ಮನೆಯನ್ನು ತೊರೆದು
This text was machine-transcribed from the printed book and may contain errors. Select the words and choose “Report a mistake”.
ಮನೆಯನ್ನು ತೊರೆದು ಹೋಗುವ ಒತ್ತಡವು ಬಲವಾಗುತ್ತಾ ಹೋಯಿತು. ಒಂದು ಸಂಜೆ ಆ ಒತ್ತಡವು ಎಷ್ಟು ಬಲವಾಗಿತ್ತೆಂದರೆ ಪರಮಹಂಸ ನಿತ್ಯಾನಂದರಿಗೆ ಕೂಡಲೆ ಕಾರ್ಯಪ್ರವೃತ್ತರಾಗಬೇಕೆಂಬ ಭಾವನೆಯುಂಟಾಯಿತು. ಅವರಿಗೆ ಇನ್ನು ವೇಳೆಯವಿಲ್ಲದೆ ತಾವು ನಡೆಸುತ್ತಿರುವ ಬದುಕನ್ನು ಬಿಟ್ಟು ಅನ್ವೇಷಿಸುತ್ತಿರುವ ಜೀವನದೊಳ ಹೊಕ್ಕಬೇಕೆಂದು ಎನಿಸಿತು. ಅವರಿಗೆ ತಾವು ನಡೆಸುತ್ತಿರುವ ಬದುಕನ್ನು ಮುಂದುವರಿಸುವುದು ಇನ್ನು ತಾಳಲಸಾಧ್ಯವೆನಿಸಿತು.
ಪರಮಹಂಸ ನಿತ್ಯಾನಂದರಿಗೆ ತಮ್ಮ ತೀರ್ಮಾನವನ್ನು ಮೊದಲು ತಾಯಿಗೆ ತಿಳಿಸಬೇಕೆನಿಸಿತು. ಅವರು ಅವರನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದು, ಅವರಿಗೆ ಸಾಧ್ಯವಾದಷ್ಟೂ ಕಡಿಮೆ ತೊಂದರೆಯಾಗುವಂತೆ ವಿವೇಶಪಡಿಸಿಕೊಳ್ಳಬಯಸಿದರು. ಆ ದಿನ ರಾತ್ರಿ ಸುಮಾರು 10 ಗಂಟೆಗೆ ತಮ್ಮ ತಾಯಿಯ ಬಳಿಗೆ ಹೋಗಿ ಅವರನ್ನು ಕೇಳಿದರು, ‘ನಾನು ಉತ್ತರ ದಿನೇನು ಮಾಡುವ ?’, ಎಂದು. ಅವರ ತಾಯಿ, ‘ನನ್ನನ್ನೇಕೆ ಇಂತಹ ಅಶುಭ ಪ್ರಶ್ನೆಯನ್ನು ಕೇಳುವೆ ? ಏನು ತಪ್ಪಾಯಿತು?’, ಎಂದು ಕೇಳಿದರು. ಪರಮ ಹಂಸ ನಿತ್ಯಾನಂದರು, ‘ಏನೂ ಇಲ್ಲ, ನಾನು ದಿನ ದರ್ಶನವಾದ ಕಾರಣವಿಲ್ಲ, ನಾನು ಕೇವಲ ತಿಳಿಯಬೇಕೆನಿಸಿದೆ’, ಎಂದರು. ಅವರ ತಾಯಿಯು ಸಮಾಧಾನದಿಂದ, ‘ನಾನೇನು ಮಾಡಬಹುದು? ಅದು ಸಂಭವಿಸಿದರೆ ಅದನ್ನು ನಾನು ಒಪ್ಪಿಕೊಳ್ಳಬೇಕಾಗುವುದು’, ಎಂದು ಹೇಳಿದರು. ಆಗ ನಿತ್ಯಾನಂದರು ತಮ್ಮ ತಾಯಿಗೆ ತಾವು ಮನೆಯನ್ನು ಬಿಟ್ಟುಹೋಗ ಬಯಸಿರುವುದಾಗಿ ಹೇಳಿದರು.

ಅವರ ತಾಯಿಯು ಕಣ್ಣೀರು ಸುರಿಸಲಾರಂಭಿಸಿದರು. ದುಃಖದಿಂದ ಅವರ ದೇಹವು ನಡುಗುತ್ತಾನೆಲ್ಲದೆ ಆಡುರಲಾರಂಭಿಸಿತು. ‘ನೀನು ಒಂದು ದಿನ ಹೊರಟು ಹೋಗಿ ಬಿಡುವೆಯೆಂದು ನನಗೆ ತಿಳಿದಿತ್ತು’, ಎಂದರು ಅವರ ತಾಯಿ. ಪರಮಹಂಸ ನಿತ್ಯಾನಂದರು ಅವರ ತಾಯಿಯನ್ನು ತಾನು ಹೋಗಿ ಕೂಡ ಬಯಸುವಿಯೇನು ಎಂದು ಕೇಳಿದರು. ಅವರ ತಾಯಿಯು, ‘ಇಲ್ಲ, ನೀನು ಹೋಗಿ ಬಯಸಿದೆಯೆಂದು ನನಗೆ ಗೊತ್ತು ಮತ್ತು ನಿನ್ನ ಜೀವನದಲ್ಲಿ ನೀನು ಏನು ಮಾಡಬೇಕೆಂದು ಸದಾ ಬಯಸಿರುವೆಯೋ ಅದನ್ನು ನೀನು ಮಾಡಬೇಕೆಂದು ನಾನು ಬಯಸುತ್ತೇನೆ. ಅದರಿಂದ ನಿನ್ನನ್ನು ತಪ್ತನೆಲು ನನ್ನಿಂದ ಆಗದು; ಆದರೆ ನೀನು ಹೊರಟು ಹೋಗುವುದನ್ನು ನೋಡಲು ನನ್ನಿಂದ ಆಗದು. ಆದುದರಿಂದಲೇ ನಾನು ಅಳುತ್ತಿದ್ದೇನೆ,’ ಎಂದರು.
ತನ್ನ ತಾಯಿಯ ಅಪರಿಮಿತವಾದ ಪ್ರೀತಿಗೆ ಪರಮಹಂಸ ನಿತ್ಯಾನಂದರು ಮಿತಿಮೀರಿದ ಭಾವನೆಯನ್ನು ಅನುಭವಿಸಿದರು. ಆ ತಾಯಿಯು ತೀವ್ರವಾದ ದುಃಖದಲ್ಲಿದ್ದರೂ ತನ್ನ ಮಗನು ಬಯಸಿದ್ಧನ್ನೇ ಅವನಿಗೆ ಬಯಸಿದ್ಧಳು. ಅವಳು ತನ್ನ ಮಗನ ದಾರಿಗೆ ಅಡ್ಡ ಬರಲು ಇಚ್ಚಿಸಲಿಲ್ಲ. ಅವಳ ಮುಗ್ಧತೆ ಮತ್ತು ನಿಸ್ವಾರ್ಥ ಪ್ರೇಮವು ಅವರನ್ನು ಆಳವಾಗಿ ಸ್ಪರ್ಶಿಸಿತು. ಅವರು (ತಾಯಿಯು) ತನ್ನ ಮುಗ್ಧತೆಯ ಬಗೆಯೇ ಮುಗ್ಧತೆಯಿಂದಿದ್ದರು.
ಭಾರತ ಮತ್ತು ನೇಪಾಳದ ಅಡ್ಡಗಲಕ್ಕೆ
"ಎಲ್ಲ ದೊಡ್ಡ ಪವಿತ್ರ ಸ್ಥಳಗಳೂ ಪ್ರಪಂಚ
ಶಕ್ತಿಯೊಂದಿಗೆ ಅನುರಣಿಸುತ್ತಿರುತ್ತದೆ ;
ಕೇವಲ ಅಲ್ಲಿರುವುದೇ ಒಂದು ಆಳವಾದ ಧ್ಯಾನ."
- ಪರಮಹಂಸ ನಿತ್ಯಾನಂದ
ಪರಮಹಂಸ ನಿತ್ಯಾನಂದರ ಆಳವಾದ ಹಂಬಲವು ಅವರನ್ನು ಭಾರತ ಮತ್ತು ನೇಪಾಳದ ಉದ್ದಗಲಕ್ಕೆ, ಹಿಮಾಲಯದ ತಪ್ಪಲುವಿನಿಂದ ದಕ್ಷಿಣದ ಕನ್ಯಾಕುಮಾರಿಯವರೆಗೂ, ಪಶ್ಚಿಮದಲ್ಲಿರುವ ದ್ವಾರಕೆಯಿ೦ದ ಪೂರ್ವದಲ್ಲಿರುವ ಕೋಲ್ಕತ್ತಾವರೆಗೂ ಕೊಂಡೊಯ್ದಿತು. ಅವರ ಪರಿವ್ರಾಜಕ ವ್ರ (ಅಂದರೆ ಸನ್ಯಾಸಿಗಳ ಅಲೆದಾಟ) 9 ವರ್ಷಗಳ ಕಾಲವಿದ್ದು ಅವರ ಇಡಿಯ ಅಸ್ತಿತ್ವವನ್ನು ಅಂತಿಮ ಐಕ್ಯತೆಯ ಅನುಭವವನ್ನು ಹೊಂದಲು ತಯಾರುಮಾಡುತ್ತಿತ್ತು. ಸಾವಿರಾರು ಮೈಲುಗಳಷ್ಟನ್ನು ಕಾಲ್ನಡಿಗೆಯಲ್ಲಿ ಸವೆಯುತ್ತಾ 70,000 ಕ್ಕೂ ಅಧಿಕ ಮೈಲುಗಳನ್ನು ಕ್ರಮಿಸಿದರು.

ಮಹಾವತಾರ ಬಾಬಾಜಿ
ಮಹಾವತಾರ ಬಾಬಾಜಿ
ಮಹಾವತಾರ ಬಾಬಾಜಿಯವರು ಒಬ್ಬ ಜೀವಂತವಾಗಿರುವ ಹಿಮಾಲಯದ ಗುರುಗಳು. ಪರಮಹಂಸ ನಿತ್ಯಾನಂದರ ಹಿಮಾಲಯದಲ್ಲಿ ಋಷಿಗಳಂತೆ ಅಲೆದಾಡುವ ದಿನಗಳಲ್ಲಿ ಅವರಿಗೆ ದರ್ಶನವನ್ನು ನೀಡಿದರು. ಬಾಬಾಜಿಯವರೇ ಈ ಭೇಟಿಮಾಡಿದ ಸಮಯದಲ್ಲಿ ಅವರಿಗೆ 'ಪರಮ ಹಂಸ ನಿತ್ಯಾನಂದ', ಎಂದು ಕರೆದಿದ್ದು, ಅದೇ ಹೆಸರಿನಿಂದಲೇ ಚಿರಪರಿಚಿತರಾಗಿದ್ದಾರೆ.

ಇಂದು
ಪರಮಹಂಸ ನಿತ್ಯಾನಂದರು ತಮ್ಮ ಶಿಷ್ಯರನ್ನು ಹಿಮಾಲಯ ಶ್ರೇಣಿಗಳು ಮತ್ತು ಇತರ ಅಧಿಕ ಶಕ್ತಿ ಕೇಂದ್ರಗಳಿಗೆ ಕಾಲಕಾಲಕ್ಕೆ ಕರೆದೊಯ್ಯುತ್ತಾರೆ. ಆಧ್ಯಾತ್ಮಿಕ ಅಲೆದಾಟದ ನಡಿಗೆಯ ಮುಖಾಂತರ ಪ್ರತಿ ವ್ಯಕ್ತಿಯಲ್ಲೂ ಸಂತೃಪ್ತತೆಯ ಆಳವಾದ ಹಂಬಲಕ್ಕಾಗಿ ಸ್ಥಳವನ್ನು ಸೃಷ್ಟಿಸುತ್ತಾರೆ.
ಹಿಮಾಲಯ ಪ್ರವಾಸ 2007

ಋಷಿಕೇಶ ಆಲೆದಾಡುವ ದಿನಗಳಲ್ಲಿ
ಅವರು ನೀರಿನ ಮಡಕೆಯಲ್ಲಿ ನೀರನ್ನು
ತುಂಬಿಸುತ್ತಿದ್ದರು. ಅವರ ರುದ್ರಾಕ್ಷಿ
ಲೋಲಕವನ್ನು ಅವರ ಮುಂಚೆ
ತಂಗಾಡಿ ಮಾಡುವ ಮೂಲಕ ಅವರು
ಆ ನೀರಿನ ಚೈತನ್ಯವನ್ನು ಪರೀಕ್ಷಿಸಲು
ಪರೀಕ್ಷಿಸಿ ನಂತರ, ಲೋಲಕವು ಅದು
ಯೋಗ್ಯವೆಂದು ತಿಳಿಸಿದರೆ ಮಾತ್ರವೇ
ಕುಡಿಯುತ್ತಿದ್ದರು.

ವಿಭೂತಿಯನ್ನು ಇಟ್ಟುಕೊಳ್ಳಲು ಖಾವಿ ಮತ್ತು
ಚೀಲ. ಇದು ಅವರ ಋಷಿಕೇಶ ಅಲೆದಾಟದ
ದಿನಗಳ ಪರ್ಯಟನ್ದ ಅವರೊಡನೆ
ಒಡನಾಡಿತು.

ಅವರು ಋಷಿಕೇಶ ಅಲೆದಾಟದ ದಿನಗಳ
ಪರ್ಯಟನ್ ಧರಿಸಿದ ಸೊಂಟದಲ್ಲಿ
ಪೋಣಿಸಲ್ಪಡುತ್ತಿದ್ದ ಮಣಿಗಳು.
ಮೊದಲ ಗುಣಪಡಿಸುವ ಪವಾಡ (First Healing Miracle)
ಹಿಮಾಲಯದ ಶ್ರೇಣಿಯ 17,000 ಅಡಿಗಳ ತಪೋವನದಿಂದ ಹಿಂದಿರುಗುತ್ತಿರುವಾಗ, ಪರಮಹಂಸ ನಿತ್ಯಾನಂದರು ಸೇನೆಯ ಟ್ರಕ್ ಒಂದರಲ್ಲಿ ಪ್ರಯಾಣಿಸುತ್ತಿದ್ದರು. ಆ ಟ್ರಕ್ ಒಂದು ಹಳ್ಳದ ಮೇಲೆ ಚಲಿಸುವಾಗ ನಿತ್ಯಾನಂದರು ಮೇಲಕ್ಕೆಹಾರಲ್ಪಟ್ಟು ಒಂದು ಲೋಹದ ಚೂರಿನ ಮೇಲೆ ಬಿದ್ದರು. ಅದು ಒಳತೂಕ್ತು ಅವರ ಬೆನ್ನೆಲುಬನ್ನು ಮುರಿಯಿತು. ಸೇನೆಯ ವೈದ್ಯರ ಬಳಿ ಅವರನ್ನು ಕೊಂಡೊಯ್ದಾಗ ಅವರು ಪರಮಹಂಸ ನಿತ್ಯಾನಂದರು 15 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು. ಪರಮಹಂಸ ನಿತ್ಯಾನಂದರು ಅವರಿಗೆ ತಿಳಿಸದಂತೆಯೇ ಎದ್ದು, ಗಾಯದ ಭಾಗದ ಮೇಲೆ ತಮ್ಮದೇ ಹಸ್ತವನ್ನು ಇರಿಸಿ ನಂತರ ಮುಚ್ಚಿದರು. ಪರಮಾಶ್ಚರ್ಯದಲ್ಲಿ ಅವರ ಕ್ಷ-ಕಿರಣ ಪರೀಕ್ಷೆಗೊಳಪಟ್ಟಾಗ ಅವರಲ್ಲೆಲ್ಲರು ಪ್ರತಿಯೊಬ್ಬರೂ ದಿಗ್ಧಂತರಾದರು. ಮುರಿತವು ಸಮಗ್ರವಾಗಿ ಗುಣವಾಗಿತ್ತು. ತಮ್ಮದೇ ದೇಹದ ಮೇಲೆ ಆದ ಗುಣಪರ್ಶವು ಒಂದು ದಿನ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಉಪಯುಕ್ತವಾಗಬಲ್ಲದೆಂದು ಪರಮಹಂಸ ನಿತ್ಯಾನಂದರು ಸ್ವಲ್ಪಮಟ್ಟಿಗೂ ತಿಳಿದಿರಲಿಲ್ಲ!
ಇಂಚು
ಪರಮಹಂಸ ನಿತ್ಯಾನಂದರಿಂದ ದೀಕ್ಷೆ ಪಡೆದ ಹೀಲರ್ ಗಳು ಪ್ರಪಂಚದಾದ್ಯಂತ ನಿತ್ಯಾ ಸ್ಪಿರಿಚ್ಯುಅಲ್ ಹೀಲಿಂಗ್ ಎಂಬ ಉಚಿತ ಸೇವೆಯನ್ನು ನೀಡುತ್ತಿದ್ದಾರೆ.

ಮೃತ್ಯುವಿನ ಮೇಲೆ ವಿಜಯ
ಪವಿತ್ರ ಗಂಗಾನದಿಯ ಮೆಟ್ಟಿಲುಗಳ ಮೇಲಿರುವ ಶವದಹನ ಸ್ಥಳವು ವಾರಣಾಸಿಯ ಬಹುಮಂದಿಗೆ ಬಲುಪವಿತ್ರವಾದದ್ದೆಂಬ ಭಾವನೆಯಿದೆ. ಆ ಸ್ಥಳದಲ್ಲಿಯೇ ಪರಶಿವನು ವಿಶ್ವವನ್ನು ಸೃಷ್ಟಿಸಿದನೆಂದು ಪ್ರತೀತಿ.
ಇಲ್ಲಿ ಪರಮಹಂಸ ನಿತ್ಯಾನಂದರು ಆಳವಾದ ಧ್ಯಾನದಲ್ಲಿದ್ದಾಗ ಅವರಿಗೆ ಸ್ವತಃ ಮೃತ್ಯುವಿನ ಪ್ರಜ್ಞಾಪೂರಕ ಅನುಭವವು ಉಂಟಾಯಿತು. ಈ ಗಾಢವಾದ ಅನುಭವದಿಂದ, ಅವರಿಗೆ ತಾವು ಬಹುದೊಡ್ಡ ಮತ್ತು ಭೂಗ್ರಹದ ಮೇಲಿರುವ ಪ್ರತಿ ಮಾನವನಲ್ಲಿ ಸರ್ವಾಂತರ್ಯಾಮಿಯಾಗಿರುವ ಮರಣ ಭಯವನ್ನು ಜಯಿಸಿದ್ರಾಗಿ ಅರಿವಾಯಿತು.

ಮಣಿಕರ್ಣಿಕಾ ಘಾಟ್, ವಾರಣಾಸಿ

ಋಷಿಗಳಂತೆ ಅಲೆದಾಡುವುದನ್ನು ಮುಂದುವರಿಸುತ್ತಾ, ಪರಮಹಂಸ ನಿತ್ಯಾನಂದರು ಅಂತಿಮವಾಗಿ ಅವರ 22ನೆಯ ವಯಸ್ಸಿನಲ್ಲಿ ಅಂತರ್ಯದ ಪರಮಾನಂದವನ್ನು ಪಡೆದರು. ಇಲ್ಲಿ ಕಾಣಿಸಿರುವುದು ಅವರು ಜ್ಞಾನೋದಯವನ್ನು ಹೊಂದಿದ ನಂತರ ತೆಗೆದ ಮೊದಲ ಚಿತ್ರವಿದು. ಅವರ ಕಣ್ಣಿನಲ್ಲಿದ್ದ ಅಗ್ನಿಯು ಮಾಯವಾಗಿದೆ; ಕೇವಲ ಪರಮೋಚ್ಚ ಪ್ರಶಾಂತತೆ ಉಳಿದಿದೆ. ರಾಜಶೇಖರನ್ ಪರಮಹಂಸ ನಿತ್ಯಾನಂದರಾದರು.
ಇಂದು
ಪರಮಹಂಸ ನಿತ್ಯಾನಂದರು 'ಆಧ್ಯಾತ್ಮಿಕ ಅಲೆದಾಟವು ಆಧ್ಯಾತ್ಮಿಕ ಬೆಳವಣಿಗೆಗೆ ಒಂದು ಮಹಾನ್ ತಂತ್ರ ಮತ್ತು ಕಾರ್ಯವಿಧಾನ' ಎನ್ನುತ್ತಾರೆ. ಪರಮಹಂಸ ನಿತ್ಯಾನಂದರು ಬ್ರಹ್ಮಚರ್ಯೆಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಅಲೆದಾಡುವ ಯತಿಗಳಂತೆ ಭಿಕ್ಷೆ ಬೇಡಲು ಮತ್ತು ಭಿಕ್ಷೆಯನ್ನು ಸ್ವೀಕರಿಸಲು ಕಳುಹಿಸುವರು! ಅವರು ಹೇಳಿದ್ದು, 'ಯತಿಗಳಂತೆ ಬೇಡುವುದು ಮನೋಭಾವನೆಗಳ ಏರಿಳಿತಗಳಿಂದ ಬಿಡುಗಡೆಹೊಂದುವ ಒಂದು ತಂತ್ರ. ನೀವು ಭಿಕ್ಷೆ ಬೇಡಿದಾಗ, ನೀವು ದೊರೆತದ್ದಕ್ಕೆ ಸಂತೋಷಪಡುವುದಾಗಲೀ ಇಲ್ಲವೇ ಕಳೆದುಕೊಳ್ಳುವುದಕ್ಕೆ ದುಃಖ ಪಡುವುದಾಗಲೀ ಆಗಬಾರದು!'
