KAILASA Library/ಖಚಿತ ಪರಿಹಾರಗಳು/ಅಧ್ಯಾಯ - 2: ಪರಿಚಯSign in
ಖಚಿತ ಪರಿಹಾರಗಳು

ಅಧ್ಯಾಯ - 2: ಪರಿಚಯ

This text was machine-transcribed from the printed book and may contain errors. Select the words and choose “Report a mistake”.

(Introduction)

ಈ ಗ ವಿಷಯಕ್ಕೆ ಬರೋಣ

ನೀವು ಈ ಚಕ್ರಗಳಿಗೆ ಸಂಬಂಧಿಸಿದ ಧ್ಯಾನ ಶಿಬಿರದಲ್ಲಿ ಏಕೆ ಭಾಗವಹಿಸಬೇಕು? ಇಲ್ಲಿ ನಿಮಗಾಗಿ ಏನಿದೆ? ಈ ಪ್ರಶ್ನೆಗೆ ಈ ಅವಧಿಯಲ್ಲಿ ಉತ್ತರವನ್ನು ನೀಡಲು ಪ್ರಯತ್ನಿಸುತ್ತೇನೆ. ಇದಕ್ಕೆ ಮೊದಲನೆಯದಾಗಿ ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂದು ವಿಶ್ಲೇಷಿಸೋಣ. ನಿಮ್ಮ ಮತ್ತು ನಿಮ್ಮ ನೈಜಸ್ವರೂಪದ ನಡುವೆ ಮನಸ್ಸು ಒಂದೇ ಅಡ್ಡವಾಗಿ ನಿಲ್ಲುವುದು. ನಿಮಗೆ ನಿಮ್ಮ ಮನಸ್ಸನ್ನು ಬಿಡಲು ನಿಮಗೆ ಸಾಧ್ಯವಾದರೆ, ನಿಮ್ಮ ನೈಜಸ್ವರೂಪವು ಜ್ಞಾನಿಯಾಗುತ್ತದೆ.

ಮನಸ್ಸು ಹೇಗೆ ಕೆಲಸ ಮಾಡುತ್ತದೆ? ಇಲ್ಲಿ, ಈ ಚಿತ್ರವನ್ನು ನೋಡಿ (ಮುಂದಿನ ಪುಟದಲ್ಲಿ). ಈ ಚಿತ್ರವು ಕಣ್ಣಿನ ಮೂಲಕ ಪ್ರವೇಶಿಸುವ ಮಾಹಿತಿಯನ್ನು ಹೇಗೆ ಪರಿಷ್ಕರಿಸಲಾಗುವುದು ಎಂಬುದನ್ನು ತೋರಿಸುತ್ತದೆ. ನಿಜವಾಗಿ ನೋಡಿದರೆ ಕಣ್ಣಿನ ಮೂಲಕ ಮಾತ್ರವಲ್ಲ, ಪಂಚೇಂದ್ರಿಯಗಳು ಎಂದರೆ ಕಣ್ಣುಗಳು, ನಾಸಿಕ, ಕಿವಿಗಳು, ನಾಲಿಗೆ ಮತ್ತು ಸ್ಪರ್ಶ ಇವುಗಳ ಮೂಲಕ ಪ್ರವೇಶಿಸುವ ಮಾಹಿತಿಯೂ ಕೂಡ ಹೇಗೆ ಪರಿಷ್ಕರಿಸಲಾಗುವುದು ಎಂಬುದನ್ನು ತೋರಿಸುತ್ತದೆ. ಉದಾಹರಣೆಗೆ, ಈಗ ಕಣ್ಣನ್ನು ಆಯ್ದುಕೊಳ್ಳೋಣ. ವಿವರಿಸುತ್ತೇನೆ.

ನೀವು ಏನನ್ನಾದರೂ ನೋಡಿದಾಗ, ಮೊದಲು ಕಣ್ಣು ಅದನ್ನು ನೋಡುತ್ತದೆ. ಕಣ್ಣಿನ ಮೂಲಕ ಸಂಗ್ರಹಿಸುವ ಮಾಹಿತಿಯನ್ನು ಅಂಕೀಕೃತಗೊಳಿಸಲಾಗುತ್ತದೆ. ಇದನ್ನು ಮಾಡುವುದನ್ನು ಸಂಸ್ಕೃತದಲ್ಲಿ 'ಚಕ್ಷು' ಎಂದು ಕರೆಯುತ್ತೇವೆ. ಇದು ಒಂದು ತರಹ ಸಂಕೇತವನ್ನು ಅಂಕೀಕೃತಗೊಳಿಸುವ ಪರಿವರ್ತಕದಂತೆ (Digital signal pro-cessor - DSP) 'ಚಕ್ಷು'ವು ಒಳಹೋಗುವ ಮಾಹಿತಿಯನ್ನು ಅಂಕೀಕೃತ 'ಫೈಲ್'

ಮನಸ್ಸು ಹೇಗೆ ಕೆಲಸ ಮಾಡುತ್ತದೆ....

(ಕಡತ) ಆಗಿ ಪರಿವರ್ತಿಸುವುದು. ಕಣ್ಣಿನ ಮೂಲಕ ಮಾತ್ರವಲ್ಲ, ಪಂಚೇಂದ್ರಿಯಗಳ ಮೂಲಕ ಒಳಹೋಗುವ ಮಾಹಿತಿಯೂ ಇದೇ ರೀತಿ ಪರಿವರ್ತನೆಯಾಗುವುದು.

ತದನಂತರ ಈ ಫೈಲು ನೆನಪಿನ ಭಂಡಾರವನ್ನು ತಲುಪುತ್ತದೆ. ಸಂಸ್ಕೃತದಲ್ಲಿ ಈ ಭಾಗವನ್ನು 'ಚಿತ್ತ' ಎಂದು ಕರೆಯುತ್ತೇವೆ. ಚಿತ್ತದಲ್ಲಿ ಈ ಫೈಲಿನ ಮೇಲೆ ಇನ್ನಷ್ಟು ಕೆಲಸ ಮಾಡಲಾಗುವುದು. ಉದಾಹರಣೆಗೆ ನೀವು ಈಗ ನನ್ನನ್ನು ನೋಡುತ್ತಿದ್ದರೆ ಫೈಲನ್ನು ಚಕ್ಷುವಿನ ಮೂಲಕ ಪರಿಷ್ಕರಿಸಿ ನಂತರ ಚಿತ್ತಕ್ಕೆ ತಲುಪಿಸಲಾಗುವುದು ಮತ್ತು ಚಿತ್ತವು ಆ ಮಾಹಿತಿಯನ್ನು ವಿಶ್ಲೇಷಿಸಲು ಆರಂಭಿಸುತ್ತದೆ. ಅದು ಇದು ಪ್ರಾಣಿಯಲ್ಲ, ಗಿಡವಲ್ಲ, ಬಂಡೆಯಲ್ಲ... ಹೀಗೆ ಹೇಳಲು ಆರಂಭಿಸುತ್ತದೆ. ಹೀಗೆ ವರ್ಜಿಸುವ ಕ್ರಿಯೆಯನ್ನು ಚಿತ್ತವು ಮಾಡುತ್ತದೆ.

ನಂತರ ಫೈಲು ಮನಸ್ಸಿಗೆ ಹೋಗುತ್ತದೆ. ಮನಸ್ಸು ಫೈಲನ್ನು ಗುರುತಿಸುವ ಕೆಲಸವನ್ನು ಮಾಡುತ್ತದೆ. ಅದು: ಇದು ಒಬ್ಬ ಮನುಷ್ಯ; ತರಗತಿಯನ್ನು ತೆಗೆದುಕೊಳ್ಳುತ್ತಿರುವ ಒಬ್ಬ ಮನುಷ್ಯ ಹೀಗೆ ಹೇಳುತ್ತದೆ. 'ಇದೇ ಇದು' ಎಂದು ಮನಸ್ಸು ತೀರ್ಮಾನಿಸುತ್ತದೆ.

ಮುಂದೆ ಇಡೀ ಫೈಲು ಅಹಂಕಾರಕ್ಕೆ ನಿರ್ದಿಷ್ಟ ಜಿಗಿತವನ್ನು ಮಾಡುತ್ತದೆ. ನಂತರ, ಅಹಂಕಾರವು ನಿಮ್ಮ ಹಿಂದಿನ ಅನುಭವಗಳನ್ನು ಅನುಸರಿಸಿ, ನಿಮ್ಮ ಮುಂದಿನ ಪ್ರತಿಕ್ರಿಯೆ ಅಥವಾ ನಿರ್ಧಾರವನ್ನು ನಿರ್ಧರಿಸುತ್ತದೆ. ನಿಮಗೆ ಇಂತಹದೇ ಯೋಗ ಅಥವಾ ಧ್ಯಾನದ ಶಿಬಿರಗಳಲ್ಲಿ ಹಿಂದಿನ ಅನುಭವಗಳಿದ್ದರೆ ಅವು ನಿಮಗೆ ಸರಿಹೋಗದಿದ್ದರೆ ಮತ್ತು ನಿಮಗೆ ಅವುಗಳಿಂದ ಉಪಯೋಗವಾಗಿದೆ ಎಂದೆನಿಸಿದರೆ, ನೀವು ಇಲ್ಲಿ ಕುಳಿತುಕೊಳ್ಳುವುದಕ್ಕೆ ನಿರ್ಧರಿಸುತ್ತೀರ, ಇಲ್ಲದಿದ್ದರೆ ಇಲ್ಲಿಂದ ಹೊರಡುವುದೇ ಒಳಿತೆಂದುಕೊಳ್ಳುತ್ತೀರ!

ಈ ಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ: ನೀವು ನನ್ನನ್ನು ನೋಡುತ್ತಿದ್ದೀರ, ಕಣ್ಣು ಮಾಹಿತಿಯನ್ನು ಚಕ್ಷುವಿಗೆ ತಲುಪಿಸುತ್ತದೆ, ಚಕ್ಷುವು ಇದನ್ನು ಅಂಕೀಕೃತ (digitised) ಸಂಕೇತವನ್ನಾಗಿ ಪರಿವರ್ತಿಸುತ್ತದೆ. ನಂತರ, ಚಿತ್ತವು ಫೈಲನ್ನು 'ಇದು ಅಲ್ಲ...' 'ಇದು ಅಲ್ಲ...' ಹೀಗೆ ವರ್ಜಿಸುವ ಕ್ರಿಯೆಯನ್ನು ಮಾಡುತ್ತದೆ. ನಂತರ, ಮನಸ್ಸು 'ಇದೇ ಇದು...' ಎಂದು ಗುರುತಿಸುತ್ತದೆ ನಂತರ, ಇಡೀ ಫೈಲು ಅಹಂಕಾರಕ್ಕೆ ನಿರ್ದಿಷ್ಟ ಜಿಗಿತವನ್ನು ಮಾಡುತ್ತದೆ. ಇಲ್ಲಿ ನೀವು ನಿಮ್ಮ ಹಿಂದಿನ ಅನುಭವಗಳನ್ನು ಅನುಸರಿಸಿ, ಇಲ್ಲಿ ಕುಳಿತುಕೊಳ್ಳುವುದೋ ಅಥವಾ ಹೊರಡುವುದೋ ಎಂದು ನಿರ್ಧರಿಸುತ್ತೀರ.

ಈಗ, ಕಣ್ಣಿನ ಮತ್ತು ಮನಸ್ಸಿನ ನಡುವೆ ಕ್ರಿಯೆಯು ನಡೆಯುವ ಕಾಲಾವಧಿಯನ್ನು 'Tp' ಎಂದು ಕರೆಯೋಣ. 'Tp' ಎಂಬುದು ಕಣ್ಣಿನ ಮತ್ತು ಮನಸ್ಸಿನ ನಡುವೆ ನಡೆಯುವ ಕ್ರಿಯೆ ತೆಗೆದುಕೊಳ್ಳುವ ಸಮಯ. ಕಣ್ಣು ಮತ್ತು ಮನಸ್ಸಿನ ನಡುವೆ ನಡೆಯುವ ಈ ಕ್ರಿಯೆಯು ತರ್ಕಬದ್ಧವಾಗಿ ಅರಿವಿನಿಂದೊಡಗೂಡಿರುತ್ತದೆ. ನಿಮಗೆ ಈ ಕ್ರಿಯೆಯ ಸಂಪೂರ್ಣ ಅರಿವಿದೆ. ನಿಮಗೆ ಅದರ ಸಂಭವದ ಅರಿವಿರುವುದು.

ಈಗ ಮನಸ್ಸಿನಿಂದ ಅಹಂಕಾರಕ್ಕೆ ಜಿಗಿತವು ಬಹು ಮಟ್ಟಿಗೆ, ಅರಿವಿಲ್ಲದೆ ಆಗುವುದು, ಆ ಸಮಯದಲ್ಲೇ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಮತ್ತದು ಬಹುವಾಗಿ ನಿಮ್ಮ ಅರಿವಿಲ್ಲದೆ ನಡೆಯುವ ಕ್ರಿಯೆಯಾಗಿರುವುದು. ಇದು ನಿಮಗೆ ಅರಿವಿಲ್ಲದೆ ಸಂಭವಿಸುತ್ತದೆ. ಈ ಕಾಲಾವಧಿಯನ್ನು 'Tq' ಎಂದು ಕರೆಯೋಣ. ಈ ಸಮಯದಲ್ಲಿ ನೀವು ತರ್ಕವಿಲ್ಲದೆ ಹಾಗೆಯೇ ತೀರ್ಮಾನಿಸಿಬಿಡುತ್ತೀರ; ನಿಮ್ಮ ತರ್ಕಬದ್ಧವಾದ ಆಲೋಚನಾಕ್ರಿಯೆ, ವಿರೋಧವಾಗಿ ನಿರ್ಧರಿಸುತ್ತೀರ. ಕ್ಷಿಪ್ರವಾಗಿ, ತರ್ಕವಿಲ್ಲದೆ ನಿರ್ಧರಿಸುತ್ತೀರ.

ಹೀಗೇಕೆ ಸಂಭವಿಸುತ್ತದೆ? ನೀವೇಕೆ ಅರಿವಿಲ್ಲದೆ ನಿರ್ಧರಿಸಿ, ನಂತರ ವಿಷಾದಿಸುತ್ತೀರ?

ಇದಕ್ಕೆ ಕಾರಣ, ನಿಮ್ಮ ಅರಿವಿಲ್ಲದ ವಲಯವು ನಕಾರಾತ್ಮಕ ನೆನಪುಗಳು ಮತ್ತು ಅಶಾಂತತೆಯಿಂದ ತುಂಬಿರುವುದು. ನಿಮ್ಮ ಹಿಂದಿನ ನೆನಪುಗಳು - (ಸಂಸ್ಕೃತದಲ್ಲಿ ಇವುಗಳನ್ನು ಸಂಸ್ಕಾರಗಳು ಎಂದು ಕರೆಯುತ್ತೇವೆ) ಮತ್ತು ನಿಮ್ಮ ಹಿಂದಿನ ಆಲೋಚನೆಯ ಮಾದರಿಗಳು ಈ ವಲಯದಲ್ಲಿ ಸಂಗ್ರಹಿಸಲಾಗಿದೆ. ಈ ಸಂಗ್ರಹಿಸಿದ ನೆನಪುಗಳಿಗೆ ಮನೋಶಾಸ್ತ್ರದಲ್ಲಿ 'ಎನ್‌ಗ್ರಾಮ್ಸ್' (engrams) ಎಂದು ಹೇಳುತ್ತೇವೆ. ಈ ವಲಯದಲ್ಲಿ ಬಹಳಷ್ಟು ಫೈಲುಗಳು ಸಂಗ್ರಹವಾಗಿವೆ. ಈ ನೆನಪುಗಳು ಅಥವಾ ಘಟನೆಗಳು ಯಾವುದೇ ತರ್ಕಬದ್ಧವಾದ ಸಂಬಂಧವಿಲ್ಲದೆಯೇ ಸಂಗ್ರಹವಾಗಿವೆ.

ಫೈಲು ಈ ವಲಯಕ್ಕೆ ಜಿಗಿತವನ್ನು ಮಾಡಿದಾಗ, ಏನಾಗುತ್ತದೆ ಎಂದರೆ, ಅಲ್ಲಿ ಅತಿಯಾಗಿ ಮಾಹಿತಿಯು ಸಂಗ್ರಹವಾಗಿರುವುದರಿಂದ, ನಿಮ್ಮಲ್ಲಿ ಅಶಾಂತತೆ ಖಚಿತ ಪರಿಹಾರಗಳು

ಉಂಟಾಗಿ, ಫೈಲು ಅಹಂಕಾರವನ್ನೂ ಕೂಡ ಸರಿಯಾಗಿ ತಲುಪದೆ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು. ಸಂಗ್ರಹಿಸಿರುವ ಸಂಸ್ಕಾರಗಳು ಪಡೆದ ಮಾಹಿತಿಯ ಮೇಲೆ ಆಡತೊಡಗುತ್ತವೆ. ಅವು ತಮ್ಮನ್ನು ತಾವು ತೊಡಗಿಸಿಕೊಂಡು ತೀರ್ಮಾನ ತೆಗೆದುಕೊಳ್ಳುವ ಕ್ರಿಯೆಗೆ ಹಾವಳಿಯುಂಟುಮಾಡುತ್ತದೆ.

ಇದರ ಫಲವಾಗಿ, ಅಹಂಕಾರವು ಸಂಪೂರ್ಣವಾಗಿ ಸಹಜಪ್ರವೃತ್ತಿಯ ಮಟ್ಟದಲ್ಲಿ ಶೀಘ್ರದ ಮತ್ತು ಆತುರದ ನಿರ್ಧಾರವನ್ನು ತೆಗೆದುಕೊಂಡು, ನಂತರ ಫೈಲನ್ನು ಹಿಂತಿರುಗಿಸುತ್ತದೆ. ಈ ಕ್ರಿಯೆಯು ಅರಿವಿಲ್ಲದೆ, ಮಿಂಚಿನ ವೇಗದಲ್ಲಿ ಸಂಭವಿಸುತ್ತದೆ.

ಉದಾಹರಣೆಗೆ, ನೀವು ಸಂಗ್ರಹಿಸಿರುವ ಮಾಹಿತಿಯಿಂದ, ಧೂಮಪಾನವು ಹಾನಿಕರವೆಂದು ಮತ್ತು ಅದು ನಿಮ್ಮ ದೇಹಕ್ಕೆ ಅಥವಾ ಮನಸ್ಸಿಗೆ ಒಳ್ಳೆಯದಲ್ಲವೆಂದೂ ತಿಳಿದಿದೆ. ‘Tp’ ಮಟ್ಟದಲ್ಲಿ ಇರುವ ತನಕ ಹೀಗೆ ಇರುತ್ತದೆ. ಆದರೆ ಮನಸ್ಸು ಅಹಂಕಾರಕ್ಕೆ ಜಿಗಿತವನ್ನು ಮಾಡಿದ ಕೂಡಲೇ ಸಂಸ್ಕಾರಗಳು ನಿಮಗೆ ಸಿಗರೇಟು ಸೇದಲು ತಿಳಿಸುತ್ತದೆ, ಅದರಂತೆಯೇ ಸೇದಲು ನಿರ್ಧರಿಸುತ್ತೀರ! ಆಲೋಚನಾ ಕ್ರಿಯೆಯು ‘ಸೇದಬೇಡ, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ’ ಎಂದು ಹೇಳುತ್ತದೆ ಆದರೆ, ಅರಿವಿಲ್ಲದ (unconscious) ಕ್ರಿಯೆಯು ಹೇಳುತ್ತದೆ... ನಿಜವಾಗಿ ನೋಡಿದರೆ, ಅದು ಹೇಳುವುದೂ ಇಲ್ಲ, ಸುಮ್ಮನೆ ಹಾಗೆಯೇ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ ಮತ್ತು ನೀವು ಅದರಂತೆಯೇ ಕಾರ್ಯ ನಿರ್ವಹಿಸುತ್ತೀರ! ಈ ತೀರ್ಮಾನವನ್ನು ಸಂಪೂರ್ಣವಾಗಿ ಸಹಜಪ್ರವೃತ್ತಿಯ ಮಟ್ಟದಲ್ಲಿ ತೆಗೆದುಕೊಳ್ಳಲಾಗುತ್ತದೆ.

ಈ ಅರಿವಿಲ್ಲದ ವಲಯವು ಮಹಾಶಕ್ತಿಶಾಲಿಯಾದುದು. ಅದನ್ನು ಮೂರು ರೀತಿಗಳಲ್ಲಿ ಸಹಪ್ರವೃತ್ತಿಯ ಮಟ್ಟ, ಬುದ್ಧಿಮತ್ತೆಯ ಮಟ್ಟ (intellect level) ಅಥವಾ ಅಂತಃಸ್ಫೂರ್ತಿಯ (intuition) ಮಟ್ಟದಲ್ಲಿ ಉಪಯೋಗಿಸಬಹುದು. ಅರಿವಿಲ್ಲದ ವಲಯವು ನಕಾರಾತ್ಮಕ (negative) ನೆನಪುಗಳು ಮತ್ತು ಅಸ್ಥಿರತೆಗಳಿಂದ ಮಿತಿಮೀರಿ ತುಂಬಿರುವವರೆಗೆ, ಸಹಜಪ್ರವೃತ್ತಿಯಿಂದ ಅರಿವಿಲ್ಲದೆಯೇ ತೀರ್ಮಾನಿಸುತ್ತಾರೆ.

ಸಹಜಪ್ರವೃತ್ತಿಯ ಮಟ್ಟದಲ್ಲಿದ್ದರೆ ಬಹಳಷ್ಟು ಬಾರಿ ನಿಮ್ಮ ನಿರ್ಧಾರಗಳ ಬಗ್ಗೆ ವಿಷಾದಿಸುತ್ತಲೇ ಇರುತ್ತೀರ. ನೀವು ಆಶ್ಚರ್ಯಪಡುತ್ತೀರ. ನಾನೇಕೆ ಆ ರೀತಿ ವರ್ತಿಸಿದೆ? ಅದು ನಾನಲ್ಲ! ಹೀಗೆ ನಡೆಯುವುದಕ್ಕೆ ನಾನು ಹೇಗೆ ಬಿಟ್ಟೆ? ನಾನು ಹೇಗೆ

ಈ ನಿರ್ಧಾರವನ್ನು ತೆಗೆದುಕೊಂಡೆ? ನಿಮ್ಮ ಅರಿವಿಲ್ಲದ ವಲಯವು ಸಹಜಪ್ರವೃತ್ತಿಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದ ಹೀಗೆ ಆಗುತ್ತದೆ. ಈ ಮಟ್ಟದಲ್ಲಿ ನೀವು ತರ್ಕಬದ್ಧ ಸಂಬಂಧವಿಲ್ಲದೆ ವಿಷಯಗಳನ್ನು ಪರಸ್ಪರ ಸೇರಿಸಿ, ನಂತರ ಅರಿವಿಲ್ಲದೆಯೇ ನಿರ್ಧಾರಕ್ಕೆ ನೆಗೆಯುತ್ತೀರ.

ಉದಾಹರಣೆಗೆ, ನಿಮಗೆ ಬಿಳಿ ಬಟ್ಟೆ ಧರಿಸಿದ್ದ ಯಾವುದೋ ವ್ಯಕ್ತಿಯಿಂದ ತೊಂದರೆಯಾಗಿದ್ದರೆ, ಬಿಳಿಬಟ್ಟೆ ಧರಿಸಿದ ಯಾವ ವ್ಯಕ್ತಿಯನ್ನು ಕಂಡ ತಕ್ಷಣವೇ, ನಿಮಗೆ ತಿಳಿಯದೆಯೇ ನಿಮ್ಮ ಹಳೆಯ ನೆನಪುಗಳು ಮೇಲ್ಕೆದ್ದು, ನಿಮಗೆ ಸಿಟ್ಟು ಉಂಟಾಗುತ್ತದೆ. ಇದು ಸಹಜಪ್ರವೃತ್ತಿಯ ಮಟ್ಟ, ನಿಮ್ಮ ಅರಿವಿನ ಮನಸ್ಸಿಲ್ಲದೆಯೇ ನಿಮಗೆ ಅರ್ಥವಾಗದೆಯೇ ತಾನಾಗಿಯೇ ಸಂಭವಿಸುತ್ತದೆ.

ಚಕ್ಷು - ಚಿತ್ರದಲ್ಲಿ 'Tq' ವು 'Tp' ಗಿಂತ ಕಡಿಮೆಯಿದ್ದಾಗ ಅಂದರೆ, ಅಹಂಕಾರವನ್ನು ತಲುಪಿ ಹಿಂತಿರುಗುವುದಕ್ಕೆ ಹಿಡಿಯುವ ಸಮಯವು ಕಣ್ಣು ಮತ್ತು ಮನಸ್ಸಿನ ನಡುವೆ ಕ್ರಿಯೆಗೆ ಹಿಡಿಯುವ ಸಮಯಕ್ಕಿಂತ ಬಹಳ ಕಡಿಮೆಯಾಗಿದ್ದರೆ, ನೀವು ಸಹಜ ಪ್ರವೃತ್ತಿಯ ಮಟ್ಟದಲ್ಲಿದ್ದೀರ. ನಿರ್ದಿಷ್ಟ ಜಿಗಿತಕ್ಕೆ ಸಮಯವೇ ದೊರಕುವುದಿಲ್ಲ. ಫೈಲು ಅರಿವಿಲ್ಲದ ವಲಯವನ್ನು ತಲುಪಿದ ತಕ್ಷಣ, ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು. ನೀವು 'Tq' ವಿಗೆ ಸ್ವಲ್ಪವೂ ಸಮಯವನ್ನು ನೀಡದೆ, ನಿರಂತರವಾಗಿ ತೀರ್ಪನ್ನು ನೀಡುತ್ತಾ ಇರುತ್ತೀರ. ನಿಮ್ಮ ಅರಿವಿಲ್ಲದ ವಲಯವು ನೆನಪಿನ ಫೈಲುಗಳಿಂದ ಮಿತಿಮೀರಿ ತುಂಬಿರುತ್ತದೆ. ನೀವು ಈ ರೀತಿ ಕಾರ್ಯ ನಿರ್ವಹಿಸಿದಾಗ ನೀವು ಕೂಡ ಆಯಾಸಗೊಳ್ಳುತ್ತೀರ.

ಅದು ಈ ರೀತಿ ಇದೆ: ನಿಮ್ಮ ಹಾರ್ಡ್‌ಡಿಸ್ಕ್ ಹೆಚ್ಚು ಸ್ಪಷ್ಟವಾದ (High resolution) ಭಾವಚಿತ್ರಗಳಿಂದ ತುಂಬಿದ್ದರೆ, ಇನ್ನು ಹಾರ್ಡ್‌ಡಿಸ್ಕ್ ಅನ್ನು ಬಳಸಿ ಕೆಲಸ ಮಾಡಲು ಸಾಧ್ಯವಿಲ್ಲ ಅಲ್ಲವೇ? ಇದೇ ರೀತಿ, ನಿಮ್ಮ ಅರಿವಿಲ್ಲದ ಮನಸ್ಸು ಹಳೆಯ ಆಲೋಚನೆಯ ಮಾದರಿಗಳು ಮತ್ತು ನೆನಪುಗಳಿಂದ ತುಂಬಿದ್ದರೆ, ಅದು ಅಸಮರ್ಥವಾಗುವುದು ಮತ್ತು ಅದು ಮೇಲ್ಮೀಯ ಮತ್ತು ತರ್ಕವಿಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳುವುದು.

ಮುಂದಿನದು ಬುದ್ಧಿಮತ್ತೆಯ ಮಟ್ಟ. ಈ ಮಟ್ಟದಲ್ಲಿ 'Tq' ವು 'Tp'ಗೆ ಸಮವಾಗಿರುತ್ತದೆ. ಈ ಮಟ್ಟದಲ್ಲಿ ನೀವು ನಿಮಗೆ ಅರಿವಿದೆ; ನೀವು ತರ್ಕಬದ್ಧವಾಗಿ

ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರ, ಆದರೆ ನಿಮಗೆ ಹೆಚ್ಚಿಗೆಯ ಹುರುಪು ಅಥವಾ ಚೈತನ್ಯವಿರುವುದಿಲ್ಲ. ಅರಿವಿನಿ ಮನಸ್ಸನ್ನು ಉಳ್ಳವರಾಗಿರುತ್ತೀರ ಅಷ್ಟೆ; ನೀವು ಸೃಜನಶೀಲರಾಗಿರುವುದಿಲ್ಲ. ಹೊಸತನವನ್ನು ಕಲ್ಪಿಸಲು ಅಸಮರ್ಥರಾಗಿರುತ್ತೀರ; ದೊಡ್ಡ ದೊಡ್ಡ ಹೆಜ್ಜೆಗಳನ್ನು ತೆಗೆದುಕೊಳ್ಳುವುದಿಲ್ಲ; ನೀವು ಬೆಳೆಯುವುದಿಲ್ಲ. ನೀವು ಒಬ್ಬ ನಿಷ್ಠೆಯುಳ್ಳ ಸೇವಕನ ಹಾಗೆ ಇರುತ್ತೀರ. ಈನ್‌ಸ್ಟೀನ್ (Einstein) ಹೇಳುತ್ತಾರೆ: 'ಬುದ್ಧಿ ಎಂಬುದು ಒಬ್ಬ ನಿಷ್ಠಾವಂತ ಸೇವಕನಂತೆ' ನೀವು ನಿಮ್ಮ ಜೀವನಪರ್ಯಂತ ಸೇವಕನಾಗಿಯೇ ಇರಬಹುದು. ನೀವು ಬರೀ ಸೇವಕನಾಗಿ ಇರಬಹುದು, ಆದರೆ ನಿಮ್ಮ ಮೂಲಕ, ಸ್ವಲ್ಪ ಹೆಚ್ಚು ಅಥವಾ ದೊಡ್ಡ ಕೆಲಸವನ್ನು ಮಾಡಲು ಸಾಧ್ಯವಿಲ್ಲ.

ಈ ಮಟ್ಟದಲ್ಲಿ ನೀವು ಮಾಹಿತಿಯನ್ನು ಕೇವಲ ಸಂಗ್ರಹಿಸಿ, ಅದರ ಮೇಲೆ ಪ್ರತಿಕ್ರಿಯೆ ನಡೆಸಿ, ಅದನ್ನು ನೀಡುತ್ತೀರ; ಒಂದು ಕಂಪ್ಯೂಟರ್‌ಗಿಂತ ಏನೂ ಹೆಚ್ಚಾಗಿರುವುದಿಲ್ಲ. ನಿಮ್ಮ ಅರಿವಿಲ್ಲದ ವಲಯವು ಬುದ್ಧಿಮತ್ತೆಯ ಮಟ್ಟದಲ್ಲಿದ್ದರೆ, 'Tq'ವು ಹೆಚ್ಚು ಕಡಿಮೆ 'Tp' ಗೆ ಸಮವಾಗಿರುತ್ತದೆ. ಚಡಪಡಿಕೆ ಮತ್ತು ಅರಿವಿಲ್ಲದ ವಲಯವು ಮಿತಿಮೀರಿ ತುಂಬಿರುವ ಕಾರಣದಿಂದ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ; ತರ್ಕಬದ್ಧವಾಗಿ ಮತ್ತು ಅರಿವಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರ.

ನೀವು ಬುದ್ಧಿಮತ್ತೆಯ ಮಟ್ಟದಲ್ಲಿದ್ದಾಗ, ಆಯಾಸದಿಂದಿರುವುದಿಲ್ಲ ಆದರೆ ಉತ್ಸಾಹದಿಂದಿರುವುದಿಲ್ಲ. ನೀವು ಒಂದು ತರಹೆಯ ಸೀಮಿತದ ಸ್ಥಿತಿಯಲ್ಲಿರುತ್ತೀರ (break-even state) ಈ ಮಟ್ಟದಲ್ಲಿ ನೀವು ನಿಮ್ಮ ಸಾಮರ್ಥ್ಯವನ್ನು ಗರಿಷ್ಠ ಮಟ್ಟಕ್ಕೆ ಇನ್ನೂ ಉಪಯೋಗಿಸುತ್ತಿಲ್ಲ.

ಇನ್ನು ಮುಂದಿನದು ಅಂತಃಸ್ಪೂರ್ತಿಯ ಮಟ್ಟ, ಎಲ್ಲಿ ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಾಧ್ಯವಾಗುವುದು. ನಿಮ್ಮ ಅರಿವಿಲ್ಲದ ವಲಯದಲ್ಲಿ ಗಾಢವಾದ ನಿಶ್ಯಬ್ದತೆ ಮತ್ತು ಅರಿವನ್ನು ತುಂಬಿ ಮತ್ತು ನಿಮ್ಮ ಆಚೊತ್ತಿದ ನೆನಪುಗಳು ಅಥವಾ ಫೈಲುಗಳನ್ನು ಗಾಢವಾದ ನಿಶ್ಯಬ್ದತೆ ಮತ್ತು ಅರಿವಿನಿಂದ ಬದಲಿಸಲು ಸಾಧ್ಯವಾದರೆ ನೀವು ಅಂತಃಸ್ಪೂರ್ತಿಯ ಮಟ್ಟದಲ್ಲಿ ಇರಬಹುದು.

ಒಂದು ವೇಳೆ ನಿಮ್ಮ ನೆನಪುಗಳಿಂದ ಮುಕ್ತರಾಗುವುದಾದರೆ ಮತ್ತು ನಿಮ್ಮ ಅರಿವಿಲ್ಲದ ವಲಯದಲ್ಲಿ ಶೂನ್ಯವಾಗಿ ಮತ್ತು ಆನಂದಮಯವಾಗುವುದಾದರೆ, ನಿಮ್ಮ ಭೂತಕಾಲದ ಹೊರೆಯಿಲ್ಲದೆ, ಸಂಸ್ಕಾರಗಳ ಹೊರೆಯಲ್ಲದೆ, ಪ್ರತಿಕ್ಷಣವೂ

ಜೀವಭರಿತರಾಗಿ ಮತ್ತು ತಾಜಾತನದಿಂದ ಇರಲು ಸಾಧ್ಯವಾದರೆ, ನಿಮ್ಮ ಆತ್ಮಶಕ್ತಿಯು ತನ್ನ ಶುದ್ಧ ಸ್ವರೂಪದಲ್ಲಿ ಪ್ರಕಟವಾಗುತ್ತದೆ. ಹೀಗೆ ಸಂಭವಿಸಿದಾಗ, ನಿಮ್ಮ ತಿಳಿವು ಉನ್ನತಮಟ್ಟಕ್ಕೆ ಏರಿದೆ ಎಂದು ಹೇಳಬಹುದು, ಏಕೆಂದರೆ ತಿಳಿವು ಎಂಬುದು ಚೈತನ್ಯವೇ ಸರಿ. ಹೀಗಾದಾಗ, ನೀವು ಅಂತಃಸ್ಫೂರ್ತಿಯೆಂಬ ಚೈತನ್ಯದಿಂದ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರ; ಆಗ ನಿಮಗೆ ಅತ್ಯಂತ ಸ್ಪಷ್ಟವಾದ ಅರಿವಿದೆ.

ಅಂತಃಸ್ಫೂರ್ತಿಯ ಮಟ್ಟದಲ್ಲಿದ್ದಾಗ 'Tq'ವು 'Tq'ಗಿಂತ ಹೆಚ್ಚಾಗಿರುತ್ತದೆ, ಹಾಗೂ ನೀವು ನಿಮ್ಮ ಅಂತಃಸ್ಫೂರ್ತಿಯ ಚೈತನ್ಯದಿಂದ, ಗಾಢವಾದ ಅರಿವಿನಿಂದ, ಶಾಂತೆಯಿಂದ, ಆನಂದದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರ!

ಈ ವಿಚಾರವನ್ನು ಗಾಢವಾಗಿ ಅರ್ಥಮಾಡಿಕೊಳ್ಳಬೇಕು. ಈ ವಿಜ್ಞಾನದೊಳಗೆ, ಗಾಢವಾಗಿ ಹೋಗಬೇಕು, ಆಗಲೇ ನಿಮಗೆ 'ಅಂತಃಸ್ಫೂರ್ತಿ'ಯೆಂಬ ಪದದಿಂದ ಏನನ್ನು ಹೇಳಲು ಬಯಸುತ್ತಿದ್ದೇನೆ ಎಂದು ಅರ್ಥವಾಗುವುದು. ಅಂತಃಸ್ಫೂರ್ತಿಯೆಂಬುದು ನಿಮ್ಮ ಬುದ್ಧಿಮತ್ತೆಯನ್ನು ಮೀರಿ ಸಂಭವಿಸುವಂತಹುದು.

ಅಂತಃಸ್ಫೂರ್ತಿಯೆಂದರೇನು?

ವಿವರಿಸುತ್ತೇನೆ. ಇದ್ದಕ್ಕಿದ್ದಹಾಗೆ ನಿಮಗೆ ಯಾವುದೋ ಒಂದು ಸರಿಯೆಂದು ಖಚಿತವಾಗಿ ಅದನ್ನು ಮಾಡಲು ಸಾಕಷ್ಟು ಚೈತನ್ಯವಿದೆಯೆಂದೂ ನಿಮಗೆ ತಿಳಿದಿದೆ. ಆದರೆ, ಮಾಡುವ ವಿಧಾನ ಮಾತ್ರ ತಿಳಿದಿಲ್ಲ. ಆ ಒಂದು ತೀರ್ಮಾನಕ್ಕೆ ನಿಮ್ಮನ್ನು ತಲುಪಿಸಿದ ಹೆಜ್ಜೆಗಳು ತಿಳಿದಿಲ್ಲ, ಆದರೆ ನಿಮ್ಮ ತೀರ್ಮಾನವು ಖಂಡಿತವಾಗಿ ಸರಿಯಾಗಿದೆ ಎಂದು ತಿಳಿದಿದೆ. ಇದೇ ಅಂತಃಸ್ಫೂರ್ತಿ ಎಂಬುದು.

ನಿದರ್ಶನವಿಲ್ಲದ ಘಟನೆಯನ್ನು ಎದುರಿಸಲು ಅಂತಃಸ್ಫೂರ್ತಿಯ ಚೈತನ್ಯದ ಅವಶ್ಯಕತೆ ಇದೆ. ನೀವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಸಮಯದಲ್ಲಿ ಕನಿಷ್ಠ ಮಾಹಿತಿಯೊಂದಿಗೆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಾಗ ಅಥವಾ ನಿಮಗೆ ಹಲವಾರು ಆಯ್ಕೆಗಳಿದ್ದು, ಯಾವುದನ್ನು ಮಾಡಬೇಕೆಂದು ನಿರ್ಧರಿಸಲು ಅಸಾಧ್ಯವಾಗದೆ ಇದ್ದಾಗ ಅಂಥ ಸನ್ನಿವೇಶಗಳಲ್ಲಿ ಅಂತಃಸ್ಫೂರ್ತಿಯ ಚೈತನ್ಯವು ನಿಮಗೆ ನೆರವಾಗುತ್ತದೆ. ಇಂತಹ ಸಂದರ್ಭಗಳಲ್ಲಷ್ಟೇ ಅಲ್ಲ... ನಿಮ್ಮ ಜೀವಾತ್ಮದ ಮಟ್ಟದಲ್ಲಿ ನಿರಂತರವಾಗಿ ಇರಲು ಸಾಧ್ಯವಾದರೆ, ನೀವು ಪ್ರತಿಕ್ಷಣವು ಸಂಪೂರ್ಣವಾಗಿ ಪ್ರಸ್ತುತರಾಗಿರಿ ಹಾಗೂ ನೀವು ಬರುವ ಭವಿಷ್ಯದ ಕ್ಷಣಗಳು ಇದೇ ರೀತಿ ಹುಟ್ಟಲು ನೀವು ಕಾರಣಜನಕರಾಗುತ್ತೀರ.

ನಾನು ಈಗ ಹೇಳುತ್ತಿರುವುದನ್ನು ಅರಗಿಸಿಕೊಳ್ಳಲು ಪ್ರಯತ್ನಿಸಿದರೆ, ನಿಮ್ಮೊಂದಿಗೆ ನೀವು ಕುಳಿತು, ಸಂಗ್ರಹಿಸಿರುವ ಸಂಸ್ಕಾರಗಳು ಹೇಗೆ ನಿಮ್ಮನ್ನು ಹಾವಳಿಗೆ ಈಡುಮಾಡಿ ಪೀಡಿಸುತ್ತಿವೆ ಎಂದು ಆಲೋಚಿಸಿದರೆ, ನಾನು ಹೇಳುತ್ತಿರುವುದರಲ್ಲಿ ಸತ್ಯವನ್ನು ಕಾಣಬಹುದಾದರೆ, ನಿಧಾನವಾಗಿ ಈ ಆವೃತ್ತದಿಂದ ಹೊರ ಬಂದು, ನಿಮ್ಮ ಆತ್ಮದ ಮಟ್ಟಕ್ಕೆ ಹೋಗುವ ಕೌಶಲ್ಯವನ್ನು ತಿಳಿದುಕೊಳ್ಳಬಹುದು.

ಅಂತಃಸ್ಫೂರ್ತಿಯ ವಿಷಯದಲ್ಲಿ ಇನ್ನೊಂದು ವಿಚಾರ: ಇದು ನಿಮಗೆ ನಿರ್ಧಾರವನ್ನು ಮಾಡುವುದಕ್ಕಲ್ಲದೆ, ನೀವು ನಿರ್ಧರಿಸಿದ್ದನ್ನು ನಿರ್ವಹಿಸಲೂ ಕೂಡ ಚೈತನ್ಯವನ್ನು ನೀಡುತ್ತದೆ. ಇದನ್ನು ನಾನು ಜನರಿಗೆ ಹೇಳಿದಾಗ, ಅವರು “ಸ್ವಾಮೀಜಿ, ನನಗೆ ಎನಿಸಿದ್ದು ಅಂತಃಸ್ಫೂರ್ತಿಯೋ ಅಥವಾ ಬರಿ ಬುದ್ಧಿಮತ್ತೆಯೋ ಎಂದು ಹೇಗೆ ಕಂಡುಹಿಡಿಯಲಿ''. ಸ್ವಾಮೀಜಿ, ಅದು ಅಂತಃಸ್ಫೂರ್ತಿಯೋ ಅಥವಾ ಬುದ್ಧಿಮತ್ತೆಯೋ ಎಂದು ನನಗೆ ಗೊಂದಲವಾಗಿದೆ ಎಂದು ಹೇಳುತ್ತಾರೆ. ಆಗ ನಾನು ಹೇಳುತ್ತೇನೆ: ಸ್ಪಷ್ಟವಾಗಿರಿ. ನಿಮಗೆ ಗಲಿಬಿಲಿಯಾದರೆ, ಅದು ಬರಿ ಬುದ್ಧಿಮತ್ತೆಯೆಂದು ಆ ಗೊಂದಲವೇ ತೋರಿಸುತ್ತದೆ. ನಿಮಗೆ ಅಂತಃಸ್ಫೂರ್ತಿ ಇದ್ದರೆ, ನೀವು ಧೈರ್ಯವಾಗಿ ಸಂದೇಹವಿಲ್ಲದೆ ಚೈತನ್ಯದೊಂದಿಗೆ ತುಂಬಿ ತುಳುಕುತ್ತಿರುತ್ತೀರ ಹಾಗಾಗಿ, ಗೊಂದಲವಾಗುವ ಪ್ರಶ್ನೆಯೇ ಇಲ್ಲ.

ಅಂತಃಸ್ಫೂರ್ತಿಯಿಂದ, ನಿಮ್ಮ ಅಂತಃಕರಣದಲ್ಲಿ ಅಡಗಿರುವ ಶಕ್ತಿಯು ಇದ್ದ ಹಾಗೆಯೇ ಹೊರಬರುತ್ತದೆ. ನೀವು ತೆರೆದ ಮನಸ್ಸಿನವರಾಗಿ, ಇದ್ದ ಹಾಗೆಯೇ ಅದನ್ನು ಪ್ರಕಟಿಸುತ್ತೀರ ಮತ್ತು ನಿರ್ವಹಿಸುತ್ತೀರ. ನೀವು ದೊಡ್ಡ ಆವಿಷ್ಕಾರಗಳಲ್ಲಿ ತೊಡಗಿರುವ ವಿಜ್ಞಾನಿಗಳು ಮತ್ತು CEO ಗಳ ಬಗ್ಗೆ ಓದಿದರೆ, ಅವರು ತಮ್ಮ ಯಶಸ್ಸನ್ನು ತಮ್ಮ ಬುದ್ಧಿಮತ್ತೆಯನ್ನು ಮೀರಿದ ಮತ್ತು ಅವರಿಗೆ ನಿರ್ಧಾರಗಳನ್ನು ಮಾಡಲು ಚೈತನ್ಯ ಅಥವಾ ಧೈರ್ಯವನ್ನು ನೀಡಿದ ಯಾವುದೋ ಒಂದಕ್ಕೆ ಅರ್ಪಿಸುತ್ತಾರೆ.

ಒಂದು ವಿಚಾರವನ್ನು ತಿಳಿದುಕೊಳ್ಳಿ: ಪ್ರತಿಯೊಬ್ಬರಲ್ಲೂ ಅಂತಃಸ್ಫೂರ್ತಿಯ ಶಕ್ತಿ ಈಗ ಒಂದು ಕೇಳುತ್ತೇನೆ: ನಿಮ್ಮಲ್ಲಿ ಎಷ್ಟು ಜನ, ನೀವು ಒಬ್ಬ ವ್ಯಕ್ತಿಯ ಬಗ್ಗೆ

ಯೋಚಿಸುತ್ತಿದ್ದಾಗ, ಫೋನ್ ರಿಂಗ್ ಆಗಿ, ಅದೇ ವ್ಯಕ್ತಿ ಫೋನ್‌ನಲ್ಲಿ ಇದ್ದಾರೆ; ಅಥವಾ ಒಂದು ಸ್ಥಳವನ್ನು ಆಗಮಿಸುತ್ತೀರ, ಆಗ ನಿಮಗೆ ಆ ಸ್ಥಳಕ್ಕೆ ಹಿಂದೆ ಬಂದಿದ್ದೀರ; ಅಥವಾ ಇನ್ನಿತರ ಅಂತಃಸ್ಫೂರ್ತಿಯ ವಿಷಯಗಳನ್ನು ಜೀವನದಲ್ಲಿ ಒಮ್ಮೆಯಾದರೂ ಅನುಭವಿಸಿದ್ದೀರ?

(ಶೇಕಡಾ 80 ರಷ್ಟು ಜನರು ತಮ್ಮ ಕೈಗಳನ್ನು ಎತ್ತುತ್ತಾರೆ)

ನೋಡಿ, ಕೆಲವು ಸಂದರ್ಭಗಳಲ್ಲಿ ಅಂತಃಸ್ಫೂರ್ತಿಯನ್ನು ನಿಮ್ಮ ಜೀವನದಲ್ಲಿ ಆಕಸ್ಮಿಕವಾಗಿ ಅನುಭವಿಸಿದ್ದೀರ. ಈ ಸಂದರ್ಭಗಳಲ್ಲಿ ನೀವು ಆಕಸ್ಮಿಕವಾಗಿ ಧ್ಯಾನದ ಸ್ಥಿತಿಯಲ್ಲಿದ್ದೀರ. ಈ ಎಲ್ಲ ಸಂದರ್ಭಗಳಲ್ಲಿ ನಿಮ್ಮ ಜೀವಾತ್ಮವು ನಿಮ್ಮೊಂದಿಗೆ ಸಂಬಂಧ ಪಡೆಯಲು ಪ್ರಯತ್ನಿಸುತ್ತದೆ. ಆದರೆ ಅದಕ್ಕೆ ನೀವೇನು ಮಾಡುತ್ತೀರ? ನೀವು ಈ ವಿಚಾರಗಳನ್ನು ಯೋಗವಶಾತ್ (coincidence) ಎಂದು ಪಕ್ಕಕ್ಕೆ ಸರಿಸಿ ನಿಮ್ಮ ಜೀವಾತ್ಮವನ್ನು ನಿರ್ಲಕ್ಷಿಸುತ್ತೀರ. ನಾವು ನಮ್ಮ ಆತ್ಮದ ಮೇಲ್ಮಟ್ಟದ ಆಯಾಮಗಳನ್ನು ಅಲಕ್ಷ್ಯ ಮಾಡುತ್ತೇವೆ. ನಿಮ್ಮಲ್ಲಿ ಶೇಕಡಾ 80ರಷ್ಟು ಜನರಿಗೆ ಅನುಭವವಾಗಿದ್ದು ಯೋಗಾಯೋಗವಾಗಲು ಹೇಗೆ ಸಾಧ್ಯ?

ಸ್ಪಷ್ಟವಾಗಿರಿ: ಈ ಅಂತಃಸ್ಫೂರ್ತಿಯ ಸಂದರ್ಭಗಳು ನಿಮ್ಮಲ್ಲಿ ಸುಪ್ತವಾಗಿರುವ ಶಕ್ತಿಯ ಸ್ಪಷ್ಟ ಸಂಕೇತ. ನೀವಿದನ್ನು ಕಂಡುಹಿಡಿದು ಅದನ್ನು ಪ್ರೋತ್ಸಾಹಿಸಿದರೆ, ನಿಮ್ಮ ಆತ್ಮದ ಮೇಲ್ಮಟ್ಟದ ಆಯಾಮಗಳನ್ನು ಅಭಿವ್ಯಕ್ತಪಡಿಸಬಹುದು.

ಈಚೆಗೆ ಲೇಸರ್ ಮತ್ತು ಮೇಸರ್ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಡಾಕ್ಟರ್ ಚಾರ್ಲ್ಸ್ ಟೌನ್ಸ್ ರವರೊಡನೆ ಸಹಭೋಜನ ಮಾಡುವ ಅವಕಾಶವಿತ್ತು. ನಾನು, ‘ಅದು ಹೇಗೆ ಸಂಭವಿಸಿತು? ಹೀಗೆ ಮಾಡಲು ಹೇಗೆ ಸಾಧ್ಯವಾಯಿತು?' ಎಂದು ಕೇಳಿದೆ. ಆಗ ಅವರು ಸುಂದರವಾದ ರೀತಿಯಲ್ಲಿ ‘ನಾನು ವಾಷಿಂಗ್ಟನ್ ಡಿಸಿನಲ್ಲಿ ಒಂದು ಪಾರ್ಕ್‌ನಲ್ಲಿ ಸುಮ್ಮನೆ ಕುಳಿತಿದ್ದೆ, ಹಠಾತ್ತನೆ ನನ್ನಲ್ಲಿ ಏನೋ ಆಯಿತು. ಉತ್ತರವು ನನ್ನಲ್ಲಿತ್ತು. ಹಠಾತ್ತನೆ ಉತ್ತರವು ನನಗೆ ಪ್ರಕಟವಾಯಿತು. ನನಗೆ ಅರಿವಾಗಿದ್ದನ್ನು ಆ ತಕ್ಷಣವೇ ಬರೆದುಕೊಂಡೆ. ನಂತರ, ನನಗೆ ಒಂದು ಸಮಸ್ಯೆಯ ಅರಿವಾಯಿತು, ಅದು ಏನೆಂದರೆ - ನನ್ನ ಬಳಿ ಉತ್ತರವೇನೋ ಇತ್ತು ಆದರೆ ಆ ಉತ್ತರಕ್ಕೆ ಬರಲು ಬೇಕಾದ ಹೆಜ್ಜೆಗಳು ನನಗೆ ತಿಳಿದಿರಲಿಲ್ಲ! ಹಾಗಾಗಿ ನಾನು ಅದನ್ನು ಬೇರೆ ಯಾರಿಗೂ ಪ್ರದರ್ಶಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ಆ ಸಿದ್ಧಾಂತವು ಮಾತ್ರ ನನಗೆ ತಿಳಿದಿದ್ದು; ಅದಕ್ಕೆ ಬರುವ ವಿಧಾನವಲ್ಲ. ನಂತರ ಕುಳಿತು ಬರೆದಾಗ ತರ್ಕಬದ್ಧವಾದ ಕ್ರಮವು ದೊರಕಲು ಸಾಧ್ಯವಾಯಿತು' ಎಂದು ಉತ್ತರಿಸಿದರು.

ಚಾರ್ಲ್ಸ್‌ಟೌನ್ಸ್ ಮಾತ್ರವಲ್ಲ, ಐನ್‌ಸ್ಟೀನ್ ಕೂಡ "ನನಗೆ ಹೊಸದಾಗಿ ಏನೇನು ಸಂಭವಿಸಿತೋ ಅದೆಲ್ಲವೂ ಅಂತಃಸ್ಫೂರ್ತಿಯ ಮೂಲಕ ಸಂಭವಿಸಿತು, ಬುದ್ಧಿಮತ್ತೆಯಿಂದಲ್ಲ' ಎಂದು ಹೇಳುತ್ತಾರೆ. ಅವರು "ಅಂತಃಸ್ಫೂರ್ತಿಯ ಮನಸ್ಸೆಂಬುದು ಪವಿತ್ರವಾದ ಕೊಡುಗೆ, ಹಾಗೂ ವಿವೇಚನಾಯುಕ್ತ ಮನಸ್ಸು ಒಂದು ಪ್ರಾಮಾಣಿಕ ಆಳು" ಎಂದು ಸುಂದರವಾಗಿ ಹೇಳುತ್ತಾರೆ. ನಾವು ಆಳನ್ನು ಸನ್ಮಾನಿಸುವ, ಕೊಡುಗೆಯನ್ನು ಮರೆಯುವ ಸಮಾಜವನ್ನು ಸೃಷ್ಟಿಸಿಕೊಂಡಿದ್ದೇವೆ.

ನಾವು ನಂಬುತ್ತೇವೋ ಬಿಡುತ್ತೇವೋ, ಒಪ್ಪಿಕೊಳ್ಳುತ್ತೇವೋ ಬಿಡುತ್ತೇವೋ, ಅಂತಃಸ್ಫೂರ್ತಿಯೆಂಬುದು ನಮ್ಮಲ್ಲಿದೆ. ಐನ್‌ಸ್ಟೀನ್ ಕೂಡ ಇದನ್ನು ಕೊಡುಗೆ ಎಂದೇ ಕರೆಯುತ್ತಾರೆ, ಏಕೆಂದರೆ ಇದನ್ನು ಸತತವಾಗಿ ಪಡೆಯಬಹುದೋ ಇಲ್ಲವೋ ಎಂದು ಅವರಿಗೂ ಸಹ ತಿಳಿದಿರಲಿಲ್ಲ. ಅದೇನೋ ನಿಜ ಅವರಿಗೆ ಅದು ಯಾವಾಗ ಸಂಭವಿಸುತ್ತದೆ ಮತ್ತು ಸಂಭವಿಸುತ್ತದೆಯೋ ಇಲ್ಲವೋ ಎಂದು ನಿಶ್ಚಿತವಾಗಿ ತಿಳಿದಿರಲಿಲ್ಲ. ಆದರೆ ನೀವದಕ್ಕಾಗಿ ಖಂಡಿತವಾಗಿ ಪರಿಶ್ರಮಿಸಬಹುದೆಂದೂ, ಅದನ್ನು ನಿರಂತರವಾಗಿ ಪಡೆದುಕೊಂಡಿರಬಹುದೆಂದೂ ಮಹಾನ್ ಯೋಗಿಗಳು ಮತ್ತೆ ಮತ್ತೆ ಹೇಳುತ್ತಾರೆ. ಅಂತಃಸ್ಫೂರ್ತಿ ಎಂಬುದನ್ನು ಕೊಡುಗೆ ಎಂದು ಭಾವಿಸಬೇಕಾಗಿಲ್ಲ. ನೀವು ಅದಕ್ಕಾಗಿ ಪ್ರಯತ್ನವನ್ನು ಮಾಡಬಹುದು. ಅದು ನಿಮ್ಮ ಜೀವನದ ಒಂದು ಭಾಗವಾಗಬಹುದು.

ನಿಮ್ಮ ಬುದ್ಧಿಮತ್ತೆಯನ್ನು ಮೀರಿ ಅಂತಃಸ್ಫೂರ್ತಿಯು ಸಂಭವಿಸಿದಾಗ, ನಿಮ್ಮ ಸಂಪೂರ್ಣ ಜೀವಾತ್ಮವು ಸಮಗ್ರವಾಗುತ್ತದೆ. ಆಗ ನೀವು ನಿಮ್ಮ ಉನ್ನತ ಮಟ್ಟದಲ್ಲಿರುತ್ತೀರ. ನೀವು ಉನ್ನತ ಮಟ್ಟದಲ್ಲಿದ್ದಾಗ ಯಾವುದೋ ಒಂದು ತೆರೆಯುತ್ತದೆ. ಇದನ್ನು ನೀವು ಅಂತರ್ಜ್ಞಾನವೆಂದೋ ಅಥವಾ ಅಂತಃಸ್ಫೂರ್ತಿಯೆಂದೋ ಅಥವಾ ಇನ್ನೇನಾದರೂ ಕರೆಯಬಹುದು. ಯೋಗಿಗಳು ಇದು ಒಂದು ವಿಜ್ಞಾನವೆಂದು ಮತ್ತೆ ಮತ್ತೆ ಹೇಳಿದ್ದಾರೆ. ನಿಮ್ಮ ಜೀವಾತ್ಮದಲ್ಲಿ ನಿರಂತರವಾಗಿ ದೊರಕುತ್ತಿರುವ ಈ ಅಂತಃಸ್ಫೂರ್ತಿ ಅಥವಾ ಈ ಚೈತನ್ಯದೊಂದಿಗೆ ಶೃತಿಗೂಡಿಸಲು ಸಾಧ್ಯವಾದರೆ, ಇದನ್ನು ನಿಮ್ಮ ನಿತ್ಯ ಜೀವನದಲ್ಲಿ ಉಪಯೋಗಿಸಬಹುದು.

ಅಂತಃಸ್ಫೂರ್ತಿಯು ನಿಮ್ಮ ಜೀವಾತ್ಮದ ಚೈತನ್ಯ. ಈ ಶುದ್ಧ ಚೈತನ್ಯವು ಅರಿವಿಲ್ಲದ ಮಟ್ಟದಿಂದ ಹೊರಬರಲು ಆರಂಭಿಸಿದಾಗ, ಅದು ನಿಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವುಕವಾಗಿ ಗುಣಪಡಿಸುವುದು, ಗುಣಪಡಿಸುವುದಲ್ಲದೆ ಅದು ಒತ್ತಡವನ್ನು ಕಡಿಮೆ ಮಾಡಿ, ಸ್ವಯಂ ಸ್ಫೂರ್ತಿಯಿಂದ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಸ್ವಯಂ ಸ್ಫೂರ್ತಿಯು ನೀವು ಸಂಗ್ರಹಿಸುವ ಮಾಹಿತಿಯೊಂದಿಗೆ ಯಾವ ಸಂಬಂಧವೂ ಇಲ್ಲ, ಸಂಗ್ರಹಿಸಿದ ಮಾಹಿತಿಯನ್ನು ಹೇಗೆ ಪರಿಷ್ಕರಿಸುತ್ತೇವೆ ಎಂಬುದನ್ನು ಅವಲಂಬಿಸಿರುತ್ತೆ.

ಮಾಹಿತಿಯು ಒಂದೇ ಆದರೂ, ಅದನ್ನು ಅನೇಕ ರೀತಿಯಲ್ಲಿ ಪರಿಷ್ಕರಿಸಬಹುದು, ಅಂತಃಸ್ಫೂರ್ತಿ ಎಂಬುದು ಮಾಹಿತಿಯನ್ನು ಯಾವ ರೀತಿ ಪರಿಷ್ಕರಿಸುತ್ತೀರ ಮತ್ತು ನಿಮ್ಮ ಬುದ್ಧಿಮತ್ತೆಯನ್ನು ಮೀರಿ ಯಾವ ರೀತಿ ನಿರ್ಧಾರವನ್ನು ಮಾಡುತ್ತೀರ ಎಂದು ಸೂಚಿಸುತ್ತದೆ. ತಂತ್ರವಿಧಾನಗಳಿಂದ ನಾವು ಅಂತಃಸ್ಫೂರ್ತಿಯ ಚೈತನ್ಯವನ್ನು ಅನುಭವಿಸಬಹುದು.

ಈ ತಂತ್ರಗಳನ್ನೇ ಧ್ಯಾನವೆಂದು ಕರೆಯುತ್ತೇವೆ. ತನ್ನನ್ನು ಅನುಭವಿಸಲು ನಮ್ಮನ್ನು ನಿರಂತರವಾಗಿ ಮತ್ತೆ ಮತ್ತೆ ಆಹ್ವಾನಿಸುವ ನಮ್ಮ ಅಸ್ತಿತ್ವ ಅಂದರೆ ಈ ಮೇಲ್ಮಟ್ಟದ ಚೈತನ್ಯದೊಂದಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳುವುದಕ್ಕೆ ಪೌರ್ವಾತ್ಯದಲ್ಲಿ 'ಧ್ಯಾನ' ಎಂದು ಕರೆಯುತ್ತಾರೆ.

ಸಮಯ ದೊರಕಿದಾಗಲೆಲ್ಲ ನಿಮ್ಮೊಂದಿಗೆ ನೀವು ಕುಳಿತು ಅವಲೋಕಿಸಿ... ನಾವು ಇತರರೊಂದಿಗೆ ಹೊತ್ತು ಗೊತ್ತು ಮಾಡುವುದಕ್ಕೆ ಸದಾ ಸಿದ್ಧರಾಗಿದ್ದೇವೆ, ಆದರೆ ನಮ್ಮೊಂದಿಗೆ ನಾವು ಹೀಗೆ ಮಾಡುವುದೇ ಇಲ್ಲ...! ನಿಮ್ಮೊಂದಿಗೆ ನೀವು ಕುಳಿತರೆ, ನಿಮ್ಮ ಅಸ್ತಿತ್ವದ ಒಂದು ಭಾಗವು ಅಭಿವ್ಯಕ್ತಪಡಿಸಬೇಕೆಂದೂ, ಅದು ಇನ್ನು ಹೆಚ್ಚು ಮಾಡಬೇಕೆಂದು ನೀವು ಯಾವಾಗಲೂ ನೋಡಬಹುದು; ಆದರೆ, ನಾವು ಮಾತ್ರ ಅಸ್ತಿತ್ವದ ಆ ಭಾಗಕ್ಕೆ ಅವಕಾಶವನ್ನಾಗಲೀ ಸಮಯವನ್ನಾಗಲಿ ದೊರಕಿಸಿ ಕೊಡುವುದಿಲ್ಲ. ನಾವು ನಮ್ಮ ಬುದ್ಧಿಮತ್ತೆಯೊಂದಿಗೆ ಅಷ್ಟೊಂದು ತೊಡಗಿದ್ದೇವೆ. ನಮ್ಮ ಬುದ್ಧಿಮತ್ತೆಯೇ ಅಂತಿಮವೆಂದು ಭಾವಿಸುತ್ತೇವೆ, ಆದರೆ ಯೋಗಿಗಳು ಬುದ್ಧಿಮತ್ತೆಯನ್ನೂ ಮೀರಿ ಹೋಗಲು ಸಾಧ್ಯವೆಂದು ಸಾಧಿಸಿ ತೋರಿಸುತ್ತಾರೆ.

ಖಚಿತ ಪರಿಹಾರಗಳು

ನಿಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ, ನಿಮ್ಮ ಅರಿವಿಲ್ಲದೆ ವಲಯದಲ್ಲಿ ಗಾಢವಾಗಿ ಅಚ್ಚೊತ್ತಿದ ನೆನಪುಗಳನ್ನು ತೆಗೆದು ಹಾಕುವುದು ಹೇಗೆ ಇನ್ನಷ್ಟು ಇವುಗಳು ಸಂಗ್ರಹವನ್ನು ತಡೆ ಮಾಡುವುದು ಹೇಗೆ, ನಾವು ಜೀವಾತ್ಮದ ಅಗೋಚರ ಶಕ್ತಿಯನ್ನು ಜಾಗೃತಗೊಳಿಸುವುದು ಹೇಗೆ, ಸಹಜ ಪ್ರವೃತ್ತಿಯಿಂದ ಬುದ್ಧಿಮತ್ತೆಗೆ, ಬುದ್ಧಿಮತ್ತೆಯಿಂದ ಅಂತಃಸ್ಫೂರ್ತಿಗೆ ಹೋಗಿ ನಾವು ಜೀವನದಲ್ಲಿ ಬಾಳಲು ನಮ್ಮ ಜೀವಾತ್ಮದ ಅಗೋಚರ ಶಕ್ತಿಯನ್ನು ಜಾಗೃತಗೊಳಿಸುವುದು ಹೇಗೆ ಇವೆಲ್ಲವನ್ನು ಕುರಿತು ಈ ಧ್ಯಾನ ಶಿಬಿರವು ಇರುವುದು.

ಈ ಕಾರ್ಯಕ್ರಮವು ನಿಮ್ಮ ಎಲ್ಲ ಭಾವನೆಗಳ ಮೇಲೆ ಬೆಳಕು ಚೆಲ್ಲಿ, ನಿಮ್ಮ ಮನಸ್ಸಿನ ಆಟವನ್ನು ಅವಲೋಕಿಸಲು ಸಹಾಯ ಮಾಡುತ್ತದೆ. ನೀವು ನೀವಾಗಿಯೇ ಹೇಗೆ ಭಾವನೆಗಳನ್ನು ಸೃಷ್ಟಿಸಿಕೊಂಡು ಕೊನೆಗೆ ಹೇಗೆ ಅವುಗಳ ಆಳಾಗಿಬಿಡುತ್ತೀರ ಎಂದು ತೋರಿಸುತ್ತದೆ. ನಿಮ್ಮ ದೈಹಿಕ ಮತ್ತು ಮಾನಸಿಕ ಸುರಕ್ಷತೆಯ ಮೇಲೆ ಭಾವನೆಗಳು ಹೇಗೆ ನೇರವಾಗಿ ಪರಿಣಾಮ ಬೀರುತ್ತವೆ ಎಂದು ತೋರಿಸುತ್ತದೆ.

(ಸ್ವಾಮೀಜಿ ಒಂದು ಚಿತ್ರಪಟವನ್ನು ತೋರಿಸುತ್ತಾರೆ)

ಈ ಚಿತ್ರವನ್ನು ನೋಡಿ. ಇಲ್ಲಿ ಒಬ್ಬ ಮನುಷ್ಯನ ಆಕೃತಿಯ ಮೇಲೆ ಏಳು ಗುರುತುಗಳನ್ನು ನೋಡಬಹುದು. ಎಲ್ಲರಿಗೂ ಕಾಣಿಸುತ್ತದೆಯೇ? ಈ ಮನುಷ್ಯನ ಆಕೃತಿಯ ಮೇಲೆ ಇರುವ ಏಳು ಗುರುತುಗಳನ್ನೇ ‘ಚಕ್ರ’ಗಳೆಂದು ಕರೆಯುತ್ತೇವೆ.

ಚಕ್ರಗಳು ನಮ್ಮ ದೇಹದ ಸೂಕ್ಷ್ಮವಾದ ಚೈತನ್ಯ ಕೇಂದ್ರಗಳು.

ನಮಗೆ ತಿಳಿದಿರುವ ಹಾಗೆ ನಮಗೆ ಕೇವಲ ಒಂದು ಶರೀರ ಮಾತ್ರವಲ್ಲ, ನಮಗೆ ಏಳು ಶರೀರಗಳಿವೆ ಇವೇ ಚೈತನ್ಯ ಶರೀರಗಳು. ಅವುಗಳಲ್ಲಿ ಮೊದಲನೆಯ ಮೂರು ಶರೀರಗಳನ್ನು ವಿವರಿಸುತ್ತೇನೆ.

ಮೊದಲನೆಯ ಶರೀರ - ಯಾವುದರೊಂದಿಗೆ ನೀವಿಲ್ಲಿಗೆ ಬಂದಿದ್ದೀರಿ, ನೀವು ಚಲಿಸುತ್ತೀರಿ, ಮಾತನಾಡುತ್ತೀರಿ, ಬರೆಯುತ್ತೀರಿ - ಈ ಶರೀರವನ್ನು ಜಾಗ್ರತ ಶರೀರ ಅಥವಾ ದೈಹಿಕ ಶರೀರವೆಂದು (Physical body) ಕರೆಯುತ್ತೇವೆ.

ಮುಂದಿನ ಶರೀರ - ಸೂಕ್ಷ್ಮ ಶರೀರ (dream body) ಎಂದರೆ ಕನಸುಗಳ ಶರೀರ, ಕನಸಿನ ಸ್ಥಿತಿಯಲ್ಲಿ ಉಪಯೋಗಿಸುವ ಶರೀರ. ಕನಸಿನಲ್ಲಿ ಒಂದು ಸ್ಥಳದಿಂದ

ಚಕ್ರಗಳು

ಚಕ್ರಗಳು

ಸಹಸ್ರಾರ
ಆಜ್ಞಾ
ವಿಶುದ್ಧಿ

ಅನಾಹತ

ಮಣಿಪೂರಕ
ಸ್ವಾಧಿಷ್ಠಾನ
ಮೂಲಾಧಾರ

ಖಚಿತ ಪರಿಹಾರಗಳು

ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ಉಪಯೋಗಿಸುವ ಶರೀರವೇ ಇದು! ಕನಸಿನಲ್ಲಿ ನಿಮ್ಮನ್ನು ನೀವು ಹಲವಾರು ಸ್ಥಳಗಳಲ್ಲಿ ಕಂಡುಕೊಳ್ಳುತ್ತೀರ ಅಲ್ಲವೇ? ಕೆಲವೊಮ್ಮೆ ನಿಮ್ಮನ್ನು ನೀವು ಜಾಗ್ರತರಾದಾಗಲೂ ನೋಡದೆ ಇರುವಂತಹ ಸ್ಥಳಗಳಲ್ಲಿ ಕಂಡುಕೊಳ್ಳುತ್ತೀರ.

ಮೂರನೆಯ ಶರೀರ - ಕಾರಣ ಶರೀರ (Casual Body) ಇದನ್ನು ನೀವು ಗಾಢವಾದ ನಿದ್ರೆಯಲ್ಲಿದ್ದಾಗ ಉಪಯೋಗಿಸುತ್ತೀರ. ಈ ಶರೀರವು ಚಲಿಸುವುದಿಲ್ಲ.

ಈಗ ನೋಡಿ, ಮೇಲಿನ ಎರಡು ಶರೀರಗಳು ಸೂಕ್ಷ್ಮ ಮತ್ತು ಕಾರಣ ಶರೀರಗಳು ದೈಹಿಕ ಶರೀರವನ್ನು ಅದರ ಉದ್ದಗಲಕ್ಕೂ ಏಳು ಸ್ಥಳಗಳಲ್ಲಿ ಸಂಧಿಸುತ್ತದೆ. ಈ ಏಳು ಸ್ಥಳಗಳನ್ನೇ ಚಕ್ರಗಳೆಂದು ಕರೆಯಲಾಗುತ್ತದೆ. ನಮ್ಮ ದೇಹದಲ್ಲಿ ಏಳು ಪ್ರಮುಖ ಚಕ್ರಗಳಿವೆ. ಹಲವಾರು ಕಿರಿಯ (minor) ಆದರೆ ಈ ಏಳು ಚಕ್ರಗಳೇ ನಮ್ಮ ದೈಹಿಕ ಮತ್ತು ಮಾನಸಿಕ ಸುರಕ್ಷೆಗೆ ಪ್ರಧಾನವಾಗಿ ಜವಾಬ್ದಾರರು.

ಬಹಳ ಹಿಂದೆಯೇ ವೇದಿಯ ಕಾಲದಲ್ಲಿ ಚಕ್ರಗಳನ್ನು ಕಂಡುಹಿಡಿಯಲಾಯಿತು. ನಿಜವಾಗಿ ನೋಡಿದರೆ, ಹಲವು ಆಧ್ಯಾತ್ಮಿಕ ಮಂತ್ರಗಳಲ್ಲಿ ಹಲವು ಬಾರಿ ಈ ಚಕ್ರಗಳ ಹೆಸರುಗಳ ಅನ್ವಯವನ್ನು ಕಾಣಬಹುದು. ಪ್ರತಿಯೊಂದು ಚಕ್ರದ ಹತ್ತಿರ ಒಂದು ರಸಗ್ರಂಥಿಯು ಸ್ಥಾಪಿತವಾಗಿ ಅವುಗಳಿಗೆ ಆಯಾ ಚಕ್ರಗಳೊಂದಿಗೆ ಸಂಬಂಧವಿದೆ ಎಂದು ವಿಜ್ಞಾನವು ಈ ದಿನ ಸಮರ್ಥಿಸಿ ತೋರಿಸಿದೆ. ಈ ಏಳು ಚಕ್ರಗಳು ರಸಗ್ರಂಥಿಗಳಿಗೆ ಚೈತನ್ಯವನ್ನು ನೀಡುತ್ತವೆ.

ಈ ಏಳು ಪ್ರಮುಖ ಚಕ್ರಗಳು ನಮ್ಮ ದೈಹಿಕ, ಮಾನಸಿಕ ಮತ್ತು ಭಾವುಕ ಕ್ರಿಯೆಗಳ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ. ಅವುಗಳಿಗೆ ಅದ್ಭುತವಾದ ಶಕ್ತಿಯಿದೆ. ಅವುಗಳು ಚೈತನ್ಯ ಕೇಂದ್ರಗಳು ಮತ್ತು ಅವುಗಳನ್ನು ಸಚೇತನಗೊಳಿಸಿ ನಿರ್ಮಲವಾದ ಸ್ಥಿತಿಯಲ್ಲಿ ಇಟ್ಟುಕೊಂಡರೆ ಅವುಗಳಿಂದ ನಾವು ಆನಂದದಿಂದ ಮತ್ತು ಆರೋಗ್ಯವಾಗಿ ಜೀವಿಸಲು ಸಾಧ್ಯ.

ನಮ್ಮ ಎಲ್ಲ ಅನಾರೋಗ್ಯಕ್ಕೆ ಈ ಚಕ್ರಗಳಲ್ಲಿ ಯಾವುದೋ ಒಂದರಲ್ಲಿ ಅಸ್ಥಿರತೆಯೇ ಕಾರಣ, ಏಕೆಂದರೆ ನಮ್ಮ ದೇಹ ಮತ್ತು ಮನಸ್ಸು ನಮ್ಮ ಅಂತರಾಳದಲ್ಲಿ ಬೇರೂರಿವೆ. ಈ ಚಕ್ರಗಳನ್ನು ಆರೋಗ್ಯವಾದ ಸ್ಥಿತಿಯಲ್ಲಿ ಇಟ್ಟುಕೊಂಡರೆ ದೈಹಿಕ ಮತ್ತು ಮಾನಸಿಕ ಮಟ್ಟಗಳಲ್ಲಿ ಪರಿವರ್ತನೆಯಾಗುವುದನ್ನು ಕಾಣಬಹುದು.

ಒಂದು ಸಣ್ಣ ಕಥೆಯನ್ನು ಹೇಳುತ್ತೇನೆ:

ವಿಶ್ವಯುದ್ಧ - 1 ನಡೆದ ನಂತರ, ಒಂದು ಚಿಕ್ಕ ವಿಮಾನವು ಏಷ್ಯಾದ ಒಂದು ಬುಡಕಟ್ಟಿನ ಪಾಳೆಯ ಬಳಿ ಅನಾಥವಾಗಿತ್ತು. ಆ ಬುಡಕಟ್ಟಿನ ಜನರು ತಮ್ಮ ಜೀವನದಲ್ಲಿ ವಿಮಾನವನ್ನು ನೋಡಿಯೇ ಇರಲಿಲ್ಲ. ಅದರ ಬಗ್ಗೆ ತುಂಬ ಉತ್ಸಾಹ ಮತ್ತು ಗದ್ದಲವಿತ್ತು, ಮತ್ತು ಅದರ ಸುತ್ತಲೂ ಒಂದು ದೊಡ್ಡ ಜನಸಮೂಹವೇ ಸೇರಿತು.

ಅದೇನಿರಬಹುದೆಂದು ಅವರು ಕುತೂಹಲದಿಂದಿದ್ದರು, ಹಾಗೆಯೇ ಒಬ್ಬೊಬ್ಬರೂ ಅದರ ಬಗ್ಗೆ ಅವರವರ ಅನಿಸಿಕೆಗಳನ್ನು ಹೇಳತೊಡಗಿದರು.

ಕೊನೆಯಲ್ಲಿ ಅದಕ್ಕೆ ಚಕ್ರಗಳಿದ್ದುದರಿಂದ ಅದು ಎತ್ತಿನಗಾಡಿ ಎಂದು ತೀರ್ಮಾನಿಸಿದರು!

ಹಾಗಾಗಿ, ಹೊಸ ಎತ್ತಿನಗಾಡಿಯ ವಿಚಾರ ಹಳ್ಳಿಯಲ್ಲೆಲ್ಲ ಹರಡಿತು.

ಜನರು ಹಳ್ಳಿಯಲ್ಲಿ ಹಬ್ಬವನ್ನು ಆಚರಿಸಿ, ವಿಮಾನಕ್ಕೆ ಎತ್ತುಗಳನ್ನು ಕಟ್ಟಿ, ಎತ್ತಿನ ಗಾಡಿಯ ಹಾಗೆ ಪಾಳೆಯಲ್ಲೆಲ್ಲಾ ಮೆರವಣಿಗೆ ಮಾಡಿದರು.

ಕೆಲವು ವಾರಗಳ ನಂತರ ನಗರದಲ್ಲಿ ಓದುತ್ತಿದ್ದ ಆ ಬುಡಕಟ್ಟಿನ ಯುವ ಹುಡುಗನೊಬ್ಬ ಅಲ್ಲಿಂದ ಪಾಳೆಗೆ ಹಿಂತಿರುಗಿದನು, ವಿಮಾನವನ್ನು ನೋಡಿದನು. ಅದರೊಳಗೆ ಕುಳಿತು ಸುತ್ತಮುತ್ತಲೂ ನೋಡಿದನು. ಅದರೊಳಗಿದ್ದ ಯಂತ್ರರಚನೆ ಮತ್ತು ಉಪಕರಣಗಳನ್ನು ನೋಡಿದನು. ಸ್ವಿಚ್ಚು ಮತ್ತು ಸನ್ನೆಗಳ ಜೊತೆ ಒಂದೊಂದಾಗಿ ಆಡತೊಡಗಿದನು. ಹಠಾತ್ತನೆ ವಿಮಾನದ ಎಂಜಿನಿಗೆ ಜೀವ ಬಂದಿತು. ಅವನು ವಿಮಾನವನ್ನು ಭೂಮಿಯ ಮೇಲೆ ಸ್ವಲ್ಪ ದೂರ ಚಲಿಸಿದಾಗ ಹಳ್ಳಿಯವರು ಅದನ್ನು ನೋಡಿ ದಿಗ್ಭ್ರಮೆಗೊಂಡರು. ಆ ಹುಡುಗನು ಹಳ್ಳಿಯವರು ಉಪಯೋಗಿಸುತ್ತಿದ್ದ ಟ್ರಾಕ್ಟರ್‌ಗಳನ್ನು ನೋಡಿದ್ದ, ಹಾಗಾಗಿ ಆ ವಿಮಾನವು ಎತ್ತಿನ ಗಾಡಿಯಲ್ಲ, ಒಂದು ತರಹದ ಟ್ರಾಕ್ಟರ್ ಎಂದು ಜನರಿಗೆ ಪ್ರಕಟಿಸಿದ.

ಮತ್ತೆ ಅಲ್ಲಿ ಜೋರು ಹಬ್ಬ ನಡೆಯಿತು, ವಿಮಾನವನ್ನು ಟ್ರಾಕ್ಟರ್ ಹಾಗೆ ಉಪಯೋಗಿಸತೊಡಗಿದರು.

ಆರು ತಿಂಗಳು ಕಳೆದವು; ಒಬ್ಬ ನಿವೃತ್ತನಾದ ಸೇನಾಧಿಕಾರಿಯು ಆ ಹಳ್ಳಿಗೆ ಬಂದನು. ವಿಮಾನವು ಟ್ರ್ಯಾಕ್ಟರ್ ಹಾಗೆ ಉಪಯೋಗವಾಗುತ್ತಿದ್ದನ್ನು ನೋಡಿ ಅವನು ಗಾಬರಿಗೊಂಡನು! ಅದು ಟ್ರ್ಯಾಕ್ಟರ್ ಅಲ್ಲವೆಂದೂ, ಆ ವಿಮಾನವು ನಿಜವಾಗಿಯೂ ಹಾರಬಹುದೆಂದೂ ಅವನು ಹಳ್ಳಿಯವರಿಗೆ ಹೇಳಿದನು.

ಹಳ್ಳಿಯವರು ಅವನನ್ನು ನಂಬಲು ತಯಾರಿರಲಿಲ್ಲ.

ಪಕ್ಷಿಗಳು ಮಾತ್ರ ಹಾರಾಡುತ್ತಿದ್ದದ್ದನ್ನು ನೋಡಿದ್ದರು

ಸೇನಾಧಿಕಾರಿಯು ವಿಮಾನದೊಳಗೆ ಕುಳಿತು, ಸ್ವಲ್ಪ ಹೊತ್ತು ಅದನ್ನು ಹಾರಾಡಿಸಿ ನಂತರ ಭೂಮಿಗೆ ಇಳಿಸಿದನು.

ಹಳ್ಳಿಯವರು ಆಶ್ಚರ್ಯಗೊಂಡರು.

ನಂತರ ಅವರು ಅದರ ನಿಜ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡರು.

ನೋಡಿ: ಮನುಷ್ಯನು ಹಾರಲು ಅತ್ಯದ್ಭುತ ಯಂತ್ರರಚನೆ. ಆದರೆ, ನಮಗೆ ಅದರ ನಿಜ ಸಾಮರ್ಥ್ಯದ ಅರಿವಿಲ್ಲ. ನಮಗೆ ನಮ್ಮ ಮೇಲೆ ಅತಿ ಸೀಮಿತ ದೃಷ್ಟಿ ಇದೆ. ನಮ್ಮಲ್ಲಿ ಬಹಳಷ್ಟು ಜನರು ಬರಿ ಎತ್ತಿನಗಾಡಿಯ ಹಾಗೂ ಸಹಜ ಪ್ರವೃತ್ತಿಯ ಮಟ್ಟದಲ್ಲಿ ನಮ್ಮ ಭಾವನೆಗಳಿಗೆ ಶರಣಾಗಿ ಕಾರ್ಯ ಮಾಡುತ್ತಾರೆ.

ನಮ್ಮಲ್ಲಿ ಯಾರು ಮನೆ, ಕಾರು, ಉದ್ಯೋಗ, ಮತ್ತಿತರ ದೈನಂದಿನ ಬದುಕಿನ ಉಪಕರಣಗಳು ಇಂತಹ ಭೌತಿಕ ವಿಚಾರಗಳಲ್ಲಿ ಭಾಗಿಯಾಗಿ, ಇದನ್ನು ಮೀರಿ ನೋಡದೆ ಇರುವರು, ತಮ್ಮ ದೇಹಗಳನ್ನು ಎತ್ತಿನಗಾಡಿಯ ಹಾಗೆ ಉಪಯೋಗಿಸುತ್ತಾರೆ.

ನಾವು ಸಹಜ ಪ್ರವೃತ್ತಿಯ ಮಟ್ಟದಲ್ಲಿ ಮಾತ್ರ ಕಾರ್ಯಮಾಡಿ, ಮಿತಿಮೀರಿ ಹೊರಿಸಲ್ಪಟ್ಟ ಅರಿವಿಲ್ಲದ ಮನಸ್ಸಿನೊಡನೆ ಇದ್ದುಬಿಡುತ್ತೇವೆ.

ನಮ್ಮಲ್ಲಿ ಯಾರು ಕಲೆ, ಕ್ರಿಯಾಶೀಲತೆ, ತತ್ವಜ್ಞಾನ ಹೀಗೆ ಬರಿ ಮನಸ್ಸಲ್ಲದೆ ಹೃದಯವನ್ನೂ ತೊಡಗಿಸುವ ಕ್ರಿಯೆಗಳಲ್ಲಿ ಆಸಕ್ತರಾಗಿರುತ್ತಾರೋ, ಅವರು ತಮ್ಮ ದೇಹಗಳನ್ನು 'ಟ್ರಾಕ್ಟರ್' ಹಾಗೆ ಉಪಯೋಗಿಸುತ್ತಾರೆ. ಒಂದು ರೀತಿಯ ತೃಪ್ತಿಯನ್ನು ಕಾಣುತ್ತೇವೆ. ಒಂದು ಕವಿತೆಗೆ ಜನ್ಮಕೊಟ್ಟ ಕವಿಯು ಮಗುವಿಗೆ ಜನ್ಮಕೊಟ್ಟ ತಾಯಿಗಿಂತಲೂ ಸಂತೋಷವಾಗಿರುತ್ತಾನೆ. ಗರ್ಭಕೋಶವು ಹೆಣ್ಣಿನಲ್ಲಿ ಹೊಟ್ಟೆಯ ಭಾಗದಲ್ಲಿ ಕೇಂದ್ರೀಕೃತವಾಗಿರುತ್ತದೆ, ಆದರೆ ಕವಿಯಲ್ಲಿ ಅದು ಹೃದಯದಲ್ಲಿ ಕೇಂದ್ರೀಕೃತವಾಗಿರುತ್ತದೆ, ಹಾಗೆಯೇ ತೃಪ್ತಿಯೂ ಕೂಡ. ಇಂತಹ ಜನರು ಬುದ್ಧಿಮತ್ತೆಯ ಮಟ್ಟದಲ್ಲಿ ಕಾರ್ಯ ಮಾಡುತ್ತಾರೆ.

ಕೊನೆಯದಾಗಿ ಯಾವ ವ್ಯಕ್ತಿಯು ಆಧ್ಯಾತ್ಮಿಕತೆಯನ್ನು ಪ್ರವೇಶಿಸಿ, ನೈಜ ಜ್ಞಾನಕ್ಕಾಗಿ ದಾಹವನ್ನು ಬೆಳೆಸಿಕೊಂಡು, ತಾನು ಅಂತಿಮವಾದ ಅಸ್ತಿತ್ವದ ಚೈತನ್ಯವೆಂದು ಅರಿಯುವನೋ, ತನ್ನ ದೇಹವನ್ನು ವಿಮಾನದ ದೇಹದ ರೂಪದಲ್ಲಿರುವ ಹಾಗೆ ಉಪಯೋಗಿಸುತ್ತಾನೆ. ಜ್ಞಾನೋದಯವಾದ ಗುರುಗಳು ತಮ್ಮ ದೇಹಗಳನ್ನು ವಿಮಾನದ ಹಾಗೆ ಉಪಯೋಗಿಸುತ್ತಾರೆ. ಯಾವಾಗಲೂ ಅವರು ಅದೆಷ್ಟು ಆನಂದಮಯವಾಗಿರುತ್ತಾರೆ. ಅವರು ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳ ಶೋಚನೀಯ ಸ್ಥಿತಿಯನ್ನು ಮೀರಿ ಹಾಗೆಯೇ ಹಾರುತ್ತಾರೆ! ಅವರು ಕಷ್ಟಕೋಟೆಲೆಗಳ ಮೇಲೆ ಅಂತಃಸ್ಫೂರ್ತಿಯ ಮಟ್ಟದಲ್ಲಿ ಕಾರ್ಯ ಮಾಡುತ್ತಾರೆ.

ನಾವು ವಿಮಾನವಾಗಬೇಕಾದರೆ ಏನು ಮಾಡಬೇಕು? ಹಳ್ಳಿಯವರಿಗೂ, ಸೇನಾಧಿಕಾರಿಗೂ ಇದ್ದ ವ್ಯತ್ಯಾಸವೇನು? ವಿಮಾನವೇನೋ ಒಂದೇ ಆಗಿತ್ತು. ಅದಕ್ಕೆ ಏನೂ ಸೇರಿಸಲಿಲ್ಲ ಅಥವಾ ಅದರಿಂದ ಏನೂ ತೆಗೆಯಲಿಲ್ಲ. ಅದಕ್ಕೆ ಯಾವ ಶಾರೀರಿಕ ಬದಲಾವಣೆಗಳನ್ನು ಮಾಡಲಿಲ್ಲ, ಹೌದಲ್ಲವೇ? ಹಾಗಾದರೆ, ವ್ಯತ್ಯಾಸವೇನಾಗಿತ್ತು? ಎಲ್ಲಿ, ಹೇಳಿ...

( ಒಬ್ಬ ಮಹಿಳೆ ಉತ್ತರಿಸುತ್ತಾಳೆ )

ಸ್ವಾಮೀಜಿ, ಜ್ಞಾನವೇ...?

ಹೌದು ಜ್ಞಾನ. ವಿಮಾನದ ಯಂತ್ರದ ರಚನೆಯ ಜ್ಞಾನ. ಆ ಯಂತ್ರಕ್ಕೆ ಹಾರಾಡಲು ನಡೆಸಬಹುದಾದ ಯಂತ್ರರಚನೆ ಇದೆಯೆಂದು ಹಳ್ಳಿಯ ಜನರಿಗೆ ತಿಳಿದಿರಲಿಲ್ಲ. ಆದರೆ ಸೇನಾಧಿಕಾರಿಗೆ ಅದು ತಿಳಿದಿತ್ತು ಅಷ್ಟೆ. ಅವರು ವಿಮಾನವನ್ನು ಯಾವ ವಿಧಾನದಲ್ಲಿ ಅದನ್ನು ಉಪಯೋಗಿಸಿದರೋ, ಅದರಂತೆಯೇ ಅದು ಮೊದಲು ಎತ್ತಿನ ಗಾಡಿಯಾಗಿ ನಂತರ ಟ್ರ್ಯಾಕ್ಟರ್ ಆಗಿ ನಂತರ ಕೊನೆಯಲ್ಲಿ ವಿಮಾನವಾಯಿತು.

ಇದೇ ರೀತಿ, ನಮ್ಮೊಳಗೆ 'ಚಕ್ರ'ಗಳೆಂಬ ಯಂತ್ರರಚನೆಗಳು ಮತ್ತು ಉಪಕರಣಗಳು ಇವೆ. ಇವು ಮಿತಿಯಿಲ್ಲದ ಚೈತನ್ಯ ಕೇಂದ್ರಗಳು ಮತ್ತು ಇವುಗಳನ್ನು ಸರಿಯಾದ ಖಚಿತ ಪರಿಹಾರಗಳು

ರೀತಿಯಲ್ಲಿ ಉಪಯೋಗಿಸಿದಾಗ ಇವು ನಮ್ಮನ್ನು ವಿಮಾನವನ್ನಾಗಿ ಮಾಡಬಹುದು. ಯಾವ ಮನುಷ್ಯನಿಗೆ ಈ ಚಕ್ರಗಳ ಬಗ್ಗೆ ತಿಳಿದೆ ಇಲ್ಲವೋ ಅವನು ನೆಲದ ಮೇಲೆ ನಡೆಯುತ್ತಲೇ ಇರುತ್ತಾನೆ, ಆದರೆ ಅವುಗಳನ್ನು ನಡೆಸಲು ಬಲ್ಲ ಗುರುವು ಹಾಗೆಯೇ ಹಾರುತ್ತಾನೆ!

ಈ ಚಕ್ರಗಳ ಹಿಂದೆ ಇರುವ ವಿಜ್ಞಾನವನ್ನು ಅರ್ಥಮಾಡಿಕೊಂಡಾಗ, ಈಗಿರುವ ನಮ್ಮ ಗಾಢವಾದ ಅರಿವಿಲ್ಲದ ಸ್ಥಿತಿಯ ಬಗ್ಗೆ ಅರಿತುಕೊಳ್ಳಬಹುದು. ಇದನ್ನು ಅರಿತರೆ, ಅರಿವಿಲ್ಲದ ಮನಸ್ಸಿನ ಭಾರದಿಂದ ಮುಕ್ತವಾಗಿ, ಜೀವ್ವಳದ ಮೇಲ್ಮಟ್ಟದ ಆಯಾಮಕ್ಕೆ ಚಲಿಸಲು ಆರಂಭಿಸಬಹುದು.

ಈ ಚಕ್ರಗಳು ನಮ್ಮ ದೇಹದ ಭೌತಿಕ (Physical) ಅವು ಆದಿ ಭೌತಿಕ (Metaphysi-cal) ನಿರೂಪಣೆಗಳು ಏಕೆಂದರೆ, ಅವು ತೇಜಸ್ಸಿನ ಶರೀರಕ್ಕೆ ಸಂಬಂಧಿಸಿವೆ, ಭೌತಿಕ ಶರೀರ ಕರ್ಲಿಯನ್ ಚಿತ್ರೀಕರಣದಿಂದ (Kirlian Photography) ಈ ಚಕ್ರಗಳನ್ನು ಸೆರೆಹಿಡಿದು ಮತ್ತು ಆಧಿಭೌತಿಕ ಮಟ್ಟದಲ್ಲಿ ಅವುಗಳ ಅಸ್ತಿತ್ವವನ್ನು ಸಾಧಿಸಿ ತೋರಿಸಲು ಅನುಕೂಲ ಮಾಡಿದೆ.

ಮನುಷ್ಯನಿಗೆ ಯಾವುದಾದರೂ ನಕಾರಾತ್ಮಕ ಭಾವನೆಯಿಂದ ಬಂಧಿತನಾಗಿದ್ದರೆ (locked) ಆ ಭಾವನೆಗೆ ಸಂಬಂಧಪಟ್ಟ ಚಕ್ರವು ಅಂಗಿಯ ಗುಂಡಿಯ ಗಾತ್ರಕ್ಕೆ ಇಳಿಯುವುದು. ಅದು ಅಷ್ಟು ಚಿಕ್ಕದಾಗುವುದು. ಆದರೆ ಅದೇ ಮನುಷ್ಯ ಸಂಬಂಧಿತ ಸಕಾರಾತ್ಮಕ ಭಾವನೆಯನ್ನು ಅನುಭವಿಸಿದಾಗ ಆ ಚಕ್ರವು ಗಾಡಿಯ ಚಕ್ರದ ಗಾತ್ರಕ್ಕೆ ವಿಸ್ತರಿಸುತ್ತದೆ. ನಮ್ಮ ಭಾವನೆಗಳು ಈ ಚೈತನ್ಯ ಕೇಂದ್ರಗಳ ಮೇಲೆ ಅಂದರೆ ನಮ್ಮ ಚಕ್ರಗಳ ಮೇಲೆ ಇಂತಹ ಪರಿಣಾಮವನ್ನು ಬೀರುತ್ತವೆ.

ಈ ಚಕ್ರಗಳಲ್ಲಿ ನಮ್ಮ ಚೈತನ್ಯದ ಹರಿವು ನಮ್ಮ ನಕಾರಾತ್ಮಕ ಭಾವನೆಗಳಿಂದ ನಿಲ್ಲುತ್ತದೆ, ಇದರ ಬಗ್ಗೆ ಸಂಪೂರ್ಣವಾಗಿ ನಮಗೆ ಅರಿವೇ ಇರುವುದಿಲ್ಲ.

ಅರ್ಥಮಾಡಿಕೊಳ್ಳಿ: ಮನುಷ್ಯನು ಭೂಮಿಯ ಮೇಲೆ ತೆವಳುವ ಹುಳುವಿನ ಹಾಗೆ ಇರಲು ಯೋಜಿಸಲ್ಪಟ್ಟಿಲ್ಲ; ಆಕಾಶದಲ್ಲಿ ಹಾರಾಡಲು ಯೋಜಿಸಲಾಗಿದೆ. ಹಾರಾಡುವ ವಿಜ್ಞಾನವೇನೆಂದರೆ ಚಕ್ರಗಳನ್ನು ನಿಭಾಯಿಸಲು ಭಾವನೆಗಳನ್ನು ನಿಭಾಯಿಸಲು ಕಲಿಯುವ ವಿಜ್ಞಾನ. ನಿಮ್ಮ ಶರೀರದ ಏಳು ಚಕ್ರಗಳನ್ನು ಉಪಯೋಗಿಸುವುದು ಹೇಗೆ ಎಂದು ಕಲಿತರೆ ಅಷ್ಟು ಸಾಕು.

ಆ ಹಳ್ಳಿಯವರಿಗೆ ವಿಮಾನವು ಹಾರಬಹುದೆಂದು ಸ್ವಲ್ಪವೂ ತಿಳಿದಿರಲಿಲ್ಲ. ಹಾಗೆಯೇ ಮನುಷ್ಯನಿಗೂ ತಾನು ಹಾರಬಹುದೆಂದು ತಿಳಿದಿಲ್ಲ. ಜ್ಞಾನೋದಯವಾದವರು ದೈವದತ್ತವಾದವರು ಎಂದೂ, ಅವರಿಂದ ದೂರ ನಿಲ್ಲಬೇಕೆಂದೂ, ಅವರನ್ನು ಆಶ್ಚರ್ಯ ಮತ್ತು ಆದರದಿಂದ ನೋಡಬೇಕೆಂದೂ ಮಾನವನು ಯಾವಾಗಲೂ ಭಾವಿಸುತ್ತಾನೆ. ಆದರೆ, ಅವರ ಹಾಗೆ ತಾನೂ ಆಗಬೇಕೆಂದು ಬಯಸುವುದೇ ಇಲ್ಲ. ನಾನೀಗ ಹೇಳುತ್ತೇನೆ: ನೀವು ಆಂತರಿಕ ಜಗತ್ತಿನಲ್ಲಿ ಸಾಧಿಸಬೇಕೆಂದು ನಿಜವಾಗಿ ಆಸಕ್ತಿಯಿದ್ದರೆ, ಏನೇ ಬರಲಿ, ಖಂಡಿತವಾಗಿ ಸಾಧಿಸುತ್ತೀರ. ಸಮಸ್ಯೆ ಏನೆಂದರೆ, ನೀವು ಸಾಧಿಸಬಹುದೆಂದು ನಂಬುವುದಿಲ್ಲ. ಆ ಹಳ್ಳಿಯವರು ವಿಮಾನವು ಹಾರಬಹುದೆಂದು ನಂಬಲು ಹೇಗೆ ನಿರಾಕರಿಸಿದರೋ ಅದೇ ರೀತಿ, ನೀವು ಇನ್ನೂ ಉನ್ನತ ಮಟ್ಟಕ್ಕೆ ಹಾರಲು ಯೋಚಿಸಿದ್ದೀರೆಂದು ನಂಬಲು ನಿರಾಕರಿಸುತ್ತೀರ.

ಒಂದು ಸಣ್ಣ ಕಥೆ:

ಒಂದು ಚಿಕ್ಕ ಹುಡುಗಿಯು ಪಿಯಾನೊವನ್ನು ಬಾರಿಸಲು ಕಲಿಯುತ್ತಿದ್ದಳು.

ಗುರುಗಳ ಪಾಠಗಳನ್ನು ಸರಿಸಮವಾಗಿ ಕಲಿಯಲು ಕಷ್ಟಪಡುತ್ತಿದ್ದಳು.

ಅವಳ ಪಕ್ಕ ಇದ್ದ ಒಬ್ಬ ವ್ಯಕ್ತಿಯೂ ಪಿಯಾನೋ ಬಾರಿಸುವುದರಲ್ಲಿ ಪ್ರವೀಣನಾಗಿದ್ದನು, ತಾನಾಗಿಯೇ ಒಂದು ಹಾಡನ್ನು ಬಾರಿಸುತ್ತಿದ್ದನು.

ಆ ಹುಡುಗಿಯು ಅವನ ಹತ್ತಿರ ಹೋಗಿ ಅವನು ಬಾರಿಸುತ್ತಿದ್ದುದನ್ನು ಸ್ವಲ್ಪ ಹೊತ್ತು ನೋಡುತ್ತಾ ಇದ್ದಳು. ಕೊನೆಯಲ್ಲಿ ಅವಳು “ಅಯ್ಯಾ, ನಿಮಗೆ ಆಕಸ್ಮಿಕವಾಗಿ ನನಗಿಂತ ಹೆಚ್ಚು ಬೆರಳುಗಳಿವೆಯೇ?” ಎಂದು ಕೇಳಿದಳು.

(ನಗು!)

ಯಾವಾಗಲೂ ನಾವು ಎಷ್ಟು ಇರಬೇಕಾಗಿದೆಯೋ ಅಷ್ಟು ದೈವದತ್ತವಾಗಿಲ್ಲ ಎಂದು ಭಾವಿಸುತ್ತೇವೆ. ಸತ್ಯವೇನೆಂದರೆ, ನಮಗೆ ಬೇಕಾಗುವುದೆಲ್ಲ ನಮ್ಮಲ್ಲಿ ಇದ್ದೇ ಇದೆ. ಅದನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸುವುದಕ್ಕೆ ನಮಗೆ ತಿಳಿದಿಲ್ಲ. ನಮ್ಮಲ್ಲಿ ಬಹಳಷ್ಟು ಜನರು ತಮ್ಮ ಜೀವನವನ್ನು, ತಮ್ಮ ಸಾಮರ್ಥ್ಯವನ್ನು ಎತ್ತಿನ ಗಾಡಿಯ ಹಾಗೆ ಅಥವಾ ಟ್ರಾಕ್ಟರ್ ಹಾಗೆ ಉಪಯೋಗಿಸುತ್ತಾರೆ. ಹಾರಾಡುವುದಕ್ಕೆ ಶಕ್ತಿಯು ನಿಮ್ಮಲ್ಲಿಯೇ ಇದೆ, ಆದರೆ ಚಕ್ರಗಳಿಗೆ ಸಂಬಂಧಿಸಿದ ವಿಜ್ಞಾನವನ್ನು ಕಲಿತುಕೊಳ್ಳದೆ ಇದ್ದರೆ ಅದು ಎಂದೆಂದಿಗೂ ಸುಪ್ತವಾಗಿಯೇ ಇರುವುದು.

ಈ ಶಿಬಿರದ ಕೆಲವು ದಿನಗಳಲ್ಲಿ ಪ್ರತಿಯೊಂದು ಚಕ್ರಕ್ಕೆ ಸಂಬಂಧಿಸಿರುವ ಭಾವನೆಗಳಲ್ಲಿ ಈ ಚಕ್ರಗಳಿಗೆ ಚೈತನ್ಯಕ್ಕೆ ಸೆರೆಹಾಕುವುದು ಯಾವುದು, ಸೆರೆಯಿಂದ ಮುಕ್ತಿಕೊಡುವುದು ಯಾವುದು, ಮತ್ತು ಈ ಚಕ್ರಗಳನ್ನು ಸಚೇತನದ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಹೇಗೆ ಎನ್ನುವುದರಲ್ಲಿ ಸ್ಪಷ್ಟ ಒಳನೋಟ ಪಡೆಯುತ್ತೀರ.

ಗುರುವೆಂಬುವವರು ತನ್ನ ಅಂತಿಮ ಸತ್ಯದ ಅನುಭವದಿಂದ ಮಾತನಾಡುವವರು. ಅವರು ಅಂತಿಮ ಅಧಿಕಾರದಿಂದ ಮಾತನಾಡುತ್ತಾರೆ ಏಕೆಂದರೆ, ಅವರಿಗೆ ಆ ಅಂತಿಮ ಅನುಭವವಾಗಿದೆ. ಸಾಮಾನ್ಯವಾಗಿ ನಾವೆಲ್ಲರೂ ಬರಿ ವಯಸ್ಸು, ಅನುಭವದಿಂದ, ಪಕ್ವತೆಯನ್ನು ಹೊಂದಿ ವಿಕಾಸವಾಗಬಹುದೆಂದು ಭಾವಿಸಿರುತ್ತೇವೆ.

ನಾವು ಪಕ್ವವಾಗಿ ವಿಕಾಸವಾಗಲು ಕಾಲದ ಆವಶ್ಯಕತೆಯಿಲ್ಲವೆಂದು ತೋರಿಸಲು ಗುರುಗಳೇ ಜೀವಂತ ಉದಾಹರಣೆಗಳು.

ನೀವು ಮಗುವಾಗಿದ್ದಾಗ ನಿಮ್ಮ ಆಟದ ಸಾಮಾನುಗಳನ್ನು ಬಹಳ ಹಚ್ಚಿಕೊಂಡಿದ್ದಿರಿ, ಅಲ್ಲವೇ, ಯಾರಾದರೂ ನಿಮ್ಮಿಂದ ಆಟದ ಸಾಮಾನನ್ನು ಎತ್ತಿಕೊಂಡುಬಿಟ್ಟಿದ್ದರೆ ತಕ್ಷಣ ಹೇಗೆ ವರ್ತಿಸುತ್ತಿದ್ದಿರಿ? ನಿಮ್ಮ ಇಡೀ ಜೀವನವೇ ಅದನ್ನು ನಂಬಿರುವ ಹಾಗೆ ಕಿರುಚಿ, ಅಳುತ್ತಿದ್ದಿರಿ ಅಲ್ಲವೇ? ಆದರೆ ನೀವು ಬೆಳೆದ ಮೇಲೆ ಯಾರಾದರೂ ನಿಮ್ಮಿಂದ ಆಟದ ಸಾಮಾನನ್ನು ಕಿತ್ತುಕೊಂಡರೆ, ಅದರಿಂದ ನಿಮಗೇನಾದರೂ ತೊಂದರೆಯಾಗುವುದೇ? ನಿಮಗೆ ಕೋಪವಾಗುವುದೋ? ಇಲ್ಲ! ನೀವು ಆಟದ ಸಾಮಾನನ್ನು ಇನ್ನು ಹಚ್ಚಿಕೊಳ್ಳುವುದಿಲ್ಲ; ನಿಮಗೆ ಪಕ್ವತೆಯು ತಾನಾಗಿಯೇ ಸಂಭವಿಸುತ್ತದೆ.

ಈ ರೀತಿಯ ಜ್ಞಾನ ಮತ್ತು ಪಕ್ವತೆಯು ವಯಸ್ಸಿಗೆ ಸಂಬಂಧಪಟ್ಟ ವಿಷಯಗಳೆಂದು ಭಾವಿಸಿದರೂ, ನಿಜವಾಗಿಯೂ, ಅವುಗಳಿಗೆ ದೈಹಿಕ ವಯಸ್ಸಿಗೆ ಜೊತೆ ಸಂಬಂಧವೇ ಇಲ್ಲ; ಆದರೆ ಮಾನಸಿಕ ವಯಸ್ಸಿಗೆ ಸಂಬಂಧಿಸಿವೆ. ಮಾನವನ ಸರಾಸರಿ ಮಾನಸಿಕ ವಯಸ್ಸು 14 ವರ್ಷಗಳಿಗಿಂತ ಹೆಚ್ಚಲ್ಲ ಎಂದು ಕಂಡುಹಿಡಿಯಲಾಗಿದೆ!

ಮನುಷ್ಯನಿಗೆ ದೈಹಿಕ ವಯಸ್ಸಿನಿಂದ ಪಕ್ವನಾಗಬೇಕಾದರೆ ಎಲ್ಲಾ ತರಹದ ತಪ್ಪುಗಳನ್ನು ಮಾಡಿ, ನಂತರ ಅನುಭವಸ್ಥನಾಗಿ ಪಕ್ವನಾಗಬಹುದು.

ಇದು ಹೀಗಿದೆ:

ಮೇಣದ ಬತ್ತಿಯ ಜ್ವಾಲೆಯನ್ನು ಮುಟ್ಟಿದಾಗ ಕೈ ಸುಡುತ್ತದೆ, ನಂತರ ಮೇಣದ ಬತ್ತಿಯ ಬೆಂಕಿಯ ಜ್ವಾಲೆಯು ಸುಡುತ್ತದೆ ಎಂದು ಕಲಿಯುತ್ತೇವೆ.

ಇನ್ನು ಒಲೆಯ ಬೆಂಕಿಯ ಜ್ವಾಲೆಯನ್ನು ಮುಟ್ಟಿ, ಅದು ಕೂಡ ಸುಡುತ್ತದೆ ಎಂದು ಕಲಿಯುತ್ತೇವೆ.

ಮುಂದೆ ಸಿಗರೇಟಿನ ಉರಿಯುತ್ತಿರುವ ತುದಿಯನ್ನು ಮುಟ್ಟಿ ಅದು ಕೂಡ ಸುಡುತ್ತದೆ ಎಂದು ಕಲಿಯುತ್ತೇವೆ.

ನಂತರ ಉರಿಯುತ್ತಿರುವ ಕಲ್ಲಿದ್ದಲನ್ನು ಮುಟ್ಟಿ, ಅದೂ ಕೂಡ ಸುಡುತ್ತದೆ ಎಂದು ಕಲಿಯುತ್ತೇವೆ.

ಈ ರೀತಿ ಅಗ್ನಿಯ ನಾನಾ ರೂಪಗಳನ್ನು ಮುಟ್ಟಿ ಮುಟ್ಟಿ, ಅಗ್ನಿಯ ಎಲ್ಲ ರೂಪಗಳೂ ಸುಡುತ್ತವೆ ಎಂದು ಕಲಿಯುತ್ತೇನೆ. ಇದನ್ನು ಕಲಿಯುವಷ್ಟರೊಳಗೆ, ಉರಿಯುತ್ತಿರುವ ಚಿತೆಯನ್ನೇ ಪ್ರವೇಶಿಸುವ ಕಾಲ ಬರುವುದು! ಇದನ್ನೇ ಜೀವನದಲ್ಲಿ ಅನುಭವ ಎಂದು ಹೇಳುತ್ತೇವೆ. ಇದನ್ನೇ ಅನುಭವದಿಂದ ಕಲಿಯುವುದು ಎನ್ನುತ್ತೇವೆ; ಅಂದರೆ, ದೈಹಿಕ ವಯಸ್ಸಿನೊಂದಿಗೆ ಜ್ಞಾನಾರ್ಜನೆಯನ್ನು ಮಾಡುವುದು ವರ್ಧಿಸುತ್ತಿರುವ ವಯಸ್ಸಿನೊಂದಿಗೆ ನೀವು ಕಲಿಯುತ್ತೀರ ನಿಮ್ಮದೇ ಆದ ವೇಗದಲ್ಲಿ.

ಅದೇ, ಮೊದಲನೆಯ ಜ್ವಾಲೆಯನ್ನು ಮುಟ್ಟಿ, ಆಗಲೇ ಅಗ್ನಿಯ ಎಲ್ಲ ರೂಪಗಳೂ ಸಹ ಸುಡುತ್ತವೆ ಅದು ಅರ್ಥಮಾಡಿಕೊಂಡರೆ ನೀವು ಬುದ್ಧಿವಂತರು. ಇದನ್ನು ಕಲಿಯಲು ಕಾಲದ ಅವಶ್ಯಕತೆಯಿಲ್ಲ. ಬುದ್ಧಿಯೊಂದಿದ್ದರೆ ಸಾಕು. ಇದು ನಿಮ್ಮ

ಮಾನಸಿಕ ವಯಸ್ಸನ್ನು ಸೂಚಿಸುತ್ತದೆ. ಹಾಗಾಗಿ ಜಾಣತನ ದೈಹಿಕ ವಯಸ್ಸಿಗೂ ಸಂಬಂಧವೇ ಇಲ್ಲ ಎಂದು ಹೇಳುತ್ತೇವೆ. ನೀವು ಎಷ್ಟು ಬುದ್ಧಿವಂತರು, ನಿಮ್ಮ ವಿಚಾರ ಅರ್ಥಮಾಡಿಕೊಳ್ಳಲು ಆಂತರಿಕ ಬುದ್ಧಿಶಕ್ತಿಯನ್ನು ಎಷ್ಟು ಪೋಷಿಸಿದ್ದೀರೆಂಬುದು ಪ್ರಶ್ನೆ.

ನಿಮ್ಮ ಜೀವನದಲ್ಲೇ ನಡೆಯುವಂತಹ ವಿಚಾರಗಳನ್ನು ನೋಡೋಣ.

ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಕಾಲೇಜಿನಲ್ಲಿ ಓದುತ್ತಿರುವಾಗ ನಿಮಗೆ ಕೆಲಸ ಸಿಕ್ಕಿದಾಗ ಖುಷಿಯಾಗಬಹುದೆಂದು ಭಾವಿಸುತ್ತೀರ.

ಕೆಲಸ ದೊರಕಿದ ಮೇಲೆ ಅದೇನೋ ನೀವು ಅಂದುಕೊಂಡಷ್ಟು ಸಂತೋಷವಾಗುತ್ತಿಲ್ಲ. ಆದರೆ ಆಗ ನೀವು ಮದುವೆಯಾದರೆ ಸಂತೋಷ ಪಡಬಹುದು ಎಂದು ಸಮಾಧಾನರಾಗುತ್ತೀರ.

ಮದುವೆಯಾದ ಮೇಲೆ, ಮಕ್ಕಳಾದರೆ ಸಂತೋಷ ಪಡಬಹುದು ಎಂದು ಭಾವಿಸುತ್ತೀರ.

ಪ್ರತಿಯೊಂದು ಆಸೆಯು ಪೂರೈಸಿದ ಮೇಲೆ ಮಾತ್ರ ನೀವು ಸಂತೋಷವಾಗಿರುತ್ತೀರಿ ಎಂದು ಭಾವಿಸಿ, ಪ್ರತಿಯೊಂದು ಆಸೆಯ ಬೆನ್ನಟ್ಟಿ ಓಡುತ್ತೀರ. ಇದೇ ರೀತಿ, ಜೀವನದ ಕೊನೆಗಾಲದವರೆಗೂ ಓಡುತ್ತಲೇ ಇರುತ್ತೀರ ಮತ್ತು ನಿಮ್ಮ ಯಾವುದೇ ಆಸೆಯ ಪೂರೈಕೆಯಿಂದಾಗಲೀ ನಿಜವಾಗಿಯೂ ನಿಮಗೆ ನಿಜ ಸಂತೋಷವು ದೊರಕಿಲ್ಲ ಎಂದು ನಿಮಗೆ ಅರಿವಾದ ಮೇಲೆ ಆಧ್ಯಾತ್ಮಿಕತೆ ಮತ್ತು ಧ್ಯಾನದ ಕಡೆ ಓಡುತ್ತೀರ.

ದೈಹಿಕ ವಯಸ್ಸಿನೊಂದಿಗೆ ಅನುಭವದಿಂದ ಕಲಿಯುವ ಮನುಷ್ಯನ ಜೀವನವು ಹೀಗೆ ಇರುತ್ತದೆ.

ಉನ್ನತ ಮಾನಸಿಕ ವಯಸ್ಸಿರುವ ಮನುಷ್ಯನು ಬುದ್ಧಿಯನ್ನು ಉಪಯೋಗಿಸಿ ಕಲಿಯುತ್ತಾನೆ, ಅವನು ಮಾತ್ರ ಯಾವುದೇ ಆಸೆಯನ್ನು ಪೂರೈಸಿದರೂ ನಿಜ ಸಂತೋಷವು ದೊರಕುವುದಿಲ್ಲವೆಂದು ತನ್ನ ಮೊದಲ ಆಸೆಯಿಂದಲೇ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಾನೆ; ಇಲ್ಲೇ ವ್ಯತ್ಯಾಸವಿರುವುದು. ಅವನು ವಿಷಯವನ್ನು ಸಂಪೂರ್ಣತೆಯಿಂದ ನೋಡಿ, ಅದನ್ನು ಸಂಪೂರ್ಣವಾಗಿ ವಿಶ್ಲೇಷಿಸುತ್ತಾನೆ. ನಿಜವಾದ ಸಂತೃಪ್ತಿಯು ಒಳಗಿನಿಂದ ಬರುವುದು, ಪ್ರಾಪಂಚಿಕ ವಿಷಯ ಗಳಿಂದಲ್ಲವೆಂದು ಅವನಿಗೆ ತಿಳಿದಿದೆ.

ಈ ಜಾಣತನವನ್ನು ಪಡೆಯಲು ನಿಮಗೆ ವಯಸ್ಸಾಗಿರಬೇಕಾಗಿಲ್ಲ, ನೀವು ವರ್ತಮಾನದಲ್ಲಿ ಇರಬೇಕು ಅಷ್ಟೆ. ವರ್ತಮಾನದಲ್ಲಿದ್ದರೆ ಅಸ್ತಿತ್ವವೇ ನಿಮಗೆ ಹೇಳಿಕೊಡುತ್ತದೆ. ಅಸ್ತಿತ್ವವೇ ಪರಮಶ್ರೇಷ್ಠ ಗುರು. ನಾವು ವರ್ತಮಾನದಲ್ಲಿ ಇಲ್ಲದೆ ಯಾವಾಗಲೂ ಭೂತಕಾಲ ಮತ್ತು ಭವಿಷ್ಯತ್ತಿನಲ್ಲಿ ಇದ್ದರೆ, ನಮ್ಮದೇ ಆದ ವೇಗದಲ್ಲಿ ಕಲಿಯುತ್ತೇವೆ ಅಷ್ಟೆ.

ವರ್ಷಾಂತರಗಳಲ್ಲಿ ಬುದ್ಧ, ಶಂಕರ, ರಮಣ ಮಹರ್ಷಿ, ವಿವೇಕಾನಂದ, ಭಾರತದ ಇತಿಹಾಸವನ್ನು ಸೃಷ್ಟಿಸಿದ ಜ್ಞಾನಿಗಳ ಜೀವವನ್ನು ನೋಡಿದರೆ ಅವರೆಲ್ಲರೂ ಅತಿ ಚಿಕ್ಕ ವಯಸ್ಸಿನಲ್ಲೇ ಜ್ಞಾನೋದಯವನ್ನು ಪಡೆದರು. ಹಾಗಾಗಿ, ವಯಸ್ಸೆಂಬುದು ಆಧ್ಯಾತ್ಮಿಕತೆಗೆ ಮತ್ತು ಕಲಿಯುವುದಕ್ಕೆ ಸಂಬಂಧಿಸಿಲ್ಲವೆಂದು ಅರ್ಥಮಾಡಿಕೊಳ್ಳಿ.

ಅದಕ್ಕಾಗಿಯೇ 'ನಿಮ್ಮತನಕ್ಕೆ ನಿಮ್ಮಷ್ಟೇ ವಯಸ್ಸಾಗಿದೆ' ಎಂದು ಹೇಳುತ್ತಾರೆ. ಇದರ ಅರ್ಥ ನಿಮಗೆ ನಿಮ್ಮ ಮಾನಸಿಕ ವಯಸ್ಸಿನಷ್ಟೇ ವಯಸ್ಸಾಗಿದೆ ಎಂದು. ನಿಮಗೆ ನಿಮ್ಮ ಪಕ್ವತೆ ಎಷ್ಟಿದೆಯೋ ಅಷ್ಟೇ ವಯಸ್ಸಾಗಿದೆ, ನಿಮ್ಮ ದೈಹಿಕ ವಯಸ್ಸಿನಷ್ಟು ವಯಸ್ಸಾಗಿಲ್ಲ. ನಿಮಗೆ ವಯಸ್ಸು (70) ಎಪ್ಪತ್ತು ವರ್ಷಗಳಿದ್ದರೂ 20 ವರ್ಷದವನಷ್ಟೇ ತಿಳಿವಳಿಕೆ ಇರಬಹುದು. ಅಥವಾ ನಿಮಗೆ ವಯಸ್ಸು 18 ವರ್ಷಗಳಿದ್ದರೂ 80 ವರ್ಷದವನಷ್ಟು ತಿಳಿವಳಿಕೆ ಇರಬಹುದು. ಹಾಗಾಗಿ ನಿಮಗೆ ಹೆಚ್ಚು ವಯಸ್ಸಾಗಿದೆ ಎಂದ ಮಾತ್ರಕ್ಕೆ ನೀವೇ ಶ್ರೇಷ್ಠರು ಎಂದು ದಯವಿಟ್ಟು ಅಂದುಕೊಳ್ಳಬೇಡಿ.

ಶ್ರೀ ರಾಮಕೃಷ್ಣರ ಶಿಷ್ಯ - ಸ್ವಾಮಿ ಬ್ರಹ್ಮಾನಂದರ ಒಂದು ಸುಂದರವಾದ ಕಥೆ - ಒಂದು ದಿನ, ಸ್ವಾಮಿ ಬ್ರಹ್ಮಾನಂದರು ಬೃಂದಾವನದಲ್ಲಿ ಧ್ಯಾನ ಮಾಡುತ್ತಿದ್ದರು. ಒಬ್ಬ ಭಕ್ತ ಬಂದು ದುಬಾರಿ ಬೆಲೆಯ ಹೊದಿಕೆಯನ್ನು ಅರ್ಪಣೆಯಾಗಿ ಅವರ ಮುಂದೆ ಇಟ್ಟನು.

ಸ್ವಾಮಿ ಬ್ರಹ್ಮಾನಂದರು ಏನೂ ಹೇಳಲಿಲ್ಲ. ಅವರು ನಡೆಯುತ್ತಿದ್ದನ್ನು ಸುಮ್ಮನೆ ನೋಡುತ್ತಿದ್ದರು.

ಸ್ವಲ್ಪ ಗಂಟೆಗಳ ನಂತರ ಒಬ್ಬ ಕಳ್ಳ ಬಂದ, ಹೊದಿಕೆಯನ್ನು ನೋಡಿದ, ಅವರ ಹತ್ತಿ ಬಂದು ಹೊದಿಕೆಯನ್ನು ಎತ್ತಿಕೊಂಡು ಹೋದ.

ಆಗಲೂ ಬ್ರಹ್ಮಾನಂದರು ಅದೇ ರೀತಿ ಸುಮ್ಮನಾಗಿ ಯಾವುದೇ ಪ್ರತಿಕ್ರಿಯೆ ಇಲ್ಲದೆ ನೋಡುತ್ತಿದ್ದರು! ಹೊದಿಕೆ ಪಡೆಯುವುದರಲ್ಲೂ ಕಳೆದುಕೊಳ್ಳುವುದರಲ್ಲೂ ಅವರಿಗೆ ಏನೂ ವ್ಯತ್ಯಾಸವಾಗಲಿಲ್ಲ.

ಇದೇ ರೀತಿ ಭಗವಾನ್ ರಮಣ ಮಹರ್ಷಿಗಳ ಒಂದು ಕತೆ ಇದೆ:

ಒಂದು ದಿನ ಕೆಲವು ಕಳ್ಳರು ಅವರ ಆಶ್ರಮವನ್ನು ಪ್ರವೇಶಿಸಿದರು. ಹೊರಡುವ ಮುಂಚೆ, ಕಂಡ ಚೊರುಪಾರನ್ನು ಎತ್ತಿಕೊಂಡು, ಅವರಿಗೆ ಹೊಡೆದರು ಕೂಡ.

ಭಗವಾನ್ ಯಾವುದೇ ಪ್ರತಿಕ್ರಿಯೆ ತೋರಿಸಲಿಲ್ಲವೆಂದು ಹೇಳಲಾಗಿದೆ, ಘಟನೆ ನಡೆದಾದ ಮೇಲೆಯೂ ಅವರ ಉಸಿರಾಟದ ವೇಗವೂ ಬದಲಾಗಿರಲಿಲ್ಲ!

ನಡೆದ ಈ ಎಲ್ಲ ಘಟನೆಗಳಿಂದಲೂ ಅವರು ವಿಚಲಿತರಾಗಿರಲಿಲ್ಲ. ನಾವು ಬರಿ ವೀಕ್ಷಕರಷ್ಟೆ ಆದಾಗ, ಮನಸ್ಸು ನಮ್ಮ ಕೈಯಲ್ಲಿನ ಸಾಧನೆಯಾಗುವುದು. ಆಗ ಅದನ್ನು ನಮ್ಮ ಇಷ್ಟದಂತೆ ಉಪಯೋಗಿಸಬಹುದು. ಇಲ್ಲದಿದ್ದರೆ ನಾವು ಮನಸ್ಸಿನ ಆಳಾಗುತ್ತೇವೆ. ನಿಮಗೆ ಅವಶ್ಯವಿದ್ದಾಗ ಮನಸ್ಸನ್ನು ಉಪಯೋಗಿಸಲು ಸಾಧ್ಯವಾದರೆ ಅದನ್ನು ಬಿಟ್ಟುಬಿಡಲು ಕಲಿತಿದ್ದೀರ ಎಂದರ್ಥ! ನೀವು ಗುರುವಾಗಿಬಿಟ್ಟಿದ್ದೀರ!

ಹಾಗಾಗಿ, ಶಿಬಿರದ ಈ ಕೆಲವು ದಿನಗಳಲ್ಲಿ ನಿಮ್ಮ ಭಾವನೆಗಳನ್ನು ನಿಭಾಯಿಸುವುದು ಹೇಗೆ ಮತ್ತು ನಮ್ಮ ಜೀವನದ ವೀಕ್ಷಕರಾಗುವುದು ಹೇಗೆ; ನಮ್ಮನ್ನು ನಮ್ಮೊಳಗೆಯೇ ಕೇಂದ್ರೀಕರಿಸಿ, ಪರಿಧಿಯಲ್ಲಿ ಅಡಚಣೆಯಿಲ್ಲದೆ ಕೆಲಸ ಮಾಡುವುದು ಹೇಗೆ ಎಂದು ನೋಡೋಣ. ಅರಿವಿಲ್ಲದೆ ನಿರ್ಧಾರ ಮಾಡುವುದಕ್ಕೆ ಕಾರಣವಾದ ಅಚ್ಚೊತ್ತಿದ ನೆನಪುಗಳಿಂದ ಮುಕ್ತವಾಗಿರುವ ಮಾನಸಿಕ ಸ್ಥಿತಿಯನ್ನು ಸೃಷ್ಟಿಸುವುದು ಹೇಗೆ ಎಂದು ನೋಡೋಣ. ನಮ್ಮೊಳಗಿರುವ ಅಂತಃಸ್ಫೂರ್ತಿಯ ಚೈತನ್ಯವನ್ನು ಉಪಯೋಗಿಸುವುದು ಹೇಗೆ ಎಂದು, ಅರಿವಿಲ್ಲದ ಮಟ್ಟದಿಂದ ಅರಿವಿನ ಮಟ್ಟಕ್ಕೆ ಅರಿವಿನ ಮಟ್ಟದಿಂದ ಉತ್ಕೃಷ್ಟ ಅರಿವಿನ ಮಟ್ಟಕ್ಕೆ ಹೋಗುವುದು ಹೇಗೆ ಎಂದು; ಸಹಜ ಪ್ರವೃತ್ತಿಯಿಂದ ಬುದ್ಧಿಮತ್ತೆಗೆ, ಬುದ್ಧಿಮತ್ತೆಯಿಂದ ಅಂತಃಸ್ಫೂರ್ತಿಗೆ ಹೋಗುವುದು ಹೇಗೆ ಎಂದು ಆನಂದದ ಕಾರಂಜಿಯನ್ನು ನಮ್ಮೊಳಗಿನಿಂದ ಮೂಡಿಸುವುದು ಹೇಗೆ ಎಂದು ನೋಡೋಣ!

ಮುಂದಿನ ಅವಧಿಯಲ್ಲಿ ಮತ್ತೆ ಭೇಟಿಯಾಗೋಣ, ಧನ್ಯವಾದಗಳು.

ಭಾವಚಿತ್ರ