KAILASA Library/ಜೀವನ್ಮುಕ್ತಿ/ನೋವು ಎಂಬುದು ಪರಮಗುರುSign in
ಜೀವನ್ಮುಕ್ತಿ

ನೋವು ಎಂಬುದು ಪರಮಗುರು

This text was machine-transcribed from the printed book and may contain errors. Select the words and choose “Report a mistake”.

ಅನೇಕವೇಳೆ ಭಯವೇ ನೋವಾಗಿ
ಕಾಣಿಸಿಕೊಳ್ಳುತ್ತದೆ. ಪ್ರಪಂಚದಲ್ಲಿ ಅತ್ಯಂತ
ಭಯಂಕರವಾದ ವಿಷಯವೇ ನೋವು.

ಎಲ್ಲಾ ಜೀವಿಗಳೂ ಹೆದರುವುದು ಒಂದಕ್ಕೇ –
ಅದೇ ನೋವು. ಆಳವಾಗಿ ಪರಿಶೀಲಿಸಿದರೆ ಜನರು
ಸಾವಿಗೆ ಹೆದರುವುದಕ್ಕಿಂತಲೂ
ಮರಣಕಾಲದಲ್ಲಾಗಬಹುದಾದ ಸಂಕಟ ಹಾಗೂ
ಯಾತನೆಗೆ ಹೆಚ್ಚಾಗಿ ಹೆದರುತ್ತಾರೆ! ಕೆಲವರಿಗೆ
ಬಡತನದ ಭಯ, ಕೆಲವರಿಗೆ ಸಂಬಂಧಗಳ ಭಯ,
ಮತ್ತೆ ಕೆಲವರಿಗೆ ರೋಗ-ರುಜಿನಗಳ ಭಯ. ಆದರೆ
ಈ ಎಲ್ಲಾ ವಿಷಯಗಳನ್ನು ಅನುಭವಿಸುವಾಗ ಆಗುವ
ನೋವೇ ಎಲ್ಲಾ ಭಯಗಳ ಮೂಲಕಾರಣ. ಈ ಎಲ್ಲ
ಭಯಗಳೂ ನೋವಿನ ಭಯದಿಂದಲೇ
ಉಂಟಾಗುವುವು.

ನೋವೆಂದರೇನು?

ನೋವು ದೈಹಿಕ, ಮಾನಸಿಕ ಅಥವಾ ಭಾವನಾತ್ಮಕವಾಗಿರಬಹುದು.

ದೈಹಿಕ ನೋವು ದೇಹಕ್ಕೆ ಮೂಲಭೂತವಾದ ಒಂದು ಅವಶ್ಯಕತೆ. ಸ್ವಲ್ಪ ಯೋಚಿಸಿ ನೋಡಿ, ದೇಹದಲ್ಲಿ ನೋವೇ ಆಗದಿದ್ದರೆ, ಆಕಸ್ಮಿಕವಾಗಿಯಾದರೂ ನಮ್ಮನ್ನು ನಾವೇ ಘಾಸಿಗೊಳಿಸಿಕೊಂಡು, ನಮ್ಮ ಮುಖ, ಕೈಕಾಲುಗಳನ್ನೂ ಸಹ ಇಂದಿನ ಕೇಶಾಲಂಕಾರದಂತೆ ಶೃಂಗಾರ ಮಾಡಿಕೊಳ್ಳಲಾರಂಭಿಸುತ್ತಿದ್ದೆವೋ ಏನೋ. ವಾಸ್ತವವಾಗಿ ನೋವು ಎಂಬುದು ದೇಹವು ಮನಸ್ಸಿಗೆ ‘ನನಗೆ ಗಮನಕೊಡು’ ಎಂದು ಮನಸ್ಸಿಗೆ ಬರೆಯುವ ಕೋರಿಕೆಯ ಪತ್ರ! ಏಕೆಂದರೆ ಗಮನವೇ ಚೈತನ್ಯ. ಒಂದು ನಿರ್ದಿಷ್ಟವಾದ ಜಾಗಕ್ಕೆ ಗಮನವನ್ನು ಕೊಟ್ಟಾಗ, ಆ ಜಾಗಕ್ಕೆ ಅದು ಚೈತನ್ಯವಾಗುತ್ತದೆ. ದೇಹವು ನೋವನ್ನು ತೋರ್ಪಡಿಸಿದಾಗ, ಅದು ವಾಸ್ತವವಾಗಿ ತನ್ನನ್ನು ಗುಣಪಡಿಸಬಲ್ಲ ಗಮನವನ್ನು ಅಥವಾ ಚೈತನ್ಯವನ್ನು ಕೋರುತ್ತಿರುತ್ತದೆ.

ನಿಮಗಿಷ್ಟವಿಲ್ಲದ ಸನ್ನಿವೇಶವನ್ನು
ಎದುರಿಸಬೇಕಾಗಿ ಬಂದಾಗ ಮೂಡುವ ಭಾವನೆಯೇ
ಮಾನಸಿಕ ಅಥವಾ ಭಾವನಾತ್ಮಕ ನೋವು.
ಭಾವನಾತ್ಮಕ ನೋವು ಭೌತಿಕ ಶರೀರವನ್ನು
ಗಾಢವಾಗಿ ಘಾಸಿಗೊಳಿಸಬಹುದೆಂದು

ಸಂಶೋಧನೆಗಳು ತೋರಿಸಿವೆ. ಉದಾಹರಣೆಗೆ,
ಲೈಂಗಿಕತೆಯ ಆಸಕ್ತಿಯನ್ನು ಅದುಮಿಡುವುದರಿಂದ
ಉಂಟಾಗುವ ಭಾವನೆಗಳು ಕೆಳಬೆನ್ನಿನ
ತೊಂದರೆಗಳಿಗೆ ಕಾರಣವಾಗಬಹುದು;
ವಿಪರೀತವಾಗಿ ಜವಾಬ್ದಾರಿಯನ್ನು ಹೊರುವುದು
ಹೆಗಲು ನೋವನ್ನುಂಟುಮಾಡಬಹುದು.

ಮುಖ್ಯವಾದುದೊಂದು ವಿಷಯವನ್ನು
ತಿಳಿದುಕೊಳ್ಳಿರಿ. ದೈಹಿಕ ನೋವಾಗಲೀ, ಮಾನಸಿಕ
ನೋವಾಗಲೀ, ವರ್ತಮಾನದ ಬಗ್ಗೆ ಇರುವ
ಪ್ರತಿರೋಧದಿಂದಲೇ ಸಂಭವಿಸುವುದು.

ಕಾಲ ಹಾಗೂ ತಿಳಿವಳಿಕೆ

ನಿಮ್ಮ ಜೀವನದಲ್ಲಿ, ಮಗುವನ್ನು
ಕಳೆದುಕೊಳ್ಳುವುದೋ, ಪತಿ ಅಥವಾ ಪತ್ನಿಯು
ನಿಮ್ಮನ್ನು ತೊರೆಯುವುದೋ, ಸ್ನೇಹದಲ್ಲಿ
ಒಡಕುಂಟಾಗುವುದೋ ಇಂತಹ
ನೋವುಂಟುಮಾಡುವ ಘಟನೆಯು ಸಂಭವಿಸಿದಾಗ
ನೀವು ಎಷ್ಟೇ ನೊಂದರೂ, ಕಾಲಕಳೆದಂತೆ ಅದನ್ನು
ಒಪ್ಪಿಕೊಳ್ಳುತ್ತೀರಿ. ಹಲವಾರು ದಿನಗಳು ನೀವು
ಅಳಬಹುದು, ರಾತ್ರಿ-ಹಗಲು ಚಿಂತೆಗೀಡಾಗಬಹುದು.
ಆದರೆ ಕಡೆಗೆ ಏನಾಯಿತೋ ಅದನ್ನು
ಒಪ್ಪಿಕೊಳ್ಳಬಹುದು. ಕಾಲವು ಎಲ್ಲವನ್ನೂ
ಗುಣಪಡಿಸುತ್ತದೆ ಎಂಬುದೊಂದು ಪ್ರಚಲಿತ ಗಾದೆ.
ಗುಣವಾಗಲು ಕಾಲಾವಕಾಶ ಏಕೆ ಬೇಕಾಗುವುದು
ಎಂದರೆ, ಒಂದು ಘಟನೆಯು ಸಂಭವಿಸಿದಾಗ,
ನೋವನ್ನೂ, ಹಿಂಸೆಯನ್ನೂ
ಪ್ರಜ್ಞಾಪೂರ್ವಕವಾಗಿಯೂ, ಅರಿವಿನಿಂದಲೂ
ಎದುರಿಸಲು ನೀವು ಸಿದ್ಧವಾಗಿಲ್ಲದೇ
ಇರುವುದರಿಂದಲೇ.

ನೀವು ನೋವನ್ನು ಗಮನಿಸಬಲ್ಲಿರಾದರೆ ನಿಮ್ಮಲ್ಲುಂಟಾಗುವ ಭಾವನೆಯನ್ನು ಅರಿವಿನಿಂದ ನೋಡುವಿರಾದರೆ, ಹಾಗೂ ನೋವನ್ನನುಭವಿಸುತ್ತಿರುವಾಗ ಉಂಟಾಗುವ ಮನದ ಲೀಲೆಯನ್ನು ನೋಡಬಲ್ಲಿರಾದರೆ, ಆಗ ಅದರಿಂದ ಒಂದು ತಿಳಿವಳಿಕೆ ಮೂಡಿ, ತಕ್ಷಣವೇ ಅದು ಗುಣವಾಗುತ್ತದೆ. ತಿಳಿವಳಿಕೆ ಹೊಂದಲು ನೀವು ತಯಾರಾಗಿಲ್ಲದಿರುವುದರಿಂದ ಸಮಯ ಬೇಕಾಗುತ್ತದೆ. ಹಾಗಾಗಿ ಬಹಳ ವ್ಯಸನಕ್ಕೀಡಾಗುವಿರಿ. ನಿಧಾನವಾಗಿ, ಕೆಲವು ವಾರಗಳ, ತಿಂಗಳುಗಳ, ಅಷ್ಟೇ ಏಕೆ ವರ್ಷಗಳ ನಂತರ, ಘಟನೆಯು ಮಸುಕಾಗುತ್ತದೆ, ಅದು ಒಂದು ಹಳೆಯ ನೆನಪಾಗುತ್ತದೆ.

ಏನೇ ಆಗಲಿ, ಯಾತನೆಯು ನಿಮ್ಮ
ಮಾನಸ್ಸಿನಾಳದಿಂದ ಪೂರ್ಣವಾಗಿ
ಮರೆಯಾಗಿರುವುದಿಲ್ಲ. ಅಗಲಿದ ಮಗುವನ್ನೋ,
ಗಂಡನನ್ನೋ ನೆನಪಿಗೆ ತರುವ ವ್ಯಕ್ತಿಯು
ಎದುರಾದರೂ ಅದು ಮೇಲೆಳುತ್ತದೆ.
ಉದಾಹರಣೆಗೆ ಅಗಲಿದ ವ್ಯಕ್ತಿಯ ರೀತಿಯಲ್ಲೇ
ಮಾತನಾಡುವ, ನಡೆಯುವ ಅಥವಾ ನಗುವ ವ್ಯಕ್ತಿ
ಎದುರಾದರೂ, ಮತ್ತೆ ಗಾಯವು ತೆರೆದುಕೊಳ್ಳುತ್ತದೆ.
ಹಳೆಯ ನೆನಪುಗಳನ್ನೇ ನೀವು
ಹೊತ್ತುಕೊಂಡಿರುವುದರಿಂದ ನಿಮಗೆ
ನೋವಾಗುತ್ತದೆ. ಈ ಕಾರಣದಿಂದ ಜೀವನವು
ಭಾರವಾಗಿ ಸಹಿಸಲಸಾಧ್ಯವೆನಿಸುತ್ತದೆ. ಆಗ ಹಿಂದಿನ
ಜೀವನದ ನೆನಪಿಗೆ ಜೋತುಬೀಳುತ್ತೀರಿ:
ಮಗುವಾಗಿದ್ದಾಗ, ಹದಿಹರೆಯದವರಾಗಿದ್ದಾಗ,

ಮೊದಲಬಾರಿ ಕೆಲಸಕ್ಕೆ ಹೋಗಿದ್ದಾಗ - ನೀವು ಅನುಭವಿಸಿದ ಜೀವನದ ಎಲ್ಲ ಸ್ತರಗಳ ಎಲ್ಲಾ ಯಾತನೆಗಳ ಮತ್ತು ಮಾಡಿದ ತಪ್ಪುಗಳ ನೆನಪನ್ನು ಮಾರೆಯದೆ ಮೆಲುಕುಹಾಕುತ್ತೀರಿ. ಹಿಂದೆ ನಡೆದುಹೋದುದಕ್ಕೆ ಉಂಟಾದ ಭಾವನೆಗಳ ಹೊರೆಯನ್ನು ಪ್ರತಿಸಲವೂ ಅನುಭವಿಸುವಾಗ ಅದು ನೋವಾಗಿ ಪರಿಣಮಿಸುತ್ತದೆ. ಒಂದು ವೇಳೆ ನೀವು ಹಿಂದಿನದೆಲ್ಲವನ್ನೂ ಬಿಟ್ಟುಬಿಡಲು ತೀರ್ಮಾನಿಸಿದರೆ ಹಾಗೂ ಪ್ರತಿಯೊಂದು ಸನ್ನಿವೇಶವನ್ನೂ ಹೊಸದೃಷ್ಟಿಯಿಂದ ವೀಕ್ಷಿಸಲು ತೀರ್ಮಾನಿಸಿದರೆ ಆಗ ಆ ನೋವು ಅಷ್ಟಾಗಿರುವುದಿಲ್ಲ. ನಿಮಗೆ ತಕ್ಷಣ ಗುಣಹೊಂದಿದ ಅನುಭವವಾಗುತ್ತದೆ. ಆ ಬೇಗುದಿಯಿಂದ ಹೊರಬರಲು ಹೆಚ್ಚುಕಾಲ ಹಿಡಿಸುವುದಿಲ್ಲ.

ನೋವು ಮತ್ತು ನಲಿವು -

ಒಂದೇ ನಾಣ್ಯದ ಎರಡು ಮುಖಗಳು

ಒಂದು ಸಣ್ಣ ಕಥೆ:

ಒಮ್ಮೆ ಒಬ್ಬ ಶಿಷ್ಯನು ತನ್ನ ಗುರುಗಳ ಬಳಿ ಹೋಗಿ ‘ಗುರುಗಳೇ ನನಗೆ ಧ್ಯಾನಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಕಾಲುಗಳು ನೋಯುತ್ತವೆ, ನನಗೆ ಚಿತ್ತೈಕಾಗ್ರತೆ ಇರುವುದಿಲ್ಲ' ಎಂದನು.

ಗುರುಗಳು ಸಾವಧಾನವಾಗಿ, 'ಅದು ಹೋಗುತ್ತದೆ' ಎಂದರು.

ಎರಡು ವಾರಗಳು
ಕಳೆದು ಶಿಷ್ಯನು
ಗುರುಗಳ ಬಳಿ
ಮತ್ತೊಮ್ಮೆ ಹೋಗಿ,
'ಈ ಬಾರಿ, 'ನಾನು ಚೆನ್ನಾಗಿ ಧ್ಯಾನಮಾಡಬಲ್ಲೆ,
ನಾನು ಅರಿವಿನಿಂದ ಕೂಡಿ, ಆನಂದವಾಗಿದ್ದೇನೆ'
ಎಂದನು.

ಗುರುಗಳು ಮತ್ತೊಮ್ಮೆ ‘ಅದು ಹೋಗುತ್ತದೆ' ಎಂದರು.

ನೋವು ಮತ್ತು ನಲಿವುಗಳ ಮೂಲವು ಒಂದೇ. ಅದು ಎರಡು ಹೆಸರುಗಳುಳ್ಳ ಒಂದೇ ಅನುಭವ. ಅದು ಹೀಗೆ: ಒಬ್ಬನಿಂದಲೇ ಇಬ್ಬರು ಅಂಗಮರ್ದನ ಮಾಡಿಸಿಕೊಳ್ಳುತ್ತಾರೆ. ಒಬ್ಬನು ಅದು ಹಾಯಾಗಿದ್ದು, ಚೇತೋಹಾರಿಯಾಗಿದ್ದ ಅನುಭವವಾಗಿತ್ತೆಂದು ಭಾವಿಸುತ್ತಾನೆ. ಮತ್ತೊಬ್ಬನು ಅದರಿಂದ ಬಾಧೆಯಾಯಿತೆಂದು ಭಾವಿಸುತ್ತಾನೆ! ಒಂದೇ ಅಂಗಮರ್ದನವು, ಮಾಡಿಸಿಕೊಂಡವರ ಮೇಲೆ ಆಧಾರಿತವಾಗಿ, ನೋವು ಅಥವಾ ನಲಿವಿನಂತೆ ತೋರುತ್ತದೆ.

ಜೀವನವು ಈ ಎರಡೂ ವಿರುದ್ಧಗಳನ್ನು
ಹೊಂದಿದೆ-ನೋವು ಮತ್ತು ನಲಿವು. ನೋವು-
ನಲಿವುಗಳೆರಡೂ ಮನಸ್ಸಿನಿಂದಲೇ ಬಂದುವು.
ಮನಸ್ಸು ಯಾವಾಗಲೂ ಒಂದು ವಿಪರೀತದಿಂದ
ಮತ್ತೊಂದಕ್ಕೆ ಹೋಗುತ್ತದೆ. ಅದು ಮಧ್ಯಪಥದಲ್ಲಿ
ಬೀಳುವುದು ಅಪರೂಪ. ನಲಿವಿನಿಂದ ನೋವಿಗೂ,
ನೋವಿನಿಂದ ನಲಿವಿಗೂ ನೀವು ಓಲಾಡುತ್ತಿರುತ್ತೀರ.
ಹಿಂದೆಯೇ ನೋಡಿದಂತೆ, ನೋವು ನಲಿವುಗಳು
ಅದನ್ನು ಅನುಭವಿಸುವವನನ್ನು ಅವಲಂಬಿಸಿರುತ್ತವೆ.

ನಿಮಗೆ ನಲಿವೆಂದು ತೋರುವುದು ಮತ್ತೊಬ್ಬರಿಗೆ ನೋವೆಂಬಂತೆ ತೋರಬಹುದು.

ಆತ್ಮಜ್ಞಾನಕ್ಕೆ ವಿವಿಧ ಮಾರ್ಗಗಳನ್ನು-
ಪದೇಶಿಸುವ ಭಗವದ್ಗೀತೆಯಲ್ಲಿ ಪರಮಜ್ಞಾನಿ
ಕೃಷ್ಣಪರಮಾತ್ಮನು ಸುಂದರವಾಗಿ ಹೀಗೆ
ಹೇಳುತ್ತಾನೆ, ‘ಯಾವಾತನು ನೋವು ನಲಿವುಗಳನ್ನು
ಒಂದೇ ಸಮನಾಗಿ ಕಾಣುತ್ತಾನೆಯೋ, ಮಣ್ಣು, ಕಲ್ಲು,
ಹೊನ್ನುಗಳನ್ನು ಸಮದೃಷ್ಟಿಯಲ್ಲಿ ಕಾಣುತ್ತಾನೆಯೋ,
ಹೊಗಳಿಕೆ ತೆಗಳಿಕೆಗಳನ್ನು ಒಂದೇ ರೀತಿಯಾಗಿ
ಕಾಣುವ ಬುದ್ಧಿಯುಳ್ಳವನೋ, ಮಾನಾಪಮಾನಗಳಿಗೆ
ಧೃತಿಗೆಡುವುದಿಲ್ಲವೋ, ಯಾರು ಶತ್ರು ಮಿತ್ರರನ್ನು
ಒಂದೇ ರೀತಿಯಾಗಿ ಕಾಣುತ್ತಾನೆಯೋ, ಆತನನ್ನು
ನೈಸರ್ಗಿಕ ನಿಯಮಗಳನ್ನು ಮೀರಿಹೋದವನೆಂದು
ಹೇಳಲಾಗುತ್ತದೆ. ಆತನಿಗೆ ನೋವು ನಲಿವುಗಳು
ಸಮನಾಗಿದ್ದು, ಆತನು ಜ್ಞಾನೋದಯಕ್ಕೆ
ಸಿದ್ಧನಾಗಿರುತ್ತಾನೆ’ ಎಂದು.

ನೋವು ನಲಿವುಗಳಿಂದ ಮುಕ್ತರಾಗಿರಿ

ಬುದ್ಧನು ಹೇಳುತ್ತಾನೆ, ‘ನೋವು
ನಲಿವುಗಳೆರಡರಿಂದಲೂ ಮುಕ್ತರಾಗಿರಿ’ ಎಂದು.
ನಲಿವಿಗಾಗಿ ಹಂಬಲಿಸುವುದೂ, ನೋವನ್ನು
ಸಲಹುವುದೂ ಎರಡೂ ಒಂದೇ ಅನುಭವದ ಎರಡು
ರೂಪಗಳು. ಎರಡೂ ಸರಪಳಿಗಳೇ - ನೋವು
ವಿಕಾರವಾದ ಸರಪಳಿಯಾದರೆ, ನಲಿವು
ಸುಂದರವಾದ ಸರಪಳಿಯಾಗಿ ಕಾಣಬಹುದು.
ಹಗಲನ್ನು ರಾತ್ರಿಯೂ, ರಾತ್ರಿಯನ್ನು ಹಗಲೂ
ಹಿಂಬಾಲಿಸುವಂತೆ ನೋವು ನಲಿವುಗಳು
ಒಂದನ್ನೊಂದು ಹಿಂಬಾಲಿಸುತ್ತಿರುತ್ತವೆ.

ನೋವು, ನಲಿವುಗಳೆರಡೂ ಮನೋನಿರ್ಮಿತವೆಂಬುದನ್ನು ಅರಿತಾಗ, ಅವು ಅಶಾಶ್ವತವೆಂದೂ, ಸಾಬೂನಿನ ಗುಳ್ಳೆಗಳಂತೆ ಬಂದು ಹೋಗುವಂತಹವುಗಳೆಂದೂ ಅರಿಯುವಿರಿ. ನಿಮ್ಮ ನಲಿವನ್ನು ಕಿತ್ತುಕೊಳ್ಳಲು ಬೇರೆಯವರ ಅಗತ್ಯವಿಲ್ಲ, ಏಕೆಂದರೆ ನಿಮ್ಮ ಮನಸ್ಸು, ತನ್ನ ಸಹಜವಾದ ಸ್ವಭಾವದಿಂದಲೇ ಲೋಲಕದಂತೆ ನೋವೆಂಬ ಇನ್ನೊಂದು ವಿಪರೀತಕ್ಕೆ ಸರಿಯುತ್ತದೆ!

ನೋವು, ನಲಿವುಗಳೆರಡನ್ನೂ ಮೀರಿಹೋಗುವುದೊಂದೇ ಮಾರ್ಗವಿರುವುದು. ಹಾಗೆಂದಲ್ಲಿ ನಲಿವನ್ನು ಅದುಮಿಡುವುದಿಂದಾಗಲೀ, ನೋವಿನ ವಿಷಯವನ್ನು ಮರೆಯುವುದೆಂದಾಗಲೀ ಅರ್ಥವಲ್ಲ. ಅದು ನೋವನ್ನು ಆನಂದವನ್ನಾಗಿ ಪರಿವರ್ತಿಸುವಂತಹ ಅರಿವು - ಆನಂದವು ಹೊರಗಿನ ಸನ್ನಿವೇಶವೇನೇ ಇದ್ದರೂ, ಅಸ್ತಿತ್ವದಲ್ಲಿ ಇರುವ ಚೈತನ್ಯ. ನಿಮ್ಮ ಸ್ವಭಾವವೇ ಆನಂದ, ಅದನ್ನು ಕಳೆದುಕೊಳ್ಳಲು ಸಾಧ್ಯವೇ ಇಲ್ಲ. ನಡೆಯುತ್ತಿರುವುದನ್ನು ಪ್ರತಿರೋಧಿಸುವುದರಿಂದ ಮಾತ್ರವೇ ನಿಮಗೆ ನೋವಾಗುವುದು ಹಾಗೂ ನಿಮ್ಮ ಸ್ವಾಭಾವಿಕವಾದ ಆನಂದವು ಮರೆತುಹೋಗುವುದು ಅಷ್ಟೇ.

ನೋವಿನಲ್ಲಿ ಅರಿವು

ನೋವು-ಅದು ದೈಹಿಕ, ಮಾನಸಿಕ ಅಥವಾ ಭಾವನಾತ್ಮಕವಾಗಿದ್ದರೂ, ಕತ್ತಲಿನಂತೆ ಅದಕ್ಕೆ ನಕಾರಾತ್ಮಕ ಇರುವಿಕೆ ಮಾತ್ರವೇ ಇರುವುದು. ಬೆಳಕಿಲ್ಲದಿರುವುದರಿಂದ ಮಾತ್ರವೇ ಕತ್ತಲೆ ಇರುವುದು. ಅದಕ್ಕೆ ತನ್ನದೇ ಆದ ಸಕಾರಾತ್ಮಕ ಅಸ್ತಿತ್ವವಿಲ್ಲ. ಅದೇ ರೀತಿ ಅರಿವಿಲ್ಲದಿರುವುದರಿಂದ ಮಾತ್ರವೇ ನೋವಿರುವುದು. ಒಂದು ಕೊಠಡಿಯೊಳಕ್ಕೆ ಬೆಳಕನ್ನು ತಂದ ಕೂಡಲೇ ಯಾವ ರೀತಿ ಕತ್ತಲೆಯು ತಾನಾಗಿಯೇ ಅದೃಶ್ಯವಾಗುವುದೋ ಅಂತೆಯೇ ನಿಮ್ಮ ಅರಿವಿನ ಚೈತನ್ಯವನ್ನು ನೋವಿನ ಮೇಲೆ ಕೇಂದ್ರೀಕರಿಸಿದೊಡನೆಯೇ ನೋವು ತಾನಾಗಿಯೇ ಕರಗಿಹೋಗುತ್ತದೆ.

ನೀವು ಪಡುವ ಯಾವುದೇ ಮಾನಸಿಕ ಅಥವಾ ಭಾವನಾತ್ಮಕ ನೋವು, ಹಿಮಗಡ್ಡೆಯ ತುದಿಯಷ್ಟೆ. ಅದು ಪ್ರಾರಂಭವಾಗುವ ಮೂಲಕ್ಕೆ ಹೋಗಬೇಕು. ಅದರ ಮೂಲ ಕಾರಣದ ಮೇಲೆ ಕೆಲಸ ಮಾಡಿ ಅದನ್ನು ಗುಣಪಡಿಸಬೇಕು. ಇಲ್ಲದಿದ್ದರೆ ಆ ನೋವನ್ನು ಬೇರೆ ಯಾರಮೇಲಾದರೂ ಕಾರುವ ಅಥವಾ ನೀವೇ ಇನ್ನೂ ಹೆಚ್ಚಾಗಿ ಅನುಭವಿಸುವ ಅಪಾಯವು ನಿಶ್ಚಿತ. ನಾನು ಜನರಿಗೆ ಯಾವಾಗಲೂ ಹೇಳುತ್ತೇನೆ, 'ನಿಮಗೆ ನೋವಿದ್ದರೆ ಎಲ್ಲವನ್ನು ಬಿಟ್ಟು ಅದರ ಮೇಲೆ ಗಮನವಿಡಿ, ಅದರ ಮೂಲವು ಗುಣ ಹೊಂದುವಂತೆ ನೋಡಿಕೊಳ್ಳಿರಿ. ಆಗ ಮಾತ್ರವೇ ನೀವು ಕ್ಷೇಮವಾದ ವಲಯದಲ್ಲಿರಬಲ್ಲಿರಿ. ಹಾಗಲ್ಲದಿದ್ದರೆ, ನೀವಾಗಲೀ, ನಿಮ್ಮ ಸುತ್ತಮುತ್ತ ಇರುವವರಾಗಲೀ ಕ್ಷೇಮವಾದ ವಲಯದಲ್ಲಿರಲು ಸಾಧ್ಯವಿಲ್ಲ' ಎಂದು.

ಅರಿವಿಲ್ಲದಿರು-
ವುದರಿಂದ
ಮಾತ್ರವೇ
ನೋವಿರುವುದು.

ಯಾವುದೇ ನೋವನ್ನು ಅರಿವಿನಿಂದ ಎದುರಿಸಿದಾಗ ‘ನೀವು’ ಎಂದರೆ ಬರೀ ನಿಮ್ಮ ದೇಹವಲ್ಲ ಎಂಬ ಅರಿವು ನಿಮಗಾಗುತ್ತದೆ. ಯಾವ ನೋವೂ ನೀವು ನಿಜವಾಗಿ ಏನೋ ಅದನ್ನು ಮುಟ್ಟಲಾರದು ಎಂದರಿತುಕೊಳ್ಳುವಿರಿ. ನೋವನ್ನು ಮೀರಿದವರೆಂದು ಒಮ್ಮೆ ನಿಮಗೆ ಅರಿವಾದರೆ, ನೀವು ನೋವಿನಿಂದಾಚೆಗೆ ಹೋಗಿ ದುಃಖಾತೀತರಾಗುತ್ತೀರಿ. ದೇಹದ ಮೇಲಿನ ಮಮಕಾರವನ್ನು ಬಿಟ್ಟಾಗ ಉಂಟಾಗುವ ಅಪೂರ್ವವಾದ ಸ್ವಾತಂತ್ರ್ಯವನ್ನು ಅನುಭವಿಸುವಿರಿ. ಈ ಸ್ವಾತಂತ್ರ್ಯವನ್ನು ಜೀವನದುದ್ದಕ್ಕೂ ಹೊಂದಿರುವಿರಿ. ಸಾಮಾನ್ಯವಾದ ಜೀವನವನ್ನು ಹಿಂದಕ್ಕೆ ತಳ್ಳಿ ಆಧ್ಯಾತ್ಮಿಕ ಸ್ತರಕ್ಕೆ ಪ್ರವೇಶಿಸುತ್ತೀರಿ. ಪ್ರಾಪಂಚಿಕ ಜೀವನವೆಲ್ಲವೂ ಸಂಪೂರ್ಣವಾಗಿ ಅದೃಶ್ಯವಾಗಿ, ಮತ್ತೊಂದು ಹೋಲಿಸಲಸಾಧ್ಯವಾದ ಸೌಂದರ್ಯದಿಂದ ಕೂಡಿದ, ಮುಗ್ಧವಾದ, ಹರ್ಷದಾಯಕವಾದ ಅನುಕಂಪದ ಪ್ರಪಂಚ ಉದಿಸುತ್ತದೆ.

ನೋವಿನ ಸ್ವಭಾವವನ್ನೂ, ಕಾರಣವನ್ನೂ, ತೀಕ್ಷ್ಮವಾದ ಆಂತರಿಕ ಸ್ಪಷ್ಟತೆಯಿಂದ ನೋಡಿದಾಗ, ನೋವು ತಾನಾಗಿ ತಾನೇ ಇಂಗಿಹೋಗುತ್ತದೆ. ಏಕೆಂದರೆ ಆ ಸ್ಪಷ್ಟತೆಯೇ ನಿಮ್ಮಲ್ಲಿರುವ ನೋವಿನ ಕಾರಣಗಳನ್ನು ಇಂಗಿಸಿಬಿಡುತ್ತದೆ ಮತ್ತು ಈ ಅರಿವು ನಿಮ್ಮಲ್ಲಿ ನಿರಪೇಕ್ಷ ಆನಂದವನ್ನು ತರುತ್ತದೆ. ಅದೇ ಜ್ಞಾನೋದಯದ ಸ್ಥಿತಿ.

ನೋವು-ಮನಸ್ಸಿನ ಒಂದು ವಿದ್ಯಮಾನ

ನೋವಿಲ್ಲದ ಹೆರಿಗೆ

ನಾನು ಪರಿವ್ರಾಜಕದಲ್ಲಿದ್ದಾಗ ನಡೆದ ಒಂದು ಕುತೂಹಲಕಾರೀ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ನನ್ನ ಯಾತ್ರಾದಿನಗಳಲ್ಲಿ ಭಾರತದ ಮಧ್ಯಪ್ರದೇಶದ ಗುಡ್ಡಗಾಡಿನ ಜನರೊಂದಿಗಿದ್ದೆ. ಆಗ ಆ ಹಳ್ಳಿಯ ಮಧ್ಯದಲ್ಲಿದ್ದ ಒಂದು ದೇವಸ್ಥಾನದಲ್ಲಿ ವಾಸವಾಗಿದ್ದೆ. ಒಂದು ದಿನ, ಒಬ್ಬ ಗರ್ಭಿಣಿ ಹೆಂಗಸು ಒಂದು ಚಿಕ್ಕ ಗುಡಿಸಲಿನೊಳಕ್ಕೆ ಹೋದುದನ್ನು ಕಂಡೆ. ಸುಮಾರು ಒಂದರ್ಧ ಗಂಟೆಯ ನಂತರ ಆಕೆಯು ಕೈಯಲ್ಲಿ ಒಂದು ಪುಟ್ಟ ಮಗುವನ್ನೆತ್ತಿಕೊಂಡು ಹೊರಬಂದಳು! ನೋವಿಲ್ಲ, ವೈದ್ಯರಿಲ್ಲ, ಔಷಧಗಳಿಲ್ಲ, ಚೀರಾಟಗಳಿಲ್ಲ. ಅರ್ಧಗಂಟೆಯಲ್ಲಿ ಆಕೆ ತನ್ನ ತೋಳಿನಲ್ಲಿ ಒಂದು ಮಗುವನ್ನು ಎತ್ತಿಕೊಂಡು ನಡೆಯುತ್ತಾ ಹೊರಬಂದುಬಿಟ್ಟಳು.

ನನಗೆ ದಿಗ್ಭ್ರಮೆಯಾಯಿತು! ನನಗೆ ಅವರ ಭಾಷೆ
ಬರುತ್ತಿರಲಿಲ್ಲವಾದುದರಿಂದ ಏನನ್ನೂ
ಕೇಳಲಾಗಲಿಲ್ಲ. ಒಂದು ತಿಂಗಳಾದ ಮೇಲೆ
ಮತ್ತೊಬ್ಬ ಗರ್ಭಿಣಿಯೂ ಹಾಗೆಯೇ
ಮಾಡಿದುದನ್ನು ನೋಡಿದೆ. ಆಕೆಯೂ ಅರ್ಧ
ಗಂಟೆಯಲ್ಲಿ ಒಂದು ಮಗುವನ್ನೆತ್ತಿಕೊಂಡು
ಹೊರಬಂದಳು. ದೇವಸ್ಥಾನಕ್ಕೆ ಬಂದ
ಪೂಜಾರಿಯನ್ನು ಕೇಳಿದೆ, 'ಇದು ಹೇಗೆ ಸಾಧ್ಯ?
ಅವರಿಗೆ ನೋವಾಗುವುದಿಲ್ಲವೇ?' ಎಂದು. ಆತನು,
'ನೋವೇ? ನೋವೇಕೆ?' ಎಂದುಬಿಟ್ಟನು.

ನನಗೆ ಪರಮಾಶ್ಚರ್ಯವಾಯಿತು. ಅವರ
ಸಮಾಜದಲ್ಲಿ ಮಹಿಳೆಯರಿಗೆ ಹೆರಿಗೆಯ ಕಾಲದಲ್ಲಿ
ನೋವನುಭವಿಸುವ ಕಲ್ಪನೆಯೇ ಇರಲಿಲ್ಲ! ಅಷ್ಟೇ
ಅಲ್ಲ, ಯಾರೂ ಸಹ ರಜೋನಿಲುಗಡೆಯಾದ ನಂತರ
ಸ್ತ್ರೀರೋಗದಿಂದ ನರಳುತ್ತಿರಲಿಲ್ಲ.

ನಾನು ಅವರ ಜೀವನಶೈಲಿಯನ್ನು
ವಿಚಾರಿಸತೊಡಗಿದೆ. ಅವರ ಸಂಪ್ರದಾಯದಲ್ಲಿ
ಸ್ತ್ರೀಯರನ್ನು ಅಪಾರವಾಗಿ ಗೌರವಿಸುತ್ತಾರೆಂದು
ತಿಳಿದುಬಂದಿತು. ಹುಡುಗಿಯು ಮೈನೆರೆದ ಕೂಡಲೇ
ಆಕೆ ತಾಯಿಯಾಗಲು ಅರ್ಹಳಾಗಿರುವಳೆಂದು
ಆಕೆಯನ್ನು ಗೌರವದಿಂದ ಕಾಣಲಾಗುತ್ತದೆ. ಜನರು
ಆಕೆಯ ಕಾಲಿಗೆ ಬೀಳುತ್ತಾರೆ, ಆಕೆಯೂ ಅವರನ್ನು
ಸ್ಪರ್ಶಿಸುವ ಮೂಲಕ ಅವರ ನೋವನ್ನು
ಗುಣಪಡಿಸುತ್ತಾಳೆ! ಅವರನ್ನು ಬೆಳೆಸಿರುವ ಕೇವಲ
ಈ ಒಂದು ಅಪರೂಪವಾದ ರೀತಿಯ ಜೀವನ
ಪದ್ಧತಿಗಳಿಂದಾಗಿ ಆ ಸಂಸ್ಕೃತಿಯ ಮಹಿಳೆಯರು
ಇತರ ಸಂಸ್ಕೃತಿಯ ಮಹಿಳೆಯರಂತೆ
ಸಾಮಾನ್ಯವಾದ ನೋವುಗಳನ್ನು
ಅನುಭವಿಸುವುದಿಲ್ಲ.

ಭ್ರಾಂತ ನೋವು

ಭ್ರಾಂತನೋವಿನ ದಾಖಲಾದ ದೃಷ್ಟಾಂತಗಳಿವೆ

  • ಅಂದರೆ ದೇಹದಲ್ಲಿಲ್ಲದ ಒಂದು ಭಾಗದ ನೋವು. ಎರಡನೇ ವಿಶ್ವಸಮರದ ಸಮಯದಲ್ಲಿ ಒಬ್ಬ ಸೈನಿಕನ ಕಾಲು ತೀವ್ರವಾಗಿ ಗಾಯಗೊಂಡಿದ್ದರಿಂದ ಅದನ್ನು ತೆಗೆದುಹಾಕಲಾಗಿತ್ತು. ವಿಚಿತ್ರ ಸಂಗತಿ ಏನೆಂದರೆ, ಆತನಿಗೆ ಪ್ರಜ್ಞೆ ಬಂದೊಡನೆಯೇ ಆತನು ಇನ್ನೂ ಆ ಕಾಲಿನ

ನೋವನ್ನೇ ಅನುಭವಿಸುತ್ತಿದ್ದನು. ಹೊದಿಕೆಯನ್ನು
ಹೊದಿಸಿದುದರಿಂದ, ಆತನಿಗೆ ಕಾಲನ್ನು
ತೆಗೆದುಹಾಕಿದ ಕಲ್ಪನೆಯೂ ಇರಲಿಲ್ಲ.
ಹೊದಿಕೆಯನ್ನು ಸರಿಸಿ, ಆತನ ಕಾಲು ಇಲ್ಲವೇ
ಇಲ್ಲವೆಂದು ತೋರಿಸಲಾಯಿತು. ಆಗ ಆತನಿಗೆ
ದಿಗ್ಭ್ರಮೆಯಾಯಿತು!

ಆನಂತರ ನಡೆದ ಸಂಶೋಧನೆಗಳು ದೇಹದ
ಪ್ರತಿಯೊಂದು ಭಾಗವೂ ನಿರ್ದಿಷ್ಟವಾದ ಮೆದುಳಿನ
ಭಾಗಕ್ಕೆ ಸಂಬಂಧಿಸಿದೆ ಎಂದು ತೋರಿವೆ. ದೇಹದ
ಒಂದು ನಿರ್ದಿಷ್ಟವಾದ ಭಾಗಕ್ಕೆ ನೋವಾದಾಗ ಅದಕ್ಕೆ
ಸಂಬಂಧಿಸಿರುವ ಮೆದುಳಿನ ಕೇಂದ್ರವು
ಚುರುಕಾಗುತ್ತದೆ. ಈ ಸೈನಿಕನ ವಿಷಯದಲ್ಲಿ ಕಾಲು
ದೇಹದ ಒಂದು ಭಾಗವಾಗಿದ್ದಾಗ ಅದಕ್ಕೆ
ಸಂಬಂಧಿಸಿದ ಮೆದುಳಿನ ಕೇಂದ್ರವು ಯಾವರೀತಿ
ಕಂಪಿಸುತ್ತಿತ್ತೋ ಅದೂ ಇನ್ನೂ ಹಾಗೇಯೇ
ಕಂಪಿಸುತ್ತಿತ್ತು. ಜನರು ತಮ್ಮ ಅವಯವಗಳನ್ನು
ತೆಗೆದುಹಾಕಿದ ನಂತರವೂ ಆ ಖಾಲಿ ಜಾಗದಲ್ಲಿ
ನೋವನ್ನನುಭವಿಸುವ ಇಂತಹ ಅನೇಕ
ದೃಷ್ಟಾಂತಗಳಿವೆ. ಇದನ್ನು 'ಭ್ರಾಂತ ನೋವು'
ಎನ್ನಲಾಗಿದೆ.

ಪ್ಲೇಸಿಬೋ ಪ್ರಭಾವ

ಮನಸ್ಸು ದೇಹದ ಮೇಲೆ ಪ್ರಚಂಡವಾದ
ಪ್ರಭಾವ ಬೀರುತ್ತದೆ. ಮನಸ್ಸಿನಿಂದ ದೈಹಿಕ ನೋವಿನ
ಅರಿವನ್ನೂ ಸಹ ಬದಲಾಯಿಸಬಹುದು.
ವಿಜ್ಞಾನದಲ್ಲಿ ಅದನ್ನು 'ಪ್ಲೇಸಿಬೋ ಎಫೆಕ್ಟ್'
ಎಂದರೆ 'ಹುಸಿಮದ್ದಿನ ಪ್ರಭಾವ' ಎಂದು
ಕರೆಯಲಾಗಿದೆ. ಒಂದು
ಸಾಮಾನ್ಯ ಸಕ್ಕರೆ
ಗುಳಿಗೆಯನ್ನು ನೋವು
ನಿವಾರಕವೆಂದು ರೋಗಿ-
ಯನ್ನು ನಂಬಿಸಿದರೆ ಅದು ನೋವು ನಿವಾರಕದಷ್ಟೇ
ಪರಿಣಾಮಕಾರಿಯಾಗುತ್ತದೆ.

ಒಂದು ದಿನ ಅಮೆರಿಕಾದ ಮಿಚಿಗನ್ ವಿಶ್ವವಿದ್ಯಾಲಯದ 'ಜರ್ನಲ್ ಆಫ್ ನ್ಯೂರೋಸೈನ್ಸ್'ನಲ್ಲಿ ಒಂದು ಸಂಶೋಧನೆಯ ಕುರಿತು ಕಂಡುಬಂದ ವಿಷಯದ ಬಗ್ಗೆ ಓದುತ್ತಿದ್ದೆ. ಸಂಶೋಧನೆಗೆ ಒಡ್ಡಿಕೊಂಡ ಕೆಲವು ಯುವಕರ ದವಡೆಯ ಮಾಂಸಗಳಿಗೆ ಸಾಂದ್ರೀಕರಿಸಿದ ನೋವುಂಟುಮಾಡುವ ಉಪ್ಪು ನೀರಿನ ದ್ರಾವಣವನ್ನು ಚುಚ್ಚಿ, ಸಂಶೋಧನೆಯನ್ನು ಮಾಡಲಾಗಿತ್ತು. ಮೆದುಳಿನ ಆ ನೋವಿಗೆ ಪ್ರತಿಕ್ರಿಯೆಯನ್ನು ಪಿ.ಇ.ಟಿ. ಸ್ಕ್ಯಾನ್ (Positron Emission Tomography Scan) ಅನ್ನು ಉಪಯೋಗಿಸಿಕೊಂಡು ಅಧ್ಯಯನ ಮಾಡಲಾಗಿತ್ತು. ಎಂಡಾರ್ಫಿನ್ಸ್ ಎಂಬ ದೇಹದ ಸಹಜವಾದ ನೋವು ನಿವಾರಕಗಳು ಪ್ರತಿಕ್ರಿಯೆಯನ್ನು ತೋರುವುದನ್ನು ಅಧ್ಯಯನ ಮಾಡಲಾಗಿತ್ತು.

ಒಂದು ಸ್ಕ್ಯಾನ್‌ನಲ್ಲಿ, ನೋವು ನಿವಾರಕವನ್ನು ಕೊಟ್ಟಿರುವುದಾಗಿ ಹೇಳಿದ್ದರು. ಆದರೆ ವಾಸ್ತವವಾಗಿ ಕೊಟ್ಟಿದ್ದೇನೆಂದರೆ, ಕೇವಲ ಒಂದು ಹುಸಿಮದ್ದು! ಅಂದರೆ ನೋವು ನಿವಾರಣೆಯ ಗುಣವೇ ಇಲ್ಲದ ವಸ್ತುವನ್ನು. ನಂತರ ಅವರು ಅನುಭವಿಸುತ್ತಿದ್ದ ನೋವಿನ ಪ್ರಖರತೆಯನ್ನು 0 ಯಿಂದ 100ವರೆಗಿನ ಮಾಪನದಲ್ಲಿ ಅಂದಾಜುಮಾಡಲು ಹೇಳಲಾಯಿತು. ಅಲ್ಲದೆ ಪಿ.ಇ.ಟಿ. ಸ್ಕ್ಯಾನ್ ಸಹ ನೋವಿಗೆ

ಸಂಬಂಧಿಸಿದ ಮೆದುಳಿನ ಕ್ರಿಯೆಯನ್ನು
ತೋರಿಸುತ್ತಿತ್ತು. ಮೆದುಳಿನ ಪ್ರತಿಕ್ರಿಯೆ ಹಾಗೂ
ಅವರು ವಾಸ್ತವವಾಗಿ ಅನುಭವಿಸುತ್ತಿದ್ದ ನೋವು

  • ಈ ಎರಡನ್ನೂ ಅಧ್ಯಯನ ಮಾಡಲಾಯಿತು.

ಆಶ್ಚರ್ಯಕರವಾದ ಅವಲೋಕನವೆಂದರೆ ಆ
ಯುವಕರಿಗೆ ಹುಸಿಮದ್ದನ್ನು - ಎಂದರೆ ನೋವು
ನಿವಾರಕವಲ್ಲದೆ ಕೇವಲ ತಟಸ್ಥ, ನಿಷ್ಪರಿಣಾಮದ
ವಸ್ತುವನ್ನು ಕೊಟ್ಟಾಗ, ಅವರು ಅನುಭವಿಸಿದ
ನೋವು ವಾಸ್ತವವಾಗಿಯೂ ಕಡಿಮೆಯಾಗಿತ್ತು -
ನೋವು ನಿವಾರಕವನ್ನೇ ಕೊಟ್ಟಂತೆ! ಪಿ.ಇ.ಟಿ.
ಸ್ಕ್ಯಾನ್‌ಗಳು ಮೆದುಳಿನ ಎಂಡಾರ್ಫಿನ್‌ (ಸಹಜ
ನೋವು ನಿವಾರಕ) ವ್ಯವಸ್ಥೆಯು ಚುರುಕಾದುದನ್ನು
ಸೂಚಿಸಿತು. ಹುಸಿಮದ್ದಿನಿಂದ ಹೆಚ್ಚಾದ
ಚಟುವಟಿಕೆಯನ್ನು ಸೂಚಿಸಿದುದೇಕೆಂದರೆ ಕೇವಲ
ತಮಗೆ ಕೊಟ್ಟದ್ದು ನೋವು ನಿವಾರಕವೆಂದು ಅವರು
ನಂಬಿದುದರಿಂದ ಮಾತ್ರ! ಮುಂದಿನ ಅಧ್ಯಯನಗಳು
ಹುಸಿಮದ್ದಿನ ಪರಿಣಾಮವು ಶೇಕಡಾ 70 ಜನರಲ್ಲಿ
ಶೇಕಡಾ 22ರಷ್ಟು ನೋವು ಕಡಿಮೆಯಾದುದನ್ನು
ತೋರಿವೆ. ಮನಸ್ಸು ಮತ್ತು ಶರೀರದ ಈ
ಆಶ್ಚರ್ಯಕರವಾದ ಸಂಗತಿಯನ್ನು ವಿಜ್ಞಾನವು
ಇಂದಿಗೂ ಅಧ್ಯಯನ ಮಾಡುತ್ತಿದೆ.

ಸ್ಥಿತ್ಯಂತರ

ನೋವು - ಮನೋರಹಿತ ಸ್ಥಿತಿಗೆ ಒಂದು ಮಾರ್ಗ

ಒಂದು ಸಣ್ಣಕಥೆ:

ಒಮ್ಮೆ ಒಬ್ಬ ಝೆನ್‌ ಗುರುಗಳ ಜೊತೆಯಲ್ಲಿ ಒಬ್ಬ ಶಿಷ್ಯನು ಹೋಗುತ್ತಿದ್ದಾಗ, ಮೇಲೆ ಒಂದು ಗುಂಪು ಬಾತುಕೋಳಿಗಳು ಹಾರಿಹೋದವು. ಗುರುಗಳು, 'ಅವುಗಳು ಏನು?' ಎಂದು ಕೇಳಿದರು. ಶಿಷ್ಯನು 'ಅವು ಬಾತುಕೋಳಿಗಳು, ಗುರುಗಳೇ' ಎಂದನು. ಗುರುಗಳು, 'ಅವು ಎಲ್ಲಿವೆ?' ಎಂದು ಕೇಳಿದರು. ಶಿಷ್ಯನು 'ಅವು ಹಾರಿಹೋದವು' ಎಂದನು.

ಇದ್ದಕ್ಕಿದ್ದಂತೆಯೇ ಗುರುಗಳು ಶಿಷ್ಯನ ಮೂಗನ್ನು ಹಿಡಿದು, ಹಿಂಡಿದರು. ಶಿಷ್ಯನು ನೋವಿನಿಂದ ಚೀರಿದನು. ಗುರುಗಳು 'ಅವು ಹಾರಿಹೋದವು ಎನ್ನುತ್ತೀಯೆ, ಆದರೆ ಅವು ಮೊದಲಿನಿಂದಲೂ ಇಲ್ಲಿಯೇ ಇವೆ' ಎಂದರು. ಆ ಕ್ಷಣದಲ್ಲಿಯೇ ಶಿಷ್ಯನು ಜ್ಞಾನಿಯಾದನೆಂದು ಈ ಕಥೆಯಲ್ಲಿ ತಿಳಿಸಲಾಗಿದೆ.

ಈ ಕಥೆಯು ವಿಚಿತ್ರವೆನಿಸಬಹುದು, ಆದರೆ ಬಹುತೇಕ ಝೆನ್‌ ಗುರುಗಳ ರೀತಿಯೇ ಹೀಗೆ. ವಾಸ್ತವದ ಅರಿವುಂಟುಮಾಡಲು ನೋವು ಪ್ರಚಂಡವಾದ ಮಹತ್ವವನ್ನು ಹೊಂದಿದೆ. ಆದುದರಿಂದಲೇ ಸುಪ್ತಾವಸ್ಥೆಯಲ್ಲಿರುವ ಶಿಷ್ಯರನ್ನು ಜಾಗೃತಗೊಳಿಸಲು ಅನೇಕ ಗುರುಗಳು ಇಂತಹದನ್ನು ಬಳಸುತ್ತಾರೆ. ಯಾರಾದರೂ ನೋವಿನಲ್ಲಿದ್ದರೆ ಸಾಮಾನ್ಯವಾಗಿ ನಾವೇನು ಮಾಡುತ್ತೇವೆ?

ಸಮಾಧಾನಪಡಿಸುತ್ತೇವೆ. ಆ ವ್ಯಕ್ತಿಯು ತಿಳಿಯದಂತೆ ನಿದ್ದೆಯನ್ನು ಮುಂದುವರೆಸುವಂತೆ ಮಾಡುತ್ತೇವೆ. ಆದರೆ ಗುರುವಾದವರಿಗೆ ಸಮಾಧಾನಪಡಿಸುವುದರಲ್ಲಿ ಆಸಕ್ತಿ ಇರುವುದಿಲ್ಲ - ಅವರ ಒಂದೇ ಒಂದು ಆಸಕ್ತಿಯು ಜಾಗೃತಗೊಳಿಸುವುದರಲ್ಲಿಯೇ ಇರುತ್ತದೆ. ಸಹಿಸಲಸಾಧ್ಯವಾದ ನೋವಿನ ಕಾಲದಲ್ಲಿ ಮನಸ್ಸು ನಿಂತುಹೋಗಿ, ಕೇವಲ ನೋವೇ ಉಳಿದಿರುತ್ತದೆ. ಆ ಕ್ಷಣದಲ್ಲಿ ಸತ್ಯವನ್ನು ನೀಡಲಾಗುತ್ತದೆ! ಈ ಕಥೆಯಲ್ಲಿ, ನೋವಿನ ಕ್ಷಣದಲ್ಲಿ ಶಿಷ್ಯನ ಅಂತರಂಗವು ಗುರುಗಳಿಂದ ಸತ್ಯವನ್ನು ಪಡೆಯಲು ಸಿದ್ಧವಾಗಿತ್ತು. ಹಾಗೆಯೇ ಗುರುಗಳು ಅದನ್ನು ದಯಪಾಲಿಸಿದರು!

ಪರಿವರ್ತನೆಯ ನೋವು

ನೋವು, ಒಂದು ಸೃಜನಾತ್ಮಕ ಚೈತನ್ಯವೇ
ಆಗಬಲ್ಲದು. ಅದು ದೈವಸ್ಮರಣೆಯಾಗಬಲ್ಲದು.
ಅದು ಪ್ರಾರ್ಥನೆಯಾಗಬಲ್ಲದು. ಅದು
ಧ್ಯಾನವಾಗಬಲ್ಲದು. ಅದು ಅರಿವಾಗಬಲ್ಲದು.
ಅದು ಅಪಾರವಾದ ಪರಿವರ್ತನೆಯನ್ನು
ಉಂಟುಮಾಡಬಲ್ಲದು.

ನೀವು ತಿಳಿದುಕೊಳ್ಳಬೇಕಾದ ಅತಿ ಮುಖ್ಯವಾದ ಒಂದು ಜೀವನ ರಹಸ್ಯವೆಂದರೆ, ಯಾವುದೇ ಆಗಲಿ, ನಿಮ್ಮ ಅರಿವಿಗೆ ಬಂದರೆ ಅದರಿಂದ ಬಹಳ ಸುಲಭವಾಗಿ ಬಿಡುಗಡೆ ಹೊಂದಬಲ್ಲಿರಿ ಎಂಬುದು. ನಿಮಗದರ ಅರಿವಿಲ್ಲದಿದ್ದರೆ, ಅದರಿಂದ ಬಿಡುಗಡೆಯಾಗುವ ಪ್ರಶ್ನೆಯೇ ಇಲ್ಲ. ಅದು ನಿಮ್ಮೊಂದಿಗೇ ಇರುತ್ತದೆ. ನೋವು ನೋವಾಗಿಯೇ ಉಳಿಯುತ್ತದೆ. ಏಕೆಂದರೆ, ಅದು ನಿಮ್ಮ ಪ್ರಜ್ಞಾಹೀನತೆಯಲ್ಲಿರುತ್ತದೆ. ನಿಮ್ಮ ಅರಿವಿನಲ್ಲಲ್ಲ. ನೋವನ್ನೆದುರಿಸುವ ಭಯವು ಅದನ್ನು ಇರಗೊಟ್ಟು, ಒಂದು ಗಡ್ಡೆಯಂತೆ ಹೆಚ್ಚು ಹೆಚ್ಚಾಗಿ ಬೆಳೆಯಗೊಡುತ್ತದೆ. ಒಬ್ಬ ಗುರುಗಳು, ಈ ಗಡ್ಡೆಯನ್ನು ಅವರ ಕುಶಲಶಸ್ತ್ರಚಿಕಿತ್ಸೆಯಿಂದ ಸುಮ್ಮನೆ ತೆಗೆದುಹಾಕಿಬಿಡುತ್ತಾರೆ! ಜೊತೆಗೆ ಅದು ಬಿಟ್ಟುಹೋಗುವಾಗ, ನೀವು ಒಬ್ಬ ಹೊಸವ್ಯಕ್ತಿಯಾಗುತ್ತೀರಿ. ಒಂದು ಸಲ ಒಬ್ಬ ಭಕ್ತರು, 'ಸ್ವಾಮೀಜಿ, ನನ್ನ ಅಂತರಂಗವು ಶುದ್ಧವಾಗಲು ಶಸ್ತ್ರಚಿಕಿತ್ಸೆ ಅವಶ್ಯಕವೆಂದು ನನಗೆ ತಿಳಿಯಿತು. ಆದರೆ ಆ 'ಕುಶಲ ಶಸ್ತ್ರಕ್ರಿಯೆ'ಯನ್ನು ಮಾಡುವಾಗ ಗುರುಗಳು ನೋವುನಿವಾರಕವಾದದ್ದನ್ನೇನಾದರೂ ಬಳಸುವ ಸಾಧ್ಯತೆ ಇದೆಯೇ?' ಎಂದು ನನ್ನನ್ನು ಕೇಳಿದರು.

ಗುರುಗಳು ಮಾಡುವ ನೋವಿನಿಂದ ಕೂಡಿದ
'ಶಸ್ತ್ರಕ್ರಿಯೆಗಳನ್ನು' ಎದುರಿಸಲು ಎಂತಹ
ಮನೋಭಾವವಿರಬೇಕು? ಕೆಲವು ವೇಳೆ ಕೇವಲ
ಅರಿವೇ ನೋವನ್ನು ನಿವಾರಿಸಿಬಿಡುತ್ತದೆ. ಅನೇಕ
ಬಾರಿ ನೋವಿನೆಡೆಗೆ ಕೇವಲ ನನ್ನ
ಗಮನಹರಿಸುತ್ತೇನೆ, ಇನ್ನೇನಿಲ್ಲ. ಅದು ತಾನಾಗಿಯೇ
ಅದೃಶ್ಯವಾಗುತ್ತದೆ, ಇಂಗಿಹೋಗುತ್ತದೆ.

ಈಗ ಹೇಳಿರಿ, ಈ ನೋವಿನಿಂದ ಕೂಡಿದ
ಶಸ್ತ್ರಕ್ರಿಯೆಗಳನ್ನು ಎದುರಿಸಲು ಎಂತಹ
ಮನೋಭಾವವಿರಬೇಕು? ಗುರುಗಳು
ಉಂಟುಮಾಡುವ ಯಾವುದೇ 'ನೋವು', ನಿಮ್ಮ
ಒಳ್ಳೆಯದಕ್ಕಾಗಿಂದೇ ಎಂಬ ಸಂಪೂರ್ಣ
ಭರವಸೆಯನ್ನು ಹೊಂದಿರುವುದು, ಅಷ್ಟೇ,

ಇನ್ನೇನಿಲ್ಲ. ಶಸ್ತ್ರಚಿಕಿತ್ಸೆ ಮಾಡುವುದೇ ನಿಮ್ಮ ಮೇಲಿನ ಆತನ ಸೀಮಾತೀತ ಪ್ರೀತಿ ಮತ್ತು ಕರುಣೆಗಳಿಂದಾಗಿ ಎಂಬುದನ್ನು ಅನುಭವಿಸುತ್ತೀರಿ. ಇದು ಸ್ಪಷ್ಟವಾದರೆ, ಆಗ ಗುರುವು ಮಾಡುತ್ತಿರುವುದರಿಂದ ಹಿಂಸೆಯಾದರೂ ಆಳವಾದ ಕೃತಜ್ಞತೆಯಿಂದ ಅದನ್ನು ಅನುಭವಿಸುತ್ತೀರಿ. ಪ್ರೀತಿ ಮತ್ತು ಅನುಕಂಪದಿಂದ ಕೂಡಿರುವ ಗುರುಗಳ ಒಂದು ನೋಟವೇ ನೋವು ನಿವಾರಕದ ಹಾಗೆ ಕೆಲಸ ಮಾಡುತ್ತದೆ.

ಮತ್ತೊಂದು ವಿಷಯವೇನೆಂದರೆ,
ನೋವಾಗುವುದೂ ಸಹ, ಅದನ್ನು ನೋವೆಂದು
ಪರಿಗಣಿಸಿ ಅದಕ್ಕೆ ಆ ಪಟ್ಟಿಯನ್ನು
ಹಚ್ಚುವುದರಿಂದಲೇ.

ಜೀವಮಾನವೋ, ಕೆಲವು ಶತಮಾನಗಳೋ, ಅಥವಾ ಕೆಲವು ಜನ್ಮಗಳೇ ಬೇಕಾಗುವಂತಹದನ್ನು ಗುರುಗಳು ಎರಡು ಮೂರು ಕ್ಷಣಗಳಲ್ಲಿ ಕಲಿಸಬಲ್ಲರು. ಗುರುವು ತೀಕ್ಷ್ಣತೆಯ ಜೀವಿ. ಅವರು 'ಗಡ್ಡೆ'ಯನ್ನು ಸುಮ್ಮನೆ ತೆಗೆದು ಬಿಸಾಡಿಬಿಡುತ್ತಾರೆ. ಆದುದರಿಂದ, ಅದು ತೀಕ್ಷ್ಣವೇ ಆದರೂ, ಜೀವನದ ಜೊತೆ ಹೋಗುವ ಬದಲು, ಗುರುಗಳೊಂದಿಗೆ ಹೋಗುವುದೇ ಮೇಲು. ಏಕೆಂದರೆ, ಅದು ಬಹಳ ತ್ವರಿತವಾದ ಕಾರ್ಯಗತಿ. ಅಲ್ಲದೆ, ಗುರುವು ಏನು ಮಾಡುತ್ತಿರುವರೆಂದು ನಿಮಗೆ ತಿಳಿದರೆ, ಜೀವನದಲ್ಲಿ ಆತ್ಯುತ್ಕೃಷ್ಟವಾದುದು ನಡೆಯುತ್ತಿದೆಯೆಂದು ಸಂತೋಷಪಡಬಹುದು.

ಇನ್ನೊಂದು ವಿಷಯ : ಗಡ್ಡೆಗಳೊಂದಿಗೆ
ಜೀವನವನ್ನು ಮುಂದುವರೆಸಿ ಅನುಭವಿಸುವ
ನೋವು, ಗುರುಗಳು ಅವನ್ನು ತೆಗೆಯುವಾಗ ಆಗುವ
ನೋವಿಗಿಂತ ಬಹಳ ಕಷ್ಟಕರವಾಗಿರುತ್ತದೆ. ಏಕೆಂದರೆ
'ಗಡ್ಡೆ'ಯನ್ನು ತೆಗೆಯುವುದು ಕೇವಲ ಕೆಲವು
ನಿಮಿಷಗಳಲ್ಲಿ ಆಗಿಹೋಗುತ್ತದೆ. ಗುರುಗಳು ಅದನ್ನು
ತೆಗೆದುಬಿಡುತ್ತಾರೆ, ಅಲ್ಲಿಗೆ ಮುಗಿಯಿತು.

ಇದನ್ನು ಒಮ್ಮೆ ನೀವು ಅರಿತುಬಿಟ್ಟರೆ
ಪರಿವರ್ತನೆಯನ್ನು ಇನ್ನೆಂದಿಗೂ ನೋವೆಂದು
ಪರಿಗಣಿಸುವುದಿಲ್ಲ, ಅದನ್ನು ಸ್ವಾಗತಿಸುವಿರಿ.
ಸ್ವಾಗತಿಸುವುದು ಮಾತ್ರವೇ ಅಲ್ಲ,
ಪ್ರಜ್ಞಾರಹಿತಸ್ಥಿತಿಯಲ್ಲಿ ಯಾವುದು
ಅಡಗಿಕೊಂಡಿತ್ತೋ ಅದನ್ನು ಮೇಲೆತ್ತಿ
ಹೊರತೆಗೆಯಲಾಯಿತೆಂದು ಕೃತಜ್ಞತೆಯನ್ನು ನೀವು
ಹೊಂದುವಿರಿ.

ಧ್ಯಾನಗಳು

ಧ್ಯಾನತಂತ್ರ 1 - ನೋವಿನ ಮೇಲೆ ಕೇಂದ್ರೀಕರಣ

ನೋವೆಂಬುದು ವಾಸ್ತವವಾಗಿ ಗಮನದ
ಕೊರತೆ. ಆದುದರಿಂದ 'ನಿಮ್ಮ ಸಾನ್ನಿಧ್ಯ'ವನ್ನು
ಕೊಡುವುದೇ ಅದಕ್ಕೆ ಪರಿಹಾರ. ರೋಗಗ್ರಸ್ಥ
ಅಂಗಕ್ಕೋ ಅಥವಾ ಹಿಂಸೆ ಪಡುತ್ತಿರುವ
ಮನಸ್ಸಿಗೋ ನಿಮ್ಮ ಇರುವಿಕೆಯನ್ನು ಹರಿಸುವ
ಸುಲಭವಾದ ಮತ್ತು ಸುಂದರವಾದ ಸ್ವಯಂ -
ಉಪಶಮನದ ಒಂದು ಧ್ಯಾನ ತಂತ್ರವಿದೆ. ಮುಂದಿನ
ಬಾರಿ ನಿಮಗೆ ನೋವು ಅಥವಾ ಹಿಂಸೆಯಾದಾಗ
ನೀವದನ್ನು ಪ್ರಯೋಗಿಸಿಕೊಳ್ಳಬಹುದು. ನೋವು

ನಿವಾರಕ ಔಷಧಿಗಳಿಗಿಂತಲೂ ಅದು
ಖಂಡಿತವಾಗಿಯೂ ಮೇಲು, ಏಕೆಂದರೆ
ನೋವುನಿವಾರಕಗಳ ಉಪಪರಿಣಾಮಗಳನ್ನು
ಅನುಭವಿಸುವುದಕ್ಕಿಂತಲೂ, ಮೊದಲೇ ಇದ್ದ
ವ್ಯಾಧಿಯೇ ಎಷ್ಟೋ ಮೇಲಾಗಿತ್ತೆನಿಸುತ್ತದೆ.

ಕೇವಲ ಇದನ್ನು ಮಾಡಿನೋಡಿರಿ. ನಿಮಗೆ
ಕಾಲುನೋವು ಅಥವಾ ಹೊರಗಿನ ಘಟನೆಯಿಂದಾದ
ಏನೋ ಒಂದು ಹಿಂಸೆ ಇದೆ, ಎಂದಿಟ್ಟುಕೊಳ್ಳೋಣ.
ಕತ್ತಲಾಗಿರುವ ಕೋಣೆಯಲ್ಲಿ ಮಲಗಿಕೊಳ್ಳಿರಿ. ಕೇವಲ
ನೋವಾಗುತ್ತಿರುವ ಜಾಗದ ಮೇಲೆಯೇ ನಿಮ್ಮ
ಗಮನವನ್ನು ಕೇಂದ್ರೀಕರಿಸುತ್ತಾ, ಇಡೀ ದೇಹವನ್ನು
ಮರೆತುಬಿಡಲು ಪ್ರಜ್ಞಾಪೂರಿತವಾಗಿ
ಪ್ರಯತ್ನಮಾಡಿರಿ. ಅದೇನಾದರೂ ಮಾನಸಿಕ
ಬಾಧೆಯಾಗಿದ್ದರೆ, ಇಡೀ ದೇಹವನ್ನು ಮರೆತು
ನಿಮ್ಮನ್ನು ವ್ಯಥೇಗೀಡುಮಾಡಿದ ಘಟನೆಯ ಮೇಲೆಯೇ
ಕೇಂದ್ರೀಕರಿಸಿ. ನೋವನ್ನು ಅನುಭವಿಸುತ್ತಿರುವಾಗ
ಬೇಕೆಂದೇ ‘ನೋವು’ ಎಂಬ ಪದವನ್ನು ನಿಮ್ಮ
ಮನಸ್ಸಿನಿಂದ ಬಿಟ್ಟುಬಿಡಿರಿ.

ನಿಮಗೆ ನೋವಾಗುತ್ತಿದೆ ಎಂದು ನಿಮ್ಮ ಮನಸ್ಸಿನಲ್ಲಾಗುವ ಹರಟೆಯು ಹೇಳುತ್ತಲೇ ಇರುತ್ತದೆ. ಅದನ್ನು ನಿಲ್ಲಿಸಿಬಿಡಿರಿ. ಗಾಢವಾಗಿ ಯೋಚಿಸಿರಿ; ತೆರೆದ ಮನಸ್ಸಿನಿಂದ ಅನುಭವಿಸಿರಿ. ಮನಸ್ಸಿನಾಳದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಕಾಣಿರಿ. ನಿಮ್ಮ ಮನಸ್ಸು ನೋವನ್ನು ಕೇವಲ ಉತ್ಪ್ರೇಕ್ಷಿಸುತ್ತಿತ್ತೆಂಬುದನ್ನು ಕಾಣುವಿರಿ. ನಿಮ್ಮ ಅರಿವನ್ನೆಲ್ಲಾ ಆ ನೋವಿನ ಮಧ್ಯಕ್ಕೆ ಹಾಕಿರಿ, ಆಗ ಅದು ಬೇಗನೇ ಕುಗ್ಗಿ, ಕೇವಲ ಒಂದು ನೋವಿನ ಚುಕ್ಕೆಯಾಗುತ್ತದೆ. ಈ ಚುಕ್ಕೆಯ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸಿರಿ. ಆಗ, ಇದ್ದಕ್ಕಿದ್ದಂತೆಯೇ ನೋವು ಮಾಯವಾಗುವುದನ್ನು ಕಾಣುವಿರಿ ಹಾಗೂ ಅದರ ಸ್ಥಾನದಲ್ಲಿ ಆನಂದವಿರುತ್ತದೆ!

ಧ್ಯಾನತಂತ್ರ 2

ನೋವನ್ನು ವೀಕ್ಷಿಸಿರಿ

ನಿಮ್ಮ ದೇಹದ ಯಾವುದೇ ಭಾಗದ ದೈಹಿಕ ನೋವನ್ನು ನಿವಾರಿಸಿಕೊಳ್ಳಲು ಈ ತಂತ್ರವನ್ನು ಬಳಸಿಕೊಳ್ಳಬಹುದು. ದೇಹದ ನೋವಿನಿಂದ ನರಳುತ್ತಿರುವಾಗ, ನಿಮ್ಮ ದೇಹದ ಆ ಭಾಗದ ನೋವನ್ನು ಕೇವಲ ನಿರಾಯಾಸವಾಗಿ ವೀಕ್ಷಿಸಿರಿ. ಮೊದಲಿಗೆ ನೋವು ಉಕ್ಕಬಹುದು, ಆದರೆ ಕೂಡಲೇ ಅದು ಒಂದು ಚುಕ್ಕೆಯಷ್ಟು ಚಿಕ್ಕದಾಗಿ ಇಲ್ಲದೇ ಹೋಗುತ್ತದೆ. ವಾಸ್ತವವಾಗಿ ಆಗುವುದೇನೆಂದರೆ ದೈಹಿಕವಾಗಿ ಘಾಸಿಗೊಂಡ ಕ್ಷಣವೇ ನಿಮ್ಮ ದೇಹದ ಬುದ್ಧಿಶಕ್ತಿಯು ಅದನ್ನು ಗುಣಪಡಿಸಲು ಚೈತನ್ಯವನ್ನು ಅಲ್ಲಿಗೆ ನುಗ್ಗಿಸುತ್ತದೆ. ಚೈತನ್ಯದ ಆ ನುಗ್ಗುವಿಕೆಯನ್ನೇ ನೀವು ‘ನೋವು’ ಎಂದು ಹೆಸರಿಡುವುದು. ಚೈತನ್ಯದ ನುಗ್ಗುವಿಕೆಯನ್ನೂ, ಗುಣವಾಗುವುದನ್ನೂ ನೀವು ನಿರಾಯಾಸವಾಗಿ ವೀಕ್ಷಿಸಿದಲ್ಲಿ ನೋವು ಕಾಣದಾಗಿ, ಗುಣವಾಗುತ್ತದೆ. ಇದನ್ನು ಅರ್ಥಮಾಡಿಕೊಂಡುಬಿಟ್ಟರೆ ನೋವನ್ನು ವಿರೋಧಿಸುವುದೂ ಇಲ್ಲ, ಬಾಧೆಪಡುವುದೂ ಇಲ್ಲ – ದೇಹದ ಸ್ವಾಭಾವಿಕ ಗುಣಕಾರಕ ಚೈತನ್ಯದೊಂದಿಗೆ ಸಹಕರಿಸುತ್ತೇವೆ.

ನಿಮ್ಮೊಳಗಿನ ಸಂಚಾರಿ ಚಿಕಿತ್ಸಾಲಯದ ವ್ಯವಸ್ಥೆಯನ್ನೇ ನೋವೆನ್ನುವುದು!

ನನ್ನ ಸ್ವಂತ ಅನುಭವದಿಂದಲೇ ನಾನಿದನ್ನು ಹೇಳಬಲ್ಲೆ. ಒಂದು ಸಲ ಯಾರೋ ಒಬ್ಬರು ನನ್ನ ಬೆರಳಿನ ಮೇಲೆ ಕಾರಿನ ಬಾಗಿಲನ್ನು ಹಾಕಿಬಿಟ್ಟರು. ಸುತ್ತಲಿದ್ದವರಿಗೆ ಕಳವಳವಾಗಿ ಪ್ರಥಮ ಚಿಕಿತ್ಸೆಗಾಗಿ ಎಲ್ಲೆಡೆಂದೂ ಓಡಿದರು. ಏನೂ ತೊಂದರೆತೆಗೆದುಕೊಳ್ಳಬೇಡಿರೆಂದು ನಾನವರಿಗೆ ಹೇಳಿದೆ.

ನನ್ನ ಬೆರಳು ಊದಿಕೊಳ್ಳುತ್ತಿದ್ದಂತೆಯೇ ನಾನು ಕೇವಲ ನನ್ನ ದೇಹದ ಒಳಗಡೆ ಏನಾಗುತ್ತಿದೆ ಎಂಬುದನ್ನು ಗಮನಿಸತೊಡಗಿದೆ. ನನ್ನ ಮಣಿಪೂರಕದಿಂದ ಚೈತನ್ಯವು ಬೆರಳಿಗೆ ಹರಿಯುತ್ತಿರುವುದರ ಅರಿವಾಯಿತು. ತುರ್ತುಪರಿಸ್ಥಿತಿಗೆ ದೇಹದ ಬುದ್ಧಿಶಕ್ತಿಯು ತಾನಾಗಿಯೇ ಸ್ಪಂದಿಸುವುದನ್ನು ಸ್ಪಷ್ಟವಾಗಿ ಕಂಡೆನು. ಅದು ತಾನಾಗಿಯೇ ವಾಸಿಯಾಯಿತು.

ನಿಮ್ಮೊಳಗಿನ ಸಂಚಾರಿ ಚಿಕಿತ್ಸಾಲಯದ ವ್ಯವಸ್ಥೆಯನ್ನೇ ನೀವು ನೋವೆನ್ನುವುದು!

ನೋವನ್ನು ವೀಕ್ಷಿಸಿ ಅದಕ್ಕೆ ನೀಡುವ ಗಮನವೇ
ನೀವು ದೇಹವನ್ನು ಮೀರಿದವರೆಂದು ತಿಳಿಸುತ್ತದೆ.
ನೀವು ನಿಮ್ಮ ಚೈತನ್ಯದ ಅಡಿಪಾಯವನ್ನೇ ಹೊಕ್ಕು,
ಶರೀರ-ಮನಸ್ಸನ್ನು ಮೀರಿದವರೆಂದು ತಿಳಿಯುವಿರಿ.

ನೋವನ್ನು ಗಾಢವಾಗಿ ಪರಿಶೀಲಿಸಿರಿ. ಆದರೆ 'ನೋವು' ಎಂಬ ಪದವನ್ನಾಗಲೀ, ಹಿಂಸೆ ಎಂಬ ಅರ್ಥವನ್ನಾಗಲೀ ಅದಕ್ಕೆ ಕೊಡಬೇಡಿರಿ. ಸ್ವಲ್ಪ ಕಾಲ ನೋವು ಹೆಚ್ಚಾದಂತೆ ಕಾಣಬಹುದು, ಆದರೆ ಬೇಗನೇ ಅದು ಕರಗಿಹೋಗುತ್ತದೆ.

ವಾಸ್ತವವಾಗಿ ದೇಹದ ಯಾವ ಭಾಗವು ಚೈತನ್ಯವನ್ನು ಅಪೇಕ್ಷಿಸುತ್ತದೆಯೋ ಆ ಭಾಗಕ್ಕೆ ಚೈತನ್ಯವನ್ನು ಹರಿಸುವ ಬುದ್ಧಿಶಕ್ತಿಯು ದೇಹಕ್ಕಿದೆ. ಆದರೆ, ಆ ಚೈತನ್ಯದ ಹರಿಯುವಿಕೆಯನ್ನು 'ನೋವು' ಎಂದು ಹೆಸರಿಸಿ, ವಿರೋಧಿಸುತ್ತೀರಿ. ಆ ಚೈತನ್ಯವನ್ನು ಪೂರ್ಣ ಅರಿವಿನೊಂದಿಗೆ ಮೇಲ್ನೈಸುವ ಮೂಲಕ ದೇಹದ ಆ ಭಾಗಕ್ಕೆ ಹರಿಯಗೊಡಿರಿ. ಚೈತನ್ಯದ ಹರಿಯುವಿಕೆಯನ್ನು ಕುತೂಹಲದಿಂದ ಗಮನಿಸಿರಿ. ಸಂಪೂರ್ಣವಾಗಿ ಹೊರಗಿನವರಾಗಿರಿ; ಆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಡಿರಿ. ಕೇವಲ ಆ ಭಾಗಕ್ಕೆ ಚೈತನ್ಯವು ಹರಿದು ಆ ಭಾಗದ ಮೇಲೆ ಕೆಲಸಮಾಡಲಿ. ಅದು ಗುಣಹೊಂದುವುದನ್ನು ನೋಡುವಿರಿ.