ಪ್ರ ಪಂ ಚ ಶ ಕ್ತಿ ಯೊಂ ದಿ ಗೆ ಸಂ ಪ ರ್ಕ ವಾ ದಾ ಗ...
This text was machine-transcribed from the printed book and may contain errors. Select the words and choose “Report a mistake”.
"ನಿಮ್ಮ ಕೈಗಳು ತೆರೆದಿರುವ ತನಕವೂ, ಅದರ ಮೂಲಕ ನದಿಯು ಹರಿಯುತ್ತಿರುವುದು ಅನುಭವವಾಗುತ್ತದೆ. ಅದನ್ನು ಹಿಡಿಯಲು ಪ್ರಯತ್ನಿಸಿದರೆ, ಅದನ್ನು ಕಳೆದುಕೊಳ್ಳುವಿರಿ !"
- ಪರಮಹಂಸ ನಿತ್ಯಾನಂದ

ಪರಮಹಂಸ ನಿತ್ಯಾನಂದರು ಸುಮಾರು 12 ವಯಸ್ಸಿನವರಾಗಿದ್ದಾಗ ಒಂದು ದಿನ ಅರುಣಾಚಲ ಬೆಟ್ಟದ ಬಂಡೆಯೊಂದರ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದರು ; ವಾಸ್ತವವಾಗಿ ಅವರು ಆಲೋಚನೆಗಳು ಹುಟ್ಟುವ ಉಗಮಸ್ಥಾನವನ್ನು ವೀಕ್ಷಿಸಲು, ಅಣ್ಣಾಮಲೈ ಸ್ವಾಮಿಗಳ್ ಅವರು ಕೊಟ್ಟ ಧ್ಯಾನ ತಂತ್ರದೊಂದಿಗೆ ಆಟವಾಡುತ್ತಿದ್ದರು
ಅವರು ಕುಳಿತಿದ್ದ ಹಾಗೆಯೇ, ಅವರು ತಾವು ಕರಗುತ್ತಿರುವುದನ್ನು ಅನುಭವಿಸಿ ದರು. ಅವರ ಸ್ವಂತ ಮಾತುಗಳಲ್ಲಿ 'ಇದ್ದಕ್ಕೆ ಇದ್ದಹಾಗೆ, ಅಂತರಂಗದಲ್ಲಿ ಏನೋ ಒಂದು ತೆರೆದುಕೊಂಡ ಹಾಗೆ ಅನುಭವವಾಯಿತು. ನನ್ನ ಕಣ್ಣುಗಳು ಮುಚ್ಚಿದ್ದರೂ, ಎಲ್ಲ 360 ಡಿಗ್ರಿಗಳಷ್ಟು ನಾನು ನೋಡಬಲ್ಲನಾದೆನು! ಜೀವಬಲವನ್ನು ದೇಹದ ಒಳ ಗಷ್ಟೇ ಅಲ್ಲದೆ, ಹೊರಗಿದ್ದ ಇತರ ವಸ್ತುಗಳಲ್ಲಿಯೂ ಕೂಡ ನನಗೆ ಭಾಸವಾಯಿತು. ಬಂಡೆಗಳಲ್ಲಿ, ಗಿಡಗಳಲ್ಲಿ, ಹೂಗಳಲ್ಲಿ, ನನ್ನ ಸುತ್ತಲಿದ್ದ ಸಜೀವ ಹಾಗೂ ನಿರ್ಜೀವ ವಸ್ತು ಗಳಲ್ಲಿಯೂ ನಾನು ಜೀವಂತವಾಗಿದ್ದೇನೆಂಬ ಭಾವನೆಯು ನನಗೆ ಉಂಟಾಯಿತು.
ಪರಮಹಂಸ ನಿತ್ಯಾನಂದರು ಅರುಣಾಚಲದಲ್ಲಿ ಧ್ಯಾನ ಮಾಡುತ್ತಿರುವುದು
ಇಂದು
ನಿತ್ಯಾನಂದ ಪಂಥದ ಬ್ರಹ್ಮಚಾರಿಗಳು
ಪರಮಹಂಸ ನಿತ್ಯಾನಂದರ ಆಧ್ಯಾತ್ಮಿಕ
ಅನುಭವದ ವಾರ್ಷಿಕೋತ್ಸವದಂದು
ಆ ಪವಿತ್ರ ಬಂಡೆಗೆ ಅಭಿಷೇಕವನ್ನು ಮಾಡುವರು.

ಅದೇ ನನ್ನ ಮೊದಲ ಅಗಾಧವಾದ ಅನುಭವ. ಅದು ನನ್ನಲ್ಲಿ ಎಲ್ಲದ ರಲ್ಲಿಯೂ ಒಂದು ಆಳವಾದ ಅನುಕಂಪ ಮತ್ತು ಪ್ರೀತಿಯನ್ನು ಉಂಟುಮಾಡಿತು. ಆ ಅನುಭವದ ಮೂಲಕ ಜೀವನಕ್ಕೆ ಒಂದು ಮಹತ್ತಾದ ಗೌರವ ಉಂಟಾಯಿತು. ಪ್ರತಿಯೊಂದು ಜೀವಿಯನ್ನು ಅದು ಇರುವ ಹಾಗೆ ಒಪ್ಪಿಕೊಳ್ಳುವಿಕೆಯು ನನ್ನ ಇರುವಿಕೆಯನ್ನು ಒಳಹೊಕ್ಕಿತು. ಆ ಅನುಭವವು ನನಗೆ ಜ್ಞಾನೋದಯದೆಡೆ ದಾರಿ ತೋರಿಸಿದ ಮೊದಲ ಇಣುಕುನೋಟವಾಯಿತು. ಇಂತಹ ಕೇವಲ ಒಂದು ಅನುಭವದಿಂದ, ಎಲ್ಲ ಧರ್ಮಾಂಧತೆ, ಮತಾಂಧತೆ, ಭಾಷಾಂಧತೆ ಎಲ್ಲವೂ ವ್ಯವಸ್ಥೆಯಿಂದ ಸುಮ್ಮನೆ ಮಾಯವಾಗುವು ದನ್ನು ಯಾರೊಬ್ಬರು ಕಾಣಬಹುದು.
ಪರಮಹಂಸ ನಿತ್ಯಾನಂದರ ಮೊದಲ ಆಧ್ಯಾತ್ಮಿಕ ಅನುಭವವು ವೈಕಾಶಿ ಮಾಸದ ಹುಣ್ಣಿಮೆಯ ದಿನವಾದ ಬುದ್ಧಪೂರ್ಣಿಮೆಯ ಸೂರ್ಯಾಸ್ತ ಸಮಯದಲ್ಲಿ ಆಯಿತು (ಮೇ-ಜೂನ್, ತಮಿಳು ಕ್ಯಾಲೆಂಡರಿನ ಪ್ರಕಾರ)
ಪರಮಹಂಸ ನಿತ್ಯಾನಂದರು ಅರುಣಾಚಲ ಪರ್ವತದ ಸುತ್ತಲೂ ನಡೆದಾಡುವುದು ಪ್ರತಿದಿನದ ವಾಡಿಕೆಯಾಗಿತ್ತು.
ಅವರು ಮುಂಜಾನೆಯಲ್ಲಿ ಬಹುಬೇಗನೆ ಸುಮಾರು 4.00 ಗಂಟೆಗೆ ಪ್ರಾರಂಭಿಸಿ, ಬೆಟ್ಟದ ಸುತ್ತಲೂ ಮೂರರಿಂದ ನಾಲ್ಕು ತಾಸು ನಡೆದಾಡುತ್ತಾ, ನಡೆಯುವ ಸಮಯದಲ್ಲಿ ಹಾಡುಗಳನ್ನು ಹಾಡುತ್ತಾ ಇರುತ್ತಿದ್ದರು. ಅವರು ಸಂಪೂರ್ಣವಾಗಿ ಪ್ರಸಕ್ತತೆಯಲ್ಲಿ ತಾಯಿಯ ತೊಡೆಯ ಮೇಲೆ ಆಟವಾಡುತ್ತಿರುವ ಮುಗ್ಧ ಮಗು ವಿನಂತೆ ಮುಂದಿನ ಕ್ಷಣ ಏನಾಗಬಹುದೆಂಬ ವಿಚಾರದಲ್ಲಿ ತಲೆಕೆಡಿಸಿಕೊಳ್ಳದೇ; ಅವರ ಪ್ರಿಯ ಅರುಣಾಚಲದ ಪರಿಸರದಲ್ಲಿ ಆತ್ಯಾನಂದದಿಂದಿದ್ದರು!
ಒಂದು ಮುಂಜಾನೆ ಅವರು ಬಹುಬೇಗ, ಮಧ್ಯರಾತ್ರಿ ಕಳೆದ ಸ್ವಲ್ಪ ಹೊತ್ತಿನಲ್ಲೇ, ಹೊರಟರು. ಆ ದಿನಗಳಲ್ಲಿ ಬೆಟ್ಟದ ದಾರಿಯ ಸುತ್ತಲೂ ರಸ್ತೆಯಾಗಲೀ, ದೀಪಗಳಾಗಲೀ ಇರಲಿಲ್ಲ. ಅವರು ನಡೆಯುತ್ತಾ ಹೋಗುತ್ತಿರುವಾಗ ಒಂದು ಸಣ್ಣ ತೊರೆಯ ಬಳಿ, ಕತ್ತೆ ಕಿರುಬಗಳ (ಎಢಿಲ್ಲಿಖಂ) ಗುಂಪೊಂದು ಅವರನ್ನು ಸಮೀಪಿಸಿತು. ಅವರು ದೃಷ್ಟಿಯನ್ನು ಕೆಳಗೆ ನೆಟ್ಟು, ಭಕ್ತಿಯ ಹಾಡುಗಳನ್ನು ಹಾಡುತ್ತಾ ನಡೆಯುತ್ತಿದ್ದರು. ಅವರು ಹಾಡಿನಲ್ಲಿ ಸಂಪೂರ್ಣ ಮಗ್ನರಾಗಿ ಕತ್ತೆಕಿರುಬಗಳ ಅತಿ ಸಮೀಪಕ್ಕೆ ಬರುವ ತನಕವೂ ಅವುಗಳನ್ನು ಗಮನಿಸಿರಲಿಲ್ಲ. ಅವರು ತಮ್ಮ ತಲೆಯನ್ನು ಮೇಲೆತ್ತಿ ಅವುಗಳನ್ನು ನೋಡಿದಾಗ, ಅವುಗಳು ಅವರ ಅತಿ ಸಮೀಪ ಬಂದಿದ್ದವು. ಅವರ ಹರದ ಆಳದಿಂದ, ಸ್ವಾಧಿಷ್ಠಾನ ಚಕ್ರದಿಂದ ಅಥವಾ ಗುಲ್ಮದ ಶಕ್ತಿ ಕೇಂದ್ರದ ಬಿಂದುವಿನಿಂದ, ಜೋರಾಗಿ ಚೀತ್ಕರಿಸಿದರು. ಅದು ಹಿಂದೊಂದೂ ಅನುಭವಿಸಿರದಿದ್ದ ಅಥವಾ ಮುಂದೊಂದೂ ಆಗದ ಶುದ್ಧ ಭಯದ ಚೀತ್ಕಾರವಾಗಿತ್ತು. ಕೂಗಿದ ನಂತರ ಅರುಣಾಚಲಕ್ಕೆ ಸಂಪೂರ್ಣ ಶರಣಾಗತಿಯಾದ ಭಾವನೆಯುಂಟಾಯಿತು ಮತ್ತು ಅರುಣಾಚಲವು ಅವರ ರಕ್ಷಣೆಯನ್ನು ನೋಡಿಕೊಳ್ಳುವುದೆಂಬ ಆಳವಾದ ವಿಶ್ವಾಸವು ಉಂಟಾಯಿತು.
ಕತ್ತೆಕಿರುಬಗಳ ದಾಳಿಗೆ ತುತ್ತಾಗುವ ಪರಮ ಭಯದಲ್ಲಿ,
ಇದ್ದಕ್ಕಿದ್ದಂತೆ, ಒಬ್ಬ ವೃದ್ಧ ಸಾಧುವು ಅವರ
ಮುಂದೆ ಎಲ್ಲಿಂದಲೋ ಪ್ರತ್ಯಕ್ಷನಾಗಿ ತನ್ನ ದೊಡ್ಡ
ದೊಣ್ಣೆಯಿಂದ ಕತ್ತೆಕಿರುಬಗಳನ್ನು ಓಡಿಸಿದನು.
ಆ ಕಿತ್ತೆಕಿರುಬಗಳು ಓಡಿಹೋದ ತಕ್ಷಣವೇ,
ವೃದ್ಧನೂ ಮಾಯವಾದನು. ಪರಮಹಂಸ
ನಿತ್ಯಾನಂದರಿಗೆ ಈ ಮನುಷ್ಯನು ಎಲ್ಲಿಂದ
ಬಂದ'ನೆಂದಾಗಲೀ ಇಲ್ಲವೇ ಎಲ್ಲಿಗೆ
ಹೋದನೆಂದಾಗಲೀ ತಿಳಿಯಲಿಲ್ಲ.
ಆ ತೀವ್ರವಾದ ಚೀತ್ಕಾರದಿಂದ, ಪರಮಹಂಸ ನಿತ್ಯಾನಂದರಿಗೆ ತಮ್ಮ ದೇಹವು ತತ್ ಕ್ಷಣವೇ ತುಂಬಾ ಹಗುರವಾದಂತೆನಿಸಿತು; ಅವರು ತಮ್ಮ ಅಸ್ತಿತ್ವದ ಪುನರಾವರ್ತನೆಯು ಹೆಚ್ಚಾಗಿ ತೇಲುತ್ತಿರುವಂತೆಯೋ ಎಂಬಂತೆ ನಡೆಯಲಾರಂಭಿಸಿದರು.
(ಪರಮತೆಯ ಕಲ್ಪನೆಯು ಆಧುನಿಕ ಮನಃಶಾಸ್ತ್ರದ ಒಂದು ಚಿಕಿತ್ಸೆಯಾಗಿದ್ದು ಇಲ್ಲಿ ರೋಗಿಗಳು ಭಯ ಮತ್ತಿತರ ಅದುಮಿಡಲ್ಪಟ್ಟ ನಕಾರಾತ್ಮಕ ಮನೋಭಾವನೆಗಳ ಶುದ್ಧೀಕರಣದಿಂದ ಶಮನಗೊಳಿಸಲು ತಮ್ಮಹರದ ಆಳದಿಂದ ಚೀತ್ಕರಿಸುತ್ತಾರೆ.)