KAILASA Library/ಖಚಿತ ಪರಿಹಾರಗಳು/ಅಧ್ಯಾಯ - 1: ಪರಸ್ಪರ ವಿನಿಮಯSign in
ಖಚಿತ ಪರಿಹಾರಗಳು

ಅಧ್ಯಾಯ - 1: ಪರಸ್ಪರ ವಿನಿಮಯ

This text was machine-transcribed from the printed book and may contain errors. Select the words and choose “Report a mistake”.

(Interaction)

ನಿಮ್ಮೆಲ್ಲರಿಗೂ ನನ್ನ ಪ್ರೀತ್ಯಾದರಗಳ ಸ್ವಾಗತ

ನಿಮ್ಮ ಜ್ಞಾನವನ್ನು ವರ್ಧಿಸಿಕೊಳ್ಳಲು ಜೀವನದ ಒಂದು ಹೊಸ ದೃಶ್ಯವನ್ನು ಪಡೆಯಲು ಇನ್ನೂ ಒಳ್ಳೆಯ ರೀತಿಯಲ್ಲಿ ಬದುಕಬಹುದೇ ಎಂಬ ನಿರೀಕ್ಷೆಯಿಂದ, ಮತ್ತು ಅಪೇಕ್ಷೆಯಿಂದ ನೀವಿಲ್ಲಿಗೆ ಬಂದಿದ್ದೀರಿ.

ವಿಷಯಕ್ಕೆ ಹೋಗುವ ಮೊದಲು ಕೆಲವು ವಿಚಾರಗಳನ್ನು ಹೇಳಲು ಬಯಸುತ್ತೇನೆ. ಇದರಿಂದ ನೀವಿಲ್ಲಿರುವಾಗ ಹೆಚ್ಚು ಲಾಭ ಪಡೆಯಲು ಸಾಧ್ಯವಾಗುವುದು.

ನೀವು ಎಷ್ಟೋ ಸ್ಥಳಗಳಿಗೆ ಹೋಗಿರಬಹುದು, ಬೇರೆಷ್ಟೋ ಉಪನ್ಯಾಸಗಳನ್ನು ಕೇಳಿರಬಹುದು. ಅದೆಲ್ಲವು ಇರಲಿ. ಒಂದು ವಿಚಾರ: ನೀವಿಲ್ಲಿರುವಾಗ ಸಂಪೂರ್ಣವಾಗಿ ಇಲ್ಲಿಯೇ ಇರಿ.

ಬೇರೆ ಸ್ಥಳಗಳಿಂದ ನೀವರಿತ ಜ್ಞಾನವನ್ನೆಲ್ಲ ಬಿಟ್ಟು, ಆಮೇಲೆ ಇಲ್ಲಿ ಒಳಗೆ ಬನ್ನಿ. ಹೊರಗೆ ‘ನಿಮ್ಮ ಪಾದರಕ್ಷೆಗಳನ್ನು ಹಾಗೂ ಮನಸ್ಸನ್ನು ಹೊರಗೆ ಬಿಡಿ’, ಎಂಬ ಸೂಚನಾ ಫಲಕವನ್ನು ನೋಡಿರಬಹುದು ಇದರ ಅರ್ಥವೇನೆಂದು ತಿಳಿಯಲು ನೀವು ಕುತೂಹಲವುಳ್ಳವರಾಗಿರಬಹುದು. ಇದರ ಅರ್ಥ: ನಿಮ್ಮ ಪಾದರಕ್ಷೆಗಳನ್ನು ಹೊರಗೆ ಬಿಡುವಾಗಲೇ ನಿಮ್ಮ ಮನಸ್ಸನ್ನು ಕೂಡ ಹೊರಗೆ ಬಿಡಿ. ನೀವು ಪಡೆದ ಜ್ಞಾನವನ್ನೆಲ್ಲ ನಿಮ್ಮ ಪಾದರಕ್ಷೆಗಳಂತೆಯೇ ಬಿಟ್ಟು ಒಳಗೆ ಬನ್ನಿ. ಹಿಂದಿರುಗುವಾಗ ಅದನ್ನು ಮತ್ತೆ

ತೆಗೆದುಕೊಂಡು ಹೋಗಬಹುದು. ಅದರ ಬಗ್ಗೆ ಚಿಂತಿಸಬೇಡಿ! ಯಾರೂ ನಿಮ್ಮ ಮನಸ್ಸನ್ನು ತೆಗೆದುಕೊಂಡು ಹೋಗುವುದಿಲ್ಲ. ಅದು ಸುರಕ್ಷಿತವಾಗಿರುತ್ತದೆ.

ನಿಮ್ಮ ಪಾದರಕ್ಷೆಗಳನ್ನಾದರೂ ಜನರು ತೆಗೆದುಕೊಳ್ಳಬಹುದು. ಆದರೆ ನಿಮ್ಮ ಮನಸ್ಸನ್ನು ಜನರು ಅದನ್ನು ಮುಟ್ಟುವುದಿಲ್ಲ. ನಾನು ಭರವಸೆ ಕೊಡುತ್ತೇನೆ! ಜನರು ತಮ್ಮ ಮನಸ್ಸನ್ನೇ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ; ಖಂಡಿತವಾಗಿ ನಿಮ್ಮ ಮನಸ್ಸನ್ನು ಮುಟ್ಟಲು ಪ್ರಯತ್ನ ಮಾಡುವುದಿಲ್ಲ!

ಇಲ್ಲಿ ನೀವು ಖಾಲಿ ಮನಸ್ಸಿನಿಂದ ಇರಿ. ಯಾವುದೇ ಪೂರ್ವಕಲ್ಪಿತ ಅಭಿಪ್ರಾಯವಿಲ್ಲದೆ ಬಂದರೆ ನಾನು ಹೇಳುವುದನ್ನು ಸಂಪೂರ್ಣವಾಗಿ ಗ್ರಹಿಸಬಹುದು.

ನೀವರಿತ ಜ್ಞಾನದೊಂದಿಗೆ ಒಳಗೆ ಬಂದರೆ, ನೀವು ಯಾವಾಗಲೂ ನನ್ನ ಒಂದೊಂದು ಮಾತನ್ನು, ಅದರ ಬಗ್ಗೆ ನಿಮಗೆ ಗೊತ್ತಿರುವುದರ ಜೊತೆ, ಅದರ ಬಗ್ಗೆ ಬೇರೊಬ್ಬರಿಂದ ಕೇಳಿರುವುದರ ಜೊತೆ ತುಲನೆ ಮಾಡಿ, ನಾನು ಹೇಳಲು ಪ್ರಯತ್ನಿಸುತ್ತಿರುವುದನ್ನು ಕಳೆದುಕೊಳ್ಳುತ್ತೀರಾ ನನ್ನನ್ನು ಗ್ರಹಿಸಲು ನಿಮ್ಮಲ್ಲಿ ಸ್ವಲ್ಪ ಸ್ಥಳವಿದ್ದರೆ ಮಾತ್ರ ನನ್ನನ್ನು ಗ್ರಹಿಸಲು ಸಾಧ್ಯವಾಗುವುದು. ಈಗಾಗಲೇ ನೀವು ಭರ್ತಿಯಾಗಿದ್ದರೆ, ನನ್ನನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ.

ಒಂದು ಸಣ್ಣ ಕಥೆ:

ಪಶ್ಚಿಮದ ಒಬ್ಬ ವಿದ್ಯಾವಂತ ಪ್ರಾಧ್ಯಾಪಕನು ಪೂರ್ವದ ಒಬ್ಬ ಝೆನ್ ಗುರುವನ್ನು ಭೇಟಿ ಮಾಡಲು ಹೋದ.

ಆ ಪ್ರಾಧ್ಯಾಪಕನು ಬಹಳ ಪಾಂಡಿತ್ಯವನ್ನು ಪಡೆದವನಾಗಿದ್ದು, ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಮಾಡಿದ್ದ. ಅವನು ಸ್ವಲ್ಪ ಆಧ್ಯಾತ್ಮಿಕ ಜ್ಞಾನಕ್ಕಾಗಿ, ವಿವಿಧ ವಿಚಾರಗಳನ್ನು ಚರ್ಚಿಸಲು ಹಾಗೂ ಆಧ್ಯಾತ್ಮಿಕತೆಯನ್ನು ಇನ್ನೂ ಒಳ್ಳೆಯ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಗುರುವಿನ ಬಳಿ ಹೋದನು.

ಅವನು ಗುರುವು ನೆಲೆಸಿದ ಕ್ಷೇತ್ರಕ್ಕೆ ಬಂದನು, ಅವರು ಚಹಾ ತಯಾರಿಸುತ್ತಿರುವುದನ್ನು ನೋಡಿದನು. ಗುರುವು ಅವನನ್ನು ನೋಡಿ, ಕುಳಿತುಕೊಳ್ಳಲು ಸನ್ನೆ ಮಾಡಿ, ಮತ್ತೆ ಅವರು ಚಹಾ ತಯಾರಿಕೆಯನ್ನು ಮುಂದುವರೆಸಿದರು.

ಪ್ರಾಧ್ಯಾಪಕನು ಕುಳಿತನು; ಸ್ವಲ್ಪ ಹೊತ್ತಿನ ನಂತರ ಮಾತನಾಡಲಾರಂಭಿಸಿದ, ತನ್ನ ಹಿನ್ನೆಲೆ, ತನ್ನ ವಿದ್ಯಾಭ್ಯಾಸ, ತಾನು ಕಂಡುಹಿಡಿದ ವಿಷಯಗಳು, ತನ್ನ ಜಗತ್ಪವಾಸ, ವಿವಿಧ ರೀತಿಯ ಜನರೊಡನೆ ತನ್ನ ಅನುಭವಗಳು, ಹಲವಾರು ವಿಚಾರಗಳಲ್ಲಿ ತನ್ನ ತೀರ್ಪುಗಳು (ಸಿದ್ಧಾಂತಗಳು) ಹಾಗೂ ಇನ್ನಷ್ಟು ವಿಚಾರಗಳು, ಇನ್ನೇನಿಲ್ಲ!

ಗುರುವು ಚಹಾ ತಯಾರಿಕೆಯನ್ನು ಮುಗಿಸಿ, ತಮ್ಮಿಬ್ಬರ ಮಧ್ಯೆ ಎರಡು ಬಟ್ಟಲುಗಳನ್ನು ಇಟ್ಟರು.

ಅವರು ಪ್ರಾಧ್ಯಾಪಕನ ಬಟ್ಟಲಿಗೆ ಚಹಾ ಸುರಿಯಲು ಪ್ರಾರಂಭಿಸಿದರು. ಸುರಿಯುತ್ತಾ ಸುರಿಯುತ್ತಾ ಚಹಾ ಬಟ್ಟಲಿನ ಹೊರಗೆ ಹರಿಯಲಾರಂಭಿಸಿತು. ಚಹಾ ಬಟ್ಟಲ ತಟ್ಟೆಯ ಮೇಲೆ ಹರಿದು, ನಂತರ, ಮೇಜಿನ ಮೇಲೆ ಹರಿಯಿತು.

ಪ್ರಾಧ್ಯಾಪಕನು ಇದನ್ನು ವೀಕ್ಷಿಸುತ್ತಲೇ ಇದ್ದನು. ಇನ್ನು ಅವನಿಗೆ ಸುಮ್ಮನಿರಲಾಗಲಿಲ್ಲ, "ಗುರುವೇ, ಏನು ಮಾಡುತ್ತಿದ್ದೀರಿ? ಸುರಿಯುವುದನ್ನು ನಿಲ್ಲಿಸಿ! ಬಟ್ಟಲು ಸೂಸಿ ಹರಿಯುತ್ತಿದೆ" ಎಂದು ಕೂಗಿದ.

ಗುರುವು ನಿಲ್ಲಿಸಿ ಶಾಂತತೆಯಿಂದ "ಅದರಂತೆಯೇ ನೀನೂ ಕೂಡ" ಎಂದರು.

ಪ್ರಾಧ್ಯಾಪಕನು ಬೆಚ್ಚಿದನು, ಆದರೆ ಗುರುವಿನ ಮಾತನ್ನು ಅರ್ಥಮಾಡಿಕೊಂಡನು.

ಇನ್ನು ಹೆಚ್ಚು ಚಹಾ ಹಿಡಿಯಲಾರದ ಚಹಾ ಬಟ್ಟಲಿನಂತೆ ಆ ಪ್ರಾಧ್ಯಾಪಕನು ಇದ್ದನು. ಗುರುವು ಏನಾದರೂ ಹೇಳಿದ್ದರೂ, ಅದು ಅವನನ್ನು ಸೂಸಿ ಹರಿಯುತ್ತಿತ್ತೇ ಹೊರತು ಅವನೊಳಗಲ್ಲ. ಗುರುವು ಏನು ಹೇಳಲು ಬಯಸುತ್ತಿದ್ದರೆಂದು ಅವರ ಆ ಒಂದೇ ಮಾತಿನಿಂದ ಅವನಿಗೆ ಅರ್ಥವಾಯಿತು!

ಅರ್ಥಮಾಡಿಕೊಳ್ಳಿ; ನಿಮಗೆ ನನ್ನ ಅನುಭವವಾಗಬೇಕಾದರೆ, ಈ ದಿನಗಳ ಸಮಯದಲ್ಲಿ ನಿಜವಾಗಿ ಏನನ್ನಾದರೂ ಗಳಿಸಬೇಕಾದಲ್ಲಿ ಒಂದು ಖಾಲಿ ಬಟ್ಟಲಿನಂತೆ ಇರಿ. ತೆರೆದ ಮನಸ್ಸಿನಿಂದ ಗ್ರಹಿಸಲು ಸಿದ್ಧರಾಗಿರಿ. ಮುಗ್ಧವಾಗಿ, ಕುತೂಹಲತೆಯಿಂದಿರುವ ಮಗುವನಂತಿರಿ. ಗ್ರಹಿಸಲು ಸದಾ ಸಿದ್ಧವಾಗಿರುವ ಸ್ಪಾಂಜಿನಂತಿರಿ, ಅಷ್ಟು ಸಾಕು.

ಗಮನಿಸಿ: ಜ್ಞಾನದಲ್ಲಿ ಮೂರು ವಿಧ. ಮೊದಲನೆಯದು ಬೌದ್ಧಿಕ ಜ್ಞಾನ ಅಂದರೆ ಮನೋಜ್ಞಾನ. ಇದಕ್ಕೆ ಬರೀ ನಿಮ್ಮ ಮನಸಿನ ಅವಶ್ಯಕತೆ ಇದೆ. ಬೇರೇನೂ ಬೇಡ. ಚುರುಕಾಗಿದ್ದು, ಒಳ್ಳೆಯ ಜ್ಞಾಪಕಶಕ್ತಿಯುಳ್ಳವರಾಗಿದ್ದರೆ, ಅಷ್ಟು ಸಾಕು. ತರ್ಕವನ್ನು (logic) ಬಳಸಲು ಬಂದರೆ, ವಿಚಾರಗಳನ್ನು ಜೋಡಿಸಿ ಅರ್ಥಮಾಡಿಕೊಳ್ಳುವ ಅರಿವಿದ್ದರೆ ಅಷ್ಟು ಸಾಕು. ಶಾಲೆಯಲ್ಲಿ ಪುಸ್ತಕಗಳ ಮಾಧ್ಯಮದಿಂದ ಗಳಿಸುವ ಜ್ಞಾನದ ಬಗೆ ಇದು. ಗಣಿತ ಮತ್ತು ವಿಜ್ಞಾನವನ್ನು ಕಲಿಯಲು ನಿಮ್ಮ ಮನಸ್ಸು ಸಾಕು. ಒಬ್ಬ ದೊಡ್ಡ ಗಣಿತಶಾಸ್ತ್ರ ಪಂಡಿತನೋ ಅಥವಾ ದೊಡ್ಡ ವಿಜ್ಞಾನಿಯೋ ಆಗಬಹುದು.

ಜ್ಞಾನದ ಎರಡನೆಯ ವಿಧ ಹೃದಯದ ಜ್ಞಾನ. ಇಲ್ಲಿ ಮನಸ್ಸಿನ ಜತೆ ನಿಮ್ಮ ಹೃದಯವನ್ನೂ ಉಪಯೋಗಿಸಬೇಕು, ಕಲೆ, ಸಂಗೀತ, ಕವಿತೆ ಬರೆಯುವುದು, ನೃತ್ಯ

  • ಇವೆಲ್ಲವೂ ಈ ವಿಧಕ್ಕೆ ಸೇರಿದ್ದು. ಇವೆಲ್ಲಕ್ಕೂ, ಬರೀ ಮನಸ್ಸನ್ನು ಮಾತ್ರ ಬಳಸಲು ಸಾಧ್ಯವಿಲ್ಲ, ಬರೀ ಮನಸ್ಸಿನ ಬಳಕೆಯಿಂದ ಏನೂ ಆಗುವುದಿಲ್ಲ, ನಿಮ್ಮ ಹೃದಯವನ್ನು ಕೂಡ ಬಳಸಬೇಕು, ಚಿತ್ರ ಬಿಡಿಸಲು, ಕವಿತೆ ಬರೆಯಲು, ಹಾಡಲು, ಭಾವಿಸಲೇಬೇಕು.

ಇವೆಲ್ಲವೂ ಸೃಷ್ಟಿಗಳು, ನಿಮ್ಮ ಹೃದಯದಿಂದ ಉದ್ಭವಿಸಿದ ಸೃಷ್ಟಿಗಳು. ನಿಮ್ಮ ಹೃದಯದ ಅನಿಸಿಕೆಗಳು, ಯಾವುದೇ ಭಾವನೆಗಳಿಲ್ಲದೆ ಒಂದು ಕವಿತೆ ಬರೆಯಲು ಸಾಧ್ಯವೇ? ಒಬ್ಬ ಕಲೆಗಾರ ಬರಿ ಮನಸ್ಸಿನಿಂದ ಚಿತ್ರ ಬಿಡಿಸಿ ಬಣ್ಣ ಹಚ್ಚಲು ಸಾಧ್ಯವೇ? ಇಲ್ಲ! ಅವನು ತನ್ನ ಹೃದಯದೊಂದಿಗೆ ಸಂಪರ್ಕಿಸಬೇಕು, ನಂತರ ತಾನೇ ಹರಿಯಲಾರಂಭಿಸುತ್ತಾನೆ.

ಕವಿತೆ ಬರೆಯುವ ಅಥವಾ ಚಿತ್ರ ಬರೆಯುವ ಕೆಲವು ತಂತ್ರಗಳನ್ನು ನೀವು ನಿಮ್ಮ ಮನಸ್ಸಿನ ಸಹಾಯದಿಂದ ಕಲಿಯಬಹುದು, ಆದರೆ ಅಂತಿಮವಾಗಿ ನಿಮ್ಮ ರಚನೆಯಲ್ಲಿ ಸತ್ವವು ನಿಮ್ಮ ಹೃದಯದಿಂದ ಮಾತ್ರ ಉದ್ಭವಿಸಲು ಸಾಧ್ಯ. ಯಾರೂ ನಿಮಗೆ ಕವಿತೆ ಬರೆಯಲು ಅಥವಾ ಚಿತ್ರ ಬಿಡಿಸಲು ಹೇಳಿಕೊಡಲು ಸಾಧ್ಯವಿಲ್ಲ. ಕೆಲವು ತಂತ್ರಗಳನ್ನು ಹೇಳಿಕೊಡಬಹುದು ಅಷ್ಟೆ, ತದನಂತರ ನೀವು ಆ ವಿಚಾರಗಳನ್ನು ಗ್ರಹಿಸಿ, ಸ್ವಂತವಾಗಿ ರಚಿಸಲು ಪ್ರಾರಂಭಿಸಬೇಕು.

ಜ್ಞಾನದ ಮೂರನೆಯ ವಿಧ - ಆಧ್ಯಾತ್ಮಿಕ ಜ್ಞಾನ. ನಿಮ್ಮ ಆತ್ಮದ ಜ್ಞಾನ! ಇದು ಮನಸಿನ ಅಥವಾ ಹೃದಯದ ಜ್ಞಾನವಲ್ಲ. ನಿಜವಾಗಿ ಹೇಳುವುದಾದರೆ, ಅದನ್ನು ಜ್ಞಾನವೆಂದು ಹೇಳಲು ಸಾಧ್ಯವಿಲ್ಲ; ಅದು ತರ್ಕಾತೀತವಾದ ಆಳವಾದ ತಿಳಿವಳಿಕೆ, ಇದನ್ನು ಹೇಳಿಕೊಡಲು ಅಥವಾ ಎತ್ತಿಕೊಳ್ಳಲು ಸಾಧ್ಯವಿಲ್ಲ, ಆತ್ಮದ ಮಟ್ಟದಲ್ಲಿ ಒಂದು ಆಳವಾದ ಸಂಯೋಗದಿಂದ ಸಂಭವಿಸಲು ಸಾಧ್ಯ.

ಜನರಿಗೆ ನಾನು ಯಾವಾಗಲೂ ಹೇಳುತ್ತೇನೆ: ನಾನು ನಿಮಗೆ ಆಧ್ಯಾತ್ಮಿಕತೆಯನ್ನು ಹೇಳಿಕೊಡಲು ಸಾಧ್ಯವಿಲ್ಲ; ಆದರೆ ನೀವು ಕಲಿಯಬಹುದು. ಗುರುವಿನ ಮಾತುಗಳನ್ನು ಚೈತನ್ಯದಿಂದ ಆತ್ಮದ ಮಟ್ಟದಲ್ಲಿ ಗ್ರಹಿಸಿ ಕಲಿಯಬಹುದು. ಗುರುವಿನ ಮಾತುಗಳಲ್ಲಿರುವ ಚೈತನ್ಯ ಎಷ್ಟು ಶಕ್ತಿಶಾಲಿಯೆಂದರೆ, ನೀವು ಬಿಟ್ಟರೆ ಅದು ನಿಮ್ಮ ಒಳಹೊಕ್ಕಿ, ನಿಮ್ಮನ್ನು ಆತ್ಮದ ಮಟ್ಟದಲ್ಲಿ ಮುಟ್ಟುತ್ತದೆ. ಮನಸ್ಸಿನ ಮಾತುಗಳಿಂದ ಅಥವಾ ಹೃದಯದ ಭಾವನೆಗಳಿಂದ ಸಂಭವಿಸಲಾಗದ ಪರಿವರ್ತನೆಯನ್ನು ಅದು ಮಾಡಬಹುದು.

ನಾನು ಮಾತನಾಡುವಾಗ ಅಂತಿಮ ಸತ್ಯದ ನನ್ನ ಅನುಭವದಿಂದ ನನ್ನ ಅಸ್ತಿತ್ವದಿಂದ ಮಾತನಾಡುತ್ತೇನೆ. ನೀವು ಆಲಿಸುವಾಗ, ನಿಮ್ಮ ಅಸ್ತಿತ್ವದಿಂದ ಸಂಪೂರ್ಣವಾಗಿ ಆಲಿಸಿ. ಆಗಲೇ ನಿಮಗೆ ನನ್ನ ಅನುಭವದ ಕುಡಿನೋಟ ಪಡೆಯಬಹುದು. ನಾನಿಲ್ಲಿ ನಿಮಗೆ ಬರಿ ಮಾತುಗಳನ್ನು ನೀಡಲು ಬಂದಿಲ್ಲ, ನಿಮ್ಮನ್ನು ಅದರ ಆಚೆ ಕರೆದೊಯ್ಯಲು ಇಲ್ಲಿದ್ದೇನೆ. ನೀವು ತೀವ್ರ ಪರಿಜ್ಞಾನದಿಂದ ಮತ್ತು ನಿಶ್ಯಬ್ದತೆಯಿಂದಿದ್ದರೆ, ಶಬ್ದಗಳನ್ನು ಮೀರಿ ಹೋಗಿ ನಿಮ್ಮ ಅಸ್ತಿತ್ವದ ಒಂದು ಕುಡಿನೋಟವನ್ನು ಪಡೆಯಬಹುದು.

ಸರಿ, ಈಗ ನಾವು ಕುಳಿತಿರುವ ವ್ಯವಸ್ಥೆಯನ್ನು ಸ್ವಲ್ಪ ಬದಲಾಯಿಸೋಣ. ನೀವು ಕುಳಿತುಕೊಳ್ಳುವಾಗ, ನಿಮ್ಮ ಸಂಬಂಧಿಗಳ ಜತೆ ಅಥವಾ ಬಂಧುಗಳ ಜತೆ ಕುಳಿತುಕೊಳ್ಳಬೇಡಿ. ಅಷ್ಟು ಪರಿಚಯವಿಲ್ಲದವರ ಜತೆ, ನಿಖರತೆಯಿಲ್ಲದೆ ಕುಳಿತುಕೊಳ್ಳಿ. ಪರಿಚಯಸ್ಥರ ಜೊತೆ ಕುಳಿತುಕೊಂಡಾಗ, ನಾನು ಮಾತನಾಡುತ್ತಿರುವಾಗ ಅವರೊಂದಿಗೆ ಓರೆ ನೋಟವನ್ನು ಬೀರಲು ಬಲವಂತದಲ್ಲಿರುತ್ತೀರ. ಗುರುತಿಲ್ಲದವರ ಜೊತೆ ಕುಳಿತುಕೊಂಡರೆ, ನೀವು ಏಕಾಂಗಿಯಾಗಿ ನನ್ನನ್ನು ಇನ್ನೂ ಚೆನ್ನಾಗಿ ಗ್ರಹಿಸಬಹುದು.

ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ; ನನ್ನ ಭಾಷಣಗಳಲ್ಲಿ ಸದಾ ಹೇಳುತ್ತೇನೆ. ಕಾರ್ಯಕ್ರಮ ನಡೆಯುತ್ತಿರುವಾಗ, ಕೋಣೆಯಲ್ಲಿ ಒಂದು ಸುಂದರವಾದ ಚೈತನ್ಯವು ಸೃಷ್ಟಿಗೊಂಡು ಕಂಪಿಸಿ ಹರಿಯುವುದು, ನಿಮ್ಮ ಮತ್ತು ನನ್ನ ನಡುವೆ ಒಂದು ಆಳವಾದ ಭಾವೈಕ್ಯವುಂಟಾಗುವುದು. ನೀವು ತಡವಾಗಿ ಒಳಗೆ ಬಂದು ಅದಕ್ಕೆ ಅಡ್ಡಿ ಮಾಡಿದರೆ ಆ ಹರಿವು ಕಡಿದುಹೋಗುವುದು.

ಅದು ಹೆದ್ದಾರಿಯಲ್ಲಿ ನಿರಾಳವಾಗಿ ಚಲಿಸುತ್ತಿರುವಾಗ, ತಕ್ಷಣವಾಗಿ ವೇಗ ನಿರೋಧಕವನ್ನು ಸಂಧಿಸಿದಂತಿರುತ್ತದೆ. ವೇಗದ ತಡೆಯೇನೋ ಚಿಕ್ಕದಾದ ಅಡ್ಡಿ ಇರಬಹುದು, ಆದರೆ ಅದನ್ನು ದಾಟಿ ಹೋಗಲು ನೀವು ವೇಗ ಕಡಿಮೆ ಮಾಡಿ, ಅದನ್ನು ದಾಟಿ ನಂತರ ವೇಗವನ್ನು ಮತ್ತೆ ಹೆಚ್ಚಿಸಿಕೊಳ್ಳಬೇಕಾಗುವುದು. ಆ ನಿರಾಳವಾದ ಹರಿವು ಕಡಿಮೆಯಾಗುವುದು.

ಹಾಗೆಯೇ ನಿಮ್ಮ ಮೊಬೈಲ್ ಫೋನ್‌ಗಳನ್ನು ಆರಿಸಿಬಿಡಿ. ಈ ದಿನ ಅವುಗಳೇ ಸಾಮಾನ್ಯವಾದ ವೇಗನಿರೋಧಕಗಳು. ಸರಿಯಾಗಿ ಹೇಳುವುದಾದರೆ ಒಂದಾದ ಮೇಲೆ ಇನ್ನೊಂದು ಬರುವ ವೇಗದ ತಡೆಯ ಹಾಗೆ ನಡುವಿನಲ್ಲಿ ಬಂದು ಅವು ಪ್ರಯಾಣವನ್ನು ಅತಿಯಾಗಿ ಎತ್ತಿಹಾಕುವ ಹಾಗೆ ಮಾಡುವುವು. ಖಂಡಿತವಾಗಿಯೂ ನಿಮ್ಮೆಲ್ಲರ ಬಳಿ ಒಂದೊಂದು ಮೊಬೈಲ್ ಫೋನ್ ಇದೆ!

ನೀವಿರುವಾಗ ಗಂಭೀರವಾಗಿ, ಭಾರವಾದ ಮನಸ್ಸುಳ್ಳವರಾಗಬೇಡಿ. ಆಲಿಸುವಾಗ ಶುದ್ಧ ಮನಸ್ಸಿನಿಂದಿರಿ, ತೆರೆದ ಮನಸ್ಸಿನಿಂದ ಹಗುರತೆಯಿಂದ ಆಲಿಸಿರಿ. ಮೊಟ್ಟಮೊದಲ ಅವಧಿಯಲ್ಲಿ ದೇವರನ್ನು ಅನುಭವಿಸುವಿರೆಂಬ ಅಪೇಕ್ಷೆಯಲ್ಲಿ ಬರಬೇಡಿ! ಹಗುರ ಮತ್ತು ಸರಳವಾದ ಮನಸ್ಥಿತಿಯಲ್ಲಿ ಯಾವುದೇ ಅಪೇಕ್ಷೆಯಿಲ್ಲದೆ ಇದ್ದಲ್ಲಿ ನನ್ನಿಂದ ಇನ್ನೂ ಬಹಳಷ್ಟನ್ನು ಪಡೆಯಬಹುದು.

ಖಚಿತ ಪರಿಹಾರಗಳು

ಪೂರ್ವಕಲ್ಪಿತ ಅಭಿಪ್ರಾಯವುಳ್ಳ ಅಪೇಕ್ಷಾಭರಿತ ಮನಸ್ಸಿನೊಡನೆ ಬಂದಲ್ಲಿ ನಿಮ್ಮ ಯೋಚನೆಯೆಲ್ಲ ನಿಮ್ಮ ಅಪೇಕ್ಷೆಗಳತ್ತ ಇರುತ್ತದೆ. ನೀವಿಲ್ಲಿರುವುದು ನಾನು ಹೇಳುವುದರ ಬಗ್ಗೆ ಮನ ಹರಿಸುವುದಕ್ಕಾಗಿ ಮಾತ್ರ.

ಮತ್ತೊಂದು ವಿಷಯ: ನೀವಿಲ್ಲಿರುವಾಗ ನಿಮ್ಮ ಸಾಮಾಜಿಕ ಅಹಂಕಾರವನ್ನು ಹೊರಗೆ ಬಿಟ್ಟು, ಸಾಧಾರಣ ಮನುಷ್ಯರಾಗಿರುವುದಕ್ಕೆ ಪ್ರಯತ್ನಮಾಡಿ. ಆಶ್ರಮ ಮತ್ತು ಗುರುವಿನ ಸಮ್ಮುಖವೇ ನಿಮ್ಮೊಡನೆ ನೀವು ಪ್ರಯೋಗ ಮಾಡಲು, ನಿಮ್ಮ ಅಹಂಕಾರವನ್ನು ತೊಡೆದುಹಾಕಲು, ನಿಮ್ಮ ಭ್ರಾಂತಿಗಳನ್ನು ಕಳಚಿಕೊಳ್ಳಲು, ಈ ಅಸ್ತಿತ್ವದ ಒಂದು ಭಾಗವೆಂದು ಅರಿಯಲು, ನಿಮ್ಮ ಆತ್ಮಾನubhavವನ್ನು ಅತ್ಯುತ್ತಮ ಪ್ರಯೋಗಶಾಲೆ.

ಹಾಗಾಗಿ ನೀವು ಸಮಾಜದಲ್ಲಿ ಯಾರೊಬ್ಬರಾಗಿದ್ದರೂ, ಇಲ್ಲಿ ಮಾತ್ರ ಸಾಮಾನ್ಯರಾಗಿರಿ ಮತ್ತು ಎಲ್ಲರೊಡನೆ ಹೃತ್ಪೂರ್ವಕವಾಗಿ ಬೆರೆಯಿರಿ. ಬರಿ ನನ್ನ ಮಾತುಗಳಷ್ಟೇ ಅಲ್ಲ, ಪರಸ್ಪರತೆಯ ಪ್ರತিক্ষಣವೂ, ಇಲ್ಲಿರುವುದರ ಪ್ರತিক্ষಣವೂ ನಿಮ್ಮಲ್ಲಿ ಪರಿವರ್ತನೆಯನ್ನುಂಟು ಮಾಡಬಹುದು. ನೀವು ಅರಿವಿನಿಂದಿರಬೇಕಷ್ಟೆ.

ಒಂದು ಸಣ್ಣ ಕಥೆ:

ಒಬ್ಬ ದೊಡ್ಡ ಝನ್ ಬೌದ್ಧ ಯೋಗಿ ಜ್ಞಾನೋದಯ ಹೊಂದಿದ ಗುರುವಿದ್ದರು. ಒಮ್ಮೆ ಜಪಾನಿನ ಪ್ರಾಂತ್ಯಾಧಿಕಾರಿಯು ಅವರನ್ನು ಭೇಟಿಮಾಡಲು ಬಂದನು. ಅಧಿಕಾರಿಯು ಗುರುವಿಗೆ ತನ್ನ ‘ಪರಿಚಯಚೀಟಿ’ಯನ್ನು ಕಳುಹಿಸಿದ. ಅದರ ಮೇಲೆ ‘ಶ್ರೀಮಾನ್ ಝುಕ್ ಸsponge - ಜಪಾನಿನ ಅಧಿಕಾರಿ’ ಎಂದು ಬರೆದಿತ್ತು. ಗುರುವು ಆ ಚೀಟಿಯ ಮೇಲೆ ದೃಷ್ಟಿಹರಿಸಿ, “ಈ ಮೂರ್ಖನ ಜತೆ ನನಗೆ ಯಾವ ಕೆಲಸವೂ ಇಲ್ಲ! ಈ ನಿಮಿಷವೇ ಅವನು ಹೊರಟುಹೋಗಲು ಹೇಳಿ!” ಎಂದು ನುಡಿದರು.

ಒಬ್ಬನ ಮನಸ್ಸನ್ನು, ಅವನ ಅಹಂಕಾರವನ್ನು ಮುರಿಯುವುದಕ್ಕಾಗಿ ಝನ್ ಗುರುಗಳು ಕಠಿಣವಾಗಿ ವರ್ತಿಸಬಹುದು, ಕಠಿಣ ಪದಗಳನ್ನು ಉಪಯೋಗಿಸಲು ಅವರು ಹಿಂಜರಿಯುವುದಿಲ್ಲ. ಅವರ ಮಾತುಗಳಲ್ಲಿರುವ ಶಕ್ತಿ ಒಬ್ಬ ಮನುಷ್ಯನನ್ನು ಚುಚ್ಚಿ ಪರಿವರ್ತಿಸಬಹುದು. ಗುರುವಿನ ಶಿಷ್ಯನು ಅಧಿಕಾರಿಯ ಬಳಿ ಹಿಂತಿರುಗಿ, ಅವನ ಚೀಟಿಯನ್ನು ಹಿಂತಿರುಗಿಸಿ, ಗುರುವಿನ ಮಾತುಗಳನ್ನು ಪುನಃ ಹೇಳಿದನು. ಅಧಿಕಾರಿಗೆ

ಚೀಟಿಯನ್ನು ನೋಡಿ ಅರ್ಥವಾಯಿತು. ಆತ ಸೂಕ್ಷ್ಮತೆಯುಳ್ಳವನಾಗಿದ್ದ... ಬರಿ ಬುದ್ಧಿವಂತನಲ್ಲ, ಜ್ಞಾನವುಳ್ಳವನೂ ಆಗಿದ್ದ!

ಚೀಟಿ ಮತ್ತು ಗುರುವಿನ ಸಂದೇಶ ಅವನಿಗೆ ಹಿಂತಿರುಗಿದಾಗ, ಅವನು ಸುಮ್ಮನೆ ಚೀಟಿಯಲ್ಲಿ 'ಜಪಾನಿನ ಅಧಿಕಾರಿ' ಎಂಬ ಪದಗಳನ್ನು ಅಳಿಸಿ, ಗುರುವಿಗೆ ತೋರಿಸಲು ಅದನ್ನು ಪುನಃ ಹಿಂತಿರುಗಿಸಿದ.

ಗುರುವು ಚೀಟಿಯನ್ನು ನೋಡಿ “ಒಳಕ್ಕೆ ದಾರಿ ತೋರಿಸಿ'' ಎಂದರು.

ನಮ್ಮ ಎಲ್ಲ ಪದವಿ ಮತ್ತು ಹುದ್ದೆಗಳು ಸಮಾಜ ನಮ್ಮ ಮೇಲ್ವಿಳಾಸದ ಗುರುತಿಗಾಗಿ ಹಚ್ಚಿರುವ ಚೀಟಿಗಳಷ್ಟೆ ಮತ್ತು ನಾವು ಈ ಚೀಟಿಗಳೇ ನಾವೆಂದು ಭಾವಿಸುತ್ತ ಹೋಗುತ್ತೇವೆ. ಹಾಗೆಯೇ ನಾವು ಈ ಚೀಟಿಗಳಲ್ಲ, ಆದರೆ ಅದರೊಳಗಿರುವ ಸತ್ವವೆಂದು ಮರೆತುಬಿಡುತ್ತೇವೆ. ಈ ಚೀಟಿಗಳ ಬಗ್ಗೆಯೇ ನಾವು ಹೆಮ್ಮೆ ಪಡುತ್ತೇವೆ. ಆದರೆ ಈ ಚೀಟಿಗಳೊಂದಿಗೆ ಗುರುವನ್ನು ಸಮೀಪಿಸಲು ಸಾಧ್ಯವೇ ಇಲ್ಲ. ಅಸ್ತಿತ್ವವನ್ನು ನಮ್ಮ ಚೀಟಿಗಳೊಂದಿಗೆ ಅರಿಯಲು ಸಾಧ್ಯವಿಲ್ಲ.

ಅಧಿಕಾರಿಯ ವರ್ತನೆಯನ್ನು ತಪ್ಪೆಂದು ಹೇಳಲಾಗುವುದಿಲ್ಲ. ಸಮಾಜವನ್ನು ಸಮೀಪಿಸಲು ಅದು ಸರಿಯಾದ ವಿಧಾನವಿರಬಹುದು, ಆದರೆ ಗುರುವನ್ನು ಸಮೀಪಿಸಲು ಸರಿಯಾದ ವಿಧಾನವು ಅಲ್ಲವೇ ಅಲ್ಲ!

ಹಾಗಾಗಿ ನೀವುಳಗೆ ಬಂದರೆ, ನಿಮ್ಮ ಅಧಿಕಾರದ ಪದವಿಯನ್ನು ಹೊರಗೆ ಬಿಟ್ಟು ಬನ್ನಿ! ಇಲ್ಲದಿದ್ದರೆ ಬಹಳಷ್ಟನ್ನು ಕಳೆದುಕೊಳ್ಳುತ್ತೀರ. ಇಲ್ಲಿ ಗುರು ಮತ್ತು ಸಾಧಕನ ನಡುವೆ ಯಾವುದೋ ಅಭಿವ್ಯಕ್ತಗೊಳ್ಳುತ್ತದೆ. ನಾವು ಆಂತರಿಕ ಜಗತ್ತಿನ ಒಂದು ಅಂಶವನ್ನು ಹಂಚಿಕೊಳ್ಳುತ್ತೇವೆ. ಇದು ಸಂಭವಿಸುವಾಗ, ಹೊರ ಜಗತ್ತಿನ ಗುರುತಿನ ಚೀಟಿ ಅಡ್ಡವಾಗಿ ನಿಲ್ಲುತ್ತದೆ. ಆಧ್ಯಾತ್ಮಿಕತೆ ಎಂದರೆ ನಿಮ್ಮ ವ್ಯಕ್ತಿತ್ವವನ್ನು ಮರೆಯುವುದೇ ಆಗಿದೆ, ಏಕೆಂದರೆ ವ್ಯಕ್ತಿತ್ವವು ಒಂದು ಸಾಮಾಜಿಕ ವಿಷಯ. ನಾವಿಲ್ಲಿರುವುದು ನಮ್ಮ ವ್ಯಕ್ತಿ ವೈಶಿಷ್ಟ್ಯತೆ ನಮ್ಮ ನೈಜತೆಯನ್ನು ಕಂಡುಕೊಳ್ಳಲು ತಾಯಿಯ ಗರ್ಭಕೋಶದಲ್ಲಿ ನಾವು ಆಸ್ವಾದಿಸಿದ ಏಕಾಂತತೆಯನ್ನು ವಿಶ್ವಶಕ್ತಿಯೊಂದಿಗೆ ನಮ್ಮ ಒಂದೇ ಒಂದು ಸಂಪರ್ಕವನ್ನು ಕಂಡುಹಿಡಿದು, ಆಚರಿಸಲು ಇಲ್ಲಿದ್ದೇವೆ.

ಖಚಿತ ಪರಿಹಾರಗಳು

ಇರಲಿ, ಈಗ ಎಲ್ಲರೂ ಸುತ್ತಲೂ ಹೋಗಿ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳಿ. ಈ ಕೆಲವು ದಿನಗಳು ನಾವಿಲ್ಲಿ ಒಟ್ಟಿಗೆ ಇರುವ ಸಮಯದಲ್ಲಿ ಒಂದು ಸಾಮೂಹಿಕ ಚೈತನ್ಯವನ್ನು ಸೃಷ್ಟಿಸುವೆವು. ಎಲ್ಲರಿಗೂ ನಿಮ್ಮ ಪರಿಚಯ ಮಾಡಿಕೊಳ್ಳಿ. ನಿಮ್ಮ ಕುಟುಂಬದವರೇ ಆಗಿದ್ದರೂ ಕೂಡ ಪರಿಚಯ ಮಾಡಿಕೊಳ್ಳಿ! ಮರೆಯಬೇಡಿ: ಪ್ರತಿಯೊಬ್ಬನೂ ಪ್ರತಿ ನಿಮಿಷವೂ ಹೊಸ ಮನುಷ್ಯನಾಗುತ್ತಿರುತ್ತಾನೆ. ನಿಮ್ಮ ಕುಟುಂಬ ಸದಸ್ಯರನ್ನು ಚೆನ್ನಾಗಿ ಅರಿತಿರುವಿರೆಂದು ಭಾವಿಸಬೇಡಿ. ನೀವವರನ್ನು ಅರಿಯಲು ಸಾಧ್ಯವಿಲ್ಲ, ಏಕೆಂದರೆ ಅವರು ಪ್ರತಿ ನಿಮಿಷ ಬದಲಾಗುತ್ತಿರುತ್ತಾರೆ. ಹಾಗಾಗಿ ಸುತ್ತಲೂ ಹೋಗಿ ಪರಿಚಯ ಮಾಡಿಕೊಳ್ಳಿ. (ಜನರೆಲ್ಲರೂ ಸುತ್ತಲೂ ಹೋಗಿ ಮಾತು, ನಗೆಯೊಂದಿಗೆ ಪರಿಚಯ ಮಾಡಿಕೊಳ್ಳುತ್ತಾರೆ)

ಎಲ್ಲರ ಪರಿಚಯವಾದ ಮೇಲೆ ಈಗ ನಿಮಗೆ ಇನ್ನೂ ಆರಾಮವಾಗಿರಬಹುದು. ಇನ್ನು ನೀವು ಪರಕೀಯರೊಂದಿಗೆ ಕುಳಿತುಕೊಳ್ಳಲು ಚಿಂತೆ ಮಾಡುವುದಿಲ್ಲ!

ಮುಂದಿನ ಕೆಲವು ದಿನಗಳಲ್ಲಿ ಬಹಳಷ್ಟು ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ಎಲ್ಲವನ್ನು ಕೇವಲ ಆಲಿಸಿ; ಆಲಿಸಿದ್ದನ್ನು ಅಳವಡಿಸಿಕೊಳ್ಳಲು ನಿಮ್ಮಲ್ಲಿ ಸ್ಥಳವನ್ನು ಸೃಷ್ಟಿಸಿಕೊಳ್ಳಿ. ಮರೆಯಬೇಡಿ: ನಾನು ಹೇಳುತ್ತಿರುವುದನ್ನು ಮತ್ತೊಬ್ಬರಿಗೆ ಬೋಧನೆ ಮಾಡಬೇಡಿ; ಅದನ್ನು ಅಭ್ಯಾಸ ಮಾಡಿ. ಅಭ್ಯಾಸವನ್ನು ಮೊದಲು ಮಾಡಲು ಇದೇ ಸರಿಯಾದ ಸಮಯ. ಮೊದಲು ಮಾಡಲು ಸೂಕ್ತ ಸಮಯವನ್ನು ಹುಡುಕಲು ಹೋಗಬೇಡಿ. ಅದು ಇಲ್ಲಿ, ಈಗಲೇ ಅಥವಾ ಇಲ್ಲವೇ ಇಲ್ಲ!

ನನ್ನ ಮಾತುಗಳನ್ನು ಕೇಳಿಸಿಕೊಂಡಾಗ, ನಿಮ್ಮ ಮನಸ್ಸು ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ. ಒಂದು ಅನುಮಾನದೊಂದಿಗೆ, ಮತ್ತೊಂದು ನಂಬಿಕೆಯೊಂದಿಗೆ.

ಅನುಮಾನವು ಬುದ್ಧಿಮತ್ತೆಯುಳ್ಳ ಮನಸ್ಸಿನ ಮಾರ್ಗ. ಸಂದೇಹದೊಂದಿಗೆ ನನ್ನನ್ನು ನಿಮ್ಮೊಳಗೆ ಗ್ರಹಿಸಲು ಬಹಳ ತರ್ಕ ಮತ್ತು ಕಾರಣ ಅಡ್ಡಿಯಾಗುತ್ತವೆ. ಹೀಗೆ ಸಂಭವಿಸಿದಾಗ, ನನ್ನನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತೀರಿ.

ನಂಬಿಕೆಯೊಂದಿಗೆಯೂ ಕೂಡ, ನೀವು ನನ್ನನ್ನು ತಕ್ಷಣವೇ ನಂಬಿದರೆ ಕಳೆದುಕೊಳ್ಳುತ್ತೀರ. ಅರ್ಥಮಾಡಿಕೊಳ್ಳಿ: ನೀವು ನನ್ನನ್ನು ಮಾತ್ರವಲ್ಲ, ಬೇರೆ ಯಾರನ್ನೂ ನಂಬುವ ಆವಶ್ಯಕತೆಯಿಲ್ಲ. ನಂಬಿಕಸ್ಥರೇ ಬಹು ದುರ್ಬಲರು, ಏಕೆಂದರೆ ನಂಬಿಕೆಯಿಲ್ಲದೆ ಜೀವಿಸುವುದಕ್ಕೆ ಅತಿ ಧೈರ್ಯದ ಆವಶ್ಯಕತೆಯಿದೆ. ಒಂದು

ನಂಬಿಕೆಯಿಲ್ಲದೆ ಇದ್ದರೆ, ನಿಮ್ಮ ಕೆಲಸಗಳನ್ನು ಆರಾಧಿಸುವ ವ್ಯವಸ್ಥೆ ಇರುವುದಿಲ್ಲ. ನಿಮಗೆ ಹೇಗೆ ಯೋಚಿಸಬೇಕು, ಹೇಗೆ ವರ್ತಿಸಬೇಕೆಂದು ಹೇಳಲು ನಿರ್ದಿಷ್ಟ ಉಪಾಯ ಇರುವುದಿಲ್ಲ. ನಂಬಿಕೆಯಿಲ್ಲದೆ ಇರುವುದಕ್ಕೆ ಬಹಳ ಧೈರ್ಯದ ಅವಶ್ಯಕತೆಯಿದೆ, ಏಕೆಂದರೆ ಆಗ ನೀವು ಪ್ರತಿಯೊಂದಕ್ಕೂ ನಿಮ್ಮ ಸ್ವಂತ ಬುದ್ಧಿಯನ್ನು ಅವಲಂಬಿಸಬೇಕು, ಮತ್ತಿದು ನಿಮ್ಮಲ್ಲಿ ಅಭದ್ರತೆ ಹಾಗೂ ಅನಿಶ್ಚಯತೆಯ ಭಾವನೆಯನ್ನುಂಟು ಮಾಡುತ್ತದೆ.

ಸಂದೇಹ ಹಾಗೂ ನಂಬಿಕೆ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು ಅದೇ ನಿಮ್ಮ ಮನಸ್ಸು. ಒಂದು ಗಾಢವಾದ ಮಟ್ಟದಲ್ಲಿ ನಿಮ್ಮ ಬೃಹತ್ಸಂದೇಹವು ಸ್ವಲ್ಪ ನಂಬಿಕೆಯನ್ನು ಮತ್ತು ನಿಮ್ಮ ಬೃಹನ್ನಂಬಿಕೆಯು ಸ್ವಲ್ಪ ಸಂದೇಹವನ್ನು ಹೊತ್ತಿಕೊಂಡಿರುವುದು ನಾನು ಭರವಸೆ ಕೊಡುತ್ತೇನೆ.

ಹಾಗಾದರೆ, ನೀವೇನು ಮಾಡಬೇಕು? ಹೇಗೆ ಆಲಿಸಬೇಕು?

ಭರವಸೆಯಿಟ್ಟು ಕೇಳಿ ಅಷ್ಟೆ. ಭರವಸೆಯೇ ಒಂದು ಚೈತನ್ಯ, ಬೋಧನೆಯನ್ನು ನಿಜ ಜೀವನಕ್ಕೆ ಅಳವಡಿಸಿಕೊಳ್ಳುವುದಕ್ಕೆ ಒಂದು ಸಾಮರ್ಥ್ಯ. ನಾನು “ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟುತ್ತಾನೆ” ಎಂದು ಹೇಳಿದರೆ, ನೀವದನ್ನು ನಂಬಲು ಅಥವಾ ಅನುಮಾನಿಸಲು ಬೇಕಿಲ್ಲ - ನಿಮಗೆ ಅದು ತಿಳಿದಿದೆ ಅಷ್ಟೆ; ನಾನು ಹೇಳುವುದು ಸರಿಯೇ? ಅಥವಾ ಅದು ನೀವು ಗಮನಿಸದ ವಿಷಯವಾಗಿದ್ದರೆ, ಮಾರನೇ ದಿನ ಬೆಳಿಗ್ಗೆ ಎದ್ದು ನಿಮ್ಮಿಷ್ಟಕ್ಕೆ ನೀವೇ ನೋಡಬಹುದು - ಒಂದು ಪ್ರಯೋಗದ ಹಾಗೆ! ಅಲ್ಲವೆ? ನಿಮ್ಮಿಂದ ಇಂತಹ ಒಂದು ಮನೋಪ್ರವೃತ್ತಿಯನ್ನು ಬಯಸುತ್ತೇನೆ. ಎಲ್ಲವನ್ನು ತೆರೆದ ಮನಸ್ಸಿನಿಂದ ಗ್ರಹಿಸಿ, ನನ್ನ ಮಾತುಗಳನ್ನು ದೈನಂದಿನ ಹಲವಾರು ಸನ್ನಿವೇಶಗಳಲ್ಲಿ ಪ್ರಶಿಕ್ಷಣವೂ ಅನುಭವಿಸಲೆಂದು ಇಷ್ಟಪಡುತ್ತೇನೆ.

ಹಾಗಾಗಿ, ಭರವಸೆಯನ್ನಿಟ್ಟುಕೊಳ್ಳಿ, ನಂಬಿಕೆಯನ್ನಲ್ಲ. ನಾನು ಹೇಳುವುದನ್ನು ಪೂರ್ವಸಿದ್ಧಾಂತದ ಹಾಗೆ ಗ್ರಹಿಸಿ, ನಿಮ್ಮ ಜೀವನದೊಂದಿಗೆ ಅದನ್ನು ಸಮ್ಮಿಳಿತಗೊಳಿಸಿ, ಅದು ಸರಿಬರುವುದೋ ಇಲ್ಲವೋ? ಎಂದು ನೀವೇ ಅವಲೋಕಿಸಿಕೊಳ್ಳಿ. ಸೇಬಿನ ಹಣ್ಣು ರುಚಿಕರವಾಗಿದೆಯೆಂದು ತಿಳಿಯಲು ನಂಬಲು ಅಥವಾ ಅನುಮಾನಿಸಲು ಬೇಕಿಲ್ಲ. ಅದನ್ನು ಒಮ್ಮೆ ಬಾಯಿಯಲ್ಲಿ ಕಚ್ಚಿದರೆ ನಿಮಗೇ ತಿಳಿಯುವುದು!

ಖಚಿತ ಪರಿಹಾರಗಳು

ಮಾನವನ ನಿಜ ಸ್ವಭಾವ ಪರಮಾನಂದವೆಂದು ಕಾಲಾನುಕಾಲದಲ್ಲಿ ಪುರಾತನ ಋಷಿಗಳು ಮತ್ತು ಗುರುಗಳು ಹೇಳಿರುತ್ತಾರೆ. ವರ್ಷಾಂತರಗಳಿಂದ ಭೂಮಿಯ ಮೇಲೆ ಎಷ್ಟೋ ಗುರುಗಳು ಸಂಭವಿಸಿದ್ದಾರೆ. ಬುದ್ಧರಾಗಿರಬಹುದು, ಅಥವಾ ಕ್ರೈಸ್ತರು ಅಥವಾ ಕೃಷ್ಣ ಅಥವಾ ಮಹಾವೀರರೇ ಆಗಿರಬಹುದು, ಅವರೆಲ್ಲರ ಸಂದೇಶದ ತಿರುಳು ಒಂದೇ ಆಗಿತ್ತು. ಅವರೆಲ್ಲರೂ ಮಾನವನ ನಿಜಸ್ವಭಾವ ಪರಮಾನಂದವೆಂದು ನುಡಿದು, ಈ ಆನಂದದೊಂದಿಗೆ ಮತ್ತೆ ಸಂಯೋಗವಾಗಲು ತಂತ್ರಗಳನ್ನು ವಿಧಾನಗಳನ್ನು ಕೊಟ್ಟರು.

ಅವರ ಅಭಿವ್ಯಕ್ತತೆ ಭಿನ್ನವಾಗಿರಬಹುದು ಆದರೆ ಅವರ ಸಂದೇಶವು ಒಂದೇ ಆಗಿತ್ತು. ಜನರು ಗುರುವಿನ ಸಂದೇಶವನ್ನು ಮತ್ತೆ ಮತ್ತೆ ಕಳೆದುಕೊಳ್ಳುತ್ತಾರೆ, ಏಕೆಂದರೆ ಅವರು ಗುರುವಿನ ಸಂದೇಶದ ಬದಲಿಗೆ ಅವರ ರೂಪಕ್ಕೆ ಗಟ್ಟಿಯಾಗಿ ಅಂಟಿಕೊಳ್ಳುತ್ತಾರೆ. ಇದೇ ಮಠಾಂಧತೆಗೆ, ಮತಭ್ರಾಂತತೆಗೆ, ಮತಾಂತರ ಯುದ್ಧ ಹಾಗೂ ಭೂಮಿಯ ಮೇಲೆ ನಡೆಯುತ್ತಿರುವ ಮತ್ತಿತರ ಘಟನೆಗಳಿಗೆ ಮೂಲ ಕಾರಣ.

ಏನೇ ಇರಲಿ, ಈ ಎಲ್ಲ ಗುರುಗಳೂ ಮಾನವನ ಮೂಲ (ತಿರುಳು) ಆನಂದವೆಂಬ ಒಂದೇ ಸಂದೇಶವನ್ನು ನೀಡಿದರು ಮತ್ತು ಮಾನವನ ಎಲ್ಲ ಪ್ರಯತ್ನಗಳು ಈ ಅಂತಃಸ್ಥಳವನ್ನು ಆನಂದದ ಈ ಸ್ಥಳವನ್ನು ಪಡೆಯಲೆಂದೇ ಇವೆ. ಆದರೆ ಕಾಲಾಂತರದಲ್ಲಿ ಸಾಮಾಜಿಕ ಕಟ್ಟುಪಾಡು ಹಾಗೂ ಮನಃಚಾಪಲ್ಯಗಳ ದೆಸೆಯಿಂದ, ಮನುಷ್ಯ ತನ್ನ ಮೂಲ ಉದ್ದೇಶವನ್ನು ಮರೆತು ಈ ಆನಂದವನ್ನು ಹೊರ ಜಗತ್ತಿನ ವಸ್ತುಗಳಲ್ಲಿ, ಪ್ರಾಪಂಚಿಕ ವಸ್ತುಗಳಲ್ಲಿ, ಅಂಕಿತಗಳಲ್ಲಿ, ಆಕಾರಗಳಲ್ಲಿ, ಸಮಾಜ ನೀಡುವ ನಾಮ ಪಟ್ಟಿಗಳಲ್ಲಿ, ಸಂಬಂಧಗಳಲ್ಲಿ, ಜೀವನೋಪಾಯಕ್ರಮ (Career) ದಲ್ಲಿ, ಮತ್ತೆಷ್ಟೋ ವಿಷಯಗಳಲ್ಲಿ ಹುಡುಕುತ್ತಾನೆ.

ಒಂದು ಸಣ್ಣ ಕಥೆ:

ಒಬ್ಬ ಮುದುಕ ತನ್ನ ಪರಿವಾರದೊಂದಿಗೆ ಚಲನಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಕ್ಕೆ ಹೋದನು. ಚಲನಚಿತ್ರವು ಆಗತಾನೇ ಪ್ರಾರಂಭವಾಗಿದ್ದು,

ಮುದುಕನು ಹಠಾತ್ತನೆ ಆ ಕತ್ತಲಲ್ಲಿ ನೆಲದ ಮೇಲೆ ಏನನ್ನೊ ಹುಡುಕಲು ಆರಂಭಿಸಿದ. ಪಕ್ಕದಲ್ಲಿ ಕುಳಿತಿದ್ದ ಮೊಮ್ಮಗಳು ರೇಗಿ ನೆಲದ ಮೇಲೆ ಅವರೇನು ಮಾಡುತ್ತಿದ್ದಾರೆಂದು ಪ್ರಶ್ನಿಸಿದಳು. ಅವರು ಹೇಳಿದರು “ಕಂದ, ನನ್ನ ಚ್ಯೂಯಿಂಗ್ ಗಮ್ ಅನ್ನು ಕಳೆದುಕೊಂಡಿದ್ದೇನೆ. ಅದು ಆಚೆ ಬಿದ್ದುಬಿಟ್ಟಿತು.

ಮೊಮ್ಮಗಳು ಸಿಟ್ಟಾಗಿ “ತಾತ ಪರವಾಗಿಲ್ಲ ಬಿಡು. ಇನ್ನಷ್ಟು ಚ್ಯೂಯಿಂಗ್‌ಗಮ್ ಅನ್ನು ಕೊಂಡುಕೊಳ್ಳೋಣ. ಈಗ ಚಿತ್ರವನ್ನು ವೀಕ್ಷಿಸಿ” ಎಂದಳು.

ಮುದುಕ “ನನಗೆ ಅದೇ ಚ್ಯೂಯಿಂಗ್‌ಗಮ್ ಬೇಕು.''

ಮೊಮ್ಮಗಳು “ತಾತ, ಚಿಕ್ಕ ಮಗುವಿನ ಹಾಗೆ ಆಡಬೇಡ. ಇನ್ನಷ್ಟು ಚ್ಯೂಯಿಂಗ್‌ಗಮ್ ಅನ್ನು ಕೊಂಡುಕೊಳ್ಳೋಣ''

ತಾತ “ಆದರೆ ಕಂದ, ನನ್ನ ಹಲ್ಲುಗಳು ಅದರಲ್ಲಿವೆ” ಎಂದರು.

(ಜೋರುನಗು!)

ನೋಡಿ, ನಾವು ನಿಜವಾಗಿ ಏನೋ ಒಂದನ್ನು ಪಡೆಯಬೇಕೆಂದು ಇದ್ದೇವೆ ಆದರೆ ಅದನ್ನು ಮತ್ತೊಂದರ ಹೆಸರಿನಲ್ಲಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ! ಅಂತಿಮವಾಗಿ, ಹೊರ ಜಗತ್ತಿನ ಪ್ರಾಪಂಚಿಕ ವಸ್ತುಗಳನ್ನೆಲ್ಲ ಸಾಧಿಸಿದರೂ ಸಹ ನಮ್ಮಲ್ಲೇನೋ ಒಂದು ಶೂನ್ಯತೆಯಿದೆಯೆಂದು ಅರಿಯುತ್ತೇವೆ. ನಮ್ಮಲ್ಲೊಂದು ದಾಹವಿದೆ. ನಾವೆಲ್ಲರೂ ನಿಜವಾಗಿ ಆನಂದವನ್ನು ಹುಡುಕುತ್ತಿರುವ ಕಾರಣದಿಂದ ಈ ದಾಹವು ಇದೆ, ಆದರೆ ನಾವದನ್ನು ಇತರ ವಸ್ತುಗಳ ಹೆಸರಿನಲ್ಲಿ ಹುಡುಕುತ್ತೇವೆ, ಆದ್ದರಿಂದಲೇ ನಮಗೆ ಎಂದಿಗೂ ಸಂತೃಪ್ತಿಯ ಭಾವನೆಯುಂಟಾಗುವುದಿಲ್ಲ. ಈ ದಾಹವು ಆತ್ಮದ ಕರೆ.

ನಾವು ನಮ್ಮ ಅಸ್ತಿತ್ವವನ್ನು ಸಂಪೂರ್ಣವಾಗಿ ಕಡೆಗಣಿಸುತ್ತೇವೆ, ಏಕೆಂದರೆ ನಾವು ಹೊರ ಪ್ರಪಂಚದಲ್ಲಿ ಅಷ್ಟು ಮಗ್ನರಾಗಿದ್ದೇವೆ. ನಾವು ನಮ್ಮ ಜೀವಾತ್ಮದಲ್ಲಿ ನೆಲೆಸಿ, ಪ್ರಾಪಂಚಿಕ ವಿಷಯಗಳಲ್ಲಿ ಕೇವಲ ನಾಟಕದ ಪಾತ್ರದಂತೆ ನಿರ್ವಹಿಸಬೇಕು. ಅದಕ್ಕೆ

ಖಚಿತ ಪರಿಹಾರಗಳು

ಬದಲಾಗಿ ಪ್ರಾಪಂಚಿಕ ವಿಷಯಗಳಲ್ಲಿ ಆಳವಾಗಿ ತೊಡಗಿಸಿಕೊಂಡು ನಮ್ಮ ಅಸ್ತಿತ್ವದಲ್ಲಿ ಕೇಂದ್ರದಿಂದ ದೂರವಾಗಿದ್ದೇವೆ.

ನಾವು ನಮ್ಮೊಳಗೆ ಕೇಂದ್ರಿಕೃತರಾಗದೆ ಇದ್ದರೆ ಒಂದು ಸಂಪೂರ್ಣತೆಯನ್ನು ಪೂರೈಸಿದ ಸಂತೃಪ್ತಿಯನ್ನು ಅನುಭವಿಸಲು ಸಾಧ್ಯವಿಲ್ಲ. ಹೊರ ಜಗತ್ತಿನ ನಮ್ಮ ಸಾಧನೆಗಳಲ್ಲಿ ನಾವು ಪೂರ್ಣತೆಯನ್ನು ಹೊಂದಬಹುದು, ಆದರೆ ಸಂಪೂರ್ಣತೆಯನ್ನಲ್ಲ. ಸಂತೃಪ್ತಿಯನ್ನು ಹೊಂದದ ಕಾರಣದಿಂದಲೇ ನಮ್ಮಲ್ಲೊಂದು ದಾಹ ಉಳಿಯುತ್ತದೆ. ನಾವು ಏನನ್ನೊ ಕಳೆದುಕೊಳ್ಳುತ್ತಿದ್ದೇವೆಂದು ಯೋಚಿಸುತ್ತಲೇ ಇರುತ್ತೇವೆ, ಹಾಗಾಗಿ ಮತ್ತೊಮ್ಮೆ ಅದನ್ನು ಹೊರ ಪ್ರಪಂಚದಲ್ಲಿ ಹುಡುಕಲು ಪ್ರಾರಂಭಿಸುತ್ತೇವೆ. ನೀವು ನಿಮ್ಮೊಳಗಿನ ಅರಿವಿನೊಡನೆ ಕೇಂದ್ರಿಕೃತರಾಗಿದ್ದರೆ, ಹೊರ ಪ್ರಪಂಚದಲ್ಲಿ ಏನೇ ಮಾಡುತ್ತಾ ಇರಲಿ, ಪ್ರತಿನಿಮಿಷವೂ ಸಂತೃಪ್ತರಾಗಿರುತ್ತೀರ. ಏಕೆಂದರೆ, ತೃಪ್ತಿಯೆಂಬುದು ಅಂತರಂಗದಲ್ಲಿ ಉದ್ಭವಿಸುವುದು, ಹೊರಗಿನ ನಿಮ್ಮ ಕಾರ್ಯಚಟುವಟಿಕೆಯಿಂದಲ್ಲ.

ಹಾಗಾಗಿ ಗುರುಗಳು ಪುನಃ ಪುನಃ ಹೇಳುತ್ತಿರುವುದರಲ್ಲಿ ಆಳವಾಗಿ ಶೋಧಿಸಬೇಕು. ಹೆಸರಿಗೆಷ್ಟೆ ‘ಸಾಧಕ’ರೆನಿಸಿಕೊಂಡವರು ಜನ್ಮಾಂತರಗಳಿಂದ ಗುರುವನ್ನು ಕಳೆದುಕೊಂಡಿದ್ದಾರೆ. ಅವರು ಸತ್ಯದ ಕ್ಷಣದೃಷ್ಟಿಯನ್ನು, ಗುರುಗಳ ಮಾತಿನ ಚೈತನ್ಯವನ್ನು ಪಡೆಯಲು ನಿಲ್ಲದೆ, ಸುಮ್ಮನೆ ಸಾಧನೆ ಮಾಡುತ್ತಲೇ ಹೋದರು. ಅವರು ಅಂತರಂಗದಲ್ಲಿ ಸತತವಾಗಿ ಪ್ರಯಾಣವೊಂದರಲ್ಲಿ ಸಂಚರಿಸುತ್ತಿದ್ದಾರೆ.

‘ಪುಸ್ತಕವನ್ನು ಎತ್ತಿಕೊಳ್ಳಲು ಪ್ರಯತ್ನಿಸುವುದು ಆದರೆ ಎತ್ತಿಕೊಳ್ಳದೆ ಇರುವುದು!’ ಎಂದ ಹಾಗೆ ಇದೆ. ‘ಪುಸ್ತಕವನ್ನು ಎತ್ತಿಕೊಳ್ಳುವ ಪ್ರಯತ್ನ’ ಎಂಬುದು ಇರಲು ಸಾಧ್ಯವೇ?! ನೀವದನ್ನು ಎತ್ತಿಕೊಳ್ಳುತ್ತೀರ ಅಥವಾ ಎತ್ತಿಕೊಳ್ಳುವುದಿಲ್ಲ ಅಷ್ಟೆ. ಅದನ್ನು ಎತ್ತಿಕೊಳ್ಳಲು ಪ್ರಯತ್ನಿಸಲು ಹೇಗೆ ಸಾಧ್ಯ? ಎತ್ತಿಕೊಳ್ಳಲು ಪ್ರಯತ್ನಿಸುತ್ತಿದ್ದೀರೆಂದು ಹೇಳಿದ ಪಕ್ಷದಲ್ಲಿ, ನಿಮಗೆ ನೀವೇ ಮೋಸಮಾಡಿಕೊಳ್ಳುತ್ತಿದ್ದೀರ! ನೀವು ಇತರರಿಗೆ ಮೋಸ ಮಾಡಲು ಸಾಧ್ಯವಿಲ್ಲ, ಏಕೆಂದರೆ ಅದೆಷ್ಟು ಮೂರ್ಖವಾಗಿದೆಯೆಂದು ಅವರಿಗೆ ತಿಳಿದಿದೆ.

ಅದು ಹೀಗಿದೆ: ದುಡ್ಡು ಸಂಪಾದಿಸಲು ಯೋಗ್ಯತೆಯಿಲ್ಲದ ಜನರು ತಾವು ಬಹಳ ಸತ್ಯವಂತರು ಹಾಗಾಗಿ ದುಡ್ಡು ಗಳಿಸಲು ಅವರಿಂದ ಸಾಧ್ಯವಾಗುತ್ತಿಲ್ಲವೆಂದು ಪ್ರತಿಪಾದಿಸುತ್ತಾರೆ. ಆದರೆ ನಿಜವಾಗಿಯೂ ಅವರಿಗೆ ಆ ಯೋಗ್ಯತೆಯಿಲ್ಲ, ಇದೇ ಸತ್ಯ; ಆದರೆ ಅವರದನ್ನು ಕಾರಣಗಳನ್ನು ಕೊಟ್ಟು ಸಮರ್ಥಿಸುತ್ತಾರೆ.

ಆಧ್ಯಾತ್ಮಿಕತೆಯೊಳಗೆ ನಿಜವಾದ ಜಿಗಿತವನ್ನು ತೆಗೆದುಕೊಳ್ಳಲು ಅಸಮರ್ಥರಾದಾಗ ಹಾಗೂ ಅದೇ ವೇಳೆ ಅದರ ಬಗ್ಗೆ ನಮಗೇನೂ ತಿಳಿದಿಲ್ಲವೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲದಿದ್ದಾಗ ನಮ್ಮ ಅಹಂಕಾರ ಜೀವಂತವಾಗಿರಲು ನಮ್ಮದೇ ಆದ ತತ್ವಜ್ಞಾನವನ್ನು ಸೃಷ್ಟಿಸಿ, “ನನಗೆ ಆಧ್ಯಾತ್ಮಿಕತೆಯ ಬಗ್ಗೆ ಎಲ್ಲವೂ ತಿಳಿದಿದೆ, ಜ್ಞಾನೋದಯವಾಗುವುದೊಂದೇ ಬಾಕಿ!” ಎಂದು ಎಲ್ಲೆಡೆ ಹೇಳಿಕೊಂಡು ತಿರುಗುತ್ತೇವೆ.

ನಾನು ಹೇಳುತ್ತೇನೆ: ಆಧ್ಯಾತ್ಮಿಕವಾಗಿ ನಾವು ಬಡವರೆಂಬ ಅರಿವಷ್ಟೆ ಪರಿವರ್ತನೆಯನ್ನುಂಟುಮಾಡಲು ಸಾಕು. ಪ್ರಾಮಾಣಿಕತೆ ಹಾಗೂ ಸತ್ಯಸಂಧತೆಯೇ ತಮ್ಮಷ್ಟಕ್ಕೆ ತಾವೇ ಆದರತ್ತ ದಾರಿತೋರಿಸುತ್ತವೆ. ಆದರೆ ನಮಗದು ಬೇಕಿಲ್ಲ, ನಾವು ಸಾಧಕರೆಂಬ ಅಹಂಕಾರವನ್ನು ಸತ್ಯ ಮತ್ತು ನಮ್ಮ ನಡುವಿನಲ್ಲಿರುವ ಅಂತರವನ್ನು ಉಪಯೋಗಿಸುತ್ತೇವೆ.

ಕಾರಿನಲ್ಲಿ ಚಲಿಸುವಾಗ ನಮಗೆ ಪೆಟ್ಟಾಗದೆ ಇರಲೆಂದು ಅದರಲ್ಲಿ ಶಾಕ್ ಅಬ್ಸಾರ್ಬರ್ಸ್ ಸಾಧನವಿದ್ದಂತೆ, ಸಾಧಕನೆಂಬ-ಅಹಂಕಾರವು ನಮ್ಮನ್ನು ನೈಜತೆಯಿಂದ ದೂರವಿಡುತ್ತದೆ. ಅದು ನಮ್ಮ ಮತ್ತು ಸತ್ಯದ ನಡುವೆ ಇರುವ ಅಂತರವನ್ನು ತುಂಬುವ ಕಾರ್ಯ ಮಾಡುತ್ತದೆ. ಈ ಅಹಂಕಾರದ ಸುಖ ಸಾಧನದಲ್ಲಿ ನಮ್ಮ ಇಡೀ ಜೀವನವೆಲ್ಲ ಸಾಧಕರಾಗಿದ್ದೆವು ಎಂದು ಊಹಿಸುತ್ತೇವೆ!

ಈ ಕೆಲವು ದಿನಗಳಲ್ಲಿ ನಾನೇನನ್ನೇ ಹೇಳಲಿ, ಸಂಪೂರ್ಣ ಅರಿವಿನೊಂದಿಗೆ ಆಲಿಸಿರಿ, ಮತ್ತು ಪ್ರಮುಖವಾದ ವಿಚಾರವನ್ನು ತಿಳಿಯಲು ಯತ್ನಿಸಿರಿ, ಹಾಗೆ ಮಾಡಿದರೆ ನಿಮ್ಮಲ್ಲಿ ನೀವು ಪರಿವರ್ತನೆ ಸಂಭವಿಸುವುದಕ್ಕೆ ಜಾಗವನ್ನು ಸೃಷ್ಟಿ ಮಾಡುತ್ತೀರ. ಇಲ್ಲದೆ ಇದ್ದರೆ ಬರಿಯ ಪದಗಳನ್ನು ಮಾತ್ರ ಸಂಗ್ರಹಿಸಿ, ಸದಾಕಾಲ ಹುಡುಕುತ್ತಲೇ ಇರುತ್ತೀರ. ನಿಮ್ಮಲ್ಲಿ ಪರಿವರ್ತನೆಯಾಗದೆ ಇದ್ದರೆ, ಪದಗಳೆಲ್ಲ ವ್ಯರ್ಥ. ಹಾಗೂ ನೀವು ಆಳವಾದ ಅರಿವಿನೊಂದಿಗೆ ಅವಲೋಕಿಸಿದರೆ ಮಾತ್ರ ಪರಿವರ್ತನೆ ಸಾಧ್ಯ.

ಮತ್ತು ಸ್ಪಷ್ಟವಾಗಿರಿ: ಈ ಸಭಾಂಗಣದಲ್ಲಿ ನೀವು ಸಾವಿರ ಮಂದಿ ಇದ್ದರೂ ಸಹ ನಾನು ನಿಮ್ಮೊಡನೆ ಮಾತನಾಡುತ್ತಿದ್ದೇನೆ. ನಾನು ನಿಮ್ಮೊಡನೆಯಿದ್ದಾಗ, ನಾನು ಉದ್ದೇಶಿಸುತ್ತಿರುವುದು ಪ್ರತಿಯೊಬ್ಬರನ್ನು ಪ್ರತಿಯೊಬ್ಬರೊಡನೆ ನನಗೆ ಸಂಪರ್ಕವಿದೆ; ಹಾಗಾಗಿ, ನಾನು ನುಡಿಯುತ್ತಿರುವುದನ್ನು ಇತರರಿಗೆ ಅನ್ವಯಿಸಬೇಡಿ; ಸಂಪೂರ್ಣವಾಗಿ ಕಳೆದುಕೊಳ್ಳುತ್ತೀರ.

ನಮಗೆ ಸಾಮಾನ್ಯವಾಗಿ ಒಂದು ಪ್ರವೃತ್ತಿಯಿದೆ. ನಮ್ಮ ಆರೋಗ್ಯದ ಬಗ್ಗೆ ಏನನ್ನಾದರೂ ಕೇಳಿಸಿಕೊಂಡರೆ, ತಕ್ಷಣವೇ ಅದನ್ನು ನಮಗೆ ಅನ್ವಯಿಸಿಕೊಂಡು, ನಮ್ಮ ಸ್ಥಾನವನ್ನು ಪರೀಕ್ಷಿಸುತ್ತೇವೆ; ಚರ್ಚೆಯಾಗುತ್ತಿರುವ ರೋಗದ ಲಕ್ಷಣಗಳು ನಮ್ಮಲ್ಲಿದೆಯೆ ಎಂದು ಪರೀಕ್ಷಿಸುತ್ತೇವೆ. ಚರ್ಮದ ಬಗ್ಗೆ ಮಾತನಾಡಿದರೆ ನೀವು ನಿಮ್ಮ ಚರ್ಮವನ್ನು ಸ್ಪರ್ಶಿಸಿ ನೋಡುತ್ತೀರ; ಹೃದಯದ ವಿಚಾರವನ್ನು ಮಾತನಾಡಿದರೆ, ನಿಮ್ಮ ಹೃದಯ ಬಡಿತವನ್ನು ಗಮನಿಸುತ್ತೀರ.

ನಾನು ಚಿಂತೆಯ ವಿಚಾರ ಮಾತನಾಡತೊಡಗಿದರೆ, ತಕ್ಷಣವೇ ನೀವು ನಿಮ್ಮ ತಾಯಿ ಎಷ್ಟು ಚಿಂತಿಸುತ್ತಾರೆ ಎಂದು ಯೋಚಿಸುತ್ತೀರ. ನೀವು ಎಷ್ಟು ಚಿಂತಿಸುತ್ತೀರೆಂದು ಮರೆತುಬಿಡುತ್ತೀರ. ನೀವೂ ಕೂಡ ಚಿಂತಿಸುತ್ತೀರೆಂದು ನಾನು ಹೀಗೆ ಹೇಳುತ್ತಾ ಇದ್ದೇನೆ. ಏನೋ ಬಹುಶಃ ನಿಮ್ಮ ತಾಯಿ ನಿಮಗಿಂತ ಹೆಚ್ಚು ಚಿಂತಿಸುತ್ತಾರೇನೋ ಆದರೆ ವಿಷಯವು ಅದಲ್ಲ.

ಪ್ರತಿ ಪದವು ನಿಮ್ಮನ್ನೇ ಅನ್ವೇಷಿಸುತ್ತದೆ ಎಂದು ಅರ್ಥಮಾಡಿಕೊಳ್ಳಿ. ಅದು ಚೈತನ್ಯವನ್ನು ತರುತ್ತಿರುವ ಬಾಣದಂತಿರುತ್ತದೆ; ಅದರಿಂದ ತಪ್ಪಿಸಿಕೊಳ್ಳಬೇಡಿ. ನಿಮ್ಮೊಳಗೆ ಹೋಗಿ ಅದು ಪರಿವರ್ತನೆ ಮಾಡುವುದಕ್ಕೆ ಬಿಡಿ. ಹಾಗಾಗಿ ಇತರರಿಗೆ ಅರ್ಥವಾಗುತ್ತಿದೆಯೋ ಎಂದು ನೋಡುತ್ತಾ ಇರಬೇಡಿ. ಹೀಗೆ ಮಾಡಿದರೆ ನೀವು ನಿಜವಾಗಿಯೂ ಅದನ್ನು ಕಳೆದುಕೊಳ್ಳುತ್ತೀರ.

ನಿಮ್ಮ ಬಗ್ಗೆ ನಿಮಗೆ ನಿಜವಾಗಿ ಗೊತ್ತಿದ್ದೇ ಆದರೆ, ನಿಮಗೆ ಯಾವ ಚಿಂತೆಯೂ, ಅಥವಾ ಅತೃಪ್ತಿಯೂ ಅಥವಾ ನೋವು ಅಥವಾ ಕಾಮ ಅಥವಾ ಮಾತ್ಸರ್ಯ ಅಥವಾ ಅಹಂಕಾರವಿರುವುದಿಲ್ಲ. ಆದರೆ, ಇವೆಲ್ಲವೂ ನಿಮ್ಮಲ್ಲಿವೆ. ನಿಮಗೆ ನಿಮ್ಮ ಬಗ್ಗೆ ಎಲ್ಲವೂ ತಿಳಿದಿಲ್ಲವೆಂದು ಇದೇ ತೋರಿಸುತ್ತದೆ. ಮೊದಲನೆಯದಾಗಿ ನಿಮಗೇನೂ ತಿಳಿಯದೆಂದು ತಿಳಿದುಕೊಳ್ಳಿ. ಆಗಾದರೂ ನಿಮಗೇನೂ ಗೊತ್ತಿಲ್ಲವೆಂದು ನಿಮಗೆ ಗೊತ್ತು! ನಿಮಗೇನೂ ತಿಳಿದಿಲ್ಲವೆಂದಾದರೂ ತಿಳಿಯದೆಯಿದ್ದರೆ ಆಗ ನಿಮಗೇನೂ ತಿಳಿದಿಲ್ಲವೆಂದು ನಿಮಗೆ ತಿಳಿಯದು!

ಏನು... ಹೇಳಿ...?

ಆದರೆ, ನಮ್ಮನ್ನು ನಾವು ಅರಿಯಲು ಪ್ರಯಾಣಿಸುತ್ತಿದ್ದೇವೆ, ಹೀಗಿರುವಾಗ ನಮಗೆ ಸ್ವಲ್ಪ ಮಟ್ಟಿಗೆ ತಿಳಿದಿರಬಹುದು....

ಒಂದು ವಿಷಯವನ್ನು ಹೇಳಲು ಬಯಸುತ್ತೇನೆ: ಒಂದು ಆಳವಾದ ಆಧ್ಯಾತ್ಮಿಕ ಅನುಭವದಲ್ಲಿ ಪ್ರಯಾಣವೇನೂ ಇರುವುದಿಲ್ಲ. ಅದೊಂದು ಕ್ಷಣದ ಅನುಭವ ಅಷ್ಟೆ. ನಮ್ಮ ಪ್ರಕಾರವಿರುವ 'ಅರಿವು' ಸಂಪೂರ್ಣ ಅರಿವಿನತ್ತ ನಮ್ಮಲ್ಲಿ ಒಂದು ಜಾಗವನ್ನು ಸೃಷ್ಟಿಸುತ್ತಿದೆ.

ಆದರೆ ಅಂತಿಮವಾಗಿ ಇನ್ನೂ ಆಳವಾದ ಅರ್ಥದಲ್ಲಿ ನಮಗೆ ಅದು ತಿಳಿದಿದೆ ಅಥವಾ ತಿಳಿದಿಲ್ಲ. ಆದರೆ, ನಾವು ಇನ್ನು ಹೆಚ್ಚು ಹೆಚ್ಚು ತಿಳಿದಾಗ, ನಮಗೆ ಇನ್ನೂ ತಿಳಿಯದೆಂದು ಸ್ಪಷ್ಟವಾಗುತ್ತದೆ. ಅಷ್ಟು ಸಾಕು ಅದು ನಿಜವಾಗಿ ಅರಿಯುವುದಕ್ಕೆ ನಮ್ಮನ್ನು ಉತ್ತೇಜಿಸುತ್ತದೆ.

ಖಚಿತ ಪರಿಹಾರಗಳು

ಭಗವದ್ಗೀತೆಯ ಮೊದಲನೆಯ ಅಧ್ಯಾಯ - 'ಅರ್ಜುನ ವಿಷಾದ ಯೋಗ' ಇದರಲ್ಲಿ ಕೊನೆಯವರೆಗೆ, ಅರ್ಜುನ ಮಾತನಾಡುತ್ತಾನೆ, ಕೃಷ್ಣ ಮೌನವಾಗಿ ಉಳಿಯುತ್ತಾನೆ. ಕೊನೆಯಲ್ಲಿ ಅರ್ಜುನ “ನನಗೇನೂ ತಿಳಿಯದು'' ಎಂದು ಹೇಳಿ ಶರಣಾಗತಿಯಾದಾಗಲೇ ಅವನು ಅಂತಿಮವಾಗಿ ಕೃಷ್ಣನ ಸಂದೇಶವನ್ನು ಸ್ವೀಕರಿಸಲು ಸಿದ್ಧನಾಗುತ್ತಾನೆ. ಕೃಷ್ಣಾರ್ಜುನರು ಗೆಳೆಯರು ಮತ್ತು ಬಾಲ್ಯ ಸ್ನೇಹಿತರಾಗಿ, ನೂರಾರು ಬಿಡುವಿನ ಸನ್ನಿವೇಶಗಳು ಇದ್ದಿದ್ದರೂ ಸಹ ಅರ್ಜುನನಿಗೆ ಹಿಂದಿಂದೂ ಗೀತೋಪದೇಶವಾಗಿರಲಿಲ್ಲ.

ಏಕೆ?

ಏಕೆಂದರೆ, ಅಲ್ಲಿಯವರೆಗೆ ಗೀತೆಯನ್ನು ಸ್ವೀಕರಿಸಲು ಪಕ್ವವಾಗಿರಲಿಲ್ಲ! ಅರ್ಜುನನು “ನನಗೇನೂ ತಿಳಿದಿಲ್ಲ'' ಎಂಬ ಶಬ್ದಗಳನ್ನು ಉಚ್ಚರಿಸಿದಾಗಲೇ ಅವನು ತಿಳಿಯಲು ಯೋಗ್ಯನಾಗುವನು. ಆಧ್ಯಾತ್ಮಿಕ ಅಭಿವೃದ್ಧಿಗಾಗಿ ಮೂಲವಾದ ನಿಯಮವೇನೆಂದರೆ ನಿಮಗೆ ತಿಳಿದಿಲ್ಲವೆಂದು ತಿಳಿಯುವುದು. ನಿಜವಾಗಿ ಅರಿಯುವುದಕ್ಕೆ ಇದೇ ಮೊದಲ ಹೆಜ್ಜೆ.

ಆಗಲಿ, ಯಾವುದಾದರೂ ಪ್ರಶ್ನೆಗಳಿವೆಯೆ?

ನಿಮಗೆ ಹೇಳುತ್ತೇನೆ, ದಯವಿಟ್ಟು ಪ್ರಶ್ನೆ ಕೇಳುವುದಕ್ಕೆ ಸ್ವತಂತ್ರವಾಗಿರಿ. ಇದು ನನ್ನ ಧರ್ಮೋಪದೇಶವಾಗಿರುವುದಿಲ್ಲ. ಹಾಗಾಗಿ, ದಯವಿಟ್ಟು ಪರಸ್ಪರವಾಗಿ ವರ್ತಿಸಿ, ಪ್ರಶ್ನೆಗಳನ್ನು ಕೇಳಿ ಅಥವಾ ನಿಮ್ಮ ಗೊಂದಲವನ್ನು ಹೊರತೆಗೆಯಿರಿ, ನಾನು ಸ್ಪಷ್ಟತೆಯನ್ನು ತರಲು ಪ್ರಯತ್ನ ಮಾಡುತ್ತೇನೆ! ಇನ್ನೊಂದು ವಿಷಯ: ನೀವು ಪ್ರಶ್ನೆಗಳನ್ನು ಕೇಳಿದಾಗ, ನೀವು ನಿದ್ರೆ ಮಾಡುತ್ತಿಲ್ಲವೆಂದು ನನಗೆ ಖಾತ್ರಿಯಾಗುತ್ತದೆ!

ಒಂದು ಸಣ್ಣ ಕಥೆ:

ಒಬ್ಬ ಬಸ್ ಚಾಲಕನು ಮತ್ತು ಒಬ್ಬ ದೊಡ್ಡ ಧರ್ಮಬೋಧಕ ಮರಣ ಹೊಂದಿ, ಯಮದೇವನ ಆಸ್ಥಾನವನ್ನು ಅಂದರೆ ಮರಣದೇವನ ಆಸ್ಥಾನವನ್ನು ತಲುಪಿದರು.

ಮೊದಲು ಬಸ್ ಚಾಲಕನನ್ನು ತನ್ನ ಜೀವಮಾನದಲ್ಲಿ ಮಾಡಿದ ಕೆಲಸಗಳ ಬಗ್ಗೆ ಪ್ರಶ್ನಿಸಲಾಯಿತು, ಅವನಿಗೆ ಸಂಬಂಧಪಟ್ಟ ದಾಖಲೆಯನ್ನು ಪರಿಶೋಧಿಸಲಾಯಿತು. ಅವನಿಗೆ ಬಂಗಾರದ ಕೀಲಿಕೈ ಕೊಟ್ಟು ಸುಖಭೋಗಯುತ ಕೋಣೆಗೆ ಕಳುಹಿಸಲಾಯಿತು.

ಧರ್ಮಬೋಧಕನು ಇದನ್ನು ನೋಡುತ್ತಾ ತನ್ನ ಸರದಿಗೆ ಕಾಯುತ್ತಿದ್ದನು. ಅವನು ತನಗೆ ತಾನೆ "ಕೇವಲ ಒಬ್ಬ ಬಸ್ ಚಾಲಕನಿಗೆ ಬಂಗಾರದ ಕೀಲಿಕೈ ಮತ್ತಿತರ ಸುಖಭೋಗ ವಸ್ತುಗಳು ಕೊಡಲಾಯಿತೆಂದರೆ ಖಂಡಿತವಾಗಿ ನಾನು ಅದಕ್ಕಿಂತ ಇನ್ನು ಬಹಳ ಹೆಚ್ಚು ಪಡೆಯುತ್ತೇನೆ" ಎಂದು ಯೋಚಿಸಿದನು.

ಎಷ್ಟಾದರೂ ಅವನು ಜೀವನವೆಲ್ಲ ದೇವರ ಬಗ್ಗೆ ಬೋಧಿಸಿದ್ದನು. ಅವನ ಸರದಿ ಬಂದಿತು ಮತ್ತು ಅವನಿಗೆ ಸಂಬಂಧಿಸಿದ ದಾಖಲೆಗಳು ಮುಂದಿಡಲಾಯಿತು. ತೀರ್ಪು ನೀಡಲಾಯಿತು ಅವನನ್ನು ನರಕಕ್ಕೆ ಕಳುಹಿಸಲಾಯಿತು.

ಅವನಿಗೆ ತುಂಬ ಕೋಪವಾಯಿತು, ಅವನಿಗೆ ತೀರ್ಮಾನವನ್ನು ನಂಬಲಾಗಲಿಲ್ಲ, ಅದಕ್ಕೆ ಕಾರಣವೇನೆಂದು ತಿಳಿಯಲು ಹಕ್ಕಿನಿಂದ ಕೇಳಿದನು.

ಯಮರಾಯ ವಿವರಿಸಿದನು, "ನೀನು ನಿಮ್ಮ ಜೀವಮಾನದಲ್ಲಿ ಮಾಡಿದ ಕಾರ್ಯಗಳ ಮೇಲೆ ನಮಗೆ ಆಸಕ್ತಿಯಿಲ್ಲ; ಆ ಕಾರ್ಯಗಳ ಫಲಿತಾಂಶಗಳನ್ನು ಮಾತ್ರ ಗಮನಿಸುತ್ತೇವೆ. ಬಸ್ ಚಾಲಕನು ಬಸ್ಸನ್ನು ಓಡಿಸುತ್ತಿದ್ದಾಗ ಅವನು ಓಡಿಸುತ್ತಿದ್ದ ರೀತಿ ಬಸ್ಸಿನಲ್ಲಿದ್ದ ಜನರೆಲ್ಲ ದೇವರನ್ನು ನೆನೆಯುವಂತೆ ಮಾಡುತ್ತಿತ್ತು. ಆದರೆ, ನೀನು ಬೋಧನೆ ನೀಡುತ್ತಿದ್ದಾಗ, ದೇವರ ಬಗ್ಗೆ ಮಾತನಾಡಿದ್ದರೂ ಕೂಡ ಕೇಳುತ್ತಿದ್ದ ಜನರೆಲ್ಲ ಬಹು ಹೊತ್ತು ನಿದ್ರೆ ಮಾಡುತ್ತಿದ್ದರು".

(ಗುಂಪಿನಿಂದ ಜೋರು ನಗು!)

ಹಾಗಾಗಿ ದಯವಿಟ್ಟು ಇಲ್ಲಿ ಜಾಗ್ರತೆಯಿಂದಿರಿ. ನಿಮಗೋಸ್ಕರವಲ್ಲದೇ ಇದ್ದರೂ ನನಗೋಸ್ಕರ ಯಮರಾಯನ ಸಭೆಯಲ್ಲಿ ನನ್ನನ್ನು ಯೋಗ್ಯ ರೀತಿಯಲ್ಲಿ

ಸ್ವೀಕರಿಸಲೆಂದು! ಪ್ರಶ್ನೆಗಳನ್ನು ಕೇಳಿ ನಿಮಗೆ ಮತ್ತು ಇತರರಿಗೆ ವಿಚಾರಗಳನ್ನು ಸ್ಪಷ್ಟ ಮಾಡಿಕೊಳ್ಳಿ. ನೀವು ಪ್ರಶ್ನೆಗಳನ್ನು ಕೇಳಿದಾಗಲೇ, ವಿಚಾರಗಳನ್ನು ಕಾರ್ಯಶೀಲವಾಗುವಂತೆ ನಿಮ್ಮ ಜೀವನಕ್ಕೆ ಇನ್ನೂ ಯೋಗ್ಯವಾಗುವಂತೆ ಮಾಡಿಕೊಳ್ಳುವುದು. ಇಲ್ಲಿ ಕೆಲವರು ತಾವು ಪ್ರಶ್ನೆ ಕೇಳಿದರೆ ಮೂರ್ಖರಂತೆ ಕಾಣಬಹುದೆಂದು ಭಾವಿಸುತ್ತೀರಿ ಆದರೆ ನಾನು ಹೇಳುತ್ತೇನೆ: ನೀವು ಪ್ರಶ್ನೆಗಳನ್ನು ಕೇಳಿದರೆ ಮೂರ್ಖನಂತೆ ಕಾಣುತ್ತೀರ ಮಾತ್ರ; ಪ್ರಶ್ನೆಗಳನ್ನು ಕೇಳದೇಯೇ ಇದ್ದರೆ ಮೂರ್ಖನಾಗಿಯೇ ಉಳಿಯುತ್ತೀರ! ಹಾಗಾಗಿ ಯಾವುದಾದರೂ ವಿಚಾರವನ್ನು ನೀವು ಒಪ್ಪಿಕೊಳ್ಳದೆ ಇದ್ದರೆ ದಯವಿಟ್ಟು ಕೈಯನ್ನು ಮೇಲಕ್ಕೆತ್ತಿ ಅದನ್ನು ಸ್ಪಷ್ಟಪಡಿಸಿಕೊಳ್ಳಿ. ಹೇಳಿ...

ಸ್ವಾಮೀಜಿ, ಈ ಕೆಲವು ದಿನಗಳಲ್ಲಿ ನಾವು ನಮ್ಮ ಎಲ್ಲ ನಕಾರಾತ್ಮಕತೆಗಳನ್ನು ನಾಶಮಾಡಿ ಹೊಸ ವ್ಯಕ್ತಿಯಾಗಿ ಮತ್ತೊಮ್ಮೆ ಹುಟ್ಟಲು ಮುನ್ನೋಡುತ್ತಿದ್ದೇವೆ... ಅರ್ಥಮಾಡಿಕೊಳ್ಳಿ: ಭೂಮಿಯ ಮೇಲೆ ಯಾವ ವಿನಾಶವೂ ಸಾಧ್ಯವಿಲ್ಲ. ಪರಿವರ್ತನೆ ಒಂದೇ ಸಾಧ್ಯ. ನೀವು ಸೂಚಿಸುವ ನಿಮ್ಮ ಎಲ್ಲ ನಕಾರಾತ್ಮಕ (Negative) ಭಾವನೆಗಳು, ಪ್ರೀತಿ, ಅರಿವು ಇಂತಹ ಸಕಾರಾತ್ಮಕ ಭಾವನೆಗಳಾಗಿ ಪರಿವರ್ತಿಸಬಹುದು. ಸಮಾಜ ಸದಾ ನಿಮ್ಮನ್ನು ನೀವೇ ಭಾಗಮಾಡಿ ಧ್ವಂಸ ಮಾಡಲು ಹೇಳಿಕೊಡುತ್ತದೆ. ನೀವು ಸಮಗ್ರವಾಗಲು ಅದೆಂದೂ ಹೇಳಿಕೊಡುವುದಿಲ್ಲ. ಅದು ನಿಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳಲು ನಿಮ್ಮ ಮತ್ತು ನಿಮ್ಮತನದ ನಡುವೆ ಒಂದು ತಡೆಯನ್ನು ಇಡುತ್ತದೆ. ಸಮಾಜವು ಸದಾ ನಿಮ್ಮೊಡನೆ ಮೇಲ್ಮಟ್ಟ ಕೀಳ್ಮಟ್ಟಗಳನ್ನು ಅನುಸರಿಸಿ ಮಾತನಾಡುತ್ತದೆ. ಆದ್ದರಿಂದಲೇ ನೀವಿಷ್ಟೆಲ್ಲ ಕಷ್ಟವನ್ನು ಅನುಭವಿಸುತ್ತೀರ.

ಅದು ನಿಮ್ಮಲ್ಲಿ ನೀವು ಕೀಳು ಎಂಬ ಭಾವನೆಯನ್ನು ಮೂಡಿಸುತ್ತದೆ. ಅದು ನೀವು ನಿಮ್ಮೊಂದಿಗೆ ಹೋರಾಡುವಂತೆ ಮಾಡುತ್ತದೆ. ನೀವು ನಿಮ್ಮೊಳಗೆ ಗಲಿಬಿಲಿಯಾಗಿದ್ದಲ್ಲಿ ಮಾತ್ರ ಸಮಾಜವು ನಿಮ್ಮನ್ನು ಆಳಲು ಸಾಧ್ಯ. ಮೊದಲದು ನೀವು ಯಾವುದರಲ್ಲೂ

ಯೋಗ್ಯರಲ್ಲವೆಂಬ ಭಾವನೆಯನ್ನು ಮೂಡಿಸಿ, ನಂತರ ಅದಕ್ಕೆ ಪರಿಹಾರಗಳನ್ನು ನೀಡಲು ಮುಂದೆ ಬರುತ್ತದೆ. ಆದ್ದರಿಂದಲೇ ನೀವು ಇಂಥ ಭಾಷೆಯಲ್ಲಿ ಮಾತನಾಡಲು ಆರಂಭಿಸುತ್ತೀರ.

ಒಂದು ಸಣ್ಣ ಕಥೆ:

ಒಬ್ಬ ವ್ಯಕ್ತಿ ಸಾಮಾನ್ಯ ನೆಗಡಿಯಿಂದ ನರಳುತ್ತಿದ್ದನು. ಅವನು ವೈದ್ಯರ ಬಳಿ ಹೋಗಿ ಔಷಧವನ್ನು ಕೇಳಿದನು.

ಅದು ಸಾಧಾರಣವಾದ ನೆಗಡಿಯಷ್ಟೇ ಆಗಿತ್ತು ಮತ್ತು ವೈದ್ಯರು ಅವನನ್ನು ಸ್ವಲ್ಪ ಹೊತ್ತು ಗಮನಿಸಿ “ನೀನೇಕೆ ಒಂದು ಕೆಲಸವನ್ನು ಮಾಡಬಾರದು. ರಾತ್ರಿ ವೇಳೆ ಸ್ವಲ್ಪ ಹೊತ್ತು ಸುಮ್ಮನೆ ಹೊರಗೆ ಹೋಗು, ತಣ್ಣನೆಯ ಗಾಳಿ ನಿನ್ನನ್ನು ಸ್ವಲ್ಪ ವೇಳೆ ಮುಟ್ಟಲಿ. ನಂತರ ಮತ್ತೆ ನನ್ನ ಬಳಿ ಬಾ” ಎಂದರು.

ಆಗ ರೋಗಿಯು ಗಾಬರಿಯಾದನು. ಅವನು “ಆದರೆ ವೈದ್ಯರೇ ಹಾಗೆ ಮಾಡಿದರೆ ನನಗೆ ನಿಮೋನಿಯಾ ಬರುವುದು” ಎಂದನು. ಆಗ ವೈದ್ಯರು “ಹೌದು. ನಾನು 'ನಿಮೋನಿಯಾ'ವನ್ನು ತಕ್ಷಣವೇ ಗುಣಪಡಿಸಬಹುದು” ಎಂದರು.

ಸಮಾಜವು ನಿಮ್ಮನ್ನು ಏನೋ ಒಂದು ಆಗುವಂತೆ ಮಾಡಿ, ನಂತರ ಅದರಿಂದ ಹೊರಬರುವ ಬಗೆಗಳನ್ನು ನಿಮಗೆ ಹೇಳಿಕೊಡುತ್ತದೆ. ನಾನೀಗ ಹೇಳುತ್ತೇನೆ: ಮೇಲ್ಮಟ್ಟ ಅಥವಾ ಕೆಳಮಟ್ಟವೆಂಬುದು ಇಲ್ಲವೇ ಇಲ್ಲ. ಕೇವಲ ಪರಿವರ್ತನೆಯೆಂಬುದೊಂದೇ ಇದೆ. ಅಂತರಂಗವನ್ನು ಅರಿವಿನಿಂದ ಶೋಧಿಸಲು ನೀವು ಕಲಿತಾಗ, ನೀವಾಗಿ ನೀವೇ ಪರಿವರ್ತನೆಗೊಳ್ಳುತ್ತೀರ.

ತಾನಾಗಿ ತಾನೇ ನಿಮ್ಮ ಪರಿವರ್ತನೆಯಾಗುವುದು. ಇದೇ ಗುರುವಿನ ಮಾರ್ಗ. ಅವರು ನಿಮಗೆ ಅಂತರಂಗವನ್ನು ಶೋಧಿಸಲು ಹೇಳಿಕೊಡುತ್ತಾರೆ. ಅವರು ನಿಮ್ಮನ್ನು ಎಂದೂ ವಿಂಗಡಿಸುವುದಿಲ್ಲ. ಸದಾ ನಿಮ್ಮನ್ನು ಸಮಗ್ರವನ್ನಾಗಿ ಮಾಡುತ್ತಾರೆ.

ಖಚಿತ ಪರಿಹಾರಗಳು

ಅವರು ನೀವು ನಕಾರಾತ್ಮಕವೆಂದು ಎಂದೂ ಹೇಳುವುದಿಲ್ಲ. ನಕಾರಾತ್ಮಕವೆಂಬುದು ಇಲ್ಲವೇ ಇಲ್ಲ. ನೀವು ಕರೆಯುವ ಸಕಾರಾತ್ಮಕ ಮತ್ತು ನಕಾರಾತ್ಮಕ - ಇವೆರಡೂ ಕೂಡ ಒಂದೇ ರಶ್ಮಿ ವರ್ಣದ (Spectrum) ಎರಡು ಅಂತ್ಯಗಳು. ನಕಾರಾತ್ಮಕವೆಂಬುದು ನೀವು ಹೊರಗೆಸೆಯಲು ಭೌತಿಕ ವಸ್ತುವೇನಲ್ಲ. ನೀವು ಪರಿವರ್ತಿಸಿದರೆ, ಮೇಲ್ಮಟ್ಟದ ಸಕಾರಾತ್ಮಕ ಚೈತನ್ಯಗಳತ್ತ ಹೆಜ್ಜೆ ಹಾಕುತ್ತಿದ್ದೀರ ಅಷ್ಟೆ.

ನಾನು ಹಿಂದೆ ಹೇಳಿದ ಹಾಗೆ ಇಲ್ಲಿ ಸಂಭವಿಸುತ್ತಿರುವುದಕ್ಕೆ ನೀವು ತೆರೆದ ಮನಸ್ಸಿನಿಂದ ಮತ್ತು ಗ್ರಹಿಸಲು ಸಿದ್ಧರಾಗಿದ್ದರೆ ಈ ಪರಿವರ್ತನೆಯು ಉಂಟಾಗಲು ಸಾಧ್ಯ.

ಹೇಳಿ...?

ಸ್ವಾಮೀಜಿ, ನಮ್ಮ ಮನಸ್ಸೆಂಬುದು ಮಾಯೆ ಮತ್ತು ನಮ್ಮ ಪ್ರಶ್ನೆಗಳೆಲ್ಲ ಬರಿ ಮಾಯೆ ಎಂದು ಹಲವಾರು ಪುಸ್ತಕಗಳಲ್ಲಿ ಓದಿದ್ದೇನೆ. ದಯವಿಟ್ಟು ಇದರ ಬಗ್ಗೆ ಏನಾದರೂ ಹೇಳುತ್ತೀರ?

ಮಾಯೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆ! ನೋಡಿ, ಮೊದಲನೆಯದಾಗಿ ಗೊಂದಲವನ್ನುಂಟುಮಾಡುವ ಓದಿನಿಂದ ಗಲಿಬಿಲಿಯಾಗಬೇಡಿ ಎರಡನೆಯದು: ಮನಸ್ಸಿನಿಂದ ಅರಿತುಕೊಳ್ಳಲು ಏನೂ ಇಲ್ಲವೆಂದು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ. ಜೀವನದ ರಹಸ್ಯವನ್ನು ಮನಸ್ಸಿನಿಂದ ಭೇದಿಸಲು ಸಾಧ್ಯವಿಲ್ಲ. ಜೀವನದ ಉದ್ದೇಶವನ್ನು ಮನಸ್ಸಿನಿಂದ ಅರಿಯಲು ಸಾಧ್ಯವಿಲ್ಲ. ಆದ್ದರಿಂದಲೇ ಅವರು ನಿಮ್ಮ ಮನಸ್ಸು ಮಾಯೆ ಎಂದು ಹೇಳುತ್ತಾರೆ.

ನಮ್ಮ ಜೀವನದ ರಹಸ್ಯವನ್ನು ಬಗೆಹರಿಸುವುದಕ್ಕೆ 'ಮನಸ್ಸನ್ನು ಬಿಡುವುದೇ' ಮೊದಲನೇ ಹೆಜ್ಜೆ. ನಿಮ್ಮ ಮನಸ್ಸನ್ನು ಆಟವಾಡಲು ಬಿಟ್ಟರೆ, ನೀವು ಆಡುತ್ತಲೇ ಇರುತ್ತೀರ ಅಷ್ಟೆ. ಜನ್ಮಾಂತರ ಆಡುತ್ತೀರ, ನಿಮ್ಮ ಆಳವಾದ ಒಳದಾಹ ಎಂದೂ ಆರುವುದಿಲ್ಲ. ಬಹುಶಃ ನಿಮ್ಮ 'ಸಾಧಕ-ಅಹಂಕಾರ'ವನ್ನೇನೋ ತೃಪ್ತಿಪಡಿಸಬಹುದು, ಆದರೆ ಅದರಿಂದ ಏನೂ ಪ್ರಯೋಜನವಿಲ್ಲ. ನಿಮ್ಮೊಳಗೆ ಇನ್ನೂ ಗೊಂದಲವಿರುತ್ತದೆ.

ನಿಮ್ಮ ಕಾರ್ಯಾಚರಣೆಯ ಕೇಂದ್ರ ಸ್ಥಳವನ್ನು ನಿಮ್ಮ ಮನಸ್ಸಿನಿಂದ ನಿಮ್ಮ ಹೃದಯ ಅಥವಾ ಆತ್ಮಕ್ಕೆ ಬದಲಾಯಿಸಿ. ನಿಮ್ಮ ಮನಸ್ಸನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯ ವಹಿಸಿದರೆ, ಪ್ರಶ್ನೆ ಮೇಲೆ ಪ್ರಶ್ನೆ ಹುಟ್ಟಿ ಬರುತ್ತದೆ, ಪ್ರಶ್ನೆಗಳೊಂದಿಗೆ ನೀವು ತಿಳಿಯಲು ಸಾಧ್ಯವಿಲ್ಲ. ಕೇವಲ ಅರಿವಿನಿಂದ ಮಾತ್ರ ತಿಳಿಯಲು ಸಾಧ್ಯ.

ನಿಮ್ಮ ಹೃದಯದಿಂದ ಕಾರ್ಯ ವಹಿಸಿದರೆ ಅರಿವು ಮತ್ತು ತಿಳುವಳಿಕೆ ನಿಮ್ಮಲ್ಲಿ ಸಂಭವಿಸುತ್ತದೆ, ನಂತರ ನಿಮ್ಮ ಪ್ರಶ್ನೆಗಳು ತಾವಾಗಿ ತಾವೇ ಕರಗಿಹೋಗುತ್ತವೆ; ಸೂರ್ಯನು ಉದಯಿಸಿದಾಗ, ಹೇಗೆ ಕತ್ತಲೆ ಮಾಯವಾಗುತ್ತದೆಯೋ ಹಾಗೆಯೇ, ನಿಮ್ಮಲ್ಲಿ ಅರಿವು ಸಂಭವಿಸಿದಾಗ, ತಿಳುವಳಿಕೆಯು ಸಂಭವಿಸುತ್ತದೆ ಮತ್ತು ನಿಮ್ಮ ಪ್ರಶ್ನೆಗಳು ಕರಗಿ ಹೋಗುತ್ತವೆ.

ಪ್ರಶ್ನೆಗೆ ಬರುವುದಕ್ಕೆ ಮೊದಲೇ ನೀವು ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತೀರ! ಹಾಗೆಯೇ ಪ್ರಶ್ನೆಗಳು ಕರಗಿಹೋಗುತ್ತವೆ. ಇದನ್ನು ಅರ್ಥಮಾಡಿಕೊಳ್ಳಲು ನಿಮಗೆ ಕಷ್ಟವಾಗಬಹುದು, ಆದರೆ ಒಮ್ಮೆ ನೀವು ಅದರ ಅನುಭವವನ್ನು ಪಡೆದರೆ ನಾನು ಹೇಳುವ 'ಅರಿವಿನ' ಬಗ್ಗೆ ನಿಮಗೆ ಸರಿಯಾಗಿ ತಿಳಿಯುತ್ತದೆ. ಪ್ರಶ್ನೆಗಳು ಮಾಯವಾಗಿ ತಿಳುವಳಿಕೆ ಮಾತ್ರ ನಿಮ್ಮಲ್ಲಿರುತ್ತದೆ.

ಇಷ್ಟು ಅರ್ಥಮಾಡಿಕೊಂಡರೆ ಮಾಯೆಯ ಬಗ್ಗೆ ಚಿಂತಿಸುವ ಅವಶ್ಯಕತೆ ಇಲ್ಲ. ನನ್ನ ಮಾತುಗಳಿಂದ ಮಾನಸಿಕ ತಿಳುವಳಿಕೆಯ ಜತೆ, ಧ್ಯಾನವು ನಿಮ್ಮನ್ನು ಅರಿವಿನ ಸ್ಥಿತಿಗೆ ಹೋಗಲು ಸಹಕರಿಸುತ್ತದೆ. ನಾವು ಗಂಟೆಗಟ್ಟಲೆ ಮಾಯೆಯನ್ನು ಕುರಿತು ಮಾತನಾಡಬಹುದು, ಆದರೆ ಅದರಿಂದ ನಿಮಗೆ ಇನ್ನಷ್ಟು ಗೊಂದಲವಾಗುತ್ತದೆ.

ಬದಲಾಗಿ, ನಾವು ಬುದ್ಧಿವಂತಿಕೆಯಿಂದ ಬಾಳಲು ಸಹಕರಿಸುವ ಪರಿಹಾರಗಳನ್ನು ಕಲಿಯುವುದು ಪ್ರಯೋಜನಕರ. ಒಂದು ವಿಷಯವನ್ನು ಹೇಳಲು ಬಯಸುತ್ತೇನೆ: ನಿಮ್ಮ ಮನಸ್ಸು ಕಲ್ಪನೆ ಮಾಡುವುದೆಲ್ಲವೂ ಮಾಯೆ, ಆದ್ದರಿಂದಲೇ ನಾನು ನಿಮ್ಮ ಮನಸ್ಸನ್ನು ಸುಮ್ಮನೆ ಬಿಡಿ ಅಷ್ಟೇ ಎಂದು ಹೇಳುತ್ತೇನೆ.

ನೋಡಿ: ನಾನು ಹಿಂದೆ ಹೇಳಿದ ಹಾಗೆ, ಆನಂದವು ನಮ್ಮಲ್ಲಿ ನಿರಂತರವಾಗಿ ಸಂಭವಿಸುತ್ತಿದೆ. ಆಧಾರಭೂತವಾದ ಸತ್ಯವಿದು. ಆದರೆ ನಾವು ಆನಂದದ ಹರಿವನ್ನು ನಿರಂತರವಾಗಿ ನಿಲ್ಲಿಸುತ್ತೇವೆ, ಮತ್ತು ಇದೇ ನಾವು ಜೀವನದಲ್ಲಿ ಅನುಭವಿಸುವ ದುಃಖಾವಸ್ಥೆ. ಆನಂದವೇನೂ ನೀವು ಹೊರಗಿನಿಂದ ತಂದು ನಿಮ್ಮೊಳಗೆ ಇಟ್ಟುಕೊಳ್ಳಬೇಕಾದದ್ದೇನಲ್ಲ. ಇಲ್ಲಿ ಅದು ನಿಮ್ಮ ಸಹಜ ಸ್ವಭಾವ. ನೀವೀಜಗತ್ತಿಗೆ ಆಗಮಿಸಿದಾಗ, ನೀವು ಆನಂದದ ಸ್ಥಿತಿಯಲ್ಲಿದ್ದೀರ. ಸಮಾಜವು ನಿಮ್ಮ ಮೇಲೆ ನಿಯಮಗಳನ್ನು ವಿಧಿಸಿದಾಗ ನೀವು ಈ ಆನಂದದಿಂದ ಸಾಧ್ಯವಾದಷ್ಟು ದೂರ ಹೋಗಿ ನಂತರ ಅದನ್ನು ಹೊರಗೆ ಪಡೆಯಲು ಬಗೆಗಳನ್ನು ಹುಡುಕುವುದರಲ್ಲಿ ಪ್ರವೀಣರಾಗುತ್ತೀರ.

ಈ ಕೆಲವು ದಿನಗಳಲ್ಲಿ ನಮ್ಮೊಳಗೆ ನಿರಂತರವಾಗಿ ಸಂಭವಿಸುತ್ತಿರುವ ಈ ಆನಂದದ ನಿಲುಗಡೆಯನ್ನು ಹೇಗೆ ನಿಲ್ಲಿಸುವುದೆಂದು ನೋಡುತ್ತೇವೆ. ನಾನು ‘ಆನಂದ’ ಎಂದು ಹೇಳಿದಾಗ, ನಮ್ಮ ನಿತ್ಯ ಜೀವನದಲ್ಲಿ ಅನುಭವಿಸುವ ಸಾಧಾರಣವಾದ ಸಂತೋಷವನ್ನು ಉದ್ದೇಶಿಸುತ್ತಿಲ್ಲ. ನಮ್ಮ ಜೀವನದಲ್ಲಿ ಸಂಭವಿಸುವ ಸಾಧಾರಣವಾದ ಸಂತೋಷವು ಹೊರ ಪ್ರಪಂಚದಲ್ಲಿ ಸಂಭವಿಸುವ ಯಾವುದೋ ಸಂತುಷ್ಟ ಸಂದರ್ಭ ಅಥವಾ ಪ್ರಾಪಂಚಿಕ ಲಾಭ, ಏನೋ ಸಿಹಿ ಸುದ್ದಿ, ಯಾವುದೋ ಒಂದು ಸಂಬಂಧವು ಸಫಲವಾದಾಗ ಅಥವಾ ಪ್ರಾಪಂಚಿಕ ಜಗತ್ತಿನಲ್ಲಿ ಒಬ್ಬ ವ್ಯಕ್ತಿ ಅಥವಾ ವಸ್ತುವಿಗೆ ಸಂಬಂಧಪಟ್ಟ ವಿಷಯದ ಪರಿಣಾಮದಿಂದ ಸಂಭವಿಸುತ್ತದೆ.

ಇಂಥ ಸಂತೋಷವು ಹೊರಪ್ರಪಂಚದ ಜನರ ಮತ್ತು ಘಟನೆಗಳನ್ನು ಸಂಪೂರ್ಣವಾಗಿ ಅವಲಂಬಿಸುತ್ತದೆ. ಇಂಥ ಸಂತೋಷವು ನಮಗೆ ದುಃಖವನ್ನೂ ತರಬಹುದು, ಏಕೆಂದರೆ, ಜನರು ಮತ್ತು ಸಂದರ್ಭಗಳು ಬದಲಾಗುತ್ತಲೇ ಇರುತ್ತವೆ. ಅವು ಸಮವಾಗಿ ಇರುವುದಿಲ್ಲ. ಬೇರೆ ಬೇರೆ ಹೊತ್ತಿನಲ್ಲಿ ಅವುಗಳ ವರ್ತನೆ ಬೇರೆಯಾಗಿರುತ್ತದೆ. ಮತ್ತು ಅವುಗಳ ವರ್ತನೆ ಬದಲಾದಾಗ ನಮ್ಮ ಸಂತೋಷದ ಮೇಲೆ ಕೂಡ ಪರಿಣಾಮ ಬೀರುತ್ತದೆ.

ನಾವು ಮಾತನಾಡುತ್ತಿರುವ 'ಆನಂದ'ವೇ ಭಿನ್ನವಾದುದು. ಹೊರ ಪ್ರಪಂಚದ ಘಟನೆಗಳು ಯಾವುದೇ ರೀತಿಯಲ್ಲಿ ಪರಿಣಾಮ ಬೀರಲು ಸಾಧ್ಯವಾಗದ, ಸಂಪೂರ್ಣವಾಗಿ ನಿಮ್ಮೊಳಗಿರುವ ಸ್ಥಿತಿ ಇದು ನಿಮ್ಮ ತಿರುಳು, ನಿಮ್ಮ ಶಾಶ್ವತವಾದ ಸ್ಥಿತಿ ಮತ್ತು ನೀವಿದನ್ನು ಕಂಡುಕೊಂಡಾಗ ಹೊರ ಪ್ರಪಂಚದ ಕೇವಲ ವೀಕ್ಷಕರಾಗಿರುತ್ತೀರ. ಆನಂದಮಯ ವೀಕ್ಷಕರಾಗುತ್ತೀರ. ಅದರಲ್ಲಿ ನಿಮ್ಮ ಆನಂದವನ್ನು ಕಳೆದುಕೊಳ್ಳದೆ ಸಂಪೂರ್ಣವಾಗಿ ಭಾಗವಹಿಸುತ್ತೀರ.

ಒಂದು ಸಣ್ಣ ಕಥೆ:

ಒಂದು ಪರಿವಾರದಲ್ಲಿ ಬಹಳ ಅಸಮಾಧಾನದ ಮುದುಕನಿದ್ದ. ಕುಟುಂಬದವರು ಅವನನ್ನು ಉತ್ಸಾಹದಿಂದಿಡಲು ಎಷ್ಟೇ ಪ್ರಯತ್ನಪಟ್ಟರೂ ಅವನ ಹಠದಿಂದ, ಕೋಪದಿಂದ ಹಾಗೆಯೇ ಇದ್ದ. ಅವನ ಮಕ್ಕಳು ಮೊಮ್ಮಕ್ಕಳು ಅವನನ್ನು ಸಂತೋಷ ಪಡಿಸಲು ಬಂದು ನೋಡುತ್ತಿದ್ದರು, ಆದರೆ ಅವನು ಮಾತ್ರ ಹಾಗೆಯೇ ಉಳಿದ.

ಹಠಾತ್ತನೆ ಒಂದು ದಿನ ಬಹಳ ಮೃದು ಮತ್ತು ಉಲ್ಲಾಸಭರಿತನಾದ. ಈ ತಕ್ಷಣದ ಪರಿವರ್ತನೆಯನ್ನು ಕಂಡು ಕುಟುಂಬದವರಿಗೆ ಆಶ್ಚರ್ಯವಾಯಿತು. ಅವನ ಮೊಮ್ಮಕ್ಕಳಲ್ಲಿ ಧೈರ್ಯಶಾಲಿಯಾದ ಒಬ್ಬಳು "ತಾತಾ, ಹೇಗೆ ಇಷ್ಟು ತಕ್ಷಣವೇ ನೀವು ಬದಲಾಗಿದ್ದೀರ?" ಎಂದು ಅವನನ್ನು ಕೇಳಿದಳು. ಮುದುಕ "ತೃಪ್ತ ಮನಸ್ಸನ್ನು ಪಡೆಯಲು ಸಾಧ್ಯವಾದಷ್ಟು ಪ್ರಯತ್ನ ಮಾಡಿದೆ, ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಈಗ ಅದರೊಂದಿಗೆ ತೃಪ್ತನಾಗಿರಬೇಕೆಂದು ನಿರ್ಧರಿಸಿದ್ದೇನೆ" ಎಂದು ಉತ್ತರಿಸಿದನು.

ಎಲ್ಲವೂ ನಮ್ಮ ಮನಸ್ಸಿನ ಯೋಜನೆ! ನಮ್ಮ ಮನಸ್ಸಿನ ಸಹಾಯದಿಂದ, ಒಳಗಿನಿಂದ ಅಂತರಂಗದಿಂದ ಹರಿಯುವ ಆನಂದವನ್ನು ನಿಲ್ಲಿಸಿಬಿಟ್ಟಿದ್ದೇವೆ. ಹೊರಗಿನಿಂದ ನಾವೆಂದೂ ಆನಂದವನ್ನು ಪಡೆಯಲು ಸಾಧ್ಯವಿಲ್ಲ. ಅದು ನಮ್ಮೊಳಗೆ ಈಗಾಗಲೇ ಇದೆ. ನಾವು ಒಳಗೆ ಶೋಧಿಸಿಕೊಳ್ಳಬೇಕು, ಅಷ್ಟೆ.

ಖಚಿತ ಪರಿಹಾರಗಳು

ಅರ್ಥಮಾಡಿಕೊಳ್ಳಿ: ಇಡೀ ಬ್ರಹ್ಮಾಂಡವನ್ನು ತುಂಬುವ ಒಂದು ಸರ್ವತೋಮುಖ ಜಾಗೃದಾವಸ್ಥೆ (Universal consciousness) ಹಾಗೂ ಒಂದು ಏಕವ್ಯಕ್ತಿಪರ (individual consciousness) ಜಾಗೃದಾವಸ್ಥೆ ಇದೆ. ಈ ಎರಡರ ಮಧ್ಯೆ ಸಂಪರ್ಕ ಸ್ಥಾಪಿಸುವುದೇ ಮಾನವನ ಉದ್ದೇಶ. ಈ ಸಂಪರ್ಕವು ಸಂಭವಿಸಿದಾಗ, ಮಾನವನಿಗೆ ಜ್ಞಾನೋದಯವಾಗಿದೆ ಎಂದು ಅಥವಾ ನಿತ್ಯಾನಂದದಲ್ಲಿದ್ದಾನೆಂದು ಹೇಳಲಾಗುವುದು.

ಉಪನ್ಯಾಸಗಳನ್ನು ಕೇಳುವುದರ ಮೂಲಕ ಮತ್ತು ಎಲ್ಲ ಧ್ಯಾನದ ತಂತ್ರಗಳನ್ನು ಅಭ್ಯಾಸ ಮಾಡುವುದರ ಮೂಲಕ ನಮಗೆ ಈ ಸಂಪರ್ಕದ ಅರಿವು ಇನ್ನು ಹೆಚ್ಚು ಆಗುವುದು ಮತ್ತು ಇದನ್ನು ಇನ್ನೂ ಅರಿವಿನಿಂದ ಅನುಭವಿಸಲು ಪ್ರಯತ್ನಿಸುತ್ತೇವೆ. ನಮ್ಮ ಎಲ್ಲ ಪ್ರಯತ್ನಗಳ ಮೂಲ ಉದ್ದೇಶವೇ ಇದು.

ನಾನೆಂದೂ ಹೇಳುತ್ತೇನೆ: ಎರಡು ಬಗೆಯ ಜನರಿದ್ದಾರೆ. ಒಂದು ಬಗೆಯ ಜನರು ಇತರರ ಜೊತೆ ಯುದ್ಧ ಮಾಡಿ ಗೆಲ್ಲುವವರು, ಮತ್ತು ಇನ್ನೊಂದು ಬಗೆಯ ಜನರು ತಮ್ಮೊಂದಿಗೆ ತಾವೇ ಯುದ್ಧಮಾಡಿ ಗೆಲ್ಲುವವರು. ಇತರರ ಜೊತೆ ಯುದ್ಧ ಮಾಡುವುದು ಸುಲಭ. ಅದೇನೂ ದೊಡ್ಡ ಕೆಲಸವಲ್ಲ. ಆದರೆ ನಮ್ಮೊಂದಿಗೆ ನಾವೇ ಯುದ್ಧಮಾಡಿ ಗೆಲ್ಲುವುದು ಕಷ್ಟ. ನೀವು ಧೈರ್ಯಶಾಲಿಯಾದರೆ, ನಿಮ್ಮೊಂದಿಗೆ ನೀವೇ ಯುದ್ಧಮಾಡಿ ಗೆಲ್ಲುತ್ತೀರ. ನೀವು ಯಾವುದು ಅಲ್ಲವೋ ಅದನ್ನು ಧ್ವಂಸ ಮಾಡಿ, ಆನಂದಮಯ ಜೀವಿಯಾಗಿ ಮೇಲೇಳುತ್ತೀರ.

ಮನುಷ್ಯನಿಗೆ ತನ್ನ ಸಂಪೂರ್ಣ ಸಾಧ್ಯತೆಯನ್ನು ಅರಿತುಕೊಳ್ಳುವುದೇ ಅತಿ ಕಠಿಣವಾದ ಕಾರ್ಯ. ತನ್ನ ಒಳಮುಖವಾಗಿ ಚಲಿಸಿದರೆ ಹಾಗೂ ತನ್ನೊಳಗೆ ಇನ್ನಷ್ಟು ಕಲ್ಮಷವನ್ನು ಗ್ರಹಿಸದೆ ಇರುವಷ್ಟು ಬುದ್ಧಿವಂತನಾಗುವವರೆಗೆ ತನ್ನನ್ನು ತಾನು ಮತ್ತೆ ಮತ್ತೆ ಶುದ್ಧ ಮಾಡುತ್ತಾ ಬಂದಲ್ಲಿ ಮಾತ್ರ ಇದು ಸಾಧ್ಯವಾಗುವುದು.

ನಿಜವಾಗಿ ನೋಡಿದರೆ, ‘ಸ್ವಾಮಿ’ ಎಂಬ ಪದದ ಅರ್ಥ ‘ಯಾರು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಂಡಿದ್ದಾನೋ ಅವನು.’ ನಾವು ನಮ್ಮ ಸಾಧ್ಯತೆಯನ್ನು

ಅರಿಯಲು ಅಸಮರ್ಥರಾಗಿರುವುದೇ ಈ ಭೂಮಿಯ ಮೇಲೆ ನಮ್ಮ ಎಲ್ಲ ಕಷ್ಟಗಳಿಗೆ ಕಾರಣ. ‘ಯಾವ ಸಿಂಹಕ್ಕೆ ಸಿಂಹವಾಗಿ ಇರುವುದಕ್ಕೆ ಸಮ್ಮತಿ ಇಲ್ಲವೋ, ಅದು ನರಿಯಾಗುವುದು' ಎಂಬ ಮಾತೇ ಇದೆ. ನಮ್ಮ ನಿಜ ಸಮರ್ಥ ಚೈತನ್ಯವನ್ನು ಅರಿಯಲು ಸಮ್ಮತಿಯಿಲ್ಲದೆಯಿದ್ದರೆ ಅದನ್ನು ಅಥವಾ ಪರರನ್ನು ಧ್ವಂಸಮಾಡುವ ರೀತಿಯಲ್ಲಿ ವರ್ತಿಸುತ್ತೇವೆ.

ಹಾಗಾಗಿ, ಈ ಉತ್ಪಾದಕ ಚೈತನ್ಯ ಅಥವಾ ಸಮರ್ಥ ಚೈತನ್ಯಕ್ಕೆ ಅಡಚಣೆಯಿಲ್ಲದೆ ಹರಿದು ಅಭಿವ್ಯಕ್ತವಾಗಲು ಸಮ್ಮತಿ ಇರಬೇಕು ಒಂದು ಸಮಾಜವು ನಮಗೆ ಸಮ್ಮತಿ ನೀಡಬೇಕು ಮತ್ತು ಅದನ್ನು ಪ್ರತಿಪಾದಿಸಲು ತಂತ್ರವನ್ನು ನಾವು ತಿಳಿಯಬೇಕು ‘ಸ್ವಾಮಿ ಎಂದರೆ ಯಾರು ತನ್ನ ಸಾಮರ್ಥ್ಯ ಶಕ್ತಿಯನ್ನು ಅರಿತು, ತಾನು ಇರುವಂತೆಯೇ ಪ್ರತಿಪಾದಿಸುತ್ತಾ; ತನ್ನ ಆತ್ಮದೊಂದಿಗೆ ಹೊಂದಿಕೊಂಡಿರುವವನು; ಯಾರು ಆನಂದಮಯವಾಗಿರುವವನೋ ಅವನು.

ನಿಮ್ಮಲ್ಲಿ ಪ್ರಚಂಡ ಸಾಮರ್ಥ್ಯವಿದೆ. ಕಾಲಾಂತರಗಳಿಂದ ಮಾನವನು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತು ಬದುಕುತ್ತಿಲ್ಲವೆಂದು ಮನಶ್ಶಾಸ್ತ್ರದ ಜ್ಞಾನಿಗಳು ಆಧ್ಯಾತ್ಮಿಕರು ಹೇಳಿದ್ದಾರೆ. ಅದನ್ನು ಎಲ್ಲಿ ಕಳೆದುಕೊಳ್ಳುತ್ತಿದ್ದೇವೆ? ನಮಗೆಲ್ಲಿ ಅಡ್ಡಿಯಾಗಿದೆ? ನಮ್ಮ ಸಂಪೂರ್ಣ ಸಾಮರ್ಥ್ಯವನ್ನರಿಯಲು ನಮಗೇಕೆ ಸಾಧ್ಯವಾಗುತ್ತಿಲ್ಲ?

ತೊರೆದು ಒಳಹೊಕ್ಕು ನೋಡಲು ನಮಗೆ ಧೈರ್ಯ ಬೇಕು ಅಷ್ಟೆ. ಆಗ, ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಅರಿಯುತ್ತೇವೆ. ಶುದ್ಧಭಾವದಿಂದ ಪರಿಶೋಧಿಸಲು ಆರಂಭಿಸಿದರೆ, ತಿಳುವಳಿಕೆಯಲ್ಲಿ ಒಂದು ರೂಪಾಂತರ ಹೊಂದುತ್ತೀರ, ಈ ರೂಪಾಂತರವೇ ನೀವು ವಿಕಾಸವಾಗಲೆಂದು ನಿಮ್ಮಲ್ಲಿ ಸ್ಥಳವನ್ನು ಸೃಷ್ಟಿಸುತ್ತದೆ.

ನೀವು ಅರಳಿದಾಗ ಅರಸನಾಗುತ್ತೀರ. ಆಗ ನೀವು ಈ ಭೂಮಿಯ ಮೇಲೆ ಒಡೆಯನಾಗಿ ಬರುತ್ತೀರ. ಜನರು ಎಲ್ಲ ವಿಧದ ಸೌಕರ್ಯಗಳನ್ನು ಹಣ, ಜ್ಞಾನ, ಎಲ್ಲವನ್ನೂ ಪಡೆದಿರಬಹುದು. ಆದರೆ ಆಂತರಿಕ ಸ್ಥಳವನ್ನು ಕಂಡುಕೊಳ್ಳದೆಯಿದ್ದರೆ ಖಚಿತ ಪರಿಹಾರಗಳು

ಭಿಕ್ಷುಕರಾಗಿಯೇ ಉಳಿಯುತ್ತಾರೆ. ನಿಮ್ಮ ಆತ್ಮವನ್ನು ಅರಿಯುವುದು ಶ್ರೀಮಂತನಾಗುವುದೆಂದು ಆಂತರಿಕ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆ.

ಹೊರಗಿನ ಪ್ರಪಂಚದಲ್ಲಿ ನಡೆಯುವ ಘಟನೆಗಳಲ್ಲಿ ನಮ್ಮನ್ನು ನಾವು ಎಷ್ಟು ತೊಡಗಿಸಿಕೊಂಡಿದ್ದೇವೆ. ಎಂದರೆ ನಮ್ಮ ಅಂತರಾತ್ಮದ ಬಗ್ಗೆ ಸಂಪೂರ್ಣವಾಗಿ ಅಜ್ಞಾನಿಗಳಾಗಿದ್ದೇವೆ. ಹೊರ ಪ್ರಪಂಚದ ಸಾಹಸದಲ್ಲಿ ನಾವು ಎಷ್ಟು ತೊಡಗಿದ್ದೇವಂದರೆ, ಆಂತರಿಕ ಜಗತ್ತಿನ ಅತ್ಯದ್ಭುತವಾದ ಸಾಹಸವನ್ನು ಕಳೆದುಕೊಳ್ಳುತ್ತೇವೆ. ಶ್ರೇಷ್ಠ ಋಷಿಗಳು, ಗುರುಗಳು ತಮ್ಮ ಜೀವನದಲ್ಲಿ ಅನುಭವಿಸಿದ್ದನ್ನು ಕಳೆದುಕೊಳ್ಳುತ್ತೇವೆ. ಈ ಅನುಭವವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ.

ಹೇಳಿ... ಏನಾದರೂ ಕೇಳುವುದು ಇದೆಯೇ?

ಸ್ವಾಮೀಜಿ, ಆಧ್ಯಾತ್ಮಿಕತೆಯನ್ನು ಸಂಕ್ಷಿಪ್ತವಾಗಿ ಹೇಗೆ ವಿವರಿಸುವಿರಿ?

ಆಧ್ಯಾತ್ಮಿಕತೆಯೆಂಬುದು ನಿಮ್ಮಲ್ಲಿ ನಾಲ್ಕು ವಿಷಯಗಳ ಅರಳುವಿಕೆ; ಅವು ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ನಯವಾದ ಪರಸ್ಪರ ಸಂಬಂಧಗಳು ಮತ್ತು ತಕ್ಷಣವೇ ಪ್ರತಿಕ್ರಿಯಿಸುವ ಸಾಮರ್ಥ್ಯ, ಇದನ್ನೇ ನಾನು ಜವಾಬ್ದಾರಿ ವಹಿಸುವಿಕೆ ಎಂದು ಕರೆಯುವುದು.

ದೈಹಿಕ ಆರೋಗ್ಯವೆಂದರೆ ರೋಗಗಳಿಂದ ಮುಕ್ತರಾಗಿರುವುದು. ವೈದ್ಯರ ಬಳಿ ಹೋದರೆ, ನಿಮಗೆ ಕಾಯಿಲೆಗಳಿಲ್ಲವೆಂದು ವರದಿ ಕೊಡಬೇಕು. ಹಾಗೆ

ಎರಡನೆಯದು - ಮಾನಸಿಕ ಆರೋಗ್ಯ, ಎಂದರೆ ಅರೆಪ್ರಜ್ಞೆ (subconscious) ಮತ್ತು ಗಾಢವಾಗಿ ಇರುವ ನಕಾರಾತ್ಮಕ ಆಲೋಚನೆಗಳಿಂದ ಮುಕ್ತರಾಗಿರುವುದು ಮತ್ತು ಚಿಂತೆ, ನೋವು, ಮಾತ್ಸರ್ಯ, ಅಸಂತೃಪ್ತಿ, ಅಹಂಕಾರ, ಕಾಮ ಮುಂತಾದವುಗಳಿಂದ ಮುಕ್ತರಾಗಿರುವುದು.

ಮೂರನೆಯದು - ಪರಸ್ಪರ ಸಂಬಂಧಗಳು ಎಂದರೆ ಸುತ್ತಮುತ್ತಲು ಇರುವ ಜನರೊಂದಿಗೆ ನಯವಾದ ಸಂಬಂಧವನ್ನು ಹೊಂದುವುದು. ಎಲ್ಲರೊಡನೆ ಕೇವಲ ಆದರಪೂರ್ವಕವಾಗಿ ನಡೆದುಕೊಂಡರೆ ಸಾಲದು ಯಾವುದೇ ಬಗೆಯ ಜನರಾದರೂ ಸರಿ, ಒತ್ತಡ ಅಥವಾ ನೋವಿಲ್ಲದೆ ಪರಸ್ಪರ ವರ್ತಿಸಲು ಸಾಧ್ಯವಾಗಬೇಕು. ಒತ್ತಡ ಅಥವಾ ನೋವು ಉಂಟಾದರೆ, ನಿಮ್ಮಲ್ಲಿ ನಿಮ್ಮ ಮಾನಸಿಕ ಆರೋಗ್ಯದಲ್ಲಿ ಒಂದು ತಡೆತವಿದೆಯೆಂದರ್ಥ.

ನಾಲ್ಕನೆಯ ಬಗೆ - ತಕ್ಷಣವಾಗಿ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ, ಇದನ್ನೇ ನಾನು ಜವಾಬ್ದಾರಿ ವಹಿಸುವಿಕೆ ಎಂದು ಕರೆಯುತ್ತೇನೆ. ಜವಾಬ್ದಾರಿ ವಹಿಸಲು ಯಾವುದೇ ವಿಷಯವಿರಲಿ, ಆಗಲಿ ಎಂದು ಹೇಳುವುದಕ್ಕೆ ಸಮರ್ಥರಾದರೆ ಆ ಕ್ಷಣವೇ ನೀವು ವಿಸ್ತಾರವಾಗುತ್ತೀರ ಹಾಗೂ ಆ ಕಾರ್ಯವನ್ನು ನಿರ್ವಹಿಸಲು ನಿಮ್ಮಲ್ಲಿ ಚೈತನ್ಯವು ಹರಿಯುವುದು. ಆದರೆ ಕಾರ್ಯವನ್ನು ನಿರ್ವಹಿಸಲು ಆ ಚೈತನ್ಯವನ್ನು ಉಪಯೋಗಿಸುವುದು ನಿಮಗೆ ಬಿಟ್ಟಿದ್ದು. ಅದೇನೋ ನಿಜ ಈ ರೀತಿ ಮಾಡುತ್ತಾ ಇದ್ದರೆ, ನೀವು ವಿಸ್ತಾರವಾಗುತ್ತಲೇ ಇರುತ್ತೀರ,

ಹಾಗಾಗಿ, ಈ ನಾಲ್ಕೂ ವಿಷಯಗಳು ನಿಮ್ಮಲ್ಲಿ ವಿಕಾಸವಾದರೆ, ನೀವು ಆಧ್ಯಾತ್ಮಿಕರಾಗುತ್ತೀರ. ಆಗ ನೀವು ಯಾವ ಉದ್ಯೋಗದಲ್ಲಿ ತೊಡಗಿದ್ದೀರಿ, ಅಥವಾ ಮದುವೆಯಾಗಿದೆಯೋ ಇಲ್ಲವೋ, ಅಥವಾ ಚಿಕ್ಕವರೋ ವಯಸ್ಕರೋ ಅಥವಾ ಬೇರೆ ಯಾವುದೂ ಮುಖ್ಯವಾಗುವುದಿಲ್ಲ.

ಹೇಳಿ...

ಸ್ವಾಮೀಜಿ, ಸಸ್ಯಹಾರಿ ಊಟ ಹಾಗೂ ಮಾಂಸಹಾರಿ ಊಟವನ್ನು ಸೇವಿಸುವುದರ ಬಗ್ಗೆ ನೀವೇನು ಹೇಳುತ್ತೀರ?

ಮೊದಲನೆಯದಾಗಿ, ಮಾಂಸಹಾರಿ ಊಟವನ್ನು ಸೇವಿಸಬಾರದೆಂದು ಎಲ್ಲರಿಗೂ ಹೇಳಿಕೊಂಡು ಬರಬೇಡಿ. ತಿಳಿಯದ ವಿಷಯಗಳಲ್ಲಿ ನಮ್ಮನ್ನು ನಾವು

ತೊಡಗಿಸಿಕೊಳ್ಳದೆ ತೊಂದರೆಗೆ ಒಳಗಾಗದೆ‌ಯಿರುವುದು ಲೇಸು! ನೋಡಿ: ಕೆಲವು ವಿಚಾರಗಳನ್ನು ವಿಮರ್ಶಣೆ ಮಾಡಿ ತೀರ್ಮಾನಿಸಲು ಸಾಧ್ಯವಿಲ್ಲ. ನಾವೇನಾದರೂ ಜನರಿಗೆ ಮಾಂಸದ ಊಟವನ್ನು ಮಾಡಬೇಡಿ ಎಂದು ಹೇಳಿದರೆ ಪ್ರಾಣಿಗಳಂತೆಯೇ ಗಿಡಗಳಿಗೂ ಜೀವವಿದೆ ಹಾಗಿದ್ದಾಗ ಸಸ್ಯಗಳನ್ನೇಕೆ ಸೇವಿಸುತ್ತೀರಿ? ಎಂದು ಕೇಳುತ್ತಾರೆ. ಅವರಿಗೆ ಏನು ಉತ್ತರಿಸುತ್ತೀರಿ? ಈ ವಿಷಯಕ್ಕೆ ಕೊನೆಯೆ ಇಲ್ಲ.

ಇಷ್ಟು ಹೇಳಬಲ್ಲೆ: ನಾನು ಶುದ್ಧ ಸಸ್ಯಹಾರಿ. ನಾನು ಸಸ್ಯಾಹಾರವನ್ನು ಸೇವಿಸುತ್ತೇನೆ ಏಕೆಂದರೆ, ಅದು ನನ್ನ ದೇಹಕ್ಕೆ ಅನುಕೂಲಕರವಾಗಿದೆ ಅಷ್ಟೆ. ಮಾಂಸಾಹಾರವನ್ನು ಸೇವಿಸಿರುವಂಥ ಎಷ್ಟೋ ಜ್ಞಾನೋದಯವಾದ ಗುರುಗಳಿದ್ದಾರೆ. ಜ್ಞಾನೋದಯ ಹೊಂದಿದ ಗುರುಗಳು ಏನನ್ನಾದರೂ ಮಾಡಿದರೆ ಅದರ ಬಗ್ಗೆ ನಾವೇನೂ ತೀರ್ಮಾನಿಸಲು ಸಾಧ್ಯವಿಲ್ಲ ಏಕೆಂದರೆ ಅವನ್ನು ನಮ್ಮ ಸಾಧಾರಣವಾದ ಜ್ಞಾನದಿಂದ ಅದನ್ನು ಅರಿಯಲು ಸಾಧ್ಯವಿಲ್ಲ. ವಿಷಯವನ್ನು ತಪ್ಪಾಗಿ ಅನ್ವಯ ಮಾಡಿ ಸಂಪೂರ್ಣವಾಗಿ ಕಳೆದುಕೊಳ್ಳುತ್ತೇವೆ ಇದೇನೋ ನಿಜ.

ಒಂದು ವಿಷಯ: ಆಹಾರ ಪದ್ಧತಿಗಳನ್ನು ಅನುಸರಿಸಿ ಜನರನ್ನು ವಿಭಾಗ ಮಾಡಬೇಡಿ, ಹಾಗೂ ಮಾಂಸಾಹಾರವನ್ನು ತ್ಯಜಿಸಲೆಂದು ಒತ್ತಾಯಿಸಬೇಡಿ.

ಒಂದು ಸಣ್ಣ ಕಥೆ:

ಭಾರತಕ್ಕೆ ಮೊದಮೊದಲು ಟಿ.ವಿ. ಪ್ರಸ್ತುತವಾದಾಗ, ಕೆಲವು ಸಾಧುಗಳ ಮನೆಯಲ್ಲಿ ಟಿ.ವಿ.ಯನ್ನು ಖರೀದಿಸಲಾಯಿತು. ಒಬ್ಬನನ್ನು ಬಿಟ್ಟು ಎಲ್ಲರೂ ಟಿ.ವಿ.ಯಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದರು. ಆತನು ಮನೆಯ ಯಜಮಾನನ ಬಳಿ ಹೋಗಿ ಇತರರು ಗಂಟೆಗಟ್ಟಲೆ ಟಿ.ವಿ. ವೀಕ್ಷಿಸುವುದರ ಬಗ್ಗೆ ದೂರು ಹೇಳುತ್ತಿದ್ದನು. ಕೆಲವು ಬಾರಿ ದೂರನ್ನು ಕೇಳಿಸಿಕೊಂಡು, ಯಜಮಾನನು “ನಾಳೆಯಿಂದ ನೀನೂ ಕೂಡ ಟಿ.ವಿ.ಯನ್ನು ವೀಕ್ಷಿಸು’’ ಎಂದರು. ಆ ವ್ಯಕ್ತಿಗೆ ಆಶ್ಚರ್ಯವಾಗಿ ಅವರು ಹೀಗೇಕೆ ಮಾಡಿದರೆಂದು ಕೇಳಿದನು.

ಯಜಮಾನನು "ಟಿ.ವಿ. ವೀಕ್ಷಿಸದೆ ಇರುವುದರಿಂದ ನೀನು ಸಂತೋಷವಾಗಿಲ್ಲ. ಆದ್ದರಿಂದಲೇ ಅವರು ಹಾಗೆ ಮಾಡುವುದನ್ನು ಕಂಡು ನೀನು ಗೊಣಗುತ್ತಿದ್ದೀಯ. ನಿನಗೆ ವೀಕ್ಷಿಸಬೇಕೆಂಬ ಆಸೆಯಿದೆ, ಆದರೆ ವೀಕ್ಷಿಸುತ್ತಿಲ್ಲ ಏಕೆಂದರೆ ನಿನ್ನೊಳಗೆ ನೀನು ಗಟ್ಟಿ ಭಾವನೆಯಿಂದಿರಬೇಕೆಂದು ಬಯಸುತ್ತೀಯ ಆದರೆ ಈ ಒತ್ತಡವೇ ಅವರೆದುರು ದೂರು ಹೇಳಲು ಕಾರಣವಾಗಿದೆ" ಎಂದು ಉತ್ತರಿಸಿದರು.

ನೋಡಿ: ಮಾಂಸಾಹಾರವನ್ನು ಸೇವಿಸದೆಯಿರುವುದರಿಂದ ನಿಮಗೆ ಸಂಪೂರ್ಣವಾಗಿ ಸಂತೋಷವಾಗದೆಯಿದ್ದರೆ, ಇತರರನ್ನು ಸಸ್ಯಹಾರಿಗಳಾಗುವುದಾಗಿ ಒತ್ತಾಯ ಮಾಡುತ್ತೀರ. ಏನನ್ನಾದರೂ ಸಂಪೂರ್ಣವಾಗಿ ಮಾಡುತ್ತಿದ್ದರೆ, ಅದನ್ನು ಮಾಡಲು ಇನ್ನೊಬ್ಬರನ್ನು ಎಂದೂ ಒತ್ತಾಯಿಸುವುದಿಲ್ಲ. ಅನುಮಾನದಿಂದಲೋ ಅಥವಾ ಅರ್ಧ ಮನಸ್ಸಿನಿಂದ ಮಾಡುತ್ತಿದ್ದರೆ ಮಾತ್ರ ಇತರರನ್ನು ಕೂಡ ಎಳೆಯುತ್ತೀರ. ನೀವು ಒಂದು ಕೆಲಸವನ್ನು ಸಂಪೂರ್ಣವಾಗಿ ನಿರ್ವಹಿಸುತ್ತಿದ್ದೀರೋ ಇಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ಇದೇ ಪರೀಕ್ಷೆ. ನೀವು ಸಂಪೂರ್ಣವಾಗಿದ್ದರೆ ಯಾವುದೇ ಪಶ್ಚಾತ್ತಾಪವಿಲ್ಲದೆ, ನಿಮ್ಮ ಪಾಡಿಗೆ ನೀವಿರುತ್ತೀರ, ಹಾಗಾಗಿ ಇನ್ನೊಬ್ಬರಿಗೆ ತೊಂದರೆ ಕೊಡುವುದಿಲ್ಲ, ಇತರರು ಸ್ವತಂತ್ರವಾಗಿರುವುದಕ್ಕೆ ಬಿಡುತ್ತೀರ.

ನಿಜವಾಗಿ ನೋಡಿದರೆ ದಿನದಲ್ಲಿ ಒಂದು ಗಂಟೆಯ ಕಾಲ ಮಾಂಸಾಹಾರವನ್ನು ಸೇವಿಸಿ, ಅದನ್ನು ಮರೆಯುವವರು, ಸಸ್ಯಾಹಾರವನ್ನು ಸೇವಿಸಿ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಮಾಂಸಾಹಾರದ ಬಗ್ಗೆ ಯೋಚಿಸುವವರಿಗಿಂತ ಲೇಸು!

ಒಂದು ಸಣ್ಣ ಕಥೆ:

ಒಬ್ಬ ಝೆನ್ ಗುರು ತನ್ನ ಶಿಷ್ಯನ ಜತೆ ನಗರದ ಕಡೆ ನಡೆಯುತ್ತಿದ್ದರು. ದಾರಿಯಲ್ಲಿ ಹರಿಯುತ್ತಿದ್ದ ನದಿಯೊಂದಿತ್ತು. ಅದರ ಹತ್ತಿರ ಸುಂದರವಾದ ಮಹಿಳೆಯೊಬ್ಬಳು ನಿಂತಿದ್ದಳು. ಅವಳು ಅವರಿಬ್ಬರನ್ನು ಕಂಡಾಗ ನದಿಯನ್ನು ದಾಟಲು ಅವಳಿಗೆ ಸಹಾಯ ಮಾಡಬೇಕೆಂದು ಗುರುವನ್ನು ಪ್ರಾರ್ಥಿಸಿದಳು. ಗುರುವು ತಡವಿಲ್ಲದೆ ಅವಳನ್ನು

ನದಿಯ ಇನ್ನೊಂದು ತೀರಕ್ಕೆ ಎತ್ತಿಕೊಂಡು ಹೋಗಿ, ಅವಳನ್ನು ಅಲ್ಲಿ ಬಿಟ್ಟು ಹಿಂತಿರುಗಿದರು. ಇದನ್ನು ನೋಡುತ್ತಿದ್ದ ಶಿಷ್ಯನಿಗೆ ಸಂಪೂರ್ಣವಾಗಿ ತಳಮಳವಾಯಿತು. ಅವನು ತನ್ನೊಳಗೇ ಸುಡುತ್ತಿದ್ದನು.

ನಗರದತ್ತ ನಡೆಯುತ್ತಾ ಹೋಗುತ್ತಿದ್ದಾಗ, ಅವನಿಗೆ ಇನ್ನು ಸುಮ್ಮನಿರಲಾಗಲಿಲ್ಲ. ಅವನು "ಗುರುವೇ, ಗುರುವಾಗಿ ನೀವು ಹೀಗೆ ಒಬ್ಬ ಯುವ ಮಹಿಳೆಯನ್ನು ಮುಟ್ಟಿ, ಎತ್ತಿಕೊಳ್ಳುವುದು ಸರಿಯೇ?" ಎಂದು ಕೇಳಿಯೇಬಿಟ್ಟನು. ಗುರುವು "ನಾನು ಅವಳನ್ನು ಆಗಲೇ ಅಲ್ಲಿಯೇ ಬಿಟ್ಟೆ, ನೀನೇಕೆ ಅವಳನ್ನು ಇನ್ನೂ ಹೊತ್ತುಕೊಂಡಿದ್ದೀಯ?" ಎಂದು ಉತ್ತರಿಸಿದರು.

ಗುರುವು ಯಾವಾಗಲೂ ಪ್ರಶ್ನಿಸುವವನಿಗೇ ಉತ್ತರಿಸುತ್ತಾರೆ, ಕೇವಲ ಪ್ರಶ್ನೆಗೆ ಎಂದೂ ಉತ್ತರಿಸುವುದಿಲ್ಲ. ಈ ಕತೆಯಲ್ಲಿ ಗುರುವು ತನ್ನ ಪರಮಶ್ರೇಷ್ಠ ಸ್ಥಿತಿಯಿಂದಾಗಿ ಅವರು ಎತ್ತಿಕೊಂಡದ್ದು ಹೆಣ್ಣಾಗಲೀ ಗಂಡಾಗಲೀ ಅದು ಅವರಿಗೆ ವ್ಯತ್ಯಾಸವಾಗಿ ಕಾಣುತ್ತಿರಲಿಲ್ಲವೆಂದು ಶಿಷ್ಯನಿಗೆ ವಿವರಿಸಿ ತಿಳುವಳಿಕೆ ನೀಡಬಹುದಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಅವರು ತಡೆತವಿದ್ದದ್ದು ಶಿಷ್ಯನ ಮನದಲ್ಲೇ, ಗುರುವಿನ ಕ್ರಿಯೆಯಲ್ಲಲ್ಲವೆಂದು ಶಿಷ್ಯನಿಗೆ ಅರಿವು ನೀಡಿದರು!

ನಿಮಗೆ ಮಾಂಸಾಹಾರವನ್ನು ಸೇವಿಸುವುದನ್ನು ಬಿಟ್ಟುಬಿಡುವುದಕ್ಕೆ ಸಾಧ್ಯವಾಗುವುದಿಲ್ಲವೆಂದು ಎನಿಸಿದರೆ ತಾನಾಗಿಯೇ ಬಿಟ್ಟುಹೋಗುವವರೆಗೂ ಅದನ್ನು ಸೇವಿಸಿ. ಆದರೆ ನಾನು ಮಾಂಸಾಹಾರವನ್ನು ಪ್ರತಿಪಾದಿಸುತ್ತಿಲ್ಲ. ನನ್ನ ಸ್ವಂತ ಜೀವನಕ್ಕೆ, ನನ್ನ ದೇಹ ಮತ್ತು ಮನಸ್ಸಿಗೆ ಸಸ್ಯಾಹಾರವು ಸೂಕ್ತ, ಹಾಗಾಗಿ ಅದನ್ನು ಸೇವಿಸುತ್ತೇನೆ. ನೀವು ನನ್ನ ಜೀವನದ ರೀತಿಯನ್ನು ಅಳವಡಿಸಿಕೊಳ್ಳಬೇಕೆಂದು ಬಯಸಿದರೆ ಸಸ್ಯಾಹಾರಿಯಾಗಿ ಅಷ್ಟೆ!

ಆದರೆ ಅದರ ಕೈಬಿಟ್ಟು, ನಂತರ ಅದನ್ನು ಬಯಸಬೇಡಿ ಮತ್ತು ಇತರರನ್ನೂ ಅದನ್ನು ಕೈಬಿಡಲು ಹಿಂಸಿಸಬೇಡಿ. ನಾವೆಲ್ಲರೂ ಸಸ್ಯಾಹಾರದಂತಹ ಸಣ್ಣಪುಟ್ಟ ವಿಷಯಗಳನ್ನು ಆಯ್ದುಕೊಂಡು, ಅದರ ಬಗ್ಗೆ ಗಂಟೆಗಟ್ಟಲೆ ಆಲೋಚನೆ ಮಾಡುತ್ತೇನೆ; ಇದುವೇ ಸಮಸ್ಯೆಯಾಗಿದೆ.

ನೀವು ಮೂರು ಜಾತಿಗಳಲ್ಲಿ ಒಂದಕ್ಕೆ ಸೇರುತ್ತೀರಿ. ಮೊದಲನೆಯದು ಮಾಂಸಾಹಾರವನ್ನು ಸೇವಿಸದೆ ಇರುವುದು ಮತ್ತು ಅದರ ಬಗ್ಗೆ ಯೋಚನೆಯೂ ಮಾಡದೆ ಇರುವುದು. ಎರಡನೆಯ ಜಾತಿಯೆಂದರೆ, ಅದನ್ನು ತಿನ್ನುವುದು ನಂತರ ಅದನ್ನು ಮರೆತುಬಿಡುವುದು. ಮೂರನೆಯ ಜಾತಿಯೆಂದರೆ, ಅದನ್ನು ತಿನ್ನದೆ ಇರುವುದಲ್ಲದೆ ಅದರ ಕೊರತೆಯನ್ನುನುಭವಿಸಿ ಇತರ ಜನರೂ ಅದನ್ನು ತಿನ್ನದೆ ಇರಲೆಂದು ಕಾಟ ಕೊಡುವುದು! ದಯವಿಟ್ಟು ಮೂರನೆಯ ಜಾತಿಗೆ ಸೇರಬೇಡಿ ಅಷ್ಟು ಸಾಕು!

ಹೇಳಿ...?

ಸ್ವಾಮೀಜಿ, ನಾನು ಒಳ್ಳೆಯದನ್ನು ಮಾಡಲು ಬಯಸಿದಾಗ ಉದಾಹರಣೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ, ಒಬ್ಬ ಮುದುಕನನ್ನು ಕಂಡು ಅವರಿಗೆ ನನ್ನ ಜಾಗವನ್ನು ನೀಡಲು ನನಗೆ ಬಯಕೆ, ಆದರೆ ಪ್ರಯಾಣದ ಉಳಿದ ಭಾಗ ನಾನು ನಿಂತುಕೊಳ್ಳಬೇಕೆಂದು ಯೋಚಿಸಿದಾಗ ನನ್ನ ಬಯಕೆಗೆ ವಿರುದ್ಧವಾಗಿ ನಿರ್ಧರಿಸುತ್ತೇನೆ. ಆದರೆ ಒಂದು ಸಿಗರೇಟ್‌ ಅನ್ನು ಸೇದಬೇಕಾದಾಗ ಕೇವಲ ಒಂದು ಸಿಗರೇಟಿನಿಂದ ನನ್ನ ಜೀವನವೇನೂ ಹಾಳಾಗುವುದಿಲ್ಲವೆಂದು ಸೇದಲು ನನ್ನೊಳಗಿಂದ ಸಂಪೂರ್ಣ ಒಪ್ಪಿಗೆ ದೊರಕುತ್ತದೆ. ನನ್ನನ್ನು ನಾನು ಹತೋಟಿಯಲ್ಲಿಟ್ಟುಕೊಂಡು ಸರಿಯಾದುದನ್ನು ಮಾಡಲು ನನಗೇಕೆ ಸಾಧ್ಯವಾಗುತ್ತಿಲ್ಲ?

ನೋಡಿ, ಯಾರೋ ಒಬ್ಬರು ಹೇಳಿದ ವಿಷಯವನ್ನು ನಿಮ್ಮ ಮನಸ್ಸಿನಿಂದ ಗ್ರಹಿಸಿದರೆ ಅದನ್ನು ಬುದ್ಧಿಯ ಮಟ್ಟದಲ್ಲಿ ಅರ್ಥಮಾಡಿಕೊಂಡರೂ, ಅದರ ಲಾಭಗಳು ಸ್ಪಷ್ಟವಾಗಿ ಮತ್ತು ಗಾಢವಾಗಿ ಕಾಣುವುದಿಲ್ಲ. ಆದರೆ ಏನನ್ನಾದರೂ ಸ್ವತಃ ನಿಮಗೆ ಗಾಢವಾದ

ಖಚಿತ ಪರಿಹಾರಗಳು

ಅನುಭವವಾದರೆ ಅದು ನಿಮ್ಮ ಸ್ವಂತ ತಿಳುವಳಿಕೆಯಾಗುವುದು ಮತ್ತು ನೀವು ಯಾವುದೇ ಕಷ್ಟವಿಲ್ಲದೆ ಅದರಂತೆಯೇ ನಡೆದುಕೊಳ್ಳುತ್ತೀರ. ಸಿಗರೇಟು ನಿಮ್ಮ ಆತ್ಮದೊಂದಿಗೆ ಐಕ್ಯವಾಗಿದೆ. ನೀವೇ ಸ್ವತಃ ಅದನ್ನು ಅನುಭವಿಸಿದ್ದೀರ. ಆದರೂ ಬೇರೊಬ್ಬರ ಉಪದೇಶದಿಂದಲ್ಲ, ಆದರೆ ಅದು ನಿಮ್ಮ ಸ್ವಂತ ಅನುಭವ. ಹಾಗಾಗಿ ನಿಮ್ಮ ಹೃದಯವು ಅದನ್ನು ಒಪ್ಪಿಕೊಳ್ಳುತ್ತದೆ.

ನೀವು ಬಸ್ಸಿನಲ್ಲಿ ನಿಮ್ಮ ಜಾಗವನ್ನು ಇನ್ನೊಬ್ಬರಿಗೆ ಬಿಟ್ಟುಕೊಡುವುದರಿಂದ ದೊರಕುವ ಸಂತೋಷವನ್ನು ಗಾಢವಾಗಿ ಅನುಭವಿಸಿಲ್ಲ. ಬಸ್ಸಿನಲ್ಲಿ ವಯಸ್ಕರಿಗೆ ಜಾಗವನ್ನು ನೀಡುವುದು ಒಳ್ಳೆಯದು ಎಂದು ಜನರಿಂದ ಕೇಳಲ್ಪಟ್ಟಿದ್ದೀರ ಅಷ್ಟೆ ಏನೊ, ಅಂತೂ ಸಾಮಾಜಿಕ ಸಭ್ಯಾಚಾರಗಳನ್ನು ಪಾಲಿಸಿದ್ದಕ್ಕಾಗಿ ಸ್ವಲ್ಪ ತೃಪ್ತಿಯಾಗಬಹುದು ಅಷ್ಟೆ, ಆದರೆ ಸಿಗರೇಟಿನ ವಿಷಯದಲ್ಲಿ ಆ ಅನುಭವವೇ ನೀವಾಗಿದ್ದೀರ.

ನೀವು ಯಾವುದನ್ನಾದರೂ ಸ್ವತಃ ಅನುಭವಿಸದೆಯಿದ್ದರೆ ಅದು ನಿಮ್ಮನ್ನು ಆಕರ್ಷಿಸುವುದಿಲ್ಲ ಅಥವಾ ನಿಮ್ಮನ್ನು ಅದರೆಡೆ ಸೆಳೆಯುವುದಿಲ್ಲ. ನೀವು ಜನರಿಗೆ ಸಹಾಯ ಮಾಡುವುದರಿಂದ ದೊರಕುವ ಸುಖವನ್ನು ನಿಜವಾಗಿ ಅನುಭವಿಸಿದ್ದರೆ ಆ ಮುದುಕನಿಗೆ ನಿಮ್ಮ ಜಾಗವನ್ನು ಬಿಟ್ಟುಕೊಡುತ್ತಿದ್ದಿರಿ.

ನಿಜವಾಗಿ ಅನುಭವವಾಗಬೇಕಾದರೆ ಧ್ಯಾನವೇ ಮಾರ್ಗ. ನಾವು ಧ್ಯಾನ ಮಾಡುವಾಗ ನಮ್ಮ ಕಲ್ಲಿನಂಥ ಹೃದಯವು ಅರಳುವುದು ಮತ್ತು ಹತ್ತಿಯ ಹಾಗೆ ಮೃದುವಾಗಿ ಸೂಕ್ಷ್ಮವಾಗುವುದು ಮತ್ತು ಇತರರಿಗೆ ಸಹಾಯ ಮಾಡಲು ಎನಿಸುತ್ತದೆ.

ಸದ್ಯದಲ್ಲಿ ನಾವು ಬಸ್ಸಿನಲ್ಲಿ ವಯಸ್ಕರಿಗೆ ಜಾಗ ಕೊಡುವುದು ಒಳ್ಳೆಯದೆಂದು ಯಾವುದೋ ಮಾಸಪತ್ರಿಕೆಯಲ್ಲಿ ಓದಿರಬಹುದು ಅಥವಾ ಹಿರಿಯರು ನಮಗೆ ಹೇಳಿರಬಹುದು ಅಷ್ಟೆ. ಬದಲಾಗಿ ಆಗಬೇಕಾದದ್ದು ನಮ್ಮಲ್ಲಿ ಸಹಾಯ ಮಾಡುವ ಭಾವನೆ ವಿಕಾಸವಾಗಿ, ನಾವು ಸಹಾಯವನ್ನು ನೀಡುವುದು.

ನಿಮ್ಮಲ್ಲಿ ಧ್ಯಾನವು ಸಂಭವಿಸಿದ್ದರೆ ಮಾತ್ರ ಸೂಕ್ಷ್ಮತೆಯು ನಿಮ್ಮ ಜೀವನದ ರೀತಿಯಾಗುವುದು ಇಲ್ಲದಿದ್ದರೆ ಅದು ಮೇಲ್ಬದರದಲ್ಲೇ ಉಳಿಯುತ್ತದೆ. ಮನಸ್ಸಿನ ಮೂಲಕ ಪಡೆದ ಉಪದೇಶವನ್ನು ಬೋಧನೆಯು ಹೃದಯವನ್ನು ಮುಟ್ಟಲು ಒಂದು ಕೊರೆಯುವ ಯಂತ್ರ ಅವಶ್ಯಕ - ಅದೇ ಧ್ಯಾನ. ನಂತರ, ನಮಗೆ ಕಲಿಸಿಕೊಟ್ಟಂತಹ ನ್ಯಾಯ, ಸತ್ಯತೆ ಮತ್ತಿತ್ತರ ಗುಣಗಳು ನಮ್ಮ ಜೀವನದ ರೀತಿಯಾಗುವುವು ಮತ್ತು ಅದನ್ನು ಅನುಸರಿಸಿದಾಗ ಒಂದು ಸತ್ತ್ವದ ಅನುಭವವಾಗುತ್ತದೆ.

ಇಲ್ಲದಿದ್ದರೆ ಈ ಎಲ್ಲ ಗುಣಗಳು ನಮ್ಮ ಅನುಭವಿಕ ಜ್ಞಾನವಾಗಿ ಪರಿವರ್ತನೆಯಾಗದೆ ಮಾನಸಿಕ ಜ್ಞಾನವಾಗಿಯೇ ಉಳಿಯುತ್ತದೆ.

ಮಧ್ಯಾನದ ಅವಧಿಯಲ್ಲಿ ಮುಖ್ಯವಾದ ವಿಷಯಕ್ಕೆ ಹೋದಾಗ, ನೀವು ಸರಿಯಾದುದು ಏನೆಂದು ತಿಳಿದರೂ ಅರಿವಿಲ್ಲದ ರೀತಿಯಲ್ಲಿ ಏಕೆ ವರ್ತಿಸುತ್ತಿಲ್ಲವೆಂಬುದಕ್ಕೆ ಇನ್ನೂ ವಿವರವಾದ ಉತ್ತರವನ್ನು ಪಡೆಯಬಹುದು.

ಇರಲಿ, ಸದ್ಯಕ್ಕೆ ಇಷ್ಟು ಸಾಕು ಊಟವಾದಮೇಲೆ ಭೇಟಿಯಾಗೋಣ ಮತ್ತು ವಿಷಯಕ್ಕೆ ನೇರವಾಗಿ ಹೋಗೋಣ.

ಧನ್ಯವಾದಗಳು

portrait