ಭಯಗಳನ್ನು ಎದುರಿಸಿ ಹಾಯಾಗಿರಿ
This text was machine-transcribed from the printed book and may contain errors. Select the words and choose “Report a mistake”.
ಭಯವೆಂದರೇನು?
ಭಯವೆಂಬುದು ಚಿಂತೆಯ ಹೆಚ್ಚು ಗಾಢವಾದ
ಒಂದು ಆಯಾಮ. ಚಿಂತೆಯಿಂದ
ಹುಣ್ಣುಗಳಾಗಬಹುದು. ಆದರೆ ಭಯವು
ಜೀವನವನ್ನೇ ಹಾಳುಮಾಡಬಹುದು. ಏನೇ ಆಗಲಿ,
ಚಿಂತೆ ಇಲ್ಲದೆಯೇ ಬದುಕುವುದು ಸಾಧ್ಯ. ಆದರೆ,
ಭಯವು ನಮ್ಮ ಜೀವನಗಳಲ್ಲಿ ಹಾಸುಹೊಕ್ಕಾಗಿ
ಹೆಣೆದುಕೊಂಡಿದೆ ಎನ್ನಬಹುದು. ಭಯವಿಲ್ಲದೆಯೇ
ಭಯವನ್ನೆದುರಿಸುವುದು ಸಾಧ್ಯ. ಧೈರ್ಯವಂತನೆಂದು
ನಾವು ಕರೆಯುವವನು ಭಯವಿಲ್ಲದವನಲ್ಲ. ಆದರೆ
ಆತನು ಭಯವಿಲ್ಲದೆ ಭಯವನ್ನೆದುರಿಸಲು
ಕಲಿತವನು.
ಭಯವು ನಮ್ಮ ಅಂತಃಶಕ್ತಿಯ ಒಂದು ರೂಪ.
ಆದುದರಿಂದಲೇ ಅದನ್ನು ನಾಶಪಡಿಸಲಾಗುವುದಿಲ್ಲ.
ಶಕ್ತಿಯನ್ನು ಸೃಷ್ಟಿಸಲಾಗಲೀ ನಾಶಪಡಿಸಲಾಗಲೀ
ಸಾಧ್ಯವಿಲ್ಲ; ಅದನ್ನು ಒಂದು ರೂಪದಿಂದ
ಮತ್ತೊಂದಕ್ಕೆ ಪರಿವರ್ತಿಸಲು ಮಾತ್ರ ಸಾಧ್ಯ.
ತಿಳಿಯಿರಿ, ನಿಮ್ಮ ಭಯವು ನಿಮ್ಮ ಜೀವಶಕ್ತಿಗೆ ನೇರವಾಗಿ ಸಂಬಂಧಿಸಿದೆ. ಜೀವಕ್ಕೆ ಆಪತ್ತುಂಟಾದಾಗಲೆಲ್ಲಾ, ನಿಮ್ಮ ಭಯವು ಹೆಚ್ಚಾಗುವುದನ್ನೂ ದೇಹದಲ್ಲಿ ಅಡ್ರಲೀನ್ ಬಿಡುಗಡೆಯಾಗುವುದನ್ನೂ ಕಾಣುವಿರಿ. ಆ ಅಡ್ರಲೀನ್ ಬಿಡುಗಡೆ ನಿಮಗೆ ಎಷ್ಟು ಶಕ್ತಿಯನ್ನು ನೀಡುತ್ತದೆ ಎಂದರೆ, ನೀವಿನ್ನೇನು ಹಾರಿಯೇಬಿಡಬಹುದು. ಇದನ್ನೇ ಹೋರಾಟ ಅಥವಾ ಪಲಾಯನ ಪ್ರತಿಕ್ರಿಯೆ ಎನ್ನುವುದು; ಭಯವನ್ನು ಎದುರಿಸಿ ಹೋರಾಡುವಿರಿ ಅಥವಾ ಓಡಿ ಹೋಗುವಿರಿ. ಜೀವಕ್ಕೇ ಆಪತ್ತುಂಟಾದ ಕ್ಷಣದಲ್ಲಿ ನಿಮ್ಮ ದೇಹದಲ್ಲಿ ಬಹಳ ಶಕ್ತಿ ಇರುತ್ತದೆ. ಆ ಆಪತ್ತು ನಿಜವಾದಾಗಲೆಲ್ಲಾ ಪ್ರಾಣದ ಸ್ಥಾನವಾದ ಸ್ವಾಧಿಷ್ಠಾನ ಚಕ್ರವು ಸಂಪೂರ್ಣವಾಗಿ ತಲ್ಲಣಿಸುತ್ತದೆ!
ನಿಮ್ಮೊಳಗಿನ ಮಹಾಸ್ಫೋಟ ಮತ್ತು ಕೃಷ್ಣರಂಧ್ರ
ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವನ್ನು
ಉದ್ದೇಶಿಸದೇ, ನಿಮ್ಮಲ್ಲಿ ಶುದ್ಧವಾದ ಆಸೆ ಅಥವಾ
ದುರಾಸೆ ಇರುತ್ತದೋ ಆಗ ನೀವು ಸೃಜನಾತ್ಮಕ
ಚೈತನ್ಯದಿಂದ ತುಂಬಿ ತುಳುಕುತ್ತಿರುವಿರಿ. ಈ
ವಿಕಸನವೇ ಮಹಾ ಸ್ಫೋಟ (Big Bang) ಅದೇ
ರೀತಿ ಯಾವುದೇ ನಿರ್ದಿಷ್ಟ ವಸ್ತು, ವ್ಯಕ್ತಿ ಅಥವಾ ಸಂದರ್ಭವನ್ನು ಉದ್ದೇಶಿಸದೇ ನಿಮ್ಮಲ್ಲಿ ಶುದ್ಧವಾದ ಭಯ ಇರುವುದೋ ಆಗ ನಿಮ್ಮ ಶಕ್ತಿಯು ಕುಗ್ಗುತ್ತದೆ. ಅದೇ ಕೃಷ್ಣರಂಧ್ರ (Black Hole).
ತಿಳಿಯಿರಿ, ಭಯವು ನಿಮ್ಮ ಸ್ವಭಾವ, ಆದರೆ
ಅದನ್ನು ಯಾವ ವಸ್ತುವಿನ ಕಡೆಗೂ ಹಾಯಿಸಬೇಡಿರಿ.
ಭಯವಿರುವುದು ಸಹಜ. ಆದರೆ ಭಯವನ್ನು ಒಂದು
ವಸ್ತುವಿಗೆ ಗಂಟುಹಾಕುವುದು ಸಾಮಾಜಿಕ.
ಶುದ್ಧವಾದ ಭಯವು ಬದುಕಿರಲು ಸಹಾಯಕ
ಹಾಗೂ ಅದು ಸಮಯ ಸ್ಪೂರ್ತಿಯುತವಾಗಿ
ತಾನಾಗಿಯೇ ಆಗುವಂತಹದು.
ಕಾರಣವಿಲ್ಲದೆಯೋ ನಿಮ್ಮಿಂದ
ಹೊರಸೂಸಲ್ಪಡುವ ಅಗಾಧ ಚೈತನ್ಯವು ಶುದ್ಧ
ದುರಾಸೆ. ಅದು ಒಂದು ವಸ್ತುವಿಗಾಗಿಯಾದರೆ ಅದು
ಸಾಮಾನ್ಯ ದುರಾಸೆಯಾಗುತ್ತದೆ. ಅದೇ ರೀತಿ,
ಕಾರಣವೇ ಇಲ್ಲದೆ ನಿಮ್ಮಲ್ಲಿಯೇ ನೆಲೆಗೊಳ್ಳುವ
ಚೈತನ್ಯವು ಶುದ್ಧ ಭಯ. ಅದು ಒಂದು ವಿಷಯ
ಅಥವಾ ವ್ಯಕ್ತಿಗಾಗಿಯಾದರೆ ಅದು ಸಾಮಾನ್ಯವಾದ
ಭಯವಾಗುತ್ತದೆ. ಕೃಷ್ಣರಂಧ್ರವಾಗದೆಯೋ
ಮಹಾಸ್ಫೋಟವಾಗುವುದಿಲ್ಲ. ಅದು ಜೀವನದ
ಭಾಗ, ನಾಟಕದ ಭಾಗ, ಲೀಲೆಯ ಒಂದು ಭಾಗ.
ಶುದ್ಧ ಭಯವೆಂದರೆ ನೀವು ನಿಮ್ಮಲ್ಲಿಯೇ
ಮಿಶ್ರಮಿಸುತ್ತಾ ನಿಮ್ಮೊಳಗೇ ನೆಲೆಗೊಳ್ಳುವುದು.
ಅದನ್ನೇ ಲಯ ಎನ್ನುವುದು. ಈ ವಿಶ್ವಸೃಷ್ಟಿಯೇ
ಮಹಾಸ್ಫೋಟ ಮತ್ತು ಲಯವೇ ಕೃಷ್ಣರಂಧ್ರ. ನಿಮ್ಮ
ಜನನವೇ ನಿಮಗೆ ಮಹಾಸ್ಫೋಟ.
ನಿಮ್ಮ ಮರಣವೇ ನಿಮಗೆ ಕೃಷ್ಣರಂಧ್ರ. ಉಚ್ಛ್ವಾಸವು ಶುದ್ಧ ಆಸೆ, ನಿಶ್ವಾಸವು ಶುದ್ಧ ಭಯ. ಪ್ರಾಣ - ಮಹಾಸ್ಫೋಟದ ಕಾರಣದಿಂದಲೇ ಗಾಳಿಯೊಡನೆ ನಿಮ್ಮೊಳಗೆ ಪ್ರವೇಶಿಸುವುದೇ ಜೀವ ಚೈತನ್ಯವಾದ ಪ್ರಾಣ. ಹೊರಹೋಗುವ ಗಾಳಿಯೊಡನೆ ನಿಮ್ಮ ಶರೀರವನ್ನು ಬಿಟ್ಟು ಹೋಗುವ ಪ್ರಾಣವೇ ಕೃಷ್ಣರಂಧ್ರ. ಮಹಾಸ್ಫೋಟದೊಡನಾಗಲೀ, ಕೃಷ್ಣರಂಧ್ರದೊಡನಾಗಲೀ ನೀವು ವಿರೋಧಿಸಿದಾಗ ಅಥವಾ ಹೋರಾಡಿದಾಗ ನಿಮ್ಮ ದೇಹದಲ್ಲಿ ಶಾಂತಿಭಂಗ ಉಂಟುಮಾಡಿಕೊಳ್ಳುತ್ತೀರಿ.
ಭಯ ಉಂಟಾದಾಗ ಎಂದರೆ, ಕೃಷ್ಣರಂಧ್ರ ಉಂಟಾದಾಗ ನೀವು ಶಾಂತಿಯೆಡೆಗೆ ತಿರುಗುತ್ತಿದ್ದೀರಿ ಅಥವಾ ಮಹಾಸ್ಫೋಟಕ್ಕೆ ಸಿದ್ಧರಾಗುತ್ತಿದ್ದೀರಿ ಎಂದರ್ಥ. ಶುದ್ಧ ಭಯವಾದಾಗಲೆಲ್ಲ ನಿಮ್ಮಲ್ಲಿ ಧೈರ್ಯ ಮತ್ತು ಚೈತನ್ಯಗಳನ್ನು ಹೊರಸೂಸುವ ಅಗಾಧವಾದ ಶಾಂತಿಯೊಂದಿಗೆ, ಆರಾಮದೊಂದಿಗೆ, ನವಚೈತನ್ಯವನ್ನು ಹೊಂದುತ್ತೀರಿ.
ನಿಮ್ಮ ಸಾಮರ್ಥ್ಯಕ್ಕೂ, ನಕಾರಾತ್ಮಕ ಪ್ರಯತ್ನಕ್ಕೂ ನಡುವಿನ ಹೋರಾಟ
ನಿಮ್ಮಲ್ಲಿರುವ ಏನನ್ನಾದರೂ ಕಳೆದುಕೊಳ್ಳುವ
ಅಥವಾ ಏನನ್ನಾದರೂ ಹೊಂದಬೇಕೆಂಬುದನ್ನು
ಗಳಿಸಲಾಗುವುದಿಲ್ಲವೆಂಬ ಭಯ ಬಂದಾಗಲೆಲ್ಲಾ,
ನಿಮ್ಮ ಸಾಮರ್ಥ್ಯಕ್ಕೂ, ನಿಮ್ಮ ಭವಿಷ್ಯದ
ಆಕ್ಷೇಪಣೆಯ ಮನೋಭಾವದ ನಡುವೆ ಹೋರಾಟ
ನಡೆಯುತ್ತಿರುತ್ತದೆ.
ಏನನ್ನಾದರೂ ಗಳಿಸುವ ಸಾಧ್ಯತೆಯೇ
ಇಲ್ಲವೆಂಬುದಾಗಲೀ, ಆ ಸಾಮರ್ಥ್ಯವೇ
ಇಲ್ಲವೆಂಬುದಾಗಲೀ ಖಚಿತವಾದಾಗ, ನಿಮಗೆ
ಭಯವಿರುವುದಿಲ್ಲ. ಏನನ್ನಾದರೂ ಗಳಿಸುತ್ತೇನೆಂಬ
ಖಚಿತತೆಯಿದ್ದಾಗಲೂ ನಿಮಗೆ ಭಯವಿರುವುದಿಲ್ಲ.
ಶ್ರದ್ಧೆ ಮತ್ತು ನಂಬಿಕೆಗಳು ಒಂದು ಕಡೆಯಾಗಿ,
ಭವಿಷ್ಯದ ಬಗ್ಗೆ ನಿಮ್ಮ ನಕಾರಾತ್ಮಕ ಆಕ್ಷೇಪಣೆಯ
ಆಲೋಚನೆಗಳು ಹಾಗೂ ಭವಿಷ್ಯದ ನಿರೀಕ್ಷೆಯು
ಇನ್ನೊಂದು ಕಡೆಯಾಗಿ ನಡೆಯುವ ಹೋರಾಟವೇ
ಭಯ. ನೀವು ನಿಮ್ಮ ಸಕಾರಾತ್ಮಕ ಹಾಗೂ
ನಕಾರಾತ್ಮಕ ಚೈತನ್ಯಗಳ ಜೊತೆಯಲ್ಲಿ ಅಕ್ಷರಶಃ
ಹೋರಾಡುತ್ತಿರುವಿರಿ.
ನಿಮಗೆ ಸಾಮರ್ಥ್ಯವಿಲ್ಲವೆಂಬುದೂ, ಪಡೆಯಲು
ಆಗುವುದಿಲ್ಲವೆಂಬುದೂ ಬಹಳ ಖಚಿತವಾಗಿದ್ದಲ್ಲಿ
ನಿಮಗೆ ಭಯವಿರುವುದಿಲ್ಲ.
ಪಡೆದೇಪಡೆಯುತ್ತೇನೆಂಬ ದೃಢವಿಶ್ವಾಸವಿದ್ದರೆ
ಆಗಲೂ ಭಯವಿರುವುದಿಲ್ಲ. ಏನನ್ನಾದರೂ
ಪಡೆಯಬೇಕೆಂಬುದಿದ್ದು, ಆದರೆ ಪಡೆಯುವೆನೆಂಬ
ಭರವಸೆ ಇಲ್ಲದೇ ಹೋದಾಗ ಭಯವಿರುತ್ತದೆ. ಈ
ಎರಡು ವಿಷಯಗಳ ಹೋರಾಟ ಅಥವಾ ಉಭಯ
ಸಂಕಟವನ್ನೇ ಭಯವೆನ್ನುವುದು.
ಭಯದಿಂದ ಪಾರಾಗಲು ಎರಡು ಮಾರ್ಗಗಳಿವೆ. ಎಲ್ಲಾ ಸಾಧ್ಯತೆಗಳನ್ನು ತಡೆದುಹಾಕುವುದು ಒಂದು ಮಾರ್ಗ. ಹೀಗೆಂದರೆ, ಪ್ರಾಣಕಳೆದುಕೊಳ್ಳಬಹುದು; ಆಗ ಇನ್ನಾವ ಭಯವೂ ಇರದು! ಭಯದಿಂದ ಪಾರಾಗುವ ಎರಡನೆಯ ಮಾರ್ಗವೆಂದರೆ, ಸಾಧ್ಯತೆಗಳ ಎಲ್ಲೆಮೀರುವುದು. ಸಾಧ್ಯತೆಗೆ ಕೊನೆಯೇ ಇಲ್ಲದಿದ್ದರೆ, ಎಲ್ಲೆಯೋ ಇಲ್ಲದಿದ್ದರೆ, ನಿಮ್ಮನ್ನು ತಡೆಯುವಂತಹುದೇನೂ ಇಲ್ಲದಿದ್ದರೆ, ಆಗ ನೀವು ನಿರ್ಭೀತರಾಗುತ್ತೀರಿ. ಕೇವಲ ಈ ತಿಳಿವಳಿಕೆಯಿಂದಲೇ ನಿಮ್ಮಲ್ಲಿ ಏನೋ ಒಂದು ಅರಿವು ಮೂಡುತ್ತದೆ ಹಾಗೂ ನಿಮ್ಮಿಂದ ಎಷ್ಟೋ ಭಯಗಳು ಅದೃಶ್ಯವಾಗುತ್ತವೆ!
ಆತ್ಮವಿಶ್ವಾಸಕ್ಕೂ
ಭವಿಷ್ಯದ ಬಗ್ಗೆ
ಇರುವ
ನಕಾರಾತ್ಮಕ
ಆಲೋಚನೆಗಳಿಗೂ
ನಡೆಯುವ
ಹೋರಾಟವೇ
ಭಯ.
ಒಂದು ಸುಂದರವಾದ ಕಥೆ:
ಒಂದು ದೇವಸ್ಥಾನದಲ್ಲಿ ಬೋಧನೆಗಳನ್ನು
ಬರೆಯುವ ಗೋಡೆಯಮೇಲೆ ಒಬ್ಬನು 'ಸೋಹಂ'
ನಾನು ಅದೇ ಆಗಿದ್ದೇನೆ ಎಂದು ಬರೆದನು.
ಅದರರ್ಥ, 'ನನ್ನಿಂದೆಲ್ಲವೂ ಸಾಧ್ಯ' ಎಂದು.
ಮತ್ತೊಬ್ಬನು ಬಂದು 'ದಾಸೋಹಂ' ಎಂದರೆ
'ನನ್ನಿಂದೇನೂ ಮಾಡಲು ಸಾಧ್ಯವಿಲ್ಲ. ನಾನೊಬ್ಬ
ಜೀತದಾಳು' ಎಂದು ಬರೆದನು. ಅದೂ ಸಹ
ಪರವಾಗಿಲ್ಲ.
ಮೂರನೆಯವನು ಬಂದು, 'ಸದಾಸೋಹಂ' - 'ನಾನು ಯಾವಾಗಲೂ ಅದೇ' ಎಂದು ಬರೆದನು.
ನೀವು 'ನನ್ನಿಂದೇನು ಮಾಡಲು ಸಾಧ್ಯವಿಲ್ಲ' ಎಂದಿದ್ದರೆ, 'ನೀವು ಭಕ್ತಿಯೋಗಿ'ಯಾಗಿ ಶರಣಾಗುತ್ತೀರಿ. 'ನನ್ನಿಂದೆಲ್ಲವೂ ಸಾಧ್ಯ' ಎನಿಸಿದರೆ ನೀವು 'ಜ್ಞಾನಯೋಗಿ' - ಆಳಕ್ಕಿಳಿದು ಅನುಭವಿಸುವಿರಿ. ಈ ಮಾರ್ಗದಲ್ಲೇ ಆಗಲೀ, ಆ ಮಾರ್ಗದಲ್ಲೇ ಆಗಲೀ, ಯಾವ ಮಾರ್ಗದಲ್ಲೇ ಹೋದರೂ ಭಯವನ್ನು ಮೀರಿಹೋಗುವುದು ಸಾಧ್ಯ. ಆದರೆ ಯಾವುದಾದರೂ ಒಂದು ಅಭಿಪ್ರಾಯಕ್ಕೆ ಕಟ್ಟುಬೀಳಬೇಕು. 'ನನ್ನಿಂದೆಲ್ಲವೂ ಸಾಧ್ಯ' ಎಂದೋ, 'ನನ್ನಿಂದೇನು ಮಾಡಲೂ ಸಾಧ್ಯವಿಲ್ಲ' ಎಂದೋ ಯಾವುದಾದರೊಂದರಲ್ಲಿ ಕಾರ್ಯೋನ್ಮುಖರಾಗಲು ಸಿದ್ಧರಾಗಿರಬೇಕು.
ಜ್ಞಾನೋದಯವನ್ನು ಹೊಂದಲು ಹೆಚ್ಚಾದ ಸಾಧ್ಯತೆ
ಜನರು ಬಂದು ನನ್ನನ್ನು ಕೇಳುತ್ತಾರೆ, 'ನನಗೆ
ಅನೇಕ ಭಯಗಳಿವೆ. ಏನು ಮಾಡಲಿ?' ಎಂದು.
'ನಿಮಗೆ ಅನೇಕ ಭಯಗಳಿದ್ದರೆ ಜ್ಞಾನೋದಯ
ಹೊಂದುವ ಸಾಧ್ಯತೆ ಹೆಚ್ಚು. ನಿಮಗಾಗಿ ಎಷ್ಟೋ
ಅವಕಾಶಗಳು ತೆರೆದಿವೆ!' ಎನ್ನುತ್ತೇನೆ.
ಯಾರಿಗೆ ಅನೇಕ ಭಯಗಳಿಲ್ಲವೋ, ಸಾಧ್ಯತೆಯ ದ್ವಾರಗಳೂ ಕಡಿಮೆಯೋ. ಏಕೆಂದರೆ, ಆತನು ನೀರಸವಾದ ಜೀವನವನ್ನು ನಡೆಸುತ್ತಾನೆ. ನೀರಸ ಜೀವನ ನಡೆಸುವವನಿಗೆ ಅಷ್ಟಾಗಿ ಭಯವಿರುವುದಿಲ್ಲ. ಆತನಿಗೆ ಅಷ್ಟಾಗಿ ಕಳೆದುಕೊಳ್ಳುವುದೂ ಇರುವುದಿಲ್ಲ, ನಿರ್ಧರಿಸಬೇಕಾದುದೂ ಇರುವುದಿಲ್ಲ. ಆತನು ಎಷ್ಟೋ ಅಪಾಯಗಳಿಗೀಡಾಗುವುದೇ ಇಲ್ಲ.
ನೀವು ಮಾಡಬೇಕಾದುದೆಲ್ಲವೂ ಇದೇ: ಭಯವಾದಾಗಲೆಲ್ಲಾ ನಿಮ್ಮನ್ನೇ ನೀವು ಖಂಡಿಸಬೇಡಿರಿ. 'ನಾನೆಂತಹ ಜೀವಿ!' ಎಂದುಕೊಳ್ಳುತ್ತಾ ವಿಶ್ವಾಸವನ್ನು ಕಳೆದುಕೊಳ್ಳಬೇಡಿರಿ ಅಥವಾ ಹೀಯಾಳಿಸಿಕೊಳ್ಳಬೇಡಿರಿ. ವಾಸ್ತವವಾಗಿ ಯಾರು ತಮ್ಮ ಭಯಗಳನ್ನು ಎದುರಿಸುತ್ತಾರೆಯೋ ಅವರಿಗೆ ಬಹಳ ಸಮಸ್ಯೆಗಳಿರುವುದಿಲ್ಲ. ಯಾರಿಗೆ ತಮ್ಮ ಭಯಗಳೆಂದರೆ ಭಯವೋ ಅವರು ತಾವಾಗಿಯೇ ಹೆಚ್ಚು ಸಮಸ್ಯೆಗಳನ್ನು ತಂದುಕೊಳ್ಳುತ್ತಾರೆ. ನಿಮ್ಮ ಭಯಗಳ ಬಗ್ಗೆಯೇ ಬಹಳವಾಗಿ ಚಿಂತಿಸುತ್ತಿದ್ದರೆ, ನಿಮಗೆ ಸಮಸ್ಯೆಗಳಿವೆಯೆಂದು ಯೋಚಿಸಲಾರಂಭಿಸುವಿರಿ.
ಕೆಲವುವೇಳೆ ಕೇವಲ ನಿಮ್ಮ ಗಮನವನ್ನು ಬೇರೆ
ಯಾವುದಕ್ಕಾದರೂ ತಿರುಗಿಸಿದರೇ ಸಾಕು, ಭಯದಿಂದ
ಹೊರಬರಬಹುದು. ಆದರೆ ಅದು ನಿರ್ಭಯವಲ್ಲ.
ನಿರ್ಭಯವೆಂದರೆ, ಯಾವುದನ್ನಾಗಲೀ
ಕಳೆದುಕೊಳ್ಳುವ ಭಯವನ್ನೆಂದಿಗೂ ಅನುಭವಿಸದೇ
ಇರುವಂತಹ ಪ್ರಜ್ಞೆಯೊಳಕ್ಕೆ ಒಂದು ಬೃಹತ್
ಜಿಗಿತವನ್ನು ಜಿಗಿದುಬಿಡುವುದು!
ಸ್ಪಷ್ಟವಾಗಿರಿ: ನಿಮ್ಮ ಜೀವನದ ಬಗ್ಗೆ ಇರುವ
ಭಯಗಳು – ಸೋಲಿನ ಭಯ, ನಿಮ್ಮ ಹತ್ತಿರದವರ,
ಪ್ರೀತಿಪಾತ್ರರಾದವರ ಅಗಲಿಕೆಯ ಭಯ,
ತಿಳಿಯದುದರ ಬಗ್ಗೆ ಭಯವೆಂಬಂತಹ ಪ್ರತಿಯೊಂದು
ಭಯವನ್ನೂ ಜ್ಞಾನೋದಯದೆಡೆಗೆ ಮಾರ್ಗವಾಗಿ
ಬಳಸಬಹುದು.
ನಿಮಗೆ ತಿಳಿದಿರಬೇಕಾದ ಮತ್ತೊಂದು ವಿಷಯ:
ಎಂದಿಗೂ ನಶಿಸದ ಏನೋ ವಿಶೇಷವಾದುದು
ನಿಮ್ಮಲ್ಲಿದೆ; ಇದೇ ನಿಮ್ಮ ಚೈತನ್ಯದ ಮೂಲ.
ಹಾಗೆಯೇ, ನಶಿಸುವಂತಹದೂ, ಈಗಲೂ
ವಾಸ್ತವವಾಗಿ ಸಜೀವವಾಗಿಲ್ಲದುದೂ ನಿಮ್ಮಲ್ಲಿದೆ.
ನಿಮ್ಮಲ್ಲಿ ಸಾವಿನ ಭಯವಿದೆ. ಏಕೆಂದರೆ ನಿಮ್ಮಿಂದ
ಅಪಹರಿಸಬಹುದಾದುದು ಏನೋ ಈಗ ನಿಮ್ಮಲ್ಲಿದೆ
ಎಂದುಕೊಂಡಿದ್ದೀರಿ. ಇಲ್ಲ! ನಿಮ್ಮಲ್ಲಿ ಈಗ
ಇರುವುದೇನೇ ಆದರೂ ಅದನ್ನು
ಅಪಹರಿಸಲಾಗುವುದಿಲ್ಲ. ಹಾಗೆ ನೋಡಿದರೆ
ಅಪಹರಿಸಲಾಗುವಂತಹುದೇನೂ ನಿಮ್ಮಲ್ಲಿರಲೇ
ಇಲ್ಲ. ನಶಿಸುವಂತಹುದು ನಿಮ್ಮ ಅಂತರಂಗವನ್ನು
ತುಂಬಲು ಸಾಧ್ಯವೇ ಇಲ್ಲ.
ಭಯವನ್ನೆದುರಿಸುವ ಧೈರ್ಯವೇ ನಿರ್ಭಯ
ಭಯವನ್ನು ಗೆಲ್ಲಲಾಗುವುದಿಲ್ಲ.
ನಿರ್ಭಯವೆಂದರೆ, ತೀವ್ರವಾದ ಭಯವನ್ನು ಯಾವ
ವಸ್ತುವಿನೆಡೆಗೂ ಗುರಿಮಾಡದೇ ಅನುಭವಿಸುವ
ಬುದ್ಧಿವಂತಿಕೆ. ಹೆದರಬೇಕಾದ ಯಾವ ವಸ್ತುವೂ
ಇಲ್ಲವಾದರೆ ತೀವ್ರವಾದ ಭಯವೇ ಮಹತ್ತರವಾದ
ವಿಶ್ರಾಂತಿಯನ್ನೂ, ಸಮಾಧಾನವನ್ನೂ ಕೊಡುತ್ತದೆ.
ಭಯವೆಂಬುದು, ಆಳವಾದ ವಿಶ್ರಾಂತಿಯನ್ನೂ,
ಸ್ವಕೇಂದ್ರೀಕರಣವನ್ನೂ ಉಂಟುಮಾಡುವ ಒಂದು
ಪ್ರಭಾವಶಾಲಿಯಾದ ಶಕ್ತಿ. ಭಯದ ಕೇಂದ್ರವು
ಪುನಶ್ಚೇತನದ ಕೇಂದ್ರ.
ಸ್ಪಷ್ಟವಾಗಿ ತಿಳಿಯಿರಿ:
ನಿರ್ಭಯವಾಗಿರುವುದೆಂದರೆ ಭಯವೇ ಇಲ್ಲದೆ
ಇರುವುದು ಎಂದಲ್ಲ. ಭಯವೇನೋ ಇದೆ, ಆದರೆ
ಅದನ್ನು ಎದುರಿಸಿ ಅದರೊಂದಿಗೆ ಬದುಕಲು ನಿಮಗೆ
ಅಸಾಧಾರಣವಾದ ಶಕ್ತಿ ಮತ್ತು ಧೈರ್ಯವೂ ಇದೆ
ಎಂದರ್ಥ. ನಿರ್ಭಯವೆಂದರೆ ಅತ್ಯಂತ ಹೆಚ್ಚಾದ
ಭಯದಲ್ಲಿಯೂ ಸಹ ಜೀವಿಸುವ ಚೈತನ್ಯ ಅಥವಾ
ಧೈರ್ಯವನ್ನು ಹೊಂದಿರುವುದು. ಆ ಭಯವನ್ನೂ
ಮೀರಿ ಹೋಗಿ ಭಯಕ್ಕೆ ಅಂಟಿದಂತೆಯೂ
ಅಂಟದಂತೆಯೂ ಇರುವುದು.
ನೀವು ತಿಳಿದಿರಬೇಕಾದ ಮತ್ತೊಂದು
ವಿಷಯವೆಂದರೆ, ಭಯವು ಜೀವನದ ಸಹಜಗುಣದ
ಒಂದು ಅಂಶ ಎನ್ನುವುದು. ನೀವು ನಿಮ್ಮ
ಗೋರಿಯಲ್ಲಿದ್ದಾಗ ನಿರ್ಭಯವಾಗಿರಬಹುದು! ಆಗ
ಯಾವುದಕ್ಕೂ ಭಯಪಡಬೇಕಾಗಿಯೇ ಇಲ್ಲ,
ಏಕೆಂದರೆ ಕಳೆದುಕೊಳ್ಳಲು ನಿಮ್ಮಲ್ಲೇನೂ
ಇರುವುದಿಲ್ಲ! ಕಳೆದುಕೊಳ್ಳಲು ಏನಾದರೂ ಇದ್ದರೆ,
ಭಯವಿರುತ್ತದೆ. ಜೀವನದ ಸಹಜ ಗುಣವೇ ಅದು.
ವಿಷಯಗಳು ಸ್ಪಷ್ಟವಾದವೂ, ತಿಳಿದುವೂ
ಆಗಿದ್ದಾಗ ಭಯವಿರುವುದಿಲ್ಲ. ವಿಷಯಗಳು
ಅಸ್ಪಷ್ಟವಾಗಿಯೂ, ಕೇವಲ ಸಾಧ್ಯತೆಗಳಾಗಿಯೂ
ಮತ್ತು ತಿಳಿಯದೇ ಇದ್ದಾಗ ಮಾತ್ರ ಭಯವಿರುತ್ತದೆ.
ಉದಾಹರಣೆಗೆ, ಸಾವು ಒಂದು ಸಾಧ್ಯತೆ. ಒಂದು
ಘಟನೆ ಎಂಬಂತೆ ನೋಡಿದಾಗ ಅದು
ಸ್ಪಷ್ಟವಾದುದು, ಆದರೆ ಅದು ಯಾವಾಗ ಹೇಗೆ
ಆಗಬಹುದೆಂಬುದು ನಮಗೆ ಸ್ಪಷ್ಟವಾಗಿ ತಿಳಿದಿಲ್ಲ.
ಆದುದರಿಂದಲೇ ಭಯವು ಅದರೊಂದಿಗೆ
ಕಲಿತಿರುವುದು.
ಭಯವೆಂಬ ಗಾಢಾಂಧಕಾರವನ್ನು ಸುಮ್ಮನೆ
ಅರಿವಿನೊಂದಿಗೆ ನೋಡಿದರೇ ಸಾಕು, ನೀವು
ಅದರೊಂದಿಗೇ ಜೀವಿಸಿ ಅದನ್ನು ಮೀರಿಯೂ
ಹೋಗಬಹುದು.
ತನ್ನತನದ ಗುರುತನ್ನು ಕಳೆದುಕೊಳ್ಳುವ ಭಯ
ಮಾನವರಿಗಿರುವ ಅತ್ಯಂತ ದೊಡ್ಡ
ಭಯವೆಂದರೆ, ತನ್ನತನದ ಗುರುತನ್ನು ಕಳೆದುಕೊಳ್ಳುವ
ಭಯ. ಜೀವವನ್ನೇ ಕಳೆದುಕೊಳ್ಳುವ ಭಯವೂ ಸಹ
ತನ್ನತನದ ಗುರುತನ್ನು ಕಳೆದುಕೊಳ್ಳುವುದರಷ್ಟು
ದೊಡ್ಡದಲ್ಲ. ಗುರುತನ್ನು ಕಳೆದುಕೊಳ್ಳುವ ಭಯವು
ಸಾವಿನ ಭಯಕ್ಕಿಂತಲೂ ಹೆಚ್ಚಾದುದು.
ಸಾವಿನ ಭಯ
ದೈಹಿಕ ಆರೋಗ್ಯ, ಮಾನಸಿಕ ಸ್ವಾಸ್ಥ್ಯ,
ಸಂಪತ್ತು, ಪದವಿ ಹಾಗೂ ಕೀರ್ತಿ ಅಥವಾ
ಬಂಧುಮಿತ್ರರನ್ನು ಕಳೆದುಕೊಳ್ಳುವ – ನಮ್ಮೆಲ್ಲಾ
ಭಯಗಳೂ ವಾಸ್ತವವಾಗಿ ಅನೇಕ
ಮಾರುಪೇಷಗಳಲ್ಲಿರುವ ಸಾವಿನ ಭಯವೇ.
ಒಂದು ಸಣ್ಣ ಕಥೆ:
ಒಂದು ಸಾರ್ವಜನಿಕ ಸಭೆಯಲ್ಲಿ ಪ್ರವಚನವನ್ನು
ಮಾಡಲು ಒಬ್ಬಾತನು ಬಹಳ ಚೆನ್ನಾಗಿ ತಯಾರಿ
ಮಾಡಿಕೊಂಡಿದ್ದನು. ವೇದಿಕೆಯ ಮೇಲೆ
ಹೋಗುತ್ತಿದ್ದಂತೆಯೇ ಹಠಾತ್ತನೆ ಎಲ್ಲವೂ
ಮರೆತುಹೋಯಿತು. ಆದರೂ ಮೈಕನ್ನು
ಕೈಗೆತ್ತಿಕೊಂಡನು. ಸಭಾಕಂಪನ ಮೊದಲಾಯಿತು!
ಕೆಲವು ನಿಮಿಷಗಳ ಕಾಲ ಮುಂದೆ ನೆರೆದಿದ್ದ ದೊಡ್ಡ
ಜನಸಮೂಹದ ಮುಂದೆ ಮಾತೇಹೊರಡದೆ
ನಿಂತಿದ್ದನು.
ನಂತರ ಸ್ವಲ್ಪ ಹೊತ್ತಾದಮೇಲೆ ಇದ್ದಕ್ಕಿದ್ದಂತೆ, ‘ಈ ಜಗತ್ತಿನಲ್ಲಿ ಮಾನವನ ಮನಸ್ಸೆಂಬುದು ಅತ್ಯಂತ ಆಶ್ಚರ್ಯಕರವಾದುದು. ಅದು ಹುಟ್ಟಿದಾಗಿನಿಂದಲೂ ಕ್ರಿಯಾಶೀಲವಾಗಿದ್ದು, ಸಾಯುವವರೆಗೂ ನಿಲ್ಲುವುದೇ ಇಲ್ಲ; ಪ್ರವಚನ ಮಾಡಬೇಕಾಗಿ ಬಂದಾಗ ಬಿಟ್ಟರೆ!’ ಎಂದನು.
ಸಾಮಾಜಿಕ ಭಯ:- ಸಮಾಜವು ನಮ್ಮನ್ನು ನಿರಾಕರಿಸುವುದೆಂಬ ಭಯವು, ನಮಗೆ ಅದು ಒಳ್ಳೆಯದಲ್ಲದಿದ್ದರೂ ಸಹ ಸಮಾಜವನ್ನು ಮೆಚ್ಚಿಸಲೆಂದು ನಮ್ಮನ್ನು ಕೆಲಸ ಮಾಡುವಂತೆ ಪ್ರೇರಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಅನೇಕ ವೇಳೆ ನಮ್ಮ ಅಂತರಾತ್ಮಕ್ಕೆ ನಿಜವಾಗಿಯೂ ಏನು ಮಾಡಬೇಕೆನಿಸುತ್ತದೆಯೋ ಅದನ್ನು ತ್ಯಜಿಸುತ್ತೇವೆ. ಸಮಾಜವು ಒಪ್ಪದಿರಬಹುದೆಂಬ ಆ ಭಯವು ಸಾವಿನ ಭಯದ ಇನ್ನೊಂದು ರೂಪವಷ್ಟೆ - ಅದು ಅಹಂಕಾರದ ಸಾವು.
ನಮ್ಮ ಪ್ರತಿಯೊಂದು ಕ್ರಿಯೆಯೂ
ನಮಗರಿವಿಲ್ಲದೆಯೇ ಸಾವಿಗೂ, ಸಾವಿನ ಭಯಕ್ಕೂ
ಸಂಬಂಧಿಸಿದೆ. ಸಾವಿನ ಬಗ್ಗೆ ತಿಳಿಯುವುದು
ಜೀವನವನ್ನು ನೋಡುವ ರೀತಿಯನ್ನೇ
ಬದಲಾಯಿಸಬಲ್ಲದು. ನಿಮ್ಮೆಲ್ಲಾ ಭಯಗಳನ್ನೂ
ನಿಭಾಯಿಸುವ ರೀತಿಯನ್ನೇ ಅದು
ಬದಲಾಯಿಸಬಲ್ಲದು. (ಸಾವಿನ ತಿಳಿವಳಿಕೆಯನ್ನು
'ಸಾವು' ಎಂಬ ಅಧ್ಯಾಯದಲ್ಲಿ ವಿವರವಾಗಿ
ಕೊಡಲಾಗಿದೆ).
ಕೋಪ - ಭಯದ ಕ್ರಿಯಾತ್ಮಕ ರೂಪ
ಭಯವೇ ಕೋಪಕ್ಕೆ ಈಡುಮಾಡುವುದು.
ಭಯವು ಚೈತನ್ಯದ ಸೌಮ್ಯರೂಪವಾದರೆ, ಕೋಪವು
ಕ್ರಿಯಾತ್ಮಕ ವ್ಯಕ್ತ ರೂಪ.
ಒಂದು ಚಿಕ್ಕ ಕಥೆ:
ಒಬ್ಬಾತನು ಕೈಯಲ್ಲಿ ಕಾಗದಗಳ ಕಂತೆಯನ್ನು ಹಿಡಿದು ಬಹಳ ಕೋಪದಿಂದ, 'ಇಂತಹ ಬೆದರಿಕೆಯ ಪತ್ರಗಳನ್ನು ನನಗೆ ಕಳಿಸಲು ಇವರಿಗೆಷ್ಟು ಪೊಗರು!' ಎನ್ನುತ್ತಾ ಅಂಚೆ ಕಛೇರಿಗೆ ನುಗ್ಗಿದನು. ಅಂಚೆ ಕಛೇರಿಯ ಅಧಿಕಾರಿಯು 'ನಿಜ, ಬೆದರಿಕೆಯ ಪತ್ರಗಳನ್ನು ಕಳಿಸುವುದು ಕಾನೂನುಬಾಹಿರ. ಈ ಪತ್ರಗಳನ್ನು ಯಾರು ಕಳುಹಿಸುತ್ತಿರುವರೆಂದು ನಿಮಗೆ ಗೊತ್ತೆ?' ಎಂದು ಕೇಳಿದನು.
ಆತನು, 'ಹೌದು, ನನಗೆ ಗೊತ್ತು! ಅದು ಇನ್ಕಂ ಟ್ಯಾಕ್ಸ್ನವರು' ಎಂದು ಅರಚಿಕೊಂಡನು.
ಕೋಪಬಂದಾಗ ಕೇವಲ ಕೋಪವನ್ನು
ನೋಡಿರಿ. ಅದರ ಮೂಲದಲ್ಲಿ ತೀವ್ರವಾದ
ಭಯವನ್ನು ಕಾಣುವಿರಿ.
ಇದನ್ನು ನಿಮಗಾಗಿಯೇ ಪ್ರಯತ್ನಿಸಿರಿ : ನಿಮಗೆ ಭಯವಾಗುತ್ತಿದ್ದರೆ ಆಗ ಕೋಪವನ್ನು ವ್ಯಕ್ತಪಡಿಸಿರಿ. ಕೈಗಳನ್ನು ಕೊಡವಿ, ಕಾಲಿನಿಂದ ಒದೆಯಿರಿ - ಚೈತನ್ಯವನ್ನು ವ್ಯಕ್ತಪಡಿಸಿರಿ. ಕೋಪವು ಮಾಯವಾಗುವುದನ್ನು ಕಾಣುವಿರಿ. ಭಯವು ಕೋಪವಾಗಿ ಹೇಗೆ ಪರಿವರ್ತಿಸುತ್ತದೆ ಎಂಬುದನ್ನು ನೀವಾಗಿಯೇ ಕಾಣುವಿರಿ. ಹಾಗೆಯೇ ಭಯವು ದ್ವೇಷವಾಗಿಯೂ ಪರಿವರ್ತಿಸಬಹುದು. ನೀವು ಕೇವಲ ನಿಮ್ಮ ಮೇಲೆಯೇ ಅರಿವಿನಿಂದಿರಬೇಕು ಹಾಗೂ ಭಾವನೆಗಳು ಯಾವ ರೀತಿ ಒಂದು ರೂಪದಿಂದ ಮತ್ತೊಂದಕ್ಕೆ ಸೂಕ್ಷ್ಮವಾಗಿ ಪರಿವರ್ತಿಸುತ್ತವೆ ಎಂಬುದನ್ನು ವೀಕ್ಷಿಸಬೇಕು. ಈ ಲೀಲೆಯನ್ನರಿತುಕೊಂಡಾಗ ಆಟದಿಂದ ಸುಲಭವಾಗಿ ನಿರ್ಗಮಿಸಬಹುದು.
ನಮ್ಮೆಲ್ಲ
ಭಯಗಳೂ
ಅನೇಕ
ಮಾರುವೇಷ-
ಗಳಲ್ಲಿರುವ
ಸಾವಿನ ಭಯವೇ.
ಭಯದ ಆಘಾತಗಳು
ಮನೋವಿಜ್ಞಾನಿಗಳು ಭಯದ ಆಘಾತಗಳನ್ನು ಕುರಿತು ಮಾತನಾಡುತ್ತಾರೆ. ಕತ್ತಲಿನಲ್ಲಿ ತೋಟದೊಳಗೆ ಹೋಗುತ್ತಿದ್ದೀರೆಂದಿಟ್ಟುಕೊಳ್ಳಿರಿ. ಹಾಗೆಯೇ ಒಂದು ಹಗ್ಗದ ಸುರುಳಿಯನ್ನು ನೋಡುತ್ತೀರಿ – ಅದನ್ನು ಒಂದು ಹಾವೆಂದುಕೊಂಡು ನಡುಗಲಾರಂಭಿಸುತ್ತೀರಿ. ಅದು ಕೇವಲ ಹಗ್ಗ, ಹಾವಲ್ಲವೆಂದು ತಿಳಿಯುವ ಮುನ್ನ ಆಗುವ ತಕ್ಷಣದ ಆಘಾತವನ್ನೇ 'ಭಯದ ಆಘಾತ' ಎಂದು ಕರೆಯುವುದು. ಭಯದ ಆಘಾತವು ಗುಲಾಬಿ ಗಿಡವನ್ನು ಬುಡಸಮೇತ ಅಲುಗಾಡಿಸಿದಂತೆ. ಅದನ್ನು ಸಾಕಷ್ಟು ಅಲುಗಾಡಿಸಿದರೆ ಅದು ಸತ್ತೇ ಹೋಗುತ್ತದೆ.
ನಾವು ಪ್ರತಿ ಹಗಲು-ರಾತ್ರಿ ಕನಸಿನಲ್ಲಿ
ಎಚ್ಚೆತ್ತಾಗ, ಆರರಿಂದ ಹನ್ನೆರಡು ಭಯದ
ಆಘಾತಗಳನ್ನು ಅನುಭವಿಸುತ್ತೇವೆ ಎನ್ನಲಾಗಿದೆ.
ನಮ್ಮ ಅಂತರಾತ್ಮದ ಗತಿ ಏನು ಎಂಬುದನ್ನು
ಕಲ್ಪಿಸಿಕೊಳ್ಳಿರಿ! ಭಯದ ಆಘಾತಗಳು
ಪ್ರಜ್ಞಾಹೀನತೆಯಿಂದ ಉದ್ಭವವಾಗುತ್ತವೆ.
ಅವುಗಳನ್ನು ಜಾಗರೂಕತೆಯಿಂದಲೂ,
ಪ್ರಜ್ಞಾಪೂರ್ವಕವಾಗಿಯೂ ಅವಲೋಕಿಸಿದಾಗ
ಅವನ್ನು ಸಾಕಷ್ಟು ಕಡಿಮೆಮಾಡಿಕೊಳ್ಳಬಹುದು.
ಭಯವನ್ನು ಗೆಲ್ಲುವುದು ಹೇಗೆ
ವೀಕ್ಷಣೆ ಮತ್ತು ಅಂಗೀಕಾರ
ಭಯವು ಎದುರಾದಾಗ ಅದನ್ನು ವಿರೋಧಿಸಲಾಗಲೀ, ನಿಗ್ರಹಿಸಲಾಗಲೀ ಪ್ರಯತ್ನಿಸಬೇಡಿರಿ. ಭಯವನ್ನು ಕೇವಲ ನೋಡಿರಿ, ಗುರುತಿಸಿರಿ ಮತ್ತು ಅದನ್ನು ಒಪ್ಪಿಕೊಳ್ಳಿರಿ. ಭಯದ ಅಂಗೀಕಾರವು ಭಯವನ್ನು ಕರಗಿಸುತ್ತದೆ. ಭಯವು ನಿಮ್ಮನ್ನು ನಡುಗಿಸಲಿ, ನಿಮ್ಮ ದೇಹವು ಕಂಪಿಸಿದರೆ ಕಂಪಿಸಲಿ. ಕಣ್ಣುಗಳು ಒದ್ದೆಯಾದರೆ ಕಣ್ಣೀರುಬರಲಿ. ಬೀಸುವ ಗಾಳಿಯಲ್ಲಿ ವಿರೋಧಿಸದೆ, ಗಾಳಿಗೆ ಬಾಗುತ್ತಾ ಹುಲ್ಲಿನ ಎಸಳಿನಂತಿರಿ.
ಒಂದು ಚಿಕ್ಕ ಕಥೆ :
ರಾತ್ರಿಯ ಕತ್ತಲಿನಲ್ಲಿ ಒಬ್ಬಾತನು ಇಕ್ಕಟ್ಟಾದ
ದಾರಿಯಲ್ಲಿ ನಡೆಯುತ್ತಿದ್ದನು. ಹಠಾತ್ತನೆ ಆತನ
ಪಾದವು ಒಂದು ಬಂಡೆಗೆ ತಾಕಿ, ಎಡವಿಕೊಂಡು
ಬಿದ್ದನು. ಬಂಡೆಯ ಮೇಲೆ ನೇತಾಡುತ್ತಿದ್ದ ಒಂದು
ಕೊಂಬೆಯನ್ನು ಹಿಡಿದುಕೊಂಡನು. ಸಂಪೂರ್ಣವಾಗಿ
ಕತ್ತಲಾಗಿತ್ತು. ಆತನು ಕೊಂಬೆಯನ್ನು ಬಿಗಿಯಾಗಿ
ಹಿಡಿದನು. ಸಹಾಯಕ್ಕಾಗಿ ಕೂಗಿಕೊಂಡನಾದರೂ
ಕೇಳಿಬಂದುದು ಕೇವಲ ಆತನ ಪ್ರತಿಧ್ವನಿ.
ಪ್ರತಿಧ್ವನಿಯನ್ನು ಕೇಳುತ್ತಲೇ ತಾನು ಒಂದು
ಅಗಾಧವಾದ ಕೂಪದ ಬಾಯಲ್ಲಿರಬಹುದೆಂದು
ಗಾಬರಿಗೊಂಡನು.
ಆ ರಾತ್ರಿಗೆ ಕೊನೆಯಿಲ್ಲವೆನಿಸಿತು ಹಾಗೂ
ಏನಾದರೂ ಸಹಾಯ ದೊರೆಯಬಹುದೆಂಬ
ನಿರೀಕ್ಷೆಯಲ್ಲಿ ಹತಾಶನಾಗಿ ಕೊಂಬೆಯನ್ನು
ಹಿಡಿದುಕೊಂಡೇ ಇದ್ದನು. ಕೊನೆಗೆ, ಬೆಳಗಾಯಿತು.
ಕೂಪವು ಎಷ್ಟು ಆಳವಾಗಿದೆಯೋ ಎಂದು ಬಗ್ಗಿ
ನೋಡಿದನು. ಆದರೆ ಕೂಪವೇ ಇರಲಿಲ್ಲ, ಕೇವಲ
ಎರಡು ಅಡಿಗಳ ಕೆಳಗೆ ದೊಡ್ಡದೊಂದು ಬಂಡೆ
ಇತ್ತು!
ನಿಮ್ಮ ಭಯಗಳು ಸರಿಯಾಗಿ ಆತನ
ಭಯದಂತೆಯೇ ಇರುವುದು – ನೀವು ಒಂದು
ಅಗಾಧವಾದ ಕೂಪ ಎಂದುಕೊಳ್ಳುವುದು ಕೇವಲ
ಕೆಲವು ಅಡಿಗಳಾಳವಿರುತ್ತದೆ. ನಿಮ್ಮ ಭಯಗಳನ್ನು
ಎದುರಿಸಲು ಸಾಧ್ಯವಾದರೆ, ಅವುಗಳಿಗೆ
ಆಳವಿಲ್ಲದಿರುವುದು ಕಂಡುಬರುತ್ತದೆ. ನೀವು
ಭಯಗಳನ್ನು ಉತ್ಪ್ರೇಕ್ಷಿಸುವುದರಿಂದ ಅವುಗಳನ್ನು
ಕೂಪಗಳೆಂದು ಊಹಿಸುತ್ತೀರಿ. ಕೊಂಬೆಯನ್ನು
ಎಂದರೆ ಭಯವನ್ನು ಕೈ ಬಿಡುವುದೋ, ಇಲ್ಲವೇ
ಅದನ್ನೇ ಹಿಡಿದುಕೊಂಡು ಚಿತ್ರಹಿಂಸೆಪಡುವುದೋ,
ಎಂಬುದು ನಿಮ್ಮಿಷ್ಟ.
ಅನಿವಾರ್ಯವಾದುವುಗಳನ್ನು ಗೆಲ್ಲಲು
ಒಪ್ಪಿಕೊಳ್ಳುವುದೊಂದೇ ಮಾರ್ಗ. ಅಂಗೀಕರಿಸಿದಾಗ
ಇದ್ದಕ್ಕಿದ್ದಂತೆ ಭಯವು ಅದೃಶ್ಯವಾಗುವುದನ್ನು
ಕಾಣುವಿರಿ. ಅಂಗೀಕರಿಸಿದಾಕ್ಷಣವೇ ಭಯಕ್ಕೆ
ನಿಮ್ಮನ್ನು ಹೆದರಿಸುವ ಶಕ್ತಿ ಹೋಗಿಬಿಡುತ್ತದೆ.
ಅದರೊಡನೆ ಸೆಣಸಾಡಿದಾಗ ಭಯವನ್ನು ಆಳವಾದ
ಶಾಂತಿಯಂತೆ ಕಾಣುವಿರಿ. ಭಯದ ಆಘಾತವಾದಾಗ ಅದು ನಡೆಯಲು ಬಿಡಿ. ಅದೊಂದೇ ದಾರಿ.
ಭಯದೊಂದಿಗೆ ಒಂದು ವ್ಯಕ್ತಿ ಅಥವಾ ವಿಷಯ ಸೇರಿದ್ದಾಗ ಅದನ್ನೂ ಒಪ್ಪಿಕೊಳ್ಳಿರಿ. ಆ ಸ್ವೀಕಾರವು ಪರಿವರ್ತನೆ ಮಾಡುತ್ತದೆ. ಸೆಣಸಾಡಿದಷ್ಟೂ ಭಯವನ್ನು ಉತ್ತೇಜಿಸಿದಂತೆ. ನಿಮ್ಮ ಗಮನವನ್ನು ಭಯದಿಂದ ಎತ್ತಲೋ ತಿರುಗಿಸುವುದೂ ಸಹ ಸರಿಯಲ್ಲ. ಏಕೆಂದರೆ ಆಗ ಭಯವಿನ್ನೂ ನಿಮ್ಮಲ್ಲಿಯೇ ಉಳಿಯುತ್ತದೆ. ಭಯದಿಂದ ಹೊರಬಂದಂತಾಗುವುದಿಲ್ಲ.
ಭಯವು ತನ್ನನ್ನೇ ತಾನು ಸ್ವಾಧೀನ
ಪಡಿಸಿಕೊಳ್ಳಲಿ. ಭಯದೊಳಕ್ಕೇ ಎರಡು ಮೂರು
ಸಲ ಹೋಗಿಬನ್ನಿರಿ. ಯಾವ ಹಿಡಿತಡೆಯೂ ಇಲ್ಲದೆ
ಭಯವನ್ನು ತೀವ್ರವಾಗಿ ಅನುಭವಿಸಿರಿ. ಇನ್ನೆಂದಿಗೂ
ಅದು ನಿಮ್ಮ ತಂಟೆಗೆ ಬರುವುದಿಲ್ಲ.
ಸ್ವಾಧಿಷ್ಠಾನ ಚಕ್ರ - ಜೀವ ಹಾಗೂ ಮರಣದ ಸ್ಥಾನ
ಭಯವು ನಾಭಿಪ್ರದೇಶದಿಂದ ಎರಡು
ಇಂಚುಗಳಷ್ಟು ಕೆಳಗಿರುವ ಸ್ವಾಧಿಷ್ಠಾನ ಚಕ್ರಕ್ಕೆ
ಸಂಬಂಧಿಸಿದುದು.
ನನ್ನ ಚಿಕ್ಕಂದಿನಲ್ಲಿ ನಡೆದ ಒಂದು ಘಟನೆ:
ನಾನು ಪ್ರತಿದಿನವೂ ಅರುಣಾಚಲ ಬೆಟ್ಟಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದೆ. ಬೆಳಗ್ಗೆ ನಾಲ್ಕು ಗಂಟೆಯಿಂದ ಪ್ರಾರಂಭಿಸಿ ಜಪಿಸುತ್ತಲೂ, ಹಾಡುಗಳನ್ನು ಹೇಳಿಕೊಳ್ಳುತ್ತಲೂ, ಬೆಟ್ಟದ ಸುತ್ತಲೂ ಹೋಗುತ್ತಿದ್ದೆ.
ಒಂದು ದಿನ ಬಹಳ ಬೇಗನೇ ಮಧ್ಯರಾತ್ರಿ ಕಳೆದಕೂಡಲೇ ಹೊರಟುಬಿಟ್ಟೆ. ಆ ದಿನಗಳಲ್ಲಿ ಬೆಟ್ಟದ ಸುತ್ತಲೂ ರಸ್ತೆಗಳಾಗಲೀ, ದೀಪಗಳಾಗಲೀ ಇರುತ್ತಿರಲಿಲ್ಲ. ದಾರಿಯೆಲ್ಲವೂ ದಟ್ಟವಾದ ಕಾಡಾಗಿತ್ತು. ನಾನು ಕೆಳಗೆ ನೋಡಿಕೊಂಡು ಸಂತೋಷವಾಗಿ ಹಾಡಿಕೊಳ್ಳುತ್ತಾ ನಡೆಯುತ್ತಿದ್ದೆ. ಒಂದು ಸಣ್ಣ ನದಿಯ ಬಳಿ ಇದ್ದಕ್ಕಿದ್ದಂತೆ ತಲೆ ಎತ್ತಿ ನೋಡಿದಾಗ, ಭೀಷಣಾಕಾರದ ಒಂದು ಮಂದೆ ಕಿರುಬಗಳು ತೀಕ್ಷ್ಣವಾಗಿ ದುರುಗುಟ್ಟಿಕೊಂಡು ನೋಡುತ್ತಾ ನನ್ನ ಮೇಲೆರಗಲು ಸಿದ್ಧವಾಗಿದ್ದುದನ್ನು ಕಂಡೆ!
ಹಠಾತ್ತನೆ ಸಂಭವಿಸಿದ ಆ ತೀವ್ರವಾದ ಭಯದಲ್ಲಿ ನನ್ನ 'ಹರ' ಎಂದರೆ ಸ್ವಾಧಿಷ್ಠಾನ ಚಕ್ರದೊಳಗಿನಿಂದ ಕಿರಿಚಿಕೊಂಡೆ. ಅದು ಹಿಂದেন্দೂ ಅನುಭವಿಸದ ಶುದ್ಧ ಭಯದ ಕಿರಿಚಾಟವಾಗಿತ್ತು. ಅದು ಎಷ್ಟು ಪೂರ್ಣವಾಗಿತ್ತೆಂದರೆ, ಅಂದಿನಿಂದ ಜೀವನಪರ್ಯಂತವೂ ಭಯದಿಂದ ನಾನು ವಿಚಲಿತನಾಗಲೇ ಇಲ್ಲ!
ಅರುಣಾಚಲಕ್ಕೆ ನಾನು ಸಂಪೂರ್ಣ ಶರಣಾದೆನು
ಹಾಗೂ ಅರುಣಾಚಲವು ನನ್ನನ್ನು
ಕಾಪಾಡುತ್ತದೆಯೆಂಬ ಸಂಪೂರ್ಣ ವಿಶ್ವಾಸ
ನನಗುಂಟಾಯಿತು. ಹಠಾತ್ತನೆ ಅದೆಲ್ಲಿಂದಲೋ
ಒಬ್ಬ ಹಿರಿಯ ಸನ್ಯಾಸಿಗಳು ಒಂದು ದೊಡ್ಡ
ಕೋಲನ್ನು ಹಿಡಿದು ನನ್ನ ಮುಂದೆ ಪ್ರತ್ಯಕ್ಷವಾಗಿ
ಕಿರುಬಗಳನ್ನು ಓಡಿಸಿದರು. ಆ ಪ್ರಾಣಿಗಳು
ಪಲಾಯನ ಮಾಡುತ್ತಿದ್ದಂತೆಯೇ ಆ ಮುದುಕರೂ
ಅದೃಶ್ಯರಾದರು!
> ಭಯವನ್ನು
> ಹೋಗಲಾಡಿಸಿಕೊಳ್ಳಲು
> ಅದನ್ನು ದೃಶ್ಯೀ-
> ಕರಿಸಿಕೊಳ್ಳುವುದೇ
> ಮಾರ್ಗ.
ಆ ಆದ್ಯ ಕಿರಿಚಾಟದಿಂದ
ಇದ್ದಕ್ಕಿದ್ದಂತೆ ನನ್ನ ದೇಹವು
ಹಗುರವಾಗಿಬಿಟ್ಟದ್ದು
ನನಗರಿವಾಯಿತು. ನನ್ನ
ಇರುವಿಕೆಯ ಕಂಪನವೇ
ಹೆಚ್ಚಾಯಿತೇನೋ ಎಂಬಂತೆ, ನಾನು ನಡೆಯುತ್ತಿದ್ದೆ
ಎನ್ನುವುದಕ್ಕಿಂತಲೂ ತೇಲಾಡುತ್ತಿದ್ದೆ. ಆಧುನಿಕ
ಯುಗದಲ್ಲಿ ಮನೋರೋಗದಿಂದ
ನರಳುತ್ತಿರುವವರಿಗೆ, ಅವರ ಭಯ ಹಾಗೂ ಒತ್ತಿಟ್ಟ
ನಕಾರಾತ್ಮಕ ಭಾವನೆಗಳನ್ನು ಹೋಗಿಸಲು, ಅವರ
'ಹರ'ದ (ಸ್ವಾಧಿಷ್ಠಾನ ಚಕ್ರ) ಆಳದಿಂದ ಜೋರಾಗಿ
ಕಿರುಚಿಕೊಳ್ಳುವ ಒಂದು ಚಿಕಿತ್ಸೆಯನ್ನು
ಅಳವಡಿಸಿದ್ದಾರೆ. ಇದನ್ನು 'ಪ್ರೈಮಲ್ ಥಿಯರಿ'
ಎನ್ನುತ್ತಾರೆ.
ದೃಶ್ಯೀಕರಣ
ಭಯವನ್ನು ಹೋಗಲಾಡಿಸಿಕೊಳ್ಳುವ ಬಹಳ ಪ್ರಭಾವಶಾಲಿಯಾದ ಮಾರ್ಗವೆಂದರೆ ನಿಮಗೆ ಸಾಧ್ಯವಾದಷ್ಟೂ ಸ್ಪಷ್ಟವಾಗಿ ಆ ಭಯವನ್ನು ದೃಶ್ಯೀಕರಿಸಿಕೊಳ್ಳುವುದು. ಈ ತಂತ್ರದ ಸೊಗಸೆಂದರೆ ಇದನ್ನು ಭಯದ ಸನ್ನಿವೇಶದಲ್ಲಲ್ಲದೇ ಶಾಂತವಾಗಿರುವಾಗಲೂ ನಿಮ್ಮನ್ನು ನೀವೇ ನಿಯಂತ್ರಿಸಿಕೊಳ್ಳುವ ಅವಕಾಶವಿರುವಾಗಲೂ ಮಾಡಬಹುದು.
ಸುಮ್ಮನೆ ಕುಳಿತುಕೊಂಡು ಭಯವಾಗುವ ಸನ್ನಿವೇಶವನ್ನು ಕಣ್ಣಿಗೆ ಕಾಣುತ್ತಿರುವಂತೆ ಚಿತ್ರೀಕರಿಸಿಕೊಳ್ಳಿರಿ. ನಿಮ್ಮನ್ನಾವರಿಸುತ್ತಿರುವ ಭಯವನ್ನು ಸ್ಪಷ್ಟವಾಗಿ ಅನುಭವಿಸಿರಿ. ಭಯವನ್ನು ಗಾಢವಾದ ಅರಿವಿನಿಂದ ಎದುರಿಸಿ his. ನಿಮಗೆ ಹಿಂಸೆಯಾದರೂ, ದೇಹಕ್ಕೆ ತೊಂದರೆಯಾದರೂ ಪರವಾಗಿಲ್ಲ. ಭಯವನ್ನು ಅದುಮಿಡಬೇಡಿರಿ. ಅದು ಹಾಗೇಯೇ ಆಗಗೊಡಿರಿ. ಏನನ್ನಾದರೂ ಸಂಪೂರ್ಣವಾಗಿ ಅನುಭವಿಸಿದಾಗ, ಅದನ್ನು ನೀವು ಬಿಟ್ಟುಬಿಡುತ್ತೀರ.
ಧ್ಯಾನ ತಂತ್ರಗಳು
ಹಂಸ ಮಂತ್ರ
ದಿನದ ಇಪ್ಪತ್ತನಾಲ್ಕು ಗಂಟೆಗಳೂ
ಅಭ್ಯಾಸಮಾಡಬಹುದಾದ ಬಹಳ ಶಕ್ತಿಶಾಲಿಯಾದ
ತಂತ್ರವಿದು. ಭಯದಿಂದಾವೃತವಾದಾಗಲೆಲ್ಲಾ
ಸುಮ್ಮನೆ ಕುಳಿತುಬಿಡಿರಿ, ವಿರಮಿಸಿರಿ.
ನಿಮ್ಮ ಅರಿವನ್ನು ನಿಮ್ಮ ನಿಶ್ವಾಸದ ಮೇಲೆ ಮಾತ್ರ ಇಡಿರಿ. ಉಸಿರನ್ನು ಬಿಡುತ್ತಿರುವಾಗ 'ಸಹ್' ಎಂಬ ಪದವನ್ನು ಮೌನವಾಗಿ ಹೇಳಿಕೊಳ್ಳುತ್ತಿರಿ; ಅಂದರೆ ನಿಶ್ವಾಸದೊಂದಿಗೆ ಹೇಳಿಕೊಳ್ಳುತ್ತಿರಿ. ನಿಶ್ವಾಸವು ನಶಿಸಿಹೋಗುವಂತಹುದನ್ನು ಆರಾಮವಾಗಿ ಹೋಗಗೊಟ್ಟಂತೆ.
ಉಚ್ಛ್ವಾಸದೊಂದಿಗೆ ನೀವು ಸತತವಾಗಿ ಏನನ್ನಾದರೂ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುತ್ತೀರ. ನಿಶ್ವಾಸವು, ಎಲ್ಲವನ್ನೂ ಬಿಟ್ಟುಬಿಡುವಂತೆ; ಉಚ್ಛ್ವಾಸಕ್ಕಿಂತಲೂ ನಿಶ್ವಾಸದ ಮೇಲೆ ಗಮನವಿಡಿರಿ. ಉಚ್ಛ್ವಾಸದೊಂದಿಗೆ 'ಹಂ' ಎಂದು ಹೇಳಿಕೊಳ್ಳುತ್ತಿರಿ.
ನಿಶ್ವಾಸಕ್ಕೆ ಹೆಚ್ಚಾದ ಅರಿವನ್ನೂ ಚೈತನ್ಯವನ್ನೂ
ತುಂಬಿರಿ. ಇನ್ನೂ ಆಳವಾಗಿ ಉಸಿರು ಬಿಡಲು
ಪ್ರಯತ್ನಿಸಿರಿ. ಉಚ್ಛ್ವಾಸವು ದೇಹದಿಂದ
ತಾನಾಗಿಯೇ ಆಗಲು ಬಿಡಿರಿ. ನಿಮ್ಮ ಚೈತನ್ಯ, ಗಮನ
ಹಾಗೂ ಪ್ರಯತ್ನಗಳೂ ನಿಶ್ವಾಸದ ಮೇಲೆಯೇ ಇರಲಿ.
ಹಂ . . . ಸಹ್ . . . ಹಂ . . . ಸಹ್ . . .
ಎಂಬುದು ಮೌನವಾಚನ. ಈ ಹಂಸಮಂತ್ರದ
ಮೌನವಾಚನವು ಎಂದಿಗೂ ನಶಿಸದ ವಿರಾಮವಾದ
ಅರಿವಿಗೆ ಕೊಂಡೊಯ್ಯುತ್ತದೆ. ಏನೇನೆಲ್ಲ
ನಶಿಸಬಹುದೋ ಅದೆಲ್ಲವನ್ನೂ ನಿಮ್ಮ
ಅಂತರಂಗದಿಂದ ಹೊರಹಾಕಲ್ಪಡುತ್ತದೆ.
ಭಯವನ್ನೆದುರಿಸದೇ ಇರುವಂತಹ ಬೇರೆ
ಸಮಯಗಳಲ್ಲಿಯೂ - ಕುಳಿತಾಗ,
ಮಾತನಾಡುತ್ತಿರುವಾಗ, ನಡೆಯುತ್ತಿರುವಾಗ,
ಉಣ್ಣುತ್ತಿರುವಾಗ, ಅಷ್ಟೇ ಏಕೆ,
ನಿದ್ರಿಸುತ್ತಿರುವಾಗಲೂ - ಈ ತಂತ್ರವನ್ನು
ಅಭ್ಯಾಸಮಾಡಬಹುದು. ಇದು ಬಹಳ
ಪ್ರಭಾವಶಾಲಿಯಾದ ಮಂತ್ರ. ಇಪ್ಪತ್ತನಾಲ್ಕು
ಗಂಟೆಗಳೂ ಸತತವಾಗಿ, ಹಂಸ . . .ಹಂಸ . .
.ಹಂಸ . . . ಎಂದು ಮೌನವಾಗಿ ಹಂಸಮಂತ್ರವನ್ನು
ವಾಚಿಸುವುದನ್ನು ರೂಢಿಸಿಕೊಳ್ಳಿರಿ. ಉಚ್ಛ್ವಾಸ
ಮಾಡುವಾಗ 'ಹಂ' ಎಂಬ ನಾದವೂ, ನಿಶ್ವಾಸ
ಮಾಡುವಾಗ 'ಸಹ್' ಎಂಬ ನಾದವೂ
ಉಂಟಾಗುತ್ತಿರಲಿ.
ತಿಳಿಯಿರಿ, ಈ ಮಂತ್ರವನ್ನು ಸತತವಾಗಿ
ವಾಚಿಸುವಾಗ ಅದು 'ಅಜಪ ಜಪ'ವಾಗುತ್ತದೆ.
ಎಂದರೆ ಅಪ್ರಯತ್ನವಾಗಿ ಮಾಡುವ ಜಪ.
ಪ್ರಯತ್ನಪೂರ್ವಕವಾಗಿ ಮಾಡುವುದು ಜಪ.
ಅಪ್ರಯತ್ನವಾಗಿ ಆಗುವುದು ಅಜಪ ಎಂದರೆ
ತಾನಾಗಿಯೇ ನಿಮ್ಮೊಳಗೆ ಆಗುತ್ತಿರುವುದು. ನೀವು
ಕೇವಲ ವಾಚನ ಮಾಡಬೇಕಷ್ಟೆ. ಇದನ್ನು
ಮೈಗೂಡಿಸಿಕೊಳ್ಳಿರಿ ಅಷ್ಟೇ. ಅದು ದಿನವೆಲ್ಲವೂ
ನಡೆಯುತ್ತಿರುತ್ತದೆ.
ಯಾವುದು ನಶಿಸಿ ಹೋಗಲು ಸಾಧ್ಯವೋ
ಅದೆಲ್ಲವೂ ನಿಮ್ಮ ದೇಹವನ್ನು ಬಿಟ್ಟುಹೋಗುತ್ತದೆ.
ಹಾಗೂ ಯಾವುದು ನಶಿಸಿಹೋಗಬೇಕೋ ಅದು
ನಿಮಗೆ ಸೇರಿದುದಲ್ಲವೆಂಬುದನ್ನು ನೀವು
ಅರಿಯುವಿರಿ.
ಯಾವುದಾದರೂ ನಶಿಸಿ ಹೋಗುವಂತಹುದರ ಜೊತೆ ನಿಮ್ಮ ವ್ಯಕ್ತಿತ್ವವನ್ನು ನೀವು ಗುರುತಿಸಿಕೊಂಡಿದ್ದರೆ ಅದು ಕಳಚಿಕೊಂಡು ನೀವು ಬಿಡುಗಡೆ ಹೊಂದುವಿರಿ; ನೀವು ಅನ್ಕ್ಲಚ್ ಆಗುವಿರಿ. ಯಾವುದು ನಶಿಸಿ ಹೋಗಲು ಸಾಧ್ಯವಿಲ್ಲವೋ ಅದಕ್ಕೆ ಸಂಬಂಧಿಸಿದುದಾಗಿ ಭಾವಿಸುತ್ತೀರಿ. ಯಾವುದು ನಶಿಸಿ ಹೋಗಲು ಸಾಧ್ಯವಿಲ್ಲವೋ ಅದೇ ನಿಮ್ಮ ಅಸ್ತಿತ್ವ.
ಈ ತಂತ್ರವನ್ನು ಕೇವಲ ಮೂರು ದಿನಗಳು
ಅಭ್ಯಾಸಮಾಡಿರಿ. ನಿಮ್ಮ ಸಂಪತ್ತು, ದೇಹದ
ಅಂಗಾಂಗಗಳು ಅಥವಾ ಆರೋಗ್ಯ, ನಿಮ್ಮ
ಹತ್ತಿರದವರು, ಪ್ರೀತಿಪಾತ್ರರು - ಇವೆಲ್ಲವನ್ನು
ಕಳೆದುಕೊಳ್ಳುವ ಭಯ, ಅಥವಾ ಅಪರಿಚಿತದ ಬಗ್ಗೆ
ಭಯಗಳೆಲ್ಲವೂ ಮಾಯವಾಗುತ್ತವೆ. ನಿಶ್ವಾಸದ
ಮೇಲೆ ನಿಮ್ಮ ಗಮನವಿಟ್ಟಾಗ, ನಿಮ್ಮ
ಅಂತರಂಗದಲ್ಲಿ ನಶಿಸಿಹೋಗಬಹುದಾದ ನಿಮ್ಮ
ಭಾಗದಂತೆ ಅಡಗಿರುವುದೆಲ್ಲವೂ ಸುಮ್ಮನೆ
ಬಿಟ್ಟುಹೋಗುತ್ತದೆ. ನೀವು ಮುಕ್ತರಾಗುತ್ತೀರಿ.