KAILASA Library/ಜೀವನ್ಮುಕ್ತಿ/ತಪ್ಪಿತಸ್ಥ ಭಾವನೆಯು ಮೂಲ ಪಾಪSign in
ಜೀವನ್ಮುಕ್ತಿ

ತಪ್ಪಿತಸ್ಥ ಭಾವನೆಯು ಮೂಲ ಪಾಪ

This text was machine-transcribed from the printed book and may contain errors. Select the words and choose “Report a mistake”.

ತಪ್ಪಿತಸ್ಥ ಭಾವನೆ ಎಂದರೇನು?

ನಿಮ್ಮಲ್ಲಿ ಆಸೆಗಳಿದ್ದಾಗ ತಪ್ಪಿತಸ್ಥ ಭಾವನೆಯೂ ಇರುತ್ತದೆ. ತಪ್ಪಿತಸ್ಥ ಭಾವನೆಯು ಆಸೆಯ ವಿರುದ್ಧವಾದ ಒಂದು ಮುಖ. ಒಮ್ಮೊಮ್ಮೆ ನೀವು ಏನನ್ನಾದರೂ ಬಯಸಿದಾಗ, ತಪ್ಪಿತಸ್ಥ ಭಾವನೆ ಉಂಟಾಗುತ್ತದೆ, ಏಕೆಂದರೆ ಅದನ್ನು ಬಯಸುವುದು ಸರಿಯಲ್ಲವೆಂದು ನೀವು ಭಾವಿಸುತ್ತೀರಿ. ಕೆಲವೊಮ್ಮೆ ನಿಮ್ಮ ಬಯಕೆಗಳು ಪೂರೈಸಿದಾಗ ನಿಮ್ಮಲ್ಲಿ ತಪ್ಪಿತಸ್ಥ ಭಾವನೆ ಉಂಟಾಗುತ್ತದೆ, ಏಕೆಂದರೆ ನೀವು ಅದನ್ನು ಪಡೆಯಲು ಅರ್ಹರಲ್ಲವೆಂದು ಭಾವಿಸುತ್ತೀರಿ. ನಿಮ್ಮ ಬಯಕೆಗಳು ಪೂರೈಸದೇ ಇದ್ದಾಗ, ನಿಮಗೆ ತಪ್ಪಿತಸ್ಥ ಭಾವನೆ ಉಂಟಾಗುತ್ತದೆ. ಏಕೆಂದರೆ ನೀವು ಮಾಡಬೇಕಾದ್ದನ್ನು ಮಾಡಿಲ್ಲವೆಂದು ಭಾವಿಸುತ್ತೀರಿ. ಆಸೆಗಳು ತಪ್ಪದೆ ತಪ್ಪಿತಸ್ಥ ಭಾವನೆಗೆ ಒಯ್ಯುತ್ತವೆ.

ನಿಮ್ಮ ಹಿಂದಿನ ನಿರ್ಧಾರಗಳನ್ನು ಹಾಗೂ
ಕಾರ್ಯಗಳನ್ನು ನಿಮ್ಮ ನವೀಕರಿಸಿದ ಬುದ್ಧಿಯಿಂದ
ವಿಮರ್ಶಿಸುವುದು ತಪ್ಪಿತಸ್ಥ ಭಾವನೆಯಲ್ಲದೆ
ಬೇರೇನೂ ಅಲ್ಲ.

ಉದಾಹರಣೆಗೆ, ನೀವು ಶಾಲೆಯಲ್ಲಿದ್ದಾಗ, ನಿಮ್ಮ ಸ್ನೇಹಿತರಿಗೆ ಕೆಲವು ಕೆಟ್ಟ ಮಾತುಗಳನ್ನಾಡಿದ ಕಾರಣ, ನಿಮ್ಮಿಬ್ಬರ ಸಂಬಂಧವು ಮುರಿದು ಹೋಗಿದ್ದಿರಬಹುದು. ಈಗ, ಇಷ್ಟು ವರ್ಷಗಳ ನಂತರ ನಿಮಗಿರುವ ಬುದ್ಧಿಯಿಂದ, ಆ ಘಟನೆಯನ್ನು ವಿಮರ್ಶಿಸಿ ತಪ್ಪಿತಸ್ಥ ಭಾವನೆಯನ್ನು ಹೊಂದುವುದು ಸರಿಯೇ? ಇಲ್ಲ! ಆ ಸಮಯದಲ್ಲಿ ನಿಮಗೆ ಅಷ್ಟು ಬುದ್ಧಿಯೇ ಇದ್ದದ್ದು, ಆದ ಕಾರಣ ಹಾಗೆ ವರ್ತಿಸಿದ್ದಿರಿ. ಈಗ ನಿಮಗೆ ಬುದ್ಧಿಯು ನವೀಕರಿಸಿದೆ.

ಹಿಂದೆ ನಡೆದಿದ್ದನ್ನು ಈಗಿರುವ ಬುದ್ಧಿಯಿಂದ ವಿಮರ್ಶಿಸುವುದು ಅರ್ಥಹೀನವಾದುದೇ ಸರಿ.

ಗತಕಾಲದ ನಿರರ್ಥಕತೆ

ಕಳೆದದ್ದು ಕಳೆದುಹೋಗಿದೆ, ಆದದ್ದು ಆಗಿ ಹೋಗಿದೆ. ನೀವು ಅದನ್ನು ತೊಡೆದುಹಾಕಲು ಸಾಧ್ಯವಿಲ್ಲ. ಈಗ ನೀವು ಹಿಂದೆ ನಡೆದ ವಿಷಯದ ಬಗ್ಗೆ ಸತತವಾಗಿ ಚಿಂತಿಸಿ, ತಪ್ಪಿತಸ್ಥ ಭಾವನೆಯನ್ನು ಹೊಂದಿದರೆ ನಿಮ್ಮ ವರ್ತಮಾನ ಹಾಗೂ ಭವಿಷ್ಯತ್ ಕಾಲವನ್ನೂ ನಾಶಪಡಿಸುತ್ತೀರಿ. ಅದಕ್ಕಾಗಿ ಏನನ್ನೂ

ಮಾಡಲಾಗುವುದಿಲ್ಲ. ಆದ್ದರಿಂದ ತಪ್ಪಿತಸ್ಥ ಭಾವನೆಯು ವ್ಯರ್ಥವಾದುದಕ್ಕೆ ಈಗ ನೀವೇನು ಮಾಡಬಲ್ಲಿರಿ? ನೀವು ಮಾಡಬಹುದಾದದ್ದೆಂದರೆ ನಿಮ್ಮ ಅದೇ ವರ್ತನೆಯ ಮಾದರಿಯನ್ನು ಪುನರಾವರ್ತಿಸದೆ ಇರುವುದು, ಅಷ್ಟೇ. ಆ ಸಮಯದಲ್ಲಿ ನಿಮಗಿದ್ದ ಬುದ್ಧಿಯಂತೆ ವರ್ತಿಸಿದಿರಿ, ಅಷ್ಟೇ.

ನಮ್ಮ ಗತಕಾಲವು ಯಾವಾಗಲೂ ಮುಗಿದು
ಹೋದದ್ದು, ಅದು ಯಾವಾಗಲೂ ತೀರಿ ಹೋದದ್ದು.
ಆದ್ದರಿಂದಲೇ ಅದನ್ನು ಗತಕಾಲ ಎನ್ನುವುದು.
ಆದರೂ, ನಾವು ಯಾವಾಗಲೂ ಗತಕಾಲವು ನಮ್ಮ
ಮೇಲೆ ಪ್ರಭಾವ ಬೀರಲು ಎಡೆ ಮಾಡಿಕೊಡುತ್ತೇವೆ.
ಗತಕಾಲವು ನಮ್ಮ ಮೇಲೆ ಪರಿಣಾಮ ಬೀರಲು
ನಾವು ಹೇಗೆ ಆಸ್ಪದ ಕೊಡುತ್ತೇವೆ? ಎರಡು
ರೀತಿಗಳಲ್ಲಿ:

1. ಹಿಂದಿನ ಘಟನೆಗಳು ಅಥವಾ ನಿರ್ಧಾರಗಳನ್ನು ಈಗಿನ ಬುದ್ಧಿಯಿಂದ ವಿಮರ್ಶಿಸಿದರೆ, ನಿಮ್ಮ ಅಂತರಂಗದಲ್ಲಿ ತಪ್ಪಿತಸ್ಥ ಭಾವವನ್ನು ಸೃಷ್ಟಿಸಿಕೊಳ್ಳುತ್ತೀರಿ.

2. ಈಗಿನ ನಿರ್ಧಾರಗಳನ್ನು ಹಿಂದಿನ
ಅನುಭವಗಳ ಆಧಾರದ ಮೇಲೆ ತೆಗೆದುಕೊಂಡರೆ
ಭವಿಷ್ಯತ್ತಿನಲ್ಲಿಯೂ ಅದೇ ಹಿಂದಿನದನ್ನು ಸ್ವಲ್ಪ
ನವೀಕರಿಸಿದ ರೀತಿಯಲ್ಲಿ ಪುನರಾವರ್ತಿಸುತ್ತೀರಿ!

ನೀವು ಅದೇ ತಪ್ಪನ್ನು ಮಾಡದಿದ್ದರೂ, ಅದೇ
ಅನುಭವದ ಮಟ್ಟದಲ್ಲಿ, ಅದೇ ವಲಯದಲ್ಲಿ
ಮುಂದುವರೆಯುತ್ತಿರುತ್ತೀರಿ.

ನಮ್ಮ ಮನಸ್ಸು ಒಂದು ಕಾಲುವೆ, ಒಂದು ಹಾದಿ,
ಒಂದು ಮನೋರೂಢಿಗೆ ಜಾರುತ್ತದೆ, ಮತ್ತು ಅದು
ಯಾವಾಗಲೂ ಮಾಡಿದ್ದನ್ನೇ ಮಾಡಲು
ಬಲಾತ್ಕರಿಸುತ್ತದೆ. ಆದ ಕಾರಣ ನಾವು ಅದೇ
ತಪ್ಪುಗಳನ್ನು ಮಾಡುತ್ತಿರುತ್ತೇವೆ.

ತಪ್ಪಿತಸ್ಥ ಭಾವನೆಯ ಮೂರು

ವಿಧಗಳು

ನಮ್ಮಲ್ಲಿ ಆಳವಾಗಿ ಬೇರೂರಿ, ನಮ್ಮ ಬುದ್ಧಿ
ಶಕ್ತಿಯನ್ನು ನಾಶಪಡಿಸುವ ತಪ್ಪಿತಸ್ಥ ಭಾವನೆಯು
ಮೂರು ಬಗೆಯದ್ದಾಗಿದೆ.

1. ಹತ್ತಿರದ ಕುಟುಂಬವರ್ಗದವರಿಂದ ಸೃಷ್ಟಿಸಲ್ಪಟ್ಟ ತಪ್ಪಿತಸ್ಥ ಭಾವನೆ

2. ಸಮಾಜದಿಂದ ಸೃಷ್ಟಿಸಲ್ಪಟ್ಟ ತಪ್ಪಿತಸ್ಥ ಭಾವನೆ

3. ನಮ್ಮಿಂದಲೇ ಸೃಷ್ಟಿಸಲ್ಪಟ್ಟ ತಪ್ಪಿತಸ್ಥ ಭಾವನೆ

ಹತ್ತಿರದ ಕುಟುಂಬ ವರ್ಗದವರಿಂದ

ಸೃಷ್ಟಿಸಲ್ಪಟ್ಟ ತಪ್ಪಿತಸ್ಥ ಭಾವನೆ

ಏಳು ವರ್ಷಕ್ಕೂ ಚಿಕ್ಕ ವಯಸ್ಸಿನಲ್ಲಿದ್ದಾಗ
ತಪ್ಪಿತಸ್ಥ ಭಾವನೆಯು ನಿಮ್ಮ ಹತ್ತಿರದ ಕುಟುಂಬ
ವರ್ಗದವರಿಂದ ಸೃಷ್ಟಿಸಲ್ಪಡುತ್ತದೆ. ನಿಮ್ಮ ತಂದೆ
ತಾಯಿಯರ ಇಚ್ಛೆಯಂತೆ ನಡೆದುಕೊಳ್ಳದಿದ್ದರೆ,
ಅವರು ನಿಮ್ಮಲ್ಲಿ ತಪ್ಪಿತಸ್ಥ ಭಾವನೆಯನ್ನು

ತುಂಬುತ್ತಾರೆ. ನೀವು ಮಾಡುತ್ತಿರುವುದನ್ನು ದೇವರು ಒಪ್ಪುವುದಿಲ್ಲವೆಂದು ನಿಮಗೆ ಹೇಳುತ್ತಾರೆ. ಪಾಪ ದೇವರು, ಆತನ ಬಗ್ಗೆ ಯಾರು ಏನೇ ಹೇಳಿದರೂ, ಆತನು ಅದನ್ನು ಬೆಂಬಲಿಸಬೇಕು! ಅಥವಾ ಅವರು ನಿಮ್ಮ ತಂದೆ ತಾಯಿಯರಾಗಿರುವುದರಿಂದ ಅವರ ಮಾತನ್ನು ಗೌರವಿಸಬೇಕೆಂದು ಹೇಳುತ್ತಾರೆ. ಅವರನ್ನು ಅಸಂತೋಷಗೊಳಿಸಿದ ಕಾರಣ ಕೂಡಲೇ ನಿಮ್ಮಲ್ಲಿ ತಪ್ಪಿತಸ್ಥ ಭಾವನೆ ಮೂಡುತ್ತದೆ. ಈ ರೀತಿ, ಕುಟುಂಬವು ನಿಮ್ಮಲ್ಲಿ ಮೊದಲ ತಪ್ಪಿತಸ್ಥ ಭಾವನೆಯನ್ನು ಬಿತ್ತುತ್ತದೆ. ನೀವು ಅದನ್ನು ನಿಮ್ಮ ಮಗುವಿಗೆ ವರ್ಗಾಯಿಸುತ್ತೀರಿ. ಒಂದು ಕಿರೀಟದಂತೆ ಅದು ತಲೆಮಾರುಗಳಿಗೆ ವರ್ಗಾಯಿಸಲ್ಪಡುತ್ತದೆ.

ಕೆಲವು ಕಾರ್ಯಗಳನ್ನು ಒಂದು ನಿರ್ದಿಷ್ಟವಾದ
ರೀತಿಯಲ್ಲಿ ಏಕೆ ಮಾಡಬೇಕೆಂಬ ತಿಳಿವಳಿಕೆ ಇಲ್ಲದ
ಕಾರಣ, ನೀವು ಅದನ್ನು ಒಂದು ನಿಯಮವಾಗಿ
ಬದಲಿಸಿ, ನಿಮ್ಮ ಮಗುವಿನ ಮೇಲೆ ಹೇರುತ್ತೀರಿ
ಹಾಗೂ ಇದರ ಮೂಲಕ ತಪ್ಪಿತಸ್ಥ ಭಾವನೆಯನ್ನು
ಸೃಷ್ಟಿಸುತ್ತೀರಿ. ಉದಾಹರಣೆಗೆ, ಮಕ್ಕಳಿಗೆ
ಸುತ್ತುವುದೆಂದರೆ ಬಲು ಇಷ್ಟ. ಅವರಿಗೆ ತಮ್ಮ
ದೇಹದ ಜೊತೆ ಚಲಿಸಲು ಹಾಗೂ ಹರಿಯಲು ಬಹಳ
ಇಷ್ಟ. ಅವರು ತಮ್ಮ ಚೈತನ್ಯದೊಂದಿಗೆ
ಕೇಂದ್ರೀಕೃತವಾಗಲು ಅವರಿಗೆ ಅದೊಂದು ಸಹಜ
ರೀತಿ. ಆದರೆ ನಾವೇನು ಮಾಡುತ್ತೇವೆ? ಮಗುವಿನಲ್ಲಿ
ಅವನು ಬೀಳಬಹುದೆಂಬ ಭಯವನ್ನು ನಾವು ತುಂಬಿ,
ಅವನನ್ನು ತಡೆಯುತ್ತೇವೆ. ಆ ಮಗುವು
ನಮ್ಮಂತೆಯೇ ಅಪ್ರಯೋಜಕ, ನಿಷ್ಕ್ರಿಯ ಮತ್ತು
ದಡ್ಡನಾಗುವವರೆಗೂ ನಾವು ನಮ್ಮ ಪ್ರಯತ್ನವನ್ನು
ನಿಲ್ಲಿಸುವುದೇ ಇಲ್ಲ!

ಮಗುವು ಹೊರಗೆ ಹೋಗಿ ಬಿಸಿಲಿನಲ್ಲಿ ಆಡಲು
ಬಯಸಬಹುದು ಅಥವಾ ಸ್ವಲ್ಪ ಹೂಗಳನ್ನು ಕೀಳ
ಬಯಸಬಹುದು ಅಥವಾ ತಂಪಾದ ಗಾಳಿಯಲ್ಲಿ
ಸುಮ್ಮನೆ ಕುಣಿಯಬಯಸಬಹುದು. ಅದರ ಬಗ್ಗೆ
ಯೋಚಿಸಿದರೆ, ಮಗುವು ಕೇಳುತ್ತಿರುವುದು
ಅಂತಹುದೇನೂ ಅತಿಯಾದದ್ದಲ್ಲ. ಆದರೆ
ಸೂರ್ಯನ ತಾಪದಿಂದ ಮಗುವು ಖಾಯಿಲೆ
ಬೀಳಬಹುದೆಂದು ತಾಯಿಯು 'ಇಲ್ಲ' ಎನ್ನುತ್ತಾಳೆ.
ಸ್ವಲ್ಪ ಆಳವಾಗಿ ನೋಡಿದರೆ, ಆಕೆಯು 'ಇಲ್ಲ'
ಎನ್ನುವಾಗ ಆಕೆಗೆ ಅಧಿಕಾರದ ಒಂದು ಸೂಕ್ಷ್ಮ
ಭಾವನೆ, ಹತೋಟಿಯಲ್ಲಿಟ್ಟುಕೊಳ್ಳಬೇಕೆಂಬ ಭಾವನೆ
ಇರುತ್ತದೆ. ಸೂರ್ಯನಿಂದ ತೊಂದರೆ-
ಯಾಗಬಹುದೆಂದು ಹೇಳಿದೆ ಎಂದು ಆಕೆಯು
ಹೇಳಬಹುದು, ಆದರೆ ಅದು ಇನ್ನೂ ಹೆಚ್ಚು
ಸೂಕ್ಷ್ಮವಾದದ್ದು.

ತಾಯಿಯು 'ಇಲ್ಲ' ಎನ್ನುವುದು ಮಗುವಿನ ಮೇಲೆ ಒಂದು ಆಳವಾದ ಪ್ರಭಾವ ಬೀರುತ್ತದೆ. ಅದು ಮಗುವಿನಲ್ಲಿ ತಪ್ಪಿತಸ್ಥ ಭಾವವನ್ನು ಸೃಷ್ಟಿಸುತ್ತದೆ. ಈಗ, ಮಗುವು ತಾನು ಒಳಗೇ ಇರಲು ತನ್ನನ್ನು ಬಲಾತ್ಕರಿಸಿಕೊಳ್ಳಬಹುದು ಅಥವಾ ಅವನ ತಾಯಿಯ ಕಣ್ಣು ತಪ್ಪಿಸಿ, ಆಚೆಗೆ ಓಡಬಹುದು. ಆದರೆ ಈ ಎರಡರಲ್ಲಿ ಯಾವುದನ್ನು ಮಾಡಿದರೂ, ಅವನ ಅಪ್ಪಟ ಚೈತನ್ಯವು ಅದುಮಲ್ಪಡುತ್ತದೆ. ಅವನು ಒಳಗೇ ಇರಲು ತನ್ನನ್ನು ಬಲಾತ್ಕರಿಸಿಕೊಂಡರೆ, ಅವನ ಶಕ್ತಿಯು ವ್ಯಕ್ತವಾಗಲು ಆಸ್ಪದವಿರುವುದಿಲ್ಲ. ಅವನು ಹೊರಗೆ ಹೋದರೆ, ಯಾರಾದರೂ ಅವನನ್ನು ನೋಡಿಬಿಡಬಹುದೆಂಬ ಭಯದಿಂದ ಅವನಲ್ಲಿ ತಪ್ಪಿತಸ್ಥ ಭಾವನೆ ಉಂಟಾಗುತ್ತದೆ. ಇಷ್ಟಾಗಿಯೂ ಬರಿಯ ಬಿಸಿಲಿನಲ್ಲಿ ಆಡುವುದು ಅಂತಹ ದೊಡ್ಡ ವಿಷಯವೇನೂ ಅಲ್ಲ!

ಮಗುವು ಬೆಳೆಯುತ್ತಿದ್ದಂತೆ, ಈ ಆಳವಾದ ತಪ್ಪಿತಸ್ಥ ಭಾವನೆಯು ವಾಸ್ತವವಾಗಿ ಅವನಲ್ಲಿ ನೆಲೆಗೊಳ್ಳುತ್ತದೆ. ಅವನು ವಯಸ್ಕನಾಗಿ ಬೆಳೆದು, ಸ್ವತಂತ್ರನಾದರೂ, ಅವನು ಒಂದು ಹುಲ್ಲುಗಾವಲಿನ ಮೇಲೆ ಬಿಸಿಲಿನಲ್ಲಿ ಕುಳಿತಿದ್ದಾಗ ಅವನ ಚಿಕ್ಕಂದಿನ ನೆನಪುಗಳು ಪ್ರಚೋದನೆಗೊಂಡು ಯಾವ ಕಾರಣವೂ ಇಲ್ಲದೆಯೇ ಅವನು ತಪ್ಪಿತಸ್ಥ ಭಾವನೆಯನ್ನು ಹೊಂದಿ ಕ್ಷೋಭೆಗೊಳಗಾಗಬಹುದು. ಹುಲ್ಲುಗಾವಲಿನ ಮೇಲೆ ಕುಳಿತುಕೊಳ್ಳುವುದರ ಬಗ್ಗೆ ತಪ್ಪಿತಸ್ಥ ಭಾವ ಉಂಟಾಗಲು ಯಾವ ಕಾರಣವೂ ಇಲ್ಲದಿದ್ದರೂ, ಹಳೆಯ ನೆನಪುಗಳು ಜಾಗೃತವಾಗುತ್ತವೆ.

ತಪ್ಪಿತಸ್ಥ ಭಾವನೆಯು ಹುಟ್ಟುವುದು ಹೀಗೆಯೇ.
ಇಂತಹ ಸಣ್ಣ ಘಟನೆಗಳು ಒಟ್ಟು ಸೇರಿ ತಪ್ಪಿತಸ್ಥ
ಭಾವನೆಯೇ ನಿಮ್ಮ ಜೀವನದ ಸಹಜ
ರೀತಿಯಾಗುತ್ತದೆ.

ತಪ್ಪಿತಸ್ಥ ಭಾವನೆ ಮತ್ತು ಸಂತೋಷ

ಒಂದು ಮಗುವು ಸ್ವಾಭಾವಿಕವಾಗಿ ಸಂತೋಷ
ಹಾಗೂ ಆನಂದದಲ್ಲಿರುವುದನ್ನು ಆನಂದಿಸಿ
ಪ್ರೋತ್ಸಾಹಿಸಲು ನಮ್ಮಿಂದೇಕೆ ಆಗುವುದಿಲ್ಲ?

ಸ್ವಲ್ಪ ಆಳವಾಗಿ ನೋಡಿದರೆ, ಸಂತೋಷವೇ
ತಪ್ಪಿತಸ್ಥತೆಯೊಂದಿಗೆ ಸೇರಿಹೋಗಿರುವುದನ್ನು
ತಿಳಿಯಬಹುದು. ಒಂದು ಸಣ್ಣ ಮಗುವಿಗೆ ತಪ್ಪಿತಸ್ಥ
ಭಾವನೆಯೆಂದರೆ ಏನೆಂದು ಸಹ ತಿಳಿಯದು. ಅದು
ಕೇವಲ ಸ್ವಚ್ಛಂದವಾಗಿ, ಸಹಜವಾಗಿ ಇರುತ್ತದೆ.
ಆದ್ದರಿಂದಲೇ ಒಂದು ಸಣ್ಣ ಮಗುವನ್ನು
ನೋಡುವುದು ಅಷ್ಟೊಂದು
ಮನಮೋಹಕವಾಗಿರುವುದು. ಅದು
ಮಾಡುವುದರಲ್ಲೆಲ್ಲಾ ಸಂಪೂರ್ಣವಾಗಿರುತ್ತದೆ. ಅದು
ಇನ್ನೂ ನಾಗರಿಕತೆಯ ಮುಖವಾಡಕ್ಕೆ
ಪರಿಚಿತವಾಗಿರುವುದಿಲ್ಲ. ಅದು ಇನ್ನೂ
ಸಹಜವಾಗಿರುತ್ತದೆ. ಆದ್ದರಿಂದಲೇ ಅದು
ಅಷ್ಟೊಂದು ಚೈತನ್ಯ ಭರಿತವಾಗಿರುವುದು. ಅದರಲ್ಲಿ
ಸಂತೋಷ ಹಾಗೂ ಕುತೂಹಲಗಳು ಉಕ್ಕಿ
ಹರಿಯುತ್ತವೆ. ತನ್ನೊಳಗಿರುವ ಚೈತನ್ಯದೊಂದಿಗೆ
ಅದು ಮಿಡಿಯುತ್ತಿರುತ್ತದೆ.

ಮಗುವು ಎಲ್ಲವನ್ನೂ ಆನಂದಿಸಲು
ಇಚ್ಛಿಸುತ್ತದೆ. ಆದರೆ ತಂದೆ ತಾಯಿಯರು ಸಮಾಜದ
ಕಟ್ಟು ಪಾಡುಗಳಾದ ತಪ್ಪಿತಸ್ಥ ಭಾವನೆ, ಗಂಭೀರತೆ,
ಕಪಟಾಚಾರಗಳಿಂದ ಕೂಡಿರುತ್ತಾರೆ. ಮಗುವಿಗೆ
ಸ್ವಾಭಾವಿಕವಾಗಿ ಕಿರಿಚಿ, ನಲಿದು,
ನರ್ತಿಸಬೇಕೆನಿಸುತ್ತದೆ. ಆದರೆ ಹಿರಿಯರು,
'ಕಿರಿಚಬೇಡ. ಅದು ಕೆಟ್ಟ ನಡವಳಿಕೆ. ನೀನು
ನಾಗರಿಕನಾಗಬೇಕು. ನೀನು ನಮ್ಮಂತೆ ಸರಿಯಾಗಿ
ವರ್ತಿಸಬೇಕು' ಎಂದು ಅವನನ್ನು ತಡೆಯುತ್ತಾರೆ.
ಕಾಲ ಕ್ರಮೇಣ, ಸ್ವತಂತ್ರವಾಗಿ ಆನಂದವಾಗಿರುವ
ಕಲ್ಪನೆಯೇ ತಪ್ಪಿತಸ್ಥ ಭಾವನೆಗಳೊಂದಿಗೆ
ಮಿಳಿತವಾಗುತ್ತದೆ.

ಸಮಾಜದಿಂದ ಸೃಷ್ಟಿಸಲ್ಪಟ್ಟ ತಪ್ಪಿತಸ್ಥ ಭಾವನೆ

ಏಳರಿಂದ ಹದಿನಾಲ್ಕು ವರ್ಷ ವಯಸ್ಸಿನವರೆಗೆ, ಸಮಾಜವು ತನ್ನ ನಿಯಮಗಳ ಮೂಲಕ ನಿಮ್ಮಲ್ಲಿ ತಪ್ಪಿತಸ್ಥ ಭಾವನೆಯನ್ನು ಹುಟ್ಟಿಸುತ್ತದೆ. ಭಯದ ಆಧಾರವಾದ ತಪ್ಪಿತಸ್ಥ ಭಾವನೆಯು ಸಾಮಾಜಿಕ ಕಾನೂನಿನಿಂದ ಸೃಷ್ಟಿಸಲ್ಪಡುತ್ತದೆ.

ಹದಿನಾಲ್ಕು ವರ್ಷ ವಯಸ್ಸಿನವರೆಗೂ ಕುಟುಂಬ ಹಾಗೂ ಸಮಾಜವು ನಿಮ್ಮಲ್ಲಿ ತಪ್ಪಿತಸ್ಥ ಭಾವನೆಯನ್ನು ಹುಟ್ಟಿಸುತ್ತದೆ. ಇದರಲ್ಲಿ ಒಂದು ಮುಖ್ಯವಾದ ತಪ್ಪಿತಸ್ಥ ಭಾವನೆಯೆಂದರೆ ಲೈಂಗಿಕತೆಯ ತಪ್ಪಿತಸ್ಥ ಭಾವನೆ. ತಂದೆ ತಾಯಿಯರಾಗಲೀ, ಕುಟುಂಬವಾಗಲೀ, ಲೈಂಗಿಕತೆಯ ವಿಷಯವನ್ನು ಎಂದಿಗೂ ಪ್ರಸ್ತಾಪಿಸುವುದಿಲ್ಲ. ನಿಮ್ಮಲ್ಲಿ ಒಂದು ರಾಸಾಯನಿಕ ಬದಲಾವಣೆ ಆಗುತ್ತಿರುವಾಗ, ನಿಮ್ಮ ದೇಹವು ಹೊಸದೆಂಬ ಭಾವನೆ ಉಂಟಾಗುತ್ತದೆ. ಬಹಳಷ್ಟು ಪ್ರಶ್ನೆಗಳು ಮೇಲೆಳುತ್ತವೆ ಹಾಗೂ ಸ್ಪಷ್ಟತೆಯ ಅವಶ್ಯಕತೆ ಇರುತ್ತದೆ. ಆದರೆ ಅದನ್ನು ನೀಡಲು ಯಾರೂ ಸಿದ್ಧರಾಗಿರುವುದಿಲ್ಲ.

ಇಷ್ಟೇಅಲ್ಲದೆ, ಗೊಂದಲ ಮತ್ತು ಆಸೆಗಳ ಜೊತೆ ಸೇರಿಸಲೆಂಬಂತೆ ಆ ಬದಲಾವಣೆಯಾಗುವ ವಯಸ್ಸಿನಲ್ಲಿ, ಸುತ್ತಮುತ್ತಲಿನ ಮಾಧ್ಯಮಗಳು ನಿಮ್ಮ ಭ್ರಮೆಗಳು ಮತ್ತು ಕಲ್ಪನೆಗಳಿಂದ ನಿಮ್ಮನ್ನು ಸತತವಾದ ಹೊಡೆತಕ್ಕೆ ಗುರಿಪಡಿಸುತ್ತದೆ.

ಇದರ ಜೊತೆಗೆ, ನಿಮಗೆ ನೀವೇ ಸಾಲದೆಂಬ ಭಾವನೆಯನ್ನು ಸಮಾಜವು ನಿಮ್ಮಲ್ಲಿ ತುಂಬುತ್ತದೆ. ನೀವು ಇರುವುದರ ಬಗ್ಗೆ, ನೀವು ಮಾಡುವುದರ ಬಗ್ಗೆ ತಪ್ಪಿತಸ್ಥ ಭಾವನೆ ಉಂಟಾಗುವಂತೆ ಮಾಡುತ್ತದೆ. ನಿಮ್ಮನ್ನು ಒಬ್ಬ ಪಾಪಿಯೆಂದು ಸಮಾಜವು ಒಮ್ಮೆ ನಿಮ್ಮ ಮನವರಿಕೆ ಮಾಡಿದರೆ, ನೀವು ಅದರ ಹಿಡಿತದಲ್ಲಿ ಸಿಕ್ಕಿ ಬೀಳುತ್ತೀರಿ. ಆಗ ನೀವು ಜೀವನದ ಸವಿಯನ್ನು ಎಂದೂ ಸವಿಯಲಾಗುವುದೇ ಇಲ್ಲ.

ತಪ್ಪಿತಸ್ಥ
ಭಾವನೆಯು ಅತಿ
ದೊಡ್ಡ ಪಾಪ.
ಅದು ನೀವು
ಬದುಕಿರುವಾಗಲೇ
ನಿಮ್ಮನ್ನು
ಶಿಕ್ಷಿಸುತ್ತದೆ.

ನನ್ನ ಪ್ರಕಾರ, ತಪ್ಪಿತಸ್ಥ ಭಾವನೆಯು ಅತಿ ದೊಡ್ಡ ಪಾಪ. ಕಡೇ ಪಕ್ಷ ಬೇರೆಯ ಪಾಪಗಳು ನಿಮ್ಮ ಸಾವಿನ ನಂತರ ಶಿಕ್ಷಿಸುತ್ತವೆ. ತಪ್ಪಿತಸ್ಥ ಭಾವನೆಯು ನೀವು ಬದುಕಿರುವಾಗಲೇ ಶಿಕ್ಷಿಸುತ್ತದೆ.

ಟಿಬೆಟ್‌ನ ಕವಿ ಸಂತರಾದ ಮಿಲರೇಪ ಹೀಗೆ ಹಾಡಿದ್ದಾರೆ, 'ಪಶ್ಚಾತ್ತಾಪವಿಲ್ಲದೆ ಬದುಕುವುದು ಮತ್ತು ಸಾಯುವುದು ನನ್ನ ಧರ್ಮ' ಎಂದು.

ನೀವು ಒಬ್ಬ ಸಂತನೋ ಅಥವಾ ಪಾಪಿಯೋ ಎಂದು ಹೇಳುವುದೇ ಸಮಾಜ. ಸಮಾಜವು ನಿಮ್ಮನ್ನು ಒಬ್ಬ ಸಂತ ಎಂದು ಹೆಸರಿಸುವವರೆಗೂ, ನೀವು ಒಬ್ಬ ಸಂತ. ಸಮಾಜವು ನಿಮ್ಮನ್ನು ಒಬ್ಬ ಪಾಪಿಯೆಂದು ಹೆಸರಿಸಿದ ಕ್ಷಣವೇ ನೀವೊಬ್ಬ ಪಾಪಿ. ಸಮಾಜದಲ್ಲಿ ಯಾರನ್ನಾದರೂ ಕೊಂದರೆ, ನೀವು ಒಬ್ಬ ಕೊಲೆಗಾರನೆಂದು ಕರೆಸಿಕೊಳ್ಳುತ್ತೀರಿ ಹಾಗೂ ಶಿಕ್ಷೆಗೆ ಒಳಗಾಗುತ್ತೀರಿ. ಆದರೆ ಯುದ್ಧಭೂಮಿಯಲ್ಲಿ ಯಾರನ್ನಾದರೂ ಕೊಂದರೆ, ನೀವು ಒಬ್ಬ ವೀರನೆಂದು ಗೌರವಕ್ಕೆ ಒಳಗಾಗಿ ನಿಮಗೊಂದು ದೊಡ್ಡ ಪ್ರಶಸ್ತಿ ನೀಡಲಾಗುತ್ತದೆ! ಆದ್ದರಿಂದ ಯಾವುದು ಸರಿ

ಯಾವುದು ತಪ್ಪು ಎಂಬುದನ್ನು ನಿರ್ಧರಿಸಲು
ನಿಖರವಾದ ಮಾಪನವಿಲ್ಲ. ಅದು ಸಮಾಜದ್ದೇ
ಸ್ವಂತ ತರ್ಕವಾಗಿದೆ.

ಸ್ವರ್ಗ ಮತ್ತು ನರಕ

ಸ್ವರ್ಗ ಮತ್ತು ನರಕಗಳೆಂಬ ಪರಿಕಲ್ಪನೆಯ ಮೂಲಕ ಇಂದು ಬಹಳ ಸೂಕ್ಷ್ಮವಾದ ಹಾಗೂ ಕಪಟವಾದ ರೀತಿಯಲ್ಲಿ ತಪ್ಪಿತಸ್ಥ ಭಾವನೆಯನ್ನು ಬಿತ್ತಲಾಗುತ್ತಿದೆ. ಸ್ವರ್ಗ ಮತ್ತು ನರಕಗಳೆಂಬ ಕಲ್ಪನೆಗಳನ್ನು ನಿಮಗೆ ತೋರಿಸಿ, ನಿಮ್ಮ ಭಯ ಹಾಗೂ ದುರಾಸೆಗಳನ್ನು ಜನರು ಶೋಷಿಸುತ್ತಾರೆ. ಅವರು ನಿಮ್ಮಲ್ಲಿ ಸ್ವರ್ಗದ ದುರಾಸೆ ಹಾಗೂ ನರಕದ ಭಯವನ್ನು ಸೃಷ್ಟಿಸಿಬಿಡುತ್ತಾರೆ. ಸ್ವರ್ಗ ಮತ್ತು ನರಕಗಳ ಕಲ್ಪನೆಗಳನ್ನು ಸೃಷ್ಟಿಸಿ ಅದನ್ನು ನಿಮಗೆ ಮಾರುತ್ತಾರೆ. ಅವರು ಹೇಳುತ್ತಾರೆ, ‘ನೀವು ಈ ಕೆಲವನ್ನು ಅಭ್ಯಾಸ ಮಾಡಿದರೆ, ನಿಮಗೆ ಸ್ವರ್ಗವು ಲಭಿಸುತ್ತದೆ ಇಲ್ಲದಿದ್ದಲ್ಲಿ ನರಕದಲ್ಲಿ ಶಿಕ್ಷೆಯನ್ನು ಅನುಭವಿಸುತ್ತೀರಿ' ಎಂದು. ದುರಾಸೆ ಹಾಗೂ ಭಯದ ಆಧಾರಿತವಾದ ನಿಯಮಗಳನ್ನು ನಿಮಗೆ ಕೊಟ್ಟಾಗ, ಪ್ರಯತ್ನವಿಲ್ಲದೆಯೇ ನಿಮ್ಮಲ್ಲಿ ಆಳವಾದ ತಪ್ಪಿತಸ್ಥ ಭಾವನೆಯನ್ನು ಸೃಷ್ಟಿಸಿಕೊಳ್ಳಲು ಆರಂಭಿಸುತ್ತೀರಿ.

ಒಂದು ಸಣ್ಣ ಕಥೆ:

ಒಮ್ಮೆ ಒಬ್ಬ ಮಿಲಿಟರಿ ಜನರಲ್‌ರವರು ಒಬ್ಬ ಝೆನ್
ಗುರುಗಳ ಬಳಿ ಹೋಗಿ ಕೇಳಿದರು, ‘ಗುರುಗಳೇ,
ಸ್ವರ್ಗ ನರಕಗಳೆಂದರೇನು?' ಎಂದು.

ಗುರುಗಳು, ‘ನಿನ್ನ ಜೀವನೋಪಾಯಕ್ಕೆ ಏನನ್ನು ಮಾಡುತ್ತಿರುವೆ' ಎಂದು ಕೇಳಿದರು.

ಜನರಲ್, ‘ನಾನು ಒಬ್ಬ ಜನರಲ್' ಎಂದು ನುಡಿದರು.

ಗುರುಗಳು ಸುಮ್ಮನೆ ನಕ್ಕು, ‘ನಿನ್ನನ್ನು ಒಬ್ಬ ಜನರಲ್ ಆಗು ಎಂದು ಯಾವ ಮೂರ್ಖ ಹೇಳಿದನು? ನೀನು ಒಬ್ಬ ಕಟುಕನಂತೆ ಕಾಣುತ್ತೀಯೆ' ಎಂದು ಹೇಳಿದರು.

ಜನರಲ್ ಕೋಪಿಸಿಕೊಂಡು ತನ್ನ ಕತ್ತಿಯನ್ನು
ಹೊರತೆಗೆಯುತ್ತಾ, ‘ನಿನ್ನನ್ನು ತುಂಡುತುಂಡಾಗಿ
ಕತ್ತರಿಸುತ್ತೇನೆ' ಎಂದು ಕಿರುಚಿದನು.

ಗುರುಗಳು ತಮ್ಮ ಕೈ ಎತ್ತಿ, ‘ಇವೇ ನರಕದ ದ್ವಾರಗಳು' ಎಂದು ಹೇಳಿದರು.

ಜನರಲ್ ತನ್ನ ತಪ್ಪನ್ನು ತಿಳಿದು ಗುರುಗಳಿಗೆ ಆಳವಾಗಿ ವಂದಿಸಿ ಕ್ಷಮೆ ಕೋರಿದನು.

ಗುರುಗಳು, ‘ಇವೇ ಸ್ವರ್ಗದ ದ್ವಾರಗಳು' ಎಂದು ನುಡಿದರು.

ಸ್ಪಷ್ಟವಾಗಿ ತಿಳಿಯಿರಿ. ಸ್ವರ್ಗ ಮತ್ತು ನರಕಗಳು
ಭೌತಿಕ ಪ್ರದೇಶಗಳಲ್ಲ. ಅವು ನಿಮ್ಮ ಮಾನಸಿಕ
ಸ್ಥಿತಿಗಳು ಮಾತ್ರ. ಒಂದು ಕ್ಷಣ ನಿಮ್ಮ ಮನಸ್ಸು
ನರಕದಲ್ಲಿರಬಹುದು ಹಾಗೂ ಮರುಕ್ಷಣ ಅದು
ಸ್ವರ್ಗದಲ್ಲಿರಬಹುದು. ಸ್ವರ್ಗ ನರಕಗಳ ದ್ವಾರಗಳು
ಯಾವುದೇ ಸಮಯದಲ್ಲಿ ಒಂದಾದ ಮೇಲೆ
ಒಂದರಂತೆ ತೆರೆದು, ಹಾಕಿಕೊಳ್ಳುತ್ತವೆ.

ನಿಮ್ಮಿಂದಲೇ ಸೃಷ್ಟಿಸಲ್ಪಟ್ಟ ತಪ್ಪಿತಸ್ಥ ಭಾವನೆ

ಇಪ್ಪತ್ತೊಂದು ವರ್ಷ ವಯಸ್ಸಿನವರೆಗೂ ಕುಟುಂಬ ಹಾಗೂ ಸಮಾಜದಿಂದ ಬಂದ ವಿಷಯಗಳು ತಪ್ಪಿತಸ್ಥ ಭಾವನೆಯನ್ನು ಸೃಷ್ಟಿಸುತ್ತದೆ. ಇಪ್ಪತ್ತೊಂದರ ನಂತರ ಕುಟುಂಬ ಹಾಗೂ ಸಮಾಜವು ಬಿತ್ತಿರುವ ತಪ್ಪಿತಸ್ಥ ಭಾವನೆಯು ನಿಮ್ಮೊಳಗೆ ಆಳವಾಗಿ ಬೇರು ಬಿಡುತ್ತದೆ. ಆಗ ಯಾವ ಕಾರಣವೂ ಇಲ್ಲದೆಯೇ ನಿಮಗೆ ನೀವೇ ತಪ್ಪಿತಸ್ಥ ಭಾವನೆಯನ್ನು ಸೃಷ್ಟಿಸಿಕೊಳ್ಳುತ್ತೀರಿ. ತಪ್ಪಿತಸ್ಥ ಭಾವನೆಯು ನಿಮ್ಮ ಅಂತರಂಗದಲ್ಲಿ ಒಂದು ಶಾಶ್ವತವಾದ ಅತಿಥಿಯಾಗಿ ಇದ್ದುಬಿಡುತ್ತದೆ!

ಕುಟುಂಬವು ಸೃಷ್ಟಿಸಿದ ತಪ್ಪಿತಸ್ಥ ಭಾವನೆ ಹಾಗೂ ಸಮಾಜವು ಸೃಷ್ಟಿಸಿದ ತಪ್ಪಿತಸ್ಥ ಭಾವನೆ, ಈ ಎರಡೂ ನಿಮ್ಮ ಮೇಲೆ ಹೇರಿದಂತಹ ತಪ್ಪಿತಸ್ಥ ಭಾವನೆ; ಅವು ವಂಶ ಪಾರಂಪರ್ಯವಾಗಿ ಬಂದ ಒಂದು ಕಿರೀಟದಂತೆ. ಮೂರನೆಯ ತಪ್ಪಿತಸ್ಥ ಭಾವನೆಯು ಅತ್ಯಂತ ಕೆಟ್ಟದ್ದು - ನಿಮಗೆ ನೀವೇ ಸೃಷ್ಟಿಸಿಕೊಳ್ಳುವ ತಪ್ಪಿತಸ್ಥ ಭಾವನೆ. ದುರಾಸೆ ಮತ್ತು ಭಯದ ಆಧಾರಿತ ತಪ್ಪಿತಸ್ಥ ಭಾವನೆಯನ್ನು ಆಂತರಿಕಗೊಳಿಸಿ ಕೊಂಡಾಗ ನಿಮಗೆ ನೀವೇ ಹೊಸ ರೀತಿಗಳ ತಪ್ಪಿತಸ್ಥ ಭಾವನೆಯನ್ನು ಸೃಷ್ಟಿಸಿಕೊಳ್ಳುತ್ತೀರಿ.

ಯಾವುದಾದರೊಂದು ವಿಷಯದ ಬಗ್ಗೆ ನಿಮ್ಮಲ್ಲಿ
ತಪ್ಪಿತಸ್ಥ ಭಾವನೆ ಉಂಟಾದ ಕ್ಷಣವೇ ನಿಮ್ಮನ್ನು
ಶೋಷಿಸುವುದು ಸುಲಭ. ಅದರಲ್ಲೂ ನೀವು
ನಿಮ್ಮೊಂದಿಗೆ ಹೋರಾಡಲು ಪ್ರಾರಂಭಿಸಿದಾಗ
ನಿಮ್ಮನ್ನು ಶೋಷಿಸುವುದು ಇನ್ನೂ ಸುಲಭ.

ನಿಮ್ಮ ಜೀವನವನ್ನು ಅವಲೋಕಿಸಿದರೆ,
ಪ್ರತಿಕ್ಷಣವೂ ನಿಮ್ಮೊಂದಿಗೇ ನೀವು ಹೋರಾಡಲೂ,
ನಿಮ್ಮೊಂದಿಗೇ ನೀವು ಅಸಮಾಧಾನದಿಂದಿರಲೂ
ಕಾರಣವನ್ನು ಯಾವ ರೀತಿ ಸೂಕ್ಷ್ಮವಾಗಿ
ಹುಡುಕುತ್ತಿರುವಿರಿ ಎಂಬುದನ್ನು ಕಾಣಬಹುದು.
ಯಾವುದೇ ಒಂದು ಹೋರಾಟವಿಲ್ಲದೆ ನಿಮ್ಮಿಂದ
ಇರಲಾಗುವುದಿಲ್ಲ. ನೀವೇ ನಿಮ್ಮೊಳಗೆ ದುಃಖವನ್ನು
ಸೃಷ್ಟಿಸಿಕೊಳ್ಳಬಯಸುತ್ತೀರಿ. ಏಕೆಂದರೆ ಸಂತೋಷವು
ಒಂದು ಪಾಪ ಎಂದು ಕಲಿತಿದ್ದೀರಿ.

ನಿಮ್ಮ ಮನಸ್ಸೆಂಬ ನದಿಯಲ್ಲಿ ತಪ್ಪಿತಸ್ಥ ಭಾವನೆಯೆಂಬ ಬಂಡೆ - ಬುದ್ಧಿಶಕ್ತಿಯ ಹರಿವಿನ ತಡೆ

ನೀವು ಒಂದು ಹಾಯಾಗಿ ಹರಿಯುವ ನದಿಯಂತೆ ವಿನ್ಯಾಸಗೊಳಿಸಲ್ಪಟ್ಟಿದ್ದೀರಿ. ತಪ್ಪಿತಸ್ಥ ಭಾವನೆಯು ನೀರಿನ ಹಾದಿಯಲ್ಲಿರುವ ಬಂಡೆಗಳಂತೆ. ಸಂತೋಷವು ಒಂದು ಪಾಪವೆಂದು ಸಮಾಜವು ಸೂಕ್ಷ್ಮವಾಗಿ, ಮುದ್ರೆಯೊತ್ತಿದೆ. ಆಗಿರುವ ಸಮಸ್ಯೆ ಅದೇ. ಆದ್ದರಿಂದ ಎಲ್ಲವೂ ಹಾಯಾಗಿ ಸಂತೋಷವಾಗಿದ್ದಾಗಲೂ, ನಿಮ್ಮಲ್ಲಿ ಒಂದು ತಪ್ಪಿತಸ್ಥ ಭಾವನೆಯು ಅಡಗಿರುತ್ತದೆ ಎಂಬುದನ್ನು ಗಮನಿಸಬಹುದು. ಜೀವನವನ್ನು ಸಂತೋಷವಾಗಿ ಅನುಭವಿಸುವುದು ಒಂದು ರೀತಿಯ ಬೇಜವಾಬ್ದಾರಿಯೆಂದು ಸಮಾಜವು ನಿಮಗೆ ಕಲಿಸಿದೆ. ತಪ್ಪಿತಸ್ಥ ಭಾವನೆ ಉಂಟಾಗುವುದು ಈ ಕಾರಣದಿಂದಲೇ.

ನೀವು ಒಂದು ನದಿಯಂತೆ ಆದರೆ ನೀವು ಜೀವಿಸಿದರೆ, ಯಾವ ಪಶ್ಚಾತ್ತಾಪವೂ ಇಲ್ಲದೆ, ನಿಮ್ಮ ಹರಿಯುವವರೆಗೂ, ದುಃಖಿತರಾಗಿ, ಜವಾಬ್ದಾರಿಗಳನ್ನೆಲ್ಲಾ ಪೂರೈಸುತ್ತಾ, ಪ್ರ some text ನಿಮ್ಮ ಜೀವನದಲ್ಲಿ ಖಿನ್ನರಾದಾಗ, ಆನಂದವಾಗಿರಬಹುದು. ಅಸಾಧಾರಣವಾದ ನಿಮಗೆ ಬುದ್ಧಿಶಕ್ತಿಯನ್ನು ಎಂದಾದರೂ ಸಮಸ್ಯೆ ಏನೆಂದರೆ, ನಿಮ್ಮೊಳಗೇ ನಿಮ್ಮದಲ್ಲದ ವ್ಯಕ್ತಪಡಿಸುತ್ತೀರಿ. ತಪ್ಪಿತಸ್ಥ ಭಾವ ಅನೇಕರ ಧ್ವನಿಗಳಿವೆ. ಅದರೊಳಗೆ ನಿಮ್ಮ ತಾಯಿಯ ಉಂಟಾಗಿದೆಯೇ? ಧ್ವನಿ, ನಿಮ್ಮ ತಂದೆಯ ಧ್ವನಿ, ನಿಮ್ಮ ಶಿಕ್ಷಕರ ಧ್ವನಿ, ಇಲ್ಲ! ನಿಮ್ಮ ನೆರೆಹೊರೆಯವರ ಧ್ವನಿ ಹಾಗೂ ಇನ್ನಿತರರ ಧ್ವನಿಗಳೆಲ್ಲವೂ ಸೇರಿಕೊಂಡಿವೆ! ಈ ಎಲ್ಲರ ಜೀವನವು ದುಃಖ ಹಾಗೂ ಕಷ್ಟಗಳ ಧ್ವನಿಗಳೂ ನಿಮ್ಮೊಳಗಿವೆ. ಒಂದೇ ಒಂದು ಧ್ವನಿ ಸರಮಾಲೆಯೆಂದೂ, ಸಂತೋಷವು ಒಮ್ಮೊಮ್ಮೆ ಇದ್ದಿದ್ದರೆ, ನಿಮಗೆ ಯಾವ ಸಮಸ್ಯೆಯೂ ಕಾಣಿಸಿಕೊಳ್ಳುವಂತಹುದೆಂದೂ ನಿಮಗೆ ಇರುತ್ತಿರಲಿಲ್ಲ. ನಿಮ್ಮ ಮನಸ್ಸು ಒಂದು ನದಿಯಂತೆ ಕಲಿಸಲಾಗಿದೆ. ಹರಿಯುತ್ತಿತ್ತು. ಆದರೆ ಅನೇಕ ಧ್ವನಿಗಳು ಸೇರಿ ಅನೇಕ ವಿಷಯಗಳನ್ನು ಹೇಳುತ್ತಿವೆ ಮತ್ತು ನಿಮ್ಮ ಈ ಕಾರಣದಿಂದಲೇ ನೀವು ಸದಾ ನಗುನಗುತ್ತಾ ಹಾದಿಯಲ್ಲಿ ತಪ್ಪಿತಸ್ಥ ಭಾವನೆಯ ಬಂಡೆಗಳನ್ನು ಸಂತೋಷವಾಗಿದ್ದರೆ ಜನರಿಗೆ ಅದನ್ನು ಸೃಷ್ಟಿಸುತ್ತಿದೆ. ಸಹಿಸಲಾಗುವುದಿಲ್ಲ. ಅವರು ನಿಮ್ಮಲ್ಲಿ ತಪ್ಪಿತಸ್ಥತೆಯನ್ನು ತುಂಬುತ್ತಾ, ನಿಜತ್ವವೆಂದು ನೀವು ಒಂದು ನದಿಯಂತೆ ಹರಿಯುವವರೆಗೂ, ತಿಳಿಯಲ್ಪಟ್ಟ ಸ್ಥಿತಿಗೆ ನಿಮ್ಮನ್ನು ಕರೆತರಲು ನಿಮ್ಮ ಜೀವನದಲ್ಲಿ ಒಂದು ಅಸಾಧಾರಣವಾದ ಪ್ರಯತ್ನಿಸುತ್ತಾರೆ. ಬುದ್ಧಿಶಕ್ತಿಯನ್ನು ವ್ಯಕ್ತಪಡಿಸುತ್ತೀರಿ. ಪ್ರತಿಯೊಂದು ನಿಮಿಷವೂ ಉಕ್ಕಿ ಹರಿಯುವ ಚೈತನ್ಯದಿಂದ ಉದಾಹರಣೆಗೆ, ಆನಂದದಿಂದಿದ್ದಾಗ, ಬದುಕುತ್ತೀರಿ. ತಪ್ಪಿತಸ್ಥ ಭಾವನೆಯನ್ನು ನಿಮ್ಮೊಳಗೆ ನರ್ತಿಸುತ್ತಿದ್ದಾಗ ಅಥವಾ ಸಮುದ್ರ ತೀರದಲ್ಲಿ ಬರಮಾಡಿಕೊಂಡ ಕ್ಷಣ, ನಿಮ್ಮ ಹಾಯಾದ ಹರಿವನ್ನು ವಿಹರಿಸುತ್ತಿದ್ದಾಗ ನೀವು ಮಾಡಬೇಕಾಗಿ ಉಳಿದಿರುವ ತಡೆಗಟ್ಟಿದ ಕ್ಷಣ, ನಿಮ್ಮ ಅಸ್ತಿತ್ವದಲ್ಲಿ ಶಕ್ತಿಯ ಕೆಲಸದ ಬಗ್ಗೆ, ನೀವು ಪೂರೈಸಬೇಕಾದ ತಡೆಗಳನ್ನು ಸೃಷ್ಟಿಸುತ್ತೀರಿ. ಜವಾಬ್ದಾರಿಗಳೆಲ್ಲದರ ಬಗ್ಗೆ, ತಪ್ಪಿತಸ್ಥ ಭಾವನೆಯು ಮೇಲೇಳುವುದನ್ನು ಗಮನಿಸುತ್ತೀರಿ.

ತಪ್ಪಿತಸ್ಥ ಭಾವನೆಗೆ ಯಾವ ಆಧಾರವೂ ಇಲ್ಲ, ನಿಮ್ಮನ್ನು ನೀವೇ ಉದ್ಧರಿಸಿಕೊಳ್ಳಿರಿ ಆದರೂ ಅದು ನಿಮ್ಮ ಜೀವನವನ್ನೇ ನಾಶಮಾಡಬಲ್ಲುದು. ತಪ್ಪಿತಸ್ಥ ಭಾವನೆ ಇಲ್ಲದೆ ತಪ್ಪಿತಸ್ಥ ಭಾವನೆಯಿಂದ ನೀವು ಹೇಗೆ ನಿಯಂತ್ರಿಸಲ್ಪಟ್ಟಿದ್ದೀರಿ ಎಂಬುದನ್ನು ಅರಿತರೆ,

ಅದರಿಂದ ಹೊರಬರಲು ಅಭ್ಯಾಸಮಾಡಲಾರಂಭಿಸಬಹುದು. ಯಾವುದನ್ನಾದರೂ ಅಭ್ಯಾಸ ಮಾಡಲು ಆರಂಭಿಸಿದಾಗ, ಸ್ವಾಭಾವಿಕವಾಗಿ ಕೆಲವು ಬಾರಿ ಜಾರುತ್ತೀರಿ. ತಪ್ಪಿತಸ್ಥ ಭಾವನೆಯನ್ನು ಹೊಂದದೆ ಇರಲು ಅಭ್ಯಾಸ ಮಾಡುವಾಗ, ಹಳೆಯ ಮಾದರಿಯಂತೆ ದುರಾಸೆ ಹಾಗೂ ಭಯಗಳಿಗೆ ಜಾರುವ ಸಾಧ್ಯತೆ ಇರುತ್ತದೆ. ಆಗ, ಇದ್ದಕ್ಕಿದ್ದಂತೆ ನೀವು ನೆನಪು ಮಾಡಿಕೊಳ್ಳುತ್ತೀರಿ, 'ಓ, ನಾನು ಭಯದಿಂದ ಕೆಲಸಮಾಡುತ್ತಿದ್ದೇನೆ, ನಾನು ದುರಾಸೆಯಿಂದ ಕೆಲಸ ಮಾಡುತ್ತಿದ್ದೇನೆ' ಎಂದು. ಆಗ ಮತ್ತೆ ಹೊಸದಾಗಿ ಆರಂಭಿಸುತ್ತೀರಿ. ನಿಮ್ಮ ಪ್ರಯತ್ನವನ್ನು ಮಾಡಲಾರಂಭಿಸಿದಾಗ, ಸಹಜವಾಗಿ ಹೀಗಾಗುವುದನ್ನು ನೀವು ನೋಡುವಿರಿ.

ಒಂದು ಸಣ್ಣ ಕಥೆ:

ಒಮ್ಮೆ ಒಂದು ದೊಡ್ಡ ಆಧ್ಯಾತ್ಮ ಸಂಸ್ಥೆಯಿಂದ
ಒಬ್ಬ ಸನ್ಯಾಸಿಯನ್ನು ದೂರದ, ಆದಿವಾಸಿಗಳಿರುವ
ಸ್ಥಳಕ್ಕೆ ಸೇವೆ ಮಾಡಲು ಕಳುಹಿಸಲಾಯಿತು.
ಕೂಡಲೇ, ಆ ಸನ್ಯಾಸಿಯನ್ನು ದೂರುವ ಅನೇಕ
ಪತ್ರಗಳು ಸಂಸ್ಥೆಗೆ ಬಂದವು.

ಪತ್ರಗಳನ್ನು ಓದಿದ ಸಂಸ್ಥೆಯ ಅಧ್ಯಕ್ಷರು, 'ನಾವು ಸರಿಯಾದ ವ್ಯಕ್ತಿಯನ್ನೇ ಅಲ್ಲಿಗೆ ಕಳುಹಿಸಿದ್ದೇವೆ' ಎಂದು ಹೇಳಿದರು.

ಕಾರ್ಯದರ್ಶಿಗಳು, 'ಇದೇನು ಸರ್, ಅವರ ಬಗ್ಗೆ ನಮಗೆ ದೂರು ಬರುತ್ತಿದೆ. ಅದು ಹೇಗೆ ಅವರನ್ನು ಸರಿಯಾದ ವ್ಯಕ್ತಿ ಎನ್ನುತ್ತಿದ್ದೀರಿ?' ಎಂದು ಅವರನ್ನು ಕೇಳಿದರು.

ಅಧ್ಯಕ್ಷರು, 'ನಮಗೆ ದೂರು ಬರುತ್ತಿದೆಯೆಂದರೆ, ಅವರು ಕೆಲಸ ಮಾಡಲಾರಂಭಿಸಿದ್ದಾರೆ, ಹಾಗಾಗಿ ಅಲ್ಲಿ ಏನೋ ನಡೆಯುತ್ತಿದೆ ಎಂದರ್ಥ!' ಎಂದು ಹೇಳಿದರು.

ನಿಮ್ಮ ಅನುಮತಿಯಿಲ್ಲದೆ ನಿಮ್ಮನ್ನು ಯಾರೂ ತೊಂದರೆಪಡಿಸಲೂ, ಸಹಾಯಮಾಡಲೂ ಆಗುವುದಿಲ್ಲ

ಏನಾದರೂ ಹೊಸದನ್ನು ಮಾಡಲಾರಂಭಿಸಿದಾಗ, ಮೂರು ಹಂತಗಳಿರುತ್ತವೆ- ಮೊದಲನೆಯದು ವಿರೋಧ. ಮುಂದಿನದು ಬರೀ ತಪ್ಪಿಸಿಕೊಳ್ಳುವಿಕೆ. ಜನರು ಗಮನ ಕೊಡುವುದೂ ಇಲ್ಲ, ಪ್ರತಿಭಟಿಸುವುದೂ ಇಲ್ಲ. ಮೂರನೆಯದು ಸಮ್ಮತಿ.

ಅದೇ ರೀತಿ, ನಿಮ್ಮ ಅಂತರಂಗದಲ್ಲಿ ಏನನ್ನಾದರೂ ಮಾಡಲಾರಂಭಿಸಿದಾಗ, ನಿಮ್ಮಲ್ಲಿ ಬೆಳವಣಿಗೆ ಇರುತ್ತದೆ, ಆದರೆ ಈ ಮೂರು ಹಂತಗಳಿರುತ್ತದೆ. ಮೊದಲನೆಯ ಹಂತ ವಿರೋಧ. ನಿಮ್ಮ ಸದ್ಯದ ಪದ್ಧತಿಗೆ ಹೊಸ ಅಭ್ಯಾಸವು ಒಂದು ಕಷ್ಟಕರವಾದ ಬದಲಾವಣೆಯೆಂದು ಭಾವಿಸುತ್ತೀರಿ. ಇದರಿಂದಾಗಿ ಮುಂದೆ ಆಗುವುದೇನೆಂದರೆ, ಆ ಬದಲಾವಣೆಯನ್ನು ಅಭ್ಯಾಸ ಮಾಡುವ ಬದಲು, ಆ ಅವಕಾಶದಿಂದ ತಪ್ಪಿಸಿಕೊಳ್ಳುತ್ತೀರಿ. ಮತ್ತೆ ಮತ್ತೆ ನಿಮ್ಮ ಹಳೆಯ ಪದ್ಧತಿಗಳಿಗೇ ಹಿಂದಿರುಗುತ್ತೀರಿ. ನಿಮ್ಮ ವ್ಯವಸ್ಥೆಯು ವಿರೋಧಿಸುತ್ತದೆ. ಅದು ಎಲ್ಲಾ ರೀತಿಯ ತೊಡಕುಗಳನ್ನೂ, ಎಲ್ಲಾ ರೀತಿಯ ವಾದಗಳನ್ನೂ ಸೃಷ್ಟಿಸುತ್ತದೆ. ಪ್ರತಿಭಟನೆಯನ್ನು ಮುಂದುವರೆಯಲು ಬಿಟ್ಟರೆ ನಿಮಗೆ ನೀವೇ ಶತ್ರುವಾಗುತ್ತೀರಿ.

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿದ್ದಾನೆ, 'ನಿನ್ನನ್ನು ನೀನೇ ಉದ್ದರಿಸಿಕೊ, ಇಲ್ಲದಿದ್ದರೆ ನಿನಗೆ

ನೀನೇ ಕೆಟ್ಟ ಶತ್ರುವಾಗುವೆ' ಎಂದು. ನಿಮಗೆ ನೀವು
ಉತ್ತಮವಾದ ಗೆಳೆಯರಾಗಿ ಸಹಾಯ
ಮಾಡುವುದೋ ಅಥವಾ ಕೆಟ್ಟ ಶತ್ರುವಾಗುವುದೋ
ಅದು ನಿಮಗೇ ಬಿಟ್ಟದ್ದು.

ಸರಿಯಾಗಿ ತಿಳಿಯಿರಿ: ನಿಮ್ಮ ಅನುಮತಿ ಇಲ್ಲದೆ
ನಿಮಗೆ ಯಾರೂ ನೋವನ್ನುಂಟು
ಮಾಡಲಾಗುವುದಿಲ್ಲ, ನಿಮ್ಮ ಅನುಮತಿ ಇಲ್ಲದೆ
ಯಾರೂ ನಿಮಗೆ ಸಹಾಯ ಮಾಡಲೂ ಆಗುವುದಿಲ್ಲ.

ನಿಮಗೆ ಅಭ್ಯಾಸವು ಮರೆತು ಹೋಗಿದ್ದರೆ
ಅದನ್ನು ನೆನಪು ಮಾಡಿಕೊಂಡು ಮತ್ತೆ ಮತ್ತೆ
ನಿಮ್ಮನ್ನು ಉದ್ದರಿಸಿಕೊಳ್ಳಿರಿ. ಖಿನ್ನತೆಯೊಳಗೆ
ಬೀಳದಿರಿ. ತಪ್ಪಿತಸ್ಥ ಭಾವನೆಯನ್ನು ಹೊಂದದಿರಿ.
ನಿಮ್ಮಿಂದ ಮಾಡಲಾಗುವುದಿಲ್ಲವೆಂದು ಭಾವಿಸದಿರಿ.

ನೀವು ಬುದ್ಧನ ಜೀವನ ಚರಿತ್ರೆಯನ್ನು ಓದಿದರೆ,
ಬುದ್ಧನು ತನ್ನ ಶರೀರವನ್ನು ತ್ಯಾಗ ಮಾಡುವ
ಸಮಯದಲ್ಲಿ ಆತನ ಶಿಷ್ಯರು ಆತನ ಅಂತಿಮ
ಸಂದೇಶವನ್ನು ನೀಡಬೇಕೆಂದು ಕೇಳಿದಾಗ, ಬುದ್ಧನು,
'ಆತ್ಮ ದೀಪೋಭವ' - ನಿನ್ನಿಂದಲೇ ನಿನಗೆ ಬೆಳಕು
ಸಿಗುವಂತಾಗಲಿ, ನಿನ್ನಿಂದಲೇ ನಿನಗೆ
ಮಾರ್ಗದರ್ಶನವಾಗಲಿ, ಎಂದಿದ್ದಾನೆ.

ಪಾರಾಗಲು ದಾರಿ - ಒಳಮುಖವಾಗಿ ನೋಡುವುದು

ತಪ್ಪಿತಸ್ಥ ಭಾವನೆ ಹೊಂದುವುದು ಒಂದು ಪಾಪ.
ವಾಸ್ತವವಾಗಿ ಅದೊಂದೇ ಪಾಪ. ನಾವು ಹೇಳುವ
ನರಕವು ಮತ್ತೊಂದು ಕಾಲ ಅಥವಾ ಜಾಗದಲ್ಲಿಲ್ಲ.
ನಮ್ಮ ಮನೋಧರ್ಮವನ್ನು ಬದಲಾಯಿಸಲು
ಏನನ್ನೂ ಮಾಡದೆ ತಪ್ಪಿತಸ್ಥ ಭಾವನೆಯನ್ನು
ಹೊಂದಿದಾಗ, ನರಕವು ನಮ್ಮೊಳಗೇ ಇರುತ್ತದೆ.

ನಿಮ್ಮ ಎಲ್ಲಾ ತಪ್ಪಿತಸ್ಥ ಭಾವನೆ, ನಿಮ್ಮ ಎಲ್ಲಾ ವೇದನೆ, ಎಲ್ಲವೂ ನಿಮ್ಮ ಮನಸ್ಸಿನಲ್ಲಿ ನೀವು ಸೃಷ್ಟಿಸಿಕೊಳ್ಳುವ ಒಂದು ಕಾಲ್ಪನಿಕ ದಂಡ. ಹತ್ತು ವರ್ಷಗಳ ಹಿಂದೆ ನೀವು ಮಾಡಿದ ತಪ್ಪುಗಳು, ಏಳು ವರ್ಷಗಳ ಹಿಂದೆ ನೀವು ಮಾಡಿದ ತಪ್ಪುಗಳು, ಮೂರು ವರ್ಷಗಳ ಹಿಂದೆ ನೀವು ಮಾಡಿದ ತಪ್ಪುಗಳೆಲ್ಲವೂ ಸ್ವತಂತ್ರವಾದ, ಸಂಬಂಧವಿಲ್ಲದ ಘಟನೆಗಳು. ಆದರೆ ಅವನ್ನು ಪರಸ್ಪರ ಒಂದಕ್ಕೊಂದು ಸಂಬಂಧಕಲ್ಪಿಸಿ ಯೋಚಿಸಲಾರಂಭಿಸಿದಾಗ, ಸ್ವಾಭಾವಿಕವಾಗಿಯೇ ತಪ್ಪಿತಸ್ಥ ಭಾವನೆಯನ್ನು ಸೃಷ್ಟಿಸಲಾರಂಭಿಸುತ್ತೀರಿ. ನೀವು ಒಬ್ಬ ಸತತ ಪಾಪಿ ಎಂದು ಭಾವಿಸಲಾರಂಭಿಸುತ್ತೀರಿ. ಇದು ಯೋಚಿಸುವ ಒಂದು ರೀತಿ.

ಯೋಚಿಸುವ ಮತ್ತೊಂದು ರೀತಿ ಏನೆಂದರೆ:
ನೀವು ಒಂದು ತಪ್ಪನ್ನು ಮಾಡಿದಾಗ, ಅದನ್ನು ಏಕೆ
ಮಾಡಿದಿರಿ, ಅದನ್ನು ಹೇಗೆ ಮಾಡಿದಿರೆಂದು
ವಾಸ್ತವಿಕವಾಗಿ ನೋಡಿರಿ. ಆ ತಪ್ಪು ಏಕೆ ಮತ್ತು
ಹೇಗೆ ಪುನರಾವರ್ತಿಸುತ್ತಿದೆಯೆಂದು ಒಬ್ಬ
ವೀಕ್ಷಕನಂತೆ ಗಮನಿಸಿರಿ. ತಪ್ಪಿತಸ್ಥ ಭಾವನೆಯ
ಕಾರ್ಯ ರೀತಿಯನ್ನು ವೈಜ್ಞಾನಿಕವಾಗಿ
ಅವಲೋಕಿಸಿರಿ. ಈ ಒಂದು ಅರಿವೇ ನಿಮಗೆ
ಹೊಸದೊಂದು ಬಾಗಿಲನ್ನು ತೆರೆದು, ನೀವು ಅದೇ
ತಪ್ಪನ್ನು ಮಾಡದಂತೆ ನೋಡಿಕೊಳ್ಳುತ್ತದೆ -
ಏಕೆಂದರೆ ನೀವು ಆ ತಪ್ಪನ್ನು ನೋಡಿ ಕಾರಣವನ್ನು
ತಿಳಿದಾಗ, ಅದು ಮಾಯವಾಗುತ್ತದೆ. ಒಂದು

ವಿಷಯವನ್ನು ಸಂಪೂರ್ಣವಾಗಿ ತಿಳಿಯುವುದು ಅದರಿಂದ ಮುಕ್ತಿಯನ್ನು ಪಡೆದಂತೆ.