ಅಧ್ಯಾಯ - 5: ಭ್ರಮೆಗಳನ್ನು ಜಯಿಸುವುದು - ಮೂಲಾಧಾರ ಚಕ್ರ
This text was machine-transcribed from the printed book and may contain errors. Select the words and choose “Report a mistake”.

ಈ ಗ, ನಾವು ಬೆನ್ನೆಲುಬಿನ ತಳದಲ್ಲಿರುವ ಮೂಲಾಧಾರ ಚಕ್ರದ ಬಗ್ಗೆ ಮಾತನಾಡೋಣ.
ಸಂಸ್ಕೃತದಲ್ಲಿ ಮೂಲಾಧಾರ ಎಂದರೆ 'ಅಸ್ತಿತ್ವದ ಬೇರು ಹಾಗೂ ತಳಹದಿ' ಎಂದರ್ಥ. ಮೂಲ ಎಂದರೆ ಬೇರು ಮತ್ತು ಆಧಾರ ಎಂದರೆ ತಳಹದಿ. ಈ ಚಕ್ರವು (fantacy) ಭ್ರಮೆ ಹಾಗೂ ಕಲ್ಪನೆಯಿಂದ ಬಂಧಿತವಾಗಿದೆ ಮತ್ತು ನೀವು ನಿಮ್ಮ ಭ್ರಮೆಗಳನ್ನು ಬಿಟ್ಟು ನೈಜತೆಯನ್ನು ಸ್ವಾಗತಿಸಿದಾಗ ಈ ಚಕ್ರವು ವಿಕಾಸವಾಗುತ್ತದೆ. (ಧ್ಯಾನದ ತಂತ್ರ: ದುಃಖಹರಣ ಧ್ಯಾನ - ಕುಲಾರ್ಣವ ತಂತ್ರದಿಂದ)
ಮೂಲಾಧಾರ ಚಕ್ರವು ಲೈಂಗಿಕತೆಗೆ (sex) ಭ್ರಮೆ ಹಾಗೂ ಕಲ್ಪನೆಗಳಿಗೆ (imagi-nation) ಸಂಬಂಧಿಸಿದೆ.
ಹೆಚ್ಚು ಮಾತನಾಡಲ್ಪಟ್ಟ ಹೆಚ್ಚು ಯೋಚಿಸಲ್ಪಟ್ಟ, ಹೆಚ್ಚು ಬರೆಯಲ್ಪಟ್ಟ ವಿಷಯವೆಂದರೆ ಅದು ಲೈಂಗಿಕತೆ (sex). ಹೆಚ್ಚು ಅಪಾರ್ಥ ಹೊಂದಿರುವ ಹೆಚ್ಚು ತಪ್ಪು ಊಹೆಗಳನ್ನು ಹೊಂದಿರುವ, ಗೊಂದಲಗೊಳಿಸುವಂಥ ವಿಷಯವೂ ಕೂಡ ಲೈಂಗಿಕತೆ! ನಾವು ಈ ವಿಷಯವನ್ನು ಪಕ್ಕಕ್ಕೆ ತಳ್ಳುತ್ತೇವೆ, ಅಥವಾ ಅದರಲ್ಲಿ ತೃಪ್ತಿ ಪಡುತ್ತೇವೆ. ನಮ್ಮ ಅರಿವಿಲ್ಲದ ಮನಸ್ಸುಗಳಲ್ಲಿ ಆರಂಭದಿಂದಲೂ, ನಮಗೆ ಲೈಂಗಿಕತೆಯ ಬಗ್ಗೆ ಸತ್ಯಾಂಶವನ್ನು ಹೇಳಿಕೊಡಲು ಯಾರೂ ಇಲ್ಲ.
ಬೇರೆ ಯಾವ ವಿಷಯಕ್ಕಿಂತಲೂ, ಲೈಂಗಿಕತೆಯ ವಿಷಯದ ಮೇಲೆ ಬೆಳಕು ಚೆಲ್ಲುವುದು ಅಗತ್ಯ. ಅದನ್ನು ಅರಿವಿನ ಪ್ರಕಾಶದಿಂದ ಬೆಳಕು ಚೆಲ್ಲಬೇಕು.
ಈಗ ನಮ್ಮ ಪರಿಸ್ಥಿತಿಯು ಹೇಗಿದೆ ಎಂದರೆ, ಕಗ್ಗತ್ತಲೆಯ ಇರುಳಿನಲ್ಲಿ ಒಂದು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿರುವ ಒಬ್ಬ ಮನುಷ್ಯನ ಪರಿಸ್ಥಿತಿಯ ಹಾಗೆ.
ಎಲ್ಲೋ ಏನೋ ಒಂದು ದೊಡ್ಡ ಹಳ್ಳವನ್ನು ಅಗೆದಿಡಲಾಗಿದೆ.
ಈ ವಿಷಯವನ್ನು ತಪ್ಪಿಸುವ ವ್ಯಕ್ತಿಯು ಸಂಪೂರ್ಣ ಅರಿವಿಲ್ಲದ ಸ್ಥಿತಿಯಲ್ಲಿದ್ದಾನೆ, ಅವನಿಗೆ ಹಳ್ಳವೆಲ್ಲಿದೆ ಎಂದೂ ತಿಳಿಯದು - ಹಾಗಿರುವಾಗ ಹೇಗೆ ತಾನೆ ಅದರಿಂದ ತಪ್ಪಿಸಿಕೊಳ್ಳಬಹುದು?
ಈ ವಿಷಯದಲ್ಲಿ ತೊಡಗಿಸಿಕೊಳ್ಳುವವನಿಗೆ ಹಳ್ಳದ ಅರಿವಿದೆ, ಆದರೆ ಅದರೊಳಕ್ಕೆ ನೆಗೆಯುವುದನ್ನು ಬಿಟ್ಟರೆ ಬೇರೆ ದಾರಿ ತೋಚುತ್ತಿಲ್ಲ.
ಈ ಎರಡೂ ಸಾಧ್ಯತೆಗಳು ಪರಿಹಾರವಾಗಲು ಸಾಧ್ಯವೇ? ಏನು ಮಾಡಬಹುದು? ವ್ಯಕ್ತಿಗೆ ಹಳ್ಳವು ಎಲ್ಲಿದೆ ಎಂದು ತಿಳಿದಿರಬೇಕು, ನಂತರ ಅದನ್ನು ಬಳಸಿಕೊಂಡು ಹೋಗಲು ಸರಿಯಾದ ಹೆಜ್ಜೆಗಳನ್ನಿಡಬೇಕು.
ಯಾವಾಗಲೂ ಲೈಂಗಿಕತೆ (ಸೆಕ್ಸ್) ಯ ವಿಷಯವನ್ನು ಪಕ್ಕಕ್ಕೆ ತಳ್ಳುತ್ತೇವೆ. ಅದೊಂದು ಬಹಿಷ್ಕರಿಸಿರುವ ವಿಷಯ. ತಂದೆ ತಾಯಿಗಳು ಮುಂದೆ ಬಂದು ತಮ್ಮ ಮಕ್ಕಳ ಜೊತೆ ಅದನ್ನು ಚರ್ಚಿಸುವುದಿಲ್ಲ. ಮೊದಲನೆಯದಾಗಿ ವಿಷಯದ ತಳಹದಿಯಲ್ಲಿರುವ ವಾಸ್ತವಾಂಶಗಳು ತಂದೆ ತಾಯಿಗಳಿಗೇ ತಿಳಿದಿಲ್ಲ! ಯಾವುದೇ ವಿಷಯವಾಗಿರಲಿ, ನೀವು ಸಂಬಂಧಪಟ್ಟ ಅಧಿಕಾರವನ್ನು ಕೇಳಬೇಕು, ಇಲ್ಲದಿದ್ದರೆ ಸರಿಯಾದ ತಿಳುವಳಿಕೆಯನ್ನು ಕಳೆದುಕೊಳ್ಳುತ್ತೀರ ಮತ್ತು ಸರಿಯಾದ ತಿಳುವಳಿಕೆಯನ್ನು ಕಳೆದುಕೊಂಡಾಗ, ನೀವು ತಪ್ಪಾಗಿ ತಿಳಿಯುತ್ತೀರ.
ಒಂದು ಸಣ್ಣ ಕಥೆ:
ಒಬ್ಬ ಮಹಿಳೆ ತನ್ನ ಮಗನ ಅಧ್ಯಾಪಕಿಯಿಂದ ಪತ್ರವನ್ನು ಪಡೆದಳು. ಅಧ್ಯಾಪಕಿಯು ಆ ಹುಡುಗನಿಗೆ ಬೋರ್ಡ್ (Board) ಅನ್ನು ಸ್ಪಷ್ಟವಾಗಿ ನೋಡಲು ಕಷ್ಟವಾಗುತ್ತಿತ್ತೆಂದೂ, ಹಾಗಾಗಿ ಅವನು ಬರೆಯುವಾಗ ತಪ್ಪುಗಳನ್ನು ಮಾಡುತ್ತಿದ್ದನೆಂದು ಪತ್ರದಲ್ಲಿ ಬರೆದಿದ್ದಳು.
ಆ ಮಹಿಳೆಯು ತನ್ನ ಮಗನನ್ನು ನೇರವಾಗಿ ಕಣ್ಣಿನ ವೈದ್ಯರ ಬಳಿ ಕರೆದುಕೊಂಡು ಹೋದಳು. ವೈದ್ಯರು ಹುಡುಗನನ್ನು ಪರೀಕ್ಷಿಸಿ, ಔಷಧ ಸೂಚಿ ಚೀಟಿಯನ್ನು (pre-scription) ಬರೆದರು.
ಅದರಲ್ಲಿ ಬರೆದುದು: ಕೂದಲು ಕತ್ತರಿಸುವಿಕೆ!
(ನಗು!)
ನಾವು ಇದನ್ನು ನೋಡಿ ನಗುತ್ತೇವೆ, ಆದರೆ ನಾನು ಹೇಳುತ್ತೇನೆ, ನಮ್ಮ ಜೀವನಗಳಲ್ಲಿ ನೀವು ನೋಡಿದರೆ; ನೀವು ಮೊದಲನೆಯ ಬಾರಿಯಲ್ಲೇ ನೀವು ಸರಿಯಾದ ವ್ಯಕ್ತಿಯ ಬಳಿ ಹೋದರೆ ಸರಿಯಾದ ಪರಿಹಾರವು ದೊರಕುತ್ತದೆ; ಇಲ್ಲದಿದ್ದರೆ ನೀವು ಸುಮ್ಮನೆ ಸುತ್ತುತ್ತಲೇ ಇರುತ್ತೀರ ಮತ್ತು 'ಅಧಿಕಾರಿ'ಯೆಂದೆನಿಸಿಕೊಂಡವರು ಪ್ರತಿಪಾದಿಸಿದ ಪ್ರಯೋಜನವಿಲ್ಲದ ಕ್ರಮಗಳನ್ನು ನೀವು ಪಾಲಿಸುತ್ತಾ ನಿಮ್ಮ ಜೀವನವನ್ನೆಲ್ಲ ವ್ಯರ್ಥ ಮಾಡುತ್ತೀರ.
ಇನ್ನು ಹೆಚ್ಚು ಕೆಟ್ಟದ್ದೇನೆಂದರೆ, ನೀವು ಆ ಪ್ರಯೋಜನವಿಲ್ಲದ ಕ್ರಮಗಳನ್ನು ನಿಮ್ಮ ಮುಂದೆ ಬರುವ ಸಂತತಿಗಳಿಗೂ ಪ್ರತಿಪಾದಿಸುತ್ತೀರ. ಪದ್ಧತಿಗಳು ಬರುವುದು ಹೀಗೆಯೇ. ಒಂದು ಪದ್ಧತಿಯನ್ನು ರೂಢಿ ಆಗಲು ಬಿಟ್ಟರೆ, ಅದರಿಂದ ಬಿಡಿಸಿಕೊಂಡು ಮುಕ್ತರಾಗುವುದೇ ಅತಿ ಕಷ್ಟವಾದ ಕೆಲಸವಾಗುತ್ತದೆ, ಏಕೆಂದರೆ ವರ್ಷಾಂತರಗಳಲ್ಲಿ ಆ ಪದ್ಧತಿಯೇ 'ನಿಜ'ವೆಂದಾಗಿಬಿಟ್ಟಿರುತ್ತದೆ.
ಗುರುಗಳು ಭೂಮಿಗೆ ಬಂದಾಗ, ನೀವು ಮಾಡಿರುವುದನ್ನೆಲ್ಲ ಅಳಿಸುವುದೇ ಅವರ ಮೊದಲ ಕೆಲಸ. ಆಗಲೇ, ಅವರು ನಿಮ್ಮನ್ನು ಒಳಹೊಕ್ಕಲು ಆರಂಭಿಸಬಹುದು! ಆಗಲೇ, ನೀವು ನಿಜವಾಗಿಯೂ ಯಾರು ಎಂದು ತೋರಿಸಲು ಅವರು ಆರಂಭಿಸಬಹುದು. ಅವರಿಗೆ ಅದೊಂದು ಕಠಿಣವಾದ ಕೆಲಸ, ಏಕೆಂದರೆ ನೀವು ನಿಮ್ಮ ಸ್ವಂತ ದಾರಿಯಲ್ಲೇ ಎಷ್ಟೊಂದು ಮುಂದುಹೋಗಿದ್ದೀರ. ನೀವು ಎಷ್ಟು ಮುಂದು ಹೋಗಿದ್ದೀರ ಎಂದರೆ, ನೀವು ತಪ್ಪುದಾರಿಯಲ್ಲಿ ಇರಲು ಹೇಗೆ ಸಾಧ್ಯ ಎಂದು ಆಶ್ಚರ್ಯಪಡುತ್ತೀರ!
ಈಗ ಮತ್ತೆ ವಿಷಯಕ್ಕೆ ಬರೋಣ: ಲೈಂಗಿಕತೆ ಎಂದರೇನು? ಲೈಂಗಿಕತೆ (ಸೆಕ್ಸ್) ಎಂಬುದು ತೀವ್ರವಾದ ಸೃಜನಾತ್ಮಕ ಚೈತನ್ಯ (creative energy). ಅದು ಧ್ಯಾನಯುಕ್ತವಾದ ಚೈತನ್ಯ. ಇಡೀ ಜಗತ್ತೇ ಲೈಂಗಿಕ ಚೈತನ್ಯದಿಂದ ಉದ್ಭವವಾಗಿದೆ. ನಮ್ಮ ಪ್ರಾಚೀನ ಕಾಲದ ಜ್ಞಾನೋದಯವಾದ ಗುರುಗಳು, ಋಷಿಗಳು ಈ ವಿಷಯದ ಬಗ್ಗೆ ನಮಗೆ ಸ್ಪಷ್ಟತೆಯನ್ನು ಕೊಟ್ಟಿದ್ದಾರೆ. ವಾತ್ಸಾಯನ ಕಾಮಸೂತ್ರ (ಲೈಂಗಿಕತೆಯ ವಿಜ್ಞಾನದ ಮೇಲೆ ಒಂದು ಗ್ರಂಥ) ವನ್ನು ಬರೆದವರು ಒಬ್ಬ ಸನ್ಯಾಸಿಯೆಂದು ನಿಮಗೆ ತಿಳಿದಿದೆಯೇ? ಅವರು ಬ್ರಹ್ಮಚಾರಿಯಾಗಿದ್ದರು!
ನಿಜವೇನೆಂದರೆ, ಅವರು ಕಾಮಸೂತ್ರವನ್ನು ತಮ್ಮ ತಾಯಿಗೇ ಪಠನೆ ಮಾಡಿದರು. ಅವರು ಜ್ಞಾನೋದಯವಾದ ಮೇಲೆ ಒಂದು ದಿನ ಅವರು ತಮ್ಮ ತಾಯಿಯ ಬಳಿಗೆ ಹಿಂತಿರುಗಿ ಬಂದರು. ಅವರು ಜ್ಞಾನಿಯಾಗಿದ್ದರೆ, ಯಾವ ವಿಷಯದಲ್ಲಾದರೂ ಸರಿ ಅವರಿಗೆ ಒಳನೋಟವು (ವಿವೇಕವು) ಇರಬೇಕೆಂದು ತಾಯಿಯು ಹೇಳಿದಳು. ಅವರು ಅದನ್ನು ಒಪ್ಪಿಕೊಂಡು, ತಾಯಿಯು ತನ್ನಿಂದ ಏನನ್ನು ಕೇಳಬೇಕೆಂದು ಬಯಸುತ್ತಾಳೆಂದು ಕೇಳಿದರು. ಅವಳು ಹೇಳಿದಳು, "ನಿನ್ನ ತಾಯಿಯಾಗಿ, ನೀನು ಹುಟ್ಟಿನಿಂದ ಕೂಡ ಬ್ರಹ್ಮಚಾರಿ ಎಂದು ನನಗೆ ತಿಳಿದಿದೆ. ಹಾಗಾಗಿ ಲೈಂಗಿಕತೆಯ ವಿಷಯದ ಬಗ್ಗೆ ನಿನಗೇನೂ ತಿಳಿಯುವುದಕ್ಕೆ ಸಾಧ್ಯವೇ ಇಲ್ಲ. ಅದರ ಬಗ್ಗೆ ಏನನ್ನಾದರೂ ಹೇಳುವೆಯಾ?"
ವಾತ್ಸ್ಯಾಯನ ನಸುನಗೇ ನಕ್ಕು, ಲೈಂಗಿಕತೆಯ ವಿಜ್ಞಾನವೇ ಆದ ಕಾಮಸೂತ್ರವನ್ನು ಇತ್ತರು.
ವಾತ್ಸ್ಯಾಯನನ್ನು ಒಮ್ಮೆ ಪ್ರಶ್ನಿಸಲಾಯಿತು "ಈ ವಿಷಯದ ಬಗ್ಗೆ ಮಾತನಾಡಲು ನಿನಗೆ ಯಾವ ಅಧಿಕಾರವಿದೆ?"
ಒಂದು ಸಹಜವಾದ ಪ್ರಶ್ನೆ! ನಿಮ್ಮಲ್ಲೂ ಬಹಳಷ್ಟು ಜನರು ಮೌನವಾಗಿ ಈ ಪ್ರಶ್ನೆಯನ್ನು ನನಗೂ ಕೂಡ ಕೇಳುತ್ತಿರುತ್ತೀರ ಎಂದು ನನಗೆ ಎನಿಸುತ್ತದೆ!
ವಾತ್ಸ್ಯಾಯನ ಕೊಟ್ಟ ಉತ್ತರವನ್ನು ನಿಮಗೆ ಅರ್ಥವಾಗುವ ರೀತಿಯಲ್ಲಿ ಉದಾಹರಣೆ ಸಹಿತ ವಿವರಿಸುತ್ತೇನೆ:
ನಿಮ್ಮ ಮನೆಗೆ ಬರುವ ಎಲೆಕ್ನಿಷಿಯನ್ಗೆ ಪ್ರತಿ ಒಂದು ಕೋಣೆಯಲ್ಲೂ ಸ್ವಿಚ್ ಅನ್ನು ಹಚ್ಚಿ ಆರಿಸುವಾಗ ಏನಾಗುತ್ತದೆ ಎಂದು ನಿಷ್ಕೃಷ್ಟವಾಗಿ ತಿಳಿದಿದೆ. ಗೋಡೆಯ ಹಿಂದೆ ಇರುವ ಸಂಪೂರ್ಣ ವಿದ್ಯುತ್ ಪಥವು ಅವರಿಗೆ ತಿಳಿದಿದೆ. ಏನಾದರೂ ತೊಂದರೆ ಇದ್ದರೆ, ಅವನು ತೊಂದರೆ ಏನಿರಬಹುದೆಂದು ಊಹಿಸಿ, ಅದಕ್ಕೆ ಪರಿಹಾರವನ್ನು ನೀಡಬಹುದು ಅಲ್ಲವೇ?
ವಿದ್ಯುತ್ತಿನ ವಿಜ್ಞಾನವನ್ನು ಅವನು ಅರಿಯುತ್ತಾನೆ.
ಆದರೆ, ಒಂದು ದಿನದಲ್ಲಿ ಐವತ್ತು ಬಾರಿ ಆ ಸ್ವಿಚ್ಚುಗಳು ಹಚ್ಚಿ ಆರಿಸುವ ನಿಮಗೆ ಅವುಗಳ ಹಿಂದೆ ನಿಜವಾಗಿಯೂ ಏನಾಗುತ್ತಿದೆ ಎಂದು ಸ್ವಲ್ಪವೂ ತಿಳಿದಿಲ್ಲ! ಹೌದೇ?
ಖಚಿತ ಪರಿಹಾರಗಳು
ನಮ್ಮಲ್ಲಿ ಬಹಳಷ್ಟು ಜನರಿಗೆ ಸ್ವಿಚ್ಚುಗಳನ್ನು ಹಚ್ಚಿ ಆರಿಸುವುದಕ್ಕೆ ಮೇಲು ಏನೂ ತಿಳಿದಿಲ್ಲ. ಆದ್ದರಿಂದಲೇ ಕೆಲವೊಮ್ಮೆ ನಮಗೆ ವಿದ್ಯುತ್ ಆಘಾತ (ಷಾಕು) ಸಂಭವಿಸುತ್ತದೆ! ಹಾಗಾಗಿ ಅರ್ಥಮಾಡಿಕೊಳ್ಳಿ: ನಾವು ತಂದೆಗಳು, ತಾಯಿಗಳು, ಅಜ್ಜ ಅಜ್ಜಿಯರೇ ಆಗಿರಬಹುದು - ಆದರೂ ಕೂಡ, ಲೈಂಗಿಕತೆಯ ಬಗ್ಗೆ ನಮಗೇನೂ ತಿಳಿಯದೆ ಇರಬಹುದು.
ನಾವೆಲ್ಲರೂ ನಿರಂತರವಾದ ಹಾರ್ಮೋನುಗಳ (ಪುಷ್ಟಿಕಾರದ ಸತ್ವಗಳ) ಕಾಟಕ್ಕೆ ಒಳಗಾಗಿದ್ದೇವೆ. ಟಿ.ವಿ. ಮತ್ತು ವಿವಿಧ ರೀತಿಯ ಮಾಧ್ಯಮಗಳ ಮೋಹವನ್ನು ಹಲವಾರು ರೀತಿಗಳಲ್ಲಿ ತೋರಿಸುತ್ತವೆ ಮತ್ತು ನಾವು ಅದನ್ನು ವೀಕ್ಷಿಸಿ, ಲೈಂಗಿಕತೆ ಹಾಗೂ ಪ್ರೀತಿಯ ಬಗ್ಗೆ ನಮಗೆಲ್ಲವೂ ತಿಳಿದಿದೆ ಎಂದು ಭಾವಿಸುತ್ತೇವೆ.
ಕೇವಲ ಒಬ್ಬ ಜ್ಞಾನೋದಯವಾದ ವ್ಯಕ್ತಿಯು ಮಾತ್ರ ನಿಮಗೆ ಲೈಂಗಿಕತೆಯ ವಿಜ್ಞಾನವನ್ನು ನೀಡಬಹುದು.
ವರ್ಷಾಂತರಗಳಿಂದ ಭಾರತವನ್ನು ತನ್ನ ವಿಪುಲ ಐಶ್ವರ್ಯ ಮತ್ತು ಭೂಮಿಯನ್ನು ದರೋಡೆ ಮಾಡಲಾಗಿದೆ. ಭಾರತಕ್ಕೆ ಇವೆಲ್ಲವೂ ದೊಡ್ಡ ಹಾನಿಗಳೇನಾಗಿಲಿಲ್ಲ. ಪ್ರತಿ ಒಂದು ದಾಳಿಯಾದ ನಂತರವೂ, ಅದೆಲ್ಲವೂ ಮತ್ತೆ ಬರುತ್ತಿತ್ತು ಮತ್ತು ಸಮಾಜವು ಎದ್ದು ನಿಲ್ಲುತ್ತಿತ್ತು. ಕೊನೆಯದಾಗಿ ನಮ್ಮ ಗುರುಕುಲ ಪದ್ಧತಿ ಗುರುಗಳ ಪದತಲದಲ್ಲಿ ಕಲಿಯುವ ಪ್ರಾಚೀನ ಕಾಲದ ಪದ್ಧತಿಯನ್ನು ರದ್ದುಮಾಡಲಾಯಿತು, ಮತ್ತು ಕಾಮಸೂತ್ರ - ಲೈಂಗಿಕತೆಯ ವಿಜ್ಞಾನವನ್ನು ಮಕ್ಕಳಿಗೆ ಹೇಳಿಕೊಡುವುದನ್ನು ನಿಲ್ಲಿಸಲಾಯಿತು. ಇದೇ ಭಾರತಕ್ಕೆ ದೊಡ್ಡ ಹೊಡೆತವಾಯಿತು. ಆ ಸಮಯದಿಂದಲೇ ಜನರು ಲೈಂಗಿಕತೆಯ ಅರ್ಥವನ್ನು ಅರಿತುಕೊಳ್ಳುವುದನ್ನು ನಿಲ್ಲಿಸಿ, ಕಾಮದ ಹಿಂದೆ ಬಿದ್ದರು.
ಎರಡು ವ್ಯಕ್ತಿಗಳು ಚದುರಂಗದಾಟವನ್ನು ಆಡುತ್ತಿರುವುದನ್ನು ನೀವು ವೀಕ್ಷಿಸಿದ್ದೀರ? ನೀವು ಆಟವನ್ನು ಸುಮ್ಮನೆ ವೀಕ್ಷಿಸುವಾಗ, ಹಲವು ಬಾರಿ ನಿಮಗೆ ಸರಿಯಾದ ಹೆಜ್ಜೆಯು ತಾನಾಗಿಯೇ ಹೊಳೆಯುತ್ತದೆ - ಆದರೆ ಅದು ಹೇಗೋ ಏನೋ ಆಡುತ್ತಿರುವ ಆ ಇಬ್ಬರು ವ್ಯಕ್ತಿಗಳಿಗೆ ಅದು ಹೊಳೆಯುವುದೇ ಇಲ್ಲ! ನಿಮ್ಮಲ್ಲಿ ಎಷ್ಟು ಜನರು ಇದನ್ನು ಗಮನಿಸಿದ್ದೀರ? ಇದಕ್ಕೆ ಕಾರಣವೇನಿರಬಹುದು? ಹೇಳಿ....
ನಾವು ಆಟದಲ್ಲಿ ತೊಡಗಿಲ್ಲವೆಂಬ ಕಾರಣಕ್ಕಾಗಿಯೇ ಸ್ವಾಮೀಜಿ?
ಹೌದು! ನಿಜವಾಗಿಯೂ, ವೀಕ್ಷಿಸುತ್ತಿರುವವನು ಗೆಲ್ಲುವ ಒತ್ತಡದಲ್ಲಿಲ್ಲ. ಒತ್ತಡ ಮತ್ತು ಒತ್ತಾಯ ಮನಸ್ಸನ್ನು ಕೇವಲ ಮಂಕುಮಾಡುತ್ತವೆ. ಹಾಗಾಗಿ, ಆಟದಿಂದ ಹೊರಕ್ಕೆ ಬಂದವನು ಯಾರು ಕೇವಲ ವೀಕ್ಷಕನಾಗಿರುತ್ತಾನೋ ಅವನು ಮಾತ್ರ ಅದರ ಬಗ್ಗೆ ಸರಿಯಾದ ಉಪಾಯವನ್ನು ನೀಡಬಹುದು. ಗುರುವೆಂಬುವವನಿಗೆ ಸಂಪೂರ್ಣ ಅಸ್ತಿತ್ವವನ್ನು ಅರಿತಿದ್ದಾನೆ. ಆದ್ದರಿಂದಲೇ ಯಾವುದೇ ವಿಷಯದಲ್ಲಿ ಅವರು 'ಅಧಿಕಾರ' ವಾಗುತ್ತಾರೆ.
ಲೈಂಗಿಕತೆ ಎಂದರೇನು?
ಈ ದಿನ ಜೀವಶಾಸ್ತ್ರವು ಯಾವ ಗಂಡಸನೂ 100% ಗಂಡಸನಲ್ಲ ಮತ್ತು ಯಾವ ಹೆಂಗಸಳೂ 100% ಹೆಂಗಸಳಲ್ಲವೆಂದು ಸಮರ್ಥಿಸಿ ತೋರಿಸಿದೆ. ಗಂಡಸರು 51% ಅಷ್ಟು ಗಂಡಸು ಮತ್ತು 49% ಅಷ್ಟು ಹೆಂಗಸು. ಅದೇ ರೀತಿ, ಹೆಂಗಸಳು 51% ಅಷ್ಟು ಹೆಂಗಸು ಮತ್ತು 49% ಅಷ್ಟು ಗಂಡಸು; ಕೇವಲ 1% ಅಷ್ಟು ವ್ಯತ್ಯಾಸವಿದೆ ಅಷ್ಟೆ.
ನೀವು ನಿಮ್ಮ ತಂದೆಯ ಮೂಲಾಧಾರದಿಂದ ಮತ್ತು ತಾಯಿಯ ಮೂಲಾಧಾರದಿಂದ ಜನಿಸುತ್ತೀರ. ಹಾಗಿರುವಾಗ, ನೀವು ಕೇವಲ ಗಂಡು ಅಥವಾ ಕೇವಲ ಹೆಣ್ಣಾಗಲು ಹೇಗೆ ತಾನೆ ಸಾಧ್ಯ? ಎರಡರ ಗುಣಗಳೂ ಕೂಡ ನಿಮ್ಮಲ್ಲಿ ಇರಲೇಬೇಕು! ಅಲ್ಲವೇ?
ಅರ್ಧ ಗಂಡು ಮತ್ತು ಇನ್ನರ್ಧ ಹೆಣ್ಣಿರುವ ಆಕಾರ - ಅರ್ಧನಾರೀಶ್ವರ ಶಿವನ ಸಾಂಕೇತಿಕ ನಿರೂಪಣೆಗೆ ಇದೇ ತಳಹದಿ. ನಾವು ಒಪ್ಪಲಿ, ಒಪ್ಪದೆ ಇರಲಿ, ನಾವು ಹೆಣ್ಣು ಮತ್ತು ಗಂಡು ಚೈತನ್ಯಗಳ ಸ್ವರೂಪ. ನಾವು ಸಮಗ್ರವಾಗಿದ್ದೇವೆ, ತುಂಡು ತುಂಡಾಗಿಲ್ಲ.
ತಂತ್ರವು ಲೈಂಗಿಕತೆಯ ಇಡೀ ಕಲ್ಪನೆಯನ್ನು ಸುಂದರವಾಗಿ ಹೇಳುತ್ತದೆ. ಸನಾತನ ಗ್ರಂಥಗಳಲ್ಲಿ ಈ ವಿಷಯವನ್ನು ಕುರಿತು ಶಿವನು ದೇವಿ ಪಾರ್ವತಿಯ ಜೊತೆ ಮಾತನಾಡುತ್ತಾನೆ. 5000 ವರ್ಷಗಳ ಹಿಂದೆ ಲಿಖಿತ ಮಾಡಲ್ಪಟ್ಟ ಆ ಒಳನೋಟಗಳು ಇಂದು ಜೀವಶಾಸ್ತ್ರದಲ್ಲಿ ಸಮಂಜಸವಾಗಿದೆ.
ಸಂಪೂರ್ಣರಾಗಿರಲು, ಪರಿಪೂರ್ಣತೆಯಿಂದಿರಲು, ನಮ್ಮ ಸ್ವಭಾವದ (ಸಹಜ ಭಾವದ) ಸ್ತ್ರೀಯ ಹಾಗೂ ಪೌರುಷಿಕ ರೂಪಗಳನ್ನು ಒಪ್ಪಿಕೊಂಡು ಅದನ್ನು ಅಭಿವ್ಯಕ್ತಪಡಿಸುವುದು ಅಗತ್ಯ.
ಆದರೆ, ವಾಸ್ತವದಲ್ಲಿ ಹೀಗೆ ನಡೆಯುತ್ತದೆಯೇ? ನಮಗೆ ಅಭಿವ್ಯಕ್ತಪಡಿಸಲು ಅವಕಾಶವಿದೆಯೇ?
ನಾವು ಹುಟ್ಟಿದ ಗಳಿಗೆಯಿಂದಲೇ ಸಮಾಜವು ನಮ್ಮನ್ನು ಹೆಣ್ಣು ಅಥವಾ ಗಂಡು ಎಂದು ಗುರುತಿಸುತ್ತದೆ. ಮತ್ತು ನೀವು ಅದರ ಪ್ರಕಾರ ವರ್ತಿಸಬೇಕೆಂದು ಅಪೇಕ್ಷಿಸುತ್ತದೆ. ಸಮಾಜವು ಹುಡುಗರಿಗೆ ತಮ್ಮ 'ಹೆಣ್ಣು' ಗುಣಗಳನ್ನು ಅಭಿವ್ಯಕ್ತಪಡಿಸಲು ಬಿಡುವುದಿಲ್ಲ ಅಥವಾ ಹುಡುಗಿಯರಿಗೆ ತಮ್ಮ 'ಗಂಡು' ಗುಣಗಳನ್ನು ಅಭಿವ್ಯಕ್ತಪಡಿಸಲು ಬಿಡುವುದಿಲ್ಲ. ಚಿಕ್ಕಂದಿನಿಂದಲೇ ನಮ್ಮ ಜೀವಾತ್ಮದ ಅರ್ಧ ಭಾಗವನ್ನು ಒತ್ತಿಡಲಾಗುತ್ತದೆ.
ಏಳು ವರ್ಷಗಳ ವಯಸ್ಸಿನ ತನಕ, ಸಾಮಾಜಿಕ ಕಟ್ಟುಪಾಡು ಒಳಗೆ ಬೇರೂರದೆ ಇರುವ ತನಕ, ಮಗುವಿಗೆ ತಾನು ಹೆಣ್ಣೋ ಗಂಡೋ ಎಂಬ ಅರಿವಿರುವುದಿಲ್ಲ. ಆದ್ದರಿಂದಲೇ ಚಿಕ್ಕ ಮಗುವಿಗೆ ಪರಿಪೂರ್ಣತೆಯ ಅಂಶವಿರುತ್ತದೆ. ಅದು ಕೇಂದ್ರೀಕೃತವಾಗಿ, ಸುರಕ್ಷಿತವಾಗಿರುತ್ತದೆ. ನೋಡಲು ಅದು ಎಷ್ಟು ಸುಂದರವಾಗಿ ಸಂತೋಷವಾಗಿರುತ್ತದೆ! ಮಗುವಿಗೆ ಸುಮಾರು ಏಳು ವರ್ಷಗಳಾದಾಗ ಅದು ಸಮಾಜದ ಹಿಡಿತಕ್ಕೆ ಒಳಗಾಗುತ್ತದೆ.
ಗಂಡು ಮಗುವನ್ನು ಗೊಂಬೆಗಳು ಮತ್ತು 'ಅಡುಗೆ ಮನೆ' ಆಟದ ಸಾಮಾನು ಜೊತೆ ಆಟವಾಡಲು ಪ್ರೋತ್ಸಾಹಿಸಲಾಗುವುದಿಲ್ಲ. ಹೆಣ್ಣು ಮಗುವು 'ರೇಸ್ ಕಾರು' ಅಥವಾ 'ರಾಕೆಟ್'ಗಳ ಜೊತೆ ಆಟವಾಡಲು ಬಯಸಿದರೆ, ಅವಳನ್ನು ಅಸಮಾಧಾನದಿಂದ ನೋಡಲಾಗುತ್ತದೆ. ಅವರ ಬಟ್ಟೆಗಳು ಹಾಗೂ ಸಾಮಾನುಗಳ ಬಣ್ಣದ ವಿಷಯದಲ್ಲೂ ಕೂಡ, ಪಕ್ಷಪಾತವಿದೆ. ಗಂಡು ಮಕ್ಕಳಿಗೆ ನೀಲಿ ಬಣ್ಣ, ಹೆಣ್ಣು ಮಕ್ಕಳಿಗೆ ಗುಲಾಬಿ ಬಣ್ಣವನ್ನು ಆಯ್ಕೆ ಮಾಡುತ್ತೀರ. ನಾನು ಹೇಳುವುದು ಸರಿಯೇ?
ಹಿಂದಿನ ಕಾಲದಲ್ಲಿ ಮಗುವನ್ನು ಹೆತ್ತು ಕೊಡುವುದೊಂದೇ ತಂದೆ ತಾಯಿಗಳ ಜವಾಬ್ದಾರಿಯಾಗಿತ್ತು. ಸುಮಾರು ನಾಲ್ಕು ವರ್ಷಗಳ ವಯಸ್ಸಿನಲ್ಲೇ, ಅವರು ಮಕ್ಕಳನ್ನು ಗುರುಕುಲದಲ್ಲಿ ಗುರುಗಳ ಬಳಿ ಬಿಡುತ್ತಿದ್ದರು. ಗುರುಕುಲದಲ್ಲಿ, ಮಕ್ಕಳಿಗೆ ಏಳು ವಯಸ್ಸಿನಲ್ಲಿ 'ಗಾಯತ್ರಿಮಂತ್ರ' - ಬುದ್ಧಿಯನ್ನು ಉದ್ದೀಪಿಸುವ ಮಂತ್ರೋಚ್ಚಾರಣೆಯನ್ನು ಉಪದೇಶಿಸಲಾಗುತ್ತಿತ್ತು. 14 ವಯಸ್ಸು ತುಂಬುವುದರೊಳಗೆ, ಅವರಿಗೆ ಒಂದು ರೀತಿಯ ಆಧ್ಯಾತ್ಮಿಕ ಅನುಭವವು ಉಂಟಾದರೆ, ಅವರಿಗೆ ಬ್ರಹ್ಮಸೂತ್ರ - ಜಗತ್ತಿನ ತತ್ವಶಾಸ್ತ್ರದ ಅತ್ಯಂತ ಶ್ರೇಷ್ಠವಾದ ಗ್ರಂಥವನ್ನು ಉಪದೇಶಿಸಲಾಗುತ್ತಿತ್ತು. ಇಲ್ಲವಾದರೆ, ಕೌಟುಂಬಿಕ ಜೀವನದ ಕಲೆಯನ್ನು ಕಲಿಯಲು ಕಾಮಸೂತ್ರ - ಲೈಂಗಿಕತೆಯ ವಿಜ್ಞಾನವನ್ನು ಉಪದೇಶಿಸಲಾಗುತ್ತಿತ್ತು. 21 ವಯಸ್ಸು ತುಂಬುವುದಕ್ಕೆ ಮೊದಲು, ಅವರಿಗೆ ಜ್ಞಾನೋದಯವಾದರೆ, ಸನ್ಯಾಸ ದೀಕ್ಷೆಯನ್ನು ನೀಡಲಾಗುತ್ತಿತ್ತು. ಇಲ್ಲವಾದರೆ, ಯೋಗ ಶಾಸ್ತ್ರವನ್ನು ಹೇಳಿಕೊಡಲಾಗುತ್ತಿತ್ತು. ಗುರುವಿನ ಪ್ರೀತಿ ಹಾಗೂ ಮಾರ್ಗದರ್ಶನದಲ್ಲಿ ಮಗುವು ತನ್ನ ಸ್ವಂತ ರೀತಿಯಲ್ಲಿ ವಿಕಾಸವಾಗಲು ಅವಕಾಶವಿರುತ್ತಿತ್ತು.
ಆದರೆ ಈಗ, ಮಗುವಿನೊಳಗೆ ಎಷ್ಟು ಬಲವಾದ ಕಟ್ಟುಪಾಡು ಒಳಹೋಗುತ್ತದೆ, ಇದು ಆ ಮಗುವಿಗೆ ಬಹಳ ಹಾನಿಕರವಾಗಿದೆ. ಮಗುವು ಸಮಾಜವು ಒಪ್ಪದೆ ಇರುವಂಥ ತನ್ನ ಭಾಗವನ್ನು ಒತ್ತಡದಲ್ಲಿಡುತ್ತದೆ. ನಾವು ಇದನ್ನು ಅರಿಯುವುದೇ ಇಲ್ಲ. ಆದರೆ ಈ ಕಾಲಾವಧಿಯ ಸಮಯವು ಮಗುವಿಗೆ ಗಾಯವನ್ನುಂಟುಮಾಡುತ್ತದೆ. ಇದ್ದಕ್ಕೆ ಇದ್ದಹಾಗೆ ಅದಕ್ಕೆ ಬೇರು ಸಹಿತ ಕಿತ್ತ ಭಾವನೆ, ತನ್ನ ಜೀವಾತ್ಮದ ಅರ್ಧಭಾಗದಿಂದ ಕತ್ತರಿಸಿ ಹೋದ ಭಾವನೆ ಉಂಟಾಗುತ್ತದೆ. ಈ ಒತ್ತಿಟ್ಟ ಅರ್ಧವನ್ನು ಹುಡುಕಲು ಆರಂಭಿಸುತ್ತಾನೆ.
ಗಮನಿಸಿ: ಪರಿಪೂರ್ಣತೆಯೇ ಮನುಷ್ಯನ ಸಹಜ ಸ್ವಭಾವ. ಅವನು ಪರಿಪೂರ್ಣತೆ ಯಿಂದಲೇ ಬಂದು, ಅದನ್ನು ಪಡೆದುಕೊಳ್ಳಲು ಸಹ ಮುಂದುನೋಡುತ್ತಾನೆ. ಹಾಗಾಗಿ, ಅವನು ಅರಿವಿಲ್ಲದೆಯೇ ತನ್ನ ಕಳೆದು ಹೋದ ಅರ್ಧವನ್ನು, ಅಂದರೆ ತನ್ನ ಒತ್ತಿಟ್ಟ ಅರ್ಧವನ್ನು ಅರಸಲು ಆರಂಭಿಸುತ್ತಾನೆ. ಕಳೆದು ಹೋದ ತನ್ನ ಸ್ವಂತ ಅರ್ಧಕ್ಕೆ ಬದಲಿಯನ್ನು ಹೊರಜಗತ್ತಿನಲ್ಲಿ ಹುಡುಕಲು ಆರಂಭಿಸುತ್ತಾನೆ. ಗಂಡು ಮಗುವು ಹೆಣ್ಣಿನ ಇರುವಿಕೆಯನ್ನು ಹುಡುಕಲು ಆರಂಭಿಸುತ್ತಾನೆ, ಮತ್ತು ಹೆಣ್ಣು ಮಗುವು ಗಂಡಿನ ಇರುವಿಕೆಯನ್ನು ಹುಡುಕಲು ಆರಂಭಿಸುತ್ತಾಳೆ.
ಲೈಂಗಿಕತೆಯ ಇಡೀ ಕಲ್ಪನೆಯು ಇಲ್ಲಿಯೇ ಪ್ರಾರಂಭವಾಗುವುದು. ಹೀಗೆಯೇ ಲೈಂಗಿಕತೆಯ ಕಲ್ಪನೆಯು ಬೇರೂರುವುದು.
7 ರಿಂದ 14 ವರ್ಷಗಳ ಕಾಲಾವಧಿಯಲ್ಲಿ, ಮಗುವು ತಂದೆ ತಾಯಿಗಳೊಡನೆ ತುಂಬ ಅನ್ಯೋನ್ಯತೆಯಿಂದಿರುತ್ತದೆ. ಮಗುವು ಅವರಿಂದ ಸೂಕ್ತ ಮಹಿಳೆ ಅಥವಾ ಪುರುಷ ಹೇಗಿರಬೇಕೆಂಬ ಪ್ರತಿಬಿಂಬಗಳನ್ನು ಸಂಗ್ರಹಿಸುತ್ತಾರೆ. ಗಂಡು ಮಗುವಿಗೆ, ತನ್ನ ಸ್ವಂತ ವ್ಯಕ್ತಿತ್ವದ ಒಟ್ಟಿಟ್ಟ ಅರ್ಧವನ್ನು ತಾಯಿಯ ಪ್ರತಿಬಿಂಬದಿಂದ ಭರ್ತಿಮಾಡಲಾಗುವುದು, ಮತ್ತು ಹೆಣ್ಣು ಮಗುವಿಗೆ ತನ್ನ ಸ್ವಂತ ವ್ಯಕ್ತಿತ್ವದ ಒಟ್ಟಿಟ್ಟ ಅರ್ಧವನ್ನು ತಂದೆಯ ಪ್ರತಿಬಿಂಬದಿಂದ ಭರ್ತಿಮಾಡಲಾಗುವುದು.
ಆದ್ದರಿಂದಲೇ ಪ್ರತಿ ಒಬ್ಬ ಹುಡುಗನ ತಾಯಿಯೇ ಅವನ ಮೊದಲ ನಾಯಕಿಯಾಗುತ್ತಾಳೆ, ಮತ್ತು ಪ್ರತಿ ಒಬ್ಬ ಹುಡುಗಿಯ ತಂದೆಯೇ ಅವಳ ಮೊದಲ ನಾಯಕನಾಗುತ್ತಾನೆ. ಇದು ಬರಹರಹಿತವಾಗಿರುವ ಒಂದು ಕಾನೂನು! ಈ ಒಂದು ಆಳವಾಗಿ ಬೇರೂರಿರುವ ಫ್ರಾಯ್ಡ್ನ ಮನೋಶಾಸ್ತ್ರ ಎಡಿಪಸ್ ಮತ್ತು ವಫೀಲಿಯಾ ಅರಿಮೆಗಳೆಂದು ಏನನ್ನು ಕರೆಯುತ್ತಾರೋ, ಅದಕ್ಕೆ ಕಾರಣ.
ಹುಡುಗನು ತನ್ನ ತಾಯಿಯಿಂದ ಪಡೆದ ಪೋಷಣೆಯನ್ನು ತನ್ನ ಹೆಂಡತಿಯಿಂದ ಕೂಡ ಅಪೇಕ್ಷಿಸುತ್ತಾನೆ ಮತ್ತು ಹುಡುಗಿಯು ತನ್ನ ತಂದೆಯ ಜೊತೆ ಆಸ್ವಾದಿಸಿದ ಸುರಕ್ಷತೆ ಹಾಗೂ ಭರವಸೆಯನ್ನು ತನ್ನ ಗಂಡನಿಂದಲೂ ಅಪೇಕ್ಷಿಸುತ್ತಾಳೆ.
ಒಡೆದ ಸಂಸಾರಗಳಲ್ಲಿ, ಎಲ್ಲಿ ತಂದೆ ಅಥವಾ ತಾಯಿಯ ಸಾವಿನ ಅಥವಾ ವಿವಾಹ ವಿಚ್ಛೇದನದ ಕಾರಣದಿಂದ ಮಗುವಿಗೆ ಅವರ ಇರುವಿಕೆಯು ನಷ್ಟವಾಗಿರುತ್ತದೆಯೋ ಮಗುವು ಅಪೂರ್ಣತೆಯ ಭಾವನೆಯನ್ನು ಹೊತ್ತಿಕೊಳ್ಳುತ್ತದೆ, ಏಕೆಂದರೆ, ತಂದೆ ತಾಯಿಗಳ ಅಚ್ಚೇ ಮೊದಲನೆಯದು ಮತ್ತು ಬಹಳ ಗಾಢವಾದದ್ದು. ನೀವು ದೊಡ್ಡವರಾದ ಮೇಲೆ ಹೆಚ್ಚು ಕಾಲವಾದ ನಂತರವೂ ನೀವು ನಿಮ್ಮ ತಂದೆ ಅಥವಾ ತಾಯಿಯೊಂದಿಗೆ ಅಭಿಪ್ರಾಯಗಳಲ್ಲಿ ಎಷ್ಟೇ ವ್ಯತ್ಯಾಸಗಳಿದ್ದರೂ, ನಿಮ್ಮ ಜೀವಾತ್ಮದಿಂದ ಅವರ ಅಚ್ಚನ್ನು ನೀವು ಅಳಿಸಲು ಸಾಧ್ಯವೇ ಇಲ್ಲ.
ಹದಿನಾಲ್ಕು ವಯಸ್ಸಿನಲ್ಲಿ, ಮಗುವು ದೈಹಿಕ ಪಕ್ವತೆಯನ್ನು ಗಳಿಸುತ್ತದೆ. ಸಹಜವಾಗಿ ಅವರು ತಮ್ಮ ಲಿಂಗಕ್ಕೆ ವಿರುದ್ಧವಾಗಿರುವ ತಂದೆ ಅಥವಾ ತಾಯಿಯೊಂದಿಗೆ ಹಿಂದೆ ಇರುತ್ತಿದ್ದ ಅನ್ನೋನ್ಯತೆಯಿಂದಿರಲು ಸಾಮಾಜಿಕ ಕಾನೂನುಗಳು ಬಿಡುವುದಿಲ್ಲ, ಮತ್ತು ಅವರ ಕೆಲಸಗಳೂ ಕೂಡ ಬೇರೆ ಬೇರೆಯಾಗುತ್ತವೆ, ಮತ್ತು ಅವರು ತಮ್ಮ ತಂದೆ ತಾಯಿಯರೊಂದಿಗೆ ಹಿಂದೆ ಕಳೆಯುತ್ತಿದ್ದ ಸಮಯವನ್ನು ಕಳೆಯುವುದಿಲ್ಲ.
ಹಾಗಾಗಿ, ಹದಿನಾಲ್ಕರ ವಯಸ್ಸಿನಲ್ಲಿ, ಹುಡುಕಾಟವು ಮುಂದುವರಿಯುತ್ತದೆ, ಆದರೆ ಈ ಬಾರಿ ಅದು ಹೊರ ಜಗತ್ತಿನಲ್ಲಿ. ಈಗಿನ ಕಾಲದಲ್ಲಿ, ಇದು ಹದಿನಾಲ್ಕಕ್ಕಿಂತ ಇನ್ನು ಕಡಿಮೆ ವಯಸ್ಸಿನಲ್ಲೇ ಸಂಭವಿಸುತ್ತಿದೆ. ಈಗಿನ ಕಾಲದಲ್ಲಿ ಮಕ್ಕಳು ಟಿ.ವಿ. ಹಾಗೂ ಇಂಟರ್ನೆಟ್ಗೆ ಚಿಕ್ಕ ವಯಸ್ಸಿನಿಂದಲೇ ವೊಡ್ಡಿಕೊಂಡಿರುತ್ತಾರೆ. ಆದ್ದರಿಂದಲೇ ಅವರು ಮಾನಸಿಕವಾಗಿ ಹೆಚ್ಚು ಬೇಗ ಬೆಳೆಯುತ್ತಾರೆ. ಇದೊಂದು ಆರೋಗ್ಯದ ಸಂಕೇತವಲ್ಲ. ಇರಲಿ, ಸುಮಾರು ಹದಿನಾಲ್ಕರ ವಯಸ್ಸಿನಲ್ಲಿ, ಹೊರ ಜಗತ್ತಿನಲ್ಲಿ ಹುಡುಕಾಟವು ಆರಂಭವಾಗುತ್ತದೆ.
ಮಗುವು ಹೊರಗಿನವರಿಂದ, ದೂರದರ್ಶಕಗಳಿಂದ ಪ್ರತಿಬಿಂಬಗಳನ್ನು ಸಂಗ್ರಹಿಸಲು ಆರಂಭಿಸುತ್ತದೆ. ದೂರದರ್ಶಕಗಳಿಗೆ ಇದು ತಿಳಿದಿದೆಯೇ. ಹಾಗಾಗಿಯೇ ಎಲ್ಲ ಜಾಹೀರಾತುಗಳಲ್ಲಿ ಲೈಂಗಿಕ ಒಳಧ್ವನಿ - ಒಬ್ಬ ಆಕರ್ಷಕ ಮಹಿಳೆ ಅಥವಾ ಪುರುಷನಿಗೂ ಆ ಪದಾರ್ಥಕ್ಕೂ ಯಾವ ಸಂಬಂಧವಿಲ್ಲದೆ ಇದ್ದರೂ ನಿರೂಪಣೆ ಮಾಡುವುದನ್ನು ನೀವು ನೋಡಬಹುದು.
ಸುಮಾರು ಎಲ್ಲ ಮೋಟಾರ್ಬೈಕುಗಳು ಜಾಹೀರಾತುಗಳು ಮಹಿಳೆಯನ್ನು ತೋರಿಸುತ್ತವೆ ಮತ್ತು ಎಷ್ಟು ಮಹಿಳೆಯರು ತಾನೆ ಮೋಟಾರ್ ಬೈಕುಗಳನ್ನು ಓಡಿಸುತ್ತಾರೆ?! ಪದಾರ್ಥವು ಯಾವುದೇ ಆಗಿರಲಿ, ನಸುನಗೆ ನಗುತ್ತಿರುವ ಒಬ್ಬ ಮಹಿಳೆ ಅದನ್ನು ಶಿಫಾರಸು ಮಾಡುತ್ತಿರುವುದನ್ನು ಕಾಣಬಹುದು. ಮತ್ತು ನೀವು ಮಾರುಕಟ್ಟೆಗೆ ಹೋದಾಗ, ನೀವು ಕೂಡಲೇ ಆ ಪದಾರ್ಥವನ್ನು ಕೊಂಡುಕೊಳ್ಳುತ್ತೀರ - ಆ ಮಹಿಳೆಯು ಅದರ ಜೊತೆ ಬರುವುದಿಲ್ಲ ಎಂದು ಮರೆತು! 'ಪ್ಯೂರ್ ಮ್ಯಾಜಿಕ್' ಬಿಸ್ಕೆಟ್ಗಳ ಜಾಹೀರಾತಿನಂಥ ಒಂದು ಸರಳವಾದ ಜಾಹೀರಾತೂ ಕೂಡ ಕೇವಲ ಮಹಿಳೆಯರನ್ನೇ ತೋರಿಸುತ್ತದೆ! ನಿಮ್ಮ ಒತ್ತಿಟ್ಟ ಆಸೆಗಳನ್ನು ದೂರದರ್ಶಕಗಳು ತಮ್ಮ ಸ್ವಪ್ರಯೋಜನಕ್ಕಾಗಿ ಉಪಯೋಗಿಸಿ ಕೊಳ್ಳುವ ರೀತಿ ಇದು.
ದೂರದರ್ಶಕಗಳ ಎಲ್ಲ ಬಗೆಗಳೂ ಕೇವಲ ಕನಸು - ಮಾರಾಟ ಮಾಡುವವು (dream - sellers). ನಾವು ಈ ಎಲ್ಲ ಕನಸುಗಳನ್ನು ಸಂಗ್ರಹಿಸಿ, ನಮ್ಮ ದಾಹವನ್ನು ನಿವಾರಿಸುವ ನಿರೀಕ್ಷೆಯಲ್ಲಿ ಅವುಗಳನ್ನು ಮತ್ತೆ ಮತ್ತೆ ನೆನೆಯುತ್ತೇವೆ. ಇದು ಸಾಧ್ಯವೇ? ನೀರಿಗಾಗಿ ಬಾಯಾರಿಕೆಯಾದಾಗ ಕೇವಲ ಉಪ್ಪನ್ನು ಸೇವಿಸುತ್ತ ಅದನ್ನು ನಿವಾರಿಸಿಕೊಳ್ಳಲು ಸಾಧ್ಯವೇ? ಇಲ್ಲ! ಹೀಗೆ ಮಾಡಿದರೆ, ನಿಮ್ಮ ಬಾಯಾರಿಕೆ ಕೇವಲ ಇನ್ನು ವರ್ಧಿಸುತ್ತದೆ ಅಲ್ಲವೇ?
ನೀವು ಜಾಗ್ರತೆಯಿಂದ ಮತ್ತು ಅರಿವಿನಿಂದಿದ್ದರೆ, ಜಾಹೀರಾತುಗಳಿಂದ ನೀವು ಮೋಸಹೋಗಲು ಎಂದೂ ಸಾಧ್ಯವಿಲ್ಲ. ಅವುಗಳನ್ನು ನೋಡಿ, ಮಾರುಕಟ್ಟೆಯ ಇತ್ತೀಚಿನ ಪದಾರ್ಥಗಳ ಬಗ್ಗೆ ನಿಮಗೆ ಅರಿವಾಗಬಹುದು, ಅದೇನೋ ಸರಿ, ಆದರೆ ಅವು ನಿಮಗೆ ಮೋಸ ಮಾಡಲು ಎಂದೂ ಸಾಧ್ಯವಿಲ್ಲ.
ನೀವು ಅವುಗಳ ಪ್ರಭಾವಕ್ಕೊಳಗಾಗುವುದಿಲ್ಲ. ನೀವು ಅವುಗಳನ್ನು ಕೇವಲ ಒಂದು ವಾಸ್ತವವಾದ ರೀತಿಯಲ್ಲಿ (objectively) ನೋಡಿ ಆ ಹಂತದಲ್ಲಿ ಅವುಗಳನ್ನು ಬಿಡಲು ಸಾಧ್ಯವಾಗುತ್ತದೆ. ನೀವು ಅವುಗಳಲ್ಲಿ ತಕ್ಷಣದ ಮತ್ತು ಅರಿವಿಲ್ಲದ ಎಳೆತವನ್ನು ಅನುಭವಿಸುವುದಿಲ್ಲ. ನೀವು ನಿಮ್ಮ 'ಪ್ರತಿಕ್ರಿಯಿಸುವ' ಮನಸ್ಸು ನಿಮ್ಮ ತೀರ್ಮಾನ ಮಾಡುವ ಅಧಿಕಾರವಾಗುವಂತೆ ಬಿಟ್ಟಾಗ ಮಾತ್ರ ನೀವು ತೊಂದರೆಯಲ್ಲಿದ್ದೀರ. ನೀವು ನಿಮ್ಮ ಪ್ರತಿಕ್ರಿಯಿಸುವ ಮನಸ್ಸನ್ನು ಕರಗಿಸಿ ಬುದ್ದಿಯಿಂದ ಕೆಲಸ ಮಾಡಬೇಕು. ಆಗ ನೀವು ಯಾವಾಗಲೂ ಅರಿವಿನಿಂದಿರಬಹುದು. ಇದನ್ನು ಸಾಧಿಸಲು ಧ್ಯಾನವು ಬಹಳ ಸಹಕರಿಸುತ್ತದೆ, ಅದೇನೋ ನಿಜ.
ನೀವು ಗಮನಿಸಿ, ಒಂದು ಕಡೆಯಲ್ಲಿ ದೂರದರ್ಶಕಗಳು ನಿಮ್ಮ ಕಲ್ಪನೆಗಳನ್ನು ಪೂರೈಸುತ್ತವೆ, ಇನ್ನೊಂದೆಡೆ ಸಮಾಜವು ನಿಮ್ಮನ್ನು ಒತ್ತಿಡಲು ಪ್ರಯತ್ನಿಸುತ್ತದೆ. ಸಮಾಜವು ನಿಮ್ಮ ಕಲ್ಪನೆಗಳು ಮತ್ತು ಆಸೆಗಳನ್ನು ಒತ್ತಿಡಲು ಪ್ರಯತ್ನಿಸಿದಷ್ಟು; ಹೆಚ್ಚು ಬೆಳೆಯುತ್ತವೆ, ಏಕೆಂದರೆ, ಸಮಾಜವು ಮೂಲ ಕಾರಣಕ್ಕೆ ಇಳಿದು ಹೋಗುವುದನ್ನು ಬಿಟ್ಟು, ಲಕ್ಷಣಗಳನ್ನು ಮಾತ್ರ ಒತ್ತಿಡುತ್ತದೆ. ನೀವು ಮರದ ಕೊಂಬೆಗಳನ್ನು ಸುಮ್ಮನೆ ಕತ್ತರಿಸಿ, ಬೇರುಗಳನ್ನು ಇರುವ ಹಾಗೆ ಬಿಟ್ಟರೆ, ಏನಾಗುತ್ತದೆ? ಮರವು ಇನ್ನು ಸೊಂಪಾಗಿ ಬೆಳೆಯುತ್ತದೆ ಅಷ್ಟೆ!
ಇರಲಿ, ಈ ಒಂದು ವಯಸ್ಸಿನಲ್ಲಿ, ಎಲ್ಲ ಬಗೆಯ ದೂರದರ್ಶಕಗಳಿಂದ ಕಲ್ಪನೆಗಳನ್ನು ಸಂಗ್ರಹಿಸಿ, ಸೂಕ್ತ ಮಹಿಳೆ ಅಥವಾ ಪುರುಷನ ಪ್ರತಿಬಿಂಬವನ್ನು ಕಲ್ಪಿಸುತ್ತೇವೆ. ಪ್ರತಿಯೊಬ್ಬ ವ್ಯಕ್ತಿಯಿಂದಲೂ, ಚೆನ್ನಾಗಿರುವ ಮೂಗು, ಚೆನ್ನಾಗಿರುವ ಕಣ್ಣುಗಳು, ಒಳ್ಳೆಯ ರೂಪ ಎಲ್ಲವನ್ನು ಸಂಗ್ರಹಿಸಿ ನಮ್ಮ ಸ್ವಂತದ 'ಪರಿಪೂರ್ಣ ವ್ಯಕ್ತಿ'ಯನ್ನು ಸೃಷ್ಟಿಸುತ್ತೇವೆ. ಕತ್ತರಿಸಿ ಅಂಟಿಸುವ (cut & paste) ವಿಧಾನವನ್ನು ಬಳಸುತ್ತೇವೆ. ನಿಮ್ಮ ಕಂಪ್ಯೂಟರ್ಗಳಲ್ಲಿ ಸದಾ ಕಾಲವೂ 'cut & paste' ವಿಧಾನವನ್ನು ಉಪಯೋಗಿಸುತ್ತೀರ ಅಲ್ಲವೇ?!
ಈ ಹಂತವು ಸುಮಾರು 7 ವರ್ಷಗಳ ಕಾಲ ಇರುತ್ತದೆ, ನಾವು 20 ಅಥವಾ 21 ವಯಸ್ಸಾಗುವ ತನಕ. ಆಗ, ದೂರದರ್ಶಕಗಳೊಂದಿಗೆ ಗುರುತಿಸಿಕೊಳ್ಳುವುದು ಬಿಟ್ಟು ಹೋಗುತ್ತದೆ - ಆದರೆ ಆ ಕಲ್ಪನೆಗಳು ನಮ್ಮ ಮನಸ್ಸಿನಲ್ಲಿ ಈಗಾಗಲೇ ಆಳವಾಗಿ ಬೇರೂರಿವೆ. ಆಗ ಒಂದು ಹೊಸ ಹುಡುಕಾಟವು ಆರಂಭವಾಗುತ್ತದೆ - ಆ ಪರಿಪೂರ್ಣ ವ್ಯಕ್ತಿಯನ್ನು ನಮ್ಮ ನಿಜ ಜೀವನದಲ್ಲಿ ಕಾಣುವುದು. ಇದೇ ನಮ್ಮ ಜೀವನ ಸಂಗಾತಿಯು ಹೇಗಿರಬೇಕು ಎಂಬ ಕಲ್ಪನೆಯೊಂದಿಗೆ ನಾವು ನಡೆಸುವ ಹುಡುಕಾಟ. ಇಲ್ಲಿಯೇ ಅಪೇಕ್ಷೆಗಳು ಆರಂಭವಾಗುವುವು.
ಮುಂದಿನ 7 ವರ್ಷಗಳ ಕಾಲ, ಈ ಹುಡುಕಾಟ ಮುಂದುವರಿಯುತ್ತದೆ. ಒಂದರ ನಂತರ ಇನ್ನೊಂದು ವ್ಯಕ್ತಿಯನ್ನು ಪರೀಕ್ಷಿಸಿ ಪ್ರಯತ್ನ ಮಾಡುತ್ತೇವೆ ಮತ್ತು ನಿರಾಶರಾಗುತ್ತೇವೆ. ಕೆಲ ಬುದ್ಧಿವಂತ ಜನರು ಕನಸು ನಿಜವಾಗಲು ಸಾಧ್ಯವಿಲ್ಲವೆಂದು ಸ್ವಲ್ಪ ಕಾಲದ ನಂತರ ಅರ್ಥಮಾಡಿಕೊಳ್ಳುತ್ತಾರೆ. ಕನಸುಗಳು ನನಸಾಗಲು ಸಾಧ್ಯವಾಗದೆ ಇರುವ ಕಾರಣದಿಂದಲೇ ಅವುಗಳನ್ನು ಕನಸುಗಳೆಂದು ಕರೆಯಲಾಗುತ್ತದೆ! ಆದರೆ, ಬಹಳಷ್ಟು ಜನರು ಹುಡುಕುತ್ತಲೇ ಇರುತ್ತಾರೆ.
ಒಂದು ಸಣ್ಣ ಕಥೆ:
ಒಬ್ಬ 90 ವಯಸ್ಸಿನ ಮುದುಕ ಪ್ರತಿದಿನ ಸಮುದ್ರ ದಡದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ, ಜನರನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದನು. ಇದನ್ನು ಗಮನಿಸಿದ ಇನ್ನೊಬ್ಬ ಮನುಷ್ಯನು ಅವನ ಬಳಿ ಬಂದು ಕೇಳಿದನು, "ನೀನಿಲ್ಲಿ ಪ್ರತಿದಿನ ಕುಳಿತು ನಿಜವಾಗಿಯೂ ಏನು ಮಾಡುತ್ತೀಯ?"
ಆ ಮುದುಕನು ಉತ್ತರಿಸಿದನು “ನನ್ನ ಹೆಂಡತಿಯಾಗಲು ಒಬ್ಬ ಹೆಂಗಸಳನ್ನು ಹುಡುಕುತ್ತಿದ್ದೇನೆ.''
ಈ ಉತ್ತರವನ್ನು ಕೇಳಿ ಆ ಮನುಷ್ಯನಿಗೆ ಆಶ್ಚರ್ಯವಾಯಿತು. ಅವನು ಕೇಳಿದನು, “ನಿನ್ನ ಯೌವನದಲ್ಲಿ ನೀನೇಕೆ ಹುಡುಕಲಿಲ್ಲ?'' ಮುದುಕ ಉತ್ತರಿಸಿದನು “ನನ್ನ ಮೂವತ್ತರ ವಯಸ್ಸಿನಿಂದ ನಾನು ಹುಡುಕುತ್ತಲೇ ಬಂದಿದ್ದೇನೆ.''
ಆ ಮನುಷ್ಯನು ಬೆರಗಾಗಿ ಕೇಳಿದನು “ಯಾವ ತರಹದ ಹೆಂಗಸಳನ್ನು ನೀನು ಹುಡುಕುತ್ತಿದ್ದೀಯ?''
ಮುದುಕ ಉತ್ತರಿಸಿದನು "ಒಬ್ಬ ಪರಿಪೂರ್ಣ ಹೆಂಗಸಳನ್ನು ಹುಡುಕುತ್ತಿದ್ದೇನೆ." "ಹಾಗಾದರೆ, ನೀವಿನ್ನು ಅಂಥವಳನ್ನು ಕಂಡಿಲ್ಲವೇ" ಆ ಮನುಷ್ಯ ಕೇಳಿದ. "ನನ್ನ ಮನಸ್ಸಿಗೆ ಒಪ್ಪುವಂಥವಳನ್ನು ನಾನು ಸಂಧಿಸಿದ್ದೆ, ಆದರೆ ಅದು ಸರಿಹೋಗಲಿಲ್ಲ" ಎಂದು ಅವನು ಉತ್ತರಿಸಿದ. ಆ ಮನುಷ್ಯನು "ಏಕೆ" ಎಂದು ಕೇಳಿದ. ಮುದುಕನು ಉತ್ತರಿಸಿದನು "ಅವಳೂ ಕೂಡ ಪರಿಪೂರ್ಣ ಪುರುಷನನ್ನು ಹುಡುಕುತ್ತಿದ್ದಳು!" (ಜೋರು ನಗು!) ನಮ್ಮೊಳಗೇ ಇಟ್ಟುಕೊಂಡು ಹೋಗುವ ಪ್ರತಿಬಿಂಬಕ್ಕೆ ಸರಿ ಬರುವಂಥ ವ್ಯಕ್ತಿಯನ್ನು ಪಡೆಯಲು ಪ್ರಯತ್ನಿಸಿದಾಗ, ಹೀಗೆಯೇ ಆಗುವುದು. ಬಹುಕಾಲದ ಹುಡುಕಾಟವಾದ ನಂತರ ಇದ್ದಕ್ಕೆ ಇದ್ದ ಹಾಗೆ ನಮ್ಮ ಮನಸ್ಸಿನಲ್ಲಿರುವ ಪ್ರತಿಬಿಂಬಕ್ಕೆ ಸರಿ ಹೊಂದುವಂಥ ವ್ಯಕ್ತಿಯನ್ನು ಕಂಡುಕೊಳ್ಳುತ್ತೇವೆ - ಸ್ವಲ್ಪ ದೂರದಿಂದ. ನಮ್ಮ ಮನಸ್ಸಿನಲ್ಲಿರುವ ಕಲ್ಪನೆ ಹಸಿರಾಗಿದೆ - ಮತ್ತು ಆ ವ್ಯಕ್ತಿಯು, ಅಂದರೆ ನಾವು ನೋಡುವ ಪ್ರತಿಬಿಂಬವೂ ಹಸಿರಾಗಿ ಕಾಣುತ್ತದೆ - ಹಾಗಾಗಿ, ಎರಡೂ ಹಸಿರಾಗಿ ಕಾಣುತ್ತದೆ! ಸಾಮ್ಯವು ದೊರಕಿದ ಹಾಗೆ ಕಾಣುತ್ತದೆ! ಈ ಸಂದರ್ಭದಲ್ಲಿ ಸಂಭವಿಸುವುದನ್ನೇ ನಾವು 'ಪ್ರೀತಿಯಲ್ಲಿ ಬೀಳುವುದು (fall-ing in love)' ಎಂದು ಕರೆಯುತ್ತೇವೆ. ಇದೇ ಪ್ರೀತಿಯಲ್ಲಿ ಬೀಳುವುದರ ಹಿಂದೆ ಇರುವ ವಿಜ್ಞಾನ. ಅದು ಯಾವಾಗಲೂ ಪ್ರೀತಿಯಲ್ಲಿ 'ಬೀಳುವುದು' ಎಂದು ಮತ್ತು ಪ್ರೀತಿಯಲ್ಲಿ 'ಏಳುವುದು' ಎಂದಲ್ಲವೆಂದು ಗಮನಿಸಿ! ಅದು ಹಾರ್ಮೋಣುಗಳು 'ಪ್ರೀತಿ'ಯ ವೇಷವನ್ನು ಹಾಕಿಕೊಂಡು ಮಾಡುವ ಹಾವಳಿಗಿಂತ ಹೆಚ್ಚು ಏನೂ ಇಲ್ಲ. ಏಕೆಂದರೆ ನಿಜವಾಗಿಯೂ ಏನಾಗುತ್ತದೆ ಎಂದರೆ, ನಮ್ಮ ಸ್ವಂತ ಬಲವತ್ತರವಾದ ಆವಶ್ಯಕತೆಗಳು ಹಾಗೂ ಅಪೇಕ್ಷೆಗಳ ಕಾರಣದಿಂದ, ವಿಷಯಗಳನ್ನು ನಮಗೆ ಬೇಕಾದ ರೀತಿಯಲ್ಲಿ ನಾವು ನೋಡುತ್ತೇವೆ. ನಮ್ಮ ಮಾನಸಿಕ ಪ್ರತಿಬಿಂಬವನ್ನು ಇನ್ನೊಬ್ಬರ ಮೇಲೆ ಬಿಂಬಿಸುತ್ತೇವೆ. (project).
ಇರಲಿ, ಲೋಕವೇ ಹಸಿರಿನಿಂದ ಕೂಡಿ, ಸಂಗೀತಮಯವಾಗುತ್ತದೆ. ಜೀವನವೇ ಕವಿತೆಯಾಗುತ್ತದೆ. ಕೊನೆಗೂ, ನಮ್ಮ ಹುಡುಕಾಟವು ಮುಗಿಯಿತು! ಈ ಹಂತದಲ್ಲೇ ನಾವು ಕವಿತೆಯನ್ನು ಬರೆಯಲು, ಪರಸ್ಪರ ಚಿತ್ರಗಳನ್ನು ರಚಿಸಿ, ಮತ್ತಿನ್ನೆಲ್ಲವನ್ನು ಮಾಡುವುದು.
ಅಂತರವನ್ನು ಇಟ್ಟುಕೊಳ್ಳುವವರೆಗೂ, ಎಲ್ಲವೂ ನಯವಾಗಿ ನಡೆಯುತ್ತದೆ. ನಾವು ಒಬ್ಬರ ಮೇಲೆ ಒಬ್ಬರು ನಮ್ಮ ಕಲ್ಪನೆಯನ್ನು ಬಿಂಬಿಸುತ್ತೇವೆ. ಆದರೆ, ನಿಧಾನವಾಗಿ, ಆ ವ್ಯಕ್ತಿಯು ಹತ್ತಿರವಾಗುತ್ತಾನೆ ಮತ್ತು ಆಗ, ನಾವು ಹಸಿರೆಂದು ನೋಡಿದ್ದು ಅಷ್ಟು ಹಸಿರಾಗಿಲ್ಲ, ಕೇವಲ ಮಂಕಾದ ಹಸಿರಷ್ಟೆ ಎಂದು ನಮಗೆ ಎನಿಸುತ್ತದೆ. ಇರಲಿ, ಇದು ಪರವಾಗಿಲ್ಲ; ಮುಂದುವರಿಸುತ್ತೀರ. ಸ್ವಲ್ಪ ಕಾಲದ ನಂತರ, ಇನ್ನೂ ಹತ್ತಿರವಾಗುತ್ತೀರ ಮತ್ತು ಆಗ, ಅದು ಮಂಕಾದ ಹಸಿರೂ ಅಲ್ಲ ಆದರೆ ಒಂದು ತರಹದ ಹಳದಿ ಬಣ್ಣವೆಂದು ಎನಿಸುತ್ತದೆ.
ಆದರೆ, ಈ ಹಂತದಲ್ಲಿ, ನಮ್ಮ ಕಲ್ಪನೆಯು ಸುಳ್ಳಾಯಿತೆಂದು ನಾವು ಒಪ್ಪಿಕೊಳ್ಳಲು ತಯಾರಿಲ್ಲ, ಹಾಗಾಗಿ ಆ ಸನ್ನಿವೇಶಕ್ಕೆ ನೆಪವುಗಳನ್ನು ಮಾಡತೊಡಗುತ್ತೇವೆ. ನಾವೇ ''ಇದೇ ಜೀವನ! ಎಲ್ಲವೂ ಸಂಪೂರ್ಣವಾಗಿರಲು ಸಾಧ್ಯವಿಲ್ಲ!'' ಹೀಗೆ ಹೇಳಿಕೊಳ್ಳುತ್ತೇವೆ. ನಿಜದಲ್ಲಿ ಜೀವಿಸುವುದಕ್ಕೆ ಅತಿ ಹೆಚ್ಚು ಧೈರ್ಯ, ಹೆಚ್ಚು ಬುದ್ಧಿಯ ಅಗತ್ಯ. ಹಾಗಾಗಿ, ಇದರ ಬದಲು ನಮ್ಮನ್ನು ನಾವು ನೈಜತೆಯಿಂದ ಕಾಪಾಡಿಕೊಳ್ಳಲು ನೆಪಗಳನ್ನು ಉಪಯೋಗಿಸುತ್ತೇವೆ.
ಕೊನೆಯಲ್ಲಿ, ಇಬ್ಬರೂ ಬಹಳ ಹತ್ತಿರವಾದಾಗ, ಅದು ಹಳದಿಯೂ ಅಲ್ಲ, ಬರೀ ಬಿಳುಪು ಎಂದುಕೊಳ್ಳುತ್ತೇವೆ! ನಮ್ಮೊಳಗೆ ಇರುವ ಕಲ್ಪನೆಯು ಹಸಿರು ಮತ್ತು ಬಾಹ್ಯದಲ್ಲಿ ಇರುವುದು ಬಿಳುಪು. ಭ್ರಮೆ ಹಾಗೂ ನೈಜತೆ ಇವೆರಡೂ ಸಂಪೂರ್ಣವಾಗಿ ಭಿನ್ನವಾಗಿವೆ.
ಒಂದು ಸಣ್ಣ ಕಥ:
ಒಬ್ಬ ಮನುಷ್ಯನು ಒಂದು ಕಟ್ಟಡದ ಮೂರನೆಯ ಮಹಡಿಯಿಂದ ನೆಲಕ್ಕೆ ಬಿದ್ದುಬಿಟ್ಟನು. ಅಲ್ಲಿಯೇ ನಡೆದು ಹೋಗುತ್ತಿದ್ದ ಒಬ್ಬ ವ್ಯಕ್ತಿಯು ಅವನ ಬಳಿ ಓಡಿ ಬಂದು, ಕೇಳಿದನು ''ಬಿದ್ದಿದ್ದು ನಿಮಗೆ ಗಾಯವಾಗಿರಬೇಕು'' ಆಗ ಮನುಷ್ಯನು ಉತ್ತರಿಸಿದನು, ''ಇಲ್ಲ, ಬಿದ್ದದ್ದರಿಂದ ನನಗೆ ಪೆಟ್ಟಾಗಲಿಲ್ಲ, ಹಠಾತ್ತನೆ ನಿಲ್ಲಿಸಿದ್ದರಿಂದ ಮಾತ್ರ ನನಗೆ ಪೆಟ್ಟಾಯಿತು!''
(ನಗು!)
ಪ್ರೀತಿಯಲ್ಲಿ ತೇಲಾಡಿ, ಹರಟೆ ಮಾಡುವವರೆಗೂ, ಸಮಯವನ್ನು ಮತ್ತು ಅಂತರವನ್ನು ಚಿಕ್ಕದಾಗಿ ಇಟ್ಟುಕೊಳ್ಳುವವರೆಗೂ, ನಾವು ಒಂದು ಭ್ರಮೆಯ ಲೋಕದಲ್ಲಿರುತ್ತೇವೆ; ಕಾರ್ಯಾಚರಣೆಯ ಮಟ್ಟದಲ್ಲಿರುವುದಿಲ್ಲ. ತೇಲಾಟ ನಿಂತು ನಿಜವಾದ ಸಂಬಂಧವು ಆರಂಭವಾದಾಗ, ಅಂತರವು ಕಡಿಮೆಯಾಗಿ, ಅವರೊಂದಿಗೆ ಕಳೆಯುವ ಸಮಯವು ಹೆಚ್ಚಾದಾಗಲೇ ಸಮಸ್ಯೆ ಆರಂಭವಾಗುವುದು!
ಹೆಚ್ಚು ಭ್ರಮೆಗಳನ್ನು ಸಂಗ್ರಹಿಸುವಷ್ಟು, ನೀವು ನೆಲವನ್ನು ತಗಲುವುದಕ್ಕೆ ಮುಂಚೆ ಸಂಭವಿಸುವ ಬೀಳುವ ಸಮಯ ಹೆಚ್ಚಾಗುತ್ತದೆ, ಹಾಗಾಗಿ ಹೆಚ್ಚು ಗಾಯವುಂಟಾಗುತ್ತದೆ. ಕಡಿಮೆ ಭ್ರಮೆಗಳನ್ನು ಸಂಗ್ರಹಿಸಿದಷ್ಟು, ತುಲನೆ ಮಾಡಲು ಕಡಿಮೆ ವಿಷಯಗಳಿರುತ್ತವೆ ಮತ್ತು ಕಡಿಮೆ ತೊಂದರೆಯುಂಟಾಗುವುದು. ನಿಮಗೆ ಯಾವ ಭ್ರಮೆ ಅಥವಾ ಕಲ್ಪನೆ ಇಲ್ಲದೆ ಇದ್ದರೆ, ನೀವು ತಕ್ಷಣವೇ ನಿಮ್ಮ ಜೀವಸಂಗಾತಿಯನ್ನು ಸಂಧಿಸುತ್ತೀರ. ನಿಮಗೆ ಭ್ರಮೆಗಳಿಲ್ಲದೆ ಇದ್ದರೆ ನೀವು ಯಾರನ್ನೇ ಮದುವೆಯಾಗಲಿ, ಅವರು ನಿಮ್ಮ ಜೀವನಸಂಗಾತಿಯಾಗುತ್ತಾರೆ.
ನಮ್ಮ ಮನಸ್ಸಿನಲ್ಲಿಟ್ಟುಕೊಂಡಿರುವ ಪ್ರತಿಬಿಂಬಕ್ಕೆ ಸಮವಾಗುವಂಥ ಯಾವ ಜೀವಂತ ವ್ಯಕ್ತಿಯೂ ಇಲ್ಲವೆಂದು ನಾವು ಅರ್ಥಮಾಡಿಕೊಳ್ಳಬೇಕು, ಏಕೆಂದರೆ ಪ್ರತಿಬಿಂಬವನ್ನು ನೈಜತೆಯಿಂದ ರಚಿಸಲ್ಪಟ್ಟಿಲ್ಲ! ಆ ಪ್ರತಿಬಿಂಬವು ನಮ್ಮ ಕನಸಿನ ಲೋಕದ ಹಲವು ಕಡೆಯಿಂದ ಕತ್ತರಿಸಿ ಅಂಟಿಸಿರುವ (cut & paste) ಪ್ರತಿಬಿಂಬ! ಯಾವ ಪ್ರತಿಬಿಂಬವನ್ನೂ ಕೂಡ ನೈಜತೆಯೊಂದಿಗೆ ಸಮವಾಗಿಸಲು ಸಾಧ್ಯವಿಲ್ಲ - ಏಕೆಂದರೆ ಅದು ಎಷ್ಟಾದರೂ ಒಂದು ಪ್ರತಿಬಿಂಬ, ಒಂದು ಭ್ರಮೆ!
ನಿಜ ಜೀವನದ ವ್ಯಕ್ತಿಗಳಿಂದ ಮತ್ತು ನಿಮ್ಮ ಸುತ್ತಮುತ್ತ ನೋಡುವ ಜನರಿಂದ ನೀವು ಪ್ರತಿಬಿಂಬಗಳನ್ನು ಸಂಗ್ರಹಿಸಿದರೆ, ಅದು ಪರವಾಗಿಲ್ಲ. ಆದರೆ ನೀವು ದೂರದರ್ಶಕಗಳಿಂದ ಅವುಗಳನ್ನು ಸಂಗ್ರಹಿಸುತ್ತೀರ. ದೂರದರ್ಶಕಗಳೇ ಕಾಮದಿಂದ ಕೊರಗುತ್ತಿವೆ! ಹಾಗಾಗಿರುವಾಗ, ಅದು ನಿಮಗೆ ಯಾವುದೇ ರೀತಿಯ ಮಾರ್ಗದರ್ಶನ ಅಥವಾ ನಿವಾರಣೆ ನೀಡಲು ಸಾಧ್ಯ?
ಹಾಗಾಗಿಯೇ, ನೀವು ಯಾವುದನ್ನು 'ಪ್ರೀತಿ'ಯೆಂದು ಕರೆಯುತ್ತೀರೋ, ಅದು ಹೆಚ್ಚು ಬಾರಿ ನೋವಿನಲ್ಲಿ ಅಂತ್ಯವಾಗುತ್ತದೆ. ಅಂತಿಮದಲ್ಲಿ ನಾವು ಮೋಸಹೋದ ಭಾವನೆಯುಂಟಾಗುತ್ತದೆ, ಆ ಇನ್ನೊಬ್ಬ ವ್ಯಕ್ತಿಯಿಂದ ಶೋಷಿತ ಭಾವನೆಯುಂಟಾಗುತ್ತದೆ. ನಡೆದದ್ದಕ್ಕೆ ಇನ್ನೊಬ್ಬರನ್ನು ದೂರುವುದೇ ನಮ್ಮ ಮೂಲ ಸಹಜ ಪ್ರವೃತ್ತಿಯಾಗಿದೆ (Basic instinct).
ಆದರೆ ಅದು ಇನ್ನೊಬ್ಬರ ತಪ್ಪೇನು?
ಇಲ್ಲ! ತಪ್ಪು ಯಾವಾಗಲೂ ನಿಮ್ಮದೇ ಆಗಿರುತ್ತದೆ - ಏಕೆಂದರೆ ನೀವು ಯಾವುದೋ ಒಂದನ್ನು ಅಪೇಕ್ಷಿಸಿದ್ದಿರಿ, ನಿಮ್ಮ ಕೆಲಸಗಳನ್ನು ಇನ್ನೊಬ್ಬರ ಮೇಲೆ ಹೊರಿಸಲು ಪ್ರಯತ್ನಿಸಿದ್ದಿರಿ! ವಿಫಲತೆಗೆ ಯಾರು ತಾನೆ ಜವಾಬ್ದಾರರು?
ನೋಡಿ, ಕೆಲವೊಮ್ಮೆ ಒಬ್ಬ ವ್ಯಕ್ತಿಯು ವಿಚಿತ್ರವಾದ ಅಸಂಬದ್ಧವಾದ ರೀತಿಯಲ್ಲಿ ವರ್ತಿಸತೊಡಗುತ್ತಾರೆ. ಇಂಥ ಅಸಾಧಾರಣವಾದ ಸಂದರ್ಭಗಳಲ್ಲಿ ಮಾತ್ರ ನೀವಿಬ್ಬರೂ ಇಂಥ ವರ್ತನೆಯನ್ನು ಮುಂದುವರಿಸಿಕೊಂಡು ಇನ್ನು ಮುಂದೆ ಸಹಬಾಳ್ವೆ ನಡೆಸುವುದೋ ಬೇಡವೋ ಎಂದು ನಿರ್ಧರಿಸುತ್ತೀರ. ಇಂಥ ಸನ್ನಿವೇಶಗಳಲ್ಲಿ ನಾನು ಹೇಳುತ್ತಿರುವುದನ್ನು ಅನ್ವಯಿಸಲು ಸಾಧ್ಯವಿಲ್ಲ. ಅಸಾಧಾರಣವಾದ ಸನ್ನಿವೇಶಗಳು ಇದ್ದೇ ಇರುತ್ತವೆ.
ಆದರೆ, ನಾನು ಹೇಳುತ್ತಿರುವುದೇ ನೈಜತೆಯಲ್ಲಿ ಹೆಚ್ಚು ಮನೆಗಳಲ್ಲಿ ನಡೆಯುತ್ತಿರುವುದು, ಎಲ್ಲಿ ಇಬ್ಬರು ವ್ಯಕ್ತಿಗಳೂ ಸಾಮಾನ್ಯವಾಗಿರುತ್ತಾರೆ; ಆದರೂ ಕೂಡ ಏನೋ ಅಶಾಂತಿಯಿರುತ್ತದೆ. ಈ ವಿಷಯದಲ್ಲಿ ನಾವು ಒಳಹೊಕ್ಕಿ ನೋಡುವುದೇ ಇಲ್ಲ. ಸತ್ಯದ ಜೊತೆ ವ್ಯವಹರಿಸಲು ನಮಗೆ ಎಂದೂ ಇಷ್ಟವಿಲ್ಲ! ನಾವು ವಿಷಯಗಳನ್ನು ಒಂದು ಸುಂದರವಾದ ಕೆಳಕ್ಕೆ ಗುಡಿಸಿಹಾಕಿ, ಅದರ ಮೇಲೆ ನಡೆದುಕೊಂಡು ಹೋಗಿ ನಮಗೆ ನಾವೇ ಮೋಸ ಮಾಡಿಕೊಳ್ಳಲು ಇಷ್ಟ.
ನಿಮಗೆ ಹಸಿ ಗಾಯವಿದ್ದಾಗ, ಅದಕ್ಕೆ ತಕ್ಷಣವೇ ಚಿಕಿತ್ಸೆ ಮಾಡಿ ಅದರಿಂದ ನಿವಾರಣೆಯಾಗುವುದೇ ಸೂಕ್ತವಲ್ಲವೇ? ಅದರ ಬದಲಿಗೆ, ನೀವು ಬಂಗಾರದ ಕವಚ ಮತ್ತು ರೇಷ್ಮೆ ಬಟ್ಟೆಯಿಂದ ಅದನ್ನು ಮುಚ್ಚಿ, ಆ ಗಾಯವೇ ಇಲ್ಲ ಎಂದು ನಂಬಿದರೆ ಏನಾಗುತ್ತದೆ? ಅದು ಕೇವಲ ಮೂರ್ಖತನವಲ್ಲವೇ?
ಹಾಗಾಗಿ ನಾನು ಹೇಳುತ್ತಿರುವುದನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಕಲ್ಪನೆಗಳನ್ನು ಬಿಟ್ಟು ನೈಜತೆಯೊಂದಿಗೆ ಬಾಳಲು ಆರಂಭಿಸಿರಿ.
ಒಂದು ಸಣ್ಣ ಕಥೆ:
ಒಬ್ಬ ವ್ಯಕ್ತಿಯು ತನ್ನ ಗೆಳೆಯನಿಗೆ ಒಂದು ನಾಯಿಮರಿಯನ್ನು ಅವನ ಮದುವೆಯ ಉಡುಗೊರೆಯಾಗಿ ಕೊಟ್ಟನು.
ಮೂರು ತಿಂಗಳ ನಂತರ, ಆ ವ್ಯಕ್ತಿಯು ಅವನನ್ನು ದಾರಿಯಲ್ಲಿ ಸಂಧಿಸಿದನು. ಆ ವ್ಯಕ್ತಿ ಹೇಳಿದನು 'ಮದುವೆಯಾದ ಮೇಲೆ ಜೀವನ ಹೇಗಿದೆ?''
''ಓ, ಕಾಲಾಂತರದಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗಿವೆ, ಅಷ್ಟೆ'' ಎಂದು ಆ ಗೆಳೆಯನು ಉತ್ತರಿಸಿದನು.
''ಏನು ಬದಲಾವಣೆಗಳು?'' ಎಂದು ಅವನು ಕೇಳಿದನು.
ಗೆಳೆಯನು ಉತ್ತರಿಸಿದನು 'ಮೊದ ಮೊದಲಿಗೆ, ನೀ ಕೊಟ್ಟ ನಾಯಿಮರಿಯು ನನ್ನನ್ನು ನೋಡಿ ಬೊಗಳುತ್ತಿತ್ತು ಮತ್ತು ನನ್ನ ಹೆಂಡತಿ ನನಗೆ ನ್ಯೂಸ್ ಪೇಪರ್ ಅನ್ನು (ದಿನಪತ್ರಿಕೆಯನ್ನು) ತಂದುಕೊಡುತ್ತಿದ್ದಳು. ಈಗ ನನ್ನ ಹೆಂಡತಿ ನನ್ನನ್ನು ನೋಡಿ ಬೊಗಳುತ್ತಾಳೆ ಮತ್ತು ಆ ನಾಯಿಮರಿಯು ನನಗೆ ನ್ಯೂಸ್ ಪೇಪರ್ ಅನ್ನು ತಂದುಕೊಡುತ್ತದೆ!''
(ನಗೆ!)
'ಹನಿಮೂನ್' (honeymoon) ಮುಗಿದೊಡನೆ ಆಗುವುದು ಏನು? ಅದನ್ನು 'ಹನಿಸನ್' (honeysun) ಬದಲಾಗಿ, 'ಹನಿಮೂನ್' ಎಂದು ಕರೆಯುವುದರಲ್ಲಿ ಆಶ್ಚರ್ಯವೇನಿಲ್ಲ! ಆ ಸಂತೋಷವು ಕಡಿಮೆಯಾಗಲು ಕೇವಲ ಒಂದು ಹದಿನೈದು ದಿನಗಳಷ್ಟೇ ಸಾಕು! ನಾನು ಹೇಳುತ್ತೇನೆ, ನೀವು ಒಬ್ಬ ವಿಶ್ವಸುಂದರಿಯನ್ನೇ ಮದುವೆಯಾದರೂ ಕೂಡ ನಿಮ್ಮ ಕಣ್ಣುಗಳಲ್ಲಿ ಅವಳ ಸೌಂದರ್ಯವು ಕೇವಲ ಹದಿನೈದು ದಿವಸಗಳಲ್ಲಿ ಮಂಕಾಗುತ್ತದೆ ಏಕೆಂದರೆ ನೀವೀಗಾಗಲೇ ಬೇರೊಂದರ ಬಗ್ಗೆ ಭ್ರಮೆಪಡಲು ಆರಂಭಿಸಿದ್ದೀರ! ಮತ್ತು ನೀವು ಭ್ರಮೆ ಪಡುತ್ತಲೇ ಇರುತ್ತೀರ ಏಕೆಂದರೆ, ನೀವು ನಿಮ್ಮೊಳಗೆಯೇ ಸಂತೃಪ್ತಿಗಾಗಿ ಹುಡುಕುತ್ತಿದ್ದೀರ, ಆದರೆ ಇದನ್ನು ಅರಿಯದೆ, ಅದಕ್ಕಾಗಿ ಬಾಹ್ಯದಲ್ಲಿ ವಿವಿಧ ಭ್ರಮೆಗಳ ಮೂಲಕ ಹುಡುಕುತ್ತಿದ್ದೀರ.
ಭ್ರಮೆಗಳನ್ನು ಜಯಿಸುವುದು
ಒಮ್ಮೆ ಮಹಿಳೆ ತನ್ನ ಮಗಳಿಗೆ ಮದುವೆಯ ವಿಷಯದಲ್ಲಿ ಉಪದೇಶ ನೀಡುತ್ತಿದ್ದಳು, “ನೋಡು ಮಗಳೇ, ನೀನು ಯಾರನ್ನಾದರೂ ಪ್ರೀತಿಸಿದಾಗ, ಅದು ಜೀವನಪರ್ಯಂತವಿರಬೇಕು, ಆಗಲೇ ಅದು ನಿಜವಾದ ಪ್ರೀತಿಯಾಗುವುದು.
ಮಗಳು ತಾಯಿ ಹೇಳುತ್ತಿದ್ದನ್ನು ಕೇಳುತ್ತಾ ಇದ್ದಳು.
ಆ ಮಹಿಳೆ ಮುಂದುವರಿಸಿದಳು “ನನ್ನ ಬುದ್ಧಿ ಮಾತುಗಳನ್ನು ಕೇಳು. ನಾನು ಮಾತನಾಡುತ್ತಿರುವುದರ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಎಷ್ಟಾದರೂ ನಾನು ಮೂರು ಬಾರಿ ಮದುವೆಮಾಡಿಕೊಂಡಿದ್ದೇನೆ.''
(ಜೋರು ನಗೆ!)
ಸಮಸ್ಯೆ ಏನೆಂದರೆ ಎಲ್ಲರೂ ಬುದ್ಧಿಮಾತುಗಳನ್ನು ನೀಡಲು ಸಿದ್ಧರಾಗಿದ್ದಾರೆ, ಆದರೆ ಅದನ್ನು ತೆಗೆದುಕೊಳ್ಳಲು ಯಾರೂ ಸಿದ್ಧರಾಗಿಲ್ಲ! ಎಲ್ಲರೂ ಪ್ರೀತಿ, ಕಲ್ಪನೆ, ಭ್ರಮೆ ಮತ್ತಿತರ ವಿಷಯಗಳ ಬಗ್ಗೆ ಬುದ್ಧಿವಾದವನ್ನು ನೀಡಲು ಸಿದ್ಧರಾಗಿದ್ದಾರೆ. ಆದರೆ, ಅವರ ಸ್ವಂತ ಜೀವನದ ವಿಚಾರಕ್ಕೆ ಬಂದಾಗ, ಇವೆಲ್ಲವೂ ಏನಾಗುತ್ತದೆ? ಅದು ಕೇವಲ ಮತ್ತೊಂದು ಭ್ರಮೆಯಾಗಿ, ಮತ್ತೊಂದು ಕಲ್ಪನೆಯಾಗಿಯೇ ಉಳಿಯುತ್ತದೆ ಅಷ್ಟೆ!
ಇರಲಿ, ಈ ಹಂತದಲ್ಲಾದರೂ ನಾವು ನೈಜತೆಯನ್ನು ಒಪ್ಪಿಕೊಂಡರೆ, ಯಾವ ತೊಂದರೆಗಳು ಬರುವುದಿಲ್ಲ. ಆದರೆ, ನಾವು ಸುಮ್ಮನಿರುತ್ತೀವಾ? ಇಲ್ಲ! ನಾವು ಬಣ್ಣ ಬ್ರಶ್ಅನ್ನು ತೆಗೆದುಕೊಂಡು, ತಿಳಿಯಾದದ್ದನ್ನು ಹಸಿರು ಮಾಡಲು ಪ್ರಯತ್ನಿಸುತ್ತೇವೆ! ಆ ವ್ಯಕ್ತಿಯನ್ನು ನಮ್ಮ ಮಾನಸಿಕ ಕಲ್ಪನೆಯ ಪ್ರತಿಬಿಂಬಕ್ಕೆ ಸರಿ ಹೊಂದಲು ಅವರನ್ನು ಬದಲಾಯಿಸಲು ಪ್ರಯತ್ನಿಸುತ್ತೇವೆ.
ಯಾವುದೇ ಸಂಬಂಧದಲ್ಲಿ ಇದೇ ಅತಿ ಹಾನಿಕರ ವಿಷಯ. ಒಬ್ಬರು ಇನ್ನೊಬ್ಬ ವ್ಯಕ್ತಿಯು ಹೇಗಿರಬೇಕೆಂಬ ಕಲ್ಪನೆಯ ಪ್ರಕಾರ ಅವನ ಕೆತ್ತನೆ ಮಾಡಲು ಪ್ರಯತ್ನಿಸುತ್ತೇವೆ. ಆ ವ್ಯಕ್ತಿಯನ್ನು ನಮ್ಮ ವಶವಾಗಿಸಿಕೊಂಡು, ಅವರನ್ನು ಪದಾರ್ಥವನ್ನಾಗಿ (matter) ಮಾರ್ಪಡಿಸುತ್ತೇವೆ. ನಾವು ಚೈತನ್ಯವನ್ನು ಪದಾರ್ಥಕ್ಕೆ ಕೆಳಗಿಳಿಸುತ್ತೇವೆ. ಇಲ್ಲಿಯೇ ಎಲ್ಲ ಸಮಸ್ಯೆ ಜೀವನದ ಮುಗಿಯದ ಯುದ್ಧವು ಆರಂಭವಾಗುವುದು!
ಒಂದು ಸಣ್ಣ ಕಥೆ:
ಒಬ್ಬ ವ್ಯಕ್ತಿಯು ತನ್ನ ವೃತ್ತಿಯಿಂದ ಬಣ್ಣ ಹಚ್ಚುವವನಾಗಿದ್ದ. ಅವನು ತನ್ನ ಗೆಳೆಯನಿಗೆ ಹೇಳುತ್ತಿದ್ದನು, “ನಿನಗೆ ಗೊತ್ತೇ, ಆ ಒಂದು ದಿನ, ಒಬ್ಬ ಹುಡುಗಿ ಒಂದು ತರಹದ ನೀಲಿ ಕಪ್ಪು ಬಣ್ಣದ ಚೂರನ್ನು ತಂದು, ತನ್ನ ಮಾದರಿಯ ಮನೆಗೆ ನಾನು ಆ ರಂಗಿನ ಬಣ್ಣ ಹಚ್ಚಬೇಕೆಂದು ಬಯಸಿದಳು. ಆ ರಂಗಿಗೆ ಸರಿಹೊಂದಿಸುವಷ್ಟರಲ್ಲಿ ನಾನು ನನ್ನ ವೃತ್ತಿಯನ್ನೇ ಬಿಡಬೇಕೇನೋ ಎಂದುಕೊಂಡೆ. ನಾನು ತೋರಿಸಿದ ಯಾವುದೇ ಬಣ್ಣವೂ ಕೂಡ ಅವಳಿಗೆ ಒಪ್ಪಿಗೆಯಾಗಲಿಲ್ಲವಂತಿತ್ತು.''
ಗೆಳೆಯ ಕೇಳಿದ, “ಕೊನೆಗೂ ನೀನು ಸರಿಹೊಂದುವಂತಹ ಬಣ್ಣವನ್ನು ಕಂಡೆಯಾ?'' ಅವನು ಉತ್ತರಿಸಿದ, “ನಾನು ಅದೃಷ್ಟವಂತ. ಅವಳಿಗೆ ಅವಳ ಮೊಬೈಲ್ಫೋನಿಗೆ ಕರೆ ಬಂದಿತು, ಅವಳು ಅದರಲ್ಲಿ ಮಾತನಾಡುತ್ತಿದ್ದಾಗ ನಾನು ಅವಳು ತಂದಿದ್ದ ಚೂರನ್ನೇ ನನ್ನ ಬಳಿ ಇದ್ದ ಬಣ್ಣವನ್ನು ಹಚ್ಚಿದೆ!''
(ನಗೇ!)
ಪ್ರತಿಯೊಂದು ಮನೆಯಲ್ಲಿ ಇಡೀ ದಿನ ಗಂಡ-ಹೆಂಡತಿ ಮಾತನಾಡುವುದನ್ನು ಗಮನವಿಟ್ಟು ಆಲಿಸಿರಿ, ಆಗ ಆಗುತ್ತಿರುವ ಕೆತ್ತನೆಯ ಕೆಲಸವನ್ನು ನೀವು ಆಲಿಸಬಹುದು. ನನಗನಿಸುತ್ತದೆ, ಮದುವೆಗಳಲ್ಲಿ ಜನಿವಾರ ಅಥವಾ ಮದುವೆ-ಉಂಗುರದ ಬದಲಿಗೆ ಚಾಣ ಮತ್ತು ಸುತ್ತಿಗೆಯನ್ನು ಉಡುಗೊರೆಯಾಗಿ ಕೊಡಬಹುದೋ ಏನೋ!''
ಇನ್ನೊಂದು ಸಣ್ಣ ಕಥೆ:
ಒಬ್ಬ ವ್ಯಕ್ತಿಯು ತನ್ನ ಗೆಳೆಯನೊಡನೆ ಸಂಜೆ ವೇಳೆಯಲ್ಲಿ ಚಹಾ (ಟೀ) ಸೇವಿಸುತ್ತಿದ್ದರು.
ಆ ವ್ಯಕ್ತಿ ತನ್ನ ಗೆಳೆಯನಿಗೆ ಹೇಳಿದ, “ನಾನು ನನ್ನ ಹೆಂಡತಿಯೊಂದಿಗೆ ವಿವಾಹ ವಿಚ್ಛೇದನ (Divorce) ಮಾಡಬೇಕೆಂದು ಯೋಚಿಸಿದ್ದೇನೆ. ಕಳೆದ ಆರು ತಿಂಗಳಿಂದ ಅವಳು ನನ್ನೊಂದಿಗೆ ಒಂದು ಮಾತನಾಡಿಲ್ಲ.'' ಗೆಳೆಯ ಹೇಳಿದ, “ಇಂಥ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಮುಂಚೆ ಸರಿಯಾಗಿ ಯೋಚಿಸು. ನಿನ್ನ ಹೆಂಡತಿಯ ಹಾಗೆ ಇನ್ನೊಬ್ಬ ಹೆಂಡತಿಯು ಸಿಗುವುದಿಲ್ಲ.''
(ಜೋರು ನಗೆ!)
ಜೀವನದಲ್ಲಿ ನಾವು ಕಲ್ಪಿಸುವ ಪ್ರತಿಬಿಂಬಗಳನ್ನು ಬಾಹ್ಯದಲ್ಲಿರುವ ನೈಜತೆಯೊಂದಿಗೆ ಸರಿ ಹೊಂದಿಸಲು ನಿರಂತರವಾಗಿ ಪ್ರಯತ್ನಿಸುತ್ತೇವೆ. ಅದಕ್ಕೆ ಅನುರೂಪವಾದದ್ದನ್ನು (perfect match) ನಾವೆಂದೂ ಕಾಣಲು ಸಾಧ್ಯವಿಲ್ಲ. ನಾವು ಕಲ್ಪಿಸಿಕೊಂಡಿರುವ ಈ ಪ್ರತಿಬಿಂಬಗಳನ್ನು ಬಿಟ್ಟುಬಿಡಬೇಕು, ಆಗ ಅನಂತವಾದ ಸಾಧ್ಯತೆಗಳನ್ನು ಕಾಣಬಹುದು!
ನೀವು ಅವಿವಾಹಿತರಾಗಿದ್ದರೆ (unmarried) ನಿಮ್ಮ ಭ್ರಮೆಗಳನ್ನು ಬಿಟ್ಟುಬಿಡಿ, ಆಗ ನೀವು ನಿಮ್ಮ ಜೀವನ ಸಂಗಾತಿಯನ್ನು ಆಯ್ದುಕೊಳ್ಳಬಹುದು, ಕನಸಿನ ಸಂಗಾತಿಯನ್ನಲ್ಲ. ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿದಾಗ, ಅವನ ಜೊತೆ ಕೇವಲ ಕೆಲವು ತಿಂಗಳಷ್ಟೇ ಅಲ್ಲ, ಆದರೆ ನಿಮ್ಮ ಇಡೀ ಜೀವನವನ್ನು ಅವನ ಜೊತೆ ಕಳೆಯುತ್ತೀರ ಎಂದು ಜ್ಞಾಪಿಸಿಕೊಳ್ಳಿ, ಅದೇನೂ ಒಂದು ಉದ್ರೇಕದ ವಿಷಯವಲ್ಲ, ಅದು ನಿಮ್ಮ ಜೀವನ ಪರ್ಯ.
ಯಾವುದೇ ಜೀನ್ಸ್ಪ್ಯಾಂಟ್ (Jeans pant) ಅಥವಾ ನೀಲಿ ಟೀ-ಶರಟು (T-Shirt) ಧರಿಸುವವ ನಿಮ್ಮ ಭ್ರಮಲೋಕದ ಎಲ್ಲೆಗೊಳಗೆ ಬೀಳುತ್ತಾನೆ, ಮತ್ತು ನೀವು ಅದಕ್ಕೆ ಆಕರ್ಷಿತರಾಗುತ್ತೀರ. ಆದರೆ, ನೀಲಿ ಅಥವಾ ಕಪ್ಪು ಕೇವಲ ಆರು ತಿಂಗಳು ಆಗುವಷ್ಟರಲ್ಲೇ ಮಂಕಾಗುತ್ತದೆ ಎಂದು ಅರ್ಥಮಾಡಿಕೊಳ್ಳಿ!
ನೀವು ವಿವಾಹಿತರಾಗಿದ್ದರೆ, ನಿಮ್ಮ ಭ್ರಮೆಗಳನ್ನು ಬಿಟ್ಟುಬಿಡಿ; ಆಗಲೇ ನೀವು ಯಾರೊಬ್ಬರ ಜೊತೆ ನಿಜವಾದ ಸಂಬಂಧವನ್ನು ಆರಂಭಿಸಬಹುದು. ಆದರೆ ನೀವು ಆ ಸಂಬಂಧವನ್ನು ಮೊದ ಮೊದಲು ಪ್ರವೇಶಿಸುವಾಗಲೇ ಚಾಣ ಮತ್ತು ಸುತ್ತಿಗೆಗಳೊಡನೆ ಇದ್ದರೆ, ನಿಜವಾದ ಸಂಬಂಧ ಉಂಟಾಗಲು ಸಾಧ್ಯವಿಲ್ಲ.
ನೋಡಿ: ಕೆತ್ತನೆಯಲ್ಲಿ ಏನಾಗುತ್ತದೆ ಎಂದರೆ, ನೀವು ಕೆತ್ತನೆ ಮಾಡಲು ಶುರು ಮಾಡುತ್ತೀರ ಮತ್ತು ಹಾಗೆ ಮಾಡುವುದನ್ನು ಮುಗಿಸಿದ್ದೀರ ಎಂದುಕೊಳ್ಳುತ್ತೀರ, ಆದರೆ ಅಷ್ಟರಲ್ಲಿ ನಿಮ್ಮ ಕಲ್ಪನೆಯು ಬದಲಾಗಿದೆ; ಅದು ಬೇರೇನೋ ಆಗಿಬಿಟ್ಟಿದೆ ಮತ್ತು ನೀವು ಈ ಸ್ವಲ್ಪ ಬದಲಾದ ಕಲ್ಪನೆಗೆ ಸರಿ ಹೊಂದಿಸಲು ಇನ್ನಷ್ಟು ಕೆತ್ತನೆ ಮಾಡಬೇಕಾಗುತ್ತದೆ! ಇದೊಂದು ಅಂತ್ಯವಿಲ್ಲದ ಆವೃತ್ತಿಯಾಗುತ್ತದೆ.
ನೀವು ಭ್ರಮೆಗಳನ್ನು ಇಟ್ಟುಕೊಳ್ಳುವವರೆಗೂ, ಒಂದು ಸಂಬಂಧವು ಉಂಟಾಗಲು ಸಾಧ್ಯವಿಲ್ಲ. ದಿನದ ಇಪ್ಪತ್ತಾಲ್ಕು ಗಂಟೆಗಳ ಕಾಲ ನೀವು ಅದೇ ಮನೆಯಲ್ಲಿ ವಾಸಮಾಡಿದರೂ, ಒಬ್ಬರು ಇನ್ನೊಬ್ಬರ ಕಣ್ಣಿನಲ್ಲಿ ಕಣ್ಣಿಟ್ಟು ನೋಡುವುದಿಲ್ಲ. ಏಕೆಂದರೆ ನೀವು ಭ್ರಮೆಯಲ್ಲಿ ಬದುಕುತ್ತೀರ. ನೈಜತೆಯಲ್ಲಲ್ಲ. ನೀವು ನಿಜವಾಗಿ ಆ ನಿಜವಾದ ವ್ಯಕ್ತಿಯೊಡನೆ ಬಾಳುವುದಿಲ್ಲ. ಆ ವ್ಯಕ್ತಿ ಮಾಡುವುದನ್ನೆಲ್ಲ ನಿಮ್ಮ ಕಲ್ಪನೆಗಳ ಮೂಲಕ ನೋಡುತ್ತೀರ ಮತ್ತು ನಿಮ್ಮ ಜೀವನವನ್ನು ದೇವರು ನಿಮಗೆ ಕೊಟ್ಟಿರುವ ಶಿಕ್ಷೆ ಎಂದು ತೀರ್ಮಾನಿಸಿಬಿಡುತ್ತೀರ.
ನೀವು ಅವಿವಾಹಿತರಾಗಿದ್ದರೆ, ನಿಮ್ಮ ಭ್ರಮೆಗಳನ್ನು ಬಿಟ್ಟುಬಿಡಿ. ಆಗ ನಿಮ್ಮ ರಕ್ತ ತಣ್ಣಗಾಗುತ್ತದೆ, ನೀವು ಹಾರ್ಮೋನುಗಳ ಕಾಟದಲ್ಲಿ ಸಿಕ್ಕಿಕೊಳ್ಳುವುದಿಲ್ಲ. ನೀವು ವಿಧುರನಾಗಿದ್ದರೆ (widower) ನಿಮ್ಮ ಕಲ್ಪನೆಯನ್ನು ಬಿಡಿ, ಆಗ ಏಕಾಂತತೆಯ ನೋವನ್ನು ಅನುಭವಿಸುವುದಿಲ್ಲ.
ನಿಮ್ಮ ಮಕ್ಕಳು ಟಿ.ವಿ.ಯಲ್ಲಿ ಡ್ಯೂಯೆಟ್ (duet) ಹಾಡುಗಳನ್ನು ನೋಡಲು ಸಾಧ್ಯವಾದಷ್ಟು ಬಿಡಬೇಡಿ. ಅವರು ಸುಮ್ಮನೆ ಆ ಹಾಡು ಮತ್ತು ನೃತ್ಯವನ್ನು ನೋಡಿ ಸಂತೋಷಪಟ್ಟರೆ ಅದು ಪರವಾಗಿಲ್ಲ; ಆದರೆ ಅವರು ಮಾಡುವುದೇನೆಂದರೆ, ಅವರು ನೋಡುವುದನ್ನೆಲ್ಲ - ಆ ಡ್ಯೂಯೆಟ್ ಹಾಡುಗಳು, ಆ ಭಾವನೆಗಳು ಮತ್ತೆಲ್ಲವನ್ನು ಗ್ರಹಿಸಿಕೊಳ್ಳುತ್ತಾರೆ. ಇಲ್ಲಿಯೇ ಎಲ್ಲ ಸಮಸ್ಯೆ ಶುರು ಆಗುತ್ತದೆ. ಅದೆಲ್ಲವೂ ಮೂಲಾಧಾರ ಚಕ್ರ, ಆದರೆ ಲೈಂಗಿಕತೆಯ ಚಕ್ರದಲ್ಲಿ ಸಂಗ್ರಹವಾಗುತ್ತದೆ. ಆಮೇಲೆ ಕೇವಲ ಒಂದು ಸಲಹೆಯಷ್ಟೆ ಸಾಕು, ಮೂಲಾಧಾರವು ಸಿದ್ಧವಾಗಿದೆ.
ಕೇವಲ ಅಪೇಕ್ಷೆಗಳ ಹೊರೆಯೇ ಮೂಲಾಧಾರ ಚಕ್ರದಲ್ಲಿ ಗೊಂದಲಗಳಿಗೆ ಕಾರಣವಾಗುತ್ತದೆ. ಹೀಗೆಯೇ ಈ ಚಕ್ರವು ಬಂಧಿತವಾಗುವುದು (locked). ನೀವು ನಿಮ್ಮ ಭ್ರಮೆಯನ್ನು ಇನ್ನೊಬ್ಬ ವ್ಯಕ್ತಿಯ ಮೂಲಕ ಅಥವಾ ಟಿ.ವಿ.ಯನ್ನು ನೋಡುವುದರ ಮೂಲಕ ಹಾಗೂ ನಿಮ್ಮ ಅಪೇಕ್ಷೆ ಮತ್ತು ಕಲ್ಪನೆಯನ್ನು ಇನ್ನೊಬ್ಬ ವ್ಯಕ್ತಿಯ ಮೇಲೆ ಹೊರಿಸಲು ಪ್ರಯತ್ನಿಸಿದಾಗ, ಈ ಚಕ್ರವು ಬಂಧಿತವಾಗುತ್ತದೆ.
ಇದೇನೂ ಹೊರಗಡೆಯ ಪರಿಸ್ಥಿತಿಗಳಿಗೆ ಸಂಬಂಧಪಟ್ಟಿಲ್ಲ. ನೀವು ಯಾವುದನ್ನು ಬ್ರಹ್ಮಚರ್ಯ ಎಂದು ಕರೆಯುತ್ತೀರೋ ಅದಕ್ಕೂ ಕೂಡ ಸಂಬಂಧಿಸಿಲ್ಲ. ಅದು ಚೂರು ಚೂರಾಗಿರುವ ನಿಮ್ಮ ತನಕ್ಕೆ ಸಂಬಂಧಿಸಿದೆ.
ಅವಿವಾಹತೆ (celibacy) ಎಂದರೇನು?
ಅವಿವಾಹತೆ ಎಂದರೆ ನಿಮ್ಮಲ್ಲಿರುವ ಒತ್ತಿಟ್ಟ ಆ ಅರ್ಧಭಾಗಕ್ಕಾಗಿ ಹಂಬಲಿಸುವುದಲ್ಲದೆ ಬೇರೇನಲ್ಲ. ನೀವು ಗಂಡಾಗಿದ್ದರೆ, ನೀವು ನಿಮ್ಮೊಳಗಿರುವ ಒತ್ತಿಟ್ಟ ಅರ್ಧ ಅಂದರೆ ಹೆಣ್ಣಿನ ಅರ್ಧಕ್ಕಾಗಿ ಇನ್ನು ಹಂಬಲಿಸದೆ ಇರುವಷ್ಟು ಸಂತೃಪ್ತಿಯನ್ನು ನಿಮ್ಮೊಳಗೆಯೇ ಅನುಭವಿಸಬೇಕಾಗುತ್ತದೆ. ಅಥವಾ ನೀವು ಹೆಣ್ಣಾಗಿದ್ದರೆ, ನೀವಷ್ಟಕ್ಕೇ ನೀವು ತೃಪ್ತರಾಗಿದ್ದೀರ, ಹಾಗಾಗಿ ಈ ಸಂತೃಪ್ತಿಯನ್ನು ಅನುಭವಿಸುವುದಕ್ಕೆ ಹೊರ ಪ್ರಪಂಚದಲ್ಲಿ ಹುಡುಕುವುದಿಲ್ಲ.
ಈ ಸ್ಥಿತಿಯನ್ನು ಪಡೆದುಕೊಂಡರೆ, ನೀವು ನಿಮ್ಮ ಹೊರ ಪ್ರಪಂಚದಲ್ಲಿ ಹೆಣ್ಣಿರಲಿ ಇಲ್ಲದಿರಲಿ, ನೀವು ಜೀವಿಸಬಹುದು. ಆದರೆ, ಇದನ್ನು ನೀವು ಹೊಂದಿಲ್ಲದೆ ಇದ್ದರೆ, ನಿಮಗೆ ಮದುವೆಯಾಗಿದ್ದರೂ ಕೂಡ, ನಿಮ್ಮ ಹಾರ್ಮೋನುಗಳ ಕಾಟದಲ್ಲಿ ಸಿಕ್ಕಿಕೊಂಡೇ ಇರುತ್ತೀರ. ನಿಮ್ಮ ಹಾರ್ಮೋನುಗಳ ಕಾಟವು ಏನೆಂದರೆ ನೀವು ಹೊರಗಿನಿಂದಲ್ಲ ಆದರೆ ಒಳಗಿನಿಂದ ಪಡೆಯಬೇಕಾಗಿರುವಂತಹ ಸಂತೃಪ್ತಿಗಾಗಿ ಇರುವ ದಾಹವಲ್ಲದೆ ಬೇರೇನಲ್ಲ.
ಈ ಸಂತೃಪ್ತಿಯನ್ನು ನೀವು ಹೊಂದಿದರೆ, ನಿಮಗೆ ವಿವಾಹವಾಗಿದ್ದರೂ ಇಲ್ಲದಿದ್ದರೂ, ಮನಸ್ಸಿನಲ್ಲಿ ಶಾಂತಿಯಿರುತ್ತದೆ. ಹಾಗಾದರೆ, ನೀವು ವಿವಾಹಿತ ಜೀವನದಲ್ಲೂ ಕೂಡ ಅವಿವಾಹಿತರಾಗಿರಲು ಸಾಧ್ಯ! ಇದೇ ನಿಜವಾದ ಅವಿವಾಹತೆ.
ಇದಕ್ಕೆ ಬದಲಾಗಿ, ಜನರು ಅವಿವಾಹಿತರಾಗಲು ಏನೆಲ್ಲ ಕಷ್ಟಪಡುತ್ತಾರೆ, ಮತ್ತೆವರು ಇನ್ನಷ್ಟು ಒತ್ತಿಟ್ಟ ಭಾವನೆಯನ್ನು ಹೊಂದಿದವರಾಗಿ ಒಂದು ರೀತಿಯ ಹುಚ್ಚರಾಗುತ್ತಾರೆ. (neurotic)
ಹೇಳಿ... ನಾನು ಹೇಳುತ್ತಿರುವುದು ಎಲ್ಲರಿಗೂ ಅರ್ಥವಾಗುತ್ತಿದೆಯೇ? ಯಾರಾದರೂ ಏನನ್ನಾದರೂ ಕೇಳುವುದು ಇದೆಯೇ?
ಆದರೆ ಸ್ವಾಮೀಜಿ, ನಾವು ನಮ್ಮೊಳಗೆ ಒಂದು ಪ್ರತಿಬಿಂಬವನ್ನು ಹೊತ್ತುಕೊಂಡಿದ್ದೇವೆ ಎಂದು ನಮಗೆ ಅರಿವೇ ಆಗುವುದಿಲ್ಲವೇ?
ಹೌದು. ಏಕೆಂದರೆ ನಾವೆಂದೂ ಒಳಹೊಕ್ಕಿ ನೋಡಿಲ್ಲ. ನಾವು ನಮ್ಮ ಒಳಕ್ಕೆ ಬಿಟ್ಟು ಬೇರೆಲ್ಲ ಜಾಗಗಳಿಗೂ ಹೋಗುತ್ತೇವೆ. ನಿಮಗೆ ಗೊತ್ತೆ? ನಮ್ಮ ಚೈತನ್ಯದ ಶೇಕಡಾ
80 ರಷ್ಟು ಈ ಚಕ್ರದಲ್ಲೇ ಬಂಧಿತವಾಗಿದೆ! ಈ ಚಕ್ರವನ್ನು ಸಚೇತನಗೊಳಿಸುವುದು ಕೂಡ ಬೇಕಿಲ್ಲ. ಅದನ್ನು ಸುಮ್ಮನೆ ತೆರೆದು ಚುರುಕುಗೊಳಿಸಬೇಕು (activate) ಅಷ್ಟೆ. ಆಗ ಅದರಿಂದ ಪ್ರವಹಿಸುವ ಚೈತನ್ಯದ ಪ್ರವಾಹವೇ ನಿಮ್ಮ ಇಡೀ ಜೀವನವನ್ನು ಪರಿವರ್ತನೆಗೊಳಿಸಬಹುದು!
ನೀವು ನಿಮ್ಮೊಳಗೆ ಆಳವಾಗಿ ನೋಡಿದರೆ, ನೀವು ಯಾವುದನ್ನು ನೋಡುತ್ತೀರೋ, ಅದಕ್ಕೂ ಮತ್ತು ಯಾವುದನ್ನು ನೋಡಲು ಬಯಸುತ್ತೀರೋ ಅದಕ್ಕೂ ಏನೋ ಒಂದು ಸರಿ ಹೊಂದುವಿಕೆ ಇಲ್ಲವೆಂದು ನೀವು ಸದಾಕಾಲವೂ ಭಾವಿಸುವುದೇ ನಿಮ್ಮ ನೊಂದುವಿಕೆ (Suffering) ಕಾರಣ ಎಂದು ಅರ್ಥವಾಗುತ್ತದೆ. ಈ 'ಯಾವುದನ್ನು ನೋಡಲು ಬಯಸುತ್ತೀರೋ' ಅದೇ ನೀವು ನಿಮ್ಮೊಳಗೆ ಹೊತ್ತುಕೊಂಡಿರುವ ಕಲ್ಪನೆಯ ಪ್ರತಿಬಿಂಬ.
ಈಗಿನಿಂದಾದರೂ, ನೀವು ನೋಡುವುದರಲ್ಲೆಲ್ಲ ನಿಮ್ಮ ಮನಸ್ಸಿನ ಆಟವನ್ನು ಅರಿವಿನಿಂದ ವೀಕ್ಷಿಸಲು ಪ್ರಯತ್ನಪಡಿ. ಯಾವುದೇ ದೃಶ್ಯಗಳನ್ನು ನೋಡಿದಾಗ, ನಿಮ್ಮ ಮನಸ್ಸು ಮುನ್ನುಗ್ಗಿ ತೀರ್ಮಾನಗಳನ್ನು ಮಾಡುವುದಕ್ಕೆ ಮುಂಚೆ ಆ ದೃಶ್ಯಗಳನ್ನು ಇರುವ ಹಾಗೆಯೇ ಗ್ರಹಿಸಿ. ನೀವು ನೋಡುವುದರಲ್ಲೆಲ್ಲ ನಿಮ್ಮ ಮನಸ್ಸು ಹೇಗೆ ಸೂಕ್ಷ್ಮವಾಗಿ ಯಾವ ಸಂಬಂಧವೂ ಇಲ್ಲದ ರೀತಿಯಲ್ಲಿ ಆಟ ಆಡಿ, ನೀವು ನೋಡುವುದರಲ್ಲೆಲ್ಲ ಏನೋ ಒಂದು ತಪ್ಪಿದೆ ಎಂದು ನಂಬುವಂತೆ ಮಾಡುವುದನ್ನು ಗಮನಿಸಿ.
ಸಂಸ್ಕೃತದಲ್ಲಿ ನಮಗೆ ನೈಜತೆಯನ್ನು ಹೇಳಿಕೊಡುವಂತಹ ಎರಡು ಸಣ್ಣ ನುಡಿಗಳಿವೆ: ದೃಷ್ಟಿ ಸೃಷ್ಟಿ ಮತ್ತು ಸೃಷ್ಟಿ ದೃಷ್ಟಿ. ದೃಷ್ಟಿ ಸೃಷ್ಟಿ ಎಂದರೆ ಜಗತ್ತನ್ನು ಇರುವ ಹಾಗೆ ನೋಡುವುದು, ಒಪ್ಪಿಕೊಳ್ಳುವುದು; ಇರುವುದನ್ನು ನೈಜತೆಯೆಂದು ಸ್ವಾಗತಿಸುವುದು. ಸೃಷ್ಟಿ ದೃಷ್ಟಿ ಎಂದರೆ ಜಗತ್ತು ಹೇಗಿರಬೇಕೆಂದು ನೀವು ಬಯಸುವ ರೀತಿಯಲ್ಲಿ, ನಮಗೆ ಬೇಕಾದ ರಂಗಿನ ಗಾಜಿನ ಮೂಲಕ, ಅಂದರೆ ನಮ್ಮ ಭ್ರಮೆಗಳ ಮೂಲಕ ನೋಡುವುದು. ಮೊದಲನೆಯದು (ದೃಷ್ಟಿ ಸೃಷ್ಟಿ) ನೆಮ್ಮದಿಯ ಜೀವನಕ್ಕೆ ದಾರಿ ತೋರಿಸುತ್ತದೆ, ಆದರೆ ಎರಡನೆಯದು (ಸೃಷ್ಟಿ ದೃಷ್ಟಿ) ವೇದನೆಯನ್ನು ಅನುಭವಿಸುವುದಕ್ಕೆ ದಾರಿ ತೋರಿಸುತ್ತದೆ.
ಒಂದು ಸಣ್ಣ ಕಥೆ:
ಒಮ್ಮೆ ಒಬ್ಬ ವ್ಯಕ್ತಿಯು ನನ್ನ ಬಳಿಗೆ ಬಂದು ಹೇಳಿದನು, ''ಸ್ವಾಮೀಜಿ, ನಮ್ಮ ಮನೆಯಲ್ಲಿ ನಾವಿಬ್ಬರಷ್ಟೆ ಇರುವುದು, ನನ್ನ ಹೆಂಡತಿ ಮತ್ತು ನಾನು. ಆದರೂ ನೆಮ್ಮದಿಯೇ ಇಲ್ಲ!''
ನಾನು ಹೇಳಿದೆ, ''ನಿನ್ನ ಮನೆಯಲ್ಲಿ ಬರೀ ಇಬ್ಬರು ಮಂದಿ ಇದ್ದಾರೆ ಎಂದು ಯಾರು ಹೇಳಿದರು? ನೀವು ನಾಲ್ಕು ಮಂದಿ ಇದ್ದೀರ.''
ಆ ಮನುಷ್ಯ ಹಾಗೆಯೇ ಆಶ್ಚರ್ಯಚಕಿತನಾದ.
ನಾನು ಹೇಳಿದೆ, ''ನಿಮ್ಮ ಮನೆಯಲ್ಲಿರುವುದು, ನೀನು, ನಿನ್ನ ಕಾಲ್ಪನಿಕ ಹೆಂಡತಿ, ನಿನ್ನ ಹೆಂಡತಿ ಮತ್ತು ಅವಳ ಕಾಲ್ಪನಿಕ ಗಂಡ! ಆದ್ದರಿಂದಲೇ ನೀವು ನಾಲ್ಕು ಮಂದಿ ಇದ್ದೀರ ಎಂದು ನಾನು ಹೇಳಿದೆ. ನಿಮ್ಮ ಕಾಲ್ಪನಿಕ ಗಂಡ ಅಥವಾ ಕಾಲ್ಪನಿಕ ಹೆಂಡತಿಯನ್ನು ಬಿಟ್ಟುಬಿಡಲು ಸುಮ್ಮನೆ ಕಲಿತುಕೊಳ್ಳಿ - ಆಗ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಯನ್ನು ನೋಡಿ!''
ಆ ಮನುಷ್ಯ ಸದ್ದಿಲ್ಲದೆ ಹೊರಟುಬಿಟ್ಟ, ಹೇಳಿ...
ಸ್ವಾಮೀಜಿ, ನಾವು ನಮ್ಮ ಬೇರೆ ಸಂಬಂಧಗಳಲ್ಲೂ - ಅಂದರೆ ತಂದೆ ತಾಯಿಗಳು ಮತ್ತು ಮಕ್ಕಳ ನಡುವೆ ಕೂಡ ಕ್ಲೇಶಗಳನ್ನು ಅನುಭವಿಸುತ್ತೇನೆ...
ಹೌದು, ಯಾವುದೇ ಸಂಬಂಧದಲ್ಲೂ ಅಪೇಕ್ಷೆಗಳಿರುತ್ತವೆ. ಅಪೇಕ್ಷೆಗಳಿಲ್ಲದ ಯಾವುದೇ ಸಂಬಂಧವೂ ಇಲ್ಲ ಎಂದೆನಿಸುತ್ತದೆ.
ತಂದೆ ತಾಯಿಗಳು ಮಕ್ಕಳ ಮೇಲೆ ಕೆತ್ತನೆ ಮಾಡಲು ಪ್ರಯತ್ನಿಸುತ್ತಾರೆ, ಮತ್ತು ಇದನ್ನೇ ಮಕ್ಕಳೂ ಕೂಡ ತಂದೆ ತಾಯಿಗಳ ಮೇಲೆ ಮಾಡಲು ಪ್ರಯತ್ನಿಸುತ್ತಾರೆ. ತಂದೆ ತಾಯಿಗಳು ತಮ್ಮ ಪೂರ್ತಿಯಾಗದ ಆಸೆಗಳನ್ನು ತಮ್ಮ ಮಕ್ಕಳ ಮೂಲಕ ಪೂರ್ತಿ ಮಾಡಲು ಪ್ರಯತ್ನಿಸುತ್ತಾರೆ. ಈ ವಿಷಯವನ್ನು ಆಳವಾಗಿ ವಿಶ್ಲೇಷಿಸಿದರೆ, ನಾನು ಹೇಳುತ್ತಿರುವುದು ಸತ್ಯ ಎಂದು ನಿಮಗೆ ಅರ್ಥವಾಗುತ್ತದೆ. ತಂದೆ ತಾಯಿಗಳು ತಮ್ಮ ಮಕ್ಕಳು ಡಾಕ್ಟರ್ (ವೈದ್ಯನೋ) ಇಂಜಿನಿಯರೋ ಆಗಲೆಂದು ಕನಸು ಕಾಣುತ್ತಾರೆ. ಆ ಮಗು ಏನಾಗಬೇಕೆಂದು ಬಯಸುತ್ತದೆ ಎಂದು ತಿಳಿದುಕೊಂಡು, ಅದನ್ನು ಪೂರೈಸಲು ಏಕೆ ಕನಸು ಕಾಣುವುದಿಲ್ಲ? ಹಾಗೆ ಮಾಡುವುದರಿಂದ ನಿಮ್ಮ ಮಗುವಿಗೆ ಬಹಳ ಸಹಾಯವಾಗುತ್ತದೆ.
ನಿಮ್ಮ ಮಗು ನಿಮಗೆ ಎದುರು ಜವಾಬು ನೀಡಲು ಆರಂಭಿಸುವ ದಿನವೇ ಅವನು ಮನುಷ್ಯನಾಗಿದ್ದಾನೆ. ನೀವು ಅವನ ಜೊತೆ ತುಂಬ ಎಚ್ಚರಿಕೆಯಿಂದ ವ್ಯವಹರಿಸಬೇಕು. ಅವನ ಜೊತೆ ಸಮಯ ಕಳೆಯಿರಿ, ಮಾತನಾಡಿ, ಒಬ್ಬ ಒಳ್ಳೆಯ ಸಖನಾಗಿ, ಅವನು ಜೀವನದಲ್ಲಿ ನಿಜವಾಗಿಯೂ ಏನು ಮಾಡಬೇಕೆಂದು ಬಯಸುತ್ತಾನೆ ಎಂದು ತಿಳಿದುಕೊಳ್ಳಿ. ಗಾಢವಾದ ಪ್ರೀತಿ ಮತ್ತು ಭರವಸೆಯಿಂದ ಮಾರ್ಗದರ್ಶನ ನೀಡಿ. ನಂತರ ಅವನ ಮಹತ್ವಾಕಾಂಕ್ಷೆ ನೈಜತೆಯನ್ನಾಗಿ ಮಾಡಿಕೊಂಡು, ಅದನ್ನು ಸಾಧಿಸಲು ಅವನಿಗೆ ಸಹಾಯ ಮಾಡಿ.
ಎಷ್ಟೋ ಮಕ್ಕಳು ನನಗೆ ಹೇಳುತ್ತಾರೆ, “ನನ್ನ ತಂದೆಯು ನಾನು ವೈದ್ಯನಾಗಬೇಕೆಂದು ಬಯಸುತ್ತಾರೆ ಅಥವಾ ನನ್ನ ತಂದೆ ನಾನು ಲಾಯರ್ (Lawyer) ಆಗಬೇಕೆಂದು ಬಯಸುತ್ತಾರೆ.” ಕಂದನು ತಾನಾಗಿಯೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ಇದ್ದರೆ, ಅವನೇನು ಮಾಡಬೇಕೆಂದು ನಿಮ್ಮನ್ನು ಕೇಳುತ್ತಾನೆ, ಆಗ ಅವನ ಬುದ್ಧಿಶಕ್ತಿ ಕೌಶಲ್ಯ ಮತ್ತು ಸಾಮರ್ಥ್ಯದ ನಿಮ್ಮ ಅವಲೋಕನವನ್ನು ಆಧರಿಸಿ, ಅವನೇನು ಮಾಡಬೇಕೆಂದು ನೀವು ಹೇಳಬಹುದು, ಅದೇನೋ ಸರಿ.
ಯಾವಾಗಲೂ ನೀವು ಸಲಹೆ ನೀಡಬಹುದು, ಆದರೆ, ಅವನ ಗಂಟಲಿನ ಮೂಲಕ ಏನನ್ನೂ ತುರುಕಬೇಡಿ ನೀವು ಅವನಿಗೆ ಸ್ವಾತಂತ್ರ್ಯ ಹಾಗೂ ಇದನ್ನು ಅವನು ಸ್ಪಷ್ಟವಾಗಿ ಅರಿತುಕೊಳ್ಳಬೇಕು.
ನೋಡಿ, ನಾವು ಸದಾಕಾಲವೂ ನಮ್ಮ ಉಳಿಯನ್ನು ಹಿಡಿದುಕೊಂಡು ನಮ್ಮ ಸಂಬಂಧಿಕರನ್ನು, ಗೆಳೆಯರನ್ನು - ಅಪರಿಚಿತರನ್ನೂ ಕೂಡ ನಮ್ಮ ಸ್ವಂತ ಕಲ್ಪನೆಗೆ ಅನುಸಾರವಾಗಿ ಕೆತ್ತನೆ ಮಾಡಲು ಪ್ರಯತ್ನಿಸುತ್ತಲೇ ಇರುತ್ತೇವೆ. ಮತ್ತು ಅವರೂ ಕೂಡ ನಮ್ಮ ಮೇಲೆ ಪ್ರಯೋಗಿಸುವುದಕ್ಕೆ ತಮ್ಮ ತಮ್ಮ ಸ್ವಂತ ಬಾಣಗಳನ್ನು ಹಿಡಿದುಕೊಂಡಿರುತ್ತಾರೆ! ಎಂಥ ದೌರ್ಜನ್ಯ!
ಈ ದಿನದ ಮನೆಪಾಠಕ್ಕಾಗಿ (homework) ನೀವು 'ಒಬ್ಬ ಪರಿಪೂರ್ಣ ಗಂಡ', 'ಪರಿಪೂರ್ಣ ಹೆಂಡತಿ', 'ಪರಿಪೂರ್ಣ ತಂದೆ', 'ಪರಿಪೂರ್ಣ ತಾಯಿ', ಒಬ್ಬ 'ಪರಿಪೂರ್ಣ ಮಗು' ಒಬ್ಬ 'ಪರಿಪೂರ್ಣ ಮಿತ್ರ' ಹೇಗಿರಬೇಕು ಎನ್ನುವುದರ ಬಗ್ಗೆ ಇರುವ ನಿಮ್ಮ ಮನೋಭಾವನೆಗಳನ್ನು ಬರೆದುಕೊಳ್ಳಿರಿ. ನಿಮಗೆ ಯಾವುದಾದರೂ 5 ಸಂಬಂಧಗಳನ್ನು ಆಯ್ದುಕೊಳ್ಳಿ ಮತ್ತು ಬರೆಯಿರಿ. ಈ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ. ನಿಮ್ಮ ಅರಿವಿಲ್ಲದ ವಲಯದಲ್ಲಿ ಸಂಗ್ರಹಿಸಿರುವ
ನಿಮ್ಮ ಮನೋಭಾವನೆಗಳೆಲ್ಲವೂ ಜನಪ್ರಿಯ ದೂರದರ್ಶಕಗಳಿಂದ ಸಂಗ್ರಹಿಸಲಾಗಿವೆ ಎಂದು ನಿಮಗೆ ಅರಿವಾಗುತ್ತದೆ, ನಾನು ಖಚಿತವಾಗಿದ್ದೇನೆ.
ನೀವು ಒಂದು ಧಾರಾವಾಹಿಯನ್ನು ನೋಡುತ್ತೀರಿ ಮತ್ತು ಅದರಲ್ಲಿ ಬರುವ ಒಂದು ನಟನ ಪಾತ್ರವನ್ನು ಇಷ್ಟಪಡಲು ಆರಂಭಿಸುತ್ತೀರಿ. ನಿಮಗೆ ಆ ಪಾತ್ರವೇ ಒಂದು ಘನವಾದ ನೈಜತೆಯಾಗಿಬಿಡುತ್ತದೆ (solid reality). ನೀವು ಆ ರೀತಿಯ ವರ್ತನೆಯನ್ನು ನಿಮ್ಮ ನಿಜ ಜೀವನದಲ್ಲಿ ಸಂಧಿಸಿದ ವ್ಯಕ್ತಿಗಳಲ್ಲಿ ಆ ರೀತಿಯ ವರ್ತನೆಯನ್ನು ಕಾಣಲು ನಿಮ್ಮ ಅರಿವಿಲ್ಲದೆಯೇ ಅಪೇಕ್ಷಿಸಲು ಆರಂಭಿಸುತ್ತೀರಿ.
ನಿಮಗೆ ತಿಳಿದಿದೆಯೇನು: ಜನರು ತಮ್ಮ ಮನಸ್ಸಿನಲ್ಲಿ ‘ಒಬ್ಬ ಪರಿಪೂರ್ಣ ಗುರು’ವಿನ ಪ್ರತಿಬಿಂಬವನ್ನೂ ಕೂಡ ಹೊತ್ತುಕೊಂಡಿರುತ್ತಾನೆ ಎಂದು? ಅದು ಸಾಮಾನ್ಯವಾಗಿ ಅದು ಬಿಳಿಗೂದಲಿರುವ, ನೀಳವಾದ ಗಡ್ಡ ಹೊಂದಿರುವ ಒಬ್ಬ ವಯಸ್ಕನ ಪ್ರತಿಬಿಂಬವಾಗಿರುತ್ತದೆ - ಯಾವುದನ್ನು ನೀವು ಪುಸ್ತಕಗಳಲ್ಲೋ ಅಥವಾ ಟಿ.ವಿ.ನಲ್ಲಿ ಬರುವ ಧಾರಾವಾಹಿಗಳಲ್ಲಿ ನೋಡಿರುತ್ತೀರೋ ಅಂತಹದು! ಮತ್ತು ಅವರು ಬಂದು ನನ್ನನ್ನು ನೋಡಿದಾಗ, ಇಂಥ ಯುವ ಹುಡುಗನು ನಿಜವಾದ ಗುರುವಾಗಬಹುದೆಂದು ಅವರು ಒಪ್ಪಿಕೊಳ್ಳಲು ಅಸಮರ್ಥರಾಗುತ್ತಾರೆ (ಸಾಧ್ಯವಾಗುವುದಿಲ್ಲ)!
ಸ್ವಾಮೀಜಿ, ಆದರೆ ಕೆಲವೊಮ್ಮೆ ನಾವು ಕೆತ್ತನೆಯನ್ನು ಮಾಡಲೇಬೇಕಾಗುತ್ತದೆ ಎಂಬ ಭಾವನೆ ಬರುತ್ತದೆ... ಉದಾಹರಣೆಗೆ ಕಾರ್ಯಾಲಯದಲ್ಲಿ ಕೆಲಸಗಾರರನ್ನು ನಿಭಾಯಿಸುವಾಗ. ಅವರೊಂದಿಗೆ ನಾವೇನು ಮಾಡಬೇಕು?
ಕೆತ್ತನೆಯನ್ನು ಅರಿವಿನಿಂದ ಮಾಡಿ. ನೀವು ಮಾಡುವುದರ ಬಗ್ಗೆ ಸಂಪೂರ್ಣ ಅರಿವಿರಲಿ, ಆಗ ನೀವು ಅಗತ್ಯಕ್ಕಿಂತ ಹೆಚ್ಚು ಮಾಡುವುದಿಲ್ಲ. ನಿಮ್ಮ ಕೆಲಸಗಾರರಿಂದ ನೀವು ಏನನ್ನು ಅಪೇಕ್ಷಿಸುತ್ತೀರೋ ಅದು ವಾಸ್ತವಿಕತೆಯಿಂದ ಕೂಡಿದೆಯೋ ಎಂದು ಗಮನಿಸಿ. ಪರ್ಯಾಯ ಪರಿಹಾರವಿದೆಯೇ ಎಂದು ಗಮನಿಸಿ, ಬೇರೆ ದಾರಿಯೇ ಇಲ್ಲವೆಂದಾಗ, ಅತಿ ಅಗತ್ಯವೆಂದಾಗ ಮಾತ್ರ ಆ ವ್ಯಕ್ತಿಯ ಮೇಲೆ ಕೆತ್ತನೆ ನಡೆಸಲು ಪ್ರಯತ್ನಿಸಬೇಕು.
ನಿಮಗೆ ದೊರಕಿರುವ ಯಾವುದೇ ಶಕ್ತಿಯಿದ್ದರೂ, ಅದನ್ನು ಅರಿವಿನಿಂದ ಪ್ರಯೋಗಿಸಲು ಕಲಿಯಿರಿ! ಕೋಪ ಹಾಗೂ ಕಾಮಗಳು ಕೂಡ ನಿಮಗೆ ದೇವರು ನೀಡಿರುವಂತಹ ಅದ್ಭುತ (ಶ್ರೇಷ್ಠ) ಚೈತನ್ಯಗಳು. ಆ ಚೈತನ್ಯವನ್ನು ನೀವು ಗೌರವಿಸಿದಾಗ, ಅದನ್ನು ವ್ಯರ್ಥ ಮಾಡುವುದಾಗಲೀ ದುರುಪಯೋಗ ಮಾಡುವುದಾಗಲೀ ಮಾಡುವುದಿಲ್ಲ.
ನಾವು ಹಣವನ್ನು ಎಂದಾದರೂ ದುರುಪಯೋಗಿಸುವುದಾಗಲೀ ಮಾಡುತ್ತೇವಾ? ನೀವು ಹಣವನ್ನು ಎಂದೂ ದುರುಪಯೋಗಿಸುವುದಿಲ್ಲ, ಏಕೆಂದರೆ ಅದನ್ನು ನೀವು ಗೌರವಿಸುತ್ತೀರ. ಒಬ್ಬ ವ್ಯಕ್ತಿ ಹತ್ತು ರೂಪಾಯಿನಷ್ಟು ಕೆಲಸ ಮಾಡಿದರೂ, ನೀವು ಅವನಿಗೆ ಅದಕ್ಕಿಂತ ಹೆಚ್ಚು ಒಂದು ರೂಪಾಯಿಯನ್ನಾದರೂ ನೀಡುತ್ತೀರೇನು? ಆದರೆ ಕೋಪದ ವಿಷಯದಲ್ಲಿ ನೀವು ಯಾವಾಗಲೂ ‘ಹೆಚ್ಚು’ ನೀಡುತ್ತೀರ. ಒಬ್ಬ ವ್ಯಕ್ತಿ ‘ಹತ್ತು ರೂಪಾಯಿ ಕೋಪದಷ್ಟು ತಪ್ಪು ಕೆಲಸ ಮಾಡಿದರೆ, ನೀವು ಅವನಿಗೆ ‘ಐವತ್ತು ರೂಪಾಯಿನಷ್ಟು ಕೋಪವನ್ನು’ ತೋರಿಸುತ್ತೀರ! ಅಲ್ಲವೇ? ಏಕೆ? ಏಕೆಂದರೆ ನೀವು ನಿಮ್ಮ ಕೋಪವನ್ನು ಅರಿವಿಲ್ಲದೆ ಉಪಯೋಗಿಸುತ್ತೀರ, ಅರಿವಿನಿಂದಲ್ಲ. ನಿಮ್ಮ ಕೋಪವನ್ನು ಅರಿವಿನಿಂದ ಉಪಯೋಗಿಸಿದರೆ, ನೀವದರ ಬಗ್ಗೆ ಅಪರಾಧ ಭಾವನೆಯನ್ನು ಕೂಡ ಅನುಭವಿಸುವುದಿಲ್ಲ, ನಾನು ಭರವಸೆ ಕೊಡುತ್ತೇನೆ.
ನಿಮ್ಮ ಸ್ವಂತ ಕೋಪದಿಂದಲೇ ನೀವು ಕ್ಷೋಭೆಗೆ ಒಳಗಾಗಬೇಡಿ. ಒಂದು ವೇಳೆ ನೀವು ಕ್ಷೋಭೆಗೆ ಒಳಗಾದರೆ, ಅದರರ್ಥ ನೀವು ಕೋಪವನ್ನು ಅರಿವಿನಿಂದ ಅನುಭವಿಸಿಲ್ಲ; ಕೋಪವು ನಿಮ್ಮ ಕೈಮೀರಿ ಹೋಗಿದೆ ಎಂದು. ನೀವು ಕೋಪವನ್ನು ಸರಿಯಾಗಿ ಉಪಯೋಗಿಸಿದ್ದೀರೋ ಇಲ್ಲವೋ ಎನ್ನುವುದಕ್ಕೆ ಇದೇ ಅಳತೆ!
ಒಂದು ಸಣ್ಣ ಕಥೆ:
ಒಮ್ಮೆ ಒಬ್ಬ ಸಾಧು - ಒಬ್ಬ ಅಲೆದಾಡುವ ಸನ್ಯಾಸಿ ಒಂದು ಹಳ್ಳಿಯ ಮೂಲಕ ಹಾದು ಹೋಗುತ್ತಿದ್ದಾಗ, ಆ ಹಳ್ಳಿಯವರ ಬದುಕಿನಲ್ಲಿ ಹಾವಳಿಯುಂಟುಮಾಡುತ್ತಿದ್ದ ಒಂದು ನಾಗರಹಾವಿನ ಬಗ್ಗೆ ದೂರು ಪಡೆದರು. ಆ ಸಾಧುವು ಪ್ರಾಣಿಗಳೊಂದಿಗೆ ಮಾತನಾಡಲು ಶಕ್ತಿಯುಳ್ಳವನಾಗಿದ್ದನೆಂದು ಪ್ರಖ್ಯಾತನಾಗಿದ್ದ, ಹಾಗಾಗಿ ಆ ಹಳ್ಳಿಯವರು ತಮ್ಮನ್ನು ಉಳಿಸುವುದಾಗಿ ನಾಗರ ಹಾವನ್ನು ಒಪ್ಪಿಸಬೇಕೆಂದು ಸಾಧುವಿನಲ್ಲಿ ಬೇಡಿಕೊಂಡರು. ಹಾಗಾಗಿ ಸಾಧುವು ನಾಗರ ಹಾವಿನ ಜೊತೆ ಮಾತನಾಡಿದರು ಮತ್ತು ಆ ನಾಗರ ಹಾವು ಆ ಹಳ್ಳಿಯವರನ್ನು ಇನ್ನು ಎಂದೂ ಕಚ್ಚುವುದಿಲ್ಲ ಎಂದು ಪ್ರಮಾಣ ಮಾಡಿತು.
ಕೆಲವು ತಿಂಗಳು ಕಳೆದವು ಆ ಸಾಧುವು ಅದೇ ಹಳ್ಳಿಯ ಮೂಲಕ ಹಾದು ಹೋಗುತ್ತಿದ್ದಾಗ, ಆ ನಾಗರಹಾವಿಗೆ ತುಂಬ ಪೆಟ್ಟುಬಿದ್ದು ಇನ್ನೇನು ಸಾಯುವ ಸ್ಥಿತಿಯಲ್ಲಿದ್ದುದನ್ನು ನೋಡಿದರು.
“ನಿನಗೇನಾಯಿತು? ನಿನಗೇಕೆ ಪೆಟ್ಟಾಗಿದೆ?” ಎಂದು ಸಾಧುವು ಕೇಳಿದರು. ಆ ನಾಗರಹಾವು ದುಃಖದಿಂದ ಅತ್ತಿತು, “ಓ ಸಾಧುವೇ! ನಾನು ಹಳ್ಳಿಯವರನ್ನು ಎಂದೂ ಕಚ್ಚಬಾರದೆಂದು ಪ್ರಮಾಣ ಮಾಡಿಸಿದ್ದು ನೀನೇ! ನನ್ನ ಪ್ರಮಾಣವನ್ನು ಈ ದಿನದ ವರೆಗೂ ಪಾಲಿಸಿದ್ದೇನೆ. ಆದರೆ, ಹಿಂದೆ ನನ್ನ ಭಯದಲ್ಲಿದ್ದ ಹಳ್ಳಿಯವರು, ನನ್ನ ಮೃದು ಸ್ವಭಾವವೇ ನನ್ನ ಅಶಕ್ತತೆಯನ್ನಾಗಿ ನೋಡಿ, ನಾನು ಕಚ್ಚದೆಯಿರುವುದನ್ನು ನೋಡಿ, ಅವರು ನನ್ನನ್ನು ಪ್ರತಿದಿನ ಹಿಂಸಿಸತೊಡಗಿದರು. ನನ್ನನ್ನು ಯಾವ ಸ್ಥಿತಿಗೆ ಇಳಿಸಿಬಿಟ್ಟಿದ್ದಾರೆ, ನೋಡು!” ಸಾಧುವು ಉತ್ತರಿಸಿದರು “ನನ್ನ ಬಡಪಾಯಿ ಮೂರ್ಖ ಮಿತ್ರನೇ! ನೀನು ಜನರನ್ನು ಕಚ್ಚಬಾರದೆಂದು ಮಾತ್ರ ನಾನು ಹೇಳಿದೆ. ಆದರೆ ಅವರತ್ತ ಬುಸುಗುಟ್ಟಬಾರದೆಂದು ನಾನು ಹೇಳಿದ್ದೇನಾ?’’
ನೀವು ಕೋಪವನ್ನು ಸರಿಯಾದ ರೀತಿಯಲ್ಲಿ ಸರಿಯಾದ ಪರಿಮಾಣದಲ್ಲಿ ಉಪಯೋಗಿಸಬೇಕು. ಕೋಪವನ್ನು ಸರಿಯಾಗಿ ಉಪಯೋಗಿಸುವುದು ಹೇಗೆ ಎಂದು ಅರಿತುಕೊಂಡರೆ, ಅದೊಂದು ಅದ್ಭುತವಾದ ಚೈತನ್ಯವಾಗುತ್ತದೆ.
ಕೋಪದ ಬಗ್ಗೆ ತಿಳುವಳಿಕೆಯು ಕೋಪವನ್ನು ಕಡಿಮೆ ಮಾಡುತ್ತದೆ.
ಬಹಳ ಜನರು ನನ್ನ ಬಳಿ ಬಂದು ಹೇಳುತ್ತಾರೆ “ಸ್ವಾಮೀಜಿ, ನಾನು ನನ್ನ ಹೆಂಡತಿಯನ್ನು ತುಂಬ ಪ್ರೀತಿಸುತ್ತೇನೆ, ಆದ್ದರಿಂದಲೇ ಅವಳು ಒಳ್ಳೆಯದಕ್ಕೆ ಬದಲಾಗಲೆಂದು ಬಯಸುತ್ತೇನೆ! ಆದ್ದರಿಂದಲೇ ಅವಳ ಜೊತೆ ಜಗಳವಾಡುತ್ತೇನೆ.’’
ಅವರಿಗೆ ಹೇಳುತ್ತೇನೆ, “ನೀವು ನಿಮ್ಮ ಹೆಂಡತಿಯನ್ನು ಪ್ರೀತಿಸುತ್ತಿಲ್ಲ, ನಿಮ್ಮ ಮನಸ್ಸಿನಲ್ಲಿ ಹೊತ್ತುಕೊಂಡಿರುವ ಅವಳ ಪ್ರತಿಬಿಂಬವನ್ನು ಪ್ರೀತಿಸುತ್ತಿದ್ದೀರ.’’
ನೀವು ಆ ಪ್ರತಿಬಿಂಬವನ್ನು ಪ್ರೀತಿಸುತ್ತೀರ ಮತ್ತು ನೀವು ಅಪೇಕ್ಷಿಸಿದ ರೀತಿಯಲ್ಲಿ ನಿಮ್ಮ ಹೆಂಡತಿ ನಡೆದುಕೊಂಡರೆ, ಅವಳನ್ನು ಪ್ರೀತಿಸುತ್ತೀರ. ನಿಮ್ಮ ನಿಜವಾದ ಪ್ರೀತಿ ಇರುವುದು ಹೆಂಡತಿಗಾಗಿ ಅಲ್ಲ, ನಿಮ್ಮ ಮಾನಸಿಕ ಪ್ರತಿಬಿಂಬಕ್ಕೆ ಇರುವುದು. ನಿಮ್ಮ ಹೆಂಡತಿಯನ್ನು ನೀವು ನಿಜವಾಗಿ ಪ್ರೀತಿಸಿದರೆ, ನಿಮ್ಮ ಹೆಂಡತಿಗೆ ಸರಿ ಹೊಂದುವಂತೆ
ನಿಮ್ಮ ಮಾನಸಿಕ ಪ್ರತಿಬಿಂಬವನ್ನು ಬದಲಾಯಿಸಿಕೊಳ್ಳುತ್ತೀರ, ಆದರೆ ನೀವು ಆ ಪ್ರತಿಬಿಂಬವನ್ನು ಪ್ರೀತಿಸಿದರೆ, ಆಗ ಆ ಪ್ರತಿಬಿಂಬಕ್ಕೆ ಸರಿ ಹೊಂದುವಂತೆ ನಿಮ್ಮ ಹೆಂಡತಿಯನ್ನೇ ಬದಲಾಯಿಸಲು ಪ್ರಯತ್ನಿಸುತ್ತೀರ.
ನಮ್ಮಲ್ಲಿ ಬಹಳಷ್ಟು ಜನರು ತಮ್ಮ ಮಾನಸಿಕ ಪ್ರತಿಬಿಂಬಗಳನ್ನು ಪ್ರೀತಿಸುತ್ತಾರೆ. ಇದೇ ಸತ್ಯ. ನಮ್ಮ ಮನೆಗಳಲ್ಲಿ ಅಶಾಂತತೆಯಾಗುವುದಕ್ಕೆ ಇದೇ ಆರಂಭ. ನಿಕಟವಾದ ಕಲಹಕ್ಕೆ ಇದೇ ನಾಂದಿ.! ಸತ್ಯವಾಗಿ ಹೇಳುತ್ತೇನೆ, ಪ್ರೇಮಿಗಳು ನಿಕಟವಾದ ಶತ್ರುಗಳು. ಅವರು ನಿಕಟವಾಗಿರುತ್ತಾರೆ, ಆದರೆ ನಿರಂತರವಾಗಿ ಪರಸ್ಪರರಿಂದ ರಕ್ಷಣೆ ಮಾಡಿಕೊಳ್ಳುತ್ತಿರುತ್ತಾರೆ. ಅವರು ನಿರಂತರವಾಗಿ ಪರಸ್ಪರ ಅಧಿಕಾರ ಚಲಾಯಿಸಲು ಪ್ರಯತ್ನಿಸುತ್ತಾರೆ. ಅವರಿಬ್ಬರ ಮಧ್ಯೆ ಒಂದು ನಿಕಟವಾದ ಶತ್ರುತ್ವವಿದೆ, ಅದನ್ನೇ ಅವರು ಆತ್ಮೀಯತೆ ಎಂದು ಕರೆಯುತ್ತಾರೆ. ನಿಜವಾದ ಆತ್ಮೀಯತೆ ನೀವು ಪರಸ್ಪರ ಆರಾಮದಿಂದಿದ್ದರೆ ಮಾತ್ರ ನಿಜವಾದ ಅನ್ನೋನ್ಯತೆ ಸಂಭವಿಸುತ್ತದೆ. ಅದು ನಿಜವಾದ ಅನ್ನೋನ್ಯತೆ.
ಸ್ವಾಮೀಜಿ, ನೀವು ಹೇಳುತ್ತಿರುವುದು, ನಾವು ಆ ವ್ಯಕ್ತಿಯನ್ನು ಸಂಪೂರ್ಣವಾಗಿ, ಅವನ ತಪ್ಪುಗಳ ಸಹಿತ ಒಪ್ಪಿಕೊಳ್ಳಬೇಕೆಂದೇ?
ಇಲ್ಲ!
‘ಒಪ್ಪಿಕೊಳ್ಳುವುದು' ಎಂಬ ಪದವೂ ಕೂಡ ತೆಗಳವಿಕೆಯ ಭಾವನೆಯನ್ನು ಒಳಗೊಂಡಿರುತ್ತದೆ. 'ಅವರ ಎಲ್ಲ ತಪ್ಪುಗಳ ಸಹಿತ' ಎಂದು ನೀವು ಹೇಳುವಾಗ, ಅದೊಂದು ಮೌನವಾದ ದೂರಿನಂತೆ. ಅದು “ಏನು ಮಾಡಲಿ, ಅದರ ಜೊತೆ ನಾವು ಬಾಳಬೇಕು' ಎಂದು ಹೇಳುವಂತಿದೆ. ಇಲ್ಲ! ನಾನು ಹೇಳುತ್ತೇನೆ, ಆ ವ್ಯಕ್ತಿಯನ್ನು ಅವನಿರುವ ಹಾಗೆಯೇ ನಿಮ್ಮ ಜೀವನದೊಳಕ್ಕೆ ಸ್ವಾಗತಿಸಿ. ಒಪ್ಪಿಕೊಳ್ಳುವುದು ಮತ್ತು ಸ್ವಾಗತಿಸುವುದರ ಮಧ್ಯೆ ವ್ಯತ್ಯಾಸವಿದೆ. ಒಪ್ಪಿಕೊಳ್ಳುವುದು ರಾಜಿ ಮಾಡಿಕೊಂಡ ಹಾಗೆ. ಸ್ವಾಗತಿಸುವುದೆಂದರೆ ಯಾವ ಅಪೇಕ್ಷೆಗಳಿಲ್ಲದೆ, ಯಾವ ನಿಬಂಧನೆಗಳಿಲ್ಲದೆ ಒಳಪಡದೆ, ಆ ವ್ಯಕ್ತಿಗೆ ನಿಮ್ಮ ಜೀವಾತ್ಮವನ್ನು ತೆರೆಯುವುದು.
ಜ್ಞಾಪಿಸಿಕೊಳ್ಳಿ: ಇದೇ ಸೃಷ್ಟಿಯು ವಿಶ್ವಶಕ್ತಿಯು ನಿಮಗೆ ನೀಡಿರುವ ಕೊಡುಗೆ. ಅದನ್ನು ಅನುಗ್ರಹಿತ ಭಾವದಿಂದ, ವಿನಯದಿಂದ ಸ್ವೀಕರಿಸಿ. ಹೀಗೆ ಮಾಡಿದಾಗ, ಮೂಲಾಧಾರ ಚಕ್ರದ ಅದ್ಭುತವಾದ ಚೈತನ್ಯವು ನಿಮಗಾಗಿ ತೆರೆದುಕೊಳ್ಳುತ್ತದೆ. ಈ
ಚಕ್ರವನ್ನು ಜಾಗ್ರತಗೊಳಿಸುವುದು ಒಂದು ನಿರಂತರವಾದ ಚೈತನ್ಯದ ಉಗಮವನ್ನು ಮುಟ್ಟುವ ಹಾಗೆ. ಕಲ್ಪನೆ, ಅಪೇಕ್ಷೆ ಮತ್ತು ದುರಾಸೆಯಿಂದ ಬಂಧಿತವಾಗಿರುವ ಈ ಅದ್ಭುತ ಚೈತನ್ಯವು ಸ್ವಯಂ ಉತ್ಪಾದನೆಗೆ, ವ್ಯಾಪಾರಕ್ಕೆ, ಜೀವನಕ್ಕೆ, ನೈಜತೆಗೆ ಉಪಯೋಗವಾಗುವಂತೆ ಮಾಡಬಹುದು!
ಅಷ್ಟೇ ಅಲ್ಲ, ನಿಮ್ಮ ಮನೆಯು ಒಂದು ಕ್ಷೇತ್ರ - ಶಾಂತಿಯ ದೇಗುಲವಾಗುವುದನ್ನು ನೀವು ಕಾಣಬಹುದು. ನಮ್ಮ ಮನೆಗಳು ಧರ್ಮಕ್ಷೇತ್ರಗಳಾಗಬೇಕೆಂದು ಉದ್ದೇಶಿಸಿರುವುದು. ಆದರೆ, ಅವು ಕುರುಕ್ಷೇತ್ರಗಳಾಗಿವೆ. ನಾನು ಹೇಳುವುದು ಸರಿಯೇ? ಮತ್ತು ಅವು ಕಲಹಗಳ ನೆಲೆ ಆಗಿರುವುದು ಏಕೆ? ಏಕೆಂದರೆ, ನಾವು ಮನುಷ್ಯರ ಕೆತ್ತನೆ ಮಾಡುತ್ತಿದ್ದೇವೆ. ನಾವು ವಿಗ್ರಹಗಳನ್ನು ಅಥವಾ ಮರದ ತುಂಡನ್ನು ಕೆತ್ತನೆ ಮಾಡಿದರೆ, ಸುಂದರವಾದ ಆಕೃತಿ ಮತ್ತು ಪೀಠೋಪಕರಣಗಳನ್ನಾದರೂ ರಚಿಸಬಹುದು, ಆದರೆ ಮನುಷ್ಯರ ಕೆತ್ತನೆ ಮಾಡಿದರೆ ಕೇವಲ ವೇದನೆ ಉಂಟಾಗುತ್ತದೆ.
ಒಬ್ಬ ವ್ಯಕ್ತಿ ನನ್ನನ್ನು ಕೇಳಿದ, "ಸ್ವಾಮೀಜಿ, ಹದಿನೆಂಟು ಕೈಗಳಿರುವ ಆ ದೇವಿಯೊಂದಿಗೆ ಸಂಪರ್ಕ ಹೊಂದುವ ಮಾರ್ಗವನ್ನು ದಯವಿಟ್ಟು ಹೇಳುತ್ತೀರ.'' ನಾನವನಿಗೆ ಹೇಳಿದೆ, "ಮೊದಲು ಎರಡು ಕೈಗಳನ್ನು ಹೊಂದಿರುವ ನಿನ್ನ ಹೆಂಡತಿಯೊಂದಿಗೆ ಸಂಪರ್ಕ ಹೊಂದಲು ಪ್ರಯತ್ನಿಸು, ನಂತರ ಹದಿನೆಂಟು ಕೈಗಳುಳ್ಳ ದೇವಿಯೊಂದಿಗೆ ಸಂಪರ್ಕ ಹೊಂದುವುದು ಹೇಗೆ ಎಂದು ನೋಡೋಣ!''
(ನಗೇ!)
ಇನ್ನೊಬ್ಬ ವ್ಯಕ್ತಿ ತನ್ನ ಬಳಿಗೆ ಬಂದು ವಿವಾಹ ವಿಚ್ಛೇದನಕ್ಕಾಗಿ ಆಶೀರ್ವಾದವನ್ನು ಬೇಡಿದ. ನಾನು ವಿವಾಹಕ್ಕಾಗಿ ಆಶೀರ್ವದಿಸುತ್ತೇನೆ ಹೊರತು ವಿವಾಹ ವಿಚ್ಛೇದನಕ್ಕಾಗಿ ಎಂದೂ ಅಲ್ಲ ಎಂದು ಅವನಿಗೆ ಹೇಳಿದೆ.
ಅವನ ಸಮಸ್ಯೆಯನ್ನು ಬಗೆಹರಿಸಲು ಅದೇನೆಂದು ಕೇಳಿದೆ. ಅವನು ಹೇಳಿದನು, "ಸ್ವಾಮೀಜಿ, ಈದಿನ ಬೆಳಿಗ್ಗೆ, ನಾನು ಕಾಫಿ ಬೇಕೆಂದು ಕೇಳಿದೆ. ಅವಳು ಎಷ್ಟು ಆತುರದಿಂದ ಕಾಫಿಯನ್ನು ತಂದು ನನ್ನ ಬಟ್ಟೆಯ ಮೇಲೆ ಚೆಲ್ಲಿದಳು.'' ನನಗೆ ಆಶ್ಚರ್ಯವಾಯಿತು ಮತ್ತು ವಿವಾಹ ವಿಚ್ಛೇದನವನ್ನು ಕೇಳಲು ಈ ಘಟನೆ ತುಂಬ
ಅಲ್ಪವಾದದ್ದು ಎಂದು ಹೇಳಿದೆ. ಅವನು ಮುಂದುವರಿಸಿದ, "ಸ್ವಾಮೀಜಿ, ನಿಮಗೆ ಗೊತ್ತಿಲ್ಲ, ಇವತ್ತು ಕಾಫಿ ಚೆಲ್ಲಿದಳು, ನಾಳೆ ಅವಳು ಆಸಿಡ್ ಅನ್ನೇ (Acid) ಚೆಲ್ಲುತ್ತಾಳೆ.'' ನನಗೆ ಬಹಳ ಆಶ್ಚರ್ಯವಾಯಿತು. ನಾನು ಹೇಳಿದೆ, “ಆಯ್ಯ, ಕಾರಣವಿಲ್ಲದೆ ಕಾಫಿಯಿಂದ ಆಸಿಡ್ವರೆಗೆ ಏಕೆ ಹೋಗುತ್ತೀರ? ಏನೋ ಸ್ವಲ್ಪ ಕೋಪ ಮತ್ತು ಆತುರದಿಂದಲೋ ಅವಳು ಕಾಫಿಯನ್ನು ಚೆಲ್ಲಿದಳು ಅಷ್ಟೆ, ಮತ್ತು ಹೇಗಿದ್ದರೂ ನಿನ್ನ ಬಟ್ಟೆಗಳನ್ನು ಒಗೆಯುವವಳು ಅವಳೇ ಅಲ್ಲವೇ!''
ಅವನು ಮುಂದುವರೆಸಿದ, “ಸ್ವಾಮೀಜಿ, ನಮ್ಮ ಮದುವೆಯಲ್ಲಿ ಒಂದು ಸಂಪ್ರದಾಯವಿದೆ, ಏನೆಂದರೆ ನೀರು ತುಂಬಿರುವ ಮೂರು ಮಡಿಕೆಗಳನ್ನು ಇಟ್ಟಿರುತ್ತಾರೆ, ಮತ್ತು ಮದುವೆಯಾದ ಆ ದಂಪತಿಗಳು ಆ ಮೂರು ಮಡಿಕೆಗಳಲ್ಲೂ ತಮ್ಮ ಕೈಗಳನ್ನು ಬಿಟ್ಟು, ಅವುಗಳಲ್ಲೊಂದರಲ್ಲಿ ಇಟ್ಟಿರುವಂತಹ ಉಂಗುರವನ್ನು ಹುಡುಕಲು ಪ್ರಯತ್ನಿಸಬೇಕು. ಆ ಸಂದರ್ಭದಲ್ಲೇ ಅವಳು ತನ್ನ ಉಗುರಿನಿಂದ ನನ್ನ ಕೈಯನ್ನು ಪರಚಿದಳು!''
(ನಗೆ!)
ಭಾರತೀಯ ಮದುವೆಗಳಲ್ಲಿ ದಂಪತಿಗಳ ಮಧ್ಯೆ ಅಂತರವನ್ನು ಕಡಿಮೆ ಮಾಡಲೆಂದೇ ಈ ರೀತಿಯ ಚಿಕ್ಕ ಆಟಗಳನ್ನು ಆಡಿಸಲಾಗುತ್ತದೆ. ಹತ್ತು ವರ್ಷಗಳಿಂದ ಇಂಥ ಸಣ್ಣ ಪುಟ್ಟ ವಿಷಯಗಳ ಒಂದು ಪಟ್ಟಿಯನ್ನೇ ಇಟ್ಟುಕೊಂಡು ಬಂದಿದ್ದಾನೆ! ನಾನು ಹೇಳಿದೆ, “ಆಯ್ಯ, ಇಂತಹ ಪೋಲೀಸರ ದಾಖಲಾಪಟ್ಟಿಯನ್ನು ಇಟ್ಟುಕೊಂಡರೆ, ನಿನ್ನ ಜೊತೆ ಒಬ್ಬ ವ್ಯಕ್ತಿ ಹೇಗೆ ತಾನೆ ಜೀವಿಸಲು ಸಾಧ್ಯ!''
ನೋಡಿ: ನಾವು ಎರಡು ಕೆಲಸಗಳನ್ನು ಮಾಡುವುದು ಉಂಟು. ಒಂದು, ನಮ್ಮ ವಾದಗಳನ್ನು ಮುಂದಿಟ್ಟು ಒಂದು ತೀರ್ಮಾನಕ್ಕಾಗಿ ಹುಡುಕುತ್ತೇವೆ, ಇನ್ನೊಂದು ಏನೆಂದರೆ ತೀರ್ಮಾನವನ್ನು ಮೊದಲು ಮಾಡಿ, ನಂತರ ಆ ತೀರ್ಮಾನವನ್ನು ಆಧಾರಿಸಲು ವಾದಗಳನ್ನು ಸಂಗ್ರಹಿಸುತ್ತೇವೆ. 99 ಪ್ರತಿಶತದಷ್ಟು ಬಾರಿ ನಾವು ಎರಡನೆಯದನ್ನು ಮಾಡುತ್ತೇವೆ.
ನೋಡಿ, ನಮ್ಮ ಸುತ್ತಮುತ್ತಲೂ ಎಷ್ಟೊಂದೆಲ್ಲ ನಡೆಯುತ್ತಿವೆ. ಆದರೆ ನಮಗೆ ಬೇಕಾದ್ದನ್ನು ಮಾತ್ರ ನಾವು ಗ್ರಹಿಸುತ್ತೇವೆ, ನಿಜವಾಗಿ ಆಗುತ್ತಿರುವುದನ್ನೆಂದೂ ಅಲ್ಲ.
ಆದ್ದರಿಂದಲೇ, ನೀವು ನೈಜತೆಯನ್ನು ಕಳೆದುಕೊಳ್ಳುತ್ತಿದ್ದೀರ. ನೈಜತೆಯು ನಿರಂತರ ವಾಗಿ ಇದೆ, ಆದರೆ ನೀವು ನಿಮಗೆ ಬೇಕಾದದ್ದನ್ನು ಮಾತ್ರ ನೋಡುತ್ತಿದ್ದೀರ. ಮದುವೆಯಾದ ಕೆಲವು ತಿಂಗಳುಗಳಲ್ಲಿ ಗಂಡ ಅಥವಾ ಹೆಂಡತಿಯು ಒಬ್ಬರು ಇನ್ನೊಬ್ಬರ ಬಗ್ಗೆ ಒಂದು ತೀರ್ಮಾನವನ್ನು ಮಾಡಿ, ತದನಂತರ, ಆ ವ್ಯಕ್ತಿ ಏನೇ ಮಾಡಲಿ, ಅದನ್ನು ಆ ತೀರ್ಮಾನದ ದೃಷ್ಟಿಯಿಂದಲೇ ನೋಡುತ್ತಾರೆ. ತಮ್ಮ ತೀರ್ಮಾನವನ್ನು ಕಾಪಾಡಿಕೊಳ್ಳಲು ಅವರು ವಾದಗಳನ್ನು ಹುಡುಕಿ ಸಂಗ್ರಹಿಸುತ್ತಾರೆ.
ಆದ್ದರಿಂದಲೇ, ನೀವು ನಿಮ್ಮ ಹೆಂಡತಿಯು ಮೂರ್ಖಳೆಂದು ತೀರ್ಮಾನಿಸಿದರೆ, ಅವಳು ಸದಾಕಾಲವೂ ನಿಮಗೆ ಮೂರ್ಖಳಾಗಿಯೇ ಕಾಣುತ್ತಾಳೆ. ನಿಮ್ಮ ಗಂಡನು ನಿಮ್ಮನ್ನು ಅವರ ಹಿಡಿತದಲ್ಲಿಟ್ಟುಕೊಳ್ಳುವವ ಎಂದು ತೀರ್ಮಾನಿಸಿದರೆ, ಅವರು ಏನೇ ಮಾಡಲಿ, ಯಾವಾಗಲೂ ಹಾಗೆ ಇರುವಂತೆ ಕಾಣುತ್ತಾರೆ.
ನೀವು ಹೀಗೆ ಮಾಡಿದರೆ, ನಿಮ್ಮ ಗಂಡ ಅಥವಾ ಹೆಂಡತಿಯಲ್ಲಿರುವ ನಿಜಾಂಶವನ್ನು ಕಾಣಲು ಎಂದೂ ಸಾಧ್ಯವಾಗುವುದಿಲ್ಲ; ನಿಮ್ಮ ತೀರ್ಮಾನವನ್ನು ದೃಢ ಪಡಿಸುವಂತಹ ಅಂಶಗಳನ್ನು ಮಾತ್ರ ನೀವು ನೋಡುತ್ತೀರ, ಇದು ಹೇಗೆ ಎಂದರೆ, ನಿಮಗೆ ಹಸಿವಾದಾಗ, ದಾರಿಯಲ್ಲಿ ಹೊಟೆಲ್ಗಳು ಮಾತ್ರ ನಿಮ್ಮ ಕಣ್ಣಿಗೆ ಬೀಳುತ್ತವೆ. ಒಂದು ನಾಯಿಯನ್ನು ಕೊಲ್ಲುವುದಕ್ಕೆ ಮುಂಚೆ ನಾವು ಮಾಡುವುದೇನು? ಅದನ್ನು ಹುಚ್ಚುನಾಯಿ ಎಂದು ಕರೆದು, ಅದನ್ನು ಸಾಯಿಸುತ್ತೇವೆ.
ಈ ಮನೋಭಾವನೆಯನ್ನು ಬಿಟ್ಟುಬಿಡಿ. ಆಗ ನೀವು ನೋಡುವ ಯಾವುದೇ ವ್ಯಕ್ತಿ ಅಥವಾ ವಸ್ತುವಿನಲ್ಲಿ ಒಂದು ರೀತಿಯ ತಾಜಾತನವನ್ನು ಕಾಣಬಹುದು.
ಒಂದು ಸಣ್ಣ ಕಥೆ:
ಒಬ್ಬ ವ್ಯಕ್ತಿ ಮೂರು ಗಂಟೆಗಳಿಂದ ತನ್ನ ಹೆಂಡತಿ ಕಾಣೆಯಾಗಿದ್ದರ ಬಗ್ಗೆ ದೂರು ಹೇಳಲು ಪೋಲಿಸ್ ಠಾಣೆಗೆ ಆಗಮಿಸಿದ್ದನು. ಪೋಲಿಸ್ ಅಧಿಕಾರಿಯು ಅವನನ್ನು ಕೇಳಿದನು, “ಅವಳ ಎತ್ತರ, ತೂಕ, ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತೀರಾ?’’
ಆ ವ್ಯಕ್ತಿ ಹೇಳಿದ, “ಓ! ಅದೆಲ್ಲ ನನಗೆ ತಿಳಿಯದು.’’
ಪೋಲಿಸ್ ಅಧಿಕಾರಿ ಕೇಳಿದನು, "ಅವಳು ಮನೆಯಿಂದ ಹೊರಟಾಗ ಯಾವ ಬಟ್ಟೆಯನ್ನು ಧರಿಸಿದ್ದಳು?"
ಆ ವ್ಯಕ್ತಿ ಹೇಳಿದನು, "ಸರ್, ಅದನ್ನು ಅಷ್ಟು ಗಮನಿಸಲಿಲ್ಲ. ಆದರೆ, ಅವಳ ಜೊತೆ ನಾಯಿಯನ್ನು ಕರೆದುಕೊಂಡು ಹೋದಳು. ಅಷ್ಟು ತಿಳಿದಿದೆ.''
ಪೋಲಿಸ್ ಅಧಿಕಾರಿ ಕೇಳಿದನು "ಆ ನಾಯಿ ಯಾವ ಜಾತಿಯದು?''
ಆ ವ್ಯಕ್ತಿ ಉತ್ತರಿಸಿದ "ಡಾಲ್ಮೇಷನ್ (Dalnation) ಜಾತಿಯದು, ಕಪ್ಪು ಬಣ್ಣದ ಚುಕ್ಕಿಗಳ ಬದಲು, ಅದಕ್ಕೆ ಬೂದಿ ಬಣ್ಣದ ಚುಕ್ಕಿಗಳಿವೆ; ಅದು ಸುಮಾರು 50 ಪೌಂಡ್ಗಳಷ್ಟು ತೂಕವಿದೆ, ಮತ್ತು ಅದಕ್ಕೆ ಚುಕ್ಕಿಗಳಿದ್ದ ಶುದ್ಧ ಬಿಳುಪುಬಣ್ಣದ ಬಾಲ; ಅದು ಬೆಳ್ಳಿಯ ಸರಪಣಿಯಿರುವ ಕೆಂದು ಬಣ್ಣದ ಕೊರಳುಪಟ್ಟಿಯನ್ನು ಧರಿಸುತ್ತದೆ. ಅದರ ಹೆಸರು 'ಸ್ಪಾಟ್' ಎಂದು.''
ಆ ಪೋಲಿಸ್ ಅಧಿಕಾರಿಯು ಹೇಳಿದನು, "ಅಷ್ಟು ಸಾಕು, ಅವರನ್ನು ಕಂಡುಹಿಡಿಯುತ್ತೇವೆ!''
(ನಗೆ!)
ಮದುವೆಯಾದ ಮೇಲೆ ಕೆಲವು ತಿಂಗಳುಗಳಲ್ಲಿ ಮಾತ್ರ, ಗಂಡ ಹೆಂಡತಿ ಇಬ್ಬರು ಒಂದು ಸ್ವಲ್ಪ ತಾಜಾತನದಿಂದ ಇರುತ್ತಾರೆ. ಆ ಕೆಲವು ತಿಂಗಳುಗಳಲ್ಲಿ ಒಬ್ಬರ ಬಗ್ಗೆ ಇನ್ನೊಬ್ಬರು ತೀರ್ಮಾನಗಳನ್ನು ಸಂಗ್ರಹಿಸುತ್ತಾರೆ. ಆಮೇಲೆ, ಅವರಿಬ್ಬರು ಪರಸ್ಪರ ಅನ್ಯೂನ್ಯತೆಯಿಂದಿರುವುದಿಲ್ಲ. ವಾಸ್ತವದಲ್ಲಿ ಒಬ್ಬರು ಇನ್ನೊಬ್ಬರನ್ನು ನೋಡುವಾಗ, ಆ ವ್ಯಕ್ತಿಯನ್ನೇ ನೋಡುವುದಿಲ್ಲ. ಅವರು ಅದರ ತೀರ್ಮಾನಗಳಿಂದಲೇ ಸಂಬಂಧ ಕಲ್ಪಿಸಿ ಮಾತನಾಡುತ್ತಾರೆ ಅಷ್ಟೆ.
ಗಂಡನು ಹೆಂಡತಿಯ ಬಗ್ಗೆ ಸಂಗ್ರಹಿಸಿರುವು ತೀರ್ಮಾನಗಳೊಂದಿಗೆ ಸಂಬಂಧ ಕಲ್ಪಿಸುತ್ತಾನೆ, ಮತ್ತು ಹೆಂಡತಿಯು ಗಂಡನ ಬಗ್ಗೆ ಸಂಗ್ರಹಿಸಿರುವ ತೀರ್ಮಾನ ಗಳೊಂದಿಗೆ ಸಂಬಂಧ ಕಲ್ಪಿಸುತ್ತಾಳೆ. ವಾಸ್ತವದ ಗಂಡ ಮತ್ತು ವಾಸ್ತವದ ಹೆಂಡತಿಯೂ ಬೇರೆ! ಮನೆಯಲ್ಲಿ ಮತ್ತೆ ಅವರು ನಾಲ್ಕು ಮಂದಿಯಾಗಿಬಿಡುತ್ತಾರೆ.
ಪ್ರಾಮಾಣಿಕವಾಗಿ ಒಂದು ಪರೀಕ್ಷೆ ನಡೆಸಿ: ನಿಮ್ಮ ಗಂಡ ಅಥವಾ ಹೆಂಡತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅವನ ಅಥವಾ ಅವಳ ಜೊತೆ ಮಾತನಾಡಿ ಎಷ್ಟು ದಿನಗಳಾಗಿವೆ?
ಖಂಡಿತವಾಗಿ, ಬಹಳ ದಿನಗಳೇ ಆಗಿರುತ್ತದೆ. ಮತ್ತು ಹಿಂದಿನ ದಿನಗಳೇ ಚಿನ್ನದಂಥ ದಿನಗಳೆಂದೂ, ಈಗ ಜೀವನವು ಬೇಸರವಾಗಿಬಿಟ್ಟಿದೆ ಎಂದು ಭಾವಿಸುತ್ತೇವೆ. ಅದನ್ನು ಬೇಸರವನ್ನಾಗಿಸುವುದು ಕೇವಲ ನಿಮ್ಮ ಮನೋಭಾವನೆಯೇ.
ಒಬ್ಬ ವ್ಯಕ್ತಿಯು ಬೆಳೆಯಲು ನೀವು ಅವಕಾಶವನ್ನೇ ನೀಡುವುದಿಲ್ಲ. ಅವರನ್ನು ಅಚ್ಚು ಮಾಡಲು ಅದೆಷ್ಟು ಆತುರದಿಂದಿರುತ್ತೀರಿ. ನೀವು ಅವರ ವಿಷಯದಲ್ಲಿ ಯಾವುದೇ ಹೊಸ ವಿಷಯವನ್ನು ಗಮನಿಸಲು ಬಯಸುವುದೂ ಇಲ್ಲ. ಮದುವೆಯಾದ ಸ್ವಲ್ಪ ವರ್ಷಗಳಾದ ಮೇಲೆ, ನೀವು ನಿಮ್ಮ ಹೆಂಡತಿ ಅಥವಾ ಗಂಡನನ್ನು ನೋಡುವುದೂ ಕೂಡ ಇಲ್ಲ. ಏಕೆಂದರೆ, ನಿಮ್ಮ ಮನಸ್ಸಿನಲ್ಲಿರುವ ಅವರ ಪ್ರತಿಬಿಂಬದ ಜೊತೆ ಸಂಬಂಧ ಕಲ್ಪಿಸುವುದರಲ್ಲೇ ಸಂತೋಷಪಡುತ್ತೀರ.
ಆಗ ಆಗುವುದೇನು? ತನ್ನ ಸ್ವಂತ ಹೆಂಡತಿಯ ಬಗ್ಗೆಯೇ ಏನೂ ತಿಳಿಯದ ಈ ವ್ಯಕ್ತಿಯ ಹಾಗೆ ಆಗಿಬಿಡುತ್ತೀರ! ಹೆಂಡತಿಯ ವಿವರಣೆಯನ್ನು ತಿಳಿಯದೆ ಇರುವುದು ಒಂದು ಮೇಲ್ಮಟ್ಟಿನ ಸಮಸ್ಯೆ. ಆದರೆ, ವಿಷಯವು ಇನ್ನೂ ಆಳವಾದದ್ದು. ನೀವು ನಿಮ್ಮೊಂದಿಗೆ ಜೀವಿಸುತ್ತಿರುವ ನಿಜವಾದ ವ್ಯಕ್ತಿಯನ್ನು ಕಳೆದುಕೊಳ್ಳುತ್ತೀರ (miss). ಆ ವ್ಯಕ್ತಿಯ ಬಗ್ಗೆ ಇರುವ ಕಲ್ಪನೆಯ ಜೊತೆ ಮಾತ್ರ ಜೀವಿಸುತ್ತೀರ ಅಷ್ಟೆ.
ಕೇವಲ ಒಂದು 24 ಗಂಟೆಗಳ ಕಾಲದ ನಿಮ್ಮ ಗಂಡ ಅಥವಾ ಹೆಂಡತಿಯನ್ನು ಮೊದಲನೆಯ ಬಾರಿಗೆ ನೋಡುವ ಹಾಗೆ ನೋಡುವುದಾಗಿ ಮನಸ್ಸು ಮಾಡಿ. ಅವಳ ಪ್ರತಿಯೊಂದು ಮಾತು ಅಥವಾ ವರ್ತನೆಯನ್ನು ಹೊಸತನದಿಂದ ಮತ್ತು ಮುಗ್ಧತೆಯಿಂದ, ಯಾವ ತೀರ್ಮಾನವನ್ನೂ ಮಾಡದೆ ಸ್ವೀಕರಿಸಿ. ನಿಮ್ಮೊಳಗೆ ಅವಳಲ್ಲಿರುವ ಪ್ರೀತಿಯನ್ನು ಅನುಭವಿಸಿ. ಅವಳೇನಾದರೂ ನಿಮಗೆ ರೇಗುವಂಥ ಮಾತುಗಳನ್ನು ಆಡಿದರೂ ಕೂಡ, ಸಾಮಾನ್ಯವಾಗಿ ನೀವು ವರ್ತಿಸುವ ವಿವಾದಶೀಲ ರೀತಿಯ ಬದಲಿಗೆ, ಅವಳಾಡಿದ ಮಾತುಗಳನ್ನು ಅರಿವಿನಿಂದ ಆಲಿಸಿ, ಶಾಂತಿಯಿಂದ, ಪ್ರೀತಿಯಿಂದ ಪ್ರತಿಕ್ರಿಯಿಸಿ. ನಿಜವಾಗಿ, ನೀವು ನಿಮ್ಮಿಬ್ಬರಿಗೂ ಹೊಸ ಹಾದಿ ತೆರೆದು, ಇಬ್ಬರಿಗೂ ಬೆಳೆಯಲು ಒಂದು ಹೊಸ ಅವಕಾಶವನ್ನೇ ನೀಡುತ್ತಿದ್ದೀರ, ಇದನ್ನು ನೀವು ಗಮನಿಸಬಹುದು.
ಇದಕ್ಕೆ ಇದ್ದಹಾಗೆ, ವಿಷಯಗಳು ಬಹು ಕಷ್ಟವೆಂದು ಕಾಣುವುದಕ್ಕೆ ನಿಮ್ಮ ಮನೋಭಾವನೆಯೇ ಕಾರಣವೆಂದು ನಿಮಗೆ ಅರಿವಾಗುತ್ತದೆ. ಆದರೆ, ನಿಮ್ಮ
ಹೆಂಡತಿಯೂ ಕೂಡ ಪರಸ್ಪರ ವರ್ತಿಸಬೇಕು ಎಂದು ನೀವು ಹೇಳಬಹುದು. ಆದರೆ, ನಾನು ಹೇಳುತ್ತೇನೆ: ನಿಮಗೆ ನಿಮ್ಮಲ್ಲಿ ಮತ್ತು ಇತರರಲ್ಲಿ ಪರಿವರ್ತನೆಯುಂಟುಮಾಡುವ ಶಕ್ತಿಯಿದೆ. ನಿಮ್ಮ ಮಾನಸಿಕ ಸ್ಥಿತಿಯಲ್ಲಿ ಕೇವಲ ಒಂದು ಬದಲಾವಣೆಯಿಂದ ನೀವು ಹೆಚ್ಚು ಸಾಧಿಸಬಹುದು. ನೀವು ಬದಲಾಯಿಸಲು ನಿರ್ಧರಿಸಿದಾಗ, ನಿಮ್ಮ ಹೆಂಡತಿಯೂ ಕೂಡ ತಾನಾಗಿಯೇ ತನ್ನ ವರ್ತನೆಗಳನ್ನು ಬದಲಾಯಿಸಿಕೊಳ್ಳುತ್ತಾಳೆ.
ಒಂದು ಚಿಕ್ಕ ಕಥೆ:
ಒಬ್ಬ ವ್ಯಕ್ತಿ ಸ್ಮಶಾನದ ಪಕ್ಕದಲ್ಲಿ ನಡೆದು ಹೋಗುತ್ತಿದ್ದಾಗ, ಅದರೊಳಗಿಂದ ಜೋರಾದ ಕೂಗೊಂದು ಅವನ ಕಿವಿಗೆ ಬಿದ್ದಿತು. ನಡೆಯುತ್ತಿದ್ದದ್ದನ್ನು ನಿಲ್ಲಿಸಿ ತಾನು ಏನಾದರೂ ಸಹಾಯ ಮಾಡಬಹುದಾಗಿ ನೋಡಿದ. ಅವನು ಸ್ಮಶಾನದ ಒಳಗೆ ಹೋದ, ಅಲ್ಲಿ ಒಂದು ಶಿಲಾಸ್ಮಾರಕದ ಬಳಿ ಒಬ್ಬ ಮನುಷ್ಯ ಜೋರಾಗಿ ಅಳುತ್ತಿರುವುದನ್ನು ನೋಡಿದ. ಅವನು ಪುನಃ ಪುನಃ ಹೇಳುತ್ತಲೇ ಇದ್ದ, “ನೀನೇಕೆ ಹೊರಟುಹೋಗಬೇಕಾಗಿತ್ತು? ನೀನೇಕೆ ಹೋಗಬೇಕಾಗಿತ್ತು?” ಆ ವ್ಯಕ್ತಿಗೆ ಆ ಮನುಷ್ಯ ನರಳುತ್ತಿದ್ದದ್ದನ್ನು ನೋಡಿ ತುಂಬ ದುಃಖವಾಯಿತು, ಹಾಗಾಗಿ ಅವನು ಆ ಮನುಷ್ಯನ ಹತ್ತಿರ ಬಂದು ಕೇಳಿದ, “ಸಾರ್, ಕ್ಷಮಿಸಿ, ಅದು ನಿಮ್ಮ ಹೆಂಡತಿಯೇನು?” ಆ ಮನುಷ್ಯ ಉತ್ತರಿಸಿದ “ಇಲ್ಲ, ಇದು ಅವಳ ಮೊದಲನೆಯ ಗಂಡ.”
(ಜೋರು ನಗೆ!)
ನಮ್ಮ ಸ್ವಂತ ಕಲ್ಪನೆ ಹಾಗೂ ನೈಜತೆಯ ಮಧ್ಯೆ ಆಗುವ ಬರೀ ಒಂದು ಅಸಮಾನತೆಯಿಂದಷ್ಟೆ ಸಂಬಂಧಗಳು ಒಂದು ವೇದನೆಯಾಗಿ ಸಂಭವಿಸುತ್ತವೆ. ಇನ್ನು ಹೆಚ್ಚು ಕೆಟ್ಟದ್ದೇನೆಂದರೆ, ಜನರು ಮುಂದಿನ ಸಂಬಂಧವು ತಮ್ಮ ಕಲ್ಪನೆಗೆ ಸರಿಹೊಂದುವುದೆಂಬ ಭಾವನೆಯಿಂದ ಒಂದು ಸಂಬಂಧದಿಂದ ಮತ್ತೊಂದು ಸಂಬಂಧಕ್ಕೆ ಹೋಗುತ್ತಾರೆ.
ಆ ಸಂಬಂಧವನ್ನು ಒಂದಷ್ಟು ಸಮಯ ಮುಂದುವರಿಸಿ, ಅದರಲ್ಲೂ ಕೂಡ ಏನೋ ಒಂದು ಅಭಾವವಿರುವುದನ್ನು ಅರಿಯುತ್ತಾರೆ ಮತ್ತು ಮುಂದಿನ ಸಂಬಂಧಕ್ಕೆ ಹೋಗುತ್ತಾರೆ. ವಾಸ್ತವವಾಗಿ ಆ ಅಭಾವವು ಅವರ ಸ್ವಂತ ಕಲ್ಪನೆಯಿಂದ ಆಗುವುದು ಮತ್ತು ಇನ್ನೊಬ್ಬ ವ್ಯಕ್ತಿಯ ತಪ್ಪಿರುವುದಿಲ್ಲವೆಂದು ಅವರಿಗೆ ಅರಿವಾಗುವುದಿಲ್ಲ.
ಅವರು ತಮ್ಮ ಕಲ್ಪನಾ ಲೋಕದಲ್ಲಿ ಅದೆಷ್ಟು ಮುಳುಗಿರುತ್ತಾರೆ ಎಂದರೆ, ಅವರಿಗೆ ನೈಜತೆಯೇ ಒಂದು ಕಲ್ಪನೆಯಂತೆ ಕಾಣುತ್ತದೆ! ನಾನು ಹೇಳುತ್ತೇನೆ, ನಮ್ಮ ತೊಂದರೆಗಳು ಇಲ್ಲಿಯೇ ಆರಂಭವಾಗುವುದು. ನಮಗೆ ತೊಂದರೆಗಳುಂಟಾ ಗುವುದಕ್ಕೆ ಇದೇ ಆರಂಭದ ಹಂತ. ನಾವು ಯಾವ ದಿನ ವರ್ತಮಾನದಲ್ಲಿ ಬಾಳಲು ಆರಂಭಿಸುತ್ತೇವೋ, ಆದಿನ ನಾವು ಸಂತೋಷವನ್ನು ಅನುಭವಿಸಲು ಆರಂಭಿಸುತ್ತೇವೆ; ಯಾವಾಗಲೂ ಅದೆಷ್ಟು ಹೆಚ್ಚು ಪ್ರಮಾಣದ ಕಲ್ಪನೆಯಲ್ಲಿ ಮುಳುಗಿದ್ದೆವು ಎಂದು ಆದಿನ ನೀವು ಕಂಡುಹಿಡಿಯುತ್ತೀರಿ.
ಈದಿನ ಯುವಕರು ಒಬ್ಬರನ್ನೊಬ್ಬರು ಸಹಿಸಿಕೊಳ್ಳುವುದು ಹೆಚ್ಚು ಹೆಚ್ಚು ಕಷ್ಟವಾಗುತ್ತಿದೆ ಮತ್ತು ವಿವಾಹಗಳು ಎಷ್ಟು ಸುಲಭವಾಗಿ ಮುರಿದುಹೋಗುತ್ತಿವೆ. ಇದೆಲ್ಲ ಆಗುವುದನ್ನು ನೋಡಿ ಕನಿಕರವಾಗುತ್ತದೆ. ಈಗ, ಎಚ್ಚರಗೊಳಿಸುವಿಕೆಯ ಅಗತ್ಯವಾಗಿದೆ. ಕೇವಲ ಒಂದು ಆಳವಾದ ತಿಳುವಳಿಕೆ ಮಾತ್ರ ಈ ಎಚ್ಚರಗೊಳಿಸುವಿಕೆಯನ್ನು ತರಬಹುದು.
ಸಂಬಂಧಗಳ ವಿಷಯದಲ್ಲಿ ನಾವು ಇನ್ನೊಬ್ಬರತ್ತ ಬೆರಳು ತೋರಿಸಲು ಸಿದ್ಧರಾಗಿದ್ದೇವೆ. ಚಪ್ಪಾಳೆ ತಟ್ಟಿ ಶಬ್ದ ಮಾಡಲು ಎರಡು ಕೈಗಳ ಅವಶ್ಯಕತೆಯಿದೆ. ನೀವು ನಿಮ್ಮ ಮೇಲೆ ಕೆಲಸ ಮಾಡಿದಾಗ, ನಿಮಗೆ ಮತ್ತು ಇತರರಿಗೆ ವಿಷಯಗಳನ್ನು ಸ್ಪಷ್ಟಮಾಡಿಕೊಳ್ಳಬಹುದು. ಆ ಇನ್ನೊಬ್ಬ ವ್ಯಕ್ತಿಯ ಬದಲಾವಣೆಯ ಅವಶ್ಯಕತೆಯ ಬಗ್ಗೆ ಚಿಂತಿಸಬೇಡಿ.
ಇಲ್ಲಿಯವರೆಗೆ ಬರೆದಿರುವ ಪ್ರೇಮಕಥೆಗಳನ್ನು ನೀವು ಓದಿದರೆ, ವಾಸ್ತವದಲ್ಲಿ ಅವುಗಳಲ್ಲಿ ಎಲ್ಲಿಯೂ ಕೂಡ ಗಂಡ - ಹೆಂಡತಿ ಇಬ್ಬರೂ ಜೀವನಪರ್ಯಂತ ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಾ ಸಹಬಾಳ್ವೆ ನಡೆಸಿಯೇ ಇಲ್ಲ.
ನಿತ್ಯ ಪ್ರೇಮಿಗಳ ಬಗ್ಗೆ ರವೀಂದ್ರನಾಥ ಟಾಗೋರ್ ಅವರು ರಚಿಸಿರುವ ಒಂದು ಕಥೆಯಲ್ಲಿ ನಾಯಕ ಮತ್ತು ನಾಯಕಿ ಇಬ್ಬರೂ ಗಂಗಾನದಿಯ ಎರಡೂ ದಡಗಳ ಮೇಲೆ ನಿತ್ಯ ಪ್ರೇಮಿಗಳ ಹಾಗೆ ಬಾಳಬೇಕೆಂದು ನಿರ್ಧರಿಸುತ್ತಾರೆ. ವಾರಕ್ಕೊಮ್ಮೆ ಇಬ್ಬರೂ ದೋಣಿಯಲ್ಲಿ ಬಂದು ಒಬ್ಬರನ್ನೊಬ್ಬರು ಸಂಧಿಸಿ ಮತ್ತೆ ಹಿಂತಿರುಗುತ್ತಾರೆ.
ಹೀಗೆ ಮಾಡಿದರೆ, ಅವರು ಭೇಟಿಯಾಗುವ ಆ ಸಮಯದಲ್ಲಿ ಶಾಂತಿಯಿಂದಿರುತ್ತಾರೆ, ಅದೇನೋ ನಿಜ. ಅವರು ಭೇಟಿಯಾಗುವ ಪ್ರತಿ ಬಾರಿಯೂ, ಗಾಳಿಯಲ್ಲಿ ಒಂದು ಹೊಸತನವಿರುತ್ತದೆ, ಏಕೆಂದರೆ, ಅವರು ಕೇವಲ ಕೆಲವು ಗಂಟೆಗಳ ಕಾಲ ಮಾತ್ರ ಜೊತೆಯಲ್ಲಿರುತ್ತಾರೆ, ಆ ಒಂದು ಸಮಯವು ಅಮೂಲ್ಯವಾಗುತ್ತದೆ!
ನಿತ್ಯ ಪ್ರೇಮಿಗಳೆಲ್ಲರೂ, ರೋಮಿಯೋ-ಜೂಲಿಯೆಟ್ ಅಥವಾ ಲೈಲಾ-ಮಜ್ನು ಅಥವಾ ಅಂಬಿಕಾಪತಿ ಮತ್ತು ಅಮರಾವತಿ ಯಾರೇ ಆಗಿರಲಿ, ಅವರು ನಿಜವಾಗಿ ಸಹಬಾಳ್ವೆ ನಡೆಸಲೇ ಇಲ್ಲ! ಅವರು ಸಹಬಾಳ್ವೆ ನಡೆಸಲೇ ಇಲ್ಲ! ಅವರು ಸಹಬಾಳ್ವೆ ನಡೆಸಿದ್ದಿದ್ದರೆ, ಅವರ ನಿತ್ಯಪ್ರೇಮವನ್ನೇ ಪುನಃ ಹೇಳುವ ಸಮಸ್ಯೆಯೇನೆಂದರೆ, ಜೀವನಕ್ಕೆ ಹಿನ್ನೆಲೆ ಸಂಗೀತವೇನೂ ಇಲ್ಲ! ನೀವು ಟಿ.ವಿ.ಯಲ್ಲಿ ಪ್ರೇಮಕಥೆಗಳನ್ನು ವೀಕ್ಷಿಸಿದಾಗ, ಅವೆಲ್ಲವೂ ಹಿನ್ನೆಲೆ ಸಂಗೀತದೊಡನೆ ಇರುತ್ತವೆ, ಹಾಗಾಗಿ ನೀವು ಭ್ರಮೆಯ ಲೋಕದೊಳಕ್ಕೆ ಸುಲಭವಾಗಿ ಹೋಗುತ್ತೀರ. ಸಂಗೀತಕ್ಕೆ, ನಿಮ್ಮನ್ನು ಕರಗಿಸಿ ಒಂದು ಭೇದ್ಯತೆಯ (vulnerable) ಸ್ಥಿತಿಗೆ ಕರೆದುಕೊಂಡು ಹೋಗುವ ಶಕ್ತಿ ಇದೆ. ನೀವು ನೋಡುವ ಎಲ್ಲ ದೃಶ್ಯಗಳು, ವಿಶೇಷವಾಗಿ ಪ್ರೇಮ ದೃಶ್ಯಗಳು ಹಿನ್ನೆಲೆ ಸಂಗೀತದೊಡನೆ ಬರುತ್ತವೆ. ನೀವು ಹಿನ್ನೆಲೆ ಸಂಗೀತದ ಕಾರಣದಿಂದಲೇ ಅದನ್ನು ಅಷ್ಟೊಂದು ಆಸ್ವಾದಿಸುತ್ತೀರ. ಆ ಟಿ.ವಿ. ಪೆಟ್ಟಿಗೆಯಲ್ಲಿ ಸೃಷ್ಟಿಸಿರುವ ವಾತಾವರಣದಿಂದ ನೀವು ಸಂಪೂರ್ಣವಾಗಿ ಸಮ್ಮೋಹವಾಗುತ್ತೀರ.
ನಿಜ ಜೀವನದಲ್ಲಿ ನೀವು ಆ ಸಂಗೀತಕ್ಕಾಗಿ ಹುಡುಕುತ್ತೀರ, ಆದರೆ ಅದನ್ನು ಕಾಣುವುದಿಲ್ಲ! ಕಲ್ಪನೆಯಿಂದ ಕವಿತೆಯನ್ನು ಬರೆಯುವುದು, ಕಣ್ಣುಮುಂದೆ ತಂದುಕೊಂಡು ಕವಿತೆಯನ್ನು ರಚಿಸುವುದೇ ಬೇರೆ. ಮೊದಲನೆಯ ಕೇವಲ ಒಂದು ಕಲ್ಪನೆ ಅಷ್ಟೆ, ಅದು ಆಕಾಶಕ್ಕಾಗಿ ಕೈಚಾಚುವಂತಿದೆ. ಎರಡನೆಯದು ನಿಜವಾದದ್ದು.
ಜ್ಞಾಪಿಸಿಕೊಳ್ಳಿ: ನಿಮ್ಮ ಗಂಡ ಅಥವಾ ಹೆಂಡತಿಯು ದೇವರ ಒಂದು ಸೃಷ್ಟಿ. ನಿಮ್ಮಿಂದ ಏನು ಸೃಷ್ಟಿಸಲ್ಪಡುವುದೋ ಅದು ದೇವರ ಸೃಷ್ಟಿಯೊಂದಿಗೇನೂ ಸ್ಪರ್ಧಿಸಲು ಸಾಧ್ಯವಿಲ್ಲ! ಅವನ ಸೃಷ್ಟಿಯೇ ಗೆಲ್ಲುತ್ತದೆ!
ಈ ದಿನ ಅಶ್ಲೀಲ ಸಾಹಿತ್ಯ (pornograp by) ಭ್ರಮೆ, ಕನಸುಗಳು ಮತ್ತು ವಿಕಲ್ಪಗಳು ಇದೆಲ್ಲವೂ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಭವಿಸುತ್ತಿದೆ. ಜನರು ತಮ್ಮ ಭ್ರಮೆಗಳನ್ನು ಪೂರೈಸಿಸಲು ಸಾರವಿಲ್ಲದ ಪರ್ಯಾಯಗಳತ್ತ ಹೋಗುತ್ತಿದ್ದಾರೆ. ಅಶ್ಲೀಲ ಸಾಹಿತ್ಯವೇನೂ ಅವರ ಲೈಂಗಿಕ ಜೀವನವನ್ನು ಪೂರೈಸುವುದಿಲ್ಲ. ಅದೇನಿದ್ದರೂ ಇನ್ನು ಹೆಚ್ಚು ಭ್ರಮೆಗಳನ್ನು ಮತ್ತು ವಿಕಲ್ಪಗಳನ್ನು ಸೃಷ್ಟಿಸುತ್ತದೆ ಅಷ್ಟೆ. ಆದರೆ ಭ್ರಮೆ ಪಡುವುದಕ್ಕೇಯೇ ಬಹಳ ಬಲಾತ್ಕಾರವಿದೆ. ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ: ನೀವು ಬಲಹೀನರು ಮತ್ತು ಬುದ್ಧಿರಹಿತರಾಗಿ ಇಲ್ಲವಾದರೆ ಯಾವುದೂ ಕೂಡ ಬಲಾತ್ಕಾರವಾಗಲು ಸಾಧ್ಯವಿಲ್ಲ. ನೀವು ಬುದ್ಧಿವಂತರಾದಾಗ, ಏನನ್ನಾದರೂ ಬಿಟ್ಟುಬಿಡಬಹುದು.
ಹೇಳಿ...
(ಒಬ್ಬ ಮಹಿಳೆ ತನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾಳೆ) ಸ್ವಾಮೀಜಿ, ನಾವು ಇರುವ ಹಾಗೆಯೇ ಇರಬೇಕು ಎಂದು ಹೇಳುತ್ತೀರ. ಆದರೆ ನಾವು ಸಮಾಜದಲ್ಲಿ ಇರುವ ಹಾಗೆಯೇ ಹೇಗೆ ಇರಲು ಸಾಧ್ಯ? ಕುಟುಂಬ, ಸಮಾಜ ಇವುಗಳನ್ನು ಅನುಸರಿಸಿ ನಾವು ಬದಲಾಗಬೇಕೆಂದು ನನಗೆ ಎನಿಸುತ್ತದೆ.
ಹೌದು, ವ್ಯವಹಾರಿಕ ಮಟ್ಟದಲ್ಲಿ ಪ್ರತಿಯೊಬ್ಬರೂ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಾರೆ. ನೀವು ಹೇಳುತ್ತೀರ “ಸ್ವಾಮೀಜಿ, ನಾನು ಇನ್ನೊಬ್ಬರ ಇಚ್ಛೆಗೆ ಅನುಸಾರವಾಗಿ ನಡೆದುಕೊಳ್ಳಬೇಕು'' ಬೇರೆಯವರು ನಿಮ್ಮ ಇಚ್ಛೆಗೆ ಅನುಸಾರವಾಗಿ ನಡೆದುಕೊಳ್ಳುವ ಹಾಗೆ ನೀವೇಕೆ ಮಾಡಬಾರದು? ನಿಜ, ಸಮಾಜದಲ್ಲಿ ನಾವು ಪರಸ್ಪರ ಅವಲಂಬಿತರಾಗಿರಬೇಕು. ಬೇರೆ ದಾರಿಯೇ ಇಲ್ಲ. ನಿಮ್ಮ ಪರಿಮಿತಿಗಳ ಬಗ್ಗೆ ಸ್ಪಷ್ಟವಾಗಿರಿ. ಮುಕ್ತವಾಗಿ ಅವಲಂಬಿತರಾಗಿರಿ! ನಿಮ್ಮ ಸ್ಥಳ (ಅವಕಾಶ/ಮಿತಿ) ಯಾವುದು ಮತ್ತು ಆ ವ್ಯಕ್ತಿಯ ಮಿತಿ ಏನು ಎಂದು ಸ್ಪಷ್ಟವಾಗಿರಿ. ಇನ್ನೊಬ್ಬರಿಗೆ ತೊಂದರೆ ಮಾಡದೆ ನಿಮ್ಮ ಸ್ವಂತ ಜೀವನವನ್ನು ಸಂಪದ್ಭರಿತವಾಗಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಿಸಿ.
ನಾನು ಇದಕ್ಕೆ ತಪ್ಪಾಗಲು ಸಾಧ್ಯವೇ ಇಲ್ಲದಂಥ ಪರಿಹಾರವನ್ನು ನೀಡುವುದಕ್ಕೆ ಆಗುವುದಿಲ್ಲ. ಅದೇನೋ ಸರಿ... ಗಂಡ ಹೆಂಡತಿಯರ ಮಧ್ಯೆ ಇರುವ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಒಂದು ಮಂತ್ರವನ್ನು ನಾನು ನೀಡುವುದಾದರೆ, ಜಗತ್ತಿನ ಅತಿ ಪ್ರಸಿದ್ಧ ವ್ಯಕ್ತಿ ನಾನಾಗಿಬಿಡಬಹುದಾಗಿತ್ತು!
(ಜೋರು ನಗೆ ಮತ್ತು ಚಪ್ಪಾಳೆ!)
ಸ್ವಾಮೀಜಿ... ಆ ವ್ಯಕ್ತಿಯು ತನ್ನ ಅಪೇಕ್ಷೆಗಳನ್ನು ಬಿಡಲು ಅವನ ಮೂಲಾಧಾರ ಚಕ್ರವನ್ನು ತೆರೆಯುವುದಕ್ಕೆ ಸಾಧ್ಯವಿಲ್ಲವೇ?
(ಸ್ವಾಮೀಜಿ ನಗುತ್ತಾರೆ!) ಅದನ್ನು ಹೇಗೆ ಮಾಡಲು ಸಾಧ್ಯ? ನೀವು ಕೇವಲ ನಿಮ್ಮ ಸ್ವಂತ ಅಪೇಕ್ಷೆಗಳನ್ನು ಬಿಟ್ಟುಬಿಡುವುದರ ಬಗ್ಗೆ ಖಚಿತ ಮಾಡಿಕೊಳ್ಳಬಹುದು. ಇದರಿಂದ ಮನೆಯಲ್ಲಿ ನಾಲ್ಕು ಮಂದಿ ಜನರಿಂದ ಮೂರು ಮಂದಿಗಾದರೂ ಇಳಿಯುತ್ತದೆ!
ಆ ಇನ್ನೊಬ್ಬ ವ್ಯಕ್ತಿಯನ್ನು ಬದಲಾಯಿಸುವುದು ಹೇಗೆ...? ಇತ್ತೀಚಿನ ದಿನಗಳಲ್ಲಿ ವಿವಾಹ - ಸಲಹೆಗಾರರು ಸಮ್ಮೋಹನವನ್ನೂ (hypnotism) ಕೂಡ ಸಲಹೆಯಾಗಿ ನೀಡುತ್ತಾರೆ! ಅದೇನೋ ಇನ್ನೊಬ್ಬ ವ್ಯಕ್ತಿಯ ಸ್ವಾತಂತ್ರ್ಯತೆಯಲ್ಲಿ ಅತಿಯಾಗಿ ತಲೆ ಹಾಕಿದಂತೆ ಎಂದೆನಿಸುತ್ತದೆ. ಅದು ಸಂಪೂರ್ಣವಾಗಿ ತಪ್ಪು.
ಒಬ್ಬ ಮಹಿಳೆ ತನ್ನ ಗಂಡನ ಕೋಪದ ಮಟ್ಟವನ್ನು ಕಡಿಮೆಗೊಳಿಸಲು ಬಯಸುತ್ತಿದ್ದ ಒಂದು ಸಂಗತಿಯ ಬಗ್ಗೆ ಒಮ್ಮೆ ಓದಿದೆ. ನೀವು ಓದಿರಬಹುದು - ಚಿಕಾಗೋ ವಿಶ್ವವಿದ್ಯಾಲಯವು ಒಂದು ಸಂಶೋಧನೆ ನಡೆಸುತ್ತಿದೆ ಎಲ್ಲಿ ಅವರ ಒಬ್ಬ ವ್ಯಕ್ತಿಯ ಮೆದುಳಿನಲ್ಲಿ ಎಲೆಕ್ಟ್ರೋಡ್ (ವಿದ್ಯುತ್ ಪ್ರವಾಹವನ್ನು ಹರಿಸುವ ವಾಹಕ) ನೆಟ್ಟು ಕೋಪವನ್ನು ಸಂಪೂರ್ಣವಾಗಿ ಹಿಡಿತಕ್ಕೆ ತರಬಹುದು!
ಈ ಸಂಶೋಧನೆಗೆ ಸ್ವಯಂ ಸೇವಕರಿಗೆ ಭಾಗವಹಿಸಲು ಕೇಳಿದಾಗ, ನೂರಾರು ಮಹಿಳೆಯರು ತಮ್ಮ ಗಂಡಂದಿರನ್ನು ಬಲವಂತ ಮಾಡಿ ಕರೆದುಕೊಂಡು ಬಂದಿದ್ದರಂತೆ!
(ನಗೆ!)
ಪ್ರಯೋಗ ಮುಗಿದ ಮೇಲೆ, 72 ಮಹಿಳೆಯರು - ಇದು ನಿಜ - 72 ಮಹಿಳೆಯರು ಹಿಂದಿರುಗಿ ವಿಶ್ವವಿದ್ಯಾಲಯಕ್ಕೆ ಹೇಳಿದರು, “ದಯವಿಟ್ಟು ಈ ಎಲೆಕ್ಟ್ರೋಡ್ಗಳನ್ನು ತೆಗೆದುಬಿಡಿ. ನನಗೆ ನನ್ನ ಹಳೆಯ ಗಂಡನೇ ಮತ್ತೆ ಬೇಕು! ನನ್ನ ಹಳೆಯ ಕೋಪಿಷ್ಟ ಗಂಡನೇ ಮತ್ತೆ ಬೇಕು!” ಅವರು ಹೇಳುತ್ತಾರೆ, “ಜೀವವು ಸ್ವಾದವನ್ನೇ ಕಳೆದುಕೊಂಡಿದೆ! ನಾವು ಜಗಳವಾಡದೆ ಇದ್ದರೆ, ಯಾವ ಪರಸ್ಪರ ವರ್ತನೆ ಇರುವುದಿಲ್ಲ, ಅವನು ನನಗೆ ಗಮನವನ್ನು ನೀಡುವುದೇ ಇಲ್ಲ!” ಪ್ರತಿಯೊಬ್ಬರಿಗೂ
ಗಮನದ ಅಗತ್ಯವಿದೆ! ಮನುಷ್ಯನ ವರ್ತನೆಯ ಅಧ್ಯಯನವನ್ನು ಮಾಡುವ ಮನೋಶಾಸ್ತ್ರಜ್ಞರು ಹೇಳುವುದೇನೆಂದರೆ, ಒಬ್ಬ ಸಾಮಾನ್ಯ ಮನುಷ್ಯ ಆಹಾರವಿಲ್ಲದೆ 90 ದಿನಗಳ ಕಾಲದಷ್ಟು ಬದುಕಿರಬಹುದು, ಆದರೆ ಬೇರೆಯವರ ಗಮನವಿಲ್ಲದೆ ಕೇವಲ 14 ದಿನಗಳ ಕಾಲದಷ್ಟು ಮಾತ್ರ ಬದುಕಬಹುದು ಎಂದು! ಅವನು ಹುಚ್ಚನಾಗಲು ಆರಂಭಿಸುತ್ತಾನೆ.
ಏನಾಗಿದೆ ಎಂದರೆ, ನಾವು ಒಬ್ಬರನ್ನೊಬ್ಬರು ಪ್ರೀತಿಸುವುದು ಹೇಗೆ, ಒಬ್ಬರನ್ನೊಬ್ಬರು ಕಾಳಜಿ ವಹಿಸುವುದು ಹೇಗೆ ಎಂದು ಮರೆತುಬಿಟ್ಟಿದ್ದೇವೆ. ಪ್ರೀತಿಯು ಮರೆತುಹೋದ ಭಾಷೆಯಾಗಿದೆ! ಹಾಗಾಗಿ ನಾವು ಇಟ್ಟುಕೊಳ್ಳಲು ಆಶಿಸಬಹುದಾದ ಒಂದೇ ಒಂದು ರೀತಿಯ ಪರಸ್ಪರ ವರ್ತನೆ ಏನೆಂದರೆ ಅದು ಜಗಳವಾಡುವುದು! ನನಗನಿಸುತ್ತದೆ, ಇಲ್ಲಿ ಕುಳಿತು ತಮ್ಮ ಗಂಡಂದಿರು ಅಥವಾ ಹೆಂಡತಿಯರು ಆಧ್ಯಾತ್ಮಿಕದವರಾಗಿಲ್ಲ ಎಂದು ದೂರು ಹೇಳುತ್ತಿರುವವರು - ಒಂದು ವೇಳೆ ಅವರ ಗಂಡ ಅಥವಾ ಹೆಂಡತಿ ಆಧ್ಯಾತ್ಮಿಕರಾಗಿಬಿಟ್ಟರೆ, ಅವರು ಮತ್ತೆ ಬಂದು, ತಮ್ಮ ಹಳೆಯ ಜೊತೆಗಾರರೇ ಬೇಕು ಎಂದು ದೂರುತ್ತಾರೆ!
(ತಂಡದಿಂದ ನಗೆ ಮತ್ತು ಅಸಮ್ಮತಿ!)
ಇರಲಿ! ನೀವು ಭಿನ್ನರೆಂದು ಹೇಳುತ್ತೀರಿ! ನೋಡೋಣ!
ಮೂಲಾಧಾರ ಚಕ್ರದ ಬಗ್ಗೆ ಒಂದು ಅದ್ಭುತವಾದ ವಿಷಯವೇನೆಂದರೆ, ಈ ಒಂದು ಚಕ್ರವನ್ನು ತೆರೆದರೆ, ನಿಮ್ಮ ಸಮಸ್ಯೆಗಳ ಶೇ. 50% ರಷ್ಟು ಮಾಯವಾಗುತ್ತದೆ! ಈ ಒಂದು ಚಕ್ರವು ನಿಮ್ಮ ಜೀವನದ ಶೇ. 50 ರಷ್ಟನ್ನು ನಿಭಾಯಿಸುತ್ತದೆ. ನೀವೇನೇ ಮಾಡಿದರೂ, ಈ ಚಕ್ರದ ಒಂದು ಅಂಕವಿದ್ದೇ ಇರುತ್ತದೆ! ನಿಮ್ಮ ಸಟಿಯಲ್ಲೂ ಕೂಡ, ಈ ಚಕ್ರದ ಒಂದು ಅಂಶವಿರುತ್ತದೆ! ಮೂಲಾಧಾರ ಚಕ್ರವನ್ನು ಚುರುಕುಗೊಳಿಸಿದಾಗ, ನಿಮ್ಮ ಸಟಿಯೂ ಕೂಡ ಬೇರೆ ತರಹ ಕಾಣುತ್ತದೆ. ಒಂದು ಹೂವನ್ನು ಕಿತ್ತರೂ ಕೂಡ, ಕೀಳುವ ರೀತಿಯೇ ಬೇರೆಯಾಗಿರುತ್ತದೆ.
‘ನಾಯನರ್’ ಎಂಬ ತಮಿಳು ಸಂತರ ಪಂಗಡವಿದೆ. ಅವರ ಬಗ್ಗೆ ಹೇಳುವ ಒಂದು ಹಾಡಿದೆ, ಅದು ಏನು ಹೇಳುತ್ತದೆ ಎಂದರೆ, ಅವರು ಒಂದು ಹೂವನ್ನು ಕಿತ್ತಾಗ, ಆ
ಮರವು ನೋವನ್ನು ಅನುಭವಿಸುವುದಿಲ್ಲ! ಎಂದು. ಇದರ ಅರ್ಥ ಏನು? ಈ ಚಕ್ರವನ್ನು ತೆರೆದಾಗ, ನೀವು ಅದೆಷ್ಟು ಸೂಕ್ಷ್ಮತೆಯಿಂದ ಪ್ರೀತಿಯಿಂದ ಇರುವವರಾಗುತ್ತೀರಿ. ಈ ಚಕ್ರದ ಚೈತನ್ಯವನ್ನು ಪರಿವರ್ತನೆಗೊಳಿಸಿದಾಗ, ಅದು ನಿಮ್ಮಲ್ಲಿ ಪ್ರೀತಿಯಾಗಿ ಉಕ್ಕಿ ಹರಿಯುತ್ತದೆ!
ಲೈಂಗಿಕತೆಯು ಇದ್ದಿಲು ಎಂದುಕೊಂಡರೆ, ಪ್ರೀತಿಯು ವಜ್ರದಂತೆ. ಲೈಂಗಿಕತೆಯು ಕೆಸರು ಎಂದುಕೊಂಡರೆ, ಪ್ರೀತಿಯು ಆ ಕೆಸರಿನಲ್ಲಿ ವಿಕಸನವಾಗುವ ಕಮಲದಂತೆ. ಎರಡೂ ಒಂದೇ ಅಂಶ - ಆದರೆ ಒಂದೇ ಒಂದು ವಿಷಯವೇನೆಂದರೆ, ಅದನ್ನು ಸಂಸ್ಕರಿಸುವುದು ಹೇಗೆ ಎಂದು ತಿಳಿದುಕೊಳ್ಳಬೇಕು. ನಿಮ್ಮ ಅಪೇಕ್ಷೆಗಳನ್ನು ಸುಮ್ಮನೆ ಬಿಡಿ, ಆಗ ಚೈತನ್ಯದ ಒಂದು ಅದ್ಭುತವಾದ ಸೆಲೆಯೇ ಕಾಣುತ್ತದೆ.
ಇವತ್ತು ನೀವು ಮನೆಗೆ ಹಿಂದಿರುಗಿದ ಮೇಲೆ ಈ ಒಂದು ತಂತ್ರವನ್ನು ಮಾಡಬೇಕೆಂದು ಬಯಸುತ್ತೇನೆ.
ಕುಳಿತುಕೊಂಡು ನಿಮ್ಮ ಮೂಲಾಧಾರ ಚಕ್ರದ ಮೇಲೆ ಗಮನವನ್ನು ಹರಿಸಿ. ನೀವು ಗಮನಿಸಿದರೆ, ನಿಮ್ಮ ಮೂಲಾಧಾರ ಚಕ್ರವು ಯಾವಾಗಲೂ ಬಿಗಿಯಾಗಿರುತ್ತದೆ.
ಐದು ನಿಮಿಷಗಳ ಕಾಲ, ನಿಮ್ಮ ಗಂಡ ಅಥವಾ ಹೆಂಡತಿ ನಿಮಗೆ ತೊಂದರೆಯಾಗುವಂತೆ ಏನೇ ಮಾಡಿದ್ದರೂ, ಮಾನಸಿಕವಾಗಿ ಅವರನ್ನು ಕ್ಷಮಿಸಿ. ನಿಜವಾಗಿಯೂ ಅವರನ್ನು ಕ್ಷಮಿಸಿ; ಬುಡಕ್ಕೆ ಹೋಗಿ ಸಿಟ್ಟಿನ ಭಾವನೆಯನ್ನು ಬಿಟ್ಟುಬಿಡಿ. ಇದನ್ನು ಸಂಪೂರ್ಣತೆಯಿಂದ ಮಾಡಿ. ಅವರನ್ನು ಇರುವ ಹಾಗೆಯೇ ಒಪ್ಪಿಕೊಳ್ಳಿ. ನಿಮ್ಮ ಗಾಢವಾದ ಪ್ರೀತಿಯನ್ನು ಅವರಿಗೆ ನೀಡಿ.
ಐದು ನಿಮಿಷಗಳಾದ ಮೇಲೆ, ನಿಮ್ಮ ಮೂಲಾಧಾರ ಚಕ್ರವು ಸಂಪೂರ್ಣವಾಗಿ ಸಡಿಲಾಗಿರುವುದನ್ನು ಕಾಣಬಹುದು.
ಕೇವಲ ಐದು ನಿಮಿಷಗಳಷ್ಟೇ ಈ ಫಲಿತಾಂಶವನ್ನು ನೀಡಲು ಸಾಧ್ಯವಾದರೆ, ನಿಮ್ಮ ಸಂಪೂರ್ಣ ಮನೋಭಾವನೆಯನ್ನು ಬದಲಾಯಿಸಿದರೆ ಏನಾಗಬಹುದು ಎಂದು ನೀವೇ ಊಹಿಸಿಕೊಳ್ಳಿ! ಅದೆಂಥ ಅದ್ಭುತವಾದ ಚೈತನ್ಯದ ಹರಿವನ್ನು ನೀವು ಅನುಭವಿಸಬಹುದು!
ಈಗ ನೀವು ಬದುಕುತ್ತಿರುವುದು ಹೇಗೆಂದರೆ, ನಿಮಗೆ ಒಂದು ಲಕ್ಷ ರೂಪಾಯಿಗಳು ದೊರಕಿದ್ದು ಆದರೆ ಅದರಲ್ಲಿ ತೊಂಭತ್ತು ಸಾವಿರವನ್ನು ಹಿಂಪಡೆಯಲು ಸಾಧ್ಯವಾಗದೇ ಇರುವಂಥ ಜಾಗದಲ್ಲಿ ಭದ್ರಪಡಿಸಿದ್ದೀರ, ಮಿಕ್ಕ ಹತ್ತು ಸಾವಿರದೊಂದಿಗೆ ನಿಮ್ಮ ಇಡೀ ಜೀವನವನ್ನು ನಿಭಾಯಿಸಲು ಪ್ರಯತ್ನಿಸುತ್ತೀರ. ಆಗ, ಸಹಜವಾಗಿ ನೀವು ಬಡವರೆಂದುಕೊಳ್ಳುತ್ತೀರ!
ಹಾಗೆಯೇ, ನಮ್ಮ ಎಲ್ಲ ಚೈತನ್ಯವು ತಪ್ಪಾಗಿ ಹೂಡಲಾಗಿದೆ, ಅದು ಈ ಚಕ್ರದಲ್ಲಿ ಬಂಧಿತವಾಗಿದೆ - ಕೋಪದಲ್ಲಿ, ಲೈಂಗಿಕತೆಯಲ್ಲಿ ಮತ್ತಿನ್ನೆಲ್ಲ ವಿಷಯಗಳಲ್ಲಿ. ನಮ್ಮ ದೈನಂದಿಂದ ಬದುಕಿಗೂ ಸಾಕಾಗುವಷ್ಟು ಚೈತನ್ಯವು ನಮ್ಮಲ್ಲಿಲ್ಲ! ಈ ಚಕ್ರವು ತೆರೆದುಕೊಂಡ ಮೇಲೆ, ನಿಮ್ಮ ಜೀವನವು ಸಂಪದ್ಭರಿತವಾಗುತ್ತದೆ. ಇನ್ನು ಒಳ್ಳೆಯ ರೀತಿಯಲ್ಲಿ ಯೋಚಿಸಲು, ಇನ್ನು ಒಳ್ಳೆಯ ರೀತಿಯಲ್ಲಿ ಅರಿತುಕೊಳ್ಳಲು, ಇನ್ನು ಒಳ್ಳೆಯ ರೀತಿಯಲ್ಲಿ ಯೋಚಿಸಲು ಸಾಧ್ಯವಾಗುತ್ತದೆ. ಈ ಚೈತನ್ಯವು ನಿಮ್ಮಲ್ಲಿ ನಿರಂತರವಾಗಿ ಕೆಲಸ ಮಾಡುವುದನ್ನು ಕಾಣಬಹುದು. ಅದು ನೀವು ಹಿಂದೆ ಅನುಭವಿಸದೆ ಇರುವಂಥ ಒಂದು ಹೊಸ ವಿಸ್ತೀರ್ಣವನ್ನು (Dimension) ತೆರೆಯುತ್ತದೆ. ನಿಮ್ಮ ಗಂಡ, ಹೆಂಡತಿ, ಮತ್ತಿತ್ತರ ಎಲ್ಲರೂ ಆಧ್ಯಾತ್ಮಿಕ ಜೀವಿಗಳು ಎಂದು ನೀವು ನಿಜವಾಗಿ ಅರಿಯುತ್ತೀರ!
ಅರ್ಥಮಾಡಿಕೊಳ್ಳಿ: ನರಕ ಮತ್ತು ಸ್ವರ್ಗ - ಇವೆರಡು ಭೌಗೋಳಿಕ ಸ್ಥಳಗಳಲ್ಲ (geographical). ಅವುಗಳನ್ನು ನಕ್ಷೆಯ ಮೇಲೆ ಗುರುತಿಸಲು ಸಾಧ್ಯವಿಲ್ಲ. ಅವು ಕೇವಲ ಮಾನಸಿಕವಾಗಿ ಅಷ್ಟೇ ಇವೆ. ನಿಮ್ಮ ಜೀವನವನ್ನು ಸ್ವರ್ಗವನ್ನಾಗಿಯೋ ನರಕವನ್ನಾಗಿಯೋ ಪರಿವರ್ತನೆಗೊಳಿಸುವುದು ನಿಮ್ಮ ಕೈಯಲ್ಲಿದೆ. ನೀವು ಅಪೇಕ್ಷಾಭರಿತರಾಗಿದ್ದರೆ, ನಿಮ್ಮ ತಲೆಯಲ್ಲಿ ನೀವೇ ನರಕವನ್ನು ಹೊತ್ತುಕೊಂಡಿದ್ದೀರ! ಹಾಗಾಗಿ ನೀವೆಲ್ಲೇ ಹೋದರೂ, ನರಕದ ನಿಮ್ಮ ಸ್ವಂತ ಗಂಟು ನಿಮ್ಮ ಜೊತೆ ಪ್ರಯಾಣ ಮಾಡುವುದನ್ನು ಕಾಣಬಹುದು! ಸರ್ಕಸ್ ತಂಡವು ಹೇಗೆ ತನ್ನ ಗುಡಾರಗಳನ್ನು ಹೋದ ಕಡೆಯೆಲ್ಲ ಹರಡುತ್ತದೆಯೋ, ಅದೇ ರೀತಿ ನೀವೂ ಕೂಡ ನರಕವನ್ನು ಹೊತ್ತುಕೊಳ್ಳುತ್ತಾ, ನೀವು ಹೋದ ಕಡೆಯಲ್ಲೆಲ್ಲ ಅದರಲ್ಲಿ ವಾಸ ಮಾಡುತ್ತೀರ. ಅದರಿಂದ ನಿಮಗೆ ತಪ್ಪಿಸಿಕೊಳ್ಳುವುದಕ್ಕೆ ಆಗುವುದೇ ಇಲ್ಲ. ಮತ್ತು ಇಬ್ಬರು ಮಂದಿ ಸಂಧಿಸಿದರೆ, ಅವರವರ ನರಕಗಳ ದೊಡ್ಡ ತಿಕ್ಕಾಟವೇ ಆಗುತ್ತದೆ!
ಈ ಹೊರೆಯನ್ನೇಕೆ ನೀವು ಎಲ್ಲ ಕಡೆ ಹೊತ್ತುಕೊಂಡು ಹೋಗಬೇಕು? ಅದನ್ನು ಸುಮ್ಮನೆ ಬಿಟ್ಟುಬಿಡಿ!
ಖಚಿತ ಪರಿಹಾರಗಳು
ನಿಮ್ಮ ಅಪೇಕ್ಷೆಗಳಿಗೆ ಅನುಗುಣವಾಗಿ ಇನ್ನೊಬ್ಬ ವ್ಯಕ್ತಿಯ ಕತ್ತಲೆ ಮಾಡಲು ಪ್ರಯತ್ನಿಸುವುದರಲ್ಲಿ ಎಷ್ಟೊಂದು ಚೈತನ್ಯವನ್ನು ವ್ಯರ್ಥ ಮಾಡುವುದರ ಬಗ್ಗೆ ಆಲೋಚಿಸಿ. ಉಳಿಯನ್ನು ಬಿಟ್ಟುಬಿಡುವುದೇ ಇನ್ನೂ ಸುಲಭವಲ್ಲವೇ? ಆ ಚೈತನ್ಯದ 10% ರಷ್ಟಾದರೂ ಧ್ಯಾನದಲ್ಲಿ ತೊಡಗಿಸಿದರೆ, ನಿಮ್ಮ ಜೀವನವೇ ನಿಜವಾದ ಬದುಕಾಗಿ ಬದಲಾಗುವುದು. ಬದುಕುವುದೆಂದರೆ ‘ಜೀವನವನ್ನು ಅರಿವಿನಿಂದ, ಸ್ವಾತಂತ್ರ್ಯತೆಯಿಂದ ನಡೆಸುವುದು' ಎಂದು.
ನಮಗೆ ಒಂದು ಆಯ್ಕೆಯಿದೆ!
ಅರಿವಿನಿಂದಿರಲು ಒಂದು ಅವಕಾಶವಿದೆ.
ಈಗ, ನಿರ್ಧರಿಸುವುದು ನಿಮಗೆ ಬಿಟ್ಟದ್ದು.
ಹೇಳಿ... ಏನಾದರೂ ಪ್ರಶ್ನೆಯಿದೆಯೇ?
ಸ್ವಾಮೀಜಿ, ಕಾಮವನ್ನು ಬಿಡುವುದು ಮತ್ತು ಪ್ರೀತಿಯನ್ನು ಪೋಷಿಸುವುದು ಹೇಗೆ?
ಅಂತೂ, ಕಡೆಗೆ ವಿಷಯದ ಅಂಶಕ್ಕೆ ಬಂದಿದ್ದೀರ... ಕೋಪದಂತೆ ಕಾಮವೂ ಕೂಡ ಒಂದು ಅದ್ಭುತವಾದ ಚೈತನ್ಯ. ನಿಜವೇನೆಂದರೆ, ಕಾಮ ಎಂದರೇನು ಮತ್ತು ಅದನ್ನು ಹೇಗೆ ಪರಿವರ್ತನೆಗೊಳಿಸಬಹುದು ಎಂದು ಅರಿತುಕೊಳ್ಳುವ ತನಕ, ನೀವು ಮಾಡುವ ಯಾವುದೇ ಕಾರ್ಯವೂ ಕಾಮದಿಂದ ಕೂಡಿರುತ್ತದೆ; ಒಂದು ಸಣ್ಣ ಮಗುವಿಗೆ ಮುದ್ದು ಮಾಡಿದರೂ ಅದು ಕಾಮದಿಂದ ಕೂಡಿರುತ್ತದೆ; ಅದರಲ್ಲಿ ಒಂದು ಪ್ರಾಣಿಮಾತ್ರದ ಸ್ವಭಾವವು ಇರುತ್ತದೆ ಏಕೆಂದರೆ, ನಿಮ್ಮ ಚೈತನ್ಯವು ಇನ್ನೂ ಹೀನವಾಗಿದೆ (base) ಮತ್ತದು ಉನ್ನತ ಮಟ್ಟದ ಚೈತನ್ಯವಾಗಿ ಪರಿವರ್ತನೆಗೊಂಡಿಲ್ಲ.
ಕೋಪದ ಬಗ್ಗೆ ತಿಳುವಳಿಕೆ ಹೇಗೆ ಕೋಪವನ್ನು ಕಡಿಮೆ ಮಾಡುತ್ತದೆಯೋ, ಹಾಗೆಯೇ, ಕಾಮದ ಬಗ್ಗೆ ತಿಳುವಳಿಕೆ ಕಾಮವನ್ನು ಕಡಿಮೆ ಮಾಡುತ್ತದೆ, ಏಕೆಂದರೆ ಎರಡೂ ಕೂಡ ಒಂದೇ ಚೈತನ್ಯ! ಕಾಮ ಹಾಗೂ ಲೈಂಗಿಕತೆಯ ವಿಷಯದಲ್ಲಿ ಸಮಸ್ಯೆ ಏನೆಂದರೆ, ಅದು ಇರುವುದಕ್ಕಿಂತಲೂ ಇನ್ನಷ್ಟು ಉತ್ಪ್ರೇಕ್ಷೆ ಮತ್ತು ಕಲ್ಪನೆ ಮಾಡಿಕೊಳ್ಳಲಾಗಿದೆ. ಒತ್ತಿಡುವಿಕೆಯಿಂದಲೇ, ಅದನ್ನು ಇರುವುದಕ್ಕಿಂತಲೂ ಹೆಚ್ಚು ಮಾಡಲಾಗಿದೆ. ಅಲ್ಲಿಯೇ ಸಮಸ್ಯೆಯೆಲ್ಲವೂ ಆರಂಭವಾಗುವುದು. ಅದು ದೂರದರ್ಶಕಗಳಿಂದ ಇನ್ನು ಹೆಚ್ಚು ಪಟ್ಟು ಕಲ್ಮಶಗೊಳಿಸಲಾಗಿದೆ. ಮತ್ತು ನಿಮ್ಮ ಕಾಮವನ್ನು ಆ ವ್ಯಕ್ತಿಯು ಒಪ್ಪದೆ ಇದ್ದರೆ, ಆ ವ್ಯಕ್ತಿಯ ವಿರುದ್ಧವೇ ಅದು ಕೋಪವಾಗಿ ಮಾರ್ಪಡುವುದು. ಆದ್ದರಿಂದಲೇ, ಯುವ ಹುಡುಗರು ತಮ್ಮನ್ನು ನಿರಾಕರಿಸಿದ ಹೆಣ್ಣುಮಕ್ಕಳ ಮುಖಕ್ಕೆ ಆಮ್ಲವನ್ನು (ಆಸಿಡ್) ಎರಚುವ ಸಂಗತಿಗಳನ್ನು ನೀವು ದಿನಪತ್ರಿಕೆಗಳಲ್ಲಿ ಓದಬಹುದು.
ನೋಡಿ, ಒಂದು ವಿಷಯವನ್ನು ಮೊದಲು ಅರ್ಥಮಾಡಿಕೊಳ್ಳಿ: ಸಮಾಜವು ಯಾವಾಗಲೂ ಕೆಳಮಟ್ಟದ ಮನುಷ್ಯರು, ಮೇಲ್ಮಟ್ಟದ ಮನುಷ್ಯರು ಹೀಗೆ ವರ್ಗಗಳನ್ನು ಮಾಡಿದೆ. ಮೋಹವನ್ನು ಹೊಂದಿರುವವನು ಕೆಳಮಟ್ಟದವನೆಂದು, ಕಾಮವನ್ನು ಹೊಂದಿರುವವನು ಕೆಳಮಟ್ಟದವನೆಂದು ಹೇಳಲಾಗುತ್ತದೆ. ಕೆಳಮಟ್ಟ, ಮೇಲ್ಮಟ್ಟ - ಯಾವುದೂ ಇಲ್ಲ; ಪರಿವರ್ತನೆಯೊಂದೇ ಸಂಭವಿಸಬೇಕು, ಅಷ್ಟೆ.
ಇಂಥ ನೈತಿಕ ಅಳತೆಗಳನ್ನು ಸ್ಥಾಪಿಸುವ ಜನರು ಕೇವಲ ನೀತಿಜ್ಞರೆಂದು ನಟಿಸುವವರು, ಅಷ್ಟೆ. ಅಂಥವರಲ್ಲಿ ಅದೆಷ್ಟು ಅಡಗಿದ ಕಾಮ ಮತ್ತು ಮೋಹವಿರುತ್ತದೆ. ಈ ಭಾವನೆಗಳ ಹಿಂದೆ ಹೋಗಲು ಹೆದರುತ್ತಾರೆ ಅಥವಾ ತಪ್ಪು ಮಾಡುವ ಭಾವನೆಗಳನ್ನು ಹೊಂದುತ್ತಾರೆ, ಹಾಗಾಗಿ ನೀತಿಬೋಧಕರಾಗಿ ಪಾರಾಗಿಬಿಡುತ್ತಾರೆ. ಅಂಥವರೇ ಈ ಕೆಳಮಟ್ಟ ಮೇಲ್ಮಟ್ಟ ಹೀಗೆ ಅಳತೆಗಳನ್ನು ಸ್ಥಾಪಿಸಿ ಸಮಾಜಕ್ಕೆ ಕೇಡುಂಟುಮಾಡುತ್ತಾರೆ.
ಕೆಳಮಟ್ಟ ಮೇಲ್ಮಟ್ಟ ಯಾವುದೂ ಇಲ್ಲ. ನೀವು ಕೆಳಮಟ್ಟದವರು ಎಂದು ನೀವು ಭಾವಿಸಿದ ಕೂಡಲೆ, ಆ ಭಾವನೆಯ ಜೊತೆ ಹೋರಾಡುತ್ತಿದ್ದೀರ ಮತ್ತು ಅದನ್ನು ಸೋಲಿಸುವುದು ತುಂಬ ಕಷ್ಟವಾಗಿಬಿಡುತ್ತದೆ; ಪರಿವರ್ತನೆ ಉಂಟಾಗಲು ಬಹಳ ಕಷ್ಟವಾಗಿಬಿಡುತ್ತದೆ.
ಯಾವುದನ್ನೇ ತಡೆಗಟ್ಟಿಸಿದಷ್ಟು, ಹಠದಿಂದ ಇನ್ನೂ ದೃಢವಾಗಿ ನಿಲ್ಲುತ್ತದೆ. ನಿಮ್ಮ ಅರಿವನ್ನು (consciousness) ಪರಿವರ್ತನೆಗೊಳ್ಳಲು ಬಿಡಿ, ಆಗ ಅದು ಸಂಭವಿಸುತ್ತದೆ. ಸುಮ್ಮನೆ ನಿಮ್ಮೊಳಕ್ಕೆ ಅರಿವನ್ನು ತಂದುಕೊಳ್ಳಿರಿ, ಆಗ ಪರಿವರ್ತನೆಗೊಳ್ಳುತ್ತೀರ. ವಿಶ್ಲೇಷಣೆ ಮಾಡಬೇಡಿ; ವಿಶ್ಲೇಷಣೆ ಕೇವಲ ವಿಭಜನೆ ಮಾಡುತ್ತದೆ. ನಿಮ್ಮನ್ನು ಎರಡು ಭಾಗಗಳನ್ನಾಗಿ ಮಾಡಿ, ಆ ಭಾಗಗಳು ಪರಸ್ಪರ ಹೋರಾಡುವಂತೆ ಮಾಡುತ್ತದೆ. ಸಮಾಜವು ಯಾವಾಗಲೂ ನಿಮ್ಮ ಭಾಗಗಳನ್ನಾಗಿ ಮಾಡುವುದಕ್ಕೆ ನೋಡುತ್ತಿರುತ್ತದೆ.
ವಿಶ್ಲೇಷಣೆ ಏನಿದ್ದರೂ ವಿಜ್ಞಾನಿಗಳಿಗೆ ಮತ್ತು ಸಂಶೋಧಕರಿಗೆ, ಆಧ್ಯಾತ್ಮಿಕ ಬೆಳವಣಿಗೆಗಲ್ಲ. ನೀವು ವಿಶ್ಲೇಷಣೆ ಮತ್ತು ವಿಂಗಡಿಸುವುದು ಅದೆಷ್ಟು ಅಭ್ಯಾಸವಾಗಿಬಿಟ್ಟಿದೆ ಎಂದರೆ, ಯಾವುದೇ ವಿಷಯದಲ್ಲೂ ಕೂಡ ಅದನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಜನರು ನಿಮ್ಮಲ್ಲಿ ಮೇಲು - ಕೀಳು ಇಂಥ ಭಾವನೆಗಳನ್ನು ಹೊರಿಸಲು ಪ್ರಯತ್ನಿಸಿದಾಗ, ಜ್ಞಾಪಿಸಿಕೊಳ್ಳಿ: ಪ್ರತಿಯೊಬ್ಬರೂ ಅಸ್ತಿತ್ವದ ಒಂದು ಭಾಗ ಮತ್ತು ಯಾರೂ ಯಾರಿಗೂ ಕೂಡ ಮೇಲೆ ಅಥವಾ ಕೀಳು ಅಲ್ಲ. ಈ ಸತ್ಯವನ್ನು ನೀವು ಮರೆತಾಗ ಮಾತ್ರ, ಇಂಥ ಪದಗಳನ್ನು ಬಳಸುತ್ತೀರ.
ಕಾಮದ ಬಗ್ಗೆ ನೀವು ಕೇಳಿದ ಪ್ರಶ್ನೆಗೆ ಬರುವುದಾದರೆ, ಮೊದಲು ಅರಿತುಕೊಳ್ಳಿ: ಪ್ರೀತಿಯೊಂದೇ ಇರಲು ಸಾಧ್ಯ, ಕಾಮವೆಂದೂ ಅಲ್ಲ. ಇದೇ ಸತ್ಯ. ಕಾಮವು ಆಳವಾದ ಅಜ್ಞಾನದ ಪರಿಣಾಮ.
ಕಾಮವನ್ನು ಪ್ರೀತಿಯನ್ನಾಗಿ ಬದಲಾಯಿಸುವುದು ರಸಾಯನಶಾಸ್ತ್ರದ ಪ್ರಕ್ರಿಯೆಯಂತೆ (alchemy process). ರಾಸಾಯನಶಾಸ್ತ್ರವೆಂದರೆ, ಅಲ್ಪ ಲೋಹಗಳನ್ನು ಉನ್ನತ (ಶ್ರೇಷ್ಠ) ಲೋಹವನ್ನಾಗಿ ಬದಲಾಯಿಸುವುದು ಎಂದು. ಇದೇ ರೀತಿ, ನಮ್ಮ ಹೀನ ಭಾವನೆ - ಅಂದರೆ ಕಾಮವನ್ನು ನಾವು ಅನುಭವಿಸಲು ಸಮರ್ಥರಾಗಿರುವ ಅತಿ ಶ್ರೇಷ್ಠ ಭಾವನೆ - ಅಂದರೆ ಪ್ರೀತಿಯಾಗಿ ಬದಲಾಯಿಸುವುದು ಒಂದು ರಸಾಯನಶಾಸ್ತ್ರ ಪ್ರಕ್ರಿಯೆ. ಇದು ಅಂತಿಮ ರಸಾಯನ ಶಾಸ್ತ್ರ.
ನಾನು ಹಿಮಾಲಯದಲ್ಲಿ ಅಲೆದಾಡುತ್ತಿದ್ದಾಗ, ನನ್ನೊಂದಿಗೆ ಸಂಭವಿಸಿದ ಒಂದು ಘಟನೆಯನ್ನು ವಿವರಿಸುತ್ತೇನೆ.
ಹಿಮಾಲಯದಲ್ಲಿ ನಾನು ಎಲ್ಲಿ ಬೇಕೋ ಅಲ್ಲಿಗೆ ಸುಮ್ಮನೆ ನಡೆಯುತ್ತಿದ್ದೆ. ನನ್ನ ಸ್ವತ್ತು ಸ್ವಲ್ಪವೇ ಇತ್ತು ಮತ್ತು ನಾನು ಅಲೆದಾಡಿ ರಾತ್ರಿಯ ವೇಳೆ ಎಲ್ಲಾದರೂ ಮಲಗುತ್ತಿದ್ದೆ. ಆ ಅವಧಿಯಲ್ಲಿ ನಾನು ಬಹಳಷ್ಟು ಋಷಿಗಳನ್ನು ಸಂಧಿಸುತ್ತಿದ್ದೆ.
ಅಂಥದ್ದೊಂದು ಸಂದರ್ಭದಲ್ಲಿ ಒಬ್ಬ ಋಷಿಯನ್ನು ಭೇಟಿ ಮಾಡಿದೆ. ಅವರು ಕಿಂಚಿತ್ತಾಗಿ ಉಡುಪು ತೊಟ್ಟಿದ್ದರು, ಗಂಟು ಗಂಟಾದ ಕೂದಲು ಮತ್ತು ಭೀಕರ ಮುಖಭಾವವನ್ನು ಹೊಂದಿದ್ದರು. ಅವರೊಬ್ಬ ನಾಗಾ ಬಾಬಾರಾಗಿದ್ದರು, ನಾಗಾ ಋಷಿಗಳ ಪಂಥಕ್ಕೆ ಸೇರಿದವರಾಗಿದ್ದರು. ಹೇಗೋ ಏನೋ, ನಾನು ಅವರ ಬಳಿ ಹೋಗಲು ಆಕರ್ಷಿತನಾಗಿದ್ದೆ, ಅವರನ್ನು ಸಮೀಪಿಸಿದೆ. ಆ ಸಮಯದಲ್ಲಿ ಹಿಂದಿ ಭಾಷೆ ಮಾತನಾಡಲು ಅಷ್ಟು ತಿಳಿದಿರಲಿಲ್ಲ, ಹೇಗೋ ಹಿಂದಿ ಭಾಷೆಯಲ್ಲಿ ಅವರೊಂದಿಗೆ ಮಾತನಾಡುವುದನ್ನು ನಿಭಾಯಿಸಿದೆ. ಕೆಲವು ದಿನಗಳ ಕಾಲ ಅವರ ಜೊತೆ ಇದ್ದೆ. ಇಡೀ ದಿನ, ಅವರು ತಮ್ಮ ಹುಕ್ಕಾ (Hookah) ವನ್ನು ಸೇದುತ್ತಿದ್ದರು. ಅವರನ್ನು ನೋಡುತ್ತಿದ್ದೆ ಮತ್ತು ಅವರು ಮಾಡುತ್ತಿದ್ದನ್ನು ನೋಡಿ ಆಶ್ಚರ್ಯಪಟ್ಟಿದ್ದೆ. ಅವರು ತಮ್ಮ ಹುಕ್ಕಾದೊಳಕ್ಕೆ ಎರಡು ತಾಮ್ರದ ನಾಣ್ಯಗಳನ್ನು ಹಾಕಿ, ಸ್ವಲ್ಪ ಹೊತ್ತು ಅದನ್ನು ಸೇದಿ, ನಂತರ ಅದನ್ನು ಖಾಲಿ ಮಾಡುತ್ತಿದ್ದಾಗ, ಅದರಿಂದ ಎರಡು ಚಿನ್ನದ ನಾಣ್ಯಗಳು ಬೀಳುತ್ತಿದ್ದವು!
ಅವರು ನಂತರ ಮಾರುಕಟ್ಟೆಗೆ ಹೋಗಿ, ಆ ಎರಡು ಚಿನ್ನದ ನಾಣ್ಯಗಳನ್ನು ಮಾರಿಬಿಟ್ಟು, ಇನ್ನಷ್ಟು ತಾಮ್ರದ ನಾಣ್ಯಗಳನ್ನು ತಂದು ಆ ಪ್ರಕ್ರಿಯೆಯನ್ನು ಪುನಃ ಮಾಡುತ್ತಿದ್ದರು!
ಅದು ಹೇಗೆ ಸಂಭವಿಸುತ್ತದೆ ಎಂದು ಅವರನ್ನು ಕೇಳಿದೆ. ಅವರು ಉತ್ತರಿಸದೆ ಸುಮ್ಮನೆ ಆ ಹುಕ್ಕವನ್ನು ನನಗೆ ಕೊಟ್ಟರು. ಹೇಗೋ, ತಂಬಾಕು ಅಥವಾ ಸಾರಾಯಿ - ಇವುಗಳ ವಾಸನೆ ನನ್ನ ದೇಹದ ವ್ಯವಸ್ಥೆಗೆ ಒಪ್ಪಿಲ್ಲ, ಹಾಗಾಗಿ ನಾನು ಒಂದೆರಡು ಹೆಜ್ಜೆ ಹಿಂದಕ್ಕೆ ಹೋದೆ. ನಾನು ಹಿಮಾಲಯಕ್ಕೆ ಧ್ಯಾನ ಮತ್ತು ಜ್ಞಾನೋದಯಕ್ಕಾಗಿ ಬಂದಿದ್ದೇನೆ ಮತ್ತು ಸೇದುವುದರಲ್ಲೋ ಚಿನ್ನದ ನಾಣ್ಯಗಳಲ್ಲೋ ಆಸಕ್ತಿ ಇರಲಿಲ್ಲವೆಂದು ಹೇಳಿದೆ. ಅವರು ನನ್ನನ್ನು ನೋಡಿ ಮೊದಲ ಬಾರಿ ತಮಿಳು ಭಾಷೆಯಲ್ಲಿ ಮಾತನಾಡಿದರು: "ಆಂಗಂ ಪಳತ್ತಾಲ್ ತಂಗಂ ಪಳಕ್ಕುಮ್'' ಅಂದರೆ ನಿಮ್ಮತನವು ಪಕ್ವವಾದರೆ, ಚಿನ್ನವು ಪಕ್ವವಾಗುತ್ತದೆ. ನನಗೆ ಮಾತೇ ಹೊರಡಲಿಲ್ಲ, ಅವರು ತಮಾಷೆಗಾಗಿ ಹೊಗೆಯ ಸುರುಳಿಗಳನ್ನು ನನ್ನ ಮುಖದ ಮೇಲೆ ಬಿಟ್ಟರು. ಆದಾದ ಮೂರು ದಿನಗಳ ಕಾಲ ನಾನು ಗಾಢವಾದ ಆನಂದದಲ್ಲಿದ್ದೆ.
ತಾಮ್ರವನ್ನು ಚಿನ್ನವನ್ನಾಗಿ ಬದಲಾಯಿಸುವುದು ಒಂದು ರಸಾಯನ ಶಾಸ್ತ್ರದ ಪ್ರಕ್ರಿಯೆ. ಅದು ಬಾಹ್ಯ ಜಗತ್ತಿನ ಒಂದು ರಸಾಯನ ಶಾಸ್ತ್ರದ ಪ್ರಕ್ರಿಯೆ. ಆಂತರಿಕ ಜಗತ್ತಿನ ರಸಾಯನ ಶಾಸ್ತ್ರವೇನೆಂದರೆ, ನಮ್ಮ ಹೀನ (ಅಲ್ಪ) ಚೈತನ್ಯಗಳನ್ನು ಉನ್ನತ ಆಧ್ಯಾತ್ಮಿಕ ಚೈತನ್ಯಗಳನ್ನಾಗಿ ಪರಿವರ್ತನೆಗೊಳಿಸುವುದು ಎಂದು. ನಿಮ್ಮ ಚೈತನ್ಯಗಳನ್ನು ಉನ್ನತ ಚೈತನ್ಯಗಳನ್ನಾಗಿ ಬದಲಾಯಿಸುವ ಕಲೆಯಲ್ಲಿ ನೀವು ಪಾರಂಗತರಾದರೆ, ನೀವು ತಾಮ್ರವನ್ನು ಚಿನ್ನವನ್ನಾಗಿ ಪರಿವರ್ತನೆಗೊಳಿಸಬಹುದು,
ಅದೇನೂ ದೊಡ್ಡ ವಿಷಯವಲ್ಲ. ಆಂತರಿಕ ರಸಾಯನಶಾಸ್ತ್ರದ ಪ್ರಕ್ರಿಯೆಯಲ್ಲಿ ಪಾರಂಗತರಾದರೆ, ಬಾಹ್ಯ ಜಗತ್ತಿನ ರಸಾಯನ ಶಾಸ್ತ್ರಗಳು ಏನೇನೂ ಇಲ್ಲ; ಅವು ನಿಮ್ಮ ಕೈಯಲ್ಲಿ ಕೇವಲ ಒಂದು ಮಕ್ಕಳಾಟ.
ನಾನು ಈ ಘಟನೆಯನ್ನು ನಿಮಗೆ ವಿವರಿಸಿರುವುದು ರಸಾಯನ ಶಾಸ್ತ್ರದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದಕ್ಕೇ ಹೊರತು, ಬಾಹ್ಯ ಜಗತ್ತಿನ ರಸಾಯನ ಶಾಸ್ತ್ರಗಳನ್ನು ಅಭ್ಯಾಸ ಮಾಡುವುದಕ್ಕಲ್ಲ! ಅದನ್ನು ಅರ್ಥಮಾಡಿಕೊಳ್ಳಿ. ಬಾಹ್ಯ ಜಗತ್ತಿನ ರಸಾಯನ ಶಾಸ್ತ್ರಗಳು ಬಹಳ ಸಾಧಾರಣವಾದವು. ಆಂತರಿಕ ಜಗತ್ತಿನ ರಸಾಯನಶಾಸ್ತ್ರವೇ ನಿಮ್ಮನ್ನು ನಿಜವಾದ ಗುರುವನ್ನಾಗಿ ಮಾಡುತ್ತದೆ.
ಲೋಹಗಳ ರಸಾಯನ ಶಾಸ್ತ್ರದ ಪ್ರಕ್ರಿಯೆಯಲ್ಲಿ ಆಗುವುದೇನು? ಮೊದಲು, ಆ ಹೀನ ಲೋಹದಿಂದ ಅಶುದ್ಧ ಪದಾರ್ಥಗಳನ್ನು ತೆಗೆಯಲಾಗುವುದು, ನಂತರ ಅದಕ್ಕೆ ಕೆಲವು ಉಪಾಂಗ ಪದಾರ್ಥಗಳನ್ನು ಸೇರಿಸಿ, ನಂತರ ಅದನ್ನು ಪ್ರಕ್ರಿಯಿಸಲಾಗುತ್ತದೆ. ಕೊನೆಯಲ್ಲಿ, ಹೀನ ಲೋಹವು ಉನ್ನತ ಲೋಹವಾಗುತ್ತದೆ. ನಮ್ಮ ಪ್ರಾಣಿಮಾತ್ರದ ಭಾವನೆಗಳು ದೈವಿಕ ಭಾವನೆಗಳನ್ನಾಗಿ ಬದಲಾಗಬೇಕು. ನಮಗೆಲ್ಲರಿಗೂ ಕಾಮವಿದೆ, ಇದೊಂದು ಪ್ರಾಣಿಮಾತ್ರದ ಭಾವನೆ. ಇನ್ನೊಂದು ವಿಚಾರ: ಪ್ರಾಣಿಗಳಾದರೂ ಶುದ್ಧವಾದ ಕಾಮವನ್ನು ಹೊಂದಿರುತ್ತಾರೆ. ಅವು ಸಂಬಂಧದಲ್ಲಿರುವಾಗ, ಇಡೀ ಜಗತ್ತನ್ನೇ ಸುಮ್ಮನೆ ಮರೆತುಬಿಡುತ್ತಾರೆ. ಆದರೆ ನಮಗೆ ನಮ್ಮ ಕಾಮವೂ ಕೂಡ ಶುದ್ಧವಾಗಿಲ್ಲ. ಅದರಲ್ಲಿ ಯಾವಾಗಲೂ ತಪ್ಪಿತಸ್ಥ ಭಾವನೆ, ಆಸೆಗಳಿಂದ ಕೂಡಿರುತ್ತದೆ.
ನಮ್ಮ ಹಿಂದಿನ ಜೀವನದ ಕಟ್ಟುಪಾಡುಗಳು ನಮಗೆ ತಪ್ಪಿತಸ್ಥ ಭಾವನೆಯನ್ನುಂಟುಮಾಡಿ ಅದರಿಂದ ಹಿಂಜರಿಯುವ ಹಾಗೆ ಮಾಡುತ್ತವೆ ಅಥವಾ ಭವಿಷ್ಯ ಕಾಲದಲ್ಲಿ ಮುಂದುವರಿಯಬೇಕೆಂಬ ತೀವ್ರ ಆಸೆ ನಮ್ಮನ್ನು ಅದರಲ್ಲಿ ಇನ್ನಷ್ಟು ತೊಡಗಲು ಮಾಡಿ, ಮತ್ತೆ ತಪ್ಪಿತಸ್ಥ ಭಾವನೆಯುಂಟುಮಾಡುತ್ತದೆ. ಇದೊಂದು ವಿಷ ಚಕ್ರ, ಯಾವುದರ ಪರಿಣಾಮವಾಗಿ ಕಾಮವು ಸುಮ್ಮನೆ ಕಲ್ಮಶವಾಗುತ್ತದೆ; ಅದು ಶುದ್ಧವಾಗಿರುವುದಿಲ್ಲ.
ನೀವು ಗಮನಿಸಿದರೆ, ಯಾವಾಗಲೂ ನಿಮ್ಮ ಕಲ್ಪನೆಯನ್ನು ಪೂರೈಸಿದ ಕ್ಷಣವೇ ನೀವು ತಪ್ಪಿತಸ್ಥ ಭಾವನೆಯು ನಿಮ್ಮನ್ನು ಆವರಿಸುತ್ತದೆ. ಆದ್ದರಿಂದಲೇ ಲೈಂಗಿಕತೆಯು ನಿಮ್ಮಲ್ಲಿ ತಪ್ಪಿತಸ್ಥ ಭಾವನೆಯನ್ನುಂಟುಮಾಡುತ್ತದೆ. ನೀವು ಮಗುವಾಗಿದ್ದಾಗಲೇ ಮೊದಲು
ನಿಮ್ಮ ಪರಿವಾರು ತಪ್ಪಿತಸ್ಥ ಭಾವನೆಯನ್ನು ನಿಮ್ಮಲ್ಲಿ ಮೂಡಿಸುತ್ತದೆ. ನಂತರ ತಪ್ಪಿತಸ್ಥ ಭಾವನೆಯನ್ನು ಸ್ವತಃ ನೀವೇ ಸೃಷ್ಟಿಸಿಕೊಳ್ಳುವ ಕಲೆಯಲ್ಲಿ ಪಾರಂಗತರಾಗುತ್ತೀರ! ತಪ್ಪಿತಸ್ಥ ಭಾವನೆಯನ್ನು ಮೊದಲು ಅರ್ಥಮಾಡಿಕೊಳ್ಳಿ. ಯಾರಾದರೂ ನಿಮ್ಮನ್ನು ಅವರ ಹತೋಟಿಯಲ್ಲಿಟ್ಟುಕೊಳ್ಳಬೇಕೆಂದು ಬಯಸುವವರು ನಿಮ್ಮಲ್ಲಿ ಮೊದಲು ತಪ್ಪಿತಸ್ಥ ಭಾವನೆಯನ್ನು ತುಂಬುತ್ತಾರೆ. ನೀವು ಯಾವುದೋ ಒಂದು ರೀತಿಯಲ್ಲಿ ಕೆಳಮಟ್ಟರೆಂಬ ಭಾವನೆಯನ್ನು ಮೂಡಿಸುತ್ತಾರೆ. ಆಗ ನೀವು ನೀವಾಗಿಯೇ ಅವರು ಹೇಳುವುದನ್ನು ಪಾಲಿಸುತ್ತೀರ.
ಮನುಷ್ಯನಿಗೆ ನಿಮ್ಮ ತಪ್ಪಿತಸ್ಥ ಭಾವನೆಯಿಂದ ಮಾತ್ರ ಹತೋಟಿ ಯಲ್ಲಿಟ್ಟುಕೊಳ್ಳುವುದು ತಿಳಿದಿದೆ. ನಾನು ಹೇಳುತ್ತೇನೆ, ನಿಯಮಗಳು ಮಕ್ಕಳ ವಿಷಯದಲ್ಲಿ ಪರವಾಗಿಲ್ಲ. ನಿಯಮಗಳಿಂದ ಆರಂಭಿಸುವುದೇನೋ ಒಳ್ಳೆಯದು. ಆದರೆ, ನೀವು ಸ್ವಂತ ಬುದ್ಧಿಶಕ್ತಿಯಿಂದ ಬೆಳೆದು ಮುಂದೆ ಹೋಗುವುದು ಮುಖ್ಯ, ನಿಮ್ಮ ವ್ಯಕ್ತಿತ್ವವನ್ನು ಸಮಗ್ರವನ್ನಾಗಿ ಮಾಡಿದಾಗ, ನಿಮ್ಮಲ್ಲಿ ತಪ್ಪಿತಸ್ಥ ಭಾವನೆಯು ತುಂಬಲು ಸಾಧ್ಯವಿಲ್ಲ. ನಿಜವಾಗಿ ನೋಡಿದರೆ, ಒಂದು ಘಟನೆ ತಾನಾಗಿಯೇ ನಿಮ್ಮಲ್ಲಿ ತಪ್ಪಿತಸ್ಥ ಭಾವನೆಯನ್ನುಂಟುಮಾಡುವುದಿಲ್ಲ. ಆ ಘಟನೆಯ ಪರಿಣಾಮವೇ ನಿಮ್ಮಲ್ಲಿ ತಪ್ಪಿತಸ್ಥ ಭಾವನೆಯನ್ನುಂಟುಮಾಡುತ್ತದೆ.
ಜನರು ಕಣ್ಣುಮುಚ್ಚಿ ಪೀಳಿಗೆಯಿಂದ ಪೀಳಿಗೆಗೆ ನಿಯಮಗಳನ್ನು ದಾಟಿಸುತ್ತಾರೆ, ಮತ್ತು ಅದರ ಜೊತೆಗೆ, ತಪ್ಪಿತಸ್ಥ ಭಾವನೆಯನ್ನೂ ಕೂಡ ಒಂದು ಕಿರೀಟದ ಹಾಗೆ, ತಪ್ಪಿತಸ್ಥ ಭಾವನೆಯನ್ನು ದಾಟಿಸಲಾಗುತ್ತದೆ - ತಾತನಿಂದ ತಂದೆಗೆ, ತಂದೆಯಿಂದ, ಮಗನಿಗೆ, ಮಗನಿಂದ ಮೊಮ್ಮಗನಿಗೆ ಹೀಗೆ.
ಸೌಂದರ್ಯಕ್ಕೆ ಸಂಬಂಧಪಟ್ಟ ಎಲ್ಲ ಪದಾರ್ಥಗಳು ನೀವು ಅಷ್ಟು ಚೆನ್ನಾಗಿಲ್ಲ ಎಂದು ಪದೇ ಪದೇ ಹೇಳುತ್ತವೆ. ನೀವು ನಿಮ್ಮ ಸ್ವಂತ ಸಾಕಷ್ಟಿಲ್ಲದ ದೇಹದ ಬಗ್ಗೆಯೇ ತಪ್ಪಿತಸ್ಥ ಭಾವನೆಯನ್ನು ಹೊಂದಲು ಆರಂಭಿಸುತ್ತೀರ. ಆಗ ನೀವು ಮಾಡುವುದೇನು? ನೀವೇ ಹೋಗಿ ಆ ಪದಾರ್ಥಗಳನ್ನು ಕೊಂಡು ಬಂದು ಉಪಯೋಗಿಸುತ್ತೀರ. ಹತೋಟಿಯಲ್ಲಿ ಬೀಳುತ್ತೀರ. ಅವುಗಳನ್ನು ಉಪಯೋಗಿಸಿದ ಮೇಲೆ, ಇನ್ನೊಂದು ತಪ್ಪಿತಸ್ಥ ಭಾವನೆ ಆವರಿಸಿಕೊಳ್ಳುತ್ತದೆ 'ಕೇವಲ ಇಷ್ಟಕ್ಕಾಗಿಯೇ ನಾನು ಇಷ್ಟೆಲ್ಲಾ ಕಷ್ಟವನ್ನು ಪಟ್ಟೆನಾ?' ನೀವು ಏನನ್ನಾದರೂ ಸಾಧಿಸಿದ ಕ್ಷಣವೇ, ನಿಮ್ಮನ್ನು ಆವರಿಸುವ ಮೊದಲ ಭವನೆ ತಪ್ಪಿತಸ್ಥ ಭಾವನೆ.
ಖಚಿತ ಪರಿಹಾರಗಳು
ಕಾಮ, ಭ್ರಮೆ ಮತ್ತು ಕಲ್ಪನೆಗಳ ವಿಷಯಕ್ಕೆ ಮತ್ತೆ ಬಂದರೆ, ಇವು ನಿಮ್ಮನ್ನು ಒಂದು ನಿರುತ್ಪಾದಕ ಆವೃತ್ತದಲ್ಲಿ ಮುಳುಗಿಸಿ ಇಡುತ್ತದೆ. ನೀವು ಟಿ.ವಿ., ಇಂಟರ್ನೆಟ್, ಪುಸ್ತಕಗಳು ಹೀಗೆ ಇವುಗಳಿಂದ ಸಂಗ್ರಹಿಸುವ ಕಲ್ಪನೆಯಿಂದ ಒಂದು ಘನವಾದ ಮೆದುಳಿನ (cerebral) ಪದರವನ್ನೇ ಸೃಷ್ಟಿಸಿಕೊಳ್ಳುತ್ತೀರ. ನೀವು ಮಾನಸಿಕವಾಗಿ ಈ ಪದರದಲ್ಲೇ ಬದುಕುತ್ತೀರ. ನೀವು ಒಂದು ವೈವಾಹಿಕ ಸಂಬಂಧದಲ್ಲಿರುವಾಗಲೂ ಕೂಡ, ಈ ಪದರದೊಂದಿಗೆ ಸಂಬಂಧ ಕಲ್ಪಿಸುತ್ತೀರ; ನಿಮ್ಮ ನಿಜವಾದ ಗಂಡ ಅಥವಾ ಹೆಂಡತಿಯೊಂದಿಗೆ ಅಲ್ಲ. ನಿಜವಾದ ಗಂಡ ಅಥವಾ ಹೆಂಡತಿಯು ನಿಮ್ಮ ಮನಸ್ಸಿನಲ್ಲಿರುವ ಮಾನಸಿಕ ಪ್ರತಿಬಿಂಬಗಳಿಗೆ ಒಂದು ಸಾರವಿಲ್ಲದ ಪರ್ಯಾಯವಾಗ್ತಾರೆ. ಆಗ ನಿಮ್ಮ ಕಾಮವು ಕಲ್ಮಶವಾಗಿರುತ್ತದೆ.
ನೀವು ಈ ರೀತಿ ತೊಡಗಿಸಿಕೊಂಡರೆ, ಒಂದು ವಿಷಚಕ್ರ (Vicious cycle) ದಲ್ಲಿ ಸಿಕ್ಕಿಕೊಂಡು ಬಿಡುತ್ತೀರ, ಮತ್ತು ಆದ್ದರಿಂದಲೇ ನೀವು ಅದರೊಳಕ್ಕೆ ಆಳವಾಗಿ ಹೋಗಿ ಅಂತಿಮದಲ್ಲಿ ಅದರ ಹೊರಗೆ ಬರುವುದಿಲ್ಲ, ಬದಲಿಗೆ ಇನ್ನಷ್ಟು ಬಯಕೆಗಳಿಂದ ಅದಕ್ಕೆ ಮತ್ತೆ ಮತ್ತೆ ಹೋಗುತ್ತೀರ. ನೀವು ಅದರೊಳಕ್ಕೆ ಆಳವಾಗಿ ಹೋದರೆ, ಅದರಿಂದ ವಿಕಸನವಾಗುತ್ತೀರ!
ಆದ್ದರಿಂದಲೇ ಹಿಂದಿನ ಕಾಲದಲ್ಲಿ ಜನರು ತಮ್ಮ 40 ವರ್ಷಗಳ ವಯಸ್ಸಿನಲ್ಲಿ ಕಾಮವನ್ನು ಬಿಡುತ್ತಿದ್ದರು. ಅವರಲ್ಲಿ ಇಷ್ಟು ಅತಿ ಕ್ಲಿಷ್ಟವಾದ ಮಾನಸಿಕ ಪ್ರತಿಬಿಂಬಗಳೇ ಇರುತ್ತಿರಲಿಲ್ಲ. ಅವರು ತಮ್ಮ ಗಂಡ ಅಥವಾ ಹೆಂಡತಿಯ ಜೊತೆ ನೇರವಾಗಿ ಸಂಬಂಧ ಕಲ್ಪಿಸುತ್ತಿದ್ದರು. ಆದ್ದರಿಂದ ಅವರು ಅದರಿಂದ ಚಿಕ್ಕ ವಯಸ್ಸಿನಲ್ಲೇ ವಿಕಾಸವಾಗುತ್ತಿದ್ದರು. ಅವರು ಕಾಮದೊಳಕ್ಕೆ ಇನ್ನೂ ಆಳವಾಗಿ ಹೋಗಿ ಅದರಿಂದಾಚೆ ಬರುತ್ತಿದ್ದರು. ಕಾಮವೇ ಅವರನ್ನು ಹಾಗೆಯೇ ಬಿಟ್ಟಿತ್ತು, ಅವರು ಅದನ್ನು ಬಿಡಬೇಕಾಗಲಿಲ್ಲ.
ಭಾರತೀಯ ವಿವಾಹಗಳಲ್ಲಿ, ಪೂಜಾರಿಗಳು ದಂಪತಿಗಳನ್ನು ಉಚ್ಛರಿಸಲು ಮಾಡುವ ಒಂದು ಸುಂದರವಾದ ಶ್ಲೋಕವಿದೆ. ಹೆಂಡತಿ ಗಂಡನಿಗೆ ಹೇಳುತ್ತಾಳೆ, “ನೀನು ನನ್ನ 11ನೆಯ ಮಗನಾಗಲಿ” ಮತ್ತು ಗಂಡ ಹೆಂಡತಿಗೆ ಹೇಳುತ್ತಾನೆ “ನೀನು ನನ್ನ 11ನೆಯ ಮಗಳಾಗಲಿ'' ಇದರರ್ಥ, ಮದುವೆಯಾದ ಹನ್ನೊಂದನೆಯ ವರ್ಷದಲ್ಲಿ ಅವರು ಒಬ್ಬರನ್ನೊಬ್ಬರು ತಮ್ಮ ಮಗ ಅಥವಾ ಮಗಳಾಗಿ ನೋಡುತ್ತಾರೆ; ಅಷ್ಟು ಹೊತ್ತಿಗೆ ಅವರ ಸಂಬಂಧವು ಅಷ್ಟು ಪರಿವರ್ತನೆಯನ್ನು ಹೊಂದಿರುತ್ತದೆ.
ನೀವು ನಿಮ್ಮ ಮಕ್ಕಳನ್ನು ನೋಡಿದಾಗ, ಅದೆಷ್ಟೊಂದು ಸಂತೋಷದಿಂದ ತುಂಬಿದ್ದೀರ, ಅಲ್ಲವೇ? ನಿಮ್ಮ ಗಂಡ ಅಥವಾ ಹೆಂಡತಿಯ ಜೊತೆ ಇರುವ ಸಂಬಂಧವು ಎಷ್ಟು ಪರಿವರ್ತನೆಯನ್ನು ಹೊಂದಿರುತ್ತದೆ ಎಂದರೆ, ಅವನನ್ನು ಅಥವಾ ಅವಳನ್ನು ನೋಡಿದಾಗ ಅದೇ ಸಂತೋಷವನ್ನು ಅನುಭವಿಸುತ್ತೀರ. ಗಂಡ ಹೆಂಡತಿಗೆ ಮಗನಾಗುತ್ತಾನೆ ಮತ್ತು ಹೆಂಡತಿ ಗಂಡನಿಗೆ ಮಗಳಾಗುತ್ತಾಳೆ. ನಿಮ್ಮ ಕಲ್ಪನೆಯ ಸ್ಪಷ್ಟವಾದ ತಿಳುವಳಿಕೆ ಇಲ್ಲದಿದ್ದಾಗ, ನೀವು ವೇದನೆ ಅನುಭವಿಸುತ್ತೀರ. ಇದರಿಂದ ಹೊರಕ್ಕೆ ಬರುವುದಕ್ಕೆ ತಿಳುವಳಿಕೆಯೇ ಕೀಲಿಕೈ. ವೇದನೆಯನ್ನು ಅನುಭವಿಸದೆ ಬಾಳುವುದು ಹೇಗೆ ಎಂದು ನಿಮಗೆ ತಿಳಿದರೆ, ನೀವು ಆಧ್ಯಾತ್ಮಿಕ ಜೀವನವನ್ನು ನಡೆಸುತ್ತಿದ್ದೀರ. ವೇದನೆ ಅನುಭವಿಸುವುದನ್ನು ತಪ್ಪಿಸುವುದು ಹೇಗೆ ಎಂದು ತಿಳಿಯದೆ ಇದ್ದರೆ, ನೀವು ಪ್ರಾಪಂಚಿಕ ಜೀವನವನ್ನು ನಡೆಸುತ್ತಿದ್ದೀರ. ಎರಡೇ ಬಗೆಯ ಜೀವನಗಳಿವೆ ತಿಳುವಳಿಕೆಯಿಂದ ಕೂಡಿದ ಜೀವನ ಮತ್ತು ತಿಳುವಳಿಕೆ ರಹಿತ ಜೀವನ; ಬುದ್ಧನ ಜೀವನ ಮತ್ತು ಬುದ್ಧುವಿನ ಜೀವನ! ನೀವು ನಿಮ್ಮ ಆಸೆಗಳು ಹಾಗೂ ಭ್ರಮೆಗಳ ಬಗ್ಗೆ ಗೊಂದಲದಲ್ಲಿದ್ದೀರ, ಆದ್ದರಿಂದಲೇ ನೀವೆಲ್ಲೇ ಇದ್ದರೂ ಸಂತೋಷವಾಗಿಲ್ಲ. ನೆಲದ ಮೇಲೆ ಚಾಪೆಯ ಮೇಲೆ ಕುಳಿತುಕೊಂಡರೆ, ನೀವು ಸಂತೋಷವಾಗಿಲ್ಲ, ಏಕೆಂದರೆ ಕುರ್ಚಿಯ ಬಗ್ಗೆ ಯೋಚಿಸುತ್ತಿದ್ದೀರ, ಕುರ್ಚಿಯ ಮೇಲೆ ಕುಳಿತುಕೊಂಡರೆ, ಸಿಂಹಾಸನದ ಯೋಚನೆಯಲ್ಲಿರುತ್ತೀರ. ಸಿಂಹಾಸನದ ಮೇಲೆ ಕುಳಿತಾಗ, ಅದನ್ನು ಆಸ್ವಾದಿಸುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತೀರ! ನಾನು ಏನು ಹೇಳಲು ಪ್ರಯತ್ನಿಸುತ್ತಿದ್ದೇನೆ ಎಂದು ಅರ್ಥವಾಗುತ್ತಿದೆಯೇ? ನಿಮ್ಮ ಕಾಮವು ತಪ್ಪಿತಸ್ಥ ಭಾವನೆ ಅಥವಾ ಆಸೆಗಳಿಂದ ಕೂಡಿಲ್ಲದೆ ಪರಿಶುದ್ಧವಾಗಿದ್ದರೆ, ನೀವು ಯಾವುದೇ ರೀತಿಯ ತಪ್ಪಿತಸ್ಥ ಭಾವನೆ ಅಥವಾ ಕಲ್ಪನೆಯಿಲ್ಲದೆ ಅದರೊಳಕ್ಕೆ ಆಳವಾಗಿ ಹೋಗುತ್ತೀರ, ಮತ್ತು ಅದರಿಂದ ವಿಕಸನವಾಗುತ್ತೀರ. ನಿಮ್ಮ ಮೆದುಳಿನ ಪದರವು ಕೆಲಸ ಮಾಡಲು ಆರಂಭಿಸಿದಾಗಲೇ, ನೀವು ಸಂಗ್ರಹಿಸಿದ ಕಲ್ಪನೆ ಮತ್ತು ಭ್ರಮೆಯನ್ನು ತೊಡಗಿಸಿ, ಕಾಮದಿಂದ ವಿಕಸನವಾಗಲು ಅಸಫಲರಾಗುತ್ತೀರ. ನಿಮ್ಮ ಮೆದುಳಿನ ಪದರವನ್ನು ಬಿಡಿ, ಮತ್ತು ನಿಮ್ಮ ಸ್ವಂತ ದೇಹದ ಬಗ್ಗೆ ಮತ್ತು ಮತ್ತೊಬ್ಬರ ದೇಹದ ಬಗ್ಗೆ ಪ್ರೀತಿಯನ್ನು ಅನುಭವಿಸುವುದನ್ನು ಆರಂಭಿಸಿ. ನಿಮ್ಮ ದೇಹದಲ್ಲಿ ಆನಂದವು ನಿರಂತರವಾಗಿ ಸಂಭವಿಸುತ್ತಿದೆ, ಆದರೆ ಅದು ಮೇಲ್ಬರಲು
ನೀವೇ ಅವಕಾಶವನ್ನು ನೀಡುತ್ತಿಲ್ಲ, ಏಕೆಂದರೆ ನೀವು ನಿಮ್ಮ ಕಲ್ಪನೆಯಲ್ಲಿ ಸಿಕ್ಕಿಕೊಂಡಿದ್ದೀರ. ನಿಮ್ಮ ಸ್ವಂತ ದೇಹದ ಬಗ್ಗೆ ಮತ್ತು ಮತ್ತೊಬ್ಬರ ದೇಹದ ಬಗ್ಗೆ ನಿಮ್ಮ ಕಲ್ಪನೆಯನ್ನು ಬಿಟ್ಟಾಗ, ನಿಮ್ಮ ಕಾಮದಲ್ಲಿ ಅಶುದ್ಧ ಅಂಶವು ತೆಗೆದು ಹಾಕಲ್ಪಡುತ್ತದೆ, ಮತ್ತು ರಾಸಾಯನಿಕ ಶಾಸ್ತ್ರದ ಪ್ರಕ್ರಿಯೆಯ ಮೊದಲ ಹೆಜ್ಜೆ - ಅಂದರೆ ಅಶುದ್ಧ ಅಂಶಗಳನ್ನು ತೆಗೆದು ಹಾಕುವಿಕೆಯು ಸಂಭವಿಸುವುದು. ನೀವು ನಿಮ್ಮ ದೇಹದೊಂದಿಗೆ ಆರಾಮದಿಂದಿದ್ದರೆ, ನಿಮ್ಮಲ್ಲಿ ಒಂದು ರೀತಿಯ ಸೊಬಗು ಉಂಟಾಗುತ್ತದೆ. ಅರ್ಥ ಮಾಡಿಕೊಳ್ಳಿ: ಎಲ್ಲ ಚರ್ಮದ ರೋಗಗಳೆಲ್ಲ ಸಂಭವಿಸುವುದಕ್ಕೆ ಕಾರಣ ನೀನು ನಿಮ್ಮ ದೇಹದ ಬಗ್ಗೆ ದ್ವೇಷವಿದೆ. ಅವು ಸಂಭವಿಸುವುದಕ್ಕೆ ಕಾರಣ ನೀವು ಸ್ವಂತ ದೇಹದ ಬಗ್ಗೆ ಕಡಿಮೆ ಸ್ವಪ್ರತಿಷ್ಠೆ ಮತ್ತು ಅಗೌರವವಿರುವುದು.
ಇದನ್ನು ಅರ್ಥಮಾಡಿಕೊಳ್ಳದೆ, ಚರ್ಮರೋಗಗಳಿಗೆ ಚಿಕಿತ್ಸೆ ಹುಡುಕುತ್ತಾ ಹೋಗುತ್ತೀರ. ಇದರ ಮೂಲವು ನೀವು ವರ್ಷಾಂತರದಲ್ಲಿ ಸೃಷ್ಟಿಸಿಕೊಂಡಿರುವ ಸ್ವಂತ ಮೆದುಳಿನ ಪದರದಲ್ಲೇ ಇದೆ. ಸದಾಕಾಲವೂ ನೀವು ಬೇರೊಬ್ಬರ ದೇಹವನ್ನು ನೋಡಿ, ಅದರಂತೆ ದೇಹವನ್ನು ನೀವೂ ಬಯಸುತ್ತೀರ. ನಿಮ್ಮ ದೇಹವನ್ನು ಪ್ರೀತಿಸಿದಾಗ, ಅದರೊಂದಿಗೆ ಆರಾಮದಿಂದಿದ್ದರೆ, ನೀವು ಸುಂದರವಾಗಿ ಕಾಣುತ್ತೀರ ಮತ್ತು ಸುಂದರವೆನಿಸುತ್ತೀರ.
ತುಳಸೀದಾಸರು ರಚಿಸಿರುವ ರಾಮಾಯಣದಲ್ಲಿ ಹೀಗೆ ಹೇಳಲಾಗಿದೆ: ಸೀತಾ ಜನಕನ ಆಸ್ಥಾನದೊಳಕ್ಕೆ ನಡೆದುಬಂದಾಗ, ಪ್ರತಿಯೊಬ್ಬರೂ, ವಶಿಷ್ಠರಂಥ ಋಷಿಗಳು ಮತ್ತು ಮಹಾಮುನಿಗಳೆಲ್ಲರೂ ಮತ್ತು ಸೀತಾಳ ಸ್ವಂತ ತಂದೆಯಾದ ಜನಕರೇ ಎದ್ದು ನಿಂತು ಅವಳಿಗೆ ಗೌರವ ತೋರಿದರು. ಅಂಥ ಒಂದು ಸೊಬಗು ಅವಳಿಂದ ಹೊರಸೂಸುತ್ತಿತ್ತು.
'ತಂತ್ರ'ದಲ್ಲಿ ಒಂದು ವಿಧಾನವಿದೆ, ಬೆಳಿಗ್ಗೆ ಎದ್ದ ತಕ್ಷಣ ನೀವು ನಿಮ್ಮ ದೇಹದ ಪ್ರತಿ ಭಾಗವನ್ನು ಗಾಢವಾದ ಪ್ರೀತಿಯಿಂದ ಸ್ಪರ್ಶಿಸುವುದು ಮತ್ತು ಜಾಗೃತರಾಗುವ ಸಮಯದಲ್ಲಿ ಸೂಕ್ಷ್ಮ ಶರೀರವು ಭೌತಿಕ ಶರೀರದಲ್ಲಿ ನೆಲೆಗೊಳ್ಳುವುದು.
ಇರಲಿ, ಬಾಹ್ಯ ಜಗತ್ತಿನಿಂದ ನೀವು ಹೆಚ್ಚು ಪ್ರತಿಬಿಂಬಗಳನ್ನು ಸಂಗ್ರಹಿಸಿದಷ್ಟು, ನಿಮ್ಮ ಮೆದುಳಿನ ಪದರವು ಅಷ್ಟೇ ಹೆಚ್ಚು ದಟ್ಟವಾಗಿರುತ್ತದೆ. ಹಿಂದಿನ ಕಾಲದಲ್ಲಿ ಜನರು ಎಷ್ಟೊಂದು ಸಂಕೀರ್ಣರಾಗಿರಲಿಲ್ಲ. ಅವರು ಸರಳತೆಯಿಂದಿದ್ದರು. ಮೆದುಳಿನ ಪದರವು ಇರಲೇ ಇಲ್ಲ ಅಥವಾ ಅದು ಬಹಳ ಸಣ್ಣ ಪದರವಾಗಿತ್ತು.
ನಿಮ್ಮ ದೇಹದ ಬಗ್ಗೆ ಮತ್ತು ಮತ್ತೊಬ್ಬರ ದೇಹದ ಬಗ್ಗೆ ನೀವು ಕಲ್ಪನೆಯನ್ನು ಬಿಟ್ಟ ಮೇಲೆ, ನೀವು ಮತ್ತೊಬ್ಬರ ದೇಹದ ಬಗ್ಗೆ ಅನುಕಂಪ ಮತ್ತು ಸ್ನೇಹಭಾವವನ್ನು ಅಭಿವ್ಯಕ್ತಪಡಿಸಲು ಆರಂಭಿಸುತ್ತೀರ. ಕಾಮವನ್ನು ಪ್ರೀತಿಯನ್ನಾಗಿ ಪರಿವರ್ತನೆ ಮಾಡುವ ರಸಾಯನ ಶಾಸ್ತ್ರದ ಪ್ರಕ್ರಿಯೆಗೆ ನೀವು ಸ್ನೇಹಭಾವದ ಅಂಶವನ್ನು ಸೇರಿಸಬೇಕು.
ಜ್ಞಾಪಿಸಿಕೊಳ್ಳಿ: ದೌರ್ಜನ್ಯವೇ ಒಂದು ದಾರಿಯಲ್ಲ. ನಾವು ಸಮಾಜದಲ್ಲಿ, ರಾಜ್ಯದಲ್ಲಿ, ದೇಶದಲ್ಲಿ ಇರುವ ದೌರ್ಜನ್ಯದ ಬಗ್ಗೆ ಮಾತನಾಡುತ್ತೇವೆ. ಆದರೆ, ನಮ್ಮ ಸ್ವಂತ ಮನೆಗಳಲ್ಲಿ ಮತ್ತು ಸ್ವಂತ ದೇಹಗಳು ಮತ್ತು ಮನಸ್ಸುಗಳಲ್ಲಿರುವ ದೌರ್ಜನ್ಯದ ಬಗ್ಗೆ ಯೋಚಿಸಿದ್ದೀರಾ? ನಾನು ಹೇಳುತ್ತೇನೆ: ದೌರ್ಜನ್ಯವು ಮನೆಯಲ್ಲೇ ಆರಂಭವಾಗುವುದು.
ನೀವು ಹೇಳಬಹುದು, "ನಾವು ನಮ್ಮ ದೈನಂದಿನ ಜೀವನದಲ್ಲಿ ದೌರ್ಜನ್ಯತೆ ಯಿಂದಿಲ್ಲ'' ಎಂದು. ನಾನು ಹೇಳುತ್ತೇನೆ: ನೀವು ಸ್ನೇಹಭಾವದವರೆಂದೂ, ದೌರ್ಜನ್ಯ ಭಾವದವರಲ್ಲವೆಂದು ಕೇವಲ ಭಾವಿಸುತ್ತೀರ ಅಷ್ಟೆ. 'ಸ್ನೇಹಭಾವ' ಪದದಿಂದ ನಾನು ಹೇಳಲು ಬಯಸುತ್ತಿರುವುದು ಬೇರೆ. ನೀವು ಅದರ ಬಗ್ಗೆ ಮನಸ್ಸಿನಲ್ಲಿ ಅಂದುಕೊಂಡಿರುವುದೇ ಬೇರೆ. ನೀವು ನಿಮ್ಮನ್ನು ಹತ್ತಿರದಿಂದ ಅವಲೋಕಿಸಿ. ನೀವು ಬೀದಿಯಲ್ಲಿ ಅಥವಾ ನಿಮ್ಮ ಸ್ವಂತ ಉದ್ಯಾನದಲ್ಲಿ ನಡೆದು ಹೋಗುವಾಗ, ನಿಮ್ಮ ಅರಿವಿಲ್ಲದೆಯೇ ನೀವು ಮರಗಳ ಎಲೆಗಳು, ಹೂಗಳು ಇರುವುದನ್ನು ಕೀಳುತ್ತೀರ, ಕಲ್ಲುಗಳನ್ನು ಒದೆಯುತ್ತೀರ, ಮತ್ತು ಬಳ್ಳಿಗಳನ್ನು ಎಳೆಯುತ್ತೀರ, ಹೀಗೆ ಏನೇನೋ ಮಾಡುತ್ತೀರ. ಇವೆಲ್ಲವೂ ದೌರ್ಜನ್ಯತೆಯಿಂದ ಕೂಡಿರುವ ನಡತೆಗಳು.
ಒಂದು ಬಾರಿಯಾದರೂ, ನಿಮ್ಮ ಉದ್ಯಾನವನದೊಳಕ್ಕೆ ನಡೆದು ಒಂದು ಹೂವನ್ನೋ ಅಥವಾ ಎಲೆಯನ್ನೋ, ಹತ್ತಿರದಿಂದ ಅವುಗಳ ಬಗ್ಗೆ ಒಂದು ಆಶ್ಚರ್ಯಭಾವದಿಂದ ಪ್ರೀತಿಯಿಂದ ನೋಡಿ. ಅವುಗಳ ಸೌಂದರ್ಯವನ್ನು ನಿಮ್ಮ ಹೃದಯದಲ್ಲಿ ಅನುಭವಿಸಿ ಅದನ್ನು ಪ್ರೀತಿಯಿಂದ ನೋಡಿ. ಅದರ ಮೂಲಕ ಅಸ್ತಿತ್ವದ ಅದ್ಭುತಗಳೊಡನೆ ಸಂಪರ್ಕ ಹೊಂದಿ. ಅದನ್ನು ಎಳೆಯ ಮಗುವಿನಂತೆ ನೋಡಿ. ಈ ಭಾವನೆ ನಿಮ್ಮೊಳಗೆ ಆಳದಲ್ಲಿ ಉಕ್ಕುತ್ತಿರುವುದನ್ನು ಅನುಭವಿಸಿ.
ಈಗ, ನೀವು ಅದರ ಹತ್ತಿರ ನಡೆಯುತ್ತಿದ್ದಾಗ ಎಷ್ಟು ಬಾರಿ ಅದೇ ಹೂವನ್ನು ಅರಿವಿಲ್ಲದೆಯೇ ಕಿತ್ತು ಕೇವಲವಾಗಿ ಅದನ್ನು ಎಸೆದುಬಿಟ್ಟಿದ್ದಿರಿ ಎಂದು ಯೋಚಿಸಿ.
ಖಚಿತ ಪರಿಹಾರಗಳು
ಈ ಎರಡೂ ಭಾವನೆಗಳ ಮಧ್ಯೆ, ಮನೋಭಾವನೆಗಳ ಮಧ್ಯೆ, ಇರುವ ವ್ಯತ್ಯಾಸದ ತಿಳಿವಾಯಿತೇ? ಈಗ ಹೇಳಿ, ನೀವು ನಿಜವಾಗಿಯೂ ನಿಮ್ಮ ಸುತ್ತಮುತ್ತಲಿರುವ ಎಲ್ಲದರ ಬಗ್ಗೆ ಮತ್ತು ಎಲ್ಲರ ಬಗ್ಗೆ ಸ್ನೇಹಭಾವದಿಂದ ವರ್ತಿಸುತ್ತಿದ್ದೀರ?
ಎಲ್ಲವನ್ನು ಅರಿವಿನಿಂದ ನೋಡಿ. ಈಗೇನೋ ನೀವು ನಿಮ್ಮ ಅರಿವಿಲ್ಲದ ವಲಯದಿಂದ ಕೆಲಸ ಮಾಡುತ್ತಿದ್ದೀರಿ, ಆದ್ದರಿಂದ ಈ ವಿಷಯಗಳ ಬಗ್ಗೆ ದೌರ್ಜನ್ಯ ರೀತಿಯಲ್ಲಿ ವರ್ತಿಸುತ್ತೀರ, ನೀವು ದೌರ್ಜನ್ಯತೆಯಿಂದಿದ್ದೀರ ಎಂಬ ಅರಿವೂ ಇಲ್ಲದೆ, ಅವುಗಳನ್ನು ಅರಿವಿನಿಂದ (awareness) ನೋಡಿದರೆ, ಅವುಗಳಲ್ಲಿರುವ ಅತಿಯಾದ ಸೌಂದರ್ಯವನ್ನು ಕಾಣುತ್ತೀರ ಮತ್ತು ಅವುಗಳೊಂದಿಗೆ ಪ್ರೀತಿಯಿಂದ ವರ್ತಿಸುತ್ತೀರ.
ಮತ್ತೊಂದು ವಿಚಾರ, ನೀವು ನಿಮ್ಮ ಸ್ವಂತ ದೇಹವನ್ನು ಅದೆಷ್ಟು ದುರುಪಯೋಗಪಡಿಸುತ್ತೀರ? ನೀವು ಅತಿಯಾಗಿ ತಿಂದು, ನಿಮ್ಮೊಳಗೆ ಕೆಲಸ ಮಾಡುತ್ತಿರುವ ಸುಂದರವಾದ ಜೀರ್ಣಾಂಗ ವ್ಯವಸ್ಥೆಯಲ್ಲಿ ವ್ಯತ್ಯಾಸಗಳನ್ನು ಉಂಟುಮಾಡುತ್ತೀರ. ರಾತ್ರಿ ಬಹಳ ಹೊತ್ತಾದರೂ ನೀವು ಎದ್ದಿರುತ್ತೀರ ಮತ್ತು ನಿಮ್ಮ ಶರೀರವು ವಿಶ್ರಾಂತಿಗಾಗಿ ಅಳುತ್ತಿರುವಾಗಲೂ ಅದನ್ನು ಹಿಂಸಿಸುತ್ತೀರ. ಧೂಮಪಾನ, ಮದ್ಯಪಾನ ನಿಮ್ಮ ದೇಹಕ್ಕೆ ಒಳ್ಳೆಯದಲ್ಲವೆಂದು ತಿಳಿದಿದ್ದರೂ ಹಾಗೆ ಮಾಡುತ್ತೀರ. ಇವೆಲ್ಲವೂ ನಿಮ್ಮ ದೇಹದ ಬಗ್ಗೆ ನೀವು ತೋರಿಸುವ ಸ್ನೇಹಭಾವದ ವರ್ತನೆಗಳೇ? ನಿಮ್ಮಲ್ಲಿ ಕೆಲವರು ನಿಮ್ಮ ದೇಹವನ್ನು ದ್ವೇಷಿಸುತ್ತೀರ ಮತ್ತು ಆದ್ದರಿಂದ ಅದರ ಬಗ್ಗೆ ಉದಾಸೀನರಾಗಿರುತ್ತೀರ.
ಬಾಹ್ಯದಲ್ಲಿರುವ ದೌರ್ಜನ್ಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ, ನಿಮ್ಮೊಳಗಿರುವ ದೌರ್ಜನ್ಯದ ಬಗ್ಗೆ ಗಮನ ಹರಿಸಿ. ಆಗ ಬಾಹ್ಯದಲ್ಲಿರುವ ದೌರ್ಜನ್ಯವು ತಾನಾಗಿಯೇ ನಿಂತುಹೋಗುತ್ತದೆ. ಸದಾಕಾಲವೂ ನಾವು ಬೇರೆಯವರ ನ್ಯೂನತೆಗೆ ಬೊಟ್ಟು ತೋರಿಸಲು ಸಿದ್ಧರಾಗಿರುತ್ತೇವೆ. ಆದರೆ ನಮ್ಮಲ್ಲೇ ಇರುವ ಅಷ್ಟೊಂದು ನ್ಯೂನತೆಯ ಬಗ್ಗೆ ನಾವು ಯೋಚಿಸುತ್ತೇವಾ?
ಒಮ್ಮೆ ಒಬ್ಬ ವ್ಯಕ್ತಿ ನನ್ನನ್ನು ನೋಡಲು ಬಂದಿದ್ದ, ಮತ್ತು ಅವನು ತನ್ನ ಕುಟುಂಬದ ಬಗ್ಗೆ ಹೇಳಿದ. ಅವನ ಹೆಂಡತಿ ಲಾಯರ್ (lawyer) ಎಂದು ಹೇಳಿದ. ನಾನು ಕೇಳಿದೆ, "ಓ, ಅವಳು ವಾದ ಮಾಡಲು ನ್ಯಾಯಾಲಯಕ್ಕೆ ಹೋಗುತ್ತಾಳೆಯೇ?'' ಅವನು ಉತ್ತರಿಸಿದ, "ಇಲ್ಲ ಸ್ವಾಮೀಜಿ, ಮನೆಯಲ್ಲೇ ವಾದ ಮಾಡುತ್ತಾಳೆ!''
ನಾವೆಲ್ಲರೂ ಬೇರೆಯವರತ್ತ ಬೊಟ್ಟು ತೋರಿಸಿ ವಾದ ಮಾಡಲು ಸಿದ್ಧರಾಗಿದ್ದೇವೆ. ಇದಕ್ಕೆ ಬದಲಾಗಿ, ನಮ್ಮಲ್ಲಿರುವ ಕಲ್ಮಶಗಳನ್ನು ತೆಗೆದುಹಾಕಲು ಆರಂಭಿಸೋಣ, ಮತ್ತು ಆಗ, ಬಾಹ್ಯದಲ್ಲಿ ವಾದ ಮಾಡುವ ಅವಶ್ಯಕತೆಯೇ ಇರುವುದಿಲ್ಲ.
ನಿಮ್ಮನ್ನು ಮತ್ತು ಇತರರನ್ನು ಗುಣಪಡಿಸುವಂಥ ಮಾತುಗಳನ್ನು ಆಡಿ. ಇನ್ನೊಬ್ಬರ ದೇಹ, ಮನಸ್ಸು ಮತ್ತು ಇರುವಿಕೆಗೆ ಸ್ನೇಹಭಾವವನ್ನು ತೋರಿಸಿ. ಇದೇ 'ಪ್ರಾಯೋಗಿಕ ಆಧ್ಯಾತ್ಮಿಕತೆ'. ಆಧ್ಯಾತ್ಮಿಕತೆ ಎಂದರೆ ದೇವರಕೋಣೆಯಲ್ಲಿ ಪ್ರತಿದಿನವೂ ಗಂಟೆ ಬಾರಿಸಿ, ಲಕ್ಷ್ಮೀದೇವಿಯನ್ನು ಐಶ್ವರ್ಯಕ್ಕಾಗಿ ಪ್ರಾರ್ಥಿಸುವು ದಲ್ಲ. ಅದು ಲಕ್ಷ್ಮೀದೇವಿಯ ಗುಣಗಳಾದ ಶೋಭೆ ಮತ್ತು ದಯಾಪರತೆಯನ್ನು ಅಂತರ್ಗತ ಮಾಡಿಕೊಳ್ಳುವುದು. ಐಶ್ವರ್ಯವು ತಾನಾಗಿಯೇ ಸಂಭವಿಸುತ್ತದೆ.
ನಾವು ಕೇವಲ ಶಾಸ್ತ್ರೋಕ್ತ ಪದ್ಧತಿಗಳನ್ನು ಆಚರಿಸಿದರೆ ಸಾಕು, ಫಲವು ದೊರಕುತ್ತದೆ ಎಂದುಕೊಳ್ಳುತ್ತೇವೆ. ಇಲ್ಲ. ಸ್ಪಷ್ಟವಾಗಿರಿ: ನಿಮ್ಮನ್ನು ನೀವು ಪರಿವರ್ತನೆ ಗೊಳಿಸಬೇಕೆಂಬ ಇಚ್ಛೆ ಅಥವಾ ಮನೋಪ್ರವೃತ್ತಿ ಇಲ್ಲದೆಯೇ ಸುಮ್ಮನೆ 'ರಾಮ ರಾಮ' ಎಂದು ದಿನಕ್ಕೊಂದು ಸಾವಿರ ಸಲ ಉಚ್ಚಾರಣೆ ಮಾಡಿದರೆ, ಅದು ಪ್ರತಿದಿನ 'ಕೋಕಾ-ಕೋಲಾ' ಎಂದು ಉಚ್ಚಾರಣೆ ಮಾಡುವುದಕ್ಕಿಂತ ಹೆಚ್ಚೇನಲ್ಲ! ಶಾಸ್ತ್ರೋಕ್ತ ಪದ್ಧತಿಗಳ ಹಿಂದೆ ಇರುವ ಮೂಲ ಉದ್ದೇಶವೇನೆಂದರೆ, ನಿಮ್ಮನ್ನು ನೀವು ಪರಿವರ್ತನೆಗೊಳಿಸುವುದಕ್ಕಾಗಿ ಅರ್ಥ ಮಾಡಿಕೊಳ್ಳುವುದು ಮತ್ತು ಅಂತರ್ಗತ ಮಾಡಿಕೊಳ್ಳುವುದು, ಮತ್ತು ಆಗ ಪ್ರಾಪಂಚಿಕ ಫಲಗಳು ತಾವಾಗಿಯೇ ಸಂಭವಿಸುತ್ತವೆ.
ನೀವು ಇನ್ನೊಬ್ಬರಿಗೆ ಸ್ನೇಹಭಾವವನ್ನು ತೋರಲು ಸಾಧ್ಯವಾದಾಗ, ಆ ನಿಮ್ಮ ಪರಿವರ್ತನೆಗೊಂಡ ಭಾವನೆಯನ್ನು ಪ್ರಕ್ರಿಯಿಸಲು ತಾಳ್ಮೆ ಮತ್ತು ಪರಿಶ್ರಮವನ್ನು ಪಟ್ಟರೆ, ಆಗ ಅಂತಿಮದಲ್ಲಿ, ನೀವು ಅತಿ ಶ್ರೇಷ್ಠವಾದ ಮತ್ತು ಪರಸ್ಪರವಾದ ಭಾವನೆಯಾದ ಪ್ರೀತಿಯನ್ನು ಅನುಭವಿಸುತ್ತೀರ. ಆ ವ್ಯಕ್ತಿಯೂ ಕೂಡ ಪರಿವರ್ತನೆಗೊಂಡ ನಿಮ್ಮ ಭಾವನೆಗೆ ಸ್ಪಂದಿಸುತ್ತಾರೆ ಮತ್ತು ಆಗ ನೀವು ಆಗಮಿಸಿದ್ದೀರಿ! ನಿಮ್ಮತನವು ಆನಂದವಾಗುತ್ತದೆ! ಆಗ ನೀವು ನಿಮ್ಮ ಧ್ಯಾನವನ್ನು ಸರಿಯಾಗಿ ಮಾಡಿದ್ದೀರಿ!
ಯಾವಾಗ ಪ್ರೀತಿಯು ನಿಮ್ಮತನದ ಕೇಂದ್ರವಾದಾಗ, ಲೈಂಗಿಕ ಸಂಬಂಧವು ಎರಡು ಜೀವಿಗಳ ಗಾಢವಾದ ಸಂಯೋಗವಾಗುತ್ತದೆ. ಆದರೆ, ಸಮಸ್ಯೆ ಏನೆಂದರೆ,
ನಿಜವಾದ ಪ್ರೀತಿಯು ಕಳೆದುಹೋಗುತ್ತದೆ, ಮತ್ತು ಕಾಮವು ಮುಂದು ಬಂದಿದೆ. ಹಾಗಾಗಿ, ಜೀವಿಗಳು ಒಗ್ಗೂಡುವುದೇ ಇಲ್ಲ, ಕೇವಲ ದೇಹಗಳು ಒಗ್ಗೂಡುತ್ತವೆ. ಸಂಬಂಧವು ಒಂದು ಮೇಲ್ಮೈಯ ಮಟ್ಟದಲ್ಲೇ ಉಳಿಯುತ್ತದೆ. ಯಾವುದೇ ಮೇಲ್ಮೈಯಲ್ಲಿದ್ದರೂ, ಅದನ್ನು ಸುಲಭವಾಗಿ ಅಲುಗಾಡಿಸಬಹುದು. ಯಾವುದೊಂದು ವಿಷಯವು ಅಲುಗಾಡದೇ ಇರುವುದಕ್ಕೆ, ಅದು ಆಳವಾಗಿ ಬೇರೂರಿರಬೇಕು. ಹಾಗೂ, ಕಾಮವು ನಿಮ್ಮನ್ನು ಕುರುಡರನ್ನಾಗಿ ಮಾಡಿಸುತ್ತದೆ, ಅದು ನಿಮ್ಮನ್ನು ಅರಿವಿಲ್ಲದ ಅಮಲಿಗೆ ಕೊಂಡೊಯ್ಯುತ್ತದೆ. ಪ್ರೀತಿಯೂ ಕೂಡ ನಿಮಗೆ ಅಮಲು ಬರಿಸುತ್ತದೆ, ಆದರೆ, ಅದು ನಿಮ್ಮನ್ನು ಒಂದು ಗಾಢವಾದ ಅರಿವಿನೊಳಕ್ಕೆ ಕರೆದೊಯ್ಯುತ್ತದೆ. ಅದೆಂಥ ಸುಂದರವಾದ ಸ್ಥಿತಿ - ಕಾಮ ಮತ್ತು ಪ್ರೀತಿ ಎರಡೂ ಒಂದೇ ರಶ್ಮಿವರ್ಣದ (spectrum) ಎರಡು ತುದಿಗಳು. ಯಾವುದು ನಿಮ್ಮನ್ನು ಒಂದು ಆಳವಾದ ಅರಿವಿನ ಸ್ಥಿತಿಗೆ ಹೋಗುವಂತೆ ಮಾಡುತ್ತದೆಯೋ, ಅದೇ ಧ್ಯಾನ. ಯಾವುದು ನಿಮ್ಮನ್ನು ಅರಿವಿಲ್ಲದ ಸ್ಥಿತಿಗೆ ಹೋಗುವಂತೆ ಮಾಡುತ್ತದೆಯೊ, ಅದು ಸೂಕ್ತವಾದದ್ದಲ್ಲ. ನೀವು ಅನುಭವಿಸುತ್ತಿರುವುದು ನಿಮಗೆ ಒಳಿತೋ ಇಲ್ಲವೋ ಎಂದು ತಿಳಿಯುವುದಕ್ಕೆ ಇದೇ ಅಳತೆ.
ಇನ್ನೊಂದು ವಿಷಯ - ನೀವು ಆಳವಾಗಿ ಪ್ರೀತಿಸಿದಾಗ, ಅಸೂಯೆಗೆ ಅವಕಾಶವೇ ಇರುವುದಿಲ್ಲ. ಆಳವಲ್ಲದ ಬೇರುಗಳು ಅಲುಗಾಡಬಹುದೆಂಬ ಆತಂಕದಿಂದಲೇ ಅಸೂಯೆ ಇರುವುದು. ಬೇರುಗಳು ಆಳವಾಗಿದ್ದರೆ, ನೀವು ಹೇಗೆ ತಾನೆ ಭಯಪಡುತ್ತೀರ? ನೀವು ಹೇಗೆ ತಾನೆ ಅಸೂಯೆ ಪಡುತ್ತೀರ? ನಾನು ಹೇಳುವುದು ಅರ್ಥವಾಗುತ್ತಿದೆಯೊ? ನಿಮಗೆ ನಿಮ್ಮ ಸಂಗಾತಿಯಲ್ಲಿರುವ ಭರವಸೆ ಅಲುಗಾಡಿದಂತೆ ಆಗುವುದಕ್ಕೆ ಕಾರಣ, ಆ ಸಂಬಂಧವು ಒಂದು ಮೇಲ್ಮೈಯ ಸಂಬಂಧ, ಭ್ರಮೆ ಮತ್ತು ಕಾಮವನ್ನು ಆಧರಿಸಿರುವ ಒಂದು ಸಂಬಂಧ.
ಪ್ರಣಯವೆಂಬುದು ನೀವು ಕೇವಲ ಒಂದು ವ್ಯಕ್ತಿಯ ಬಗ್ಗೆ ಮಾತ್ರ ಅನುಭವಿಸಿದರೆ, ಅದು ನಿಜವಾದ ಪ್ರಣಯವಲ್ಲ. ನಿಮ್ಮತನವು ಹೊರಸೂಸಬೇಕು - ವಿಶ್ವಶಕ್ತಿಯ ಬಗ್ಗೆ. ನಿಮ್ಮತನವು (being) ನಿಮ್ಮ ತಲೆಯ ಮೂಲಕ ಅಭಿವ್ಯಕ್ತವಾದರೆ ಅದೇ ಬುದ್ಧಿವಂತಿಕೆ; ಅದು ನಿಮ್ಮ ಹೃದಯದ ಮೂಲಕ ಅಭಿವ್ಯಕ್ತವಾದಾಗ ಅದೇ ಅನುಕಂಪ; ಅದು ನಿಮ್ಮ ದೇಹದ ಮೂಲಕ ಅಭಿವ್ಯಕ್ತವಾದಾಗ, ಅದೇ ಚೈತನ್ಯ ಮತ್ತು ಯಾವಾಗ ನಿಮ್ಮತನವು ಅಭಿವ್ಯಕ್ತವಾಗದೆ ಇದ್ದು, ಆದರೆ ಸುಮ್ಮನೆ ಇರುವ ಹಾಗೆ ಇರುತ್ತದೆಯೋ, ಅದೇ ಆನಂದ! ನೀವು ಹಂತವನ್ನು ತಲುಪಿದಾಗ, ಯಾವುದೇ ರೀತಿಯ ಸಂತೋಷಕ್ಕಾಗಲೀ ನೀವು ಬಾಹ್ಯಜಗತ್ತಿನಲ್ಲಿರುವ ಜನರನ್ನಾವಲಂಬಿಸಿರುವುದಿಲ್ಲ. ನೀವು ಯಾವಾಗಲೂ ಸುಮ್ಮನೆ ನಿಮ್ಮೊಳಗೆಯೇ ಸಂತೋಷದೊಂದಿಗೆ ಕಂಪಿಸುತ್ತೀರ. ಆ ಸಂತೋಷವನ್ನು ಬೇರೆಯವರೊಂದಿಗೆ ಹಂಚಿಕೊಂಡು ಅದನ್ನು ಇನ್ನೂ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ, ಅದೇನೋ ನಿಜ.
ಒಬ್ಬ ವ್ಯಕ್ತಿಯ ಜೊತೆ ನೀವು ಗಾಢವಾದ ಸಂಬಂಧವನ್ನು ಹೊಂದಿದ್ದರೆ, ಆ ವ್ಯಕ್ತಿಯೊಂದಿಗೆ ಭೌತಿಕ ಸಾಮೀಪ್ಯದ ಅವಶ್ಯಕತೆಯೇ ಇರುವುದಿಲ್ಲ. ಆ ವ್ಯಕ್ತಿಯೊಂದಿಗೆ ಇರುವ ಸಂಬಂಧದ ಭಾವನೆಯಿಂದಲೇ ನೀವು ಸಂತೋಷ ಮತ್ತು ತೃಪ್ತಿಯನ್ನು ಅನುಭವಿಸುತ್ತೀರ. ನಿಮ್ಮಷ್ಟಕ್ಕೆ ನೀವು ಸಂಪೂರ್ಣತೆಯ ಭಾವನೆಯನ್ನುಹೊಂದಿ, ಸಂತೃಪ್ತಿಗಾಗಿ ಬಾಹ್ಯಜಗತ್ತಿನತ್ತ ನೋಡುವುದಿಲ್ಲ. ಈ ಸಂಬಂಧವು ಅಂತರವನ್ನು ಅನುಭವಿಸುವುದಿಲ್ಲ.
ಒಂದು ಸಂಬಂಧವೆಂಬುದು, ಎಲ್ಲ ವಿಷಯಗಳನ್ನು ಮೀರಿ, ಒಬ್ಬ ವ್ಯಕ್ತಿಯ ಜೊತೆ ಒಂದು ಆಳವಾದ ಮಟ್ಟದಲ್ಲಿ ಸಂಪರ್ಕವನ್ನು ಹೊಂದುವುದು. ಇದನ್ನು ನೀವು ಅರ್ಥಮಾಡಿಕೊಳ್ಳದೆ ಇದ್ದಾಗ, ನೀವು ಜನರೊಂದಿಗೆ ಎಷ್ಟೋ ನಿಬಂಧನೆಗಳಿಂದ ಬಂಧಿತರಾಗಿ ಅದನ್ನೇ ಸಂಬಂಧವೆಂದು ಕರೆಯುತ್ತೀರ. ಅದು ಅಲುಗಾಡತೊಡಗುತ್ತದೆ ಮತ್ತು ಅದನ್ನು ಕಾಪಾಡಲು ಶ್ರಮಪಟ್ಟು, ಸಂಬಂಧಗಳೇ ಒಂದು ಪೀಡನೆ ಎಂದು ತೀರ್ಮಾನಿಸಿಬಿಡುತ್ತೀರ!
ಜನರು ನನಗೆ ಹೇಳುತ್ತಾರೆ, "ಸ್ವಾಮೀಜಿ, ನಾನು ನಿಮ್ಮ ಜೊತೆ ಆಶ್ರಮದಲ್ಲಿ ಇರಬೇಕೆಂದು ಬಯಸುತ್ತೇನೆ. ಮನೆಯಲ್ಲಿ ನಾನು ಸಂತೋಷವಾಗಿಲ್ಲ.'' ನಾನು ಯಾವಾಗಲೂ ಹೇಳುತ್ತೇನೆ: ಅವರ ಮನೆಯಲ್ಲಿ ಕೇವಲ ನಾಲ್ಕು ಜನರೊಂದಿಗೆ ಸಂತೋಷದಿಂದ ಇರಲು ಸಾಧ್ಯವಾಗದೆ ಇರುವಾಗ, ಆಶ್ರಮದಲ್ಲಿ 100 ಜನರೊಂದಿಗೆ ಅವರು ಸಂತೋಷದಿಂದಿರಲು ಸಾಧ್ಯವಾಗುವುದಿಲ್ಲ. ಆಶ್ರಮ ಎಂದರೆ ಪಲಾಯನವಾದಿಗಳ ವಸತಿಗೃಹ ಎಂದುಕೊಂಡಿದ್ದೀರೇನು?
ಸ್ಪಷ್ಟವಾಗಿರಿ: ಮನೆ ಎಂಬುದು ನಿಮ್ಮ ಹೊರಗಡೆ ಇರುವಂತಹದೇನೂ ಅಲ್ಲ. ನಿಮ್ಮ ಸುತ್ತಮುತ್ತ ಏನೇ ಆದರೂ ಸದಾಕಾಲವೂ ಆನಂದಮಯವಾಗಿರುವುದೇ 'ಮನೆಯಲ್ಲಿ ಇರುವುದು' ಎಂದು. ಹೀಗೆ ಇರಲು ಸಾಧ್ಯವಾಗದೆ ಇದ್ದಾಗ, ನೀವು ಎಲ್ಲೂ ಕೂಡ ಮನೆಯಲ್ಲಿರುವುದಿಲ್ಲ.
ನಾನು ತಿಂಗಳುಗಟ್ಟಲೆ ಒಂದು 8' x 8' ಆವರಣದಲ್ಲಿ ವಾಸಮಾಡಿದ್ದಾಗ, ನಾನು ಈ ದಿನ ಈ ಸಿಂಹಾಸನದ ಮೇಲೆ ಕುಳಿತುಕೊಂಡು ಆನಂದಮಯವಾಗಿರುವಷ್ಟೇ ಆನಂದಮಯನಾಗಿದ್ದೆ. ದಯವಿಟ್ಟು ಇದನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಸಂತೋಷಕ್ಕೂ ಬಾಹ್ಯ ಜಗತ್ತಿನ ವಸ್ತುಗಳಿಗೂ ಯಾವುದೇ ಸಂಬಂಧವೂ ಇಲ್ಲ ಎಂದು ಅರ್ಥಮಾಡಿಕೊಳ್ಳುವುದರಲ್ಲಿ ಈ ಸಾಮರ್ಥ್ಯವು ಅಡಗಿದೆ.
ಒಂದು ನಾಯಿಯು ಮೂಳೆಯೊಂದನ್ನು ಕಚ್ಚುತ್ತಿದ್ದು, ಅದರ ಬಾಯಿಯಿಂದ ರಕ್ತಸ್ರಾವವಾಗಲು ಆರಂಭಿಸುತ್ತದೆ. ಆ ರಕ್ತವು ಮೂಳೆಯಿಂದ ಬರುತ್ತಿದೆ ಎಂದುಕೊಂಡು, ಆ ನಾಯಿ ಮೂಳೆಯನ್ನು ಮತ್ತಷ್ಟು ಕಚ್ಚಿ ರಕ್ತವನ್ನು ನೆಕ್ಕುತ್ತದೆ. ಆ ನಾಯಿಗೆ ಆಗುವುದೇನು? ಕೇವಲ ನೋವು ಒಂದೇ ಉಂಟಾಗುತ್ತದೆ. ಇದನ್ನೇ ನೀವು ಕೂಡ ಮಾಡುತ್ತಿರುವುದು. ನೀವು ನೋವು ಅಥವಾ ನಲಿವು ಬಾಹ್ಯ ಜಗತ್ತಿನ ವಸ್ತುಗಳಿಗೆ ಸಂಬಂಧಿಸಿದೆ ಎಂದುಕೊಂಡು, ಅವುಗಳಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುತ್ತೀರ ಮತ್ತು ಕಷ್ಟವನ್ನು ಅನುಭವಿಸುತ್ತೀರ. ತಿಳಿಯಿತೇ? ಹೇಳಿ ...
ಸಾಮೀಜಿ, ನಮ್ಮ ಮಕ್ಕಳು ಈ ಬಗೆಯ ಸಮಸ್ಯೆಗಳಲ್ಲಿ ಸಿಕ್ಕಿಕೊಳ್ಳದೆ ಇರುವ ಹಾಗೆ ಅವರನ್ನು ಹೇಗೆ ಕಾಪಾಡಿಕೊಳ್ಳಬೇಕು?
ನಿಜ ಹೇಳುವುದಾದರೆ, ನೀವು ಅದನ್ನು ಸಂಪೂರ್ಣವಾಗಿ ನಿಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಸಮಾಜದ ಜೊತೆ ಮಗುವಿನ ಎಲ್ಲ ಪರಸ್ಪರ ವರ್ತನೆಗಳನ್ನು ನೀವು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಆದರೆ, ಮನೆಯಲ್ಲೇ ಅಭ್ಯಾಸ ಮಾಡಬಹುದಾದ ಕೆಲವು ವಿಚಾರಗಳಿವೆ.
ನಾನು ಹಿಂದೆ ಹೇಳಿದ ಹಾಗೆ, ಮಗುವಿನ ಆ ಇನ್ನೊಂದು ಅರ್ಧಭಾಗವನ್ನು ಒತ್ತಿಡಬೇಡಿ. ಆ ಮಗು ತನ್ನನ್ನು ಸ್ವತಂತ್ರವಾಗಿ ಅಭಿವ್ಯಕ್ತಪಡಿಸಿಕೊಂಡು ಬೇರೆ ಬೇರೆ ರೀತಿಗಳಲ್ಲಿ ಅನುಭವಿಸಲಿ. ಅದು ಲಿಂಗದ ಅರಿವಿನಿಂದ ಇರುವುದಕ್ಕೆ ಹೇಳಿಕೊಡಬೇಡಿ.
ಆ ಮಗು ಸ್ವಂತ ಸಹಜತನವಾಗಿರಲು ಬಿಡಿ, ತನ್ನನ್ನು ತಾನು ಪರಿಶೋಧಿಸಲು ಸಾಕಷ್ಟು ಅವಕಾಶವನ್ನು ನೀಡಿ. ಸಾಮಾಜಿಕ ಕಟ್ಟುಪಾಡುಗಳಲ್ಲಿ ಒಳಪಟ್ಟಿಲ್ಲದ ಮಕ್ಕಳು ಸ್ವಾಭಾವಿಕವಾಗಿ ತಮ್ಮ ಸ್ವಂತ ಸೀಮಿತದಲ್ಲಿ ಆರಾಮದಿಂದಿರುತ್ತಾರೆ.
ಮಕ್ಕಳು ತಮ್ಮ ಜನನಾಂಗದೊಂದಿಗೆ ಆಟವಾಡುತ್ತಿರುವುದು ಅಥವಾ ತಮ್ಮ ಹೆಬ್ಬೆಟ್ಟನ್ನು ಬಾಯಿಯೊಳಕ್ಕೆ ಹಾಕುವುದು ಮತ್ತಿತರ ಕಾರ್ಯಗಳನ್ನು
ಮಾಡುತ್ತಿರುವುದನ್ನು ನೀವು ಗಮನಿಸಿರಬಹುದು. ಅವರು ತಮ್ಮ ಸ್ವಂತ ಎಲ್ಲೆಯೊಳಗೆ ಅದೆಷ್ಟು ಆರಾಮದಿಂದ ಪ್ರೀತಿಪಾತ್ರರಾಗಿರುತ್ತಾರೆ, ಅವರನ್ನು ಈ ಕೆಲಸಗಳನ್ನು ಮಾಡಲು ಬಿಡುವುದಿಲ್ಲ. ಅವರು ಹಾಗೆ ಮಾಡಿದ ತಕ್ಷಣವೇ ನಾವು ಅವರನ್ನು ನಿಲ್ಲಿಸಿಬಿಡುತ್ತೇವೆ. ಅವರು ಮಾಡುತ್ತಿರುವುದು ತಪ್ಪು ಎಂದು ಹೇಳುತ್ತೇವೆ. ಅವರು ಸ್ವತಃ ತಾವೇ ಕಂಡುಕೊಳ್ಳುವುದಕ್ಕೆ ಅವಕಾಶ ನೀಡುವುದು ಒಳಿತು.
ಮತ್ತು ಅವರ ಬಟ್ಟೆಯ ವಿಷಯಕ್ಕೆ ಬಂದಾಗ, ಅವರಿಗೆ ಎರಡು ತುಂಡಿನ ಬಟ್ಟೆಯ ಬದಲಿಗೆ, ಒಂದೇ ತುಂಡಿನ ಬಟ್ಟೆಯನ್ನು ಹಾಕುವುದು ಒಳಿತು. ಎರಡು ತುಂಡಿನ ಬಟ್ಟೆಯು ಅವರಿಗೆ ತಮ್ಮ ದೇಹವನ್ನು ಎರಡು ಭಾಗಗಳನ್ನಾಗಿ ಮಾಡಿದ ಭಾವನೆಯುಂಟಾಗುತ್ತದೆ ಮತ್ತು ಸ್ವಲ್ಪ ಸಮಯದಲ್ಲಿ ಅವರು ತಮ್ಮ ದೇಹದ ಕೆಳ ಅರ್ಧವನ್ನು ಮರೆತು ಅದರ ಬಗ್ಗೆ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಾರೆ. ಇದು ಹೆಚ್ಚು ಮಟ್ಟಿಗೆ ಅವರ ಅರಿವಿನ ಭಾಗಿಸುವಿಕೆಯಂತೆಯೇ! ಆದ್ದರಿಂದಲೇ, ಈ ದಿನ ನಿಮ್ಮನ್ನು ನೀವು ಕಣ್ಣುಮುಂದೆ ತಂದುಕೊಳ್ಳಲು ಹೇಳಿದರೆ, ಹೆಚ್ಚು ಮಟ್ಟಿಗೆ ಯಾವಾಗಲೂ, ನಿಮ್ಮ ಮೇಲ್ಬಾಗ ಮಾತ್ರ ನಿಮ್ಮ ಮನಸ್ಸಿಗೆ ಹೊಳೆಯುತ್ತದೆ. ನಿಮ್ಮ ಕೆಳಭಾಗವನ್ನು ಸುಮ್ಮನೆ ಉದಾಸೀನ ಮಾಡುತ್ತೀರ.
ನೀವು ಕೆಲವು ಅಪಾಯಗಳನ್ನು ಎದುರಿಸಬೇಕಾಗಿ ಬರಬಹುದು ಎನ್ನುವ ಹಾಗೆ ಇರುವಾಗಲೂ, ಮಗುವು ತನ್ನ ರೀತಿಗಳಲ್ಲಿ ಸ್ವತಂತ್ರವಾಗಿರಲು ಬಿಡಿ. ಮಕ್ಕಳಿಗೆ ಅಂತಃಸ್ಫೂರ್ತಿಯ ಮತ್ತು ಸಹಜಪ್ರವೃತ್ತಿಯ ಪ್ರಜ್ಞೆ ಇರುತ್ತದೆ. ಹಾಗಾಗಿ, ನೀವು ಅಗತ್ಯವಾದ ಮುನ್ನೆಚ್ಚರಿಕೆಯ ಉಪಾಯಗಳನ್ನು ಮಾಡಿ, ಅವರನ್ನು ಪರಿಶೋಧಿಸಲು ಬಿಡಿ.
ಮತ್ತು ಮಕ್ಕಳು ತಮ್ಮ ಅಭಿವ್ಯಕ್ತತೆಗಳಲ್ಲಿ ಸಂಪೂರ್ಣತೆಯನ್ನು ಹೊಂದುತ್ತಾರೆ. ಹಾಗಾಗಿ, ಅವರನ್ನು ಒತ್ತಿಡಬೇಕು. ಅವರಿಗೆ ತಮ್ಮ ಮನಸ್ಸನ್ನು ಉಪಯೋಗಿಸಿ, ಮೇಲ್ಮೀಯ ಅಥವಾ ಬೂಟಾಟಿಕೆಯ ವರ್ತನೆಯನ್ನು ಪ್ರದರ್ಶಿಸುವುದು ತಿಳಿದಿಲ್ಲ. ನಾವೆಲ್ಲರೂ ನಮ್ಮ ಮನಸ್ಸು ನಿಗ್ರಹಿಸಲು ಅವಕಾಶ ಮಾಡಿಕೊಟ್ಟು ಬೂಟಾಟಿಕೆಯ ಕಲೆಯಲ್ಲಿ ಪರಿಣತರಾಗಿದ್ದೇವೆ. ನಾವು ಸಂಪೂರ್ಣತೆಯಿಂದ ಎಂದೂ ಅಭಿವ್ಯಕ್ತಪಡಿಸುವುದಿಲ್ಲ.
ಮಕ್ಕಳು ತಮ್ಮ ಎರಡೂ ಕೈಗಳನ್ನು ಸರಾಗವಾಗಿ ಬಳಸಲು ಬಿಡಿ. ನಾವು ಅವರನ್ನು ತಮ್ಮ ಎಡಗೈಯನ್ನು ಎಷ್ಟೋ ಕೆಲಸಗಳಿಗೆ ಉಪಯೋಗಿಸಲು ಯಾವಾಗಲೂ ನಿರುತ್ಸಾಹಗೊಳಿಸುತ್ತೇವೆ. ಆ ಮಗುವು ಉಭಯಹಸ್ತ ಕುಶಲನೇಕಾಗಬಾರದು? ಅದರಲ್ಲಿ ತಪ್ಪೇನೂ ಇಲ್ಲ. ಮಹಾಭಾರತದಲ್ಲಿ ಅರ್ಜುನನು ಉಭಯಹಸ್ತ ಕುಶಲನಾಗಿದ್ದ. ನಿಮಗದು ತಿಳಿದಿತ್ತೇ? ಇದನ್ನೆಲ್ಲ ನಾವು ಕೇಳಿದಾಗ ನಾವು ಆಶ್ಚರ್ಯಚಕಿತರಾಗುತ್ತೇವೆ, ಆದರೆ ನಾವು ಕೂಡ ಇದನ್ನೆಲ್ಲ ಮಾಡಲು ಸಂಪೂರ್ಣವಾಗಿ ಸಮರ್ಥರಾಗಿದ್ದೇವೆ ಎಂದು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದೇವೆ, ಆದರೆ ನಮಗೆ ನಾವೇ ಆ ಅವಕಾಶವನ್ನು ನೀಡಿದರೆ ಮಾತ್ರ!
ಇನ್ನೊಂದು ವಿಷಯ: ನೀವು ಗಮನಿಸಿರಬಹುದು, ಎಲ್ಲ ಮಕ್ಕಳಿಗೂ ಗಿರಗಿಟ್ಟಲೆ (ಗರಗರನೆ ಸುತ್ತುವುದು) ತುಂಬ ಇಷ್ಟ. ಅವರ ಚೈತನ್ಯವು ಕೇಂದ್ರೀಕೃತವಾಗಲು ಬಿಡಲು ಅವರು ತಿರುಗುತ್ತಾರೆ, ನಿಮ್ಮ ಹೊಕ್ಕಳಿನ ಸುತ್ತಲಿರುವ ಮಣಿಪೂರಕ ಚಕ್ರವು ಶುದ್ಧವಾಗಿದ್ದಾಗ ಮಾತ್ರ ನೀವು ಸರಾಗವಾಗಿ ತಿರುಗಬಹುದು. ಮಕ್ಕಳು ಅದೆಷ್ಟು ಮುಗ್ಧರಾಗಿ ಮತ್ತು ಚಿಂತಾರಹಿತರಾಗಿರುತ್ತಾರೆ, ಆದ್ದರಿಂದಲೇ ಅವರು ಶ್ರಮವಿಲ್ಲದೆಯೂ ತಿರುಗಬಲ್ಲರು. ಆದರೆ ಅವರು ಗಿರಗಿಟ್ಟಲೆ ಮಾಡಲು ನಾವು ಬಿಡುತ್ತೇವಾ? ಅವರು ತಿರುಗುವುದನ್ನುನೋಡಿದಾಗ, ನಮ್ಮ ತಲೆ ತಿರುಗಲು ಆರಂಭಿಸುತ್ತದೆ, ಹಾಗಾಗಿ ಅವರನ್ನು ನಿಲ್ಲಿಸಿಬಿಡುತ್ತೇವೆ! ನಾವು ಅವರಿಗೆ “ಒಂದು ಕಡೆ ಕುಳಿತುಕೋ! ಅದು ಆರೋಗ್ಯಕ್ಕೆ ಒಳ್ಳೆಯದಲ್ಲ” ಹೀಗೆ ಇನ್ನೇನನ್ನೋ ಹೇಳುತ್ತೇವೆ. ನಾನು ಹೇಳುವುದೇನೆಂದರೆ, ಅವರನ್ನು ಗರಗರನೆ ತಿರುಗಲು ಸುಮ್ಮನೆ ಬಿಡಿ. ಕೆಳಗೆ ಮೆದುವಾದ ಬಟ್ಟೆಯೊಂದನ್ನು ಹಾಕಿ, ಹಾಗಾಗಿ ಅವರು ಬಿದ್ದರೂ ಕೂಡ ಪೆಟ್ಟಾಗುವುದಿಲ್ಲ.
ಇನ್ನೊಂದು ವಿಷಯ: ಮಕ್ಕಳಲ್ಲಿ ಎಂದೂ ಭಯವನ್ನು ತುಂಬಬೇಡಿ! ಅವರನ್ನು ಸ್ವತಂತ್ರವಾಗಿರಲು ಬಿಡಿ, ಆ ಮಗು ಒಂದೆರಡು ಬಾರಿ ಹತ್ತಿ ಬೀಳಲಿ. ಆ ಮಗುವನ್ನು ನಿರಂತರವಾಗಿ ನಿರುತ್ಸಾಹಗೊಳಿಸಿದರೆ, ಆ ಮಗುವಿಗೆ ಎಷ್ಟೋ ವಿಷಯಗಳ ಭಯಗಳು - ಎತ್ತರದ ಭಯ, ಕತ್ತಲೆಯ ಭಯ ಮತ್ತು ಇನ್ನೂ ಏನೇನೋ ವಿಷಯಗಳಿಗೆ ಭಯ ಬರುತ್ತದೆ, ನಂತರ, ಇದು ಹತ್ತುವುದಕ್ಕೆ ಭಯ ತರುತ್ತದೆ, ಅಪರಿಚಿತ ಹೊಸ ತೀರ್ಮಾನಗಳನ್ನು ಮಾಡಲು ಭಯ ತರುತ್ತದೆ, ಹೀಗೆ. ಈ ಸಣ್ಣಸಣ್ಣ ವಿಷಯಗಳನ್ನು ಪಾಲಿಸಿ. ಅಷ್ಟು ಸಾಕು.
ಹೇಳಿ ... ?
ಸ್ವಾಮೀಜೀ, 'ಪರಿಪೂರ್ಣ ಸಂಗಾತಿ' ಎಂದು ಏನೂ ಇಲ್ಲ ಎಂದು ನೀವು ಹೇಳುತ್ತಿದ್ದೀರ. ಹಾಗಾದರೆ, ಮದುವೆಗಳಿಗೆ ಮುಂಚೆ ಜಾತಕ ಹೊಂದಿಸುವುದರ ಉದ್ದೇಶವೇನು?
ಈಗ, ಈ ವಿಷಯದ ಬಗ್ಗೆ ಮಾತನಾಡಲು ಆರಂಭಿಸಿದರೆ, ಜ್ಯೋತಿಷ್ಯಶಾಸ್ತ್ರದ ಇಡೀ ರಚನೆಯನ್ನೇ ನಾನು ಕೆಡವಬೇಕಾದೀತು! ಜ್ಯೋತಿಷ್ಯಶಾಸ್ತ್ರ ಅಲ್ಲ, ಆದರೆ, ಈದಿನ ನಾವು ಅದನ್ನು ಪಾಲಿಸುವ ರೀತಿ ಮೂರ್ಖತನದಿಂದ ತುಂಬಿದೆ ಮತ್ತು ಅರ್ಥವಿಲ್ಲದೆ ಇದೆ.
ಅರ್ಥಮಾಡಿಕೊಳ್ಳಿ: ಇದು ನಿಮ್ಮ ಜೀವನ, ನೀವದನ್ನು ಬಾಳುತ್ತಿದ್ದೀರ, ನಿಮಗೆ ಅದರ ಅನುಕೂಲ-ಪ್ರತಿಕೂಲಗಳು ತಿಳಿದಿರಬೇಕು - ಆದರೆ ನಿಮ್ಮ ಬದುಕಿನ ಬಗ್ಗೆ ನಿಮಗೆ ಏನೂ ತಿಳಿದಿಲ್ಲ ಮತ್ತು ನೀವು ಹೋಗಿ ಬೇರೆಯವರನ್ನು ಕೇಳುತ್ತಿದ್ದೀರ! ನಿಮ್ಮ ಬುದ್ಧಿವಂತಿಕೆ ಎಲ್ಲಿ ಹೋಗಿದೆ?
ನಿಮ್ಮ ಬದುಕನ್ನು ಇನ್ನೊಬ್ಬರಿಗೆ ಒಪ್ಪಿಸಿಬಿಡುವುದು, ನಿಮ್ಮ ಬದುಕಿನ ತೀರ್ಮಾನಗಳನ್ನು ಅವನು ಮಾಡುವುದಕ್ಕೆ ಬಿಡುವುದು, ಇದೆಲ್ಲವು ತೋರಿಸುವುದೇನೆಂದರೆ, ನಿಮಗೆ ನಿಮ್ಮ ಸ್ವಂತ ಜೀವನವನ್ನೇ ಹೇಗೆ ನಡೆಸುವುದು ಎಂದು ತಿಳಿದಿಲ್ಲವೆಂದು. ಸ್ಪಷ್ಟವಾಗಿರಿ: ನಿಮ್ಮ ಸ್ವಂತ ಜೀವನದ ಜವಾಬ್ದಾರಿಯನ್ನು ನೀವೇ ವಹಿಸಬೇಕು. ಜನರು ತಮ್ಮ ಭವಿಷ್ಯದ ಬಗ್ಗೆ ಪ್ರಶ್ನೆಗಳೊಂದಿಗೆ ನನ್ನ ಬಳಿ ಬಂದಾಗ, ನಾನು ಹೇಳುತ್ತೇನೆ - ನಿಮ್ಮ ಭವಿಷ್ಯ ಹೇಗೆ ಇದೆ ಎಂದು ನಾನು ಹೇಳುವುದಕ್ಕಾಗಿ ನನ್ನ ಬಳಿ ಬರಬೇಡಿ. ನಿಮಗಾಗಿ ಒಂದು ಒಳ್ಳೆಯ ಭವಿಷ್ಯವನ್ನು ಯೋಜಿಸಲು ನನ್ನ ಸಹಾಯ ಬೇಕಾದರೆ, ನನ್ನ ಬಳಿ ಬನ್ನಿ. ಈ ಭವಿಷ್ಯ ನುಡಿಗಳೆಲ್ಲವು ಬಲಹೀನ ಮನಸ್ಸುಳ್ಳವರಾಗಿರುವ ಜನರಿಗೆ ಮಾತ್ರ, ಇದರ ಬಗ್ಗೆ ಸ್ಪಷ್ಟವಾಗಿರಿ.
ಪ್ರಾಚೀನ ಜ್ಯೋತಿಷ್ಯಶಾಸ್ತ್ರವು ಒಂದು ಶುದ್ಧ ವಿಜ್ಞಾನವಾಗಿತ್ತು, ಅದರಲ್ಲಿ ಸತ್ಯಾಂಶವಿತ್ತು.
ಜ್ಯೋತಿಷ್ಯವು ಹೇಗೆ ವಿಕಸಿತವಾಯಿತು ಎಂದು ಹೇಳುತ್ತೇನೆ.
ಹಿಂದಿನ ಕಾಲದಲ್ಲಿ ಮಗುವನ್ನು ಗುರುವಿನ ಬಳಿಗೆ, ಅಂದರೆ ಗುರುಕುಲಕ್ಕೆ ಕಳುಹಿಸುತ್ತಿದ್ದಾಗ, ಆ ಮಗುವಿನ ವ್ಯಕ್ತಿತ್ವ ಯಾವ ತರಹೆಯದು ಎಂದು, ಆ ಮಗುವು ಯಾವ ರೀತಿಯ ಮನೋಭಾವಗಳು ಮತ್ತು ಸ್ವಾಭಾವಿಕವಾದ ಸಾಮರ್ಥ್ಯ ಗಳನ್ನು ಹೊಂದಿತ್ತು ಎಂಬುದನ್ನು ಪರೀಕ್ಷಿಸಲು ಜ್ಯೋತಿಷ್ಯಶಾಸ್ತ್ರವನ್ನು ಉಪಯೋಗಿಸಲಾಗುತ್ತಿತ್ತು. ಅದರಂತೆಯೇ ಆ ಮಗುವನ್ನು ತರಬೇತು ಮಾಡಲಾಗುತ್ತಿತ್ತು.
ಹೀಗೆ, ಹಿಂದೆ, ಜಾತಿ ಭೇದಗಳು ಹುಟ್ಟಿನ ಮೇಲೆ ಅವಲಂಬಿತವಾಗಿರಲಿಲ್ಲ. ಅವು ಒಬ್ಬ ವ್ಯಕ್ತಿಯ ಗುಣಲಕ್ಷಣ ಮತ್ತು ಸ್ವಾಭಾವಿಕ ಸಾಮರ್ಥ್ಯಗಳನ್ನು ಅವಲಂಬಿಸಿರುತ್ತಿದ್ದವು.
ಒಬ್ಬ ಹುಡುಗನು ಗುರುಕುಲಕ್ಕೆ ಪ್ರವೇಶ ಹೋದಾಗ, ಗುರುವು ಅವನ ಸ್ವಾಭಾವಿಕ ಪ್ರವೃತ್ತಿಗಳನ್ನು ನೋಡುತ್ತಿದ್ದರು. ಅವನಿಗೆ ಬ್ರಾಹ್ಮಣ ಪ್ರವೃತ್ತಿಗಳಿದ್ದಿದ್ದರೆ, ಎಲ್ಲಿ ಬುದ್ಧಿವಂತಿಕೆಯೇ ಪ್ರಮುಖ ಗುಣವಾಗಿದ್ದರೆ, ಅವನಿಗೆ ವೇದವಿದ್ಯೆ - ವೇದೀಯ ಗ್ರಂಥಗಳ ಅಧ್ಯಯನಕ್ಕೆ ದೀಕ್ಷೆ ನೀಡಲಾಗುತ್ತಿತ್ತು. ಅವನ ವ್ಯಕ್ತಿತ್ವವು ಕ್ಷತ್ರಿಯನದಾಗಿದ್ದರೆ, ಎಲ್ಲಿ ಧೈರ್ಯ ಮತ್ತುಬಲಪ್ರಧಾನ ಪ್ರವೃತ್ತಿಗಳಾಗಿದ್ದರೆ, ಅವನಿಗೆ ಸಮರೋಚಿತ ಕಲೆಯ ತರಬೇತಿ ನೀಡಲಾಗುತ್ತಿತು. ಅವನು ವೈಶ್ಯ ಪ್ರವೃತ್ತಿಗಳಲ್ಲಿ ಹೆಚ್ಚು ಕುಶಲತೆಯನ್ನು ಪ್ರದರ್ಶಿಸುತ್ತಿದ್ದರೆ, ಅವನಿಗೆ ವ್ಯಾಪಾರವನ್ನು ತರಬೇತಿಸಲಾಗುತ್ತಿತ್ತು. ಅವನು ಶೂದ್ರಗುಣಗಳನ್ನು, ಅಂದರೆ ತನ್ನ ದೈನಂದಿನ ಕೆಲಸದಲ್ಲಿ ತೊಡಗುವುದರಲ್ಲಿ ಸಂತೋಷವಾಗಿದ್ದರೆ, ಅವನಿಗೆ ಸೇವೆಯಲ್ಲಿ ದೀಕ್ಷೆ ನೀಡಲಾಗುತ್ತಿತ್ತು. ಎಲ್ಲ ನಾಲ್ಕು ಪಾತ್ರಗಳಿಗೂ ಸಮವಾದ ಬೆಲೆ ಮತ್ತು ಗೌರವವಿರುತ್ತಿತ್ತು.
ಈ ಉದ್ದೇಶಕ್ಕಾಗಿ ಜ್ಯೋತಿಷ್ಯಶಾಸ್ತ್ರವನ್ನು ಉಪಯೋಗಿಸಲಾಗುತ್ತಿತ್ತು.
ಅದು ಪರೀಕ್ಷಿಸುವುದಕ್ಕಾಗಿ ಉಪಯೋಗಿಸಲಾಗುತ್ತಿದ್ದ ವಿಜ್ಞಾನವಾಗಿತ್ತು. ಈದಿನ, ನಿಮ್ಮ ಸುತ್ತಮುತ್ತಲು ನೋಡಿ, ಹೆಚ್ಚು ಮಟ್ಟಿಗೆ ಎಲ್ಲರೂ ತಪ್ಪು ಸ್ಥಳಗಳಲ್ಲಿದ್ದಾರೆ! ಸ್ವಾಭಾವಿಕವಾಗಿ ವೈದ್ಯನಾಗಿರುವವನು ಇಂಜಿನಿಯರ್ ಆಗಿಬಿಟ್ಟಿದ್ದಾನೆ, ಮತ್ತು ಸ್ವಾಭಾವಿಕವಾಗಿ ಇಂಜಿನಿಯರ್ ಆಗಿರುವವನು ರಿಪೇರಿ ಮಾಡುವವನು ಆಗಿಬಿಟ್ಟಿದ್ದಾನೆ, ಹೀಗೆ ಇನ್ನೇನೆನೋ! ಆದ್ದರಿಂದಲೇ, ಸಮಾಜದಲ್ಲಿ ಸಂಪೂರ್ಣ ಅಸ್ವಸ್ಥತೆ ಇದೆ. ಒಬ್ಬ ವ್ಯಕ್ತಿಯು ಲಕ್ಷಣಗಳಿಂದ ವ್ಯಾಪಾರಿಯಾಗಿರುವವನು ಆಧ್ಯಾತ್ಮಿಕತೆಯನ್ನು ಪ್ರವೇಶಿಸಿದರೆ, ಆಗುವುದೇನು? ಆಧ್ಯಾತ್ಮಿಕತೆಯೇ ಒಂದು ವ್ಯಾಪಾರವಾಗಿ ಬಿಡುತ್ತದೆ!
ಹಾಗಾದರೆ, ಪ್ರಾಚೀನ ಜ್ಯೋತಿಷ್ಯಶಾಸ್ತ್ರವು ಒಂದು ಸಿದ್ಧಪಡಿಸಿದ ವಿಜ್ಞಾನವೇ, ಸ್ವಾಮೀಜಿ?
ಇದಕ್ಕೆ ನಾನು ಹೆದರುತ್ತಿದ್ದೆ! ನಾನು ಹೌದು ಎಂದ ಕ್ಷಣವೇ, ನೀವು ಜ್ಯೋತಿಷ್ಯಶಾಸ್ತ್ರದ ಹಿಂದೆ ಓಡಲು ಆರಂಭಿಸುತ್ತೀರ! ನಾಳೆ ಬೆಳಿಗ್ಗೆ, ನನ್ನ ಮುಂದೆ ಜನರು ಜಾತಕಗಳನ್ನು ಹಿಡಿದುಕೊಂಡು ಒಂದು ಉದ್ದವಾದ ಸಾಲಿನಲ್ಲಿ ಬಂದು ನಿಲ್ಲುತ್ತಾರೆ, ಅವರು “ಸ್ವಾಮೀಜಿ, ದಯವಿಟ್ಟು ಇದನ್ನು ನೋಡಿ ನನ್ನ ಭವಿಷ್ಯವನ್ನು ಹೇಳಿ”, ಎನ್ನುತ್ತಾರೆ.
ನಾನು ಹೇಳುವುದೇನೆಂದರೆ, ಜ್ಯೋತಿಷ್ಯಶಾಸ್ತ್ರದ ಬಗ್ಗೆ ಇಷ್ಟೊಂದು ಚಿಂತಿಸಬೇಡಿ! ಯಾರೋ ಒಬ್ಬರು ವಿವೇಕಾನಂದರನ್ನು ಜ್ಯೋತಿಷ್ಯದ ಬಗ್ಗೆ ಪ್ರಶ್ನಿಸಿದಾಗ, ಅವರು ಒಂದು ತಕ್ಕ ಉತ್ತರ ನೀಡಿದರು. ಅವರು ಅವನಿಗೆ, “ಹೋಗು, ಚೆನ್ನಾಗಿ ತಿನ್ನು, ಚೆನ್ನಾಗಿ ವ್ಯಾಯಾಮ ಮಾಡು, ಚೆನ್ನಾಗಿ ಮಲಗು. ನೀನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲವುಳ್ಳವರಾಗುತ್ತೀರ. ಆಗ, ಈ ವಿಷಯಗಳ ಬಗ್ಗೆ ನೀವು ಚಿಂತಿಸುವುದಿಲ್ಲ!”
ಮಾನಸಿಕವಾಗಿ ಬಲಹೀನರಾಗಿರುವ ವ್ಯಕ್ತಿಯೇ ಜ್ಯೋತಿಷ್ಯಶಾಸ್ತ್ರವನ್ನು ಅಷ್ಟೊಂದು ಅವಲಂಬಿಸಿರುತ್ತಾನೆ.
ಸ್ವಾಮೀಜಿ, ಹಾಗಾದರೆ, ಜ್ಯೋತಿಷ್ಯಶಾಸ್ತ್ರವನ್ನು ಅನುಸರಿಸಿ ಹೋಗುವವರು ದುರ್ಬಲ ಮನಸ್ಸುಳ್ಳವರೇ?
ಇಲ್ಲ ಹಾಗೆ ಹೇಳುವುದಕ್ಕಾಗುವುದಿಲ್ಲ. ಆದರೆ ಬಹಳಷ್ಟು ಜನರು ದುರ್ಬಲ ಮನಸ್ಸುಳ್ಳವರು. ಸಾಮಾನ್ಯವಾಗಿ ಬುದ್ಧಿವಂತರಾಗಿರುವ ಜನರೂ ಕೂಡ ಕೆಲವೊಮ್ಮೆ ಈ ವಿಷಯಗಳಲ್ಲಿ ಮೂರ್ಖತನದಿಂದ ವರ್ತಿಸುತ್ತಾರೆ. ಅವರು ಬಂದು ಕೇಳುತ್ತಾರೆ, “ಸ್ವಾಮೀಜಿ, ನಾನು ಈ ಕಲ್ಲು ಅಥವಾ ರತ್ನವನ್ನು ಧರಿಸಿದರೆ, ನನಗೆ ಅದು ಅದೃಷ್ಟವೇ?” ನೀವು ಒಂದು ಕಲ್ಲನ್ನು ಹೇಗೆ ಅವಲಂಬಿಸಬಹುದು! ನೀವೇ ಜೀವಂತ ಅರಿವು (live consciousness); ನೀವು ದೇವರಲ್ಲದೆ ಬೇರೇನೂ ಅಲ್ಲ! ನನಗೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ - ನಾನು ಈ ಇಡೀ ಪ್ರಪಂಚ ಶಕ್ತಿಯನ್ನು ಉಪಯೋಗಿಸಲು ಸಾಧ್ಯಮಾಡಿಕೊಡುವ ವಿಜ್ಞಾನವನ್ನು ಹೇಳಿಕೊಡುತ್ತಿದ್ದೇನೆ, ಮತ್ತು ನೀವು ಬಂದು ನನ್ನನ್ನು ಕಲ್ಲುಗಳ ಬಗ್ಗೆ ಕೇಳುತ್ತೀರ!
ನೀವು ಸ್ವಾಮಿ ಯತೀಶ್ವರಾನಂದರ ಬಗ್ಗೆ ಕೇಳಿರಬಹುದು. ಅವರೊಬ್ಬ ಶ್ರೇಷ್ಠ ವ್ಯಕ್ತಿ, ಜ್ಞಾನೋದಯ ಹೊಂದಿದ ವ್ಯಕ್ತಿ. ಅವರು ಹೊರದೇಶಕ್ಕೆ ಮೊದಲ ಬಾರಿ ಹೋದಾಗ, ಅವರು ಹೊರಟಿದ್ದು ರಾಹುಕಾಲದಲ್ಲಿ - ಅಂದರೆ ದಿನದ ಅಶುಭವಾದ ವೇಳೆ, ಇದನ್ನು ಗ್ರಹಗಳ ಸ್ಥಾನಗಳನ್ನು ಉಪಯೋಗಿಸಿ ಲೆಕ್ಕಾಚಾರವನ್ನು ಮಾಡಲಾಗುವ ಒಂದು ವೇಳೆ.
ಒಬ್ಬ ವ್ಯಕ್ತಿ ಅವರನ್ನು ಕೇಳಿದರು, “ಸ್ವಾಮೀಜಿ, ಹೇಗೆ ನೀವು ರಾಹುಕಾಲದಲ್ಲಿ ಹೊರಡಬಹುದು?''
ಅವರು ಉತ್ತರಿಸಿದರು, “ಅಯ್ಯೋ ಮೂರ್ಖ! ಆ ಗ್ರಹಗಳನ್ನು ನಡೆಸುವ ಚೈತನ್ಯವು ನಾನೇ! ಹಾಗಿರುವಾಗ, ಅವು ನನ್ನನ್ನು ನಿಯಂತ್ರಿಸಲು ಹೇಗೆ ಸಾಧ್ಯ?'' ಅವರ ಧೈರ್ಯವನ್ನು ಗಮನಿಸಿ! ಇದು ಆಳವಾದ ತಿಳುವಳಿಕೆಯಿಂದ ಹೊರಬರುವ ಒಂದು ಧೈರ್ಯ.
ಗ್ರಹಗಳನ್ನು ನಿಯಂತ್ರಿಸಲು ಸಾಧ್ಯಮಾಡಿಕೊಡುವ ವಿಜ್ಞಾನವನ್ನು ನಾನು ಹೇಳಿಕೊಡುತ್ತಿದ್ದೇನೆ! ಹಾಗಾಗಿ, ಗ್ರಹಗಳು ಎಲ್ಲಿವೆ, ಅವು ಹೇಗೆ ನಿಮ್ಮ ಮೇಲೆ ಪರಿಣಾಮ ಬೀರುತ್ತವೆ ಇತ್ಯಾದಿಗಳ ಬಗ್ಗೆ ನೀವೇಕೆ ಚಿಂತಿಸುತ್ತೀರಿ? ಧ್ಯಾನದ ವಿಜ್ಞಾನವನ್ನು ಗ್ರಹಿಸಿರಿ, ಅಷ್ಟು ಸಾಕು. ಆಗ, ಯಾವುದೂ ನಿಮ್ಮನ್ನು ಮುಟ್ಟುವುದಿಲ್ಲ.
ಆದರೆ ಇದು ನಮ್ಮ ಮೌಲ್ಯಾಧಾರಿತ ವ್ಯವಸ್ಥೆಯ ಒಂದು ಭಾಗವಾಗಿಬಿಟ್ಟಿದೆ, ಸ್ವಾಮೀಜಿ ...
ಸ್ಪಷ್ಟವಾಗಿರಿ: ಎಲ್ಲ ಮೌಲ್ಯಗಳು ನಮ್ಮ ಅರಿವಿಗೆ (consciousness) ಪರ್ಯಾಯವಲ್ಲದೆ ಬೇರೇನಲ್ಲ.
ನೀವು ಮಾಡುವುದರ ಬಗ್ಗೆ ನಿಮಗೆ ಅರಿವಿದ್ದರೆ, ಏನು ಮಾಡಬೇಕೆಂದು ಹೇಳುವುದಕ್ಕೆ ಮೌಲ್ಯಗಳ ಅವಶ್ಯಕತೆ ಇಲ್ಲ. ನೀವು ಯಾವ ನಿಯಮಗಳನ್ನು ಅನುಸರಿಸಬೇಕಾಗಿಲ್ಲ; ನಿಯಮಗಳೇ ನಿಮ್ಮನ್ನು ಅನುಸರಿಸುತ್ತವೆ! ಎಲ್ಲ ಗುಣಗಳು ಮತ್ತು ಶಿಸ್ತು ಮತ್ತು ಆಧ್ಯಾತ್ಮಿಕತೆ ಎಲ್ಲವೂ ನಿಮಗೆ ಸಂಭವಿಸುತ್ತದೆ ಮತ್ತು ಆಧ್ಯಾತ್ಮಿಕ ಔನ್ನತ್ಯದ ಸ್ಥಿತಿಗೆ ನೀವು ಸ್ವಾಭಾವಿಕವಾಗಿ ವಿಕಸನವಾಗುತ್ತೀರ.
ಹೇಗೋ ಏನೋ, ನಾವು ಅರಿವು (consiouness) ಅಥವಾ ಆಧ್ಯಾತ್ಮಿಕ ಔನ್ನತ್ಯ ಇಂಥ ಪದಗಳನ್ನು ಕೇಳಿಸಿಕೊಂಡಾಗ, ನಾವು - ಇಲ್ಲ, ಇಲ್ಲ, ಇದು ನನಗಲ್ಲ! ಎಂದು ಭಾವಿಸುತ್ತೇವೆ. ಯಾವ ಧ್ಯಾನತಂತ್ರವನ್ನೂ, ಅರಿವನ್ನು ಔನ್ನತ್ಯಕ್ಕೆ ಏರಿಸಲು ಯಾವ ಕಾರ್ಯಶೀಲ ಬಗೆಯನ್ನೂ ಪ್ರಯತ್ನಿಸದೆ, ಇದೆಲ್ಲವೂ ನಮಗಲ್ಲ ಎಂದು ತೀರ್ಮಾನಿಸಿಬಿಡುತ್ತೇವೆ. ಹಾಗಾಗಿ ಅದಕ್ಕೆ ಪರ್ಯಾಯವಾದ ಹುಸಿ-ಅರಿವು (pseudo-consciousnesS), ಅಂದರೆ ನೈತಿಕತೆ, ಆತ್ಮಸಾಕ್ಷಿ, ಮೌಲ್ಯಗಳು ಇವುಗಳತ್ತ ಹೋಗುತ್ತೇವೆ.
ನೀವು ಆರಂಭದಲ್ಲಿದ್ದಾಗ, ಮೌಲ್ಯಗಳು ಪರವಾಗಿಲ್ಲ - ಆದರೆ ಕೊನೆಯಲ್ಲಲ್ಲ! ವಿವೇಕಾನಂದರು ಸುಂದರವಾಗಿ ನುಡಿಯುತ್ತಾರೆ, "ಚರ್ಚಿನಲ್ಲಿ (church) ಹುಟ್ಟುವುದು ಒಳ್ಳೆಯದು, ಆದರೆ ಅಲ್ಲೇ ಸಾಯುವುದಲ್ಲ!"
ಆಧ್ಯಾತ್ಮಿಕವಾಗಿರುವುದು ತುಂಬ ಕಷ್ಟ, ತುಂಬ ಭಿನ್ನವಾದದ್ದು ಎಂಬ ಭಾವನೆಯನ್ನು ಮೊದಲು ಬಿಟ್ಟುಬಿಡಬೇಕು.
ಭಗವಾನ್ ರಮಣ ಮಹರ್ಷಿಗಳಿಂದ ಒಂದು ಹಾಡಿದೆ:
ಅಯ್ಯೈ, ಅತಿ ಸುಲಭಂ, ಆತ್ಮವಿದ್ಯೆ, ಅಯ್ಯೈ ಅತಿ ಸುಲಭಂ!
ಇದರ ಅರ್ಥ, ‘ಓ, ಎಷ್ಟು ಸುಲಭ, ಈ ಆಧ್ಯಾತ್ಮಿಕತೆ, ಓ ಎಷ್ಟು ಸುಲಭ!’
ಮುಂದೆ ಬರುವ ನುಡಿಯಲ್ಲಿ ಅವರು ನುಡಿಯುತ್ತಾರೆ,
ನಿಮಗೆ ಹಣ ಬೇಕಾದರೆ, ನೀವು ಪರಿಶ್ರಮ ಪಡಬೇಕು.
ನಿಮಗೆ ಹೆಸರು ಅಥವಾ ಕೀರ್ತಿ ಬೇಕಾದರೆ, ನೀವು ಪರಿಶ್ರಮ ಪಡಬೇಕು.
ನಿಮಗೆ ಆತ್ಮ ಸಾಕ್ಷಾತ್ಕಾರವಾಗಬೇಕಾದರೆ, ನೀವು ಮಾಡಬೇಕಾಗಿರುವುದು ಇಷ್ಟೆ, ಸುಮ್ಮನಿರಬೇಕು!
ನಿಮಗೆ ಗಾಢವಾದ ಆಲಸ್ಯಕ್ಕೆ ಇಳಿಯಲು ಸಾಧ್ಯವಾದರೆ, ನೀವು ದೈವತ್ವಕ್ಕೆ ಇಳಿಯುತ್ತೀರ. ಈ ಆಲಸ್ಯವೇನೂ ನಮಗೆ ತಿಳಿದಿರುವ ಸಾಮಾನ್ಯವಾದ ಆಲಸ್ಯವಲ್ಲ. ಅದು ದೈಹಿಕ ಆಲಸ್ಯವಲ್ಲ, ಅದು ಒಂದು ರೀತಿಯ ಮಾನಸಿಕ ಆಲಸ್ಯ! ನಿಮ್ಮನ್ನು ನೀವು ಸಂಪೂರ್ಣವಾಗಿ - ಅಂದರೆ ಸಂಪೂರ್ಣವಾಗಿ ಶಾಂತಗೊಳಿಸಲು ಸಾಧ್ಯವಾದರೆ, ನೀವು ಆಧ್ಯಾತ್ಮಿಕರಾಗಬಹುದು.
ಆಧ್ಯಾತ್ಮಿಕವಾಗಿರುವುದು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಅದು ಏನಿದ್ದರೂ ನಿಮ್ಮ ಕಲ್ಪನೆ. ಅದು ಸುಲಭ ಎಂದು ನೀವು ಭಾವಿಸಿದರೆ, ಅದು ಸುಲಭ. ಅದು ಕಷ್ಟ ಎಂದು ಭಾವಿಸಿದರೆ, ಅದು ಕಷ್ಟ. ನೀವು ಇರುವ ಹಾಗೆಯೇ ಇರಲು, ಬೇಕಾಗಿರುವುದೇನು? ಅದು ಕಷ್ಟವೋ ಅಥವಾ ಸುಲಭವೋ?
ಸುಲಭ ಸ್ವಾಮೀಜಿ ...
ಸುಲಭ ಎಂಬ ಪದವನ್ನು ಕೂಡ ಉಪಯೋಗಿಸಲಾಗುವುದಿಲ್ಲ! ಅದು ನಾವು ಇರುವ ಹಾಗೆಯೇ! ನೀವು ಈಗಾಗಲೇ ಹಾಗೆ ಇದ್ದೀರ, ಅಂದಮೇಲೆ, ಹಾಗೆ ಆಗುವುದು ಸುಲಭ ಎಂದು ಹೇಗೆ ಹೇಳುತ್ತೀರ?
ಸುಮ್ಮನೆ ಒಳಹೊಕ್ಕಿ ನೋಡಿ. ಅಂತರಂಗದತ್ತ ನೋಡಿ. ಆಧ್ಯಾತ್ಮಿಕತೆಯಲ್ಲಿ ಸ್ವಲ್ಪ ಭರವಸೆ ಮತ್ತು ಸ್ವಲ್ಪ ಧ್ಯಾನ - ಅಷ್ಟು ಸಾಕು! ಆಧ್ಯಾತ್ಮಿಕರಾಗಿರುವುದು ತುಂಬ ಕಷ್ಟ ಎಂಬ ಭಯವನ್ನು ನೀವು ಬಿಟ್ಟಾಗ, ನಿಮಗೆ - ಹೌದು, ನಾನು ಆಧ್ಯಾತ್ಮಿಕನಾಗಬಲ್ಲೆ, ನಾನು ಅರಿವಿನಿಂದಿರಲು ಸಾಧ್ಯ, ಎಂಬ ವಿಶ್ವಾಸ ಉಂಟಾಗುತ್ತದೆ. ಆಗ, ‘ನನ್ನ ಮೌಲ್ಯಗಳನ್ನು ಬಿಡುವುದು ಸರಿಯೇ’ ಎಂಬ ಪ್ರಶ್ನೆಯು ಹುಟ್ಟುವುದೇ ಇಲ್ಲ.
ಈ ಕ್ಷಣ, ನೀವು ನಿಮ್ಮ ಮೌಲ್ಯಗಳನ್ನು ಬಿಡಲು ಹೆದರುತ್ತೀರ, ಏಕೆಂದರೆ ಹಿಡಿದುಕೊಳ್ಳಲು ಬೇರೇನಿಲ್ಲ! ನಾವು ನಮ್ಮ ಮೌಲ್ಯಗಳನ್ನು ಬಿಟ್ಟರೆ, ಎಲ್ಲ ಒತ್ತಿಟ್ಟ ಆಸೆಗಳು ಹೊರಬರುತ್ತವೆ, ಪಂಡೋರಾ ಪೆಟ್ಟಿಗೆ (Pandora box) ತೆರೆದುಕೊಳ್ಳುತ್ತದೆ! ಮತ್ತು ನಮಗೆ ತಿಳಿದಿದೆ, ಪಂಡೋರಾ ಪೆಟ್ಟಿಗೆ ತೆರೆದುಕೊಂಡರೆ, ಕೇವಲ ಅಸ್ವಸ್ಥತೆ ಮಾತ್ರ ಇರುತ್ತದೆ! ನಾವು ನಮ್ಮ ಅರೆಪ್ರಜ್ಞಾವಸ್ಥೆಯ (subcon-scious) ಬಗ್ಗೆ ಹೆದರುತ್ತೇವೆ. ಅರೆಪ್ರಜ್ಞಾವಸ್ಥೆಯ ಬಗ್ಗೆ ಇರುವ ಭಯವೇ ಈ ಪ್ರಶ್ನೆಯನ್ನುಪ್ರೇರೇಪಿಸುತ್ತದೆ.
ನೀವು ಧ್ಯಾನವನ್ನು ನಿರಂತರವಾಗಿ ಅಭ್ಯಾಸಮಾಡಿದರೆ, ನಿಮ್ಮ ಅರೆಪ್ರಜ್ಞಾವಸ್ಥೆ ತಿಳಿಯಾಗುತ್ತದೆ. ಆಗ ನೀವು ನೋಡಬಹುದು, ನೀವು ಪಂಡೋರಾ ಪೆಟ್ಟಿಗೆಯನ್ನು ತೆರೆದರೂ, ಹೊರಬರಲು ಅದರೊಳಗೆ ಏನೂ ಇಲ್ಲ, ನಿಮ್ಮ ಮುಖವೇ ಅದರಲ್ಲಿ ಪ್ರತಿಬಿಂಬಿಸುವುದನ್ನು ನೋಡುತ್ತೀರ, ತಿಳಿಯಾದ ಕನ್ನಡಿಯೇ ಕಾಣಿಸುತ್ತದೆ! ನಾನು ಹೇಳುತ್ತಿರುವುದು ಅರ್ಥವಾಗುತ್ತಿದೆಯೇ?
ಇರಲಿ ... ಈಗ ದುಃಖಹರಣ ಧ್ಯಾನವೆಂಬ ಧ್ಯಾನತಂತ್ರವನ್ನು ಪ್ರವೇಶಿಸೋಣ. ಈ ಧ್ಯಾನತಂತ್ರವು ಮೂಲಾಧಾರ ಚಕ್ರದ ಮೇಲೆ ಕೆಲಸಮಾಡಿ, ಅದರಲ್ಲಿರುವ ಚೈತನ್ಯವನ್ನು ಜಾಗೃತಗೊಳಿಸುತ್ತದೆ.
ದುಃಖಹರಣ ಧ್ಯಾನ
(ಒಟ್ಟು ಸಮಯ: 30 ನಿಮಿಷಗಳು)
ಈ ಧ್ಯಾನತಂತ್ರವನ್ನು ದುಃಖಹರಣ ಎಂದು ಕರೆಯಲಾಗಿದೆ ಮತ್ತು ಇದನ್ನು ಕುಲರ್ಣವ ತಂತ್ರದಿಂದ (Kularnava tantra) ತೆಗೆದುಕೊಳ್ಳಲಾಗಿದೆ. ನಿಮ್ಮಲ್ಲಿರುವ ಎಲ್ಲ ಒತ್ತಿಟ್ಟ ಭಾವನೆಗಳನ್ನು ಹೊರತರುತ್ತದೆ. ಹಿಂದೆ, ಎಷ್ಟೋ ಗುರುಗಳು ಈ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ಇದು ಒಟ್ಟು 30 ನಿಮಿಷಗಳ ಕಾಲದ ಧ್ಯಾನ.
ಉಸಿರಾಟವೇ ವಿಶ್ವಕ್ಕೆ ಸೇತುವೆ. ಅದು ನಿಮ್ಮ ಮನಸ್ಸಿನೊಂದಿಗೆ ನೀವು ಬದುಕುತ್ತಿರುವ ಪದ್ಧತಿ. ನಿಮ್ಮ ಆಲೋಚನಾಕ್ರಿಯೆಯು ಶಾಂತವಾಗಿದ್ದರೆ, ನಿಮ್ಮ ಉಸಿರಾಟವು ಸಡಿಲವಾಗಿರುತ್ತದೆ. ನಿಮ್ಮ ಆಲೋಚನಾಕ್ರಿಯೆಯು ಆಕ್ರಮಣಶೀಲ ವಾಗಿದ್ದರೆ, ನಿಮ್ಮ ಉಸಿರಾಟವೂ ಕೂಡ ಜೋರಾಗಿರುತ್ತದೆ. ನಿಮ್ಮ ಮನಸ್ಸನ್ನು ನಿಯಂತ್ರಿಸಲು, ಮೊದಲು ನಿಮ್ಮ ಉಸಿರಾಟವನ್ನು ನಿಯಂತ್ರಿಸಿಕೊಳ್ಳಬೇಕು.
ಈಗಿನ, ನಮ್ಮ ನಿಗ್ರಹಣ ಸ್ಥಿತಿಯಲ್ಲಿ, ನಮ್ಮಲ್ಲಿ ಬಹಳಷ್ಟು ಜನರು ಅರ್ಧ-ಸತ್ತು ಅರ್ಧ ಬದುಕಿದ್ದೀರ. ಈ ಧ್ಯಾನದ ಮೊದಲ ಭಾಗದಲ್ಲಿ, ನಿಮ್ಮ ನಿಗ್ರಹಣ ಪದ್ಧತಿಯಲ್ಲಿ ಮಥನವನ್ನು ಸೃಷ್ಟಿಸಲು ಆಳವಾದ ಉಸಿರಾಟವನ್ನು ಮಾಡಲಾಗುತ್ತದೆ. ಆಮ್ಲಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ, ನಿಮ್ಮ ಮಾನಸಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸಜೀವ ಮಾಡಲಾಗುತ್ತದೆ; ಅದು ಇನ್ನೂ ಹೆಚ್ಚು ಮಹತ್ವವಾಗುವುದು. ನಿಮ್ಮ ಜೀವಕೋಶಗಳಿಗೆ ಹೆಚ್ಚು ಚೈತನ್ಯ ದೊರಕುತ್ತದೆ ಮತ್ತು ಅವು ಜೈವಿಕ-ವಿದ್ಯುತ್ (bioelectricty) ಅಥವಾ ಜೈವಿಕ-ಚೈತನ್ಯವನ್ನು (bioenergy) ಸೃಷ್ಟಿಸುತ್ತವೆ. ಈ ಚೈತನ್ಯವು ಎಲ್ಲ ನಿಗ್ರಹಿತ ಭಾವನೆಗಳನ್ನು ಕರಗಿಸುತ್ತವೆ, ಮಂಜುಗಡ್ಡೆಯನ್ನು ಕರಗಿಸುವ ಹಾಗೆ. ಇದು ಮೂಲಾಧಾರ ಚಕ್ರಕ್ಕೆ ಗಾಳಿ ಬೀಸಿದ ಹಾಗೆ.
ಈ ತಂತ್ರವನ್ನು ನೀವು ಖಾಲಿ ಹೊಟ್ಟೆಯಲ್ಲಿ, ಬೆಳಗಿನ ಜಾವದಲ್ಲಿ ಮಾಡುವುದು ಒಳ್ಳೆಯದು. ದುಃಖಹರಣ ಧ್ಯಾನವನ್ನು 21 ದಿನಗಳ ಕಾಲ ಮಾಡುವುದರಿಂದ, ನಿಮ್ಮತನವು (being) ಪರಿವರ್ತನೆಗೊಳ್ಳುತ್ತದೆ ಮತ್ತು ನಿಮ್ಮ ಮುಖ ಮತ್ತು ದೇಹದಲ್ಲಿ ಒಂದು ಕಾಂತಿಯುಂಟಾಗುತ್ತದೆ. ಇದು ಮಾನಸಿಕ ಸ್ನಾನವನ್ನು ಮಾಡಿದ ಹಾಗೆ. ನಿಮ್ಮಲ್ಲಿ ಆ ನಿಶ್ಯಬ್ದತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ನೀವು ದುಃಖವನ್ನು ಹರಣ ಮಾಡಿದಾಗ, ಆನಂದವು ನಿಮ್ಮಲ್ಲಿ ವಿಕಸನವಾಗುತ್ತದೆ ಮತ್ತು ನಿಮ್ಮಿಂದ ಒಂದು ಸುಂದರವಾದ ಸುವಾಸನೆಯನ್ನು ಹೊರತರುತ್ತದೆ.
ಕಣ್ಣುಗಳನ್ನು ಮುಚ್ಚಿಕೊಂಡು ನಿಂತುಕೊಳ್ಳಿ. ಆಳವಾಗಿ, ಕ್ರಮಬದ್ಧವಾಗಿ ನಿಮ್ಮ ದೇಹದ ಆಳಸ್ಥಳಗಳಿಂದ ಉಸಿರಾಟ ನಡೆಸಿ, ಉಸಿರಾಟವು ಯಾವಾಗಲೂ ಮೂಗಿನ ಮೂಲಕ ಇರಲಿ, ಬಾಯಿ ಮುಚ್ಚಿರಲಿ. ನಿಮ್ಮ ಕೈಗಳನ್ನು ಚಲಿಸಿ, ಮಂಡಿಗಳನ್ನು ಬಗ್ಗಿಸಿ, ಅರ್ಧ ಕುಳಿತುಕೊಳ್ಳುವ ಭಂಗಿ ಮಾಡಿ ನಂತರ ಮೇಲಕ್ಕೆ ಎಳಿ. ನೀವೊಂದು ಹಾರಾಡುತ್ತಿರುವ ಪಕ್ಷಿ ಎಂಬಂತೆ, ಮೇಲಕ್ಕೆ ಕೆಳಕ್ಕೆ, ಮಂಡಿಗಳು
ಮೇಲಕ್ಕೆ ಕೆಳಕ್ಕೆ, ಕೈಗಳು ಮೇಲಕ್ಕೆ ಕೆಳಕ್ಕೆ ಚಲಿಸಿ, ಎಲ್ಲವೂ ನಿಮ್ಮ ಉಸಿರಾಟದ ಜೊತೆ ಕ್ರಮಬದ್ಧವಾಗಿರಲಿ.
ಎಲ್ಲ ಚಲನೆಗಳನ್ನು ಸೌಮ್ಯವಾಗಿ ಮಾಡಿ ಮತ್ತು ನಿಮ್ಮ ಉಸಿರೆಳೆದುಕೊಳ್ಳುವಿಕೆಯು ನಿಮ್ಮ ಮೇಲ್ಮುಖವಾದ ಚಲನೆಯ ಜೊತೆ ಅನುರೂಪತೆಯಿಂದಿರಬೇಕು, ಮತ್ತು ಉಸಿರು ಬಿಡುವ ಕ್ರಿಯೆಯು ನಿಮ್ಮ ಕೆಳಮುಖವಾದ ಚಲನೆಯ ಜೊತೆ ಅನುರೂಪತೆಯಿಂದಿರಬೇಕು. ನಿಮ್ಮ ಹೃದಯಕ್ಕೆ ಸಂಬಂಧಪಟ್ಟ ತೊಂದರೆಗಳಿದ್ದರೆ, ನಿಮಗೆ ಸಾಧ್ಯವಿದ್ದಷ್ಟು ಮಾತ್ರ ಮಾಡಿ. ಹೀಗೆಯೇ, ಗರ್ಭಿಣಿ ಮಹಿಳೆಯರು ಮತ್ತು ದೈಹಿಕ ಕಾಯಿಲೆಗಳುಳ್ಳವರು - ನಿಮಗೆ ಸಾಧ್ಯವಾದಷ್ಟು ಮಾತ್ರ ಮಾಡಿ. ಇದನ್ನು ಹತ್ತು ನಿಮಿಷಗಳಷ್ಟು ಕಾಲ ಮಾಡಿ.
ಮುಂದಿನ ಹತ್ತು ನಿಮಿಷಗಳ ಕಾಲ, ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು, ದೇಹದ ಪ್ರತಿಯೊಂದು ಭಾಗವನ್ನು ಒಂದು ಭಾಗದ ನಂತರ ಇನ್ನೊಂದನ್ನು ಒಂದು ಅಂಗವಾದ ಮೇಲೆ ಇನ್ನೊಂದನ್ನು ಬಿಗುವು ಮಾಡಿ, ನಂತರ ಸಡಿಲಗೊಳಿಸಿ. ಒಂದು ಅಂಗವನ್ನು ಬಿಗುವು ಮಾಡಿ, ಸಡಿಲಗೊಳಿಸಿ, ನಂತರ ಮುಂದಿನ ಅಂಗಕ್ಕೆ ಹೋಗಿ. ನಿಮ್ಮ ಪಾದಗಳಿಂದ ಆರಂಭಿಸಿ, ಕಾಲುಗಳಿಗೆ ಹೋಗಿ, ನಂತರ ತೊಡೆಗಳಿಗೆ; ನಂತರ ಸೊಂಟಕ್ಕೆ ಹೋಗಿ; ನಂತರ ಹೊಟ್ಟೆ ಮತ್ತು ಬೆನ್ನಿನ ಕೆಳಭಾಗಕ್ಕೆ; ನಂತರ ಎದೆ ಮತ್ತು ಬೆನ್ನಿನ ಮೇಲ್ಭಾಗಕ್ಕೆ, ನಂತರ ಕೈಬೆರಳುಗಳಿಂದ ಹಿಡಿದು ಭುಜದವರೆಗೆ, ನಂತರ ಕತ್ತು ಮತ್ತು ಭುಜಗಳಿಗೆ, ನಂತರ ನಿಮ್ಮ ಮುಖಕ್ಕೆ ಮತ್ತು ಕೊನೆಯಲ್ಲಿ ನಿಮ್ಮ ಶಿರ ಮುಕುಟಕ್ಕೆ ಹೋಗಿ. ನಿಮ್ಮ ಇಡೀ ದೇಹವು ಪ್ರತಿಯೊಂದು ಭಾಗವನ್ನು ಸಡಿಲಗೊಳಿಸಿ ನಂತರ ಮುಂದಿನ ಭಾಗಕ್ಕೆ ಹೋಗಿ. ಇದು ನಿಮ್ಮ ದೇಹದ ಪ್ರತಿಯೊಂದು ಭಾಗದ ಜೊತೆ ಒಂದು ಪ್ರಮಾಣಬದ್ಧವಾದ (isometric) ವ್ಯಾಯಾಮದ ಹಾಗೆ.
ಈ ಹತ್ತು ನಿಮಿಷಗಳು ಅಂತ್ಯವಾದಾಗ, ನೀವು ನಿಮ್ಮೊಳಗೆ ಖಾಲಿಯಾಗುತ್ತೀರ; ನೀವು ತಂಪಾಗಿ, ಶಾಂತರಾಗಿ ಸಮಚಿತ್ತ ಭಾವವನ್ನು ಹೊಂದುತ್ತೀರ.
ಮುಂದಿನ 10 ನಿಮಿಷಗಳ ಕಾಲ ಕಣ್ಣುಗಳನ್ನು ಮುಚ್ಚಿಕೊಂಡೇ ಕುಳಿತುಕೊಳ್ಳಿ ಮತ್ತು 'ಹೂ'ಕಾರದ ಶಬ್ದವನ್ನು ಮಾಡಿ, 'ಹೂ' ಕಾರ ಮಾತ್ರ. ಇದನ್ನು ಆಳವಾಗಿ ಜೋರಾಗಿ ಮಾಡಬೇಕಾಗಿಲ್ಲ. ಸುಮ್ಮನೆ ಅದನ್ನು ಸಡಿಲವಾದ ರೀತಿಯಲ್ಲಿ ಉಚ್ಚರಿಸಿ.
ಉಚ್ಛರಿಸುವಾಗ, ನಿಮ್ಮತನದ ಒಳಗೆ ಅಥವಾ ಹೊರಗೆ ಆಗುವುದೆಲ್ಲವನ್ನು ಸುಮ್ಮನೆ ವೀಕ್ಷಿಸಿ.
ವಾಸ್ತವದಲ್ಲಿ ಈ ತಂತ್ರದ ಮೊದಲ ಎರಡು ಭಾಗಗಳು ಈ ಮೂರನೆಯ ಭಾಗಕ್ಕೆ ಒಂದು ತಯಾರಿ. ಈ ಮೂರನೆಯ ಭಾಗವೇ ನಿಜವಾದ ಧ್ಯಾನ. ನೀವು ಮೂರನೆಯ ಭಾಗಕ್ಕೆ ಬರುವಷ್ಟರಲ್ಲಿ ನಿಮ್ಮ ಮನಸ್ಸು ಶ್ರಮವಿಲ್ಲದೆಯೇ ನಿಶ್ಯಬ್ದವಾಗುವುದನ್ನು ಕಾಣಬಹುದು. ನಿಶ್ಯಬ್ದತೆಯನ್ನು ನಿಮ್ಮ ಮೇಲೆ ಬಲವಂತಮಾಡಲು ಸಾಧ್ಯವಿಲ್ಲ; ಅದು ತಾನಾಗಿಯೇ ಸಂಭವಿಸಲು ಮಾತ್ರ ಸಾಧ್ಯ.
ಈ ಸಡಿಲವಾದ ಸ್ಥಿತಿಯಲ್ಲಿ ನಗುಮುಖ ಮಾಡಿಕೊಂಡು ಆನಂದಮಯ ಭಾವನೆಯಿಂದ ಉಳಿಯಿರಿ. ಈ ಸಮಯದಲ್ಲಿ ಎಷ್ಟೋ ಅನುಭವಗಳಾಗಬಹುದು; ಅವುಗಳನ್ನು ಸುಮ್ಮನೆ ವೀಕ್ಷಿಸಿ, ಟಿ.ವಿ.ಯನ್ನು ವೀಕ್ಷಿಸುವ ಹಾಗೆ. ನಿಮ್ಮ ಮನಸ್ಸನ್ನು ಆಲೋಚನೆಯಾದ ಮೇಲೆ ಆಲೋಚನೆಯನ್ನು ವೀಕ್ಷಿಸಿ. ಈ ಧ್ಯಾನ ಮಾಡುವಾಗ ಯಾವುದೇ ಸಮಯದಲ್ಲೂ ಕೂಡ ನಿಮ್ಮ ಮೂಲಾಧಾರ ಚಕ್ರದ ಮೇಲೆ ಗಮನವನ್ನು ಹರಿಸಬೇಡಿ, ಏಕೆಂದರೆ ಇದರಿಂದ ಭ್ರಮೆಗಳು ಸೃಷ್ಟಿಯಾಗುತ್ತವೆ, ಇವನ್ನೇ ನೀವು ತೆಗೆದುಹಾಕಲು ಪ್ರಯತ್ನಿಸುತ್ತಿರುವುದು.
(ತಂಡವು ದುಃಖಹರಣ ಧ್ಯಾನವನ್ನು ಧ್ಯಾನದ ಸಂಗೀತದ ಸಹಿತ ಅಭ್ಯಾಸಮಾಡುತ್ತಾರೆ)
(ಅದರ ಕೊನೆಯಲ್ಲಿ ಸ್ವಾಮೀಜಿ ಉಚ್ಛರಿಸುತ್ತಾರೆ ...)
ಓಂ ಶಾಂತಿ ಶಾಂತಿ ಶಾಂತಿಃ
ನಿಧಾನವಾಗಿ, ತುಂಬ ನಿಧಾನವಾಗಿ, ನಿಮ್ಮ ಕಣ್ಣುಗಳನ್ನು ತೆರೆಯಿರಿ. ಈ ಚೈತನ್ಯವನ್ನು ಮತ್ತು ನಿಶ್ಯಬ್ದತೆಯನ್ನು ಕೊಂಡೊಯ್ಯಿರಿ. ಮುಂದಿನ ಅಧಿವೇಶನದಲ್ಲಿ ಭೇಟಿಯಾಗೋಣ. ಧನ್ಯವಾದಗಳು.
