ಅಧ್ಯಾಯ - 7: ಅಸೂಯೆಯಿಂದ ಮುಕ್ತಿ - ವಿಶುದ್ಧಿ ಚಕ್ರ
This text was machine-transcribed from the printed book and may contain errors. Select the words and choose “Report a mistake”.

ನಾವು ಈಗ ವಿಶುದ್ಧಿ ಚಕ್ರದ ಕಡೆಗೆ ಹೋಗೋಣ. ವಿಶುದ್ಧಿ ಚಕ್ರವು ಗಂಟಲಿನ ಪ್ರದೇಶದಲ್ಲಿ ಸ್ಥಾಪಿತವಾಗಿದೆ. ಸಂಸ್ಕೃತದಲ್ಲಿ ವಿಶುದ್ಧಿ ಎಂದರೆ 'ಶುದ್ಧವನ್ನೂ ಮತ್ತು ಅಶುದ್ಧವನ್ನೂ ಮೀರಿರುವುದು' ಎಂದು. ಈ ಚಕ್ರವು ಹೋಲಿಕೆ ಮತ್ತು ಹೊಟ್ಟೆಕಿಚ್ಚಿನಿಂದ ಬಂಧಿತವಾಗಿದೆ. ಆ ಚಕ್ರವು ಅರಳುವಂತೆ ಮಾಡುವುದು ಹೇಗೆಂದರೆ ನಮ್ಮ ವ್ಯಕ್ತಿತ್ವವನ್ನು ಪ್ರಕಟಪಡಿಸುವುದು, ಇನ್ನೊಬ್ಬರ ವಿಚಾರವಾಗಿ ಚಿಂತೆ ಮಾಡದೆ ಇರುವುದ ರಿಂದಲೂ ಮತ್ತು ನಮ್ಮ ಯೋಗ್ಯತೆಯನ್ನು, ಅಪೂರ್ವತ್ವವನ್ನು, ಉತ್ಪಾದಕತ್ವವನ್ನು ಪೂರ್ತಿ ಪ್ರಕಟಿಸುವುದರಿಂದಲೂ ಮಾಡಬಹುದು.
(ಧ್ಯಾನದ ತಂತ್ರ - ಶಕ್ತಿ ಸಾಗರ ಧ್ಯಾನ - ಝೆನ್ ಬುದ್ಧಿಸಮ್ನಿಂದ ಒಂದು ತಂತ್ರ.) ನಾವು ಯಾವಾಗಲೂ ನಮ್ಮನ್ನು ಇನ್ನೊಬ್ಬರಿಗೆ ಹೋಲಿಸಿಕೊಳ್ಳುತ್ತೇವೆ, ಮತ್ತು ಬಹಳ ಸಲ ಅವರು ನಮಗಿಂತ ಎಷ್ಟು ಹೆಚ್ಚು ಹೊಂದಿದ್ದಾರೆ ಅಥವಾ ಅವರು ನಮಗಿಂತ ಎಷ್ಟು ಹೆಚ್ಚು ಸಾಧಿಸಿದ್ದಾರೆ ಎಂದು ಹೊಟ್ಟೆಕಿಚ್ಚು ಪಡಲು ಪ್ರಾರಂಭಿಸುತ್ತೇವೆ. ಹೋಲಿಸಿಕೊಳ್ಳುವುದು ಬೀಜ ಮತ್ತು ಹೊಟ್ಟೆಕಿಚ್ಚು ಅದರ ಫಲ. ಹೊಟ್ಟೆಕಿಚ್ಚು ಮತ್ತು ಹೋಲಿಕೆ ಅವೆರಡೂ ನಿಜವಾಗಿ ಪ್ರಪಂಚದಲ್ಲಿಲ್ಲ! ನಾವೇ ಅವುಗಳನ್ನು ಸೃಷ್ಟಿಸಿಕೊಂಡು ಮತ್ತು ಅದರಿಂದ ಹೇಗೆ ಮುಕ್ತರಾಗಬೇಕೆಂದು ಕೊನೆಯೇ ಇಲ್ಲದೆ ಮಾತಾಡುತ್ತಿರುತ್ತೇವೆ. ಈ ಕಲ್ಪನೆಯನ್ನು ಚಕ್ರದ ಹೆಸರೇ ಸೂಚಿಸುವಂತೆ ವಿಶುದ್ಧಿ ಎಂದು ಅನುಮಾನವಿಲ್ಲದೇ ಅರ್ಥಮಾಡಿಕೊಳ್ಳಬಹುದು. ಶುದ್ಧಿ ಎಂದರೆ ಏನೂ ದೋಷವಿಲ್ಲದಿರುವುದು. ಅಶುದ್ಧಿ ಎಂದರೆ ದೋಷವಿರುವುದು. ವಿಶುದ್ಧಿ ಎಂದರೆ, ದೋಷವಿರುವುದು ಮತ್ತು ದೋಷವಿಲ್ಲದೆ ಇರುವುದು ಇವೆರಡಕ್ಕೂ ಮೇಲ್ಪಟ್ಟಿರುವುದು. ಆದ್ದರಿಂದ ಈ ಹೆಸರೇ ಸೂಚಿಸುವಂತೆ ಈ ಚಕ್ರವು ಎಂದಿಗೂ ಅಶುದ್ಧಿಯಾಗುವುದೇ ಇಲ್ಲ ಮತ್ತು ಅದನ್ನು ಶುದ್ಧಿ ಮಾಡುವ ಅವಶ್ಯಕತೆಯೇ ಇಲ್ಲ. ಆದ್ದರಿಂದ ಹೋಲಿಕೆ ಈ ಚಕ್ರವನ್ನು ಕಟ್ಟಿಹಾಕುವುದು ಮತ್ತು ಅದು ಒಂದು ಪದಾರ್ಥವಿಲ್ಲದ ನೆರಳಿನಂತೆ. ಆದ್ದರಿಂದ ಹೋಲಿಕೆಯ ಕಲ್ಪನೆಗೆ ಯಾವ ಆಧಾರವೂ ಇಲ್ಲ, ಅದು ಪೂರ್ತಿ ನಮ್ಮ ಕಲ್ಪನೆಯ ಕಟ್ಟುಕತೆ.
ಒಂದು ಸಣ್ಣ ಕಥೆ:
ಒಬ್ಬ ವ್ಯಕ್ತಿ ಒಂದು ಸಂಗೀತದ ಗುಂಪಿಗೆ ಸೇರಿದವನಾಗಿ ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಜೀವಂತ ಪ್ರದರ್ಶನ ಕೊಡುತ್ತಿದ್ದ.
ಒಂದು ನಿರ್ದಿಷ್ಟವಾದ ಸಭಾ ಪ್ರದರ್ಶನದಲ್ಲಿ ಒಂದು ನಿರ್ದಿಷ್ಟವಾದ ಕಪ್ಪು ಕೂದಲಿನ ಟೋಪಿಯನ್ನು ಕೆಲವು ಹಾಡುಗಳಿಗೂ ಮತ್ತು ಕೆಂಪು ಕೂದಲಿನ ಟೋಪಿಯನ್ನು ಮಿಕ್ಕ ಹಾಡುಗಳಿಗೆ ಧರಿಸಬೇಕೆಂದು ತೀರ್ಮಾನಿಸಿದ.
ಅವನು ಕೂದಲಿನ ಟೋಪಿಗಳನ್ನು ಬದಲಾಯಿಸಿಕೊಳ್ಳುತ್ತಾ ಅರ್ಧ ಕಾರ್ಯಕ್ರಮವನ್ನು ಪೂರೈಸಿದ.
ಮಧ್ಯಾಂತರದಲ್ಲಿ ಪ್ರದರ್ಶನದ ವ್ಯವಸ್ಥಾಪಕ (Director) ಪೋಷಾಕು ಬದಲಾವಣೆ ಮಾಡಿಕೊಳ್ಳುವ ಕೊಠಡಿಗೆ ಹೋಗಿ “ಸ್ವಾಮಿ, ನೀವು ಕೆಂಪು ಕೂದಲಿನ ಟೋಪಿಯನ್ನೇ ಮಿಕ್ಕ ಪ್ರದರ್ಶನಕ್ಕೆ ಧರಿಸಬೇಕು'' ಎಂದು ಆ ವ್ಯಕ್ತಿ ಹೇಳಿದ.
ಆ ವ್ಯಕ್ತಿಗೆ ಆಶ್ಚರ್ಯವಾಗಿ “ಏಕೆ'' ಎಂದು ಕೇಳಿದ.
ಆ ವ್ಯವಸ್ಥಾಪಕ ಹೇಳಿದ “ಆ ಜನಗಳು ಕೆಂಪು ಕೂದಲಿನವನ ಕಂಠವನ್ನೇ ಕಪ್ಪು ಕೂದಲಿನವನ ಕಂಠಕ್ಕಿಂತ ಇಷ್ಟಪಟ್ಟಿದ್ದಾರೆ''
(ನSecondary!)
ನಾವು ಯಾವಾಗಲೂ ಹೋಲಿಸಿಕೊಳ್ಳುವುದರಲ್ಲಿಯೇ ತೊಡಗಿರುತ್ತೇವೆ (busy). ಹೇಗೆಂದರೆ - ಸಂಗತಿಗಳನ್ನು ಅವು ಇರುವ ಹಾಗೆಯೇ ನೋಡುವುದೇ ಇಲ್ಲ. ನಮ್ಮ ಮನಸ್ಸು ಹೋಲಿಸಿಕೊಳ್ಳುವುದರಲ್ಲಿಯೇ ಸಿಕ್ಕಿ ಹಾಕಿಕೊಂಡು, ನಿಜವಾಗಿರುವುದನ್ನು, ಅವುಗಳ ಗುಣ ಹೇಗೆ ಇದೆ ಎಂದು ನೋಡದೆಯೇ ಅವುಗಳನ್ನು ಕಳೆದುಕೊಳ್ಳುತ್ತೇವೆ. ನಾವು ಹೋಲಿಸಿಕೊಳ್ಳುವ ಪ್ರವೃತ್ತಿಯನ್ನು ಒಟ್ಟು ಸಂಗತಿಗಳು ಹೇಗಿವೆಯೋ ಹಾಗೆ ನೋಡುವುದರಲ್ಲಿ ಸಮರ್ಥರಾಗಬೇಕು.
ಹೋಲಿಕೆ ಎಂದರೆ ಏನು?
ಯಾರಾದರೂ ಕೆಲವು ನನಗೆ ಹೇಳುತ್ತೀರ. ಸಾಧಾರಣವಾಗಿ, ಯಾವ ಪ್ರಧಾನವಾದ ಪ್ರದೇಶದಲ್ಲಿ ನೀವು ಸಾಧಾರಣವಾಗಿ ಹೋಲಿಸುತ್ತೀರ? ನೀವು ಸಿದ್ಧರಾಗಿ ಅದರಿಂದ ಖಂಡಿತ ಹೊರಗಡೆಗೆ ಬರಲು ಸಾಧ್ಯವಿದೆ ಎಂದು ಭರವಸೆ ನನಗೆ ಇದೆ.
(ಸಭಿಕರ ಪ್ರಯತ್ನ...)
ಸೌಂದರ್ಯ ಸ್ವಾಮೀಜೀ....
ಹಾ ಸೌಂದರ್ಯ! ಪ್ರತಿಯೊಬ್ಬರಿಗೂ ಅವರವರದೇ ಆದ ಸ್ವಂತ ಹೋಲಿಕೆಯ ಪ್ರದೇಶಗಳು ಇವೆ, ಸರಿ ಮುಂದೆ!
ಐಶ್ವರ್ಯ.. ಹೆಸರು ಮತ್ತು ಖ್ಯಾತಿ.. ಅಧಿಕಾರ.. ಅಂತಸ್ತು.. ಬುದ್ಧಿಶಕ್ತಿ.. ಆರೋಗ್ಯ..
ಸರಿ, ಇವೆಲ್ಲ ಸಾಧಾರಣವಾಗಿ ನಾವು ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳುವ ಹೋಲಿಕೆಯ ಕ್ಷೇತ್ರಗಳು. ಹೌದಲ್ಲವೇ? ಇವುಗಳನ್ನೆಲ್ಲ ಪ್ರಧಾನವಾದ 4 ಪಂಗಡಗಳನ್ನಾಗಿ ವಿಂಗಡಿಸಬಹುದು: ಹಣ, ಬುದ್ಧಿ, ಸೌಂದರ್ಯ - ಆರೋಗ್ಯವನ್ನು ಒಳಗೊಂಡಿದೆ, ಮತ್ತು ಅಂತಸ್ತು, ನಿಮ್ಮ ಎಲ್ಲ ಸಮಸ್ಯೆಗಳು, ನಿಮ್ಮ ಎಲ್ಲ ಅರಿಮೆಗಳು, ಈ ನಾಲ್ಕು ವಿಷಯಗಳೇ ಅಲ್ಲದೆ ಬೇರೆ ಅಲ್ಲ. ನಾನು ಸರಿಯೇ?
ಈಗ ಪ್ರಪಂಚದಲ್ಲಿರುವ ಎಲ್ಲ ಜನರನ್ನು ಹಣದ ಮೇಲೇರುವಿಕೆಯಿಂದ ಕ್ರಮದಲ್ಲಿ ಸಾಲು ಮಾಡಿ. ನೀವು ಕೂಡ ಆ ಸಾಲಿನಲ್ಲಿ ಇರುವಂತೆ ತಿಳಿಯಿರಿ. ನೀವು ಎಲ್ಲಿ ಇರಬೇಕೆಂದು ನೀವು ಯೋಚಿಸುವಿರಿ?
ಹೇಗೋ ಮಧ್ಯೆ ಎಲ್ಲೋ ಒಂದು ಕಡೆ ಸ್ವಾಮೀಜಿ...
ಖಂಡಿತವಾಗಿ! ನೀವು ಎಲ್ಲೋ ಮಧ್ಯದಲ್ಲಿರುತ್ತೀರ. ಹೌದಲ್ಲವೇ? ನಿಮ್ಮ ಸಾಲಿನಲ್ಲಿರುವ ಅಕ್ಕಪಕ್ಕದವರನ್ನು ನೀವು ಎಣಿಸಲು ಕೂಡ ಸಾಧ್ಯವಾಗುವುದಿಲ್ಲ. ನಿಮ್ಮ ಮುಂದೆ ಇರುವ ಜನಗಳು ಬಹಳಷ್ಟು ಇದ್ದಾರೆ ಮತ್ತು ಹಿಂದೆ ಇರುವ ಜನಗಳು ಎಣಿಕೆಯಲ್ಲಿ ಬಹಳಷ್ಟು ಇದ್ದಾರೆ.
ಮತ್ತು ಜನಗಳು ಅವರವರ ಸ್ಥಳಗಳನ್ನು ಅವರವರ ಹಣದ ಅಂತಸ್ತಿಗೆ ತಕ್ಕಂತೆ ಬದಲಾಯಿಸುತ್ತಾ ಇರುತ್ತಾರೆ. ಪ್ರತಿ ಕ್ಷಣವೂ ಅವರು ಬದಲಾಯಿಸುತ್ತಲೇ ಇರುತ್ತಾರೆ. ನೀವು ನಿಮ್ಮ ಯೋಚನೆಗಳೊಂದಿಗೆ, ಇತ್ಯರ್ಥ ಮಾಡಬೇಕು, ನೀವು ಒಂದು ವೇಳೆ ನಿಮ್ಮ ಮುಂದೆ ಇರುವ ಸಾಲಿನ ಉದ್ದವನ್ನು ನೋಡಿ, ಹೊಟ್ಟೆಕಿಚ್ಚು ಪಡಬೇಕೊ
ಅಥವಾ ನಿಮ್ಮ ಹಿಂದೆ ಇರುವ ಸಾಲಿನ ಉದ್ದವನ್ನು ನೋಡಿ ಸಮಾಧಾನ ಉಸಿರಿನೊಂದಿಗೆ ದೇವರಿಗೆ ಕೃತಜ್ಞರಾಗಿ ಇರುತ್ತೀರೋ, ಅದು ನಿಮ್ಮ ಕೈಯಲ್ಲಿ ಇದೆ. ನೀವು ಸಾಲಿನಲ್ಲಿ ಎಲ್ಲಿ ಇರುವಿರಿ ಎಂಬುದರ ಬಗ್ಗೆ ಏನನ್ನು ಹೇಳುವುದಕ್ಕೆ ಆಗುವುದಿಲ್ಲವೆಂಬು ನಿಮಗೆ ಚೆನ್ನಾಗಿ ಗೊತ್ತಿದೆ, ಆದರೂ ಆ ಯೋಚನೆಯು ನಿಮಗೆ ಯಾವಾಗಲೂ ಶಾಂತಿ ಭಂಗ ಮಾಡುತ್ತದೆ! ಇಲ್ಲದೆ ಇರುವ ಅಸಾಧಾರಣ ವಸ್ತುವಿನಿಂದ ಕಾಡಲ್ಪಟ್ಟಿರುತ್ತೇವೆ (haunted) ಅದಕ್ಕೆ ನಕಾರಾತ್ಮಕವಾದ ಅಸ್ತಿತ್ವವನ್ನು ಹೊಂದಿರುತ್ತದೆ.
ನಿಮಗೆ ನಕಾರಾತ್ಮಕವಾದ ಅಸ್ತಿತ್ವ ಎಂದರೆ ಏನು ಎಂಬುದನ್ನು ನಾನು ವಿವರಿಸುತ್ತೇನೆ. ನನ್ನ ಪಕ್ಕದಲ್ಲಿರುವ ಗಂಟೆಯನ್ನು ತೆಗೆದುಕೊಳ್ಳಿ. ನಾನು ಇಷ್ಟಪಟ್ಟರೆ ಈ ಗಂಟೆಯನ್ನು ತೆಗೆದು ಇಡಬಹುದು, ನಾನು ಸುಮ್ಮನೆ ತೆಗೆದುಕೊಂಡು ಕೊಠಡಿಯ ಹೊರಗಡೆ ಬಿಡಬಹುದು ಮತ್ತು ಅದು ಯಾವಾಗಲೂ ಇಲ್ಲಿ ಇರುವುದೇ ಇಲ್ಲ, ನಾನು ಸರಿಯೇ? ಈ ಗಂಟೆಯು ಒಂದು ನಿರ್ದಿಷ್ಟವಾದ ಅಸ್ತಿತ್ವವನ್ನು ಹೊಂದಿದೆ ಆದ್ದರಿಂದ ಇದನ್ನು ಮಾಡಲು ನನಗೆ ಸಾಧ್ಯ. ಈಗ ಈ ಕೊಠಡಿಯಲ್ಲಿ ಕತ್ತಲೆ ಇದೆಯೆಂದು ನಾವು ಹೇಳೋಣ. ಈ ಕತ್ತಲೆಯನ್ನು ತೆಗೆದುಕೊಂಡು ಹೊರಗೆ ಇಡಲು ನಿಮಗೆ ಸಾಧ್ಯವೇ?
ಇಲ್ಲ...
ಆದರೆ ಈ ಕೊಠಡಿಯ ಒಳಗಡೆಗೆ ದೀಪವನ್ನು ತಂದರೆ ಕತ್ತಲೆಯು ತನ್ನಷ್ಟಕ್ಕೆ ತಾನೇ ಕಣ್ಮರೆ ಆಗುತ್ತದೆ. ಸರಿಯೇ? ಇದು ಏತಕ್ಕೆ ಎಂದರೆ ಕತ್ತಲೆಯು ನಿರ್ದಿಷ್ಟವಾದ ಅಸ್ತಿತ್ವವನ್ನು ಹೊಂದಿಲ್ಲ; ಅದು ನಕಾರಾತ್ಮಕವಾದ ಅಸ್ತಿತ್ವವನ್ನು ಹೊಂದಿರುವುದರಿಂದ ಅದನ್ನು ಸುಮ್ಮನೆ ತೆಗೆಯಲು ಆಗುವುದಿಲ್ಲ.
ಅದೇ ರೀತಿ, ಹೋಲಿಕೆ ನಿರ್ದಿಷ್ಟವಾದ ಅಸ್ತಿತ್ವವನ್ನು ಹೊಂದಿಲ್ಲ. ಅದು ನಮ್ಮ ಮನಸ್ಸಿನಲ್ಲಿದೆ, ಅದು ನಮ್ಮ ಮನಸ್ಸಿನಲ್ಲಿ ಕೆಲವು ಯೋಚನೆಗಳನ್ನು ಅಭ್ಯಾಸ ಮಾಡುವುದರಿಂದ ಸಂಭವಿಸುತ್ತದೆ. ಏಕೆಂದರೆ ಹೋಲಿಕೆ ನಿಜಸ್ವರೂಪದಲ್ಲಿ ಅಸ್ತಿತ್ವದಲ್ಲಿಲ್ಲ, ನೀವು ಅದನ್ನು ಸುಮ್ಮನೆ ಹೋಗು ಎಂದರೆ ಹೋಗುವುದಿಲ್ಲ. ನೀವು ನಿಮ್ಮ ಮನಸ್ಸಿನಲ್ಲಿ ತಿಳುವಳಿಕೆಯನ್ನು ತಂದುಕೊಂಡು, ಹೇಗೆಂದರೆ ದೀಪವನ್ನು ತಂದು ಕತ್ತಲೆಯು ಹೇಗೆ ಮಾಯವಾಯಿತೋ ಹಾಗೆ ಹೋಲಿಕೆಯಿಂದ ಹೊರಗೆ ಬರಬಹುದು.
ಸಂಸ್ಕೃತದಲ್ಲಿ ಭ್ರಾಂತಿ (ಭ್ರಮೆ) ಎನ್ನುವ ಪದವನ್ನು ಮಾಯೆ ಎಂದು ಭಾಷಾಂತರಿಸಲಾಗಿದೆ.
ನಾವು ಯಮ ಎಂದರೆ ಮಾಯೆ ಎನ್ನುತ್ತೇವೆ, ಅಂದರೆ ಯಾವುದು ಅಸ್ತಿತ್ವವನ್ನು ಹೊಂದಿಲ್ಲವೋ ಅದು ಮಾಯೆ!
ಯಾವುದು ಅಸ್ತಿತ್ವವನ್ನು ಹೊಂದಿಲ್ಲವೋ ಆದರೆ ಯಾವುದು ಯಾವಾಗಲೂ ಶಾಂತಿ ಭಂಗ ಮಾಡುತ್ತಿರುವುದೋ! ಅದೇ ಮಾಯೆಯ ಗುಣಲಕ್ಷಣ! ನೀವು ಸುಮ್ಮನೆ ಅದಕ್ಕೆ ಜೀವ ಕೊಡುತ್ತೀರಾ ಅಷ್ಟೆ. ಹೋಲಿಕೆ ಶುದ್ಧ ಮಾಯೆ. ಹೇಳಿ...?
ಸ್ವಾಮೀಜಿ, ನಾವು ನಮ್ಮ ಎರಡು ಕಡೆಯ ಸಾಲನ್ನು ನೋಡದೆ ಇದ್ದರೆ ಉತ್ತಮ ಅಲ್ಲವೆ?
ನೀವು ಏಕೆ ಹಾಗೆ ಹೇಳುತ್ತೀರ? ಮತ್ತು ಹೇಗಾದರೂ ಸರಿ, ನೀವು ಏಕೆ ನೋಡಲು ಹೆದರುತ್ತೀರ? ನೀವು ನೋಡಲು ಹೆದರುತ್ತೀರ ಎನ್ನುವ ಸಂಗತಿಯೇ ನೀವು ನಿಮ್ಮ ಮನಸ್ಸಿನಿಂದ ಓಡಿ ಹೋಗುತ್ತಿದ್ದೀರ ಎನ್ನುವುದನ್ನು ತೋರಿಸುತ್ತಿದೆ. ನೀವು ನೋಡಿದರೂ ಆದರೆ ಅದರಿಂದ ನಿಮಗೆ ತೊಂದರೆ ಆಗದಿದ್ದರೆ ನೀವು ಸರಿಯಾದ ದಾರಿಯನ್ನು ಹುಡುಕಿದ್ದೀರ ಎಂದು ತಿಳಿಯುತ್ತದೆ.
ನೀವು ಎಲ್ಲದರ ಕಡೆಯೂ ನೋಡಲು ಸಾಧ್ಯವಾದ ಮೇಲೆ, ನೀವು ಏನು ಹೊಂದಿದ್ದೀರ ಬೇರೆಯವರು ಏನು ಹೊಂದಿದ್ದಾರೆ, ಎಂದು ತಿಳಿದ ಮೇಲೂ ನಿಮಗೆ ಸಂತೃಪ್ತಿ ಯಾವಾಗಲೂ ಉಂಟಾಗಿದೆ ಎಂಬ ಭಾವನೆ ಬಂದ ಮೇಲೆ, ಆಗ ಈ ಚಕ್ರವು ಸಚೇತನದ ಸ್ಥಿತಿಯಲ್ಲಿದೆ ಎಂದು ತಿಳಿಯುತ್ತದೆ. ನೋಡಿ, ಈ ವಿಚಾರದಲ್ಲಿ ಸ್ಪಷ್ಟವಾಗಿ ತಿಳಿದುಕೊಳ್ಳಿ, ನಾನು ಈ ತೃಪ್ತಿಯೆನ್ನುವ ಪದವನ್ನು ಹೇಳುತ್ತಿಲ್ಲ, ಜನಗಳು ಆಗಾಗ್ಗೆ ಹೇಳುತ್ತಿರುತ್ತಾರೆ, 'ತೃಪ್ತಿ ಪಡುವುದನ್ನು ಕಲಿಯಿರಿ'' ಎಂದು ನೀವು ತೃಪ್ತಿ ಪಡುವುದನ್ನು ಕಲಿಯಲು ಸಾಧ್ಯವೇ ಇಲ್ಲ.
ತೃಪ್ತಿಯು ನಕಾರಾತ್ಮಕವಾದ ಹೋಲಿಕೆ ಮತ್ತು ಹೊಟ್ಟೆಕಿಚ್ಚು ಇವುಗಳ (experien-tial) ಅನುಭವಾತ್ಮಕವಾದ ತಿಳುವಳಿಕೆಯ ಫಲಿತಾಂಶವಾಗಿ ಅರಳಬೇಕು ನಿಮಗೆ ಏನೇನು ಕೊಡಲ್ಪಟ್ಟಿದೆಯೋ, ಅದಕ್ಕೆ ಕೃತಜ್ಞತೆಯ ಆಳವಾದ ಮನೋಭಾವದಿಂದ ತೃಪ್ತಿಯು ಅರಳಬೇಕು. ಇದು ಹೊರಗಿನಿಂದ ಹೊರಿಸಲು ಸಾಧ್ಯವಿಲ್ಲ, ಅದು ಒಳಗಿನಿಂದ ಅರಳಬೇಕು.
ಸುಮ್ಮನೆ ನಿಮಗೆ ಏನೇನು ಹೇಳಲ್ಪಡುತ್ತದೆಯೋ ಎಲ್ಲವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಪ್ರಯತ್ನ ಮಾಡಿ. ನಿಜವನ್ನು ಮತ್ತೆ ಮತ್ತೆ ಕೇಳುತ್ತಾ ಇದ್ದರೆ, ನಿಮ್ಮಲ್ಲಿ ಒಂದು ಸ್ಥಳವನ್ನು ತೆರೆದು, ಅಲ್ಲಿ ಅದನ್ನು ಅನುಭವಿಸಬಹುದು. ಪ್ರಾಮಾಣಿಕವಾದ ಮನೋಭಾವ ದಿಂದ ಯಾವುದೇ ಸಮಸ್ಯೆಯನ್ನು ಆಳವಾಗಿ ನೋಡಿದರೆ ಅದರಲ್ಲೇಯೇ ಪರಿಹಾರ ಇರುವುದು ಕಾಣುವುದು. ನೀವು ಹೋಲಿಕೆ ಮತ್ತು ಹೊಟ್ಟೆಕಿಚ್ಚು ಇವುಗಳನ್ನು ಆಳವಾಗಿ ಅದರಲ್ಲಿ ನೋಡಿದರೆ, ಅದು ಬರೀ ನಿಮ್ಮ ಮನಸ್ಸಿನ ಆಟವಲ್ಲದೆ ಮತ್ತೇನೂ ಅಲ್ಲವೆಂಬುದು ತಿಳಿಯುತ್ತದೆ.
ನೀವು ನಿಮ್ಮ ಸ್ವಂತ ಮನೆಯಲ್ಲಿದ್ದಾಗ, ಸ್ವಂತ ಮನೆ ಮತ್ತು ಕಾರು ಇದೆಯಲ್ಲ ಎಂದು ತೃಪ್ತಿ ಪಟ್ಟುಕೊಂಡು ಇರುತ್ತೀರ. ಈ ಯೋಚನೆಯಿಂದ ಆರಾಮವಾಗಿ ಇರುತ್ತೀರ. ನೀವು ಕೃತಜ್ಞತೆಯ ಕ್ಷಣಗಳನ್ನು ಅನುಭವಿಸಿ ತೃಪ್ತಿ ಹೊಂದುತ್ತೀರ. ಕೆಲವು ಸಮಯ ಆದ ಮೇಲೆ, ನೀವು ನಿಮ್ಮ ಕಾರಿನಲ್ಲಿ ಮನೆಯ ಹೊರಗಡೆ ಹೊರಟ ಮೇಲೆ, ಟ್ರಾಫಿಕ್ ಲೈಟ್ನಿಂದ ನಿಂತರೆ, ಏನಾಗುವುದು? ಪಕ್ಕದಲ್ಲಿ ಒಂದು ಮರ್ಸಿ ಡೀಜ್ಡ್ ಬೆನ್ಜ್ (Benz) ಕಾರು ಬಂದು ನಿಮ್ಮ ಕಾರಿನ ಪಕ್ಕದಲ್ಲಿ ನಿಲ್ಲುತ್ತದೆ... ಮತ್ತು ನಿಮ್ಮ ಮನಸ್ಸು ಸುಮ್ಮನೆ ಅದರ ಯೋಚನೆಯ ಗುಂಡಿಯನ್ನು (switch) ಒತ್ತುತ್ತದೆ. ಆಗ ನಿಮ್ಮ ಕಾರು ಏನೇನೂ ಚೆನ್ನಾಗಿಲ್ಲ ಎಂದು, ನೀವು ಈಗಲಾದರೂ ಮರ್ಸಿಡೀಜ್ಡ್ ಬೆನ್ಸ್ (mercedes (Benz) ಅಲ್ಲದೇ ಇದ್ದರೂ ಹೊಸ ಕಾರನ್ನು ಕೊಂಡಿರುವನಲ್ಲ ಎಂದು ಯೋಚಿಸಲು ಪ್ರಾರಂಭ ಮಾಡುತ್ತೀರ.
ಕೇವಲ ಕೆಲವು ಕ್ಷಣಗಳ ಮೊದಲು ನೀವು ಹೊಂದಿರುವ ಸ್ವಂತ ಪದಾರ್ಥಗಳ ಮೇಲೆ ಸಂತೋಷವಾಗಿದ್ದಿರಿ, ಆದರೆ ಈಗ ಏನಾಯಿತು? ನೀವು ಹೊಸ ಆಕಾಂಕ್ಷೆಯ, ಅದೂ ಬೇರೆಯವರಿಂದ ಪಡೆದ ಆಕಾಂಕ್ಷೆಯ ಮೇಲೆ ಕೆಲಸ ಮಾಡಲು ಪ್ರಾರಂಭ ಮಾಡುತ್ತಿದ್ದೀರ. ಸರಿಯಾಗಿ ತಿಳಿಯಿರಿ. ಇದು ನಿಮ್ಮ ಸ್ವಂತ ಆಕಾಂಕ್ಷೆಯಲ್ಲ, ಅದು ಬೇರೆಯವರಿಗೆ ಸಂಬಂಧಪಟ್ಟ ಆಕಾಂಕ್ಷೆ, ಅದು ಬೆನ್ಸ್ (Benz) ಕಾರಿನ ಮಾಲೀಕನ ಆಕಾಂಕ್ಷೆ. ಇದೇ ನೀವು ಹೋಲಿಕೆ ಮತ್ತು ಹೊಟ್ಟೆಕಿಚ್ಚು ಪಡುವುದರಿಂದ ನಿಮ್ಮ ಮನಸ್ಸಿನಲ್ಲಿ ಬೇರೆಯವರ ಆಸೆಗಳು ಕೆಲಸ ಮಾಡಲು ಪ್ರಾರಂಭ ಆಗುತ್ತದೆ.
ನೀವು ನಿಮ್ಮ ಮನೆಯಲ್ಲಿ ರೆಫ್ರಿಜರೇಟರ್ (Refrigetator) ನ ಅವಶ್ಯಕತೆಯನ್ನು ಯೋಚನೆ ಮಾಡಿಯೇ ಇರುವುದಿಲ್ಲ, ಆದರೆ ನಿಮ್ಮ ಪಕ್ಕದ ಮನೆಯವರು ರೆಫ್ರಿಜಿರೇಟರ್ನ್ನು ಕೊಂಡರೆ, ತಕ್ಷಣ ನಿಮಗೆ ಅದು ಇಲ್ಲದೆ ಇರುವುದಕ್ಕೆ ಆಗುವುದೇ
ಖಚಿತ ಪರಿಹಾರಗಳು
ಇಲ್ಲವೆಂದು ಎನಿಸುತ್ತದೆ. ತಕ್ಷಣವೇ ರೆಫ್ರಿಜಿರೇಟರ್ ಏಕೆ ಬೇಕು ಎನ್ನುವುದಕ್ಕೆ ಪ್ರಪಂಚದಲ್ಲಿರುವ ಎಲ್ಲ ಕಾರಣಗಳನ್ನೂ ನೀವು ಹುಡುಕುತ್ತೀರ. ಇಷ್ಟು ದಿನವೂ ರೆಫ್ರಿಜಿರೇಟರ್ ಇಲ್ಲದಯೇ ನಿಭಾಯಿಸುತ್ತಿದ್ದಿರಿ. ಏನೂ ಬದಲಾವಣೆ ಆಗಿರಲಿಲ್ಲ, ಆದರೆ ಏನು ಸಂಭವಿಸಿತು? ನಿಮ್ಮ ಮನಸ್ಸು ಹೋಲಿಕೆಯೊಡನೆ ಒಳ ಹೊಕ್ಕಿದೆ.
ಅದೇನೋ ಸರಿ, ನೀವು ಬೇರೆಯವರಿಂದ ಬಂದ ಆಕಾಂಕ್ಷೆಗಳನ್ನು ನಿಮ್ಮ ಸ್ವಂತದ್ದೆಂದು ತಿಳಿಯುವುದಿಲ್ಲ. ಅದು ನಿಮ್ಮ ಮನಸ್ಸಿನಲ್ಲಿ ತಿಳಿಯದ ಹಾಗೆ ಸಂಭವಿಸುತ್ತದೆ, ಎಂದರೆ ಆಕಾಂಕ್ಷೆಯ ಸರಿಯಾದ ಬುಡ ತಿಳಿಯದೆ ಹೊರಟು ಹೋಗುತ್ತದೆ. ಅದು ಕಪಟ ಮತ್ತು ಸೂಕ್ಷ್ಮತೆ (subtle) ಇಂದ ಕೂಡಿದ ಮನಸ್ಸಿನ ಆಟವಾಗಿದೆ. ನಾವು ಯಾವಾಗಲೂ ಇನ್ನೊಬ್ಬರ ವಿಚಾರವಾಗಿ ಚಿಂತೆ ಪಡುವುದಿಲ್ಲವೆಂದು ಹೇಳುತ್ತೇವೆ.
ಒಂದು ಸಣ್ಣ ಕಥೆ:
ಒಬ್ಬ ಮನುಷ್ಯ ಸುಮಾರು 10 ವರ್ಷಗಳಾದ ಮೇಲೆ ತನ್ನ ಪಕ್ಕದ ಊರಿಗೆ ವಾಪಸ್ ಬಂದ.
ಅವನ ಸ್ನೇಹಿತನ ಜೊತೆಯಲ್ಲಿ ಎಲ್ಲ ಸುತ್ತಿಕೊಂಡು ಬಂದ.
ಅಲ್ಲಿ ಆಗಿರುವ ತುಂಬಾ ಬದಲಾವಣೆಗಳನ್ನು ನೋಡಿ ಅವನಿಗೆ ಆಶ್ಚರ್ಯವಾಯಿತು. “ಏಳಿಗೆ ಈ ಊರಿನ ಸ್ಥಿತಿಯನ್ನೇ ಬದಲಾಯಿಸಿದೆ” ಎಂದು ಅವನ ಸ್ನೇಹಿತನ ಹತ್ತಿರ ಅಭಿಪ್ರಾಯಪಟ್ಟ.
“ಇಲ್ಲ ಏಳಿಗೆ ಅಲ್ಲ, ಕೇವಲ ಬರೀ ಹೊಟ್ಟೆಕಿಚ್ಚು ಅಷ್ಟೆ” ಎಂದು ಸ್ನೇಹಿತ ಹೇಳಿದ.
ನಾವು ಯಾವಾಗಲೂ ಇನ್ನೊಬ್ಬರನ್ನು ತುಳಿದು ಹಾಕಲು ಪ್ರಯತ್ನ ಪಡುತ್ತಿರುತ್ತೇವೆ. ನೀವು ಯಾವಾಗ (ನಿಮ್ಮದಲ್ಲದ) ಆಕಾಂಕ್ಷೆಗಳ ಹಿಂದೆ ಹೋಗುತ್ತಿರುತ್ತೀರೋ, ಆಗ ನೀವು ನಿಲ್ಲುವುದೇ ಇಲ್ಲ. ಏಕೆಂದರೆ ಅದರಲ್ಲಿ ಒಂದನ್ನು ತಿಳಿದುಕೊಳ್ಳುವ ಅಂಚಿನಲ್ಲಿರುವಾಗಲೇ, ಮತ್ತೊಂದು ನಿಮ್ಮದಲ್ಲದ (borrowed) ಆಕಾಂಕ್ಷೆ ಎಲ್ಲಿಂದಲೋ ಬಂದು, ಪುನಃ ಅದರ ಹಾದಿಯಲ್ಲಿ ನೀವು ಹೊರಡುತ್ತೀರ.
ನೀವು ನಿಮ್ಮಲ್ಲಿಯೇ ಕೇಂದ್ರೀಕೃತರಾಗಿಲ್ಲದೇ ಇರುವುದರಿಂದ ನೀವು ಓಡುತ್ತಲೇ ಇರುತ್ತೀರ. ನಿಮ್ಮ ಕೇಂದ್ರ (center) ಬದಲಾಯಿಸುತ್ತಲೇ ಇರುತ್ತದೆ, ನಿಮ್ಮ ಕೇಂದ್ರ ಮತ್ತೊಬ್ಬರ ಮೇಲಿರುತ್ತದೆ, ನಿಮ್ಮ ಒಳಗೆ ಇರುವುದಿಲ್ಲ. ಮತ್ತು ಅವರ ಕೇಂದ್ರ ಇನ್ನೆಲ್ಲಿಯೋ ಇರುತ್ತದೆ, ಅವರವರ ಒಳಗಡೆ ಇರುವುದಿಲ್ಲ. ನೀವು
ಆಸೂಯೆಯಿಂದ ಮುಕ್ತಿ
ಕೇಂದ್ರರಹಿತವಾದ ಆಲೋಚನೆ ಮತ್ತು ಭಾವನೆಗಳ ಹೊಯ್ದಾಟದ ಅನುಗುಣವಾಗಿ ಎಷ್ಟು ಓಡಬೇಕಾಗುತ್ತದೆ, ಎಷ್ಟು ಎಳೆದು ಮತ್ತು ನೂಕಬೇಕಾಗುತ್ತದೆ! ನೀವು ಒಂದು ಸೂತ್ರದ ಗೊಂಬೆಯಾಗಿಬಿಡುತ್ತೀರ!
ನಿಮಗೆ ಯಾವಾಗಲೂ ಏನಾದರೂ ಬೇಕಾಗುವುದು, ನಿಮ್ಮ ಪಾಡಿಗೆ ನೀವು ಒಬ್ಬರೇ ಕುಳಿತುಕೊಂಡು ನಿಮಗೆ ನಿಜವಾಗಿಯೂ ಅದು ಬೇಕಾಗಿದೆಯೋ, ಅಥವಾ ಬೇರೆಯವರು ಹೊಂದಿರುವುದರಿಂದ ನಿಮಗೆ ಬೇಕಾಗಿದೆಯೋ ಎಂದು ಯೋಚಿಸಿ. ಪ್ರಾಮಾಣಿಕವಾಗಿ ನಿಮ್ಮ ಆಕಾಂಕ್ಷೆ ಎಲ್ಲವನ್ನು ವಿಭಜನೆ ಮಾಡಿ, ನಿಮ್ಮ ಎಲ್ಲ ಪ್ರತಿಷ್ಠೆ, ಸಮಸ್ಯೆ ಎಲ್ಲವನ್ನು ಬಿಟ್ಟು ನಿಮ್ಮಷ್ಟಕ್ಕೆ ವಿಭಜನೆ ಮಾಡಿ, ನಿಮ್ಮ ಪ್ರತಿಷ್ಠೆಯನ್ನು ನೀವು ಒಬ್ಬರೇ ಇರುವಾಗ ಬಿಡಲು ಸಾಧ್ಯವಾಗದೇ ಇರುವಾಗ, ಜನಗಳ ಮಧ್ಯೆ ಇರುವಾಗ ಹೇಗೆ ಬಿಡಲು ಸಾಧ್ಯವಾಗುತ್ತೆ! ನಿಮಗೆ ನಿಮ್ಮ ಆಕಾಂಕ್ಷೆಗಳನ್ನು ಬಿಡಲು ಸಾಧ್ಯವಾದರೆ, ನೀವು ಶಾಂತ ರೀತಿಯಿಂದ ಸಾವನ್ನು ಅಪ್ಪುತ್ತೀರ, ಪೂರ್ತಿ ನೆಮ್ಮದಿಯಿಂದ ಜಗಲಿಯ ಮೇಲಾದರೂ ಸರಿ ನೀವು ನಿಮ್ಮ ಪೂರ್ತಿ ಜೀವನವೆಲ್ಲ ನಿಮ್ಮದಲ್ಲದ ಆಕಾಂಕ್ಷೆಯ ಮೇಲೆಯೇ ಜೀವಿಸಿದರೆ ನೀವು ಖಂಡಿತ ನಿಜವಾದ ಸಂತೃಪ್ತಿಯನ್ನು ಹೊಂದುವುದಿಲ್ಲ ಮತ್ತು ನೀವು ಒಂದು ಅಮೃತ ಶಿಲೆಯ ಮನೆಯಲ್ಲಿ ವಾಸವಾಗಿದ್ದರೂ, ದೀರ್ಘವಾದ ಎಳೆದಾಡುವ ಮತ್ತು ತಳ್ಳುವ ಸಾವಿನ ಜೊತೆ ಸಾಹಸ ಪಟ್ಟುಕೊಂಡು ನಿಮ್ಮದಲ್ಲದ ಆಕಾಂಕ್ಷೆಗಳಿಂದ ಮುಕ್ತಿ ಹೊಂದದೆ ತುಂಬಾ ಕಷ್ಟಪಡುತ್ತೀರ.
ಜೈನ ಧರ್ಮದಲ್ಲಿ ಒಂದು ನಂಬಿಕೆ ಈ ರೀತಿ ಇದೆ, ನೀವು ಹುಟ್ಟುವಾಗಲೇ ನಿಮ್ಮ ಜೊತೆಯಲ್ಲಿಯೇ ನಿಮಗೆ ಎಷ್ಟು ಬೇಕೋ ಅಷ್ಟು ಆಹಾರ ಮತ್ತು ಶಕ್ತಿ ನಿಮ್ಮ ಜೀವಮಾನದಲ್ಲಿ ಎಷ್ಟು ಬೇಕೋ ಅಷ್ಟನ್ನೂ ಕಳುಹಿಸಿರುತ್ತದೆ. ನಿಮಗೆ ಏನೇನು ಅನುಕೂಲಗಳು ಈ ಜೀವನದಲ್ಲಿದೆಯೋ ಎಲ್ಲವನ್ನು ಕೊಟ್ಟು, ಅವುಗಳನ್ನು ಪೂರೈಸಲು ಬೇಕಾಗುವ ಚೈತನ್ಯವನ್ನೂ ಕೂಡ ಕೊಟ್ಟು ಈ ಭೂಮಿಗೆ ಕಳುಹಿಸಲಾಗುತ್ತದೆ.
ಆದರೆ ಯಾವಾಗ ನೀವು ನಿಮ್ಮದಲ್ಲದ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಈ ಶಕ್ತಿಯನ್ನು ಉಪಯೋಗಿಸುತ್ತೀರೋ, ಆಗ ನಿಮಗೆ ಏನೂ ಕೊಟ್ಟಿಲ್ಲವೆಂದೂ, ಯಾವುದೂ ನಿಮಗೆ ಸಾಲದೆಂದೂ ಯೋಚಿಸಲು ಆರಂಭಿಸುತ್ತೀರ. ಏನೂ ಸಂಭವಿಸುತ್ತಲೇ ಇಲ್ಲವೆಂದು, ಸುಸ್ತಾಗಿ, ಆಶಾಭಂಗವಾಗಿ ಅಂದುಕೊಳ್ಳುತ್ತೀರ. ಹೀಗೆ ಸಮಸ್ಯೆಗಳು ಪ್ರಾರಂಭವಾಗುತ್ತವೆ.
ನೋಡಿ, ಅವಶ್ಯಕತೆಗೂ ಮತ್ತು ಬಯಕೆಗೂ ವ್ಯತ್ಯಾಸವಿದೆ, ನಿಮ್ಮ ಅವಶ್ಯಕತೆಗೆ ಈಗಲೇ ಹೇಗೋ ಪೂರೈಸಲಾಗಿದೆ. ಅವಶ್ಯಕತೆಗೆ ತೃಪ್ತಿ ಮಾಡಲು ಹೇಗೋ ಸಾಧ್ಯವಿದೆ, ನಿಮ್ಮ ಬಯಕೆಯನ್ನು ತೃಪ್ತಿಪಡಿಸಲು ಸಾಧ್ಯವೇ ಇಲ್ಲ, ಏಕೆಂದರೆ ಅವುಗಳು ಬದಲಾಯಿಸುತ್ತಲೇ ಇರುತ್ತವೆ ಮತ್ತು ಯಾವಾಗಲೂ ಸ್ಪಷ್ಟವಾಗಿ ಇರುವುದೇ ಇಲ್ಲ. ಯಾವಾಗಲೂ ಒಂದು ಬಯಕೆ ಅಥವಾ ಅಪೇಕ್ಷೆಯನ್ನು ತೃಪ್ತಿಪಡಿಸಿದರೆ, ಒಂದು ನೂರು ಮೇಲಕ್ಕೆ ಬರುತ್ತದೆ.
ಕೊನೆ - ಮೊದಲಿಲ್ಲದ ಅಪೇಕ್ಷೆ ಪಡುವುದು ನಮ್ಮ ಸ್ವಭಾವ, ಏಕೆಂದರೆ ಸತತವಾಗಿ ಇನ್ನೊಬ್ಬರು ಏನು ಹೊಂದಿದ್ದಾರೆ ಎನ್ನುವುದನ್ನು ನೋಡುತ್ತಲೇ ಇರುತ್ತೇವೆ, ಮತ್ತು ಎಲ್ಲವೂ ನಮಗೆ ಬೇಕು ಎಂದು ಅಪೇಕ್ಷೆ ಪಡುತ್ತಿರುತ್ತೇವೆ. ಹೊರಗಡೆ ತೋರಿಕೆಗೆ ನೀವು ಈ ವಿಚಾರವನ್ನು ಒಪ್ಪಿಕೊಳ್ಳದೆ ಇರಬಹುದು, ಆದರೆ ಆಳವಾಗಿ ಪರಿಶೀಲಿಸಿದರೆ, ಇದು ನಿಜವೆಂದು ನೋಡುವಿರಿ. ನಿಮ್ಮ ಮನಸ್ಸು ಕುಟಿಲತೆಯಿಂದಲೂ, ಜಡತ್ವದಿಂದಲೂ ನೀವು ನಿಮ್ಮನ್ನಾಗಿ ಒಪ್ಪಿಕೊಳ್ಳದಂತೆ ಮಾಡಲು ಮೊದಲನೇ ಸಲ ಆಟವಾಡುತ್ತದೆ.
ಉದಾಹರಣೆಗೆ: ನೀವು ಫ್ಯಾನ್ (fan) ನಿಮ್ಮ ಮನೆಗೆ ಕೊಳ್ಳಲು ಅಂಗಡಿಗೆ ಹೋಗುತ್ತೀರ. ಮಾರ್ಗದ ಮಧ್ಯದಲ್ಲಿ ರಸ್ತೆಯಲ್ಲಿ ನಿಮ್ಮ ಕೆಲವು ಸ್ನೇಹಿತರನ್ನು ಸಂಧಿಸುತ್ತೀರ. ಅವರು ಬೇರೆ ಅಂಗಡಿಗೆ, ಬೇರೆ ಕೆಲವು ಸಾಮಾನುಗಳನ್ನು ಕೊಳ್ಳಲು ಹೋಗುತ್ತಿರುವುದಾಗಿ ಹೇಳುತ್ತಾರೆ. ತಕ್ಷಣವೇ ನೀವು ಅವುಳನ್ನು ಕೊಳ್ಳಲು ಚಪಲರಾಗಿ ನೀವು ನಿಮ್ಮ ದಾರಿಯನ್ನೇ ಬದಲಾಯಿಸಿರಿ ಅವರುಗಳ ಜೊತೆ ಹೋಗಿ ಕೊಳ್ಳುತ್ತೀರ. ಆಗ ನಿಮ್ಮ ಹತ್ತಿರ (fan) ಫ್ಯಾನ್ ಕೊಳ್ಳಲು ಸಾಕಷ್ಟು ಹಣವಿರುವುದಿಲ್ಲ!
ಹೋಲಿಸಿಕೊಳ್ಳಲು ಪ್ರಾರಂಭ ಮಾಡಿ, ಇನ್ನೊಬ್ಬರ ಆಕಾಂಕ್ಷೆಯ ಮೇಲೆ ಜೀವನ ಮಾಡಿದರೆ, ನೀವು ಆಳವಾದ ಕಷ್ಟಕ್ಕೆ ತಲಪು, ನೀವು ಎಲ್ಲಿ ನಿಲ್ಲುತ್ತೀರ ಎನ್ನುವುದೇ ತಿಳಿಯುವುದಿಲ್ಲ. ಯಾವಾಗಲೂ ನಿಮ್ಮ ಅಳತೆ ಕೋಲಿನಿಂದ ನಿಮ್ಮನ್ನು ಅಳತೆ ಮಾಡಿಕೊಳ್ಳಿ; ಇನ್ನೊಬ್ಬರ ಅಳತೆ ಕೋಲಿನಿಂದಲ್ಲ ಅದು ತುಂಬಾ ಬುದ್ಧಿ ಇಲ್ಲದ ಮತ್ತು ಅಪಾಯದ ಕೆಲಸ.
ಇಂಡಿಯ ದೇಶದಲ್ಲಿ ಕೆಲವು ಕಡೆ ಮಂಗಗಳಿಗೆ ತರಬೇತಿ ಕೊಡುವವರನ್ನು ನೋಡಿರಬಹುದು. ಅವರು ಅದರಿಂದ ಅವರ ಜೀವನವನ್ನು ಮಾಡುತ್ತಿರುತ್ತಾರೆ.
ಅವರು ಒಂದು ಕೋಲನ್ನು ಇಟ್ಟುಕೊಂಡು ಅದರಿಂದ ಮಂಗನನ್ನು ಅವರಿಗೆ ಯಾವ ಯಾವ ತರಹ ಬೇಕೋ ಆ ತರಹ ಆಟಗಳನ್ನು ಆಡಲು ಉತ್ತೇಜಿಸುತ್ತಾರೆ.
ಅವರು ಕೋಲನ್ನು ಚಲಿಸುತ್ತಾ "ಕುಣಿ ರಾಮ! ಕುಣಿ" ಎನ್ನುತ್ತಾ ಕೂಗುತ್ತಾರೆ. ಆಗ ಅದು ಕುಣಿಯುತ್ತದೆ.
ಆಮೇಲೆ ಅವರು "ಗಾಡಿಯ ಚಕ್ರವನ್ನು ತಿರುಗಿಸು ರಾಮ! ಗಾಡಿಯ ಚಕ್ರವನ್ನು ತಿರುಗಿಸು" ಎಂದು ಹೇಳುತ್ತಾರೆ. ಆ ಕೋತಿಯು ಗಾಡಿಯ ಚಕ್ರವನ್ನು ತಿರುಗಿಸುತ್ತದೆ. ಕೋತಿಯು ಸುಮ್ಮನೆ ಕೋಲಿನ ಚಲನೆಗೆ ಸರಿಯಾಗಿ ಕುಣಿಯುತ್ತಿರುತ್ತದೆ. ಇದೇ ತರಹ ನಾವು ಹೋಲಿಕೆ ಎನ್ನುವ ಕೋಲು ನಮ್ಮ ಜೀವನವನ್ನು ತಳ್ಳಲು ಬಿಡುತ್ತೇವೆ. ನಾವು ಅದರ ತಾಳಕ್ಕೆ ಕುಣಿಯುತ್ತೇವೆ, ಅದು ನಮ್ಮ ಸ್ವಂತದ್ದಾಗಿರುವುದಿಲ್ಲ, ಕೋಲಿನಿಂದ ಪ್ರಭುತ್ವವನ್ನು ಪಡೆದಿರುತ್ತದೆ.
ಹೋಲಿಕೆಗೆ ಕೊನೆಯೇ ಇಲ್ಲ, ನಮ್ಮ ನಿರೀಕ್ಷೆಣೆಗೆ ಕೊನೆಯೇ ಇಲ್ಲ. ನಾವು ಯಾವಾಗಲೂ ಇನ್ನು ಬೇಕು, ಜಾಸ್ತಿ ಬೇಕು, ಜಾಸ್ತಿ ಬೇಕು ಎಂದು ಕೇಳುತ್ತಲೇ ಇರುತ್ತೇವೆ, ನೀವು ಸತತವಾಗಿ ಇಲಿಯ ಪಂದ್ಯದಲ್ಲಿ ಇರುತ್ತೀರ. ಹೇಗೆ ನೀವು ಆರಾಮವಾಗಿ, ಆನಂದದಿಂದ, ತೃಪ್ತಿಯನ್ನು ಪಡುತ್ತೀರ? ನೀವು ಇಲಿಯ ಪಂದ್ಯದಲ್ಲಿ ಇರುತ್ತೀರ ಎಂದರೆ, ಒಂದು ವೇಳೆ ನೀವು ಗೆದ್ದರೂ ನೀವು ಕೇವಲ ಇಲಿಯೇ!
ಆದರೆ ಹೇಗಾದರೂ ಸರಿ, ಜೀವನದಲ್ಲಿ ಕಡೆಗೆ ಒಂದು ಸಲ ಇಲಿಯ ಪಂದ್ಯದಲ್ಲಿ ನೀವು ಗೆದ್ದರೂ ನಿಮಗೆ ಜೀವನದಲ್ಲಿ ಪರಿಪೂರ್ಣ, ತಿಳುವಳಿಕೆ ಬರುವುದಿಲ್ಲ. ಗೆಲುವು ಆಳವಾದ ಅತೃಪ್ತಿಯ ತಿಳಿವಿಗೆ ಕೊಂಡೊಯ್ಯುತ್ತದೆ. ಏಕೆಂದರೆ ನೀವು ಪ್ರಾಪಂಚಿಕವಾದ ಅಭಿಲಾಷೆಗಳನ್ನು ತೋರಿಕೆಯ ಪ್ರಪಂಚದಲ್ಲಿ ಹೊಂದಿದ್ದರೂ, ನಿಮ್ಮ ಇರುವಿಕೆಯನ್ನು ಪೂರ್ತಿ ಅಲಕ್ಷಿಸಿರುತ್ತೀರ.
ಆತೃಪ್ತಿಯ ಕರೆ ನಿಮ್ಮ ಇರುವಿಕೆಯಿಂದ ಬಂದಿರುವುದು. ನೀವು ಅದನ್ನು ಅರ್ಥಮಾಡಿಕೊಂಡರೆ, ತಡವಾದರೂ ಸರಿ ನೀವು ದೈವತ್ವದ ಕಡೆಗೆ ತಿರುಗುತ್ತೀರ. ಆದರೆ ನೀವು ಅದನ್ನು ಅರ್ಥಮಾಡಿಕೊಳ್ಳದಿದ್ದರೆ ನಿರುತ್ಸಾಹದ ಕಡೆಗೆ ತಿರುಗುತ್ತೀರ, ಏಕೆಂದರೆ ನೀವು ಎಲ್ಲಿ ತಪ್ಪುತ್ತಿದ್ದೀರ ಎಂದು ತಿಳಿಯುವುದಿಲ್ಲ, ಆ ನೋಲು ಎಲ್ಲಿದೆ ಎಂದು ನಿಮಗೆ ತಿಳಿಯುವುದಿಲ್ಲ; ಅದನ್ನು ಎಲ್ಲಿ ಕಳೆದುಕೊಂಡಿದ್ದೀರ ಎಂದು ತಿಳಿದಿರುವುದಿಲ್ಲ ನೀವು ಎಲ್ಲಿ ತಪ್ಪಿನ ಕಡೆಗೆ ಹೋದಿರಿ ಎಂದು ತಿಳಿದಿರುವುದಿಲ್ಲ,
ನಾನು ನನ್ನ ಅನುಭವದಿಂದ ಹೇಳುತ್ತಿದ್ದೇನೆ - ಅಸ್ತಿತ್ವ ನಮ್ಮ ಮೇಲೆ ಯಾವಾಗಲೂ ಸುರಿಯುತ್ತಿರುತ್ತದೆ. ಅಲ್ಲಿ ಅದು ಹೇರಳವಾಗಿ ಇದೆ. ನಾವು ಅತೃಪ್ತಿಯ ಶಿಸ್ತಿನಲ್ಲಿ ತಯಾರಾಗಿದ್ದೇವೆ.
ನಾವು ಏನು ಪಡೆಯುತ್ತೇವೆ ಎನ್ನುವುದರಲ್ಲಿಯೇ ಉತ್ತೇಜಕರಾಗಿರುತ್ತೇವೆ. ನಾವು ಯಾವಾಗಲೂ ಮತ್ತೊಬ್ಬರು ಹೊಂದಿರುವುದಕ್ಕಿಂತ ಹೆಚ್ಚಿಗೆ ಹೊಂದಬೇಕೆಂದು ಆಶಿಸುತ್ತೇವೆ, ಯಾಕೆಂದರೆ ಹೋಲಿಕೆ ಎನ್ನುವುದು ನಮಗೆ ಅರಿವಿಲ್ಲದ ಪ್ರಕ್ರಿಯೆ ನಮ್ಮಲ್ಲಿಯೇ ಆಗಿದೆ, ಏಕೆಂದರೆ ತೃಪ್ತಿಕರವಾದ ಜೀವನವನ್ನು ನಮ್ಮಲ್ಲಿಯೇ ಕೇಂದ್ರೀಕರಿಸಿಕೊಂಡು ಸಾಗಿಸುವುದು ತಿಳಿದಿರುವುದಿಲ್ಲ.
ಒಂದು ಸಣ್ಣ ಕಥೆ:
ಒಬ್ಬ ಮನುಷ್ಯನು ಕಾಡಿನಲ್ಲಿ ದೇವರನ್ನು ಕಾಣಲು ಕಠಿಣ ತಪಸ್ಸನ್ನು ಮಾಡುತ್ತಿದ್ದ. ದೇವರು ಕೃಪೆ ತೋರಿ ಅವನ ಎದುರಿಗೆ ಪ್ರತ್ಯಕ್ಷನಾದನು. ಅವನಿಗೆ ಏನುಬೇಕು ಎಂದು ಕೇಳು ಎಂದನು.
ಆ ಮನುಷ್ಯನಿಗೆ ತುಂಬಾ ಸಂತೋಷವಾಯಿತು, "ನಾನು ತುಂಬಾ ಧನವನ್ನು ಹೊಂದಿದ್ದೆ, ನಾನು ಒಬ್ಬ ಜಮೀನ್ದಾರನಾಗಿದ್ದೆ. ನನ್ನ ಎಲ್ಲ ಆಸ್ತಿಯನ್ನೆಲ್ಲ ಕಳೆದುಕೊಂಡುಬಿಟ್ಟೆ ಮತ್ತು ಈಗ ನಾನು ಪುನಃ ಹಣವಂತನಾಗಲು ಅಪೇಕ್ಷೆ ಪಡುತ್ತಿದ್ದೇನೆ" ಎಂದ. ದೇವರು ಅವನ ಮೇಲೆ ಕೃಪೆ ತೋರಿ, ಮರುದಿವಸ, ಆ ಮನುಷ್ಯ ಬೆಳಗಿನಿಂದ ಸಂಜೆವರೆಗೆ ಓಡಿ, ಎಷ್ಟು ಪ್ರದೇಶವನ್ನು ಅವನಿಂದ ಆಕ್ರಮಿಸಲ್ಪಟ್ಟಿದೆಯೋ ಎಲ್ಲವೂ ಅವನದೇ ಆಗುತ್ತದೆ ಎಂದು ಹೇಳಿದನು.
ಆ ಮನುಷ್ಯನು ಬಹಳ ಸಂತೋಷವಾಗಿಬಿಟ್ಟ.
ಮರು ದಿವಸ ಬೆಳಗಾಗುವ ಮೊದಲೇ ಓಡಲು ಪ್ರಾರಂಭ ಮಾಡಿದ.
ಅವನ ಕೈಲಿ ಎಷ್ಟು ಸಾಧ್ಯವೋ ಅಷ್ಟು ಓಡಿದ.
ಮಧ್ಯಾಹ್ನದ ಹೊತ್ತಿಗೆ, ಹಸಿವು ಪ್ರಾರಂಭವಾಯಿತು, ಆದರೆ ಅದನ್ನು ಲಕ್ಷಿಸದೆ ಓಡುತ್ತಲೇ ಇದ್ದ.
ಸಾಯಂಕಾಲವಾಗುವ ಮುಂಚೆ, ಸುಸ್ತು ಮತ್ತು ಬಾಯಾರಿಕೆ ಅವನಿಗೆ ಉಂಟಾಯಿತು ಆದರೆ ಅವನು ಪಕ್ಕದ ಜಮೀನುದಾರನ ವಿಚಾರವಾಗಿ ಅವನು ತುಂಬಾ ಎಕರೆ ಜಮೀನು ಹೊಂದಿರುವ ವಿಚಾರ ಪ್ರಚೋದನೆಗೆ ಒಳಗಾಗಿದ್ದ. ಅವನ ಜೊತೆಯ ಎಲ್ಲ ಐಶ್ವರ್ಯವಂತರ ಚಿತ್ರವೆಲ್ಲ ಕಣ್ಣುಮುಂದೆ ಬರಲಾರಂಭಿಸಿತು ಮತ್ತು ಅವನು ಇನ್ನು ಓಡುತ್ತಲೇ ಇದ್ದ.
ಸೂರ್ಯನು ಮುಳುಗುವ ಸ್ವಲ್ಪ ಮುಂಚೆ, ಅವನಿಗೆ ಛಳಿ ಶುರುವಾಗಿ, ಅವನು ಸುಸ್ತಾದ ಆದರೂ ಇನ್ನು ಕೆಲವು ಹೆಚ್ಚು ಹೆಜ್ಜೆಗಳನ್ನು ಹಾಕಲು ಹೇಗೋ ನಿಭಾಯಿಸಿದ. ಮುಸ್ಸಂಜೆ ಹೊತ್ತಿಗೆ ಅವನು ಸುಸ್ತಾಗಿ ಬಿದ್ದ ಮತ್ತು ಪ್ರಾಣವನ್ನು ಬಿಟ್ಟ. ಇದೇ ರೀತಿ ನಾವು ನಮ್ಮ ಜೀವನವನ್ನು ಸಾಗಿಸುತ್ತಿದ್ದೇವೆ. ನಾವು ಏತಕ್ಕೆ ಓಡುತ್ತಿದ್ದೇವೆ ಎನ್ನುವುದನ್ನೆ ಮರೆತು ನಿಲ್ಲಿಸದೆ ಸತತವಾಗಿ ಪಂದ್ಯದಲ್ಲಿ ಓಡುತ್ತೇವೆ. ಬೇರೆ ಎಲ್ಲರೂ ಓಡುತ್ತಿದ್ದಾರೆ ಎಂದು ನಾವು ಓಡುತ್ತೇವೆ. ಶಂಕರಾಚಾರ್ಯರು ಇದನ್ನು ಸುಂದರವಾಗಿ 'ತತಃ ಕಿಮ್, ತತಃ ಕಿಮ್'... ಎಂದರೆ ಅರ್ಥ 'ಮುಂದೆ ಏನು, ಮುಂದೆ ಏನು' ಎಂದು ವರ್ಣಿಸಿದ್ದಾರೆ. ನಾವು ಯಾವಾಗಲೂ 'ಮುಂದೆ... ಏನು' ಎಂದು ಯೋಚಿಸುತ್ತಲೇ ಇರುತ್ತೇವೆ. ಅದೇ ನಮ್ಮನ್ನು ಓಡಲು ಕಾರಣವಾಗುತ್ತದೆ.
ಚಂದ್ರಬಾಬು ಅವನ ಮನೆಯ ಮೆಟ್ಟಲಿನ ಮೇಲೆ ಅಳುತ್ತಿದ್ದ. ಅವನ ಸ್ನೇಹಿತನು ಅವನನ್ನು ಏನು ಸಮಾಚಾರ ಎಂದು ಕೇಳಿದ. "ನನ್ನ ಚಿಕ್ಕಜ್ಜಿ ಅವಳ ಐಶ್ವರ್ಯವನ್ನೆಲ್ಲಾ ನನಗೆ ಬಿಟ್ಟು ಸತ್ತಹೋದಳು" ಎಂದ.
ಅವನ ಸ್ನೇಹಿತನಿಗೆ ದಿಗ್ಧಮೆಯಾಯಿತು. ಅವನು ಹೇಳಿದ "ಅವಿಗೆ ನಿಜವಾಗಿಯೂ ವಯಸ್ಸು ಆಗಿತ್ತು ಆದ್ದರಿಂದ ಅವಳ ಐಶ್ವರ್ಯವನ್ನೆಲ್ಲ ನಿನಗೆ ಬಿಟ್ಟು ಹೋಗಿದ್ದಾಳೆ. ಆದ್ದರಿಂದ ನೀನು ಏಕೆ ಅಳುತ್ತಿದ್ದೀಯ?"
ಚಂದ್ರ ಉತ್ತರಿಸಿದ "ನಿನಗೆ ಗೊತ್ತಿಲ್ಲ - ಈಗ ಒಂದು ವಾರದ ಹಿಂದೆ, ನನ್ನ ಮಾವ ಅವನ ಐಶ್ವರ್ಯವನ್ನೆಲ್ಲ ನನಗೆ ಬಿಟ್ಟು ಹೋದ."
ಅವನ ಸ್ನೇಹಿತನಿಗೆ ದಿಗ್ಧಮೆಯಾಗಿ ಕೇಳಿ "ಈಗ ಪುನಃ ಏಕೆ ಅಳುತ್ತಿದ್ದೀಯ?"
ಚಂದ್ರ ಮುಂದುವರೆಸಿದ "ಇದಕ್ಕಿಂತ ಇನ್ನು ಒಂದು ವಾರದ ಹಿಂದೆ, ನನ್ನ ಅತ್ತೆ ಅವಳ ಐಶ್ವರ್ಯವನ್ನೆಲ್ಲ ನನಗೆ ಬಿಟ್ಟು ಸತ್ತು ಹೋದಳು"
ಅವನ ಸ್ನೇಹಿತನಿಗೆ ಇದೆಲ್ಲ ಚಂದ್ರನಿಗೆ ಅಳಲು ಏಕೆ ಕಾರಣಗಳಾಗುತ್ತಿವೆ ಎಂದು ಅರ್ಥವಾಗುತ್ತಿಲ್ಲ.
ಅವನು "ನೀನು ಏಕೆ ಇದಕ್ಕೆಲ್ಲ ಅಳುತ್ತಿದ್ದೀಯ ಹೇಳು ಚಂದ್ರ" ಎಂದು ಕೇಳಿದ.
ಖಚಿತ ಪರಿಹಾರಗಳು
“ನಿನಗೆ ಗೊತ್ತಿಲ್ಲ ಐಶ್ವರ್ಯವನ್ನೆಲ್ಲ ನನಗೆ ಬಿಟ್ಟು ಸಾಯುವ ಸಂಬಂಧಿಗಳು ಇನ್ನು ಯಾರೂ ಇಲ್ಲ” ಎಂದು ಚಂದ್ರ ಹೇಳಿದ.
(ಜೋರಾಗಿ ನಗು!)
ಇದೇನೋ ಒಂದು ಅತಿಶಯೋಕ್ತಿಯಾದ ಕತೆ, ಆದರೆ ನಾವೆಲ್ಲ ಇದೇ ತರಹ ಇದ್ದೇವೆ,ಇದು ಸ್ಪಷ್ಟವಾಗಿದೆಯೆಂದು ತಿಳಿಯಿರಿ. ನಾವುಗಳು ನಮ್ಮ ಜೀವಮಾನದಲ್ಲಿ ಏನೇನು ಪ್ರತಿಕ್ಷಣವೂ ಪಡೆಯಬೇಕೊ ಎನ್ನುವುದನ್ನು ನೋಡುತ್ತಲೇ ಇರುತ್ತೇವೆ. ಎಲ್ಲ ನಮ್ಮ ಕೋರಿಕೆಯ ಪ್ರೀತಿ ವ್ಯಾಪಾರೀ ಮನೋಭಾವ ಹೊಂದಿದೆ. ಕೆಲವು ವಿಷಯಗಳಲ್ಲಿ ಅಸಂಸ್ಕೃತವಾಗಿ ಇರುವುದನ್ನು ನಾವು ಎಲ್ಲರೂ ನೋಡಬಹುದು. ಇನ್ನು ಕೆಲವು ವಿಷಯಗಳಲ್ಲಿ ಅದು ಸೂಕ್ಷ್ಮತೆಯಿಂದ ಕೂಡಿ ನೋಡಲು ಆಗದೆ ಇರುವ ಹಾಗೆ ಇರುತ್ತದೆ. ನಿಜವಾಗಿಯೂ, ನಮಗೆ ಅರಿವಿಲ್ಲದೇ ಒಂದು ನಿಜವಾದ ಪ್ರೀತಿ ಎನ್ನುವ ತರಹ ಆಟವಾಡಿರುತ್ತದೆ.
ಹೋಲಿಸಿಕೊಳ್ಳುವುದರ ಮೂಲ ಕಾರಣ, ನಾವು ನಮ್ಮ ಮನಸ್ಸಿನಲ್ಲಿ ಸಂತೃಪ್ತಿಯನ್ನು ಹೊಂದಿರುವುದಿಲ್ಲ. ನಾವು ಹೊಂದಿರುವ ಪದಾರ್ಥಗಳಿಂದ ನಮಗೆ ಸಂತೋಷವಾಗಿರುವುದಿಲ್ಲ. 24 ಗಂಟೆಗಳ ಕಾಲ ಬೆಳಗಿನಿಂದ, ಸಂಜೆಯವರೆಗೆ ನೀವು ನಿಮ್ಮ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿರುವ ತರಹ ಊಹೆ ಮಾಡಿಕೊಳ್ಳಿ. ನಿಮ್ಮ ಕಣ್ಣನ್ನು ಮುಚ್ಚಿಕೊಂಡು ನಿಮ್ಮಕೆಲಸಕ್ಕೆ ಹೋಗಲು ಪ್ರಯತ್ನಿಸುತ್ತಾ ಇರಿ. ಕೇವಲ ಕೆಲವು ನಿಮಿಷಗಳಲ್ಲಿಯೇ ನಿಮ್ಮ ಜೋಡಿಸಿ ಇಟ್ಟಂತಹ ಮಾಮೂಲು ದಿನಚರಿ ನೀವು ಊಹಿಸದೇ ಇರುವಷ್ಟು ಇದೆ ಎಂದು ನಿಮಗೆ ಅರಿವಾಗುತ್ತದೆ. 24 ಗಂಟೆಗಳು ಏಕೆ, ಕೇವಲ ಕೆಲವು ನಿಮಿಷಗಳಲ್ಲಿಯೇ, ನಿಮಗೆ ಎಷ್ಟು ಕಷ್ಟವೆನ್ನುವುದು ತಿಳಿಯುತ್ತದೆ. ಕಣ್ಣುಗಳನ್ನು ತೆರೆದು ಪ್ರಪಂಚವನ್ನು ಪುನಃ ನೋಡಲು ಆಯಿತಲ್ಲ ಎಂದು ನೆಮ್ಮದಿಯಾಗುತ್ತದೆ. ಆಗ ನೀವು ಬಹುಶಃ ನಿಮ್ಮ ಕಣ್ಣಿನ ದೃಷ್ಟಿಗಾಗಿ ದೇವರನ್ನು ವಂದಿಸುತ್ತೀರ.
ನೀವು ಯಾವಾಗಲಾದರೂ ಕಣ್ಣಿನ ದೃಷ್ಟಿ ಇಲ್ಲದವರನ್ನು ನಿಮಗೆ ಹೋಲಿಸಿಕೊಂಡು, ನಿಮಗೆ ದೇವರು ಕಣ್ಣಿನ ದೃಷ್ಟಿಯನ್ನು ಕೊಟ್ಟಿರುವುದಕ್ಕೆ ವಂದಿಸಿದ್ದೀರಾ? ನೀವು ಸ್ವಯಂ ಪ್ರೇರಿತರಾಗಿ ನಿಮ್ಮ ಕಣ್ಣಿನ ದೃಷ್ಟಿಗೆ ಕೃತಜ್ಞತೆಯನ್ನು ಹೊಂದಿದ್ದೀರ? ಇಲ್ಲ! ಏಕೆ? ಏಕೆಂದರೆ ನಿಮಗೆ ಏನೇನು ಕೊಟ್ಟಿರುವರೋ ಅದೆಲ್ಲವೂ ಸಾಮಾನ್ಯವಾಗಿ ಇರುವುದು ಎಂದು ತಿಳಿಯುತ್ತೀರ. ಇದೂ ಒಂದು ಕಾರಣ. ಹೇಗಿದ್ದರೂ ಅದು ಇದ್ದೇ ಇದೆ, ನಾವು ಬೇರೆ ಮತ್ತೊಂದನ್ನು ಪಡೆಯಲು ಚಿಂತಿಸೋಣ, ಎಂದುಕೊಳ್ಳುತ್ತೀರ. ನಾವು ಈ ಮೂರು ವಿಷಯಗಳ ಸುತ್ತ ಕೆಲಸ ಮಾಡುತ್ತಿರುತ್ತೇವೆ: ಮಾಡುವುದು, ಹೊಂದುವುದು ಮತ್ತು ಜೀವಿಸಿರುವುದು. ಹೊಂದಲು ಕೆಲಸ ಮಾಡುತ್ತಾ ಜೀವಿಸುವುದರಲ್ಲಿ ಸಂತೋಷಪಡದೆ ಇರುತ್ತೇವೆ, ಇವೆಲ್ಲ ದುಃಖ ಪಡುವುದಕ್ಕೆ ಮೂಲ ಕಾರಣಗಳು. ಕೆಲಸ ಮಾಡುವುದು, ಹೊಂದುವುದರಿಂದ ಹಿಡಿಯಲ್ಪಡುವುದಿಲ್ಲ, ಯಾವಾಗಲೂ ನಮ್ಮ ಅಭಿಲಾಷೆಗಳನ್ನು ಈಡೇರಿಸಲು ಕಷ್ಟಪಟ್ಟು ಕೆಲಸ ಮಾಡುತ್ತೇವೆ, ಅಲ್ಲಿ ವಿಪರೀತ ಆಕಾಂಕ್ಷೆಗಳು ನಮ್ಮನ್ನು ಓಡುವಂತೆ ಮಾಡುತ್ತವೆ.
ಯಾವಾಗಲೂ ಈಗ ಕೆಲಸ ಮಾಡೋಣ ಆಮೇಲೆ ಸುಖ ಅನುಭವಿಸಿದರಾಯಿತು ಎಂದು ಯೋಚಿಸಲೇಬೇಡಿ. ನೀವು ಪುನಃ ವಾಪಸ್ ಬಂದು ಅನುಭವಿಸೋಣ ಎಂದು ಯೋಚಿಸಲೇ ಬೇಡಿ ಎಂದು ನಾನು ಹೇಳುತ್ತೇನೆ. ಅದು ಖಂಡಿತ ಆಗುವುದೇ ಇಲ್ಲ, ಎಲ್ಲ ನಾಳೆಯೂ, ಇವತ್ತಿನ ರೂಪದಲ್ಲಿಯೇ ಬರುತ್ತದೆ. ಮಾಡುವುದು, ಪ್ರತಿಕ್ಷಣವೂ ಇರುವಿಕೆಗೆ ದಾರಿ ತೋರಿಸಲೇಬೇಕು - ಆವಾಗಲೇ ನೀವು ಸರಿಯಾದ ಮಾರ್ಗದಲ್ಲಿ ಇದ್ದೀರ ಎಂದು ತಿಳಿಯಬೇಕು.
ಜೀವಿಸುವುದನ್ನು ಮುಂದಕ್ಕೆ ಹಾಕಬೇಡಿ! ಸಂತೋಷದಿಂದ ಅದನ್ನು ಆಚರಿಸಿ. ಜೀವಿತವನ್ನು ಸಂತೋಷಪಡಿ - ಅದು ಈಗಳ್ಳದೆ ಇದ್ದರೆ ಮುಂದೆ ಇಲ್ಲವೇ ಇಲ್ಲ. ನಾವೆಲ್ಲರೂ ನಾವು ಕಡೆಗೆ ಅನುಭವಿಸೋಣವೆಂದು ನಮ್ಮ ಜೀವಮಾನವೆಲ್ಲ ಯೋಚಿಸುತ್ತಾ ಓಡುತ್ತಿರುತ್ತೇವೆ, ಆದರೆ ನಾವು ಕಡೆಯದಾಗಿ ಸ್ಮಶಾನದ ಕಡೆಗೆ ಓಡುತ್ತಾ ಅಲ್ಲಿ ನಿಲ್ಲುತ್ತೇವೆ. ನೀವು ಓಡುವ ಹಾದಿಗೆ ಬಂದಾಗ, ನೀವು ಅನುಭವಿಸುವ (ಆನಂದಪಡುವ) ನಿಜವಾದ ಶಕ್ತಿಯನ್ನು ಕಳೆದುಕೊಳ್ಳುತ್ತೀರ. ನೀವು ಯಾವ ತರಹ ಆನಂದ ಪಡಬೇಕು ಎನ್ನುವುದನ್ನೇ ಮರೆಯುತ್ತೀರ.
ಸಾಧಾರಣ ಹೀಗೆ ಹೇಳುವುದುಂಟು, ಹೊಂದುವುದರಲ್ಲಿರುವ ಸುಖಕ್ಕಿಂತ ಹೆಚ್ಚು ಸುಖ ಪ್ರಯತ್ನದಲ್ಲಿ ಇರುತ್ತದೆ. ಯಾವಾಗಲೂ ನೀವು ಯಾವುದನ್ನಾದರೂ ಹಿಂಬಾಲಿಸಿಕೊಂಡು ಅಡ್ಡಿಸಿಕೊಂಡು ಎಲ್ಲಿಯವರೆಗೆ ಹೋಗುತ್ತೀರೋ, ಪೂರ್ತಿ ಪ್ರಪಂಚವೇ ಅದಕ್ಕೆ ಸಮಾನ ಎಂದು ತೋರುತ್ತದೆ, ಆದರೆ ಅದನ್ನು ನೀವು ಪಡೆದ ಮೇಲೆ ಹೇಗೂ ಅದು ನಿಮಗೆ ಮುಖ್ಯವಲ್ಲವೆಂದು ತೋರುತ್ತದೆ: ನೀವು ನಿಮಗೆ ಸರಿಯಾಗಿ (ಕರಾರುವಾಕ್ಕಾಗಿ) ಏನು ಬೇಕು ಎನ್ನುವುದನ್ನು ತಿಳಿದುಕೊಂಡು
ಜಾಗ್ರತರಾಗಿ, ನೀವು ಅದನ್ನೇ ಮಾಡಲು ಪ್ರಯತ್ನ ಪಡುತ್ತೀರ ಮತ್ತು ನೀವು ಮತ್ತೊಮ್ಮೆ ಇಂಥ ನಿಮಗೆ ವಿರುದ್ಧವಾದ, ತುಂಡುತುಂಡಾಗುವ (fragmened) ಸಂದರ್ಭಕ್ಕೆ ಸಿಲುಕಿಕೊಳ್ಳುವುದಿಲ್ಲ.
ರಮಣ ಮಹರ್ಷಿಗಳು ಸುಂದರವಾಗಿ ಹೀಗೆ ಹೇಳುತ್ತಾರೆ.
"ಅಡೈವದಾರ್ ಮನ್ ಕಡುಗೆ ಅನಾಲುಮ್ ಮಲಯಾಯ್ ಕಾಟ್ಟಿ ಅಡೈಂದಪಿನ್ ಮಲಯ್ಕೆ ಅನಾಲುಮ್ ಕಡುಗೆ ಕಾಟ್ಟುಮ್ ಮಾಯಾ ಮನಮ್''. ಅದರ ಅರ್ಥ ಏನೆಂದರೆ, ಮನಸ್ಸು ಒಂದು ಮಾಯೆ ಒಂದು ಸಣ್ಣ ಸಾಸಿವೆ ಬೀಜವನ್ನು ಒಂದು ದೊಡ್ಡ ಪರ್ವತದಂತೆ ಅದನ್ನು ಹೊಂದುವತನಕ ತೋರಿಸುತ್ತದೆ, ಮತ್ತು ಒಂದು ಪರ್ವತವನ್ನು ಅದು ಹೊಂದಿದ ಮೇಲೆ ಸಾಸಿವೆ ಕಾಳಿನ ತರಹ ಪ್ರಾಮುಖ್ಯತೆ ಹೊಂದಿಲ್ಲವೆಂದು ತೋರಿಸುತ್ತದೆ.
ಹೋಲಿಕೆ ಈ ತರಹ ಮನೋವೃತ್ತಿಗೆ ಮೂಲ ಕಾರಣ. ಮನಸ್ಸು ಸುಮ್ಮನೆ ಅದರ ಸುತ್ತ ಎಲ್ಲವನ್ನು ನೋಡುತ್ತದೆ ಮತ್ತು ಆಟವಾಡುತ್ತದೆ. ನೀವು ಎಲ್ಲಾ ನಿಮ್ಮ ಆಕಾಂಕ್ಷೆಗಳನ್ನೆಲ್ಲ ತ್ಯಾಗ ಮಾಡಿ ಎಂದು ಹೇಳುವುದಿಲ್ಲ. ನೀವು ಹೋಲಿಸಿಕೊಳ್ಳಬೇಡಿ ಎಂದು ನಾನು ಹೇಳುವುದಿಲ್ಲ. ನಾನು ಹೇಳುವುದು ಇಷ್ಟು, ನಿಮ್ಮ ಹೋಲಿಕೆಗೆ ನಿಖರತೆಯನ್ನು ತನ್ನಿ, ನಿಮ್ಮ ಹೊಟ್ಟೆಕಿಚ್ಚಿಗೆ ಸ್ಪಷ್ಟತೆಯನ್ನು ತನ್ನಿ. ನೀವು ಏಕೆ ಓಡುತ್ತಿದ್ದೀರಿ ಎಂದು ಸ್ಪಷ್ಟಪಡಿಸಿಕೊಳ್ಳಿ. ಯಾರೋ ಬೇರೆಯವರು ಓಡುತ್ತಿದ್ದಾರೆ ಎಂದು ನೀವು ಓಡಬೇಡಿ ಅಷ್ಟೆ.
ಜನರು ಕೇಳುತ್ತಾರೆ "ಸ್ವಾಮೀಜಿ ನಾವು ಹೋಲಿಸಿಕೊಳ್ಳದೆ ಇದ್ದರೆ, ನಾವು ಎಲ್ಲಿ ನಿಲ್ಲುತ್ತೇವೆ ಎಂದು ಹೇಗೆ ತಿಳಿಯುವುದು?''
ಈ ಪೂರ್ತಿ ಪ್ರಪಂಚದಲ್ಲಿ ಕೆಲವು ಜನ ನಿಮಗಿಂತ ನೀವು ಏನು ಮಾಡಿದರೂ ಅದಕ್ಕಿಂತ ಮೇಲೆ ಇದ್ದಾರೆ. 99.99% ಶತಮಾಂಶ ನೀವು ಪ್ರಪಂಚದ ಅತ್ಯುತ್ತಮ ಇಂಜಿನಿಯನಿರಾಗಿಲ್ಲ, ವೇಗವಾದ ಓಟಗಾರನೂ ಅಥವಾ ತುಂಬಾ ನಿಪುಣನಾದ ಚಿತ್ರಕಾರನೂ ಅಲ್ಲ. ಇದರಿಂದ ಈ ವಿಷಯಗಳಲ್ಲಿ ನೀವು ಕಡಿಮೆ ಆನಂದಿಸುತ್ತೀಯ ಎಂದು ಅರ್ಥವಾಗುತ್ತದೆಯೆ? ನೀವು ಯಾವಾಗ ನೀವು ಮಿಕ್ಕವರಿಗಿಂತ ಕಡಿಮೆ ಆನಂದಿಸುತ್ತಿದ್ದೀಯ ಎಂದು ತಿಳಿದುಕೊಂಡರೆ ಆಗ ನೀವು ಕಡಿಮೆ ಆನಂದಿಸುವುದಕ್ಕೆ ಪ್ರಾರಂಭ ಮಾಡುತ್ತೀಯ. ನೀವು ಬೇರೆಯವರು ನಿಮಗಿಂತ ಹೆಚ್ಚಾಗಿ ಆನಂದಿಸುತ್ತಿದ್ದಾರೆಂದು ಯೋಚಿಸಿದ ತಕ್ಷಣ ಅದು ನಿಮ್ಮೊಳಗೆ ಬಂದ ಕೂಡಲೆ ನಿಮ್ಮ
ಪೂರ್ತಿ ಅಭಿರುಚಿಯೇ ಬದಲಾಯಿಸುತ್ತದೆ. ನೀವು ಅಸಮಾಧಾನದಿಂದ ಮತ್ತು ಹೊಟ್ಟೆಕಿಚ್ಚಿನಿಂದ ಕೂಡಿದವರಾಗುತ್ತೀರ.
ನೋಡಿ, ಬಡತನ ಒಂದೇ ನಮ್ಮನ್ನು ತೊಂದರೆ ಪಡಿಸುವುದಿಲ್ಲ. ನಾವು ಯಾವಾಗ ಅದರ ಬಗ್ಗೆ ಚಿಂತಿಸುತ್ತಿವೋ ಆಗ ಅದು ನಮಗೆ ತೊಂದರೆ ಕೊಡಲು ಪ್ರಾರಂಭ ಮಾಡುತ್ತದೆ. ನಾವು ಇರುವಂತೆಯೇ ಶಾಂತವಾದ ಜೀವನವನ್ನು ಸಾಗಿಸುತ್ತಿರುತ್ತೇವೆ, ಯಾವಾಗ ನಾವು ಬಡವರು ಎನ್ನುವುದು ನಮ್ಮಲ್ಲಿ ಪ್ರವೇಶ ಮಾಡುತ್ತದೆಯೋ ಆಗ ನಾವು ದುಃಖಿ ಪಡುತ್ತೇವೆ. ಮತ್ತು ಈ ಯೋಚನೆ ಹೇಗೆ ನಮಗೆ ಬಂತು? ಇನ್ನೊಬ್ಬರನ್ನು ನೋಡಿ ಅವರನ್ನು ಹೋಲಿಕೆ ಮಾಡಿಕೊಂಡಾಗ ಪ್ರಾರಂಭವಾಯಿತು. ಈ ತರಹ ನಾವು ಸಂಕಟ ಪಡುತ್ತೇವೆ, ಏಕೆಂದರೆ ಈ ಯೋಚನೆ ನಮ್ಮ ಆತ್ಮವನ್ನು ಸೀದ ಬಡಿಯುತ್ತದೆ ಅದರಿಂದ ನಾವು ಕುಗ್ಗುತ್ತೇವೆ - ಮಾವಿನ ಹಣ್ಣಿನ ತರಹ.
ಒಂದು ಸಣ್ಣ ಕಥೆ:
ಎರಡು ಅಂಗಡಿಗಳು ಒಂದು ರಸ್ತೆಯ ಎದುರು ಬದುರಿನಲ್ಲಿದ್ದವು, ಒಂದೇ ತರಹ ಪದಾರ್ಥಗಳನ್ನು ಮಾರುತ್ತಿದ್ದರು.
ಯಾವಾಗಲೂ 2 ಅಂಗಡಿಯಲ್ಲೂ ಬಿಗಿಯಾದ ಪೈಪೋಟಿ ಇತ್ತು.
ಒಂದು ದಿವಸ ಒಂದು ಅಂಗಡಿಯ ಮಾಲೀಕ ಹೊರಗಡೆ ಬಂದು, ಅವನ ಅಂಗಡಿಯ ಹೊರಗಡೆ ಸಂಕೇತದ ಹಲಗೆಯನ್ನು ಹಾಕಿದ. 1929 ಈ ವರ್ಷದಲ್ಲಿ ಸ್ಥಾಪಿಸಲ್ಪಟ್ಟಿದೆ.
ಎದುರುಗಡೆ ಅಂಗಡಿಯ ಮಾಲೀಕ ಅವನ ಅಂಗಡಿಯ ಒಳಗಿನಿಂದ ಇದನ್ನು ನೋಡುತ್ತಲಿದ್ದ.
ಮಾರನೇ ದಿನ ಅವನು ಹೊರಗಡೆ ಬಂದು ಅವನ ಅಂಗಡಿಯ ಮುಂದೆ ಸಂಕೇತದ ಹಲಗೆಯನ್ನು ‘ಎಲ್ಲ ಹೊಸ ದಾಸ್ತಾನು ಯಾವುದೂ ಹಳೆಯದು ಇಲ್ಲ’ ಎಂದು ಬರೆದು ಹಾಕಿದ.
(ನಗು!)
ಒಂದು ವೇಳೆ ನೀವು ನಿಮ್ಮನ್ನು ಇನ್ನೊಬ್ಬರಿಗೆ ಹೋಲಿಸಿಕೊಂಡು ಅದಕ್ಕೆ ಪ್ರತಿಕ್ರಿಯೆ ಮಾಡುತ್ತಿದ್ದರೆ, ನಿಮ್ಮನ್ನು ನೀವೇ ಸಾಕಷ್ಟು ಗೌರವಿಸುತ್ತಿಲ್ಲವೆಂದು ಅದರಿಂದ ಅರ್ಥವಾಗುತ್ತದೆ. ನೀವು ಸುಮ್ಮನೆ ನಿಮ್ಮ ಮೆದುಳಿನ ಮನಸ್ಸಿನಿಂದ
ಪ್ರತಿಕ್ರಿಯಿಸುತ್ತಿದ್ದೀರ, ನಿಮ್ಮ ಬುದ್ಧಿಶಕ್ತಿಯಿಂದ ಅಲ್ಲ ಎಂದು ತಿಳಿಯುತ್ತದೆ. ನಿಮ್ಮ ಮೆದುಳಿನ ಮನಸ್ಸು ಏನೇನು ಅದು ನೋಡುತ್ತದೆಯೊ ಎಲ್ಲವನ್ನು ಕೂಡಿಸಿಟ್ಟು ಸಿದ್ಧವಾದ ಪಟ್ಟಿ. ಆಗ ನೀವು ಅನ್ಯಾಯವಾದ ದಾರಿಯಲ್ಲಿ ಪ್ರತಿಕ್ರಿಯಿಸುತ್ತೀರ. ಆಗ ನಿಮ್ಮ ಒಳಗಿನ ಬುದ್ಧಿಶಕ್ತಿಯು ಎಲ್ಲವನ್ನು ಅದು ಇರುವಂತೆಯೇ ನೋಡುತ್ತದೆ ಮತ್ತು ಮುಂದಕ್ಕೆ ಹೋಗುತ್ತದೆ.
ಯಾವಾಗ ನೀವು ನಿಮ್ಮ ಶಕ್ಯತೆ ನಿಮಗೆ ಆಶೀರ್ವಾದದಿಂದ ಹೊಂದಿರುವುದನ್ನು ಅರ್ಥಮಾಡಿಕೊಳ್ಳುವುದಿಲ್ಲವೋ, ನೀವು ಯಾವಾಗ ನಿಮಗೆ ಸಾಕಾದಷ್ಟು ಹೊಂದಿರುವುದನ್ನು ಕಂಡು ಹಿಡಿದಿಲ್ಲವೋ, ನೀವು ಯಾಂತ್ರಿಕವಾಗಿ ನಿಮ್ಮ ಒಳಗಡೆ ಇರುವ ವಸ್ತುವಿನ ಮೇಲೆ ನಿಮಗೆ ವಿಶ್ವಾಸ ಬರುವುದಿಲ್ಲ ಮತ್ತು ಆಗ ನೀವು ಇನ್ನೊಬ್ಬರನ್ನು ಅನುಕರಣೆ ಮಾಡಲು ಪ್ರಾರಂಭಿಸುತ್ತೀರ.
ಬುದ್ಧ ಹೇಳುತ್ತಾನೆ: ಸಂಬಂಧಗಳು ವಿನಃ ಯಾವುದೂ ಅಸ್ತಿತ್ವದಲ್ಲಿಲ್ಲ. ಒಂದು ವೇಳೆ ನೀನು ಒಬ್ಬನೇ ಈ ಹೊಸ ಗ್ರಹದ ಮೇಲೆ ಇದ್ದರೆ, ಆಗ ನಿನ್ನನ್ನು ಉದ್ದ ಅಥವಾ ಕುಳ್ಳ, ಕುರೂಪಿ ಅಥವಾ ಸುಂದರ, ಸಾಹುಕಾರ ಅಥವಾ ಬಡವ ಎಂದು ಕರೆಯುತ್ತೀಯ? ನಿನ್ನನ್ನು ಏನಾದರೂ ಕರೆದುಕೊಳ್ಳಲು ಆಗುವುದಿಲ್ಲ. ನಾನು ಸರಿಯೆ? ನೀನು ನೀನಾಗಿರುತ್ತೀಯ! ಅಷ್ಟೆ ತಿಳಿಯಿತೇ? ಇದೇ ನೀವು ಈ ಗ್ರಹದ ಮೇಲೂ ಇರುವಾಗ ಇರುವ ಸತ್ಯ.
ಪ್ರತಿ ಒಬ್ಬ ಮನುಷ್ಯನೂ ಸರಿಸಾಟಿ ಇಲ್ಲದವರು (unique) ನೀವು ಒಂದು ಸಿಂಹವನ್ನು ಮತ್ತು ಒಂದು ಕುದುರೆಯನ್ನು ಹೋಲಿಸಲು ಸಾಧ್ಯವಾಗುತ್ತಾ? ನಾವು ನಮ್ಮನ್ನು ಹೂವಿಗಾಗಲೀ ಅಥವಾ ಪಕ್ಷಿಗಳಿಗಾಗಲೀ ಅಥವಾ ಬೆಟ್ಟಗಳಿಗಾಗಲೀ, ಹೋಲಿಸಿ ಕೊಳ್ಳುತ್ತೀವಾ? ನಾವು ಸುಮ್ಮನೆ ಅವುಗಳ ಸೌಂದರ್ಯವನ್ನು ಆಸ್ವಾದಿಸುತ್ತೇವೆ, ಹೌದೋ ಅಲ್ಲವೋ? ಅದೇ ರೀತಿ ನೀವು ಬೇರೆ ಮನುಷ್ಯರನ್ನು ನೋಡಿ ಸಂತೋಷ ಪಡಲು ಆಗುವುದಿಲ್ಲವೇ?
ಮನುಷ್ಯರು ಒಂದೇ ತರಹ ಇರುವಂತೆ ತೋರಿದರೂ, ಪ್ರತಿ ಒಬ್ಬರೂ ಸರಿಸಾಟಿ ಇಲ್ಲದವರು (unique) ಮತ್ತು ಬೇರೆ ದಾರಿಯಲ್ಲಿ ಪ್ರಯಾಣ ಮಾಡುತ್ತಿರುವವರು, ಎಲ್ಲಿಯವರೆಗೆ ನೀವು ನಿಮ್ಮ ದಾರಿಯಲ್ಲಿ ಪೂರ್ತಿ ಏಕಾಗ್ರತೆಯಿಂದ ಪ್ರಯಾಣ ಮಾಡುತ್ತಿರುತ್ತೀರೋ, ನೀವು ಪ್ರತಿ ಕ್ಷಣವೂ ತೃಪ್ತಿಯನ್ನು ಅನುಭವಿಸುತ್ತಿರುತ್ತೀರಾ. ನಿಮಗೆ ಇನ್ನೊಬ್ಬ ಮನುಷ್ಯನ ದಾರಿಯನ್ನು ನೋಡುವುದರಿಂದ ಏನು ಅರ್ಥವಾಗುತ್ತದೆ ಎನ್ನುವುದೂ ತಿಳಿದಿರುವುದಿಲ್ಲ.
ಒಂದು ಸಣ್ಣ ಕಥೆ:
ಒಬ್ಬ ವ್ಯಕ್ತಿಯು ಒಂದು ಕತ್ತಲೆಯ ಹಳ್ಳಿ, ಅಲ್ಲಿ ದೀಪಗಳೂ ಇಲ್ಲದೇ ಇರುವಂಥ ರಸ್ತೆಯಲ್ಲಿ ಕಾರನ್ನು ನಡೆಸುತ್ತಿದ್ದರು.
ಅವರು ತಮ್ಮ ಮುಂದೆ ಇರುವ ಕಾರನ್ನು ಹಿಂಬಾಲಿಸಿದರೆ ತೊಂದರೆ ಇಲ್ಲದೆ ಹೋಗಬಹುದು ಎಂದು ತೀರ್ಮಾನಿಸಿದರು.
ಹಾಗೆಯೇ ಸ್ವಲ್ಪ ದೂರ ಹೋದರು ಮತ್ತು ತಕ್ಷಣ ಮುಂದಿನ ಕಾರು ನಿಂತಿತು.
ಆ ವ್ಯಕ್ತಿ ಹೋಗಿ ಆ ಕಾರಿಗೆ ಅಪ್ಪಳಿಸಿದನು.
"ನೀನು ಏಕೆ ಕಾರನ್ನು ನಿಲ್ಲಿಸುವುದಾಗಿ ಸೂಚನೆ ಮಾಡಲಿಲ್ಲ" ಎಂದು ಆ ವ್ಯಕ್ತಿ ಕಿರುಚಾಡಿದನು.
ಕಾರು ಚಾಲಕನು (Driver) ಅವನ ತಲೆಯನ್ನು ಹೊರಗಡೆ ಹಾಕಿ 'ನನ್ನ ಸ್ವಂತ ಗ್ಯಾರೇಜ್ ಒಳಗಡೆಯೇ' ಎಂದು ಕೇಳಿದ.
(ಜೋರಾದ ನಗು!)
ನೀವು ನಿಮ್ಮ ಸ್ವಂತ ಹಾದಿಯ ಮೇಲೆ ಏಕಾಗ್ರತೆ ಹೊಂದಿದರೆ, ನೀವು ಸತತವಾಗಿ ಮುಂದುವರೆಯುತ್ತೀರ ಮತ್ತು ನಿಮ್ಮ ಸಾಮರ್ಥ್ಯವನ್ನು ವಿಕಾಸಪಡಿಸುತ್ತೀರ. ನೀವು ನಿಮ್ಮನ್ನೇ ನಿಮಗೆ ಹೋಲಿಸಿಕೊಳ್ಳಬೇಕಾಗುತ್ತೆ, ಮಿಕ್ಕವರ ಮೇಲೆ ಖಂಡಿತ ಬೇಕಿಲ್ಲ. ನೀವು ನಿಮ್ಮಷ್ಟಕ್ಕೆ ನೀವಾಗಿಯೇ, ಬೇರೆಯವರಿಂದ ಅಲ್ಲದೆ ಗೆಲ್ಲಲೇ ಬೇಕಾಗುತ್ತದೆ. ಇನ್ನೊಬ್ಬರ ಮೇಲೆ ಹೋಲಿಸಿಕೊಳ್ಳುವುದರಿಂದ ಪ್ರತಿಯೊಂದು ನಿಮಿಷವೂ, ನಿಮ್ಮ ಪ್ರಗತಿಯ ಕಾಲ ವ್ಯರ್ಥವಾಗುತ್ತದೆ.
ಇನ್ನೊಂದು ಸಣ್ಣ ಕಥೆ:
ಒಬ್ಬ ಮನುಷ್ಯ ಸಾವಿರ ಮೀಟರ್ ಓಟದ ಪಂದ್ಯದಲ್ಲಿ ಓಡುತ್ತಿದ್ದ.
200 ಮೀಟರ್ ಓಡಿದ ಮೇಲೆ ಹಿಂದೆ ತಿರುಗಿ ನೋಡಿ ಇನ್ನು ಮಿಕ್ಕ ಓಟಗಾರರು ಇವನಿಗಿಂತ ಹಿಂದೆ ಇರುವುದನ್ನು ತಿಳಿದುಕೊಂಡು, ಸಂತೋಷವಾಗಿ ಅವನು ಓಡುತ್ತಿದ್ದ.
500 ಮೀಟರ್ ಆದ ಮೇಲೆ ಅವನು ಪುನಃ ಹಿಂತಿರುಗಿ ನೋಡಿ, ಅವನು ಇನ್ನು ಅವರಿಗಿಂತ ಮುಂದೆ ಇರುವುದಕ್ಕೆ ಸಂತೋಷಪಟ್ಟು ಮುಂದೆ ಓಡುತ್ತಿದ್ದ.
ಪ್ರತಿ ಕೆಲವು ಮೀಟರ್ ಆದ ಮೇಲೂ, ಅವನು ಅದನ್ನೇ ಮಾಡುತ್ತಿದ್ದ, ಕೊನೆಯಲ್ಲಿ ಪಂದ್ಯದಲ್ಲಿ ಗೆದ್ದ.
ಒಂದು ವೇಳೆ ಆ ಮನುಷ್ಯನು ಹಿಂದಿರುಗಿ ನೋಡದೆ, ಬರೀ ಜೋರಾಗಿ ಓಡುವುದರ ಮೇಲೆಯೇ ಏಕಾಗ್ರತೆಯನ್ನು ಹೊಂದಿದ್ದರೆ, ಅವನು ಕಡಿಮೆ ಅವಧಿಯಲ್ಲಿಯೇ ಪಂದ್ಯದಲ್ಲಿ ಗೆಲ್ಲುತ್ತಿದ್ದ. ಅವನು ಬಹುಶಃ ಹೊಸ ದಾಖಲೆಯನ್ನೇ ಮಾಡುತ್ತಿದ್ದ. ಇದೇ ರೀತಿ ನಮ್ಮ ಜೀವಿತದಲ್ಲೀಯೂ ಕೂಡ. ನಮ್ಮ ಏಕಾಗ್ರತೆ ಪೂರ್ತಿ ನಮ್ಮ ಏಳಿಗೆಯ ಮೇಲೆ ಯಾವಾಗಲೂ ಬೇರೆಯವರ ಮೇಲೆ ಇರುವುದರ ಬದಲು ಇದ್ದರೆ ನಮ್ಮ ಪೂರ್ತಿ ಶಕ್ಯತೆಯನ್ನು ಸಾಧ್ಯವಾಗಿಸಬಹುದು. ಆದರೆ ನಾವು ಬೇರೆಯವರನ್ನೇ ನೋಡುತ್ತಾ ನಮ್ಮ ಶಕ್ಯತೆಯನ್ನು ಅರಿಯಲು ಕಳೆದುಕೊಳ್ಳುತ್ತಿದ್ದೇವೆ.
ಸುಮ್ಮನೆ ನೀವು ಒಂದು ಕೊಠಡಿಯಲ್ಲಿ ಬೀಗ ಹಾಕಿಕೊಂಡು, ಎಷ್ಟು ಕಾಲ ಮತ್ತು ಸಾಮರ್ಥ್ಯವನ್ನು ಇನ್ನೊಬ್ಬರಿಗೆ ಹೋಲಿಸಿಕೊಳ್ಳುವುದರಲ್ಲಿಯೇ ವ್ಯರ್ಥ ಮಾಡಿರುವುದಾಗಿ ವಿಶ್ಲೇಷಣೆ ಮಾಡಿದಲ್ಲಿ, 60% ಗಿಂತ ಹೆಚ್ಚು ಎಂದು ಅನ್ನಿಸುತ್ತೆ. ನಾನು ಖಂಡಿತವಾಗಿ ತಿಳಿದಿದ್ದೇನೆ. ಮುಖ್ಯವಾಗಿ ಹೋಲಿಕೆ ಮತ್ತು ಹೊಟ್ಟೆಕಿಚ್ಚು (ಅಸೂಯೆ) ನಿಮ್ಮ ಬಲವನ್ನು ಎಲ್ಲದಕ್ಕಿಂತ ಮಿಗಿಲಾಗಿ ಹೀರುತ್ತದೆ. ನಿಮ್ಮ ಮನಸ್ಸು ಬೇರೆ ಮನುಷ್ಯ ಅವನು ಏನೇನು ಹೊಂದಿದ್ದಾನೊ ಅದನ್ನೆಲ್ಲ ಹೇಗೆ ನಿರ್ವಹಿಸಿದ (managed) ಎಂದು ಲೆಕ್ಕ ಹಾಕುವುದರಲ್ಲಿ ಚಟುವಟಿಕೆ ಆಗುತ್ತದೆ. ನಿಮ್ಮ ಮನಸ್ಸು ಅಷ್ಟು ಬಿಸಿ ಆಗುತ್ತದೆ. ನಿಮ್ಮ ಇಡೀ ವ್ಯವಸ್ಥೆಯು (system) ಈ ಬೇಡದೇ ಇರುವ ಲೆಕ್ಕಾಚಾರದಿಂದ ಹೀರಲ್ಪಡುತ್ತದೆ (sapped). ನೀನು ಸುಮ್ಮನೆ ನಿನ್ನ ಸಾಮರ್ಥ್ಯವನ್ನು ಕೆಲವೇ ಕ್ಷಣಗಳಲ್ಲಿ ಹೋಲಿಕೆ ಮತ್ತು ಅಸೂಯೆಯಿಂದ ಒಣಗಿಸಿಕೊಳ್ಳುತ್ತೀರ.
ನಾವು ಯಾವಾಗಲೂ ಪೆಟ್ರೋಲ್, ನೀರು ಮತ್ತು ವಿದ್ಯುಚ್ಛಕ್ತಿ ಇವುಗಳನ್ನು ರಕ್ಷಿಸುವುದಕ್ಕೆ ಮಾತಾಡುತ್ತಾ ಇರುತ್ತೇವೆ, ನಮ್ಮ ಸ್ವಂತ ಸಾಮರ್ಥ್ಯವನ್ನು ರಕ್ಷಿಸುವುದು ಹೇಗೆ? ನಮ್ಮ ಸಾಮರ್ಥ್ಯವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುತ್ತಿದ್ದೀವಾ? ನಮ್ಮ ಸ್ವಂತ ಸಾಮರ್ಥ್ಯವನ್ನು ನಾವು ಏಕೆ ತಿಳಿದಿಲ್ಲ? ನಾವುಗಳು ಸಾಮರ್ಥ್ಯದಿಂದ ಆಶೀರ್ವಾದ ಹೊಂದಿದ್ದೇವೆ ಎಂದು ನಾವು ನೋಡಿಲ್ಲ. ಅದೇ ಕಾರಣ. ನಾವು ಹೊರಗಡೆ ಮೂಲಗಳಿಂದ ಸಾಮರ್ಥ್ಯ (ಬಲ) ಪೋಲಾಗುತ್ತಿರುವುದನ್ನು ನೋಡಬಹುದು ಏಕೆಂದರೆ ಸಾಮರ್ಥ್ಯ (energy) ವನ್ನು ವಾಸ್ತವ (Tangible) ರೂಪದಲ್ಲಿ ನೋಡುತ್ತೇವೆ. ಆದರೆ ನಮ್ಮ ಸ್ವಂತ ಸಾಮರ್ಥ್ಯವನ್ನು ಸುಮ್ಮನೆ
ಗೊತ್ತಿಲ್ಲದೇ ಇರುವ ದಾರಿಯಲ್ಲಿ ವ್ಯರ್ಥಮಾಡಿ ಆಮೇಲೆ ನಮಗೆ ಸಾಕಷ್ಟು ಕೊಟ್ಟಿಲ್ಲವೆಂದು ದೂರುತ್ತೇವೆ.
ನೀವು ನಿಮ್ಮ ಸಾಮರ್ಥ್ಯವನ್ನು ನಿಮ್ಮದೇ ಸ್ವಂತ ವಿಸ್ತರಣೆಗೆ ಉಪಯೋಗಿಸಿದರೆ, ನೀವು ಎಷ್ಟು ಸಾಧಿಸಬಹುದು ಎಂದು ಊಹಿಸಿಕೊಳ್ಳಿ. ನೀವು ಸುಮ್ಮನೆ ವಿಸ್ತರಣೆ (ex-pand) ಹೊಂದಿ ಮುಕ್ತಿ ಪಡೆದಂತೆ ಸಂತೋಷದಿಂದ ಅನುಭವಿಸಬಹುದು.
ನೋಡಿ. ಹೋಲಿಕೆ ಎನ್ನುವುದು ನೀವು ಯಾವಾಗಲೂ ನಿಮ್ಮಲ್ಲಿರುವ ದೌರ್ಬಲ್ಯದ ಕೊಂಡಿಯಿಂದಲೋ ಅಥವಾ ನಿಮ್ಮ ಸಾಹಸ ಕಾರ್ಯದಿಂದಲೋ ಅಳೆಯುತ್ತೀರ. ಇದೇ ಇರುವ ತೊಂದರೆ. ನೀವು ಏಕೆ ಹಾಗೆ ಮಾಡುತ್ತೀರ? ಯಾವಾಗಲೂ ನಿಮ್ಮ ದೌರ್ಬಲ್ಯದ ಕೊಂಡಿಯಿಂದ ನಿಮ್ಮನ್ನು ಅಳೆಯಬೇಡಿ. ನೀವು ಅಹಂಭಾವನೆಯಿಂದ ಇರಬೇಕಾಗಿಲ್ಲ ಮತ್ತು ನೀವು ತುಂಬಾ ಪ್ರಖ್ಯಾತರೆಂದು ಹಕ್ಕು ಸಾಧಿಸುವುದು ಬೇಡ. ಆದರೆ ನೀವು ಆತ್ಮಗೌರವವನ್ನು ಹೊಂದಬಹುದು. ಮತ್ತು ನಿಮ್ಮಲ್ಲಿಯೇ ನೀವು ಅದ್ವಿತೀಯರೆಂದು ನೋಡಬಹುದು. ಆಗ ನಿಮ್ಮನ್ನು ಈ ತರಹ ಅಳತೆ ಮಾಡಿಕೊಳ್ಳುವುದಿಲ್ಲ.
ನೀವು ಆತ್ಮಗೌರವ ಹೊಂದಿದ್ದರೆ, ನೀವು ಪ್ರತಿಯೊಬ್ಬರನ್ನು ಅದ್ವಿತೀಯರೆಂದು (unique) ಗೌರವಿಸುತ್ತೀರ ಮತ್ತು ಹೋಲಿಕೆಗೆ ಆಸ್ಪದ ಇಲ್ಲವೆಂದು ತಿಳಿಯುತ್ತೀರ. ಇದೂ ಕೂಡ ಅಸ್ತಿತ್ವ (Being) ಹೊಂದಿರುವುದಕ್ಕೆ ಕೃತಜ್ಞತೆಯನ್ನು ತೋರಿಸಲು ಮೊದಲನೇ ಮೆಟ್ಟಲು.
ಒಂದು ಸಣ್ಣ ಕಥೆ:
ಒಬ್ಬ ದೊರೆ ಒಂದು ಸಲ ಕೆಲವು ಯಕ್ಷಿಣಿ ಶಕ್ತಿಯನ್ನು ಹೊಂದಲು ಗುರುವಿನ ಹತ್ತಿರ ಹೋದ. ಏಕೆಂದರೆ ಅವನು ತನ್ನ ನೆರೆಯ ರಾಜನಿಗಿಂತ ಹೆಚ್ಚು ಪ್ರಭಾವಶಾಲಿಯಾಗಬೇಕೆಂದು ಬಯಸಿದ್ದ. ಅವನು ಗುರುವಿನ ಎದುರು ಕುಳಿತು ಅವನು ಬಂದಿರುವ ಉದ್ದೇಶವನ್ನು ತಿಳಿಸಲು ಪ್ರಾರಂಭ ಮಾಡಿದ.
ಗುರುವು ಸಾವಧಾನದಿಂದ ಅವನು (ರಾಜ) ಹೇಳುವುದನ್ನು ಕೇಳಿದ.
ಆಮೇಲೆ ರಾಜನನ್ನು ಅವನ ತೋಟದಲ್ಲಿ ಎಲ್ಲಿ ಗುಲಾಬಿ ಪೊದೆ (bush) ಮತ್ತು ಒಂದು ಸೈಪ್ರಸ್ ಗಿಡ ಒಂದರ ಪಕ್ಕದಲ್ಲಿ ಒಂದು ಬೆಳೆದಿರುವ ಜಾಗಕ್ಕೆ ಹೋಗುವಂತೆ ಅವನಿಗೆ ಹೇಳಿದ. “ಅವರೇ ನಿನ್ನ ಉಪಾಧ್ಯಾಯರು. ನೀನು ಏನು ಕಲಿಯಬೇಕೆಂದು ಇರುವೆಯೋ ಅದನ್ನು ಕಲಿಸುತ್ತಾರೆ.”
ದೊರೆಯು ತೋಟಕ್ಕೆ ಹೋದನು, ಅಲ್ಲಿ ಎರಡು ಗಿಡಗಳನ್ನೂ ನೋಡಿದ, ಗುರುವು ಅವುಗಳಿಂದ ಏನು ಕಲಿಯಬೇಕೆಂದು ಹೇಳಿದ ಎಂದು ಅರ್ಥವಾಗಲಿಲ್ಲ.
ಅವನು ಗುರುವಿನ ಹತ್ತಿರ ವಾಪಸ್ ಬಂದು ಕೇಳಿದ, "ನೀವು ಏನು ಹೇಳುತ್ತಿದ್ದೀರಾ ಗುರುಗಳೇ? ಅವುಗಳು ನನಗೆ ಹೇಗೆ ಹೇಳಿಕೊಡುತ್ತವೆ ಎನ್ನುವುದನ್ನು ತಿಳಿಯಲು ನನಗೆ ಅರ್ಥವಾಗುತ್ತಿಲ್ಲ." ಗುರುವು ಗಿಡಗಳ ಹತ್ತಿರ ಕರೆದುಕೊಂಡು ಹೋಗಿ ವಿವರಿಸಿದ, "ಈ ಸೈಪ್ರಸ್ ಗಿಡ ಬಹಳ ವರ್ಷಗಳಿಂದ ಗುಲಾಬಿ ಗಿಡದ ಪಕ್ಕದಲ್ಲಿಯೇ ಇದೆ. ಒಂದು ಸಲವೂ ಕೂಡ ಅದು ನಾನು ಗುಲಾಬಿ ಗಿಡ ಆಗಬೇಕೆಂದು ಆಸೆಯೇ ಪಟ್ಟಿಲ್ಲ. ಅದೇ ತರಹ ಗುಲಾಬಿ ಗಿಡವೂ ತಾನು ಸೈಪ್ರಸ್ ಗಿಡ ಆಗಬೇಕೆಂದು ಆಸೆ ಪಟ್ಟಿಲ್ಲ. ಅವು ಸುಮ್ಮನೆ ಅವುಗಳ ಕರ್ತವ್ಯ ಪಾಲನೆಯನ್ನು ಅಂದರೆ ಬೆಳೆಯುವುದು, ಅರಳುವುದು ಇವುಗಳನ್ನು ಮಾಡುತ್ತಿವೆ. ಒಂದು ವೇಳೆ ಒಬ್ಬ ಮನುಷ್ಯ ಆ ಸೈಪ್ರಸ್ ಗಿಡವಾಗಿದ್ದರೆ ಅವನು ಗುಲಾಬಿ ಮೇಲೆ ಅಸೂಯೆ ಪಟ್ಟುಕೊಂಡು, ಅದರ ಮೇಲೆ ಜನರು ಎಷ್ಟು ಗಮನ ಕೊಡುತ್ತಿದ್ದಾರೆ ಎಂದು ಸಂಕಟ ಪಡುತ್ತಿದ್ದ. ಅಥವಾ ಅವನು ಗುಲಾಬಿಯಾಗಿದ್ದರೆ ಸೈಪ್ರಸ್ ಮೇಲೆ ಮತ್ಸರದಿಂದ ಯೋಚನೆ ಮಾಡುತ್ತಾ ಜನಗಳಿಂದ ದಿನವೆಲ್ಲ ಕೀಳುವುದು ಮುಂತಾದ ಹಿಂಸೆಗೆ ಒಳಗಾಗಿದ್ದೆ, ಎಷ್ಟು ಶಾಂತತೆಯಿಂದ ಇದೆ ಎಂದು ಅಂದುಕೊಳ್ಳುತ್ತಿದ್ದ!"
ಗುರುವು ಹೇಳಿದ "ಇದೇ ಮಹತ್ತರವಾದ ಶಕ್ತಿಶಾಲಿಯಾದ ಯಕ್ಷಿಣಿ ಶಕ್ತಿಯನ್ನು ಹೊಂದಬಹುದು!"
ನೋಡಿ: ಆ ಎರಡೂ ಗಿಡಿಗಳೂ ಅವರ ಎಲ್ಲ ಸಾಮರ್ಥ್ಯವನ್ನು ಅವರ ಬೆಳವಣಿಗೆಗೆ ಉಪಯೋಗಿಸಿದ್ದದರಿಂದ ಅಭಿವೃದ್ಧಿಗೆ ಬಂದವು, ಒಂದು ಅಣು ಮಾತ್ರ ಸಾಮರ್ಥ್ಯವೂ ಬೇರೆಯದರ ಅಭಿವೃದ್ಧಿಯ ವಿಶ್ಲೇಷಣೆ ಮಾಡುತ್ತಾ ವ್ಯರ್ಥವಾಗಿಲ್ಲ. ಅವುಗಳು ಹೊಂದಿರುವ 100% ಸಾಮರ್ಥ್ಯವೂ ಅವುಗಳ ಬೆಳವಣಿಗೆಗೆ ಉಪಯೋಗವಾಗಿದೆ.
ಇದೇ ರೀತಿ ನೀವು ನಿಮ್ಮ ಎಲ್ಲ ಸಾಮರ್ಥ್ಯವನ್ನು ನಿಮ್ಮಷ್ಟಕ್ಕೆ ನೀವೇ ಓಡುವ ಪಂದ್ಯದಲ್ಲಿ ಉಪಯೋಗಿಸಿ, ನಿಮ್ಮಲ್ಲಿಯೇ ಪೈಪೋಟಿ ಮಾಡಿಕೊಂಡರೆ ಹೆಚ್ಚು ಪಟ್ಟು ಅಭಿವೃದ್ಧಿಯಿಂದ ಮುಂದುವರಿಯುತ್ತೀರ, ನಿಮಗೆ ಅದನ್ನು ನಂಬಲು ಸಾಧ್ಯವೇ ಆಗುವುದಿಲ್ಲ. ಇದೂ ಕೂಡ ತೊಂದರೆ ಇಲ್ಲದ ಮತ್ತು ಶಾಶ್ವತವಾದ ಶಾಂತಿಯನ್ನು ಪಡೆಯಲು ಒಂದೇ ಮಾರ್ಗ.
ಶಾಂತಿಭಂಗವಾಗದೇ ಇರುವಂತಹ ನೆಮ್ಮದಿಯನ್ನು (ಶಾಂತಿ)ಯನ್ನು ಪಡೆಯುವುದು ಎಷ್ಟು ಮುಖ್ಯವಾದುದು ಎಂದು ತಿಳಿದುಕೊಳ್ಳಿ. ನೀವು ಬೇರೆಯವರ ಜೊತೆ ಓಡಿದಾಗ ನೀವು ಕಡಿಮೆ ಅವಧಿಯ ಶಾಂತಿಯನ್ನು ಪಡೆಯುತ್ತೀರ, ಎಲ್ಲ ಆಶೆಯನ್ನು ಪಡೆದ ಕೊನೆಯಲ್ಲಿ, ಈ ಶಾಂತಿಯು ನೀವು ಇನ್ನೊಂದು ಹೋಲಿಕೆಯ ಮಾರ್ಗವನ್ನು ನೋಡಿದ ಕೂಡಲೇ ಅದೃಶ್ಯವಾಗುತ್ತದೆ. ಒಂದು ವೇಳೆ ನೀವು ನಿಮ್ಮ ಸ್ವಂತವಾಗಿ ನಿಮ್ಮ ಪಾಡಿಗೆ ಓಡುತಿದ್ದರೆ, ಮತ್ತು ಶೀಘ್ರವಾಗಿ ಏಳಿಗೆಗೆ ಬರುತ್ತಿದ್ದರೆ, ಆಗ ನಿಮಗೆ ಶಾಂತಿಭಂಗವಾಗದೇ ಇರುವಂತಹ ನೆಮ್ಮದಿ ಸಿಗುತ್ತದೆ.
ಅದು ಮತ್ತೊಬ್ಬರಿಂದ ಶಾಂತಿಭಂಗವಾಗದೇ ಇರುವಂತಹ ಬಂಧಮುಕ್ತಿ ನೆಮ್ಮದಿ, ಚೆನ್ನಾಗಿ ತಿಳಿಯಿರಿ: ನೀವು ಇನ್ನೊಬ್ಬರಿಂದ ಶಾಂತಿಭಂಗವಾಯಿತೆಂದು ಅನಿಸಿದ ತಕ್ಷಣ, ಅಲ್ಲಿ ಎಲ್ಲೋ ನಿಮ್ಮಲ್ಲಿಯೇ ತಿಳಿದುಕೊಳ್ಳದೇ ಇರುವಂತಹ ಕೊರತೆ ಇದ್ದು ಅದು ಅಲ್ಲಿ ಕಡೆಯಾಗಿದೆ ಎಂದು ತಿಳಿಯುತ್ತದೆ. ನೀವು ನಿಮ್ಮ ಶಾಂತಿಗೆ ಮತ್ತೊಬ್ಬರ ಮೇಲೆ ಅವಲಂಬಿಸಿದ್ದೀರ ಎಂದು ತಿಳಿಯುತ್ತದೆ.
'ಸಮಾಜ' ಎನ್ನುವ ಹೆಸರನ್ನು ನೀವೇ ನಿಮ್ಮ ಶಕ್ತಿಹೀನತೆಗೆ ಕೊಟ್ಟಿರುವ ಹೆಸರು; ನಿಮ್ಮ ಸ್ವಂತ ವಿಷದೀಕರಿಸುವ ಕೊರತೆ, ಸಮಾಜ ಎನ್ನುವಂತ ವಸ್ತುವೇ ಇಲ್ಲ. ಆಕಾಶವೇ ಒಂದು ಗಡಿ, ಆಕಾಶದ ತರಹ ಬೇರೆ ಏನೂ ಇಲ್ಲವೇ ಇಲ್ಲ. ಹಿಗ್ಗುವುದೇ (ವಿಸ್ತರಿಸುವುದೇ) ಜೀವನ, ಕುಗ್ಗುವುದೇ ಮರಣ. ನೀವು ನಿಮ್ಮಲ್ಲಿಯೇ ಸ್ಪಷ್ಟವಾಗಿಲ್ಲ, ಆದ್ದರಿಂದ ನೀವು ಅದಕ್ಕೆ ಜನಗಳನ್ನು ತಗಳುತ್ತಿದ್ದೀರ.
ನೀವು ಇನ್ನೊಬ್ಬರ ಕನಸುಗಳನ್ನು ನಿಮ್ಮದೇ ಸತ್ಯಸ್ಥಿತಿಯ ತರಹ ಮಾಡುತ್ತಿದ್ದರೆ ಆ ಕ್ಷಣವೇ ನೀವು ಕಾಲ ಚಕ್ರದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರ, ಮತ್ತು ನೀವು ಇಲಿಯ ಪಂದ್ಯದಲ್ಲಿ ಇರುತ್ತೀರ. ಹೋಲಿಕೆ ಮತ್ತು ಅಸೂಯೆ ಎನ್ನುವುದು ಇನ್ನೊಬ್ಬರ ಕನಸನ್ನು ನೆರವಲು ಪಡೆದು ಅದನ್ನು ನಿಮ್ಮದೇ ಎನ್ನುವ ರೀತಿ ಸತ್ಯ ವಸ್ತುವಾಗಿ ಮಾಡುತ್ತಿರುವುದೇ ವಿನಹ ಬೇರೆ ಏನೂ ಅಲ್ಲ. ಇಲಿಯ ಪಂದ್ಯದಲ್ಲಿರಲು ಈ ಶಕ್ತಿ ಅಗತ್ಯವಿದೆ. ಶಕ್ತಿ ಅಥವಾ ಪ್ರಭಾವ ನಿಮ್ಮ ಕನಸುಗಳನ್ನು ನಿಜ ಸ್ಥಿತಿಗೆ ತರುತ್ತದೆ. ಆದರೆ ನಿಜಸ್ಥಿತಿ ಏನೆಂದರೆ ನಿಮ್ಮ ನಿಜವಾದ ಸಾಧನೆ ಪ್ರತ್ಯಕ್ಷವಾಗಿರುವ ಕನಸು ಎಂದು ತಿಳಿದುಕೊಳ್ಳುವುದರಲ್ಲಿದೆ. ಇದನ್ನು ತಿಳಿಯಲು ಅಧಿಕಾರ ಬೇಕಾಗಿಲ್ಲ, ನಿಮಗೆ ಬುದ್ಧಿ ಅಥವಾ ಜ್ಞಾನದ ಅವಶ್ಯಕತೆ ಇದೆ.
ಅಧಿಕಾರ ನಿಮ್ಮ ಕನಸುಗಳನ್ನು ನಿಜಸ್ಥಿತಿಗೆ ತರುತ್ತದೆ, ಆದರೆ ನೈಜತೆಯೇ ನಿಮ್ಮ ಕನಸು
ಖಚಿತ ಪರಿಹಾರಗಳು
ಎಂದು ಬುದ್ಧಿವಂತಿಕೆಯೇ ಅರ್ಥ ಮಾಡಿಸುತ್ತದೆ. ಬುದ್ಧಿಶಕ್ತಿಯು ನೀವು ಯಾರು ಆಗಬೇಕು ಎನ್ನುವುದನ್ನು ಆಗಲೇ ನೀವು ಆಗಿದ್ದೀರ ಎಂದು ನಿಮಗೆ ಅರಿವನ್ನು ಉಂಟು ಮಾಡುತ್ತದೆ, ನೀವು ಸುಮ್ಮನೆ ಎಚ್ಚರಿಕೆ ಆಗುವ ಅವಶ್ಯಕತೆ ಇದೆ, ಬೇರೆ ಎಲ್ಲವನ್ನು ನೀವು ನಿಜಸ್ಥಿತಿ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೀರಾ ಎಂದರೆ ಅದು ನಿಜವಾಗಿಯೂ ಎರವಲು ಪಡೆದಿರುವುದು ಮತ್ತು ಭ್ರಾಂತಿ ಅಷ್ಟೆ.
ನಾವು ಯಾವಾಗಲೂ ಹೊರಗಿನ ಪ್ರಪಂಚದಲ್ಲೇ ಸಾಧಿಸಲು ನೋಡುತ್ತಿರುತ್ತೇವೆ. ಇದೇ ಹೋಲಿಕೆಗೆ ಮತ್ತು ಅಸೂಯೆಗೆ ಮೂಲ ಕಾರಣ. ಜನಗಳು ನೀವು ಹೊರಗಿನ ಪ್ರಪಂಚಕ್ಕೆ ಅರ್ಥವಾಗಿವಂತಹ (tangible) ಆಗುವಂತಹ ವಿಷಯದಲ್ಲಿ ಸಾಧಿಸಿದ್ದೀರಾ ಎಂದರೆ ನಿಮಗೆ ಮರ್ಯಾದೆ ಕೊಡುತ್ತಾರೆ. ವಿದ್ಯಾಭ್ಯಾಸದ ಪದವಿಗಳು, ಸೌಂದರ್ಯದ ಬಿರುದಾವಳಿಗಳೂ, ಸಂಸ್ಥೆಯ (company) ಹುದ್ದೆಗಳ ಹೆಸರುಗಳೂ, ವರ್ತಮಾನ ಪತ್ರಿಕೆಯಲ್ಲಿ ಅಚ್ಚು ಆಗಿರುವುದೂ, ಬ್ಯಾಂಕ್ನಲ್ಲಿರುವ ಹಣದ ಬಾಕಿಯೂ, ಇವೆಲ್ಲವನ್ನು ಸಮಾಜವು ನಿಮ್ಮನ್ನು ಅಳೆಯಲು, ಅಳತೆ ತಕ್ಕಡಿಯನ್ನಾಗಿ ಉಪಯೋಗಿಸುತ್ತದೆ.
ನೋಡಿ, ಎಲ್ಲಕ್ಕಿಂತ ಮಿಗಿಲಾಗಿ, ನೀವು ಮತ್ತೊಬ್ಬರಿಂದ ಅಳೆಯಲ್ಪಡಬೇಕಾಗಿಲ್ಲ. ನಿಮ್ಮಲ್ಲಿಯೇ ನೀವು ನಂಬಿಕೆಯನ್ನು ಇಟ್ಟುಕೊಂಡು, ನಿಮ್ಮ ದರ್ಜೆಯನ್ನು ಅಳತೆ ಮಾಡಿಕೊಳ್ಳಿ. ನಿಜವಾಗಿಯೂ, ಹೊರಗಡೆ ಪ್ರಪಂಚದಲ್ಲಿರುವ ಮನುಷ್ಯ ಕುಲಕ್ಕೆ ಸೇವೆ ಮಾಡುವುದರಲ್ಲಿ ನೀವು ಸಾಕಷ್ಟು ಸಾಧಿಸಬಹುದು. ಕೇವಲ, ವಿಜ್ಞಾನದ ಸಾಧನೆಯಿಂದ ನೀವು ಈ ಧ್ವನಿವರ್ಧಕ (microphone) ಯಂತ್ರದಿಂದ ಈ ದಿವಸ ನಾನು ಹೇಳುವುದನ್ನು (ಮಾತಾಡುವುದನ್ನು) ಕೇಳಲು ಸಾಧ್ಯವಾಗುತ್ತಿದೆ.
ಆದರೆ ಒಳಗಿನ ಪ್ರಪಂಚದಲ್ಲಿ ನೀವು ಸಾಧಿಸುವುದು ಬೇಕಾದಷ್ಟು ಎಂದು ಅರಿತುಕೊಳ್ಳಿ. ಹೊರಗಡೆ ಪ್ರಪಂಚದ ಸಾಧನೆಯೆಲ್ಲ, ಆಕಸ್ಮಿಕ ಘಟನೆ ಆಗಿದೆ. ಅವು ತಕ್ಷಣ ಹೆಸರು ಮತ್ತು ಕೀರ್ತಿ ಮತ್ತು ಹಣವನ್ನು ಕೊಡಿಸುತ್ತವೆ. ನಿಜವಾದ ಸಾಧನೆ ಒಳಗಿನ ಪ್ರಪಂಚದಲ್ಲಿದೆ.
ನಿಮ್ಮಲ್ಲಿಯೇ ಚೆನ್ನಾಗಿ ತೀಕ್ಷ್ಣವಾದ ಅರಿವು (awareness) ಇಂದ ಬಿಂದು ಮಾಡಿಕೊಂಡು, ಮತ್ತು ಸುಮ್ಮನೆ ಹೊರಗಿನ ಪ್ರಪಂಚದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ, ಕೊಳದಲ್ಲಿರುವ ಕಮಲದ ಪುಷ್ಪವು ಹೇಗೆ ನೀರಿನಲ್ಲಿದ್ದರೂ ಅದರಿಂದ ನೀರಿನಿಂದ ಮುಟ್ಟಿಸಿಕೊಳ್ಳದೆ ಇರುವಂತೆ ಇರಬೇಕು. ಬಾಹ್ಯ
ಪ್ರಪಂಚದಲ್ಲಿ ಕೆಲಸವು ಏನೂ ತೊಂದರೆ ಆಗದಂತೆ ನಡೆಯುತ್ತಿರಲಿ, ಆದರೆ ನಿಮ್ಮಲ್ಲಿ ನಿಮ್ಮ ಅಸ್ತಿತ್ವದಲ್ಲಿ ನೀವು ಕೇಂದ್ರೀಕೃತರಾಗಿರಬೇಕು. ಆಗ ನೀವು ಇನ್ನು ಉತ್ತಮ ತರದ ಕಾರ್ಯ ನಿರ್ವಾಹವನ್ನು ಹೊರಗಿನ ಪ್ರಪಂಚದಲ್ಲಿ ಮಾಡಲು ಶಕ್ಯವಾಗುತ್ತದೆ. ಏಕೆಂದರೆ ನಿಮ್ಮ ಒಳಗಿನ ಬುದ್ಧಿ ಶಕ್ತಿಯು ಬೆಳೆಯುತ್ತಾ ಮತ್ತು ನೀವು ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಮಾರ್ಗವನ್ನು ಸೂಚಿಸುತ್ತಾ ಮತ್ತು ಅದರ ಫಲಿತಾಂಶ ಏನು ಬರುತ್ತೆ ಅವಲೋಕನ ಮಾಡುವಂತೆ ಕಾಯುತ್ತಿರುತ್ತದೆ.
ಆಮೇಲೆ ನೀವು ನೀವಾಗಿಯೇ ಹೊರಗಿನ ಪ್ರಪಂಚದ ಸಾಧನೆಗಳಿಗೆ ಕೂಗಾಡುವುದನ್ನು ನಿಲ್ಲಿಸಿ, ಸ್ಥಿರತೆಯನ್ನು ಅನುಭವಿಸಿ, ನಿನ್ನ ಅಸ್ತಿತ್ವ (being) ದ ಕೇಂದ್ರ ಬಿಂದುವಿನಲ್ಲಿ ಸಂತೋಷಪಡುತ್ತೀಯ. ಎಲ್ಲ ಹೋಲಿಕೆ ಮತ್ತು ಅಸೂಯೆಯ ಕಾಲಚಕ್ರದಲ್ಲಿ ನಿನ್ನ ಕೇಂದ್ರವನ್ನು ಹುಡುಕುವುದೇ ಇರುವುದು ಒಂದು ಮಾರ್ಗ.
ಎಷ್ಟು ಜನ ವ್ಯಾಪಾರಸ್ಥರು ಅದರಲ್ಲೂ ತುಂಬಾ ಸುರಿತವರು, ಈ ಕಾಲದಲ್ಲಿ ತಿಳಿದಿರುವ ಯಶಸ್ಸಿನ ಚಿಂತೆ (ಕೊರಗು) ಯನ್ನು ಎದುರಿಸುತ್ತಿದ್ದಾರೆ. ಅವರಿಗೆ ಏನೇನು ಬೇಕಾಗಿದೆಯೊ ಎಲ್ಲವನ್ನು ಸಾಧಿಸಿದ್ದಾರೆ, ಅವರ ಸ್ವಂತ ಕನಸುಗಳನ್ನೆಲ್ಲ ತಿಳಿದಿದ್ದಾರೆ (realized), ಬಾಡಿಗೆ ಪಡೆದ ಕನಸುಗಳನ್ನು ಎಲ್ಲವನ್ನು ಹೊಂದಿದ್ದಾರೆ. ಅವರು ಯಾತಕ್ಕೋಸ್ಕರ ಇಷ್ಟೊಂದು ಓಡಿದೆ ಎಂದು ಆಶ್ಚರ್ಯ ಪಡಲು ಪ್ರಾರಂಭಿಸಿದ್ದಾರೆ. ಅವರ ಅಭಿಲಾಷೆಗಳೂ, ಗಟ್ಟಿಯಾದ ಅನುಕಂಪಗಳೂ, ಯಾವುದು ಅವರ ಇಲ್ಲಿಯ ಪಂದ್ಯದಲ್ಲಿ ಅವರನ್ನು ಉತ್ತೇಜಿಸಿದ್ದವೋ, ಅವೆಲ್ಲವೂ ಅಲ್ಲಿ ಇಲ್ಲವೇ ಇಲ್ಲ. ಅವರಲ್ಲಿಯೇ ಅವರಿಗೆ ಗೊಂದಲವಾಗಿದೆ. ಅವರು ವ್ಯಾಪಾರದ ದಿವಸಗಳಲ್ಲಿ ಅವರಲ್ಲಿ ಇದ್ದ ಹಿಡಿತ (ಬಿಗಿ) ಇದ್ದಕ್ಕಿದ್ದಂತೆ ಸೋತಿರುವಂತೆ (ಶಕ್ತಿಹೀನ) ತೋರುತ್ತಿದೆ.
ಇದು ಏತಕ್ಕೆಂದರೆ ಅರಿವಿಲ್ಲದೆಯೇ, ನಿಲ್ಲದೆಯೇ, ತಮ್ಮೊಳಗೇ ಗೊತ್ತು ಪಡಿಸದೇ ತಮ್ಮದೇ ಆದ ಶೋಧನೆ (ಆತ್ಮಶೋಧನೆ) ಇಲ್ಲದೆ, ಓಡಿದುದರ ಪರಿಣಾಮದಿಂದ ಆಯಿತು. ಇದರ ಫಲಿತಾಂಶದಿಂದ, ಯಾವಾಗ ಅವರು ಓಡುವುದನ್ನು ನಿಲ್ಲಿಸಿದರೋ ಅಥವಾ ಯಾವಾಗ ಇದ್ದಕ್ಕಿದ್ದ ಹಾಗೆ ಅವರು ಇನ್ನು ಮುಂದೆ ಓಡಲು ಸಾಧ್ಯವಾಗಲಿಲ್ಲವೋ, ಅವರಷ್ಟಕ್ಕೆ ಅವರೇ ಹಿಂದಕ್ಕೆ ಸರಿ ತಕ್ಷಣ ಮತ್ತು ಇದೇ ‘ಚಿಂತೆ ಅಥವಾ ‘ಬೇನೆ’ ಆಗುವುದಕ್ಕೆ ಕಾರಣ.
ಖಚಿತ ಪರಿಹಾರಗಳು
ಯಾವಾಗ ನೀವು ಗೆಲುವಿನ ಚಿಂತೆಯಲ್ಲಿ ಬೀಳುತ್ತೀರೋ, ಆಗ ಮೂರು ದಾರಿಯನ್ನು ಅವಲಂಬಿಸಬಹುದು. ಒಂದು ಮಾದಕ ಪದಾರ್ಥಗಳಿಗೆ ಮೊರೆ ಹೋಗುವುದು - ಅದು ಇನ್ನು ಮುಂದಿನ ಚಿಂತೆಗಳಿಗೆ ದಾರಿಯಾಗುತ್ತದೆ ಎರಡನೆಯದು ದಾರಿ ಆತ್ಮಹತ್ಯೆ
- ಅದು ಜವಾಬ್ದಾರಿಯಿಂದ ಪಾರಾಗುವಿಕೆ ಅಥವಾ ಪಲಾಯನವಾದ 3ನೆಯ ದಾರಿ ಧ್ಯಾನದ ಮಾರ್ಗ - ಪರಿಹಾರಕ್ಕೆ ಒಳ ಹೊಕ್ಕು ನೋಡುವುದು. ಬುದ್ಧಿವಂತನು 3ನೇ ಮಾರ್ಗವನ್ನು ಆಶ್ರಯಿಸುತ್ತಾರೆ. ಆತ್ಮ ತನಿಖೆ ಒಂದೇ ಈ ಚಿಂತೆಯಿಂದ ಜಾಮೀನಿನಿಂದ ಬಿಡುಗಡೆ ಆಗಲು ದಾರಿಯಾಗಬಹುದು. ಸಮಸ್ಯೆ ಒಳಗಡೆ ಇದೆ, ಆದರೆ ನೀವು ಪರಿಹಾರವನ್ನು ಹೊರಗಡೆ ಹುಡುಕುತ್ತಿರುವಿರಿ. ನೀವು ನಿಮ್ಮ ಅಸ್ತಿತ್ವವನ್ನು ತುಂಬಾ ದಿವಸಗಳಿಂದ ಅಸಡ್ಡೆ ಮಾಡಿದ್ದೀರ, ಮತ್ತು ಈ ಚಿಂತೆಯು ಈಗ ನೀವು ಅನುಭವಿಸುತ್ತಿರುವುದು ನಿಜವಾಗಿಯೂ ನಿಮ್ಮಲ್ಲಿ ಅಸ್ಸಿ ೈದ ಕರೆ. ಆದ್ದರಿಂದಲೇ ಏತಕ್ಕೆ ಪುನಃ ಮತ್ತು ಪುನಃ ಗುರುಗಳು ನೀವು ನಿಮ್ಮ ಒಳಗಡೆ ಕೇಂದ್ರೀಕೃತವಾಗುವಂತೆ ಮತ್ತು ಸುಮ್ಮನೆ ನಿಮ್ಮ (periphery) ಬಾಹ್ಯ ಪ್ರಪಂಚದಲ್ಲಿ ಕೆಲಸ ಮಾಡುವ ತಂತ್ರಗಳನ್ನು ನೀಡಿದ್ದಾರೆ.
ಇದೇ ವಿಚಾರವನ್ನು ನಿಮ್ಮ ಜೀವನ ಯಾತ್ರೆ (career) ಯ ಶಿಖರದಲ್ಲಿನೀವಿರುವಾಗ, ನೀವು ಇದಕ್ಕೆ ಗಮನ ಕೊಡುವಷ್ಟು ಮನಸ್ಸು ಹೊಂದಿರುವುದಿಲ್ಲ. ಏಕೆಂದರೆ ನಿಮಗೆ ಸಾಕಷ್ಟು ಬಲ ಹೊಂದಿರುತ್ತೀರ,....
ಎಲ್ಲ ಸಾಮರ್ಥ್ಯವನ್ನು ನಿಮ್ಮ ಕೆಳಮುಖವಾಗಿರುವ (off centric) ನಡವಳಿಕೆಗಳನ್ನು ಎದುರಿಸಲು ಹೊಂದಿರುತ್ತೀರ. ಒಂದು ಸಲ ನಿಮ್ಮ ಸಾಮರ್ಥ್ಯವು ಕಡಿಮೆಯಾಗಲು ಪ್ರಾರಂಭವಾದರೆ, ನೀವು ಎಲ್ಲಿಯೋ ಏನೋ ತಪ್ಪಿದೆ ಎಂದು ಅಂದುಕೊಳ್ಳುತ್ತೀರ. ಆ ಏನೋ ಒಂದು ಎನ್ನುವುದನ್ನೇ ಗುರುವು ಆಗಾಗ್ಗೆ ಹೇಳುವುದಕ್ಕೆ ಪ್ರಯತ್ನ ಪಡುವುದು. ‘ಆರ್ಲ್ಬಟ್್ರ ಐನ್ಸ್ಟಿನ್’ ಪ್ರಖ್ಯಾತಿಯಾದ ವಿಜ್ಞಾನಿ. ಅವನ ಸಾವಿನ ಹಾಸಿಗೆಯ ಮೇಲೆ ಇದ್ದ.
ಅವನ ಸುತ್ತ ಅವನಿಗೆ ತುಂಬಾ ಹತ್ತಿರವಾದ ಜನಗಳು ಇದ್ದರು.
ಅವರಲ್ಲಿ ಒಬ್ಬರು ಏನು ನೀನು ಪುನಃ ಹುಟ್ಟಬೇಕೆಂದು ಆಸೆ ಇದೆಯಾ, ಒಂದು ವೇಳೆ ಪುನಃ ಹುಟ್ಟಿದರೆ ಏನಾಗಬೇಕೆಂದು ಇಷ್ಟಪಡುತ್ತೀಯ.
ಪ್ರತಿ ಒಬ್ಬರೂ ಅವನು ಪುನಃ ಹುಟ್ಟುವುದಕ್ಕೆ ಇಷ್ಟ ಪಡುತ್ತಾನೆ, ಇನ್ನು ದೊಡ್ಡ ವಿಜ್ಞಾನಿಯಾಗಿ ಅಥವಾ ಅದೇ ತರಹ ಇನ್ನೇನಾದರೂ ಹೇಳುತ್ತಾನೆಂದು ನಿರೀಕ್ಷಿಸುತ್ತಿದ್ದರು.
ಐನ್ಸ್ಟೀನ್ 'ನಾನು ಒಂದು ವೇಳೆ ಪುನಃ ಜನ್ಮ ತಾಳಿದರೆ, ನಾನು ಪೈಪುಗಳನ್ನು ಜೋಡಿಸುವ (plumber) ನಾಗಿ ಪುನಃ ಜನ್ಮ ತಾಳಬೇಕೆಂದು ಇಷ್ಟ ಪಡುತ್ತೇನೆ.
ಅವನು ಸಂಕಟ ಪಡುತ್ತಿದ್ದ ಏನೆಂದರೆ 'ಏನೇನು ಸಾಧಿಸಬೇಕೆಂದು ಇದ್ದನೋ, ಅದೆಲ್ಲವನ್ನು ಸಾಧಿಸಿದ್ದಾಯಿತು, ಆದರೆ ಏತಕ್ಕೋಸ್ಕರ ಅವನು ಸಾಧಿಸಿದ, ಅದನ್ನು ಅವನು ಸಾಧಿಸಲಿಲ್ಲವೆಂದು. ಅವನು ಪ್ರಪಂಚಕ್ಕೆ ದೊಡ್ಡ ಸತ್ಯವನ್ನು ಕೊಟ್ಟಿದ್ದಾನೆ, ಅವನ ಪೂರ್ತಿ ಜೀವನ ದೊಡ್ಡ ಸುಳ್ಳು ಎಂದು ಸಂಕಟ (felt) ಪಟ್ಟ. ಅವನ ಕಡೆಯ ದಿನಗಳಲ್ಲಿ, ಅವನ ಪೂರ್ತಿ ಜೀವಿತ ಕಾಲದಲ್ಲಿ ಅವನು ಹೊರಗಡೆ ಪ್ರಪಂಚದ ಘಟನೆಗಳಲ್ಲಿ ಹಿಡಿಯಲ್ಪಟ್ಟಿದ್ದ ಮತ್ತು ಅಸ್ತಿತ್ವ (existence) ದ ಆಳವಾದ ಸಂಪರ್ಕವನ್ನು ಕಳೆದುಕೊಂಡಿದ್ದ.
ಅದುದರಿಂದ ಅವನು ಪುನಃ ವಿಜ್ಞಾನಿಯಾಗಿ ಜನ್ಮ ತಾಳುವುದಕ್ಕಿಂತ ಪೈಪುಗಳನ್ನು ಜೋಡಿಸುವವನಾಗಿ ಹುಟ್ಟುವುದಕ್ಕೆ ಇಷ್ಟ ಪಡುವುದಾಗಿ ಹೇಳಿದ. ಒಂದು ವೇಳೆ ಹೊರಗಡೆ ಪ್ರಪಂಚದ ಚಟುವಟಿಕೆಗಳ ಶಿಬಿರದಲ್ಲಿ ಸಿಕ್ಕಿಕೊಂಡಿದ್ದರೂ, ಒಂದು ಯಂತ್ರ ಆಗುವುದಕ್ಕೆ ನಿಮ್ಮನ್ನು ಜಾರಲು ಬಿಡಬೇಡಿ. ಇದು ದೈವತ್ವವಿರುವ ಮನುಷ್ಯನಿಗೆ ಸುಲಭದ ಕೆಲಸ ಆದರೆ ಪ್ರಾಪಂಚಿಕ ಮನುಷ್ಯನಿಗೆ ಕಷ್ಟದ ಕೆಲಸ.
ನೀವು ನೋಡಿ, ಈ ಎಲ್ಲ ಹೋಲಿಕೆ ಮತ್ತು ಓಡುವ ಕಾರ್ಯ ವಿಧಾನದಲ್ಲಿ ನೀವು ನಿಜವಾಗಿ ಒಂದು ಯಂತ್ರವಾಗುತ್ತೀರ. ನಿಮ್ಮ ಸುಮಾರು ನಿತ್ಯದ ಚಟುವಟಿಕೆಗಳೆಲ್ಲ ತಿಳಿಯದೇ ಇರುತ್ತದೆ. ನೀವು ಒಂದು ಕಾರನ್ನು ಚಲಿಸುತ್ತಿದ್ದರೂ, ಅದನ್ನು ಮಾಡುತ್ತಿರುವುದು ಅರಿವೇ ಇರುವುದಿಲ್ಲ. ನೀವು ಆ ಕಾರಿನ ತರಹ ಒಂದು ಯಂತ್ರವಾಗುತ್ತೀರ.
ಬೆಳಗಿನ ಝಾವ ಹಲ್ಲು ಉಜ್ಜಿಕೊಳ್ಳುವುದರಿಂದ ಮೊದಲೊಂಡು, ರಾತ್ರಿ ಮಲಗಲು ಹಾಸಿಯ ಮೇಲೆ ಹೋಗುವ ತನಕ, ನೀವು ಒಂದು ಕಾರ್ಯಕ್ರಮ ಗೊತ್ತುಪಡಿಸಿ ತಯಾರು ಮಾಡಿದ ಮಾನವ ಯಂತ್ರ (robot) ತರಹ ಕೆಲಸ ಮಾಡುತ್ತೀರ, ಸ್ವಲ್ಪವೂ ನಿಮ್ಮಲ್ಲಿಯೇ ಅರಿವಿಲ್ಲದೆ ಇರುತ್ತೀ. ನೀವು ಮಾಡುವ ಎಲ್ಲ ಕೆಲಸಗಳಲ್ಲಿಯೂ ಅನುಮಾನ ಇಲ್ಲದೆ ದಕ್ಷತೆಯನ್ನು ಹೊಂದುತ್ತಿರುತ್ತೀರ, ಆದರೆ ನಿಮ್ಮಲ್ಲಿ ಮಾನವೀಯತೆಯನ್ನು ಕಳೆದುಕೊಂಡಿರುತ್ತೀರ! ನೀವು ಭೂ ಗ್ರಹದ ಮೇಲೆ ಹುಟ್ಟಿರುವ ಕಾರಣವನ್ನೇ ಕಳೆದುಕೊಳ್ಳುವಷ್ಟು ಮುಂದೆ ಹೋಗಿರುತ್ತೀರ. ನಿಮ್ಮ ಅಸ್ತಿತ್ವದಿಂದ ಕಳಚಿಕೊಂಡಿರುತ್ತೀರ!
(ನೀವು ಒಂದೇ ಸಮನೆ ಅರಿವಿನಲ್ಲಿರುವಾಗ, ನೀವು ಕೆಲಸಗಳನ್ನು ಸಮರ್ಥರಾಗಿ ಮಾಡಬಲ್ಲಿರಿ ಅಲ್ಲದೆ ಕೆಲಸಗಳನ್ನು ಪೂರ್ಣತ್ವ (Totality) ದಿಂದ ಮಾಡುತ್ತೀರ ಅದೂ ಅಲ್ಲದೆ ವಿವೇಕದಿಂದ ಸಂತೃಪ್ತರಾಗಿಯೂ ಮಾಡುತ್ತೀರ)
ನೀವು ಒಂದೇ ಸಮನೆ ಅರಿವಿನಲ್ಲಿರುವಾಗ, ಕೆಲಸಗಳನ್ನು ಸಮರ್ಥರಾಗಿಯೂ ಸಂಪೂರ್ಣತೆಯಿಂದಲೂ (Totality) ಮತ್ತು ವಿವೇಕದಿಂದ ಸಂತೃಪ್ತರಾಗಿಯೂ ಮಾಡುತ್ತೀರ, ಆದ್ದರಿಂದ ನೀವು ಪಿಂಡಾಂಡವು ಬ್ರಹ್ಮಾಂಡದೊಂದಿಗೆ ಅಥವಾ ಅಸ್ತಿತ್ವದೊಂದಿಗೆ ಹೊಂದಿಕೊಂಡಿರುತ್ತದೆ, ನೀವು ಬೇರಿನೊಂದಿಗೆ ಭೂಗ್ರಹದ ಮೇಲೆ ಹಾರುತ್ತೀರ. ಯಾವಾಗ ಇದ್ದಕ್ಕಿದೆ ನೀವು ಹಾರುತ್ತೀರೋ, ನೀವು ಯಾವಾಗಲೂ ಕೆಳಗೆ ಯಾವ ಕ್ಷಣಿಗೆ ಬೇಕಾದರೂ ಬೀಳಬಹುದೆಂಬ ಭಯದಲ್ಲಿರುತ್ತೀರ. ಅರಿವಿನಿಂದ ಕೆಲಸ ಮಾಡಿದರೆ ನಿಮ್ಮ ಕಾರ್ಯ ಸಮರ್ಥತೆ ಹೆಚ್ಚುತ್ತದೆ ಮತ್ತು ನಿಮ್ಮ ಇರುವಿಕೆಯ ಉದ್ದೇಶವನ್ನು ನಿಶ್ಚಿತಗೊಳಿಸುತ್ತದೆ.
ಸರಿ, ಈಗ... ನಾವು ಅಸೂಯೆ ಮೇಲೆ ಇನ್ನು ಸ್ವಲ್ಪ ವಿಷಯಗಳನ್ನು ಮಾತನಾಡೋಣ! ಅಸೂಯೆ ನೀವೆಲ್ಲರು ತಿಳಿದಿರುವಂತೆ, ಹೋಲಿಕೆಯಿಂದ ಹುಟ್ಟುತ್ತದೆ. ನಾವು ಯಾವಾಗ ಮತ್ತೊಬ್ಬರ ಯಾವ ರೀತಿಯಲ್ಲಾದರೂ ಸರಿ ಶ್ರೇಷ್ಠತೆಯನ್ನು ಸಹಿಸಲು ಆಗುವುದಿಲ್ಲವೋ, ನಾವು ಅಸೂಯೆ ಪಡಲು ಪ್ರಾರಂಭಿಸುತ್ತೇವೆ. ನಾವು ಏಕೆ ಅಸೂಯೆ ಪಟ್ಟೆವು ಎನ್ನುವುದಕ್ಕೆ ಸಾಕಷ್ಟು ಕಾರಣಗಳು ಇರುತ್ತದೆ.
ಉದಾಹರಣೆಗೆ, ನೀವು ಮತ್ತೊಬ್ಬ ಮನುಷ್ಯ ನಿಮಗಿಂತ ಸುಂದರವಾಗಿದ್ದರೆ, ನಿಮಗೆ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ನೀವು ನಿಮ್ಮ ಒಳಗೇ ಸಂಕಟ ಪಡಲು ಪ್ರಾರಂಭಿಸುತ್ತೀರ. ನೀವು ಅಸೂಯೆ ಪಟ್ಟೇ ಪಡಬೇಕು ಎನ್ನುವುದು ಸಹಜ ಯಾಕೆಂದರೆ ಆ ಮನುಷ್ಯ ನನಗಿಂತ ತುಂಬಾ ಸುಂದರವಾಗಿದ್ದಾನೆ ಎಂದು.
ಏನಾದರಾಗಲಿ ಮೊದಲು ತಿಳಿದುಕೊಳ್ಳಿ: ದೇವರು ಒಬ್ಬ ಕಲೆಗಾರ, ಇಂಜಿನಿಯರ್ ಅಲ್ಲ. ಅವನು ಇಂಜಿನಿಯರ್ ಆಗಿದ್ದರೆ, ಅವನು ಎಲ್ಲ ಹೆಂಗಸರನ್ನು ಅಥವಾ ಗಂಡಸರನ್ನು ಒಂದೇ ಅಚ್ಚಿನಲ್ಲಿ ತಯಾರು ಮಾಡುತ್ತಿದ್ದ. ಅವನು ಪ್ರಾಯಶಃ ಎಲ್ಲ ಹೆಂಗಸರನ್ನು ಐಶ್ವರ್ಯರಾಯ್ ಅಚ್ಚಿನಲ್ಲಿಯೇ (ಮೊದಲಿನ ವಿಶ್ವಸುಂದರಿ) ಮಾಡುತ್ತಿದ್ದ. ಅವಳು ಬಹಳ ಸುಂದರವಾದ ಹೆಂಗಸು ಎಂದು ವಿಚಾರ ಮಾಡಲಾಗಿದೆ, ಹೌದಲ್ಲವೆ? ಮತ್ತು ಎಲ್ಲ ಗಂಡಸರನ್ನು ಹೃತಿಕ್ ರೋಷನ್ ಅಥವಾ ಶಾರುಖ್ ಖಾನ್! ಅವರ ಅಚ್ಚಿನಲ್ಲಿ ಮಾಡುತ್ತಿದ್ದ.
ಆದರೆ ದೇವರು ಇಂಜಿನಿಯರ್ ಅಲ್ಲ. ಅವನು ಒಬ್ಬ ಕಲೆಗಾರ. ಅವನು ಎಲ್ಲರನ್ನು ಸರಿಸಾಟಿ ಇಲ್ಲದ ರೀತಿ (unique) ಮಾಡಿರುತ್ತಾನೆ.
ನೀವು ನಿಮ್ಮ ಪೂರ್ತಿ ಸೌಂದರ್ಯವಾಗಿದ್ದೀರಿ ಸಾಕು. ಪ್ರತಿಯೊಂದು ಜೀವಿಯೂ ಸೌಂದರ್ಯವಾಗಿದೆ. ನೀವು ಯಾವ ತಕ್ಕಡಿಯಿಂದ ಸೌಂದರ್ಯವನ್ನು ಅಳೆಯುತ್ತೀರ? ಅದಕ್ಕೆ ತಕ್ಕಡಿಯೇ ಇಲ್ಲ. ಅವೆಲ್ಲವೂ ನಿಮ್ಮ ಸ್ವಂತ ಊಹೆ ಮತ್ತು ಕಲ್ಪನೆಗಳು. ನೀವು ಸ್ವಲ್ಪ ಯೋಚನೆ ಮಾಡಿ: ನಿಮ್ಮ ಹೆಸರುವಾಸಿಯಾಗಿರುವ ಸಿನಿಮಾ ನಟ, ನಟಿಯರ ವಿಗ್ರಹ ಸುಂದರವಾಗಿದ್ದರೂ, ಅವರ (form) ಆಕೃತಿಯಿಂದ ಒಂದು ಬಟ್ಟಲು ಟೀ ಅಥವಾ ಕಾಫಿ ನೀವು ಹೊಂದಲು ಆಗುತ್ತದೆಯೇ?
ದಯವಿಟ್ಟು ನೀವು ಸಾಕಷ್ಟು ಸುಂದರವಾಗಿದ್ದೀರ ಎಂದು ತಿಳಿದುಕೊಳ್ಳಿ, ನೀವು ಯಾವಾಗ ಇನ್ನೊಬ್ಬರ ಶರೀರಕ್ಕೆ ಹಂಬಲ ಪಡಲು ಪ್ರಾರಂಭಿಸುತ್ತೀರೋ, ನಿಮ್ಮೊಳಗೆ ಒಂದು ಗೂಟವನ್ನು (wedge) ಸೃಷ್ಟಿಸಿಕೊಳ್ಳುತ್ತೀರ. ನಿಮ್ಮನ್ನೇ ನೀವು ದ್ವೇಷಿಸಿಕೊಳ್ಳಲು ಪ್ರಾರಂಭ ಮಾಡುತ್ತೀರ.
ಯಾವ ಕಣ್ಣುಗಳು ಇನ್ನೊಬ್ಬರ ಶರೀರದ ಮೇಲೆ (linger) ನೋಟವನ್ನು ಹರಿಸುವುದಿಲ್ಲವೋ ಅವುಗಳಲ್ಲಿ ಒಂದು ಖಚಿತವಾದ ಸೌಂದರ್ಯ ಮತ್ತು ಮುಗ್ಧತೆ ಇರುವುದು ನಿಮಗೆ ತಿಳಿದಿದೆಯೆ? ನಿಮಗೆ ದೇವರು ಏನು ಮಾಡಿರುತ್ತಾನೊ ಅದರಲ್ಲಿ ಅವನ ಮೇಲೆ ವಿಶ್ವಾಸವನ್ನು ಇಡಿ. ನೀವು ಯಾವಾಗ ಆ ವಿಶ್ವಾಸವನ್ನು ಹೊಂದಿಲ್ಲವೋ, ಆಗಲೇ ನೀವು ಎಲ್ಲ ರೀತಿಯ ಕೆಟ್ಟ ಮಾರ್ಗಗಳಲ್ಲಿ ತೊಡಗುತ್ತೀರ. ಯಾವಾಗ ನೀವು ನಿಮ್ಮನ್ನು ಪೂರ್ತಿಯಾಗಿ ಒಪ್ಪಿಕೊಳ್ಳುತ್ತೀರೋ, ಒಂದು ರೀತಿಯ ಸೊಬಗು (grace) ನಿಮಗೆ ಬರುತ್ತದೆ. ಈ ಸೊಬಗು ನೀವು ಕರೆಯುವ ಸೌಂದರ್ಯಕ್ಕಿಂತ ಮೇಲ್ಮಟ್ಟದ್ದು.
ನೋಡಿ ಶರೀರದ ಸೌಂದರ್ಯ ಒಂದು.. ಚೆಲುವು ಬೇರೆ ತರಹ. ಶರೀರದ ಸೌಂದರ್ಯ ಬಹಳ ವಿಧಾನಗಳಿಂದ ಪಡೆಯಬಹುದು. ಈಗಿನ ಕಾಲದಲ್ಲಿ ಶರೀರದ ಸೌಂದರ್ಯವನ್ನು ಹೊಂದಲು ಬಹಳ ವಿಧಾನಗಳು ಇವೆ. ಸೌಂದರ್ಯ ಸಾಧನಗಳು, ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸೆಗಳೂ ಮತ್ತು ಇನ್ನೂ ಬೇರೆಯ ತರಹ ಶಸ್ತ್ರ ಚಿಕಿತ್ಸೆ
ವಿಧಾನಗಳು ಇವೆ. ಆದರೆ ಸೊಬಗು ಬೇರೆ ತರಹವಾಗಿರುವುದು. ಅದು ನಿಮ್ಮಲ್ಲಿ ಅದ್ಭುತವಾದ, ಭರವಸೆ ಮತ್ತು ಶಾಂತತೆ ಇದ್ದು; ನಿಮ್ಮಲ್ಲಿ ಬೇರೆ ತರಹ ಬೇಡಿಕೆಗಳು ಇಲ್ಲದಿರುವುದು, ಯಾವಾಗ ನೀವು ಪೂರ್ತಿ ನಿಮ್ಮ ಶರೀರದ ಜೊತೆ ಆರಾಮವಾಗಿ ಇರುವಾಗ, ಅದು ಸೊಬಗು ಬರುತ್ತದೆ.
ನೀನು ಪೂರ್ತಿ ಸಂತೋಷವನ್ನು ಅನುಭವಿಸಿದಾಗ ಖಚಿತವಾದ (certain) ಚೆಲುವು ನಿಮ್ಮಲ್ಲಿ ಉಂಟಾಗುತ್ತದೆ ಮತ್ತು ನಿಮ್ಮ ಸುತ್ತ ಇರುವ ಅಂಥ ಪ್ರಸಿದ್ಧರಾದ ಸೌಂದರ್ಯವಂತರಾದ ಜನಗಳಿಗಿಂತ ಬಹಳ ಸೌಂದರ್ಯವಂತರಾಗಿ ನೀವು ಕಾಣಿಸುತ್ತೀರ. ನೀವು ಒಂದು ಹೊಸ ರೀತಿಯನ್ನೇ ಆರಂಭಿಸುತ್ತೀರ.
ನಾನು ಅಮೆರಿಕಕ್ಕೆ ಮೊದಲನೆ ಸಲ ಹೋದಾಗ, ಏರ್ಪೋರ್ಟ್ನ ಅಧಿಕಾರಿಗಳು ನಾನು ಈ ಕಾವಿಯ (ಬಟ್ಟೆ) ಉಡುಪನ್ನು ಹಾಕಿಕೊಂಡು ಮಾತಾಡಿದರೆ ಹೇಗೆ ನನ್ನ ಮಾತನ್ನು ಕೇಳಿಕೊಳ್ಳುತ್ತಾರೆ ಎಂದು ಕೇಳಿದರು! ನಾನು ಅವರಿಗೆ ‘ನನಗೆ ಒಂದು ವಾರ ಅವಕಾಶ ಕೊಡಿ ಮತ್ತು ನಾನು ಅಮೆರಿಕದಲ್ಲಿಯೇ ಇದನ್ನು ಒಂದು ಸಂಪ್ರದಾಯದ ಉಡುಪಾಗಿ ಮಾಡುತ್ತೇನೆ'' ಎಂದು ಹೇಳಿದೆ. ಯಾರು ಅವನನ್ನೇ ಸಂಪೂರ್ಣವಾಗಿ ಒಪ್ಪಿಕೊಂಡಿರುತ್ತಾನೋ ಅವನೇ ಒಬ್ಬ ನಾಯಕನಾಗುತ್ತಾನೆ . ನೀನು ಯಾವಾಗ ನಿನ್ನನ್ನೇ ಒಪ್ಪಿಕೊಳ್ಳುತ್ತೀಯೊ, ಆಗ ಸರಿಸಾಟಿ ಇಲ್ಲದ ಹೂವು ಆಗುತ್ತೀಯ, ಮತ್ತು ಅದ್ಭುತವಾದ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸ ಉಂಟಾಗುತ್ತದೆ. ನಿನ್ನ ಶರೀರದ ಮೇಲಿರುವ ಅಪರಾಧ ಮತ್ತು ದ್ವೇಷಗಳೆಲ್ಲ ಸ್ವಚ್ಛವಾದ ಭರವಸೆ ಮತ್ತು ಚೆಲುವಿಗೆ ಬದಲಾಗುತ್ತದೆ.
ನೀನು ನಿನ್ನ ಸ್ವಂತ ಶರೀರದೊಡನೆ ಜೀವಿಸುವುದನ್ನು ಕಲಿಯುವುದು ತುಂಬಾ ಮುಖ್ಯ. ನೀನು ಬೇರೆಯವರ ಶರೀರ, ಇತರೆಯವರ ಸುತ್ತಳತೆ ಬಹಳ ಆಕರ್ಷಕವಾಗಿದೆ ಎಂದು ಚಿಂತಿಸಿದ ಕ್ಷಣದಲ್ಲಿಯೇ, ನಿನಗೂ ಮತ್ತು ನಿನ್ನ ಶರೀರಕ್ಕೂ ಮಧ್ಯೆ ಒಂದು ಸಂದಿಯನ್ನೇ ಉಂಟು ಮಾಡುತ್ತೀಯ.
ಜನಗಳು ಅವರ ಕೊಠಡಿಯ ಗೋಡೆಗಳ ಮೇಲೆ ಗಂಡು ಅಥವಾ ಹೆಣ್ಣಿನ ಆಕೃತಿಗಳ ಫೋಟೋಗಳನ್ನು ಹಾಕಿಕೊಂಡು, ಅವರ ಶರೀರದ ರಚನೆಯನ್ನು ಹೊಂದಲು ವ್ಯಾಯಾಮವನ್ನು ಮಾಡುತ್ತಾರೆ. ನೀವು ಸ್ಪಷ್ಟವಾಗಿ ತಿಳಿಯಿರಿ: ನೀವು ಯಾವಾಗ ಇನ್ನೊಬ್ಬರ ಶರೀರ ಬಹಳ ಸುಂದರವಾಗಿದೆ ಎಂದು ಯೋಚಿಸುತ್ತೀರೋ ಆಗ ನೀವು ಮತ್ತು ನಿಮ್ಮಲ್ಲಿ ಅಂತರವನ್ನು ಸೃಷ್ಟಿಸುತ್ತೀರ.
ಆಸೂಯೆಯಿಂದ ಮುಕ್ತಿ
ಈ ಎಲ್ಲ ಪ್ರಜ್ಞೆ ಇಲ್ಲದ ಬೇರೆಯವರ ಶರೀರದ ಕಡೆ ನೋಡುವ ರೀತಿಗಳು... ನಿಮ್ಮ ಇರುವಿಕೆಗೆ ಬೇಕಿಲ್ಲದ ಪರಿಣಾಮ (side effect) ಉಂಟು ಮಾಡುತ್ತದೆ. ನಾವು ಯಾರೂ ಮನಃ ಪೂರ್ವಕವಾಗಿ ನಮ್ಮ ಶರೀರವನ್ನು ಪ್ರೀತಿಸುವುದಿಲ್ಲ, ನಾವು ಸುಮ್ಮನೆ ಒಂದು ಹೊರೆತರಹ ಹೊತ್ತುಕೊಂಡಿರುತ್ತೇವೆ. ನಮಗೆ ಅದು ಭೋಜನಶಾಲೆ ಮತ್ತು ವಸತಿ ಗೃಹ ಎಂಬ ಅರಿವು ತರಹ ಆಗಿದೆ. ನಾವು ನಮ್ಮ ಶರೀರದ ಒಳಗಡೆ ಇಲ್ಲವೇ ಇಲ್ಲ, ಏಕೆಂದರೆ ನಾವು ಅದನ್ನು ದ್ವೇಷಿಸುತ್ತೇವೆ. ನಾವು ನಮ್ಮ ಶರೀರದಲ್ಲಿ ವಿನಹ ಎಲ್ಲ ಕಡೆಯೂ ಇದ್ದೇವೆ. ಆದ್ದರಿಂದ ನಾವು ನಿರಂತವಾದ ಆಯಾಸವನ್ನು ನಮ್ಮಲ್ಲಿ ಪಡೆದು, ಯಾವ ಸಮಯದಲ್ಲಾದರೂ ಸಿಡಿಯಲು ತಯಾರಾಗಿರುತ್ತೇವೆ.
ಒಂದು ಉದಾಹರಣೆ: ನಿಮ್ಮ ಡ್ರೈವರ್ ಒಂದು ಸಣ್ಣ ತಪ್ಪನ್ನು ಮಾಡಿದರೂ, ನೀವು ಕಷ್ಟ ಪಡದೆ ಕೋಪದಿಂದ ಸಿಡಿಯುತ್ತೀರ. ಕೆಲಸದಲ್ಲಿ ನಿರಂತರವಾಗಿ ಸಿಟ್ಟಿನ ಮನೋಭಾವದಲ್ಲಿರುತ್ತೀರ. ಈ ಸುಳ್ಳಿಗೆಲ್ಲ ಕಾರಣ ನಿಮ್ಮ ಸುತ್ತ ಇರುವ ಜನ ಎಂದು ಯೋಚನೆ ಮಾಡಬೇಡಿ. ಜನಗಳು ಹೇಳುತ್ತಾರೆ, 'ಸ್ವಾಮೀಜಿ, ನನ್ನ ಎಲ್ಲ ಕೆಲಸಗಾರರೂ ಅಷ್ಟು ಅಸಮರ್ಥರು ಅದಕ್ಕೋಸ್ಕರ ನಾನು ಸಿಟ್ಟಾಗುತ್ತೇನೆ'. ದಯವಿಟ್ಟು ತಿಳಿದುಕೊಳ್ಳಿ. ಇದು ನಿಮ್ಮ ಸಿಟ್ಟಿಗೆ ಕಾರಣವಲ್ಲ. ನೀವು ನಿಮ್ಮ ಶರೀರದೊಂದಿಗೆ ಆರಾಮವಾಗಿಲ್ಲ, ಮತ್ತು ಅದೇ ನಿಮ್ಮ ರಚನೆಯೊಂದಿಗೆ ಆರಾಮವಿಲ್ಲದಿರುವಿಕೆಗೂ ಮತ್ತು ಸಿಟ್ಟಿಗೇಳುವಿಕೆಗೂ ಕಾರಣ. ಇದು ಬಹು ಗೂಢವಾಗಿರುವ ಕಾರಣ ಮತ್ತು ಆದ್ದರಿಂದಲೇ ಗ್ರಹಿಸುವುದು ಕಷ್ಟ.
ನೀವು ನಿರಂತರವಾಗಿ ನಿಮ್ಮ ಅಳತೆ ಮತ್ತು ಸುತ್ತಳತೆಯನ್ನು ಬದಲಾಯಿಸಲು ಇಷ್ಟಪಡುತ್ತೀರ, ನಿಮ್ಮ ಶರೀರವು ದೇವರಿಂದ ಬಂದಿರುವವರು ಎಂದು ತಿಳಿಯಿರಿ. ನಿಮಗೆ ನೀವು ಸಾಲದು ಎನ್ನುವ ಯೋಚನೆಯೇ ನಿಮ್ಮ ಆತ್ಮಕ್ಕೆ ಮಾಡುತ್ತಿರುವ ಹಾನಿ (ನಷ್ಟ)
ಹೇಳಿ... ಏನಾದರೂ ಪ್ರಶ್ನೆಗಳಿವೆಯಾ?
ಸ್ವಾಮೀಜಿ, ನಿಮ್ಮ ಮುಖವು ಪ್ರತಿಸಲವೂ ಬದಲಾಗುತ್ತಿರುವಂತೆ ನನಗೆ ತೋರುತ್ತದೆ. ಇದು ಕಲ್ಪನೆಯೇ ಅಥವಾ ನಿಜವಾದ ಸಂಗತಿಯೆ?
(ಸ್ವಾಮೀಜಿ ನಗುತ್ತಾರೆ)
ನೋಡಿ ತಿಳಿದುಕೊಳ್ಳಿ. ನನ್ನ ಇರುವಿಕೆಯು (ಅಸ್ತಿತ್ವ) ಯಾವ ಅಹಂ ಇಲ್ಲದ ದ್ರವ ರೂಪದಲ್ಲಿದೆ. ನಾನು ಸುಮ್ಮನೆ ಅಸ್ತಿತ್ವದೊಂದಿಗೆ ಹರಿಯುತ್ತಿರುತ್ತೇನೆ, ನಾನು ಏನೆಲ್ಲ ಭಾವಿಸುತ್ತೇನೊ (express) ಅದು ದ್ರವರೂಪದಲ್ಲಿ ಹರಿಯುತ್ತದೆ, ಅದನ್ನು ನೀವು ನನ್ನ ಮುಖದಲ್ಲಿ ಕಾಣುತ್ತೀರ. ನನ್ನ ಮುಖ ಯಾವಾಗಲೂ ಬದಲಾಯಿಸುತ್ತಿರುವಂತೆ ಕಾಣುವುದು ಇದೇ ಕಾರಣದಿಂದ. ನೀವು ಅಹಂ ಇಲ್ಲದೆ ಇರುವಂತಹ ಸ್ಥಿತಿ ಹೇಗೆ ಪ್ರಕಟಿಸುವುದು ಎಂದು ಅರ್ಥ ಮಾಡಿಕೊಳ್ಳಬಹುದು, ಮುಂದಿನ ಚಕ್ರ, ಅದೇ ಆಜ್ಞಾ ಚಕ್ರದ ಮೇಲೆ ಮಾತಾಡುವಾಗ.
ಹೌದು...
ಸ್ವಾಮೀಜಿ, ನಾವು ಹೇಗೆ ಸ್ವಾಧೀನತೆಯಿಂದ (possesiveness) ಮತ್ತು ಅಸೂಯೆಯಿಂದ ಹೊರಗೆ ಬರಲು ಸಾಧ್ಯ?
ಹೌದು, ನಾವು ಹೇಗೆ ಹೊರಗೆ ಬರುವುದು? ನೀವು ಈ ಪ್ರಶ್ನೆಯನ್ನು ಕೇಳುತ್ತಿರುವ ಸತ್ಯಾಂಶವೇ ನೀವು ಆಗಲೇ ಉತ್ತಮವಾಗಿ ಅರ್ಥಮಾಡಿಕೊಳ್ಳುವುದಕ್ಕೆ ತಯಾರಾಗಿದ್ದೀರ ಎಂದು ತೋರಿಸುತ್ತದೆ.
ಒಂದು ವಿಷಯವನ್ನು ತಿಳಿದುಕೊಳ್ಳಿ: ಮನುಷ್ಯ ಜನಾಂಗವನ್ನು (ಅಧಿಕಾರ ಚಲಾಯಿಸಲು) ಅಧೀನ ಪಡಿಸಿಕೊಳ್ಳಲು, ಆಗುವುದಿಲ್ಲ. ನೀವು ಯಾವಾಗ ಒಬ್ಬ ಮನುಷ್ಯನನ್ನು ಅಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತೀರೋ, ನೀವು ನಿಜವಾಗಿಯೂ ಅವನು ಅಥವಾ ಅವಳನ್ನು ಒಂದು ಪದಾರ್ಥವನ್ನಾಗಿ ಮಾಡಿದಂತೆ ಆಗುತ್ತೆ. ನೀವು ಆ ಮನುಷ್ಯನನ್ನು ಒಂದು ಜೀವವಿಲ್ಲದ ಪದಾರ್ಥವನ್ನಾಗಿ ಮಾಡಿದಂತೆ ಆಗುತ್ತೆ. ಬರೀ ಜೀವವಿಲ್ಲದ ವಸ್ತುಗಳನ್ನು ಹೊಂದಬಹುದು. ನೀವು ಇದನ್ನು ಶುದ್ಧವಾಗಿ ತಿಳಿದುಕೊಂಡ ಮೇಲೆ ಇದರಿಂದ ಬರುವ ಹಕ್ಕು ಪಡೆಯುವುದರಿಂದಲೂ ಮತ್ತು ಅಸೂಯೆ ಪಡುವುದರಿಂದಲೂ ಮುಕ್ತರಾಗುತ್ತೀರಿ.
ಸುಮ್ಮನೆ ನೋಡಿ ಮಾನವನು ಹರಿಯುವ ನದಿಯ ತರಹ, ಅವನು ಅಥವಾ ಅವಳು ಏನು ಜೊತೆಯಲ್ಲಿ ತರುತ್ತಾರೋ ಅದರಿಂದ ಸುಮ್ಮನೆ ಸಂತೋಷಪಟ್ಟು ಅನುಭವಿಸಬೇಕು. ನೀವು ನದಿಯನ್ನು ಅಧೀನಪಡಿಸಿಕೊಳ್ಳಲು ಪ್ರಯತ್ನ ಪಡುತ್ತೀರಾ? ನೀವು ನಿಮ್ಮ ಕೈಯಲ್ಲಿ ಹಿಡಿಯಲು ಪ್ರಯತ್ನ ಪಟ್ಟರೆ, ನೀವು ಒಂದು ಹುಚ್ಚು (ಬುದ್ಧಿ ಇಲ್ಲದ) ಕೆಲಸವನ್ನು ಮಾಡುತ್ತಿದ್ದೀರಿ, ಹೌದೊ, ಅಲ್ಪವೊ? ಇದೇ ತರಹ (ರೀತಿ) ಜನಗಳನ್ನು ಅಧೀನಪಡಿಸಿಕೊಳ್ಳಲು ಪ್ರಯತ್ನ ಪಡಬೇಡಿ; ಪ್ರಾಮಾಣಿಕವಾಗಿ, ಅವರು ಏನಾಗಿದ್ದಾರೆ ಎಂದು ಆನಂದಪಡಿ, ಆಗ ನೀವು ಅಸೂಯೆಯ ಹಿಡಿತದಿಂದ ಪಾರಾಗುತ್ತೀರ. ಆಮೇಲೆ ಅಧೀನಪಡಿಸಿಕೊಳ್ಳುವುದು, ನಿಮ್ಮಿಂದಲೇ ನಿಮ್ಮ
ಆಸೂಯೆಯಿಂದ ಮುಕ್ತಿ
ಗೊಂದಲದಲ್ಲಿರುವ ಮನಸ್ಸಿನಿಂದ ಗೂಢವಾಗಿ ಕೆಲವು ಸೃಷ್ಟಿಸಲ್ಪಟ್ಟಿದೆ, ಯಾವುದಕ್ಕೆ ನೀವು ಅಷ್ಟೊಂದು ಶಕ್ತಿಯನ್ನು ಕೊಟ್ಟಿದ್ದೀರೋ ಅದರಿಂದಲೇ, ಎಂದು ನೀವು ತಿಳಿದುಕೊಳ್ಳುತ್ತೀರ.
ಯಾವಾಗ ನೀವು ಒಬ್ಬ ಮನುಷ್ಯನನ್ನು ಅಧೀನಪಡಿಸಿಕೊಳ್ಳುತ್ತೀರೋ, ಆಗ ಅವನಿಗೂ ಅದು ಒಂದು ಕಷ್ಟವಾಗುತ್ತದೆ. ನೀವು ನಿಮ್ಮ ಎಲ್ಲ ಮನೋಭಾವನೆಯನ್ನು ಅವನ ಮೇಲೆ ಯೋಜಿಸುವುದಕ್ಕೆ (project) ಪ್ರಾರಂಭ ಮಾಡುತ್ತೀರ. ನೀವು ಯೋಚಿಸಿರುವ, ಕಲ್ಪನೆಗಳಿಗೆ ತಕ್ಕ ಹಾಗೆ ಕೆಲಸ (ನಟನೆ) ಮಾಡಬೇಕಾಗುತ್ತದೆ. ಅವನಿಗೆ ಪಂಜರದಲ್ಲಿರುವಂತೆ ಭಾಸವಾಗುತ್ತದೆ. ಅವನ ವ್ಯಕ್ತಿತ್ವದಲ್ಲಿಯೇ ಭಾಗವಾದ ಹಾಗೆ ಆಗುತ್ತಾನೆ. ಅವನ ಸ್ವಾಭಾವಿಕವಾದ ವ್ಯಕ್ತಿತ್ವದಿಂದ ನಿಮ್ಮ ಜೊತೆ ಇರಲು ಆಗುವುದಿಲ್ಲ ಮತ್ತು ಅವನು ನಿಮ್ಮ ಸಂಬಂಧಿಯಂತೆ ಇರಲು ಆಗುವುದಿಲ್ಲ.
ನೀವು ಒಬ್ಬ ಮನುಷ್ಯನನ್ನು ಪ್ರಾಮಾಣಿಕವಾಗಿ ಪ್ರೀತಿಸುವುದಾದರೆ, ಅವನನ್ನು ಮುಕ್ತಿಗೊಳಿಸಿ; ಅವನನ್ನು ಅಧೀನಪಡಿಸಿಕೊಳ್ಳಬೇಡಿ (process); ಆಗಲೇ ನಿಜವಾದ ಸಂಬಂಧ ಅರಳುತ್ತದೆ; ಆಗಲೇ ವಿನಹ, ಒಬ್ಬರ ಮೇಲೆ ಅವಲಂಬನೆ ಇಲ್ಲದೆ, ಗಾಢವಾದ ಪ್ರೀತಿ, ಮತ್ತು ನಂಬಿಕೆ ಇರುವ ಸಂಬಂಧ ಅರಳಲು ಸಾಧ್ಯವಾಗುತ್ತೆ. ನೀವು ಕೆಲವು ಅಂಶಗಳ ಮೇಲೆ ನೇತಾಡಲು ಪ್ರಯತ್ನ ಪಡುತ್ತೀರೋ, ಆ ಕ್ಷಣವೇ ನೀವು ಅದನ್ನು ಕಳೆದುಕೊಳ್ಳುವಿರಿ. ಪ್ರಾಮಾಣಿಕವಾಗಿ ಅವನನ್ನು ಪ್ರೀತಿಸಿ ಅದಕ್ಕೆ ಯಾವ ತಂತಿಯೂ (ಕೊಂಡಿ) ಜೋಡಿಸಿರಬಾರದು.
ನನಗೆ ಒಂದು ಕತೆ ಜ್ಞಾಪಕಕ್ಕೆ ಬಂತು:
ಒಂದು ಹಿಂದುಳಿದ ಹಳ್ಳಿಯಲ್ಲಿ, ದಕ್ಷಿಣ ಭಾರತದಲ್ಲಿ, ಎಲ್ಲಿ ಜನಗಳಿಗೆ ನಾಗರೀಕತೆ ಇರುವುದೇ ಗೊತ್ತಿರಲಿಲ್ಲವೋ, ಅಲ್ಲಿ ವಯಸ್ಸಾಗಿರುವ ದಂಪತಿಗಳು ಇದ್ದರು.
ಒಂದು ದಿನ ಮೊಟ್ಟ ಮೊದಲನೇ ಸಲ, ಅಲ್ಲಿ ಒಂದು ಜಾತ್ರೆ ನಡೆಯುತ್ತಿತ್ತು.
ಆ ಮನುಷ್ಯ ಜಾತ್ರೆಗೆ ಹೋಗಿ ಅಲ್ಲಿ ಎಲ್ಲ ಪ್ರದರ್ಶಿಸಲ್ಪಟ್ಟ ಪದಾರ್ಥಗಳನ್ನು ನೋಡಿದ.
ಅವನು ಒಂದು ಕನ್ನಡಿಯನ್ನು ತೆಗೆದುಕೊಂಡು, ಅವನು ಏನು ನೋಡಿದನೊ, ಅದನ್ನು ಕಂಡು ಆಶ್ಚರ್ಯಚಕಿತನಾದ!
ಅವನ ಜೀವಿತದಲ್ಲೆಲ್ಲ ಅವನು ಕನ್ನಡಿಯನ್ನೇ ನೋಡಿರಲಿಲ್ಲ. ಅವನು ಆ ಕನ್ನಡಿಯನ್ನು ಮನೆಗೆ ತೆಗೆದುಕೊಂಡು ಹೋದ.
ಅವನು ಆಗಿಂದಾಗ್ಗೆ ಕನ್ನಡಿಯನ್ನು ಹೊರಗಡೆ ತೆಗೆಯುತ್ತಿದ್ದ, ಅದರ ಕಡೆ ಇಣಿಕಿ ನೋಡಿ, ಪುನಃ ಅವನು ಹೆಂಡತಿ ಬಂದು ನೋಡುವುದಕ್ಕೆ ಮುಂಚೆ ವಾಪಸ್ ಇಡುತ್ತಿದ್ದ.
ಅವನ ಹೆಂಡತಿ ಹೇಗೋ ಅದನ್ನು ನೋಡಿದಳು ಮತ್ತು ಒಂದು ದಿನ ಅವನು ಹೊರಗಡೆ ಹೋಗಿದ್ದಾಗ ಅದನ್ನು ತೆಗೆದುಕೊಂಡು, ಅದರಲ್ಲಿ ನೋಡಿದಳು.
ಅವಳು ಆವೇಶದಿಂದ ಉದ್ಗರಿಸಿದಳು, (exclaimed) ಇನ್ನೊಬ್ಬ ಹೆಂಗಸು ನಾನು ಸರಿಯಾಗಿ ಇದೇ ರೀತಿ ಯೋಚಿಸಿದ್ದೆ.
(ಜೋರಾಗಿ ನಗೆ!)
ನಮ್ಮ ಕಲ್ಪನೆಗೆ ಆಧೀನಪಡಿಸಿಕೊಳ್ಳುವುದು ಮತ್ತು ಅಸೂಯೆಯಿಂದ ಕೊನೆಯೇ ಇಲ್ಲ! ಮುಕ್ಕಾಲುಪಾಲು ಯಾವಾಗಲೂ, ನಮ್ಮ ಕಲ್ಪನೆ ವಾಸ್ತವತೆಗೆ ಸರಿಯಾಗಿ ಹೊಂದಿಕೊಂಡಿಲ್ಲ. ನಾವು ಪ್ರಾಮಾಣಿಕವಾಗಿ ನಿಂತು, ಗಾಢವಾಗಿ ಅಸೂಯೆಯನ್ನು ನೋಡಿದರೆ ನಾವು ಆಗ ಅದು ತಳಾಧಾರವಿಲ್ಲದ್ದು ಮತ್ತು ಬೇಕಿಲ್ಲದೆ ಇರುವುದು ಎಂದು ತಿಳಿಯುತ್ತೇವೆ.
ಇರಬಹುದು, ಸ್ವಾಮೀಜಿ ನಮ್ಮ ಹೆಂಡತಿ ಅಥವಾ ಗಂಡ ಇನ್ನೊಬ್ಬರ ಮೇಲೆ ಕಣ್ಣು ಹಾಯಿಸಿದರೆ ಆಗ ನಾವು ಹೇಗೆ ಸುಮ್ಮನೆ ಇರುವುದು ಎಂದು ನೀವು ಕೇಳಬಹುದು. ನಿಮ್ಮ ಗಂಡ, ಅಥವಾ ಹೆಂಡತಿ ನಿಜವಾಗಿಯೂ ಇನ್ನೊಬ್ಬರನ್ನು ನೋಡುತ್ತಿದ್ದರೆ, ಆ ವಿಚಾರದಲ್ಲಿ ಪ್ರಾಮಾಣಿಕವಾಗಿ ಪ್ರಜ್ಞೆಯಿಂದ ಮತ್ತು ಅರಿವಿನಿಂದ, ಪ್ರಜ್ಞೆ ಇಲ್ಲದ ಸಂಪ್ರದಾಯದ ಕೆಲಸಕ್ಕೆ ಹೋಗುವ ಬದಲು ನೋಡಿ.
ನೀವು ಯಾವಾಗ ಸ್ವಾಧೀನತೆ ಮತ್ತು ಅಸೂಯೆಯನ್ನು ಅರಿವಿನಿಂದ ಒಳಗೆ ನೋಡಿದರೆ, ನೀವು ಬೇಕಿಲ್ಲದ ಕಲ್ಪನೆ ಅಥವಾ ಉದ್ವೇಗದಿಂದ ಬಿಗಿಯಾಗಿ ಹಿಡಿಯಲ್ಪಡುವುದಿಲ್ಲ. ನೀವು ಎಲ್ಲವನ್ನು ಬೆಳಕಿನಲ್ಲಿ ನೋಡುವುದಕ್ಕೆ ಸಮರ್ಥರಾಗಿ, ಸರಿಯಾದ ಉದ್ದೇಶದಿಂದ ವರ್ತಿಸಿ, ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳುತ್ತೀರ.
ಆಸೂಯೆಯಿಂದ ಮುಕ್ತಿ
ನಿಮ್ಮಲ್ಲಿಯೇ ಆಸೂಯೆ ಪಡುವುದು ಬೇಡವೆಂದು ಹೇಳುವುದರಲ್ಲಿ, ನೀವು ಅದರಿಂದ ಹೊರಗೆ ಬರಲು ಸಾಧ್ಯವೇ ಇಲ್ಲ. ನೀವು ಅರಿವನ್ನು ತಂದುಕೊಂಡಾಗ ಮಾತ್ರವೇ, ಪೂರ್ತಿ ಎಲ್ಲ ವಿಚಾರದಲ್ಲೂ ಮತ್ತು ಗಾಢವಾಗಿ ಅರ್ಥಮಾಡಿಕೊಂಡರೆ, ಆಗ ಅದು ಸಹಾಯವಾಗುತ್ತೆ.
ನೀವು ಆಸೂಯೆಯನ್ನು ಜಯಿಸುವುದಕ್ಕೆ, ಸುಮ್ಮನೆ ಆಸೂಯೆ ಹೇಗೆ ನಿಮ್ಮ ರಚನೆ System (ಶರೀರ)ಗೆ ಬಂತು, ಎಂದು ನೋಡಿ ಪ್ರಾಮಾಣಿಕವಾಗಿ ನಿಮ್ಮ system ನಲ್ಲಿರುವ ಯೋಚನೆಗಳ ಪರಿಣಾಮ ಮತ್ತು ನಿಮ್ಮ (system) ರಚನೆಯಲ್ಲಿರುವ ಉದ್ದೇಶಗಳನ್ನೆಲ್ಲ ವಿಶ್ಲೇಷಣೆ ಮಾಡಿ ಆಮೇಲೆ ಅದನ್ನು ನಿಮ್ಮ ಬುದ್ಧಿಶಕ್ತಿಯಿಂದ ಎಲ್ಲ ವಿಧಾನಗಳನ್ನು ವಿವೇಚನಾಶಕ್ತಿಯಿಂದ ನಾಶಗೊಳಿಸುವಂತೆ ಮಾಡಿ.
ಒಂದು ಸಲ ಆಸೂಯೆ ಒಂದು ವಸ್ತುವಿಲ್ಲದ ನೆರಳು ಎಂದು ನೀವು ತಿಳಿಯಿರಿ, ಆಮೇಲೆ ನೀವು ಅದು ಎಷ್ಟು ಅಸಂಭದ್ಧವಾಗಿದೆ ಮತ್ತು ನಿಮಗೆ ಎಷ್ಟು ಯಾತನೆ ಕೊಟ್ಟಿತು ಎಂದು ಅರಿಯುವಿರಿ. ಆಸೂಯೆಯಿಂದ ಮುಕ್ತಿ ಆಗುವುದು ಒಬ್ಬನ ಜೀವನದಲ್ಲಿ ಒಂದು ದೊಡ್ಡ ಮುಕ್ತಿ.
ಮತ್ತು ನಿಮ್ಮ ಆಸೂಯೆಯ ವಸ್ತುವನ್ನು ಖಂಡಿಸಬೇಡಿ. ಪ್ರಾಮಾಣಿಕವಾಗಿ ಆಸೂಯೆಯ ವಸ್ತುಗಳನ್ನು ಖಂಡಿಸುವುದರಿಂದ ನೀವು ಅದರಿಂದ ಮುಕ್ತರಾಗುವುದಿಲ್ಲ. ಏಕೆಂದರೆ ನೀವು ಖಂಡಿಸುವುದಕ್ಕೆ ಪ್ರಾರಂಭ ಮಾಡಿದ ತಕ್ಷಣ, ಒಳಗಡೆ ಒಂದು ವ್ರಣ (ಗಾಯ) ಇರುತ್ತದೆ, ಅದನ್ನು ನೀವು ಮುಚ್ಚಲು ಪ್ರಯತ್ನಿಸುತ್ತೀರಾ.
ನೀವು ಒಂದು ಆಸೂಯೆಯ ವಸ್ತುವನ್ನು ಖಂಡಿಸುವುದರಿಂದ... ಆ ಒಂದು ಆಸೂಯೆಯ ನಿರ್ದಿಷ್ಟ ವಸ್ತುವಿನಿಂದ ಮುಕ್ತಿ ಹೊಂದಬಹುದು. ಆದರೆ ನೀವು ಇನ್ನೊಂದು ಆಸೂಯೆಯ ವಸ್ತುವಿನಿಂದ ಉಭಯ ಸಂಕಟಕ್ಕೆ (fix) ಸಿಲುಕುತ್ತೀರ ಅಷ್ಟೆ! ಅದು ಸುಮ್ಮನೆ 'ದ್ರಾಕ್ಷಿ ಹುಳಿ' ಎಂದು ಹೇಳಿ ಮುಂದೆ ಇನ್ನೊಂದು ದ್ರಾಕ್ಷಿ ತೋಟಕ್ಕೆ ಚಲಿಸಿದಂತಾಗುತ್ತೆ! ಆದ್ದರಿಂದ ಆಸೂಯೆಯ ವಸ್ತುವಿನಿಂದ ದಾಟಿ ಆಚೆಗೆ ಬರುವುದು ಸಮಸ್ಯೆ ಬಿಡಿಸಿದಂತೆ ಆಗುವುದಿಲ್ಲ. ನೀವು 'ನೀನು' ಎನ್ನುವ ವಸ್ತುವಿನ ಮೇಲೆ ಕೆಲಸ ಮಾಡಬೇಕು.
ಯಾವಾಗಲೂ ನೆನಪಿಟ್ಟುಕೊಳ್ಳಿ: ನೀವು ಬಿಡುಗಡೆ ಪಡೆಯಲು ಉದ್ವೇಗವನ್ನು ಹಿಡಿದಿದ್ದೇವೆಂದು ಅನ್ನಿಸುತ್ತಿದ್ದರೆ, ನಿಮ್ಮ ಬೆಳವಣಿಗೆಗೆ ಏನೂ ಅದು ಸಮರ್ಪಕವಾಗಿಲ್ಲವೆಂದು ತೋರುತ್ತಿದ್ದರೆ, ಆ ಮನೋಭಾವವನ್ನು ಪ್ರತಿರೋಧಿಸ ಬೇಡಿ. ನೀವು ಪ್ರತಿರೋಧಿಸಿದರೆ ನೀವು, ಅದಕ್ಕೆ ಇನ್ನು ಹೆಚ್ಚಿನ ಶಕ್ತಿ ಕೊಟ್ಟಂತೆ ಆಗುತ್ತೆ. ನೀವು ಯಾವಾಗ ನಾನು ಅಸೂಯೆ ಪಡಬಾರದು ಎಂದು ಹೇಳುತ್ತೀರೋ, ‘ಅಸೂಯೆ' ಎಂಬ ಪದಕ್ಕೆ ಎಷ್ಟು ಶಕ್ತಿ ತುಂಬುತ್ತೀರೋ, 'ನಾನು ಪಡಬಾರದು' ಎಂಬ ಪದಗಳಿಗೂ ಅಷ್ಟೇ ಶಕ್ತಿಯನ್ನು ತುಂಬುತ್ತೀರ.
ಆದ್ದರಿಂದ ಈ ತರಹ ಹೇಳಬೇಡಿ, ಬದಲು ನಾನು ಯಾವಾಗಲೂ ಪ್ರತಿಯೊಬ್ಬರಲ್ಲಿಯೂ ಅನುಕಂಪದಿಂದ ಇರಲು ಸಾಧ್ಯವಾಗಲಿ ಎಂದು ನಿಮ್ಮಲ್ಲಿಯೇ ಹೇಳಿಕೊಳ್ಳಿ. ಆ ಅಸೂಯೆ ಎನ್ನುವ ಪದವನ್ನು ಉಪಯೋಗಿಸಲೇಬೇಡಿ. ಆ ಉದ್ದೇಗವನ್ನು ನಿಷೇದ ಮಾಡಿ, ನೀವು ಏನು ಸಾಧಿಸಬೇಕೊ ಅದನ್ನು ಪಡೆಯಲು ಆಗುವುದಿಲ್ಲ. ಪೂರ್ತಿ ಸಕಾರಾತ್ಮಕವಾಗಿ ಅದೇ ಪ್ರಕರಣವನ್ನು ಹೇಳಿ ಅಷ್ಟೆ.
ಕೂಡ, ಅಸೂಯೆಯಿಂದ ಓಡಿಹೋಗುವ ಬದಲು ಅಥವಾ ಅದನ್ನು ತಪ್ಪಿಸಿಕೊಳ್ಳುವ ಬದಲು, ಅದನ್ನು ಸಂಪೂರ್ಣವಾದ ಅರಿವಿನಿಂದ ಬಿಟ್ಟುಬಿಡಿ. ನೀವು ಅದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ, ನಿಮಗೆ ಬೇರೆ ಸಮಯದಲ್ಲಿ ಮೊದಲಿಗಿಂತ ಹೆಚ್ಚು ತೀವ್ರತೆಯಲ್ಲಿ ಅನುಕೂಲ ಮಾಡುತ್ತದೆ. ಆಳವಾಗಿ ಸರಿಯಾದ ಅರಿವಿನಿಂದ ಒಂದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಿ: ಅಸೂಯೆ ನಿಮ್ಮ ನಿಜವಾದ ಸ್ವಭಾವವಲ್ಲ. ಸಮಾಜವು ನಿಮ್ಮನ್ನು ಅಸೂಯೆ ಪಡುವಂತೆ ಬೋಧಿಸಿದೆ.
ಆ ಅಸೂಯೆ ನೀವಲ್ಲ ಎನ್ನುವುದನ್ನು ನಂಬಿ, ಅಷ್ಟೇ ಸಾಕು. ನೀವು ನೀವಾಗಿಯೇ ಅದರಲ್ಲಿ ಸಿಕ್ಕಿ ಹಾಕಿಕೊಳ್ಳುವ ಬದಲು ನಗುತ್ತೀರ, ನೀವು ಯಾವಾಗ ಅದರ ಕಡೆಗೆ ನಗಲು ಸಾಧ್ಯವಾಗುತ್ತದೆಯೋ, ನೀವು ಅದರಲ್ಲಿ ಸಿಕ್ಕಿಹಾಕಿಕೊಳ್ಳುವ ಬದಲು ಸುಮ್ಮನೆ ಪ್ರೇಕ್ಷಕರಾಗಿ ಇರಲು ಪ್ರಾರಂಭ ಮಾಡಿದ್ದೀರೆಂದು ಅರ್ಥವಾಗುತ್ತೆ. ನೀವು ಪ್ರೇಕ್ಷಕರಾಗಿರಲು ಪ್ರಾರಂಭ ಮಾಡಿದ ಕ್ಷಣವೇ ಎಲ್ಲಕ್ಕಿಂತ ಆಚೆಯ ಕಡೆ (ಬಹುದೂರ) ಹೋಗುವುದಕ್ಕೆ ಸುಲಭವಾಗುತ್ತೆ.
ಮತ್ತು ಎಲ್ಲ ವಿಶ್ವಶಕ್ತಿಯೂ ದೇವರ ಆಟ ವಿನಹ ಬೇರೆ ಏನೂ ಇಲ್ಲವೆಂದು ನೀವು ನೋಡಿದರೆ, ಈ ಅಸೂಯೆ ಎಂದು ಕರೆಯಲ್ಪಟ್ಟಿರುವುದೂ ಕೂಡ ಒಂದು ದೇವರ ಆಟವೆಂದು ನೀವು ನೋಡಲು ಸಮರ್ಥರಾಗುತ್ತೀರ. ಮತ್ತು ಅದು ಅದರಲ್ಲಿ ನಿಜತ್ವನ್ನು ಹೊಂದಿಲ್ಲ. ಪ್ರಾಮಾಣಿಕತೆಯಿಂದ, ಅಸೂಯೆಯನ್ನು ಅದರಲ್ಲಿ ಹಿಡಿಯಲ್ಪಡುವ ಬದಲು, ಒಂದು ಪದಾರ್ಥವನ್ನಾಗಿ ನೋಡಿ. ಅದು ಯಾಂತ್ರಿಕವಾಗಿ ನಿಮ್ಮ ಮೇಲಿನ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
ನೀವು, ನಿಮಗೆ ಈ ಪ್ರಪಂಚದಲ್ಲಿ ಸರಿಸಾಟಿ ಇರುವರು, ಇಲ್ಲವೆಂದು ತಿಳಿದುಕೊಳ್ಳಿರಿ, ಹೋಲಿಸಿಕೊಳ್ಳುವ ಸ್ವಭಾವ ನಿಮ್ಮಲ್ಲಿ ಇರುವುದು ಅರ್ಥಹೀನವಾಗುತ್ತೆ ಮತ್ತು ನೀವು ನೀವಾಗಿಯೇ ಅಸೂಯೆ ಪಡುವುದನ್ನು ನಿಲ್ಲಿಸುತ್ತೀರ. ಪ್ರಾಮಾಣಿಕವಾಗಿ ವಿಶ್ವಶಕ್ತಿಯು ಎಲ್ಲರನ್ನು ಮತ್ತು ಎಲ್ಲವನ್ನು ಸರಿಸಮಾನವಾಗಿ ಪ್ರೀತಿಸುತ್ತದೆ ಎಂದು ತಿಳಿಯಲು ಪ್ರಯತ್ನಿಸಿ.
ಹೌದು...
ಸ್ವಾಮೀಜಿ... ಗುರುಗಳು ಆಗಿಂದಾಗ್ಗೆ ನಮ್ಮಲ್ಲಿ ವಿಶೇಷ ಗುಣಗಳು ಅಸೂಯೆಯಿಂದ ಮುಕ್ತ, ಒಳ್ಳೆಯ ತಿಳುವಳಿಕೆ ಮತ್ತು ವಿಮರ್ಶೆ ಮಾಡಲಾಗದೇ ಇರುವಂತಹ ನಡವಳಿಕೆಗಳು ಎಲ್ಲವನ್ನು ಪ್ರೇರೇಪಿಸಲು ಪ್ರಯತ್ನ ಪಡುತ್ತಲೇ ಇರುತ್ತಾರೆ. ಯಾತಕ್ಕೆ ಈ ತಿಳುವಳಿಕೆ ನಮ್ಮಲ್ಲಿ ಉಂಟಾಗುತ್ತಿಲ್ಲ?
ನೀವು ನೋಡಿ, ಇದರಲ್ಲಿ ಎರಡು ವಿಷಯಗಳು ಇವೆ.
ನಾವು ಯಾವಾಗ ಗುರುವಿನ ಮೂಲ ತತ್ತ್ವವನ್ನು ಗ್ರಹಿಸುತ್ತೇವೆಯೊ, ಮತ್ತು ನಮ್ಮನ್ನು ಪರಿವರ್ತನೆ ಮಾಡಿಕೊಳ್ಳಲು ನಿಶ್ಚಯಾದ ಪ್ರಯತ್ನವನ್ನು ಮಾಡುತ್ತೇವೆಯೊ, ನಾವು ಆನಂದವನ್ನು (bliss) ಪ್ರವೇಶಿಸಲು ಸರಿಯಾದ ನೂಲನ್ನು ಹಿಡಿದಿದ್ದೇವೆ. ಆದರೆ ಏನಾಗುತ್ತೆ ಎಂದರೆ, ಅದರ ಬದಲು ಗುರುವಿನ ರೂಪಕ್ಕೆ ಪ್ರಾಮುಖ್ಯತೆಯನ್ನು ಕೊಡಲು ನಾವು ಪ್ರಾರಂಭ ಮಾಡುತ್ತೇವೆ. ನೀವು ಗುರುವಿನ ಮೂಲ ತತ್ತ್ವಕ್ಕೆ ಮತ್ತು ತತ್ತ್ವಜ್ಞಾನಕ್ಕೆ ಪ್ರಾಮುಖ್ಯತೆ ಕೊಡಬೇಕು. ನೀವು ರೂಪಕ್ಕೆ ಪ್ರಾಮುಖ್ಯತೆ ಕೊಟ್ಟರೆ ನೀವು ಪೂರ್ತಿಯಾಗಿ ಅವರನ್ನು ಕಳೆದುಕೊಳ್ಳುತ್ತೀರ; ನೀವು ಪೂರ್ತಿ ಅವರ ಸಂದೇಶವನ್ನು ಕಳೆದುಕೊಳ್ಳುತ್ತೀರ.
ನೋಡಿ ಅರ್ಥಮಾಡಿಕೊಳ್ಳಿ: ನೀವು ಅವರ ಉಪದೇಶಗಳನ್ನು ಅನುಸರಿಸಿದರೆ, ನೀವು ಒಂದು ದೈವೀ ಸಂಪತ್ತುಳ್ಳ ಹಣ್ಣು ಆಗುತ್ತೀರ; ನೀವು ಅವರ ವ್ಯಕ್ತಿತ್ವಕ್ಕೆ ಗಟ್ಟಿಯಾಗಿ ಅಂಟಿಕೊಂಡರೆ, ಮತಶ್ರದ್ಧೆಯ ಕಷ್ಟಕರ ಸಮಸ್ಯೆಯಾಗುತ್ತದೆ. ಮತಶ್ರದ್ಧೆಯ ಕಷ್ಟಕರ ಸಮಸ್ಯೆಯು ಗೊಂದಲ ಮತ್ತು ಘರ್ಷಣೆಯನ್ನು ಸೃಷ್ಟಿಸಿ, ಅವರು ಎಲ್ಲಿರುವವರೋ ಅಲ್ಲಿಯೇ ನಿಲ್ಲುತ್ತಾರೆ.
ಭಗವದ್ಗೀತೆಯ ಕೃಷ್ಣನ ಸಂದೇಶವಾಗಲಿ, ಅಥವಾ ಮಹಮದ್ನ ಪವಿತ್ರವಾದ ಕುರಾನ್ ಅಥವಾ ಕ್ರೈಸ್ತನ ಪವಿತ್ರ ಬೈಬಲ್ನ ಸಂದೇಶವಾಗಲೀ ಎಲ್ಲವೂ ಒಂದೇ ರೀತಿಯ ಬದಲಾಗದ ಸಂದೇಶಗಳಾಗಿ ನಿಲ್ಲುತ್ತವೆ, ನಿರೂಪಿಸಿರುವುದು ಬದಲಾಗುತ್ತೆ. ಯಾವ ಗುರುವನ್ನಾಗಲೀ ನಿಮಗೆ ಯಾರನ್ನು ಅನುಸರಿಸುವ ಭವಿಷ್ಯ ಇದೆಯೊ ಅವರನ್ನು ಅನುಸರಿಸಿ. ಆದರೆ ನೀವು ಯಾವಾಗ ಅವರ ವ್ಯಕ್ತಿತ್ವವನ್ನು ಅವರ ಸಂದೇಶದ ಬದಲು ಅನುಸರಿಸಲು ಪ್ರಾರಂಭ ಮಾಡುತ್ತೀರೋ ಆಗ ಭಗವದ್ಗೀತೆಗಿಂತ ಕೃಷ್ಣನೇ ತುಂಬಾ ಪ್ರಾಮುಖ್ಯತೆ ಉಳ್ಳವನಾಗಿ, ನೀವೇ ತೊಂದರೆಯನ್ನು ಪ್ರಾರಂಭಿಸುತ್ತಾ ನಿಮಗೂ ಮತ್ತೊಬ್ಬರಿಗೂ ಅದನ್ನು ಉಂಟು ಮಾಡುತ್ತೀರ.
ಯಾವಾಗ ಕೃಷ್ಣ ಮತ್ತು ಕ್ರೈಸ್ತ ಸಂಧಿಸಿದರೆ, ಅವರು ಖಂಡಿತವಾಗಿ ಒಬ್ಬರಿಗೊಬ್ಬರು ಆಲಿಂಗನ ಮಾಡಿಕೊಳ್ಳುತ್ತಾರೆ. ಆದರೆ ಕೃಷ್ಣನ ಹಸು ಮತ್ತು ಕ್ರೈಸ್ತನ ಕುರಿ ಸಂಧಿಸಿದರೆ, ಅಲ್ಲಿ ಖಂಡಿತ ಜಗಳ ಇದ್ದೇ ಇರುತ್ತದೆ!
ಪ್ರತಿಯೊಬ್ಬರೂ ಬೇರೆ ಬೇರೆ ನೇತೃತ್ವವನ್ನು ಸ್ವೀಕರಿಸುವವರು (follow) ಅವರ ಗುರುವಿನ ತತ್ವವೇ ಅತ್ಯುತ್ತಮವೆಂದು ಶಾಂತಿಯನ್ನು ಹರಡಲು ಪ್ರಯತ್ನ ಪಡುತ್ತಾರೆ. ಆಗ ಏನಾಗುತ್ತದೆ? ಶಾಂತಿಯನ್ನು ಪ್ರಚಾರ ಮಾಡುವ ಬದಲು, ನಾವು ನಮ್ಮಲ್ಲಿಯೇ ಚೂರು ಚೂರಾಗು (piece) ತ್ತೇವೆ. ನೀವು ಹೇಳುವಂತಹ ಶಾಂತಿ (peace) ಯನ್ನು ಬೇರೆಯವರ ಮೇಲೆ ಬಲವಂತ ಮಾಡಲು ಪ್ರಯತ್ನ ಪಟ್ಟರೆ, ಆಗ ಸಮಸ್ಯೆ ಉದ್ಭವವಾಗುತ್ತೆ. ಹೀಗೆಯೇ ನಾವು ಸಂಗತಿಗಳನ್ನು ತೊಡಕು ಮಾಡಿ, ಸಂದೇಶವನ್ನು ಒಂದು ಜನ್ಮದಲ್ಲಿ ಅಲ್ಲ ಬೇಕಾದಷ್ಟು ಜನ್ಮಗಳಲ್ಲಿ ಕಳೆದುಕೊಳ್ಳುತ್ತೇವೆ.
ಗುರುಗಳು ಭೂಗ್ರಹದ ಮೇಲೆ ಮಾನವನ ಮೇಲೆ ಇರುವ ಕರುಣೆಯಿಂದ ಸಂಭವಿಸುತ್ತಲೇ ಇರುತ್ತಾರೆ. ಮಾನವನು ಹೇಗೋ ಅವುಗಳಿಂದ ತಪ್ಪಿಸಿಕೊಳ್ಳುತ್ತಾನೆ.
ಎರಡನೇ ವಿಚಾರ: ಇನ್ನೊಬ್ಬರ ಕಡೆ ಬೆಟ್ಟು ತೋರಿಸುವ ಬದಲು, ಅಥವಾ ಒಳ್ಳೆ ಕಾಲ ಬರಲಿ ಒಳ್ಳೆಯ ಸಾಧನೆಗೆ ಎಂದು ಕಾಯುತ್ತಿರುವ ಬದಲು ನಾವು ಎಲ್ಲರೂ ಏನು ಕೇಳುತ್ತೇವೊ ಆ ಕ್ಷಣದಿಂದಲೇ ಅದನ್ನು ಪ್ರಾರಂಭ ಮಾಡಿದರೆ, ಎಲ್ಲವೂ ತಾವಾಗಿಯೇ ನಮ್ಮ ಸುತ್ತ ಸಂಭವಿಸಲು ಶುರು ಆಗುತ್ತದೆ.
ಉದಾಹರಣೆಗೆ, ನೀವು ಗಿಡಗಳನ್ನು, ಪ್ರಾಣಿಗಳನ್ನು, ಮರಗಳನ್ನು ಮತ್ತು ಮಾನವನನ್ನು ಒಂದೇ ರೀತಿ ಪ್ರೀತಿಸಲು ಪ್ರಾರಂಭಿಸಿ. ಒಳ್ಳೆಯ ಶುಭವಾದ ದಿನ (ಗಳಿಗೆ) ಅಭ್ಯಾಸ ಮಾಡಲು ಕಾಯುವ ಕೊನೆಗೆ ಎಲ್ಲವನ್ನು ಮರೆಯುವ ಬದಲು
ತಕ್ಷಣ ನಾನು ಏನು ಹೇಳಿದೆ ಎನ್ನುವುದನ್ನು ಮನದಲ್ಲಿಯೇ ಆಲೋಚನೆ ಮಾಡಿ ಅಭ್ಯಾಸ ಮಾಡಲು ಪ್ರಾರಂಭಿಸಿ.
ನೀವು ರಸ್ತೆಯ ಮೇಲೆ ನಡೆಯುವಾಗ, ಪ್ರಕೃತಿಯನ್ನು ಬೈಯುವುದನ್ನು... ತಪ್ಪಿಸುವುದು ಅಥವಾ ನಿಮ್ಮ ಮನೆಯ ಒಳಗಡೆ ಇರುವಾಗ ಬೈಯುವುದನ್ನು ತಪ್ಪಿಸುವುದು ಒಂದು ಸುಲಭವಾದ ಮಾರ್ಗ. ನಡೆಯುವಾಗ, ನಮ್ಮಲ್ಲಿಯೇ ಕೆಲವು ಮರಗಳ ಕಡ್ಡಿಗಳನ್ನು ಮುರಿಯುತ್ತಾ ಇರುವ ಮತ್ತು ಹೂವುಗಳನ್ನು ಕೀಳುವ ಅಭ್ಯಾಸವನ್ನು ಹೊಂದಿರುತ್ತಾರೆ. ನೀವು ತಿಳಿವಿನಿಂದಲೇ ಈ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಬೇಕು ಮತ್ತು ಈ ಪದಾರ್ಥಗಳನ್ನು ತುಂಬಾ ಅರಿವಿನಿಂದ ನೋಡಬೇಕು ಮತ್ತು ಪ್ರೀತಿಸಬೇಕು. ಪ್ರಾರಂಭದಿಂದಲೇ ಪ್ರಕೃತಿಯನ್ನು ಅಪ್ಪಿಕೊಳ್ಳಬೇಕು. ಇದು ಸಂತೋಷಪಡಲು ಮತ್ತು ಗೌರವಿಸಲು ಪ್ರಾರಂಭ ಮಾಡುವುದಕ್ಕೆ ಅಸೂಯೆ ಪಡುವ ಬದಲಾಗಿ ಇರುವ ಖಂಡಿತವಾದ ಮಾರ್ಗ.
ಇವೆಲ್ಲ ಗುರುವಿನ ಉಪದೇಶಗಳನ್ನು ಕಳೆದುಕೊಳ್ಳದೇ ಇರುವ ಮಾರ್ಗಗಳು ಆದರೆ ನೀವು ಏನು ಹೇಳುತ್ತೀರ? ನೀವು ಇಲ್ಲಿಗೆ ಬಂದು ನನ್ನ ಮಾತುಗಳನ್ನು ಕೇಳುತ್ತೀರಾ ಅಥವಾ ನನ್ನ ಪುಸ್ತಕಗಳನ್ನು ಕೊಂಡು ಓದುತ್ತೀರ, ಮತ್ತು ನನ್ನನ್ನು ಒಬ್ಬ ದೊಡ್ಡ ವಾಗ್ನಿ (ವಾಕ್ಚತುರ) ಎಂದು ಹೊಗಳಿ ಅದರ ವಿಚಾರವಾಗಿ ಮರೆತು ಬಿಡುತ್ತೀರ. ಅಥವಾ ನಿಮ್ಮ ಕೆಲವು ಸ್ನೇಹಿತರಿಗೆ ನನ್ನ ಭಾಷಣಗಳನ್ನು ಕೇಳುವಂತೆ ಬುದ್ಧಿವಾದ ಹೇಳಿ ನೀವು ಸುಮ್ಮನೆ ನಿಮ್ಮ ಹಳೆಯ ಕಾರ್ಯಕ್ರಮವನ್ನು ಮಾಡಲು ವಾಪಸ್ ಹೋಗುತ್ತೀರ. ಆಮೇಲೆ ಏನು ಮಾಡಬಹುದು? ದಯವಿಟ್ಟು ಅರ್ಥಮಾಡಿಕೊಳ್ಳಿ: ನನ್ನ ಉಪದೇಶಗಳನ್ನು ಇನ್ನೊಬ್ಬರಿಗೆ ಬೋಧನೆ ಮಾಡುವುದನ್ನು ನಾನು ಇಷ್ಟ ಪಡುವುದಿಲ್ಲ, ನೀವು ಅದನ್ನು ಅನುಸಂಧಾನ ಮಾಡಬೇಕೆಂದು ಇಷ್ಟಪಡುತ್ತೇನೆ.
ಈ ಸಣ್ಣ ಕಥೆಯನ್ನು ಕೇಳಿ:
ಒಬ್ಬ ಮನುಷ್ಯ ಆಫ್ರಿಕಕ್ಕೆ ರಜ ದಿವಸಕ್ಕೆ ಹೋದ.
ಅವನು ಅವನ ಮನೆಯ ಹಿಂದುಗಡೆ, ಒಂದು ಸಿಂಹದಿಂದ ಮುಖಾಮುಖಿಯಾದನು ಮತ್ತು ಅದು ಅವನ ಮೇಲೆ ಎಗರಿತು.
ಅವನು ತಕ್ಷಣ ಬಗ್ಗಿದನು, ಸಿಂಹವು ಹತ್ತಿರದ ಪೊದೆಯೊಳಕ್ಕೆ ನಿಂತಿತು.
ಖಚಿತ ಪರಿಹಾರಗಳು
ಮಾರನೇ ದಿನ, ಆ ಮನುಷ್ಯ ಪುನಃ ಅಡ್ಡಾಡಲು ಹೋದನು, ಆ ಸಿಂಹವು ಮತ್ತೊಂದು ಸಲ ಕಾಣಿಸಿಕೊಂಡು ಅವನ ಮೇಲೆ ಬಿದ್ದಿತು, ಆದರೆ ಪುನಃ ಅವನು ಬಾಗಿದನು, ಅದು ಇನ್ನು ದೂರ ಪೊದೆಯೊಳಗೆ ಬಿದ್ದಿತು.
ಮಾರನೇ ದಿನ, ಆ ಮನುಷ್ಯನು ಅವನ ಮನೆ ಒಳಗಡೆ ನಿಂತು, ಹೊರಗಡೆ ಸಿಂಹವು ಎಲ್ಲಾದರೂ ಕಾಣುತ್ತದೆಯೆ ಎಂದು ನೋಡಿದನು. ಒಂದು ಪೊದೆಯ ಹಿಂದುಗಡೆ ಅವನು ಆ ಸಿಂಹವನ್ನು ಕಂಡು ಹಿಡಿದನು. ಅವನ ಆಶ್ಚರ್ಯಕ್ಕೆ ಆ ಸಿಂಹವು ತಗ್ಗಾದ ನೆಗೆತವನ್ನು ಅಭ್ಯಾಸ ಮಾಡುತ್ತಿದ್ದಿತು. ನೋಡಿ, ನೀವು ಯಾವಾಗ ನಿಮ್ಮ ಬುದ್ಧಿಯನ್ನು ನೀವು ಹೊಂದಿರುವಾಷ್ಟು, ಬಳಕೆ ಮಾಡುತ್ತೀರೋ ಆಗ ನಿಮ್ಮ ಜೀವನದಲ್ಲಿ ನೀವು ಬೆಳೆಯಬಹುದು. ನೀವು ಸುಮ್ಮನೆ ಬುದ್ಧಿಯನ್ನು ಕೂಡಿಸಿಕೊಳ್ಳುತ್ತಿರುತ್ತೀರೋ, ಅದು ಏನೂ ಪ್ರಯೋಜನವಿಲ್ಲ. ನೀವು ಸುಮ್ಮನೆ ಬುದ್ಧಿಯನ್ನು (ಜ್ಞಾನವನ್ನು) ಕೂಡಿ ಹಾಕಿಕೊಳ್ಳುತ್ತೀರೋ ನಿಮ್ಮ ಜ್ಞಾಪಕಶಕ್ತಿ ಬೆಳೆಯುತ್ತದೆ, ನಿಮ್ಮ ಅಸ್ತಿತ್ವವಲ್ಲ.
ಎಲ್ಲ ಸಂಪಾದಿಸಿದ ಜ್ಞಾನ ನಿಮ್ಮ ಅಂತರ್ ಬೆಳವಣಿಗೆಗೆ apply ಆಗಬೇಕು. ಇಲ್ಲದಿದ್ದರೆ ನೀವು ಒಂದು ನಡೆದಾಡುವ ಪುಸ್ತಕ ಸಂಗ್ರಹಣಾಗುತ್ತೀರ. ನಾನು ತುಂಬಾ (voraciously) ಓದುವ ಜನಗಳನ್ನು ನೋಡಿದ್ದೇನೆ, ಮತ್ತು ಬೇರೆ ಬೇರೆ ತರಹ ಜನಗಳ ಭಾಷಣಗಳನ್ನು ತತ್ವ ಶಾಸ್ತ್ರದ ಮೇಲೆ ಮಾಡುವುದನ್ನು ಮತ್ತು ಅದರ ಮೇಲೆ ತಡೆ ಇಲ್ಲದೆ ಮಾತಾಡುವುದನ್ನು ಓದಿದ್ದೇನೆ. ಅದು ಕಾರ್ಯಗತವಾಗಲು ಬಂದಾಗ, ಅವರು ಪೂರ್ತಿಯಾಗಿ ಏನೂ ಇಲ್ಲದವರಂತೆ ಹಿಂದೆ ಬೀಳುತ್ತಾರೆ. ಅವರು ಸುಮ್ಮನೆ ಬೇರೆ ಜನಗಳ ಉಲ್ಲೇಖನಕ್ಕೆ ಪುಸ್ತಕಗಳಾಗುತ್ತಾರೆ. ಅವರು ಓದುತ್ತಾರೆ ಆದರೆ ಅದನ್ನು ಪೂರ್ತಿಯಾಗಿ ಜೀರ್ಣಿಸಿಕೊಳ್ಳುವುದಿಲ್ಲ ಅವರು ಸುಮ್ಮನೆ ಇನ್ನೊಬ್ಬರ ಮೇಲೆ ವಾಂತಿ ಮಾಡುತ್ತಾರೆ. ಇದರಿಂದ ಏನು ಪ್ರಯೋಜನ?
ನೀವು ಅರಿವಿನಿಂದ ನಿಮ್ಮಷ್ಟಕ್ಕೆ ಬೆಳೆದರೆ, ನೀವು ನಿಮಗೆ ಮತ್ತು ಮಿಕ್ಕವರಿಗೆ ಸಹಾಯ ಮಾಡಬಹುದು. ನಿಮಗೆ ಅನುಭವಯುಕ್ತವಾದ ತಿಳುವಳಿಕೆಯ ಅಗತ್ಯವಿದೆ. ನೀವು ಹೊರಪ್ರಪಂಚದ ಪ್ರಯೋಜನಕ್ಕಾಗಿ ಏನು ಕೇಳುತ್ತೀರೋ ಅದನ್ನು ಅನ್ವಯಿಸುವುದಕ್ಕೋಸ್ಕರ ಈ ಬೀಗದ ಕೈ ಇಲ್ಲಿಲ್ಲ, ಏನು ಕೇಳುತ್ತೀರೋ ಅದನ್ನು ಹೆಚ್ಚು ಅರಿವಿನಿಂದ ನಿಮ್ಮಷ್ಟಕ್ಕೆ ತಿಳಿದು ಅನ್ವಯಿಸಿಕೊಂಡು, ಈ ಹೊರ ಜಗತ್ತು ಒಂದು ಮಾಯೆ ಮತ್ತು ಎಲ್ಲವೂ ನೀವು ಸಾಧಿಸಬೇಕಾದ್ದು ನಿಮ್ಮಲ್ಲಿಯೇ ಇದೆ ಎಂಬ ತಿಳುವಳಿಕೆ ಬರಬೇಕು. ನೀವು ಹೊರ ಜಗತ್ತಿನಲ್ಲಿ ತಲುಪಿದ ಮೈಲುಗಲ್ಲುಗಳು ಪ್ರಾಮಾಣಿಕವಾಗಿ ಈ ಎಲ್ಲ ಕಾರ್ಯಗಳಲ್ಲಿ ಒಂದು ಘಟನೆ ಆಗುತ್ತದೆ.
ನೀವು ಯಾವಾಗ ಗುರುವಿನ ಮಾತನ್ನು ಆಲಿಸುತ್ತೀರೋ, ಸುಮ್ಮನೆ ಹೀರಿಕೊಳ್ಳಿ ಮತ್ತು ಗ್ರಹಿಸಿಕೊಳ್ಳಿ. ಗುರುವು ಸತ್ಯವನ್ನು ಮಾತ್ರ ಮಾತಾಡುತ್ತಾನೆ.
ಇದು ಈ ತರಹ ಇದೆ: ಅಲ್ಲಿ ಒಂದು ದಟ್ಟವಾದ ಕಾಡು ಇದೆ, ನೀವು ಅದನ್ನು ಒಂದು ಸಣ್ಣ ದೀಪದಿಂದ ಶೋಧಿಸುವುದಕ್ಕೆ ಪ್ರಯತ್ನ ಪಡುತ್ತಿದ್ದೀಯ ಇದೇ ನಿನ್ನ ಮನಸ್ಸು. ಆ ಸಣ್ಣ (ಪುಟ್ಟ) ದೀಪದ ಬೆಳಕಿನಿಂದ, ನೀವು ಕೆಲವು ಅಡಿಗಳಷ್ಟು ದೂರ ನೋಡುತ್ತೀರ ಮತ್ತು ನೀವು ನೋಡಿರುವುದನ್ನೇ ಸತ್ಯವೆಂದು ತಿಳಿಯುತ್ತೀಯ.
ಇದನ್ನೇ ವಿಜ್ಞಾನಿಗಳು ಮಾಡುವುದು.
ಅವರು ಕೆಲವು ಅಡಿಗಳಷ್ಟು ದೂರ ಮುಂದು ನೋಡುತ್ತಾರೆ, ಮತ್ತು ಒಂದು ಕಲ್ಪನೆಯಿಂದ (theory) ಹೊರ ಬರುತ್ತಾರೆ.
ಆಮೇಲೆ ಕೆಲವು ದಿವಸಗಳ ಮೇಲೆ, ಅವರು ಇನ್ನು ಸ್ವಲ್ಪ ಅಡಿ ಮುಂದಕ್ಕೆ ಹೋಗಿ ಆ ದೀಪದ ಸಹಾಯದಿಂದ ಇನ್ನು ಸ್ವಲ್ಪ ಅಡಿ ದೂರ ನೋಡುತ್ತಾರೆ, ಮತ್ತು ಇನ್ನು ಸ್ವಲ್ಪ ಜಾಸ್ತಿ ನೋಡಿರುತ್ತಾರೆ. ಆಮೇಲೆ ಅವರು ನೆನ್ನೆ ನೋಡಿರುವ ಸತ್ಯವನ್ನೇ ನಿರಾಕರಿಸಿ, ಅದನ್ನು ಪ್ರಕಟಿಸಿ, ಬೇರೆ ಹೊಸ ನಿಜಾಂಶವನ್ನು ತರುತ್ತಾರೆ.
ಸ್ಪಷ್ಟವಾಗಿ ತಿಳಿದುಕೊಳ್ಳಿ: ನೆನ್ನೆ ಇದ್ದ ನಿಜಾಂಶ ಇವತ್ತು ಸುಳ್ಳಾಗಿದೆ, ಆದರೆ ಅದು ನೆನ್ನೆಯೂ ನಿಜವಾದ ಅಂಶವೇ ಆಗಿದ್ದಿರಬೇಕು.
ಹೇಗೋ ಈ ರೀತಿ ದಟ್ಟವಾದ ಅರಣ್ಯವನ್ನು ಅವರ ಮನಸ್ಸಿನಿಂದ ಶೋಧಿಸಲು ಪ್ರಯತ್ನ ಪಡುತ್ತಿದ್ದಾರೆ.
ಆದರೆ ಈಗ ಒಂದು ದೀಪದ ಪ್ರಕಾಶವು ಇದೆ ಎಂದು ಕಲ್ಪನೆ ಮಾಡಿಕೊಳ್ಳಿ, ಆ ಎಲ್ಲ ಅರಣ್ಯವೂ ಆ ಒಂಟಿ ಪ್ರಕಾಶದಿಂದ ಕಾಣುತ್ತದೆ (ಗೋಚರವಾಗುತ್ತದೆ)
ಆಮೇಲೆ ನೀವು ಆ ಪೂರ್ತಿ ಅರಣ್ಯವನ್ನೇ ತಿಳಿದುಕೊಂಡು, ಆ ವಿಚಾರವಾಗಿ ಸಮಾಚಾರಗಳನ್ನು ಬೇಕಾದಾಗ ಸ್ಪಷ್ಟಪಡಿಸುತ್ತಾ ಇರಬಹುದು.
ಇದೇ ಜ್ಞಾನೋದಯದ ಮೇಲೆ ಇರುವ ಎಲ್ಲ ವಿಚಾರ! ಒಂದು ಒಂಟಿ ದೀಪದಿಂದ (ಮಿಂಚಿನಿಂದ) ಪೂರ್ತಿ ಕಾನನವನ್ನು ನೋಡುತ್ತಿರುವುದು.
ಒಂದು ಸಲ ಇದು ಆದ ಮೇಲೆ, ನೀವು ಸರಳತೆಯಿಂದ ತಿಳಿದುಕೊಳ್ಳಿ.
ಆದ್ದರಿಂದಲೇ, ಒಬ್ಬ ಗುರುವಿಗೆ ಯಾವುದು ಸತ್ಯವಾಗಿತ್ತೋ, ಅದೇ ಇನ್ನೊಬ್ಬ ಗುರುವಿಗೂ ಸತ್ಯವಾಗಿಯೇ ಇರುತ್ತದೆ. ಅವರ ಅನುಭವಗಳು ಬದಲಾಗಬಹುದು. ಆದರೆ ಅವರ ಅನುಭವದ ಅಂತಿಮ ಗುರಿ ಒಂದೇ ಆಗಿರುತ್ತೆ. ಒಂದು ವೇಳೆ ಅನುಭವದಿಂದ ನೀವು ತಿಳಿದಿರಬಹುದು, ಅಥವಾ ತಿಳಿಯದೇ ಇರಬಹುದು. ನೀವು ನಿಮ್ಮ ಬುದ್ಧಿಶಕ್ತಿಯಿಂದ ಯಾವಾಗ ಉತ್ತರ ಕೊಡಲು ಪ್ರಯತ್ನಿಸುತ್ತೀರೋ, ಆಗ ನೀವು ತತ್ವವನ್ನು ಸೃಷ್ಟಿಸುತ್ತೀರ. ಆದ್ದರಿಂದ ತತ್ವವಾದಿಗಳಾಗಬೇಡಿ. ನಿಮ್ಮ ತಿಳುವಳಿಕೆಯನ್ನು ಅನುಭವಕ್ಕೆ ತಿರುಗಿಸಲು ಪ್ರಯತ್ನಿಸಿ.
ಇಂಡಿಯಾದ ತುಂಬಾ ಹಿಂದುಳಿದ ಹಳ್ಳಿಗಳಲ್ಲಿ, ಕೆಲವು ಚಹಾದ ಅಂಗಡಿಗಳಲ್ಲಿ ನೀವು ಒಂದು ತಿಳಿದಿರುವ ದೃಶ್ಯವನ್ನು ನೋಡಬಹುದು. ಆ ಅಂಗಡಿಗೆ ಒಂದು ವರ್ಗದ ಭೇಟಿ ಕೊಡುವವರು ನಿತ್ಯವೂ ಬರುತ್ತಿರುತ್ತಾರೆ. ಅವರು ಪ್ರಪಂಚದಲ್ಲಿರುವ ಎಲ್ಲ ದೊಡ್ಡ ತತ್ವ ವಾದಿಗಳ ವಿಚಾರಗಳನ್ನೆಲ್ಲ ಚರ್ಚೆ ಮಾಡುತ್ತಿರುತ್ತಾರೆ. ಎಲ್ಲ ದೊಡ್ಡ (ಪ್ರಸಿದ್ಧವಾದ) ದೇವರ ಕಲೆಗಳನ್ನೆಲ್ಲ, ಗುರುಗಳ ಮತ್ತು ರಾಜಕಾರಣಿಗಳನ್ನೆಲ್ಲ ಚೆನ್ನಾಗಿ ಅಗಿದು ಮತ್ತು ಜೀರ್ಣಿಸಿಕೊಂಡಿರುತ್ತಾರೆ.
ಪಟ್ಟಣಗಳಲ್ಲಿ ನಡೆಯುವ ಕ್ರೂರತ್ವ (ದೌರ್ಜನ್ಯ) ಗಳನ್ನೆಲ್ಲ ಒಂದೂ ಬಿಡದೆ ಚರ್ಚಿಸುತ್ತಾರೆ. ಪೂರ್ತಿ ಎಲ್ಲ ಪ್ರಪಂಚವೂ, ನೆಮ್ಮದಿ ಮತ್ತು ಶಿಸ್ತಿನ ಕೊರತೆಯ ವಿಮರ್ಶೆಯೊಳಗೆ ತಂದು ಹಾಕಲ್ಪಡುತ್ತದೆ. ಕೊನೆಯದಾಗಿ, ಈ ಎಲ್ಲ ವಿಚಾರವನ್ನು ಮಾತನಾಡಿದ ಮನುಷ್ಯ ಚಹವನ್ನು ಪೂರ್ತಿ ಕುಡಿದು, ಆ ದುಡ್ಡನ್ನು ಮಾರನೇ ದಿನ ಕೊಡುವುದಾಗಿ ಹೇಳಿ ಹೊರಡುತ್ತಾನೆ.
ಚಹ ಕುಡಿದ ದುಡ್ಡನ್ನು ಸಹ ಕೊಡದೆ, ಚಹ ಅಂಗಡಿಯ ಬೆಂಚಿನ ಮೇಲೆ ಕುಳಿತು ಸಮಾಚಾರ ಪತ್ರಿಕೆಯ ಮೊದಲನೇ ಪುಟದಿಂದ ಹಿಡಿದು ಕೊನೆ ಪುಟದವರೆಗೂ ಓದಿ, ಎಲ್ಲ ಸಮಾಚಾರಗಳ ಮೇಲೂ ತೀರ್ಪನ್ನು ಕೊಟ್ಟು ಹೋಗುತ್ತಾನೆ. ಆ ಪತ್ರಿಕೆಯ ಸಂಪಾದಕ ಕೂಡ ಆ ಪತ್ರಿಕೆಯನ್ನು ಅಷ್ಟು ಪೂರ್ತಿ ಓದಿರಲಾರ.
ಆ ಚಹ ಅಂಗಡಿಯಲ್ಲಿ ಈ ಜನಗಳು ಕಳೆದ ವೇಳೆಯಲ್ಲಿ ಆ ಅಂಗಡಿಯ ಬೆಂಚುಗಳಿಗೂ ಕೂಡ (ತಗ್ಗು) ಕೊರತೆಯು ಉಂಟಾಗುತ್ತದೆ! ಆ ಜನಗಳು ಈ ಮಾದರಿಯಲ್ಲಿ ಅವರ ವೇಳೆಯನ್ನು ಕಳೆಯುತ್ತಾರೆ. ಅವರು ಒಂದು ಘಳಿಗೆಯನ್ನು ಏನನ್ನಾದರೂ ಸಾಧಿಸಲು ಕಳೆಯುವುದಕ್ಕೆ ಪ್ರಯತ್ನ ಪಡುವುದಿಲ್ಲ.
ಆದ್ದರಿಂದ, ಕೊನೆಪಕ್ಷ ಇದನ್ನು ನೀವು ಮಾಡಿ ನಾನು ಏನು ಹೇಳುತ್ತಿದ್ದೇನೆ ಎನ್ನುವುದನ್ನು ಅಂತರಂಗದಲ್ಲಿ ಯೋಚನೆ ಮಾಡಿ ಅದರ ಹಿಂದೆ ಇರುವ ಸತ್ಯವನ್ನು ಅನುಭವಿಸಲು ಪ್ರಾರಂಭ ಮಾಡಿ. ಪತಂಜಲಿ ಹೀಗೆ ಹೇಳುತ್ತಾನೆ: ನೀವು 5 ಅಂಗುಲ ಇವತ್ತು ಬಗ್ಗಿದರೆ, ನಾಳೆ ಇನ್ನು 1/2 ಇಂಚು ಬಗ್ಗಲು ಪ್ರಯತ್ನ ಪಡು. ಈ ತರಹ ನೀವು ಒಂದೇ ಸಮ ನಾನು ಕೊಡುತ್ತಿರುವ ಸತ್ಯವನ್ನು ಅನುಭವಿಸಿ ಕಡೆಗೆ ಕೆಲಸ ಮಾಡಿ. ಇಲ್ಲದಿದ್ದರೆ ಚಹ ಅಂಗಡಿಯ ಜನಗಳಿಗಿಂತ ಮೇಲಾಗುವುದಿಲ್ಲ. ಅವುಗಳು ಬೆಂಚಿನಲ್ಲಿ ತಗ್ಗನ್ನು ಚಹ ಅಂಗಡಿಯಲ್ಲಿ ಉಂಟುಮಾಡಿದರು, ನೀವು ಈ ಜಮಖಾನದ ಮೇಲೆ (ಚಾಪೆಯ) ರಂಧ್ರಗಳನ್ನು ಉಂಟುಮಾಡುತ್ತೀರ ಅಷ್ಟೆ! ಸಮಸ್ಯೆಯು ಏನೆಂದರೆ, ತುಂಬಾ ಸಲ, ನಾವು ಯಾವಾಗ ಬುದ್ಧಿಯುತವಾದ ಮಾತುಗಳನ್ನು ಕೇಳುತ್ತೇವೆಯೊ, ಆಗ ಇದು ನಿಜವಾಗಿ ನಮ್ಮ ಸ್ನೇಹಿತ ಅಥವಾ ಸಂಬಂಧಿ ಯಾರು ಈ ಪ್ರವಚನವನ್ನು ಕೇಳುತ್ತಿದ್ದಾರೊ ಅವರಿಗೆ ಅನ್ವಯಿಸುತ್ತದೆ. ಎಂದು ಅಂದುಕೊಳ್ಳುತ್ತೇವೆ.
ನಾವು ಅವರಿಗೆ ಅದನ್ನು ಅನ್ವಯಿಸಿ, ಗುಟ್ಟಾಗಿ ಆ ಸಮಾಚಾರ ಅವರಿಗೆ ಕೆಲವದೆ ಎಂದು ಆಶಿಸುತ್ತೇವೆ. ಇದನ್ನು ನೀವು ಮನಸ್ಸಿನಲ್ಲಿ ಈ ಸಮಾಚಾರವನ್ನು ಕಳೆದುಕೊಳ್ಳುತ್ತೀರ ಅಷ್ಟೆ! ನಾನು ಹೇಳುವುದೇನೆಂದರೆ, ನಾನು ಮಾತಾಡುವಾಗ, ನಾನು ನಿಮ್ಮ ಹತ್ತಿರ ಮಾತಾಡುತ್ತಿರುತ್ತೇನೆ. ಈ ಸಭಾಂಗಣದಲ್ಲಿ (hall) ಸಾವಿರಾರು ಜನರು ಇದ್ದರೂ, ನಿಮ್ಮ ಹತ್ತಿರ ಮಾತಾಡುತ್ತಿರುತ್ತೇನೆ. ದಯವಿಟ್ಟು ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಪ್ರತಿಯೊಂದು ನನ್ನ ಪದವೂ ಶಕ್ತಿಯಿಂದ ಗರ್ಭಿತವಾಗಿ ಅದು ನಿಮಗೋಸ್ಕರ ಇದೆ. ಆದ್ದರಿಂದ ದಯವಿಟ್ಟು ನಿಮ್ಮ ಮನಸ್ಸಿನಲ್ಲಿ ಉಂಟಾಗುವ ಆ ತರಹ ಆಲೋಚನೆಗಳನ್ನು ಕೇಳಬೇಡಿ. ಮುಖ್ಯವಾಗಿ ಯಾವಾಗ ಗಂಡ ಮತ್ತು ಹೆಂಡತಿ ಈ ಪ್ರವಚನಗಳನ್ನು ಕೇಳಲು ಬಂದಾಗ, ನಾನು ಅವರ ಸ್ವಂತ ವಿಚಾರಕ್ಕೆ ಅನ್ವಯಿಸುವಂತಹ ಕೆಲವು ವಿಚಾರಗಳನ್ನು ಹೇಳಿದರೆ, ಗಂಡನು, ಅವಳು ಇದನ್ನು ಕೇಳಬೇಕು ಎಂತಲೂ ಮತ್ತು ಹೆಂಡತಿಯು ತನ್ನ ಗಂಡನು ಇದನ್ನು ಕೇಳಬೇಕಾಗಿತ್ತು ಎಂದೂ ಯೋಚಿಸಿರುತ್ತಾರೆ. ಕೊನೆಯಲ್ಲಿ ಇಬ್ಬರೂ ಎಲ್ಲವನ್ನು ಕಳೆದುಕೊಳ್ಳುತ್ತಾರೆ.
ಮನುಷ್ಯನ ಸ್ವಭಾವ ಸಿದ್ಧವಾದ ಗುಣ, ಹಣವನ್ನು ಕೂಡಿಡುವುದು ಮತ್ತು ಭೌತಿಕವಾದ ಪದಾರ್ಥಗಳನ್ನು ಕೂಡಿಡುವುದು. ಕಾಲಕ್ರಮೇಣ, ಹಣವು ತರದೇ
ಇರುವಂತಹ ಸಂಗತಿಗಳು ಇವೆ ಎಂಬ ಅರಿವು ಬರುತ್ತದೆ. ಅವನು ಹಣ ಸಂಪಾದನೆ ಮಾಡಬೇಕೆನ್ನುವ ನಡೆ ಯಾಂತ್ರಿಕವಾಗಿ ಕಮ್ಮಿಯಾಗುತ್ತದೆ. ಆಮೇಲೆ ಅವನು ಬುದ್ಧಿಮತ್ತೆಯಾದ ಜ್ಞಾನವನ್ನು ಅಥವಾ ಪದಗಳನ್ನು ಕೂಡಿ ಹಾಕುವುದನ್ನು ಪ್ರಾರಂಭ ಮಾಡುತ್ತಾನೆ. ಈ ಕ್ರಮವು ಹೇಗೂ ನಿಲ್ಲುವುದಿಲ್ಲ. ಅವನು ಹೆಚ್ಚು ಹೆಚ್ಚು ಪದಗಳನ್ನು ಸಂಗ್ರಹಿಸುವುದರಲ್ಲಿ ದುರಾಸೆ ಉಳ್ಳವನಾಗುತ್ತಾನೆ.
ಯಾವನು ಹಣ ಮತ್ತು ಪದಗಳನ್ನು ಸಂಗ್ರಹಿಸುವುದನ್ನು ನಿಲ್ಲಿಸುತ್ತಾನೊ, ಅವನು ನಿಜವಾದ ಜ್ಞಾನವನ್ನು ಹುಡುಕಲು ಪ್ರಾರಂಭ ಮಾಡುತ್ತಾನೆ. ಕೆಲವು ಸಲ ನಾವು ಪ್ರಶ್ನೆಗಳನ್ನು ನಾವು ನಿಜವಾಗಿ ಉತ್ತರವನ್ನು ತಿಳಿದುಕೊಳ್ಳಲು ಕೇಳುವುದಿಲ್ಲ ಆದರೆ ಸುಮ್ಮನೆ ಪದಗಳನ್ನು ತಿಳಿದುಕೊಳ್ಳಲು ನಾವು ದುರಾಶೆಯಿಂದ ಇರುತ್ತೇವೆ. ಅಥವಾ ನಾವು ಸ್ವಲ್ಪ ತಿಳಿದುಕೊಂಡಿದ್ದೇವೆ ಎಂದು ತೋರಿಸಲು ಇಷ್ಟ ಪಡುತ್ತೇವೆ.
ನೀವು ಅದರಲ್ಲಿ ಆಳವಾಗಿ ನೋಡಿದರೆ, ಒಂದೇ ಒಂದು ಪ್ರಶ್ನೆ ಏಳುತ್ತದೆ ಅದು ಏನೆಂದರೆ ಹೊಸ ಕಲ್ಪನೆಯ ನಿಮ್ಮದೇ ಪ್ರಶ್ನೆ ಆದರೆ ಆ ಪ್ರಶ್ನೆ ಉತ್ತರಿಸಲ್ಪಟ್ಟರೆ ನಿಮಗೆ ಜ್ಞಾನೋದಯವಾಯಿತೆಂದು ತಿಳಿಯಿರಿ.
ಒಬ್ಬ ಮನುಷ್ಯ ನನ್ನನ್ನು ಕೇಳಿದ, ಸ್ವಾಮೀಜಿ ದೇವರು ಎಂದರೆ ಏನು?
ನಾನು ನಿಧಾನವಾಗಿ ಆ ವಿಚಾರವನ್ನೇ ಬದಲಾಯಿಸಿ, ಅವನ ಸಂಸಾರದ ವಿಷಯವನ್ನು ಮತ್ತು ವ್ಯಾಪಾರವನ್ನು ಪ್ರಶ್ನಿಸಿದೆ.
ನಾವು ಸುಮಾರು 2 ಗಂಟೆಗಳ ತನಕ ಮಾತಾಡಿದೆವು. ಆ 2 ಗಂಟೆಗಳಲ್ಲಿ, ನಾವು ಕೇಳಿದ ಮುಖ್ಯವಾದ ಪ್ರಶ್ನೆಗೆ ವಾಪಸ್ ಹೋಗಲೇ ಇಲ್ಲ.
ಕೊನೆಯಲ್ಲಿ ಅವನಿಗೆ ಹೇಳಿದೆ, ಅಯ್ಯ ನೀನು ಒಳಗೆ ಬಂದ ತಕ್ಷಣ ನನ್ನನ್ನು ಒಂದು ಪ್ರಶ್ನೆ ಕೇಳಿದೆ. ನಾನು ಅದಕ್ಕೆ ಉತ್ತರಿಸಲೇ ಇಲ್ಲ ಏಕೆಂದರೆ ಅದು ನಿನ್ನ ಒಳಗಿನಿಂದ ಆಳವಾಗಿ ಬಂದಿರುವ ಪ್ರಶ್ನೆ ಆಗಿರಲಿಲ್ಲ.
ಒಂದು ವೇಳೆ ಆ ಪ್ರಶ್ನೆ ನಮ್ಮ ಒಳಗಿನಿಂದ ಆಳವಾಗಿ ಉಂಟಾಗಿದ್ದರೆ, ನಾವು ಖಂಡಿತ ಅದನ್ನು ಮರೆಯುವುದಿಲ್ಲ ಅಥವಾ ನಾವು ಉತ್ತರದಿಂದ ತೃಪ್ತಿಯಾಗುವವರೆಗೂ ವಿಶ್ರಮಿಸುತ್ತದೆ. ಕೆಲವು ಜನ ನನ್ನನ್ನು ಒಂದು ಪ್ರಶ್ನೆ ಕೇಳುತ್ತಾರೆ, ಅವರೇ ಉತ್ತರವನ್ನು ಕೊಡುತ್ತಾರೆ, ಮತ್ತು ಆಮೇಲೆ ನನ್ನನ್ನು ಉತ್ತರ ಕೇಳುತ್ತಾರೆ! ಅವರು ಸುಮ್ಮನೆ ನನ್ನಿಂದ ಅವರಿಗೆ ಬೆಂಬಲ ಕೊಡುವ ಮಾತುಗಳನ್ನೆ ಕೂಡಿ ಹಾಕಲು ಕಾಯುತ್ತಿರುತ್ತಾರೆ.
ಪ್ರಶ್ನೆಗಳು ನಿಜವಾಗಿಯೂ ಪದಗಳನ್ನು ಕಲಿತು , ಅವುಗಳನ್ನು ಸಂಗ್ರಹಿಸಿ ಹಾಕಲು ಒಂದು ಪ್ರಯತ್ನ. ನಾವು ಒಂದು ದೊಡ್ಡ ತಿಳಿವನ್ನು ಪದಗಳನ್ನು ಕಲೆ ಹಾಕಿದಾಗ, ನಮ್ಮ ಮೇಲೆಯೇ ಹೊಂದುತ್ತೇವೆ. ಆದರೆ ದೊಡ್ಡ ನಿಜಾಂಶವನ್ನು ಆರೀತಿ ಮಾಡಿದಾಗ ತಪ್ಪಿಸಿಕೊಳ್ಳುತ್ತೇವೆ! ನಾವು ಪದಕ್ಕೆ ಮುಖ್ಯ ಸ್ಥಾನವನ್ನು ನಿಜಾಂಶಕ್ಕಿಂತ ಮೇಲಕ್ಕೆ ಕೊಡುತ್ತೇವೆ. ಇದೇ ರೀತಿ ನಾವು ಗುರುವನ್ನು ಕಂಡು ಹಿಡಿಯದೇ ಹೋಗುತ್ತೇವೆ: ಇದೇ ರೀತಿ ನಾವು ಗುರುವಿನ ಪದಗಳ ಹಿಂದೆ ಇರುವ ತಿಳುವಳಿಕೆಯನ್ನು ಅರಿಯುವುದಿಲ್ಲ.
ಜನಗಳು ನನ್ನನ್ನು ಈ ರೀತಿ ಕೇಳುತ್ತಾರೆ, ಸ್ವಾಮೀಜಿ, ನಾವು ಹೋಲಿಸಿಕೊಳ್ಳುವದನ್ನು ಮತ್ತು ಎಲ್ಲವನ್ನು ನಿಲ್ಲಿಸಿದರೆ, ಆಗ ನಾವು ಎಲ್ಲವನ್ನು ತ್ಯಾಗ ಮಾಡಿ, ಆಧ್ಯಾತ್ಮಿಕರಾಗುತ್ತೇವೆಯೆ?
ತುಂಬಾ ಜನಗಳು, ನಾನು ಹೋಲಿಸಿಕೊಳ್ಳುವುದನ್ನು ಮತ್ತು ಓದುವುದನ್ನು ನಿಲ್ಲಿಸಿ ಎಂದು ಹೇಳಿದ ಕ್ಷಣದಲ್ಲಿಯೇ ಈ ಪ್ರಪಂಚದ ಎಲ್ಲ ವಿಚಾರಗಳಿಂದ ತಪ್ಪಿಸಿಕೊಂಡು ಆಧ್ಯಾತ್ಮಿಕರಾಗಿ ಎಂದು ಹೇಳುತ್ತಿದ್ದೇನೆಂದು ಯೋಚಿಸುತ್ತಾರೆ. ಮುಖ್ಯವಾಗಿ ನಾನು ಯಾವಾಗ ಈ ವಿಶುದ್ಧಿ ಚಕ್ರದ ಮೇಲೆ ಮಾತಾಡುತ್ತಿರುತ್ತೇನೋ ಆಗ ಈ ರೀತಿ ತಿಳಿಯಲು ಪ್ರಾರಂಭಿಸುತ್ತಾರೆ.
ನೀವು ನೋಡಿ ಆಧ್ಯಾತ್ಮಿಕತೆ, ಅಥವಾ ಅದಕ್ಕೋಸ್ಕರ ಸನ್ಯಾಸತ್ವ, ಎಲ್ಲವನ್ನು ತ್ಯಜಿಸಬೇಕೆನ್ನುವ ಮೇಲೆ ಇಲ್ಲ. ಅದು ಆಳವಾದ ಅರಿವನ್ನು ಹೊಂದುವುದರಲ್ಲಿ ಇದೆ, ಯಾವುದು ಯಾಂತ್ರಿಕವಾಗಿ ಕುಗ್ಗಿ ನಿಮ್ಮ ಮನಸ್ಸಿನ ಹೆಚ್ಚು ಆಕಾಂಕ್ಷೆಗಳು, ತುಂಬಾ ಬೇಕಾದ ಅನುಕೂಲತೆಗಳು ಮತ್ತು ನಿಮಗೆ ಅವುಗಳನ್ನು ಪೂರ್ತಿ ಹೊಂದಿ, ಅಂತರಂಗಕ್ಕೆ ಹೋಗಲು ಅನುಕೂಲವಾಗುವಂತಹ ಶಕ್ತಿಯನ್ನು ಕೊಡುವುದೋ ಅದರಲ್ಲಿ ಇದೆ.
ಏನೇನು ಹೊರಗಿನ ಪ್ರಪಂಚಕ್ಕೆ ಮಾಡಬೇಕಾಗಿದೆಯೊ ಎಲ್ಲವನ್ನು ಏನೂ ಅನುಮಾನವಿಲ್ಲದೆ ಮಾಡಬೇಕು. ನೀವು ನಿಮ್ಮ ಜೀವನೋಪಾಯಕ್ಕೆ ಸಂಪಾದನೆ ಮಾಡಬೇಕು: ನೀವು ಸಂಬಂಧಪಟ್ಟ ವಿಷಯಗಳನ್ನು ಗಮನಿಸಬೇಕು; ನೀವು ನಿಮ್ಮ ಶರೀರವನ್ನು ಜೀವಂತವಾಗಿ ಇಟ್ಟುಕೊಳ್ಳಬೇಕು. ಇದನ್ನೆಲ್ಲ ನಾನು ಏಕೆ ಹೇಳುತ್ತಿದ್ದೇನೆಂದರೆ, ಎಲ್ಲಕ್ಕೂ ಅರಿವನ್ನು ತಂದುಕೊಂಡರೆ ಹೊರಗಿನ ಪ್ರಪಂಚದ ಎಲ್ಲ ಬೇಕಿಲ್ಲದೆ ಇರುವ ಕೆಲಸಗಳೂ, ಯಾಂತ್ರಿಕವಾಗಿ ಮಾಯವಾಗಿ, ನೀವು ನಿಮ್ಮ ಜನನವು ಯಾವ ಕಾರಣಕ್ಕಾಗಿ ಆಗಿದೆ ಎಂದು ಸರಿಯಾದ ತಿಳುವಳಿಕೆಯಿಂದ ಜೀವಿಸುತ್ತೀರ.
ಎಲ್ಲ ರೀತಿಯಾದ ಮಾಯೆ, ಎಲ್ಲ ಬಾಡಿಗೆಗೆ ಪಡೆದ ಆಕಾಂಕ್ಷೆಗಳು, ಎಲ್ಲ ಹುದುಗಿರುವ ಹೆದರಿಕೆಗಳು, ಎಲ್ಲ ತರಹದ ಅಸೂಯೆ ಮತ್ತು ಹೋಲಿಕೆ, ಮೋಹ ಮತ್ತು ದುರಾಸೆ ಎಲ್ಲವೂ ಪೂರ್ತಿ ರೂಪಾಂತರ ಹೊಂದಿ, ಬದಲಾಗಿ ಆಮೇಲೆ ನಿಮಗೆ ಸಂತೋಷಕರವಾದ ಶಕ್ತಿಯಾಗುತ್ತದೆ.
ಒಂದು ಸಣ್ಣ ಕಥೆ:
ಒಬ್ಬ ಗುರುವು, ಅವರ ಶಿಷ್ಯನ ಜೊತೆ ನಡೆಯುತ್ತಾ ಒಂದು ನದಿಗೆ ಬಂದರು.
ಆ ಶಿಷ್ಯನಿಗೆ ಆಶ್ಚರ್ಯವಾಗಿ, "ಗುರುವೇ ನಾವು ಈಗ ನದಿಯನ್ನು ದಾಟುತ್ತಾ ಇದ್ದೇವಾ" ಎಂದು ಕೇಳಿದನು.
ಗುರುವು ಶಾಂತವಾಗಿ "ಹೌದು ದಾಟುತ್ತಿದ್ದೇವೆ ಎಂದು ಹೇಳಿದರು. ಮತ್ತು ನಿನ್ನ ಕಾಲುಗಳು ಒದ್ದೆಯಾಗದೇ ಇರುವಂತೆ ಎಚ್ಚರವಾಗಿರು.''
ಆ ಶಿಷ್ಯನಿಗೆ ಗುರುವು ಏನು ಹೇಳುತ್ತಿದ್ದಾರೆಂದು ತಿಳಿಯಲಿಲ್ಲ! ಗುರುವು ಆಧ್ಯಾತ್ಮಿಕತೆ ಎಂದರೆ ಜೀವನ ಸಾಗರವನ್ನು ಕಾಲುಗಳನ್ನು ಒದ್ದೆ ಮಾಡಿಕೊಳ್ಳದೆ ದಾಟುವುದರ ಮೇಲೆ ಇದೆ ಎಂದು ಹೇಳಲು ಪ್ರಯತ್ನ ಪಡುತ್ತಿದ್ದರು. ಧಾರ್ಮಿಕತೆ ಪ್ರಾಪಂಚಿಕ ವಿಚಾರಗಳಿಂದ ಓಡಿ ಹೋಗುವುದರ ಮೇಲೆ ಅವಲಂಬಿಸಿಲ್ಲ, ಇದರ ಮೇಲೆ ಖಂಡಿತ ಪರಿಶುದ್ಧತೆಯಿಂದ ಇರಿ.
ಆಧ್ಯಾತ್ಮಿಕತೆ ನಿಜವಾಗಿ ಜೀವನದ ಯಂತ್ರಶಾಸ್ತ್ರ. ಕಾಲೇಜುಗಳಲ್ಲಿ ವಿಧ, ವಿಧವಾದ ನಮೂನೆಯ ಯಂತ್ರ ಶಾಸ್ತ್ರಗಳನ್ನು ಹೇಳಿಕೊಡುತ್ತಾರೆ. ಅವು ನಿಮ್ಮ ಬುದ್ಧಿವಂತಿಕೆಯ ಮೆದುಳನ್ನು ಮಾರಿ, ಅದರಿಂದ ಬರುವ ಆದಾಯದ ಸರ್ಟಿಫಿಕೇಟ್ಗಳು ಜೀವನದ ಯಂತ್ರಶಾಸ್ತ್ರ ನಮಗೆ ಪ್ರತಿಯೊಬ್ಬರಿಗೂ ಬೇಕಾಗಿರುವಂತಹ ಅವಶ್ಯಕತೆಗಳನ್ನು ಬೋಧಿಸಲು ಇದೆ. ಧಾರ್ಮಿಕತೆ, ಪರಮಹಂಸ ಅಥವಾ ಆತ್ಮ ಸಾಕ್ಷಾತ್ಕಾರ ಹೊಂದಿದವನ ಹಾಗೆ ಈ ಪ್ರಾಪಂಚಿಕ ಜಗತ್ತಿನಲ್ಲಿ ಕುತ್ತಿಗೆ ತನಕ ನೀರು ಇದ್ದರೂ ಸಹ ಅದರಿಂದ ಮುಟ್ಟದೆ ಇರುವಂತೆ ಜೀವಿಸಲು ಬೋಧಿಸುತ್ತದೆ.
ಅದು ಹೆಚ್ಚು ಮಟ್ಟದಲ್ಲಿರುವ ಮತ್ತು ಪರಿಪೂರ್ಣವಾದ ಜೀವನವನ್ನು ಇನ್ನೊಬ್ಬರನ್ನು ಬಲಾತ್ಕಾರ ಪಡಿಸದೆ, ಅವರ ಆಸ್ತಿಯನ್ನು ಭಂಗಪಡಿಸದೆ ಇರುವಂತೆ ಜೀವಿಸಲು ಬೋಧಿಸುತ್ತದೆ. ಅದು ನಿಮ್ಮನ್ನು ನಿಮ್ಮ ಬುದ್ಧಿಶಕ್ತಿಯಿಂದ ಬಿಡಿಸಿಕೊಂಡು ಚೆನ್ನಾಗಿ ತೆರೆದಿರುವಂತಹ ಮುಗ್ಧವಾದ ಕಣ್ಣಿನಿಂದ, ವಿಶ್ವಶಕ್ತಿಯಲ್ಲಿರುವ ಆಶ್ಚರ್ಯಗಳನ್ನು ಹೋಲಿಕೆ, ಅಸೂಯೆ, ದುರಾಸೆ ತರಹ ಯಾವ ಮಾಯೆಯನ್ನು ಹೊಂದದೆ ಇರುವಂತೆ ಬೋಧಿಸುತ್ತದೆ. ಅದು ವಿಶ್ವಶಕ್ತಿಯೊಂದಿಗೆ ಅನುರೂಪ ಸೇರಿಕೆಯಲ್ಲಿ ಹೋಗುವಂತೆ ಮಾಡಲು ಹೇಳಿಕೊಡುತ್ತದೆ; ನೀವು ಸಂಗತಿಗಳು ತಾವಾಗಿಯೇ ಸಂಭವಿಸುವುದನ್ನು ನಿಮ್ಮ ಒಳಗಿನ ಸಂತೋಷಕ್ಕೆ ಸರಿಯಾಗಿರುವುದನ್ನು ಕಂಡುಕೊಳ್ಳುತ್ತೀರಿ.
ಅದು ಅಸ್ತಿತ್ವಕ್ಕೆ ಯಾವಾಗಲೂ ಪ್ರಾರ್ಥಿಸಿರುವಂತೆಯೂ ಮತ್ತು ಕೃತಜ್ಞತೆಯ ಮನಸ್ಸಿನಲ್ಲಿರುವಂತೆ ಮತ್ತು ಗ್ರಹಿಸುವ ಹಾಗೆ ಇರುವಂತೆ ಬೋಧಿಸುತ್ತದೆ. ಅದು ಯಾವಾಗಲೂ ಪ್ರತಿ ಒಂದು ಕ್ಷಣವೂ ನಿಮ್ಮ ಒಳಗಿನ ಹೃದಯದಿಂದ, ಸಂತೋಷಪಡಲು ಬೋಧಿಸುತ್ತದೆ, ನಿಮ್ಮ ಹೊರಗಿನಿಂದ ನೇತಾಡುವ ಬದಲು ಮತ್ತು ಉದ್ವೇಗದ ಜೊತೆಯಲ್ಲಿರುವ ಬದಲು ಒಳಗಿನ ಹೃದಯವು ಅನುಭವಿಸಲು ಬೋಧಿಸುತ್ತದೆ. ಅದು ನಿಮ್ಮ ಜೀವನವನ್ನು ಪ್ರತಿಯೊಂದು ಕ್ಷಣವೂ ಸಂತೋಷವಾಗಿ ಆಚರಿಸಲು ಬೇರೆ ಕಾರಣಗಳನ್ನು ನೋಡುತ್ತಿರುವ ಬದಲು ಆವಾಗಲೇ ಆಚರಿಸಲು ಬೋಧಿಸುತ್ತದೆ.
ಅದು ನಿಮ್ಮ ಒಳಗಿನ ಬುದ್ಧಿಶಕ್ತಿಯನ್ನು ಪ್ರಜ್ವಲಿಸುತ್ತದೆ ಮತ್ತು ಹೊರಗಿನ ಪ್ರಾಪಂಚಿಕ ವಿದ್ಯಮಾನಕ್ಕೆ ಅಭಿನಯಿಸಲು ಉತ್ತೇಜಿಸುತ್ತದೆ. ಅದು ನಿಮ್ಮ ಅರಿವನ್ನು ಜಾಗೃತಗೊಳಿಸಿ ನಿಮ್ಮನ್ನು ಇನ್ನು ಆಳವಾದ ಜ್ಞಾನಕ್ಕೆ ಕೊಂಡೊಯ್ಯುತ್ತದೆ. ಅದು ನಿಮ್ಮನ್ನು
ದುರಾಸೆಯಿಂದ ಪ್ರೀತಿಗೆ, ಚಿಂತಿಸುವುದರಿಂದ ಆಶ್ಚರ್ಯಕ್ಕೆ, ಸುಳ್ಳಿನಿಂದ ನಿಜಾಂಶಕ್ಕೆ, ನೋವಿನಿಂದ ಸಂತೋಷಕ್ಕೆ, ಅಸೂಯೆಯಿಂದ ಆಚರಣೆಗೆ (celebrate) ಕೊಂಡೊಯ್ಯುತ್ತದೆ. ಈಗ ನನಗೆ ಹೇಳಿ, ಎಲ್ಲಿಂದ ವೈರಾಗ್ಯ ಎಲ್ಲದಕ್ಕೂ ಬಂತು? ಮತ್ತು ಇನ್ನು ಒಂದು ಮುಖ್ಯ ವಿಷಯ: ಜನಗಳು ಬೇರೆ ಪ್ರತ್ಯೇಕವಾದ ಕಾಲವನ್ನು ಧಾರ್ಮಿಕತೆಗೆ ತೆಗೆದಿಡಬೇಕೆನ್ನುವ ಅವಶ್ಯಕತೆ ಇದೆಯೆಂದು ಯೋಚಿಸುತ್ತಾರೆ; ಇದು ಇಲ್ಲವೇ ಇಲ್ಲ. ನಾನು ಈಗ ತಾನೆ ಅದರ ಅವಶ್ಯಕತೆ ಇಲ್ಲವೆಂದು ಹೇಳಿರುವುದನ್ನು ನೀವು ತಿಳಿಯುತ್ತೀರ. ಆ ಜನಗಳು ಯಾರು - ಪ್ರತ್ಯೇಕವಾದ ಕಾಲ ಇದಕ್ಕೆ ಬೇಕು - ಎಂದು ಹೇಳುತ್ತಾರೋ, ಅವರು ಧಾರ್ಮಿಕ ಮನುಷ್ಯರಲ್ಲ, ಅವರು ಮತಶ್ರದ್ಧೆಯುಳ್ಳ ಮನುಷ್ಯರು.
ಮತಕ್ಕೆ ಮತಾಚರಣೆ ಮತ್ತು ಶಾಸ್ತ್ರವಿಧಿಗಳಿಂದ ಕಾಲದ ಅವಶ್ಯಕತೆ ಇದೆ. ಆಧ್ಯಾತ್ಮಿಕತೆಗೆ, ಕಾಲ ಅಥವಾ ಪ್ರಮಾಣ ಇಲ್ಲ. ಅದು ನಿಮ್ಮ ಜೀವನದ ಗುಣಗಳ ಮೇಲೆ ಅವಲಂಬಿಸಿದೆ. ನಿಮಗೆ ಸತ್ಯವನ್ನು ಹೊಂದಲು ಶುದ್ಧಭಾವವಿದ್ದರೆ ಸಾಕು. ಆಗ ನೀವು ಎಲ್ಲವನ್ನು ಶ್ರದ್ಧಾಪೂರ್ವಕವಾದ ಧ್ಯಾನದ ಹಾಗೆ ಮಾಡಲು ನಿಮ್ಮ ಎಲ್ಲ ಸಮಯವನ್ನು ನಿವೇದಿಸಿದರೆ, ಆಗ ನೀವು ನಿಮ್ಮ ಗುರಿಯನ್ನು ಹೊಂದುವಿರಿ. ನೀವು ಆಗ ಯಾಂತ್ರಿಕವಾಗಿ ಕೆಲಸದಲ್ಲಿ, ಮನೆಯಲ್ಲಿ ಮತ್ತು ಒಳಗಿನ ಸ್ವಂತ ಸಂಬಂಧದಲ್ಲಿಯೂ, ಯಾವ ಶಕ್ತಿಗೆ ಅಡ್ಡಿ ಬರುವಂತಹ ಅಸೂಯೆ ಮತ್ತು ಹೋಲಿಕೆಗಳು ಇಲ್ಲದೆ ಹೊಳೆಯುವಿರಿ.
ನೀವು ನಿಮ್ಮನ್ನು ಯಾವುದೇ ವಿಧವಾದ ಸುತ್ತು ಇರುವ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುವಿರಿ. ನೀವು ಎಲ್ಲಿಯೇ ಇರಲಿ, ಯಾವ ವಿಧವಾದ ಜನಗಳ ಜೊತೆಯಲ್ಲಿರಲಿ, ನಿಮ್ಮ ಮನೆಯಲ್ಲಿಯೇ ಇದ್ದಂತೆ ಇರುವಿರಿ. ಮನೆ ಒಂದೇ ನೀವು ಜೀವಿಸಲು ಸ್ಥಳವಾಗಿರದೆ ಎಲ್ಲ ಪ್ರಪಂಚದ ಅಸ್ತಿತ್ವವೂ ಸ್ಥಳವಾಗಿರುತ್ತದೆ. ನೀವು ನಿಮ್ಮ ಮನಸ್ಸಿನ ಮತ್ತು ದೈಹಿಕವಾದ ನಿಬಂಧನೆಗಳಿಂದ ಮುಕ್ತರಾಗಿ ಮತ್ತು ಮೇಲಕ್ಕೆ ಸೇರಿಕೊಂಡು ವಿಶ್ವಶಕ್ತಿಯಲ್ಲಿ ಒಬ್ಬರಾಗುತ್ತೀರ.
ಆದರೆ ಸಮಸ್ಯೆ ಏನೆಂದರೆ ಜನಗಳು ಶಾಸ್ತ್ರವಿಧಿಗಳನ್ನು ಅನುಸರಿಸುವುದರಲ್ಲಿ ತೃಪ್ತಿ ಹೊಂದಿದ್ದಾರೆ. ಅದರಲ್ಲಿ ಕೆಲವು ಕಾವಲುಗಳನ್ನು (security) ಅದನ್ನು ಮಾಡುವುದರಲ್ಲಿ ಸಂತೋಷಪಡುತ್ತಾರೆ. ಆ ಶಾಸ್ತ್ರವಿಧಿಗಳನ್ನು ಮಾಡುವುದರ ವೈಜ್ಞಾನಿಕವಾದದ್ದು ಅವರಿಗೆ ತಿಳಿದೇ ಇಲ್ಲ. ಆ ಶಾಸ್ತ್ರವಿಧಿಗಳು ಅವರ ಅಹಂಭಾವವನ್ನು ಈಡೇರಿಸುವುದರಲ್ಲಿ ಇದೆ. ಶಾಸ್ತ್ರವಿಧಿಗಳು ಸಂಕೀರ್ಣವಾಗಿರುತ್ತವೆ, ಸಂಕೀರ್ಣ ವಿಷಯಗಳನ್ನು ಪಾಲಿಸುವುದು ಒಂದು ಸವಾಲು ಎಂದುಕೊಳ್ಳುತ್ತವೆ. ಜನಗಳು ನನ್ನ ಹತ್ತಿರ ಬಂದು ಅವರ ಸಮಸ್ಯೆಗಳಿಗೆ ಪರಿಹಾರವನ್ನು ಕೇಳುತ್ತಾರೆ. ನಾನು ಅವುಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿಯೂ, ಸ್ವಲ್ಪ ಹೊತ್ತು ಆಲದ ಮರದ ಅಡಿಯಲ್ಲಿ ಅವರು ಆಶ್ರಮದಲ್ಲಿರುವಾಗ ಕುಳಿತುಕೊಳ್ಳುವುದಕ್ಕೆ ಸಲಹೆಯನ್ನು ಕೊಡುತ್ತೇನೆ. ಆ ಆಲದ ಮರವು ಆಶ್ರಮದಲ್ಲಿರುವ ಒಂದು ಶಕ್ತಿಯ ಪ್ರದೇಶ. ಆದರೆ ಆ ಉತ್ತರದಿಂದ ಸಂತೋಷವಾಗುವುದಿಲ್ಲ. ಅವರು ಸಮಸ್ಯೆಗಳನ್ನು ಉತ್ಕಟಡಿಸಲು ಯಾವ ಶಾಸ್ತ್ರವಿಧಿ ಮಾಡಬೇಕೆಂದು ಕೇಳುತ್ತಾರೆ.
ಆಸೂಯೆಯಿಂದ ಮುಕ್ತಿ
ನಾನು ಅವರಿಗೆ ಆಲದ ಮರವನ್ನು 108 ಸಲ ಪ್ರದಕ್ಷಿಣೆ ಮಾಡಲು ಹೇಳಿದರೆ, ಅದನ್ನು ಮಾಡಲು ಅವರಿಗೆ ತುಂಬಾ ಸಂತೋಷವಾಗುತ್ತೆ. ನೀವು ಆಲದ ಮರದ ಸುತ್ತು 108 ಸಲ ಪ್ರದಕ್ಷಿಣೆ ಮಾಡಿದರೆ, ನಿಮಗೆ ಅದು ನಿಮ್ಮ ಅಹಂಅನ್ನು ಪೂರ್ತಿಪಡಿಸಿದಂತೆ ಆಗುತ್ತದೆ. ಆಗ ನೀವು ಕಷ್ಟಪಟ್ಟು ಕೆಲಸ ಮಾಡಿದ್ದಕ್ಕೆ ನಿಮಗೆ ಅದರಿಂದ ಲಾಭ ಆಯಿತು ಎನ್ನುವ ಭಾವನೆ ಉಂಟಾಗುತ್ತದೆ. ಈ ತರಹ ನಾವು ನಮ್ಮ ಮನಸ್ಸನ್ನು ಮರಕ್ಕೆ ಮರ್ಯಾದೆ ಕೊಡುವಂತೆ ತಯಾರು ಮಾಡಿದ್ದೇವೆ.
ಮತ ಮತ್ತು ಶಾಸ್ತ್ರವಿಧಿಗಳಲ್ಲಿಯೂ, ಜನಗಳು ಒಬ್ಬರ ಮೇಲೊಬ್ಬರು, ಪೈಪೋಟಿ ಮಾಡುವುದನ್ನು ನೋಡಿದ್ದೇನೆ. ನಿಮ್ಮ ಪಕ್ಕದ ಮನೆಯವರು ಒಂದು ವಿಶೇಷತೆ ಇರುವ ದೇವಸ್ಥಾನದಲ್ಲಿ ಒಂದು ವಿಶೇಷ ಪೂಜೆಯನ್ನು ಮಾಡಿದರೆ, ನೀವು ಆಮೇಲೆ ಹೋಗಿ ಅದೇ ಪೂಜೆಯನ್ನು ಆ ದೇವಸ್ಥಾನದಲ್ಲಿ ಸಲ್ಲಿಸುತ್ತೀರಾ. ಅಲ್ಲಿ ಏಕಾಗ್ರಗೊಳಿಸುತ್ತಿರುವುದು ಯಾವುದರ ಮೇಲೆ? ಆ ದೇವರೋ ಅಥವಾ ಪಕ್ಕದ ಮನೆಯವರೋ? ನೀವು ಇದನ್ನೆಲ್ಲ ಮಾಡುತ್ತಿರುವಾಗ ನೀವು ಎಲ್ಲದರಿಂದ ತಪ್ಪಿಸಿಕೊಂಡಿರಿ.
ಜನಗಳು ಅವರು ತುಂಬ ಮುಖ್ಯವಾದ ಪ್ರಪಂಚದಲ್ಲಿರುವ ಎಲ್ಲ ಪೂಜನೀಯವಾದ ದೇವಸ್ಥಾನಗಳನ್ನು ಭೇಟಿ ಮಾಡಿರುವುದಾಗಿ ಜಂಭ ಪಡುತ್ತಾರೆ. ಅವರು ಭೇಟಿ ಮಾಡಿರುವ ದೇವಸ್ಥಾನಗಳ ಪಟ್ಟಿಯನ್ನೆಲ್ಲ ಮಾಡಿರುತ್ತಾರೆ. ತಕ್ಷಣ ಯಾರು ಈ ಕತೆಗಳನ್ನು ಕೇಳುತ್ತಾ ಇರುತ್ತಾರೋ ಅವರು ಈ ಸಾಧನೆಯನ್ನೆಲ್ಲ ಮೀರಿಸುವುದಕ್ಕೆ ಪ್ರಯತ್ನಿಸುತ್ತಾರೆ.
ಈ ಪವಿತ್ರವಾದ ದೇವಸ್ಥಾನಗಳನ್ನು ಭೇಟಿ ಮಾಡಿ ಬಂದ ಮೇಲೆ, ನಿಮ್ಮ ಅಹಂ ಇನ್ನೂ ಗಟ್ಟಿಯಾಗಿ, ನಿಮ್ಮ ವಿಶುದ್ಧಿ ಚಕ್ರ ಇನ್ನೂ ಬಂಧಿಸಲ್ಪಡುತ್ತದೆ! ಇದರ ವಿಚಾರವಾಗಿ ನೀವು ಯಾವಾಗಲಾದರೂ ಯೋಚನೆ ಮಾಡಿದ್ದೀರ. ಈ ಎಲ್ಲ ಸಂಗತಿಗಳೂ, ಕೇವಲ ನಿಮ್ಮ ಆಂತರಿಕ ಪ್ರಪಂಚದಲ್ಲಿ ಮುಂದುವರಿಯಲು, ಹೋಲಿಕೆ ಮತ್ತು ಆಸೂಯೆಯಿಂದ ಮುಕ್ತಿ ಹೊಂದಲು, ಅದೇ ತರಹ ಸಂಗತಿಗಳೂ ಆದರೆ ಇಲ್ಲಿ ಆ ಸಂಗತಿಯನ್ನೇ ಪುನಃಪುನಃ ಕಳೆದುಕೊಂಡು ಹೊರಗಿನ ಪ್ರಪಂಚದ ಸಲುವಾಗಿ ಮಾಡುತ್ತೀರ.
ನಾನು ಜನಗಳು ದೇವರ ಮುಂದೆ ಸ್ತೋತ್ರಗಳನ್ನು ಓದುವುದನ್ನು ನೋಡಿದ್ದೇನೆ, ಅವರು ಕೆಲವು ಸಾಲುಗಳನ್ನು ಓದುತ್ತಾರೆ ಮತ್ತು ಆಮೇಲೆ ಕೆಲಸ ಮಾಡುವ ಹೆಂಗಸನ್ನು
ಕರೆಯು ಅವಳಿಗೆ ಹೇಳಿದ ಕೆಲಸಗಳನ್ನು ಮಾಡಿದಳೆ, ಇಲ್ಲದಿದ್ದರೆ ಅದನ್ನು ಪೂರ್ತಿ ಮಾಡುವಂತೆ ಹೇಳುತ್ತಾರೆ ಅಥವಾ ಅವರು ಇನ್ನು ಕೆಲವು ಸಾಲುಗಳನ್ನು ಓದಿ ಇನ್ನೂ ಓದಿ ಮುಗಿಸುವುದಕ್ಕೆ ಎಷ್ಟು ಪುಟಗಳು ಬಾಕಿ ಇವೆ ಎಂದು ನೋಡುತ್ತಾರೆ! ಅವರು ದೇವರ ಹತ್ತಿರ ಯಾವ ತರಹ ಬಾಂಧವ್ಯ ಇದೆ ಮತ್ತು ದಿವಸದ ಕೊನೆಯಲ್ಲಿ ಅವರು ಸ್ತೋತ್ರಗಳನ್ನು ಓದಿದ, ಭಾವನೆಯಲ್ಲಿ ತೃಪ್ತಿ ಹೊಂದುತ್ತಾರೆ.
ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಅವರು ಆ ತರಹ ಹೇಳುವುದನ್ನು 21 ದಿವಸ ಪುನಃ ಹೇಳುತ್ತಲೇ ಇರುತ್ತಾರೆ, ಯಾಕೆಂದರೆ, ಆ ತರಹ ಮಾಡುವದಾಗಿ ಸಂಕಲ್ಪವನ್ನು ಮಾಡಿರುತ್ತಾರೆ! ಆಮೇಲೆ ಅವರ ಪಕ್ಕದ ಮನೆಯವರು ಅಥವಾ ಸಂಬಂಧಿಕರ ಹತ್ತಿರ ಜಂಭದಿಂದ ಹೋಗಿ ತಾವೂ ಆ ಕಠಿಣವಾದ ಸಂಕಲ್ಪವನ್ನು ಪೂರ್ತಿ ಮಾಡಿದ್ದಾಗಿ ಹೇಳಿಕೊಳ್ಳುತ್ತಾರೆ!
ಎಲ್ಲವೂ ನಾವು ಮಾಡುವುದು ಮುಕ್ಕಾಲು ಪಾಲು ಜನಗಳಿಗೆ ನಾವು ಹೀಗೆ ಮಾಡಿದೆವು ಎಂದು ಹೇಳಿ, ಅವರಲ್ಲಿ ಹೋಲಿಕೆಯ ಬೀಜವನ್ನು ಬಿತ್ತಲು ಮಾಡುತ್ತೇವೆ. ನೋಡಿ, ನೀವು ಶಾಸ್ತ್ರವಿಧಿಗಳನ್ನು ಮಾಡುವುದಾಗಿ ಇತ್ಯರ್ಥ ಮಾಡಿದರೆ, ಸಾಧ್ಯವಾದಷ್ಟು ಶುದ್ಧಭಾವದಿಂದ ಮಾಡಿ, ಅಸ್ತಿತ್ವಕ್ಕೆ ಆಳವಾಗಿ ತಗುಲಿಕೊಂಡು ಆ ಭಾವನೆಯಿಂದ ಮಾಡಿ. ನೀವು ಈ ತರಹ ದಾರಿಯಲ್ಲಿ ಮಾಡಿದರೆ ನೀವು ಈ ವಿಚಾರವಾಗಿ ಮಾತಾಡುವುದೇ ಇಲ್ಲ.
ನೀವು ಯಾವಾಗ ಈ ಮತಾಚರಣೆಯ ಹಾದಿಯಲ್ಲಿ ಅನುಸರಿಸಲು ಇತ್ಯರ್ಥ ಮಾಡುತ್ತೀರೋ ಆಗ ವಚನಬದ್ಧತೆ ಮತ್ತು ಶುದ್ಧಭಾವ ನಿಮ್ಮ ಯಾಜಮಾನ್ಯದ ಬೀಗದ ಕೈಗಳು ಆಗಲೇಬೇಕು. ಆದ್ದರಿಂದ ಅದನ್ನು ಅತ್ಯಂತ ಶುದ್ಧಭಾವದಿಂದ ಮಾಡಿ. ಈ ಕಾಲದಲ್ಲಿ ನೂರಾರು ಮತಾಚರಣೆಯ ಪೂಜೆಗಳ ದಾರಿಯು ಇವೆ. ನೀವು ಯಾವುದನ್ನು ಅನುಸರಿಸಬೇಕೆಂದು ಇತ್ಯರ್ಥ ಮಾಡಿಕೊಂಡು ವಚನಬದ್ಧತೆಯಿಂದ ಮಾಡಿ. ಈ ವಚನಬದ್ಧತೆ ನಿಮಗೆ ಸಹಾಯ ಮಾಡುತ್ತದೆ, ಆದರೆ ಶಾಸ್ತ್ರವಿಧಿ ಅಲ್ಲ.
ಇನ್ನು ಒಂದು ಮುಖ್ಯವಾದ ವಿಚಾರ: ತಕ್ಷಣದ ಫಲಿತಾಂಶಕ್ಕೆ ನೋಡಬೇಡಿ. ಈ ಕಾಲದಲ್ಲಿ ಎಲ್ಲರಿಗೂ ತಕ್ಷಣದ ಫಲಿತಾಂಶ ಬೇಕು, ತಕ್ಷಣದ ಕಾಫಿ (instant coffee) ಮತ್ತು ತಕ್ಷಣದ ಚಹ! ನಾವು ತುಂಬಾ ಜನ ನಮ್ಮ ಪ್ರಾರ್ಥನೆಗಿಂತ ಮೊದಲು ಮಿಕ್ಕವರ ಪ್ರಾರ್ಥನೆ ಜವಾಬು (ಫಲಿತಾಂಶ) ಬರುತ್ತೆ ಆದ್ದರಿಂದ ನಮ್ಮ
ಆಸೂಯೆಯಿಂದ ಮುಕ್ತಿ
ಪ್ರಾರ್ಥನೆಯ (ಪೂಜೆಯ) ಮಾದರಿಯಿಂದ ಬೇರೆಯವರ ಮಾದರಿಯ ಪೂಜೆಗೆ ಬದಲಾಯಿಸಿಕೊಳ್ಳಬೇಕು ಎಂದು ಅಂದುಕೊಳ್ಳುತ್ತಾರೆ. ಇದೆಲ್ಲ ಅರ್ಥವಿಲ್ಲದ ಮಾತು. ಪೂಜೆಯಲ್ಲಿ ಇಷ್ಟೊಂದು ಹೋಲಿಕೆ. ನೀವು ಏನು ಮಾಡುತ್ತೀರೋ ಅದನ್ನು ವಚನಬದ್ಧತೆಯಿಂದ ಮತ್ತು ನಂಬಿಕೆಯಿಂದ ಮಾಡಿ, ಮಿಕ್ಕದ್ದನ್ನು ತೆರೆದಂತೆ ಬಿಡಿ. ಸಂದರ್ಭಗಳು ಯಾಂತ್ರಿಕವಾಗಿ ಅದರ ಪಾಡಿಗೆ ಸಂಭವಿಸುತ್ತದೆ.
ಮತ್ತು ಶಾಸ್ತ್ರವಿಧಿ ಹಿಂದುಗಡೆ ವಿಜ್ಞಾನವಿದೆ ಎಂದು ತಿಳಿದುಕೊಂಡು ಅದನ್ನು ಅನುಸರಿಸಿ. ಆಗ ನಿಮ್ಮ ಮನಸ್ಸು ಸರಿಯಾದ ರೀತಿಯಲ್ಲಿ, ಶಾಸ್ತ್ರವಿಧಿಯಿಂದಲೇ ಕಟ್ಟಿಹಾಕಲ್ಪಡುವ ಬದಲು ಸರಿಯಾದ ರೀತಿಯಲ್ಲಿ ಏಕರಸವಾಗಿರುತ್ತದೆ (tuned). ಯಾವ ಮತದ ಅಥವಾ ಶಾಸ್ತ್ರವಿಧಿಯ ಅಂತಿಮ ಗುರಿ ವಿಶ್ವಶಕ್ತಿಯೊಂದಿಗೆ ಏಕರಸವಾಗಿರುವುದು. ನಿಜವಾಗಿಲ್ಲದ ಪದಗಳಿಂದ ಇದು ಅರ್ಥವಾಗಬೇಕು.
ಶಾಸ್ತ್ರವಿಧಿಗಳು ದೇವರಿಗೆ ಲಂಚ ಕೊಡುವ ವ್ಯವಹಾರವಲ್ಲ. ನೀವು ನಿಮ್ಮನ್ನು ಕಾಪಾಡಿಕೊಳ್ಳುವ ಬ್ಯಾಂಕಿನ ಬಾಕಿ ಅಲ್ಲ. ಅದು ಇನ್ನೊಬ್ಬರು ಎಷ್ಟು ಜಾಸ್ತಿ ಮಾಡುತ್ತಿದ್ದಾರೋ ಅಥವಾ ಇನ್ನೊಬ್ಬರು ಎಷ್ಟು ಹೊಂದಿದ್ದಾರೆ ಎಂದು ಪಂದ್ಯ ಮಾಡುವುದಕ್ಕಲ್ಲ. ಆದ್ದರಿಂದ ಹೋಲಿಸಿಕೊಳ್ಳುವುದನ್ನು ನಿಲ್ಲಿಸಿ, ನೀವು ಏನು ಮಾಡುವುದಕ್ಕೆ ಪ್ರಯತ್ನ ಪಡುತ್ತಿದ್ದೀರ ಎನ್ನುವ ಗಾಢತೆ (ತೀವ್ರತೆ)ಯನ್ನು ಅರಿತುಕೊಳ್ಳುವುದಕ್ಕೆ ಪ್ರಾರಂಭಮಾಡಿ.
ನನಗೆ ಒಂದು ಕತೆ ಜ್ಞಾಪಕಕ್ಕೆ ಬರುತ್ತದೆ.
3 ಜನ ಒಂದು ವ್ಯಾಪಾರವನ್ನು ಒಟ್ಟಿಗೆ ಮಾಡಲು ಪ್ರಾರಂಭ ಮಾಡಿದರು.
ಅವರು ದೇವರನ್ನು ಒಬ್ಬ ಪಾಲುಗಾರನಾಗಿ ಅವರ ವ್ಯಾಪಾರಕ್ಕೆ ಸೇರಿಸಿಕೊಳ್ಳಲು ಇತ್ಯರ್ಥ ಮಾಡಿದರು.
ಅವರಿಗೆ ಎಷ್ಟಾದರೂ ಲಾಭ ಬಂದರೆ ಅದರಲ್ಲಿ ದೇವರಿಗೂ ಒಂದು ಪರ್ಸೆಂಟ್ (1%) ಲಾಭವನ್ನು ಕೊಡಲು ಒಪ್ಪಿಕೊಂಡರು.
ಅವರು ವ್ಯಾಪಾರವನ್ನು ಪ್ರಾರಂಭ ಮಾಡಿದರು ಮತ್ತು ಅವರು ಊಹಿಸಿದ್ದಕ್ಕಿಂತ ಹೆಚ್ಚಾಗಿ ಲಾಭವನ್ನು ಪಡೆದರು.
ಆಮೇಲೆ ಸಮಸ್ಯೆ ಉದ್ಭವವಾಯಿತು! ಹೇಗೆ ಅಷ್ಟೊಂದು ದೇವರಿಗೆ ಕೊಟ್ಟು ಬಿಡುವುದು? ಒಬ್ಬೊಬ್ಬರೂ ಒಂದೊಂದು ಸಲಹೆ ಕೊಟ್ಟರು.
ಖಚಿತ ಪರಿಹಾರಗಳು
ಮೊದಲನೇ ಮನುಷ್ಯ ಹೀಗೆ ಹೇಳಿದ, “ಆಯಿತು ನಾವು ಒಂದು ವೃತ್ತವನ್ನು ಬರೆದು ಅದರಲ್ಲಿ ಎಲ್ಲ ಹಣವನ್ನು ಎಸೆಯೋಣ. ಒಳಗಡೆ ವೃತ್ತದಲ್ಲಿ ಎಷ್ಟೆಷ್ಟು ಬೀಳುತ್ತೋ ಅಷ್ಟು ದೇವರಿಗೆ ಸೇರಿದ್ದು ಮತ್ತು ಮಿಕ್ಕಿದ್ದು ಹೊರಗಡೆ ಬೀಳುವುದು ನಮ್ಮದು”. ಎರಡನೇ ಮನುಷ್ಯ ಹೇಳಿದ, “ಬೇಡ, ನಾನು ನಿಮಗೆ ಉತ್ತಮವಾದ ಸಲಹೆಯನ್ನು ಕೊಡುತ್ತೇನೆ. ನಾವು ನಿಜವಾಗಿಯೂ ದೊಡ್ಡ ವೃತ್ತವನ್ನು ಬರೆಯೋಣ ಮತ್ತು ಅದರಲ್ಲಿ ಎಲ್ಲ ಹಣವನ್ನು ಎಸೆಯೋಣ. ಎಷ್ಟು ಒಳಗಡೆ ಬೀಳುತ್ತೋ ಅದು ನಮ್ಮದು ಮತ್ತು ಹೊರಗಡೆ ಎಷ್ಟು ಬೀಳುತ್ತೋ ಅದು ದೇವರದು”.
ಮೂರನೇ ಮನುಷ್ಯ ಹೇಳಿದ, 'ನೋಡಿ, ನಾನು ಹೇಳುವುದನ್ನು ಕೇಳಿ. ಹೇಗೂ ದೇವರು ನಮಗಿಂತ ಮೇಲೆ ಇದ್ದಾನೆ. ನಾವು ಎಲ್ಲ ಹಣವನ್ನು ಮೇಲೆ ಎಸೆಯೋಣ. ಅವನಿಗೆ ಎಷ್ಟು ಬೇಕಾಗಿದೆಯೋ, ಅವನು ತೆಗೆದುಕೊಳ್ಳಲಿ, ಕೆಳಕ್ಕೆ ಎಷ್ಟು ಬರುತ್ತೋ ಅದು ನಮ್ಮದು!”
(ಜೋರು ನಗೆ!)
ಎಲ್ಲಿಯವರೆಗೆ ನಮಗೆ ಏನಾದರೂ ಸ್ವಲ್ಪ ಬೇಕಾಗಿದೆಯೋ, ಅದಕ್ಕೆ ನಾವು ದೇವರಿಗೆ ಲಂಚ ಕೊಡುತ್ತೇವೆ. ನಾವು ಅದನ್ನು ಪಡೆದ ಮೇಲೆ, ನಮಗೆ ಮುಂದಿನ ಆಸೆ ಬರುವವರೆಗೂ ಅವನನ್ನು ಬಿಟ್ಟುಬಿಡುತ್ತೇವೆ. ಈ ತರಹ ನಾವು ಕೆಲಸಕ್ಕೋಸ್ಕರ ಬೋಧಿಸಲ್ಪಟ್ಟಿದ್ದೇವೆ. ಹೌದು ... ನೀವು ಏನನ್ನಾದರೂ ಕೇಳಬೇಕಾ?
ಸ್ವಾಮೀಜೀ, ನಾವು ಶಾಸ್ತ್ರವಿಧಿಯ ವಿಚಾರದ ಮೇಲೆ ಮಾತಾಡುತ್ತಿರುವಾಗ, ನೀವು ದಯವಿಟ್ಟು ಶಾಸ್ತ್ರವಿಧಿಯ ಪಥದ ಮೇಲೂ ಮತ್ತು ಧ್ಯಾನದ ಪಥದ ಮೇಲೂ ಸ್ವಲ್ಪ ವಿಚಾರಗಳನ್ನು ಹೇಳುತ್ತೀರಾ?
ಆಗಲಿ...
ನೋಡಿ ಶಾಸ್ತ್ರವಿಧಿಯಲ್ಲಿ ಖಂಡಿತವಾಗಿ ಏನೋ ಒಂದು ವಿಚಾರ ಅವುಗಳ ಮೇಲೆ ಇದೆ. ಅದು ರಚನೆ ಆಗಿದೆ ಮತ್ತು ನಿಮಗೆ ಅದು ನಿಖರವಾಗಿ ಯಾವಾಗ ಪ್ರಾರಂಭವಾಗುತ್ತೆ ಎನ್ನುವುದು ತಿಳಿದಿದೆ, ಅದು ಯಾವಾಗ ಮುಗಿಯುತ್ತದೆ ಎನ್ನುವುದು, ಅದನ್ನು ಮಾಡಲು ನೀವು ಎಲ್ಲಿಗೆ ಹೋಗುತ್ತಿರುವಿರಿ ಎನ್ನುವುದು, ಯಾವುದಕ್ಕೋಸ್ಕರ ಮಾಡುತ್ತಿರುವುದು ಮುಂತಾಗಿ ಎಲ್ಲವೂ ತಿಳಿದಿರುತ್ತದೆ. ಅಲ್ಲಿ ಅಷ್ಟು ಬಿಗಿಯಾದ ಕಾವಲು ಎಲ್ಲ ಕ್ರಮದಲ್ಲೂ ಇದೆ. ಆದ್ದರಿಂದ ಅದು ಅಷ್ಟರಮಟ್ಟಿಗೆ ಆವರಿಸಿದೆ. ಯಾವುದು ಖಂಡಿತವಾಗಿದೆಯೋ ಅದು ಹರಡುತ್ತದೆ.
ಆದರೆ ಧ್ಯಾನದಲ್ಲಿ ಏನಾಗುತ್ತದೆ ಎಂದರೆ - ಮೊದಲನೆಯದಾಗಿ, ಲಾಭಗಳನ್ನು ಉಂಟುಮಾಡುವುದರಲ್ಲಿ ಧ್ಯಾನವು ಶಾಸ್ತ್ರವಿಧಿಗಿಂತ ತುಂಬಾ ಸರಳವಾದದ್ದು ಎಂದು ಕಾಣುತ್ತದೆ. ಜನಗಳು ನಾನು ಏಕೆ ಆಶ್ರಮದಲ್ಲಿ ಶಾಸ್ತ್ರವಿಧಿಗಳು ಮಾಡುತ್ತೇನೆ ಎಂದು ಕೇಳುತ್ತಾರೆ. ನಾನು ಸುಮ್ಮನೆ ಸರಳವಾಗಿ ಆಶ್ರಮಕ್ಕೆ ಬಂದು ಆಲದಮರದ ಅಡಿಯಲ್ಲಿ ಕುಳಿತುಕೊಂಡು ಧ್ಯಾನ ಮಾಡಿ ಎಂದು ಹೇಳಿದರೆ, ಅಷ್ಟೇ ಸಾಕಾ, ಅವರು ಕೇಳುತ್ತಾರೆಯೇ?
ನಾನು ದಕ್ಷಿಣಾಮೂರ್ತಿಯ ವಿಗ್ರಹವನ್ನು ಮತ್ತು ನಟರಾಜ ವಿಗ್ರಹವನ್ನು ಹೊಂದಿಲ್ಲದಿದ್ದರೆ, ಅವರುಗಳು ಆ ಮೂರ್ತಿಗಳನ್ನು ಅಲ್ಲಿ ನೋಡದಿದ್ದರೆ, ಅಲ್ಲಿ ಅವರು ಆ ಖಾಲಿಸ್ಥಳವನ್ನು ಮತ್ತು ಆಲದ ಮರವನ್ನು ನೋಡಲು ಬರುತ್ತಾರೆಯೇ? ಪ್ರಾಯಶಃ ನಾನು ಒಬ್ಬನೇ ಆಲದ ಮರದ ಅಡಿಯಲ್ಲಿ ಧ್ಯಾನ ಮಾಡುತ್ತಾ ಕುಳಿತಿರುತ್ತೇನೆ.
ಜನಗಳು ಮೊದಲನೇ ಹೆಜ್ಜೆ ಅವರ ಅಂತರಂಗದ ಪ್ರಯಾಣಕ್ಕೆ ತೆಗೆದುಕೊಳ್ಳಲಿ ಎಂದೂ ಮತ್ತು ಅವರ ಮನಸ್ಸಿನಲ್ಲಿ ಉಂಟಾಗುವ ಕೆಲವು ಗೊಂದಲಗಳನ್ನು ತೋರಿಸಲು ಈ ರೀತಿ ಮಾಡುತ್ತೇನೆ. ಇಲ್ಲದಿದ್ದರೆ ಅವರನ್ನು ಅದಕ್ಕೆ ಆಕರ್ಷಿಸಲು ಆಗುವುದಿಲ್ಲ, ನಾನು ಅವರ ಭಾಷೆಯಲ್ಲಿಯೇ ಮಾತನಾಡಬೇಕು.
ದಕ್ಷಿಣಾಮೂರ್ತಿಯ ವಿಗ್ರಹವು ಅಲ್ಲಿ ಇಲ್ಲದೇ ಇದ್ದರೂ, ಅಲ್ಲಿ ಇರುವ ಶಕ್ತಿಯ ಜಾಗದ ಶಾಂತತೆಯನ್ನು ಅರಿವಿಲ್ಲದೆ ಇದ್ದರೂ, ಅಲ್ಲಿ ಸುತ್ತ ಇರುವ ಶಾಂತತೆಯು ಅವರಿಗೆ ದಕ್ಷಿಣಾಮೂರ್ತಿಯನ್ನು ನೋಡಿದ ತಕ್ಷಣ ಅಷ್ಟು ಸಂತೋಷವಾಗುತ್ತದೆ. ಈ ಆಲದ ಮರವು ಜೀವಿಸಿರುವ ಶಕ್ತಿ, ಅದರ ನಿಶ್ಯಬ್ದಕ್ಕೆ ಕಂಪಿಸುವ ನಿಶ್ಯಬ್ದತೆ. ನೀವು ಅಲ್ಲಿ ಧ್ಯಾನದ ಮನಸ್ಸಿನಿಂದ ಅಲ್ಲಿ ಕುಳಿತುಕೊಂಡರೇ ಸಾಕು. ನೀವು ಅಲ್ಲಿ ಏನೂ ಗೊಂದಲತರಹವಾದ ಏನನ್ನೂ ಮಾಡಬೇಕಾಗಿಲ್ಲ, ಪ್ರತಿಯೊಂದು ಎಲೆಯೂ ಮತ್ತು ಕಡ್ಡಿಯೂ ಇಲ್ಲಿ ನನ್ನ ಹತ್ತಿರ ಮಾತನಾಡುತ್ತವೆ.
ನೋಡಿ, ನೀವು ಯಾವಾಗ ವಿಗ್ರಹಗಳನ್ನು ಪೂಜಿಸಲು ಮುಂದುವರಿಸುತ್ತೀರೋ, ನೀವು ಹೆಚ್ಚುಹೆಚ್ಚಾಗಿ ಮತ್ತು ಅಸ್ತಿತ್ವದ ಇರುವಿಕೆಗೆ ಅರಿಯುವಂತವರಾಗಬೇಕು ಮತ್ತು ವಿಗ್ರಹದ ಮೂಲಕ ಜೋಡಿಸುವುದಕ್ಕೆ ಪ್ರಯತ್ನಿಸುತ್ತಿರುತ್ತೀರ. ಬರೀ ವಿಗ್ರಹ ಒಂದೇ ಅಲ್ಲ ಆದರೆ ಎಲ್ಲ ಸೃಷ್ಟಿಯೂ ದೇವರ ಇರುವಿಕೆಯ ಗರ್ಭದಿಂದ ಇದೆ ಎಂದು ನೀವು ತಿಳಿಯುತ್ತೀರ. ಆಮೇಲೆ ನೀವು ಯಾಂತ್ರಿಕವಾಗಿ ದೇವರನ್ನು ಎಲ್ಲೆಲ್ಲಿಯೂ ಕಾಣುತ್ತೀರ. ಆಮೇಲೆ ನೀವು ಪೂರ್ತಿ ಅಸ್ತಿತ್ವದ ಜೊತೆ ಸಂಬಂಧವನ್ನು ಪ್ರಾರಂಭಮಾಡುತ್ತೀರ.
ಧ್ಯಾನದಲ್ಲಿ ಕುಟಿಲವಿಲ್ಲದೆ ಧ್ಯಾನದ ಒಳಗೆ ಹೋದರೆ, ಅದರ ಫಲಿತಾಂಶ ಅಷ್ಟು ಸಾದ್ಯತೆ ಇಲ್ಲ. ಒಂದು ವ್ಯಕ್ತಿತ್ವದ ಬದಲಾವಣೆ ಸಂಭವಿಸಬಹುದು. ನೀವು ಒಬ್ಬ ಬೇರೆ ಮನುಷ್ಯನಾಗಿ ಹೊರಬರಬಹುದು. ಇದು ಒಂದು ದೊಡ್ಡ ಅಪಾಯ ಕಾಣಬಹುದು! ಇದು ಒಂದು ಜೂಜಾಟದ ತರಹ ಆಗುತ್ತೆ. ಬದಲಾವಣೆ ಸಂಭವಿಸಲು ಪ್ರಾರಂಭವಾಗುತ್ತೆ. ಇದೇ ನೀವು ಹುಡುಕುತ್ತಿರುವ ಬದಲಾವಣೆ, ಆದರೆ ಅದು ಸಂಭವಿಸಿದಾಗ ನೀವು ಹೆದರಿಕೆ ಪಡುತ್ತೀರ.
ನೀವು ನಿಮ್ಮ ಶಾಸ್ತ್ರವಿಧಿಗಳ ಕಾಯುವಿಕೆಯಿಂದ ಆರಾಮವಾಗಿರುವಂತೆ ಅಂದುಕೊಳ್ಳುತ್ತೀರ. ಶಾಸ್ತ್ರವಿಧಿ ನಿಮ್ಮ ದಿನನಿತ್ಯದ ಕಾರ್ಯಕ್ರಮವಾಗಿರುತ್ತದೆ. ಅದು ನೀವು ಅನುಸರಿಸುತ್ತಿರುವ ಜೀವವಿಲ್ಲದ ಒಂದು ಪ್ರದಕ್ಷಿಣೆಯ ಭಾಗವಾಗುತ್ತದೆ. ಹೇಗೋ, ಅವು ನಿಮಗೆ ತೃಪ್ತಿಯನ್ನು ಕೊಡುತ್ತವೆ, ಮತ್ತು ಇವು ಎಲ್ಲಿರುವಿರೋ, ಅಲ್ಲಿಯೇ ಉಳಿದುಕೊಳ್ಳುತ್ತೀರ. ಧ್ಯಾನದಲ್ಲಿ ನಿಮ್ಮ ಅಭಿಪ್ರಾಯಗಳು ಸ್ವಲ್ಪ ಅಳ್ಳಾಡುತ್ತವೆ, ಮತ್ತು ಆಗ ನೀವು ಹೆದರಿಕೊಳ್ಳುವುದಕ್ಕೆ ಪ್ರಾರಂಭ ಮಾಡುತ್ತೀರ. ನಿಮ್ಮ ವರ್ಷಾನುಗಟ್ಟಲೆಯಿಂದ ನೀವು ಕಟ್ಟಿರುವ ಕಟ್ಟುಪಾಡುಗಳ ನಂಬಿಕೆಗಳು ಇದಕ್ಕಿದ್ದಂತೆ ಅಳ್ಳಾಡುವಂತೆ ತೋರುತ್ತದೆ. ನೀವು ಕಡಿಮೆ ತುಳಿದಿರುವ ದಾರಿಯಲ್ಲಿ ಸಂಚರಿಸುತ್ತಿರುವಂತೆ ಅನುಭವಿಸುತ್ತೀರ ಮತ್ತು ಅದೇ ನಿಮಗೆ ಭಯವನ್ನುಂಟು ಮಾಡುತ್ತದೆ.
ನೀವು ಧ್ಯಾನ ಮಾಡುವಾಗ, ನಿಮ್ಮ ಅರಿವು ವೃದ್ಧಿಯಾಗುತ್ತದೆ ಮತ್ತು ಇದು ಸಂಭವಿಸಿದಾಗ, ನಿಮ್ಮ ಸುತ್ತ ನೀವು ಊಟಿಸಿಕೊಂಡಿರುವ ಬೇಲಿ - ಅದು ನಿಜವಾಗಿ ಸಮಾಜವು ನಿಮ್ಮ ಸುತ್ತ ಹಾಕಿರುವುದು - ನಿಧಾನವಾಗಿ ಕರಗಿ, ನೀವು ದಂಗೆಕೋರರಂತೆ ಅಂದುಕೊಳ್ಳುತ್ತೀರ, ಅದು ಸಮಾಜಕ್ಕೆ ಎದುರಾಗಿ ಅಲ್ಲ, ಆದರೆ ನಿಮ್ಮ ಸ್ವಂತ ಪ್ರಜ್ಞೆ ಇಲ್ಲದ ಮತ್ತು ತಿಳುವಳಿಕೆ ಇಲ್ಲದ ಸ್ಥಿತಿಗೆ ಅಷ್ಟೆ. ಈ ದಂಗೆಕೋರುತನ ನಿಮ್ಮನ್ನು ಅದರ ಕಾರಣಕ್ಕೆ ತುಂಬಾ ಪ್ರೋತ್ಸಾಹಿಸಿ ಅದು ಮುಂದಿನ ದಾರಿಗಳಿಗೆ ತೆರೆದಂತೆ ಆಗುತ್ತದೆ.
ಇದು ಹೀಗೆಯೇ ನೀವು ಆಳವಾಗಿ ಮತ್ತು ಆಳವಾಗಿ ನೀವು ಹಿಂದেন্দೂ ಪ್ರವೇಶವೇ ಮಾಡದೇ ಇರುವಂತಹ ಪ್ರದೇಶಕ್ಕೆ ಚಲಿಸುತ್ತೀರ; ಆ ಪ್ರದೇಶವನ್ನು ಸಮಾಜವು ತಿಳದೇ ಇರುವುದಿಲ್ಲ; ಆ ಜಾಗವು ಎಚ್ಚರಿಕೆಯಿಂದ ಇರುತ್ತದೆ; ಆ ಜಾಗವು ನಿಮ್ಮ ಒಳಗೇ ಅಡಗಿರುತ್ತದೆ ಆದರೆ ಭದ್ರಿಸಲ್ಪಟ್ಟಿರುತ್ತದೆ, ಆದರೆ ಪರಮಸುಖದಲ್ಲಿ ತಿಳಿಯದೇ ಇರುತ್ತೀರ, ಆದರೆ ಈ ಜನ್ಮದಲ್ಲಿ ಅಲ್ಲ, ಬಹಳ ಜನ್ಮಗಳ ಹಿಂದೆ, ಅದನ್ನು ಬೀಗ ತೆಗೆಯಲು ಬೀಗದ ಕೈಯನ್ನು ಹುಡುಕುತ್ತಿರುತ್ತೀರ. ಯಾವಾಗ ನೀವು ಆ ಜಾಗವನ್ನು ಕಾಣುತ್ತೀರೋ ಆಗ ನೀವು ತಲುಪುತ್ತೀರ!
ಅದು ಈ ರೀತಿ ಇದೆ:
ಒಂದು ಹಸವು ಒಂದು ಹಗ್ಗದಿಂದ ಕಟ್ಟಲ್ಪಟ್ಟಿದೆ ಮತ್ತು ಕೆಲವು ಸುತ್ತಳತೆಯನ್ನು ಅದು ಸುತ್ತುವರಿಯಲು ಬಿಟ್ಟಿದೆ.
ಅದು ಸುತ್ತ ಸಂಚರಿಸುತ್ತದೆ. ಅದರ ಬುದ್ಧಿಶಕ್ತಿಯಿಂದ ಫಲಿತವಾಗಿ ತಿಳುವಳಿಕೆಯುಳ್ಳದ್ದಾಗಿರುತ್ತದೆ.
ಆಮೇಲೆ ಇನ್ನು ಸ್ವಲ್ಪ ಜಾಸ್ತಿ ಮೀಟರಷ್ಟು ಹಗ್ಗವನ್ನು ಸಡಿಸಿಲಟ್ಟಿತು. ಅದು ಸುತ್ತ ಇನ್ನು ಸ್ವಲ್ಪ ಹೋಗಿ ಮತ್ತು ಜಾಸ್ತಿ ಬುದ್ಧಿಶಾಲಿಯಾಗುತ್ತದೆ, ಆಮೇಲೆ ಇನ್ನೂ ಸ್ವಲ್ಪ ಉದ್ದವಾದ ಹಗ್ಗವನ್ನು ಅದು ಆಡ್ಡಾಡಲು ಬಿಡಲಟ್ಟಿದೆ.
ಆ ಹಸುವಿನ ಬೆಳೆಯುತ್ತಿರುವ ಬುದ್ಧಿವಂತಿಕೆ ಮತ್ತು ಪ್ರಜ್ಞೆಯ ಮೇಲೆ ಅವಲಂಬಿಸಿ ಕಾಲಕ್ಕೆ ಸರಿಯಾಗಿ ಅದನ್ನು ಬಿಡುಗಡೆ ಮಾಡಲ್ಪಡಲಾಗುತ್ತದೆ.
ಇದೇ ತರಹ ಮನುಷ್ಯನಲ್ಲಿಯೂ ಸಂಭವಿಸುತ್ತದೆ. ಹಗ್ಗ ಅಥವಾ ಬೇಲಿ ಮನುಷ್ಯನ ಸುತ್ತ ಅವನ ಪ್ರಜ್ಞೆಗೆ ಸರಿಯಾದ ಪ್ರಮಾಣದಲ್ಲಿದೆ. ಅವನು ಜಾಸ್ತಿ ಪ್ರಜ್ಞಾವಂತನಾದರೆ, ಅವನು ಹೆಚ್ಚು ಸ್ವಾತಂತ್ರ್ಯವನ್ನು ಅನುಭವಿಸುತ್ತಾನೆ ಮತ್ತು ಅವನ ಅರಿವು ಬೆಳೆಯುತ್ತದೆ.
ನೋಡಿ, ಹೇಗೆ ನೀವು ನಿಮ್ಮ ಶಕ್ತಿಯ ಪರಿವರ್ತನೆ ಆಗಲು ಅವಕಾಶ ಮಾಡಿಕೊಡುವುದಕ್ಕೆ ಎಷ್ಟು ಮನಸ್ಸು ಮಾಡಿದ್ದೀರಿ ಎನ್ನುವುದೇ ಪ್ರಶ್ನೆಯಾಗಿದೆ. ಇದು ಸಂಭವಿಸಲು ಇರುವುದು ಒಂದೇ ಮಾರ್ಗ.
ಆದರೆ ಇದು ಸಂಭವಿಸಿದಾಗ, ಸಮಾಜವು ನೀವು ದಾರಿಬಿಟ್ಟು ಹೋಗುತ್ತಿದ್ದೀರಿ ಎಂದು ಹೇಳುತ್ತದೆ. ನೀವು ಸರಿಯಾದ ದಾರಿಯನ್ನು ಬಿಟ್ಟು ಹೋಗುತ್ತಿದ್ದೀರಿ ಎಂದು ಹೇಳುತ್ತದೆ. ಆಗೆ ಗೊಂದಲ ಪ್ರಾರಂಭವಾಗುತ್ತದೆ. ಇದು ಸಂಭವಿಸಿದಾಗ, ನೀವೇ ಧೈರ್ಯವನ್ನು ಹೊಂದಿ, ನಿಮ್ಮಲ್ಲಿಯೇ ನಂಬಿಕೆ ಮತ್ತು ಅಸ್ತಿತ್ವವುಳ್ಳವರಾಗಿ, ಮುಂದಕ್ಕೆ ಸಾಗಬೇಕು.
ಇಲ್ಲಿಯೇ ನೀವು ಇದ್ದೀರಾ, ತುಂಬ ಪುಸ್ತಕಗಳು ಅಥವಾ ಭಾಷಣಗಳಿಗಿಂತ, ಒಬ್ಬ ಗುರುವು ನಿಮಗೆ ಯೋಗದಂಡ ಊರುಗೋಲಾಗಿ ನೀವು ನಿಮ್ಮ ಪಾಡಿಗೆ ನಿಲ್ಲಲು ಸಹಾಯವಾಗುತ್ತದೆ. ಪ್ರತಿ ಸಲವೂ ಸಮಾಜವು ನಿಮ್ಮ ಧಾರ್ಮಿಕ ದಾರಿಯಿಂದ ಹೊಡೆದೋಡಿಸಿದಂತೆ ನಿಮಗೆ ಭಾಸವಾಗುತ್ತದೆ. ಯಾವಾಗ ನೀವು ಬಹು ಮತದ ವಿರುದ್ಧ ಇದ್ದೀರೆಂದು ಭಾಸವಾಗುತ್ತದೆಯೋ, ಆಗ ಗುರುವು ನಿಮ್ಮನ್ನು ಅವರ ದಾರಿಗೆ ಎಳೆದುಕೊಂಡು ನೀವು ಮುಂದೆ ಸಾಗಲು ಹೇಳುತ್ತಾರೆ.
ನೀವು ನಿರ್ಬಲರಾಗುವ ಸಂದರ್ಭಗಳಲ್ಲಿ ನಿಮಗೆ ಉತ್ತೇಜನದ ಅಗತ್ಯವಿದೆ, ಗುರುವೇ ನೀವು ಮತ್ತೆ ತಲೆ ಎತ್ತಿ ನಡೆಯುವತನಕ, ನಿಮ್ಮನ್ನು ಉತ್ತೇಜಿಸಿ ಆಧಾರ ನೀಡುವ ಊರುಗೋಲಾಗಿ ಆಗುತ್ತಾರೆ. ನೀವು ತಡವರಿಸುವಾಗಲೆಲ್ಲ ಆ ಊರುಗೋಲು ನಿಮಗೆ ಸಹಾಯಕ್ಕಾಗಿ ಗೋಚರಿಸುತ್ತದೆ.
ಗುರುವಿನ ಉತ್ತೇಜನದಿಂದ, ನೀವು ನಿಮ್ಮಲ್ಲಿರುವ ಸರಿಸಾಟಿಯಿಲ್ಲದ ವ್ಯಕ್ತಿತ್ವವನ್ನು ಕಂಡುಹಿಡಿದು ವಿಶಿಷ್ಟ ವ್ಯಕ್ತಿಯಾಗಿ ಎದ್ದು ನಿಲ್ಲಬಹುದು. ಒಬ್ಬ ಸ್ವತಂತ್ರ ಪುರುಷನಾಗಬಹುದು. ನೀವು ಗುರುವಿನ ಮೇಲೆ ಪರಾವಲಂಬಿಗಳಾಗಿದ್ದೀರೆಂದು ಅರ್ಥವಾಗುವುದೇ ಇಲ್ಲ. ಇದು ಇನ್ನೊಂದು ಸಾಧಾರಣವಾದ ತಪ್ಪು ತಿಳುವಳಿಕೆ. ಜನಗಳು ನೀವು ಬೇರೊಬ್ಬರ ವ್ಯಕ್ತಿಯ ಮೇಲೆ ಪರಾವಲಂಬಿಗಳಾಗಿ ಜೀವಿಸುತ್ತಿದ್ದೀರೆಂದು ಯೋಚನೆ ಮಾಡುತ್ತಾರೆ.
ಇದು ಈ ತರಹ ಇದೆ: ನೀವು ಒಂದು ನಿರ್ದಿಷ್ಟವಾದ ಜಾಗಕ್ಕೆ ದಾರಿಯನ್ನು ಹುಡುಕಲು ಪ್ರಯತ್ನಿಸುತ್ತಿರುತ್ತೀರ. ನಿಮಗೇ ಬಿಟ್ಟರೆ, ನೀವು ತುಂಬಾ ಸ್ಥಳಗಳಲ್ಲಿ ವಿಳಾಸಗಳನ್ನು ಕೇಳುತ್ತಿರುತ್ತೀರ.
ಕೆಲವು ಸಲ ತಪ್ಪಾಗಿ ಮಾರ್ಗವನ್ನು ನಿಮಗೆ ಸೂಚಿಸಿ ಮತ್ತು ಪುನಃ ನೀವು ಸರಿಯಾಗಿ ಜಾಡು ಹಿಡಿಯಬೇಕು, ಈ ಮಾದರಿಯಲ್ಲಿ ಹೇಗೋ ನೀವು ಹೋಗಬೇಕಾದ ಸ್ಥಳದಲ್ಲಿ ತಲುಪುತ್ತೀರಿ. ಅದು ಆ ರೀತಿ ಮಾಡಲು ತುಂಬಾ ಸಮಯವು ನಿಮಗೆ ಹಿಡಿದರೂ ನೀವು ತಲುಪುತ್ತೀರ. ಆದರೆ ನೀವು ಒಂದು ನಕ್ಷೆಯನ್ನಾಗಲೀ ಅಥವಾ ಗುರುವನ್ನಾಗಲೀ ಹೊಂದಿದ್ದರೆ ಏನಾಗುತ್ತೆ? ನೀವು ನೇರಮಾರ್ಗದಿಂದ ನಿಮ್ಮ ನಿರ್ದಿಷ್ಟಸ್ಥಾನಕ್ಕೆ ವೇಳೆಯ ವ್ಯರ್ಥವಾಗದೆ ತಲುಪಲು ಸಾಧ್ಯವಾಗುತ್ತೆ ಹೌದಲ್ಲವೇ? ನೀವು ನಕ್ಷೆಯ ಮೇಲಾಗಲೀ ಅಥವಾ ಮಾರ್ಗದರ್ಶಿಯ ಮೇಲಾಗಲೀ ಅವಲಂಬಿಗಳಾಗಿದ್ದೀರೆಂದು ಅರ್ಥವಾಗುತ್ತದೆಯೇ? ಇಲ್ಲ. ಅದು ಜಾಗೃತಿಕವಾಗಿ
ಕೆಲಸವನ್ನು ಮಾಡುವ ಒಂದು ಪ್ರಾಮಾಣಿಕವಾದ ದಾರಿ, ಅಷ್ಟೆ. ಇದೇ ರೀತಿ ಒಬ್ಬ ಗುರುವು ದಾರಿಯನ್ನು ತಿಳಿದಿರುವ ಒಬ್ಬ ಮಾರ್ಗದರ್ಶಿ ನೀವು ಹುಡುಕುತ್ತಿರುವ ಆ ಸ್ಥಳಕ್ಕೆ ಆಗಲೇ ಹೋಗಿದ್ದು, ಈಗ ನಿಮಗೆ ದಾರಿ ತೋರಿಸಲು ಸಿಗುತ್ತಿದ್ದಾರೆ.
ನೀವು ಸಮರ್ಪಣೆ ಮನೋಭಾವವನ್ನೇ ಹೊಂದಿದ್ದರೆ, ನೀವು ಅನುಮಾನವಿಲ್ಲದೆ ಕಷ್ಟಪಟ್ಟು ನಿಮ್ಮ ಗುರಿಗೆ ತಲುಪಲು ಉದ್ದೇಶ್ಯದಿಂದ ಕೆಲಸ ಮಾಡುತ್ತೀರ, ಆದರೆ ಯಾವಾಗ ನೀವು ಧೈರ್ಯದಿಂದ ಕೂಡಿದ ಮನೋಭಾವವನ್ನು ಹೊಂದಿದ್ದರೆ, ನಿಮ್ಮ ಗುರಿಯ ಕಡೆಗೆ ನೆಗೆಯುತ್ತೀರ. ಈ ಧೈರ್ಯವು ನೀವು ಯಾವಾಗ ಇನ್ನೊಬ್ಬರ ಕಡೆ ನೋಡುವುದನ್ನು ನಿಲ್ಲಿಸಿ ಮತ್ತು ನಿಮ್ಮಲ್ಲಿಯೇ ಒಳಗೆ ನೋಡಿಕೊಳ್ಳುತ್ತೀರೋ ಆಗ ಬರುತ್ತದೆ. ನೀವು ನಿಮ್ಮನ್ನು ಮತ್ತೊಬ್ಬರಿಗೆ ಹೋಲಿಸಿಕೊಳ್ಳುವುದನ್ನು ನಿಲ್ಲಿಸಿ ಮತ್ತು ನಿಮ್ಮನ್ನು ಅರಿವಿನಿಂದ ಕಾಯುತ್ತಿದ್ದರೆ, ನಿಮ್ಮ ಒಳಗಿನ ವ್ಯವಸ್ಥೆಯಲ್ಲಿ ಸೂಕ್ಷ್ಮವಾದ ಬದಲಾವಣೆಗಳು ಆಗಿ ನಿಮಗೆ ಧೈರ್ಯವು ಬರುತ್ತದೆ.
ನೀವು ನಿಮ್ಮ ಸ್ವತಂತ್ರವಾದ ದಾರಿಯಲ್ಲಿ ಧೈರ್ಯ ಮತ್ತು ದೃಢನಿಶ್ಚಯದಿಂದ ಎದ್ದು ನಿಲ್ಲಬೇಕಾದ ಅವಶ್ಯಕತೆ ಇದೆ. ದೃಢನಿಶ್ಚಯವಾದ ಧೈರ್ಯ ನೀವು ಯಾವಾಗ ಗಟ್ಟಿಯಾಗಿ, ಇನ್ನೊಬ್ಬರ ಮೇಲೆ ಹೋಲಿಸಿಕೊಳ್ಳದೆ ನಿಮ್ಮಲ್ಲಿಯೇ ಕೇಂದ್ರೀಕರಿಸಿ ಕೊಂಡರೆ ಆಗ ಸಂಭವಿಸುತ್ತದೆ.
ಸಮಾಜವು ಅದಕ್ಕೆ ಪರಿಚಯವಾದ, ತಿಳಿದಿರುವ ಆದರ್ಶಗಳಿಗೆ ಎಳೆಯುವುದಕ್ಕೆ ಪರಿಚಯವಾಗಿರುವಂತಹ ದುಃಖಗಳನ್ನು ಸಹಿಸುವುದು, ಚೆನ್ನಾಗಿ ತುಳಿದಿರುವ ಮತ್ತು ಸವೆದುಹೋಗಿರುವ ಹಾದಿಗಳಿಗೆ ನಿಮ್ಮನ್ನು ಎಳೆಯಲು ಕಾಯುತ್ತಿರುತ್ತದೆ. ಈ ತರಹದ ಹಾದಿಗೆ ಬೀಳಲು ಧೈರ್ಯ ಬೇಕಾಗಿಲ್ಲ ಮತ್ತು ತುಂಬಾ ಸುಲಭ. ನಾನು ಧೈರ್ಯ ವೆಂದು ಹೇಳುವುದು, ಸಾಮಾನ್ಯವಾದ ಧೈರ್ಯವನ್ನಲ್ಲ, ಪೂರ್ಣವಾದ ಧೈರ್ಯ.
ಚಿನ್ನಿಮಣಿಗಳನ್ನು ಧರಿಸಲು ಧೈರ್ಯದ ಅವಶ್ಯಕತೆ ಇಲ್ಲ ಆದರೆ ರುದ್ರಾಕ್ಷಿ ಮಾಲೆಯನ್ನು ಧರಿಸಲು ಧೈರ್ಯವು ಬೇಕು. ನಾನು ಭಕ್ತರಿಗೆ ಯಾರು ಅದನ್ನು ಧರಿಸಲು ಇಷ್ಟಪಡುತ್ತಾರೋ, ಅವರಿಗೆ ರುದ್ರಾಕ್ಷಿ ಮಾಲೆಯನ್ನು ಕೊಡುತ್ತೇನೆ. ರುದ್ರಾಕ್ಷಿ ಮಣಿಗಳು ಶಕ್ತಿಯ ಉಗ್ರಾಣವೆ ವಿನಹ ಮತ್ತೇನೂ ಅಲ್ಲ, ಅವು ಜಗದ ಶಕ್ತಿಯನ್ನು ನಿಮಗೆ ಕೂಡಿಸುತ್ತವೆ. ಅವು ವಿದ್ಯುತ್ ಸಂಗ್ರಹ ಮನೆಯ ತರಹ ಇವೆ ಮತ್ತು ನೀವು ಶಕ್ತಿ ಇಲ್ಲದ ತರಹ ಆದಾಗ ನಿಮ್ಮನ್ನು ಶಕ್ತಿವಂತವಾಗಿ ಮಾಡುತ್ತವೆ.
ಆದರೆ ಸಮಾಜವು ಈ ಮಣಿಗಳು ಸನ್ಯಾಸತ್ವದ ಒಂದು ಸ್ಪಷ್ಟ ಸಂಕೇತವೆಂದು ನೋಡುತ್ತದೆ. ಅವರು ಆ ಮಣಿಗಳನ್ನು ಧರಿಸಿರುವವರು ಪರಿತ್ಯಾಗಿಗಳು ಎಂದೂ, ತ್ಯಾಗದ ಅರ್ಥವನ್ನೇ ತಿಳಿದುಕೊಳ್ಳದೇ ನೋಡುತ್ತಾರೆ.
ಸಂಸಾರದಲ್ಲಿದ್ದು ರುದ್ರಾಕ್ಷಿಯನ್ನು ಧರಿಸುತ್ತಿರುವವರನ್ನು ಅವರು ಖಂಡಿಸುತ್ತಾರೆ. ಆದರೆ ರುದ್ರಾಕ್ಷಿ ಮಣಿಗಳನ್ನು ವಿಗ್ರಹಗಳ ಮೇಲಾಗಲೀ ಅಥವಾ ಸಾಧುಗಳ ಮೇಲಾಗಲೀ ನೋಡಿದಾಗ, ಅವರು ಸಂತೋಷಪಟ್ಟುಕೊಂಡು ಅವರಿಗೆ ಪ್ರಾರ್ಥಿಸುತ್ತಾರೆ. ಆದ್ದರಿಂದ ನನ್ನ ಚಿಕ್ಕ ಭಕ್ತರುಗಳು ಬಂದು ಅವರ ಸಂಸಾರದವರು ರುದ್ರಾಕ್ಷಿಗಳನ್ನು ಧರಿಸಿದಾಗ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಹೇಳುತ್ತಾರೆ. ಈ ಎಲ್ಲ ಗೂಡುಹರಟೆ ಹೊಡೆಯುವವರು ಕೊನೆ ಇಲ್ಲದೆ ಅದರ ಮೇಲೆ ಮಾತಾಡಿ, ಕತೆಗಳನ್ನು ಅವುಗಳ ಮೇಲೆ ಹರಡುತ್ತಾರೆ. ಅದು ಹಾಸ್ಯಾಸ್ಪದವಲ್ಲವೇ? ಅವರು ಪ್ರಾರ್ಥನೆ ಮಾಡುವಾಗ ವಿಶ್ವದ ಶಕ್ತಿಯನ್ನು ಪ್ರಾರ್ಥಿಸುತ್ತಿರುತ್ತಾರೆ, ಆದರೆ ಅದೇ ಶಕ್ತಿ ಸುಲಭ ಸ್ವರೂಪದಲ್ಲಿ ಅವರಿಗೆ ಲಭ್ಯವಾಗುವಾಗ, ಅವರು ಅದನ್ನು ತೆಗೆದುಕೊಳ್ಳಲು ತಯಾರಾಗಿರುವುದಿಲ್ಲ! ಅವರು ಅದಕ್ಕಾಗಿ ಪ್ರಾರ್ಥಿಸುತ್ತಾರೆ, ಆದರೆ ಅದರಿಂದ ಓಡಿ ಹೋಗುತ್ತಾರೆ!
ನೀವು ಆಳವಾಗಿ ಇದನ್ನು ವಿಶ್ಲೇಷಿಸಿದರೆ ಅದು ಅಷ್ಟು ಹಾಸ್ಯಾಸ್ಪದವಾಗಿಯೂ, ಅರ್ಥವಿಲ್ಲದಂತೆಯೂ ಕಾಣುತ್ತದೆ. ಅವುಗಳು ತಮ್ಮನ್ನೇ ದೇವರಿಂದ ಪ್ರತ್ಯೇಕವಾಗಿ ನೋಡುತ್ತಾರೆ; ಇದೇ ಇರುವುದು ಸಮಸ್ಯೆ. ಅವರುಗಳು ದೇವರೆಂದು ಒಪ್ಪಿಕೊಳ್ಳಲು ಅವರು ತಯಾರಾಗಿಲ್ಲ. ಈಗ ನಾನು ಹೇಳುತ್ತೇನೆ: ನೀವು ತಿಳಿದಿರಿ ಅಥವಾ ತಿಳಿಯದೆ ಇರಿ, ನೀವು ಒಪ್ಪಿಕೊಳ್ಳಿ ಅಥವಾ ಇಲ್ಲದಿರಿ, ನೀವು ಇಷ್ಟಪಡಲಿ, ಅಥವಾ ಬಿಡಲಿ, ನೀವು ನಂಬಿರಿ ಅಥವಾ ಬಿಡಿರಿ, ನೀವು ದೇವರೇ. ಇದು ವಿಶುದ್ಧಿ ಚಕ್ರದ ಕೆಳಗಿರುವ ತಳಹದಿಯೂ ಕೂಡ - ನಿಮ್ಮ ಸ್ವಂತ ಆತ್ಮದ ಅಪಾರ ಶಕ್ತಿಯನ್ನು ಕಂಡುಹಿಡಿಯಬಹುದು.
ಯಾವಾಗ ನಿಮ್ಮ ಧೈರ್ಯ ವೃದ್ಧಿಸುತ್ತದೆಯೋ, ಸಮಾಜವು ತನ್ನಷ್ಟಕ್ಕೆ ಯಾಂತ್ರಿಕವಾಗಿ ಅರ್ಥವಿಲ್ಲದಂತೆ ಮಾಸಿಹೋಗುತ್ತದೆ. ನಿಮ್ಮ ಧೈರ್ಯವು ಕಮ್ಮಿಯಾದಾಗ ಸಮಾಜವು ನಿಮ್ಮ ಮೇಲೆ ಅಧಿಕಾರ ಚಲಾಯಿಸುತ್ತದೆ. ಇವೆಲ್ಲವೂ ನಿಮ್ಮ ಮನಸ್ಸಿನಲ್ಲಿದೆ. ನೀವು ಎಷ್ಟು ಅಧಿಕಾರವನ್ನು ಸಮಾಜಕ್ಕೆ ಕೊಡುತ್ತೀರೋ ಅಷ್ಟು ಅಧಿಕಾರವನ್ನು ಅದು ನಿಮ್ಮ ಮೇಲೆ ಹೊಂದುತ್ತದೆ. ಯಾವುದಕ್ಕೂ ಸಮಾಜವನ್ನು ದೂಷಿಸಬೇಡಿ.
ಆಯ್ಕೆಕೊಳ್ಳುವುದು ಯಾವಾಗಲೂ ನಿಮ್ಮದಾಗಿಯೇ ಇರುತ್ತದೆ. ಕೇವಲ ಧೈರ್ಯದ ಕೊರತೆಯಿಂದ ಸಮಾಜವು ಏನನ್ನು ಹೇಳುತ್ತದೆಯೋ ಅದನ್ನು ಆಯ್ದುಕೊಳ್ಳಲು ಹೋಗುತ್ತೀರ, ನೀವು ಹೋಲಿಕೆ ಮತ್ತು ಒಬ್ಬರನ್ನೊಬ್ಬರಾಗಿ ಸೋಲಿಸುವುದಕ್ಕೆ ಪ್ರಯತ್ನಿಸುತ್ತಾ, ನೀವು ತಳ್ಳುವ ಮತ್ತು ಎಳೆಯಲ್ಪಡುವುದನ್ನು ಆಯ್ಕೆ ಮಾಡಿಕೊಂಡು, ಆಮೇಲೆ ಸಮಾಜವನ್ನು ಬೈಯಲು ಪ್ರಾರಂಭಮಾಡುತ್ತೀರ. ಇದು ಒಂದು ತುಂಬಾ ತುಚ್ಚವಾದ ಕೆಲಸ. ನೀವು ಮಾಡುವುದಕ್ಕೆ ಆಗುವುದು. ಆರಿಸಿಕೊಳ್ಳುವುದು ಯಾವಾಗಲೂ ನಿಮ್ಮದೇ ಆಗಿರುತ್ತದೆ ಎನ್ನುವುದನ್ನು ಜ್ಞಾಪಿಸಿಕೊಳ್ಳಿ.
ಪ್ರಾಮಾಣಿಕವಾಗಿ ಅರಿವಿನಿಂದ ಕೆಲಸ ಮಾಡಿ, ಅನಂತತ್ವ (infinity) ಅದಾಗಿಯೇ ತೆರೆಯಲ್ಪಡುತ್ತದೆ. ಅದು ನಡೆದಾಗ, ನಿಮ್ಮ ಮುಂದೆ ಅಷ್ಟು ತೆರೆದ ಜಾಗ ಇರುವುದನ್ನು ನೋಡಿರುವುದು ನಿಮಗೆ ಅಭ್ಯಾಸವಾಗಿಲ್ಲದೇ ಇರುವುದರಿಂದ ನೀವು ಭಯಭೀತರಾಗಿರುವಂತೆ ತೋರುತ್ತೀರಿ. ನಿಮಗೆ ಗಡಿಯನ್ನು ನೋಡಿರುವುದೇ ಅಭ್ಯಾಸವಾಗಿರುತ್ತದೆ. ಈಗ ನಿಮಗೆ ಬೇಲಿಯನ್ನು ನೋಡುವುದಕ್ಕೆ ಎಲ್ಲಿಯೂ ಆಗುವುದಿಲ್ಲ, ನೀವು ಭಯಪಡುವುದಕ್ಕೆ ಪ್ರಾರಂಭಮಾಡುತ್ತೀರ.
ನೀವು ತಕ್ಷಣ ತಪ್ಪು ಜಾಗಕ್ಕೆ ಪ್ರವೇಶಮಾಡಿರುವುದಾಗಿ ಯೋಚಿಸುತ್ತೀರ. ಸತ್ಯಸ್ಥಿತಿ ನಿಮಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಿ ತೋರುತ್ತದೆ. ನಿಮಗೆ ಸುರಕ್ಷತೆ ಇಲ್ಲದೆ ಇರುವಂತೆ ಭಾವಿಸಲು ಪ್ರಾರಂಭಮಾಡುತ್ತೀರ. ನೀವು ನಿಮಗೆ ಹಿತವಾದ ವಾತಾವರಣವನ್ನು ಕೊಡುವಂತಹ ಹಳೆಯ ನಂಬಿಕೆಗಳು ಮತ್ತು ಭ್ರಮೆಗಳಿಗೆ ವಾಪಾಸ್ ಹೋಗವಂತೆ ಭಾವಿಸುತ್ತೀರ. ನೀವು ಸಮಾಜದ ಮಾತುಗಳಿಗೆ ಅದು ನಿಮ್ಮನ್ನು ಕೆಟ್ಟದಾರಿಗೆ ಹೋಗುತ್ತಿರುವಿರೆಂದು ಹೇಳಿದಾಗ ಕೇಳದೆ ಇದ್ದುದಕ್ಕೆ ನೀವು ತಪ್ಪು ಮಾಡಿರುವುದಾಗಿ ಅಂದುಕೊಳ್ಳುತ್ತೀರ. ನೀವು ಅನುಮಾನವನ್ನೇ, ಅನುಮಾನವೆಂದು, ಅನುಮಾನ ಪಡುವುದಕ್ಕೆ ಪ್ರಾರಂಭಮಾಡುತ್ತೀರ.
ಜೀವನವು ತಕ್ಷಣ ಅಲ್ಲಾಡುತ್ತಿರುವಂತೆ ಕಾಣುತ್ತದೆ. ನೀವು ಎಲ್ಲಿ ತಲೆ ಇಟ್ಟಿದ್ದೀರಾ ಎನ್ನುವುದೇ ನಿಮಗೆ ತಿಳಿದಿರುವುದಿಲ್ಲ, ಒಂದು ಮರಳುಗಾಡಿನ ಮಧ್ಯೆ ಒಂಟಿ ಮಗುವನ್ನು ಬಿಟ್ಟರೆ ಹೇಗೆ ಅದಕ್ಕೆ ಆಗುತ್ತೋ ಹಾಗೆ ಅನುಭವಿಸುತ್ತೀರ. ಈ ತರಹ ಸಂದರ್ಭಗಳು ಬಂದಾಗ ಯಾವಾಗಲೂ ವಿಶ್ವಶಕ್ತಿಯು ನಿಮ್ಮ ಜೊತೆ ಇದೆ ಎಂದೂ ಮತ್ತು ಧೈರ್ಯವು ಪಕ್ವವಾಗುವುದೊಂದೇ ಅವಶ್ಯಕವಾಗಿ, ವಿಶ್ವಶಕ್ತಿಯ ಮೇಲೆ ಕೈಯಲ್ಲಿ ಕೈಯನ್ನಿಟ್ಟುಕೊಂಡು ಹೋಗಲು ನಂಬಿಕೆಯುಳ್ಳವರಾಗಿ ಇದ್ದರೆ, ಆಗ ಪ್ರತಿಯೊಂದೂ ಸರಿಯಾಗುತ್ತದೆ. ನಂಬಿಕೆಯೊಂದೇ ಧೈರ್ಯಕ್ಕೆ ಊರುಗೋಲು.
ಖಚಿತ ಪರಿಹಾರಗಳು
ನಿಮ್ಮೊಳಗೆ ಒಂದು ಕ್ರಾಂತಿ ಆಗದ ಹೊರತು, ನೀವು ಒಡೆದು ಒಂದು ಮರವಾಗಿ ಬೆಳೆಯಲು ಸಾಧ್ಯವೇ ಇಲ್ಲ. ನಮ್ಮಲ್ಲಿಯೇ ಬೇಕಾದಷ್ಟು ಜನ ಬೀಜವಾಗಿಯೇ ಇದ್ದು, ಧೈರ್ಯದ ಕೊರತೆಯಿಂದ ಸಾಯುತ್ತಾರೆ. ನಾವು ಯಾವಾಗಲೂ ಬೀಜವನ್ನು ಕೊಯ್ದು ಅದರಲ್ಲಿ ಹಣ್ಣು ಮತ್ತು ಹೂವನ್ನು ನೋಡಲು ಪ್ರಯತ್ನ ಪಡುತ್ತೇವೆ. ಇದು ಯಾವಾಗಲಾದರೂ ನಮಗೆ ಸಹಾಯವಾಗಿದೆಯೇ? ಇಲ್ಲ! ಆ ಬೀಜವು ಬೆಳೆಯುವುದಕ್ಕೆ ಒಡೆಯಬೇಕು. ಅದೇ ತರಹ ಮೂಲತತ್ವದ ಬದಲಾವಣೆ ನಡೆದಾಗ, ಮನುಷ್ಯನಲ್ಲಿ ಕ್ರಾಂತಿ ಉಂಟಾದಾಗ, ಅವರು ಒಡೆದು ಬೆಳೆಯುತ್ತಾರೆ. ಎಲ್ಲ ಧ್ಯಾನವೂ ಆ ಬೀಜವನ್ನು ಒಡೆಯಲು ಮಾಡುವ ತಂತ್ರವೇ ವಿನಹ ಬೇರೆ ಅಲ್ಲ. ನೀವು ಒಡೆಯುವುದಕ್ಕೆ ಪ್ರಾರಂಭವಾದಾಗ, ಎಲ್ಲ ನಿಮ್ಮ ಪ್ರಥಮತೆಯೂ ಬದಲಾಗಲು ಪ್ರಾರಂಭವಾಗುತ್ತದೆ. ಯಾವುದು ಮೊದಲು ಮುಖ್ಯವಾಗಿತ್ತೋ, ಅದು ತುಂಬಾ ಮುಖ್ಯವಲ್ಲ ಎನ್ನುವಂತೆ ಆಗುತ್ತದೆ. ಬರೀ ನಿಮ್ಮ ಅಸ್ತಿತ್ವವನ್ನು ಪಾಲಿಸುವುದೇ ಮುಖ್ಯವೆಂದು ತೋರುತ್ತದೆ. ನಿಮ್ಮ ಎಲ್ಲ ನಡವಳಿಕೆಗಳೂ ಬದಲಾಗುತ್ತದೆ. ನಿಮ್ಮ ಇರುವಿಕೆಯೇ ಬದಲಾಗುತ್ತದೆ.
ನಿಮ್ಮ ಸಾನ್ನಿಧ್ಯ ಯಾಂತ್ರಿಕವಾಗಿ ಜನಗಳನ್ನು ನಿಮ್ಮ ಕಡೆಗೆ ಅವರು ಒಪ್ಪಿಕೊಳ್ಳದೇ ಇದ್ದರೂ ಆಕರ್ಷಿಸುತ್ತದೆ! ನಿಮ್ಮ ಒಳಗಿನ ಹೃದಯದ ಮಧ್ಯಭಾಗದಲ್ಲಿ ಅನುಭವಿಸಿದ ಪ್ರಭೆ ಅವರನ್ನು ಆಳವಾದ ಕುತೂಹಲದಿಂದ ಆಕರ್ಷಿಸಲ್ಪಡುತ್ತದೆ. ಸಮಾಜವು ನಿಮ್ಮ ಬದಲಾದ ನಡವಳಿಕೆಯನ್ನು ಖಂಡನೆ ಮಾಡುತ್ತಿರುವಾಗಲೂ, ನಿಮ್ಮ ಸಾನ್ನಿಧ್ಯವನ್ನು ಪೂರ್ತಿ ಬೇರೆ ತರಹ ಕಂಡುಹಿಡಿಯಲು ಪ್ರಾರಂಭಿಸುತ್ತಾರೆ.
ಯಾವಾಗ ಬದಲಾವಣೆ ನಡೆಯುತ್ತಿರುವಾಗ, ಹಳೆಯದು ಕಳೆದುಹೋದದ್ದು ಏನಾದರೂ ಇರಲಿ ಅದನ್ನು ಕಡೆಗಣಿಸಬೇಡಿ. ಕಳೆದುಹೋದ ಘಟನೆಗಳು ಮತ್ತೆ ಮತ್ತೆ ಪರಿಚಯವಾದಂತಹ ಮಾದರಿಗಳಿಗೆ ಮತ್ತು ಆಳವಾದ ಕಟ್ಟುಪಾಡಿಗೆ ಎಳೆಯುತ್ತಿರುತ್ತವೆ. ನೀವು ಬೇರೆಯವರ ಮಾತುಗಳನ್ನು ಕೇಳಿದ ಮೇಲೆ, ನೀವು ನಿಮ್ಮನ್ನು ಕಟ್ಟುಪಾಡಿನಲ್ಲಿರುವಂತೆ ಬಿಡುತ್ತಿರುತ್ತೀರ. ಪ್ರಾಮಾಣಿಕವಾಗಿ ನಿಮ್ಮಲ್ಲಿ ಆಗುತ್ತಿರುವ ಬದಲಾವಣೆಯ, ದೃಢನಿಶ್ಚಯದ ಆತ್ಮಾನಂದಕ್ಕೆ ಹಿಡಿಯಲು ನೀವು ಇತ್ಯರ್ಥ ಮಾಡಿ. ಇದು ನಿಮ್ಮ ದೊಡ್ಡ ಪರೀಕ್ಷೆ - ಪೂರ್ತಿ ಬದಲಾವಣೆ ಸತತ ಯತ್ನದ ಪರೀಕ್ಷೆ. ಬದಲಾವಣೆ ಪೂರ್ತಿ ಆಗಿ ಮಾಗುವ ತನಕ ಹಾಗೆಯೇ ಹಿಡಿದಿರಿ.
ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಿ: ಈ ಜಗತ್ತನ್ನೆಲ್ಲ ತುಂಬುವ ವಿಶ್ವಶಕ್ತಿ ಒಂದು ಇದೆ ಮತ್ತು ನಿಮ್ಮನ್ನು ತುಂಬುವ ಶಕ್ತಿಯೂ ಒಂದು ಇದೆ. ಆಧ್ಯಾತ್ಮಿಕತೆಯು, ವಿಶ್ವಶಕ್ತಿಗೂ ನಿಮ್ಮಲ್ಲಿರುವ ಶಕ್ತಿಗೂ ಜೀವವಿರುವ ಸಂಪರ್ಕವನ್ನು ಉಂಟುಮಾಡುವುದರ ಮೇಲೆ ಇದೆ. ಯಾವಾಗ ನಿಮ್ಮ ವಿಶಿಷ್ಟಪ್ರಜ್ಞೆ ಸಾರ್ವತ್ರಿಕ ಪ್ರಜ್ಞೆಯೊಂದಿಗೆ ಮಿಳಿತವಾಗುತ್ತದೋ, ಆಗ ನಿಮಗೆ ಜ್ಞಾನೋದಯವಾಗುತ್ತದೆ. ಪ್ರಾಮಾಣಿಕವಾದ ಜ್ಞಾನೋದಯವಾಗಬೇಕೆನ್ನುವ ಆಸೆ ಏನೂ ಕೆಲಸ ಮಾಡುವುದಿಲ್ಲ. ಅದು ಒಂದು ಪ್ರಜ್ಞೆಯ ಇತ್ಯರ್ಥವಾಗಬೇಕು. ಸಾಮಾನ್ಯ ತರಹವಾದ ಆಸೆಯು ದುರಾಸೆ ವಿನಹ ಮತ್ತೇನೂ ಅಲ್ಲ, ಅದು ನಿಮ್ಮನ್ನು ನಿರ್ದಿಷ್ಟವಾದ ಗುರಿಗೆ ತಳ್ಳುವುದಿಲ್ಲ. ಪ್ರಜ್ಞೆಯಲ್ಲಿ ತೀರ್ಮಾನ ನಿಮ್ಮನ್ನು ಸಾಧಿಸುವ ಕಡೆಗೆ ಕೆಲಸ ಮಾಡುವಂತೆ ಮಾಡುತ್ತದೆ.
ಜನಗಳು ಈ ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಮತ್ತು ಸುಮ್ಮನೆ ತೋರಿಕೆಯ ಅಂತಸ್ಸಿನಲ್ಲಿ ಮಾತಾಡುತ್ತಾರೆ. ನೀವು ಯಾವಾಗ ಅರ್ಥಮಾಡಿಕೊಳ್ಳುವುದಿಲ್ಲವೋ, ಆಗ ತಪ್ಪಾಗಿ ಅರ್ಥಮಾಡಿಕೊಳ್ಳುತ್ತೀರ. ಆದರೆ ನೀವು ಅರ್ಥಮಾಡಿ ಕೊಂಡಿದ್ದೇವೆಂದು ಯೋಚಿಸಿದರೆ ಆಗ ಸಮಸ್ಯೆಯು ಪ್ರಾರಂಭವಾಗುತ್ತದೆ.
ಧಾರ್ಮಿಕತೆ ಆಳವಾದ ನಮ್ಮ ಶರೀರ, ಮನಸ್ಸು ಮತ್ತು ಶಕ್ತಿಯ ಅರ್ಥವನ್ನು ಕೊಡುವ ಒಂದು ವಿಜ್ಞಾನ (science). ಯಾವಾಗ ನೀವು ಅರಿವಿನಿಂದ ಅದರಲ್ಲಿ ಹೋಗುತ್ತೀರೋ ಆಗ ಹೊರಗಿನ ಪ್ರಪಂಚ ನಿಧಾನವಾಗಿ ಕರಗುತ್ತದೆ. ಜನರು ಯಾವಾಗ ನಿಮ್ಮನ್ನು ಹೊರಗಿನಿಂದ ನೋಡುತ್ತಾರೋ, ಆಗ ನೀವು ತ್ಯಜಿಸಿರುವುದಾಗಿ ಯೋಚಿಸುತ್ತಾರೆ. ನೀವು ಮಾತ್ರ ಯಾವುದನ್ನು ತ್ಯಜಿಸಿಲ್ಲವೆಂದು ಅರ್ಥ ಮಾಡಿಕೊಳ್ಳುತ್ತೀರ, ಹೊರಗಿನ ಪ್ರಪಂಚದ ವಿಚಾರಗಳು ಸುಮ್ಮನೆ ಅವುಗಳ ಪಾಡಿಗೆ ಕರಗಿಹೋಗುತ್ತವೆ ಎಂದುಕೊಳ್ಳುತ್ತೀರ. ಆ ಮಾಯೆ ಹೊರಟುಹೋಗುತ್ತದೆ. ನೀವು ಸಮ್ಮೋಹಿತದಿಂದ ಬಿಡುಗಡೆಯಾಗುತ್ತೀರ.
ನಮ್ಮ ಒಂದು ಕಾರ್ಯಕ್ರಮದಲ್ಲಿ ನೀವು ಎಷ್ಟು ಜನ ನನ್ನ ಸಮ್ಮೋಹಿತವನ್ನು ಅನುಭವಿಸಿದ್ದೀರ ಎಂದು ಕೇಳಿದೆ. 80 ಜನ ಇದ್ದ ಗುಂಪಿನಲ್ಲಿ 3 ಜನ ಕೈಗಳನ್ನು ಎತ್ತಿದರು. ಒಬ್ಬ ಹೆಂಗಸು ಹುಡುಗಿಯ ಪಕ್ಕ ಕುಳಿತಿದ್ದವರು, ಕೈಯನ್ನು ಎತ್ತಿದ್ದ ಹುಡುಗಿಯನ್ನು ನೋಡಿ ನಕ್ಕರು. ಅವರು ಏತಕ್ಕೆ ನಗುತ್ತಿದ್ದಾರೆಂದು ಕೇಳಿದೆ. ಆ ಹುಡುಗಿ ತನ್ನ ಕೈಯನ್ನು ಎತ್ತಿ ತನ್ನ ಪ್ರಾಮಾಣಿಕತೆಯನ್ನು ತೋರಿಸಿದಳು.
ಆ ಗುಂಪಿನಲ್ಲಿ ಬಹಳಷ್ಟು ಜನಕ್ಕೆ ಕೈ ಎತ್ತಲು ಆಸೆ ಆಗಿರಬಹುದು. ಆದರೆ ನಾನು ಏನು ಹೇಳುತ್ತೇನೋ ಎಂಬ ಹೆದರಿಕೆಯಿಂದ ಹಾಗೆ ಮಾಡಲಿಲ್ಲ ಎಂದು ನನಗೆ ಖಂಡಿತ ಗೊತ್ತು. ಹೇಗೋ ಅವರಲ್ಲಿ 3 ಜನ ಕೈ ಎತ್ತಿದರು, ಆದರೆ ನಾನು ನಿಜವಾಗಿ ಸಮ್ಮೋಹನದಿಂದ ಅವರನ್ನು ಮುಕ್ತ ಮಾಡಿದ್ದೇನೆ.
ಅವರು ಮಾಯೆ ಅಥವಾ ಭ್ರಾಂತಿ (illusion) ನಿಂದ ಮುಕ್ತರಾಗುವ ಹಾಗೆ ಅನುಭವಿಸುತ್ತಿರುವಂತೆ ಆಗಿರುವುದಾಗಿ ಪ್ರಾರಂಭ ಮಾಡಿದರು. ಆದರೆ ಏನಾಗುತ್ತದೆ ಎಂದರೆ ನೀವು ಮಾಯೆಯ ಸ್ವರೂಪದಲ್ಲಿ ಇರುವುದಾಗಿ ಅಂದುಕೊಂಡಿರುತ್ತೀರ, ಅದು ಮುಕ್ತವಾಗಲು ಪ್ರಾರಂಭವಾದರೆ, ಏನೋ ಕಳೆದುಕೊಂಡವರ ಹಾಗೆ ಯೋಚಿಸುತ್ತೀರ! ಆ ಸಮಸ್ಯೆ ಏನೆಂದರೆ, ಯಾವಾಗ ತುಂಬಾ ನಿಜ ಸಂಗತಿಗಳನ್ನು ಜನಗಳಿಗೆ ತಿಳಿಯಪಡಿಸಿದರೆ, ಅರ್ಥಮಾಡಿಕೊಳ್ಳುವುದು ಉದಯವಾಗುತ್ತದೆ, ಕೆಲವು ಭೀತಿಗಳು ಒಳಗೆ ಹೋಗುತ್ತವೆ. ಅವರು ಸಂತೋಷದಿಂದ ಇದ್ದ ಅನುಕೂಲತೆಗಳು ಅಜ್ಞಾನದ ಮುಚ್ಚುವಿಕೆಯಲ್ಲಿ ಇದ್ದವು ಸಂಕಟವನ್ನು ಅನುಭವಿಸುತ್ತವೆ.
ನೋಡಿ, ಎಷ್ಟಾದರೂ ಅಳತೆಯಲ್ಲಿ ನಿಮ್ಮ ದಡ್ಡತನವು ಕರಗುತ್ತದೆಯೋ, ಆ ಅಳತೆಯಲ್ಲಿ ನೀವು ದೇವರಿಂದ ಅಥವಾ ವಿಶ್ವದಿಂದ ವಶಪಡಿಸಲ್ಪಟ್ಟಿರುತ್ತೀರ. ಯಾವ ಪ್ರಯತ್ನವನ್ನು ನಿಮ್ಮ ದಿನನಿತ್ಯದ ಜೀವನದಲ್ಲಿ ಮಾಡುತ್ತೀರೋ, ಅದನ್ನು ಸ್ವಯಂ ಆಗಿ ಖಾಲಿ ಮಾಡಿದರೆ, ನೀವು ವಿಶ್ವದಿಂದ ತುಂಬಲ್ಪಡಬಹುದು. ಇನ್ನು ಮಿಕ್ಕಿದ್ದೆಲ್ಲವೂ ಪ್ರಾಮಾಣಿಕವಾಗಿ ಆಕಸ್ಮಿಕವಾಗಿರುತ್ತದೆ ಮತ್ತು ಬೆಲೆ ಇಲ್ಲದ್ದಾಗಿರುತ್ತದೆ. ಇದನ್ನು ಜ್ಞಾಪಿಸಿಕೊಳ್ಳಿ.
ನಿಮ್ಮ ಪ್ರತಿಯೊಂದು ಉಸಿರೂ ನಿಮ್ಮ ಅರಿವನ್ನು ಮತ್ತು ಜ್ಞಾನವನ್ನು ವೃದ್ಧಿಪಡಿಸುವುದಕ್ಕೋಸ್ಕರ ವಿನಿಯೋಗವಾಗಬೇಕು. ಆವಾಗಲೇ ನೀವು ನಿಜವಾಗಿ ಪ್ರಜ್ಞೆಯುಳ್ಳ ಇತ್ಯರ್ಥವನ್ನು ದೇವರು ಅಥವಾ ಅಸ್ತಿತ್ವವನ್ನು ಅನುಭವಿಸುವಂತೆ ಆಗುತ್ತೀರ. ಈ ಬಿಗಿಯಾದ ನಿರ್ಧಾರ ನಿಮ್ಮಲ್ಲಿ ಉಂಟಾಗಿದ್ದರೆ ನೀವು ಇನ್ನು ಅದನ್ನು ಪಡೆಯಲು ನಟನೆ ಮಾಡ್ತಿದ್ದೀರೆಂದು ಆಗುತ್ತದಷ್ಟೇ. ನೀವು ನಿಮ್ಮನ್ನೇ ಮೋಸ ಮಾಡಿಕೊಳ್ಳುತ್ತಿದ್ದೀರ. ಒಂದು ಕ್ಷಣವೂ ಇನ್ನೊಬ್ಬರನ್ನು ಮೋಸ ಮಾಡುತ್ತಿದ್ದೀರೆಂದು ಯೋಚಿಸಬೇಡಿ. ನಿಮ್ಮನ್ನೇ ನೀವು ಮೋಸ ಮಾಡಿಕೊಳ್ಳುತ್ತಿದ್ದೀರ.
ನಿಮ್ಮ ಹೆಜ್ಜೆಗಳನ್ನು ಹೊರಗಡೆಯಿಂದ, ಒಳ ಮುಖಕ್ಕೆ ತಿರುಗಿಸುವುದೇ ಮೊದಲ ಹೆಜ್ಜೆ. ಆ ಯು-ತಿರುವು (U-turn) ತಿರುವು ತೆಗೆದುಕೊಳ್ಳುವುದೇ ಮುಖ್ಯವಾದ ಅರ್ಥವತ್ತಾದ ಕ್ಷಣ. ತಿಳಿದುಕೊಳ್ಳಿ, ನಿಮ್ಮ ಅರಿವು, ನೀವು ಯು-ತಿರುವು ತೆಗೆದುಕೊಂಡಿರುವುದನ್ನು ತಿಳಿಸುತ್ತದೆ. ಅಲ್ಲಿಯ ತನಕ, ನಿಮ್ಮ ಮನಸ್ಸು ನೆಪಗಳ ಮೇಲೆ ನೆಪಗಳನ್ನು, ಜನಗಳು ಮತ್ತು ಹೊರ ಪ್ರಪಂಚದ ವಾತಾವರಣವನ್ನು ಉದಾಹರಿಸುತ್ತ ಅವರಿಗೆ ಏಕೆ ಸರಾಸರಿ ಮಾಡಲು ಆಗಲಿಲ್ಲ ಎಂದು ಹೇಳುತ್ತಿರುತ್ತಾರೆ.
ಒಂದು ಸಲ ನೀವು ಯು-ತಿರುವನ್ನು ತೆಗೆದುಕೊಂಡರೆ, ಈ ಎಲ್ಲ ವಿಚಾರಗಳೂ ಕ್ಷುಲ್ಲಕವೆಂದು ಮಾಸಿ ಹೋಗುತ್ತದೆ. ಅವುಗಳು ನಿಧಾನವಾಗಿ ಅವುಗಳ ಪ್ರಧಾನತ್ವವನ್ನು ಕಳೆದುಕೊಳ್ಳುತ್ತವೆ. ಅವುಗಳು ಅನುಮಾನವಿಲ್ಲದೆ ಅಲ್ಲಿ ಇರುತ್ತವೆ, ಆದರೆ ನೀವು ಒಂದೇ ಸಮನಾಗಿ ಮುಂದುವರೆಯುತ್ತೀರ, ಅವುಗಳನ್ನು ನಿಮ್ಮ ಬೀಸು ಗಾಲಿನಲ್ಲಿ ತೆಗೆದುಕೊಂಡು ಹೋಗಬಹುದು. ನಿಮಗೆ ನೀವು ಪ್ರಯೋಜನೀಯ ಅತಿ ಜಾಗರೂಕದಿಂದ, ಅವುಗಳು ಆಡುವುದನ್ನು ನೀವು ನೋಡುವ ಪಹರೆಯವರಾಗುತ್ತೀರ. ಮೊದಲನೆ ಹೆಜ್ಜೆಯನ್ನು ತೆಗೆದಿಡುವುದು ಅಥವಾ ಯು-ತಿರುವನ್ನು ತೆಗೆದುಕೊಳ್ಳುವುದು, ಇದರಲ್ಲಿ ಯಾವುದು ತುಂಬಾ ಕಷ್ಟದ ಕೆಲಸ. ನೀವು ಯಾವಾಗ ಯು-ತಿರುವನ್ನು ತೆಗೆದುಕೊಳ್ಳುತ್ತೀರೋ ಆಗ ಅರ್ಧ ಕೆಲಸ ಆದ ಹಾಗೆ ಆಗುತ್ತೆ. ಆಗ ನೀವು ಅಸ್ತಿತ್ವದ ದಾರಿಗೆ ತುಂಬಾ ಹೊಂದಿಕೊಂಡಂತೆ ಆಗುತ್ತೀರ.
ನೀವು ಯಾವಾಗ ಯು-ತಿರುವನ್ನು ತೆಗೆದುಕೊಳ್ಳುತ್ತೀರೋ, ಸಕಲವೂ ಧ್ಯಾನವಾಗುತ್ತದೆ. ಅದು ನಡೆದಾಡುವುದೇ ಆಗಬಹುದು, ಮಾತಾಡುತ್ತಿರುವುದು, ಸಂಗೀತ ಕೇಳುತ್ತಿರುವುದು ಅಥವಾ ನರ್ತನ ಮಾಡುತ್ತಿರುವುದು, ಅಥವಾ ನಿಮ್ಮ ಬಟ್ಟೆಗಳನ್ನು ಮೈಮೇಲೆ ಹಾಕಿಕೊಳ್ಳುತ್ತಿರುವುದು ಅಥವಾ ಅವುಗಳನ್ನು ತೆಗೆಯುತ್ತಿರುವುದು ಎಲ್ಲವೂ ಧ್ಯಾನವೇ ಆಗುವುದು ಮತ್ತು ಹೆಚ್ಚುತ್ತಿರುವ ಅರಿವಿನಿಂದ ಮಾಡಿದಂತೆ ಆಗುತ್ತೆ.
ನೀವು ಸ್ವಾಭಾವಿಕವಾಗಿ, ನೀವು ಇದನ್ನೆಲ್ಲ ಮಾಡುವಾಗ ಕಾಯುತ್ತಾ ನೋಡುತ್ತಿರಿ ಮತ್ತು ನಿಧಾನವಾಗಿ ಈ ಪೂರ್ತಿ ಪ್ರಪಂಚ ಒಂದು ಮಾಯೆ ಎಂದು ಅರಿತುಕೊಳ್ಳುತ್ತೀರ. ನೀವು ಯಾವಾಗ ಮೊದಲನೆ ನಿಮ್ಮ ನಡಿಗೆಯನ್ನು ಒಳಕ್ಕೆ ತೆಗೆದುಕೊಳ್ಳುತ್ತೀರೋ ನೀವು ಒಳಗಿನ ನೆಗೆತದ ಪರಿಣಾಮವನ್ನು ಹೊಂದುತ್ತೀರ,
ಖಚಿತ ಪರಿಹಾರಗಳು
ಏಕೆಂದರೆ ಮೊದಲನೆ ಹೆಜ್ಜೆಯೇ ನಿಜವಾದ ನೆಗೆತ. ಅಲ್ಲಿಯವರೆಗೆ, ತತ್ತ್ವಜ್ಞಾನಿಗಳಾಗುತ್ತೀರ, ನಿಮ್ಮನ್ನೇ ಮತ್ತು ಮಿಕ್ಕವರನ್ನು ಒಪ್ಪಿಸಿಕೊಳ್ಳುತ್ತೀರ, ನೀವು ಹುಡುಕುತ್ತಿದ್ದೀರ ಎಂದು ಮತ್ತು ಇನ್ನು ಕಮ್ಮಿ ನಿರ್ಧಾರ ದಿನ ದಿನಕ್ಕೆ ಉಂಟು ಮಾಡಿಕೊಂಡು, ಇನ್ನು ಜಾಸ್ತಿ ಗಲಿಬಿಲಿ ಮಾಡಿಕೊಳ್ಳುತ್ತೀರ.
ನೀವು ಮೊದಲನೇ ಹೆಜ್ಜೆಯನ್ನು ಇಟ್ಟಾಗ, ನೀವು ನಿಮ್ಮಷ್ಟಕ್ಕೆ ಜಯಿಸಲು ತಯಾರಾಗಿದ್ದೀರಿ. ಮಿಕ್ಕವರನ್ನು ಜಯಿಸುವುದು ತುಂಬಾ ಸುಲಭ. ಪ್ರಾಮಾಣಿಕವಾಗಿ ಕೆಲವು ಆಯುಧಗಳನ್ನು ತೆಗೆದುಕೊ ಅಥವಾ ನಿಮ್ಮ ನಾಲಗೆಯನ್ನು ಉಪಯೋಗಿಸಿ ಅದನ್ನು ಸುಮ್ಮನೆ ಹರಿಯಲು ಬಿಡಿ, ಅಷ್ಟೆ. ಆದರೆ ನಿಮ್ಮನ್ನು ಗೆಲ್ಲಲು ನಿಜವಾದ ಧೈರ್ಯ ಬೇಕು. ಈ ವಿಶುದ್ಧಿ ಚಕ್ರ ನಿಮ್ಮನ್ನು ಗೆಲ್ಲುವುದರಲ್ಲಿಯೇ ಇದೆ.
ನೀವು ಒಳಗಿನ ಮನಸ್ಸಿನಲ್ಲಿ ನೋಡಿದರೆ, ನೀವು ನಿಮ್ಮಷ್ಟಕ್ಕೆ ಜಯಿಸಲು ತಯಾರಾಗಿರುತ್ತೀರ. ಎಷ್ಟಾದರೊ, ನೀವು (ಒಳಗಿರುವ) ಅಂತಃಸ್ಥಳದ ದಾರಿಯಲ್ಲಿ ಇದ್ದರೆ, ನೀವು ಏನು ಮಾಡುತ್ತಿದ್ದೀರಿ ಎಂದು ನಿಮ್ಮ ಸುತ್ತ ಇರುವ ಜನಗಳಿಗೆ ಏನೂ ಸ್ಪಷ್ಟವಾಗಿ ಇರುವುದಿಲ್ಲ. ನೀವು ಮಾತ್ರ ಎಲ್ಲವೂ ಒಳಗೆ ನಡೆಯುವುದನ್ನು ನೋಡುತ್ತಿರುತ್ತೀರ ಮತ್ತು ಹೊರಗಿನದು ಕಾಣುವುದಿಲ್ಲ. ನೀವು ಮಾತ್ರ ನಿಮ್ಮ ಒಳಗೆ ನಡೆಯುತ್ತಿರುವ, ಬುದ್ಧಿಶಕ್ತಿಯನ್ನು ಹೇಳಲು ನೀವು ಶಕ್ತರಾಗುತ್ತೀರ.
ಜನಗಳು ನಿಮ್ಮ ಸುತ್ತ ಇರುವವರು, ನೀವು ಸಂತೋಷ ಪಡುತ್ತಿರುವ ಅನುಭವಗಳನ್ನು ಅರ್ಥಮಾಡಿಕೊಳ್ಳಲು, ಸಾಧ್ಯವಾಗುವುದಿಲ್ಲ. ನಾನು ಹೇಳುತ್ತೇನೆ: ಯಾರನ್ನೂ ನೀವು ಒಳಗೇ ವಿಕಸಿತವಾಗುತ್ತಿರುವುದನ್ನು ಯಾರಿಗೂ ಒಪ್ಪಿಸುವುದಕ್ಕೆ ಪ್ರಯತ್ನ ಮಾಡಬೇಡಿ. ನೀವು ನಿಮ್ಮ ಅನುಭವಗಳನ್ನು ನಿಮ್ಮ ದೈವತ್ವವಿರುವ ಸ್ನೇಹಿತರ ಜೊತೆ ಯಾರು ನಿಮ್ಮ ಯೋಚನೆಯ ಸಮಾನ ಮನೋಧರ್ಮಕ್ಕೆ ಸರಿ ಹೊಂದಲು ಸಾಧ್ಯವಾಗಿರುತ್ತಾರೋ, ಅವರ ಹತ್ತಿರ ಹಂಚಿಕೊಳ್ಳಬಹುದು. ಆದರೆ ನೀವು ಈ ಅನುಭವಗಳನ್ನು ಬೇರೆ ಜನಗಳ ಜೊತೆ ಪರಮ ಸುಖದ, ಒಳಗಿನ ಪ್ರಯಾಣಕ್ಕೆ ಮರೆಯುವ ಸ್ವಭಾವದವರಾಗಿರುತ್ತಾರೋ ಅಂತಹವರ ಹತ್ತಿರ ಹಂಚಿಕೊಂಡರೆ, ನೀವು ಆಳವಾದ ಸಂಕಟದಲ್ಲಿ ನಿಲ್ಲುತ್ತೀರಿ.
ಸಮಂಜಸವಾದ ಅನುಭವಗಳು ನಿಮ್ಮಲ್ಲಿ ಉಂಟಾಗಲಿ; ಅವುಗಳನ್ನು ಹಿಡಿದುಕೊಳ್ಳುವುದೂ ಬೇಡ ಅಥವಾ ಅದರ ಹಿಂದೆ ಓಡುವುದೂ ಬೇಡ. ಅವುಗಳನ್ನು ನಿಮ್ಮ ಮೇಲೆ ಹಬೆಯ ತರಹ ನಿಮ್ಮ ಮೇಲೆ ಕೆಲಸ ಮಾಡಲು ಬಿಡಿ, ಆಗ
ನೀವು ಪೂರ್ತಿ ಹಣ್ಣಾಗಬಹುದು. ನೀವು ಅದನ್ನು ಹಿಡಿದುಕೊಂಡರೆ, ನೀವು ಕೆಲವು ಜಾಗದಲ್ಲಿ ನಿಂತುಬಿಡುತ್ತೀರ ಮತ್ತು ಎಲ್ಲವನ್ನು ಕಳೆದುಕೊಳ್ಳುತ್ತೀರ.
ಈ ಅನುಭವಗಳೆಲ್ಲ ಒಳಗಿರುವ ಪ್ರಯಾಣದ ಮೇಲೆ ಚೆನ್ನಾಗಿರುವ ಬಾಡಿಕೋರ ಚಿಹ್ನೆಗಳು. ಅವುಗಳು ನೀವು ರಸ್ತೆಯಲ್ಲಿ ಕಾಣುವ (sign board) ಗುರುತು ಹಲಗೆಗಳು. ನೀವು ಆ ಗುರುತು ಹಲಗೆಗಳಿಗೆ ಗಟ್ಟಿಯಾಗಿ ಅಂಟಿಕೊಂಡು ಹೋಗಿ ಸೇರಬೇಕಾದ ಸ್ಥಳವನ್ನು ತಲುಪಿದೆವೆಂದು ಹೇಳುತ್ತೀರ? ಇಲ್ಲ, ಅದಕ್ಕೆ ಅಂಟಿಕೊಳ್ಳಬೇಡಿ. ನೀವು ಸೇರಬೇಕಾದ ಸ್ಥಳಕ್ಕೆ ಚಲಿಸಿ.
ಒಂದು ಪೂರ್ತಿ ವಚನಬದ್ಧನಾಗುವುದು ಮತ್ತು ದೃಢ ಸಂಕಲ್ಪ ಬೇಕಾಗಿರುವುದು ಮತ್ತು ತನ್ನಷ್ಟಕ್ಕೆ ತಾನೇ ನೀವು ತಯಾರಾಗಿರುವಾಗ ನಿಮಗೆ ಬರುವುದು; ನೀವು ಯಾವಾಗ ನಿಮ್ಮ ಮನಸ್ಸನ್ನು ಬೀಳಿಸುತ್ತೀರೋ ಅದೇ ಸಮಾಜ, ಮತ್ತು ನಿಮ್ಮ ಹೃದಯದ ಜೊತೆ ವಾಸಿಸುತ್ತೀರೋ, ಯಾವಾಗ ನೀವು ಇನ್ನೊಬ್ಬರ ಕಡೆಗೆ ಬೆರಳನ್ನು ತೋರಿಸುವುದನ್ನು ನಿಲ್ಲಿಸಿ ನಿಮ್ಮ ಕಡೆಗೆ ತೋರಿಸುತ್ತೀರೋ, ಏನಾದರೂ ಬರಲಿ, ನೀವು ಯಾವಾಗ ನಿಮ್ಮ ಮನಸ್ಸು ಸಾಮಾಜಿಕ (societal) ಆಗಿದೆ ಮತ್ತು ನಿಮ್ಮ ಹೃದಯವು ಸ್ವಾಭಾವಿಕವಾಗಿದೆ ಎಂದು ಅನುಭವದಿಂದ ಅರ್ಥಮಾಡಿಕೊಂಡರೆ ಬರುತ್ತದೆ.
ಇನ್ನು ಒಂದು ವಿಚಾರ: ಜನಗಳು ಯಾವಾಗ ನಿಮ್ಮ ಅನುಭವಗಳಿಗೆ ರುಜುವಾತುಗಳನ್ನು ಕೇಳುತ್ತಾರೊ, ಅವರಿಗೆ ರುಜುವಾತು ಕೊಡುವ ಅವಶ್ಯಕತೆ ಇಲ್ಲವೆಂದು ಸರಿಯಾಗಿ ಅರ್ಥಮಾಡಿಕೊಳ್ಳಿ. ನಿಮ್ಮ ಅನುಭವಗಳು ಅಷ್ಟು ಪರಿಚಯವಾಗಿವೆ ಮತ್ತು ನೀವು ಇನ್ನೊಬ್ಬರ ಹತ್ತಿರ ಪರಿಣಾಮಕಾರಿಯಾಗಿ ಹಂಚಿಕೊಳ್ಳಲು ಆಗದಂತೆ ಅದು ನಿಮ್ಮ ಸ್ವಂತದ್ದಾಗಿದೆ. ನಿಜವಾಗಿ ಒಂದು ವೇಳೆ ನೀವು ಹಂಚಿಕೊಂಡರೆ, ನೀವು ನಿಮ್ಮ ಎಲ್ಲ ಅನುಭವಗಳನ್ನು ಕೆಳಗೆ ತರುವಂತರಾಗುತ್ತೀರ. ಮತ್ತು ಆ ಇತರೆ ಮನುಷ್ಯ ನೀವು ಹೇಳುವುದನ್ನು ನಂಬದೆಯೂ ಇರಬಹುದು. ನೀವು ನಿಮ್ಮನ್ನೆ ಮೋಸಪಡಿಸಿಕೊಳ್ಳುತ್ತಿದ್ದೀರೆಂದು ಹೇಳಬಹುದು. ನೀವು ಎಲ್ಲವನ್ನು ತರ್ಕಬದ್ಧವಾಗಿ ಅವರಿಗೆ ವಿಶದೀಕರಿಸಬೇಕೆಂದು ಇಷ್ಟ ಪಡುತ್ತಾರೆ.
ತರ್ಕದಲ್ಲಿ ಈ ಅನುಭವಗಳನ್ನು ವಿವರಿಸುವುದಕ್ಕಾಗುವುದಿಲ್ಲ. ದೇವರು ತರ್ಕಕ್ಕಿಂತ ಮೇಲೆ ಇದ್ದಾನೆ. ತರ್ಕವು ದೇವರನ್ನು ವಿವರಿಸಿದರೆ, ಆಗ ತರ್ಕವು ದೇವರಿಗಿಂತ ಮಿಗಿಲಾಗಿರಬೇಕು; ಆದರೆ ವಿಚಾರ ಅದಲ್ಲವಲ್ಲ, ಆದ್ದರಿಂದ ಸಮಂಜಸವಾಗಿ
ವಿಶ್ರಮಿಸಿಕೊಳ್ಳಿ ಮತ್ತು ನಿಮಗೆ ಅನುಭವಗಳು ಸಂಭವಿಸಲು ಬಿಡಿ. ಯಾರಾದರೂ ನಿಮ್ಮನ್ನು ಪ್ರಶ್ನಿಸಿದಾಗ, ನಗುವ ಪರಿಪಕ್ವತೆಯನ್ನು ಹೊಂದಿ ಮುಂದಕ್ಕೆ ಹೋಗಿ. ಒಂದು ನಗುವು ನೀವು ಮಾತಿನಲ್ಲಿ ಹೇಳಲಾಗದಂತ ವಿಷಯಗಳನ್ನು ತುಂಬಾ ಪರಿಣಾಮಕಾರಿಯಾಗಿ ತಿಳಿಸಬಹುದು.
ದೊಡ್ಡ ಜ್ಞಾನೋದಯವಾದ ಗುರುಗಳು ಅದ್ಭುತವಾದ ಸಂತೋಷವನ್ನು ಅಸ್ತಿತ್ವದ ಜೊತೆ ಅನುಭವಿಸಿರುತ್ತಾರೆ. ಜನಗಳು ನನ್ನ ಅನುಭವಗಳನ್ನು ತಿಳಿಸುವಂತೆ ಕೇಳುತ್ತಾರೆ, ಆದರೆ ನಾನು ಹೇಳುತ್ತೇನೆ, ಇದೆಲ್ಲ ಅಷ್ಟು ಸ್ವಂತ ವಿಷಯ ಮತ್ತು ಪರಿಚಯವಾಗಿರುವುದು, ನಾನು ಇದನ್ನು ಅಕ್ಷರದಲ್ಲಿ ವಿಶದೀಕರಿಸಲು ಸಾಧ್ಯವಾಗುವುದಿಲ್ಲ. ನಾನು ದಾರಿ ತೋರಿಸುತ್ತೇನೆ, ಮಾರ್ಗದರ್ಶಿಯಾಗುತ್ತೇನೆ, ನೀವು ಅನುಭವ ಪಡೆಯಲು ದಾರಿ ತೋರಿಸುತ್ತೇನೆ. ನಿಮಗೆ ವಿವರಿಸಲು ಪ್ರಾರಂಭ ಮಾಡಿದ ತಕ್ಷಣ ನಾನು ಲೌಕಿಕನಾಗುತ್ತೇನೆ.
ಆದರೆ ಒಂದು ವಿಚಾರ ನಾನು ಒಂದು ಮಹತ್ತರವಾದ ಭರವಸೆಯನ್ನು ನೀವು ಅನುಭವಿಸುವಂತೆ, ನಿಮ್ಮಲ್ಲಿ ಆಪ್ತಿಯನ್ನು ಹೊಂದಿದ್ದರೆ ಕೊಡಬಹುದು. ಗುರುವಿನಿಂದ ಕೊಡಲ್ಪಟ್ಟ ಭರವಸೆ, ನೀವು ಸಾಧಿಸಲು ಸಾಕಷ್ಟು ಶಕ್ತಿಯಾಗುತ್ತೆ.
ಸರಿಯಾಗಿ ಅರ್ಥಮಾಡಿಕೊಳ್ಳಿ, ನೀವು ಅನುಭವಿಸುವ ಸಂತೋಷ ಯಾವುದು ಕಾರಣವನ್ನು ಹೊಂದಿಲ್ಲ. ಜನಗಳು ಯೋಚನೆಯನ್ನು ಪರಿಮಿತಗೊಳಿಸಿ ಅವರು ನೀವು ಏನೂ ಕಾರಣವಿಲ್ಲದೆ ಸಂತೋಷವಾಗಿರುವುದನ್ನು ಯಾವಾಗ ನೋಡಿದರೂ ಆಗ ನೀವು ಹುಚ್ಚರಾಗಿದ್ದೀರೆಂದು ಯೋಚನೆ ಮಾಡಿಯೇ ತೀರುತ್ತಾರೆ. ನೀವು ಸಂತೋಷವಾಗಿರುವುದರ ಕಾರಣ ಮತ್ತು ಪರಿಣಾಮದ, ಸಂಬಂಧಗಳ ಪ್ರಕರಣ ಮಾತ್ರ ತಿಳಿದಿರುತ್ತಾರೆ. ಅವರ ಪ್ರಕಾರ, ಹೊರಗಿನ ಕಾರಣ ಒಂದೇ ನಿಮ್ಮ ಒಳಗಿನ ಸಂತೋಷಕ್ಕೆ ಕಾರಣ.
ನಾನು ಇದನ್ನೆಲ್ಲ ನಿಮ್ಮ ಧ್ಯಾನ ಮತ್ತು ದೈವತ್ವದ ಮೇಲಿನ ಪ್ರಶ್ನೆಗಳಿಗೆ ಉತ್ತರವಾಗಿ ಹೇಳುತ್ತಿದ್ದೇನೆ. ನಾವು ಮುಖ್ಯವಾದ ವಿಷಯದಿಂದ ಆ ಕಡೆ ಚಲಿಸುತ್ತಿದ್ದೇನೆ. ನಾವು ಮುಖ್ಯವಾದ ವಿಷಯದಿಂದ ಆ ಕಡೆ ಚಲಿಸುತ್ತಿದ್ದೇವೆಂದು ಯೋಚನೆ ಮಾಡಬಹುದು. ಇಲ್ಲ! ಈ ಚಕ್ರ, ಈ ವಿಶುದ್ಧಿ ಚಕ್ರವು ನೀವೇ ವಿಕಸಿಸುವುದರ ಮೇಲೆ ಇದೆ; ಸರಿಸಾಟಿ ಇಲ್ಲದ ನಿಮ್ಮತನವನ್ನು ಕಂಡು ಹಿಡಿಯುವುದರ ಮೇಲೆ ಪೂರ್ತಿ ಅರಿವು ಮತ್ತು ಆ ವಿಚಾರವನ್ನು ತಿಳಿದುಕೊಳ್ಳುವುದರಲ್ಲಿ ಮತ್ತು ಅಲ್ಲಿ ಹೋಲಿಕೆ ಮತ್ತು
ಅಸೂಯೆ ಜೀವನದಲ್ಲಿರುವುದಕ್ಕೆ ಅವಕಾಶವೇ ಇಲ್ಲ ಎಂದು ಅರ್ಥ ಮಾಡಿಕೊಳ್ಳುವುದು. ಸುಮ್ಮನೆ ನಾನು ಏನೇನು ಹೇಳಿದ್ದೇನೊ ನೀವು ಅದನ್ನು ತೆಗೆದುಕೊಳ್ಳಿ, ಮತ್ತು ಆ ಶಕ್ತಿಯು ನಿಮ್ಮನ್ನು ಬದಲಾಯಿಸಲು ಬಿಡಿ. ಅದ್ಭುತಗಳು ನಡೆಯಬಹುದು ನಿಮ್ಮಲ್ಲಿಯೇ, ಎಂದು ನಾನು ಹೇಳುತ್ತೇನೆ. ಅದು ನಿಮ್ಮ ಅಸ್ತಿತ್ವದ ಗುಣಗಳನ್ನೇ ಬದಲಾಯಿಸಬಹುದು.
ಆಗಲಿ... ಈಗ, ನಾವು ಚರ್ಚಿಸಿದ ಎಲ್ಲ ವಿಷಯಗಳಿಂದಲೂ, ಹೋಲಿಕೆ ಮತ್ತು ಅಸೂಯೆಗಳು ಅಸ್ತಿತ್ವರಹಿತವಾದವುಗಳು ಮತ್ತು ನಿಮಗೆ ಪ್ರತ್ಯಕ್ಷವಾಗಿ ಸಂಬಂಧಿತವಾಗಿರುವುದೇ ಇಲ್ಲ ಎಂದು ನೀವು ಅರ್ಥಮಾಡಿಕೊಂಡಿರಿ. ಈಗ, ನಾನು ವಿಶುದ್ಧಿ ಚಕ್ರ ಮತ್ತು ಅದರೊಳಗೆ ಇರುವ ಚೈತನ್ಯದ ಮನೆಯ ಬಗ್ಗೆ ಮತ್ತಷ್ಟು ವಿವರಿಸುತ್ತೇನೆ.
ನೋಡಿ: ನಮ್ಮೊಳಗೆ ಮೂರು ಚೈತನ್ಯದ ಪದರಗಳಿವೆ. ಮೊದಲನೆಯ ಚೈತನ್ಯದ ಪದರವು ನಮ್ಮ ಮನಸ್ಸಿನಿಂದ ಆಗಿದ್ದು ಮತ್ತು ಇದನ್ನು ನಾವು ದೈನಂದಿನ ಚಟುವಟಿಕೆಗಳಿಗೆ ಬೆಳಿಗ್ಗೆಯಿಂದ ರಾತ್ರಿಯತನಕ ಉಪಯೋಗಿಸುತ್ತೇವೆ, ಒಮ್ಮೆ ಈ ಚೈತನ್ಯವು ಬರಿದಾದರೆ, ನೀವು ಆಯಾಸ ಹೊಂದಿದವರಂತೆ ಭಾವಿಸುತ್ತೀರಿ ಮತ್ತು ನಿಮಗೆ ಹೆಚ್ಚಿನ ಕೆಲಸಗಳನ್ನು ಮಾಡಲು ಕೊಟ್ಟರೆ ರೇಗುತ್ತೀರಿ.
ಎರಡನೆಯ ಚೈತನ್ಯದ ಪದರವು ತುರ್ತು ಪರಿಸ್ಥಿತಿಯ ಪದರವು. ನಿಮ್ಮ ಮನೋಭಾವನೆಗಳಿಂದ ಈ ಚೈತನ್ಯವು ಮೇಲೆಳುವಂತಹದು. ತುರ್ತು ಸಮಯದಲ್ಲಿ ಈ ಚೈತನ್ಯವು ತೆರೆದುಕೊಳ್ಳುವುದು. ನೀವು ರಸ್ತೆಯ ಮೇಲೆ ನಡೆಯುತ್ತಿದ್ದೀರ ಎಂದಿಟ್ಟುಕೊಳ್ಳಿ. ಒಂದು ನಾಯಿಯು ನಿಮ್ಮನ್ನು ಅಟ್ಟಿಸಿಕೊಂಡು ಬಂದರೆ, ಭಯದ ಮನೋಭಾವನೆಯು ಮೇಲಕ್ಕೆ ಬರುವುದು ಮತ್ತು ನೀವೇನು ಮಾಡುವಿರಿ? ನೀವು ಸಾಧಾರಣ ಸನ್ನಿವೇಶಗಳಲ್ಲಿ ಓಡಬಲ್ಲ ಅತಿ ಹೆಚ್ಚಿನ ವೇಗಕ್ಕಿಂತಲೂ ಅಧಿಕ ವೇಗದಲ್ಲಿ ಓಡುವಿರಿ, ಅಲ್ಲವೆ? ನೀವು ಸಾಯುವಂತೆ ಆಯಾಸಗೊಂಡಿದ್ದರೂ ಸಹ, ನೀವು ನಿಮ್ಮ ಕೈಕಾಲುಗಳನ್ನು ಆಡಿಸಲು ಸಾಧ್ಯವಾಗದಿದ್ದರೂ ಸಹ, ನೀವು ಬೇರೆ ರೀತಿಯ ಚೈತನ್ಯದಿಂದ ಓಡುವಿರಿ. ಇದೇ ತುರ್ತು ಪರಿಸ್ಥಿತಿಯ ಚೈತನ್ಯ - ನಿಮ್ಮ ಮನೋಭಾವನೆಯಿಂದ ಮೇಲೆಳುವಂತಹದು.
ಮೂರನೆಯ ಚೈತನ್ಯದ ಪದರವು ನಿಮ್ಮ ಅಸ್ತಿತ್ವದ ಮಟ್ಟಕ್ಕೆ ಚೈತನ್ಯ. ಇದೊಂದು ನಿಮ್ಮೊಳಗೆ ಇರುವ, ನೀವು ಉಪಯೋಗಿಸದೇ ಇರುವಂತಹ ಅಕ್ಷಯ ಚೈತನ್ಯದ ಸೆಲೆ.
ಆಳವಾದ ಧ್ಯಾನದಿಂದ ಈ ಚೈತನ್ಯದ ಪದರವನ್ನು ತೆರೆಯಬಹುದು. ನೀವು ಒಪ್ಪಿಕೊಳ್ಳಿ ಇಲ್ಲವೆ ಬಿಡಿ, ನೀವು ಈ ಮೂರೂ ಚೈತನ್ಯದ ಪದರಗಳೊಂದಿಗೆ ಸಂಪರ್ಕವನ್ನು ಹೊಂದಿರುತ್ತೀರಿ. ಈ ವಿಶುದ್ಧಿ ಚಕ್ರವು ತನ್ನೊಳಗೆ ಈ ಉನ್ನತ ಚೈತನ್ಯದ ಸ್ತರಗಳಿಗೆ ಕೀಲಿಕೈಯನ್ನು ಹಿಡಿದಿದೆ.
ನನ್ನ ಅಲೆದಾಡುವ ದಿನಗಳಲ್ಲಿ ನಡೆದ ಸತ್ಯ ಘಟನೆಯನ್ನು ನಾನು ನಿಮಗೆ ವಿವರಿಸುತ್ತೇನೆ.
ಆಲ್ಮೋರಾ ಎಂಬುದು ಹಿಮಾಲಯದಲ್ಲಿರುವ ಒಂದು ಸುಂದರ ಸ್ಥಳ. ಇಲ್ಲಿ ಧ್ಯಾನ ಮಾಡಲು ಬಯಸುವವರಿಗಾಗಿ ಒಂದು ಚಿಕ್ಕ ಆಶ್ರಮ ಮತ್ತು ಕೆಲವು ಗುಡಿಸಲುಗಳಿವೆ.
ಈ ಸ್ಥಳದ ಬಗ್ಗೆ ಇರುವ ಒಂದೇ ಒಂದು ಸಂಗತಿಯೆಂದರೆ, ರಾತ್ರಿಯ ವೇಳೆ ಈ ಸ್ಥಳದಲ್ಲಿ ಹುಲಿಗಳು ಸಂಚರಿಸುತ್ತಿರುತ್ತವೆ ಎಂಬುದು!
ನಾನು ಅಲೆದಾಡುತ್ತಿದ್ದ ದಿನಗಳಲ್ಲಿ ನಾನು ಸ್ವಲ್ಪ ಕಾಲ ಅಲ್ಲಿದ್ದೆ. ನಾನು ಅಲ್ಲಿ ದೀರ್ಘಕಾಲ ಧ್ಯಾನವನ್ನು ಮಾಡುತ್ತಿದ್ದೆ.
ಅವರಲ್ಲಿ ಒಂದು ಪದ್ಧತಿ ಇದ್ದಿತು. ಅದರಂತೆ ಆಶ್ರಮದ ಮುಖ್ಯಸ್ಥನು ಹುಲಿಗಳು ಬರುತ್ತಿರುವುದಾಗಿ ಗ್ರಹಿಸಿದರೆ, ಅವನೊಂದು ಗಂಟೆಯನ್ನು ಬಾರಿಸುತ್ತಿದ್ದನು ಮತ್ತು ಎಲ್ಲಾ ಸಾಧುಗಳೂ ತಮ್ಮ ತಮ್ಮ ಗುಡಿಸಲುಗಳೊಳಗೆ ಸೇರಿಕೊಂಡು ಬಾಗಿಲನ್ನು ಹಾಕಿಕೊಂಡು, ಅವರು ಹೊರ ಬರುವಂತೆ ಹೇಳುವವರೆಗೂ ಒಳಗೇ ಇರುತ್ತಿದ್ದರು.
ಅಂತಹ ಒಂದು ಸಂದರ್ಭದಲ್ಲಿ, ರಾತ್ರಿ ಸಮಯದಲ್ಲಿ ನಾವು ಧ್ಯಾನ ಮಾಡುತ್ತಿರುವಾಗ, ಗಂಟೆಯು ಮೊಳಗಿತು ಮತ್ತು ನಾವೆಲ್ಲರೂ ನಮ್ಮ ನಮ್ಮ ಗುಡಿಸಲುಗಳೊಳಗೆ ಸೇರಿಕೊಂಡೆವು.
ಮರುದಿನ, ಆಶ್ರಮದ ಮುಖ್ಯಸ್ಥನು ನಾವುಗಳೆಲ್ಲರೂ ಕ್ಷೇಮದಿಂದ ಇದ್ದೇವೆಯೇ ಎಂದು ನೋಡಲು ಎಲ್ಲ ಕಡೆ ಸುತ್ತಿಕೊಂಡು ಬಂದನು.
ಅವನು ಒಂದು ಗುಡಿಸಲು ಮುಚ್ಚಿದ್ದದನ್ನು ಕಂಡನು ಮತ್ತು ಅದರೊಳಗಿದ್ದ ಸನ್ಯಾಸಿಯು ತೆರೆದ ಕಿಟಕಿಯಿಂದ ಬಾಗಿಲನ್ನು ತೆರೆಯುವಂತೆ ಕೂಗಿಕೊಳ್ಳುತ್ತಿದ್ದನು. ನಾವೆಲ್ಲ ಆ ಗುಡಿಸಲಿನತ್ತ ಓಡಿ ಆ ಬಾಗಿಲನ್ನು ತೆರೆಯಲು ನೋಡಿದೆವು, ಆದರೆ ತೆರೆಯಲು ನಮಗೆ ಸಾಧ್ಯವಾಗಲಿಲ್ಲ.
ಕೊನೆಗೆ, ನಮ್ಮಲ್ಲಿ ಕೆಲವರು ಕಿಟಕಿಯ ಮುಖಾಂತರ ಗುಡಿಸಲಿನ ಒಳ ಹೊಕ್ಕೆವು. ನಮ್ಮ ಆಶ್ಚರ್ಯಕ್ಕೆ ಆ ಸನ್ಯಾಸಿಯು ಒಂದು ದೊಡ್ಡ ಬೀಸುವ ಕಲ್ಲನ್ನು ಬಾಗಿಲಿಗೆ ಅಡ್ಡವಾಗಿಟ್ಟು ಹುಲಿಯು ಅದನ್ನು ತಳ್ಳಿಕೊಂಡು ಬರದೇ ಇರಲೆಂದು ಇಟ್ಟಿದ್ದನು. ನಾವೆಲ್ಲರೂ ಸೇರಿ ಬಾಗಿಲನ್ನು ತೆರೆಯಲು ಆ ಕಲ್ಲನ್ನು ದೂರ ಸರಿಸಿದೆವು. ನಮಗೆ ತಕ್ಷಣ ಹೊಳೆದಿದ್ದು ಮೊದಲನೆಯದಾಗಿ ಅದು ಹೇಗೆ ಈ ಸನ್ಯಾಸಿಯು ಆ ಕಲ್ಲನ್ನು ಒಬ್ಬಂಟಿಗನಾಗಿ ಬಾಗಿಲಿಗೆ ಅಡ್ಡವಾಗಿ ಇಟ್ಟನು ಎಂದು? ನಾವು ಆತನನ್ನು ಅದು ಹೇಗೆ ಅದನ್ನು ಜರುಗಿಸಿದನು ಎಂದು ಕೇಳಿದೆವು.
“ಅದನ್ನು ಜರುಗಿಸುವುದೇ? ನಾನು ಸುಮ್ಮನೇ ಅದನ್ನು ಎತ್ತಿ ಇಟ್ಟೆನು!” ಎಂದು ಉತ್ತರಿಸಿದನು.
ಅವನಿಗೆ ಹುಲಿಯು ಬರುತ್ತಿರುವ ಎಚ್ಚರಿಕೆಯ ಗಂಟೆಯನ್ನು ಕೇಳಿ, ಆ ಕಲ್ಲನ್ನು ಸುಮ್ಮನೆ ಎತ್ತಿ ಬಾಗಿಲಿಗೆ ಅಡ್ಡವಾಗಿ ಇಟ್ಟನು ಅಷ್ಟೆ!
ನಾನು ಹೇಳಲು ಉದ್ದೇಶಿಸಿರುವ ತುರ್ತು ಪರಿಸ್ಥಿತಿಯ ಚೈತನ್ಯದ ಪದರ ಎಂದರೆ ನಿಖರವಾಗಿ ಇದನ್ನೇ ಸಾಮಾನ್ಯ ಸಂದರ್ಭಗಳಲ್ಲಿ ಅದೇ ಮನುಷ್ಯನು ಅದೇ ಕಲ್ಲನ್ನು ಎತ್ತಲು ಸಾಧ್ಯವಾಗುತ್ತಿರಲಿಲ್ಲ. ನಿಮಗೆ ಅರ್ಥವಾಯಿತೇ? ಈ ಘಟನೆಯು ಮುಗಿದ ನಂತರ ಕೂಡ, ಅವನೆ ಆ ಕಲ್ಲನ್ನು ಬಾಗಿಲಿನಿಂದಾಚೆ ಎತ್ತಿ ಇಡಲಾಗಲಿಲ್ಲ!
ಭಯ ಮತ್ತು ಅತಿಯಾದ ಆಸೆಯಿಂದ ಎರಡನೆಯ ಚೈತನ್ಯದ ಹಂತವು ತೆರೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ಅತಿ ಮುಖ್ಯವಾದ ಸಭೆಯು ಇದ್ದರೆ, ನಿಮಗೆ ಆಯಾಸದ ಅನುಭವವಾಗುತ್ತದೆಯೇ? ಇಲ್ಲ! ನೀವು ಚಟುವಟಿಕೆಯಿಂದ ಮತ್ತು ತಾಜಾತನದಿಂದ ಇರುತ್ತೀರಿ. ಸಭೆಯಲ್ಲಿ ಭಾಗವಹಿಸಬೇಕೆಂಬ ಅಪೇಕ್ಷೆ ಅಥವಾ ಆಸೆಯು ನಿಮ್ಮನ್ನು ಒಂದು ಚೈತನ್ಯಶೀಲ ಸ್ಥಿತಿಯಲ್ಲಿ ಇಟ್ಟಿರುತ್ತದೆ.
ಈ ಎಲ್ಲಾ ಮೂರು ಚೈತನ್ಯದ ಪದಗಳನ್ನು ಹೊರ ತೆರೆಯಲು ವಿಶುದ್ಧಿ ಚಕ್ರವೇ ಬಾಗಿಲು. ಆದರೆ ನಿಮಗೆ ಅದರ ಅರಿವಿಲ್ಲ, ಏಕೆಂದರೆ ನೀವು ಬಹಳ ಸಮಯದ ತನಕ ಈ ಪದರಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಯೇ ಇಲ್ಲ. ಇದು ಈ ರೀತಿ: ಎಲ್ಲಾ ಬಂದರುಗಳಲ್ಲಿಯೂ ದೋಣಿಗಳನ್ನು ಇಡಲು ದೋಣಿಗಳ ಒಡ್ಡು (boat jetty) ಎಂಬುದೊಂದು ಇರುತ್ತದೆ. ಸಾಮಾನ್ಯವಾಗಿ ಹೇಳುವ ಸಾಮಿತಿಯೊಂದು ಇದೆ: ದೋಣಿಯನ್ನು ಒಡ್ಡಿನಲ್ಲಿ ಬಹಳ ಸಮಯ ತೇಲಿ ಬಿಡದಿದ್ದರೆ, ಅದಕ್ಕೆ ತಾನು ನೀರಿಗೆ ಸೇರಿದವನೆಂಬುದು ಮರೆತು ಹೋಗಿ ಬಿಡುವುದಂತೆ!
ಇದೇ ರೀತಿ ನೀವು ಚೈತನ್ಯದ ಮೂರನೆಯ ಪದರವನ್ನು ಬಹಳ ಸಮಯ ಉಪಯೋಗಿಸದಿದ್ದರೆ, ನೀವು ಅದಕ್ಕೆ ಸೇರಿದವರೋ ಅಥವಾ ಅದು ನಿಮಗೆ ಸೇರಿದ್ದೋ ಎಂಬುದನ್ನು ನೀವು ಮರೆಯುತ್ತೀರ, ಧ್ಯಾನವು ನಿಮಗಾಗಿ ಈ ಮೂರನೆಯ ಚೈತನ್ಯದ ಪದರವನ್ನು ತೆರೆಯುತ್ತದೆ.
ನೀವು ಈ ಚಕ್ರವನ್ನು ಶುದ್ಧೀಕರಿಸಿದ ಸ್ಥಿತಿಯಲ್ಲಿ ಇಟ್ಟರೆ, ನೀವು ಬಾಹ್ಯ ಪ್ರಪಂಚದಲ್ಲಿ ಅತ್ಯುನ್ನತ ಎತ್ತರಕ್ಕೂ ಮತ್ತು ಒಳ ಪ್ರಪಂಚದಲ್ಲಿ ಅತಿ ಆಳಕ್ಕೂ ಹೋಗಬಹುದು. ನಿಮಗೆ ಕೀಳರಿಮೆ (ಕಡಿಮೆ ಗೌರವ) ಅಥವಾ ಅಸೂಯೆ ಇದ್ದರೆ, ಈ ಚಕ್ರವು ಮುಚ್ಚಿಕೊಂಡಿರುತ್ತದೆ. ಕೀಳರಿಮೆ (ಕಡಿಮೆ ಗೌರವ) ಅಸೂಯೆಯ ಜಡರೂಪದ ಪ್ರಕಟಣೆ ಅಷ್ಟೆ. ಅಸೂಯೆಯು ಚುರುಕಿನ ರೂಪ, ಕೀಳರಿಮೆಯು ಜಡ ರೂಪ. ಎರಡೂ ಹೋಲಿಕೆ ಮಾಡುವುದರಿಂದ ಮೂಡುವ ಫಲಿತಾಂಶ ಕೀಳರಿಮೆಯಿಂದ (ಕಡಿಮೆ ಗೌರವದಿಂದ) ನೀವು ಅಪ್ರಯೋಜಕರೆನಿಸಿ ಅದಕ್ಕೇ ಸಮಾಧಾನ ಹೊಂದಿಬಿಡುತ್ತೀರ. ಅಸೂಯೆಯಲ್ಲಿ ನಿಮಗೆ ಅದನ್ನು ತಾಳಿಕೊಳ್ಳಲಾಗದೆ ಪ್ರತಿಕ್ರಿಯಿಸಲು ಪ್ರಾರಂಭಿಸುತ್ತೀರ; ಅದೇ ವ್ಯತ್ಯಾಸ.
ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಿ: ನಿಮ್ಮಲ್ಲಿರುವ ಯಾವುದೇ ಆತ್ಮಗೌರವ ನೀವು ದೇವರಿಗಿಂತ ಕಡಿಮೆಯವರೆಂದು ಸೂಚಿಸಿದರೆ, ಅದು ಕಡಿಮೆ ಆತ್ಮಗೌರವದ್ದು ಏಕೆಂದರೆ ನೀವು ದೇವರು ಆಗಿದ್ದೀರ. ಅದಕ್ಕೇ ನಾನು ಹೇಳುವುದು ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಲು ಆಸ್ಪದವೇ ಇಲ್ಲ ಎಂದು.
ನೀವು ನಿಮ್ಮೊಳಗೆ ಅಡಗಿರುವ ಅಕ್ಷಯ ಸಾಮರ್ಥ್ಯವನ್ನು ಅರ್ಥಮಾಡಿ ಕೊಳ್ಳಬೇಕಾದರೆ, ಈ ಚಕ್ರದಲ್ಲಿ ಅಡಗಿರುವ ಎರಡನೆಯ ಮತ್ತು ಮೂರನೆಯ ಪದರಗಳಲ್ಲಿ ಅಡಗಿರುವ ಚೈತನ್ಯವನ್ನು ಅರ್ಥಮಾಡಿಕೊಳ್ಳಬೇಕು. ನಿಜವಾಗಿಯೂ ಈ ಚಕ್ರವು ನಮ್ಮ ಚೈತನ್ಯದ ನೆಲೆ. ನಾವು ಅದರ ಮೇಲೆ ಗಮನವನ್ನು ಕೇಂದ್ರೀಕರಿಸಿದರೆ, ಅದರಿಂದ ಪಸರಿಸುತ್ತಿರುವ ಚೈತನ್ಯದ ಅನುಭವವನ್ನು ಹೊಂದಬಹುದು.
ಹಿಮಾಲಯದಲ್ಲಿ ನಾನು ಅಲೆದಾಡುತ್ತಿರುವಾಗ, ಬೇಕಾದಷ್ಟು ಮೈಲಿಗಳನ್ನು ನಾನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿದ್ದೆ. ನಾನು ಪ್ರಾರಂಭದಲ್ಲಿ ಕಡಿಮೆ ವೇಗದಲ್ಲಿ ವಿಶುದ್ಧಿ ಚಕ್ರದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾ ನಡೆಯುತ್ತಿದ್ದೆ. ಚಕ್ರದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾ ನನ್ನ ವೇಗವನ್ನು ಹೆಚ್ಚಿಸುತ್ತಾ ಶ್ರಮವಿಲ್ಲದೆ ನಡೆಯುತ್ತಿದ್ದೆ. ಒಂದು ಅಂಶದ ನಂತರ, ನನ್ನ ದೇಹವು ತೂಗಾಡುವ ವೇಗದಲ್ಲಿ ಚಲಿಸುತ್ತಿರುತ್ತಿತ್ತು ಮತ್ತು ನಾನು ಕೇವಲ ಒಬ್ಬ ಪ್ರೇಕ್ಷಕನಾಗಿರುತ್ತಿದ್ದೆ! ನಾನು ಈ ರೀತಿ ಅನೇಕ ಮೈಲುಗಳನ್ನು ಕ್ರಮಿಸುತ್ತಿರುತ್ತಿದ್ದೆ.
ನೀವು ಸೇವಿಸುವ ಆಹಾರ ಮತ್ತು ಮಾಡುವ ವ್ಯಾಯಾಮಗಳೆಲ್ಲವೂ ನಿಮ್ಮ ಚೈತನ್ಯದ ಮೊದಲನೆಯ ಪದರಕ್ಕೆ ಸಹಾಯವಾಗುತ್ತದೆ. ಆಹಾರ ಒಂದೇ ನಿಮಗೆ ಚೈತನ್ಯವನ್ನು ನೀಡುವುದಿಲ್ಲ. ಕೇವಲ ಆಹಾರ ಮಾತ್ರವೇ ಚೈತನ್ಯವನ್ನು ನೀಡುತ್ತದೆ ಎಂಬುದು ಒಂದು ತಪ್ಪು ಕಲ್ಪನೆ. ಆಹಾರವು ಚೈತನ್ಯದ ಒಂದು ಸೆಲೆ ಮಾತ್ರ ಅಷ್ಟೆ.
ಟಿಬೆಟ್ನಲ್ಲಿರುವ ಯೋಗಿಗಳು ತಿನ್ನುವುದೇ ಇಲ್ಲ. ಅವರು ಬಿಲ್ವ ಫಲದ ಹೊರಕವಚದಿಂದ ಕೇವಲ ನೀರನ್ನು ಮಾತ್ರ ಕುಡಿಯುತ್ತಾರೆ. ನಾನು ಅದೇ ರೀತಿ ಆರು ತಿಂಗಳುಗಳ ಕಾಲ ಹಿಮಾಲಯದಲ್ಲಿ ಬದುಕಿದೆ. ನಾನು ಸೂರ್ಯನಿಂದ, ಸ್ನಾನ ಮಾಡುವಾಗ ನೀರಿನಿಂದ, ಉಸಿರಾಡುವಾಗ ಗಾಳಿಯಿಂದ ಚೈತನ್ಯವನ್ನು ಪಡೆದೆ. ಇವೆಲ್ಲವೂ ಯೋಗಿಗಳ ವಿಧಾನಗಳು. ತಪಸ್ಸು ಎಂಬುದು ಪರಮಾನಂದಕ್ಕಾಗಿ ಜೀವನಪರ್ಯಂತ ನೀವು ಮಾಡುವ ದೇಹದಂಡನೆ. ಇದು ಮಾತ್ರವೇ ನಿಮ್ಮ ಅಸ್ತಿತ್ವವನ್ನು ತುಡಿಸುತ್ತಿರುತ್ತದೆ.
ನೀವು ಬೇರೆಯವರೊಂದಿಗೆ ಸ್ಪರ್ಧಿಸಲು ಮೊದಲು ಮಾಡಿದರೆ, ನೀವು ನಿಮ್ಮನ್ನೇ ಮರೆತುಬಿಡುತ್ತೀರ. ನಿಮ್ಮ ತೆರೆಯದೇ ಇರುವಂತಹ (untapped) ಚೈತನ್ಯದ ಸೆಲೆಯಾದ ನಿಮ್ಮದೇ ಅಸ್ತಿತ್ವವನ್ನು ಬಲಪಡಿಸುವುದನ್ನು ಮರೆತಿದ್ದೀರ. ಕೇವಲ ಭೌತಿಕ ಬಲ ಮತ್ತು ಮಾನಸಿಕ ಬಲ ಮಾತ್ರವೇ ಇದ್ದು ಆತ್ಮದ ಬಲವಿಲ್ಲದಿದ್ದರೆ, ಉಪಯೋಗವಿಲ್ಲ. ನೀವು ಆತ್ಮದ ಬಲವನ್ನು ಕಂಡುಕೊಂಡಾಗ ಮಾತ್ರವೇ ನೀವು ನಿಮ್ಮ ಜೀವನದ ಸೆಲೆಯನ್ನು ಮುಟ್ಟಿದಂತಾಗುತ್ತದೆ. ಸರಿ...
ಸ್ವಾಮೀಜಿ, ನಾವು ಅಸೂಯಾರಹಿತರಾಗಲು ಸಾಧ್ಯವಾದರೆ, ನಮ್ಮ ಜೀವನದ ಕೊರತೆಗಳಲ್ಲಿ ಕೊನೆಯ ಪಕ್ಷ ಒಂದು ಸಂಗತಿಯಿಂದಲಾದರೂ ಸಂಪೂರ್ಣವಾಗಿ ಮುಕ್ತರಾಗುತ್ತೇವೆಯೇ?
ಮೋಹ ಅಥವಾ ಅಸೂಯೆ ಇಲ್ಲದೆ ಪ್ರೀತಿಯು ಇರಬಲ್ಲಂತಹ ಜಾಗವನ್ನು ನೀವು ಕಾಣಬಲ್ಲಿರಾದರೆ, ನೀವು ಖಂಡಿತವಾಗಿಯೂ ಮುಂದುವರಿದ್ದೀರಾ ಎಂಬುದೇನೋ ಸರಿ. ಆದರೆ ಸಂಪೂರ್ಣ ಅರಿವಿನಿಂದ ಸಾಗುವುದನ್ನು ಮುಂದುವರಿಸಿ, ಏಕೆಂದರೆ ನೀವು ಬಹಳ ಸುಲಭವಾಗಿ ನಿಮ್ಮ ಹಿಂದಿನ ಪ್ರಜ್ಞಾರಹಿತ ಸ್ಥಿತಿಗೆ ಜಾರಬಹುದು ಮತ್ತು ನಿಮ್ಮ ಹಿಂದಿನ ಮನೋಭಾವನೆಗಳನ್ನು ಮತ್ತೊಮ್ಮೆ ನೀವೇ ಅನುಭವಿಸುವುದಂತೆ ಆಗಬಹುದು.
ಹೊಸದಾಗಿ ಕಂಡುಕೊಂಡ ಅರಿವಿನಿಂದಿಗೆ ಅಂಟಿಕೊಂಡು ಅದರೊಂದಿಗೆ ಮುಂದುವರಿಯಿರಿ. ಅನ್ವೇಷಿಸಲು ಅದರಿಂದ ನಿಮಗೆ ಇನ್ನೂ ಅನೇಕ ಸುಂದರವಾದ ಮಾರ್ಗಗಳು ತೆರೆದುಕೊಳ್ಳುವಂತೆ ಆಗಬಹುದು. ಸುಮ್ಮನೆ ನಿಂತ ನೀರಿನಂತೆ ಆಗಿಬಿಡಬೇಡಿ. ಕೆಲವು ಅನುಭವಗಳಿಗೆ ಅವೇ ಘನವಾದುದೆಂದುಕೊಂಡು ಅಂಟಿಕೊಂಡು ಬಿಡುವುದು ಅತಿ ದೊಡ್ಡ ಅಪಾಯ.
ಗುರುಗಳು ತಮ್ಮ ಶಿಷ್ಯರನ್ನು ಯಾವುದೇ ಅನುಭವದಲ್ಲಿ ಹರಿಯದೇ ನಿಂತುಬಿಡಲು ಬಿಡುವುದಿಲ್ಲ. ಶಿಷ್ಯರು ತಮ್ಮ ಶೋಧನೆಯಲ್ಲಿ ಇನ್ನೂ ಆಳವಾಗಿ ಗಮನಿಸುವಂತೆ ಅವರನ್ನು ಗುರುಗಳು ಸದಾಕಾಲವೂ ತಿವಿಯುತ್ತಿರುತ್ತಾರೆ. ದೇವರ ಅಥವಾ ದೇವಿಯರ ಬಗ್ಗೆ ದೃಷ್ಟಿಯನ್ನು ಹೊಂದಿದ ವ್ಯಕ್ತಿಗಳು ತಮ್ಮ ಆಧ್ಯಾತ್ಮಿಕ ಬದುಕಿನಲ್ಲಿ ಹರಿಯದೆ ನಿಂತುಬಿಡಬಹುದು. ಅವರು ನೋಡಲು ಮತ್ತೇನೂ ಉಳಿದಿಲ್ಲವೆಂದು ಭಾವಿಸುವುದು. ಆದ್ದರಿಂದ ಆ ಅನುಭವಕ್ಕೆ ಅಂಟಿಕೊಂಡು ಇರುವ ಜಾಗದಲ್ಲಿಯೇ ಇದ್ದುಬಿಡುವರು. ಇದು ಆಗುವುದಕ್ಕೆ ಬಿಡಲೇಬಾರದು.
ನೋಡಿ, ನೀವು ನಿರಂತರವಾದ ಪೂರ್ಣಾನಂದದ ಸ್ಥಿತಿಯನ್ನು ತಲುಪುವ ತನಕ, ನೀವು ಯಾವುದೇ ಸಮಯದಲ್ಲಾದರೂ ಕೆಳಮಟ್ಟಕ್ಕೆ ಬಿದ್ದುಬಿಡಬಹುದು. ಆದುದರಿಂದ ಅದನ್ನು ಜ್ಞಾಪಿಸಿಕೊಂಡು ನಿಮ್ಮನ್ನು ಇನ್ನೂ ಆಳವಾದ ತಿಳುವಳಿಕೆಯ ಲೋಕಕ್ಕೆ ಕೊಂಡೊಯ್ಯಲು ನಿಮ್ಮ ಅರಿವನ್ನು ಸದಾ ಪೋಷಿಸುತ್ತಿರಿ.
ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಿ: ಗುರುವಿನ ಕಾರ್ಯವು ಅಷ್ಟೊಂದು ಸೂಕ್ಷ್ಮವಾಗಿದೆ. ಅವರು ನಿಮ್ಮ ಪ್ರತಿಯೊಬ್ಬರನ್ನೂ ಅತಿಯಾದ ಎಚ್ಚರಿಕೆ ಮತ್ತು ಸೂಕ್ಷ್ಮತೆಯಿಂದ ನಿರ್ವಹಿಸಬೇಕು. ನೀವು ಪ್ರತಿಯೊಬ್ಬರೂ ಯಾವ ರೀತಿಯಲ್ಲಿ ಬೆಳೆಯುತ್ತೀರ ಎಂದು ನೋಡಿ, ಆ ರೀತಿಯಲ್ಲೇ ನೀವು ಅರಳುವಂತೆ ಅವರು ನೋಡಬೇಕು. ನೀವು ಪ್ರತಿಯೊಬ್ಬರೂ ಅಷ್ಟೊಂದು ಜೀವನಗಳನ್ನು ಸಾಗಿ ಬಂದಿರುತ್ತೀರ ಮತ್ತು ಬೇಕಾದಷ್ಟು ಅಜ್ಞಾನವನ್ನು ಗಳಿಸಿಕೊಂಡಿರುತ್ತೀರ. ಗುರುಗಳು ಅದೆಲ್ಲದರ ಮೇಲೆಯೂ ಕೆಲಸ ಮಾಡಿ ನಿಮ್ಮನ್ನು ಎಬ್ಬಿಸಬೇಕಾಗಿದೆ.
ಒಂದು ವಿಷಯವನ್ನು ನೆನಪಿಡಿ:
ಜೀವನವು ಬೇಕಾದಷ್ಟು ಪರಿಹಾರಗಳನ್ನು ನೀಡುತ್ತದೆ. ಆದರೆ ಯಾವಾಗಲೂ ಒಂದು ನಿಮಗೆ ಅತ್ಯುತ್ತಮವಾಗಿ ಸರಿ ಹೊಂದುತ್ತದೆ. ಅದನ್ನು ಕಂಡುಹಿಡಿಯುವುದರಲ್ಲಿಯೇ ಬುದ್ಧಿವಂತಿಕೆಯು ಇದೆ. ಅದನ್ನು ಕಂಡು ಹಿಡಿಯಲು ನೀವು ನಿಮ್ಮದೇ ಬುದ್ಧಿವಂತಿಕೆ ಯನ್ನು ಅನ್ವಯಿಸಿದರೆ, ಅದರಿಂದಾಗುವ ಲಾಭಗಳನ್ನು ಅನುಭವಿಸುತ್ತೀರ. ಅದೇ ನೀವು ಬೇರೆಯವರತ್ತ ನೋಡಿ ಅವರ ಪರಿಹಾರಗಳನ್ನು ನಿಮಗೆ ಅನ್ವಯಿಸಿಕೊಂಡರೆ, ನೀವು ಎಲ್ಲಿ ನಿಂತಿರುವಿರೆಂಬ ಜಾಡನ್ನು ಕಳೆದುಕೊಳ್ಳುತ್ತೀರ.
ಒಂದು ಚಿಕ್ಕ ಕಥೆ:
ಒಬ್ಬ ಮುದುಕಿಯು ಒಂದು ಕುಗ್ರಾಮದಲ್ಲಿ ತನ್ನ ಮನೆಯ ಕಸವನ್ನು ಗುಡಿಸುತ್ತಿದ್ದಳು. ಇದ್ದಕ್ಕಿದ್ದ ಹಾಗೆ ಬಾಗಿಲನ್ನು ತೆಗೆದುಕೊಂಡು ಒಬ್ಬ ಯುವ ಮಾರಾಟಗಾರನು ಒಳ ಬಂದನು. ಅವನು ಆ ಹೆಂಗಸು ಕಸವನ್ನು ಗುಡಿಸುತ್ತಿರುವುದನ್ನು ನೋಡಿ ತುಂಬಾ ಸಂಭ್ರಮದಿಂದ ಮಾತನಾಡಲಾರಂಭಿಸಿದನು.
ಅವಳಿಗೆ ತನ್ನ ಬಳಿ ಅವಳ ಮನೆಯನ್ನು ಸ್ವಚ್ಛವಾಗಿಡಲು ಅನುಕೂಲವಾಗುವಂತಹ ಅನೇಕ ಉಪಕರಣಗಳಿವೆಯೆಂದು ಹೇಳಿದನು.
ಆ ಮುದುಕಿಯು ಹೇಳಿದಳು, "ಆದರೆ...."
ಆ ವ್ಯಕ್ತಿಯು ಅವಳನ್ನು ಮಧ್ಯದಲ್ಲಿಯೇ ನಿಲ್ಲಿಸಿ ತನ್ನ ಚೀಲದಿಂದ ಅನೇಕ ಉಪಯೋಗವಿಲ್ಲದಂತಹ ವಸ್ತುಗಳನ್ನು ತೆಗೆದು ನೆಲದ ಮೇಲೆ ಹರಡಿದನು.
ಮುದುಕಿಯು ಮತ್ತೊಮ್ಮೆ “ಆದರೆ...” ಎಂದು ಏನನ್ನೋ ಹೇಳಲು ಪ್ರಯತ್ನಿಸಿದಳು.
ಆ ವ್ಯಕ್ತಿಯು ಅವಳನ್ನು ಸುಮ್ಮನೆ ನಿಂತುಕೊಂಡು ಗಮನಿಸಲು ಹೇಳಿದನು. ಅವನು ಒಂದು ಉಪಕರಣವನ್ನು ಹೊರಗೆಳೆದು ವಿವರಿಸಿದನು, “ಈ ಯಂತ್ರವನ್ನು ನೋಡಿದಿರಲ್ಲಾ? ಇದು ಎಷ್ಟೇ ಧೂಳನ್ನಾದರೂ ಅತ್ಯಲ್ಪ ಸಮಯದಲ್ಲಿಯೇ ತೆಗೆದು ಸ್ವಚ್ಛಗೊಳಿಸುತ್ತದೆ. ಇದು ಬಹಳ ಹಗುರವಾಗಿರುವುದರಿಂದ ನಿಮಗೆ ಈ ವಯಸ್ಸಿನಲ್ಲಿ ಉಪಯೋಗಿಸುವುದು ಸುಲಭ. ನಿಮಗೆ ಪ್ರತ್ಯಕ್ಷವಾಗಿ ತೋರಿಸುತ್ತೇನೆ'' ಎಂದು.
ಆ ಮುದುಕಿಯು ಹೇಳಲು ಪ್ರಯತ್ನಿಸಿದಳು “ಆದರೆ...”
ಆ ವ್ಯಕ್ತಿಯು ಮಧ್ಯದಲ್ಲಿಯೇ ತಡೆದು, “ಸುಮ್ಮನೆ ನನಗೆ ವಿದ್ಯುತ್ತಿನ ಬಿರಟೆ (plug) ಹಾಕುವ ಸ್ಥಳವನ್ನು ತೋರಿಸಿ'' ಎಂದನು. ಆ ಹೆಂಗಸು ಕೊನೆಗೆ ಹೇಳಿದಳು “ಆದರೆ.... ನಮ್ಮ ಹಳ್ಳಿಗೆ ವಿದ್ಯುಚ್ಛಕ್ತಿಯು ಇನ್ನೂ ಬಂದಿಲ್ಲ!” ಎಂದು.
(ಜೋರಾದ ನಗೆ!)
ಬದುಕಿನಲ್ಲಿ ನಮಗೆ ಯಾವುದು ಅತ್ಯುತ್ತಮವಾಗಿ ಹೊಂದುತ್ತದೆ ಎಂಬುದನ್ನು ನಾವು ರೂಪಿಸಿಕೊಳ್ಳಬೇಕು! ಇದರ ಬಗ್ಗೆ ನಮಗೆ ಸ್ಪಷ್ಟತೆ ಇದ್ದರೆ, ನಾವು ಯಾವ ಚಿಂತೆಯೂ ಇಲ್ಲದೆ ಬೆಳೆಯುತ್ತೇವೆ. ಆದರೆ ಬಹಳ ಸಮಯ, ನಾವು ಆಸೆಯಿಂದ ಬೇರೆಯವರ ಪರಿಹಾರಗಳನ್ನು ನಮಗೆ ಅನ್ವಯಿಸಿಕೊಂಡು ನಂತರ ದುಃಖವನ್ನು ಅನುಭವಿಸುತ್ತೇವೆ.
ನಾವು ಎಲ್ಲಿನಿಂತಿದ್ದೇವೆ ಮತ್ತು ನಮ್ಮ ಅವಶ್ಯಕತೆಯೇನು ಎಂದು ಸ್ಪಷ್ಟವಾಗಿದ್ದರೆ, ನಾವು ಸ್ಥಿರವಾಗಿ ಬೆಳೆಯುತ್ತೇವೆ. ಈ ರೀತಿಯ ಬದುಕಿನಲ್ಲಿ ಹಿಂಜರಿಕೆಯೂ ಕೂಡ ನಾವು ಹೇಗೆ ಬುದ್ಧಿವಂತಿಕೆಯಿಂದ ಕಾರ್ಯ ಮಾಡಬೇಕೆಂದು ಹೇಳಿಕೊಡುತ್ತದೆ. ಈ ರೀತಿ, ನೀವು ನಿಮ್ಮದೇ ಬುದ್ಧಿವಂತಿಕೆಯಿಂದ ಕಾರ್ಯವನ್ನು ನಿರ್ವಹಿಸುತ್ತೀರ ಮತ್ತು ಆದ್ದರಿಂದ ಅದು ಒಂದು ಅನುಭವಯುಕ್ತ ತಿಳುವಳಿಕೆಯಾಗುತ್ತದೆ. ನೀವು ಬೇರೆಯವರ ಪರಿಹಾರವನ್ನು ಸುಮ್ಮನೆ ಅನುಸರಿಸಿದರೆ, ನಿಮ್ಮೊಳಗೆ ಏನೂ ಸಂಭವಿಸುತ್ತಿರುವುದಿಲ್ಲ; ನೀವು ಸುಮ್ಮನೆ ನಿಮ್ಮ ಪರಿಧಿಯಿಂದ ಕೆಲಸ ಮಾಡುತ್ತಿರುತ್ತೀರ. ನಿಮ್ಮೊಳಗೆ ಏನೂ ಸಂಭವಿಸದಿದ್ದರೆ, ನೀವು ಬೆಳೆಯಲಾರಿರಿ; ಅದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಿ. ನೀವು ಬೆಳೆಯಲಾರಿರಿ ಎಂದು ನಾನು ಹೇಳಿದಾಗ, ನೀವು ಆಂತರ್ಯದಿಂದ ವಿಕಸಿತವಾಗುತ್ತಿಲ್ಲವೆಂದು ನಾನು ಹೇಳುತ್ತಿರುವುದು. ಪ್ರಾಪಂಚಿಕ ಲಾಭಗಳು ಬರಬಹುದು, ಆದರೆ ನೀವು ಆಂತರ್ಯದಲ್ಲಿ ನಿರ್ಜೀವವಾಗಿರುತ್ತೀರ.
ಒಂದು ಸಂಗತಿಯನ್ನು ಜ್ಞಾಪಕದಲ್ಲಿಡಿ: ನೀವು ಆಂತರ್ಯದಿಂದ ಬೆಳೆದರೆ ಮಾತ್ರವೇ, ನೀವು ನಿಜವಾಗಿಯೂ ಬೆಳೆಯುತ್ತಿರುವುದು. ಹೊರ ಪ್ರಪಂಚದ ಸ್ಪರ್ಧೆಗಳಲ್ಲಿ ಅಪಾಯಗಳಾಗುವಂತೆ ಸಿಕ್ಕಿಕೊಂಡು ಬಿಡಬೇಡಿ. ಅವುಗಳನ್ನು ಕೇವಲ ಆಟವೆಂಬಂತೆ ನೋಡಿ, ಚೆನ್ನಾಗಿ ಆಡಿ. ಪ್ರಾಪಂಚಿಕ ಲಾಭಗಳು ನಮ್ಮ ಉಳಿವಿಕೆಗಾಗಿ ಅಗತ್ಯ. ಆದರೆ ಇವುಗಳೆಲ್ಲವೂ ಪರಿಧಿಯಲ್ಲಿ ಮಾತ್ರವೇ ಇರಬೇಕು. ನಿಮ್ಮ ಒಳ ತಿರುಳು ಸ್ಥಿರವಾಗಿ ಬೆಳೆಯಬೇಕು. ಇದೇ ನಿಮ್ಮ ಹೊರಗಿನ ಆಟದಲ್ಲಿ ನಿಮ್ಮ ಮಾರ್ಗದರ್ಶನ ಮಾಡುವುದು.
ನೀವು ನಿಮ್ಮ ಸ್ವಂತ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಳ್ಳುವುದನ್ನು ಕಲಿತುಕೊಂಡರೆ, ನಿಮಗೆ ಬೇರೆಯವರ ಅಭಿವೃದ್ಧಿ ಅಥವಾ ಚಟುವಟಿಕೆಗಳನ್ನು ನೋಡುವುದು ಎಷ್ಟು ಅಪ್ರಸ್ತುತ ಎಂದು ನಿಮಗೆ ಕಾಣಿಸುತ್ತದೆ. ಇಡಿಯ ಸಂಗತಿಯಲ್ಲಿನ ಅಸಂಬದ್ಧತೆಯನ್ನು ನೀವು ಕಾಣುವಿರಿ. ನಿಮ್ಮ ಬುದ್ಧಿವಂತಿಕೆಯು ಬೆಳೆಯುತ್ತಿದ್ದಂತೆ, ಪ್ರತಿಯೊಬ್ಬರೂ ಅವರ ಪಂದ್ಯದಲ್ಲಿ ಅವರೇ ಓಡಬೇಕೆಂದೂ, ಇನ್ನೊಬ್ಬರ ವಿರುದ್ಧ ಅಲ್ಲವೆಂದೂ, ಅರ್ಥಮಾಡಿಕೊಳ್ಳುತ್ತೀರ! ನಿಜವಾದ ಸ್ಪರ್ಧೆಯು ಇರುವುದು ನಿಮ್ಮ ಅನಂತ ಬುದ್ಧಿವಂತಿಕೆಯನ್ನು ಕಂಡುಕೊಳ್ಳುವುದಲ್ಲಿದೆ. ಹಾಗಾದರೆ ಹೋಲಿಸಿಕೊಳ್ಳುವ ಅವಕಾಶವಾದರೂ ಹೇಗೆ ಬರುತ್ತದೆ?
ನಿಮ್ಮ ಅನಂತ ಬುದ್ಧಿವಂತಿಕೆಯನ್ನು ಕಂಡುಹಿಡಿಯುವುದರ ಕ್ರಮಗಳೇ ಜೀವನದ ಬಗ್ಗೆ ಎಲ್ಲವೂ ಆಗಿದೆ. ಆದುದರಿಂದಲೇ ನಾನು ಯಾವಾಗಲೂ ಹೇಳುವುದು: ಜೀವನವು ಒಂದು ಮಾರ್ಗ ಮತ್ತು ಅದು ಯಾವುದೇ ಗುರಿಯಲ್ಲ ಎಂದು. ನಿಮ್ಮ ಬುದ್ಧಿವಂತಿಕೆಯು ಬೆಳೆಯುತ್ತಿದ್ದಂತೆ, ನೀವು ಹೆಚ್ಚು ಸಂತೋಷದಿಂದ ಇರುತ್ತೀರ, ಮತ್ತು ಜೀವನದ ಆಟವನ್ನು ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿ ಆಡಬಲ್ಲಿರಿ. ಆದ್ದರಿಂದ ಹೋಲಿಸಿಕೊಳ್ಳುವುದನ್ನು ನಿಲ್ಲಿಸಿ ಮತ್ತು ನಿಮ್ಮ ನಿಜವಾದ ಬೆಳವಣಿಗೆಯ ಸೆಲೆಯನ್ನು ಕಂಡುಹಿಡಿಯಲು ಆರಂಭಿಸಿ.
ವಿಶುದ್ಧಿ ಚಕ್ರ ಎಂಬುದು ಉನ್ನತ ಸೃಜನಾತ್ಮಕತೆಯ ಪೀಠ. ಈ ಚಕ್ರದ ಚೈತನ್ಯವನ್ನು ಮುಕ್ತಗೊಳಿಸಿದರೆ, ನಿಮಗೆ ಸೃಜನಾತ್ಮಕತೆಯ ಅಗಾಧ ಹರಿವು ನಿಮಗೆ ಲಭ್ಯವಾಗುವುದನ್ನು ನೀವು ನೋಡುವಿರಿ.
ನೀವು ನಿಮ್ಮ ಅಸ್ತಿತ್ವದ ಗುಣವನ್ನು ಬದಲಾಯಿಸಿದರೆ, ಸ್ವಾಭಾವಿಕವಾಗಿಯೇ, ನಿಮ್ಮ ಕೆಲಸಗಳ ಗುಣವೂ ಸಹ ಬದಲಾಗುತ್ತದೆ. ನೀವು ಏನೇ ಮಾಡಿದರೂ, ನೀವು ಹೆಚ್ಚಿನ ಕಾರ್ಯ ಸಮರ್ಥತೆಯಿಂದ, ಹೆಚ್ಚಿನ ಸೃಜನಾತ್ಮಕೆಯಿಂದ ಮಾಡುತ್ತೀರಿ. ಇದರ ಪರಿಣಾಮವಾಗಿ, ನಿಮ್ಮ ಹೊಂದಿರುವಿಕೆಯ ಗುಣವೂ ಸಹ ಬದಲಾಗುತ್ತದೆ. ನಿಮ್ಮ ಹಾದಿಯಲ್ಲಿ ಬರುವ ಯಾವುದರಿಂದಲೂ ಸಹ ನೀವು ಸಂತುಷ್ಟರಾಗಿರುತ್ತೀರ ಮತ್ತು ಪ್ರಾಪಂಚಿಕ ಸಂಪತ್ತು ಮತ್ತು ಯಶಸ್ಸು ಸ್ವಾಭಾವಿಕವಾಗಿಯೇ ನಿಮ್ಮತ್ತ ಹರಿಯುತ್ತವೆ. ಆದುದರಿಂದ ಹೋಲಿಸುವುದನ್ನು ಬಿಟ್ಟುಬಿಡಿ ನಿಮ್ಮ ಅಸ್ತಿತ್ವಕ್ಕೆ ಹಿಂತಿರುಗಿ ಮತ್ತು ಚಿರವಾದ ಪರಮಾನಂದ ಅಥವಾ ನಿತ್ಯಾನಂದವನ್ನು ಕಂಡುಕೊಳ್ಳಿ.
ಸರಿ... ಈಗ ನಾವು ಶಕ್ತಿ ಸಾಗರ ಧ್ಯಾನ ಎಂಬ ಧ್ಯಾನ ತಂತ್ರವನ್ನು ಕೈಕೊಳ್ಳೋಣ. ಇದು ಪ್ರಯೋಗಾತ್ಮಕವಾಗಿ ನೀವು ಹೇಗೆ ನಿಮ್ಮಲ್ಲಿ ವಿಶುದ್ಧಿ ಚಕ್ರದ ಮುಖೇನ ಲಭ್ಯವಿರುವ ಅಗಾಧವಾದ ಚೈತನ್ಯದ ಸೆಲೆಯನ್ನು ಉಪಯೋಗಿಸಿಕೊಳ್ಳಬಹುದು ಎಂಬುದನ್ನು ನಿಮಗೆ ಅರ್ಥಮಾಡಿಸುತ್ತದೆ.
ಶಕ್ತಿ ಸಾಗರ ಧ್ಯಾನ
(ಒಟ್ಟು ಕಾಲಾವಧಿ: 30 ನಿಮಿಷಗಳು)
ಶಕ್ತಿ ಸಾಗರ ಧ್ಯಾನವನ್ನು ಝೆನ್ ಬೌದ್ಧಮತದಿಂದ ತೆಗೆದುಕೊಳ್ಳಲಾಗಿದೆ. ಇದು ವಿಶ್ವ ಚೈತನ್ಯದಿಂದ ಎಳೆದುಕೊಳ್ಳುವಂತೆ ನಿಮಗೆ ಸಹಾಯ ಮಾಡುತ್ತದೆ. ಈ ಧ್ಯಾನದ ಕೀಲಿಕೈ ಇರುವುದು ನಿಮ್ಮ ದೇಹವು ಚಲಿಸುತ್ತಿರುವಾಗ ನಿಮ್ಮ ಮನಸ್ಸನ್ನು ವಿಶುದ್ಧಿಯ ಮೇಲೆ ನೆಲೆಸಿರುವಂತೆ ಮಾಡುವುದರಲ್ಲಿ ಇದೆ. ಈ ಧ್ಯಾನವನ್ನು ಮಾಡುವುದರಿಂದ ನೀವು ವಿಶ್ವ ಚೈತನ್ಯದಿಂದ ನೇರವಾಗಿ ಎಳೆದುಕೊಳ್ಳಬಹುದು.
ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಎದ್ದು ನಿಲ್ಲಿ ಮತ್ತು ನಿಮ್ಮ ವಿಶುದ್ಧಿ ಚಕ್ರದ ಮೇಲೆ ಕೇಂದ್ರೀಕರಿಸಿ. ಒಂದು ಕುರ್ಚಿಯ ಹಿಂದೆಯೋ ಅಥವಾ ಒಂದು ಆಧಾರದ ಹಿಂದೆಯೋ ನಿಂತು ಅದನ್ನು ಹಿಡಿದುಕೊಂಡು ನಿಧಾನವಾಗಿ, ಬಹಳ ನಿಧಾನವಾಗಿ, ನೀವು ನಿಂತಿರುವ ಅದೇ ಸ್ಥಳದಲ್ಲಿ ನಡೆಯಲಾರಂಭಿಸಿ.
ಈಗ ನಡೆಯುವ ವೇಗವನ್ನು ಕ್ರಮೇಣ ಹೆಚ್ಚಿಸಿ. ಅದೇ ಸ್ಥಳದಲ್ಲಿ ಹೆಚ್ಚಿಸಿದ ವೇಗದಿಂದ ನಡೆಯುತ್ತಿರಿ. ನಿಮಗೆ ಅಹಿತಕರವಲ್ಲದ, ಸಾಧ್ಯವಾದ ಮಟ್ಟಕ್ಕೆ ಮಾತ್ರ ನಿಮ್ಮ ಮಿತಿಯನ್ನು ತಳ್ಳಿ. ಯಾವುದೇ ಸಮಯದಲ್ಲೂ ಮಿತಿಮೀರಿ ಶ್ರಮಪಡಬೇಡಿ. ಸದಾಕಾಲವೂ ವಿಶುದ್ಧಿಯ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಅದರಿಂದ ಹೊರ ಹೊಮ್ಮುತ್ತಿರುವ ಚೈತನ್ಯವನ್ನು ಅನುಭವಿಸಬಲ್ಲಿರಿ. ಮುಖ್ಯವಾದ ವಿಚಾರವೆಂದರೆ ಯಾವುದೇ ಸಮಯದಲ್ಲೂ ನೀವು ನಿಮ್ಮ ವೇಗವನ್ನು ಕಡಿಮೆ ಮಾಡದೇ ಇರುವುದು. 20 ನಿಮಿಷಗಳ ನಂತರ ನಿಲ್ಲಿಸಿ.
ಮುಂದಿನ 10 ನಿಮಿಷಗಳ ಕಾಲ, ಸುಮ್ಮನೆ ನಿಶ್ಯಬ್ದವಾಗಿ, ನೀವಿರುವಲ್ಲಿಯೇ ಕುಳಿತುಕೊಳ್ಳಿ. ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ವಿಶುದ್ಧಿಯ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ನಿಮ್ಮ ಚಲನೆಯ ಸಮಯದಲ್ಲಿ ಉತ್ಪನ್ನವಾದ ಚೈತನ್ಯವನ್ನು ನೀವು ಈಗ ಹೀರಿಕೊಳ್ಳಲಾರಂಭಿಸುತ್ತೀರಿ.
ಈ ಧ್ಯಾನದ ಕೀಲಿಕೈ ಎಂದರೆ ನಿಮ್ಮ ದೇಹವು ಚಲಿಸುತ್ತಿರುವಾಗ ನಿಮ್ಮ ಮನಸ್ಸನ್ನು ವಿಶುದ್ಧಿಯ ಮೇಲೆ ಸ್ಥಿರಗೊಳಿಸುವುದು. ನೀವು ಇದನ್ನು ಮಾಡಿದರೆ, ವಿಶ್ವ ಚೈತನ್ಯವು ನಿಮ್ಮ ವಿಶುದ್ಧಿ ಚಕ್ರದ ಮೂಲಕ ಒಳಹೊಕ್ಕು ನಿಮಗೆ ಒಂದು ಚೈತನ್ಯದ ಪ್ರಚಂಡ ಸೆಲೆಯಾಗುತ್ತದೆ.
ಈ ಧ್ಯಾನವನ್ನು ಮಾಡುತ್ತಿರುವಾಗ, ನಿಮ್ಮ ಮಾಲೆಯನ್ನು ನಿಮ್ಮ ಕುತ್ತಿಗೆಯಲ್ಲಿ ಧರಿಸಿರಬಹುದು. ಧ್ಯಾನದಲ್ಲಿ ನೀವು ಸೃಷ್ಟಿಸಿದ ಚೈತನ್ಯವನ್ನು ಸಂಗ್ರಹಿಸಲು ಇದು ಅನುವು ಮಾಡಿಕೊಡುತ್ತದೆ.
(ಗುಂಪು ಹಾಡಿನೊಂದಿಗೆ ಶಕ್ತಿ ಸಾಗರ ಧ್ಯಾನವನ್ನು ಅಭ್ಯಾಸ ಮಾಡುತ್ತದೆ)
(ಕೊನೆಯಲ್ಲಿ ಸ್ವಾಮೀಜಿಯವರು ಮಂತ್ರವನ್ನು ಪಠಿಸುತ್ತಾರೆ...)
ಓಂ ಶಾಂತಿ, ಶಾಂತಿ, ಶಾಂತಿಃ
ನಿಧಾನವಾಗಿ ಬಹು ನಿಧಾನವಾಗಿ ನಿಮ್ಮ ಕಣ್ಣುಗಳನ್ನು ತೆರೆಯಿರಿ. ನಾವು ಮುಂದಿನ ಕಾರ್ಯಕ್ರಮದಲ್ಲಿ ಭೇಟಿಯಾಗೋಣ.
ಧನ್ಯವಾದಗಳು.
