KAILASA Library/ಖಚಿತ ಪರಿಹಾರಗಳು/ಅಧ್ಯಾಯ - 6: ಭಯವನ್ನು ಎದುರಿಸುವುದುSign in
ಖಚಿತ ಪರಿಹಾರಗಳು

ಅಧ್ಯಾಯ - 6: ಭಯವನ್ನು ಎದುರಿಸುವುದು

This text was machine-transcribed from the printed book and may contain errors. Select the words and choose “Report a mistake”.

ಸ್ವಾಧಿಷ್ಠಾನ ಚಕ್ರ

ಸ್ವಾಧಿಷ್ಠಾನ ಚಕ್ರ

ಈ ಸ್ವಾಧಿಷ್ಠಾನ ಚಕ್ರವೆಂಬುದು ಹೊಕ್ಕಳಿನಿಂದ 2 ಅಂಗುಲದಷ್ಟು ಕೆಳಗಿದೆ.

'ಸ್ವಾಧಿಷ್ಠಾನ' ಎಂದರೆ 'ಎಲ್ಲಿ ನಿಮ್ಮತನವು (ಜೀವಾತ್ಮವು) ನೆಲೆಗೊಂಡಿದೆ' ಎಂದು - 'ಸ್ವಾ' ಎಂದರೆ 'ನಿಮ್ಮತನ' ಮತ್ತು 'ಅಧಿಷ್ಠಾನ' ಎಂದರೆ 'ನೆಲೆಗೊಂಡಿದೆ'.

ಈ ಚಕ್ರವು ಭಯದಿಂದ, ವಿಶೇಷವಾಗಿ ಸಾವಿನ ಭಯದಿಂದ ಬಂಧಿತವಾಗಿರುತ್ತದೆ.

ಭಯವನ್ನು ಒಪ್ಪಿಕೊಳ್ಳುವುದರ ಮೂಲಕ, ಸಾವನ್ನು ಒಪ್ಪಿಕೊಳ್ಳುವುದರ ಮೂಲಕ, ಈ ಚಕ್ರವು ಬಂಧನದಿಂದ ಮುಕ್ತವಾಗುವುದು.

(ಧ್ಯಾನದ ತಂತ್ರ: ಅಂಧಕಾರದ ಧ್ಯಾನ - ಒಂದು ತಾಂತ್ರಿಕ ಧ್ಯಾನ)

ಈ ಚಕ್ರವು ಭಯದಿಂದ ಬಂಧಿತವಾಗಿರುವುದು.

ನಮ್ಮೆಲ್ಲ ಭಯವೂ, ವಾಸ್ತವದಲ್ಲಿ ಬೇರೆ ಬೇರೆ ಛದ್ಮವೇಷದಲ್ಲಿರುವ ಮರಣದ ಭಯವಷ್ಟೆ. ನಮ್ಮ ಪ್ರತಿಯೊಂದು ಭಯವೂ, ಮರಣಭಯಕ್ಕೆ ಒಂದು ಕ್ಲಿಷ್ಟವಾದ ಸುರಳಿಯ ತರಹ ಸಂಬಂಧ ಹೊಂದಿರುತ್ತದೆ. ಅದು ಕ್ಲಿಷ್ಟವಾದ ಸುರಳಿಯಂತಿರುವುದರಿಂದ ನಾವು ಅದನ್ನು (ಭಯವನ್ನು) ಮರಣಭಯದಂತೆ ನೋಡುವುದಿಲ್ಲ. ಭಯವಿಲ್ಲದಿದ್ದರೆ, 'ಮರಣ' ಪದಕ್ಕೆ ನಾವು ಕೊಡುತ್ತಿರುವ ಸಂಬಂಧಿತ ಅರ್ಥವನ್ನು ಕಳೆದುಕೊಳ್ಳುತ್ತದೆ.

ಆದ್ದರಿಂದ ಸಾವು ಎಂದರೇನು?

ನಾನು ಈ ಪ್ರಶ್ನೆಯನ್ನು ನಿಮಗೆ ಕೇಳಿದರೆ, ನೀವು ಹೇಳುತ್ತೀರಿ, 'ಸ್ವಾಮೀಜಿ, ನಮ್ಮ ಜೀವನದ ಅಂತ್ಯದಲ್ಲಿ ಏನು ಸಂಭವಿಸುತ್ತದೆಯೋ ಅದೇ ಮರಣ' ಎಂದು.

ಮರಣವೆಂಬುದು ಇದಕ್ಕಿಂತ ಜಾಸ್ತಿ ಏನೂ ಇಲ್ಲದಿದ್ದರೆ ಇದು ಬಹಳ ಸುಲಭವಾಗಿರುತ್ತಿತ್ತು.

ಆದರೆ ಮರಣವೆಂಬುದು ನಮ್ಮ ಜೀವನದ ಅಂತ್ಯದಲ್ಲಿ ಸಂಭವಿಸುವ ಯಾವುದೋ ಒಂದು ಸಂಗತಿಯಲ್ಲ. ಅದು ನಮ್ಮ ಜೀವನದ ಪ್ರತಿಯೊಂದು ಕ್ಷಣವೂ ನಡೆಯುತ್ತಿರುವ ಸಂಗತಿ. ನಮ್ಮ ಪ್ರತಿಯೊಂದು ಕಾರ್ಯವೂ ನಮ್ಮ ಅರಿವಿಲ್ಲದೆ ಮರಣದೊಂದಿಗೆ, ಅಂದರೆ ಮರಣಭಯದೊಂದಿಗೆ ಸಂಬಂಧ ಹೊಂದಿರುತ್ತದೆ. ಮರಣವು ನಮ್ಮ ಜೀವನದ ಗುಣವನ್ನೇ ಬದಲಾಯಿಸುತ್ತದೆ. ಮರಣವೆಂಬುದು ಅಂತ್ಯವಲ್ಲ; ಅದು ಜೀವನದ ಉತ್ತುಂಗ - ಎಂದರೆ ನಮ್ಮ ಪೂರ್ತಿ ಜೀವನವನ್ನೇ ಹೊಂದಿಕೊಂಡಿರುತ್ತದೆ.

ಹಾಗೆ ನಾನೇಕೆ ಹೇಳುತ್ತೇನೆ?

ಏಕೆಂದರೆ ನಮ್ಮ ಇಡೀ ಜೀವನವೂ ಮರಣದ ಕಲ್ಪನೆಯ ಹಿಡಿತದಲ್ಲಿರುತ್ತದೆ. ನಮ್ಮ ಸಾಮಾಜಿಕ ಕಟ್ಟಡವೂ ಕೂಡ ನಮ್ಮ ಮರಣದ ಕಲ್ಪನೆಯಿಂದ ನಿರ್ದೇಶಿಸಲ್ಪಟ್ಟಿರುತ್ತದೆ.

ಎಲ್ಲಾ ಮಹಾನ್ ಮತಗಳೂ, ಪ್ರಪಂಚದ ಸಿದ್ಧಾಂತಗಳೂ ಈ ಒಂದು ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತಾ ಹುಟ್ಟಿಕೊಂಡಿವೆ. ;

'ಮರಣಾನಂತರ ಏನು ಸಂಭವಿಸುತ್ತದೆ?'

ಈ ಒಂದು ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತಾ ವಿವಿಧ ಜೀವನದ ಪರಿಹಾರಗಳು ಬೇರುಬಿಟ್ಟಿವೆ.

ಪುನರ್ಜನ್ಮದ ಕಲ್ಪನೆಯಿಲ್ಲದ, ಇರುವುದು ಒಂದೇ ಜೀವನ ಎಂಬ ನಂಬಿಕೆಯಿಂದ ಸಂಸ್ಕೃತಿಗಳು ತಮ್ಮೆಲ್ಲಾ ಚೈತನ್ಯವನ್ನು ಜೀವನದ ಅತ್ಯುನ್ನತೆಯ ಮಟ್ಟಕ್ಕಾಗಿ ಸುರಿದಿವೆ. ಅವು ಮಾಹಿತಿಯನ್ನು ಅರಗಿಸಿಕೊಳ್ಳುವ, ಬೌದ್ಧಿಕ ಮತ್ತು ಪ್ರಾಪಂಚಿಕ ಸುಖವನ್ನು ಗಳಿಸುವ ವಿಚಾರದಲ್ಲಿ ಶಿಖರತೆಯನ್ನು ಹೊಂದಿದ್ದಾರೆ.

ಇಂತಹ ಸಂಸ್ಕೃತಿಗಳಿಂದ ವಿಜ್ಞಾನವು ಹುಟ್ಟಿದೆ. ವಿಜ್ಞಾನವು ನಮ್ಮ ಜೀವನವನ್ನು ಅತ್ಯುತ್ತಮತೆಯಲ್ಲಿ ಜೀವಿಸಲು ಸಹಾಯ ಮಾಡುತ್ತದೆ. ವಿಜ್ಞಾನವು ನಮಗೆ ಈ ಜೀವನದಿಂದ ಗರಿಷ್ಠವಾದದ್ದನ್ನು ಹೊಂದಲು ಸಹಾಯ ಮಾಡುತ್ತದೆ.

ಪುನರ್ಜನ್ಮದ ಬಗ್ಗೆ ನಂಬಿಕೆಯಿರುವ ಸಂಸ್ಕೃತಿಗಳು ತಮ್ಮ ಗಮನವನ್ನು ಜೀವನದ ಆಂತರ್ಯದೆಡೆಗೆ ಕೇಂದ್ರೀಕರಿಸಿದೆ. ಅವುಗಳ ಅನ್ವೇಷಣೆಯು ಬೇರೆಯೇ ಆಗಿದೆ.

ಜೀವನವನ್ನು ಅವಸರದಿಂದ ಜೀವಿಸಲು ಅವುಗಳು ಪ್ರಚೋದಿತರಾಗಿಲ್ಲ, ಏಕೆಂದರೆ ನಿರಂತರತೆ ಎಂಬುದು ಅವಕ್ಕೆ ದೊರಕಿದೆ.

ಈ ಕಲ್ಪನೆಯ ಆಟವನ್ನು ಜನರ ನಡತೆಯಲ್ಲಿ ನಿಚ್ಚಳವಾಗಿ ನೋಡಬಹುದು. ಭಾರತದಲ್ಲಿ ಒಂದು ಕಾರ್ಯಕ್ರಮವು 6-00 ಘಂಟೆಗೆ ಪ್ರಾರಂಭವಾಗುವುದೆಂದು ನಿಗದಿಯಾಗಿದ್ದರೆ, ಅದು 7-30 ಘಂಟೆಗೆ ಮುಂಚೆ ಪ್ರಾರಂಭವಾಗುವುದಿಲ್ಲವೆಂದು ನೀವು ಖಚಿತವಾಗಿರಬಹುದು! ಏಕೆಂದರೆ ನಿತ್ಯತೆ (ನಿರಂತರತೆ) ಅವು ಮುಂದೆ ಇದೆ!

ನಮ್ಮ ಮನೋವ್ಯವಸ್ಥೆ ನಮ್ಮ ಬದುಕಿನ ದಾರಿ, ನಮ್ಮ ಸಮಾಜ, ನಮ್ಮ ಸಂಸ್ಕೃತಿ, ನಮ್ಮ ಮತ - ಪ್ರತಿಯೊಂದೂ ಸಾವಿನ ಕಲ್ಪನೆಯ ಮೇಲೆ ನೆಲೆಗೊಂಡಿದೆಯಲ್ಲದೆ ಬೇರೇನೂ ಅಲ್ಲ. ಸಾವಿನ ಬಗ್ಗೆ ಯೋಚಿಸದಿರಲು ಬಹಳಷ್ಟು ಪ್ರಯತ್ನಿಸುತ್ತೇವೆ - ಆದರೆ ಸಾವು ನಮ್ಮ ಬದುಕಿನ ಪ್ರತಿಕ್ಷಣದಲ್ಲೂ ವ್ಯಾಪಿಸಿಕೊಂಡಿದೆ.

ಸಾವಿನ ಆಳಗಳು, ಗಹನತೆಗಳು ಮತ್ತು ಗೂಢತ್ವಗಳನ್ನು ಯಾವಾಗ ಅರ್ಥಮಾಡಿಕೊಳ್ಳುವವೋ ಆಗ ನಾವು ಜೀವನದ ಗಹನತೆಗಳನ್ನು ಅರ್ಥ ಮಾಡಿಕೊಳ್ಳುವೆವು. ಸಾವಿನ ಸಮಸ್ಯೆಯನ್ನು ಜೀವದ ಬೇರೊಂದು ರೂಪದಲ್ಲಿನ ಕೇವಲ ಮುಂದುವರಿಕೆ ಎಂದು ನೋಡಬೇಕು. ಇಲ್ಲದಿದ್ದರೆ ನಾವು ಜೀವನವನ್ನೇ ಕಳೆದುಕೊಳ್ಳುತ್ತೇವೆ.

ನಾವು ಸಾವನ್ನು ಜೀವದ ಬೇರೊಂದು ರೂಪದಲ್ಲಿನ ಮುಂದುವರಿಕೆಯಲ್ಲದೆ ಬೇರೇನೂ ಅಲ್ಲ ಎಂದು ಅರ್ಥಮಾಡಿಕೊಂಡರೆ, ನಾವು ಸಾವಿಗೆ ಹೆದರುವುದಿಲ್ಲ. ನಾವು ಸಾವಿಗೆ ಹೆದರುವುದನ್ನು ನಿಲ್ಲಿಸಿದಾಗ ಜೀವನದ ಬಗ್ಗೆ ನಾವೆಷ್ಟರ ಮಟ್ಟಿಗೆ ಕಳೆದುಕೊಳ್ಳುತ್ತಿದ್ದೆವು ಎಂಬುದನ್ನು ತಿಳಿದುಕೊಳ್ಳುತ್ತೇವೆ.

ನಾವು ಜೀವನವನ್ನು ಆಂಗೀಕೃತವಾಗಿ ತೆಗೆದುಕೊಳ್ಳುತ್ತೇವೆ ಮತ್ತು ಎಷ್ಟರಮಟ್ಟಿಗೆ ಪೂರ್ತಿಯಾಗಿ ಜೀವಿಸುತ್ತೇವೆಂದರೆ ನಾವು ಜೀವನದ ಬಹುಭಾಗಗಳನ್ನು ತಪ್ಪಿಸಿಕೊಳ್ಳುತ್ತೇವೆ. ಸಾವು ನಮಗೆ ಜೀವನವನ್ನು ಹೆಚ್ಚಿನ ಅರಿವಿನಿಂದ ನೋಡಬೇಕೆಂದು ಕೇವಲ ಹೇಳಿಕೊಡುತ್ತದೆ. ಸಾವು ಸರ್ವಕಾಲಕ್ಕೂ ಅತ್ಯಂತ ದೊಡ್ಡ ಗುರು.

ನಾವು ಯಾವುದಾದರಲ್ಲೂ ನಂಬಿಕೆಯನ್ನು (conviction) ತರಬೇಕಾದರೆ, ಅದನ್ನು ಎರಡು ವಿಧದಲ್ಲಿ ಮಾಡಬಹುದು: ಮೊದಲನೆಯದು, ನಾವೇ ಅದನ್ನು

ಪ್ರಯೋಗಮಾಡಿ ಸತ್ಯವು ಏನೆಂದು ನೋಡಬೇಕು. ಎರಡನೆಯದು, ಬೇರೊಬ್ಬರು ಪಟ್ಟ ಅನುಭವದ ಆಧಾರವನ್ನು ತೆಗೆದುಕೊಳ್ಳಬೇಕು. ನಿಮಗೆ ನಾನು ಈಗ ಉಪನಿಷತ್ತಿನ ಆಧಾರವೊಂದನ್ನು ಕೊಡುತ್ತೇನೆ.

ಕಠೋಪನಿಷತ್‌ ಎಂಬುದೊಂದು ಉಪನಿಷತ್. ಇದೊಂದು ಒಂದು ಮಗುವು ಯಮರಾಜ - ಅಂದರೆ ಸಾವಿನ ಅಧಿಪತಿಯೊಂದಿಗೆ ನಡೆಸಿದ ವೈಯಕ್ತಿಕ ಸಂದರ್ಶನದ ನೇರ ಸಂಭಾಷಣೆ. ನಮ್ಮ ಹಿಂದೂ ಪುರಾಣದಲ್ಲಿ ಮರಣದ ಅಧಿಪತಿ ಯಮರಾಜ. ಮರಣ ಎಂದರೆ ಅವನು.

ಹಿಂದೆ ಉಚ್ಚಿಶ್ರವಸ್‌ ಎಂಬ ಪ್ರಸಿದ್ಧವಾದ ರಾಜನೊಬ್ಬನಿದ್ದ. ಇದ್ದಕ್ಕಿದ್ದ ಹಾಗೆ ಅವನಿಗೆ ಇಡೀ ಪ್ರಪಂಚವನ್ನೆಲ್ಲಾ ಆಳಬೇಕೆಂಬ ಉತ್ಕಟವಾದ ಇಚ್ಛೆಯುಂಟಾಯಿತು. ಅದಕ್ಕಾಗಿ ಅವನು ವಾಜಪೇಯ ಯಾಗವನ್ನು ಮಾಡಿದ - ಯಾರಿಗಾದರೂ ಇಡೀ ಪ್ರಪಂಚವನ್ನೆಲ್ಲಾ ಆಳಬೇಕೆಂದರೆ ಅಗ್ನಿಮುಖೇನ ನಡೆಸುವ ಯಾಗ.

ಈ ಯಾಗದ ನಿಯಮಗಳ ಪ್ರಕಾರ ಯಾಗ ಮಾಡುವವನು ತನ್ನೊಂದಿಗೆ ನಿಕಟವಾಗಿ ಸಂಬಂಧ ಹೊಂದಿರುವ ಮತ್ತು ಅತ್ಯಮೂಲ್ಯ ವಸ್ತುಗಳನ್ನು ದಾನ ಮಾಡಿಬಿಡಬೇಕು. ಹಾಗಾದಾಗ ಮಾತ್ರ ಅವನಿಗೆ ಇಡೀ ಪ್ರಪಂಚದ ಅಧಿಪತಿಯ ಸ್ಥಾನ ಪ್ರಾಪ್ತವಾಗಬಲ್ಲದು.

ರಾಜರು ಯಾವಾಗಲೂ ಒಳ್ಳೆಯ ವ್ಯಾಪಾರಿಗಳು; ಹಾಗಿರಲೇಬೇಕು, ಇಲ್ಲದಿದ್ದರೆ ಅವರು ಅಷ್ಟು ವಿಸ್ತಾರವಾದ ಸ್ವತ್ತಿನ ಮೇಲೆ ಹತೋಟಿ ಇಟ್ಟುಕೊಳ್ಳುವ ರಾಜರೇ ಆಗುವುದಿಲ್ಲ. ಎಷ್ಟು ಅತಿ ಕಡಿಮೆ ಕೊಟ್ಟು ಎಷ್ಟು ಅತಿ ಜಾಸ್ತಿಯನ್ನು ಅದರಿಂದ ಪಡೆಯಬಹುದೆಂಬುದನ್ನು ಅವರು ನೋಡುತ್ತಿರುತ್ತಾರೆ.

ಈ ರಾಜ ದಾನವನ್ನು ನೀಡಲು ಆರಂಭಿಸಿದ - ಕೊನೆಯ ಕಾಲದಲ್ಲಿರುವ ಗೋವುಗಳು; ಅವುಗಳ ಇಡೀ ಜೀವನದಲ್ಲಿ ಕೊಡಲು ಸಾಧ್ಯವಾಗಬಲ್ಲ ಹಾಲನ್ನೆಲ್ಲ ಕೊಟ್ಟಿರುವಂತಹವು; ಅವುಗಳ ಇಡೀ ಜೀವನದಲ್ಲಿ ಸಾಧ್ಯವಾಗಬಲ್ಲ ಕರುಗಳನ್ನು ಜನ್ಮಕೊಟ್ಟವಂತಹವು; ಸಾಯಲು ಸಿದ್ಧವಾಗಿರುವಂತಹವು. ಅವನು ಪ್ರಯೋಜನಕ್ಕೆ ಬರದಂತಹ ವಸ್ತುಗಳನ್ನೆಲ್ಲ ದಾನ ಮಾಡುತ್ತಿದ್ದನು. ಅವನ ಮಗ 7 ವರ್ಷದ ನಚಿಕೇತನು ನಡೆಯುತ್ತಿರುವುದನ್ನೆಲ್ಲ ಗಮನಿಸುತ್ತಿದ್ದನು.

ಈ ಕತೆಯ ನಾಯಕನೇ ನಚಿಕೇತನು.

ಅವನಿಗೆ ತಂದೆಯು ಮಾಡುತ್ತಿರುವುದು ಸರಿಯಲ್ಲವೆಂದು ಗೊತ್ತಾಗಿತ್ತು. ಆದರೆ ಹೇಗೆ ಹೇಳಬೇಕೆಂದು ಗೊತ್ತಾಗforegroundಲಿಲ್ಲ.

ನೋಡಿ: ಮಕ್ಕಳು ಬಹಳ ಚುರುಕು ಮತ್ತು ಬುದ್ಧಿವಂತರು. ಅವರನ್ನು ಮೋಸ ಮಾಡಲಾಗುವುದಿಲ್ಲ. ಸಮಾಜವು ಅವರನ್ನು ಭ್ರಷ್ಟರನ್ನಾಗಿಯಾಗಲೀ, ನಿಬಂಧನೆಗೊಳಪಡಿಸಿಯಾಗಲೀ ಇನ್ನೂ ಮಾಡಿರುವುದಿಲ್ಲ.

ನಚಿಕೇತನು ತಂದೆಯನ್ನು ಸದಾ ಗಮನಿಸುತ್ತಿದ್ದು ಕಡೆಗೆ ಅವನ ಬಳಿ ಹೋಗಿ ‘‘ತಂದೆಯೇ, ನೀನು ನನ್ನಲ್ಲಿರುವ ಆತ್ಮಮೌಲ್ಯ ವಸ್ತುಗಳನ್ನೆಲ್ಲ ದಾನ ಮಾಡಿಬಿಡಬೇಕು, ನಾನು ನಿನ್ನಲ್ಲಿರುವ ಒಂದು ಆತ್ಮಮೌಲ್ಯವಾದ ವಸ್ತು. ಯಾರಿಗೆ ನನ್ನನ್ನು ದಾನ ಮಾಡುತ್ತಿದ್ದೀಯಾ?’’ ಎಂದು ಕೇಳಿದನು.

ರಾಜನಿಗೆ ತನ್ನ ಮಗನು ತಾನು ಮಾಡುತ್ತಿರುವ ಬಗ್ಗೆ ಛೇಡಿಸುತ್ತಿದ್ದಾನೆಂದು ಗೊತ್ತಾಯಿತು; ಆದರೆ ಆತನ ಸ್ವಾಭಿಮಾನ ಅದನ್ನು ಒಪ್ಪಿಕೊಳ್ಳಲು ಅವನಿಗೆ ಅಡ್ಡಿಯಾಯಿತು.

ಅವನು ತನ್ನ ಉಪಯೋಗವಿಲ್ಲದ ದಾನಗಳನ್ನು ಮುಂದುವರಿಸಿದ.

ಮತ್ತೊಮ್ಮೆ ಹುಡುಗನು ಅದೇ ಪ್ರಶ್ನೆಯನ್ನು ಕೇಳಿದ ಮತ್ತು ರಾಜನು ಮೌನದಿಂದಿದ್ದ. ಮೂರನೆಯ ಬಾರಿ ಹುಡುಗನು ಅವನನ್ನು ಅಲುಗಾಡಿಸಿ ತನ್ನನ್ನು ಯಾರಿಗೆ ದಾನ ಮಾಡಬೇಕೆಂದು ಆಲೋಚಿಸುತ್ತಿದ್ದೀಯಾ ಎಂದು ಕೇಳಿದ.

ರಾಜನು ಅತೀವವಾಗಿ ಕೆರಳಿದ ಮತ್ತು ಹಾಗೆಯೇ ಕೂಗಿಕೊಂಡ, ‘‘ನಿನ್ನನ್ನು ಯಮರಾಜನಿಗೆ ಕೊಡುತ್ತಿದ್ದೇನೆ. ಯಮನ ಬಳಿಗೆ ಹೋಗು’’ ಎಂದು.

ಸಾಮಾನ್ಯ ಬಾಲಕನಾಗಿದ್ದರೆ ಹೀಗೆ ಹೇಳಿರುತ್ತಿದ್ದ, ‘‘ನಾನೇಕೆ ಹೋಗಬೇಕು? ನೀನು ಪೂರ್ತಿ ಜೀವನವನ್ನು ಜೀವಿಸಿಯಾಗಿದೆ; ನೀನೇ ಹೋಗು’’ ಎಂದು. ಆದರೆ ನಚಿಕೇತನೊಬ್ಬ ಬಹಳ ಪ್ರಾಮಾಣಿಕ ಮತ್ತು ವಚನಬದ್ಧನಾದ ಹುಡುಗ.

ವಚನಬದ್ಧತೆ ಮತ್ತು ಪ್ರಾಮಾಣಿಕತೆ ಅವನನ್ನು ಒಂದು ದೆವ್ವದಂತೆ ಹಿಡಿದಿತ್ತು. ತಂದೆಯ ಮಾತುಗಳನ್ನು ಗೌರವಿಸಲು, ಅವನು ಯಮರಾಜನನ್ನು ಸಂಧಿಸಲು ಹೋಗಬೇಕೆಂದು ನಿರ್ಧರಿಸಿದ.

ಜ್ಞಾಪಕವಿಡಿ: ಭೂಗ್ರಹದಲ್ಲಿ ಯಮನನ್ನು ಹೋಗಿ ಭೇಟಿ ಮಾಡಿದ ಮೊದಲನೆಯ ಮತ್ತು ಕಡೆಯ ವ್ಯಕ್ತಿ ನಚಿಕೇತ. ಸಾಮಾನ್ಯವಾಗಿ ಯಮನೇ ಜನರನ್ನು ಸಂಧಿಸಲು ಬರುತ್ತಾನೆ. ಮೊದಲನೆಯ ಬಾರಿ ನಚಿಕೇತನು ಯಮನನ್ನು ಸಂಧಿಸಲು ಹೋಗುತ್ತಾನೆ.

ಅವನು ಯಮನ ಸ್ಥಳಕ್ಕೆ ಹೋದ, ಆದರೆ ಯಮ ಅಲ್ಲಿರಲಿಲ್ಲ!

ಅವನು ಹೊರಗೆ ಹೋಗಿದ್ದ.

ನಚಿಕೇತನು ಮೂರು ದಿನಗಳ ಕಾಲ ಕಾಯ್ದ.

ಇಲ್ಲಿ ಒಂದು ಸಂಗತಿ ಅರ್ಥ ಮಾಡಿಕೊಳ್ಳಿ. ಕತೆಯ ಈ ಅಂಶದಲ್ಲಿ ಒಂದು ಮಹತ್ತ್ವವಾದ ಸತ್ಯವು ನೆಲೆಗೊಂಡಿದೆ. ಸಾವನ್ನು ಹುಡುಕುತ್ತ ನಾವು ಹೋದರೆ ಅಥವಾ ಸಾವನ್ನು ಎದುರಿಸುವ ಧೈರ್ಯ ನಮ್ಮಲ್ಲಿದ್ದರೆ, ನಾವು ಅಂದುಕೊಂಡ ಹಾಗೆ ಸಾವು ಅಲ್ಲಿರುವುದಿಲ್ಲ.

ಹೇಗೋ, ಯಮನು ಮೂರು ದಿನಗಳ ನಂತರ ಹಿಂತಿರುಗಿ ಬಂದ.

ಅವನ ಸೇವಕರು ಅವನಿಗಾಗಿ ಕಾಯುತ್ತಾ ಇರುವ ಚಿಕ್ಕ ಬಾಲಕನ ಬಗ್ಗೆ ಅವನಿಗೆ ಹೇಳಿದರು.

ಯಮನು ನಚಿಕೇತನನ್ನು ನೋಡಲು ಧಾವಿಸಿ ಬಂದ.

ಅವನನ್ನು ಬರಮಾಡಿಕೊಳ್ಳಲು ಅಲ್ಲಿ ಇರದಿದ್ದಕ್ಕಾಗಿ ಕ್ಷಮೆಯನ್ನು ಯಾಚಿಸಿದ.

ಯಮನು ಮುಂದುವರಿದು ಅವನಿಗೆ ಹೇಳಿದ;, “ನಿನ್ನನ್ನು ಮೂರು ದಿನಗಳ ಕಾಲ ಕಾಯಿಸಿದ್ದಕ್ಕಾಗಿ ನಿನಗೆ ಮೂರು ವರಗಳನ್ನು ನೀಡುತ್ತೇನೆ. ನೀನು ಯಾವುದಾದರೂ ಮೂರು ವರಗಳನ್ನು ಕೇಳು, ನಾನು ಅವುಗಳನ್ನು ನಿನಗೆ ನೀಡುತ್ತೇನೆ.''

ನಚಿಕೇತನಿಗೆ, ಸಾವು ವರಗಳನ್ನು ನೀಡಿದ ದೇವನಾಗಿ ಪರಿವರ್ತಿತನಾಗಿದ್ದ!

ನಚಿಕೇತನು ಮೂರು ವರಗಳನ್ನು ಕೇಳಿದ.

ಮೊದಲನೆಯ ವರವು: “ನನ್ನ ತಂದೆಯ ಪಾಪಗಳೆಲ್ಲವೂ ತೊಳೆದು ಹೋಗಬೇಕು'' ಎಂದು.

ಯಮನು ಅವನಿಗೆ ಆ ವರವನ್ನು ನೀಡಿದನು.

ಎರಡನೆಯ ವರವು: “ನನ್ನ ತಂದೆಯು ನಿನ್ನನ್ನು ಭೇಟಿ ಮಾಡಿ ಹಿಂತಿರುಗಿದ ಮೇಲೆ ನನ್ನನ್ನು ಸ್ವೀಕರಿಸಬೇಕು'' ಎಂದು.

ಈ ವರವೂ ಕೊಡಲ್ಪಟ್ಟಿತು.

ಮೂರನೆಯ ವರವು ಹೀಗಿತ್ತು: “ನನಗೆ ಹೇಳು, ಮರಣದ ನಂತರ ಏನಾಗುತ್ತದೆ? ಕೆಲವರು ಹೇಳುತ್ತಾರೆ - ಮನುಷ್ಯನು ಸತ್ತ ನಂತರ ಜೀವಿಸುತ್ತಾನೆ ಎಂದು; ಮತ್ತೆ ಕೆಲವರು ಮನುಷ್ಯನು ಸತ್ತ ನಂತರ ಜೀವಿಸಿರುವುದಿಲ್ಲ ಎಂದು ಹೇಳುತ್ತಾರೆ. ನಿಜ ಸಂಗತಿ ಏನು?''

ನಚಿಕೇತನ ಪ್ರಶ್ನೆಯಿಂದ ಯಮನು ತಲ್ಲಣಗೊಂಡ.

ಅವನು ನಚಿಕೇತನಿಗೆ, “ದಯವಿಟ್ಟು ಈ ಪ್ರಶ್ನೆಯನ್ನು ನನಗೆ ಕೇಳಬೇಡ. ನೀನು ಕೇಳುವುದು ಸಾವಿನ ಪರಮ ರಹಸ್ಯ. ಅದನ್ನು ನಿನಗೆ ಕೊಡಲು ಆಗದು. ನೀನಿಷ್ಟಪಟ್ಟರೆ ನಾನು ನಿನಗೆ ಅಗಣಿತ ಸಂಪತ್ತನ್ನು ಕೊಡುತ್ತೇನೆ. ಆದರೆ ದಯವಿಟ್ಟು ನನಗೆ ಈ ಪ್ರಶ್ನೆಯನ್ನು ಕೇಳಬೇಡ'' ಎಂದು ಹೇಳಿದನ್ದಾರೆ ನಚಿಕೇತನು ಆಗ್ರಹ ಮಾಡುತ್ತಲೇ ಇದ್ದ.

ಅವನು ಹೇಳಿದ, “ನಿನ್ನ ಈ ಸಂಪತ್ತನ್ನೆಲ್ಲಾ ನಾನು ತೆಗೆದುಕೊಂಡರೂ ನಾನು 100 ವರ್ಷಗಳಿಂದ 1000 ವರ್ಷಗಳ ಕಾಲ ನಿನ್ನ ಈ ಸಂಪತ್ತಿಗೆ ಕೇವಲ ಒಬ್ಬ ಪಾರುಪತ್ಯಗಾರನಾಗಿರುತ್ತೇನೆ, ಅಷ್ಟೆ. ಒಮ್ಮೆ ಆ ಕಾಲ ಮುಗಿದ ನಂತರ ನಾನು ನಿನ್ನ ಈ ಸ್ಥಳಕ್ಕೆ ಬರಲೇಬೇಕಾಗುತ್ತದೆ! ಇದು ಯಾವುದೂ ನನಗೆ ಉಪಯೋಗಕ್ಕೆ ಬರುವಂತಹುದಲ್ಲ. ಆದ್ದರಿಂದ ಬದಲಾಗಿ ನನಗೆ ದಯವಿಟ್ಟು ಸಾವಿನರಹಸ್ಯವನ್ನು ಹೇಳು''.

ಯಮನು ನಚಿಕೇತನ ಸತ್ಯವನ್ನು ಅರಿಯುವ ಪಕ್ವತೆ ಮತ್ತು ಬದ್ಧತೆಯನ್ನು ಮನಗಂಡ.

ಅವನು ನಚಿಕೇತನಿಗೆ ಅರಿವಿನಿಂದ ಕೂಡಿದ ಸಾವಿನ ಅನುಭವವನ್ನು ನೀಡಲು ನಿರ್ಧರಿಸಿದ.

ಯಮನು ನಚಿಕೇತನನ್ನು ಕೊಂಡೊಯ್ದ ಅನುಭವವು, ಹುಡುಗನ ಆತ್ಮದ ಅನುಭವವು ಆಯಿತು ಮತ್ತು ನಚಿಕೇತನು ಜ್ಞಾನೋದಯ ಹೊಂದಿದನು.

ಇದು ಉಪನಿಷತ್ತಿನ ಒಂದು ಸುಂದರವಾದ ಕತೆ. ಈ ಕತೆಯ ವಾಸ್ತವಾಂಶವನ್ನು ವಿಶ್ಲೇಷಿಸಲು ಹೋಗಬೇಡಿ. ಇದರ ಚರಿತ್ರೆ ಮತ್ತು ಘಟನೆಯ ಕಾಲವನ್ನು

ಶೋಧಿಸುತ್ತಾ ಹೋಗಬೇಡಿ. ಇದು ಸತ್ಯವನ್ನು ಮುಟ್ಟಿಸುತ್ತದೆ - ಅಷ್ಟು ಸಾಕು. ಇದನ್ನು ಸತ್ಯವನ್ನು ತಲುಪಲು ಒಂದು ಏಣಿಯ ಹಾಗೆ ಉಪಯೋಗಿಸಬೇಕೆ ಹೊರತು ಏಣಿಗೇ ಅಂಟಿಕೊಂಡು ಸತ್ಯವನ್ನು ಕಳೆದುಕೊಳ್ಳಬಾರದು.

ಮರಣವೆಂಬುದು ಜ್ಞಾನೋದಯವನ್ನೇ ಕೊಡುವ ಗುರು. ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ನಿಖರವಾದ ಸಮಯಕ್ಕೆ ಬರುವಂತಹ ಒಂದೇ ಒಂದು ವಸ್ತು ಎಂದರೆ ಸಾವು ಮಾತ್ರ! ನಾವು ಒಂದೇ ಒಂದು ನಿಮಿಷವನ್ನೂ ಕೂಡ ಅಧಿಕವಾಗಿ ಕೇಳಲಾರೆವು. ಮತ್ತು ನಮ್ಮ ಜೀವನದಲ್ಲಿ ಸಾವು ನಮ್ಮಿಂದ ಎಲ್ಲವನ್ನೂ ತೆಗೆದುಕೊಂಡು ಹೋಗಿಬಿಡುತ್ತದೆ - ನಮ್ಮ ಸಂಬಂಧಿಗಳು, ನಮ್ಮ ಸಂಪತ್ತು, ಎಲ್ಲವನ್ನೂ. ಆದರೆ ನಚಿಕೇತನಿಗೆ ಸಾವು ಎಲ್ಲವನ್ನೂ ನೀಡುತ್ತದೆ ಮತ್ತು ಜ್ಞಾನೋದಯವನ್ನೂ ಸಹ! ಏಕೆ ಈ ತಾರತಮ್ಯ? ನಚಿಕೇತ ಮತ್ತು ನಮ್ಮ ನಡುವೆಯಿರುವ ವ್ಯತ್ಯಾಸವೇನು?

ಒಂದೇ ಒಂದು ತರ್ಕವೇನೆಂದರೆ: ನಾವೆಲ್ಲಾ ಸಾವಿನಿಂದ ದೂರ ಓಡಿಹೋಗುತ್ತಿದ್ದರೆ ನಚಿಕೇತನು ಸಾವನ್ನೇ ಎದುರಿಸಿದನು.

ಈ ಅದ್ಭುತವಾದ ಕತೆಯಿಂದ ನಾಲ್ಕು ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು. ಮೊದಲನೆಯ ವಿಷಯ: ನಾವು ಸಾವನ್ನು ಹುಡುಕುತ್ತಾ ಹೊರಟಾಗ, ಸಾವನ್ನು ಎದುರು ನೋಡಿದಾಗ, ಅದು ಅಲ್ಲಿರುವುದಿಲ್ಲ. ಎರಡನೆಯ ವಿಷಯ: ಸಾವು ಅಲ್ಲಿಯೇ ಇದ್ದರೂ ಸಹ ಅದು ನಾವಂದುಕೊಂಡ ಹಾಗೆ ಭಯಾನಕವಾಗಿರುವುದಿಲ್ಲ; ಅದು ಪ್ರೀತಿಸುತ್ತಿರುತ್ತದೆ ಮತ್ತು ಕೊಡುತ್ತಿರುತ್ತದೆ. ಮೂರನೆಯ ವಿಷಯ: ಸಾವು ನಮ್ಮ ಬಹು ದೊಡ್ಡ ಗುರು. ನಾಲ್ಕನೆಯ ವಿಷಯ: ಸಾವು ಎಂಬುದು ನಮಗೆ ಬಹುಮಾನಗಳಲ್ಲಿಯೇ ಅಂತಿಮವಾದುದು - ಎಂದರೆ ಜ್ಞಾನೋದಯವನ್ನು ಕೊಡುವಂತಹದು.

ಹೇಗೋ ಏನೋ, ಬಹಳಷ್ಟು ಜನಗಳಿಗೆ ಜೀವನ ಎಂಬುದು ಸ್ವಾಧಿಷ್ಠಾನ ಚಕ್ರದ ಆಚೆ ಹೋಗುವುದೇ ಇಲ್ಲ. ಜೀವನವು ಸಾವಿನ ಭಯದಿಂದಾಚೆಗೆ ಹೋಗುವುದೇ ಇಲ್ಲ. ನಾವು ಜೀವಿಸಿ ಸಾಯುವುದು ಮೂಲಾಧಾರ ಮತ್ತು ಸ್ವಾಧಿಷ್ಠಾನ ಚಕ್ರಗಳ ನಡುವೆ - ಅಪೇಕ್ಷೆಗಳ ಮತ್ತು ಭಯಗಳ ನಡುವೆ. ನಮಗೆ ಜೀವನದ ಬೇರಾವ ದಾರಿಯೂ ಗೊತ್ತಿಲ್ಲ; ಅಥವಾ ಬೇರಾವ ದಾರಿಯನ್ನು ತೆಗೆದುಕೊಳ್ಳುವ ಧೈರ್ಯವು ಇಲ್ಲ.

ಹಿಂದಿನ ಕಾಲದಲ್ಲಿ ಜನಗಳು ಈಗಿರುವ ಜೀವನ ಸುರಕ್ಷತೆಗಳಿಲ್ಲದೆ ಬದುಕುತ್ತಿದ್ದರು. ಮಾರಕ ರೋಗಗಳಿಗೆ ಅವಶ್ಯವಿರುವ ಲಸಿಕೆಗಳ ಲಭ್ಯತೆಯಿರಲಿಲ್ಲ, ಉಪಗ್ರಹ ಆಧಾರಿತ ಪ್ರಕೃತಿ ವಿಕೋಪ ಮುನ್ಸೂಚನೆಗಳಿರಲಿಲ್ಲ, ಕ್ಷಾಮ ಅಥವಾ ನೆರೆಗಳಿಂದ ರಕ್ಷಣೆ ಇರಲಿಲ್ಲ; ಆದ್ದರಿಂದ ಜನಗಳು ಹೋರಾಡಲು, ಸಾವನ್ನೂ ಸಹ, ಮಾನಸಿಕವಾಗಿ ಸದಾಕಾಲವೂ ಸಿದ್ಧರಿರುತ್ತಿದ್ದರು. ವಿಶೇಷವಾಗಿ ಕಲಿಯೋಧರು ಸಾವಿಗೆ ಸದಾಕಾಲವೂ ಸನ್ನದ್ಧರಾಗಿರಬೇಕಾಗಿತ್ತು.

ಪ್ರಾಚೀನ ಜಪಾನಿನ ಸಮುರಾಯಿ ಯೋಧರಿಗೆ ಮರಣವನ್ನು ಪ್ರಶಾಂತವಾಗಿ ಎದುರಿಸುವುದು ಗೊತ್ತಿತ್ತು. ಒಂದು ವೇಳೆ ಯುದ್ಧದಲ್ಲಿ ಸೋತರೆ ಅವರು ಒಂದು ಉದ್ದವಾದ ಸೂಜಿಯನ್ನು ಸ್ವಾಧಿಷ್ಠಾನ ಚಕ್ರದಲ್ಲಿ ಚುಚ್ಚಿಕೊಳ್ಳುತ್ತಿದ್ದರು. ಇದೊಂದು ತುಂಬಾ ಕಸುಬುದಾರಿ ಕೆಲಸ. ಇದರಿಂದ ಸ್ವಾಧಿಷ್ಠಾನ ಚಕ್ರದಲ್ಲಿ ಹುದುಗಿರುವ ಜೀವ ಚೈತನ್ಯದ ಬಿಡುಗಡೆಯಾಗಿ ನೋವಿಲ್ಲದ ತತ್ಕ್ಷಣದ ಸಾವು ಸಂಭವಿಸುವುದು. ಈ ಕಾರ್ಯವಿಧಾನಕ್ಕೆ ಹರಾಕಿರಿ ಎಂದು ಕರೆಯುತ್ತಿದ್ದರು.

ನಾವೆಲ್ಲರೂ ಸದಾ ಸಾವಿನ ಭಯದಲ್ಲಿ ಜೀವಿಸುತ್ತಿದ್ದೇವೆ. ಎಂತಹುದೇ ಬೆಲೆಯಾದರೂ ಅದರಿಂದ ತಪ್ಪಿಸಿಕೊಳ್ಳಲು ಸಿದ್ಧರಾಗಿರುತ್ತೇವೆ. ಸಾವನ್ನು ನಮ್ಮ ಅತಿ ದೊಡ್ಡ ಶತ್ರುವಿನ ಹಾಗೆ ನೋಡುತ್ತೇವೆ.

ಸೋಕ್ರೆಟಿಸ್‌ನ ಬಗ್ಗೆ ಒಂದು ಸಣ್ಣ ಕತೆ:

ಹೆಮ್‌ಲಾಕ್ ಎಂಬ ಒಂದು ವಿಷಯುಕ್ತವಾದ ಸಸ್ಯದ ರಸವನ್ನು ಬಲವಂತವಾಗಿ ಕುಡಿಸಿ ಸೋಕ್ರಟೀಸ್‌ನನ್ನು ಸಾಯಿಸಲಾಯಿತು.

ಸೋಕ್ರಟೀಸ್‌ನು ಆ ವಿಷವನ್ನು ಕುಡಿಯಲು ಸ್ವಲ್ಪ ಮುಂಚೆ ಅವನ ಶಿಷ್ಯನೊಬ್ಬನು ಕೇಳುತ್ತಾನೆ, "ಗುರುಗಳೇ, ಸಾಯಲು ನೀವು ಹೆದರುವುದಿಲ್ಲವೇ? ನೀವು ಪ್ರಶಾಂತರಾಗಿ ಇರುವಂತಿದೆ" ಎಂದು. ಸೋಕ್ರಟೀಸ್‌ನು ಹೀಗೆ ಉತ್ತರಿಸುತ್ತಾನೆ, "ನಾನೇಕೆ ಹೆದರಬೇಕು? ಸಾವಿನ ನಂತರ ಕೇವಲ ಎರಡು ಸಂಗತಿಗಳು ಆಗಬಹುದೆಂದು ನನಗೆ ಗೊತ್ತು. ನಾನು ಬೇರೆಯ ರೂಪದಲ್ಲೋ ಅಥವಾ ಹೆಸರಿನಲ್ಲೋ ಜೀವಿಸುವುದನ್ನು ಮುಂದುವರಿಸುತ್ತೇನೆ ಅಥವಾ ನಾನು ಇರುವುದು ಸಾವಿನ ನಂತರ ಸ್ಥಗಿತವಾಗುತ್ತದೆ. ಮೊದಲನೆಯ ವಿಷಯದಲ್ಲಿ ಯೋಚನೆ ಮಾಡಬೇಕಾದುದ್ದೇನೂ ಇಲ್ಲ; ಎರಡನೆಯ ವಿಷಯದಲ್ಲಿ ಚಿಂತೆ ಮಾಡಲು ಯಾರಿರುತ್ತಾರೆ?! ಆದ್ದರಿಂದ ಯಾವುದೇ ವಿಷಯದಲ್ಲಿ ಹೆದರಲು ಏನೂ ಇಲ್ಲ!"

ಸೋಕ್ರಟೀಸ್‌ಗೆ ಸಾವು ಮತ್ತು ಅದರ ಪರಿಣಾಮಗಳ ಬಗ್ಗೆ ನಿಚ್ಚಳವಾದ ತಿಳುವಳಿಕೆ ಇದ್ದುದ್ದರಿಂದ ಅವನು ಸಾವನ್ನು ಕುರಿತು ಭಯರಹಿತನಾಗಿದ್ದನು. ಸಾವನ್ನು ಯಾವಾಗಲೂ ಒಂದು 'ನಿಲ್ಲಿಸುವಿಕೆ' ಎಂದು ನೋಡುತ್ತಾರೆ ಮತ್ತು ಆದ್ದರಿಂದಲೇ ಜನರು ಸಾವನ್ನು ಕಂಡರೆ ದುಃಖವನ್ನು ಅನುಭವಿಸುತ್ತಾರೆ. ಸಾವಿನ ಬಗ್ಗೆ ಮೂಲ ತಿಳುವಳಿಕೆ ಇರುವುದಿಲ್ಲ.

ಸಾವು ಒಂದು ನಿಲ್ಲಿಸುವಿಕೆ ಅಲ್ಲವೇ ಅಲ್ಲ. ಅದು ಬೇರೊಂದು ರೂಪದಲ್ಲಿಯ ಮುಂದುವರಿಕೆ ಅಥವಾ ಬರೀ ವಿಮೋಚನೆ, ಅಷ್ಟೆ. ಮನುಷ್ಯನು ಇದನ್ನು ಅರ್ಥಮಾಡಿಕೊಂಡರೆ ಸಾವಿನಬಗ್ಗೆ ದುಃಖವನ್ನು ಅನುಭವಿಸುವುದು ಎಷ್ಟೊಂದು ಮೂರ್ಖತನವೆಂದು ತಿಳಿದುಕೊಳ್ಳುತ್ತಾನೆ. ಮನುಷ್ಯನು ಭೌತಿಕ ರೂಪಕ್ಕೆ ಎಷ್ಟೊಂದು ಅಂಟಿಕೊಂಡಿದ್ದಾನೆಂದರೆ ಅದಕ್ಕಾಗಿಯೇ ಅವನು ಅಷ್ಟೊಂದು ದುಃಖವನ್ನು ಅನುಭವಿಸುತ್ತಾನೆ. ದೇಹವು ಆತ್ಮಕ್ಕೆ ಕೇವಲ ಒಂದು ವಾಹನ ಮಾತ್ರ. ಇದನ್ನು ಬಹಳ ನಿಚ್ಚಳವಾಗಿ ಅರ್ಥಮಾಡಿಕೊಳ್ಳಬೇಕು.

ಈ ಭೂಗ್ರಹದ ಮೇಲೆ ಮಾನವನಿಗೆ ನಿಖರವಾದ ಒಂದೇ ಒಂದು ವಿಷಯವೆಂದರೆ ಸಾವು ಎಂದಿದ್ದರೂ ಸಹ, ಅದು ನಿಜವಾಗಿ ಸಂಭವಿಸಿದಾಗ ಅವನು ಯಾವಾಗಲೂ ಆಶ್ಚರ್ಯಚಕಿತನಾಗುತ್ತಾನೆ.

ಒಂದು ಚಿಕ್ಕ ಕತೆ:

ಒಬ್ಬ ಮಹಿಳೆಯು ತನ್ನ 100ನೆಯ ಜನ್ಮದಿನವನ್ನು ಆಚರಿಸುತ್ತಿದ್ದಳು. ಅವಳ ಇಡಿಯ ಸಂಸಾರವೇ ಈ ಸಂದರ್ಭಕ್ಕೆ ಅಲ್ಲಿ ನೆರೆದಿತ್ತು. ಎಲ್ಲರೂ ಬಂದ ಬಳುವಳಿಗಳನ್ನು ತೆರೆದುನೋಡುತ್ತಿದ್ದರು ಮತ್ತು ಕುಟುಂಬ ಮತ್ತು ಸ್ನೇಹಿತರಿಂದ ಬಂದ ಕಾಗದಗಳನ್ನು (cards) ಓದುತ್ತಿದ್ದರು. ಅವರು ಆ ಮಹಿಳೆಗೆ ಆಕೆಯ ಒಬ್ಬ 94 ವರ್ಷದ ಸ್ನೇಹಿತೆಯಿಂದ ಬಂದ ಒಂದು ಶುಭಾಷಯದ ಕಾಗದವನ್ನು ತೋರಿಸಿದರು.

ಆ ಮಹಿಳೆ “ದೇವರೇ! ಆಕೆಯು ಇನ್ನೂ ಜೀವಂತವಾಗಿದ್ದಾಳೆ!” ಎಂದು ಚೀರಿದಳು.

(ನಗೆ)

ನಾವು ಸಾವನ್ನು ನಮ್ಮನ್ನಲ್ಲದು ಬೇರೆಯವರಿಗೆ ಅನ್ವಯಿಸಬಲ್ಲೆವು! ನಾವು ಯಾವಾಗಲೂ ಹಾಗೆಯೇ. ನಮ್ಮದೇ ಸಾವನ್ನುಳಿದು ಬೇರೆಲ್ಲದಕ್ಕೂ ನಾವು ಸಿದ್ಧರಾಗಿರುತ್ತೇವೆ. ವಿಪರ್ಯಾಸ ಎಂದರೆ ಜೀವನದಲ್ಲಿ ಎಲ್ಲವೂ, ಸಾವನ್ನು ಹೊರತುಪಡಿಸಿ, ಪ್ರತಿಪಾದಿಸಲಾಗದಂತಹವು. ಆದರೆ ಹೇಳಿಸಿಕೊಳ್ಳಲು ಇಷ್ಟಪಡಲಾರದ ಸಂಗತಿಯೆಂದರೆ ಅನತಿ ಸಮಯದಲ್ಲೋ ಅಥವಾ ನಂತರವೋ ನಾವು ಸಾಯಲಿದ್ದೇವೆಂದು!

ಭಗವಾನ್ ರಮಣ ಮಹರ್ಷಿಯವರು ಸಾವಿನ ಅರಿವಿನ ಅನುಭವದಿಂದ ಜ್ಞಾನೋದಯವನ್ನು ಹೊಂದಿದವರು.

ರಮಣರು ಚಿಕ್ಕ ಹುಡುಗನಾಗಿದ್ದಾಗ ಭಾರತದಲ್ಲಿದ್ದ ಮಧುರೈನಲ್ಲಿದ್ದ ಅವರ ಚಿಕ್ಕಪ್ಪನ ಮನೆಯಲ್ಲಿ ಒಂದು ದಿನ ಸುಮ್ಮನೆ ಮಲಗಿದ್ದರು.

ತಟ್ಟನೆ ಅವರಿಗೆ ತಾವು ಸಾಯಲಿರುವುದಾಗಿ ಸಂವೇದನೆಯುಂಟಾಯಿತು! ಸಾವು ಆವರಿಸಿ ಬರುತ್ತಿರುವುದಾಗಿ ಅವರಿಗೆ ಅನ್ನಿಸಿತು.

ಅವರಿಗೆ ಎರಡು ಆಯ್ಕೆಗಳಿದ್ದವು - ಸಂವೇದನೆಯನ್ನು ಪ್ರತಿರೋಧಿಸುವುದು ಅಥವಾ ಅದನ್ನು ಒಪ್ಪಿಕೊಂಡು ಅದರೊಳಗೆ ಹೋಗುವುದು.

ಸಾಮಾನ್ಯವಾಗಿ ಜನರು ಪ್ರತಿರೋಧಿಸುತ್ತಾರೆ, ಆದ್ದರಿಂದ ಅವರು ಗಾಢನಿದ್ರೆಗೆ (coma) ಜಾರುತ್ತಾರೆ ಮತ್ತು ದೇಹವನ್ನು ಒಂದು ಮೂರ್ಛಾವಸ್ಥೆಯಲ್ಲಿ ಬಿಡುತ್ತಾರೆ.

ನಮ್ಮಲ್ಲಿ ಪ್ರತಿಶತ 99 ಭಾಗ ದೇಹವನ್ನು ಮೂರ್ಛಾವಸ್ಥೆಯ ಸ್ಥಿತಿಯಲ್ಲಿ ಬಿಡುತ್ತೇವೆ.

ನಾವು ಹುಟ್ಟಿದಾಕ್ಷಣದಿಂದ ನಮ್ಮ ಜೀವನವು ಸಾವಿನೊಂದಿಗೆ ಅಂತ್ಯಗೊಳ್ಳುತ್ತದೆ ಎಂದು ಗೊತ್ತಿದ್ದರೂ ಸಹ, ನಾವು ಅದರ ದೃಷ್ಟಿ ಕಲ್ಪನೆಗೆ ಪ್ರಯತ್ನಿಸುವುದಾಗಲೀ ಅದರ ಸಂಭವನೀಯತೆಯ ಪ್ರಾತ್ಯಕ್ಷಿಕೆಗೆ ಪ್ರಯತ್ನಿಸುವುದಾಗಲೀ ಸ್ವಾಗತಿಸಲು ಪ್ರಯತ್ನಿಸುವುದಾಗಲೀ ಇಲ್ಲವೇ ಇಲ್ಲ.

ಒಮ್ಮೆಯಾದರೂ ಅರಿವಿನಿಂದ ನೀವು ಇದರ ಒಳಹೊಕ್ಕರೆ, ಯಾಂತ್ರಿಕವಾಗಿ ನೀವು ಸಾವಿನ ಬಗ್ಗೆ ಹೆದರಿಕೆಯನ್ನು ಕಳೆದುಕೊಳ್ಳುತ್ತೀರ.

ರಮಣರು ಎರಡನೆಯ ಮಾರ್ಗವನ್ನು ಆಯ್ಕೆಮಾಡಿಕೊಳ್ಳಲು ಸಾಕಷ್ಟು ಧೈರ್ಯದಿಂದಿದ್ದರು. ಅವರು ಸಂವೇದನೆಯೊಂದಿಗೆ ಸಹಕರಿಸಿದರು.

ಅವರು ಸಾವು ಸಂಭವಿಸಲು ಅನುವು ಮಾಡಿಕೊಟ್ಟರು. ಸಾವಿನ ಸಮಯದಲ್ಲಿ ಏನು ನಡೆಯುವುದೆಂದು ನೋಡಲು ನಿರ್ಧರಿಸಿದರು.

ಅವರು ತಮ್ಮ ದೇಹದ ಒಂದರ ನಂತರ ಇನ್ನೊಂದು ಭಾಗ ಸಾಯುವುದನ್ನು ನಿಶ್ಚಳವಾಗಿ ನೋಡಿದರು.

ನಿಧಾನವಾಗಿ ಅವರ ಇಡಿಯ ದೇಹವೇ ಮರಣ ಹೊಂದಿತು. ತಮ್ಮ ದೇಹವು ಭಸ್ಮವಾಗುವುದನ್ನು ನೋಡಿದರು.

ತತ್‌ಕ್ಷಣವೇ ಅವರಿಗೆ ಇದರ ನಂತರವೂ ಮತ್ತೇನೋ ಉಳಿದಿದೆಯೆಂದು ಗ್ರಹಿಸಿದರು; ಅದು ಏನೋ ನಾಶಮಾಡಲಾರದಂತಹುದು ಎಂದು. ಆ ಸಮಯದಲ್ಲಿ ಅವರು ಆಚೆಗಿನ ಮತ್ತು ಮನಸಿನ ಆಚೆಯ ಪರಿಶುದ್ಧ ಜಾಗೃತಾವಸ್ಥೆ (conscious-ness) ಎಂದು ಅವರಿಗೆ ಹೊಳೆಯಿತು. ಅವರು ಈ ಎಲ್ಲಾ ವಿಷಯಗಳಿಗೂ ಸುಮ್ಮನೆ ಒಬ್ಬ ವೀಕ್ಷಕರಾಗಿದ್ದರಷ್ಟೇ. ಆ ಜ್ಞಾನವು ಪ್ರಚಂಡವಾದದ್ದು ಮತ್ತು ಅವರನ್ನು ಬಿಡಲಿಲ್ಲ. ಅವರು ತಮ್ಮ ದೇಹಕ್ಕೆ ಮರಳಿ ಬಂದಾಗ ಅವರು ಜ್ಞಾನೋದಯ ಹೊಂದಿದ ಭಗವಾನ್ ರಮಣ ಮಹರ್ಷಿಯಾಗಿದ್ದರು.

ನೀವು ಸಾವಿನ ಭಯವನ್ನು ಜಯಿಸಿದರೆ, ನೀವು ಸಾವನ್ನೇ ಜಯಿಸುತ್ತೀರ, ಏಕೆಂದರೆ ಸಾವು ಮತ್ತೊಂದು ಕಲ್ಪನೆಯಷ್ಟೇ! ಮೂಲಾಧಾರ ಚಕ್ರದಲ್ಲಿ ನಮ್ಮ ದುರಾಸೆಯು ನಾವು ಪ್ರಪಂಚವನ್ನು ಇರುವುದಕ್ಕಿಂತ ಹೆಚ್ಚು ಸುಂದರವಾಗಿ ಕಲ್ಪಿಸಿಕೊಳ್ಳುವಂತೆ ಮಾಡಿಕೊಳ್ಳುವ ಹಾಗೆಯೇ, ಇಲ್ಲಿ ಭಯವು ನಾವು ಸಾವನ್ನು ಅದು ಇರುವುದಕ್ಕಿಂತ ಹೆಚ್ಚು ಭಯಾನಕವಾಗಿ ಕಲ್ಪಿಸಿಕೊಳ್ಳುತ್ತೇವೆ.

ನಾವು ದುರಾಸೆ ಮತ್ತು ಭಯದ ಕನ್ನಡಕವನ್ನು ಧರಿಸಿರುವುದರಿಂದ ಅವು ನಾವು ವಾಸ್ತವಿಕತೆಯನ್ನು ನೋಡಲು ಬಿಡುವುದಿಲ್ಲ. ನೀವು ಸಾವನ್ನು ಮಾನಸಿಕವಾಗಿ ಅನುಭವಿಸಿದರೆ, ನೀವು ಸ್ವಾಧಿಷ್ಠಾನ ಚಕ್ರದಲ್ಲಿ ಸಾವಿನ ಭಯದಿಂದ ಬಂಧಿತವಾಗಿರುವ ಚೈತನ್ಯವನ್ನು ಬಿಡುಗಡೆ ಮಾಡುತ್ತೀರ; ಸ್ವಾಧಿಷ್ಠಾನವು ತೆರೆದರೆ, ಜೀವನದ ಪೂರ್ತಿ ಗುಣವೇ ಬದಲಾವಣೆಯಾಗುತ್ತದೆ.

ಸಾವನ್ನು ಮುಂದುವರಿಕೆಯ ಇನ್ನೊಂದು ರೂಪ ಎಂದು ಒಪ್ಪಿಕೊಳ್ಳುವ ನಿಮ್ಮ ಸಾಮರ್ಥ್ಯದಿಂದ, ಜೀವನವನ್ನು ಆಸ್ವಾದಿಸುವ ಸಾಮರ್ಥ್ಯವು ಬದಲಾವಣೆ ಹೊಂದುತ್ತದೆ. ನಿಮ್ಮ ಇಡೀ ದೇಹವು ಆರಾಮದಿಂದಿರುತ್ತದೆ; ನಿಮ್ಮ ಜಾಗೃತಾವಸ್ಥೆಯು ವೃದ್ಧಿಯಾಗುತ್ತದೆ; ನಿಮ್ಮ ಬದುಕಿನ ಸಾಮರ್ಥ್ಯವು ವಿಸ್ತಾರವಾಗುತ್ತದೆ. ನೀವು ಒಪ್ಪಿಕೊಳ್ಳಿ ಇಲ್ಲ ಬಿಡಿ, ನಿಮ್ಮ ಜೀವನದ ಪ್ರತಿಕ್ಷಣವೂ ಸಾವಿನ ಭಯವು ಒಳಅರಿವಿನ (sub-conscious) ಮನಸ್ಸಿನಲ್ಲಿ ಬಂದು ನಿಲ್ಲುತ್ತಿರುತ್ತದೆ. ಸಾವನ್ನು ಮತ್ತು ಸಾವಿನ ಭಯವನ್ನು ಅರ್ಥಮಾಡಿಕೊಳ್ಳುವುದರಿಂದ, ನಿಮ್ಮ ಜೀವನವು ಸಿರಿವಂತವಾಗಿ ಯಲ್ಲಿದ್ದರೂ ಶ್ರೀಮಂತನಾಗಿ ಮಾರ್ಪಾಡಾಗುತ್ತದೆ. ಶ್ರೀಮಂತಿಕೆಯೇ ಜೀವನದಲ್ಲಿ ನಿಜವಾಗಲೂ ಮುಖ್ಯವಾದದ್ದು.

ಆದರೆ ನಾನು ನಿಮಗೆ ಇದನ್ನೆಲ್ಲಾ ಈಗ ಹೇಳಿದರೆ, ನೀವು ನನ್ನನ್ನು ನಂಬುವುದಿಲ್ಲ. ನಾನು ಅವ್ಯವಹಾರಿಕವಾದದ್ದನ್ನೇನೋ ಮಾತನಾಡುತ್ತಿದ್ದೇನೆ ಎಂದು ಭಾವಿಸುವಿರಿ. ಒಂದು ಸಣ್ಣ ಕತೆ.

ಒಬ್ಬ ವೈದ್ಯರು ಗುಣಪಡಿಸುವುದಾಗಿ ಹುಟ್ಟುಕುರುಡನೊಬ್ಬನಿಗೆ ಭರವಸೆಯಿತ್ತರು. "ಈ ಶಸ್ತ್ರ ಚಿಕಿತ್ಸೆಯ ನಂತರ ನೀನು ನೋಡಬಲ್ಲೆ! ನಿನ್ನಲ್ಲಿರುವ ಕೋಲಿನ ಅವಶ್ಯಕತೆ ನಿನಗಿರುವುದಿಲ್ಲ'' ಎಂದು ವೈದ್ಯರು ಭರವಸೆಯನ್ನಿತ್ತರು.

ಇದನ್ನು ಕೇಳಿದ ಕುರುಡನು ಭಯಭೀತನಾದನು.

''ವೈದ್ಯರೆ, ನಾನು ನೋಡಬಲ್ಲೆನೆಂದು ಅರ್ಥವಾಯಿತು. ಆದರೆ ನನ್ನ ಕೋಲಿಲ್ಲದೆ ನಾನು ಹೇಗೆ ತಾನೆ ನಡೆಯಬಲ್ಲೆ?'' ಎಂದನು ಕುರುಡನು.

ಆ ಕೋಲು ಕುರುಡನಿಗೆ ಎಷ್ಟರಮಟ್ಟಿಗೆ ಅವನ ಒಂದು ಅವಿಭಾಜ್ಯ ಅಂಗವಾಗಿತ್ತೆಂದರೆ ಅವನು ಒಮ್ಮೆ ದೃಷ್ಟಿ ಬಂದಿತೆಂದರೆ ಕೋಲಿನ ಸಹಾಯವಿಲ್ಲದೆ ನಡೆಯಬಹುದು ಎಂಬ ಸತ್ಯಸಂಗತಿಗೆ ಸಂಬಂಧ ಕಲ್ಪಿಸಿಕೊಳ್ಳಲಾಗಲಿಲ್ಲ! ಒಬ್ಬ ಕುರುಡನಿಗೆ ಒಮ್ಮೆ ದೃಷ್ಟಿ ಬಂದಿತೆಂದರೆ, ಅವನಿಗೆ ಕೋಲಿನ ಅವಶ್ಯಕತೆಯೇ ಇರುವುದಿಲ್ಲ ಎಂದು ಹೇಗೆ ತಾನೇ ವಿವರಿಸಬಲ್ಲಿರಿ? ಈ ಕ್ಷಣದಲ್ಲಿ ಅವನಿಗೆ ತುಂಬಾ ಭಯ. ಆದ್ದರಿಂದ ನೀವು ಈಗೇನು ಮಾಡಬಹುದೆಂದರೆ, ಶಸ್ತ್ರಚಿಕಿತ್ಸೆಯನ್ನು ಮಾಡಿ, ಅವನಿಗೇ ನೋಡಲು ಬಿಡಿ, ಅಷ್ಟೆ. ಅವನೇ ಕೋಲು ಬಿಸಾಡುತ್ತಾನೆ!

ಇದೇ ರೀತಿ ನಾನು: ನಿಮ್ಮೆಲ್ಲ ಭಯಗಳು ಕೇವಲ ಸಾವಿನ ಅಂತಿಮ ಭಯ, ನಿಮ್ಮ ಆತ್ಮ ನಿರಂತರ, ಕೇವಲ ನಿಮ್ಮ ಶರೀರ ನಶಿಸುತ್ತದೆ, ಎಂದೆಲ್ಲಾ ಹೇಳಿದರೂ, ನೀವು ಆಗಲೂ ನಿಮ್ಮ ಸ್ವಂತ ಭಯದ ಬಗೆಗಿನ ಕಲ್ಪನೆಗಳಿಗೆ ಕೇವಲ ಭಯದ ಕಾರಣಗಳಿಂದ ಅಂಟಿಕೊಂಡಿರುತ್ತೀರ, ಏಕೆಂದರೆ ನೀವು ಅದನ್ನು ಅನುಭವಿಸಿಯೇ ಇಲ್ಲ!

ಸಾವು ನಿಮ್ಮ ಅರಿವಿನ ಅನುಭವವಾಗದಿದ್ದರೆ, ಭಯವು ನಿಮ್ಮನ್ನು ಬಿಡುವುದೇ ಇಲ್ಲ. ಆದರೆ ನೀವು ಒಂದು ಮಾಡಬಹುದು. ಪದೇ ಪದೇ ಈ ಪದಗಳನ್ನು ಕೇಳಿ; ಅದರ

ಬಗ್ಗೆ ಒಂದು ನಿಶ್ಚಿತಾಭಿಪ್ರಾಯವನ್ನು ಬೆಳೆಸಿಕೊಳ್ಳಿ; ಹೇಗೆ ನಿಮ್ಮ ಚಿಕ್ಕ ಮತ್ತು ದೊಡ್ಡ ಭಯಗಳು ನಿಜಸ್ಥಿತಿಯಲ್ಲಿ ಸಾವಿನ ಭಯಕ್ಕೆ ಸಂಬಂಧಿಸಿವೆ ಎಂದು ನೋಡಲು ಪ್ರಯತ್ನಿಸಿ; ನಿಮ್ಮ ದಿನನಿತ್ಯದ ಭಯಗಳಿಗೆ ಸ್ವಲ್ಪ ನಿಚ್ಚಳಿಕೆಯನ್ನು ತನ್ನಿ; ನಿಮ್ಮೆಲ್ಲಾ ಭಯಗಳೂ ಹೇಗೆ ಪರಸ್ಪರ ಸಂಬಂಧಿಸಿವೆ ಎಂದು ನೋಡಿರಿ; ಆಗ ನೀವು ನಿಶ್ಚಲವಾಗಿ ವಿಕಸನಗೊಂಡು ಸತ್ಯದ ಸಮೀಪಕ್ಕೆ ಬರುತ್ತೀರಿ.

ನಾವು ನಮ್ಮೆಲ್ಲ ಭಯಗಳನ್ನು ಐದು ಪ್ರಮುಖ ಪಂಗಡಗಳಾಗಿ ವಿಂಗಡಿಸಬಹುದು: ಮೊದಲನೆಯದು ನಮ್ಮ ಸಂಪತ್ತನ್ನು, ನಮ್ಮ ಸುಖ, ಹೆಸರು ಮತ್ತು ಖ್ಯಾತಿಯನ್ನು, ಘನತೆಯನ್ನು ಮುಂತಾದ ಇತರ ಪ್ರಾಪಂಚಿಕ ವಸ್ತುಗಳನ್ನು ಕಳೆದುಕೊಳ್ಳುವ ಭಯ. ಎರಡನೆಯದು ನಮ್ಮ ಆರೋಗ್ಯವನ್ನು ಕಳೆದುಕೊಳ್ಳುವ, ಅಪಘಾತಗಳಿಂದಲೋ ಅಥವಾ ಖಾಯಿಲೆಯಿಂದಲೋ ನಮ್ಮ ದೇಹದ ಅಂಗಗಳನ್ನು ಕಳೆದುಕೊಳ್ಳುವ ಭಯ

  • ನಮ್ಮ ಭೌತಿಕ ಆರೋಗ್ಯಕ್ಕೆ ಸಂಬಂಧಪಟ್ಟ ಭಯ. ಮೂರನೆಯದು ನಮ್ಮ ಮಾನಸಿಕ ಸ್ವಾಸ್ಥ್ಯವನ್ನು, ನಮ್ಮ ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳುವ ಭಯ. ನಾಲ್ಕನೆಯದು ನಮ್ಮ ಪ್ರೀತಿಪಾತ್ರರನ್ನು, ಅವರ ಪ್ರೀತಿಯನ್ನು ಕಳೆದುಕೊಳ್ಳುವ ಭಯ, ಐದನೆಯದು ನಿಗೂಢವಾಗಿರುವುದರ ಭಯ - ದೇವರ ಭಯ, ದೆವ್ವಗಳ ಭಯ ಮತ್ತು ಸಾವಿನದೇ ಭಯ.

ವಾಸ್ತವವಾಗಿ ನೀವು ಆಳವಾಗಿ ನಮ್ಮ ಭಯಗಳನ್ನು ವಿಶ್ಲೇಷಿಸಿದರೆ, ಭಯದ ಎಲ್ಲಾ ಐದೂ ಪಂಗಡಗಳೂ ಸಾವಿನ ಭಯ ಮಾತ್ರ. ಎಲ್ಲವೂ ಬೇರೆ ಬೇರೆ ವಿಧಗಳಲ್ಲಿ ಪ್ರಕಟಗೊಂಡಿರುತ್ತವೆ, ಅಷ್ಟೆ.

ಜನಗಳು ಸಾವಿಗೆ ಹೆದರಲು ಮುಖ್ಯ ಕಾರಣವೇನೆಂದರೆ, ಅವರು ತಮ್ಮ ಜೀವನವನ್ನು ಪೂರ್ತಿಯಾಗಿ ಜೀವಿಸಿಲ್ಲದಿರುವುದು. ಅವರು ಜೀವನವನ್ನು ಸಾಕಷ್ಟು ಜೀವಿಸಿಲ್ಲವೆಂಬ ಹತಾಶಭಾವನೆಯಾಗುವುದರಿಂದ ಅವರು ಹೆದರುತ್ತಾರೆ. ಅವರು ಈ ತರಹ ಭಾವಿಸಲು ಕಾರಣ ಅವರು ತಮ್ಮ ಜೀವಮಾನವಿಡೀ ಭೂತಕಾಲದ ಸ್ಮೃತಿಗಳಲ್ಲಿ, ಭವಿಷ್ಯಕಾಲದ ಚಿಂತೆಗಳಲ್ಲಿ, ಬೇರೆಯವರಿಗಾಗಿ ಜೀವಿಸಿರುತ್ತಾರೆ, ವರ್ತಮಾನದಲ್ಲಿಯಂತೂ ಇಲ್ಲವೇ ಇಲ್ಲ.

ನಮ್ಮ ಪ್ರತಿಯೊಂದು ಕೃತ್ಯವೂ, ಪ್ರತಿಯೊಬ್ಬರ ಅಹಂನ ತಳ್ಳಾಟ ಜಗ್ಗಾಟಗಳು, ಪ್ರತಿಯೊಬ್ಬರ ಆಕಾಂಕ್ಷೆಗಳು, ಪ್ರತಿಯೊಬ್ಬರ ಭಾವನೆಗಳು, ಮುಂತಾದುವುಗಳಿಂದ ಆಗಿರುತ್ತದೆ. ನೀವು ನಿಮ್ಮ ಜೀವನವನ್ನೇ ಆಳವಾಗಿ ವಿಶ್ಲೇಷಿಸಿದರೆ, ನಾನು ಏನು

ಹೇಳಲು ಪ್ರಯತ್ನಿಸುತ್ತಿದ್ದೇನೆ ಎಂದು ನಿಮಗೆ ತಿಳಿಯುತ್ತದೆ. ನೀವು ನಿಮ್ಮ ಜೀವನವನ್ನು ನಿಮ್ಮ ತಂದೆತಾಯಿಯರು ಬಿಟ್ಟ ಜಾಗದಿಂದ ಪ್ರಾರಂಭಿಸುತ್ತೀರಿ. ನೀವು ತಲೆಮಾರುಗಳಿಂದ ಹಸ್ತಾಂತರಗೊಂಡು ಬರುತ್ತಿರುವ ಆಕಾಂಕ್ಷೆ, ಭಯ ಮುಂತಾದವುಗಳ ಮುಕುಟವನ್ನು ಸರಳವಾಗಿ ತೆಗೆದುಕೊಂಡು ಅದನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುತ್ತೀರ, ಅಷ್ಟೆ. ನೀವು ಸಂಪೂರ್ಣವಾಗಿ ಜೀವಿಸಿಯೇ ಇಲ್ಲ.

ಪೂರ್ಣವಾಗಿ ಬದುಕಬೇಕು ಎಂದು ನಾನು ಅರ್ಥೈಸುತ್ತಿರುವುದೇನು? ಹೆಚ್ಚು ನಿಚ್ಚಳತೆಯಿಂದ ಬದುಕಲು ಪ್ರಯತ್ನಿಸಿ ಎಂದಷ್ಟೆ. ನಿಮ್ಮ ಮೇಲೆ ಏನಾದರೂ ಹೇರಲು ಪ್ರಯತ್ನಿಸುತ್ತಿರುವ ಜನಗಳು ಅರ್ಥಮಾಡಿಕೊಳ್ಳುವಂತೆ ಮಾಡಿ. ನಿಚ್ಚಳತೆಯಿಂದ ನೀವು ನಿಮ್ಮ ಆಕಾಂಕ್ಷೆಗಳನ್ನು, ಬೇರೆಯವರು ನಿಮ್ಮ ಮೇಲೆ ಹೇರುತ್ತಿರುವುದೇನು ಮತ್ತು ಬೇರೆಯವರಿಂದ ಯಾವ ಅಪೇಕ್ಷೆಗಳನ್ನು ಎರವಲು ಪಡೆದಿರುವುದೇನು ಎಂದು ಸ್ಪಷ್ಟವಾಗಿ ಗುರುತಿಸಬಲ್ಲಿರಿ. ಮೊದಲನೆಯ ಗುಂಪಿನ ಆಕಾಂಕ್ಷೆಗಳನ್ನು ಮಾತ್ರವೇ ಬೇರೆ ವ್ಯಕ್ತಿಗೆ ಅಥವಾ ಸ್ವತ್ತಿಗೆ ಹಾನಿಮಾಡದೆ ಪೂರೈಕೆಗೊಳಿಸ ಬೇಕಿರುವುದು. ಮಿಕ್ಕೆರಡು ಆಕಾಂಕ್ಷೆಗಳನ್ನು ನಿಚ್ಚಳತೆಯ ಸಹಾಯದಿಂದ ಕೈಬಿಡಬೇಕಾಗಿರುವುದು.

ನೀವು ಈ ರೀತಿ ಬಾಳಿದರೆ, ನೀವು ಬೇರಾರ ಆಕಾಂಕ್ಷೆಗಳನ್ನು ಪೂರೈಸುತ್ತಿರುವುದಿಲ್ಲ ಮತ್ತು ನೀವು ಬೇರೆಯವರ ಜೀವನವನ್ನು ಜೀವಿಸುತ್ತಿರುವುದಿಲ್ಲ. ನೀವು ನಿಮ್ಮದೇ ಸ್ವಂತ ಜೀವನವನ್ನು ಜೀವಿಸುತ್ತೀರ, ಸಂತೃಪ್ತಿಯನ್ನು (fulfilment), ಮತ್ತು ಸಮಯ ಬಂದಾಗ ಸಾಯಲು ತಯಾರಾಗಿರುತ್ತೀರ. ನೀವು ಈಡಗಿರುವ ಗೊಂದಲಗಳನ್ನು ಮತ್ತು ಸಾವಿನ ಭಯವನ್ನು ಹೊಂದಿರುವುದಿಲ್ಲ. ನಾನು ನಿಮ್ಮನ್ನು ಸ್ವಾರ್ಥಿಗಳಾಗಿರಬೇಕೆಂದು ಹೇಳುತ್ತಿಲ್ಲ. ನಾನು ಕೇಳುತ್ತಿರುವುದು ಇದೆಲ್ಲದರಲ್ಲೂ ನಿಚ್ಚಳತೆಯನ್ನು ತನ್ನಿರಿ ಎಂದಷ್ಟೆ.

ಒಂದು ಚಿಕ್ಕ ಕತೆ:

ಒಮ್ಮೆ ಝೆನ್ ಭಿಕ್ಷು ಒಬ್ಬರು ರಾಜನಿಂದ ಮರಣ ದಂಡನೆಗೆ ಗುರಿಯಾಗಿದ್ದ. ಮರುದಿನ ಅವನನ್ನು ಸಾಯಿಸಬೇಕೆಂದು ನಿಗದಿಯಾಗಿತ್ತು.

ಭಿಕ್ಷುವು ಶಾಂತಚಿತ್ತನಾಗಿ ಮೌನದಿಂದಿದ್ದ.

ಭಿಕ್ಷುವಿನ ಶಾಂತತೆಯನ್ನು ನೋಡಿ ಆಘಾತ ಹೊಂದಿದ ಅವನ ಶಿಷ್ಯನೊಬ್ಬನು ಅವನನ್ನು ಕೇಳುತ್ತಾನೆ, "ನೀವು ಇನ್ನು ಕೇವಲ 24 ಘಂಟೆಗಳ ಕಾಲ ಮಾತ್ರ ಜೀವಿಸಿರುತ್ತೀರೆಂದು ಅರಿತಿದ್ದೀರಾ? ನೀವು ಸಾವಿಗೆ ಹೆದರುವುದಿಲ್ಲವೇ?"

ಭಿಕ್ಷುವು ಅರ್ಥೈಸಿದ್ದು, "ನಾನು ಜೀವನದ ಪ್ರತಿಕ್ಷಣವನ್ನೂ, ಕ್ಷಣದಿಂದ ಕ್ಷಣಕ್ಕೂ, ಜೀವಿಸಿದೆ. ಪ್ರತಿಯೊಂದು ಕ್ಷಣವೂ ನನಗೆ ಅತಿಶಯವಾಗಿತ್ತು. ಆದ್ದರಿಂದ ನಾನೇಕೆ ಹೆದರಲಿ?"

ನೀವು ನಿಮ್ಮೊಳಗೆ ಆಳವಾಗಿ ಅವಲೋಕಿಸಿದರೆ, ನಿಮಗೆ ತಿಳಿಯುವುದೇನೆಂದರೆ ನಮ್ಮಲ್ಲಿ ಬಹು ಮಂದಿ ಸಾವಿಗೆ ಹೆದರುತ್ತಿಲ್ಲ. ಆದರೆ ನಾವು ಹೆದರುತ್ತಿರುವುದು ನಾವು ನಮ್ಮ ಜೀವನವನ್ನು ಸಾಕಷ್ಟು ಜೀವಿಸಿಲ್ಲವೆಂದು ನಾವು ಒಂದು ಮಿಥ್ಯಾಜೀವನವನ್ನು ಜೀವಿಸಿದ್ದಕ್ಕಾಗಿ ಹೆದರುತ್ತೇವೆ. ಎಲ್ಲದರ ಬಗ್ಗೆಯೂ ಒಂದು ತರಹೆಯ ಆಳವಾದ ವಿವರಿಸಲಾಗದ ವಿಷಾದ ಭಾವನೆಯುಂಟಾಗುತ್ತದೆ. ನಾವು ಜೀವಿಸಬೇಕೆಂದುಕೊಂಡ ಹಾಗೆ ಜೀವಿಸಿಲ್ಲವೆಂಬ ಭಾವನೆಯುಂಟಾಗುತ್ತದೆ; ಸಾಫಲ್ಯತೆಯ ಭಾವನೆ ನಮಗುಂಟಾಗುವುದಿಲ್ಲ - ಅಲ್ಲಿ ಸಾವಿನ ಹೆದರಿಕೆ ಶುರುವಾಗುವುದು.

ಬೇರೆಯವರಿಗಾಗಿ ನಿರಂತರವಾಗಿ ರಾಜಿ ಮಾಡಿಕೊಳ್ಳುವುದು, ನಮಗೆ ಸ್ವಾಭಾವಿಕವಲ್ಲದ ಜೀವನವನ್ನು ಬೇರೆಯವರಿಗಾಗಿ ಜೀವಿಸುವುದು, ಸಮಾಜವು ನಮಗಾಗಿ ತಯಾರಿಸಿದ ಅಚ್ಚಿಗೆ ಹೊಂದಿಕೊಳ್ಳಲು ಪ್ರಯತ್ನಿಸುವುದು ... ಇವೆಲ್ಲವೂ ಅಸಫಲತೆಗೆ ಕರೆದೊಯ್ಯುತ್ತದೆ! ಜೀವನದ ಭಯವೇ ಸಾವಿನ ಭಯದಲ್ಲಿ ಪ್ರತಿಬಿಂಬಿಸುತ್ತಿರುತ್ತದೆ.

ನೀವು ನಿಮ್ಮ ಪೂರ್ಣ ತೃಪ್ತಿಗೆ ಸಾಧ್ಯವಾದಷ್ಟೂ ಮನಃಪೂರ್ವಕವಾಗಿ ಜೀವಿಸಿದರೆ, ನೀವು ಸಾವಿನ ಭಯದಲ್ಲಿ ಇರುವುದಿಲ್ಲ.

ನಿಮಗೆ ಸಾಧ್ಯವಾದಷ್ಟೂ ಮನಃಪೂರ್ವಕವಾದ ವ್ಯಕ್ತಿತ್ವದಲ್ಲಿ ಜೀವಿಸಿರಿ. ನಿಮ್ಮ ಪರಿಪೂರ್ಣ ತೃಪ್ತಿಗಾಗಿ ಜೀವಿಸಿರಿ. ನೀವು ಸಾವಿನ ಭಯವನ್ನು ಕಳೆದುಕೊಳ್ಳುತ್ತೀರಿ.

ಮತ್ತೊಂದು ವಿಷಯ: ನೀವು ಯಾವುದೇ ಸಂವೇದನೆಯ ಮಯಕವಿಲ್ಲದೆ ಪೂರ್ಣವಾಗಿ ಜೀವಿಸಿದರೆ, ನೀವು ನಿಮ್ಮ ಮನೋಭಾವನೆಗಳನ್ನು ತುಂಬಾ ನಿಚ್ಚಳತೆಯಿಂದ ಮತ್ತು ಸಂಪೂರ್ಣತೆಯಿಂದ ಜೀವಿಸಿದರೆ, ನೀವು ನಿಮ್ಮ ಸಂಸಾರ ಮತ್ತು ಸಂಬಂಧಿಕರನ್ನು ಕಳೆದುಕೊಳ್ಳುವ ಭಯವಾಗುವುದೇ ಇಲ್ಲ.

ನೋಡಿ: ನೀವು ಯಾರಾದರೊಬ್ಬರನ್ನು ಕಳೆದುಕೊಳ್ಳಲು ಹೆದರಿಕೊಳ್ಳುವುದೇಕೆಂದರೆ ನೀವು ಆ ಸಂಬಂಧವನ್ನು ನಿಮ್ಮ ಜೀವನದಲ್ಲಿ ಎಲ್ಲಿಯೋ ಸಮರ್ಥಿಸಿಲ್ಲವೆಂದು ಭಾವಿಸಿರುವುದರಿಂದ; ನೀವು ಅದರಲ್ಲಿ ಪೂರ್ಣತೆಯಿಂದ ಇರಲಿಲ್ಲವೆಂದು ಭಾವಿಸಿರುತ್ತೀರಿ; ನೀವು ಬಿಟ್ಟುಬಿಡಲು ತಯಾರಿರವುದಿಲ್ಲ; ಶಾರೀರಿಕ ಅಗಲಿಕೆಯ ಭಯದ ಕೇವಲ ಒಂದು ಅಂಶ ಮಾತ್ರ; ಸಂಬಂಧದಲ್ಲಿಯ ಪರಿಪೂರ್ಣತೆಯ ಕೊರತೆಯೇ ನಿಜವಾದ ಉದ್ದೇಶ.

‘ಸಮರ್ಥನೆ ’ ಎಂಬ ಪದವು ಸಂಬಂಧಗಳಲ್ಲಿ ಬರುವುದೇಕೆಂದರೆ ನೀವು ಬೇರೆಯವರಿಗಾಗಿ ಬದುಕುತ್ತಾ ಅವರ ಅವಶ್ಯಕತೆಗಳೂ ಮತ್ತು ಆಸೆಗಳನ್ನು ಈಡೇರಿಸುತ್ತಿರಬೇಕೆಂದು ನಿಮಗೆ ಸದಾಕಾಲವೂ ಬೋಧಿಸಲಾಗಿದೆ. ಈ ಕೆಲಸಗಳನ್ನು ಮಾಡುತ್ತಾ ಸಂಬಂಧಗಳು ಸಮರ್ಥನೆಯನ್ನು ಮಾಡುವ ಅವಶ್ಯಕತೆ ನಿಮಗೆ ಅನಿಸುತ್ತಿರುತ್ತದೆ. ಇವುಗಳನ್ನು ಮಾಡದಿದ್ದರೆ ನೀವು ಅಪರಾಧ ಮತ್ತು ಭಯದ ಆವರ್ತ (cycle) ದಲ್ಲಿ ಸಿಲುಕಿಕೊಳ್ಳುತ್ತೀರಿ. ನೀವು ಸಮಾಜದ ಆಟದಲ್ಲಿ ಆಳವಾದ ನಿಚ್ಚಳತೆಯಿಂದ ಸುಮ್ಮನೆ ಸಂಪೂರ್ಣವಾಗಿ ಬದುಕಿದರೆ, ನೀವು ಅಂತಹ ನಿರ್ಬಂಧದಲ್ಲಿ ಹಿಡಿತಕ್ಕೆ ಒಳಗಾಗುವುದೇ ಇಲ್ಲ.

ಸಂಬಂಧಗಳಲ್ಲಿ ಯಾವುದೇ ಪ್ರೀತಿಯನ್ನು ಕಳೆದುಕೊಳ್ಳದೆ ನೀವು ಸಂಪೂರ್ಣ ಸಂತೃಪ್ತಿಯಿಂದ ಜೀವಿಸಬಹುದು. ನಾವು ಇದನ್ನು “ಅನಾಹತ ಚಕ್ರ”ದ ಬಗ್ಗೆ ಮಾತನಾಡುವಾಗ ಚರ್ಚಿಸಿದ್ದೇವೆ. ದೈಹಿಕ ಅಗಲಿಕೆಯ ಭಯವು ಯಾವಾಗಲೂ ತತ್ಸಂಬಂಧಿತ ತಪ್ಪಿತಸ್ಥ ಪ್ರಜ್ಞೆಯ ಕಾರಣದಿಂದ ಇರುತ್ತದೆ. ನೀವು ಇತರರ ಸಂಬಂಧವು ವ್ಯಾಪಾರದ ರೀತಿಯಂತಲ್ಲದೆ ಕೇವಲ ಶುದ್ಧವಾದ ಪ್ರೀತಿಸುವ ಚೈತನ್ಯದಿಂದ ನೀವು ಸಂಪೂರ್ಣವಾಗಿ ಜೀವಿಸಿದರೆ ಅಲ್ಲಿ ತಪ್ಪಿತಸ್ಥ ಭಾವನೆ ಅಥವಾ ಭಯಕ್ಕೆ ಜಾಗವು ಇರುವುದಿಲ್ಲ. ಆ ವ್ಯಕ್ತಿಯು ಮರಣಿಸಿದರೂ ಕೂಡ ಅವರನ್ನು ಕುರಿತು ಪ್ರೀತಿಯಿರುತ್ತದೆಯಷ್ಟೆ ಹೊರತು ಅಗಲಿಕೆಯ ಭಯವು ಇರುವುದಿಲ್ಲ.

ನೀವು ಆ ವ್ಯಕ್ತಿಯೊಂದಿಗೆ ಜೀವಿಸುತ್ತಿದ್ದರೂ ಸಹ, ಹೆಚ್ಚಿನ ನಿಚ್ಚಳತೆ ಮತ್ತು ಅರಿವಿನಿಂದ ಜೀವಿಸಲು ಪ್ರಯತ್ನಿಸಿ. ಬಹಳಷ್ಟು ಸಾರಿ ಸಂಬಂಧಗಳು ಹಾಳಾಗಲು ಕಾರಣ ಅಭದ್ರತೆ ಮತ್ತು ಒಬ್ಬರನ್ನೊಬ್ಬರು ಕಳೆದುಕೊಳ್ಳಬಹುದೆಂದು ಬಂದು ನಿಲ್ಲುತ್ತಿರುವ ಭಯ. ಈ ನಮ್ಮ ಸಂಬಂಧಗಳು ಕೇವಲ ಒಂದು ರೀತಿಯ ವ್ಯವಹಾರದಂತಿರು ವುದನ್ನು ಮತ್ತು ಈ ಭಯವು ಅಲ್ಲಿರುವುದನ್ನು ಅರ್ಥಮಾಡಿಕೊಳ್ಳುತ್ತೀರ.

ಒಬ್ಬ ಗಂಡ ಮತ್ತು ಹೆಂಡತಿಯ ಮಧ್ಯೆ ಇನ್ನೊಬ್ಬರು ವಿವಾಹದ ಹೊರಗೆ ನೋಡುತ್ತಿರಬಹುದೇನೋ ಎಂಬ ಭಯವಿರುತ್ತದೆ. ತಾಯಿ ಮತ್ತು ಮಗನ ಮಧ್ಯೆ, ಮಗನು ಗಮನವನ್ನು ತಾಯಿಗಿಂತ ಹೆಚ್ಚಾಗಿ ಹೆಂಡತಿಗೆ ನೀಡುತ್ತಿರಬಹುದೆಂಬ ಭಯವಿರುತ್ತದೆ. ತಂದೆ ಮತ್ತು ಮಗನ ಮಧ್ಯೆ, ತಂದೆಯು ಪಿತ್ರಾರ್ಜಿತವನ್ನು ಮಗನಿಗೆ ಹಸ್ತಾಂತರಿಸುತ್ತಿಲ್ಲವೆಂಬುದಾಗಿಯೋ ಅಥವಾ ಮಗನು ಕುಟುಂಬದ ಘನತೆಯನ್ನು ಎತ್ತಿ ಹಿಡಿಯುತ್ತಿಲ್ಲವೆಂದಾಗಿಯೋ ಭಯವಿರುತ್ತದೆ.

ಇದೇ ರೀತಿ, ಇನ್ಯಾವುದೇ ಸಂಬಂಧಗಳಲ್ಲಿ ಒಂದು ತೃಪ್ತಿಗೊಳಿಸಬೇಕಾದಂತಹ ಮತ್ತು ಕಾಪಾಡಬೇಕಾದಂತಹ ಅಂತರಾಳದ ನಿರೀಕ್ಷೆಯಿರುತ್ತದೆ ಮತ್ತು ಇದೇ ಭಯವನ್ನು ಹುಟ್ಟಿಸುತ್ತದೆ. ನಾನು ಹೇಳುತ್ತೇನೆ: ನೀವು ಯಾವುದೇ ಸಂಬಂಧವನ್ನೂ ಪೂರ್ಣವಾಗಿ ತೃಪ್ತಿಗೊಳಿಸಲಾಗುವುದೇ ಇಲ್ಲ. ಯಾರಾದರೂ ತಮ್ಮ ಇಡೀ ಕುಟುಂಬವನ್ನೇ ತೃಪ್ತಿಗೊಳಿಸಲು ಪ್ರಯತ್ನಿಸಿದರೆ ಅವರು ಕೇವಲ ಅಪ್ರಯೋಜಕರೇ (dropouts) ಆಗಿಬಿಡುತ್ತಾರೆ.

ಯಾವುದೇ ಸಂಬಂಧ ಅಂತರ್ಗತ ಕಾರಣವಿಲ್ಲದ ಶುದ್ಧ ಪ್ರೀತಿಯ ಮೇಲೆ ನೆಲೆಸಿದ್ದರೆ

  • ‘ಅನಾಹತ’ ಚಕ್ರದ ಸಮಯದಲ್ಲಿ ನಾವು ಮಾತನಾಡಿದ ಪ್ರೀತಿಯ ಬಗ್ಗೆ - ಅಲ್ಲಿ ಭಯದ ಅಂಶವೇ ಇರುವುದಿಲ್ಲ.

ನೀವು ಭಯದಿಂದ ಪ್ರೀತಿಗೆ ಸ್ಥಳಾಂತರಿಸಿದರೆ ಎಂತಹ ಬಿಡುಗಡೆ ಎಂದು ನಿಮಗೆ ತಿಳಿದಿಲ್ಲ. ಭಯವು ಯಾವಾಗಲೂ ನಿರ್ಬಂಧಿಸುತ್ತದೆ ಮತ್ತು ಪ್ರೀತಿಯು ಯಾವಾಗಲೂ ಬಿಡುಗಡೆ ಮಾಡುತ್ತಿರುತ್ತದೆ. ಆದರೆ ಸಮಾಜವು ನಿಮ್ಮ ಮನಸ್ಸಿನಲ್ಲಿ ಭಯವನ್ನು ತುಂಬಿಸದೆ ಇದ್ದರೆ ನೀವು ಅದನ್ನು ಕೇಳುವುದಿಲ್ಲ. ಆದ್ದರಿಂದ ಅದು ನಿಮ್ಮಲ್ಲಿ ಸಾಧ್ಯವಾದ ಎಲ್ಲ ವಿಧಾನಗಳಿಂದಲೂ - ಅಭದ್ರತೆಯಿಂದ, ನಿಯಮ ಕಟ್ಟುಪಾಡುಗಳಿಂದ, ಪೂಜಾ ವಿಧಾನ ಏನೇನಿಲ್ಲಾ, ನಿಮ್ಮ ಮನಸ್ಸಿನಲ್ಲಿ ಭಯವನ್ನು ತುಂಬಿಸುತ್ತದೆ.

ಸಮಾಜವು ನಿಮ್ಮಿಂದ ಸಂತರನ್ನು ಮಾಡಲು ಪ್ರಯತ್ನಿಸುತ್ತದೆ - ಸದಾಕಾಲವೂ ಅಸ್ತಿತ್ವ ಮತ್ತು ಎಲ್ಲದಕ್ಕೂ ಹೆದರುವ ಸಂತರನ್ನು. ನಾನು ನಿಮ್ಮಿಂದ ಸಂತರನ್ನು ಮಾಡಲು ಇಲ್ಲಿಲ್ಲ. ನಿಮ್ಮನ್ನು ನಿತ್ಯಾನಂದರನ್ನಾಗಿಸಲು ಇಲ್ಲಿದ್ದೇನೆ. ನೀವು ನಿತ್ಯಾನಂದರಾದರೆ, ನೀವು ಸತ್ವಭರಿತ, ಚಟುವಟಿಕೆಯಿಂದ ಜಾಗರೂಕತೆಯಿಂದ ಇರುತ್ತೀರಿ.

ಹೇಗೇ ಇರಲಿ, ನಮ್ಮ ಸಂಬಂಧಗಳಲ್ಲಿ ಭಯವು ಅಸೂಯೆಯ ರೂಪವನ್ನು ಕೂಡ ತೆಗೆದುಕೊಳ್ಳುತ್ತದೆ. ಭಯವು ನಮ್ಮ ಬಹಳ ಕೃತ್ಯಗಳ, ಮನೋಭಾವಗಳ ತಳಹದಿಯ ಮನೋಭಾವ. ಅಸೂಯೆ, ಕೋಪ, ಅತ್ಯಾಸೆ - ಈ ಎಲ್ಲ ಮನೋಭಾವಗಳು ಭಯದಲ್ಲಿ ಬೇರು ಬಿಟ್ಟಿರುತ್ತವೆ. ಆದರೆ ಇದು ನಮಗೆ ಅರಿವಾಗುತ್ತಿಲ್ಲ; ಇವೆಲ್ಲಕ್ಕೂ ಭಯವೇ ಮೂಲ ಕಾರಣ ಎಂಬುದು ನಮಗೆ ಗೊತ್ತಿಲ್ಲ. ಅದೇ ಸಮಸ್ಯೆ. ಆದ್ದರಿಂದಲೇ ನಮ್ಮ ವರ್ತನೆಯ ಮಾದರಿಗಳನ್ನು ಕುರಿತಂತೆ ನಾವು ಸದಾಕಾಲವೂ ಮುಂದುವರಿಯುತ್ತೇವೆ. ಆದ್ದರಿಂದಲೇ ನಮ್ಮ ಸಂಬಂಧಗಳೂ ವೇದನಾಮಯವಾಗಿ ತಿರುಗುತ್ತದೆ.

ಅರ್ಥ ಮಾಡಿಕೊಳ್ಳಿರಿ: ಭಯ ಮತ್ತು ಪ್ರೀತಿಯು ಒಟ್ಟಿಗೆ ಇರಲಾರವು. ಒಂದು ಸಂಬಂಧದಲ್ಲಿ ನಿರ್ಮಲ ಪ್ರೀತಿಯಿದ್ದರೆ, ಅಲ್ಲಿ ಭಯವು ಇರುವುದೇ ಇಲ್ಲ. ಅಲ್ಲಿ ಭಯವು ಇದ್ದರೆ, ನಿರ್ಮಲ ಪ್ರೀತಿಯು ಅಲ್ಲಿರುವುದೇ ಇಲ್ಲ. ತುಂಬಾ ಸ್ಪಷ್ಟವಾಗಿರಿ. ಸಂಬಂಧದಲ್ಲಿ ಯಾವುದೋ ಪಟ್ಟಭದ್ರ ಹಿತಾಸಕ್ತಿಯಿರುತ್ತದೆ; ಯಾವುದೋ ಉದ್ದೇಶವಿರುತ್ತದೆ, ಯಾವುದೋ ಗುರಿ, ಯಾವುದೋ ಭದ್ರತೆಯ ನಿರೀಕ್ಷೆ ಅಥವಾ ಅತಿ ಆಸೆ ಅಥವಾ ಪ್ರತಿಫಲಾಪೇಕ್ಷೆ ಸಂಬಂಧದಲ್ಲಿ ಇರುತ್ತದೆ. ಆದ್ದರಿಂದಲೇ ಭಯವು ಪ್ರಾರಂಭವಾಗುತ್ತದೆ.

ನಾವು ಪ್ರತಿ ಸಂಬಂಧದಲ್ಲೂ ಭದ್ರತೆಗಾಗಿ ನೋಡುತ್ತೇವೆ. ನಾವು ಆರಾಮದಾಯಕವಾಗಿ ನೆಲೆಗೊಳ್ಳಲು ಯಾವುದಾದರೂ ಭದ್ರತೆಯು ಬೇಕು. ವಾಸ್ತವವಾಗಿ ಇದು ನಾವು ಖುಷಿಪಡುವ ಒಂದು ತರಹೆಯ ಸೆರೆಮನೆವಾಸ. ಜನಗಳು ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಾರೆ, ಆದರೆ ನಾನು ನಿಮಗೆ ಹೇಳುತ್ತೇನೆ: ಅವರು ಅದಕ್ಕೆ ಬಹಳವಾಗಿ ಹೆದರಿರುತ್ತಾರೆ! ಅವರು ಸೆರೆಮನೆವಾಸವನ್ನು ಮಾತ್ರವೇ ಇಷ್ಟಪಡುತ್ತಾರೆ. ಸೆರೆಮನೆವಾಸದ ಆರಾಮದಾಯಕವಾದ ಮತ್ತತೆಯ ಪರಿಣಾಮದಲ್ಲಿ ಅವರು ತಾವು ಸ್ವತಂತ್ರರು ಎಂದು ತಿಳಿಯುತ್ತಾರೆ.

ಒಂದು ಸಣ್ಣ ಕತೆ:

ಒಬ್ಬ ಚಿಕ್ಕ ಹುಡುಗಿಯು ಒಂದು ದಿನ ತನ್ನ ತಂದೆಯನ್ನು ಕೇಳುತ್ತಾಳೆ, ''ಅಪ್ಪ, ಭರವಸೆ (guaranteed) ಎಂಬ ಪದದ ಅರ್ಥವೇನು?''

ತಂದೆಯು ಉತ್ತರಿಸಿದ, ''ಅದರ ಅರ್ಥ ಯಾವುದೋ ಪದಾರ್ಥವನ್ನು ಚೆನ್ನಾಗಿ ಮಾಡಲಾಗಿದೆ ಮತ್ತು ಅದು ದೀರ್ಘಕಾಲ ಬಾಳುತ್ತದೆ, ಎಂದು''.

ಆ ರಾತ್ರಿ ಮಲಗುವ ಮುಂಚೆ, ಆ ಹುಡುಗಿಯು ಕೂಗಿ ಹೇಳಿದಳು, "ಶುಭ ರಾತ್ರಿ, ಭರವಸೆಯಿರುವ ಅಪ್ಪ!"

ನಾವೆಲ್ಲರೂ ಸದಾಕಾಲವೂ ನಮ್ಮ ಜೀವನದಲ್ಲಿ ಭದ್ರತೆಯನ್ನು ದೃಷ್ಟಿಸುತ್ತಿರುತ್ತೇವೆ. ಆದರೆ ನಾವು ಸ್ವಾತಂತ್ರ್ಯವನ್ನು ದೃಷ್ಟಿಸುತ್ತಿದ್ದೇವೆ ಎಂದು ಹೇಳುತ್ತೇವೆ. ನಾವು ನಿಜವಾಗಿಯೂ ಸ್ವಾತಂತ್ರ್ಯವನ್ನು ಶೋಧಿಸುತ್ತಿದ್ದರೆ, ನಾವೇಕೆ ಭದ್ರತೆಗಾಗಿ ಶೋಧಿಸುತ್ತಿರುತ್ತೇವೆ? ಯಾಕೆ ಭಯ? ನಿಮ್ಮಲ್ಲಿ ಭಯವಿರುವತನಕ, ನೀವು ಭದ್ರತೆಗಾಗಿ ಶೋಧಿಸುತ್ತಿರುತ್ತೀರಿ. ಅಲ್ಲಿಯತನಕ ನೀವು ಸ್ವಾತಂತ್ರ್ಯವು ಬೇಕು ಎಂದು ಹೇಳುವುದರ ಮೂಲಕ ನಿಮ್ಮನ್ನು ನೀವು ಮೋಸಗೊಳಿಸಿಕೊಳ್ಳುತ್ತಿರುತ್ತೀರ.

ಒಬ್ಬ ಗುರು ಎನ್ನುವನು ಜೀವನದ ಸಂಪೂರ್ಣ ಅಭದ್ರತೆಯ ಮೇಲೆ ನಿಮ್ಮನ್ನು ಎಸೆಯುತ್ತಾನೆ. ನಿಮಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಡುವವನು ಅವನೊಬ್ಬನೆ. ಆದುದರಿಂದಲೇ ಅವನ ಜೊತೆ ನೀವಿರುವಾಗ ನೀವು ಅಭದ್ರತೆಯನ್ನು ಅನುಭವಿಸುತ್ತೀರ, ಮತ್ತು ಭಯವನ್ನು ಅನುಭವಿಸುತ್ತೀರ. ಸ್ವಾತಂತ್ರ್ಯವು ಭಯವನ್ನು ಸೃಷ್ಟಿಸುತ್ತದೆ.

ನೀವು ಬೇರೆ ಸಂಬಂಧಗಳಲ್ಲಿ ಸಂಪೂರ್ಣ ಅಭದ್ರತೆಯನ್ನು ಅನುಭವಿಸbreakುವುದೇ ಇಲ್ಲ, ಏಕೆಂದರೆ ಅಲ್ಲಿ ಯಾವಾಗಲೂ ಅತಿ ಆಸೆಯ ತಳ್ಳುವಿಕೆ ಮತ್ತು ಎಳೆತಗಳು, ಭಯ ಮತ್ತು ಕೋಪ ಇವುಗಳು ನಿಮ್ಮನ್ನು ಸಂಬಂಧಗಳ ಚಿರಪರಿಚಿತ ಮಾದರಿಗಳಲ್ಲಿ ಚೆನ್ನಾಗಿ ಸ್ಥಾಪಿಸಿರುತ್ತವೆ. ಆದರೆ ಗುರುವಿನೊಂದಿಗೆ ನೀವು ಸಂಪೂರ್ಣ ಸ್ವತಂತ್ರರಾಗಿರುತ್ತೀರಿ. ಆದುದರಿಂದಲೇ ನೀವು ಭಯಗೊಳ್ಳುತ್ತೀರಿ.

ಒಂದು ಚಿಕ್ಕ ಕತೆ:

ಒಬ್ಬ ಮನುಷ್ಯನು ಸೆರೆಮನೆಯಲ್ಲಿ 20 ವರ್ಷಗಳು ಇದ್ದನು.

ಬಿಡುಗಡೆಯ ದಿನ ಅವನು ತುಂಬಾ ಚಿಂತಿತನಾಗಿ ಮತ್ತು ಉದ್ವೇಗದಿಂದ ಇರುವಂತೆ ಕಂಡುಬಂದನು.

ಸೆರೆಮನೆಯಲ್ಲಿದ್ದ ಅವನ ಸ್ನೇಹಿತರು ಅವನನ್ನು ಕೇಳಿದನು, "ನಿನಗೇನಾಯಿತು? ಏತಕ್ಕೆ ಇಷ್ಟೊಂದು ಚಿಂತಿತನಾಗಿದ್ದೀಯಾ?'' ಎಂದು.

ಆ ಮನುಷ್ಯನು ಉತ್ತರಿಸಿದನು, "ನನಗೆ ಭಯವಾಗಿದೆ. ಹೊರಗೆ ಹೋದ ಮೇಲೆ ನಾನೇನು ಮಾಡಲಿ" ಎಂದು

ಸೆರೆಮನೆಯು ಆ ಮನುಷ್ಯನಿಗೆ ಎಂತಹ ಗಟ್ಟಿ ಮಾದರಿಯ ಭದ್ರತೆಯನ್ನು ಸೃಷ್ಟಿಸಿತ್ತೆಂದರೆ ಅವನು ಹೊರಗೆ ಹೋದ ನಂತರ ಏನು ಮಾಡಬೇಕೆಂದು ಅವನಿಗೆ ಗೊತ್ತಾಗುತ್ತಿಲ್ಲ! ಮಾದರಿಗಳಲ್ಲಿ ಮತ್ತು ಭದ್ರತೆಯಲ್ಲಿ ಸಿಕ್ಕಿಕೊಂಡರೆ ಆಗುವ ಭಯ ಇದೇ.

ಒಬ್ಬ ಗುರುವು ನೀವು ನೋಡುತ್ತಿರುವ ಭದ್ರತೆಯನ್ನು ನೀಡುವುದೇ ಇಲ್ಲ. ಅವನು ನೀವು ನೋಡುತ್ತಿರುವ ಮಾದರಿಗಳನ್ನು ನೀಡುವುದೇ ಇಲ್ಲ. ನೀವು ನೋಡುತ್ತಿರುವ ಭದ್ರತೆಯು ನಿಮಗೆ ಸಿಕ್ಕದೆ ಇದ್ದಾಗ ಆಳವಾದ ಕೇಂದ್ರೀಕೃತವನ್ನು (deep centering) ನಿಮ್ಮೊಳಗೆ ಬೆಳೆಸಿಕೊಳ್ಳುತ್ತೀರ; ನೀವು ಭಯರಹಿತರಾಗಿ ಬೆಳೆಯುತ್ತೀರ, ಏಕೆಂದರೆ ನೀವು ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ ಎಂದು ನಿಮಗೆ ಗೊತ್ತು; ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ ಎಂದು ನಿಮಗೆ ತಿಳಿದರೆ, ನಿಮಗೆ ಭಯವಿರುವುದಿಲ್ಲ.

ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ ಎಂದು ನಿಮಗೆ ತೋರಿಸಲು, ಗುರುವು ನಿಮ್ಮನ್ನು ಸಂಪೂರ್ಣ ಅಭದ್ರತೆಯ ಮೇಲೆ ಎಸೆಯುತ್ತಾನೆ. ನಿಮ್ಮ ಮೇಲಿರುವ ಆಳವಾದ ಅನುಕಂಪದಿಂದ, ನಿಮ್ಮ ಬೆಳವಣಿಗೆಯ ಬಗ್ಗೆ ಇರುವ ಆಳವಾದ ಹಂಬಲದಿಂದ, ಅವನು ನಿಮಗೆ ಭದ್ರತೆಯನ್ನು ನೀಡುವುದಿಲ್ಲ. ನಿಮಗೆ ಪ್ರಾಪಂಚಿಕ ಭದ್ರತೆಯು ಸಿಗದಿದ್ದರೆ, ನೀವು ದೇವರನ್ನು ಹುಡುಕುತ್ತೀರಿ; ನೀವು ಅಸ್ತಿತ್ವವನ್ನು ಅರಿತುಕೊಳ್ಳುತ್ತೀರಿ.

ಕಳೆದುಕೊಳ್ಳಲು ಏನೂ ಇಲ್ಲ ಎನ್ನುವುದು ನಿಮಗೆ ನಿಚ್ಚಳವಾಗಿ ತಿಳಿಯದಿರುವುದೇ ನಿಮ್ಮೆಲ್ಲ ಭಯಗಳಿಗೆ ಕಾರಣ. ಸಮೀಪಿಸಿದ್ದ ಸಾವಿನ ಜತೆ ಕೇವಲ ಒಂದು ಭೇಟಿಯು, ಕಳೆದುಕೊಳ್ಳಲು ಏನೂ ಇಲ್ಲವೆಂಬುದನ್ನು ಮತ್ತು ನಿಮ್ಮ ಎಲ್ಲಾ ಭಯಗಳೂ ತಳವಿಲ್ಲದ್ದೆಂದೂ ನಿಮಗೆ ತೋರಿಸುತ್ತದೆ. ಗುರುವು ತನ್ನದೇ ದಾರಿಯಲ್ಲಿ ಸುಲಭವಾಗಿ ನೀವು ಅರ್ಥಮಾಡಿಕೊಳ್ಳುವಂತೆ ಮಾಡುತ್ತಾನೆ.

ಆದ್ದರಿಂದ ಗುರುವಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ. ಅವನು ಇಲ್ಲಿ ಇರುವುದು ವಾಸ್ತವವಾಗಿ ನೀವು ಯಾರು ಎಂದು ತೋರಿಸಲು ಎಂದು ಅರ್ಥಮಾಡಿಕೊಳ್ಳಿ. ನಿರ್ಭಯತೆಯೆಂಬುದು ನಿಮ್ಮ ಜನ್ಮಸಿದ್ಧ ಸ್ವಭಾವ. ವರ್ಷಾಂತರಗಳಲ್ಲಿ ನಿಮ್ಮಲ್ಲಿ ಭಯವನ್ನು ಹುಟ್ಟಿಸಲಾಗಿದೆ. ಗುರುವು, ವರ್ಷಾಂತರಗಳಿಂದ ನೀವೇ ಮೇಲೆಳೆದುಕೊಂಡ ಇಂತಹ ನಿಬಂಧನೆ ಮಾಡುವ ಪದರಗಳನ್ನು ಒಡೆಯಲು

ಪ್ರಯತ್ನಿಸುತ್ತಾನೆ ಅಷ್ಟೆ. ನಂಬಿಕೆಯಿಂದ ಮತ್ತು ಪ್ರೀತಿಯಿಂದ ಸುಮ್ಮನೆ ನೀವು ಅವನನ್ನು ನಿಮ್ಮ ಮೇಲೆ ಕೆಲಸ ಮಾಡಲು ಬಿಟ್ಟರೆ, ನಿಮ್ಮ ಕಣ್ಣುಗಳ ಮುಂದೆಯೇ ನೀವು ಬದಲಾವಣೆ ಹೊಂದುವುದನ್ನು ನೋಡಬಹುದು.

ನಿಮಗೆ ನನಗೆ ಪರಿಚಯವಿದ್ದ 'ಸ್ವಾಮಿ'ಯೊಬ್ಬನ ಕತೆಯನ್ನು ಹೇಳುತ್ತೇನೆ:

ಈ 'ಸ್ವಾಮಿ'ಯು ತನ್ನ ಕೊಠಡಿಯಲ್ಲಿ ಅನೇಕ ಗಡಿಯಾರಗಳನ್ನು ಇಟ್ಟುಕೊಂಡಿರುತ್ತಿದ್ದನು, ಮತ್ತು ಪ್ರತಿಯೊಂದು ಗಡಿಯಾರವೂ ಬೇರೆ ಬೇರೆ ಸಮಯವನ್ನು ತೋರಿಸುತ್ತಿತ್ತು!

ಇದನ್ನು ಕುರಿತು ಒಂದು ದಿನ ಅವನನ್ನು ಕೇಳಿದೆ.

ಅವನು ಹೇಳಿದ, “ಸಮಯವು ನನ್ನ ಯಜಮಾನನಲ್ಲ. ನಾನು ಯಜಮಾನ! ನನಗೆ ಯಾವ ಸಮಯ ಬೇಕಿರುತ್ತದೋ, ನಾನು ಸುಮ್ಮನೆ ಆ ಸಮಯವನ್ನು ಯಾವ ಗಡಿಯಾರವು ತೋರಿಸುತ್ತದೋ ಅದರಿಂದ ಆಯ್ಕೆ ಮಾಡಿಕೊಳ್ಳುತ್ತೇನೆ.

ಈ ಸ್ವಾಮಿಯು ಆಗಲೇ ತನ್ನ ದೇಹ ತ್ಯಾಗದ ದಿನಾಂಕ ಮತ್ತು ಸಮಯವನ್ನು ಮುಂಚಿತವಾಗಿ ನುಡಿದಿದ್ದನು. ಸಾಯುವ ಹಿಂದಿನ ರಾತ್ರಿ, ಆ ಸ್ವಾಮಿಯು ತನ್ನ ಎಲ್ಲಾ ಶಿಷ್ಯರನ್ನು ತನ್ನ ಸುತ್ತಲೂ ಸೇರಿ ದೇವರ ಹಾಡುಗಳನ್ನು ಹಾಡಲು ಹೇಳಿದನು.

ಅವರಲ್ಲೊಬ್ಬ ಹಾಡುಗಾರನು ತನ್ನ ಹಾಡುಗಾರಿಕೆಯ ಸಾಮರ್ಥ್ಯದ ಬಗ್ಗೆ ಅಹಂಕಾರದಿಂದಿದ್ದನು. ಈ ಸಂದರ್ಭದಲ್ಲಿ ಅವನು ಹಾಡಲೇ ಇಲ್ಲ.

ಸಂಪ್ರದಾಯದಂತೆ ಸ್ವಾಮಿಯು ಒಂದು ಕಾಗದದ ಚೂರಿನ ಮೇಲೆ ಏನನ್ನೋ ಬರೆದು ಅವನಿಗೆ ತಲುಪಿಸಿದನು.

ಆ ಶಿಷ್ಯನು ಅದನ್ನು ನಿರ್ದಿಷ್ಟವಾದ ಹಾಡಿಗಾಗಿ ಕೋರಿಕೆ ಎಂದುಕೊಂಡು ಉಬ್ಬಿಹೋದನು.

ಆದರೆ ಆ ಕೈಪತ್ರವನ್ನು ತೆಗೆದು ನೋಡಿದಾಗ, ಸ್ವಾಮಿಯು ಏನೆಂದು ಬರೆದಿದ್ದನ್ನು ನೋಡಿದನು, “ನನ್ನ ಸಾವಿನ ನಂತರ ಹಾಡಬೇಡ!'' ಎಂದು.

ಮರಣಶಯ್ಯೆಯಲ್ಲಿ ಕೂಡ ಹಾಸ್ಯದ ಮನೋಭಾವದಲ್ಲಿದ್ದನು.

ನಂತರ ಆ ರಾತ್ರಿ ತನ್ನ ಶಿಷ್ಯರಿಗೆ ಆಶ್ರಮದಲ್ಲಿ ವಾಸಿಸುತ್ತಿದ್ದ ಇಬ್ಬರು ಅನಾಥರನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳಿದನು. ಅವನು ಹೇಳಿದನು, “ವಿಶೇಷವಾಗಿ ನಾಳೆ

ನೀವೆಲ್ಲರೂ ನನ್ನ ಶವಸಂಸ್ಕಾರದ ತಯಾರಿಯಲ್ಲಿ ನಿರತರಾಗಿರುತ್ತೀರ. ಆ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಲು ಮರೆಯಬೇಡಿ!” ಎಂದನು. ಅಂತಿಮ ನಿಮಿಷದ ತನಕ ಅವನ ಕಾತರವಿದ್ದದ್ದು ತಾನು ಹಿಂದೆ ಬಿಟ್ಟು ಹೋಗುತ್ತಿದ್ದ ಜನಗಳ ಮೇಲೆ ಇತ್ತು.

ಮರುದಿನ ಬೆಳಿಗ್ಗೆ, ತಾನು ನಿಖರವಾಗಿ ತಿಳಿಸಿದ್ದ ಸಮಯಕ್ಕೆ ಎಲ್ಲರಿಗೂ ನಮಸ್ಕಾರ ಮಾಡುವ ಹಾಗೆ ತನ್ನ ಕೈಗಳನ್ನು ಕೂಡಿಸಿದನು ನಂತರ ಸುಮ್ಮನೆ ನಾಟಕದಂತೆ ಅವನ ಕೈಗಳು ಕೆಳಗೆ ಬಿದ್ದವು.

ಎಂತಹ ಸುಂದರವಾದ, ಶಾಂತವಾದ ಮತ್ತು ಎದೆಗಾರಿಕೆಯ ಮೃತ್ಯುವನ್ನು ಎದುರಿಸುವ ರೀತಿ! ಅದೇ ರೀತಿಯೇ ನಾವೆಲ್ಲರೂ ಮರಣಕ್ಕೆ ಹೋಗಬೇಕು ಮತ್ತು ಅದೇ ರೀತಿಯೇ ನಾವು ನಮ್ಮ ಸ್ವಂತ ಸಂಸಾರ ಮತ್ತು ಸಂಬಂಧಿಕರು ಮರಣಿಸಿದಾಗ ಸಾವನ್ನು ಅವಲೋಕಿಸಬೇಕು. ನೀವು ಇದನ್ನು ಅರ್ಥಮಾಡಿಕೊಂಡಾಗ, ಭಯದ ನಿಮ್ಮ ಸಂಪೂರ್ಣ ಕಲ್ಪನೆಯು ನಿಧಾನವಾಗಿ ಕರಗಿ ಹೋಗುತ್ತದೆ, ಏಕೆಂದರೆ ನಾನು ಹೇಳಿದ ಹಾಗೆ, ಸಾವೇ ಭಯದ ತಳಹದಿಯಾಗಿದೆ.

ಸರಿ.... ಏನಾದರೂ ಪ್ರಶ್ನೆಗಳಿಗೆ ಉತ್ತರಿಸಬೇಕೆ?

“ಆದರೆ ಸ್ವಾಮೀಜಿ, ಭಯವು ಸಾಮಾನ್ಯವಾಗಿ ಹೆಂಗಸರ ಜತೆ ಸಂಬಂಧಿಸಿರುತ್ತದಲ್ಲಾ...?”

ನೋಡಿ: ಗಂಡಸರು ಮುಖ್ಯವಾಗಿ ಮೂಲಾಧಾರ ಚಕ್ರದಲ್ಲಿ ಬಂಧಿತರಾಗಿರುತ್ತಾರೆ ಮತ್ತು ಹೆಂಗಸರು ಮುಖ್ಯವಾಗಿ ಸ್ವಾಧಿಷ್ಠಾನ ಚಕ್ರದಲ್ಲಿ ಬಂಧಿತರಾಗಿರುತ್ತಾರೆ. ಆದುದರಿಂದಲೇ ಗಂಡಸರು ಹೆಚ್ಚು ವಿಷಯಾಸಕ್ತರಾಗಿರುತ್ತಾರೆ ಮತ್ತು ಹೆಂಗಸರು ಹೆಚ್ಚು ಭಯಸ್ತರಾಗಿರುತ್ತಾರೆ. ವಾಸ್ತವವೆಂದರೆ, ಅವರಿಬ್ಬರಿಗೂ ಇದು ತಿಳಿದಿದೆ ಮತ್ತು ಇನ್ನೊಬ್ಬರನ್ನು ತಮ್ಮ ಸ್ವಪ್ರಯೋಜನಕ್ಕಾಗಿ ತಕ್ಕ ಹಾಗೆ ಉಪಯೋಗಿಸಿಕೊಳ್ಳುತ್ತಾರೆ!

ಗಂಡಸಿಗೆ ಹೆಂಗಸಿನ ದುರ್ಬಲ ತಂತಿಯನ್ನು ಎಲ್ಲಿ ಮುಟ್ಟಬೇಕೆಂದು ನಿಖರವಾಗಿ ಗೊತ್ತಿರುತ್ತದೆ. ಅವನು ಅವಳ ಅಭದ್ರತೆ ಮತ್ತು ಭಯದೊಂದಿಗೆ ಆಟವಾಡಿ ತನ್ನ ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳುತ್ತಾನೆ. ಅದೇ ತರಹ ಹೆಂಗಸಿಗೆ ಗಂಡಸಿನ ಕೀಲಿಕೈ ಎಲ್ಲಿರುತ್ತದೆಂದು ಗೊತ್ತು. ಇದೇ ಮದುವೆಗಳಲ್ಲಿ ಸದಾ ಕಾಲವೂ ನಡೆಯುತ್ತಿರುವಂತಹದು.

ವಾಸ್ತವವಾಗಿ ಹಿಂದೂಗಳ ವಿವಾಹ ಸಮಯದಲ್ಲಿ ಗಂಡಸು ಮತ್ತು ಹೆಂಗಸು ತಾವು ಪರಸ್ಪರರ ಕರ್ಮಗಳನ್ನು ನೆರವೇರಿಸದಿರುವ ಕಾರ್ಯಗಳು ಮತ್ತು ಆಕಾಂಕ್ಷೆಗಳು - ಸುಸೂತ್ರವಾಗಿ, ಬೇರೆ ಹೆಚ್ಚಿನ ಕರ್ಮಗಳನ್ನು ಈ ಜೀವನದಲ್ಲಿ ಶೇಖರಿಸಿಕೊಳ್ಳದೆ, ಬರಿದು ಮಾಡುವ ವಚನವನ್ನು ಪರಸ್ಪರ ತೆಗೆದುಕೊಳ್ಳುತ್ತಾರೆ.

ಆದರೆ ಈ ಕಾಲದಲ್ಲಿ ಜನಗಳಿಗೆ ಆ ವಚನವನ್ನು ತೆಗೆದುಕೊಳ್ಳುತ್ತಿರುವ ಅರಿವೇ ಇರುವುದಿಲ್ಲ, ಕಾರಣ ಮದುವೆಯಾಗುತ್ತಿರುವುದು ಅವರಲ್ಲ; ಮಂತ್ರಗಳನ್ನು ಹೇಳುತ್ತಿರುವ ಪುರೋಹಿತರೇ ಮದುವೆಯಾಗುತ್ತಿರುವವರು!

ಅವರು ತೆಗೆದುಕೊಳ್ಳುತ್ತಿರುವ ವಚನವು ಅಂತಹ ಸುಂದರವಾದದ್ದು. ನೋಡಿ: ನಾವು ನಮ್ಮ ಜೀವನದಲ್ಲಿ ಸಾಕಷ್ಟು ಮತ್ತು ಜಾಸ್ತಿ ಕರ್ಮಗಳನ್ನು ಶೇಖರಿಸಿರುತ್ತೇವೆ. ನಮ್ಮ ಒಂದೇ ಕಾಳಜಿ ಇರಬೇಕಾದದ್ದು ಅವುಗಳನ್ನು ಕೊನೆಯ ಪಕ್ಷದಲ್ಲಿ ಈ ಜನ್ಮದಲ್ಲಾದರೂ ಬರಿದುಮಾಡಿ ಮುಕ್ತಿಯನ್ನು ಗಳಿಸಬೇಕು.

ಆದರೆ ನಾವು ಮಾಡುತ್ತಿರುವುದೇನು? ನಾವು ಪರಸ್ಪರ ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳುತ್ತೇವೆ. ಮತ್ತು ಕಪಟತನ ಮತ್ತು ಸೇಡಿನ ಆಟವನ್ನು ಆಡುತ್ತೇವೆ. ನಾವು ಪರಸ್ಪರರ ಕರ್ಮಗಳಿಗೆ ಇನ್ನಷ್ಟು ಸೇರಿಸುತ್ತೇವೆ ಮತ್ತು ಜನನ ಮರಣಗಳ ಚಕ್ರದಲ್ಲಿ ಮತ್ತಷ್ಟು ಸಿಕ್ಕಿಹಾಕಿಕೊಳ್ಳುತ್ತೇವೆ. ಇನ್ನೂ ಕೆಟ್ಟದ್ದೆಂದರೆ, ನಾವು ಇದಕ್ಕಾಗಿ ಪರಸ್ಪರರನ್ನು ದೂಷಿಸುತ್ತೇವೆ. ನೀವು ಬಾಹ್ಯದಿಂದ ಮದುವೆಯೆಂಬ ನಾಟಕವನ್ನು ವೀಕ್ಷಿಸಿದರೆ ಪ್ರತಿಯೊಬ್ಬರೂ ಕರ್ಮವನ್ನು ಹೇಗೆ ತಮಗಾಗಿ ಸೃಷ್ಟಿಸಿಕೊಳ್ಳುತ್ತಾರೆ ಮತ್ತು ಇಡೀ ಪ್ರಪಂಚವನ್ನೆ ದೂಷಿಸುವುದರಲ್ಲಿ ಪರ್ಯವಸನಗೊಳ್ಳುತ್ತದೆ ಎಂದು.

ನೀವು ಬಾಹ್ಯದಿಂದ ವೀಕ್ಷಿಸಿದಾಗಲೇ ಎಂತಹ ಮೂರ್ಖತನದ ಆಟವನ್ನು ಆಡಲಾಗುತ್ತಿದೆ ಎಂದು ಅರ್ಥವಾಗುವುದು. ನಾನು ಯಾವಾಗಲೂ ಜನಗಳಿಗೆ ಹೇಳುವುದು: ನಟರಿಗೆ ಮತ್ತು ನಟಿಯರಿಗೆ ಜೀವನವನ್ನು ಒಂದು ಆಟವನ್ನಾಗಿ ವೀಕ್ಷಿಸುವುದು ಸುಲಭ, ಏಕೆಂದರೆ ಅವರು ಸದಾಕಾಲವೂ ಪಾತ್ರಗಳನ್ನು ಕಲ್ಪಿಸಿ ಅವುಗಳನ್ನು ಅಭಿನಯಿಸುತ್ತಿರುತ್ತಾರೆ. ಅವರೇ ಜೀವನವನ್ನು ಅತಿ ಸನಿಹದಿಂದ ಒಂದು ನಾಟಕವೆಂಬಂತೆ ನೋಡುತ್ತಿರುವವರು. ಮಿಕ್ಕ ನಾವು ನಮ್ಮ ಪಾತ್ರಗಳಲ್ಲಿ ಎಷ್ಟು ಬಂಧಿತರಾಗಿರುತ್ತೇವೆಂದರೆ ಅದು ನಮಗೆ ಒಂದು ಘನವಾದ ವಾಸ್ತವಿಕತೆಯಾಗಿಬಿಟ್ಟಿರುತ್ತದೆ.

ಹೆಂಗಸರು ಹೆಚ್ಚು ಭಯಸ್ಥರು, ಏಕೆಂದರೆ ಮಾನಸಿಕವಾಗಿ ಆ ರೀತಿಯಾಗಿ ರಚಿಸಲ್ಪಟ್ಟಿದ್ದಾರೆ. ಗಂಡಸು ಮತ್ತು ಹೆಂಗಸು ಶಾರೀರಿಕವಾಗಿಯಲ್ಲದೆ ಮಾನಸಿಕವಾಗಿಯೂ ಭಿನ್ನವಾಗಿರುತ್ತಾರೆ.

ಸರಿ...?

ಸ್ವಾಮೀಜಿ, ನಾವು ಸಣ್ಣ ವಿಷಯಗಳ ಬಗ್ಗೆ ಆಗುವ ಭಯವನ್ನು ಹೇಗೆ ನಿವಾರಿಸಿಕೊಳ್ಳಬೇಕು?

ಮೊಟ್ಟಮೊದಲಿಗೆ ಸಣ್ಣ ಭಯಗಳು ಮರಣದ ಅಂತಿಮ ಭಯದ ಕೇವಲ ಯೋಚನೆಗಳೆಂದು ಅರಿತುಕೊಳ್ಳಿ. ಎರಡನೆಯದಾಗಿ ಭಯವನ್ನು ವಿರೋಧಿಸಲು ಪ್ರಯತ್ನಿಸಬೇಡಿ. ನಿಮಗೆ ಭಯವಾಗಿದೆಯೆಂದು ಸ್ವಗತ ಸುಮ್ಮನೆ ಹೇಳಿಕೊಳ್ಳುತ್ತಿರಿ ಮತ್ತು ಅದರ ಮೂಲಕ ಹೋಗಿ, ಅಷ್ಟೆ. ಶೀಘ್ರದಲ್ಲೇ ಅಲ್ಲಿ ಭಯವು ಇಲ್ಲದಿರುವುದನ್ನು ನೀವು ಕಂಡುಕೊಳ್ಳುತ್ತೀರಿ, ಏಕೆಂದರೆ ನೀವು ಅದನ್ನು ಪೂರ್ತಿಯಾಗಿ ನೋಡಿಯಾಯಿತು. ಪ್ರತಿಸಲವೂ ನಿಮಗೆ ಭಯವಾದರೆ ಈ ರೀತಿ ಮಾಡಲು ಮೊದಲು ಮಾಡಿ.

ನೀವು ಅರಿವಿನಿಂದ ಇದರ ಮೇಲೆ ಕೆಲಸ ಮಾಡಿದರೆ, ಯಾವುದನ್ನು ನೀವು ಭಯವೆಂದು ಕರೆಯುತ್ತೀರೋ ಅದು ಒಂದು ಘಟನೆಯ ಅಥವಾ ಒಂದು ವಿಚಾರದ ಪ್ರತಿಕ್ರಿಯೆಯಲ್ಲದೇ ಬೇರೇನೂ ಅಲ್ಲವೆಂದು ಅರ್ಥಮಾಡಿಕೊಳ್ಳುತ್ತೀರ. ನೀವು ಯಾವ ರೀತಿ ಪ್ರತಿಕ್ರಿಯಿಸುತ್ತೀರ ಎಂಬುದನ್ನು ಅವಲಂಬಿಸಿ ನಿಮಗೆ ಭಯವಿರಲಿಲ್ಲವೇ ಅಥವಾ ಭಯವಿತ್ತೇ ಎಂದು ಹೇಳಿಕೊಳ್ಳಬಹುದು. ಮತ್ತು ಹೆಚ್ಚು ಹೆಚ್ಚಿನ ಅರಿವಿನಿಂದ ನೀವು ಭಯರಹಿತರಾಗಿ ಭಯಕ್ಕೆ ಪ್ರತಿಕ್ರಿಯಿಸಬಹುದು!

ಒಂದು ವಿಷಯವನ್ನು ಜ್ಞಾಪಕದಲ್ಲಿಡಿ: ಯಾರೊಬ್ಬರೂ ನಿರ್ಭಯರು ಎಂದು ಹೇಳಿಕೊಳ್ಳಲಾಗದು. ಅವರು ಭಯವನ್ನು ಭಯರಹಿತರಾಗಿ ನಿಭಾಯಿಸುವುದನ್ನು ಕಲಿತಿರಬಹುದು, ಅಷ್ಟೆ. ಯಾರಾದರೂ ತಾವು ನಿರ್ಭಯಸ್ಥರೆಂದು ಹೇಳಿಕೊಳ್ಳುತ್ತಿದ್ದರೆ, ಸ್ಪಷ್ಟವಾಗಿ ತಿಳಿದುಕೊಳ್ಳಿ, ಅವರು ಭಯದ ವಿಷಯ ಮತ್ತು ಅದಕ್ಕೆ ಮಾನವನ ಪ್ರತಿಕ್ರಿಯೆಯನ್ನು ಆಳವಾಗಿ ವಿಶ್ಲೇಷಿಸಿಲ್ಲವೆಂದು. ಅವರನ್ನು ಆತಿಮಾನವರೆಂದಾಗಲೀ ಮತ್ತು ನೀವೊಬ್ಬ ಹುಲು ಮಾನನೆಂದಾಗಲೀ ಯೋಚಿಸಲು ಮೊದಲು ಮಾಡಬೇಡಿ. ಸರಿ...

ಸ್ವಾಮೀಜಿ, ನನಗೆ ಜೇಡದ ಬಗ್ಗೆ ಇದ್ದ ಭಯವನ್ನು ನೀವು ಹೇಗೆ ಜಯಿಸುವಂತೆ ಮಾಡಿದಿರಿ ಎಂದು ಜ್ಞಾಪಕವಿದೆ!

(ಸ್ವಾಮೀಜಿಯವರು ನಗುತ್ತಾರೆ!) ಹೌದು ಹೌದು, ಅವರಿಗೆ ಹೇಳಮ್ಮ!

(ಒಬ್ಬ ಚಿಕ್ಕ ಹುಡುಗಿಯು ಹೇಳುತ್ತಾಳೆ) ಒಂದು ದಿನ ನಾವು ಸಂಭಾಷಣೆಯಲ್ಲಿ ಮಗ್ನರಾಗಿದ್ದಾಗ ಒಂದು ಜೇಡವನ್ನು ನೋಡಿ ನಾನು ಎಗುರಿದೆ ಮತ್ತು ಅದನ್ನು ನೋಡಿ ನನ್ಹತ್ತ ನಕ್ಕಿರಿ. ಪ್ರತಿ ಸಾರಿ ಜೇಡವನ್ನು ನೋಡಿದಾಗಲೂ ಅದನ್ನು ಕುರಿತು ಧ್ಯಾನ ಮಾಡುವಂತೆ ನೀವು ನನಗೆ ಹೇಳಿದಿರಿ. ಇದನ್ನು ಕೂಲಂಕಶತೆಯಿಂದ ಅನುಸರಿಸಿದೆ ಮತ್ತು ಪ್ರತಿ ಬಾರಿಯೂ ಜೇಡವನ್ನು ನೋಡಿದಾಗ ಅದರತ್ತ ಅರಿವಿನಿಂದ ಮತ್ತು ಏಕಾಗ್ರತೆಯಿಂದ ನೋಡುತ್ತಿದ್ದೆ. ನಿಧಾನವಾಗಿ ನಾನೇಕೆ ಕೇವಲ ಅದಕ್ಕಾಗಿ ಹೆದರಿಕೊಳ್ಳುತ್ತಿದ್ದೆ ಎಂದು ನನಗೆ ಆಶ್ಚರ್ಯವಾಗತೊಡಗಿತು!

ಸರಿ, ನೀವೆಲ್ಲಾ ಅದನ್ನು ಕೇಳಿದಿರೇನು? ಇದು ಕೇವಲ ಅರಿವನ್ನು ನಮ್ಮ ಅರಿವಿನೊಳಗೆ ತರುವ ಪ್ರಶ್ನೆ. ಆಗ ನಿಮ್ಮೊಳಗೆ ಭಯವನ್ನು ಹುಟ್ಟಿಸಿದ್ದು ಯಾವುದು ಎಂದು ಆಶ್ಚರ್ಯಪಡುತ್ತೀರ!

(ಮತ್ತೊಬ್ಬ ಚಿಕ್ಕ ಹುಡುಗಿ) ಸ್ವಾಮೀಜಿ ನಾವೆಲ್ಲಾ ನಿಮ್ಮ ಸುತ್ತ ಹಿಮಾಲಯದಲ್ಲಿರುವ ಗಂಗಾನದಿಯಲ್ಲಿ ನಿಂತಿದ್ದಾಗ ಒಂದು ಚಿಕ್ಕ ನೀರುಹಾವು ನಮ್ಮ ಬಳಿ ಬಂದದ್ದು ಜ್ಞಾಪಕವಿದೆ. ನಾನು ಕಿರುಚಿಕೊಂಡು ನೀರಿನಲ್ಲಿ ಒದ್ದಾಡುತ್ತಿದ್ದಾಗ ಅನುಪಮಳು ಅದು ಅವಳನ್ನು ಸವರಿಕೊಂಡು ಹೋಗುತ್ತಿದ್ದ ಸಮಯದಲ್ಲೂ ಪ್ರಶಾಂತತೆಯಿಂದ ಅದನ್ನು ನೋಡುತ್ತಿದ್ದಳು. ನಿಮ್ಮ ಸಾನ್ನಿಧ್ಯದಲ್ಲೂ ಸಹ ನಾನು ಅರಿವನ್ನು ತರದಿದ್ದುದಕ್ಕಾಗಿ ನೀವು ನನ್ನನ್ನು ತೆಗಳಿದಿರಿ.

ಹೌದು! ಅರಿವು ಎಂದು ನಾನು ಏನು ಅರ್ಥೈಸುತ್ತಿರುವುದನ್ನು ಈಗ ನೀನು ಜೋಡಿಸಬಲ್ಲೆ.

ಈ ಭಯಗಳಿಂದ ಹೊರಹೋಗಲು ಇರುವ ಏಕೈಕ ದಾರಿಯೆಂದರೆ ಅವುಗಳನ್ನು ದೃಷ್ಟಿಗೆ ತಂದುಕೊಂಡು ನಿಮ್ಮ ದೃಷ್ಟಿ ಶಕ್ತಿಯಿಂದ ಅವು ನಿಜವೆಂದುಕೊಂಡು ಅದರ ಮೂಲಕ ಹೋಗಬೇಕು. ನೀವು ಹಾಗೆಯೇ ಕುಳಿತುಕೊಂಡು ನಿಮ್ಮ ಭಯಗಳು ನಿಮಗೆ ಸಂಭವಿಸುತ್ತಿವೆಯೆಂದು ಕಲ್ಪಿಸಿಕೊಳ್ಳಬಹುದು. ನಿಮ್ಮ ಕಲ್ಪನೆಯಲ್ಲಿ ಅವುಗಳನ್ನು ಆಳವಾದ ಅರಿವಿನಿಂದ ಮತ್ತು ಪ್ರಶಾಂತತೆಯಿಂದ ಎದುರಿಸಿ. ದೃಷ್ಟಿಗೆ

ತಂದುಕೊಳ್ಳುವ ಕಾರ್ಯವಿಧಾನದಲ್ಲಿ ನೀವು ಅನುಭವಿಸಬೇಕಾಗಿ ಬಂದರೂ ಪರವಾಗಿಲ್ಲ, ಅದನ್ನು ಅದುಮಬೇಡಿ ಅಥವಾ ಶಿಕ್ಷಿಸಬೇಡಿ. ನಿಮ್ಮ ದೇಹವು ಭಯದಿಂದ ಕಂಪಿಸಿದರೆ, ಹಾಗೆಯೇ ಬಿಡಿ. ನಿಮ್ಮ ಬುದ್ಧಿಯೊಂದಿಗೆ ಸಹಕರಿಸಿ ಮತ್ತು ನೀವು ಅದರೊಂದಿಗೆ ಹರಿದುಕೊಂಡು ಹೋಗಲು ಬಿಡಿ. ಯಾವುದೇ ಸಂಗತಿಯೂ ಪೂರ್ಣವಾಗಿ ಜೀವಿಸಿಯಾದ ಮೇಲೆ ನಿಮ್ಮ ಮೇಲೆ ಏನೂ ಪರಿಣಾಮ ಬೀರಲಾರದು. ಎಲ್ಲಾ ಭಯಗಳೂ ಕೇವಲ ನಿಮ್ಮ ಭಯಗಳ ಭಯ, ಅಷ್ಟೆ!

ಒಂದು ಚಿಕ್ಕ ಕತೆ:

ಒಬ್ಬ ಶಿಷ್ಯನು ಒಂದು ದಿನ ನದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದನು.

ಅವನಿಗೆ ಪ್ರಾಣಭಯ ಉಂಟಾಯಿತು ಮತ್ತು ಗುರುಗಳನ್ನು ಕುರಿತು ತನ್ನನ್ನು ಮುಳುಗುವುದರಿಂದ ಕಾಪಾಡಲು ಕೂಗಿಕೊಂಡನು.

‘‘ಎದ್ದು ನಿಂತುಕೋ!’’ ಎಂದರು ಗುರುಗಳು.

ಶಿಷ್ಯನು ‘‘ಹೇಗೆ ಮಾಡಲಿ? ನಾನು ಮುಳುಗುತ್ತಿದ್ದೇನೆ’’ ಎಂದು ಕಿರುಚಿದನು.

ಗುರುಗಳು ‘‘ನಾನು ನಿನಗೆ ನೀನೇ ಸಹಾಯ ಮಾಡಿಕೊಳ್ಳಬೇಕೆಂದು ಹೇಳಿಕೊಟ್ಟಿಲ್ಲವೇ? ಈಗ ಎದ್ದು ನಿಂತುಕೋ’’ ಎಂದರು.

ಶಿಷ್ಯನು ‘‘ಗುರುಗಳೇ, ಸಾವು ಮೇಲೆ ಕವಿದಿರುವ ಈ ಸಮಯದಲ್ಲಿ ನನಗೆ ಉಪದೇಶಿಸುತ್ತಿದ್ದೀರ, ಸುಮ್ಮನೆ ನನ್ನನ್ನೇಕೆ ರಕ್ಷಿಸುವುದಿಲ್ಲ!’’ ಎಂದನು.

ಗುರುಗಳು ಮುಂದುವರಿಸಿದರು ‘‘ನಾನು ಹೇಳುತ್ತಿದ್ದೇನೆ, ಎದ್ದು ನಿಂತುಕೋ’’ ಎಂದು.

ಶಿಷ್ಯನು ಗುರುಗಳ ಹಟಮಾರಿತನವನ್ನು ಕಂಡು ಕ್ರುದ್ಧನಾದನು.

ಅವನು ಸುಮ್ಮನೆ ಎದ್ದು ನಿಂತುಕೊಂಡನು. ನೀರು ಅವನ ಮಂಡಿಯವರೆಗೆ ಮಾತ್ರ ಬಂದಿತು.

(ನಗೆ!)

ನಾನು ನಿಮಗೆ ಹೇಳುತ್ತೇನೆ: ನಿಮ್ಮೆಲ್ಲ ಭಯಗಳೂ ನಿಮ್ಮ ಭಯಗಳ ಭಯವಲ್ಲದೇ ಬೇರೇನೂ ಅಲ್ಲ, ನಿಮ್ಮ ಎಲ್ಲಾ ಭಯಗಳನ್ನೂ ಕೊಡವಿಕೊಂಡರೆ ಮತ್ತು ನಿಮ್ಮ ಬುದ್ಧಿಶಕ್ತಿಯ ಮೇಲೆ ಬರುವಂತೆ ಮಾಡಿದರೆ, ನಿಮ್ಮ ಭಯಗಳು ಕೇವಲ ಅಸ್ತಿತ್ವದಲ್ಲಿಲ್ಲದ ವಸ್ತುಗಳ ನೆರಳೆಂದು ಕಂಡುಕೊಳ್ಳುತ್ತೀರ.

ನೀವು ಸಾವಿನ ಭಯವನ್ನು ಆಳವಾಗಿ ವಿಶ್ಲೇಷಿಸಿದರೆ ನಿಮಗೆ ತಿಳಿಯುವುದು, ಜನಗಳು ಸಾವಿಗೆ ಹೆದರುವುದು ಏಕೆಂದರೆ ಅರಿವಿಲ್ಲದೆಯೆ, ಅವರಿಗೆ ಅನ್ನಿಸುವುದು ಈಗಿರುವ ಅವರ ಸ್ಥಿತಿಗಿಂತಾ ಅವರು ಇನ್ನೂ ಮೇಲ್ಮಟ್ಟದಲ್ಲಿರಬೇಕೆಂದು. ತಾವು ಜೀವನದಲ್ಲಿ ಇರಬೇಕಾದ ಜಾಗವನ್ನು ಇನ್ನೂ ತಲುಪಿಲ್ಲವೆಂದೂ, ಆದ್ದರಿಂದ ಸಾಯಲು ಇನ್ನೂ ತಯಾರಿಲ್ಲವೆಂದೂ ಭಾವಿಸಿರುತ್ತಾರೆ.

ಕೆಲವು ಜನರು ಭಾವಿಸುವುದೆನಂದರೆ ಬೇರೆಯವರು ತಮ್ಮ ಮೇಲೆ ಕಣ್ಣು ಬೀರಿರುವುದರಿಂದ ಅವರು ಪ್ರಗತಿಯನ್ನು ಸಾಧಿಸಲು ಆಗಲಿಲ್ಲವೆಂದು! ನಿಜವೇನೆಂದರೆ: ನಿಮ್ಮ ಮೇಲೆ ನೀವೇ ಸರಿಯಾಗಿ ಕಣ್ಣುಗಳನ್ನು ಬೀರಿಲ್ಲ. ಆದ್ದರಿಂದಲೆ, ನಿಮ್ಮ ಕೊನೆಯ ದಿನಗಳಲ್ಲಿ ಕೂಡ, ನೀವು ನಿಮ್ಮ ಸಾವನ್ನು ಮುಂದೂಡುತ್ತಿದ್ದೀರ.

ನೀವು ನಿಮ್ಮ ಆಕಾಂಕ್ಷೆಗಳು, ಭಯ ಮತ್ತು ಇತರ ಮನೋಭಾವಗಳನ್ನು ಸರಿಯಾಗಿ ವಿಶ್ಲೇಷಿಸಿ ಅರ್ಥಮಾಡಿಕೊಂಡರೆ, ನೀವು ಯಾವುದಕ್ಕೂ ಮತ್ಯಾರನ್ನೋ ದೂಷಿಸುವುದಿಲ್ಲ.

ಭಯಗಳ ಸುಳಿಯಲ್ಲಿ ಸಿಲುಕದೆ ತಮ್ಮ ಜೀವನವನ್ನು ಬದುಕುವ ಜನರು ತಮ್ಮ ಸಾವನ್ನೂ ಕೂಡ ಬದುಕಬಲ್ಲರು. ನಾನು ಮುಂಚೆ ಹೇಳಿದ ಹಾಗೆ ತಾವು ಯಾವ ದಿನದ ಯಾವ ಸಮಯ ಸಾಯುವೆವೆಂದು ನಿಖರವಾಗಿ ಹೇಳಿ ಮತ್ತು ಅದೇ ರೀತಿ ಮರಣಿಸಿದ ಜೀವಂತ ಗುರುಗಳ ಅನೇಕ ಕಥೆಗಳು ಇವೆ.

ತಮ್ಮ ಗುರುಗಳು ಬದುಕಿದ್ದಾಗ ಅವರ ಬೋಧನೆಗಳನ್ನು ಕಲಿಯಲು ವಿಫಲರಾಗಿದ್ದ ಅವರ ಎಷ್ಟೋ ಶಿಷ್ಯರು ಗುರುಗಳ ಮರಣದಲ್ಲಿ ಕಲಿತಿದ್ದಾರೆ. ಅವರ ಸಾವಿನಲ್ಲಿ ಬದುಕಿದ್ದರು ಎಂದು ನಾವು ಅರ್ಥೈಸಿದಾಗ, ನಾವು ಅನ್ನುತ್ತಿರುವುದು ಅವರು ತಾವು ಸಾಯಲು ಹೋಗುತ್ತಿರುವುದಾಗಿ ಪ್ರಕಟಿಸಿ ಮತ್ತು ಅರಿವಿನಿಂದ ಸಾಯುತ್ತಿದ್ದರು. ಅವರ ವಿಚಾರದಲ್ಲಿ ಮರಣವೆಂಬುದು ಅಕ್ಷರಶಃ 'ದೇಹತ್ಯಾಗ' ಅಷ್ಟೆ. ನಾವೆಲ್ಲರೂ ನಮ್ಮ ದೇಹವನ್ನು ಅರಿವುರಹಿತವಾಗಿ ಬಹಳ ವೇದನೆಯಿಂದ ಬಿಡುತ್ತೇವೆ - ಪೂರೈಸಲಾಗದ ಅಭಿಲಾಷೆಗಳ ಎಳೆತ ಮತ್ತು ಒತ್ತಡಗಳು ಒಂದು ಕಡೆ ನಮ್ಮನ್ನು

ಹಿಂಸಿಸಿದರೆ ದೇಹವು ಮತ್ತೊಂದು ಕಡೆ ಅದಕ್ಕೆ ಸಾಕಾಯಿತು ಎಂದು ಹಿಂಸಿಸುತ್ತಿರುತ್ತದೆ. ಮನಸ್ಸು ಮತ್ತು ದೇಹದ ನಡುವಿನ ತಕ್ಕದಲ್ಲದ ಜೋಡಿಯು ನಾವು ಬದುಕಿರುವಾಗ ಮತ್ತು ಸಾವಿನ ಸಮಯದಲ್ಲೂ ಸಹ ನಮ್ಮನ್ನು ಹಿಂಸಿಸುತ್ತದೆ. ನಾವು ಬದುಕಿರುವಾಗ, ನಾವು ನಮ್ಮ ಸರಿಹದ್ದಿನಲ್ಲಿ ಅಂದರೆ ನಮ್ಮ ದೇಹದಲ್ಲಿ ಬದುಕಿದ್ದರೆ, ನಾವು ನಮ್ಮ ದೇಹವನ್ನು ಶಾಂತಿಯುತವಾಗಿ ಬಿಡುತ್ತೇವೆ. ಸಮಸ್ಯೆ ಏನೆಂದರೆ, ನಾವು ಬದುಕಿರುವಾಗ, ನಾವು ಯಾವಾಗಲೂ ನಮ್ಮ ದೇಹದ ಹೊರಗೆ ಇರುತ್ತೇವೆ, ಒಳಗೆ ಅಲ್ಲವೇ ಅಲ್ಲ, ಇದನ್ನು ವಿವರಿಸುತ್ತೇನೆ:

ಹಾಗೆಯೇ ನಿಮ್ಮ ಜೀವನ ಕ್ರಮವನ್ನು ಆಳವಾಗಿ ನೋಡಿ. ಬೆಳಗಿನ ಜಾವ, ನಿಮ್ಮ ಹಲ್ಲುಗಳನ್ನು ಉಜ್ಜುವಾಗ, ನೀವೇನು ಮಾಡುತ್ತಿರುತ್ತೀರಿ? ನೀವು ಅದಾಗಲೇ ಕೆಲಸಕ್ಕೆ ಹೋಗುವುದನ್ನು ಯೋಚಿಸುತ್ತಿರುತ್ತೀರ. ನೀವು ಕೆಲಸದಲ್ಲಿದ್ದಾಗ, ಮನೆಗೆ ಹೋಗಲು ಬಸ್ಸನ್ನು ಹಿಡಿಯಲು ಯೋಚಿಸುತ್ತಿರುತ್ತೀರ. ನೀವು ಮನೆಯಲ್ಲಿದ್ದಾಗ ನೀವು ಯೋಚಿಸುತ್ತಿರುವುದು ಮರುದಿನದ ಕೆಲಸದ ಬಗ್ಗೆ! ರಜೆಯಲ್ಲಿದ್ದಾಗ ನಿಮ್ಮ ಕಚೇರಿಯ ಬಗ್ಗೆ ಯೋಚಿಸುತ್ತೀರ ಮತ್ತು ಕಚೇರಿಯಲ್ಲಿದ್ದಾಗ, ನೀವು ರಜೆಗೆ ಹೋಗುವುದರ ಬಗ್ಗೆ ಯೋಚಿಸುತ್ತೀರ.

ಎಲ್ಲಿ ನಿಮ್ಮ ದೇಹವಿರುವುದೋ ಅಲ್ಲಿ ನಿಮ್ಮ ಮನಸ್ಸು ಇರುವುದಿಲ್ಲವೆಂದು ನೀವು ಖಚಿತವಾಗಿರಬಹುದು! ನೀವು ಜೀವನದ ಯಾವೊಂದು ಕ್ಷಣವೂ ಪರಿಪೂರ್ಣವಾಗಿ ಜೀವಿಸಿಯೇ ಇಲ್ಲ, ನೀವು ಯಾವಾಗಲೂ ಭೂತಕಾಲ ಅಥವಾ ಭವಿಷ್ಯಕಾಲದಲ್ಲಿ ಜೀವಿಸುತ್ತೀರ. ಇದನ್ನೇ “ನಿಮ್ಮ ಸರಿಹದ್ದಿನಲ್ಲಿ ಜೀವಿಸುತ್ತಿಲ್ಲ'' ಎಂದು ಕರೆಯುವುದು. ಆದ್ದರಿಂದಲೇ ಮರಣ ಕಾಲದಲ್ಲಿ ನಿಮ್ಮ ಮನಸ್ಸು ಅನ್ಯ ವಿಚಾರಗಳಲ್ಲಿ ಮಗ್ನವಾಗಿಯೂ, ಸಫಲವಾಗಿಲ್ಲದಂತೆಯೂ, ಹೋಗಲು ಮನಸ್ಸಿಲ್ಲದಂತೆಯೂ ಅನ್ನಿಸುವುದು. ಇದರಿಂದಲೇ ನೀವು ಸಾವಿಗೆ ಭಯಪಡುತ್ತೀರಿ.

ನೀವು ಕೇಳಬಹುದು, ಅರಿವಿನಿಂದ ಸಾಯುವುದನ್ನು ತಿಳಿದುಕೊಳ್ಳುವ ಅವಶ್ಯಕತೆ ಏನೆಂದು.

ನಾನು ಹೇಳುತ್ತೇನೆ: ನಿಮಗೆ ಸಾವಿನ ಬಗ್ಗೆ ತಿಳಿದಾಗಲೇ, ನೀವು ಬದುಕಿನ ಸರಿಯಾದ ಅರ್ಥದೊಂದಿಗೆ ಬದುಕಬಲ್ಲಿರಿ ಎಂದು. ಇಲ್ಲದಿದ್ದರೆ ನೀವು ಜೀವನವನ್ನು ಸರಿಯಾದ ರೀತಿಯಲ್ಲಿ ಜೀವಿಸಲಾರಿರಿ.

ಜೀವನದಲ್ಲಿ ನೀವು ಪ್ರತಿಯೊಂದನ್ನೂ ಮುಂದೂಡುತ್ತಿರುತ್ತೀರ. ನಿಮ್ಮ ಸಂತೋಷವನ್ನು ಮುಂದೂಡುತ್ತೀರ, ನಿಮ್ಮ ಕೆಲಸವನ್ನು ಮುಂದೂಡುತ್ತೀರ, ಎಲ್ಲವನ್ನೂ ನಾಳೆಗೆ ಮುಂದೂಡುತ್ತಿರುತ್ತೀರ. ನೀವು ಅರ್ಥ ಮಾಡಿಕೊಳ್ಳಬೇಕಾದದ್ದು 'ನಾಳೆ' ಕೂಡ 'ಈದಿನ'ದ ರೂಪದಲ್ಲಿ ಮಾತ್ರವೇ ಬರುತ್ತದೆ! ಅದು 'ಈದಿನ'ದ ರೂಪದಲ್ಲಿ ಬಂದರೆ ನೀವು ಪುನಃ ಹೇಳುವುದು 'ನಾಳೆ' ಎಂದೇ! ಇದು ನೀವು ನಿಮ್ಮೊಡನೆಯೇ ಆಡಿಕೊಳ್ಳುತ್ತಿರುವ ಆಟ.

ಕೊನೆಯಲ್ಲಿ ಸಾವು ಬಂದಾಗ, ನೀವು ಎಷ್ಟು ಮಾತ್ರವೂ ತಯಾರಾಗಿ ಇರುವುದಿಲ್ಲ! ನಿಮಗೆ ಇನ್ನೂ ಎಷ್ಟೋ ಮಾಡಬೇಕೆಂದು ಅನಿಸಿಕೆ ಇರುತ್ತದೆ. ನೀವು ಬದುಕಿನಿಂದಲೇ ಮೋಸ ಹೊಂದಿದ್ದಾಗಿ ಭಾವಿಸುತ್ತೀರ. ಸತ್ಯ ಏನೆಂದರೆ ಇಲ್ಲಿಯವರೆಗೂ ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳುತ್ತಿದ್ದಿರಿ. ಆದರೆ ಪ್ರತಿಯೊಂದಕ್ಕೂ ಜೀವನು ದೂಷಿಸುವುದೇ ನೀವು ಮುಟ್ಟಿದ್ದು. ಆದ್ದರಿಂದಲೇ ಸಾವನ್ನು ನಿಚ್ಚಳವಾಗಿ ಅರ್ಥಮಾಡಿಕೊಳ್ಳುವುದೇ ನೀವು ಜೀವಿಸುವುದರ ಆವಶ್ಯಕತೆ. ಆಗ ನಿಮಗೆ ಭ್ರಮೆಗಳು ಇರುವುದಿಲ್ಲ ಮತ್ತು ಸಮಯ ಬಂದಾಗ ಸಾಯಲು ತಯಾರಾಗುತ್ತೀರ.

ಮುಂದೂಡುವಿಕೆಯ ಪ್ರವೃತ್ತಿಯೇ ನಾವು ಜೀವನದಲ್ಲಿ ಬಹಳಷ್ಟು ವಸ್ತುಗಳನ್ನು ಕಳೆದುಕೊಳ್ಳಲು ಕಾರಣ. ಜನಗಳು ಕೇಳುತ್ತಾರೆ, "ಸ್ವಾಮೀಜಿ, ತಾವು ಅದು ಹೇಗೆ ಬಹಳಷ್ಟು ಕೆಲಸಗಳನ್ನು ಅಷ್ಟೊಂದು ಕಡಿಮೆ ಸಮಯದಲ್ಲಿ ಮಾಡಬಲ್ಲಿರಿ?" ಎಂದು. ನನ್ನ ವರ್ಷದ ಕಾರ್ಯಕ್ರಮದ ಪಟ್ಟಿ (calendar) ಯನ್ನು ನೋಡಿ ಅವರಿಗೆ ವಿಸ್ಮಯವಾಗಿರುತ್ತದೆ! ವರ್ಷವಿಡೀ ಪ್ರಪಂಚದಾದ್ಯಂತ ನಡೆಯುತ್ತಿರುವ ವಿವಿಧ ವಿದ್ಯಮಾನಗಳನ್ನು ನೋಡಿ ಅಚ್ಚರಿಗೊಳ್ಳುತ್ತಾರೆ. ಅವರಿಗೆ ನಾನು ಹೇಳುವುದು, "ಇದು ಬಹಳ ಸರಳ - ನಾನು ವರ್ತಮಾನದಲ್ಲೇ ಪೂರ್ಣವಾಗಿ ಬದುಕಿದ್ದೇನೆ. ನಾನು ನಿಮ್ಮಂತೆ ಮುಂದೂಡುವುದಿಲ್ಲ" ಎಂದು.

ಸುಮ್ಮನೆ ಕೆಲಸಗಳನ್ನು ಮುಂದೂಡುವ ನಿಮ್ಮ ಪ್ರವೃತ್ತಿಯು ನೀವು ಪರಾಜಿತನೆಂಬ ಹಾಗೆ ಭಾವನೆಯನ್ನು ಮಾಡುತ್ತದೆ. ನೀವು ಪರಾಜಿತನ ಹಾಗೆ ಅನಿಸಿದರೂ, ನೀವು ಮುಂದೂಡುವಿಕೆಯನ್ನು ಮಾಡಕೂಡದಿರಲು ಪ್ರಯತ್ನವನ್ನೇ ಮಾಡುವುದಿಲ್ಲ.

ನಮ್ಮ ಧ್ಯಾನದ ಕಾರ್ಯಕ್ರಮಗಳಲ್ಲಿ ನಾವು ಜನಗಳನ್ನು ಒಂದು ಮಾರ್ಗದರ್ಶಿತ ಧ್ಯಾನದಲ್ಲಿ ಕರೆದೊಯ್ಯುತ್ತೇವೆ. ಇದರಲ್ಲಿ ಅವರಿಗೆ ತಾವು ಇನ್ನು 24 ಘಂಟೆಗಳಲ್ಲಿ ಸಾಯಲಿರುವುದಾಗಿ ದೃಢಿಸಿಕೊಳ್ಳಬೇಕೆಂದೂ ಮತ್ತು ತಾವು ಪೂರ್ಣಗೊಳಿಸ ಲಿಷ್ಟಿಸಿರುವ ಕಾರ್ಯಗಳೆಲ್ಲವನ್ನೂ ಮುಗಿಸಬೇಕೆಂದೂ ಹೇಳಲಾಗಿರುತ್ತದೆ. ಅವರಿಗೆ ತಮ್ಮದೇ ಸಾವಿನ ಸಂಸ್ಕಾರಗಳನ್ನೂ ದೃಷ್ಟಿಸಿಕೊಳ್ಳುವಂತೆ ಮಾಡಲಾಗುತ್ತದೆ.

ಒಮ್ಮೆ ಈ ಧ್ಯಾನದ ನಂತರ, ಒಬ್ಬ ಚಿಕ್ಕ ಹುಡುಗಿಯೊಬ್ಬಳು ತನ್ನ ಆಲೋಚನೆಗಳನ್ನು ಹಂಚಿಕೊಂಡಳು.

ಅವಳು ಹೇಳಿದಳು "ಸ್ವಾಮೀಜಿ, ನಾನು ಅಂಗಡಿಯಲ್ಲಿ ಒಂದು ಭಿತ್ತಿ ಪತ್ರವನ್ನು ನೋಡಿದೆ. ಅದರಲ್ಲಿ ಹೀಗಿತ್ತು "ನೀವು ಎಪಾರ್ಟ್‌ಮೆಂಟ್ ಹಂಚಿಕೆ ಮಾಡುವಾಗ, ಮುಂಬರುವ ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾಗಿ ಹಂಚಿಕೆ ಮಾಡಿ. ಅದನ್ನು ನೆರವೇರಿಸುವಾಗ, ಮರು ನಿಮಿಷವೇ ಸಾಯುವವರಂತೆ ಭಾವಿಸಿ ನೆರವೇರಿಸಿ. ಈ ಧ್ಯಾನವನ್ನು ಮಾಡಿದ ನಂತರ ಅದು ನಿಜವಾಗಿ ಏನೆನ್ನುತ್ತದೆ ಎಂದು ಅರ್ಥವಾಯಿತು" ಎಂದು.

ನಾನು ಹೇಳಿದೆ "ಸೊಗಸಾಗಿದೆ!"

ನೋಡಿ, ನೀವು ಹಂಚಿಕೆ ಮಾಡುವಾಗ ಭವಿಷ್ಯತ್ಕಾಲಕ್ಕೆ ಅನುಗುಣವಾಗಿ ಇರಬೇಕು. ಏಕೆಂದರೆ ಬಹಳಷ್ಟು ಕಾರ್ಯಗಳನ್ನು ಕನಿಷ್ಠ ಹಲವು ವರ್ಷಗಳವರೆಗಾದರೂ ಪುನರ್ ರಚನೆ ಮಾಡಬೇಕಿರುವುದಿಲ್ಲ. ಆದರೆ ಅದನ್ನು ನೆರವೇರಿಸುವಾಗ ಹಂಚಿಕೆಯ ನಕ್ಷೆಯಲ್ಲಿನ ಪ್ರತಿಯೊಂದು ಚಿಕ್ಕ ಕೆಲಸವೂ ಸಡಿಲವಾದ ಕೊನೆಗಳಿಲ್ಲದಂತೆ ನೆರವೇರಿಸಬೇಕು.

ಆಗ ನೀವು ಸಾಯಬೇಕಿದ್ದರೂ ಸಹ, ಎಲ್ಲಿಯವರೆಗೂ ಏನೆಲ್ಲವೂ ನೆರವೇರಿರುತ್ತವೆಯೋ ಪ್ರತಿಯೊಂದೂ ಸಮಗ್ರವಾಗಿರುತ್ತದೆ ಮತ್ತು ಹಂಚಿಕೆಯ ನಕ್ಷೆಯು ಮುಂಬರುವ ಜನಗಳಿಗೆ ಆಧಾರ ಸೂಚಿಯಾಗಿದ್ದು ಅಥವಾ ಸಂದರ್ಭ ಬಂದರೆ ಪರಿಷ್ಕರಿಸಲು ಅನುವಾಗುವಂತೆಯೂ ಇರುತ್ತದೆ. ನೀವು ತೆಗೆದುಕೊಳ್ಳುವ ಪ್ರತಿಯೊಂದು ಚಿಕ್ಕ ಕೆಲಸವನ್ನೂ ಮುಂದೂಡುವ ಪ್ರವೃತ್ತಿಯಿಲ್ಲದೆ ಮಾಡಿದರೆ ಇದನ್ನು ಸಾಧಿಸಬಹುದು.

ಬಹಳ ಸಾರಿ, ಮುಂದೂಡುವ ಪ್ರವೃತ್ತಿಯೇ ನಿಮ್ಮನ್ನು ದಾರಿದ್ರ್ಯದತ್ತ ಕೊಂಡೊಯ್ಯುತ್ತದೆ. ದಾರಿದ್ರ್ಯವು ನಿಮ್ಮದೇ ಆಯ್ಕೆ. ನೀವು ನಿರ್ಧಾರಗಳನ್ನು ಮುಂದೂಡಿದರೆ, ಬಡತನದತ್ತ ಹೆಜ್ಜೆಗಳನ್ನು ಹಾಕುತ್ತೀರಿ. ಆದರೆ ಇದು ನಿಮಗೆ ಪರಮಾನಂದವಾಗಿ ಅರಿವೇ ಇರುವುದಿಲ್ಲ. ನೀವು ದೇವರು ನಿಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದೂ ಮತ್ತು ಜೀವನವು (ಜೀವನಾವಧಿಯು) ನಿಮ್ಮ ಕನಸುಗಳನ್ನು ನನಸುಗೊಳಿಸಲು ತುಂಬಾ ಚಿಕ್ಕದೆಂದೂ ಭಾವಿಸುತ್ತೀರಿ. ನೀವು ನಿಮ್ಮ ಚೈತನ್ಯವನ್ನೆಲ್ಲಾ ಸರಿಯಾದ ಕಾಲುವೆ ಮತ್ತು ನಿಶ್ಚಳತೆಯಿಂದ ಉಪಯೋಗಿಸಿದ್ದರೆ, ನೀವು ಈ ರೀತಿ ಭಾವಿಸುವುದಿಲ್ಲ ಮತ್ತು ಸಾಯಲು ಸದಾಕಾಲವೂ ತಯಾರಾಗಿ ಇರುತ್ತೀರ.

ಪ್ರತಿದಿನ ನೀವು ಸುಮ್ಮನೆ ಕನ್ನடியில் ನೋಡುತ್ತಾ ಈ ದಿನವೇ ನಿಮ್ಮ ಜೀವನದ ಅಂತಿಮ ದಿನವೆಂದು ಹೇಳಿಕೊಳ್ಳುತ್ತಿದ್ದರೆ, ನೀವು ಮುಂದೂಡುವ ಪ್ರವೃತ್ತಿಯನ್ನು ನಿಲ್ಲಿಸಿಬಿಡುತ್ತೀರ. ನೀವು ಇದನ್ನು ನಿಮ್ಮ ಜೀವನಪರ್ಯಂತ ನಿಮಗೆ ಹೇಳಿಕೊಳ್ಳಬೇಕಿಲ್ಲ; ಕೇವಲ ಒಂದು ತಿಂಗಳು ಸಾಕು. ನಿಮ್ಮಷ್ಟಕ್ಕೆ ನೀವೇ ಮುಂದೂಡುವ ಪ್ರವೃತ್ತಿಯಿಲ್ಲದೆ ನಿಮ್ಮ ಜೀವನವನ್ನು ಜೀವಿಸಲು ಪ್ರಾರಂಭಿಸುತ್ತೀರ. ಅಷ್ಟೇ ಅಲ್ಲ, ಘನತೆಯನ್ನು ಕಳೆದುಕೊಳ್ಳುವ, ಪೇಚಾಟಕ್ಕೆ ಸಿಲುಕಿಕೊಳ್ಳುವ, ಪ್ರತಿಷ್ಠೆಯ, ನಿರೀಕ್ಷೆಯ ನಿಮ್ಮ ಭಯಗಳೆಲ್ಲವೂ ಕರಗಿ ಹೋಗುತ್ತವೆ, ಏಕೆಂದರೆ ನಿಮಗೆ ಕಳೆದುಕೊಳ್ಳುವುದು ಏನೂ ಇಲ್ಲವೆಂದು ಗೊತ್ತಾಗುತ್ತದೆ.

ಸಾವಿನ ಅತಿ ಸನಿಹದ ಅಂದರೆ ಅಪಘಾತ ಒಂದರಲ್ಲಿ ಸ್ವಲ್ಪದರಲ್ಲಿ ಪಾರಾದ ಅಥವಾ ಕ್ಯಾನ್ಸರ್‌ನಿಂದ ಮುಕ್ತವಾದ ಅಥವಾ ಅದೇ ತರಹೆಯ ಇನ್ನಾವುದರ ಅನುಭವವನ್ನು ಪಡೆದ ಜನರು ಹೆಚ್ಚು ಭಯರಹಿತರಾಗಿ ಜೀವಿಸಬಲ್ಲರು ಏಕೆಂದರೆ ಅವರಿಗೆ ಗೊತ್ತು ತಾವು ಕಳೆದುಕೊಳ್ಳುವಂತಹುದು ಇನ್ನೇನೂ ಇಲ್ಲವೆಂದು! ಇನ್ನೂ ಹೆಚ್ಚಿನ ನಿಶ್ಚಳತೆ ಮತ್ತು ಹೆಚ್ಚಿನ ಬುದ್ಧಿವಂತಿಕೆಯಿಂದ ತಮ್ಮ ಬದುಕನ್ನು ಜೀವಿಸಿರಬಲ್ಲರು.

ನಿಮ್ಮ ಎಲ್ಲ ವಿದ್ಯಾಭ್ಯಾಸದಲ್ಲಿ ಕಲಿಯಬೇಕಾದ ಮೊದಲ ಪಾಠವೆಂದರೆ, ನೀವು ಸರಿಯಾದದ್ದನ್ನು ಸರಿಯಾದ ಸಮಯದಲ್ಲಿ ಮಾಡಿ ಮುಂದುವರಿಯಬೇಕು ಎಂದು. ಹೇಗೋ ಇದೇ ಚೆನ್ನಾಗಿ ಕಲಿಯುವ ಕೊನೆಯ ಪಾಠವಾಗಿದೆ! ಬೇರೆಲ್ಲಾ ಪಾಠಗಳನ್ನು ಮುಗಿಸಿಯಾದ ಮೇಲೆ, ಈ ಪಾಠವನ್ನು ಕಲಿಯುತ್ತೇವೆ!

ಮುಂದೂಡುವ ಪ್ರವೃತ್ತಿಯೆಂಬುದು ನಿಮ್ಮ ಮೇಲೆ ನೀವೇ ತಂದುಕೊಳ್ಳುವ ಒಂದು ಸಂಗತಿ. ಆದರೆ ಮಿಕ್ಕೆಲ್ಲ ಭಯಗಳನ್ನು ಸಮಾಜವು ನಿಮ್ಮಲ್ಲಿ ಉಂಟುಮಾಡುತ್ತದೆ. ಸಮಾಜವು ನಿಮ್ಮ ಬಗ್ಗೆ ನೀವೇ, ಬೇರೆಯವರ ಬಗ್ಗೆ ಮತ್ತು ದೇವರ ಬಗ್ಗೆ ಭಯಪಡುವಂತೆ ಮಾಡುತ್ತದೆ. ಅದು ನೀತಿ ವಿಚಾರಗಳಂತಹ ಸಣ್ಣ ವಿಚಾರಗಳಿಂದ

ಹೆಸರುಗಳು ಮತ್ತು ರೂಪಗಳಿಂದ, ಘನತೆ ಮತ್ತು ಮುಂತಾದವುಗಳಿಂದ ನಿಮ್ಮ ಬಗ್ಗೆ ನೀವೇ ಭಯಪಡುವಂತೆ ಮಾಡುತ್ತದೆ.

ನೀತಿ ವಿಚಾರಗಳ ಹೆಸರಿನಿಂದ, ಅದು ನಿಮ್ಮ ಬಗ್ಗೆ ನೀವೇ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು ಅದೇ ಕಾರಣಕ್ಕೇ ನೀತಿ ವಿಚಾರಗಳ ವಿಷಯ ಬಂದಾಗ ನಿಮ್ಮ ಬಗ್ಗೆ ನೀವೇ ಅನಿಶ್ಚಯತೆಯಿಂದ ಇರುತ್ತೀರ. ನೀತಿ ವಿಚಾರಗಳನ್ನು ಭಯದಿಂದ ಅನುಸರಿಸಲು ಪ್ರಾರಂಭಿಸಿದರೆ, ನಿಮ್ಮ ಒಳ ಬುದ್ಧಿಮತ್ತೆಯು ನಿಮಗೆ ಮಾರ್ಗದರ್ಶನ ನೀಡಲು ಅವಕಾಶವೇ ಇರುವುದಿಲ್ಲ. ಜನಗಳು ನಾನು ಹೆಂಗಸರೊಂದಿಗೆ ಪ್ರಯಾಣ ಮಾಡುತ್ತಿರುವಾಗ ಕೇಳುತ್ತಾರೆ, “ಸ್ವಾಮೀಜಿ, ನೀವು ಒಬ್ಬ ಆಧ್ಯಾತ್ಮಿಕ ನಾಯಕರಾಗಿ, ಹೀಗೆ ಹೆಂಗಸರೊಂದಿಗೆ ಪ್ರಯಾಣ ಮಾಡಬಲ್ಲಿರಿ? ಇತರೆ ಜನಗಳು ನಿಮ್ಮ ಬಗ್ಗೆ ಮಾತನಾಡಲಾರರೆ?” ಎಂದು.

ಮೊದಲನೆಯದಾಗಿ ಅವರು ಒಬ್ಬ ಪರಮಜ್ಞಾನ ಹೊಂದಿದ ಗುರುವಿನೊಡನೆ ಮಾತನಾಡುತ್ತಿದ್ದೇವೆಂಬುದನ್ನು ಮರೆತಿರುತ್ತಾರೆ. ಯಾರೊಡನೆ ಮಾತನಾಡುತ್ತಿದ್ದೇ ವೆಂಬ ಸಂಪೂರ್ಣ ಅರಿವಿದ್ದರೆ ಅವರು ಪ್ರಶ್ನೆಯನ್ನೂ ಸಹ ಮಾಡುತ್ತಿರಲಿಲ್ಲ. ಏನೇ ಇರಲಿ, ನಾನು ಅವರಿಗೆ ಅವರ ಭಾಷೆಯಲ್ಲಿಯೇ ಉತ್ತರಿಸಬೇಕಾಗಿತ್ತು. ಆದ್ದರಿಂದ ಅವರಿಗೆ ಹೇಳಿದೆ, “ನನಗೆ ನನ್ನ ಬಗ್ಗೆ ವಿಶ್ವಾಸವಿದೆ ಮತ್ತು ಹೆಂಗಸರಿಗೆ ನನ್ನ ಬಗ್ಗೆ ವಿಶ್ವಾಸವಿದೆ, ನಿಮಗೇನು ತೊಂದರೆಯಾಗುತ್ತಿದೆ?!” ಎಂದು.

ನಾನು ಹೀಗೆ ಹೇಳಿದಾಗ ಅವರಿಗೆ ಹಾಗೆಯೇ ಆಘಾತವುಂಟಾಯಿತು.

ನಮ್ಮ ಜೀವನಗಳಲ್ಲಿ ನೀತಿ ವಿಚಾರಗಳು ಎಂಬುದು ಬುದ್ಧಿಮತ್ತೆ ತಿಳಿವು ಇಲ್ಲವೆಂಬುದಕ್ಕೆ ಒಂದು ಸಾರವಿಲ್ಲದೆ ಬದಲಿ ಪದವಲ್ಲದೆ ಬೇರೇನೂ ಅಲ್ಲ. ನೀವು ನಿಮ್ಮ ಸ್ವಂತ ಬುದ್ಧಿಮತ್ತೆಯಿಂದ ನಡೆದುಕೊಂಡರೆ, ನೀವು ನಿಮ್ಮ ಬಗ್ಗೆ ವಿಶ್ವಾಸದಿಂದಿರಬಹುದು. ಆದರೆ ನೀವು ನಿಯಮಗಳು ಮತ್ತು ನಿಯಂತ್ರಣಗಳನುಗುಣವಾಗಿ ನಡೆದುಕೊಂಡರೆ ನಿಮ್ಮ ಬಗ್ಗೆ ನೀವೇ ನಿಶ್ಚಿತವಾಗಿರುವುದಿಲ್ಲ. ಏಕೆಂದರೆ ಶುರು ಮಾಡಲು ನೀವು ನೀವೇ ಆಗಿರುವುದಿಲ್ಲ! ನೀವು ನಿಮ್ಮೊಳಗೆ ಕೇಂದ್ರೀಕೃತವಾಗಿರುವುದಿಲ್ಲ. ನೀವು ನಿಯಮಗಳ ಮೇಲೆ ಕೇಂದ್ರೀಕೃತವಾಗಿರುತ್ತೀರ.

ನೀವು ಬುದ್ಧಿಮತ್ತೆಗನುಗುಣವಾಗಿ ಬದುಕಿದರೆ, ಭಯದ ಇಂತಹ ವಿಧಗಳು ನಿಮ್ಮನ್ನು ಹಿಡಿದುಕೊಳ್ಳುವುದೇ ಇಲ್ಲ. ನೀತಿ ವಿಚಾರಗಳನ್ನು ಮಾತನಾಡುವ ಜನಗಳು ಈ ಭಯದಲ್ಲಿ ಅಷ್ಟು ಆಳವಾಗಿ ಇರುತ್ತಾರೆ. ಆದುದರಿಂದಲೇ ಅವರು ಅದರ ಬಗ್ಗೆ ಉಪದೇಶ ಮಾಡುತ್ತಾರೆ. ಅವರು ಹೆದರಿಕೊಂಡಿರುವುದು ಏಕೆಂದರೆ ಅವರು ಅವರ ಬಗ್ಗೆಯೇ ನಿಶ್ಚಿತವಾಗಿರುವುದಿಲ್ಲ ಅಥವಾ ಅವರು ಭಯದಿಂದ ಮಾತ್ರವೇ ನೀತಿವಂತರಾಗಿರುವವರು. ನೀತಿವಂತರು ಅವರ ನೀತಿ ವಿಚಾರ ಮತ್ತು ಶಿಸ್ತಿನ ಕಲ್ಪನೆಯಿಂದ ನರರೋಗಿಗಳಾಗಬಹುದು.

ಒಂದು ಚಿಕ್ಕ ಕಥೆ:

ಹಿಂದೊಮ್ಮೆ ಸಾಮಾನ್ಯವಾಗಿ ರಸ್ತೆಗಳ ಮೇಲೆ ಎಚ್ಚರಿಕೆಯಿಂದ ಅಳತೆ ಮಾಡಲ್ಪಟ್ಟ ಹೆಜ್ಜೆಗಳನ್ನು ಹಾಕುತ್ತಾ ನಡೆಯುವ ಒಬ್ಬ ನೀತಿವಂತನಿದ್ದನು.

ಒಂದು ದಿನ ಇದ್ದಕ್ಕಿದ್ದ ಹಾಗೆ ಭಾರಿಯಾಗಿ ಮಳೆ ಸುರಿಯಲಾರಂಭಿಸಿತು.

ಈ ನೀತಿವಂತನು ಸುಮ್ಮನೆ ಗುಂಪನ್ನು ಅನುಸರಿಸಿ ತಾನೂ ಓಡಿದನು.

ಸ್ವಲ್ಪ ಸಮಯದ ನಂತರ, ಅವನಿಗೆ ತನ್ನ ನಡವಳಿಕೆಯ ಬಗ್ಗೆ ಎಚ್ಚರ ತಪ್ಪಿದ್ದು ವೇದ್ಯವಾಯಿತು (realize)

ಅವನು ತನ್ನಷ್ಟಕ್ಕೆ ತಾನೆ ಅಂದುಕೊಂಡನು "ನಾನು ಏನು ಮಾಡುತ್ತಿದ್ದೇನೆ! ಓಡುವುದು ಘನತೆಯಲ್ಲ. ಒಬ್ಬ ಸಭ್ಯನು ತಾನೇನಾದರೂ ತಪ್ಪುಗಳನ್ನು ಮಾಡಿದರೆ ಅದನ್ನು ವಿಷಾದದಿಂದ ತಿದ್ದಿಕೊಳ್ಳಬೇಕು" ಎಂದು.

ಆದ್ದರಿಂದ ಅವನು ತಾನು ಓಡಲು ಪ್ರಾರಂಭಿಸಿದ ಜಾಗಕ್ಕೆ ಮತ್ತೆ ಮಳೆಯಲ್ಲಿಯೇ ಹಿಂತಿರುಗಿದನು ಮತ್ತು ಪುನಃ ಅಳತೆ ಮಾಡಲ್ಪಟ್ಟ ಹೆಜ್ಜೆಗಳಿಂದ ನಡೆಯಲಾರಂಭಿಸಿದನು.

(ನಗು)

ನೀತಿ ವಿಚಾರಗಳು ನಮ್ಮನ್ನು ಸಂಪೂರ್ಣವಾಗಿ ಮಂಕಾಗಿಯೂ ಮತ್ತು ನಿರ್ಜೀವವಾಗಿಯೂ ಮಾಡುತ್ತದೆ!

ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಿ. ನಾನು ಇದನ್ನು ಹೇಳಿದಾಗ, ಇದು ನಿರ್ಬಂಧವಿಲ್ಲದ ಪ್ರಪಂಚವೆಂದೂ ಮತ್ತು ನೀವು ನಿಮಗಿಷ್ಟಬಂದದ್ದನ್ನು

ಮಾಡಬಹುದೆಂದೂ ಹೇಳುತ್ತಿಲ್ಲ. ನಾನು ನಿಮಗೆ ಹೇಳುತ್ತಿರುವುದು, ನೀವು ನಿಮ್ಮ ಸ್ವಂತ ಬುದ್ಧಿಯನ್ನು ಬೆಳೆಸಿಕೊಳ್ಳಬೇಕು ಮತ್ತು ಬದುಕಬೇಕು ಹಾಗೂ ನಿಯಮಗಳು ಕೇವಲ ನಿಮಗಾಗಲೇ ಗೊತ್ತಿದ್ದು ಮತ್ತು ಅನುಭವಿಸಿದ್ದನ್ನು ಸ್ಥಿರೀಕರಿಸುವುವು. ಇದೇ ನಿಜವಾದ ಬುದ್ಧಿವಂತಿಕೆ. ಯಾವುದೇ ಸರಿಯಾದ ನಿಯಮವು, ಸರಿಯಾಗಿ ಅರಳಿದ ಬುದ್ಧಿಮತ್ತೆಯು ಅಂದುಕೊಳ್ಳುವುದನ್ನು, ಕೇವಲ ದೃಢೀಕರಿಸುತ್ತದೆ. ಆದುದರಿಂದ ನಿಮ್ಮ ಭಯಗಳನ್ನು ಬಿಟ್ಟುಬಿಡಿ ಮತ್ತು ನಿಮ್ಮ ಒಳ ಬುದ್ಧಿಮತ್ತೆಯನ್ನು, ನಿಮ್ಮ ಒಳ ಧ್ವನಿಯನ್ನು ಮತ್ತು ನಿಮ್ಮ ಅಂತರಂಗದ ಗುರುವನ್ನು ಕಂಡುಹಿಡಿಯಲು ಪ್ರಯತ್ನಿಸಿ.

ಒಂದು ಚಿಕ್ಕ ಕಥೆ:

ಒಬ್ಬ ಸುಂದರ ವೇಶ್ಯೆಯಿದ್ದ ರಸ್ತೆ ಎದುರು ಬದಿ ಒಬ್ಬ ಯುವ ಸನ್ಯಾಸಿಯು ವಾಸವಾಗಿದ್ದನು.

ಆ ಸನ್ಯಾಸಿಯು ಸದಾಕಾಲವೂ ಧ್ಯಾನಮಗ್ನನಾಗಿರಲು ಪ್ರಯತ್ನಿಸುತ್ತಿದ್ದನು.

ಆ ವೇಶ್ಯೆಯಾದರೂ ಹಣವನ್ನು ಗಳಿಸುತ್ತಾ ತನ್ನ ದಂಧೆಯನ್ನು ಮುಂದುವರಿಸುತ್ತಿದ್ದಳು.

ಬಹಳಷ್ಟು ಗಂಡಸರು ಅವಳ ಮನೆಗೆ ಬಂದು ಹೋಗುತ್ತಿದ್ದರು.

ಈ ಸನ್ಯಾಸಿಯು ತನ್ನ ಧ್ಯಾನದಲ್ಲಿ ಏಕಾಗ್ರತೆಯಿಂದಿರಲು ಬಹಳ ಪ್ರಯತ್ನಿಸುತ್ತಿದ್ದನು, ಆದರೆ ಅವನ ಗಮನವೆಲ್ಲಾ ಆ ಯುವ ಹೆಂಗಸಿನ ಮೇಲೆಯೇ ಇತ್ತು ಮತ್ತು ಅವಳು ನಡೆಸುತ್ತಿದ್ದ ಅನೀತಿಯುತ ಬಾಳ್ವೆಗಾಗಿ ಅವಳನ್ನು ಶಪಿಸುತ್ತಲೇ ಇದ್ದನು.

ವೇಶ್ಯೆಗಾದರೂ ರಸ್ತೆಯ ಆಚೆ ಬದಿಯಲ್ಲಿದ್ದ ಸನ್ಯಾಸಿಯ ಅರಿವೂ ಇರಲಿಲ್ಲ.

ಗಂಡಸರಿಗೆ ಸುಖವನ್ನು ನೀಡುವುದು ಅವಳ ಜೀವನ ಶೈಲಿಯಾಗಿದ್ದರೂ ಸಹ, ಆ ವೇಶ್ಯೆಯು ಕೃಷ್ಣ ಭಗವಾನನ ಪ್ರೇಮದಲ್ಲಿ ಮುಳುಗಿ ಹೋಗಿದ್ದಳು ಮತ್ತು ಅವಳು ಸಾಧ್ಯವಾದಷ್ಟೂ ಸಮಯವನ್ನು ಅವನ ಪ್ರಾರ್ಥನೆ ಮಾಡುತ್ತಾ ಅವನ ಛಾಯೆಯೊಂದಿಗೆ ಆಟವಾಡುತ್ತಿದ್ದಳು.

ಆ ಸನ್ಯಾಸಿ ಮತ್ತು ವೇಶ್ಯೆಯು ಒಂದೇ ದಿನ ಸತ್ತರು ಮತ್ತು ಯಮರಾಜನ ಅಂದರೆ ಮೃತ್ಯುವಿನ ಒಡೆಯನ ದ್ವಾರವನ್ನು ತಲುಪಿದರು.

ದಾಖಲೆಗಳನ್ನೆಲ್ಲಾ ವಿಶ್ಲೇಷಿಸಿದ ಮೇಲೆ ವೇಶ್ಯೆಯನ್ನು ಸ್ವರ್ಗಕ್ಕೆ ಕಳುಹಿಸಲಾಯಿತು. ಮತ್ತು ಸನ್ಯಾಸಿಯನ್ನು ನರಕಕ್ಕೆ ಕಳುಹಿಸಲಾಯಿತು.

ಸನ್ಯಾಸಿಯು ಯಮನ ಸಮಗ್ರ ನ್ಯಾಯದಲ್ಲಿನ ಪಕ್ಷಪಾತದ ಬಗ್ಗೆ ತನ್ನ ಆಳವಾದ ಭಾವನೆಗಳನ್ನು ಅಭಿವ್ಯಕ್ತಗೊಳಿಸಿದನು.

ಯಮನು ಆ ಸನ್ಯಾಸಿಗೆ ಶಾಂತವಾಗಿ ವಿವರಿಸಿದನು, ನಿನ್ನ ಜೀವನವನ್ನೆಲ್ಲಾ ಧ್ಯಾನ ಮಾಡುವ ಸೋಗಿನಲ್ಲಿ ವೇಶ್ಯೆಯ ಬಗ್ಗೆ ಕಾಮವನ್ನು ಇಟ್ಟುಕೊಂಡಿದ್ದೆ. ಅವಳಾದರೋ ಅವಳು ಏನೇ ಮಾಡುತ್ತಿದ್ದರೂ ದೇವರ ಅಸ್ತಿತ್ವದಲ್ಲಿ ಸಂಪೂರ್ಣವಾಗಿ ಏಕಾಗ್ರತೆಯಿಂದಿದ್ದಳು ಎಂದು.

ನೀತಿವಂತರು ಪೊಳ್ಳಾದ, ಅಂಜುವ ಮತ್ತು ಸಾರವಿಲ್ಲದ ಬದುಕನ್ನು ಜೀವಿಸುತ್ತಾರೆ. ಅವರು ನೀತಿವಿಚಾರಗಳನ್ನು ದಾಟಿ ಹೋಗಲು ಸದಾ ಭಯದಿಂದ ಇರುತ್ತಾರೆ. ಅವರ ನಿಜವಾದ ಉದ್ದೇಶಗಳು ನೀತಿಯ ಉದ್ದೇಶಗಳ ಸೋಗಿನಲ್ಲಿ ಪೂರ್ತಿಯಾಗಿ ಮುಚ್ಚಲ್ಪಟ್ಟಿರುತ್ತವೆ. ಅದೇ, ನೀವು ನಿಮ್ಮ ಒಳ ಬುದ್ಧಿವಂತಿಕೆಯ ಬದಲು ಕೇವಲ ನೀತಿಗಳ ನಿಯಮಗಳನುಸಾರ ಕಾರ್ಯ ನಡೆಸಿದರೆ ಆಗುವ ಸಮಸ್ಯೆ.

ನೀವು ನಿಮ್ಮ ಬುದ್ಧಿವಂತಿಕೆಯಿಂದ ಕಾರ್ಯ ನಡೆಸಿದರೆ ನಿಮ್ಮಲ್ಲಿ ಒಂದಷ್ಟು ಪವಿತ್ರತೆ ಇರುತ್ತದೆ. ನೀವು ಸುಮ್ಮನೆ ಹೊರ ಮೈಯಿಂದ ನೀತಿಗಳ ನಿಯಮಾನುಸಾರ ಕಾರ್ಯ ನಡೆಸಿದರೆ, ಅಲ್ಲಿ ಸೌಂದರ್ಯವಾಗಲೀ ಅಥವಾ ಪವಿತ್ರತೆಯಾಗಲೀ ನಿಮ್ಮಲ್ಲಿ ಇರುವುದಿಲ್ಲ.

ಯಾರು ಭಯಪಡುತ್ತಾರೋ ಮತ್ತು ತಮ್ಮ ಬಗ್ಗೆ ಅನಿಶ್ಚಿತತೆಯಿಂದ ಇರುತ್ತಾರೋ ಅವರು ನೀತಿನಿಯಮಗಳನ್ನು ಸ್ಥಾಪಿಸಿ ಅವುಗಳನ್ನು ಅನುಸರಿಸುತ್ತಾರೆ. ಯಾರು ಬುದ್ಧಿವಂತರಾಗಿರುತ್ತಾರೋ ಅಂತಹವರು ಆತ್ಮಸಂತೋಷದಿಂದ ಕಾರ್ಯ ಮಾಡುತ್ತಾರೆ ಮತ್ತು ಆಳವಾದ ಕೇಂದ್ರೀಕೃತದಿಂದ, ಭಯವಿಲ್ಲದೆ ಸರಿಯಾದ ಕಾರ್ಯಗಳನ್ನು ಮಾಡುತ್ತಾರೆ ಅಷ್ಟೆ.

ನೀತಿ ಕಾರ್ಯದಂತೆಯೇ, ಘನತೆಯೂ ಕೂಡ ಭಯವನ್ನು ಮೂಡಿಸುತ್ತದೆ. ಘನತೆ, ಹೆಸರು ಮತ್ತು ಪ್ರಸಿದ್ಧಿ, ಸಾಮಾಜಿಕ ಅಂತಸ್ತು - ಇವೆಲ್ಲವೂ ಭಯವನ್ನು ಮೂಡಿಸುತ್ತವೆ. ಈ ಭಯಗಳು ನಿಮ್ಮ ಅಹಂಭಾವದ ಭಯಗಳಲ್ಲದೆ ಬೇರೇನಲ್ಲ. ಯಾವ ಘಟನೆಯನ್ನು ಮರೆಮಾಡಲು ನೀವು ಪ್ರಯತ್ನಿಸುತ್ತಿದ್ದೀರಾ? ಸುಮ್ಮನೆ ನಿಮ್ಮ

ಖಚಿತ ಪರಿಹಾರಗಳು

ಒಳ ನೆರವೇರಿಕೆಯೊಡನೆ ಮತ್ತು ಗಾಂಭೀರ್ಯದಿಂದ ಜೀವಿಸಿರಿ ಅದು ಸಾಕು. ತಮ್ಮ ಘನತೆಯನ್ನು ಕಾಪಾಡಿಕೊಳ್ಳುವ ವ್ಯಕ್ತಿಗಳು ಈ ಭೂಮಿಯ ಮೇಲಿರುವ ಅತ್ಯಂತ ದೊಡ್ಡ ಕಪಟಿಗಳು.

ಆ ಜನಗಳೇ ಸದಾ ಭಯದಿಂದ ಜೀವಿಸುತ್ತಿರುವವರು. ಅವರ ಹಾಗೆ ಹೇಳುವ ಘನತೆಯು ಅವರ ಮೇಲೆ ಅಷ್ಟೊಂದು ಹಿಡಿತವನ್ನು ಇಟ್ಟಿರುತ್ತದೆ.

ಒಂದು ಚಿಕ್ಕ ಕಥೆ:

ಒಬ್ಬ ಮನುಷ್ಯನು ಒಂದು ದಿನ ನದಿಯಲ್ಲಿ ಮೀನನ್ನು ಹಿಡಿಯುತ್ತಿದ್ದನು.

ಬಹಳ ಸಮಯದಿಂದ ಯಾವುದೇ ಮೀನನ್ನು ಹಿಡಿಯಲಾಗದೇ ಕುಳಿತಿದ್ದನು.

ಗಾಳವನ್ನು ಕೈಯಲ್ಲಿ ಹಿಡಿಯುತ್ತಾ ಹಾಗೆಯೇ ತೂಕಡಿಸುತ್ತಿದ್ದನು.

ಇದ್ದಕ್ಕಿದ್ದಂತೆಯೇ ಒಂದು ದೊಡ್ಡ ಮೀನು ಎಡೆಯನ್ನು ಹಿಡಿದುಕೊಂಡಿತು ಮತ್ತು ಅದನ್ನು ಎಳೆಯಲಾರಂಭಿಸಿತು.

ಆ ಮನುಷ್ಯನು ಎಚ್ಚರಗೊಳ್ಳುವ ಮೊದಲೇ ನೀರಿನೊಳಗೆ ಮಗುಚಿ ಬಿದ್ದನು.

ಈ ವಿದ್ಯಮಾನವನ್ನು ಒಬ್ಬ ಬಾಲಕನು ದೂರದಿಂದ ಗಮನಿಸುತ್ತಿದ್ದ.

ಅವನು ತನ್ನ ತಂದೆಯನ್ನು ಕೇಳಿದನು “ಅಪ್ಪ, ಅವನು ಮೀನನ್ನು ಹಿಡಿಯುತ್ತಿದ್ದನೋ ಅಥವಾ ಮೀನು ಅವನನ್ನು ಹಿಡಿಯುತ್ತಿತ್ತೋ?” ಎಂದು.

ಘನತೆಯೊಂದಿಗೆ ನೀವು ಬಹಳ ಎಚ್ಚರಿಕೆಯಿಂದಿರಬೇಕು. ಘನತೆಯು ನಿಮ್ಮ ಜೀವನಕ್ಕಿಂತ ಅಧಿಕವಾದರೆ, ಅದು ನಿಮ್ಮನ್ನೇ ಮುಗಿಸಿ ಬಿಡಲು ಶುರು ಮಾಡುತ್ತದೆ. ಅದು ಹಾಗೆಯೇ ನಿಮ್ಮನ್ನು ಮುಗಿಸಿಬಿಡುತ್ತದೆ ಅಷ್ಟೆ. ಅದನ್ನು ಹುಡುಕುತ್ತಾ ಹೋಗುವ ಅವಶ್ಯಕತೆಯು ನಿಮಗಿನ್ನೇನೂ ಇರುವುದಿಲ್ಲ.

ಮತ್ತು ಘನತೆಯನ್ನು ಕಳೆದುಕೊಳ್ಳಲು ನೀವೇಕೆ ಭಯಪಡಬೇಕು? ಏಕೆಂದರೆ ಘನತೆಯು ನಿಮ್ಮನ್ನು ನೀವೊಬ್ಬ ಅಸಾಧಾರಣ ವ್ಯಕ್ತಿ ಎಂದು ಭಾವಿಸುವಂತೆ ಮಾಡುತ್ತದೆ. ನಿಮ್ಮ ಘಟನೆಯು ಸಮಾಜದಲ್ಲಿ ನಿಮಗೆ ಒಂದು ಘನವಾದ ವ್ಯಕ್ತಿತ್ವ (identity) ವನ್ನು ಕೊಡುತ್ತದೆ. ಹಣ ಮತ್ತು ಘನತೆಯಿರುವ ಜನರುಗಳು ಎಲ್ಲ ತರಹೆಯ ಅಸಂಬದ್ಧ ಮತ್ತು ಅನೀತಿಯುತವಾದದ್ದನ್ನೆಲ್ಲಾ ಮಾಡಿ ಅದರಿಂದ ತಪ್ಪಿಸಿಕೊಳ್ಳುತ್ತಾರೆ (getway) ಬಲ ಮತ್ತು ಘನತೆಯಿರುವುದರಿಂದ ಇವರ ಬೆನ್ನ ಹಿಂದೆ ಇತರ ಜನಗಳು ಆಡಿಕೊಳ್ಳುತ್ತಾರೆ ಮತ್ತು ಅವರ ಮುಂದೆ ನಮಸ್ಕಾರ ಮಾಡುತ್ತಾರೆ.

ಇಂತಹ ಘನತೆಯನ್ನೇ ಅವರು ಬಹಳ ಎಚ್ಚರಿಕೆಯಿಂದ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವುದು. ನಿಮಗೆ ಒಂದು ವಿಚಾರವನ್ನು ಹೇಳುತ್ತೇನೆ. ಅಸ್ತಿತ್ವವು ನೀವು ಹೀಗೆ ಇದ್ದರೆ ನಿಮ್ಮನ್ನು ಆಯ್ಕೆಯನ್ನು ಮಾಡುವುದೇ ಇಲ್ಲ. ಈ ಭೌತಿಕ ಪ್ರಪಂಚದಲ್ಲಿ ನೀವು ಇಚ್ಚಿಸಿದ್ದೆಲ್ಲವೂ ನಿಮಗೆ ದೊರಕಬಹುದು, ನೀವು ಸಫಲರು ಎಂದು ತೋರಬಹುದು. ಆದರೆ ಅಸ್ತಿತ್ವದ ಕಣ್ಣುಗಳಲ್ಲಿ, ನೀವು ಬಹು ದರಿದ್ರರಾಗಿಯೇ ಇರುತ್ತೀರಿ. ಅಸ್ತಿತ್ವಕ್ಕೆ ಆಯ್ಕೆ ಮಾಡಲು ತನ್ನದೇ ವಿಧಾನಗಳಿರುತ್ತವೆ.

ಘನತೆ, ಹೆಸರು, ಪ್ರಸಿದ್ಧಿ ಮತ್ತು ಶಕ್ತಿ ಇವೆಲ್ಲವೂ ನಿಮ್ಮ ಕಲ್ಪನೆಯೆಂದು ಅರ್ಥಮಾಡಿಕೊಳ್ಳಿ. ನೀವು ಅವುಗಳಿಗೆ ಜೀವ ಕೊಡುತ್ತೀರಿ; ನೀವು ಅದನ್ನು ಸೃಷ್ಟಿಸುತ್ತೀರಿ ಹಾಗೂ ಅವುಗಳನ್ನು ಕಳೆದುಕೊಳ್ಳಲು ಭಯಪಡುತ್ತೀರಿ.

ನಿಮ್ಮ ಸುತ್ತಲೂ ಇರುವ ಎಲ್ಲರ ಮತ್ತು ಎಲ್ಲದರ ಮೇಲೂ ಅಪರಿಮಿತ ಪ್ರೀತಿಯಿಂದ ಕೇವಲ ಬದುಕಿರಿ. ನಿಮ್ಮ ದಾರಿಯಲ್ಲಿ ಬರುವ ಪ್ರತಿಯೊಬ್ಬರ ಮತ್ತು ಪ್ರತಿಯೊಂದರಲ್ಲೂ ಆಳವಾದ ಪ್ರೀತಿಯನ್ನು ಅನುಭವಿಸಿ. ನೀವು ಈ ರೀತಿ ಬದುಕಿದರೆ, ಘನತೆಯೆಂಬುದು ತಾನೇ ತಾನಾಗಿ ನಿಮ್ಮಲ್ಲಿಗೆ ಬರುತ್ತದೆ. ಜನಗಳು ನಿಮ್ಮನ್ನು ನಿಮ್ಮಲ್ಲಿ ಎಷ್ಟು ಇದೆ ಎನ್ನುವುದಕ್ಕಿಂತ ನಿಮ್ಮ ಗುಣಕ್ಕಾಗಿ ನಿಮ್ಮನ್ನು ಗೌರವಿಸುತ್ತಾರೆ. ಮತ್ತು ಈ ತರಹೆಯ ಘನತೆಯೊಂದಿಗೆ, ಕಳೆದುಕೊಳ್ಳುವ ಭಯವಿರುವುದಿಲ್ಲ; ಯಾವಾಗಲೂ ಅದನ್ನು ಕಾಯುತ್ತಾ ಇರಬೇಕಾಗಿಲ್ಲ; ನೀವು ಅಂತಹ ಭಯಗಳಿಂದ ಸುಮ್ಮನೆ ಮುಕ್ತರಾಗಿರುತ್ತೀರಿ.

ಸಾರ್ವಜನಿಕ (ಸಭೆಗಳಲ್ಲಿ) ಮಾತನಾಡುವುದು, ಮುಂತಾದುವುಗಳೂ ಕೂಡ ಒಂದು ವಿಧದಲ್ಲಿ ಒಬ್ಬರ ಘನತೆಯನ್ನು ಕಳೆದುಕೊಳ್ಳುವಿಕೆಯ ಭಯ. ನೀವು ಜನ ಸಮೂಹದ ಮುಂದೆ ಮಾತನಾಡಲು ಹೆದರುತ್ತಿದ್ದರೆ, ವಾಸ್ತವದಲ್ಲಿ ನೀವು ಹೆದರುತ್ತಿರುವುದು ಅವರು ನಿಮ್ಮ ಬಗ್ಗೆ ಏನು ಹೇಳಬಹುದು ಎಂದು. ನೀವು ಹೆದರುತ್ತಿರುವುದು, ಅವರು ನಿಮ್ಮ ಬಗ್ಗೆ ಏನಾದರೂ ಹೇಳಿದರೆ ಅದರಿಂದ ನಿಮ್ಮ ಅಹಂಭಾವಕ್ಕೆ ನೋವುಂಟಾಗಬಹುದು ಎಂದು. ಇದು ನಿಮ್ಮ ಅಹಂಭಾವವನ್ನು ಕಾಯುವ ಒಂದು ನಿಷ್ಕ್ರಿಯ ಮಾದರಿ. ಭಯವು ಬಹುವಾಗಿ ಅಹಂಭಾವದ ಪ್ರಕಟನೆ. ಅದನ್ನು ಅರ್ಥಮಾಡಿಕೊಳ್ಳಿ.

ಜನಗಳು ನಿಮ್ಮ ಮಾತನ್ನು ಒಪ್ಪಿಕೊಳ್ಳದಿದ್ದರೆ ಏನಂತೆ? ನೀವು ಒಂದು ಸಂಪೂರ್ಣತೆಯ ತಿಳುವಳಿಕೆಯಿಂದ ಮಾತನಾಡುತ್ತಿದ್ದೀರ, ಅಷ್ಟು ಸಾಕು. ಸುಮ್ಮನೆ ಆನಂದಿಸಿರಿ ಮತ್ತು ಅದನ್ನು ಮಾಡಿ; ಬೇರೆಯವರು ಅದರ ಬಗ್ಗೆ ಏನು ಹೇಳುತ್ತಾರೆಂದು ಚಿಂತೆಪಡಬೇಡಿ. ಬೇರೆಯವರು ಏನು ಹೇಳುತ್ತಾರೆ ಎಂದು ನೀವು ಹೆದರಿದ ಕ್ಷಣವೇ, ನೀವು ನಿಮ್ಮ ಅಹಂಭಾವವನ್ನು ಕಾಯುತ್ತಿರುತ್ತೀರ.

ಅಹಂಭಾವಕ್ಕೆ ನೋವು (ಏಟು) ಆಗುವ ಭಯವೇ ಜನಗಳು ಧ್ಯಾನದಲ್ಲಿ ಹೋದಾಗ ಭಯ ಹೊಂದುತ್ತಾರೆ. ನೀವು ಧ್ಯಾನದಲ್ಲಿ ಹೋದಾಗ, ನಿಮಗೆ ಸದಾಕಾಲವೂ ವಿಶ್ವಶಕ್ತಿಗೆ ನಿಮ್ಮ ಸುತ್ತಲೂ ಇರುವ ವಿಶ್ವ ಚೈತನ್ಯಕ್ಕೆ, ನಿಮ್ಮನ್ನೇ ಕಳೆದುಕೊಳ್ಳುವ ಭಯವು ಇರುತ್ತದೆ. ಆದುದರಿಂದ ನಿಲ್ಲಿಸುತ್ತೀರ (hold on) ನೀವು ಧ್ಯಾನವನ್ನು ನಿರೋಧಿಸುತ್ತೀರ. ಬದಲಿಗೆ, ನಾನು ನಿಮಗೆ ಏನಾದರೂ ಮಂತ್ರವನ್ನು ಹೇಳಲು ಹೇಳಿದರೆ, ನೀವು ಸಂತೋಷವಾಗಿ ಮಂತ್ರವನ್ನು ಹೇಳುತ್ತೀರ. ಆಗ ಭಯವಿರುವುದಿಲ್ಲ.

ನಿಮ್ಮ ಅಹಂಭಾವಕ್ಕೆ ಅದು ಕರಗಿ ಹೋಗುವ ಭಯವವಿರುತ್ತದೆ. ಅದು ಕರಗಿ ಹೋದರೆ ನಿಮ್ಮನ್ನು ನೀವೇ ಗುರುತಿಸಿಕೊಳ್ಳುತ್ತಿದ್ದ ಚೀಟಿ (labels) ಗಳೆಲ್ಲವೂ ಕೂಡ ಕರಗಿ ಹೋಗುತ್ತವೆ. ಇದು ನಿಮ್ಮ ಅಹಂಭಾವಕ್ಕೆ ತುಂಬಾ ಅತಿಯಾಗುತ್ತದೆ. ನೀವು ಯಾರೂ ಇಲ್ಲದವರಾಗುತ್ತೀರ! ಆದುದರಿಂದ ನೀವು ಪ್ರತಿರೋಧಿಸುತ್ತೀರಿ ಮತ್ತು ಕನಿಷ್ಠ ನಿಮಗಾಗಿಯಾದರೂ ನೀವು ಯಾರೋ ಒಬ್ಬರಾಗಿ ಇರುತ್ತೀರಿ. ಈ ಪ್ರತಿರೋಧವು ಶುದ್ಧಾಂಗವಾಗಿ ನಿಮ್ಮ ಅಹಂಭಾವದ ಭಯ ನೀವು ನಿಂದನೆಗಳಿಗೆ ಗುರಿಯಾಗುವಂತಹದ್ದಕ್ಕೆ ಮತ್ತು ನಿಮ್ಮಲ್ಲಿ ತಪ್ಪುಗಳನ್ನು ಹುಡುಕಬಲ್ಲದುದಕ್ಕೆ ನೀವು ಅಷ್ಟೊಂದು ಹೆದರುತ್ತೀರ.

ಸಾಮಾಜಿಕ ವೃತ್ತಗಳಲ್ಲಿ ಜನಗಳು ಏಕೆ ಅಷ್ಟೊಂದು ಹೆಚ್ಚು ಮಾತನಾಡುತ್ತಾರೆ ಎನ್ನುವುದಕ್ಕೆ ಕೂಡ ಭಯವೇ ಕಾರಣ. ನೀವು ಸುಮ್ಮನೆ ಜನಗಳನ್ನು ಗಮನಿಸಿದರೆ, ಅವರ ಕಡೆಯಿಂದ ಏನಾದರೂ ಹೇಳಲೇಬೇಕೆಂದು ಅವರು ಅಷ್ಟೊಂದು ಒತ್ತಾಯದ ಭಾವನೆಯಲ್ಲಿರುತ್ತಾರೆ. ಅವರು ಏನಾದರೂ ಹೇಳಲೇಬೇಕು, ಇಲ್ಲದಿದ್ದರೆ ಮಿಕ್ಕವರು ಅವರನ್ನು ಸಾಕಷ್ಟಿಲ್ಲದವರೆಂದು (inadequate) ತಿಳಿಯುತ್ತಾರೆಂದು, ಭಾವಿಸುತ್ತಾರೆ. ಆದುದರಿಂದ ಅವರು ಏನಾದರೂ ಹೇಳುತ್ತಾರೆ - ಅದು ಅರ್ಥಹೀನವಾಗಿದ್ದರೂ ಸಹ. ಇವೆಲ್ಲವೂ ನೀವು ಗ್ರಹಿಸಲು ಕಷ್ಟವಾದ ಭಯದ ಸೂಕ್ಷ್ಮವಾದ ಪ್ರಕಟಣೆಗಳು.

ಸರಿ...?

ಸ್ವಾಮೀಜಿ, ತಾವು ಅಜ್ಞಾತತೆಯ ಭಯದ ಬಗ್ಗೆ ಹೇಳಿದಿರಿ. ನೀವು ಅದರ ಬಗ್ಗೆ ಇನ್ನೂ ಹೆಚ್ಚು ವಿವರಿಸುವಿರಾ...?

ಆಗಲಿ, ಅದಕ್ಕೆ ಬರುತ್ತಾ ಇದ್ದೇನೆ.

ನೋಡಿ, ಅಜ್ಞಾತತೆಯ ಭಯವೆಂದರೆ, ಅಂಧಕಾರದ ಬಗ್ಗೆ, ದೆವ್ವಗಳ ಮತ್ತು ಭೂತಗಳ, ದೇವರ ಮತ್ತು ಕೊನೆಯದಾಗಿ ನಮ್ಮದೇ ಸಾವಿನ ಬಗ್ಗೆ ನಮಗಿರುವ ಹೆದರಿಕೆಯಲ್ಲದೆ ಬೇರೇನೂ ಅಲ್ಲ.

ವಾಸ್ತವವಾಗಿ ನಾವು ನಮ್ಮ ಭಯಗಳ ಬಗ್ಗೆ ಅಷ್ಟೊಂದು ಹೆದರುತ್ತೇವೆ! ಅದೇ ನಿಜವಾದದ್ದು. ನಾವು ನಮ್ಮ ಭಯಗಳನ್ನು ಎದುರಿಸಲು ಭಯಪಡುತ್ತೇವೆ ಮತ್ತು ಆದ್ದರಿಂದ ನಾವು ನಮ್ಮ ಭಯಗಳನ್ನು ಬೃಹತ್ ಪ್ರಮಾಣ ಹೊಂದಲು ಬಿಡುತ್ತೇವೆ ಮತ್ತು ಹೆಚ್ಚು ಹೆಚ್ಚು ಭಯವನ್ನು ಹೊಂದಲು ಪ್ರಾರಂಭಿಸುತ್ತೇವೆ.

ಒಂದು ಚಿಕ್ಕ ಕಥೆ:

ಒಬ್ಬ ಮನುಷ್ಯನು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದನು.

ಟಿಕೇಟ್ ಪರೀಕ್ಷಕನು ಅವನ ಬಳಿ ಬಂದು ಅವನ ಟಿಕೇಟನ್ನು ಕೇಳಿದನು.

ಅವನು ಬಹಳ ಉದ್ರೇಕದಿಂದ ಟಿಕೇಟ್‌ಗಾಗಿ ತನ್ನ ಪರ್ಸ್‌ನಲ್ಲಿ, ತನ್ನ ಸಾಮಾನುಗಳಲ್ಲಿ, ಇನ್ನೆಲ್ಲಾ ಕಡೆಯೂ ಹುಡುಕಲು ಮೊದಲು ಮಾಡಿದ.

ಟಿಕೇಟ್ ಪರೀಕ್ಷಕನು ಇದನ್ನು ಗಮನಿಸುತ್ತಿದ್ದನು ಮತ್ತು ಹೇಳಿದನು "ಸ್ವಾಮಿ, ತಮ್ಮ ಅಂಗಿಯ ಜೇಬಿನಲ್ಲಿ ಏಕೆ ಹುಡುಕುವುದಿಲ್ಲ'' ಎಂದು.

ಆ ಮನುಷ್ಯನು "ದಯವಿಟ್ಟು ಈಗ ಅದರಲ್ಲಿ ಹುಡುಕಲು ಹೇಳಬೇಡಿ. ನನ್ನ ಒಂದೇ ನಂಬಿಕೆ ಎಂದರೆ ಅದು ಅಲ್ಲಿ ಇರುವುದು'' ಎಂದು (ನಗೆ!)

ನೋಡಲು ಅಷ್ಟೊಂದು ಭಯಪಡುತ್ತೇವೆ! ನಾವು ನೋಡಲು ಎಷ್ಟೊಂದು ಭಯಪಡುತ್ತೇವೆ ಎಂದರೆ, ಅದೇ ನಮ್ಮ ಸಮಸ್ಯೆ. ಆದ್ದರಿಂದ ನಾವು ಸುಖದ ವಲಯಗಳಲ್ಲಿ ನಮಗೆ ನಾವೇ ಮೋಸ ಮಾಡಿಕೊಂಡು ಹಾಗೆಯೇ ಮುಂದುವರಿಯುತ್ತೇವೆ.

ನೋಡಲು ಹೆದರಲೇಬೇಡಿ. ನೀವು ನೋಡಲು ಹೆದರಿದ ಕ್ಷಣವೇ, ನೀವು ಮತ್ತಷ್ಟು ಭಯವನ್ನು ಸೃಷ್ಟಿಸುತ್ತೀರಿ, ಏಕೆಂದರೆ ಅದು ನಿಮಗೆ ಇನ್ನಷ್ಟು ಅಜ್ಞಾತವಾಗುತ್ತದೆ. ಸುಮ್ಮನೆ ಭಯದೊಳಗೆ ನೋಡಿ ಮತ್ತು ನೀವು ಭಯದಲ್ಲಿ ಇರುವುದನ್ನು ಒಪ್ಪಿಕೊಳ್ಳಿ. ತನ್ನಷ್ಟಕ್ಕೆ ಭಯವು ಕರಗಿಹೋಗುತ್ತದೆ. ನೀವು ಅರಿವಿನಿಂದ ಒಂದು ಭಯದ ನಂತರ ಮತ್ತೊಂದು ಭಯವನ್ನು ಧೈರ್ಯವಾಗಿ ಎದುರಿಸಲು ಮೊದಲು ಮಾಡಿದರೆ ಸಾಲಿನ ಕೆಳಗೆ ಎಲ್ಲೋ ಒಂದು ಕಡೆ ಬುದ್ಧಿವಂತಿಕೆಯು ಭಯದ ಬದಲಾಗಿ ಬರುತ್ತದೆ ಮತ್ತು ನಿಮಗೆ ಭಯದ ಮನೋಭಾವವು ಕಡಿಮೆಯಾಗುತ್ತಾ ಇರುತ್ತದೆ.

ಏನೇ ಇರಲಿ, ನಾವು ಅಜ್ಞಾತ ಭಯದ ಬಗ್ಗೆ ಮಾತನಾಡಿದರೆ, ದೆವ್ವಗಳ ಮತ್ತು ಭೂತಗಳ ಭಯವು ತುಂಬಾ ಸಾಮಾನ್ಯ. ಅವುಗಳ ಬಗ್ಗೆ ಭಯಪಡುವ ಅವಶ್ಯಕತೆಯೇ ಇಲ್ಲ. ದೆವ್ವಗಳು ಮತ್ತು ಭೂತಗಳು ನಮಗಿಂತ ಕಡಿಮೆ ಶಕ್ತಿಶಾಲಿಗಳೆಂದು ಸುಮ್ಮನೆ ಅರ್ಥಮಾಡಿಕೊಳ್ಳಿ. ನಾವು ಅವುಗಳಿಗೆ ಅವುಗಳಲ್ಲಿರುವ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು ಕೊಡುತ್ತೇವೆ ಮತ್ತು ನಮ್ಮ ಭಯಗಳನ್ನು ಅವು ಹಿಡಿತದಲ್ಲಿ ಇಟ್ಟುಕೊಳ್ಳುವಂತೆ ಮಾಡುತ್ತೇವೆ. ಅಲ್ಲಿ ಸಮಸ್ಯೆಯು ಆರಂಭವಾಗುವುದು.

ದೆವ್ವಗಳು ಮತ್ತು ಭೂತಗಳ ವಿಷಯದಲ್ಲಿ ಹೆಚ್ಚಾಗಿ ಹೋಗಬೇಡಿ. ಅದು ಉಪಯೋಗವಿಲ್ಲ. ನೀವು ನಿಮ್ಮ ಬಗ್ಗೆ ಚೆನ್ನಾಗಿ ಕೇಂದ್ರೀಕೃತವಾಗಿ ಮತ್ತು ನಿಶ್ಚಳತೆಯಿಂದ ಇದ್ದರೆ ಅಷ್ಟು ಸಾಕು. ತನ್ನಷ್ಟಕ್ಕೇ ಯಾವುದೂ ನಿಮ್ಮನ್ನು ಮುಟ್ಟುವುದಿಲ್ಲ ಮತ್ತು ಅಂತಹ ವಿಷಯಗಳಲ್ಲಿ ನಿಮಗೂ ಭಯವಿರುವುದಿಲ್ಲ.

ಅಂಧಕಾರದ ಬಗ್ಗೆ ಭಯವು ಕೂಡ ಅಜ್ಞಾತದ ಭಯ. ಅಂಧಕಾರದ ಭಯವು ಸಾವಿನ ಬಗ್ಗೆ ಭಯವಲ್ಲದೆ ಬೇರೇನೂ ಅಲ್ಲ. ಸುಮ್ಮನೆ ಯೋಚಿಸಿ. ನಿಮ್ಮ ಮನೆಯಲ್ಲಿರುವ ಅದೇ ತೋಟ, ಬೆಳಿಗ್ಗೆ ನಡೆದಿರುತ್ತೀರ, ಆದರೆ ರಾತ್ರಿಯ ವೇಳೆ ನಡೆದಾಡುವಿರಾ? ಇಲ್ಲ! ನೀವು ಭಯಪಡುತ್ತೀರಾ! ಏಕೆ? ನಿಮಗೆ ನಿಮ್ಮ ತೋಟದ ಎಲ್ಲೆಗಳು ಚೆನ್ನಾಗಿಯೇ ಗೊತ್ತಿರುತ್ತದೆಯಲ್ಲವೇ? ಮತ್ತೇಕೆ ಹೆದರುತ್ತೀರಾ? ನೀವು ಹೆದರುತ್ತಿರುವುದು ತೋಟದಿಂದ ಅಲ್ಲ, ಆದರೆ ಅಂಧಕಾರಕ್ಕಾಗಿ.

ನಿಮಗೆ ಕತ್ತಲಿನಲ್ಲಿ ಏನೋ ಆಗಬಹುದೆಂದು ಹೆದರಿರುತ್ತೀರ. ನೀವು ನಿಮ್ಮ ಜೀವದ ಬಗ್ಗೆ ಹೆದರಿರುತ್ತೀರ. ನಾನು ನಿಮಗೆ ನಿಮ್ಮ ಪ್ರತಿಯೊಂದು ಭಯವೂ ಸಾವಿನ ಅಂತಿಮ ಭಯಕ್ಕೆ ಯಾವುದೋ ಒಂದು ರೀತಿ ಸಂಬಂಧವನ್ನು ಹೊಂದಿರುತ್ತದೆ ಎಂದು ಹೇಳಿದಾಗ ನಾನು ಇದನ್ನೇ ಅರ್ಥೈಸುತ್ತಿರುವುದು. ಅಂಧಕಾರದ ವಿಚಾರದಲ್ಲಿ

ಇದು ಬಹಳವೇ ಸಹಜ, ಆದರೆ ನಿಮ್ಮ ಇತರ ಭಯಗಳ ವಿಚಾರದಲ್ಲಿ ಇದು ಬಹಳ ಸೂಕ್ಷ್ಮ ಅಷ್ಟೆ.

ವಾಸ್ತವವಾಗಿ, ಅಂಧಕಾರವು ಬಲು ಸುಂದರ! ಅದು ನಿಮ್ಮ ತಾಯಿಯ ಗರ್ಭದಂತೆಯೇ ನೀವು ನಿಮ್ಮ ತಾಯಿಯ ಗರ್ಭದಲ್ಲಿದ್ದಾಗ, ನೀವು ಸಂಪೂರ್ಣ ಕತ್ತಲಿನಲ್ಲಿದ್ದಿರಿ. ಆದರೆ ನೀವು (ಹೊರ) ಪ್ರಪಂಚಕ್ಕೆ ಬಂದ ಮೇಲೆ, ಕತ್ತಲಿನ ಜತೆ ಸಂಬಂಧವನ್ನು ಕಳೆದುಕೊಂಡಿರಿ; ಅದನ್ನು ಯಾವುದೋ ಅಜ್ಞಾತವೆಂದು ಭಯಪಡಲು ಮೊದಲು ಮಾಡಿದಿರಿ. ತಾಂತ್ರಿಕ ಅನುಯಾಯಿಗಳು ಅಸ್ತಿತ್ವದ ತೀಕ್ಷ್ಣತೆಯನ್ನು ಅನುಭವಿಸಲು ಅಂಧಕಾರವನ್ನು ಕುರಿತು ಧ್ಯಾನವನ್ನು ಮಾಡುತ್ತಾರೆ.

ಅಂಧಕಾರದ ಬಗ್ಗೆ ಹೆದರುವ ಅವಶ್ಯಕತೆಯೇ ಇಲ್ಲ. ಕೇವಲ ಒಮ್ಮೆ ನೀವು ನಿಮ್ಮ ತಾಯಿಯ ಗರ್ಭದಲ್ಲಿನ ಸಾಂತ್ವೈಸುವಿಕೆಯ ಅನುಭವದಿಂದ ಗಾಢವಾದ ಪ್ರೀತಿಯಿಂದ ಅಂಧಕಾರದತ್ತ ನೋಡಿದರೆ, ನೀವು ಇನ್ನೇನೂ ಭಯವನ್ನು ಅನುಭವಿಸುವುದಿಲ್ಲ.

ಒಂದು ಮಗುವು ಕತ್ತಲಿನ ಬಗ್ಗೆ ಹೆದರಿಕೊಂಡರೆ, ಧೈರ್ಯದಿಂದಿರು! ಎಂದು ಹೇಳಬೇಡಿ. ನೀವು ಇದನ್ನು ಹೇಳಿದರೆ ಅವನಿಗೆ ಉದ್ವೇಗವು ಮಾತ್ರ ಆಗುತ್ತದೆ, ಏಕೆಂದರೆ ಅವನು ಭಯವನ್ನು ಹೊಂದಕೂಡದು ಎಂದು ಭಾವಿಸಲಾಗಿದೆ. ಅವನು ಅವನ ಕತ್ತಲಿನ ಬಗ್ಗೆ ಭಯವನ್ನು ಬಿಟ್ಟುಬಿಡುವುದಿಲ್ಲ. ಸುಮ್ಮನೆ ಅವನಿಗೆ ಅಂಧಕಾರದ ಭಯದ ಮೂಲಕ ಹೋಗಲು ಬಿಡಿ. ಅವನು ಸ್ವಲ್ಪ ನಡುಗಲಿ. ಕೊನೆಯಪಕ್ಷ, ಅವನಿಗೆ ಭಯವನ್ನು ಅನ್ವೇಷಿಸಲು ಒಂದು ಅವಕಾಶ ಸಿಗುತ್ತದೆ. ಅವನು ಇದನ್ನು ಹಲವು ಬಾರಿ ಮಾಡಿದರೆ, ನಿಧಾನವಾಗಿ ಅವನು ಕತ್ತಲಿನ ಭಯವನ್ನು ಕಳೆದುಕೊಳ್ಳುತ್ತಾನೆ.

ಈಗ ದೇವರ ಭಯಕ್ಕೆ ಬಂದರೆ, ದೇವರೂ ನಮಗೆ ಅಜ್ಞಾತವಾಗಿದ್ದಾನೆ ಮತ್ತು ಅದರಿಂದ ನಾವು ದೇವರಿಗೆ ಹೆದರುತ್ತೇವೆ. ಅರ್ಥಮಾಡಿಕೊಳ್ಳಿ. ದೇವರು ಎನ್ನುವುದು, ನಾವು ಅಸ್ತಿತ್ವಕ್ಕೆ ಸುವ್ಯವಸ್ಥಿತ ವಿಶ್ವಕ್ಕೆ, ಅಸ್ತಿತ್ವದ ಚೈತನ್ಯಕ್ಕೆ, ವಿಶ್ವದಲ್ಲೆಲ್ಲಾ ಹರಡಿರುವ ಜೀವದ ಬಲಕ್ಕೆ ನಾವು ಕೊಟ್ಟಿರುವ ಹೆಸರು. ಅಸ್ತಿತ್ವಕ್ಕೆ ಅಂದರೆ ವಿಶ್ವ ಚೈತನ್ಯಕ್ಕೆ ಪ್ರೀತಿಸುವುದು ಮಾತ್ರವೇ ಗೊತ್ತು. ನೀವು ಇಷ್ಟನ್ನು ಅರ್ಥಮಾಡಿಕೊಳ್ಳಬಲ್ಲಿರಾದರೆ, ತನ್ನಷ್ಟಕ್ಕೆ ತಾನೇ ನಿಮ್ಮ ಭಯಗಳೆಲ್ಲವೂ ಬೀಳುತ್ತವೆ. ಜನಗಳು ದೇವರಿಗೆ ಅಷ್ಟೊಂದು ಹೆದರುತ್ತಾರೆ. ಜನಗಳು ಕೇಳುತ್ತಾರೆ, “ಸ್ವಾಮೀಜಿ, ಜನಗಳು ಹೇಳುತ್ತಾರೆ, ನಾವು ಕೆಟ್ಟ ಅಥವಾ ಪಾಪ ಕಾರ್ಯಗಳ ಬದಲಿಗೆ ಒಳ್ಳೆಯ

ಅಥವಾ ಪುಣ್ಯ ಕಾರ್ಯಗಳನ್ನು ಮಾಡಿದರೆ ಸ್ವರ್ಗಕ್ಕೆ ಹೋಗುತ್ತೇವೆ, ನರಕಕ್ಕಲ್ಲ, ಇದು ನಿಜವೇ?" ಎಂದು.

ಮೊಟ್ಟಮೊದಲು, ನರಕ ಅಥವಾ ಸ್ವರ್ಗ ಭೌಗೋಳಿಕ ಪ್ರದೇಶಗಳಲ್ಲ ಎಂದು ಅರ್ಥಮಾಡಿಕೊಳ್ಳಿ. ನಿಮ್ಮ ತಲೆಯ ಮೇಲೆ ಸ್ವರ್ಗ ಅಥವಾ ನರಕ ಎಂಬುದು ನೆಲೆಗೊಂಡಿಲ್ಲ. ಮನುಷ್ಯನಲ್ಲಿ ಭಯ ಮತ್ತು ಆಸೆಯನ್ನು ಕೇವಲ ಹುಟ್ಟಿಸಲು ಸೃಷ್ಟಿಸಿದ ಪದಗಳು ಅಷ್ಟೆ. ನರಕ ಅಥವಾ ಸ್ವರ್ಗ ಎಂಬುವನ್ನು ಗೊಂದಲದ ಸಾವು ಅಥವಾ ಶಾಂತಿಯುತವಾದ ಮತ್ತು ಅರಿವಿನಿಂದ ಕೂಡಿದ ಸಾವು ಎಂದು ಅರ್ಥೈಸಬಹುದು ಅಷ್ಟೆ.

ನಿಮ್ಮ ಜೀವನದಲ್ಲಿ ಯಾವುದೇ ಕ್ಷಣವನ್ನು ಧ್ಯಾನದಲ್ಲಿ ಕಳೆದರೆ, ಆ ಕ್ಷಣವು ಪುಣ್ಯ ಅಥವಾ ಒಳ್ಳೆಯ ಕಾರ್ಯದ ಕ್ಷಣ. ನಾನು ಧ್ಯಾನ ಎಂದರೆ ಕಣ್ಣುಗಳನ್ನು ಮುಚ್ಚಿ ಕುಳಿತುಕೊಂಡಿರುವುದು ಎಂದು ಅರ್ಥ ಮಾಡುತ್ತಿಲ್ಲ. ನಾನು ಅರ್ಥ ಮಾಡುತ್ತಿರುವುದು, ನೀವು ಜಾಗ್ರತಾವಸ್ಥೆಯಿಂದ ವರ್ತಮಾನದಲ್ಲಿ ಇರುವ ಕ್ಷಣಗಳು; ನಿಮ್ಮ ಜಾಗ್ರತಾವಸ್ಥೆಯು ನಿಮ್ಮೊಡನಿದ್ದರೆ; ಸಾಮಾನ್ಯವಾಗಿ ನೀವು ಇರುವ ಅರೆಜಾಗ್ರತಾವಸ್ಥೆಯಿಂದ ಹೊರ ಬಂದು ವರ್ತಮಾನದಲ್ಲಿರುವ ಕ್ಷಣಗಳು; ನೀವು ಅಸ್ತಿತ್ವದ ಚೈತನ್ಯದೊಡನೆ ಅನುಭವಿಸಿ ಪ್ರತಿಸ್ಪಂದಿಸಿದ ಕ್ಷಣಗಳು.

ಆ ಸ್ಥಿತಿಗಳಲ್ಲಿ ಕಳೆಯದೇ ಇರುವ ಕ್ಷಣವೇ ಪಾಪ. ಜಾಗ್ರತಾವಸ್ಥೆಯಲ್ಲಿ ಕಳೆಯುವ ಕ್ಷಣಗಳೆಲ್ಲವೂ ನಿಮ್ಮ ಬ್ಯಾಂಕಿನಲ್ಲಿರುವ ಬಾಕಿಯಂತೆ. ನಿಮ್ಮ ಸಾವಿನ ಸಮಯದಲ್ಲಿ, ಈ ಸ್ಥಿತಿಗಳೇ ಮೇಲಕ್ಕೆ ಬಂದು ನಿಮ್ಮನ್ನು ಮುಕ್ತಿಗೊಳಿಸುತ್ತದೆ.

ಜನಗಳು ತಿಳಿದುಕೊಂಡಿರುವುದು ಅವರು ಕೊಡಗಟ್ಟಲೆ ಹಾಲನ್ನು ದೇವಸ್ಥಾನದಲ್ಲಿರುವ ವಿಗ್ರಹಕ್ಕೆ ಅರ್ಪಿಸಿದರೆ ಅವರ ಪುಣ್ಯಗಳು ವೃದ್ಧಿಸಿ ಅವರು ಸ್ವರ್ಗವನ್ನು ತಲುಪುತ್ತಾರೆಂದು! ನಾನು ನಿಮಗೆ ಹೇಳುತ್ತೇನೆ. ದೇವರಿಗೆ ಹಾಲನ್ನು ಸಮರ್ಪಿಸುವುದರಿಂದ ಏನೂ ಆಗುವುದಿಲ್ಲ. ಅಸ್ತಿತ್ವದ ಬಗ್ಗೆ ನಿಮ್ಮೊಳಗೆ ಹಿಗ್ಗುತ್ತಿರುವ ಕೃತಜ್ಞತಾ ಭಾವನೆಯುಂಟಾಗುತ್ತಿದ್ದರೆ, ನೀವು ಅದನ್ನು ಅಸ್ತಿತ್ವವೆಂದು ಭಾವಿಸಿ ಪೂಜಿಸುತ್ತಿರುವ ವಿಗ್ರಹಕ್ಕೆ ಹಾಲನ್ನು ಸಮರ್ಪಿಸುವುದರಿಂದ ಸೂಚಿಸಬಹುದು. ಇದು ಸಂಪೂರ್ಣವಾಗಿ ಸರಿ. ಆದರೆ ದಯವಿಟ್ಟು ಇದನ್ನು ಪುಣ್ಯ ಮುಂತಾದವುಕ್ಕೆ ಜೋಡಿಸಬೇಡಿ.

ಪರಿಶುದ್ಧ ಸಂತೋಷದಿಂದ ಮತ್ತು ಕೃತಜ್ಞತೆಯಿಂದ ಅರ್ಪಿಸಿದ ಒಂದು ತೊಟ್ಟು ಹಾಲು ನಿಷ್ಕಪಟ ಧ್ಯಾನದ ಒಂದು ಕ್ಷಣವಾಗಿದ್ದು ಅದು ಸಾವಿನ ಸಮಯದಲ್ಲಿ ನಿಮ್ಮೊಡನೆ ಇರುತ್ತದೆ. ಅದೇ ಪುಣ್ಯ ಸಂಚಯನವನ್ನು ತಪ್ಪಿಸಿಕೊಳ್ಳುವ ಕೇವಲ ಭಯದಿಂದ ಕೊಡಗಟ್ಟಲೆ ಹಾಲನ್ನು ಸಮರ್ಪಿಸಿದರೆ ಏನೂ ದಕ್ಕುವುದಿಲ್ಲ. ಆದ್ದರಿಂದ ನಿಮ್ಮ ಅರಿವಿಕೆಯನ್ನು ಹೆಚ್ಚಿಸಿ, ಜಾಗೃತಾಭಾವದಿಂದ ಬದುಕಿರಿ. ಪ್ರತಿಕ್ಷಣವನ್ನೂ, ನೀವೇನೇ ಕೆಲಸವನ್ನು ಮಾಡುತ್ತಿದ್ದರೂ, ಧ್ಯಾನವನ್ನಾಗಿ ಮಾಡಿರಿ. ಅದು ಸಾಕು. ನೀವು ಪಾಪದ ಭಯವಿಲ್ಲದೆ ಜೀವಿಸಬಹುದು.

ನಿಮಗೆ ಒಂದು ಸಂಗತಿಯನ್ನು ವಿವರಿಸುತ್ತೇನೆ.

ನಾನು ಭಾರತ ದೇಶದಲ್ಲಿನ ದೂರದ ಹಳ್ಳಿಯಲ್ಲಿರುವ ಶಿವಾಲಯಕ್ಕೆ ಹೋಗಿದ್ದೆ. ಮೂಲ ದೇವರ (main deity) ದ್ವಾರದ ಬಳಿ ಒಂದು ಟ್ಯೂಬ್‌ಲೈಟ್‌ ಹತ್ತಿತ್ತು.

ಅದು ಸ್ವಲ್ಪವೂ ಕಾಣಿಸುತ್ತಿರಲಿಲ್ಲ. ಕಾರಣ ಅದರ ಮೇಲೆ ಕಪ್ಪು ಶಾಯಿಯಿಂದ ವಿಷ್ಣುನಾಥನ್, ಬಿ.ಎಸ್‌ಸಿ., ಎಂದು ಬರೆಯಲಾಗಿತ್ತು.

ಶಿವನನ್ನು ವಿಷ್ಣುನಾಥನ್ ಎಂದು ಹೇಗೆ ಕರೆಯುತ್ತಾರೆ ಎಂದು ಆಶ್ಚರ್ಯಪಡುತ್ತಿದ್ದೆ. ನಂತರ ಅದರ ಕೆಳಗೆ ಸಣ್ಣ ಅಕ್ಷರಗಳಲ್ಲಿ ಕೈಲಾಸನಾಥನ್ - ಶಿವನ ಸರಿಯಾದ ಹೆಸರನ್ನು ನೋಡಿದೆ.

ವಿಷ್ಣುನಾಥನ್ ಎಂಬುದು ಆ ಟ್ಯೂಬ್‌ಲೈಟನ್ನು ಕೊಡುಗೆಯಾಗಿ ನೀಡಿದ ವ್ಯಕ್ತಿಯ ಹೆಸರು!

(ನಗೆ!)

ನಾವು ನಮ್ಮ ಬದುಕಿನಲ್ಲಿ ಒಳ್ಳೆಯ ಕೆಲಸಗಳ ಸಂಚಯನವನ್ನು ಕಳೆದುಕೊಳ್ಳುವ ಬಗ್ಗೆ ಎಷ್ಟೊಂದು ಭಯಗ್ರಸ್ತರಾಗಿರುತ್ತೇವೆಂದರೆ ನಾವು ಪ್ರಾಪಂಚಿಕವಾಗಿದ್ದು (material-istic) ಒಳ್ಳೆಯ ಕಾರ್ಯಗಳ ಬ್ಯಾಂಕ್ ಬಾಕಿಗಳನ್ನು ನಮಗಾಗಿ ಸೃಷ್ಟಿಸಿಕೊಳ್ಳಲು ಪ್ರಾರಂಭಿಸುತ್ತೇವೆ. ನಾವು ದೇವರಿಗೆ ನಾವು ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಪದೇ ಪದೇ ತಿಳಿಸುತ್ತಿರುತ್ತೇವೆ, ಅದರಿಂದ ಅವನು ಮರೆಯದೇ ಇರಲೆಂದು! ನಾವು ದೇವರಿಗೆ ಸಂಬಂಧಗಳೆಲ್ಲವೂ ಕೂಡ ಅಷ್ಟೊಂದು ಪ್ರಾಪಂಚಿಕವಾಗಿ ಬಿಡುತ್ತೇವೆ!

ಅರ್ಥಮಾಡಿಕೊಳ್ಳಿ: ಹಾಗೆ ಹೇಳುವ ಒಳ್ಳೆಯ ಕಾರ್ಯಗಳಿಂದ ಪ್ರವೇಶವನ್ನು ಪಡೆಯಬಹುದಾದಂತಹ ಒಂದು ವಿಶ್ರಾಂತಿ ಧಾಮವನ್ನು ದೇವರು ಸ್ವರ್ಗದಲ್ಲಿ ನಡೆಸುತ್ತಿಲ್ಲ. ನೀವು ಬದುಕಿರುವಾಗ, ನೀವು ಇಂತಹ ಭೌತಿಕ ಕಾರ್ಯಗಳನ್ನು ಅದರ ಹಿಂದಿರುವ ನಿಜದ ಅನುಭವದ ಪರಿಕಲ್ಪನೆಯೇ (idea) ಇಲ್ಲದೆ, ಸದಾಕಾಲವೂ ಮಾಡಲು ಪ್ರಯತ್ನಿಸುತ್ತಿರುತ್ತೀರ. ಈ ಕೆಲಸಗಳಿಂದ ನೀವು ಪುಣ್ಯ ಎಂಬ ದೊಡ್ಡ ಸೌಧ (castle) ವನ್ನೇ ಕಟ್ಟುತ್ತೀರ. ನಂತರ ನಿಮ್ಮ ಸಾವಿನ ಸಮಯದಲ್ಲಿ ಈ ಸೌಧವು ನಿಮ್ಮ ಬಳಿ ಇರಬೇಕೆಂದು ನೀವು ಅಪೇಕ್ಷಿಸುತ್ತೀರ.

ಇದು ಒಂದು ರೀತಿ ಈ ತರಹ: ನೀವು ಕನಸಿನಲ್ಲಿ ಒಂದು ಮನೆಯನ್ನು ಕಟ್ಟುತ್ತೀರ, ಅದಕ್ಕೆ ಬಣ್ಣ ಹಚ್ಚುತ್ತೀರ, ಶೃಂಗರಿಸುತ್ತೀರ ಮತ್ತು ಅದನ್ನು ಅನುಭವಿಸುತ್ತೀರ. ನೀವು ನಿಮ್ಮ ಕನಸಿನಿಂದ ಎಚ್ಚೆತ್ತ ಮೇಲೆ ಏನಾಗುತ್ತದೆ? ಆ ಮನೆಯೆಲ್ಲಿದೆ? ನೀವೆಚ್ಚೆತ್ತಮೇಲೆ ಅದರಿಂದ ನಿಮಗೇನಾದರೂ ಪ್ರಯೋಜನವಿದೆಯೇ? ಇದೇ ರೀತಿ ಈ ರೀತಿಯ ಪುಣ್ಯದ ಕಲ್ಪನೆಯಿಂದ ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳುತ್ತಿದ್ದೀರ. ನಾವು ದೈವಿಕದ ಸಹಿತ ಎಲ್ಲವನ್ನೂ ‘ಸರಳ ವ್ಯಾಪಾರ’ಕ್ಕೆ ಇಳಿಸುತ್ತೇವೆ ಅಷ್ಟೆ.

ನಾನು ಜನಗಳನ್ನು ನೋಡಿದ್ದೇನೆ. ಅವರು ಒಬ್ಬ ನಿರ್ದಿಷ್ಟ ದೇವರನ್ನು ಒಂದು ನಿರ್ದಿಷ್ಟ ದೇವಸ್ಥಾನದಲ್ಲಿ ಪ್ರತಿ ಶನಿವಾರ ಒಂದು ಸಮರ್ಪಣೆಯನ್ನು ಅರ್ಪಿಸುವುದಾಗಿ ನಿಶ್ಚಯಿಸಿರುತ್ತಾರೆ. ಯಾವುದಾದರೊಂದು ಶನಿವಾರ ಅವರಿಗೆ ಅದು ಮಾಡಲು ಸಾಧ್ಯವಾಗದಿದ್ದರೆ, ಅವರು ತಮ್ಮ ವಾಹನ ಚಾಲಕನನ್ನು ಸಮರ್ಪಣೆಯೊಂದಿಗೆ ದೇವರಿಗೆ ಕಳುಹಿಸುತ್ತಾರೆ! ತುಂಬ ಸ್ಪಷ್ಟವಾಗಿರಿ. ಈ ಭೌತಿಕ ಪ್ರಪಂಚವು ನೀವು ಸಾಯುತ್ತಿರುವಾಗ ನಿಮ್ಮೊಂದಿಗೆ ಬರುವುದಿಲ್ಲ. ಕೇವಲ ಅರಿವಿನ ಕ್ಷಣಗಳು, ಜಾಗ್ರತಾಭಾವವು, ಮತ್ತು ಧ್ಯಾನವು ನಿಮ್ಮೊಂದಿಗೆ ಬರುತ್ತವೆ.

ಮತ್ತು ಇದೊಂದು ವಿಚಾರವನ್ನು ಅರ್ಥಮಾಡಿಕೊಳ್ಳಿ. ನೀವು ನಿಮ್ಮ ಬಗ್ಗೆ ತಿಳಿದಿರುವುದಕ್ಕಿಂತಾ ದೇವರು ನಿಮ್ಮ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿರುತ್ತಾನೆ. ಅವನಿಗೆ ತಿಳಿದಿರುವುದರಿಂದ ನೀವು ಅವನಿಂದ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಆದುದರಿಂದ ಅವನಿಗೆ ಭಯಪಡುವುದಾಗಲೀ ಮತ್ತು ಅವನನ್ನು ತೃಪ್ತಿಗೊಳಿಸುವುದಾಗಲೀ ಕಾರಣವಿಲ್ಲ. ದೇವರು ನಿಮ್ಮನ್ನು ಅರ್ಥ ಮಾಡಿಕೊಳ್ಳದಿದ್ದರೆ, ಪ್ರಪಂಚದಲ್ಲೆಲ್ಲೂ ತಿಳಿಯುವಿಕೆ (understanding) ಎಂಬುದೇ ಇರುತ್ತಿರಲಿಲ್ಲ.

ನಿಮ್ಮ ತಾಯಿ ತಂದೆಗಳಿಗಿಂತಲೂ ದೇವರು ನಿಮ್ಮನ್ನು ಬಲ್ಲ. ನಿಮ್ಮ ಈ ಜನ್ಮದಲ್ಲಷ್ಟೇ ಅಲ್ಲ ನಿಮ್ಮ ಇಲ್ಲಿಯವರೆಗಿನ ಹುಟ್ಟಿನ ಬದುಕುಗಳ ಬಗ್ಗೆಯೂ ಗೊತ್ತು. ನೀವು ಅವನ ಎದುರು ಒಂದು ತೆರೆದ ಪುಸ್ತಕ. ಅವನು ಯಾವುದೇ ಪುಟವನ್ನು ಯಾವ ಸಮಯದಲ್ಲಿ ಬೇಕಾದರೂ ನೋಡಬಹುದು!

ಆದುದರಿಂದ ದೇವರ ಬಗ್ಗೆ ನಿಮಗಿರುವ ಭಯವನ್ನು ಬಿಟ್ಟುಬಿಡಿ ಮತ್ತು ಅವನನ್ನು ಅಸ್ತಿತ್ವದ ಪರಿಪೂರ್ಣತೆಯೆಂದು ನೋಡಿ (totality of existence) ಅವನನ್ನು ಒಬ್ಬ ಸ್ನೇಹಿತನಂತೆ ನೋಡಿ. ಸಮಾಜವು ನಿಮ್ಮನ್ನು ದೇವರ ಬಗ್ಗೆ ಹೆದರಿಸಲು ಎಷ್ಟೇ ಕಷ್ಟಪಟ್ಟು ಪ್ರಯತ್ನಿಸಿದರೂ, ಅದನ್ನು ಕೇಳಬೇಡಿ. ದೇವರೊಂದಿಗೆ ನಿಮ್ಮದೇ ಸಂಬಂಧವನ್ನು ಬೆಳೆಸಿಕೊಳ್ಳಿ. ಒಂದು ಘನವಾದ ಮತ್ತು ನಂಬಿಕಸ್ತವಾದದ್ದು; ಒಬ್ಬನ ಬದುಕಿನಲ್ಲಿ ಬೇಕಾಗಿರುವ ಇದೊಂದೇ ಸಂಬಂಧ.

ನೀವು ಅಸ್ತಿತ್ವದೊಂದಿಗೆ ಅಥವಾ ದೇವರೊಂದಿಗೆ ಸಂಬಂಧವನ್ನು ಪ್ರಾರಂಭಿಸಿದರೆ, ನೀವು ನಿಮ್ಮೊಂದಿಗೆ ಮುಂಚಿಗಿಂತ ಇನ್ನೂ ಹೆಚ್ಚಾಗಿ ಸಂಬಂಧವನ್ನು ಪ್ರಾರಂಭಿಸುತ್ತೀರ. ನೀವು ನಿಖರವಾಗಿ ನಿಮ್ಮೊಳಗೆ ಏನು ನಡೆಯುತ್ತಿದೆಯೆಂದು ತಿಳಿಯುತ್ತೀರ. ನಿಶ್ಚಳತೆ ನಿಮ್ಮೊಳಗೆ ಪ್ರವೇಶ ಮಾಡುತ್ತದೆ. ನಿಮ್ಮ ಅಂತರಂಗದ ಬುದ್ಧಿವಂತಿಕೆ ಬೆಳೆಯುತ್ತದೆ. ನಿಮ್ಮ ಭಯಗಳು ಬೀಳುತ್ತವೆ. ನೀವು ಯಾವುದೇ ವಿಷಯಗಳಲ್ಲೂ ಹೆದರಿಕೆಯನ್ನು ಅನುಭವಿಸುವ ಮೊದಲು ಸರಿಯಾಗಿ ನೋಡಲು ಕಲಿಯುತ್ತೀರ. ನೀವು ಏನೇ ಕೆಲಸವನ್ನು ಮಾಡಲು ಒತ್ತಡದ ಅನುಭವವನ್ನು ಹೊಂದಿರುವುದಿಲ್ಲ, ಏಕೆಂದರೆ ಹೆದರಿಕೆಯ ಜಾಗದಲ್ಲಿ ಬುದ್ಧಿವಂತಿಕೆಯು ಬಂದಿರುತ್ತದೆ. ನೀವು ಹೆಚ್ಚು ವಿಶ್ರಾಂತತೆಯಿಂದ ಮತ್ತು ಸಂತೋಷದಿಂದ ಇರುತ್ತೀರಿ. ನೀವು ಮುಕ್ತರಾದಂತೆ ಭಾವಿಸುತ್ತೀರಿ.

ನೀವು ಅಸ್ತಿತ್ವದ ಬಗ್ಗೆ ಅರ್ಥಮಾಡಿಕೊಂಡರೆ, ಮತ (ಧರ್ಮ)ದ ಹೆಸರಿನಲ್ಲಿ ನಡೆಯುತ್ತಿರುವ ಯುದ್ಧಗಳಾವುವೂ ಇರುವುದಿಲ್ಲ. ತಮ್ಮ ಮತಗಳ ಬಗ್ಗೆ ಹೆದರಿಕೆಯಿಂದಿರುವ ಜನಗಳು, ತಮ್ಮ ಮತಕ್ಕಾಗಿ ಹೋರಾಟ ಮಾಡುವ ಜನಗಳು, ಇವರೇ ನಮ್ಮನ್ನು ಪ್ರೀತಿಸುವ ಅಸ್ತಿತ್ವವನ್ನು ನಿಚ್ಚಳವಾಗಿ ಅರ್ಥಮಾಡಿಕೊಳ್ಳದೇ ಇರುವವರು. ಅವರು ಸುಮ್ಮನೆ ಎಲ್ಲವನ್ನೂ ಒಂದೇ ಸಮನೆ ಕಳೆದುಕೊಳ್ಳುತ್ತಿರುವವರು. ಅವರು ಪರಸ್ಪರ ಕಚ್ಚಾಡುತ್ತಿರುವ ಕುರುಡರಂತೆ ಇರುವವರು.

ಮತ್ತು ಬಹುಮುಖ್ಯವಾದದ್ದು: ದಯವಿಟ್ಟು ದೇವರ ಮೇಲಿನ ನಿಮ್ಮ ಅಭಿಪ್ರಾಯಗಳನ್ನು ನಿಮ್ಮ ಮಕ್ಕಳಿಗೆ ರವಾನಿಸಿ ಅವರಲ್ಲಿ ದೇವರ ಬಗ್ಗೆ ಭಯವನ್ನು ಹುಟ್ಟಿಸಬೇಡಿ. ದೇವರನ್ನು ಅಪ್ಪಿಕೊಳ್ಳಲು ಹೇಳಿಕೊಡಿ. ಅವರಿಗೆ ದೇವರು ಸರ್ವರನ್ನೂ ಅಪ್ಪಿಕೊಳ್ಳುತ್ತಿರುವ ಸರ್ವಾಂತರ್ಯಾಮಿ ಅಸ್ತಿತ್ವವೆಂದು ಹೇಳಿಕೊಡಿ. ಅವರಿಗೆ ದೇವರು ಪವಿತ್ರ ಪ್ರೀತಿಯಲ್ಲದೆ ಬೇರೇನೂ ಅಲ್ಲವೆಂದು ಹೇಳಿಕೊಡಿ. ಅವರಿಗೆ ದೇವರತ್ವ ಮತ್ತು ಅಸ್ತಿತ್ವದೊಂದಿಗೆ ಒಟ್ಟಾಗಿ ಪ್ರೀತಿಯ ಮನೋಭಾವದಿಂದ ಬೆಳೆಯಲು ಸಹಾಯ ಮಾಡಿ. ಈ ರೀತಿ, ಅವರು ಸಾಮಾನ್ಯವಾಗಿ ಬೆಳೆಯುವಂತೆ ಭಯದಿಂದ ಬೆಳೆಯುವುದಿಲ್ಲ.

ಹಾಂ...

ಸ್ವಾಮೀಜಿ, ನಾವು ಸದಾ ಆಶ್ಚರ್ಯಪಡುತ್ತೇವೆ - ನಮಗೆ ಏನಾದರೂ ಆಗುತ್ತಿದ್ದರೂ ಅದು ನಮ್ಮ ವಿಧಿಯೋ ಅಥವಾ ನಮ್ಮ ಆಯ್ಕೆಯೋ?

(ಸ್ವಾಮೀಜಿ ನಗುತ್ತಾರೆ!) ಒಂದು ತುಂಬಾ ಸಾಮಾನ್ಯವಾಗಿ ಕೇಳುವ ಪ್ರಶ್ನೆ! ನೋಡಿ ಅರ್ಥಮಾಡಿಕೊಳ್ಳಿ. ನಿಮ್ಮ ವರ್ತಮಾನದ ಕ್ಷಣವು ನಿಮ್ಮ ಭೂತಕಾಲದ ತೀರ್ಮಾನಗಳ ಒಟ್ಟು ಮೊತ್ತದ್ದು. ನೀವು ಈಗ ಈ ಜಾಗದಲ್ಲಿದ್ದೀರ. ನೀವು ಬೆಳಿಗ್ಗೆ ಬೇಗ ಎಳಲು, ಸರಿಯಾದ ಮಾರ್ಗ ಹಿಡಿದು, ಇಲ್ಲಿಗೆ ಬರಲು, ಕುಳಿತು ಮತ್ತು ಕುಳಿತಿರುವುದನ್ನು ಮುಂದುವರಿಯಲು ನಿರ್ಧರಿಸಿದಿರಿ ಸರಿಯಲ್ಲವೇ?

ಇದು ಹೀಗೆ, ನಿಮ್ಮ ಎಲ್ಲ ಭೂತಕಾಲದ ತೀರ್ಮಾನಗಳು ವರ್ತಮಾನವನ್ನು ರೂಪಿಸುತ್ತವೆ - ನೀವು ಈ ಕ್ಷಣ ಇಲ್ಲಿರುವ ಹಾಗೆ ಇದೇ ರೀತಿ, ನಿಮ್ಮ ಭವಿಷ್ಯವು ನಿಮ್ಮ ಎಲ್ಲ ವರ್ತಮಾನದ ತೀರ್ಮಾನಗಳ ಪರಿಣಾಮವಾಗಿರುತ್ತದೆ. ಈಗ, ನಾವು ಇದನ್ನು ವಿಧಿ ಎಂದು ಏಕೆ ತಿಳಿಯಬೇಕು? ಅದು ಏಕೆಂದರೆ ನಾವು ಅರಿವಿಲ್ಲದೆಯೇ ನಮ್ಮ ತೀರ್ಮಾನಗಳನ್ನು ಮಾಡುತ್ತೇವೆ ಮತ್ತು ನಮ್ಮ ದಾರಿಯಲ್ಲಿ ಬರುವ ಹಲವು ಪರಿಣಾಮಗಳನ್ನು ನಿರೀಕ್ಷಿಸಿರುವುದಿಲ್ಲ. ಯಾವಾಗ ಅನಿರೀಕ್ಷಿತವಾದದ್ದು ಅಥವಾ ಅನುಕೂಲವಲ್ಲದ ಪರಿಣಾಮಗಳು ಆಗುತ್ತವೆಯೋ, ಅದನ್ನು ವಿಧಿ ಎಂದು ಕರೆಯುತ್ತೇವೆ.

ನಾವು ಅರಿವಿನ ನಿರ್ಧಾರಗಳನ್ನು ಮಾಡಿದರೆ, ನಮಗೆ ಅನಪೇಕ್ಷಿತ ಪರಿಣಾಮ (side effects) ಮತ್ತು ನಂತರದ ಪರಿಣಾಮಗಳ ಅರಿವಿರುತ್ತದೆ. ನಮಗೆ ಅನಪೇಕ್ಷಿತ ಪರಿಣಾಮ ಮತ್ತು ನಂತರದ ಪರಿಣಾಮಗಳ ಅರಿವಿಲ್ಲದಿದ್ದರೆ, ಅದನ್ನು ವಿಧಿ ಎಂದು ಕರೆಯುತ್ತೇವೆ. ವಾಸ್ತವವಾಗಿ, ಜೀವನವು ಶುದ್ಧವಾಗಿ ನಿಮ್ಮ ಆಯ್ಕೆ. ಅದು ನಾವೇ ತೀರ್ಮಾನಗಳನ್ನು ಮಾಡುವವರು, ಬೇರೆಯವರು ನಮಗಾಗಿ ಅಲ್ಲವೇ ಅಲ್ಲ.

ದೇವರು ಎಷ್ಟು ಕೃಪಾಳುವೆಂದರೆ, ಈ ಪ್ರಪಂಚವೇ ಅವನದಾಗಿದ್ದರೂ, ಅವನು ನಮಗೆ ನಮ್ಮ ಆಯ್ಕೆಯನ್ನು ಮಾಡಿಕೊಳ್ಳಲು ಬಿಡುತ್ತಾನೆ! ನೀವು ಸರಿಯಾದ ನಿರ್ಧಾರಗಳನ್ನು ಮಾಡುವ ಒಂದೇ ಮಾರ್ಗ ಎಂದರೆ ನಿಮ್ಮ ಉಸಿರಿನಲ್ಲೇ ಅರಿವನ್ನು ತುಂಬುವುದರ ಮೂಲಕ ಮತ್ತು ಅದರಿಂದ ನಿಮ್ಮ ಪ್ರತಿಯೊಂದು ಕೃತ್ಯವೂ, ನಿಮ್ಮ ಪ್ರತಿಯೊಂದು ನಿರ್ಧಾರವೂ ನಿಮ್ಮ ಅರಿವಿನಿಂದ ಆಗುತ್ತದೆ ಮತ್ತು ನೀವು ಯಾವುದೇ ಅರೆಜಾಗ್ರತಾವಸ್ಥೆಯ (subconscious) ಅಥವಾ ಅರಿವಿಲ್ಲದ (unconscious) ನಿರ್ಧಾರಗಳನ್ನು ಮಾಡುವ ಸ್ಥಿತಿಗೆ ಜಾರುವುದಿಲ್ಲ ಅಷ್ಟೆ. ಆಗ ನೀವು ವಿಧಿಯ ಬಗ್ಗೆ, ಪ್ರಾರಬ್ಧ (desting) ದ ಬಗ್ಗೆ ಚಿಂತಿಸಬೇಕಿರುವುದಿಲ್ಲ.

ಮತ್ತು ಒಂದನ್ನು ಅರ್ಥಮಾಡಿಕೊಳ್ಳಿ. ಯಾರೂ ತಮ್ಮ ಕೈಗಳನ್ನು ನಿಮ್ಮ ಸಂಪತ್ತಿನ ಮೇಲೆ ಇಟ್ಟು ನಿಮಗೆ ಹಾಗೆ ಹೇಳುವ ಕೆಟ್ಟ ವಿಧಿಯನ್ನು (ill-fate) ಉಂಟುಮಾಡಲು ಪ್ರಯತ್ನಿಸುತ್ತಿರಲಿಲ್ಲ. ಅದು ಹೇಗೋ ನಾವು ಬೇರೆಯವರು ನಮ್ಮ ಸಂಪತ್ತನ್ನು ಕದಿಯಲು ಕಾಯುತ್ತಿರುವರೆಂಬ ಸತತವಾದ ಭಯದಲ್ಲಿ ಜೀವಿಸಿರುತ್ತೇವೆ.

ಭಯದಲ್ಲಿ, ನಾವು ಹಲವಾರು ಗೋಡೆಗಳನ್ನು ಕಟ್ಟುತ್ತೇವೆ. ಕೊನೆಯಲ್ಲಿ ನಾವು ನಮ್ಮದೇ ಸಣ್ಣ ಕೋಣೆ (cell) ಯಲ್ಲಿ ಬಂಧಿತರಾಗಿರುವುದಾಗಿ ಕಂಡುಕೊಳ್ಳುತ್ತೇವೆ. ಆದುದರಿಂದಲೇ ನಾನು ಹೇಳುವುದು, "ಬಾಗಿಲು ತೆರೆಯಿರಿ, ತಂಗಾಳಿ ಒಳ ಬರಲಿ" ಎಂದು. ಜೀವ ಬಲವು (life force) ನಿಮ್ಮನ್ನು ನೋಡಿಕೊಳ್ಳುತ್ತದೆ ಎಂಬ ನಂಬಿಕೆಯಿರಲಿ. ಸ್ಪಷ್ಟವಾಗಿ ತಿಳಿದಿರಿ: ನಾನು, "ನಿಮ್ಮ ಮನೆಗಳಿಗೆ ಬೀಗ ಹಾಕಬೇಡಿ!'' ಎಂದು ಹೇಳುತ್ತಿಲ್ಲ. ಭೌತಿಕ ಹಂತದಲ್ಲಿ ನಿಮ್ಮ ಮನೆಗಳಿಗೆ ಬೀಗ ಹಾಕಲೇಬೇಕಾದ ಅವಶ್ಯಕತೆ ನಿಮಗೆ ಇದೆ. ನಾನು ಹೇಳುತ್ತಿರುವುದು ಮಾನಸಿಕ ಹಂತದಲ್ಲಿ ಬೀಗದ ಭ್ರಾಂತಿಯನ್ನು ಬಿಟ್ಟು ಬಿಡಿ ಎಂದಷ್ಟೆ.

ನೀವು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೀರಿ ಎಂದು ಸುಮ್ಮನೆ ಉದಾಹರಣೆಗೆ ತೆಗೆದುಕೊಳ್ಳಿ. ನೀವು ನಿಮ್ಮ ಬೋಗಿಯಲ್ಲಿ ನೆಲೆಗೊಂಡ ಕೂಡಲೇ ಏನು ಮಾಡುತ್ತೀರಿ? ನಿಮ್ಮ ಪಕ್ಕದಲ್ಲಿರುವವರ ಜೊತೆ ಸಂಭಾಷಣೆಗೆ ಪ್ರಾರಂಭಿಸುತ್ತೀರಿ. ಅವರು ಎಲ್ಲಿಂದ ಬಂದವರು ಎಂದು ಕೇಳುತ್ತೀರಿ. ಅವರು ಯಾವ ಮತಸ್ಥರಿರಬಹುದೆಂದು ಊಹೆ ಮಾಡಲು ಪ್ರಯತ್ನಿಸುತ್ತೀರಿ. ಅವರ ಹಿನ್ನೆಲೆ ಮುಂತಾದವುಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತೀರಿ. ಏಕೆ? ಏಕೆಂದರೆ ನೀವು ಅವರ ವಿಚಾರಗಳ ಬಗ್ಗೆ ಪ್ರಾಮಾಣಿಕವಾಗಿ ಆಸಕ್ತಿ ಹೊಂದಿದ್ದೀರಿ ಎಂದೆ? ಅಲ್ಲ! ಅದು ಏಕೆಂದರೆ ನೀವು ಅವರನ್ನು ಅಪರಿಚಿತರೆಂದು ನೋಡುತ್ತೀರಿ ಮತ್ತು ಅವರ ಈ ವಿಚಾರಗಳೆಲ್ಲಾ ನಿಮಗೆ ತಿಳಿದರೆ, ಮಾನಸಿಕವಾಗಿ ನಿಮ್ಮ ಅಜ್ಞಾತತೆಯ ಭಯವು ಕಡಿಮೆಯಾಗುವುದು, ಮತ್ತು ನೀವು ನಿರಾಳವಾಗಿರುತ್ತೀರಿ ಅಷ್ಟೆ.

ನೀವು ಒಬ್ಬ ಹಿಂದುವಾಗಿದ್ದು ಅವರೂ ಹಿಂದು ಆಗಿದ್ದರೆ, ನೀವು ವಿಶ್ರಮಿಸುತ್ತೀರಿ. ನೀವು ಹಿಂದು ಆಗಿದ್ದು ಅವರು ಮುಸಲ್ಮಾನರಾಗಿದ್ದರೆ ನಿಮಗೆ ಚಡಪಡಿಕೆಯ ಭಾವನೆ ಮತ್ತು ಭಯವು ಉಂಟಾಗುವುದು, ಅವರನ್ನು ಸಂಶಯದಿಂದ ನೋಡಲು ಪ್ರಾರಂಭಿಸುತ್ತೀರಿ. ನೀವು ನಿಮ್ಮ ಸ್ಥಳವನ್ನು ಬದಲಾಯಿಸಿಕೊಳ್ಳಲೂ ಸಹ ಯೋಚಿಸುತ್ತಿರುತ್ತೀರಿ. ಈ ರೀತಿ ನಿಮ್ಮ ಭಯವು ಕೆಲಸ ಮಾಡುತ್ತದೆ. ಸದಾಕಾಲವೂ ನೀವು ನಿಮ್ಮ ಸ್ವತ್ತನ್ನು ಕಳೆದು ಅರಿವಿಲ್ಲದ ಭಯದಲ್ಲಿ ಇರುತ್ತೀರಿ.

ಶಾರದಾದೇವಿ ಹೇಳುತ್ತಾಳೆ, “ನೀವು ಶೋಷಣೆಗೆ (exploit) ಒಳಗಾದರೂ ಅನ್ಯರನ್ನು ನಂಬು. ವಿಶ್ವವನ್ನು ನಿಮ್ಮ ಜೀವಾತ್ಮದಲ್ಲಿ ನಂಬುವ ನಿಮ್ಮ ಮೂಲ ಗುಣವೇ ನಿಮ್ಮನ್ನು ಭೂಮಿಯ ಮೇಲೆ ದೇವರ ತರಹ ಬದುಕುವಂತೆ ಮಾಡುತ್ತದೆ'' ಎಂದು.

ಬುದ್ಧಿಮತ್ತೆಯು ಹರಿತವಾದಾಗ, ನೀವು ಒಬ್ಬ ವಿಜ್ಞಾನಿಯಂತೆ ಅರ್ಥ ಮಾಡಿಕೊಳ್ಳುತ್ತೀರಿ, ಮನೋಭಾವಗಳು ಹರಿತವಾದಾಗ, ನಂಬಿಕೆಯು ಅರಳುತ್ತದೆ, ಭಾವನೆಗಳು ಹರಿತವಾದಾಗ, ಜ್ಞಾನೋದಯವು ವಿಕಾಸವಾಗುತ್ತದೆ (flowers)

ಆದುದರಿಂದ ನಿಮ್ಮ ಭಯಗಳನ್ನು ಬಿಟ್ಟುಬಿಡಿ ಮತ್ತು ಅರಿತುಕೊಳ್ಳುವಿಕೆ ಮತ್ತು ನಂಬಿಕೆಯು ನಿಮ್ಮೊಳಗೆ ಆಗಲು ಪ್ರವೇಶಿಸಲು ಬಿಡಿ.

ಆದುದರಿಂದ ನಿಮ್ಮ ಸ್ವತ್ತಿನ ಬಗ್ಗೆ ಭಯಗಳನ್ನು ಬಿಟ್ಟುಬಿಡಿ. ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ: ಪ್ರತಿಯೊಂದು ವಸ್ತುವೂ ಅಸ್ತಿತ್ವಕ್ಕೆ ಸೇರಿದ್ದೆಂದು. ನೀವು ಕೇವಲ ಒಬ್ಬ ತಾತ್ಕಾಲಿಕ ಮಾಲೀಕರಷ್ಟೆ. ನೀವು ಇದನ್ನು ಆಳವಾದ ಮಟ್ಟದಲ್ಲಿ ಅರ್ಥ ಮಾಡಿಕೊಂಡರೆ, ನಿಮ್ಮ ಸ್ವತ್ತಿನ ಭಯವು ನಿಮ್ಮನ್ನು ನುಂಗಿಬಿಡುವುದಕ್ಕೆ ನೀವು ಆಸ್ಪದ ಮಾಡಿಕೊಡುವುದಿಲ್ಲ.

ನಾವು ಸ್ವತ್ತಿನ ಸಂದರ್ಭದಲ್ಲಿ (Context) ಅಪರಿಚಿತರ ಭಯವನ್ನು ಕುರಿತು ಮಾತನಾಡಿದೆವು ಆದರೆ ಘನತೆಯ ವಿಚಾರದಲ್ಲಿ ಭಯವು ಹೇಗೆ ಕೆಲಸ ಮಾಡುತ್ತದೆ ಎಂಬ ವಿಷಯವನ್ನು ತೆಗೆದುಕೊಳ್ಳಿ. ಯಾರೋ ಒಬ್ಬರು ಸಮಾಜವು ಮಾಡಬೇಕೆಂದು ಒಪ್ಪಿಕೊಳ್ಳದಂತಹ, ಒಂದು ವಿವಾಹೇತರ ಸಂಬಂಧವನ್ನು ಹೊಂದಲೋ ಅಥವಾ ಒಂದು ಉದ್ರೇಕದ ಕುಣಿತವನ್ನು ಇಚ್ಛಿಸಿದ್ದಾರೆಂದು ಇಟ್ಟುಕೊಳ್ಳಿ; ಅವರೇನು ಮಾಡುತ್ತಾರೆ? ಅವರು ತಮ್ಮೊಂದಿಗೆ ಸಮಾಜದ ಕಣ್ಣುಗಳಲ್ಲಿ ಗುರುತಿಸಿಕೊಳ್ಳಲಾರದಂತಹ ಅಪರಿಚಿತರೊಂದಿಗೆ ಯಾರೋ ಅಪರಿಚಿತರೊಂದಿಗೆ ತಮಗೆ ಬೇಕಾದ ವಿನೋದವನ್ನು ಹೊಂದುತ್ತಾರೆ.

ಈ ಸಂದರ್ಭದಲ್ಲಿ ಅಪರಿಚಿತರು ಭಯಕ್ಕೆ ಒಬ್ಬ ಸಂಗಾತಿಯಾಗುತ್ತಾರೆ. ಇಲ್ಲಿ ಕಟ್ಟುಪಾಡಿಗೆ ಒಳಗಾಗುವುದು ಮತ್ತು ತೊಡಗಿಸಿಕೊಳ್ಳುವುದು ಭಯವನ್ನು ಹುಟ್ಟುಹಾಕುತ್ತದೆ, ಆದ್ದರಿಂದ ನೀವು ಕಟ್ಟುಪಾಡಿಗೆ ಒಳಗಾಗುವುದು ಮತ್ತು ತೊಡಗಿಸಿಕೊಳ್ಳುವುದು ಪೂರ್ಣವಾಗಿ ನಿವಾರಿಸಲಾಗದಿದ್ದರೂ ಕಡಿಮೆ ಮಾಡಬಲ್ಲ ಕಾರಣದಿಂದ ನೀವು ಕಡಿಮೆ ಗೊತ್ತಿರುವ ಜನಗಳಿಗಾಗಿ ನೋಡುತ್ತೀರಿ. ಭಯವು ಹೇಗೆ ಆಡುತ್ತಿದೆ ಎಂದು ಹಾಗೇ ನೋಡಿ! ನೀವು ಸದಾಕಾಲವೂ ಭಯದ ಹಿಡಿತದಲ್ಲಿ ಹೇಗೆ ಇದ್ದೀರಿ ಎಂದು ನೋಡಿರಿ.

ಹ್ಯಾ..

ಸ್ವಾಮೀಜಿ, ನಮಗೆ ಭಯವಿರುವಾಗ, ನಾವು ಅದರ ಬಗ್ಗೆ ಹೆಚ್ಚಿನ ಅರಿವಿನಿಂದ ಇದ್ದು ಅದರೊಳಗೆ ನೋಡಬೇಕೆಂದು ಹೇಳುತ್ತೀರಿ. ಆದರೆ ಕೆಲವೊಮ್ಮೆ ಭಯವು ಥಟ್ಟನೆ ಸಂಭವಿಸುತ್ತದೆ. ಅದು ಒಂದು ಘಟನೆ ಸಂಭವಿಸುವ ಆಘಾತದಂತೆ ಬಂದು ಹೋಗುತ್ತದೆ. ಆಗ ಅದರೊಳಗೆ ನೋಡಲು ನಮಗೆ ಸಮಯವಿರುವುದಿಲ್ಲ.

ಹೌದು... ನೀವು ಹೇಳುತ್ತಿರುವುದು ನಾವು ಕರೆಯುವ ಭಯದ ಹೊಡೆತ ಎಂದು.

ಭಯದ ಛಳುಕುಗಳು ಭಯದ ಚಿಕ್ಕ ಶಿಖರಗಳಂತಹವು. ಅವು ಕೆಲವು ಕ್ಷಣಗಳ ಕಾಲ ಹಾಗೇ ಬಂದು ಹೋಗುವಂತಹವು. ನೀವು ಭಯದ ತೀವ್ರ ಏರಿಕೆಯನ್ನು ಅನುಭವಿಸುತ್ತೀರ. ಅದು ಕೆಲವೇ ಕ್ಷಣಗಳಲ್ಲಿ ಇಳಿದು ಹೋಗುತ್ತದೆ ಏಕೆಂದರೆ ಅಷ್ಟು ಹೊತ್ತಿಗೆ ನೀವು ಅದು ಕೇವಲ ಒಂದು ಹಗ್ಗದಂತೆ ಎಂದು ತಿಳಿದುಕೊಂಡಿರುತ್ತೀರ. ಇದೇ ಭಯದ ಛಳುಕು.

ನೋಡಿ, ಇದು ಈ ರೀತಿ. ನಮ್ಮೊಳಗೆ ಯಾವಾಗಲೂ ಭಯದ ಒಂದು ಹರಿವು ಇರುತ್ತದೆ. ಕೆಲವೊಮ್ಮೆ ಅದು ಶಿಖರಕ್ಕೆ ಏರುತ್ತದೆ ಅಷ್ಟೆ. ಈ ಭಯದ ಛಳುಕುಗಳು ಅಲ್ಪ ಕಾಲಾವಧಿಯಷ್ಟಿದ್ದರೂ ಬಹಳ ತೀವ್ರತೆಯಿಂದ ಆಗಬಹುದು. ಭಯದ ಛಳುಕುಗಳು ನಮ್ಮ ಪ್ರತಿರೋಧಕ (immune) ವ್ಯವಸ್ಥೆಯನ್ನು (System) ದುರ್ಬಲಗೊಳಿಸುತ್ತದೆ. ಅವು ಖಿನ್ನತೆಯನ್ನು ಉಂಟುಮಾಡುವ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ನಮ್ಮ ವಯಸ್ಸಾಗುವ ಪ್ರಕ್ರಿಯೆ (ಮುಪ್ಪಾಗುವಿಕೆಯ ಪ್ರಕ್ರಿಯೆ - ageing process) ಯನ್ನು ತ್ವರಿತಗೊಳಿಸುತ್ತದೆ. ಅದು ಹೃದಯಾಘಾತವನ್ನು ಉಂಟು ಮಾಡಬಹುದು ಅಥವಾ ನಿಮ್ಮ ತಲೆಗೂದಲು ಬಿಳಿಯದನ್ನಾಗಿ ಮಾಡಬಹುದು.

ಒಂದು ಸರಾಸರಿಯಲ್ಲಿ ಪ್ರತಿಯೊಬ್ಬರೂ ಅರಿವಿನಿಂದಲೋ ಅರಿವಿಲ್ಲದೆಯೋ ಪ್ರತಿದಿನ 6 ಭಯದ ಛಳಕನ್ನು ಅನುಭವಿಸುತ್ತಾರೆ. ಅರಿವಿನ ಭಯದ ಛಳುಕುಗಳು ನಮ್ಮ ಕಾರ್ಯಗಳಿಗೆ ಸಂಬಂಧ ಪಟ್ಟಿರುತ್ತವೆ. - ಟೆಲಿಫೋನಿನ ರಿಂಗ್ ಮಧ್ಯರಾತ್ರಿಯ ನಂತರ ಆದರೆ, ಅಥವಾ ನೀವು ಕಾರಿನಲ್ಲಿರುವಾಗ ಮತ್ತೊಬ್ಬ ಕಾರಿನ ಚಾಲಕನು ಹಠಾತ್ತನೆ ನಿಮ್ಮ ಕಡೆಗೆ ಬಂದರೆ ಅಥವಾ ನೀವು ಒಂದು ಭಯಾನಕ ಚಲನಚಿತ್ರವನ್ನು ನೋಡುತ್ತಿರುವಾಗ ಯಾರೋ ನಿಮ್ಮ ಭುಜವನ್ನು ತಟ್ಟಿದಾಗ, ಹೀಗೇ ಇದೇ ತರಹ ಮುಂತಾದವುಗಳು.

ನಿಮ್ಮ ಸ್ವಪ್ನಗಳಲ್ಲಿಯೂ ಕೂಡ ನಿಮಗೆ ಭಯದ ಛಳುಕುಗಳು ಬರಬಹುದು, ಆದರೆ ನೀವು ಎಚ್ಚರಗೊಂಡೊಡನೆಯೇ ಅದನ್ನು ಮರೆಯುತ್ತೀರ. ಭಯದ ಛಳುಕುಗಳು ಒಂದು ಗುಲಾಬಿಯ ಗಿಡದ ಬೇರುಗಳನ್ನು ಅಲುಗಾಡಿಸಿದಂತೆ. ಅದು ನಮ್ಮ ವ್ಯವಸ್ಥೆಗೆ ಬಹಳ ಅಪಾಯಕಾರಿ.

ನೀವು ಹೇಳಿದಂತೆ ಭಯದ ಛಳುಕಿನ ಸಮಯದಲ್ಲಿ, ನಿಮಗೆ ಅರಿವಿಗೆ ಹೋಗಲು ಏನೂ ಸಮಯವೇ ಇರುವುದಿಲ್ಲ. ಯಾವುದೇ ದೇವರ ನಾಮವನ್ನು ಜಪಿಸಿ ಛಳಕಿನೊಳಗೆ ಹೋಗಲು ಸಮಯವಿರುವುದಿಲ್ಲ. ಏಕೆಂದರೆ ಅದು ಒಂದು ಸಣ್ಣ ಶಿಖರದಂತೆ. ಆದರೆ ಭಯದ ಛಳಕಿನ ನಂತರ, ನೀವು ಛಳಕನ್ನು ಸರಿಯಾಗಿ ವಿಶ್ಲೇಷಿಸಬಹುದು ಮತ್ತು ನಿಮ್ಮ ಭಯಗಳ ಒಂದು ಆಳವಾದ ಮುದ್ರಿತ ತಿವಳಿಕೆಯನ್ನು ಹೊಂದಬಹುದು. ಇದು ಭಯದ ಸಂಪೂರ್ಣ ಕಲ್ಪನೆಯನ್ನು ಕರಗಿಸಲು ಸಹಾಯ ಮಾಡುವುದು.

ನಮ್ಮಲ್ಲಿರುವ ಸಾಮಾನ್ಯವಾದ ಭಯದ ತೀವ್ರತೆ ಮತ್ತು ಆಳವನ್ನು ಕಡಿಮೆ ಮಾಡುವುದರ ಮೂಲಕ ಭಯದ ಛಳುಕುಗಳ ತೀವ್ರತೆ ಮತ್ತು ಪುನರಾವರ್ತನೆಯನ್ನು ಬಹಳಷ್ಟು ಕಡಿಮೆ ಮಾಡಬಹುದು. ಸಾಮಾನ್ಯವಾದ ಭಯದಿಂದ ಮಾತ್ರವೇ ಭಯದ ಛಳುಕುಗಳು ಹುಟ್ಟುತ್ತವೆ. ಆಳವಾದ ಅರಿವು ಮತ್ತು ನಿಚ್ಚಳತೆಯ ಸಾಮಾನ್ಯವಾದ ಭಯವನ್ನು ಕಡಿಮೆ ಮಾಡಿದರೆ, ಭಯದ ಛಳುಕುಗಳೂ ಕಡಿಮೆಯಾಗುತ್ತವೆ.

ಸಾಮಾನ್ಯವಾಗಿ ಭಯವು ಎಷ್ಟೊಂದು ಆಕ್ರಮಣಶೀಲ (overpower) ವಾಗಿ ಇರುತ್ತದೆಂದರೆ ಅದು ನಿಮ್ಮನ್ನು ಪೂರ್ಣವಾಗಿ ಹತೋಟಿಯನ್ನು ತಪ್ಪಿದವರಂತೆ ಮಾಡಿಬಿಡುತ್ತದೆ (Throw you out of control)

ಒಂದು ಸಣ್ಣ ಕಥೆ:

ಒಬ್ಬ ಶಿಷ್ಯನು ಸೂಫಿ ಗುರುಗಳನ್ನು ದೀಕ್ಷೆಗಾಗಿ ಕಾಡುತ್ತಿದ್ದನು.

ಕಡೆಗೆ ಗುರುಗಳು ಅವನಿಗೆ ದೀಕ್ಷೆ ಕೊಡುವುದಾಗಿ ಹೇಳಿದರು; ಆದರೆ ಒಂದು ಷರತ್ತಿನ ಮೇಲೆ, ಅಂದರೆ ಅವನು ಹತ್ತಿರದ ಪಟ್ಟಣಕ್ಕೆ ಹೋಗಿ ಒಬ್ಬ ಬುರ್ಖಾ ಮಹಿಳೆಯನ್ನು ಚುಂಬಿಸಿ ನಂತರ ಆಚೆ ಇರುವ ಕಾಡಿನಲ್ಲಿರುವ ಹುಲಿಯನ್ನು ತನ್ನ ಕೋಲಿನಿಂದ ಹೊಡೆಯಬೇಕು ಎಂದು.

ಮಿಕ್ಕ ಶಿಷ್ಯರು ಇದು ಬಹಳ ಸರಳವೆಂದು ಪ್ರತಿಭಟಿಸಿದರು.

ಗುರುಗಳು ಸುಮ್ಮನೆ ನಕ್ಕರು ಮತ್ತು ಅವರನ್ನು ಕಾಯಲು ಹೇಳಿದರು.

ಒಂದು ವಾರದ ನಂತರ ಆ ಶಿಷ್ಯನು ಹಿಂತಿರುಗಿ ಬಂದನು. ಅವನು ಬಹಳ ತೀವ್ರವಾಗಿ ಗಾಯಗೊಂಡಿದ್ದನು ಮತ್ತು ರಕ್ತವು ಸುರಿಯುತ್ತಿದ್ದಿತು.

ಏನಾಯಿತೆಂದು ಗುರುಗಳು ಅವನನ್ನು ಕೇಳಿದರು.

ಆ ಶಿಷ್ಯನು ಹೇಳಿದನು "ಏಕೋ ಗೊತ್ತಿಲ್ಲ, ಆದರೆ ನಾನು ಆ ಹೆಂಗಸನ್ನು ಹೊಡೆದೆ ಮತ್ತು ಹುಲಿಯನ್ನು ಚುಂಬಿಸಿದೆ' ಎಂದು

(ಜೋರಾದ ನಗು!)

ಭಯವು ನಿಮ್ಮನ್ನು ಸುಮ್ಮನೆ ಅಂಧರನ್ನಾಗಿಸಬಹುದು! ಅದು ನಿಮ್ಮ ಯೋಚನಾ ಶಕ್ತಿಯನ್ನು ಮತ್ತು ಬುದ್ಧಿವಂತಿಕೆಯನ್ನು ಒಟ್ಟಿಗೆ ಕೆಲವು ಕ್ಷಣಗಳು ತೆಗೆದುಕೊಂಡು ಹೋಗಿಬಿಡಬಹುದು. ಆದುದರಿಂದಲೇ ನೀವು ಭಯವನ್ನು ಆಳವಾಗಿ ಅರ್ಥಮಾಡಿಕೊಂಡು ಅದನ್ನು ನಿಗ್ರಹಿಸಬೇಕು.

ಬಹಳ ಸಂಗತಿಗಳಲ್ಲಿ ನೀವು ಕೇಳಿದ್ದಿರಬಹುದು. ಎಲ್ಲಾದರೂ ಯಾವುದೋ ಅಗ್ನಿ ಆಕಸ್ಮಿಕವೋ ಅಥವಾ ದುರ್ಘಟನೆಯೋ ಆಗುತ್ತಿದ್ದರೆ, ಜನಗಳು ಭಯದಿಂದ ಎಲ್ಲಾ ದಿಕ್ಕುಗಳಲ್ಲೂ ಓಡುತ್ತಿರುತ್ತಾರೆ, ಅವರು ಬಾಗಿಲುಗಳನ್ನು ತಪ್ಪು ದಿಕ್ಕುಗಳಲ್ಲಿ ತೆರೆಯುತ್ತಿರುತ್ತಾರೆ, ಅವರು ತಪ್ಪು ಹೊರದಾರಿಯಕಡೆಗೆ, ಸಾಮಾನ್ಯ ಸಮಯದಲ್ಲಿ ಅದು ಸರಿಯಾದ ದಾರಿಯಲ್ಲವೆಂದು ತಿಳಿದಿದ್ದರೂ ಸಹ, ಓಡುತ್ತಿರುತ್ತಾರೆ. ಇವೆಲ್ಲಾ ವಿಷಯಗಳೂ ಕೆಲ ಸಮಯಗಳಲ್ಲಿ ಅವರು ತಮ್ಮ ಇಂತಹ ತುರ್ತು ಸಂದರ್ಭಗಳಲ್ಲಿ ಜೀವವನ್ನು ಕಳೆದುಕೊಳ್ಳುವಂತೆ ಮಾಡುತ್ತವೆ.

ನಾನು ನಿಮಗೆ ಹೇಳುವುದು ನೀವು ಸದಾಕಾಲವೂ ಹೆದರಿಕೆಯ ಬಗ್ಗೆ ಅರಿವಿನಿಂದ ಇರಬೇಕೆಂದು, ಏಕೆಂದರೆ, ಕೇವಲ ಅರಿವಿನಿಂದ ಮಾತ್ರವೇ ನೀವು ನಿಮ್ಮ ಮೂಲ ಚೈತನ್ಯವನ್ನು ಉನ್ನತ ಶಕ್ತಿಯನ್ನಾಗಿ ಬದಲಾಯಿಸಬಹುದು. ಸುಮ್ಮನೆ ಹೇಗೆ ಕಾಮವನ್ನು ಅರಿವಿನ ಮೂಲಕ ಪ್ರೀತಿಗೆ ಬದಲಾಯಿಸಬಹುದೋ, ಭಯವನ್ನು ಸಂಪೂರ್ಣ ಅರಿವಿನಿಂದ ನಿರ್ಭಯತೆಗೆ ಮತ್ತು ಬುದ್ಧಿವಂತಿಕೆಗೆ ಬದಲಾಯಿಸಬಹುದು.

ದಮನ ಮಾಡಲ್ಪಟ್ಟ ಯಾವುದಾದರೂ ಬೇರೆ ರೂಪವನ್ನು ತೆಗೆದುಕೊಳ್ಳುತ್ತದೆ. ಇದು ಸಂಪೂರ್ಣವಾಗಿ ಮೂಲೋತ್ಪಾಟನೆಯಾಗುವುದಿಲ್ಲ. ಆದ್ದರಿಂದ ಧಮನ ಮಾಡುವುದು ಭಯವನ್ನು ನಿಗ್ರಹಿಸಲು ಮಾರ್ಗವಲ್ಲ. ಅರಿವಿನಿಂದಿರುವುದೇ ಮಾರ್ಗ. ವಾಸ್ತವವಾಗಿ, ನೀವು ಭಯವನ್ನು ಅದುಮಿಟ್ಟರೆ, ನೀವು ಅದನ್ನು ನಿಗ್ರಹಿಸುವ ಅವಕಾಶವನ್ನು ಕಳೆದುಕೊಳ್ಳುತ್ತೀರ.

ನೀವು ಸತತವಾಗಿ ನಿಮ್ಮ ಭಯಗಳು ಮತ್ತು ಅರಿವಿನಲ್ಲಿ ಅವಲೋಕನ ಮಾಡಿದರೆ, ಸಾವು ಬಂದರೂ ಸಹ, ನೀವು ಅದರಲ್ಲಿ ಅರಿವಿನಿಂದ ನೋಡುತ್ತೀರ ಮತ್ತು ಅದು ನಿಮ್ಮಲ್ಲಿ ನಡೆಯಲು ಬಿಡುತ್ತೀರ. ಇದನ್ನು ಸಾಧ್ಯವಾಗುವಂತೆ ಮಾಡುವುದು ಮುಖ್ಯ, ಏಕೆಂದರೆ ಅಂತಿಮವಾಗಿ ನಿಮ್ಮ ಭಯಗಳೆಲ್ಲಾ ಸಾವಿನ ಭಯವಲ್ಲದೇ ಬೇರೇನೂ ಅಲ್ಲ. ನೀವು ನಿಮ್ಮ ದಿನನಿತ್ಯದ ಭಯಗಳ ಮೇಲೆ ನೀವು ಕೆಲಸ ಮಾಡುತ್ತಿದ್ದರೆ, ನಿಮ್ಮ ಸಾವಿನ ಭಯವು ಅರಿವಿಲ್ಲದೆಯೇ ಕಡಿಮೆಯಾಗುತ್ತದೆ ಮತ್ತು ನಿಮ್ಮ ಸಾವಿನ ಭಯವು ಕಡಿಮೆಯಾದರೆ ನಿಮ್ಮ ದಿನ ನಿತ್ಯದ ಭಯಗಳು ಕಡಿಮೆಯಾಗುತ್ತವೆ.

ಹ್ಯಾ... ಈಗ ನಾವು ಸ್ವಾಧಿಷ್ಠಾನ ಚಕ್ರದ ಮೇಲೆ ನೇರವಾಗಿ ಕೆಲಸ ಮಾಡುವ ನಿರ್ಭಯ ಧ್ಯಾನ ಎಂಬ ಒಂದು ಸುಂದರ ಧ್ಯಾನವನ್ನು ಮಾಡೋಣ. ಇದು ಒಂದು ಅಂಧಕಾರದ ಧ್ಯಾನ. ಅಂಧಕಾರದ ಧ್ಯಾನವು ನಿಮ್ಮ ಮನಸ್ಸನ್ನು ಯಾವುದೇ ಗೊತ್ತಿರುವ ವಿಚಾರಗಳನ್ನು ಕುರಿತು ಯೋಚಿಸುವುದನ್ನು ತಡೆಯುತ್ತದೆ. ನಿಮ್ಮ ಮನಸ್ಸು ಗೊತ್ತಿರುವ ವಿಚಾರಗಳನ್ನು ಕುರಿತು ಯೋಚಿಸುವುದನ್ನು ನಿಲ್ಲಿಸಿದರೆ, ಯೋಜನೆಗಳು ತನ್ನಷ್ಟಕ್ಕೇ ಕರಗುತ್ತವೆ. ಈ ಧ್ಯಾನದ ಹಿಂದಿರುವುದು ಇದೇ ಕಲ್ಪನೆಯೇ.

ನಿರ್ಭಯ ಧ್ಯಾನ

(ಒಟ್ಟು ಕಾಲಾವಧಿ: 30 ನಿಮಿಷಗಳು)

ನಿರ್ಭಯ ಧ್ಯಾನದ ತಂತ್ರಜ್ಞಾನವನ್ನು ವೇದಾಂತದಿಂದ ತೆಗೆದುಕೊಳ್ಳಲಾಗಿದೆ. ಈ ಧ್ಯಾನವು ಬಾಹ್ಯ ದೇಹದ ಅನುಭವವನ್ನು ಕೊಡುತ್ತದೆ.

ಬಾಹ್ಯ ದೇಹದ ಅನುಭವವು ಸಾವಿನ ಅನುಭವವೇ. ನಿರ್ದಿಷ್ಟವಾಗಿ ಮಾಡಿದರೆ, ಪ್ರತಿ ಬಾರಿಯೂ ವಿಶ್ವ ಚೈತನ್ಯ (cormic energy) ವು, ಅಂದರೆ ಎಲ್ಲೆಲ್ಲೂ ಇರುವ

ಅಂಧಕಾರವು ನಿಮ್ಮ ದೇಹ ಮತ್ತು ಮನಸ್ಸುಗಳನ್ನು ಶಕ್ತಿದಾಯಕವಾಗಿಯೂ ಮತ್ತು ಚೈತನ್ಯದಾಯಕವಾಗಿಯೂ ಮಾಡುತ್ತಲೇ ಇರುತ್ತದೆ. ಇದು ನಿಮ್ಮ ಸ್ವಾಧಿಷ್ಠಾನ ಚಕ್ರವನ್ನು ಬಲಪಡಿಸುತ್ತದೆ. ಇದು 30 ನಿಮಿಷಗಳ ಉಪದೇಶಿತ ಧ್ಯಾನ.

ನೆಲದ ಮೇಲೆ ಆರಾಮವಾಗಿ ಕುಳಿತುಕೊಳ್ಳಿ. ಯಾರು ನೆಲದ ಮೇಲೆ ಕುಳಿತುಕೊಳ್ಳಲಾಗುವುದಿಲ್ಲವೋ ಅವರು ಕುರ್ಚಿಗಳ ಮೇಲೆ ಕುಳಿತುಕೊಳ್ಳಬಹುದು. ತಲೆ, ಕುತ್ತಿಗೆ ಮತ್ತು ಬೆನ್ನುಹುರಿ ಎಲ್ಲವೂ ಒಂದು ಸರಳರೇಖೆಯಲ್ಲಿರಬೇಕು.

(ಮದುವಾದ ಹಾಡನ್ನು ನುಡಿಸಲಾಗುತ್ತದೆ)

ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ. ಆಳವಾಗಿ ಉಸಿರಾಡಿರಿ. ನೀವು ಒಂದು ದಟ್ಟವಾದ ಕಾಡಿನಲ್ಲಿ ನಡೆಯುತ್ತಿರುವಂತೆ ಭಾವಿಸಿಕೊಳ್ಳಿ. ನೀವು ಕಾಡಿನ ಅತಿ ದಟ್ಟವಾದ ಭಾಗದೊಳಕ್ಕೆ ನಡೆಯುತ್ತಿದ್ದೀರ. ನೀವು ಏನನ್ನೂ ನಿಮ್ಮ ಕಣ್ಣುಗಳಿಂದ ನೋಡಲಾರಿರಿ. ನೀವು ಕತ್ತಲಿನ ಗುಹೆಯೊಳಗೆ ಕೆಳಗೆ ಕುಳಿತುಕೊಳ್ಳುತ್ತೀರಿ. ನೀವು ನಿಮ್ಮ ದೇಹವನ್ನೇ ನೋಡಲಾರಿರಿ. ನೀವಿರುವ ನಿಮ್ಮದೇ ಅನುಭವವನ್ನು ಬಿಟ್ಟರೆ, ನಿಮಗೆ ಬೇರೆ ಯಾವ ಅನನ್ಯತೆಯೂ ಇಲ್ಲ.

ಎಷ್ಟೇ ನೀವು ಪ್ರಯತ್ನ ಪಟ್ಟರೂ, ನಿಮಗೆ ನೋಡಲು ಸಾಧ್ಯವಾಗುತ್ತಿಲ್ಲ. ಈ ಆಳವಾದ ಅಂಧಕಾರದಲ್ಲಿ ನೀವು ಅಲ್ಲಿರುವುದನ್ನು ಕೇವಲ ನಿಮ್ಮ ಸ್ಪರ್ಶದಿಂದ ಮಾತ್ರ ತಿಳಿಯಬಲ್ಲಿರಿ... (1 ನಿಮಿಷ)

ನೀವು ತಾಯಿಯ ಗರ್ಭದಲ್ಲಿದ್ದಂತಹ ಅಂಧಕಾರದಿಂದ ಹುಟ್ಟಿದ್ದೀರಿ ಮತ್ತು ನೀವು ಅದೇ ಪ್ರೀತಿಸುವ ಮತ್ತು ಕರುಣೆ ತೋರುವ ಅಂಧಕಾರದೊಳಕ್ಕೆ ಕರಗಿ ಹೋಗುತ್ತೀರ... (1 ನಿಮಿಷ)

ಎಲ್ಲೆಡೆಯಿಂದಲೂ ನಿಮ್ಮನ್ನು ಸುತ್ತುವರಿದಿರುವ ಗಾಢಾಂಧಕಾರತೆಯನ್ನು ಆಳವಾಗಿ ಉಸಿರಿನಲ್ಲಿ ಒಳಕ್ಕೆ ಎಳೆದುಕೊಳ್ಳಿ. ನಿಮ್ಮ ಅನನ್ಯತೆಯನ್ನು ಮಾಯವಾಗುವಂತೆ ಮಾಡಿದ ಅಂಧಕಾರವನ್ನು ಆಳವಾಗಿ ಉಸಿರಿನಲ್ಲಿ ಒಳಕ್ಕೆ ಎಳೆದುಕೊಳ್ಳಿ.

ನಿಧಾನವಾಗಿ, ಬಹಳ ನಿಧಾನವಾಗಿ, ನಿಮ್ಮ ದೇಹದ ಅಂಧಕಾರದಲ್ಲಿ ಸೇರಿಹೋಗುವುದನ್ನು ಅನುಭವಿಸಿ (5 ನಿಮಿಷಗಳು)

ನಿಧಾನವಾಗಿ, ಬಹಳ ನಿಧಾನವಾಗಿ, ನಿಮ್ಮ ದೇಹವು ಅಂಧಕಾರವಾಗುವುದನ್ನು ಅನುಭವಿಸಿ (5 ನಿಮಿಷಗಳು)

ನಿಮ್ಮ ಪೂರ್ಣ ದೇಹದಿಂದ, ಅಂಧಕಾರವನ್ನು ಉಸಿರಿನಲ್ಲಿ ಒಳಕ್ಕೆ ಎಳೆದುಕೊಳ್ಳಿ. ನಿಮ್ಮ ದೇಹದ ಪ್ರತಿ ಜೀವಕೋಶದಿಂದಲೂ, ಅಂಧಕಾರವನ್ನು ಉಸಿರಿನಲ್ಲಿ ಒಳಕ್ಕೆ ಎಳೆದುಕೊಳ್ಳಿ (15 ನಿಮಿಷಗಳು)

ನಿಮ್ಮನ್ನು ನೀವೇ ಅನುಭವಿಸಲು ಪ್ರಾರಂಭಿಸಿ. ನಿಮ್ಮ ಸಂಪೂರ್ಣ ದೇಹವನ್ನು ನಿಮ್ಮ ಎಲ್ಲ ಇಂದ್ರಿಯ ಜ್ಞಾನಗಳಿಂದಲೂ ಅನುಭವಿಸಲು ಪ್ರಾರಂಭಿಸಿ. ನಿಮ್ಮ ದೇಹವನ್ನು ಕುಳಿತಿರುವ ಸ್ಥಿತಿಯಲ್ಲಿ ನಿಧಾನವಾಗಿ ಅಲುಗಾಡಿಸಿರಿ. ಮೇಲಕ್ಕೆ ಎದ್ದು ಗುಹೆಯಿಂದ ಹೊರಗೆ ನಡೆಯಿರಿ. ನೀವು ದಟ್ಟವಾದ ಅರಣ್ಯದಿಂದ ಹೊರಗೆ ಬರುತ್ತಿದ್ದೀರಿ.

ನೀವು ಧ್ಯಾನ ಸಭಾಂಗಣಕ್ಕೆ ಹಿಂತಿರುಗುತ್ತಿದ್ದೀರಿ! (3 ನಿಮಿಷಗಳು)

ಓಂ ಶಾಂತಿಃ ಶಾಂತಿಃ ಶಾಂತಿಃ

ಸುಮ್ಮನೇ ಈ ನಿಶ್ಯಬ್ಧವನ್ನು ನಾವು ಮುಂದಿನ ಅಧಿವೇಶನದಲ್ಲಿ ಭೇಟಿಯಾಗುವ ತನಕ ನಿಮ್ಮೊಡನೆ ಕೊಂಡೊಯ್ಯಿರಿ.

ಧನ್ಯವಾದಗಳು

Nithyananda pointing upward