ಒತ್ತಡವಿಲ್ಲದೆಯೇ ಅತಿಶಯಿಸಿರಿ
This text was machine-transcribed from the printed book and may contain errors. Select the words and choose “Report a mistake”.
ಒತ್ತಡ ಎಂದರೇನು?
ಚಿಂತೆ ಮತ್ತು ಒತ್ತಡಗಳು ಹತ್ತಿರದ ಪರಸ್ಪರ
ಸಂಬಂಧವುಳ್ಳವು. ಅವು ತಾಯಿ ಮಕ್ಕಳಂತೆ. ಒಂದನ್ನು
ಬಿಟ್ಟು ಇನ್ನೊಂದಿರಲಾರದು. ಒಂದಕ್ಕಾದುದೇ
ಇನ್ನೊಂದಕ್ಕೂ ಆಗುತ್ತದೆ. ಏನೇ ಆದರೂ, ಇಂದಿನ
ಜಗತ್ತಿನಲ್ಲಿ ಒತ್ತಡವು ಆರೋಗ್ಯಕ್ಕೆ ಅತ್ಯಂತ
ಹಾನಿಕರವೆಂದು ಪರಿಗಣಿಸಿರುವುದರಿಂದ, ಈ
ವಿಷಯದ ಬಗ್ಗೆ ಇನ್ನೂ ಆಳವಾಗಿ ವಿಚಾರ
ಮಾಡುವುದು ಸೂಕ್ತವಾಗಿದೆ.
ನಾನೂರು ವರ್ಷಗಳ ಕೆಳಗೆ ರಿನಿ ಡೆಕಾರ್ಟ್ ಎಂಬ ಫ್ರೆಂಚ್ ದಾರ್ಶನಿಕರು ಘೋಷಿಸಿದರು, 'ನಾನು ಯೋಚಿಸುತ್ತೇನೆ, ಆದ್ದರಿಂದ ನಾನು ಇದ್ದೇನೆ' ಎಂದು. ಇದು ಆಧುನಿಕ ಚಿಂತನೆಗೆ ತಳಹದಿಯಾಗಿದೆ. ಕೋಟ್ಯಾಂತರ ಜನರು ಅನೇಕ ತಲೆಮಾರುಗಳಿಂದ ಡೆಕಾರ್ಟ್ನನ್ನು ಅನುಸರಿಸಿದ್ದಂತೆ ಪ್ರತಿಯೊಬ್ಬನೂ ಮತ್ತೊಬ್ಬನನ್ನು ಮೀರಿಸುವಂತೆ ಚಿಂತಿಸದಿದ್ದಲ್ಲಿ ಯಶಸ್ಸು ಅಸಾಧ್ಯ ಎಂದು ನಂಬಿಕೊಂಡಿದ್ದಾರೆ.
ಡೆಕಾರ್ಟ್ ಸರಿಯೂ ಹೌದು, ತಪ್ಪ ಎರಡೂ.
ಮಾನವನಿಗೆ ಮನಸ್ಸು ಹಾಗೂ ಚಿಂತನೆಯಿಲ್ಲದೆ
ಬದುಕುವುದು ತಿಳಿಯದು ಎಂದು ಆತನು ಹೇಳಿದ್ದು
ಸರಿ. ತತ್ಪರಿಣಾಮವಾಗಿ, ಮಾನವರು ತಮ್ಮ ಮನಸ್ಸಿಗೆ
ಅಡಿಯಾಳಾಗುತ್ತಾರೆ. ಅವರು ಅದರ ಗುಲಾಮರಾಗಿ
ಜೀವಿಸುತ್ತಾರೆ.
ಡೆಕಾರ್ಟ್ಗಿಂತಲೂ ಅನೇಕ ಶತಮಾನಗಳ
ಹಿಂದೆ ಒಬ್ಬ ಋಷಿಯು, ಮನುಷ್ಯನು ತನ್ನ
ಚಿಂತನೆಯನ್ನು ನಿಲ್ಲಿಸುವವರೆಗೂ ಜೀವಿಸುವುದನ್ನು
ಪ್ರಾರಂಭಿಸಲಾರನೆಂದು ಹೇಳಿದ್ದಾರೆ. ಆದಿಶಂಕರರು
ತಮ್ಮ ಎಂಟನೆಯ ವಯಸ್ಸಿನಲ್ಲಿ ಪವಿತ್ರವಾದ
ತುಂಗಭದ್ರಾ ನದಿಯ ದಂಡೆಯಲ್ಲಿ ತಮ್ಮ ಭಾವೀ
ಗುರುಗಳನ್ನು ಸಂಧಿಸಿದರು. ಗುರುಗಳು, 'ನೀನು
ಯಾರು?' ಎಂದು ಅವರನ್ನು ಪ್ರಶ್ನಿಸಿದರು.
ಶಂಕರರು, 'ನಾನು ಮನಸ್ಸಲ್ಲ, ನಾನು
ಬುದ್ಧಿಯಲ್ಲ, ನಾನು ಅಹಂಕಾರವಲ್ಲ, ನಾನು
ಇಂದ್ರಿಯಗಳೂ ಅಲ್ಲ, ಇದೆಲ್ಲವನ್ನೂ ಮೀರಿದ ಶುದ್ಧ
ಪ್ರಜ್ಞೆ' ಎಂದು ಉತ್ತರಿಸಿದರು.
ನಾವು ನಮ್ಮನ್ನು ಕೇವಲ ಮನಸ್ಸು ಮತ್ತು ದೇಹವೆಂದು ಯೋಚಿಸುವವರೆಗೂ ನಾವು ಬರೀ
ನೀವು ಒತ್ತಡಕ್ಕೊಳಗಾಗಿಲ್ಲ, ಆದರೆ ನೀವೇ ಒತ್ತಡದ
ಮೂಲ. ಈ ಎರಡಕ್ಕೂ ದೊಡ್ಡ ಅಂತರವಿದೆ.
ಅದನ್ನು ಆಳವಾಗಿ ಪರಿಶೀಲಿಸೋಣ, ಆಗ ನಿಮಗೆ
ತಿಳಿಯುತ್ತದೆ. ನೀವು ಉದ್ವೇಗಗೊಂಡಿರುವುದಿಲ್ಲ,
ನೀವೇ ಉದ್ವೇಗ. 'ನೀವು
ಗೊಂದಲಕ್ಕೊಳಗಾಗಿರುವಿರಿ' ಎಂಬುದಕ್ಕೂ, 'ನೀವೇ
ಗೊಂದಲ' ಎಂಬುದಕ್ಕೂ ಅತಿದೊಡ್ಡ ವ್ಯತ್ಯಾಸವಿದೆ.
ಪ್ರಖ್ಯಾತ ಹಾಗೂ ಅನುಭಾವಿ ವಿಜ್ಞಾನಿಗಳ
ಗುಂಪೊಂದು ಅನೇಕ ವರ್ಷಗಳ ಸಂಶೋಧನೆ
ನಡೆಸಿದ ನಂತರ ಈಗ ಹೀಗೆ ಹೇಳಲು ಮುಂದೆ
ಬಂದಿದ್ದಾರೆ. ಅವರು ಹೇಳುತ್ತಾರೆ: ಮಾನವನು
ತನ್ನೊಳಗುಂಟಾಗುವ ಭಾವನೆಗಳನ್ನು
ಒಳನೋಟದಿಂದ ಹೇಗೆ ನಿರ್ವಹಿಸಬೇಕೆಂದು ನಾವು
ಬೋಧಿಸುವವರೆಗೂ, ಆತನನ್ನು ತನ್ನ ಕಾರ್ಯಗಳಿಗೆ
ಜವಾಬ್ದಾರನನ್ನಾಗಿ ಮಾಡಲಾಗುವುದಿಲ್ಲ.
ಐದು ಸಾವಿರ ವರ್ಷಗಳ ಹಿಂದೆ ವೈದಿಕ ಗ್ರಂಥಗಳು ಏನೇನು ಹೇಳಿದ್ದವೋ ಇಂದಿನ ವಿಜ್ಞಾನಿಗಳು ಹೇಳುವುದೂ ಅದನ್ನೇ. ಈ ಗ್ರಂಥಗಳು ಶತಮಾನಗಳ ಸಮಸ್ಯೆಗೆ ಪರಿಹಾರವನ್ನೂ, ಈ ಉತ್ತರವನ್ನೂ ಒದಗಿಸುತ್ತವೆ. ಪಾಶ್ಚಿಮಾತ್ಯ ಮತ್ತು ವೈದಿಕ ಮನಃಶಾಸ್ತ್ರಗಳ ನಡುವಿನ ಅಂತರಕ್ಕೆ ಅವು ಸೇತುವೆಯಾಗಬಲ್ಲವು.
ಪಾಶ್ಚಿಮಾತ್ಯ ಮನೋವಿಜ್ಞಾನವು ನಾನು ಎಂಬ
ಅಹಂಕಾರವನ್ನು ಉಳಿಸುವುದರ ಮೂಲಕ ಸಹಜ
ಸ್ಥಿತಿಯನ್ನು ತರಬಹುದೆಂದು ಸತತವಾಗಿ
ಆಶಾಭಾವನೆಯನ್ನು ಹುಟ್ಟಿಸುತ್ತದೆ. ಉದಾಹರಣೆಗೆ,
ಈ ಕೋಣೆಯು ಬಿಸಿಯಾಗಿದ್ದರೆ, ಇದಕ್ಕೊಂದು
ಹವಾನಿಯಂತ್ರಣ ಯಂತ್ರವನ್ನು ಅಳವಡಿಸಿ,
ನೀವು ಉದ್ವೇಗ-
ಕ್ಕೊಳಗಾಗಿಲ್ಲ,
ನೀವೇ ಉದ್ವೇಗ.
ಜೈವಿಕ ಯಂತ್ರಗಳು. ಎಲ್ಲಿಯವರೆಗೆ ನಾವು ನಮ್ಮ ಇಂದ್ರಿಯಗಳು ಸೂಚಿಸಿದಂತೆ ನಡೆದುಕೊಳ್ಳುತ್ತೇವೋ ಅಲ್ಲಿಯವರೆಗೆ ನಾವು ಯಾವ ಪ್ರಾಣಿಜನ್ಯಗಳನ್ನು ಮೀರಿ ಬಂದಿದ್ದೇವೋ ಅವುಗಳಿಗಿಂತ ಬರೀ ಒಂದು ಪಾಲು ಮಾತ್ರ ಉತ್ತಮ, ಅಷ್ಟೇ, ಆದರೆ ಮಾನವನ ನಿಜವಾದ ಸಾಮರ್ಥ್ಯವು ಯೋಚಿಸುವುದು ಹಾಗೂ ಪ್ರಾಣಿಗಳಿಗಿಂತ ಶ್ರೇಷ್ಠರೆಂದು ಸಮರ್ಥಿಸುವುದು ಮಾತ್ರವಲ್ಲ, ಮಾನವನ ಜೀವನದ ಉದ್ದೇಶವು ಮನಸ್ಸನ್ನು ಮೀರಿ ಉನ್ನತಮಟ್ಟದ ಪ್ರಜ್ಞಾ ಸ್ಥಿತಿಗೆ ಏರುವುದು. ಆ ಸ್ಥಿತಿಯಲ್ಲಿರುವಾಗ ನಾವು ಯಾವ ದೈವೀ ಸ್ಥಿತಿಯಿಂದ ಬಂದಿದ್ದೇವೆಯೋ ನಿಜವಾಗಿಯೂ ಅದೇ ಸ್ಥಿತಿಯಲ್ಲಿ ಇರುತ್ತೇವೆ.
ನಾವು ನಮ್ಮ ಸಹಜ ಸ್ಥಿತಿ ಏನಿದೆಯೋ
ಅದರೊಂದಿಗೆ ಐಕ್ಯವಾಗಿರುವವರೆಗೂ
ಕ್ಷೋಭೆಗೊಳಗಾಗಿರುತ್ತೇವೆ. ನಮ್ಮ ಸಹಜ ಸ್ವಭಾವ
ಮತ್ತು ನಾವು ಹೇಗಿರಬೇಕೆಂದು ಒದ್ದಾಡಿ ಅದಕ್ಕಾಗಿ
ನಟಿಸುತ್ತೇವೆಯೋ, ಇವುಗಳ ನಡುವಿನ ಗೊಂದಲ
ಮತ್ತು ಕ್ಷೋಭೆಗಳನ್ನೇ ನಾವು ಒತ್ತಡ ಎಂದು
ಕರೆಯುವುದು.
ಮನಸ್ಸು ಒಂದು ಯಂತ್ರವಲ್ಲ
ವೈದಿಕ ಮನಃಶಾಸ್ತ್ರದ ಪ್ರಕಾರ, ನಾವು
ಗೊಂದಲಕ್ಕೊಳಗಾಗಿಲ್ಲ. ಆ ಗೊಂದಲಕ್ಕೆ ನಾವೇ
ನಿಜವಾದ ಮೂಲ. ಇದನ್ನು ಚೆನ್ನಾಗಿ ತಿಳಿಯಿರಿ,
ನೀವು ಉದ್ವೇಗಕ್ಕೊಳಗಾಗಿಲ್ಲ, ನೀವೇ ಉದ್ವೇಗ.
ಕೋಣೆಯನ್ನು ತಣ್ಣಗೆ ಮಾಡಿ ಸುಖವಾಗಿರಬಹುದು.
ಆದರೆ, ಇಲ್ಲಿ ನಾವು ಒಂದು ಮುಖ್ಯವಾದ
ಅಂಶವನ್ನು ಮರೆಯುತ್ತೇವೆ. ಹವಾನಿಯಂತ್ರಣ
ಯಂತ್ರವನ್ನು ಕೋಣೆಗೆ ತಂದ ಕ್ಷಣವೇ ಅದನ್ನು
ಕಾಪಾಡಬೇಕಾಗುತ್ತದೆ. ಇದರಿಂದ ಇನ್ನಷ್ಟು ಒತ್ತಡ
ಉಂಟಾಗುತ್ತದೆ. ಅದರಿಂದ ಹೆಚ್ಚಿನ ತೊಂದರೆಗಳು
ಉದ್ಭವಿಸುತ್ತವೆ. ಇದಕ್ಕಾಗಿ ನಮಗೆ ವಿದ್ಯುತ್
ಬೇಕಾಗುತ್ತದೆ. ಅದರ ಬಿಲ್ಲುಗಳ
ಪಾವತಿಮಾಡಬೇಕಾಗುತ್ತದೆ. ಇದೆಲ್ಲಕ್ಕೂ ಹಣ
ಬೇಕಾಗುತ್ತದೆ. ಇಷ್ಟೆಲ್ಲಾ ಆಗಿಯೂ, ನೀವು
ಉದ್ಯೋಗಕ್ಕಾಗಿ ಹೊರ ಹೊರಟೊಡನೆ, ಈ
ಕೋಣೆಯ ತಂಪು ನಿಮಗಿರುವುದಿಲ್ಲ. ಈ ಕೋಣೆ
ಮತ್ತು ಅದರೊಳಗಿನ ಹವಾನಿಯಂತ್ರಣ
ಇರುತ್ತವೆಯಾದರೂ ನೀವು ಬೇರೆಲ್ಲಿಯೋ ಇದ್ದು
ಅದರ ಖರ್ಚಿನ ಬಿಲ್ಲುಗಳಿಗೆ ಹಣ ಕಟ್ಟಲು
ಕೆಲಸದಲ್ಲಿ ಮುಳುಗಿಹೋಗಿರುತ್ತೀರಿ!
ನಾವು ಒಂದು ಮುಖ್ಯವಾದ ಅಂಶವನ್ನು
ಮರೆಯುತ್ತೇವೆ. ನೀವು 'ನೀವು' ಎಂಬ
ಅಹಂಕಾರದಿಂದಿದ್ದಾಗ, ಅದು ಒಂದು ಖಾಯಿಲೆ.
ಪಾಶ್ಚಿಮಾತ್ಯ ಮನಶ್ಶಾಸ್ತ್ರದ ಪ್ರಕಾರ, ಮನಸ್ಸು
ಒಂದು ಯಂತ್ರ. ವೈದಿಕ ಮನಶ್ಶಾಸ್ತ್ರದ ಪ್ರಕಾರ
ಮನಸ್ಸು ಯಂತ್ರವಲ್ಲ, ಅದೊಂದು ಪ್ರಕ್ರಿಯೆ. ಅದು
ಸದಾ ಸಂಭವಿಸುತ್ತಿರುತ್ತದೆ. ಸಂಸ್ಕೃತ ಪದ
'ಮಾನಸ್'ನ ಅರ್ಥ, ಯಾವಾಗಲೂ
ಸಂಘಟಿಸುತ್ತಿರುವುದು ಎಂದು. ನಿಷ್ಕ್ರಿಯವಾಗಿಯೂ
ನಿರ್ಜೀವವಾಗಿಯೂ ಇರದೆ, ಕ್ರಿಯಾಶೀಲವಾಗಿಯೂ
ಸಂಪೂರ್ಣ ಶಕ್ತಿಯಿಂದ ಕೂಡಿರುವುದೂ ಎಂದು
ಅರ್ಥ.
ಮನಸ್ಸು ಒಂದು ಜೈವಿಕ ಯಂತ್ರ ಎಂಬುದನ್ನು ಪಾಶ್ಚಿಮಾತ್ಯ ಮನಶ್ಶಾಸ್ತ್ರವು ಒತ್ತಿಹೇಳುತ್ತದೆ. ನಾವೆಲ್ಲರೂ ಪ್ರಜ್ಞಾರಹಿತವಾಗಿ, ಮನಸ್ಸು ಒಂದು ವಸ್ತು, ಒಂದು ಪದಾರ್ಥ ಅಥವಾ ಒಂದು ಯಂತ್ರವೆಂದು ನಂಬುತ್ತೇವೆ. ಆದ್ದರಿಂದಲೇ ನಾವು ಮನಸ್ಸಿನಲ್ಲುಂಟಾದ ಎಲ್ಲ ಆಗುಹೋಗುಗಳನ್ನು ಒಂದು ಸರಪಳಿಯಂತೆ ಜೋಡಿಸುತ್ತೇವೆ ಮತ್ತು ಮನಸ್ಸೆಂಬುದು ಒಂದು ಘನ ವಸ್ತು ಎಂದು ನಂಬಲಾರಂಭಿಸುತ್ತೇವೆ.
ಸಂಬಂಧವಿಲ್ಲದುದರ ಮಧ್ಯೆ ಸಂಬಂಧ ಕಲ್ಪಿಸುವುದು
ನಾನು ಒಂದು ಉದಾಹರಣೆಯನ್ನು ಕೊಡುತ್ತೇನೆ. ಹತ್ತು ವರ್ಷಗಳ ಹಿಂದಿನ ನಿಮ್ಮ ಖಿನ್ನತೆ, ಒಂಬತ್ತು ವರ್ಷಗಳ ಹಿಂದಿನ ನಿಮ್ಮ ಖಿನ್ನತೆ, ಎಂಟು ವರ್ಷಗಳ ಹಿಂದಿನ ನಿಮ್ಮ ಖಿನ್ನತೆ, ಏಳು ವರ್ಷಗಳ ಹಿಂದಿನ ನಿಮ್ಮ ಖಿನ್ನತೆ ಮತ್ತು ನೆನ್ನೆಯ ನಿಮ್ಮ ಖಿನ್ನತೆಗಳೆಲ್ಲವೂ ಒಂದಕ್ಕೊಂದು ಸಂಬಂಧವಿಲ್ಲದ ಸ್ವತಂತ್ರವಾದ ಘಟನೆಗಳು. ಇವೆಲ್ಲವೂ ಬೇರೆ ಬೇರೆ ಉದ್ದೇಶಗಳಿಂದ, ಬೇರೆ ಬೇರೆ ಕಾರಣಗಳಿಗೋಸ್ಕರ, ಬೇರೆ ಬೇರೆ ಸಂದರ್ಭಗಳಲ್ಲಿ ಹಾಗೂ ವೇಳೆಗಳಲ್ಲಿ ಸಂಘಟಿಸಿದವು. ಸಂಬಂಧವಿಲ್ಲದ ಈ ಎಲ್ಲಾ ಘಟನೆಗಳನ್ನೂ ಒಂದಾಗಿಸಿ ನೀವು ಹೇಳುತ್ತೀರಿ, 'ನನ್ನ ಜೀವನವೇ ದುಃಖಮಯ' ಎಂದು.
ವರ್ಷಗಳ, ತಿಂಗಳುಗಳ, ವಾರಗಳ ಹಿಂದೆ ಅಥವಾ ದಿನಗಳ ಹಿಂದೆ ನೀವನುಭವಿಸಿದ
ಕೊರಗುಗಳೆಲ್ಲವೂ ಸಂಬಂಧವಿಲ್ಲದ ಮತ್ತು
ಸ್ವತಂತ್ರವಾದ ಘಟನೆಗಳು. ಹತ್ತು ವರ್ಷಗಳ ಹಿಂದೆ
ನಿಮ್ಮ ಆಟದ ಸಾಮಾನುಗಳು ಕಳೆದುಹೋಗಿ ನೀವು
ಕೊರಗಿರಬಹುದು. ಒಂಭತ್ತು ವರ್ಷಗಳ ಹಿಂದೆ
ನೀವು ಪ್ರೇಮಿಸಿದ ಗೆಳತಿಯನ್ನು ಕಳೆದುಕೊಂಡು,
ನೀವು ದುಃಖವನ್ನನುಭವಿಸಿದ್ದಿರಬಹುದು. ಹಲವು
ವರ್ಷಗಳ ಹಿಂದೆ ನಿಮ್ಮ ಮಗನು ನಿಮ್ಮ ಮಾತಿನ
ಪ್ರಕಾರ ನಡೆದುಕೊಳ್ಳಲಿಲ್ಲವೆಂದು ನಿಮಗೆ
ವ್ಯಸನವಾಗಿದ್ದಿರಬಹುದು. ಕಾರಣಗಳು ಬೇರೆ
ಬೇರೆಯಾಗಿದ್ದವು ಮತ್ತು ಪರಿಸ್ಥಿತಿಗಳು
ಸಂಪೂರ್ಣವಾಗಿ ಬೇರೆ ಬೇರೆಯಾಗಿದ್ದವು. ಆದರೂ,
ನೀವು ಇವೆಲ್ಲಾ ಕೊರಗುಗಳನ್ನೂ ಸೇರಿಸಿ, 'ನನ್ನ
ಜೀವನವು ಬರೀ ಖಿನ್ನತೆಯಿಂದ ತುಂಬಿದೆ' ಎಂದು
ತೀರ್ಮಾನಿಸಿದರೆ, ಆಗ ನಿಮ್ಮ ನರಕವನ್ನು ನೀವೇ
ಸೃಷ್ಟಿಮಾಡಿಕೊಂಡಂತೆ!
ನಿಮ್ಮ ಜೀವನವು ಖಿನ್ನವಾದದ್ದೆಂದು ನಂಬಲಾರಂಭಿಸಿದ ತಕ್ಷಣವೇ ನಿಮ್ಮ ಜೀವನವು ನಿಜವಾಗಿಯೂ ಖಿನ್ನವಾಗುತ್ತದೆ. ದಯವಿಟ್ಟು ತಿಳಿಯಿರಿ, ನಿಮ್ಮ ಗತಜೀವನವು ಹೇಗಿತ್ತೆಂದು ನಂಬುವಿರೋ ಅದನ್ನು ನಿಮ್ಮ ಭವಿಷ್ಯದಲ್ಲಿಯೂ ಪುನರುತ್ಪಾದಿಸುವಿರಿ. ನಮ್ಮ ಹಳೆಯ ಅನುಭವಗಳಿಂದ, ನಮಗೆ ಹಕ್ಕಿಯಂತೆ ಹಾರುವುದು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ನಮಗೆಲ್ಲರಿಗೂ ತಿಳಿದಿದೆ. ನಾಳೆಯಿಂದಲೇ ನಾವು ಹಾರಲು ಪ್ರಾರಂಭಿಸುತ್ತೇವೆ ಎಂಬುದನ್ನು ಹೇಗೆ ತಾನೇ ನಂಬುವುದು? ಇಲ್ಲ, ನಮ್ಮಿಂದ ಅದಾಗದು. ನಮ್ಮ ಗತಕಾಲವನ್ನು ಏನೆಂದು ನಂಬುವೆವೋ, ಅದೇ ನಮ್ಮ ಭವಿಷ್ಯತ್ತು ಎಂದು ನಂಬುತ್ತೇವೆ. ಆದ್ದರಿಂದ, ಒಂದು ಸಲ ನಾವು ನಮ್ಮ ಗತಕಾಲವು ಖಿನ್ನತೆಯಿಂದ ತುಂಬಿತ್ತೆಂದು ನಂಬಲಾರಂಭಿಸಿದರೆ, ನಮ್ಮ ಪ್ರಜ್ಞಾಹೀನ ಮಾನಸ್ಸಿನಲ್ಲಿ ಭವಿಷ್ಯವೂ ಖಿನ್ನಮಯವಾಗಿರುವುದೆಂಬ ನಂಬಿಕೆಯನ್ನು ಸೃಷ್ಟಿಸಿಕೊಳ್ಳುತ್ತೇವೆ.
ಮನಸ್ಸೆಂಬುದು ಕೇವಲ ಒಂದು ವಸ್ತು ಎಂದು ನಂಬಿದಾಗ, ಒಂದು ಜೀವಯಂತ್ರವೆಂದಾಗ, ನಾವು ನಮ್ಮ ನರಕವನ್ನು ಸೃಷ್ಟಿಸಿಕೊಂಡೆವೆಂದೇ ಅರ್ಥ. ನಮ್ಮ ಪುಣ್ಯಕ್ಕೆ ಮನಸ್ಸೆಂಬುದು ಒಂದು ವಸ್ತುವಲ್ಲ. ಆದ್ದರಿಂದ ಭರವಸೆ ಇದೆ. ಸತ್ಯಾಂಶವೇನೆಂದರೆ, ನಮಗೆಲ್ಲಾ ಹೇಳಿಕೊಟ್ಟಿರುವ ಹಾಗೆ ಮನಸ್ಸೆಂಬುದು ಒಂದು ಘನವಸ್ತುವಲ್ಲ. ಅದೊಂದು ಕಾರ್ಯಗತಿ. ಅದೊಂದು ನಾಮ ಪದವಲ್ಲ, ಕ್ರಿಯಾಪದ!
ಮನಸ್ಸೆಂಬುದು ಘನವೆಂದು ನಾವು
ಭಾವಿಸಿದಾಗ, ಸ್ಪಷ್ಟಮಾಡಿಕೊಳ್ಳಿರಿ, ಇಲ್ಲದಿರುವ
ಸಮಸ್ಯೆಗಳನ್ನು ನಾವು ಸೃಷ್ಟಿಸುತ್ತೇವೆ.
ಒಂದು ಸಣ್ಣ ಕಥೆ :
ಒಬ್ಬಾತನು ಮನೋರೋಗ ತಜ್ಞರಲ್ಲಿಗೆ ಹೋಗಿ
ಹೇಳುತ್ತಾನೆ, 'ವೈದ್ಯರೇ, ನನ್ನ ಜೀವನವು ಬಹಳ
ಸಮಸ್ಯೆಗಳಿಂದ ಕೂಡಿದೆ' ಎಂದು.
ವೈದ್ಯರು, 'ಪ್ರತಿಯೊಬ್ಬರ ಜೀವನವೂ ಸಮಸ್ಯೆಯೇ,
ಚಿಂತಿಸಬೇಡಿರಿ. ಪ್ರತಿವಾರವೂ ನಾವು ಮೂರು
ಅಧಿವೇಶನಗಳನ್ನಿಟ್ಟುಕೊಳ್ಳೋಣ. ನೀವು ಸಾವಿರ
ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ'
ಎಂದು ಹೇಳುತ್ತಾರೆ.
ಆತನು, 'ವೈದ್ಯರೇ, ವಾರಕ್ಕೆ ಮೂರು
ಅಧಿವೇಶನಗಳು ಮತ್ತು ಒಂದೊಂದಕ್ಕೂ ಸಾವಿರ
ರೂಪಾಯಿಗಳು ನಿಮ್ಮ ಸಮಸ್ಯೆಯನ್ನು
ಬಗೆಹರಿಸುತ್ತದೆ. ಆದರೆ ನನ್ನ ಸಮಸ್ಯೆ ಬಗ್ಗೆ ಏನು?' ಎಂದು ಹೇಳುತ್ತಾನೆ.
ಅರ್ಥಮಾಡಿಕೊಳ್ಳಿರಿ, ಮಾನಸ್ಸು ಒಂದು
ಯಂತ್ರವೆಂದು ನಾವು ಭಾವಿಸಲಾರಂಭಿಸುತ್ತಲೇ
ನಾವು ನಿಸ್ಸಹಾಯಕರಾಗುತ್ತೇವೆ. ಯಾವ
ಮನೋವೈದ್ಯನೂ ಸಹಾಯಮಾಡಲಾರ. ಯಾವ
ಮನೋವಿಶ್ಲೇಷಕನೂ ಭರವಸೆ ಕೊಡಲಾರ. ಬೇರೆ
ಯಾವ ಉಪಾಯವೂ ಪ್ರಯೋಜನಕ್ಕೆ ಬರುವುದಿಲ್ಲ.
ಏಕೆಂದರೆ ಮೂಲಭೂತ ನಂಬಿಕೆಯೇ ತಪ್ಪು. ತಪ್ಪು
ಆಲೋಚನೆ ಬಂದ ತಕ್ಷಣ, ಅದರ ಮೇಲೆ ಏನೇ
ಕಟ್ಟಿದರೂ ಅದು ತಪ್ಪಾಗುತ್ತದೆ, ಅದು
ಸತ್ಯವಾಗಲಾರದು. ಮನಸ್ಸೆಂಬುದು ಒಂದು ಪ್ರಕ್ರಿಯೆ
ಎಂಬ ಮೂಲಭೂತ ಸತ್ಯವನ್ನು ಅರಿಯಬೇಕು; ನಾವು
ಉದ್ವೇಗದಲ್ಲಲ್ಲ, ನಾವೇ ಉದ್ವೇಗ.
ನಾವು ಹೇಗೆ ನಿರ್ಧರಿಸುತ್ತೇವೆ?
ನಾವು ಇಂದ್ರಿಯಗಳ ಮೂಲಕ ಗ್ರಹಿಸಿದ ನೂರರಲ್ಲಿ ಹತ್ತು ಭಾಗ ಮಾತ್ರ ನಮ್ಮ ಪ್ರಜ್ಞಾಸಹಿತ ಮನಸ್ಸಿನಲ್ಲಿ ದಾಖಲಾಗುತ್ತದೆ. ಉಳಿದದ್ದೆಲ್ಲಾ ನೇರವಾಗಿ ನಮ್ಮ ಪ್ರಜ್ಞಾರಹಿತ ಮನಸ್ಸಿಗೆ ಹೋಗುತ್ತದೆ. ಇದರಿಂದಲೇ ಅನೇಕ ವೇಳೆ ನಾವು ದಿನನಿತ್ಯವೂ ಹೋಗಿಬರುವ ಜಾಗವನ್ನು ಸಹ ನೆನಪಿಟ್ಟುಕೊಳ್ಳುವುದಿಲ್ಲ. ಎಲ್ಲಿಯವರೆಗೆ ಈ ಇಂದ್ರಿಯಗಳು ಗ್ರಹಿಸುವಂತಹುದು ನಮ್ಮಲ್ಲಿ ಆಸಕ್ತಿಯನ್ನುಂಟುಮಾಡುವುದಿಲ್ಲವೋ ಅಲ್ಲಿಯವರೆಗೂ ಅದು ದಾಖಲಾಗುವುದಿಲ್ಲ.
ನಮ್ಮ ಜಾಗೃತ ಮನಸ್ಸಿನಲ್ಲಿ ದಾಖಲಾಗುವ ಈ ಇಂದ್ರಿಯಗಳ ಗ್ರಹಿಕೆಗಳು ಏನಾಗುತ್ತದೆಂಬುದನ್ನು ನೋಡೋಣ. ಈ ನೆನಪುಗಳು ಮಾನಸ್ಸಿನ ಭಾಗಗಳಿಂದ ವಿಂಗಡಿಸಲ್ಪಟ್ಟು ಗುರುತಿಸಲ್ಪಡುತ್ತವೆ. ನಿಮ್ಮ ಜಾಗೃತ ಮನಸ್ಸು, ನೀವು ನೋಡುತ್ತಿರುವ ನಿಮ್ಮೆದುರಿನ ವ್ಯಕ್ತಿಯು ನಿಮಗೆ ಪರಿಚಿತನೋ ಅಥವಾ ಅಪರಿಚಿತನೋ ಎಂಬುದನ್ನು ನಮೂದಿಸುತ್ತದೆ. ಆತನೊಡನೆ ಹೇಗೆ ವರ್ತಿಸಬೇಕೆಂಬುದು ಪ್ರಜ್ಞಾಮಟ್ಟದಲ್ಲಿ ಮೂಡುವ ತೀರ್ಮಾನವಾಗಿರುವುದೇ ಇಲ್ಲ. ಒಂದು ವೇಳೆ, ಆತನು ನಿಮಗೆ ಪರಿಚಿತನಾಗಿದ್ದರೆ, ಆತನ ಮೇಲಿನ ನಿಮ್ಮ ಮನೋಭಾವ ಮತ್ತು ವರ್ತನೆಯು ನಿಮ್ಮ ಮನಸ್ಸಿನಲ್ಲಿ ಕೊರೆಯಲ್ಪಟ್ಟ ನೆನಪುಗಳ ಮೇಲೆ ಆಧಾರಪಟ್ಟಿರುತ್ತದೆ. ಒಂದು ವೇಳೆ ಆತನು ನಿಮಗೆ ಅಪರಿಚಿತನಾಗಿದ್ದರೂ ಸಹ, ಆತನನ್ನು ಕಂಡ ಕೂಡಲೇ ನಿಮ್ಮ ಪ್ರಜ್ಞಾಹೀನ ಮಾನಸ್ಸಿನ ಪ್ರತಿಕ್ರಿಯೆಗಳು ಪ್ರಚೋದಿಸುತ್ತವೆ. ಯಾವುದೇ ಮಾರ್ಗವಾಗಲೀ, ಏನು ಮಾಡಬೇಕೆಂಬ ನಿರ್ಧಾರವನ್ನು ತೆಗೆದುಕೊಳ್ಳಲು ನಿಮ್ಮ ಕಡತಗಳು ನಿಮ್ಮ ಪ್ರಜ್ಞಾಹೀನ ಮನಸ್ಸಿನೊಳಕ್ಕೆ ನುಗ್ಗುತ್ತವೆ.
ನಮ್ಮಲ್ಲಿ ಅನೇಕರಿಗೆ ಶೇಕಡ ಹತ್ತಕ್ಕೂ
ಕಡಿಮೆಯಷ್ಟು ಮನಸ್ಸು ಜಾಗೃತಗೊಂಡಿರುತ್ತದೆ.
ಇಂದ್ರಿಯಗಳಿಂದ ನೀವು ಗ್ರಹಿಸುವುದರಲ್ಲಿ ಶೇಕಡ
ಹತ್ತಕ್ಕಿಂತಲೂ ಕಡಿಮೆಯೇ ಪ್ರಜ್ಞಾಪೂರ್ವಕವಾಗಿ
ನಮೂದಿಸಲ್ಪಡುವುದು. ನಿಮ್ಮ ತೀರ್ಮಾನಗಳಲ್ಲಿ
ಶೇಕಡ ಒಂದಕ್ಕಿಂತಲೂ ಕಡಿಮೆಯಷ್ಟು ಮಾತ್ರ
ಯುಕ್ತಾಯುಕ್ತ ತೀರ್ಮಾನವಾಗಿರಲು ಸಾಧ್ಯ!
ಹತೋಟಿಯನ್ನು ಪುನಃ ಪಡೆಯಲು ಎರಡು
ಮಾರ್ಗಗಳಿವೆ. ಮೊದಲನೆಯದಾಗಿ ನಮ್ಮನ್ನು
ಬಂಧಿಸುವ ಕಟ್ಟುಪಾಡುಗಳನ್ನು ಕಡಿಮೆ
ಮಾಡುವುದು. ನಮ್ಮ ಧ್ಯಾನ ಕಾರ್ಯಕ್ರಮಗಳಲ್ಲಿ
ನಮ್ಮನ್ನು ಬಂಧಿಸುವ ಈ ಸಂಸ್ಕಾರಗಳನ್ನು
ತೆಗೆದುಹಾಕಲು ಹಾಗೂ ಮುಕ್ತಾಯಗೊಳಿಸಲು ನಾವು
ಕಾರ್ಯೋನ್ಮುಖವಾಗುತ್ತೇವೆ. ಎರಡನೆಯ
ದಾರಿಯೆಂದರೆ, ವರ್ತಮಾನ ಕ್ಷಣದಲ್ಲಿ
ಸಂಪೂರ್ಣಪ್ರಜ್ಞೆ ಮತ್ತು ಹತೋಟಿಗಳೊಡನೆ
ಇರುವುದು.
ಕಾಲಾತೀತರಾಗಿ - ವರ್ತಮಾನದಲ್ಲಿ
ನಿಮ್ಮ ಆಲೋಚನೆಗಳು ಯಾವಾಗಲೂ ನಿಮ್ಮ ಗತಕಾಲ ಅಥವಾ ಭವಿಷ್ಯತ್ಕಾಲದ ಬಗ್ಗೆಯೇ ಆಗಿರುತ್ತದೆ. ಹಿಂದೆ ಏನಾಗಿತ್ತು ಅಥವಾ ಮುಂದೇನಾಗುತ್ತದೆ ಎಂಬುದರ ಬಗ್ಗೆ ಮಾತ್ರ ಯೋಚಿಸಲು ನಿಮಗೆ ಸಾಧ್ಯ. ಸಾಮಾನ್ಯವಾಗಿ, ನಿಮ್ಮ ಗತಕಾಲದ ಆಲೋಚನೆಗಳು ನೀವು ಮಾಡದೇಇದ್ದ ಕೃತ್ಯಗಳಿಗಾಗಿ ಪಶ್ಚಾತ್ತಾಪವೋ ಅಥವಾ ಮಾಡಿದ ಕೃತ್ಯಗಳಿಗಾಗಿ ತಪ್ಪಿತಸ್ಥಭಾವನೆಯೋ ಆಗಿರುತ್ತದೆ. ಭವಿಷ್ಯತ್ತಿನ ಆಲೋಚನೆಗಳು ನೀವು ಮಾಡಲಿಚ್ಛಿಸುವುದರ ಬಗ್ಗೆ ಆಗಿರುತ್ತದೆ.
ದಯವಿಟ್ಟು ತಿಳಿಯಿರಿ, ಭೂತಕಾಲವಾಗಲೀ ಭವಿಷ್ಯತ್ ಕಾಲವಾಗಲೀ ನಿಜವಾದುದಲ್ಲ. ಭೂತಕಾಲವು ಕಳೆದುಹೋಗಿದೆ. ಅನೇಕ ವೇಳೆ ನಾವು ಭೂತಕಾಲದಿಂದ ಏನೂ ಕಲಿಯುವುದೂ ಇಲ್ಲ. ನಾವು ಮಾಡುವುದೆಲ್ಲಾ ನಮ್ಮ ಹಿಂದಿನದೆಲ್ಲವನ್ನೂ ಆಧರಿಸಿ, ಭವಿಷ್ಯತ್ತನ್ನು ನಡೆಸುವುದು. ಅದು ಬರಿಯ ಹಿಂದಿನ ದೃಷ್ಟಿಕನ್ನಡಿಯನ್ನು ನೋಡಿಕೊಂಡು ಕಾರನ್ನು ನಡೆಸಿದಂತೆ! ಹೀಗೆ ನಡೆಸಿದಾಗ ನೀವು ಎಲ್ಲಿಗೆ ತಲುಪುವಿರಿ ಎಂಬುದು ನಿಮಗೇ ಖಂಡಿತವಾಗಿ ಗೊತ್ತು!
ಭವಿಷ್ಯವು ಇನ್ನೂ ಹೆಚ್ಚು ಅಸತ್ಯ, ಅದು ಇನ್ನೂ ನಡೆದಿಲ್ಲ. ನೀವಿರುವ ಸ್ಥಿತಿಯಲ್ಲಿ ನಿಮಗೆ ನಿಮ್ಮ ಭವಿಷ್ಯದ ಮೇಲೆ ಅತ್ಯಲ್ಪ ನಿಯಂತ್ರಣ ಇದೆ. ಏಕೆಂದರೆ ನಿಮ್ಮ ಎಲ್ಲಾ ಕಾರ್ಯಗಳೂ ನಿಮ್ಮ ಪ್ರಜ್ಞಾಹೀನ ಮನಸ್ಸಿನಿಂದ ನಡೆಸಲ್ಪಡುತ್ತಿವೆ. ನಿಮ್ಮಲ್ಲಿ ನಾಟಿಕೊಂಡಿರುವ ನಿಮ್ಮ ಹಳೇ ನೆನಪುಗಳಿಂದ ನೀವು ಪ್ರೇರಿತರಾಗಿದ್ದೀರಿ. ನಿಮ್ಮ ಆಲೋಚನೆಗಳೆಂದರೆ, ಭೂತ ಹಾಗೂ ಭವಿಷ್ಯತ್ತುಗಳ ನಡುವೆ ನಿಮ್ಮ ಮನಸ್ಸಿನ ಹೊಯ್ದಾಟವೇ ಹೊರತು ಬೇರೇನಲ್ಲ. ನಿಮ್ಮ ಮನಸ್ಸು ವಿಶ್ರಾಂತಿಯಿಂದಿರಲು ಬಯಸುವುದೇ ಇಲ್ಲ. ಅದಕ್ಕೆ ವಿಶ್ರಾಂತಿ ಕೊಟ್ಟಲ್ಲಿ ನೀವು ಅದಿಲ್ಲದೆಯೂ ಇರಬಲ್ಲರಿ ಎಂದು ನಿಮಗೆ ತಿಳಿಯುತ್ತದೆ!
ನಿಮ್ಮ ಮನಸ್ಸನ್ನು ವಿಶ್ರಮಿಸಲು ಬಿಟ್ಟರೆ ಅಥವಾ ವಿಶ್ರಮಿಸಲೆಂದು ಒತ್ತಾಯಿಸಿದಲ್ಲಿ, ಒಂದು ಆನಂದದ ಸ್ಥಿತಿಯನ್ನು ತಲುಪಿದೆನೆಂದು ಅರಿಯುವಿರಿ. ಆ ಸ್ಥಿತಿಯೇ ವರ್ತಮಾನದ ಕ್ಷಣ. ನಿಮ್ಮ ಭವಿಷ್ಯವೆಲ್ಲವೂ ಈ ಕ್ಷಣದಲ್ಲೇ ಆಗಿ ಹೋಗಬೇಕು. ಈ ಕ್ಷಣದಲ್ಲಿ ನೀವು ಏನನ್ನು ನಿರ್ಧರಿಸುವಿರೋ ಅದು ನಿಮ್ಮ ಭವಿಷ್ಯತ್ತನ್ನು ರೂಪಿಸುತ್ತದೆ. ಒಮ್ಮೆ ಈ ವರ್ತಮಾನದ ಬಗ್ಗೆ ಪ್ರಾಮುಖ್ಯತೆ

ಕೊಟ್ಟಿರೆಂದರೆ, ಇದನ್ನು ಪ್ರಜ್ಞಾಪೂರ್ವಕವಾಗಿ
ಜೀವಿಸಿದಿರೆಂದರೆ, ನಿಮ್ಮ ಗತಕಾಲದ ಬಗ್ಗೆ
ಪಶ್ಚಾತ್ತಾಪಕ್ಕಾಗಲೀ, ತಪ್ಪಿತಸ್ಥತೆಗಾಗಲೀ
ಅವಕಾಶವಿರುವುದಿಲ್ಲ.
ಚಿತ್ರದ ಮಧ್ಯದಲ್ಲಿರುವ ದಂಡವು ಸಮಯವನ್ನು
ಸೂಚಿಸುತ್ತದೆ. ಯಾವುದೇ ನಿಗದಿತ ಸಮಯದಲ್ಲಿ
ನಿಮ್ಮ TPS(ಎಂದರೆ ಥಾಟ್ ಪರ್ ಸೆಕೆಂಡ್-
ಒಂದು ಸೆಕೆಂಡಿನಲ್ಲಿ ಬರುವ ಆಲೋಚನೆಗಳು)
ಎಷ್ಟಿವೆಯೆಂಬುದನ್ನು ನೋಡಿದರೆ, ಅವು
ಹೆಚ್ಚಾದಷ್ಟೂ ನೀವು ವರ್ತಮಾನದ ಪ್ರಜ್ಞೆಗಿಂತ
ದೂರವಿರುವಿರೆಂಬುದನ್ನು ಸೂಚಿಸುತ್ತದೆ. ನೀವು
ಭವಿಷ್ಯವನ್ನೇ ಚಿಂತಿಸುತ್ತಾ, ವರ್ತಮಾನದ ಒಂದು
ಕ್ಷಣವನ್ನೂ ಅನುಭವಿಸದೆ ಅದನ್ನು
ಭೂತಕಾಲದೊಳಕ್ಕೆ ಜಾರಲು ಅವಕಾಶ
ಮಾಡಿಕೊಡುತ್ತೀರಿ.
ನಿಮ್ಮ TPS ಕಡಿಮೆಯಾದಾಗ, ನೀವು ಇನ್ನೂ ಹೆಚ್ಚಾಗಿ ವರ್ತಮಾನದೊಳಕ್ಕೆ ಪ್ರವೇಶಿಸುವಿರಿ. ಇದಾದಾಗ, ನಿಮಗೆ ಭೂತ ಮತ್ತು ಭವಿಷ್ಯತ್ತುಗಳು ಇನ್ನೂ ಹೆಚ್ಚು ಸ್ಪಷ್ಟವಾಗುತ್ತವೆ. ಭೂತಕಾಲದ ಬಗ್ಗೆ ಸ್ಪಷ್ಟವಾಗಿರುವುದರಲ್ಲೇನಿದೆ? ಎಂದು ನಿಮಗೆ ಆಶ್ಚರ್ಯವಾಗಬಹುದು. ಭವಿಷ್ಯತ್ತು ಅಸ್ಪಷ್ಟವಾಗಿರಬಹುದು ಎಂಬುದನ್ನು ಒಪ್ಪಿಕೊಳ್ಳಬಹುದು, ಆದರೆ ಭೂತಕಾಲದ ಬಗ್ಗೆ ಏಕೆ ಬೇಕು? ನಾನದನ್ನು ಬಾಳಿಯಾಗಿದೆಯಲ್ಲ, ಅದೇಕೆ ಅದು ಅಸ್ಪಷ್ಟವಾಗಿರಬಹುದು ಎನಿಸುತ್ತದೆ! ಈಗ ಯಾವುದನ್ನು ಭೂತಕಾಲವೆಂದು ನೆನಪಿಸಿಕೊಳ್ಳುವಿರೋ ಅದು ನಿಮ್ಮ ಭೂತಕಾಲದ ತೀರ್ಮಾನವೇ ಹೊರತು, ಅದು ಹೇಗೆ ನಡೆಯಿತು ಎಂಬುದಲ್ಲ, ಎಂಬುದನ್ನು ನೀವು ತಿಳಿಯಬೇಕು. ಚಿನ್ನದಂತಹ ಗತವನ್ನು ಕುರಿತು ನಾವೆಷ್ಟು ಸಲ ಮಾತನಾಡುತ್ತೇವೆ? ಚಿನ್ನದಂತಹ ಗತದ ಬಗ್ಗೆ ಎಷ್ಟೊಂದು ಬರೆಯಲಾಗಿದೆ? ಗತದಲ್ಲಿ ಚಿನ್ನದಂತಹದೇನೂ ಇಲ್ಲ. ನಾವು ಒಳ್ಳೆಯ ಭಾಗಗಳನ್ನು ನೆನಪಿನಲ್ಲಿಟ್ಟುಕೊಂಡು ನಿರ್ಧರಿಸುತ್ತೇವೆ. ಅದಕ್ಕೇ ಅದು ಚಿನ್ನವಾಗುತ್ತದೆ.
ನೀವು ನಿಮ್ಮ ಅಂತಃಸ್ಫೂರ್ತಿಯ
ಸ್ಥಿತಿಯಲ್ಲಿರುವಾಗ ಆ ಕೆಲವು ಕ್ಷಣಗಳಲ್ಲಿ TPS
ಕೆಳಗೆ ಇಳಿದಿರುತ್ತದೆ ಮತ್ತು ನೀವು ಹೆಚ್ಚಾಗಿ
ವರ್ತಮಾನದಲ್ಲಿರುತ್ತೀರಿ. ನಿಮ್ಮ TPS ಸೊನ್ನೆ
ಆದಾಗ ನೀವು ಇಡೀ ಭೂತ ಹಾಗೂ
ಭವಿಷ್ಯತ್ಕಾಲಗಳನ್ನು ಸ್ಪಷ್ಟವಾಗಿ ನೋಡಬಲ್ಲಿರಿ.
ಭೂತವು ಭವಿಷ್ಯತ್ತನ್ನು ಸಂಧಿಸುವ ಬಿಂದುವೇ ವರ್ತಮಾನ. ಇಲ್ಲಿಯೇ ನಿಮ್ಮ ಯೋಚನೆಯ
> ಮನಸ್ಸು ಆಟ-
> ಗಳಾಡದಿರಲೆಂದು
> ಧ್ಯಾನವು
> ಮನಸ್ಸನ್ನು
> ಯಾವುದರಲ್ಲೂ
> ತೊಡಗದಂತೆ
> ಮಾಡುತ್ತದೆ.
ಕಂಪನಾಂಕವು ಶೂನ್ಯ-
ವಾಗುವುದು ಮತ್ತು
ನೀವು ಶೂನ್ಯಮನಸ್ಥಿತಿಗೆ
ಬರುವುದು. ಇಲ್ಲಿ, ನೀವು
ನಿಮ್ಮ ಮನಸ್ಸನ್ನು ಬರೀ
ಸ್ವಾಧೀನದಲ್ಲಿಟ್ಟುಕೊಂಡಿಲ್ಲ
ಅಥವಾ ಅದುಮಿಟ್ಟಿಲ್ಲ.
ಅದು ಅಸಾಧ್ಯವಾದುದು. ನೀವು ನಿಮ್ಮ ಮನಸ್ಸನ್ನು
ದಾಟಿಹೋಗಿದ್ದೀರಿ, ಅದು ಸಾಧ್ಯ.
ಧ್ಯಾನವು ಮನಸ್ಸನ್ನು ವಿಶ್ರಾಂತಿಯಲ್ಲಿರಿಸುತ್ತದೆ. ಮನಸ್ಸು ಆಟಗಳಾಡದಿರಲೆಂದು ಧ್ಯಾನವು ಮನಸ್ಸನ್ನು ಯಾವುದರಲ್ಲೂ ತೊಡಗದಂತೆ ಮಾಡುತ್ತದೆ. ನಾವೂ ಸಹ ಗುರುಗಳ ಸಮ್ಮುಖದಲ್ಲಿ ಈ ಸ್ಥಿತಿಗೆ ಹೋಗಬಹುದು. ಗುರುಗಳು ಶೂನ್ಯ TPS ಸ್ಥಿತಿಯಾದ ಮನೋರಹಿತ ಸ್ಥಿತಿಯಲ್ಲೇ ಯಾವಾಗಲೂ ಇರುತ್ತಾರೆ.
ನೀವು ಭೌತಿಕವಾಗಿಯೋ ಅಥವಾ ಇತರ ರೀತಿಯಲ್ಲಿ, ಅವರ ಸನ್ನಿಧಿಯಲ್ಲಿದ್ದಾಗ ನಿಮ್ಮ TPS ಸಹ ಕಡಿಮೆಯಾಗುತ್ತದೆ. ಗುರುಗಳ ಸಮ್ಮುಖದಲ್ಲಿರುವುದರಿಂದಲೇ ನೀವು ಶೂನ್ಯ TPSನ್ನು ತಲುಪಬಹುದು. ಗುರುಗಳ ಸನ್ನಿಧಿಯೇ ಧ್ಯಾನ. ಗುರುವಿನ ಅರಿವೇ ಧ್ಯಾನ.
ದೇಹದ ಮೇಲೆ ಒತ್ತಡದ ಪರಿಣಾಮಗಳು
ಒತ್ತಡ ಏಕೆ ಉಂಟಾಗುತ್ತದೆಂಬುದರ ಬಗ್ಗೆ
ಧಾರ್ಮಿಕ ಗ್ರಂಥಗಳು ಹೇಳುವುದನ್ನೂ, ನಾನು
ಹೇಳುವುದನ್ನೂ ಕೇಳಿದ್ದೀರಿ. ಈಗ ವಿಜ್ಞಾನವೇನು
ಹೇಳುತ್ತದೆ ಎಂಬುದನ್ನು ನೋಡೋಣ.
ನಮ್ಮ ಮೆದುಳಿನ ಒಂದು ಭಾಗವು ನಮ್ಮ ಉಸಿರಾಟ, ಜೀರ್ಣಕ್ರಿಯೆ ಮೊದಲಾದಂತಹ ಕಾರ್ಯಗಳನ್ನೂ, ಚಟುವಟಿಕೆಗಳನ್ನೂ ಸ್ವಯಂ ಚಾಲಿತವಾಗಿ ಹಾಗೂ ಅನೈಚ್ಛಿಕವಾಗಿ ಹತೋಟಿಯಲ್ಲಿಟ್ಟುಕೊಳ್ಳುತ್ತದೆ. ಪ್ರಕೃತಿಯು ನಮ್ಮ ಮೆದುಳಿನ ಒಂದು ಭಾಗದಲ್ಲಿ ಹೈಪೋತಲಮಸ್ ಎಂಬ ಸೋಲದೇ ರಕ್ಷಿಸುವ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದೆ. ಮೆದುಳಿನ ಈ ಭಾಗವು ಜೀವವಿಜ್ಞಾನಿಗಳು ಹೇಳುವ ಸರೀಸೃಪ ಮೆದುಳನ್ನೂ ಒಳಗೊಂಡಿರುತ್ತದೆ.
ವರ್ತನ ಶಾಸ್ತ್ರಜ್ಞರು ಹೋರಾಟ ಅಥವಾ ಪಲಾಯನ ಪ್ರತಿಕ್ರಿಯೆಯ ಬಗ್ಗೆ ಹೇಳುತ್ತಾರೆ. ಮನೋಶರೀರಕ್ಕೆ, ನಮ್ಮ ಜೀವಕ್ಕೆ ಅಪಾಯದ ಅರಿವಾದಾಗ, ನಮ್ಮ ಪ್ರಜ್ಞಾಹೀನ ಮನಸ್ಸು ಹೈಪೋತಲಮಸ್ನ್ನು ಉದ್ರೇಕಗೊಳಿಸುತ್ತದೆ. ಪ್ರಜ್ಞಾಹೀನ ಮನಸ್ಸೆಂಬುದು ಪ್ರಜ್ಞಾವಂತ ಮನಸ್ಸಿಗಿಂತ ಹತ್ತು ಲಕ್ಷದಷ್ಟು ವೇಗವಾಗಿ ಕಾರ್ಯಮಾಡುತ್ತದೆ. ಹೀಗೆ, ಪ್ರಜ್ಞಾಪೂರಿತವಾಗಿ ಅಪಾಯವನ್ನು ಅರಿತುಕೊಳ್ಳುವ ಮುಂಚೆಯೇ ನಾವು ಸಹಜ ಪ್ರವೃತ್ತಿಯಿಂದಾಗಿ ಎಚ್ಚೆತ್ತುಕೊಳ್ಳುತ್ತೇವೆ. ಹೈಪೋತಲಮಸ್ ಪಿಟ್ಯುಟರಿ ಗ್ರಂಥಿಯನ್ನು ಉದ್ರೇಕಗೊಳಿಸುತ್ತದೆ. ಅದು ಆಡ್ರಿನಲಿನ್ ಗ್ರಂಥಿಗಳನ್ನು ಉದ್ರೇಕಗೊಳಿಸುತ್ತದೆ. ಅವು ಆಡ್ರಿನಲಿನ್ ಹಾರ್ಮೋನ್ನನ್ನು ನಮ್ಮ ದೇಹದ ಕೊನೆ ಗಡಿಯವರೆಗೆ, ಎಂದರೆ ಕೈಕಾಲುಗಳವರೆಗೆ ಒಯ್ಯುತ್ತವೆ. ನಂತರ, ನಾವು ಹೋರಾಟ ಇಲ್ಲವೇ
ಪಲಾಯನ ಪ್ರತಿಕ್ರಿಯೆಗೆ ತಯಾರಾಗುತ್ತೇವೆ. ಈ
ಶಕ್ತಿಯು ಬೆದರಿಕೆಯನ್ನೆದುರಿಸಲು ಅಥವಾ
ಬೆದರಿಕೆಯಿಂದ ಪಾರಾಗಲು ನಮ್ಮನ್ನು
ಸಿದ್ಧಗೊಳಿಸುತ್ತದೆ.
ಪ್ರಜ್ಞಾ ಹೀನ ಸರೀಸೃಪ ಮೆದುಳು ನಮ್ಮನ್ನು
ರಕ್ಷಿಸುವ ಸಲುವಾಗಿ ನಮ್ಮ ದೇಹದೊಳಕ್ಕೆ
ರಾಸಾಯನಿಕಗಳನ್ನು ಸ್ರವಿಸುವ ತೀರ್ಮಾನವನ್ನು
ಕೈಗೊಳ್ಳುತ್ತದೆ. ಗುಹಾವಾಸಿಯಾದ ಆದಿಮಾನವನು
ಹುಲಿ, ಸಿಂಹಗಳನ್ನು ಎದುರಿಸಿದಾಗ ಇದು ಬಹಳ
ಸೂಕ್ತವಾಗಿತ್ತು. ಹೋರಾಟ ಮತ್ತು ಪಲಾಯನ
ಮಾಡುವುದನ್ನು ಯೋಚಿಸುವ ಮೊದಲೇ ಅವನು
ಸಿದ್ಧನಾಗಿರಬೇಕಾಗಿತ್ತು.
ಈ ದಿವಸಗಳಲ್ಲಿ ಮಾನವನ ಮೇಲೆ ಅಡ್ರಿನಲಿನ್ನ ಪರಿಣಾಮವೇನೆಂಬುದನ್ನು ನೋಡಲು ಕ್ರೀಡಾಪಟುಗಳ ಮೇಲೆ ಪ್ರಯೋಗಗಳನ್ನು ಮಾಡಲಾಯಿತು. ಓಟಗಾರರನ್ನು ಓಟದ ಆರಂಭದ ಗೆರೆಯಲ್ಲಿ ಸಾಲಾಗಿ ನಿಲ್ಲಿಸಲಾಯಿತು ಮತ್ತು ಅವರು ಓಟವನ್ನು ಪ್ರಾರಂಭ ಮಾಡುವ ಸೂಚನೆ ಕೊಡುವ ತೀರ್ಪುಗಾರನು ಪಿಸ್ತೂಲನ್ನು ಮೇಲೆತ್ತುವ ಕೆಲವು ಕ್ಷಣಗಳ ಮೊದಲೇ ತನ್ನ ಕೈಗಳನ್ನು ಇಳಿಬಿಟ್ಟನು. ಆದ್ದರಿಂದ ಆಟಗಾರರು ಮತ್ತೆ ಹಿಂದಕ್ಕೆ ಬಂದು ಪುನಃ ಅದೇ ಸ್ಥಾನದಲ್ಲಿಯೇ ನಿಲ್ಲಬೇಕಾಯಿತು. ಇದನ್ನು ಆರು ಸಲ ಪುನರಾವರ್ತಿಸಲಾಯಿತು. ಒಂದು ಮೀಟರ್ನಷ್ಟೂ ಓಡದೆಯೇ ಆಟಗಾರರು ಆರಂಭದಲ್ಲಿಯೇ ಕುಸಿದು ಬಿದ್ದರು. ಅವರ ದೇಹದಲ್ಲಿನ ಅಡ್ರಿನಲಿನ್ ಮಟ್ಟವು ಅಪಾಯ ಮಟ್ಟವನ್ನು ದಾಟಿತ್ತು. ಜೀವರಕ್ಷಕ ಅಡ್ರಿನಲಿನ್, ಕಾರಣವಿಲ್ಲದೆ ಉತ್ಪನ್ನವಾದಾಗ ಮಾರಕವಾಗಬಹುದು.
ಈಚಿನ ದಿನಗಳಲ್ಲಿ ನಾವು ಹುಲಿ ಅಥವಾ
ಸಿಂಹವನ್ನು ಎದುರಾಗುವ ಸಾಧ್ಯತೆ ಬಹಳ ವಿರಳ.
ಆದರೂ ಪ್ರಜ್ಞಾ ಹೀನ ಮನಸ್ಸು ಅಂತಹ ಅಪಾಯದ
ಸಂಜ್ಞೆಗಳನ್ನು ಕೊಡುತ್ತಿರುತ್ತದೆ. ಇವುಗಳನ್ನು
'ಫಿಯರ್ ಸ್ಟ್ರೋಕ್ಸ್' ಎಂದರೆ ಭಯದ
ಹೊಡೆತಗಳು ಎಂದು ಕರೆಯುತ್ತಾರೆ. ದಿನಕ್ಕೆ ಆರು
ಬಾರಿಯಾದರೂ ನಾವು ಅಂತಹ ಹೊಡೆತಗಳನ್ನು
ಎದುರಿಸುತ್ತೇವೆಂದು ಮನಶ್ಶಾಸ್ತ್ರಜ್ಞರು ಅಂದಾಜು
ಮಾಡಿದ್ದಾರೆ. ಈ ಭಯದ ಹೊಡೆತಗಳು ನಮ್ಮೊಳಗೆ
ದೊಡ್ಡ ಪ್ರಮಾಣದಲ್ಲಿ ಅಡ್ರಿನಲಿನ್ ದ್ರವವನ್ನು
ಉತ್ಪನ್ನಮಾಡುತ್ತವೆ. ಖಿನ್ನತೆಯು ಅಂತಹ
ಅಡ್ರಿನಲಿನ್ ಉತ್ಪನ್ನದ ನೇರವಾದ
ಪರಿಣಾಮವೆಂಬುದನ್ನು ಖಚಿತಗೊಳಿಸಲಾಗಿದೆ.
ಅನೇಕ ದೀರ್ಘಕಾಲದರೋಗಗಳು ಮತ್ತು ಮಾರಕ
ರೋಗಗಳಿಗೆ ಖಿನ್ನತೆಯೇ ಪ್ರಮುಖ ಕಾರಣವೆಂದು
ಪರಿಗಣಿಸಲಾಗಿದೆ.
ವೈದ್ಯಕೀಯ ಸಂಶೋಧನೆಗಳ ಪ್ರಕಾರ ಮುಂದುವರೆದ ಶ್ರೀಮಂತ ದೇಶಗಳಲ್ಲಿರುವ ಯುವ ಜನತೆಯಲ್ಲಿಯೂ ಸಹ ಅರವತ್ತು ವರ್ಷವಯಸ್ಸಿನವರಂತೆ ರಕ್ತನಾಳಗಳು ಬಹಳ ಕಟ್ಟಿಕೊಂಡಿರುತ್ತವೆ. ಶಾರೀರಿಕ ಸ್ಥಿತಿಯು ಸಮಸ್ಯೆಯ ಕೇವಲ ಒಂದು ಭಾಗ ಮಾತ್ರವೆಂದು ವೈದ್ಯರು ದೃಢಪಡಿಸಿದ್ದಾರೆ. ಇನ್ನೂ ದೊಡ್ಡದಾದ ಭಾಗವೆಂದರೆ ಭಾವನಾಸ್ಥಿತಿ. ಅಂತಹ ದೈಹಿಕ ಸ್ಥಿತಿಯು ಬಹಳ ಕಾಲದಿಂದಲೂ ಇದ್ದರೂ, ಭಾವನೆಗಳ ಪ್ರಚೋದನೆಯು
ಹೃದಯಾಘಾತವನ್ನೋ ಅಥವಾ
ಪಾರ್ಶ್ವವಾಯುವನ್ನೋ ಉಂಟುಮಾಡ-
ಬಲ್ಲದೆಂಬುದು ಈಗ ಸಾಕಷ್ಟು ಚೆನ್ನಾಗಿ
ದೃಢಪಡಿಸಲಾಗಿದೆ.
ಒತ್ತಡವು ಒಂದು ಮಾರಕ, ಆದರೆ ಅದು ಇರುವುದು ಮನಸ್ಸಿನಲ್ಲಿ.
ಒತ್ತಡವು ದುಡಿಮೆಗೆ ಸಂಬಂಧಿಸಿದುದೇ?
ಐ.ಟಿ. ಕಂಪನಿಯೊಂದರಲ್ಲಿ ಮುಖ್ಯ ಕಾರ್ಯನಿರ್ವಾಹಕರೊಬ್ಬರನ್ನು ಒಂದು ಯೋಜನೆಯನ್ನು ಕೈಗೊಳ್ಳಲು ಕೇಳಲಾಯಿತು. ಅದನ್ನು ಪ್ರಸ್ತಾಪ ಮಾಡುವುದಕ್ಕಾಗಿ ಆತನು ಅದನ್ನು ಕೆಳಗಿನವರಿಗೆ ಕಳುಹಿಸಿದನು. ಅಂತಹ ಯೋಜನೆಗಳಿಗಾಗಿ ಕೆಲಸ ಮಾಡುತ್ತಿದ್ದ ತಂಡವು ಅದನ್ನು ಸಂಪೂರ್ಣವಾಗಿ ವಿಮರ್ಶೆ ಮಾಡಿ, ಆರು ತಿಂಗಳಲ್ಲಿ ಆ ಕೆಲಸವಾಗುವುದೆಂದೂ ಮತ್ತು ಅದರ ವೆಚ್ಚ ಹತ್ತು ಲಕ್ಷ ರೂಪಾಯಿಗಳಾಗುವುದೆಂದೂ ಹೇಳಿದರು. ತಂಡಕ್ಕೆ ಸಂಬಂಧಪಟ್ಟ ವ್ಯವಸ್ಥಾಪಕರು ವಿಮರ್ಶಿಸಿ, ತಂಡವು ನಾಲ್ಕು ತಿಂಗಳಲ್ಲಿ, ಏಳೂವರೆ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮಾಡಬಹುದು ಎಂದರು.
ಈ ಪ್ರಸ್ತಾಪವು ಜನರಲ್ ಮ್ಯಾನೇಜರ್ರವರೆಗೂ ಹೋಗಿ ಮುಟ್ಟಿತು. ಅವರು ಎಲ್ಲರನ್ನೂ ಕರೆದು, ಹುಮ್ಮಸ್ಸಿನ ಮಾತುಗಳ ಭಾಷಣ ಮಾಡಿ, ಇದನ್ನು ಮೂರು ತಿಂಗಳಲ್ಲಿ ಐದು ಲಕ್ಷ ರೂಪಾಯಿಗಳಿಗೆ ಮಾಡಬಹುದು ಎಂದು ಹೇಳಿದರು. ನಂತರ ಇದನ್ನು ಮುಖ್ಯ ಕಾರ್ಯನಿರ್ವಾಹಕರಿಗೆ ಕಳುಹಿಸಿದರು. ಮುಖ್ಯಕಾರ್ಯನಿರ್ವಾಹಕರು ಕಕ್ಷಿದಾರರನ್ನು ಕರೆದು, ತನ್ನ ಕಂಪನಿಯು ಎರಡು ತಿಂಗಳಲ್ಲಿ ಐದು ಲಕ್ಷ ರೂಪಾಯಿಗಳಿಗೆ ಉತ್ಪನ್ನವನ್ನು ಸಿದ್ಧಮಾಡಿಕೊಡುವುದಾಗಿ ಹೇಳಿದರು.
ಕಾರ್ಪೊರೇಟ್ ಸಂಸ್ಥೆಗಳಲ್ಲಿ ದುಡಿಯುವವರು ಇದನ್ನು ಗ್ರಹಿಸಬಲ್ಲರು. ತೀರ್ಮಾನಗಳನ್ನು ಕೈಗೊಳ್ಳುವವರು, ವಾಗ್ದಾನ ಮಾಡುವವರು, ಅನೇಕ ಬಾರಿ ನಿಜ ಪರಿಸ್ಥಿತಿಯನ್ನು ಅರಿತಿರುವುದಿಲ್ಲ. ಒಮ್ಮೆ ಅಂತಹ ತೀರ್ಮಾನಗಳನ್ನು ಮಾಡಿ, ತಮ್ಮ ಅಹಂಕಾರದಾಟವನ್ನು ಪ್ರಾರಂಭಿಸುತ್ತಾರೆ. ಏನನ್ನಾದರೂ ತ್ಯಾಗ ಮಾಡಬಹುದು, ಆದರೆ ಅಹಂಕಾರವನ್ನಲ್ಲ! ಕಾರ್ಪೊರೇಟ್ ಚರಿತ್ರೆಯ ಒಂದು ಸರಳ ಅಧ್ಯಯನವು, ಮುಖ್ಯಸ್ಥರ ಅಹಂಕಾರದಿಂದಾಗಿ ಎಷ್ಟೋ ಕಂಪನಿಗಳು ನಾಶವಾಗಿ ಹೋಗಿವೆಯೆಂದು ತೋರಿಸಬಲ್ಲದು.
ಕಾರ್ಪೊರೇಟ್ ವಲಯದಲ್ಲಿನ 'ಐದನೇ ಹಂತದ
ಮುಂದಾಳುತನ' ಎಂಬುದರ ಬಗ್ಗೆ ನಾನು ನನ್ನ
ಶಿಷ್ಯರಿಂದ ಕೇಳಿದ್ದೇನೆ. ಕಂಪನಿಯ ಅಗತ್ಯಗಳ
ಹಿಂದಿರುವ ಆ ಮುಂದಾಳುಗಳು ಕೆಲಸ ಮಾಡುವ
ರೀತಿ ಹೇಗೆಂದರೆ, ಅವರು ತಮ್ಮ ಅಹಂಕಾರಕ್ಕೆ
ಆದ್ಯತೆ ಕೊಡುವ ಬದಲು ಕಂಪನಿಯ ಉದ್ದಾರಕ್ಕಾಗಿ
ಶ್ರಮಿಸುತ್ತಾರೆ. ವಾಣಿಜ್ಯದಲ್ಲಿ ಸತತವಾಗಿ
ಜಯಗಳಿಸಿರುವ ಮುಖ್ಯ ಕಾರ್ಯಕರ್ತರು
ಹೊರಪ್ರಪಂಚಕ್ಕೆ ತಿಳಿದಿರುವುದೇ ಇಲ್ಲವೆಂದು
ಸಂಶೋಧನೆಯು ತಿಳಿಸಿದೆ! ಈ ಮುಖ್ಯಸ್ಥರು ಅತ್ಯಂತ
ವಿನಯದಿಂದಿರುತ್ತಾರೆ ಮತ್ತು
ಅಂತರ್ಮುಖಿಗಳಾಗಿರುತ್ತಾರೆ.
ಮುಖ್ಯಸ್ಥರ
ಅಹಂಕಾರದಿಂದಾಗಿ
ಎಷ್ಟೋ
ಕಂಪನಿಗಳು
ನಾಶವಾಗಿ
ಹೋಗಿವೆ
ಉದ್ಯೋಗದಲ್ಲಿ ನಾವು ಅನುಭವಿಸುವ ಒತ್ತಡವು ನಮ್ಮ ಶಿಕ್ಷಣವ್ಯವಸ್ಥೆಯಿಂದ ಪ್ರಾರಂಭವಾಗುತ್ತದೆ. ಅತಿ ಚಿಕ್ಕ ವಯಸ್ಸಿನಿಂದಲೇ ನಾವು ಮಕ್ಕಳನ್ನು ವರ್ಗಿಕರಣ ಮಾಡುತ್ತೇವೆ. ಒಂದು ಗುಂಪಿನಲ್ಲಿ ಮೂರು ಜನರನ್ನು ನಾಯಕರೆಂದು ದರ್ಜೆ ಮಾಡಿದಾಗ ಉಳಿದವರು ತಾವು ಕೆಲಸಕ್ಕೆ ಬಾರದವರೆಂದುಕೊಳ್ಳುತ್ತಾರೆ. ಬಹಳ ಚಿಕ್ಕ ವಯಸ್ಸಿನಿಂದಲೇ ನಮಗೆ ಸ್ಪರ್ಧಿಸುವುದನ್ನು ಕಲಿಸಲಾಗಿದೆ. ಈ ಹೋಲಿಕೆಯು ಉದ್ಯೋಗದಲ್ಲಿಯೂ ಮುಂದುವರೆದು ಅದನ್ನು ರಣರಂಗವನ್ನಾಗಿ ಪರಿವರ್ತಿಸುತ್ತದೆ.
ದೈನಿತ್ಯದ ಕಾರ್ಯ-
ಗಳನ್ನು ಮಾಡಿಸಬಹುದು.
ಆದರೆ ಅಸಾಧ್ಯ-
ವಾದುದನ್ನು ಮಾಡಲು
ಪ್ರೇರಿಸಲಾಗುವುದಿಲ್ಲ.
ಈಗಿನ ನಿಗಮಗಳು ಈ
ಸಂದಿಗ್ಧವನ್ನೇ ಎದುರಿಸುತ್ತಿರುವುದು. ಅವರಿಗೆ
ದುಡಿಯಲು ಜನ ಬೇಕು, ಆದರೆ ಅವರ
ಬತ್ತಳಿಕೆಯಲ್ಲಿ ಸ್ಪೂರ್ತಿದಾಯಕ ತಂತ್ರಗಳು
ಸಾಕಷ್ಟಿಲ್ಲ. ಛಾವಟಿ ಮತ್ತು ಭಕ್ಷ್ಯ ಮಾತ್ರವೇ
ಇರುವುದು, ಹೆಚ್ಚಿನದೇನೂ ಇಲ್ಲ.
ಹ್ಯೂಮನ್ ರಿಸೋರ್ಸ್ ಪ್ರೋಗ್ರಾಂ (ಅಥವಾ ಜನ ಸಂಪತ್ತು ಅಭಿವೃದ್ಧಿ ಕಾರ್ಯಕ್ರಮ) ಎಂದು ಕರೆಯಲ್ಪಡುವ ಕಾರ್ಯಕ್ರಮಗಳಲ್ಲಿಯೂ ಸಹ ಜನರನ್ನು ವರ್ಗೀಕರಿಸಲೇ ಬೇಕೆನ್ನುತ್ತಾರೆ. ಅನೇಕ ನಿಗಮಗಳಲ್ಲಿ ಶೇಕಡ ಹತ್ತರಿಂದ ಹದಿನೈದು ಜನರನ್ನು ಅಪ್ರಯೋಜಕರೆಂದು ತೋರಿಸಲೇಬೇಕೆಂಬ ಅವಶ್ಯಕತೆ ಇದೆಯೆಂದು ನಾನು ಕೇಳಿದ್ದೇನೆ. ಜನರನ್ನು ಅಂಕಿ ಅಂಶಗಳ ಮಟ್ಟಕ್ಕೆ ಇಳಿಸಲಾಗಿದೆ! ತಾವು ಬದುಕುವುದಕ್ಕಾಗಿ ಜನರು ಇತರರನ್ನು ಬಲವಂತದಿಂದ ಬಲಿಪಶುಗಳನ್ನಾಗಿಸುತ್ತಾರೆ. ಬಹುಶಃ ಇದೇ ಕಾರಣಕ್ಕೆ ಈ ಕಛೇರಿಗಳನ್ನು ‘ಕಾಂಕ್ರೀಟ್ ಜಂಗಲ್ಸ್' ಎನ್ನುತ್ತಾರೆ!
ಎಲ್ಲಿಯವರೆಗೆ ಜನರು ಭಯ ಮತ್ತು
ದುರಾಸೆಯಿಂದ ಪ್ರೇರಿತರಾಗಿರುತ್ತಾರೆಯೋ
ಅಲ್ಲಿಯವರೆಗೆ ಅವರಲ್ಲಿ ಸ್ಪೂರ್ತಿಯನ್ನು
ತುಂಬಲಾಗುವುದಿಲ್ಲ. ಅವರನ್ನು
ಸ್ವಾಧೀನದಲ್ಲಿರಿಸಬಹುದು ಮತ್ತು ಅವರಿಂದ
ಒಬ್ಬ ಪ್ರಸಿದ್ಧ ಮನೋವಿಜ್ಞಾನಿಯು, ಮನುಷ್ಯರು
ಹೇಗೆ ತಮ್ಮ ಆಸೆಗಳಲ್ಲಿ
ಮುಂದುವರೆಯುತ್ತಾರೆಂಬುದಕ್ಕೆ ಒಂದು
ಮಾದರಿಯನ್ನು ನಿರ್ಮಿಸಿದನು. ಅದನ್ನು ಈಗ
‘ಮಾಸ್ಲೋವಿನ ಅವಶ್ಯಕತೆಗಳ ಪದರಗಳು' ಎಂದು
ಹೆಸರಿಸಿದ್ದಾರೆ. ಈ ಪಿರಮಿಡ್ನ ತಳಪಾಯದಲ್ಲಿ
ಒಬ್ಬರಿಗೆ ಜೀವಿಸಲು ಅವಶ್ಯಕವಿರುವಷ್ಟು ಆಹಾರ,
ಆಶ್ರಯ ಮತ್ತು ಇತರ ವಸ್ತುಗಳಿರುತ್ತವೆ. ನಂತರ
ಜನರು ತಾವು ವಾಸಿಸುತ್ತಿರುವ ಸಮಾಜದಲ್ಲಿ
ಪೂರ್ಣತೆಗಾಗಿ ಹುಡುಕುತ್ತಾರೆ, ಜನಸಂಪರ್ಕವನ್ನು
ಬೆಳೆಸುವುದು ಮುಂತಾದುವುಗಳ ಬಗ್ಗೆ
ಗಮನಿಸುತ್ತಾರೆ. ನಂತರ ಅವರು ಪ್ರೀತಿ ಮತ್ತು
ಗಮನವನ್ನು ಕೋರುತ್ತಾರೆ, ನಂತರ ಗೌರವ, ಹೆಸರು
ಮತ್ತು ಕೀರ್ತಿಗಳನ್ನು ಕೋರುತ್ತಾರೆ. ಇದೆಲ್ಲದರ
ನಂತರವೂ ಅವರು ಅಸಂತುಷ್ಟರೇ ಆಗಿರುತ್ತಾರೆ.
ಅವರು ತಮ್ಮ ಜೀವನದಲ್ಲಿ ಇನ್ನೂ ಏನೋ ಕೊರತೆ
ಇರುವುದಾಗಿ ಭಾವಿಸುತ್ತಾರೆ.
ಆ ಕೊರತೆ ನಮ್ಮಲ್ಲೇ ಇದೆ. ಮಾಸ್ಲೋ ಅದನ್ನು
ಆತ್ಮ-ಯಥಾರ್ಥತೆ ಎಂದು ಕರೆದಿದ್ದಾರೆ. ಈ
ವಲಯದಲ್ಲಿಯೇ ನಾವು ಒತ್ತಡವಿಲ್ಲದೇ
ಹರಿಯುವುದು. ಈ ವಲಯದಲ್ಲಿಯೇ ಅಂತಃ
ಸಾಕ್ಷಾತ್ಕಾರ ಆಗುವುದು. ಈ ವಲಯದಲ್ಲಿಯೇ
ವಿಶ್ವಶಕ್ತಿಯೊಡನೆ ಒಂದಾಗಿರುವಿರೆಂದು ನೀವು
ತಿಳಿಯುವುದು. ನೀವು ಮನೆಯಲ್ಲಾಗಲೀ,
ಕಛೇರಿಯಲ್ಲಾಗಲೀ, ಕಾರ್ಖಾನೆಯಲ್ಲಾಗಲೀ,
ಎಲ್ಲೇ ಕೆಲಸ ಮಾಡಿದರೂ ಅಥವಾ ಯಾವ
ಕೆಲಸವನ್ನೂ ಮಾಡದೇ ಇದ್ದರೂ ಕೇಂದ್ರೀಕೃತವಾದ
ಈ ಸ್ಥಿತಿಯನ್ನು ಎದುರು ನೋಡುವಿರಿ.
ಇದನ್ನೇ ನಾವು ನಮ್ಮ ಆನಂದ ಸ್ಪುರಣ ಧ್ಯಾನ ಕಾರ್ಯಕ್ರಮದಲ್ಲಿ ಕಲಿಸುವುದು. ನಮ್ಮೊಳಗಿನ ಏಳು ಮಟ್ಟಗಳ ಚೈತನ್ಯವು ಮಾಸ್ಲೋ ರಚಿಸಿದ ಐದು ಮಟ್ಟಗಳ ಪಿರಮಿಡ್ಗೆ ಸರಿದೂಗುತ್ತದೆ. ಈ ಏಳು ಚೈತನ್ಯ ಕೇಂದ್ರಗಳು ವೈದಿಕ ಶಾಸ್ತ್ರದಲ್ಲಿ ಚಕ್ರಗಳೆಂದು ಕರೆಯಲ್ಪಡುತ್ತವೆ. ಪ್ರತಿಯೊಂದು ಚಕ್ರವೂ ಒಂದೊಂದು ಭಾವನಾಸ್ಥಿತಿಯನ್ನೂ ಒಂದು ಆಸೆಯ ಸ್ಥಿತಿಯನ್ನೂ ನಿರೂಪಿಸುತ್ತದೆ. ಪರಿಪೂರ್ಣತಾಸ್ಥಿತಿಯನ್ನು ತಲುಪುವವರೆಗೂ ಒಂದೊಂದು ಚಕ್ರದ ಆವಶ್ಯಕತೆಗಳನ್ನು ಪೂರೈಸುತ್ತಿದ್ದಂತೆ ಚೈತನ್ಯದಲ್ಲಿ ಮೇಲೇರುತ್ತಿರುತ್ತೇವೆ. ಅನೇಕ ಸಾವಿರ ಜನರು ಈ ಕ್ರಮವನ್ನನುಸರಿಸಿ ಅಪಾರವಾದ ಪರಿಣಾಮಕ್ಕೊಳಗಾಗಿದ್ದಾರೆ. ಪ್ರಪಂಚದಾದ್ಯಂತ ಈ ಕಾರ್ಯಕ್ರಮಗಳನ್ನು ಅನೇಕ ನಿಗಮಗಳಲ್ಲಿ ಕಲಿಸಿದ್ದೇವೆ. ನಾನು ಇದನ್ನು 'ಖಚಿತ ಪರಿಹಾರ' ಎಂದು ಕರೆಯುತ್ತೇನೆ.
ಧ್ಯಾನ ತಂತ್ರ:
ಒತ್ತಡವನ್ನು ಅಳಿಸಿಹಾಕಲು ಇದು ಸರಳವಾದ
ಹಾಗೂ ಶಕ್ತಿಯುತ ತಂತ್ರ. ಒತ್ತಡದ ಸ್ಥಾನವಾದ
ಮಣಿಪೂರಕ ಚಕ್ರವನ್ನು ತೆರೆಯಲು ನಾವು ಇದನ್ನು
ಆನಂದ ಸ್ಪುರಣ ಧ್ಯಾನ ಕಾರ್ಯಕ್ರಮದಲ್ಲಿ
ಹೇಳಿಕೊಡುತ್ತೇವೆ. ಈ ತಂತ್ರವನ್ನು ಊಟಕ್ಕೆ
ಮುಂಚೆ, ಹೊಟ್ಟೆ ಖಾಲಿಯಿರುವಾಗ ಮತ್ತು ನಿದ್ದೆಗೆ
ಹಲವು ಗಂಟೆಗಳ ಮುಂಚಿತವಾಗಿಯೇ ಮಾಡಬೇಕು.
ನಿಂತುಕೊಂಡು ನಿಮಗೆ ಗೊತ್ತಿಲ್ಲದ ಭಾಷೆಯಲ್ಲಿ ಕೂಗಿಕೊಳ್ಳಿರಿ, ಅರಚಿರಿ, ಆರ್ಭಟಿಸಿರಿ ಮತ್ತು ಅಬ್ಬರಿಸಿರಿ. ಯಾರಾದರೂ ಅದನ್ನು ಕೇಳಿಸಿಕೊಂಡರೂ ಅವರಿಗೇನೂ ಅರ್ಥವಾಗಬಾರದು. ಆರಂಭಿಸಿದೊಡನೆಯೇ ಹೊರಬರುವ ಭಾವನೆಗಳನ್ನು ಹೊರಹಾಕುವುದರಲ್ಲಿ ಉದ್ವಿಗ್ನರಾಗಿರಿ. ಅಳಬೇಕೆನಿಸಿದರೆ ಅತ್ತು ಬಿಡಿರಿ, ನಿಮ್ಮ ಭಾವನೆಗಳು ಪ್ರೇರಿಸಿದಲ್ಲಿ ನೆಲದ ಮೇಲೆ ಬಿದ್ದು ಹೊರಳಾಡಿಬಿಡಿರಿ.
ಈ ತಂತ್ರವು ಪ್ರಭಾವಶಾಲಿಯಾದ ಧ್ಯಾನ. ಅದು ನಿಮ್ಮ ಸುಪ್ತ ಪ್ರಜ್ಞಾ ಸ್ಥಿತಿಯನ್ನು ಹೊರಹಾಕಿ, ನೀವು ನಿಮ್ಮಲ್ಲಿ ಕೂಡಿಟ್ಟುಕೊಂಡಿರುವ ಎಲ್ಲಾ ನಕಾರಾತ್ಮಕತೆಯನ್ನೂ ಕರಗಿಸುತ್ತದೆ. ಸಾಧಾರಣ ಮನೋವಿಶ್ಲೇಷಕ ಅಧಿವೇಶನಗಳಲ್ಲಿ ರೋಗಿಗಳು ತಮ್ಮ ವೈದ್ಯರ ಬಳಿ ಮಾತನಾಡುವಾಗ, ಭಾವೋದ್ರೇಕದಿಂದ ವಸ್ತುಗಳನ್ನು ಎಸೆದಾಡಿದರೂ, ಅದು ಪ್ರಜ್ಞಾ ಪೂರ್ವಕ ಕಾರ್ಯವೇ. ನಿಮ್ಮ ಕೂಡಿಟ್ಟ ನೆನಪುಗಳಲ್ಲಿ ಕೇವಲ ಶೇಕಡ ಹತ್ತರಷ್ಟು ಮಾತ್ರ ಬಿಡುಗಡೆಯಾಗುತ್ತದೆ. ವಶೀಕರಣದಂತಹ
ಕ್ರಮಪಾರಗಳಲ್ಲಿ ನೀವು ಪ್ರಜ್ಞಾ ಹೀನ ಸ್ಥಿತಿಯಲ್ಲಿರುವಿರಿ ಮತ್ತು ನಿಮಗೆ ಸ್ವಾಧೀನ ಇರುವುದಿಲ್ಲ. ಈ ತಂತ್ರವು ಪರಮ ಪ್ರಜ್ಞಾ ಸ್ಥಿತಿಯ ಕ್ರಮವಾಗಿದ್ದು, ಅರಿವಿನಲ್ಲೇ ಇದ್ದು ನಿಮ್ಮನ್ನು ನೀವು ಶುದ್ಧೀಕರಿಸಿಕೊಳ್ಳುತ್ತೀರಿ.
ಈ ತಂತ್ರವನ್ನು ಇಪ್ಪತ್ತು ನಿಮಿಷಗಳವರೆಗೆ
ಅಭ್ಯಾಸ ಮಾಡಿರಿ. ನಂತರ, ಕುಳಿತುಕೊಂಡು ಹತ್ತು
ನಿಮಿಷಗಳವರೆಗೆ ಮೌನವಾಗಿರಿ. ನಿಮ್ಮಲ್ಲಿ ಆ
ಚೈತನ್ಯವು ಹರಡಲು ಬಿಡಿ. ಈ ನಿಶ್ಯಬ್ದತೆಯಲ್ಲಿ
ಕೇವಲ ನಿಮ್ಮ ಯೋಚನೆಗಳಿಗೆ ಸಾಕ್ಷಿಯಾಗಿರಿ.
ಅವುಗಳನ್ನು ಅದುಮಿಡಬೇಡಿರಿ ಅಥವಾ
ಹಿಂಬಾಲಿಸಬೇಡಿರಿ.