ಶಾಲಾಭ್ಯಾಸ - ಕೇವಲ ಒಂದು ಘಟನೆ
This text was machine-transcribed from the printed book and may contain errors. Select the words and choose “Report a mistake”.
> "ಯಾವುದೇ ಕೆಲಸವನ್ನು ತೀವ್ರತೆಯಿಂದ
> ಮಾಡಿದರೆ ಅದು ಧ್ಯಾನವಾಗುತ್ತದೆ.
> ಆಗ ಜೀವನವೇ ಧ್ಯಾನಾತ್ಮಕವಾಗುತ್ತದೆ"
>
> -ಪರಮಹಂಸ ನಿತ್ಯಾನಂದ

ರೆಕಾರ್ಡ್ ಪುಸ್ತಕಗಳು ಮತ್ತು ಮಂತ್ರದ ದಿನಚರಿ ಪುಸ್ತಕಗಳು
ಶಾಲಾಭ್ಯಾಸವು ಪರಮಹಂಸ ನಿತ್ಯಾನಂದರ ಜೀವನದಲ್ಲಿ ಕೇವಲ ಒಂದು ಘಟನೆಯಷ್ಟೇವಾಗಿತ್ತು. ಶಾಲೆಯಲ್ಲಿ ಅವರು ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದ ದಾವೇದಾತಿ ಪುಸ್ತಕಗಳನ್ನು ಯಾವುದೋ ಒಂದು ಬೆಲ್ಲದ ಕೋಡುಂಬಂತೆ ಬರೆಯುತ್ತಿದ್ದರು. ಆದರೆ ಹೆಚ್ಚಿನ ಅಭಿರುಚಿಯೊಂದಿಗೆ ಮಂತ್ರಗಳನ್ನು ಪಠಿಸುತ್ತಾ ಧಾರ್ಮಿಕ ವಿಧಿಗಳನ್ನುಮಾಡುತ್ತಿದ್ದರು.
ಇಲ್ಲಿ ಕಾಣಿಸುತ್ತಿರುವ ದಾವೇದಾತಿ ಪುಸ್ತಕಗಳು ಅವರ ಉನ್ನತಹಕ್ಕೆ ಸಾಕ್ಷಿಯಾಗಿ ನಿಂತಿವೆ
- ಮಂತ್ರದ ದಿನಚರಿಯ ಪುಸ್ತಕದ ಒಂದು ಹಾಳೆ, ಅವರಿಂದ ಬರೆಯಲ್ಪಟ್ಟ ಪೂಜಾ (ದೇವರ ಪೂಜಾ ವಿಧಾನ) ದ ಸಂಪೂರ್ಣ ಸಚಿತ್ರ ಮಾರ್ಗದರ್ಶಿನಿ. ಈ ಪುಸ್ತಕವು ಈ ದಿನ ಅವರ ಶಿಷ್ಯರಿಗೆ ಮತ್ತು ಮಾರ್ಗದರ್ಶಿಗಳಿಗೆ ಪೂಜಾವ ಅಭ್ಯಾಸಗಳ ಮಾರ್ಗದರ್ಶಿಯಾಗಿದೆ! ವಿಧಿಬದ್ಧವಾದ ಪೂಜೆ ಮತ್ತು ಅದರೊಂದಿಗೆ ತದೇಕವಾಗಿ ಬರೆಯುವ ಯೋಜನಾಕ್ರಮದಲ್ಲೆ ಆ ಎರಡೂ ವಯಸ್ಸಿನಲ್ಲಿ ಅವರಿಗಿದ್ದ ಮನೋಬದ್ಧತೆಯು ವಿಸ್ಮಯಗೊಳಿಸುವಂತಹದು.
ಪರಮಹಂಸ ನಿತ್ಯಾನಂದರ ಗೆಳೆಯರು ಅವರ ಆಧ್ಯಾತ್ಮಿಕ ಬಲವನ್ನು ಕುರಿತು ಆಗಾಗ್ಗೆ ಅವರನ್ನು ಛೇಡಿಸುತ್ತಿದ್ದರು. ಅವರಲ್ಲೊಬ್ಬನು ಧ್ಯಾನದ ಅಷ್ಟೊಂದು ದೀರ್ಘವಾದ ನಿತ್ಯಾಯೀರ್ಯ ಗಂಟೆಗಳಿಂದ ಏನನ್ನು ಸಾಧಿಸುತ್ತೀಯೆಂದು ಅವರನ್ನು ಕೇಳಿದನು. 'ಸಮಯ ಬಂದಾಗ ನೀನು ತಿಳಿದುಕೊಳ್ಳುವೆ', ಎಂದು ಉತ್ತರಿಸಿದರು.
ಇಂದಿಗೂ
'ನಾನು ಚಿಕ್ಕವನಿದ್ದಾಗ ಪರಮಾನಂದದ ಬದುಕಿನ ರಹಸ್ಯಗಳನ್ನು ಒಂದೇ ಮಾಡಿನ ಕೆಳಗೆ ಕಲಿಯಬಹುದಾದಂತಹ ಜಾಗಕ್ಕಾಗಿ ಹುಡುಕಾಡುತ್ತಿದ್ದೆ. ನಾನು ಒಂಭತ್ತು ವರ್ಷಗಳ ಕಾಲ ಹುಡುಕಾಡಿದರೂ ಸಹ ಅಂತಹ ಜಾಗವು ಸಿಗಲೇ ಇಲ್ಲ. ಅವುಗಳನ್ನು ಚೂರುಪಾರುಗಳಾಗಿ ನಾನು ಸಂಗ್ರಹಿಸಬೇಕಾಯಿತು. ಜ್ಞಾನೋದಯವಾದ ನಂತರ, ನಾನು ಯುವ ಜನಾಂಗಕ್ಕೆ ಅಂತಹ ಜಾಗವನ್ನು ನೀಡಬೇಕೆಂದು ಇಚ್ಚಿಸಿದೆ!' ಗುರುಕುಲ ಮತ್ತು ಲೈಫ್ ಬ್ಲಿಸ್ ಟೆಕ್ನಾಲಜಿ ಕಾರ್ಯಕ್ರಮಗಳು ಈ ಉದ್ದೇಶಿತ ಭರಿತ ಹಂಬಲದ ಪರಿಣಾಮ. ಇಲ್ಲಿ ಯುವ ಜನತೆಯು ಅಸಂಖ್ಯಾತ ಆಯಾಮಗಳಲ್ಲಿ ಅನ್ವೇಷಿಸಿ ವಿಸ್ಪೋಟನಗೊಳ್ಳುತ್ತಾರೆ. ಅವರು ಕೆಲಸಮಾಡದೆ ಹೇಗೆ ಕೆಲಸಮಾಡಬಹುದೆಂದೂ, ಆಳವಾದ ಪ್ರಜ್ಞೆಯಿಂದ ಹೇಗೆ ಆನಂದದಾಯಕ ಜೀವನವನ್ನು ಸೃಷ್ಟಿಸಬಹುದೆಂಬುದನ್ನೂ ಕಲಿಯುತ್ತಾರೆ.
- ಪರಮಹಂಸ ನಿತ್ಯಾನಂದ
ಇತ್ತೀಚಿನ ತಮಿಳುನಾಡಿನ ಪ್ರವಾಸದಲ್ಲಿ ಪರಮಹಂಸ ನಿತ್ಯಾನಂದರು ಅವರ ಸ್ವಂತ ಊರಾದ ತಿರುವಣ್ಣಾಮಲೈನಲ್ಲಿ ಪ್ರವಚನವನ್ನು ನೀಡಿಯಾದ ಮೇಲೆ, ತಮ್ಮ ಶಿಷ್ಯರನ್ನು ತುಂಬಿದ ಸಭಾಂಗಣದ ವೇದಿಕೆಗೆ ಕರೆದು, ಅವರ ಆಶೀರ್ವಾದವನ್ನು ಪಡೆಯಲಿಕ್ಕಾಗಿ ಸರದಿಯ ಸಾಲಿನಲ್ಲಿ ನಿಂತಿದ್ದ ಕೆಲವು ಹುಡುಗರತ್ತ ಬೊಟ್ಟುಮಾಡಿದರು ; ಈ ಹುಡುಗರೇ ಇದಕ್ಕೂ ಮುಂಚೆ ಅವರನ್ನು ಪ್ರಶ್ನಿಸಿದ್ದರು (ನಿತ್ಯಾನಂದರನ್ನು)! ಭಾವೋದ್ವೇಗದಿಂದ ಗದ್ಗದಿತರಾಗಿ ಮತ್ತು ಗುರುಗಳ ಪಾದಗಳನ್ನು ಮುಟ್ಟಲು ಬಗ್ಗುವಾಗ ನಿಯಂತ್ರಿಸಲಾಗದಂತೆ ನಡುಗುತ್ತಿದ್ದರು. ತುಂಟಾಟದ ನಗುವಿನಿಂದ ಮತ್ತು ಉತ್ಸಾಹ ಭರಿತ ಅನುಕಂಪದಿಂದ ಆ ಹುಡುಗರನ್ನು ತಮ್ಮ ತೋಳ್ಕೈಯಲ್ಲಿ ತೆಗೆದುಕೊಂಡರು. ಶಿಷ್ಯರು ತಮ್ಮದೇ ಭಾವೋದ್ವೇಗದಲ್ಲಿ ಸಿಲುಕಿಕೊಂಡು ಅದನ್ನು ನೋಡಿದರು.
ಶ್ರೇಷ್ಠ ಡಿಪ್ಲೊಮಾ ಡಿಗ್ರಿ

ಪರಮಹಂಸ ನಿತ್ಯಾನಂದರು ತಮಿಳುನಾಡಿನ ಗುಡಿಯಾಟ್ಟಂ ಪಾಲಿಟೆಕ್ನಿಕ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾವನ್ನು ಪಡೆದರು. ತರಗತಿಗಳಲ್ಲಿ ಕೊಟ್ಟ ಗಮನ ಮಾತ್ರದಿಂದಲೇ, ಪರಮಹಂಸ ನಿತ್ಯಾನಂದರು ಅವರ ಡಿಪ್ಲೊಮಾ ಪಠ್ಯಕ್ರಮವನ್ನು ಅಪೂರ್ವ ಯಶಸ್ಸಿನಿಂದ ಮುಗಿಸಿಬಿಟ್ಟರು. ಕೆಲವು ವರ್ಷಗಳ ನಂತರ ಕಾಲೇಜಿನಲ್ಲಿ ಅವರಿಗೆ ಪಾಠವನ್ನು ಬೋಧಿಸಿದ ಗುರುಗಳೇ ಅವರ ಮೊದಲ ದೀಕ್ಷೆ ಪಡೆದ 'ಹೀಲರ್' (Healer) ಆದರು.

ಪರಮಹಂಸ ನಿತ್ಯಾನಂದರಿಗೆ ಪವಿತ್ರ ಪಟ್ಟಣವಾದ ತಿರುವಣ್ಣಾಮಲೈನ ರುದ್ರಭೂಮಿಗಳೇ ಧ್ಯಾನಮಾಡಲು ಪ್ರಶಾಂತ ಸ್ಥಳಗಳಾಗಿದ್ದವು. ಮಧ್ಯರಾತ್ರಿಯ ನಂತರವೇ ಅವರು ಮನೆಗೆ ಹಿಂತಿರುಗಿ ಅವರಿಗೆ ಕೊಟ್ಟ ಕೀಲಿ ಕೈ ನಿಂದ ಬಾಗಿಲನ್ನು ತೆರೆಯುತ್ತಿದ್ದರು. ಅವರ ತಂದೆ ತಾಯಿಗಳು ಅವರ ಆ ವೇಳೇಗಳಿಗೆ ಒಂದೇ ಒಂದು ಅಸಮ್ಮತಿಯ ಪದವನ್ನಾಗಲೀ ಹೇಳುತ್ತಿರಲಿಲ್ಲ.
ಗುರುಕುಲ

ಲೈಫ್ ಬ್ಲಿಸ್ ಟೆಕ್ನಾಲಜಿ

“ಆಶ್ರಮವು ಚೈತನ್ಯದ ಕ್ಷೇತ್ರವಾಗಿದ್ದು ಅಲ್ಲಿ ಪ್ರತಿ ಪಥವೂ ಅಂತರಂಗದ ಪಯಣವಾಗಿರುತ್ತದೆ”
- ಪರಮಹಂಸ ನಿತ್ಯಾನಂದ