KAILASA Library/ಖಚಿತ ಪರಿಹಾರಗಳು/ಅಧ್ಯಾಯ - 3: ಗಮನದ ಅಪೇಕ್ಷೆಯನ್ನು ಬಿಡುವುದು ಅನಾಹತ ಚಕ್ರSign in
ಖಚಿತ ಪರಿಹಾರಗಳು

ಅಧ್ಯಾಯ - 3: ಗಮನದ ಅಪೇಕ್ಷೆಯನ್ನು ಬಿಡುವುದು ಅನಾಹತ ಚಕ್ರ

This text was machine-transcribed from the printed book and may contain errors. Select the words and choose “Report a mistake”.

ಅನಾಹತ ಚಕ್ರ

ಈಗ ಅನಾಹತ ಚಕ್ರಕ್ಕೆ ಬರೋಣ. ಈ ಚಕ್ರವು ಹೃದಯದ ವಲಯದಲ್ಲಿ ಸ್ಥಾಪಿತವಾಗಿದೆ. ಸಂಸ್ಕೃತದಲ್ಲಿ ಅನಾಹತ ಎಂದರೆ 'ಯಾವುದು ಸೃಷ್ಟಿಸಲು ಸಾಧ್ಯವಿಲ್ಲವೋ ಅದು' ಎಂದು ಅರ್ಥ.

ನೀವು ಇತರರಿಂದ ಗಮನ ಮತ್ತು ಪ್ರೀತಿ ಅಪೇಕ್ಷಿಸಿದಾಗ, ಈ ಚಕ್ರವು ಮುದುಡುತ್ತದೆ ಮತ್ತು ನೀವು ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ನಿಸ್ವಾರ್ಥ ಪ್ರೀತಿಯನ್ನು ಪ್ರಕಟಿಸಿದಾಗ ಈ ಚಕ್ರವು ಅರಳುತ್ತದೆ. (ಧ್ಯಾನದ ತಂತ್ರ: ಮಹಾಮಂತ್ರ ಧ್ಯಾನ - ಟಿಬೆಟಿನ ಬೌದ್ಧ ತಂತ್ರ)

ಅನಾಹತ ಚಕ್ರವು ಪ್ರೀತಿ, ಮನೋಭಾವ (sentiments) ಮತ್ತಿತರ ಭಾವನೆಗಳಿಗೆ ಸಂಬಂಧಿಸಿದೆ. ನಾವು ಪ್ರೀತಿಯನ್ನು ಹೊರಸೂಸುವುದರ ಬದಲು ಇತರರಿಂದ ನಿರಂತರವಾಗಿ ಗಮನವನ್ನು ಅಪೇಕ್ಷಿಸಿದಾಗ ಈ ಚಕ್ರದ ಕಾರ್ಯನಿರ್ವಹಣೆ ಸ್ಥಗಿತವಾಗುತ್ತದೆ. ಅನಾಹತ ಪದದ ಅರ್ಥವೇ 'ಯಾವುದು ಸೃಷ್ಟಿಸಲು ಸಾಧ್ಯವಿಲ್ಲವೋ' ಎಂದು ಮತ್ತು ಇದು ನಿಜವಾದ ಪ್ರೀತಿಯು ಹೊರ ಪ್ರಪಂಚದಲ್ಲಿ ಸೃಷ್ಟಿಸಿ, ನಿಮ್ಮೊಳಗೆ ತುಂಬಲು ಸಾಧ್ಯವಿಲ್ಲ; ಆದರೆ, ಅದು ನಿಮ್ಮೊಳಗೆ ಹಾಗೆಯೇ ಸಂಭವಿಸಬಹುದು ಅಷ್ಟೆ ಎಂದು ಸೂಚಿಸುತ್ತದೆ. ನಿಮ್ಮೊಳಗೆ ಒಂದು ಗಾಢವಾದ ಅರಿವು ಪ್ರವೇಶಿಸಿದಾಗ ಅದು ಸಂಭವಿಸಬಹುದು.

ನಿಜವಾದ ಪ್ರೀತಿ ಸಂಭವಿಸಿದಾಗ, ಇತರರಿಂದ ಗಮನ ಅಪೇಕ್ಷಿಸುವುದನ್ನು ನಿಲ್ಲಿಸಿ, ನಾವೇ ಸ್ವತಃ ಚೈತನ್ಯದ ಉಗಮವಾಗಿ ಪರಿವರ್ತನೆಗೊಳ್ಳುತ್ತೇವೆ.

ಗಮನ ಅಪೇಕ್ಷಿಸುವುದು ಎಂದರೇನು?

ಗಮನದ ಅಪೇಕ್ಷೆಯನ್ನು ಬಿಡುವುದು

ನೋಡಿ: ನಾವೇನೇ ಮಾಡಿದರೂ, ಏನೇ ಯೋಚಿಸಿದರೂ ಅರಿವಿಲ್ಲದೆಯೇ ನಮ್ಮ ಸುತ್ತಲಿರುವ ಜನರ ಅಭಿಪ್ರಾಯ ಮತ್ತು ಒಪ್ಪಿಗೆಯನ್ನು ಒಂದು ಸೂಕ್ಷ್ಮ ರೀತಿಯಲ್ಲಿ ಅಪೇಕ್ಷಿಸುತ್ತಾ ಇರುತ್ತೇವೆ. ಎಲ್ಲರಿಂದ ಒಳ್ಳೆಯ ಹೆಸರನ್ನು ಗಳಿಸಬೇಕೆಂದು ಉತ್ಸುಕರಾಗಿರುತ್ತೇವೆ. ನಾವು ಇದನ್ನು ನೇರವಾದ ರೀತಿಯಲ್ಲಿ ಮಾಡದೆ ಇರಬಹುದು. ಆದರೆ ಗಾಢವಾಗಿ ವಿಶ್ಲೇಷಿಸಿದರೆ ನೀವು ನಿಮ್ಮ ಸುತ್ತಲಿನ ಜನರ ಹೊಗಳಿಕೆ ಮತ್ತು ಪುರಸ್ಕಾರವಿಲ್ಲದೆ ನಿಶ್ಚಿಂತೆಯಿಂದಿರುವುದಿಲ್ಲ. ಈ ಪುರಸ್ಕಾರ ಈ ಒಪ್ಪಿಗೆಯನ್ನೇ 'ಗಮನದ ಅಪೇಕ್ಷೆ' ಎಂದು ಕರೆಯುತ್ತೇವೆ. ಗಮನವನ್ನು ಅಥವಾ ಒಪ್ಪಿಗೆಯನ್ನು ಬಯಸುವುದೇ ಶೇಕಡಾ 80 ಪಾಲು ನಮ್ಮ ಸಮಸ್ಯೆಗಳಿಗೆ ನೀವು ಒಳ್ಳೆಯ ಹೆಸರನ್ನು ಗಳಿಸಲು ಸಮಾಜದಲ್ಲಿ ನಿಮ್ಮ ಅಂತಸ್ತನ್ನು ಕಾಪಾಡಿಕೊಳ್ಳಲು ಒಂದು ದಿನದಲ್ಲಿ ಎಷ್ಟು ಕೆಲಸಗಳನ್ನು ಮಾಡುತ್ತೀರ ಎಂಬುದನ್ನು ಸುಮ್ಮನೆ ಕುಳಿತು ಬರೆದರೆ ನೀವೇ ಗಮನಿಸಬಹುದು.

ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ನಿಮ್ಮ ಜೀವನಪರ್ಯಂತ ನೀವು ಇತರರ ಒಪ್ಪಿಗೆಯನ್ನು ಪಡೆಯುವುದರಲ್ಲಿ ತೊಡಗಿದ್ದೀರಿ ಎಂದು ನೋಡಬಹುದು. ನಿಮ್ಮ ಇಡೀ ಜೀವನ ನೀವು ಕುಟುಂಬ ಮತ್ತು ಸಮಾಜದಿಂದ ಒಪ್ಪಿಗೆಯ ಸಹಿಯನ್ನು ಪಡೆಯಲು ಒಂದು ಸಹಿ ಪ್ರಚಾರದಲ್ಲೇ ತೊಡಗಿದ್ದೀರ.

ನಿಮ್ಮ ಸುತ್ತಲಿರುವ ಜನರ ಸಹಿಯನ್ನು ಪಡೆಯುವುದಕ್ಕಾಗಿಯೇ ನಿಮ್ಮ ಎಲ್ಲ ಕೆಲಸಗಳನ್ನೂ ಎಲ್ಲ ಪ್ರಯತ್ನಗಳನ್ನು ನೀವು ಮಾಡುವುದು. ಒಂದು ದೊಡ್ಡ ಪಟ್ಟಿಯಲ್ಲಿ 'ಒಳ್ಳೆಯ ತಂದೆ' ಎಂಬ ಸಾಲು ಮಾಡಿ, ನಿಮ್ಮ ಮಕ್ಕಳಿಗೆ ಏನೇನು ಬೇಕೋ ಎಲ್ಲವನ್ನೂ ಮಾಡಿ, ನಂತರ ಆ ಪಂಕ್ತಿಯಲ್ಲಿ ನಿಮ್ಮ ಮಕ್ಕಳ ಒಪ್ಪಿಗೆ ಸಹಿಯನ್ನು ಅಪೇಕ್ಷಿಸುತ್ತೀರ! ಅದಾದ ಮೇಲೆ ನಿಮ್ಮ ಹೆಂಡತಿಯ ಬಳಿ, ನಿಮ್ಮ ಮಾಲಿಕನ ಬಳಿ, ಗೆಳೆಯರ ಬಳಿ ಹೋಗುತ್ತೀರ. 'ಒಳ್ಳೆಯ ಪತಿ', 'ಒಳ್ಳೆಯ ಕೆಲಸಗಾರ', 'ಒಳ್ಳೆಯ ಗೆಳೆಯ' ಹೀಗೆ... ಶೀರ್ಷಿಕೆಗಳಿರುವ ಸಾಲುಗಳನ್ನು ತಯಾರು ಮಾಡಿ, ಅವರೆಲ್ಲರೂ ಅದರಲ್ಲಿ ಸಹಿ ಮಾಡಲೆಂದು ಕಾಯುತ್ತೀರ. ನೀವು ಯಾವಾಗಲೂ ಒಪ್ಪಿಗೆಯ ಸಹಿಯನ್ನು ಬೇಡಿಕೊಳ್ಳುತ್ತಾ ಇರುತ್ತೀರಿ ಅಷ್ಟೆ.

ಈ ಎಲ್ಲ ಜನರೂ ಕೂಡ ನಿಮ್ಮ ಸಹಿಗಾಗಿ ನಿಮ್ಮ ಬಳಿ ಬರುತ್ತಾರೆ, ಅದೇನೋ ಸರಿ! ಆಗ ಅವರ ಪಟ್ಟಿಗಳಲ್ಲಿ ನಿಮಗೆ ಅನ್ವಯಿಸದ ಸಾಲುಗಳಲ್ಲಿ ನೀವೂ ಕೂಡ ನಿಮ್ಮ ಸಹಿ ಖಚಿತ ಪರಿಹಾರಗಳು

ಹಾಕಬೇಕಾಗುತ್ತದೆ! ನಮ್ಮಲ್ಲಿ ಪ್ರತಿಯೊಬ್ಬರೂ ನಿರಂತರವಾಗಿ ಸಹಿ ಪ್ರಚಾರದಲ್ಲಿ ತೊಡಗಿರುತ್ತೇವೆ. ನಮಗೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಅಭಿಪ್ರಾಯಗಳನ್ನು ಸಂಗ್ರಹಿಸಿ, ನಮ್ಮ ಬೆಲೆಯನ್ನು ಸ್ವತಃ ನಮಗೆ ಹಾಗೂ ಸಮಾಜಕ್ಕೆ ಸಮರ್ಥಿಸಿ ತೋರಿಸಬೇಕು.

ಬೇರೆಯವರಿಗೆ ನಮ್ಮ ಬಗ್ಗೆ ಇರುವ ಅಭಿಪ್ರಾಯಗಳ ಬಗ್ಗೆ ನಾವೇಕೆ ಇಷ್ಟೊಂದು ಯೋಚಿಸುತ್ತೇವೆ? ನಮ್ಮ ಸ್ವಂತ ಶಕ್ತಿಯಿಂದ ನಮ್ಮನ್ನು ನಾವು ವಿಚಾರಣೆ ಮಾಡಿಕೊಂಡು ನಮ್ಮ ಕೆಲಸವನ್ನು ಮಾಡಲು ಮುಂದುವರಿಸಲು ನಮಗೇಕೆ ಆಗುತ್ತಿಲ್ಲ? ಬೇರೆಯವರಿಂದ ನಾವೇಕೆ ಬಲವನ್ನು ಪಡೆಯುತ್ತಿದ್ದೇವೆ? ಇದೆಲ್ಲವೂ ಎರಡು ಕಾರಣಗಳಿಂದ. ಒಂದು: ನಮಗೆ ನಮ್ಮ ಬಗ್ಗೆಯೇ ಏನೂ ತಿಳಿದಿಲ್ಲ. ಬೇರೆಯವರ ಅಭಿಪ್ರಾಯಗಳು, ಯೋಗ್ಯತಾ ಪತ್ರಗಳಿಂದ ಮಾತ್ರ ನಮಗೆ ಸ್ವಂತದ ಬಗ್ಗೆ ತಿಳಿಯುತ್ತದೆ. ಎರಡನೆಯದು: ಬೇರೆಯವರು ತಮ್ಮ ಒಪ್ಪಿಗೆ, ಗಮನವನ್ನು ನಮಗೆ ಕೊಟ್ಟಾಗ, ವಾಸ್ತವಿಕವಾಗಿ ಅವರು ನಮಗೆ ಮುಂದುವರಿಯಲು ಚೈತನ್ಯವನ್ನು ನೀಡುತ್ತಿದ್ದಾರೆ. ಗಮನವು ಒಂದು ಚೈತನ್ಯವೇ ಸರಿ! ಹಾಗಾಗಿಯೇ, ಅವರು ನಮಗೆ ಗಮನವನ್ನು ನೀಡಿದಾಗ, ನಾವಾದಷ್ಟು ಉತ್ಸಾಹಭರಿತರಾಗುತ್ತೇವೆ.

ಯಾವುದೇ ಪ್ರಕಾರದ ಗಮನವು ನಮಗೆ ಪರವಾಗಿಲ್ಲ. ಬಹಳಷ್ಟು ಮನೆಗಳಲ್ಲಿ ಅತ್ತೆ ಸೊಸೆಯರು ಯಾವಾಗಲೂ ಜಗಳವಾಡುತ್ತಿರುತ್ತಾರೆ. ಅವರಿಬ್ಬರೂ ಆ ಬಡಪಾಯಿ ಮನುಷ್ಯನಿಗೆ ಒಬ್ಬರ ಬಗ್ಗೆ ಇನ್ನೊಬ್ಬರು ದೂರು ಹೇಳುತ್ತಲೇ ಇರುತ್ತಾರೆ. ಆದರೆ, ಸ್ವಲ್ಪ ದಿನಗಳ ಮಟ್ಟಿಗೆ ಅವರಲ್ಲಿ ಒಬ್ಬರು ಊರಿಂದಾಚೆ ಹೋದರೆ ಏನಾಗುತ್ತೆ? ಇನ್ನೊಬ್ಬರು ಅವರ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ! ಯಾವಾಗಲೂ ಜಗಳವಾಡುತ್ತಿದ್ದರೂ, ಜೊತೆಯಲ್ಲಿಲ್ಲದಿದ್ದಾಗ, ಒಬ್ಬರನ್ನೊಬ್ಬರು ಕಳೆದುಕೊಂಡ ಭಾವನೆಯಲ್ಲಿರುತ್ತಾರೆ!

ಹೀಗೇಕೆ ಆಗುತ್ತದೆ? ಅವರು ಯಾವಾಗಲೂ ಜಗಳವಾಡುವಾಗ, ಅವರು ತಮ್ಮ ಮೇಲೆ ಇನ್ನೊಬ್ಬರಿಂದ ಬಹಳಷ್ಟು ಗಮನವನ್ನು ಪಡೆಯುತ್ತಿರುತ್ತಾರೆ! ಬರಿ ಒಳ್ಳೆಯ ಕಾರಣಕ್ಕಾಗಿ ಗಮನ ಮಾತ್ರ ಚೇತನಕರವೆಂದು ಭಾವಿಸಬೇಡಿ! ಯಾವುದೇ ಪ್ರಕಾರದ ಗಮನವೂ ಕೂಡ ಚೇತನಕರ. ಅವರಿಬ್ಬರೂ ಜಗಳವಾಡಿದಾಗ, ಪರಸ್ಪರ ಪಡೆಯುವ ಗಮನವನ್ನು ತಮ್ಮ ಅರಿವಿಲ್ಲದೆ ಸಂತೋಷದಿಂದ ಅನುಭವಿಸುತ್ತಾರೆ; ಹಾಗಾಗಿಯೇ ಅವರು ಒಬ್ಬರನ್ನೊಬ್ಬರು ಕಳೆದುಕೊಂಡ ಭಾವನೆಯಲ್ಲಿರುತ್ತಾರೆ ನಿಜವಾಗಿ ನೋಡಿದರೆ, ಅವರು ಆ ಗಮನವನ್ನು ಕಳೆದುಕೊಂಡಿರುತ್ತಾರೆ. ಆದರೆ ಒಬ್ಬರನ್ನೊಬ್ಬರು ಕಳೆದುಕೊಂಡಾಗ ಅದನ್ನೇ 'ಪ್ರೀತಿ' ಎಂದು ಕರೆಯುತ್ತಾರೆ! ಅವರು ಒಬ್ಬರನ್ನೊಬ್ಬರು ಪ್ರೀತಿಯ ಕಾರಣದಿಂದ ಕಳೆದುಕೊಳ್ಳುತ್ತಿದ್ದೇವೆ ಎಂದು ಹೇಳುತ್ತಾರೆ.

ಅದೇನೋ ಖಂಡಿತವಾಗಿ ಸಾಧ್ಯ; ಆದರೆ ಒಂದು ಮಾತ್ರ ಅರ್ಥಮಾಡಿಕೊಳ್ಳಿ, ಗಮನವೆಂಬುದು ನಮ್ಮನ್ನು ಉತ್ಸಾಹದಿಂದಿಡುವ ಚೈತನ್ಯವಲ್ಲದೆ ಬೇರೇನೂ ಅಲ್ಲ. ನಮ್ಮನ್ನು ಚೇತನಗೊಳಿಸುವ ಒಂದು ಸೂಕ್ಷ್ಮವಾದ ರೀತಿ ಮತ್ತು ನಮಗೆ ಅದರ ಬಗ್ಗೆ ಅರಿವಿಲ್ಲ. ತಿಳಿದುಕೊಳ್ಳಿ: ನಮಗೆ ಏನಾದರೂ 'ಬೇಕು' ಎಂದಾದರೆ ಅದು ಪ್ರೀತಿಯಲ್ಲ. ಅದು ಗಮನವಷ್ಟೆ. ನಿಮಗೆ ಪ್ರೀತಿಯ ಅವಶ್ಯಕತೆ ಇಲ್ಲ. ನೀವೇ ಪ್ರೀತಿಯ ಸಾಕಾರ. ಹಾಗಾಗಿ ನೀವು ಪ್ರೀತಿಯ ಅವಶ್ಯಕತೆ ಇದೆ ಎಂದು ಅಥವಾ ನಿಮ್ಮನ್ನು ಪ್ರೀತಿಸಬೇಕು ಎಂದು ಹೇಳಿದರೆ ನಿಮಗೆ ನಿಜವಾಗಿ ಗಮನದ ಅವಶ್ಯಕತೆ ಮಾತ್ರ ಇದೆ, ಪ್ರೀತಿಯಲ್ಲ.

ವೃದ್ಧ ವಯಸ್ಸಿನಲ್ಲಿ ತಮ್ಮ ಮಕ್ಕಳು ತಮ್ಮನ್ನು ಅಷ್ಟು ಪ್ರೀತಿಸುವುದಿಲ್ಲವೆಂದು ಜನರು ಬಂದು ನನಗೆ ಹೇಳುತ್ತಾರೆ. ಅವರ ಮಾತಿನ ನಿಜವಾದ ಅರ್ಥವೇನೆಂದರೆ, ಅವರ ಮಕ್ಕಳು ಅವರಿಗೆ ಗಮನವನ್ನು ಎಂದರೆ ವೃದ್ಧಾಪ್ಯದಲ್ಲಿ ಅವರಿಗೆ ಅವಶ್ಯವಾಗಿರುವ ಚೈತನ್ಯವನ್ನು ನೀಡುತ್ತಿಲ್ಲ ಎಂದು.

ನಿಜವಾಗಿ ನೀವು ನೋಡಿದರೆ, ನಮಗೆ ವಯಸ್ಸಾಗುತ್ತಲೇ ಬೆಳೆಯುತ್ತಾ ಬೆಳೆಯುತ್ತಾ ನಮ್ಮೊಳಗಿರುವ ಅಸ್ತಿತ್ವ ಚೈತನ್ಯಕ್ಕೆ ವರ್ಧಿಸುವ ಸೂಕ್ಷ್ಮತೆಯಿಂದಾಗ, ನಾವು ನಮ್ಮೊಳಗೆ ಇನ್ನು ಹೆಚ್ಚು ಹೆಚ್ಚು ಕೇಂದ್ರೀಕೃತರಾಗಬೇಕು ಆದರೆ ಆಗುವುದೇನೆಂದರೆ ಇಡೀ ಜೀವನದಲ್ಲಿ ನಾವು ಗಮನ ಮತ್ತು ಚೈತನ್ಯಕ್ಕಾಗಿ ಪರಾಧೀನರಾಗಿರುವುದರಿಂದ, ನಮಗೆ ತಿಳಿದಿರುವ ಪ್ರೀತಿ ಬರಿ ಸಂಬಂಧಗಳಲ್ಲಿ ಮಾತ್ರ ಅಸ್ತಿತ್ವವಿರುವ ಕಾರಣದಿಂದ, ನಾವು ನಮ್ಮೊಳಗಿರುವುದರ ಬಗ್ಗೆ ಅರಿವು ಮತ್ತು ಸೂಕ್ಷ್ಮತೆಯಿಲ್ಲದೆ ಬದುಕಿರುವುದರಿಂದ ನಮಗೆ ವಯಸ್ಸಾದಾಗ, ನಾವು ಹೊರ ಪ್ರಪಂಚದಿಂದ ಬಂದ

ಖಚಿತ ಪರಿಹಾರಗಳು

ಪ್ರೀತಿಯನ್ನು ಹೊರಗಿನಿಂದ ಬಂದ ಗಮನವನ್ನೂ ಕಳೆದುಕೊಳ್ಳುತ್ತೇವೆ. ನಿಮ್ಮ ಕುಟುಂಬದವರು ಬೇರೆ ವಿಷಯಗಳಲ್ಲಿ ಕಾರ್ಯನಿರತರಾಗುತ್ತಾರೆ ಆದ್ದರಿಂದ ಹಿಂದೆ ಅವರು ನಿಮ್ಮೊಡನೆ ಮಾತನಾಡುತ್ತಿದ್ದ ರೀತಿಯಲ್ಲಿ ಈಗ ಮಾತನಾಡುವುದಿಲ್ಲ. ಹಾಗಾಗಿ ನೀವು ನಿಮ್ಮ ವಯಸ್ಸಿನ ಮೇಲೆ ಚಾಡಿ ಹೇಳುತ್ತೀರ.

ನೀವು ದೂರು ಹೇಳುವುದಕ್ಕೆ ನಿಜವಾದ ಕಾರಣವೇನೆಂದರೆ, ನಿಮ್ಮ ಚೈತನ್ಯದ ಉಗಮ ನಿಮ್ಮೊಳಗೆಯೇ ಇದೆ, ಹೊರಗೆ ಎಲ್ಲೂ ಇಲ್ಲವೆಂದು ನೀವು ಪಡೆಯುವ ಜೀವನದ ಅನುಭವದಿಂದಲೂ ಕೂಡ ನಿಮಗೆ ಅರ್ಥವಾಗಿಲ್ಲ ಮತ್ತು ಅದರ ಅರಿವಿಲ್ಲ. ಹಾಗಾಗಿ ವಯಸ್ಸಾಗುತ್ತಲೇ ನಿಮ್ಮ ಜೀವನವನ್ನು ಇನ್ನು ಹೆಚ್ಚು ಸಂತೋಷ ಮತ್ತು ಚೈತನ್ಯದಿಂದಿರುವುದರ ಬದಲಿಗೆ ಇನ್ನಷ್ಟು ಕುಗ್ಗುತ್ತಿರುವ ಚೈತನ್ಯ ಹೊಂದಿರುತ್ತೀರ. ಏಕೆಂದರೆ, ನಿಮ್ಮ ಚೈತನ್ಯದ ಉಗಮ, ಅಂದರೆ, ನಿಮ್ಮ ಸುತ್ತಲಿನ ಜನರು ಹಿಂದೆ ನೀಡುತ್ತಿದ್ದಂತಹ ಚೈತನ್ಯವನ್ನು ಇನ್ನು ನಿಮಗೆ ನೀಡುವುದಿಲ್ಲ.

ನೀವು ಚೈತನ್ಯಕ್ಕಾಗಿ ಬಾಹ್ಯದಲ್ಲಿರುವ ಹೊರ ಪ್ರಪಂಚದ ಉಗಮಗಳನ್ನು ಅವಲಂಬಿಸಿದರೆ ಇದರರ್ಥ ನೀವು ಮಾನಸಿಕವಾಗಿ ಬಲಹೀನರಾಗಿದ್ದೀರಿ ಎಂದು, ನಿಮಗೆ ಶಾರೀರಕ ಆಧಾರದ ಅವಶ್ಯಕತೆ ಇದ್ದರೆ, ನೀವು ದೈಹಿಕವಾಗಿ ಬಲಹೀನರಾಗಿದ್ದೀರ. ನಿಮಗೆ ಮಾನಸಿಕ ಆಧಾರದ ಅವಶ್ಯಕತೆ ಇದ್ದರೆ, ನೀವು ಮಾನಸಿಕವಾಗಿ ಬಲಹೀನರಾಗಿದ್ದೀರಿ ಅಷ್ಟೆ.

ದೈಹಿಕ ಬಲಹೀನತೆಯಲ್ಲಿ ನೀವು ಬಲಹೀನರಾಗಿದ್ದೀರಿ ಎಂದು ನಿಮಗೆ ತಿಳಿದಿದೆ, ಏಕೆಂದರೆ ನೀವದನ್ನು ಸ್ಪಷ್ಟವಾಗಿ ಕಾಣಬಹುದು, ಆದರೆ ಮಾನಸಿಕ ಬಲಹೀನತೆಯಲ್ಲಿ ನೀವು ಬಲಹೀನರಾಗಿದ್ದೀರಿ ಎಂದು ನಿಮಗೆ ತಿಳಿದೂ ಇಲ್ಲ. ನಿಮಗೆ ಅದರ ಅರಿವು ಕೂಡ ಇಲ್ಲ. ನಿಮಗೆ ಅದರ ಅರಿವಿಲ್ಲದಿದ್ದಾಗ, ಅದರ ಪರಿಣಾಮಗಳೂ ಕೂಡ ನಿಮಗೆ ತಿಳಿದಿಲ್ಲ. ಅದರ ಪರಿಣಾಮ ಅಥವಾ ಅನಾರೋಗ್ಯತೆ ಸಂಭವಿಸಿದಾಗ ಅದಕ್ಕೆ ಕಾರಣವೇನಿರಬಹುದೆಂದು ನೀವು ಕುತೂಹಲರಾಗುತ್ತೀರ.

ನೀವು ಮಕ್ಕಳು ಆಟವಾಡುವುದನ್ನು ನೋಡಿದ್ದರೆ ಅವು ಇಸ್ಪೀಟು ಎಲೆಗಳನ್ನು, ರಟ್ಟು ಕಾಗದವನ್ನು ಉಪಯೋಗಿಸಿ ಕೋಟೆ ಕೊತ್ತಲ, ಉಪ್ಪರಿಗೆ ಕಟ್ಟುವುದನ್ನು ನೀವು ನೋಡಿರಬಹುದು. ಅವು ಆ ಇಸ್ಪೀಟು ಎಲೆಗಳನ್ನು ಒಂದಕ್ಕೊಂದು ಸರಿಯಾದ

ಗಮನದ ಅಪೇಕ್ಷೆಯನ್ನು ಬಿಡುವುದು

ಕೋನದಳ್ಳಿಟ್ಟು, ಈ ಮಾದರಿಯ ಹಲವಾರು ಮಜಲುಗಳಿರುವ ಗೋಪುರಾಕೃತಿಯ ಕಟ್ಟಡವನ್ನು ಕಟ್ಟುತ್ತಾರೆ. ಅದು ನೋಡುವುದಕ್ಕೆ ಸುಂದರವಾಗಿರುತ್ತದೆ. ಆದರೆ, ಆ ಆಕೃತಿಯ ಯಾವುದೇ ಭಾಗದಿಂದ ಒಂದೇ ಒಂದು ಇಸ್ಪೀಟು ಎಲೆಯನ್ನು ಹೊರತೆಗೆದರೆ ಇಡೀ ಕಟ್ಟಡವೇ ಕುಸಿದು ಬೀಳುತ್ತದೆ! ಕಟ್ಟಡವು ಎತ್ತರವಾದಷ್ಟೂ ಕುಸಿಯುವ ಸಾಧ್ಯತೆಗಳು ಹೆಚ್ಚುತ್ತವೆ.

ಇದೇ ರೀತಿ, ನಾವು ನಮ್ಮ ಸ್ವಂತ ಪ್ರತಿಮೆಯ ಜನರಿಗೆ ನಮ್ಮ ಮೇಲೆ ಇರುವ ಅಭಿಪ್ರಾಯಗಳನ್ನು ಉಪಯೋಗಿಸಿ ಕೋಟೆ ಕೊತ್ತಲವನ್ನು ಕಟ್ಟುತ್ತೇವೆ. ನಾವು ನಮ್ಮ ತಂದೆ, ತಾಯಿ, ಗೆಳೆಯ, ಗೆಳತಿ, ಉಪಾಧ್ಯಾಯ, ಗೆಳೆಯರು ಇವರೆಲ್ಲರಿಂದ ಯೋಗ್ಯತಾಪತ್ರ ಅಥವಾ ಸಹಿಯನ್ನು ಸಂಗ್ರಹಿಸಿ, ಈ ಯೋಗ್ಯತಾಪತ್ರ ಅಥವಾ ಸಹಿಯನ್ನು ಕ್ರಮಪಡಿಸಿ ಜೋಡಿಸಿ ನಮ್ಮ ಸ್ವಂತ ಪ್ರತಿಮೆಯ ಕೋಟೆಕೊತ್ತಲವನ್ನು ನಿರ್ಮಿಸುತ್ತೇವೆ. ಪ್ರತಿಮೆಯು ಸುಂದರವಾಗಿ ಕಾಣುತ್ತದೆ ಮತ್ತು ನಾವು ಸಂತೋಷ ಪಡುತ್ತೇವೆ.

ಆದರೆ ಒಬ್ಬ ವ್ಯಕ್ತಿಯಾದರೂ ತನ್ನ ಯೋಗ್ಯತಾ ಪತ್ರವನ್ನು ಹಿಂತೆಗೆದುಕೊಂಡರೆ ಅಥವಾ ತನ್ನ ಸಹಿಯನ್ನು ಹೊಡೆದು ಹಾಕಿದರೆ ಏನಾಗುತ್ತೆ? ಕೋಟೆ ಕೊತ್ತಲವು ಕುಸಿದು ಬೀಳುತ್ತದೆ! ನಿಮಗೆ ನಿಮ್ಮ ಮೇಲೆ ಬೇಸರವುಂಟಾಗಲು ಶುರು ಆಗುತ್ತದೆ. ನೀವು ನಿರುತ್ಸಾಹಿಗಳಾಗುತ್ತೀರ. ಇಡೀ ಜಗತ್ತೇ ಕೊನೆಯ ಸ್ಥಿತಿ ತಲುಪಿದ ಹಾಗೆ ಭಾವಿಸುತ್ತೀರ.

ನೋಡಿ, ಮಕ್ಕಳಾದರೂ ತಮ್ಮ ಸ್ವಂತ ಇಸ್ಪೀಟು ಕಾಗದವನ್ನು ಬಳಸಿ ಕೋಟೆಕೊತ್ತಲವನ್ನು ಕಟ್ಟುತ್ತಾರೆ. ಆದರೆ, ನಾವು ಬೇರೆಯವರ ಕಾಗದಗಳನ್ನು ಯೋಗ್ಯತಾಪತ್ರಗಳನ್ನು ಬಳಸಿ ನಮ್ಮ ಉಪ್ಪರಿಗೆಯನ್ನು ಕಟ್ಟುತ್ತೇವೆ! ನಮಗೆ ಈ ಕಟ್ಟಡದ ಮೇಲೆ ಅಧಿಕಾರವೇ ಇಲ್ಲ ಏಕೆಂದರೆ ಅದನ್ನು ಬೇರೆಯವರು ನೀಡುವ ಯೋಗ್ಯತಾ ಪತ್ರಗಳಿಂದ ನಿರ್ಮಿಸಿದ್ದೇವೆ.

ಹಾಗಾಗಿ ನಾವು ಏನು ಮಾಡುತ್ತೇವೆ? ಕಟ್ಟಡವನ್ನು ಸಂರಕ್ಷಿಸಲು ಅದರ ಕಾವಲಿರಲು ಕಷ್ಟಪಡುತ್ತೇವೆ. ಜನರು ತಾವು ನೀಡಿರುವ ಯೋಗ್ಯತಾ ಪತ್ರ ಅಥವಾ ರುಜುವನ್ನು

ತೆಗೆಯಬಾರದೆಂಬ ರೀತಿಯಲ್ಲಿ ತೆಗೆದು ಹಾಕದ ಹಾಗೆ ವರ್ತಿಸುತ್ತೇವೆ. ನಿರಂತರವಾಗಿ ಅವರ ಒಪ್ಪಿಗೆ ಪಡೆಯುವುದಕ್ಕೆ ಕೆಲಸಗಳನ್ನು ಮಾಡುತ್ತೇವೆ ಏಕೆಂದರೆ ಅವರ ಒಪ್ಪಿಗೆಯೇ ನಮ್ಮ ಹೊಟ್ಟೆಪಾಡಾಗುತ್ತದೆ.

ಒಂದು ಸಣ್ಣ ಕಥೆ:

ಒಮ್ಮೆ ಒಬ್ಬ ಮಹಿಳೆ ತನ್ನ ಪತಿಯೊಂದಿಗೆ ಅಂಗಡಿಗೆ ಖರೀದಿ ಮಾಡಲು ಹೋದಳು. ಅವಳು ತನಗಾಗಿ ಒಂದು ಅಂಗಿಯನ್ನು ಕೊಂಡುಕೊಳ್ಳಲು ಬಯಸಿದಳು. ಅವರು ಹಲವಾರು ಅಂಗಡಿಗಳಿಗೆ ಹೋದರು, ಆದರೆ ಅವಳಿಗೆ ಬೇಕಾದದ್ದು ಎಲ್ಲಿಯೂ ದೊರಕಲಿಲ್ಲ. ಪತಿಗೆ ಆಯಾಸವಾಯಿತು. ಅವರು ಕೇಳಿದರು “ನಿನಗೆ ಯಾವ ತರಹೆಯ ನಿಲುವಂಗಿಯನ್ನು ಕೊಳ್ಳಬೇಕೆಂದು ಸರಿಯಾಗಿ ತಿಳಿದಿದೆಯೇ?” ಹೆಂಡತಿ ಉತ್ತರಿಸಿದಳು “ಖಂಡಿತವಾಗಿ ತಿಳಿದಿದೆ! ಜನರು ಮೂರ್ಛಿತರಾಗುವ ನಿಲುವಂಗಿಯನ್ನು ನಾನು ಹುಡುಕುತ್ತಿದ್ದೇನೆ.” ಗಂಡನಿಗೆ ಅವಳ ಮಾತುಗಳು ಅರ್ಥವಾಗಲಿಲ್ಲ. ಅವನು ಕೇಳಿದ, “ಮೂರ್ಛಿತರಾಗುವ ನಿಲುವಂಗಿ ಎಂದರೇನು?” ಹೆಂಡತಿ ಉತ್ತರಿಸಿದಳು “ಜನರು ಅದನ್ನು ನೋಡಿದಾಗ, ಅವರು ಮೂರ್ಛೆ ಬೀಳುತ್ತಾರೆ!”

(ಜೋರು ನಗೆ!)

ನಾವು ಜನರಿಂದ ಯೋಗ್ಯತಾ ಪತ್ರಗಳನ್ನು ಸಂಗ್ರಹಿಸಿಕೊಳ್ಳಬೇಕೆಂದೇ ಯಾವಾಗಲೂ ಎದುರು ನೋಡುತ್ತಿರುತ್ತೇವೆ! ನಮ್ಮ ಪ್ರತಿಯೊಂದು ಕೆಲಸವೂ ನಮ್ಮ ಅರಿವಿಲ್ಲದೆಯೇ ಅದರ ಬಗ್ಗೆ ಜನರ ಹೇಳಿಕೆrange, ಜನರ ಪ್ರತಿಕ್ರಿಯೆಗೆ ಸಂಬಂಧಿಸಿರುತ್ತದೆ.

ಉದಾಹರಣೆಗೆ: ಒಂದು ಬ್ಯಾಗ್ (ಚೀಲ) ನಿಮ್ಮ ದುಡ್ಡಿನ ಪರಿಮಿತಿಯಲ್ಲಿದ್ದು, ಅದು ನಿಮಗೆ ಬಹಳ ಪ್ರಯೋಜನಕಾರಿಯಾಗಿರಬಹುದು. ಆದರೆ ನಿಮಗೆ ಅರಿವಿಲ್ಲದೆಯೇ ನೀವು ಆ ಬ್ಯಾಗನ್ನು ಹಿಡಿದುಕೊಂಡ ಹಾಗೆ ದೃಷ್ಟಿ ಕಲ್ಪಿಸಿಕೊಂಡು, ಇತರರು ನಿಮ್ಮನ್ನು ಆ ಚೀಲದ ಜೊತೆ ನೋಡಿದಾಗ ಏನು ಭಾವಿಸಬಹುದು ಎಂದುಕೊಂಡು; ಇತರರು ನೀವು ಆಚೀಲವನ್ನು ಹಿಡಿದುಕೊಳ್ಳುವುದನ್ನು ನೋಡುವುದಕ್ಕೆ ಅಷ್ಟು ಚೆನ್ನಾಗಿಲ್ಲವೆಂದು ನಿರ್ಧರಿಸುತ್ತೀರ. ಮತ್ತೆ ಚೀಲವನ್ನು ಆಯ್ಕೆ ಮಾಡಲು ಆರಂಭಿಸುತ್ತೀರ! ಆದರೆ ನೀವು ಯೋಗ್ಯತಾಪತ್ರವನ್ನು ಎದುರು ನೋಡುತ್ತಿದ್ದೀರೆಂದು ಒಪ್ಪಿಕೊಳ್ಳುವುದಿಲ್ಲ ಏಕೆಂದರೆ ಅದು ನಿಮ್ಮಲ್ಲಿ ಒಂದು ಅರಿವಿಲ್ಲದ ಪ್ರಕ್ರಿಯೆಯಾಗುವುದು!

ನಾವು ಹೆಚ್ಚು ಕಡಿಮೆ ನೂರು ಕಾಲಿನ ಹುಳುವಿನ (centipede) ಹಾಗೆ ಆಗುತ್ತೇವೆ. ಒಂದು ಲಕ್ಷ್ಮೀ ಚೀಲಿಗೆ ನಡೆಯಲು ನೂರು ಕಾಲುಗಳು ಅವಶ್ಯಕ. ಅದರಂತೆಯೇ ನಮಗೆ ಜೀವನದಲ್ಲಿ ನಡೆಯುವುದಕ್ಕೂ ಕೂಡ ಎಲ್ಲರ ಒಪ್ಪಿಗೆ (syntronous approval)ಯ ಅವಶ್ಯಕತೆ ಇದೆ. ಲಕ್ಷ್ಮೀಚೀಲಿನ ಒಂದೇ ಒಂದು ಕಾಲಾದರೂ ಸರಿಯಾಗಿಲ್ಲದೆ ಇದ್ದರೆ ಆಗುವುದೇನು? ಅದು ಅಲ್ಲೇ ಸ್ಥಗಿತವಾಗಿಬಿಡುತ್ತದೆ. ಯಾರೋ ಒಬ್ಬರ ಒಪ್ಪಿಗೆಯು ನಮಗೆ ದೊರಕದೆ ಹೋದರೆ ನಮಗೆ ಆಗುವುದೇನು? ನಾವು ಚಿಂತೆಗೊಳಗಾಗುತ್ತೇವೆ.

ನಾವು ಇನ್ನೊಬ್ಬರನ್ನು ಅಷ್ಟೊಂದು ಅವಲಂಬಿಸಿದ್ದರೆ, ನಾವು ಚಿಂತೆಗೊಳಗಾಗುವ ಎಲ್ಲಾ ಸಾಧ್ಯತೆಗಳಿವೆ. ಯಾರು ಚಿಂತೆಯಿಂದ ನರಳುತ್ತಿದ್ದಾರೋ, ಅವರು ವಾಸ್ತವದಲ್ಲಿ ಗಮನಾಪೇಕ್ಷೆಯಿಂದ ನರಳುತ್ತಿದ್ದಾರೆ. over time, ಏನೋ ಒಂದು ಸಂಭವಿಸುತ್ತದೆ, ಮತ್ತವರು ಅದನ್ನು ನಿಭಾಯಿಸುವ ಸಾಮರ್ಥ್ಯವಿರುವುದಿಲ್ಲ. ನಮ್ಮನ್ನು ಚಿಂತೆಗೊಳಗಾಗಿಸಲು ಒಂದೇ ಒಂದು ಪದ ಸಾಕು. ಆದರೆ, ನಮಗೆ ನಮ್ಮ ಚಿಂತೆ ನಿಜವಾದ ಕಾರಣವೇನೆಂದು ತಿಳಿದಿರುವುದಿಲ್ಲ ಆಗ, ನಾವೇನು ಮಾಡುತ್ತೇವೆ? ಅದನ್ನು ಗುಣಪಡಿಸಲು ಔಷಧಗಳನ್ನು ಸೇವಿಸಲು ಆರಂಭಿಸುತ್ತೇವೆ.

ಅದು ಹೇಗೆ ತಾನೆ ಗುಣವಾಗಲು ಸಾಧ್ಯ? ಚಿಂತೆಗೆ ಕಾರಣವು ನಿಮ್ಮಲ್ಲೇ ಇದೆ, ಆದರೆ ಸಹಾಯಕ್ಕಾಗಿ ನೀವು ಔಷಧಗಳೆಡೆ ನೋಡುತ್ತೀರ. ಕೊರಗಿಗೆ ಒಳಗಾದ ಜನರು ನನ್ನ ಬಳಿ ಬಂದಾಗ, ನಾನು ಅವರಿಗೆ ಮೊದಲಿಗೆ ಒಂದು ಸುಲಭವಾದ ಧ್ಯಾನ - ಮಹಾಮಂತ್ರ, ಧ್ಯಾನವನ್ನು ಮಾಡಲು ಹೇಳಿ, ನಿಧಾನವಾಗಿ ಔಷಧಗಳನ್ನು ನಿಲ್ಲಿಸುವುದಾಗಿ ಹೇಳುತ್ತೇನೆ.

ನೋಡಿ, ಈ ಜನರಿಗೆ ತಮ್ಮ ಚೈತನ್ಯದ ಉಗಮವು ತಮ್ಮಲ್ಲೇ ಇದೆಯೆಂದು ತೋರಿಸುವುದು ಅವಶ್ಯಕವಾಗುತ್ತದೆ ಮತ್ತು ಧ್ಯಾನವು ಅವರಿಗೆ ಅದನ್ನು ತೋರಿಸಬಹುದು.

ಅವರು ಧ್ಯಾನವನ್ನು ಎಷ್ಟು ಶ್ರದ್ಧೆಯಿಂದ ಮಾಡುತ್ತಾರೋ, ಅದಕ್ಕೆ ಅನುಗುಣವಾಗಿ ಅವರು ತಮ್ಮಲ್ಲಿರುವ ಚೈತನ್ಯವನ್ನು ಹಾಗೆಯೇ ಉಪಯೋಗಿಸಿ, ಕೊರಗಿನಿಂದ ಬಿಡುಗಡೆ ಹೊಂದಬಹುದು. ಔಷಧಗಳು ಅವರನ್ನು ಇನ್ನಷ್ಟು ಮಂಕಾಗಿ ಮಾಡುತ್ತವೆ. ಇದನ್ನು ಅರ್ಥಮಾಡಿಕೊಳ್ಳಬೇಕು.

ನಾನು ಹೇಳುತ್ತೇನೆ: ನೀವು ಬಾಹ್ಯ ಪ್ರಪಂಚದಿಂದ ಚೈತನ್ಯವನ್ನು ಪಡೆದುಕೊಂಡರೆ, ಅದು ನಿಮ್ಮನ್ನು ಹಾವಳಿ ಮಾಡಬಹುದು, ನೀವೊಂದು ಕೈಗೊಂಬೆಯಾಗುತ್ತೀರ ಅಷ್ಟೆ.

ನಿಮಗೊಂದು ಕಥೆ ಹೇಳುತ್ತೇನೆ: ನಿಜವೇನೆಂದರೆ, ಇದು ಚಿಕಾಗೊ ವಿಶ್ವವಿದ್ಯಾಲಯ ಅಮೆರಿಕದಲ್ಲಿ ನಡೆಸಿದ ಸಂಶೋಧನೆ.

ಒಬ್ಬ ಆರೋಗ್ಯವಾದ, ಬುದ್ಧಿವಂತ ಯುವಕನು ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗಲು ತಯಾರಾಗುತ್ತಾನೆ. ಅವನ ಹೆಂಡತಿ ಅವನನ್ನು ನೋಡಿ, “ನಿನಗೆ ಆಯಾಸವಾಗಿರುವ ಹಾಗಿದೆ; ಕ್ಷೇಮವಾಗಿದ್ದೀಯೇನು ಎಂದು ಕೇಳಿದಳು.

ಅವಳ ಮಾತನ್ನು ಕೇಳಿ ಅವನಿಗೆ ಸಿಟ್ಟಾಯಿತು. ಇಲ್ಲದ್ದನ್ನು ಕಲ್ಪನೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಅವಳಿಗೆ ಹೇಳಿ ಮನೆಯಿಂದ ಹೊರಟನು.

ಕಾರನ್ನು ಮನೆಯಿಂದ ಬೀದಿಗೆ ಹೊರತೆಗೆಯುತ್ತಿದ್ದಾಗ, ಪಕ್ಕದ ಮನೆಯವನು ಅವನನ್ನು ನೋಡುತ್ತಲೇ ಇದ್ದು ಕೂಗಿದನು, “ಕ್ಷೇಮವಾಗಿದ್ದೀಯೇನು? ಏನೋ ಅಷ್ಟು ಸರಿಯಿಲ್ಲದ ಹಾಗೆ ಕಾಣುತ್ತದೆ!''

ಈ ಬಾರಿ, ಅವನಿಗೆ ಆಶ್ಚರ್ಯವಾಯಿತು, ಆದರೆ ತಾನು ಕ್ಷೇಮವಿದ್ದೇನೆಂದು ಅವನಿಗೆ ಹೇಳಿ ಆಫೀಸಿಗೆ ಹೊರಡುತ್ತಾನೆ.

ಆಫೀಸನ್ನು ತಲುಪಿದ. ಒಳಗೆ ನಡೆಯುತ್ತಿರುವಾಗಲೇ, ಸ್ವಾಗತಕಾರನು ಅವನನ್ನು ನೋಡಿ ಕೇಳಿದನು “ಸಾರ್, ನೀವು ಹುಷಾರು ಇಲ್ಲದೆಯಿರುವ ಹಾಗೆ ಕಾಣಿಸುತ್ತಿದ್ದೀರ! ಹಾಗಿರುವಾಗ ಕೆಲಸಕ್ಕೆ ಏಕೆ ಬಂದಿರಿ?''

ಆ ಮನುಷ್ಯ “ನಾನು ಕ್ಷೇಮವಿದ್ದೇನೆಂದು ನನಗೆ ಎನಿಸುತ್ತದೆ. ಇರಲಿ... ನೋಡೋಣ..'' ಎಂದು ಉತ್ತರಿಸಿ ತನ್ನ ಜಾಗಕ್ಕೆ ತೆರಳಿದನು.

ಗಮನದ ಅಪೇಕ್ಷೆಯನ್ನು ಬಿಡುವುದು

ಕೆಲಸ ಮಾಡಲು ಆರಂಭಿಸಿದ. ಆಗಲೇ ತನ್ನ ಸಹೋದ್ಯೋಗಿ ಬಂದು “ಏಯ್! ಇಷ್ಟು ಮಂಕಾಗಿ ಕಾಣುತ್ತಿದ್ದೀಯ, ಏನು ಸಮಾಚಾರ? ಜ್ವರವೇನಾದರೂ ಇದೆಯೇ?'' ಎಂದು ಕೂಗಿಕೊಂಡನು.

ಈಗ, ಆ ಮನುಷ್ಯನಿಗೆ ಇದು ಅತಿರೇಕವೆನಿಸಿತು. ಅವನು ಚಡಪಡಿಸಲು ಆರಂಭಿಸಿದ, ಏನೋ ಅಸ್ವಸ್ಥತೆಯನ್ನು ಅನುಭವಿಸಲಾರಂಭಿಸಿದ.

ಅದೇ ಸಮಯ, ಅವನ ಮಾಲೀಕ (ಬಾಸ್) ಅವನನ್ನು ಕರೆದರು. ಅವನು ಅಲ್ಲಿಗೆ ಹೋದನು. ಮಾಲೀಕನು ಅವನನ್ನು ನೋಡಿದ ಕೂಡಲೇ “ನೀನು ನಿಜವಾಗಿಯೂ ಅಸ್ವಸ್ಥನಾಗಿ ಕಾಣುತ್ತೀಯೆ. ಇವತ್ತು ಇಡೀ ದಿನ ಕೆಲಸ ಮಾಡಲು ನಿನ್ನಿಂದ ಸಾಧ್ಯವಾಗುವುದೇ? ನೀನೇಕೆ ಡಾಕ್ಟರ್ ಬಳಿ ಹೋಗಬಾರದು?''

ಈಗಾಗಲೇ ಆ ಯುವ ಮನುಷ್ಯನಿಗೆ ಸಾಕಷ್ಟಾಯಿತು. ಅವನಿಗೆ ಈಗ ನಿಜವಾಗಿಯೂ ಜ್ವರ ಬಂದಿತು; ಮನೆಗೆ ಹೋಗುವುದಾಗಿ ತಿಳಿಸಿ ಅಲ್ಲಿಂದ ಹೊರಟನು.

ಮನೆಗೆ ಹೋಗುತ್ತಿರುವಾಗಲೇ ತನ್ನ ದೇಹ ತಾಪ ಏರುತ್ತಿರುವ ಹಾಗಾಯಿತು. ಮನೆಯನ್ನು ತಲುಪಿದ ಕೂಡಲೇ ಅವನನ್ನು ನೋಡಿ ಹೆಂಡತಿಗೆ ಆಶ್ಚರ್ಯವಾಯಿತು. ಅವಳು ಅವನ ಹಣೆಯನ್ನು ಮುಟ್ಟಿನೋಡಿ, ಜ್ವರವಿರುವುದನ್ನು ಕಂಡಳು!

ಬೆಳಿಗ್ಗೆ ತಾನೆ ಸ್ವಸ್ಥನಾಗಿ ಸಂತೋಷದಿಂದಿದ್ದ ಮನುಷ್ಯನಿಗೆ ಮಧ್ಯಾಹ್ನದ ವೇಳಗಾಗಲೇ ನಿಜವಾಗಿಯೂ ಜ್ವರ ಬಂದಿತ್ತು! ಮತ್ತು ಅವನಿಗೆ ಜ್ವರ ಬಂದದ್ದು ಹೇಗೆ? ಸುಮ್ಮನೆ ಜನರು ಅವನಿಗೆ ಜ್ವರವಿದೆಯೆಂದು ಹೇಳಿದ ಮಾತ್ರಕ್ಕೆ! ಜನರು ಅವನಿಗೆ ಪದೇ ಪದೇ ಅದೇ ಮಾತನ್ನು ಹೇಳುವುದಾಗಿ ಸೂಚಿಸಲಾಗಿತ್ತು. ಹಾಗಾಗಿ ಆದದ್ದೇನು? ಅವನಿಗೆ ನಿಜವಾಗಿಯೂ ಜ್ವರ ಬಂದಿತು. ಈ ಒಂದು ಸಂಶೋಧನೆಯನ್ನು 11 ಜನರ ಮೇಲೆ ನಡೆಸಲಾಯಿತು ಮತ್ತು ಎಲ್ಲ ಜನರಿಗೂ ಕೂಡ ಜ್ವರ ಬಂದಿತು.

ನಿಮ್ಮೊಳಗೆಯೇ ಇರುವ ಚೈತನ್ಯದಲ್ಲಿ ಕೇಂದ್ರೀಕೃತರಾಗದೆ ಇದ್ದಾಗ, ಹೀಗೆಯೇ ಆಗುವುದು. ಹೊರ ಪ್ರಪಂಚದ ಪ್ರಭಾವಗಳ ದೆಸೆಯಿಂದಷ್ಟೆ ನೀವು ಎತ್ತರದಿಂದ ತಗ್ಗಿಗೆ ಕುಗ್ಗುತ್ತೀರ. ನಾವು ನಮ್ಮೊಳಗೆಯೇ ಕೇಂದ್ರೀಕೃತರಾದಾಗ, ಹೊರ ಪ್ರಪಂಚದ ಯಾವುದೇ ಕಾರಣವು ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ.

ಖಚಿತ ಪರಿಹಾರಗಳು

ನಾವೆಲ್ಲರು ಬೇರೆಯವರ ಪ್ರಶಂಸೆ ಮತ್ತು ಒಪ್ಪಿಗೆಯನ್ನು ಪಡೆಯಲೆಂದೇ ಕೆಲಸಗಳನ್ನು ಮಾಡುತ್ತೇವೆ, ಆದರೆ ಅದನ್ನು ಪ್ರೀತಿ ಮತ್ತು ಕರ್ತವ್ಯದ ಹೆಸರಿನಲ್ಲಿ ಮಾಡುತ್ತೇವೆ. ಜನರು ನನಗೆ ಹೇಳುತ್ತಾರೆ, “ಸ್ವಾಮೀಜಿ, ನಾವು ಪ್ರಶಂಸೆ ಮತ್ತು ಒಪ್ಪಿಗೆಗಾಗಿ ಕೆಲಸ ಮಾಡುವುದಿಲ್ಲ. ಅದು ನಮ್ಮ ಕರ್ತವ್ಯವೆಂದು ಮಾಡುತ್ತೇವೆ.”

ಸ್ಪಷ್ಟವಾಗಿರಿ: ನೀವು ನಿಮ್ಮ ಕರ್ತವ್ಯವನ್ನು ಮಾಡುತ್ತಿದ್ದೀರೆಂದು ಒಪ್ಪಿಕೊಂಡ ಕ್ಷಣವೇ, ನೀವು ಅದನ್ನು ಮಾಡದೆ ಇದ್ದರೆ, ಜನರು ನಿಮಗೆ ಒಪ್ಪಿಗೆ ನೀಡುವುದನ್ನು ನಿಲ್ಲಿಸಿಬಿಡುತ್ತಾರೆ ಎಂದು ಆ ಕೆಲಸವನ್ನು ಮಾಡುತ್ತಿದ್ದೀರ. ನಿಮ್ಮಿಂದ ಅಪೇಕ್ಷಿತವಾದ ಪ್ರತಿ ಒಂದು ಸಣ್ಣ ಪುಟ್ಟ ಕೆಲಸವನ್ನು ನೀವು ಮಾಡಿ ಪೂರೈಸುವವರೆಗೂ ಜನರಿಗೆ ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯವಿರುವುದು. ಒಮ್ಮೆಯಾದರೂ ನೀವು ಮಾಡುತ್ತಿರುವುದರಲ್ಲಿ ಸಣ್ಣ ಕೇಡು ಉಂಟಾದರೆ, ಜನರ ಮತ್ತು ನಿಮ್ಮ ಸಂಬಂಧವೇ ಬದಲಾಗುವುದನ್ನು ನೀವು ಕಾಣಬಹುದು. ಇದು ನಿಮಗೆ ತಿಳಿದ ವಿಷಯ, ಆದ್ದರಿಂದ ನೀವು ನಿಮ್ಮ ಕರ್ತವ್ಯವನ್ನು ಮಾಡುತ್ತೀರ.

ನೀವು ಹೇಳಬಹುದು, “ಸ್ವಾಮೀಜಿ, ನಾನು ಈ ಮಕ್ಕಳ ತಂದೆ. ನಾನಲ್ಲದೆ ಬೇರೆ ಯಾರು ತಾನೇ ಅವರ ಆವಶ್ಯಕತೆಗಳನ್ನು ಪೂರೈಸುವರು?” ನೋಡಿ, ಅರ್ಥಮಾಡಿಕೊಳ್ಳಿ: ಅವರಿಗೆ ಬೇಕಾದ್ದನ್ನು ನೀಡಬಾರದು ಎಂದು ನಾನು ಹೇಳುತ್ತಿಲ್ಲ. ಅವರಿಗೆ ಜನ್ಮವನೆತ್ತಿರುವುದು ನೀವು, ಅವರು ತಮ್ಮ ಕೆಲಸಗಳನ್ನು ಸ್ವತಂತ್ರವಾಗಿ ಮಾಡಿಕೊಳ್ಳುವವರಾಗುವವರೆಗೂ ನೀವೇ ಅವರಿಗೆ ಬೇಕಾದ್ದನ್ನು ನೀಡಬೇಕು. ಆದರೆ, ನೀವೇನೇ ಮಾಡಲಿ ಅದನ್ನು ಯಾವುದೇ ಅಪೇಕ್ಷೆಯಿಲ್ಲದೆ ಮಾಡಿ. ನೀವು ಮಾಡುವುದು ಒಂದು ಕ್ರಿಯೆಯಾಗಿರಲಿ, ನಿಮ್ಮಲ್ಲಿರುವ ಪ್ರೀತಿಯ ಚೈತನ್ಯದ ಪ್ರಕಟನೆಯಾಗಿರಲಿ.

ಈಗೇನೋ ನೀವು ಯಾವುದೇ ಅಪೇಕ್ಷೆಯಿಲ್ಲದೆ ಮಾಡುತ್ತಿದ್ದೀರೆಂದು ಹೇಳಬಹುದು, ಆದರೆ, ನೀವು ಯಾರಿಗೋಸ್ಕರ ಮಾಡುತ್ತಿದ್ದೀರೋ, ಅವರೇನಾದರೂ ನಿಮ್ಮ ಅಪೇಕ್ಷೆಗೆ ಅನುಗುಣವಾಗಿ ನಡೆದುಕೊಳ್ಳದೆ ಇದ್ದರೆ; ನಿಮ್ಮಲ್ಲಾಗುವ ಬಿಗುವನ್ನು, ನಿಮ್ಮಲ್ಲಾಗುವ ತಳಮಳವನ್ನು, ನಿಮ್ಮಲ್ಲಾಗುವ ನಿರಾಸೆಯನ್ನು ನೀವು ಕಾಣಬಹುದು. ಈ ತಳಮಳ, ಈ ಬಿಗುವು, ಈ ನಿರಾಸೆಯು ನೀವು ಕರ್ತವ್ಯವನ್ನು ಮಾಡಿದಾಗ ನಿಮ್ಮೊಳಗಿದ್ದ ಅಪೇಕ್ಷೆಯ ಫಲ. ಇವುಗಳ ಪರಿಮಾಣ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಾಗಬಹುದು, ಆದರೆ ಪ್ರತಿಯೊಬ್ಬರಲ್ಲೂ ಒಂದಷ್ಟು ಮಟ್ಟಿಗೆ ಇದ್ದೇ ಇರುತ್ತದೆ.

ಮತ್ತು ಹಾಗೆ ಇದ್ದಾಗ, ನೀವು ಮಾಡುವುದು ನಿಮ್ಮ ಪ್ರೀತಿಯ ಚೈತನ್ಯದ ಪ್ರಕಟಣೆಯಾಗಲ್ಲ, ನೀವು ಮಾಡುವುದು ಪ್ರೀತಿಯೆಂದು ಕರೆಯಲ್ಪಡುವ ಒಂದು ಕಡಿಮೆಯ ಮಿತಿ ಇರುವ 'ಕರ್ತೃತ್ವ' ವೆಂಬ ಭಾವನೆಯಿಂದ ಮಾಡುತ್ತೀರ. ಅದೇನೂ ನಿಮ್ಮೊಳಗಿರುವ ಅಸ್ತಿತ್ವಶಕ್ತಿಯ ಪ್ರಕಟಣೆಯಲ್ಲ; ಅದೊಂದು ಬಾಹ್ಯ ಪ್ರಪಂಚದ ಕಾರ್ಯ ಅಷ್ಟೆ.

ಭಗವದ್ಗೀತೆಯಲ್ಲಿ ಸುಂದರವಾಗಿ ಹೇಳಿದೆ

ಕರ್ಮಣ್ಯೇವಾಧಿಕಾರಸ್ತೇ ಮಾಫಲೇಶು ಕದಾಚನ:

ಎಂದರೆ, ನೀವು ಮಾಡಬೇಕಾದ್ದು ಕೆಲಸವನ್ನು ಮಾತ್ರ, ಫಲದ ಯೋಚನೆಯಲ್ಲ ಎಂದರ್ಥ.

ನೀವು ಕೆಲಸಗಳನ್ನು ಮಾಡುತ್ತಲೇ ಇರಬೇಕು, ಏಕೆಂದರೆ ನಿಮ್ಮಲ್ಲಷ್ಟು ಪ್ರೀತಿಯ ಚೈತನ್ಯವಿದೆ. ನೀವು ಯಾವುದೇ ಕಾರಣ ಅಥವಾ ಅಪೇಕ್ಷೆ ಇಲ್ಲದೆಯೇ ಚೈತನ್ಯವನ್ನು ಹೊರಹೊಮ್ಮಬಹುದು. ನೀವು ಹೀಗಿದ್ದಾಗ, ಫಲದ ಬಗ್ಗೆ ಚಿಂತೆಯೇ ಇರುವುದಿಲ್ಲ. ಫಲದ ಯೋಚನೆಯಿಲ್ಲ ಎಂದಾಗ ಅದೇನೂ ನಿರಾಶಾವಾದಿಯ ಅಥವಾ ತಿರಸ್ಕಾರ ಭಾವದಿಂದಾಗಿ ನೀವು ಫಲದ ಬಗ್ಗೆ ಯೋಚಿಸುತ್ತಿಲ್ಲ ಎಂದಲ್ಲ. ನಾನು ಹೇಳುವುದೇನೆಂದರೆ, ನಿಮಗೆ ಫಲವನ್ನು ಅಪೇಕ್ಷಿಸುವುದು ಕೂಡ ತಿಳಿದಿಲ್ಲ, ಏಕೆಂದರೆ ನೀವು ನಿರಂತರವಾಗಿ ನಿಮ್ಮ ಆನಂದಮಯವಾದ ಆಂತರಿಕ ಚೈತನ್ಯವನ್ನು ಪ್ರಕಟಿಸುತ್ತಿದ್ದೀರ ಅಷ್ಟೆ. ಹಾಗಾಗಿ, ನೀವು ಫಲವನ್ನು ಅಪೇಕ್ಷಿಸುವುದಿಲ್ಲವೆಂದೂ ಹೇಳಲು ಸಾಧ್ಯವಿಲ್ಲ. ನೀವು ಸುಮ್ಮನೆ ಸಂತೋಷದಿಂದ ಹರಿಯುತ್ತಿದ್ದೀರ ಅಷ್ಟೆ. ಈ ಹರಿಯುತ್ತಿರುವ ಚೈತನ್ಯವೇ ನಿಜವಾದ ಪ್ರೀತಿ.

ನೀವು ಬೇರೆಯವರಿಂದ ಅಪೇಕ್ಷಿಸುವುದನ್ನು ಆರಂಭಿಸಿದರೆ, ಅದಕ್ಕೆ ಅಂತ್ಯವೇ ಇಲ್ಲ. ಇನ್ನೊಂದು ಮಾತು: ನಿಮ್ಮ ಸುತ್ತಮುತ್ತಲಿರುವ ಎಲ್ಲ ಜನರನ್ನೂ ತೃಪ್ತಿಪಡಿಸುವುದೇ ಅತಿ

ಖಚಿತ ಪರಿಹಾರಗಳು

ಕಷ್ಟವಾದ ಕೆಲಸ. ನೀವು ಎಲ್ಲರನ್ನು ಯಾವಾಗಲೂ ತೃಪ್ತಿಗೊಳಿಸಲು ಸಾಧ್ಯವಿದೆಯೆಂದು ಭಾವಿಸುತ್ತೀರೇನು? ಖಂಡಿತ ಸಾಧ್ಯವಿಲ್ಲ. ಅದು ಈ ಭೂಮಿಯ ಮೇಲೆ ಮಾಡಲು ಸಾಧ್ಯವಾಗದೆ ಇರುವ ಕೆಲಸ.

ಒಂದು ಸಣ್ಣ ಕಥೆ:

ಗಂಡ ಹೆಂಡತಿ ಇಬ್ಬರೂ ತಮ್ಮ ಮದುವೆಯಾಗಿ 50 ಸಂವತ್ಸರಗಳನ್ನು ಆಚರಿಸುತ್ತಿದ್ದರು. ಆ ಸಂದರ್ಭದಲ್ಲಿ ಹೆಂಡತಿಯು ಗಂಡನಿಗೆ ಎರಡು ಅಂಗಿಗಳನ್ನು ಉಡುಗೊರೆಯಾಗಿ ಕೊಟ್ಟಳು. ಆತನಿಗೆ ತುಂಬ ಸಂತೋಷವಾಯಿತು ಮತ್ತು ಊಟಕ್ಕಾಗಿ ಮನೆಯಲ್ಲಿ ಅಡುಗೆ ಮಾಡುವ ಬದಲಿಗೆ ಹೊರಗೆ ಹೋಗುತ್ತೇವೆಂದು ತಾನು ಘೋಷಿಸಿದನು.

ಅವರಿಬ್ಬರಿಗೂ ಅದೊಂದು ಕೋಮಲವಾದ ಸಮಯವಾಗಿತ್ತು.

ಆತ ಕೈಕಾಲು ತೊಳೆದ, ತನ್ನ ಹೆಂಡತಿಯನ್ನು ಸಂತೋಷಪಡಿಸಬೇಕೆಂದು ಅವಳು ಉಡುಗೊರೆಯಾಗಿ ಕೊಟ್ಟಿದ್ದ ಅಂಗಿಗಳಲ್ಲಿ ಒಂದನ್ನು ಧರಿಸಿ ತನ್ನ ಕೋಣೆಯಿಂದ ಹೊರಗೆ ಬಂದನು. ಅವನು ಕೆಳಗೆ ಇಳಿದು ಬರುತ್ತಿರುವಾಗ ಹೆಂಡತಿ ಅವನನ್ನು ನೋಡಿ ಮುಗುಳು ನಕ್ಕಳು, ಆದರೆ ತಕ್ಷಣವೇ ಅವಳ ಮುಖಭಾವನೆ ಬದಲಾಗಿ, ಅವಳು ಹೇಳಿದಳು “ಏನು ಆ ಮತ್ತೊಂದು ಶರಟು ಚೆನ್ನಾಗಿಲ್ಲವೇನು?''

(ನಗೇ!)

ಇನ್ನೊಬ್ಬರನ್ನು ಸಂಪೂರ್ಣವಾಗಿ ಸಂತೋಷಪಡಿಸಲು ಸಾಧ್ಯವಿಲ್ಲ. ಮೊದಲು ನೀವು ನಿಮ್ಮನ್ನು ತೃಪ್ತಗೊಳಿಸಿರಿ. ನಿಮ್ಮೊಳಗೆ ನೀವು ಸಂತೃಪ್ತಿಯನ್ನು ಕಾಣಿರಿ ಅಷ್ಟು ಸಾಕು, ಮತ್ತು ಈ ಸಂತೃಪ್ತಿಯು ನಿಮ್ಮ ಸುತ್ತಲಿರುವ ಜನರನ್ನು ಅವಲಂಬಿಸದೆ ಇರಲಿ. ಹೊರಗಿನ ವಾತಾವರಣ ಅಥವಾ ಜನ ಹೇಗೇ ಇರಲಿ, ನಿಮ್ಮಲ್ಲಿ ಅದೊಂದು ಉತ್ಸಾಹ ತುಂಬಿದ ಚೈತನ್ಯವಾಗಿರಲಿ ಅಷ್ಟು ಸಾಕು.

ಇತರರಿಗೆ ಏನೊ ಒಂದನ್ನು ಮಾಡುವುದೇನೋ ಒಳ್ಳೆಯದು; ಅವರಿಗೆ ಗಮನ ಅಥವಾ ಗೌರವವನ್ನು ಕೊಡುವುದೇನೋ ಒಳ್ಳೆಯದು - ಆದರೆ, ಅದು ಒಂದು ಗಾಢವಾದ ಸಚೇತನಗೊಳಿಸುವ ಪ್ರೀತಿಯಿಂದಷ್ಟೇ ಹೊರತು, ಭಯದಿಂದಲ್ಲ;

ಗಮನದ ಅಪೇಕ್ಷೆಯನ್ನು ಬಿಡುವುದು

ಅವರು ನೀಡಿರುವ ಯೋಗ್ಯತಾಪತ್ರಗಳನ್ನು ಹಿಂತೆಗೆದುಕೊಳ್ಳುತ್ತಾರೇಂಬ ಅಂಜಿಕೆಯಿಂದಲ್ಲ, ಬೇರೆಯವರ ಅಭಿಪ್ರಾಯಗಳೇ ನಿಮ್ಮ ಜೀವನದ ಕೇಂದ್ರವಾಗುವಷ್ಟು ಅವುಗಳಲ್ಲಿ ಗಮನವಿಡಬೇಡಿ. ಬೇರೆಯವರು ನಿಮ್ಮ ಚೈತನ್ಯದ ಉಗಮವಾಗುವಂತೆ ಮಾಡಬೇಡಿ. ನಿಮ್ಮ ಮಾನಸಿಕ ಬದುಕಿಗೆ ಬೇರೆಯವರನ್ನು ಅವಲಂಬಿಸಿ ಇರಬೇಡಿ.

ನೀವು ನಿಮ್ಮ ಸಂತೋಷಕ್ಕಾಗಿ ಬೇರೆಯವರನ್ನು ಅವಲಂಬಿಸಿದಾಗ, ನಿಮ್ಮ ಜೀವನದ ಮೇಲೆ ಹತೋಟಿಯನ್ನು ಅವರಿಗೆ ನೀಡುತ್ತಿದ್ದೀರ. ನಿಮ್ಮ ಚೈತನ್ಯ ಹಾಗೂ ಉತ್ಸಾಹಕ್ಕೆ ನೀವೇ ಉಗಮವಾಗಿರಿ! ಬೇರೆಯವರಲ್ಲಿ ನಿಮ್ಮ ಕೇಂದ್ರವನ್ನು ಸ್ಥಾಪಿಸಿದಾಗ, ನಿಜವಾದ ಸಂತೋಷವುಂಟಾಗುವುದಿಲ್ಲವೆಂದು ಸ್ಪಷ್ಟವಾಗಿ ತಿಳಿದುಕೊಳ್ಳಿ. ಇದನ್ನು ನೀವು ಅರ್ಥಮಾಡಿಕೊಂಡರೆ, ಸಮಸ್ಯೆಯ ಅರ್ಧ ಭಾಗ ಪರಿಹಾರವಾದಂತೆ.

ನಾನು ನಮ್ಮೊಳಗೆ ಸ್ಥಿರವಾಗಿಲ್ಲ; ನಾವೇ ಹಣೇಪಟ್ಟಿಗಳಲ್ಲ, ಒಳಗಿರುವ ಅಂಶವೆಂದು ನಮಗೆ ತಿಳಿದಿಲ್ಲ. ಈ ವಿಷಯ ನಮಗೆ ತಿಳಿಯದೆ ಇರುವ ಕಾರಣ ನಮಗೆ ದಾರಿ ತೋರಿಸಲು ಹಾಕುವ ಸಮಾಜದ ಮುದ್ರೆಗಳನ್ನು ಅವಲಂಬಿಸಿರುತ್ತೇವೆ. ಹಾಗೆ ಮಾಡುತ್ತಾ, ನಾವು ಹಣೇಪಟ್ಟಿಗಳಲ್ಲ, ಒಳಗಿರುವ ಅಂಶವೆಂದು ಸಂಪೂರ್ಣವಾಗಿ ಮರೆತುಬಿಡುತ್ತೇವೆ; ನಮ್ಮೊಳಗಿರುವ ಅಸ್ತಿತ್ವದ ಜೊತೆ ಸಂಪರ್ಕವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತೇವೆ.

ಅನಾಹತ ಚಕ್ರವು ತೆರೆದಾಗ ಅದು ನಿಮ್ಮಲ್ಲಿರುವ ಅನಂತ ಚೈತನ್ಯದ ಉಗಮವನ್ನು, ನಿಮ್ಮಲ್ಲಿರುವ ವಿಶ್ವಶಕ್ತಿಯನ್ನು ಉದ್ರೇಕಿಸಿ ಪಸರಿಸುತ್ತದೆ ಮತ್ತು ಎಲ್ಲರಲ್ಲೂ, ಎಲ್ಲದರಲ್ಲೂ ಒಟ್ಟಿನಲ್ಲಿ ವಿಶ್ವಶಕ್ತಿಯಲ್ಲಿ ನೀವು ನಿಸ್ವಾರ್ಥ ಪ್ರೀತಿಯಿಂದ, ಯಾವುದೇ ಅಪೇಕ್ಷೆಗಳಿಲ್ಲದೆ, ಕೇವಲ ಸಂತೋಷದಿಂದ ಹರಿಯಲು ಸಾಧ್ಯ ಮಾಡಿಕೊಡುತ್ತದೆ.

ಒಂದು ಸಣ್ಣ ಕಥೆ:

'ಬ್ರಹ್ಮಸೂತ್ರ' ಎಂಬುದು ಒಂದು ಗ್ರಂಥ - ಇಡೀ ಮನುಕುಲಕ್ಕೆ ದೊರಕಬಹುದಾದ ಅತ್ಯಂತ ಶ್ರೇಷ್ಠ ಗ್ರಂಥ. ಅದು ವಿಶ್ವದ ತತ್ವಶಾಸ್ತ್ರದ ಮೂಲಕ ಮುದ್ರಣ, ಇದರಿಂದಲೇ ವಿಶ್ವದ ಎಲ್ಲ ತತ್ವಶಾಸ್ತ್ರಗಳನ್ನು ಜನಿಸಿವೆ; ಅದು ಗ್ರಂಥಗಳಲ್ಲಿ ಮಹಾನ್ ಗ್ರಂಥ.

ಅದನ್ನು ರಚಿಸಿದವರು ಭಾರತದ ಅತಿಶ್ರೇಷ್ಠ ಪಂಡಿತರಾದ ವೇದವ್ಯಾಸರು.

ಒಬ್ಬ ಜ್ಞಾನಿಯು ಈ ಗ್ರಂಥವನ್ನು ವಾಚಸ್ಪತಿ ಮಿಶ್ರ ಎಂಬ ತಮ್ಮ ಶಿಷ್ಯನಿಗೆ ಕೊಟ್ಟರು, ಅದನ್ನು ಕುರಿತು ವ್ಯಾಖ್ಯಾನ ಬರೆಯಲು ಹೇಳಿದರು. ಗುರುಗಳು ತಮ್ಮ ಮಗಳಾದ ಭಾಮತಿಯನ್ನು ಅವನೊಡನೆ ವಿವಾಹ ಮಾಡಿಸಿ, ಕೂಡಲೇ ಪ್ರಾಣ ಬಿಟ್ಟರು.

ವಾಚಸ್ಪತಿ ಮಿಶ್ರರು ತಮಗೆ ವಹಿಸಿದ ಕಾರ್ಯವನ್ನು ಶ್ರದ್ಧೆಯಿಂದ ಮಾಡಲು ಆರಂಭಿಸಿದನು. ಅವರು ಬರೆಯುವುದರಲ್ಲಿ ನಿರಂತರವಾಗಿ ತೊಡಗಿದ್ದರು. ಅವರಿಗೆ ಅದೇ ಒಂದು ತೀವ್ರ ಮತ್ತು ಪರಿವರ್ತಕ ಧ್ಯಾನವಾಯಿತು.

ಹಲವಾರು ತಿಂಗಳು ಬರೆಯುತ್ತಲೇ ಇದ್ದರು; ಕೂಡಲೇ ತಿಂಗಳುಗಳು ವರ್ಷಗಳಾದವು, ವರ್ಷಗಳು ದಶವರ್ಷಗಳಾದವು. ಅವರು ಆ ಅವಧಿಯಲ್ಲಿ ಬೇರೆ ಏನನ್ನೂ ನೋಡಲಿಲ್ಲ. ಬೇರೆ ಯಾವುದನ್ನೂ ಕೇಳಲಿಲ್ಲ. ಬೇರೆ ಯಾವುದರ ಬಗ್ಗೆಯೂ ಯೋಚಿಸಲಿಲ್ಲ. ಕೊನೆಯಲ್ಲಿ ಆ ಶ್ರೇಷ್ಠ ಗ್ರಂಥವನ್ನು ಪೂರ್ತಿ ಮಾಡಿದರು. ಆ ಗ್ರಂಥಕ್ಕೆ ಶೀರ್ಷಿಕೆಯೊಂದೇ ಬಾಕಿಯಿತ್ತು. ಅವರು ತಮ್ಮ ಗ್ರಂಥದೆಡೆಯಿಂದ ತಲೆಯೆತ್ತಿ ನೋಡಿದರು.

ಒಬ್ಬ ಮುಪ್ಪು ವಯಸ್ಸಿನ ಹೆಂಗಸೊಬ್ಬಳು ತನ್ನ ಪಕ್ಕದಲ್ಲಿ ದೀಪ ಹಚ್ಚುತ್ತಿರುವುದನ್ನು ಕಂಡರು. ವಾಚಸ್ಪತಿ ಮಿಶ್ರರಿಗೆ ಆಶ್ಚರ್ಯವಾಯಿತು. ಅವರು ಅವಳನ್ನು ಕೇಳಿದರು “ಯಾರು ನೀನು?” ಮುದುಕಿಯು ಉತ್ತರಿಸಿದಳು “ನನ್ನ ವಿಷಯ ಬಿಡಿ. ನಿಮ್ಮ ಕೆಲಸವನ್ನು ಮುಂದುವರಿಸಿ.”

ಅವರು ಹೇಳಿದರು, “ಗ್ರಂಥವು ಪೂರ್ತಿಯಾಯಿತು. ನೀನು ಯಾರೆಂದು ಹೇಳು” ಆಗ ಮುದುಕಿ ಹೇಳಿದಳು “ನಾನು ನಿಮ್ಮ ಹೆಂಡತಿ.”

ನಡೆದದ್ದನ್ನು ನೋಡಿ ವಾಚಸ್ಪತಿ ಮಿಶ್ರರಿಗೆ ಗಾಬರಿಯಾಯಿತು. ಮೂವತ್ತು ವರ್ಷಗಳ ಕಾಲ ತನ್ನ ಹೆಂಡತಿಯ ಬಗ್ಗೆ ಒಮ್ಮೆ ಕೂಡ ಯೋಚಿಸದೆ ಗ್ರಂಥವನ್ನು ಬರೆದಿದ್ದರು. ಇದನ್ನು ಅವರಿಗೆ ನಂಬಲು ಸಾಧ್ಯವಾಗಲಿಲ್ಲ.

“ಕಳೆದ ಇಷ್ಟು ವರ್ಷಗಳಲ್ಲಿ ನೀನೇಕೆ ನನಗೆ ನಿನ್ನ ಬಗ್ಗೆ ಜ್ಞಾಪಿಸಲಿಲ್ಲ?” ಎಂದು ಅತ್ತು ಕರೆದರು.

ಗಮನದ ಅಪೇಕ್ಷೆಯನ್ನು ಬಿಡುವುದು

“ನೀವು ಆ ಗ್ರಂಥದಲ್ಲೇ ತಲ್ಲೀನರಾಗಿದ್ದಿರಿ. ನಿಮಗೆ ಅಡಚಣೆಯುಂಟುಮಾಡಲು ನನಗೆ ಯಾವ ಕಾರಣವೂ ಇರಲಿಲ್ಲ'' ಎಂದು ಅವಳು ಪ್ರಶಾಂತವಾಗಿ ನುಡಿದಳು.

ವಾಚಸ್ಪತಿ ಮಿಶ್ರರು ಮುಂದುವರೆಸಿದರು “ಮನುಕುಲಕ್ಕಾಗಿಯೇ ನಿನ್ನ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದೀಯೆ. ಇದಕ್ಕೆ ಪ್ರತಿಫಲವಾಗಿ ನಾನು ಏನು ತಾನೆ ಮಾಡಲು ಸಾಧ್ಯ?''

ಭಾಮತಿ ಉತ್ತರಿಸಿದಳು “ನಿಮಗೆ ಸೇವೆ ಮಾಡುವುದೇ ಒಂದು ಆನಂದವನ್ನು ತಂದಿದೆ. ನೀವು ಈ ಶ್ರೇಷ್ಠ ಗ್ರಂಥವನ್ನು ರಚಿಸುವಾಗ ನಿಮ್ಮ ಸೇವೆಯನ್ನು ಮಾಡುವ ಭಾಗ್ಯ ನನಗೆ ಸಿಕ್ಕಿತು, ಇದಕ್ಕಿಂತ ಹೆಚ್ಚು ಇನ್ನೇನೂ ಬೇಡ.''

ವಾಚಸ್ಪತಿ ಮಿಶ್ರರು ಆನಂದಬಾಷ್ಪಗರೆದರು. ಅವರು ತಮ್ಮ ಹೆಂಡತಿಗೆ ಅತಿ ಶ್ರೇಷ್ಠವಾದ ಕಾಣಿಕೆ ಅನ್ನೇ ನೀಡಿದರು: ಅವರು ತಮ್ಮ ಆ ಗ್ರಂಥಕ್ಕೆ ತಮ್ಮ ಹೆಂಡತಿಯ ಹೆಸರು ಭಾಮತಿ ಎಂದೇ ಶೀರ್ಷಿಕೆಯಾಗಿಟ್ಟರು.

ಈ ದಿನ ಕೂಡ ಮನುಕುಲದ ಅತ್ಯಮೂಲ್ಯವಾದ ಗ್ರಂಥ ಅತ್ಯುತ್ತಮವಾದ ವ್ಯಾಖ್ಯಾನದ ಹೆಸರು ‘ಭಾಮತಿ’ ಎಂದು.

ಭಾಮತಿಯು ತನ್ನ ನಿಸ್ವಾರ್ಥ ಭಕ್ತಿ ಹಾಗೂ ಪ್ರೀತಿಯ ಕಾರಣ ಅಮರಳಾಗಿದ್ದಾಳೆ. ಅವಳು ತನ್ನಷ್ಟಕ್ಕೆ ತಾನು ಇದ್ದಳು. ಅವಳಿಗೇನು ತನ್ನ ಗಂಡನಿಗೆ ತೊಂದರೆ ಮಾಡುವ ಇಚ್ಛೆಯಿರಲಿಲ್ಲ ಎಂದೇನಲ್ಲ. ಅವಳಿಗೆ ಅದರ ಅವಶ್ಯಕತೆಯಿರಲಿಲ್ಲ ಅಷ್ಟೆ! ಇವೆರಡರ ಮಧ್ಯೆ ದೊಡ್ಡ ವ್ಯತ್ಯಾಸವಿದೆ. ಬಹು ಸಮಯ ನಮಗೆ ಗಮನ ಬೇಕಾಗುತ್ತದೆ ಆದರೆ ಆಗ, ಇನ್ನೊಬ್ಬರಿಗೆ ತೊಂದರೆ ಮಾಡಬಾರದೆಂದು ಅಥವಾ ಅವರನ್ನು ಪೀಡಿಸಬಾರದೆಂದು ಭಾವಿಸಿ ಸುಮ್ಮನಾಗಿಬಿಡುತ್ತೇವೆ.

ಆದರೆ ಇಲ್ಲಿ ಗಮನದ ಅವಶ್ಯಕತೆಯೇ ಇಲ್ಲದ ವ್ಯಕ್ತಿಯ ಬಗ್ಗೆ ನಾವು ಮಾತನಾಡುತ್ತಿದ್ದೇವೆ - ಅಲ್ಲೇ ಇರುವುದು ವ್ಯತ್ಯಾಸ. ಅವಳಿಗೆ ತನ್ನ ಯೌವನವು ವ್ಯರ್ಥವಾಗುತ್ತಿತ್ತೆಂದೂ ಮತ್ತು ಆ ವಿಚಾರದಲ್ಲಿ ರಾಜಿ ಮಾಡಿಕೊಂಡ ಭಾವನೆ ಅವಳಿಗಾಗಲಿಲ್ಲ. ಅವಳು ತನ್ನ ನಿಜ ಸ್ವಭಾವದಲ್ಲಿದ್ದಳು ಅಷ್ಟೆ. ಮತ್ತದು ಅವಳಿಗೆ ಸಾಕಾಗಿತ್ತು, ತನ್ನ ಗಂಡನಿಗೆ ಮಾಡುತ್ತಿದ್ದ ಕೆಲಸದಲ್ಲಿ ಕೆಡಕು ಉಂಟುಮಾಡದೆ

ಖಚಿತ ಪರಿಹಾರಗಳು

ಇರುವುದು ಅವಳಿಗೆ ಕಷ್ಟವಾದ ಆಯ್ಕೆ ಆಗಲಿಲ್ಲ. ಅವಳು ತನ್ನಲ್ಲಿರುವ ಚೈತನ್ಯದಲ್ಲಿ ಎಷ್ಟು ಕೇಂದ್ರೀಕೃತಳಾಗಿದ್ದಳೆಂದರೆ, ಅದಾವುದೂ ಅವಳಿಗೆ ಮುಖ್ಯವಾಗಲಿಲ್ಲ.

ಭಾಮತಿಯು ಸತ್ತಮೇಲೂ ಬದುಕಿದ್ದಾಳೆ. ನಾವೆಲ್ಲರೂ ಪ್ರತಿಕ್ಷಣ ಬದುಕಿರುವಾಗಲೇ ಸಾಯುತ್ತಿದ್ದೇವೆ. ಅದೇ ವ್ಯತ್ಯಾಸ.

ಈ ದಿನ, ನಿಮ್ಮ ಮನೆಗಳಲ್ಲಿ ನೀವು ನೆಮ್ಮದಿಯಿಂದ ಒಂದು ಅರ್ಧ ಗಂಟೆಯಾದರೂ ದಿನಪತ್ರಿಕೆಯನ್ನು ಓದಲು ಸಾಧ್ಯವೇ?

ನಿಮ್ಮ ಹೆಂಡತಿ ಟಿ.ವಿ.ಯಲ್ಲಿ ಧಾರಾವಾಹಿಯನ್ನು ಅರ್ಧಗಂಟೆಯಾದರೂ ನೋಡಲು ಸಾಧ್ಯವೇ?

ನೀವು ದಿನಪತ್ರಿಕೆಯನ್ನು ಓದುತ್ತಿರುವಾಗಲೇ, ನಿಮ್ಮ ಹೆಂಡತಿಯು ಮನೆಯಲ್ಲಿ ಹಿಂದಿನ ದಿನ ನಡೆದ ಎಲ್ಲ ಮುಖ್ಯ ವಿಚಾರಗಳನ್ನು ಹೇಳಲು ಬರುತ್ತಾಳೆ ಮತ್ತು ನೀವು ಅವಳಿಗೆ ಗಮನ ಕೊಡುತ್ತಿಲ್ಲವೆಂದು ದೂರುತ್ತಾ, ನೀವು ಯಾವಾಗಲೂ ದಿನಪತ್ರಿಕೆಯೊಂದಿಗೇ ಇರುತ್ತೀರೆಂದು ಹೇಳುತ್ತಾಳೆ.

ಮತ್ತು ನಿಮ್ಮ ಹೆಂಡತಿ ಟಿ.ವಿ.ಯಲ್ಲಿ ತನ್ನ ಇಷ್ಟವಾದ ಧಾರಾವಾಹಿಯನ್ನು ನೋಡುತ್ತಿರುವಾಗಲೇ, ನಿಮಗೆ ಹಸಿವಾಗುತ್ತದೆ ಮತ್ತು ನಿಮ್ಮ ಹೆಂಡತಿ ನಿಮಗೆ ಊಟವನ್ನು ಬಡಿಸಬೇಕೆಂದು ಬಯಸುತ್ತೀರ. ಸೂಕ್ತವಲ್ಲದ ಸಮಯದಲ್ಲೇ ಧಾರಾವಾಹಿಗಳನ್ನು ತೋರಿಸುವ ಟಿ.ವಿ.ಯನ್ನು ನೀವು ನಿಂದಿಸುತ್ತೀರ. ನಂತರ ಮನೆಯಲ್ಲಿ ಮಾಮೂಲಾಗಿ ನಡೆಯುವ ವಾಗ್ವಿವಾದಗಳು ಪುನಃ ನಡೆಯುತ್ತವೆ.

ಒಂದು ಸಣ್ಣ ಕಥೆ:

ಒಬ್ಬ ವ್ಯಕ್ತಿಯು ತನ್ನ ಹೆಂಡತಿಯ ಜೊತೆ ಹೋಟೆಲ್‌ನಲ್ಲಿ ಕುಳಿತಿದ್ದನು. ಅವರು ಊಟಕ್ಕಾಗಿ ಹೇಳಿ, ಅದು ಬರಲು ಕಾಯುತ್ತಾ ಇದ್ದರು.

ಹೆಂಡತಿಯು "ರೀ, ನಾವು ಈ ಹೋಟೆಲ್‌ನ್ನು ಪ್ರವೇಶಿಸಿದ ಸಮಯದಿಂದ ನೀವು ಆ ದಿನಪತ್ರಿಕೆಯನ್ನು ಓದುತ್ತಲೇ ಇದ್ದೀರ.'' ಎಂದು ಗೊಣಗಿದಳು. ಆಗ ಗಂಡನು "ತಪ್ಪಾಯಿತು'' ಎಂದು ಕ್ಷಮೆಬೇಡಿ, ವೇಯ್ಸರ್‌ಗೆ ಸನ್ನೆಮಾಡಿ "ನಮಗೆ ಬೇರೆ ದಿನಪತ್ರಿಕೆಯನ್ನು ತೆಗೆದುಕೊಂಡು ಬನ್ನಿ'' ಎನ್ನು ಹೇಳಿದನು.

ಗಮನದ ಅಪೇಕ್ಷೆಯನ್ನು ಬಿಡುವುದು

(ನಗೆ)

ನಾವೆಲ್ಲರೂ ಯಾವಾಗಲೂ ಗಮನವನ್ನು ಅಪೇಕ್ಷಿಸುತ್ತಲೇ ಇರುತ್ತೇವೆ, ಮತ್ತದು ನಮಗೆ ದೊರಕದೆಯಿದ್ದಾಗ, ತಲೆಕೆಳಗಾಗುತ್ತೇವೆ. ನಮ್ಮ ಜೀವನದ ಎಲ್ಲ ಕೋಪ, ನಿರಾಶೆ ಮತ್ತು ನಿಷ್ಫಲತೆಗೆ ಇದೇ ಮೂಲ ಕಾರಣ.

ನಾವು ಕೇಳುವುದನ್ನು ನಿಲ್ಲಿಸಿ ಕೊಡುವುದನ್ನು ಅಂಭಿಸಬೇಕು. ನಾವು ಚೈತನ್ಯವನ್ನು ಅಪೇಕ್ಷಿಸುವುದರ ಬದಲಿಗೆ ನಾವೇ ಚೈತನ್ಯವನ್ನು ಪ್ರಸರಿಸಬೇಕು. ಆದರೆ ನಮ್ಮ ಗಮನವನ್ನು ನಮ್ಮಿಂದ ಇನ್ನೊಬ್ಬರಿಗೆ ಬದಲಾಯಿಸುವುದು ಕೂಡ ನಮಗೆ ತಿಳಿದಿಲ್ಲ. ನಾವೇ ಗಮನದ ಕೇಂದ್ರಗಳಾಗಿ ನೋಡುವುದೇ ನಮಗೆ ರೂಢಿಯಾಗಿಬಿಟ್ಟಿದೆ. ನಾವು ಹೊರ ಪ್ರಪಂಚವನ್ನು ಗಮನದ ಕೇಂದ್ರವನ್ನಾಗಿ ನೋಡಲು ಆರಂಭಿಸಬೇಕು. ಇದನ್ನು ಮಾಡುವುದು ಹೇಗೆ?

ಮುಂಬರುವ ಈ ಕೆಲವು ದಿನಗಳಲ್ಲಿ ಒಂದು ಸಣ್ಣ ಅಭ್ಯಾಸವನ್ನು ಮಾಡಿ: ನಿಮ್ಮಲ್ಲೇ ಒಬ್ಬ ವ್ಯಕ್ತಿ, ಅದೇ ಲಿಂಗದವರನ್ನು ಆಯ್ದುಕೊಳ್ಳಿ. ಆ ವ್ಯಕ್ತಿಯನ್ನು ಸಂಪೂರ್ಣವಾಗಿ ನೋಡಿಕೊಳ್ಳಿ. ನಿಮ್ಮ ಆಸಕ್ತಿ ಏನಿದ್ದರೂ ಮೊದಲು ಆ ವ್ಯಕ್ತಿಯು ಸುಖವಾಗಿರಬೇಕು. ಆ ವ್ಯಕ್ತಿಯು ಸಂತೋಷವಾಗಿ, ಸುಖವಾಗಿದ್ದಾರೋ ಇಲ್ಲವೋ ಎಂದು ಮೊದಲು ನೋಡಬೇಕು. ಊಟದ ತಟ್ಟೆಯನ್ನು ಮೊದಲು ನಿಮಗೋಸ್ಕರ ತೆಗೆದುಕೊಳ್ಳುವುದರ ಬದಲಿಗೆ, ಆ ವ್ಯಕ್ತಿಗೆ ಮೊದಲು ಕೊಟ್ಟು, ನಂತರ ನಿಮಗಾಗಿ ತೆಗೆದುಕೊಳ್ಳಿ.

ಇದಕ್ಕಾಗಿ ನಿಮ್ಮ ಗೆಳೆಯರು ಅಥವಾ ಸಂಬಂಧಿಕರನ್ನು ಆಯ್ದುಕೊಳ್ಳಬೇಡಿ! ಮುಂದೆ ನೀವು ಗೆಳೆಯರಾಗಬಹುದಾದಂತಹ ವ್ಯಕ್ತಿಗಳನ್ನು ಆಯ್ದುಕೊಳ್ಳಬೇಡಿ! ಸುಮ್ಮನೆ ಒಬ್ಬ ಅಪರಿಚಿತರನ್ನು ಆಯ್ದುಕೊಳ್ಳಿ. ನಿಮಗೆ ತುಂಬ ಹತ್ತಿರ ನಿಂತಿರುವವರಲ್ಲಿ ಯಾರೋ ಒಬ್ಬರನ್ನು ಆಯ್ದುಕೊಳ್ಳಿರಿ.

ನಮ್ಮ ಜೀವನದಲ್ಲಿ ಬಹಳಷ್ಟು ನಾವು ನಮ್ಮ ಸ್ವಂತದ ಬಗ್ಗೆಯೇ ಚಿಂತಿಸುತ್ತೇವೆ. ಏನೋ ಸ್ವಲ್ಪ ಮಟ್ಟಿಗೆ, ನಮ್ಮ ಹತ್ತಿರದ ಕುಟುಂಬದ ಬಗ್ಗೆ ಚಿಂತಿಸುತ್ತೇವೆ, ಏಕೆಂದರೆ, ಹಾಗೆ ಮಾಡುವುದು ನಮ್ಮ ಕರ್ತವ್ಯವೆಂದುಕೊಂಡು ಅದನ್ನೇ ಪ್ರೀತಿಯೆಂದುಕೊಳ್ಳುತ್ತೇವೆ. ನೀವು ಆ ಅಭ್ಯಾಸವನ್ನು ಮಾಡಲು ಆರಂಭಿಸಿದರೆ, ನಿಸ್ವಾರ್ಥ ಪ್ರೀತಿಯೆಂಬುದು

ಖಚಿತ ಪರಿಹಾರಗಳು

ಹೇಗಿರುತ್ತದೆ ಎಂದು ನೋಡುವ ಅವಕಾಶವಿರುತ್ತದೆ! ಅದು ನಿಸ್ವಾರ್ಥ ಪ್ರೀತಿ, ಏಕೆಂದರೆ ನೀವು ಆ ವ್ಯಕ್ತಿಯಿಂದ ಏನನ್ನೂ ಅಪೇಕ್ಷಿಸುವುದಿಲ್ಲ.

ಭಾಗವಹಿಸಲು ಬಂದವರು ಒಬ್ಬೊಬ್ಬ ವ್ಯಕ್ತಿಯನ್ನು ಆಯ್ದುಕೊಂಡು ಕುಳಿತುಕೊಳ್ಳುತ್ತಾರೆ. ನೋಡಿ: ನಿಜವಾದ ಪ್ರೀತಿಯು ಎಷ್ಟು ಗಾಢವಾದದ್ದು, ಎಷ್ಟು ಸಚೇತನಗೊಳಿಸುವಂತಹದ್ದು ಎಂದರೆ, ನೀವದನ್ನು ಅನುಭವಿಸುವವರೆಗೂ ಅದೇನೆಂದು ನಿಮಗೆ ತಿಳಿಯುವುದಿಲ್ಲ. ಪ್ರೀತಿಯೆಂಬುದು ಚೈತನ್ಯದ ಒಂದು ಪ್ರಕಟಣೆ, ವ್ಯವಹಾರಿಕವಾದದ್ದಲ್ಲ. ಒಂದು ವಿಚಾರ ಹೇಳಿ - ನೀವು ಮೊದಲ ಬಾರಿ ಭೇಟಿ ಮಾಡುವ ವ್ಯಕ್ತಿಗಳನ್ನು ನಿಮಗೆ ಪ್ರೀತಿಸಲು ಸಾಧ್ಯವೇ?

ಇಲ್ಲ ಸ್ವಾಮೀಜಿ!

ಯಾಕೆ ಆಗುವುದಿಲ್ಲ?

ಅವರು ಯಾರೆಂದೂ ನಮಗೆ ತಿಳಿಯದು ಸ್ವಾಮೀಜಿ, ಹಾಗಿರುವಾಗ ಹೇಗೆ ತಾನೆ ಅವರನ್ನು ಪ್ರೀತಿಸಲು ಸಾಧ್ಯ?

ಅದು ಸರಿ! ಈ ರೀತಿ ಆಲೋಚಿಸುವುದು ನೀವು. ನಾನು ಹೇಳುತ್ತೇನೆ, ಕಾರಣವಿಲ್ಲದೆಯೇ ನೀವು ಪ್ರೀತಿಸಬಹುದೆಂದು ಸ್ವಲ್ಪ ಬುದ್ಧಿಯನ್ನು ಉಪಯೋಗಿಸಿ ಅರ್ಥಮಾಡಿಕೊಳ್ಳುವುದರಿಂದ ಮತ್ತು ಧ್ಯಾನದಿಂದ, ನಿಮಗೆ ಅರಿವಾಗುವುದು! ಬೀದಿಯಲ್ಲಿರುವ ಮರಗಳನ್ನು ನೀವು ಪ್ರೀತಿಸಬಹುದು, ಅವುಗಳನ್ನು ಸ್ಪರ್ಶಿಸಿ ನಿಮ್ಮಲ್ಲಿ ಚೈತನ್ಯದ ಹರಿವನ್ನು ನೀವು ಅನುಭವಿಸಬಹುದು. ಬೀದಿಯಲ್ಲಿ ಹೋಗುತ್ತಿರುವ ಅಪರಿಚಿತ ವ್ಯಕ್ತಿಗಳನ್ನೂ ಕೂಡ ನೀವು ಪ್ರೀತಿಸಬಹುದು. ಪ್ರೀತಿಯೆಂಬುದು ನಿಮ್ಮ ಆಸ್ತಿತ್ವ ನೀವು ಪಡೆದುಕೊಂಡಿರುವ ಭಟ್ಟೆ ಇಳಿಸಿದ ಗುಣವಲ್ಲ.

'ಪ್ರೀತಿ'ಗಿಂತ ಅಪಾರ್ಥ ಹೊಂದಿರುವ ಬೇರೆ ಯಾವ ವಿಷಯವೂ ಇಲ್ಲ. ಈದಿನ ಪ್ರೀತಿಯು ಹೆಚ್ಚಾಗಿ ವ್ಯವಹಾರಿಕವಾಗಿದೆ, ಯಾರಾದರೂ ನಿಮಗೆ ಒಳ್ಳೆಯದನ್ನೇನಾದರೂ ಹೇಳಿದರೆ, ನೀವವರನ್ನು ಪ್ರೀತಿಸುತ್ತೀರ; ಇನ್ನು ನಾಳೆ ಅದೇ ವ್ಯಕ್ತಿ ಹಾಗೆ ಮಾಡದೆ ಇದ್ದರೆ, ನೀವವರನ್ನು ಅಷ್ಟು ಪ್ರೀತಿಸುವುದಿಲ್ಲ ಅಥವಾ ಅವರನ್ನು ದ್ವೇಷಿಸುತ್ತೀರ.

ಗಮನದ ಅಪೇಕ್ಷೆಯನ್ನು ಬಿಡುವುದು

ನಿಮ್ಮ ಬಾಲ್ಯಸ್ನೇಹಿತನೇ ಆಗಿದ್ದರೂ ನೀವು ಎಲ್ಲೇ ಇದ್ದರೂ, ಯಾರ ಜೊತೆ ನೀವು ಪ್ರತಿದಿನ ಮಾತನಾಡುತ್ತೀರೋ? ಅವನು ನಿಮಗೆ ನಿಮ್ಮ ಒಪ್ಪಿಗೆಯ ವಿರುದ್ಧ ಏನಾದರೂ ನುಡಿದರೆ, ಆ ತಕ್ಷಣವೇ ಅವನು ನಿಮಗೆ ಅಷ್ಟು ಹತ್ತಿರವಾದವನೆಂದು ಕಾಣುವುದಿಲ್ಲ; ಅವನೊಂದಿಗೆ ನಿಮಗೆ ಮೊದಲಿದ್ದಷ್ಟು ಪ್ರೀತಿಯ ತೀವ್ರತೆ ಬರುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಈಗ ಎಲ್ಲಿದೆ ನಿಮ್ಮ ಪ್ರೀತಿ? ಅದು ತಾತ್ಕಾಲಿಕವಾಗಿ ಕಾಡಲ್ಪಟ್ಟಿದೆ.

ಇದೆಲ್ಲವೂ ನೀಡುವ ಆಡಗಳು; ಪ್ರೀತಿ ಮತ್ತು ದ್ವೇಷ ಒಂದಾದ ಮೇಲೆ ಇನ್ನೊಂದು ತೋರಿಸಿಕೊಳ್ಳುವಂತಹ ಆಟ. ಮತ್ತು ಈ ಪ್ರೀತಿ - ದ್ವೇಷಗಳಿರುವ ಸಂಬಂಧವು ಪ್ರೀತಿ ಅಲ್ಲವೇ ಅಲ್ಲ. ಸ್ಪಷ್ಟವಾಗಿರಿ: ಇದು ಒಂದು ವ್ಯಕ್ತಿಗೆ ಅಥವಾ ಘಟನೆಗೆ ನೀವು ತೋರಿಸುವ ಪ್ರತಿಕ್ರಿಯೆ ಅಷ್ಟೆ. ಇದನ್ನೇ ನಾವು ಪ್ರೀತಿಯೆಂದು ಕರೆಯುತ್ತೇವೆ. ಇದು ನಿಜವಾದ ಪ್ರೀತಿ ಅಲ್ಲ. ಇನ್ನು ಕರ್ತೃ ಸಂಬಂಧವುಳ್ಳ ಪ್ರೀತಿ ಅಷ್ಟೆ.

ನಿಜವಾದ ಪ್ರೀತಿಗೆ ಯಾವುದೇ ವಿಷಯದ ಅಗತ್ಯವಿಲ್ಲ. ಅದು ಮಾತ್ರ ಇರುತ್ತದೆ. ನಿಜವಾದ ಪ್ರೀತಿಯೇ ಅದಕ್ಕೆ ಯಾವುದೇ ವಸ್ತುವಿನ ಅಗತ್ಯವಿಲ್ಲ. ನೀವೇ ಆ ಕರ್ತೃ ಮತ್ತು ನೀವೇ ಆ ಪ್ರೀತಿಯಾಗಿಬಿಟ್ಟಿದ್ದೀರ ಅಷ್ಟೆ. ಯಾವುದೇ ವಸ್ತು ಅದನ್ನು ನಿಜವಾದ ಪ್ರೀತಿಯಲ್ಲಿ ನಿಶ್ಚಿತ ರೀತಿಯಲ್ಲಿರುವುದಿಲ್ಲ. ನಿಮ್ಮಲ್ಲಿರುವ ಚೈತನ್ಯವು ಉಕ್ಕಿ ಹರಿದು ಪ್ರೀತಿಯ ರೂಪದಲ್ಲಿ ಪ್ರಕಟವಾಗಬೇಕು. ಆಗಲೇ ನಿಮ್ಮ ಕಗ್ಗಂಟಾದ ಸಂಬಂಧಗಳ ಸೀಮೆಗಳನ್ನು ಭೇದಿಸಿಕೊಂಡು ನಿಮ್ಮನ್ನು ನೀವು ಒಂದು ಪ್ರೀತಿಸುವ ಜೀವಿಯಾಗಿ ಸುಂದರವಾಗಿ ಪ್ರಕಟಿಸಿಕೊಳ್ಳಬಹುದು! ತಿಳಿಯಿತೇ? ಹೇಳಿ...

ನಿಮ್ಮ ಅಸ್ತಿತ್ವದ ಗುಣವಾಗಿರುವ ಪ್ರೀತಿಯನ್ನು ಕಂಡುಹಿಡಿಯಲು ಎರಡು ಕೆಲಸಗಳನ್ನು ಮಾಡಬಹುದು. ಒಂದು: ಈ ವಿಷಯದ ಬಗ್ಗೆ ನಿಮ್ಮಲ್ಲಿ ಒಂದು ನಿಶ್ಚಿತಾಭಿಪ್ರಾಯವನ್ನು ಸೃಷ್ಟಿಸಲು ಪರಿವರ್ತನೆಯ ಕ್ರಿಯೆ ಆರಂಭವಾಗಲು ನಿಮ್ಮಲ್ಲಿ ಸ್ಥಳವನ್ನು ಸೃಷ್ಟಿಸಲು, ಪುನಃ ಪುನಃ ಇಂತಹ ಮಾತುಗಳನ್ನು ಕೇಳಿರಿ. ಎರಡನೆಯದು: ನಿಜವಾಗಿಯೂ ಈ ಪರಿವರ್ತನೆಯಾಗಲು ಧ್ಯಾನ ಮಾಡಿರಿ.

ವಾಸ್ತವಿಕ ಜೀವನದಲ್ಲಿ ಸಂಬಂಧಗಳನ್ನು ನೀವು ಇನ್ನೂ ಆಳವಾಗಿ ಗಮನಿಸಿದರೆ, ನೀವು ಅನುಭವಿಸುವುದೆಲ್ಲವೂ ನಿಜವಾದ ಪ್ರೀತಿಯಲ್ಲ, ಕೇವಲ ಒಂದು ರೀತಿಯ

ಖಚಿತ ಪರಿಹಾರಗಳು

give & take ಎಂದು ನಿಮಗೇ ತಿಳಿಯುವುದು. ಅದೆಲ್ಲವೂ ಕೇವಲ ಒಂದು ವ್ಯವಸ್ಥಾಪನೆ, ಒಂದು ರಾಜಿ, ಕೆಲವು ಕರ್ತವ್ಯಬದ್ಧ ಭಾವನೆಗಳು, ಸ್ವಲ್ಪ ಭಯ, ಸ್ವಲ್ಪ ತಪ್ಪಿತಸ್ಥಭಾವನೆ, ಅಷ್ಟೆ ನಿಜವಾದ ಪ್ರೀತಿಯಲ್ಲ. ಹೆಸರಿಗಷ್ಟೇ ಪ್ರೀತಿ ಎನಿಸಿಕೊಂಡು ಇವೆಲ್ಲವೂ ಇವೆ.

ಧ್ಯಾನವು ಪ್ರೀತಿಯ ಬಗ್ಗೆ ಇರುವ ಈ ತಪ್ಪು ಕಲ್ಪನೆಗಳನ್ನು ದಾಟಿ ಹೋಗುವುದಕ್ಕೆ ಸಹಾಯವಾಗುವಂತೆ ನಿಮ್ಮನ್ನು ನಿಮ್ಮ ಅಂತರಾಳದೊಳಕ್ಕೆ ಕರೆದೊಯ್ಯುತ್ತದೆ. ಧ್ಯಾನವು ನಿಮ್ಮ ಜೀವಾತ್ಮದ ಮಟ್ಟದಲ್ಲಿ ಕೆಲಸ ಮಾಡುತ್ತದೆ. ಆದ್ದರಿಂದಲೇ ಅದೊಂದು ಅತ್ಯಂತ ಚಿಕ್ಕದಾದ ಮಾರ್ಗ! ನೀವು ಜೀವನವನ್ನು ಅನುಭವಿಸಿ, ನೀವಾಗಿಯೇ ತಿಳಿದುಕೊಳ್ಳುವುದಕ್ಕೆ ಇಡೀ ಜೀವಮಾನವೇ ಆವಶ್ಯಕ, ಆದರೆ ಧ್ಯಾನವು ನಿಮಗೆ ವಯಸ್ಸೆಷ್ಟೇ ಆಗಿರಲಿ, ಈ ವಿಷಯಗಳನ್ನು ಸ್ಪಷ್ಟತೆಯಿಂದ ಅನುಭವಿಸಲು ನಿಮ್ಮೊಳಗೆ ಸ್ಥಳವನ್ನು ಸೃಷ್ಟಿಸುತ್ತದೆ.

ಒಂದು ವಿಷಯವನ್ನು ಅರಿತುಕೊಳ್ಳಿ: ನಿಮಗೆ ಕಾರಣವಿಲ್ಲದೆಯೇ ಪ್ರೀತಿಸಲು ಸಾಧ್ಯವಾದಾಗ, ನೀವು ಹೆಚ್ಚಾಗಿ ವಿಸ್ತರಿಸುತ್ತೀರ. ನಿಮ್ಮ ಜಗತ್ತು ಜೀವನಕ್ಕಿಂತ ಎಷ್ಟೋ ದೊಡ್ಡದಾಗಿ, ಆನಂದಮಯವಾಗಿ ಕಾಣುತ್ತದೆ. ನಿಮ್ಮ ಸ್ವಂತ ಚೈತನ್ಯದ ಉಗಮವನ್ನು ನಿಮ್ಮೊಳಗೇಯೇ ಅನುಭವಿಸುತ್ತೀರಿ, ನಿಮ್ಮ ಹೊರಗಲ್ಲ. ನೀವು ಮೊದಲು ನಿಮ್ಮ ಸ್ವಂತಕ್ಕೆ ನಂತರ ಬೇರೆಯವರಿಗೆ ಚೈತನ್ಯದ ಉಗಮವಾಗುತ್ತೀರ. ನಿಮ್ಮಲ್ಲಿರುವ ಚೈತನ್ಯವು ಇತರರನ್ನು ಮುಟ್ಟಲೇಬೇಕು; ಬೇರೆ ದಾರಿಯೇ ಇಲ್ಲ; ಏಕೆಂದರೆ ನೀವು ಆ ಚೈತನ್ಯದೊಂದಿಗೆ ಉಕ್ಕಿ ಹರಿಯುತ್ತಿರುತ್ತೀರ. ಇತರರು ಸಹಜವಾಗಿ ನಿಮ್ಮ ಬಳಿ ಸೆಳೆಯಲ್ಪಡುತ್ತಾರೆ. ನೀವು ಪರಿಪೂರ್ಣರಾಗಿ ಮತ್ತು ಪ್ರೀತಿಸುವವರಾಗುತ್ತೀರ!

ಹೇಳಿ... ಯಾರಾದರೂ ಏನನ್ನಾದರೂ ಕೇಳುವುದಿದೆಯೇ?

ಸ್ವಾಮೀಜಿ, ತಾಯಿ-ಮಗುವಿನ ಪ್ರೀತಿಯ ಬಗ್ಗೆ ನೀವೇನು ಹೇಳುತ್ತೀರ? ಅದೇನು ನಿಸ್ವಾರ್ಥ ಪ್ರೀತಿಯಲ್ಲವೇ?

ತಾಯಿಯ ಪ್ರೀತಿಯೂ ಕೂಡ ಅಪೇಕ್ಷೆಗಳಿಂದ ಕೂಡಿರುತ್ತದೆ ಮಾ. ನಾನು ಹೀಗೆ ಹೇಳಿದಾಗ, ಹಲವು ಬಾರಿ ಜನರು ನನ್ನೊಡನೆ ವಾದಿಸುತ್ತಾರೆ. ನಾನು ಹೇಳುತ್ತೇನೆ,

ಗಮನದ ಅಪೇಕ್ಷೆಯನ್ನು ಬಿಡುವುದು

ತಾಯಿ ಏನೋ ಮಗನನ್ನು ಪ್ರೀತಿಸುತ್ತಾಳೆ, ಇರಲಿ. ಆದರೆ ಕೊನೆಯಲ್ಲಿ ನೋಡಿದಾಗ, ಆ ಪ್ರೀತಿಯ ಮೇಲೆ ಒಂದು ಗ್ರಹಿಸಲಾಗದ, ಬರೆಯದೆ ಇರುವಂಥ ಅಪೇಕ್ಷೆಯು ಬರೆದಿರುತ್ತದೆ. ಒಮ್ಮೆಯಾದರೂ ಮಗನು ತಾಯಿಯ ವಿರುದ್ಧ ವರ್ತಿಸಿದರೆ, ತಾನು ಮಗನಿಗೆ ಅವನ ಚಿಕ್ಕಂದಿನಿಂದ ಮಾಡಿದ್ದನ್ನೆಲ್ಲ ಮೊದಲು ಹೇಳತೊಡಗುತ್ತಾಳೆ. ಇದೆಲ್ಲವೂ ಅವಳ ಹೊರಬರಲು ಅವರಿಬ್ಬರ ಸಂಬಂಧದಲ್ಲಿ ಒಂದು ಚಿಕ್ಕ ತಗ್ಗು ಸಾಕು.

ನಿಜವಾದ ಪ್ರೀತಿಯು ನಿಮ್ಮಲ್ಲಿರುವ ಅಸ್ತಿತ್ವ ಚೈತನ್ಯದ ಅಭಿವ್ಯಕ್ತತೆ ಮತ್ತು ಈ ಪ್ರೀತಿಗೆ ವಾಗ್ವಾದಗಳು ತಿಳಿಯದು. ಉದ್ದೇಶವಿಲ್ಲದೆ ಹರಿಯುವುದೊಂದೇ ಅದಕ್ಕೆ ತಿಳಿದಿದೆ. ಅದಕ್ಕೆ ಹಿಂದೆ ನಡೆದು ಹೋದದ್ದನ್ನು ನೆನಪಿನಲ್ಲಿಟ್ಟುಕೊಂಡು ವಾಗ್ವಾದಗಳು ತಿಳಿದಿಲ್ಲ. ಅದು ಉಕ್ಕಿಹರಿಯುವ ಕಾರಣದಿಂದ ಹರಿಯುತ್ತದೆ ಅಷ್ಟೆ! ಅದು ಎಂದೂ ಪ್ರಶ್ನಿಸುವುದಿಲ್ಲ, ಏಕೆಂದರೆ ಅದಕ್ಕೆ ಪ್ರಶ್ನಿಸುವುದು ತಿಳಿದಿಲ್ಲ!

ಹಿಂದಿನ ಘಟನೆಗಳನ್ನು ಅನ್ವಯಿಸಿ ಮಾತನಾಡಿದಾಗ, ಅದರರ್ಥ ನಿಮ್ಮ ಪ್ರೀತಿಯಲ್ಲಿ ಎಂದೂ ಅಪೇಕ್ಷೆಗಳು ಹುದುಗಿದ್ದವು ಎಂದು ಮತ್ತು ಹೀಗೆ ಆದಾಗ ಅದು ನಿಜವಾದ ಪ್ರೀತಿ ಆಗಲು ಸಾಧ್ಯವೇ ಇಲ್ಲ. ಅದನ್ನು ಅರ್ಥಮಾಡಿಕೊಳ್ಳಿ.

ಮಗನ ವಿಷಯದಲ್ಲೂ ಹೀಗೆಯೇ ಆಗುವುದು. ಮಗನು ತಾಯಿಯು ತನ್ನನ್ನು ಪ್ರೀತಿಸುತ್ತಾಳೆಂಬ ಅಪೇಕ್ಷೆಯಿಂದ ಅವಳನ್ನು ಪ್ರೀತಿಸುತ್ತಾನೆ. ಅವಳು ಒಂದು ದಿನವೂ ತಪ್ಪಿಸದೆ ಮುಂಜಾನೆ 5 ಗಂಟೆಗೆ ಎದ್ದು ಅವನಿಗೆ ಊಟದ ಬುತ್ತಿ ಕಟ್ಟಿ, ಅವನ ಬಟ್ಟೆಗಳನ್ನು ನೋಡಿಕೊಳ್ಳುತ್ತಾಳೆಂಬ ಅಪೇಕ್ಷೆಯಲ್ಲಿ ಅವನು ಅವಳನ್ನು ಪ್ರೀತಿಸುತ್ತಾನೆ. ಅವನು ತಾಯಿಯ ಮಮತೆ, ಕಾಳಜಿ, ಸೌಕರ್ಯಗಳಿಗಾಗಿ ಅವಳನ್ನು ಇಷ್ಟಪಡುತ್ತಾನೆ.

ಒಂದು ಸಣ್ಣ ಕಥೆ:

ಒಬ್ಬ ಬಾಲಕ ತನ್ನ ಶಾಲೆಯಲ್ಲಿ ಭಾಗಾಕಾರದ ಲೆಕ್ಕವನ್ನು ಕಲಿಯುತ್ತಿದ್ದನು. ಒಂದು ದಿನ ಅಧ್ಯಾಪಕರು ಅವನನ್ನು ಕೇಳಿದರು "ಒಂದು ಕೇಕನ್ನು 5 ಭಾಗಗಳಾಗಿ ಮಾಡಿ, ಅದನ್ನು ನಿನ್ನ ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಹಂಚಿದರೆ, ಆ ಕೇಕಿನ ಎಷ್ಟು ಭಾಗ ನಿನಗೆ ಸಿಕ್ಕುತ್ತದೆ?"

ಬಾಲಕ ಉತ್ತರಿಸಿದ "2/5 ಸರ್''

ಅಧ್ಯಾಪಕರು ಕೇಳಿದರು "ಹೇಗೆ? ನೀನು ಭಾಗಾಕಾರದ ಲೆಕ್ಕವನ್ನು ಸರಿಯಾಗಿ ಕಲಿತಿಲ್ಲವೇನು?''

ಬಾಲಕ ಉತ್ತರಿಸಿದ "ಸರ್ ನನಗೆ ಕೇಕು ಇಷ್ಟವಾದರೆ ನನ್ನ ತಾಯಿಯ ತನ್ನ ಭಾಗವನ್ನೂ ಕೂಡ ನನಗೆ ಕೊಟ್ಟುಬಿಡುತ್ತಾಳೆ.''

ನೋಡಿ, ತಾಯಂದಿರು ತಮ್ಮ ಮಕ್ಕಳಿಗಾಗಿ ತ್ಯಾಗ ಮಾಡಲು ಬಯಸುತ್ತಾರೆ ಇರಲಿ, ಆದರೆ ಅವರು ಯಾವ ಭಾವವನ್ನಿಟ್ಟುಕೊಂಡು ತ್ಯಾಗ ಮಾಡುತ್ತಾರೆ ಎಂಬುದರ ಬಗ್ಗೆ ನಾವೀಗ ಮಾತನಾಡುತ್ತಿದ್ದೇವೆ. ಅವರು ತಮ್ಮಲ್ಲಿ ಒಂದು ಉಕ್ಕಿ ಹರಿಯುವಿಕೆಯಿಂದಾಗಿ ಅದನ್ನು ಮಾಡಬೇಕು, ಯಾವ ಹುದುಗಿಟ್ಟ ಅಪೇಕ್ಷೆಗಳಿಂದಲ್ಲ. ಅವರು ಉಕ್ಕಿ ಹರಿಯುವಿಕೆಯಿಂದ ಅದನ್ನು ಮಾಡಿದರೆ, ಈ ಸಂದರ್ಭಗಳು ಅವರಲ್ಲಿ ಎಂದೂ ದಾಖಲಿಸಲಾಗುವುದಿಲ್ಲ. ಹಾಗೆ ಒಂದು ವೇಳೆ ಅವು ಆದರೂ ಕೂಡ ಇಂಥ ಸನ್ನಿವೇಶಗಳು ಸಂಭವಿಸಿದಾಗ ಅವು ಆ ಪ್ರತಿಕಾರದೊಡನೆ ಮೇಲ್ಬರುವುದಿಲ್ಲ. ಅವರು ಅದನ್ನು ಕರ್ತವ್ಯಬದ್ಧವಾದ ಪ್ರೀತಿಯಿಂದು ಮಾಡಿದಾಗ ಮಾತ್ರ, ಆ ಸಂದರ್ಭಗಳನ್ನು ನೆನಪಿನಲ್ಲಿಟ್ಟುಕೊಂಡು ಪುನಃ ನೆನಪು ಮಾಡಿಕೊಳ್ಳುತ್ತಾರೆ.

ಸಾಮಾನ್ಯವಾದ ಪ್ರೀತಿಯು ಸದಾಕಾಲವೂ ಅಪೇಕ್ಷೆಗಳ ಮೇಲೆ ಅವಲಂಬಿತ ವಾಗಿರುತ್ತದೆ. ಇದನ್ನು ಪ್ರತಿಯೊಬ್ಬರೂ ಆಕ್ರೋಶದಿಂದ ನಿರಾಕರಿಸಲು ಪ್ರಯತ್ನಿಸಬಹುದು, ಆದರೆ ಹಾಗೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅಪೇಕ್ಷೆಯು ಪ್ರೀತಿಯಲ್ಲಿ ಅದೆಷ್ಟು ಚೆನ್ನಾಗಿ ಹೆಣೆದಿದೆ ಎಂದರೆ ಅದನ್ನು ಗ್ರಹಿಸುವುದು ತುಂಬ ಕಷ್ಟ, ಮತ್ತು ಅದರ ಬಗ್ಗೆ ಯಾರಾದರೂ ಮಾತನಾಡಿದರೆ ಅದನ್ನು ನಂಬುವುದು ಕಷ್ಟ.

ನಿಜವಾಗಿಯೂ ಎಲ್ಲವೂ ನಯವಾದ ರೀತಿಯಲ್ಲಿ ನಡೆದರೆ, ಇದನ್ನು ನಂಬುವುದು ಕಷ್ಟ. ಆದರೆ, ಸಣ್ಣಪುಟ್ಟ ಕಾರಣಗಳಿಂದ, ಮಕ್ಕಳನ್ನು ಮನೆಯಿಂದಾಚೆ ಓಡಿಸಿರುವ ಎಷ್ಟೋ ಸಂಗತಿಗಳನ್ನು ಕೇಳುತ್ತೇವೆ! ಕೇವಲ ಅವರು ಹೊರಜಾತಿಯವರನ್ನು ಮದುವೆಯಾದ ಕಾರಣ, ಅಥವಾ ಮನೆಯಲ್ಲಿ ಯಾವುದೋ ಒಂದು ಜಗಳವಾದ ಕಾರಣದಿಂದಾಗಿ ಮಾತ್ರ. ಇದ್ದಕ್ಕೆ ಇದ್ದಹಾಗೆ, ಇದ್ದ ಪ್ರೀತಿಯೆಲ್ಲ ಎಲ್ಲಿ ಮಾಯವಾಯಿತು?

ಅಂತಹ ಘಟನೆಗಳು ಸಂಭವಿಸುವ ತನಕ, ಆ ಮನೆಯಲ್ಲಿ ಆ ಮಕ್ಕಳನ್ನು ತುಂಬ ಪ್ರೀತಿಸಲಾಗುತ್ತದೆ. ನೀವು ಯಾವುದನ್ನು ಪ್ರೀತಿ ಎಂದು ಕರೆಯುತ್ತೀರೋ, ಅದು ಉನ್ನತ ಮಟ್ಟದಲ್ಲಿ ಇರುವುದು. ಇದ್ದಕ್ಕಿದ್ದಹಾಗೆ ಏನಾಯಿತು? ಇದ್ದಕ್ಕಿದ್ದಹಾಗೆ ಮಾಯವಾಗಲು ಹೇಗೆ ಸಾಧ್ಯ? ನಿಜವಾದ ಪ್ರೀತಿಯು ಈ ಪ್ರೀತಿಯ ಪ್ರತಿಕ್ರಿಯೆಯನ್ನು ಹುಟ್ಟಿಸುವುದಿಲ್ಲ. ನಿಜವಾದ ಪ್ರೀತಿಯು ಗೊಂದಲಮಯ ವಾಗಿರುವುದಿಲ್ಲ. ಏಕೆಂದರೆ ಅದು ಹರಿಯುವುದನ್ನು ಯಾವುದೂ ಕೂಡ ನಿಲ್ಲಿಸಲು ಸಾಧ್ಯವಿಲ್ಲ! ಅದು ಕಾರಣ ಪರಿಣಾಮಗಳ ಚಕ್ರವ್ಯೂಹದಲ್ಲಿ ಬದ್ಧವಾಗಿರುವುದಿಲ್ಲ. ಸೂಕ್ಷ್ಮ ಕೌಟುಂಬಿಕ ವಿಷಯಗಳಲ್ಲೂ ಸಹ, ನೀವು ಗಾಢವಾದ ಅರಿವಿನಿಂದಿದ್ದರೆ, ನಿಮ್ಮ ಪ್ರೀತಿಯು ಎಷ್ಟು ಬದ್ಧವಾದದ್ದೆಂದು ನಿಮಗೆ ಅರ್ಥವಾಗುವುದು. ನಿಮ್ಮ ಜೀವನದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿ ಅದಕ್ಕೆ ನಿಮ್ಮ ಕುಟುಂಬವು ಹೇಗೆ ಪ್ರತಿಕ್ರಿಯೆ ತೋರಿಸುತ್ತದೆ ಎಂಬುದನ್ನು ಗಮನಿಸಿ.

ನಿಮ್ಮ ಮಕ್ಕಳಿಗೆ ಪ್ರೀತಿಯ ಹೆಸರಿನಲ್ಲಿ ನೀವು ನೀಡುವವರೆಗೂ, ಅವರೂ ಕೂಡ ಕೃಪೆಯಲ್ಲಿ ಜೀವಿಸುವ ಸುಖವನ್ನು ಪ್ರೀತಿಯ ಹೆಸರಿನಲ್ಲಿ ಅನುಭವಿಸುತ್ತಾರೆ. ನಿಮ್ಮಿಬ್ಬರ ಮಧ್ಯೆ ಯಾವುದೇ ತಿಕ್ಕಾಟವಿಲ್ಲದಿರುವವರೆಗೂ ಎಲ್ಲವೂ ಸರಿಯಾಗಿರುತ್ತದೆ. ನಿಮ್ಮಿಬ್ಬರಲ್ಲಿ ಒಬ್ಬರಾದರೂ ಅನಪೇಕ್ಷಿತ ರೀತಿಯಲ್ಲಿ ವರ್ತಿಸಿದರೆ, ಆ ಪ್ರೀತಿಯ ಭಾವವೇ ಬದಲಾಗುವುದು, ಇಡೀ ಸ್ವಾದವೇ ಬದಲಾಗುವುದು, ಏಕೆಂದರೆ, ಅದು ಸಹಜವಾದ ಸ್ವಾದವಲ್ಲ; ಅದು ಕೃತಕವಾದ (artificial) ಸ್ವಾದ; ಕೃತಕವಾದ ಬಣ್ಣದೊಂದಿಗೆ!

ಸದಾಕಾಲವೂ ಬೆದರಿಕೆಯಲ್ಲಿರುವ ಪ್ರೀತಿಯು ನಿಜವಾದ ಪ್ರೀತಿಯಲ್ಲ. ಅದು ಕೇವಲ ವ್ಯವಸ್ಥಿತವಾದ ಪ್ರೀತಿ (arranged love) ಮತ್ತು ಯಾವುದೇ ವ್ಯವಸ್ಥಿತವಾಗಿ ಇರುತ್ತದೆಯೋ ಅದು ಪರಿಪೂರ್ಣವಾಗಿರಲು ಸಾಧ್ಯವಿಲ್ಲ ಮತ್ತು ಯಾವುದು ಪರಿಪೂರ್ಣವಾಗಿ ಇರುವುದಿಲ್ಲವೋ, ಅದು ಬೆದರಿಕೆಯಲ್ಲಿರುತ್ತದೆ. ಪ್ರೀತಿಯು ಆಚರಣೆಯಾಗಿರಬೇಕು, ಕರ್ತವ್ಯವಲ್ಲ.

ಮತ್ತು ಇನ್ನೊಂದು ವಿಷಯ: ನಾವೆಲ್ಲರೂ ಗೌರವವನ್ನು ಪ್ರೀತಿಯೆಂದು ತಪ್ಪು ತಿಳಿಯುತ್ತೇವೆ. ಸ್ಪಷ್ಟವಾಗಿರಿ: ನೀವು ಸಂಪೂರ್ಣತೆಯಿಂದ ಪ್ರೀತಿಸಿದರೆ, ನೀವು ಮಾಡುವ ಯಾವುದೇ ಕೆಲಸವು ಅಗೌರವಾನ್ವಿತವಾಗಿ ಕಾಣುವುದಿಲ್ಲ. ನೋಡಿ, ನೀವು ಗೌರವವನ್ನು ಹತ್ತಿರದಿಂದ ಗಮನಿಸಿದರೆ, ನೀವು ನೋಡಬಹುದು: ಕೆಲ ವ್ಯಕ್ತಿಗಳು ಕೆಲ ಕೆಲಸಗಳನ್ನು ಮಾಡಿದಾಗ, ಅದು ಸರಿ ಎಂದು ಕಾಣುತ್ತದೆ, ಆದರೆ ಅದೇ ಕೆಲಸವನ್ನು ಬೇರೊಬ್ಬ ವ್ಯಕ್ತಿಯು ಮಾಡಿದಾಗ, ಅದು ಅಗೌರವಾನ್ವಿತವಾಗಿ ಕಾಣುವುದು. ಆ ಕೆಲಸವು ಗೌರವಾನ್ವಿತವಾಗಿ ಅಥವಾ ಅಗೌರವಾನ್ವಿತವಾಗಿ ಕಾಣುವುದಕ್ಕೆ ಅದನ್ನು ಮಾಡುತ್ತಿರುವ ವ್ಯಕ್ತಿಯಲ್ಲಿರುವ ಚೈತನ್ಯವು ಕಾರಣವಾಗುತ್ತದೆ.

ನಿಮ್ಮಲ್ಲಿರುವ ಚೈತನ್ಯವು ಪರಿಪೂರ್ಣವಾಗಿರುವಾಗ, ನೀವೇನೇ ಮಾಡಲಿ ಅದು ಸರಿ ಎಂದು ಕಾಣುತ್ತದೆ. ನಿಮ್ಮ ಬಗ್ಗೆಯೇ ನೀವು ಖಚಿತವಾಗಿ ಇಲ್ಲದೆ ಇದ್ದರೆ, 'ಮರ್ಯಾದೆ'ಗೆ ಸಂಬಂಧಿಸಿದ ತೊಂದರೆಗಳಲ್ಲಿ ಸಿಕ್ಕಿಕೊಂಡರೆ, ನೀವು ಅವಮರ್ಯಾದೆಯಿಂದ ವರ್ತಿಸಲು ನಾನು ಹೇಳುತ್ತಿಲ್ಲ, ನಾನು ಹೇಳುವುದೇನೆಂದರೆ, ನಿಮ್ಮ ಅಸ್ತಿತ್ವವು ಪ್ರೀತಿಯೊಂದಿಗೆ ಶೃತಿಗೂಡಿಸಿದಾಗ, ನಿಮ್ಮ ದೇಹದ ಭಾಷೆಯು (body language) ಹೇಗಿರುತ್ತದೆ ಎಂದರೆ, ನಿಮ್ಮ ಕೆಲಸಗಳು ಎಂದೂ ಅಗೌರವಾನ್ವಿತವಾಗಿ ಕಾಣುವುದಿಲ್ಲ.

ಆದರೆ ನೀವು ಪ್ರೀತಿಯ ಬದಲಿಗೆ ಮರ್ಯಾದೆಯಲ್ಲಿ ಸಿಕ್ಕಿಕೊಂಡರೆ, ಆಗ ನೀವು ವಿಷಯವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದ್ದೀರ. ಆಗ, ಪ್ರೀತಿಸುವವರಾಗುವ ಬದಲಿಗೆ, ನೀವು ನಟಿಸಲು ಆರಂಭಿಸುತ್ತೀರ, ಮತ್ತು ನೀವು ನಟಿಸಿದಾಗ ನೀವು ಪರಿಪೂರ್ಣರಾಗಿಲ್ಲ.

ನೀವು 'ಮರ್ಯಾದೆ'ಯಲ್ಲಿ ಕೇಂದ್ರೀಕೃತರಾದರೆ, ನೀವು ನಟಿಸುತ್ತೀರ, ಏಕೆಂದರೆ ಮರ್ಯಾದೆಯು ಸಾಮಾಜಿಕ ವಿಷಯ ಮತ್ತು ಅದು ಅದರ ವಿವರಣೆಯಲ್ಲಿ ಬದಲಾಗುತ್ತಲೇ ಇರುತ್ತದೆ. ಆದರೆ ನೀವು ಪ್ರೀತಿಯಲ್ಲಿ ಕೇಂದ್ರೀಕೃತರಾದರೆ, ಮರ್ಯಾದೆಯು ಒಂದು ಸಂತೋಷಕರ ಉಪಪದಾರ್ಥವಾಗುತ್ತದೆ. ಹಾಗಾಗಿ ನೀವು ಪ್ರೀತಿಯಲ್ಲಿ ಕೇಂದ್ರೀಕೃತರಾಗಿ ಆಗ ಮರ್ಯಾದೆಯು ತಾನಾಗಿಯೇ ಸಂಭವಿಸುತ್ತದೆ.

ಗಮನದ ಅಪೇಕ್ಷೆಯನ್ನು ಬಿಡುವುದು

ಜ್ಞಾಪಿಸಿಕೊಳ್ಳಿ: ಮರ್ಯಾದೆ ಎಂಬುದು ನಿರ್ಜೀವವಾದದ್ದು. ಪ್ರೀತಿಯೆಂಬುದು ಸಜೀವವಾದದ್ದು. ಮರ್ಯಾದೆಯು ಅಂತರವನ್ನು ಸೃಷ್ಟಿಸುತ್ತದೆ. ಪ್ರೀತಿಯ ವಿಷಯದಲ್ಲಿ ಅಂತರವೆಂಬ ಮಾತೇ ಇಲ್ಲ.

ಜನರು ದೇವರೊಂದಿಗೆ ಭಯದಿಂದ ಹಾಗೂ ಗೌರವಾನ್ವಿತರಾಗಿರಲು ಕಲಿತಿರುತ್ತಾರೆ. ಅವರಿಗೆ ದೇವರನ್ನು ಪ್ರೀತಿಸಲು ಎಂದೂ ಕಲಿಸಲಾಗುವುದಿಲ್ಲ. ದೇವಸ್ಥಾನಗಳಲ್ಲಿರುವ ಮೂರ್ತಿಗಳನ್ನು ಮುಟ್ಟಲು ಅವರನ್ನು ಬಿಡಲಾಗುವುದಿಲ್ಲ. ಅವರು ಒಂದಷ್ಟು ದೂರ ನಿಂತುಕೊಂಡು ಭಯಭಕ್ತಿಯಿಂದ ನಮಸ್ಕರಿಸಬೇಕೆಂದು ಅಪೇಕ್ಷಿಸಲಾಗುತ್ತದೆ. ದೇವರೊಂದಿಗೆ ಸಾವಧಾನವಾಗಿರಲು ಹೇಳಿಕೊಡಲಾಗುತ್ತದೆ. ತಿಳಿದುಕೊಳ್ಳಿ ದೇವರೇ ಪ್ರೀತಿ ಎಂಬುದು ಮಕ್ಕಳಿಗೆ ಕಲಿಸಬೇಕಾದ ಮೊದಲನೆಯ ವಿಷಯ.

ನಿಮಗೆ ದೇವರನ್ನು ಆಲಂಗಿಸಿಕೊಳ್ಳಲು ಆಗದೆ ಇದ್ದರೆ, ಆಲಂಗಿಸುವುದಕ್ಕೆ ಬೇರೇನೂ ಉಳಿದಿಲ್ಲ, ಏಕೆಂದರೆ ದೇವರೇ ಸರ್ವಸ್ವ! ನೀವು ಮಕ್ಕಳಿಗೆ ದೇವರನ್ನು ಆಲಂಗಿಸಲು ಸಾಧ್ಯವಲ್ಲವೆಂದು ಹೇಳಿಕೊಟ್ಟಾಗ; ದೇವರು ಉಳಿದೆಲ್ಲದರಿಂದ ಭಿನ್ನವೆಂದು ನೀವು ಹೇಳಿಕೊಡುತ್ತಿದ್ದೀರ. ದೇವರನ್ನು ಎತ್ತರದಲ್ಲಿ ಕೂರಿಸುವುದರಿಂದ, ನಿಜವಾಗಿಯೂ ನೀವು ಇಡೀ ಅಸ್ತಿತ್ವದಿಂದ ಬೇರೆಯಾಗುತ್ತಿದ್ದೀರ. ನೀವು ಬಹಳಷ್ಟನ್ನು ಕಳೆದುಕೊಳ್ಳುತ್ತಿದ್ದೀರ!

ಸ್ವಲ್ಪ ಮಟ್ಟಿಗೆ ಸಾಮಾಜಿಕ ಬುದ್ಧಿವಂತಿಕೆಯನ್ನು (Social intelligence) ಬಳಸಿ, ಆವಶ್ಯಕವಾದಾಗ, ಗೌರವದ ಆಟವನ್ನು ಬುದ್ಧಿವಂತ ರೀತಿಯಲ್ಲಿ ಆಡಿ ಅಷ್ಟೆ. ಗಮನಿಸಿ: ಈ ಬಗೆಯ ಗೌರವವು ಗಾಢವಾದ ಅರಿವಿನೊಡನೆ ಮತ್ತು ಬುದ್ಧಿವಂತಿಕೆಯೊಡನೆ ಬರುವುದು. ಆದರೆ ಇದು ನಿಮ್ಮನ್ನು ನಿಮ್ಮ ಕೇಂದ್ರ ಸ್ಥಳದಿಂದ ವಿಚಲಿತರಾಗಿಸುವುದಿಲ್ಲ. ನೀವು ಪ್ರೀತಿ ಕಡಿಮೆಯಾಗುವಂತೆ ಮಾಡುವುದಿಲ್ಲ. ಅದು ಬುದ್ಧಿವಂತಿಕೆಯುಳ್ಳ ಕ್ರಿಯೆಯಾಗಿರುವುದು ಅಷ್ಟೆ.

ಒಂದು ಸಣ್ಣ ಕಥೆ:

ಒಬ್ಬ ತಾಯಿಯು ತನ್ನ ಮಗುವಿನೊಂದಿಗೆ ಸಾರ್ವಜನಿಕ ಸಮಾರಂಭಕ್ಕೆ ಹೋದಳು. ಹೇಗೋ ಏನೋ, ಅವಳು ತನ್ನ ಮಗುವು ಹೋದ ದಾರಿಯನ್ನು ಕಳೆದುಕೊಂಡು ಅವರಿಬ್ಬರೂ ಆ ಜನಸಮೂಹದಲ್ಲಿ ಬೇರೆಯಾದರು.

ಖಚಿತ ಪರಿಹಾರಗಳು

ತಾಯಿಯು ಬಹಳ ಗಾಬರಿಗೊಂಡು ಮಗುವನ್ನು ಎಲ್ಲೆಡೆ ಹುಡುಕತೊಡಗಿದಳು. ಇದ್ದಕ್ಕಿದ್ದಹಾಗೆ ಅವಳ ಹಿಂದೆ “ಮಾರಿಯಾ! ಮಾರಿಯಾ!” ಎಂದು ಕೂಗುತ್ತಿದ್ದ ಧ್ವನಿಯನ್ನು ಕೇಳಿದಳು. ಅವಳು ತಿರುಗಿ ನೋಡಿದಾಗ ಅವಳ ಮಗಳನ್ನು ನೋಡಿದಳು. ತಾಯಿಯು ಅವಳತ್ತ ಓಡಿ, ಅವಳನ್ನು ಅಪ್ಪಿಕೊಂಡು ಕೇಳಿದಳು, “ನನ್ನನ್ನೇಕೆ ನೀನು ಅಮ್ಮ ಎಂದು ಕರೆಯುವುದರ ಬದಲು ಮಾರಿಯಾ ಎಂದು ಕರೆಯುತ್ತಿದ್ದೆ?” ಮಗಳು “ಅದೇನೂ ಪ್ರಯೋಜನವಾಗುತ್ತಿರಲಿಲ್ಲ, ಏಕೆಂದರೆ ಇಲ್ಲಿ ಎಷ್ಟೊಂದು ತಾಯಂದಿರು ಇದ್ದಾರೆ!”

ಮಕ್ಕಳು ಅವರೊಳಗೆ ಕೇಂದ್ರೀಕೃತರಾಗಿರುತ್ತಾರೆ ಮತ್ತು ಅವರು ನಮಗಿಂತ ಇನ್ನು ಹೆಚ್ಚು ಸಜೀವವಾಗಿ ಮತ್ತು ಚುರುಕಾಗಿರುತ್ತಾರೆ. ಅವರ ಮುಗ್ಧತೆ, ಅವರ ಪ್ರೀತಿ, ಅವರ ದೇಹದ ಭಾಷೆ ಅವರು ಹೇಳಬೇಕಾದ್ದನ್ನು ತಿಳಿಸುತ್ತವೆ, ಅವರ ಮಾತುಗಳಲ್ಲ. ಆದ್ದರಿಂದಲೇ ಅವರೇನೇ ಹೇಳಲಿ ಏನೇ ಮಾಡಲಿ, ಅದು ಅವಮರ್ಯಾದೆಯನ್ನು ತೋರಿಸುವಂತಹದಾಗಿರುವುದಿಲ್ಲ ಮತ್ತದು ಸರಿಯೆನಿಸುತ್ತದೆ. ಒಮ್ಮೆ ಅವರ ಮನಸ್ಸು ಸಾಮಾಜಿಕ ಕಟ್ಟುಪಾಡಿಗೆ ಒಳಪಟ್ಟಾಗ, ಈ ಮುಗ್ಧತೆಯು ಮಾಯವಾಗುತ್ತದೆ; ಆಗ ಮಾತುಗಳಿಂದ ಮತ್ತು ತೋರಿಕೆಗಳಿಂದ ಅದನ್ನು ಭರ್ತಿಮಾಡಿಕೊಳ್ಳಬೇಕಾಗುತ್ತದೆ, ಏಕೆಂದರೆ ಹೇಗೆ ನಮಗೆ ಮುಗ್ಧತೆಯಿಂದ ಮತ್ತು ಸಂಪೂರ್ಣತೆಯಿಂದಿರಬಹುದೆಂದೇ ಮರೆತುಬಿಟ್ಟಿದ್ದೇವೆ.

ಯಾವಾಗ ಪ್ರೀತಿಯು ಕರ್ತವ್ಯವಾದಾಗ, ಅದು ಹೊರೆಯಾಗುತ್ತದೆ ಮತ್ತು ಅದು ಹೊರೆಯಾದಾಗ ನೀವು ಆಚರಿಸುತ್ತಿರುವುದಿಲ್ಲ ಒತ್ತಡದಲ್ಲಿರುತ್ತೀರ. ತಂದೆ ತಾಯಿಯರು ಮಕ್ಕಳಿಗೆ ಪ್ರೀತಿಸುವುದಕ್ಕಾಗಿ ಕಾರಣಗಳನ್ನು ಹೇಳಿಕೊಡುತ್ತಾರೆ. ಚಿಕ್ಕಂದಿನಿಂದಲೇ ಪ್ರೀತಿಯನ್ನು ಕಾರಣದೊಂದಿಗೆ ಹೇಳಿಕೊಡಲಾಗುತ್ತದೆ.

ಭೂಮಿಯನ್ನು ಪ್ರೀತಿಸಲು ಎಂದಾದರೂ ಅವರಿಗೆ ಹೇಳಿಕೊಡುತ್ತೇವೇನು, ಪ್ರಕೃತಿಯನ್ನು ಪ್ರೀತಿಸಲು ಹೇಳಿಕೊಡುತ್ತೇವೇನು? ಆದರೆ, ನಮ್ಮ ಸಂಬಂಧಿಕರನ್ನು ಪ್ರೀತಿಸಲು ಹೇಳಿಕೊಡುತ್ತೇವೆ. ನಮ್ಮನ್ನು ಪ್ರೀತಿಸಲು ಹೇಳಿಕೊಡುತ್ತೇವೆ. ಯಾವುದೋ ಒಂದು ರೀತಿಯಲ್ಲಿ ಅವರಿಗೆ ಪ್ರಯೋಜನಕ್ಕೆ ಬರಬಹುದಾದವರನ್ನೆಲ್ಲ ಪ್ರೀತಿಸಲು ಹೇಳಿಕೊಡುತ್ತೇವೆ.

ಪ್ರಕೃತಿಯನ್ನು ಆಲಂಗಿಸಲು ಅವರಿಗೆ ಹೇಳಿಕೊಟ್ಟರೆ ಅವರಲ್ಲಿ ನಿಜವಾದ ಪ್ರೀತಿಯ ಬೀಜವನ್ನು ನೆಡುತ್ತಿದ್ದೀರ. ನಾನು ಎಷ್ಟೋ ತಂದೆ ತಾಯಿಗಳನ್ನು ಗಮನಿಸಿದ್ದೇನೆ: ಅವರು ತಮ್ಮ ಮಕ್ಕಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಬಿಸಾಡಿ ಪ್ರಕೃತಿಯ ಸೌಂದರ್ಯವನ್ನು ಹಾಳು ಮಾಡಲು ಹೇಳಿಕೊಡುತ್ತಾರೆ. ಯಾವ ತಂದೆ ತಾಯಿಗಳು ಮಕ್ಕಳಿಗೆ ತಮ್ಮ ಕುಟುಂಬವನ್ನು ಪ್ರೀತಿಸಲು ಹೇಳಿಕೊಡುತ್ತಾರೋ, ಅವರೇ ಆ ಮಕ್ಕಳಿಗೆ ಪ್ರಕೃತಿಯನ್ನು ಹಾಳುಮಾಡಲು ಹೇಳಿಕೊಡುತ್ತಾರೆ. ನಿಮ್ಮಲ್ಲಿ ನಿಜವಾದ ಪ್ರೀತಿಯನ್ನು ಹೊಂದಿದರೆ, ಪ್ರಕೃತಿಯನ್ನು ದೂಷಿಸುವುದಿಲ್ಲ ಮತ್ತು ನಿಮ್ಮಲ್ಲಿ ನಿಜವಾದ ಪ್ರೀತಿ ಇದ್ದರೆ ಪ್ರಕೃತಿಯನ್ನು ಮತ್ತು ಜನರನ್ನು ಸಮಾನವಾಗಿ ಆಲಂಗಿಸುತ್ತೀರ.

ಗಮನಿಸಿ: ನೀವು ಸರಿಯಾದ ಬೀಜವನ್ನು ಬಿತ್ತಬೇಕು. ಆಗಲೇ ನಾವು ಅಪೇಕ್ಷಿಸಿದ ಗಿಡ ಬೆಳೆಯಲು ಸಾಧ್ಯ. ಮಕ್ಕಳಲ್ಲಿ ನೀವು ಸರಿಯಾದ ಬೀಜವನ್ನು ಬಿತ್ತಿ ಪ್ರೀತಿಯು ವಿಕಾಸವಾಗುವುದಕ್ಕೆ ಬೇಕಾದ ಸೂಕ್ತ ಪರಿಸ್ಥಿತಿಯನ್ನು ನೀಡಬೇಕು. ಈ ವಿಷಯದಲ್ಲೇ ಧ್ಯಾನವು ನೆರವಾಗುವುದು. ಧ್ಯಾನವು ಬೀಜವನ್ನು ಬಿತ್ತಲು, ಆ ಒಂದು ಬೆಳವಣಿಗೆ ಸಂಭವಿಸಲು ಸಹಕರಿಸುತ್ತದೆ. ಯಾವುದನ್ನಾದರೂ ಬಾಹ್ಯದಿಂದ ಹೇರಲು ಸಾಧ್ಯವಿಲ್ಲ. ಅದನ್ನು ಹೇರಿದ ತಕ್ಷಣವೇ, ಅದನ್ನು ಪ್ರತಿರೋಧದಿಂದ ಎದುರಿಸಲಾಗುತ್ತದೆ ಅಥವಾ ಅದನ್ನು ಒಂದು ಕರ್ತವ್ಯದ ಹಾಗೆ, ಹೊರೆಯ ಭಾವನೆಯಿಂದ ನಿರ್ವಹಿಸ ಲಾಗುವುದು.

ನಾವು ಯಾವುದನ್ನು 'ಪ್ರೀತಿ' ಎನ್ನುತ್ತೇವೋ, ಅದು ಕೇವಲ ಮಾನಸಿಕ ಗುಲಾಮಗಿರಿ ಅಷ್ಟೆ. ನೀವು ಒಬ್ಬ ವ್ಯಕ್ತಿಯನ್ನು ಪ್ರೀತಿಯ ಹೆಸರಿನಲ್ಲಿ ಗುಲಾಮರನ್ನಾಗಿಸುತ್ತೀರಾ, ಮತ್ತು ಆ ವ್ಯಕ್ತಿಯು ಒಂದು ನಿರ್ದಿಷ್ಟ ರೀತಿಯಲ್ಲೇ ವರ್ತಿಸಬೇಕೆಂಬ ಬಲವಂತವನ್ನು ಹೊಂದುತ್ತಾನೆ. ದೈಹಿಕ ಗುಲಾಮಗಿರಿಯಲ್ಲಿ ನೀವು ಗುಲಾಮರಾಗಿದ್ದೀರಾ ಎಂಬ ಅರಿವಾದರೂ ನಿಮಗೆ ಇರುತ್ತದೆ. ಆದರೆ, ಮಾನಸಿಕ ಗುಲಾಮಗಿರಿಯಲ್ಲಿ ಅದು ಎಷ್ಟು ಜಾಣ ಎಂದರೆ ನೀವು ಗುಲಾಮರಾಗಿದ್ದೀರೆಂದು ತಿಳಿಯಲು ಪಕ್ವವಾಗುವವರೆಗೂ ಅದರ ಅರಿವು ನಿಮಗಾಗಿರುವುದಿಲ್ಲ.

ನಮ್ಮೆಲ್ಲರಲ್ಲಿ ಇಷ್ಟೊಂದು ತಪ್ಪಿತಸ್ಥ ಭಾವನೆ ಏಕೆ ಇದೆಯೆಂದು ನೀವು ಭಾವಿಸುತ್ತೀರಾ? ಏಕೆಂದರೆ, ನಾವು ಯಾವುದನ್ನು ಪ್ರೀತಿ ಎನ್ನುತ್ತೇವೋ, ಅದು ತಪ್ಪಿತಸ್ಥ ಭಾವನೆ ಯೊಂದಿಗೆ ಬರುತ್ತದೆ. ಯಾವಾಗ ಪ್ರೀತಿಯು ಸಂಪೂರ್ಣತೆಯಿಂದಿರುತ್ತದೆಯೋ, ಯಾವಾಗ ಪ್ರೀತಿಯು ನಿಮ್ಮ ಜೀವಾತ್ಮದಿಂದ ಬಂದ ಪರಿಶುದ್ಧವಾದ ಚೈತನ್ಯವಾದಾಗ, ಅದು ತಪ್ಪಿತಸ್ಥಭಾವನೆಯನ್ನು ತರಲು ಎಂದೂ ಸಾಧ್ಯವಿಲ್ಲ. ನೀವು ತಪ್ಪಿತಸ್ಥರೆಂಬ ಭಾವನೆ ಉಂಟಾಗುವುದಕ್ಕೆ ಕಾರಣವೇನೆಂದರೆ, ನೀವು ಸಾಕಷ್ಟು ಪ್ರೀತಿಸಲಿಲ್ಲವೆಂದು ಭಾವಿಸುತ್ತೀರ ಮತ್ತು ಎಲ್ಲಿಯೋ ಏನೋ ಪ್ರೀತಿಯ ವಿಷಯದಲ್ಲಿ ಸೋತಿದ್ದೀರೆಂದು ಭಾವಿಸುತ್ತೀರ. ಮತ್ತು ಸಾಕಷ್ಟು ಪ್ರೀತಿಸಲು ಸಾಧ್ಯವಾಗದೆ ಇರುವುದಕ್ಕೆ ಕಾರಣವೇನು? ಕಾರಣ, ನಿಮಗೆ ಸಾಧಾರಣವಾದ ಪ್ರೀತಿಯನ್ನು ಮಾತ್ರ ಕಲಿಸಲಾಗುತ್ತದೆ, ಪರಿಪೂರ್ಣವಾದ ಪ್ರೀತಿಯನ್ನು ಎಂದೂ ಅಲ್ಲ.

ನಾನು ಹೇಳುತ್ತೇನೆ: ನೀವು ಪರಿಪೂರ್ಣವಾಗಿ ಪ್ರೀತಿಸಿದ್ದರೆ, ಯಾರಾದರೂ ಸತ್ತಾಗ, ನೀವು ದುಃಖಪಡುವುದಿಲ್ಲ, ತಪ್ಪಿತಸ್ಥ ಭಾವನೆಯನ್ನು ಹೊಂದುವುದಿಲ್ಲ. ದೈಹಿಕವಾಗಿ ದೂರವಾದ ಕಾರಣ, ನೀವು ದುಃಖವನ್ನು ಪಡಬಹುದೋ ಏನೋ, ಆದರೆ ಅವರು ಬದುಕಿದ್ದಾಗ ನೀವು ಏನನ್ನೋ ಕಳೆದುಕೊಂಡಿದ್ದೀರಿ ಎಂಬ ಭಾವನೆ ನಿಮಗೆಂದೂ ಉಂಟಾಗುವುದಿಲ್ಲ. ಪರಿಪೂರ್ಣವಾದ ಪ್ರೀತಿ ಬಂದಾಗ ಆ ವ್ಯಕ್ತಿಯ ಆಸೆ ಆಕಾಂಕ್ಷೆಗಳನ್ನೆಲ್ಲ ಪೂರೈಸಿರಬೇಕೆಂದು ನಾನು ಹೇಳುತ್ತಿಲ್ಲ. ನನ್ನ ಮಾತಿನ ಅರ್ಥವೇನೆಂದರೆ, ನೀವು ನಿಮ್ಮೊಳಗೆ ಕೇಂದ್ರೀಕೃತರಾಗಿರುವುದು ಮತ್ತು ಅವರಿಗೆ ಸಚೇತನಗೊಳಿಸುವ ಪ್ರೀತಿಯನ್ನು ಹೊರಸೂಸಿ, ಅವರನ್ನು ಅಸ್ತಿತ್ವದ ಒಂದು ಭಾಗವೆಂದು ಗೌರವ ತೋರಿಸಿರಬೇಕು.

ನೀವು ಈ ರೀತಿ ಇದ್ದಿದ್ದರೆ, ಇನ್ನಷ್ಟು ಹರ್ಷದಿಂದ ಅವರನ್ನು ಅನುಭವಿಸುತ್ತಿದ್ದಿರಿ ಮತ್ತು ಅವರು ತೀರಿಕೊಂಡಮೇಲೆ ನಿಮಗೆ ಸ್ವಲ್ಪವೂ ಕೂಡ ತಪ್ಪಿತಸ್ಥ ಭಾವನೆ ಯುಂಟಾಗುವುದಿಲ್ಲ. ತಪ್ಪಿತಸ್ಥ ಭಾವನೆಯು ನೀವು ಯಾವ ಭಾವನೆಗಳನ್ನು ಸಂಪೂರ್ಣವಾಗಿ ಅನುಭವಿಸಲಿಲ್ಲವೋ ಅಂತಹ ಹಲವು ಭಾವನೆಗಳು ಪದೇ ಪದೇ ನಿಮ್ಮನ್ನು ಕಾಡುವ ಪರಿಸ್ಥಿತಿಯಲ್ಲದೆ ಬೇರೇನೂ ಅಲ್ಲ. ತಪ್ಪಿತಸ್ಥ ಭಾವನೆಯು ನಿಮ್ಮ ಮಾಲಿಕನಾಗಲು ಎಂದೂ ಬಿಡಬೇಡಿ.

ನೀವು ಏನನ್ನು ಬಯಸುತ್ತೀರೋ ಅದನ್ನೆಲ್ಲಾ ಮಾಡಿ ನಂತರ ಅದರ ಬಗ್ಗೆ ತಪ್ಪಿತಸ್ಥ ಭಾವನೆಯನ್ನು ಭಾವಿಸಬೇಡಿ ಎಂದು ನಾನು ಹೇಳುತ್ತಿಲ್ಲ. ಅರ್ಥಮಾಡಿಕೊಳ್ಳಿ: ನೀವು

ಗಮನದ ಅಪೇಕ್ಷೆಯನ್ನು ಬಿಡುವುದು

ಪರಿಪೂರ್ಣತೆಯಿಂದ, ನಿಮ್ಮ ಕೇಂದ್ರ ಸ್ಥಳದಿಂದ, ಗಾಢವಾದ ಅರಿವಿನಿಂದ, ತಿಳಿಯುವಿಕೆಯಿಂದ ಜೀವಿಸಿದರೆ, ತಪ್ತಿತ್ತಸ್ಥ ಭಾವನೆಗೆ ಅವಕಾಶವೇ ಇರುವುದಿಲ್ಲ.

ಯಾವಾಗಲೂ ನಿಜವಾದ ಪ್ರೀತಿಯು ಯಾವುದೇ ಕಾತರವಿಲ್ಲದೆ ನೀಡುತ್ತದೆ, ಮತ್ತು ಅದಕ್ಕೆ ಕೇಳುವುದು ತಿಳಿದಿಲ್ಲ. ಅದಕ್ಕೆ ಯಾವ ವ್ಯಾಪಾರವೂ ತಿಳಿದಿಲ್ಲ. ಅದಕ್ಕೆ ನೀಡುವುದೊಂದೇ ತಿಳಿದಿದೆ. ಮತ್ತು ಅದು ಸೃಷ್ಟಿಸಲು ಎಂದೂ ಸಾಧ್ಯವಿಲ್ಲ. ಅದು ಈ ರೀತಿ ಇದೆ: ನೀವು ಒಂದು ಪ್ಲಾಸ್ಟಿಕ್‌ನಿಂದ ಗುಲಾಬಿ ಹೂವನ್ನು ರಚಿಸಬಹುದು. ಆದರೆ ಅದಕ್ಕೆ ನಿಜವಾದ ಗುಲಾಬಿ ಹೂವಿನಂಥ ಸುವಾಸನೆಯಿರುತ್ತದೆಯೇ? ಇಲ್ಲ! ಅದೇ ರೀತಿ, ನಿಜವಾದ ಪ್ರೀತಿಯನ್ನು ಸೃಷ್ಟಿಸಲು ಎಂದೂ ಸಾಧ್ಯವಿಲ್ಲ. ನಿಮ್ಮ ದೈನಂದಿನ ಜೀವನದಲ್ಲಿ ಅನುಭವಿಸುವ ಪ್ರೀತಿಯು ಸುವಾಸನೆಯಿಲ್ಲದ ಆ ಪ್ಲಾಸ್ಟಿಕ್ ಹೂವಿನಂತೆ. ಅದು ನಿಜ ಎಂದು ಕಾಣುತ್ತದೆ, ಆದರೆ ಅದಕ್ಕೆ ಸುವಾಸನೆಯೇ ಇರುವುದಿಲ್ಲ.

ನಿಜಾದ ಗುಲಾಬಿಯು ಬರುವುದಕ್ಕೆ ಸರಿಯಾದ ಮಣ್ಣು, ಬೇಕಾಗುವಷ್ಟು ನೀರು, ಇತ್ಯಾದಿಗಳಿರುವ ಸೂಕ್ತ ವಾತಾವರಣವನ್ನು ಸೃಷ್ಟಿಸಬೇಕು, ನಂತರ ಗುಲಾಬಿಯು ತಾನಾಗಿಯೇ ಸಂಭವಿಸುತ್ತದೆ. ಅದೇ ರೀತಿ, ನಿಜವಾದ ಪ್ರೀತಿಯು ಸಂಭವಿಸುವುದಕ್ಕೆ ನೀವು ನಿಮ್ಮೊಳಗೆ ಅರಿವನ್ನು, ಸ್ಪಷ್ಟತೆಯನ್ನು, ಗಾಢವಾದ ತಿಳುವಳಿಕೆಯನ್ನು ಸೃಷ್ಟಿಸಿಕೊಳ್ಳಿರಿ, ನಂತರ ನಿಜವಾದ ಪ್ರೀತಿಯು ನಿಮ್ಮೊಳಗಿಂದ ವಿಕಾಸವಾಗುತ್ತದೆ.

ಒಮ್ಮೆ ಒಂದು ಕಾಲೇಜಿನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಒಬ್ಬ ಬಾಲಕಿ ನನ್ನನ್ನು ಕೇಳಿದಳು, "ಸ್ವಾಮೀಜಿ ಪ್ರೀತಿಯಲ್ಲಿ ಸೋತುಹೋದ ಕಾರಣದಿಂದ ನೀವು ಸನ್ಯಾಸಿಯಾಗಿಬಿಟ್ಟಿದ್ದೀರೇನು?"

ಪ್ರೀತಿಯಲ್ಲಿ ಯಶಸ್ವಿಯಾದ ಕಾರಣದಿಂದ ನಾನು ಸನ್ಯಾಸಿಯಾದೆ ಎಂದು ನಾನು ಅವಳಿಗೆ ಹೇಳಿದೆ! ಪ್ರೀತಿಯಲ್ಲಿ ಸೋತವನು ದೇವದಾಸನಾಗುತ್ತಾನೇ ಹೊರತು ಸನ್ಯಾಸಿಯಲ್ಲ! ನೀವು ಇಡೀ ಜಗತ್ತನ್ನು ಪ್ರೀತಿಸಲು ಸಾಧ್ಯವಾದಾಗ ಮಾತ್ರ ಸನ್ಯಾಸಿಯಾಗಲು ಸಾಧ್ಯ. ಇಡೀ ಜಗತ್ತನ್ನು ಪ್ರೀತಿಸಲು ನಿಮಗೆ ಸಾಧ್ಯವಾದಾಗ ಅದೇ ನಿಜವಾದ ಪ್ರೀತಿ.

ನಿಜವಾದ ಪ್ರೀತಿಗೆ ಸಂಬಂಧಗಳ ತಿಳಿವಿಲ್ಲ. ಸಾಧಾರಣವಾದ ಪ್ರೀತಿಗೆ ಮಾತ್ರ ಸಂಬಂಧಗಳು ತಿಳಿದಿವೆ. ಸಾಧಾರಣವಾದ ಪ್ರೀತಿಯಲ್ಲಿ ನೀವು ನಿಮ್ಮ ತಂದೆಯು

ಖಚಿತ ಪರಿಹಾರಗಳು

ನಿಮಗೆ ಬೇಕಾದ್ದನ್ನು ನೀಡುವುದರಿಂದ ಅವರನ್ನು ಪ್ರೀತಿಸುತ್ತೀರ. ನಿಮ್ಮ ತಾಯಿಯನ್ನು ಪ್ರೀತಿಸುತ್ತೀರ, ಏಕೆಂದರೆ ಅವಳು ನಿಮ್ಮನ್ನು ನೋಡಿಕೊಳ್ಳುತ್ತಾಳೆ. ನಿಮ್ಮ ಗೆಳೆಯ ನಿಮಗೆ ಇಂದ್ರಿಯ ಸುಖವನ್ನು ನೀಡುವುದರಿಂದ ಅವನನ್ನು ಪ್ರೀತಿಸುತ್ತೀರ, ಸಾಧಾರಣವಾದ ಪ್ರೀತಿಗೆ ಹಲವಾರು ಕಾರಣಗಳಿವೆ.

ನಿಜವಾದ ಪ್ರೀತಿಯು ಹಾಗಲ್ಲ. ಅದು ಓ! ಇದು ನನ್ನ ತಂದೆ. ನಾನು ಅವರನ್ನು ಪ್ರೀತಿಸಬೇಕು... ಎಂದು ಹೇಳುವುದಿಲ್ಲ! ಎಲ್ಲರನ್ನೂ ಎಲ್ಲವನ್ನೂ ಪ್ರೀತಿಸುವುದು ಮಾತ್ರ ತಿಳಿದಿದೆ, ಅಷ್ಟೆ. ಸಾಧಾರಣ ಪ್ರೀತಿಯ ವಿಷಯದಲ್ಲಿ ಸೋಲು ಅಥವಾ ಯಶಸ್ಸು ಇದ್ದೇ ಇರುತ್ತದೆ. ನಿಜವಾದ ಪ್ರೀತಿಯ ವಿಷಯದಲ್ಲಿ ಸೋಲು ಅಥವಾ ಗೆಲುವು ಇರುವುದಿಲ್ಲ. ಆದರೆ ನಿಜವಾದ ಪ್ರೀತಿಯು ಇದೆ ಅಷ್ಟೆ. ಯಶಸ್ಸೆಂಬುದು ಅದನ್ನು ಹುಡುಕುವುದರಲ್ಲಿ ಇರುವುದು!

ಜೀವನದಲ್ಲಿ ಯಾವುದೂ ಸರಿಹೋಗಲಿಲ್ಲವೆಂದು, ಪ್ರೀತಿಯೆಂಬುದು ಅಂತ್ಯವಾದಾಗ ಸನ್ಯಾಸಿಯಾಗುವರೆಂದು ಜನರು ಭಾವಿಸುತ್ತಾರೆ. ಸನ್ಯಾಸಿಗಳನ್ನು ನಿರಾಶೆಯಿಂದ ಎಲ್ಲವನ್ನು ಪರಿತ್ಯಾಗ ಮಾಡುವಂಥವರೆಂದು ನೋಡಲಾಗುತ್ತದೆ. ಈ ರೀತಿ ಮಾತನಾಡುವವರ ಬಗ್ಗೆ ಯೋಚಿಸಿದಾಗ, ನನಗೆ ಬಹಳ ಬೇಸರವಾಗುತ್ತದೆ. ಅವರು ಒಂದು ಗಾಢವಾದ ಅಜ್ಞಾನದಲ್ಲಿದ್ದಾರೆ. ಮತ್ತೆವರು ಆ ಅಜ್ಞಾನ ಸ್ಥಿತಿಯಲ್ಲಿದ್ದುಕೊಂಡೇ ತಮ್ಮ ಅಭಿಪ್ರಾಯವನ್ನು ನೀಡುತ್ತಾರೆ. ‘ಸನ್ಯಾಸ’ ಎಂಬುದು ಅಂತಿಮ ವಿವಾಹ ದೈವದೊಂದಿಗೆ ದೈವತ್ವದೊಂದಿಗೆ ವಿವಾಹ!

ನಿಜವಾದ ಸನ್ಯಾಸಿಯು ಎಷ್ಟು ಪ್ರೀತಿಸುವನು ಮತ್ತು ಕನಿಕರವುಳ್ಳವನೆಂದರೆ, ಅವನು ನಡೆಯುವ ಜಾಗದಲ್ಲಿ ಹುಲ್ಲು ನಾಶವಾಗುವುದಿಲ್ಲ ಎಂದು ಹೇಳಲಾಗುತ್ತದೆ! ಇದೇನೂ ಕಥೆಯಲ್ಲ, ಇದು ನಿಜ. ಯಾರು ಪ್ರಪಂಚಕ್ಕೆ ಅನುಕಂಪ ಮತ್ತು ಪ್ರೀತಿಯನ್ನು ತೋರಿಸುತ್ತಾನೋ ಅವನು ನಿಜವಾದ ಸನ್ಯಾಸಿ. ಪ್ರಾರ್ಥನೆಯೇ ಪ್ರೀತಿಯೆಂದು ಪ್ರೀತಿಯೇ ಪ್ರಾರ್ಥನೆಯೆಂದು ಅರಿತವನೇ ನಿಜವಾದ ಸನ್ಯಾಸಿ.

ನೀವು ನಿಜವಾದ ಪ್ರೀತಿಯನ್ನು ಕಂಡುಕೊಂಡಾಗ, ನಿಮ್ಮ ಪ್ರಾರ್ಥನೆಯು ಅದರ ಅಭಿವ್ಯಕ್ತತೆ ಆಗಿರುತ್ತದೆ ಅಷ್ಟೆ. ಮೀರಾ ಭಜನೆಗಳೇನು? ಅವು ಮೀರಾ ಎಂಬ ಜ್ಞಾನೋದಯ ಹೊಂದಿದ ಒಬ್ಬ ಭಾರತೀಯ ಮಹಿಳೆಯ ಪ್ರೀತಿಯ ಅಭಿವ್ಯಕ್ತತೆ. ಅವಳು ಅಸ್ತಿತ್ವದೊಂದಿಗೆ ಕಂಪಿಸಿ, ತನ್ನ ಅಸ್ತಿತ್ವದಿಂದ ಹೊರ ಸುರಿಸಿದಳು.

ಹಾಗಾಗಿಯೇ ಇಂದಿಗೂ ಕೂಡಾ ಮೀರಾ ಭಜನೆಗಳು ಪ್ರಸಿದ್ಧವಾಗಿವೆ. ಅವುಗಳಲ್ಲಿದ್ದ ಚೈತನ್ಯವು ಮಾಸಿ ಹೋಗುವುದಿಲ್ಲ. ಏಕೆಂದರೆ, ಅದು ವಿಶ್ವ ಸಾಧಾರಣವಾದ ಪ್ರೀತಿಯನ್ನು ವರ್ಷಾನುಕಾಲದಲ್ಲಿ ಎಷ್ಟೊಂದು ಜನರಿಂದ ಅನುಭವಿಸಲು ಸಾಧ್ಯವಿಲ್ಲ. ಶುದ್ಧವಾದ ಪ್ರೀತಿಗೆ ಮಾತ್ರ ಇಂತಹ ಚೈತನ್ಯವನ್ನು ಪಸರಿಸಲು ಸಾಧ್ಯ.

ಮತ್ತು ಮೀರಳಿಗೆ, ಅವಳ ಭಜನೆಗಳು ಅವಳ ಪ್ರಾರ್ಥನೆಯಾಗಿತ್ತು. ನೀವು ನಿಜವಾದ ಪ್ರೀತಿಯನ್ನು ಕಂಡುಕೊಂಡಾಗ, ಎರಡನೆಯ ಮಾತೇ ಇಲ್ಲ. ಪ್ರಾರ್ಥನೆಯೇ ಪ್ರೀತಿಯಾಗುವುದು ಮತ್ತು ಪರಿಶುದ್ಧವಾದ ಪ್ರೀತಿಗೆ ಕೇಳುವುದು ತಿಳಿದಿಲ್ಲ. ಒಂದು ಸಂಪೂರ್ಣತೆಯಿಂದ ಹರಿಯುವುದೊಂದೇ ತಿಳಿದಿದೆ. ನೀವು ನಮ್ಮ ಪ್ರಾರ್ಥನೆಯಲ್ಲಿ ಕೇಳುವುದನ್ನು ನಿಲ್ಲಿಸಿದಾಗ ನೀವು ನಿಜವಾದ ಪ್ರೀತಿಯನ್ನು ಕಂಡುಕೊಂಡಿದ್ದೀರ.

ನಿಮಗೆ ತಿಳಿದಿರುವಂತಹ ಸಾಧಾರಣವಾದ ಪ್ರೀತಿಯು ಕೇವಲ (infatuation) ಮೋಹ; ನಿಮ್ಮ ಪೃಷ್ಠಿಕಾರಕ ಸತ್ವಗಳ ಪೀಡನೆ (Hormonal torture) ನಿಮ್ಮ ಹಾರ್ಮೋನ್‌ಗಳು ನಿಮ್ಮನ್ನು ಸುಮ್ಮನೆ ನಿಮ್ಮ ಮನಸ್ಸಿನಿಂದ ಹೊರಕ್ಕೆ ತಳ್ಳುತ್ತಿವೆ ಅಷ್ಟೆ. ನಿಮ್ಮ ಮಾನಸಿಕ ಪ್ರತಿಬಿಂಬವನ್ನು ತೃಪ್ತಿಗೊಳಿಸಲು, ನಿಮಗೆ ಮಾನಸಿಕ ಆಧಾರವನ್ನು ನೀಡುವಂಥ ಒಬ್ಬ ವ್ಯಕ್ತಿಯ ಅವಶ್ಯಕತೆ ಇದೆ. ಒಂದೆರಡು ನಿಮಿಷಗಳ ಕಾಲ ನಿಮಗೆ ಆಧಾರವನ್ನು ನೀಡುವ ಭಜದ ಅಗತ್ಯವಿದೆ.

ನಿಮ್ಮ ಬೇಕುಗಳನ್ನು ಪೂರೈಸಲು ಒಬ್ಬ ವ್ಯಕ್ತಿಯ ಅಗತ್ಯವಿದೆ. ನೀವು ಮಂಕಾದಾಗ, ನಿಮಗೆ ಉತ್ಸಾಹವನ್ನು ತುಂಬಲು ಯಾರೊಬ್ಬರ ಅಗತ್ಯವಿದೆ. ನಿಮ್ಮ ಬಗ್ಗೆ ಕನಿಕರಪಡುವ ಮತ್ತು ನಿಮ್ಮ ಚಿಂತೆಗಳನ್ನು ದೃಢಪಡಿಸುವ ಯಾರೊಬ್ಬರ ಅಗತ್ಯವಿದೆ. ಇದನ್ನೇ ನೀವು ಪ್ರೀತಿಯೆಂದು ಕರೆಯುತ್ತೀರ. ಪರಿಶುದ್ಧವಾದ ಪ್ರೀತಿಯು ಆಕಾರಗಳನ್ನು ಮತ್ತು ಹೆಸರುಗಳನ್ನು ಮೀರಿ ಇದೆ, ಮನಸ್ಸು ಮತ್ತು ದೇಹವನ್ನು ಮೀರಿ/ ದಾಟಿ ಇದೆ. ಇವುಗಳೆಲ್ಲವನ್ನು ದಾಟಿ ಹೋಗಿ ಇಡೀ ಜಗತ್ತನ್ನೇ ಪ್ರೀತಿಸಲು ಸಾಧ್ಯವಾಗುತ್ತದೆಯೋ, ಅವನು ಮಾತ್ರ ಸನ್ಯಾಸಿಯಾಗಲು ಸಾಧ್ಯ, ಒಬ್ಬ 'ವಿವೇಕಾನಂದ'ನಾಗಲು ಸಾಧ್ಯ.

ವಿವೇಕಾನಂದರ ಜೀವನದಿಂದ ಒಂದು ಸಣ್ಣ ಕಥೆ:

ಒಂದು ರಾತ್ರಿ ವಿವೇಕಾನಂದರು ಎರಡು ಘಂಟೆಗೆ ಎದ್ದು ತಮ್ಮ ಶಿಷ್ಯರನ್ನು ಎಬ್ಬಿಸಿದರು. ಅಲ್ಲಿ ಏನು ಆಗುತ್ತಿದೆ ಎಂದು ತಿಳಿದುಕೊಳ್ಳಲು ಅವರ ಶಿಷ್ಯರು ಕುತೂಹಲರಾಗಿದ್ದರು. ಆಗ ವಿವೇಕಾನಂದರು, ತಮಗೆ ಬಹಳ ನೋವು ಉಂಟಾಗುತ್ತಿದೆ ಎಂದು ಹೇಳಿ, ಜಗತ್ತಿನ ಯಾವುದೋ ಒಂದು ಭಾಗದಲ್ಲಿ ಪ್ರಾಕೃತಿಕ ದುರ್ಘಟನೆಯು (natural calamity) ಸಂಭವಿಸುತ್ತಿದ್ದದರಿಂದ ಅವರಿಗೆ ನೋವುಂಟಾಯಿತೆಂದು ಹೇಳಿದರು.

ಮರುದಿನ ಬೆಳಿಗ್ಗೆ ದಿನಪತ್ರಿಕೆಗಳಲ್ಲಿ ಕ್ಯೂಬಾ (Cuba) ದೇಶದಲ್ಲಿ ಒಂದು ಘೋರವಾದ ಭೂಕಂಪದಿಂದ ಹಲವರು ಮರಣ ಹೊಂದಿದರೆಂಬ ಸುದ್ದಿಯು ಪ್ರಕಟಣೆಯಾಗಿತ್ತು.

ವಿವೇಕಾನಂದರು ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಸಾವಿರ ಮೈಲಿಗಳಾಚೆ ಸಂಭವಿಸಿದ ದುರ್ಘಟನೆಗೆ ಸೂಕ್ಷ್ಮರಾಗಿದ್ದರು! ಸಾಮಾನ್ಯ ಮನುಷ್ಯನಿಗೆ ಇಷ್ಟು ಸೂಕ್ಷ್ಮವಾಗಿರಲು ಸಾಧ್ಯವೇ? ನಮ್ಮ ಪಕ್ಕದ ಮನೆಯವರಿಗೆ ಕಾಯಿಲೆ ಬಂದರೆ ಅದರಿಂದ ನಮ್ಮ ಮೇಲೆ ಯಾವ ಪರಿಣಾಮವೂ ಇರುವುದಿಲ್ಲ.

ಒಂದು ಸಣ್ಣ ಕಥೆ:

ಒಬ್ಬನು ತನ್ನ ಕುಟುಂಬದ ವೈದ್ಯರಿಗೆ ಫೋನ್ಮಾಡಿ, “ವೈದ್ಯರೇ, ನೀವು ನಮ್ಮ ಮನೆಗೆ ಬಂದು ನನ್ನ ಹೆಂಡತಿಯನ್ನು ಸಂಪೂರ್ಣವಾಗಿ ಪರೀಕ್ಷಿಸಬೇಕೆಂದು ನನಗೆ ಎನಿಸುತ್ತದೆ.” ವೈದ್ಯರು ಕೇಳಿದರು “ಏಕೆ? ಅವಳು ಕ್ಷೇಮವಿಲ್ಲವೇ?”

ಆ ಮನುಷ್ಯನು ಉತ್ತರಿಸಿದನು “ನನಗೇನೋ ಹಾಗೆ ಎನಿಸುತ್ತದೆ ವೈದ್ಯರೇ. ನಿನ್ನೆ ಅವಳು ಮಾಮೂಲಿನಂತೆ ಎದ್ದು, ಸ್ನಾನಮಾಡಿ, ಅಡುಗೆ ತಯಾರಿಸಿ, ಮಕ್ಕಳನ್ನು ಶಾಲೆಗೆ ಕಳುಹಿಸಿ, ಮನೆಯ ಕೆಲಸ ಮಾಡುವವಳು ಬಂದಿರಲಿಲ್ಲವೆಂದು ತಾನೇ ಮನೆಯನ್ನು ಸ್ವಚ್ಛಮಾಡಿ, ನಮ್ಮ ಬಟ್ಟೆಗಳನ್ನು ಒಗೆದು, ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದು, ಅವರ ಓದಿನ ಕಡೆ ಸ್ವಲ್ಪ ಸಮಯ ಕೊಟ್ಟು, ನಂತರ ಮಲಗಿದಳು. ಸುಮಾರು ಅರ್ಧರಾತ್ರಿಯಲ್ಲಿ ಅವಳು ತನಗೆ ಆಯಾಸವೆಂದು ಒದ್ದಾಡುತ್ತಿದ್ದಳು. ಹಾಗಾಗಿ ಅವಳ ಆರೋಗ್ಯದ ಸಂಪೂರ್ಣ ಪರೀಕ್ಷೆ ಅಗತ್ಯವಿದೆಯೋ ಏನೋ?’’

(ನಗು!)

ಈದಿನ ನಾವು ಎಷ್ಟು ಸೂಕ್ಷ್ಮತೆಯಿಲ್ಲದವರಾಗಿಬಿಟ್ಟಿದ್ದೇವೆ! ದಿನದ ಇಪ್ಪತ್ನಾಲ್ಕು ಗಂಟೆ, ವರ್ಷದ 365 ದಿನಗಳ ಕಾಲ ನಮ್ಮೊಂದಿಗೆ ಇರುವವರ ಜೊತೆ ನಮಗೆ ಸಂಪರ್ಕ ಹೊಂದಲು ಸಾಧ್ಯವಾಗುತ್ತಿಲ್ಲ. ನಾವು ಇನ್ನಷ್ಟು ಸೂಕ್ಷ್ಮತೆಯಿಂದ ಚುರುಕಾಗಿರಬೇಕು. ನಿಮ್ಮ ಜೀವಾತ್ಮವು ಪ್ರೀತಿಯಾದಾಗ, ಇದು ತಾನಾಗಿಯೇ ಸಂಭವಿಸುವುದು. ನಿಮಗೆ ಯಾರೂ ಏನನ್ನೂ ಹೇಳಬೇಕಾಗಿಲ್ಲ; ನೀವು ಹಾಗೆಯೇ ಅವರನ್ನು ಅರ್ಥಮಾಡಿಕೊಂಡು ಅವರಿಗೆ ಸಹಾಯ ಮಾಡಬಹುದು. ಇದು ನಿಮಗೆ ಬಹಳ ಸಹಜವಾದ ವಿಷಯವಾಗುತ್ತದೆ.

ಆದರೆ. ಕೆಲವು ಜನರು ಗಮನಕ್ಕಾಗಿ ಹಂಬಲಿಸುತ್ತಾರೆ, ಇದಕ್ಕಾಗಿ ತಾವು ಅಸ್ವಸ್ಥರೆಂದು ನಟಿಸುತ್ತಾರೆ. ಇಂಥವರಿಗೆ ಏನನ್ನೂ ಮಾಡುವುದು ಬೇಕಿಲ್ಲ. ನಾನು ಮಾತನಾಡುತ್ತಿರುವ ಸೂಕ್ಷ್ಮತೆಯೇನೆಂದರೆ, ಅಸ್ತಿತ್ವದೊಂದಿಗೆ ನೀವು ಬೆಳೆಸಿಕೊಳ್ಳಬೇಕಾಗಿರುವಂಥ ಒಂದು ಗಾಢವಾದ ಸಂಪರ್ಕ, ಯಾವ ಕಾರಣದಿಂದ ನೀವು ಸಾಮುದಾಯಿಕ ಜಾಗ್ರತಾವಸ್ಥೆಗೆ (collective consciousness) ಸೂಕ್ಷ್ಮರಾಗುತ್ತೀರೋ.

ವಿವೇಕಾನಂದರಲ್ಲಿ ಸಂಭವಿಸಿದ್ದನ್ನು ಅನುಭೂತಿ ಶಕ್ತಿ (empathy) ಎಂದು ಕರೆಯುತ್ತೇವೆ. ಗಮನಿಸಿ, ಅದು ಅನುಭೂತಿ ಶಕ್ತಿ, ಸಹಾನುಭೂತಿಯಲ್ಲ (sympa-thy). ಸಹಾನುಭೂತಿ ಎಂಬುದು ಮೇಲ್ಮೀಯ ಪದ. ನಾವೆಲ್ಲರೂ ಸಹಾನುಭೂತಿ ಪಡುವುದಕ್ಕೆ ಸಮರ್ಥರಾಗಿದ್ದೇವೆ. ಯಾರಾದರೂ ನಿಮಗೆ ಅವರ ಕಷ್ಟಗಳನ್ನು ಹೇಳಿಕೊಂಡಾಗ, ನೀವು ಅವರಿಗೆ ಅವರ ಕಷ್ಟದ ಅನುಭವವನ್ನು ದೃಢಪಡಿಸುತ್ತೀರ; ಇದು ಸಹಾನುಭೂತಿ! ಯಾರಾದರೂ ನಿಮಗೆ ತಮ್ಮ ಗಂಡನಿಗೆ ಕಾಯಿಲೆ ದುಃಖವಾಗಿರಬೇಕು, ಏನೂ ಚಿಂತೆ ಮಾಡಬೇಡಿ, ಎಲ್ಲವೂ ಸರಿಹೋಗುತ್ತದೆ.’’ ಸಹಾನುಭೂತಿ ಹೆಸರಿನಲ್ಲಿ ನಾವು ಅವರ ಕಷ್ಟವನ್ನು ದೃಢಪಡಿಸುತ್ತೇವೆ ಮತ್ತು ಅದಕ್ಕಾಗಿ ಅವರು ನಾವು ಅವರ ಮೇಲೆ ಎಷ್ಟೊಂದು ಕಾಳಜಿ ವಹಿಸುತ್ತೇವೆ ಎಂದು ಹೇಳಿ ನಮ್ಮನ್ನು ಪ್ರೀತಿಸುತ್ತಾರೆ.

ವಾಸ್ತವದಲ್ಲಿ ಅವರು ಬಹಳ ಕಷ್ಟವನ್ನು ಅನುಭವಿಸುತ್ತಿದ್ದಾರೆಂದು ನಾವು ಹೇಳಿದಾಗ, ಅವರಿಗೆ ಹಿತವಾಗುತ್ತದೆ; ಅದು ಸೂಕ್ಷ್ಮವಾಗಿ ಅವರ ಅಹಂಕಾರವನ್ನು ವರ್ಧಿಸುತ್ತದೆ. ಅದಕ್ಕಾಗಿ ಅವರು ನಮ್ಮನ್ನು ಪ್ರೀತಿಸುತ್ತಾರೆ. ಅವರು ಎಷ್ಟೊಂದು ದೊಡ್ಡ ದೊಡ್ಡ ಚಿಂತೆಗಳನ್ನು ನಿಭಾಯಿಸುತ್ತಿದ್ದಾರೆಂದು ನಾವು ಒಪ್ಪಿಕೊಳ್ಳುವುದರಿಂದ ಅವರಿಗೆ ಹಿತವಾಗುತ್ತದೆ. ಇದನ್ನು ಸಮಾಜವು ಅನುಕಂಪ ಎಂದು ಕರೆಯುತ್ತದೆ.

ಗುರುಗಳು ಅನುಭವಿಸುವುದು ಕೇವಲ ಅನುಭೂತಿ; ಸಹಾನುಭೂತಿ ಎಂದೂ ಅಲ್ಲ. ಅನುಭೂತಿ ಎಂಬುದು ನೀವು ಇನ್ನೊಬ್ಬರ ನೊಂದುವಿಕೆಯನ್ನು ನಿಮ್ಮ ಸ್ವಂತ ಜೀವಾತ್ಮದಲ್ಲಿ ಅನುಭವಿಸಿದಾಗ; ಒಬ್ಬ ವ್ಯಕ್ತಿಯು ತನ್ನ ಕಷ್ಟಗಳನ್ನು ಹೇಳಿಕೊಳ್ಳಬೇಕಾಗಿಲ್ಲ, ನಿಮಗೆ ಅದು ಹಾಗೆಯೇ ತಿಳಿಯುತ್ತದೆ, ಏಕೆಂದರೆ ನಿಮ್ಮಲ್ಲಿರುವ ಅಸ್ತಿತ್ವ ಚೈತನ್ಯವು ಅದನ್ನು ಅನುಭವಿಸುತ್ತದೆ.

ಗುರುಗಳು ನಿಮ್ಮೊಂದಿಗೆ ಒಂದಾಗಿರುತ್ತಾರೆ, ಏಕೆಂದರೆ ಅವರು ವಿಶ್ವಶಕ್ತಿಯೊಂದಿಗೆ ಒಂದಾಗಿರುತ್ತಾರೆ, ಮತ್ತು ನೀವು ವಿಶ್ವಶಕ್ತಿಯ ಒಂದು ಭಾಗವಾಗಿದ್ದೀರ; ಕೇವಲ ನೀವು ಅವರನ್ನು ಭಿನ್ನವೆಂದು ನೋಡುತ್ತೀರ ಮತ್ತು ಅವರು ನಿಮ್ಮೊಂದಿಗೆ ಒಂದಾಗಿರುವ ಕಾರಣದಿಂದ, ಅವರು ನಿಮ್ಮ ನೋವನ್ನು ತಮ್ಮ ಹೃದಯದಲ್ಲಿ ಅನುಭವಿಸುತ್ತಾರೆ. ಅವರಿಗೆ ಬೇರೆ ದಾರಿ ತಿಳಿದಿಲ್ಲ, ಮತ್ತು ಅದರ ಜೊತೆ ಬರುವ ನೊಂದುವಿಕೆಯನ್ನೂ ಕೂಡ ಸ್ವೀಕರಿಸುವ ಸಾಮರ್ಥ್ಯವು ಅವರಿಗೆ ಇದೆ.

ಸಾಮಾನ್ಯವಾದ ಪ್ರೀತಿಯು ಮಕ್ಕಳಿಗೆ ಜನ್ಮವನ್ನಿತ್ತರೆ, ನಿಜವಾದ ಪ್ರೀತಿಯು ನಿಮ್ಮ ಸ್ವಂತ, ನೈಜತನಕ್ಕೆ ಜನ್ಮ ನೀಡುತ್ತದೆ. ನೀವು ನಿಮ್ಮ ತನಕ್ಕೆ ಒಂದು ಹೊಸ ಹುಟ್ಟನ್ನು ನೀಡುತ್ತೀರ - ಒಂದು ಪರಿವರ್ತನೆ. ಕಂಬಳಿ ಹುಳವು ಹೇಗೆ ಚಿಟ್ಟೆಯಾಗುತ್ತದೆಯೋ, ಅದೇರೀತಿ ಮಾನವನು ಆತ್ಮವನ್ನು ಅರಿತವನಾಗುತ್ತಾನೆ. ನಿಮ್ಮಲ್ಲೇ ಸುಪ್ತಾವಸ್ಥೆಯಲ್ಲಿದ್ದ ಸಚೇತನಗೊಳಿಸುವಂಥ ಪ್ರೀತಿಗೆ ನೀವು ಎಚ್ಚರಗೊಳ್ಳುತ್ತೀರ.

ವಿವೇಕಾನಂದರು, 'ಏಳಿ! ಎಚ್ಚರವಾಗಿರಿ! ಎಂದು ನುಡಿಯುವಾಗ, ಅದರ ಅರ್ಥ ನಾವು ನಿದ್ರಿಸುತ್ತಿದ್ದೇವಂದೇ? ಖಂಡಿತವಾಗಿ! ನಾವೂ ಸುಪ್ತರಾಗಿದ್ದೇವೆ ಎಂದು ತಿಳಿಯದೆಯೇ ನಿದ್ರಿಸುತ್ತಿದ್ದೇವೆ ಮತ್ತು ನಿದ್ರಿಸುತ್ತಿರುವಾಗಲೇ ನಮ್ಮ ತೀರ್ಪುಗಳನ್ನು ನೀಡುತ್ತೇವೆ. ನಿದ್ರಿಸುತ್ತಿರುವಾಗಲೇ ಟೀಕಿಸುತ್ತೇವೆ. ನಿದ್ರಿಸುತ್ತಿರುವಾಗಲೇ ಖಂಡಿಸುತ್ತೇವೆ. ನಾವು ಎಚ್ಚರವಾಗಿದ್ದೇವೆ ಎಂದು ಭಾವಿಸಿ ಟೀಕಿಸುತ್ತೇವೆ. ನಮಗೆ ಎಲ್ಲದರಲ್ಲೂ, ಪ್ರೀತಿಯ ವಿಷಯದಲ್ಲೂ ಎಲ್ಲವೂ ತಿಳಿದಿದೆ ಎಂದು ಭಾವಿಸುತ್ತೇವೆ. ನಮಗೆ ತಿಳಿದಿರುವ ‘ಪ್ರೀತಿ’ಯೇ ನಿಜವಾದ ಪ್ರೀತಿ ಎಂದು ಭಾವಿಸುತ್ತೇವೆ.

ಒಂದು ಸಣ್ಣ ಕಥೆ:

ಒಬ್ಬ ಮನುಷ್ಯನು ತನ್ನ ವಯಸ್ಸಾಗಿದ್ದ ಶ್ರೀಮಂತ ದೊಡ್ಡಮ್ಮನ ಭೇಟಿಗೆ ಹಲವು ಬಾರಿ ಹೋಗುತ್ತಿದ್ದನು. ಅವನಿಗೆ ಅವಳ ಐಶ್ವರ್ಯದ ಮೇಲೆ ಒಂದು ಕಣ್ಣಿತ್ತು ಮತ್ತು ಅವಳಿಂದ ಮೆಚ್ಚಿಗೆ ಪಡೆಯಲು ಏನೆಲ್ಲಾ ಮಾಡುತ್ತಿದ್ದನು.

ಅವಳ ಬಳಿ ಎರಡು ಬೆಕ್ಕುಗಳಿದ್ದವು, ಅವನ್ನು ಬಹಳ ಪ್ರೀತಿಸುತ್ತಿದ್ದಳು. ಈ ವಿಷಯ ಆ ಮನುಷ್ಯನಿಗೆ ತಿಳಿದಿತ್ತು ಮತ್ತು ಅವಳ ಮನಸ್ಸನ್ನು ಗೆಲ್ಲಲು ಆ ಬೆಕ್ಕುಗಳನ್ನು ನಿಷ್ಠೆಯಿಂದ ನೋಡಿಕೊಳ್ಳುತ್ತಿದ್ದನು. ಅವಳು ತನ್ನ ಮೃತ್ಯುಪತ್ರ (will) ವನ್ನು ಬರೆಯುವಾಗ ಅವನಿಗೂ ಒಂದು ಪಾಲನ್ನು ಬರೆಯಬೇಕೆಂಬುದೇ ಅವನ ಗುಪ್ತ ಆಸೆಯಾಗಿತ್ತು.

ಅವನು ಪ್ರತಿದಿನ ಬರುತ್ತಿದ್ದ, ಬೆಕ್ಕುಗಳಿಗೆ ಹಾಲನ್ನು ಕುಡಿಸಿ, ಅವುಗಳ ಜೊತೆ ಆಟ ವಾಡಿ, ಬಹಳ ಸಮಯ ಅಲ್ಲಿಯೇ ಕಳೆದು ನಂತರ ಹಿಂತಿರುಗುತ್ತಿದ್ದ.

ಅವನು ಬೆಕ್ಕುಗಳನ್ನು ನೋಡಿಕೊಳ್ಳುತ್ತಿದ್ದ ರೀತಿಯನ್ನು ನೋಡಿ ಆ ಮುದುಕಿಗೆ ಬಹಳ ಮೆಚ್ಚಿಗೆಯಾಯಿತು. ಅದೆಲ್ಲವನ್ನೂ ನೋಡಿದಾಗ ಅವಳಿಗೆ ಬಹಳ ಸಂತೋಷ ವಾಯಿತು. ಕೂಡಲೇ ಅವಳು ಪ್ರಾಣಬಿಟ್ಟಳು. ಅವನಿಗೆ ಆ ಎರಡು ಬೆಕ್ಕುಗಳನ್ನು ಬಿಟ್ಟಳು.

(ನಗೆ!)

ಆ ಬೆಕ್ಕುಗಳನ್ನು ಕಂಡರೆ ಅವನಿಗೆ ಅದೆಷ್ಟು ಪ್ರೀತಿ ಎಂದು ಅವಳು ನೋಡಿದ್ದಳು, ಹಾಗಾಗಿ ಅವನಿಗೆ ಆ ಬೆಕ್ಕುಗಳನ್ನು ಬಿಟ್ಟು ಪ್ರಾಣಬಿಟ್ಟಳು. ಆ ಮನುಷ್ಯನಿಗೆ ಆದ ನಿರಾಶೆಯನ್ನು ನೀವು ಊಹಿಸಿಕೊಳ್ಳಬಹುದು. ಅಷ್ಟೊಂದು ಮಾಸಗಳ ಪ್ರೀತಿಯ ನಟನೆ ಅವನಿಗೆ ಅದೆಷ್ಟು ದಾರುಣವಾಗಿರಬೇಕು! ಅವನಿಗೆ ವಂಚಿತವಾದ ಭಾವನೆಯುಂಟಾಗಿರಬೇಕು ಅವನು ಕೋಪ ಮತ್ತು ನಿರಾಶೆಯಿಂದ ದಹಿಸಿರಬೇಕು!

ಸಾಮಾನ್ಯವಾದ ಪ್ರೀತಿಯಲ್ಲಿ ನೀವು ವಂಚಿತರಾಗಬಹುದಾದ ಎಲ್ಲ ಸಾಧ್ಯತೆಯಿದೆ. ಜನರು ಐಶ್ವರ್ಯಕ್ಕಾಗಿ, ತಮಗೆ ದೊರಕಬಹುದಾದ ಸಹಾಯಕ್ಕಾಗಿ, ತಾವು ತೊಂದರೆಯಲ್ಲಿದ್ದಾಗ ದೊರಕುವ ಬುದ್ದಿಮಾತಿಗಾಗಿ, ಇನ್ನು ಏನೆಲ್ಲಾ ಕಾರಣಗಳಿಗಾಗಿ ಜನರು ಪ್ರೀತಿಸುತ್ತಾರೆ. ಯಾವಾಗಲೂ ಪ್ರೀತಿಯು ಉದ್ದೇಶಪೂರಕವಾಗಿರುತ್ತದೆ. ಪ್ರೀತಿಯು ಯಾವಾಗಲೂ ಅಪೇಕ್ಷೆಗಳನ್ನೊಡಗೊಂಡಿರುತ್ತದೆ.

ಆದರೆ, ಜನರು ಇದನ್ನು ಸತ್ಯಾಂಶವೆಂದು ಎಂದೂ ಒಪ್ಪಿಕೊಳ್ಳುವುದಿಲ್ಲ. ಅವರು ತಮ್ಮ ಸ್ವಂತ ಸಾಮಾನ್ಯವಾದ ಪ್ರೀತಿಯಿಂದಲೇ ಮೋಸಹೋಗಿದ್ದಾರೆ. ಪ್ರೀತಿಯು ಆ ರೀತಿಯೇ ಸಂಭವಿಸುತ್ತದೆ ಎಂದು ಅವರು ಭಾವಿಸುತ್ತಾರೆ. ಮತ್ತು ಅವರು ಎಷ್ಟು ಪ್ರೀತಿಸುವವರಾಗಿದ್ದಾರೆ ಎಂದು ಮತ್ತು ನಾನು ಅವರ ಪ್ರೀತಿಯನ್ನು ಕೆಳಮಟ್ಟಕ್ಕೆ ತರುತ್ತಿದ್ದೇನೆ ಎಂದು ಭಾವಿಸುತ್ತಾರೆ.

ಸತ್ಯವಾಗಿ, ನೀವು ಕುಳಿತು ನೀವಾಗಿಯೇ ಆಲೋಚಿಸಿದರೆ, ನಾನು ಹೇಳುತ್ತಿರುವುದು ಸತ್ಯವಲ್ಲದೆ ಬೇರೇನಲ್ಲವೆಂದು ನಿಮಗೆ ಅರ್ಥವಾಗುತ್ತದೆ. ನೀವು ನಿಮ್ಮ ಸ್ವಂತ ಪರೀಕ್ಷೆಯನ್ನು ಮಾಡಿ ನೋಡಿ, ನಿಮಗೇ ತಿಳಿಯುತ್ತದೆ. ನಿಮ್ಮ ತಂದೆ ಅಥವಾ ತಾಯಿ ಅಥವಾ ತಂಗಿ ನಿಮ್ಮೊಂದಿಗೆ ಸ್ವಲ್ಪ ಬೇರೆ ರೀತಿಯಲ್ಲಿ ವರ್ತಿಸಿದರೆ, ನೀವು ಅದಕ್ಕೆ ಹೇಗೆ ಪ್ರತಿಕ್ರಿಯೆ ತೋರುತ್ತೀರ ಎಂಬುದನ್ನು ಸುಮ್ಮನೆ ಕುಳಿತು ಅವಲೋಕಿಸಿ, ಅಷ್ಟು ಸಾಕು. ಆಗ ನಾನು ಹೇಳುತ್ತಿರುವುದು ನಿಮಗೇ ತಿಳಿಯುತ್ತದೆ.

ಸದಾಕಾಲವೂ ನಾವು ಯಾರಿಂದಾದರೂ ಯಾವೊಂದರ ಅಗತ್ಯದಲ್ಲಿರುತ್ತೇವೆ, ಹಾಗಾಗಿ ಅದನ್ನು ಅವರಿಂದ ನಯವಾದ ರೀತಿಯಲ್ಲಿ ಪಡೆಯಲು ನಿರಂತರವಾಗಿ ದಾರಿ ಮಾಡಿಕೊಳ್ಳುತ್ತಿದ್ದೇವೆ. ಈ ನಯವಾದ ರೀತಿಯನ್ನೇ ನಾವು 'ಪ್ರೀತಿ' ಎಂದು ಕರೆಯುತ್ತೇವೆ. ಇದು ಕೇವಲ ಭೌತಿಕ ಐಶ್ವರ್ಯವನ್ನು ಪಡೆದುಕೊಳ್ಳುವುದಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಭಾವಿಸಬೇಡಿ. ಇದು ಸಣ್ಣ ಪುಟ್ಟ ವಿಷಯಗಳು, ಉದಾಹರಣೆಗೆ, ನೀವು ಒಬ್ಬ ವ್ಯಕ್ತಿಯಿಂದ ಒಂದು ರೀತಿಯ ವರ್ತನೆಯನ್ನು ಅಪೇಕ್ಷಿಸಿದಾಗ ಕೂಡ ಅನ್ವಯಿಸುತ್ತದೆ. ನೀವು ಪರಸ್ಪರ ಒಬ್ಬರ ವರ್ತನೆ ಒಂದು ನಿರ್ದಿಷ್ಟ ರೀತಿಯಲ್ಲಿರಬೇಕೆಂದು ಅಪೇಕ್ಷಿಸುತ್ತೀರ ಮತ್ತು ಅದರಂತೆಯೇ ವರ್ತಿಸುತ್ತೀರ. ಇಬ್ಬರೂ ಈ ರೀತಿ ವರ್ತಿಸುವವರೆಗೂ, ಒಬ್ಬರನ್ನೊಬ್ಬರು

ಗಮನದ ಅಪೇಕ್ಷೆಯನ್ನು ಬಿಡುವುದು

ಪ್ರೀತಿಸುತ್ತೀರ. ಇದನ್ನು ನಿಮ್ಮಿಬ್ಬರಲ್ಲಿ ಒಬ್ಬರಾದರೂ ಸ್ವಲ್ಪ ತಪ್ಪಿದರೆ ಸಾಕು, ನಿಮ್ಮ ಪ್ರೀತಿಯು ಕ್ಷಣಿಕ ಕುಗ್ಗನ್ನು ಅನುಭವಿಸುತ್ತದೆ.

ಉದಾಹರಣೆಗೆ, ನೀವೆಲ್ಲರೂ ನನ್ನನ್ನು ತುಂಬ ಪ್ರೀತಿಸುತ್ತೀರ ಎಂದು ಹೇಳುತ್ತೀರ. ನಾನು ನಿಮ್ಮೊಂದಿಗೆ ಹೇಗೆ ವರ್ತಿಸಬೇಕೆಂದು ಇಲ್ಲಿ ಪ್ರತಿಯೊಬ್ಬರೂ ಒಂದು ನಿರ್ದಿಷ್ಟ ಕಲ್ಪನೆಯನ್ನಿಟ್ಟುಕೊಂಡಿದ್ದೀರ. ಪ್ರತಿಯೊಬ್ಬರೊಂದಿಗೂ ನಾನು ನೀವು ಅಪೇಕ್ಷಿಸುವಂಥ ರೀತಿಯಲ್ಲಿ ಸುಮ್ಮನೆ ವರ್ತಿಸುತ್ತೇನೆ. ನಿಜವಾಗಿ ಈಗ ನಾನು ಅದನ್ನೇ ಮಾಡುತ್ತಿರುವುದು. ಆಗುವುದೇನು? ನಾನು ಒಮ್ಮೆಯಾದರೂ ನಿಮ್ಮನ್ನು ನೋಡಿ ಕಿರುನಗೆ ನಗದೆಯಿದ್ದರೆ ಅಥವಾ ನಿಮ್ಮ ಅನಿಸಿಕೆಗೆ ವಿರುದ್ಧವಾಗಿ ನಾನೇನಾದರೂ ನುಡಿದರೆ, ನಾನು ನಿಮ್ಮನ್ನು ಪ್ರೀತಿಸುತ್ತಿಲ್ಲವೆಂದು ನೀವು ಭಾವಿಸುತ್ತೀರ. ಆಗ ನಿಮಗೆ ನನ್ನ ಮೇಲಿರುವ ಪ್ರೀತಿ ಕ್ಷಣಿಕವಾಗಿ ಕಡಿಮೆಯಾದದ್ದನ್ನು ಅನುಭವಿಸುತ್ತೀರ.

ಏನೋ, ನಾನು ಅಷ್ಟು ಪ್ರೀತಿಸುವವನಲ್ಲವೆಂದು ನೀವು ಭಾವಿಸಲು ಆರಂಭಿಸುತ್ತೀರ ನೀವು ‘ಪ್ರೀತಿ’ ಎಂದು ಕರೆಯುವ ವ್ಯವಹಾರವು ಕ್ಷಣಿಕವಾಗಿ ನೊಂದುತ್ತದೆ. ನಾನು ನಿಮಗೆ ಒಂದು ನಿರ್ದಿಷ್ಟವಾಗಿ ಒಂದನ್ನು ಏಕೆ ಹೇಳಿದೆ, ಅಥವಾ ನಿಮ್ಮನ್ನು ನೋಡಿ ನಾನೇಕೆ ಕಿರುನಗೆ ನಗದೆೆಯಿರುವುದಕ್ಕೆ ನಿಮ್ಮದೇ ಆದ ಕಾರಣಗಳನ್ನು ಕಲ್ಪಿಸಲು ಆರಂಭಿಸುತ್ತೀರ.

ನಾನು ಬೇರೊಬ್ಬರ ಜೊತೆ ಮಾತನಾಡುತ್ತಿರಬಹುದು, ಅಥವಾ ನಿಮ್ಮ ಅಹಂಕಾರವು ಸ್ವಲ್ಪ ಕಡಿಮೆಯಾಗಲೆಂದೇ ನಾನು ಸುಮ್ಮನೆ ನಿಮ್ಮನ್ನು ನೋಡಿ ನಗದೆ ಇರಬಹುದು, ಅಷ್ಟೆ! ಆದರೆ, ನೀವು ಇಡೀ ಆಟವನ್ನು ಮರೆತು, ನನ್ನ ವರ್ತನೆಯನ್ನು ನಿಮಗೆ ತಿಳಿದಿರುವ ‘ಪ್ರೀತಿ’ಯ ಪ್ರಕಾರ ಅರ್ಥಮಾಡಿಕೊಳ್ಳುತ್ತೀರ. ಆಗುವುದೇನು? ದುಃಖಾವಸ್ಥೆಯಲ್ಲಿ ಬೀಳುತ್ತೀರ.

‘ಪ್ರೀತಿ’ ಎಂಬುದರ ಅರ್ಥವನ್ನು ಗೊಂದಲಕ್ಕೆ ಹಾಕುತ್ತೀರ. ನಾನೇನೋ ಅದಕ್ಕೆ ತನ್ನ ಕಡೆಯಿಂದ ಇನ್ನಷ್ಟು ಗೊಂದಲವನ್ನು ಸೇರಿಸುವುದಿಲ್ಲ ಏಕೆಂದರೆ ನಾನು ಸಾಮಾನ್ಯ ಪ್ರೀತಿಯನ್ನು ದಾಟಿ ಹೋಗಿದ್ದೇನೆ! ಈ ರೀತಿ, ಗೊಂದಲ ತುಂಬಿರುವ ಪ್ರೀತಿಯಿಂದ ಇಬ್ಬರು ಸಂಬಂಧವನ್ನು ಕಲ್ಪಿಸತೊಡಗಿದರೆ, ಏನಾಗುತ್ತದೆ ಎಂದು ನೀವೇ ಊಹಿಸಿಕೊಳ್ಳಿ? ಸಂಪೂರ್ಣ ಅಸ್ವಸ್ಥತೆ ಉಂಟಾಗುತ್ತದೆ! ನೀವು ಪ್ರೀತಿಯಲ್ಲಿ ಹೆಚ್ಚು ಮತ್ತು ಕಡಿಮೆಗಳ ಮಧ್ಯೆ ಸುಮ್ಮನೆ ಚಲಿಸುತ್ತಿರುತ್ತೀರ ಅಷ್ಟೆ!

ನಿಮ್ಮ ಭಾವನೆಗಳ ವಿಷಯದಲ್ಲಿ ಅದೂ ಪ್ರೀತಿಯ ವಿಷಯದಲ್ಲಿ ನೀವು ಅದೆಷ್ಟು ಪರಸ್ಪರ ಅವಲಂಬಿಸಿದ್ದೀರ. ನಿಮ್ಮ ಪರಸ್ಪರ ಅವಲಂಬನೆಗೆ ಕಾರಣಗಳು ಎಷ್ಟು ಸೂಕ್ಷ್ಮ ಮತ್ತು ವಂಚಕರವಾಗಿರಬಹುದೆಂದರೆ, ನಿಮ್ಮ ಪ್ರೀತಿಯು ಅದನ್ನು ನಿಮಗೆ ತಿಳಿಯುವುದಿಲ್ಲ. ಕಾರಣವಿಲ್ಲದೆ ಹಾಗೆಯೇ ಪ್ರೀತಿಸಲು ಸಾಧ್ಯವಾದರೆ, ಅದು ಪರಿಶುದ್ಧವಾದ ಪ್ರೀತಿ; ಅಷ್ಟೆ. ಪರಿಶುದ್ಧವಾದ ಪ್ರೀತಿಯು ನಿಮ್ಮ ಸ್ವಂತತನವನ್ನು ಮಾತ್ರ ಅವಲಂಬಿಸಿರುತ್ತದೆ; ಬೇರಾವುದನ್ನೂ ಅಲ್ಲ, ಸ್ಪಷ್ಟವಾಗಿರಿ.

ಜನರು ನನಗೆ ಹೇಳುತ್ತಾರೆ, “ಸ್ವಾಮೀಜಿ, ನಾವು ಮಕ್ಕಳನ್ನು ಪ್ರೀತಿಸುತ್ತೇವೆ…” ಅವರ ತುಂಟತನವನ್ನು ಸಹಿಸಿಕೊಳ್ಳುವ ವಿಷಯದಲ್ಲಿ, ಎಷ್ಟು ಬಾರಿ ನಾವು ಅವರ ಮೇಲೆ ಆಣೆಯಿಟ್ಟಿದ್ದೇವೆ? ಒಬ್ಬ ಬಾಲಕಿ ಆಶ್ರಮದಲ್ಲಿ ನನಗೆ ಹೇಳುತ್ತಿದ್ದಳು, “ಸ್ವಾಮೀಜಿ, ನನ್ನ ಮಕ್ಕಳು ಒಳ್ಳೆಯ ರೀತಿಯಲ್ಲಿ ವರ್ತಿಸಿದರೆ ಮಾತ್ರ ನನ್ನ ತಾಯಿ ಅವರನ್ನು ಪ್ರೀತಿಸುತ್ತಾರೆ. ಅವರು ಮಕ್ಕಳನ್ನು ತನ್ನ ಮೊಮ್ಮಕ್ಕಳೆಂದು ತನ್ನ ಗೆಳತಿಯ ಮುಂದೆ ಜಂಬ ಕೊಚ್ಚಿಕೊಳ್ಳುವುದಕ್ಕಾಗಿ ಕರೆದುಕೊಂಡು ಬಂದು, ಕೊನೆಯಲ್ಲಿ ಮಕ್ಕಳು ಮಾಡುವ ಹಾವೇಳಿಗಾಗಿ ನನ್ನನ್ನು ನಿಂದಿಸುತ್ತಾರೆ!”

ನೀವು ಮಕ್ಕಳನ್ನು ನೋಡಿದಾಗ, ಅವರ ಮುಗ್ಧತೆಯಿಂದ ಸೆಳೆದಿದ್ದೀರ - ಅದು ಒಂದು ವಿಷಯ. ಎರಡನೆಯದು, ಆ ಮಕ್ಕಳು ನಿಮ್ಮ ಸೃಷ್ಟಿ ಎಂದು ನೀವು ನೋಡಿದಾಗ, ನಿಮಗೆ ಜಂಬದ ಭಾವನೆ, ಅಥವಾ ಅಹಂಕಾರವನ್ನು ವರ್ಧಿಸುವಂಥ ಭಾವನೆಯುಂಟಾಗುತ್ತದೆ. ನೀವೇ ಅವರನ್ನು ನೋಡಿಕೊಂಡು ಅವರನ್ನು ಸಂತೋಷಪಡಿಸುತ್ತೀರ, ಅದೇನೋ ನಿಜ. ಆದರೆ, ನಾನು ಹೇಳುತ್ತಿರುವುದೇನೆಂದರೆ, ಈ ಪ್ರೀತಿಯು ಕೆಲವು ಸೀಮಾ ಬಂಧನೆಗಳೊಡನೆ, ಆಯ್ಕೆಗಳೊಡನೆ (prefer-ences) ಬರುತ್ತದೆ. ಮಕ್ಕಳು ನಡೆದುಕೊಳ್ಳುವ ರೀತಿಗಳನ್ನು ಅವಲಂಬಿಸಿರುತ್ತದೆ.

ಒಂದು ಚಿಕ್ಕ ಕಥೆ:

ಒಬ್ಬ ಮನುಷ್ಯ ದಾರಿಗೆ ಕಾಂಕ್ರೀಟನ್ನು (concerete) ಹಾಕಿ ತಯಾರಿ ಮಾಡುತ್ತಿದ್ದನು. ಆಗತಾನೆ ಕಾಂಕ್ರೀಟ್ ದಾರಿಯನ್ನು ತಯಾರಿ ಮಾಡಿ ಮುಗಿಸಿದ್ದ, ಒಡನೆಯೇ ಆಕ್ಕಪಕ್ಕದಲ್ಲಿನ ಮಕ್ಕಳ ಗುಂಪೊಂದು ದಾರಿಯ ಮೇಲೆ ಓಡಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟುಹೋದರು. ಆ ಮನುಷ್ಯನಿಗೆ ಬಹಳ ಕೋಪಬಂದು ಆ ಮಕ್ಕಳನ್ನು ನಿಂದಿಸಿದನು. ಆಗ ಅವನ ಗೆಳೆಯ ಕೇಳಿದ “ಏಯ್, ಏನಾಯಿತು?

ನೀನು ಮಕ್ಕಳನ್ನು ಪ್ರೀತಿಸುತ್ತೀಯೆ ಎಂದು ಭಾವಿಸಿದ್ದೆ'' ಮನುಷ್ಯನು ಉತ್ತರಿಸಿದನು ‘‘ಹೌದು, ಪ್ರೀತಿಸುತ್ತೇನೆ, ಆದರೆ ಅವರು ಕಾಂಕ್ರೀಟ್ ಮೇಲಿದ್ದಾಗಲ್ಲ''

(ನಗು!)

ಯಾವಾಗಲೂ ಸಾಮಾನ್ಯವಾದ ಪ್ರೀತಿಯು ಯಾವುದೋ ಒಂದು ನಿಬಂಧನೆಯೊಂದಿಗೆ ಇರುತ್ತದೆ, ಎಲ್ಲೋ ಏನೋ ಯಾವುದೋ ಸ್ವಾರ್ಥ ಆಸಕ್ತಿಯೊಂದಿಗೆ ಇರುತ್ತದೆ. ಇದನ್ನೇ ನಾನು ಹೇಳಲು ಬಯಸುತ್ತಿರುವುದು. ನಾನು ಹೆಸರು, ಸ್ಥಳ, ಮನೋಭಾವನೆ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಜನರನ್ನು ಪ್ರೀತಿಸುತ್ತೇವೆ. ಅದು ಅಷ್ಟು ಅವಲಂಬನೀಯವಾಗಿರುತ್ತದೆ.

ಇನ್ನೊಂದೆಡೆ ಗುರುಗಳ ಪ್ರೀತಿಯು ಪರಿಶುದ್ಧವಾದ ಪ್ರೀತಿ, ನಿಜವಾದ ಪ್ರೀತಿ. ಅದು ಪ್ರಶ್ನಿಸದೆಯೇ ನಮ್ಮ ಮೇಲೆ ಧಾರೆಯೆರೆಯುತ್ತದೆ. ಅದಕ್ಕೆ ಯಾವ ಹೆಸರೂ ಅಥವಾ ಸ್ಥಳವೂ ಅಥವಾ ಸಂದರ್ಭವೂ ತಿಳಿದಿಲ್ಲ. ಗುರುಗಳು ನುಡಿಯುವಂಥ ಪ್ರತಿಯೊಂದು ಮಾತೂ ಕೂಡ ನಿಮ್ಮ ಮೇಲಿರುವ ಪ್ರೀತಿಯಿಂದ, ನಿಮ್ಮ ಸ್ವಂತ ಬೆಳವಣಿಗೆಗಾಗಿ ಗುರುಗಳು ಮಾಡುವ ಪ್ರತಿಯೊಂದು ಕೆಲಸವೂ ಪ್ರೀತಿಯಿಂದ ತುಂಬಿರುತ್ತದೆ. ಗುರುವಿಗೆ ಸ್ವಾಭಾವಿಕವಾದ ಒಂದೇ ಒಂದು ಭಾವನೆಯೆಂದರೆ ಅದು ಪ್ರೀತಿ. ಅವರ ಬೇರೆಲ್ಲ ಭಾವನೆಗಳು, ನೀವು ನಿಮಗೆ ತಿಳಿಸಿರುವ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೆ ಒಂದು ನೆಪ ಅಷ್ಟೆ.

ನನ್ನ ಶಿಷ್ಯರಿಗೆ ನಾನು ಯಾವಾಗಲೂ ಹೇಳುತ್ತೇನೆ, "ನಾನು ಅನುಕಂಪದಿಂದಿದ್ದಾಗ, ನಿಮಗೆ ವಂಚನೆ ಮಾಡುತ್ತೇನೆ ಮತ್ತು ನಿಮ್ಮನ್ನು ನಿಂದಿಸಿದಾಗ ನಿಮಗೆ ಕಲಿಸುತ್ತೇನೆ'' ಎರಡೂ ರೀತಿಗಳಲ್ಲಿ ನೀವು ಬೆಳೆಯುತ್ತೀರ! ನೀವು ಪರಿವರ್ತನೆಗೊಳ್ಳಲು ಸಹಾಯವಾಗಲೆಂದೇ ಕೆಲವೊಮ್ಮೆ ನಾನು ನನ್ನ ಅನುಕಂಪವನ್ನು ಬಹಳ ಪ್ರೀತಿಸುವಂಥ ರೀತಿಯಲ್ಲಿ ಪ್ರಕಟಿಸುತ್ತೇನೆ. ನೀವು ಇನ್ನೂ ಗಾಢವಾದ ಅರಿವಿಗೆ ನಿಮ್ಮನ್ನು ನಿಂದಿಸಿ ನನ್ನ ಅನುಕಂಪವನ್ನು ತೋರಿಸುತ್ತೇನೆ. ಎರಡು ವಿಧಗಳಲ್ಲೂ, ನಿಮ್ಮ ಮೇಲಿರುವ ಪರಿಶುದ್ಧವಾದ ಪ್ರೀತಿಯೊಂದೇ ಕಾರಣ.

‘ಗುರು'ವು ಅನಂತ ಪ್ರೀತಿಯ ಕಡಲು ಮತ್ತು ಅವರಿಗೆ ಕೊಡುವುದೊಂದೇ ತಿಳಿದಿದೆ. ಅವರು ಸ್ವತಃ ತಾವೇ ವಿಶ್ವ. ನೀವು ಒಂದು ಬಟ್ಟಲನ್ನು ತೆಗೆದುಕೊಂಡು ಅವರ ಬಳಿ

ಹೋದರೆ ಅವರನ್ನು ಒಂದು ಬಟ್ಟಲಿನಷ್ಟೇ ತೆಗೆದುಕೊಂಡು ಹಿಂತಿರುಗುತ್ತೀರ. ಒಂದು ಕೊಡವನ್ನಿಟ್ಟುಕೊಂಡು ಅವಳ ಬಳಿ ಹೋದರೆ, ಅವರನ್ನು ಕೊಡದಷ್ಟೇ ತೆಗೆದುಕೊಂಡು ಹಿಂತಿರುಗುತ್ತೀರ. ಇದೆಲ್ಲವೂ ನಿಮಗಷ್ಟು ದಾಹವಿದೆಯೆಂಬುದನ್ನು ಅವಲಂಬಿಸಿರುತ್ತದೆ ಅಷ್ಟೆ. ಹೆಚ್ಚು ದಾಹವಾದಷ್ಟು, ಅಷ್ಟೇ ದೊಡ್ಡ ಪಾತ್ರೆಯೊಂದಿಗೆ ನೀವು ಅವರ ಬಳಿ ಹೋಗುತ್ತೀರ.

ಆದರೆ ಅವರು, ನೀವು ಬೇರೆ ಬೇರೆ ಆಕಾರದ ಪಾತ್ರೆಗಳೊಡನೆ ಬರುತ್ತಿರುವುದನ್ನು ನೋಡಿ, ನಿಮ್ಮ ಸಂದಿಗ್ಧತೆಯನ್ನು, ನಿಮ್ಮ ಮನಸ್ಸಿನ ಆಟವನ್ನು, ನಿಮ್ಮ ತರ್ಕವು ಆಡುವ ಆಟವನ್ನು ನಿಮ್ಮ ಕಟ್ಟುಪಾಡುಗಳ ಆಟವನ್ನು ನೋಡಿ, ಅವರು ತಮ್ಮೊಳಗೆಯೇ ನಗುತ್ತಾರೆ!

ಗಮನಿಸಿ, ಸ್ಪಷ್ಟವಾಗಿರಿ: ನಾನೇನೂ ನೀವು ದೇವರನ್ನಾಗಲೀ ಅಥವಾ ಯಾವ ಗುರುವನ್ನಾಗಲೀ ಪ್ರೀತಿಸಬೇಕೆಂದು ಹೇಳುತ್ತಿಲ್ಲ. ನಿಮಗೆ ದೇವರು ಯಾರೆಂದೇ ತಿಳಿದಿಲ್ಲ, ಹಾಗಿರುವಾಗ, ಅವರನ್ನು ಹೇಗೆ ಪ್ರೀತಿಸಲು ಸಾಧ್ಯ? ನೀವು ನೋಡದೆ ಇರುವಂತಹದನ್ನು ಪ್ರೀತಿಸುವುದು ಬಹಳ ಕಷ್ಟ. ಆದರೆ ನೀವು ನೋಡುವುದನ್ನೆಲ್ಲ ಪ್ರೀತಿಸಬಹುದು, ಅಲ್ಲವೇ? ಪ್ರಾಣಿಗಳನ್ನು, ಗಿಡಗಳನ್ನು, ಜನರನ್ನು, ಎಲ್ಲವನ್ನು ಪ್ರೀತಿಸಬಹುದು. ಪ್ರೀತಿಸುವುದರಲ್ಲಿರುವ ಸುಖಕ್ಕಾಗಿಯೇ ಅವುಗಳನ್ನೆಲ್ಲವನ್ನು ಪ್ರೀತಿಸಿ, ಬೇರೆ ಯಾವ ಕಾರಣಕ್ಕಾಗಿಯೂ ಅಲ್ಲ. ಅವುಗಳೊಂದಿಗೆ ಒಂದು ಗಾಢವಾದ ಸಂಪರ್ಕವನ್ನು ಅನುಭವಿಸಿ, ಅವುಗಳನ್ನು ಪ್ರೀತಿಸಿ.

ಹೀಗೆ ಮಾಡುವುದನ್ನು ಪ್ರಾರಂಭಿಸಿದಾಗ, ನೀವು ವಿಶ್ವಶಕ್ತಿಯಲ್ಲಿ ಶ್ರದ್ಧೆಯನ್ನು ಬೆಳೆಸಿಕೊಳ್ಳುತ್ತೀರ. ಏಕೆಂದರೆ ವಿಶ್ವಶಕ್ತಿಯೊಂದೇ ಇವುಗಳಲ್ಲೆದರಲ್ಲೂ ಹರಿಯುವ ಒಂದೇ ತಿರುಳು, ಶ್ರದ್ದೆಯೆಂಬುದು ನಿಮ್ಮ ಮೇಲೆ ಹೊರಿಸುವಂತಹದಲ್ಲ. ಅದನ್ನು ನಿಮ್ಮ ಮೇಲೆ ಹೊರಿಸಿದರೆ, ನೀವು ಅದನ್ನು ಕೇವಲ ನಿರೋಧಿಸುತ್ತೀರ. ಅದನ್ನು ಪೀಡಿಸುವಂತಹುದೆಂದು, ಶ್ರದ್ಧೆಯೆಂಬ ಪದಕ್ಕೆ ಅಸಹ್ಯತೆಯನ್ನು ಬಳಸಿಕೊಳ್ಳುತ್ತೀರ. ನೀವು ಕಾರಣವಿಲ್ಲದೆಯೇ ಇನ್ನೊಂದನ್ನು ಅವಲಂಬಿಸಲ್ಪಡುತ್ತಿದ್ದೀರೆಂದು ಭಾವಿಸುತ್ತೀರ. ಆದರೆ, ಅದು ನಿಮ್ಮ ಅನುಭವವಾದಾಗ, ಸಂಪೂರ್ಣವಾಗಿ ಆಗುವುದೇ ಬೇರೆ.

ಗಮನದ ಅಪೇಕ್ಷೆಯನ್ನು ಬಿಡುವುದು

ಈ ಶ್ರದ್ಧೆಯು ಸಂಭವಿಸಿದಾಗ, ನಿಧಾನವಾಗಿ, ನಿಮ್ಮ ಪ್ರೀತಿಯು ಈ ಎಲ್ಲದರಲ್ಲಿ ಒಂದೇ ಆಗಿರುವ ವಿಶ್ವಶಕ್ತಿಯಲ್ಲಿ ದೇವರಲ್ಲಿ ಅಥವಾ ಜೀವ ಬಲದಲ್ಲಿ (life force) ನಿಮ್ಮ ಪ್ರೀತಿಯಾಗುತ್ತದೆ. ಆಗ, ನೀವು ವಿಶ್ವಶಕ್ತಿಯಲ್ಲಿ ಪ್ರೀತಿಯನ್ನು ಹೊರಸೂಸಲು ಆರಂಭಿಸುತ್ತೀರ, ಮತ್ತು ಅಂತಿಮ ಮತವಾದ - 'ಕೃತಜ್ಞತೆ ಮತ್ತು ಪ್ರೀತಿ'ಯ ಮತವು ನಿಮ್ಮಲ್ಲಿ ನೆಲೆಗೊಳ್ಳುತ್ತದೆ.

ಕೃತಜ್ಞತೆ ಹಾಗೂ ಪ್ರೀತಿಯು ಹತ್ತಿರವಾದ ಸಂಬಂಧವನ್ನು ಹೊಂದುತ್ತವೆ. ನಿಮ್ಮ ಅಸ್ತಿತ್ವದಲ್ಲಿ ನೀವು ಕೃತಜ್ಞತೆಯನ್ನು ಅನುಭವಿಸಿದರೆ, ನಿಮ್ಮಲ್ಲಿ ಕೇವಲ ಪ್ರೀತಿಯೊಂದೇ ಇರುತ್ತದೆ, ಬೇರೇನಲ್ಲ. ನಿಜವಾದ ಪ್ರೀತಿಯನ್ನು ಅನುಭವಿಸುವುದಕ್ಕೆ, ಕೃತಜ್ಞರಾಗುವುದೇ ಮೊದಲ ಹೆಜ್ಜೆ. ನಿಮ್ಮ ವ್ಯವಸ್ಥೆಯಲ್ಲಿ (system) ಅತೃಪ್ತಿ ಇರುವವರೆಗೂ, ನಿಜಾದ ಪ್ರೀತಿಯು ಇರಲು ಸಾಧ್ಯವಿಲ್ಲ. ಕೃತಜ್ಞತೆ ಮತ್ತು ಪ್ರೀತಿಯು ಜತೆಜತೆಯಾಗಿ ಹೋಗುತ್ತವೆ. ಕೊನೆಯ ಚಕ್ರ - ಸಹಸ್ರಾರ ಚಕ್ರದ ಬಗ್ಗೆ ಮಾತನಾಡುವಾಗ, ಕೃತಜ್ಞತೆಯ ಬಗ್ಗೆ ಹೆಚ್ಚು ಮಾತನಾಡೋಣ.

ಜನರಿಗೆ ಇದನ್ನೆಲ್ಲ ಹೇಳಿದಾಗ, ಅವರು ಹೇಳುತ್ತಾರೆ, "ಸ್ವಾಮೀಜಿ, ನಾನು ಇಡೀ ಜಗತ್ತನ್ನೇ ಪ್ರೀತಿಸುತ್ತೇನೆ ಸ್ವಾಮೀಜಿ. ಒಂದು ಸಣ್ಣ ಇರುವೆಗೂ ನಾನು ಹಿಂಸೆ ಮಾಡುವುದಿಲ್ಲ.''

ಇಂತಹದನ್ನೆಲ್ಲ ಹೇಳಿ ನೀವಾಗಿಯೇ ನೀವು ಏಕೆ ಮೋಸ ಹೋಗುತ್ತೀರ? ನಿಮ್ಮ ಪಕ್ಕದ ಮನೆಯವನನ್ನಾದರೂ ನೀವು ಹೃತ್ಪೂರ್ವಕವಾಗಿ ಪ್ರೀತಿಸಬಲ್ಲಿರಾ? ನಾನು ಹೇಳುತ್ತೇನೆ: ಇಡೀ ಜಗತ್ತನ್ನೇ ಪ್ರೀತಿಸುತ್ತೇನೆ - ಇಂಥ ವಿಷಯಗಳನ್ನು ಹೇಳಲು ಜನರಿಗೆ ಸುಲಭ, ಏಕೆಂದರೆ, ಅದನ್ನು ಸಮರ್ಥಿಸಿ ತೋರಿಸಲು ಅವರು ಯಾವ ನಿಜವಾದ ಕೆಲಸವನ್ನೂ ಮಾಡಬೇಕಾಗಿಲ್ಲ!

ಅವರು ಜಗತ್ತನ್ನು ಪ್ರೀತಿಸುತ್ತೇವೆ ಎಂದು ಹೇಳುತ್ತಾ ಎಲ್ಲಿದ್ದಾರೋ ಅಲ್ಲಿಯೇ ಇರಬಹುದು! ಅದನ್ನು ತೋರಿಸಲು ಯಾವ ವಿಶೇಷ ಕೆಲಸವನ್ನೂ ಮಾಡಬೇಕಾಗಿಲ್ಲ. ಜಗತ್ತೇ ಒಂದು ಮಿಥ್ಯೆ (intangible entity) ಅದು ಗಹನವಾದದ್ದು (abstract) ಅದು ಸ್ಪಷ್ಟವಾದ ನಿರೂಪಣೆಯಲ್ಲ.

ಆದರೆ, ನೀವು ನಿಮ್ಮ ಪಕ್ಕದ ಮನೆಯವರನ್ನು ಪ್ರೀತಿಸುತ್ತೀರ ಎಂದು ಹೇಳಿದಾಗ, ಅಲ್ಲೇ ಸಮಸ್ಯೆ ಆರಂಭವಾಗುವುದು! ಪ್ರತಿದಿನ ನೀವು ಅವರ ಮುಖವನ್ನು

ನೋಡಬೇಕು. ನಿಜದಲ್ಲಿ ಅವರಿಗಾಗಿ ಏನನ್ನಾದರೂ ಮಾಡಿ ಅವರಲ್ಲಿರುವ ಪ್ರೀತಿಯನ್ನು ಸಮರ್ಥಿಸಿ ತೋರಿಸಬೇಕು! ಆಗ, ಅದು ಸಮಸ್ಯೆಯಾಗುವುದು! ಮತ್ತು ಒಂದು ಇರುವೆಗೆ ಹಿಂಸೆ ಮಾಡದೆ ಇರುವುದರಿಂದ ನೀವು ಶ್ರೇಷ್ಠರೆಂದು ಹೇಗೆ ತಾನೆ ಭಾವಿಸಬಹುದು? ಆ ಇರುವೆಗೆ ನಿಮ್ಮ ಆಸ್ತಿ ಅಥವಾ ವ್ಯಕ್ತಿಯನ್ನು ನಾಶಮಾಡುವ ಸಾಮರ್ಥ್ಯವಿದೆಯೇ?! ಅದರಲ್ಲಿ ನಿಮಗಿರುವ ಪ್ರೀತಿಯನ್ನು ಪರೀಕ್ಷಿಸುವ ಸಾಮರ್ಥ್ಯವಿದೆಯೇ? ಅದು ಕಣ್ಣಿಗೂ ಕಾಣದೆ ಇರುವಷ್ಟು ಚಿಕ್ಕದಾಗಿದೆ ಮತ್ತು ನೀವು ಅದರ ಬಗ್ಗೆ ಮಾತನಾಡುತ್ತೀರ. ಇದು ಹಾಸ್ಯಾಸ್ಪದವಾಗಿದೆ ಅಲ್ಲವೇ? ಒಂದು ಇರುವೆಯನ್ನೂ ಕೂಡ ಹಿಂಸಿಸುವುದಿಲ್ಲವೆಂದು ಹೇಳಿಕೊಳ್ಳುವುದರಲ್ಲಿ! ಇವೆಲ್ಲವೂ ನೈಜತೆಯಿಂದ ತಪ್ಪಿಸಿಕೊಳ್ಳಲು ಮಾರ್ಗಗಳು.

ಒಂದು ವಿಷಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ: ಪ್ರೀತಿಯೇ ನಿಮ್ಮ ನೈಜ ಸ್ವಭಾವ. ಪ್ರೀತಿಯು ಶಾಶ್ವತವಾದದ್ದು. ಬೇರೆಲ್ಲ ಭಾವನೆಗಳು ಬಂದು ಹೋಗುತ್ತವೆ ಅಷ್ಟೆ. ಬೇರೆಲ್ಲ ಭಾವನೆಗಳು ನಿಜವೆಂದು, ಅವು ಪ್ರೀತಿಯನ್ನು ನಾಶಮಾಡುತ್ತಿವೆ ಎರಡು ಭಾವಿಸುವುದರಲ್ಲೇ ಸಿಕ್ಕಿ ಬಿದ್ದಿದ್ದೀರ. ಪ್ರೀತಿಯನ್ನು ನಾಶಮಾಡಲು ಎಂದೂ ಸಾಧ್ಯವಿಲ್ಲ. ಪ್ರೀತಿಯನ್ನು ನಾಶಮಾಡಲು ಸಾಧ್ಯವಾಗಿದ್ದರೆ, ಎಂದೋ ಹಿಂದೆಯೇ ಅದು ಅಳಿಸಿಹೋಗುತ್ತಿತ್ತು.

ನೀವು ನಿಜವಾಗಿ ಪ್ರೀತಿಸಿದಾಗ, ತದ್ವಿರುದ್ಧವಾದ ಭಾವನೆಗಳು ನಿಮ್ಮನ್ನು ಪ್ರವೇಶಿಸಲು ಸಾಧ್ಯವಿಲ್ಲ. ಅವೆಲ್ಲವೂ ಸುಮ್ಮನೆ ಅಳಿಸಿಹೋಗುತ್ತವೆ. ಒಂದು ಕೋಣೆಯಲ್ಲಿ ಪ್ರಕಾಶಮಾನವಾದ ಬೆಳಕಿದ್ದರೆ, ಕತ್ತಲೆಯನ್ನು ಒಳಕ್ಕೆ ತರಲು ಸಾಧ್ಯವೇ? ಇಲ್ಲ! ಬೆಳಕನ್ನು ಮಂಕಾಗಿಸಿದರೆ ಮಾತ್ರ ಕತ್ತಲೆಯು ಒಳಕ್ಕೆ ಪ್ರವೇಶಿಸಬಹುದು. ಇದೇ ರೀತಿ, ನಿಜವಾದ ಪ್ರೀತಿಯು ನಿಮ್ಮಲ್ಲಿ ಸಂಭವಿಸಿದಿದ್ದಾಗ ಮಾತ್ರ, ಬೇರೆ ಭಾವನೆಗಳು ಹೊಂದಲು ಸಾಧ್ಯ. ನೀವು ಪ್ರೀತಿಯಿಂದ ತುಂಬಿತುಳುಕುತ್ತಿದ್ದರೆ, ಬೇರೊಂದು ಭಾವನೆ ನಿಮ್ಮನ್ನು ಪ್ರವೇಶಿಸಲು ಅವಕಾಶವೇ ಇಲ್ಲ. ಮತ್ತು ಈ ಚಕ್ರ - ಅನಾಹತ ಚಕ್ರವು ನಿಮ್ಮನ್ನು ಪ್ರೀತಿಯಿಂದ ತುಂಬಿತುಳುಕಿಸುತ್ತದೆ, ಏಕೆಂದರೆ ಅದು ಉಕ್ಕಿಹರಿಯುತ್ತಿರುವ, ಸಚೇತನಗೊಳಿಸುವಂಥ ಪ್ರೀತಿಯ ಚೈತನ್ಯ.

ನೀವು ಅನುಭವಿಸಿರಬಹುದು: ನೀವು ಏನನ್ನಾದರೂ ತೀವ್ರವಾಗಿ ಮಾಡಿದಾಗ, ನಿಮ್ಮನ್ನು ನೀವು ಮರೆತುಬಿಡುತ್ತೀರ. ಇದನ್ನು ನಿಮ್ಮ ಜೀವನದಲ್ಲಿ ಹಲವು ಬಾರಿ ನೀವು

ಅನುಭವಿಸಿರಬಹುದು. ನೀವು ಮಾಡುವುದು ಏನೇ ಆಗಿರಲಿ. ಬಣ್ಣ ಹಚ್ಚುವುದು, ಅಥವಾ ಓದು ಅಥವಾ... ಯಾವುದೇ ಸರಳವಾದ ಕೆಲಸವೇ ಆಗಿರಲಿ. ಅದರೊಳಕ್ಕೆ ನೀವು ಆಳವಾಗಿ ಹೋದಾಗ, ನಿಮ್ಮನ್ನೇ ನೀವು ಮರೆತುಬಿಡುತ್ತೀರ. ನಿಮಗೆ ತೀವ್ರವಾದ ತಲೆನೋವಿದ್ದಾಗ, ಯಾವುದಾದರೂ ಆಸಕ್ತಿಕರವಾದ್ದನ್ನು ಬಹಳ ಆಳವಾಗಿ ಮಾಡಲು ಪ್ರಯತ್ನಿಸಿ, ನಿಮ್ಮ ತಲೆನೋವು ಹೊರಟುಹೋಗುತ್ತದೆ.

ನೋಡಿ: ನಿಮ್ಮ ತಲೆಯ ಬಗ್ಗೆ ನಿಮಗೆ ನಿರಂತರವಾಗಿ ಅರಿವಿರುವುದರಿಂದಲೇ, ನಿಮ್ಮ ತಲೆನೋವು ನಿಮಗೆ ತೊಂದರೆ ಮಾಡಲು ಮುಂದುವರಿಸುತ್ತದೆ. ಬೇರೊಂದು ವಿಷಯದಲ್ಲಿ ಆಳವಾಗಿ ಹೋಗಿ, ತಲೆಯ ಬಗ್ಗೆ ನಿಮ್ಮ ಅರಿವನ್ನು ಬಿಟ್ಟಾಗ, ನಿಮ್ಮ ತಲೆನೋವು ಸುಮ್ಮನೆ ಮಾಯವಾಗುತ್ತದೆ. ನಿಮ್ಮ ತಲೆಯನ್ನು ನೆನಸಿಕೊಂಡಾಗ ಮಾತ್ರ, ನಿಮಗೆ ತಲೆನೋವು ಆಗಲು ಸಾಧ್ಯ. ಯಾವುದೇ ಭಾವನೆಯೊಳಗೆ ನೀವು ಆಳವಾಗಿ ಹೋದರೆ, ಕೇವಲ ಆ ಭಾವನೆಯೊಂದೇ ಇರುತ್ತದೆ ಮತ್ತು ನಿಮ್ಮ ಇರುವಿಕೆ ಸ್ಥಗಿತಗೊಳ್ಳುತ್ತದೆ. ಇದನ್ನೇ ‘ಸಂಪೂರ್ಣತೆ’ಯೆಂದು ಕರೆಯುತ್ತೇವೆ.

‘ನೀವು’ ಎಂಬುದು ಮಾಯವಾಗುವ ಕ್ಷಣವನ್ನು ನೀವು ಕೆಲವು ಕ್ಷಣಗಳು ಮಾತ್ರ ಅನುಭವಿಸುತ್ತೀರೋ ಏನೋ. ಆದರೆ, ನಿಮ್ಮ ಅಸ್ತಿತ್ವದ ಮೇಲೆ ತೀವ್ರವಾಗಿ ಸಂಪೂರ್ಣತೆಯಿಂದ ಕೆಲಸ ಮಾಡಿದರೆ, ‘ನೀವು’ ಎಂಬುದು ಮಾಯವಾಗುವ ಅನುಭವವು ನಿಮಗೆ ಹಲವು ಬಾರಿ ಇನ್ನೂ ದೀರ್ಘವಾಗಿಯೂ ಕೂಡ ಆಗುತ್ತದೆ. ಕೂಡಲೇ, ನೀವು ನಿಮ್ಮ ಅನುಪಸ್ಥಿತಿಯಲ್ಲಿಯೇ ತೀವ್ರವಾಗಿ ಕೆಲಸ ಮಾಡುವುದರಲ್ಲಿ ಪರಿಣತರಾಗುತ್ತೀರ! ಆಗ, ನಿಮ್ಮ ಇಷ್ಟದಂತೆ ನೀವು ಬೇಕಾದಾಗ ಪ್ರಸಕ್ತರಾಗಬಹುದು. ಹೊರಗೆ ನಡೆಯುವ ಕೆಲಸವನ್ನು ಅವಲಂಬಿಸಿರುವುದಿಲ್ಲ.

ಇದೇ ರೀತಿ, ನೀವು ಪ್ರೀತಿಯಿಂದ ತುಂಬಿತುಳುಕುತ್ತಿದ್ದರೆ, ನಿಮ್ಮ ಇರುವಿಕೆಯನ್ನು ನೀವು ಅನುಭವಿಸುವುದಿಲ್ಲ ನೀವು ಪ್ರೀತಿಯನ್ನು ಮಾತ್ರ ಅನುಭವಿಸುತ್ತೀರ, ನೀವೇ ಪ್ರೀತಿಯಾಗುತ್ತೀರ, ನೀವೇ ಪ್ರೀತಿಯಾದಾಗ, ನೀವು ನೀವಾಗಿಯೇ ನಿಮ್ಮ ಸುತ್ತಮುತ್ತಲಿರುವ ಎಲ್ಲರ ಮೇಲೆ, ಎಲ್ಲದರ ಮೇಲೆ ಅನುಕಂಪವನ್ನು ಹೊರಸೂಸುತ್ತೀರ.

ನಿಮ್ಮ ಸುತ್ತಲೂ ಇನ್ನು ಹೆಚ್ಚು ಜವಾಬ್ದಾರಿಯನ್ನು ವಹಿಸುತ್ತೀರ. ಈ ಜವಾಬ್ದಾರಿಯನ್ನು ಜನರಿಗೆ ಸೇವೆ ಮಾಡುವ ಅಹಂಕಾರದಿಂದ ಏನೂ ನೀವು ವಹಿಸುವುದಿಲ್ಲ ಆದರೆ ನಿಮ್ಮಲ್ಲಿ ತುಂಬಿತುಳುಕುತ್ತಿರುವ ಚೈತನ್ಯದಿಂದ.

ಪ್ರೀತಿ ಹಾಗೂ ಜವಾಬ್ದಾರಿ ಯಾವಾಗಲೂ ನೀವು ನಿಜವಾಗಿ ಪ್ರೀತಿಸಿದಾಗ, ಸಂಪೂರ್ಣ ಜವಾಬ್ದಾರಿಯನ್ನು ಕೂಡ ವಹಿಸುತ್ತೀರ. ಸನ್ಯಾಸಿಗಳೆಂದರೆ ಯಾರು ಜವಾಬ್ದಾರಿಯಿಂದ ಓಡುತ್ತಾರೋ ಅವರು ಎಂದು ಜನರು ಭಾವಿಸುತ್ತಾರೆ. ನಿಮಗೆ ಹೇಳುತ್ತೇನೆ: ನೀವು ನಿಮ್ಮ ಕುಟುಂಬದ ಜವಾಬ್ದಾರಿಯನ್ನು ಬಿಟ್ಟಾಗ, ಇನ್ನು ದೊಡ್ಡ ಕುಟುಂಬಕ್ಕೇ, ಇಡೀ ಮನುಕುಲಕ್ಕೆ, ನಿಮ್ಮ ಸ್ವಂತ ಕುಟುಂಬಕ್ಕಿಂತಲೂ ಲಕ್ಷ್ಯವಿಟ್ಟು ಹೆಚ್ಚು ದೊಡ್ಡದಾಗಿರುವಂಥ ಕುಟುಂಬಕ್ಕೆ ನೀವು ಜವಾಬ್ದಾರಿಯನ್ನು ವಹಿಸುತ್ತಿದ್ದೀರ. ಜನರು ಇದನ್ನು ಅರ್ಥಮಾಡಿಕೊಳ್ಳದೆ ಟೀಕಿಸುತ್ತಾರೆ.

ಹೆಚ್ಚು ಜವಾಬ್ದಾರಿ ವಹಿಸಿಕೊಂಡಷ್ಟು ಹೆಚ್ಚು ವಿಸ್ತರಿಸುತ್ತೀರ, ಜವಾಬ್ದಾರಿ ಎಂಬುದು ಸುಲಭವಾಗಿ ತಿರಸ್ಕರಿಸಬಹುದಾದದ್ದು. ಆದರೆ ನೀವು ಅದನ್ನು ತಿರಸ್ಕರಿಸದೆ ಅದನ್ನು ವಹಿಸಿಕೊಳ್ಳುತ್ತಲೇ ಇದ್ದರೆ, ನೀವು ವಿಸ್ತರಿಸುತ್ತೀರ, ಮತ್ತು ದೈವೀ ಶಕ್ತಿಯು ತಾನಾಗಿಯೇ ನಿಮ್ಮಲ್ಲಿ ಹರಿಯುತ್ತದೆ. ಮತ್ತು ನೀವು ನಿಮ್ಮೊಳಗೆ ಉಕ್ಕಿ ಹರಿಯುತ್ತಿರುವ ಚೈತನ್ಯವನ್ನು ಅನುಭವಿಸಿದಾಗಲೇ ಹೆಚ್ಚು ಹೆಚ್ಚು ಜವಾಬ್ದಾರಿಯನ್ನು ವಹಿಸುತ್ತೀರ. ಸುತ್ತಮುತ್ತಲಿರುವ ನೊಂದುವಿಕೆ ಅಥವಾ ನೋವಿಗಾಗಿ ಜವಾಬ್ದಾರಿಯನ್ನು ವಹಿಸಿ ಜನರನ್ನು ಗುಣಪಡಿಸಲು ಇರುವ ಹೀಲರ್‌ಗಳ (Healer's) ಒಕ್ಕೂಟದಲ್ಲಿ ನನ್ನ ಹೀಲರ್‌ಗಳಿಗೆ ಎಂದೂ ಹೇಳುತ್ತೇನೆ.

ನಿಮ್ಮ ಸುತ್ತಲಿರುವ ನೋವಿಗೆ ನೀವೇ ಜವಾಬ್ದಾರರೆಂದು ನೀವು ಭಾವಿಸಿದಾಗ, ಅದನ್ನು ಯಾವುದೋ ಒಂದು ರೀತಿಯಲ್ಲಿ ಕಡಿಮೆಮಾಡಲು ನೀವಾಗಿ ನೀವೇ ಎದ್ದು ನಿಲ್ಲುತ್ತೀರ. ಜನರು ತಮ್ಮ ಸ್ವಂತ ಕುಟುಂಬಕ್ಕಾಗಿ ಮಾತ್ರ ಕೆಲಸ ಮಾಡಿದರೆ ಸಾಕು ಎಂದು ಭಾವಿಸುತ್ತಾರೆ. ಇದು ಕಿರಿದಾಗುವ ಒಂದು ರೀತಿ, ವಿಸ್ತಾರವಾಗುವ ರೀತಿಯಲ್ಲ. ಬೆಳವಣಿಗೆ ಆಗಬೇಕಾದರೆ, ನೀವು ವಿಸ್ತರಿಸಲೇಬೇಕು.

ನೀವು ಜವಾಬ್ದಾರಿಯೊಂದಿಗೆ ಎದ್ದು ನಿಂತಾಗ ಚೈತನ್ಯವನ್ನು ಪಸರಿಸುತ್ತೀರ. ಜವಾಬ್ದಾರಿಯನ್ನು ವಹಿಸಿದಾಗ, ವಿಶ್ವಶಕ್ತಿಯು ತಾನಾಗಿಯೇ ನಿಮ್ಮಲ್ಲಿ ಹರಿಯುತ್ತದೆ.

ಜನರು ಹೇಳುತ್ತಾರೆ, "ಸ್ವಾಮೀಜಿ, ನನ್ನ ಕುಟುಂಬವನ್ನು ಪೋಷಿಸುವುದು ನನಗೆ ಸಾಧ್ಯವಾದರೆ ಅಷ್ಟು ಸಾಕು'' ನಾನು ಹೇಳುತ್ತೇನೆ: ನೀವು ನಿಮ್ಮಷ್ಟಕ್ಕೇ ಸೀಮಿತರಾಗಲು ಇದೊಂದು ನೆಪವಷ್ಟೆ; ನಿಮ್ಮನ್ನು ಕಿರಿದಾಗಿಸುವ ಒಂದು ಮಾರ್ಗ.

ಬೌದ್ಧ ಧರ್ಮದ ಈ ಪ್ರಸಿದ್ಧ ಸಾಲುಗಳನ್ನು ನೀವು ಕೇಳಿರಬಹುದು.

ಬುದ್ಧಂ ಶರಣಂ ಗಚ್ಛಾಮಿ
ಧಮ್ಮಂ ಶರಣಂ ಗಚ್ಛಾಮಿ
ಸಂಗಂ ಶರಣಂ ಗಚ್ಛಾಮಿ

ಇದರರ್ಥ:

ನಾನು ಬುದ್ಧನಿಗೆ ಶರಣಾಗುತ್ತೇನೆ. ಧಮ್ಮ - ಅಂದರೆ ಬುದ್ಧನ ಬೋಧನೆಗೆ ಶರಣಾಗುತ್ತೇನೆ. ಸಂಗ - ಅಂದರೆ ಬುದ್ಧನು ಸೃಷ್ಟಿಸಿದ ಸಂಸ್ಥೆಗೆ ನಾನು ಶರಣಾಗುತ್ತೇನೆ.

ಬುದ್ಧನಿಗೋ ಅಥವಾ ಯಾವುದೋ ಗುರುಗಳಿಗೆ ಶರಣಾಗುವುದು ಸುಲಭ. ಅದಕ್ಕಾಗಿ ನೀವೇನೂ ಹೆಚ್ಚು ಮಾಡಬೇಕಾಗಿಲ್ಲ. ಗುರುಗಳು ತಮ್ಮ ದೈವತ್ವದಿಂದಾಗಿ ಎಷ್ಟು ಆಕರ್ಷಕರು ಎಂದರೆ, ಶರಣಾಗಲು ನಿಮ್ಮ ಕಡೆಯಿಂದ ಅಷ್ಟು ಪ್ರಯತ್ನಗಳ ಅಗತ್ಯವಿಲ್ಲ. ಜನರು ನನ್ನನ್ನು ನೋಡಿದ ಕ್ಷಣವೇ ಒಂದು ನಂಬಿಕೆಯನ್ನು, ಒಂದು ಶ್ರದ್ಧೆಯನ್ನು ಅನುಭವಿಸುತ್ತಾರೆಂದು ಹೇಳುತ್ತಾರೆ. ನಾನು ಹೇಳುತ್ತೇನೆ; ಅದೇನೂ ದೊಡ್ಡ ವಿಷಯವಲ್ಲ! ನನ್ನಲ್ಲಿರುವ ವಿಶ್ವ ಚೈತನ್ಯವು ನಿಮ್ಮನ್ನು ಎಳೆಯುತ್ತದೆ ಅಷ್ಟೆ!

ಮುಂದಿನ ಸಾಲು 'ನಾನು ಬುದ್ಧನ ಬೋಧನೆಗೆ ಶರಣಾಗುತ್ತೇನೆ' ಎಂಬುದು ಮೊದಲನೆಯದಕ್ಕಿಂತ ಸ್ವಲ್ಪ ಹೆಚ್ಚು ಕಷ್ಟ, ಏಕೆಂದರೆ ಹೀಗೆ ಹೇಳಿದ ಕ್ಷಣವೇ, ನೀವು ಅದನ್ನು ಪಾಲಿಸುತ್ತಿದ್ದೀರೆಂದು ನೀವು ತೋರಿಸಬೇಕು! ಉದಾಹರಣೆಗೆ, ನಾನು ನಿಮಗೆ ಹೇಳುತ್ತೇನೆ: ಆನಂದಮಯವಾಗಿರಿ. ಅದು ನನ್ನ ಬೋಧನೆ. ಆಗ ನೀವು ಹೇಳುವುದೇನು?

''ಇಲ್ಲ ಸ್ವಾಮೀಜಿ, ಅದು ಉಪಯುಕ್ತವಾದುದಲ್ಲ...'' ಸ್ಪಷ್ಟವಾಗಿರಿ: ನಾನು ಕೇವಲ ಉಪಯುಕ್ತವಾದ ವಿಷಯಗಳನ್ನು ಮಾತ್ರ ಹೇಳುತ್ತೇನೆ. ನಾನು ಜ್ಞಾನಿಯೆಂದು, ನೀವು

ಯಾವುದನ್ನು ನಿಮ್ಮ ‘ಉಪಯುಕ್ತ ಜೀವನ’ವೆಂದು ಕರೆಯುತ್ತೀರೋ, ಅದರ ಬಗ್ಗೆ ನನಗೇನೂ ತಿಳಿಯದು ಎಂದು ಭಾವಿಸಲು ಆರಂಭಿಸುತ್ತೀರ. ಇಲ್ಲ, ನೀವು ತಪ್ಪು ತಿಳಿದಿದ್ದೀರ.

ನೀವು ದೈನಂದಿನ ಜೀವನದಲ್ಲಿ ಆಗಬಹುದಾದ ವಿಷಯಗಳನ್ನು ಮಾತ್ರ ನಾನು ಹೇಳುತ್ತೇನೆ. ಆನಂದಮಯವಾಗಿರಿ ಎಂದು ಹೇಳುವಾಗ, ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ಕೇವಲ ಪದಗಳನ್ನು ಬೋಧಿಸುತ್ತಿಲ್ಲ. ಮೊದಲು ಅದನ್ನು ಅರ್ಥಮಾಡಿಕೊಳ್ಳಿ. ಆನಂದಮಯವಾಗಿರಿ ಎಂದು ನಾನು ಹೇಳುವಾಗ, ನಾನು ಅನುಭವಿಸುತ್ತಿರುವ ಆನಂದವನ್ನು ಅನುಭವಿಸಲು ನಿಮ್ಮನ್ನು ಸೆಳೆಯುತ್ತಿದ್ದೇನೆ. ಮತ್ತದು ಸಂಪೂರ್ಣವಾಗಿ ಉಪಯುಕ್ತವಾದ ವಿಷಯ, ಏಕೆಂದರೆ, ನಾನು ಇಲ್ಲಿ ನಿಮ್ಮ ಮುಂದೆ ಜೀವಂತವಾಗಿದ್ದೇನೆ.

ಇರಲಿ, ಮೂರನೆಯ ಸಾಲು ಹೇಳುತ್ತದೆ: ಬುದ್ಧನು ಸೃಷ್ಟಿಸಿದ ಸಂಸ್ಥೆಗೆ ನಾನು ಶರಣಾಗುತ್ತೇನೆ. ನಿಜವಾದ ತೊಂದರೆ ಇಲ್ಲಿಯೇ ಆರಂಭವಾಗುವುದು. ಇದಕ್ಕಾಗಿ ಸ್ವಂತವಾಗಿ ಅತ್ಯಧಿಕ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ.

ಅರ್ಥಮಾಡಿಕೊಳ್ಳಿ: ಗುರುಗಳು ತಮ್ಮ ದೇಹಕ್ಕಿಂತ ತಮ್ಮ ಧೈೇಯದಲ್ಲಿ ಜೀವಿಸುತ್ತಾರೆ. ಅವರ ಚೈತನ್ಯದ ಶೇಕಡಾ 33 ರಷ್ಟು ಮಾತ್ರ ಅವರ ದೇಹದಲ್ಲಿರುತ್ತದೆ. ಮಿಕ್ಕ ಶೇಕಡಾ 66 ರಷ್ಟು ಚೈತನ್ಯವು ಅವರ ಧೈೇಯ ಮತ್ತು ಬೋಧನೆಯಲ್ಲಿರುತ್ತದೆ. ಅವರು ಆ ರೀತಿಯ ಜವಾಬ್ದಾರಿಯನ್ನು ವಹಿಸಿ ಜೀವಿಸುತ್ತಾರೆ. ನಾನು ಯಾವಾಗಲೂ ಜನರಿಗೆ ಹೇಳುತ್ತೇನೆ: ನಾನು ನನ್ನ ಚೈತನ್ಯವನ್ನು ನನ್ನ ಚಳವಳಿಯಿಂದ ಪಡೆದುಕೊಳ್ಳುತ್ತೇನೆ, ನಾನು ಸೇವಿಸುವ ಊಟದಿಂದಲ್ಲ.

ಗುರುಗಳು ಯಾವ ಕರ್ಮಗಳನ್ನೂ ಅಥವಾ ತಮ್ಮಲ್ಲಿದ್ದ ಪೂರೈಸದ ಆಸೆಗಳನ್ನು ಪೂರೈಸಲು ಜನ್ಮವನ್ನು ತೆಗೆದುಕೊಳ್ಳುವುದಿಲ್ಲ, ಏಕೆಂದರೆ, ಅವರಿಗೆ ಪೂರೈಸಬೇಕಾದ ಕರ್ಮವು ಯಾವುದೂ ಇಲ್ಲ. ಅವರು ಕೇವಲ ಅನುಕಂಪದಿಂದ, ಶುದ್ಧ ಪ್ರೀತಿಯಿಂದ, ಜನರ ಆತ್ಮವನ್ನು ಉದ್ರೇಕಿಸಲು ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಗುರುಗಳ ಜನನದ ಮೂಲ ಉದ್ದೇಶವಾದ ಧೈೇಯದ ತೀವ್ರತೆ ಮತ್ತು ವೇಗವೇ ಗುರುವಿನ ದೀರ್ಘಾಯುಷ್ಯವನ್ನು ತೀರ್ಮಾನಿಸುತ್ತವೆ.

ಗಮನದ ಅಪೇಕ್ಷೆಯನ್ನು ಬಿಡುವುದು

ಗುರುಗಳು ತಮ್ಮ ದೇಹಕ್ಕಿಂತ, ತಮ್ಮ ಮಾತುಗಳಲ್ಲಿ ಮತ್ತು ಧೈಯಗಳಲ್ಲಿ ಜೀವಿಸುತ್ತಾರೆ. ಅದಕ್ಕಾಗಿ ನೀವು ನನ್ನ ಸ್ವರೂಪವನ್ನು ಬಿಟ್ಟು ಚೈತನ್ಯಕ್ಕೆ ಸೂಕ್ಷ್ಮರಾಗಿರಿ ಎಂದು ನಾನು ಯಾವಾಗಲೂ ಹೇಳುತ್ತೇನೆ.

ಆದರೆ ನೀವು ಮಾಡುವುದೇನು? ಸದಾಕಾಲವೂ ನನ್ನ ಎಲುಬನ್ನೇ ಹಿಡಿದುಕೊಳ್ಳುತ್ತೀರ! ನನ್ನ ಕೆಲಸವನ್ನು ನಿಜದಲ್ಲಿ ನಿಮ್ಮ ಕೆಲಸವನ್ನು ಮಾಡುವುದರ ಬದಲಿಗೆ, ಸದಾಕಾಲವೂ ನೀವು ನನ್ನ ದೈಹಿಕ ಸ್ವರೂಪದೊಂದಿಗೆ ಇರಬೇಕೆಂದು ಕೊಳ್ಳುತ್ತೀರ. ಹೀಗೆ ಹೇಳುವುದನ್ನು ನೀವು ಅರ್ಥಮಾಡಿಕೊಳ್ಳುವುದೇ ಇಲ್ಲ.

ನೀವು ದೈವಿಕ ಧೈಯಕ್ಕೆ ಕಾರ್ಯ ಮಾಡಿದಾಗ, ಎರಡನ್ನು ಮಾಡುತ್ತಿದ್ದೀರ - ಒಂದು: ನಿಮ್ಮ ಸ್ವಂತ ಆಧ್ಯಾತ್ಮಿಕ ಬೆಳವಣಿಗೆಗಾಗಿ ಧ್ಯಾನ ಮತ್ತು ಎರಡನೆಯದು, ಜವಾಬ್ದಾರಿಯೊಡನೆ ಸಮಾಜ ಸೇವೆ. ಇಲ್ಲಿ ಎರಡನೆಯ ವಿಷಯವು ಕೇವಲ ಒಂದು ಮುಖ್ಯ ಪದಾರ್ಥದೊಡನೆ ಉತ್ಪತ್ತಿ ಹೊಂದುವ ಉಪ ಪದಾರ್ಥದ ಹಾಗೆ. ನೀವು ಕೆಲಸ ಮಾಡುವಾಗ ನಿಮ್ಮಲ್ಲಿ ಸಂಭವಿಸುವ ಪರಿವರ್ತನೆಯೇ ನಾನು ನಿಮ್ಮನ್ನು ಪರಿವರ್ತನೆಗೊಳಿಸುವ ನಿಜವಾದ ಕೆಲಸ!

ನಿಮ್ಮನ್ನು ನಿರಂತರವಾಗಿ ಪರಿವರ್ತನೆಗೊಳಿಸಬೇಕೆಂಬುದೇ ನನ್ನ ಕೆಲಸ, ಮತ್ತದು ಬೇರೆ ಬೇರೆ ಮಾರ್ಗಗಳಲ್ಲಿ ಸಂಭವಿಸುತ್ತದೆ. ನಿಮ್ಮನ್ನು ಧೈಯಕ್ಕಾಗಿ ಕೆಲಸ ಮಾಡಿಸುವುದು ಒಂದು ಮಾರ್ಗ. ನಾನು ಹೇಳುತ್ತಿರುವುದು ನಿಮಗೆ ತಿಳಿಯಿತೇ?

ಹಾಗಾಗಿ ಸಂತೋಷದಿಂದ ಜವಾಬ್ದಾರಿಯನ್ನು ವಹಿಸಿರಿ! ದೊಡ್ಡದಾಗಿ ಕಾಣುವಂಥ ಜವಾಬ್ದಾರಿಗಳನ್ನು ನೀವು ಎದುರಿಸಿದಾಗ, ಸುಮ್ಮನೆ ಅವುಗಳಿಗೆ ನಿಮ್ಮ ಹೂಂಕಾರ ನೀಡಿ. ಕೇವಲ ನಿರೋಧಕವಿಲ್ಲದೆ ಹೂಂಕಾರ ನೀಡುವುದೇ ಸಾಕು. ಮಿಕ್ಕಿದೆಲ್ಲವನ್ನೂ ಅಸ್ತಿತ್ವದಿಂದ ನೋಡಿಕೊಳ್ಳಲಾಗುತ್ತದೆ.

ನೀವು ಮೈಸೂರ್‌ಪಾಕ್ - ಪ್ರಸಿದ್ಧ ಭಾರತದ ಸಿಹಿಯನ್ನು ಕೇಳಟ್ಟಿದ್ದೀರ? ಅದು ನೋಡಲು, ತಿನ್ನಲು ಭಾರವೆಂದೆನಿಸಬಹುದು ಆದರೆ, ಅದನ್ನು ನಿಮ್ಮ ಬಾಯೊಳಗೆ ಹಾಕಿಕೊಂಡ ಕ್ಷಣವೇ, ಅದು ಕರಗಿ ವಿಲೀನವಾಗುತ್ತದೆ ಮತ್ತು ನಿಮಗೆ ಒಂದು ಚೈತನ್ಯ ಉಗಮವನ್ನೂ ಕೂಡ ನೀಡುತ್ತದೆ. ಅದೇ ರೀತಿ ನೀವು ಯಾವುದೇ ಜವಾಬ್ದಾರಿಗೆ ನಿಮ್ಮ ಹೂಂಕಾರವನ್ನು ನೀಡಿದಾಗ, ಅದನ್ನು ನಿರ್ವಹಿಸಲು ಚೈತನ್ಯವು ನಿಮಗೆ ತಕ್ಷಣವೇ ದೊರಕುತ್ತದೆ. ಜವಾಬ್ದಾರಿಯನ್ನು ವಹಿಸುವ ಕ್ರಿಯೆಯೇ ಅದಕ್ಕೆ ಬೇಕಾಗುವ ಚೈತನ್ಯವನ್ನು ನಿಮ್ಮಲ್ಲಿ ತರುತ್ತದೆ. ಅಸ್ತಿತ್ವದ ಈ ಪ್ರೀತಿಸುವ ಚೈತನ್ಯವನ್ನೇ ನೀವು ನಿಮ್ಮಲ್ಲಿ ಕಂಡುಕೊಳ್ಳಬೇಕಾಗಿರುವುದು.

ಜವಾಬ್ದಾರಿಯನ್ನು ವಹಿಸಲು ನೀವು ಇಡೀ ಜಗತ್ತನ್ನೇ ವಿವೇಚನೆಯಿಲ್ಲದೆ ಪ್ರೀತಿಸಬೇಕು. ನೀವು ವಿವೇಚನೆಯಿಲ್ಲದೆ ಪ್ರೀತಿಸಿದರೆ, ವಿವೇಚನೆಯಿಲ್ಲದೆ ಜವಾಬ್ದಾರಿಯನ್ನು ವಹಿಸುತ್ತೀರ. ಜವಾಬ್ದಾರಿ ಎಂದರೆ (ಸ್ವಂತ ಪ್ರೇರಿತವಾಗಿ) ಪ್ರತಿಕ್ರಿಯಿಸುವುದಲ್ಲದೆ ಬೇರೇನಲ್ಲ. ಆಲೋಚಿಸದೆ, ಉಪಾಯವಿಲ್ಲದೆ ಪ್ರತಿಕ್ರಿಯಿಸಲು ಸಾಧ್ಯವಾದಾಗ, ಅಥವಾ ಯಾವುದನ್ನಾಗಲೀ ತಕ್ಷಣ ಸ್ವಯಂಪ್ರೇರಿತವಾಗಿ ವಹಿಸಲು ಸಾಧ್ಯವಾದಾಗ, ನೀವು ಹೇಳಿ ಆಗಮಿಸಿದ್ದೀರ.. ಹೇಳಿ? ಇಲ್ಲಿಯವರೆಗೆ ಪ್ರಶ್ನೆಗಳಿವೆಯೇ?

ಸ್ವಾಮೀಜಿ, ನಾನು ಪ್ರೀತಿಸುವವನಾಗಬೇಕೆಂದು ಬಯಸುತ್ತೇನೆ, ಆದರೆ ಬಿಡಲು (let go) ಸಾಧ್ಯವಾಗುತ್ತಿಲ್ಲ...

ಸಂಪೂರ್ಣವಾಗಿ ಪ್ರೀತಿಸುವವರಾಗಲು, ಅಹಂಕಾರಕ್ಕೆ ಅದೊಂದು ದೊಡ್ಡ ಸವಾಲು. ಸಂಪೂರ್ಣವಾಗಿ ಪ್ರೀತಿಸುವವರಾಗುವುದೆಂದರೆ, ಅಸ್ತಿತ್ವದೊಂದಿಗೆ ಐಕ್ಯರಾಗುವುದೆಂದರ್ಥ. ಇದು ಅಹಂಕಾರಕ್ಕೆ ದೊಡ್ಡ ಸಮಸ್ಯೆ. ಈಗ ನೀವು ತುಂಡು ತುಂಡಾಗಿದ್ದೀರ; ನೀವು ಸಮಗ್ರವಾಗಿಲ್ಲ. ನೀವು ತುಂಡಾಗಿದ್ದಾಗ, ನಿಮ್ಮ ಹಲವು ತುಂಡುಗಳ ಜೊತೆ ಸುಮ್ಮನೆ ಆಟವಾಡಿ ತಪ್ಪಿಸಿಕೊಳ್ಳುತ್ತೀರ ಅಷ್ಟೆ. ಪ್ರೀತಿಸುವವರಾಗಬೇಕಾದರೆ, ನೀವು ಸಮಗ್ರವಾಗಲೇಬೇಕು. ನೀವು ಸಮಗ್ರವಾಗಲು ಭಯಪಡುತ್ತೀರ. ನೀವು ಸಮಗ್ರವಾದಾಗ, ಸಂಪೂರ್ಣತೆಯಿಂದ ಬೆಳೆಯುತ್ತೀರ.

ಆದರೆ ಸಮಗ್ರವಾಗಲು ನೀವು ಸತ್ತು ಮರುಜನ್ಮ ಪಡೆಯಲೇಬೇಕು. ತುಂಡುತುಂಡಾಗಿರುವುದೇ ನಿಮಗೆ ಅದೆಷ್ಟು ರೂಢಿಯಾಗಿಬಿಟ್ಟಿದೆ ಎಂದರೆ, ನಿಮ್ಮನ್ನು ನೀವು ಸಮಗ್ರವನ್ನಾಗಿಸಿಕೊಳ್ಳಲು ನೀವು ಹೆದರುತ್ತೀರ. ಹೀಗೆ ಸಂಭವಿಸಲು ನಿಮ್ಮ ಅಹಂಕಾರವು ನಿರಾಕರಿಸುತ್ತದೆ. ನೀವು ಪ್ರೀತಿಸುವವರಾದಾಗ, ನಿಮ್ಮ ಅಹಂಕಾರವನ್ನು

ಗಮನದ ಅಪೇಕ್ಷೆಯನ್ನು ಬಿಡುವುದು

ಕರಗಿಸುತ್ತಿದ್ದೀರ. ಹಿಂದೆ, ನಿಮ್ಮ ಅಹಂಕಾರವು ಗಟ್ಟಿಯಾಗಿತ್ತು, ದೃಢವಾಗಿತ್ತು ಮತ್ತು ನಿಮಗೆ ಹಿತವಾಗಿತ್ತು. ನಿಮ್ಮ ಅಹಂಕಾರ ಕರಗಿದರೆ, ಆಗುವುದೇನು? ನಿಮ್ಮ ಸಂಪೂರ್ಣ ವ್ಯಕ್ತಿತ್ವವನ್ನೇ ಅನನ್ಯತೆ ಕಳೆದುಕೊಳ್ಳುತ್ತಿರುವ ಭಾವನೆಯುಂಟಾಗುತ್ತದೆ.

ಒಮ್ಮೆಯಾದರೂ ಬಿಡುವ ನಿರ್ಧಾರವನ್ನು ಮಾಡಿದರೆ, ಪ್ರಚಂಡ ಸ್ವಾತಂತ್ರ್ಯದ ಅನುಭವ, ನಿಮ್ಮೊಳಗೆ ಒಂದು ಬಂಧಮುಕ್ತಿಯ ಭಾವನೆ ಉಂಟಾಗುತ್ತದೆ. ಬಿಟ್ಟು ಪ್ರೀತಿಸುವವರಾಗುವುದಕ್ಕೆ ಧೈರ್ಯದ ಅಗತ್ಯವಿದೆ. ಮೊದಲನೆಯ ಹೆಜ್ಜೆಯಾಗಿ, ನಿಮ್ಮ ಆಳದಲ್ಲಿ ಇದರ ಇರುವಿಕೆಯ ಅರಿವು ಮಾಡಿಕೊಳ್ಳಿರಿ, ಅದು ತಾನಾಗಿಯೇ ಸಂಭವಿಸುತ್ತದೆ. ಯಾವುದೇ ಬೀಜವನ್ನು ತೆರೆಯಲು ಅರಿವೊಂದೇ ಕೀಲಿಕೈ.

ಅರ್ಥಮಾಡಿಕೊಳ್ಳಿ: ಹೆಸರು ಮತ್ತು ರೂಪಗಳನ್ನು ದಾಟಿ ನೀವು ಪ್ರೀತಿಸಲು ಆರಂಭಿಸಿದರೆ, ಏನನ್ನೂ ಕಳೆದುಕೊಳ್ಳುತ್ತಿಲ್ಲ, ನೀವು ಯಾವುದು ಅಲ್ಲವೋ - ನೀವು ಕಳೆದುಕೊಳ್ಳಬೇಕಾದ ಕಲ್ಪನೆಯನ್ನು ಮಾತ್ರ ಕಳೆದುಕೊಳ್ಳುತ್ತಿದ್ದೀರ. ನೀವು ನೈಜತೆಯನ್ನು ಗಳಿಸಿದ್ದೀರ. ಹಾಗಾಗಿ, ಶ್ರದ್ಧೆಯಿಂದಿರಿ ಮತ್ತು ನೀವು ಅಸ್ತಿತ್ವದೊಂದಿಗೆ ಐಕ್ಯವಾಗುವುದನ್ನು ಕಂಡಾಗ ಹೆದರಬೇಡಿ.

ನಿಮ್ಮ ಮತ್ತು ಅಸ್ತಿತ್ವದ ಐಕ್ಯವನ್ನು ಎಂದೂ ತಡೆ ಮಾಡಬೇಡಿ. ಸುಮ್ಮನೆ ಬಿಟ್ಟು, ನಿಮ್ಮೊಳಗಿರುವ ಪರಿವರ್ತನೆಯನ್ನು ವೀಕ್ಷಿಸಿ ನಿಮ್ಮ ಅಹಂಕಾರದ ರೀತಿಗಳನ್ನು ನೀವು ಎಷ್ಟು ಮೂರ್ಖತನದಿಂದ ಹಿಡಿದುಕೊಂಡಿದ್ದಿರಿ ಎಂದು, ಅಹಂಕಾರದ ಮುಖವಾಡದ ಹಿಂದೆ ಇದ್ದುದರಿಂದ ನೀವು ಅದೆಷ್ಟು ಕಳೆದುಕೊಂಡಿದ್ದೀರ ಎಂದು ನಿಮಗೆ ಅರಿವಾಗುವುದು.

ನಿಜವಾದ ಪ್ರೀತಿಯು ಎಂದೂ ಲೆಕ್ಕ ಹಾಕುವುದಿಲ್ಲವೆಂದು ತಿಳಿಯಿರಿ. ಮನಸ್ಸು ಮಾತ್ರ ಲೆಕ್ಕ ಹಾಕುತ್ತದೆ, ಹೃದಯವಲ್ಲ. ನಿಮ್ಮ ಮನಸ್ಸಿನಿಂದ ಹೃದಯಕ್ಕೆ ಚಲಿಸಲು ಪ್ರಾರಂಭಿಸಲು ಈಗಾಗಲೇ ಸಮಯವಾಗಿದೆ. ನಿಮ್ಮ ಮನಸ್ಸಿನ ಮಾತುಗಳನ್ನು ಸಾಕಷ್ಟು ಆಲಿಸಿದ್ದೀರ. ಈಗ ನಿರ್ಧರಿಸಿ ನಿಮ್ಮ ಹೃದಯವನ್ನು ಆಲಿಸಿರಿ. ಆಗ ನಿಮಗೆ ಯಾವ ಪಶ್ಚಾತ್ತಾಪವೂ ಇರುವುದಿಲ್ಲ, ನಿಮ್ಮ ಹೃದಯದೊಂದಿಗೆ ನೀವು ಜೀವಿಸಿದಾಗ, ಜೀವನದಲ್ಲಿ ಯಾವುದಕ್ಕೂ ಪಶ್ಚಾತ್ತಾಪ ಪಡುವುದಿಲ್ಲ ಏಕೆಂದರೆ ಅಷ್ಟು ಸಂಪೂರ್ಣತೆಯೊಂದಿಗೆ ಜೀವಿಸುತ್ತೀರ.

ನಿಮ್ಮ ಮನಸ್ಸಿನಿಂದ ನಿಜವಾದ ಪ್ರೀತಿಯನ್ನು ಎಂದೂ ಅನುಭವಿಸಲು ಸಾಧ್ಯವಿಲ್ಲ. ಅದನ್ನು ಕೇವಲ ನಿಮ್ಮ ಹೃದಯದಿಂದ ಮಾತ್ರ ಅನುಭವಿಸಲು ಸಾಧ್ಯ. ಪ್ರೀತಿಯನ್ನು ನಿಮ್ಮ ಅಸ್ತಿತ್ವದ ಕೇಂದ್ರದಲ್ಲಿ ಅನುಭವಿಸುವುದು ಅಗತ್ಯ. ನಿಮ್ಮ ಅಸ್ತಿತ್ವದ ಕೇಂದ್ರವು ಸಂಪೂರ್ಣವಾಗಿ ನಿಶ್ಯಬ್ದತೆಯಿಂದಿದೆ, ಅದಕ್ಕೆ ಯಾವ ಶಬ್ದಗಳೂ ಆಲೋಚನೆಗಳೂ ತಿಳಿದಿಲ್ಲ. ಯಾವ ಆಲೋಚನೆಯೂ ಕೂಡ ಅದನ್ನು ಒಳಹೊಕ್ಕಲು ಸಾಧ್ಯವಿಲ್ಲ. ಅದಕ್ಕೆ ಪ್ರೀತಿಯ ಭಾಷೆಯನ್ನು ಬಿಟ್ಟು ಬೇರೆ ಭಾಷೆ ತಿಳಿಯದು.

ಆದ್ದರಿಂದಲೇ ನೀವು ನಿಮ್ಮ ತನವನ್ನು ಕಂಡುಹಿಡಿಯಲು ನಿಮ್ಮೊಳಕ್ಕೆ ಆಳವಾಗಿ ಹೋಗಲು ಗುರುಗಳು ಮರಳಿ ಮರಳಿ ಹೇಳುತ್ತಾರೆ. ಈ ಕೇಂದ್ರವು ನಿಮ್ಮ ನಿಜಸ್ವಭಾವ. ನಿಜವಾಗಿ, ಇದೇ ನೀವು (ನಿಮ್ಮ ನೈಜತನ) ಆದರೆ ನಿಮ್ಮನ್ನು ನೀವು ಕಂಡುಕೊಳ್ಳಲು ಎಲ್ಲ ವಿಧದ ಜಾಗಗಳಲ್ಲಿ, ಸಂಬಂಧಗಳಲ್ಲಿ, ಜನರಲ್ಲಿ ಹುಡುಕುತ್ತೀರ. ನೀವು ನಿರಂತರವಾಗಿ ಕಳೆದುಕೊಳ್ಳುತ್ತಿದ್ದೀರ. ನೀವು ಒಳಕ್ಕೆ ಹೋಗಲು ಈಗಾಗಲೇ ಸಮಯವಾಗಿದೆ. ಹೊರಗೆ ನೋಡುವುದನ್ನು ನಿಲ್ಲಿಸಲು ಈಗ ಸಮಯವಾಗಿದೆ. ನೀವು ನಿಮ್ಮತನಕ್ಕೆ ಸಾಕಷ್ಟು ವಂಚನೆಮಾಡಿದ್ದೀರ. ಮುಂದು ಹೋಗಿ.

ನಾವು ನಿರಂತರವಾಗಿ ಪ್ರೀತಿಯ ಬಗ್ಗೆ ಮಾತನಾಡುತ್ತೇವೆ, ಏಕೆಂದರೆ ನಾವದನ್ನು ಕಳೆದುಕೊಳ್ಳುತ್ತಿದ್ದೇವೆ; ಏಕೆಂದರೆ ಅದರ ರುಚಿ ನೋಡಿಲ್ಲ. ಅದು ಈ ರೀತಿ ಇದೆ. ಒಬ್ಬನಿಗೆ ಬಾಯಾರಿಕೆಯಾದಾಗ, ಅವನು ಸದಾಕಾಲವೂ ನೀರಿನ ಬಗ್ಗೆ ಮಾತನಾಡುತ್ತಾ ಕನಸು ಕಾಣುತ್ತಾ ಇರುತ್ತಾನೆ. ಅವನು ಬಾಯಾರಿಕೆಯನ್ನು ಆರಿಸಿದ ಕ್ಷಣವೇ ಅದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸುತ್ತಾನೆ. ನಾವು ಹೋಗಲು ಬಿಟ್ಟು (let go) ನಿಜವಾದ ಪ್ರೀತಿಯನ್ನು, ಅಂದರೆ ನಿಮ್ಮನ್ನು ವಿಶ್ವಶಕ್ತಿಯೊಂದಿಗೆ ಐಕ್ಯಮಾಡುವ ಪ್ರೀತಿಯನ್ನು ಅನುಭವಿಸುವುದು ಅಗತ್ಯ, ಆಗ ಅದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸುತ್ತೇವೆ.

ನೀವು ಬಿಡಲು ಸಿದ್ಧರಾಗಿದ್ದರೆ ವಿಶ್ವಶಕ್ತಿಯು ತೆರೆದ ಕೈಗಳಿಂದ ನಿಮ್ಮನ್ನು ನುಂಗಲು (en-gulf), ಅದರೊಳಕ್ಕೆ ನಿಮ್ಮನ್ನು ವಿಲೀನಗೊಳಿಸಲು ಕಾಯುತ್ತಿದೆ, ತೆರೆದ ಹೃದಯದಿಂದ ಬಿಡಲು ಧೈರ್ಯವಾಗಿರಿ. ನೀವು ಅದನ್ನು ಕಂಡು ಅದರೊಂದಿಗೆ ಐಕ್ಯವಾಗುತ್ತೀರ!

ಗಮನದ ಅಪೇಕ್ಷೆಯನ್ನು ಬಿಡುವುದು

ಅಸ್ತಿತ್ವದ ಆಲಿಂಗನವನ್ನು ಅನುಭವಿಸಲು ಸಿದ್ಧರಾದಾಗ, ಉನ್ನತ ಮಟ್ಟಕ್ಕೆ, ಉನ್ನತ ಅರಿವಿನ (consciousness) ಮಟ್ಟಕ್ಕೆ ಏರುತ್ತೀರ. ನಿಮಗೆ ಹಿಂದೆ ಎಂದೂ ತಿಳಿಯದ ಸ್ಥಳವನ್ನು ಪ್ರವೇಶಿಸುತ್ತೀರ. ಅಸ್ತಿತ್ವದೊಂದಿಗೆ, ನೀವು ಯಾವಾಗಲೂ ಮೇಲಕ್ಕೆ ಏರಲು ಒಳಕ್ಕೆ ಬಿಡುತ್ತೀರ.

ಪ್ರೀತಿಯೆಂಬುದು ನಿಜದಲ್ಲಿ ಶರಣಾಗತಿ. ಆದರೆ ಇದು ನಮ್ಮಲ್ಲಿ ಹೆಚ್ಚು ಜನಕ್ಕೆ ಒಂದು ಹೋರಾಟವಾಗುತ್ತದೆ. ನಾವು ನಮ್ಮೊಂದಿಗೆ ಮತ್ತು ವಿಶ್ವಶಕ್ತಿಯೊಂದಿಗೂ ಕೂಡ ಹೋರಾಡುತ್ತೇವೆ. 'ಶರಣಾಗತಿ' ಎಂದಾಗ, ಒಪ್ಪಿಗೆಯಿಂದ ಸಂಭವಿಸುವ ಶರಣಾಗತಿಯಲ್ಲ. ಒಪ್ಪಿಗೆಯಿಂದ ಶರಣಾಗತರಾದರೆ, ನೀವು ರಾಜಿ ಮಾಡುತ್ತಿದ್ದೀರ. ಪ್ರೀತಿಯು ರಾಜಿಯಾಗಲು ಎಂದೂ ಸಾಧ್ಯವಿಲ್ಲ. ಅದನ್ನು ಅರಿತುಕೊಳ್ಳಿ. ನೀವು ರಾಜಿ ಮಾಡುವ ಕ್ಷಣವೇ, ನೀವು ಪ್ರೀತಿಸುತ್ತಿಲ್ಲ. ನೀವು ಅರ್ಥಮಾಡಿಕೊಂಡು ವಿಲೀನವಾದರೆ (dissolve), ಅದು ಪ್ರೀತಿಯಾಗುತ್ತದೆ.

ನೀವು ಗುರುಗಳೊಂದಿಗೆ ಇರುವಾಗ, ಪ್ರೀತಿಯನ್ನು ಕಂಡುಹಿಡಿಯಲು ಒಂದು ಜೀವಮಾನದ ಅವಕಾಶವಿದೆ, ಸತ್ತು ನಿಜವಾದ ಪ್ರೀತಿಯೊಂದಿಗೆ ಪುನರ್ಜನ್ಮ ಪಡೆಯುವ ಅವಕಾಶವಿದೆ. ಗುರುಗಳ ಸಮ್ಮುಖದಲ್ಲಿ ನಿಮ್ಮಲ್ಲಿ ಸಂಭವಿಸುವ ಪರಿವರ್ತನಾ ಕ್ರಿಯೆಯು (alchemy process) ನೀವು ಸತ್ತು ನಿಜವಾದ ಪ್ರೀತಿಯೊಂದಿಗೆ ಪುನರ್ಜನ್ಮ ಪಡೆಯುವುದನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ನೀವು ಮಾಡಬೇಕಾದಿದ್ದೇನೆಂದರೆ ಸಾಯಲು ಅಥವಾ ಅವರಲ್ಲಿ ಸಂಕಲ್ಪವಿರಬೇಕು. ನೀವು ಇದಕ್ಕೆ ಸಿದ್ಧರಾದಾಗ, ಇದನ್ನು ಮಾಡಲು ಧೈರ್ಯವು ಬಂದಾಗ, ನೀವು ಉನ್ನತ ಮಟ್ಟದ ಜಾಗೃತಾವಸ್ಥೆಗೆ ನೆಗೆಯುತ್ತೀರ.

ಪ್ರೀತಿಯು ವಸ್ತುವಲ್ಲ, ಅದು ಒಂದು ಕೃತ್ರಿಮ, ಅದೇ ನೀವು. ನೀವೇ ಪ್ರೀತಿಯಾಗುತ್ತೀರ ಅಷ್ಟೆ. ಆಗ ನೀವು ಉದ್ದೇಶವಿಲ್ಲದೆಯೇ ಪ್ರೀತಿಸಲು ಪ್ರಾರಂಭಿಸುತ್ತೀರ. ನೀವು ಮರಗಳನ್ನು, ಹೂವುಗಳನ್ನು, ಭೂಮಿಯನ್ನು ಮತ್ತೆಲ್ಲವನ್ನು ಪ್ರೀತಿಸುತ್ತೀರ. ನೀವು ಸುಮ್ಮನೆ ಪ್ರೀತಿಯನ್ನು ಪಸರಿಸುತ್ತೀರ. ಆಗ ನೀವು ಇಡೀ ಪ್ರಪಂಚದೊಂದಿಗೆ (Universe) ಒಂದಾಗುತ್ತೀರ. ಎಲ್ಲ ಸೀಮೆಗಳು ಮಾಯವಾಗಿ ನೀವು ಅಸ್ತಿತ್ವದೊಂದಿಗೆ ಐಕ್ಯವಾಗುತ್ತೀರ.

ನೋಡಿ, ನೀವು ಪ್ರೀತಿಯಲ್ಲಿ ಬೆಳೆದಾಗ, ಎಲ್ಲವನ್ನೂ ಎಲ್ಲರನ್ನೂ ಸೇರಿಸುತ್ತೀರ. ಗುರುವನ್ನು ನೋಡಿದಾಗ, ಅವರೆಷ್ಟು ಸರ್ವಾಂತರ್ಯಾಮಿ ಎಂದು ನೀವು ತಿಳಿಯಬಹುದು. ಅವರು ಯಾವುದನ್ನೂ ಯಾರನ್ನೂ ಕೂಡ ಬಹಿಷ್ಕರಿಸುವುದಿಲ್ಲ. ಅವರು ಯಾರಲ್ಲೂ ಯಾವ ಅಪೂರ್ಣತೆಯನ್ನು ನೋಡುವುದಿಲ್ಲ. ಅವರ ಬರೀ ಪರಿಶುದ್ಧವಾದ ಪ್ರೀತಿ, ಅಷ್ಟೆ ಮತ್ತು ಪರಿಶುದ್ಧವಾದ ಪ್ರೀತಿಯು ಯಾವ ಅಸಂಪೂರ್ಣತೆಯನ್ನೂ ಕೂಡ ನೋಡುವುದಿಲ್ಲ.

ವಿಶ್ವಶಕ್ತಿಯು ಪರಿಶುದ್ಧವಾದ ಪ್ರೀತಿ ಮತ್ತು ಸಮಾಜವು ಯಾವಾಗಲೂ ಪರಿಶುದ್ಧವಾದ ಪ್ರೀತಿಯ ವಿರೋಧವಿರುತ್ತದೆ. ಒಳಗೆ ಆಳದಲ್ಲಿ ಸಮಾಜವು ನಿಜದಲ್ಲಿ ವಿಶ್ವಶಕ್ತಿಯ ಅಥವಾ ದೇವರ ವಿರುದ್ಧವಿದೆ. ಅದರ ಪೂಜೆಯೆಲ್ಲ ಕೇವಲ ಬೂಟಾಟಿಕೆ. ಅದು ಪೂಜೆಯ ಹಿಂದೆ ಬಚ್ಚಿಟ್ಟುಕೊಳ್ಳುತ್ತದೆ. ಯಾವುದನ್ನಾದರೂ ಪಾಲಿಸದೆ ಇರುವುದಕ್ಕೆ ಅದನ್ನು ಪೂಜಿಸುವುದು ಒಳ್ಳೆಯ ಮಾರ್ಗ! ಸಮಾಜವು ಪೂಜೆಯ ಹೆಸರಿನಲ್ಲಿ ತಪ್ಪಿಸಿಕೊಳ್ಳುತ್ತಿದೆ. ನೀವು ಪೂಜಿಸುವಾಗ, ನೀವು ಬೇರೆ ಏನನ್ನೂ ಮಾಡಬೇಕಾಗಿಲ್ಲ! ಮತ್ತು ನೀವು ಪೂಜಿಸುತ್ತಿರುವುದರಿಂದ ಸಮಾಜವು ನಿಮಗೆ ತೊಂದರೆ ಉಂಟುಮಾಡುವುದಿಲ್ಲ! ಆದರೆ ನಿಮ್ಮ ಒಳ ಸ್ಥಳದಲ್ಲಿ ಆಗುವುದೇನು? ಯಾವ ಬೆಳವಣಿಗೆಯೂ ಆಗುವುದಿಲ್ಲ ಮತ್ತದು ಇದ್ದ ಹಾಗೆಯೇ ಇರುತ್ತದೆ.

ನೀವು ಬಿಟ್ಟು (let go) ಪ್ರತಿಯೊಂದು ಗಿಡವನ್ನು, ಪ್ರಾಣಿಯನ್ನು ಅನಂತ ಪ್ರೀತಿಯಿಂದ ಪ್ರೀತಿಸುವರಾದರೆ, ಸಮಾಜವು ನಿಮ್ಮನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ. ನೀವು ಹುಚ್ಚರೆಂದು ಅದು ಹೇಳುತ್ತದೆ. ಅದು ಕೇವಲ ಸಾಮಾಜಿಕ ಪ್ರೀತಿಯನ್ನು ಮಾತ್ರ ಒಪ್ಪಿಕೊಳ್ಳುತ್ತದೆ; ಯಾವ ಪ್ರೀತಿಯು ಕೊಡುವುದು ಪಡೆಯುವುದರಿಂದ, ಯಾವ ಪ್ರೀತಿಯು ಉದ್ದೇಶಪೂರಕವಾಗಿರುತ್ತದೆಯೋ, ಅಂಥ ಪ್ರೀತಿಯನ್ನು ಮಾತ್ರ ಒಪ್ಪಿಕೊಳ್ಳುತ್ತದೆ.

ಆದರೆ ನಾನು ಹೇಳುತ್ತೇನೆ: ನೀವು ಪ್ರಯತ್ನವನ್ನು ನಿಲ್ಲಿಸಬೇಡಿ. ಹೃತ್ಪೂರ್ವಕವಾಗಿ ಪ್ರೀತಿಸುತ್ತಲೇ ಇರಿ. ಎಲ್ಲದರಲ್ಲೂ ವಿಶ್ವಶಕ್ತಿಯನ್ನು ಕಾಣಿರಿ. ನಿಮ್ಮ ಹೃದಯದಲ್ಲಿ

ಗಮನದ ಅಪೇಕ್ಷೆಯನ್ನು ಬಿಡುವುದು

ಗಿಡಗಳನ್ನು ಕೋಮಲ ಭಾವನೆಯಿಂದ ನೋಡಿ. ಪ್ರಾಣಿಗಳು ನಿಮ್ಮ ಸ್ವಂತದ್ದೇ ಎಂಬ ಭಾವನೆಯಿಂದ ನೋಡಿ. ಪ್ರತಿ ಮನುಷ್ಯನನ್ನು ದೇವರ ಒಂದು ಭಾಗವೆಂದು ನೋಡಿ. ಇದು ನಿಜವಾದ ಪೂಜೆ. ದೇವಸ್ಥಾನದಲ್ಲಿ ದೇವರನ್ನು ಪೂಜಿಸುವುದೇನೋ ಸುಲಭ. ಎಲ್ಲವನ್ನೂ ದೇವರೆಂದು ನೋಡುವುದೇ ನಿಜವಾದ ಪೂಜೆ, ನಿಮ್ಮ ಪಕ್ಕದ ಮನೆಯವರನ್ನು ದೇವರೆಂದು ನೋಡುವುದೇ ನಿಜವಾದ ಪೂಜೆ.

ಜನರು ಎಂದೂ ಯಾವುದರ ಮೂಲಕ್ಕೂ (root) ಹೋಗುವುದಿಲ್ಲ; ಅದೇ ಸಮಸ್ಯೆ. ಪ್ರೀತಿಯೇ ದೇವರ ಮೂಲ. ದೇವರ ಮೂಲಕವು ಎಲ್ಲದರಲ್ಲೂ ದೇವರನ್ನು ನೋಡುವುದರಲ್ಲಿ ಇದೆ. ಜನರ ಮೂಲಕ್ಕೆ ಹೋಗಲು ಹೆದರುತ್ತಾರೆ, ಹಾಗಾಗಿ. ಮೇಲ್ವೈನ ಭ್ರಾಂತರಾಗುತ್ತಾರೆ. ಜೀವನದಲ್ಲಿ ಒಂದು ನಿರ್ದಿಷ್ಟ ಮಟ್ಟವನ್ನು ಮೀರಿ ಹೋಗುವ ಧೈರ್ಯವಿರುವುದಿಲ್ಲ. ಆದ್ದರಿಂದಲೇ ಅವರು ನಿಮ್ಮನ್ನೂ ಕೂಡ ಒಳಹೊಕ್ಕಿ ನೋಡಲು ಬಿಡುವುದಿಲ್ಲ. ಅವರು ಕಂಡುಹಿಡಿದಿರುವುದೇ ಸತ್ಯವೆಂದು ಹೇಳುತ್ತಾರೆ. ಅವರು ಹೇಳುತ್ತಿರುವುದನ್ನು ಪಾಲಿಸುತ್ತಾ ಬಂದರೆ, ಅಷ್ಟು ಸಾಕು ಎಂದು ಹೇಳುತ್ತಾರೆ.

ನಿಮ್ಮೊಳಗೆ ಆಳವಾಗಿ ಹೋಗಿ ಪ್ರೀತಿಸಲು ಧೈರ್ಯವಾಗಿರಿ: ನೀವು ನೋಡುವುದರಲ್ಲೆಲ್ಲದರಲ್ಲೂ ಒಂದು ಸಾಮಾನ್ಯ ಎಳೆಯನ್ನು ಅನುಭವಿಸುತ್ತೀರ. ನೀವು ನೋಡುವುದೆಲ್ಲವೂ ವಿಶ್ವಶಕ್ತಿಯೆಂಬ ನಿಜವಾದ ಎಳೆಯನ್ನು ಒಟ್ಟಾಗಿ ಹಿಡಿಯಲ್ಪಟ್ಟ ಭ್ರಮೆಯ ಘಟನೆಗಳೆಂದು ನೀವು ಅರ್ಥಮಾಡಿಕೊಳ್ಳುತ್ತೀರ. ನೀವು ಸ್ವಯಂ ಚಾಲಿತವಾಗಿ ಯಾವ ಕಷ್ಟವೂ ಇಲ್ಲದೆ ಎಲ್ಲವನ್ನು ಒಂದೇ ರೀತಿ ಪ್ರೀತಿಸುತ್ತೀರ. ಏಕೆಂದರೆ ನೀವು ಎಲ್ಲರಲ್ಲೂ ಎಲ್ಲದರಲ್ಲೂ ಕೇವಲ ಅಸ್ತಿತ್ವವನ್ನು ಮಾತ್ರ ಕಾಣುತ್ತೀರ.

ಈ ಪರಿವರ್ತನೆಯನ್ನು ನಿಮ್ಮೊಳಗೆ ಆಗಲು ಬಿಟ್ಟರೆ ಮಾತ್ರ ಅದು ಸಂಭವಿಸಲು ಸಾಧ್ಯ. ನಿಮ್ಮಲ್ಲಾಗುವ ಯಾವೊಂದು ಬದಲಾವಣೆಯೂ ಕೂಡ ಜಾಗ್ರತಾವಸ್ಥೆಯಲ್ಲಿ ಒಂದು ರೂಪಾಂತರ; ಅದು ಯಾವ ಸ್ವಿಚ್ಚೂ (switch) ಅಲ್ಲ. ಪ್ರತಿಯೊಂದೂ ವಿಶ್ವಶಕ್ತಿಯ ಒಂದು ಭಾಗವೆಂದು ಭಾವಿಸುವಂತೆ ಮಾಡುತ್ತದೆ.

ಖಚಿತ ಪರಿಹಾರಗಳು

ನೀವು ವರ್ಷಗಳ ಗಟ್ಟಲೆ ದೇವರ ಅಥವಾ ಅಸ್ತಿತ್ವದ ಬಗ್ಗೆ ಚರ್ಚಿಸುತ್ತಲೇ ಇರಬಹುದು; ಅದರ ಯಾವ ಅನುಭವವನ್ನೂ ಪಡೆಯದೆ ನಿಮಗೆ ದೇವರ ವಿಚಾರ ಅದೆಷ್ಟು ತಿಳಿದಿದೆ ಎಂದು ಭಾವಿಸುವುದದರಿಂದ ನಿಮ್ಮ ಅಹಂಕಾರ ಹಿತವಾಗಿ, ಗಟ್ಟಿಯಾಗಿರುವುದು, ಅದೇನೋ ಸರಿ! ಆದರೆ ನೀವು ಒಳಕ್ಕೆ ನೋಡಿದರೆ, ಯಾವ ದೃಢವಾದ ಅನುಭವವೂ ಇರುವುದಿಲ್ಲ. ಮತ್ತು ನಿಮಗೆ ದೃಢವಾದ ಅನುಭವವು ಇಲ್ಲದೆಯಿರುವ ಕಾರಣದಿಂದ ನೀವು ಮಾತುಗಳಲ್ಲೇ ಸಿಕ್ಕಿಹಾಕಿಕೊಳ್ಳುತ್ತೀರ, ಏಕೆಂದರೆ ನೀವು ಮಾತನಾಡುವುದನ್ನು ನಿಲ್ಲಿಸಿಬಿಟ್ಟರೆ ಇನ್ನೇನೂ ಉಳಿದಿಲ್ಲ; ಆಸ್ವಾದಿಸಲು ಯಾವ ಅನುಭವವೂ ಉಳಿದಿಲ್ಲ!

ವಿಶ್ವಶಕ್ತಿಯಲ್ಲಿ ಪ್ರೀತಿಯನ್ನು ಅನುಭವಿಸಲು ಆರಂಭಿಸಿ, ನಿಮಗೆ ಆಗುವ ಸಣ್ಣಪುಟ್ಟ ವಿಷಯಗಳಲ್ಲೇ ದೇವರನ್ನು ಅನುಭವಿಸುತ್ತೀರ. ನೀವೆಲ್ಲರೂ ಇಲ್ಲಿರುವುದರಿಂದ, ನಾನು ನಿಮ್ಮೊಡನೆ ಇಷ್ಟೊಂದು ಮಾತನಾಡುತ್ತಿದ್ದೇನೆ. ನೀವು ಇಲ್ಲದೆ ಇದ್ದರೂ, ನಾನು ಈ ಆಲದ ಮರದೊಂದಿಗೆ ಎಲ್ಲ ಗಿಡಗಳೊಂದಿಗೆ ಮಾತನಾಡಲು ಮುಂದುವರಿಸುತ್ತಿದ್ದೆ! ಇಲ್ಲಿರುವ ಪ್ರತಿ ಒಂದು ಎಲೆಯೂ ನನ್ನೊಂದಿಗೆ ಮಾತನಾಡುತ್ತದೆ. ಅದೇ ನಿಜವಾದ ಪ್ರೀತಿಯ ಭಾಷೆ!

ವರ್ಷಾಂತರಗಳಿಂದ, ಜನರು ನೀವು ಉನ್ನತಿಹೊಂದಿದ ಪ್ರಾಣಿಗಳ ಜಾತಿಯೆಂದು ಹೇಳುತ್ತಾರೆ. ಸ್ಪಷ್ಟವಾಗಿರಿ: ಪ್ರಾಣಿಗಳೂ ಕೂಡ ಪ್ರಾಣಿಗಳಲ್ಲ, ಈ ಭೂಮಿಯ ಪ್ರತಿಯೊಂದು ಅಣುವೂ ಕೂಡ ದೈವತ್ವವನ್ನು ಹೊಂದುವ ಅಸ್ತಿತ್ವದ ಒಂದು ಭಾಗವಾಗಿದೆ. ಇದನ್ನು ನೀವು ಸ್ಪಷ್ಟವಾಗಿ ಅರಿತುಕೊಂಡರೆ, ನಿಮ್ಮ ಸುತ್ತಮುತ್ತಲಿರುವ ಎಲ್ಲದರ ಬಗ್ಗೆ ಕನಿಕರವನ್ನು ಪಡುತ್ತೀರ.

ನಿಮ್ಮ ದೇಹಕ್ಕೆ ಪ್ರೀತಿಯ ಅಗತ್ಯವಿಲ್ಲ, ಆದರೆ ನಿಮ್ಮ ಅಸ್ತಿತ್ವಕ್ಕೆ ಅದರ ಅಗತ್ಯವಿದೆ. ಪ್ರೀತಿಯು ಜೀವ್ವ ವಿಲೀನತೆಗೆ ಹೋಗುವ ಒಂದು ಸಾಹಸ. ನೀವು ಇಲ್ಲದೆ ಇದ್ದಾಗ, ಪ್ರೀತಿ ಇರುತ್ತದೆ. ನಮಗೆ ಇಲ್ಲದೆ ಇರುವುದಕ್ಕೆ ಧೈರ್ಯವಿಲ್ಲ, ಹಾಗಾಗಿ ಹಿಡಿದುಕೊಳ್ಳುತ್ತೇವೆ; ಕಾರಣವಿಲ್ಲದೆ ಪ್ರೀತಿಯಿಂದ ದೂರವಿರುತ್ತೇವೆ.

ಯಾರು ವಿಲೀನಗೊಳ್ಳುವ ಸಾಹಸವನ್ನು ಕೈಗೂಡಲು ಅಸ್ತಿತ್ವವನ್ನು (ಸಂಪೂರ್ಣತೆ ಯನ್ನು) ಅನುಭವಿಸಲು ಸಿದ್ಧವಾಗಿದ್ದಾರೋ, ಅಂಥವರು ಧೈರ್ಯವಂತರು. ನಿಮಗೆ

ಗಮನದ ಅಪೇಕ್ಷೆಯನ್ನು ಬಿಡುವುದು

ತಿಳಿದಿರುವಂತಹ ಸಾಮಾನ್ಯವಾದ ಪ್ರೀತಿಯು ನಾಲ್ಕು ಗೋಡೆಗಳ ಮಧ್ಯೆ ಹೋರಾಡುವ ಹಾಗೆ ಇದೆ. ನೀವು ಸಂಪೂರ್ಣ ಸುರಕ್ಷತೆಯೊಡನೆ ಹೋರಾಡುತ್ತೀರ. ನಿಜವಾದ ಪ್ರೀತಿಯು ಬೀದಿ ಬೀದಿಗಳಲ್ಲಿ ಛಳಿಯಲ್ಲಿ ಹೋರಾಡುವ ಹಾಗೆ ಇದೆ. ಧೈರ್ಯವಂತರು ಬೀದಿಗಳಲ್ಲಿ ಹೋರಾಡಿ ಯಶಸ್ವಿಗಳಾಗುತ್ತಾರೆ. ನಾಲ್ಕು ಗೋಡೆಗಳ ಮಧ್ಯೆ ಹೋರಾಡುವಾಗ ನೀವು ಸುರಕ್ಷಿತವಾಗಿದ್ದೀರ, ಆದರೆ ನಿಮ್ಮ ಜೀವನವು ನಿರ್ಜೀವವಾಗಿರುತ್ತದೆ. ನೀವು ಒಂದು ಜೀವಂತ ಹೆಣದ ಹಾಗೆ ಇದ್ದೀರ. ನೀವು ಬೀದಿಯಲ್ಲಿ ಹೋರಾಡಲು ಸಿದ್ಧರಾದಾಗ, ನೀವು ಸಜೀವಭರಿತರಾಗಿ ಜೀವಂತರಾಗಿ ಇರುತ್ತೀರ.

ಮತ್ತು ಅರ್ಥಮಾಡಿಕೊಳ್ಳಿ, ಹೊರಗಡೆ ಹೋರಾಡುವಾಗ, ನೀವು ವಿಶ್ವಶಕ್ತಿಯ ಅನುಕಂಪ ತುಂಬಿರುವ ಕಣ್ಣುಗಳ ಎದುರಿಗೆ ಹೋರಾಡುತ್ತಿದ್ದೀರಿ ಎಂದು ತಿಳಿದೂ ಹೋರಾಡಿದರೆ, ನೀವು ಯಾವ ಭಯವೂ ಪಡಬೇಕಿಲ್ಲ. ಏಕೆಂದರೆ, ನೀವು ಬಿದ್ದರೂ ಕೂಡ, ವಿಶ್ವಶಕ್ತಿಯ ತೊಡೆಯ ಮೇಲೆಯೇ ಬೀಳುತ್ತೀರ! ಆದರೆ ಮತ್ತೆ ಎದ್ದುನಿಂತು ಹೋರಾಡುವ ಧೈರ್ಯವಿರಬೇಕು. ಇದೊಂದೇ ನೀವು ತೆಗೆದುಕೊಳ್ಳಬೇಕಾಗಿರುವ ಹೆಜ್ಜೆ. ಮಿಕ್ಕದ್ದೆಲ್ಲವನ್ನು ವಿಶ್ವಶಕ್ತಿಯು ನೋಡಿಕೊಳ್ಳುತ್ತದೆ.

ನೀವು ನಿಜವನ್ನರಿಯಲು ಕುತೂಹಲತೆಗಿಂತ ಸ್ವಲ್ಪ ಹೆಚ್ಚು ಆಸಕ್ತಿ ವಹಿಸಿದರೆ, ಇದು ಸಂಭವಿಸುವುದು. ಕೇವಲ ಕುತೂಹಲತೆಯೊಂದೇ ಸಾಲದು. ಕೇವಲ ಕುತೂಹಲರಾಗಿದ್ದರೆ, ಇಲ್ಲಿಗೆ ಬಂದು, ನನ್ನೊಡನೆ ಹರಟೆಮಾಡಿ ಹೊರಟು ಹೋಗುತ್ತೀರ. ಕುತೂಹಲತೆಗಿಂತ ಹೆಚ್ಚು ಆಸಕ್ತಿ ಇದ್ದರೆ, ದಹಿಸುತ್ತಿರುವ ಆಸೆಯೊಂದಿದ್ದರೆ, ನೀವು ಅರಿಯಲು ಪ್ರಾರಂಭಿಸಿ ನಿಜವನ್ನು ಅನುಭವಿಸಲು ಪ್ರಾರಂಭಿಸಬಹುದು. ನೀವು ಕೇವಲ ಕುತೂಹಲರಾಗಿದ್ದರೆ, ಭಕ್ತಿಯೂ ಶ್ರದ್ಧೆಯೂ ಇರುವುದಿಲ್ಲ. ಬೆಂಕಿಯಿದ್ದರೆ, ಭಕ್ತಿಯೂ ಶ್ರದ್ಧೆಯೂ ಇರುತ್ತದೆ. ಶ್ರದ್ಧೆಯೇ ನಿಮ್ಮನ್ನು ಮರಳಿ ಇಲ್ಲಿಗೆ ಕರೆದುಕೊಂಡು ಬರುವಂತಹದು.

ನೀವು ನನ್ನಿಂದ ಓಡಿಹೋಗಲು ಪ್ರಯತ್ನಿಸಿದರೆ, ಅದು ಸಾಧ್ಯವಾಗುವುದಿಲ್ಲ! ಕೆಲವು ದಿನಗಳ ಮಟ್ಟಿಗೆ ನನ್ನಿಂದ ದೂರವಿರುತ್ತೀರೋ ಏನೋ, ಆದರೆ ನಿಮ್ಮಲ್ಲಿರುವ ಆ ಉರಿಯುತ್ತಿರುವ ಆಸೆಯು ನಿಮ್ಮನ್ನು ನನ್ನ ಬಳಿ ಮರಳಿ ಮರಳಿ ಕರೆದುಕೊಂಡು ಬರುತ್ತದೆ. ನಿಜವಾದ ಪ್ರೀತಿಯನ್ನು ಕಂಡುಹಿಡಿಯಲು, ಈ ತೀವ್ರತೆ ನಿಮ್ಮಲ್ಲಿರಲೇಬೇಕು.

ಪ್ರೀತಿಗೆ ಬದಲಾಗಿ ಏನನ್ನೂ ಅಪೇಕ್ಷಿಸದೆ ನಿಮಗೆಷ್ಟು ಸಾಧ್ಯವೋ ಅಷ್ಟು ಪ್ರೀತಿಸಿ. ಉದ್ದೇಶಪೂರ್ವಕವಾದ ಪ್ರೀತಿಯು ಪ್ರೀತಿಯಲ್ಲ; ಅದು ಕೇವಲ ಒಂದು ವ್ಯವಹಾರ. ನಿಮಗೆ ಕಾರಣವಿಲ್ಲದೆಯೇ ಪ್ರೀತಿಸಲು ಸಾಧ್ಯವಾದರೆ, ನಿಮ್ಮ ದಾರಿಯಲ್ಲಿ ಬರುವ ಎಲ್ಲವನ್ನೂ ಎಲ್ಲರನ್ನೂ ಪ್ರೀತಿಸಿದಾಗ, ನಿಮ್ಮೊಳಗಿರುವ ಅತ್ಯುನ್ನತ (trenendous) ಚೈತನ್ಯ ಹಾಗೂ ಸೌಂದರ್ಯವನ್ನು ಪ್ರಕಟಿಸುತ್ತೀರ. ನಿಮ್ಮ ದೈಹಿಕ ಸೌಂದರ್ಯವನ್ನು ಲಕ್ಷಿಸದೆ ನೀವು ಸುಮ್ಮನೆ ಹಾಗೆಯೇ ಸುಂದರವಾಗಿ ಕಾಣುತ್ತೀರ.

ಮತ್ತೊಂದು ವಿಷಯ: ಕಾರಣವಿಲ್ಲದೆ ಉಂಟಾಗುವ ಪ್ರೀತಿಯು ನಿಮಗೆ ಯಾವ ಪ್ರತಿಫಲವನ್ನೂ ನೀಡುವುದಿಲ್ಲವೆಂದು ಭಾವಿಸಬೇಡಿ. ಅದು ನಿಮಗೆ ಬಹಳಷ್ಟು ರೀತಿಗಳಲ್ಲಿ ನಿಮಗೆ ಪ್ರತಿಫಲವನ್ನು ನೀಡುತ್ತದೆ. ಆದರೆ, ಇವು ನಿಮ್ಮ ಬಳಿ ಬರುವುದನ್ನು ಕಂಡರೂ ಅದು ನಿಮ್ಮ ಮೇಲೆ ಪ್ರಭಾವ ಬೀರದೆ ಇರುವಷ್ಟು ನೀವು ವಿಕಸಿತರಾಗಬೇಕು, ಮತ್ತು ಪ್ರೀತಿಸುವುದಕ್ಕಾಗಿಯೇ ಪ್ರೀತಿಸುವುದನ್ನು ಮುಂದುವರಿಸಬೇಕು. ನಿಮ್ಮ ಬುದ್ಧಿಯು ನಿಮಗೆ ಬರುವ ಪ್ರತಿಫಲವನ್ನು ನೀವು ನೋಡುವಂತೆ ಮಾಡಿ, ಅದೇ ಬುದ್ಧಿಶಕ್ತಿಯು ನಿಮ್ಮನ್ನು ಆನಂದಮಯವಾಗಿ, ಅವುಗಳಿಂದ ಪ್ರಭಾವಿತರಾಗದೆ ಇರುವ ಹಾಗೆ ಮಾಡುತ್ತದೆ.

ನಿಮ್ಮ ಹೃದಯವು ಕ್ರಾಂತಿಕಾರಕ ಬದಲಾವಣೆಯನ್ನು ಹೊಂದುತ್ತದೆ ಮತ್ತು ನೀವು ಒಬ್ಬ ಹೊಸ ಮನುಷ್ಯನಾಗುತ್ತೀರ. ನೀವು ನಿಮ್ಮಲ್ಲಿಯೇ ಬದಲಾವಣೆಯನ್ನು ಕಾಣಬಹುದು, ಬೇರೆಯವರೂ ಕೂಡ ಅದನ್ನು ಕಾಣಬಹುದು. ಜನರು ನಿಮಗೆ ಒಂದು ಹೊಸ ರೀತಿಯ ಆದರತೆಯನ್ನು ಬೆಳೆಸಿಕೊಳ್ಳುತ್ತಾರೆ. ನೀವು ಅವರಿಗೆ ಅರ್ಥಮಾಡಿಕೊಳ್ಳಲಾಗದ ರೀತಿಯಲ್ಲಿ ವಿಕಾಸವಾಗುತ್ತಿರುವುದನ್ನು ನೋಡುತ್ತಾರೆ. ನೀವು ಪ್ರಸರಿಸುವ ಚೈತನ್ಯವನ್ನು ಅವರು ಅನುಭವಿಸುತ್ತಾರೆ.

ಕಾರಣವಿಲ್ಲದೆಯೇ ಪ್ರೀತಿಸಲು, ನೀವು ಸ್ವತಂತ್ರವಾಗಿರಬೇಕು. ನಿಮಗೆ ಸ್ವತಂತ್ರವಾದ ಮುಕ್ತವಾದ ಭಾವನೆಯುಂಟಾದಾಗ, ನೀವು ಕಾರಣವಿಲ್ಲದೆ,

ಚಿಂತೆಯಿಲ್ಲದೆಯೇ ಪ್ರೀತಿಸುತ್ತೀರ 'ಇಲ್ಲಿ' ಮುಕ್ತಿ ಎಂಬುವುದರ ಅರ್ಥವೇನು? ಜಾತಿ, ಮತ, ಪರಿವಾರ, ಸಂಬಂಧಿಕರು ಮತ್ತು ಬೇರೆಲ್ಲ ವಿಚಾರಗಳಿಂದ ಬಂಧಿತರಾಗದೆ ಇರುವುದು ಎಂದು. ಏಕೆಂದರೆ, ನೀವು ಇವೆಲ್ಲದರಿಂದ ಬಂಧಿತರಾದಾಗ, ನಿಮ್ಮ ಪ್ರೀತಿಯು ಬಂಧಿತವಾಗಿರುತ್ತದೆ ಮತ್ತು ಬಂಧಿತವಾದ ಪ್ರೀತಿಯು ನಿಜವಾದ ಪ್ರೀತಿಯಲ್ಲ. ಸೀಮಿತವಾಗಿ ಹೇಗೆ ತಾನೇ ಪ್ರೀತಿಸಲು ಸಾಧ್ಯ? ಅದು ಪ್ರೀತಿ ಎಂಬ ಪದದ ವಿವರಣೆಗೆ ವಿರುದ್ಧವಾಗಿದೆ!

ನಿಮ್ಮ ಕುಟುಂಬವನ್ನು, ಮತವನ್ನು ಮತ್ತಿತ್ತರ ವಿಷಯಗಳನ್ನು ಮರೆಯಬೇಕೆಂದು ನಾನು ಹೇಳುತ್ತಿಲ್ಲ; ಈ ಎಲ್ಲ ವಿಷಯಗಳ ಪ್ರಸಂಗಗಳಲ್ಲಿ ಪ್ರೀತಿಯನ್ನು ನೋಡಬೇಡಿ ಅಷ್ಟೆ. ನೀವು ಪ್ರೀತಿಸುವಾಗ, ಮುಕ್ತರಾದ ಭಾವನೆಯಿಂದ ಪ್ರೀತಿಸಿರಿ. ನಿಮಗೆ ಯಾವಾಗ 'ಮುಕ್ತ' ಎಂಬ ಭಾವನೆಯು ಉಂಟಾಗುವುದು, ಈ ಎಲ್ಲ ವಿಷಯಗಳ ಬಂಧನದಿಂದ ಮುಕ್ತರಾದರೆ; ಯಾವೊಂದು ನಿರ್ದಿಷ್ಟ ವಿಷಯದ ಜೊತೆ ಪರಿಚಯಿಸಿಕೊಳ್ಳದೇ ಇದ್ದಾಗ, ನೀವು ಇಡೀ ಅಸ್ತಿತ್ವಕ್ಕೆ ಸೇರುತ್ತೀರ ಎಂಬ ಭಾವನೆ ಉಂಟಾದಾಗ; ಆಗ ನೀವು ಮಿತಿಯಿಲ್ಲದೆಯೇ ಪ್ರೀತಿಸಲು ಸಾಧ್ಯವಾಗುತ್ತದೆ.

ನಾನು ಯಾವಾಗಲೂ ಜನರಿಗೆ ಹೇಳುತ್ತೇನೆ: ನೀವು ನನ್ನ ಪ್ರೀತಿಯನ್ನು ಪರಸ್ಪರರಲ್ಲಿ ಕಾಣಲು ಸಾಧ್ಯವಾದರೆ ನಿಮಗೆ ನಿಜವಾದ ಪ್ರೀತಿಯ ಒಂದು ಕುಡಿನೋಟ (glimpse) ದೊರಕಿದೆ. ಏಕೆಂದರೆ, ನಾನು ಆಗಲೇ ಹೇಳಿದ ಹಾಗೆ, ನನ್ನನ್ನು ಪ್ರೀತಿಸುವುದು ತುಂಬ ಸುಲಭ! ಆದರೆ, ನೀವು ನನ್ನಲ್ಲಿ ಅನುಭವಿಸುವ ಪ್ರೀತಿಯನ್ನು ಇತರರಲ್ಲಿಯೂ ಕೂಡ ಅನುಭವಿಸಿದರೆ, ನೀವು ನಿಜವಾದ ಪ್ರೀತಿಯ ಎಳೆಯನ್ನು ಕಂಡುಕೊಂಡಿದ್ದೀರ; ನೀವು ಎಲ್ಲದರಲ್ಲಿ ಅಸ್ತಿತ್ವವನ್ನು ಅನುಭವಿಸಲು ಆರಂಭಿಸಿದ್ದೀರ. ನಂತರ ಮೆಲ್ಲನೆ, ಎಲ್ಲವನ್ನು ಎಲ್ಲರನ್ನು ಅಸ್ತಿತ್ವದ ಒಂದು ಭಾಗವೆಂದು ಆಲಂಗಿಸಲು ಚಲಿಸುತ್ತೀರ.

ಈಗ, ಈ ಅನಾಹತ ಚಕ್ರಕ್ಕೆ ಒಂದು ಸರಳವಾದ, ಅತಿ ಪರಿಣಾಮಕಾರಿಯಾದ ಧ್ಯಾನತಂತ್ರ - ಮಹಾಮಂತ್ರ ಧ್ಯಾನ ತಂತ್ರವನ್ನು ಈಗ ಮಾಡೋಣ.

ಮಹಾಮಂತ್ರ ಧ್ಯಾನ

(ಒಟ್ಟು: 20 ನಿಮಿಷಗಳು) ಮಹಾಮಂತ್ರ ಧ್ಯಾನ ನಮ್ಮ ಹೃದಯದ ಕೇಂದ್ರ ಭಾಗದಲ್ಲಿ ಇರುವಂತಹ ಅನಾಹತ ಚಕ್ರವನ್ನು ಜಾಗೃತಗೊಳಿಸುವ ಪುರಾತನವಾದ ಟಿಬೇಟಿಯನ್ ಬೌದ್ಧ ತಂತ್ರ. ಈ ಧ್ಯಾನ ನಿಮ್ಮ ಮನಸ್ಸನ್ನು ದೃಢ ಮತ್ತು ಸ್ಥಿರವಾಗಿಸುತ್ತದೆ. ಇದು ನಿಮ್ಮಲ್ಲಿ ಒಳ್ಳೆಯ ಶಕ್ತಿಯ ಪ್ರವಾಹವನ್ನು ಸೃಷ್ಟಿಸುತ್ತದೆ.

ಈ ಧ್ಯಾನವನ್ನು ಮಾಡುವಾಗ ನಿಮ್ಮ ಮಾಲೆಯನ್ನು ನಿಮ್ಮ ಕೊರಳಿನ ಸುತ್ತ ಧರಿಸಬಹುದು. ನೀವು ಧ್ಯಾನದ ವೇಳೆಯಲ್ಲಿ ಸೃಷ್ಟಿಸಿದ ಶಕ್ತಿಯನ್ನು ಹಿಡಿದಿಟ್ಟುಕೊಳ್ಳಲು ಇದು ನೆರವಾಗುತ್ತದೆ.

ಇದನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಆಹಾರ ಸೇವಿಸಿದ ಎರಡು ಗಂಟೆಗಳ ನಂತರ ಮಾಡಬೇಕು. ಪ್ರಾತಃಕಾಲ ಸೂಕ್ತವಾದದ್ದು. ಇದನ್ನು ಏಕಾಂಗಿಯಾಗಾಗಲೀ ಅಥವಾ ಗುಂಪಿನಲ್ಲಾಗಲೀ ಮಾಡಬಹುದು. ಗುಂಪಿನೊಡನೆ ಮಾಡಿದಾಗ ನೀವು ಧ್ಯಾನ ಮಾಡಿದ ಸ್ಥಳವನ್ನೆಲ್ಲಾ ಇದು ಪರಿಣಾಮಕಾರಿಯಾಗಿ ಶಕ್ತಿಯುತವನ್ನಾಗಿ ಮಾಡುತ್ತದೆ.

ಭಾಗ-1

ತಲೆ, ಕುತ್ತಿಗೆ ಮತ್ತು ಬೆನ್ನುಮೂಳೆ ನೇರವಾಗಿರುವ ರೀತಿಯಲ್ಲಿ ಕುರ್ಚಿಯ ಮೇಲಾಗಲೀ, ನೆಲದ ಮೇಲಾಗಲೀ, ಆರಾಮವಾಗಿ ಕುಳಿತುಕೊಳ್ಳಿ.

ನಿಮ್ಮ ಕಣ್ಣುಗಳನ್ನು ಮುಚ್ಚಿ ಕಣ್ಣು ಗುಡ್ಡೆಗಳನ್ನು ಮಾನಸಿಕವಾಗಿ ಗಟ್ಟಿಯಾಗಿಸಿಕೊಳ್ಳಿ ಹಾಗೂ ಆಲೋಚನೆಗಳು ಬಾರದ ರೀತಿ ಪ್ರಯತ್ನಿಸಿ.

ನಿಮ್ಮ ತುಟಿಗಳನ್ನು ಒಟ್ಟಿಗೆ ಜೋಡಿಸಿ ಮತ್ತು “ಮ್‌ಮ್‌.....” ಶಬ್ದವನ್ನು ಒಳಗಿನಿಂದ ಹೊರಡಿಸಿ.

ಈ ಶಬ್ದವು ಮತ್ತೊಮ್ಮೆ ಉಸಿರು ತೆಗೆದುಕೊಳ್ಳುವ ಮೊದಲು ಸಾಧ್ಯವಾದಷ್ಟೂ ದೀರ್ಘವಾಗಿರಲಿ. ನಾಭಿಯೊಳಗಿನಿಂದ ಎಷ್ಟು ಆಳವಾಗಿರಲು ಸಾಧ್ಯವೋ ಅಷ್ಟೂ ಹಾಗೂ ಆದಷ್ಟೂ ಗಟ್ಟಿಯಾಗಿರಲಿ.

ಗಮನದ ಅಪೇಕ್ಷೆಯನ್ನು ಬಿಡುವುದು

ಪ್ರತಿ ‘ಮ್...’ ಶಬ್ದದ ನಡುವೆ ಆಳವಾದ ಉಸಿರು ತೆಗೆದುಕೊಳ್ಳಲು ಪ್ರಯತ್ನಿಸಬೇಡಿ, ದೇಹ ತನಗೆ ತಾನೇ ಆವಶ್ಯಕವಾದಾಗ ಉಸಿರಾಡುತ್ತದೆ. ಉದ್ವೇಗಗೊಳ್ಳಬೇಡಿ.

ನಿಮ್ಮ ಇಡೀ ಜೀವವನ್ನು ಮತ್ತು ಶಕ್ತಿಯನ್ನು ಈ ತರಂಗಗಳನ್ನು ಹೊರಡಿಸಲು ಉಪಯೋಗಿಸಿ. ಆ ಶಬ್ದವೇ ಆಗಿಬಿಡಿ. ನಿಮ್ಮ ಇಡೀ ದೇಹವು ಹಮ್ಮಿಂಗ್ ತರಂಗದಿಂದ ತುಂಬಿ ಹೋಗಲು ಬಿಡಿ.

20 ನಿಮಿಷವಾದ ತಕ್ಷಣ ಹಮ್ಮಿಂಗ್ ನಿಲ್ಲಿಸಿ. ಕ್ಯಾಸೆಟ್ ಹಾಕಿದ್ದಲ್ಲಿ “ನಿಲ್ಲ್ರಿ!” ಎಂಬುದು ಕೇಳಿಸುತ್ತದೆ, ತಕ್ಷಣ ಹೇಗಿದ್ದೀರೋ ಹಾಗೆಯೇ ಹಮ್ಮಿಂಗ್ ನಿಲ್ಲಿಸಿ.

ಭಾಗ - ೨

ಹಮ್ಮಿಂಗ್ ನಿಲ್ಲಿಸಿದ ನಂತರವೂ ನಿಮ್ಮ ಕಣ್ಣುಗಳು ಮುಚ್ಚಿಯೇ ಇರಲಿ, ಮುಂದಿನ 10 ನಿಮಿಷ ಮೌನವಾಗಿ ಮತ್ತು ಚಲನೆಯಿಲ್ಲದೆ ಆನಂದ ಸ್ಥಿತಿಯಲ್ಲಿ ಮುಗುಳ್ನಗೆಯೊಂದಿಗೆ ಇರಿ. ಏನಾದರೂ ಆಲೋಚನೆಗಳು ಬಂದರೆ, ಬರಲಿ. ಅವುಗಳ ಬಗ್ಗೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಾಗಲೀ ಅಥವಾ ಅವುಗಳನ್ನು ವಿರೋಧಿಸುವುದಾಗಲೀ ಮಾಡದೇ ದೂರದರ್ಶನ ನೋಡುವಂತೆ ನಿಮ್ಮ ಮನಸ್ಸನ್ನು ಸುಮ್ಮನೆ ವೀಕ್ಷಿಸಿ.

ಮೌನವಾಗಿ ಆನಂದವಾಗಿರಿ. ಈ ಸಮಯದಲ್ಲಿ 20 ನಿಮಿಷಗಳಲ್ಲಿ ಹಮ್ಮಿಂಗ್‌ನಿಂದ ಸೃಜಿಸಿದ ಶಕ್ತಿಯು ನಿಮ್ಮ ದೇಹದ ಮೂಲೆಮೂಲೆಗಳಲ್ಲೂ ಹೊಕ್ಕು ಜೀವಿಯನ್ನು ಆಳವಾಗಿ ಶುದ್ಧಗೊಳಿಸುತ್ತದೆ.

ಆನಂದವಾಗಿರಿ!

ಭಾವಚಿತ್ರ