KAILASA Library/ಖಚಿತ ಪರಿಹಾರಗಳು/ಅಧ್ಯಾಯ - 4: ಚಿಂತೆಯಿಲ್ಲದೆ ಬದುಕುವುದು - ಮಣಿಪೂರಕ ಚಕ್ರSign in
ಖಚಿತ ಪರಿಹಾರಗಳು

ಅಧ್ಯಾಯ - 4: ಚಿಂತೆಯಿಲ್ಲದೆ ಬದುಕುವುದು - ಮಣಿಪೂರಕ ಚಕ್ರ

This text was machine-transcribed from the printed book and may contain errors. Select the words and choose “Report a mistake”.

ಮಣಿಪೂರಕ ಚಕ್ರ

ಮಣಿಪೂರಕ ಚಕ್ರವೆಂಬುದು ಹೊಕ್ಕಳಿನ ಪ್ರದೇಶದಲ್ಲಿದೆ. ಸಂಸ್ಕೃತದಲ್ಲಿ ಮಣಿಪೂರಕ ಎಂದರೆ 'ಒಡವೆಗಳ ನಗರ'. ಈ ಚಕ್ರವು ಚಿಂತೆಯಿಂದ ಬಂಧಿತವಾಗಿರುತ್ತದೆ. ಚಿಂತೆಯ ಬಗ್ಗೆ ಚಿಂತಿಸದೇ ಇರುವುದರ ಮೂಲಕ ಇದನ್ನು ಅರಳುವಂತೆ ಮಾಡಬಹುದು.

(ಧ್ಯಾನದ ತಂತ್ರ - ಮಣಿಪೂರಕ ಶುದ್ಧಿ ಕ್ರಿಯೆ - ಕ್ರೈಸ್ತಮತದ ಒಂದು ತಂತ್ರ)

ಈಗ 'ಚಿಂತೆ'ಯೆಂಬುದು ಏನೆಂದು ವಿಶ್ಲೇಷಿಸೋಣ.

ಯಾರಾದರೂ 'ಚಿಂತೆ'ಯೆಂದರೆ ಏನೆಂದು ಹೇಳಬಲ್ಲಿರಾ?

(ಒಬ್ಬ ಮಹಿಳೆ ಉತ್ತರಿಸುತ್ತಾಳೆ) ಸ್ವಾಮೀಜಿ, ನಮಗೆ ನಮ್ಮ ವ್ಯವಹಾರದ ಸಮಸ್ಯೆ, ನಮ್ಮ ಮಕ್ಕಳು ಅಥವಾ ನಮ್ಮ ಆರೋಗ್ಯ - ಇವುಗಳ ಬಗ್ಗೆ ಯೋಚಿಸಿದಾಗ ಚಿಂತೆಯುಂಟಾಗುತ್ತದೆ.

ನೀವು ಹೇಳುತ್ತಿರುವುದು ಚಿಂತೆಗೆ ಕಾರಣಗಳಾಯಿತು. ನಾನು ನಿಮ್ಮನ್ನು ಚಿಂತೆಗೆ ಕಾರಣಗಳನ್ನು ಕೇಳುತ್ತಿಲ್ಲ. ನಾನು ನಿಮ್ಮನ್ನು 'ಚಿಂತೆಯೆಂದರೆ ಏನು?' ಎಂದು ಕೇಳುತ್ತಿದ್ದೇನೆ. ನಾನು ನಿಮ್ಮನ್ನು ಚಿಂತೆಗೆ ಉದ್ದೇಶಗಳನ್ನು ಕೇಳಿದರೆ ಈ ಅಧಿವೇಶನದ ಸಭೆಯು (session) ಮುಕ್ತಾಯಗೊಳ್ಳುವುದಿಲ್ಲ. ಪ್ರತಿಯೊಬ್ಬರೂ ಒಂದು ಉದ್ದವಾದ ಪಟ್ಟಿಯೊಡನೆ ಸಿದ್ಧವಾಗುತ್ತೀರಾ.

ಸ್ವಾಮೀಜಿ, ನನ್ನ ವ್ಯವಹಾರವು ಇಳಿಮುಖವಾಗಿದೆ.

ಸ್ವಾಮೀ, ಮನೆಯಲ್ಲಿ ನನಗೆ ಮನಶ್ಶಾಂತಿ ಇಲ್ಲ!

ಸ್ವಾಮೀಜಿ, ನನಗೆ ಎಷ್ಟು ತೊಂದರೆಗಳಿವೆ ಎಂದರೆ ನಿಮಗೆ ಊಹಿಸಲೂ ಅಸಾಧ್ಯ.

ನನಗೆ ಮಕ್ಕಳಿಲ್ಲ, ಅದೇ ನನ್ನ ಚಿಂತೆ!

ಸ್ವಾಮೀಜಿ, ನನ್ನ ಮಕ್ಕಳೇ ನನ್ನ ಚಿಂತೆ!

(ತಂಡದಿಂದ ಗಟ್ಟಿಯಾಗಿ ನಗೆ)

ನಮಗೆಲ್ಲ ಯಾವಾಗಲೂ ಅನೇಕ ಚಿಂತೆಗಳಿರುತ್ತವೆ. ಮತ್ತು ನಾವು ಯಾವುದೂ ಚಿಂತೆಗಳನ್ನು ಕಾಣದಿದ್ದಲ್ಲಿ, ಚಿಂತೆ ಇಲ್ಲದಿರುವುದರ ಬಗ್ಗೆ ಚಿಂತಿಸಲು ಪ್ರಾರಂಭಿಸುತ್ತೇವೆ! ನಮಗೆ ಅಸುರಕ್ಷತೆಯ ಮನೋಭಾವ ಉಂಟಾಗಿ, ನಾವು ಯಾವುದರ ಬಗ್ಗೆ ಚಿಂತಿಸಬೇಕೆಂದು ಯೋಚಿಸುತ್ತೇವೆ.

ನಾನು ಹೇಳುತ್ತೇನೆ, ಇದು ಸತ್ಯಾಂಶ! ಕೆಲವು ವಯಸ್ಸಾದ ನಿವೃತ್ತಿ ಹೊಂದಿದ ಜನ ಬಂದು ನನ್ನ ಹತ್ತಿರ ಹೇಳುತ್ತಾರೆ, ಸ್ವಾಮೀಜಿ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ನಮ್ಮ ಮಕ್ಕಳಿಗೆ ಮದುವೆಯಾಗಿ ಅವರವರ ಸ್ವಂತ ಮನೆಗಳಲ್ಲಿ ಇದ್ದಾರೆ. ನಮ್ಮನ್ನು ಅವರು ಏನನ್ನೂ ಕೇಳುವುದಿಲ್ಲ. ನಮಗೆ ಏನು ಮಾಡುವುದೆಂದು ತಿಳಿಯುತ್ತಿಲ್ಲ. ಯೋಚಿಸುವುದಕ್ಕೆ ಏನೂ ಇಲ್ಲ. ಇನ್ನು ಬದುಕುವುದರಲ್ಲಿ ಯಾವ ಅರ್ಥವೂ ಇಲ್ಲ. ನಾವು ಶಾಂತತೆಯಿಂದ ಸಾಯಲು ಇಚ್ಚಿಸುತ್ತೇವೆ.

ಅವರಿಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಏಕೆಂದರೆ ಅವರಿಗೆ ಯಾವ ಚಿಂತೆಗಳೂ ಇಲ್ಲ! ಅವರು ಸಾಧ್ಯವಾದಷ್ಟು ಅವರ ಮನಸ್ಸುಗಳನ್ನು ಯಾವುದರಲ್ಲಾದರೂ ತೊಡಗಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ, ಆದರೆ ಅಲ್ಲಿ ತೊಡಗಿಸಿಕೊಳ್ಳುವುದಕ್ಕೆ ಏನೂ ಇರುವುದಿಲ್ಲ ಮತ್ತು ಇದು ಅವರಿಗೆ ಹೊಸದು ಏಕೆಂದರೆ ಅವರು ಇಷ್ಟು ದಿನವೂ ಒಂದಲ್ಲದೆ ಮತ್ತೊಂದು ಚಿಂತೆ, ಒಂದು ಬಿಟ್ಟರೆ ಮತ್ತೊಂದು ಯೋಚನೆಗಳಲ್ಲಿ ತೊಡಗಿಸಿಕೊಂಡಿದ್ದವರು.

ಚಿಂತೆ ಎಂಬುದನ್ನು ಸ್ಪಷ್ಟಪಡಿಸುವ ಮೊದಲು, ನಾನು ನಿಮಗೆ ತಿಳಿಸುವುದೇನೆಂದರೆ, ಯಾವುದೇ ನಮ್ಮ ಸಂಸ್ಕೃತಿ ಇರಲಿ, ಆರ್ಥಿಕ ಅಂತಸ್ತು, ವಯಸ್ಸು ಅಥವಾ ಬೇರೆ ಏನಾದರೂ ಸರಿ, ನಮ್ಮಲ್ಲೆಲ್ಲಾ ಸಾಮಾನ್ಯವಾಗಿ ಇರುವುದು ಒಂದೇ - ಅದೇ ಚಿಂತೆ.

ನಾನು ನಿಮ್ಮನ್ನು ಏತಕ್ಕೆ ಚಿಂತಿಸುತ್ತೀರಾ ಎಂದು ಕೇಳಿದರೆ, ನೀವು ಅದಕ್ಕೆ ಕಾರಣಗಳ ಪಟ್ಟಿಯನ್ನುಮಾಡುತ್ತೀರಾ. ನೀವು ಯಾವಾಗಲೂ ಚಿಂತೆ ಹೊರಗಡೆಯ ವಿಚಾರಗಳಿಂದ ಉಂಟಾಗುತ್ತದೆ ಎಂದು ಆಲೋಚಿಸುತ್ತೀರ. ನೀವು ಸದಾಕಾಲವೂ

ಹೊರಗಡೆಯ ಪ್ರಪಂಚವನ್ನು, ನಿಮ್ಮ ಸುತ್ತಮುತ್ತಲಿನ ಜನರನ್ನು ನಿಂದಿಸಿ, ನಿಮ್ಮಲ್ಲಿ ಉಂಟಾಗುವ ಚಿಂತೆಗೆ ಇವೆಲ್ಲ ಕಾರಣವೆಂದು ಆಪಾದಿಸುತ್ತೀರ.

ಹಾಗೆ ಯೋಚಿಸಿ ನೋಡಿ: ನಿಮ್ಮ ಚಿಂತೆಗೆ ಕಾರಣ ಬಾಹ್ಯವಾಗಿದ್ದರೆ, ಯಾರಾದರೊಬ್ಬರು ಈ ಕಾರಣಗಳಿಂದ ಮುಕ್ತರಾಗಿ ಚಿಂತೆಗಳಿಂದ ಬಿಡುಗಡೆ ಹೊಂದಿರಬೇಕು? ಹೌದು, ಆದರೆ ಹಾಗಾಗುವುದೇ? ಯಾರೊಬ್ಬರನ್ನಾದರೂ ಸಂಧಿಸಿದರೆ ಏನಾದರೂ ಒಂದು ಚಿಂತೆ ಇದ್ದೇ ಇರುತ್ತೆ. ಅವರು ಶ್ರೀಮಂತರೇ ಆಗಿರಬಹುದು ಅಥವಾ ಬಡವರೇ ಆಗಿರಬಹುದು. ಮದುವೆ ಆಗಿರುವವರು ಅಥವಾ ಮದುವೆ ಆಗದೇ ಇರುವವರು, ಮಕ್ಕಳಿರುವವರು ಅಥವಾ ಮಕ್ಕಳಿಲ್ಲದವರು, ಕೆಲಸಕ್ಕೆ ಹೋಗುವವರು ಅಥವಾ ಅವರದ್ದೇ ಆದ ಸ್ವಂತ ವ್ಯವಹಾರ ಮಾಡುತ್ತಿರುವವರು - ಪ್ರತಿಯೊಬ್ಬರಿಗೂ ಚಿಂತೆಗಳು ಇರುವ ಹಾಗೆ ಕಾಣುತ್ತದೆ. ಇದು ಏಕೆಂದರೆ, ನಾವೆಲ್ಲಾ ಚಿಂತೆಗೆ ಕಾರಣ ಬಾಹ್ಯವಾದದ್ದೆಂದು ತಿಳಿದಿದ್ದರೂ, ನಿಜವಾಗಿ ಯೋಚಿಸಿದರೆ ಚಿಂತೆಗೆ ಕಾರಣ ನಮ್ಮೊಳಗೆ ಬೇರೂರಿದೆ. ಇದು ಸತ್ಯ. ಆದ್ದರಿಂದಲೇ ಪ್ರತಿಯೊಬ್ಬರಿಗೂ ಯಾವಾಗಲೂ ಏನಾದರೂ ಒಂದು ಚಿಂತೆ ಇದ್ದೇ ಇರುತ್ತದೆ.

ಈಗ ನಮ್ಮ ಪ್ರಶ್ನೆಗೆ ಹಿಂದಿರುಗONA: ಚಿಂತೆ ಎಂದರೆ ಏನು? ನೀವು ನಿಮ್ಮೊಳಗೆ ಆಳವಾಗಿ ನೋಡಿದರೆ, ಚಿಂತೆಯು ಬೇರೇನಲ್ಲ, ಒಂದು ಘಟನೆಗೆ ನಿಮ್ಮ ಪ್ರತಿಕ್ರಿಯೆ. ಒಂದು ಸನ್ನಿವೇಶವು ನಿಮಗೆ ಚಿಂತೆಯನ್ನುಂಟು ಮಾಡುತ್ತದೆಯೋ ಇಲ್ಲವೋ ಎಂಬುದು ಆ ಸನ್ನಿವೇಶಕ್ಕೆ ನೀವು ಹೇಗೆ ಪ್ರತಿಕ್ರಿಯಿಸಲು ಆಯ್ಕೆ ಮಾಡುತ್ತೀರ ಎಂಬುದನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ. ಮತ್ತು ಚಿಂತೆಯೆಂಬುದು ಯಾವಾಗಲೂ ನಿಮ್ಮ ಒಳಗೆ ಜಿಗುಪ್ಸೆ ಉಂಟು ಮಾಡುವ ಒಂದು ಸತತವಾದ ಒಳ ಹರಟೆಯಾಗಿದೆ (inner chatter).

ಉದಾಹರಣೆಗೆ: ಒಂದು ವೇಳೆ ನಿಮ್ಮ ಸ್ನೇಹಿತನಿಗೆ ಒಂದು ಹೊಸ ಕೆಲಸ ಸಿಕ್ಕಿ ಉತ್ಸಾಹದಿಂದ ನಿಮ್ಮ ಹತ್ತಿರ ಬಂದು ಆ ಕೆಲಸದಿಂದ ಬರುವ ಸವಲತ್ತು(perk) ಮತ್ತು ಲಾಭದ ಬಗ್ಗೆ ಹೇಳಿದರೆ, ನೀವು ಹೇಗೆ ಪ್ರತಿಕ್ರಿಯಿಸುತ್ತೀರಾ? ಅರಿವಿಲ್ಲದೆಯೇ ನಿಮ್ಮ ಅಂತರಂಗದಲ್ಲಿ ನಿಮ್ಮೊಂದಿಗೆ ನೀವೇ ಹರಟುತ್ತೀರ.

ನೀವು ಹೀಗೆ ಯೋಚಿಸಲು ಆರಂಭಿಸುತ್ತೀರ, ... ಓ ಅವನಿಗೆ ಹೊಸ ಕೆಲಸ ಸಿಕ್ಕಿದೆ, ಅವನು ಎಷ್ಟೊಂದು ಲಾಭ ಪಡೆಯುತ್ತಿದ್ದಾನೆ. ನನ್ನ ಬಗ್ಗೆ ಏನು? ನನ್ನ ಹೆಂಡತಿ ಈ

ಸವಲತ್ತು ಮತ್ತು ಲಾಭದ ವಿಚಾರ ಕೇಳಿದರೆ ಏನು ಹೇಳುತ್ತಾರೋ? ಈತ ನನ್ನ ಹೆಂಡತಿಯನ್ನು ಭೇಟಿಯಾಗದಿದ್ದರೆ ಒಳ್ಳೆಯದು, ಇಲ್ಲದಿದ್ದರೆ ನಾನು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತೇನೆ. ನಾನು ಬೇರೆ ಕೆಲಸವನ್ನು ಹುಡುಕಿಕೊಳ್ಳಬೇಕೆ? ಸಿಗದಿದ್ದರೆ ಏನು? ಯಾವುದೂ ನನಗೆ ಸರಿಯಾಗಿ ನಡೆಯುತ್ತಲೇ ಇಲ್ಲ...

ಇದು ಚಿಂತೆ!

ಚಿಂತೆಯೆಂಬುದು ಸದಾಕಾಲವೂ ನಿಮ್ಮನ್ನು ನೀವು ಹೊರಗಡೆಯ ಮಾದರಿಗಳೊಂದಿಗೆ ಹೋಲಿಕೆ ಮಾಡಿಕೊಂಡು ಅದರ ಬಗ್ಗೆ ನಿಮ್ಮೊಳಗೆ ಹರಟುತ್ತಿದ್ದರೆ (inner chatter) ಉಂಟಾಗುವಂಥದು. ಕಾಲಾಂತರದಲ್ಲಿ ಇದೇ ಒಂದು ನಿಮ್ಮ ಮಾನಸಿಕ ವ್ಯವಸ್ಥೆ (mental make-up) ಉಳಿಯುತ್ತದೆ. ನಾನು ನನ್ನ ನೆರೆಹೊರೆಯವರ ಸಮಕ್ಕೆ ಜೀವನ ನಡೆಸುತ್ತಿದ್ದೀನಾ?

ನನ್ನ ಯಜಮಾನನನ್ನು ಒಲಿಸುವುದು ಹೇಗೆ? ನನ್ನ ಮಕ್ಕಳು ಏನು ಆಲೋಚಿಸುತ್ತಾರೆ?

ಯಾವಾಗಲೂ ನಮಗೆ ಬೇರೆಯವರ ಒಪ್ಪಿಗೆ ಬೇಕು - ಅದು ಸಂಸಾರದ್ದೋ ಅಥವಾ ಕೆಲಸದ್ದೋ ಅಥವಾ ಸಮಾಜದ್ದೋ ಆಗಿರಲಿ. ಇದು ನಮ್ಮ ಚಿಂತೆಯ ಪ್ರಮುಖ ಭಾಗ.

ನಮ್ಮ ಸಂಪೂರ್ಣ ಜೀವನ ಇತರರಿಂದ ಯೋಗ್ಯತಾ ಪತ್ರಗಳನ್ನು (certificate) ಸಂಗ್ರಹಿಸುವುದನ್ನು ಬಿಟ್ಟರೆ ಬೇರೊಂದಿಲ್ಲ. ಇತರರು ಈ ತರಹ ಯೋಗ್ಯತಾಪತ್ರ ಕೊಡದಿದ್ದಲ್ಲಿ - ಒಳ್ಳೆಯ ಗಂಡ, ಒಳ್ಳೆಯ ಕೆಲಸಗಾರ, ಒಳ್ಳೆಯ ನೆರೆಯವ - ನಾವು ನಮ್ಮ ಜೀವನವು ನಿಷ್ಪಯೋಜಕವಾಗಿಬಿಟ್ಟಿದೆ ಎಂದು ಚಿಂತಿಸುತ್ತೇವೆ.

ನಾವು ನಮ್ಮ ವ್ಯಕ್ತಿತ್ವವನ್ನು ಇತರರಿಂದ ಪಡೆದ ಯೋಗ್ಯತಾಪತ್ರದ ಮೂಲಕವೇ ರೂಪಿಸುತ್ತೇವೆ. ನಾವೆಲ್ಲಾ ನಮ್ಮ ಮೇಲೆಯೇ ನಂಬಿಕೆ ಕಳೆದುಕೊಂಡಿದ್ದೇವೆ. ಇದೇ ಸಮಸ್ಯೆಯಾಗಿರುವುದು.

ನಾವು ಚಿಕ್ಕ ಮಕ್ಕಳಾಗಿದ್ದಾಗ ಸದಾ ನಾವು ನಮ್ಮ ಅಸ್ತಿತ್ವದಲ್ಲಿ ಬಲವಾಗಿ ಕೇಂದ್ರೀಕರಿಸಿಕೊಂಡು ಇದ್ದೆವು. ನೀವು ಯಾವುದಾದರೂ ಮಗುವು 'ಬೇರೆಯವರು ಏನು ತಿಳಿದುಕೊಳ್ಳುತ್ತಾರೋ' ಎಂದು ಚಿಂತಿಸುವುದನ್ನು ನೋಡಿದ್ದೀರಾ? ಇಲ್ಲ! ಒಂದು ಮಗುವನ್ನು ಗಮನಿಸುವುದೇ ಒಂದು ಹಬ್ಬ (treat). ಏಕೆಂದರೆ ಆತನಿಗೆ ಯಾವ ಚಿಂತೆಗಳೂ ಇರುವುದಿಲ್ಲ ಮತ್ತು ಅವನು ಮಾಡುವುದೆರಲೆಲ್ಲಾ

ಸಂಪೂರ್ಣವಾಗಿರುತ್ತಾನೆ. ಏಕೆಂದರೆ ಬೇರೆಯವರು ಅವನ ಬಗ್ಗೆ ಏನು ಹೇಳುತ್ತಾರೋ ಎಂಬ ಚಿಂತೆ ಇಲ್ಲ.

ನಾವು ದೊಡ್ಡವರಾಗುತ್ತಾ ಇದ್ದ ಹಾಗೆ, ಸಮಾಜವು ನಮ್ಮ ಮನಸ್ಸಿನ ಮೇಲೆ ಈ ಅಭಿಪ್ರಾಯವನ್ನು ಸತತವಾಗಿ ಬೀರುತ್ತದೆ. ಸಮಾಜವು ನಮ್ಮನ್ನು ನಾವು ಬೇರೆಯವರ ಅಭಿಪ್ರಾಯಗಳ ಆಧಾರದ ಮೇಲೆ ವಿಮರ್ಶಿಸಲು ಹೇಳಿಕೊಟ್ಟು ಪಾತ್ರ ವಹಿಸುತ್ತದೆ. ಯಾಕೆಂದರೆ ತಂದೆತಾಯಿಯರು, ಅಧ್ಯಾಪಕರು, ಸ್ನೇಹಿತರು ಮತ್ತು ಅಪರಿಚಿತರು ಕೂಡ ಸಮಾಜವು ನಮ್ಮ ಪ್ರತಿಯೊಂದು ನಡತೆಗಳಿಗೆ ಮತ್ತು ಮಾತುಗಳಿಗೆ ಹೊರಗಡೆಯಿಂದ ಉತ್ತೇಜನ ಮತ್ತು ಬೇರೆಯವರಿಂದ ಪಡೆಯುವ ಯೋಗ್ಯತಾಪತ್ರದ ಮೇಲೆ ನಮ್ಮನ್ನು ಅವಲಂಬಿಸುವ ಹಾಗೆ ಮಾಡುತ್ತದೆ. ಇದರಿಂದಾಗಿ ನಾವು ಯಾವಾಗಲೂ ಬೇರೆಯವರು ನಮ್ಮ ಬಗ್ಗೆ ಏನು ಹೇಳುತ್ತಾರೋ ಎಂದು ಚಿಂತಿಸುತ್ತಿರುತ್ತೇವೆ.

ಮತ್ತು ನೀವು ಯಾವುದೇ ವಿಚಾರದ ಬಗ್ಗೆ ಚಿಂತಿಸುತ್ತಿದ್ದಾಗ, ನೀವು ಒಂದು ನಿಶ್ಚಿತವಾದ ಪ್ರಮಾಣಕ್ಕೆ ನಿಮ್ಮ ವಿಮರ್ಶೆಯನ್ನು ಮಾಡಬಲ್ಲಿರಿ ಎಂಬುದು ನಿಮಗೆ ಒಂದು ಭದ್ರತೆಯ ಭಾವನೆಯು ನೀಡುವುದು. ಇದರಿಂದಲೇ ಚಿಂತೆಯು ನಮ್ಮ ಜೀವನಕ್ಕೆ ಒಂದು ದಿಕ್ಕನ್ನು ನೀಡುತ್ತದೆ. ಚಿಂತೆ ಇಲ್ಲದಿದ್ದರೆ ನಿಮಗೆ ಚಲಿಸಲು ಅಕ್ಷೀಯೇ ಇಲ್ಲ ಎಂದು ಅನಿಸುವುದು. ಇದರಿಂದಾಗಿ ನಿಜವಾಗಿ ನಾವು ಗೋಪ್ಯವಾಗಿ ನಮ್ಮ ಚಿಂತೆಗಳನ್ನೂ ಪ್ರೀತಿಸುತ್ತೇವೆ!

ಒಂದು ಸಣ್ಣ ಕಥೆಯನ್ನು ಹೇಳುತ್ತೇನೆ ಕೇಳಿ:

ಒಂದು ದ್ವೀಪದ ಮೇಲೆ ಮೂರು ಜನರು ಯಾರೂ ದಿಕ್ಕಿಲ್ಲದೆ ಕುಳಿತಿದ್ದರು. ಅವರಿಗೆ ಅವರು ಎಷ್ಟು ವರ್ಷಗಳಿಂದ ಅಲ್ಲಿ ಇದ್ದಾರೆಂದು ತಿಳಿದಿರಲಿಲ್ಲ.

ಇದ್ದಕ್ಕಿದ್ದ ಹಾಗೆ, ಒಂದು ಸೀಸೆಯು (bottle) ಅವರಿಗೆ ಸಿಕ್ಕಿತು. ಅವರು ಅದನ್ನು ಕೈಗೆತ್ತಿಕೊಂಡರು.

ಅದರ ಮೇಲೆ ಅವರ ಕೈಗಳನ್ನು ಉಜ್ಜಿದರು, ತಕ್ಷಣವೇ ಒಂದು ಜೀನಿ ಅವರ ಮುಂದೆ ಪ್ರತ್ಯಕ್ಷವಾಯಿತು. ಅವರಿಗೆ ಗಾಬರಿಯಾಯಿತು.

ಜೀನಿಯು ಅವರಿಗೆ ಹೀಗೆ ಹೇಳಿತು, “ನೀವು ನನ್ನನ್ನು ಈ ಸೀಸೆಯಿಂದ ಬಿಡುಗಡೆ ಮಾಡಿದ್ದಕ್ಕೆ ಬಹಳ ವಂದನೆಗಳು. ಒಬ್ಬೊಬ್ಬರೂ ನೀವು ನಿಮ್ಮ ಕೋರಿಕೆಗಳನ್ನು ಕೇಳಿ,

ನಾನು ನಿಮಗೆ ಅನುಗ್ರಹಿಸುತ್ತೇನೆ''. ಅವರು ಬಹಳ ಸಡಗರದಿಂದ ಸ್ವಲ್ಪ ಹೊತ್ತು ಯೋಚಿಸಿದರು.

ಮೊದಲನೆಯವನು ಹೇಳಿದನು, “ನಾನು ನನ್ನ ಸ್ನೇಹಿತೆಯನ್ನು ಮದುವೆಯಾಗಿ ಸಂತೋಷವಾಗಿ ಜೀವನ ನಡೆಸಬೇಕು''.

ಜೀನಿಯು ಹೇಳಿತು, “ಹಾಗೆಯೇ ಆಗಲಿ, ನಿನ್ನ ಕೋರಿಕೆ ನೆರವೇರಲಿ''.

ಮೊದಲನೆಯವ ಆ ದ್ವೀಪದಿಂದ ಅದೃಶ್ಯವಾಗಿಬಿಟ್ಟ, ಮತ್ತು ಜೀನಿಯು ಎರಡನೆಯವನ ಕಡೆ ನೋಡಿತು.

ಎರಡನೆಯವ ಹೇಳಿದ, “ನಾನು ಒಬ್ಬ ಶ್ರೀಮಂತನಾದ ವ್ಯಾಪಾರಸ್ಥನಾಗಬೇಕೆಂಬ ಆಸೆ.''

ಜೀನಿಯು ಹೇಳಿತು, “ಹಾಗೇ ಆಗಲಿ, ನಿನ್ನ ಕೋರಿಕೆ ನೆರವೇರಲಿ''. ಎರಡನೆಯವ ಅಲ್ಲಿಂದ ಅದೃಶ್ಯನಾದ ಮತ್ತು ಉಳಿದ ಮೂರನೆಯವನನ್ನು ಜೀನಿ ಏನು ಬೇಕೆಂದು ಕೇಳಿತು.

ಮೂರನೆಯವ ಹೇಳಿದ, “ಇಷ್ಟು ವರ್ಷಗಳ ಕಾಲ ನನ್ನ ಇಬ್ಬರು ಸ್ನೇಹಿತರ ಜೊತೆ ಇದ್ದು, ಈಗ ಅವರಿಲ್ಲದೆ ನನಗೆ ಇರುವುದಕ್ಕೆ ಸಾಧ್ಯವಿಲ್ಲ. ನಾನು ಅವರ ಜೊತೆಯಲ್ಲಿಯೇ ಇರುವ ಆಸೆ.''

ಜೀನಿ ಹೇಳಿತು, “ಹಾಗೇ ಆಗಲಿ'', ಎಂದು ಹೇಳಿ, ಆ ಮೂರನ್ನು ಅದೇ ದ್ವೀಪದ ಮೇಲೆ ಅದೇ ರೀತಿ ಬಿಟ್ಟು ಅದೃಶ್ಯವಾಯಿತು.

(ನಗು!)

ಬಹಳ ವರ್ಷಗಳ ಕಾಲ ಆ ದ್ವೀಪದ ಮೇಲೆ ಆ ಮನುಷ್ಯನು ತೊಂದರೆಗಳನ್ನು ಅನುಭವಿಸಿದ್ದರೂ, ಒಂದು ಹೊಸ ಜೀವನ ನಡೆಸಲು ಸಿದ್ಧನಾಗಿರಲಿಲ್ಲ. ಅವನು ತನ್ನ ದ್ವೀಪದ ಮೇಲಿನ ಜೀವನಕ್ಕೆ ಅಷ್ಟು ಅಂಟಿಕೊಂಡಿದ್ದ. ಇದೇ ನಾನು ಹೇಳುವುದು, ನಮ್ಮ ಚಿಂತೆಗಳ ಬಗ್ಗೆ ನಮಗೆ ಎಷ್ಟೊಂದು ಅಕ್ಕರೆ! ನಾವು ನಮಗೆ ಅವುಗಳಿಂದ ತೊಂದರೆ ಎಂದು ಹೇಳುತ್ತೇವೆ, ಆದರೆ ನಾವು ಅವುಗಳಿಗೆ ಅಂಟಿಕೊಂಡೇ ಇರುತ್ತೇವೆ. ನೀವು ನಿಮ್ಮ ಚಿಂತೆಗಳನ್ನು ಪ್ರೀತಿಸುತ್ತೀರ ಎಂದು ನಾನು ಹೇಳಿದರೆ, ನೀವು ಅದನ್ನು ನಂಬಲು ತಯಾರಾಗಿರುವುದಿಲ್ಲ, ಆದರೆ ಇದು ನಿಜವಾದ ಸಂಗತಿ.

ಕೆಲವರು ನನ್ನಲ್ಲಿ ಬಂದು ಹೇಳುತ್ತಾರೆ, “ನನ್ನ ವ್ಯಾಪಾರವು ದಿನೇ ದಿನೇ ಬಹಳ ಹೀನಸ್ಥಿತಿಗೆ ಇಳಿಯುತ್ತಿದೆ, ಸ್ವಾಮೀಜಿ! ಹೋದ ತಿಂಗಳು ನಾನು ಹೆಚ್ಚು ನಷ್ಟಗಳನ್ನು ಅನುಭವಿಸಿದೆ, ಮತ್ತು ಮುಂದಿನ ತಿಂಗಳು ಮತ್ತಷ್ಟೂ ಹೀನ ಸ್ಥಿತಿಗೆ ಹೋಗುತ್ತದೆಂದು ನನಗೆ ಗೊತ್ತು”.

ನಾನು ಅವರನ್ನು ಕೇಳುತ್ತೇನೆ, “ನಿಮಗೆ ಮೊದಲೇ ಆ ವಿಚಾರ ತಿಳಿದಿರುವುದರಿಂದ, ನೀವು ಏಕೆ ನಿಮ್ಮ ವ್ಯವಹಾರವನ್ನು (business) ಮುಚ್ಚಬಾರದು? ಏಕೆ ನೀವು ನಷ್ಟವನ್ನು ಅನುಭವಿಸಬೇಕು.” ಅವರು ಆಘಾತಕ್ಕೆ ಒಳಗಾದರು.

ಅವರು ಸಂದೇಹದಿಂದ ಕೇಳಿದರು, “ನೀವು ಏನು ಹೇಳುತ್ತಿದ್ದೀರ ಸ್ವಾಮೀಜಿ? ನಾನು ಏನು ಮಾಡಲಿ ಮತ್ತೆ?”

(ಜೋರಾಗಿ ನಗೆ!)

ಚಿಂತಿಸುವುದಕ್ಕೆ ಕಾರಣವೇ ಇಲ್ಲದಿದ್ದರೆ, ನಿಮ್ಮ ಅಹಂಭಾವವು ಅಸ್ತಿತ್ವದಲ್ಲಿ ಅದರ ಕಾರಣವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದಲೇ ನೀವು ದುಃಖದ ಆಯಕಟ್ಟಿನಲ್ಲಿ ಇರುವುದನ್ನೇ ಆರಿಸಿಕೊಳ್ಳುತ್ತೀರ. ನೀವು ಚಿಂತಿಸುವಾಗ ನೀವು ಬೇರೊಬ್ಬರೆಂದು ಭಾವಿಸುತ್ತೀರ. ನೀವು ನೀವೊಬ್ಬ ಘನವಾದ (solid entity) ಅಸ್ತಿತ್ವವುಳ್ಳವರು ಎಂದು ತಿಳಿಯುತ್ತೀರ, ಏಕೆಂದರೆ ನೀವು ಚಿಂತೆಗಳನ್ನು ಪರಿಹರಿಸಿ ಮತ್ತು ಅವುಗಳ ಬಗ್ಗೆ ಸದಾ ಕಾಲವೂ ಯೋಚಿಸುವವರಾಗಿರುತ್ತೀರ.

ಆ ಕಾರಣದಿಂದ, ಯಾವಾಗ ನೀವು ಸತತವಾಗಿ ಚಿಂತಿಸುವುದರಿಂದ ಮುಕ್ತರಾಗುತ್ತೀರೋ, ಆಗ ನೀವು ಆತ್ಮಾನಂದದಲ್ಲಿರುತ್ತೀರ. ಆದರೆ ಈ ಆಯಕಟ್ಟಿನಲ್ಲಿ ನೀವು ಯಾರೂ ಅಲ್ಲ! ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಏನೂ ಇರುವುದಿಲ್ಲ, ಅಲ್ಲಿ ಪರಿಹರಿಸುವುದಕ್ಕೆ ಏನೂ ಇರುವುದಿಲ್ಲ.

ಚಿಂತೆಯಿಲ್ಲದ ಸ್ಥಿತಿಯನ್ನು ಅನುಭವಿಸಲು, ಒಂದು ಘನವಾದ ಅಸ್ತಿತ್ವದ ಬಯಕೆಯ ಅಹಂಭಾವವನ್ನು ಮೊದಲು ಬಿಡಬೇಕು.

ಚಿಂತೆಯ ಬಗ್ಗೆ ಮತ್ತೊಂದು ವಿಷಯವೇನೆಂದರೆ, ಮೊದಲನೆಯದಾಗಿ, ಚಿಂತೆಯೆಂಬುದೇ ನಿಮ್ಮ ಮನಸ್ಸಿಗೆ ಆಹಾರ ಕೊಟ್ಟು, ಅದನ್ನು ಕಾರ್ಯನಿರತವಾಗಿ ಇಟ್ಟುಕೊಳ್ಳುವ ನಿಮ್ಮ ಒಂದು ನಿರ್ಧಾರ. ಅದರ ಮೇಲೆ, ಪ್ರತಿಯೊಬ್ಬ ಮನುಷ್ಯನೂ, ಅವನಿಗೇ ಜಾಸ್ತಿ ಚಿಂತೆಗಳು ಇರುವುದೆಂದು ಯೋಚಿಸುತ್ತಾನೆ. ಮತ್ತು ಅವನೊಬ್ಬನೇ ಸಂತೋಷವಾಗಿಲ್ಲವೆಂದು ಮತ್ತು ಮಿಕ್ಕವರೆಲ್ಲ ಬಹಳ ಸಂತೋಷವಾಗಿದ್ದಾರೆಂದು ಭಾವಿಸುತ್ತಾನೆ.

ಆದರೆ ಒಂದು ವಿಚಿತ್ರವಾದ ಸಂಗತಿಯೆಂದರೆ, ಈ ಭೂಮಿಯ ಮೇಲೆ ಪ್ರತಿಯೊಬ್ಬರೂ ಅವನು ಅಥವಾ ಅವಳು, ಬಹಳ ನತದೃಷ್ಟ, ಅಸಂತೋಷದ ಮನುಷ್ಯ! ಎಂದು ಭಾವಿಸುತ್ತಾರೆ. ಇದು ಹೇಗೆ ಸಾಧ್ಯ?

ಒಂದು ಸಣ್ಣ ಕತೆ:

ಒಂದು ರಾಜ್ಯದಲ್ಲಿ ಪ್ರತಿಯೊಬ್ಬರೂ ಬಹಳ ಖಿನ್ನತೆಯಿಂದ (depression) ನರಳುತ್ತಿದ್ದುದು ರಾಜನ ಗಮನಕ್ಕೆ ಬಂದಿತು. ಏಕೆಂದರೆ, ಒಬ್ಬೊಬ್ಬರೂ ಅವರಿಗೆ ಹೆಚ್ಚು ತೊಂದರೆಗಳಿದ್ದು, ಬೇರೆ ಯಾರಿಗೂ ಚಿಂತೆಗಳೇ ಇಲ್ಲವೆಂದು ಭಾವಿಸಿದ್ದರು.

ಆದ್ದರಿಂದ ರಾಜನು ಒಂದು ಚಿಂತೆಯನ್ನು ಅದಲುಬದಲು ಮಾಡುವ ಕಾರ್ಯಕ್ರಮ' "worry exchange offer" ವನ್ನು ಘೋಷಿಸಿದನು. ಅಲ್ಲಿ ಜನರು ಅವರವರ ದೊಡ್ಡ ಚಿಂತೆಗಳನ್ನು ಮತ್ತೊಬ್ಬರು ಸಣ್ಣಪುಟ್ಟ ಚಿಂತೆಗಳೊಂದಿಗೆ ಬದಲಾಯಿಸಿ ಕೊಳ್ಳಬಹುದೆಂದು.

ಒಂದು ದೊಡ್ಡ ಸ್ಥಳವನ್ನು ಸಿದ್ಧಮಾಡಿ, ಅದರ ಮಧ್ಯದಲ್ಲಿ ಒಂದು ಚಿಂತೆಯ ಮಡಿಕೆಯನ್ನು ಇರಿಸಲಾಯಿತು.

ಯಾರಿಗೇ ಬೇಕೋ ಅವನು, ಬಂದು ಅವರದ್ದೇ ಆದ ಚಿಂತೆಗಳನ್ನು ಅದರಲ್ಲಿ ತುಂಬಿ, ಮತ್ತು ಅವರಿಗೆ ಬೇಕಾದ ಬೇರೆಯ ಚಿಂತೆಗಳನ್ನು ಆರಿಸಿಕೊಳ್ಳಬಹುದು. ಒಂದು ವಿಷಯವೇನೆಂದರೆ, ಒಟ್ಟಿನಲ್ಲಿ ಅವರು ಯಾವುದಾದರೊಂದು ಚಿಂತೆಗಳನ್ನು ಆರಿಸಿಕೊಳ್ಳಲೇ ಬೇಕು. ಇಡೀ ರಾಜ್ಯದ ಜನರೆಲ್ಲರೂ ಈ ಕಾರ್ಯಕ್ರಮಕ್ಕೆ ಸೇರಿದರು.

ಜನರು ಒಬ್ಬರನ್ನೊಬ್ಬರು ಭೇಟಿಯಾಗಿ ಅವರವರ ಚಿಂತೆಗಳ ಬಗ್ಗೆ ಚರ್ಚಿಸಿದರು.

ಬಹಳ ಹೊತ್ತಿನ ಮೇಲೆ ಅವರವರ ಚಿಂತೆಗಳ ಬದಲಾವಣೆಯನ್ನು ಆರಂಭಿಸಲು ಶುರು ಮಾಡಬಹುದೆಂದು ಘೋಷಿಸಲಾಯಿತು.

ಬಹಳ ಸಮಯ ಕಳೆಯಿತು. ಆದರೆ ಒಬ್ಬರಾದರೂ ಅವರು ಚಿಂತೆಗಳನ್ನು ಆ ಮಡಿಕೆಯಲ್ಲಿ ಹಾಕಲು ಮುಂದೆ ಬರಲಿಲ್ಲ!

ಎಲ್ಲರೂ ಪರಸ್ಪರ ಮಾತನಾಡಿದ ಮೇಲೆ, ಪ್ರತಿಯೊಬ್ಬರೂ ಅವರ ಬಳಕೆಯಲ್ಲಿರುವ ಚಿಕ್ಕ ಚಿಂತೆಗಳೇ, ಬೇರೆಯವರ ಚಿಂತೆಗಳಿಗಿಂತ ಎಷ್ಟೋ ವಾಸಿ ಎಂದು ಆಲೋಚಿಸಿದರು.

ನಾನು ಹೇಳುತ್ತೇನೆ: ಯಾವಾಗಲೂ ನಾವು ನಿಜವಾಗಿ ನಡೆಯುವ ಸಂಗತಿಗಳನ್ನು ಬಿಟ್ಟು ಸುಮ್ಮನೆ ಗಾಳಿ ಮಾತನಾಡುತ್ತಿರುತ್ತೇವೆ. ನಾವು ಚಿಂತೆಗಳೆಂದು ಭಾವಿಸಿರುವುದರ ಬುಡಕ್ಕೆ ಹೋದರೆ, ಏನೂ ಇಲ್ಲದ್ದನ್ನು ದೊಡ್ಡದಾಗಿ ಮಾಡುತ್ತಿದ್ದೇವೆ ಎಂದು ಅರಿವಾಗುತ್ತದೆ.

ಇರಲಿ, ಈಗ ನಾವು- ನಿಮ್ಮ ಮನಸ್ಸಿನಲ್ಲಿ ಚಿಂತಿಸಬೇಕಾದರೆ, ನಿಜವಾಗಿ ಏನು ನಡೆಯುತ್ತೆ ಎಂಬುದನ್ನು ವಿಶ್ಲೇಷಿಸೋಣ.

ನೀವು ಯಾವುದರ ಬಗ್ಗೆಯಾದರೂ ಚಿಂತಿಸುತ್ತಿರುವಾಗ ನಿಮ್ಮ ಮನಸ್ಸನ್ನು ಹಾಗೆ ಗಮನಿಸಿ (ವೀಕ್ಷಿಸಿ).

ನಿಮ್ಮ ಮನಸ್ಸಿನಲ್ಲಿ ಆಲೋಚನೆಗಳ ಒಂದು ನಿರಂತರವಾದ ಪ್ರವಾಹವೇ ಉತ್ಪತ್ತಿಯಾಗುತ್ತಿರುವುದನ್ನು ನೀವು ಗಮನಿಸಬಹುದು - ಸಂಪೂರ್ಣವಾಗಿ ಅಸಂಬದ್ಧವಾದ ಆಲೋಚನೆಗಳತ - ಸಾಮಾನ್ಯವಾಗಿ ನಕಾರಾತ್ಮಕ (negative) ಆಲೋಚನೆಗಳು. ಪುನಃ ಪುನಃ ಬರುವ ನಕಾರಾತ್ಮಕ ಮಾತುಗಳ ಹರಿವು ನಿಮ್ಮ ಮನಸ್ಸಿನಲ್ಲಿ ಪ್ರವಾಹದಂತಿರುತ್ತದೆ.

ನೋಡಿ: ನಾವೆಲ್ಲಾ ಎರಡು ರೀತಿಯ ಮಾತನ್ನು ಬಳಸುತ್ತೇವೆ - ಹೊರಗಿನ ಮತ್ತು ಮತ್ತು ಒಳಗಿನ ಮಾತು. ಹೊರಗಿನ ಮಾತು ಎಂದರೆ ಬೇರೆಯವರ ಜೊತೆ ಮಾತನಾಡುವುದು - ಯಾವುದನ್ನು ನಾವು ಭಾಷಣ ಅಥವಾ ಸಂಭಾಷಣೆ ಎಂದು ಕರೆಯುತ್ತೇವೋ ಅದು. ಒಳಗಿನ ಮಾತು ಎಂದರೆ ನಮ್ಮಲ್ಲಿಯೇ ನಾವು ಮಾತನಾಡುವುದು. ವಾಸ್ತವದಲ್ಲಿ ಒಳಗಿನ ಮಾತು, ಇದು ನಮ್ಮೊಳಗೆ ನಡೆಯುವ ಒಂದು ನಿರಂತರ ಪ್ರಕ್ರಿಯೆ. ಇದನ್ನು 'ಒಳ ಮಾತು' (inner chatter) ಮತ್ತು ಇದನ್ನು ಚಿಂತೆಯೆಂದೂ ಕರೆಯಬಹುದು.

ಚಿಂತೆಯೆಂಬುದು ನಿಮ್ಮ ಮನಸ್ಸಿನಲ್ಲಿ ಸತತವಾಗಿ ಸಂಭವಿಸುವ, ಹತೋಟಿಯಿಲ್ಲದ ಒಳಮಾತು. ಮತ್ತೆ ಬೇರೇನಲ್ಲ. ಈ ಒಳಮಾತು ನಿಮ್ಮ ಗುರುವಾಗಿದೆ. ಅದು ನಿಮ್ಮನ್ನು ಅದರ ಹತೋಟಿಯಲ್ಲಿಟ್ಟುಕೊಂಡಿದೆ. ಇದು ಯಾವಾಗಲೂ ಸಂಭವಿಸುತ್ತಿರುತ್ತದೆ.

ನೀವು ಏನೇ ಹೊರಗೆ ಮಾತನಾಡಿದರೂ, ನೀವು ಬಹಳ ಎಚ್ಚರಿಕೆಯಿಂದ ಮಾತನಾಡುತ್ತೀರ. ಏಕೆಂದರೆ, ಹಾಗೆ ಇಲ್ಲದಿದ್ದಲ್ಲಿ, ಸಮಾಜವು ನಿಮ್ಮನ್ನು ಎಚ್ಚರಿಕೆಯಿಂದ ಇರುವುದಕ್ಕೆ ಹೇಳುತ್ತದೆ, ಅಲ್ಲವೇ? ಆದರೆ ನಿಮ್ಮ 'ಒಳಮಾತು' ಯಾವ ವಿಧದಲ್ಲೂ ಹತೋಟಿಯಲ್ಲಿ ಇರುವುದಿಲ್ಲ. ನೀವು ಹೊರಗೆ ಆಡುವ ಮಾತುಗಳು, ಸದ್ದು ಮಾಡುವ ಮಾತುಗಳನ್ನು ನಿಯಂತ್ರಿಸಲು ಸಾಧ್ಯ. ಹಾಗಿರುವಾಗ ಸದ್ದು ಮಾಡದೇ ಇರುವ ಮಾತುಗಳನ್ನು (ಒಳಹರಟೆ) ನಿಯಂತ್ರಿಸಲು ಏಕೆ ಸಾಧ್ಯವಿಲ್ಲ. ನಿಮಗೆ ಆತ್ಮಗೌರವ ಇಲ್ಲದಿರುವುದರಿಂದ ನಿಮ್ಮ ಒಳಮಾತನ್ನು ನಿಮ್ಮ ಹತೋಟಿಯಲ್ಲಿಟ್ಟುಕೊಳ್ಳುವುದಿಲ್ಲ. ನಿಮ್ಮ ಒಳಗೆ, ನೀವು ಇಚ್ಛಿಸಿದ್ದನ್ನು ಸುಮ್ಮನೆ ಹೇಳಿಕೊಳ್ಳುತ್ತೀರ. ನಾವು ಒಂದು ಊಟ ಇರುವ ತಟ್ಟೆಯ ಮೇಲೆ ಕಸವನ್ನು ಎಸೆಯುತ್ತೀವಾ? ಇಲ್ಲ. ಆದರೆ, ನಾವು ಅದನ್ನು ಒಂದು ಕಸದ ತೊಟ್ಟಿಯಲ್ಲಿ ಎಸೆಯುತ್ತೇವೆ. ನೀವು ಬೇರೆಯವರನ್ನು ಒಂದು ಊಟ ಇರುವ ತಟ್ಟೆಯ ಹಾಗೆ ನೋಡಿಕೊಳ್ಳುತ್ತೀರ. ಮತ್ತು ನಿಮ್ಮನ್ನು ಒಂದು ಕಸದ ತೊಟ್ಟಿಯ ತರಹ; ಇದರಿಂದಲೇ ನಿಮಗೆ ಅಜೀರ್ಣವಾಗುವುದು.

ಹಲವೊಮ್ಮೆ ಹೊರಗಿನ ಸಂಭಾಷಣೆಯೊಂದಿಗೆ ಮಧ್ಯೆ ವಿರಾಮವಿರುತ್ತದೆ. ಆದರೆ, ಈ ಒಳಮಾತು ನಿರಂತರವಾಗಿರುತ್ತದೆ. ಅದು ನಿಮ್ಮನ್ನು ಹುಚ್ಚನ್ನಾಗಿ ಮಾಡುತ್ತದೆ! ವಾಸ್ತವವಾಗಿ, ಎಷ್ಟೋ ಸಾರಿ, ಬೇರೆಯವರ ಹತ್ತಿರ ಮಾಡುವುದು, ನಿಮ್ಮನ್ನು ಹುಚ್ಚನ್ನಾಗಿ ಮಾಡುವಂತಹ ಒಳಮಾತಿನಿಂದ ತಪ್ಪಿಸಿಕೊಳ್ಳುವಂತಹ ಒಂದು ದಾರಿಯಾಗುತ್ತದೆ. ಅದರಿಂದಾಗಿ ಪ್ರಪಂಚದಲ್ಲಿ ಇಷ್ಟೊಂದು ಮಾತುಕತೆ ನಡೆಯುತ್ತಾ ಇದೆ! ಜನರಿಗೆ ಗಂಭೀರವಾಗಿರುವುದಕ್ಕೆ ಭಯ. ಏಕೆಂದರೆ, ಅವರ ಒಳಗೊಂದು ಹುಚ್ಚನ ಮನೆ ಇದೆ. ಆದ್ದರಿಂದ ಅವರು ಒಂದು ಕಡೆ ಸೇರಿ, ಭೇಟಿ ಮಾಡಿ, ಮಾತನಾಡಿ ಮತ್ತು ಅವರಲ್ಲವರ ತೊಡಗಿಸಿಕೊಳ್ಳುತ್ತಾರೆ.

ಒಳಮಾತು ಎಂದರೆ ನಿಕ್ಕಷ್ಟ ಏನು ಅರ್ಥ?

ನೀವೊಬ್ಬರೇ ಇರಬೇಕಾದಾಗ ಒಂದು ಚಿಕ್ಕ ವ್ಯಾಯಾಮವನ್ನು ಮಾಡಿ ನೋಡಿ: ಸ್ವಲ್ಪ ನಿಮಿಷಗಳ ಕಾಲ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ಒಂದು ಕಾಗದ ಮತ್ತು ಲೇಖನಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ನಿಮ್ಮ ಮನಸ್ಸನ್ನು ಯಾವುದರ ಮೇಲೂ ಗಮನ ಹರಿಸಬೇಡಿ. ಹಾಗೆ ನಿಮ್ಮ ಮನಸ್ಸನ್ನು ಗಮನಿಸಿ. ಮತ್ತು ಏನು ನಿಮ್ಮ ಮನಸ್ಸಿನಲ್ಲಿ ನಡೆಯುತ್ತಿದೆ ಎಂದು ನೋಡಿ. ನೀವು ಕಣ್ಣನ್ನು ಮುಚ್ಚಿ ತಕ್ಷಣವೇ, ನೀವು ಒಂದು

ನಿರಂತರ ಆಲೋಚನೆಗಳ ಪ್ರವಾಹವು ನಿಮ್ಮ ಮನಸ್ಸಿನ ಮೂಲಕ ಹರಿಯುವುದನ್ನು ನೀವು ನೋಡುತ್ತೀರ. ನಿಮ್ಮ ಮನಸ್ಸಿನಲ್ಲಿ ಒಂದು ನಿರಂತರ ಚಟುವಟಿಕೆ ಇದೆ. ಏನೇ ಆಲೋಚನೆಗಳು ಬರಲಿ ಅವುಗಳನ್ನು ಪ್ರಾಮಾಣಿಕವಾಗಿ ಬರೆಯಿರಿ. ಐದು ನಿಮಿಷಗಳ ಕಾಲ ಇದನ್ನು ಮಾಡಿ. ಈಗ, ನೀವು ಕಾಗದದಲ್ಲಿ ಏನು ಬರೆದಿದ್ದೀರೋ ಅವುಗಳನ್ನು ಕುಳಿತುಕೊಂಡು ಓದಿ. ನಿಮಗೆ ಗಾಬರಿಯಾಗಬಹುದು! ಏನೇನು ನೀವು ಕಾಗದದ ಮೇಲೆ ಬರೆದಿದ್ದೀರೋ, ಅದೆಲ್ಲಾ ನಿಮ್ಮ ಒಳಹರಟೆ (inner chatter) ನೀವು ಅದನ್ನು ಓದಿದರೆ, ನೀವು ನಿಮ್ಮ ಆಲೋಚನೆಗಳನ್ನು ಎಷ್ಟು ಅಸಂಬದ್ಧ ಎಂದು ನೋಡುತ್ತೀರ.

ಒಂದು ಕ್ಷಣ ಇಲ್ಲಿ ಇರುತ್ತೀರ, ಮುಂದಿನ ಕ್ಷಣದಲ್ಲಿ ನೀವು ಅಮೆರಿಕದಲ್ಲಿ ಇರುತ್ತೀರ; ಮತ್ತೊಂದು ಕ್ಷಣದಲ್ಲಿ ನಿಮ್ಮ ಆಫೀಸಿನಲ್ಲಿ ಇರುತ್ತೀರ, ಇನ್ನೊಂದು ಕ್ಷಣದಲ್ಲಿ ನಿಮ್ಮ ಮಕ್ಕಳ ಬಗ್ಗೆ ಯೋಚಿಸುತ್ತಿರುತ್ತೀರ...!

ಇದು ನಿಮ್ಮ ಮನಸ್ಸಿನ ಸ್ಥಿತಿ - ಹತೋಟಿಯಿಲ್ಲದೆ ಹರಿಯುವ ಈ ಆಲೋಚನೆಗಳು. ಇದೇ ಮನಸ್ಸನ್ನು ನಂಬಿ ನಿಮ್ಮ ಬದುಕನ್ನು ಅದಕ್ಕೆ ಒಪ್ಪಿಸಿದ್ದೀರ! ಇದೇ ಮನಸ್ಸೇ ನಿಮ್ಮ ಎಲ್ಲಾ ಚಿಂತೆಗಳನ್ನು ಉತ್ಪತ್ತಿಮಾಡುತ್ತಿರುವುದು. ನಿಮಗೆ ಇದೇ ಮನಸ್ಸೇ ನಿಮ್ಮ ಜೀವನವನ್ನು ನಡೆಸುತ್ತದೆ. ಸುಮ್ಮನೆ ನೀವು ಇಷ್ಟು ಅರ್ಥಮಾಡಿಕೊಂಡರೆ, ನೀವು ನಿಮ್ಮ ಚಿಂತೆ ಮತ್ತು ಒಳಮಾಡಿನಿಂದ ಮುಕ್ತಿ ಹೊಂದಲು ಒಂದು ನಿರ್ದಿಷ್ಟ ಜಿಗಿತವನ್ನು (quantum leap) ತೆಗೆದುಕೊಂಡಿದ್ದೀರ.

ಒಂದು ಸಣ್ಣ ಕತೆ:

ಒಂದು ದಿನ ದಾರಿಯಲ್ಲಿ ಒಂದು ಅಪಘಾತ ಸಂಭವಿಸಿತ್ತು. ಒಂದು ಹೊಚ್ಚ ಹೊಸ ಕಾರು ಒಂದು ಗೋಡೆಗೆ ಡಿಕ್ಕಿ ಹೊಡೆದಿತ್ತು ಮತ್ತು ಜನರು ಗುಂಪಾಗಿ ಅದನ್ನು ನೋಡುತ್ತಿದ್ದರು.

ಅವರು ಚಾಲಕನನ್ನು ಹೀಗೆ ಕೇಳಿದರು, "ಸಾರ್, ನಿಮಗೆ ಕಾರ್ ಓಡಿಸಲು ಸರಿಯಾಗಿ ತಿಳಿಯದೇ ಇದ್ದಮೇಲೆ, ನೀವೇಕೆ ಓಡಿಸುತ್ತಿದ್ದೀರಿ?"

"ನನಗೆ ಕಾರ್ ಓಡಿಸುವುದಕ್ಕೆ ಬರುತ್ತೆ ನಿಜ" ಅವನು ಉತ್ತರಿಸಿದನು. "ಆದರೆ ನನಗೆ ನಿಲ್ಲಿಸುವುದಕ್ಕೆ ಬರುವುದೇ ಇಲ್ಲ".

(ಜೋರಾಗಿ ನಗೆ)

ಆ ವ್ಯಕ್ತಿಗೆ ಹೇಗೆ ಓಡಿಸುವುದು ಮಾತ್ರ ಗೊತ್ತಿತ್ತು. ಆದರೆ ನಿಲ್ಲಿಸಲು ಗೊತ್ತಿರಲಿಲ್ಲ. ನೀವು ಕೂಡ, ನಿಮಗೆ ನಿಲ್ಲಿಸಲು ತಿಳಿಯದೇ ಇರುವ ವಾಹನವನ್ನು ಓಡಿಸುತ್ತಿದ್ದೀರ. ಇದೊಂದು ಬಹಳ ಅಪಾಯಕರವಾದ ಸಂಗತಿ. ನಿಮ್ಮ ಮನಸ್ಸು ನಿಮಗೆ ನಿಲ್ಲಿಸಲು ತಿಳಿಯದೇ ಇರುವ ಒಂದು ವಾಹನದ ಹಾಗೆ. ಸ್ವಲ್ಪ ಕ್ಷಣಗಳ ಕಾಲವಾದರೂ, ಹಾಗೆ ನಿಮ್ಮ ಒಳಮಾತನ್ನು (inner chatter) ನಿಲ್ಲಿಸಲು ಪ್ರಯತ್ನಿಸಿ...

ನಿಮಗೆ ಆಗುತ್ತದೆಯೇ?

ಯಾವಾಗ ನೀವು ಅದನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಿಸುತ್ತೀರೋ, ಆಗ, ಆಲೋಚನೆಗಳ ರಭಸ ಇನ್ನೂ ತಡೆ ಇಲ್ಲದಾಗುತ್ತದೆ, ಏಕೆಂದರೆ ಅದನ್ನು ತಡೆಯಬೇಕೆಂಬ ಮತ್ತೊಂದು ಆಲೋಚನೆ ಸೇರುತ್ತದೆ.

ನೀವು ನಿಮ್ಮ ಮನಸ್ಸನ್ನು ಓಡಿಸುತ್ತಿಲ್ಲ - ನಿಮ್ಮ ಮನಸ್ಸು ನಿಮ್ಮನ್ನು ಓಡಿಸುತ್ತದೆ!

ಚಿಂತೆಯನ್ನು ಅರ್ಥಮಾಡಿಕೊಳ್ಳಲು, ನಮ್ಮ ಮನಸ್ಸಿನ ಸ್ವಭಾವ ಒಂದು ಆಳವಾದ ಒಳನೋಟವನ್ನು ತಿಳಿದಿರಬೇಕು.

ಚಿಂತೆಗೆ ಮಾರ್ಗವು ಮನಸ್ಸಿನ ಮೂಲಕವೇ - ಮತ್ತು ಅದರಿಂದ ಹೊರಬರುವ ಮಾರ್ಗವೂ ಕೂಡ ಮನಸ್ಸಿನ ಮೂಲಕವೇ ಆಗಬಹುದು. ಆದರೆ ನಾವು ತಪ್ಪಾದ ಸ್ಥಳಗಳಲ್ಲಿ ಇದಕ್ಕೆ ಉತ್ತರಗಳನ್ನು ಹುಡುಕುತ್ತಿರುತ್ತೇವೆ, ನಾವು ಚಿಂತೆಯ ಬುಡವನ್ನು ಆಳವಾಗಿ ನೋಡದೆ, ಯಾವಾಗಲೂ ಹೊರಗಡೆ ಹುಡುಕುತ್ತಿರುತ್ತೇವೆ. ನಾವು, ನನಗೆ ತುಂಬಾ ಹಣವಿದ್ದಿದ್ದರೆ, ನನ್ನ ಚಿಂತೆಗಳೆಲ್ಲ ಹೊರಟುಹೋಗುತ್ತದೆ! ನಾನು ಬಹಳ ಸುಂದರವಾಗಿದ್ದರೆ ... ನನಗೆ ಇನ್ನೂ ಒಳ್ಳೆಯ ಕೆಲಸ ಇದ್ದಿದ್ದರೆ ... ಹಾಗೆ ಇದ್ದಿದ್ದರೆ ... ಹೀಗೆ ಇದ್ದಿದ್ದರೆ ... ಎಂದೆಲ್ಲಾ ಯೋಚಿಸುತ್ತೇವೆ.

ಇದಕ್ಕೆ ಪರಿಹಾರವು ಬಾಹ್ಯ ಪ್ರಪಂಚದ ವಿಚಾರಗಳಲ್ಲಿ ಸಿಗುವಂತಹದಲ್ಲ, ಇದು ನಮ್ಮೊಳಗೆ ಮಾತ್ರ ಸಿಗುವಂತಹದು.

ಒಂದು ಸಣ್ಣ ಕತೆ:

ಬುದ್ಧನು ಪ್ರತಿದಿನ ಬೆಳಿಗ್ಗೆ ತನ್ನ ಹತ್ತು ಸಾವಿರ ಶಿಷ್ಯರಿಗೆ ಉಪದೇಶ ನೀಡುತ್ತಿದ್ದನು. ಒಂದು ದಿನ, ಅವರು ಒಂದು ಬಿಗಿಯಾಗಿ ಗಂಟು ಹಾಕಿದ ಹಗ್ಗವನ್ನು ಅವರ ಮುಂದೆ ತಂದಿಟ್ಟು ಹೀಗೆ ಕೇಳಿದರು, “ಯಾರಾದರೂ, ಈ ಗಂಟನ್ನು ಬಿಡಿಸುತ್ತೀರಾ?”

ಶಿಷ್ಯರು ಮುಂದೆ ಬಂದು, ಆ ಗಂಟನ್ನು ಹಿಂದೆ ಮುಂದೆ ಎಳೆದರು. ಆದರೆ ಅದನ್ನು ಬಿಡಿಸಲು ಅಸಾಧ್ಯವಾಯಿತು.

ಒಬ್ಬ ಬುದ್ಧಿವಂತ ಶಿಷ್ಯನು ಮುಂದೆ ಬಂದು, ಗಂಟನ್ನು ಸ್ವಲ್ಪ ಹೊತ್ತು ಗಮನಿಸಿ, ಸುಲಭವಾಗಿ ಬಿಡಿಸಿದನು.

ನೀವು ಗಂಟಿನ ಕಡೆ ನೋಡಿ, ಮತ್ತು ಅದು ಹೇಗೆ ನಿರ್ಮಾಣವಾಗಿದೆ, ಹೇಗೆ ಸಂಭವಿಸಿದೆ ಎಂದು ಗಮನಿಸಿ. ಒಂದು ಸಾರಿ ಹಾಗೆ ಮಾಡಿದಲ್ಲಿ, ನೀವು ಸುಮ್ಮನೆ ಹಾಗೆಯೇ ಆ ಗಂಟಿ ಸಂಭವಿಸಿರುವ ಪ್ರಕ್ರಿಯೆಯನ್ನು ತಲೆಕೆಳಗಾಗಿ ಮಾಡಿದರೆ ಸಾಕು, ನೀವು ಅದನ್ನು ಬಿಡಿಸಿರುತ್ತೀರ. ಅಷ್ಟೆ. ಹೀಗೆ ಮಾಡುವುದನ್ನು ಬಿಟ್ಟು, ನೀವು ಸುಮ್ಮನೆ ಹಿಂದೆಮುಂದೆ ಎಳೆದರೆ, ನಿಮಗೆ ಆ ಗಂಟನ್ನು ಬಿಡಿಸಲು ಸಾಧ್ಯವಾಗುವುದೇ ಇಲ್ಲ, ಅದು ಇನ್ನೂ ಬಿಗಿಯಾಗಿ ಬಿಡುತ್ತದೆ.

ಇದು ನಮ್ಮ ಸಮಸ್ಯೆಗಳಿಗೂ ಕೂಡ ಅನ್ವಯಿಸುತ್ತದೆ. ನೀವು ಯಾವ ಸಮಸ್ಯೆಗಳು, ರೋಗಗಳು, ಭಾವನೆಗಳೊಂದಿಗೆ ತೀಣುಕಾಡುತ್ತಿದ್ದೀರೋ, ಅವುಗಳು ನಿಮ್ಮ ವ್ಯವಸ್ಥೆಯಲ್ಲಿ ಇರುವ ಗಂಟುಗಳು. ಬೇರೆ ಏನೂ ಅಲ್ಲ. ನಿಮಗೆ ಈ ಗಂಟುಗಳು ಹೇಗೆ ಸೃಷ್ಟಿಯಾದವು ಎಂದು ಸರಿಯಾಗಿ ತಿಳಿದರೆ, ಅದನ್ನು ಬಿಡಿಸಲು ನೀವು ಯೋಗ್ಯವಾದ ಕ್ರಮ ತೆಗೆದುಕೊಳ್ಳಬಹುದು.

ಚಿಂತೆಯು ನಮ್ಮ ಹೊಕ್ಕಳಿನ ಪ್ರದೇಶದಲ್ಲಿರುವ ಮಣಿಪೂರಕ ಚಕ್ರದೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದೆ. ನಕಾರಾತ್ಮಕ ಆಲೋಚನೆಗಳು ನೇರವಾಗಿ ಮಣಿಪೂರಕ ಚಕ್ರವನ್ನು ಆಕ್ರಮಿಸುತ್ತದೆ.

ಇದೊಂದು ಚಿಕ್ಕ ಪರೀಕ್ಷೆಯನ್ನು ಮಾಡಿ: ಯಾವಾಗಲಾದರೂ ನೀವು, ನಕಾರಾತ್ಮಕ ಭಾವನೆಗಳು ನಿಮ್ಮಲ್ಲಿ ಉಂಟಾಗುತ್ತಿದೆ, ಮೇಲೆದ್ದು ಬರುತ್ತಿದೆ ಎಂದು ಭಾವಿಸಿದರೆ, ಅವುಗಳನ್ನು ಗಮನಿಸಿ ಮತ್ತು ಯಾವ ಸ್ಥಳದಿಂದ ಮೇಲೆ ಏಳುತ್ತದೆ ಎಂದು ನೋಡಿ. ಅವುಗಳು ಯಾವಾಗಲೂ ಹೊಕ್ಕಳಿನ ಭಾಗದಿಂದ ಉಂಟಾಗುತ್ತದೆ ಎಂದು ನಿಮಗೆ ತಿಳಿಯುತ್ತದೆ.

ಯಾವಾಗಲಾದರೂ ನೀವು ಚಿಂತೆಗೊಳಗಾದಾಗ, ಯಾವಾಗಲಾದರೂ ನಿಮಗೆ ನಿಭಾಯಿಸುವುದಕ್ಕೆ ಆಗದೇ ಇರುವಂತಹ ಸನ್ನಿವೇಶ ಉಂಟಾದಾಗ, ಮೊದಲನೆಯ ದಾಗಿ ನಿಮ್ಮ ಹೊಕ್ಕಳಿನ ಭಾಗ, ಅಂದರೆ ನಿಮ್ಮ ಹೊಟ್ಟೆಯ ಮೇಲೆ ಪರಿಣಾಮ ಉಂಟಾಗುವುದು.

ನೀವು ದೈಹಿಕವಾಗಿ ಖಿನ್ನತೆಯನ್ನು ನಿಮ್ಮ ಹೊಟ್ಟೆಯಲ್ಲಿ ಒಂದು ಭಾರವನ್ನಾಗಿ ಅನುಭವಿಸುತ್ತೀರ. ಆದುದರಿಂದಲೇ ನೀವು ಹೇಳುವುದು, “ನಾನು ಅದನ್ನು ಹೊಟ್ಟೆಯಲ್ಲಿ ಇಡಲಾರೆ. ನಾನು ಅದನ್ನು ಜೀರ್ಣಿಸಿಕೊಳ್ಳಲಾರೆ” ಎಂದು.

ಆದ್ದರಿಂದ, ಈ ಚಕ್ರವನ್ನು ತೆರೆಯುವುದಕ್ಕೆ ಮಾಡುವ ಮಾರ್ಗ ಯಾವುದು? ಈ ಚಕ್ರವನ್ನು ಒಳ್ಳೆಯ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದರ ಬಗೆ ಹೇಗೆ? ಬನ್ನಿ ... ಹೇಳಿ.

ಸ್ವಾಮೀಜಿ, ನಾವು ಯಾವ ಸಂದರ್ಭದಲ್ಲೂ ಚಿಂತೆಗೆ ಒಳಗಾಗಬಾರದು?

ನಿಮಗೆ ನೀವೇ, ಚಿಂತಿಸಕೂಡದು ಎಂದು ಸುಮ್ಮನೆ ಹೇಳುತ್ತಾ ಇರಲು ಪ್ರಯತ್ನಿಸಿ. ಏನು ಆಗುತ್ತದೆ? ಚಿಂತೆ ಮಾಡಿಕೊಳ್ಳುವುದು ಬೇಡವೆಂಬ ಮತ್ತೊಂದು ಚಿಂತೆಯನ್ನು ಸೃಷ್ಟಿಸಿಕೊಳ್ಳುತ್ತೀರ. 'ಚಿಂತಿಸುವುದನ್ನು ನಿಲ್ಲಿಸು' ಎಂದು ಹೇಳಲೇ ಬೇಡಿ. ಅದು ಖಂಡಿತವಾಗಿ ಅಸಾಧ್ಯವಾದ ಒಂದು ವಿಚಾರ, ನಿಮ್ಮ ಚಿಂತೆಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ.

ನಾನು, ನಿಮ್ಮ ಚಿಂತೆಯ ಬಗ್ಗೆ ಚಿಂತಿಸಬಾರದು, ಎಂದು ಹೇಳುವುದರ ಅರ್ಥವೇನು? ಸುಮ್ಮನೆ ಚಿಂತೆಗಳನ್ನು ಗಮನಿಸಿ, ಮತ್ತು ಅವುಗಳಿಂದ ಉದ್ವೇಗಗೊಳ್ಳಬೇಡಿ. ನೀವು ಯಾವಾಗ ನಿಮ್ಮೊಳಗೆ ನಿಮ್ಮ ಚಿಂತೆಗಳನ್ನು ಮತ್ತೆ ಮತ್ತೆ ಪುನರುಚ್ಚಾರಣೆ ಮಾಡಲು ಆರಂಭಿಸುತ್ತೀರೋ, ಆಗಲೇ ನಿಜವಾದ ಚಿಂತೆಯು ಹುಟ್ಟುತ್ತದೆ.

ಇದೇ ನಾನು ಹೇಳುವ 'ಚಿಂತೆಗಳ ಬಗ್ಗೆ ಚಿಂತಿಸಬೇಡಿ' ಎಂದು ಹೇಳುವುದರ ಅರ್ಥ. ಅದರ ಪಾಡಿಗೆ ಅದು ಇರಲಿ. ಅವುಗಳಿಗೆ ಜೀವ ಕೊಡಲು ಆರಂಭಿಸಬೇಡಿ. ಅವು -

ಯಾವಾಗ ನೀವು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಿ, ನಕಾರಾತ್ಮಕವಾಗಿ ಯೋಚಿಸಬೇಡಿ - ಎಂದು ಹೇಳುತ್ತೀರೋ ಅದು ಹಗ್ಗದ ಗಂಟನ್ನು ಬಿಗಿ ಮಾಡುವ ತರಹ. ನಿಮ್ಮ ಮನಸ್ಸು ಬಹಳ ಬಿಗಿಯಾಗಿ ಮತ್ತು ನಿರ್ಬಂಧಿತವಾಗುತ್ತದೆ. ಇದು ಯಾವ ತರಹದಲ್ಲೂ ಗಂಟನ್ನು ಸಡಿಲಗೊಳಿಸಲು ಸಹಾಯ ಮಾಡುವುದಿಲ್ಲ.

ನಿಮ್ಮ ಭಾವನೆಗಳನ್ನು ಒತ್ತಿಟ್ಟಾಗ, ನಿಮ್ಮ ನೆನಪಿನಲ್ಲಿರುವ ಈ ಭಾವನೆಗಳು ಮಣಿಪೂರಕ ಚಕ್ರಕ್ಕೆ ನೇರವಾಗಿ ಹೋಗುತ್ತದೆ. ಯಾವಾಗ ಮಣಿಪೂರಕವು ವಿಷಮಯವಾದಾಗ ನಿಮ್ಮ ನಡತೆಯು ನಿಮ್ಮ ಅರಿವಿಲ್ಲದ ದೌರ್ಜನ್ಯ (unconscious violence) ದಿಂದ ಕೂಡಿರುತ್ತದೆ. ಉದಾಹರಣೆಗೆ ಏನಾದರೂ ಕೀಳುವುದು, ಪದಾರ್ಥಗಳನ್ನು ನಾಶಮಾಡುವುದು, ನಿಮ್ಮ ದೇಹದೊಂದಿಗೆ ಅಸಭ್ಯವಾಗಿ ವರ್ತಿಸುವುದು, ನಿಮ್ಮ ಮತ್ತು ಬೇರೆಯವರ ಜೊತೆ ಜಗಳವಾಡುವುದು.

ಇವೆಲ್ಲಾ ಒತ್ತಿಡುವಿಕೆಯಿಂದ ಉಂಟಾಗುವ ಸೂಕ್ಷ್ಮವಾದ ಅಭಿವ್ಯಕ್ತತೆ. ಆದ್ದರಿಂದ ಜನರು, ಅವರ ಹೊಟ್ಟೆಯು ಕೋಪದಿಂದ ಉರಿಯುತ್ತದೆ ಅಥವಾ ಅವರ ಹೊಟ್ಟೆಯಲ್ಲಿ ಭಾರವಾದ ಭಾವನೆ - ಎಂದೆಲ್ಲಾ ಹೇಳುತ್ತಾರೆ. ನಿಮ್ಮೊಳಗೆ ಎಷ್ಟೊಂದು ಒತ್ತಿಟ್ಟ ಕೋಪ ಇರುವುದು; ಎಷ್ಟೊಂದು ನಕಾರಾತ್ಮಕತೆ ಇದೆ, ಮತ್ತೆ ಇದು ಹೆಚ್ಚು ಹೆಚ್ಚು ಸಕಾರಾತ್ಮಕತೆಯನ್ನು ಉಂಟುಮಾಡುತ್ತದೆ.

ನಕಾರಾತ್ಮಕತೆ ಎಂದರೇನು?

ಯಾವುದೋ ಕಾರಣಗಳಿಂದ ನಿಮ್ಮ ವ್ಯಾಪಾರದಲ್ಲಿ ವಿಫಲತೆಯನ್ನು ನೀವು ಅನುಭವಿಸಿದ್ದರೆ, ನೀವು ಹೇಗೆ ಪ್ರತಿಕ್ರಿಯಿಸುತ್ತೀರಾ? ನೀವು ವಿಫಲತೆಯನ್ನು ಅನುಭವಿಸಿದ್ದ ಕಾರಣ ದುಃಖಿತರಾಗುತ್ತೀರ; ಅದು ಪರವಾಗಿಲ್ಲ. ಆದರೆ ನೀವು ಅಷ್ಟು ಮಾತ್ರಕ್ಕೆ ನಿಲ್ಲಿಸುವುದಿಲ್ಲ. ನೀವು ಆಶಾಭಂಗರಾಗಿ ಮತ್ತು ಕೋಪಕ್ಕೊಳಗಾಗಿ ಮತ್ತು ನಿಮ್ಮ ತಲೆಯೊಳಗೆ ಎಲ್ಲಾ ತರಹದ ವಿಚಾರಗಳು ಪ್ರವೇಶಿಸುವಂತೆ ಅವಕಾಶ ನೀಡುತ್ತೀರ.

ಓ, ಇದು ನನ್ನ ಕೆಟ್ಟ ಕಾಲ!

ನಾನು ಮುಟ್ಟಿದ್ದೆಲ್ಲಾ ವಿಫಲವಾಗುವುದು ಖಂಡಿತ!

ನಾನೊಬ್ಬ ಅಪ್ರಯೋಜಕ!

ನಾನೇಕೆ ಯಾವಾಗಲೂ ಇಷ್ಟು ದುರಾದೃಷ್ಟವಂತ?

ಈಗ ನಾನೇನು ಮಾಡಲಿ? ... ಹೀಗೆ!

ಇದೇ ನಕಾರಾತ್ಮಕತೆ; ಇದೇ ಚಿಂತೆಗೆ ಮೂಲ. ಚಿಂತೆಯ ಬಗ್ಗೆ ಒಂದು ವಿಚಾರವೇನೆಂದರೆ, ನಮ್ಮ ಚಿಂತೆಗಳ 99% ರಷ್ಟು ಭಾಗ ನಿಜವಾಗಿ ಇರುವುದಿಲ್ಲ. ನಮ್ಮ ಚಿಂತೆಗಳ 99ರಷ್ಟು ಭಾಗ ಸಂಪೂರ್ಣವಾಗಿ ಯುಕ್ತಿ ವಿರುದ್ಧವಾಗಿರುತ್ತದೆ.

ಕ್ರಮೇಣವಾಗಿ, ಈ ನಕಾರಾತ್ಮಕ ಮನೋಭಾವನೆ, ಈ ನಕಾರಾತ್ಮಕ ಒಳಹರಟೆ ನಿಮ್ಮ ಜೀವಾತ್ಮದಲ್ಲಿ ಶಾಶ್ವತವಾಗಿ ಗಟ್ಟಿಯಾಗಿ ಉಳಿದುಕೊಳ್ಳುತ್ತದೆ, ಮತ್ತು ನೀವು ಮಾಡುವುದರಲ್ಲೆಲ್ಲಾ ನಕಾರಾತ್ಮಕ ಪರಿಣಾಮ ಉಂಟುಮಾಡುವಂತಹುದಾಗುತ್ತದೆ. ನೀವು ನಿಮ್ಮೊಳಗೆ ಇದು ಗಟ್ಟಿಯಾಗಿ ಉಳಿಯುವುದರ ಅರಿವಿಲ್ಲದೇ ಇರುತ್ತೀರ; ಇದು ಒಂದು ಬಹಳ ದೊಡ್ಡ ಅಪಾಯ, ಈ ಪ್ರವಾಹವನ್ನು ತೀಕ್ಷ್ಣವಾಗಿ ನಿಮ್ಮ ಪದ್ಧತಿಯಲ್ಲಿ

ಅರಿಯುವ ಹಾಗೆ ಮಾಡುವುದೇ ಒಂದು ದೊಡ್ಡ ಕೆಲಸ. ಏಕೆಂದರೆ, ಇದು ನಿಮ್ಮ ಸ್ವಭಾವವೇ ಆಗಿಬಿಟ್ಟಿದೆ. ಇದೊಂದು ನಿಮಗಿಂತ ಭಿನ್ನವಾದದ್ದು ಎಂದು ನೀವು ನೋಡಲು ಆಗುವುದೇ ಇಲ್ಲ. ನೀವು ಇದರ ಒಂದು ಭಾಗವಾಗಿದ್ದೀರ.

ಈ ನಕಾರಾತ್ಮಕ ಮನೋಭಾವನೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಖಿನ್ನತೆ (depression) ಎಂಬ ಹೆಸರಿನಿಂದ ಕರೆಯುತ್ತಾರೆ. ಸ್ವಲ್ಪ ಜನರು ಕಡಿಮೆ ಮಾನಸಿಕ ತಗ್ಗುನಿಂದ ಇರುತ್ತಾರೆ, ಮತ್ತೆ ಕೆಲವರು ಹೆಚ್ಚು ಖಿನ್ನತೆಯಿಂದ ಇರುತ್ತಾರೆ, ಅಷ್ಟೆ. ನೀವು ಹೆಚ್ಚು ನಿಮ್ಮ ಒಳಹರಟೆಯನ್ನು ನಿಮ್ಮನ್ನು ಹೆಚ್ಚು ಬೆಳೆಸುವುದಕ್ಕೆ ಬಿಟ್ಟಷ್ಟು, ಅಷ್ಟೇ ಹೆಚ್ಚು ಖಿನ್ನತೆಯಿಂದ ನೀವು ನರಳುತ್ತೀರ. ಕಡಿಮೆ ಖಿನ್ನತೆಯಿಂದ ಇರುವ ಜನ, ಒಂದೊಂದು ಸಾರಿ ಬಹಳ ಸ್ವಲ್ಪ ಗಾತ್ರದಲ್ಲಿ ಅನುಭವಿಸುತ್ತಾರೆ. ಆದರೆ ಹೆಚ್ಚು ಖಿನ್ನತೆಯಿಂದ ಇರುವವರು ಬಿರುಸಾದ ರೀತಿಯಲ್ಲಿ ಹೆಚ್ಚು ಕಾಲ ಅನುಭವಿಸುತ್ತಾರೆ. ಆದರೆ ಎರಡರಲ್ಲೂ ಈ ಪ್ರವಾಹ ಇದ್ದೇ ಇರುತ್ತದೆ.

ಆದ್ದರಿಂದ ಖಿನ್ನತೆ ಅಥವಾ ನಕಾರಾತ್ಮಕತೆ, ಇವೆರಡೂ ಬೇರೆನಲ್ಲ - ನೀವು ನಿಮ್ಮೊಳಗೆ ಮಾತನಾಡುವ, ಒಂದು ಸಕಾರಾತ್ಮಕ ಆಲೋಚನೆಗಳ ಸಂಗ್ರಹ, ಮತ್ತು ನಿಮ್ಮ ಮನಸ್ಸಿನೊಳಗೆ ಈ ಆಲೋಚನೆಗಳನ್ನು ಪ್ರವೇಶಿಸಲು ಬಿಟ್ಟರೆ, ಅದೇ ಆಲೋಚನೆಗಳು, ನಿಮಗೆ ಸಣ್ಣ ಸೋಲು ಸಂಭವಿಸಿದಾಗಲೂ ಮತ್ತೆ ಮತ್ತೆ ಬಂದು ಕಾಡುತ್ತದೆ. ಈ ಮನೋಭಾವವನ್ನು ಹೆಚ್ಚು ಬಲಪಡಿಸುತ್ತದೆ. ಎಷ್ಟಾದರೂ, ಚಿಂತಿಸುವುದು ಒಂದು ಬಲಪಡಿಸಿದ ಅಭ್ಯಾಸ.

ಆದರೆ ಇದು ಒಂದು ಕೇವಲ ಅಭ್ಯಾಸವಾಗಿದೆ. ಆದ್ದರಿಂದ ನೀವು ಇದನ್ನು ಬೇರೆಯ ಅಭ್ಯಾಸದ ತರಹ ಒದ್ದು ಬಿಡಬಹುದು. ಆದರೆ ಇದು ಕೇವಲ ಒಂದು ಅಭ್ಯಾಸವೆಂದು ನೀವು ತಿಳಿಯುವುದಿಲ್ಲ; ಅದೇನೋ ಒಂದು ಗಂಭೀರವಾದ ಘನವಾದ ನೈಜತೆಯೆಂದು ಭಾವಿಸುತ್ತೀರ. ಅದೇ ಸಮಸ್ಯೆ. ಆದ್ದರಿಂದ ನಿಮಗೆ ಅದನ್ನು ಒದ್ದು ಹಾಕಲು ಸಾಧ್ಯವಾಗುತ್ತಿಲ್ಲ.

ಮನಸ್ಸು ಒಂದು ಉತ್ತಮವಾದ ರೆಕಾರ್ಡಿಂಗ್ ಸಿಸ್ಟಮ್ (recording system). ಇದು ನಿಮ್ಮ ನಕಾರಾತ್ಮಕ ಆಲೋಚನೆಯ ಮಾದರಿಗಳನ್ನು, ನಿಮ್ಮ ಅರಿಮೆಗಳನ್ನು ಮತ್ತು ಚಿಂತೆಗಳನ್ನು ಶೇಖರಿಸುತ್ತದೆ. ನೀವು ಯಾವುದನ್ನಾದರೂ ಮನಸ್ಸಿಗೆ ಹೇಳಿಕೊಟ್ಟರೆ, ಅದು ಕಲಿತು ಮತ್ತು ನಿಷ್ಠೆಯಿಂದ ಪುನರುಚ್ಛರಿಸುತ್ತದೆ. ಇದೇ ರೀತಿ ನಿಮ್ಮ ನಕಾರಾತ್ಮಕತೆಗಳನ್ನು ಒಟ್ಟುಗೂಡಿಸಿ ಒಂದು ಘನವಾದ ಮಾನಸಿಕ

ಪರಿಸ್ಥಿತಿಯನ್ನೇ ಸೃಷ್ಟಿಸುತ್ತೀರ. ಆದ್ದರಿಂದ ನಿಮ್ಮ ಮನಸ್ಸಿಗೆ ಹೇಳುವುದರಲ್ಲಿ ಬಹಳ ಹುಷಾರಾಗಿರಿ. ನಾವು ಯಾವಾಗಲೂ ಬೇರೆಯವರ ಜೊತೆ ಮಾತನಾಡಬೇಕಾದರೆ ಬಹಳ ಎಚ್ಚರಿಕೆ ವಹಿಸುತ್ತೇವೆ, ಆದರೆ ನಮಗೆ ನಾವೇ ಮಾತನಾಡಬೇಕಾದರೆ ಹೆಚ್ಚು ಗಮನ ಕೊಡುವುದಿಲ್ಲ.

ಹೇಗೆ ಸತ್ತ್ವವಿಲ್ಲದ ಊಟದ ಅಭ್ಯಾಸಗಳು ನಿಮ್ಮ ರಕ್ತನಾಡಿಗಳಲ್ಲಿ ಕೊಲೆಸ್ಟ್ರಾಲ್ (cholesterol) ಉಂಟು ಮಾಡುತ್ತದೋ, ಅದೇ ರೀತಿಯಲ್ಲಿ ಸತತವಾಗಿ ಚಿಂತಿಸುವುದರಿಂದ ಚಿಂತೆಗಳು ನಮ್ಮ ಜೀವಾತ್ಮದಲ್ಲಿ ಗಟ್ಟಿಯಾಗುತ್ತದೆ. ಹೇಗೆ ಕೊಲೆಸ್ಟ್ರಾಲ್ ನಿಮ್ಮ ರಕ್ತನಾಡಿಗಳಲ್ಲಿ ತಡೆಯನ್ನು ಉಂಟುಮಾಡುವ ಹಾಗೆ, ಚಿಂತೆಯು ನಮ್ಮ ಜೀವಾತ್ಮದಲ್ಲಿ ತಡೆಯನ್ನು ಉಂಟುಮಾಡುತ್ತದೆ.

ಕಾಲಾಂತರದಲ್ಲಿ ಚಿಂತೆಯು ನಿಮ್ಮ ಸ್ವಭಾವದ ಒಂದು ಅಂಶವಾಗುತ್ತದೆ; ಅದು ಒಂದು ಅರಿವಿಲ್ಲದ ನಡತೆಯಾಗುತ್ತದೆ. ಅದಕ್ಕೆ ಕಾರಣವೇನೆಂದು ನಿಮಗೆ ತಿಳಿದಿದ್ದರೂ ಕೂಡ, ದುಃಖಿತ ಮಾನಸಿಕ ಸ್ಥಿತಿ ಹಾಗೆಯೇ ಉಳಿಯುತ್ತದೆ. ಏಕೆ? ಏಕೆಂದರೆ, ನಿಮ್ಮ ಎಲ್ಲಾ ಚಿಂತೆಗಳು, ನಿಮ್ಮ ಎಲ್ಲಾ ಕೋಪ, ನೀವು ನಿಮ್ಮೊಳಗೆ ವರ್ಷಾಂತರಗಳಿಂದ ಒತ್ತಿಟ್ಟಿದ್ದ ಕಾರಣ, ಮತ್ತು ಇವು ನಿಮ್ಮ ಜೀವಾತ್ಮದಲ್ಲಿ ಒಂದು ಪರೋಕ್ಷವಾದ ಪದರವಾಗಿ (invisible layer) ಹಾಗೇ ಉಳಿದಿದೆ. ಚಿಂತೆಯು ಆಗಾಗ ಮೇಲೆ ಏಳುವ ಅಲೆ, ಆದರೆ, ಖಿನ್ನತೆಯೇ (depression) ನೀರು.

ನಾವು ಹೇಗೆ ಖಿನ್ನತೆ ಅಥವಾ ನಕಾರಾತ್ಮಕತೆಯಿಂದ ಇನ್ನೂ ಮುಂದಕ್ಕೆ ಹೋಗುವುದು?

ಸುಮ್ಮನೆ ಅರಿವಿನಿಂದ ಚುರುಕುತನದಿಂದಿರಿ. ಒಂದು ನಕಾರಾತ್ಮಕ ಆಲೋಚನೆಯು ಮೇಲ್ಬರುವುದು ನಿಮಗೆ ತಿಳಿದಾದರೆ, ನಿಮ್ಮ ಕಣ್ಣು ಮುಂದೆ ಆ ನಕಾರಾತ್ಮಕ ಪದಗಳನ್ನು ಭಿದ್ರ ಮಾಡುವಂತೆ ಕಲ್ಪಿಸಿಕೊಳ್ಳಿ. ಅವುಗಳು ಹೊರಟುಹೋದ ಹಾಗೆ ಕಲ್ಪಿಸಿಕೊಳ್ಳಿ. ಹೀಗೆ ಮಾಡುತ್ತಲೇ ಇದ್ದರೆ, ಯಾವ ನಕಾರಾತ್ಮಕ ಮಾದರಿಗಳು ನಿಮ್ಮಲ್ಲಿ ನೆಲೆಗೊಳ್ಳಲು ನೀವು ಅವಕಾಶ ಮಾಡುವುದಿಲ್ಲ ಮತ್ತು ಸ್ವಲ್ಪ ಸಮಯದಲ್ಲಿ, ನಿಮ್ಮ ಮಾನಸಿಕ ಪರಿಸ್ಥಿತಿ ಬದಲಾಗುತ್ತದೆ. ಇನ್ನೂ ನಕಾರಾತ್ಮಕವಾಗಿ ಇರುವುದಿಲ್ಲ.

ನೀವು ಕೆಲ ನಿಮಿಷಗಳ ಕಾಲ ಒಳಹರಟೆಯಿಂದ ಇನ್ನೂ ಮುಂದಕ್ಕೆ ಹೋದರೆ, ನೀವು ಹೆಚ್ಚು ಅರಿತವರಾಗುತ್ತೀರ ಮತ್ತು ಹೆಚ್ಚು ಚುರುಕಾಗುತ್ತೀರ. ಚಿಂತೆಯು ಒಂದು ಮಾಯೆ ಮತ್ತು ಅನಾವಶ್ಯಕವಾದದ್ದು ಎಂದು ಅರ್ಥ ಮಾಡಿಕೊಳ್ಳಿ. ಅನಂತರ

ಮಣಿಪೂರಕ ಚಕ್ರದ ನಿಧಿಯು ಸ್ವಾಭಾವಿಕವಾಗಿ ತೆರೆಯುತ್ತದೆ.

ಸರಿ, ನೀವು ಏನಾದರೂ ಸ್ಪಷ್ಟಪಡಿಸಿಕೊಳ್ಳಬೇಕಾ?

ಸ್ವಾಮೀಜಿ, ಆಲೋಚನೆಗಳು ಮನಸ್ಸಿನ ಒಂದು ಭಾಗವೋ, ಅಥವಾ ಅವುಗಳು ಮನಸ್ಸಿನ ಭಾವನೆಗಳೋ?

ನಿಮ್ಮ ಮನಸ್ಸು ಮತ್ತು ನಿಮ್ಮ ಆಲೋಚನೆಗಳು, ಎರಡೂ ಒಂದೇ. ಮನಸ್ಸು ಮತ್ತು ಆಲೋಚನೆಗಳ ಮಧ್ಯೆ ಏನೂ ವ್ಯತ್ಯಾಸವಿಲ್ಲ, ಮನಸ್ಸೇ ಆಲೋಚನೆ ಮತ್ತು ಆಲೋಚನೆಯೇ ಮನಸ್ಸು, ಮನಸ್ಸು - ಅದೊಂದು ನಿಮ್ಮ ಆಲೋಚನೆಗಳ - ನಿರಂತರವಾಗಿ ಹರಿಯುವ ಮನೋಭಾವನೆಗಳ ಸಂಗ್ರಹ ಅಷ್ಟೇ. ಇದಕ್ಕಿಂತ ಹೆಚ್ಚಿನದೇನಲ್ಲ. ಮತ್ತು ಆಲೋಚನೆಗಳು ನೀವು ನಿಮ್ಮೊಳಗೆ ನಿರಂತರವಾಗಿ ಮಾತನಾಡುವ ಶಬ್ದಗಳಿಗಿಂತ ಹೆಚ್ಚೇನಲ್ಲ.

ನೀವು ಯಾವಾಗ ಚಿಂತಿಸುತ್ತೀರೋ, ಆಗ ಒಪ್ಪಿಗೆ ಮತ್ತು ಸ್ಪಷ್ಟತೆಯಿಂದ ನಿಮ್ಮನ್ನು ನೀವೇ ಆಳವಾಗಿ ಅದರಲ್ಲಿ ಪ್ರವೇಶಿಸಲು ಬಿಡಿ, ಅದರೊಳಗೆ ಪ್ರವೇಶಿಸಲು ಹೆದರಬೇಡಿ.

ಜ್ಞಾಪಕವಿರಲಿ: ಒಪ್ಪಿಗೆಯು ಬಲಹೀನತೆಯಲ್ಲ. ಒಪ್ಪಿಗೆಯು ಒಂದು ಅದ್ಭುತವಾದ ಧ್ಯಾನತಂತ್ರ. ಒಪ್ಪಿಗೆಯು ಒಂದು ಅದ್ಭುತವಾದ ಚೈತನ್ಯವನ್ನು ಹೊರತರುತ್ತದೆ, ನಿಮಗೆ ಒಂದು ಅದ್ಭುತವಾದ ಸ್ಪಷ್ಟತೆ ಮತ್ತು ಮುಕ್ತಿಯನ್ನು ಕೊಡುತ್ತದೆ.

ಯಾವಾಗ ನೀವು ನಿಮ್ಮ ಚಿಂತೆಗಳನ್ನು ಒಪ್ಪಿಕೊಳ್ಳುತ್ತೀರೋ, ಯಾವಾಗ ನೀವು ಅವುಗಳಲ್ಲಿ ಆಳವಾಗಿ ಪ್ರವೇಶಿಸುತ್ತೀರೋ, ಆಗ ನಿಮ್ಮ ಚಿಂತೆಗಳೆಲ್ಲಾ ನಿಮ್ಮ ಸ್ವಂತ ಸೃಷ್ಟಿ ಎಂಬುದನ್ನು ತಿಳಿದು ಒಂದು ಉತ್ತಮವಾದ ತಿಳಿಯುವಿಕೆಗೆ ಬರುತ್ತೀರ. ನಿಮ್ಮ ಮನಸ್ಸು ಹೇಗೆ ಆಟವಾಡುತ್ತದೆ ಮತ್ತು ನಿಮ್ಮಲ್ಲಿ ಹೇಗೆ ಉದ್ವೇಗ ಉಂಟುಮಾಡುತ್ತದೆ ಎಂಬುದನ್ನು ನೀವು ನೋಡಬಹುದು.

ನಾನು ನಿಮಗೆ ಹೇಳುವಾಗ, ನೀವು ನಿಮ್ಮ ಬುದ್ಧಿವಂತಿಕೆಯಿಂದ ಅರ್ಥ ಮಾಡಿಕೊಳ್ಳಬಹುದು. ಅದು ಯಾವಾಗ ನಿಮ್ಮ ಸ್ವಂತ ಅನುಭವಕ್ಕೆ ಬಂದಾಗ, ಮತ್ತು ಯಾವಾಗ ನಿಮಗೆ ಅದರ ಸ್ಪಷ್ಟತೆ ಇರುತ್ತದೋ ಆಗ ನೀವು ಚಿಂತೆಯಿಂದ ಇನ್ನೂ ಮುಂದಕ್ಕೆ ಹೋಗುತ್ತೀರ. ಆಮೇಲೆ ಖಿನ್ನತೆಯು ನಿಮ್ಮನ್ನು ಮುಟ್ಟಲು ಅಸಾಧ್ಯವಾಗುತ್ತದೆ. ನೀವು ಅತೀ ಕಷ್ಟದಿಂದ ದೂರ ಹೋಗುತ್ತೀರ.

ಒಂದು ಸಣ್ಣ ಕತೆ:

ನಾನು ಕಲ್ಕತ್ತಾದಲ್ಲಿ ಇದ್ದಾಗ, ಈಶಾವಾಸ್ಯ ಉಪನಿಷದ್‌ ವಿಷಯದಲ್ಲಿ ಪಾಠ ಮಾಡುತ್ತಿದ್ದೆ. ಆಗ ನನ್ನನ್ನು ನೋಡಲು ಒಬ್ಬ ಬಂದನು.

ಅವನು ಹೇಳಿದನು, “ಸ್ವಾಮೀಜಿ, ನನಗೆ ಒಂದು ತೊಂದರೆ ಇದೆ, ನಾನು ರಾತ್ರಿ ವೇಳೆ ಸರಿಯಾಗಿ ಮಲಗಿಕೊಳ್ಳುವುದಿಲ್ಲ. ಏಕೆಂದರೆ, ನಾನು ಹೇರಳವಾಗಿ ಬೀದಿನಾಯಿಗಳು ಇರುವ ಸ್ಥಳದಲ್ಲಿ ವಾಸ ಮಾಡುತ್ತೇನೆ. ಪ್ರತಿದಿನ ರಾತ್ರಿ ಅವುಗಳು ಬೊಗಳುವುದಕ್ಕೆ ಶುರು ಮಾಡಿದರೆ ಸೂರ್ಯೋದಯದ ತನಕ ಬೊಗಳುತ್ತಿರುತ್ತವೆ. ನಾನು ಮೊದಲೇ ಅಲ್ಪ ನಿದ್ರಿಸುವವ ಮತ್ತು ಈ ಕೂಗಾಟದಿಂದ ನನಗೆ ಸ್ವಲ್ಪವೂ ವಿಶ್ರಾಂತಿ ಸಿಗುತ್ತಾ ಇಲ್ಲ”.

ನಾನು ಅವನಿಗೆ ಹೇಳಿದೆ, “ಮನೆಗೆ ಹೋಗಿ ಇದನ್ನು ಮಾಡಿ ನೋಡು. ಏನೆಂದರೆ, ನೀನು ನಾಯಿ ಬೊಗಳುವುದನ್ನು ಕೇಳಿದಾಗ, ನಿನ್ನಲ್ಲಿ ಮೇಲೇಳುವ ನಕಾರಾತ್ಮಕ ಭಾವನೆಗಳಿಂದ ಉಂಟಾಗುವ ಕೋಪವನ್ನು ಸುಮ್ಮನೆ ಬಿಟ್ಟುಬಿಡು. ಬೊಗಳುವ ಶಬ್ದವನ್ನು ತಡೆಹಿಡಿಯದೆ ಹಾಗೆಯೇ ಕೇಳಿಸಿಕೋ. ನಾಯಿಗಳು ಬೊಗಳುತ್ತಿವೆ ಎಂದು ನಿನಗೆ ನೀನೇ ಹೇಳಿಕೋ, ಅಷ್ಟೆ. ಅದಕ್ಕೆ ಪ್ರತಿಕ್ರಿಯಿಸುವುದಕ್ಕೆ ನಿನ್ನನ್ನು ನೀನು ಬಿಡಬೇಡ. ತೊಂದರೆ ಏನೆಂದರೆ, ನಿನ್ನ ಪ್ರತಿರೋಧನೆ (resistance) ನಾಯಿಯ ಬೊಗಳುವಿಕೆ ಅಲ್ಲ.

ಆತ, ಮನೆಗೆ ಹಿಂದಿರುಗಿ ನಾನು ಹೇಳಿದ್ದನ್ನು ಮಾಡಿದ. ಸ್ವಲ್ಪ ದಿನಗಳು ಕಳೆದು ಮತ್ತೆ ನನ್ನ ಹತ್ತಿರ ಬಂದು ಹೇಳಿದ, “ಸ್ವಾಮೀಜಿ, ನೀವು ಹೇಳಿದಂತೆ ನಾನು ಪ್ರತಿರೋಧಿಸುವುದನ್ನು ಬಿಡುವುದಕ್ಕೆ ಪ್ರಯತ್ನಿಸಿದೆ. ಕ್ರಮೇಣ ನಾನು ನನ್ನ ಆಲೋಚನೆಗಳನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿದೆ. 'ನಾಯಿಗಳು ಬೊಗಳುತ್ತಿವೆ, ನನ್ನ ನಿದ್ದೆಯನ್ನು ಕೆಡಿಸುತ್ತಿದೆ...? 'ನಾಯಿಗಳು ಬೊಗಳುತ್ತಿವೆ...? 'ಯಾವುದೋ ಪ್ರಾಣಿಗಳು ಶಬ್ದಗಳನ್ನು ಉಂಟುಮಾಡುತ್ತಾ ಇದೆ' ಈ ವಾಕ್ಯಕ್ಕೆ ಬರುವಷ್ಟರಲ್ಲಿ ನನಗೆ ನಿದ್ರೆ ಬಂದುಬಿಟ್ಟಿತ್ತು ಎಂದು ಅನಿಸುತ್ತದೆ. ಹೇಗೋ, ಈಗ ನನಗೆ ಪ್ರತಿದಿನ ಅದ್ಭುತವಾದ ನಿದ್ರೆ ಬರುತ್ತಿದೆ. ವಂದನೆಗಳು ನಿಮಗೆ ಸ್ವಾಮೀಜಿ!”

ಇದು ನಿಮ್ಮಲ್ಲೂ ಆಗುವ ಸಾಧ್ಯತೆ ಇದೆ. ನಿಮಗೆ ನಿಮ್ಮ ನಕಾರಾತ್ಮಕತೆಯನ್ನು

ಬಿಡುವುದು ಹೇಗೆ ಎಂದು ಮತ್ತು ನಿಮ್ಮ ನಕಾರಾತ್ಮಕ ಪ್ರತಿಕ್ರಿಯೆಯನ್ನು ಬಿಡುವುದು ಹೇಗೆ ಎಂದು ತಿಳಿದಾದರೆ, ನೀವು ಯಾವ ಸನ್ನಿವೇಶವನ್ನಾದರೂ ನಿಭಾಯಿಸಲು ಸಾಧ್ಯವಾಗುತ್ತದೆ. ಇದೇ ಮಣಿಪೂರಕ ಚಕ್ರವನ್ನು ತೆರೆಯಲು ಕೀಲಿಕೈ.

ಆದರೆ ಮನಸ್ಸು ಒಳಹರಟೆಯ ಪರಿಚಿತ ಮಾದರಿಗಳಲ್ಲಿ ನೆಲೆಗೊಳ್ಳಲು ಅದೆಷ್ಟು ಕಾತರವಾಗಿರುತ್ತದೆ. ಚಿಂತೆಯ ಕೆಲಸ ಮಾಡುವಿಕೆಗೆ ಇದೇ ತಳಹದಿ. ಮನಸ್ಸು ಯಾವಾಗಲೂ ವಿಷಯಗಳನ್ನು ಅಚ್ಚು ಹೊಡೆಯಲು ನೋಡುತ್ತದೆ. ಅದಕ್ಕೆ ಸದಾಕಾಲವೂ ಹಿಂದಿನ, ಇಂದಿನ ಮತ್ತು ಮುಂದಿನ ವಿಷಯಗಳ ಹೋಲಿಕೆಯ ಅವಶ್ಯಕತೆ ಬೇಕು. ಮತ್ತು ಈ ಹೋಲಿಕೆ, ಈ ಆಧಾರ, ಮತ್ತು ಈ ತೀರ್ಮಾನ ಚಿಂತೆಗೆ ಜನ್ಮನೀಡುತ್ತದೆ.

ನಮ್ಮ ಮನಸ್ಸಿಗೆ ಚಿಂತೆಗಳು, ಚಿರಪರಿಚಿತರಾಗಿ ನೆಲೆಗೊಂಡ ಮಾದರಿಗಳು, ಬೇರೇನಲ್ಲ. ಮಾನವನ ಮನೋವಿಜ್ಞಾನದಲ್ಲಿ ಈ ಚಿರಪರಿಚಿತ ಮಾದರಿಗಳನ್ನು ಸಂಸ್ಕಾರ (engrams) ಎಂದು ಕರೆಯುತ್ತಾರೆ. ಸಂಸ್ಕಾರ ಎಂದರೆ, ಮನಸ್ಸಿನಲ್ಲಿ ನಾಟಿಕೊಂಡಿರುವ ಹಿಂದಿನ ನೆನಪುಗಳು, ಎಲ್ಲಾ ನಮ್ಮ ನಡತೆಗಳಿಗೆ ಈ ನೆಲೆಗೊಂಡ ಸಂಸ್ಕಾರಗಳಿಂದ, ನಾವು ಇಂದಿನ ಕಾಲದಲ್ಲಿ ತರ್ಕವಿರುದ್ಧವಾಗಿ ಪ್ರತಿಕ್ರಿಯೆ ತೋರಿಸುತ್ತೇವೆ.

ಏಕೆ ನಾವು ಪ್ರತಿಯೊಂದು ಕ್ಷಣವನ್ನು ಅದು ಇರುವ ಹಾಗೆಯೇ ತೆಗೆದುಕೊಳ್ಳಬಾರದು? ಏಕೆ ನಾವು ಈ ಕ್ಷಣವನ್ನು ಭೂತಕಾಲ ಮತ್ತು ಭವಿಷ್ಯಕ್ಕೆ ಸೇರಿಸಿ ತೀರ್ಮಾನಿಸುತ್ತೇವೆ? ಏಕೆ ನಮ್ಮ ಮನಸ್ಸು ಅದು ನೋಡುವುದರಲ್ಲೆಲ್ಲಾ ಏಕರೂಪತೆ ಕಾಣಲು ಎದುರು ನೋಡುತ್ತದೆ? ಮತ್ತು ಅದಕ್ಕೆ ನೋಡಲು ಅಸಾಧ್ಯವಾದಾಗ, ಏಕೆ ಅದು ಜೀರ್ಣಿಸಿಕೊಳ್ಳಲು ಕಷ್ಟಪಡುತ್ತದೆ? ಇದು ಏಕೆಂದರೆ, ನೀವು ಯಾವಾಗಲೂ ನಿಮ್ಮ ಮಾನಸಿಕ ಸ್ಥಿತಿ ಮತ್ತು ನಿಮ್ಮೊಳಗೆ ಶೇಖರಣೆ ಆಗಿರುವ ಸಂಸ್ಕಾರಗಳು, ಇವುಗಳ ಸಹಾಯದಿಂದ ನಿಮ್ಮ ವಿಷಯಗಳನ್ನು ಅಳವಡಿಸಲು ನೋಡುತ್ತೀರ; ಮತ್ತು ಯಾವಾಗ ನಿಮಗೆ ಆಗುವುದಿಲ್ಲವೋ, ಆಗ ನೀವು ಚಿಂತೆಯುಳ್ಳವರಾಗುತ್ತೀರ.

ನೀವು ಯಾವಾಗಲಾದರೂ ನಾನು ಚಿಂತಿಸುತ್ತಿರುವುದನ್ನು ನೋಡಿದ್ದೀರ? ಎಷ್ಟು ಜನ ನನ್ನನ್ನು - ನೀವು ಹೇಗೆ ಇಷ್ಟು ಸಂತೋಷವಾಗಿ ಮತ್ತು ಎಲ್ಲಾ ಸಮಯದಲ್ಲೂ ಮನಸ್ಸಿನಿಂದ ತಲ್ಲಣಗೊಳ್ಳದೆ ಇದ್ದೀರಾ ಎಂದು ಕೇಳಿದ್ದಾರೆ. ನಾನು ನಿಮಗೆ

ಹೇಳುವುದೇನೆಂದರೆ: ಕಾರಣವೇನೆಂದರೆ, ನಾನು ಈ ಕ್ಷಣದಲ್ಲಿ ಜೀವಿಸುತ್ತಿರುತ್ತೇನೆ. ಅಷ್ಟೆ. ನನ್ನ ಮನಸ್ಸಿನಲ್ಲಿ ಹಿಂದೆ ಆದದ್ದನ್ನು ಆಧಾರವಾಗಿ ಎತ್ತಿಕೊಂಡು ಹೋಗುವುದಿಲ್ಲ. ಈ ತರಹ ಆಧಾರಗಳಿಂದ ನನ್ನ ಮನಸ್ಸಿಗೆ ಭಾರ ಹೇರುವುದಿಲ್ಲ. ನಾನು ಸ್ವಯಂಪ್ರೇರಿತವಾಗಿ ಪ್ರವೃತ್ತಿಸುತ್ತೇನೆ, ಮಾದರಿಗಳಿಂದಲ್ಲ.

ನಾನು ಒಂದು ಹರಿಯುವ ನದಿಯ ತರಹ, ಬಹಳಷ್ಟು ಜನ ನನ್ನ ಜೊತೆ ಬಂದವರಲ್ಲಿ. ಹಿಮಾಲಯದಲ್ಲಿ ಗಂಗಾನದಿಯು ಹರಿಯುವುದನ್ನು ನೀವು ನೋಡಿರಬಹುದು. ಅದು ಎಷ್ಟು ಸುಂದರವಾಗಿದೆ. ಒಂದೊಂದು ಸ್ಥಳದಲ್ಲಿ ಬಹಳ ಪ್ರಶಾಂತವಾಗಿ ಗೋಚರಿಸುತ್ತದೆ, ಬೇರೆ ಸ್ಥಳಗಳಲ್ಲಿ ಬಹಳ ರಭಸದಿಂದ ಹರಿಯುತ್ತದೆ. ಒಂದೊಂದು ಸಾರಿ ಸ್ಪಟಿಕದಂತೆ ಸ್ವಚ್ಛವಾಗಿರುತ್ತದೆ. ಮತ್ತೊಂದು ಸಾರಿ ನೋಡಿದರೆ ಮಂಕಾಗಿ ಹರಿಯುತ್ತದೆ.

ಒಬ್ಬ ವ್ಯಕ್ತಿಯು ಎಲ್ಲಿ ಅದನ್ನು ಸಂಧಿಸುತ್ತಾನೋ ಅದೇ ಅವನಿಗೆ ಅದರಿಂದ ಸಿಗುವ ಅನುಭವವಾಗುತ್ತದೆ.

ಇಬ್ಬರು ವ್ಯಕ್ತಿಗಳು ಯಾರು ಇದನ್ನು ಸಂಧಿಸಿರುತ್ತಾರೋ, ಅವರವರ ಟಿಪ್ಪಣಿಗಳನ್ನು ಹೋಲಿಸಿ, ದೂರು ಹೇಳಲು ಸಾಧ್ಯವೇ? ಅದೆಷ್ಟು ಮೂರ್ಖತನವಾದೀತು! ನದಿಯು ಸುಮ್ಮನೆ ಅದರ ಅಸ್ತಿತ್ವದ ಸಂಗೀತಕ್ಕೆ ಹರಿಯುತ್ತಾ ಇರುತ್ತದೆ. ಅಷ್ಟೆ! ಅದಕ್ಕೆ ಯಾವ ಯೋಜನೆ ಇರುವುದಿಲ್ಲ. ನಾನು ಗಂಗಾ ನದಿಯ ತರಹ, ಯಾವ ಒಂದು ಯೋಜನೆ ಇಲ್ಲದೆ, ಒಂದು ಚಿಂತೆಯಿಲ್ಲದೆ, ಸ್ವಯಂಸ್ಫೂರ್ತವಾಗಿ ನಾನು ಹರಿಯುತ್ತೇನೆ. ಅಸ್ತಿತ್ವವು ಒಂದು ಉತ್ತಮ ಯೋಜನಾಕಾರ.

ನನ್ನ ಸ್ವಯಂಸ್ಫೂರ್ತಿತನದಿಂದಾಗಿ (spontaneity) ಜನರು ನನ್ನ ಬಗ್ಗೆ ತೀರ್ಮಾನ ನೀಡುತ್ತಾರೆ. ನಾನು ಒಂದೇ ಸಮನಾಗಿ ಇರುವುದಿಲ್ಲ ಎಂದು ಹೇಳುತ್ತಾರೆ. ಇಲ್ಲಿ ನೀವು ಎಷ್ಟು ಜನರು ನನ್ನ ಮತ್ತು ನಡವಳಿಕೆಯು ಸಾಮರಸ್ಯವಿಲ್ಲದ್ದು ಎಂದು ದೂರು ಹೇಳಿದ್ದೀರ? ಎಲ್ಲಿ ಬನ್ನಿ, ಕೈಗಳನ್ನು ಮೇಲೆತ್ತಿ!

(ಬಹಳ ಹೊತ್ತಿನ ಮೇಲೆ ಸ್ವಲ್ಪ ಜನ ಧೈರ್ಯವಾಗಿ ಮುಂದೆ ಬಂದರು) ನೋಡಿ! ನಿಮ್ಮೆಲ್ಲರಿಗೂ, ಯಾವುದಾದರೂ ಒಂದು ಸಂದರ್ಭದಲ್ಲಿ ಈ ಆಲೋಚನೆಯು ಬಂದೇ ಇರುವುದೆಂದು ಖಚಿತವಾಗಿ ಹೇಳುತ್ತೇನೆ. ಆದರೆ ಈ ಸ್ವಲ್ಪ ಜನರಿಗೆ ಮಾತ್ರ ಅವರ ಕೈ ಮೇಲೆತ್ತಲು ಧೈರ್ಯ ಇತ್ತು.

ನೀವು ಗಂಗಾನದಿಯನ್ನು ಸಾಮರಸ್ಯವಿಲ್ಲದ್ದು ಎಂದು ಹೇಳಲು ಸಾಧ್ಯವೇ? ಗಂಗಾನದಿಯನ್ನು ಇನ್ನೂ ಹೆಚ್ಚು ಕ್ರಮಬದ್ಧವಾಗಿ ಹರಿಯಬೇಕು ಎಂದು ಹೇಳಲು ಸಾಧ್ಯವೇ? ಇಲ್ಲ! ನದಿಯು ಹರಿಯುವ ರೀತಿಯೆ ಹಾಗೆ, ಅಷ್ಟೆ! ನೀವು ನಿಮ್ಮ ಅಭಿಪ್ರಾಯವನ್ನು ತೀರ್ಮಾನಿಸಿ ಹೇಳಲು ಆಗುವುದಿಲ್ಲ. ನಾನೂ ಇದೇ ತರಹ, ಒಂದು ನದಿಯ ಹಾಗೆ ಹರಿಯುತ್ತೇನೆ ಮತ್ತು ನಾನು ಸಾಮರಸ್ಯದಿಂದಿಲ್ಲವೆಂದು ನೀವು ಕರೆಯಲು ಸಾಧ್ಯವಿಲ್ಲ. ನಾನು ಕ್ಷಣದಿಂದ ಕ್ಷಣಕ್ಕೆ ವಾಸಮಾಡುತ್ತೇನೆ. ಆದರೆ ನೀವು ಹೆಚ್ಚಾಗಿ ಒಳಒಳಗೆ ಜೋಡಿಸಿರುವ ಮತ್ತು ಗೊಂದಲದಲ್ಲಿ ಸಿಕ್ಕಿಬಿದ್ದ ಕ್ಷಣಗಳು ಇವೆಲ್ಲದರ ಜೊತೆ ವಾಸ ಮಾಡುತ್ತೀರ. ಆದರೆ ಫಲಿತಾಂಶ ಏನು? ನೀವು ಭಾರವಾಗಿ ಮತ್ತು ಚಿಂತೆಯುಳ್ಳವರಾಗುತ್ತೀರ.

ಯಾವಾಗ ನಿಮ್ಮೊಂದಿಗೆ ಅಷ್ಟೊಂದು ಕ್ಷಣಗಳು ನಿಮ್ಮ ಮೇಲೆ ತೂಗುತ್ತಿದೆಯೋ ನಿಮಗೆ ನಿಜವಾಗಿಯೂ ಭಾರ ಎಂದು ಅನಿಸುವುದಿಲ್ಲವೇ? ಇದೇ ರೀತಿಯಲ್ಲಿ ಯಾವಾಗ ಒಂದು ಕ್ಷಣ ನಿಮ್ಮ ಮೇಲೆ ಇರುವಾಗ, ನಿಮಗೆ ಹಗುರ ಎಂದೆನಿಸುವುದಿಲ್ಲವೇ? ನಿಮ್ಮ ಎಲ್ಲಾ ಚಿಂತೆಗಳಿಗೆ ಕಾರಣವೇನೆಂದರೆ, ನಿಮ್ಮ ಇಂದಿನ ಮತ್ತು ಮುಂದಿನ ಜೀವನವನ್ನು ಹಿಂದಿನ ಮಾದರಿಗಳ ಜೊತೆ ಜೋಡಿಸುತ್ತೀರ. ಈ ಎಲ್ಲಾ ಪ್ರತಿಕ್ರಿಯೆಯಲ್ಲಿ ನಿಮಗೆ ಈಗ ನಡೆಯುತ್ತಿರುವುದನ್ನು ಕಳೆದುಕೊಳ್ಳುತ್ತಿದ್ದೀರ. ನೀವು ನಿರಂತರವಾಗಿ, ನೀವು ಹಿಂದಿನ ಮತ್ತು ಮುಂದಿನದನ್ನು ಯೋಚಿಸುವುದರ ಸಲುವಾಗಿ ವರ್ತಮಾನವನ್ನು ಇಂದು ಕಳೆದುಕೊಳ್ಳುತ್ತಿದ್ದೀರ. ಕೊನೆಗೆ ಕೇವಲ ಭವಿಷ್ಯ ಮತ್ತು ಭೂತಕಾಲ ಉಳಿಯುತ್ತದೆ, ವರ್ತಮಾನ ಇರುವುದೇ ಇಲ್ಲ.

ಚಿಂತೆಗಳ ಪ್ರವಾಹವನ್ನುಂಟುಮಾಡುವ ಈ ಮಾದರಿಗಳು ನಮ್ಮ ಮನಸ್ಸಿನ ಜೀವಕ್ಕೆ ಒಂದು ಆಧಾರದಂತೆ ಆಗಿಬಿಟ್ಟಿವೆ.

ಒಂದು ಸಣ್ಣ ಕತೆ:

ಇಬ್ಬರು ಸ್ನೇಹಿತರು, ಹೊಸದಾಗಿ ಹೊರಬಂದ ಸಿನಿಮಾ ನೋಡಲು ಒಂದು ಸಿನಿಮಾ ಥಿಯೇಟರ್‌ಗೆ ಹೋದರು. ಅವರಲ್ಲೊಬ್ಬನು ಆಗಾಗ ಅವನ ಗಡಿಯಾರವನ್ನು ನೋಡಿಕೊಳ್ಳುತ್ತಿದ್ದುದನ್ನು ಇನ್ನೊಬ್ಬ ಗಮನಿಸಿದನು. ಕಡೆಗೆ ಅವನು ಹೀಗೆ ಪಿಸುಗುಟ್ಟಿದನು, “ನೀನು ಸಿನಿಮಾ ನೋಡಿ ಸಂತೋಷಪಡುತ್ತಿಲ್ವಾ?”

ಅವನ ಗೆಳೆಯ ಉತ್ತರಿಸಿದನು, “ಪಡುತ್ತಿದ್ದೇನೆ. ಆದರೆ ನಾನು, ಇನ್ನೂ ಎಷ್ಟು ಹೆಚ್ಚು ಕಾಲ ಉಳಿದಿದೆ ಸಂತೋಷಪಡುವುದಕ್ಕೆ” ಎಂದು ಯೋಚಿಸುತ್ತಿದ್ದೆ.

ಖಚಿತ ಪರಿಹಾರಗಳು

ನಿಜವಾಗಿಯೂ, ನಮ್ಮಲ್ಲಿ ಬಹಳಷ್ಟು ಜನರು ಹೀಗಿದ್ದಾರೆ. ನಾವು ಎಷ್ಟರಮಟ್ಟಿಗೆ ಚಿಂತಿಸುವುದರಲ್ಲಿ ಪಳಗಿದ್ದೇವೆ ಎಂದರೆ, ಚಿಂತಿಸುವುದಕ್ಕೆ ಏನೂ ಇಲ್ಲದಿರುವುದರ ಮೇಲೆ ಚಿಂತೆ ಮತ್ತು ನಾವು ಈ ಚಿಂತರಹಿತ ಸ್ಥಿತಿಯು ಇನ್ನೂ ಎಷ್ಟು ಹೊತ್ತು ಹೀಗೇ ಇರುತ್ತದೋ ಎನ್ನುವುದರ ಬಗ್ಗೆ ಚಿಂತಿಸುತ್ತೇವೆ! ಯಾವಾಗ ನಾನು ನಮ್ಮಲ್ಲಿ ಆಸ್ವಾದಿಸುತ್ತಿರುವಾಗ, ನಾವು ಇನ್ನೂ ಆಸ್ವಾದಿಸಲು ಎಷ್ಟು ಸಮಯ ಉಳಿದಿದೆ ಎಂಬ ಆಲೋಚನೆಯಿಂದ ಆಸ್ವಾದಿಸುತ್ತೇವೆ. ಮತ್ತೆ ನಾವು ಆಸ್ವಾದಿಸುವುದು ತಾನೆ ಹೇಗೆ? ಯಾವಾಗ ನೀವು ಸತತವಾಗಿ ಈ ತರಹ ಆಲೋಚಿಸುತ್ತಿದ್ದರೆ, ಯಾವಾಗಲೂ ನೀವು ನಿಮ್ಮನ್ನು ಭವಿಷ್ಯತ್ ಕಾಲದಲ್ಲೇ ಇಟ್ಟುಕೊಂಡಿರುತ್ತೀರ. ಯಾವಾಗ ನೀವು, ಮುಂದೆ ನಡೆಯುವ ಯಾವುದಾದರೊಂದು ಸಂತೋಷದ ಸಂದರ್ಭವನ್ನು ಮನಸ್ಸಿನಲ್ಲಿ ಇಡಲು ಪ್ರಯತ್ನಿಸಿದರೆ, ಆ ಕ್ಷಣದ ಸುಖವನ್ನು ಕಳೆದುಕೊಳ್ಳುತ್ತೀರ!

ನಾನು ಹೇಳಲು ಪ್ರಯತ್ನಿಸುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?

ನೀವು ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ಆಳವಾಗಿ ವಿಶ್ಲೇಷಣೆ ಮಾಡಿದರೆ, ನಾನು ಹೇಳುತ್ತಿರುವುದೆೇನೆಂದು ನೀವು ಗಮನಿಸಬಹುದು.

ಯಾವಾಗ ಪ್ರತಿಯೊಬ್ಬರೂ ಚಿಂತೆಗಳಿಗೆ ಆಶ್ರಯ ಕೊಟ್ಟಾಗ, ಅವರು ಮುಖ್ಯಸ್ಥರೆಂದು ಮತ್ತು ಉತ್ಪಾದಕರೆಂದು ತಿಳಿಯುತ್ತಾರೆ. ವಾಸ್ತವವಾಗಿ, ಚಿಂತೆಗಳು ಜಾಸ್ತಿಯಾದಷ್ಟೂ, ಒಬ್ಬ ವ್ಯಕ್ತಿಯು ತನ್ನ ಬಗ್ಗೆ ಹಿತವಾದ ಭಾವನೆ ಹೊಂದುತ್ತಾನೆ, ಏಕೆಂದರೆ, ಇಷ್ಟೊಂದು ಚಿಂತೆಗಳನ್ನು ನಿಭಾಯಿಸುವುದರ ಬಗ್ಗೆ ಅವನ ಅಹಂಭಾವವು ಹಿತವಾದ ಭಾವ ಹೊಂದುತ್ತದೆ. ಆದ್ದರಿಂದಲೇ, ಬಹಳಷ್ಟು ಸಮಯ ನೀವು ನಿಮ್ಮ ಚಿಂತೆಗಳನ್ನು ಕುರಿತು ಇನ್ನೊಬ್ಬರ ಜೊತೆ ಮಾತನಾಡಿದಾಗ, ಅವರು "ಆಹ್! ಇದು ಏನೇನೂ ಇಲ್ಲ, ನನ್ನ ಸಮಸ್ಯೆಗಳನ್ನು ಕೇಳು; ಆಗ ನಿನಗೆ ಚಿಂತೆ ಏನೆಂಬುದು ತಿಳಿಯುತ್ತದೆ" - ಹೀಗೆ ಹೇಳುವುದನ್ನು ನೀವು ಕಾಣಬಹುದು.

ಇದಕ್ಕೆ ಕಾರಣ, ಜನರು ದೊಡ್ಡ ದೊಡ್ಡ ಚಿಂತೆಗಳನ್ನು ಹೊರುವುದರಿಂದ ತಾವು ಶ್ರೇಷ್ಠರೆಂದು ಭಾವಿಸುತ್ತಾರೆ.

ಸದಾಕಾಲವೂ ಚಿಂತೆಗಳ ಬಗ್ಗೆ ಆಲೋಚಿಸಿದರೆ, ಏನು ಆಗುತ್ತದೆ? ಏನೂ ಇಲ್ಲ, ನಿಮ್ಮ ಹತ್ತು ಚಿಂತೆಗಳ ಜೊತೆ, ಖಿನ್ನತೆ (depression) ಎಂಬ ಹನ್ನೊಂದನೆಯ ಚಿಂತೆ ಉಂಟಾಗುತ್ತದೆ, ಅಷ್ಟೆ.

ನಾವು ಕೆಲಸ ಮಾಡಬೇಕಾದರೆ ಚಿಂತಿಸುತ್ತೇವೆ. ಸ್ಪಷ್ಟವಾಗಿರಿ; ಯಾವಾಗ ನಿಮಗೆ ಚಿಂತೆ ಇರುತ್ತದೋ ಆಗ ಕೆಲಸ ಮಾಡಲು ಆಗುವುದಿಲ್ಲ ಮತ್ತು ಯಾವಾಗ ನೀವು ನಿಜವಾಗಿಯೂ ಕೆಲಸ ಮಾಡುತ್ತಿರುತ್ತೀರೋ, ಆಗ ಚಿಂತಿಸಲು ಆಗುವುದಿಲ್ಲ. ಎಲ್ಲಿ ಚಿಂತೆ ಇರುತ್ತದೋ ಅಲ್ಲಿ ಸೃಜನಾತ್ಮಕತೆ (creativity) ಇರಲು ಸಾಧ್ಯವಿಲ್ಲ ಮತ್ತು ಎಲ್ಲಿ ಸೃಜನಾತ್ಮಕತೆ ಇರುತ್ತದೋ ಅಲ್ಲಿ ಚಿಂತೆ ಇರುವುದಿಲ್ಲ. ಯಾವುದಾದರೊಂದು ನಿರ್ದಿಷ್ಟಕಾಲದಲ್ಲಿ ಚಿಂತೆ ಅಥವಾ ಸೃಜನಾತ್ಮಕತೆ, ಈ ಎರಡರಲ್ಲಿ ಒಂದು ಮಾತ್ರ ಇರಲು ಸಾಧ್ಯ. ಎರಡೂ ಇರಲು ಸಾಧ್ಯವಿಲ್ಲ. ಸೃಜನಾತ್ಮಕತೆಯು ನಿಜವಾದ ಆರಾಧನೆ. ನೀವು ಸೃಷ್ಟಿಸುವಾಗ, ದೇವರ ಸಮೀಪದಲ್ಲಿರುತ್ತೀರ. ಸೃಜನಾತ್ಮಕತೆಯು ಹೃದಯದಿಂದ ಬರುವಂತಹುದು. ಚಿಂತೆಯು ಮನಸ್ಸಿನಿಂದ ಬರುವಂತಹುದು.

ನೀವು ಭೂತಕಾಲದ ಹಿಂದೆ ಹೋಗುವುದು, ಅಥವಾ ಮುಂದೆ ಆಗುವುದರ ಬಗ್ಗೆ ಆಲೋಚಿಸುವುದರಲ್ಲಿ ನೀವು ವರ್ತಮಾನವನ್ನು ಕಳೆದುಕೊಳ್ಳುತ್ತೀರ. ಭೂತಕಾಲವನ್ನು ಬಿಟ್ಟು ಮತ್ತು ವರ್ತಮಾನದಲ್ಲಿ ಇರುವುದೇ ಆಧ್ಯಾತ್ಮಿಕತೆ. ಈಗ ನೀವು ಹಿಂದಿನದೆಲ್ಲ ಬೇಕಾದಷ್ಟು ಸಂಗ್ರಹಿಸುತ್ತಿದ್ದೀರ. ನಿಮ್ಮ ಹೊರೆ ದಿನೇ ದಿನೇ ಭಾರವಾಗುತ್ತ ಬರುತ್ತಿದೆ. ಇದರಿಂದಾಗಿ ಅಲುಗಾಡಲಾಗುವುದಿಲ್ಲ.

ನಿಮಗೆ ಭೂತಕಾಲದ ಹೊರೆಯನ್ನು ಇಳಿಸಿಕೊಳ್ಳಲು ಗೊತ್ತಿಲ್ಲ; ನಿಮಗೆ ಹೇಗೆ ಅದನ್ನು ನಿಮ್ಮೊಂದಿಗೆ ಕೊಂಡೊಯ್ಯುವುದೊಂದೇ ಗೊತ್ತಿದೆ. ನೀವು ಅದನ್ನು ನೀವೇ ಕೊಂಡೊಯ್ಯಬೇಕೆಂದು ಭಾವಿಸುತ್ತೀರ. ಸಮಾಜವು ನಿಮಗೆ, ಅದನ್ನು ನಿಮ್ಮೊಂದಿಗೇ ಕೊಂಡೊಯ್ಯಬೇಕೆಂದು ಹೇಳಿಕೊಟ್ಟಿದೆ. ನೀವು ಅದನ್ನು ಬಿಡುವುದಕ್ಕೆ ಪ್ರಯತ್ನಿಸಿದರೆ ಏನೋ ತಪ್ಪು ಮಾಡಿರುವ ಭಾವನೆ ಬರುವ ಹಾಗೆ ಹೇಳಿಕೊಟ್ಟಿದೆ.

ಸಮಾಜವು, ನೀವು ಭೂತಕಾಲವನ್ನು ಬಿಟ್ಟುಬಿಟ್ಟರೆ, ನೀನೊಬ್ಬ ಕೃತಘ್ನ ಎಂದು ಹೇಳುತ್ತದೆ. ನಾನು ಹೇಳುತ್ತೇನೆ; ಅದು ಮೂರ್ಖತನ. ಖಂಡಿತ ನೀವು ಹಿಂದೆ ಆಗಿರುವುದನ್ನು ನಿಮ್ಮೊಂದಿಗೆ ಕೊಂಡೊಯ್ಯುವ ಆವಶ್ಯಕತೆಯೇ ಇಲ್ಲ. ಯಾರು ಈ ವಿಚಾರಗಳನ್ನು ಹೇಳುತ್ತಾರೋ ಅವರಿಗೆ ಕೃತಜ್ಞತೆಯು ವಿಶ್ವಶಕ್ತಿಯ ಬಗ್ಗೆ ಮತ್ತು ಪ್ರತಿಯೊಬ್ಬರ ಬಗ್ಗೆಯೂ ನೋವು ನಿಮ್ಮಲ್ಲಿ ನಿರಂತರವಾಗಿ ಅನುಭವಿಸುವಂತಹುದು, ಮತ್ತು ಯಾವುದೋ ಕೆಲವು ಘಟನೆಗಳ ಬಗ್ಗೆ ಮಾತ್ರವಲ್ಲ.

ಯಾವಾಗ ನೀವು ಭೂತಕಾಲವನ್ನು ಬಿಡುತ್ತೀರೋ, ಆಗ ವರ್ತಮಾನವು ಅನಿರೀಕ್ಷಿತವಾಗಿ ನಿಮ್ಮನ್ನು ಕೊಂಡೊಯ್ಯುತ್ತದೆ. ಸಮಾಜವು ಯಾವಾಗಲೂ

ವರ್ತಮಾನವನ್ನು ಭೂತಕಾಲದ ಹಾಗೆ ಆಸ್ವಾದಿಸಲು ನಿಮಗೆ ಹೇಳಿಕೊಡುತ್ತದೆ, ಆದರೆ ಮಾತ್ರ ವರ್ತಮಾನದಲ್ಲಲ್ಲ. ಅದು ನಿಮಗೆ ಎಲ್ಲವನ್ನೂ ಭೂತಕಾಲವನ್ನಾಗಿಸಿ ಆಮೇಲೆ ಆಸ್ವಾದಿಸಿ ಹೇಳಿಕೊಡುತ್ತೆ.

ರಜಾದಿನಗಳಲ್ಲಿ ಜನರು ಹೊರಗೆ ಹೋಗುವುದನ್ನು ನಾನು ನೋಡಿದ್ದೇನೆ. ಅವರುಗಳು ಯಾವಾಗಲೂ ಅವರ ವೀಡಿಯೋ ಕ್ಯಾಮರಾ ಮತ್ತು ಸ್ಟಿಲ್ ಕ್ಯಾಮರಾಗಳೊಡನೆ ಇರುತ್ತಾರೆ. ಪ್ರಕೃತಿ ಸೌಂದರ್ಯ ಚೆನ್ನಾಗಿ ಇರುವ ಎಷ್ಟೋ ಸ್ಥಳಗಳಲ್ಲಿ ಅವರ ಸುತ್ತಲೂ ಇರುವ ಪ್ರಕೃತಿಯನ್ನು ಆಸ್ವಾದಿಸುವ ಬದಲು ಅವರ ಕ್ಯಾಮರಾಗಳಲ್ಲಿ ಅಲ್ಲಿ ಕಾಣುವ ದೃಶ್ಯವನ್ನೆಲ್ಲ ಸೆರೆಹಿಡಿಯುವುದರಲ್ಲಿ ತಲ್ಲೀನರಾಗಿರುತ್ತಾರೆ.

ಆಮೇಲೆ ಅವರು ಮನೆಗೆ ವಾಪಸ್ಸು ಹೋಗಿ, ಚಿತ್ರಗಳನ್ನು ಸೆರೆಹಿಡಿದದ್ದನ್ನೆಲ್ಲ ತೊಳೆದು, ನಾಲ್ಕು ಗೋಡೆಯ ಮಧ್ಯೆ ಅವರ ಸೋಫಾ ಮೇಲೆ ಕುಳಿತು, ಮತ್ತೆ ಅದೇ ದೃಶ್ಯಗಳನ್ನು ವೀಡಿಯೋ ಕ್ಯಾಸೆಟ್ ಮತ್ತು ಭಾವಚಿತ್ರಗಳ ಮೂಲಕ ನೋಡಿ ಆಸ್ವಾದಿಸುತ್ತಾರೆ. ಅವರು ಸುಮ್ಮನೆ ಕಳೆದುಕೊಂಡಿದ್ದಾರೆ ಅಷ್ಟೆ, ಮತ್ತು ಎಲ್ಲಾ ಭಾವಚಿತ್ರಗಳನ್ನು ಅವರ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ತೋರಿಸಿ, ಇದೆಲ್ಲಾ ಅವರು ಹೋಗಿ ನೋಡಿಕೊಂಡು ಬಂದ ಸ್ಥಳಗಳು ಎಂದು ಹೇಳುತ್ತಾರೆ. ಆದರೆ ಅವರು ಆ ಸ್ಥಳಗಳಿಗೆ ಹೋಗಿ ಅಲ್ಲೇ ಇದ್ದಾಗ ಆಸ್ವಾದಿಸಲಿಲ್ಲ! ಅವರು ನಿಜವಾಗಿಯೂ ಬಹಳ ಕಳೆದುಕೊಂಡಿದ್ದಾರೆ.

ನೀವು ಸದಾಕಾಲವೂ ವರ್ತಮಾನವನ್ನು ಭೂತಕಾಲವನ್ನಾಗಿ ಮಾಡಿ ಆಸ್ವಾದಿಸುತ್ತೀರ. ಆದ್ದರಿಂದ ಜನರು ಹೀಗೆ ಹೇಳುವುದುಂಟು, “ನಮ್ಮ ಆ ಕಾಲ ಚಿನ್ನದಂತಹ ಕಾಲ''. ವಾಸ್ತವವಾಗಿ ಯಾವಾಗ ಆ ದಿನಗಳು ಹಾಗಿದ್ದಲ್ಲಿ, ನೀವು ಖಂಡಿತ ಆ ದಿನಗಳು ಚಿನ್ನದಂತೆ ಎಂದು ಆಲೋಚಿಸಿರುವುದಿಲ್ಲ. ಆ ಕಾಲದಲ್ಲಿ ನೀವು ಅದೇ ತರಹ ಅದರ ಹಿಂದಿನ ದಿನಗಳನ್ನು ಚಿನ್ನದಂತ ದಿನಗಳು ಎಂದು ಹೇಳುವುದು ಅಷ್ಟೆ! ಇದೇ ತರಹ ನೀವು ನಿಮ್ಮ ಚಿಂತೆಗಳಿಂದ ವಂಚಿತರಾಗುತ್ತೀರ.

ನೀವು ವರ್ತಮಾನದ ಸೌಂದರ್ಯವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತೀರ. ನೀವು ಯಾವಾಗ ವರ್ತಮಾನದ ಜೊತೆ ಹೊಂದಿಕೊಂಡಾಗ ಪ್ರತಿ ಕ್ಷಣವೂ ಒಂದು ಸಂಭ್ರಮದ ಆಚರಣೆಯಾಗುತ್ತದೆ ಮತ್ತು ನೀವು ಆಚರಿಸಲು ಹಳೇ ಘಟನೆಗಳನ್ನು

ಹುಡುಕುತ್ತಿರುವುದಿಲ್ಲ. ಯಾವಾಗ ಪ್ರತಿ ಕ್ಷಣವೂ ಆಚರಣೆಯಾಗುತ್ತದೋ ಆಗ ನೀವು ವರ್ತಮಾನದಲ್ಲಿ ಇರುವುದನ್ನು ಮುಂದುವರೆಸುತ್ತೀರ, ಏಕೆಂದರೆ ನೀವು ಪ್ರತಿ ಕ್ಷಣವನ್ನು ಆಚರಿಸುತ್ತಿದ್ದೀರ ಆಗ ನೀವು ಆಚರಿಸಲು ಹಿಂದಿನ ಘಟನೆಗಳಿಗೆ ಹೋಗುವುದೇ ಇಲ್ಲ.

ಹಾಗೂ ನಡೆದುಹೋದ ಘಟನೆಗಳನ್ನು ವಿಶ್ಲೇಷಣೆ ಮಾಡಿ ಅದರ ಬಗ್ಗೆ ಚಿಂತಿಸುವುದನ್ನು ಬಹಳ ವ್ಯರ್ಥವಾಗಿ ಕಾಲ ಕಳೆಯುವ ಸಂಗತಿ. ಏಕೆಂದರೆ, ಪ್ರತಿ ಕ್ಷಣವೂ ನೀವು ಬೆಳೆಯುತ್ತಿದ್ದೀರ; ಪ್ರತಿ ಕ್ಷಣವೂ ನೀವು ವಿಶ್ವಶಕ್ತಿಯ ಒಂದು ಭಾಗ ಮತ್ತು ವಿಶ್ವಶಕ್ತಿಯ ಪ್ರತಿ ಕ್ಷಣದಲ್ಲೂ ಬದಲಾಯಿಸುತ್ತಿರುತ್ತದೆ. ಹಾಗೆಂದರೆ, ಹೇಗೆ ನೀವು ಈ ಹೊಸತನವನ್ನು ಕಾಣುತ್ತಿರುವ ಬುದ್ಧಿವಂತಿಕೆಯೊಂದಿಗೆ ಹಳೆ ಘಟನೆಗಳನ್ನು ನಿಶ್ಲೇಷಣೆ ಮಾಡುತ್ತೀರ? ಅದು ಸಂಪೂರ್ಣವಾಗಿ ಅಸಂಬದ್ಧವಾಗಿರುತ್ತದೆ.

ಹಿಂದೆ ನಡೆದದ್ದನ್ನು ಹೊಸತನವನ್ನು ಕಾಣುತ್ತಿರುವ ಬುದ್ಧಿವಂತಿಕೆಯೊಂದಿಗೆ ವಿಶ್ಲೇಷಿಸಲೇ ಬೇಡಿ. ಸಂಪೂರ್ಣವಾಗಿ ಅದೊಂದು ಮೂರ್ಖತನದ ಕೆಲಸ. ಅದು ನಮ್ಮಲ್ಲಿ ಹೆಚ್ಚಾಗಿ ಚಿಂತೆ ಮತ್ತು ತಪ್ಪಿತಸ್ಥಭಾವ ಉಂಟು ಮಾಡುತ್ತದೆ. ಪ್ರತಿ ಕ್ಷಣವು ನೀವು ಸಾಯುತ್ತಿದ್ದೀರ ಮತ್ತು ಒಂದು ಹೊಸ ಮನುಷ್ಯನಾಗುತ್ತಿದ್ದೀರ. ಇದು ಸತ್ಯ. ಅರ್ಥಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ.

ನೀವು ಯಾವುದಾದರೂ ಎಮ್ಮೆ ಅಥವಾ ಹಸು ಚಿಂತಿಸುತ್ತಿರುವುದನ್ನು ನೋಡಿದ್ದೀರಾ? ಯಾವುದಾದರೂ ಗಿಡ ಚಿಂತಿಸುವುದನ್ನು ಕೇಳಿದ್ದೀರ? ಅವುಗಳು ಏನೂ ಅಡಚಣೆ ಇಲ್ಲದೆ ಜೀವನ ನಡೆಸುತ್ತಿಲ್ಲವಾ? ನೀವು ಮತ್ತೆ ಏಕೆ ಚಿಂತಿಸಬೇಕು? ನಾನು ಹೇಳುತ್ತೇನೆ; ಚಿಂತೆಯು ಮನುಷ್ಯನ ಒಂದು ನಿರುತ್ಪಾದಕ ಅಭ್ಯಾಸ. ಚಿಂತೆಗಳು ನಿಮ್ಮೊಳಗೆ ಸತತವಾಗಿ ಒಳಹರಟೆ ರೂಪದಲ್ಲಿ ಉತ್ಪಾದನೆ ಆಗುತ್ತದೆ. ಮತ್ತು ನಿಮ್ಮನ್ನು ನಿರುತ್ಪಾದಕವಾಗಿ ಅದರಲ್ಲಿ ಹೀರಿಕೊಳ್ಳುವಂತೆ ಮಾಡುತ್ತದೆ.

ನಿಮ್ಮ ಎಲ್ಲಾ ಚಿಂತೆಗಳು ಬೇರೇನಲ್ಲ, ಅದೊಂದು, ನಮಗೆ ತಿಳಿದಿರುವ ಭಾಷೆಯ ಒಂದು ಜೋಡಣೆ ಅಷ್ಟೆ. ಮತ್ತು ಅವುಗಳು ನಿಮ್ಮೊಳಗೆ ಎಷ್ಟೊಂದು ತಪ್ಪು ಕಲ್ಪನೆ ಮತ್ತು ಗೊಂದಲ ಉಂಟುಮಾಡುತ್ತದೆ. ಎಲ್ಲಾ ತರಹದ ತಪ್ಪು ಕಲ್ಪನೆಗೆ ಮಾತೇ ಮೂಲವಾದ ಕಾರಣ. ಆದರೆ ಏನು ಮಾಡುವುದು - ಮಾತು ಒಂದೇ ನಮಗೆ ಒಬ್ಬರಿಂದೊಬ್ಬರಿಗೆ ಸುದ್ದಿ ತಿಳಿಸಲು ಪರಿಚಿತವಾಗಿರುವ ಮಾಧ್ಯಮ.

ನಾನು ಜನರಿಗೆ ಯಾವಾಗಲೂ ಹೇಳುತ್ತೇನೆ: ನಾನು ಏನಾದರೂ ಹೇಳಿದರೆ, ನೀವು ಅದನ್ನು ಬೇರೆಯ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತೀರ. ಮತ್ತು ತೊಂದರೆ ಶುರುವಾಗುವುದು ಅಲ್ಲಿಯೇ. ಪ್ರತಿಯೊಬ್ಬರೂ ಅವರವರ ನಿಘಂಟನ್ನು ಹಿಡಿದು ಅವರದೇ ಆದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ.

ಒಂದು ಸಣ್ಣ ಕಥೆ:

ಒಬ್ಬ ವ್ಯಕ್ತಿಯು ಅವನ ಪತ್ನಿಗೆ ಹೀಗೆ ಹೇಳಿದನು, “ನೋಡು ಒಂದು ವರ್ಷದಲ್ಲಿ 5000 ಒಂಟೆಗಳನ್ನು ಬಣ್ಣ ಹಚ್ಚುವ ಕುಂಚಗಳನ್ನು ತಯಾರಿಸಲು ಉಪಯೋಗಿಸುತ್ತಾರೆ'' ನಿನಗೆ ಗೊತ್ತಾ?

ಅವನ ಪತ್ನಿಯು ಹೀಗೆ ಉತ್ತರಿಸಿದಳು, “ಅಯ್ಯೋ ದೇವರೇ! ಪ್ರಾಣಿಗಳ ಕೈಯಲ್ಲಿ ಏನೇನು ಮಾಡಿಸುತ್ತಾರೆ! ಇದು ಬಹಳ ಆಶ್ಚರ್ಯಕರವಾದ ಸಂಗತಿಯಲ್ಲವೇ?''

(ನಗೆ)

ಗಂಡನು ಒಂದು ಹೇಳಿದರೆ, ಅದನ್ನು ಹೆಂಡತಿಯು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾಳೆ. ಇದೇ ರೀತಿಯಲ್ಲಿ ನಮ್ಮಲ್ಲಿ ಎಷ್ಟೋ ಜನ ಸಂಬಂಧ ಕಲ್ಪಿಸುತ್ತಾರೆ. ಆದ್ದರಿಂದ ನಾನು ಹೇಳುವುದೇನೆಂದರೆ, ಪದಗಳೇ ಗೊಂದಲಗಳನ್ನು ಉಂಟುಮಾಡುವಂತಹುದು. ಮನುಷ್ಯನಿಗೆ ತಿಳಿದಿರುವ, ಸುದ್ದಿ ತಿಳಿಸುವ ಒಂದೇ ಮಾರ್ಗವೇನೆಂದರೆ 'ಮಾತುಗಳು' ಎಂದು ಹೇಳಲು ವಿಷಾದಿಸುತ್ತೇನೆ. ಅವನು ಹೆಚ್ಚು ಹೆಚ್ಚು ಮಾತುಗಳಲ್ಲಿ ಸಿಕ್ಕಿಕೊಳ್ಳುತ್ತಾನೆ.

ನೋಡಿ, ಯಾವಾಗಲೂ ಮಾತುಗಳೇ ಹೆಚ್ಚು ಮಾತುಗಳಿಗೆ ಅವಕಾಶ ಕೊಡುತ್ತದೆ. ಆದರೆ ಎರಡು ಮಾತುಗಳ ಮಧ್ಯೆ ನಿಶ್ಯಬ್ದತೆ ಅಥವಾ ವಿರಾಮವಿರುತ್ತದೆ - ನಮ್ಮಿಂದ ಗ್ರಹಿಸದೇ ಇರುವಂತಹ ಒಂದು ಸಣ್ಣ ವಿರಾಮವಿರುತ್ತದೆ; ಈ ವಿರಾಮವೇ ನೀವು ಅರಿವಿನಿಂದ ಇರಬೇಕಾಗಿರುವಂತಹತಕ್ಕದ್ದು. ಈ ವಿರಾಮವೇ ಏನನ್ನು ನಾವು ನಿಜವಾಗಿಯೂ ಹುಡುಕುತ್ತಿರುವುದನ್ನು ಹಿಡಿದಿಟ್ಟುಕೊಂಡಿರುವುದು.

ಈ ವಿರಾಮವು ಎಷ್ಟು ಅಣಿುಮಾತ್ರವಾದದ್ದು (ಸೂಕ್ಷ್ಮವಾದದ್ದು) ಎಂದರೆ, ನಾವು ದಿನವಿಡೀ ಅದನ್ನು ಅನುಭವಿಸಿದರೂ, ಅದರ ಬಗ್ಗೆ ತಿಳಿವೇ ಇಲ್ಲದೆ ಆನಂದದಿಂದಿರುತ್ತೇವೆ.

ನಾನು ಮಾತನಾಡುವಾಗಲೆಲ್ಲಾ ನೀವು ನಿಮ್ಮ ಒಳಹರಟೆಯನ್ನು ಬಿಟ್ಟು ನನ್ನ ಮಾತಿನಲ್ಲಿ ತಲ್ಲೀನರಾಗುತ್ತೀರ. ಯಾವಾಗ ನೀವು ನನ್ನ ಮಾತಿನಲ್ಲಿ ಆಳವಾಗಿ ಲೀನವಾದಾಗ, ನಾನು ಮಧ್ಯೆ ಮಧ್ಯೆ ವಿರಾಮ ಕೊಡುತ್ತೇನೆ. ಮತ್ತು ಆ ವಿರಾಮದ ಮಧ್ಯೆ ನಿಶ್ಯಬ್ದತೆಯೆ ನೀವು ಅನ್ವೇಷಿಸುತ್ತಿರುವ ನಿಜವಾದ ಪರಿಹಾರ!

ಒಂದೊಂದು ಸಾರಿ ನನ್ನ ಉಪನ್ಯಾಸಗಳಲ್ಲಿ ನಾನು ಮಾತನಾಡಬೇಕಾದರೆ ಹೆಚ್ಚು ವಿರಾಮಗಳನ್ನು ಕೊಡುತ್ತೇನೆ. ನಾನು ನಿಮಗೆ ಆ ವಿರಾಮ ಕೊಡುವುದು ಏತಕ್ಕೆಂದರೆ, ನಿಶ್ಯಬ್ದತೆಯನ್ನು ಗ್ರಹಿಸಿ, ಅದನ್ನು ವೀಕ್ಷಿಸುವುದಕ್ಕಾಗಿ, ಇದು ನಿಮ್ಮ ಅರಿವನ್ನು ವರ್ಧಿಸಲು ಸಹಾಯ ಮಾಡುತ್ತದೆ.

ಆದರೆ ಸಾಮಾನ್ಯವಾಗಿ ಏನಾಗುತ್ತದೆ? ಯಾವ ಕ್ಷಣದಿಂದ ನಾನು ವಿರಾಮವನ್ನು ಕೊಡುತ್ತೇನೋ ಆ ಕ್ಷಣದಿಂದ ಜನರಲ್ಲಿ ಅಶಾಂತತೆ ಉಂಟಾಗುತ್ತದೆ. ಅವರು, ಅವರು ತಂದಿರುವ ವಸ್ತುಗಳೊಂದಿಗೆ ಚಡಪಡಿಸುತ್ತ ಅಥವಾ ಅತ್ತ ಕಡೆ, ಇತ್ತ ಕಡೆ ನೋಡಿಕೊಂಡು ಮಾತನಾಡುವುದಕ್ಕೆ ಪ್ರಾರಂಭಿಸುತ್ತಾರೆ - ಮತ್ತೆ ಮಾತುಗಳನ್ನು ಸಂಗ್ರಹಿಸುವುದು!

ನಿಜವಾದ ನಿಶ್ಯಬ್ದತೆ ಎಂದರೆ, ಯಾವುದು ಕೇವಲ ಅರಿವಿನಿಂದ ತುಂಬಿ ಹರಿಯುತ್ತದೋ ಅದು ಬೇರೇನಲ್ಲ. ಅದು ಕೇವಲ ಬಾಯಿ ಮುಚ್ಚಿಕೊಂಡಿರುವುದಲ್ಲ. ನಿಮಗೆ ಈ ನಿಶ್ಯಬ್ದತೆಯ ಈ ಅರಿವು, ಇವುಗಳ ಕುಡಿನೋಟ ಸಿಕ್ಕರೆ, ನಿಮಗೆ ನಾನು ಏನು ಮಾತನಾಡುತ್ತಿದ್ದೇನೆ ಎಂದು ಅರ್ಥವಾಗುತ್ತದೆ.

ಈಗ ನಿಮ್ಮ ಮನಸ್ಸು ಹೀಗೆ ಕೇಳಲು ಪ್ರಾರಂಭಿಸುತ್ತದೆ, "ನಾನು ಈ ಒಳಹರಟೆ ಮತ್ತು ಆಲೋಚನೆಗಳನ್ನು ನಿಲ್ಲಿಸುವುದು ಹೇಗೆ? ನಾನು ನಿಜವಾದ ನಿಶ್ಯಬ್ದತೆಯನ್ನು ಅನುಭವಿಸುವುದು ಹೇಗೆ?" ಈ ಆಲೋಚನೆಯು ಪದೇ ಪದೇ ಕಾಡಲು ಶುರುವಾಗುತ್ತದೆ ಮತ್ತು ಅದೂ ಒಂದು ಹೊಸ ಚಿಂತೆಯಾಗಿ ಸೇರುತ್ತದೆ.

ನೋಡಿ, ಅರ್ಥ ಮಾಡಿಕೊಳ್ಳಿ; ನೀವು ಆಲೋಚನಾ ಕ್ರಿಯೆಯನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ನೀವು ಆಲೋಚಿಸುವುದನ್ನು ನಿಲ್ಲಿಸಬೇಕು, ಎನ್ನುವ ಆಲೋಚನೆಯೇ ಇನ್ನೊಂದು ಆಲೋಚನೆ! ನೀವು ಬಲವಂತವಾಗಿ ಒಂದು ಕ್ಷಣ ನಿಶ್ಯಬ್ದವಾಗಿರಲು ಪ್ರಯತ್ನಿಸಿದರೆ, ಅದು ನಾವು ಸಾಧಿಸಬೇಕೆಂದುಕೊಂಡಿರುವ ನಿಶ್ಯಬ್ದತೆ ಅಲ್ಲ. ಅದು ಸುಮ್ಮನೆ, ಬಲವಂತದ ಮತ್ತು ಸತ್ತ್ವವಿಲ್ಲದ ಕಂಪಿಸುತ್ತಿರುವಂತಹ ಮತ್ತು ಆನಂದಮಯವಾದ ನಿಶ್ಯಬ್ದತೆ - ಅದೇ ಅಸ್ತಿತ್ವದ ನಿಶ್ಯಬ್ದತೆ.

ಆದ್ದರಿಂದ ಮಾಡಬೇಕಾಗಿರುವುದು ಏನು? ನೀವು ಮನಸ್ಸನ್ನು ವೀಕ್ಷಿಸಿ, ಅಷ್ಟೆ, ಪ್ರೇಕ್ಷಕರಾಗಿ. ಯಾವುದೇ ತೀರ್ಮಾನಗಳನ್ನು ಮಾಡಿಕೊಳ್ಳಬೇಡಿ; ಯಾವುದೇ ಆಲೋಚನೆಗಳನ್ನು ಪ್ರತಿರೋಧಿಸಬೇಡಿ. ಅದು ದೇವರು ನಿಮಗೆ ನೀಡಿದ ಒಂದು ಕೊಡುಗೆ ಎಂದು, ಅದನ್ನು ಗಾಢವಾದ ಕೃತಜ್ಞತೆಯ ಭಾವನೆಯಿಂದ ವೀಕ್ಷಿಸಿ. ಆಂತರಿಕ ನಿಶ್ಯಬ್ದತೆಯತ್ತ ಇದೇ ಮೊದಲ ಹೆಜ್ಜೆ.

ಕ್ರಮೇಣವಾಗಿ ನಿಮ್ಮ ಅರಿವು ಬೆಳೆದು, ನಿಮ್ಮನ್ನು ನಿಮ್ಮತನದಲ್ಲಿ ಕೇಂದ್ರೀಕರಿಸುತ್ತದೆ ಮತ್ತು ನಿಮ್ಮಲ್ಲಿ ನಿಶ್ಯಬ್ದತೆಯನ್ನು ಹೆಚ್ಚಿಸುತ್ತದೆ. ನಿಶ್ಯಬ್ದತೆಯನ್ನು ಹೆಚ್ಚಿಸುತ್ತದೆ ಎಂದು ನಾನು ಹೇಳಿದಾಗ, ಅದರ ಅರ್ಥವೇನೆಂದರೆ, ನಿಮ್ಮ ಒಳಹರಟೆಯು ಕಡಿಮೆಯಾಗುವು ಮತ್ತು ನೀವು ಇನ್ನೂ ಹೆಚ್ಚಾಗಿ ಒಬ್ಬ ವೀಕ್ಷಕರಾಗುತ್ತೀರ. ಹೆಚ್ಚಾದ ಆ ನಿಶ್ಯಬ್ದತೆಯಿಂದ, ನಿಮ್ಮಲ್ಲಿ ಇನ್ನೂ ಹೆಚ್ಚು ಅರಿವು ಉಂಟಾಗುತ್ತದೆ. ಮತ್ತು ಇದು ಒಂದು ಚಕ್ರೀಯ ಪ್ರಕ್ರಿಯೆ (cyclic process ) ಯನ್ನು ಉಂಟುಮಾಡುತ್ತದೆ.

ಈ ಅರಿವಿನಿಂದ ನೀವು ನಿಮ್ಮನ್ನು ಸುತ್ತುವರೆದಿರುವ ಸೌಂದರ್ಯವನ್ನು ಆಸ್ವಾದಿಸಲು ಸಾಧ್ಯವಾಗುತ್ತದೆ. ಈ ಸೌಂದರ್ಯವೇನು ಇದ್ದಕ್ಕಿದ್ದ ಹಾಗೆ ಬಂದಿದ್ದೇನು ಅಲ್ಲ. ಅದು ಅಲ್ಲೇ ಯಾವಾಗಲೂ ಇದೆ! ಆದರೆ ನಿಮಗೆ ಅದರ ಅರಿವು ಇರಲಿಲ್ಲ. ನೀವು ನಿಮ್ಮೊಳಗೆ ಸದಾ ಕಾರ್ಯನಿರತರಾಗಿದ್ದು ನೀವು ಅದನ್ನು ನೋಡಲು ಅಸಮರ್ಥರಾಗಿದ್ದೀರಿ. ಈಗ ನಿಮ್ಮ ಅರಿವಿನಿಂದ. ನೀವು ಅದನ್ನು ಸಂಭ್ರಮದಿಂದ ಆಚರಿಸಲು ಸಾಧ್ಯ! ಇದ್ದಕ್ಕಿದ್ದ ಹಾಗೆ ಪ್ರಕೃತಿಯು ತನ್ನ ಪೂರ್ಣ ಸೊಬಗನ್ನು ನಿಮಗೆ ತೋರಿಸಲು ಪ್ರಾರಂಭಿಸುತ್ತದೆ. ನಿಮ್ಮ ಒಳತನವು ಪರಿವರ್ತನೆಗೊಳ್ಳುತ್ತದೆ, ಮತ್ತು ಹಾಗಾದಾಗ, ಬಾಹ್ಯ ಪ್ರಪಂಚವು ತಾನಾಗಿಯೇ ಪರಿವರ್ತನೆಗೊಳ್ಳುತ್ತದೆ.

ಯಾವಾಗ ನೀವು ಅರಿವಿನಿಂದ ಇರುವುದನ್ನು ಕಲಿಯುತ್ತೀರೋ, ಆಗ ನಿಮ್ಮ ಮನಸ್ಸನ್ನು ನಿಮ್ಮ ವಿವೇಚನೆಯೊಂದಿಗೆ ಉಪಯೋಗಿಸಬಹುದು. ಅದು ನಿಮ್ಮ ವಶದಲ್ಲಿ ಇರುವ ಒಂದು ಮುಖ್ಯವಾದ ಉಪಕರಣವಾಗುತ್ತದೆ. ನಿಮಗೆ ಬೇಕಾದಾಗ ಉಪಯೋಗಿಸಬಹುದು. ಅದು ಅಪಾಯಕರ ಶತ್ರುವಾಗುವ ಬದಲು, ಒಂದು ಭರವಸೆಯುಳ್ಳ ಮಿತ್ರನಾಗುತ್ತದೆ.

ಯಾವಾಗ ನಿಮ್ಮ ಒಳಹರಟೆಯು ಕಡಿಮೆಯಾಗುತ್ತದೋ, ಯಾವಾಗ ನಿಮ್ಮ TPS - ಅಂದರೆ ಒಂದು ಸೆಕೆಂಡ್‌ಗೆ ಬರುವ ಆಲೋಚನೆಗಳು ಕಡಿಮೆಯಾಗುತ್ತದೋ ಆಗ ನೀವು ಸಂಪೂರ್ಣವಾಗಿ ವರ್ತಮಾನದಲ್ಲಿ ಇರುತ್ತೀರ ಮತ್ತು ನಿಮಗೆ, ಒಂದು ತೆರೆದ ಪುಸ್ತಕದ ಹಾಗೆ ನಿಮ್ಮ ಭೂತಕಾಲ ಮತ್ತು ಭವಿಷ್ಯತ್‌ಕಾಲಗಳನ್ನು ಪ್ರವೇಶಿಸಿ ನೋಡಲು ಸಾಧ್ಯವಾಗುತ್ತದೆ. ಯಾವಾಗ ನಿಮ್ಮ ಒಳಹರಟೆಯು ಹೆಚ್ಚಾಗಿರುತ್ತದೋ, ನಿಮ್ಮ TPS ಕೂಡ ಹೆಚ್ಚಾಗಿ, ನೀವು ಸದಾಕಾಲ ಭೂತಕಾಲದಲ್ಲೋ ಅಥವಾ ಭವಿಷ್ಯತ್‌ಕಾಲದಲ್ಲೋ ಇದ್ದು, ವರ್ತಮಾನದಲ್ಲಿ ಇರುವುದೇ ಇಲ್ಲ. ಈಗ ನಾನು, ನಿಮ್ಮ ಭೂತಕಾಲ ಮತ್ತು ಭವಿಷ್ಯತ್‌ಕಾಲಗಳನ್ನು ಪ್ರವೇಶಿಸಲು ಸಾಧ್ಯ ಎಂದರೆ ಏನೆಂದು ವಿವರಿಸುತ್ತೇನೆ.

ಒಂದೊಂದು ಸಾರಿ ನಿಮಗೆ ಹೀಗೆ ಅನುಭವ ಆಗಿರಬಹುದು: ಯಾವಾಗಲಾದರೂ, ನೀವು ಒಂದು ಭಾಷಣಕ್ಕೆ ಹೋದಾಗ, ಅಥವಾ ಸಮಾರಂಭಕ್ಕೆ ಹೋದಾಗ, ಅಥವಾ ಬೇರೆಯ ಸ್ಥಳಕ್ಕೆ ಹೋದಾಗ, ತತ್‌ಕ್ಷಣವೇ, ಯಾವ ರೀತಿಯಿಂದಲೂ ಇಲ್ಲದ ಹಾಗೆ, ಎಲ್ಲ ದೃಶ್ಯಗಳೂ ಹಿಂದೊಮ್ಮೆ ನೀವು ನೋಡಿದ್ದ ಹಾಗೆ ಭಾಸವಾಗುತ್ತದೆ. ಧ್ವನಿಗಳು, ಸಂಭಾಷಣೆ, ಆ ಜಾಗ ಮತ್ತು ಅಲ್ಲಿದ್ದ ಕೆಲವು ಅಪೂರ್ವ ಕಲಾಸ್ತುಗಳೂ, ನೀವು ಹಿಂದೊಮ್ಮೆ ನೋಡಿದ್ದ ದೃಶ್ಯದ ಪುನರ್‌ಪ್ರದರ್ಶನದಂತೆ ಕಾಣುತ್ತದೆ. ನೀವು ಅಲ್ಲಾಡಿಹೋಗುತ್ತೀರ.

ಅಥವಾ ಇದ್ದಕ್ಕಿದ್ದ ಹಾಗೆ ನೀವು ಒಬ್ಬ ವ್ಯಕ್ತಿಯ ಬಗ್ಗೆ ಯೋಚಿಸುತ್ತೀರ, ಅವನು ಬಹಳ ದಿನಗಳಿಂದ ನೀವು ಸಂಪರ್ಕಿಸದೇ ಇದ್ದ ಸ್ನೇಹಿತನೇ ಇರಬಹುದು. ಆಗ ಅದೇ ವ್ಯಕ್ತಿಯು ನಿಮಗೆ ಫೋನ್ ಕರೆ ಮಾಡುತ್ತಾನೆ. ನೀವು ಮುಂದಿನ ಕೆಲವು ಕ್ಷಣಗಳಲ್ಲಿ ನಡೆಯಬಹುದಾದ್ದನ್ನು ಊಹಿಸಬಲ್ಲಿರಿ. ಈ ಘಟನೆಗಳು ನಿಮಗೆ ಸಂಭವಿಸಿದಾಗ ನೀವು ಅಲ್ಲಾಡಿಹೋಗುತ್ತೀರ. ಈ ಕೆಲವು ಕ್ಷಣಗಳಲ್ಲಿ ನೀವು ಸಂಪೂರ್ಣವಾಗಿ ವರ್ತಮಾನದಲ್ಲಿ ಇರುತ್ತೀರ. ಆಕಸ್ಮಿಕವಾಗಿ ಹೇಗೋ ನೀವು ವರ್ತಮಾನದಲ್ಲಿ ಬೀಳುತ್ತೀರ.

ನೀವು ಪ್ರಜ್ಞೆಯಿಂದ ವರ್ತಮಾನದಲ್ಲಿ ಇರುವುದೇ ಇಲ್ಲ. ಯಾವಾಗಲೂ ನೀವು ಭೂತಕಾಲ ಅಥವಾ ಭವಿಷ್ಯತ್‌ಕಾಲದಲ್ಲಿ ಇರುತ್ತೀರ. ನೀವು ವರ್ತಮಾನವನ್ನು ಮುಟ್ಟದೆ ಭೂತಕಾಲದಿಂದ ಭವಿಷ್ಯತ್ ಕಾಲಕ್ಕೆ ಚಲಿಸುವಿರಿ. ಇದೇ ನಿಜವಾದದ್ದು.

ಆದರೆ ಆಕಸ್ಮಿಕವಾಗಿ ನಿಮ್ಮ TPS ಒಂದು ಕ್ಷಣ ಕೆಳಕ್ಕೆ ಬರುತ್ತದೆ ಮತ್ತು ನೀವು ವರ್ತಮಾನಕ್ಕೆ ಪುಟಿಯುತ್ತೀರ.

ಯಾವಾಗ ನೀವು ಒಂದು ಕ್ಷಣವಾದರೂ ಸಂಪೂರ್ಣವಾಗಿ ವರ್ತಮಾನದಲ್ಲಿದ್ದರೆ, ನಿಮ್ಮ ಭೂತ ಮತ್ತು ಭವಿಷ್ಯತ್‌ಕಾಲಗಳು ನಿಮಗೆ ಪಾರದರ್ಶಕವಾಗಿರುತ್ತದೆ. ಆದುದರಿಂದಲೇ ನೀವು ಇಂತಹ ಒಳಅರಿವಿನ ಸಂಗತಿಗಳು ನಿಮಗೆ ಆಗುತ್ತಿರುವುದನ್ನು ನೋಡುತ್ತೀರ.

ನೋಡಿ: ನಮ್ಮ ಆಲೋಚನಾ ಕ್ರಿಯೆ ಎಂದೂ ಸ್ಪಷ್ಟತೆಯಿಂದ ಇರುವುದಿಲ್ಲ. ಅದು ಯಾವಾಗಲೂ ಬರೀ ಒಂದು ಸಂಬಂಧಿತ ಕ್ರಿಯೆ (association) ಅಷ್ಟೆ. ಅದು ನಿಜವಾಗಿ ಆಲೋಚನಾಕ್ರಿಯೆ ಅಲ್ಲವೇ ಅಲ್ಲ.

ನಾನು ನಿಮಗೆ ಸಂಬಂಧಿತ ಕ್ರಿಯೆ ಏನೆಂದು ವಿವರಿಸುತ್ತೇನೆ.

ನೀವು ಬೆಳಗ್ಗೆ ಎದ್ದು, ನಿಮ್ಮ ಹೂತೋಟದಲ್ಲಿ ಅರಳಿರುವ ಒಂದು ಗುಲಾಬಿಯನ್ನು ನೋಡುತ್ತೀರ. ತತ್‌ಕ್ಷಣವೇ ನಿಮ್ಮ ಮನಸ್ಸು ಸ್ವಲ್ಪ ದಿನಗಳ ಹಿಂದೆ, ಯಾರೋ ಒಬ್ಬರು ಒಂದು ಗುಲಾಬಿ ಹೂವನ್ನು ಕೊಟ್ಟವರ ಬಗ್ಗೆ ಹೋಗುತ್ತದೆ. ನಿಮ್ಮ ಆಲೋಚನೆಯು ಆ ಹೊತ್ತಿನಲ್ಲಿ ನಿಮ್ಮ ಪ್ರತಿಕ್ರಿಯೆ ಮೂಲಕ ಆ ಹೂವಿನತ್ತ ಹೋಗುತ್ತದೆ ಅಥವಾ ನೀವು ಆ ವ್ಯಕ್ತಿಯ ಬಗ್ಗೆ ಆಲೋಚಿಸುತ್ತೀರಿ. ಆಮೇಲೆ ನೀವು ಅವನ ಜೊತೆ ಆದ ಘಟನೆಗಳ ಬಗ್ಗೆ ಆಲೋಚಿಸುತ್ತೀರ. ಕಡೆಯಲ್ಲಿ ಏನು ಆಗುತ್ತದೆ? ನೀವು ನಿಮ್ಮ ಎದುರಿಗೆ ಇರುವ ಗುಲಾಬಿಯನ್ನು ನೋಡಿ ಆನಂದಿಸುವ ಬದಲು ಏನೇನೋ ಆಲೋಚಿಸುತ್ತೀರ.

ಇದೇ ತರಹ ನೀವು ಹಿಂದೆ ಆಗಿರುವ ಘಟನೆಗಳ ಹಿಂದೆ ಓಡುತ್ತೀರ ಮತ್ತು ಈಗ ನಡೆಯುತ್ತಿರುವುದನ್ನು ಕಳೆದುಕೊಳ್ಳುತ್ತೀರ. ಇದೇ ನಾನು ಹೇಳುವ ಸಂಬಂಧಿತ ಕ್ರಿಯೆ ಎಂಬುದರ ಅರ್ಥ. ಇದು ರೂಢಿಯಲ್ಲಿರುವ ನಿಮ್ಮ ಮಾನಸಿಕ ವ್ಯವಸ್ಥೆಯ ಸ್ವಭಾವ. ನಿಮ್ಮ ಮಾನಸಿಕ ವ್ಯವಸ್ಥೆಯು ಬೇರೇನಲ್ಲ, ಒಂದು ಸಂಬಂಧಿತ ಕ್ರಿಯೆಯಾಗಿರುವ ತನಕ, ನೀವು ನಿಮ್ಮೊಳಗೇ ಹೆಚ್ಚು ಹೆಚ್ಚು ಶಬ್ದಗಳನ್ನು ಸೃಷ್ಟಿಸುತ್ತಾ, ಭೂತಕಾಲ ಮತ್ತು ಭವಿಷ್ಯತ್‌ಕಾಲದ ಹಿಂದೆ ಹೋಗುವುದನ್ನು ಮುಂದುವರೆಸುತ್ತೀರ.

ಗುರುಗಳು ಯಾವಾಗಲೂ ವರ್ತಮಾನದಲ್ಲಿ ಬದುಕುತ್ತಾರೆ. ಆದ್ದರಿಂದ ಅವರು ಮಹಾ ಸಾಗರದತ್ತ ಹೋಗುವ ಒಂದು ಮಾರ್ಗವನ್ನು ಹೊಂದಿರುತ್ತಾರೆ. ಅದು

ಯಾವುದೆಂದರೆ, ಭೂತಕಾಲ ಮತ್ತು ಭವಿಷ್ಯತ್ ಕಾಲ. ನಿಮಗೆ ಇದೊಂದು ಆಕಸ್ಮಿಕ ಘಟನೆ. ಇದು ನಿಮಗೆ ಅರ್ಧ ಕ್ಷಣದಲ್ಲಿ ಸಂಭವಿಸುತ್ತದೆ! ಇದು ಸಂಭವಿಸುವಾಗ ನಿಮಗೆ ಗಾಬರಿಯೂ ಉಂಟಾಗುತ್ತದೆ! ನೀವು ಅರಿವಿಲ್ಲದೆಯೇ...

ನೀವು ನೈಜತೆ ಅಥವಾ ವರ್ತಮಾನದಿಂದ ಎಷ್ಟು ದೂರವಿದ್ದೀರ ಎಂಬುದನ್ನು ನಿಶ್ಚಯಿಸುವುದರಲ್ಲಿ ನಿಮ್ಮ TPS ಒಂದು ಮುಖ್ಯವಾದ ಪಾತ್ರ ವಹಿಸುತ್ತದೆ.

ಅರ್ಥಮಾಡಿಕೊಳ್ಳಿ: ಬರೀ ನಿಮ್ಮ ಮಾಡುವಿಕೆಯೇ ನಿಮ್ಮ ಬಗ್ಗೆ ಹೇಳುತ್ತದೆ. ನಿಮ್ಮ ಮಾತುಗಳು ನಿಮ್ಮ ಬಗ್ಗೆ ಏನೂ ಮಾಡುವುದಿಲ್ಲ. ನೀವು ಒಳಗಡೆ ಅಥವಾ ಹೊರಗಡೆ ಮಾತನಾಡಿದರೂ ಏನೂ ಪರವಾಗಿಲ್ಲ. ಸುಮ್ಮನೆ ನಿಮ್ಮೊಳಗೆ ಅರಿವಿಕೆಯನ್ನು ತಂದುಕೊಳ್ಳಿ ಮತ್ತು ನೀವು ಅನಾವಶ್ಯಕವಾಗಿ ಮಾತನಾಡುವುದನ್ನು ತನ್ನಷ್ಟಕ್ಕೆ ತಾನೇ ನಿಲ್ಲಿಸುತ್ತೀರ.

ಜನಗಳು ನನ್ನ ಹತ್ತಿರ ಹೇಳುತ್ತಾರೆ, “ಸ್ವಾಮೀಜಿ, ನಾವು ರಜೆಯಲ್ಲಿ ಹೊರಗಡೆ ಹೋಗಿದ್ದೆವು ಆದರೆ ಅದು ನರಕವಾಗಿ ಮಾರ್ಪಟ್ಟಿತ್ತು'' ನಾನು ಹೇಳುತ್ತೇನೆ: ನರಕ ಎನ್ನುವುದು ನಿಮ್ಮೊಳಗೇ ಇದೆ; ನೀವು ಅದನ್ನು ಎಲ್ಲಾ ಕಡೆಯೂ ಕೊಂಡೊಯ್ಯುತ್ತೀರ. ನೀವು ಹೋಗುವ ಜಾಗದಲ್ಲೆಲ್ಲಾ ಸ್ಪಷ್ಟವಾಗಿ ಅದನ್ನು ಕಾಣಬಹುದು. ನೀವು ಬದುಕಿರುವಾಗ, ನೀವು ಬೇರೆಯವರಿಗೆ ನರಕವನ್ನು ಕೊಡುತ್ತೀರ, ನೀವು ಸಾವನ್ನಪ್ಪಿದಾಗ ನಿಮಗೆ ನರಕ ಸಿಗುತ್ತದೆ! ನೀವು ಎಲ್ಲೆಲ್ಲಿ ಹೋದರೂ ಅಲ್ಲಿ ನಿಮ್ಮ ನರಕವನ್ನು ಹೊತ್ತುಕೊಂಡು ಹೋಗಲು ಬಯಸುತ್ತೀರ. ನೀವು ನರಕದ ಬಗ್ಗೆ ಎಷ್ಟು ಚಿರಪರಿಚಿತರಾಗಿದ್ದೀರಿ ಎಂದರೆ, ನಿಮಗೆ ಸ್ವರ್ಗವನ್ನು ತೋರಿಸಿದರೂ, ಆ ಸ್ಥಳಕ್ಕೆ ಹೊಂದದೆ ಇರುವ ಭಾವನೆ ಹೊಂದುತ್ತೀರ!

ಒಂದು ಸಣ್ಣ ಕಥೆ:

ಒಂದು ದಿನ ಮೂವರು ಬೆಸ್ತ ಸ್ತ್ರೀಯರು ಮೀನು ಮಾರಲು ಹೋಗಿದ್ದರು. ಮನೆಗೆ ಹಿಂದಿರುಗುವ ಹೊತ್ತಿಗೆ ಕತ್ತಲಾಗಿಬಿಟ್ಟಿತು. ಆದ್ದರಿಂದ ಅವರು ದಾರಿಯಲ್ಲಿ ಯಾವುದಾದರೂ ಒಂದು ಮನೆಯಲ್ಲಿ ಆ ರಾತ್ರಿಯನ್ನು ಕಳೆಯಲು ನಿರ್ಧರಿಸಿದರು. ಅವರು ಒಬ್ಬ ಮಲ್ಲಿಗೆ ಹೂವು ಮಾರುವವಳ ಮನೆಗೆ ಹೋಗಿ ಆ ದಿನ ರಾತ್ರಿ ಅಲ್ಲಿ ಇದ್ದು ಮಾರನೇ ದಿನ ಹೋಗುತ್ತೇವೆಂದು ಕೇಳಿಕೊಂಡರು. ಆ ಹೆಂಗಸು ಇದಕ್ಕೆ ಒಪ್ಪಿಕೊಂಡಳು. ಅವರು ಅವಳ ಮನೆಯ ಒಂದು ಕೊಠಡಿಯಲ್ಲಿ ಮಲಗಲು ಹೋದರು.

ಅವಳ ಮನೆಯು ಮಲ್ಲಿಗೆ ಹೂವಿನ ಸುವಾಸನೆಯೊಂದಿಗೆ ತುಂಬಿತ್ತು. ಆದರೆ, ಬೆಸ್ತ ಹೆಂಗಸರಿಗೆ ಎಷ್ಟು ಪ್ರಯತ್ನಿಸಿದರೂ ಮಲಗಲು ಸಾಧ್ಯವಾಗಲಿಲ್ಲ. ಅವರು ಹೊರಳಾಡುತ್ತಿದ್ದರು ಮತ್ತು ಏನು ಮಾಡಬೇಕು ಎಂದು ತಿಳಿಯಲಿಲ್ಲ. ಇದ್ದಕ್ಕಿದ್ದ ಹಾಗೆ ಅವರಲ್ಲೊಬ್ಬಳು ಎದ್ದು ಹೋಗಿ ಖಾಲಿ ಮೀನು ಬುಟ್ಟಿಗಳನ್ನು ತಂದು ಅವರ ತಲೆಗಳ ಹತ್ತಿರ ಇಟ್ಟಳು - ಆ ಕ್ಷಣವೇ ಅವರುಗಳು ನಿದ್ರಿಸಿಬಿಟ್ಟರು!

(ನಗೆ!)

ನಾವು ಹೋಗುವ ಜಾಗದಲ್ಲೆಲ್ಲಾ ನಮ್ಮ ಚಿಂತೆಗಳನ್ನು ನಮ್ಮ ಜೊತೆ ಕೊಂಡೊಯ್ಯುತ್ತೇವೆ ಮತ್ತು ಅವುಗಳನ್ನು ಪೋಷಿಸುವುದರಲ್ಲಿ ಹಿತವನ್ನು ಅನುಭವಿಸುತ್ತೇವೆ. ಆದರೆ ಸದಾಕಾಲವು ನಾವು ಎಷ್ಟು ಚಿಂತೆಯಿಂದಿರುತ್ತೇವೆ ಎಂದು ದೂರು ಹೇಳುತ್ತೇವೆ! ನಾವು ಯಾವುದರಿಂದಲೋ ಮುಕ್ತರಾಗಬೇಕೆಂದು ಅಂದುಕೊಳ್ಳುತ್ತೇವೆ. ಆದರೆ ಅದರಿಂದ ಪರಿವರ್ತನೆಗೊಳ್ಳಲು ಮನಸ್ಸು ಮಾಡುವುದಿಲ್ಲ. ಈ ತರಹ ನಾವು ಸ್ವಯಂ ವಿರುದ್ಧವಾಗಿ ಇರುತ್ತೇವೆ.

ಹೇಗಾದರೂ ಆಗಲಿ, ಇದರಿಂದ ನಾವು ಹೇಗೆ ಮುಕ್ತಿಯನ್ನು ಹೊಂದುವುದು? ನಮ್ಮ ಮನೋಭಾವವು ಏನಾಗಿರಬೇಕು?

ಹೇಗೆ ಮುಕ್ತರಾಗಬೇಕು ಮತ್ತು ನಿಮ್ಮ ಮನೋಭಾವವು ಏನು - ಎರಡು ಪ್ರಶ್ನೆಗಳಿಗೂ ಒಂದೇ ಉತ್ತರ ಇದೆ. ನೀವು ಏನನ್ನೇ ಮಾಡಲಿ, ಆನಂದದ ಅನುಭವದಿಂದ ಮಾಡಲು ಶಕ್ತರಾಗಿರಬೇಕು ಅಷ್ಟೆ. ನೋಡಿ, ನಿಮ್ಮಲ್ಲಿರುವ ಆಂತರಿಕ ಸ್ಥಳ, ಅಂದರೆ ನಿಮ್ಮ ಅರಿವು (consciousness) ನಿಮ್ಮ ಬದುಕಿನ ಗುಣಮಟ್ಟವನ್ನು ತೀರ್ಮಾನಿಸುತ್ತದೆ. ಈ ಆಂತರಿಕ ಸ್ಥಳವು ಯಾವಾಗಲೂ ಪರಿಶುದ್ಧವಾಗಿ ಆನಂದಮಯವಾಗಿರಬೇಕು.

ಒಬ್ಬ ವಿಜ್ಞಾನಿಯ ಅರಿವು (consciousness) ಅವನು ನಿರ್ವಹಿಸುವ ಪ್ರಯೋಗದಲ್ಲಿ ಒಂದು ಹಿರಿಯ ಪಾತ್ರ ವಹಿಸುತ್ತದೆ ಎಂಬುದನ್ನು ಸಾಧಿಸಿ ತೋರಿಸಲಾಗಿದೆ. ಅದೇ ಪ್ರಯೋಗವನ್ನು ಅದೇ ವಾತಾವರಣದ ಪರಿಸ್ಥಿತಿಯಲ್ಲಿ ಬೇರೆ ಬೇರೆ ವಿಜ್ಞಾನಿಗಳು ಕೈಗೊಂಡರೆ, ಬೇರೆ ಬೇರೆ ಫಲಿತಾಂಶಗಳು ಉಂಟಾಗುತ್ತವೆ ಎಂಬುದನ್ನು ಗಮನಿಸಲಾಗಿದೆ. ನಮ್ಮ ಒಳ ಆಲೋಚನೆಗಳು ನಮ್ಮ ನಡತೆಗಳನ್ನು ಮತ್ತು ಅವುಗಳ ಫಲಿತಾಂಶವನ್ನು ನಿಯಂತ್ರಿಸುತ್ತವೆ ಎಂದು ಸ್ಪಷ್ಟವಾಗಿ ದೃಢಪಡಿಸಿ ತೋರಿಸಲಾಗಿದೆ.

ನಾನೀಗ ಹೇಳುತ್ತೇನೆ: ‘ಆನಂದವು ಸೌಭಾಗ್ಯವನ್ನು ಆಕರ್ಷಿಸುತ್ತದೆ’ ಇದು ಒಂದು ಮಹತ್ವವುಳ್ಳ ಸತ್ಯ. ನೀವು ಆನಂದಮಯವಾಗಿದ್ದಾಗ, ಅಸ್ತಿತ್ವವು ತಂತಾನೇ ನಿಮ್ಮ ಮೇಲೆ ಐಶ್ವರ್ಯವನ್ನು ಧಾರೆ ಎರೆಯುತ್ತದೆ. ಯಾವಾಗಲೂ ಕೃತಜ್ಞತಾ ಭಾವದಿಂದಿರಿ. ಮಿಕ್ಕಿದ್ದೆಲ್ಲವು ತಂತಾನೇ ಸಂಭವಿಸುತ್ತದೆ.

ಯಾವುದರ ಬಗ್ಗೆಯೂ ನಿಮ್ಮ ಮನಸ್ಸಿಗೆ ಯಾವುದಾದರೂ ಚಿಂತೆ, ಅಥವಾ ಅಪರಾಧ ಅಥವಾ ದುಃಖದ ಸನ್ನಿವೇಶ ಬಂದರೆ, ಸುಮ್ಮನೆ ಅದನ್ನು ನೋಡಿ ಮತ್ತು ನಗು ಮುಖದಿಂದ ಹೀಗೆ ಹೇಳಿ, “ಇಲ್ಲ, ನಾನು ನಿನ್ನ ಪರಿಣಾಮಕ್ಕೆ ಒಳಗಾಗುವುದಿಲ್ಲ. ನೀನೇನು ಮಾಡುತ್ತೀಯಾ?” ಸುಮ್ಮನೆ ಅದರತ್ತ ನೋಡಿ ಹೀಗೆ ಹೇಳಿ. ತನಗೆ ತಾನೇ ಆ ಘಟನೆ ಅಥವಾ ಅಪರಾಧ ನಿಮ್ಮ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಅದನ್ನು ನಿಮ್ಮ ಮೇಲೆ ಆಕ್ರಮಣ ಮಾಡಲು ಬಿಟ್ಟರೆ, ನೀವೇನಾದರೂ ಲಾಭ ಪಡೆಯುತ್ತೀರಾ? ಇಲ್ಲ! ಅದನ್ನು ಸುಮ್ಮನೆ ನೋಡಿ ಮತ್ತು ನಿನ್ನನ್ನು ಆಕ್ರಮಣ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಹೇಳುವುದರಿಂದ ನಿಮ್ಮ ದುಃಖವನ್ನು ದೂರ ಮಾಡಬಹುದು ಅಷ್ಟೆ. ನಾನು ನಿಮ್ಮನ್ನು ಅದರಿಂದ ದೂರ ಓಡಿ ಹೋಗಿ ಎಂದು ಹೇಳುತ್ತಿಲ್ಲ. ನಾನು ನಿಮಗೆ ಅದನ್ನು ನೋಡಿ ಅಷ್ಟು ಹೇಳಿ ಸಾಕು ಎಂದು ಹೇಳುತ್ತಿದ್ದೇನೆ ಅಷ್ಟೆ. ಈ ಅಂಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ.

ನೀವು ಈ ಆಲೋಚನೆಗಳನ್ನು ನಿಮ್ಮೊಳಗೆ ಅದುಮಿಟ್ಟುಕೊಳ್ಳಲು ಪ್ರಯತ್ನಿಸಿದರೆ, ಅವುಗಳು ನಿಮ್ಮ ಮನಸ್ಸಿನ ಹಿಂದೆ ಅವಿತುಕೊಂಡಿರುತ್ತದೆ ಮತ್ತು ಯಾವ ಸಮಯದಲ್ಲಿಯಾದರೂ ವಾಪಸ್ಸು ಬರುತ್ತೇವೆಂದು ಅವು ನಮ್ಮನ್ನು ಹೆದರಿಸುತ್ತವೆ. ಅವುಗಳನ್ನು ಮೇಲಕ್ಕೆ ಬರಲು ಬಿಡಿ, ಆದರೆ ಸುಮ್ಮನೆ ಅವುಗಳ ಕಡೆ ನೋಡಿ ಮತ್ತು ಅವುಗಳಿಗೆ ನೀವು ಶಕ್ತಿಹೀನರು ಎಂದು ಹೇಳಿ; ಹಾಗೆ ಹೇಳಿದ ಕೂಡಲೇ ತನ್‌ತಾನೇ ಮಾಯವಾಗುತ್ತವೆ. ಅವುಗಳು ಹೀಗೆ ಕಾದುವುದರಲ್ಲಿ ಪ್ರಯೋಜನವಿಲ್ಲವೆಂದು ಯೋಚಿಸಿ ಮಾಯವಾಗುತ್ತವೆ!!

ಯಾವಾಗಲೂ ನೆನಪಿಟ್ಟುಕೊಳ್ಳಿ: ಯಾವುದಾದರೂ ಸರಿ ನಿಮ್ಮ ಶರೀರ, ಮನಸ್ಸು ಅಥವಾ ಆತ್ಮ ಇವುಗಳ ಮೂಲಕ ನಿಮಗೆ ಬಲ ಬಂದರೆ ಅದೇ ಆಧ್ಯಾತ್ಮಿಕತೆ. ಮತ್ತು ನಿಮ್ಮನ್ನು ತಂತಾನೇ ಆನಂದದ ಕಡೆಗೆ ಕರೆದೊಯ್ಯುತ್ತದೆ. ಯಾವುದು ನಿಮ್ಮನ್ನು ಬಲಹೀನತೆ ಪಡಿಸುತ್ತದೋ ಅದು ಆಧ್ಯಾತ್ಮಿಕತೆ ಅಲ್ಲ. ಆದ್ದರಿಂದ ಅದನ್ನು ಹಿಂಬಾಲಿಸುವುದು ಬೇಡ. ಇದು ಒಂದು ಅನುಸರಿಸಬೇಕಾದ ಹೆಬ್ಬೆರಳು ನಿಯಮವು (thumb rule) ಆನಂದವೇ ನಿಮ್ಮ ನಿಜವಾದ ಸ್ವಭಾವ ಎಂದು ಮರೆಯಬೇಡಿ.

ಮತ್ತೆ ಇನ್ನೊಂದು ವಿಷಯ: ಯಾವುದಾದರೂ ಸುಂದರವಾಗಿರುವುದನ್ನು ನೀವು ನೋಡಿದರೆ, ಅದನ್ನು ನಿಮಗೆ ಪರಿಚಿತ ಮಾದರಿಗಳೊಂದಿಗೆ ಹೋಲಿಕೆ ಮಾಡಿ, ತನ್ನ ವೀಕ್ಷಕನ ಹಾಗೆ ಇರುವ ಬದಲಿಗೆ, ಅವುಗಳನ್ನು ಅನುಭವಿಸಿ. ನೀವು ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು, ಆಶ್ರಮದಲ್ಲೋ, ನೀವಿರುವ ಜಾಗದಲ್ಲೋ ಎಲ್ಲಾದರೂ ನೋಡಿದ್ದೀರಾ? ಯಾವಾಗಲಾದರೂ ಅದರ ಸುಂದರವಾದ ಬಣ್ಣಗಳ ಮಾರ್ಪಾಟು ಮತ್ತು ಅದರ ಬೆಳಕಿನ ಕಿರಣಗಳು ಆಕಾಶದಿಂದ ಅಡ್ಡವಾಗಿ ಹರಡುತ್ತಿರುವುದು, ಇದನ್ನೆಲ್ಲಾ ನಿಂತು ಗಮನಿಸಿದ್ದೀರಾ? ನಮ್ಮಲ್ಲಿ ಬಹಳಷ್ಟು ಜನರಿಗೆ ಸೂರ್ಯಾಸ್ತವಾಗುವುದು ಗೊತ್ತಿಲ್ಲ ಅಥವಾ ಅವರು ಸುಮ್ಮನೆ ಹೀಗೆ ಹೇಳುತ್ತಾರೆ. “ಹೌದು, ಸೂರ್ಯಾಸ್ತವಾಗುತ್ತಿದೆ; ಅದೇನೆಂದರೆ; ಹೇಗಿದ್ದರೂ ಪ್ರತಿದಿನ ಸೂರ್ಯ ಮುಳುಗುತ್ತಾನೆ.”

ನಾನು ಹೇಳುತ್ತೇನೆ ಕೇಳಿ: ಜ್ಞಾನವು ನಿಮ್ಮ ಮುಗ್ಧತೆಯನ್ನು ಹಾಳು ಮಾಡಿ ಜೀವನವನ್ನು ಮಂಕಾಗಿಸುತ್ತದೆ. ಯಾವಾಗ ನೀವು ಸೂರ್ಯೋದಯ ಅಥವಾ ಸೂರ್ಯಾಸ್ತವನ್ನು ನೋಡುತ್ತೀರೋ ಅದೊಂದು ನಿಮಗೆ ಸುಂದರವಾದ ಧ್ಯಾನವಾಗುತ್ತದೆ ಅದನ್ನು ನಿಮ್ಮ ಪ್ರಾಪಂಚಿಕ ತಿಳುವಳಿಕೆಯಿಂದ ನೋಡುವ ಬದಲು, ನೀವು ಅದರ ಒಂದು ಭಾಗವಾಗಿ ಮತ್ತು ಅದರಲ್ಲಿ ಐಕ್ಯವಾದರೆ ನೀವು ಆಚರಿಸುತ್ತಿರುವ ಈ ಪ್ರಪಂಚ ಅರಿವಿನ ಒಂದು ಕಣವಾಗಿ ನೋಡುತ್ತೀರಿ. ಆಗ ನೀವು ಈ ಆಚರಣೆಯಲ್ಲಿ ಸ್ವಯಂ ಸ್ಫೂರ್ತಿಯಿಂದ ಭಾಗವಹಿಸುತ್ತೀರ.

ನಾವು ಏನನ್ನು ಜ್ಞಾನ ಅಥವಾ ತಿಳುವಳಿಕೆ ಎಂದು ಅಂದುಕೊಂಡಿದ್ದೇವೋ ಅದು ನಮ್ಮನ್ನು ಮಂಕು ಮಾಡುತ್ತದೆ, ಮತ್ತೆ ಅದೇ ನಮ್ಮ ಒಳ ಹರಟೆಗೆ ಮತ್ತು ಚಿಂತೆಗೆ ಕಾರಣವಾದ ಪದಗಳ ಸಂಗ್ರಹ ಬೇರೇನಲ್ಲ. ನಾವು ಎಷ್ಟೋ ಪದಗಳ ಸಂಗ್ರಹ ಮಾಡಿ, ಮತ್ತು ಅದರ ಜೊತೆಯಲ್ಲೇ ಜೀವನ ಮಾಡುತ್ತಿರುವುದರಿಂದ ನಮಗೆ ಆಶ್ಚರ್ಯವೇನಿಲ್ಲ. ದೇವರೇ ನಿಮ್ಮ ಹತ್ತಿರ ಬಂದು, ನಾನೇ ದೇವರು ಎಂದು ಹೇಳಿದರೂ, ನೀವು ಹೀಗೆ ಹೇಳುತ್ತೀರ, “ಆದರೇನು?” ನಿಮ್ಮ ತಿಳುವಳಿಕೆಯಿಂದ ಎಲ್ಲವನ್ನೂ.

ನೀವು ಯಾವುದನ್ನು ಜ್ಞಾನ ಎಂದು ತಿಳಿದುಕೊಂಡಿದ್ದೀರೋ, ಅದರಿಂದ ಈ ರೀತಿ ನೀವು ಪೂರ್ಣ ವಿಶ್ವಶಕ್ತಿಯನ್ನು ಕಳೆದುಕೊಳ್ಳುತ್ತೀರ. ನೀವು ಹೆಚ್ಚು ಹೆಚ್ಚು ದುರಾಸೆ, ಚಿಂತೆ ಮತ್ತು ಭಯ ಉಂಟು ಮಾಡುವ ಪ್ರಾಪಂಚಿಕ ವಸ್ತುಗಳ ಹಿಂದೆ ಓಡುತ್ತೀರ: ಈ

ವಸ್ತುಗಳು ನಿಮ್ಮನ್ನು ನಿಮ್ಮ ಅಸ್ತಿತ್ವದ ತಿರುಳಿನಿಂದ ದೂರ ಮಾಡುತ್ತವೆ. ಅವುಗಳು ನಿಮ್ಮನ್ನು ನಿಮ್ಮೊಳಗೆ ನೋಡಿಕೊಳ್ಳುವ ಬದಲು ಹೊರಗೆ ನೋಡಿಕೊಳ್ಳುವ ಹಾಗೆ ಮಾಡುತ್ತವೆ; ಅವು ನಿಮ್ಮನ್ನು ನಿಮ್ಮ ಅಂತರ್ಬಲದ ಬದಲಿಗೆ ಪ್ರಾಪಂಚಿಕ ವಿಷಯಗಳ ಮೇಲೆ ಸಂಪೂರ್ಣವಾಗಿ ಅವಲಂಬಿಸುವ ಹಾಗೆ ಮಾಡುತ್ತವೆ; ಅವು ನಿಮ್ಮನ್ನು ಶಾಶ್ವತ ಆನಂದದ ಮೇಲೆ ಕೇಂದ್ರೀಕೃತವಾಗುವ ಬದಲಿಗೆ, ಖಿನ್ನತೆ ಮತ್ತು ಸಂತೋಷ - ಇವುಗಳ ಮಧ್ಯೆ ಹೊಯ್ದಾಡುವ ಹಾಗೆ ಮಾಡುತ್ತವೆ.

ಎಲ್ಲವೂ ಬಾಹ್ಯದಲ್ಲಿ ಮಾತ್ರ ಸಂಭವಿಸುತ್ತಿದೆ, ಮತ್ತು ತಡವಾಗುವುದಕ್ಕೆ ಮುಂಚೆ, ಹಿಡಿಯಲು ಅದರ ಹಿಂದೆ ಓಡಬೇಕು ಎಂದು ಭಾವಿಸುತ್ತೀರ. ಇದರಿಂದಲೇ ನೀವು ಯಾವಾಗಲೂ ಆತುರದಲ್ಲಿದ್ದೀರ, ಸದಾ ನಿಮ್ಮೊಳಗೆ ಒಳಹರಟೆ ನಡೆಯುತ್ತಾ, ಆದ್ದರಿಂದಲೇ ನೀವು ಈ ಇಲಿ ಪಂದ್ಯದಲ್ಲಿದ್ದೀರ. ಆದ್ದರಿಂದಲೇ ನೀವು ಯಾವಾಗಲೂ ಭವಿಷ್ಯತ್ ಕಾಲದಲ್ಲಿದ್ದೀರ, ವರ್ತಮಾನದಲ್ಲಿ ಎಂದೂ ಅಲ್ಲ.

ತಿಳುವಳಿಕೆ ಎಂಬುದು ಕೇವಲ ಮಾಹಿತಿ, ನಿಜ ಸಂಗತಿಗಳು, ಅದು ನಿರ್ಜೀವವಾದದ್ದು. ಜ್ಞಾನಾರ್ಜನೆಯನ್ನು ಮಾಡಿ, ಆದರೆ ಅದು ನಿಮ್ಮನ್ನು ಯಾವುದೇ ರೀತಿ ನಿಯಂತ್ರಿಸಲು ಬಿಡಬೇಡಿ. ಅದನ್ನು ಒಂದು ಪಕ್ಕಕ್ಕೆ ಇಟ್ಟು, ಜೀವನವನ್ನು ಒಂದು ವಿಸ್ಮಯ ಭಾವನೆಯಿಂದ ನೋಡಲು ಕಲಿಯಿರಿ. ನೋಡುವ ವಿಷಯಗಳ ಬಗ್ಗೆ ಮನಸ್ಸು ಯಾವಾಗಲೂ ತೀರ್ಮಾನಿಸಲು, ವಿಚಾರವನ್ನು ಒಗುಗ್ಗಡಿಸಲು, ತಪ್ಪು ನೀಡಲು, ವಿಚಾರಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತದೆ. ನೀವು ಹೆಚ್ಚು ಹೆಚ್ಚು ಮಾತುಗಳನ್ನು ಸಂಗ್ರಹಿಸಲು ಬಯಸುತ್ತೀರ ಅಷ್ಟೆ, ಅದರಿಂದ ಏನು ಉಪಯೋಗ?

ನಾನು ಕೆಲವು ಭಕ್ತರನ್ನು ಕೃಷ್ಣನ ಜನ್ಮಸ್ಥಳವಾದ ಮಥುರ ಕರೆದುಕೊಂಡು ಹೋಗಿದ್ದೆ. ಬಹಳ ಸುಂದರವಾಗಿತ್ತು. ನಾವು ದೋಣಿಯಲ್ಲಿ ಕುಳಿತು ಯಮುನಾ ನದಿಯ ಮೇಲೆ ಶ್ರೀ ಕೃಷ್ಣನ ಕಾಲವನ್ನು ನೆನೆಸಿಕೊಂಡು ಹೋಗಿದ್ದೆವು. ನಾನು ನನ್ನ ಆನಂದವನ್ನು ಭಕ್ತರೊಂದಿಗೆ ಹಂಚಿಕೊಳ್ಳುತ್ತಿದ್ದೆ. ಜೊತೆಯಲ್ಲಿ ಬಂದವರೆಲ್ಲ ವಿಶೇಷವಾಗಿ ಬುದ್ಧಿಯುಳ್ಳ ಜನರು, (highly intellectual) ಇಲ್ಲಿ ನಾನು ಕೃಷ್ಣನ ದಿನಗಳನ್ನು ಜ್ಞಾಪಿಸಿಕೊಳ್ಳುತ್ತ, ಅವರಿಗೆ ಎಲ್ಲಿ ರಾಸಲೀಲೆ ಸಂಭವಿಸಿದ್ದು ಎಂದು ತೋರಿಸುತ್ತ ಮತ್ತು ನಾನು ಅತಿ ಆನಂದದಿಂದ ತುಂಬಿದ್ದೆನು. ಆ ಸಮಯದಲ್ಲಿ ಭಕ್ತರು ಆ ಜಾಗದಲ್ಲಿ ಹಾಕಿರುವ ಹೆಂಚುಗಳು ಹೊಸದಾಗಿ ಹಾಕಿರುವ ಹಾಗೆ ಕಾಣುತ್ತದೆ ಎಂದು ನನ್ನ ಹತ್ತಿರ ಹೇಳಿದರು. ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ನಾನು ನನ್ನ ಜೊತೆ ಸ್ವಲ್ಪ

ಕಡಿಮೆ ಬುದ್ಧಿಯುಳ್ಳ ಮತ್ತು ವಿಸ್ಮಯಗೊಳ್ಳುವಂಥವರನ್ನು ಕರೆದುಕೊಂಡು ಬರಬೇಕಾಗಿತ್ತು. ಆಗಾದರೂ, ಅವರ ಜೊತೆ ನನ್ನ ಅತಿಶಯಾನಂದವನ್ನು ಹಂಚಿಕೊಳ್ಳುತ್ತಿದ್ದೆ ಎಂದು ಅವರಿಗೆ ಹೇಳಿದೆ.

ದಿನದ ಕೊನೆಯಲ್ಲಿ ತಿಳುವಳಿಕೆಯು ನಿರ್ಜೀವವಾಗಿರುತ್ತದೆ. ಹೇಗಾದರೂ ಜನರು ಜ್ಞಾನವನ್ನು ಅವರ ಯೋಗ್ಯತೆಯನ್ನು ಅಳೆಯುವುದಕ್ಕೆ ಉಪಯೋಗಿಸುತ್ತಾರೆ. ಹೆಚ್ಚು ಜ್ಞಾನವನ್ನು ನೀವು ಪಡೆದಷ್ಟೂ ಜನರು ನಿಮ್ಮನ್ನು ಹೆಚ್ಚು ಗೌರವಿಸುತ್ತಾರೆ.

ಜ್ಞಾನದಿಂದಲೇ ನೀವು ಸತತವಾಗಿ ನಿಮ್ಮ ಮನಸ್ಸಿನ ಜೊತೆ ಜೀವಿಸುತ್ತೀರ. ನೀವು ವಿಶ್ವಶಕ್ತಿಯನ್ನು ನಿಮ್ಮ ಮನಸ್ಸಿನ ಮೂಲಕ ಖಂಡಿತ ಅರಿಯಲಾರಿರಿ. ನೀವು ವಿಶ್ವಶಕ್ತಿಯನ್ನು ಕೇವಲ ನಿಮ್ಮ ಹೃದಯದ ಮುಖಾಂತರ ಮಾತ್ರ ಅರಿಯಬಲ್ಲಿರಿ. ಕೇವಲ ಪ್ರೀತಿಯಿಂದ ಮಾತ್ರವೇ ನೀವು ಪ್ರಪಂಚ ಶಕ್ತಿಯನ್ನು ಅರಿಯಬಲ್ಲಿರಿ. ಮತ್ತು ಮನಸ್ಸು ಪ್ರೀತಿಯನ್ನು ಅರಿಯದು; ಕೇವಲ ಹೃದಯವು ಮಾತ್ರ ಪ್ರೀತಿಯನ್ನು ಬಲ್ಲದು. ಮನಸ್ಸಿಗೆ ಲೆಕ್ಕ ಹಾಕಿದ ಪ್ರೀತಿಯು ಮಾತ್ರವೇ ಗೊತ್ತು ಮತ್ತು ಇದು ಪ್ರೀತಿಯೇ ಅಲ್ಲ. ಇದು ನಿಮ್ಮನ್ನು ಮೇಲ್ವೆನ ಹಂತದಲ್ಲಿ ತೃಪ್ತಿಗೊಳಿಸಲು ಇರುವ ಕೇವಲ ಮತ್ತೊಂದು ಲೆಕ್ಕಾಚಾರ.

ಆಧ್ಯಾತ್ಮಿಕತೆ ಎಂಬುದು ಮನುಷ್ಯ ಮತ್ತು ವಿಶ್ವಶಕ್ತಿಯ ನಡುವಣ ಇರುವ ಪರಿಪೂರ್ಣ ಸಾಮರಸ್ಯ ಮತ್ತು ಆಳವಾದ ಸಂಬಂಧವನ್ನು ಅರ್ಥಮಾಡಿಕೊಳ್ಳುವುದೇ ಆಗಿದೆ. ನೀವು ಇದನ್ನು ಅರ್ಥಮಾಡಿಕೊಂಡು ನಿಮ್ಮ ಇಡಿಯ ಹೋರಾಟವನ್ನು ಬಿಟ್ಟುಬಿಟ್ಟರೆ, ನೀವು ಒಂದು ನದಿಯಂತೆ ಸುಮ್ಮನೆ ಹರಿಯುತ್ತೀರ. ಆ ನದಿಯು ಅದರದೇ ಜಾಡನ್ನು ಹಿಡಿದು ಬೃಹತ್ ಸಾಗರವನ್ನು ಸೇರುತ್ತದೆ. ನೀವು ಕೇವಲ ಬಿಟ್ಟು ಬಿಡಬೇಕಷ್ಟೆ.

ನೀವು ಒಂದು ಮೂಲೆಯಲ್ಲಿ ಕುಳಿತುಕೊಂಡಿರಬಹುದೆಂದೂ ಮತ್ತು ಯಾವುದೋ ಒಂದು ನದಿಯು ನಿಮ್ಮನ್ನು ಸೆಳೆದುಕೊಂಡು ಹೋಗುತ್ತದೆಂದೂ ನಾನು ಅರ್ಥೈಸುತ್ತಿಲ್ಲ. ಇಲ್ಲ! ನೀವು ಕುಸಿಯದ ವಿಶ್ವಾಸದಿಂದ ಮತ್ತು ನಿಮ್ಮ ಯೋಗಕ್ಷೇಮವನ್ನೂ ಕೂಡ ನೋಡಿಕೊಳ್ಳುತ್ತಿರುವ ಉಚ್ಛ್ವಾಸ ವಿಶ್ವಾಸವನ್ನು ನಡೆಸುತ್ತಿರುವ ವಿಶ್ವವನ್ನು ನಡೆಸುತ್ತಿರುವ ಒಂದು ಜೀವಬಲ (Life force) ಎಂಬುದೊಂದು ಇದೆಯೆಂಬ ಭಾವನೆಯಿಂದ ನಿಮ್ಮ ಕೆಲಸವನ್ನು ಮಾಡಿ ಅಷ್ಟು ಸಾಕು.

ಸುಮ್ಮನೆ ಮೇಲಧಿಕಾರಿಗೆ ಜವಾಬ್ದಾರಿಯನ್ನು ದಾಟಿಸಿ ವಿರಮಿಸಿರಿ. ಆಗ ನೀವು ಒಬ್ಬ ರಾಜನಂತೆ ಜೀವಿಸುತ್ತೀರ! ಆಗ ನೀವು ವಿಶ್ವಶಕ್ತಿಯು ನಿಮ್ಮನ್ನು ನೋಡಿಕೊಳ್ಳುವುದನ್ನು, ನಿಮ್ಮ ಮತ್ತು ವಿಶ್ವಶಕ್ತಿಯ ಸಾಮರಸ್ಯವನ್ನು ಹರಿಯುವ ನದಿಯ ಅನುರೂಪದ ಹಾಡನ್ನು ಕೇಳುವ ರೀತಿ ಕೇಳಲು ಪ್ರಾರಂಭಿಸುತ್ತೀರ. ಈ ಸಾಮರಸ್ಯದೊಂದಿಗೇ ನೀವು ಶ್ರುತಿಗೂಡಿಸಬೇಕಿರುವುದು. ಆಗ, ನಿಮ್ಮೆಲ್ಲಾ ಚಿಂತೆಗಳೂ ಮಾಯವಾಗುವುದು!

ವಿಶ್ವಶಕ್ತಿಯು ನಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿರುವ ಬಗ್ಗೆ ರುಜುವಾತು ಇಲ್ಲದಿರುವುದೇನೋ ಸರಿ. ಕೆಲವು ಸಂಗತಿಗಳನ್ನು ರುಜುವಾತು ಪಡಿಸಲಾಗದು. ನೀವು ಈ ದಿಕ್ಕು ಪೂರ್ವ ಎಂದು ಸಾಧಿಸಬಲ್ಲಿರಾ? ಇಲ್ಲ! ನೀವು ಸೂರ್ಯೋದಯ ಮತ್ತು ಸೂರ್ಯಾಸ್ತಮದ ಪ್ರಕೃತಿ ಘಟನೆಗಳನ್ನು ಸಾಧಿಸಬಲ್ಲಿರಾ? ಇಲ್ಲ! ನೀವು ಕೇವಲ ಅದನ್ನು ಅನುಭವಿಸಬಹುದು. ನೀವು ರುಜುವಾತು ಪಡಿಸಲಾಗದುದಕ್ಕೆ ಅದನ್ನು ಖಂಡಿಸಬಲ್ಲಿರಾ? ನೀವು ವಿಜ್ಞಾನದಿಂದ ಪ್ರತಿದಿನ ಸೂರ್ಯನು ಮುಳುಗುವುದನ್ನು ಮತ್ತು ಉದಯಿಸುವುದನ್ನು ತಡೆಗಟ್ಟಬಲ್ಲಿರಾ?

ಅರ್ಥಮಾಡಿಕೊಳ್ಳಿ: ವಿಶ್ವಶಕ್ತಿಯೊಂದೇ ತರ್ಕಾತೀತವಾದದ್ದು. ನೀವು ತರ್ಕದಿಂದ ವಿಶ್ವಶಕ್ತಿಯು ರುಜುವಾತು ಪಡಿಸಿದರೆ, ಆಗ ತರ್ಕವು ವಿಶ್ವಶಕ್ತಿಗಿಂತಲೂ ದೊಡ್ಡದಂದಾಗುತ್ತದೆ, ಮತ್ತು ಇದು ಸಾಧ್ಯವೇ ಇಲ್ಲ!

ಒಬ್ಬ ವ್ಯಕ್ತಿಯು ನನ್ನನ್ನು ಕೇಳಿದನು "ಸ್ವಾಮೀಜಿ, ನಾನು ಆಧ್ಯಾತ್ಮಿಕನಾಗಲು ಹಿಂದುವಾಗಬೇಕೇ'' ಎಂದು. ಆ ಪ್ರಶ್ನೆಯಿಂದ ನನಗೆ ಆಘಾತವಾಯಿತು! ನಾನು ಅವನಿಗೆ ಹಿಂದುವಾಗುವ ಅವಶ್ಯಕತೆ ಇಲ್ಲ ಅಂದೆನು. ನೋಡಿ, ಸ್ಪಷ್ಟವಾಗಿ ತಿಳಿಯಿರಿ: ನಿಮ್ಮ ಅರಿವನ್ನು ನಿಗ್ರಹಿಸುವ ಯಾವುದೇ ಸಂಗತಿಯೂ ನಿಚ್ಚಳವಾಗಿ ಆಧ್ಯಾತ್ಮಿಕತೆಗೆ ಸಂಬಂಧಿಸಿದುದಲ್ಲ. ಆಧ್ಯಾತ್ಮಿಕತೆಯು ಯಾವಾಗಲೂ ಎಲ್ಲವನ್ನೂ ಸುತ್ತುವರಿದಿರುತ್ತದೆ.

ನಿಮ್ಮ 'ನಾನು ಇದು' ಮತ್ತು 'ನಾನು ಅದು' ಎಂಬ ಎಲ್ಲ ಅನಿಸಿಕೆಗಳನ್ನು ಬಿಟ್ಟುಬಿಡಿ. ನಿಮ್ಮ ಬದುಕನ್ನು ತೆರೆದಿಟ್ಟುಕೊಳ್ಳಿ. ಇದು ಆಧ್ಯಾತ್ಮಿಕತೆಯ ತಳಹದಿ. ಇದು ಈ ರೀತಿ: ಒಂದು ಕೋಣೆಯಲ್ಲಿ ಸದಾ ಬಂಧಿತನಾಗಿರುವ ವ್ಯಕ್ತಿಯು ಹೊರಗಿನ ಗಾಳಿ ಮತ್ತು ಮೇಲುಗಾಳಿಯ ಬಗ್ಗೆ ತಿಳಿದಿರುವುದಿಲ್ಲ. ಅವನು ಅಂತಹ ವರ್ಗದ ಆಲೋಚನೆಗಳನ್ನು ಹೊಂದಿರುತ್ತಾನೆ. ಇದೇ ರೀತಿಯ ನಿರ್ಬಂಧಗಳನ್ನು ನಿಮ್ಮ ಮೇಲೆ ವಿಧಿಸಿಕೊಂಡರೆ,

ನಿಮಗೆ ನಿಮ್ಮೊಳಗಿರುವ ಅನಂತ ಪ್ರೀತಿ ಮತ್ತು ಅನುಕಂಪವು ಗೊತ್ತಾಗುವುದಿಲ್ಲ. ನೀವು ಕೇವಲ ಚಿಂತೆ ಮತ್ತು ದೂರುವುದನ್ನು ಮಾಡುತ್ತಿರುತ್ತೀರ. ನೀವು ವಿಕಾಸವಾಗುವುದೇ ಇಲ್ಲ.

ಬುದ್ಧನನ್ನು ಒಮ್ಮೆ ಕೇಳಿದರು, ಅನುಕಂಪವನ್ನು ಹೊಂದಿರದ ವ್ಯಕ್ತಿಗಳಿಗೆ ಎಂತಹ ನರಕವನ್ನು ಕೊಡಲಾಗುವುದು ಎಂದು. ಅವನು ಉತ್ತರಿಸಿದನು, "ನೀವು ಅವರನ್ನು ನರಕಕ್ಕೆ ಹಾಕಲಾರಿರಿ, ಏಕೆಂದರೆ ಅವರಾಗಲೇ ನರಕದಲ್ಲಿದ್ದಾರೆ!" ಎಂದು. ನೀವು ನರಕದಲ್ಲಿದ್ದಾಗ ಮಾತ್ರವೇ, ಇತರರಿಗೆ ನೀವು ನರಕವನ್ನು ಸೃಷ್ಟಿಸಬಲ್ಲಿರಿ, ಏಕೆಂದರೆ ನಿಮ್ಮಲ್ಲಿ ಏನಿದೆಯೋ ಅದನ್ನೇ ನೀವು ನೀಡಬಲ್ಲಿರಿ.

ಒಂದು ಚಿಕ್ಕ ಕಥೆ:

ಒಬ್ಬ ತಾಯಿ ಮತ್ತು ಮಗ ಬಿಸಿಯಾಗಿ ವಾಗ್ವಾದ ಮಾಡುತ್ತಿದ್ದರು. ತಾಯಿಯು ಮಗನನ್ನು ಕೇಳಿದಳು, "ನಿನಗೆ ಏನಾದರೂ ಮೆದುಳು ಇದೆಯೇನು?" ಎಂದು.

ಮಗನು ನಕ್ಕನು.

ತಾಯಿಯು ಅವನೇಕೆ ನಗುತ್ತಿರುವನೆಂದು ಕೇಳಿದಳು.

ಮಗನು ಉತ್ತರಿಸಿದನು "ನಿಮ್ಮಲ್ಲಿ ಏನಾದರೂ ಇಲ್ಲದಿದ್ದರೆ ಮಾತ್ರವೇ ನೀವು ಅದಕ್ಕಾಗಿ ಇತರರನ್ನು ಕೇಳುವುದು!" ಎಂದು

(ನಗೆ!)

ನಾವೇ ಶಾಂತವಾಗಿಲ್ಲದಿದ್ದರೆ, ನಾವು ಮಿಕ್ಕವರ ಶಾಂತಿಯನ್ನು ಕೆಡಿಸುತ್ತೇವೆ.

ನಾವು ನಮ್ಮ ಮನಸ್ಸಿನ ಜೊತೆ ಪುನಃ ಪುನಃ ಕೆಲಸ ಮಾಡಿ ಯಾವುದು ನಮಗೆ ಸಂತೋಷವನ್ನೋ ಅಥವಾ ಪರಮಾನಂದವನ್ನೋ ಕೊಡುವುದು ಎಂದು ನೋಡಬೇಕು. ಸ್ಪಷ್ಟವಾಗಿರಲಿ, ಸಂತೋಷವು ಪರಮಾನಂದಕ್ಕಿಂತ ಭಿನ್ನವಾದುದು. ಪರಮಾನಂದವು ನಿಮ್ಮೊಳಗಿನ ಒಂದು ಸುಂದರವಾದ ಮತ್ತು ತೀವ್ರವಾದ ಅನುಭವವನ್ನು ಕೊಟ್ಟು ನಿಮ್ಮನ್ನು ಬೇರೆಯದೇ ಅಸ್ತಿತ್ವದ ಸಮತಲ (plane) ದಲ್ಲಿ ಇರುವ ಭಾವನೆಯನ್ನುಂಟು ಮಾಡುತ್ತದೆ. ಸಂತೋಷ ಅಥವಾ ಕೇವಲ ಸುಖ ಇರುವ ಬಹಳ ಸರ್ತಿ ಹೊರ ಪ್ರಪಂಚದ ವಸ್ತುಗಳಿಗೆ ಸಂಬಂಧಿಸಿದ್ದು ನಮ್ಮೊಳಗೆ ನಿರಂತರವಾಗಿ ನೋವನ್ನು ಉಂಟು ಮಾಡುತ್ತದೆ.

ಸಂತೋಷವು ಸಾಪೇಕ್ಷವಾದದ್ದು (relative) ಆದರೆ ಪರಮಾನಂದವು ನಿರಪೇಕ್ಷವಾದದ್ದು (absolute) ಪರಮಾನಂದವೆಂಬುದು ಒಂದು ರೀತಿಯಲ್ಲಿ ವಿರುದ್ಧವಿಲ್ಲದೇ ಇರುವಂತಹದು. ನೀವು ಸಂತೋಷದಲ್ಲಿದ್ದರೆ, ದುಃಖವು ಅಲ್ಲಿಯೇ ಮೂಲೆಯಲ್ಲಿರುತ್ತದೆ. ಬಹಳ ಸಂತೋಷವು ಇರುವ ಕಡೆ, ನೀವು ನೋವಿನ ಬಡಿಗಲ್ಲಿನ (anvil) ಮೇಲೆ ಇರುತ್ತೀರ. ಆದರೆ ನೀವು ಪರಮಾನಂದದಲ್ಲಿ ಇದ್ದರೆ, ನೀವು ಸುಮ್ಮನೆ ಇದ್ದೀರ, ಮತ್ತು ಅದಕ್ಕೆ ವಿರುದ್ಧಾತ್ಮಕವಾದುದು ಯಾವುದೂ ಇಲ್ಲ. ಸಂತೋಷ ಮತ್ತು ಸುಖ ಎಂಬುದು ಲೋಲಕಗಳಂತೆ (pendulums) ಅವುಗಳು ಹೊಯ್ದಾಡುತ್ತಾ ಇರಲೇಬೇಕು ಮತ್ತು ಒಂದು ತುದಿಯನ್ನು ತಲುಪಿ ಮತ್ತೆ ಹಿಂತಿರುಗಿ ಬರಲೇಬೇಕು. ಆದರೆ ಪರಮಾನಂದವು ಒಂದು ಲೋಲಕವಲ್ಲ; ಅದು ದ್ವಂದ್ವಕ್ಕೆ ಅತೀತವಾದುದು; ಅದು ಹೊಯ್ದಾಡುವುದೇ ಇಲ್ಲ. ಅದು ಕೇವಲ ಇದೆ.

ಪದೇ ಪದೇ, ನಿಮ್ಮ ಮನಸ್ಸನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿ ಮತ್ತು ಯಾವುದು ನಿಮಗೆ ಸಂತೋಷವನ್ನು ಕೊಡುವುದು ಎಂದು. ನಂತರ, ಅದನ್ನು ಅನುಸರಿಸಲು ಪ್ರಾರಂಭಿಸಿ. ಒಮ್ಮೆ ಅದ್ಯಾವುದೋ ನಿಮ್ಮೊಳಗೆ ನೀವು ನಿಮ್ಮೊಳಗೆ ಶಾಶ್ವತ ಸಂತೋಷದತ್ತ ಹೋಗುತ್ತಿರುವಿರೆಂದು ಹೇಳಿದರೆ, ಒಮ್ಮೆ ನಿಮ್ಮೊಳಗೆ ದೃಢ ನಂಬಿಕೆಯು ಉಂಟಾದರೆ, ನಿಮ್ಮ ಸ್ಥಾನವನ್ನು ಪುನರ್ ರೂಪಿಸಿಕೊಳ್ಳಿ ಮತ್ತು ನಿಮ್ಮ ಬದುಕಿಗೆ ಸಂಬಂಧಪಟ್ಟ ವಿಚಾರಗಳನ್ನು ಸರಿಪಡಿಸಿಕೊಂಡು ಪರಮಾನಂದದತ್ತ ತಿರುಗಿಕೊಳ್ಳಿ. ನಿಮ್ಮ ಪ್ರತಿಯೊಂದು ಕಾರ್ಯ ಅಥವಾ ಆಲೋಚನೆಯು ಈ ಪರಮಾನಂದವನ್ನು ಅನುಭವಿಸುವುದರತ್ತ ಇರಬೇಕು. ಆಗ ಚೈತನ್ಯವು ವ್ಯಯಿಸಿದ್ದು ಚೈತನ್ಯವನ್ನು ಸಂಪಾದಿಸಿದಂತೆ ಇರುತ್ತದೆ. ನೀವು ಸದಾಕಾಲವೂ ಚೈತನ್ಯದಾಯಕರಾಗಿ ಇರುತ್ತೀರ.

ಹಲವು ಜನರು ಹೇಳುತ್ತಾರೆ ತಮ್ಮನ್ನು ಚಿಂತೆಗಳಿಲ್ಲದೆ ಶಾಂತಿಯಿಂದ ಇರಲು ಬಿಟ್ಟುಬಿಡಬೇಕೆಂದು. ಅವರು ಮಾತನಾಡುತ್ತಿರುವ ಶಾಂತಿಯು ಜೀವಂತ ಶಾಂತಿಯಲ್ಲ; ಅದು ನಿರ್ಜೀವ ಶಾಂತಿ. ಜೀವನದ ವಿವಿಧ ಮನೋಭಾವನೆಗಳನ್ನು ನಿಭಾಯಿಸುವುದು ಗೊತ್ತಿಲ್ಲದಿರುವ ಪರಿಣಾಮವಾದ ಅದು ನಿರ್ಜೀವ ಮತ್ತು ಸುಪ್ತಾವಸ್ಥೆಯಲ್ಲಿರುವ (dermant) ಶಾಂತಿ. ಅದು ಅವರು ಹಂಬಲಿಸುತ್ತಿರುವ ಶಾಂತಿ, ಏಕೆಂದರೆ ಜೀವನವು ಅವರಿಗೆ ನಿಭಾಯಿಸಲು ಅತಿಯಾಗಿದೆ. ಇದು 'ದ್ರಾಕ್ಷಿ ಹುಳಿ' ಎಂದು ಹೊರಟು ಹೋಗುವ ಹಾಗೆ ಇದೆ.

ನಿಜವಾದ ಶಾಂತಿ ಎಂಬುದು ಹೊರಗಡೆ ಏನೇ ಸಂಭವಿಸುತ್ತಿದ್ದರೂ ಸಹ ಸದಾಕಾಲವೂ ನಿಮ್ಮೊಳಗೇ ಇರುವಂತಹದು; ನೀವು ನಿಮ್ಮ ಬಗ್ಗೆ ಸಂತೋಷದಿಂದ ಇರುತ್ತೀರ; ನೀವು ಯಾರನ್ನೇ ಆದರೂ, ಬಂದು ಸಾಗಿ ಹೋಗುವ ಮೃದು ಗಾಳಿಯು ನಿಮ್ಮನ್ನು ಮುತ್ತಿಕ್ಕಿ ಮುಂದೆ ಸಾಗುವಂತೆ, ಸುಮ್ಮನೆ ನೋಡುತ್ತೀರ. ವ್ಯಕ್ತಿಯು ಅಥವಾ ವಸ್ತುವು ಏನೇ ಆಗಿದ್ದರೂ ಸಹ, ನಿಮ್ಮ ಶಾಂತಿಯು ನಿಮ್ಮ ಸಂಗಡವೇ ಇರುತ್ತದೆ. ಜನಗಳು ಅಥವಾ ಸಂದರ್ಭಗಳು ಯಾವುದೇ ರೂಪದಲ್ಲಿ ಅದನ್ನು ಬದಲಾಯಿಸುವುದಿಲ್ಲ.

ಶಾಂತಿ ಎಂಬುದು ನಿಮ್ಮೊಳಗೇ ಅನುಭವಿಸಲಾಗುವ ಪರಮಾನಂದ. ಶಾಂತಿಯು ಪರಮಾನಂದದಿಂದ ಹುಟ್ಟಿದ್ದರೆ, ಅದು ನಿಮ್ಮನ್ನೂ ಮತ್ತು ಇತರರನ್ನೂ ಶಾಂತಿಯ ಸ್ಥಿತಿಯಲ್ಲಿ ಇಡುತ್ತದೆ. ಒಮ್ಮೆ ನೀವು ಈ ಶಾಂತಿಯನ್ನು ನಿಮ್ಮಲ್ಲಿ ಕಂಡುಕೊಂಡರೆ, ನೀವು ಈ ರೀತಿ, “ನನ್ನನ್ನು ಶಾಂತಿಯಿಂದಿರಲು ಬಿಟ್ಟುಬಿಡಿ, ನಾನು ಶಾಂತಿಯಿಂದಿರಬೇಕು” ಎಂದು ಮುಂತಾಗಿ ಹೇಳುವುದಿಲ್ಲ. ನೀವು ಈ ರೀತಿ ಹೇಳಿದ ಕ್ಷಣವೇ, ನೀವು ಮಿಕ್ಕವರ ದಯೆಯಿಂದ ಶಾಂತಿಯಿಂದಿರಲು ಪ್ರಯತ್ನಿಸುತ್ತಿದ್ದೀರೆಂದು ಅರ್ಥ ಮತ್ತು ಇದು ಶಾಂತಿ ಅಲ್ಲವೇ ಅಲ್ಲ.

ಶಾಂತಿ ಎಂಬುದು ನಿಮ್ಮೊಳಗೆ ಅಭಿವೃದ್ಧಿ ಹೊಂದುತ್ತಾ ನಿಮ್ಮನ್ನು ನಿಮ್ಮ ಬಗ್ಗೆ ಸಂತೋಷದಿಂದ ಇರುವ ಹಾಗೆ ಮಾಡುವ ಒಂದು ಘನವಾದ ಕೇಂದ್ರ. ಹೊರಗಡೆ ಏನೇ ಸಂಭವಿಸಿದರೂ ಅದು ಕೇವಲ ಮತ್ತೊಂದು ಘಟನೆಯಂತೆ ಅಷ್ಟೆ. ಅದನ್ನು ನಿಮ್ಮ ಶಾಂತಿಯೊಡನೆ ಸಂಬಂಧ ಕಲ್ಪಿಸುವುದೂ ಇಲ್ಲ. ಒಂದು ಘಟನೆಯನ್ನು ನಿಮ್ಮ ಸಂತೋಷದೊಡನೆ ಸಂಬಂಧ ಕಲ್ಪಿಸಿದ ಕ್ಷಣವೇ, ಸ್ಪಷ್ಟವಾಗಿ ತಿಳಿಯಿರಿ, ನಿಮ್ಮೊಳಗೆ ನಿಜವಾದ ಶಾಂತಿಯು ಸಂಭವಿಸಿಲ್ಲ ಎಂದು.

ನಮ್ಮ ವಾರ್ಷಿಕ ಹಿಮಾಲಯ ಯಾತ್ರೆಯಲ್ಲಿ, ಕೆಲವರು ಕಷ್ಟಗಳ ಮತ್ತು ಅನಾರೋಗ್ಯಕರ ಸ್ಥಿತಿಗಳ ಬಗ್ಗೆ ದೂರಿದರು. ಹಿಮಾಲಯದಲ್ಲಿ ಇರುವುದೇ ಎಷ್ಟೋ ಜನರಿಗೆ ಸಿಗದಂತಹ ಒಂದು ಆಶೀರ್ವಾದ ಮತ್ತು ಅವರು ಕೇವಲ ಸಂತೋಷವನ್ನು ಅನುಭವಿಸಬೇಕು ಮತ್ತು ಮಿಕ್ಕೆಲ್ಲವನ್ನೂ ಕ್ಷುಲ್ಲಕ ಎಂದು ಬಿಟ್ಟುಬಿಡಲು ನಾನು ಜನರಿಗೆ ಅನೇಕ ಬಾರಿ ಹೇಳಿದ್ದೇನೆ. ಹೇಗೋ, ಜನಗಳು ತತ್‌ಕ್ಷಣವೇ ಉದ್ವೇಗಗೊಂಡು ಇವುಗಳ ಬಗ್ಗೆ ಮಾತನಾಡುತ್ತಾರೆ.

ಚಿಂತೆಯಿಲ್ಲದೆ ಬದುಕುವುದು

ಇಂತಹ ಒಂದು ಸಂದರ್ಭದಲ್ಲಿ, ಇಬ್ಬರು ಚಿಕ್ಕ ಭಕ್ತರು ನನಗೆ ಹೇಳುತ್ತಿದ್ದರು. “ಸ್ವಾಮೀಜಿ, ಈ ಜನರು ಕಷ್ಟಗಳ ಬಗ್ಗೆ ಮಾತನಾಡುತ್ತಾ ಅವುಗಳನ್ನು ಕುರಿತು ತಲೆ ಕೆಡಿಸಿಕೊಳ್ಳದಂತೆ ಹೇಳುತ್ತಾರೆ, ಆದರೆ ನಾವು ಈ ಕಷ್ಟಗಳನ್ನು ನೋಡಲೂ ಆಗುತ್ತಿಲ್ಲ! ನಾವು ಸದಾಕಾಲವೂ ಕೇವಲ ಸಂತೋಷವನ್ನು ಅನುಭವಿಸುತ್ತಿದ್ದೇವೆ!’’ ಎಂದು. ನೀವು ನಿಮ್ಮ ಬಗ್ಗೆ ತುಂಬಾ ಸಂತುಷ್ಟರಾಗಿರುವಾಗ, ಅಲ್ಲಿ ‘ನನ್ನ ಶಾಂತಿ’ ಮತ್ತು ‘ನಿಮ್ಮ ಶಾಂತಿ’ ಎಂಬುದೇ ಇರುವುದಿಲ್ಲ ಎಂದು ನಾನು ಹೇಳಿದಾಗ ಅನ್ವಯ ಅರ್ಥ. ಅದು ಏನೇ ಆದರೂ, ಇದೆ ಅಷ್ಟೆ. ನೀವು ಇದ್ದೀರ, ಅದು ಇದೆ ಮತ್ತು ಯಾವುದೂ ಸಂಬಂಧ ಹೊಂದಿಲ್ಲ. ನೀವು ಪ್ರೀತಿಯ ಮತ್ತು ಪರಮಾನಂದದ ಅದೇ ಸ್ಥಿತಿಯಲ್ಲಿ ಹಾಗೆಯೇ ಸಾಗುವಿರಿ.

ದೂರುತಿರುವುದು ಚಿಂತೆಯ ಸಂಬಂಧಿತ, ಏಕೆಂದರೆ ನೀವು ಚಡಪಡಿಸುತ್ತಾ ಪದಗಳೊಂದಿಗೆ ಸಿಕ್ಕಿಬಿದ್ದಿದ್ದೀರ, ನೀವು ಹಿಮಾಲಯದಲ್ಲಿ ಕೇವಲ ಒಂದು ಚಿಕ್ಕ ನೀರಿನ ಹೂಜಿ ಮತ್ತು ಎರಡು ಜೊತೆ ಬಟ್ಟೆಗಳೊಂದಿಗೆ ಅಲೆದಾಡುತ್ತಿರುವ ಸಾಧುಗಳನ್ನು ನೋಡಿದರೆ, ನಿಜವಾಗಿಯೂ ನಿಮಗೆ ನಿಮ್ಮ ಬಳಿ ಇರುವುದಕ್ಕಿಂತಲೂ ಇನ್ನೂ ಹೆಚ್ಚಿನ ಅವಶ್ಯಕತೆ ಇಲ್ಲವೆಂದೂ, ಮತ್ತು ಆದ್ದರಿಂದ ದೂರು ಹೇಳಲು ಏನೂ ಹೇಳಲು ಇಲ್ಲವೆಂದೂ ತಿಳಿಯುತ್ತದೆ.

ನೀವು ಏಕೆ ದೂರುತೀರ? ನಿಜವಾಗಿಯೂ ದೂರುತ್ತಿರುವವರು ಬಹಳ ವಸ್ತುಗಳನ್ನು ಹೊಂದಿರುವ ಧನ್ವಂತರು; ಅವರಿಗೆ ಏನು ಮಾಡಲೂ ತೋಚುವುದಿಲ್ಲ, ಆದ್ದರಿಂದ ಅವರು ದೂರುತ್ತಾರೆ! ನಿಮ್ಮಲ್ಲಿ ಸಾಕಷ್ಟಿದ್ದು ಮತ್ತು ಬದುಕುಳಿಯುವುದಕ್ಕೆ ಯಾವುದೇ ದೊಡ್ಡ ಹೋರಾಟವಿಲ್ಲದ್ದಿರೆ, ನಿಮಗೆ ದೂರಲು ಸಮಯವು ಸಿಕ್ಕುತ್ತದೆ. ನೀವು ಬದುಕುಳಿಯುವುದೇ ಪೇಚಿನಲ್ಲಿದ್ದಾಗ, ನೀವು ನಿಮ್ಮ ಕಾರ್ಯದಲ್ಲಿ ಮಗ್ನರಾಗಿರುವಿರಿ ಮತ್ತು ದೂರುತ್ತಿರುವುದಿಲ್ಲ, ಏಕೆಂದರೆ ನೀವು ದೂರಲು ಪ್ರಾರಂಭಿಸಿದರೆ, ಯಾರು ನಿಮ್ಮ ಕೆಲಸವನ್ನು ಮಾಡುವವರು?!

ಹಿಮಾಲಯದಲ್ಲಿ ಅತಿ ಸಮರ್ಥನಾಗಿರುವವನೇ ಬದುಕುಳಿಯುವವನು. ನೀವು ಸದಾಕಾಲವೂ ಎಚ್ಚರದಿಂದ ಮತ್ತು ಅರಿವಿನಿಂದ ಇರಬೇಕು. ಯಾವ ಸಮಯದಲ್ಲಿಯಾದರೂ ನಿಮ್ಮ ಮೇಲೆ ಕವಿಯುವ ಭೂ ಕುಸಿತಗಳಿರಬಹುದು; ಹಠಾತ್ತನೆ ಹಿಮಪಾತವಾಗಿ ನಿಮ್ಮ ಪರಿಚಿತ ಹಾದಿಗಳನ್ನು ಮುಚ್ಚಿಬಿಡಬಹುದು; ಆಹಾರ ಮತ್ತು ಇತರ ಸಾಮಗ್ರಿಗಳು ಇದ್ದಕ್ಕಿದ್ದ ಹಾಗೆ ಅಭಾವದಿಂದಾಗಿ ಮಿತವಾಗಿ ಸಿಕ್ಕುತ್ತಿರಬಹುದು, ಮುಂತಾಗಿ ಇದೇ ತರಹ.

ಅಲ್ಲಿರುವ ಜನರನ್ನು ಅಂತಹ ಸನ್ನಿವೇಶಗಳಲ್ಲಿ ನೀವು ಗಮನಿಸಬೇಕು. ಅವರು ಅಷ್ಟೊಂದು ಮುಗ್ಧರು, ಯಾವುದನ್ನೇ ಗಣನೆಗೆ ತೆಗೆದುಕೊಳ್ಳದೆ ಅಥವಾ ದೂರುಗಳಿಲ್ಲದೆ ಜನಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾ ಬೆಚ್ಚಗಿರುವಂತೆ ಮಾಡುತ್ತಾರೆ. ಅವರಿಗೆ ಯಾವುದೂ ಇಲ್ಲವೆಂದು ಕಾಣಿಸುವುದಿಲ್ಲ; ಅವರು ಕೇವಲ ಸಂತಸದಿಂದ ಬದುಕುತ್ತಾರೆ ಅಷ್ಟೆ. ಅವರು ತಮ್ಮ ಚಟುವಟಿಕೆಗಳನ್ನು ತಮ್ಮ ಸುತ್ತ ಮುತ್ತ ನಡೆಯುತ್ತಿರುವ ಸಂಗತಿಗಳಿಗನುಗುಣವಾಗಿ ಪುನರ್ ಹೊಂದಿಸಿಕೊಳ್ಳುತ್ತಾರೆ. ಅವರು ಚಿಂತಿಸುವುದಿಲ್ಲ ಮತ್ತು ದೂರುವುದಿಲ್ಲ.

ನಿಮಗೆ ಲಭ್ಯವಿರುವುದನ್ನೇ ಉಪಯೋಗಿಸಿಕೊಂಡು ಯಾಕೆ ನೀವು ಮುಂದೆ ಸಾಗುತ್ತಿರಬಾರದು? ಇಲ್ಲಿಯೇ ಹುಟ್ಟಿ ಬೆಳೆದ ಜನಗಳು ಅಮೆರಿಕೆಗೆ ಹೋಗಿ ಹಿಂತಿರುಗಿದಾಗ, ಭಾರತ ದೇಶದ ಸ್ಥಿತಿಗತಿಗಳ ಬಗ್ಗೆ ಸ್ನಾನದ ಕೊಠಡಿಯಿಂದ ಮೊದಲುಗೊಂಡು ರಸ್ತೆ ಮುಂತಾದವುಗಳ ಬಗ್ಗೆ ದೂರುತ್ತಿರುತ್ತಾರೆ. ಇದು ತೋರಿಸುವುದೇನೆಂದರೆ ಈ ಎಲ್ಲಾ ಅನುಭವಗಳೂ ನಿಮಗೆ ಹೆಚ್ಚಿನ ವೈಶಾಲ್ಯವನ್ನು ಕೊಟ್ಟು ನೀವು ಇರಬೇಕಾದ ರೀತಿ ಅರಳುವಂತೆ ಮಾಡುವ ಬದಲು ಗೊಣಗುತ್ತಾ ದೂರುತ್ತಾ ಇರುವ ಹಾಗೆ ಮಾಡಿವೆ.

ನೀವು ಆಳವಾಗಿ ಅರ್ಥಮಾಡಿಕೊಂಡರೆ, ನೀವು ದೂರುತ್ತಾ ಇರುವುದನ್ನು ನಿಲ್ಲಿಸುತ್ತೀರ. ಏಕೆಂದರೆ ವಿಶ್ವಶಕ್ತಿಯು ಎಲ್ಲರ ಮೇಲೂ ಮತ್ತು ಎಲ್ಲದರ ಮೇಲೂ ಸುಮ್ಮನೆ ಧಾರೆ ಎರೆಯುತ್ತದೆ. ನಿಮ್ಮ ಮೇಲೆ ಧಾರೆ ಎರೆಯಲ್ಪಟ್ಟಿರುವುದು ನೀವು ಅರ್ಹರಾದ ಕಾರಣದಿಂದಲೇ ಅಲ್ಲ ಎಂದು ನೀವು ಅರ್ಥ ಮಾಡಿಕೊಂಡರೆ ನೀವು ದೂರುತ್ತಿರುವುದನ್ನು ನಿಲ್ಲಿಸುತ್ತೀರ. ನೀವು ಯಾವುದೋ ವಿಧದಲ್ಲಿ ಅರ್ಹರಾಗಿದ್ದು ಮತ್ತು ಅದಕ್ಕೆ ತಕ್ಕದ್ದನ್ನು ನೀಡಿಲ್ಲವೆಂದು ನೀವು ಭಾವಿಸುವುದರಿಂದ ನೀವು ದೂರುತ್ತೀರ.

ಸ್ಪಷ್ಟವಾಗಿ ತಿಳಿಯಿರಿ: ಯಾರೊಬ್ಬರೂ ಅರ್ಹರೋ ಅಥವಾ ಅನರ್ಹರೋ ಅಲ್ಲ; ಯಾರೊಬ್ಬರು ಸಂತರೋ ಅಥವಾ ಪಾಪಿಯೋ ಅಲ್ಲ. ಇದೆಲ್ಲವೂ ನಾವು ಪ್ರಕೃತಿಯೊಂದಿಗೆ ಶ್ರುತಿಗೂಡಿಸಿ ಸಾಗುತ್ತಿರುವುದರಿಂದ ವಿಶ್ವಶಕ್ತಿ ಮತ್ತು ಅದರ ಕಾಣಿಕೆಗಳನ್ನು ಹೊಂದುತ್ತಿದ್ದೇವೆಂದು ತಿಳಿದುಕೊಳ್ಳುವುದರಲ್ಲಿ ಇದೆ. ಇದು ಯಾವಾಗಲೂ, ಆಳವಾಗಿ ಅರ್ಥಮಾಡಿಕೊಳ್ಳುವುದರಿಂದ ನಿಮಗೆ ಪ್ರಜ್ಞೆಯಲ್ಲಿ ಬದಲಾವಣೆಯನ್ನು ನೀಡುತ್ತದೆ.

ನೀವು ತೆರೆದುಕೊಂಡವರಾದರೆ, ವಿಶ್ವಶಕ್ತಿಯು ಸುರಿಮಳೆಯಾಗುತ್ತದೆ. ವಿಶ್ವಶಕ್ತಿಯು ನಿರಂತರವಾಗಿ ಧಾರೆ ಎರೆಯುತ್ತಿದೆ, ಆದರೆ ನಾವು ಮಾತ್ರ ಅದನ್ನು ಹೇಗೆ ಗ್ರಹಿಸಬೇಕೆಂದು ಅರಿತಿಲ್ಲ. ಸದಾಕಾಲವೂ ನಾವು ಬೇರೆಲ್ಲೋ ನೋಡುತ್ತಿರುತ್ತೇವೆ. ನಾವು ನಮ್ಮ ಮಣಿಪೂರಕ ಚಕ್ರದಲ್ಲಿ ಅಷ್ಟೊಂದು ಮುಳುಗಿ ಹೋಗಿರುತ್ತೇವೆ! ನಾವು ಪದಗಳನ್ನು ಸಂಗ್ರಹಿಸುವುದರಲ್ಲಿಯೇ ಅಷ್ಟೊಂದು ಕಾರ್ಯನಿರತರಾಗಿರುತ್ತೇವೆ!

ನೀವು ನಿಮ್ಮೊಂದಿಗೇ ಇರುವುದನ್ನು ಕಲಿತುಕೊಂಡರೆ, ನೀವು ವಿಶ್ವಶಕ್ತಿಯೊಂದಿಗೆ ಭಾವೈಕ್ಯದಿಂದಿರಬಹುದು (communion). ಆದರೆ ನಾವು ನಮ್ಮೊಂದಿಗೆ ಇರುವುದಿಲ್ಲ. ನಾವು ಯಾವಾಗಲೂ ಜನಗಳೊಂದಿಗೆ ಮತ್ತು ಗದ್ದಲದೊಂದಿಗೆ ಇರುತ್ತೇವೆ. ನಾವು ನಮ್ಮನ್ನು ಮಿಕ್ಕವರೊಂದಿಗೆ ಗುರುತಿಸಿಕೊಳ್ಳುತ್ತೇವೆ, ನಮ್ಮೊಂದಿಗೆಲ್ಲ. ನಾವು ನಮ್ಮೊಂದಿಗೆ ಇರುವುದಕ್ಕೆ ಅಷ್ಟೊಂದು ಹೆದರುತ್ತೇವೆ. ನಾವು ನಮ್ಮೊಂದಿಗೆ ಇದ್ದರೆ ಒಬ್ಬಂಟಿಗರಾಗಿದ್ದ ಅನುಭವವಾಗಿ ಹೆದರುತ್ತೇವೆ. ನಾವು ನಮ್ಮೊಂದಿಗೇ ಇದ್ದರೆ ವಿಷಣ್ಣರಾದದರಂತೆ ಭಾವಿಸುತ್ತೇವೆ.

ನೀವು ನಿಮ್ಮ ತಾಯಿಯ ಗರ್ಭದಲ್ಲಿದ್ದಾಗ ಒಬ್ಬಂಟಿಗರಾಗಿದ್ದಿರಿ ಮತ್ತು ಅದೇ ನಿಮ್ಮ ನಿಜವಾದ ಸ್ವಭಾವ. ಆದರೆ ನಂತರ ಏನಾಯಿತು? ನಿಮ್ಮನ್ನು ಸಂತೋಷಪಡಿಸಲು ನಿಮಗೆ ಜನಗಳ ಅವಶ್ಯಕತೆ ಇದೆಯೆಂದು ತಿಳಿಯಲು ಪ್ರಾರಂಭಿಸಿದಿರಿ. ನೀವು ಜನಗಳೊಂದಿಗೆ ನಗುತ್ತೀರ, ನೀವು ಅವರೊಂದಿಗೆ ಅಳುತ್ತೀರ, ನೀವು ಅವರೊಂದಿಗೆ ಮಾತನಾಡುತ್ತೀರ, ನೀವು ಅವರಿಗಾಗಿ ತೊಂದರೆಯನ್ನು ತೆಗೆದುಕೊಳ್ಳುತ್ತೀರ, ಹೀಗೆಯೇ. ನೀವು ಕೇವಲ ನಿಮ್ಮೊಂದಿಗೆ ಹೇಗೆ ಆಚರಿಸಿಕೊಳ್ಳಬೇಕೆಂದೇ ಗೊತ್ತಿರುವುದಿಲ್ಲ.

ನೀವು ಒಬ್ಬಂಟಿಗರಾಗಿರುವುದಾಗಿ ನೀವು ಕಂಡುಕೊಂಡ ಒಡನೆಯೇ, ನೀವು ನಿಮ್ಮೊಳಗೆ ಒದ್ದಾಡಲು ಪ್ರಾರಂಭಿಸುತ್ತೀರಿ, ನಿಮ್ಮ ಒಳಹರಟೆಯು ಕಾರ್ಯಶೀಲ ವಾಗುತ್ತದೆ, ನಿಮ್ಮ ಚಿಂತೆಗಳು ಕಾರ್ಯಶೀಲವಾಗುತ್ತವೆ; ಗದ್ದಲವನ್ನು ಹೇಗೆ ಸೃಷ್ಟಿಸಬೇಕೆಂದು ಮತ್ತು ಯಾರಿಗೆ ಕರೆ ಮಾಡಿ ಮಾತನಾಡಬೇಕು ಅಥವಾ ನಿಮ್ಮ ಕಂಪ್ಯೂಟರ್‌ನ ಮೂಲಕ ಯಾರೊಡನೆ ಹರಟಬೇಕೆಂದು ಮತ್ತು ಎಲ್ಲಾ ತರಹದ ಅರ್ಥಹೀನವಾದ ಸಂಗತಿಗಳ ಬಗ್ಗೆ ಯೋಚಿಸಲಾರಂಭಿಸುತ್ತೀರಿ.

ಸದಾಕಾಲವೂ ನಿಮಗೆ ಜನಗಳೊಂದಿಗೆ ಮತ್ತು ಗದ್ದಲದೊಂದಿಗೆ ಇರಬೇಕೆಂದಿದ್ದರೆ, ನೀವು ನಿಮ್ಮೊಂದಿಗೆ ಇರಲು ನಿಚ್ಚಳವಾಗಿ ಹೆದರುತ್ತಿದ್ದೀರಿ. ನೀವು ಒಳಮುಖವಾಗಿ

ನೋಡಲು ಹೆದರುತ್ತೀರಿ, ಆದ್ದರಿಂದ ನೀವು ಹೊರಮುಖವಾಗಿ ನೋಡಲು ಪ್ರಾರಂಭಿಸುತ್ತೀರಿ. ನೀವು ಧ್ಯಾನ ಮಾಡುವವರಾದರೆ, ನಿಮ್ಮನ್ನು ಸಂತುಷ್ಟಗೊಳಿಸಲು ನೀವು ಸಂಬಂಧಗಳ ಮೇಲೆ ಅವಲಂಬಿತರಾಗಬೇಕಾದ ಪ್ರಮೇಯ ವಿರುವುದಿಲ್ಲವೆಂದು ನಿಧಾನವಾಗಿ ಅರ್ಥಮಾಡಿಕೊಳ್ಳುತ್ತೀರ. ನೀವೊಬ್ಬರೇ ನಿಮಗೆ ಸಾಕು. ನೀವು ನಿಮ್ಮೊಂದಿಗೇ ಶಾಂತಿಯಿಂದಿರದಿದ್ದರೆ, ನಿಮ್ಮ ಅಸ್ತಿತ್ವದ ಪರಿಧಿಯಲ್ಲಿಯೇ (periphery) ಉಳಿದು ಸಂಬಂಧಗಳೆಂಬುದರಲ್ಲಿಯೇ ಸಿಕ್ಕಿಹಾಕಿಕೊಂಡಿರುತ್ತೀರ.

ಮೊದಲಿಗೆ ನೀವು ನಿಮ್ಮೊಂದಿಗೇ ಒಂದು ಸಂಬಂಧವನ್ನು ಹೊಂದುವ ಅವಶ್ಯಕತೆಯಿದೆ. ಇದು ಗಟ್ಟಿಯಾಗಿ ಮತ್ತು ಸ್ಥಿರವಾಗಿ ಇದ್ದರೆ, ಮಿಕ್ಕವರೊಂದಿಗೆ ಸಂಬಂಧವನ್ನು ಕಲ್ಪಿಸಿಕೊಳ್ಳುವುದು ಕೇವಲ ಪ್ರಾಸಂಗಿಕವಾಗುತ್ತದೆ. ಇದೀಗ, ಯಾವುದು ಪರಿಧಿಯಲ್ಲಿ ಇರುತ್ತದೆಯೋ ಅದನ್ನು ತಿರುಳಿನಂತೆ ನೋಡುತ್ತೇವೆ, ಮತ್ತು ಯಾವುದು ತಿರುಳಾಗಿ ಇರುತ್ತದೆಯೋ ಅದನ್ನು ಪರಿಧಿಯಲ್ಲಿ ಇರುವಂತೆ ನೋಡುತ್ತೇವೆ. ನೀವು ಈ ಸ್ಥಿತಿಯನ್ನು ತಿರುಗುಮುರುಗು ಮಾಡಬೇಕು. ಇದಕ್ಕಾಗಿ ನೀವು ನಿಮ್ಮ ದೃಷ್ಟಿಸುವುದನ್ನು ಒಳಮುಖವಾಗಿ ತಿರುಗಿಸಬೇಕು. ನೀವು ನಿಮ್ಮೊಂದಿಗೇ ಶಾಂತಿಯನ್ನು ನೆಲೆಸುವಂತೆ ಮಾಡಬೇಕು.

ಇದಕ್ಕಾಗಿ ನಿಮ್ಮ ಮನಸ್ಸನ್ನು ದಾಟಿ ಹೋಗುವ ಧೈರ್ಯದ ಅವಶ್ಯಕತೆ ನಿಮಗಿದೆ. ನೀವು ಪ್ರತಿಯೊಬ್ಬರಿಗೂ ಭೇಟಿಯ ಸಮಯವನ್ನು ಕೊಡಲು ತಯಾರಿರುತ್ತೀರ, ಆದರೆ ನಿಮಗಾಗಿ ಇರುವುದಿಲ್ಲ. ನೀವು ಇತರರಿಗೆ ಭೇಟಿಯ ಸಮಯವನ್ನು ನೀಡುವುದು ಏಕೆಂದರೆ ಅದು ನಿಮ್ಮ ಅಹಂಭಾವವನ್ನು ಸಂತೃಪ್ತಿಗೊಳಿಸುತ್ತದೆ. ನೀವು ನಿಮಗೇ ಒಂದು ಭೇಟಿಯ ಸಮಯವನ್ನು ನೀಡುವುದಿಲ್ಲ, ಏಕೆಂದರೆ ನಿಜವು ಹೊರಬೀಳಬಹುದೆಂದೂ ಮತ್ತು ಅದನ್ನು ಸ್ವೀಕರಿಸಲು ನಿಮಗೆ ಆಗುವುದಿಲ್ಲವೆಂದೂ ನಿಮಗೆ ಭಯವಿದೆ. ನೀವು ಪರಮಾನಂದಕ್ಕಾಗಿ ಎಲ್ಲ ತಪ್ಪು ಜಾಗಗಳಲ್ಲಿ ಹುಡುಕುತ್ತಾ ಮತ್ತು ಅದು ನಿಮ್ಮಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ದೂರುತ್ತಾ ಇರುವುದರಲ್ಲಿ ನೀವು ಆರಾಮವಾಗಿರುತ್ತೀರ. ನಿಜವಾಗಿಯೂ ನೀವು ಪರಮಾನಂದವನ್ನು ಕಂಡುಕೊಳ್ಳ ಬೇಕಿದ್ದರೆ, ನೀವು ಅದನ್ನು ಕಂಡುಕೊಳ್ಳುವಿರಿ. ಆದರೆ ನಿಮಗೆ ಧೈರ್ಯ ಬೇಕು.

ವಾಸ್ತವವಾಗಿ, ನಾವೆಲ್ಲರೂ ಒಂದೇ ವಸ್ತುವನ್ನು ಹುಡುಕುತ್ತಿದ್ದೇವೆ - ಅದೇ ಪರಮಾನಂದ. ಆದರೆ ನಾವು ಸತತವಾಗಿ ಅದಕ್ಕಾಗಿ ತಪ್ಪು ಸ್ಥಳಗಳಲ್ಲಿ

ಹುಡುಕುತ್ತಿರುತ್ತೇವೆ. ನಾನು ಯಾರಾದರೂ ಚಿಕ್ಕ ವ್ಯಕ್ತಿಯನ್ನು ಯಾವುದು ಅವನಿಗೆ ಸಂತೋಷವನ್ನು ಕೊಡುತ್ತದೆ ಎಂದು ಕೇಳಿದರೆ, ಅವನು ಕೂಡಲೇ ‘ಮಾದಕ ವಸ್ತುಗಳು’ ಎಂದು ಹೇಳುತ್ತಾರೆ. ಅವನು ಕೂಡ ಪರಮಾನಂದಕ್ಕಾಗಿ, ಶಾಶ್ವತ ಶಾಂತಿಗಾಗಿ ಹುಡುಕುತ್ತಿರುತ್ತಾನೆ, ಆದರೆ ತಪ್ಪು ದಿಕ್ಕಿನಲ್ಲಿ!

ನಾವು ನಮ್ಮ ಹಾದಿಯನ್ನು ಬಿಟ್ಟು ಎಷ್ಟು ವಿಪರೀತವಾಗಿ ಸರಿದಿದ್ದೇವೆಂದರೆ, ನಮ್ಮ ಮೂಲ ಆಲೋಚನಾ ವ್ಯವಸ್ಥೆಯು ನಮ್ಮ ನಕಾರಾತ್ಮಕ ಯೋಚನೆಗಳ ಮಾದರಿಗಳಿಂದ ಸಂಪೂರ್ಣವಾಗಿ ಬದಲಾಯಿಸಲ್ಪಟ್ಟಿದೆ. ನಮ್ಮ ಜೀವನವು ಇರಬೇಕಾದುದಕ್ಕಿಂತ ವಿಪರೀತವಾಗಿ ಬದಲಾಗಿದೆ. ಮಾದಕ ವಸ್ತುಗಳನ್ನು ಸೇವಿಸುವುದರಿಂದ ನಿಮಗೆ ಪರಮಾನಂದವು ದೊರಕುತ್ತದೆಯೇನು? ಮಾದಕ ವಸ್ತುಗಳ ಸೇವನೆಯಿಂದ, ನೀವು ನಿಮ್ಮಿಂದ ತಪ್ಪಿಸಿಕೊಂಡು ಹೋಗುತ್ತಿದ್ದೀರ ಮತ್ತು ಪರಿಸ್ಥಿತಿಯನ್ನು ಇನ್ನೂ ಕೆಡಿಸುತ್ತಿದ್ದೀರ, ಏಕೆಂದರೆ ಶೀಘ್ರದಲ್ಲೇ ನಿಮ್ಮ ಆರೋಗ್ಯವು ತೊಂದರೆಗೆ ಒಳಗಾಗುತ್ತದೆ. ಈ ಇಡಿಯ ವಿಚಾರದಲ್ಲಿನ ಮೂರ್ಖತನವನ್ನು ನೋಡಿ.

ಇದು ನಿಮಗೆ ಮೂರ್ಖತನವೆನಿಸುತ್ತದೆ, ಏಕೆಂದರೆ ಇದು ಯಾವುದೋ ವಿಪರೀತವಾಗಿದೆ. ಇದು ನೈತಿಕತೆಯ ಅಳತೆಗೋಲನ್ನು ಹೊಡೆಯುತ್ತದೆ ಮತ್ತು ಅದರಿಂದ ಅದು ನಿಮಗೆ ಹೊಡೆಯುತ್ತದೆ. ನಿಮ್ಮ ಸಂತೋಷವನ್ನು ಕಂಡುಕೊಳ್ಳುವ ಗುರಿಯನ್ನು ಹೊಂದಿರುವ ಇತರ ಸೂಕ್ಷ್ಮ ಕಾರ್ಯಚಟುವಟಿಕೆಗಳು ಕೂಡ ಇದೇ ರೀತಿಯ ಪ್ರಯತ್ನಗಳನ್ನು ಬೇರೆಯದೇ ಅಷ್ಟೊಂದು ನೈತಿಕತೆಯಿಲ್ಲದ ಅಳತೆಗೋಲಿನಲ್ಲಿ ಮಾಡುತ್ತಿರುತ್ತವೆ, ಆದರೆ ನೀವು ಅವುಗಳನ್ನು ಮೂರ್ಖತನವೆಂದು ಅಂದುಕೊಳ್ಳುವುದಿಲ್ಲ. ನಿಮಗೆ ಸಮಯ ಸಿಕ್ಕಾಗಲೆಲ್ಲಾ ನಿಮ್ಮ ಮನಸ್ಸನ್ನು ಓರಣವಾಗಿ ಇಡಲು ಪ್ರಯತ್ನಿಸಿ, ಆಗ ನಿಮಗೆ ನಾನು ಏನು ಹೇಳಲು ಪ್ರಯತ್ನಿಸುತ್ತಿರುವೆನೆಂಬುದು ತಿಳಿಯುತ್ತದೆ.

ಸುಮ್ಮನೆ ನಿಮ್ಮೊಳಗೆ ಅರಿವಿನಿಂದ ನೋಡಿರಿ ಮತ್ತು ಹೇಗೆ ನಿಮ್ಮ ಮನಸ್ಸು ಕೆಲಸ ಮಾಡುತ್ತದೆ ಎಂದೂ, ಹೇಗೆ ನಿಮ್ಮ ಚಿಂತೆಗಳು ಬೇರೂರುತ್ತವೆಯೆಂದೂ ಗಮನಿಸಿ. ನಾವು ಪದಗಳನ್ನು ಸಂಗ್ರಹಿಸುತ್ತಾ ಇದ್ದು, ಅಭಿಪ್ರಾಯಗಳನ್ನು ಸೃಷ್ಟಿಸುತ್ತಾ ಮತ್ತು ಅವುಗಳನ್ನು ಪುನಃ ಪುನಃ ಅವಲೋಕಿಸುತ್ತಿರುತ್ತೇವೆ. ಹೀಗೆಯೇ ಚಿಂತೆಯು ಬೇರುಬಿಟ್ಟು ಬಲಗೊಳ್ಳುತ್ತದೆ.

ನಿಮ್ಮ ಮಗನು ಯಾವತ್ತಾದರೂ ಒಂದು ದಿನ ತಡವಾಗಿ ಮನೆಗೆ ಬಂದರೆ, ಅವನು ಯಾವುದೋ ಕೆಟ್ಟ ಸಹವಾಸದಲ್ಲಿದ್ದಿರಬಹುದೆಂದು ಮತ್ತು ಅದಕ್ಕಾಗಿ ಅವನು ತಡವಾಗಿ ಬಂದನೆಂದೂ ನೀವು ಭಾವಿಸುತ್ತೀರ. ಮುಂದಿನ ಸಲ, ಅವನು ತರಗತಿಗಳಿಗೆ ಹೋಗಿ ತಡವಾಗಿ ಮನೆಗೆ ಬಂದರೂ ಸಹ, ಈ ಮುದ್ರಿತ ಅಭಿಪ್ರಾಯವು ಮೇಲಕ್ಕೆ ಬಂದು ಅದಕ್ಕನುಗುಣವಾಗಿ ನೀವು ಪ್ರತಿಕ್ರಿಯಿಸುತ್ತೀರಿ. ಇದು ನಿಮ್ಮ ಮಗನಲ್ಲಿ ಹತಾಶೆಯ ಭಾವನೆಯನ್ನು ಉಂಟು ಮಾಡುವುದಷ್ಟೇ ಅಲ್ಲದೆ ಅವನು ನಿಮ್ಮನ್ನು ಪ್ರತಿಭಟಿಸಲು ನಿಜವಾಗಿಯೂ ಅಡ್ಡದಾರಿ ಹಿಡಿಯುವಂತೆ ಬಲಾತ್ಕರಿಸುತ್ತದೆ. ಪ್ರತಿಯೊಬ್ಬರೂ ವಿಕಸಿತಗೊಳ್ಳುತ್ತಿರುವರೆಂದೂ ಮತ್ತು ಪ್ರವಹಿಸುತ್ತಿರುವರೆಂದೂ ಮತ್ತು ನಿಮ್ಮದೇ ಕಲ್ಪನೆಯ ಮಾನಸಿಕ ಚೌಕಟ್ಟಿನಲ್ಲಿದ್ದರೆ ಏನೂ ಸಹಾಯವಾಗುವುದಿಲ್ಲವೆಂದು ನೀವು ಅವಶ್ಯ ಅರ್ಥಮಾಡಿಕೊಳ್ಳಬೇಕು.

ಕಲ್ಪನೆಯಿಂದ ಬದುಕುವುದು ಸುಲಭ. ಆದರೆ ನಾನು ಹೇಳುತ್ತೇನೆ: ನೀವು ನಂಬಿರುವದರಲ್ಲಿ 98% ಭಾಗವು ತಪ್ಪಾಗಿರುತ್ತದೆ. ನಿಮ್ಮ ಮತ್ತು ಇನ್ನೊಬ್ಬ ವ್ಯಕ್ತಿಯ ನಡುವೆ ಒಂದು ದೊಡ್ಡ ಪರದೆಯು ಇದೆಯೆಂದು ನೀವು ತಿಳಿಯುತ್ತೀರಿ. ನೀವು ಹಸಿರು ಗಾಜಿನ ಕನ್ನಡಕವನ್ನು ಧರಿಸಿದರೆ, ಇಡಿಯ ಪ್ರಪಂಚವೇ ಹಸಿರಾಗಿರುವಂತೆ ಕಾಣುತ್ತೀರಿ ಅಷ್ಟೆ.

ಮಹಮ್ಮದ್ ನಬಿಯವರು ಹೇಳುತ್ತಾರೆ “ನೀವು ಪ್ರಪಂಚವನ್ನು ಏನೊಂದಾಗಿ ನೋಡಿದರೆ, ಆ ಏನೊಂದು ನೀವು'' ನೀವು ಯಾರ ಬಗ್ಗೆಯಾದರೂ ನನ್ನೊಂದಿಗೆ ಮಾತನಾಡಿದರೆ, ಅಥವಾ ದೂರಿದರೆ, ನೀವು ಚಿಂತಿತರಾಗಿರುವುದರಿಂದ ಈ ಸಂಗತಿಗಳನ್ನೆಲ್ಲಾ ನನಗೆ ಹೇಳುತ್ತಿರುವುದಾಗಿ ನೀವು ಹೇಳಿಕೊಳ್ಳಬಹುದು, ಆದರೆ ವಾಸ್ತವವಾಗಿ ನೀವು ನಿಮ್ಮದೇ ಮನಸ್ಸನ್ನು ತೋರಿಸುತ್ತಿರುತ್ತೀರ, ಏಕೆಂದರೆ ನೀವು ಆ ಸಂಗತಿಗಳನ್ನು ನೋಡಬಯಸಿದ ರೀತಿಯಲ್ಲೇ ನೋಡುತ್ತಿರುತ್ತೀರ, ಅದು ಇರುವಂತೆ ಅಲ್ಲವೇ ಅಲ್ಲ. ನೀವು ಏನು ನೋಡಬೇಕೆಂದು ಬಯಸಿದ್ದೀರೋ ಅದನ್ನು ಮಾತ್ರವೇ ನೋಡಿದರೆ, ನೀವು ಅಷ್ಟೊಂದು ಕಳೆದುಕೊಳ್ಳುತ್ತೀರ.

ನಿಮಗೆ ನಿಜವಾಗಿಯೂ ನಡೆದ ಸಂಗತಿಯೊಂದನ್ನು ಹೇಳುತ್ತೇನೆ:

ಕೆಲವು ವರ್ಷಗಳ ಹಿಂದೆ, ನಾನು ಆಶ್ರಮದಿಂದ ನಗರ ಕೇಂದ್ರಕ್ಕೆ ಪ್ರತಿದಿನ ಅದೇ ಚಾಲಕನೊಂದಿಗೆ ಪ್ರಯಾಣಿಸುತ್ತಿದ್ದೆ.

ಚಿಂತೆಯಿಲ್ಲದೆ ಬದುಕುವುದು

ಒಂದು ದಿನ, ನಾನು ಒಂದು ನಿರ್ದಿಷ್ಟ ರಸ್ತೆಗೆ ಹೋಗಬೇಕಾಗಿತ್ತು ಮತ್ತು ಆ ಚಾಲಕನಿಗೆ ಆ ರಸ್ತೆಯ ಬಗ್ಗೆ ಜ್ಞಾಪಿಸಲು ಹತ್ತಿರವಿರುವ ಮಸೀದಿಯನ್ನು ಉಲ್ಲೇಖಿಸಿ ಹೇಳಿದೆ.

ಆ ಚಾಲಕನು ಆ ಜಾಗದಲ್ಲಿ ಯಾವ ಮಸೀದಿಯೂ ಇಲ್ಲವೆಂದು ಹೇಳಿದನು.

ಆ ಮಸೀದಿಯ ಬಳಿ ಇರುವ ಒಂದು ಪ್ರಸಿದ್ಧ ಹೋಟೆಲ್ ಅನ್ನು ಕುರಿತು ಹೇಳಿ ಅವನಿಗೆ ಜ್ಞಾಪಿಸಲು ಪ್ರಯತ್ನಿಸಿದೆ, ಆದರೆ ಅದನ್ನು ಕೂಡ ಅವನು ಒಪ್ಪಿಕೊಳ್ಳಲು ಆಗಲಿಲ್ಲ.

ಕೊನೆಗೆ ನಾನು ಆ ಜಾಗದಲ್ಲಿ ಒಂದು ಹನುಮಂತನ ಗುಡಿ ಇರುವುದಾಗಿ ಹೇಳಿದೆ.

ಗುರುತು ಹಿಡಿಯುವುದರೊಂದಿಗೆ ತತ್ ಕ್ಷಣ ಅವನ ಮುಖ ಪ್ರಕಾಶಮಾನವಾಯಿತು.

ಅವನು ಆ ರಸ್ತೆಗೆ ಹೋದನು ಮತ್ತು ನಾನು ಅವನಿಗೆ ಆ ಗುಡಿಯ ಪಕ್ಕದಲ್ಲೇ ಇದ್ದ ಮತ್ತು ಅದಕ್ಕಿಂತ ಐದು ಪಟ್ಟು ದೊಡ್ಡದಾಗಿದ್ದ ಮಸೀದಿಯನ್ನು ತೋರಿಸಿದೆ.

ಅವನಿಗೆ ಆಘಾತವಾಯಿತು!

ಅವನು ಎಷ್ಟೊಂದು ಕಟ್ದಾ ಹಿಂದುವಾಗಿದ್ದನೆಂದರೆ ಆ ತಿಂಗಳುಗಳಲ್ಲಿ ಆ ಮಸೀದಿಯನ್ನು ನೋಡಿಯೇ ಇರಲಿಲ್ಲ.

ನಾನು ಹೇಳುವುದು: ಧರ್ಮಾಂಧರಾಗಬೇಡಿ ಅಥವಾ ಜೀವನದಲ್ಲಿ ಯಾವುದಕ್ಕೋ ಅಂಟಿಕೊಂಡಿರಬೇಡಿ.

ಒಂದು ನದಿಯ ಬಗ್ಗೆ ಯೋಚಿಸಿ: ನಿಮ್ಮ ಕಾಲನ್ನು ನದಿಯಲ್ಲಿ ಮೊದಲ ಬಾರಿ ಬಿಟ್ಟು ನಂತರ ಈಚೆಗೆ ತೆಗೆದು ತರುವಾಯ ಎರಡನೆಯ ಬಾರಿ ಬಿಟ್ಟರೆ, ಅದು ಅದೇ ಸರಿಯಾಗಿ ಇರುವುದೇ? ಇಲ್ಲ! ನದಿಯು ತನ್ನ ಮುಖಗಳನ್ನು ಬದಲಾಯಿಸಿದೆ, ಅದೇ ನೀವು ಇನ್ನೇನೂ ಅಲ್ಲೆಲ್ಲ; ಹೊಸ ನೀರು ಹರಿದಾಯಿತು, ಅಲ್ಲವೇ?

ಆದುದರಿಂದ ಯಾವುದರೊಂದಿಗಾರೂ ನಿಮ್ಮನ್ನು ಗುರುತಿಸಿಕೊಳ್ಳಲು ಕಷ್ಟಪಡಬೇಡಿ; ಬದುಕು ಸದಾ ಬದಲಾಗುತ್ತಿರುತ್ತದೆ. ನಿಮ್ಮ ಸಂಕುಚಿತ ನಂಬಿಕೆಗಳಿದ, ನಿಮ್ಮ ಆಧ್ಯಾತ್ಮಿಕ ಬೆಳವಣಿಗೆಯು ನಿಂತು ಅಡಗಿ ಹೋಗಿಬಿಡುತ್ತದೆ. ನೀವು ಮುಂದಿರುವ ರಸ್ತೆಯ ಸೀಮಿತ ದೃಷ್ಟಿಯನ್ನು ಹೊಂದಿರುವ ಕುದುರೆಯಂತಿರುತ್ತೀರಿ. ಜೀವನಕ್ಕೆ ಒಂದು ವಿಶಾಲವಾದ ದೃಷ್ಟಿಕೋನದ ಅಗತ್ಯವಿದೆ.

ನಮ್ಮ ಪೂರ್ವಜರು ನಮಗೆ ಬೇಕಾದಷ್ಟು ಆಹಾರವನ್ನು ಕೊಟ್ಟರು, ಆದರೆ ರುಚಿಯನ್ನು ನೋಡಲು ನಾಲಿಗೆಯನ್ನು ಕೊಡಲಿಲ್ಲ. ಈ ಪ್ರಪಂಚವನ್ನು ಸಂತೋಷದಿಂದ ಅನುಭವಿಸುವುದು ನಮಗೆ ಬಿಟ್ಟದ್ದು. ಸಂತೋಷವು ನಾವು ಅನುಭವಿಸುವ ರೀತಿಯಲ್ಲಿ ಇದೆ, ಬಾಹ್ಯ ಪ್ರಪಂಚದಲ್ಲಿರುವ ವಸ್ತುಗಳಲ್ಲಿಯೇ ಇಲ್ಲ. ಇದನ್ನು ಬಹಳ ನಿಚ್ಚಳತೆಯಿಂದ ಅರ್ಥಮಾಡಿಕೊಳ್ಳಬೇಕು. ನಿಮ್ಮ ಮಾನಸಿಕ ವ್ಯವಸ್ಥೆಯೇ ನಿಮ್ಮ ಜೀವನವನ್ನು ಸಂತೋಷದಾಯಕವಾಗಿಯೋ ಅಥವಾ ಕಷ್ಟದಾಯಕವಾಗಿಯೋ ಮಾಡಬಲ್ಲದು.

ನೀವು ನಿಮ್ಮ ಪ್ರಸಕ್ತ ಮಾನಸಿಕ ವ್ಯವಸ್ಥೆಯೊಂದಿಗೆ ಸಂತೋಷಗೊಂಡಿದ್ದರೆ, ಅದು ಪೂರ್ಣವಾಗಿ ಸರಿಯಷ್ಟೆ. ಆದರೆ ಅದನ್ನು ಸ್ವಲ್ಪ ಕತ್ತರಿಸಬೇಕೆಂದು ನೀವು ಭಾವಿಸಿದರೆ, ಆಗ ಎಲ್ಲೋ ಒಂದು ಸಮಸ್ಯೆಯಿದೆ. ನೀವು ಆಗಾಗ್ಗೆ ಗಿಡವನ್ನು ಕತ್ತರಿಸುವಂತೆ ನಿಮ್ಮ ಮಾನಸಿಕ ವ್ಯವಸ್ಥೆಯನ್ನು ಕತ್ತರಿಸಲು ಪ್ರಯತ್ನಿಸುತ್ತಿರುತ್ತೀರ. ಒಂದು ಕತ್ತರಿಸಿದ ಗಿಡವು ಬೇಗ ಬೇಗ ಬೆಳೆಯುತ್ತದೆ. ನೀವು ನಿಮ್ಮ ಪ್ರಸಕ್ತ ಮಾನಸಿಕ ವ್ಯವಸ್ಥೆಯೊಂದಿಗೆ ಬದುಕಿರಿ ಅಥವಾ ಬುಡಸಹಿತ ಕಿತ್ತುಹಾಕಿ ಹೊಸತೊಂದನ್ನು ಸೃಷ್ಟಿಸಿ. ನೀವು ಬಟ್ಟೆಗಳಿಗೆ ಬಣ್ಣ ಹಚ್ಚಿ ಬೇರೆಯಾಗಿ ಕಾಣುವ ಹಾಗೆ ಮಾಡುವಂತೆ ನಿಮ್ಮ ಮಾನಸಿಕ ವ್ಯವಸ್ಥೆಗೆ ಬಣ್ಣ ಹಚ್ಚಲಾರಿರಿ. ನೀವು ನಿಮ್ಮ ಮಾನಸಿಕ ವ್ಯವಸ್ಥೆಯನ್ನು ಕತ್ತನೆಯಿಂದ ಸರಿಪಡಿಸಲಾರಿರಿ. ಒಂದು ಸಮಗ್ರ ಪರಿವರ್ತನೆಯು ನಡೆಯಬೇಕು, ಇಲ್ಲದಿದ್ದರೆ ಮತ್ತೊಮ್ಮೆ ಹಳೆಯ ದಾರಿಗಳಿಗೆ ಜಾರಿ ಬೀಳುವ ಅಪಾಯವು ಇದ್ದೇ ಇರುತ್ತದೆ.

ನಿಮಗೆ ಒಂದು ಸ್ವಚ್ಛವಾದ ಮನಸ್ಸಿನ ಸ್ಥಿತಿಯು ಇದ್ದರೆ, ನೀವು ಖಂಡಿತವಾಗಿ ಚಿಂತೆ ಮಾಡಿಕೊಳ್ಳುವುದಿಲ್ಲ. ಸಂಕೀರ್ಣವಾದ ರೂಪರೇಶೆಗಳು ಮತ್ತು ಪದಗಳಿಂದ ನೀವು ಗೊಂದಲಗೊಂಡಿದ್ದರೆ ಮಾತ್ರ ನೀವು ಸದಾಕಾಲವೂ ಚಿಂತಿಸುತ್ತಿರುತ್ತೀರ. ನಾನು ಜನಗಳಿಗೆ ಸದಾ ಹೇಳುತ್ತಿರುತ್ತೇನೆ: ನೀವು ನಿಮ್ಮ ಬಗ್ಗೆ ಖಚಿತವಾಗಿಲ್ಲದಿದ್ದರೆ, ನೀವು ಗ್ರಹಗಳು ಎಲ್ಲಿವೆ ಎಂಬುದರ ಬಗ್ಗೆ ಚಿಂತಿತರಾಗಿರುತ್ತೀರ! ನೀವು ಯಾವ ಗ್ರಹವು ಎಲ್ಲಿ ಸ್ಥಿತಗೊಂಡಿದೆ ಮತ್ತು ಅದು ಹೇಗೆ ನಿಮ್ಮ ಮೇಲೆ ಪ್ರಭಾವ ಬೀರುತ್ತಿದೆ ಎಂದು ವಿಶ್ಲೇಷಿಸಲು ಆರಂಭಿಸುತ್ತೀರ. ವಾಸ್ತವ ಸಮಸ್ಯೆಯು ಏನೆಂದರೆ ನೀವು ಸ್ಥಿತಿಗೊಂಡಿಲ್ಲ.

ನಿಮಗೆ ಸಮಯ ಸಿಕ್ಕಾಗಲೆಲ್ಲಾ ನಿಮ್ಮ ಮನಸ್ಸಿನ ಮೇಲೆ ಕೆಲಸ ಮಾಡಿ. ಹೇಗೋ ನೀವು ನಿಮ್ಮ ಮನಸ್ಸಿನ ಸಂಗಡ ದಿನದಲ್ಲಿ 24 ಗಂಟೆಗಳ ಕಾಲ ಇರುತ್ತೀರ ಅಲ್ಲವೇ? ಅದನ್ನು ಏಕೆ ಸ್ವಚ್ಛವಾಗಿ ಇಡಬಾರದು?

ನಾನು ತಮ್ಮ ಮನೆಗಳನ್ನು ತುಂಬಾ ಸುಂದರವಾಗಿ ಇಟ್ಟುಕೊಂಡಿರುವಂತಹ 'ಮನೆಯ-ದರ್ಪ'ದ ವ್ಯಕ್ತಿಗಳನ್ನು ನೋಡಿದ್ದೇನೆ. ಅವರು ಯಾಂತ್ರಿಕ ಕಸಬರಿಗೆ (vaccum cleaner) ಯನ್ನು ಉಪಯೋಗಿಸಿ ಮನೆಯನ್ನು ಧೂಳು ರಹಿತವಾಗಿ ಇಟ್ಟುಕೊಳ್ಳುತ್ತಾರೆ. ಅವರು ತಮ್ಮ ಹಾಸುಗಂಬಳಿ (carpet) ಯನ್ನು ಅದರೊಳಗೆ ತೂತು ಬೀಳುವ ತನಕ ಸ್ವಚ್ಛಗೊಳಿಸುತ್ತಿರುತ್ತಾರೆ! ನೀವು 24 ಗಂಟೆಗಳ ಕಾಲವೂ ವಾಸಿಸುತ್ತಿರುವ ಮನೆಯನ್ನು ಸ್ವಚ್ಛಗೊಳಿಸುವ ವಿಚಾರ ಏನು? ನಿಮ್ಮ ಮನಸ್ಸು? ನೀವು ಅದರೊಂದಿಗೆ 24 ಗಂಟೆಗಳೂ ಇರುತ್ತೀರ; ನಿಮ್ಮ ಪ್ರತಿಯೊಂದು ಆಲೋಚನೆ ಅಥವಾ ನಿಮ್ಮ ಕ್ರಿಯೆಯೂ ಅದನ್ನು ಒಳಪಡಿಸಿಕೊಂಡಿರುತ್ತದೆ.

ನಿಮ್ಮ ಮನೆಯನ್ನು ಶುದ್ಧವಾಗಿ ಮತ್ತು ಚೈತನ್ಯದಾಯಕವಾಗಿ ಇಡುವ ವಾಸ್ತು ಶಾಸ್ತ್ರ ಫೆಂಗ್‌ ಶುಯಿ (Feng Shui) ಮುಂತಾದ ವಿಜ್ಞಾನಗಳನ್ನು ತರುತ್ತೀರ. ಆದರೆ ನೀವು ಒಂದು ವಿಚಾರವನ್ನು ಮಾತ್ರ ಅರ್ಥಮಾಡಿಕೊಳ್ಳಲು ವಿಫಲರಾಗುತ್ತೀರ: ನೀವು ನಿಮ್ಮ ಮನೆಯನ್ನು ಸತತವಾಗಿ ಚೈತನ್ಯಗೊಳಿಸಬೇಕಾದ ಅವಶ್ಯಕತೆ ಏಕೆ ಇದೆ ಎಂದರೆ ನೀವು ಅದನ್ನು ನಿಮ್ಮ ನಕಾರಾತ್ಮಕತೆಯಿಂದ ಮಲಿನಗೊಳಿಸುತ್ತಿದ್ದೀರಿ ಇದು ಸತ್ಯ.

ನೀವು ನಿಮ್ಮ ಮನೆಯ ಜಾಗವನ್ನು ನಿಮ್ಮ ಒಂದುಗೂಡಿಸಿದ ನಕಾರಾತ್ಮಕ ಆಲೋಚನೆಗಳಿಂದ, ನಿಮ್ಮ ಚಿಂತೆಗಳಿಂದ ಮಲಿನಗೊಳಿಸಿದರೆ, ಆ ಜಾಗವು ನಕಾರಾತ್ಮಕ ಆಲೋಚನೆಗಳನ್ನು ನಿಮಗೇ ಮರಳಿ ಪಸರಿಸುತ್ತದೆ ಮತ್ತು ನೀವು ಮನೆಯನ್ನು ಹೊಕ್ಕ ಕ್ಷಣವೇ ಒಂದು ನಕಾರಾತ್ಮಕತೆಯ ವಿಷ ವರ್ತುಲದಲ್ಲಿ ಸಿಕ್ಕಿಕೊಳ್ಳುವಿರಿ.

ಎಷ್ಟು ಬಾರಿ ನೀವು ನಿಮ್ಮ ಮನೆಯೊಳಕ್ಕೆ ಬರುವ ತನಕ ಸಂಪೂರ್ಣವಾಗಿ ಸರಿಯಾಗಿದ್ದೀರಿ ಎಂದು ಭಾವಿಸಿರುತ್ತೀರ?! ನೀವು ಒಳ ಹೊಕ್ಕ ಕ್ಷಣವೇ, ನೀವು ಚಿರಪರಿಚಿತ ನಕಾರಾತ್ಮಕ ಆಲೋಚನಾ ಮಾದರಿಗಳ ಬಲದ ಹಿಡಿತದಲ್ಲಿರುವಂತೆ ಭಾವಿಸುತ್ತೀರ. ಇದು ನಿಮ್ಮ ಮನೆಯನ್ನು ನಿಮ್ಮದೇ ಆಲೋಚನೆಗಳಿಂದ ತುಂಬಿಸಿಕೊಳ್ಳಲು ನೀವೇ ಮಾಡಿಕೊಂಡ ವ್ಯವಸ್ಥೆಯಲ್ಲದೆ ಬೇರೇನೂ ಅಲ್ಲ. ಆಗ ನೀವೇನು ಮಾಡುತ್ತೀರಿ? ನೀವು ನಿಮ್ಮ ಮನೆಯ ವಿನ್ಯಾಸವನ್ನು ಬದಲಾಯಿಸಲು ಒಬ್ಬ ವಾಸ್ತುಶಾಸ್ತ್ರದ ಪರಿಣಿತನನ್ನು ಕರೆಯುತ್ತೀರ, ಅಥವಾ ಒಂದು ದೇವಸ್ಥಾನದ ಪೂಜಾರಿಯನ್ನು ಯಾವುದೋ ಹೋಮ ಮಾಡಿ ನಿಮ್ಮ ಮನೆಯನ್ನು ಶುದ್ಧಿಗೊಳಿಸಲು ಕರೆಸುತ್ತೀರ, ಅಥವಾ ನಿಮ್ಮ ಮನೆಗೆ ಫೆಂಗ್ ಶುಯಿಯ ಉಪಾಯಗಳನ್ನು ಅನ್ವಯಿಸುತ್ತೀರ.

ಇವುಗಳನ್ನೆಲ್ಲಾ ಪ್ರಾಮಾಣಿಕವಾಗಿ ಮಾಡಿದರೆ, ನಿಸ್ಸಂದೇಹವಾಗಿ ಅವುಗಳು ನಿಮ್ಮ ಮನೆಗೆ ಬೇಕಾದುದನ್ನೆಲ್ಲಾ ಮಾಡುತ್ತವೆ. ಆದರೆ ನೀವು ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಬೇಕು: ಇವೆಲ್ಲವೂ ಕೇವಲ ಹೆಚ್ಚಿಗೆ ಸೇರಿಸುವಂತಹ ವಿಧಾನಗಳು. ನಿಜವಾದ ವಿಷಯವೆಂದರೆ, ನಿಮ್ಮನ್ನು ನೀವೇ ಶುಚಿಗೊಳಿಸಿಕೊಳ್ಳಬೇಕು ಮತ್ತು ಪರಮಾನಂದದ ಮಾನಸಿಕ ವ್ಯವಸ್ಥೆಯನ್ನು ಪಸರಿಸಬೇಕು. ಅದರಿಂದ ತನ್ನಷ್ಟಕ್ಕೆ ತಾನೇ ನೀವು ವಾಸಿಸುವ ಸ್ಥಳವು ಅದನ್ನು ಪಸರಿಸುತ್ತದೆ.

ಒಬ್ಬ ವ್ಯಕ್ತಿಯನ್ನು ಅವನ ಹಿಂದಿನ ಮತ್ತು ಈಗಿನ ಬಗ್ಗೆ ಕೇಳಲಾಯಿತು.

ಅವನು ಉತ್ತರಿಸಿದನು “ಹಿಂದೆ ನಾನು ನೆಲದ ಮೇಲೆ ಚಾಪೆ ಹಾಸಿ ಕುಳಿತುಕೊಂಡು ಊಟ ಮಾಡುತ್ತಿದ್ದೆ. ಈಗ ನಾನು ಮೇಜಿನ ಮೇಲೆ ಕುಳಿತುಕೊಳ್ಳುತ್ತೇನೆ” ಎಂದು.

ನೋಡಿ, ಹಿಂದೆಯೂ ಮತ್ತು ಈಗಲೂ ಅವನ ಬಾಯಿಯು ಅದೇ. ನಿಮ್ಮಲ್ಲಿ ಯಾವುದೇ ಮಹತ್ವದ ವ್ಯತ್ಯಾಸವೇನಿಲ್ಲದಿದ್ದರೆ, ನಿಮ್ಮ ಜೀವನವು ಕೇವಲ ಇಷ್ಟು ಮಾತ್ರದ ಬದಲಾವಣೆಯನ್ನು ಕಾಣುತ್ತದೆ. ನಿರೀಕ್ಷಕನ ಕಣ್ಣಿಗೆ ಸೌಂದರ್ಯತೆಯು ಹೇಗೆ ಇರುತ್ತದೆಯೋ, ಹಾಗೆಯೇ ನಾಲಿಗೆಯು ಅನುಭವಿಸುವಂತೆ ರುಚಿಯು ಇರುತ್ತದೆ. ನಿಮ್ಮ ಮಾನಸಿಕ ವ್ಯವಸ್ಥೆಯು ನಿಮ್ಮ ಜೀವನದ ಗುಣವನ್ನು ತೀರ್ಮಾನಿಸುತ್ತದೆ.

ಎಷ್ಟೋಬಾರಿ, ನಾವು ಬದಲಾಗಬೇಕೆಂದು ನಮಗೆ ಗೊತ್ತಿರುತ್ತದೆ. ಆದರೆ ಹೇಗೋ ನಾವು ನಮ್ಮ ಪ್ರಸಕ್ತ ವ್ಯವಸ್ಥೆಯಲ್ಲಿ ಆರಾಮದಿಂದ ಒರಗಿಕೊಂಡು ಇರುತ್ತೇವೆ. ನಾವು ಅದೇ ಚಕ್ರದಲ್ಲಿ ಮತ್ತೊಮ್ಮೆ ಸಿಕ್ಕಿಬಿದ್ದಿರುತ್ತೇವೆ. ನಮ್ಮ ಒಂದು ಬದಿಯು ನಾವು ಬದಲಾಗಬೇಕೆಂದು ಹೇಳುತ್ತದೆ ಮತ್ತು ಇನ್ನೊಂದು ಬದಿಯು ಪ್ರಜ್ಞಾರಹಿತವಾಗಿ ಪರಿಚಿತ ಮಾದರಿಗಳಿಗೆ ಜಾರುತ್ತದೆ. ನಿಮಗೆ ಬದಲಾವಣೆ ಹೊಂದಲು ಬಹಳ ಅವಕಾಶಗಳನ್ನು ನೀಡಿದರೂ ಸಹ, ಪ್ರಸಕ್ತ ಸ್ಥಿತಿಯಲ್ಲಿ ಹಿತವಾಗಿರುವಂತೆ ಭಾವಿಸಿ ಅವುಗಳನ್ನು ಕಳೆದುಕೊಳ್ಳುತ್ತೀರ.

ಈ ಮಾನಸಿಕ ವ್ಯವಸ್ಥೆಯು ನಿಮ್ಮಲ್ಲಿ ಅಷ್ಟು ಘನವಾದ ನಿಜಸ್ಥಿತಿಯಾಗುತ್ತದೆ. ನಿಮ್ಮ ಸುಮ್ಮನೆ ಪಸರಿಸುತ್ತೀರ.

ಇದನ್ನು ಬದಲಾಯಿಸಲು ಪ್ರಯತ್ನಿಸಿ. ನಾನು ಹೇಳುತ್ತೇನೆ: ನೀವು ಅಂತಹ ಘನವಾದ ಮಾನಸಿಕ ವ್ಯವಸ್ಥೆಯಲ್ಲಿ ಬದುಕಿದರೆ, ಅದರೊಳಗೆ ಮತ್ತೊಂದು ಅಪಾಯವಿದೆ.

ನಿಮ್ಮಿಂದ ನಿಮ್ಮ ಮಕ್ಕಳೂ ಅದನ್ನು ಗ್ರಹಿಸುವ ಎಲ್ಲಾ ಸಾಧ್ಯತೆಗಳಿವೆ.

ನನಗೆ ಒಂದು ಹಾಸ್ಯವು ಜ್ಞಾಪಕಕ್ಕೆ ಬರುತ್ತದೆ.

ಗಂಡ ಹೆಂಡತಿ ಇಬ್ಬರೂ ಕಸುಬಿನಲ್ಲಿ ಜೇಬುಗಳ್ಳರಾಗಿದ್ದರು.

ಅವರಿಗೆ ಮಗುವಾದರೆ ತುಂಬಾ ಅಭಿವೃದ್ಧಿಕರವೆಂದು ಅವರು ಆಗಾಗ್ಗೆ ಚರ್ಚಿಸುತ್ತಿದ್ದರು.

ಶೀಘ್ರದಲ್ಲೇ ಅವರಿಗೆ ಒಂದು ಮಗುವಾಯಿತು.

ಆದರೆ, ಆಗತಾನೆ ಹುಟ್ಟಿದ ಮಗುವು ತನ್ನ ಬಲಗೈಯನ್ನು ಗಟ್ಟಿಯಾಗಿ ಮುಚ್ಚಿಕೊಂಡಿತ್ತು.

ಅವರಿಗೆ ಅದನ್ನು ತೆರೆಯಲು ಆಗುತ್ತಿರಲಿಲ್ಲ.

ಅದನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿ ಕೊನೆಯಲ್ಲಿ ತಮ್ಮ ಚಿನ್ನದ ಸರವನ್ನು ಆ ಮಗುವಿನ ಕಣ್ಣಮುಂದೆ ತೂಗಾಡಿಸಿದರು.

ಆ ಮಗುವು ನಿಧಾನವಾಗಿ ತನ್ನ ಕೈಗಳನ್ನು ಬಿಡಿಸಿತು ಮತ್ತು ಅದರೊಳಗೆ ಸೂಲಗಿತ್ತಿಯ ಚಿನ್ನದ ಉಂಗುರವಿತ್ತು!

(ಜೋರಾದ ನಗು)!

ಇದು ಬರಿಯ ಹಾಸ್ಯ, ಆದರೆ ಅರ್ಥಮಾಡಿಕೊಳ್ಳಿ, ತಂದೆ ತಾಯಿಯರಾಗಿ ನೀವು ನಿಮ್ಮ ಮಾನಸಿಕ ವ್ಯವಸ್ಥೆಯನ್ನು ನಿಮ್ಮ ಮಕ್ಕಳಿಗೆ ದಾಟಿಸಬಹುದಾದ ಎಲ್ಲಾ ಸಂಭವವೂ ಇರುವುದೆಂದು. ಆದುದರಿಂದ, ಪ್ರತಿ ಕ್ಷಣವೂ ಅರಿವಿನಿಂದ ಇದ್ದು ನಿಮ್ಮ ಪ್ರಜ್ಞೆ ಮತ್ತು ಅರಿವಿನ ಮೇಲೆ ಕೆಲಸ ಮಾಡಿ; ನಿಮ್ಮ ಒಳ ಹರಟೆ ಮತ್ತು ನಿಮ್ಮೊಳಗಿರುವ ಮಾನಸಿಕ ರಚನೆಯನ್ನು ಸ್ವಚ್ಛವಾಗಿಡಲು ಕೆಲಸ ಮಾಡಿ.

ಸದಾಕಾಲವೂ ನಾವು ನಮ್ಮ ಮಕ್ಕಳನ್ನು ಗೊಂಬೆಗಳನ್ನಾಗಿ ಮಾಡಲು ಅವರನ್ನು ಹತೋಟಿಯಲ್ಲಿಡಲು ಪ್ರಯತ್ನಿಸುತ್ತೇವೆ. ಮಕ್ಕಳು ನಿರಂಕುಶ (wild) ಚೈತನ್ಯ. ಅವರನ್ನು ನಿರ್ವಹಿಸಲು ಸರಾಗವಾಗಲೆಂದು ನಾವು ಆ ಚೈತನ್ಯವನ್ನು ಪೆಟ್ಟಿಗೆಯಲ್ಲಿಡಲು ಪ್ರಯತ್ನಿಸುತ್ತೇವೆ.

ಎರಡು ನಾಯಿಗಳು ಒಂದು ರಸ್ತೆಯಲ್ಲಿ ನಡೆಯುತ್ತಿದ್ದವು.

ಮೊದಲನೆಯದು ಹೇಳಿತು, “ನನ್ನ ಹೆಸರು ಸ್ಯಾಂಡಿ, ನಿನ್ನ ಹೆಸರೇನು?’’ ಎಂದು.

ಎರಡನೆಯದು ಸ್ವಲ್ಪ ಹೊತ್ತು ಸುಮ್ಮನಿದ್ದು ಹೇಳಿತು, “ನನ್ನದ್ದು ಇಲ್ಲ ಇಲ್ಲ ರೋಜರ್‌ ಎಂದು ಅಂದುಕೊಂಡಿದ್ದೇನೆ’’ ಎಂದು.

(ನಗೆ!)

ಈ ನಾಯಿಯ ತರಹ, ಮಕ್ಕಳು ಕೂಡ ನಮ್ಮ ಪದಗಳಿಂದ ಮತ್ತು ದೇಹದ ಭಾಷೆಯಿಂದ ಗ್ರಹಿಸಲು ಮತ್ತು ಕಲಿಯಲು ಪ್ರಾರಂಭಿಸುತ್ತಾರೆ. ಮಕ್ಕಳು ಚಿಕ್ಕವರಿದ್ದಾಗ ಮತ್ತು ಅವರು ಯಾವುದರ ಬಗ್ಗೆಯಾದರೂ ಆಶ್ಚರ್ಯಚಕಿತರಾಗಲು ಪ್ರಾರಂಭಿಸಿದಾಗ, ಅವರು ಕೂಡಲೇ ಅದಕ್ಕೆ ಸಂಬಂಧಪಟ್ಟ ನಮ್ಮ ಹಿಂದಿನ ಪದಗಳು ಅಥವಾ ಕಾರ್ಯಗಳಿಗೆ ಗಮನ ಸೆಳೆದು ಅವುಗಳ ಮೇಲೆ ಆಧರಿಸಿ ತಮ್ಮ ತೀರ್ಮಾನಗಳನ್ನು ರೂಪಿಸಿಕೊಳ್ಳುತ್ತಾರೆ. ಆದ್ದರಿಂದ, ನೀವು ಮಕ್ಕಳೊಂದಿಗೆ ಇರುವಾಗ ನೀವು ಇನ್ನೂ ಹೆಚ್ಚಿನ ಅರಿವಿನಿಂದ ಇದ್ದು, ಸುಮ್ಮನೆ ಅವರನ್ನು ಸದಾ ಕಾಲವೂ ನಿಗ್ರಹಿಸುವುದಕ್ಕಿಂತ ಅವರ ಬುದ್ಧಿವಂತಿಕೆಯನ್ನು ಜೀವಂತವಾಗಿಡಲು ಪ್ರಯತ್ನಿಸಿ.

ತಾಯಂದಿರು ಇದನ್ನು ನಿರಂತರವಾಗಿ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಉದಾಹರಣೆಗೆ, ಮಳೆಯಾಗುತ್ತಿದ್ದರೆ ತಾಯಿಯು ಅವರಿಗೆ ನೆಗಡಿಯು ಆಗಬಹುದೆಂದು ಹೇಳುತ್ತಾ ಅವರನ್ನು ತಕ್ಷಣವೇ ಒಳಗೆ ಬರುವಂತೆ ಹೇಳುತ್ತಾರೆ. ಈ ಘಟನೆಯ ಹಲವು ಬಾರಿ ಪುನರಾವರ್ತನೆಗಳು ಮಗುವು ಮಳೆಯನ್ನು ನೋಡಿದರೆ ಅದರ ಮನಸ್ಸು ನೆಗಡಿಗೆ ಶ್ರುತಿಗೊಡುವಂತೆ ಮಾಡುತ್ತವೆ. ಮುಂದೆ ತುಂತುರು ಮಳೆಯಾದರೂ, ಮಗುವು ಸೊರಗುಟ್ಟಲಾರಂಭಿಸುತ್ತದೆ.

ವಾಸ್ತವವಾಗಿ ನಾನು ಹೇಳುತ್ತೇನೆ: ಮನುಷ್ಯನ ದೇಹವು ಬಹಳ ಬುದ್ಧಿವಂತ, ಸ್ವಯಂ ಸರಿ ಹೊಂದುವ, ಸ್ವಯಂ ರಕ್ಷಿತ (auto-innune) ವ್ಯವಸ್ಥೆ. ಆದರೆ ಹೇಗೋ ನಾವು ನಮ್ಮ ದೇಹದ ಸ್ವಾಭಾವಿಕ ಬುದ್ಧಿವಂತಿಕೆಯ ಬದಲು ನಮ್ಮ ಸ್ವಂತ ಮನಸ್ಸನ್ನು ನಂಬುತ್ತೇವೆ. ಅಲ್ಲಿ ನಮ್ಮ ಸಮಸ್ಯೆ ಮತ್ತು ನಮ್ಮ ಎಲ್ಲಾ ಚಿಂತೆಗಳೂ ಪ್ರಾರಂಭವಾಗುತ್ತವೆ.

ಒಂದು ಚಿಕ್ಕ ಕಥೆ: ಒಂದು ತಂದೆ ಒಂಟೆಯು ತನ್ನ ಮಗ ಒಂಟೆಗೆ ತಮ್ಮ ಜಾತಿಯ ದೇಹ ರಚನೆಯನ್ನು ವಿವರಿಸುತ್ತಿತ್ತು. ಅದು ಹೇಳಿತು, 'ತಿಳಿದುಕೋ, ನಮಗೆ ಹುಬ್ಬುಗಳಿವೆ, ಆದ್ದರಿಂದ ನಾವು ಅವುಗಳಲ್ಲಿ ನೀರನ್ನು ಶೇಖರಿಸಿಟ್ಟುಕೊಂಡು ಮರುಗಾಡಿನಲ್ಲಿ ದಿನಗಟ್ಟಲೆ ಇರಬಹುದು' ಎಂದು. ಮಗನು ಕೇಳಿದನು, "ನಮ್ಮ ಕಣ್ಣ ಎವೆಗಳು (eye lashes) ಅಷ್ಟು ಉದ್ದವಾಗಿರುತ್ತದೆ?'' ಎಂದು. ತಂದೆಯು ಉತ್ತರಿಸಿದನು “ನಮ್ಮ ಕಣ್ಣುಗಳನ್ನು ಮರಳಿನ ಬಿರುಗಾಳಿಗಳಿಂದ ತಪ್ಪಿಸಿಕೊಳ್ಳಲು' ಎಂದು. ಮಗನು ಕೇಳಿದನು, "ನಮಗೆ ಏಕೆ ಹಾಗೆ ಗಡ್ಡೆಗಳಂತಿರುವ ಪಾದಗಳಿವೆ?'' ಎಂದು. ತಂದೆಯು ಉತ್ತರಿಸಿದನು, 'ಆದ್ದರಿಂದ ನಾವು ಮರುಭೂಮಿಯಲ್ಲಿ ಬೇಗ ನಡೆಯಬಹುದು' ಎಂದು. ಮಗನು ಕೇಳಿದನು, "ಅಪ್ಪ ಹಾಗಾದರೆ ನಾವು ಈ ಮೃಗಾಲಯದಲ್ಲಿ ಏನು ಮಾಡುತ್ತಾ ಇದ್ದೇವೆ?'' ಎಂದು. (ಜೋರು ನಗೆ!) ನೋಡಿ, ನಮ್ಮ ಶರೀರವು ಅಷ್ಟು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ನಾವು ಸುಮ್ಮನೆ ಅವುಗಳನ್ನು ಅವುಗಳ ಸಹಜ ಬುದ್ಧಿವಂತಿಕೆಯಿಂದ ಓಡಲು ಬಿಟ್ಟರೆ, ಅದು ಚೆನ್ನಾಗಿ ಕೆಲಸ ಮಾಡುತ್ತದೆ. ನೀವು ನಿಮ್ಮ ಕಟ್ಟುಪಾಡುಗಳನ್ನು ತಂದು ಅವುಗಳನ್ನು ನಿಮ್ಮ ದೇಹದ ಮೇಲೆ ಹೇರಿದ ಕ್ಷಣವೇ ನೀವು ಕಷ್ಟಗಳನ್ನು ಅನುಭವಿಸಲು ಪ್ರಾರಂಭಿಸುತ್ತೀರಿ. ನಿಮ್ಮ ಚಿಂತೆಗಳು ಮತ್ತು ಮಾನಸಿಕ ಸ್ಥಿತಿಯೇ ನಿಮ್ಮ ಮಾನಸಿಕ ಹಾಗೂ ಶಾರೀರಿಕ ಖಾಯಿಲೆಗಳಿಗೆ ಮೂಲಕಾರಣ. ಹಿಮಾಲಯದಲ್ಲಿ ಸಾಧುಗಳು, ಅಲೆದಾಡುತ್ತಿರುವ ಬೈರಾಗಿಗಳು, ಗುಹೆಗಳಲ್ಲಿ ವಾಸಿಸುತ್ತಾರೆ. ಅವರು ಬಹಳ ಆರೋಗ್ಯವಂತ ಜನರು. ಬಿಸಿಲಿರಲಿ ಅಥವಾ ಮಳೆ ಇರಲಿ ಅಥವಾ ಹಿಮ ಸುರಿಯಲಿ, ಅವರು ಜೀವಿಸುವುದನ್ನು ಮುಂದುವರಿಸುತ್ತಾರೆ; ತನ್ನಷ್ಟಕ್ಕೆ ತಾನೇ ಅವರ ದೇಹವು ಹೊಂದಿಕೊಂಡಿರುತ್ತದೆ. ನಾವು ಕೇವಲ ನಿಸರ್ಗವನ್ನು ಮತ್ತು ತತ್ಸಂಬಂಧ ನಿರೋಧಕ ವ್ಯವಸ್ಥೆಯನ್ನು ನಂಬಬೇಕು.

ಮತ್ತು ಅರ್ಥಮಾಡಿಕೊಳ್ಳಿ: ಗುರುವೆಂಬುವವರು ನಿಮಗೆ ಒಂದು ಹೊಸ ಮಾನಸಿಕ ವ್ಯವಸ್ಥೆಯನ್ನು, ಅಂದರೆ ಒಂದು ಪುನರ್ಜನ್ಮವನ್ನು ನೀಡುವವರು. ಅದು ಕೇವಲ ಗುರುಗಳ ಸಮಕ್ಷಮತೆಯನ್ನು ಹೀರಿಕೊಳ್ಳುವುದರಿಂದ ಸಿಗುವಂತಹದು. ಗುರುಗಳ ಚೈತನ್ಯವು ನಿಮ್ಮನ್ನು ಮುಳುಗಿಸಿಬಿಟ್ಟರೆ, ನಿಮ್ಮ ಮಾನಸಿಕ ವ್ಯವಸ್ಥೆಯು ಬದಲಾಯಿಸುತ್ತದೆ, ಮತ್ತು ನೀವು ಮತ್ತೊಮ್ಮೆ ಹುಟ್ಟಿರುತ್ತೀರ. ನಿಮಗೆ ಅದು ಅಸ್ತಿತ್ವದಲ್ಲಿತ್ತು ಎಂಬುದನ್ನೇ ತಿಳಿದಿರದಿದ್ದ ಜಾಗದ ಒಳ ಹೊಕ್ಕುತ್ತೀರ.

ನೀವು ಈ ರೀತಿಯಲ್ಲಿ ಮರು ಹುಟ್ಟಿದರೆ, ನೀವು ನಿಮ್ಮ ಎಲ್ಲಾ ಚಿಂತೆಗಳ, ರೋಗಗಳ, ಮತ್ತಿತರ ಮನೋಭಾವನೆಗಳ ಹಿಡಿತದಿಂದ ಮುಕ್ತರಾಗಿರುತ್ತೀರ. ಇವುಗಳಲ್ಲಿ ನಿಮಗೆ ಯಾವುದಾದರೂ ಸಂಭವಿಸಿದರೂ, ನೀವು ಅವುಗಳನ್ನು ಸುಲಭವಾಗಿ ನಿಭಾಯಿಸಬಲ್ಲಿರಿ, ಮತ್ತು ಇದು ನಿಮಗೆ ಮುಂದೆ ಗೊತ್ತೇ ಇರಲಿಲ್ಲ. ನೀವು ನಿಮ್ಮ ಸುತ್ತಲೂ ಸಂಭವಿಸುತ್ತಿರುವ ಎಲ್ಲ ಸಂಗತಿಗಳ ವೀಕ್ಷಕರಾಗಬಲ್ಲಿರಿ.

ನಮ್ಮ ಧ್ಯಾನ ತಂತ್ರದ ಕಾರ್ಯಕ್ರಮವು ನಡೆದ ಹೋಟೆಲ್‌ನಲ್ಲಿ ಅದಿನ ನಾನು ದೂರದರ್ಶನವನ್ನು ವೀಕ್ಷಿಸುತ್ತಿದ್ದೆ. ಒಂದು ಭಾರತೀಯ ಚಾನೆಲ್‌ನಲ್ಲಿ ಹಳೆಯ ಚಿತ್ರವೊಂದರ ಯುಗಳಗೀತೆ ಬರುತ್ತಿತ್ತು. ಬೇರೊಂದು ಭಾರತೀಯ ಚಾನೆಲ್‌ನಲ್ಲಿ ಹೊಸ ಚಿತ್ರವೊಂದರ ಇನ್ನೊಂದು ಯುಗಳ ಗೀತೆ ಬರುತ್ತಿತ್ತು. ನಾನು ನನ್ನ ಕಾರ್ಯದರ್ಶಿಗೆ ಈ ಎರಡೂ ಚಾನೆಲ್‌ಗಳು ಮನುಷ್ಯನ ಪ್ರಜ್ಞೆಯಲ್ಲಿ ಏನೂ ಬೆಳವಣಿಗೆಯಾಗಿಲ್ಲವೆಂದು ಮಾತ್ರ ತೋರಿಸುತ್ತದೆ ಎಂದು ಹೇಳುತ್ತಿದ್ದೆ. ಅವನು ನನ್ನ ಅಭಿಪ್ರಾಯಕ್ಕೆ ಗಾಬರಿ ಪಟ್ಟುಕೊಂಡ ಮತ್ತು ಸಹಮತ ವ್ಯಕ್ತಪಡಿಸಿದ.

ಇದೇ ಮಾದರಿಗಳು, ಒಂದು ಮುಚ್ಚಿದ ಕೊಠಡಿಯಲ್ಲಿ ಐದು ಜನರು ಒಂದು ಬಾಲನ್ನು ಒದೆಯುತ್ತಿರುವಂತೆ, ಪದೇ ಪದೇ ಪುನರಾವರ್ತನೆಯಾಗುತ್ತಿರುತ್ತವೆ. ಕಡೆಯ ಪಕ್ಷ ಪಶ್ಚಿಮದಲ್ಲಿ, ಅವರು ತುತ್ತತುದಿಗೆ ಹೋಗಿ ವಿಚಾರಗಳನ್ನು ಅನ್ವೇಷಿಸಿ ಹಿಂತಿರುಗಿ ಬರುತ್ತಾರೆ. ಅಷ್ಟಾದರೂ ಅಲ್ಲಿ, ಬೆಳೆಯುತ್ತಿರುವ ಪ್ರಜ್ಞೆ ಇಲ್ಲದಿದ್ದರೂ, ಸಾಮಾಜಿಕ ಬುದ್ಧಿವಂತಿಕೆ ಇರುತ್ತದೆ. ಪರಿಚಿತ ಮಾದರಿಗಳು ನಮ್ಮ ಬುದ್ಧಿವಂತಿಕೆಯನ್ನು ಸಂಪೂರ್ಣವಾಗಿ ನಿರ್ಜೀವಗೊಳಿಸಬಲ್ಲದು.

ನಾನು ಈ ಸಂಗತಿಗಳನ್ನು ಜನರಿಗೆ ಹೇಳಿದರೆ, ಅವರು ನನಗೆ ಹೇಳುತ್ತಾರೆ, “ಸ್ವಾಮೀಜಿ, ನೀವು ಹೇಳುತ್ತಿರುವುದು ನನಗೆ ಅರ್ಥವಾಗುತ್ತಿದೆ, ಆದರೆ ಅದನ್ನು ಜಯಿಸಲು ಆಗುತ್ತಿಲ್ಲ” ಎಂದು. ನಾನು ಹೇಳುವುದು: ನನ್ನ ಪದಗಳು ನಿಮ್ಮೊಳಹೊಕ್ಕು

ಒಂದು ಜಾಗವನ್ನು ನಿಮ್ಮೊಳಗೆ ನಿರ್ಮಿಸಿಕೊಳ್ಳಲು ಸುಮ್ಮನೆ ಬಿಡಿ ಎಂದು. ಇಲ್ಲೇ ಧ್ಯಾನವು ಸಹಾಯ ಮಾಡಬಲ್ಲದು. ನಾನು ಧ್ಯಾನದ ಶಿಬಿರಗಳಲ್ಲಿ ಮಾಡುವುದೇನೆಂದರೆ, ನಾನು ನಿಮಗೆ ಹೊರಗಿನ ತಿಳುವಳಿಕೆಯನ್ನು ಕೊಡುತ್ತೇನೆ, ಮತ್ತು ನಂತರ ಅದರ ಮೇಲೆ ಕೆಲಸ ಮಾಡುತ್ತಾ ಧ್ಯಾನದ ಮುಖಾಂತರ ನಿಮ್ಮೊಳ ಹೊಕ್ಕುತ್ತೇನೆ.

ಆದರೆ ಜನಗಳು ಹೇಳುತ್ತಾರೆ ‘ಸ್ವಾಮೀಜಿ, ನಾವು ಮಾಡಲು ನಮ್ಮ ಕೆಲಸಗಳಿವೆ, ಬಿಲ್‌ಗಳನ್ನು (ಬೆಲೆಪಟ್ಟಿ) ಪಾವತಿಸಬೇಕಿದೆ, ಗಡುವುಗಳನ್ನು ಮುಟ್ಟಬೇಕಿದೆ; ಹಾಗಾಗಿ ನಾವು ಧ್ಯಾನವನ್ನು ಹೇಗೆ ಮಾಡುವುದು?” ಎಂದು. ನಾನು ಅವರಿಗೆ ಒಂದು ಸರಳವಾದ ಧ್ಯಾನ ತಂತ್ರದಿಂದ ಉತ್ತರಿಸುತ್ತೇನೆ: ನಿಮಗೆ ನಿಮ್ಮ ಬಿಲ್‌ಗಳನ್ನು ಪಾವತಿಸುವುದಕ್ಕೆ ಸಮಯವಿರಲಿ, ಇಲ್ಲದಿರಲಿ ಅಥವಾ ಗಡುವುಗಳನ್ನು ಮುಟ್ಟಲಿ, ಬಿಡಲಿ, ನಿಮಗೆ ಉಸಿರಾಡಲು ಸಮಯವು ಖಂಡಿತ ಇದೆಯಲ್ಲವೇ? ಇಲ್ಲದಿದ್ದರೆ, ನೀವು ಜೀವಂತವಾಗಿರುವುದಿಲ್ಲ! ಈಗ ನೀವು ಸುಮ್ಮನೆ ನಿಮ್ಮ ಉಸಿರಾಟಕ್ಕೆ ಅರಿವನ್ನು ಸೇರಿಸಿ, ಅಷ್ಟೆ. ಕೇವಲ ನಿಮ್ಮ ಉಸಿರಾಟವನ್ನು ಗಮನಿಸಿ. ಅದೇ ನೀವು ಮಾಡಬಹುದಾದ ಅತ್ಯಂತ ಸರಳವಾದ ಮತ್ತು ಅತ್ಯಂತ ಶಕ್ತಿಯುತವಾದ ಧ್ಯಾನ.

ನೀವು ಪ್ರತಿಬಾರಿ ಈ ತಂತ್ರವನ್ನು ಜ್ಞಾಪಿಸಿಕೊಂಡಾಗಲೂ, ಇದನ್ನು ಅಭ್ಯಾಸ ಮಾಡಿ. ಶೀಘ್ರದಲ್ಲೇ ಇದು ಒಂದು ಅಭ್ಯಾಸ ಬಲವಾಗುತ್ತದೆ. ನೀವು ನಿಮ್ಮ ಉಸಿರಾಟದಲ್ಲಿ ಅರಿವನ್ನು ತುಂಬಿಸಿದರೆ, ನೀವು ವರ್ತಮಾನದ ಕ್ಷಣದಲ್ಲಿ ಇರುತ್ತೀರ. ವರ್ತಮಾನದಲ್ಲಿ ಬದುಕುವುದು ನಿಮ್ಮನ್ನು ಆನಂದಕ್ಕೆ ಕೊಂಡೊಯ್ಯುತ್ತದೆ. ‘ಈಗ’ ಶಕ್ತಿಯು ಆನಂದಕ್ಕೆ ನೇರ ದಾರಿ. ಸುಮ್ಮನೆ ನಿಮ್ಮ ಪ್ರತಿಯೊಂದು ಉಚ್ಛ್ವಾಸ ಮತ್ತು ನಿಶ್ಶ್ವಾಸಕ್ಕೆ ಅರಿವನ್ನು ಸೇರಿಸಿ. ಆದುದರಿಂದ ಆತ್ಯಾನಂದವನ್ನು ಪಡೆಯಲು ನಿಮಗೆ ಬೇರೆಯ ಸಮಯದ ಅವಶ್ಯಕತೆಯಿಲ್ಲ. ನೀವೇನೂ ಸಮಯಾವಕಾಶವನ್ನು ಮಾಡಿಕೊಂಡು ಯಾವುದಾದರೂ ಏಕಾಂತ ಸ್ಥಳಕ್ಕೋ ಇಲ್ಲವೆ ಧ್ಯಾನ ಶಿಬಿರಕ್ಕೋ ಹೋಗಬೇಕಾಗಿಲ್ಲ. ನೀವು ನಿಮ್ಮ ದೈನಂದಿನ ಕಾರ್ಯಚಟುವಟಿಕೆಗಳನ್ನು ಮಾಡುತ್ತಿರಬಹುದು. ನೀವು ಸೃಷ್ಟಿಸುತ್ತಿರುವ ಹೆಚ್ಚಿನ ಅರಿವಿನಿಂದ, ನಿಮ್ಮ ಗಡುವುಗಳು ಮತ್ತು ಇನ್ನಿತರ ಗುರಿಗಳು ಇನ್ನೂ ಹೆಚ್ಚಿನ ದಕ್ಷತೆಯಿಂದ ಮುಗಿಸಲ್ಪಡುತ್ತದೆ.

ಧ್ಯಾನವು ನಿಮ್ಮ ಪ್ರಜ್ಞೆಯಲ್ಲಿ ಬದಲಾವಣೆಯಾಗುವುದಲ್ಲದೇ ಬೇರೇನೂ ಅಲ್ಲ. ಅದು ನಿಮ್ಮ ಅರಿವಿನಲ್ಲಿನ “ಚೈತನ್ಯದ ಬದಲಾವಣೆ” ಅದು ಒಂದು ಮೂಲೆಯಲ್ಲಿ ಕಾಲು ಮಡಿಚಿ ಬೆನ್ನು ನೆಟ್ಟಗೆ ಮಾಡಿಕೊಂಡು ಕುಳಿತು ಮನಸ್ಸನ್ನು ಹತೋಟಿಯಲ್ಲಿಡಲು ಪ್ರಯತ್ನಿಸುವುದಿಲ್ಲ. ನೀವು ಇವುಗಳೆಲ್ಲವನ್ನು ಮಾಡಲು ಪ್ರಯತ್ನಿಸಿದರೆ, ಕೊನೆಯಲ್ಲಿ ಆಗುವುದು ನಿಮಗೆ ಕುತ್ತಿಗೆ ನೋವು ಮತ್ತು ಬೆನ್ನುನೋವು! ನಿಮಗೆ ಕುಳಿತುಕೊಂಡು ಧ್ಯಾನವನ್ನು ಮಾಡಲಾಗಲಿಲ್ಲವೆಂಬ ಮತ್ತೊಂದು ಹೆಚ್ಚಿನ ಚಿಂತೆಯುಂಟಾಗುತ್ತದೆ. ನೀವು ಮಾಡಬೇಕಾದುದೆಲ್ಲವೂ ಇಷ್ಟೆ, ವರ್ತಮಾನದಲ್ಲಿ 'ಈಗ' ಮತ್ತು 'ಇಲ್ಲಿ' ಇವುಗಳಲ್ಲಿ ಬದುಕಲು ಪ್ರಯತ್ನಿಸಿ. ನೀವು ವರ್ತಮಾನದಲ್ಲಿ ಇದ್ದರೆ, ನೀವು ಪ್ರಪಂಚ ಶಕ್ತಿಯನ್ನು ಅನುಭವಿಸಿ ಸಂತೋಷ ಪಡುವ ಅನುಭವವಾಗುತ್ತದೆ. ನೀವು ವರ್ತಮಾನದಲ್ಲಿ ಇದ್ದರೆ, ನೀವು ಪ್ರಪಂಚಶಕ್ತಿಯೊಂದಿಗೆ ಶ್ರುತಿಗೂಡಿಸಿ ಹೋಗುತ್ತೀರ. ನೀವು ವರ್ತಮಾನದಲ್ಲಿ ಇದ್ದರೆ, ಪ್ರಪಂಚಶಕ್ತಿಯೇ ನಿಮಗೆ ಹೇಳಿಕೊಡುತ್ತದೆ.

ಪ್ರಪಂಚಶಕ್ತಿಯೇ ಅತ್ಯಂತ ದೊಡ್ಡ ಗುರು. ಇದನ್ನೇ ಬದುಕು ಒಬ್ಬ ದೊಡ್ಡಗುರು ಎಂದರೆ ಅವರು ಅರ್ಥೈಸುವುದು. ನೀವು ಅದನ್ನು ಕಳೆದುಕೊಂಡರೆ, ಅದನ್ನು ಕಲಿಯಲು ನೀವು ನಿಮ್ಮದೇ ಸಿಹಿ ಸಮಯವನ್ನು ತೆಗೆದುಕೊಳ್ಳುತ್ತೀರ. ನೀವು ಕಲಿಯಲು ನಿಮ್ಮದೇ ಸಿಹಿ ಸಮಯವನ್ನು ತೆಗೆದುಕೊಂಡರೆ, ಬದುಕು ನೀವು ಎಚ್ಚೆತ್ತುಕೊಂಡು ಬೇಗನೆ ಕಲಿಯಲು ಕೆಲವು ಆಘಾತಗಳನ್ನು ಕೊಡುತ್ತದೆ! ಇಲ್ಲದಿದ್ದರೆ, ನೀವು ಅನೇಕ ಜನ್ಮಗಳ ಕಾಲ ಕಲಿಯುತ್ತಿರುತ್ತೀರ.

ಈಗ ನೋಡಿ, ನೀವು ಭೂತಕಾಲದ ಹಿಂದೆ ವಿಷಾದದಿಂದ ಓಡುತ್ತಿರುತ್ತೀರ ಇಲ್ಲವೇ ಭವಿಷ್ಯದ ಹಿಂದೆ ಆತಂಕದಿಂದ ಓಡುತ್ತಿರುತ್ತೀರ. ಈ ತರಹೆಯಲ್ಲಿ ನೀವು ವರ್ತಮಾನವನ್ನು ಸಂಪೂರ್ಣವಾಗಿ ನಾಶ ಮಾಡುತ್ತೀರ. ಏನಾಗುತ್ತದೆ ಎಂದರೆ, ನೀವು ಸರಿಯಾಗಿ ಕಾರ್ಯ ಮಾಡುವುದೇ ಇಲ್ಲ, ನೀವು ನಿಮ್ಮ ಭೂತಕಾಲದ ನೆನಪುಗಳಿಂದ ಅಥವಾ ಭವಿಷ್ಯತ್ಕಾಲದ ಆತಂಕಗಳಿಂದ ಸುಮ್ಮನೆ ಪ್ರತಿಕ್ರಿಯಿಸುತ್ತೀರ. ನೀವು ಸುಮ್ಮನೆ ಪ್ರತಿಕ್ರಿಯಿಸಿದರೆ, ನೀವು ನಿಮ್ಮ ಪೂರ್ಣ ಸಾಮರ್ಥ್ಯವನ್ನು ಉಪಯೋಗಿಸುತ್ತಿಲ್ಲ. ನೀವು ಕೇವಲ ಪೂರ್ವ ನಿಗದಿತ ಕಾರ್ಯಕ್ರಮದಂತೆ ಕಾರ್ಯ ಮಾಡುವ ಯಂತ್ರ ಮಾನವ (Robot) ನಂತೆ ವರ್ತಿಸುತ್ತೀರ; ನೀವು ಅಂಧ ತರ್ಕವನ್ನು ಅನುಸರಿಸುತ್ತೀರ, ಬುದ್ಧಿವಂತಿಕೆಯನ್ನಾಗಲೀ ಅಥವಾ ಅರಿವಿನಿಂದಾಗಲೀ ಅಲ್ಲ.

ನಿಮ್ಮ 80% ಚೈತನ್ಯವು ನಿಮ್ಮ ಭೂತಕಾಲದಲ್ಲಿ ಅಥವಾ ಭವಿಷ್ಯತ್ಕಾಲದಲ್ಲಿ ಬಂಧಿತವಾಗಿರುತ್ತದೆ ಮತ್ತು ಕೇವಲ 20% ಭಾಗವು ವರ್ತಮಾನದಲ್ಲಿ ನಿಮಗೆ ಸಿಗುತ್ತಿದೆ. ಆದುದರಿಂದಲೇ ನೀವು ಮಂಕಾದಂತೆಯೂ ಮತ್ತು ಚೈತನ್ಯಹೀನ ರಾದಂತೆಯೂ ಭಾವಿಸುತ್ತೀರಿ.

ಹೆಚ್ಚಾದ ಅರಿವಿನಿಂದ, ಈ ವಸ್ತುಸ್ಥಿತಿಯು ಆದಲು ಬದಲಾಗುತ್ತದೆ ಮತ್ತು ನಿಮ್ಮ ಜೀವನವನ್ನು ಹೆಚ್ಚು ಆನಂದವಾಗಿ, ಸಂತಸದಾಯಕವಾಗಿ ಮತ್ತು ಉತ್ತೇಜನಕಾರಿ ಯಾಗಿರುವ ಇನ್ನೂ ಹೆಚ್ಚಿನ ಹಂತದಲ್ಲಿ ಬದುಕಬಹುದು!

ಸರಿ...

ಸ್ವಾಮೀಜಿ, ಅಂದರೆ ನಮ್ಮ ಉಸಿರಾಟವನ್ನು ಸುಮ್ಮನೆ ಗಮನಿಸುತ್ತಿರುವುದರಿಂದ, ನಾವು ನಿತ್ಯಾನಂದವನ್ನು ಪಡೆಯಬಹುದೇ?

ಹೌದು. ಇದೊಂದು ಬಹಳ ಶಕ್ತಿಯುತವಾದ ತಂತ್ರ. ನೋಡಿ, ನೀವು ನಿಮ್ಮ ಉಸಿರಾಟವನ್ನು ಗಮನಿಸಿದರೆ, ನಿಮ್ಮ ಅರಿವು ತೀವ್ರವಾಗಿರುತ್ತದೆ ಮತ್ತು ಯಾವುದೇ ಆಲೋಚನೆಯು ನಿಮ್ಮ ಪ್ರಜ್ಞೆಯನ್ನು ಮೀರಿ ತಪ್ಪಿಸಿಕೊಳ್ಳುವಂತಿರುವುದಿಲ್ಲ. ಪ್ರತಿಯೊಂದು ಆಲೋಚನೆಯೂ ನಿಮ್ಮ ಅರಿವಿನ ಮುಖಾಂತರವೇ ಹೋಗಲಾರಂಭಿಸಿದರೆ, ನಿಮ್ಮಷ್ಟಕ್ಕೆ ನೀವೇ ನಕಾರಾತ್ಮಕ ಆಲೋಚನೆಗಳನ್ನು ನಿಮ್ಮ ಬಗ್ಗೆ ಸೃಷ್ಟಿಸಿಕೊಳ್ಳುವುದನ್ನು ಬಿಡುತ್ತೀರ.

ನಿಮ್ಮ ಆಲೋಚನೆಗಳನ್ನು ಸರಿಪಡಿಸಿಕೊಳ್ಳಲು ನೀವೇನೂ ಸಮಯವನ್ನು ವಿನಿಯೋಗಿಸಬೇಕಾಗಿಲ್ಲ; ಅರಿವೇ ಅದನ್ನು ನಿಮಗಾಗಿ ಮಾಡುತ್ತದೆ. ನಿಮ್ಮ ಆಲೋಚನೆಯ ವ್ಯವಸ್ಥೆಯು ತನ್ನಷ್ಟಕ್ಕೇ ಪುನರ್ ವ್ಯವಸ್ಥೆಗೊಳ್ಳುತ್ತದೆ. ಅರಿವಿನ ಶಕ್ತಿಯು ಹೇಗಿರುತ್ತದೆಂದರೆ ಅದು ನಿಮ್ಮ ಆಲೋಚನಾ ವ್ಯವಸ್ಥೆಯನ್ನು ನಕಾರಾತ್ಮಕ ಚೈತನ್ಯವಾಗಿ ಪರಿವರ್ತಿಸುತ್ತದೆ.

ನೋಡಿ, ನಾವು ನೋವನ್ನು ಅನುಭವಿಸಿದಾಗ ಮಾತ್ರವೇ ನಾವು ನಮ್ಮ ಆಸೆಗಳನ್ನು ಪೂರೈಸಿದಂತೆ ಅದು ಹೇಗೋ ಭಾವಿಸುತ್ತೇವೆ. ನಾವು ನೋವಾಗುವ ತನಕ ಓಡುತ್ತೇವೆ; ನಾವು ಬೇಲಿಯನ್ನು ಡಿಕ್ಕಿ ಹೊಡೆಯುವ ತನಕ ಓಡುತ್ತೇವೆ. ನಾವು ಬೇಲಿಯ ಕಲ್ಪನೆಯ ಬಗ್ಗೆ ಎಷ್ಟೊಂದು ಹೊಂದಿಕೊಂಡು ಬಿಟ್ಟಿದ್ದೇವೆಂದರೆ, ಯಾರಾದರೂ ನಮಗೆ ಬೇಲಿಯು ಇಲ್ಲವೆಂದೂ, ಗಡಿಯು ಇಲ್ಲವೆಂದು ಹೇಳಿದರೂ ಸಹ ನಾನು ಅದನ್ನು ನಂಬಲು ತಯಾರಿರವುದಿಲ್ಲ. ನಾವು ಓಡಿ ಅದು ಹೇಗೋ ಒಂದು ಬೇಲಿಗೆ ಡಿಕ್ಕಿ ಹೊಡೆದು ನೋವನ್ನು ಅನುಭವಿಸುತ್ತೇವೆ; ನಂತರ ನಾವು ನೋವನ್ನು ಅನುಭವಿಸಿದ ಸಮಾಧಾನದಿಂದ ನಿಲ್ಲುತ್ತೇವೆ. ನಂತರ ನಮ್ಮ ಆಸೆಗಳು ಪೂರ್ಣಗೊಂಡಂತೆ ನಾವು ಭಾವಿಸುತ್ತೇವೆ. ಹೊಗಳಿಕೆಗೆ ಸುರಿಮಳೆಗೆ ಅರ್ಹರಾಗಲು ನಾವು ಆತಂಕ ಮತ್ತು ಚೈತನ್ಯಗಳ ಮುಖಾಂತರ ಹೋಗಲೇ ಬೇಕೆಂದು ನಾವು ಯಾವಾಗಲೂ ಭಾವಿಸುತ್ತೇವೆ. ನಾವು ಚಿಂತೆ ಮತ್ತು ನೋವಿಗಾಗಿ ನಿರಂತರ ತಯಾರಿಕೆಯಲ್ಲಿ ಇರುತ್ತೇವೆ.

ಮತ್ತು ಇನ್ನು ಕೆಲವು ಜನರಿರುತ್ತಾರೆ: ಅವರು ತಮಗೋಸ್ಕರವಾಗಿಯೇ ಚಿಂತೆಗಳನ್ನು ಸೃಷ್ಟಿಸಿಕೊಳ್ಳುತ್ತಾರೆ ಮತ್ತು ಆ ಚಿಂತೆಗಳನ್ನು ಮರೆಯಲು ಕುಡಿಯುತ್ತಾರೆ! ಈಗಿನ ತುಂಬಾ ಸಾಮಾನ್ಯ ಸಂಗತಿ. ಇದು ಒಂದು ತರಹ ಈ ರೀತಿ: ಒಂದು ಹಂದಿಯು ತಾನು ವಾಸವಾಗಿರುವ ಜಾಗದ ವಾಸನೆಯನ್ನು ಮತ್ತು ಕೊಚ್ಚೆಯನ್ನು ತಡೆದುಕೊಳ್ಳಲಾಗದೆ ತನ್ನ ಮೂಗನ್ನು ಅದರೊಳಗೇ ಮುಳುಗಿಸಿದಂತೆ. ನೀವು ಕುಡಿಯುವುದರಿಂದ ನಿಮ್ಮ ಚಿಂತೆಗಳನ್ನೆಲ್ಲಾ ಹೊಡೆದು ಹಾಕಿದಂತೆ ತಿಳಿಯುತ್ತೀರ, ಆದರೆ ನಿಜ ಸಂಗತಿಯಲ್ಲಿ ನೀವು ಹಿಂದೆ ಮುಂದೆ ನೋಡದೆ ವಾಸ್ತವವಾಗಿ ನೀವು ಅದರಲ್ಲಿ ಮುಳುಗಿಬಿಟ್ಟಿರುತ್ತೀರ.

ನಮಗೆ ಏನಾದರೂ ಬೇಕಾಗಿರುತ್ತದೆ, ಆದರೆ ನಾವು ಸ್ವಯಂ ವಿರೋಧಾತ್ಮಕವಾದ ಫಲಿತಾಂಶಗಳನ್ನು ನಮಗಾಗಿ ಸೃಷ್ಟಿಸಿಕೊಳ್ಳುತ್ತೇವೆ ಮತ್ತು ನಂತರ ನಮಗಾಗಿ ಹೆಚ್ಚಿನ ಚಿಂತೆಗಳನ್ನು ಆಗುವಂತೆ ಮಾಡಿಕೊಳ್ಳುತ್ತೇವೆ. ನಮಗೆ ಇದು ಅರಿವಾಗದಿದ್ದರೂ ಇದೇ ಮುಖ್ಯ ಸಮಸ್ಯೆ.

ಒಂದು ಚಿಕ್ಕ ಕಥೆ:

ಒಬ್ಬ ಬೇಡದ ಆಗಂತುಕನೊಬ್ಬನು ಒಬ್ಬ ವ್ಯಕ್ತಿಯ ಮನೆಗೆ ಬಂದನು.

ಆ ವ್ಯಕ್ತಿಯು ಅಡಿಗೆ ಮನೆಯಲ್ಲಿದ್ದ ತನ್ನ ಹೆಂಡತಿಗೆ ಆಗಂತುಕನಿಗೆ ಕಾಫಿಯನ್ನು ತರಲು ಕೂಗಿಕೊಂಡನು.

ಅವನ ಹೆಂಡತಿಯು ಮನೆಯಲ್ಲಿ ಕಾಫಿಯು ಇಲ್ಲವೆಂದೂ ಮತ್ತು ಕೊಳ್ಳಲು ಹಣವೂ ಸಹ ಇಲ್ಲವೆಂದು ಮರಳಿ ಕಿರುಚಿಕೊಂಡಳು.

ಗಂಡನು ಕೋಪಗೊಂಡು ಅವಳನ್ನು ಬಯ್ಯಲಾರಂಭಿಸಿದನು ಮತ್ತು ಕೊನೆಯಲ್ಲಿ ಕಾಫಿಯನ್ನು ತಂದುಕೊಡಲಾಗದುದ್ದಕ್ಕೆ ಕೆನ್ನೆಗೊಂದು ಏಟನ್ನು ಕೊಟ್ಟನು.

ಹೆಂಡತಿಯು ಅಳಲಾರಂಭಿಸಿದಳು.

ಆಗಂತುಕನು ಏನು ನಡೆಯುತ್ತಿದೆ ಎಂದು ನೋಡಿದನು ಮತ್ತು ನಿಧಾನವಾಗಿ ಮೇಲೆದ್ದು ಹೊರ ನಡೆದನು.

ಹೆಂಡತಿಯು ತನ್ನ ಕಣ್ಣೀರನ್ನು ಒರೆಸಿಕೊಂಡು ವಿಜಯೋತ್ಸಾಹದಿಂದ ಹೇಳಿದಳು, “ನೋಡಿದಿಯೇನು? ನಾನು ಅಳುವಂತೆ ನಟಿಸಿ ಅವನನ್ನು ಕಳುಹಿಸಿಬಿಟ್ಟೆ!” ಎಂದು.

ಗಂಡನು ಮರುತ್ತರಿಸಿದನು “ನಾನು ನಿನ್ನೊಂದಿಗೆ ಕೋಪಗೊಂಡಂತೆ ನಟಿಸಿದೆ ಮತ್ತು ನೀನು ಅಳುವಂತೆ ಮಾಡಿದೆ!” ಎಂದು.

ಆಗಂತುಕನು “ನಾನು ಹೊರ ನಡೆದಂತೆ ನಟಿಸಿದೆ ಮತ್ತು ಈಗ ನಾನು ಮರಳಿ ಬಂದೆ!” ಎಂದನು.

(ನಗೆ!)

ನಮ್ಮ ಆಲೋಚನೆಗಳು ನಮ್ಮಪದಗಳಿಗಿಂತ ಬೇರೆಯಾಗಿರುತ್ತವೆ. ಆದ್ದರಿಂದ ನಾವು ಬದುಕುತ್ತಿರುವ ಜೀವನವನ್ನು ಕಳೆದುಕೊಳ್ಳುತ್ತೇವೆ. ರಾಮಕೃಷ್ಣರು ಹೇಳುತ್ತಾರೆ “ನಮ್ಮ ಆಲೋಚನೆಗಳನ್ನು ಮತ್ತು ಪದಗಳನ್ನು ಒಂದುಗೂಡಿಸುವುದು ಒಂತು ತಪಸ್ಸನ್ನು ಮಾಡಿದರೆ” ಎಂದು. ಪದಗಳು ಹೊರ ಬರುವ ಮುಂಚೆ ನಮ್ಮೊಳಗೆ ಬಹಳಷ್ಟು ಆಲೋಚನೆಗಳು ನಡೆಯುತ್ತಿರುತ್ತವೆ. ನಾವು ಮಾತನಾಡಲು ಪ್ರಾರಂಭಿಸುವ ಮುಂಚೆ 'ಲಾಭ ಮತ್ತು ನಷ್ಟ'ವನ್ನು ನೋಡಿ ನಂತರ ವಿಶ್ಲೇಷಿಸಲು ಭವಿಷ್ಯಕ್ಕೆ ಹೋಗುತ್ತೇವೆ. ನಮ್ಮ ವ್ಯಕ್ತಿತ್ವವು ಈ ಕಾರಣಕ್ಕೆ ಒಟ್ಟಾಗಿರದೆ ಚೂರು ಚೂರಾಗಿರುತ್ತದೆ.

ಜನಗಳು ನನ್ನನ್ನು ಯಾವ ಪೂರ್ವ ತಯಾರಿಯೂ ಇಲ್ಲದೆ ಅದು ಹೇಗೆ ಗಂಟೆಗಟ್ಟಲೆ ಮಾತನಾಡಬಲ್ಲೆ ಎಂದು ಕೇಳುತ್ತಾರೆ. ನೋಡಿ, ನಾನು ಸ್ವಯಂ ಸ್ಫೂರ್ತಿಯುತವಾಗಿ ಸತ್ಯವನ್ನು ಅದು ಇರುವ ಹಾಗೆಯೇ ಮಾತನಾಡುತ್ತೇನೆ, ಅಷ್ಟೆ. ನಾನು ಸತ್ಯವನ್ನು ಬಿಚ್ಚಿಡಲು ಚಿಂತೆ ಮಾಡುವುದಿಲ್ಲ! ನಾನು ನನ್ನ ಪದಗಳನ್ನು ಹೇಳಲು ತಯಾರು ಮಾಡಿಕೊಳ್ಳುವುದಿಲ್ಲ. ನನಗೆ, ಯೋಚನೆ ಮಾಡುವುದೇ ಮಾತನಾಡುವುದು. ನಿಮಗೆ, ಮೊದಲು ಯೋಚಿಸುವುದು ಸಂಭವಿಸುತ್ತದೆ; ನಂತರ ಅವುಗಳನ್ನು ಹೇಗೆ ಹೇಳಬೇಕೆಂದು ತಯಾರಿ ನಡೆಯುತ್ತದೆ, ನಂತರವೇ ನೀವು ಮಾತನಾಡಲು

ಪ್ರಾರಂಭಿಸುತ್ತೀರ. ಈ ಎಲ್ಲಾ ಕಾರ್ಯ ವಿಧಾನಗಳಲ್ಲಿ ಮುಗ್ಧತೆಯು ಕಳೆದುಹೋಗುತ್ತದೆ ಮತ್ತು ನೀವು ಬಹಳ ಪದಗಳ ನಡುವೆ ಸಿಕ್ಕಿ ಬಿದ್ದಿರುತ್ತೀರಿ ಕೂಡ. ನಾನು ಸ್ವಯಂ ಸ್ಪೂರ್ತಿಯಿಂದ ಮಾತನಾಡುತ್ತಿರುವುದರಿಂದ ನೀವು ಗಂಟೆಗಟ್ಟಲೆ ಅದನ್ನು ಆಲಿಸಬಲ್ಲಿರಿ. ಇಲ್ಲದಿದ್ದಲ್ಲಿ, ನೀವು ತಳಮಳಿಸುವಂತಾಗುತ್ತೀರಿ. ಸಮಯವು ಹೋಗುತ್ತಿರುವ ಬಗ್ಗೆ ಯಾವ ಜಂಜಾಟವೂ ಇಲ್ಲದೆ ನೀವು ಇಲ್ಲಿರುವ ವಾಸ್ತವ ಸಂಗತಿಯೇ ನಾನು ಹೇಳಲು ಬಯಸುತ್ತಿರುವ ವಿಚಾರಗಳಿಗೆ ಸಾಕಷ್ಟು ರುಜುವಾತು. ಯಾವಾಗ ಸ್ವಯಂ ಸ್ಪೂರ್ತಿಯು ಸಂಭವಿಸುತ್ತದೆಯೋ, ಆಗ ನೀವು ಯಾವ ಯೋಚನೆಯೂ ಇಲ್ಲದೆ ಕೇವಲ ಹರಿಯುತ್ತೀರಿ. ಇಲ್ಲದಿದ್ದರೆ, ನೀವು ನಿಮ್ಮದೇ ಮನಸ್ಸಿನ ತಯಾರಿಯಲ್ಲಿ ಹರಿಯದೆ ನಿಲ್ಲುತ್ತೀರ. ನೀವು ಒಂದೇ ಹಾದಿಯ ಮನಸ್ಸಿನವರಾಗುತ್ತೀರ. ಒಂದು ಚಿಕ್ಕ ಕಥೆ: ಒಬ್ಬ ವ್ಯಕ್ತಿಯು ನಿದ್ರಿಸಲು ಬಹಳ ಕಷ್ಟ ಪಡುತ್ತಿದ್ದನು, ಆದರೆ ಆಗುತ್ತಿರಲಿಲ್ಲ, ಏಕೆಂದರೆ ಅವನ ನೆರೆ ಮನೆಯಾತನ ನಾಯಿಗಳು ಒಂದೇ ಸಮನೆ ಬೊಗಳುತ್ತಿದ್ದವು. ಹಲವು ರಾತ್ರಿಗಳು ಕಳೆದರೂ ಈ ಸನ್ನಿವೇಶದಲ್ಲಿ ಬದಲಾವಣೆಯಾಗಲಿಲ್ಲ. ಈ ವ್ಯಕ್ತಿಯು ಕೊನೆಗೆ ನಾಯಿಗಳ ಒಡೆಯನ ಸಂಗಡ ಮಾತನಾಡಲು ನಿರ್ಧರಿಸಿದನು. ಅವನ ಮನೆಗೆ ಮರುದಿನ ಹೋಗಿ ಇದರ ಬಗ್ಗೆ ದೂರನ್ನು ಹೇಳಿದನು. ವಿಚಲಿತನಾಗದ ನೆರೆಮನೆಯಾತನು ಹೇಳಿದನು, "ನಾನೇನೂ ಇದರ ಬಗ್ಗೆ ಮಾಡಲಾಗುವುದಲ್ಲ, ನೀವು ಏನು ಮಾಡಬೇಕೆಂದು ಯೋಜಿಸಿದ್ದೀರಾ?" ಎಂದು. ಈ ವ್ಯಕ್ತಿಯು ಉತ್ತರಿಸಿದನು "ಸರಿ ಹಾಗಾದರೆ, ಈ ರಾತ್ರಿ ನಾನು ನಾಯಿಗಳನ್ನು ನನ್ನ ಹಿತ್ತಲಿನಲ್ಲಿ ಕಟ್ಟಿಹಾಕುತ್ತೇನೆ, ಆಗ ನಿಮಗೆ ಇದೇನೆಂದು ಗೊತ್ತಾಗುತ್ತದೆ" ಎಂದು. ಆ ವ್ಯಕ್ತಿಯು ಸಲಹೆ ಕೊಟ್ಟಂತೆ ಮಾಡುವುದು ಎಂತಹ ಮೂರ್ಖತನದ್ದೆಂದು ಸುಮ್ಮನೆ ಯೋಚಿಸಿ. ಅವನು ಪದೇ ಪದೇ ಒಂದೇ ಹಾದಿಯ ಮನಸ್ಸಿನಲ್ಲಿ ಹೋಗುತ್ತಿರುತ್ತಾನೆ. ಉತ್ತರವನ್ನು ಹೇಗೆ ತಾನೆ ಕಂಡುಕೊಳ್ಳುತ್ತಾನೆ? ನೀವು ಸ್ವಯಂ ಸ್ಪೂರ್ತಿವಂತರಾಗಿದ್ದರೆ ನಿಮ್ಮನ್ನು ಒಂದು ಕ್ಷಣವೂ ವಿರೋಧಿಸಲಾಗುವುದೇ ಇಲ್ಲ. ನೀವು ತತ್ಕ್ಷಣವೇ ಒಂದು ಉತ್ತರದೊಂದಿಗೆ ಸಿದ್ಧರಾಗಿರುತ್ತೀರ. ನೀವು ಸ್ವಯಂ ಸ್ಪೂರ್ತಿವಂತರಾಗಿದ್ದರೆ, ನೀವು ಯಾವುದೇ ಬೆಟ್ಟದ ತುದಿಯಿಂದಲಾದರೂ ಹಾರಿ ಕೆಳಗೆ ಬೀಳುತ್ತಿರುವ ಸಮಯದಲ್ಲಿ ರೆಕ್ಕೆಗಳನ್ನು ಕಟ್ಟಿಕೊಳ್ಳುತ್ತೀರ!

ಸರಿ... ಏನಾದರೂ ಪ್ರಶ್ನೆಗಳಿವೆಯೇನು?

ಸ್ವಾಮೀಜಿ... ನಮ್ಮ ಜೀವನದಲ್ಲಿರುವ ಅಷ್ಟೊಂದು ಚಿಂತೆ ಮತ್ತು ಉದ್ವೇಗಗಳಿಗೆ ಮೂಲ ಕಾರಣಗಳೇನು ಎಂದು ಹೇಳುತ್ತೀರ?

ನೀವು ಈ ಪ್ರಶ್ನೆಯಿಂದ ಬಂದಿದ್ದೀರ ಎಂಬ ವಾಸ್ತವಾಂಶವೇ, ನೀವು ಅದರೊಳಗೆ ಆಳವಾಗಿ ನೋಡಬೇಕೆಂದು ಬಯಸಿದ್ದೀರ ಎಂಬುದನ್ನು ತೋರಿಸುತ್ತದೆ.

ನೋಡಿ, ನಾವು ಎಲ್ಲ ವಿಷಯಗಳಲ್ಲೂ - ನಮ್ಮ ಸುತ್ತಲಿರುವ ಜನಗಳ ಬಗ್ಗೆ, ನಾವು ವಾಸಿಸುವ ಸ್ಥಳಗಳ ಬಗ್ಗೆ, ಉಂಟಾಗುವ ಸನ್ನಿವೇಶಗಳ ಬಗ್ಗೆ, ಮತ್ತು ನಾವು ಅನುಸರಿಸುವ ಜೀವನದ ಶೈಲಿಯ ಬಗ್ಗೆ, ಒಂದೇ ಸಮನೆ ಕಲ್ಪನೆಗಳನ್ನು ಹೊಂದಿರುತ್ತೇವೆ. ನಾವು ಒಂದೇ ಸಮನೆ ಭ್ರಮಿಸುತ್ತಿರುತ್ತೇವೆ ಅಥವಾ ಸಂಗತಿಗಳು ಒಂದು ನಿರ್ದಿಷ್ಟವಾದ ಮಾದರಿಯಲ್ಲಿ ಆಗಬೇಕೆಂದು ನಿರೀಕ್ಷಿಸುತ್ತಿರುತ್ತೇವೆ. ಆದರೆ ನಿಜಾಂಶವು ಈ ಕಲ್ಪನೆಯಿಂದ ಯಾವಾಗಲೂ ಬೇರೆಯೇ ಆಗಿರುತ್ತದೆ. ವಾಸ್ತವಿಕತೆ ಮತ್ತು ನಮ್ಮ ಕಲ್ಪನೆಗಳ ನಡುವಿನ ಅಂತರವೇ ನಮ್ಮ ಬದುಕಿನಲ್ಲಿ ಉದ್ವೇಗವನ್ನು ಎಬ್ಬಿಸುತ್ತದೆ.

ನಾವು ನಮ್ಮೊಳಗೆ ಒಂದು ಮಿಥ್ಯಾ ಲೋಕವನ್ನು ಸೃಷ್ಟಿಸಿಕೊಂಡು ಅದನ್ನು ವಾಸ್ತವಿಕತೆಯಲ್ಲಿ ಕೈಗೂಡಿಸಿಕೊಳ್ಳಲು ಸದಾ ನೋಡುತ್ತಿರುತ್ತೇವೆ. ನಾವು ಎಷ್ಟು ಕಲ್ಪಿಸಿಕೊಂಡಿರುತ್ತೇವೋ ಅಷ್ಟು ಹೆಚ್ಚು ಅಂತ ವಾಸ್ತವಿಕತೆಯಲ್ಲಿ ಮತ್ತು ನಮ್ಮ ಕಲ್ಪನೆಯಲ್ಲಿ ಇರುತ್ತದೆ ಮತ್ತು ಅಷ್ಟು ಹೆಚ್ಚು ಉದ್ವೇಗವಿರುತ್ತದೆ.

ನಾವು ನಮ್ಮ ಕಲ್ಪನೆಯನ್ನು ವಾಸ್ತವಿಕಗೊಳಿಸುವ ಹಂತಕ್ಕೆ ಬಂದಂತೆ ಸದಾ ಭಾವಿಸುತ್ತೇವೆ, ಆದರೆ ನಾವು ಅದರ ಬಳಿ ಬಂದರೆ, ನಮ್ಮ ಕಲ್ಪನೆಗಳು ಮತ್ತಷ್ಟು ಬೆಳೆದಿರುತ್ತದೆ ಮತ್ತು ಅದರಿಂದ ನಾವು ಅದನ್ನು ಪಡೆಯುವುದೇ ಇಲ್ಲ. ಇದು ನಮ್ಮಲ್ಲಿ ನಿರಾಸೆಯನ್ನು, ಉದ್ವೇಗವನ್ನು ಮತ್ತು ಚಿಂತೆಯನ್ನು ಹುಟ್ಟಿ ಹಾಕುತ್ತದೆ.

ನಿಜ ಸಂಗತಿ ಏನೆಂದರೆ, ನಾವು ಕಲ್ಪನೆಯಲ್ಲಿ ಕೆಲಸ ಮಾಡುತ್ತಿದ್ದೇವೆಂಬ ಅರಿವು ಕೂಡ ನಮ್ಮಲ್ಲಿರುವುದಿಲ್ಲ. ನಮ್ಮ ಕಲ್ಪನೆಯು ನಮಗೆ ಎಷ್ಟೊಂದು ಘನ ವಸ್ತುವಾಗಿರುತ್ತದೆ

ನಾವು ಅದನ್ನು ಕಲ್ಪನೆಯೆಂದು ಕೂಡ ನೋಡಲಾಗುವುದಿಲ್ಲ. ನಾವು ಅದರೊಳಗೆ ಸಿಕ್ಕಿಹಾಕಿಕೊಂಡು ಬಿಟ್ಟಿರುತ್ತೇವೆ. ಸ್ಪಷ್ಟವಾಗಿ ತಿಳಿದಿರಿ: ಯಾವುದೇ ಸಂಗತಿಯತ್ತ ಕೆಲಸ ಮಾಡುತ್ತಿರುವುದು ಉದ್ವೇಗವನ್ನು ಉಂಟು ಮಾಡಿದರೆ, ಆಗ ನೀವು ವಾಸ್ತವತೆಯಲ್ಲಿ ಕೆಲಸ ಮಾಡುತ್ತಿಲ್ಲ ಮತ್ತು ನಿಮ್ಮ ಕಲ್ಪನಾ ವಲಯದಲ್ಲಿ ಕೆಲಸ ಮಾಡುತ್ತಿರುತ್ತೀರ.

ಪ್ರತಿಕ್ಷಣವೂ, ನಾವು ಹೊರ ಪ್ರಪಂಚದಲ್ಲಿನ ನಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ. ಜನಗಳು ನಾವು ಕಲ್ಪಿಸಿಕೊಂಡ ವಿಧದಲ್ಲಿ ಪ್ರತಿಕ್ರಿಯಿಸುವ ದಾಗಲೀ ಅಥವಾ ಪ್ರತಿಸ್ಪಂದಿಸುವುದಾಗಲೀ ಮಾಡದಿದ್ದರೆ, ನಮ್ಮನ್ನು ಕೈಬಿಟ್ಟಂತೆ ಅನಿಸುತ್ತದೆ.

ಸಣ್ಣ ವಿಚಾರಗಳಿಂದ ದೊಡ್ಡ ವಿಚಾರಗಳವರೆಗೆ, ನಾವು ಸದಾಕಾಲವೂ ನಮ್ಮ ಕಲ್ಪನೆಗೆ ಒಂದು ತಕ್ಕುದಾದ ಜೋಡಿಯನ್ನು ಹುಡುಕುತ್ತಿರುತ್ತೇವೆ. ಇದು ನಮ್ಮೊಳಗೆ ಒಂದು ಪ್ರಜ್ಞಾರಹಿತ ಕಾರ್ಯವಿಧಾನವಾಗಿರುತ್ತದೆ. ಆದುದರಿಂದಲೇ ನಾವು ಉದ್ವೇಗದ ಕಾರಣವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಆ ಕಾರಣವು ಇಡಿಯ ಸಂಗತಿಯಲ್ಲಿ ಎಷ್ಟೊಂದು ಸೂಕ್ಷ್ಮವಾಗಿ ಹೆಣೆದುಕೊಂಡು ಇದೆ ಎಂದರೆ, ಅದನ್ನು ಕಂಡುಕೊಳ್ಳಲಾಗುವುದಿಲ್ಲ.

ನೀವು ನಿಮ್ಮ ಅರಿವನ್ನು ಈ ಅಂಶಕ್ಕೆ ತೀಕ್ಷ್ಣವಾಗಿ ತಂದರೆ ಮತ್ತು ನಿಮ್ಮನ್ನೇ ನೀವು ಕೆಲವು ಗಂಟೆಗಳ ಕಾಲ ಗಮನಿಸಿದರೆ ನಿಮ್ಮ ಇಡಿಯ ಮನಸ್ಸು ಹೇಗೆ ಕೆಲಸ ಮಾಡುವುದೆಂದು ನಿಮಗೆ ತಿಳಿಯುತ್ತದೆ. ನಿಮ್ಮ ಮನಸ್ಸನ್ನು ಮತ್ತು ನಿಮ್ಮ ಸುತ್ತಲಿರುವ ಜನಗಳನ್ನು ಕೇವಲ ಗಮನಿಸುವುದಾಗಿ ನಿರ್ಧರಿಸಿ. ನಿಮ್ಮ ಮನಸ್ಸು ಹೇಗೆ ಸೂಕ್ಷ್ಮವಾಗಿ ಒಂದೇ ಸಮನೆ ನೀವು ನೋಡುವ ಮತ್ತು ಮಾಡುವ ಪ್ರತಿ ಸಣ್ಣ ವಿಚಾರಗಳಲ್ಲೂ ಅಪೇಕ್ಷೆಗಳನ್ನು ಸೃಷ್ಟಿಸುತ್ತಿರುವುದನ್ನು ನೋಡುತ್ತೀರಿ ಮತ್ತು ಹೇಗೆ ಕೆಲವು ಬಾರಿ ವಾಸ್ತವಿಕತೆಯು ಹೊಂದುತ್ತದೆ ಮತ್ತು ಹಲವು ಬಾರಿ ನಿಮ್ಮ ಅಪೇಕ್ಷೆಗಳನ್ನು ತಪ್ಪುತ್ತದೆಂದೂ ಮತ್ತು ಇದು ಸಂಭವಿಸಿದಾಗ ಹೇಗೆ ಉದ್ವೇಗ ಮತ್ತು ಚಿಂತೆಯ ಭಾವನೆಗಳು ನಿಮ್ಮಲ್ಲಿ ಉದ್ಭವಿಸುತ್ತದೆಯೆಂದೂ ನೀವು ನೋಡುತ್ತೀರಿ.

ಈ ಇಡಿಯ ವಿಚಾರದಲ್ಲಿ ನೀವು ಅರಿವನ್ನು ಕೇವಲ ತುಂಬಿಸಿಬಿಡುವುದರಿಂದಲೇ ಹೇಗೆ ನಿಮ್ಮ ಮನಸ್ಸು ಹೇಗೆ ಆಟವಾಡಿ ನಿಮಗೆ ಉದ್ವೇಗವನ್ನು ಸೃಷ್ಟಿಸುತ್ತದೆ ಎಂಬುದನ್ನು ನೋಡುತ್ತೀರಿ. ಒಮ್ಮೆ ನೀವು ಪ್ರೇಕ್ಷಕರಾಗಿರುವುದನ್ನು ಕಲಿತುಕೊಂಡರೆ, ನಿಮ್ಮ ಚಿಂತೆಗಳು ಬೀಳುತ್ತವೆ ಮತ್ತು ನೀವು ಹೊರ ಪ್ರಪಂಚದ ಘಟನೆಗಳನ್ನು ಅಂತರ್ಗತ ಮಾಡಿಕೊಳ್ಳುವುದಿಲ್ಲ. ನೀವು ಹೊರ ಪ್ರಪಂಚದ ಘಟನೆಗಳನ್ನು ಅಂತರ್ಗತ ಮಾಡಿಕೊಂಡರೆ, ನೀವು ಇನ್ನೂ ವಿಸ್ತಾರವಾದ ಪದಗಳ ಮಾಹಿತಿಯ ಆಧಾರ (database) ವನ್ನು ನಿಮ್ಮೊಳಗೆ ಸೃಷ್ಟಿಸಿಕೊಳ್ಳುತ್ತೀರ, ಮತ್ತು ಅವುಗಳಿಂದ ಹೊಸ ಚಿಂತೆಗಳು ಮೇಲೇಳುತ್ತವೆ.

ಮತ್ತೊಂದು ವಿಷಯ: ನೀವು ಸಮಯಾನುಸಾರ ಯೋಚಿಸಿ ಮತ್ತು ಸಮಯದ ನಷ್ಟವಿಲ್ಲದೆ ನಿಮ್ಮ ಸಮಯಾನುಸಾರದ ಯೋಜನೆಯನ್ನು ಕೈಗೂಡಿಸುವತ್ತ ಕೆಲಸ ಮಾಡಿದರೆ, ನೀವು ವಾಸ್ತವಿಕತೆಯ ಜಾಡಿನಲ್ಲಿದ್ದೀರಿ. ನೀವು ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಚಿಂತಿಸುತ್ತಾ ಏನನ್ನೂ ನಿರ್ಧರಿಸದಿರುವಂತೆ ಕಂಡುಕೊಂಡರೆ, ಆಗ ವಾಸ್ತವಿಕತೆ ಮತ್ತು ನಿಮ್ಮ ನಡುವೆ ಅಂತರವಿರುವಂತಹ ಹಾದಿಯಲ್ಲಿ ಇರುತ್ತೀರ. ಆಗ ನಿಮ್ಮಲ್ಲಿ ಅವಲೋಕಿಸಿಕೊಂಡು ನಿಮ್ಮ ಆಲೋಚನೆಗಳನ್ನು ನೇರಗೊಳಿಸಿಕೊಳ್ಳುವ ಸಮಯ ಬಂದಿರುತ್ತದೆ.

ಸಮಯಾನುಸಾರ ಯೋಚಿಸಲು ಯೋಚನೆ ಮಾಡುವುದು ಸರಿ, ಆದರೆ ಆ ಯೋಜನೆಯನ್ನು ಕಾರ್ಯಗತ ಮಾಡಬೇಕೆಂದು ಯೋಚಿಸುತ್ತಿರುವುದು ಸರಿಯಲ್ಲ. ಇದನ್ನೇ ಮಾನಸಿಕ ಯೋಜನೆಯೆಂದು ಕರೆಯುತ್ತಾರೆ ಮತ್ತು ಇದೇ ಉದ್ವೇಗ ಮತ್ತು ಚಿಂತೆಯನ್ನು ಸೃಷ್ಟಿಸುತ್ತದೆ.

ನೀವು ಯೋಚಿಸಿಕೊಳ್ಳಲು ಕೇವಲ 2 ಗಂಟೆಗಳ ಸಮಯ ಹಿಡಿದರೆ, ಇನ್ನುಳಿದ 22 ಗಂಟೆಗಳು ಆಯೋಜನೆಯನ್ನು ಕಾರ್ಯರೂಪಗೊಳಿಸಲು ನಿಮಗೆ ಸಿಗುತ್ತವೆ. ಹಾಗಾದರೆ ಆ ಯೋಜನೆಯು ಕಾರ್ಯರೂಪಕ್ಕೆ ಏಕೆ ಬಂದಿಲ್ಲ? ಏಕೆಂದರೆ, ನೀವು ಆ ಉಳಿದ ಸಮಯದ 80% ಕ್ಕೂ ಹೆಚ್ಚು ಭಾಗವನ್ನು ಆ ಯೋಜನೆಯನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂದು ಚಿಂತಿಸುವುದರಲ್ಲೇ ವ್ಯರ್ಥ ಮಾಡುತ್ತೀರ.

ನೀವು ಯೋಜನೆಯನ್ನು ನಿಮಗೇ ಪುನರುಚ್ಚರಿಸಿಕೊಳ್ಳುತ್ತಿದ್ದರೆ, ಪರಿಣಾಮದಲ್ಲಿ ನೀವು ನಿಮ್ಮ ಚೈತನ್ಯವನ್ನು ಅದರಲ್ಲಿ ಬರಿದು ಮಾಡುತ್ತಿದ್ದೀರ. ನಿಮ್ಮ ಚೈತನ್ಯವನ್ನು ಕಾರ್ಯರೂಪಗೊಳಿಸುವ ಬದಲು, ನೀವು ಅದನ್ನು ಸುಮ್ಮನೆ ವ್ಯರ್ಥ ಮಾಡುತ್ತಿದ್ದೀರ. ಆಗ ಕಾರ್ಯವು ಹೇಗೆ ತಾನೆ ಮುಗಿಸಲಾಗುತ್ತದೆ?

ಮತ್ತೊಂದು ವಿಷಯ: ನೀವು ನಿಜವಾಗಿಯೂ ಕೆಲಸವನ್ನು ಮುಗಿಸಬೇಕೆಂದಿದ್ದರೆ, ನೀವು ಚಿಂತೆಯನ್ನು ಮಾಡಿಕೊಳ್ಳದೆ, ಕಾರ್ಯ ಪ್ರವೃತ್ತರಾಗುತ್ತೀರ. ನಾನು

ಹೇಳುತ್ತೇನೆ: ಉದ್ವೇಗ ಮತ್ತು ಚಿಂತೆಯು ವಾಸ್ತವಿಕತೆಯಿಂದ ಓಡಿ ಹೋಗಲು ಇರುವ ಸಬೂಬುಗಳು ಮಾತ್ರ. ಚಿಂತೆ ಮತ್ತು ಉದ್ವೇಗದ ಸೋಗಿನಲ್ಲಿ, ನೀವು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತೀರ. ಪ್ರತಿ ಸಮಸ್ಯೆಯೂ ಒಂದು ಉತ್ತರದೊಂದಿಗೆ ಗರ್ಭಿತವಾಗಿರುತ್ತದೆ. ನೀವು ಮಾಡಬೇಕಿರುವುದು ಆ ಸಮಸ್ಯೆಯನ್ನು ಆಳವಾದ ಅರಿವಿನಿಂದ ಅವಲೋಕಿಸುವುದು ಮಾತ್ರ; ಪರಿಹಾರವು ತನ್ನಷ್ಟಕ್ಕೇ ಪ್ರಕಟಗೊಳ್ಳುತ್ತದೆ. ನೀವು ಅದನ್ನು ಪರಿಹರಿಸಲು ಬಯಸದೆ ಅದರ ಬಗ್ಗೆ ಮಾತನಾಡುವುದರಲ್ಲೇ ಆರಾಮವನ್ನು ಭಾವಿಸಿದರೆ, ನೀವು ಅದರ ಬಗ್ಗೆ ಮಾತನಾಡುವುದನ್ನೇ ಮುಂದುವರಿಸುತ್ತೀರ ಮತ್ತು ಚಿಂತಿಸಲು ಬಹಳವಿದೆಯೆಂಬ ದೊಡ್ಡಸ್ತಿಕೆಯ ಭಾವನೆಯನ್ನು ಹೊಂದುತ್ತೀರ.

ಜವಾಬ್ದಾರಿಯಿಂದ ಕಳಚಿಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ ತಪ್ಪು ಹಾದಿಯ ಮನಸ್ಥಿತಿಗೆ ಬರುವುದು - ಅಂದರೆ ಚಿಂತೆ ಮತ್ತು ಉದ್ವೇಗದ ಸ್ಥಿತಿ. ಬಹಳ ಸರ್ತಿ ವಿಷಣ್ಣ ಭಾವದಿಂದ ನರಳುತ್ತಿರುವ ಜನರು ಆ ಸ್ಥಿತಿಯಲ್ಲಿಯೇ ಆರಾಮದ ಭಾವನೆಯಿಂದಿರುತ್ತಾರೆ, ಏಕೆಂದರೆ ಅವರು ಯಾವ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕಾಗಿರುವುದಿಲ್ಲ, ಅವರು ಎಲ್ಲ ಜವಾಬ್ದಾರಿಗಳಿಂದಲೂ ಸುಮ್ಮನೆ ಮುಕ್ತರಾಗಿರುತ್ತಾರೆ.

ಒಂದು ಚಿಕ್ಕ ಕಥೆ:

ಒಬ್ಬ ದೊಡ್ಡ ಗುಣಪಡಿಸುವವನೆಂದು ಹೆಸರುವಾಸಿಯಾಗಿದ್ದ ವ್ಯಕ್ತಿಯೊಬ್ಬನು ಒಂದು ಹಳ್ಳಿಗೆ ಬಂದನು.

ಬೇಗನೇ ಒಂದು ಗುಂಪು ಅವನ ಸುತ್ತ ಜಮಾಯಿಸಿತು.

ಅವನು ಒಬ್ಬ ವ್ಯಕ್ತಿಯ ಕುತ್ತಿಗೆಯನ್ನು ಸ್ಪರ್ಶಿಸಿದನು ಮತ್ತು ದೀರ್ಘಕಾಲದಿಂದ ಕುತ್ತಿಗೆಯ ನೋವಿನಿಂದ ನರಳುತ್ತಿದ್ದ ಆ ವ್ಯಕ್ತಿಯು ತತ್‌ಕ್ಷಣವೇ ನೋವಿನಿಂದ ವಿಮುಕ್ತನಾದನು.

ಅವನು, ನಂತರ, ಇನ್ನೊಬ್ಬ ವ್ಯಕ್ತಿಯ ತಲೆಯನ್ನು ಮುಟ್ಟಿದನು ಮತ್ತು ಆ ವ್ಯಕ್ತಿಯ ತಲೆಯ ನೋವು ಆ ಕ್ಷಣವೇ ಮಾಯವಾಯಿತು.

ಅವನು ಊರುಗೋಲಿನ ಆಸರೆಯಲ್ಲಿದ್ದ ವ್ಯಕ್ತಿಯೊಬ್ಬನ ಬಳಿ ಬಂದನು.

ಊರುಗೋಲಿನ ಆಸೆಯಲ್ಲಿದ್ದ ವ್ಯಕ್ತಿಯು ದೂರ ಸರಿಯುತ್ತಾ ಹೇಳಿದನು "ನನ್ನನ್ನು ಮುಟ್ಟಬೇಡಿ!" ಎಂದು.

ಗುಣಪಡಿಸುವವನು ತಬ್ಬಿಬ್ಬಾಗಿ ಏಕೆ ಎಂದು ಕೇಳಿದನು.

ಆ ವ್ಯಕ್ತಿಯು ಹೇಳಿದನು "ನಾನು ಈಗ ತಾನೆ ಅಂಗವಿಕಲರ ಪರಿಹಾರ ನಿಧಿಗಾಗಿ ಅರ್ಜಿ ಸಲ್ಲಿಸಿದ್ದೇನೆ" ಎಂದು.

(ನಗೆ!)

ನಾವು ನಮ್ಮ ಸಮಸ್ಯೆಯ ಬಗ್ಗೆ ಕೊನೆಯೇ ಇಲ್ಲದೆ ಮಾತನಾಡುತ್ತೇವೆ, ಆದರೆ ನಮಗೆ ತತ್‌ಕ್ಷಣದ ಪರಿಹಾರವನ್ನು ನೀಡಿದರೆ, ಅದನ್ನು ಸ್ವೀಕರಿಸಲು ಕಷ್ಟಪಡುತ್ತೇವೆ! ನಮಗೆ ತತ್‌ಕ್ಷಣದ ಪರಿಹಾರವನ್ನು ನೀಡಿದರೆ, ಹಠಾತ್ತನೆ ನಮ್ಮೊಳಗೆ ಶೂನ್ಯ ಭಾವನೆಯನ್ನು ಹೊಂದುತ್ತೇವೆ. ನಮಗೆ ಜೀವನದಲ್ಲಿ ಮಾಡಲು ಮತ್ತೇನೂ ಇಲ್ಲವೆಂದು ಭಾವಿಸುತ್ತೇವೆ. ನಾವು ಅತಿಯಾಗಿ ನೆಮ್ಮದಿ ಹೊಂದಿದಂತೆ ಭಾವಿಸುತ್ತೇವೆ! ನಮ್ಮ ಸಮಸ್ಯೆಗಳು ಹಠಾತ್ತನೆ ಮಾಯವಾದರೆ ನಾವು ಸರಿಯಾಗಿ ಯೋಚಿಸಲಾರದ ಹಾಗೆ ಕಂಡುಕೊಳ್ಳುತ್ತೇವೆ, ಏಕೆಂದರೆ ನಾವು ನಮ್ಮ ಸಮಸ್ಯೆಗಳ ಆಚೆಗೆ ಯೋಚಿಸಿಯೇ ಇಲ್ಲ.

ನಮ್ಮ ಎಲ್ಲಾ ಉದ್ವೇಗಗಳೂ ಮತ್ತು ಚಿಂತೆಗಳೂ ನಿಜ ಸ್ಥಿತಿಯಲ್ಲಿ ಆರಾಮದಾಯಕ ವಲಯಗಳಾಗಿದ್ದು ಅವುಗಳಲ್ಲಿ ನಾವು ವಾಸ್ತವಿಕತೆಯಿಂದ ಅಡಗಿಕೊಂಡಿರುತ್ತೇವೆ. ನೀವು ನಿಜವಾಗಿಯೂ ಏನನ್ನಾದರೂ ಮಾಡಿ ಮುಗಿಸಬೇಕೆಂದಿದ್ದರೆ ಯಾವುದು ಹಾಗೆ ಮಾಡದಂತೆ ನಿಮ್ಮನ್ನು ತಡೆಯುತ್ತಿದೆ? ಏಕೆ ನೀವು ಅನುತ್ಪಾದಕ ಉದ್ವೇಗ ಮತ್ತು ಚಿಂತೆಯಲ್ಲಿ ಮುಳುಗಿ ಹೋಗುತ್ತೀರ? ಇದನ್ನು ನೀವು ಮಾಡುವುದು ಏಕೆಂದರೆ ನಿಮ್ಮ ಕೈಯಲ್ಲಿ ಅತಿಯಾದ ಸಮಯವಿದೆ ಅಥವಾ ಏಕೆಂದರೆ ನೀವು ವಾಸ್ತವಿಕತೆಯಿಂದ ತಪ್ಪಿಸಿಕೊಳ್ಳಬೇಕೆಂದಿದೆ, ಅಥವಾ ನೀವು ಅಷ್ಟೊಂದು ಉದ್ವೇಗ ಮತ್ತು ಚಿಂತೆಗೆ ಆಶ್ರಯವನ್ನು ಕೊಡುವಲ್ಲಿ ದೊಡ್ಡತನದ ಭಾವನೆಯನ್ನು ಹೊಂದಿದ್ದೀರ ಅಷ್ಟೆ.

ಆದುದರಿಂದ ನಿಮ್ಮ ಜೀವನ ಶೈಲಿಯ ವ್ಯಕ್ತಿಗಳು ಮುಂತಾದವುಗಳ ಬಗ್ಗೆ ನಿಮ್ಮ ಕಲ್ಪನೆಗಳನ್ನು ಬಿಟ್ಟುಬಿಟ್ಟು ಈ ಕ್ಷಣದಲ್ಲಿ ಬದುಕಲು ಪ್ರಾರಂಭಿಸಿ ಕಾರ್ಯಗಳು ತನ್ನಷ್ಟಕ್ಕೆ ತಾನೇ ಸಂಭವಿಸಲಾರಂಭವಾಗುತ್ತವೆ. ಜ್ಞಾಪಕದಲ್ಲಿಡಿ: ನೀವು ಈ ಆರಾಮದಾಯಕ ವಲಯದಲ್ಲಿ ಬಹಳ ಸಮಯ ಬದುಕಲಾರಿರಿ. ಯಾವ ಸಮಯದಲ್ಲಿಯಾದರೂ, ವಾಸ್ತವಿಕತೆಯು ನಿಮ್ಮನ್ನು ಕಂಡು ಹಿಡಿಯುತ್ತದೆ. ಆದುದರಿಂದ ಪ್ರಜ್ಞಾಸಹಿತರಾಗಿ ಬದುಕಿರಿ, ಪ್ರಜ್ಞಾಸಹಿತ ನಿರ್ಧಾರಗಳನ್ನು ತೆಗೆದುಕೊಂಡು, ಮತ್ತು ಮಾಡುವ ಪ್ರತಿ ತೀರ್ಮಾನಕ್ಕೂ ಜವಾಬ್ದಾರಿಯನ್ನು ತೆಗೆದುಕೊಳ್ಳಿ.

ಬೇರೊಬ್ಬರ ನಿರ್ಧಾರದಂತೆ ಹೋಗಿ ಕೊನೆಯಲ್ಲಿ ಅವರನ್ನು ದೂಷಿಸುವುದು ಬಹಳ ಸುಲಭ. ಇದನ್ನು ಮಾಡಲೇಬೇಡಿ. ಇದು ಬಹಳ ಮೂರ್ಖತನದ ಮತ್ತು ಹೇಡಿಯುತವಾದ ಕೆಲಸ. ಯಾರನ್ನೂ ಯಾವುದಕ್ಕೂ ದೂಷಿಸಬೇಡಿ. ಜ್ಞಾಪಕವಿಡಿ, ನೀವು ಯಾವುದನ್ನಾದರೂ ನಿಭಾಯಿಸಲು ಅಸಮರ್ಥರಾದರೆ, ನೀವು ಇತರರನ್ನು ದೂಷಿಸುತ್ತೀರ.

ಸರಿ...

ಸ್ವಾಮೀಜಿ... ನಾವು ಸದಾಕಾಲವೂ ಆರಾಮವಾಗಿರುವುದು ಹೇಗೆ?

ನಿಮ್ಮ ಪ್ರಜ್ಞೆಯು ಸದಾಕಾಲವೂ ಜಾಗೃತವಾಗಿದ್ದರೆ, ನೀವು ಸದಾಕಾಲವೂ ಆರಾಮವಾಗಿ ಇರುತ್ತೀರಿ. ಇಂತಹ ಸ್ಥಿತಿಯನ್ನು ಪಡೆಯಲು ಧ್ಯಾನವು ಕೀಲಿಕೈ. ಕೊನೆಯ ಪಕ್ಷ ಬುದ್ಧಿಮತ್ತೆಯ ಹಂತದಲ್ಲಿಯಾದರೂ ಇದನ್ನು ಮೊದಲು ಅರ್ಥಮಾಡಿಕೊಳ್ಳಿ. ಈ ಸಮಯದ ಅವಧಿಯನ್ನು ನಂತರ ಹೆಚ್ಚಿಸಬಹುದು ಮತ್ತು ಕೊನೆಯಲ್ಲಿ ನಿಮ್ಮ ಶಾಶ್ವತ ಸ್ಥಿತಿಯಾಗುತ್ತದೆ.

ನಾನು ಜನಗಳಿಗೆ ಯಾವಾಗಲೂ ಹೇಳುತ್ತೇನೆ: ಒಬ್ಬ ಗುರುವು ನಿಜವಾದ ಗುರುವೇ ಎಂಬುದನ್ನು ಕಂಡು ಹಿಡಿಯಲು, ಅವರು ನಿದ್ರಾವಸ್ಥೆಯಲ್ಲಿರುವಾಗ ಅವರನ್ನು ಗಮನಿಸಿ. ಒಬ್ಬ ನಿಜವಾದ ಗುರುವು ಮಲಗಿರುವಾಗ ಒಂದು ಹೂವಿನಂತೆ ಕಾಣಿಸುತ್ತಾರೆ. ಅವರು ಸಂಪೂರ್ಣವಾಗಿ ಆರಾಮವಾಗಿಯೂ ಮತ್ತು ಸುಂದರವಾಗಿಯೂ ನಿದ್ರಿಸುತ್ತಿರುವಾಗ ಕಾಣಿಸುತ್ತಾರೆ. ಅವರು ನಿದ್ರಿಸುತ್ತಿರುವಾಗ ಮಗುವಿನ ತರಹೆಯ ಮುಗ್ಧತೆಯನ್ನು ಪಸರಿಸುತ್ತಿರುತ್ತಾರೆ. ಅದೇ ಒಬ್ಬ ಸಾಮಾನ್ಯ ವ್ಯಕ್ತಿಯು ಮಲಗಿರುವಾಗ ಉದ್ವೇಗದಿಂದ ಮತ್ತು ಬಿಗುವಿನಿಂದ ಇರುವಂತೆ ಕಾಣಿಸುತ್ತಾರೆ.

ಒಬ್ಬ ಗುರುವು ಸದಾಕಾಲವು ಪರಮೋನ್ನತ ಪ್ರಜ್ಞೆಯ (super consciousness) ಸ್ಥಿತಿಯಲ್ಲಿ ಸದಾಕಾಲವೂ ಇರುತ್ತಾರೆ ಮತ್ತು ಕೇವಲ ಅವರು ದೇಹವನ್ನು ವಿಶ್ರಮಿಸಲು ಮಾತ್ರ ಮಲಗುತ್ತಾರೆ. ನೀವು ನಿರಂತರವಾಗಿ ಪ್ರಜ್ಞೆಯ ಅಥವಾ ಅರಿವಿನ ಸ್ಥಿತಿಯಲ್ಲಿದ್ದರೆ, ನೀವು ಉದ್ವೇಗದಿಂದಿರಲು ಸಾಧ್ಯವೇ ಇಲ್ಲ. ನೀವು ಪ್ರಜ್ಞಾರಹಿತ ಸ್ಥಿತಿಯಲ್ಲಿ, ಭ್ರಮಾಧೀನ ಸ್ಥಿತಿಯಲ್ಲಿ ಬೀಳುವಂತೆ ಅನುವು ಮಾಡಿಕೊಂಡರೆ, ನೀವು ನಿಮಗೆ ಉದ್ವೇಗವನ್ನು ಸೃಷ್ಟಿಸಿಕೊಳ್ಳುತ್ತೀರ. ಸದಾಕಾಲವೂ ವಿಶ್ರಮಿಸಲು ಇರುವ ಒಂದೇ ದಾರಿ ಎಂದರೆ, ಸದಾಕಾಲವು ನಿಮ್ಮೊಳಗೆ ಮತ್ತು ಹೊರಗೆ ಸಂಭವಿಸುತ್ತಿರುವ ಪ್ರತಿಯೊಂದು ವಿಷಯಗಳ ಬಗ್ಗೆಯೂ ಅರಿವನ್ನು ಹೊಂದಿರಬೇಕು.

ಅರಿವಿನಿಂದ ವಿಶ್ರಮಿಸುವುದನ್ನು ಕಲಿಯಿರಿ. ನೀವು ಒಬ್ಬ ಗುರುವಿನೊಂದಿಗೆ ಇರುವಾಗ ನೀವು ವಿಶ್ರಾಮದಿಂದಿದ್ದರೆ, ಅವರು ನಿಮ್ಮೊಳ ಹೊಕ್ಕುತ್ತಾರೆ; ಅವರ ಸ್ಥಿತಿಯ ನಿಮ್ಮ ಒಳ ಹೊಕ್ಕುತ್ತದೆ. ನೀವು ಮುಚ್ಚಿಕೊಂಡು ಮತ್ತು ಬಿಗಿಯಾಗಿ ಇದ್ದರೆ, ಅವರು ನಿಮ್ಮೊಳಗೆ ಹೋಗಲು ಸಾಧ್ಯವಾಗುವುದಿಲ್ಲ.

'ಉಪನಿಷತ್' ಪದದ ಅರ್ಥ 'ಗುರುವಿನ ಪಾದದಡಿಗಳಲ್ಲಿ ಕುಳಿತಿರುವುದು' ಎಂದು. ನೀವು ಗುರುವಿನ ಪಾದದಡಡಿಗಳಲ್ಲಿ ತೆರೆದ ಮತ್ತು ವಿಶ್ರಾಮದಿಂದ ಕೂಡಿದ ಮನಸ್ಸಿನಿಂದ ಕುಳಿತುಕೊಂಡಿರಬಲ್ಲಿರಾದರೆ, ಅವರು ನಿಮ್ಮೊಳಗೆ ಹೊಕ್ಕುತ್ತಾರೆ ಮತ್ತು ತಮ್ಮ ಎಲ್ಲ ಅನುಕಂಪದಿಂದ ನಿಮ್ಮ ಮೇಲೆ ಕೆಲಸ ಮಾಡುತ್ತಾರೆ. ಆಗ ಪದಗಳ ಅವಶ್ಯಕತೆಯೇ ಇರುವುದಿಲ್ಲ; ಅವರು ನಿಮ್ಮೊಳ ಹೊಕ್ಕಲು ಪ್ರಯತ್ನಿಸುತ್ತಿರುವಾಗ ನೀವು ತೊಡಗಿಸಿಕೊಂಡಿರುವುದಕ್ಕಾಗಿ ಮಾತ್ರ ಪದಗಳನ್ನು ಉಪಯೋಗಿಸುತ್ತಾರೆ. ಒಬ್ಬ ಗುರುವು ನೀವು ವಿಶ್ರಮಿಸುವುದು ಹೇಗೆ ಎಂಬುದನ್ನು ಬೋಧಿಸಬಲ್ಲರು. ನೀವು ಗುರುವಿನ ಸಮ್ಮುಖದಲ್ಲಿ ವಿಶ್ರಮಿಸುತ್ತಿರುವಾಗ, ವಾಸ್ತವವಾಗಿ ನೀವು ನಿಮ್ಮ ದೇಹದಲ್ಲಿಯೇ ನೆಲೆಗೊಳ್ಳುತ್ತಿರುತ್ತೀರಿ, ನೀವು ನಿಮ್ಮ ವ್ಯಕ್ತಿ ವೈಶಿಷ್ಟ್ಯದಲ್ಲಿ ನೆಲೆಗೊಳ್ಳುತ್ತಿರುತ್ತೀರ, ನಿಮ್ಮ ವ್ಯಕ್ತಿತ್ವದಲ್ಲಿ ನೀವು ವಿಶ್ರಾಂತಿಯನ್ನು ಅನುಭವಿಸುತ್ತೀರ. ಆಗ ನಿಮ್ಮೊಳಗೆ ಯಾವ ಬೆಣೆಯೂ (wadge) ಇರುವುದಿಲ್ಲ ಮತ್ತು ನೀವು ಸಮಗ್ರತೆಯಿಂದ ಇರುತ್ತೀರ. ಆದುದರಿಂದ ವಿಶ್ರಮಿಸುವುದನ್ನು ಗುರುವಿನ ಸಮ್ಮುಖದಲ್ಲಿ ಅಭ್ಯಾಸ ಮಾಡಿ. ಅದೇ ವಿಶ್ರಮಿಸುವುದಕ್ಕೆ ಹತ್ತಿರದ ಮತ್ತು ಅಚ್ಚೇರಿನ ದಾರಿ. ಸರಿ...

ಸ್ವಾಮೀಜಿ, ನೀವು ಯಾವಾಗಲೂ ಪರಮಾನಂದದ ಅನುಭವದಲ್ಲಿರುತ್ತೀರಾ? ನಿಮಗೆ ಮನೋಭಾವಗಳ ಹೊಯ್ದಾಟಗಳ ಅನುಭವಗಳಾಗುವುದಿಲ್ಲವೇ?

(ಸ್ವಾಮೀಜಿಯವರು ನಗುತ್ತಾರೆ...) ಹೌದು! ನಾನು ಸದಾಕಾಲವೂ, ಅಂದರೆ ನಿಮ್ಮ ಭಾಷೆಯಲ್ಲಿ ಹೇಳುವಂತೆ 24x7, ಪರಮಾನಂದದಿಂದಿರುತ್ತೇನೆ. ಇದು ಏಕೆಂದರೆ ವಿಶ್ವಶಕ್ತಿಯಿಂದ ಅನೇಕತ್ವವು (plurality) ಮಾಯವಾಗಿದೆ. ಪರಮಾನಂದವು ಇರುವಾಗ ಅನೇಕತ್ವವು ಇರಲು ಆಗುವುದಿಲ್ಲ. ಅನೇಕತ್ವವು ಮಾಯವಾದಾಗ ಮಾತ್ರವೇ ಪರಮಾನಂದವು ಸಂಭವಿಸಬಲ್ಲದು.

ನನ್ನ ಅಸ್ತಿತ್ವದಲ್ಲಿ ಕಾಮವಾಗಲೀ, ಭಯವಾಗಲೀ, ಮೋಹವಾಗಲೀ, ದ್ವೇಷವಾಗಲೀ ಅಥವಾ ಇನ್ನಾವುದೇ ವಿರೋಧಾತ್ಮಕ ಮನೋಭಾವಗಳಾಗಲೀ ಇರುವುದಿಲ್ಲ. ಇರುವ ಒಂದೇ ಮನೋಭಾವವೇ, ಪರಮಾನಂದ! ನಾನು ಹೇಳುತ್ತಿರುವುದರ ಸಂಬಂಧವನ್ನು ಕಲ್ಪಿಸಿಕೊಳ್ಳುವುದು ನಿಮಗೆ ಕಷ್ಟವಾಗಬಹುದು. ನಿಮಗೆ ಇದು ಪ್ರಯೋಗಾತ್ಮಕ ತಿಳುವಳಿಕೆಯಾಗುವ ತನಕ, ಇದನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಕಷ್ಟವಾಗುವುದು. ಇದನ್ನು ನೀವು ಬುದ್ಧಿಮತ್ತೆಯ ಹಂತದಲ್ಲಿ ಅರ್ಥ ಮಾಡಿಕೊಳ್ಳಬಹುದು. ಈಗಂತೂ, ನಾನು ಸದಾಕಾಲವೂ ಪರಮಾನಂದದಿಂದ ಇರುವೆನೆಂದು ಅರ್ಥಮಾಡಿಕೊಳ್ಳಿ, ಅಷ್ಟು ಸಾಕು!

ಅರ್ಥಮಾಡಿಕೊಳ್ಳಿ: ಪರಮಾನಂದದ ಮೊದಲ ಹೆಜ್ಜೆ ಎಂದರೆ ಒಬ್ಬ ಪ್ರೇಕ್ಷಕನಾಗಿರುವುದು. ಜೀವನವನ್ನು ಒಂದು ನಾಟಕದಂತೆ ಸುಮ್ಮನೆ ಗಮನಿಸಿ. ನೀವು ಗಮನಿಸುತ್ತಿದ್ದರೆ, ನಿಮ್ಮ ಮನಸ್ಸು ಸ್ತಬ್ಧವಾಗಿರುವುದು. ಅದು ಸ್ತಬ್ಧವಾದರೆ ನಿಮಗೆ ಎಳೆಯು (thread) ಸಿಗುತ್ತದೆ. ನೀವು ಸ್ತಬ್ಧತೆಯನ್ನು ಒಮ್ಮೆಯಾದರೂ ಅನುಭವಿಸಿದರೆ ನೀವು ಎಳೆಯನ್ನು ಹಿಡಿದಂತಾಗುತ್ತದೆ.

ಆ ಎಳೆಯು ನಿಮ್ಮನ್ನು ಇನ್ನೂ ದೀರ್ಘವಾದ ಕಾಲಾವಧಿಯ ಸ್ತಬ್ಧತೆಗೆ ಕರೆದೊಯ್ಯುತ್ತದೆ. ಈ ಸ್ತಬ್ಧತೆಯೇ ನಿಮ್ಮ ಗುರು. ಬಾಹ್ಯ ಗುರುವು ನಿಮ್ಮನ್ನು ಒಳ ಗುರುವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಾರೆ ಅಷ್ಟೆ. ನೀವು ಸ್ತಬ್ಧತೆಯನ್ನು ಕಂಡುಕೊಂಡಾಗ, ಎಲ್ಲ ಮನೋಭಾವಗಳೂ ಕೇವಲ ನಿಮ್ಮ ಮನಸ್ಸಿನ ಆಟವೆಂದು ನೀವು ಅರ್ಥಮಾಡಿಕೊಳ್ಳುತ್ತೀರ.

ಅರ್ಥಮಾಡಿಕೊಳ್ಳಿ; ನೀವು ಯಾವುದೇ ಮನೋಭಾವವನ್ನು ಪ್ರಜ್ಞಾಪೂರಕವಾಗಿ ಬಿಡಲು ಪ್ರಯತ್ನಿಸಿದರೆ ಬಿಡಲು ಸಾಧ್ಯವೇ ಆಗುವುದಿಲ್ಲ. ನೀವು ಅದನ್ನು ಬಿಡಲು ಹೆಚ್ಚು ಹೆಚ್ಚು ಪ್ರಯತ್ನಿಸಿದಷ್ಟೂ, ಅದು ಹೆಚ್ಚು ಹೆಚ್ಚು ಅಂಟಿಕೊಳ್ಳುತ್ತದೆ ಮತ್ತು ಅದು ನಿಮಗೆ ಒಂದು ಉಪದ್ರವವಾಗುತ್ತದೆ. ಆ ಮನೋಭಾವವು ನಿಮ್ಮನ್ನು ಕಾಡುತ್ತದೆ. ಇರುವ ಒಂದೇ ದಾರಿ ಎಂದರೆ ನಿಮ್ಮ ಮನೋಭಾವವನ್ನು ಗಮನಿಸುವುದು. ನೀವು ನಿಮ್ಮ ಮನೋಭಾವವನ್ನು ಗಮನಿಸುತ್ತಿದ್ದರೆ, ನಿಮ್ಮ ಮತ್ತು ನಿಮ್ಮ ಮನೋಭಾವಗಳ ಅಂತರವು ಹೆಚ್ಚುತ್ತಾ ಹೋಗುತ್ತದೆ.

ಇದೀಗ, ನೀವು ನಿಮ್ಮ ಮನೋಭಾವನೆಗಳೊಂದಿಗೆ ಎಷ್ಟು ತೊಡಗಿನಿಂದ ಸಿಕ್ಕಿಹಾಕಿಕೊಂಡಿರುವಿರೆಂದರೆ, ನೀವು ಸುಮ್ಮನೆ ಅವುಗಳಿಂದ ಬೇರೆಯಾಗಿ ಕಾಣಲಾರಿರಿ. ನೀವು ಗಮನಿಸಲು ಪ್ರಾರಂಭಿಸಿದರೆ, ನೀವು ನಿಮ್ಮ ಮತ್ತು ನಿಮ್ಮ ಮನೋಭಾವನೆಗಳ ನಡುವೆ ಅಂತರವನ್ನು ಸೃಷ್ಟಿಸಿಕೊಳ್ಳಲಾರಂಭಿಸುತ್ತೀರಿ. ನಿಧಾನವಾಗಿ, ಈ ಅಂತರವು ಹೆಚ್ಚುತ್ತಾ ಇದ್ದು ಒಂದು ದಿನ ಗಮನಿಸುವವನು ಆ ದೃಶ್ಯದಿಂದ ಮಾಯವಾಗಿ ಬಿಡುವನು.

ಆಗ ನೀವು ನಿಮ್ಮ ಮನೋಭಾವಗಳನ್ನು ಬಿಟ್ಟುಬಿಡಲು ಯಾವ ಪರಿಶ್ರಮವನ್ನೂ ಹಾಕುವ ಅಗತ್ಯವೇ ಇರುವುದಿಲ್ಲ. ಅವುಗಳು ತಮ್ಮಷ್ಟಕ್ಕೆ ತಾವೇ ಕಳಚಿಬಿಡುತ್ತವೆ ಮತ್ತು ನೀವು ಅವುಗಳಿಂದ ಸಂಬಂಧ ಕಡಿದುಕೊಂಡಂತೆ ಅನಿಸುತ್ತದೆ. ಅವುಗಳ ಜೊತೆ ಸಂಬಂಧ ಕಲ್ಪಿಸಿಕೊಳ್ಳಲು ನಿಮಗೆ ಇನ್ನು ಸಾಧ್ಯವಾಗುವುದಿಲ್ಲ. ಅವು ನಿಮ್ಮ ಅಸ್ತಿತ್ವದಿಂದ ಸುಮ್ಮನೆ ಮಾಯವಾಗಿ ಬಿಡುತ್ತದೆ. ನಿಮ್ಮ ಪ್ರಜ್ಞೆಯಲ್ಲಿ ಒಂದು ಬದಲಾವಣೆಯನ್ನು ಕಾಣುತ್ತೀರ. ನೀವು ಈಗ ಒಬ್ಬ ಹೊಸ ವ್ಯಕ್ತಿಯಾದಿರಿ.

ನೀವು ಒಬ್ಬ ಗಮನಿಸುವವರಾದರೆ, ಅಲ್ಲಿ ಚಿಂತೆಗಳಿಗಾಗಲೀ ಅಥವಾ ನೋವಿಗೆ ಸ್ಥಳಾವಕಾಶವೇ ಇರುವುದಿಲ್ಲ. ಅಲ್ಲಿ ನಿಮ್ಮೊಳಗೆ ಕೇವಲ ಪ್ರೀತಿಯು ಮಾತ್ರವೇ ಇರುತ್ತದೆ. ಆಗ ನೀವು ಪ್ರಪಂಚ ಶಕ್ತಿಯ ಪ್ರೀತಿಯನ್ನು, ಪ್ರತಿ ನಿಮಿಷವೂ ಪ್ರಪಂಚ ಶಕ್ತಿಯು ನಿಮ್ಮ ಮೇಲೆ ಸುರಿಸುತ್ತಿರುವ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುತ್ತೀರ.

ಒಂದು ಚಿಕ್ಕ ಕಥೆ:

ದುರ್ಬಲ ಹೃದಯವಿರುವ ಒಬ್ಬ ವ್ಯಕ್ತಿ ಇದ್ದನು.

ಅವನ ಕುಟುಂಬದವರು ಅವನಿಗೆ ಆಘಾತಕರವಾದ ವಿಷಯಗಳನ್ನು ಹೇಳಬೇಕಾದರೆ ಬಹಳ ಎಚ್ಚರ ವಹಿಸಿದ್ದರು.

ಒಂದು ದಿನ ಅವರಿಗೆ ಆ ವ್ಯಕ್ತಿಯ ಧನಿಕನಾದ ಚಿಕ್ಕಪ್ಪನು ಮರಣಸಿದ್ದು ಹತ್ತು ಲಕ್ಷ ಡಾಲರನ್ನು ಅವನಿಗೆ ಬಿಟ್ಟಿದ್ದು ತಿಳಿಯಿತು.

ಅವರಿಗೆ ಬಹಳ ಖುಷಿಯಾಯಿತು ಮತ್ತು ಅದೇ ಸಮಯ ಈ ವಿಚಾರವನ್ನು ಅವನಿಗೆ ಹೇಗೆ ಹೇಳಬೇಕೆಂದು ತಿಳಿಯದೆ ಹೋಯಿತು. ಅವನು ಈ ಸಂಗತಿಯಿಂದ ಸಾಯಬಹುದೆಂದು ಭಯಪಟ್ಟರು.

ಖಚಿತ ಪರಿಹಾರಗಳು

ಅವರಲ್ಲೊಬ್ಬನು ಸಲಹೆಯಿತ್ತನು “ನಾವು ನಮ್ಮ ಕುಟುಂಬದ ವೈದ್ಯರನ್ನು ಕರೆದು ಈ ವಿಚಾರವನ್ನು ನಿಭಾಯಿಸಲು ತಿಳಿಸೋಣ” ಎಂದು.

ಅವರೆಲ್ಲರೂ ಒಪ್ಪಿಕೊಂಡರು.

ಅವರು ಕುಟುಂಬದ ವೈದ್ಯರನ್ನು ಕರೆದು ಅವರಿಗೆ ಈ ಸಂಗತಿಯನ್ನು ಹೇಳಿದರು.

ಆ ವೈದ್ಯರು ಹೇಳಿದರು “ಚಿಂತಿಸಬೇಡಿ, ನಾನು ಇದನ್ನು ನಿಭಾಯಿಸುತ್ತೇನೆ. ನೀವು ತಿಳಿದಿರುವಂತೆ ಇದೇನೂ ಕಠಿಣವಾದುದಲ್ಲ” ಎಂದು.

ಆ ವೈದ್ಯರು ಬೇಗನೆ ಅವರ ಮನೆಗೆ ಬಂದು ಕೊಠಡಿಯೊಳಕ್ಕೆ ಹೊಕ್ಕು ಆ ಮನುಷ್ಯನೊಂದಿಗೆ ಮಾತನಾಡಲು ಪ್ರಾರಂಭಿಸಿದರು, “ನಿಮಗೆ ಹತ್ತುಲಕ್ಷ ಡಾಲರನ್ನು ಕೊಡುವುದಾಗಿ ತತ್‌ಕ್ಷಣವೇ ಹೇಳಿದರೆ ನೀವೇನು ಮಾಡುವಿರಿ?” ಎಂದು.

ಆ ಮನುಷ್ಯನು ಉತ್ತರಿಸಿದನು, “ಅದರಲ್ಲಿ ಅರ್ಧ ಭಾಗವನ್ನು ನಿಮಗೆ ಕೊಡುತ್ತೇನೆ ವೈದ್ಯರೆ” ಎಂದನು.

ಆ ವೈದ್ಯರು ಕುಸಿದು ಬಿದ್ದು ಮರಣಿಸಿದನು.

(ನಗೆ!)

ನಾವು ಬೇರೆಯವರ ವಿಚಾರದಲ್ಲಿ ಬದುಕನ್ನು ಒಂದು ನಾಟಕವೆಂಬಂತೆ ನೋಡಲು ತಯಾರಿರುತ್ತೇವೆ, ಆದರೆ ಅದು ನಮ್ಮದೇ ವಿಚಾರ ಬಂದಾಗ, ಅದನ್ನು ಜೀರ್ಣಿಸಿಕೊಳ್ಳಲು ನಮಗೆ ಕಠಿಣವಾಗುತ್ತದೆ! ನಾವು ಬೇರೆಯವರಿಗೆ ಬುದ್ಧಿವಾದವನ್ನು ಕೊಡಲು ತಯಾರಿರ‍್ತೇವೆ, ನಾನು ಒಂದು ಪುಸ್ತಕದಲ್ಲಿ ಓದಿದೆ. ಬುದ್ಧಿವಾದವೆನ್ನುವುದು ಪ್ರತಿಯೊಬ್ಬರೂ ಪ್ರೀತಿಸುವ ಆದರೆ ಯಾರೂ ತೆಗೆದುಕೊಳ್ಳಲು ತಯಾರಿಲ್ಲದ ವಿಷಯ!

ನೀವು ಒಂದು ಕಾಲುವೆಯಂತೆ ಇದ್ದರೆ - ಆಳವಾಗಿ ನೀರಿನಲ್ಲಿ ಇದ್ದರೂ ಅದರಿಂದ ಸ್ಪರ್ಶಿತವಾಗಿರುವುದಿಲ್ಲ, ನೀವು ಬದುಕಿನ ಆಟವನ್ನು ಆಡಲು ಕಲಿತಿದ್ದೀರ. ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ. ಅಸ್ತಿತ್ವವು ಬೇರೆ ಬೇರೆ ದಾರಿಗಳಿಂದ ಸ್ಪಷ್ಟಿಕರಿಸಿಕೊಳ್ಳುತ್ತಿದೆ (express). ನಮ್ಮ ಪಾತ್ರವು ಅದನ್ನು ಅರ್ಥಮಾಡಿಕೊಂಡು ಅದರೊಡನೆ ಆಳವಾದ ಅರಿವಿನಿಂದ ಹರಿಯುವುದು ಆಗಿದೆ.

ಇಡೀ ಸೃಷ್ಟಿಯು ಅಸ್ತಿತ್ವಕ್ಕೆ ತಕ್ಕಂತೆ ಹರಿಯುತ್ತಿದೆ ಎಂದು ಅರ್ಥಮಾಡಿಕೊಳ್ಳಿ. ಆಗ ನಿಮ್ಮಷ್ಟಕ್ಕೆ ನೀವೇ ಚಿಂತೆ ಮತ್ತು ಕಾತರತೆಯನ್ನು ಬಿಟ್ಟು ಬಿಡುತ್ತೀರಿ. ನಿಮ್ಮ ಸುತ್ತಲೂ ನಡೆಯುತ್ತಿರುವ ಸಂಗತಿಗಳಿಂದ ನಿಮ್ಮ ತಿರುಳು ಮುಟ್ಟಲಾಗದಂತಹ ಹಂತಕ್ಕೆ ನೀವು ತಲುಪಬೇಕು. ನೀವು ಪ್ರಾಯೋಗಿಕವಾಗಿ ಅಸ್ತಿತ್ವವು ಒಂದೇ ಸಮನೆ ಬದಲಾಗುತ್ತಿದೆ ಎಂದು ಅರ್ಥಮಾಡಿಕೊಂಡರೆ, ಇದು ಸಂಭವಿಸುತ್ತದೆ.

ಹೊರಮುಖವಾಗಿ ನೀವು ಬೇರೆ ಬೇರೆ ಭಾವನೆಗಳನ್ನು ತೋರಿಸಬಹುದು, ಆದರೆ ನಿಮ್ಮ ಅಂತರಾಳದಲ್ಲಿ ನೀವು ಈ ಹೊರಗಿನ ಘಟನೆಗಳೆಲ್ಲಾ ಅಸ್ತಿತ್ವ ಎಂಬ ಒಂದೇ ದಾರದಲ್ಲಿ ಪೋಣಿಸಿದ ಮಣಿಗಳಂತೆ ಎಂದು ಒಂದೇ ಸಮನೆ ನೋಡಬಲ್ಲವರಾಗಿರಬೇಕು. ಅವುಗಳನ್ನೆಲ್ಲಾ ಹಿಡಿದಿಟ್ಟಿರುವುದು ದಾರವೇ ಹ್ಞಾ...?

ಆದರೆ ಸ್ವಾಮೀಜಿ, ನಾವು ಬೇಕೆಂದೇ ಚಿಂತಿಸುವುದಿಲ್ಲ. ನಾವು ಚಿಂತೆಗಳನ್ನು ನಮ್ಮ ಮೇಲೆ ನಾವೇ ತಂದುಕೊಳ್ಳುತ್ತೇವೆಂದು ಅದು ಹೇಗೆ ನೀವು ಹೇಳುವಿರಿ?

ಚಿಂತೆ ಎಂಬುದು ನಿಮ್ಮ ಮನಸ್ಸಿನ ಅರಿವಿಲ್ಲದ ಸ್ಥಿತಿಯಾಗಿರುವುದು. ನೀವೇನೂ ಅದಕ್ಕೆ ಯಾವ ಉದ್ದೇಶವನ್ನೂ ಹಾಕಬೇಕಿಲ್ಲ. ಅದು ಸುಮ್ಮನೆ ಇದೆ, ಅಷ್ಟೆ! ನೀವು ಅದಕ್ಕಾಗಿ ಅರಿವಿನಿಂದ ಕೂಡಿದ ಪ್ರಯತ್ನವನ್ನು ಮಾಡಬೇಕಾಗಿಲ್ಲ. ಅದು ಸದಾಕಾಲವೂ ನಿಮ್ಮಲ್ಲೇ ಇದೆ.

ಒಂದು ಚಿಕ್ಕ ಕಥೆ:

ಒಬ್ಬ ಮಹಿಳೆಯು ಒಂದು ಹೋಟೆಲಿನ ಸ್ವಾಗತ ಪೀಠಕ್ಕೆ ಕರೆಮಾಡಿ ಸಹಾಯಕ್ಕಾಗಿ ಕಿರುಚಿಕೊಂಡಳು.

ಸ್ವಾಗತಕಾರಿಣಿಯು ಅವಳ ಕೊಠಡಿಗೆ ಬಂದಳು.

ಆ ಮಹಿಳೆಯು ಅವಳತ್ತ ಕಿರುಚುತ್ತಾ ನುಡಿದಳು “ನಾನು ಎದುರುಗಡೆಯ ಕೊಠಡಿಯ ಕಿಟಕಿಯ ಮುಖಾಂತರ ಒಬ್ಬ ಬೆತ್ತಲಾಗಿರುವ ಗಂಡಸನ್ನು ನೋಡುತ್ತಿದ್ದೇನೆ'' ಎಂದು.

ಸ್ವಾಗತಕಾರಿಣಿಯು ಕಿಟಕಿಯ ಮುಖಾಂತರ ನೋಡಿದಾಗ ಅವಳಿಗೆ ಒಬ್ಬ ಸೊಂಟದಿಂದ ಮೇಲೆ ಬೆತ್ತಲಿರುವ ಗಂಡಸು ಕಾಣಿಸಿದನು.

ಅವಳು ಹೇಳಿದಳು, “ಮೇಡಂ, ಅವನ ಮೇಲಿನ ದೇಹವು ಮಾತ್ರ ಬೆತ್ತಲಾಗಿದೆ. ಅವನು ಪೂರ್ಣ ಬೆತ್ತಲೆಂದು ನೀವು ಹೇಗೆ ತೀರ್ಮಾನಿಸಿದಿರಿ?'' ಎಂದು.

ಖಚಿತ ಪರಿಹಾರಗಳು

ಮಹಿಳೆಯು ಕಿರುಚುತ್ತಾ ಹೇಳಿದಳು “ಬಟ್ಟೆಗಳನ್ನಿಡುವ ಬೀರುವಿನ ಮೇಲೆ ನಿಂತು ನೋಡು!” ಎಂದು.

(ಜೋರು ನಗೆ!)

ಎಲ್ಲವೂ ಸರಿಯಿದ್ದರೂ ಸಹ, ನಾವು ಚಿಂತೆಗಳಿಗಾಗಿ ಕೈದೀಪದಿಂದ ಹುಡುಕುತ್ತೇವೆ! ನಾವು ಇದನ್ನು ಬೇಕೆಂದೇ ಮಾಡುವುದಿಲ್ಲ, ನಾವು ಇದನ್ನು ಬಹಳ ಸಹಜ ರೀತಿಯಲ್ಲಿ ಮಾಡುತ್ತೇವೆ - ಅದೇ ಸಮಸ್ಯೆ! ನಮ್ಮ ಮನಸ್ಸಿನ ಸ್ಥಿತಿಯು 180 ಡಿಗ್ರಿ ಬದಲಾವಣೆಯನ್ನು ಹೊಂದಬೇಕು.

ಇನ್ನೊಂದು ಚಿಕ್ಕ ಕಥೆ:

ಒಬ್ಬ ಪೋಲೀಸಿನವರು ತನ್ನ ರಾತ್ರಿ ಪಹರೆಯಲ್ಲಿ ಹೋಗುತ್ತಿದ್ದಾಗ ಅವನಿಗೆ ರಸ್ತೆ ಮಧ್ಯದಲ್ಲಿ ಒಂದು ಸತ್ತು ಬಿದ್ದಿರುವ ಹಸುವು ಕಾಣಿಸಿತು.

ಅವನು ಆ ಪ್ರಾಣಿಯನ್ನು ಪಕ್ಕದ ರಸ್ತೆಗೆ ಎಳೆಯಲು ಪ್ರಾರಂಭಿಸಿದನು.

ಪಕ್ಕದಲ್ಲಿ ಹೋಗುತ್ತಿದ್ದ ಒಬ್ಬ ವ್ಯಕ್ತಿಯು ಸತ್ತ ಪ್ರಾಣಿಯನ್ನು ಈ ರೀತಿ ರಸ್ತೆಯುದ್ದಕ್ಕೂ ಎಳೆದುಕೊಂಡು ಹೋಗುತ್ತಿರುವ ಕಾರಣವನ್ನು ಕೇಳಿದನು.

ಪೋಲೀಸಿನವನು ಉತ್ತರಿಸಿದನು “ನಾಳೆ ಬೆಳಿಗ್ಗೆ ಇದನ್ನು ವರದಿ ಮಾಡುವಾಗ ಇದು ಸುಲಭವಾಗುತ್ತದೆ, ಏಕೆಂದರೆ ನನಗೆ ಆ ರಸ್ತೆಯ ಹೆಸರು ಗೊತ್ತು ” ಎಂದು.

(ನಗೆ!)

ನಮಗೆ ಹೇಗೆ ಸ್ಪೂರ್ತಿಯುತರಾಗಿರಬೇಕೆಂದು ತಿಳಿದಿಲ್ಲದಿರುವುದರಿಂದ, ಸದಾಕಾಲವೂ ನಾವು ಚಿಂತಿತರಾಗಿರುತ್ತೇವೆ. ನಮ್ಮ ಚೌಕಟ್ಟಿನಲ್ಲಿ ವಿಷಯಗಳನ್ನು ಹೊಂದಿಸಲು ನಾವು ಅವುಗಳನ್ನು ಗೊಂದಲಮಯವಾಗಿ ಮಾಡುತ್ತೇವೆ. ನಾವು ದ್ರವದಂತೆ ಬದುಕುತ್ತಿಲ್ಲ, ನೀವು ದ್ರವದಂತೆ ಬದುಕಿದರೆ, ನೀವು ಅನವಶ್ಯಕವಾಗಿ ಕೆಲಸ ಮಾಡಬೇಕಿರುವುದಿಲ್ಲ, ನೀವು ಸುಮ್ಮನೆ ಸಂತೋಷದಿಂದ ಅನುಭವಿಸಿ ಮುಂದೆ ಸಾಗಬಹುದು.

ಉದಾಹರಣೆಗೆ, ನಾನು ನಿಮಗೆ ಸದಾಕಾಲವೂ ಆತ್ಮsecondaryನಂದದಿಂದಿರಬೇಕೆಂದು ಹೇಳಿದರೆ, ನೀವು ಹೇಗೆ ಆತ್ಮಾನಂದದಿಂದಿರಬೇಕೆಂದು ಚಿಂತಿಸಲು ಪ್ರಾರಂಭಿಸುತ್ತೀರ! ನಿಮಗೆ ಗೊತ್ತಿರುವುದು ಯಾವುದನ್ನೇ ಆದರೂ ಚಿಂತೆಯಿಂದ ಪ್ರಾರಂಭಿಸುವುದು, ಅದೇ ಸಮಸ್ಯೆ. ಆದ್ದರಿಂದಲೇ ನೀವು ನನ್ನನ್ನೇನಾದರೂ ಕೇಳಿದರೆ, ಬಹಳಷ್ಟು ಸರ್ತಿ ನಾನು ಯಾವುದನ್ನೂ ನೇರವಾಗಿ ಅಥವಾ ಬಹಳ ಶಬ್ದಗಳಿಂದ ನಿಮಗೆ ನಿಮ್ಮ ಮನಸ್ಸು ಚಿಂತೆಯ ಜಾಡಿನಲ್ಲಿ ಇರದೇ ಇರಲು ನಾನು ಸುಮ್ಮನೆ ಕೆಲವು ಭಾವನಾತ್ಮಕ ಹೇಳಿಕೆಗಳನ್ನು ಹೇಳುತ್ತೇನೆ. ಆದರೆ ಅದೇ ಸಮಯದಲ್ಲಿ ನೀವು ತಿಳುವಳಿಕೆಯಿಂದ ಅದರ ಒಳಹೊಕ್ಕುವಂತೆ ಮಾಡಲು ನಾನು ನಿಮಗೆ ಚೈತನ್ಯವನ್ನು ನೀಡುತ್ತೇನೆ.

ಹ್ಯಾ..

ಸ್ವಾಮೀಜಿ, ಅಂದರೆ ನಾವು ಅದರ ಬಗ್ಗೆ ಚಿಂತೆಯನ್ನು ಮಾಡಲು ಪ್ರಾರಂಭಿಸಿದರೆ, ನೀವು ಹೇಳುತ್ತಿರುವುದನ್ನು ಅನುಸರಿಸಲು ಪ್ರಾರಂಭಿಸುವುದು ಹೇಗೆ?

ನಿಮ್ಮ ಮನಸ್ಸನ್ನು ಅನ್ವಯಿಸದೆ ನನ್ನ ಪದಗಳ ಹಿಂದಿರುವ ಚೈತನ್ಯವನ್ನು ಮತ್ತು ಪ್ರೇರಣೆಯನ್ನು ಸುಮ್ಮನೆ ಹೀರಿಕೊಂಡು ವರ್ತಮಾನದಲ್ಲಿ ಬದುಕಲು ಪ್ರಾರಂಭಿಸಿರಿ ಅಷ್ಟೆ. ನೀವು ನಿಮ್ಮ ಮನನ್ನು ಅದಕ್ಕೆ ಅನ್ವಯಿಸಿದರೆ, ತರ್ಕವು ಬರುತ್ತದೆ, ತೊಂದರೆಯು ಪ್ರಾರಂಭವಾಗುತ್ತದೆ.

ನಾನು ಕರೆಯುವ ನಿಶ್ಯಬ್ದತೆ ಎಂದರೆ ಅದರಿಂದ ನಿಮ್ಮನ್ನು ಒಳ ಹೊಕ್ಕಲು ನಾನು ಸದಾ ಪ್ರಯತ್ನಿಸುತ್ತಿರುವ ನಿಶ್ಯಬ್ದತೆಯಾದ ನನ್ನ ಪದಗಳ ಹಿಂದಿರುವ ಚೈತನ್ಯವನ್ನು ಸುಮ್ಮನೆ ಅನುಭವಿಸಿ. ಈ ನಿಶ್ಯಬ್ದತೆಯು ಅಂತಿಮವಾಗಿ ನಿಮ್ಮನ್ನು ಎಲ್ಲಿಗೆ ಕೊಂಡೊಯ್ಯ ಬೇಕೋ ಅಲ್ಲಿಗೆ ಕೊಂಡೊಯ್ಯುತ್ತದೆ. ನನ್ನ ಶಬ್ದಗಳನ್ನು ಅರ್ಥೈಸಲು ಖಂಡಿತಾ ಪ್ರಯತ್ನಿಸಬೇಡಿ.

ಪದಗಳನ್ನು ಸಂಗ್ರಹಿಸಲೇಬೇಡಿ. ಕೇವಲ ಬೌದ್ಧಿಕ ಹುಚ್ಚರು ಮಾತ್ರವೇ ಪದಗಳನ್ನು ಮತ್ತು ಹೆಚ್ಚಿನ ಪದಗಳನ್ನು ಸಂಗ್ರಹಿಸುತ್ತಾರೆ. ಅವರು ಪದಗಳನ್ನು ಸಂಗ್ರಹಿಸಿ ಹೆಚ್ಚು ಹೆಚ್ಚು ಗೊಂದಲಕ್ಕೀಡಾಗುತ್ತಾರೆ. ಅವರು ಸಮಯದ ಯಾವುದೋ ಅಂಶದಲ್ಲಿ ನಿಚ್ಚಳತೆಯು ಬರಬಹುದೆಂದು ಪದಗಳನ್ನು ಸಂಗ್ರಹಿಸುತ್ತಾರೆ. ಆದರೆ ಅದು ಆಗುವುದೇ ಇಲ್ಲ.

ನೋಡಿ, ನಾನು ಏನೇ ಮಾತನಾಡಿದರೂ, ಅದನ್ನು ನೀವು ಜೋಡಿಸಿ ವಿಶ್ಲೇಷಿಸಿದರೆ ವಿರೋಧಾತ್ಮಕವಾಗಿ ಕಂಡರೂ, ನಾನು ಮಾತನಾಡಿದ ಆ ಕ್ಷಣದಲ್ಲಿ ಅದು ಸಂಪೂರ್ಣ ಸತ್ಯವಾಗಿರುತ್ತದೆ. ಆ ಕ್ಷಣಕ್ಕೆ ನಾನು ಮಾತನಾಡುತ್ತಿರುವುದೆಲ್ಲೂ ಸಂಪೂರ್ಣ ಸತ್ಯವಾಗಿರುತ್ತದೆ. ಆದರೆ ನನ್ನ ಪದಗಳಿಂದ ಮಾತ್ರವೇ ನೀವು ತೀರ್ಮಾನಕ್ಕೆ ಬರಲಾಗುವುದಿಲ್ಲ. ಆದುದರಿಂದ ಆ ಕ್ಷಣಕ್ಕೆ, ಅದನ್ನು ಪ್ರಶ್ನಿಸದೆ ಹಾಗೆಯೇ ತೆಗೆದುಕೊಳ್ಳಿ. ಅದು ನಿಮಗೆ ಅನುಸರಿಸಿಕೊಂಡು ಹೋಗಲು ಬೇಕಾಗುವ ಚೈತನ್ಯವನ್ನೂ ಮತ್ತು ಬುದ್ಧಿವಂತಿಕೆಯನ್ನೂ ಕೊಡುತ್ತದೆ.

ನೀವು ಪೂರ್ಣ ನಂಬಿಕೆಯಿಂದ ಮುಂದುವರಿದರೆ ನೀವು ಚಿಂತೆ ಮಾಡುವುದಿಲ್ಲ. ಇದು ನಿಜವಾದ ಪ್ರಾರ್ಥನೆ. ಪ್ರಾರ್ಥನೆ ಎಂದರೆ ನಿಮ್ಮ ಚಿಂತೆಗಳನ್ನೆಲ್ಲಾ ಹೊರ ಚೆಲ್ಲಿ ಪರಿಹಾರವನ್ನು ಕೇಳುವುದಲ್ಲ. ಪ್ರಾರ್ಥನೆ ಎಂದರೆ ಅಸ್ತಿತ್ವದಲ್ಲಿ ಸಂಪೂರ್ಣ ಭರವಸೆಯನ್ನು ಇಡುವುದು ಮತ್ತು ಅದು ನಿಮಗಾಗಿ ಕಾರ್ಯ ಮಾಡುವುದನ್ನು ಅನುಭವಿಸುವುದು.

ಆದುದರಿಂದ ನಿಮ್ಮ ಬುದ್ಧಿಮತ್ತೆಯಿಂದ ಕೇಳಬೇಡಿ. ಆಳವಾದ ಧ್ಯಾನದಿಂದ ಕೇಳುವುದನ್ನು ಕಲಿಯಿರಿ. ಆ ಸಮಯದಲ್ಲಿ ನಿಮ್ಮ ಮನೋಭಾವನೆಗಳು ಅಥವಾ ಮಾರ್ಗ ಏನೇ ಇದ್ದರೂ, ಸುಮ್ಮನೆ ಅದರೊಳಗೆ ಆಳವಾಗಿ ಹೋಗಿ ನನ್ನನ್ನು ಆಲಿಸಿರಿ. ಅಷ್ಟು ಸಾಕು. ತನ್ನಷ್ಟಕ್ಕೇ ನೀವು ಚೈತನ್ಯದಿಂದ ತುಂಬಲ್ಪಡುತ್ತೀರ ಮತ್ತು ಬಲಶಾಲಿಗಳಾಗುತ್ತೀರ. ಇವೆಲ್ಲವೂ ನಾನು ನಿಮಗೆ ಕೊಡುತ್ತಿರುವ ಮೂಲ ರಹಸ್ಯಗಳು.

ನೀವು ನನ್ನ ಪದಗಳಿಗೆ ಅಂಟಿಕೊಂಡರೆ, ಅವುಗಳನ್ನು ಮರೆತುಬಿಡಬಹುದೆಂದು ನೀವು ಚಿಂತಿತರಾಗುತ್ತೀರ. ನೀವು ಅವುಗಳನ್ನು ಬರೆದುಕೊಳ್ಳಲಾರಂಭಿಸುತ್ತೀರ. ನಾನು ಹೇಳುತ್ತೇನೆ, ನೀವು ಬರೆದುಕೊಳ್ಳಲು ಪ್ರಾರಂಭಿಸಿದ ಕ್ಷಣವೇ, ನೀವು ಎಲ್ಲವನ್ನೂ ಕಳೆದುಕೊಳ್ಳುತ್ತೀರ. ನೀವು ನನ್ನ ಪದಗಳ ಹಿಂದಿರುವ ಚೈತನ್ಯವನ್ನು ಹೀರಿಕೊಂಡಿರುವುದಾಗಲೀ ಇಲ್ಲವೇ ನನ್ನ ಪದಗಳನ್ನು ಪೂರ್ಣವಾಗಿ ಬರೆದುಕೊಂಡಿರುವುದಾಗಲೀ ಮಾಡಿರುವುದಿಲ್ಲ. ನೀವು ಗೀಚಿಕೊಂಡಿರುವ ಟಿಪ್ಪಣಿಗಳೊಂದಿಗೆ ಮನೆಗೆ ಹೋಗುತ್ತೀರ ಮತ್ತು ಕೆಲವು ದಿನಗಳ ನಂತರ, ಇವೂ ಕೂಡ ನಿಮ್ಮ ಮನೆಯ ಯಾವುದೋ ಮೂಲೆಯಲ್ಲಿ ಬಿದ್ದಿರುತ್ತದೆ. ಕೆಲವು ಕಾಲಾ ನಂತರ, ಅವು ನಿಮಗೆ ಸಿಕ್ಕರೂ ಸಹ, ಅವುಗಳಿಂದ ನಿಮಗೆ ತಲೆ ಬುಡವೇ ಗೊತ್ತಾಗುವುದಿಲ್ಲ.

ಇದು ಒಂದು ಈ ತರಹ: ನೀವು ಒಂದು ಪುಸ್ತಕವನ್ನು ಓದುವಿರಿ ಮತ್ತು ಅದರ ಕೊನೆಯ ಎರಡು ಪುಟಗಳನ್ನು ಮಾತ್ರವೇ ನಿಮ್ಮ ಕೈಯಲ್ಲಿ ಉಳಿಸಿಕೊಳ್ಳುತ್ತೀರ.

ಎಂದು ಭಾವಿಸೋಣ. ಕೇವಲ ಆ ಎರಡು ಪುಟಗಳಿಂದ, ನೀವು ಇಡಿಯ ಪುಸ್ತಕವನ್ನೇ ಪುನರ್ ಸಂಗ್ರಹಿಸಬಲ್ಲಿರೇನು? ಇಲ್ಲ! ಇದೇ ರೀತಿ ನನ್ನ ಕೆಲವು ಪದಗಳನ್ನು ಬರೆದುಕೊಂಡು ನಂತರ ಎಲ್ಲವನ್ನೂ ಜ್ಞಾಪಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಡಿ. ನಾನು ಮಾತನಾಡುತ್ತಿರುವಾಗ ಕೇವಲ ಇರಿ ಅಷ್ಟೇ ಸಾಕು.

ನನ್ನ ಪದಗಳು ಮರೆತು ಹೋಗಬಹುದೆಂದು ಚಿಂತಿಸುವುದನ್ನು ನಿಲ್ಲಿಸಿ. ನಿಮ್ಮ ಸಂಪೂರ್ಣ ಇರುವಿಕೆಯನ್ನು ನನಗೆ ಕೊಟ್ಟರೆ ನನ್ನ ಪದಗಳು ನಿಮ್ಮ ಒಳಹೊಕ್ಕು ತಮ್ಮ ಕೆಲಸವನ್ನು ಮಾಡುತ್ತವೆ. ಮುಖ್ಯವಾದದ್ದು ಪರಿವರ್ತನೆಯೇ ಹೊರತು ನನ್ನ ಪದಗಳಲ್ಲ. ನಿಮ್ಮ ಅಸ್ತಿತ್ವದೊಂದಿಗೆ ನನ್ನನ್ನು ಆಲಿಸಿ, ನಿಮ್ಮ ಮನಸ್ಸಿನಿಂದಲ್ಲ. ನೀವು ಅರ್ಥಮಾಡಿಕೊಂಡರೆ ಮತ್ತು ಪರಿವರ್ತನೆಯು ಸಂಭವಿಸಿದರೆ, ನೀವು ಮರೆಯುವುದಿಲ್ಲ. ನೀವು ಮರೆತಿದ್ದರೆ ಅದರ ಅರ್ಥ ನೀವು ಅರ್ಥಮಾಡಿ ಕೊಂಡಿಲ್ಲವೆಂದು.

ನನ್ನ ಪದಗಳನ್ನೇ ಅಲ್ಲ, ನೀವು ಯಾವುದಕ್ಕೂ ಅಂಟಿಕೊಂಡಿರಬೇಡಿ. ಪ್ರತಿ ಕ್ಷಣವೂ ಹಿಂದಕ್ಕೆ ಸರಿಯುತ್ತಿರುತ್ತದೆ, ಆಗ ಅಂಟಿಕೊಂಡಿರುವುದಕ್ಕೆ ಏನಿದೆ? ಅಂಟಿಕೊಂಡಿರುವುದು ಒಂದು ದುಃಖದ ಮೇಲೆ ಮತ್ತೊಂದನ್ನು ತರುತ್ತದೆ. ಭವಿಷ್ಯದ ಬಗ್ಗೆಯೂ ಯೋಚಿಸುತ್ತಿರುವುದರಲ್ಲಿ ಅರ್ಥವಿಲ್ಲ. ಅದು ಇನ್ನೂ ಬರಬೇಕಿದೆ. ಅದರ ಬಗ್ಗೆ ಏನು ಯೋಚಿಸುತ್ತೀರಿ? ಭವಿಷ್ಯವೂ ಕೂಡಿ ವರ್ತಮಾನದ ರೂಪದಲ್ಲಿಯೇ ಬರುತ್ತದೆ. ಆದುದರಿಂದ ವರ್ತಮಾನದ ಬಗ್ಗೆ ಕೇಂದ್ರೀಕರಿಸಿ.

ನೋಡಿ, ನೀವು ವರ್ತಮಾನದಲ್ಲಿದ್ದರೆ, ನೀವು ಆಯ್ಕೆ ಮಾಡುವುದಿಲ್ಲ. ಚಿಂತೆಯು ಏಳುವುದು ಏಕೆಂದರೆ ನೀವು ಸದಾಕಾಲವೂ ಆಯ್ಕೆ ಮಾಡುತ್ತಿರುತ್ತೀರ. ನೀವು ಆಯ್ಕೆ ಮಾಡುವುದೇ ಇಲ್ಲವೆಂದು ತೀರ್ಮಾನಿಸಿದರೆ ಮತ್ತು ಕೇವಲ ಒಪ್ಪಿಕೊಂಡು ಪೂರ್ತಿ ಅನುಭವವನ್ನು ಕುಡಿದರೆ, ಎಲ್ಲ ಚಿಂತೆಗಳೂ ಸುಮ್ಮನೇ ಕರಗುತ್ತವೆ. ನೀವು ಆಯ್ಕೆ ಮಾಡುವುದು ಏಕೆಂದರೆ ನಿಮ್ಮನ್ನೇ ನೀವು ಯಾವುದೋ ಘನವೆಂದು ಗುರುತಿಸಿಕೊಳ್ಳುತ್ತೀರ. ಸದಾಕಾಲವೂ ಆಯ್ಕೆ ಮಾಡಬೇಕೆಂದು ನಿಮ್ಮಲ್ಲಿ ಒತ್ತಾಯಿಸಲ್ಪಟ್ಟ ಭಾವನೆಯು ಉಂಟಾಗುತ್ತದೆ. ಇದು ನಿಮ್ಮ ಅಹಂಭಾವದ ಆಟವಲ್ಲದೇ ಬೇರೇನೂ ಅಲ್ಲ. ಅದನ್ನು ಅರ್ಥಮಾಡಿಕೊಳ್ಳಿರಿ.

ಜನಗಳು ಕೇಳುತ್ತಾರೆ, “ಸ್ವಾಮೀಜಿ, ಪ್ರಪಂಚವು ಇದ್ದಕ್ಕಿದ್ದ ಹಾಗೆ ಅಂತ್ಯಗೊಳ್ಳುತ್ತದೆ ಎಂದು ಯೋಚಿಸಿದರೆ ನನಗೆ ಭಯವಾಗುತ್ತದೆ'' ಎಂದು.

ಪ್ರಪಂಚವು ಅಂತ್ಯವಾದರೆ ಏನಾಯಿತು? ಪ್ರಪಂಚವು ಅಂತ್ಯಕ್ಕೆ ಬಂದರೆ ಪ್ರತಿಯೊಬ್ಬರೂ ಅದರೊಂದಿಗೆ ಅಂತ್ಯಗೊಳ್ಳುತ್ತಾರೆ. ಯಾರಾದರೂ ಚಿಂತೆ ಮಾಡಿಕೊಳ್ಳಲು ಯಾರಲ್ಲಿಯೂ ಏನೂ ಉಳಿದಿರುವುದಿಲ್ಲ. ನೀವು ಮುಂಚೆ ಚಿಂತೆ ಮಾಡುತ್ತಿದ್ದುದು ಏಕೆಂದರೆ ಪ್ರಪಂಚದಲ್ಲಿ ಚಿಂತೆ ಮಾಡಲು ಏನೋ ಇದೆ ಎಂಬುದಕ್ಕಾಗಿ. ಪ್ರಪಂಚವೇ ಅಂತ್ಯಗೊಳ್ಳುತ್ತದೆ ಎಂದರೆ, ಆಗ ಚಿಂತಿಸಲು ಏನೂ ಇರುವುದೇ ಇಲ್ಲ ಅಲ್ಲವೇ? ಆದರೆ ನೀವು ಅದರ ಬಗ್ಗೆ ಕೂಡ ಚಿಂತಿಸುತ್ತೀರಿ!

ನೋಡಿ ಮನಸ್ಸು ಹೇಗೆ ಸ್ವಯಂ ವಿರೋಧಾತ್ಮಕವಾಗಿದೆ. ಅದು ಚಿಂತಿಸಲು ಏನಾದರೂ ಇದ್ದರೆ ಚಿಂತಿಸುತ್ತದೆ ಮತ್ತು ಚಿಂತಿಸಲು ಏನೂ ಇಲ್ಲದಿದ್ದರೂ ಸಹ ಚಿಂತಿಸುತ್ತದೆ. ನೀವು ನಿಮ್ಮೆಲ್ಲಾ ಚಿಂತೆಗಳನ್ನೂ ಅರಿವಿನಿಂದ ನೋಡಿದರೆ, ಅವು ನಿಮ್ಮ ಪ್ರಜ್ಞಾರಹಿತ ಸ್ಥಿತಿಯಲ್ಲಿ ಹೇಗೆ ಕಪಟದಿಂದ ಆಟವಾಡುತ್ತಿದೆ ಎಂದು ನಿಮಗೆ ತಿಳಿಯುತ್ತದೆ. ನಿಮ್ಮ ಚಿಂತೆಗಳು ಅಷ್ಟೊಂದೂ ನುಣುಚಿಕೊಳ್ಳುವಂತಹದು ಮತ್ತು ಆಧಾರ ರಹಿತವಾದದ್ದು ಎಂಬುದನ್ನು ನೀವು ನೋಡುತ್ತೀರ. ನೀವು ಅದನ್ನು ಚಿತ್ ಮಾಡಲು (pindown) ಸಾಧ್ಯವೇ ಇಲ್ಲ, ಏಕೆಂದರೆ ಅವು ಆಧಾರ ರಹಿತವಾದವು. ಅವು ಘನವಾದುದಲ್ಲ.

ವಾಸ್ತವವಾಗಿ ನಿಮ್ಮ ಮನೋಭಾವನೆಗಳೆಲ್ಲಾ ನಿಮ್ಮೊಳಗಿನ ಪ್ರಜ್ಞಾರಹಿತದ ಆಟವಲ್ಲದೇ ಮತ್ತೇನೂ ಅಲ್ಲ. ನೀವು ಸಂಪೂರ್ಣ ಅರಿವಿನಿಂದ ಜೀವಿಸಿದರೆ, ನೀವು ಮನೋಭಾವನೆಗಳ ಹೊಯ್ದಾಟದಲ್ಲಿ ಇರುವುದೇ ಇಲ್ಲ. ಆದುದರಿಂದಲೇ ನೀವು ನಿಮ್ಮ ಅರಿವಿನಿಂದ ಕೊಚ್ಚಿ ಹೋಗುವಂತೆ ನಾನು ಹೇಳುತ್ತಲೇ ಇರುತ್ತೇನೆ.

ನೋಡಿ, ನಿಮ್ಮ ಚಿಂತೆಗಳು, ನಿಮ್ಮ ಪದಗಳು ನಿಮ್ಮ ಜೀವನವನ್ನು ಮಾಡುತ್ತವೆ. ಇಲ್ಲ ಮುರಿಯುತ್ತವೆ. ಅವುಗಳಿಗೆ ಅಂತಹ ಶಕ್ತಿ ಇದೆ - ನಿಮ್ಮನ್ನು ಮತ್ತು ಇತರರನ್ನು ಪ್ರಭಾವಿತರನ್ನಾಗಿಸಲು ಉದಾಹರಣೆಗೆ ನಾನು ‘ಹಸು’ ಎಂಬ ಪದವನ್ನು ಉಚ್ಚರಿಸಿದರೆ, ತತ್‌ಕ್ಷಣವೇ ಏನಾಗುತ್ತದೆ? ಒಂದು ನಾಲ್ಕು ಕಾಲುಗಳಿರುವ ಎರಡು ಕೊಂಬುಳ್ಳ ಮತ್ತು ಒಂದು ಬಾಲವಿರುವ ಒಂದು ಪ್ರಾಣಿಯು ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ, ಅಲ್ಲವೇ? ಎರಡು ಅಕ್ಷರಗಳ ಒಂದು ಪದವು ನಿಮ್ಮ ಮನಸ್ಸಿಗೆ ಒಂದು ಪೂರ್ಣ ಆಕಾರವನ್ನು ತರಬಲ್ಲದು. ಪದಗಳು ಅಷ್ಟು ಶಕ್ತಿಯುತವಾದವು. ನೀವು ಪದಗಳನ್ನು ಗೌರವಿಸದೆ ಅವುಗಳನ್ನು ತಪ್ಪಾಗಿ ಉಪಯೋಗಿಸಿದರೆ, ನಾವು ತೊಂದರೆಗಳನ್ನು ಕೇಳುತ್ತಿದ್ದೇವೆ.

ಒಂದು ಚಿಕ್ಕ ಕಥೆ:

ಜ್ಞಾನೋದಯ ಹೊಂದಿದ ಗುರು ಬೀರಬಲ್ ಮತ್ತು ಅವನ ರಾಜನಾದ ಅಕ್ಟರ್ ರಸ್ತೆಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದರು.

ಅವರು ಒಬ್ಬ ಚಂದನದ ವ್ಯಾಪಾರಿಯನ್ನು ನೋಡಿದರು. ಅಕ್ಟರ್ನು ಬೀರಬಲ್‌ಗೆ ಹೇಳಿದನು "ಏಕೋ ಗೊತ್ತಿಲ್ಲ ನಾನು ಈ ಮನುಷ್ಯನನ್ನು ನೇಣು ಹಾಕಬೇಕೆಂದು ಅನ್ನಿಸುತ್ತಿದೆ" ಎಂದು.

ಒಂದು ತಿಂಗಳ ನಂತರ, ಅವರು ಅದೇ ಚಂದನದ ವ್ಯಾಪಾರಿಯನ್ನು ದಾಟಿ ಹೋಗುತ್ತಿದ್ದರು ಮತ್ತು ಅಕ್ಟರ್ನು ಈ ಬಾರಿ ಹೇಳಿದನು "ಇದು ವಿಚಿತ್ರವಾಗಿದೆ, ಆದರೆ ಈ ಬಾರಿ ನನಗೆ ಈ ಮನುಷ್ಯನಿಗೆ ಈಗ ಇನಾಮುಗಳನ್ನು ಕೊಡಬೇಕು ಎಂದೆನಿಸುತ್ತಿದೆ!" ಎಂದು.

ದೀರ್ಘ ಸಮಯದ ನಂತರ ಬೀರಬಲ್‌ನು ಉತ್ತರಿಸಿದನು, "ಒಂದು ತಿಂಗಳ ಹಿಂದೆ, ಈ ಚಂದನದ ವ್ಯಾಪಾರಿಯ ವ್ಯಾಪಾರವು ನಷ್ಟದಲ್ಲಿತ್ತು ಮತ್ತು ನೀವು ಅವನನ್ನು ದಾಟಿಕೊಂಡು ಹೋಗುತ್ತಿರುವಾಗ, ಅವನು ತನ್ನೊಳಗೆ ಅಂದುಕೊಂಡನು - ನೀವು ಸತ್ತರೆ ಆಸ್ಥಾನದವರೆಲ್ಲಾ ಬಂದು ನಿಮ್ಮ ಚಿತೆಗಾಗಿ ಬೇಕಾದಷ್ಟು ಚಂದನದ ಕಟ್ಟಿಗೆಗಳನ್ನು ಕೊಂಡುಕೊಳ್ಳುವರು ಎಂದು. ಅವನು ಈ ನಕಾರಾತ್ಮಕ ತರಂಗಗಳನ್ನು ಕಳುಹಿಸಿದನು. ಇದರಿಂದ ನೀವು ಪ್ರಚೋದಿತರಾಗಿ ಅವನ ಬಗ್ಗೆ ದ್ವೇಷದಿಂದ ಭಾವಿಸುವಂತೆ ಮಾಡಿತು. ನಾನು ಕೂಡಲೇ ಅವನಿಂದ ಬೇಕಾದಷ್ಟು ಚಂದನ ಕಟ್ಟಿಗೆಗಳನ್ನು ನಮ್ಮ ರಾಜ್ಯಕ್ಕಾಗಿ ಮೇಜುಗಳು ಮತ್ತು ಕುರ್ಚಿಗಳನ್ನು ಮಾಡಿಸಲು ಕೊಂಡುಕೊಂಡೆನು. ಈ ದಿನ, ನಿಮ್ಮ ಬಗ್ಗೆ ಅವನು ಕೃತಜ್ಞತಾ ಭಾವದಿಂದಿದ್ದಾನೆ ಮತ್ತು ಅವನಿಂದ ಬಂದ ಸಕಾರಾತ್ಮಕ ತರಂಗಗಳು ನಿಮ್ಮನ್ನು ತಾಕಿವೆ. ಮತ್ತು ಆದ್ದರಿಂದ ಅವನಿಗೆ ಏನಾದರೂ ಇನಾಮನ್ನು ಕೊಡಬೇಕೆಂದು ನಿಮಗೆ ಅನಿಸಿದೆ!" ಎಂದು.

ನಿಮ್ಮ ಆಲೋಚನೆಗಳು ತಮ್ಮೊಳಗೆ ಬೇಕಾದಷ್ಟು ಶಕ್ತಿಯನ್ನು ಹೊಂದಿವೆ ಎಂದು ಅರ್ಥಮಾಡಿಕೊಳ್ಳಿ. ಆದುದರಿಂದಲೇ ನೀವು ಚಿಂತರಾಹಿತ ಮತ್ತು ನಿಶ್ಚಲ ಮನಸ್ಸಿನ ವ್ಯವಸ್ಥೆಯನ್ನು ಹೊಂದಿರಬೇಕಾದುದು ಬಹಳ ಮುಖ್ಯ.

ಸರಿ...?

ಸ್ವಾಮೀಜಿ, ಕೆಲವು ಪುಸ್ತಕಗಳು ಹೇಳುತ್ತವೆ, “ಚಿಕ್ಕ ವಿಚಾರಗಳಿಗಾಗಿ ಬೆವರು ಸುರಿಸಬೇಡಿ” ಎಂದು. ಆದರೆ ಚಿಕ್ಕ ವಿಚಾರಗಳೂ ಮುಖ್ಯವಾಗುತ್ತವೆ, ಅಲ್ಲವೇ ಸ್ವಾಮೀಜಿ?

ನೀವು ಬುದ್ಧಿವಂತಿಕೆಯಿಂದ ಕಾರ್ಯ ಮಾಡಿದರೆ, ನೀವು ಚಿಕ್ಕ ವಿಚಾರಗಳಿಗೂ ಬೆವರು ಸುರಿಸುವ ಪಂಗಡಕ್ಕೆ ಬರುವುದಿಲ್ಲ.

ಒಂದು ಚಿಕ್ಕ ಕಥೆ:

ಒಬ್ಬ ಯುವಕನು ತನ್ನ ಸ್ನೇಹಿತನನ್ನು ಭೇಟಿಮಾಡಲು ಹೋದನು.

ಅವನ ಸ್ನೇಹಿತನು ಗೋಡೆಯಿಂದ ಗೋಡೆಯ ಕಾಗದವನ್ನು ಕೀಳುತ್ತಿದ್ದುದನ್ನು ನೋಡಿದನು.

ಯುವಕನು ಕೇಳಿದನು, “ನೀವು ಬಣ್ಣವನ್ನು ಹಚ್ಚಲಿರುವೆಯೇನು?” ಎಂದು.

ಸ್ನೇಹಿತನು ಉತ್ತರಿಸಿದನು, “ನಾನು ಬೇರೆ ಮನೆಗೆ ಸ್ಥಳಾಂತರ ಮಾಡುತ್ತಿದ್ದೇನೆ” ಎಂದು.

ನೋಡಿ, ನೀವು ಸಣ್ಣ ಸಂಗತಿಗಳನ್ನು ಅಲಕ್ಷಿಸಲಾಗುವುದಿಲ್ಲ. ಆದರೆ ಅದಕ್ಕೆ ಎಷ್ಟು ಗಮನವನ್ನು ನೀಡಬೇಕೋ ಅಷ್ಟು ಮಾತ್ರವೇ ಕೊಡದಂತೆ ನೀವು ಬುದ್ಧಿವಂತರಾಗಿರಬೇಕು, ಇಲ್ಲದಿದ್ದರೆ ನೀವು ಬೆವರಲು ಪ್ರಾರಂಭಿಸುತ್ತೀರ. ನೀವು ಸಣ್ಣ ವಿಚಾರಗಳಿಗೆ ಗಮನವನ್ನು ಕೊಡಬಾರದೆಂದು ಹೇಳುವ ಜನರಿಗೆ ಕಿವಿಗೊಡಲೇಬೇಡಿ. ಜ್ಞಾಪಕವಿರಲಿ: ಚಿಕ್ಕ ತೂತುಗಳು ಒಂದು ದೊಡ್ಡ ಹಡಗನ್ನೇ ಮುಳುಗಿಸಬಲ್ಲದು. ನೀವು ಸಣ್ಣ ವಿಚಾರಗಳ ಬಗ್ಗೆ ಬಂದಾಗ ನಿಮ್ಮ ಬುದ್ಧಿವಂತಿಕೆ ಮತ್ತು ಅರಿವಿನಿಂದ ಕಾರ್ಯ ಮಾಡಬೇಕೆಂದು ಕೇವಲ ಅರ್ಥಮಾಡಿಕೊಳ್ಳಿ.

ಮೊದಲನೆಯದಾಗಿ ನಿಮಗೆ ಸಂಬಂಧಪಟ್ಟ ಸಣ್ಣ ವಿಚಾರಗಳು ಎಂದು ಹೇಳುವುದರ ಬಗ್ಗೆ ಪೂರ್ಣವಾಗಿ ನಂಬಿಕೆಯಿರಬೇಕು. ಇದು ಇದ್ದರೆ ಆಗ ಸ್ವಯಂ ವಿರೋಧಾತ್ಮಕತೆಯು ಇರುವುದಿಲ್ಲ ಮತ್ತು ನಿಮ್ಮಷ್ಟಕ್ಕೆ ನೀವೇ ಆ ಕೆಲಸಗಳನ್ನು ಮಾಡಲು ಚೈತನ್ಯವನ್ನು ಕಂಡುಕೊಳ್ಳುತ್ತೀರ. ನೀವು ಪೂರ್ಣವಾಗಿ ನಂಬಿಲ್ಲದಿದ್ದರೆ, ನಿಮಗೆ ಅವುಗಳ ಹಿಂದೆ ಹೋಗಿ ಕೆಲಸವನ್ನು ಸಾಧಿಸಲು ಅವಶ್ಯವಿರುವ ದೃಢ ನಿಶ್ಚಯವಾಗಲೀ ಮತ್ತು ಚೈತನ್ಯವಾಗಲೀ ಇರುವುದಿಲ್ಲ. ಇದರ ಅರ್ಥ ನಿಮ್ಮ

ಬುದ್ಧಿವಂತಿಕೆಯು ನಿಮ್ಮ ಹಿಂದೆ ಸಂಪೂರ್ಣವಾಗಿ ಇಲ್ಲ, ಏಕೆಂದರೆ ಬುದ್ಧಿವಂತಿಕೆ ಎಂದರೆ ಚೈತನ್ಯ ಮತ್ತು ಚೈತನ್ಯ ಎಂದರೆ ಬುದ್ಧಿವಂತಿಕೆ.

ನೀವು ಅದಕ್ಕಾಗಿ ಬೆವರು ಸುರಿಸುತ್ತಿದ್ದರೆ, ಆಗ ಎಲ್ಲೋ ಏನೋ ತಪ್ಪಾಗಿದೆ. ಸ್ಪಷ್ಟವಾಗಿ ತಿಳಿಯಿರಿ: ಎಲ್ಲಾ ವಿಪತ್ತುಗಳೂ ಸ್ವಯಂ ವಿರೋಧಾತ್ಮಕತೆಯಿಂದ ಹುಟ್ಟುತ್ತವೆ. ನಿಮಗೇನು ಬೇಕೆಂದು ನಿಮಗೇ ಸಂಪೂರ್ಣವಾಗಿ ಸ್ಪಷ್ಟತೆಯಿಲ್ಲ, ಆದುದರಿಂದ ಅದನ್ನು ಮಾಡಲು ನಿಮಗೆ ಆಗುತ್ತಿಲ್ಲ. ಆ ಸ್ಪಷ್ಟತೆಯು ಉಂಟಾಗಲು, ನೀವು ನಿಮ್ಮ ಸ್ವಂತ ಬುದ್ಧಿವಂತಿಕೆಯನ್ನು ಪೋಷಿಸಬೇಕಾಗುತ್ತದೆ.

ಬುದ್ಧಿವಂತಿಕೆಯು ಮೇಲೆ ಬಂದರೆ, ಸ್ವಯಂ ವಿರೋಧಗಳು ಮಾಯವಾಗುತ್ತವೆ ಮತ್ತು ನೀವು ಸಮಗ್ರವಾಗಿರಲು ಪ್ರಾರಂಭಿಸುತ್ತೀರ. ನೀವು ಸಮಗ್ರವಾಗಿರಲು ಪ್ರಾರಂಭಿಸಿದರೆ, ನಿಮ್ಮ ಬುದ್ಧಿವಂತಿಕೆಯು ಮತ್ತಷ್ಟು ಬೆಳೆಯುತ್ತದೆ. ಈ ಚಕ್ರದೊಳಗೇ ನೀವು ಇರಬೇಕಾದದ್ದು. ಈ ಚಕ್ರವೇ ನಿಮ್ಮ ಚಿಂತೆಗಳನ್ನು ಸಹ ನಿವಾರಿಸುವಂತಹದು.

ಬುದ್ಧಿವಂತಿಕೆಯೊಂದೇ ನಿಮಗೆ ಕಾಡಿಸುತ್ತಿರುವ ಯಾವುದರಿಂದಲಾದರೂ ಸ್ವಾತಂತ್ರ್ಯವನ್ನು ತಂದುಕೊಡುವಂತಹದು.

ನಿಮ್ಮ ಒಳ ಹರಟೆಯನ್ನು ಮತ್ತು ಚಿಂತೆಗಳನ್ನು ಬಿಟ್ಟುಬಿಡಲು ನಿಮಗೆ ನಿಜವಾಗಿಯೂ ಆಸಕ್ತಿ ಇದ್ದರೆ, ನೀವೊಂದು ಚಿಕ್ಕ ಅಭ್ಯಾಸವನ್ನು ಪ್ರಯತ್ನಿಸಬಹುದು.

ನಿಮಗೆ ಸಂತೋಷವನ್ನು ಕೊಡುವ ಎಲ್ಲಾ ವಿಷಯಗಳನ್ನೂ ಯೋಚಿಸಿ. ಬೇರೆಲ್ಲಾ ವಿಷಯಗಳನ್ನೂ ಹೊರತುಪಡಿಸಿ ಕೇವಲ ಈ ವಿಷಯಗಳ ಬಗ್ಗೆ ಮಾತ್ರ ನಿಮ್ಮ ಮನಸ್ಸು ಅವುಗಳ ಹಿಂದೆ ಇರುವಂತೆ ಬಿಡಿ. ಬೇರೆ ವಿಷಯಗಳಿಗೆ ಅವುಗಳನ್ನು ಮುಗಿಸಲು ಬೇಕಾಗುವಷ್ಟು ಚೈತನ್ಯವನ್ನು ಕೊಟ್ಟು ನಂತರ ಮರೆತುಬಿಡಿ. ಈ ಅಭ್ಯಾಸವನ್ನು ಪ್ರಯೋಗ ಮಾಡಿ, ನೀವು ಎಷ್ಟೊಂದು ಚೈತನ್ಯವನ್ನು ಉಳಿಸುತ್ತೀರಿ ಎಂಬುದನ್ನು ನೀವು ಕಾಣುತ್ತೀರಿ.

ನೋಡಿ, ಅರ್ಥಮಾಡಿಕೊಳ್ಳಿ, ಚಿಂತೆಗಳ ಬಗ್ಗೆ ಅತಿ ಹೆಚ್ಚು ಮಾತನಾಡು ತ್ತಿರುವುದರಿಂದ ನೀವು ಅವುಗಳಿಗೆ ಅತಿ ಹೆಚ್ಚು ಶಕ್ತಿಯನ್ನು ಕೊಟ್ಟಿರುತ್ತೀರ. ಉದಾಹರಣೆಗೆ, ಮನೆಯೊಡತಿಯು ಫೋನ್ ಅನ್ನು ತೆಗೆದುಕೊಂಡರೆ, ಅವಳ ಸ್ನೇಹಿತೆಗೆ ತನ್ನ ಮನೆ ಕೆಲಸದವಳು ಆದಿನ ಬಂದಿಲ್ಲವೆಂದು ಹೇಳುತ್ತಾಳೆ. ಅವಳಿಗೆ ಅದೇ ಆ ದಿನದ ಚಿಂತೆ. ನೀವು ನಿಜವಾಗಿಯೂ ಮನೆ ಕೆಲಸದವಳು ಬಂದಿಲ್ಲವೆಂದು

ಖಚಿತ ಪರಿಹಾರಗಳು

ಖಿನ್ನತೆಯಿಂದ ಇದ್ದರೆ ಮತ್ತು ಅದರಿಂದ ಹೊರಬರಬೇಕೆಂದು ನಿಮಗೆ ನಿಜವಾಗಿಯೂ ಆಸಕ್ತಿ ಇದ್ದರೆ, ಆಗ ಅದನ್ನು ಸುಮ್ಮನೆ ಬಿಟ್ಟುಬಿಟ್ಟು ಆ ಕೆಲಸವನ್ನು ನೀವೇ ಮಾಡಿ ಮುಗಿಸಬೇಕು! ಇದು ಹೆಚ್ಚು ತಾರ್ಕಿಕವಾಗಿದೆ ಎಂದು ಅನಿಸುವುದಿಲ್ಲವೇ?

ಆದರೆ ನೀವೇನು ಮಾಡುತ್ತೀರಿ? ನೀವು ಅದರ ಬಗ್ಗೆ ಮಾತನಾಡುತ್ತಲೇ ಇರುತ್ತೀರಿ ಮತ್ತು ನಿಮ್ಮ ಖಿನ್ನತೆಗೆ ನಿಮ್ಮ ಸ್ನೇಹಿತೆಯೂ ಸಹ ಪೋಷಿಸಬೇಕೆಂದು ಅಪೇಕ್ಷಿಸುತ್ತೀರ. ಅವಳು ನಿಮ್ಮ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸದಿದ್ದರೆ, ಅಥವಾ ಜೀವನವು ಇರುವುದು ಹಾಗೆಯೇ ಮತ್ತು ನೀವು ಮುಂದುವರಿಯುತ್ತಿರಬೇಕೆಂದು ನಿಮಗೆ ಹೇಳಿದರೆ, ನೀವು ಇನ್ನೊಬ್ಬ ಸ್ನೇಹಿತೆಗೆ ಕರೆ ಮಾಡಿ, ಆ ಸ್ನೇಹಿತೆಗೆ ಈ ಸ್ನೇಹಿತೆಯು ಎಷ್ಟೊಂದು ಕಾಳಜಿ ಇಲ್ಲದವಳೆಂದು ಹೇಳುತ್ತೀರ! ಹಾಗೇ ಯೋಚಿಸಿ: ನೀವು ನಿಮ್ಮ ಜೀವನದೊಂದಿಗೆ ಮುಂದುವರಿಯಬೇಕೆಂದು ನಿಜವಾಗಿ ಬಯಸಿದ್ದರೆ, ಈ ಸ್ನೇಹಿತೆಯ ಪದಗಳನ್ನು ಮೆಚ್ಚುತ್ತಿದ್ದಿರಿ ಅಲ್ಲವೇ?

ನೀವು ಖಿನ್ನತೆಯಿಂದ ಹೊರಬಂದು ಜೀವನದೊಂದಿಗೆ ಮುಂದುವರಿಯಬೇಕೆಂದು ನಿಜವಾಗಿಯೂ ಬಯಸಿದ್ದರೆ, ನೀವು ಖಂಡಿತವಾಗಿಯೂ ನಿಮ್ಮ ಬುದ್ಧಿವಂತಿಕೆಯನ್ನು ಅದನ್ನು ಮಾಡುವುದಕ್ಕಾಗಿ ವಿನಿಯೋಗಿಸುತ್ತಿದ್ದಿರಿ. ಆದರೆ ನೀವೇಕೆ ಬೇರೆಯಾಗಿ ಸ್ಪಂದಿಸುತ್ತಿದ್ದೀರಿ? ಅದಕ್ಕೆ ಕಾರಣ, ನೀವು ನಿಮ್ಮ ಚಿಂತೆಗಳಿಂದ ಹೊರಬರುವ ಬದಲು ಅದರ ಬಗ್ಗೆ ಸುಮ್ಮನೆ ಮಾತನಾಡುತ್ತಾ ಇರುವುದು ನಿಮಗೆ ಆರಾಮದಾಯಕ ವಾಗಿರುವುದು.

ನಾನು ಈಗಷ್ಟೇ ಹೇಳಿದ ಚಿಕ್ಕ ಅಭ್ಯಾಸವನ್ನು ಮಾಡಲು ಪ್ರಾರಂಭಿಸಿದರೆ, ನಿಮ್ಮ ಚಿಂತೆಗಳೆಲ್ಲಾ ಹಾಗೆಯೇ ಮಾಯವಾಗುವುದನ್ನು ನೀವು ನೋಡುವಿರಿ ಮತ್ತು ನೀವು ಒಟ್ಟಾರೆಯಾಗಿ ಒಂದು ಹೊಸ ಮಾನಸಿಕ ವ್ಯವಸ್ಥೆಯನ್ನು ಹೊಂದುವಿರಿ. ನೀವು ನಿಮ್ಮೊಳಗೆ ಒಂದು ಉಕ್ಕುತ್ತಿರುವ ಚೈತನ್ಯವನ್ನು ಕಂಡುಕೊಳ್ಳುತ್ತೀರಿ, ಏಕೆಂದರೆ ಹಿಂದೆ ನೀವು ನಿಮ್ಮ ಚಿಂತೆಗಳಿಗೆ ಆಧಾರ ಕಲ್ಪಿಸಲು ವಿನಿಯೋಗಿಸಿದ ಚೈತನ್ಯವೆಲ್ಲಾ ಇದ್ದಕ್ಕಿದ್ದ ಹಾಗೆ ನಿಮಗೆ ಲಭ್ಯವಾಗುತ್ತಿದೆ!

ನಿಮಗಾಗಿ ಒಂದು ಪ್ರಾಮಾಣಿಕ ಪರೀಕ್ಷೆಯನ್ನು ಮಾಡಿಕೊಳ್ಳಿ, ಮತ್ತು ನೀವು ಏನಾದರೂ ರಹಸ್ಯವಾಗಿ ನಿಮ್ಮ ಚಿಂತೆಗಳನ್ನು ಪೋಷಿಸುತ್ತಿರುವಿರಾ ಎಂದು ಮತ್ತು ನೀವು ಪರಿವರ್ತನೆ ಹೊಂದಲು ತಯಾರಾಗಿದ್ದೀರಾ ಎಂದು ಕಂಡುಕೊಳ್ಳಿ.

ನೀವು ನಿಮ್ಮ ಚಿಂತೆಗಳ ಹಿಂದೆ ಹೋಗುವುದನ್ನು ನಿಲ್ಲಿಸಿದರೆ, ಮಿಕ್ಕವರು ಅಸಹಾಯಕರಾಗಿ ಆ ಚಕ್ರದಲ್ಲಿ ಸಿಲುಕಿದ್ದಾರೆಂದು ನೀವು ನೋಡಬಲ್ಲಿರಿ. ಅವರು ಜನರೊಂದಿಗೆ ನಿರಂತರವಾಗಿ ಮಾತನಾಡುತ್ತಾ ಹೇಗೆ ತಮ್ಮ ಚಿಂತೆಗಳನ್ನು ದೊಡ್ಡದು ಮಾಡುತ್ತಾರೆಂಬುದನ್ನು ನೀವು ನೋಡಬಲ್ಲಿರಿ. ಈ 'ಚಿಂತೆಗಳ ಬಗ್ಗೆ ಮಾತನಾಡುವುದು' ಇದನ್ನೇ ನಾನು 'ಚಿಂತೆಗಳ ಬಗ್ಗೆ ಚಿಂತೆ ಮಾಡುವುದು' ಎಂದು ಕರೆಯುವುದು! ನೀವು ಇದನ್ನು ಗಮನಿಸಬಲ್ಲಿರಾದಾಗ ಮಾತ್ರ ಇದು ನಿಲ್ಲುತ್ತದೆ. ಹಾಗೆ ನೀವು ಗಮನಿಸುವವರಾಗುವ ತನಕ, ನೀವು ಮನೋಭಾವನೆಗಳಲ್ಲಿ ಸಿಲುಕಿ ಅವುಗಳಿಗೆ ಅಷ್ಟು ಶಕ್ತಿಯನ್ನೂ ಮತ್ತು ಹತೋಟಿಯನ್ನೂ ಕೊಟ್ಟಿರುತ್ತೀರ.

ಪುನಃ ನಾನು ನಿಮಗೆ ಹೇಳುತ್ತೇನೆ: ನಾನು ನಿಮಗೆ ನಿಮ್ಮ ಚಿಂತೆಗಳಿಂದ ಓಡಿ ಹೋಗಲು ಹೇಳುತ್ತಿಲ್ಲ. ನಾನು ಹೇಳುತ್ತಿರುವುದು ಅವುಗಳ ಬಗ್ಗೆ ಮಾತನಾಡುತ್ತಾ ಅವುಗಳನ್ನು ದೊಡ್ಡದು ಮಾಡಬೇಡಿ ಎಂದು. ನಿಮ್ಮ ಚೈತನ್ಯವನ್ನು ಅದಕ್ಕಾಗಿ ವ್ಯಯ ಮಾಡಬೇಡಿ. ಅದಕ್ಕೆ ಬದಲು ಅವು ನಿಮಗೆ ಚಿಂತೆಯುಂಟು ಮಾಡದಿರಲು ಏನು ಮಾಡುವ ಅವಶ್ಯಕತೆಯಿದೆ ಎಂಬುದನ್ನು ಮನಗಾಣಿ. ಸಮಯದ ನಷ್ಟವಿಲ್ಲದಂತೆ ಅದನ್ನು ಪರಿಹರಿಸಲು ಮಗ್ನರಾಗಿರಿ ಅಷ್ಟೆ.

ನಿಮ್ಮ ಚಿಂತೆಗಳೊಂದಿಗೆ ನೀವು ಆರಾಮದಿಂದಿರಲು ಪ್ರಾರಂಭಿಸಿದ್ದೀರಾ ಎಂಬುದನ್ನು ಕಂಡುಕೊಳ್ಳಲು ನಿಮ್ಮನ್ನು ಪರೀಕ್ಷಿಸಿಕೊಳ್ಳಿ. ಚಿಂತೆಗಳು ನಿಮ್ಮನ್ನು ಹಿಡಿತದಲ್ಲಿಟ್ಟಿದೆಯೇ ಅಥವಾ ನೀವು ಚಿಂತೆಯನ್ನು ಹತೋಟಿಯಲ್ಲಿಟ್ಟಿರುವಿರಾ ಎಂಬುದಕ್ಕೆ ಇದು ಒಂದು ಅಳತೆ ಪಟ್ಟಿ. ನೀವು ಅವುಗಳ ಬಗ್ಗೆ ಏನೂ ಮಾಡದೆ, ಪದೇ ಪದೇ ಅದರ ಬಗ್ಗೆ ಮಾತನಾಡುತ್ತಾ ಇರುವುದರಲ್ಲೇ ಆರಾಮವಾಗಿರುವುದಾದರೆ, ಚಿಂತೆಗಳು ನಿಮ್ಮನ್ನು ಹಿಡಿತದಲ್ಲಿಟ್ಟಿದೆ. ನೀವು ಅವುಗಳ ಬಗ್ಗೆ ಕಾಲಹರಣ ಮಾಡದೆ ಅವುಗಳನ್ನು ಪರಿಹರಿಸಲು ಮಗ್ನರಾದರೆ, ಆಗ ನೀವು ಅವುಗಳನ್ನು ಹತೋಟಿಯಲ್ಲಿ ಇಟ್ಟಿರುತ್ತೀರ!

ಸರಿ...?

ಸ್ವಾಮೀಜಿ, ಮುಂಚೆ ನೀವು ಕುಡಿತದ ಬಗ್ಗೆ ಪ್ರಸ್ತಾಪಿಸಿದಿರಿ. ನನ್ನ ಗಂಡನು ಚಿಂತೆಯನ್ನು ಮರೆಯುವುದಕ್ಕೋಸ್ಕರ ಎಂದು ಹೇಳುತ್ತಾ ಕುಡಿಯುತ್ತಲೇ ಇರುತ್ತಾನೆ. ನಾನು ಏನು ಮಾಡಬೇಕು?

ನಾನು ಹೇಳಿದ್ದ ಹಾಗೆ ಇದೊಂದು ಸಾಮಾನ್ಯ ಸಮಸ್ಯೆ. ಹೇಗಾದರೂ ಸರಿ, ನಿಮ್ಮ ಗಂಡನು ಇಲ್ಲಿ ಇದ್ದಿದ್ದರೆ ಬಹಳ ಅನುಕೂಲವಾಗುತ್ತಿತ್ತು. ನೀವು ಕುಡಿತದ

ಅಭ್ಯಾಸವನ್ನು ವಿಶ್ಲೇಷಿಸಿದರೆ, ನೀವು ಎಷ್ಟು ಸ್ವಯಂ ವಿರೋಧಾತ್ಮಕ ಎಂದು ನಿಮಗೆ ಅರ್ಥವಾಗುತ್ತದೆ. ನಾನು ನಿಮಗೆ ವಿವರಿಸಲು ಪ್ರಯತ್ನಿಸುತ್ತೇನೆ.

ನೀವು ಸಂತೋಷವಾಗಿರಬಹುದೆಂದು ಭಾವಿಸಿ ಕುಡಿಯುತ್ತೀರ, ಆದರೆ ಕೊನೆಗೆ ಬಹಳ ಕೆಟ್ಟದಾದ ಕಷ್ಟದ ಪರಿಸ್ಥಿತಿಯನ್ನು ಹೊಂದುತ್ತೀರ.

ನೀವು ಸ್ನೇಹಪ್ರಿಯರೆಂದು ಕರೆಸಿಕೊಳ್ಳಲು ಮತ್ತು ಅದರಿಂದ ಸಮಾಜವು ನಿಮ್ಮನ್ನು ಒಪ್ಪಿಕೊಳ್ಳಬಹುದೆಂದು ಕುಡಿಯುತ್ತೀರ, ಆದರೆ ಕೊನೆಯಲ್ಲಿ ನೀವು ವಾದಪ್ರಿಯರಾಗುತ್ತೀರ!

ನೀವು ಸುಶಿಕ್ಷಿತರಂತೆ ಕಾಣಿಸಲು ಕುಡಿಯುತ್ತೀರ, ಆದರೆ ಕೊನೆಯಲ್ಲಿ ನೀವು ಅಸಹನೀಯವಾಗಿ ಅಪ್ರತಿಷ್ಠೆಯುಳ್ಳವರಾಗಿ ಕಾಣುತ್ತೀರ.

ನಿಮ್ಮ ಚಿಂತೆಗಳನ್ನೆಲ್ಲಾ ಮರೆತು ಮಲಗಬಹುದೆಂದು ನೀವು ಕುಡಿಯುತ್ತೀರ, ಆದರೆ ಏಳುವುದು ಹೇಗೆ ಎಂದು ಭಾವಿಸುತ್ತಾ...? ಮುಂಚಿಗಿಂತಲೂ ಹೆಚ್ಚು ಬಳಲಿಕೆಯಿಂದ!

ನೀವು ಕುಡಿಯುವುದು ಆನಂದ ಪರವಶತೆಗಾಗಿ, ಆದರೆ ಕೊನೆಯಲ್ಲಿ ನೀವು ಖಿನ್ನ ಮನಸ್ಕರಾಗಿರುತ್ತೀರಿ!

ನೀವು ಆತ್ಮವಿಶ್ವಾಸಕ್ಕಾಗಿ ಕುಡಿಯುತ್ತೀರ, ಆದರೆ ಕೊನೆಯಲ್ಲಿ ನಿಮ್ಮ ಬಗ್ಗೆಯೇ ಹೆದರುತ್ತಿರುತ್ತೀರ.

ಸಂಭಾಷಣೆಯನ್ನು ನಡೆಸಿಕೊಂಡು ಬರಲು ಕುಡಿಯುತ್ತೀರ, ಆದರೆ ಕೊನೆಯಲ್ಲಿ ಅಸಂಬದ್ಧವಾಗಿ ಮಾತನಾಡುತ್ತಿರುತ್ತೀರ.

ನೀವು ನಿಮ್ಮ ಸಮಸ್ಯೆಗಳು ಕರಗುವುದನ್ನು ನೋಡಲು ಕುಡಿಯುತ್ತೀರ, ಆದರೆ ಕೊನೆಯಲ್ಲಿ ಅವುಗಳು ಹೆಚ್ಚಾಗುವುದನ್ನು ನೋಡುತ್ತಿರುತ್ತೀರ!

ಇವೆಲ್ಲವೂ ನಿಜ ಮತ್ತು ನನಗಿಂತ ನಿಮಗೆ ಚೆನ್ನಾಗಿ ತಿಳಿದಿದೆ! ನನಗೆ ಈಗ ಪ್ರಾಮಾಣಿಕವಾಗಿ ಹೇಳಿ, ಕುಡಿಯುವುದು ನಿಜವಾಗಿ ಅಷ್ಟೊಂದು ಪ್ರಯೋಜನಕಾರಿಯೇ? ಇದು ಹೀಗೆಯೇ ನೀವು ಈ ವಿಚಾರದಲ್ಲಷ್ಟೇ ಅಲ್ಲ, ಜೀವನದ ಇತರ ಸಂಗತಿಗಳಲ್ಲೂ ಸಹ ಸ್ವಯಂ ವಿರೋಧಾತ್ಮಕರಾಗಿರುತ್ತೀರ. ನಿಮಗೆ ಏನು ಬೇಕು ಎಂದು ಸ್ಪಷ್ಟವಾಗಿ ತಿಳಿದಿದ್ದು, ಆ ದಿಕ್ಕಿನಲ್ಲಿ ನಿಮ್ಮ ಚೈತನ್ಯದ ಪ್ರತಿ ಔನ್ಸನ್ನೂ ವಿನಿಯೋಗಿಸಿದ್ದರೆ, ನೀವು ಸ್ಥಿರವಾಗಿ ಬೆಳೆಯುತ್ತೀರ ಮತ್ತು ಸಂತೋಷವನ್ನು ಅನುಭವಿಸುತ್ತೀರ. ಆಗ ನೀವು ಸ್ವಯಂ ವಿರೋಧಾತ್ಮಕರಾಗಿ ಇರುವುದೇ ಇಲ್ಲ.

ಪ್ರತಿ ಬಾರಿ ನೀವು ಕುಡಿಯುವಾಗಲೂ, ಸಂಪೂರ್ಣ ಅರಿವಿನಿಂದ ಕುಡಿಯಿರಿ. ನಾನು ವಿವರಿಸುತ್ತೇನೆ. ಪ್ರತಿ ಬಾರಿ ನೀವು ಕುಡಿಯುವಾಗಲೂ ಪ್ರಜ್ಞೆಯಿಂದ, ನಿಧಾನವಾಗಿ, ನಿಮ್ಮ ಪ್ರತಿಯೊಂದು ನಡೆಯನ್ನೂ ಗಮನಿಸುತ್ತಾ, ಪಾನೀಯದ ಪ್ರತಿ ಹನಿಯನ್ನೂ ಆಸ್ವಾದಿಸುತ್ತಾ ಅದಕ್ಕೆ ನಿಮ್ಮ ದೇಹದ ಪ್ರತಿಕ್ರಿಯೆಯನ್ನು ಗಮನಿಸುತ್ತಾ ಕುಡಿಯಿರಿ. ಅದನ್ನು ತೀವ್ರ ಅರಿವಿನಿಂದ ತುಂಬಿದ ಒಂದು ಕಾರ್ಯವಿಧಾನವನ್ನಾಗಿ ಮಾಡಿರಿ. ಇದನ್ನು ನೀವು ಪ್ರತಿ ಬಾರಿ ಕುಡಿಯಲು ನಿರ್ಧರಿಸಿದಾಗಲೂ ಮಾಡಿದರೆ, ನೀವು ಕುಡಿತದ ಅಭ್ಯಾಸವನ್ನು ಬಿಡಬೇಕಿಲ್ಲ, ಆದರೆ ಅಭ್ಯಾಸವೇ ನಿಮ್ಮನ್ನು ಯಾವತ್ತಿಗೂ ಬಿಟ್ಟುಬಿಡುತ್ತದೆ, ಎಂದು ನಾನು ಆಶ್ವಾಸನೆಯನ್ನು ನೀಡುತ್ತೇನೆ.

ಯಾವುದರಲ್ಲಾದರೂ ಚಟ ಹೊಂದಿರುವುದು ಒಂದು ಪ್ರಜ್ಞಾರಹಿತ ಅಥವಾ ಯಾಂತ್ರಿಕ ಕಾರ್ಯವಿಧಾನ. ಚಟವು ಕೇವಲ ಕುಡಿತ ಅಥವಾ ಹೊಗೆ ಸೊಪ್ಪಿಗಾಗಿಯೇ ಅಲ್ಲ, ಚಟಗಳು ಮತದ ಬಗ್ಗೆಯೂ ಇರುತ್ತದೆ. ಪ್ರಜ್ಞಾರಹಿತರಾಗಿ ಮತ್ತು ಯಾಂತ್ರಿಕವಾಗಿ ಮಾಮೂಲು ದಿನಚರಿಯ ಪ್ರಾರ್ಥನೆ ಮಾಡುವ ಜನರು ಕೇವಲ ಒಂದು ದಿನ ಪ್ರಾರ್ಥನೆಯನ್ನು ತಪ್ಪಿಸುವುದನ್ನು ಕೂಡ ಬಹಳ ಕಷ್ಟವಾಗಿ ಕಾಣುತ್ತಾರೆ. ಅವರಿಗೆ ಇದೊಂದು ಚಟ ಮತ್ತು ಅದು ತಪ್ಪಿದರೆ ಅವರಲ್ಲಿ ಅದು ತಳಮಳವನ್ನುಂಟು ಮಾಡುತ್ತದೆ. ಇದು ಮಾದಕ ದ್ರವ್ಯ ವ್ಯಸನಿಯು ಅವನ ಸಂಜೆಯ ಪಾನೀಯವು ತಪ್ಪಿದರೆ ಅವನು ಅಭದ್ರತೆಯಿಂದ ನಡುಗುವ ಹಾಗೆ. ಯಾಮ್ತ್ರಿಕವಾಗಿರುವ ಧರ್ಮನಿಷ್ಠ ವ್ಯಕ್ತಿಯು ಅವನ ಮಾಮೂಲು ದಿನಚರಿಯ ಪ್ರಾರ್ಥನೆಯನ್ನು ತಪ್ಪಿಸಿಕೊಂಡರೆ ಒಂದು ದೊಡ್ಡ ಶೂನ್ಯ ಭಾವನೆಯು ಅವನಿಗೆ ಅನುಭವವಾಗುತ್ತದೆ.

ಕೀಲಿಕೈ ಇರುವುದು ಅರಿವಿನಿಂದ ಕೂಡಿ ಕೆಲಸ ಮಾಡುವುದು ಮತ್ತು ಕೆಲಸವನ್ನು ಭಯದಿಂದ ಯಾಂತ್ರಿಕವಾಗಿ ಮಾಡುವದರ ನಡುವಣ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಮೊದಲನೆಯ ವಿಧಾನದಲ್ಲಿ ಕೆಲಸ ಮಾಡುವುದರಿಂದ ನೀವು ಯಾವ ಬಮಧನಕ್ಕೂ ಒಳಗಾಗುವುದಿಲ್ಲ, ನಂತರದ ವಿಧಾನದಲ್ಲಿ ಮಾಡಿದ ಕಾರ್ಯಗಳು ನಿಮ್ಮನ್ನು ಬಂಧಿಸುತ್ತದೆ ಮತ್ತು ನಿಮ್ಮಲ್ಲಿ ಕಷ್ಟದ ಪರಿಸ್ಥಿತಿಯು ಉಂಟಾಗುತ್ತದೆ. ನೀವು ಒಬ್ಬ ಗುಲಾಮರಾಗುತ್ತೀರಿ.

ಚಟವನ್ನು ಬಿಡಲು ಅದನ್ನು ಅರಿವಿನಿಂದ ಮುಳುಗಿಸಬಿಡಿ; ಅದು ಸರಿಯಾದ ರೀತಿಯಲ್ಲಿ ಪರಿವರ್ತನೆಯಾಗುತ್ತದೆ. ಜ್ಞಾಪಕವಿರಲಿ: ನಿಮ್ಮ ಚಟವನ್ನು ಅವಶ್ಯವಾಗಿ ಬಿಡಬೇಕೆಂದು ತಿಳಿಯಲೇಬೇಡಿ. ನೀವು ಯಾವುದನ್ನೇ ನಿರೋಧಿಸಿದರೂ ಅದು ಮುಂದುವರಿಯುತ್ತದೆ. ನೀವು ಅದನ್ನು ಅವಶ್ಯವಾಗಿ ಕೇವಲ ಅರಿವಿನಿಂದ ಆಳವಾದ ಅರಿವಿನಿಂದ ಪರಿವರ್ತಿಸಬೇಕು ಅಷ್ಟೆ. ನೀವು ಪರಿವರ್ತನೆಯ ಭಾಷೆಯನ್ನು ಅರ್ಥಮಾಡಿಕೊಂಡರೆ, ನೀವು ಸರಿಯಾದ ಹಾದಿಯಲ್ಲಿರುತ್ತೀರ ಮತ್ತು ನೀವು ಬಿಚ್ಚು ಮನಸ್ಸಿನ ಹಾದಿಯಲ್ಲಿರುತ್ತೀರ.

ಜನಗಳು ಹೇಳುತ್ತಾರೆ, “ಸ್ವಾಮೀಜಿ, ನೀವು ಮಾತನಾಡುವುದನ್ನು ಕೇಳುವುದು ಬಹಳ ಸ್ಫೂರ್ತಿದಾಯಕವಾಗಿರುತ್ತದೆ. ಈಗ ನಾವು ಅದನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಅದು ಕೆಲಸ ಮಾಡುತ್ತದೆಯೇ ಎಂದು ನೋಡಬೇಕು'' ಎಂದು.

ನೋಡಿ, ಸ್ಪಷ್ಟವಾಗಿರಿ: ನಾನು ಯಾವಾಗಲೂ ವ್ಯಾವಹಾರಿಕ ವಿಷಯಗಳನ್ನೇ ಹೇಳುತ್ತೇನೆ. ನಾನು ದಿನಂಪ್ರತಿ ಜೀವನದಲ್ಲಿ ಮಾಡಲಾಗದ ವಿಚಾರಗಳನ್ನು ಹೇಳುತ್ತಿದ್ದೇನೆಂದು ಯೋಚಿಸಲೇ ಬೇಡಿ.

ವಾಸ್ತವವಾಗಿ ನಾನು ಮಾಡುತ್ತಿರುವುದೆಲ್ಲಾ ಅದೇ ವೇದಾಂತವನ್ನು ಪುನರುಚ್ಛರಿಸುತ್ತಿರುವುದು - ಆದರೆ ಬೇರೆ ಬೇರೆ ಪದಗಳಲ್ಲಿ ಆಧುನಿಕ ಸಂದರ್ಭಕ್ಕೆ ಅನುಸಾರವಾಗಿ, ಆದ್ದರಿಂದ ನೀವು ಕೇಳುತ್ತಾ ಆರಾಮವಾಗಿರುವ ಭಾವನೆಯನ್ನು ಹೊಂದಬಹುದು, ಆದ್ದರಿಂದ ಅದು ನಿಮಗೆ ಸಮಂಜಸವೆನಿಸುವುದು, ಆದ್ದರಿಂದ ಅದನ್ನು ನೀವು ಅನುಸರಿಸಬಹುದು ಎಂಬ ಕಾರಣದಿಂದ. ಮತ್ತು ಅಲ್ಲಿ ಇನ್ನೊಂದು ವಿಚಾರವಿದೆ. ಈ ಉಪಾಯಗಳನ್ನೆಲ್ಲಾ ನೀವು ಒಂದು ಪುಸ್ತಕದಲ್ಲಿ ಓದಿದರೆ, ಅವೆಲ್ಲವೂ ಸುಮ್ಮನೆ ಬರಹಗಾರನ ತಲೆಯಿಂದ ನೇರವಾಗಿ ನಿಮ್ಮ ತಲೆಗೆ ರವಾನೆಯಾಗುತ್ತಿರುತ್ತವೆ. ಅಲ್ಲಿ ಅನುಭವಕ್ಕೆ ಆಸ್ಪದವೇ ಇರುವುದಿಲ್ಲ. ಆದರೆ ಈ ಪದಗಳನ್ನು ಒಬ್ಬ ಗುರುವಿನಿಂದ ಕೇಳಿದರೆ ಯಾರಾದರೂ ಆತ್ಮಾನುಭವವನ್ನು ಪಡೆದವರಿಂದ ಕೇಳಿದರೆ, ಅವುಗಳು ನೀವು ಅರಿವಿನಿಂದ ಇರಲಿ ಅಥವಾ ಇಲ್ಲದಿರಲಿ, ನಿಮ್ಮೊಳಗೆ ಆಳವಾಗಿ ಇಳಿಯುತ್ತವೆ. ಎಂದು ಸ್ಪಷ್ಟವಾಗಿ ತಿಳಿಯಿರಿ. ನಾನು ನನ್ನ ಜ್ಞಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿಲ್ಲ. ನಾನು ನನ್ನ ಅನುಭವವನ್ನು , ನನ್ನ ಜೀವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ನನ್ನ ಅಸ್ತಿತ್ವದಿಂದ

ಮಾತನಾಡಿದರೆ, ಅದು ನಿಮ್ಮ ಅಸ್ತಿತ್ವವನ್ನು ಮುಟ್ಟಲೇಬೇಕು. ಅದು ನಿಮ್ಮ ಜೀವನವನ್ನು ಪರಿವರ್ತನೆ ಮಾಡಲೇಬೇಕು. ಬೇರೆ ದಾರಿಯೇ ಇಲ್ಲ.

ವಿವೇಕಾನಂದರು ಚಿಕಾಗೋವಿನಲ್ಲಿ ಹೇಳಿದರು "ಅಮೆರಿಕಾದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ...'' ಎಂದು. "ಸಭಾಂಗಣವು ಮೆಚ್ಚುಗೆಯ ಕರತಾಡನದಿಂದ ಭೋರ್ಗರೆಯಿತು. ಒಬ್ಬ ಮಹಿಳೆಯು ಬರೆದಳು, "ಅದು ಬರಿಯ ಮೆಚ್ಚುಗೆಯಲ್ಲ, ಅವರು ಒಂದು ಇಡಿಯ ದೇಶವನ್ನೇ ಗೆದ್ದರು. ಪ್ರೀತಿಯ ಒಂದು ಪ್ರವಾಹವೇ ನಮ್ಮೊಳಗೆ, ನಮ್ಮ ಅಸ್ತಿತ್ವದೊಳಗೆ ಹರಿಯುತ್ತಿರುವಂತೆ ನಮಗೆ ಭಾಸವಾಯಿತು...'' ಎಂದು. ಆಕೆ ನಂತರ ವಿವೇಕಾನಂದರನ್ನು ಅದು ಹೇಗಾಯಿತೆಂದು ಕೇಳಿದಳು. ಅವರು ಸುಮ್ಮನೆ ಉತ್ತರಿಸಿದರು "ಏಕೆಂದರೆ ಅದು ನನ್ನೊಳಗಿನಿಂದ ಬಂದಿತು'' ಎಂದು.

ವಿವೇಕಾನಂದರು ತಮ್ಮ ಅಸ್ತಿತ್ವದಿಂದ ಮಾತನಾಡಿದರು. ಪದಗಳು ಒಬ್ಬ ವ್ಯಕ್ತಿಯ ಮೆದುಳಿನಿಂದ ಹೊರ ಹೊಮ್ಮಿದರೆ ಅವು ಇನ್ನೊಬ್ಬರ ಮೆದುಳನ್ನು ಮುಟ್ಟುತ್ತವೆ, ಮತ್ತು ಇದನ್ನು 'ಸಂಪರ್ಕ' ಎಂದು ಕರೆಯಲಾಗುತ್ತದೆ. ಆದರೆ ಪದಗಳು ಒಬ್ಬ ವ್ಯಕ್ತಿಯ ಹೃದಯದಿಂದ ಹೊರ ಹೊಮ್ಮಿದರೆ ಅದು ಇನ್ನೊಬ್ಬರ ಹೃದಯವನ್ನು ಮುಟ್ಟುತ್ತವೆ, ಮತ್ತು ಇದನ್ನು 'ಸಂಯೋಗ' ಎಂದು ಕರೆಯಲಾಗುತ್ತದೆ. ಸಂಪರ್ಕವು ಸಾಲದು, ನಾವು ಹೇಗೆ ಸಂಯೋಗಿಸಬೇಕು ಎಂದು ತಿಳಿದಿರಬೇಕು. ನಾನು ಈಗ ಹೇಳುತ್ತೇನೆ: ನಾನು ನನ್ನ ಹೃದಯದ ತಳದಿಂದ ಮಾತನಾಡುತ್ತೇನೆ, ಅದರಿಂದ ನೀವು ಪೂರ್ಣ ಹೃದಯದಿಂದ ಕೇಳಿಸಿಕೊಳ್ಳುತ್ತೀರ.

ಮಾತನಾಡುವವರು ಸಂಪೂರ್ಣತೆಯಿಂದ ಮಾತನಾಡಿದರೆ, ಕೇಳುವವರು ಸಂಪೂರ್ಣತೆಯಿಂದ ಕೇಳಲು ಬದ್ಧರಾಗಿರುತ್ತಾರೆ. ಅವರ ಬದುಕು ಪರಿವರ್ತನೆಯಾಗಲು ಬದ್ಧವಾಗಿರುತ್ತದೆ. ನಿಮ್ಮ ಬದುಕು ನನ್ನ ಪದಗಳಿಂದ ಮುಟ್ಟಲಾಗದಿದ್ದರೆ, ಸ್ಪಷ್ಟವಾಗಿರಲಿ, ನನಗೆ ಮಾತನಾಡಲು ಅಧಿಕಾರವೇ ಇಲ್ಲ. ನನ್ನ ಅನುಭವದ ಸತ್ಯತೆಯನ್ನು ಸಂದೇಹಿಸಲು ನೀವು ಸ್ವತಂತ್ರರು. ನನ್ನ ಪದಗಳು ನಿಮ್ಮ ಜೀವನವನ್ನು ಪರಿವರ್ತಿಸಲು ಸಾಧ್ಯವಿಲ್ಲವೆಂದು ನೀವು ಭಾವಿಸಿದರೆ, ಅಪರಾಧೀ ಭಾವನೆಯನ್ನು ಹೊಂದಬೇಕಾಗಿಲ್ಲ. ಅದರೊಂದಿಗೆ ಹೊರಬನ್ನಿ. ಆದರೆ ನಾನು ಹೇಳುತ್ತೇನೆ: ನೀವು ನನ್ನಿಂದ ಮುಟ್ಟಲ್ಪಡದೆ ಇರಲು ಬೇರೆ ದಾರಿಯೇ ಇಲ್ಲ!

ನೀವು ನಿಮ್ಮ ಹೃದಯದಿಂದ ಕೇಳಿದರೆ, ನನ್ನ ಬೋಧನೆಗಳು ತನ್ನಷ್ಟಕ್ಕೆ ನಿಮ್ಮ ಜೀವನದಲ್ಲಿ ಸಮಯ ಬಂದಾಗ ಕೆಲಸ ಮಾಡುತ್ತಿರುವುದನ್ನು ನೀವು ನೋಡುವಿರಿ. ತನ್ನಲ್ಲೇ ವಿಶ್ವಾಸವಿಲ್ಲದ ಗುರುವು ಮಾತ್ರವೇ ತನ್ನ ಶಿಷ್ಯರಿಗೆ ಹಿಂದಿರುಗಿ ಹೋಗಿ ತನ್ನ ಪದಗಳನ್ನು ಅಭ್ಯಾಸ ಮಾಡಬೇಕೆಂದು ಬಲವಂತ ಮಾಡುವನು. ಒಬ್ಬ ನಿಜವಾದ ಗುರುವು ಮಾತನಾಡಿದ್ದರೆ, ಸುಮ್ಮನೆ ಕೇಳುತ್ತಿದ್ದರೆ ಸಾಕು. ಪೂರ್ಣವಾಗಿ ಕೇಳಿರಿ, ಪರಿವರ್ತನೆಯು ತನ್ನಂತಾನೇ ಸಂಭವಿಸುತ್ತದೆ.

ಛಾಂದೋಗ್ಯ ಉಪನಿಷತ್ ಸುಂದರವಾಗಿ ವಿವರಿಸುತ್ತದೆ: ಗುರುವು ಶಿಷ್ಯರಿಗೆ ಒಂಭತ್ತು ಸಾರಿ ಹೀಗೆ ಹೇಳುತ್ತಾರೆ: ತತ್ ತ್ವಂ ಅಸಿ - ಎಂದರೆ ಅದು ನೀನು ಎಂದು. ಕೇವಲ ಕೇಳುವುದರಿಂದಲೇ, ಕೇವಲ ಗುರುಗಳನ್ನು ಅವರ ಅಸ್ತಿತ್ವದೊಂದಿಗೆ ಕೇಳುವುದರಿಂದ ನಿಜವಾಗಿ ಶಿಷ್ಯನು ಆಧ್ಯಾತ್ಮಿಕ ಅನುಭವವನ್ನು ಪಡೆಯುತ್ತಾನೆ! ಗುರು ಮತ್ತು ಶಿಷ್ಯರು ಪರಿಪೂರ್ಣತೆಯಿಂದ ಕೆಲಸ ಮಾಡಿದರೆ, ಇದು ಸಾಧ್ಯ.

ನೀವು ಗುರುಗಳ ಸುತ್ತಮುತ್ತ ಇದ್ದರೆ, ಪದಗಳು ಸಂಪೂರ್ಣವಾಗಿ ಅಸಂಬದ್ಧವಾಗಿರುವುವು. ಕೇವಲ ಗುರುಗಳ ಸುತ್ತಮುತ್ತ ನಿಶ್ಯಬ್ದದಿಂದಿದ್ದು ಅವರನ್ನು ಗ್ರಹಿಸಿದರೆ ನಿಜವಾದ ಪರಿವರ್ತನೆಯು ನಿಮ್ಮಲ್ಲಾಗುತ್ತದೆ. ಆದರೆ ಏನು ಮಾಡುವುದು? ನೀವು ನಿಮ್ಮ ಒಳ ಹರಟೆಯಲ್ಲಿ ಎಷ್ಟೊಂದು ಸಿಕ್ಕಿಕೊಂಡಿರುತ್ತೀರೆಂದರೆ ನಿಮ್ಮ ಒಳ ಹೊಕ್ಕಲು ನನಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ನಾನು ಮಾತನಾಡುತ್ತೇನೆ. ನಾನು ಪದಗಳನ್ನು ಉಪಯೋಗಿಸಿ ನಿಮ್ಮನ್ನು ನಿಶ್ಯಬ್ದರನ್ನಾಗಿಸುತ್ತೇನೆ.

ನಾನು ನಿಮ್ಮೊಡನೆ ಮಾತನಾಡುತ್ತಿದ್ದೇನೆಂದು ನೀವೇಕೆ ತಿಳಿಯುತ್ತೀರ? ಏಕೆಂದರೆ ನಾನು ಮಾತನಾಡದಿದ್ದರೆ, ನೀವು ನಿಮ್ಮೊಳಗೆ ನಿರಂತರವಾಗಿ ಭೂತಕಾಲದ ಸಂಗತಿಗಳನ್ನು ಭೇದಿಸಿ ವಿಶ್ಲೇಷಿಸುತ್ತಲೋ, ಭವಿಷ್ಯದ ಬಗ್ಗೆ ಚಿಂತಿಸುತ್ತಲೋ, ತೀರ್ಮಾನಿಸುತ್ತಲೋ, ತೀರ್ಪನ್ನು ನೀಡುತ್ತಲೋ, ಮುಂತಾದುವುಗಳ ಬಗ್ಗೆ ಮಾತನಾಡುತ್ತಿರುತ್ತೀರ. ನಾನು ಮಾತನಾಡಿದರೆ ನೀವು ಜಾಡು ತಪ್ಪಿಬಿಡಬಹುದೆಂಬ ಭಯದಿಂದ ನನ್ನ ಪದಗಳಲ್ಲಿ ತಲ್ಲೀನತೆಯಿಂದ ಮಗ್ನರಾಗಿರುತ್ತೀರ. ಆ ಸಮಯದ ಪ್ರಯೋಜನವನ್ನು ಪಡೆದುಕೊಂಡು ನಾನು ನಿಮ್ಮನ್ನು ಹೊಕ್ಕುತ್ತೇನೆ!

ನಾನು ಮಾತನಾಡುವಾಗ, ವಾಸ್ತವದಲ್ಲಿ ಒಳಗಡೆ ನಿಶ್ಯಬ್ದವಾಗಿರುತ್ತೇನೆ. ನೋಡಿ, ಒಬ್ಬ ಗುರುವು ಮಾತನಾಡಿದರೆ, ನಿಜವಾಗಿ ಅವರು ಆಂತರ್ಯದಲ್ಲಿ ನಿಶ್ಯಬ್ದದಿಂದಿರುತ್ತಾರೆ. ಆದುದರಿಂದಲೇ ಅವರು ಒಬ್ಬ ಗುರುಗಳಾಗುವುದು! ಆದರೆ ನಿಮ್ಮ ವಿಚಾರದಲ್ಲಿ, ನೀವು ನಿಶ್ಯಬ್ದವಾಗಿದ್ದರೂ ಸಹ, ಆಂತರ್ಯದಲ್ಲಿ ನಿಮ್ಮೊಂದಿಗೆ ನೀವು ಮಾತನಾಡುತ್ತಿರುತ್ತೀರ! ಆ ಒಳ ಹರಟೆಯು ಇರುತ್ತದೆ. ಅದೇ ವ್ಯತ್ಯಾಸ. ನಿಮ್ಮ ನಿಶ್ಯಬ್ದತೆಯು ಏನೂ ವ್ಯತ್ಯಾಸವಿಲ್ಲದೆ ನಿಮ್ಮೊಳಗೆ ಕೇವಲ ಕೇಳಿಸದಂತೆ ಹೆಣಗಾಡುತ್ತಾ ಇರುತ್ತದೆ. ಆಂತರ್ಯದಲ್ಲಿ, ನೀವು ಒಂದು ಮಂಗನಂತೆ ಒಂದು ವಿಚಾರದಿಂದ ಏನೂ ಸಂಬಂಧವಿಲ್ಲದ ಮತ್ತೊಂದಕ್ಕೆ ಹಾರಾಡುತ್ತಿರುತ್ತೀರ. ಈ ಹುಚ್ಚರ ಮನೆಯು ನಿಮ್ಮೊಳಗೆ ನಡೆಯುತ್ತಿರುತ್ತದೆ ಆದರೆ ನೀವು ಹೊರಗಡೆ ನಿಶ್ಯಬ್ದದಿಂದಿರುವ ಹಾಗೆ ಕಾಣಿಸುತ್ತೀರ ಅಷ್ಟೆ.

ಆದುದರಿಂದ ಆಲಿಸುವುದು ಹೇಗೆಂದು ತಿಳಿದುಕೊಳ್ಳಿ. ನಿಮ್ಮ ತಲೆಯಿಂದ ಆಲಿಸಬೇಡಿ. ನಿಮ್ಮ ಅಸ್ತಿತ್ವವನ್ನು ನನಗೆ ತೆರೆಯಿರಿ. ಆಳವಾದ ನಂಬಿಕೆಯಿಂದ ಮತ್ತು ಸಂಪೂರ್ಣ ಶರಣಾಗತಿಯಿಂದ ಆಲಿಸಿರಿ. ನನ್ನ ಪದಗಳನ್ನು ಹೊತ್ತೊಯ್ಯಲು ಹೆಣಗಾಡಬೇಡಿ. ನಿಮ್ಮ ಅಸ್ತಿತ್ವದಲ್ಲಿ ನನ್ನನ್ನು ಹೊತ್ತೊಯ್ಯಿರಿ. ಅದು ಬೇಕಾದಷ್ಟು ಆಗುತ್ತದೆ. ನನ್ನ ಇರುವಿಕೆಯೋ ನಿಮ್ಮೊಳಗೆ ರಸಸಿದ್ಧಿ (alchemy) ಯು ಆಗುವಂತೆ ಮಾಡುತ್ತದೆ.

ಸರಿ... ಈಗ ಮಣಿಪೂರಕ ಶುದ್ಧಿಕ್ರಿಯೆ ಎಂಬ ನಿಮ್ಮ ಮಣಿಪೂರಕ ಚಕ್ರವನ್ನು ಶುದ್ಧಗೊಳಿಸುವ ಒಂದು ಧ್ಯಾನ ತಂತ್ರವನ್ನು ಕೈಕೊಳ್ಳೋಣ.

ಮಣಿಪೂರಕ ಶುದ್ಧಿ ಕ್ರಿಯೆ

(ಒಟ್ಟು ಕಾಲಾವಧಿ: 30 ನಿಮಿಷಗಳು)

ಮಣಿಪೂರಕ ಶುದ್ಧಿಕ್ರಿಯೆ ಎಂಬುದು ಪುರಾತನ ಕ್ರೈಸ್ತ ಮತದಿಂದ ತೆಗೆದುಕೊಂಡು ಒಂದು ಧ್ಯಾನತಂತ್ರ. 'ಗ್ಲಾಸಲೋಲಿಯಾ' ಎಂದು ಕರೆಯಲ್ಪಡುವ ಈ ತಂತ್ರವನ್ನು ಸೂಫಿಗಳು 'ಗೊಜಗೊಜ' ನುಡಿಗಳಂತೆ ಅಳವಡಿಸಿಕೊಂಡರು. ಈ ತಂತ್ರವು ನಿಮ್ಮೊಳಗೆ ಆಳವಾಗಿ ಕೂರಿದಿರುವ ನಕಾರಾತ್ಮಕ ಮಾನಸಿಕ ನಮೂನೆಗಳು ಮತ್ತು ಚಿಂತೆಗಳನ್ನು ಖಾಲಿ ಮಾಡುತ್ತದೆ. ಇದು ಅದುಮಿಟ್ಟಿರುವ ನಿಮ್ಮ ಕೋಪ ಮತ್ತು

ಚಿಂತೆಯ ಎಲ್ಲಾ ಮನೋಭಾವಗಳನ್ನು ಮುಕ್ತಗೊಳಿಸುತ್ತದೆ. ಒಮ್ಮೆ ಈ ತಂತ್ರವನ್ನು ಮಾಡಿದರೆ, ನೀವು ಮಣಿಪೂರಕ ಪ್ರದೇಶದಲ್ಲಿ ಅಂದರೆ ನಿಮ್ಮ ಹೊಕ್ಕಳಿನ ಜಾಗ ನಿಮ್ಮ ಚಿಂತೆಗಳ ಮತ್ತು ಸಂಕೀರ್ಣವಾದ ಮಾನಸಿಕ ನಮೂನೆಗಳ ಪ್ರದೇಶ - ಬಹಳ ಹಗುರವಾದ ಭಾವನೆಯನ್ನು ಹೊಂದುತ್ತೀರ. ಈ ಧ್ಯಾನವನ್ನು ಮಾಡಿದ ಮೇಲೆ ಹೊಸ ಚಿಂತೆಗಳನ್ನು ಕಲೆ ಹಾಕಿಕೊಂಡು ಮತ್ತೊಮ್ಮೆ ನಿಮ್ಮ ಮಣಿಪೂರಕ ಪ್ರದೇಶವನ್ನು ಹೊರಿಸುವುದನ್ನು ನಿಲ್ಲಿಸುವುದು ನಿಮಗೆ ಬಿಟ್ಟಿದ್ದು.

ಈ ತಂತ್ರವನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕು, ಅಥವಾ ಕಡೆಯ ಪಕ್ಷ ಊಟವಾದ 2 ಘಂಟೆಯ ನಂತರ ಮಾಡಬೇಕು, ಇಲ್ಲದಿದ್ದರೆ ನೀವು ವಾಂತಿ ಮಾಡಿಕೊಳ್ಳಬಹುದು.

ಈಗ ನಿಮ್ಮ ಹೊಕ್ಕಳಿನ ಪ್ರದೇಶದಿಂದ, ಸಾಧ್ಯವಾದಷ್ಟು ಜೋರಾಗಿ ಅರ್ಥಹೀನವಾದ ಶಬ್ದಗಳನ್ನು ಸುಮ್ಮನೆ ಮಾಡಲು ಪ್ರಾರಂಭಿಸಿ. ಪದಗಳನ್ನು ಕೂಗಲು ಉಪಯೋಗಿಸಬೇಡಿ. ನೀವು ಪದಗಳನ್ನು ಉಪಯೋಗಿಸಿದರೆ, ಕೇವಲ ಪರಿಚಿತವಾದ ಮತ್ತು ಈಚೆಗಿನ ಭಾವನೆಗಳು ಮೇಲಕ್ಕೆ ಬರುವುವು ಮತ್ತು ಪದಗಳು ವಾಸ್ತವವಾಗಿ ಅವುಗಳ ಹಿಂದಿರುವ ಮನೋಭಾವನೆಗಳ ಮೇಲೆ ಕೆಲಸ ಮಾಡುವ ಬದಲು ಇನ್ನೂ ಹೆಚ್ಚಿನ ಪದಗಳಿಗೆ ಆಸ್ಪದ ಮಾಡಿಕೊಡುತ್ತವೆ. ಪೂರ್ಣ ಗೋಜುಗೋಜವಾಗಿ ಕೂಗಾಡಿ. ಇದು ಮಾತ್ರವೇ ನಿಮ್ಮಲ್ಲಿರುವ ಪ್ರಜ್ಞೆ ಇಲ್ಲದಿರುವುದನ್ನು ತೆರೆಸುತ್ತದೆ, ಇದು ಮಾತ್ರವೇ ಆಳವಾಗಿ ಹುದುಗಿರುವ ಮನೋಭಾವನೆಗಳನ್ನು ತೆರೆಸುತ್ತದೆ. ನಿಮ್ಮ ಕೈಗಳನ್ನು ಬೀಸಿ, ಕೂಗಿ, ಕಿರುಚಿ, ಕಣ್ಣೀರು ಬಂದರೆ, ಹರಿಯಲು ಬಿಡಿ.

ಇದನ್ನು ನಿಮ್ಮ ಎಲ್ಲಾ ನಕಾರಾತ್ಮಕ ಭಾವನೆಗಳನ್ನು ವಾಂತಿ ಮಾಡಲು, ನಿಮ್ಮ ಸಂಪೂರ್ಣ ಶಕ್ತಿಯಿಂದ ಮಾಡಿ. ನೋವಿನ ಘಟನೆಗಳನ್ನು ಜ್ಞಾಪಿಸಿಕೊಳ್ಳಿ. ಸಂಬಂಧಪಟ್ಟ ವ್ಯಕ್ತಿಗಳನ್ನು ಕಣ್ಣುಮುಂದೆ ತಂದುಕೊಳ್ಳಿ ಮತ್ತು ಆ ಘಟನೆಗಳಲ್ಲಿ ಸಂಬಂಧಪಟ್ಟ ಮನೋಭಾವನೆಗಳನ್ನು ಅನುಭವಿಸಿ. ಎಲ್ಲಾ ಮನೋಭಾವನೆಗಳನ್ನು ಹೊರಗೆ ತನ್ನಿ, ಅದರೊಳಗೆ ಸಂಪೂರ್ಣವಾಗಿ ಮುಳುಗಿಬಿಡಿ. ಬೇರೆ ಯಾವುದರಲ್ಲೂ ಅರಿವಿನಿಂದಿರಬೇಡಿ.

20 ನಿಮಿಷಗಳ ಕೊನೆಯಲ್ಲಿ ನಿಲ್ಲಿಸಿ. ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು, ಮುಂದಿನ 10 ನಿಮಿಷಗಳು ನಿಶ್ಯಬ್ದತೆಯಲ್ಲಿ ಕುಳಿತುಕೊಳ್ಳಿ. ನಿಮ್ಮ ಯೋಚನೆಗಳಿಗೆ ಕೇವಲ ಸಾಕ್ಷಿಗಳಾಗಿರಿ. ನಿಮ್ಮ ಮಣಿಪೂರಕ ಪ್ರದೇಶದಲ್ಲಿ ಹಗುರವಾಗಿರುವುದನ್ನು ಅನುಭವಿಸಿ. ನೀವು ಅದು ಬಹಳ ಹಗುರವಾಗಿಯೂ ಮತ್ತು ಬಹಳ ಆನಂದವಾಗಿಯೂ ಇರುವುದನ್ನು ಕಂಡುಕೊಳ್ಳುತ್ತೀರ. ನಿಮ್ಮ ಪೂರ್ಣ ಅಸ್ತಿತ್ವವು ಅಷ್ಟೊಂದು ಹಗುರವಾಗಿಯೂ ಮತ್ತು ಮುಕ್ತವಾಗಿಯೂ ಇರುತ್ತದೆ.

(ಗುಂಪು ಮಣಿಪೂರಕ ಶುದ್ಧಿ ಕ್ರಿಯೆಗಳನ್ನು ಸಂಗೀತದೊಂದಿಗೆ ಅಭ್ಯಾಸ ಮಾಡುತ್ತದೆ)

ಕೊನೆಯಲ್ಲಿ ಸ್ವಾಮೀಜಿಯವರು ಮಂತ್ರವನ್ನು ಪಠಿಸುತ್ತಾರೆ....)

ಓಂ ಶಾಂತಿ ಶಾಂತಿ ಶಾಂತಿಃ

ನಿಧಾನವಾಗಿ, ಬಹು ನಿಧಾನವಾಗಿ, ನಿಮ್ಮ ಕಣ್ಣುಗಳನ್ನು ತೆರೆಯಿರಿ. ನಾವು ಮುಂದಿನ ಅಧಿವೇಶನದಲ್ಲಿ ಸಂಧಿಸೋಣ.

ಧನ್ಯವಾದಗಳು.

ಸ್ವಾಮಿ ನಿತ್ಯಾನಂದ