ಆಸೆಯು ಒಂದು ಕ್ರಿಯಾತ್ಮಕ ಶಕ್ತಿ
This text was machine-transcribed from the printed book and may contain errors. Select the words and choose “Report a mistake”.
ಭಯ ಹಾಗೂ ಆಸೆಗಳು ನಮ್ಮ ಜೀವನವನ್ನು
ನಡೆಸುವ ಮೂಲ ಚೈತನ್ಯಗಳು. ಏನನ್ನಾದರೂ
ಸಾಧಿಸುವ ಆಸೆಯಿಂದ ಅಥವಾ ಎಲ್ಲಿಗಾದರೂ
ತಲುಪುವ ಆಸೆಯಿಂದ ಇಲ್ಲವೇ ಏನನ್ನಾದರೂ
ಅನುಭವಿಸುವುದು ಬೇಡವೆಂಬ ಭಯದಿಂದ ನಾವು
ವರ್ತಿಸುತ್ತೇವೆ. ಆಕರ್ಷಣೆ ಹಾಗೂ ವಿಕರ್ಷಣೆಗಳು
ಕೇವಲ ಕಣಗಳ ಶಕ್ತಿ ಮಾತ್ರವಲ್ಲ, ಅವು ಮನುಷ್ಯನ
ವರ್ತನೆಗೂ ಅಗತ್ಯವಾದುವು.
ನಿಮ್ಮ ನಿಜವಾದ ಆಸೆಗಳನ್ನು ಗುರುತಿಸಿರಿ
ಆಸೆಯು ಮನುಷ್ಯ ಜೀವನದ ಪ್ರಮುಖ ಚಾಲಕ
ಶಕ್ತಿಗಳಲ್ಲೊಂದು. ನಮ್ಮ ಜೀವನವನ್ನು
ಅವಲೋಕಿಸಿದರೆ, ಬಹಳಷ್ಟು ಸಮಯ ನಾವು ಭಯ
ಅಥವಾ ಆಸೆಯಿಂದ ಪ್ರೇರಿತರಾಗುವುದನ್ನು
ಕಾಣಬಹುದು.
ನಮಗೆ ಬಹಳಷ್ಟು ಆಸೆಗಳಿವೆ, ಹಾಗೂ ಅನೇಕ
ಬಾರಿ ಅವುಗಳನ್ನು ಪೂರೈಸಲು ನಮ್ಮಲ್ಲಿ
ಚೈತನ್ಯವಿಲ್ಲವೆಂದು ಭಾವಿಸುತ್ತೇವೆ. ಜೈನ ಧರ್ಮದ
ಪ್ರಕಾರ ಭಗವಂತನು ನಮಗೆ ನಮ್ಮೆಲ್ಲಾ ಆಸೆಗಳನ್ನೂ
ಪೂರೈಸುವಷ್ಟು ಸಾಮರ್ಥ್ಯವನ್ನು ಕೊಟ್ಟು
ಕಳುಹಿಸಿರುತ್ತಾನೆ. ಆದರೆ ನಮ್ಮಲ್ಲಿ ಅನೇಕರು ಈ
ರೀತಿ ಭಾವಿಸುವುದಿಲ್ಲ, ಏಕೆ?
ನಮ್ಮ ನಿಜವಾದ ಆಸೆಗಳಿಗೂ ಇತರರಿಂದ
ಎರವಲು ಪಡೆದ ಆಸೆಗಳಿಗೂ ಒಂದು ವ್ಯತ್ಯಾಸವಿದೆ.
ನಮ್ಮ ನಿಜವಾದ ಆಸೆಗಳನ್ನು ನಮ್ಮ
ಅವಶ್ಯಕತೆಗಳೆಂದು ಕರೆಯಲಾಗಿದೆ. ಇತರರಿಂದ
ಎರವಲು ಪಡೆದ ಆಸೆಗಳನ್ನು ನಮ್ಮ ಬಯಕೆಗಳೆಂದು
ಕರೆಯಲಾಗಿದೆ. ನಮ್ಮ ನಿಜವಾದ ಆಸೆ ಅಥವಾ
ಅವಶ್ಯಕತೆಯನ್ನು ಪೂರೈಸಲು ನಮ್ಮಲ್ಲಿ ಸಾಕಷ್ಟು
ಶಕ್ತಿಯಿದೆ. ನಮ್ಮ ನಿಜವಾದ ಆಸೆಗಳೇನು?
ಎರಡನೇ ಹಂತದ ಲೈಫ್ ಬ್ಲಿಸ್ ಪ್ರೋಗ್ರಾಂ(ನಿತ್ಯಾನಂದ ಸ್ಪುರಣ ಪ್ರೋಗ್ರಾಂ)ನಲ್ಲಿ ಜನರಿಗೆ ತಮ್ಮ ಆಸೆಗಳ, ಅವಶ್ಯಕತೆಗಳ ಹಾಗೂ ಬಯಕೆಗಳ ಒಂದು ಪಟ್ಟಿಯನ್ನು ಮಾಡಲು ಹೇಳಲಾಗುತ್ತದೆ. ನಂತರ ಅವರು ಈ ಆಸೆಗಳ ಮೇಲೆ ಧ್ಯಾನಿಸುತ್ತಾರೆ. ಧ್ಯಾನದ ಕೊನೆಯಲ್ಲಿ ಅವರ ಆಸೆಗಳ ಪಟ್ಟಿಯನ್ನು ನೆನಪು ಮಾಡಿಕೊಳ್ಳಲು ಹೇಳುತ್ತೇನೆ. ಸಾಮಾನ್ಯವಾಗಿ ಅವರು ನೆನಪು ಮಾಡಿಕೊಳ್ಳಲು ಸಾಧ್ಯವಾಗುವುದು ಬರೆದಿರುವುದರ ಸ್ವಲ್ಪಭಾಗ ಮಾತ್ರ! ಅದು ಹೇಗೆಂದರೆ, ಧ್ಯಾನವನ್ನು ಆರಂಭಿಸಿದಾಗ ಆಸೆಗಳ ಒಂದು ದೊಡ್ಡ ಮರವಿದ್ದು, ಅದು ಒಣಗಿದ ಎಲೆಗಳನ್ನು ಉದುರಿಸುವಂತೆ ಈ ಧ್ಯಾನದ ಸಮಯದಲ್ಲಿ ನಿಮ್ಮ ಬಹಳಷ್ಟು ಆಸೆಗಳು ಉದುರಿಹೋಗುತ್ತವೆ. ಉಳಿದ ಆಸೆಗಳು ಹೊನ್ನಿನ ಎಲೆಗಳಂತೆ ಪ್ರಜ್ವಲಿಸುತ್ತವೆ. ಯಾವ ಆಸೆಯು ಹುಟ್ಟಿನಿಂದ ಬಂದದ್ದು ಹಾಗೂ ಯಾವುದು ಕೂಡಿಟ್ಟುಕೊಂಡದ್ದು ಎಂದು ತಿಳಿದರೆ, ಆಧ್ಯಾತ್ಮದ ಬೆಳವಣಿಗೆಯು ಸ್ವಾಭಾವಿಕವಾಗಿಯೇ ಉಂಟಾಗುತ್ತದೆ.
ನಮ್ಮ ಆಸೆಗಳು ನಿಜವಾಗಿಯೂ ನಮ್ಮವೇ
ಆಗಿದ್ದರೆ, ನಮ್ಮ ನಿಜವಾದ ಅವಶ್ಯಕತೆಗಳನ್ನು ಅವು
ಪ್ರತಿಬಿಂಬಿಸಿದರೆ, ನಮ್ಮ ಅಂತಃಶಕ್ತಿಯಲ್ಲಿ ಅವು
ವ್ಯಕ್ತವಾದರೆ, ಆ ಆಸೆಗಳನ್ನು ಪೂರೈಸುವ
ಪ್ರಯತ್ನದಲ್ಲಿ ನಮಗೆ ಯಾವ ನಿರಾಶೆಯೂ
ಆಗುವುದಿಲ್ಲ. ಸಹಜವಾಗಿಯೇ ಈ ಆಸೆಗಳು
ಪೂರೈಸುತ್ತವೆಂಬ ಅರಿವು ನಮಗೆ ಮೂಡುತ್ತದೆ.
ಪರಿಪೂರ್ಣತೆಗಾಗಿ ನಿಜವಾದ ಆಕಾಂಕ್ಷೆ
ನಿಮಗೆ ತಲೆನೋವು ಇದ್ದಾಗ ಆ ಸ್ಥಿತಿಯಲ್ಲಿ ಆರಾಮವಾಗಿರಲು ಆಗುವುದಿಲ್ಲ, ಏಕೆಂದರೆ ಅದು ನಿಮ್ಮ ನಿಜಸ್ವಭಾವವಲ್ಲವೆಂದು ನಿಮಗೆ ಗೊತ್ತು. ತಲೆನೋವು ಇಲ್ಲದಿರುವುದೇ ನಿಮ್ಮ ನಿಜಸ್ವಭಾವ. ಅದೇ ರೀತಿ ನಿಮ್ಮಲ್ಲಿ ಸ್ವಲ್ಪ ಆಸೆ ಇದ್ದರೆ ತಕ್ಷಣವೇ ಅದರಿಂದ ಹೊರಬರಲು ಬಯಸುತ್ತೀರಿ. ಏಕೆಂದರೆ ಆಳವಾದ ಪರಿಪೂರ್ಣತೆಯೇ ನಿಮ್ಮ ಸ್ವಭಾವ ಹಾಗೂ ಆ ಪರಿಪೂರ್ಣತೆಯಲ್ಲಿ ಆಸೆಯು ಒಂದು ಅಸಮತೋಲನೆಯನ್ನು ಉಂಟುಮಾಡುತ್ತದೆ.
ನೀವು ತಿಳಿಯಬೇಕಾದ ಎರಡು ಮುಖ್ಯವಾದ ಸತ್ಯಗಳು:
1. ನಿಮ್ಮ ಇಡೀ ಜೀವನವು ಪರಿಪೂರ್ಣತೆಯ ಗುರಿಯೆಡೆಗೆ ನೀವು ನಿರ್ವಹಿಸುವ ಘಟನೆಗಳ ಒಂದು ಉದ್ದವಾದ ಸರಪಳಿ. ಕುಡಿಯುವುದೋ, ತಿನ್ನುವುದೋ ಅಥವಾ ಸಂಬಂಧಗಳನ್ನು ಹೊಂದುವುದೋ, ಸಿರಿಯೊ, ಆನಂದವೋ ಏನೇ ಮಾಡಿದರೂ ಎಲ್ಲವೂ ಪರಿಪೂರ್ಣತೆಯನ್ನು ಅನುಭವಿಸಲೇಂದೇ. ಪರಿಪೂರ್ಣತೆಯನ್ನು ನೇರವಾಗಿ ಅರಸುವುದನ್ನು ಬಿಟ್ಟು ಬೇರೆ ಬೇರೆಯ ದಿಕ್ಕುಗಳಲ್ಲಿ ಅರಸುತ್ತಿದ್ದೀರಿ.
2. ಪರಿಪೂರ್ಣತೆಯು ನಿಮ್ಮೊಳಗಿದೆ, ಅದೇ
ನಿಮ್ಮ ನಿಜಸ್ವಭಾವ. ಆದ್ದರಿಂದಲೇ ನೀವು
ಅಪರಿಪೂರ್ಣತೆಯಿಂದ ಹೊರಬರಲು
ಪ್ರಯತ್ನಿಸುವುದು.
ಪೂರ್ಣತೆಯನ್ನು ಅರಸುತ್ತಿದ್ದೀರೆಂಬ ವಿಷಯವೇ ನಿಮಗೆ ಪೂರ್ಣತೆಯ ಬಗ್ಗೆ ತಿಳಿದಿದೆ ಎನ್ನುವುದನ್ನು ಹೇಳುತ್ತದೆ. ಇಲ್ಲದಿದ್ದರೆ ನೀವು ಪೂರ್ಣತೆಯನ್ನು ಹುಡುಕುತ್ತಿರಲಿಲ್ಲ! ನಿಮ್ಮ ಜೀವನದ ಕೆಲವು ಘಟನೆಗಳಲ್ಲಿ ಸ್ವಲ್ಪ ಪರಿಪೂರ್ಣತೆಯನ್ನು ಪಡೆದಿರಿ ಎಂಬ ಕಾರಣದಿಂದ ನೀವು ಮತ್ತೆ ಅದನ್ನು ಅನುಭವಿಸುತ್ತೀರೆಂಬ ಭರವಸೆಯೂ ಇರುತ್ತದೆ. ಆದ್ದರಿಂದಲೇ ನಿಮ್ಮ ಜೀವನವನ್ನು ಮುಂದುವರೆಸುತ್ತೀರಿ.
ಆಸೆ - ಜ್ಞಾನ - ಕ್ರಿಯೆ
ಆಸೆಯು ವಸ್ತು ಅಥವಾ ವ್ಯಕ್ತಿಯ ಮೇಲೆ ನಿರ್ದೇಶಿಸದೇ ಇದ್ದಾಗ, ಅದು ಒಂದು ಉಕ್ಕುತ್ತಿರುವ ಚೈತನ್ಯವಾಗುತ್ತದೆ. ಅದನ್ನೇ 'ಇಚ್ಛಾಶಕ್ತಿ' ಎನ್ನುವುದು.
ನಾಭಿ ಪ್ರದೇಶದಿಂದ ಚೈತನ್ಯವು ಶುದ್ಧ ರೂಪದಲ್ಲಿ ವ್ಯಕ್ತಗೊಳ್ಳುತ್ತದೆ. ಹೃದಯ ಪ್ರದೇಶದಲ್ಲಿ ಈ ಚೈತನ್ಯವು ಆಸೆಯ ಶಕ್ತಿಯಾಗಿ ಪರಿವರ್ತಿತವಾಗುತ್ತದೆ. ಇದು ನಂತರ ಕಂಠ ಪ್ರದೇಶದಲ್ಲಿ ಮಾತುಗಳಾಗಿ ಪರಿವರ್ತಿತವಾಗುತ್ತದೆ. ಈ ಶಕ್ತಿಯು ಮಾತುಗಳಿಗೆ ಪರಿವರ್ತಿತವಾದಾಗ ಅದನ್ನು ವಾಕ್ಶಕ್ತಿ ಎನ್ನುತ್ತಾರೆ. ಒಂದು ಹೋಲಿಕೆಯನ್ನು ಕೊಡುವುದಾದರೆ, ನಾಭಿಯಿಂದ ಬರುವ ಚೈತನ್ಯವು ಹತ್ತಿಯಂತೆ. ಹತ್ತಿಯು ಕಂಠದಲ್ಲಿ ದಾರವಾಗುತ್ತದೆ. ಅಥವಾ ನೀವು ಹೀಗೂ ಕಲ್ಪಿಸಿಕೊಳ್ಳಬಹುದು: ನಾಭಿಯಿಂದ ಬರುವ ಚೈತನ್ಯವು ಕಾದುಕರಗಿದ ಕಬ್ಬಿಣದಂತೆ. ಕಂಠ ಪ್ರದೇಶವು, ವಸ್ತುವು ರೂಪುಗೊಳ್ಳುವ ಕುಲುಮೆ ಕಾರ್ಖಾನೆಯಂತೆ!
ಹೇಗಾದರೂ, ಮಾತಿನ ಚೈತನ್ಯವು ಮೆದುಳಿಗೆ
ಹೋಗುತ್ತದೆ. ಅಲ್ಲಿ ಅದು ಜ್ಞಾನವಾಗಿ
ಉಳಿಯುತ್ತದೆ ಅಥವಾ ಒಂದು ಆಜ್ಞೆಯಾಗಿ
ಪರಿವರ್ತಿತವಾಗುತ್ತದೆ. ಚೈತನ್ಯವು
'ಜ್ಞಾನಶಕ್ತಿ'ಯಾಗಿ ಮೆದುಳಿನಲ್ಲಿ ಉಳಿಯಬಹುದು.
ಉದಾಹರಣೆಗೆ, ದೇಹಕ್ಕೆ ಸಂಬಂಧಿಸಿದ ಆಸೆಯ
ಚೈತನ್ಯವು ದೇಹಜ್ಞಾನವಾಗಬಹುದು.
ಮತ್ತೊಂದು ಸಾಧ್ಯತೆಯೆಂದರೆ, ಮಾತುಗಳು ಒಂದು ಆಜ್ಞೆಯಾಗಿ ಪರಿವರ್ತನೆಗೊಂಡು ನೆರವೇರಲೂಬಹುದು. ಆಜ್ಞೆಯು ನಿಮ್ಮ ಇಡೀ ದೇಹಕ್ಕೆ ಹೋಗಿ, ನೀವು ಚಲಿಸುವಂತೆ ಮಾಡುತ್ತದೆ. ಇದನ್ನು ಕ್ರಿಯಾಶಕ್ತಿ ಎನ್ನುತ್ತಾರೆ. ಉದಾಹರಣೆಗೆ, ನಿಮ್ಮ ದೇಹಕ್ಕೆ ಸಂಬಂಧಿಸಿದ ಆಸೆಯ ಚೈತನ್ಯವು ನಿಮ್ಮ ದೇಹವನ್ನು ಚಲಿಸುವಂತಹ ಕ್ರಿಯೆಯ ಶಕ್ತಿಯಾಗಿ ವ್ಯಕ್ತವಾಗಬಹುದು.
ನಿಮ್ಮ ಅಸ್ತಿತ್ವದಿಂದ ಬರುವ ಶುದ್ಧವಾದ
ಇಚ್ಛಾಶಕ್ತಿಯು ಕಂಠ ಪ್ರದೇಶದಲ್ಲಿ
ಜ್ಞಾನಶಕ್ತಿಯಾಗಿಯೂ, ಕ್ರಿಯಾಶಕ್ತಿಯಾಗಿಯೂ
ಪರಿವರ್ತಿತವಾಗುತ್ತದೆ.
ಚೈತನ್ಯವನ್ನು ಸರಿಯಾಗಿ ಪರಿಷ್ಕರಿಸದೇ ಹಾಗೂ ನಿರ್ದೇಶಿಸದೇ ಇದ್ದರೆ, ಜ್ಞಾನ ಹಾಗೂ ಕ್ರಿಯೆಯು ಶುದ್ಧವಾದ ಆಸೆಯ ಚೈತನ್ಯದಿಂದ ಬೇರ್ಪಡುತ್ತದೆ. ಜ್ಞಾನ ಹಾಗೂ ಕ್ರಿಯೆಯು ಆಸೆಯ ಚೈತನ್ಯದೊಂದಿಗೆ ಸಾಮರಸ್ಯದಿಂದಿರಬೇಕು. ಆಗ, ಆಸೆಯು ಇನ್ನೂ ಉತ್ತಮವಾದ ಜ್ಞಾನ ಹಾಗೂ ಕ್ರಿಯೆಯತ್ತ ಕೊಂಡೊಯ್ಯುತ್ತದೆ, ಇದರಿಂದ ಇನ್ನಷ್ಟು ಸ್ಪಷ್ಟವಾದ ಆಸೆಗಳತ್ತ ನಿರ್ದೇಶಿಸಲ್ಪಟ್ಟು, ಒಂದು ಉತ್ಕೃಷ್ಟವಾದ ವರ್ತುಲವೇ ರಚಿತವಾಗುತ್ತದೆ!
ನಿಮಗೆ ಒಂದು ದಶಲಕ್ಷ ರೂಪಾಯಿಗಳನ್ನು
ಗಳಿಸಬೇಕೆನ್ನುವ ಆಸೆಯಿದೆಯೆಂದು
ಇಟ್ಟುಕೊಳ್ಳೋಣ. ಆ ಆಸೆಯು ಜ್ಞಾನಕ್ಕೆ ಸರಿಯಾಗಿ
ಪರಿವರ್ತಿತವಾದರೆ, ನೀವು ಲಕ್ಷಾಧಿಪತಿಯಾಗಲು
ಒಂದು ಸ್ಪಷ್ಟವಾದ ಯೋಜನೆ ಹಾಗೂ ಸರಿಯಾದ
ಕ್ರಿಯೆಗಳನ್ನು ಮಾಡುತ್ತೀರಿ. ಆಸೆಯ ಚೈತನ್ಯವು
ಹೆಚ್ಚು ಜ್ಞಾನ ಹಾಗೂ ಕಡಿಮೆ ಕ್ರಿಯೆಯಾಗಿ
ಪರಿವರ್ತಿತವಾದರೆ, ನೀವು ಅತಿಯಾಗಿ
ಆಲೋಚಿಸುವುದರಲ್ಲೇ ಕೊನೆಗೊಂಡು ಗಾಳಿ-
ಗೋಪುರಗಳನ್ನು ಕಟ್ಟುತ್ತೀರಿ.
ಇದಕ್ಕೆ ಬದಲಾಗಿ, ಆಸೆಯ ಚೈತನ್ಯವು ಅತಿಯಾದ ಕ್ರಿಯೆ ಹಾಗೂ ಕಡಿಮೆ ಜ್ಞಾನವಾಗಿ ಪರಿವರ್ತಿತವಾದರೆ, ನೀವು ಕೆಲಸವನ್ನು ಕುರುಡಾಗಿ ಮಾಡುತ್ತೀರಿ. ಉದಾಹರಣೆಗೆ, ಬೆಂಗಳೂರಿನಿಂದ ದೆಹಲಿಯವರೆಗೆ ನಿಜವಾಗಿ ಕಷ್ಟಪಟ್ಟು ಒಂದು ಟ್ರಕ್ಕನ್ನು ಚಾಲನೆ ಮಾಡುತ್ತಾ ಹಣ ಸಂಪಾದಿಸಲು ಪ್ರಯತ್ನಿಸಬಹುದು. ಆದರೆ ಇದರಿಂದ ನೀವು ಲಕ್ಷಾಧಿಪತಿಯಾಗಲು ಸಾಧ್ಯವೆ? ಇಲ್ಲಿ ಕ್ರಿಯೆಯಿದೆ ಆದರೆ ಸರಿಯಾದ ಜ್ಞಾನವಿಲ್ಲ. ಆದ್ದರಿಂದ ಆಸೆಯು, ಸರಿಯಾದ ಜ್ಞಾನ ಹಾಗೂ ಕ್ರಿಯೆಗೆ ಪರಿವರ್ತನೆಯಾಗಬೇಕು. ಈ ಪರಿವರ್ತನೆಯು ಸರಿಯಾಗಿ ಆಗದಿರುವ ಕಾರಣವೆಂದರೆ, ಅರಿವಿಲ್ಲದಿರುವುದು.
ಆಸೆಯೊಂದಿಗೆ ನೀವು ಪ್ರಾಮಾಣಿಕವಾಗಿ
ಸಮಗ್ರರಾದಾಗ ಯಾವ ವಿರಸವೂ ಇರುವುದಿಲ್ಲ
ಹಾಗೂ ಪರಿವರ್ತನೆಯು ಸರಿಯಾಗಿ ಆಗುತ್ತದೆ.
ಪ್ರೀತಿಯ ಶಕ್ತಿ
ಇಂತಹ ಕೆಲವು ಸಂದರ್ಭಗಳನ್ನು ನಿಮ್ಮ
ಜೀವನದಲ್ಲಿ ಅನುಭವಿಸಿರಬಹುದು. ಒಂದು ಜನ
ನಿಬಿಡವಾದ ರಸ್ತೆಯನ್ನು ದಾಟಲು ಹೆದರುವ
ಮಹಿಳೆಯು, ತನ್ನ ಮಗುವು ರಸ್ತೆಯಲ್ಲಿ ಓಡಿದಾಗ,
ತನ್ನ ಸುರಕ್ಷತೆಯ ಬಗ್ಗೆಯೂ ಯೋಚಿಸದೆ ಮಗುವನ್ನು
ಕಾಪಾಡಲು ಸುಮ್ಮನೆ ಧಾವಿಸುತ್ತಾಳೆ.
ಆಕೆಗೆ ತನ್ನ ಹೆದರಿಕೆಯು ಇದ್ದಕ್ಕಿದ್ದಂತೆ ಹೇಗೆ
ಹೊರಟುಹೋಯಿತೆಂಬುದನ್ನು ನಾವು
ಅರಿತುಕೊಳ್ಳಬೇಕು. ತನ್ನ ಮಗುವಿನ ಮೇಲಿನ
ಪ್ರೀತಿಯು ಆಕೆಯಲ್ಲಿ ಮಾತೃತ್ವದ ಆಯಾಮವನ್ನು
ಜಾಗೃತಗೊಳಿಸಿತು. ಪ್ರೀತಿಯ ಪ್ರತಿಯೊಂದು
ಸಂಬಂಧದಲ್ಲೂ ಹೀಗೆಯೇ ಆಗಿರುತ್ತದೆ. ಪ್ರೀತಿಯ
ಭಾವನೆಯು ಯಾರಲ್ಲಾದರೂ ಉದಯವಾದರೆ,
ತಕ್ಷಣವೇ ಆ ವ್ಯಕ್ತಿಯಲ್ಲಿರುವ ಎಲ್ಲಾ ಭಯವೂ
ಬಿಟ್ಟುಹೋಗುತ್ತದೆ.
ತಿಳಿಯಿರಿ, ಗಮನೀಯವಾದ ಅಂಶವೆಂದರೆ, ಪ್ರೀತಿಗೆ ಅಸಾಧಾರಣವಾದ ಶಕ್ತಿಯಿದೆ ಹಾಗೂ ಕಾಮಕ್ಕೂ ಸಹ. ನಿಮ್ಮ ಮೂಲಾಧಾರ ಚಕ್ರದಲ್ಲಿ ಬಹಳಷ್ಟು ಚೈತನ್ಯವಿದ್ದರೆ ಅದು ಇತರ ಚಕ್ರಗಳನ್ನು ಕೂಡಲೇ ತಳ್ಳಿಹಾಕುತ್ತದೆ. ನಿಮ್ಮ ಸ್ವಾಧಿಷ್ಠಾನ ಚಕ್ರದಲ್ಲಿ ಯಾವ ಭಯವೂ ಇರುವುದಿಲ್ಲ ಹಾಗೂ ನಿಮ್ಮ ಮಣಿಪೂರಕ ಚಕ್ರದಲ್ಲಿ ಯಾವ ಚಿಂತೆಗಳೂ ಇರುವುದಿಲ್ಲ. ಮೂಲಾಧಾರ ಚಕ್ರವು ಸಂಪೂರ್ಣ ಶಕ್ತಿಯುತವಾಗಿದ್ದಾಗ, ಈ ಉನ್ನತವಾದ ಚಕ್ರಗಳು ಕೆಲಸ ಮಾಡುವುದಿಲ್ಲ. ಆ ವ್ಯಕ್ತಿಯ ಅರಿವಿಲ್ಲದೆಯೇ ಅದು ಆತನಿಗೆ ತಿಳಿಯದ ಗುಪ್ತ ಸಾಮರ್ಥ್ಯವನ್ನು ಹೊರಹಾಕುತ್ತದೆ. ಆತನ ಸಾಮರ್ಥ್ಯವನ್ನು ಅದು ಬಾಹ್ಯಪ್ರಪಂಚಕ್ಕೂ ಹರಡುತ್ತದೆ.
ಬೇರೆ ಬೇರೆಯ ಜನರು ನಿಮ್ಮಲ್ಲಿ ಬೇರೆ ಬೇರೆ ಆಯಾಮಗಳನ್ನು ಸಕ್ರಿಯಗೊಳಿಸುತ್ತಾರೆ. ನಿಮ್ಮನ್ನು
ಪ್ರೀತಿಸುವವರೊಬ್ಬರಿದ್ದರೆ, ಪ್ರೀತಿಯು ನಿಮ್ಮಲ್ಲಿ ಜಾಗೃತವಾಗುತ್ತದೆ. ನಿಮಗೊಬ್ಬ ಮಗನೋ ಮಗಳೋ ಇದ್ದರೆ, ಆಗ ನಿಮ್ಮಲ್ಲಿ ಮಾತೃತ್ವದ ಭಾವನೆಯು ಜಾಗೃತವಾಗುತ್ತದೆ. ನಿಮ್ಮ ಮನಸ್ಸು ಬೇರೆಬೇರೆಯ ಆಯಾಮಗಳ ಅನುಭವವನ್ನು ಸ್ವೀಕರಿಸಲು ಸಿದ್ಧವಾಗಿದ್ದರೆ, ಆ ಆಯಾಮಗಳು ನಿಮ್ಮಲ್ಲಿ ಅರಳುತ್ತವೆ.
ನೀವು ಸಂಪೂರ್ಣವಾಗಿ ತೆರೆದ ಮನಸ್ಕರಾಗಿದ್ದರೆ, ನಿಮ್ಮ ಜೀವನದಲ್ಲಿ ನೀವು ಭೇಟಿಯಾಗುವ ಪ್ರತಿಯೊಬ್ಬರೂ ನಿಮ್ಮ ವಿಕಸನಕ್ಕೆ ಕಾರಣರಾಗುತ್ತಾರೆ. ಆದರೆ ನೀವು ಅಹಂಕಾರಿಯಾಗಿದ್ದರೆ, ನಿಮ್ಮ ಪ್ರೇಮಿಯಾಗಲೀ, ಬಾಳಸಂಗಾತಿಯಾಗಲೀ ನಿಮ್ಮನ್ನು ವಿಕಸನಗೊಳಿಸಲಾರರು. ದಯವಿಟ್ಟು ತಿಳಿಯಿರಿ, ಗಂಡ ಹೆಂಡಿರ ಸಂಬಂಧ ಅಥವಾ ಪ್ರೇಮಿಗಳಂತಹ ಸಂಬಂಧವನ್ನು ಕಂಡುಕೊಳ್ಳುವ ಮೊದಲು ಒಂದು ತೆರೆದ ಹೃದಯ ಹಾಗೂ ಅಹಂಕಾರರಹಿತ ಮನಸ್ಸನ್ನು ಸೃಷ್ಟಿಸಿಕೊಳ್ಳುವುದು ನಿಮ್ಮ ಒಂದು ದೊಡ್ಡ ಜವಾಬ್ದಾರಿ. ಆಗ ಆ ಭಾವನೆಯೇ ನಿಮ್ಮನ್ನು ಶಾಶ್ವತವಾಗಿ ಪರಿವರ್ತಿಸುತ್ತದೆ. ಈ ಶಾಶ್ವತ ಪರಿವರ್ತನೆಯಾಗದಿದ್ದರೆ, ನಿಮ್ಮ ಜೀವನದಲ್ಲಿ ಒಂದು ಮುಖ್ಯವಾದ ಆಯಾಮವನ್ನು ಕಳೆದುಕೊಳ್ಳುತ್ತೀರಿ.
ನಿಮ್ಮಿಂದೇಕೆ ನಿಜವಾದ ಪ್ರೀತಿಯನ್ನು
ಅನುಭವಿಸಲು ಆಗುವುದಿಲ್ಲ? ಅದು ಏಕೆಂದರೆ,
ನಿಮ್ಮ ಸಂಸ್ಕಾರಗಳಿಂದ, ಹಳೆಯ
ನೆನಪುಗಳೊಂದಿಗಿರುವ ನಿಮ್ಮ ಭಾವನಾತ್ಮಕ
ಸಂಬಂಧದಿಂದ. ನಿಮ್ಮ ಅಂತರಂಗವು ಭೂತ ಕಾಲಕ್ಕೆ
ಸಂಬಂಧಿಸಿದ ಅನೇಕ ವಿಷಯಗಳಿಂದ ತುಂಬಿದೆ.
ಆದ್ದರಿಂದ ನಿಮ್ಮ ಅಂತರಂಗವು ವರ್ತಮಾನಕ್ಕೆ
ದೊರೆತಿಲ್ಲ. ನಿಮ್ಮ ಪ್ರೀತಿಯ ಹಳೆಯ ನೆನಪುಗಳಿಗೆ
ಹೊಂದಿಕೊಳ್ಳುವಂತಹ ಜನ ಅಥವಾ ವಿಷಯಗಳನ್ನು
ಮಾತ್ರ ನಿಮ್ಮಿಂದ ಪ್ರೀತಿಸಲು ಸಾಧ್ಯ. ಹಿಂದಿನ
ಭಾವನಾತ್ಮಕ ಬಂಧನಗಳನ್ನು ಬಿಟ್ಟುಬಿಡಲು
ಸಾಧ್ಯವಾದರೆ, ಇದ್ದಕ್ಕಿದ್ದಂತೆ ಬಹಳಷ್ಟು ನಿಮ್ಮ
ಅಂತಃಸ್ಥಳವು ನಿಮಗೆ ದೊರೆತಿರುವುದನ್ನು
ಕಾಣಬಲ್ಲಿರಿ. ನೀವು ಆಗ ನಿಮ್ಮೆದುರಿಗಿರುವ
ಯಾರೊಂದಿಗಾದರೂ ಅವರ ಗತಕಾಲದ ಬಗ್ಗೆ
ಕೇಳದೆಯೇ ಅವರೊಂದಿಗೆ ಮನಸ್ಸನ್ನು
ತೆರೆದುಕೊಳ್ಳಬಹುದು.
ಕಾಮದಿಂದ ಪ್ರೀತಿಗೆ
ಕಾಮವು ಸಂತತಿಯು ಮುಂದುವರೆಯಲು
ಪ್ರಕೃತಿಯು ಒದಗಿಸಿರುವ ಒಂದು ಆದ್ಯ ಭಾವನೆ.
ಕಾಮವನ್ನು ಮೀರಿ ಹೋಗುವುದೇ ಮಾನವ
ಜೀವನದ ಅಂತಿಮ ಸಾಮರ್ಥ್ಯವನ್ನು ಅರಿಯಲು
ಇಡಬೇಕಾದ ಪ್ರಥಮ ಪ್ರಮುಖ ಹೆಜ್ಜೆ.
ಮನುಷ್ಯರು ಪ್ರೀತಿ ಹಾಗೂ ಕಾಮಗಳ ಬಗ್ಗೆ
ಎಂದೆಂದಿಗೂ ಗೊಂದಲಗೊಳ್ಳುತ್ತಾರೆ. ಪ್ರಾಣಿಗಳು
ಮಾತ್ರ ಕಾಮವನ್ನು ಹೊಂದಿರುತ್ತವೆ
ಎಂದುಕೊಳ್ಳುತ್ತಾರೆ. ವಾಸ್ತವವಾಗಿ ಗಂಡು ಹೆಣ್ಣು
ಕೂಡಿದಾಗ, ಶುದ್ಧವಾದ ಕಾಮುಕತೆಯನ್ನು
ಹೊಂದಲು ಪ್ರಾಣಿಗಳಿಂದ ಮಾತ್ರ ಸಾಧ್ಯ!
ಮನುಷ್ಯರು ತಮ್ಮ ವಿಚಾರಪರತೆಯಿಂದ
ಕಾಮಾಸಕ್ತರಾಗಲೂ ಸಾಧ್ಯವಿಲ್ಲ,
ಪ್ರೀತ್ಯಾಸಕ್ತರಾಗಲೂ ಸಾಧ್ಯವಿಲ್ಲ. ಆದ್ದರಿಂದಲೇ
ಅವರು ಅತೃಪ್ತಿಯನ್ನು ಹಾಗೂ ಅಪೂರ್ಣತಾ ಭಾವನೆಯನ್ನು ಹೊಂದುತ್ತಾರೆ.
ಲೈಂಗಿಕತೆಯು ಇಂಗಾಲವಾದರೆ, ಪ್ರೀತಿಯು ವಜ್ರ. ಲೈಂಗಿಕತೆಯು ಕೆಸರು ಹಾಗೂ ಪ್ರೀತಿಯು ಕೆಸರಿನಲ್ಲಿ ಅರಳುವ ತಾವರೆ. ಪದಾರ್ಥವು ಒಂದೇ ಆದರೂ ಅದನ್ನು ಹೇಗೆ ಸಂಸ್ಕರಿಸಬೇಕೆಂದು ತಿಳಿದಿರಬೇಕು. ನಿಮ್ಮ ನಿರೀಕ್ಷಣೆಗಳನ್ನು ಸುಮ್ಮನೆ ಬಿಟ್ಟುಬಿಡಿರಿ, ಆಗ ನೀವೊಂದು ಅಸಾಧಾರಣವಾದ ಚೈತನ್ಯದ ಹೆಚ್ಚಳವನ್ನು ಕಾಣುತ್ತೀರಿ.
ನಿಮ್ಮೊಳಗಿನ ಸ್ತ್ರೀ ಹಾಗೂ ಪುರುಷ ಚೈತನ್ಯವನ್ನು ಕಂಡುಕೊಳ್ಳಿರಿ
ಇಂದು ಜೀವವಿಜ್ಞಾನದ ಪ್ರಕಾರ, ಯಾವ ಪುರುಷನೂ ಶೇಕಡಾ 100 ಪುರುಷನಲ್ಲ, ಹಾಗೂ ಯಾವ ಸ್ತ್ರೀಯೂ ಶೇಕಡಾ 100 ಸ್ತ್ರೀಯಲ್ಲವೆಂದು ನಮಗೆ ತಿಳಿದಿದೆ. ಒಬ್ಬ ಪುರುಷನು ಶೇಕಡಾ 51 ಪುರುಷನಾಗಿದ್ದು, ಶೇಕಡಾ 49 ಸ್ತ್ರೀಯಾಗಿರಬಹುದು. ಅದೇ ರೀತಿ ಒಬ್ಬ ಮಹಿಳೆಯು ಶೇಕಡಾ 51 ಮಹಿಳೆಯಾಗಿದ್ದು, ಶೇಕಡಾ 49 ಪುರುಷನಾಗಿರಬಹುದು; ಕೇವಲ ಶೇಕಡಾ 1 ರಷ್ಟು ಮಾತ್ರ ವ್ಯತ್ಯಾಸವಿರಬಹುದು.
ನೀವು ನಿಮ್ಮ ತಂದೆ ಹಾಗೂ ತಾಯಿಯರ ಚೈತನ್ಯಗಳಿಂದ ಜನ್ಮ ಪಡೆದಿದ್ದೀರಿ. ಹಾಗಿದ್ದಲ್ಲಿ ನೀವು ಕೇವಲ ಪುರುಷ ಅಥವಾ ಕೇವಲ ಸ್ತ್ರೀಯಾಗಿರಲು ಹೇಗೆ ಸಾಧ್ಯ? ನಾವು ಒಪ್ಪುತ್ತೇವೋ ಇಲ್ಲವೋ, ನಾವು ಸ್ತ್ರೀ ಹಾಗೂ ಪುರುಷ ಚೈತನ್ಯಗಳ ಮೂರ್ತೀಕರಣ. ನಾವು ಸಂಪೂರ್ಣರು, ವಿಭಜನೆಗೊಂಡವರಲ್ಲ.
ಹುಟ್ಟಿದ ಕ್ಷಣದಿಂದ ಸಮಾಜವು ನಿಮ್ಮನ್ನು ಗಂಡೆಂದೋ ಅಥವಾ ಹೆಣ್ಣೆಂದೋ ಪಟ್ಟಿಹಚ್ಚಿರುತ್ತದೆ ಹಾಗೂ ನೀವು ಅದರಂತೆಯೇ ವರ್ತಿಸಬೇಕೆಂದು ಸಮಾಜವು ನಿರೀಕ್ಷಿಸುತ್ತದೆ. ಮಾನವನ ಸಹಜ ಗುಣವು ಪರಿಪೂರ್ಣತೆ. ಆತನು ತಾನು ಕಳೆದುಕೊಂಡ ತನ್ನ ಅರ್ಧದ ಬದಲಿಗಾಗಿ ಬಾಹ್ಯಪ್ರಪಂಚದಲ್ಲಿ ಹುಡುಕಲಾರಂಭಿಸುತ್ತಾನೆ. ಒಂದು ಗಂಡು ಮಗುವು ಒಂದು ಹೆಣ್ಣನ್ನು ಹುಡುಕುತ್ತದೆ ಹಾಗೂ ಹೆಣ್ಣು ಮಗು ಒಂದು ಗಂಡಿಗಾಗಿ ಹುಡುಕುತ್ತದೆ. ಇಲ್ಲಿಯೇ ಕಾಮದ ಇಡೀ ಪರಿಕಲ್ಪನೆ ಆರಂಭವಾಗುವುದು.
ನಮ್ಮ ‘ಭಾವಿ’ ವ್ಯಕ್ತಿ ಹೇಗಿರಬೇಕೆಂಬ ಕಲ್ಪನೆಯಿಂದ ಹುಡುಕಾಟವು ಆರಂಭವಾಗುತ್ತದೆ.
ಒಂದು ಸಣ್ಣ ಕಥೆ:
90 ವರ್ಷ ವಯಸ್ಸಿನ ಮುದುಕನೊಬ್ಬನು
ಪ್ರತಿದಿನವೂ ಸಮುದ್ರತೀರದ ಬಳಿ ಬೆಳಗಿನಿಂದ
ರಾತ್ರಿಯವರೆಗೆ ಕುಳಿತು, ಹೋಗಿಬರುವ ಜನರನ್ನು
ಗಮನಿಸುತ್ತಿದ್ದನು. ಇದನ್ನು ಗಮನಿಸಿದ ಮತ್ತೊಬ್ಬ
ವ್ಯಕ್ತಿಯು ಆತನ ಬಳಿ ಹೋಗಿ, ‘ದಿನವೂ ನೀವಿಲ್ಲಿ
ಕುಳಿತು ವಾಸ್ತವವಾಗಿ ಏನನ್ನು ಮಾಡುತ್ತೀರಿ?’
ಎಂದು ಕೇಳಿದನು.
ಆ ಮುದುಕನು, ‘ನನ್ನ ಮಡದಿಯಾಗಲು ಒಬ್ಬ
ಮಹಿಳೆಗಾಗಿ ಹುಡುಕುತ್ತಿದ್ದೇನೆ’ ಎಂದನು. ಆ
ವ್ಯಕ್ತಿಯು ದಿಗ್ಭ್ರಮೆಗೊಂಡು, ‘ನೀವು ನಿಮ್ಮ
ತಾರುಣ್ಯದಲ್ಲೇಕೆ ಆಕೆಗಾಗಿ ಹುಡುಕಲಿಲ್ಲ?' ಎಂದು ಕೇಳಿದನು.
ಮುದುಕನು, ‘ನನಗೆ 30 ವರ್ಷ
ವಯಸ್ಸಾದಾಗಿನಿಂದಲೂ ಹುಡುಕುತ್ತಲೇ ಇದ್ದೇನೆ'
ಎಂದು ನುಡಿದನು. ಆ ವ್ಯಕ್ತಿ ‘ನೀವು ಯಾವ ಬಗೆಯ
ಮಹಿಳೆಯನ್ನು ಅರಸುತ್ತಿದ್ದೀರಿ?' ಎಂದು
ಆಶ್ಚರ್ಯಚಕಿತನಾಗಿ ಕೇಳಿದನು.
ಮುದುಕನು ಉತ್ತರಿಸಿದನು 'ನಾನು ಒಬ್ಬ ಅತಿ-ಸೂಕ್ತಳಾದ ಮಹಿಳೆಯನ್ನು ಹುಡುಕುತ್ತಿದ್ದೇನೆ' ಎಂದು. ಆ ಮತ್ತೊಬ್ಬ ವ್ಯಕ್ತಿಯು, ‘ನಿಮಗಿನ್ನೂ ಅಂತಹ ಮಹಿಳೆಯು ದೊರೆತಿಲ್ಲವೆ?' ಎಂದು ಕೇಳಿದನು.
ಮುದುಕನು, ‘ನನ್ನ ಮನಸ್ಸಿನಲ್ಲಿದ್ದಂತಹ ಒಬ್ಬ
ಮಹಿಳೆಯನ್ನೇನೋ ಕಂಡೆ, ಆದರೆ ಆಕೆಗೆ ನಾನು
ಒಪ್ಪಿಗೆಯಾಗಲಿಲ್ಲ' ಎಂದು ಹೇಳಿದನು.
‘ಅದು ಏಕೆ?' ಎಂದು ಕೇಳಲು, ‘ಆಕೆಯೂ ಸಹ ಒಬ್ಬ ಅತಿ-ಸೂಕ್ತನಾದವನನ್ನು ಹುಡುಕುತ್ತಿದ್ದಳು!' ಎಂದು ವೃದ್ಧನು ಉತ್ತರಿಸಿದನು.
ನಾವು ನಮ್ಮೊಳಗೆ ಹೊತ್ತಿರುವ ಕಲ್ಪನೆಗೆ
ಸರಿಹೊಂದುವ ಅತಿ-ಸೂಕ್ತ ಜೋಡಿಯನ್ನು
ಬಯಸಿದಾಗ ಇದೇ ಆಗುವುದು.
ಆದರೆ ಒಂದು ದೀರ್ಘ ಹುಡುಕಾಟದ ನಂತರ, ನಮ್ಮ ಮನಸ್ಸಿನ ಕಲ್ಪನೆಗೆ ಸರಿಹೊಂದುವ ವ್ಯಕ್ತಿಯನ್ನು ಇದ್ದಕ್ಕಿದ್ದಂತೆ ಕಾಣುತ್ತೇವೆ - ಸ್ವಲ್ಪ ದೂರದಿಂದ. ಈ ಸಂದರ್ಭದಲ್ಲಿ ಆಗುವುದೇನೆಂದರೆ, ‘ಪ್ರೀತಿಯಲ್ಲಿ ಬೀಳುವುದು'. ಪ್ರೀತಿಯಲ್ಲಿ ಬೀಳುವುದರ ಹಿಂದಿರುವ ವಿಜ್ಞಾನ ಇದೇ. ಅದು ಯಾವಾಗಲೂ ‘ಪ್ರೀತಿಯಲ್ಲಿ ಬೀಳುವುದೇ' ಹೊರತು, ‘ಪ್ರೀತಿಯಲ್ಲಿ ಏಳುವುದು ಆಗುವುದೇ ಇಲ್ಲ!' ನಮ್ಮ ಪ್ರಬಲವಾದ ಆಸೆ ಆಕಾಂಕ್ಷೆಗಳ ಕಾರಣದಿಂದ ನಾವು ನೋಡಬೇಕೆಂದುಕೊಳ್ಳುವುದನ್ನು ನೋಡುತ್ತೇವೆ. ಈ ದೂರದ ಅಂತರವು ಕಾಪಾಡಲ್ಪಡುವವರೆಗೂ ಎಲ್ಲವೂ ಸುಗಮವಾಗಿರುತ್ತದೆ. ನಮ್ಮ ಕಲ್ಪನೆಯನ್ನು ಪರಸ್ಪರ ಪ್ರಕ್ಷೇಪಿಸಲು ಮುಂದುವರೆಯುತ್ತೇವೆ. ಆದರೆ ಆ ವ್ಯಕ್ತಿಯು ಹತ್ತಿರವಾದಂತೆಲ್ಲಾ, ಕಲ್ಪನೆ ಹಾಗೂ ವಾಸ್ತವತೆಯು ಸಂಪೂರ್ಣವಾಗಿ ಬೇರೆಯಾದುದೆಂದು ತಿಳಿಯುತ್ತೇವೆ.
ಯಾವ ಜೀವಂತ ವ್ಯಕ್ತಿಯೂ ನಮ್ಮ ಮನಸ್ಸಿನ
ಕಲ್ಪನೆಗೆ ಸರಿಹೊಂದಲು ಸಾಧ್ಯವಿಲ್ಲ, ಏಕೆಂದರೆ
ಕಲ್ಪನೆಯೇ ನಿಜಸ್ಥಿತಿಯಿಂದ ಕಟ್ಟಿದುದಲ್ಲ! ಯಾವ
ಕಲ್ಪನೆಯೂ ನಿಜಸ್ಥಿತಿಯೊಂದಿಗೆ
ಹೊಂದಿಸಲಾಗುವುದಿಲ್ಲ. ಏಕೆಂದರೆ, ದಿನದ
ಅಂತ್ಯದಲ್ಲಿ ಅದು ಬರಿಯ ಒಂದು ಕಲ್ಪನೆ, ಒಂದು
ಕಲ್ಪನಾಚಿತ್ರ-ಭ್ರಮೆ!
ಅಂತಿಮ ರಸವಾದ
ರಸವಾದ ಎಂದರೇನು? ತಾಮ್ರ ಅಥವಾ ಕಬ್ಬಿಣದಂತಹ ಒಂದು ಕೆಳಮಟ್ಟದ ಲೋಹವನ್ನು ಚಿನ್ನವನ್ನಾಗಿ ಬದಲಿಸುವ ಪ್ರಕ್ರಿಯೆಯೇ ರಸವಿದ್ಯೆ. ಅದೇ ರೀತಿ, ನಮ್ಮ ಅಂತಃಸತ್ವವು ಪಕ್ವವಾದಾಗ, ಮೂಲಭಾವನೆಯಾದ ಕಾಮದ ನಮ್ಮಿಂದ ಭಾವಿಸಲು ಸಾಧ್ಯವಾದ ಅತ್ಯಂತ ಮೇಲ್ಮಟ್ಟದ ಭಾವನೆಯಾದ ಪ್ರೀತಿಗೆ ಪರಿವರ್ತಿತವಾಗುತ್ತದೆ. ಅದೇ ರೀತಿ, ನಿಮ್ಮ ಕಲ್ಪನೆಗಳ ಅಶುದ್ಧತೆಯನ್ನು ತೆಗೆಯಿರಿ. ನಿಮ್ಮ ಸಂಬಂಧಗಳಿಗೆ ಸ್ನೇಹದ ಶುದ್ಧತೆಯನ್ನು ಸೇರಿಸಿರಿ ಹಾಗೂ ನಿಮ್ಮ ತಾಳ್ಮೆಯಿಂದ ಅದನ್ನು ಸಂಸ್ಕರಿಸಿರಿ. ಆರಂಭದಲ್ಲಿ ಜನರಿಗೆ ನಿಮ್ಮೆಲ್ಲಾಗುವ ಬದಲಾವಣೆಯನ್ನು ಅರ್ಥಮಾಡಿಕೊಳ್ಳಲು ಆಗದೇ ಇರಬಹುದು. ನಿಮ್ಮಲ್ಲಿ ನಂಬಿಕೆ ಹಾಗೂ ವಿಶ್ವಾಸವಿಟ್ಟು ಸುಮ್ಮನೆ ಮುಂದುವರೆಸಿರಿ. ನಿಮ್ಮ ಶ್ರದ್ಧೆ ಹಾಗೂ ಶಕ್ತಿಯು ನಿಮ್ಮ ಸುತ್ತಲಿರುವವರನ್ನು ಸಕಾರಾತ್ಮಕವಾಗಿ ಮುಟ್ಟಲೇಬೇಕು; ಬೇರೆ ದಾರಿಯೇ ಇಲ್ಲ.
ಪ್ರೀತಿಗೆ ಸ್ನೇಹವನ್ನು ಸೇರಿಸಿರಿ. ಈಗಲಾದರೂ
ನಮ್ಮ ಕಾಮವು ಮತ್ತೊಬ್ಬ ವ್ಯಕ್ತಿಯನ್ನು
ವಶಪಡಿಸಿಕೊಳ್ಳಲು ಆಳವಾಗಿ ಬೇರೂರಿದ
ಹಿಂಸಾಚಾರವಾಗಿದೆ. ಆ ಸಂಬಂಧಕ್ಕೆ ಸ್ನೇಹವನ್ನು
ಸೇರಿಸಿರಿ. ನಿಮ್ಮ ಜೊತೆಗಾರರನ್ನು –
ಆಕೆಯನ್ನಾಗಲೀ, ಆತನನ್ನಾಗಲೀ,
ಅವರಿರುವಂತೆಯೇ ಸ್ವಾಗತಿಸಿರಿ; ಕೇವಲ
ಒಪ್ಪಿಕೊಳ್ಳಬೇಡಿರಿ. ಅವರ ಮನಸ್ಸು, ದೇಹ ಹಾಗೂ
ಅಂತಃಸತ್ವಗಳು ಅದು ಇರುವಂತೆಯೇ ಸ್ವಾಗತಿಸಿರಿ
ಹಾಗೂ ಸ್ವೀಕರಿಸಿರಿ. ಆಗ ಕಾಮವು ಪ್ರೀತಿಯಾಗಿ
ತಿರುಗಿ ನಿಮ್ಮ ಅಂತಃಸತ್ವವು ಶಾಶ್ವತ
ಆನಂದದಲ್ಲಿರುವುದನ್ನು ಕಾಣುವಿರಿ.
ಪ್ರೀತಿಯು ಯಾವುದೇ ವ್ಯಕ್ತಿಗೂ ಸಹ ಜೀವ ತುಂಬುತ್ತದೆ. ಪ್ರೀತಿಯಿಂದ ಒಬ್ಬ ವ್ಯಕ್ತಿಯು ಒಂದು ಚೈತನ್ಯ ಸ್ವರೂಪಿ! ಪ್ರೀತಿಯಿಲ್ಲದಿದ್ದರೆ ಆ ವ್ಯಕ್ತಿಯು ಒಂದು ವಸ್ತುವಿಗೆ ಸಮಾನನಾಗುತ್ತಾನೆ! ಪ್ರೀತಿಯಿಲ್ಲದೇ, ಸುಂದರವಾದ ಪುರುಷನನ್ನೋ ಮಹಿಳೆಯನ್ನೋ ನೋಡಿದಾಗ, ಅವರಿಂದ ಏನನ್ನಾದರೂ ಪಡೆಯಬೇಕು ಎಂದು ಆಶಿಸಿದಾಗ, ಅವರನ್ನು ಒಂದು ವಸ್ತುವಿಗೆ ಸಮವಾಗಿಸುತ್ತೀರಿ. ಆ ವ್ಯಕ್ತಿಯನ್ನು ಪ್ರೀತಿಯಿಂದ ನೋಡಿದಾಗ ಮಾತ್ರ ಆ ವ್ಯಕ್ತಿಯು ಒಬ್ಬ ಚೈತನ್ಯಸ್ವರೂಪಿ, ಒಬ್ಬ ಸ ಜೀವಿಯಾಗುತ್ತಾನೆ.
'ಬ್ರಹ್ಮಚರ್ಯೆ' ಎಂದರೆ ನಿಮ್ಮೊಳಗೆ ಅಡಗಿರುವ ಅರ್ಧ ಭಾಗಕ್ಕೆ ಹಾತೊರೆಯದಿರುವುದು ಎಂದರ್ಥ, ಅಷ್ಟೇ. ನೀವು ಒಬ್ಬ ಗಂಡಾಗಿದ್ದರೆ, ನಿಮ್ಮೊಳಗೆ ಅಡಗಿಸಲ್ಪಟ್ಟ ಅರ್ಧಭಾಗವನ್ನು ಅಥವಾ ಹೆಣ್ಣನ್ನು ಕಳೆದುಕೊಳ್ಳದಿರುವಂತಹ ಪೂರೈಕೆಯನ್ನು ಅನುಭವಿಸಬೇಕು. ನೀವು ಒಂದು ಹೆಣ್ಣಾಗಿದ್ದರೆ, ಎಷ್ಟು ತೃಪ್ತರಾಗಿರುತ್ತೀರೆಂದರೆ, ಈ ಪೂರೈಕೆಯನ್ನು ಪಡೆಯಲು ಬಾಹ್ಯದಲ್ಲಿ ಹುಡುಕುವುದೇ ಇಲ್ಲ. ಈ ಪೂರೈಕೆಯನ್ನು ಗಳಿಸಿದಾಗ, ನೀವು ವಿವಾಹಿತರಾದರೂ, ಅಲ್ಲದಿದ್ದರೂ ನಿಮ್ಮ ಮನಸ್ಸಿನಲ್ಲಿ ಶಾಂತಿ ಇರುತ್ತದೆ. ಆಗಲೇ ನೀವು ವಿವಾಹಿತ ಜೀವನದಲ್ಲೂ ಬ್ರಹ್ಮಚಾರಿಯಾಗಿರಲು ಸಾಧ್ಯ! ಇದೇ ನಿಜವಾದ ಬ್ರಹ್ಮಚರ್ಯೆ.
ಧ್ಯಾನ
1. ದುಃಖಹರಣ ಧ್ಯಾನ
ಪೂರ್ಣಾವಧಿ : 30 ನಿಮಿಷಗಳು
ಈ ಧ್ಯಾನ ತಂತ್ರವು ನಿಮ್ಮೆಲ್ಲಾ ಅಡಗಿಸಲ್ಪಟ್ಟ ಭಾವನೆಗಳನ್ನೂ ಹೊರತರುತ್ತದೆ.
ಉಸಿರಾಟವು ಮನಸ್ಸಿಗೆ ಬಹಳ ಹತ್ತಿರವಾಗಿ
ಸಂಬಂಧಿಸಿರುತ್ತದೆ. ನಿಮ್ಮ ಚಿಂತನೆಯು
ಶಾಂತವಾಗಿದ್ದರೆ ನಿಮ್ಮ ಉಸಿರಾಟವು
ನಿರಾಳವಾಗಿರುತ್ತದೆ. ನಿಮ್ಮ ಚಿಂತನೆಯು
ಸಂಕಟಕಾರಿಯಾದರೆ ನಿಮ್ಮ ಉಸಿರಾಟವೂ
ಸಂಕಟಕರವಾಗುತ್ತದೆ.
ಈ ತಂತ್ರವನ್ನು ಆದಷ್ಟೂ ಬೆಳಗಿನ ಹೊತ್ತು
ಖಾಲಿ ಹೊಟ್ಟೆಯಲ್ಲಿ ಅಭ್ಯಸಿಸಿರಿ. 21 ದಿನಗಳ
ದುಃಖಹರಣ ತಂತ್ರದ ಅಭ್ಯಾಸವು ನಿಮ್ಮ
ಅಂತಃಸತ್ವವನ್ನು ಪರಿವರ್ತಿಸಿ, ನಿಮ್ಮ ಮುಖ ಹಾಗೂ
ದೇಹಕ್ಕೆ ಕಾಂತಿಯನ್ನು ತರುತ್ತದೆ.
ಹಂತ 1 : 10 ನಿಮಿಷಗಳು
ನಿಂತುಕೊಂಡು ನಿಮ್ಮ ಕಣ್ಣುಗಳನ್ನು ಮುಚ್ಚಿರಿ.
ಈ ಧ್ಯಾನದ ಮೊದಲ ಭಾಗದಲ್ಲಿ ನಿಮ್ಮ ಮಾನಸಿಕ
ವ್ಯವಸ್ಥೆಗೆ ಆಳವಾದ ಉಸಿರಾಟದಿಂದ ಪೂರ್ಣವಾಗಿ
ಲವಲವಿಕೆಯನ್ನು ತುಂಬಲಾಗುತ್ತದೆ. ಈ ಚೈತನ್ಯವು
ನಿಮ್ಮೆಲ್ಲಾ ಅಡಗಿಸಲ್ಪಟ್ಟ ಭಾವನೆಗಳನ್ನೂ ಮಂಜಿನ
ಗಡ್ಡೆಯು ಕರಗುವಂತೆ ಕರಗಿಸುತ್ತದೆ.
ಆಳವಾಗಿ, ಅಸ್ತವ್ಯಸ್ತವಾಗಿ, ನಿಮ್ಮ ದೇಹದ ಆಳದಿಂದ, ನಿಮ್ಮ ಬಾಯಿಯನ್ನು ಮುಚ್ಚಿ, ಸದಾ ನಿಮ್ಮ ಮೂಗಿನ ಮೂಲಕ ಉಸಿರಾಡಿರಿ. ನಿಮ್ಮ ಕೈಗಳನ್ನು ಎತ್ತಿ ನಂತರ ಕೈಗಳನ್ನು ಕೆಳಕ್ಕೆ ತರುತ್ತಾ ಮಂಡಿಗಳನ್ನು ಅರ್ಧ ಕುಕ್ಕರಿಸುವ ಸ್ಥಿತಿಯವರೆಗೂ ಬಾಗಿಸಿ, ಮತ್ತೆ ಮೇಲೇರಿರಿ. ಒಂದು ಪಕ್ಷಿಯು ಹಾರುತ್ತಿರುವಂತೆ ದೇಹವನ್ನು ಮೇಲಕ್ಕೂ ಕೆಳಕ್ಕೂ ಚಲಿಸುತ್ತಾ, ಮಂಡಿಗಳನ್ನು ಮೇಲಕ್ಕೂ ಕೆಳಕ್ಕೂ


ಚಲಿಸುತ್ತಾ, ಕೈಗಳನ್ನು ಮೇಲಕ್ಕೂ ಕೆಳಕ್ಕೂ ನಿಮ್ಮ ಉಸಿರಾಟಕ್ಕೆ ಹೊಂದಿಕೊಳ್ಳುವಂತೆ ಆಡಿಸಿರಿ.
ಈ ಚಲನೆಗಳನ್ನು ನಿಧಾನವಾಗಿ ಉಸಿರನ್ನು
ತೆಗೆದುಕೊಂಡಾಗ ಮೇಲಕ್ಕೂ, ಉಸಿರನ್ನು ಬಿಡುವಾಗ
ಕೆಳಕ್ಕೂ ಸರಿಹೊಂದಿಕೊಳ್ಳುವಂತೆ ಮಾಡಿರಿ.

ಹಂತ 2 : 10 ನಿಮಿಷಗಳು
ಕಣ್ಣುಗಳನ್ನು
ಮುಚ್ಚಿ, ನಿಮ್ಮ ದೇಹದ
ಪ್ರತಿಯೊಂದು ಭಾಗ-
ವನ್ನೂ ಒಂದೊಂದು
ಭಾಗವಾಗಿ,
ಒಂದೊಂದು ಅಂಗ-
ವಾಗಿ ಬಿಗಿದಿಡಿದು,
ನಂತರ ವಿರಮಿಸಿರಿ.
ಒಂದು ಅಂಗವನ್ನು
ಬಿಗಿದು ವಿರಮಿಸಿ,
ನಂತರ ಮತ್ತೊಂದಕ್ಕೆ
ಸಾಗಿರಿ. ನಿಮ್ಮ
ಪಾದಗಳಿಂದ ಆರಂಭಿಸಿರಿ; ನಂತರ ಕಾಲುಗಳು;
ನಂತರ ತೊಡೆಗಳು; ನಂತರ ಹೊಟ್ಟೆ ಹಾಗೂ
ಸೊಂಟ; ನಂತರ ಎದೆ ಹಾಗೂ ಬೆನ್ನಿನ ಮೇಲ್ಬಾಗ;
ನಂತರ ನಿಮ್ಮ ಕೈ ಬೆರಳಿನ ತುದಿಯಿಂದ ಭುಜಗಳು;
ನಂತರ ಕತ್ತು ಹಾಗೂ ಭುಜಗಳು; ನಂತರ ನಿಮ್ಮ
ಮುಖ ಹಾಗೂ ಕಡೆಯದಾಗಿ ನಿಮ್ಮ ತಲೆಯ
ಮೇಲ್ಬಾಗ. ಮುಂದಿನ ಅಂಗಕ್ಕೆ ಸಾಗುವ ಮೊದಲು,
ನಿಮ್ಮ ಇಡೀ ದೇಹವನ್ನು ವಿರಮಿಸಿರಿ. 10 ನಿಮಿಷಗಳ
ನಂತರ, ನೀವು ಒಳಗೆ ಬರಿದಾಗಿರುತ್ತೀರಿ; ನೀವು
ಸಮಾಧಾನದಿಂದ ಶಾಂತ ಮಾನಸ್ಕರಾಗಿ
ನೆಮ್ಮದಿಯಿಂದಿರುತ್ತೀರಿ.
ಹಂತ 3 : 10 ನಿಮಿಷಗಳು
ಕುಳಿತುಕೊಂಡು ನಿಮ್ಮ ಕಣ್ಣುಗಳನ್ನು ಮುಚ್ಚಿರಿ;
'ಹೂ'ಕಾರ ಶಬ್ದವನ್ನು ಮಾಡಿರಿ. ಬರಿಯ 'ಹೂ'
ಎಂಬ ಪದವನ್ನು ಉಚ್ಚರಿಸಿರಿ. ಇದನ್ನು
ಆಳವಾಗಿಯೋ, ಗಟ್ಟಿಯಾಗಿಯೋ ಉಚ್ಚರಿಸುವ
ಅಗತ್ಯವಿಲ್ಲ. ಒಂದು ನಿರಾಳವಾದ ರೀತಿಯಲ್ಲಿ
ಉಚ್ಚರಿಸಿರಿ. ಉಚ್ಚರಿಸುವಾಗ ನಿಮ್ಮ ಅಂತಃಸತ್ವದ
ಒಳಗೂ ಹೊರಗೂ ಏನೇ ಆದರೂ ಅದನ್ನು ಸುಮ್ಮನೆ
ಗಮನಿಸಿರಿ.
ವಾಸ್ತವವಾಗಿ ಈ ತಂತ್ರದ ಮೊದಲೆರಡು
ಭಾಗಗಳು ಮೂರನೆಯ ಭಾಗವಾದ ವಾಸ್ತವ
ಧ್ಯಾನಕ್ಕೆ ಒಂದು ಸಿದ್ಧತೆ. ಮೂರನೆಯ ಹಂತಕ್ಕೆ
ಬಂದಾಗ, ಮನಸ್ಸು ಅನಾಯಾಸವಾಗಿ ತಾನಾಗಿಯೇ
ಮೌನವಾಗುತ್ತದೆ. ಮೌನವನ್ನು ನಿಮ್ಮ ಮೇಲೆ
ಬಲಾತ್ಕರಿಸಲಾಗುವುದಿಲ್ಲ. ಅದು ತಾನಾಗಿಯೇ
ಉಂಟಾಗಬೇಕು.
ಈ ನೆಮ್ಮದಿಯ ಸ್ಥಿತಿಯಲ್ಲಿ ನಗುಮೊಗದಿಂದ
ಆನಂದದ ಭಾವನೆಯಲ್ಲಿ ಸ್ವಲ್ಪಕಾಲ ಉಳಿಯಿರಿ.
ಈ ಸಮಯದಲ್ಲಿ ಅನೇಕ ಅನುಭವಗಳಾಗಬಹುದು.
ಅವನ್ನು ಒಂದು ಟಿ.ವಿ.ಯನ್ನು ವೀಕ್ಷಿಸುವಂತೆ
ವೀಕ್ಷಿಸಿರಿ. ನಿಮ್ಮ ಮಾನಸ್ಸಿನ ಒಂದೊಂದೂ
ಆಲೋಚನೆಯನ್ನೂ ಗಮನಿಸಿರಿ.