ಅಧ್ಯಾಯ - 8: ಅಹಂಭಾವವನ್ನು ಕಳಚಿಕೊಳ್ಳುವುದು - ಆಜ್ಞಾ ಚಕ್ರ
This text was machine-transcribed from the printed book and may contain errors. Select the words and choose “Report a mistake”.

ಮುಂದಿನ ಚಕ್ರವು ಆಜ್ಞಾ ಚಕ್ರವಾಗಿದ್ದು ಅದು ಹುಬ್ಬುಗಳ ಮಧ್ಯೆ ಸ್ಥಾಪಿತವಾಗಿದೆ.
ಸಂಸ್ಕೃತದಲ್ಲಿ ಆಜ್ಞಾ ಎಂದರೆ 'ಸಂಕಲ್ಪ' ಅಥವಾ 'ಆಜ್ಞೆ'. ಆಜ್ಞಾ ಚಕ್ರವು ಚಕ್ರಗಳ ಯಜಮಾನ ಎಂದು ತಿಳಿಯಲಾಗಿದೆ.
ಈ ಚಕ್ರವು ಗಾಂಭೀರ್ಯದಿಂದ ಮತ್ತು ಅಹಂಭಾವದಿಂದ ಬಂಧಿತವಾಗಿರುತ್ತದೆ ಮತ್ತು ಮುಗ್ಧತೆ, ಸರಳತೆ ಮತ್ತು ಎಲ್ಲ ರೂಪದ ಅಹಂಭಾವಗಳನ್ನು ಕಳಚಿಕೊಳ್ಳುವುದರಿಂದ ಅರಳುವಂತೆ ಮಾಡಬಹುದು.
(ಧ್ಯಾನದ ತಂತ್ರ: ದಿವ್ಯ ನೇತ್ರ ಧ್ಯಾನ - ಝುರತುಷ್ಟ್ರ ಅಥವಾ ಪಾರ್ಸಿ ಅನುಯಾಯಿಗಳ ಧ್ಯಾನತಂತ್ರ)
ಆಜ್ಞಾ ಚಕ್ರವು ಚಕ್ರರಾಜ ಅಂದರೆ ಎಲ್ಲ ಚಕ್ರಗಳ ಯಜಮಾನ ಎಂದೂ ತಿಳಿಯಲಾಗಿದೆ.
ಇದು ಎಂತಹ ಚಕ್ರವೆಂದರೆ ಈ ಚಕ್ರವನ್ನು ಪರಿಣಾಮಕಾರಿಗೊಳಿಸುವ (activate) ಕಾರ್ಯವನ್ನು ಮಾಡದ ಮತಗಳೇ ಇಲ್ಲ. ಈ ಚಕ್ರವು ತೆರೆದುಕೊಂಡರೆ ಇಡೀಯ ಅಸ್ತಿತ್ವವೇ ಬೇರೊಂದು ಲೋಕಕ್ಕೆ (realm) ಹೋಗುತ್ತದೆ. ಸಾಮರ್ಥ್ಯಗಳ (fac-ulties) ಒಂದು ಇಡಿ ಪದರವೇ ಬಿಚ್ಚಿಕೊಳ್ಳುತ್ತದೆ. ಆದುದರಿಂದಲೇ ನೆತ್ತಿಯಲ್ಲಿರುವ ಮೂರನೇ ಕಣ್ಣುಗಳು ಪೌರ್ವಾತ್ಯದ ಎಲ್ಲ ದೇವತೆಗಳನ್ನು ಪ್ರತಿನಿಧಿಸುತ್ತವೆ. ಮೂರನೆಯ ಕಣ್ಣು ಎಚ್ಚೆತ್ತ ಆಜ್ಞಾದ ಚಿಹ್ನೆ.
ಒಂದು ಹಳೆಯ ಉಕ್ತಿಯಿದೆ, ನೀವು ಭಾರತದ ಪುಣ್ಯ ನಗರ ವಾರಣಾಸಿಯಲ್ಲಿ ಸತ್ತರೆ, ತಂತಾನೇ ನೀವು ಮುಕ್ತಿಯನ್ನು ಹೊಂದುತ್ತೀರಿ ಎಂದು. ವಾರಣಾಸಿಯು ಕೇವಲ ನಾವು ತಿಳಿದಿರುವ ನಗರವಷ್ಟೆ ಅಲ್ಲ, ವಾರಣಾ ಅಂದರೆ ಕಣ್ಣು ಹುಬ್ಬುಗಳು,
ನಾಸಿ ಅಂದರೆ ಮೂಗು, ಇದನ್ನು ಸಂಧಿಸುವ ಸ್ಥಳವೇ ಆಜ್ಞಾ ಚಕ್ರದ ನಿಖರವಾದ ಜಾಗ. ಇದು ಸಾಂಕೇತಿಕವಾಗಿ, ಮುಕ್ತಿ ಹೊಂದಿದ ಅಥವಾ ಜ್ಞಾನೋದಯ ಹೊಂದಿದ ಸ್ಥಿತಿಯಲ್ಲಿನ ಅಹಂಭಾವದ ಸಾವನ್ನು ಪ್ರತಿನಿಧಿಸುತ್ತದೆ.
ಆಜ್ಞಾ ಚಕ್ರವು ಅಹಂಭಾವ, ಗಾಂಭೀರ್ಯತೆ, ನಮ್ಮ ಬಗ್ಗೆಯೇ ಅತಿಯಾಗಿ ಯೋಚಿಸುತ್ತಿರುವುದು ಮತ್ತು ಅದರಿಂದ ಬದುಕನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುವುದು, ಇವುಗಳನ್ನು ಕುರಿತಾಗಿದೆ.
ಗಾಂಭೀರ್ಯ ಅಂದರೇನು?
ಗಾಂಭೀರ್ಯ ಅಂದರೆ ಯಾವುದಕ್ಕೋ ಅನುಚಿತವಾದ ಪ್ರಾಮುಖ್ಯತೆಯನ್ನು ಬೇರೆಲ್ಲದ್ದರ ಹಾನಿ ಮಾಡಿಕೊಂಡು ನೀಡುವುದು. ಜೀವನವು ಕೇವಲ ಒಂದು ಪ್ರತಿ ನಿಮಿಷವೂ ಬಿಚ್ಚಿಕೊಳ್ಳುತ್ತಿರುವ ನಾಟಕವೆಂದು ನೋಡುವ ಅಶಕ್ಯತೆಯಿಂದ ಹುಟ್ಟುತ್ತದೆ. ಗಾಂಭೀರ್ಯವು ಜೀವನದಿಂದ ಮಿತಿ ಮೀತಿಮೀರಿದ ಅಪೇಕ್ಷಣೆಯ ಫಲಶ್ರುತಿ.
ಒಂದು ಚಿಕ್ಕಕತೆ:
ಇಬ್ಬರು ಹುಡುಗರು ಸಮುದ್ರದ ದಂಡೆಯ ಮೇಲೆ ಮರಳಿನ ಕೋಟೆಗಳನ್ನು ಕಟ್ಟುತ್ತಿದ್ದರು.
ಇದ್ದಕ್ಕಿದ್ದ ಹಾಗೆ ಇಬ್ಬರಲ್ಲೂ ಜಗಳ ಉಂಟಾಯಿತು ಮತ್ತು ಒಬ್ಬ ಹುಡುಗನಿಗೆ ಕೋಪ ಬಂದು ಮರಳಿನ ಕೋಟೆಯನ್ನು ಒದ್ದನು.
ಇನ್ನೊಬ್ಬ ಹುಡುಗನು ರಾಜನ ಬಳಿ ಹೋಗಿ ಈ ಗಂಭೀರ ಸಮಸ್ಯೆಯ ಬಗ್ಗೆ ದೂರಿದನು.
ರಾಜನು ಕೇವಲ ಮಣ್ಣಿನ ಕೋಟೆಗಳ ಬಗ್ಗೆ ಇಷ್ಟೊಂದು ದೊಡ್ಡ ಸಂಗತಿ ಮಾಡಿದುದಕ್ಕೆ ಆ ಹುಡುಗನತ್ತ ನಗಲಾರಂಭಿಸಿದನು.
ಆದರೆ ರಾಜನ ಸಲಹೆಗಾರನಾದ ಒಬ್ಬ ಝೆನ್ ಭಿಕ್ಷುವು ರಾಜನತ್ತ ನಗಲಾರಂಭಿಸಿದನು.
ಅವನು ರಾಜನನ್ನು ಕೇಳಿದನು “ನೀನು ಯುದ್ಧಗಳಲ್ಲಿ ಹೋರಾಡಿ ಕಲ್ಲಿನ ಕೋಟೆಗಳಿಗಾಗಿ ನಿನ್ನ ನಿದ್ರೆಗಳನ್ನು ಕಳೆದುಕೊಳ್ಳುತ್ತಿರುವಾಗ, ನೀನೇಕೆ ಈ ಹುಡುಗರು ಮಣ್ಣಿನ ಕೋಟೆಗಳಿಗಾಗಿ ಜಗಳವಾಡುತ್ತಿರುವಾಗ ನಗುತ್ತೀಯ?'' ಎಂದು.
ನಮ್ಮ ಗಾಂಭೀರ್ಯಗಳೆಲ್ಲಾ ಕೇವಲ ಮಣ್ಣಿನ ಕೋಟೆಗಳಿಗಾಗಿ! ಅದನ್ನು ಅರ್ಥಮಾಡಿಕೊಳ್ಳಿ. ಆ ಮಗುವಿಗೆ ಅಷ್ಟು ಚಿಕ್ಕ ವಯಸ್ಸಿನಲ್ಲಿ ಮಣ್ಣಿನ ಕೋಟೆಗಳು ಅಮೂಲ್ಯವಾಗಿ ಕಾಣಿಸಿತು, ಆದರೆ ನಮಗೆ ನಮ್ಮ ವಯಸ್ಸಿನಲ್ಲಿ ಕಲ್ಲಿನ ಕೋಟೆಗಳು ಅಮೂಲ್ಯವಾಗಿ ಕಾಣಿಸುತ್ತದೆ ಅಷ್ಟೆ. ಅದು ಮಣ್ಣಿನ ಕೋಟೆಯೇ ಇರಲಿ ಅಥವಾ ಕಲ್ಲಿನ ಕೋಟೆಯೇ ಇರಲಿ ಅದರ ಹಿಂದಿರುವ ಗಾಂಭೀರ್ಯತೆಯು ಒಂದೇ; ಕೇವಲ ಗಾಂಭೀರ್ಯತೆಯ ವಸ್ತುವು ಬೇರೆ. ಆದುದರಿಂದ ಮಕ್ಕಳು ಮರಳಿನ ಕೋಟೆಗಳಿಗಾಗಿ ಜಗಳವಾಡಿದರೆ ನಗಬೇಡಿ.
ಗಾಂಭೀರ್ಯತೆಯು ಮುಕ್ತತೆ ಮತ್ತು ಜೀವನದ ಸ್ವಾತಂತ್ರ್ಯಕ್ಕೆ ನಿಮ್ಮ ಮನಸ್ಸನ್ನು ಮುಚ್ಚುತ್ತದೆ ನಿಮ್ಮನ್ನು ಮಂಕಾಗಿ ಮತ್ತು ನಿರ್ಜಿವವಾಗಿಸುತ್ತದೆ. ನಿಮ್ಮ ಆಲೋಚನೆಯನ್ನು ಮೊಟಕುಗೊಳಿಸುತ್ತದೆ ಮತ್ತು ನಿಮಗೆ ಯಾವಾಗಲೂ ತಿಳಿದಿರುವಂತಹ ಪರಿಚಿತ ವಿನ್ಯಾಸಗಳಿಗೇ ಅಂಟಿಕೊಂಡಿರುವ ಹಾಗೆ ಮಾಡುತ್ತದೆ.
ಝೆನ್ ಮಠದಲ್ಲಿ ಶಿಷ್ಯರ ನಡುವೆ ಯಾರು ಅತ್ಯುತ್ತಮ ತೋಟವನ್ನು ಹೊಂದಿದ್ದಾರೆ ಎಂದು ಸ್ಪರ್ಧೆ ನಡೆಯಿತು.
ಒಬ್ಬ ಶಿಷ್ಯನು ತುಂಬಾ ಗಂಭೀರ ಸ್ವಭಾವದವನು.
ಅವನು ಸ್ಪರ್ಧೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡನು.
ಅವನು ತನ್ನ ತೋಟವನ್ನು ಅಚ್ಚುಕಟ್ಟಾಗಿ (neat) ಮತ್ತು ಸ್ವಚ್ಛವಾಗಿ (clean) ಮತ್ತು ಚೆನ್ನಾಗಿ ಗುಡಿಸಿ ಇಟ್ಟುಕೊಂಡನು. ಎಲ್ಲಾ ಹುಲ್ಲಿನ ಎತ್ತರವೂ ಒಂದೇ ಎತ್ತರದಲ್ಲಿದ್ದವು. ಎಲ್ಲಾ ಪೊದೆಗಳನ್ನೂ ಅಚ್ಚುಕಟ್ಟಾಗಿ ಕತ್ತರಿಸಲಾಗಿತ್ತು.
ಅವನು ತನಗೇ ಮೊದಲನೆಯ ಬಹುಮಾನ ಬರುವುದೆಂದು ಖಚಿತವಾಗಿದ್ದನು.
ಸ್ಪರ್ಧೆಯ ದಿನ ಗುರುಗಳು ಎಲ್ಲಾ ತೋಟಗಳ ಸುತ್ತಲೂ ಹೋಗಿ ಬಂದರು.
ಹಿಂತಿರುಗಿ ಬಂದು ತೋಟಗಳ ಸ್ಥಾನಗಳನ್ನು ತೀರ್ಮಾನಿಸಿದನು (ranked)
ಈ ಶಿಷ್ಯನ ತೋಟಕ್ಕೆ ಕನಿಷ್ಠ ಸ್ಥಾನವು ದೊರಕಿತು.
ಪ್ರತಿಯೊಬ್ಬರಿಗೂ ಆಘಾತವುಂಟಾಯಿತು.
ಶಿಷ್ಯನು ಗುರುಗಳ ಬಳಿ ಹೋಗಿ ಇದರ ಬಗ್ಗೆ ಪ್ರಶ್ನಿಸಿದನು.
ಅವನು ಕೇಳಿದನು "ಗುರುಗಳೇ, ನನ್ನ ತೋಟದಲ್ಲಿ ಏನು ತಪ್ಪಿದೆ? ನನ್ನನ್ನು ಕನಿಷ್ಠ ಸ್ಥಾನಕ್ಕೆ ನಿಗದಿಪಡಿಸಿದ್ದು ಏಕೆ?" ಎಂದು.
ಗುರುಗಳು ಅವನತ್ತ ನೋಡಿ ಕೇಳಿದರು “ಸತ್ತಿರುವ ಎಲೆಗಳೆಲ್ಲಾ ಎಲ್ಲಿ?'' ಎಂದು.
ಒಂದು ತೋಟವನ್ನು ಆ ರೀತಿ ಇಟ್ಟುಕೊಂಡಿದ್ದರೆ ಇನ್ನು ಬದುಕಿರುವುದಿಲ್ಲ! ಅದು ಸತ್ತಿದೆ.
ಗಾಂಭೀರ್ಯತೆಯು ಸ್ವಯಂ ಸ್ಪೂರ್ತಿಯನ್ನು (spontaneity) ಸಾಯಿಸುತ್ತದೆ. ಅದು ಸೃಜನಾತ್ಮಕತೆಯನ್ನು (creativity) ನಾಶ ಮಾಡುತ್ತದೆ.
ನೀವು ಯಾವುದೊ ಕೆಲಸವನ್ನು ಆರಾಮವಾಗಿ ಮತ್ತು ಹಗುರವಾಗಿ ಮಾಡಿದರೆ, ನಿಮ್ಮ ಆಲೋಚನೆ ಮತ್ತು ನಿರ್ಧಾರ ಮಾಡುವ ಶಕ್ತಿಯು ತನ್ನಂತಾನೇ ವೃದ್ಧಿಸುತ್ತದೆ, ಎಂದು ವಿಜ್ಞಾನವು ರುಜುವಾತು ಮಾಡಿದೆ (proved). ಅದೇ ಕೆಲಸವನ್ನು ಗಂಭೀರವಾಗಿ ಮಾಡಿದರೆ ನಿಮ್ಮ ಮನಸ್ಸನ್ನು ಮಂಕಾಗಿಸುತ್ತದೆ (dulls).
ನಾನು ಹೇಳುತ್ತೇನೆ: ನಮ್ಮ ಎಲ್ಲ ಗಂಭೀರತೆಯು ಬರಿಯ ಅಸ್ವಸ್ಥತೆಯು. ನಾನು ಎಲ್ಲ ಎಂದರೆ ಎಲ್ಲಾ ಅಷ್ಟೆ, ನಮ್ಮ ಎಲ್ಲಾ ಅಸ್ವಸ್ಥತೆಯು ಗಾಂಭೀರ್ಯತೆಯಿಂದ ಹುಟ್ಟುತ್ತದೆ. ಗಾಂಭೀರ್ಯತೆಯು ಅಸ್ವಸ್ಥತೆಯನ್ನು ಹುಟ್ಟಿ ಹಾಕಿದೆ ಮತ್ತು ಅಸ್ವಸ್ಥತೆಯು ಗಾಂಭೀರ್ಯವನ್ನು ಹುಟ್ಟಿ ಹಾಕಿದೆ.
ಒಂದು ರಾತ್ರಿ ಒಬ್ಬ ವ್ಯಕ್ತಿಯು ನನಗೆ ದೂರವಾಣಿ ಕರೆಯನ್ನು (Phone) ಮಾಡಿ ಅಳಲು ಮೊದಲು ಮಾಡಿದನು.
ಅವನು “ಸ್ವಾಮೀಜಿ, ನಿಮ್ಮ ಪಾದಗಳ ಮೇಲೆ ಬೀಳುತ್ತೇನೆ! ದಯವಿಟ್ಟು ನನಗೆ ಸಹಾಯ ಮಾಡಿ. ನಾನು ಅಷ್ಟೊಂದು ಖಿನ್ನನಾಗಿದ್ದೇನೆ (depressed) ನಾನು ನನ್ನ ಬದುಕನ್ನು ಕೊನೆಗೊಳಿಸಿಕೊಳ್ಳುತ್ತಿದ್ದೇನೆ!'' ಎಂದು ಮುಂತಾಗಿ ಹೇಳಿದನು.
ನಾನು ಅವನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದೆ, ಮತ್ತು ಕೊನೆಯಲ್ಲಿ ಹೇಳಿದೆ, “ನೀನೇಕೆ ನಾಳೆ ಬೆಳಿಗ್ಗೆ ಆಶ್ರಮಕ್ಕೆ ಬಂದು ಕೆಲವು ದಿನಗಳನ್ನು ನನ್ನೊಡನೆ ಕಳೆಯಬಾರದು? ನಾವು ಏನು ಮಾಡಬೇಕು ನೋಡೋಣ'' ಎಂದು.
ಅವನು “ನಾಳೆಯೇ ಸ್ವಾಮೀಜಿ? ಓಹ್.... ನಾಳೆ ನಾನು ಕಛೇರಿಗೆ ಹೋಗಬೇಕು... ನಾನು ವಾರಾಂತ್ಯದಲ್ಲಿ ಬರಲೇ?'' ಎಂದು.
ನಮ್ಮಲ್ಲಿ ಬಹಳಷ್ಟು ಮಂದಿ ಈ ತರಹವೇ - ನಮ್ಮ ಸಮಸ್ಯೆಗಳು ಎಂದು ಹೇಳಿಕೊಳ್ಳುವುದರ ಬಗ್ಗೆ ಅನಾವಶ್ಯಕವಾಗಿ ಉದ್ರೇಕಗೊಳ್ಳುವುದು. ಕೇವಲ ಒಮ್ಮೆ ಕುಲುಕಾಡಿಸಿದರೆ ಸಾಕು, ನಮ್ಮ ಗಾಂಭೀರ್ಯತೆಯು ಬಿದ್ದುಬಿಡುತ್ತದೆ. ನಾವು ವಾಸ್ತವಿಕತೆಗೆ (reality) ಎಚ್ಚಿತ್ತರೆ ನಮ್ಮ ಸಮಸ್ಯೆಗಳು ವಾಸ್ತವದಲ್ಲಿ ಎಷ್ಟು ನಗಣ್ಯ ಎಂದು ನೋಡುತ್ತೇವೆ.
ನೀವು ಯಾವುದನ್ನಾದರೂ ಬಹಳ ಗಂಭೀರವಾಗಿ ಮಾಡಿದರೆ, ನೀವು ಫಲಿತಾಂಶದ ಬಗ್ಗೆ ಬಹಳ ಚಿಂತಿತರಾಗಿದ್ದರೆ, ನೀವು ಸರಿಯಾದ ಮಟ್ಟದಲ್ಲಿ ನಿರ್ವಹಿಸಲು ನೀವೇ ಬಿಡುವುದಿಲ್ಲ.
ನೀವು ಯೋಜನೆಗಳನ್ನೇನೋ ಮಾಡಬೇಕು. ನೀವು ಮುಂದಾಲೋಚನೆ ಮಾಡಬೇಕು. ಆದರೆ ಅದನ್ನು ಪ್ರಾಮಾಣಿಕವಾಗಿ ಮಾಡಿ, ಗಂಭೀರವಾಗಿ ಅಲ್ಲ. ಗಾಂಭೀರ್ಯತೆಯು ಪ್ರಾಮಾಣಿಕತೆಗೆ ಸಮ ಎಂದಲ್ಲ. ಪ್ರಾಮಾಣಿಕತೆಯು ಒಂದು ಕಾರ್ಯವನ್ನು ಉತ್ಸಾಹದಿಂದ ಮತ್ತು ಸಚೇತನ (youthfulness) ವಾಗಿ ಕೇಂದ್ರೀಕರಿಸುವುದಾಗಿದೆ. ಪ್ರಾಮಾಣಿಕತೆಯು ಆ ಕಾರ್ಯಕ್ಕೆ ನೀವು ಫಲಿತಾಂಶಕ್ಕೆ ಹೆಚ್ಚಾಗಿ ಚಿಂತಿಸದೆ ನಿಮ್ಮ ಅತ್ಯುತ್ತಮವಾದುದನ್ನು ನೀಡುವುದಾಗಿರುತ್ತದೆ.
ನೀವು ಗಂಭೀರವಾಗಿದ್ದರೆ, ನೀವು ಆನಂದಿಸುವುದಿಲ್ಲ, ನಗುವುದಿಲ್ಲ. ನೀವು ಗಂಭೀರವಾಗಿದ್ದರೆ ಹೇಗೆ ತಾನೆ ನಗಬಲ್ಲಿರಿ? ಅವು ಒಂದು ಇದ್ದರೆ ಇನ್ನೊಂದು ಇರುವುದಿಲ್ಲ. ನೀವು ಗಂಭೀರವಾಗಿ ಇರುತ್ತೀರ, ಇಲ್ಲವೆ ನಗುತ್ತಿರುತ್ತೀರ, ನೀವು ಎರಡನ್ನೂ ಒಂದೇ ಸಮಯದಲ್ಲಿ ಮಾಡಲಾಗುವುದಿಲ್ಲ. ಏಕೆಂದರೆ ಗಾಂಭೀರ್ಯತೆಯ ನಿರೂಪಣೆಯೇ ಹಾಗಿದೆ.
ಆದರೆ ನೀವು ಪ್ರಾಮಾಣಿಕರಾಗಿದ್ದರೆ, ನೀವು ನಗುತ್ತಾ ನಲಿದಾಡುತ್ತಿರುತ್ತೀರಿ. ನಿಮ್ಮ ಕೈಲಿರುವ ಕೆಲಸವನ್ನು ಹಾಗೆಯೇ ನಲಿದಾಡುತ್ತ ಸೃಜನಾತ್ಮಕವಾಗಿ ಮುಂದುವರಿಸುತ್ತೀರಿ ಮತ್ತು ಆ ಕೆಲಸವು ಸಂತೋಷದಾಯಕವಾಗಿಯೇ ಮಾಡಿ ಮುಗಿಸಲಾಗುತ್ತದೆ. ನೀವು ಕಾರ್ಯವನ್ನು ಮಾಡಿ ಮುಗಿಸುವುದರಿಂದ ನೀವು ಪ್ರಾಮಾಣಿಕರಾಗಿ ಇರುತ್ತೀರಿ.
ಪ್ರಾಮಾಣಿಕತೆಯಿಂದ ಚಿಂತೆಯಿರುವುದಿಲ್ಲ, ಕೇವಲ ಉತ್ಸಾಹ ಮಾತ್ರ ಇರುತ್ತದೆ.
ನೀವು ಗಂಭೀರವಾಗಿದ್ದರೆ, ನೀವು ಅಹಂಭಾವದಿಂದ ಇರುತ್ತೀರಿ, ಏಕೆಂದರೆ ನೀವು ಎಲ್ಲವೂ ಕೇವಲ ಒಂದು ವಿಶ್ವದ (cosmic) ನಾಟಕವೆಂದು ನೋಡಲು ವಿಫಲರಾಗುತ್ತೀರಿ. ನೀವು ಬೇರೆಯ ಅಸ್ತಿತ್ವದವರೆಂದು ತುಂಬಾ ಹೆಚ್ಚಾಗಿ ಭಾವಿಸುತ್ತೀರಿ, ಬಹಳವಾಗಿ ‘ನಾನು’ ಎಂದು ಭಾವಿಸುವುದರಿಂದ ನೀವು ಗಂಭೀರವಾಗಿ ಇರುತ್ತೀರ. ನೀವು ಎಲ್ಲವೂ ಕೇವಲ ಒಂದು ನಾಟಕವೆಂದು ಅರ್ಥಮಾಡಿಕೊಂಡರೆ ನೀವು ಗಂಭೀರವಾಗಿ ಇರುವುದೇ ಇಲ್ಲ. ಈ ತಿಳುವಳಿಕೆಯು ಒಂದು ಆಳವಾದ ಮಟ್ಟದಲ್ಲಿ ಆದರೆ ನೀವು ಕೆಲಸಗಳನ್ನು ಕೇವಲ ವಿಶ್ವದ ನಾಟಕ ಅಥವಾ ಅಸ್ತಿತ್ವದೊಂದಿಗೆ ಹೊಂದಿಕೊಂಡ ಸಂತೋಷದೊಂದಿಗೆ, ಮಾಡುತ್ತೀರ. ಮತ್ತು ಅದನ್ನು ಈ ರೀತಿ ಮಾಡಿದರೆ, ನೀವು ಗಂಭೀರವಾಗಿರುವುದಿಲ್ಲ ನೀವು ಪ್ರಾಮಾಣಿಕವಾಗಿ ನಿಮ್ಮ ಪಾತ್ರವನ್ನು ಅಭಿನಯಿಸುತ್ತಿದ್ದೀರ, ಅಷ್ಟೆ. ನೋಡಿ ಸಮಯಾನುಸಾರ ಯೋಜನೆ ಮತ್ತು ಮಾನಸಿಕ ಯೋಜನೆ ಎಂದು ಎರಡು ವಿಷಯಗಳಿವೆ.
ಸಮಯಾನುಸಾರ ಯೋಜನೆಯೆಂಬುದು ಸಮಯಪ್ರಮಾಣದ ಯೋಜನೆ. ನೀವು ನಿರ್ಧರಿಸುತ್ತೀರಿ: ಇಂತಿಂತಹ ಸಮಯದಲ್ಲಿ ನೀವು ಏಳುತ್ತೀರ, ನಿಮ್ಮ ದಿನ ಬೆಳಗಿನ ಕಾರ್ಯಕ್ರಮಗಳನ್ನು ಒಂದು ನಿಗದಿತ ಸಮಯದಲ್ಲಿ ಮುಗಿಸುತ್ತೀರ, ನಿಮ್ಮ ಕಛೇರಿಯನ್ನು ಒಂದು ನಿಗದಿತ ಸಮಯದಲ್ಲಿ ತಲುಪುತ್ತೀರ, ಆ ದಿನದ ಕೆಲವು ನಿರ್ದಿಷ್ಟ ಕಾರ್ಯಗಳನ್ನು ಕಛೇರಿಯಲ್ಲಿ ಮಾಡಿಸುತ್ತೀರ, ಎಂದು. ಇದು ಸರಿಯಾಗಿದೆ. ಇದು ನಿಮ್ಮ ಕೆಲಸವನ್ನು ಅತ್ಯುತ್ತಮ ಫಲವನ್ನು ನೀಡುವಂತೆ ವ್ಯವಸ್ಥಿತವಾಗಿ ಮಾಡಬಲ್ಲಂತಹ ವ್ಯಾವಹಾರಿಕವಾದ ವಿಧಾನ (practical). ಇಂತಹ ಯೋಜನೆಯು ಪ್ರಾಮಾಣಿಕವಾದ ಕಾರ್ಯದಿಂದ ಇದ್ದರೆ ನಿಮ್ಮನ್ನು ಸಂತೋಷದಿಂದ ಹೆಚ್ಚಿನ ಸಂತೋಷಕ್ಕೆ ಕೊಂಡೊಯ್ಯುತ್ತದೆ.
ಅದೇ ಮಾನಸಿಕ ಯೋಜನೆಯೆಂಬುದು ಸಮಯಕ್ಕಾಗಲೀ ಅಥವಾ ಸ್ಥಳಕ್ಕಾಗಲೀ ಸಂಬಂಧವಿಲ್ಲದೆ ನಿಮ್ಮ ತಲೆಯಲ್ಲಿ ಮಾಡುವ ಯೋಜನೆ. ಇದು ಕೇವಲ ಸಮಯಾನುಸಾರದ ಯೋಜನೆಯನ್ನು ಮೀರಿ ಸತತವಾದ ಗಂಭೀರವಾದ ಯೋಜನೆಯನ್ನು ನಿಮ್ಮ ತಲೆಯಲ್ಲಿ ಮಾಡುತ್ತಿರುವಂತಹದು. ಇದು ನಿಮ್ಮನ್ನು ನೀವು ಗಂಭೀರಸ್ಥರು ಮತ್ತು ಕರ್ತವ್ಯ ತತ್ಪರರು (dutiful) ಎಂದು ಅಂದುಕೊಳ್ಳುವಂತೆ ಇಟ್ಟಿರುತ್ತದೆ. ವಾಸ್ತವಿಕವಾಗಿ ಇದು ನಕಾರಾತ್ಮಕ ಸಂಕೀರ್ಣವನ್ನು (complex negativity) ಆದಾಗಲೇ ಮಾಡಿರುವ ಸಮಯಾನುಸಾರ ಯೋಜನೆಗೆ ಅನ್ವಯಿಸುವುದಲ್ಲದೆ ಬೇರೇನೂ ಅಲ್ಲ. ನೀವು ನಿಮ್ಮ ಯೋಜನೆಯನ್ನು ವಿಶ್ಲೇಷಣೆ ಮಾಡುತ್ತಲೇ ಇರುತ್ತೀರ ಮತ್ತು ಪದೇ ಪದೇ ನಿಮ್ಮ ಯೋಜನೆಯನ್ನು ವಿಶ್ಲೇಷಿಸುತ್ತಿರುವುದರಿಂದ ನಿಮ್ಮ ಚೈತನ್ಯವು ವ್ಯಯವಾಗಿ ನೀವು ಮಂಕಾದ ಸ್ಥಿತಿಯನ್ನು ಹೊಂದುತ್ತೀರ (dull state).
ಮಾನಸಿಕ ಯೋಜನೆಯು ನಿಮ್ಮ ಅಹಂಭಾವವನ್ನು ಮೇಲಕ್ಕೆ ಎತ್ತುತ್ತದೆ (boost) ಇದು ನೀವು ದೊಡ್ಡವರು ಮತ್ತು ಯೋಗ್ಯರು ಎಂದು ಭಾವಿಸುವಂತೆ ಮಾಡುತ್ತದೆ. ಇದು ನೀವು ಗಂಭೀರವಾಗಿರಲು ಸಹಾಯ ಮಾಡುತ್ತದೆ. ನೀವು ಬಹು ಘನವಾದ ಕಾರ್ಯಗಳನ್ನು ನಿಭಾಯಿಸುತ್ತಿರುವ ಹಾಗೆ ಭಾವಿಸುವಂತೆ ಮಾಡುತ್ತದೆ. ಅದರ ಬಗ್ಗೆ ಚಿಂತೆ ಮಾಡಿಕೊಂಡು ಅದು ನಡೆಯುವಂತಾಗಲು ಎಲ್ಲವೂ ನಿಮ್ಮ ಕೈಗಳಲ್ಲೇ ಇದೆ ಎಂಬ ಭಾವನೆಯನ್ನು ಉಂಟುಮಾಡುತ್ತದೆ. ಮಾಡಿಸಬೇಕಿರುವ ಪ್ರತಿ ಚಿಕ್ಕ ವಿಚಾರಗಳಲ್ಲೂ ನೀವು ಅತ್ಯಾಸೆಯಿಂದ (hanking) ಇರುತ್ತೀರ ಮತ್ತು ಅದನ್ನು ಮಾಡಿಸುವುದರಲ್ಲೇ ನಿಮ್ಮ ಸಂತೋಷವು ಇದೆ ಎಂದು ಭಾವಿಸುತ್ತೀರ. ಇದೇ ಮಾನಸಿಕ ಯೋಜನೆ.
ನಾನು ಹೇಳುತ್ತೇನೆ: ನಿಮ್ಮ ಸಂತೋಷವನ್ನು ಮುಂದೂಡಲು, ಜೀವನವನ್ನು ಮುಂದೂಡಲು, ನಿಮ್ಮ ಜೀವನವನ್ನು ಅನುಭವಿಸಲು ಯಾವುದೋ ಒಂದು ಘಟಿಸಲು ಕಾಯುತ್ತಿರಲು ವಾಸ್ತವವಾಗಿ ಇದು ಒಂದು ಮಾರ್ಗ ಎಂದು.
ನಾವು ಸದಾ ಯೋಚಿಸುತ್ತಿರುತ್ತೇವೆ, ''ನಾನು ಮದುವೆ ಮಾಡಿಕೊಂಡರೆ, ನನ್ನ ಬದುಕು ನೆಲೆಗೊಳ್ಳುತ್ತದೆ. ಆದುದರಿಂದ ಮದುವೆ ಮಾಡಿಕೊಳ್ಳುವತ್ತ ಕೆಲಸ ಮಾಡೋಣ.
ನನಗೆ ಇಬ್ಬರು ಮಕ್ಕಳಾದರೆ ನನ್ನ ಬದುಕು ಸಾರ್ಥಕವಾಗುತ್ತದೆ.
ಒಮ್ಮೆ ನಾನು ನಿವೃತ್ತಿ ಹೊಂದಿದರೆ, ನಾನು ಶಾಂತಿಯಿಂದಿರುತ್ತೇನೆ'' ಎಂದು.
''ನಾನು ಈಗ ಗಂಭೀರವಾಗಿರುತ್ತೇನೆ, ನಂತರ ಸಂತೋಷವಾಗಿರುತ್ತೇನೆ'' ಎಂಬುದು ಒಂದು ಮನೋವೃತ್ತಿ (attitude).
ಕೊನೆಯಲ್ಲಿ ನೀವು ಸಂತೋಷವಾಗಿ ಈಗಲೂ ಇರುವುದಿಲ್ಲ ಅಥವಾ ನಂತರವೂ ಇರುವುದಿಲ್ಲ. ನೀವು ಯಾವ ಕಾಲದಲ್ಲೂ ಸಂತೋಷವಾಗಿರಲು ಸಾಮರ್ಥ್ಯವನ್ನು ಕಳೆದುಕೊಳ್ಳುತ್ತೀರ.
ಸರಳತೆಯಿಂದ, ಸ್ವಯಂ ಸ್ಪೂರ್ತಿಯಿಂದ ಮತ್ತು ಮುಗ್ಧತೆಯಿಂದ ಸುಮ್ಮನೆ ಬದುಕಿರಿ.
ಪರಿಪೂರ್ಣತೆಯ (perfection) ಬಗ್ಗೆ ಬಹಳವಾಗಿ ಮುಳುಗಿರಬೇಡಿ. ನಾನು ಹೇಳುತ್ತೇನೆ: ಪರಿಪೂರ್ಣತೆಯು ನಿಮ್ಮನ್ನು ನರರೋಗಿಯನ್ನಾಗಿ ಮಾಡುತ್ತದೆ. ಯಾವುದನ್ನೇ ಮಾಡಬೇಕಾದರೂ ಇಡಿಯಾಗಿ (wholly) ಮತ್ತು ಪೂರ್ಣವಾಗಿ (totally) ಮಾಡಿ. ಆಗ ತನ್ನಷ್ಟಕ್ಕೆ ತಾನೆ, ನೀವು ಏನೇ ಮಾಡಿದರೂ ಅದು ಪೂರ್ಣವಾಗಿ ಇರುತ್ತದೆ ಮತ್ತು ನೀವು ಪರಿಪೂರ್ಣತೆಯ ಬಗ್ಗೆ ಚಿಂತಿಸಬೇಕಾಗಿರುವುದೇ ಇಲ್ಲ.
ಪರಿಪೂರ್ಣತೆಯೆನ್ನುವುದು ಯಾವಾಗಲೂ ನಿಮ್ಮ ಮನಸ್ಸಿನ ಯಾವುದೋ ವಿಷಯ. ಅದು ನಿಮ್ಮ ಗುರಿಯಾಗಿಬಿಡುತ್ತದೆ. ನೀವು ಅದನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತೀರ. ನೀವು ಅದನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡಿದರೆ ಅದು ನಿರ್ಜೀವವಾಗಿ ಲೌಕಿಕವಾಗಿಬಿಡುತ್ತದೆ. ಆದರೆ ನೀವು ಪೂರ್ಣವಾಗಿ ಇದ್ದರೆ, ನೀವು ನಿಮ್ಮ ಹೃದಯದಲ್ಲಿ ಸ್ಥಾಪಿತಗೊಂಡಿರುತ್ತೀರ, ಮತ್ತು ಅದು ಒಂದು ಆಳವಾದ ಅನುಭವವಾಗುತ್ತದೆ. ಆಗ ಅದರಿಂದ ಬರುವುದು ಸುಂದರವಾಗಿರಲೇ ಬೇಕು ಮತ್ತು ಅದು ನಿಮಗೆ ಸಂತೋಷವನ್ನು ಸಹ ನೀಡುತ್ತದೆ. ಆಗ, ನೀವು ಏನೇ ಮಾಡಿದರೂ, ನೀವು ಅಸ್ತಿತ್ವದೊಂದಿಗೆ ಹೊಂದಿಕೊಂಡಿರುತ್ತೀರಿ (tune).
ಪರಿಪೂರ್ಣತೆಯು ನಿಮಗೆ ಸಂತೋಷವನ್ನು ನೀಡುವುದೇ ಇಲ್ಲ. ಅದು ಕೇವಲ ನಿಮ್ಮ ಅಹಂಭಾವವನ್ನು ಪೂರೈಸುತ್ತದೆ. ನೀವು ಪೂರೈಕೆ ಹೊಂದಿದ ಭಾವನೆಯು ಕೊನೆಯಲ್ಲಿ ಆದರೂ ಸಹ, ಅದು ಕೇವಲ ನಿಮ್ಮ ಅಹಂಭಾವವನ್ನು ಪೂರೈಸಿದ್ದಷ್ಟೆ. ನಿಮ್ಮ ಆತ್ಮದ ಪೂರೈಕೆಯಂತೂ ಅಲ್ಲವೇ ಅಲ್ಲ. ಸ್ಪಷ್ಟವಾಗಿರಲಿ: ಪರಿಪೂರ್ಣತೆಯ ಬಗ್ಗೆ ಇರುವವರು ಅತಿ ದೊಡ್ಡ ಅಹಂಭಾವದವರು. ಅವರು ಪೂರ್ಣತೆಯ ಆಯಾಮವನ್ನು ಕಳೆದುಕೊಳ್ಳುವರು. ಒಂದು ವಿಷಯ ತಿಳಿದಿರಿ. ಪೂರ್ಣತೆಯು ಸಾಧ್ಯವಾಗುವುದು ನೀವು ಅದರೊಳಗೆ ಆಳವಾಗಿ ಹೊಕ್ಕಾಗ. ಪರಿಪೂರ್ಣತೆಯು ಸಾಧ್ಯವಾಗುವುದೇ ಇಲ್ಲ. ಏಕೆಂದರೆ ಅದು ನಿಮ್ಮ ಮನಸ್ಸಿನಲ್ಲಿ ಇರುತ್ತದೆ ಮತ್ತು ನಿಮ್ಮ ಮನಸ್ಸು ಪರಿಪೂರ್ಣತೆಯ ನಿರೂಪಣೆಯನ್ನು ಬದಲಾಯಿಸುತ್ತಾ ಇರುತ್ತದೆ.
ಮತ್ತೊಂದು ವಿಷಯ: ತಪ್ಪುಗಳನ್ನು ಮಾಡಲು ಧೈರ್ಯದಿಂದಿರಿ. ಗಂಭೀರ ವಾಗಿರುವ ಜನರು ತಪ್ಪು ಮಾಡಲು ಸದಾಕಾಲವೂ ಹೆದರುತ್ತಾರೆ. ಅವರು ತಮ್ಮನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅವರು ತಮ್ಮ ಬಗ್ಗೆ ಬಹಳವಾಗಿ ಅಂದುಕೊಂಡಿರುತ್ತಾರೆ. ತಪ್ಪುಗಳನ್ನು ಮಾಡಿದಾಗ ಯಾರಾದರೂ ಅವನ್ನು ಅವರಿಗೆ
ಬೆಟ್ಟುಮಾಡಿ ತೋರಿಸುವಂತೆ ಆಗುವುದು ಅವರಿಗೆ ತುಂಬಾ ಅತಿ ಎನಿಸುತ್ತದೆ. ನಾನು ಹೇಳುತ್ತೇನೆ, ವಾಸ್ತವವಾಗಿ ಸಣ್ಣ ತಪ್ಪುಗಳನ್ನು ಮಾಡಲು ಹೆದರುವ ಈ ಜನರು ಕೊನೆಯಲ್ಲಿ ದೊಡ್ಡ ತಪ್ಪುಗಳನ್ನು ಎಸಗುತ್ತಾರೆ!
ತಪ್ಪುಗಳನ್ನು ಮಾಡುವುದರಲ್ಲಿ ತಪ್ಪೇನಿದೆ? ನೀವು ಹೇಳುತ್ತೀರಿ, “ಸ್ವಾಮೀಜಿ, ನಾನು ನನ್ನ ಕೆಲಸದಲ್ಲಿ ತಪ್ಪುಗಳನ್ನು ಮಾಡುವ ಹಾಗಿಲ್ಲ. ಆದ್ದರಿಂದಲೇ ನಾನು ಗಂಭೀರವಾಗಿರುವುದು'' ಎಂದು. ನೀವು ಹೇಳುವುದು ನಿಜವಿರಬಹುದು; ನಿಮ್ಮ ಕೆಲಸವು ನೀವು ತಪ್ಪುಗಳನ್ನು ಮಾಡಲು ಅವಕಾಶ ನೀಡದೇ ಇರಬಹುದು, ಆದರೆ ನಾನು ಆ ಅಂಶವನ್ನು ಇಲ್ಲಿ ಹೇಳಲು ಪ್ರಯತ್ನಿಸುತ್ತಿಲ್ಲ. ನೀವು ಒಂದು ತಪ್ಪನ್ನು ಮಾಡಿದರೆ, ಜನಗಳು ನಿಮಗೆ ಅದನ್ನು ಬೊಟ್ಟು ಮಾಡಿ ತೋರಿಸುತ್ತಾರೆ, ಮತ್ತು ನೀವು ಅದನ್ನು ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ನಿಮ್ಮ ಅಹಂಭಾವವು ಘಾಸಿಗೊಳ್ಳುತ್ತದೆ ಮತ್ತು ನೀವು ಇದಕ್ಕೆ ಬಹಳ ಸೂಕ್ಷ್ಮವಾಗಿರುತ್ತೀರಿ; ನಿಮಗೆ ಇದು ತಿಳಿದಿದೆ. ಆದ್ದರಿಂದ ನಿಮ್ಮ ಅಹಂಭಾವವು ಘಾಸಿಗೊಳ್ಳುವುದನ್ನು ನಿವಾರಿಸಲು, ನೀವು ತಪ್ಪುಗಳನ್ನೇ ಮಾಡದಿರಲು ನಿಮಗೆ ಸಾಧ್ಯವಿದ್ದಷ್ಟೂ ಪ್ರಯತ್ನಿಸುತ್ತೀರಿ.
ನೀವು ಅಷ್ಟೊಂದು ಅರಿವಿಲ್ಲದೆಯೇ ಮತ್ತು ನಿರಂತರವಾಗಿ ನಿಮ್ಮ ಅಹಂಭಾವವನ್ನು ಕಾಯುತ್ತಿರಲು ಯೋಜಿಸುತ್ತಿರುತ್ತೀರಿ. ನೀವು ಸುಳ್ಳನ್ನು ಹೇಳುತ್ತಿದ್ದೀರಿ ಎಂದಲ್ಲ, ಇಲ್ಲ! ಅದು ಕೇವಲ ನಿಮ್ಮ ವ್ಯವಸ್ಥೆಯು ಕೆಲಸ ಮಾಡುವ, ನಿಮ್ಮ ಅಹಂಭಾವವು ಕೆಲಸ ಮಾಡುವ ಸೂಕ್ಷ್ಮತೆಯ ಬಗ್ಗೆ ಅರಿವಿಲ್ಲದೇ ಇರುವುದು. ಆದರೆ ನೀವು ಆಳವಾಗಿ ವಿಶ್ಲೇಷಿಸಿ ನೋಡಿದರೆ, ನಾನು ಏನು ಹೇಳುತ್ತಿದ್ದೇನೆಂಬುದು ನಿಮಗೆ ಅರ್ಥವಾಗುತ್ತದೆ.
ನೀವು ತಪ್ಪುಗಳನ್ನು ಮಾಡುವುದರಲ್ಲಿ ತಪ್ಪೇನಿಲ್ಲ. ನಿಜವಾಗಿಯೂ, ಕೆಲವು ತಪ್ಪುಗಳನ್ನು ಮಾಡುವುದರಿಂದ, ತಪ್ಪುಗಳನ್ನು ಮಾಡುವುದನ್ನು ನಿವಾರಿಸಲು ಹೇಗೆ ಎಂಬುದು ನಿಮಗೆ ನಿಚ್ಚಳವಾಗಿ ಗೊತ್ತಾಗುತ್ತದೆ, ಏಕೆಂದರೆ ನೀವು ಪ್ರಯೋಗದಿಂದ ಅದನ್ನು ಅರ್ಥಮಾಡಿಕೊಂಡಿದ್ದೀರಿ. ತಪ್ಪುಗಳಿಂದ ನೀವೆಷ್ಟು ಕಲಿಯುತ್ತೀರೋ, ತಪ್ಪುಗಳನ್ನು ಹೇಗೆ ಮಾಡಕೂಡದು ಎಂಬುದನ್ನೂ ತಿಳಿಯುತ್ತೀರಿ.
ತಪ್ಪುಗಳನ್ನು ಹೇಗೆ ಮಾಡಕೂಡದು ಎಂದು ತಿಳಿದುಕೊಂಡಿರುವುದು ಒಂದು ಬಹು ಮುಖ್ಯವಾದ ವಿಷಯ. ಆಗಲೇ ನೀವು ಅದರ ಎರಡೂ ಬದಿಯನ್ನು ನೋಡಿರುತ್ತೀರ, ಆಗಲೇ ನೀವು ಅದರ ಎರಡೂ ಬದಿಯನ್ನು ಅನುಭವದಿಂದ ಪರಿಶೋಧಿಸಿರುತ್ತೀರ. ಇಲ್ಲದಿದ್ದರೆ ನಿಜವಾಗಿಯೂ ಅವಕಾಶವಿಲ್ಲದ (not afford-able) ಸಂದಿಗ್ಧ ಪರಿಸ್ಥಿತಿಯಲ್ಲಿ ನೀವು ತಿಳಿಯದೆ ಇರುವ ಬದಿಗೆ ಬೀಳುವ ಅಪಾಯವು ಸದಾ ಇರುತ್ತದೆ.
ಒಂದೇ ಒಂದು ವಿಷಯ. ಮಾಡಿದ ತಪ್ಪನ್ನೇ ಮತ್ತೆ ಮಾಡಬೇಡಿ! ನಿಮ್ಮ ಮನಸ್ಸು ಯಾವಾಗಲೂ ನಮೂನೆಗಳನ್ನು ಪುನರಾವರ್ತನೆ ಮಾಡುತ್ತಿರುತ್ತದೆ. ಅವುಗಳನ್ನು ಕೂಡ ತಪ್ಪುಗಳಿಂದಲೇ ಮಾಡಬೇಡಿ. ಹೊಸ ತಪ್ಪುಗಳನ್ನು ಮಾಡಿ! ಮತ್ತು ಉತ್ತಮದಿಂದ ಉತ್ತಮವಾದ ಅರಿತುಕೊಳ್ಳುವಿಕೆಗೆ ಮುಂದುವರಿಯಿರಿ!
ನಾನು ಬೇಕೆಂದೇ ತಪ್ಪುಗಳನ್ನು ಮಾಡಿ ಎಂದು ಹೇಳುತ್ತಿಲ್ಲ. ಅದು ಮತ್ತೊಮ್ಮೆ ಮೂರ್ಖತನವಾಗುತ್ತದೆ. ನಾನು ಹೇಳುತ್ತಿರುವುದಿಷ್ಟೆ, ಕಾರ್ಯಗಳನ್ನು ಅದು ತಪ್ಪಾಗಬಹುದೇನೋ ಎಂಬ ಚಿಂತೆಯಿಲ್ಲದೆ ನಿಮ್ಮ ಅತ್ಯುತ್ತಮ ಬುದ್ಧಿವಂತಿಕೆಯಿಂದ ಮತ್ತು ಉತ್ಸಾಹದಿಂದ ಮಾಡಿರಿ. ಅದು ತಪ್ಪಾಗಿರಬಹುದೇನೋ ಎಂದು ನೀವು ಚಿಂತೆ ಮಾಡಿದ ಕ್ಷಣವೇ, ನೀವು ನಿಮ್ಮ ಅಹಂಭಾವಕ್ಕೆ ಪೆಟ್ಟಾಗುವ ಬಗ್ಗೆ ಚಿಂತಿಸುತ್ತೀರಿ.
ನೀವು ನಿಮ್ಮ ಅಹಂಭಾವಕ್ಕೆ ಪೆಟ್ಟಾಗುವ ಬಗ್ಗೆ ಚಿಂತಿಸದಿದ್ದರೆ (concerned) ಯಾವುದೇ ನಗೆತವನ್ನು ತೆಗೆದುಕೊಳ್ಳಲು ನಿಮಗೆ ಧೈರ್ಯವಿರುತ್ತದೆ. ನಿಮ್ಮ ಚಿಂತೆ ಎಂದು ಹೇಳುವುದೆಲ್ಲಾ ವಾಸ್ತವವಾಗಿ ನಿಮ್ಮ ಅಹಂಭಾವಕ್ಕೆ ಪೆಟ್ಟಾಗುವುದರ ಬಗ್ಗೆಯೇ. ನೀವು ಅದರಿಂದ ಮುಕ್ತರಾಗಿದ್ದರೆ, ನೀವು ಹೆಚ್ಚಿನ ಸ್ವಾತಂತ್ರ್ಯದಿಂದ ಮತ್ತು ಧೈರ್ಯದಿಂದ ನಡೆದುಕೊಳ್ಳುತ್ತೀರಿ. ಪರಿಶೋಧಿಸಲು ನೀವು ಇನ್ನೂ ಹೆಚ್ಚಾಗಿ ಸಂಕಲ್ಪದಲ್ಲಿರುತ್ತೀರಿ.
ಒಂದು ಚಿಕ್ಕ ಕಥೆ:
ಒಂದು ಸಂಘದ ಮನೆಯಲ್ಲಿ (club house) ಒಬ್ಬ ವ್ಯಕ್ತಿಯು ತನ್ನ ಇಸ್ಪೀಟ್ ಆಟದ ಸರ್ತಿಯನ್ನು ಮುಗಿಸಿ ನಿರ್ಗಮಿಸುತ್ತಿದ್ದನು.
ಅವನು ನಿಲುವಂಗಿಯನ್ನು (coat) ನೇತು ಹಾಕುವ ಸ್ಥಳಕ್ಕೆ ಹೋಗಿ ತನ್ನ ನಿಲುವಂಗಿಯನ್ನು ಹಾಕಿಕೊಳ್ಳುತ್ತಿದ್ದನು. ಆಗ ಇದ್ದಕ್ಕಿದ್ದ ಹಾಗೆ ಅವನ ಹಿಂದಿನಿಂದ ಇಂದು ಸಣ್ಣ ಧ್ವನಿಯು, “ಸ್ವಾಮಿ, ತಾವು ಮಿ॥ ಫಿಲಿಪ್ರವರೇ?” ಎಂದು ಹೇಳಿತು.
ಈ ವ್ಯಕ್ತಿಯು ಹಿಂದಿರುಗಿ ಮರುತ್ತರಿಸಿದನು, “ಇಲ್ಲ, ನಾನಲ್ಲ” ಎಂದು.
ಆ ಧ್ವನಿಯು ಹೇಳಿತು "ದೇವರಿಗೆ ಧನ್ಯವಾದಗಳು. ನಾನು ಫಿಲಿಪ್ ಮತ್ತು ಆ ನಿಲುವಂಗಿಯು ನನ್ನದು" ಎಂದು.
(ನಗೆ)
ನಾವು ಎಷ್ಟೊಂದು ಹೆದರಿದ್ದೇವೆಂದರೆ ನಾವು ತಪ್ಪು ಮಾಡಿ ನಮ್ಮ ಅಹಂಭಾವ ಮತ್ತು ನಮ್ಮನ್ನು ನಾವೇ ಫಾಸಿಮಾಡಿಕೊಳ್ಳಬಹುದೇನೋ ಎಂದು. ಆದುದರಿಂದಲೇ ನಾವು ಅಷ್ಟೊಂದು ಆತ್ಮೀಯತೆಯಿಂದ, ಗಾಂಭೀರ್ಯದಿಂದ ನಾವು ಬಹಳ ವಿನಯಶೀಲರು ಎಂದು ಮುಂತಾಗಿ ತಿಳಿದುಕೊಂಡು ಕೆಲಸ ಮಾಡುತ್ತೇವೆ. ಇವೆಲ್ಲವೂ ನಮ್ಮ ಅಹಂಭಾವದ ಜಡ ರೂಪಗಳಲ್ಲದೇ (Passve forms) ಬೇರೇನೂ ಅಲ್ಲ. ನೀವು ನಿಮ್ಮ ಅಹಂಭಾವವು ಫಾಸಿಗೊಳಗಾಗಬಹುದೆಂಬ ಭಯ ಹೊಂದಿರುತ್ತೀರ ಮತ್ತು ಆದ್ದರಿಂದ ನೀವು ಈ ರೀತಿಗಳಲ್ಲಿ ನಡೆದುಕೊಳ್ಳುತ್ತೀರ. ನಿಮ್ಮ ಅಹಂಭಾವದ ಕಾವಲನ್ನು ಬಿಟ್ಟು, ಮುಕ್ತವಾಗಿ ಚಲಿಸಿರಿ.
ಗಾಂಭೀರ್ಯತೆಯಿಂದ ದೂರ ಸರಿಯಿರಿ. ಹೇಗೋ, ನಾವು ಯಾವಾಗಲೂ ಆಧ್ಯಾತ್ಮಿಕತೆಯನ್ನು ಗಾಂಭೀರ್ಯತೆಯೊಂದಿಗೆ ಜೊತೆಗೂಡಿಸುತ್ತೇವೆ. ಅದು ಒಂದು ದೊಡ್ಡ ಕಲ್ಪನೆ. ಗಾಂಭೀರ್ಯತೆಯು ಧರ್ಮವಾಗಲೀ, ಆಧ್ಯಾತ್ಮಿಕತೆಯಾಗಲೀ ಆಗುವುದೇ ಇಲ್ಲ.
ನಾನು ಏಕೆ ಬಹಳಷ್ಟು ಹಾಸ್ಯಗಳನ್ನೂ ಮತ್ತು ಚಿಕ್ಕ ಕತೆಗಳನ್ನೂ ಹೇಳುತ್ತಲೇ ಇರುವೆನೆಂದು ತಿಳಿದಿದ್ದೀರೆ? ನಾನು ಈ ಸಂಗತಿಗಳನ್ನೆಲ್ಲಾ ಹೇಳದೇ ಇದ್ದರೆ, ನೀವು ಗಂಭೀರವಾಗಿ ಇರಲು ಪ್ರಾರಂಭಿಸುತ್ತೀರಿ ಮತ್ತು ನೀವು ಗಂಭೀರವಾದರೆ, ನೀವು ನಿರ್ಜೀವವಾಗಿ ಮತ್ತು ಭಾರದಿಂದಿರುತ್ತೀರಿ. ನೀವು ಸಜೀವವಾಗಿ ಮತ್ತು ಹಗುರವಾಗಿ ಇರುವುದಿಲ್ಲ. ನಾನು ನಿಮ್ಮನ್ನು ಭಾರವಾಗಿ ಮಾಡಲು ಇಲ್ಲಿಲ್ಲ.
ನಾನು ಇಲ್ಲಿರುವುದು ನಿಮ್ಮ ಹೊರೆಯನ್ನು ಇಳಿಸಿ ನಿಮ್ಮನ್ನು ಹಗುರಗೊಳಿಸುವುದಕ್ಕಾಗಿ ನಾನು ಇಲ್ಲಿರುವುದು ನಿಮ್ಮ ಗಾಂಭೀರ್ಯತೆಯು ನಿಮ್ಮ ಅಹಂಭಾವದ ಒಂದು ರೂಪವಲ್ಲದೇ ಬೇರೇನೂ ಅಲ್ಲವೆಂದು ತೋರಿಸಲು. ನಾನು ಇಲ್ಲಿರುವುದು ನೀವು ಏನಾಗಿಲ್ಲ ಎಂದು ತೋರಿಸಲು. ನೀವು ಏನಾಗಿದ್ದೀರೆಂದು ಈಗಾಗಲೇ ತಿಳಿದಿರುವುದನ್ನು ಇನ್ನಷ್ಟು ಬಲಗೊಂಡಿಸಲು ನಾನಿಲ್ಲಿಲ್ಲ.
ಮನುಷ್ಯರು ತಮ್ಮ ಭೂತ ಕಾಲಗಳ ಮತ್ತು ಭವಿಷ್ಯತ್ಕಾಲಗಳ ಹೊರೆಯನ್ನು ಹೊತ್ತಿದ್ದರೆ ಯಾವಾಗಲೂ ಗಂಭೀರದಿಂದ ಇರುತ್ತಾರೆ. ಅವರು ತಮ್ಮ ಭೂತಕಾಲದ
ಮತ್ತು ಭವಿಷ್ಯತ್ಕಾಲದ ಹೊರೆಯನ್ನು ತಮ್ಮ ಭುಜದ ಮೇಲೆ ಹೊರಬೇಕಾಗಿರುವುದು ತಮ್ಮ ಕರ್ತವ್ಯವೆಂದು ಭಾವಿಸುತ್ತಾರೆ ಮತ್ತು ಅದರೊಳಗೆ ಎಲ್ಲಾ ಗಾಂಭೀರ್ಯತೆಯಿಂದ ಮುಳುಗಿ ಹೋಗಿರುತ್ತಾರೆ. ಇದು ಒಂದು ಬಹಳ ಅಹಂಭಾವದ ಪ್ರವೃತ್ತಿ. ಅವರು ಭಾವಿಸುವುದು ಅದನ್ನು ಅವರು ಮಾಡದಿದ್ದರೆ ಬೇರಾರೂ ಅದನ್ನು ತಮಗಾಗಿ ಮಾಡಲಾರರೆಂದು.
ಮೊದಲನೆಯದಾಗಿ ಭೂತ ಮತ್ತು ಭವಿಷ್ಯತ್ತಿನ ವಿಚಾರಗಳಿಗೆ ಭುಜ ಕೊಡುವ ಅವಶ್ಯಕತೆಯೇ ಇಲ್ಲ. ಕೇವಲ ವರ್ತಮಾನದಲ್ಲಿರಿ, ಅಷ್ಟು ಸಾಕು. ಈ ಜನಗಳು ವರ್ತಮಾನವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದ್ದಾರೆ. ಅವರು ತಮ್ಮ ಬದುಕಿನಲ್ಲಿ ನಗುವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದ್ದಾರೆ.
ನಗೆಯೆಂಬುದು ಚೈತನ್ಯದ ಕಿರಣ. ಒಂದನ್ನು ನಿಮ್ಮ ಜೀವಾತ್ಮದಿಂದ ನಿಮ್ಮ ದೇಹಕ್ಕೆ ತರುವಂತಹದು. ಅದು ನಿಮ್ಮ ಆತ್ಮವನ್ನು ಸಂಪೂರ್ಣವಾಗಿ ಪುನರುಜ್ಜಿವನ ಗೊಳಿಸುವುದು. ಬೇರಾವುದೂ ಮಾಡಲಿಕ್ಕಾಗದ್ದನ್ನು ಇದು ಗುಣಪಡಿಸುತ್ತದೆ. ನೀವು ಕ್ಲಿಷ್ಟಕರವಾದ ಬೇರೆ ಧ್ಯಾನ ತಂತ್ರಗಳಿಂದ ಪಡೆಯಲು ಯತ್ನಿಸುತ್ತಿರುವ ವರ್ತಮಾನದ ಆಶ್ಚರ್ಯಕರವಾದ ಕ್ಷಣದರ್ಶನ (glimpse) ಗಳನ್ನು ಇದು ಕೊಡುತ್ತದೆ. ನಗುವುದು ಬಹಳ ಶಕ್ತಿಯುತವಾದ ಧ್ಯಾನ ತಂತ್ರ.
ನಗೆಯು ಆಧ್ಯಾತ್ಮದ ಅತಿ ದೊಡ್ಡ ಗುಣ. ಪ್ರಾಮಾಣಿಕತೆ ಮತ್ತು ನಗೆಯು ಜತೆ ಜತೆಯಾಗಿ ಹೋಗುತ್ತವೆ. ನಾನು ಹಿಂದೆ ಹೇಳಿದ ಹಾಗೆ, ಗಾಂಭೀರ್ಯತೆಯು ನಗುವಿನೊಟ್ಟಿಗೆ ಇರಲಾಗುವುದೇ ಇಲ್ಲ. ನೀವು ಗಾಂಭೀರ್ಯದಿಂದ ಇರುತ್ತೀರಾ, ಇಲ್ಲವೇ ನೀವು ನಗುತ್ತಿರುತ್ತೀರ. ನೀವು ಪ್ರಾಮಾಣಿಕರಾಗಿದ್ದರೆ, ನೀವು ನಗುತ್ತಿರಬಹುದು ಮತ್ತು ನಿಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿರಬಹುದು.
ನಮ್ಮಲ್ಲಿ ಎಷ್ಟು ಜನ ಹೃತ್ತೂರಕವಾಗಿ ನಗಬಲ್ಲೆವು? ನಗುವಿನಲ್ಲಿ ಕೂಡ ನಿಗ್ರಹಿಸುವುದನ್ನು ನಾವು ಸಾಧಿಸುತ್ತೇವೆ (manage)!
ನಾನು ತಾಯಂದಿರು ಅವರ ಹೆಣ್ಣು ಮಕ್ಕಳಿಗೆ ಹೇಳುತ್ತಿರುವುದನ್ನು ಕೇಳಿಸಿಕೊಂಡಿದ್ದೇನೆ, "ಗಂಡಸರಂತೆ ನಗಬೇಡ, ಒಬ್ಬ ಹೆಂಗಸಿನಂತೆ ನಗು" ಎಂದು. ನೀವು ನಗುವನ್ನು ಹೇಗೆ ಸಂಸ್ಕರಿಸಬಹುದು (cultured)? ನಗುವೆಂಬುದು ಒಂದು ನಿಮ್ಮ ಒಳಗಿನಿಂದ ಬರುವಂತಹುದು. ನಾವು ಹೇಳುತ್ತೇನೆ, ನಿಮ್ಮ ಮಕ್ಕಳನ್ನು
ನಿಮ್ಮ ನಿಬಂಧನೆಗೊಳಪಡಿಸುತ್ತಿರುವುದೆಲ್ಲಾ ಕೇವಲ ನಿಮ್ಮ ಮಂಕಾದ ನಿಮ್ಮ ನಿರ್ಜೀವ ತನದಂತೆ ತದ್ರೂಪಗಳನ್ನು ಮಾಡುವುದೇ ಆಗಿದೆ. ನೀವು ನಿಮ್ಮನ್ನೇ ಪ್ರತಿರೂಪಗೊಳಿಸುವ ತನಕ ನೀವು ವಿರಮಿಸುವುದಿಲ್ಲ.
ನಾನು ನನ್ನ ಅಮೇರಿಕೆಯ ಭೇಟಿಯಲ್ಲಿ ಕೆಲವು ಮಕ್ಕಳೊಡನೆ ಸ್ವಲ್ಪ ಸಮಯವನ್ನು ಕಳೆದೆ. ನಾನು ಸುಮಾರು ಒಂದು ಗಂಟೆಯಷ್ಟು ಹೊತ್ತು ಸಂವಹನ (interaction) ನಡೆಸಿದೆ. ನಾನು ಎಷ್ಟೆ ಹಾಸ್ಯಗಳನ್ನು ಮಾಡಿದರೂ ಅವರು ನಗುತ್ತಲೇ ಇರದದ್ದನ್ನು ನೋಡಿ ನನಗೆ ಆಘಾತವಾಯಿತು. ಈ ಕಾಲದಲ್ಲಿ ಮಕ್ಕಳು ಒಂದು ಹುಸಿ ಪಕ್ವತೆಯನ್ನು (pseudo maturity) ತಂದುಕೊಂಡು ನಗೆಯನ್ನು ತಮ್ಮ ವ್ಯವಸ್ಥೆ ಯಿಂದ ಹೊರಗಿಟ್ಟು ಬಿಟ್ಟಿರುತ್ತಾರೆ. ಅವರು ಮಕ್ಕಳಂತೆ ನಗಲಾಗದಿದ್ದರೆ, ಮುಂದೆ ದೊಡ್ಡವರಾದ ಮೇಲೆ ಏನು ಮಾಡುತ್ತಾರೆ? ಇದು ನನಗೆ ತುಂಬಾ ಅತಿ ಎನಿಸಿತು.
ನನ್ನ ನಗುವು ಸಾಂಕ್ರಾಮಿಕವೆಂದು ಜನಗಳು ಹೇಳುತ್ತಾರೆ. ಆ ಮಕ್ಕಳೊಡನೆ, ಮೊದಲ ಬಾರಿಗೆ, ನನ್ನ ನಗುವು ಸಾಂಕ್ರಾಮಿಕವಾಗಿ ಇರಲಿಲ್ಲವೆಂದು ಅನಿಸಿತು! ಅವರು ಸುಮ್ಮನೇ ನನ್ನತ್ತ ಅದೇ ಪಕ್ವ ನೋಟದ ಮುಖದಿಂದ ನೋಡುತ್ತಿದ್ದರು. ನನ್ನನ್ನೂ ಗಂಭೀರವಾಗಿರುವಂತೆ ಮಾಡಬಹುದೆಂಬ ಭಯದಿಂದ ನಾನು ಅವರಿಂದ ಬೀಳ್ಕೊಂಡೆ.
(ಗಟ್ಟಿಯಾದ ನಗೆ!... )
ನೋಡಿ, ನಗೆಯನ್ನು ಬಿಟ್ಟು ಬಿಡುವುದರಲ್ಲಿ ಪಕ್ವತೆಯು ಇರುವುದಿಲ್ಲ. ಆದರೆ ಅದು ಹೇಗೋ, ನಾವು ಪಕ್ವವಾದಾಗ ಭಾವಿಸುವುದು, ನಗುವುದನ್ನು ತನ್ನಷ್ಟಕ್ಕೆ ಕಡಿಮೆ ನಗಬೇಕೆಂದು. ನಗೆಯು ಅಷ್ಟೊಂದು ಶಕ್ತಿಧಾಯಕ, ಏಕೆಂದರೆ ಅದು ಅಂತರಾಳದಿಂದ ನಿಮ್ಮ ಮೇಲ್ಗಡೆ ಚೈತನ್ಯವನ್ನು ತರುತ್ತದೆ.
ನೀವು ನನ್ನ ಅಧಿವೇಶನಗಳಲ್ಲಿ ಕುಳಿತಿದ್ದರೆ, ಬಹಳಷ್ಟು ಸಮಯ ನಗೆಯು ಮಾತ್ರ ಇರುತ್ತದೆ. ಯಾವುದೋ ಚಟಾಕಿಯನ್ನು ಸಿಡಿಸಲಾಗುತ್ತದೆ ಅಥವಾ ಯಾವುದೋ ಕತೆಯನ್ನು ಹೇಳಲಾಗುತ್ತದೆ ಮತ್ತು ಪ್ರತಿಯೊಬ್ಬರೂ ನಗುತ್ತಿರುತ್ತಾರೆ. ಗಾಂಭೀರ್ಯತೆಯು ಅವರನ್ನು ಆವರಿಸಿಕೊಳ್ಳಲು ನಾನು ಬಿಡುವುದೇ ಇಲ್ಲ.
ಒಂದು ಚಿಕ್ಕ ಕಥೆ:
ಒಬ್ಬ ಬಹಳ ಹಾಸ್ಯಕಾರಕ (humorous) ಮಾತುಗಾರರನ್ನು ಭಾಷಣ ಮಾಡಲು ಒಂದು ಪಟ್ಟಣಕ್ಕೆ ಆಹ್ವಾನಿಸಲಾಯಿತು.
ಅವನು ಆ ಕಾರ್ಯಕ್ರಮಕ್ಕೆ ಜನರ ಒಂದು ದೊಡ್ಡ ಸಮೂಹದೊಂದಿಗೆ ಬಂದನು. ಸಂಘಟನಕಾರರು ಆ ಭಾಷಣಕಾರನ ಜೊತೆ ಬಂದ ಜನಗಳ ಸಂಖ್ಯೆಯನ್ನು ನೋಡಿ ಆಶ್ಚರ್ಯಚಕಿತರಾದರು.
ಭಾಷಣಕಾರನು ಅವರ ಆಶ್ಚರ್ಯದ ದೃಷ್ಟಿಯನ್ನು ನೋಡಿ ವಿವರಿಸಿದ, "ಈ ದಿನಗಳಲ್ಲಿ ನಗಬಲ್ಲ ಜನರು ಸಿಗುವುದು ಕಷ್ಟವಾಗಿದೆ. ಆದ್ದರಿಂದ ನಾನು ನನ್ನದೇ ಸಭಿಕರನ್ನು ಕರೆತರುತ್ತೇನೆ'' ಎಂದು.
(ನಗೆ!)
ಗಣ್ಯರು ಎಂದು ಹೇಳುವವರ ವೃತ್ತಗಳಲ್ಲಿ, ಜನಗಳು ನಗುತ್ತಿರುತ್ತಾರೆ, ಆದರೆ ಅದು ಬಹಳ ಸುಸಂಸ್ಕೃತಿಯಿಂದ ಮತ್ತು ಉತ್ತಮ ನಡುವಳಿಕೆಯ ರೀತಿಯಿಂದ ಇರುತ್ತದೆ! ಅದು ನಿಜವಾದ ನಗೆಯಲ್ಲ, ಅದು ನಿರ್ಜಿವವಾದ ನಗೆ. ನಗೆಯನ್ನು ನಿರ್ಬಂಧಿಸಲಾಗುವುದೇ ಇಲ್ಲ. ಅದು ನಿಬಂಧನೆಗೆ ಒಳಪಟ್ಟಿದ್ದರೆ, ಅದು ನಗೆಯಾಗುವುದೇ ಇಲ್ಲ; ಅದು ನಾವು ಮಾತನಾಡುತ್ತಿರುವ ಧ್ಯಾನಯುಕ್ತ ನಗೆಯಲ್ಲ, ಅದು ಕೇವಲ ಒಳಗಿರುವ ಅಹಂಭಾವದ ಅಭಿವ್ಯಕ್ತತೆ ಮಾತ್ರ, ಅಷ್ಟೆ.
ನೀವು ಒಂದು ಹಾಸ್ಯ ಚಟಾಕಿಯನ್ನು ಹಾರಿಸಿದಾಗ ಯಾಕೆ ನಕ್ಕಿರೆಂದು ವಿಶ್ಲೇಷಿಸಿದರೆ, ನಿಮಗೆ ಅರ್ಥವಾಗುವುದು: ತರ್ಕಬದ್ಧವಾಗಿ ಜೋಡಿಸಲಾದ ಹೇಳಿಕೆಗಳ ಒಂದು ಗುಚ್ಚ (set) ವನ್ನು ನಿಮಗೆ ಮೊದಲು ಹೇಳಲಾಗಿದೆ. ನೀವು ನಿರ್ಮಿಸಲಾದ ತರ್ಕಕ್ಕೆ ಅಂಟಿಕೊಂಡಿದ್ದಾಗ, ಅದಕ್ಕೆ ಗುದ್ದು ಬೀಳುತ್ತದೆ ಮತ್ತು ನಿಮ್ಮ ತರ್ಕವು ಒಡೆದು ಚೂರು ಚೂರಾಗುತ್ತದೆ! ನಿಮ್ಮ ತರ್ಕವು ಒಡೆದು ಚೂರು ಚೂರಾದಾಗ, ನಿಮ್ಮ ಆಲೋಚನೆಯು, ನಿಮ್ಮ ಮನಸ್ಸು ಕೂಡ ಒಡೆದು ಚೂರು ಚೂರಾಗುತ್ತದೆ ಮತ್ತು ನೀವು ಮನೋರಹಿತ ಸ್ಥಿತಿ ಅಥವಾ ಸತೋರಿ (Satori)ಯ ಸ್ಥಿತಿಯಲ್ಲಿರುತ್ತೀರಿ. ನೀವು ಬುದ್ಧರಾದಿರಿ!
ನೀವು ಮನೋರಹಿತ ಸ್ಥಿತಿಯಲ್ಲಿದ್ದರೆ, ನೀವು ವರ್ತಮಾನದಲ್ಲಿದ್ದೀರಿ. ನೀವು ನಕ್ಕರೆ, ನೀವು ವರ್ತಮಾನದಲ್ಲಿದ್ದೀರಿ, ಏಕೆಂದರೆ ನೀವು ನಕ್ಕಾಗ, ಯೋಚನೆಗಳು ಇರುವುದಿಲ್ಲ. ನೀವು ಆಲೋಚನಾರಹಿತರಾಗಿದ್ದರೆ, ನೀವು ವರ್ತಮಾನದಲ್ಲಿದ್ದೀರ. ನೀವು ಯೋಚನೆಗಳೊಂದಿಗಿದ್ದರೆ, ನೀವು ಭೂತಕಾಲದಲ್ಲೋ ಅಥವಾ ಭವಿಷ್ಯತ್ಕಾಲದಲ್ಲೋ ಇದ್ದೀರಿ.
ನಗೆಯ ಸಂಪೂರ್ಣವಾಗಿದೆ ಮತ್ತು ಅದು ನಿಮ್ಮನ್ನು ಗುಣಪಡಿಸಬಲ್ಲದು ಮತ್ತು ನಿಮ್ಮನ್ನು ಪರಿವರ್ತನೆ ಮಾಡಬಲ್ಲದು. ಅದು ಮನುಕುಲಕ್ಕೆ ಅತ್ಯುತ್ತಮ ಮತ್ತು ಸುಲಭವಾಗಿ ದೊರೆತಿರುವ ಔಷಧಿ.
ನಾನು ಹೇಳುತ್ತೇನೆ: ಜೀವನವು ಎಷ್ಟು ಅಮೂಲ್ಯವೆಂದರೆ ಅದನ್ನು ಮಂಕಾದ ಮತ್ತು ಚಟುವಟಿಕೆಯಿಲ್ಲದ ಕ್ಷಣಗಳಿಗಾಗಿ ವ್ಯಯಿಸುವುದರಿಂದ ಉಪಯೋಗವಿಲ್ಲ. ನಗಿರಿ ಮತ್ತು ನಿಮ್ಮ ಜೀವನದಲ್ಲಿ ಚೈತನ್ಯ ಮತ್ತು ಆತ್ಮಾನಂದವನ್ನು (bliss) ತುಂಬಿರಿ. ನೀವು ಏನೇ ಕೆಲಸವನ್ನು ಮಾಡುತ್ತಿದ್ದರೂ ನಿರಂತರವಾಗಿ ಸಂತೋಷದಿಂದ ಅನುಭವಿಸಲು ಸುಮ್ಮನೆ ನಿರ್ಧರಿಸಿರಿ. ಪ್ರಾಮಾಣಿಕವಾಗಿರಿ, ಗಂಭೀರದಿಂದಲ್ಲ.
ನೀವು ನಕ್ಕಾಗ, ನಿಮ್ಮ ಸುತ್ತಲೂ ಚೈತನ್ಯವನ್ನು ಪಸರಿಸುತ್ತೀರ (radiate); ಇದು ಸಾಂಕ್ರಾಮಿಕವಾಗಿರುತ್ತದೆ; ನೀವು ಒಂದು ಚಿಕಿತ್ಸಾ ತಂತ್ರದ (therapentic) ಆತ್ಮಾನಂದವನ್ನು ನಿಮ್ಮ ಸುತ್ತಲೂ ಪಸರಿಸುತ್ತೀರ. ಆದುದರಿಂದಲೇ, ಕೆಟ್ಟ ಮನೋಭಾವದಲ್ಲಿರುವ ಒಬ್ಬ ವ್ಯಕ್ತಿಯು ಒಳಗೆ ಬಂದರೆ, ಅವನು ಆತನ ಸುತ್ತಮುತ್ತಲೂ ಅದೇ ಮನೋಭಾವನೆಯನ್ನು ಪಸರಿಸುತ್ತಾನೆ ಮತ್ತು ಅವನ ಸುತ್ತಲೂ ಇರುವ ಜನಗಳು ಇದರಿಂದ ಪರಿಣಾಮಕ್ಕೊಳಗಾಗುವ ಎಲ್ಲಾ ಸಾಧ್ಯತೆಗಳೂ ಇವೆ. ನಾನು ಯಾವಾಗಲೂ ವೈದ್ಯರಿಗೆ ಹೇಳುವುದು ಅವರು ಯಾವುದಾದರೂ ಶುದ್ಧಿಗೊಳಿಸುವ ಧ್ಯಾನವನ್ನು ಮಾಡಬೇಕೆಂದು, ಏಕೆಂದರೆ ಅವರು ನಿರಂತರವಾಗಿ ಬಹಳ ನಕಾರಾತ್ಮಕ ಆಲೋಚನೆಗಳು ಮತ್ತು ರೋಗಗಳಿರುವ ರೋಗಿಗಳ ಸಂಪರ್ಕದಲ್ಲಿರುತ್ತಾರೆ.
ಹ್ಯಾ...;
ಸ್ವಾಮೀಜಿ, ಆದರೆ ನಮಗೆ ನಗಲು ಒಂದು ಕಾರಣ ಬೇಕಲ್ಲ. ನಾವು ಯಾವುದೇ ಹಾಸ್ಯ ಸಂಗತಿಗಳು ಸಿಕ್ಕದಿದ್ದಾಗ ಹೇಗೆ ಹಾಸ್ಯದಿಂದಿರಬೇಕೆಂದು ಸುಮ್ಮನೆ ನಿರ್ಧರಿಸುವುದು?
ನಾವು ಯಾವಾಗಲೂ ಯೋಚಿಸುವುದು, ನಮ್ಮನ್ನು ನಗಿಸಲು ಒಬ್ಬ ಹಾಸ್ಯಗಾರನೋ ಅಥವಾ ಹಾಸ್ಯದ್ದೋ ಅವಶ್ಯಕತೆ ಇದೆ ಎಂದು. ನಾನು ಹೇಳುತ್ತೇನೆ. ನೀವು ವರ್ತಮಾನದ ಕ್ಷಣದಲ್ಲಿ ಬದುಕಲು ಪ್ರಾರಂಭಿಸಿದರೆ, ನಿಮ್ಮ ಅಸ್ತಿತ್ವವೇ ತುಂಬಾ ಸುಂದರವಾಗಿ ಮತ್ತು ಹಗುರವಾಗಿ ಇರುತ್ತದೆ. ನಿಮ್ಮ ಉಸಿರೆಳೆದುಕೊಳ್ಳುವ ಮತ್ತು ಉಸಿರು ಬಿಡುವ ಕ್ರಿಯೆಯು, ನೀವು ತಿಂದ ರೊಟ್ಟಿಯು (bread) ನಿಮ್ಮ ದೇಹದಲ್ಲಿ
ರಕ್ತವಾಗುವ ಕ್ರಿಯೆಯು, ಅಸ್ತಿತ್ವದಲ್ಲಿ ಲಯಬದ್ಧವಾಗಿ ಘಟಿಸುತ್ತಿರುವ ಪ್ರಸಂಗಗಳು, ಪ್ರತಿಯೊಂದೂ ಎಷ್ಟೊಂದು ಸುಂದರವಾಗಿರುತ್ತದೆ. ನೀವು ಅತೀವ ನಿತ್ಯ ಸಂತಸ ಭಾವನೆಯಲ್ಲಿರುತ್ತೀರ, ಮತ್ತು ನೀವು ಸದಾ ಕಾಲವೂ ಮಂದಹಾಸ ಬೀರುತ್ತ, ನಗುತ್ತಾ ಇರುತ್ತೀರ. ನಿಮ್ಮ ಸಂಪೂರ್ಣ ಅಸ್ತಿತ್ವತೆಯು (being), ಆ ಜೀವಾತ್ಮವು ನಗೆಯನ್ನು ಮತ್ತು ನಿತ್ಯ ಸಂತೋಷವನ್ನು ಹೊರ ಸೂಸುತ್ತಿರುತ್ತದೆ.
ಒಂದು ಹಾಸ್ಯದ ಬಗ್ಗೆ ನಗುವುದು ಸರಿ, ಆದರೆ ನೀವು ಅಸ್ತಿತ್ವದೊಂದಿಗೆ ಶ್ರುತಿಗೂಡಿಸಿದ್ದರೆ, ನೀವು ನಡೆಯುತ್ತಿರುವ ದೊಡ್ಡ ವಿಶ್ವ ನಾಟಕವನ್ನು ಸರಳವಾಗಿ ಸಂತಸದಿಂದ ಅನುಭವಿಸುತ್ತೀರ ಮತ್ತು ನೀವು ಪ್ರತಿಯೊಂದಕ್ಕೂ ನಗುತ್ತೀರ. ಆಗ ಗಾಂಭೀರ್ಯತೆಗೆ ಸ್ಥಳವೇ ಇರುವುದಿಲ್ಲ, ಅಹಂಭಾವಕ್ಕೂ ಜಾಗವಿರುವುದಿಲ್ಲ. ಇನ್ನು ನೀವು ಘನವಾಗಿ ಇರುವುದಿಲ್ಲ, ನೀವು ಗ್ರಹಿಸುವವರಾಗಿದ್ದು (porous) ಮತ್ತು ಸರಳವಾಗಿ ನಗುತ್ತೀರ. ಅಸ್ತಿತ್ವದ ಆಟದ ಬಗ್ಗೆ ಆಳವಾಗಿ ಅರ್ಥಮಾಡಿ ಕೊಳ್ಳುವುದನ್ನು ಬೆಳೆಸಿಕೊಂಡು ನಗುತ್ತೀರ.
ಪ್ರತಿಯೊಬ್ಬರೂ ಕೇವಲ ಒಬ್ಬ ಆಟಗಾರನೆಂದೂ ಆದರೆ ಅವರ ಪಾತ್ರದಲ್ಲಿ ಬಹಳ ಗಂಭೀರವಾಗಿರುವುದನ್ನು ನೀವು ನೋಡಬಲ್ಲಿರಿ ಮತ್ತು ಅದರತ್ತ ನಗುತ್ತೀರ. ಆಟವನ್ನು ಆಡುವಾಗ ಹೇಗೆ ಪ್ರತಿಯೊಬ್ಬನೂ ಮತ್ತೊಬ್ಬನನ್ನೇ ಮೋಸ ಮಾಡುತ್ತಿದ್ದಾನೆಂದು ಕಂಡು ನಗುತ್ತೀರ. ನೀವು ಆಟವನ್ನು ಆಡುತ್ತಿರುವ ಆಲೋಚನೆಯ ಬಗ್ಗೆ ನಗುತ್ತೀರ! ನೀವು ನಗಲು ಸಾಧ್ಯವಾದಾಗ, ನೀವು ಗಮನಿಸುವವರಾಗುತ್ತೀರ, ಮತ್ತು ನೀವು ಗಮನಿಸುವವರಾದಾಗ, ನೀವು 'ನಾನು' ಮತ್ತು 'ನನ್ನದು' ಎಂಬ ಅಹಂಭಾವದಿಂದ, ಬೇರೆಯಾಗಿರುತ್ತೀರ.
ಒಂದು ಚಿಕ್ಕ ಕಥೆ:
ಒಮ್ಮೆ ನಿಜವಾದ ಆಧ್ಯಾತ್ಮಿಕತೆಯ ಅರ್ಥದ ಬಗ್ಗೆ ಬುದ್ಧ ಭಿಕ್ಷುಗಳ ಸಮ್ಮೇಳನವು ನಡೆಯಿತು.
ಪ್ರತಿಯೊಬ್ಬ ಭಿಕ್ಷುವೂ ವೇದಿಕೆಯ ಮೇಲೆ ಬಂದು ಉದ್ದುದ್ದ ಭಾಷಣವನ್ನು ಮಾಡಿದನು.
ಕಡೆಗೆ ಒಬ್ಬ ಝೆನ್ ಸನ್ಯಾಸಿಯ ಸರದಿಯು ಬಂದಿತು.
ಅವನು ವೇದಿಕೆಯ ಮೇಲೆ ಬಂದು ಸುಮ್ಮನೇ ನಗಲಾರಂಭಿಸಿದನು! ಅವನು ನಕ್ಕನು ಮತ್ತು ಅಂತರಾತ್ಮದಿಂದ (being) ನಕ್ಕನು.
ನಗೆಯು ಅವನ ಹೊಟ್ಟೆಯಿಂದ ಹಾಗೆಯೇ ಏಳುತ್ತಿತ್ತು. ಅವನು ನಗೆಯಿಂದ ತಡೆದುಕೊಳ್ಳದ ಹಾಗೆ ಅಲುಗಾಡುತ್ತಿದ್ದನು.
ಮತ್ತು ಅವನ ನಗೆಯು ಎಷ್ಟು ಸಾಂಕ್ರಾಮಿಕವಾಗಿತ್ತೆಂದರೆ ಶೀಘ್ರದಲ್ಲೇ ಆ ಕೊಠಡಿಯಲ್ಲಿದ್ದ ಎಲ್ಲರೂ ಏತಕ್ಕೆಂದು ಕೂಡ ತಿಳಿಯದೆ ನಗಲಾರಂಭಿಸಿದರು!
ಅವರಿಗೆ ಅದರ ಅರಿವಿಲ್ಲದೆಯೇ, ಸನ್ಯಾಸಿಗಳ ನಗೆಯು ಆ ಕೊಠಡಿಯಲ್ಲಿ ಚೈತನ್ಯದ ಸಕಾರಾತ್ಮಕವಾದ ಒಂದು ದೊಡ್ಡ ಅಲೆಯನ್ನುಂಟು ಮಾಡಿತು.
ಆ ಸನ್ಯಾಸಿಗಳು ಒಂದು ಪ್ರಚಂಡವಾದ ಉಚ್ಛ್ರಾಯ ಸ್ಥಿತಿಯನ್ನು (elevation state) ತಲುಪಿದರು.
ಅವರ ಆಲೋಚನೆಯು ನುಚ್ಚು ನೂರಾಯಿತು ಮತ್ತು ಅವರ ಅಂತರಾತ್ಮಗಳು ಆತ್ಮಾನಂದದಿಂದ ತುಂಬಿ ಹೋಯಿತು.
ಆ ಝೆನ್ ಸನ್ಯಾಸಿಯು ಕಡೆಯಲ್ಲಿ ಹೇಳಿದನು "ಇದೇ ನಿಜವಾದ ಆಧ್ಯಾತ್ಮಿಕತೆ" ಎಂದು.
ನಗುವು ಆಧ್ಯಾತ್ಮಿಕತೆಯ ಅತ್ಯುನ್ನತ ಗುಣ. ಅದು ನಿಮ್ಮನ್ನು ಜ್ಞಾನೋದಯದತ್ತ ಕೊಂಡೊಯ್ಯಬಲ್ಲದು! ನಗುವು ಒಂದು ದೊಡ್ಡ ಗುಣಪಡಿಸುವ ಚೈತನ್ಯ. ನೀವು ನಿಮ್ಮ ರೋಗದತ್ತ ನಕ್ಕರೆ, ನೀವು ಆರೋಗ್ಯವಂತರಾಗುವಿರಿ. ನಗುವು ನಿಮ್ಮನ್ನು ಪರಿಶುದ್ಧ ಗುಣಪಡಿಸುವ ಚೈತನ್ಯವಾದ ಅಸ್ತಿತ್ವದ ಚೈತನ್ಯದೊಡನೆ ನಿಮ್ಮನ್ನು ಜೊತೆಗೂಡಿಸುವ ಒಂದು ಸುಂದರವಾದ ದಾರಿ.
ನಮ್ಮ ಧ್ಯಾನದ ಕಾರ್ಯಕ್ರಮಗಳಲ್ಲಿ ನಾವು ಯಾವಾಗಲೂ ನಗುವನ್ನು ಮತ್ತು ನರ್ತನವನ್ನು ಸೇರಿಸಿರುತ್ತೇವೆ. ಅವುಗಳು ಒಬ್ಬ ಬುದ್ಧನಾಗಲು ಅತಿ ಸುಲಭವಾದ ದಾರಿಗಳು. ನರ್ತನವು ನಿಮ್ಮನ್ನು ಸರಳ ಹಾಗು ಹಗುರವಾಗಿ ಮಾಡಬಲ್ಲದು. ನಗುವಿನಂತೆ ನರ್ತನವು ಇನ್ನೊಂದು ಸುಲಭ ಮತ್ತು ಆನಂದದಾಯಕವಾದ (en-joyable) ಧ್ಯಾನ. ನೀವು ಯಾವುದಕ್ಕೂ ಲೆಕ್ಕಿಸದೆ ನರ್ತನ ಮಾಡಿದರೆ, ನೀವು ನೃತ್ಯವೇ ಆಗುವಿರಿ. ಚೈತನ್ಯವು ನಿಮ್ಮಿಂದ ರಭಸದಿಂದ ಬರುತ್ತದೆ.
ನೀವು ಯಾವುದಕ್ಕೂ ಲೆಕ್ಕಿಸದೆ ನರ್ತಿಸುವುದು ನೀವು ನಿಮ್ಮ ಪೊಳ್ಳು ಗುರುತಿಸುವಿಕೆಯಿಂದ (pseudo identity) ಮುಕ್ತರಾಗಿದ್ದರೆ ಮಾತ್ರ. ಯಾರೋ ಒಬ್ಬರು ನೀವು ಎಂದು ತಿಳಿದುಕೊಂಡಿರುವ ತನಕ, ನೀವು ಸಂತೋಷದಿಂದ
ನರ್ತಿಸಲಾರಿರಿ. ನರ್ತನವು ಒಳಗಿರುವ ಸಂತೋಷವನ್ನು ಹೊರಗೆ ಅಭಿವ್ಯಕ್ತಗೊಳಿಸುವುದಾಗಿದೆ. ನಾನು ಮಾತನಾಡುತ್ತಿರುವ ನರ್ತನವು, ಯಾವ ಹೆಜ್ಜೆಯಾದ ಮೇಲೆ ಯಾವುದು ಬರಬೇಕು ಎಂದು ನಿಮಗೆ ಗೊತ್ತಿರುವ ಕಾರ್ಯಕ್ರಮದ ಅನ್ವಯದಂತೆ ಅಲ್ಲ. ನಾನು ಮಾತನಾಡುತ್ತಿರುವುದು ನಿಮ್ಮ ಹೇಳಿಕೊಳ್ಳುವ ಗುರುತಿಸುವಿಕೆಗಳನ್ನು ಬಿಟ್ಟು ಅಸ್ತಿತ್ವದೊಂದಿಗೆ ಒಂದಾದ ಭಾವನೆಯೊಂದಿಗೆ ಸಂತಸದಿಂದ ನರ್ತನದ ಬಗ್ಗೆ.
ಆತ್ಮ ಪ್ರಜ್ಞೆಯುಳ್ಳವರು (Self conscious) ಅಹಂಭಾವದವರು. ಅವರು ತಮ್ಮ ನರ್ತನದ ಬಗ್ಗೆ ಬೇರೆಯವರು ಏನು ಹೇಳುತ್ತಾರೆ ಎಂದು ಚಿಂತಿಸುತ್ತಾರೆ ಮತ್ತು ಆದ್ದರಿಂದ ಸುಮ್ಮನೆ ಕುಳಿತಿರುತ್ತಾರೆ. ಪುನಃ, ಅವರು ತಮ್ಮ ಅಹಂಭಾವವನ್ನು ಕಾಯುತ್ತಿರುತ್ತಾರೆ ಮತ್ತು ಜೀವನದ ಸಂತಸವನ್ನು ಯಾವುದೋ ರೀತಿಯಲ್ಲಿ ಕಳೆದುಕೊಳ್ಳುತ್ತಿರುತ್ತಾರೆ.
ಕೊನೆಯ ಪಕ್ಷ ಒಮ್ಮೊಮ್ಮೆಯಾದರೂ, ನಿಮ್ಮ ಮನೆಯಲ್ಲಿ ಕೆಲವು ಹಾಡುಗಳನ್ನು ಹಾಕಿ ಮತ್ತು ನರ್ತಿಸಿ. ಸುಮ್ಮನೇ ಬಿಟ್ಟುಬಿಡಲು ನಿರ್ಧರಿಸಿ. ಅದು ನಿಮ್ಮನ್ನು ಮನಸ್ಸಿನ ಆಚೆಗೆ ಕೊಂಡೊಯ್ಯಬಲ್ಲ ಮತ್ತು ಮಾತುಗಳಿಂದ ಮಾಡಲಾಗದಂತಹ ಪರಿವರ್ತನೆಯನ್ನು ಮಾಡುವಂತಹ ಒಂದು ತೀವ್ರವಾದ ಧ್ಯಾನ. ಸ್ವಭಾವ ಸಿದ್ಧರಾಗಿರಿ. ಅಪೂರ್ವ (original) ವ್ಯಕ್ತಿಯಾಗಿರಿ. ನಿಮ್ಮ ನರ್ತನದ ಬಗ್ಗೆ ಟೀಕೆ ಮಾಡುವವರು ನರ್ತನದ ಆನಂದವನ್ನು ಸುಮ್ಮನೇ ಕಳೆದುಕೊಳ್ಳುತ್ತಿದ್ದಾರೆ. ಅವರ ಬಗ್ಗೆ ಚಿಂತಿಸಬೇಡಿ. ಹಾಗೆಯೇ ಕರಗಿಬಿಡಿ ಮತ್ತು ನೃತ್ಯವೇ ಆಗಿಬಿಡಿ. ನಗು ಮತ್ತು ನೃತ್ಯವು ನಿಮ್ಮ ಅಹಂಭಾವವನ್ನು ಬಿಟ್ಟು ಅಸ್ತಿತ್ವದೊಂದಿಗೆ ಐಕ್ಯವಾಗಲು ಅತಿ ಸುಲಭವಾದ ತಂತ್ರಗಳು.
ಹೂಂ..
ಸ್ವಾಮೀಜಿ, ನಮ್ಮಲ್ಲಿ ಅಹಂಭಾವವು ಇನ್ನಿಲ್ಲ ಎಂದು ಯಾವಾಗ ತಿಳಿಯುತ್ತದೆ?
ಸುಮ್ಮನೆ ಇರಿ (put), ನೀವೇ ಬೇರೆಯ ಅಸ್ತಿತ್ವದವರೆಂದು ನಿಮಗೆ ಅನ್ನಿಸದಿದ್ದಾಗ, ನಿಮ್ಮ ಅಹಂಭಾವವು ಕರಗಿ ಹೋಗಿರುತ್ತದೆ. ನೀವು ಜ್ಞಾನೋದಯ ಹೊಂದಿದಾಗ, ನಿಮ್ಮ ಅಹಂಭಾವವು ಪಕ್ವವಾಗಿ ಒಡೆದು ಹೋಗಿರುತ್ತದೆ. ನಿಮ್ಮ ಅಹಂಭಾವವು ಬಿದ್ದಾಗ, ನೀವು ಮುಂಚೆ ಹಾಕಿದ ಅಡೆತಡೆಗಳು ಮಾಯವಾಗುತ್ತವೆ. ಮತ್ತು ಅಸ್ತಿತ್ವವು ಸುಮ್ಮನೆ ನಿಮ್ಮೊಳಗೆ ಸರಾಗವಾಗಿ ಹರಿಯುತ್ತದೆ.
ನಿಮಗೆ ಗೊತ್ತಿದೆಯೋ ಇಲ್ಲವೋ, ನೀವು ಒಪ್ಪಿಕೊಳ್ಳುತ್ತೀರೋ ಇಲ್ಲವೋ, ನೀವು ಇಷ್ಟಪಡುತ್ತೀರೋ ಇಲ್ಲವೋ, ಪ್ರತಿ ನಿಮಿಷವೂ ಅಸ್ತಿತ್ವವು ನಿಮ್ಮೊಳಗೆ ಹರಿಯಲು ಪ್ರಯತ್ನಿಸುತ್ತಿರುತ್ತದೆ, ಆದರೆ ನೀವು ಎಷ್ಟೊಂದು ಅಹಂಭಾವದಿಂದ ತುಂಬಿರುತ್ತೀರಿ ಎಂದರೆ, ನೀವು ಅದನ್ನು ಸ್ವೀಕರಿಸಲು ಆಗುತ್ತಿಲ್ಲ. ನಿಮ್ಮ ಅಹಂಭಾವದಿಂದ ನೀವು ಅಸ್ತಿತ್ವದ ಚಮತ್ಕಾರಗಳನ್ನು ತಪ್ಪಿಸಿಕೊಳ್ಳುತ್ತಿದ್ದೀರಿ. ನೀವು ಅಸ್ತಿತ್ವದೊಂದಿಗೆ ಸಂಬಂಧ ಹೊಂದಲು ಆಗುತ್ತಿಲ್ಲ ಮತ್ತು ಅದರಿಂದ ನೀವು ಅಹಂಭಾವ, ಅಜ್ಞಾನ ಮತ್ತು ಸಂಕಷ್ಟದಲ್ಲೇ ಜೀವಿಸುವುದನ್ನು ಮುಂದುವರಿಸುತ್ತೀರಿ.
ನೀವು ಎಷ್ಟೊಂದು ಅಹಂಭಾವದಿಂದ ತುಂಬಿರುತ್ತೀರಿ ಎಂದರೆ ನೀವು ನಿಮ್ಮದೇ ಆಸ್ತಿತ್ವ (being) ದಿಂದ ಬಹಳ ದೂರದಲ್ಲಿ ಬದುಕಿರುತ್ತೀರಿ. ನಿಮ್ಮೊಳಗೆ ಕೇವಲ ಒಂದು ಜನ್ಮದಲ್ಲದೆ ಜನ್ಮ ಜನ್ಮಾಂತರಗಳಿಂದ ನಿಮ್ಮೊಳಗೆ ತುಂಬಿಕೊಂಡಿರುವ ವಸ್ತುಗಳು ಎಷ್ಟೊಂದು ಇವೆಯೆಂದರೆ ನೀವು ಅದರಿಂದ ತಪ್ಪಿಸಿಕೊಳ್ಳುವ ಆವಶ್ಯಕತೆಯಿದೆ. ನಿಮ್ಮೊಳಗೆ ನಿಮಗೇ ಜಾಗವಿಲ್ಲ! ಮತ್ತು ಇದರಿಂದ ಸದಾಕಾಲವೂ ನೀವು ನಿಮ್ಮ ಒಳ ಅಸ್ತಿತ್ವದ ಬದಲು ನಿಮ್ಮ ಹೊರ ಮೈನಿಂದ ಕಾರ್ಯವನ್ನು ಮಾಡುತ್ತಿರುತ್ತೀರ.
ನಿಮ್ಮ ಅಹಂಭಾವವು ಕರಗಿದರೆ, ನೀವು ಇರುವುದಿಲ್ಲ ಮತ್ತು ಸುಮ್ಮನೆ ಅಸ್ತಿತ್ವದೊಂದಿಗೆ ಐಕ್ಯವಾಗುತ್ತೀರ! ಇದೇ ಜ್ಞಾನೋದಯ ಹೊಂದಿದ ಗುರುಗಳ ಸ್ಥಿತಿ. ನಾನು ಆಗಾಗ್ಗೆ ಜನಗಳಿಗೆ ಹೇಳುತ್ತಿರುತ್ತೇನೆ, "ನೀವು ಏನಲ್ಲವೋ ಅದನ್ನು ನಾಶ ಮಾಡಬೇಡಿ" ಎಂದು. ಜನಗಳು ನನ್ನತ್ತ ಆಘಾತದಿಂದ ನೋಡುತ್ತಾರೆ. ನಾನು ಇದನ್ನು ಹೇಳಿದಾಗ, ನಾನು ಅರ್ಥೈಸುವುದೆನೆಂದರೆ, ನೀವು ನಿಮ್ಮ ಒಳ ಅಸ್ತಿತ್ವ (inner being). ಆ ಅಸ್ತಿತ್ವವು ಈಗ ಆದರದಲ್ಲದ ಬೇರೆ ಬೇರೆ ಕ್ರಿಯಾತ್ಮಕ ಮತ್ತು ನಿಷ್ಕ್ರಿಯವಾದ ರೂಪಗಳ ಅಹಂಭಾವದಿಂದ ಕಲುಷಿತಗೊಂಡಿದೆ. ಇದನ್ನೇ ನೀವು ನಾಶ ಮಾಡಬೇಕಿರುವುದು ಮತ್ತು ಅದನ್ನೇ ನಾನು, "ನೀವು ಏನಲ್ಲವೋ ಅದನ್ನು ನಾಶ ಮಾಡಿರಿ ಮತ್ತು ನೀವು ಆಗಮಿಸಿದಿರಿ!" ಎಂದು ಹೇಳಿದಾಗ ಅರ್ಥೈಸುವುದು.
ನೀವು ಅಸ್ತಿತ್ವದ ಒಂದು ಭಾಗ ಮತ್ತು ಯಾವುದು ನೀವು ವ್ಯತಿರಿಕ್ತವಾಗಿ ಯೋಚಿಸುವಂತೆ ಮಾಡುತ್ತದೆಯೋ, ಅದು ಅಹಂಭಾವ ಅಷ್ಟೆ. ಇದು ಈ ರೀತಿ: ಒಂದು ಮೀನು, ಅದು ಇಷ್ಟ ಪಡಲಿ ಅಥವಾ ಇಲ್ಲದಿರಲಿ, ಅದು ಒಪ್ಪಿಕೊಳ್ಳಲಿ ಅಥವಾ ಇಲ್ಲದಿರಲಿ, ಅದು ನಂಬಲಿ ಅಥವಾ ಇಲ್ಲದಿರಲಿ, ಅದು ಸಾಗರದ ಒಂದು ಭಾಗ. ಅದಕ್ಕೆ ಎರಡು ಆಯ್ಕೆಗಳಿವೆ. ಅದು ಸಾಗರದಲ್ಲಿ ಸಂತಸದಿಂದ ಬದುಕುತ್ತದೆ, ಅಥವಾ ಸಮುದ್ರದೊಂದಿಗೆ ಹೋರಾಡುತ್ತದೆ ಮತ್ತು ಅದರೊಳಗೇ ಬದುಕು ವುದನ್ನು ಮುಂದುವರಿಸುತ್ತಾ ತನ್ನ ಬದುಕನ್ನು ಬಹು ಕಷ್ಟಮಯವಾಗಿಸಿಕೊಳ್ಳುತ್ತದೆ.
ನೀವು ಅಸ್ತಿತ್ವದೊಂದಿಗೆ ಹರಿದರೆ, ನಿಮ್ಮ ಬದುಕಿನ ಪ್ರತಿಕ್ಷಣವನ್ನೂ ಸಂತಸದಿಂದ ಅನುಭವಿಸುತ್ತೀರ. ನೀವು ಗ್ರಹಿಸುವವರಾಗುತ್ತೀರ, ಸೂಕ್ಷ್ಮ ಮನಸ್ಸಿನವರಾಗುತ್ತೀರ ಮತ್ತು ಸೃಜನಶೀಲರಾಗಿರುತ್ತೀರ ಮತ್ತು ದ್ರವಿಸುತ್ತೀರ.
ಒಂದು ಸಣ್ಣ ಕಥೆ:
ಒಬ್ಬ ಶಿಕ್ಷಕಿಯು ತನ್ನ ವಿದ್ಯಾರ್ಥಿಗಳನ್ನು ವಿಹಾರಾರ್ಥವಾಗಿ ಹೊರಗಡೆ ಕರೆದುಕೊಂಡು ಹೋಗಿದ್ದಳು.
ಅವರು ಆಟಗಳನ್ನು ಆಡಿದರು, ತಿಂಡಿಗಳನ್ನು ತಿಂದರು ಮತ್ತು ಆನಂದದಿಂದ ನಲಿದಾಡಿದರು.
ಇದ್ದಕ್ಕಿದ್ದ ಹಾಗೆ ಶಿಕ್ಷಕಿಯು ಅವರ ಗಮನವನ್ನು ಆಕಾಶದಲ್ಲಿ ಮೂಡಿ ಬಂದ ಒಂದು ಸುಂದರವಾದ ಕಾಮನಬಿಲ್ಲೆತ್ತ ಸೆಳೆದಳು.
ಮಕ್ಕಳು ಆದರತ್ತ ಆಶ್ಚರ್ಯದಿಂದ ಮೇಲೆ ನೋಡಿದರು.
ಶಿಕ್ಷಕಿಯು ಅವರನ್ನು ಗಮನಿಸಿದಳು ಮತ್ತು ಪ್ರಕಟಿಸಿದಳು “ಸರಿ ಈಗ, ನಾವು ಈಗ ಇದರ ಹಿಂದಿರುವ ಕಲಾಕಾರನಿಗೆ ಕರತಾಡನವನ್ನು ಮಾಡೋಣ!” ಎಂದು.
ವಿದ್ಯಾರ್ಥಿಗಳು ಒಂದು ಕ್ಷಣ ಗಲಿಬಿಲಿಗೊಂಡರು, ಆದರೆ ಬೇಗ ಅರ್ಥಮಾಡಿಕೊಂಡು ಪ್ರಶಂಸಾತ್ಮಕವಾಗಿ ಚಪ್ಪಾಳೆ ತಟ್ಟತೊಡಗಿದರು.
ಮಕ್ಕಳಿಗೆ ಅವರ ಸುತ್ತಲೂ ಇರುವ ಅಸ್ತಿತ್ವದ ಸೌಂದರ್ಯವನ್ನು ಮೆಚ್ಚುವುದನ್ನು ಹೇಳಿಕೊಡಬೇಕು. ಇಲ್ಲದಿದ್ದರೆ ಅವರು ಅಸ್ತಿತ್ವದ ಸಂಬಂಧವನ್ನು ಬೇಗನೆ ಕಳೆದುಕೊಂಡು ಅಹಂಭಾವಿತರಾಗುತ್ತಾರೆ. ಅವರು ಯಾಂತ್ರಿಕವಾಗಿ ಮತ್ತು ಅಹಂಭಾವಿತರಾಗಲು ಬಿಡಬಾರದು. ಅವರು ಗ್ರಹಿಸುವಂತವರಾಗಿ ಮತ್ತು ಸೂಕ್ಷ್ಮ ಮನಸ್ಸಿನವರಾಗುವಂತೆ ಬೆಳೆಸಬೇಕು.
ನೀವು ಅಸ್ತಿತ್ವವನ್ನು ಮೆಚ್ಚಬಲ್ಲವರಾದರೆ, ನೀವು ಅದರ ಸಮೀಪ ಬಂದಿರುವಿರಿ. ಅಸ್ತಿತ್ವವೆಲ್ಲವೂ ಸೃಜನಾತ್ಮಕವೇ. ಒಬ್ಬ ಸೃಜನಾತ್ಮಕ ವ್ಯಕ್ತಿಯು ಅವನ ಮನಸ್ಸಿಗಿಂತ ಅವನ ಹೃದಯಕ್ಕೆ ಹತ್ತಿರವಾಗಿರುತ್ತಾನೆ. ನೀವು ಸೃಷ್ಟಿಸಿದರೆ ನೀವು ದೇವರ ಸಮೀಪ ಇರುವಿರಿ. ದೇವರೇ ಸೃಷ್ಟಿಯಾದ ಮತ್ತು ಸೃಷ್ಟಿಯ ಸೃಷ್ಟಿಕರ್ತ. ನೀವು ಸೃಷ್ಟಿಸಿದರೆ, ನೀವು ಅಸ್ತಿತ್ವದ ಗುಣವಾದ ನಿಮ್ಮ ಅಸ್ತಿತ್ವವನ್ನು ತಿಳಿಸುತ್ತೀರ. ನೀವು ಸೃಷ್ಟಿಸಿದರೆ, ನೀವು ಅಸ್ತಿತ್ವದ ಬಗ್ಗೆ ನಿಮ್ಮ ಪ್ರೀತಿ ಮತ್ತು ಮೆಚ್ಚುಗೆಯನ್ನು ತೋರಿಸುತ್ತಿದ್ದೀರಾ, ಮತ್ತು ಅಸ್ತಿತ್ವದ ಸೌಂದರ್ಯತೆಗೆ ಇನ್ನೂ ಸ್ವಲ್ಪ ಸೇರಿಸುತ್ತಿದ್ದೀರ.
ನೀವು ಅಸ್ತಿತ್ವದತ್ತ ಆಶ್ಚರ್ಯಭರಿತರಾಗಿದ್ದರೆ, ನೀವು ಸೃಷ್ಟಿಸಬಲ್ಲಿರಿ. ಅದೇ ರೀತಿ ಅಹಂಭಾವಭರಿತರಾಗಿದ್ದರೆ, ನೀವು ಸೃಷ್ಟಿಸಲಾರಿರಿ ಮತ್ತು ನೀವು ಸೃಷ್ಟಿಸಿದರೂ ಕೂಡ, ನಿಮ್ಮ ಸೃಷ್ಟಿಯು ಒಂದು ನಿರ್ಜೀವ ಸೃಷ್ಟಿಯಾಗಿರುತ್ತದೆ. ಅದು ಒಂದು ಪ್ಲಾಸ್ಟಿಕ್ ಗುಲಾಬಿಯಂತೆ ನೋಡಲು ಪರಿಪೂರ್ಣವಾಗಿರುತ್ತದೆ, ಆದರೆ ಪರಿಮಳವಾಗಲೀ, ಜೀವವಾಗಲೀ ಇರುವುದಿಲ್ಲ. ಒಬ್ಬ ಕಲಾವಿದನು ಪ್ರೀತಿಯಿಂದ ಸೃಷ್ಟಿಸಿದರೆ, ಆ ಸೃಷ್ಟಿಗೆ ಒಂದಷ್ಟು ಅತಿಶಯವಾದ ಗುಣವನ್ನು ನೀಡಬಲ್ಲನು. ಅವನು ಅದನ್ನು ಅಹಂಭಾವದಿಂದ ಸೃಷ್ಟಿಸಿದರೆ, ಆ ಸೃಷ್ಟಿಯು ನಿರ್ಜೀವವಾಗಿರುತ್ತದೆ.
ನೀವು ಸೃಷ್ಟಿಯೊಂದಿಗೆ ಶ್ರುತಿಯೊಂದಿಲ್ಲದಿದ್ದರೆ, ನೀವು ಅಸ್ತಿತ್ವದ ಪರಿಮಳವನ್ನು ಕಳೆದುಕೊಳ್ಳುತ್ತೀರಿ. ಇದು ಹೇಗೆಂದರೆ, ಒಂದು ಸುಂದರವಾದ ಪರಿಮಳವು ನಿಮ್ಮನ್ನು ಸುತ್ತುಗಟ್ಟಿಕೊಂಡಿದ್ದರೆ, ನೀವು ನಿಮ್ಮ ಮೂಗನ್ನು ದುರ್ನಾತದಿಂದಿರುವ ಬೆರಳುಗಳಿಂದ ನಿಮ್ಮ ಮೂಗನ್ನು ಮುಚ್ಚಿಕೊಂಡಿರುವಂತೆ. ಇದೇ ಅಹಂಭಾವ. ನೀವು ಅಸ್ತಿತ್ವದ ಸುಗಂಧವನ್ನು ಅನುಭವಿಸಿದರೆ, ನೀವು ಅದರ ಅನುರೂಪ ಸೇರಿಕೆಯನ್ನು ಕೂಡ ಅನುಭವಿಸಲು ಪ್ರಾರಂಭಿಸುತ್ತೀರಿ.
ನೀವು ಸಂಪೂರ್ಣ ಅಸ್ತಿತ್ವದೊಂದಿಗೆ ಪ್ರತಿಸ್ಪಂದಿಸಲು ಸಾಧ್ಯವಾಗುತ್ತದೆ. ನೀವು ಪ್ರತಿಯೊಂದು ಎಲೆಯೂ, ರೆಂಬೆಯೂ ಅಸ್ತಿತ್ವದ ಅಥವಾ ದೇವರ ಪ್ರಕಟನೆ (manifestation) ಎಂದು ನೋಡಲು ಸಾಧ್ಯವಾಗುತ್ತದೆ. ನೀವು ಈ ಸ್ಥಿತಿಯಲ್ಲಿರುವಾಗ, ಏನನ್ನು ಕೋರಿದರೂ ಅದನ್ನು ನೀವು ಕಂಡುಕೊಳ್ಳುವಿರಿ; ನೀವು ಅಸ್ತಿತ್ವದೊಂದಿಗೆ ಶ್ರುತಿಗೂಡಿಸಿ ಚಲಿಸುತ್ತಿದ್ದೀರಿ. ಆಗ ಜೀವನವು ಒಂದು ಚಮತ್ಕಾರವಾಗುತ್ತದೆ! ಇದನ್ನೇ ನಾವು ಅಸ್ತಿತ್ವದ ಅನುರೂಪ ಸೇರಿಕೆಯೆಂದು (Synchronising of existence) ಹೇಳುವುದು.
ಮತ್ತು ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಿ. ನೀವು ಅಸ್ತಿತ್ವದೊಂದಿಗೆ ಪ್ರತಿಸ್ಪಂದಿಸುತ್ತಿದ್ದರೆ, ನೀವು ದುರಾಸೆಯಿಂದ ಕೋರಿಕೊಳ್ಳುವುದಿಲ್ಲ. ಸುಮ್ಮನೆ ಅಸ್ತಿತ್ವವು ಆ ಕ್ಷಣದಲ್ಲಿ ನಿಮಗೆ ಏನು ಬೇಕೋ ಅದನ್ನು ಕೊಡುತ್ತಲೇ ಇರುತ್ತದೆ -
ನೀವು ಅದನ್ನು ಕೇಳುವ ಮುಂಚೆಯೇ. ಇದನ್ನೇ ನಾನು ಅರ್ಥೈಸುವುದು “ಏನನ್ನು ಕೋರಿದರೂ ಅದನ್ನು ನೀವು ಕಂಡುಕೊಳ್ಳುವಿರಿ'' ಎಂದು ನಾನು ಹೇಳಿದಾಗ.
ಸಮಸ್ಯೆಯು ಏನೆಂದರೆ, ನಾವು ನಮ್ಮನ್ನೇ ಆಳವಾಗಿ ನಮ್ಮೊಳಗೆಯೇ ಇರುವ ಅಸ್ತಿತ್ವದ ಮೂಲ ಸ್ಥಾನದಿಂದ ಬಹಳ ದೂರವಿರಿಸಿಕೊಂಡಿದ್ದೇವೆ. ಆದುದರಿಂದ ನಮಗೆ ಅದರ ಬಗ್ಗೆ ಒಂದೇ ಸಮನೆ ನೆನಪಿಸುತ್ತಿರುವುದು ಬೇಕು. ಮೊದಲು ನಿಮ್ಮ ಸುತ್ತ ಇರುವ ಸೌಂದರ್ಯವನ್ನು ಮೆಚ್ಚುವುದರಿಂದ ಮತ್ತು ಶ್ಲಾಘಿಸುವುದರಿಂದ ನಿಮ್ಮ ಅಹಂಭಾವವನ್ನು ಬಿಡಲು ಪ್ರಾರಂಭಿಸುವುದು. ಇದೇ ನಿಮ್ಮಲ್ಲಿ ಬದಲಾವಣೆಯ ಬೀಜವನ್ನು ಬಿತ್ತಲು ಪ್ರಾರಂಭಿಸುತ್ತದೆ. ಇದು ನಿಮ್ಮ ಅಹಂಭಾವಕ್ಕಿಂತಲೂ ಪ್ರಬಲವಾದ ಈ ವಿಶ್ವವನ್ನೇ ನಡೆಸುತ್ತಿರುವ ಒಂದು ಜೀವ ಬಲ (Life Force) ವು ಇದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುವ ಹಾಗೆ ಮಾಡುತ್ತದೆ.
ಅಸ್ತಿತ್ವಕ್ಕೆ ನಿಮ್ಮನ್ನು ನೀವೆ ಎಷ್ಟು ಕಳೆದುಕೊಳ್ಳುತ್ತೀರೋ, ಅಷ್ಟು ಹೆಚ್ಚಾಗಿ ನೀವು ಅಹಂಭಾವರಹಿತರಾಗಿ ಇರುತ್ತೀರ. ನೀವೆಷ್ಟು ಅಹಂಭಾವರಹಿತರಾಗುತ್ತೀರೋ ಅಷ್ಟು ಹೆಚ್ಚಾಗಿ ಅಸ್ತಿತ್ವಕ್ಕೆ ನಿಮ್ಮನ್ನೇ ನೀವು ಕಳೆದುಕೊಳ್ಳುತ್ತೀರಿ.
ಹ್ಯಾ...
ಸ್ವಾಮೀಜಿ, ನಾವು ನಮ್ಮ ಅಹಂಭಾವವನ್ನು ಬಿಟ್ಟುಬಿಡಲು ನಮ್ಮ ಬುದ್ಧಿಮತ್ತೆಯ ಮಟ್ಟದಲ್ಲಿ ಗೊತ್ತಿದ್ದರೂ, ನಮಗೆ ಏಕೆ ಮಾಡಲು ಸಾಧ್ಯವಾಗುತ್ತಿಲ್ಲ?
ನೋಡಿ ಮಾನವನು ಸಂಪೂರ್ಣವಾಗಿ ಬಿಟ್ಟುಬಿಡಲು ಬಯಸುವುದೇ ಇಲ್ಲ. ಅವನು ಸದಾಕಾಲವೂ ಯಾವುದಕ್ಕಾದರೂ ಅಂಟಿಕೊಂಡಿರಲು ಬಯಸುತ್ತಾನೆ ಮತ್ತು ಅದೇ ಅವನ ಅಹಂಭಾವ. ನಿಮ್ಮ ಅಹಂಭಾವವು ನಿಮ್ಮ ಶಕ್ತಿಯೇ ಆಗಿದೆ. ನೀವು ಅದನ್ನು ಬಹಳ ವರ್ಷಗಳಿಂದ ಅಷ್ಟೊಂದು ಚೆನ್ನಾಗಿ ಕಾಪಾಡುತ್ತಿದ್ದೀರಿ. ಅದು ನಿಮ್ಮ ಅಸ್ತಿತ್ವದ ತಳಹದಿಯೇ ಆಗಿದೆ.
ನಿಮ್ಮ ಅಹಂಭಾವದಿಂದಾಚೆ ಬೇರೊಂದು ಲೋಕವು ನೀವು ಈಗ ಭಾವಿಸುತ್ತಿರುವುದಕ್ಕಿಂತಾ ಇನ್ನೂ ಹೆಚ್ಚು ಆನಂದಮಯವಾಗಿರುವುದನ್ನು ನೀವು ತಿಳಿದೇ ಇಲ್ಲ. ನಿಮ್ಮ ಅಹಂಭಾವವು ನಿಮಗೆ ಜೀವನಾಧಾರವಾದ ಮೂಲ ವಸ್ತು. ಆದರೆ ಸರಳವಾದ ನಿಜ ಎಂದರೆ - ನೀವು ಅದನ್ನು ಬಿಟ್ಟುಬಿಡಬೇಕಿದೆ!
ಅದು ಈ ತರಹ. ಒಂದು ಬೀಜವನ್ನು ಬಿತ್ತಲಾಗಿದೆ ಎಂದು ಅಂದುಕೊಳ್ಳಿ. ಆ ಬೀಜವು ಮರವಾಗಿ ಬೆಳೆಯಲು ಒಡೆಯಲೇ ಬೇಕು ಅಲ್ಲವೇ? ಆ ಬೀಜವು ಆ
ಖಚಿತ ಪರಿಹಾರಗಳು
ಮರವು ಬೆಳೆಯಲಿ ಎಂದು ಕಾದಿದ್ದು ನಂತರ ತಾನು ಒಡೆಯುವೆ ಎಂದು ಭಾವಿಸಿದರೆ, ಅದು ಸಾಧ್ಯವೇ? ಇಲ್ಲ! ಇದೇ ತರಹ, ಮನುಷ್ಯನು ತಾನು ವಿಕಸಿತನಾಗಬೇಕಾದರೆ, ಅವನ ಅಹಂಭಾವವು ಒಡೆಯಲೇಬೇಕು. ಅವನು ತನ್ನ ಅಹಂಭಾವವನ್ನು ಎಷ್ಟು ಹೆಚ್ಚು ಸಮಯ ಕಾಯುತ್ತಾನೋ, ಅವನು ತನ್ನ ವಿಕಸಿತವನ್ನು ಅಷ್ಟೇ ಮುಂದೂಡುತ್ತಿರುತ್ತಾನೆ ಅಷ್ಟೆ.
ಮನುಷ್ಯನು ತನ್ನ ಗುರುವನ್ನು ಸಂಧಿಸುವ ತನಕ, ಅವನಲ್ಲಿರುವ ಅಡೆತಡೆಗಳು ಎಲ್ಲಿವೆ, ಅವನ ಅಹಂಭಾವವು ದಾರಿಯಲ್ಲಿ ಎಲ್ಲಿ ನಿಂತಿದೆ ಎಂದು ಕೂಡ ಅವನಿಗೆ ತಿಳಿದಿಲ್ಲದಿರದೇ ಇರಬಹುದು. ಆದರೆ ಒಮ್ಮೆ ಅವನ ಗುರುವನ್ನು ಸಂಧಿಸಿದರೆ, ಅವನಿಗೆ ಕೀಲಿಕೈ ದೊರೆತಂತೆ! ಅದನ್ನು ಉಪಯೋಗಿಸುವುದು ಅವನಿಗೆ ಬಿಟ್ಟದ್ದು. ಗುರುವಿನ ಏಕೈಕ ಸಂಕಲ್ಪ ಎಂದರೆ ಅವರ ಪ್ರತಿ ಶಿಷ್ಯನ ಅಹಂಭಾವವನ್ನು ಹರಿಯುವುದು.
ಗುರುವಿನ ಮಾತುಗಳು ಮತ್ತು ಕಾರ್ಯಗಳು ಹೊರಗಡೆಯಿಂದ ನೋಡಿದರೆ ಸುಗಮವಾಗಿಲ್ಲದೆ ಮತ್ತು ಅನುಚಿತವಾಗಿ ಕಾಣಿಸಬಹುದು. ಆದರೆ ಅದು ಸತ್ಯತೆಯಿಂದ ಮೈ ತುಂಬಿರುತ್ತದೆ ಮತ್ತು ನಿಮ್ಮ ಅಹಂಭಾವವನ್ನು ನಾಶಮಾಡುವ ಏಕೈಕ ಉದ್ದೇಶದಿಂದ ಅರ್ಥಯುಕ್ತವಾಗಿರುತ್ತದೆ. ಗುರುವು ಮನುಕುಲಕ್ಕಾಗಿ ಪೂರ್ಣ ಅನುಕಂಪದಿಂದ ತಾನೇ ಇಳಿದು ಬಂದಿರುತ್ತಾರೆ. ಅವರಿಗೆ ಬೇರೆ ಯಾವುದರಲ್ಲೂ ಅಥವಾ ಬೇರಾರಲ್ಲೂ ಪಟ್ಟಭದ್ರ ಹಿತಾಸಕ್ತಿ ಇರುವುದಿಲ್ಲ. ಅವರು ಆಸೆಯ ವಿಶ್ವಾಸಘಾತುಕ ಸಾಗರದಾಚೆ ಇರುವವರು. ಅವರು ಇಲ್ಲಿರುವುದು ನಿಮ್ಮನ್ನು ಆವರಿರುವ ಸ್ಥಿತಿಗೆ - ಎಂದರೆ ನಿರಂತರ ಆನಂದದ ಸ್ಥಿತಿ, ಅಂದರೆ ಎಲ್ಲಿ 'ನಾನು' ಇಲ್ಲದೆ ಕೇವಲ ಅರಿವು ಮಾತ್ರ ಇರುವ ಸ್ಥಿತಿ - ಸರಳವಾಗಿ ಮೇಲೆತ್ತಲು.
ಸ್ತ್ರೀ ಶಕ್ತಿಯಾದ ದೇವಿಯ ಮೇಲಿನ 700 ಸಂಸ್ಕೃತ ಶ್ಲೋಕಗಳಿಂದ ಕೂಡಿದ ಚಂಡಿ ಸ್ತೋತ್ರದಲ್ಲಿ, ಚಂಡಿ ದೇವಿಯು ಹೇಗೆ ಅನೇಕ ಕೆಟ್ಟ ದೈತ್ಯರನ್ನು ಸಂಹಾರ ಮಾಡಿದಳು ಎಂಬುದರ ಬಗ್ಗೆ ಹೇಳಿದೆ. ಅದು ನಿಜವಾದ ಜನರನ್ನು ಸಂಹಾರ ಮಾಡಿದಳು ಎಂದಲ್ಲ. ಅವಳು ನಿಜವಾದ ಮನುಷ್ಯರನ್ನು ಸಂಹರಿಸಿದ್ದರೆ, ಅವಳು ಕಾರಾಗೃಹದಲ್ಲಿರಬೇಕಿತ್ತು ಮತ್ತು ನಾವು ಅವಳನ್ನು ಸ್ತೋತ್ರಗಳಿಂದ ಪೂಜಿಸುತ್ತಿರಲಿಲ್ಲ. ಅವಳು ಪಾತಕಗಳನ್ನು ಮಾಡಿದ ಅಪರಾಧಿಯಾಗಿ ಬರುತ್ತಿದ್ದಳು!
ದೈತ್ಯರು ಮನುಷ್ಯನಲ್ಲಿರುವ ನಾನಾ ತರಹದ ಕೆಡುಕುಗಳು ಮತ್ತು ಅಹಂಭಾವವನ್ನು ಪ್ರತಿನಿಧಿಸುವ ಪ್ರತೀಕಗಳು ಮತ್ತು ಇವನ್ನು ದೇವಿಯು ಹತ್ಯೆಗೈದು ಮನುಷ್ಯರನ್ನು
ಅವುಗಳಿಂದ ಬಿಡುಗಡೆ ಮಾಡಿದಳು ಎಂದು - ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು. ಒಬ್ಬ ದೈತ್ಯನು ಎಮ್ಮೆಯ ಮುಖದವ! ಇದು, ನಮ್ಮಲ್ಲಿ ಕೆಲವರು ದಪ್ಪ ಚರ್ಮದವರಾಗಿದ್ದು, ಗುರುವು ನಮ್ಮನ್ನು ಅವರ ಹಾದಿಗೆ ತರಲು ಎಷ್ಟು ಬಾರಿ ಎಚ್ಚರಿಸಿದರೂ, ನಾವು ಬಲವಾಗಿ ನಮ್ಮದೇ ಹಾದಿಗೆ ಅಂಟಿಕೊಂಡಿರುತ್ತೇವೆ, ಎಂದು. ನಾವು ಅರ್ಥಮಾಡಿಕೊಳ್ಳಲು ಇದೆ! ನಾವು ಗುರುಗಳ ಕರೆಗೆ ಗ್ರಾಹಿಗಳಾಗಿ ಯಾಗಲೀ ಮತ್ತು ಸೂಕ್ಷ್ಮವಾಗಿಯಾಗಲೀ ಇರುವುದಿಲ್ಲ.
ನೋಡಿ ಗುರುಗಳ ಜೊತೆ ವಾದ ಮಾಡುವುದು ನೀವು ನಿಮಗೇ ನೀಡಬಹುದಾದ ಶಿಕ್ಷೆ. ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ, ನೀವು ಗುರುಗಳೊಂದಿಗೆ ವಾದದಲ್ಲಿ ಸಿಕ್ಕಿಬಿದ್ದರೆ, ಯಾರೂ ನಿಮಗೆ ಅದಕ್ಕಿಂತ ಹೆಚ್ಚಿನ ಕೆಡಕನ್ನು ಮಾಡಲಾರರು. ನೀವು ಗುರುಗಳೊಂದಿಗೆ ವಾದ ಮಾಡುವುದರಿಂದ ನಿಮಗೆ ನೀವೇ ಸಾಕಷ್ಟು ಹಾನಿಯನ್ನು ಮಾಡಿಕೊಳ್ಳುತ್ತೀರ. ಗುರುಗಳು ಪ್ರತಿಯೊಬ್ಬರನ್ನೂ ಅವನ ಅಥವಾ ಅವಳ ರೀತಿಯಲ್ಲೇ ಹೇಗೆ ವಿಕಸಿತಗೊಳಿಸಬೇಕೆಂದು ಗೊತ್ತಿರುತ್ತದೆ ಮತ್ತು ಕನಿಷ್ಠವಾಗಿ ಯಾರೊಬ್ಬರೂ ಮಾಡಬೇಕಾದದ್ದು ಗುರುಗಳಿಗೆ ದೃಢ ನಂಬುಗೆಯಿಂದ ಮತ್ತು ಧೈರ್ಯದಿಂದ ಅವರಿಗೆ ತೆರೆದುಕೊಳ್ಳುವುದು.
ಹ್ಯಾ..
ಸ್ವಾಮೀಜಿ, ನೀವು ನನ್ನ ಗುರುಗಳು ಎಂದು ಗೊತ್ತಿದ್ದರೂ ಸಹ, ನಿಮ್ಮ ಸಮ್ಮುಖದಲ್ಲಿ ನನಗೆ ಹಿಂಜರಿಕೆ ಮತ್ತು ಹೆದರಿಕೆಯ ಭಾವನೆಯಾಗುತ್ತದೆ.
(ಸ್ವಾಮೀಜಿ ನಗುತ್ತಾರೆ!) ನೀವು ಈ ಹೇಳಿಕೆಯನ್ನು ಕೊಡಲು ಬಂದದ್ದೇ ವಾಸ್ತವದಲ್ಲಿ ನೀವು ಈ ನಿಮ್ಮ ಸ್ಥಿತಿಯನ್ನು ಮೆಟ್ಟಿ ನಿಲ್ಲಲು. ನೀವು ಜಿಗಿಯಲು ತೀರ್ಮಾನಿಸಿದ್ದೀರಿ.
ನಿಮಗೆ ವಿವರಿಸುತ್ತೇನೆ: ನಿಮ್ಮ ಅಸ್ತಿತ್ವವು ನನ್ನನ್ನು ಸ್ಪಷ್ಟವಾಗಿ ಗುರುತಿಸಿದೆ, ಆದರೆ ನಿಮ್ಮ ಮನಸ್ಸು ಯುದ್ಧ ಮಾಡುತ್ತಿದೆ. ನಿಮ್ಮ ಅಸ್ತಿತ್ವವು ನನ್ನನ್ನು ಗುರುತಿಸದಿದ್ದರೆ, ನೀವು ನನ್ನಲ್ಲಿಗೆ ಪದೇ ಪದೇ ಬರುತ್ತಲೇ ಇರುತ್ತಿರಲಿಲ್ಲ. ನೀವು ಇಲ್ಲಿಗೆ ಬರಲು ಮನೆಯಲ್ಲಿ ಬೇಕಾದಷ್ಟು ತೊಂದರೆಗಳನ್ನು ಎದುರಿಸಿದ್ದೀರ, ಅಲ್ಲವೆ? ನೀವು ಮಾಡಲು ಬಹಳ ಸುಲಭವಾದ ಕೆಲಸವೆಂದರೆ ಮನೆಯಲ್ಲಿಯೇ ಕುಳಿತು ನಿಮ್ಮ ಕೆಲಸವನ್ನು ಮಾಡುವುದು. ಅದು ನಿಮ್ಮ ಸಂಸಾರವನ್ನು ಸಂತುಷ್ಟರನ್ನಾಗಿ ಮಾಡುತ್ತಿತ್ತು, ಅಲ್ಲವೆ?
ನನ್ನನ್ನು ನೋಡಲು ಆಶ್ರಮಕ್ಕೆ ಪದೇ ಪದೇ ಬರಲು ಇಚ್ಛಿಸುತ್ತೀರಿ? ನನ್ನಲ್ಲಿಗೆ ಬಂದದ್ದಕ್ಕಾಗಿ ಮನೆಯಲ್ಲಿ ಪದೇ ಪದೇ ವಾದಗಳನ್ನು ಎದುರಿಸಬಯಸುತ್ತೀರ. ಸುಮ್ಮನೆ ಮನೆಯಲ್ಲಿಯೇ ಇದ್ದು ಮಿಕ್ಕವರನ್ನು ಸಂತುಷ್ಟರನ್ನಾಗಿ ಮಾಡಲು ಹೆಚ್ಚು ಸುಲಭವಾಗಿರಲಿಲ್ಲವೇ? ಕಾರಣ, ನೀವು ಅನುಭವಿಸುತ್ತಿರುವ ಸೆಳೆತವು ನಿಮ್ಮ ಅಸ್ತಿತ್ವದ ಮಟ್ಟದಲ್ಲಿದೆ. ಒಮ್ಮೆ ಅದು ನನ್ನನ್ನು ಗುರುತಿಸಿದಾದ ಮೇಲೆ ಅದು ನಿಮ್ಮನ್ನು ಹಿಂತಿರುಗಲು ಬಿಡುವುದಿಲ್ಲ, ನೀವು ಎಷ್ಟೇ ಪ್ರಯತ್ನಿಸಿದರೂ, ನೀವು ತಪ್ಪಿಸಿಕೊಳ್ಳಲಾರಿರಿ!
ನಿಮ್ಮ ಅಸ್ತಿತ್ವಕ್ಕೆ ನಾನು ಗೊತ್ತು, ಆದರೆ ನಿಮ್ಮ ಮನಸ್ಸು ಅಡ್ಡಿಯಾಗಿರುವಂತೆ ಕಾಣುತ್ತದೆ. ಜ್ಞಾಪಕವಿರಲಿ: ಯಾವಾಗಲೂ ನಿಮ್ಮ ಹೃದಯವನ್ನು ಹಿಂಬಾಲಿಸಿ. ನಿಖರವಾಗಿ ಅದನ್ನೇ ನೀವು ಇಲ್ಲಿ ಮಾಡಬೇಕಿರುವುದು. ನೀವು ನಿಮ್ಮ ಹೃದಯವನ್ನು ಹಿಂಬಾಲಿಸಿದರೆ, ನೀವು ನನ್ನನ್ನು ತಲುಪುವಿರಿ. ನೀವು ನಿಮ್ಮ ಮನಸ್ಸನ್ನು ಹಿಂಬಾಲಿಸಿದರೆ, ನನ್ನನ್ನು ತಪ್ಪಿಸಿಕೊಳ್ಳುತ್ತಲೇ ಇರುವಿರಿ.
ನೀವು ನನಗೆ ನಿಮ್ಮನ್ನೇ ಕಳೆದುಕೊಳ್ಳಲು ಭಯಪಡುತ್ತಿದ್ದೀರಿ. ಅದೇ ಸಮಸ್ಯೆ. ನಿಮ್ಮ ಅಹಂಭಾವಕ್ಕೆ ಬೆದರಿಕೆಯು ಬಂದಿದೆ. ನಿಮಗೆ ನಿಮ್ಮದೇ ಗುರುತಿನ ಬಗ್ಗೆ ಅಭದ್ರತೆಯ ಭಾವನೆಯು ಉಂಟಾಗಿದೆ. ನಿಮಗೆ ನಿಮ್ಮ ಗುರುತು ಕರಗುತ್ತಿರುವ ಭಾವನೆಯಾಗುತ್ತಿದೆ. ನೀವು ನಿಮಗೆ ಗುರುತೇ ಇಲ್ಲದೆ ಎತ್ತ ಸಾಗುತ್ತಿದ್ದೀರಿ ಎಂದು ಆಶ್ಚರ್ಯಪಡಲು ಪ್ರಾರಂಭಿಸಿದ್ದೀರಿ. ನಿಮ್ಮ ಅಹಂಭಾವವು ಒಂದು ತೀವ್ರವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಇದು ಸಂಭವಿಸಿದರೆ, ನಿಮ್ಮ ಜೀವನದಲ್ಲಿ ಬರುವ ಮಿಕ್ಕ ಸಂದರ್ಭಗಳಲ್ಲಿ ಆಗುವಂತೆಯೇ, ನಿಮ್ಮ ಅಹಂಭಾವವು ತತ್ಕ್ಷಣವೇ ತನ್ನ ಆಹಾರವನ್ನು ಹಕ್ಕಿನಿಂದ ಕೇಳುತ್ತದೆ ಮತ್ತು ಈ ಸಂಗತಿಯಲ್ಲಿ ನೀವು ಅದನ್ನು ಪೂರೈಸಲಾರಿರಿ. ಆದ್ದರಿಂದ, ನೀವು ನನ್ನನ್ನು ಅನುಮಾನಿಸಲು ಪ್ರಾರಂಭಿಸುತ್ತೀರಿ! ನೀವು ನಿಮ್ಮ ಭಾವನೆಗಳ ಕಾರಣವನ್ನು ನಾನಾ ವಿಧವಾಗಿ ಅರ್ಥೈಸಲು ಪ್ರಾರಂಭಿಸುತ್ತೀರಿ. ನಿಮ್ಮ ಮನಸು ಆನೆಯ ಸೊಂಡಿಲಿನಂತೆ ಹೊಯ್ದಾಡಲು ಪ್ರಾರಂಭಿಸುತ್ತದೆ - ಒಂದು ನನ್ನಲ್ಲಿ ತೀವ್ರವಾದ ಪ್ರೀತಿಯಿಂದ ಮತ್ತು ಇನ್ನೊಂದು ಕಡೆ ಆ ಪ್ರೀತಿಯ ಬಗ್ಗೆ ತೀವ್ರವಾದ ಅನುಮಾನದಿಂದ.
ಜ್ಞಾಪಕವಿಟ್ಟುಕೊಳ್ಳಿ: ಪ್ರೀತಿಯು ನಿಮ್ಮ ಹೃದಯದಿಂದಾದರೆ ಭಯವು ನಿಮ್ಮ ಮನಸಿನಿಂದ. ಯಾವಾಗಲೂ, ಯಾವಾಗಲೂ, ನಿಮ್ಮ ಹೃದಯವನ್ನು ಹಿಂಬಾಲಿಸಿ.
ಪ್ರೀತಿಯು ಸ್ವಾಭಾವಿಕವಾದದ್ದು, ಭಯವು ಸಾಮಾಜಿಕೀಯವಾದದ್ದು (societal). ಭಯ ಮತ್ತು ಅನುಮಾನವು ಆಳವಾಗಿ ಸಂಬಂಧಿತವಾಗಿದ್ದು ಅವು ಕೇವಲ ನಿಬಂಧನೆಗೊಳಪಡಿಸಲು ನಿಮ್ಮೊಳಗೆ ಹೊಕ್ಕಿವೆ.
ಬಹಳ ನಿಚ್ಚಳವಾಗಿ ಅರ್ಥ ಮಾಡಿಕೊಳ್ಳಿ: ಅನುಮಾನ ಪಡುವುದರಲ್ಲಿ ತಪ್ಪೇನಿಲ್ಲ. ಅನುಮಾನ ಪಡುವುದು ಜ್ಞಾನೋದಯಕ್ಕೆ ನಿಮ್ಮ ಕೈದೀಪದಂತೆ. ನಿಮ್ಮ ಮನಸ್ಸು ಅನುಮಾನವಿಲ್ಲದೆ ಮುಂದುವರಿಯಲು ಬಹಳ ಕಷ್ಟವಾಗುತ್ತದೆ. ಆದರೆ ನಿಮ್ಮ ಅನುಮಾನಗಳು ಕಡೆಯಲ್ಲಿ ನಂಬಿಕೆಗಳಾಗಿ ಪರಿವರ್ತನೆ ಹೊಂದಬೇಕು. ಆಗಲೇ ನೀವು ಪ್ರಗತಿ ಹೊಂದುತ್ತಿದ್ದೀರಿ. ನೀವು ಒಳಗೆ ಸಾಗುತ್ತಿದ್ದರೆ, ಇದು ಸಂಭವಿಸುತ್ತದೆ. ಸರಿ ...?
ನಾವು ಏನು ಮಾಡಬೇಕಾಗಿದೆ, ಸ್ವಾಮೀಜಿ?
ಪ್ರೀತಿಗೆ ಸುಮ್ಮನೆ ಸಂಪೂರ್ಣವಾಗಿ ಬೀಳಿರಿ, ಅಷ್ಟೆ! ಪ್ರೀತಿಗೆ ಸಂಪೂರ್ಣವಾಗಿ ಬೀಳುವುದು ಎಂದರೆ ಅಹಂಭಾವರಹಿತ ಸ್ಥಿತಿಗೆ ಸಂಪೂರ್ಣವಾಗಿ ಬೀಳುವುದು, ಎಂದು. ಆದುದರಿಂದಲೇ ಅಹಂಭಾವರಹಿತ ಸ್ಥಿತಿಯಲ್ಲಿರುವ ಒಬ್ಬ ಗುರುವಿಗೆ ಕೇವಲ ಪ್ರೀತಿ ಮತ್ತು ಅನುಕಂಪದಿಂದಿರಲು ಸಾಧ್ಯವಾಗುತ್ತದೆ. ಕೋಪ, ಸಿಟ್ಟು ಮುಂತಾದ ಮನೋಭಾವಗಳೆಲ್ಲ ಅವರ ಅನಂತ ಪ್ರೀತಿಯ ಹುಸಿ ಪ್ರಕಟನೆಗಳು. ಅವರು ಕೋಪಿಸಿಕೊಂಡಂತೆ, ಮತ್ತು ಸಿಟ್ಟಾದಂತೆ ತೋರಿಸಿಕೊಳ್ಳುತ್ತಾರೆ. ಅವರು ನಿಮ್ಮ ಮಟ್ಟಕ್ಕೆ ಇಳಿದುಬಂದು ನಿಮ್ಮ ಮಟ್ಟದಲ್ಲಿ ಮನೋಭಾವಿಸಿ (emotes) ನಿಮ್ಮನ್ನು ಅರಿವಿಕೆಯ ಮತ್ತೊಂದು ಹಂತದಲ್ಲಿ ಕೊಂಡೊಯ್ಯುತ್ತಾರೆ; ಅಷ್ಟೆ. ನೀವು ಅವರ ಭಾಷೆಯನ್ನು, ಅಂದರೆ ಅಸ್ತಿತ್ವದ ಭಾಷೆಯನ್ನು, ಅರ್ಥಮಾಡಿಕೊಳ್ಳುವತನಕ ಅವರು ನಿಮ್ಮ ಭಾಷೆಯಲ್ಲಿ ಮಾತನಾಡುತ್ತಾರೆ! ಹ್ಞಾ...?
ಆದರೆ ಸ್ವಾಮೀಜಿ, ನಾವು ಪ್ರೀತಿಯಲ್ಲಿ ಸಂಪೂರ್ಣವಾಗಿ ಬೀಳುವುದು ಹೇಗೆ? ಅದು ಮಾಡುವುದಕ್ಕಿಂತ ಹೇಳುವುದು ಸುಲಭ ಎಂದು ಕಾಣುತ್ತದೆ!
ಮೊದಲನೆಯದಾಗಿ: ನಿಮ್ಮ ಪ್ರತಿ ಕೃತ್ಯವನ್ನೂ ಅರಿವಿನಿಂದ ಮುಳುಗಿಸಿಬಿಡಿ. ನೀವು ಪ್ರೇಕ್ಷಕರಾಗಿರಿ (watcher). ನೀವು ಪ್ರತಿಯೊಂದೂ ಒಂದು ನಾಟಕವೆಂದೂ, ನೀವು ಕೇವಲ ಪ್ರೇಕ್ಷಕರಾಗಿದ್ದು ಪ್ರಾಸಂಗಿಕವಾಗಿ ನೀವೇ ನಿಮ್ಮ ಪಾತ್ರವನ್ನು ಅಭಿನಯಿಸುತ್ತಿರುವಿರೆಂದೂ ಭಾವಿಸಲು ಪ್ರಾರಂಭಿಸುತ್ತೀರಿ. ಎರಡನೆಯದಾಗಿ: ನೀವು ನೋಡುವ ಪ್ರತಿಯೊಂದಕ್ಕೂ ತೀರ್ಪುದಾರರಂತೆ ಇರಬೇಡಿ.
ತೀರ್ಪುದಾರರಂತೆ ಇರುವುದನ್ನು ನಿಲ್ಲಿಸಿದರೆ, ನೀವು ಪ್ರತಿಯೊಬ್ಬರನ್ನೂ ಮತ್ತು ಪ್ರತಿಯೊಂದನ್ನೂ ಸಂಪೂರ್ಣ ಮುಗ್ಧತೆಯಿಂದ ಸುಮ್ಮನೆ ಪ್ರೀತಿಸುತ್ತೀರಿ.
ನೀವು ತೀರ್ಪುದಾರರಾಗಿದ್ದರೆ, ನೀವು ಏನು ಇದೆಯೋ ಅದನ್ನುನೋಡುವುದಿಲ್ಲ, ನೀವು ಏನನ್ನು ನೋಡಲು ಬಯಸುತ್ತೀರೋ, ಅದನ್ನು ನೋಡುತ್ತೀರ. ನಮ್ಮಲ್ಲಿ ಬಹಳಷ್ಟು ಮಂದಿ ಮುಂಚಿತವಾಗಿಯೇ ನಮ್ಮ ತೀರ್ಪುಗಳನ್ನು ಅದಾಗಲೇ ರೂಪಿಸಿಕೊಂಡಿರುತ್ತೇವೆ. ಅವುಗಳು ನಮಗೆ ಅಡಿಪಾಯದ ಕಲ್ಲುಗಳು. ನಂತರ ಅವುಗಳನ್ನು ಒಂದು ಸ್ಥಿರವಾದ ತಳಹದಿಯಂತೆ ಇಟ್ಟುಕೊಂಡು ಸುಮ್ಮನೆ ಕೆಲಸ ಮಾಡುತ್ತೇವೆ. ನಾವು ಯಾವುದನ್ನೇ ನೋಡಿದರೂ, ನಾವು ಮಾಡುವ ಮೊದಲ ಕೆಲಸವೆಂದರೆ, ಅದನ್ನು ಮೊದಲೇ ಮಾಡಿಕೊಂಡ ನಮ್ಮ ತೀರ್ಪಿನ ಜತೆ ಅವಲೋಕಿಸುವುದು.
ನಾವು ಈ ರೀತಿ ಕೆಲಸ ಮಾಡಿದರೆ, ಹೇಗೆ ತಾನೆ ನಾವು ವಸ್ತುಗಳನ್ನು ಯಥಾಸ್ಥಿತಿಯಲ್ಲಿ ನೋಡಬಲ್ಲೆವು? ಹೇಗೆ ತಾನೆ ನಾವು ಪ್ರೀತಿಯಲ್ಲಿ ಬೀಳಬಲ್ಲೆವು? ನೀವು ಪ್ರೀತಿಯಲ್ಲಿ ಬೀಳುವುದು, ಪ್ರತಿಯೊಂದನ್ನೂ ತಾಜಾತನದಿಂದ ಮತ್ತು ಒಂದಷ್ಟು ಮುಗ್ಧತೆಯಿಂದ ಸ್ವಾಗತಿಸಿದರೆ ಮಾತ್ರ ಆಗುವುದು. ಆದರೆ ನೀವು ಮಾಡುವುದೇನು? ನೀವು ಪ್ರೀತಿಸುವುದಕ್ಕೂ ಸಹ ಸಾಧಕಬಾಧಕಗಳನ್ನು ವಿಶ್ಲೇಷಿಸಲು ಪ್ರಾರಂಭಿಸುತ್ತೀರಿ. ನೀವು ವಿಶ್ಲೇಷಿಸಲು ಪ್ರಾರಂಭಿಸಿದರೆ, ಅದನ್ನು ಕಳೆದುಕೊಳ್ಳುತ್ತೀರಿ. ಅಂತಿಮವಾಗಿ ನೀವು ಮಾಡಲು ನಿರ್ಧರಿಸಿದಾಗ ಕಾಲ ಮಿಂಚಿರಬಹುದು.
ನೋಡಿ, ಗುರು-ಶಿಷ್ಯರ ಸಂಬಂಧವಿರುವುದು ನೀವು ನಿಮ್ಮ ಅಹಂಭಾವವನ್ನು ಕಳೆದುಕೊಳ್ಳಲು ಮಾತ್ರ. ನೀವು ಒಬ್ಬರೇ ಇದ್ದರೆ ನಿಮ್ಮ ಅಹಂಭಾವವನ್ನು ಕಳೆದುಕೊಳ್ಳಲಾರಿರಿ. ನೀವು ನಿಮ್ಮ ಅಹಂಭಾವವನ್ನು ಕಳೆದುಕೊಳ್ಳಲು ಗುರುಗಳು ಸಾಧನೆಯಾಗುತ್ತಾರೆ ಮತ್ತು ಆಧಾರವಾಗುತ್ತಾರೆ. ನೀವು ಅವರಲ್ಲಿ ಎಷ್ಟು ಹೆಚ್ಚು ಕರಗುತ್ತೀರೋ, ಅಷ್ಟು ಹೆಚ್ಚಾಗಿ ನೀವು ತೆರೆದುಕೊಳ್ಳಲು ತಯಾರಾಗಿರುತ್ತೀರಿ ಮತ್ತು ನಿಮ್ಮ ಅಹಂಭಾವವನ್ನು ಕಳೆದುಕೊಳ್ಳುತ್ತೀರಿ. ನಿಮ್ಮ ಅಹಂಭಾವವು ಕರಗುತಿದೆಯೆಂದು ನಿಮಗೆ ತಿಳಿಯುವುದು ಯಾವಾಗ? ನೀವು ಮುಂಚೆ ಅನುಭವಿಸದಿದ್ದ ಒಂದು ರೀತಿಯ ಆನಂದವನ್ನು ನೀವು ಅನುಭವಿಸಲು ಪ್ರಾರಂಭಿಸಿದಾಗ.
ಏನೂ ಕಾರಣವಿಲ್ಲದೆಯೇ ನೀವು ಆನಂದವನ್ನು ಅನುಭವಿಸಲು ಪ್ರಾರಂಭಿಸುತ್ತೀರಿ. ಸುಮ್ಮನೇ ಅಸ್ತಿತ್ವದಲ್ಲಿರುವುದೇ ನೀವು ಸಂತೋಷವಾಗಿರುವಂತೆ ಮಾಡುತ್ತದೆ. ನೀವು ಗುರುಗಳ ಸಂಗಡ ಇರುವಾಗ, ನಿಮ್ಮ ಅಹಂಭಾವಕ್ಕಾಗಿ ನೀವು ಸದಾಕಾಲವೂ ಶಸ್ತ್ರಚಿಕಿತ್ಸೆಗೊಳಗಾಗಿರುತ್ತೀರ ಮತ್ತು ನಿಮ್ಮ ಅಹಂಭಾವವನ್ನು ಕೊಚ್ಚಿ ಹಾಕುತ್ತಿರುವುದರಿಂದ ಆಳವಾದ ಕಷ್ಟಕರವಾದ ಕ್ಷಣಗಳು ಇರುತ್ತವೆ. ಆದರೆ ನೀವು ಈ ಕ್ಷಣಗಳಿಂದ ಹೊರಹೊಮ್ಮಿದಾಗ, ನೀವು ನಿಮ್ಮ ಬೆಳವಣಿಗೆಯತ್ತ ಅನೇಕ ಹೆಜ್ಜೆಗಳನ್ನು ತೆಗೆದುಕೊಂಡಿರುತ್ತೀರ ಮತ್ತು ಕಾರಣವಿಲ್ಲದೆಯೇ ಸೀಮಾತೀತವಾದ ಆನಂದವನ್ನು ಅನುಭವಿಸುತ್ತಿರುತ್ತೀರ.
ಚಿಕ್ಕಮಕ್ಕಳತ್ತ ಸುಮ್ಮನೆ ನೋಡಿ. ಅವರು ಜೀವನದತ್ತ ಅಷ್ಟೊಂದು ಉತ್ಸಾಹದಿಂದಿರುತ್ತಾರೆ. ಅವರು ಅಷ್ಟೊಂದು ಪ್ರೀತಿಪಾತ್ರರಾಗಿರುತ್ತಾರೆ. ನೀವು ಯಾವಾಗಲಾದರೂ ನೀವೇಕೆ ಅವರಷ್ಟು ಉತ್ಸಾಹಿತರಾಗಿಲ್ಲ ಎಂದು ಆಶ್ಚರ್ಯಪಟ್ಟಿದ್ದೀರಾ? ನೀವು ಒಂದಾನೊಂದು ಕಾಲದಲ್ಲಿ ಅವರಂತೆಯೇ ಇದ್ದಿರಿ, ಅಲ್ಲವೇ? ಹಾಗಾದರೆ ನಾವು ಈ ಉತ್ಸಾಹವನ್ನು ಮತ್ತು ಮುಗ್ಧತೆಯನ್ನು ಎಲ್ಲಿ ಕಳೆದುಕೊಂಡೆವಿ? ಬನ್ನಿ, ಹೇಳಿ. ನಾವು ಇದನ್ನು ಎಲ್ಲಿ ಕಳೆದುಕೊಂಡಿರಬಹುದೆಂದು ನೀವು ತಿಳಿದಿದ್ದೀರ?
(ಭಾಗವಹಿಸಿದವರಲ್ಲಿ ಒಬ್ಬರು ಪ್ರಯತ್ನಿಸುತ್ತಾರೆ): ನಾವು ಬೆಳೆದಿದ್ದೇವೆ ಮತ್ತು ಹೆಚ್ಚು ಪ್ರೌಢತೆಯಿಂದ ಇದ್ದೇವೆ, ಸ್ವಾಮೀಜಿ! ನಾವು ಅವರಿಗಿಂತ ಹೆಚ್ಚು ಅನುಭವಸ್ಥರಾಗಿದ್ದೇವೆ.
ಛೇ, ಛೇ! ಯಾವುದರತ್ತ ಅನುಭವ? ಬೇಸರಿಕೆಯ?! ನೋಡಿ, ಸ್ಪಷ್ಟವಾಗಿರಿ. ನಾವು ತಿಳಿದುಕೊಂಡಿರುವುದು ನಾವೆಲ್ಲಾ ಮಕ್ಕಳಿಗಿಂತ ಹೆಚ್ಚು ಪ್ರೌಢತೆಯಿಂದಿರುವು ದಾಗಿಯೂ ಮತ್ತು ಜೀವನದ ಬಗ್ಗೆ ನಮಗೆ ಸರಿಯಾದ ಮನೋಭಾವ ವಿರುವುದಾಗಿಯೂ, ಅದೇ ಮಕ್ಕಳಾದರೆ ಜೀವನದಲ್ಲಿ ಇನ್ನೂ ಒಳಹೊಕ್ಕು ಪ್ರೌಢಿಮೆಯನ್ನು ಗಳಿಸಬೇಕಾದ ಅವಶ್ಯಕತೆ ಇದೆ ಎಂದು.
ಆದರೆ ನಿಜ ಏನೆಂದರೆ, ನಾವು ಎಷ್ಟು ಬುದ್ಧಿಶಕ್ತಿಯುಳ್ಳವರಾಗಿದ್ದೇವೆಂದರೆ ನಾವು ನಮ್ಮ ಹೃದಯದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದೇವೆ. ನಾವು ಕೇವಲ ನಮ್ಮ ಮನಸ್ಸಿನಿಂದ ಮಾತ್ರವೇ ಕೆಲಸ ಮಾಡುತ್ತಿದ್ದೇವೆ. ನಮ್ಮ ಮನೋಭಾವನೆಗಳು ಕೂಡ ನಮ್ಮ ಮನಸ್ಸಿನ ಆಜ್ಞೆಗೆ ಒಳಪಟ್ಟಿರುತ್ತದೆ. ನಾವು ನಮ್ಮ ಅಸ್ತಿತ್ವದಿಂದ
ಮನೋಭಾವಿಸುವುದನ್ನು (emoting) ನಿಲ್ಲಿಸಿದ್ದೇವೆ. ನಾವು ನಮ್ಮ ಅಂತರಾಳದ (core) ಸಂಬಂಧವನ್ನು ಕಳೆದುಕೊಂಡಿದ್ದೇವೆ.
ನಾವು ಈ ಪ್ರಪಂಚಕ್ಕೆ ಆಗಮಿಸಿದಾಗ, ನಾವು ಆಚರಿಸುವ ಮತ್ತು ಸ್ವಯಂಸ್ಫೂರ್ತಿಯುತವಾದ ಸ್ಥಿತಿಯಲ್ಲಿ ಇದ್ದೆವು. ವರ್ಷಾಂತರಗಳಲ್ಲಿ ಸಮಾಜವು ನಮ್ಮನ್ನು ನಿರ್ಬಂಧನೆಗೊಳಪಡಿಸಿ, ನಮಗೆ ಮನಸ್ಸನ್ನು ನಿರ್ಮಿಸಿತು. ಮನಸ್ಸು ನಂತರ ಅದೇ ಘನೀಕೃತವಾಗಿ ನಮಗೆ ಆಜ್ಞೆಗಳನ್ನು ನೀಡಲಾರಂಭಿಸಿತು. ನಮ್ಮಲ್ಲಿದ್ದ ಸ್ವಯಂಸ್ಫೂರ್ತಿಯು ಕಳೆದುಹೋಯಿತು.
ನಾನು ಹೇಳುವುದು, ನಮ್ಮ ಅಹಂಭಾವವನ್ನು ಕಳಚಿ ಬಿಡುವ ಈ ಎಲ್ಲಾ ಕಾರ್ಯವಿಧಾನದಲ್ಲಿ ನಾವು ಮಗುವನ್ನು ನಮ್ಮಲ್ಲಿ ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಾವು ಚಿಕ್ಕವರಿದ್ದಾಗ, ನಾವು ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ಸನಿಹದಲ್ಲಿದ್ದೆವು. ನಾವು ಬೆಳೆದಂತೆ ಮತ್ತು ಹೇಳುವ ಪ್ರೌಢತೆಯುಳ್ಳವರಾದಾಗ, ನಮ್ಮ ಸಾಮಾಜಿಕ ನಿಬಂಧನೆಗಳು ಸುಮ್ಮನೆ ನಮ್ಮಲ್ಲಿರುವ ಮಗುವನ್ನು ನಿರ್ನಾಮ ಮಾಡಿಬಿಟ್ಟವು.
ಬಹಳ ಮಂದಿ ನನ್ನನ್ನು ಕೇಳುತ್ತಾರೆ, 'ಸ್ವಾಮೀಜೀ, ಅದು ಹೇಗೆ ನೀವು ಅಂತಿಮ ಸತ್ಯದ ಬಗ್ಗೆ ಮಾತನಾಡಿದರೂ, ನೀವು ಮಗುವಿನ ಹಾಗೆ ಕಾಣುತ್ತೀರ?'' ಈಗ ನೀವು ಹೇಳಿ, ನಾನು ಬೆಳೆದು ಪ್ರೌಢನಾಗಿಲ್ಲದೇ ಇರುವುದರಿಂದ ಮಗುವಿನಂತೆ ಇದ್ದೇನೆಯೇ?! ನೀವು ಸುಮ್ಮನೆ ವಿಚಾರಗಳನ್ನು ನಿಮ್ಮದೇ ಅನುಕೂಲವಾದ ರೀತಿಯಲ್ಲಿ ನಿಮ್ಮದೇ ತತ್ವಶಾಸ್ತ್ರದ ಮಾರ್ಗಗಳಲ್ಲಿ ಅರ್ಥೈಸುತ್ತೀರ, ಅದೇ ಸಮಸ್ಯೆ.
ಸಾಮಾಜಿಕ ನಿಬಂಧನೆಗಳ ಹೊರತು, ಈಜಲು, ಹಾರಲು ಯಾವುದೇ ತರಬೇತಿಯಿಲ್ಲದೆ ನಮಗೆ ಸಾಮರ್ಥ್ಯವಿದೆ. ಇದು ಅಸಂಬದ್ಧವೆನಿಸಬಹುದು, ಆದರೆ ಇದು ನಿಜ. ಈ ಸಾಮರ್ಥ್ಯಗಳು ನಮ್ಮಲ್ಲಿವೆ. ಜನಗಳು ನಮಗೆ ಈಜಲು ಮತ್ತು ಹಾರಲು ಸಾಮರ್ಥ್ಯವಿಲ್ಲವೆಂದು ಹೇಳಲು ಶುರು ಮಾಡುವ ತನಕ ನಾವು ಈಜಲು ಮತ್ತು ಹಾರಲು ಬಲ್ಲೆವು. ನೀವು ಒಂದು ಹೊಸದಾಗಿ ಹುಟ್ಟಿದ ಮಗುವನ್ನು ಒಂದು ಈಜುಗೊಳದಲ್ಲಿ ಬಿಟ್ಟರೆ, ಅದು ಮುಳುಗದೆ ತೇಲುತ್ತಿರುತ್ತದೆ. ಅಹಂಭಾವವು ತನ್ನಷ್ಟಕ್ಕೆ ಬಹಳ ವಿಧದಲ್ಲಿ ಪ್ರಕಟಗೊಳ್ಳುತ್ತದೆ ಮತ್ತು ನಾವು ನಮ್ಮ ಬದುಕಿನ ಪ್ರತಿ ನಿಮಿಷವನ್ನೂ ಅದರಂತೆ ಬದುಕುತ್ತೇವೆ. ನಾವೆಲ್ಲರೂ ವಾಸ್ತವವಾಗಿ ಮುಖವಾಡಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಉಪಯೋಗಿಸುತ್ತೇವೆ. ನಮ್ಮ
ತಾಯಿಯೊಂದಿಗೆ ವ್ಯವಹರಿಸುವಾಗ ಒಂದು ಮುಖವಾಡವನ್ನು ಉಪಯೋಗಿಸುತ್ತೇವೆ; ನಾವು ಬೇರೊಂದು ಮುಖವಾಡವನ್ನು ನಮ್ಮ ತಂದೆ ಯೊಡನೆ ವ್ಯವಹರಿಸುವಾಗ ಉಪಯೋಗಿಸುತ್ತೇವೆ, ಬೇರೊಂದು ನಮ್ಮ ಕಛೇರಿಯ ಮುಖ್ಯಸ್ಥನೊಂದಿಗೆ, ಹೀಗೆಯೇ. ನಾವು ಸರಿಯಾದ ಮುಖವಾಡಗಳನ್ನು ಸರಿಯಾದ ಜನರೊಂದಿಗೆ ಉಪಯೋಗಿಸಿದಾಗ, ಸರಿಯಿರುತ್ತದೆ. ನಾವು ಒಬ್ಬ ವ್ಯಕ್ತಿಯೊಂದಿಗೆ ತಪ್ಪು ಮುಖವಾಡವನ್ನು ಉಪಯೋಗಿಸಿದಾಗ, ಅದರ ಅರ್ಥ ನಮ್ಮ ಅಹಂಭಾವವು ಒಳ ಬಂದಿದೆ ಎಂದು. ನೀವು ಏನು ಮಾಡಬೇಕೆಂದರೆ ಮುಖವಾಡಗಳನ್ನು ದಕ್ಷತೆಯಿಂದ ಬದಲಾಯಿಸಿ ನೋಟವನ್ನು ಆನಂದದಿಂದ ಅನುಭವಿಸಬೇಕು. ಆಗ ನೀವು ಅದರಲ್ಲಿ ಒಂದು ಘನವಾದ ಅಸ್ತಿತ್ವದಂತೆ ಭಾಗವಹಿಸದೆ ಕೇವಲ ನೋಡುವವರಾಗಿರುತ್ತೀರಾ.
ನೀವು ಮುಖವಾಡದಿಂದ ಆಚೆಯೇ ಇರುವ ಬೇರೊಬ್ಬರು ಎಂದು ತಿಳಿದಿದ್ದರೆ ನೀವು ಸಂತೋಷದಿಂದ ಅನುಭವಿಸುತ್ತೀರಿ. ಇಲ್ಲದಿದ್ದರೆ ನೀವು ಮುಖವಾಡದಿಂದ ಹತೋಟಿ ತಪ್ಪಿ ಜೀವನದ ಸಂಪೂರ್ಣ ಆಕರ್ಷಣೆಯನ್ನು ಕಳೆದುಕೊಳ್ಳುತ್ತೀರ. ನೀವು ಕೇವಲ ಮುಖವಾಡಗಳನ್ನು ಉಪಯೋಗಿಸುತ್ತಿರುವಿರೆಂದು ತಿಳಿದಾಗ ನಿಮ್ಮ ಅಪೇಕ್ಷೆಗಳು ಬೀಳುತ್ತವೆ.
ಅದು ಹೀಗೆ: ನೀವು ದೊಡ್ಡವರಾಗಿ ಬೆಳೆದಾಗ ನಿಮ್ಮಷ್ಟಕ್ಕೆ ನೀವೇ ಆಟಿಕೆಗಳನ್ನು ಬಿಡುತ್ತೀರ; ಅಲ್ಲವೇ? ಈ ಆಟಿಕೆಗಳು ಇನ್ನೇನೂ ಆಸಕ್ತಿಯನ್ನು ಹುಟ್ಟಿಸುತ್ತಿಲ್ಲ. ಅದೇ ರೀತಿ ನೀವು ಈ ಮುಖವಾಡಗಳತ್ತ ಬುದ್ಧಿವಂತಿಕೆಯಿಂದ ನೋಡಿದರೆ, ಅವುಗಳಿಗಾಗಿ ನೀವು ಆಸೆಪಡುವುದಿಲ್ಲ, ನೀವು ಕೇವಲ ಅವುಗಳನ್ನು ಉಪಯೋಗಿಸಿ ಮುಂದುವರಿಯುತ್ತಿರುತ್ತೀರಿ.
ಅಹಂಭಾವವು ಬಹಳ ಕಪಟತನದಿಂದ ತನ್ನಷ್ಟಕ್ಕೇ ಪ್ರಕಟಗೊಳ್ಳುತ್ತದೆ - ಆದುದರಿಂದಲೇ ಅದರ ಬಗ್ಗೆ ಈ ಎಲ್ಲಾ ವಿವರಣೆಗಳು ಬೇಕಾಗಿರುವುದು. ಇವೆಲ್ಲವೂ ನಿಮ್ಮದೇ ಒಳಪ್ರಯಾಣದಲ್ಲಿ ನೀವು ಅಡ್ಡವಾಗಿ ಎಲ್ಲಿ ನಿಂತಿರುವಿರೆಂದು ನೋಡಲು ಸಹಾಯ ಮಾಡುತ್ತವೆ.
ನಿಮ್ಮೊಳಗೆ ಎಷ್ಟು ಕಡಿಮೆ ತಡೆಗಳು ಇರುತ್ತವೆಯೋ, ಅಷ್ಟು ಹೆಚ್ಚು ನೀವು ದ್ರವವಾಗಿ ಹರಿಯುತ್ತಿರುತ್ತೀರ. ನಿಮ್ಮಲ್ಲಿ ಕಡಿಮೆ ತಡೆಗಳು ಇದ್ದರೆ, ನೀವು ಹೆಚ್ಚು ಗ್ರಹಿಸುವವರಾಗಿ (vulnerable) ಇರುತ್ತೀರ. ನಿಮ್ಮಲ್ಲಿ ಹೆಚ್ಚು ತಡೆಗಳು ಇದ್ದರೆ,
ನೀವು ಗಟ್ಟಿಯಾಗಿದ್ದು ಭೇದಿಸಲು ಕಷ್ಟವಾಗಿರುತ್ತದೆ. ನಿಮ್ಮ ಅಹಂಭಾವವು ಎಲ್ಲದಕ್ಕೂ ಒಂದು ಗಟ್ಟಿಯಾದ ತಡೆಯನ್ನು ಒಡ್ಡುತ್ತದೆ.
ಉದಾಹರಣೆಗೆ, ಯಾವಾಗಲಾದರೂ ಒಬ್ಬರು ನಿಮಗೆ ಏನನ್ನಾದರೂ ಹೇಳಿದರೆ, ನಿಮ್ಮ ಮೊದಲನೆಯ ಪ್ರತಿಕ್ರಿಯೆ ಏನು? ನಿಮ್ಮ ಮೊದಲನೆಯ ಪ್ರತಿಕ್ರಿಯೆ ಒಂದು ನಿರ್ದಿಷ್ಟವಾದ ಪ್ರತಿರೋಧ, ಒಂದು “ಇಲ್ಲ” ಎಂದು, ನೀವು “ಇಲ್ಲ” ಎಂದಾಗ ಅದು ಅಷ್ಟೊಂದು ಅಹಂಭಾವಭರಿತವಾಗಿರುತ್ತದೆ. ನೀವು ನಿಮ್ಮೊಳಗೆ ಘನವಾಗಿ ಗಟ್ಟಿಯಾಗಿರುವಂತೆ ಭಾವಿಸುತ್ತೀರಿ. ನೀವು 'ಸರಿ' ಎಂದರೆ ನೀವು ದ್ರವದಂತೆ (vul-nerable) ಭಾವಿಸುತ್ತೀರಿ. ನಿಮ್ಮ ಅಹಂಭಾವವು ವಿಧೇಯವಾಗಿರುವಂತೆ ಭಾವಿಸುತ್ತೀರಿ. ಆದುದರಿಂದ ನೀವು “ಇಲ್ಲ” ಎಂದು ಹೇಳುವಿರಿ.
ಆದುದರಿಂದಲೇ ನೀವು ಮನೆಯಲ್ಲಾಗಲೀ, ಶಾಲೆಯಲ್ಲಾಗಲೀ ಅಥವಾ ಕಾರ್ಯ ಮಾಡುವ ಸ್ಥಳದಲ್ಲಾಗಲೀ ಅಥವಾ ಇನ್ನೆಲ್ಲಿಯೇ ಆಗಲೀ ನಿಯಮಗಳನ್ನು ಉಲ್ಲಂಘಿಸಿದರೆ ನೀವು ಹಿತವನ್ನು ಅನುಭವಿಸುತ್ತೀರಿ. ವಾಸ್ತವವಾಗಿ, ನೀವು ಒಂದು ನಿಯಮವನ್ನು ಉಲ್ಲಂಘಿಸಿದಾಕ್ಷಣ, ನಿಮ್ಮ ಬಗ್ಗೆ ನೀವು ಹಿತವನ್ನು ಅನುಭವಿಸುತ್ತೀರಿ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಗೆ ಹೋಗದಿದ್ದರೆ ಹಿತವನ್ನು ಅನುಭವಿಸುತ್ತಾರೆ. ಏಕೆ? ಏಕೆಂದರೆ ಅವರು ನಿಯಮಗಳಿಗೆ ಇಲ್ಲ ಎಂದರೆ ಅವರ ಅಹಂಭಾವವು ಮೇಲೆದ್ದ ಅನುಭವವಾಗುತ್ತದೆ. ಚಿಕ್ಕ ಮಕ್ಕಳ ವಿಚಾರದಲ್ಲಿ, ವಸ್ತುಗಳು ಅವರಿಗಾಗಿಲ್ಲ ಎಂದಾಕ್ಷಣವೇ, ಅವರು ಅದನ್ನೇ ಕೇಳುವರು. ದೊಡ್ಡವರೂ ಕೂಡ ಬೇರೆಯವರನ್ನು ಬಹುವಿಧವಾಗಿ ಉಲ್ಲಂಘಿಸುವುದರಿಂದ ಸಂತೋಷಪಡುತ್ತಾರೆ.
ಗಂಡ ಮತ್ತು ಹೆಂಡತಿ ಮೊದಲನೆಯದಾಗಿ ಯಾವುದೇ ಸಲಹೆಗೆ ಸಹಮತದಿಂದಿರುವುದು ಬಹು ವಿರಳ! ನಮ್ಮ ಭಕ್ತಾದಿಗಳ ಉದಾಹರಣೆಯನ್ನೇ ತೆಗೆದುಕೊಳ್ಳಿ. ಗಂಡನು ಮೊದಲು ನನಗೆ ಹಚ್ಚಿಕೊಂಡರೆ, ಹೆಂಡತಿಯ ಮೊದಲ ಪ್ರತಿಕ್ರಿಯೆ ನನ್ನನ್ನು ಕೇವಲ ಪ್ರತಿರೋಧಿಸುವುದು. ಅವಳು ಗುಟ್ಟಾಗಿ ನನ್ನ ಪುಸ್ತಕಗಳನ್ನು ಓದಲೂಬಹುದು ಮತ್ತು ಅವುಗಳನ್ನು ಇಷ್ಟಪಡಲೂಬಹುದು, ಆದರೆ ತನ್ನ ಗಂಡನ ಮುಂದೆ ನನ್ನನ್ನು ಆದರದಿಂದ ಸ್ವೀಕರಿಸಲು ಇಷ್ಟಪಡುವುದಿಲ್ಲ. ಇದೇ ವಿಚಾರವು ಮೊದಲು ನನ್ನನ್ನು ಹಚ್ಚಿಕೊಳ್ಳುವ ಹೆಂಡಂದಿರಿಗೂ ಅನ್ವಯಿಸುತ್ತದೆ. ಅವರ ಗಂಡಂದಿರು ಅವರಿಗೆ ಕಷ್ಟವಾಗುವಂತೆ ಏನೆಲ್ಲಾ ಮಾಡಬೇಕೋ ಅವೆಲ್ಲವನ್ನೂ, ನನ್ನೊಂದಿಗೆ ಕೊನೆಯಲ್ಲಿ ಶ್ರುತಿಗೂಡಿಸುವ ಮುಂಚೆ, ಮಾಡುತ್ತಾರೆ.
ಅಹಂಭಾವದ ಆಟವು ಹಾಗಿದೆ. 'ಸರಿ' ಎಂದು ಹೇಳುವುದರಿಂದ ಸ್ವಭಾವಸಿದ್ಧವಾಗಿ (naturally) ನೀವು ದ್ರವರೂಪದಲ್ಲಿ ತಡೆಗಳಿಲ್ಲದೆ ಹರಿಯುತ್ತೀರ. ಇದರ ಅರ್ಥ ನೀವು ಎಲ್ಲದಕ್ಕೂ ಕಣ್ಣುಮುಚ್ಚಿ 'ಸರಿ' ಎಂದು ಹೇಳುವುದಲ್ಲ. ಅಲ್ಲ! ಇದರ ಅರ್ಥ ನಿಮ್ಮ ಅಹಂಭಾವದ ಪ್ರಭಾವವಿರದಂತೆ ಸ್ವಯಂಸ್ಫೂರ್ತಿಯ ಮೇಲೆ ಭರವಸೆಯನ್ನು ಇಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳಿ, ಅಷ್ಟೆ. ತನ್ಮಷ್ಟಕ್ಕೆ ತಾನೇ ನೀವು ಸರಿಯಾದ ಸಂಗತಿಗಳಲ್ಲಿ ಲಯಬದ್ಧರಾಗಿರುತ್ತೀರಿ.
'ಇಲ್ಲ' ಎಂದು ಹೇಳುವುದು ಒಂದು ಎಚ್ಚರಿಕೆ ನಡೆಯಾಗಲೀ ಅಥವಾ ನಿಮ್ಮ ಪೋಷಕ ದೇವತೆಯಾಗುವ ಯಾವುದೇ ಕಾಯುವ ಬಲವಾಗಲೀ ಅಲ್ಲ ಎಂದು ಅರ್ಥಮಾಡಿಕೊಳ್ಳಿ. ಸುಮ್ಮನೇ ಪ್ರತಿರೋಧ ಮತ್ತು ಪೂರ್ವ ಕಲ್ಪನೆಗಳಿಲ್ಲದೆ ತೆರೆದುಕೊಳ್ಳಿ, ಅಷ್ಟು ಸಾಕು. ಹ್ಞಾ...?
ಆದರೆ ಸ್ವಾಮೀಜಿ , ನಾನು ಇಲ್ಲಿಯವರೆಗೂ ಸ್ವಯಂಪ್ರತಿಷ್ಠೆಯ ಸಾಧನೆಯು ಒಂದೇ ಅಹಂಭಾವದ ಪ್ರಕಟನೆಯೆಂದು ತಿಳಿದಿದ್ದೆ!
ಇಲ್ಲ! ಅಹಂಭಾವವು ನಾವು ಇಲ್ಲಿಯವರೆಗೂ ಚರ್ಚಿಸುತ್ತಿದ್ದ ಚುರುಕಿನ ಅಥವಾ ಜಡವಾದ ಬೇರೆ ಬೇರೆ ರೂಪಗಳಲ್ಲಿ ಬರುತ್ತದೆ. ಆದುದರಿಂದಲೇ ಗ್ರಹಿಸಲು ಇದು ಅಷ್ಟೊಂದು ಯುಕ್ತಿಯುತವಾದ (tricky) ಸಂಗತಿ.
ಚುರುಕಿನ ಅಹಂಭಾವವನ್ನು ಸುಲಭವಾಗಿ ಗುರುತಿಸಬಹುದು. ಚುರುಕಾದ ಅಹಂಭಾವವಿರುವ ವ್ಯಕ್ತಿಗಳು ಜುಲುಮಿನ (high handed) ರೀತಿಯಲ್ಲಿ ವರ್ತಿಸುತ್ತಾರೆ, ಅವರು ತಮ್ಮ ಸ್ವಪ್ರತಿಷ್ಠೆಯನ್ನು ಬಹಿರಂಗವಾಗಿ ಕೇಳುತ್ತಾರೆ, ಅವರು ಬೇರೆಯವರಿಗೆ ಬಗ್ಗುವುದಿಲ್ಲ, ಅವರು ಸೊಕ್ಕಿನಿಂದ ಇರುತ್ತಾರೆ. ವಾಸ್ತವವಾಗಿ ಗುರುಗಳಿಗೆ ಇಂತಹ ಅಹಂಭಾವದೊಂದಿಗೆ ವ್ಯವಹರಿಸುವುದು ಸುಲಭ. ಕೇವಲ ಅವರು ಅದರ ಮೇಲೆ ಹಲವು ಬಾರಿ ಗಟ್ಟಿಯಾಗಿ ಕುಟ್ಟಿದರೆ ಅದು ಒಡೆಯುತ್ತದೆ!
ಒಂದು ಚಿಕ್ಕ ಕತೆ:
ಒಬ್ಬ ವ್ಯಕ್ತಿಯು ಜೂಜಾಟದಿಂದ ತನ್ನೆಲ್ಲಾ ಸಂಪತ್ತನ್ನು ಕಳೆದುಕೊಂಡು ಬಹಳ ಮಟ್ಟಿಗೆ ನಿರ್ಗತಿಕನಾದ.
ಒಂದು ದಿನ ಅವನು ರಸ್ತೆಬದಿಯ ಉಪಹಾರ ಗೃಹಕ್ಕೆ ಹೋಗಿ ತನ್ನ ಬೆಳಗಿನ ಉಪಹಾರಕ್ಕೆ ಮೇಜಿನ ಮುಂದೆ ಕುಳಿತ.
ಮಾಣಿಯು ಆರ್ಡರ್ ತೆಗೆದುಕೊಳ್ಳಲು ಅವನ ಬಳಿ ಬಂದನು.
ಆ ವ್ಯಕ್ತಿಗೆ ಬಹಳ ಆಶ್ಚರ್ಯವಾಯಿತು. ಆ ಮಾಣಿಯು ಅವನ ಹಳೆಯ ಸ್ನೇಹಿತನಾಗಿದ್ದು ಹಿಂದೊಮ್ಮೆ ಅವನಷ್ಟೆ ಸಿರಿವಂತನಾಗಿದ್ದನು.
ವ್ಯಕ್ತಿಯು ಮಾಣಿಯತ್ತ ನೋಡಿ, "ನೀನು ಮಾಣಿಯಾಗಿ ಇಂತಹ ಉಪಹಾರಗೃಹದಲ್ಲಿ ಕೆಲಸ ಮಾಡುತ್ತಿದ್ದೀಯಾ!" ಎಂದನು.
ಮಾಣಿಯು, "ನಾನು ಇಲ್ಲಿ ಕೇವಲ ಮಾಣಿ, ಆದರೆ ನಾನು ಇಲ್ಲಿ ತಿನ್ನುವುದಿಲ್ಲ" ಎಂದು ಮಾರುತ್ತರಿಸಿದನು.
(ನಗೇ!)
ಚುರುಕಿನ ಅಹಂಭಾವವನ್ನು ಗುರುತಿಸುವುದು ಬಹಳ ಸುಲಭ. ಚುರುಕಾದ ಅಹಂಭಾವದಿಂದಿರುವ ವ್ಯಕ್ತಿಯು, ಅವನ ಇತರ ರಕ್ಷಣೆಗಳಾದ, ಹಣ, ಸಂಪತ್ತು ಮುಂತಾದವುಗಳನ್ನೆಲ್ಲಾ ತೆಗೆದುಕೊಂಡು ಬಿಟ್ಟರೂ, ಅದನ್ನು ಬಿಟ್ಟುಬಿಡಲು ಸಿದ್ಧನಿರುವುದಿಲ್ಲ. ಚುರುಕಿನ ಅಹಂಭಾವವನ್ನು ಸುಲಭವಾಗಿ ಕತ್ತರಿಸಬಹುದು.
ಆದರೆ ಜಡವಾದ ಅಹಂಭಾವವು ಬಹಳ ಸೂಕ್ಷ್ಮ ಮತ್ತು ಕಪಟವಾದದ್ದು. ಜಡವಾದ ಅಹಂಭಾವವಿರುವ ವ್ಯಕ್ತಿಗಳು ಜನಗಳನ್ನು ಎದುರಿಸುವ ಧೈರ್ಯವಿಲ್ಲದೆ, ಗೌರವ ಮುಂತಾದವುಗಳನ್ನು ತೆಗೆದುಕೊಳ್ಳಲು ದೂರವಿರುತ್ತಾ, ಬಹಳ ವಿನಮ್ರತೆಯ ಸೋಗಿನಲ್ಲಿ ಇರುತ್ತಾರೆ. ಇದರ ಅತಿ ಕೆಟ್ಟ ಭಾಗವೆಂದರೆ, ಅವರು ಈ ತರಹ ಇರುವುದು ಏಕೆಂದರೆ ಅವರು ಅಹಂಭಾವೇತರಲ್ಲದವರೆಂದು ಅವರು ಅಂದುಕೊಂಡಿರುವುದು. ನಿಜ ಏನೆಂದರೆ, ಅವರು ಮಿಕ್ಕವರಿಗಿಂತ ಹೆಚ್ಚು ಅಹಂಭಾವಿತರು! ಅವರು ಈ ಎಲ್ಲಾ ವಿನಮ್ರತೆಯ ಕೆಲಸಗಳನ್ನು ಮಾಡುತ್ತಾ ತಮ್ಮ ಅಹಂಭಾವವು ಘಾಸಿಗೊಳಗಾಗುವುದನ್ನು ಬಹಳ ಎಚ್ಚರಿಕೆಯಿಂದ ರಕ್ಷಿಸುತ್ತಿರುತ್ತಾರೆ.
ನೀವು ಆಳವಾದ ಅರಿವಿನಿಂದ ಮತ್ತು ತಿಳುವಳಿಕೆಯಿಂದ ಇದ್ದರೆ ನೀವು ಕೇವಲ ನಿಮ್ಮ ಅಹಂಭಾವದ ನೋಟಕರಾಗಿರುತ್ತೀರ, ಮತ್ತು ಈ ಸ್ಥಿತಿಯಲ್ಲಿ, ತನ್ನಂತಾನೇ ನೀವು ವಿನಮ್ರರಾಗಿಯಾಗಲೀ ಅಥವಾ ಅಹಂಭಾವತ್ವದಿಂದಾಗಲೀ ಇರುವುದಿಲ್ಲ, ನೀವು ಗೌರವವನ್ನು ತೆಗೆದುಕೊಳ್ಳುವುದಾಗಲೀ ಅಥವಾ ಅದರಿಂದ ದೂರವಿರುವು ದಾಗಲೀ ಮಾಡುವುದಿಲ್ಲ. ನೀವು ಈ ಎರಡೂ ತರಹದವರಲ್ಲವೆಂದು ಕೂಡ ಯೋಚಿಸುವುದಾಗಲೀ ಅಥವಾ ಹೇಳಿಕೊಳ್ಳುವುದಾಗಲೀ ಮಾಡುವುದಿಲ್ಲ, ನೀವು ಸುಮ್ಮನೆ ಇರುತ್ತೀರ, ಅಷ್ಟೆ. ಯಾರಾದರೂ ನಿಮ್ಮನ್ನು ಹೊಗಳಿದರೆ ಅಥವಾ ನಿಮಗೆ
ಗೌರವವನ್ನು ಕೊಟ್ಟರೆ ನೀವು ಕೇವಲ ಅಸ್ತಿತ್ವದೊಂದಿಗೆ ಪ್ರತಿಸ್ಪಂದಿಸುತ್ತೀರ ಮತ್ತು ಅದನ್ನು ಅಲ್ಲಿಗೇ ಬಿಡುತ್ತೀರ, ಅಷ್ಟೆ. ಮತ್ತು ಅಲ್ಲಿ ತುಲನೆ ಮಾಡುವುದಾಗಲೀ ಇಲ್ಲ ಹೇಳಿಕೊಳ್ಳುವುದಾಗಲೀ ಅವಶ್ಯಕತೆ ಇರುವುದಿಲ್ಲ.
ಆದುದರಿಂದ ನಿಶ್ಚಳವಾಗಿರಿ. ಬಹಳಷ್ಟು ಸರ್ತಿ, ಜನಗಳು ತಿಳಿಯುವುದು ಚುರುಕಿನ ಅಹಂಭಾವವೊಂದೇ ಯಾವಾಗಲೂ ಇರುವುದು, ಎಂದು. ಇಲ್ಲ. ಜಡವಾದ ಅಹಂಭಾವ ಎಂದು ಕರೆಯಲಾಗುವ, ಈಗ ತಾನೇ ನಾವು ಚರ್ಚಿಸಿದ ಮತ್ತೊಂದಿದೆ, ಮತ್ತು ಇದರೊಂದಿಗೆ ವ್ಯವಹರಿಸುವುದು ಇನ್ನೂ ಕಷ್ಟಕರ.
ಚುರುಕಿನ ಅಹಂಭಾವವುಳ್ಳವರು ಒಂದು ಒಣಗಿದ ಮತ್ತು ಗಟ್ಟಿಯಾದ ರೆಂಬೆಯಂತೆ. ಅವನ್ನು ಸುಲಭವಾಗಿ ಮುರಿದು ಹಾಕಬಹುದು. ಜಡವಾದ ಅಹಂಭಾವವುಳ್ಳ ಜನರು ಒಂದು ತಾಜಾ ಮತ್ತು ಹಸಿಯಾದ ರೆಂಬೆಯಂತೆ. ಪ್ರತಿಬಾರಿ ಅವರ ಅಹಂಭಾವಕ್ಕೆ ಪೆಟ್ಟುಬಿದ್ದಾಗಲೂ, ಅವರು ಬಗ್ಗುತ್ತಾರೆ, ಆದರೆ ಮುರಿಯುವುದಿಲ್ಲ. ಅವರ ಅಹಂಭಾವವು ಎಷ್ಟೊಂದು ರಕ್ಷಿಸಲ್ಪಟ್ಟಿದೆಯೆಂದರೆ, ಅದರ ಜೊತೆ ವ್ಯವಹರಿಸುವುದೇ ಕಷ್ಟವಾಗಿರುತ್ತದೆ. ವಾಸ್ತವವಾಗಿ ಅದನ್ನು ರಕ್ಷಿಸಲು ಅವರು ಬಹಳ ಕಷ್ಟಪಟ್ಟು ಕೆಲಸಮಾಡುತ್ತಾರೆ, ಆದರೆ ಅದು ಸಿಹಿಯಾದ ಮತ್ತು ಜಡವಾದ ರೀತಿಯಲ್ಲಿರುತ್ತದೆ. ಜಡವಾದ ಅಹಂಭಾವವು ಚುರುಕಿನ ಅಹಂಭಾವಕ್ಕಿಂತ ಹೆಚ್ಚು ಅಪಾಯಕಾರಿ.
ಉದಾಹರಣೆಗೆ, ಈಗ ನೀವು ನನ್ನ ಸಂಗಡ ಈ ತರಗತಿಯಲ್ಲಿ ಇದ್ದೀರಿ. ಬೇಕಾದಷ್ಟು ಪ್ರಶ್ನೆಗಳು ನಿಮ್ಮಲ್ಲಿ ಏಳುತ್ತಿರಬಹುದು. ಆದರೆ ನೀವು ಎಲ್ಲವನ್ನೂ ಸ್ವಯಂಪ್ರೇರಿತರಾಗಿ ಕೇಳುತ್ತೀರೇನು? ಇಲ್ಲ. ನೀವು ಎಲ್ಲವನ್ನೂ ನಿಮ್ಮೊಳಗೆ ಕೌಶಲ್ಯದಿಂದ ನಿಭಾಯಿಸಿ ಕೊನೆಯಲ್ಲಿ ಅವುಗಳನ್ನು ನಿಗ್ರಹಿಸುತ್ತೀರಿ. ನೀವು ಅವುಗಳನ್ನು ಕೌಶಲ್ಯದಿಂದ ನಿಭಾಯಿಸುವುದು ಏಕೆಂದರೆ ಪ್ರಶ್ನೆಗಳನ್ನು ಕೇಳುವುದರಿಂದ ನೀವು ಮೂರ್ಖರಂತೆ ಕಾಣಿಸಬಹುದೆಂದು ನೀವು ಭಯಪಡುತ್ತಿರುವುದರಿಂದ. ನೀವು ಮೂರ್ಖರಂತೆ ಕಾಣಲು ಇಷ್ಟಪಡುವುದಿಲ್ಲ ಮತ್ತು ಆದ್ದರಿಂದ ನೀವು ಪ್ರಶ್ನಿಸುವುದಿಲ್ಲ. ನೀವು ನಿಮ್ಮ ಅಹಂಭಾವವನ್ನು ರಕ್ಷಿಸುತ್ತಿದ್ದೀರ. ನಿಮ್ಮ ಪ್ರಶ್ನೆಗಳು ನನ್ನ ಇರುವಿಕೆಯಲ್ಲಿ ಕರಗಿಹೋದರೆ, ಅದು ಬೇರೆಯ ವಿಚಾರ. ಆದರೆ ಇಲ್ಲಿ ಅದು ಬೇರೆಯ ಸಂಗತಿ.
ನೀವು ನಿಮ್ಮ ಬಗ್ಗೆ ಬೇರೆಯವರ ಪ್ರತಿಕ್ರಿಯೆಗಳು ಮತ್ತು ಅಭಿಪ್ರಾಯಗಳ ಬಗ್ಗೆ ಅಷ್ಟೊಂದು ಬೆಲೆ ಕೊಡುತ್ತೀರ. ಇಷ್ಟೊಂದು ವರ್ಷಗಳ ಕಾಲ, ನೀವು
ಎಚ್ಚರಿಕೆಯಿಂದ ಪೋಷಿಸಿಕೊಂಡು ಬಂದ ನಿಮ್ಮ ಅಹಂಭಾವಕ್ಕೆ ನೆಗ್ಗಾಗುವುದನ್ನು ತಡೆದುಕೊಳ್ಳಲು ನಿಮಗೆ ಆಗುವುದಿಲ್ಲ. ನಿಮ್ಮ ಅಹಂಭಾವವೇ ನಿಮ್ಮ ಭರವಸೆಯ ಬಿಂದು (anchor point). ಅದು ಕುಲುಕಾಡಿದರೆ ನೀವು ಭರವಸೆಯಿಲ್ಲದವರಂತೆ ಭಾವಿಸುತ್ತೀರ. ನಮ್ರತೆಯ ಸೋಗಿನಲ್ಲಿ ನೀವು ಸುಮ್ಮನಿರುತ್ತೀರ. ನೀವು ಗುರುಗಳ ಸಮ್ಮುಖದಲ್ಲಿ ನಿಮ್ಮ ಅಹಂಭಾವವನ್ನು ತೆರೆದಿಡುವ ಮತ್ತೊಂದು ಅವಕಾಶವನ್ನು ಕಳೆದುಕೊಳ್ಳುತ್ತೀರ. ಅರಳುವುದರತ್ತ ಹೆಜ್ಜೆಯಿಡುವ ಮತ್ತೊಂದು ಅವಕಾಶವನ್ನು ನೀವು ಕಳೆದುಕೊಳ್ಳುತ್ತೀರ.
ನಿಮಗೊಂದು ವಿಷಯವನ್ನು ಹೇಳುತ್ತೇನೆ. ಎಲ್ಲಾ ಪ್ರಶ್ನೆಗಳು ದಿನದ ಅಂತ್ಯದಲ್ಲಿ ಮೂರ್ಖತನದ್ದೇ. ಕೆಲವು ಪ್ರಶ್ನೆಗಳು ಮತ್ತು ಆದ್ದರಿಂದ ಪ್ರಶ್ನೆಗಳನ್ನು ಹಾಕುವ ಕೆಲವರು ಮಿಕ್ಕವರಿಗಿಂತ ಹೆಚ್ಚು ಬುದ್ಧಿವಂತರೆಂದೂ ಒಂದು ಕ್ಷಣವೂ ತಿಳಿಯಬೇಡಿ. ಆಳವಾದ ತಿಳಿಯುವಿಕೆಯು ಆದರೆ ಪ್ರಶ್ನೆಗಳು ತನ್ನಷ್ಟಕ್ಕೇ ಕರಗಿಹೋಗುತ್ತವೆ. ಇದೇ ನಿಜವಾದ ಜ್ಞಾನ. ಹೇಗೋ, ನಾವೆಲ್ಲರೂ ನಮ್ಮ ಅಹಂಭಾವವನ್ನು ರಕ್ಷಿಸಿಕೊಳ್ಳಲು ತುಂಬಾ ಎಚ್ಚರಿಕೆಯಿಂದ ಆಡುತ್ತೇವೆ.
ಮತ್ತೊಂದಿದೆ, ನಾವು ಚೆನ್ನಾಗಿ ಪೋಷಿಸುವ ಅಹಂಭಾವದ ಮತ್ತೊಂದು ಆಟ ಎಂದರೆ ಸಾಮಾಜಿಕ ಅಹಂಭಾವ ಎಂಬುದು.
ಈ ಸಾಮಾಜಿಕ ಅಹಂಭಾವ ಎಂದರೇನು?
ನಿಮ್ಮ ಜೀವನವು ನಿಮಗೆ ಅತ್ಯಂತ ವೈಯಕ್ತಿಕ ವಿಷಯವೆಂದೂ ಮತ್ತು ಬೇರಾರೂ ಅದರೊಳಗೆ ಬರಬಾರದೆಂದೂ ನೀವು ಭಾವಿಸುತ್ತೀರ.
ಉದಾಹರಣೆಗೆ, ಜನಗಳು ನನ್ನಲ್ಲಿಗೆ ತಮ್ಮ ಮಕ್ಕಳ ವಿಚಿತ್ರ ನಡವಳಿಕೆಗಳ ಬಗ್ಗೆ ಚರ್ಚಿಸಲು ಬರುತ್ತಾರೆ. ಅವರು ಸುತ್ತಲೂ ಬೇರೆಯವರು ಇದ್ದರೆ ಆರಾಮಕರವಾಗಿ ಇರುವುದಿಲ್ಲ. ನೀವು ಈ ವಿಚಾರಗಳನ್ನು ಬೇರೆಯವರು ತಿಳಿದುಕೊಳ್ಳಲು ಇಷ್ಟಪಡುವುದಿಲ್ಲ. ಏಕೆಂದರೆ ಸಮಾಜದ ಕಣ್ಣುಗಳಲ್ಲಿ ನಿಮಗಾಗಿ ಮತ್ತು ನಿಮ್ಮ ಸಂಸಾರದ ಸದಸ್ಯರಿಗಾಗಿ ನಿಮ್ಮ ಕಟ್ಟಲ್ಪಟ್ಟ ‘ಪ್ರತೀಕ’ (image) ಎಂಬುದಿದೆ. ನೀವು ಜನರನ್ನು ನಿಮ್ಮ ಸಂಸಾರದ ವಿಷಯಗಳಲ್ಲಿ ಒಳಗೆ ಬಿಟ್ಟರೆ, ನೀವು ನಿಮ್ಮ ಪೂರ್ಣ ಆತ್ಮವನ್ನು ಬೇರೆಯವರ ಮುಂದೆ ಬಿಚ್ಚಿಟ್ಟಂತೆ ಭಾವಿಸುತ್ತೀರ. ನಿಮ್ಮ ಪೂರ್ಣ ಪ್ರತೀಕವು ಕಳಚಿಕೊಂಡು ಬೀಳಬಹುದೆಂದೂ ಮತ್ತು ಸಮಾಜದಲ್ಲಿ ನಿಮಗೆ ಆಸರೆಯಾಗಿರಲು ಬೇರಾವುದೂ ಇಲ್ಲವೆಂದೂ ನೀವು ಭಯಪಡುತ್ತೀರ. ಇದೇ
ಸಾಮಾಜಿಕ ಅಹಂಭಾವ. ನೋವನ್ನು ಅನುಭವಿಸಿ ನೀವು ಕಟ್ಟಿದ ಪ್ರತೀಕವು, ಸಮಾಜದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳಲು ನಿಮ್ಮ ಗುರುತಾಗಿರುವ ಪ್ರತೀಕವು ಈಗ ಪೇಚಿನಲ್ಲಿದೆ (stake). ಇದು ಬೇರೆಯವರಿಗಿಂತ ಹೆಚ್ಚಾಗಿ ನಿಮ್ಮ ಗುರುತಾಗಿದೆ! ನೀವು ನಿಮ್ಮನ್ನು ಮತ್ತು ನಿಮ್ಮ ಸಂಸಾರವನ್ನು ನೀವಿರುವ ಹಾಗೆಯೇ ತೋರಿಸಿದರೆ, ನೀವು ಹೆಚ್ಚು ಆರಾಮವಾಗಿ ಇರುತ್ತೀರಿ, ಏಕೆಂದರೆ ಯಾವುದನ್ನೂ ಮುಚ್ಚಿಡಲು ಒತ್ತಡವಿರುವುದಿಲ್ಲ.
ನೀವು ಹೇಳಬಹುದು, “ಸ್ವಾಮೀಜಿ, ಈ ಸಂಗತಿಗಳನ್ನೆಲ್ಲಾ ರಹಸ್ಯವಾಗಿಡಲು ಇರುವ ಏಕೈಕ ಉದ್ದೇಶವೆಂದರೆ, ಬೇರೆಯವರು ಇದರ ಬಗ್ಗೆ ಆಡಿಕೊಳ್ಳಬಾರದು ಎಂದು ನಾವು ಅಂದುಕೊಂಡಿರುವುದರಿಂದ” ಎಂದು. ನಾನು ನಿಮಗೆ ಹೇಳುತ್ತೇನೆ: ಯಾರೊಬ್ಬರೂ ಇನ್ನೊಬ್ಬರ ಬಗ್ಗೆ ಮಾತನಾಡಲು ಅರ್ಹರಲ್ಲ. ಅವರು ಮಾತನಾಡಿದರೆ, ಅವರು ಮೂರ್ಖರಾಗುತ್ತಾರೆ. ಇದನ್ನು ಜ್ಞಾಪಿಸಿಕೊಳ್ಳಿ ಮತ್ತು ನೀವು ಅವರಿಗೆ ಕೊಡುವ ಶಕ್ತಿ ಮತ್ತು ಅವರ ಮಾತುಗಳು ತನ್ನಷ್ಟಕ್ಕೆ ಹಾಗೇ ಮಾಯವಾಗುತ್ತದೆ. ನೀವೇ ನಿಮಗೆ ಪರಿಣಾಮವಾಗುವಂತೆ ಅವರಿಗೆ ಶಕ್ತಿಯನ್ನು ಕೊಟ್ಟಿರುವುದು, ಅಲ್ಲವೇ? ಈಗ ಆ ಶಕ್ತಿಯು ಮಾಯವಾಗುತ್ತದೆ.
ಸುಮ್ಮನೇ ನಿರ್ಧರಿಸಿ ಮತ್ತು ಒಂದು ತೆರೆದ ಪುಸ್ತಕದ ಹಾಗೆ ಬದುಕಿರಿ, ಅಷ್ಟೆ, ನಿಮ್ಮ ಧೈರ್ಯವನ್ನು ಮತ್ತು ದೇಹದ ಭಾಷೆಯನ್ನು (body langauge) ನೋಡಿ, ನಿಮ್ಮ ಬಗ್ಗೆ ಆಡಿಕೊಳ್ಳುವುದರಿಂದ ಏನೂ ಸಿಗುವುದಿಲ್ಲ ಎಂದು ತಮ್ಮಷ್ಟಕ್ಕೆ ಅರ್ಥಮಾಡಿಕೊಳ್ಳುತ್ತಾರೆ! ನಾನು ಹೇಳುತ್ತೇನೆ: ನಿಮ್ಮ ಸಾಮಾಜಿಕ ಅಹಂಭಾವವನ್ನು ಬಿಟ್ಟು ಏನೂ ಖಾಸಗೀತನವಿಲ್ಲದೆ (privacy) ಬದುಕುವುದೆಂದರೆ, ಅದು ಒಂದು ಮಹತ್ತರ ಬಂಧವಿಮೋಚನೆ.
ನಮ್ಮ ಸಾಮಾಜಿಕ ಅಹಂಭಾವದಿಂದ, ನಾವು ಸದಾಕಾಲವೂ ಸ್ವಯಂಪ್ರಜ್ಞೆಯುಳ್ಳವರಾಗಿರುತ್ತೇವೆ ಕೂಡ. ನಾವು ಸದಾಕಾಲವೂ ಜನಗಳು ನಮ್ಮನ್ನು ನೋಡಿ ಆಡಿಕೊಳ್ಳುತ್ತಿರುತ್ತಾರೆಂದು ಸ್ವಯಂಪ್ರಜ್ಞೆಯುಳ್ಳವರಾಗಿರುತ್ತೇವೆ. ಸ್ಪಷ್ಟವಾಗಿರಿ:
ನೀವು ಸ್ವಯಂಪ್ರಜ್ಞೆಯುಳ್ಳವರಾಗಿದ್ದರೆ, ನೀವು ತುಂಬಾ ಅಹಂಭಾವದವ ರಾಗಿರುತ್ತೀರ.ನೀವೊಬ್ಬ ದೊಡ್ಡ ಅಸ್ತಿತ್ವವುಳ್ಳವರೆಂದೂ ಮತ್ತು ಪ್ರತಿಯೊಬ್ಬರ ಕಣ್ಣುಗಳೂ ನಿಮ್ಮ ಮೇಲೆ ಸದಾಕಾಲವೂ ಇರುತ್ತವೆಂದು ನೀವು ತಿಳಿದಿರುತ್ತೀರ.
ಆದುದರಿಂದಲೇ ನೀವು ಸ್ವಯಂ ಪ್ರಜ್ಞೆಯುಳ್ಳವರಾಗುತ್ತೀರ. ನೀವು ಒಬ್ಬ 'ಯಾರೂ ಅಲ್ಲದವ'ರೆಂದುಕೊಂಡಿದ್ದರೆ, ನೀವು ಸ್ವಯಂಪ್ರಜ್ಞೆಯುಳ್ಳವ ರಾಗಿದ್ದಿರೆ? ನೀವು 'ಯಾರೋ ಒಬ್ಬರು' ಎಂದು ತಿಳಿದುಕೊಂಡಿರುವುದರಿಂದ ನೀವು ಸ್ವಯಂಪ್ರಜ್ಞೆಯುಳ್ಳವರಾಗಿರುತ್ತೀರ. ಮತ್ತು ಇದರ ಮೇಲೆ, ನೀವು ಸ್ವಯಂಪ್ರಜ್ಞೆಯುಳ್ಳವರಾಗಿರುವುದರಿಂದ ನೀವು ನಮ್ರತೆಯನ್ನು ಪ್ರದರ್ಶಿಸುತ್ತಿರು ವುದಾಗಿ ಅಂದುಕೊಳ್ಳುತ್ತೀರ. ವಾಸ್ತವವಾಗಿ ಇದು ಒಂದು ರೀತಿಯ ಕಷ್ಟವನ್ನು ನೀವು ಅನುಭವಿಸುತ್ತಿರುವುದಾಗಿ ಕೂಡ ನಿಮಗೆ ತಿಳಿದಿಲ್ಲ. ನೀವು ಸುಮ್ಮನೆ ನೀವೊಬ್ಬ ಕೇವಲ ಸಭ್ಯ ಮತ್ತು ವಿನಮ್ರ ಜೀವಿಯೆಂದೂ ಮತ್ತು ಹಾಗೆಯೇ ಇರಲು ಮುಂದುವರಿಸುತ್ತೀರ.
ನೀವು ಸ್ವಯಂಪ್ರಜ್ಞೆಯುಳ್ಳವರಾದರೆ, ನೀವು ಬದುಕಿರುತ್ತೀರ ಆದರೆ ನಿರ್ಜೀವವಾಗಿರುತ್ತೀರ. ಇದು ನಿಮ್ಮ ಸೌಂದರ್ಯತೆಗೆ ಮತ್ತು ಸೊಬಗಿಗೆ ತಡೆ ಇದ್ದಂತೆ. ನಿಮ್ಮ ಸೌಂದರ್ಯವು ಇದರಿಂದ ಸಲೀಸಾಗಿ ಮುಂದೆ ಬರುವುದಿಲ್ಲ. ಪ್ರಾಣಿಗಳು ಮತ್ತು ಪ್ರಕೃತಿಯತ್ತ ನೋಡಿರಿ. ಅವು ಅತಿ ಸುಂದರವಾಗಿ ಮತ್ತು ಸಲೀಸಾಗಿ ಹರಿಯುತ್ತವೆ. ಹಾಗೇತಕ್ಕೆ? ಏಕೆಂದರೆ ಅವು ಸ್ವಯಂಪ್ರಜ್ಞೆಯಿಂದಿಲ್ಲ. ಅವು ಅಸ್ತಿತ್ವದೊಂದಿಗೆ ಸುಮ್ಮನೆ ಒಂದಾಗಿರುವುದರಿಂದ ಸಂತೋಷವಾಗಿರುತ್ತವೆ. ಜನರು ನಿಮ್ಮನ್ನು ಗಮನಿಸುತ್ತಿದ್ದಾರೆಂದು ನೀವು ಯೋಚಿಸಲು ಆರಂಭಿಸಿದ ಕ್ಷಣವೇ, ಅಹಂಭಾವವು ಬರುತ್ತದೆ ಮತ್ತು ನೀವು ಸ್ವಾಭಾವಿಕ ಅಸ್ತಿತ್ವವನ್ನು ಕಳೆದುಕೊಳ್ಳುತ್ತೀರ.
ಮಕ್ಕಳು ದೊಡ್ಡವರಷ್ಟು ಸ್ವಯಂಪ್ರಜ್ಞೆಯುಳ್ಳವರಲ್ಲ. ನೀವು ಅವರು ಆಡುತ್ತಿರುವುದನ್ನು ಗಮನಿಸಿದರೆ ನಿಮಗೇ ಗೊತ್ತಾಗುತ್ತದೆ - ಅಲ್ಲಿ ಅಷ್ಟೊಂದು ಸೌಂದರ್ಯತೆ ಮತ್ತು ಮುಗ್ಧತೆ ಎಲ್ಲದರಲ್ಲಿಯೂ ಇರುತ್ತವೆ. ನೀವು ನಿಮ್ಮದೇ ಮತ್ತು ಇತರರ ಚಿತ್ರಗಳನ್ನು ತೆಗೆದುಕೊಂಡರೆ, ನಿಮ್ಮ ಅರಿವಿಲ್ಲದೇ ನಿಮ್ಮ ಚಿತ್ರಗಳನ್ನು ತೆಗೆದುಕೊಂಡಾಗ ಆ ಚಿತ್ರಗಳು ನೀವು ಕ್ಯಾಮರಾ ಮುಂದೆ ನಿಂತು ತೆಗೆಸಿಕೊಂಡದ್ದಕ್ಕಿಂತಲೂ ಹೆಚ್ಚು ಚೆನ್ನಾಗಿರುತ್ತವೆ.
ಕ್ಯಾಮರಾ ಮುಂದೆ ನೀವು ನಿಲ್ಲುವಂತೆ ಕೇಳಿದಾಗ, ನೀವು ಸ್ವಯಂಪ್ರಜ್ಞೆ ಯುಳ್ಳವರಾಗುತ್ತೀರಿ. ನಿಮ್ಮ ಅಹಂಭಾವವು ಜನಗಳು ಏನು ಹೇಳಿ ಅದನ್ನು ನೆಗಬಹುದುದು ಭಯಪಡಿಸುತ್ತದೆ. ಸ್ವಯಂಪ್ರಜ್ಞೆಯು ಅಹಂಭಾವವು
ಅಹಂಭಾವವನ್ನು ಕಳಚಿಕೊಳ್ಳುವುದು
ಸದಾಕಾಲವೂ ಪ್ರತಿಯೊಂದರಲ್ಲೂ ಸಾಧಕಬಾಧಕಗಳನ್ನು ಲೆಕ್ಕ ಹಾಕುತ್ತಿರುತ್ತದೆ. ಅದು ಸದಾಕಾಲವೂ ಮಿಕ್ಕವರ ದೃಷ್ಟಿಯನ್ನು, ಅಭಿಪ್ರಾಯಗಳನ್ನು ತೂಕ ಮಾಡುತ್ತಾ ತನ್ನದೇ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತದೆ.
ನಮ್ಮ ಧ್ಯಾನ ತರಗತಿಗಳಲ್ಲಿ ಕೂಡ, ನೀವು ನೋಡಿದರೆ, ನಿಮ್ಮ ಕಣ್ಣುಗಳಿಗೆ ಕಣ್ಣುಪಟ್ಟಿಗಳನ್ನು ಧ್ಯಾನದ ತಂತ್ರಗಳನ್ನು ಆರಂಭಿಸುವ ಮುನ್ನ ಕಟ್ಟಿಕೊಳ್ಳಬೇಕೆಂದು ನಾನು ಹೇಳುತ್ತೇನೆ. ಆದರೆ ನೀವು ಮೊದಲು ಮಾಡುವುದೇನು? ನೀವು ಮಿಕ್ಕ ಜನರು ತಮ್ಮ ಕಣ್ಣುಗಳನ್ನು ಸರಿಯಾಗಿ ಕಟ್ಟಿಕೊಂಡಿರುವರೇ ಎಂದು ಮೊದಲು ನೋಡುತ್ತೀರ! ನೀವು ಧ್ಯಾನದ ಸಭಾಂಗಣದಲ್ಲಿ ಕೂಡ ಸ್ವಯಂಪ್ರಜ್ಞೆ ಯುಳ್ಳವರಾಗಿರುತ್ತೀರ. ನಿಮ್ಮಲ್ಲಿ ಕೆಲವರು ಧ್ಯಾನವನ್ನು ಸರಿಯಾಗಿ ಮಾಡುವುದಿಲ್ಲ. ಏಕೆಂದರೆ ನೀವು ಕಣ್ಣುಗಳನ್ನು ತೆರೆದುಕೊಂಡಿರುವ ಸ್ವಯಂಸೇವಕರ ಮತ್ತು ನನ್ನ ಬಗ್ಗೆ ಸ್ವಯಂಪ್ರಜ್ಞೆಯಿಂದ ಇರುತ್ತೀರ! ನೀವು ಧ್ಯಾನವನ್ನು ಹಾಗೆಯೇ ಒಂದು ಹಿಡಿತ ರೀತಿಯಲ್ಲಿ ಮಾಡುತ್ತೀರ ಮತ್ತು ಧ್ಯಾನ ಶಿಬಿರಕ್ಕೆ ಬಂದ ಉದ್ದೇಶವನ್ನೆ ಕಳೆದುಕೊಂಡು ಮುಗಿಸಿರುತ್ತೀರ.
ನೀವು ಲೆಕ್ಕಾಚಾರ ಹಾಕುವುದನ್ನು ಬಿಟ್ಟು ಮುಗ್ಧರಾಗಿ ಮತ್ತು ತೆರೆದುಕೊಂಡು ಇದ್ದರೆ, ಸದಾಕಾಲವೂ ಆಶ್ಚರ್ಯ ಮತ್ತು ತಾಜಾತನದಿಂದ ತುಂಬಿಕೊಂಡಿರುತ್ತೀರ. ಬದುಕು ನಿಮಗೆ ಮಂಕಾಗಿ ಮತ್ತು ಹಿಡಿತದಿಂದ ಇರುವುದೇ ಇಲ್ಲ.
ಮತ್ತೊಂದು ವಿಚಾರ: ಒಬ್ಬ ಮುಗ್ಧ ವ್ಯಕ್ತಿಯು ಇನ್ನೊಬ್ಬರಿಗೆ ಕೆಡುಕನ್ನು ಮಾಡುವುದೇ ಇಲ್ಲ. ಏಕೆಂದರೆ, ಕೆಡುಕನ್ನು ಮಾಡಲು ನೀವು ಲೆಕ್ಕಾಚಾರವನ್ನು ಮಾಡಬೇಕು. ಅವರು ತಿಳಿಯದೇ ಕೆಡುಕನ್ನು ಮಾಡಿದರೂ ಕೂಡ, ಜನಗಳಿಗೆ ನೋವುಂಟಾಗುವುದಿಲ್ಲ. ಏಕೆಂದರೆ ಅವರು ನಿಜವಾಗಿಯೂ ಹಾಗೆ ಅಂದುಕೊಂಡಿರಲಿಲ್ಲವೆಂದು ಗೊತ್ತು. ಅವರ ದೇಹದ ಭಾಷೆಯೇ ಅವು ಮುಗ್ಧತೆಯನ್ನು ಹೇಳುತ್ತದೆ ಮತ್ತು ಅವರೊಂದಿಗೆ ಇರುತ್ತದೆ.
ಸರಿ ... ಈಗ ... ನಾವು ಈಗ ಅಹಂಭಾವದ ಇನ್ನೊಂದು ಮುಖ್ಯವಾದ ರೂಪ ತಿಳುವಳಿಕೆಯಿಂದ ಬರುವ ಅಹಂಭಾವದತ್ತ ಹೋಗೋಣ।
ನೀವು ಬೆಳೆಯುತ್ತಿದ್ದಂತೆ, ನಿಮ್ಮ ಪರಸ್ಪರ ವರ್ತಿಸುವುದರಿಂದ ಜನಗಳ ಬಗ್ಗೆ ತೀರ್ಪುಗಳನ್ನು ಸನಾತನ ಗ್ರಂಥಗಳಿಂದ ಮತ್ತು ಪುಸ್ತಕಗಳಿಂದ ಮಾಹಿತಿಗಳನ್ನು ಸಂಗ್ರಹಿಸುತ್ತೀರ. ಇವೆರಡೂ ಸೇರಿ ನಿಮ್ಮ ತಿಳುವಳಿಕೆಯನ್ನು, ನಿಮ್ಮ ಪೂರ್ಣ ಮನಸ್ಸಿನ ವ್ಯವಸ್ಥೆಯನ್ನು ರೂಪಿಸಿರುತ್ತದೆ. ಏನನ್ನೇ ನೋಡಿದರೂ, ನೀವು ಈ ಮನಸ್ಸಿನ ವ್ಯವಸ್ಥೆಯಿಂದ ನೋಡುತ್ತೀರ.
ಏನನ್ನೇ ನೀವು ನೋಡಿದರೂ ಅದು ನಿಮಗೆ ನೀವಾಗಲೇ ರೂಪಿಸಿಕೊಂಡಿರುವ ತೀರ್ಪುಗಳಿಗೆ ಆಧಾರಯುತವಾದವಾಗಿರುತ್ತದೆ. ನೀವು ಬಹುತೇಕ ಒಂದು ಕಳೇಬರದಂತೆ ಇರುತ್ತೀರ. ನಿಮ್ಮಲ್ಲಿ ಏನೇ ಬೆಳವಣಿಗೆಗೂ ಆಸ್ಪದವಿರುವುದಿಲ್ಲ. ಸದಾಕಾಲವೂ ನೀವು ಒಂದು ನಿರ್ದಿಷ್ಟವಾದ ಬಣ್ಣದ ಗಾಜಿನ ಮುಖಾಂತರ ನೋಡುತ್ತಿರುತ್ತೀರ - ಅದು ನೀವೇ ಹಚ್ಚಿದ ಬಣ್ಣ! ಇದರಿಂದ ಅದ್ಭುತಗಳಿಂದ ತುಂಬಿರುವ ಪ್ರಪಂಚದಲ್ಲಿ ನೀವು ಎಷ್ಟೊಂದು ಕಳೆದುಕೊಳ್ಳುತ್ತಿದ್ದೀರೆಂದು ನಿಮಗೆ ಊಹಿಸಲೂ ಆಗುತ್ತಿಲ್ಲ.
ಒಂದು ಚಿಕ್ಕ ಕತೆ:
ಒಬ್ಬ ವ್ಯಕ್ತಿಯು ತನ್ನ ಸ್ನೇಹಿತನಿಗೆ ಹೇಳುತ್ತಿದ್ದನು, "ನಿನಗೆ ಗೊತ್ತೆ, ನನ್ನನ್ನು ನಾನೇ ಮೂರ್ಖನನ್ನಾಗಿಸಿಕೊಂಡೆ'' ಎಂದು.
ಸ್ನೇಹಿತನು ಕೇಳಿದನು, "ಏಕೆ, ಏನಾಯಿತು'' ಎಂದು.
ಆ ವ್ಯಕ್ತಿಯು ಹೇಳಿದನು, "ನನ್ನ ಮನೆಯ ಹತ್ತು ಕಿಟಕಿಯ ಒಡೆದ ಗಾಜುಗಳನ್ನು ಬದಲಾಯಿಸಿದೆ. ನಂತರ ನಾನು ಕಂಡುಕೊಂಡೆ ನನ್ನ ಕನ್ನಡಕದ ಗಾಜುಗಳು ಒಡೆದಿರುವುದನ್ನು'' ಎಂದು.
ನಾವು ನಮ್ಮೊಳಗೆ ಒಂದು ಕ್ಷಣ ಸುಮ್ಮನೆ ಅವಲೋಕಿಸಿದರೆ, ನಾವು ನೋಡುವ ಎಲ್ಲದಕ್ಕೂ ನಾವೇ ಸಾಮಾನ್ಯ ಅಂಶ (common factor) ಎಂದು ಅರ್ಥವಾಗುತ್ತದೆ. ಆದರೆ ಹೇಗೋ, ನಾವು ಒಳಗೆ ನೋಡಲು ಬಯಸುವುದೇ ಇಲ್ಲ. ನಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುತ್ತೇವೆ ಮತ್ತು ಅಲ್ಲಿಂದ ಸಮಸ್ಯೆಯು ಪ್ರಾರಂಭವಾಗುತ್ತದೆ. ಲೌಕಿಕ ತಿಳುವಳಿಕೆಯು (mundane knowledge) ನಾವು ವಿಕಸಿತವಾಗಲು ನಮಗೆ ಅವಕಾಶವನ್ನೇ ಕೊಡುವುದಿಲ್ಲ.
ಬಹಳ ಅಪಾಯದ ಸಂಗತಿಯೆಂದರೆ ನೀವು ನಿಮ್ಮ ತಿಳುವಳಿಕೆಯಲ್ಲಿ ಘನೀಕೃತರಾದಂತೆ ಭಾವಿಸುತ್ತೀರ. ನೀವು ನಿಮ್ಮ ತಿಳುವಳಿಕೆಯ ಬಲದಿಂದ ನೀವೊಬ್ಬ ಘನವಾದ ವ್ಯಕ್ತಿಯೆಂದು ಭಾವಿಸುತ್ತೀರ. ನಿಮ್ಮ ಅಸ್ತಿತ್ವದ ಮೇಲೆ ನೀವು ಹೊರೆಯಾಗಿದ್ದಲ್ಲದೆ ಬೇರೇನೂ ಅಲ್ಲವೆಂದು ನಿಮಗೆ ಸ್ವಲ್ಪವೂ ಗೊತ್ತಿಲ್ಲ.
ಆಹಂಭಾವವನ್ನು ಕಳಚಿಕೊಳ್ಳುವುದು
ನಿಮ್ಮ ಅಸ್ತಿತ್ವವು ಒಂದು ನದಿಯಂತೆ ಮತ್ತು ನೀವು ನಿಮ್ಮ ತಿಳುವಳಿಕೆಯೆಂದು ಹೇಳುವುದರಿಂದ ನಿಂತ ನೀರಾಗಿ ಮಾಡಿದ್ದೀರ. ನಿಜವಾದ ತಿಳುವಳಿಕೆಯೆಂಬುದು ನಿಮ್ಮ ದಾರಿಯಲ್ಲಿ ಬರುವ ತಿಳುವಳಿಕೆಯನ್ನು ಹೇಗೆ ಕೈಬಿಡಬೇಕೆಂದು ತಿಳಿದುಕೊಂಡು ಒಂದು ಮಗುವಿನಂತೆ ಬದುಕುವುದು ಮತ್ತು ಸ್ವಯಂ ಸ್ಫೂರ್ತಿಯಿಂದ ಹರಿಯುವುದು.
ನಾವೆಲ್ಲರೂ ನಮ್ಮ ಜೀವನದಲ್ಲಿ ನೋಡುವುದನ್ನೆಲ್ಲಾ ವರ್ಗೀಕರಿಸಿ ಗುರುತಿನ ಚೀಟಿಯನ್ನು ಹಚ್ಚಲು ತಯಾರಿರುತ್ತೇವೆ. ಈ ಸಂಗತಿಯಿಂದ, ನಾವು ಜೀವನದ ಸ್ವಯಂಸ್ಫೂರ್ತೀಯತೆಯನ್ನು ಕಸಿದುಕೊಂಡು ಬಿಡುತ್ತೇವೆ.
ಒಂದು ಚಿಕ್ಕ ಕತೆ:
ಒಮ್ಮೆ ಒಬ್ಬ ವ್ಯಕ್ತಿಯು ಒಂದು ಚಿತ್ರವನ್ನು ವೀಕ್ಷಿಸಲು ಒಂದು ಚಿತ್ರಮಂದಿರಕ್ಕೆ ಹೋದನು.
ಆ ಚಿತ್ರವು ಅದನ್ನು ನಿರ್ಮಿಸಿದ ಪ್ರಸಿದ್ಧ ಅಂತರರಾಷ್ಟ್ರೀಯ ಸ್ಟುಡಿಯೋ (studio) ದ ತಲೆಬರಹದೊಂದಿಗೆ ಪ್ರಾರಂಭವಾಯಿತು. ಆ ವ್ಯಕ್ತಿಯು, “ಓಹ್, ಈ ಚಿತ್ರವನ್ನು ಹಿಂದೆಯೇ ನೋಡಿದ್ದೇನೆ!” ಹೀಗೆಂದುಕೊಳ್ಳುತ್ತಾ ಮೇಲೆದ್ದು ಹೊರನಡೆದನು.
(ಜೋರು ನಗೆ!)
ಆ ನಿರ್ಮಾಪಕರ ಪ್ರತಿಯೊಂದು ಚಿತ್ರವೂ ಆ ನಿರ್ದಿಷ್ಟ ಸ್ಟುಡಿಯೋದಿನ ಲಾಂಛನದೊಂದಿಗೆ ಬರುತ್ತಿತ್ತು. ಆದ್ದರಿಂದ ಆ ವ್ಯಕ್ತಿಯು ಲಾಂಛನವನ್ನು ನೋಡಿದ ಮೇಲೆ ತಾನು ಆ ಚಿತ್ರವನ್ನು ಹಿಂದೆಯೇ ನೋಡಿದ್ದಾಗಿ ತೀರ್ಮಾನಕ್ಕೆ ಬಂದನು! ಅವನು ಸುಮ್ಮನೆ ಕಳೆದುಕೊಂಡನು, ಅಷ್ಟೇ.
ಅದೇರೀತಿ ವಯಸ್ಕರಾದ ನಾವೆಲ್ಲರೂ ಇರುವುದು. ಮಕ್ಕಳು ಆ ರೀತಿ ಇರುವುದಿಲ್ಲ. ಅವರು ಎಲ್ಲವನ್ನೂ ತಾಜಾತನದಿಂದ ನೋಡುತ್ತಾರೆ. ಅವರು ಬದುಕಿನಲ್ಲಿ ಅಷ್ಟೊಂದು ಪೂರ್ಣವಾಗಿ ಇರುತ್ತಾರೆ. ನಮ್ಮಂತೆ ನಿರ್ಜೀವವಾಗಿ ಅಲ್ಲ.
ನೀವು ಸಮುದ್ರದ ಕಿನಾರೆಗೆ ಹೋದಾಗ, ಮಕ್ಕಳು ಎಷ್ಟೊಂದು ಉತ್ತೇಜನದಿಂದ (excited) ಇರುತ್ತಾರೆಂದು ಸುಮ್ಮನೆ ಗಮನಿಸಿ. ನೀವು ಸಮುದ್ರಕಿನಾರೆಗೆ ಹೋದಾಗ, ನೀವು ಆ ಕಿನಾರವು ನಿಮಗೆ ಮುಂಚೆಯೇ ತಿಳಿದಿತ್ತು ಎಂದು ಭಾವಿಸುತ್ತೀರಿ. ಹೋಲಿಸಲಾಗದ ತಾಜಾತನ ಮತ್ತು ಪ್ರಕೃತಿಯ ಸೊಬಗು ಕೂಡ ನಿಮ್ಮ ಬಣ್ಣದ ಕನ್ನಡಕ ಮುಖಾಂತರ ಬರುತ್ತದೆ. ನೀವು ಕೈನಲ್ಲಿ ಹಿಡಿದುಕೊಂಡಿರುವ ಕನ್ನಡಕವನ್ನು ಬಿಟ್ಟುಬಿಡಲು ನಿಮಗೆ ಆಗುತ್ತಿಲ್ಲ. ಸಮುದ್ರ ಕಿನಾರೆಯು ನಿಮಗೆ ನಿಮ್ಮ ಹೇಳಿಕೊಳ್ಳುವ ತಿಳುವಳಿಕೆಯನ್ನು ಬಲಪಡಿಸಲು ಮತ್ತೊಂದು ಜಾಗವಾಗುತ್ತದೆ. ನಾನು ಹೇಳಲು ಬಯಸುತ್ತೇನೆ: ನೀವು ನಿಮ್ಮ ಬದುಕನ್ನು ಆಸ್ವಾದಿಸುತ್ತಿಲ್ಲ ಎಂದು ಭಾವಿಸುತ್ತಿದ್ದರೆ, ಅದರ ಕಾರಣ ನಿಮ್ಮ ಮನಸ್ಸು, ನಿಮ್ಮ ಘನ ಅಹಂಭಾವ; ಬದುಕು ಸುಂದರವಾಗಿಲ್ಲ ಎಂದು ಕಾರಣವಲ್ಲ.
ಒಬ್ಬ ವ್ಯಕ್ತಿಯು ರಜೆಗಾಗಿ ಸ್ವಿಟ್ಜರ್ಲ್ಯಾಂಡ್ಗೆ ಹೋಗಿ ಒಂದು ತಿಂಗಳ ನಂತರ ಹಿಂತಿರುಗಿದ.
ಒಂದು ಸಂಜೆ ತನ್ನ ಸ್ನೇಹಿತನನ್ನು ಭೇಟಿಯಾದ ಮತ್ತು ಭೋಜನಕ್ಕಾಗಿ ಹೋಗಲು ತೀರ್ಮಾನಿಸಿದ.
ಅವನ ಸ್ನೇಹಿತನು ಕೇಳಿದ, “ಅಂದಹಾಗೆ ನೀನು ಸ್ವಿಟ್ಜರ್ಲ್ಯಾಂಡಿನ ಸುಂದರ ಪ್ರಕೃತಿ ದೃಶ್ಯಗಳನ್ನು ಆಸ್ವಾದಿಸಿದೆಯಾ?” ಎಂದು.
ಆ ವ್ಯಕ್ತಿಯು ಉತ್ತರಿಸಿದನು, “ಹೌದು, ಒಂದು ತರಹ. ಆದರೆ ದಾರಿಯಲ್ಲಿ ಪರ್ವತಗಳು ಅಡ್ಡಬರುತ್ತಲೇ ಇದ್ದವು” ಎಂದು.
(ಗಟ್ಟಿಯಾಗಿ ನಗು!)
ನಾವು ಎಷ್ಟೊಂದು ಸೂಕ್ಷ್ಮರಹಿತರಾಗಿದ್ದೇವೆಂದರೆ, ನಾವು ಪ್ರಕೃತಿಯಿಂದ ಅಷ್ಟೊಂದು ದೂರದಲ್ಲಿದ್ದೇವೆ. ನಮ್ಮ ಸುತ್ತಲೂ ಎಷ್ಟೊಂದು ಸೌಂದರ್ಯತೆ ಇದೆ, ಆದರೆ ಅದನ್ನು ಆಸ್ವಾದಿಸಲು ಅಸಮರ್ಥರಾಗಿದ್ದೇವೆ, ಮತ್ತು ಆಸ್ವಾದಿಸಲು ಏನೂ ಇಲ್ಲವೆಂದು ದೂರುತ್ತಿರುತ್ತೇವೆ.
ಆಸ್ವಾದಿಸುವ ಸಾಮರ್ಥ್ಯವು ನಿಮ್ಮಲ್ಲೇ ಇದೆ. ಇದಕ್ಕಾಗಿ ಹೊರಗಿನ ಯಾವುದನ್ನೂ ದೂರಬೇಡಿ. ಒಂದು ಮಗುವಾಗಿದ್ದಾಗ ನೀವು ನಿಮ್ಮ ಸುತ್ತ ಇರುವ ಎಲ್ಲವನ್ನೂ ಆಸ್ವಾದಿಸಿದಿರಿ. ಆ ನಂತರ ಏನಾಯಿತು? ನೀವು ಗಂಭೀರವಾದಿರಿ ಮತ್ತು ಹೇಗೆ ಆಸ್ವಾದಿಸಬೇಕೆಂಬುದನ್ನು ಮರೆತಿರಿ. ನೀವು ನಿಮ್ಮ ಹೇಳಿಕೊಳ್ಳುವ ತಿಳುವಳಿಕೆಯಿಂದ ಮಂಕಾದಿರಿ.
ನಾನು ಮುಂಚೆ ಹೇಳಿದ ಹಾಗೆ, ಜನಗಳೂ ಬಹಳ ಸಾರಿ ಕೇಳುತ್ತಾರೆ, “ಸ್ವಾಮೀಜಿ, ಇಷ್ಟೆಲ್ಲಾ ತಿಳುವಳಿಕೆಯಿದ್ದರೂ ನೀವು ಅದು ಹೇಗೆ ಒಂದು ಮಗುವಿನ ಹಾಗೆ
ತೋರುತ್ತೀರಲ್ಲಾ? ಪ್ರತಿಬಾರಿ ಒಂದು ಹಾಸ್ಯವನ್ನು ಸಿಡಿಸಿದಾಗಲೂ, ನೀವು ಸ್ವಯಂಸ್ಫೂರ್ತಿಯಿಂದ ನಗುತ್ತೀರ ಮತ್ತು ನಾವು ನಿಮ್ಮತ್ತ ಆಶ್ಚರ್ಯಚಕಿತರಾಗಿ (awe) ನೋಡುತ್ತೇವೆ! ನೀವು ಒಂದು ಹಾಸ್ಯವನ್ನು ಹೇಳಲು ಪ್ರಾರಂಭಿಸಿದಾಗ, ಕೆಲವು ಬಾರಿ ನಾವು ಇದನ್ನು ಹಿಂದೆಯೇ ನೀವು ಹೇಳುವುದನ್ನು ಕೇಳಿದ್ದುದರಿಂದ ನಾವು ನಗುವುದಿಲ್ಲ. ಆದರೆ ನೀವು ಇದನ್ನು ಎಷ್ಟೊಂದು ಆಸ್ವಾದಿಸುತ್ತೀರೆಂದರೆ ಯಾರೋ ನಿಮಗೆ ಈ ಹಾಸ್ಯವನ್ನು ನಿಮಗೆ ಮೊದಲ ಬಾರಿ ಹೇಳುತ್ತಿರುವ ಹಾಗೆ!'' ಎಂದು.
ನೋಡಿ, ನೀವು ಸ್ವಯಂಸ್ಫೂರ್ತಿಯನ್ನು ಕಳೆದುಕೊಂಡಿದ್ದೀರೆಂದೂ ಮತ್ತು ಆಸ್ವಾದಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದೀರೆಂದೂ ನಾನು ನಿಮಗೆ ಹೇಳಿದಾಗ ನಾನು ಅರ್ಥೈಸುವುದು, ನೀವು ನಿಮ್ಮ ತಿಳುವಳಿಕೆಯಿಂದ ಎಲ್ಲವನ್ನೂ ತಿಳಿದಂತಹ ಮನೋಭಾವವನ್ನು ಗಳಿಸಿದ್ದೀರ.
ನಾನು ನಿಮಗೆ ಇದನ್ನು ಹೇಳಿರುವುದರಿಂದ, ನಾನು ನನ್ನ ಮಾತುಗಳಲ್ಲಿ ಬಹಳ ಬಾರಿ ಪುನರುಚ್ಛರಿಸಿರುವ ಮತ್ತು ನನಗೆ ಈಗಲೂ ನಗೆಯನ್ನು ತರುವ ಒಂದು ಕತೆಯನ್ನು ಹೇಳುತ್ತೇನೆ.
ತಮಿಳುನಾಡಿನ ಹಳ್ಳಿಗಳ ದೇವಸ್ಥಾನದ ವಾರ್ಷಿಕ ಹಬ್ಬಗಳಲ್ಲಿ, ಬಯಲಿನಲ್ಲಿ ಒಂದು ತಾತ್ಕಾಲಿಕ ವೇದಿಕೆಯನ್ನು ನಿರ್ಮಿಸಿರುತ್ತಾರೆ. ಅಲ್ಲಿ ಪ್ರಸಿದ್ಧರಾದ ನಟರು ಸಾಮಾನ್ಯವಾಗಿ ಹಿಂದೂಗಳ ಪವಿತ್ರ ಗ್ರಂಥಗಳಾದ ಮಹಾಭಾರತ ಮತ್ತು ರಾಮಾಯಣದ ಪ್ರಸಂಗಗಳ ನಾಟಕಗಳನ್ನು ಆಡುತ್ತಾರೆ.
ನಾನು ಈ ನಾಟಕಗಳನ್ನು ವೀಕ್ಷಿಸಲು ಹೋಗುತ್ತಿದ್ದೆ.
ಅಂತಹ ಒಂದು ಸಂದರ್ಭದಲ್ಲಿ, ಅವರು ಮಹಾಭಾರತದ ದೃಶ್ಯವೊಂದನ್ನು ಆಡುತ್ತಿದ್ದರು.
ಅದು ದುಶ್ಶಾಸನನಿಂದ ದ್ರೌಪದಿಯ ಮಾನಭಂಗ ಮತ್ತು ಕೊನೆಯಲ್ಲಿ ಭಗವಂತನಾದ ಕೃಷ್ಣನಿಂದ ಅವಳ ರಕ್ಷಣೆಯ ಪ್ರಸಂಗ.
ದ್ರೌಪದಿಯ ಪಾತ್ರವನ್ನು ಆಡುತ್ತಿದ್ದವನು ಒಬ್ಬ ಸೀರೆಯನ್ನು ಉಟ್ಟ ಗಂಡಸು.
ಯೋಜನೆಯಂತೆ, ಅವನು ಒಂದರ ಮೇಲೆ ಇನ್ನೊಂದರಂತೆ ಏಳು ಸೀರೆಗಳನ್ನು ಉಟ್ಟಿರುವನು ಮತ್ತು ದುಶ್ಶಾಸನನು ಲೆಕ್ಕವಿಟ್ಟುಕೊಂಡು ಒಂದರ ನಂತರ ಇನ್ನೊಂದನ್ನು ಎಳೆದು ಹಾಕಬೇಕು.
ಏಳನೆಯ ಸೀರೆಯು ಬಂದಾಗ, ದ್ರೌಪದಿಯು ಭಗವಂತ ಕೃಷ್ಣನಿಗೆ ಸಹಾಯಕ್ಕಾಗಿ ಮೊರೆ ಹೋಗುವಳು ಮತ್ತು ಕೃಷ್ಣನು ಪ್ರತ್ಯಕ್ಷನಾಗುವನು.
ಹೇಗೋ ದ್ರೌಪದಿಯ ಪಾತ್ರಧಾರಿಯು ಒಂದು ಸೀರೆಯನ್ನು ಕಡಿಮೆ ಮಾಡಿ ಕೇವಲ ಆರು ಸೀರೆಗಳನ್ನು ಉಟ್ಟಿದ್ದನು.
ವೇದಿಕೆಯ ಮೇಲೆ ದುಶ್ಶಾಸನನು ಸೀರೆಗಳನ್ನು ಎಳೆಯಲಾರಂಭಿಸಿದನು. ಆರನೆಯ ಸೀರೆಯನ್ನು ಎಳೆಯುವಾಗ ತತ್ಕ್ಷಣವೇ ದ್ರೌಪದಿಗೆ ತನ್ನ ತಪ್ಪಿನ ಅರಿವಾಯಿತು! ಅವನು, "ಹೇ ಬಿಡು! ಹೇ ಬಿಡು!" ಎಂದು ದುಶ್ಶಾಸನನಿಗೆ ಕೂಗಲಾರಂಭಿಸಿದ.
ದುಶ್ಶಾಸನನು ದ್ರೌಪದಿಯು ತನ್ನ ಪಾತ್ರವನ್ನು ಅಷ್ಟೊಂದು ಚೆನ್ನಾಗಿ ಆಡುತ್ತಿದ್ದಾಳೆ ಎಂದುಕೊಂಡು ಎಳೆಯುವುದನ್ನು ಮುಂದುವರಿಸಿದ!
ಕೊನೆಗೆ, ದ್ರೌಪದಿಯು ವೇದಿಕೆಯ ಮೇಲೆ ಬರಿಯ ಚಡ್ಡಿ ಮತ್ತು ಒಂದು ಕುಪ್ಪಸದೊಂದಿಗೆ ಸ್ತ್ರೀಯ ವೇಷದೊಂದಿಗೆ ನಿಂತುಕೊಂಡಿದ್ದನು!
ಆದರೆ ಅವನಿಗೆ ಒಳ್ಳೆಯ ಸಮಯ ಪ್ರಜ್ಞೆ ಇತ್ತು. ಅವನು "ಓ ಕೃಷ್ಣ! ನೀನೆಷ್ಟು ಕೃಪಾಳು. ನೀನು ನನ್ನ ಮಾನವನ್ನು ಉಳಿಸಲು ನನ್ನ ಲಿಂಗವನ್ನು ಪರಿವರ್ತಿಸಿದೆ!" ಎಂದು ಕೂಗಿದನು.
(ಸ್ವಾಮೀಜಿಯು ಈ ಕತೆಯನ್ನು ಹೇಳುತ್ತಾ ಬಿದ್ದು ಬಿದ್ದು ನಗಲಾರಂಭಿಸಿದರು!) ಈಗಲೂ ಕೂಡ ಈ ದೃಶ್ಯವನ್ನು ನೆನೆಸಿಕೊಂಡಾಗ ನನಗೆ ನಗೆಯನ್ನು ತಡೆದುಕೊಳ್ಳಲಾಗುವುದಿಲ್ಲ!
ಆದುದರಿಂದ ಅರ್ಥಮಾಡಿಕೊಳ್ಳಿ: ಜ್ಞಾನವು ನೇರವಾಗಿದೆ, ಆದರೆ ಅದನ್ನು ನಿಮ್ಮನ್ನು ಘನೀಕೃತ ಮಾಡಿಕೊಳ್ಳಲು ಉಪಯೋಗಿಸಬೇಡಿ. ನಿಮ್ಮ ಅಂತರ್ಗತ ಸ್ವಭಾವವು ಒಂದು ನದಿಯಂತೆ - ಹರಿಯುತ್ತಿರುತ್ತದೆ. ಸ್ವಯಂ ಸ್ಫೂರ್ತಿಯು ನಿಮ್ಮ ಸ್ವಭಾವ. ನೀವು ಅದರಿಂದ ತಿಳುವಳಿಕೆಯೆಂದು ಹೇಳುವುದರ ಸಹಾಯದಿಂದ ದೂರ ಸರಿಯುತ್ತಿದ್ದೀರ. ನೀವು ಮುಗ್ಧತೆಯ ಸಹಾಯದಿಂದ ಬದುಕಿದರೆ, ಒಂದು ಪೂರ್ಣ ನವ ವಿಶ್ವವೇ ನಿಮಗಾಗಿ ತೆರೆದುಕೊಳ್ಳುತ್ತದೆ.
ಪ್ರತಿಯೊಂದು ಕ್ಷಣವನ್ನೂ ತೆರೆದ ಮನೋಭಾವದಿಂದ ಎದುರಿಸಿ. ಯಾವುದೇ ಪೂರ್ವಾಗ್ರಹಪೀಡಿತ ಅಭಿಪ್ರಾಯಗಳನ್ನು ಹೊಂದಿರಬೇಡಿ. ನೀವು ಈ ರೀತಿ ಬದುಕಿದರೆ, ಯಾವುದೂ ನಿಮಗೆ ಪ್ರಾಪಂಚಿಕವಾಗಿರುವುದಿಲ್ಲ. ಆಗ ನೀವು
ಪ್ರತಿದಿನವೂ ಬಾಳುತ್ತಿರುವ ನಿಮ್ಮ ಹೆಂಡತಿಯನ್ನೂ ಸಹ ಉಲ್ಲಾಸಕರವಾಗಿಯೂ, ಆನಂದದಾಯಕವಾಗಿಯೂ ಇರುವ ಹಾಗೆ ನೋಡುತ್ತೀರಿ.
ಇದು ನಿಮ್ಮ ಮನೋಭಾವನೆಯಾದರೆ, ಬಹುಶಃ ಬೇರೆ ವ್ಯಕ್ತಿಯು ನಿಮ್ಮಲ್ಲಿರುವ ಮುಕ್ತತೆಯನ್ನು ಅನುಭವಿಸಿ ನಿಮಗೆ ಬಹಳಷ್ಟು ಆನಂದದಾಯಕ ವಿಧದಲ್ಲಿ ತೆರೆದುಕೊಳ್ಳುತ್ತಾರೆ. ಆಗ ಅದು ಒಂದು ಸಕಾರಾತ್ಮಕ ಚಕ್ರವಾಗಿ ನೀವು ಪ್ರತিক্ষಣವೂ ಉಲ್ಲಾಸದಿಂದ ಉಲ್ಲಾಸಕ್ಕೆ ಚಲಿಸುತ್ತಿರುತ್ತೀರ. ಆಗ ಅಲ್ಲಿ ಕೇವಲ ಉಲ್ಲಾಸ ಒಂದೇ ಇರುತ್ತದೆ; ಯಾವುದೂ ಹಳಸಿರುವುದಿಲ್ಲ!
ನೀವು ಅಹಂಭಾವದೊಡನೆ ಜೀವಿಸಿದ್ದರೆ, ನಿಮಗೆ ಕೆಲವು ನಿಮ್ಮದೇ ಆದ ಸಲಕರಣೆಗಳು, ಸ್ವಲ್ಪ ಬೆಂಬಲ, ನಿಮ್ಮ ಸುತ್ತ ಸ್ವಲ್ಪ ಜನರು ಸದಾಕಾಲವೂ ಇರುವ ಅವಶ್ಯಕತೆಯಿರುತ್ತದೆ. ಅದಿಲ್ಲದೆ ನೀವು ಯಾರೂ ಅಲ್ಲ. ಒಬ್ಬ ರಾಜನು ರಾಜನಾಗುವುದು ಅವನ ರಾಜ್ಯವಿದ್ದಾಗ ಮಾತ್ರ. ಅದೇ ರೀತಿ ಪರಮಹಂಸ ಎಂಬುವನು ಯಾವ ಅಪೇಕ್ಷೆಯೂ ಇಲ್ಲದವನು ಮತ್ತು ಕಾಲನ್ನು ನೀಡಿದಾಗ ನಿದ್ರೆ ಮಾಡುವವನು, ಕೈಯನ್ನು ಚಾಚಿದಾಗ ಊಟ ಮಾಡುವವನು! ಅವನು ಕೇವಲ ವಿಶ್ವಶಕ್ತಿಯ ಅರಿವನ್ನು ಅನುಸರಿಸಿಕೊಂಡು ಹೋಗುವವನು. ಅವನು ಆತ್ಮವನ್ನು ಸ್ಪಷ್ಟವಾಗಿ ಅರಿತವನು ಮತ್ತು ಅವನಿಗೆ ಅವನೇ ರಾಜ. ಅವನಿಗೆ ರಾಜ್ಯದ ಅವಶ್ಯಕತೆಯೇ ಇಲ್ಲ!
ಆದರೆ ನೀವು ಪರಮಹಂಸರಾದರೆ, ಒಂದು ದೊಡ್ಡ ರಾಜ್ಯವು ತನ್ನಷ್ಟಕ್ಕೆ ತಾನೇ ನಿಮ್ಮ ಸುತ್ತ ರೂಪುಗೊಳ್ಳುತ್ತದೆ. ಆದರೆ ನೀವು ಅದರಿಂದ ಸ್ಪರ್ಶಿತರಾಗಿರುವುದಾಗಲೀ ಅಥವಾ ಕಳಂಕಿತರಾಗಿರುವುದಾಗಲೀ ಇಲ್ಲ. ಕೇವಲ ದುರ್ಬಲರು ಮಾತ್ರವೇ ಅವರಿಗಾಗಿ ರಾಜ್ಯವನ್ನು ಸೃಷ್ಟಿಸಿಕೊಂಡು ಅದರಿಂದ ಬೆಂಬಲವನ್ನೂ ಮತ್ತು ಶಕ್ತಿಯನ್ನೂ ಹೊಂದುತ್ತಾರೆ. ಕೇವಲ ದುರ್ಬಲರಿಗೆ ಮಾತ್ರವೇ ಅವರನ್ನು ಬೆಂಬಲಿಸಲು ಅಂತಸ್ತು ಮತ್ತು ಅವರ ಅಹಂಭಾವದ ಅವಶ್ಯಕತೆಗಳಿವೆ. ಆದರೆ ಒಬ್ಬ ಪರಮಹಂಸನಿಗೆ ಅವರ 'ಸ್ಥಿತಿ'ಯೇ ಅವರಿಗೆ ಎಲ್ಲವನ್ನೂ ಮಾಡುತ್ತದೆ. ಅವರನ್ನು ಸುತ್ತಿರುವ ಅಂತಸ್ತಿನಿಂದ ಅವರು ಸ್ಪರ್ಶಿತರಾಗುವುದಿಲ್ಲ.
ನೀವು ನಿಮ್ಮದೇ ಸಲಕರಣೆಗಳನ್ನು ಹುಡುಕುತ್ತೀರಿ, ಏಕೆಂದರೆ ಅವಿಲ್ಲದೆ ನಿಮಗೆ ಜೀವನವು ಶೂನ್ಯವೆಂದೂ ಲೌಕಿಕವೆಂದೂ ಅನ್ನಿಸುತ್ತದೆ.
ವಿಶ್ವಶಕ್ತಿಯ ಬಹು ದೊಡ್ಡ ವಿಸ್ಮಯಗಳು ಪ್ರಶಿಕ್ಷಣವ ನಿಮ್ಮಕಣ್ಣುಮುಂದೆ ನಡೆಯುತ್ತಿರುತ್ತವೆ. ಆದರೆ ನೀವು ನಿಮ್ಮ ಅಹಂಭಾವದಿಂದ ಅನ್ಯ ವಿಚಾರಗಳಲ್ಲಿ ಮಗ್ನರಾಗಿರುತ್ತೀರ, ಆದ್ದರಿಂದ ಅವುಗಳನ್ನು ಕಳೆದುಕೊಳ್ಳುತ್ತೀರ!
ನಿಮ್ಮ ದೇಹವೇ ಒಂದು ವಿಸ್ಮಯ. ಅದು ಇದುವರೆಗೂ ಕಂಡು ಹಿಡಿಯಲಾದ ಅತ್ಯುತ್ಕೃಷ್ಟ ಗಣಕಯಂತ್ರ (Super computer) ಕ್ಕಿಂತಲೂ ಮಹತ್ತರವಾದದ್ದು. ನಿಮ್ಮ ದೇಹದಲ್ಲಿ ನಡೆಯುತ್ತಿರುವ ಮಿಲಿಯಗಟ್ಟಲೆ ಜೀವ ಕೋಶಗಳೂ, ಸಾವಿರಾರು ಅನುರೂಪ ಸೇರಿಕೆಯಲ್ಲಿ ನಡೆಯುವ ಪ್ರಸಂಗಗಳು ಈ ಭೂಗ್ರಹದ ಮೇಲೆ ಆಗುತ್ತಿರುವ ಅತಿದೊಡ್ಡ ವಿಸ್ಮಯ. ನೀವು ನಿಮ್ಮ ಮನಸ್ಸನ್ನು ಬಿಟ್ಟು ವಿಶ್ವಶಕ್ತಿಯೊಂದಿಗೆ ಶ್ರುತಿಗೂಡಿಸಿ ಬಾಳಿದರೆ, ವಿಸ್ಮಯಗಳ ಹೆಸರಿನಲ್ಲಿ ನೀವು ಹುಡುಕುತ್ತಿರುವುದು ಸ್ವಭಾವಸಿದ್ಧವಾದ ಅನುರೂಪ ಸೇರಿಕೆಯಲ್ಲಿ ನಡೆಯುವ ಪ್ರಸಂಗಗಳಲ್ಲದೆ (synchronous events) ಬೇರೇನೂ ಅಲ್ಲವೆಂದು ಅರ್ಥಮಾಡಿಕೊಳ್ಳುತ್ತೀರ. ನಿಮ್ಮ ಅಹಂಭಾವವು ಸುಮ್ಮನೆ ಇವುಗಳನ್ನು ಸಾಮಾನ್ಯವಾಗಿ ತೋರುವಂತೆ ಮಾಡುತ್ತದೆ ಅಷ್ಟೆ. ನಿಮ್ಮ ತಿಳುವಳಿಕೆಯು ಯಾವಾಗಲೂ ಕತ್ತರಿಸಿ, ವಿಶ್ಲೇಷಿಸಿ ಮತ್ತು ವಿಷಯಗಳನ್ನು ಲೌಕಿಕ ತರ್ಕಗಳಿಗೆ ಇಳಿಸಿಬಿಡುತ್ತದೆ.
ಹ್ಯಾ...?
ಸ್ವಾಮೀಜಿ, ಅದು ಏಕೆ ನಮಗೆ ತಿಳಿದಿದೆ, ಆದರೆ ಇನ್ನೂ ಈ ವಿಚಾರಗಳನ್ನು ನಮ್ಮ ಮೇಲೆ ತೆಗೆದುಕೊಳ್ಳುತ್ತೇವೆ?
ಹೌದು... ಇದು ಒಂದು ಒಳ್ಳೆಯ ಪ್ರಶ್ನೆ! ಸಂತೋಷವಾಗಿ ಬದುಕಲು ನಮಗೆ ಆಯ್ಕೆ ಇದ್ದರೂ ನಾವೇಕೆ ಕಷ್ಟಪಡುವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ... ?!
ನೋಡಿ, ನೀವು ನಿಮ್ಮ ಆತ್ಮ, ನಿಮ್ಮ ನಿಜವಾದ ಗುರುತಾದ ನಿಮ್ಮ ಅಸ್ತಿತ್ವದ ಬಗ್ಗೆ ತಿಳಿದಿಲ್ಲ. ಕಾಲಾನಂತರ ನೀವು ಹೊರ ಜಗತ್ತಿನೊಂದಿಗೆ ಸಂಬಂಧ ಕಲ್ಪಿಸಿ ನಿಮಗಾಗಿ ಒಂದು ಹುಸಿ ಗುರುತನ್ನು ಸೃಷ್ಟಿಸಿಕೊಳ್ಳುತ್ತೀರ. ಈ ಹುಸಿ ಗುರುತಿನಿಂದ ನೀವು ಹೊರ ಜಗತ್ತಿನೊಂದಿಗೆ ಸಂಬಂಧ ಕಲ್ಪಿಸಿಕೊಳ್ಳಬಹುದು. ಈ ಹುಸಿ ಗುರುತೇ ನಿಮ್ಮ ಅಹಂಭಾವ. ಅದು ಶುದ್ಧವಾಗಿ ಬೇರೆ ಜನಗಳು ನಿಮ್ಮ ಮೇಲೆ ಅಂಟಿಸಿರುವ ಗುರುತಿನ ಚೀಟಿಗಳು. ನಿಜವಾಗಿಯೂ ನೀವಾರೆಂದು ನಿಮಗೇ ಗೊತ್ತಿಲ್ಲ.
ಒಂದು ವೇಳೆ ನೀವು ಯಾರೆಂದು ನಾನು ಕೇಳಿದರೆ, ನೀವೇನು ಹೇಳುವಿರಿ? ನೀವು ‘‘ನಾನು ಇವರ ತಂದೆ’’ ಎಂದೋ ಅಥವಾ ‘‘ನಾನು ಇವರ ಸಹೋದರಿ ಎಂದೋ'' ಅಥವಾ "ನಾನೊಬ್ಬ ವೈದ್ಯ'' ಎಂದು ಮುಂತಾಗಿ ಹೇಳುವಿರಿ. ಆದರೆ ಇವೆಲ್ಲಾ ಏನು? ಇವು ಕೇವಲ ನಿಮ್ಮ ಸಂಬಂಧಗಳು ಮತ್ತು ನಿಮ್ಮ ವೃತ್ತಿಗಳು. ನೀವು ನಿಮ್ಮ ತಂದೆಗೆ ಮಗಳೋ, ನಿಮ್ಮ ಗಂಡನಿಗೆ ಹೆಂಡತಿಯೋ, ನಿಮ್ಮ ಮಕ್ಕಳಿಗೆ ತಾಯಿಯೋ ಎಂದು ಮುಂತಾಗಿ ಇರುತ್ತದೆ. ಇವೆಲ್ಲವೂ ನೀವು ನಿಮ್ಮ ಸುತ್ತಲೂ ಇರುವ ಜನಗಳಿಗಾಗಿ. ಆಗ ನೀವು ನಿಮಗೇ ಯಾರು?
ಪ್ರಚಲಿತದಲ್ಲಿ (currently) ನೀವು ಸಂಬಂಧಗಳಲ್ಲಿ ಮತ್ತು ವೃತ್ತಿಯಲ್ಲಿ ಮಾತ್ರ ಇರುವಿರಿ. ನಿಮ್ಮ ಅಹಂಭಾವವನ್ನು ಇದರ ಮೇಲೆ ಕಟ್ಟಲಾಗಿದೆ. ನಿಮ್ಮ ಗುರುತು ಇರುವುದು ಕೇವಲ ಇದರ ಮೂಲಕವೇ. ಆದುದರಿಂದಲೇ ನಿಮ್ಮ ಗುರುತನ್ನು ಕಳೆದುಕೊಳ್ಳುವ ಅಪಾಯವು ಇದ್ದೇ ಇರುತ್ತದೆ. ಇದು ಮಾನವ ನಿರ್ಮಿತ ನಾಜೂಕಾದ ವಸ್ತುವಾಗಿದ್ದು ಯಾವಾಗ ಬೇಕಾದರೂ ಮುರಿದು ಹೋಗಬಹುದು. ಆದುದರಿಂದಲೇ ಅದನ್ನು ಕಾಪಾಡಿಕೊಂಡು ಬರಲು ನೀವು ಅಷ್ಟು ಕಷ್ಟಪಡಬೇಕಿರುವುದು.
ನಿಮ್ಮ ಸಹಜ ಪ್ರಕೃತಿಯು ವಾಸ್ತವದಲ್ಲಿ “ಒಂಟಿಯಾಗಿ ಇರುವುದು'' ನೀವು ನಿಮ್ಮ ತಾಯಿಯ ಗರ್ಭದಲ್ಲಿರುವಾಗ ಒಂಟಿಯಾಗಿ ಇದ್ದಿರಿ. ನೀವು ವಾಸ್ತವದಲ್ಲಿ ಸಾಕಷ್ಟು ನಿಮಗೇ ಇದ್ದೀರ. ಇದು ನಿಮ್ಮ ವ್ಯಕ್ತಿ ವೈಶಿಷ್ಟ್ಯ. ಕಾಲಾನಂತರದಲ್ಲಿ ನಿಮ್ಮ ವ್ಯಕ್ತಿತ್ವವು ವ್ಯಕ್ತಿ ವೈಶಿಷ್ಟ್ಯವನ್ನು ಮೀರಿ ಇರುತ್ತದೆ. ವ್ಯಕ್ತಿ ವೈಶಿಷ್ಟ್ಯವು ಸ್ವಾಭಾವಿಕವಾದದ್ದು. ವ್ಯಕ್ತಿತ್ವವು ಸಮಾಜದತ್ತವಾದದ್ದು.
ಅದು ಈ ರೀತಿ: ಒಂದು ಪಾರ್ಸಲ್ (ರವಾನಿಸಬೇಕಾದ ವಸ್ತು) ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗುತ್ತದೆ. ಪ್ರತಿ ಸ್ಥಳದಲ್ಲೂ ಅದರ ಮೇಲೆ ಬೇರೆ ಬೇರೆ ವಿವರಗಳ ಮುದ್ರೆಗಳನ್ನು ಹಾಕಲಾಗುತ್ತದೆ. ಈ ಪಾರ್ಸಲ್ ಈ ಮುದ್ರೆಗಳಿಂದ ಆಗಿಲ್ಲ ಆದರೆ ಒಳಗಿರುವ ವಸ್ತುವಿನಿಂದ ಆಗಿದೆ, ಅಲ್ಲವೇ? ಇದೇ ರೀತಿ, ನೀವು ಇತರರು ನಿಮ್ಮ ಮೇಲೆ ಹಾಕಿರುವ ಮುದ್ರೆಗಳಿಂದ ಆಗಿಲ್ಲ, ನೀವು ನಿಮ್ಮೊಳಗಿರುವ ವಸ್ತುವಿನಿಂದ ಆಗಿರುವಿರಿ.
ಅದು ಹೇಗೋ, ಕಾಲಕ್ರಮೇಣ, ನಿಮ್ಮ ಅಹಂಭಾವವನ್ನು ಈ ಮುದ್ರೆಗಳ ಮೇಲೆ ಕಟ್ಟಲಾಗಿದೆ, ಮತ್ತು ನಿಮಗೆ ಇದನ್ನು ಪೋಷಿಸಲು ಹೆಚ್ಚು ಹೆಚ್ಚು ಜನರ ಅವಶ್ಯಕತೆಯಿದೆ. ಆದುದರಿಂದಲೇ ನೀವು ಒಂಟಿಯಾಗಿ ನಿಮ್ಮ ಪಾಡಿಗೆ ನೀವು ಇರಲು ಸಾಧ್ಯವೇ ಇಲ್ಲವೆಂಬುದನ್ನು ಗಮನಿಸುತ್ತೀರಿ. ನಿಮ್ಮ ಪಾಡಿಗೆ ನೀವು
ಇರುವಾಗ ಬೇರೆಯವರು ನಿಮ್ಮ ಅಹಂಭಾವವನ್ನು ಪೋಷಿಸುತ್ತಿರುವ ಧ್ವನಿ ಕೇಳುವುದಿಲ್ಲ. ನಿಮ್ಮ ಅಹಂಭಾವವು ಉಪವಾಸವಿದ್ದಂತೆ ಭಾವಿಸುತ್ತದೆ. ನೀವು ಏನು ಮಾಡುವಿರಿ? ಕೊನೆಯ ಪಕ್ಷ ನೀವು ಟಿ.ವಿ.ಯನ್ನು ತಿರುಗಿಸಿ (on) ವೀಕ್ಷಿಸಲಾರಂಭಿಸುತ್ತೀರಿ!
ಒಂದು ಸಣ್ಣ ಕಥೆ:
ಸುದೀರ್ಘಕಾಲದ ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿಯೊಬ್ಬನು ಸಾಯುತ್ತಿದ್ದನು.
ಅವನ ಸ್ನೇಹಿತರು ಅವನು ಇನ್ನೇನು ಸಾಯಲಿರುವ ಕಾಲಕ್ಕೆ ವಿರೋಧ ಪಕ್ಷಕ್ಕೆ ತನ್ನ ನಿಷ್ಠೆಯನ್ನು ಬದಲಾಯಿಸಿದ್ದನ್ನು ತಿಳಿದರು.
ಆಶ್ಚರ್ಯಚಕಿತರಾದ ಅವರು ಅವನು ಹಾಗೇಕೆ ಮಾಡಿದನೆಂದು ಕೇಳಿದರು.
ಆ ವ್ಯಕ್ತಿಯು ಹೀಗೆ ಉತ್ತರಿಸಿದನು “ಓಹ್, ನಿಜವಾಗಿ ಹೇಳುವುದಾದರೆ ಅವರಲ್ಲಿ ಒಬ್ಬರು ಸಾಯಲಿ” ಎಂದು.
(ನಗೆ!)
ಅಷ್ಟೊಂದು ಬಲವಾಗಿರುತ್ತದೆ ನಮ್ಮ ಹುಸಿ ಗುರುತು! ಅದು ನಮಗೆ ಎಷ್ಟೊಂದು ಘನವಾದ ವಾಸ್ತವಿಕತೆಯಾಗಿದೆ ಎಂದರೆ, ನಾವು ಬೇರೆ ಏನನ್ನು ನೋಡಲೂ ಆಗದಂತೆ ನಮ್ಮನ್ನು ಅಂಧರನ್ನಾಗಿಸಿದೆ. ಸಾಯುವ ಸಮಯದಲ್ಲಿ ಕೂಡ, ನಮ್ಮ ಘನತೆಯನ್ನು ಬಿಡಲು ನಮಗೆ ಕಷ್ಟವಾಗುತ್ತದೆ. ನಾವು ಅರಿವಿಲ್ಲದೇ ಬದುಕುತ್ತೇವೆ ಮತ್ತು ಸಾಯುತ್ತೇವೆ.
ನಿಮ್ಮ ಏಕೈಕ ಭರವಸೆಯ ಬಿಂದುವಾದ ನಿಮ್ಮ ವ್ಯಕ್ತಿತ್ವವನ್ನು ಕಳೆದುಕೊಳ್ಳುವ ಭಯವು ನೀವು ನಡೆದುಕೊಳ್ಳುತ್ತಿರುವ ರೀತಿಗಳಲ್ಲಿ ನಡೆದುಕೊಳ್ಳುವಂತೆ ಮಾಡುತ್ತದೆ. ಆದುದರಿಂದಲೇ ನಾನು ಹೇಳುವುದು ನಿಮ್ಮ ಅಹಂಭಾವವು ಆಟವಾಡಿಸುತ್ತಿದೆ ಎಂದು. ಸಂಪೂರ್ಣ ಆಧ್ಯಾತ್ಮಿಕತೆಯು ಈ ವ್ಯಕ್ತಿತ್ವವನ್ನು, ಈ ಹುಸಿ ಗುರುತನ್ನು ಕಳೆದುಕೊಳ್ಳುವುದರ ಬಗ್ಗೆಯೇ ಆಗಿದೆ.
ನೀವು ನಿಮ್ಮನ್ನೇ ತೊಡಗಿಸಿಕೊಳ್ಳುತ್ತಾ ನಂಬುತ್ತಾ ಇರುವ ಬದಲು ಗಮನಿಸಲು ಪ್ರಾರಂಭಿಸಿದರೆ ಇದು ಸಾಧ್ಯವಾಗುವುದು. ನೀವು ಗಮನಿಸಲು ಪ್ರಾರಂಭಿಸಿದರೆ ನೀವು ಪಾರ್ಸಲ್ ಒಳಗಿನ ಪದಾರ್ಥವೆಂದೂ ಅದರ ಮೇಲಿರುವ ಹೆಸರುಗಳು ಮತ್ತು ಗುರುತಿನ ಚೀಟಿಗಳು ಅಲ್ಲವೆಂದೂ ನಿಮಗೆ ಅರ್ಥವಾಗುವುದು.
ಅರಿವಿಕೆಯು ನಿಮಗೆ ಬಂದರೆ, ನಿಮಗೆ ಉಪನ್ಯಾಸದ ಅವಶ್ಯಕತೆಯಾಗಲೀ, ಧರ್ಮೋಪದೇಶವಾಗಲೀ, ಬೋಧನೆಗಳಾಗಲೀ, ಅಥವಾ ಪ್ರವಚನದ ಅವಶ್ಯಕತೆಗಳಾಗಲೀ ಇರುವುದಿಲ್ಲ.
ಹ್ಯೂ...?
ಸ್ವಾಮೀಜೀ, ಗುರುಗಳಾದ ನಿಮಗೆ ನಾವು ಶರಣಾಗತರಾದರೆ, ನಮ್ಮ ಅಹಂಭಾವದ ಬಗ್ಗೆ ನೋಡಿಕೊಳ್ಳಲಾಗುತ್ತದೆಯೇ?
ಮೊದಲನೆಯದಾಗಿ ನಿಜವಾಗಿಯೂ ನೀವು ಶರಣಾಗತರಾದರೆ, ನೀವು ಜ್ಞಾನೋದಯ ಹೊಂದುತ್ತೀರ. ಇದರಲ್ಲಿ ‘‘ನಾನು ಶರಣಾಗತನಾದಾಗ’’ ಎಂದು ಮುಂತಾದ ಪ್ರಶ್ನೆಯೇ ಇರುವುದಿಲ್ಲ. ಆದರೂ ಚರ್ಚೆಗಾಗಿ, ನೀವು ನನ್ನನ್ನು ನಿಮ್ಮೊಳಗೆ ಹೊಕ್ಕಲು ನಿರ್ಧರಿಸಿದರೆ, ನೀವು ಅಹಂಭಾವವನ್ನು ಕಳೆದುಕೊಂಡು ಜ್ಞಾನೋದಯವನ್ನು ಹೊಂದುವವರೆಗೂ ಒಂದು ಬೋನ್ಸಾಯಿ ಮರವನ್ನು ಇಡುವ ರೀತಿಯಲ್ಲಿ ನಿಮ್ಮ ಅಹಂಭಾವವನ್ನು ಕತ್ತರಿಸುತ್ತಾ ಇರುವೆನು.
ನೀವು ನಿಮ್ಮ ವ್ಯವಹಾರವನ್ನು ನಡೆಸಲು ಮತ್ತು ನಿಮ್ಮ ದೈನಂದಿನ ಕಾರ್ಯಗಳನ್ನು ಮಾಡಲು ಮತ್ತು ಬೇರೆಯವರಿಗೆ ಮತ್ತು ನಿಮಗೆ ಕೆಡಕಾಗದಿರಲು ಸಾಕಾಗುವಷ್ಟು ಅಹಂಭಾವವನ್ನು ಹೊಂದಿರುತ್ತೀರ. ನಿಮ್ಮ ಅಹಂಭಾವವು ಇನ್ನೆಂದೂ ಬೆಳೆಯಲಾರದ ಹುರಿದ ಬೀಜದಂತೆ ಇರುತ್ತದೆ.
ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ. ಜ್ಞಾನೋದಯವನ್ನು ಇನ್ನೂ ಹೊಂದಿರಲಾರದ ವ್ಯಕ್ತಿಯಲ್ಲಿ ಅಹಂಭಾವವು ಒಂದಲ್ಲ ಒಂದು ರೂಪದಲ್ಲಿ ಇರುತ್ತದೆ. ನಿಮ್ಮಲ್ಲಿ ಚುರುಕಾದ ಅಹಂಭಾವವೋ ಅಥವಾ ಜಡವಾದ ಅಹಂಭಾವವೋ ಇರಲಿ, ಎಷ್ಟು ನೀವು ವೀಕ್ಷಕರಂತೆ ಇರಲು ಪ್ರಾರಂಭಿಸುತ್ತೀರೋ ಅಷ್ಟು ಹೆಚ್ಚು ನಿಮ್ಮ ಅಹಂಭಾವವು ಕರಗುತ್ತದೆ. ಸದ್ಯಕ್ಕೆ ಅಷ್ಟು ಅರ್ಥಮಾಡಿಕೊಂಡರೆ ಸಾಕು.
ಸಾಮಾನ್ಯ ಜನರೊಡನೆ ನೀವು ಸುಲಭವಾಗಿ ನಿಮ್ಮ ಅಹಂಭಾವವನ್ನು ರಕ್ಷಿಸಿಕೊಂಡು ಅದರೊಂದಿಗೆ ತಪ್ಪಿಸಿಕೊಂಡುಬಿಡಬಹುದು. ಆದರೆ ಗುರುವಿನೊಂದಿಗೆ, ಅವರನ್ನು ಮೋಸಗೊಳಿಸಲು ಸಾಧ್ಯವೇ ಇಲ್ಲ. ಅವರನ್ನು ಮೋಸಗೊಳಿಸಿದ್ದಾಗ ತಿಳಿದುಕೊಳ್ಳುತ್ತಾ ಕೇವಲ ನಿಮ್ಮನ್ನು ನೀವು ಮೋಸಗೊಳಿಸಿಕೊಳ್ಳಬಹುದು. ನೀವು ಎಷ್ಟೇ ಆಳವಾಗಿ ಮತ್ತು ಚೆನ್ನಾಗಿ ನಿಮ್ಮ ಅಹಂಭಾವವನ್ನು ಮತ್ತು ನಿಮ್ಮ ಕಪಟತನವನ್ನು
ಮುಚ್ಚಿದ್ದರೂ ಸಹ ಗುರುಗಳು ದಿಟ್ಟಿಸಿ ನೋಡಿದಾಗ ಅವುಗಳೆಲ್ಲಾ ಬಯಲಾಗಿಬಿಡುತ್ತವೆ. ನೀವು ಅದನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದರೆ ಗುರುಗಳು ಅದನ್ನು ವಾಸಿ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಅಹಂಭಾವವು ಎಂತಹ ಆರ್ಬುದದಂತಹ ರೋಗವೆಂದು ಅವರಿಗೆ ಮಾತ್ರ ಗೊತ್ತು.
ಭಗವದ್ಗೀತೆಯಿಂದ ಕೆಲವು ಸಂಗತಿಗಳನ್ನು ತಿಳಿಸುತ್ತೇನೆ. ಭಗವದ್ಗೀತೆಯು ಭಗವಾನ್ ಕೃಷ್ಣನು ಪ್ರಪಂಚಕ್ಕೆ ಕೊಟ್ಟ ಉಪದೇಶ.
ಭಗವದ್ಗೀತೆಯು ಆರಂಭವಾದಾಗ, ಅರ್ಜುನನು ಗೊಂದಲದಲ್ಲಿ ಇರುತ್ತಾನೆ.
ಅವನು ಹೇಳುತ್ತಾನೆ, “ಓ ದೇವರೇ, ನಾನು ಜೀವನದಲ್ಲಿ ಏನು ಮಾಡಬೇಕೆಂದು ಗೊತ್ತಿಲ್ಲ, ದಯವಿಟ್ಟು ನನಗೆ ದಾರಿ ತೋರಿಸು'' ಎಂದು.
ಕೃಷ್ಣನು ಅವನಿಗೆ ಆತ್ಮವನ್ನು ತಲುಪುವ ಮಾರ್ಗವಾದ ಸಾಂಖ್ಯ ಯೋಗವನ್ನು ವಿವರಿಸುತ್ತಾನೆ.
ನಂತರ ಕರ್ಮಯೋಗ, ತದನಂತರ ಭಕ್ತಿಯೋಗ, ತದನಂತರ ಕರ್ಮಸನ್ಯಾಸ ಯೋಗ, ನಂತರ ಜ್ಞಾನ ಕರ್ಮ ಸನ್ಯಾಸ ಯೋಗ, ನಂತರ ರಾಜಯೋಗ, ಹೀಗೆಯೇ ಅವನಿಗೆ ವಿವರಿಸುತ್ತಾನೆ. ಅವನಿಗೆ 18 ಅಧ್ಯಾಯಗಳಲ್ಲಿ 700 ಶ್ಲೋಕಗಳ ಮುಖಾಂತರ ಧ್ಯಾನದ ವಿವಿಧ ತಂತ್ರಗಳನ್ನು ವಿವರಿಸುತ್ತಾನೆ.
ಅದರ ಕೊನೆಯಲ್ಲಿ ಅರ್ಜುನನು ಹೇಳುತ್ತಾನೆ, “ಕೃಷ್ಣ, ನೀನು ವಿವರಿಸುವುದಕ್ಕಿಂತ ಮೊದಲು ಇದ್ದದ್ದಕ್ಕಿಂತಲೂ ಇನ್ನೂ ಹೆಚ್ಚು ಗೊಂದಲದಲ್ಲಿದ್ದೇನೆ. ಯಾವ ತಂತ್ರವನ್ನು ನಾನು ಅನುಸರಿಸಬೇಕು? ಯಾವ ತಂತ್ರವು ಹೆಚ್ಚು ಉತ್ತಮ ಮತ್ತು ಶೀಘ್ರವಾದದ್ದು? ಯಾವುದು ಸನಿಹದ ಮಾರ್ಗ - ಕಟ್ಟಕಡೆಯ ವಿಧಾನ?'' ಎಂದು.
ಕೃಷ್ಣನು ಕಟ್ಟಕಡೆಯ 18ನೇ ಅಧ್ಯಾಯದಲ್ಲಿ ಉತ್ತರಿಸುತ್ತಾನೆ.
ಯಾವುದೇ ಗುರುಗಳೊಡನೆ, ಅವರು ಮುಕ್ತಾಯ ಮಾಡುವ ಪದಗಳೇ ಆಖೈರಿನದಾಗಿದ್ದು, ದೃಢವಾಗಿದ್ದು ಮತ್ತು ಅಂತಿಮ ಸತ್ಯವಾಗಿರುತ್ತದೆ.
ಕೃಷ್ಣನು ಹೇಳುತ್ತಾನೆ:
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ॥ ಎಂದು.
ನಾವು ಎಲ್ಲಾ ಧರ್ಮಗಳನ್ನೂ, ತತ್ವಶಾಸ್ತ್ರಗಳನ್ನೂ ಮತ್ತು ಆಧ್ಯಾತ್ಮಿಕದ ಪುಸ್ತಕಗಳನ್ನೂ ಒಂದು ಮಡಕೆ ಹಾಲೆಂದು ಊಹಿಸಿದರೆ, ಅದರಿಂದ ತೆಗೆದಿರುವ ಬೆಣ್ಣೆಯಂತೆ ಇದೆ ಈ ಶ್ಲೋಕವು.
ಅವನು ಹೇಳುತ್ತಾನೆ "ನಾನು ನಿಮಗೆ ನ್ಯಾಯದ ಎಲ್ಲಾ ರೂಪಗಳನ್ನೂ ವಿವರಿಸಿದ್ದೇನೆ. ಸುಮ್ಮನೆ ಎಲ್ಲವನ್ನೂ ನನಗೆ ಒಪ್ಪಿಸಿಬಿಡಿ. ನನಗೆ ಶರಣಾಗತರಾಗಿರಿ, ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ. ನಿಮ್ಮನ್ನು ನಿಮ್ಮೆಲ್ಲ ಪಾಪಗಳಿಂದಲೂ ಬಿಡುಗಡೆ ಮಾಡಿ ಮುಕ್ತಿಗೆ ನಿಮ್ಮನ್ನು ಮೇಲೆತ್ತುತ್ತೇನೆ.''
ವಾಸ್ತವವಾಗಿ ಕೃಷ್ಣನು ಈ ಶ್ಲೋಕದಲ್ಲಿ ಒಂದು ಸುಂದರವಾದ ಪ್ರಮಾಣವನ್ನು ಮಾಡುತ್ತಿದ್ದಾನೆ.
ಈ ಶ್ಲೋಕದ ಮುಖಾಂತರ ಕೃಷ್ಣನು ಪ್ರಪಂಚಕ್ಕೆ ತೋರಿಸುವುದು ಏನೆಂದರೆ ಶರಣಾಗತಿಯು ಅಂತಿಮವಾದ ದೃಢವಾದ ಮತ್ತು ಕಟ್ಟಕಡೆಯ ತಂತ್ರ - ಅಹಂಭಾವರಹಿತ ಸ್ಥಿತಿಗೆ, ಮುಕ್ತಿಗೆ ಹತ್ತಿರದ ಮಾರ್ಗ ಎಂದು.
ಕೃಷ್ಣ ಮತ್ತು ಅರ್ಜುನರ ಬಗ್ಗೆ ಮತ್ತೊಂದು ಸುಂದರ ಕತೆ:
ಒಂದು ಸಂಜೆ ಭಗವಂತ ಕೃಷ್ಣ ಮತ್ತು ಅರ್ಜುನರು ಒಟ್ಟಿಗೆ ಸಮಯವನ್ನು ಕಳೆಯುತ್ತಿದ್ದರು.
ಇದ್ದಕ್ಕಿದ್ದಂತೆ ಕೃಷ್ಣನು ಒಂದು ಕಾಗೆಯತ್ತ ಬೆಟ್ಟುಮಾಡಿ "ಅರ್ಜುನ, ಆ ಹಸಿರು ಕಾಗೆಯನ್ನು ನೋಡು!'' ಎಂದು ಹೇಳಿದನು.
ಅರ್ಜುನನು ಆ ದಿಕ್ಕಿನಲ್ಲಿ ನೋಡುತ್ತಾ ಹೇಳಿದನು “ಹೌದು ಕೃಷ್ಣ, ನಾನು ನೋಡುತ್ತಿದ್ದೇನೆ!'' ಎಂದನು.
ಸ್ವಲ್ಪ ನಿಮಿಷಗಳ ನಂತರ, ಕೃಷ್ಣನು ಆಶ್ಚರ್ಯದಿಂದ ಹೇಳಿದನು, "ಅರ್ಜುನ, ಆ ಕಪ್ಪು ಕಾಗೆಯನ್ನು ನೋಡು!'' ಎಂದನು.
ಅರ್ಜುನನು ಹೇಳಿದನು "ಹೌದು ಕೃಷ್ಣ, ನಾನು ನೋಡುತ್ತಿದ್ದೇನೆ'' ಎಂದನು.
ಕೃಷ್ಣನು ಅರ್ಜುನನನ್ನು ಸುಮ್ಮನೆ ಪರೀಕ್ಷಿಸಲು ಕೇಳಿದನು, "ಅರ್ಜುನ, ಎಷ್ಟು ತಿಳಿಗೇಡಿ ನೀನು! ಹಸಿರು ಕಾಗೆ ಇರುವುದೇ ಇಲ್ಲ. ಮೊದಲಿಗೆ ಅದು ಹೇಗೆ ನೀನು ಅದನ್ನು ನೋಡಬಲ್ಲೆ?'' ಎಂದು.
ಖಚಿತ ಪರಿಹಾರಗಳು
ಅರ್ಜುನ ಉತ್ತರಿಸಿದನು "ಕೃಷ್ಣ, ನೀನು ಅದು ಹಸಿರು ಕಾಗೆ ಎಂದಾಗ, ನಾನು ಅದನ್ನು ಹಸಿರು ಕಾಗೆಯಂತೆ ನೋಡಿದೆನು" ಎಂದು.
ಅರ್ಜುನನ ಇಂದ್ರಿಯಗಳೆಲ್ಲವೂ ಕೃಷ್ಣನಿಗೆ ಶರಣಾಗತವಾಗಿದ್ದವು. ಇಂದ್ರಿಯ ಗಳನ್ನೆಲ್ಲಾ ಗುರುವಿಗೆ ಒಪ್ಪಿಸಿಬಿಡುವುದು ಎಲ್ಲದ್ದಕ್ಕಿಂತಲೂ ಕಷ್ಟವಾದ ಶರಣಾಗತಿ. ಗುರುವು ವಿಶ್ವಶಕ್ತಿಯೇ ಆಗಿರುತ್ತಾರೆ ಮತ್ತು ಅವರು ರೂಪರಹಿತ ರೂಪ. ಗುರುಗಳು ಹೇಳಿದ್ದನ್ನು ಮಾತ್ರವೇ ನಿಮ್ಮ ಇಂದ್ರಿಯಗಳು ಗ್ರಹಿಸಿದರೆ ನೀವು ಶರಣಾಗತಿಯ ಅತಿ ಎತ್ತರವಾದ ಬಿಂದುವನ್ನು ತಲುಪಿದಿರಿ.
ಶರಣಾಗತಿ ಎಂದರೆ ಏನು? ಶರಣಾಗತಿ ಎಂಬ ಪದಕ್ಕೆ ಒಂದು ಬಹಳ ಆಳವಾದ ಅರ್ಥವಿದೆ. ನಾವು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ, ನಾವು ಅದನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವೆವು. ನಾವು ಒಂದು ದಾರುಣವಾದ ತಪ್ಪನ್ನು ಮಾಡುತ್ತಿರುತ್ತೇವೆ. ನಾವು ಆಳವಾದ ಸತ್ಯವನ್ನು ತಪ್ಪಾಗಿ ಅರ್ಥಮಾಡಿ ಕೊಳ್ಳುತ್ತಿರುತ್ತೇವೆ.
ಒಂದು ಸಣ್ಣ ಕತೆ:
ಒಂದು ರಾತ್ರಿ, ಇಬ್ಬರು ಕುರುಡರು ಒಂದು ರಸ್ತೆಯಲ್ಲಿ ಹ್ಯಾಲೋಜೀನ್ ದೀಪವನ್ನು ದಾಟಿ ನಡೆಯುತ್ತಿದ್ದರು.
ಒಬ್ಬನು ಅದನ್ನು ನೋಡಿ ಆಶ್ಚರ್ಯದಿಂದ ಹೇಳಿದನು "ನೋಡು, ಸೂರ್ಯನು ನಮಗಾಗಿ ಕೆಳಗೆ ಬಂದಿದ್ದಾನೆ!" ಎಂದು.
ಇನ್ನೊಬ್ಬನು ಉತ್ತರಿಸಿದನು "ಇಲ್ಲ, ಇದು ರಾತ್ರಿ ಸಮಯ, ಅದು ಚಂದ್ರ" ಎಂದು.
ಮೊದಲನೆಯವನು ಮುಂದುವರಿಸಿದನು "ಅದು ಹಳದಿ ಬಣ್ಣದಲ್ಲಿದೆ, ಆದ್ದರಿಂದ ಅದು ಸೂರ್ಯ" ಎಂದು.
ಕುಡಿದಿದ್ದ ಮೂರನೆಯ ವ್ಯಕ್ತಿಯೊಬ್ಬ ಅವರನ್ನು ದಾಟಿಕೊಂಡು ಹೋಗುತ್ತಿದ್ದ. ಇವರು ಕೇಳಿದರು "ಸ್ವಾಮಿ ದಯವಿಟ್ಟು ಅದು ಸೂರ್ಯನೋ ಅಥವಾ ಚಂದ್ರನೋ ಹೇಳಿ" ಎಂದು.
ಆ ವ್ಯಕ್ತಿಯು ಉತ್ತರಿಸಿದನು "ನಾನು ಈ ಪ್ರಾಂತ್ಯಕ್ಕೆ ಹೊಸಬು; ನನಗೆ ಗೊತ್ತಿಲ್ಲ" ಎಂದು.
(ಜೋರಾದ ನಗೆ!).
ಆದ್ದರಿಂದ, ನೀವು ತಿಳಿದುಕೊಂಡಿಲ್ಲದ ಯಾರನ್ನಾದರೂ ಪ್ರಶ್ನಿಸಿದರೆ ನಿಮಗೆ ಉತ್ತರವು ದೊರೆಯದೇ ಇರಬಹುದು ಅಥವಾ ತಪ್ಪು ಉತ್ತರವು ದೊರೆಯಬಹುದು.
ಕೇವಲ ಅನುಭವ ಹೊಂದಿದವರು ಮಾತ್ರವೇ ಸ್ಪಷ್ಟವಾಗಿ ವಿವರಿಸಬಲ್ಲರು. ನೀವು ಶರಣಾಗತಿಯ ಅರ್ಥವನ್ನು ಯಾರಾದರೂ ಅನುಭವ ಹೊಂದಿಲ್ಲದವರನ್ನು ಕೇಳಿದರೆ ಅವರು ಹೇಳುವರು “ಸುಮ್ಮನೆ ಎಲ್ಲವನ್ನೂ ದೇವರಿಗೆ ಬಿಟ್ಟುಬಿಡು'' ಎಂದು.
ಅದು ಶರಣಾಗತಿಯಲ್ಲ.
ಒಬ್ಬ ವ್ಯಕ್ತಿಯು ನನ್ನ ಬಳಿ ಬಂದು ಕೇಳಿದನು, “ನಾನು ಎಲ್ಲವನ್ನೂ ದೇವರಿಗೆ ಒಪ್ಪಿಸಿಬಿಟ್ಟರೆ, ಎಲ್ಲವೂ ಸರಿಹೋಗುತ್ತದೆಯೇ?'' ಎಂದು.
ನಾನು ಉತ್ತರಿಸಿದೆ, “ಹೌದು, ನಿಜವಾಗಿಯೂ ಎಲ್ಲವನ್ನೂ ನೀವು ದೇವರಿಗೆ ಒಪ್ಪಿಸಿದರೆ, ಎಲ್ಲವೂ ಸರಿಹೋಗುತ್ತದೆ'' ಎಂದು.
ಮೂರು ದಿನಗಳ ನಂತರ ಅವನು ನನ್ನ ಬಳಿ ಬಂದು “ಸ್ವಾಮೀಜಿ, ನಾನು ಎಲ್ಲವನ್ನೂ ದೇವರಿಗೆ ಒಪ್ಪಿಸಿದೆ'' ಎಂದು.
ನನಗೆ ಬಹಳ ಸಂತೋಷವಾಯಿತು, ಮತ್ತು ಕೇಳಿದೆನು “ಈಗ ಎಲ್ಲಿಗೆ ಹೋಗುತ್ತಿದ್ದೀಯ?'' ಎಂದು.
ಅವನು ಉತ್ತರಿಸಿದನು “ಬಾರಿಗೆ'' ಎಂದು.
ಅವನು ಮುಂದುವರಿಸಿದನು “ಇನ್ನು ಮೇಲೆ ನಾನು ಏನೇ ಮಾಡಿದರೂ, ದೇವರು ಅದಕ್ಕೆ ಜವಾಬ್ದಾರ'' ಎಂದು.
ವಾಸ್ತವವಾಗಿ ಇದು ಅವರನ್ನೇ ಅವರು ಮೂರ್ಖರನ್ನಾಗಿಸಿಕೊಳ್ಳುವುದು. ಆ ವ್ಯಕ್ತಿಯು ನಿಜವಾಗಿಯೂ ಶರಣಾಗತನಾಗಿದ್ದರೆ, ಅವನು ಕುಡಿಯುವ ಅಭ್ಯಾಸವನ್ನೂ ಕೂಡ ದೇವರಿಗೆ ಒಪ್ಪಿಸಿಬಿಡಬೇಕಾಗಿತ್ತು. ಅವನಿಗೆ ಇನ್ನೂ ಹೆಚ್ಚು ಕುಡಿಯಲು ಸಾಧ್ಯವಾಗುತ್ತಿರಲಿಲ್ಲ.
ರಾಮಕೃಷ್ಣರು ಸುಂದರವಾಗಿ ಹೇಳುತ್ತಾರೆ “ನಿಜವಾದ ಶರಣಾಗತಿಯು ನಿಮ್ಮ ಹೃದಯದಿಂದ ಬಂದರೆ, ದೇವರು ನಿಮ್ಮನ್ನು ಜೀವನದ ಪ್ರತಿ ಹೆಜ್ಜೆಯಲ್ಲಿಯೂ ದಾರಿ ತೋರಿಸುತ್ತಾನೆ ಮತ್ತು ನೀವು ತಪ್ಪನ್ನು ಮಾಡಲು ಆಗುವುದೇ ಇಲ್ಲ'' ಎಂದು.
ಶರಣಾಗತಿಯು ನಿಮ್ಮೊಳಗಿನಿಂದ ಅರಳದಿದ್ದರೆ ಮತ್ತು ಕೇವಲ ತುಟಿಗಳ ಮಟ್ಟದಲ್ಲಿದ್ದರೆ, ನೀವು ನಿಮ್ಮನ್ನೂ ಮತ್ತು ಮಿಕ್ಕವರನ್ನೂ ಮೂರ್ಖರನ್ನಾಗಿ ಮಾಡುತ್ತೀರ.
ಶರಣಾಗತಿಯು ನಿಮ್ಮನ್ನು ಸದಾಕಾಲವೂ ವಿಶ್ವಶಕ್ತಿಯ ಬಗ್ಗೆ ಚಿಂತಿಸುತ್ತಿರುವಂತೆ ಮಾಡುತ್ತದೆ. ನಿಧಾನವಾಗಿ ನೀವು ನಿಮ್ಮ ಗುರುತಾದ ನಿಮ್ಮ ಅಹಂಭಾವವನ್ನು ಕಳೆದುಕೊಳ್ಳುತ್ತೀರ. ಭಾಗವತದಲ್ಲಿ ಒಂದು ಶ್ಲೋಕವಿದೆ. ಅದರಲ್ಲಿ ಒಬ್ಬ ಗೋಪಿಯು ತನ್ನ ಬಗ್ಗೆ ಹೇಳುತ್ತಾನೆ “ನಾನು ಕೃಷ್ಣನನ್ನು ಬಿಟ್ಟು ಬೇರೆ ಯಾವುದನ್ನೂ ತಿಳಿಯಲು ಆಗುತ್ತಿಲ್ಲ. ನನ್ನ ಮನಸ್ಸನ್ನು ಅವನಿಗೆ ಒಪ್ಪಿಸಿದ್ದೇನೆ. ನಾನು ಬೇರೆ ಯಾವುದನ್ನಾದರೂ ಯೋಚಿಸಬೇಕಾದರೆ ನಾನು ನನ್ನ ಮನಸ್ಸನ್ನು ಅವನಿಂದ ಹಿಂದೆ ಪಡೆಯಬೇಕು; ಇದು ಹೇಗೆ ಸಾಧ್ಯ?'' ಎಂದು.
ರಾಮಕೃಷ್ಣರು ತಮ್ಮ ಕೊನೆಯ ದಿನಗಳಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರು ಬಹಳ ಜನರ ಹಲವಾರು ಕಾಯಿಲೆಗಳನ್ನು ವಾಸಿ ಮಾಡಿದ್ದರು.
ಯಾರೋ ಒಬ್ಬರು ಕೇಳಿದರು “ನೀವೇಕೆ ನಿಮ್ಮ ಮನಸ್ಸನ್ನು ನಿಮ್ಮ ಸ್ವಂತ ಕಾಯಿಲೆಯ ಮೇಲೆ ಒಂದು ಕ್ಷಣ ನೆಲೆಗೊಳಿಸಿ ಅದನ್ನು ವಾಸಿ ಮಾಡಬಾರದು?'' ಎಂದು.
ಅವರು ಉತ್ತರಿಸಿದರು “ನಾನು ನನ್ನ ಮನಸ್ಸನ್ನು ಅನಂತ ಚೇತನಕ್ಕೆ ಒಪ್ಪಿಸಿದ್ದೇನೆ. ನನ್ನ ಕಾಯಿಲೆಯ ಮೇಲೆ ಇಡಲು ಅದನ್ನು ಹೇಗೆ ಮರಳಿ ತೆಗೆದುಕೊಳ್ಳಲಿ?'' ಎಂದು. ಇದೇ ನಿಜವಾದ ಶರಣಾಗತಿ.
ವಿಶ್ವ ಚೈತನ್ಯವು ನಮ್ಮನ್ನು ಲಕ್ಷಿಸುತ್ತದೆ. ನೀವು ಕೇಳಿರಬಹುದು, “ಈ ವಿಶ್ವ ಚೈತನ್ಯವು ನಮ್ಮದೆಲ್ಲವನ್ನೂ ಒಪ್ಪಿಸಿದರೆ, ನಮ್ಮ ಸಮಸ್ಯೆಗಳನ್ನು ಲಕ್ಷಿಸುತ್ತದೆಯೇ?'' ಎಂದು. ಭಗವದ್ಗೀತೆಯಲ್ಲಿ ಕೃಷ್ಣನು ಸುಂದರವಾಗಿ ಉತ್ತರಿಸುತ್ತಾನೆ ಅಥವಾ ವಾಗ್ದಾನ ಮಾಡುತ್ತಾನೆ, “ಬೇರೆ ಏನೂ ಯೋಚನೆ ಇಲ್ಲದೆ ಯಾವ ಒಬ್ಬ ಮನುಷ್ಯನು ಕೇವಲ ನನ್ನನ್ನು ಮಾತ್ರ ಕುರಿತು ಯೋಚಿಸುತ್ತಾನೋ, ನಾನು ಅವನ ಅಪೇಕ್ಷೆಗಳನ್ನೂ, ಅವುಗಳನ್ನು ಉಳಿಸಿಕೊಳ್ಳುವುದನ್ನೂ ಮತ್ತು ಅನುಭವಿಸುವುದನ್ನೂ ಲಕ್ಷಿಸುತ್ತೇನೆ. ಯಾರು ನನಗೆ ಬದ್ಧರಾಗಿ ಶರಣಾಗತರಾಗುತ್ತಾರೋ, ನಾನು ಅವರ ವರಮಾನ ಮತ್ತು ಏಳಿಗೆಯನ್ನು ಲಕ್ಷಿಸುತ್ತೇನೆ. ಅವರ ಸಮಸ್ಯೆಗಳು ಕರಗಿ ಹೋಗುತ್ತವೆ'' ಎಂದು.
ಮನಸ್ಸಿನ ಬದ್ಧತೆ ಮತ್ತು ಪಕ್ವತೆ ನಿಜವಾದ ಶರಣಾಗತಿಯ ಆಗಲು ಬೇಕು. ನೀವು ದೇವರಿಗಾಗಲೀ ಅಥವಾ ಗುರುವಿಗಾಗಲೀ ಶರಣಾಗತರಾಗಬೇಕಿಲ್ಲ. ನೀವು ಯಾವುದಕ್ಕೆ ಬೇಕಾದರೂ ಶರಣಾಗತರಾಗಬಹುದು. ಶರಣಾಗತಿ ಎಂಬುದೇ ಒಂದು ಉತ್ತಮ ಗುಣ ಮತ್ತು ಅದರೊಳಗೇ ಅಗಾಧ ಶಕ್ತಿಯಿದೆ. ನೀವು ಶರಣಾಗತರಾದೆ, ನೀವು ನಿಮ್ಮ ಅಹಂಭಾವಕ್ಕಿಂತಲೂ ಹೆಚ್ಚಿನ ಜೀವಬಲ ಎಂಬುದು ಇದೆಯೆಂದು ಅಂಗೀಕರಿಸುತ್ತೀರ ಅಷ್ಟೆ.
ವಾಸ್ತವವಾಗಿ ದೇವರು ಎನ್ನುವುದು ನೀವು ಶರಣಾಗುವುದಕ್ಕೆ ಒಂದು ನೆಪ ಮಾತ್ರ. ನೀವು ಶರಣಾಗತಿಯಾಗುವ ಕ್ರಿಯೆಯೇ ಮುಖ್ಯವಾದದ್ದು. ದೇವರು ಗುರಿಯಲ್ಲ, ಶರಣಾಗತಿಯೇ ನಿಜವಾದ ಗುರಿ. ನೀವು ಶರಣಾಗತಿಯಾದಾಗ, ಅಥವಾ ನೀವು ನಿಮ್ಮ ಅಹಂಭಾವವನ್ನು ಕಳೆದುಕೊಂಡರೆ, ನೀವು ವಿಶ್ವಶಕ್ತಿಯಿಂದ ಬೇರೇನೂ ಅಲ್ಲ; ನೀವು ಪ್ರಪಂಚ ಶಕ್ತಿಯೊಂದಿಗೆ ಅಥವಾ ದೇವರೊಂದಿಗೆ ಐಕ್ಯವಾಗುತ್ತೀರ. ಆಗ ನಿಮಗೆ ದೇವರೆಂಬುವನು ಮೇಲೆಲ್ಲೋ ಕುಳಿತಿರುವವನಲ್ಲ, ಕೇವಲ ವಿಶ್ವಶಕ್ತಿಯೊಂದೇ ನೀವು ಒಂದು ಭಾಗವಾಗಿರುವ ಈ ಜಗತ್ತಿನಲ್ಲಿ ಎಲ್ಲವನ್ನೂ ಆವರಿಸಿರುತ್ತದೆ.
ಒಂದು ಚಿಕ್ಕ ಕಥೆ:
ಒಬ್ಬ ವ್ಯಕ್ತಿಯು ಶರಣಾಗತನಾಗಲು ನಿರ್ಧರಿಸಿದನು, ಆದರೆ ಅವನಿಗೆ ಯಾರಿಗೆ ಶರಣಾಗತನಾಗಬೇಕೆಂದು ಗೊತ್ತಿರುವುದಿಲ್ಲ.
ಅವನು ಕಾಡಿಗೆ ಹೋಗಿ ಯಾವ ವ್ಯಕ್ತಿಯು ಮೊದಲು ಅವನ ದಾರಿಯಲ್ಲಿ ಬರುತ್ತಾನೋ ಅವನಿಗೆ ಶರಣಾಗತನಾಗಲು ನಿರ್ಧರಿಸಿದನು.
ಅವನು ಕಾಡಿಗೆ ಹೋಗಿ ಕಾಯುತ್ತಾ ಇದ್ದನು.
ಕಾಣಿಸಿಕೊಂಡ ಮೊದಲನೆಯ ವ್ಯಕ್ತಿಯು ಒಬ್ಬ ಕಳ್ಳನಾಗಿದ್ದು ಅವನು ಅಟ್ಟಿಸಿಕೊಂಡು ಬರುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಬರುತ್ತಿದ್ದ.
ಆ ಮನುಷ್ಯನು ಕಳ್ಳನ ಕಾಲುಗಳನ್ನು ಹಿಡಿದುಕೊಂಡು ಆ ಕಳ್ಳನೇ ತನ್ನ ಗುರುವೆಂದೂ ಮತ್ತು ಅವನಿಗೆ ಶರಣಾಗತನಾಗಿರುವುದಾಗಿ ಪ್ರಕಟಿಸಿದನು.
ಕಳ್ಳನು ಬೆರಗುಗೊಂಡನು ಮತ್ತು ಅವನಿಗೆ ಏನು ಮಾಡಬೇಕೆಂದು ತೋಚಲಿಲ್ಲ.
ಅವನು ಆತುರದಿಂದ ಉತ್ತರಿಸಿದನು, 'ಸರಿ, ಹಾಗಾದರೆ, ನಿನ್ನ ಕಣ್ಣುಗಳನ್ನು ಮುಚ್ಚಿಕೊಂಡು ನಾನು ಹಿಂತಿರುಗಿ ಬರುವವರೆಗೂ ಇಲ್ಲಿಯೇ ಇರು' ಎಂದು ಹೇಳಿ ಓಡಿಹೋದನು.
ಆ ಮನುಷ್ಯನು ತುಂಬಾ ಬದ್ಧ ವ್ಯಕ್ತಿಯಾಗಿದ್ದನು ಮತ್ತು ನಿದ್ರಾಹಾರಗಳಿಲ್ಲದೆ ಬಹಳ ಹೊತ್ತು ಹಾಗೆಯೇ ಇದ್ದನು.
ಅವನ ಬದ್ಧತೆಯನ್ನು ನೋಡಿ ದೇವರು ಅವನ ಮುಂದೆ ಪ್ರತ್ಯಕ್ಷನಾಗಿ ಅವನನ್ನು ಆಲಂಗಿಸಿಕೊಂಡನು ಮತ್ತು ಅವನಿಗೆ ಮುಕ್ತಿಯನ್ನು ಕೊಟ್ಟನು.
ನೀವು ಯಾರಿಗೆ ಶರಣಾಗತರಾಗುವಿರೆಂಬುದು ಮುಖ್ಯವಲ್ಲ; ಪೂರ್ಣ ಶರಣಾಗತಿಯ ಆಲೋಚನೆಯೇ ನಿಮ್ಮ ಬದುಕನ್ನು ಪರಮ ಸುಖವನ್ನಾಗಿಸುವ ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ನೀವು ಶರಣಾಗತರಾದರೆ, ನೀವು ಅಕ್ಷಯ ಚೈತನ್ಯ ಅಂದರೆ ಪ್ರಪಂಚ ಶಕ್ತಿಯನ್ನು ಹೊಂದಿದವರಾಗುತ್ತೀರಿ. ನೀವು ನಿಮ್ಮ ದಾರಿಯಲ್ಲಿ ಬರುವ ಯಾವುದರ ಜೊತೆಯಲ್ಲಾದರೂ ಮುಂದುವರಿಯಬಲ್ಲಿರಿ.
ನೀವು ಬಲಿಷ್ಠರಾಗುವಿರಿ ಮತ್ತು ಏನೇ ಬರಲಿ ಅಲುಗಾಡಿಸಲಾಗದವರಾಗುವಿರಿ. ನಿಮ್ಮ ಸುತ್ತಲಿನ ಜನರು ನೀವೊಬ್ಬ ಶಕ್ತಿಯ ಸ್ತಂಭದಂತೆ ಕಾಣುತ್ತಾರೆ. ನಿಮ್ಮೊಳಗಿನ ಪ್ರಪಂಚ ಶಕ್ತಿಯ ಕಾಣದ ಕೈಯನ್ನು ಅವರು ಅನುಭವಿಸಬಲ್ಲರು. ನೀವು ಶರಣಾಗತರಾಗದಿದ್ದರೆ, ಅದರ ಅರ್ಥ ನಿಮ್ಮ ಅಹಂಭಾವವು ನಿಮ್ಮನ್ನು ಆನಂತದೊಂದಿಗೆ ಐಕ್ಯವಾಗದಂತೆ ಹಿಡಿದಿಟ್ಟುಕೊಂಡಿದೆ ಮತ್ತು ತನ್ನಷ್ಟಕ್ಕೇ ನೀವು ನಿಮ್ಮ ಚೈತನ್ಯದ ಸಂಪನ್ಮೂಲದಲ್ಲಿ ಮಿತಿಯುಳ್ಳವರಾಗುತ್ತೀರಿ.
ಒಬ್ಬ ಗುರುವು ನೀವು ಶರಣಾಗತರಾಗಲು ಸಹಾಯ ಮಾಡುವ ಸಾಧನ. ಶರಣಾಗತಿ ಎಂದರೆ ನೀವು ಯಾರೊಬ್ಬರ ಮೇಲೆ ಅವಲಂಬಿತರೆಂದಲ್ಲ, ಅದು ಸರಳವಾಗಿ ಅರ್ಥೈಸುವುದು ನೀವು ಅವರ ಸಹಾಯವನ್ನು ನಿಮ್ಮ ಅಹಂಭಾವವನ್ನು ಕರಗಿಸಲು ತೆಗೆದುಕೊಳ್ಳುತ್ತಿದ್ದೀರ ಎಂದು.
ಹ್ಯಾ..?
ಸ್ವಾಮೀಜಿ, ದಯವಿಟ್ಟು ನಮಗೆ ಧ್ಯಾನದ ಬಗ್ಗೆ ಇನ್ನಷ್ಟು ಮತ್ತು ಅದು ಹೇಗೆ ನಮ್ಮ ಅಹಂಭಾವವನ್ನು ಕಳೆದುಕೊಳ್ಳುವಂತೆ ಸಹಾಯ ಮಾಡುತ್ತದೆ ಎಂದು ಹೇಳಿ.
ಸರಿ... ಮೊದಲು ನಿಮಗೆ ಹೇಳುತ್ತೇನೆ, ಧ್ಯಾನ ತಂತ್ರವು ಹೇಗೆ ಮತ್ತು ಏಕೆ ಬಂದಿತು ಎಂದು.
ಮನುಷ್ಯನು ತನ್ನ ಸೃಷ್ಟಿಯಾರಭ್ಯ ಯಾವುದು ಈ ಸುಂದರ ಜಗತ್ತನ್ನು ಸೃಷ್ಟಿಸಿದ್ದು, ಯಾವುದು ಈ ಭೂಮಿಯನ್ನು ಸೃಷ್ಟಿಸಿ ಅಂತರಿಕ್ಷದಲ್ಲಿ ಉರುಳಿಸಿದ್ದು, ಯಾವುದು ನದಿಯನ್ನು ಹರಿಯುವಂತೆಯೂ ಮತ್ತು ಪರ್ವತಗಳನ್ನು ಬೆಳೆಯುವಂತೆಯೂ ಮಾಡುತ್ತಿರುವುದು ಎಂದು ಆಶ್ಚರ್ಯಪಡುತ್ತಲೂ ಮತ್ತು ಸಂಶೋಧಿಸುತ್ತಲೂ ಇರುವನು. ಅವನು ಇವೆಲ್ಲವೂ ನಡೆಯಲು ಒಂದು ಬಲ ಅಥವಾ ಚೈತನ್ಯವು ಇದೆಯೆಂದು ತೀರ್ಮಾನಿಸಿದನು. ಈ ಎಲ್ಲಾ ಪ್ರದರ್ಶನವನ್ನೂ ನಡೆಸಲು ಒಂದು ಪ್ರಚಂಡ ಅಸ್ತಿತ್ವ ಚೈತನ್ಯವು ಇರುವುದೆಂದು ತೀರ್ಮಾನಕ್ಕೆ ಬಂದನು. ನಂತರ ಅವನು ಈ ಚೈತನ್ಯದೊಂದಿಗೆ ಸಂಬಂಧವನ್ನು ಹೇಗೆ ಸ್ಥಾಪಿಸಬೇಕೆಂದು ತಿಳಿಯಲು ಆತುರ ಪಡಲಾರಂಭಿಸಿದನು.
ಈ ತೀರ್ಮಾನ ಮಾಡಿ, ಅದರ ಮೇಲೆ ಸಂಶೋಧನೆ ನಡೆಸಿ ಮತ್ತು ಆ ಚೈತನ್ಯದೊಂದಿಗೆ ಸಂಬಂಧವನ್ನು ಸ್ಥಾಪಿಸಿದ ಮೊಟ್ಟಮೊದಲ ಜನರು ಋಷಿಗಳು ಅಥವಾ ಸಾಕ್ಷಾತ್ಕಾರ ಹೊಂದಿದ ಜೀವಾತ್ಮಗಳು ಅಥವಾ ಜ್ಞಾನೋದಯ ಹೊಂದಿದ ಗುರುಗಳು. ಅವರಲ್ಲಿ ಪ್ರತಿಯೊಬ್ಬರೂ ಕೊಟ್ಟ ದಾರಿಗಳೇ ಧ್ಯಾನದ ವಿವಿಧ ತಂತ್ರಗಳು ಮತ್ತು ಮತಗಳು.
ಅವರಲ್ಲಿ ಪ್ರತಿಯೊಬ್ಬರೂ ದೇವರನ್ನು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ತಂತ್ರಗಳಿಂದ ಸಾಕ್ಷಾತ್ಕರಿಸಿಕೊಂಡರು ಮತ್ತು ತಮ್ಮ ವಿಧಾನಗಳನ್ನು ಸ್ವತಂತ್ರವಾಗಿ ದಾಖಲು ಮಾಡಿದರು. ಇದು ಹೇಗೆ ವಿಜ್ಞಾನಿಗಳು ತಮ್ಮ ಸಂಶೋಧನೆಗಳ ಮತ್ತು ಕಲ್ಪನೆಗಳ ಮೇಲೆ ಸಂಶೋಧನಾ ವರದಿಯನ್ನು ಸೃಷ್ಟಿಸುತ್ತಾರೋ, ಹಾಗೆಯೇ ಇದೆ. ಪ್ರತಿಯೊಬ್ಬ ಋಷಿಯು ತನ್ನ ಜ್ಞಾನೋದಯದ ಬಗ್ಗೆ ಒಂದು ವರದಿಯನ್ನು ಕೊಟ್ಟನು ಮತ್ತು ಇದು ಒಂದು ಮತ ಅಥವಾ ಒಂದು ಧ್ಯಾನ ತಂತ್ರವಾಯಿತು.
ಈ ಮೊದಲ ಸಾಕ್ಷಾತ್ಕಾರ ಹೊಂದಿದ ಜೀವಾತ್ಮಗಳು, ಈ ಪ್ರಪಂಚವನ್ನು ನಡೆಸುತ್ತಿರುವ ಜೀವ ಬಲ (Life Force) ಮೇಲಿನ ಕಲ್ಪನೆಯನ್ನು ಸ್ಥಾಪಿಸಲು ವಿವಿಧ ಮತಗಳನ್ನು ರೂಪಿಸಿದರು. ನಾವು ಈ ಜೀವ ಬಲವನ್ನು ಜೀಸಸ್, ಅಲ್ಲಾ, ಶಿವ ಎಂದು ಮುಂತಾಗಿ ಕರೆಯುತ್ತೇವೆ. ನೀವು ಯಾವುದೇ ದೇವರನ್ನೂ ಕೂಡ ನಂಬಬೇಕಾಗಿಲ್ಲ. ನಾಸ್ತಿಕರು ಯಾವುದೇ ದೇವರನ್ನು ನಂಬುವುದಿಲ್ಲ. ಆದರೆ ಅವರು ತಮ್ಮ ಅಸ್ತಿತ್ವವನ್ನು ನಂಬಬೇಕಲ್ಲವೇ? ಆದರೆ ನಾವು ನಮ್ಮ ಅಸ್ತಿತ್ವವನ್ನು ನಂಬುವುದಾದರೆ ಮತ್ತು "ನಾನು ಯಾರು?" ಎಂಬ ಪ್ರಶ್ನೆಗೆ ಉತ್ತರವನ್ನು
ಹುಡುಕಲಾರಂಭಿಸಿದರೆ, ಅದು ಒಂದು ಧ್ಯಾನದ ತಂತ್ರವಾಗುತ್ತದೆ ಮತ್ತು ನಾವು ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬಹುದು. ಹೇಗೆ ಇರಲಿ, ಈ ವಿವಿಧ ದಾರಿಗಳು ಅಥವಾ ಧ್ಯಾನ ತಂತ್ರಗಳು ಕಾಲಕ್ರಮೇಣ ವಿವಿಧ ಧ್ಯಾನ ತಂತ್ರಗಳಾದವು.
ಆದರೆ ನಂತರ ಏನಾಯಿತು? ಜನರು ಈ ಮತಗಳ ಹಿಂದಿರುವ ಮೂಲ ಕಲ್ಪನೆಯನ್ನು ಹಿಂದೆ ಬಿಟ್ಟು, ಮತದ ಹೆಸರಿನಲ್ಲಿ ಕಚ್ಚಾಡಲು ಪ್ರಾರಂಭಿಸಿದರು. ಒಂದು ಚಿಕ್ಕ ಕಥೆ:
ಒಬ್ಬ ತಮಿಳಿನವ, ಒಬ್ಬ ಇಂಗ್ಲೀಷ್ನವ, ಒಬ್ಬ ಉತ್ತರ ಭಾರತದವ ಮತ್ತೊಬ್ಬ ಬೆಂಗಾಲಿ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದರು;
ಅವರು ದೂರದಿಂದ ಒಂದು ಕೊಳವನ್ನು ನೋಡಿದರು.
ತಮಿಳಿನವನು ಅದನ್ನು ದಕ್ಷಿಣ ಕಡೆಯಿಂದ ನೋಡಿ “ತಣ್ಣೀರ್” ಎಂದು ಕರೆದನು (ತಮಿಳಿನಲ್ಲಿ ನೀರಿಗೆ ಹಾಗೆ ಕರೆಯುವರು)
ಇಂಗ್ಲೀಷ್ನವನು ಅದನ್ನು ಪಶ್ಚಿಮದ ಕಡೆಯಿಂದ ನೋಡಿ “ವಾಟರ್” ಎಂದನು.
ಉತ್ತರ ಭಾರತದವನು ಅದನ್ನು ಉತ್ತರದ ಕಡೆಯಿಂದ ನೋಡಿ “ಪಾನಿ” ಎಂದನು.
ಬಂಗಾಳದವನು ಅದನ್ನು ಪೂರ್ವದ ಕಡೆಯಿಂದ ನೋಡಿ “ಜಲ್” ಎಂದನು.
ಎಲ್ಲರೂ “ವಾಟರ್” ಎನ್ನುವ ವಸ್ತುವನ್ನು ಕುರಿತೇ ಹೇಳುತ್ತಿದ್ದರು.
ಅವರು ತಾವು ಹೇಳಿದ್ದೇ ಸರಿ ಎಂದು ಹೇಳುತ್ತಾ ಕಚ್ಚಾಡಲು ಪ್ರಾರಂಭಿಸಿದರು. ಆ ನಾಲ್ಕೂ ಜನರಲ್ಲಿ ಯಾರೊಬ್ಬರೂ ಕೊಳದೊಳಕ್ಕೆ ಇಳಿದು ಅದು ಏನು ಎಂದು ನಿಖರವಾಗಿ ನೋಡಲು ಪ್ರಯತ್ನಿಸಲಿಲ್ಲ.
ತಮಿಳಿನವನು ತನ್ನ ತಾತನು ಅವನಿಗೆ ಹೇಳಿದ್ದನ್ನೇ ಹಿಡಿದುಕೊಂಡಿದ್ದನು, ಇಂಗ್ಲೀಷ್ನವನು ತನ್ನ ತಾತನು ಅದನ್ನು “ವಾಟರ್” ಎಂದು ಅವನಿಗೆ ಹೇಳಿದ್ದಾನೆಂದು ಸಾಧಿಸಿದನು, ಉತ್ತರ ಭಾರತದವನು ಮತ್ತು ಬೆಂಗಾಲಿಯು ತಮ್ಮ ತಮ್ಮ ತಾತಂದಿರು ಹೇಳಿದ್ದಕ್ಕೇ ಅಂಟಿಕೊಂಡಿದ್ದರು.
ಇದನ್ನೇ ನಾವು ಕೂಡ ಮಾಡುತ್ತಿರುವುದು. ಮತಗಳಿಗಾಗಿ ಕಾದಾಡುವ ಜನರು ಇದನ್ನೇ ಮಾಡುತ್ತಿರುವುದು.
ಅವರು ಅರ್ಥ ಮಾಡಿಕೊಳ್ಳಬೇಕಾಗಿರುವುದು ಹಿಂದಿನ ಸಾಕ್ಷಾತ್ಕಾರ ಹೊಂದಿದ ಜೀವಾತ್ಮವು ಯಾವ ದೃಷ್ಟಿಕೋನದಿಂದ ನೋಡಿತೋ, ಅದೇ ಕೋನದಿಂದ ಅದನ್ನು ಹೆಸರಿಸಿದ್ದೂದಾಗಿಯೂ, ಆದರೆ ಎಲ್ಲವೂ ಒಂದೇ, ಎಂದರೆ ಅಸ್ತಿತ್ವ ಅಥವಾ ದೇವರು ಎಂದು.
ಕೊಳದೊಳಕ್ಕೆ ಹೋಗದೆ, ಈ ನಾಲ್ಕೂ ಜನರು ತಮ್ಮ ತಾತಂದಿರುಗಳು ಹೇಳಿದ್ದರ ಬಗ್ಗೆಯೇ ವಾದ ಮಾಡುತ್ತಿದ್ದರು! ಏನಾಗುತ್ತದೆ? ಅವರು ಜಗಳವನ್ನು ಮಾತ್ರ ಆಡುತ್ತಾರೆ, ಏಕೆಂದರೆ ಪ್ರತಿಯೊಬ್ಬರೂ ತಮ್ಮ ತಾತಂದಿರು ಹೇಳಿದ್ದೇ ಸರಿ ಎಂದು ಭಾವಿಸಿರುವುದರಿಂದ. ತಮ್ಮ ತಾತಂದಿರು ಹೇಳಿದ್ದನ್ನು ಪಕ್ಕಕ್ಕೆ ಇಟ್ಟು ಅದೇನೆಂದು ತಿಳಿದುಕೊಳ್ಳಲು ತಾವೇ ಕೊಳದೊಳಕ್ಕೆ ಇಳಿದಿದ್ದರೆ, ಅವರಿಗೆ ತಮ್ಮ ತಾತಂದಿರುಗಳೆಲ್ಲಾ ಅರ್ಥೈಸಿದ್ದು ಒಂದೇ ಎಂದು ತಿಳಿಯುತ್ತಿತ್ತು! ಆಗ ಜಗಳವೇ ಇರುತ್ತಿರಲಿಲ್ಲ.
ಈ ದಿನ ಆ ಕೊಳದೊಳಕ್ಕೆ ಇಳಿಯದೆ ಕೇವಲ ಬಾಯಿ ತುಂಬ ನೀರನ್ನು ತೆಗೆದುಕೊಂಡವರು ಜಗಳವಾಡುತ್ತಿದ್ದಾರೆ. ಮತ ಮತ್ತು ಜಾತಿಯ ಹೆಸರಿನಲ್ಲಿ ಭಯೋತ್ಪಾದನೆಯನ್ನು ಹರಡುತ್ತಿರುವವರು ಆಧ್ಯಾತ್ಮಿಕತೆಯೆಂಬ ಕೊಳದೊಳಕ್ಕೆ ಇಳಿದು ಸತ್ಯವೆಂಬ ನೀರನ್ನು ಕುಡಿಯದೇ ಇರುವ ಜನರು. ಜಗಳವಾಡುತ್ತಿರುವ ಈ ನಾಲ್ವರಂತೆ ಸುಮ್ಮನೆ ಕೊಳದ ದಡದ ಮೇಲೆ ನಿಂತು ಜಗಳವಾಡುತ್ತಿರುವವರು! ಆದುದರಿಂದ ಸತ್ಯವನ್ನು ವಿವಿಧ ರೂಪಗಳಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ತಿಳಿಯಿರಿ ಅಷ್ಟೆ.
ಧ್ಯಾನದ ಬಗ್ಗೆ ಹಿಂತಿರುಗೋಣ. ಸುಮ್ಮನೆ ಇದ್ದುಬಿಡಿ, ಧ್ಯಾನವು ನಿಮ್ಮ ಮನಸ್ಸನ್ನು ವಿರಮಿಸಲು ಅನುವು ಮಾಡುತ್ತಿದೆ ಅಷ್ಟೆ. ಜನಗಳು ಅಂದುಕೊಂಡಿರುವಂತೆ ಧ್ಯಾನವೆಂದರೆ ಏಕಾಗ್ರತೆ ಎಂದಲ್ಲ. ನೀವು ಏಕಾಗ್ರತೆಯಲ್ಲಿರುವಾಗ, ವಾಸ್ತವವಾಗಿ ನೀವು ನಿಮ್ಮ ಮನಸ್ಸಿನಿಂದ ಎಲ್ಲವನ್ನೂ ಹೊರಗಿಡಲು ಪ್ರಯತ್ನಿಸುತ್ತೀರ ಮತ್ತು ಇದು ಒಂದು ಅಸಾಧ್ಯದ ಕೆಲಸ.
ಕೇವಲ ಎರಡು ನಿಮಿಷಗಳ ಕಾಲ ಕುಳಿತುಕೊಂಡು ನಿಮ್ಮ ಮನಸ್ಸಿನಿಂದ ಎಲ್ಲವನ್ನೂ ಹೊರಗಿಡಲು ಪ್ರಯತ್ನಿಸಿ. ನೀವು ಹುಚ್ಚರಾಗುತ್ತೀರಿ! ನೀವು ಹೊರಗಿಡಲು ಪ್ರಯತ್ನಿಸುತ್ತಿರುವ ಪ್ರತಿಯೊಂದು ಸಂಗತಿಯೂ ಹಿಂತಿರುಗಿ ಬಂದು ನಿಮ್ಮನ್ನು ಹಿಂಸಿಸುತ್ತದೆ. ಆದುದರಿಂದ ಏಕಾಗ್ರತೆ ಎನ್ನುವುದು ಧ್ಯಾನವಲ್ಲ. ಧ್ಯಾನ ಎನ್ನುವುದು ಎಲ್ಲವನ್ನೂ ಸೇರಿಸಿಕೊಂಡು ವಿರಮಿಸುವುದು. ನೀವು ಯಾವುದನ್ನಾದರೂ ಹೊರಗಿಡಲು ಕೇಂದ್ರೀಕೃತರಾಗಿಲ್ಲದಿದ್ದರೆ, ನೀವು ವಿರಮಿಸಬಹುದು.
ನಿಮಗೆ ಸಮಯ ಸಿಕ್ಕಾಗ, ಹಾಗೆಯೇ ವಿರಮಿಸಿ ಮತ್ತು ನಿಮ್ಮ ಸುತ್ತಲೂ ಇರುವುದರ ಬಗ್ಗೆ ಅರಿವಿನಿಂದ ಇರಿ. ನಿಮ್ಮ ಸುತ್ತಲೂ ಸಂಭವಿಸುತ್ತಿರುವ ಎಲ್ಲ ಶಬ್ದಗಳನ್ನೂ ನಿಮ್ಮ ಹೃದಯದಿಂದ ಆಲಿಸಿ. ಅವುಗಳು ಹಕ್ಕಿಗಳ ಕಲರವವಿರಬಹುದು, ಗಾಳಿಗೆ ಗೋಡೆಯ ಮೇಲೆ ನೇತುಹಾಕಿರುವ ಕ್ಯಾಲೆಂಡರಿನ ಶಬ್ದವಿರಬಹುದು, ನಿಮ್ಮ ಮೇಲಿರುವ ಪಂಖಾದ (Fan) ಶಬ್ದವಿರಬಹುದು, ನಿಮ್ಮ ಸುತ್ತಲಿರುವ ಜನರ ಶಬ್ದಗಳಿರಬಹುದು ಅಥವಾ ಇನ್ನಾವುದೇ ಇರಬಹುದು. ಸುಮ್ಮನೇ ತೆರೆದ ಹೃದಯದಿಂದ ಆಲಿಸಿ, ತಿಳಿದುಕೊಳ್ಳಿ, ಅವೆಲ್ಲವೂ ನಿಮ್ಮ ಮನಸ್ಸನ್ನು ಬೇರೆ ಕಡೆಗೆ ತಿರುಗಿಸುತ್ತಿಲ್ಲ. ನೀವು ಅವುಗಳೊಂದಿಗೆ ಹರಿಯುತ್ತಿದ್ದು, ಆದುದರಿಂದ ಅವುಗಳು ನಿಮ್ಮ ಚಿತ್ತಭ್ರಂಶಕ (distraction) ಗಳಲ್ಲ, ನೀವು ಅವುಗಳೊಂದಿಗೆ ಹರಿಯುತ್ತಿದ್ದ ಅವು ಚಿತ್ತಭ್ರಂಶಕಲಾಗುವುದು ತಪ್ಪುತ್ತದೆ.
ಇದನ್ನು ನೀವು ಮಾಡುತ್ತಿರುವಾಗ, ನಿಮಗೆ ಅದೊಂದು ನಿಶ್ಯಬ್ದತೆ, ಒಳಗಿರುವ ಸಂಯೋಜಿತ ತಿರುಳಿಂದ (composite core) ಯಥಾರ್ಥತೆಯಲ್ಲಿ ಇವೆಲ್ಲವನ್ನೂ ನೋಡುತ್ತಿರುವುದಾಗಿ ನಿಮಗೆ ಅರಿವಾಗುತ್ತದೆ. ನೀವು ನಿಮ್ಮೊಳಗಿರುವ ಆ ನಿಶ್ಯಬ್ದತೆಯ ಅಸ್ತಿತ್ವವನ್ನು ಹೆಚ್ಚು ಹೆಚ್ಚು ಅರಿಯಲಾರಂಭಿಸುತ್ತೀರಿ. ನಿಮಗೆ ಆ ನಿಶ್ಯಬ್ದತೆಯ ಸುಳಿವುಗಳು ಸಿಗುತ್ತವೆ.
ನಿಧಾನವಾಗಿ ನೀವು ನಿಮ್ಮ ಶರೀರದ ಪ್ರಜ್ಞೆಯನ್ನೂ ಸಹ ಕಳೆದುಕೊಳ್ಳುತ್ತೀರ. ನೀವು ಕೇವಲ ಅರಿವು ಮಾತ್ರ ಹೊಂದಿರುತ್ತೀರಿ. ನೀವು ಶರೀರದ ಮುಖಾಂತರ ಅಥವಾ ಮನಸ್ಸಿನ ಮುಖಾಂತರವಲ್ಲದೆ ಕೇವಲ ಅರಿವಿನ ಮುಖಾಂತರ ನಿಮ್ಮತನವನ್ನು ಅನುಭವಿಸುತ್ತೀರ. ನಿಮ್ಮ ದೇಹವು ಜಡವಾಗಿರುವುದಿಲ್ಲ ಆದರೆ ಅದರ ಅನುಭವ ನಿಮಗಾಗುವುದಿಲ್ಲ ಅಷ್ಟೆ; ಕೇವಲ ನಿಮ್ಮ ಅರಿವು ಮಾತ್ರ ಉಳಿಯುತ್ತದೆ. ಇದನ್ನು ತೀವ್ರವಾಗಿ ಮಾಡಿದರೆ ಅದು ನಿಮ್ಮನ್ನು ಮನಸ್ಸಿನಾಚೆಗೆ ಕೊಂಡೊಯ್ಯುತ್ತದೆ.
ಧ್ಯಾನವು ಜೀವನದಲ್ಲಿ ನೀವು ಕೇವಲ ಒಬ್ಬ ನೋಟಕರೆಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಅದು ನಿಮ್ಮನ್ನು ನೀವೇ ನಿಮ್ಮ ಅಸ್ತಿತ್ವದೊಳಗೆ ಕೇಂದ್ರೀಕರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಹೊರ ಜಗತ್ತಿನ ಕೆಲಸಗಳನ್ನು ಹೆಚ್ಚು ದಕ್ಷತೆಯಿಂದಲೂ ಮತ್ತು ಆತ್ಮ ಸಂತೋಷದಿಂದಲೂ ಮಾಡಲು ಸಹಾಯ ಮಾಡುತ್ತದೆ, ಏಕೆಂದರೆ ಯಾವುದರಿಂದಲೂ ನಿಮ್ಮ ಮನಸ್ಸು ಬೇರೆ ಕಡೆಗೆ ತಿರುಗಲು ಅಥವಾ ಗೊಂದಲದಿಂದಿರಲು ಆಗದಂತೆ ನಿಮ್ಮ ಒಳ ನಿಶ್ಯಬ್ದತೆಯನ್ನು
ನೀವು ಹೊಂದಿರುತ್ತೀರಿ. ನೀವು ಇದೇ ರೀತಿ ಮಾಡುವುದನ್ನು ಮುಂದುವರಿಸಿದರೆ, 'ನಾನು' ಮತ್ತು 'ನನ್ನದು' ಎಂಬುದನ್ನು ಬಿಡಲು ಪ್ರಾರಂಭಿಸುತ್ತೀರಿ. ನಿಮ್ಮ ಅಹಂಭಾವವು ಕರಗುತ್ತದೆ. ನಿಮ್ಮ ಅಹಂಭಾವವು ನಿಮ್ಮ ಮನಸ್ಸು ಮತ್ತು ಶರೀರದ ಬಗ್ಗೆ ಇರುವ ನಿಮ್ಮ ಗಾಢವಾದ ಭಾವನೆಯಲ್ಲದೆ ಬೇರೇನೂ ಅಲ್ಲ.
ಧ್ಯಾನಕ್ಕಾಗಿ ಒಂದು ಪ್ರಪಂಚದಾದ್ಯಂತ ಒಂದು ಆಂದೋಲನವನ್ನು ನಾವು ಮಾಡಬೇಕೆಂದು ಪ್ರಯತ್ನಿಸುತ್ತಿರುವುದು ಏಕೆಂದುಕೊಂಡಿರಿ? ಧ್ಯಾನವು ವಿಶ್ವಶಾಂತಿಗೆ ಇರುವ ಏಕೈಕ ಕೀಲಿಕೈ. ನೀವು ನಿಮ್ಮೊಳಗೆ ಅವಲೋಕನ ಮಾಡಿಕೊಳ್ಳಲು ಪ್ರಾರಂಭಿಸಿದರೆ, ಬಾಹ್ಯ ಚಿತ್ತಭ್ರಂಶಕಗಳಾದ ಅಧಿಕಾರ, ಹಣ, ಪ್ರತೀಕಾರ ಮುಂತಾದವುಗಳಿಂದ ನಿಮ್ಮ ಮನಸ್ಸು ಬೇರೆ ಕಡೆಗೆ ತಿರುಗುವುದಿಲ್ಲ. ನಿಮ್ಮ ಎಲ್ಲಾ ಮೂಲ ಚೈತನ್ಯಗಳು ಉನ್ನತ ಆಧ್ಯಾತ್ಮಿಕ ಚೈತನ್ಯಗಳಾಗಿ ಪರಿವರ್ತನೆ ಹೊಂದುತ್ತವೆ. ಸಾಮೂದಾಯಿಕ (collective) ಪ್ರಜ್ಞೆಯು ಬದಲಾವಣೆಯನ್ನು ಹೊಂದುತ್ತದೆ ಮತ್ತು ತನ್ನಷ್ಟಕ್ಕೇ ಶಾಂತಿಯು ನೆಲೆಸುತ್ತದೆ.
ಆದುದರಿಂದಲೇ ನಾನು ವ್ಯಕ್ತಿಗಳ ಬದಲಾವಣೆಯ ಮೇಲೆ ಕೇಂದ್ರೀಕರಿಸುತ್ತಿದ್ದೇನೆ. ವ್ಯಕ್ತಿಗಳ ಗುಂಪೊಂದು ಒಂದು ಅನುಭವಶೀಲ ಅರಿವಿನಿಂದ ಬದಲಾವಣೆಯನ್ನು ಹೊಂದಿದರೆ, ಅವರು ತಮ್ಮದೇ ಅನುಭವದಿಂದ ಮಿಕ್ಕವರಲ್ಲಿ ಸ್ಪೂರ್ತಿಯನ್ನು ತುಂಬುತ್ತಾರೆ ಮತ್ತು ಇದು ಮುಂದುವರಿಯುತ್ತಾ ಸಮಾಜದಲ್ಲಿ ಸಕಾರಾತ್ಮಕವಾದ ಮಾನಸಿಕ ಸ್ಥಾಪನೆಯನ್ನು ಮಾಡುತ್ತದೆ.
ನಿಮ್ಮ ತಿಳುವಳಿಕೆಯು ಒಂದು ಅನುಭವವಾಗದಿದ್ದರೆ, ಪರಿವರ್ತನೆಯು ಸಾಧ್ಯವಾಗುವುದಿಲ್ಲ. ಧ್ಯಾನವು ನಿಮ್ಮ ತಿಳುವಳಿಕೆಯನ್ನು ಒಂದು ಅನುಭವವನ್ನಾಗಿ ಮಾಡುತ್ತದೆ. ಧ್ಯಾನವು ವ್ಯಕ್ತಿಯ ಪರಿವರ್ತನೆ ಮತ್ತು ಸಮಾಜದ ಪರಿವರ್ತನೆಯನ್ನು ಮಾಡುವುದಕ್ಕೆ ಇರುವ ಏಕೈಕ ಆಶಾಭಾವನೆ.
ನೀವು ಧ್ಯಾನವನ್ನು ಮಾಡಿದರೆ ನಿಮ್ಮ ಬುದ್ಧಿವಂತಿಕೆಯು ಹೆಚ್ಚುತ್ತದೆ. ನಿಮಗೆ ಎಲ್ಲ ಸಂಗತಿಗಳಲ್ಲೂ ನಿಚ್ಚಳತೆಯು ಬರಲು ಪ್ರಾರಂಭಿಸುತ್ತದೆ. ನೀವು ಪರ್ಯಾಯಕ್ಕಾಗಿ ಜನಗಳನ್ನು ಕೇಳುವ ಅವಶ್ಯಕತೆ ಇರುವುದಿಲ್ಲ. ಹಾಗೆಯೇ ನಿಮಗೆ ಗೊತ್ತಾಗುತ್ತದೆ ಅಷ್ಟೆ. ನಿಮ್ಮ ಒಳ ಬುದ್ಧಿವಂತಿಕೆಯೊಡನೆ ನೀವು ಅಷ್ಟೊಂದು ಶ್ರುತಿಗೂಡಿಸಿರುವುದರಿಂದ ನಿಮಗೆ ಗೊತ್ತಾಗುತ್ತದೆ. ಅದು ತಪ್ಪಾಗುವುದು ಇಲ್ಲವೆಂದು ನಿಮಗೆ ಗೊತ್ತು.
ನೀವು ಸರಿಯಾದ ಜಾಡಿನಲ್ಲಿರುವುದು ನಿಮಗೆ ನಿಮ್ಮ ಅಸ್ತಿತ್ವದಿಂದ ಗೊತ್ತಾಗುತ್ತದೆ. ನೀವು ಬಹಳಷ್ಟು ಮಂದಿಗೆ ವಿರುದ್ಧವಿರುವಾಗ ಕಠಿಣ ಘಳಿಗೆಗಳು ಬರಬಹುದು, ಆದರೆ ಅದರ ಫಲವು ಸುಂದರವಾಗಿಯೂ ಮತ್ತು ಮುಕ್ತಿದಾಯಕವಾಗಿಯೂ ಇರುವುದೆಂದು ನಿಮಗೆ ಗೊತ್ತಾಗುತ್ತದೆ! ನೀವು ಮಾಡಬೇಕಾದದ್ದು ದೃಢ ಮತ್ತು ಅವಿರತವಾಗಿ ಪ್ರಯತ್ನಿಸುತ್ತಾ ಮತ್ತು ನಿಮ್ಮದೇ ಬುದ್ಧಿವಂತಿಕೆಯಲ್ಲಿ ಆಳವಾದ ನಂಬಿಕೆಯನ್ನು ಇಟ್ಟುಕೊಂಡಿರುವುದು.
ಧ್ಯಾನದಿಂದ ನಿಮ್ಮನ್ನು ನೀವೇ ಪೋಷಿಸಿಕೊಂಡರೆ, ನಿಮ್ಮ ಸಾಮರ್ಥ್ಯವು ಬೆಳೆಯುತ್ತದೆ ಮತ್ತು ಹೊರ ಪ್ರಪಂಚದಲ್ಲಿ ನೀವು ಬೇಕಾದಷ್ಟು ಕಾರ್ಯಗಳನ್ನು ಮಾಡಬಲ್ಲಿರಿ. ನೀವು ಏನು ಮಾಡಬಲ್ಲಿರಿ ಮತ್ತು ಸ್ಪಷ್ಟವಾಗಿ ಹೇಳಬಲ್ಲಿರಿ ಎಂಬುದಕ್ಕೆ ಮಿತಿ ಇರುವುದಿಲ್ಲ. ನೀವು ಬೇರೆ ಬೇರೆ ಆಯಾಮಗಳಲ್ಲಿ ಬೆಳೆಯುತ್ತಿರುವುದನ್ನು ಕಂಡುಕೊಳ್ಳುತ್ತೀರ.
ನಿಮ್ಮ ಅಹಂಭಾವದಿಂದಲ್ಲದೆ ನಿಮ್ಮ ಒಳ ಬುದ್ಧಿವಂತಿಕೆಯಿಂದ ನೀವು ಕಾರ್ಯ ಮಾಡುತ್ತಿದ್ದರೆ ಯಾವುದೇ ಸಂಗತಿಯೂ ನಿಮಗೆ ಸುಲಭವಾಗಿ ಬರುತ್ತದೆ. ಯಾವುದಾದರೂ ನಿಮಗೆ ಕಠಿಣವಾಗಿರಬೇಕಾದರೆ ಅದಕ್ಕೆ ಕಾರಣ ನಿಮ್ಮ ಅಹಂಭಾವವು ನಿಮ್ಮನ್ನು ಅದರಿಂದ ದೂರ ಮಾಡುತ್ತಿರುವುದರಿಂದ. ನೀವು ನಿಮ್ಮನ್ನೇ ಕಳೆದುಕೊಂಡು ಅಸ್ತಿತ್ವದೊಂದಿಗೆ ಐಕ್ಯವಾಗಲು ಪ್ರಾರಂಭಿಸಿದರೆ, ಯಾವುದೂ ಗೊಂದಲಮಯವಾಗಿರುವುದಿಲ್ಲ, ನೀವು ಸುಮ್ಮನೆ ಹರಿಯಲಾರಂಭಿಸುತ್ತೀರ. ನಿಮ್ಮ ಬುದ್ಧಿವಂತಿಕೆಯು ವಿಶ್ವ ಚೈತನ್ಯವನ್ನು ಉಪಯೋಗಿಸಿಕೊಳ್ಳಲು ನಿಮಗಾಗಿ ತನ್ನಷ್ಟಕ್ಕೇ ಕೆಲಸ ಮಾಡುತ್ತದೆ.
ನೀವು ನಿಮ್ಮನ್ನು ಒಬ್ಬ ಪವಾಡ ಪುರುಷನಂತೆ ನೋಡಲಾರಂಭಿಸುತ್ತೀರಿ! ನಿಮ್ಮಿಂದ ಆಚೆಯಿದ್ದ ವಸ್ತುಗಳು ಇದ್ದಕ್ಕಿದ್ದ ಹಾಗೆ ಜೋಡಣಾರಹಿತವಾಗಿ ಕಾಣುತ್ತದೆ. ನೀವು ಅಜ್ಞಾನದಿಂದ ಆಳ ಅರಿವಿನೆಡೆಗೆ ಚಲಿಸುತ್ತೀರ.
ಹೇಳಿ...?
ಸ್ವಾಮೀಜಿ, ನಾವು ಆಳವಾದ ಸ್ವಪ್ನರಹಿತವಾದ ನಿದ್ರೆಯಲ್ಲಿದ್ದಾಗ ಮತ್ತು ನಾವು ನಿಜವಾದ ಧ್ಯಾನದಲ್ಲಿದ್ದಾಗ, ನಾವು ಒಂದೇ ರೀತಿಯ ಮನೋಸ್ಥಿತಿಯಲ್ಲಿ ಇರುತ್ತೇವೆಯೇನು?
ಇಲ್ಲ. ನೀವು ಆಳವಾದ ನಿದ್ರೆಯಲ್ಲಿದ್ದರೆ, ನೀವು ಬೀಜದ ಮಟ್ಟಕ್ಕೆ ಹೋಗಿ ನಿದ್ರೆಗೆ ಮೊದಲಿದ್ದ ಸ್ಥಿತಿಗೆ ಮರಳಿ ಬರುತ್ತೀರ. ನಿಮ್ಮಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ನೀವು ನಿಜವಾದ ಧ್ಯಾನದಲ್ಲಿದ್ದರೆ, ನೀವು ಬೀಜದ ಮಟ್ಟಕ್ಕೆ ಹೋಗುತ್ತೀರ, ಬೀಜವು ಒಡೆಯುತ್ತದೆ ಮತ್ತು ನೀವು ಉನ್ನತ ಸ್ಥಿತಿಗೆ ಮುಂದುವರಿಯುತ್ತೀರ. ಅದೇ ವ್ಯತ್ಯಾಸ. ಅವು ಎರಡು ಕೊನೆಗಳು. ಅದೇನೋ ಸರಿ, ನೀವು ಹೊರಗಿನಿಂದ ವೀಕ್ಷಿಸಿದರೆ, ಕೊನೆಗಳು ಯಾವಾಗಲೂ ಒಂದೇ ರೀತಿಯಾಗಿ ಕಾಣುತ್ತವೆ. ಒಬ್ಬ ಹುಚ್ಚನು ಯೋಗಿಯ ಹಾಗೆಯೂ ಮತ್ತು ಒಬ್ಬ ಯೋಗಿಯು (mystic) ಹುಚ್ಚನ ಹಾಗೆಯೂ ಕಾಣುತ್ತಾರೆ! ಇಬ್ಬರೂ ತಮ್ಮ ಮನಸ್ಸುಗಳನ್ನು ಕಳೆದುಕೊಂಡವರು, ಆದರೆ ವಿರುದ್ಧ ದಿಕ್ಕುಗಳಲ್ಲಿ.
ಹೇಳಿ...?
ಸ್ವಾಮೀಜಿ, ಅದು ಹೇಗೆ ನೀವು ಯಾವಾಗಲೂ ಸುಂದರವಾಗಿ ಇರುತ್ತೀರ...?
(ಸ್ವಾಮೀಜಿ ನಗುತ್ತಾರೆ!)
ಹೌದು, ಇದೊಂದು ಆಸಕ್ತಿಯುತವಾದ ಪ್ರಶ್ನೆ! ನಾನು ಹೇಗೆ ಸದಾಕಾಲವೂ ಸುಂದರವಾಗಿ ಕಾಣಿಸುತ್ತೇನೆ!
ನೋಡಿ: ನನ್ನ ರೂಪವು ಸುಂದರವೆಂದು ಕಂಡುಕೊಂಡಿರುವ ಹಾಗೂ ನಿಮ್ಮನ್ನು ಆಕರ್ಷಿಸುತ್ತಿರುವುದು ಇದೇ ರೂಪವಾಗಿದ್ದರೆ, ಆ ಆಕರ್ಷಣೆಯು ಕಾಲಕ್ರಮೇಣ ಹೊಯ್ದಾಡಲಾರಂಭಿಸುತ್ತದೆ. ಅದು ಸಂದರ್ಭಾನುಸಾರ ವೇಷ ಭೂಷಣಗಳಿಗೆ ತಕ್ಕಂತೆ, ಇತ್ಯಾದಿಗಳಿಗೆ ಅನುಸಾರವಾಗಿ ಹೊಯ್ದಾಡುತ್ತದೆ. ಹಾಗೇ ಯೋಚಿಸಿ. ನೀವು ನನ್ನನ್ನು ಅದೇ ವೇಷದಲ್ಲಿ ನೋಡುತ್ತೀರಿ, ಅದೇ ಹಾಡುಗಳನ್ನು ಕೇಳುತ್ತೀರಿ, ಪ್ರತಿದಿನವೂ ಅದೇ ಧ್ವನಿಯನ್ನು ಕೇಳುತ್ತೀರಿ. ಆದರೂ ಸಹ ನೀವು ಮುಂಚಿನಷ್ಟೇ ಕಾತುರತೆಯಿಂದ ಇಲ್ಲಿ ಇದ್ದೀರ. ನಿಮ್ಮ ಜೀವನದಲ್ಲಿ ಬೇರಾರ ಬಗ್ಗೆ ಇದೇ ರೀತಿ ಮುಂದುವರಿಯಬಹುದೆಂದು ನಿಮಗೆ ಅನಿಸುತ್ತದೆಯೇ? ಅರ್ಥಮಾಡಿಕೊಳ್ಳಿ. ಅದು ವ್ಯಕ್ತಿಯಲ್ಲ. ನೀವು ಅನುಭವಿಸುತ್ತಿರುವ, ನಿಮ್ಮನ್ನು ಆಕರ್ಷಿಸುತ್ತಿರುವ ಸೌಂದರ್ಯವನ್ನು ಪಸರಿಸುತ್ತಿರುವುದು ಇರುವಿಕೆಯಿಂದ.
ನಿಮ್ಮ ಬಗ್ಗೆಯಾದರೆ, ನೀವು ಒಬ್ಬ ವ್ಯಕ್ತಿ. ನನ್ನ ಬಗ್ಗೆಯಾದರೆ, ನಾನು ಕೇವಲ ಇರುವಿಕೆ ಅಷ್ಟೆ. ಈ ಅಹಂಭಾವರಹಿತ ಇರುವಿಕೆಯು ಎಷ್ಟೊಂದು ಶಕ್ತಿಯುತವಾಗಿದೆ ಎಂದರೆ ಅದು ನಿಮ್ಮನ್ನು ಸುಮ್ಮನೆ ಮರಳು ಮಾಡುತ್ತದೆ. ಇನ್ನೂ ಹೆಚ್ಚು
ಸುಂದರರಾಗಿಯೂ, ಇನ್ನೂ ಹೆಚ್ಚಿನ ವ್ಯಕ್ತಿತ್ವ ವುಳ್ಳವರಾಗಿಯೂ ಇರುವ ಬೇಕಾದಷ್ಟು ಗಂಡು ರೂಪದರ್ಶಿಗಳು ಮತ್ತು ನಟರು ಇರುತ್ತಾರೆ; ಸರಿಯಲ್ಲವೇ? ಅವರೆಲ್ಲರೊಂದಿಗೂ ನೀವು ಆಕರ್ಷಿತರಾಗಿರಬಹುದು, ಆದರೆ ನನ್ನಲ್ಲಿರುವ ಹಾಗೆ ಅಷ್ಟೊಂದು ಹಂಬಲದಿಂದ ಮತ್ತು ಆಳವಾಗಿ ಇರುವುದಿಲ್ಲ.
ಇಲ್ಲಿ ನಿಮ್ಮ ಹಂಬಲತೆಯು ನಿಮ್ಮ ಅಸ್ತಿತ್ವದಿಂದ ಇರುತ್ತದೆ. ಏಕೆಂದರೆ ನಿಮ್ಮ ಅಸ್ತಿತ್ವವು ಆವರೂಪದ ಹಿಂದಿರುವ ದೈವತ್ವವನ್ನು ನೋಡುತ್ತದೆ. ಇದೊಂದೇ ನಿಮ್ಮ ಅಸ್ತಿತ್ವದ ಕಾತರತೆ. ಅಹಂಭಾವರಹಿತ ಇರುವ ನಿಮ್ಮ ಅಸ್ತಿತ್ವ ಅಷ್ಟೊಂದು ಭಾವಾವೇಶವಾಗಿರುತ್ತದೆ. ಆದುದರಿಂದಲೇ ನೀವು ನನ್ನತ್ತ ಪದೇ ಪದೇ ಸೆಳೆಯಲ್ಪಡುತ್ತಿರುತ್ತೀರ.
ನೋಡಿ: ಪ್ರತಿ ಮನುಷ್ಯನ ಆಳದಲ್ಲೂ ದೇವರನ್ನು ಅನುಭವಿಸುವ ಹಂಬಲವಿರುತ್ತದೆ. ಆದರೆ ಅದು ಅವನಿಗೆ ಸಾಧ್ಯವಾಗುತ್ತಿಲ್ಲ. ನೀವು ನನ್ನನ್ನು ನೋಡಿದರೆ, ಆ ಸೆಳೆತದ ಅನುಭವವು ನಿಮಗೆ ಆಗುತ್ತದೆ ಮತ್ತು ಆ ಸೆಳೆತವು ಏನೆಂದು ಆಶ್ಚರ್ಯ ಪಡುತ್ತೀರ. ಆ ಸೆಳೆತವು ನಿಮ್ಮ ಅಸ್ತಿತ್ವದ ಕರೆ. ಆದರೆ ತತ್ಕ್ಷಣವೇ ಅದೇನಿರಬಹುದೆಂದು ಯೋಚಿಸಲು ಪ್ರಾರಂಭಿಸುತ್ತೀರಿ. ನೀವು ನಿಮ್ಮ ಮನಸ್ಸನ್ನು ಅನ್ವಯಿಸಿ ಪ್ರತಿಯೊಂದನ್ನೂ ತರ್ಕಕ್ಕೆ ಇಳಿಸುವುದನ್ನು ಮಾತ್ರ ಬಲ್ಲಿರಿ. ದೇವರು ತರ್ಕಾತೀತ. ಆದುದರಿಂದಲೇ ನನ್ನ ಬಗ್ಗೆ ನಿಮಗಾಗುವ ಸೆಳೆತವನ್ನು ನಿಮ್ಮ ತರ್ಕದಿಂದ ವಿವರಿಸಲಾಗುವುದಿಲ್ಲ.
ನೀವೆಲ್ಲರೂ ಇಲ್ಲಿ ಬಾಯಿ ತೆರೆದುಕೊಂಡು, ಸುಮ್ಮನೆ ಕುಳಿತುಕೊಂಡು, ಯಾವುದು ನಿಮ್ಮನ್ನು ಈ ರೀತಿ ಗಂಟೆಗಟ್ಟಲೆ ಬಾಯಿ ತೆರೆದುಕೊಂಡು ಮತ್ತು ಕಣ್ಣು ರೆಪ್ಪೆಗಳನ್ನೂ ಮಿಟುಕಿಸದಂತೆ ಮಾಡುತ್ತಿರುವುದೆಂದು ಆಶ್ಚರ್ಯಪಡುತ್ತಿದ್ದೀರಿ. ನಿಮ್ಮೊಳಗೆ ಈ ಹಂಬಲವು ಆಳವಾಗಿದ್ದರೆ, ಇದು ಸಂಭವಿಸುತ್ತದೆ. ಈ ಹಂಬಲವು ನೀವು ಮನೆಗೆ ತಲಪುವ ಹಂಬಲ. ಬಹಳಷ್ಟು ಜನ್ಮಗಳಿಂದ ಈ ಹಂಬಲವನ್ನು ಪೂರೈಸಲು ನೀವು ಪ್ರಯತ್ನಿಸಿ ಅಸಫಲರಾಗಿದ್ದೀರಿ ಮತ್ತು ಅದರಿಂದ ನೀವು ಮತ್ತೊಮ್ಮೆ ಹಿಂತಿರುಗಿದ್ದೀರ, ನೀವು ಮತ್ತೊಂದು ಜನ್ಮವನ್ನು ತಳೆದಿದ್ದೀರ.
ನಿಮಗೆ ಈ ಹಂಬಲವು ಉಂಟಾದರೆ, ನಿಮ್ಮಲ್ಲಿ ಕೆಲವರು ಇದನ್ನೇ ಮುಂದುವರಿಸಿಕೊಂಡು ನಿಮ್ಮ ಅಂತರಂಗದ ಪ್ರಯಾಣವನ್ನು ಆರಂಭಿಸುತ್ತೀರ, ಮತ್ತೆ ಕೆಲವರು ಹೆದರಿಕೊಂಡು ತಪ್ಪಿಸಿಕೊಳ್ಳುತ್ತೀರ! ನೀವು ಹೊರ ವೃತ್ತಗಳಲ್ಲೇ
ಅಲೆದಾಡುತ್ತಾ ನನ್ನನ್ನೇ ಗಮನಿಸುತ್ತಿರುತ್ತೀರ, ಏಕೆಂದರೆ ಏನಾದರೂ ಸಂಬಂಧವಿಸಿದರೆ ನೀವು ಸುಲಭವಾಗಿ ಓಡಿಹೋಗಿ ಬಿಡಬಹುದು! ನಾನು ಆಗ ನಿಮ್ಮನ್ನು ಮೋಸಗೊಳಿಸಿ, ಬೋಧಿಸಿ ಮತ್ತು ನೀವು ಆಗಮಿಸಿದ್ದೀರಿ ಎಂದೂ ಮತ್ತು ನಿಮ್ಮ ಅಹಂಭಾವವನ್ನು ಬಿಟ್ಟುಬಿಡುವುದನ್ನು ಹೊರತುಪಡಿಸಿ ಮಾಡಲು ಇನ್ನೇನೂ ಇಲ್ಲವೆಂದು ತೋರಿಸಬೇಕು.
ನೀವು ಯಾವಾಗಲೂ ಭಯದಿಂದ ಕಾರ್ಯವನ್ನು ಮಾಡುತ್ತೀರಿ, ಏಕೆಂದರೆ ನಿಮಗೆ ಆ ರೀತಿಯೇ ಹೇಳಿಕೊಡಲ್ಪಟ್ಟಿದೆ. ಭಯವೆಂಬುದು ಅಹಂಭಾವದ ಒಂದು ಜಡ ಸ್ವರೂಪ. ನೀವು ಎಷ್ಟು ಭಯದಿಂದ ಇದ್ದೀರಿ ಎಂದರೆ, ನೀವು ಅದಕ್ಕೆ ವಶವಾಗಿಬಿಡಬಹುದೆಂದುಕೊಂಡು ಭಯದ ವೇಷದಲ್ಲಿ ಒಂದು ಅಂತರವನ್ನು ಇಟ್ಟುಕೊಳ್ಳುತ್ತೀರಿ. ಭಯವು ಒಂದು ರೀತಿಯ ದೈನ್ಯತೆ ಎಂದು ಭಾವಿಸಬೇಡಿ. ಭಯ ಎಂಬುದು ಅಹಂಭಾವದ ಒಂದು ಕುಟಿಲ ವೇಷ. ನೀವು ಅದನ್ನು ಬಿಡಲು ಭಯಪಡುತ್ತೀರ. ನೀವು ಕರಗಿಬಿಡಬಹುದೆಂದು ಅಷ್ಟೊಂದು ಭಯಪಡುತ್ತೀರ.
ಅರ್ಥ ಮಾಡಿಕೊಳ್ಳಿರಿ. ಪ್ರಪಂಚ ಶಕ್ತಿ ಎಂದರೆ ಪ್ರೀತಿ. ಅದು ಪ್ರೀತಿಯಲ್ಲದೇ ಬೇರೇನೂ ಅಲ್ಲ. ಹಾಗೆಯೇ, ಪ್ರಪಂಚ ಶಕ್ತಿಯು ನಿಮ್ಮನ್ನು ಬಲ್ಲದು, ಏಕೆಂದರೆ ನೀವು ಅದರ ಒಂದು ಭಾಗವಾಗಿದ್ದೀರ. ಪ್ರಪಂಚ ಶಕ್ತಿಗೆ ನೀವು ಯಾರು ಎಂದು ಗೊತ್ತಿಲ್ಲದಿದ್ದರೆ, ಬೇರೆ ಯಾರಿಗೆ ಅದು ಗೊತ್ತಿರುತ್ತದೆ? ಆದುದರಿಂದ ಭಯಪಡುವುದಕ್ಕೆ ಏನೂ ಇಲ್ಲ.
ನೀವು ಪ್ರಪಂಚಶಕ್ತಿಯೊಂದಿಗೆ ಏನೂ ಸೋಗು ಹಾಕಬೇಕಾಗಿಲ್ಲ. ನೀವು ಸುಮ್ಮನೆ ನಿಮ್ಮದೇ ಸಾಧಾರಣ ಅಸ್ತಿತ್ವದವರಾಗಿರಿ. ಪ್ರಪಂಚ ಶಕ್ತಿಯು ನಿಮ್ಮ ಮೇಲೆ ಧಾರೆಯೆರೆಯುವುದನ್ನು ಮುಂದುವರಿಸುತ್ತದೆ. ಪ್ರಪಂಚ ಶಕ್ತಿಗೆ ಪ್ರೀತಿಸುವುದು ಮತ್ತು ಕ್ಷಮಿಸುವುದು ಮಾತ್ರವೇ ಗೊತ್ತು. ಅದಕ್ಕೆ ಬೇರಾವ ಸದ್ಗುಣಗಳೂ ತಿಳಿಯದು. ನೀವು ನಿಮ್ಮ ಅಹಂಭಾವತ್ವ ಮತ್ತು ನೈತಿಕ ಅಳತೆಗಳಿಂದ ಅಸ್ತಿತ್ವವನ್ನು ತೀರ್ಮಾನಿಸುತ್ತೀರ; ಅದೇ ಸಮಸ್ಯೆ ಮತ್ತು ಅದರಿಂದಲೇ ನೀವು ಈ ಕೆಲಸಗಳನ್ನು ಈ ರೀತಿಯಾಗಿ ಮಾಡಲು ಪ್ರಾರಂಭಿಸುತ್ತೀರಿ.
ನೀವು ಪ್ರಪಂಚಶಕ್ತಿಯ ಒಂದು ಭಾಗವೆಂದು ತಿಳಿದುಕೊಂಡರೆ, ನೀವು ಮುಕ್ತರಾದಂತೆ ಅನಿಸುತ್ತದೆ. ನೀವು ಪ್ರಪಂಚ ಶಕ್ತಿಯಿಂದ ಬೇರೆ ಎಂದು ಭಾವಿಸಿದರೆ, ನೀವು ದುಃಖಕ್ಕೆ ಬೀಳುತ್ತೀರಿ. ನೋಡಿ, ಅಸ್ತಿತ್ವದ ಒಂದು ಭಾಗ ಎಂಬುದು ಅಂತಹ ಮಹಾನ್ ಭಾವನೆಯಾಗಿದೆ. ನಿಮ್ಮ ಅಹಂಭಾವದಿಂದ, ನೀವು ಪ್ರಪಂಚ ಶಕ್ತಿಯಿಂದ ಬೇರೆ ಎಂದು ಭಾವಿಸುತ್ತೀರ.
ನೀವು ಅಂತರಂಗದತ್ತ ಪ್ರಯಾಣ ಬೆಳೆಸಿದರೆ, ನೀವು ಪ್ರಪಂಚ ಶಕ್ತಿಯ ಒಂದು ಭಾಗವೆಂಬ ಹೆಚ್ಚುತ್ತಿರುವ ಅರಿವುಳ್ಳವರಾಗಿರುತ್ತೀರ. ಅರಿವು ನಿಧಾನವಾಗಿ ಅಹಂಭಾವದ ಜಾಗದಲ್ಲಿ ಬರುತ್ತದೆ. ಅರಿವು ಆಕ್ರಮಿಸಿಕೊಂಡರೆ, ಅಹಂಭಾವವು ಕರಾಗಲೇ ಬೇಕು. ಬೇರೆ ದಾರಿಯೇ ಇಲ್ಲ. ಅರಿವು ಆಕ್ರಮಿಸಿಕೊಳ್ಳುವ ತನಕ, ನೀವು ಒಬ್ಬ ಘನವಾದ ವ್ಯಕ್ತಿತ್ವದವರೆಂದು ಭಾವಿಸಿ, ಅಸ್ತಿತ್ವದೊಂದಿಗೆ ನಿಮ್ಮನ್ನು ಸಂಪೂರ್ಣವಾಗಿ ಕಡಿದುಕೊಳ್ಳುತ್ತೀರ.
ವಾಸ್ತವವಾಗಿ ಇಡಿಯ ಆಕಾಶವೇ ನಿಮಗೆ ನೋಡಲು ಇದೆ. ಆದರೆ ನೀವು ಅದನ್ನು ನಿಮ್ಮ ಕಿಟಕಿಯ ಮುಖಾಂತರ ನಿಮ್ಮ ಅಹಂಭಾವವು ನಿಮಗೆ ಎಷ್ಟು ಅನುವು ಮಾಡಿಕೊಡುತ್ತದೆಯೋ ಅಷ್ಟನ್ನೇ ನೋಡುತ್ತೀರ, ಮತ್ತು ನಿಮ್ಮ ಚೌಕಟ್ಟಿನಲ್ಲಿರುವ ಆಕಾಶವೇ ನಿಜವಾದ ಆಕಾಶವೆಂದು ತಿಳಿಯುತ್ತೀರ. ಈ ಆಟಗಳೆಲ್ಲಾ ಅಹಂಭಾವದ ಆಟವಲ್ಲದೆ ಬೇರೇನೂ ಅಲ್ಲ. ಇದನ್ನು ಅರಿತುಕೊಂಡಿರುವುದೇ ಇದರಿಂದ ಹೊರಬರುವ ಮೊದಲ ಹೆಜ್ಜೆ. ನಿಮ್ಮೊಳಗಿರುವ ಯಾವುದೇ ಬೀಗವನ್ನು ತೆರೆಯುವ ಪ್ರಮುಖ ಕೀಲಿಕೈ ಎಂದರೆ ಅರಿವು. ಆದುದರಿಂದಲೇ ನಾನು ಪುನಃ ಪುನಃ ಹೇಳುವುದು: ನಿಮ್ಮ ಅರಿವನ್ನು ಒಳಗೆ ತನ್ನಿ ಎಂದು. ಹೇಳಿ...?
ಸ್ವಾಮೀಜಿ, ನಮ್ಮ ಬಗೆಗಿನ ಕಾಳಜಿಯನ್ನು ಹೇಗೆ ವಿವರಿಸುವಿರಿ?
ನಿಮ್ಮ ಬಗ್ಗೆ ಇರುವ ಒಂದೇ ಕಾಳಜಿ ಎಂದರೆ ನೀವು ಅರಳಲು ಸಹಾಯ ಮಾಡುವುದು. ಅದೇ ನಾನು ನಿಮಗೆ ಮಾಡಬಲ್ಲ ಮತ್ತು ನೀವು ನನಗೆ ಮಾಡಬಲ್ಲ ಅತಿ ದೊಡ್ಡ ಕಾರ್ಯ! ನಾನು ಜನಗಳು ಅವರೊಳಗೆ ಸಹಜವಾಗಿರುವ ಆನಂದ ಮತ್ತು ಅಂತಃಸತ್ವವನ್ನು ಅರಿತುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಇದೀಗ ಮಾನವನು ತಾನೊಬ್ಬ ಆಧ್ಯಾತ್ಮಿಕ ಅನುಭವವನ್ನು ಹುಡುಕುತ್ತಿರುವ ಮನುಷ್ಯ ಜೀವಿ ಎಂದು ತಿಳಿದಿದ್ದಾನೆ. ಅವನು ನಿಚ್ಚಳವಾಗಿ ಅರ್ಥಮಾಡಿಕೊಳ್ಳಬೇಕಾದ ಅವಶ್ಯಕತೆ ಎಂದರೆ ಅವನೊಬ್ಬ ಮನುಷ್ಯನ ಅನುಭವವನ್ನು ಹುಡುಕುತ್ತಿರುವ ಆಧ್ಯಾತ್ಮಿಕ ಜೀವಿ ಎಂದು. ಅದನ್ನು ಬೋಧಿಸಲು ನಾನು ಕೆಲಸ ಮಾಡುತ್ತಿದ್ದೇನೆ.
ಮತ್ತು ಅದನ್ನು ಅವನು ಕಲಿಯಲು ಇರುವ ಏಕೈಕ ಮಾರ್ಗವೆಂದರೆ ಅವನಿಗೆ ತಾನೊಬ್ಬ ಆಧ್ಯಾತ್ಮಿಕ ಜೀವಿಗೆ ಬದಲು ಮನುಷ್ಯ ಜೀವಿ ಎಂಬ ಭಾವನೆ ಉಂಟು ಮಾಡುವ ಅಹಂಭಾವದ ವಿವಿಧ ರೂಪಗಳ ಬಗ್ಗೆ ಅರಿವು ಉಂಟು ಮಾಡಿಕೊಳ್ಳಬೇಕು. ಮನುಷ್ಯನು ಪ್ರಾರ್ಥಿಸುವುದರಿಂದ ಅವನ ಯುಕ್ತತೆಯತ್ತ (becoming) ಸಾಗಿದರೆ ಅವನಿಗೆ ಕೀಲಿಕೈ ದೊರಕುತ್ತದೆ.
ಸರಿ.
ಸ್ವಾಮೀಜಿ, ಧ್ಯಾನ ಮಾಡುವುದರಿಂದ ಪರಿವರ್ತನೆಯು ಹೇಗೆ ಸಂಭವಿಸುತ್ತದೆ? ಮತ್ತು ನೀವು ನಮಗೆ ಗುರುಗಳ ಪಾತ್ರವನ್ನು ಹೆಚ್ಚು ಹೇಳಬೇಕು.
ಒಬ್ಬ ವ್ಯಕ್ತಿಯು ಧ್ಯಾನ ಮಾಡಿದರೆ, ಅವನ ಮೂಲ ಮನೋಭಾವನೆಗಳಾದ ಕೋಪ, ಕಾಮ, ಅಸೂಯೆ, ಅತಿಯಾದ ವ್ಯಾಮೋಹ, ಮುಂತಾದುವು ಉನ್ನತ ಚೈತನ್ಯವಾಗಿ ಪರಿವರ್ತನೆಯಾಗುತ್ತವೆ. ಇದು ಅವನನ್ನು ಪ್ರಜ್ಞೆಯ ಮತ್ತು ಅರಿವಿನ ಉನ್ನತ ಲೋಕಕ್ಕೆ ತಳ್ಳುತ್ತದೆ. ಆಗ ಅವನು ಮುಂಚಿನಂತೆ ತಾಳ್ಮೆಯಿಲ್ಲದವರಂತೆ ಇರುವುದಿಲ್ಲ. ಚೈತನ್ಯದ ಪರಿವರ್ತನೆಯು ಕೇವಲ ಧ್ಯಾನದ ಮುಖಾಂತರ ಸಂಭವಿಸಬಹುದು.
ಈ ಪರಿವರ್ತನೆಯು ಪ್ರತಿ ವ್ಯಕ್ತಿಯಲ್ಲಿಯೂ ಸಂಭವಿಸಿದರೆ, ಪೂರ್ತಿ ಸಮಾಜವು ಪರಿವರ್ತನೆ ಹೊಂದುತ್ತದೆ. ಹಿಂಸೆಯು ಕಡಿಮೆಯಾಗಿ ಹೆಚ್ಚು ಪ್ರಾಪಂಚಿಕ ಸಾಮರಸ್ಯವಿರುತ್ತದೆ. ಪ್ರಾಪಂಚಿಕ ಶಾಂತಿಗೆ ಅತಿ ಹೆಚ್ಚಿನ ವ್ಯಾವಹಾರಿಕ ಮಾರ್ಗವು ಪ್ರತಿ ವ್ಯಕ್ತಿಯನ್ನೂ ಪರಿವರ್ತನೆ ಮಾಡುವುದು.
ಧ್ಯಾನದಿಂದ ಮತ್ತು ಗುರುಗಳ ಮಾರ್ಗದರ್ಶನದಿಂದ ಪರಿವರ್ತನೆಯೆಂಬುದು ನೀವು ಎದುರಿಸಿ ಯಾವುದೆಲ್ಲವೂ ನೀವು ಅಲ್ಲವೋ ಅವುಗಳನ್ನು ನಾಶ ಮಾಡುವ ಪ್ರಕ್ರಿಯೆ. ಅದು ಒಂದು ವೇದನಾಮಯವಾದ ಪ್ರಕ್ರಿಯೆಯಾಗಿದ್ದು ಅವುಗಳನ್ನು ಒಬ್ಬ ಗುರುಗಳೊಂದಿಗೆ ಎದುರಿಸುತ್ತೀರ, ಏಕೆಂದರೆ ನಿಮ್ಮ ಹೃದಯಕ್ಕೆ ಸಮೀಪವಾಗಿಟ್ಟುಕೊಂಡ ಎಲ್ಲ ಸಂಗತಿಗಳನ್ನು ನೀವು ನೀವೇ ಎಂದುಕೊಂಡಿದ್ದ ಎಲ್ಲ ಸಂಗತಿಗಳನ್ನೂ ನೀವು ಬಿಡಬೇಕಾಗುವುದು.
ಗುರುಗಳು ನಿಮಗೆ ಏನೆಲ್ಲಾ ನೀವು ಅಲ್ಲ ಎಂದು ಸತತವಾಗಿ ತೋರಿಸುತ್ತಾರೆ ಮತ್ತು ಪ್ರತಿಯೊಂದೂ ಬೀಳಲು ಪ್ರಾರಂಭಿಸುತ್ತದೆ. ಅವರು ನಿಮ್ಮ ಅದುಮಿಟ್ಟ ಭಾವನೆಗಳು ಮೇಲಕ್ಕೆ ಬರಲು ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ. ನಿಮ್ಮ ಮೇಲೆ ಕೆಲಸ ಮಾಡಿ ಅನೇಕ ಜನ್ಮಗಳಿಂದ ನೀವು ಸಂಗ್ರಹಿಸಿಕೊಂಡಿದ್ದ ಕಲ್ಮಶಗಳನ್ನೆಲ್ಲಾ ಅವರು ದಹಿಸಲು ನೀವು ಕೇವಲ ಅನುವು ಮಾಡಿಕೊಡಬೇಕು.
ನಾನು ಜನಗಳಿಗೆ ಹೇಳುತ್ತಲೇ ಇರುತ್ತೇನೆ: ನೀವು ಓಡಿಹೋಗಲು ಪ್ರಯತ್ನಿಸಿದರೆ, ನೀವು ನನ್ನನ್ನು ಮತ್ತೊಂದು ಬಾರಿ ತಪ್ಪಿಸಿಕೊಳ್ಳುತ್ತೀರಿ. ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ. ನನ್ನ ಕೈಗಳನ್ನು ನಿಖರವಾಗಿ ನಿಮ್ಮೊಳಗೆ ಅಡಗಿರುವ ಗಡ್ಡೆಗಳು, ಅಂದರೆ ನಿಮ್ಮ ಅಹಂಭಾವದ ಗಡ್ಡೆಗಳ ಮೇಲೆ ಇಡುತ್ತೇನೆ. ಸುಮ್ಮನೆ ನಿಮ್ಮ ನಂಬಿಕೆಯನ್ನು ನನ್ನ ಮೇಲೆ ಇಡಿ ಮತ್ತು ತೆರೆದುಕೊಳ್ಳಲು ಧೈರ್ಯವನ್ನು ಹೊಂದಿ. ಆಗ ನಾನು ನಿಮ್ಮ ಎಲ್ಲಾ ಗಡ್ಡೆಗಳನ್ನೂ ಗುಣಪಡಿಸಬಲ್ಲೆನು. ಕೇವಲ ಗುರುಗಳಿಗೆ ತೆರೆದುಕೊಳ್ಳುವುದರಿಂದ, ನಿಮ್ಮ ಅಹಂಭಾವದ ಅರ್ಧ ಭಾಗವು ನಿಮ್ಮನ್ನು ಬಿಟ್ಟುಬಿಡುತ್ತದೆ. ಉಳಿದ ಭಾಗವನ್ನು ಅವರು ನೋಡಿಕೊಳ್ಳುತ್ತಾರೆ. ನೀವು ಕೇವಲ ನಿಮ್ಮ ಕೈಗಳನ್ನು ನೀಡಬೇಕು, ಗುರುಗಳು ನಿಮ್ಮನ್ನು ಮೇಲಕ್ಕೆ ಎತ್ತುತ್ತಾರೆ ಅಷ್ಟೆ.
ನೀವು ಒಬ್ಬ ಪ್ರಾಮಾಣಿಕ ಅನ್ವೇಷಕರಾಗಿದ್ದರೆ, ನೀವು ಪರಿವರ್ತನೆಗೆ ಸಿದ್ಧರಾಗಿದ್ದರೆ, ನೀವು ಗುರುಗಳಿಗೆ ತೆರೆದುಕೊಳ್ಳುತ್ತೀರ ಮತ್ತು ಸಂಗತಿಗಳು ತನಷ್ಟಕ್ಕೆ ತಾನೇ ಸಂಭವಿಸುತ್ತವೆ. ನೀವೊಬ್ಬ ಕೇವಲ ಅಂಗಡಿಗಳ ಗಾಜಿನ ಕಿಟಕಿಗಳಲ್ಲಿ ಜೋಡಿಸಿಟ್ಟ ವಸ್ತುಗಳನ್ನು ನೋಡಿ ಸಂತೋಷ ಪಡುವವರಾದರೆ, ಆಗ ಹೆಚ್ಚಿನದೇನೂ ಸಂಭವಿಸುವುದಿಲ್ಲ. ನೀವು ಒಬ್ಬ ಗುರುವಿನಿಂದ ಮತ್ತೊಬ್ಬ ಗುರುವಿನತ್ತ ಹೋಗುತ್ತಿರುವಿರಿ ಮತ್ತು ಅವರಿಂದ ಏನನ್ನೂ ಕಲಿಯುವುದಿಲ್ಲ.
ನೀವು ಧ್ಯಾನ ಮಾಡುವಾಗ, ತೀವ್ರವಾಗಿ ಧ್ಯಾನಮಾಡಿ. ಧ್ಯಾನದೊಂದಿಗೆ ತೀವ್ರತೆಯೂ ಇದ್ದರೆ, ಪರಿವರ್ತನೆಯು ಆಗಲೇಬೇಕು, ಅತಿಶ್ರೇಷ್ಠ ಪ್ರಜ್ಞೆಯು (Super Consciousness) ಆಗಲೇಬೇಕು ಸಾಮಾನ್ಯವಾಗಿ ನಾವು ತೀವ್ರತೆಯಿಂದ ಇದ್ದು ಧ್ಯಾನವನ್ನು ಕಳೆದುಕೊಳ್ಳುತ್ತೇವೆ, ಇಲ್ಲವೆ ಧ್ಯಾನವನ್ನು ತೀವ್ರತೆಯಿಲ್ಲದೆ ಮಾಡುತ್ತೇವೆ. ನಾವು ಒಂದನ್ನು ಹಿಡಿದು ಮತ್ತೊಂದನ್ನು ಕಳೆದುಕೊಳ್ಳುತ್ತೇವೆ. ನಾವು ನಿಜವಾಗಿಯೂ ಅರಳಬೇಕಾದರೆ ಎರಡನ್ನೂ ಹಿಡಿಯಲೇಬೇಕು.
ನಾವು ಎಷ್ಟು ಹೊತ್ತು ಧ್ಯಾನವನ್ನು ಮಾಡುತ್ತೇವೆನ್ನುವುದು ಮುಖ್ಯವಲ್ಲ, ಆದರೆ ಎಷ್ಟು ತೀವ್ರತೆಯಿಂದ ಮಾಡುತ್ತೀರಿ ಎನ್ನುವುದು ಮುಖ್ಯ. ಪ್ರಜ್ಞೆಯ ಗುಣವೇ ಮುಖ್ಯವಾದದ್ದು. ನೀವು ಒಳಮುಖವಾಗಿ ತಿರುಗಲು ಪ್ರಜ್ಞಾಪೂರಕ ನಿರ್ಧಾರವನ್ನು ತೆಗೆದುಕೊಂಡರೆ, ಅದೇ ನಿಮಗೆ ಧ್ಯಾನದ ತೀವ್ರತೆಯನ್ನು ನೀಡುತ್ತದೆ.
ಸರಿ...?
ಸ್ವಾಮೀಜಿ, ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದುಕೊಳ್ಳುತ್ತೇವೆ. ಇದೂ ಕೂಡ ನಮ್ಮ ಅಹಂಭಾವದ ಆಟವೇ?
ಹೌದು, ನಿಜವಾಗಿಯೂ! ನೀವು ವಿಷಯಕ್ಕೆ ಬಂದಿರಿ. ನೀವು ಬದುಕಿನಲ್ಲಿ ಒಂದು ಉದ್ದೇಶವಿದೆ ಎಂದುಕೊಂಡು ಆ ಉದ್ದೇಶದ ಹಿಂದೆ ಓಡಿದರೆ, ನೀವು ಅಹಂಭಾವ ಪ್ರವೃತ್ತಿಯವರು. ನೀವು ಅಸ್ತಿತ್ವದ ಸೌಂದರ್ಯವನ್ನು ಅರಿತುಕೊಂಡು ಅದರೊಂದಿಗೆ ಹರಿದರೆ, ಮತ್ತು ಜೀವನವೇ ಒಂದು ಉದ್ದೇಶವೆಂದೂ ಮತ್ತು ಗುರಿಗಳೆಲ್ಲವೂ ಕೇವಲ ಮಾಯೆಯೆಂದೂ ಅರ್ಥಮಾಡಿಕೊಂಡರೆ, ಆಗ ನೀವು ಅರಿವನ್ನು ಹೊಂದಿದಿರಿ, ಆಗ ನೀವು ಇನ್ನೆಷ್ಟೂ ಅಹಂಭಾವದವರಾಗಿರುವುದಿಲ್ಲ. ಜೀವನ 'ಗುರಿರಹಿತತೆ' (purposelessness) ಯನ್ನು ನೀವು ಅರ್ಥ ಮಾಡಿಕೊಳ್ಳುವಂತೆ ಮಾಡುವವನೇ ಗುರು. ನೀವು ಒಂದು ಗುರಿಯನ್ನು ಇಟ್ಟುಕೊಂಡು ಹುಡುಕಿದರೆ, ನೀವು ವಾಸ್ತವತೆಯನ್ನು ಕಳೆದುಕೊಳ್ಳುತ್ತೀರ, ಏಕೆಂದರೆ ನೀವು ಗುರಿಯ ಹಿಂದೆ ಓಡಿದರೆ, ವರ್ತಮಾನವನ್ನು ಕಳೆದುಕೊಳ್ಳುತ್ತೀರ ನೀವು ಅಸ್ತಿತ್ವವನ್ನು ಸುಮ್ಮನೆ ಕಳೆದುಕೊಳ್ಳುತ್ತೀರ.
ನೀವು ಜೀವನದ ಗುರಿ ರಹಿತತೆಯನ್ನು ಗ್ರಹಿಸಿದರೆ, ಒಂದು ಹೊಸ ಪ್ರಜ್ಞೆಯು ನಿಮ್ಮೊಳಗೆ ಉದಯಿಸಲಾರಂಭಿಸುತ್ತದೆ. ಆಗ ನೀವು ಇಷ್ಟು ಕಾಲವೂ ವಜ್ರಗಳೆಂದು ಕಾಪಾಡಿಕೊಂಡು ಬಂದದ್ದು ಕೇವಲ ಕಲ್ಲುಗಳೆಂದು ಅರ್ಥಮಾಡಿಕೊಳ್ಳುತ್ತೀರ. ನೀವು ಬಹಳ ದೊಡ್ಡದು ಅಂದುಕೊಂಡಿದ್ದ ವಸ್ತುಗಳೆಲ್ಲವೂ ಕೇವಲ ಗೊಂಬೆಗಳು ಎಂದು ಅರ್ಥವಾಗುತ್ತದೆ. ನೀವು ಹುಡುಕುತ್ತಿರುವ ನಿಜವಾದ ಆನಂದವು ಹಣವಲ್ಲ ಎಂದು ನೀವು ಅರ್ಥಮಾಡಿಕೊಳ್ಳುತ್ತೀರ. ನೀವು ಅದರಿಂದ ಆಚೆ ಹುಡುಕುತ್ತಿದ್ದೀರ.
ನೀವು ಜೀವನವು ಅಸ್ತಿತ್ವದ ಒಂದು ಮಹಾನ್ ದಿವ್ಯ ನಾಟಕ ಎಂದು ನೋಡಲು ಪ್ರಾರಂಭಿಸುತ್ತೀರ. ನೀವು ಆ ನಾಟಕವನ್ನು ಸಂತೋಷದಿಂದ ಅನುಭವಿಸುತ್ತಾ ನಿಮ್ಮ ಪಾತ್ರವನ್ನು ಬಹಳ ಸಂತೋಷದಿಂದ ಅಚ್ಚುಕಟ್ಟಾಗಿ ನಿರ್ವಹಿಸುತ್ತೀರ.
ನೋಡಿ, ನಾನು ನಿಮಗೆ ಹಣ ಸಂಪಾದನೆಯನ್ನು ನಿಲ್ಲಿಸಬೇಕು ಎಂದು ಹೇಳುತ್ತಿಲ್ಲವೆಂದು ಅರ್ಥಮಾಡಿಕೊಳ್ಳಿ. ಹಣವಿಲ್ಲದೆ ಜೀವನದಲ್ಲಿ ಏನೂ ಮಾಡಲಾಗುವುದಿಲ್ಲ. ಪ್ರತಿ ಕ್ಷಣವನ್ನೂ ಸಂತೋಷದಿಂದ ಬದುಕಿ ಮತ್ತು ಈ ಎಲ್ಲಾ ಪ್ರಕ್ರಿಯೆಗಳಲ್ಲಿ ನಿಮ್ಮ ಗುರಿಗಳು ಕೇವಲ ಪ್ರಾಸಂಗಿಕವೆಂದು ಮಾತ್ರ ನಾನು ಹೇಳುತ್ತಿರುವುದು. ಎಲ್ಲಾ ಸಂಗತಿಗಳು ಒಂದು ನಾಟಕವೆಂದೂ, ನೀವು ಅದರಲ್ಲಿ
ಒಬ್ಬ ಪಾತ್ರಧಾರಿಯೆಂದೂ ನೀವು ಅರ್ಥ ಮಾಡಿಕೊಳ್ಳಲೇಬೇಕು. ನೀವು ಗುರಿಗಳಿಗೆ ಅಂಟಿಕೊಂಡರೆ, ನೀವು ಪೂರ್ಣ ಕಲ್ಪನೆಯನ್ನೇ ಕಳೆದುಕೊಳ್ಳುತ್ತೀರ. ಒಂದು ನಾಟಕದಲ್ಲಿ ನಿಮ್ಮ ಪಾತ್ರಕ್ಕೆ ಆಗಲೀ ಅಥವಾ ಇನ್ನೊಂದು ಪಾತ್ರದವರೊಂದಿಗೆಯಾಗಲೀ ಅಥವಾ ಇನ್ನಾವುದಕ್ಕೇ ಆಗಲಿ ಅಂಟಿಕೊಂಡಿದ್ದರೆ ಅದು ಏನಾದರೂ ವಿವೇಕವಾಗುತ್ತದೆಯೇನು? ಇಲ್ಲ! ಅದು ಒಡನೆಯೇ ಹಾಸ್ಯಾಸ್ಪದವಾಗಿ ಕಾಣಿಸುತ್ತದೆ, ಅಲ್ಲವೆ? ಅದೇ ರೀತಿಯಲ್ಲಿ ಜೀವನವು ಕೂಡ ಒಂದು ಮಹತ್ತಾದ ನಾಟಕ, ಆದುದರಿಂದ ಅದಕ್ಕೆ ಯಾವುದೇ ರೀತಿಯಲ್ಲೂ ಅಂಟಿಕೊಂಡು ಇರಬೇಡಿ. ಕೇವಲ ನಿಮ್ಮ ಪಾತ್ರವನ್ನು ಆಡಿರಿ ಮತ್ತು ಇಡೀ ನಾಟಕವನ್ನು ಸಂತೋಷದಿಂದ ಅನುಭವಿಸಿರಿ.
ಜೀವನವು ಒಂದು ಗುರಿಯಲ್ಲವೆಂದೂ, ಅದು ಮಾರ್ಗವೇ ಎಂದು ಅರ್ಥ ಮಾಡಿಕೊಳ್ಳಿ. ನಿಮಗೆ ಒಂದು ಗುರಿ ಇದ್ದರೆ ನೀವು ಓಡುತ್ತೀರಿ. ನೀವು ಓಡಿದರೆ ನಿಮ್ಮ ಪಾದಗಳು ನೆಲವನ್ನು ಮುಟ್ಟುವುದಿಲ್ಲ. ನೀವು ನೆಲವನ್ನು ಮುಟ್ಟದಿದ್ದರೆ, ಪ್ರಪಂಚದ ಸೌಂದರ್ಯವನ್ನು ಕಳೆದುಕೊಳ್ಳುತ್ತೀರ. ನೀವು ಓಡಿದರೆ, ನೀವು ನಿಮ್ಮ ಕೆಳಗಿರುವ ಪ್ರಪಂಚಶಕ್ತಿಯ ಅನುಭವವನ್ನು ಅಕ್ಷರಶಃ ಕಳೆದುಕೊಳ್ಳುತ್ತೀರ. ನೀವು ಗುರಿಯನ್ನು ಬಿಟ್ಟರೆ, ಪ್ರಾಧಾನ್ಯತೆಯು ಆಗ ಮಾರ್ಗದ ಮೇಲಿರುತ್ತದೆ. ಮಾರ್ಗವು ಇರುವುದು ಸಂತೋಷವನ್ನು ಅನುಭವಿಸಲು; ಗುರಿಯು ತನ್ನಷ್ಟಕ್ಕೇ ನೋಡಿಕೊಳ್ಳಲ್ಪಡುವುದು.
ನೀವು ಜೀವನದ ಸಂಕಲ್ಪ ರಹಿತತೆಯನ್ನು ಅರ್ಥಮಾಡಿಕೊಂಡರೆ, ನೀವು ಬದುಕುವ ಅರ್ಥವನ್ನು ತಿಳಿದುಕೊಳ್ಳುತ್ತೀರ. ನೀವು ಇದನ್ನು ಅರ್ಥಮಾಡಿಕೊಳ್ಳುವ ತನಕ, ನೀವು ನಿಮ್ಮ ಜೀವನವನ್ನು ಪ್ರಜ್ಞಾರಹಿತ ಮಾದರಿಯಲ್ಲಿ ಜೀವಿಸುತ್ತೀರ. ನೀವು ಒಂದು ಯುಕ್ತವಾದ ಪ್ರಜ್ಞೆಯಿಲ್ಲದೆ ಜೀವಿಸುತ್ತೀರ. ನೀವು ಕೇವಲ ಗುರಿಯನ್ನು ಮಾತ್ರ ಗಮನಿಸುತ್ತಾ ಮತ್ತು ಜೀವನದ ಸೌಂದರ್ಯತೆಯನ್ನೇ ಗಮನಿಸದೆ ಒಂದು ಘನವಾದ ಅಹಂಭಾವದೊಂದಿಗೆ ಜೀವಿಸುತ್ತೀರ.
ಗುರಿಗಾಗಿ ನಿಮ್ಮ ಇಡೀ ಜೀವನವನ್ನು ತ್ಯಾಗ ಮಾಡುವುದು ಬದುಕುವ ಮಾರ್ಗವಲ್ಲ. ನೀವು ಇದೇ ರೀತಿ ಬದುಕಿದರೆ, ಒಮ್ಮೆ ನಿಮ್ಮ ಪ್ರತಿಯೊಂದು ಗುರಿಯನ್ನೂ ತಲುಪಿದಾಗ, ನೀವು ನಿಮ್ಮ ಇಡೀ ಜೀವನವನ್ನು ಇಂತಹ ಕ್ಷುಲ್ಲಕ ವಿಚಾರಗಳಿಗಾಗಿ ವ್ಯರ್ಥ ಮಾಡಿಕೊಂಡಿದ್ದಕ್ಕೆ ವಿಷಾದಿಸುತ್ತೀರಿ ಮಾತ್ರ. ಗುರಿಗಳನ್ನು ಬಿಟ್ಟು,
ಮಾರ್ಗವನ್ನು ಸಂತೋಷದಿಂದ ಅನುಭವಿಸಿ. ಪುನಃ ಪುನಃ ಈ ಬೋಧನೆಯ ಬಗ್ಗೆ ಧ್ಯಾನಿಸಿ. ಯಾವಾಗಲಾದರೂ ನಿಮಗೆ ಸತ್ಯವು ಉದಯವಾಗುತ್ತದೆ.
ಮತ್ತೊಂದು ವಿಷಯ: ಯಾವುದನ್ನೂ ನಿಮ್ಮ ಜೀವನದಿಂದ ಹೊರಗಿಡಬೇಡಿ ಮತ್ತು ನಿಮ್ಮ ಜೀವನದಲ್ಲಿ ಏನನ್ನೋ ಕಳೆದುಕೊಂಡಿರುವಿರೆಂದು ತಿಳಿದುಕೊಳ್ಳಲೇಬೇಡಿ. ಆಧ್ಯಾತ್ಮಿಕತೆ ಎಂದರೆ ಹೊರಗಿಡುವುದು ಎಂದು ಅಲ್ಲವೇ ಅಲ್ಲ; ಅದು ಯಾವಾಗಲೂ ಒಳಗಿಟ್ಟುಕೊಳ್ಳುವಂತಹದು. ನೀವು ನಿಮ್ಮ ಜೀವನದಿಂದ ಯಾವುದನ್ನಾದರೂ ಹೊರಗಿಟ್ಟರೆ, ನೀವು ಏನನ್ನಾದರೂ ಕಳೆದುಕೊಳ್ಳುತ್ತೀರಿ. ಅದಕ್ಕೆ ಬದಲು ಪ್ರತಿಯೊಂದನ್ನೂ ಕೂಡಿಸಿ ಸೇರಿಸಿಕೊಳ್ಳಿ. ಆಗ ನೀವು ಪರಿಪೂರ್ಣರಾಗುತ್ತೀರಿ. ನೀವು ಪರಿಪೂರ್ಣರಾದಾಗ ನೀವು ಪವಿತ್ರರಾಗುತ್ತೀರ! ನಿಮಗೆ ಕೆಲವು ವಸ್ತುಗಳು ಕುತೂಹಲವನ್ನು ಹುಟ್ಟಿಸದೇ ಇದ್ದರೆ, ಅದು ಬೇರೆಯ ವಿಚಾರವೇನೋ ಸರಿ. ಅವುಗಳನ್ನು ನಿಮ್ಮ ಜೀವನದೊಳಗೆ ಸೇರಿಸಿಕೊಳ್ಳಬೇಕೆಂದು ಚಿಂತಿಸಬೇಕಿಲ್ಲ. ಸುಮ್ಮನೆ ಅರಿವಿನಿಂದ ಕಾರ್ಯತತ್ಪರರಾಗಿರಿ ಮತ್ತು ಹರಿಯುತ್ತಲಿರಿ.
ಅರ್ಥಮಾಡಿಕೊಳ್ಳಿ: ವಿಜ್ಞಾನಿ ಎಂಬುವನು ಒಂದು ಸೂತ್ರವನ್ನು ಸೃಷ್ಟಿಸಿ ಅದಕ್ಕನುಗುಣವಾಗಿ ತಾನು ಹೊರ ಜಗತ್ತಿನಲ್ಲಿ ಕಂಡುಹಿಡಿದ ಏನನ್ನಾದರೂ ಸಂಗತಿಗಳನ್ನು ಮಿಕ್ಕವರು ಅನುಭವಿಸುವಂತೆ ಪುನರ್ ಉತ್ಪತ್ತಿ ಮಾಡುವವನು.
ಗುರು ಎನ್ನುವವನು ಒಂದು ಸೂತ್ರವನ್ನು ಸೃಷ್ಟಿಸಿ ತಾನು ಒಳ ಜಗತ್ತಿನಲ್ಲಿ ಅನುಭವಿಸಿದ ಕೆಲವು ಸಂಗತಿಗಳನ್ನು ಮಿಕ್ಕವರು ಅನುಭವಿಸುವಂತೆ ಪುನರುತ್ಪತ್ತಿ ಮಾಡುವವನು. ಅವನು ಒಂದು ಸೂತ್ರವನ್ನು ಸೃಷ್ಟಿಸಿ ತಾನು ಒಳ ಜಗತ್ತಿನಲ್ಲಿ ತನ್ನ ಪ್ರಜ್ಞೆಯಲ್ಲಿ ಅನುಭವಿಸಿದ ಆನಂದವನ್ನು ಮಿಕ್ಕವರು ಅನುಭವಿಸುವಂತೆ ಪುನರುತ್ಪತ್ತಿ ಮಾಡುವವನು.
ಈಗ ನಾನು ನಿಮಗೆ ಪರಮ ಆನಂದ ಅಥವಾ ನಿತ್ಯಾನಂದವನ್ನು ಸಾಧಿಸಲು ಒಂದು ಸೂತ್ರವನ್ನು ನೀಡುತ್ತೇನೆ. ಹೇಳಿ...?
ಸ್ವಾಮೀಜಿ, ನಮ್ಮ ಅಹಂಭಾವವನ್ನು ನಿರ್ನಾಮಗೊಳಿಸಲು ನಾವು ಹೇಗೆ ಮುಂದುವರಿಯಬೇಕು?
ಮೊದಲನೆಯದಾಗಿ, ನಿಮಗೆ ಯಾವುದೋ ಒಂದು ರೂಪದಲ್ಲಿ - ಚುರುಕಿನದಾಗಿರಬಹುದು ಅಥವಾ ಜಡವಾಗಿರಬಹುದು, ಅಹಂಭಾವವು
ಖಚಿತ ಪರಿಹಾರಗಳು
ಇರುತ್ತದೆಂದು ಸ್ಪಷ್ಟವಾಗಿ ತಿಳಿದುಕೊಳ್ಳಿ. ನಂತರ ಈ ವರೆಗೂ ಚರ್ಚಿಸಿದ ಯಾವ ವಿಧಗಳಿಂದ ಆ ಅಹಂಭಾವವು ತನ್ನಷ್ಟಕ್ಕೆ ಪ್ರಕಟಗೊಳ್ಳುತ್ತದೆ ಎಂದು ಅರ್ಥ ಮಾಡಿಕೊಳ್ಳಿ. ನಿಮ್ಮ ಎಲ್ಲ ಅಪರಾಧೀ ಮನೋಭಾವನೆ, ಆಸೆಗಳು, ಭಯ, ದೈನ್ಯತೆ, ಸ್ವಯಂ ಪ್ರತಿಷ್ಠೆ ಮುಂತಾದುವೆಲ್ಲವೂ ವಿವಿಧ ರೂಪದ ಅಹಂಭಾವಗಳು ನೀವು ಒಂದು ಘನವಾದ ‘ನಾನು’ ಮತ್ತು ‘ನನ್ನದು’ ಎಂದು ಭಾವಿಸುವುದರಿಂದ ಇದು ನಿಮ್ಮಲ್ಲಿ ಸಂಭವಿಸುತ್ತದೆ. ಒಮ್ಮೆ ಇದನ್ನು ನೀವು ಅರ್ಥಮಾಡಿಕೊಂಡ ಮೇಲೆ ನೀವು ಒಬ್ಬ ನೋಡುಗರಾಗಿರಿ. ಅದರಿಂದ ನೀವು ಇಡಿಯ ಜೀವನವೇ ಒಂದು ನಾಟಕ ಎಂದು ಅರ್ಥಮಾಡಿಕೊಳ್ಳುತ್ತೀರ. ಇದನ್ನು ಮಾಡುವುದರಿಂದ, ನಿಮ್ಮ ಘನವಾದ ಅಹಂ ಕರಗುವ ಅನುಭವವಾಗುತ್ತದೆ ಮತ್ತು ನಿಮ್ಮ ಅಹಂಭಾವವು ಕರಗುತ್ತದೆ.
ಇದು ಸಂಭವಿಸಲು ಪ್ರಾರಂಭವಾದಾಗ, ನಿಮ್ಮಷ್ಟಕ್ಕೆ ನೀವೇ ಅಸ್ತಿತ್ವದೊಂದಿಗೆ ಪ್ರತಿಸ್ಪಂದಿಸುತ್ತೀರ ಮತ್ತು ಎಲ್ಲವೂ ತಮ್ಮಷ್ಟಕ್ಕೇ ಪುನರ್ ವ್ಯವಸ್ಥೆಗೊಂಡು ನಿಮ್ಮ ಬದುಕು ನಿಮಗೆ ಸುಂದರವಾಗಿರುವಂತೆ ಮಾಡುತ್ತದೆ. ನಂತರ ನಿಮ್ಮ ಅಹಂಭಾವವನ್ನು ಕೊಲ್ಲುವುದೇ ಜೀವನದ ಏಕೈಕ ಉದ್ದೇಶವೆಂದುಕೊಂಡು ಬದುಕಿರಿ. ಅದನ್ನು ಯಾವುದೇ ರೀತಿಯಲ್ಲೂ ರಕ್ಷಿಸಬೇಡಿ. ನಿಮ್ಮ ಅಹಂಭಾವವನ್ನು ಕೊಲ್ಲಲು ಸದಾ ಸಿದ್ಧರಾಗಿರಿ. ನಿಮ್ಮ ಅಹಂಭಾವವನ್ನು ಕೊಲ್ಲಲು ಸಿದ್ಧರಿದ್ದರೆ, ನೀವು ಮುಕ್ತರಾಗಲು ಸಿದ್ಧವಾಗುತ್ತೀರ ಅಷ್ಟೆ.
ಸ್ವಾಮೀಜಿ, ನೀವು ಆಜ್ಞಾ ಚಕ್ರವು ಮುಗ್ಧತೆ ಮತ್ತು ಬುದ್ಧಿವಂತಿಕೆಯ ಜೊತೆ ಸಂಬಂಧವಿರುತ್ತದೆ ಎಂದು ಹೇಳಿದಿರಿ. ನೀವು ಮುಗ್ಧತೆ ಮತ್ತು ಬುದ್ಧಿವಂತಿಕೆಯನ್ನು ಹೇಗೆ ವಿವರಿಸುತ್ತೀರಿ?
ನೀವು ನಿಮ್ಮ ಮನಸ್ಸಿನ ಗಡಸಾದ ರಚನೆಯಿಂದ ಬಿಡಿಸಿಕೊಂಡು ಮುಕ್ತರಾದರೆ, ನೀವು ದ್ರವವಾಗಿ ಒಂದು ನದಿಯಂತೆ ಹರಿಯುತ್ತೀರ; ಆಗ ನೀವು ಬುದ್ಧಿವಂತರಾಗುತ್ತೀರ. ನೀವು ಅಂತರ್ಗತವಾಗಿ (lateral) ಯೋಚಿಸಲು ಸಾಧ್ಯವಾದರೆ, ನೀವು ಬುದ್ಧಿವಂತರಾಗುತ್ತೀರ. ನೀವು ಸ್ವಯಂಪ್ರೇರಿತರಾಗಿದ್ದರೆ, ನೀವು ಬುದ್ಧಿವಂತರು. ನಿಮ್ಮನ್ನು ಪ್ರತಿಭಟಿಸಲಾಗದಿದ್ದರೆ (challenge) ನೀವು ಬುದ್ಧಿವಂತರಾಗುತ್ತೀರ.
ಜೀವನವು ಒಂದು ನಾಟಕವೆಂದು ನಿಮಗೆ ತಿಳಿದರೆ ನೀವು ಬುದ್ಧಿವಂತರು. ಅಸ್ತಿತ್ವವು ಪರಮ ಜೀವ ಬಲ ಎಂದು ನೀವು ಅರಿತರೆ, ನೀವು ಬುದ್ಧಿವಂತರು. ನಿಮ್ಮ ಒಳ ನಿಶ್ಯಬ್ದತೆಯ ಬಗ್ಗೆ ನಿಮಗೆ ಅರಿವು ಮತ್ತು ಪ್ರಜ್ಞೆ ಇದ್ದರೆ ನೀವು ಬುದ್ಧಿವಂತರು.
ನೀವು ಮನಸ್ಸನ್ನು ಅನ್ವಯಿಸದೆ ಸ್ವಯಂ ಪ್ರೇರಣೆಯಿಂದ ನಕ್ಕರೆ, ನೀವು ಬುದ್ಧಿವಂತರು. ನೀವು ಕೇವಲ ನಿಮ್ಮ ಅಸ್ತಿತ್ವದಿಂದ ಚೈತನ್ಯವನ್ನು ಪಸರಿಸುತ್ತಿದ್ದರೆ, ನೀವು ಬುದ್ಧಿವಂತರು. ನೀವು ಎಲ್ಲಿಯೂ ಬಹಳ ಸಮಯ ಸಿಕ್ಕಿಹಾಕಿಕೊಳ್ಳದಿದ್ದರೆ, ಮತ್ತು ನಿಮ್ಮನ್ನು ಸುಲಭವಾಗಿ ಪ್ರತಿಭಟಿಸಲಾಗದಿದ್ದರೆ, ನೀವು ಬುದ್ಧಿವಂತರು. ನಿಮ್ಮ ಅಹಂಭಾವವನ್ನು ನೀವು ಪ್ರಜ್ಞೆಯಿಂದ ಅನುಭವಿಸಬಲ್ಲವರಾದರೆ, ನೀವು ಬುದ್ಧಿವಂತರು. ನೀವು ಶ್ರೀಮಂತರಾಗಿರುವುದೆಂದರೆ ನಿಮ್ಮ ಹಣದಿಂದಲ್ಲ ಆದರೆ ನಿಮ್ಮ ಅಸ್ತಿತ್ವದಿಂದ ಎಂದು ನೀವು ಅರಿತರೆ ನೀವು ಬುದ್ಧಿವಂತರಾಗುತ್ತೀರ.
ನೀವು ಒಬ್ಬ ಗುರುವನ್ನು ಗುರುತಿಸಿದರೆ, ನೀವು ಬುದ್ಧಿವಂತರು. ನೀವು ಗುರುವಿಗೆ ನಿಮ್ಮ ಅಹಂಭಾವವನ್ನು ಬಿಡಲು ತಯಾರಿದ್ದರೆ, ನೀವು ಬುದ್ಧಿವಂತರು. ನೀವು ಜೀವನದ ಆಟವನ್ನು ಪ್ರತಿಕ್ಷಣವೂ ಆನಂದದಿಂದ ಅನುಭವಿಸುತ್ತಾ ಆಡಿದರೆ, ನೀವು ಬುದ್ಧಿವಂತರು!
ಒಂದು ಚಿಕ್ಕ ಕಥೆ:
ಮೂವರು ವ್ಯಕ್ತಿಗಳಿಗೆ ಒಂದೇ ಪ್ರಶ್ನೆಯನ್ನು ಕೇಳಲಾಯಿತು, "ನೀವು ಬದುಕಿರಲು ಇನ್ನು ಕೇವಲ 10 ದಿನಗಳ ಮಾತ್ರ ಇವೆ ಎಂದು ನಿಮಗೆ ಹೇಳಿದರೆ, ನೀವು ಏನು ಮಾಡುತ್ತೀರಿ?" ಎಂದು.
ಮೊದಲನೆಯ ವ್ಯಕ್ತಿ ಹೇಳಿದ, "ನಾನು ನನ್ನ ಎಲ್ಲ ಕೆಲಸಗಳನ್ನೂ ವ್ಯವಸ್ಥೆಯಲ್ಲಿ ಇಟ್ಟು, ಎಲ್ಲಾ ತುದಿಗಳನ್ನೂ ಕಟ್ಟುತ್ತೇನೆ. ಆಗ ನನ್ನ ಕುಟುಂಬವು ನಾನು ಹೋದ ಮೇಲೆ ಕಷ್ಟಪಡುವುದಿಲ್ಲ. ನಂತರ ನಾನು ಶಾಂತಿಯಿಂದ ನಿರ್ಗಮಿಸುತ್ತೇನೆ" ಎಂದು.
ಎರಡನೆಯ ವ್ಯಕ್ತಿ ಹೇಳಿದ, "ನಾನು ಮುಂಚೆ ಮಾಡದಿದ್ದಂತಹ ಕಾರ್ಯಗಳನ್ನು ಮಾಡುತ್ತಾ ನನ್ನ ಜೀವನವನ್ನು ಪರಮಾವಧಿಯಾಗಿ ಸಂತೋಷವನ್ನು ಅನುಭವಿಸುತ್ತೇನೆ" ಎಂದು.
ಮೂರನೆಯ ವ್ಯಕ್ತಿ ಹೇಳಿದ, "ನಾನು ಇನ್ನೊಬ್ಬ ವೈದ್ಯನ ಸಲಹೆ ಕೇಳುತ್ತೇನೆ" ಎಂದು.
(ನಗೇ!)
ಇದು ಬುದ್ಧಿವಂತಿಕೆ! ನೀವೇ ನಿಮಗಾಗಿ ನಿರ್ಮಿಸಿಕೊಂಡ ಗಟ್ಟಿಯಾದ ಮತ್ತು ಚಿರಪರಿಚಿತವಾದ ಹಾದಿಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಬದಲು, ನೀವು ಸ್ವಯಂ
ಸ್ಪೂರ್ತಿಯಿಂದ ಇರಬಲ್ಲಿರಾದರೆ, ನೀವು ದ್ರವವಾಗಿಯೂ ಮತ್ತು ಬುದ್ಧಿವಂತರಾಗಿಯೂ ಇರುತ್ತೀರ.
ಇನ್ನೊಂದು ಚಿಕ್ಕ ಕಥೆ:
ಒಂದು ಆಸ್ಪತ್ರೆಯಲ್ಲಿ ಟೆಲಿಫೋನ್ ಗಂಟೆ ಮಾಡಿತು ಮತ್ತು ದಾದಿಯು ಉತ್ತರಿಸಿದಳು.
ಒಂದು ಧ್ವನಿಯು ಕೇಳಿಸಿತು, “10ನೇ ಕೊಠಡಿಯಲ್ಲಿರುವ ಚಂದಾಬಸುರವರು ಹೇಗಿದ್ದಾರೆಂದು ಕೇಳಬಹುದೇ?” ಎಂದು.
ದಾದಿಯು ಉತ್ತರಿಸಿದಳು “ಅವರು ಉತ್ತಮವಾಗಿದ್ದಾರೆ ಮತ್ತು ನಾಳೆ ಸಂಜೆ ಅವರನ್ನು ಬಿಡುಗಡೆ ಮಾಡಬೇಕೆಂದುಕೊಂಡಿದ್ದೇವೆ. ನಾನು ಯಾರ ಜತೆ ಮಾತನಾಡುತ್ತಿದ್ದೇನೆ?” ಎಂದು.
ಆ ಧ್ವನಿಯು ಮರುತ್ತರಿಸಿತು, “ನಾನು ಚಂದಾ ಬಸು. ನೀವು ಈ ಜಾಗದಲ್ಲಿ ರೋಗಿಗಳಿಗೆ ಏನನ್ನೂ ಹೇಳುವುದಿಲ್ಲ” ಎಂದು.
(ಜೋರಾದ ನಗೆ!)
ಇದೇ ಬುದ್ಧಿವಂತಿಕೆ. ನೀವು ಯಾವುದೇ ಅಂಶಕ್ಕೆ ಬಹುಕಾಲ ಅಂಟಿಕೊಳ್ಳದಿದ್ದರೆ, ನೀವು ಬಹುಕಾಲ ಪ್ರತಿಭಟನೆಯನ್ನು ಎದುರಿಸುತ್ತಾ ಇರಬೇಕಿಲ್ಲದಿದ್ದರೆ, ನೀವು ಬುದ್ಧಿವಂತರು.
ಈಗ ಇದನ್ನು ಕೇಳಿ:
ಒಬ್ಬ ವ್ಯಕ್ತಿಯು ತನ್ನ ಪಟ್ಟಣದ ಸ್ನೇಹಿತನನ್ನು ತನ್ನ ಹೊಲಕ್ಕೆ ಕರೆದುಕೊಂಡು ಹೋದನು.
ಅವನಿಗೆ ಸುತ್ತಲೂ ತೋರಿಸಿ ನಂತರ ಕೇಳಿದನು “ನೀನು ಇಷ್ಟೊಂದು ಕುರಿಗಳನ್ನು ನೋಡಿ ವಿಸ್ಮಯ ಪಟ್ಟಿರಬೇಕು! ನೀನು ಅವುಗಳನ್ನು ಎಣಿಸಲು ಪ್ರಯತ್ನಿಸಿದೆಯಾ?” ಎಂದು.
ಆ ಸ್ನೇಹಿತನು ಉತ್ತರಿಸಿದನು “ಖಂಡಿತವಾಗಿ, ಅಲ್ಲಿ 300 ಇದ್ದವು” ಎಂದು.
ಆಶ್ಚರ್ಯ ಹೊಂದಿದ ಆ ವ್ಯಕ್ತಿಯು ಕೇಳಿದನು “ಅವುಗಳನ್ನು ಎಣಿಸಲು ಹೇಗೆ ನಿಭಾಯಿಸಿದೆ” ಎಂದು.
ಆ ಸ್ನೇಹಿತನು ಉತ್ತರಿಸಿದನು “ಓಹ್, ಅದು ಬಹಳ ಸುಲಭವಾಗಿತ್ತು. ನಾನು ಆವುಗಳ ಕಾಲುಗಳನ್ನು ಎಣಿಸಿದೆ ಮತ್ತು ಅವುಗಳನ್ನು ನಾಲ್ಕರಿಂದ ಭಾಗಿಸಿದೆ'' ಎಂದು.
ಇದು ಬುದ್ಧಿವಂತಿಕೆಯಲ್ಲ! ಇದು ಜೀವನದಲ್ಲಿನ ಸರಳ ಸಂಗತಿಗಳನ್ನು ನಾವು ಹೇಗೆ ಜಟಿಲಗೊಳಿಸುತ್ತೇವೆ ಎಂದು ತೋರಿಸುತ್ತದೆ.
ನಂತರ, ಮುಗ್ಧತೆಯ ಬಗ್ಗೆ ಬಂದಾಗ: ಮುಗ್ಧತೆಯನ್ನು ಅರ್ಥಮಾಡಿಕೊಳ್ಳಲು ಮಕ್ಕಳೇ ಅತ್ಯುತ್ತಮ ಮಾರ್ಗ. ಅವರು ಏನನ್ನೂ ತಿದ್ದದೆ ಹಾಗೆಯೇ ಹೇಳುತ್ತಾರೆ. ಅವರು ಲೆಕ್ಕ ಹಾಕುವುದಿಲ್ಲ; ಅವರು ತಮ್ಮ ನಡುವಳಿಕೆಯಲ್ಲಿ ಅಷ್ಟು ಪರಿಪೂರ್ಣರಾಗಿರುತ್ತಾರೆ, ಕೃತ್ರಿಮತೆಯಿಂದಾಗಲೀ ಅಥವಾ ಕಪಟತನ ದಿಂದಾಗಲೀ ಇರುವುದೇ ಇಲ್ಲ. ಇದೇ ಮುಗ್ಧತೆ.
ಆದರೆ ನಾವು ಅವರಿಗೆ ಏನು ಮಾಡುತ್ತೇವೆ? ನಾವು ಅವರಿಗೆ ಅವರ ಪದಗಳನ್ನು ತಿದ್ದಲು ಹೇಗೆ ಯುಕ್ತಿಯಿಂದ ನಿಭಾಯಿಸಲು ನಮಗೆ ಸಾಧ್ಯವಾದಷ್ಟೂ ಪ್ರಯತ್ನಿಸುತ್ತೇವೆ. ನಾವು ಅವರಿಗೆ ಅವರ ಹೃದಯದಿಂದ ಅವರ ಮನಸ್ಸಿಗೆ ಬದಲಾವಣೆ ಹೊಂದಲು ಹೇಳಿಕೊಡುತ್ತೇವೆ. ಅದರಿಂದ ಅವರ ಶುದ್ಧ ಮುಗ್ಧತೆಯು ಮನಸ್ಸಿನಿಂದ ಕಲುಷಿತವಾಗುತ್ತದೆ.
ಒಂದು ಚಿಕ್ಕ ಕಥೆ:
ಒಬ್ಬ ಹುಡುಗನಿಗೆ ಅವನ ಶ್ರೀಮಂತ ಚಿಕ್ಕಮ್ಮ ಆ ದಿನ ಅವರ ಮನೆಗೆ ಬರುತ್ತಿರುವುದಾಗಿಯೂ ಮತ್ತು ಅವನು ಉತ್ತಮ ನಡುವಳಿಕೆಯಿಂದ ಇರಬೇಕೆಂದೂ ಹೇಳಲಾಗಿತ್ತು.
ಚಿಕ್ಕಮ್ಮನು ಆಗಮಿಸಿದಳು ಮತ್ತು ಒಂದು ಭಾರಿ ಔತಣವನ್ನು ಅವಳಿಗೆ ಬಡಿಸಲಾಯಿತು.
ಆ ಹುಡುಗನು ಅವಳ ಭೋಜನದ ವೇಳೆ ಅವಳನ್ನು ನಿರಂತರವಾಗಿ ನೋಡುತ್ತಿದ್ದು ಕೊನೆಯಲ್ಲಿ “ಚಿಕ್ಕಮ್ಮ, ನಿನ್ನ ತಂತ್ರವನ್ನು (trick) ಯಾವಾಗ ತೋರಿಸುತ್ತೀಯಾ?'' ಎಂದು ಕೇಳಿದನು.
ಆ ಮಹಿಳೆಯು ಕೇಳಿದಳು, “ಏನು ತಂತ್ರ, ನನ್ನ ಅಕ್ಕರೆಯ ಹುಡುಗನೇ?'' ಎಂದು.
ಆ ಹುಡುಗನು ಉತ್ತರಿಸಿದನು “ನೀನು ಒಂದು ಮೀನಿನ ರೀತಿಯಂತೆ ಕುಡಿಯುತ್ತೀಯ ಎಂದು ನನ್ನ ತಂದೆ ಹೇಳಿದ್ದರು” ಎಂದು.
(ನSecondary!)
ಮಕ್ಕಳು ತಮಗೆ ಅನಿಸಿದ್ದನ್ನು ಸರಳವಾಗಿ ಮಾತನಾಡುತ್ತಾರೆ. ಅವರು ಯಾವ ನಿರ್ಬಂಧವೂ ಇಲ್ಲದೆ ಸ್ಪಷ್ಟವಾಗಿ ಹೇಳುತ್ತಾರೆ. ಆದುದರಿಂದಲೇ ಅವರನ್ನು ಗಮನಿಸುವುದು ಅಷ್ಟೊಂದು ಸಂತಸದಾಯಕವಾಗಿರುತ್ತದೆ. ಆದುದರಿಂದಲೇ ಅವರನ್ನು ಕಂಡು ನಾವೆಲ್ಲರೂ ಸಂತೋಷಪಡುತ್ತೇವೆ. ಅವರ ಮುಗ್ಧತೆಯು ನಮ್ಮನ್ನು ಆಕರ್ಷಿಸುತ್ತದೆ. ಆದರೆ ಇದನ್ನು ನಾವು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಅವರಿಗೆ ಕಪಟತನದಿಂದಿರಲು, ಮತ್ತು ಯುಕ್ತಿಯಿಂದ ನಿಭಾಯಿಸುವುದನ್ನು ಹೇಳಿಕೊಡುತ್ತೇವೆ. ಇದನ್ನೇ ನಾವು ನಿರಂತರವಾಗಿ ಮಾಡುತ್ತಿರುವುದು.
ಒಬ್ಬ ಸಣ್ಣ ಹುಡುಗನು ತನ್ನ ಅಜ್ಜನ ಬಳಿ ಹೋಗಿ ಕೇಳಿದನು, “ತಾತ, ನೀವು ನಿಜವಾಗಿಯೂ ಒಂದು ಕಪ್ಪೆಯನ್ನು ಅನುಸರಿಸಬಲ್ಲಿರಾ?” ಎಂದು.
ಅಜ್ಜನಿಗೆ ತುಂಬಾ ಆಶ್ಚರ್ಯವಾಗಿ ಕೇಳಿದನು, “ಏಕೆ ಕೇಳುವೆ?” ಎಂದು.
ಆ ಹುಡುಗನು ಉತ್ತರಿಸಿದನು “ಗೊಟಕ್ ಎಂದರೆ ನಮಗೆ ಒಂದು ಸಣ್ಣ ಐಶ್ವರ್ಯವೇ ಸಿಗುತ್ತದೆ ಎಂದು ನನ್ನ ಅಪ್ಪ ಅಮ್ಮ ಹೇಳುತ್ತಿದ್ದುದನ್ನು ನಾನು ಕೇಳಿಸಿಕೊಂಡೆ” ಎಂದು.
(ನಗೆ!)
ನಾವು ಸದಾಕಾಲವೂ ಕಪಟಿಗಳಾಗಿ ಇರುತ್ತೇವೆ. ನಾವು ಯಾವ ನಿರ್ಬಂಧವೂ ಇಲ್ಲದೆ ಸ್ಪಷ್ಟವಾಗಿ ಹೇಳುವುದೇ ಇಲ್ಲ. ನಾವು ಯೋಚಿಸುವುದು ಒಂದು, ಮಾತನಾಡುವುದು ಇನ್ನೊಂದು. ನಾವು ಇದರಿಂದ ಅಷ್ಟೊಂದು ಕುರೂಪಿಗಳಾಗುತ್ತೇವೆ. ನಾವು ನಮ್ಮ ಮುಗ್ಧತೆಯನ್ನು ಸುಮ್ಮನೆ ಕಳೆದುಕೊಂಡಿದ್ದೇವೆ. ಮಕ್ಕಳು ಕಪಟಿಗಳಲ್ಲ. ಅವರು ಅಷ್ಟೊಂದು ಸ್ವಾಭಾವಿಕವಾಗಿ ಇರುತ್ತಾರೆ. ಅವರು ಸುಂದರವಾಗಿ ಇರುತ್ತಾರೆ, ಏಕೆಂದರೆ ಅವರು ಯಾವ ನಿರ್ಬಂಧವೂ ಇಲ್ಲದೆ ಸ್ಪಷ್ಟವಾಗಿ ಮಾತನಾಡುತ್ತಾರೆ.
ಅಹಂಭಾವವನ್ನು ಕಳಚಿಕೊಳ್ಳುವುದು
ಇನ್ನೊಂದು ಚಿಕ್ಕ ಕಥೆ:
ಒಬ್ಬ ತಾಯಿಯು ತನ್ನ ಮಗುವನ್ನು ಒಂದು ದಿನಕ್ಕಾಗಿ ತನ್ನ ಸ್ನೇಹಿತೆಯ ಬಳಿ ಬಿಡುತ್ತಿದ್ದಳು.
ಅವಳು ತನ್ನ ಮಗುವಿಗೆ ಸಂಜೆ ಹಿಂದಿರುಗಿ ಬರುವ ಸಮಯದಲ್ಲಿ ಆ ಸ್ನೇಹಿತೆಗೆ ಧನ್ಯವಾದಗಳನ್ನು ಹೇಳಲು ಜ್ಞಾಪಕದಲ್ಲಿಟ್ಟುಕೊಂಡಿರಲು ಹೇಳಿದಳು.
ಆ ಮಗುವು ಸಂಜೆ ಮನೆಗೆ ಹಿಂದಿರುಗಿ ಬಂದಿತು. ತಾಯಿಯು ತನ್ನ ಮಗುವನ್ನು ಆ ಸ್ನೇಹಿತೆಗೆ ಧನ್ಯವಾದಗಳನ್ನು ಹೇಳಿದೆಯಾ ಎಂದು ಕೇಳಿದಳು.
ಆ ಮಗುವು ಉತ್ತರಿಸಿತು, "ನಾನು ಮಾಡಲಿಲ್ಲ ಏಕೆಂದರೆ ಆ ಇನ್ನೊಂದು ಹುಡುಗಿಯು ಅವಳಿಗೆ ಧನ್ಯವಾದಗಳನ್ನು ಹೇಳಿದಾಗ, ಅವಳು ಹೇಳಿದಳು, 'ಅದನ್ನು ಹೇಳಬೇಕಿಲ್ಲ' ಎಂದು.
ಹೀಗೆಯೇ ಮಕ್ಕಳಿರುವುದು. ನಾವು ಅವರಿಗೆ ಮೂಲ ವಿಷಯಗಳಾದ ಕೃತಜ್ಞತೆ ಮುಂತಾದುವುಗಳನ್ನು ಹೇಳಿಕೊಡಬೇಕಾಗಿರುವುದು ನಮ್ಮ ಕರ್ತವ್ಯವೇನೋ ಸರಿ, ಆದರೆ ನಾನು ನಿಮಗೆ ಅರ್ಥಮಾಡಿಸಲು ಪ್ರಯತ್ನಿಸುತ್ತಿರುವುದು ಏನೆಂದರೆ ನಾವು ಮಕ್ಕಳನ್ನು ಕಪಟಿಗಳನ್ನಾಗಿ ಮಾಡಬಾರದು ಎಂದು. ಅವರು ಆಟವನ್ನು ಅರ್ಥಮಾಡಿಕೊಳ್ಳಲಿ, ಮತ್ತು ಅದನ್ನು ಅರಿವಿನಿಂದ ಆಡಲಿ; ಅಹಂಭಾವವಿಲ್ಲದೆ ಕೇವಲ ಅರಿವಿನಿಂದ ಮಾತ್ರ ಆಡಲಿ. ಅವರಿಗೆ ಮೂಲ ನಿಯಮಗಳನ್ನು ಮತ್ತು ಬುದ್ಧಿವಂತಿಕೆಯನ್ನು ಅವರೇ ವಿವೇಚಿಸಿಕೊಳ್ಳುವುದಕ್ಕಾಗಿ ಬಿಡಿ.
ಒಂದು ವಿಷಯ: ಮಗುವಿನ ಮುಗ್ಧತೆಯು ಅಜ್ಞಾನದ ಕಾರಣದಿಂದ ಇರುತ್ತದೆ. ಮುಗ್ಧತೆಯು ಮಗುವಿನಲ್ಲಿ ಇರಲೇಬೇಕು, ಏಕೆಂದರೆ ಅದು ಇನ್ನೂ ಸಾಮಾಜಿಕ ನಿಬಂಧನೆಗಳಿಂದ ಪ್ರಭಾವಿತವಾಗಿಲ್ಲ. ಆದರೆ ಒಮ್ಮೆ ನಿಬಂಧನೆಗಳು ಆಗಲು ಆರಂಭವಾದರೆ ಮತ್ತು ತಿಳುವಳಿಕೆಯನ್ನು ಗಳಿಸಿದರೆ, ಮಗುವು ಮುಗ್ಧತೆಯನ್ನು ಕಳೆದುಕೊಳ್ಳುತ್ತದೆ. ಆದರೆ ಆ ಮಗುವು ಆಳವಾದ ಅರಿವಿನಿಂದ ವರ್ಷಾನುಗಟ್ಟಲೆಯಿಂದ ಕಳೆದುಕೊಂಡ ಮುಗ್ಧತೆಯೊಂದಿಗೆ ಪುನರ್ ಸಂಬಂಧವನ್ನು ಹೊಂದಬಹುದು. ಪುನರ್ಲಭಿಸಿದ ಮುಗ್ಧತೆಯು ನಿಜವಾದ ಮುಗ್ಧತೆ, ಏಕೆಂದರೆ ಈ ಮುಗ್ಧತೆಯು ಈಗ ಅಜ್ಞಾನದಿಂದ ಬಂದಿದ್ದಲ್ಲ, ಅದು ಆಳವಾದ ತಿಳುವಳಿಕೆಯಿಂದ ಬಂದಿದೆ.
ಮಕ್ಕಳ ಮುಗ್ಧತೆಗೂ ಮತ್ತು ಗುರುಗಳ ಮುಗ್ಧತೆಗೂ ಅದೇ ವ್ಯತ್ಯಾಸ, ಪ್ರಾಪಂಚಿಕ ತಿಳುವಳಿಕೆಯು ಮುಗ್ಧತೆಯನ್ನು ಹತ್ತಿಕ್ಕಿ ಅಹಂಭಾವವನ್ನು ಪೋಷಿಸುತ್ತದೆ. ಆದರೆ ಬುದ್ಧಿವಂತಿಕೆ ಮತ್ತು ಅರಿವಿಕೆಯು ತಿಳುವಳಿಕೆಯನ್ನು ಪಕ್ಕಕ್ಕೆ ಹಾಕಿ, ಮುಗ್ಧತೆಯನ್ನು ಮತ್ತೊಮ್ಮೆ ಹೊರಕ್ಕೆ ತರುತ್ತದೆ. ಇದು ಸಂಭವಿಸಿದಾಗ, ನೀವು ದಾರಿಯನ್ನು ಕಂಡುಕೊಂಡಿರಿ.
ಸರಿ...?
ಸ್ವಾಮೀಜಿ, ನಾವು ದೇವರೊಂದಿಗೆ ಹೇಗೆ ಸಂಬಂಧ ಕಲ್ಪಿಸಬಹುದು?
ನೀವು ಸಂಬಂಧ ಕಲ್ಪಿಸಲು ದೇವರು ಯಾವುದೇ ಬೇರೆಯ ಅಸ್ತಿತ್ವ ಉಳ್ಳವನಲ್ಲ, ಅದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಅವನೇನು ನಿಮ್ಮ ತಲೆಗಳ ಮೇಲೆ ಸ್ವರ್ಗ ಎನ್ನುವ ಜಾಗದಲ್ಲಿ ಕುಳಿತುಕೊಂಡು ನೀವು ಸಂಬಂಧ ಕಲ್ಪಿಸುವುದನ್ನೇ ಕಾಯುತ್ತಾ ಇರುವುದಿಲ್ಲ. ಅವನು ಈ ವಿಶ್ವದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಇರುತ್ತಾನೆ. ಪ್ರತಿಯೊಂದೂ ಅವನಿಂದ ಸೃಷ್ಟಿಸಲ್ಪಟ್ಟಿದೆ.
ಅವನೇ ಸೃಷ್ಟಿಕರ್ತ, ಸೃಷ್ಟಿ ಮತ್ತು ಸೃಷ್ಟಿಸಲ್ಪಟ್ಟವನು. ಅವನೇ ಅನುಭವ ಮಾಡುವವನು, ಅನುಭವಸ್ಥನು ಮತ್ತು ಅನುಭವ. ಅಸ್ತಿತ್ವಕ್ಕೆ ನಾವು ಕೊಟ್ಟಿರುವ ಹೆಸರು ಎಂದರೆ ದೇವರು ಅಷ್ಟೆ. ನೀವು ಇದನ್ನು ಅರ್ಥ ಮಾಡಿಕೊಂಡರೆ, ನೀವು ದೇವರನ್ನು ಅನುಭವಿಸಲು ಪ್ರಾರಂಭಿಸುತ್ತೀರಿ, ಮತ್ತು ಆಗ ದೇವರೊಂದಿಗೆ ಸಂಬಂಧ ಕಲ್ಪಿಸುವ ಪ್ರಶ್ನೆಯೇ ಇರುವುದಿಲ್ಲ.
ನಾನು ದೇವರೊಂದಿಗೆ ಹತ್ತಿರವಿರುವ ಭಾವನೆ ಇದೆಯೇ ಎಂದು ಜನಗಳು ನನ್ನನ್ನು ಕೇಳುತ್ತಾರೆ. ನಾನು ಅವರಿಗೆ ನಾನೇ ದೇವರು ಎಂದು ಹೇಳುತ್ತೇನೆ! ನಾನು ಅವರೂ ಕೂಡ ದೇವರು ಎಂದು ಹೇಳುತ್ತೇನೆ! ಆದರೆ ಅವರು ಅದನ್ನು ಒಪ್ಪಿಕೊಳ್ಳುವುದಿಲ್ಲವೆಂಬುದೂ ಸರಿ. ಅವರು ನನ್ನನ್ನು ದೇವರಿಗೆ ಹತ್ತಿರವಾಗುವುದು ಎಂದು ಕೇಳುತ್ತಾರೆ. ಹತ್ತಿರ ಎಂದರೇನೆ ಒಂದು ಸಣ್ಣ ಅಂತರ ನಿಮ್ಮನ್ನೂ ಮತ್ತು ದೇವರನ್ನೂ ಬೇರ್ಪಡಿಸುತ್ತಿದೆ ಎಂದು ಅರ್ಥ. ನಾನು ಹೇಳುತ್ತಿರುವುದು ನೀವೇ ದೇವರೆಂದು! ಆಗ ಹತ್ತಿರವಾಗುವುದು ಎಂಬ ಪ್ರಶ್ನೆಯು ಎಲ್ಲಿದೆ?! ನಾನು ಏನು ಹೇಳಲು ಪ್ರಯತ್ನಿಸುತ್ತಿದ್ದೇನೆ ಎಂಬುದು ನಿಮಗೆ ಅರ್ಥವಾಗುತ್ತಿದೆಯೇ? ಅದು ಅಷ್ಟು ಸರಳ! ದೇವರು ಎಂಬುದು ಅಸ್ತಿತ್ವಕ್ಕೆ ನೀವು ಕೊಟ್ಟ ಹೆಸರಲ್ಲದೆ ಬೇರೇನೂ ಅಲ್ಲ, ಮತ್ತು ನೀವು ಅಸ್ತಿತ್ವದ ಒಂದು ಭಾಗ.
ಯಾವಾಗ ನೀವು ಪ್ರಪಂಚಶಕ್ತಿಯೊಂದಿಗೆ ಶ್ರುತಿಗೂಡಿಸಿ ಬದುಕಿದರೆ, ಯಾವಾಗ ನೀವು ಪ್ರಪಂಚಶಕ್ತಿಯೊಂದಿಗೆ ನಿಮ್ಮ ಸಂಬಂಧವನ್ನು ಕಂಡುಕೊಂಡರೆ, ಆಗ ನೀವು ದೇವರು ಅಷ್ಟೆ. ಯಾವಾಗ ನೀವು ನಿಮ್ಮ ಹಾದಿಯಲ್ಲಿ ಬರುವ ಯಾವುದೇ ವಸ್ತು ಮತ್ತು ಯಾವುದೇ ವ್ಯಕ್ತಿಯ ಜೊತೆ ಆತ್ಮೀಯ ಭಾವನೆಯಿಂದ ಬದುಕುತ್ತೀರೋ, ಆಗ ನೀವು ಶುದ್ಧಪ್ರಜ್ಞೆಯಾಗುತ್ತೀರ (pure consciousness) ಯಾವಾಗ ನೀವು, ನಿಮ್ಮ ಸುತ್ತಲೂ ಇರುವ ಜನರೊಂದಿಗೆ, ಅವರು ನಿಮಗೆ ಗೊತ್ತಿರಲಿ ಇಲ್ಲವೇ ಇಲ್ಲದಿರಲಿ, ಅದೇ ಪ್ರೀತಿಯ ಭಾವನೆಯು ಉಂಟಾದರೆ, ನಿಮ್ಮಲ್ಲಿ ನೀವು ದೇವರನ್ನು ಅನುಭವಿಸುತ್ತಿದ್ದೀರ. ನೀವು ದೇವರ ಪ್ರಜ್ಞೆಯಿಂದ ಎಷ್ಟು ದೂರದಲ್ಲಿದ್ದೀ ರೆಂಬುದನ್ನು ಹೇಳಲು ಇರುವ ಒಂದು ಸರಳ ಅಳತೆಗೋಲು.
ನೀವು ಪ್ರಪಂಚಶಕ್ತಿಯೊಂದಿಗೆ ಶ್ರುತಿಗೆ ಹೊಂದಿಕೊಳ್ಳಲು ಪ್ರಾರಂಭಿಸಿದಾಗ, ನಿಮ್ಮೊಳಗಿನ ಒಳ ಧ್ವನಿಯನ್ನು ಕೇಳಲು ಪ್ರಾರಂಭಿಸುತ್ತೀರ. ಆಗ ನಿಮಗೆ ಬೇರಾವ ಮಾರ್ಗದರ್ಶಿಯ ಅವಶ್ಯಕತೆಯೂ ಇರುವುದಿಲ್ಲ. ನಿಮಗೆ ಏನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂದು ಹೇಳಲು ಜನಗಳ ಅವಶ್ಯಕತೆಯೇ ಇರುವುದಿಲ್ಲ. ನಿಮಗೆ ಹಾಗೇ ತಿಳಿಯುತ್ತದೆ ಮತ್ತು ನಿಮ್ಮ ತಿಳುವಳಿಕೆಯು ನಿಮ್ಮನ್ನು ನಡೆಸುತ್ತಿರುತ್ತದೆ. ನೀವು ನಿರ್ಣಯಗಳನ್ನು ಮಾಡುವುದರಿಂದ ಆಗುವ ಭಾರದ ಅನುಭವ ಉಂಟಾಗದೆ ಹರಿಯುತ್ತೀರ. ನಿಮ್ಮೊಳಗಿನ ಒಳ ಧ್ವನಿಯನ್ನು ಎಚ್ಚರ ಗೊಳಿಸುವವನೇ ಗುರು. ಅವನು ನಿಮ್ಮ ಮೇಲೆ ಕೆಲಸ ಮಾಡಿ ನಿಮ್ಮ ಬುದ್ಧಿವಂತಿಕೆಯನ್ನು ಎಚ್ಚರಗೊಳಿಸುತ್ತಾನೆ.
ನಮ್ಮಲ್ಲಿ ಬಹಳಷ್ಟು ಜನರು ಕಾರಣವಿದ್ದರೆ ಮಾತ್ರವೇ ಪ್ರೀತಿಸುವವರು. ಹಾಗೆ ಬಲವಾಗಿದೆ ನಮ್ಮ ಅಹಂಭಾವವು. ನೀವು ಹೀಗಿದ್ದಾಗ, ಸ್ಪಷ್ಟವಾಗಿರಲಿ, ನೀವು ದೇವರಿಂದ ಬಹಳ ದೂರದಲ್ಲಿದ್ದೀರಿ! ಎಂದು. ನಾವು ನಮ್ಮ ಕುಟುಂಬದವರ ಮೇಲೆ ಮತ್ತು ಸ್ನೇಹಿತರ ಮೇಲೆ ಪ್ರೀತಿಯ ಧಾರೆಯನ್ನೇ ಸುರಿಸುತ್ತೇವೆಂದು ಹೇಳಿಕೊಳ್ಳುತ್ತೇವೆ. ಈ ಭೂಮಿಯ ಮೇಲೆ ಈವರೆಗೂ ಆಗಿ ಹೋದ ಗುರುಗಳತ್ತ ಸುಮ್ಮನೆ ನೋಡಿರಿ. ಅವರ ಜೀವನ ಧೈಯಗಳಲ್ಲಿ ಅವರನ್ನು ಸೆಳೆದ ಸಾಮಾನ್ಯ ಗುಣವೇನು? ಶುದ್ಧ ಪ್ರೀತಿ ಅಷ್ಟೆ. ನೀವು ನಿಮ್ಮ ನಿತ್ಯಜೀವನದಲ್ಲಿ ಅನುಭವಿಸುವ ಸಾಮಾನ್ಯ ಪ್ರೀತಿಯನ್ನು ಅವರು ಅನುಭವಿಸಿದ್ದರೆ, ಅವರ ಜೀವನ ಧೈಯವನ್ನು ಸ್ಥಾಪಿಸಲು ಸಾಧ್ಯವಾಗುತ್ತಿತ್ತೆಂದು ನೀವು ಭಾವಿಸುವಿರೇನು?
ಸಾಮಾನ್ಯ ಪ್ರೀತಿಯಿಂದ ಒಂದು ವಿಶ್ವವ್ಯಾಪಕವಾದ ಜೀವನ ಧ್ವೇಯದ ಸ್ಥಾಪನೆಯನ್ನು ಮಾಡಲು ಸಾಧ್ಯವೇನು? ಒಂದು ಸಾಮಾನ್ಯ ಪ್ರೀತಿಯು ಅದೆಷ್ಟು ಒತ್ತಾಸೆಯನ್ನು ಕೊಡಬಲ್ಲದು? ನಿಜದಲ್ಲಿ ಅದು ಶೀಘ್ರವೇ ನಿಮ್ಮನ್ನು ಆಯಾಸಗೊಳಿಸುವುದು! ಗುರುಗಳು ಆಗಾಗ್ಗೆ ಪ್ರಪಂಚದಾದ್ಯಂತ ಜನಗಳನ್ನು ಸಂಪರ್ಕಿಸುತ್ತಾ ಅವರ ಜೀವನವನ್ನು ಪರಿವರ್ತಿಸುತ್ತಿದ್ದರೆ, ಈ ಭೂಮಿಯ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ದೈವೀಕ ಪ್ರೀತಿಯನ್ನು (Divine love) ಮತ್ತು ಏಕತಾ ಭಾವನೆಯನ್ನು ಹೊಂದಿರುವುದೇ ಅದಕ್ಕೆ ಕಾರಣ.
ವಾಸ್ತವವಾಗಿ, ನೀವು ಅವರ ಜೀವನ ಚರಿತ್ರೆಗಳನ್ನು ಓದಿದರೆ, ಅವರಲ್ಲಿ ಬಹುವಾಗಿ ಎಲ್ಲರೂ ಅವರ ಸಂಸಾರವನ್ನು ಬದಿಗಿಟ್ಟು, ಅವರ ಕುಟುಂಬದವರ ಕೋಪಕ್ಕೆ ಗುರಿಯಾಗುತ್ತಾ ಇದ್ದರೂ, ಜನರನ್ನು ತಲುಪಲು ಹೋಗುತ್ತಾ ಇದ್ದರು. ಸಂಸಾರವು ಈ ವಿಚಾರದಲ್ಲಿ ಯಾವಾಗಲೂ ಪ್ರತಿರೋಧಿಸುತ್ತಿರುತ್ತದೆ. ಒಮ್ಮೆ ಪಕ್ವತೆ ಮತ್ತು ಅರಿವು ಬಂದರೆ, ಅವರು ಪ್ರಪಂಚದ ಮಿಕ್ಕವರಂತೆ ಒಪ್ಪಿಕೊಳ್ಳಲು ಮತ್ತು ಅನುಸರಿಸಲು ಪ್ರಾರಂಭಿಸುತ್ತಾರೆ.
ಯಾವುದಾದರೊಂದು ನಿಮ್ಮನ್ನು ದೇವರಿಂದ ಬೇರೆ ಎಂದು ಭಾವಿಸುವಂತೆ ಮಾಡಿದರೆ ಅದು ಅಹಂಭಾವ. ಅಹಂಭಾವವು ಇರುವಾಗ ನೀವು ಒಂದೇ ರೀತಿಯಲ್ಲಿ ಮತ್ತು ಅದೇ ಆಳವಾದ ಭಾವನೆಯಿಂದ ಸದಾಕಾಲವೂ ಪ್ರೀತಿಸಲಾಗುವುದಿಲ್ಲ ಮತ್ತು ನಿಮ್ಮ ಪ್ರೀತಿಯು ಬಹಳವಾಗಿ ವಸ್ತುವಾಧಾರಿತವಾಗಿರುತ್ತದೆ (subjective) ಅದು ಎರಡು ವೈಪರೀತ್ಯಗಳ ಮಧ್ಯೆ ಚಲಿಸುತ್ತಿರುತ್ತದೆ.
ಗುರುಗಳ ದೇಹದ ಭಾಷೆಯನ್ನು ಸುಮ್ಮನೆ ಗಮನಿಸಿ, ನಿಮಗೆ ದೈವೀಕ ಪ್ರೀತಿಯೊಂದಿಗೆ ಯಾವುದು ಪ್ರತಿಸ್ಪಂದಿಸುತ್ತಿದೆಯೆಂದು ತಿಳಿಯುತ್ತದೆ. ಅಸ್ತಿತ್ವದೊಂದಿಗೆ ಶ್ರುತಿಗೂಡಿಸಲು ಇರುವ ಬಹಳ ಸುಲಭವಾದ ದಾರಿಯೆಂದರೆ ಗುರುವಿನ ದೇಹದ ಭಾಷೆಯನ್ನು ಗಮನಿಸುವುದು ಆಗಿದೆ. ಒಬ್ಬ ಗುರುವು ಸದಾಕಾಲವೂ ಅಸ್ತಿತ್ವದೊಂದಿಗೆ ಶ್ರುತಿಯಿಂದ ಇರುತ್ತಾರೆ. ತಮ್ಮ ಎದುರಿಗೆ ಯಾರಿರುವರೆಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಅವರು ಸದಾಕಾಲವೂ ಪ್ರೀತಿಯನ್ನು ಹೊರಸೂಸುತ್ತಾರೆ. ನೀವು ಅವರ ದೇಹದ ಭಾಷೆಯನ್ನು ಗಮನಿಸಿದರೆ, ಅದರ ಹಿಂದಿರುವ ಗುಣಗಳನ್ನು ನೀವು ಅಳವಡಿಸಿಕೊಳ್ಳುತ್ತೀರಿ.
ನೀವು ಗುರುಗಳನ್ನು ಹೆಚ್ಚು ಸಮಯ ಗಮನಿಸಿದರೆ, ಅವರು ಹೇಗೆ ಅಷ್ಟು ಸುಂದರವಾಗಿ, ಅಷ್ಟು ಕಾವ್ಯಾತ್ಮಕವಾಗಿ, ಅಷ್ಟು ಅನುರೂಪವಾಗಿ, ಅಸ್ತಿತ್ವದೊಂದಿಗೆ ಶೃತಿಗೂಡಿಸಿಕೊಂಡು ನದಿಯಂತೆ ಹರಿಯುವುದನ್ನು ಗ್ರಹಿಸಬಲ್ಲಿರಿ. ಆದುದರಿಂದಲೇ ಅವರನ್ನು ಗಮನಿಸುವುದು ಅಷ್ಟೊಂದು ಸುಂದರವಾಗಿರುತ್ತದೆ! ಸುಮ್ಮನೆ ಗುರುಗಳನ್ನು ಗಮನಿಸುವುದರಿಂದ, ನೀವು ಅಸ್ತಿತ್ವದ ಸೌಂದರ್ಯತೆಯನ್ನು ಮತ್ತು ಹರಿವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಅನುಭವಿಸಬಹುದು.
ಗುರುವು ಅಹಂಭಾವರಹಿತರಾಗಿರುವುದರಿಂದ, ಯಾವ ತಡೆಯೂ ಇಲ್ಲದೆ ಹರಿಯುತ್ತಾರೆ. ಅವರಲ್ಲಿ 'ನಾನು' ಮತ್ತು 'ನನ್ನದು' ಎಂಬ ಪ್ರಜ್ಞೆಯು ಇಲ್ಲದಿರುವುದರಿಂದ ಅವರು ಹರಿಯುತ್ತಾರೆ. ಅವರು ಪಸರಿಸುತ್ತಿರುವುದು ಪ್ರೀತಿಯನ್ನಲ್ಲದೆ ಬೇರೇನೂ ಅಲ್ಲವಾಗಿರುವುದರಿಂದ, ಅವರು ಗುಣಪಡಿಸುತ್ತಾರೆ. ಗುಣಪಡಿಸುವಿಕೆಯು ದಟ್ಟವಾದ (concentrated) ಪ್ರೀತಿಯಲ್ಲದೆ ಬೇರೇನೂ ಅಲ್ಲ. ಆದುದರಿಂದಲೇ ಆಗಿಂದಾಗ್ಗೆ, ನಾವು ಗುರುಗಳ ಪವಾಡ ಸದೃಶವಾದ ಗುಣಪಡಿಸುವಿಕೆಯ ಶಕ್ತಿಯ ಬಗ್ಗೆ ಕೇಳಿರುತ್ತೇವೆ. ಆದುದರಿಂದಲೇ ಗುರುಗಳು ದೇವರಂತೆ ನೋಡಲ್ಪಡುತ್ತಾರೆ. ಸ್ಪಷ್ಟವಾಗಿ ಅರಿಯಿರಿ. ಗುರುಗಳೇ ಜೀವಂತ ಗುರು. ಅವರು ಅಂತಿಮ ಚೈತನ್ಯದ (Ultimate energy) ಪರಮಶ್ರೇಷ್ಠ ಪ್ರಕಟನೆ.
ಆದುದರಿಂದ ದೇವರೊಂದಿಗೆ ಹೇಗೆ ಸಂಬಂಧ ಕಲ್ಪಿಸಬೇಕೆಂಬುದರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ. ಚೈತನ್ಯದೊಂದಿಗೆ ಶೃತಿ ಹೊಂದಲು ಪ್ರಾರಂಭಿಸಿ, ಮತ್ತು ದೇವರಾಗಿರಿ.
ಜ್ಞಾಪಕವಿರಲಿ: ನೀವು ಅಸ್ತಿತ್ವವನ್ನು ಗೆಲ್ಲಲಾರಿರಿ. ಅಸ್ತಿತ್ವದಿಂದ ನೀವು ಜಯಿಸಲ್ಪಡುವಿರಿ. ನೀವು ನಿಮ್ಮ ಸಂಪೂರ್ಣ ಅಹಂಭಾವವನ್ನು ಕಳೆದುಕೊಂಡಾಗ, ನೀವು ಜಯಿಸಲ್ಪಟ್ಟಿರಿ ಅಷ್ಟೆ! ನೀವು ದೇವರಿಗೆ ಹಿತಕರವಾದ ಗರ್ಭವಾದರೆ, ಅವನು ನಿಮ್ಮಲ್ಲಿ ವಾಸಿಸುತ್ತಾನೆ. ಪ್ರಾರಂಭದ ಹಂತಗಳಲ್ಲಿ, ನೀವು ಅತಿಥಿ ಮತ್ತು ಆತಿಥೇಯ (host). ಕೊನೆಯಲ್ಲಿ ನೀವು ಆತಿಥೇಯರಾಗಬೇಕು, ನೀವು ಅವನನ್ನು ಬರಮಾಡಿಕೊಳ್ಳಲು ಒಂದು ಗರ್ಭವಾಗಬೇಕು. ಗರ್ಭವಾಗುವುದು ಎನ್ನುವುದರ ಅರ್ಥ, ಕರಗುವುದು ಮತ್ತು ಭೇದ್ಯರಾಗುವುದು ಎಂದು. ಭೇದ್ಯರಾಗುವುದು ಎನ್ನುವುದರ ಅರ್ಥ, ನಿಮ್ಮ ಇಡೀ ಅಹಂಭಾವವನ್ನು ಬಿಟ್ಟುಬಿಡುವುದು ಮತ್ತು
ದೇವರಲ್ಲಿ ಅಥವಾ ಅಸ್ತಿತ್ವದಲ್ಲಿ ಕರಗುವುದು. ಆಗ ಜೀವನವು ಒಂದು ಸಂಗೀತವಾಗುತ್ತದೆ ಮತ್ತು ನಿರಂತರ ಆಚರಣೆಯಾಗುತ್ತದೆ!
ಸರಿ... ಈಗ ನಾವು ಈ ಆಜ್ಞಾಚಕ್ರಕ್ಕಾಗಿ ಒಂದು ಸುಂದರ ಮತ್ತು ಬಹಳ ಪರಿಣಾಮಕಾರಿಯಾದ ದಿವ್ಯ ನೇತ್ರ ಧ್ಯಾನ ಎಂಬ ಧ್ಯಾನ ತಂತ್ರವನ್ನು ಮಾಡೋಣ.
ದಿವ್ಯ ನೇತ್ರ ಧ್ಯಾನ
(ಒಟ್ಟು ಕಾಲಾವಧಿ: 30 ನಿಮಿಷಗಳು)
ದಿವ್ಯ ನೇತ್ರ ಧ್ಯಾನವನ್ನು ಆಜ್ಞಾಚಕ್ರವನ್ನು ಎಚ್ಚರಗೊಳಿಸಲು ಮಾಡಲಾಗುತ್ತದೆ. ಆಜ್ಞಾ ಚಕ್ರವನ್ನು ಎಚ್ಚರಗೊಳಿಸುವುದರಿಂದ ನೀವು ವಿಶ್ವಜ್ಞಾನದೊಂದಿಗೆ ಸಂಬಂಧವನ್ನು ಕಲ್ಪಿಸುತ್ತೀರ. ಈ ಧ್ಯಾನ ತಂತ್ರವನ್ನು ಝೋರಾಸ್ಟ್ರಿಯನ್ (Zoroastrian) ನಿಂದ ತೆಗೆದುಕೊಳ್ಳಲಾಗಿದೆ. ಈ ತಂತ್ರವು ಎರಡು ಭಾಗಗಳಲ್ಲಿದೆ
- ಒಂದು ಆಜ್ಞಾ ಚಕ್ರವನ್ನು ಶುದ್ಧಗೊಳಿಸುವುದು ಮತ್ತು ಇನ್ನೊಂದು ಅದನ್ನು ಸಚೇತನಗೊಳಿಸುವುದು. ಆಜ್ಞಾ ಚಕ್ರ ಅಥವಾ ಮೂರನೆಯ ಕಣ್ಣು ಭ್ರಮೆಯನ್ನು ಮತ್ತು ಕಾಮವನ್ನು ನಾಶಮಾಡುವವ ಎಂದು ತಿಳಿಯಲಾಗಿದೆ. ಅದು ನಿಮ್ಮಲ್ಲಿ ಮಹಾನ್ ಪ್ರಜ್ಞೆಯನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಇಲ್ಲಿ ನಿಮ್ಮ ಮುಂದೆ ಒಂದು ಪ್ರಾರ್ಥನೆಯ ದೀಪವನ್ನು ಹಚ್ಚಿ ಇಡಲಾಗಿದೆ. ಅದನ್ನು ಎಳ್ಳೆಣ್ಣೆಯಿಂದ ಅಥವಾ ಹಸುವಿನ ಹಾಲಿನಿಂದ ತೆಗೆದ ಶುದ್ಧಗೊಳಿಸಿದ ಬೆಣ್ಣೆಯಿಂದ ಹಚ್ಚಿಸಲಾಗಿದೆ. ನೀವು ಒಂದು ಕಂದೀಲನ್ನು (candle) ಸಹ ಉಪಯೋಗಿಸಬಹುದು, ಆದರೆ ಅದನ್ನು ಸಸ್ಯಧಾರಿತ ಕೊಬ್ಬಿನಿಂದ ಮಾಡಿದ್ದೆಂಬುದನ್ನು ಖಾತರಿ ಮಾಡಿಕೊಳ್ಳಿ. ಇದೊಂದು ಮಾರ್ಗದರ್ಶಿತ ಧ್ಯಾನ ತಂತ್ರ. ಸುಮ್ಮನೆ ನನ್ನ ಸೂಚನೆಗಳನ್ನು ನಿಕಟವಾಗಿ ಅನುಸರಿಸಿ.
ಕಾಲುಗಳನ್ನು ಮಡಚಿಕೊಂಡು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ನೆಲದ ಮೇಲೆ ಕುಳಿತುಕೊಳ್ಳಿ. ಯಾರು ನೆಲದ ಮೇಲೆ ಕುಳಿತುಕೊಳ್ಳಲು ಸಾಧ್ಯವಿಲ್ಲವೋ ಅವರು ಕುರ್ಚಿಯ ಮೇಲೆ ಕುಳಿತುಕೊಳ್ಳಬಹುದು.
(ಮೆತ್ತಗಿನ ಸಂಗೀತವನ್ನು ನುಡಿಸಲಾಗುತ್ತದೆ)
ನಿಮ್ಮ ಆಜ್ಞಾ ಚಕ್ರದ ಮೇಲೆ ಭೇದಿಸುವರೇನೋ ಎಂಬಂತೆ ಕೇಂದ್ರೀಕರಿಸಿರಿ. (5 ನಿಮಿಷಗಳು)
ಅಹಂಭಾವವನ್ನು ಕಳಚಿಕೊಳ್ಳುವುದು
ನಿಮ್ಮ ಕಣ್ಣುಗಳನ್ನು ತೆರೆಯಿರಿ ಮತ್ತು ದೀಪದ ಜ್ವಾಲೆಯನ್ನು ನಿಮ್ಮ ಹುಬ್ಬುಗಳ ಮಧ್ಯೆ ಇರುವ ನಿಮ್ಮ ಮೂರನೆಯ ಕಣ್ಣಿನಿಂದ ನೋಡಿ. ನಿಮ್ಮ ಕಣ್ಣುಗಳು ಮಿಟುಕಿಸಬಹುದು ಅಥವಾ ಉರಿಯಬಹುದು ಅಥವಾ ನೀರು ಸುರಿಯಬಹುದು, ಹಾಗೆ ಆಗುತ್ತಿರಲು ಸುಮ್ಮನೆ ಅನುವು ಮಾಡಿಕೊಡಿ. (5 ನಿಮಿಷಗಳು)
ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ ಮತ್ತು ಪುನಃ ನಿಮ್ಮ ಆಜ್ಞಾ ಚಕ್ರದ ಮೇಲೆ ಕೇಂದ್ರೀಕರಿಸಿ. ಅದನ್ನು ಆಳವಾಗಿ ಭೇದಿಸಿ. (5 ನಿಮಿಷಗಳು)
ನಿಮ್ಮ ಕಣ್ಣುಗಳನ್ನು ತೆರೆಯಿರಿ ಮತ್ತು ದೀಪದ ಜ್ವಾಲೆಯನ್ನು ನಿಮ್ಮ ಹುಬ್ಬುಗಳ ನಡುವೆ ಇರುವ ಮೂರನೆಯ ಕಣ್ಣಿನಿಂದ ನೋಡಿರಿ. (5 ನಿಮಿಷಗಳು)
ಕಣ್ಣುಗಳನ್ನು ಮುಚ್ಚಿಕೊಳ್ಳಿ; ಈಗ ನಿಮ್ಮ ಆಜ್ಞಾ ಚಕ್ರದ ಮೇಲೆ ಕೇಂದ್ರೀಕರಿಸಬೇಡಿ; ಸುಮ್ಮನೆ ವಿಶ್ರಮಿಸಿ. (5 ನಿಮಿಷಗಳು)
ಓಂ ಶಾಂತಿ ಶಾಂತಿ ಶಾಂತಿಃ
ನಿಧಾನವಾಗಿ, ಬಹಳ ನಿಧಾನವಾಗಿ, ನಿಮ್ಮ ಕಣ್ಣುಗಳನ್ನು ತೆರೆಯಿರಿ.
ನಾವು ಮುಂದಿನ ಕಾರ್ಯಕ್ರಮದಲ್ಲಿ ಭೇಟಿಯಾಗೋಣ.
ಧನ್ಯವಾದಗಳು.
