ಚಿಂತಿಸಲೇನಿಲ್ಲ
This text was machine-transcribed from the printed book and may contain errors. Select the words and choose “Report a mistake”.
ಇದುವರೆವಿಗೂ ಪ್ರೇಮವನ್ನು ಕುರಿತು ಮಾತನಾಡಿದೆವು. ಪ್ರೇಮವು ಅನ್ಯರೊಂದಿಗಿನ ನಮ್ಮ ಸಂಬಂಧವನ್ನು ಕುರಿತದ್ದು. ಪ್ರೇಮವು ನಮ್ಮ ಜೊತೆಗೆ ನಮಗಿರುವ ಬಾಂಧವ್ಯವನ್ನು ಕುರಿತದ್ದೂ ಸಹ. ನಮ್ಮನ್ನು ನಾವು ಪ್ರೇಮಿಸದೆ ಅನ್ಯರನ್ನು ಪ್ರೇಮಿಸಲಾಗುವುದಿಲ್ಲ. ನಮ್ಮೊಳಗೇ ನಾವು ಸತತವಾಗಿ ಸೃಷ್ಟಿಸಿಕೊಳ್ಳುವ ಚಿಂತೆ ಹಾಗೂ ಕಿರಿಕಿರಿಯು ನಮ್ಮನ್ನು ನಾವು ಪ್ರೇಮಿಸದಂತೆ ಮಾಡಿಬಿಡುತ್ತದೆ. ಕೆಲಸಗಳು ಸರಿಯಾಗಿ ನಡೆದರೂ ಅಥವಾ ಕೆಟ್ಟು ಹೋದರೂ ನಾವು ಚಿಂತಿಸುತ್ತೇವೆ. ನಮ್ಮ ಆತ್ಮಗೌರವಕ್ಕೆ ಚಿಂತೆಗಿಂತಲೂ ಹೆಚ್ಚಾದ ವಿನಾಶಕಾರಿಯಾದುದು ಇನ್ನಾವುದೂ ಇಲ್ಲ. ಈ ಚಿಂತೆ ಎಂದರೆ ಏನು?
ಚಿಂತೆ ಎಂದರೇನು?
ಒಂದು ಸಣ್ಣ ಕಥೆ:
ಚಿಂತಾಕ್ರಾಂತನಾದ ಹಾಗೂ ಕ್ಷೋಭೆಗೊಂಡ ಒಬ್ಬ ವ್ಯಕ್ತಿಯು ಒಂದು ಬಾರ್ನೊಳಕ್ಕೆ ಬಂದನು.
ಅಲ್ಲಿನ ಪರಿಚಾರಕನು, 'ಏನು ಸಮಾಚಾರ?
ಏನನ್ನೋ ಚಿಂತಿಸುವಂತೆ ಕಾಣುತ್ತಿದ್ದೀಯೆ' ಎಂದು
ವಿಚಾರಿಸಿದನು.
ಆತನು, 'ನನಗೂ ನನ್ನ ಹೆಂಡತಿಗೂ
ಜಗಳವಾಯಿತು, ಜೊತೆಗೆ ಅವಳು ಒಂದು ತಿಂಗಳ
ಕಾಲ ನನ್ನೊಡನೆ ಮಾತನಾಡುವುದಿಲ್ಲವೆಂದಳು'
ಎಂದನು.
ಪರಿಚಾರಕನು ಆತನನ್ನು ಸಂತೆೈಸುತ್ತಾ, 'ಹೋಗಲಿ
ಬಿಡು. ಒಂದು ತಿಂಗಳೇನೂ ಅಷ್ಟು
ದೀರ್ಘಕಾಲವೇನಲ್ಲ' ಎಂದನು.
ಆ ವ್ಯಕ್ತಿ ಹೇಳಿದನು, 'ನನಗೆ ಗೊತ್ತು. ಇಂದಿಗೆ ಆ ತಿಂಗಳು ಮುಗಿಯಿತು!' ಎಂದು.
ಪ್ರತಿಯೊಬ್ಬರಿಗೂ ಅವರದೇ ಚಿಂತೆಯ ಕಂತೆಗಳಿರುತ್ತವೆ. 'ನಿಮಗೇನು ಚಿಂತೆ?' ಎಂದು ನಾನು ವಿಚಾರಿಸಿದರೆ, 'ನನಗೆ ಉದ್ಯೋಗವಿಲ್ಲ, ಅದೇ ನನ್ನ ಚಿಂತೆ' ಎಂದು ನೀವು ನನಗೆ ಹೇಳುವಿರಿ. ನಿಮ್ಮ ಪಕ್ಕದ ಮನೆಯವರು, 'ನನ್ನ ಉದ್ಯೋಗವೇ ನನ್ನ ದೊಡ್ಡ ಚಿಂತೆ' ಎನ್ನುತ್ತಾರೆ. ಇನ್ನೊಬ್ಬರು, 'ನನ್ನ ಮಕ್ಕಳೇ ನನಗೆ ಚಿಂತೆ' ಎನ್ನುತ್ತಾರೆ. ಮತ್ತೊಬ್ಬರು,
'ನನಗೆ ಮಕ್ಕಳಿಲ್ಲದಿರುವುದೇ ನನ್ನ ಚಿಂತೆ' ಎನ್ನುತ್ತಾರೆ. ಒಬ್ಬನ ಬಯಕೆಯೇ ಮತ್ತೊಬ್ಬನ ಚಿಂತೆ! ಅದರಲ್ಲಿ ಯಾವ ತರ್ಕವೂ ಕಂಡುಬರುವುದಿಲ್ಲ.
‘ಚಿಂತೆ’ ಎಂದರೇನು? ಯಾವಾಗಲೇ ಆದರೂ ವಿಷಯಗಳು ನಿಮಗೆ ಹೇಗೆ ಬೇಕೋ ಹಾಗೆ ನಡೆಯದಿದ್ದರೆ, ಚಿಂತೆ ಉಂಟಾಗುತ್ತದೆ. ಅದು ನಿಮ್ಮ ನಿರೀಕ್ಷೆಗೂ ಮತ್ತು ವಾಸ್ತವಿಕತೆಗೂ ಇರುವ ಅಂತರ. ಉದಾಹರಣೆಗೆ, ನಿಮಗೆ ನಿಮ್ಮ ಮಗನು ನಿಮ್ಮ ಜೊತೆಯಲ್ಲಿ ಮನೆಯಲ್ಲಿರಲಿ ಎನ್ನಿಸುತ್ತದೆ. ಆದರೆ, ಆತನಿಗೆ ತನ್ನ ಪಾಡಿಗೆ ತಾನು ನಿಮ್ಮಿಂದ ದೂರವಿರಬೇಕು ಎನ್ನಿಸುತ್ತದೆ. ನಿಮ್ಮ ಯೋಜನೆಯನ್ನು ಒಂದು ನಿರ್ದಿಷ್ಟ ಅವಧಿಯಲ್ಲಿ ಮುಗಿಸಬೇಕು ಎಂದು ನಿಮ್ಮ ಇಚ್ಛೆ. ಆದರೆ ಎಲ್ಲವೂ ಬಹಳ ನಿಧಾನವಾಗಿ ಆಗುತ್ತಿರುತ್ತದೆ ಮತ್ತು ಈ ಕೆಲಸ ಅಸಾಧ್ಯವೆನ್ನಿಸುತ್ತದೆ. ಇವೆಲ್ಲವೂ ಚಿಂತೆಗೆ ಕಾರಣಗಳು. ನಿಮ್ಮ ಇಷ್ಟಗಳಿಗೆ, ನಿರೀಕ್ಷೆಗಳಿಗೆ ಹಾಗೂ ಬೇರೆಯವರ ಇಷ್ಟಗಳಿಗೆ, ನಿರೀಕ್ಷೆಗಳಿಗೆ ಹೊಂದಾಣಿಕೆ ಇರುವುದಿಲ್ಲ.
ಚಿಂತೆ ಹೇಗೆ ಬೇರು ಬಿಡುತ್ತದೆ?
ನಿಮ್ಮದೇ ಆದ ಆಲೋಚನೆಗಳಿಂದ ಅಥವಾ
ನುಡಿಗಳಿಂದ ಚಿಂತೆ ಬೇರು ಬಿಡುತ್ತದೆ. ಎರಡು
ವಿಷಯಗಳು ನಿಮ್ಮಲ್ಲಿ ಸದಾಕಾಲ ನಡೆಯುತ್ತಲೇ
ಇರುತ್ತವೆ. ಮೊದಲನೆಯದು ಸಂಭಾಷಣೆ ಮತ್ತು
ಎರಡನೆಯದು ಸ್ವಗತ – ನಾನು ಯಾವುದನ್ನು
'ಒಳಹರಟೆ' ಎನ್ನುತ್ತೇನೆಯೋ ಅದು. ನೀವು
ಹೊರಗಿನವರೊಂದಿಗೆ ಮಾತನಾಡುತ್ತಿರುತ್ತೀರಿ,
ಇಲ್ಲದಿದ್ದರೆ ನಿಮ್ಮ ಒಳಗೇ ಸದಾಕಾಲ
ಹರಟೆಹೊಡೆಯುತ್ತೀರಿ. ಹೇಗೋ ಆದರೂ
ನುಡಿಗಳು ಮತ್ತು ಆಲೋಚನೆಗಳೆಂಬ ಇಟ್ಟಿಗೆಗಳಿಂದ
ಚಿಂತೆಯು ನಿರ್ಮಾಣವಾಗುತ್ತದೆ.
ನೀವು ಬೇರೆಯವರೊಂದಿಗೆ ಮಾತನಾಡುವಾಗ ನೀವು ಹೇಳುವುದು ಸಮಾಜದ ನಿಯಮಗಳಿಗೆ ಬದ್ಧವಾಗಿರುತ್ತದೆ. ನೀವು ಯಾಂತ್ರಿಕವಾಗಿಯೇ ನಿಷಿದ್ಧವಾದ ಅಥವಾ ಅವ್ಯವಹಾರದ ಪದಗಳನ್ನು ಉಪಯೋಗಿಸುವುದಿಲ್ಲ. ಆದರೆ ನಿಮ್ಮೊಳಗೇ ಏನಂದುಕೊಳ್ಳುತ್ತಿರುವಿರೋ ಅದು ನಿಮ್ಮನ್ನು ಬಿಟ್ಟು ಬೇರಾರಿಗೂ ಗೊತ್ತಿರುವುದಿಲ್ಲ. ನಿಮ್ಮೊಳಗೆ ನೀವು ಮೂಡಿಸಿದ ಆಲೋಚನೆಗಳಿಂದಲೇ ನಿಮ್ಮ ನಿಜವಾದ ಚಿಂತೆಗಳ ಸಂಯೋಜನೆ ಆಗಿರುತ್ತದೆ.
ಅದು ಹೀಗೆ: ವಾರದ ಏಳುದಿನವೂ,
ಇಪ್ಪತ್ತುನಾಲ್ಕು ಗಂಟೆಯೂ ಎಡಬಿಡದೆ ಒಳಹರಟೆ
ನಿಮ್ಮಲ್ಲಿ ಹರಿಯುತ್ತಿರುತ್ತದೆ. ಈ ಪ್ರವಾಹದಿಂದ
ಕೆಲವು ಮೊನಚುಗಳು ಮೇಲೆಳುತ್ತವೆ. ಈ
ಮೊನಚುಗಳೇ ನೀವು ಅನುಭವಿಸುವ ಮತ್ತು
ವ್ಯಕ್ತಪಡಿಸುವ ಚಿಂತೆಗಳು. ಚಿಂತೆಗಳೆಂದಾಗ
ನಿಮ್ಮಲ್ಲೇ ಎಡೆಬಿಡದೆ ನಡೆಯುತ್ತಿರುವ
ಆಲೋಚನೆಗಳ ಪ್ರವಾಹದಲ್ಲಿರುವ
ಮೊನಚುಗಳಲ್ಲದೆ ಬೇರೇನೂ ಅಲ್ಲ.
ಬಹುಪಾಲು ಈ ಆಲೋಚನೆಗಳು
ನಕಾರಾತ್ಮಕವಾಗಿರುತ್ತವೆ. ಅದೇ ಸಮಸ್ಯೆ. ನಿಮ್ಮ
ಜೀವನದ ಕಥೆಯನ್ನು ಕೆಲವು ಪುಟಗಳಲ್ಲಿ ಬರೆಯಿರಿ
ಎಂದು ನಾನು ಹೇಳಿದರೆ, ನೀವು ಹೇಗೆ, ಯಾವಾಗ
ಒದ್ದಾಡಿದಿರಿ ಎಂದು ಕೆಲವು ಘಟನೆಗಳನ್ನು ದೊಡ್ಡದು ಮಾಡಿ ವಿಶೇಷವಾಗಿ ಬರೆಯುವಿರಿ. ಅವುಗಳ ಮಧ್ಯೆ ನಡೆದ ಸಂತೋಷಕರವಾದ ಅನೇಕ ಘಟನೆಗಳನ್ನು ಬಣ್ಣಿಸುವುದಿಲ್ಲ. ನಕಾರಾತ್ಮಕವಾದವುಗಳನ್ನೇ ದಾಖಲುಮಾಡುವುದು ಮನಸ್ಸಿಗೆ ಅಭ್ಯಾಸವಾಗಿದೆ. ಸಂತೋಷಕರವಾದದ್ದು ನಡೆದಾಗಲೂ, ಸಂತೋಷವೆನಿಸಿದ ಗಳಿಗೆಗಳನ್ನು ಬಿಟ್ಟು, ಅದು ಕೊನೆಗೊಂಡ ಗಳಿಗೆಯನ್ನು ಮಾತ್ರ ನೆನಪು ಮಾಡಿಕೊಳ್ಳುವಿರಿ. ಏಕೆಂದರೆ, ಸಂತೋಷದ ಪರಮಾವಧಿಯಲ್ಲೂ ಈ ಸಂತೋಷ ಯಾವಾಗ ಮುಗಿದು ಹೋಗುತ್ತದೆಯೋ ಎಂದು ಚಿಂತೆ ಮಾಡುತ್ತಿರುತ್ತೀರಿ. ಚಿಕ್ಕಂದಿನಿಂದಲೂ ಮನಸ್ಸಿಗೆ ಏನು ತರಬೇತಿ ನೀಡಿದ್ದೇವেন্দರೆ, ಜೀವನ ನಡೆಯುವುದು ಒಂದು ಚಿಂತೆಯಿಂದ ಮತ್ತೊಂದಕ್ಕೆ ಅಥವಾ ಒಂದು ನೋವಿನಿಂದ ಮತ್ತೊಂದಕ್ಕೆ ಎಂದೇ ಹೊರತು, ಒಂದು ಸಂತೋಷದಿಂದ ಮತ್ತೊಂದಕ್ಕೆ ಎಂದಲ್ಲವೇ ಅಲ್ಲ.
ಒಂದು ತರಗತಿಯಲ್ಲಿ, ಒಬ್ಬ ಹುಡುಗನು ಜೋಲು
ಮುಖಹಾಕಿಕೊಂಡು ಕುಳಿತಿರುವುದನ್ನು ಶಿಕ್ಷಕಿಯು
ಕಂಡಳು.
ಆಕೆಯು, ‘ಏನಾಯಿತು? ನೀನೇಕೆ ಇಷ್ಟೊಂದು ಚಿಂತಾಕ್ರಾಂತನಾಗಿರುವೆ?’ ಎಂದು ಕೇಳಿದಳು.
ಆ ಹುಡುಗನು, ‘ಅದು ನನ್ನ ತಂದೆತಾಯಿಗಳನ್ನು
ಕುರಿತದ್ದು. ನನಗೆ ಉತ್ತಮವಾದ ವಿದ್ಯಾಭ್ಯಾಸ
ಕೊಡಲು ಮತ್ತು ಒಳ್ಳೆಯ ಬಟ್ಟೆಗಳನ್ನು ಒದಗಿಸಲು
ನನ್ನ ತಂದೆ ಹಗಲೆಲ್ಲಾ ದುಡಿಯುತ್ತಾರೆ. ಅವರು
ನನಗೆ ಬೇಕಾದುದೆಲ್ಲವನ್ನೂ ಕೊಡಿಸುತ್ತಾರೆ. ನನ್ನ
ತಾಯಿಯು ನನಗಾಗಿ ಅತ್ಯಂತ ರುಚಿಕರವಾದ ಅಡಿಗೆ
ಮಾಡಿ ಬೆಳಗಿನಿಂದ
ರಾತ್ರಿ ಮಲಗುವ-
ವರೆಗೂ ನನ್ನನ್ನು
ನೋಡಿಕೊಳ್ಳುತ್ತಾಳೆ’
ಎಂದನು.
‘ಹಾಗಾದರೆ ನಿನ್ನ
ಸಮಸ್ಯೆಯಾದರೂ
ಏನು? ನೀನು ಏಕೆ
ಚಿಂತಿಸುತ್ತಿದ್ದೀಯೆ?’
ಎಂದು ಕೇಳಿದಳು.
ಇರುವುದನ್ನು ಹೇಗಿದೆಯೋ ಹಾಗೆಯೇ ನೋಡಲು ಒಂದು ಸಲ ಪ್ರಾರಂಭಿಸಿದರೆ ನಿಮ್ಮಲ್ಲಿರುವ ಎಲ್ಲಾ ಚೈತನ್ಯಗಳೂ ನಿಮ್ಮೊಳಗೆ ಒಂದಾಗುತ್ತವೆ.
‘ಅವರು ಓಡಿಹೋಗಬಹುದು ಎಂದು ನನಗೆ ಭಯ’ ಎಂದು ಹುಡುಗನು ಹೇಳಿದನು.
ಮನಸ್ಸು ನೋವಿನೊಂದಿಗೆ ಮಾತ್ರ ಸ್ಪಷ್ಟವಾಗಿ
ಗುರುತಿಸಿಕೊಳ್ಳುತ್ತದೆ. ಸಂತೋಷದೊಂದಿಗೆ ಅಲ್ಲವೇ
ಅಲ್ಲ! ಆದುದರಿಂದಲೇ ಸಂತೋಷಕರವಾದ
ಘಟನೆಗಳನ್ನು ನೆನಪು ಮಾಡಿಕೊಳ್ಳುವುದೂ ಸಹ
ವೇದನೆಯಾಗುತ್ತದೆ.
ಸಂತೋಷವು ಎಂದಿಗೂ ಆಲೋಚನೆಯಾಗಿ
ದಾಖಲಾಗುವುದಿಲ್ಲ. ಆದರೆ ದುಃಖ ಮಾತ್ರ
ದಾಖಲಾಗುತ್ತದೆ. ಆದುದರಿಂದಲೇ ನಮ್ಮ ಆಂತರಿಕ
ದಾಖಲೆಗಳೆಲ್ಲಾ ಯಾವಾಗಲೂ ನಕಾರಾತ್ಮಕ
ಆಲೋಚನೆಗಳಾಗಿರುತ್ತವೆ. ಸಂತೋಷ ಖಾಲಿ
ದಾಖಲೆಯಂತೆ! ಉದಾಹರಣೆಗೆ, ನಿಮ್ಮ ಇಡೀ
ಜೀವನವನ್ನು ಕಾಲದಂಡವಾಗಿ ನೋಡಿದರೆ, ಆ
ಕಾಲದಂಡದಲ್ಲಿ ಸಂತೋಷವಾದ ಗಳಿಗೆಗಳು ಖಾಲಿ
ಜಾಗಗಳಾಗಿರುತ್ತವೆ ಅಷ್ಟೇ. ಅವುಗಳಿಗೆ
ಅನುಗುಣವಾಗಿ ದಾಖಲೆಗಳಾವುವೂ ಇರುವುದಿಲ್ಲ.
ಆದರೆ ಚಿಂತೆಯ ಗಳಿಗೆಗಳು ಮತ್ತು ವೇದನೆಗಳು
ಸ್ಪಷ್ಟವಾದ ಕಪ್ಪು ಛಾಯೆಗಳಾಗಿ ದಾಖಲೆಯಾಗಿರುತ್ತವೆ.
ಇರುವುದನ್ನು ಇರುವಂತೆಯೇ ನೋಡಿ ಮುಂದುವರೆಯಿರಿ
ಬುದ್ಧನು 'ತಥತ' ಎಂಬ ಪದವನ್ನು
ಬಳಸುತ್ತಿದ್ದನು. ಇರುವುದನ್ನು ಹೇಗಿರುವುದೋ
ಹಾಗೆಯೇ ಯಾವುದೇ ವಿಮರ್ಶೆಯನ್ನೂ ಮಾಡದೆ,
ಅದನ್ನು ನೋಡುವುದು.
ಆದರೆ ಅನೇಕ ವೇಳೆ ನಾವು ನಮ್ಮ ಚಿಂತೆಯ ಮೂಲಕ ಮಾತ್ರವೇ ವಸ್ತುಗಳನ್ನು ವೀಕ್ಷಿಸುತ್ತೇವೆ. ಸಾಮಾನ್ಯವಾಗಿ ಹೇಳುವ ಒಂದು ಗಾದೆ ಇದೆ, 'ವಿಷಯಗಳನ್ನು ಅವು ಇರುವಂತೆಯೇ ಕಾಣುವುದಿಲ್ಲ, ನಾವು ಇರುವಂತೆ ಕಾಣುತ್ತೇವೆ' ಎಂದು. ನೀವು ಕಾಣುತ್ತಿರುವುದರಲ್ಲಿ ಏನೋ ದೋಷವಿದೆ ಎನಿಸಿದರೆ, ನಿಮ್ಮನ್ನೇ ಒಳಹೊಕ್ಕು ನೋಡಿಕೊಳ್ಳಬೇಕು. ಏಕೆಂದರೆ ಹೊರಗೆ ನಾವು ನೋಡುವುದು ಒಳಗಿರುವುದರ ಪ್ರತಿಬಿಂಬವೇ. ಒಳಗೆ ಶುದ್ಧಪ್ರೇಮವಿದ್ದಲ್ಲಿ ಹೊರಗೂ ಶುದ್ಧಪ್ರೇಮವನ್ನೇ ಕಾಣುವಿರಿ. ಅದು ಯಾವಾಗಲೂ ನಿಮ್ಮನ್ನು ಅನ್ವಯಿಸಿರುವುದೇ ಹೊರತು, ನೀವು ಕಾಣುತ್ತಿರುವುದನ್ನಲ್ಲ.
ನಿಜವಾಗಿ ಏನಿದೆಯೋ ಅದರಿಂದ ನಿಮ್ಮ
ಆಲೋಚನೆಗಳನ್ನು ದೂರವಿಡುವುದು ಹೇಗೆ? ಪ್ರತಿ
ನಿಮಿಷವೂ ಯಾವಾಗಲೂ ಹೇಗೆ
ಸಂತೋಷಪಡುವುದು?
ಈ ಚಿಕ್ಕ ಉಪಾಯವನ್ನು ಪ್ರಯೋಗಿಸಿ ನೋಡಿರಿ- ಒಬ್ಬ ಮನುಷ್ಯ, ಅಥವಾ ಪರಿಸ್ಥಿತಿ, ಅಥವಾ ಪುಸ್ತಕ, ಅಥವಾ ಇನ್ನೇನನ್ನೇ ಆಗಲಿ ನೀವು ನೋಡಿದಾಗ, ಸಾಮಾನ್ಯವಾಗಿ ಹಳೆಯ ಆಲೋಚನೆಗಳು ಹಾಗೂ ರೂಢಿಯಾದ ಪ್ರತಿಕ್ರಿಯೆಗಳು ಕೂಡಲೇ ನಿಮ್ಮಲ್ಲಿ ಮೂಡುತ್ತವೆ. ಆದರೆ ಈಗ, ತತ್ಕಾಲದ ಅರಿವನ್ನು ತಂದುಕೊಂಡು, ಆಲೋಚನೆಗಳನ್ನು ಕಣ್ಣ ಮುಂದೆ ತಂದುಕೊಂಡು, ಅವನ್ನು ಧ್ವಂಸ ಮಾಡಿಬಿಡಿರಿ. ಆನಂತರ, ಆ ಪರಿಸ್ಥಿತಿಯನ್ನು ಅಥವಾ ಮನುಷ್ಯನನ್ನು ಅಥವಾ ವಸ್ತುವನ್ನು ಹೊಸದಾದ ನೋಟದಿಂದ, ಮೊದಲ ಬಾರಿ ಎಂಬುವಂತೆ ನೋಡಿರಿ. ನಿಮ್ಮದೇ ಚಿಂತೆ ಹಾಗೂ ಆಲೋಚನೆಗಳಿಂದಾಗಿ ನೀವು ಎಷ್ಟು ಕಳೆದುಕೊಂಡಿದ್ದೀರಿ ಎಂಬುದನ್ನು ಘಟ್ಟನೆ ನೀವು ಕಾಣುವಿರಿ.
ನಿಮ್ಮ ಹೆಂಡತಿ, ಗಂಡ, ಸೋದರ ಅಥವಾ ಇನ್ನು ಯಾರನ್ನೇ ಆಗಲೀ ನೀವು ನೋಡುವಾಗ, ಅವರನ್ನು ಮೊದಲನೇ ಬಾರಿ ನೋಡುತ್ತಿರುವಿರೇನೋ ಎಂಬಂತೆ ನೋಡಿರಿ. ಇದ್ದಕ್ಕಿದ್ದಹಾಗೆ ನಿಮ್ಮಲ್ಲಿ ಯಾವ ಚಿಂತೆಗಳೂ ಮೇಲೇಳದಿರುವುದನ್ನು ನೋಡುವಿರಿ. ಅವರು ಪರಿಚಿತರಾಗಲಿ, ಇಲ್ಲವೆ ಅಪರಿಚಿತರಾಗಲೀ, ಎಲ್ಲರನ್ನೂ ಒಂದೇ ರೀತಿ ನೋಡುವುದನ್ನು ಪ್ರಾರಂಭಿಸುತ್ತೀರಿ. ಅದೇ ಸರಿಯಾದ ರೀತಿ. ಯಾರೊಬ್ಬರೂ ಪರಿಚಿತರಲ್ಲ ಅಥವಾ ಬದಲಾಗದೆಯೂ ಇರುವಂತಹವರಲ್ಲ. ನಿಮ್ಮ ಹೆಂಡತಿಯೂ ಸಹ ನಿಮಗೆ ತಿಳಿದವಳಲ್ಲ. ಪ್ರತಿಯೊಬ್ಬರೂ ಪ್ರತಿಕ್ಷಣ ಬದಲಾಗುತ್ತಲೇ ಇರುವ ವಿಶ್ವದೊಂದಿಗೆ ಬದಲಾಗುತ್ತಲೇ ಇರುತ್ತಾರೆ. ನಿಮ್ಮ ಮಾನಸ್ಸು ಮಾತ್ರ ಅವರನ್ನು ಶಾಶ್ವತವಾಗಿ ಕಾಣುವಂತೆ ಮಾಡಲು ಪ್ರಯತ್ನಿಸುತ್ತಿರುತ್ತದೆ.
ಇರುವುದನ್ನು ಇರುವ ಹಾಗೆಯೇ ನೋಡಲು
ಒಂದು ಸಲ ಪ್ರಾರಂಭಿಸಿದರೆ ನಿಮ್ಮಲ್ಲಿರುವ ಎಲ್ಲಾ
ಚೈತನ್ಯಗಳೂ ನಿಮ್ಮೊಳಗೆ ಒಂದಾಗುತ್ತವೆ. ಆನಂತರ
ಚಿಂತೆಗಳೂ ಇರುವುದಿಲ್ಲ, ಹೋರಾಟಗಳೂ
ಇರುವುದಿಲ್ಲ.
ಭಾರತದ ಪ್ರಖ್ಯಾತ ತತ್ವಜ್ಞಾನಿ ಜೆ. ಕೃಷ್ಣಮೂರ್ತಿಯವರನ್ನು ಒಬ್ಬರು ಪ್ರಶ್ನಿಸಿದರು, 'ಇರುವಿಕೆಯೊಂದಿಗೆ ಶ್ರುತಿಗೂಡಿಸುವುದು ಹೇಗೆ?' ಎಂದು. ಅವರು ಸುಲಲಿತವಾಗಿ, 'ಅದಕ್ಕೆ ಹೆಸರಿಡಬೇಡಿರಿ ಅಷ್ಟೇ. ನೀವು ಅದರೊಂದಿಗೆ ಶ್ರುತಿಗೂಡಿಕೊಂಡಿರುವುದನ್ನು ಕಾಣುತ್ತೀರಿ!' ಎಂದು ಹೇಳಿದರು.
ಸಾಮಾನ್ಯವಾಗಿ ನಾವು ಯಾವುದನ್ನಾದರೂ ನೋಡುವಾಗ, ನಾವು ಅದರೊಂದಿಗೆ ಸಂಬಂಧ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಅಥವಾ ಅದನ್ನು ನಿಂದಿಸಲು ಪ್ರಯತ್ನಿಸುತ್ತೇವೆ. ಉದಾಹರಣೆಗೆ, ನೀವು ದುರಹಂಕಾರಿ ಎಂದಾಗ, ಅದನ್ನು ಒಪ್ಪಿಕೊಳ್ಳುತ್ತೀರಿ ಅಥವಾ ದುರಹಂಕಾರಿಯಾಗದಿರಲು ಪ್ರಯತ್ನಿಸುತ್ತೀರಿ. ನೀವು ಎಂದಿಗೂ ದುರಹಂಕಾರವನ್ನು ಅರ್ಥಮಾಡಿಕೊಳ್ಳುವುದಿಲ್ಲ ಅಥವಾ ಅದನ್ನು ಮೀರಿ ಯೋಚಿಸುವುದಿಲ್ಲ. ನಿಮಗೆ ರೂಢಿಯಾಗಿರುವ ನಿಮ್ಮದೇ ಆದ ಚೌಕಟ್ಟಿನಲ್ಲಿ ಅರ್ಥ ಮಾಡಿಕೊಳ್ಳಬಲ್ಲಿರಿ. ಇದರಿಂದಾಗಿ, ಸಾಧ್ಯತೆಗಳ ಸಂಕುಚಿತವಾದ ದೃಷ್ಟಿಕೋನದಲ್ಲಿ ಸಿಕ್ಕಿಕೊಂಡಿರುತ್ತೀರಿ. ನೀವು ವಾಸ್ತವವಾಗಿ
ಅರ್ಥಮಾಡಿಕೊಳ್ಳಲು, ಈ ಸೀಮಿತವಾದ ದೃಷ್ಟಿಕೋನವನ್ನು ಮೀರಿ ಹೋಗಬೇಕು. ಅದನ್ನು ಮಾಡಲು, ನೀವು ಅದನ್ನು ಸರ್ವವೂ ಮಂಗಳತ್ವವೆಂದು ಅರಿತುಕೊಂಡರೆ, ನಿರೀಕ್ಷೆ ಯನ್ನು ಬಿಟ್ಟು ಬಿಡುತ್ತೀರಿ ದುರಹಂಕಾರವೆಂದು ಹೆಸರಿಡುವುದನ್ನು ನಿಲ್ಲಿಸಬೇಕು ಅಷ್ಟೇ! ಆಗ ದುರಹಂಕಾರವು ಇರುವುದೇ ಇಲ್ಲ. ಅದಕ್ಕೆ ಹೆಸರಿಡುವುದರಿಂದ ಮಾತ್ರ ನೀವು ಹೋರಾಟ ಪ್ರಾರಂಭಿಸುತ್ತೀರಿ. ಈ ರೀತಿಯಾಗಿ, ಅದಕ್ಕೆ ಹೆಸರು ಕೊಡದೇ ಇರುವುದರಿಂದ, ಇರುವುದನ್ನು ಇರುವ ಹಾಗೇ ಕಾಣುತ್ತೀರಿ.
ಇರುವುದನ್ನು ಇರುವಂತೆಯೇ ಕಂಡಾಗ, ನೀವು ಸ್ವರ್ಗದಲ್ಲಿ ಇರುತ್ತೀರಿ. ನೀವು ಏನನ್ನು ಕಾಣಲು ಇಷ್ಟಪಡುತ್ತೀರೋ ಅದನ್ನೇ ಕಂಡಾಗ ನೀವು ನರಕದಲ್ಲಿರುತ್ತೀರಿ. ಸರ್ವವೂ ಮಂಗಳತ್ವವೆಂದು ಅರಿತುಕೊಂಡರೆ, ನಿರೀಕ್ಷೆಯನ್ನು ಬಿಟ್ಟು ಬಿಡುತ್ತೀರಿ ಹಾಗೂ ಎಲ್ಲವೂ ಮಂಗಳತ್ವವೇ ಆಗಿರುವುದರಿಂದ ಎಲ್ಲವನ್ನೂ ಇರುವಂತೆಯೇ ಕಾಣುವಿರಿ.
ಒಂದು ಸಣ್ಣ ಕಥೆ:
ಶಿಷ್ಯನೊಬ್ಬನು ಗುರುಗಳನ್ನು, 'ಗುರುಗಳೇ, ಸ್ವರ್ಗವೆಲ್ಲಿದೆ?' ಎಂದು ಸತತವಾಗಿ ಕೇಳುತ್ತಿದ್ದನು. ಕೊನೆಗೊಂದು ದಿನ ಗುರುಗಳು, 'ನೀನು ನಿಜವಾಗಿಯೂ ತಿಳಿದುಕೊಳ್ಳಬೇಕೆ?' ಎಂದರು.
ಶಿಷ್ಯನು ಉತ್ಸಾಹದಿಂದ, 'ಹೌದು' ಎಂದನು.
ಗುರುಗಳೆಂದರು, 'ಹಾಗಾದರೆ, ನನ್ನ ಮೊದಲನೇ ಶಿಷ್ಯನಾದ ಹೇಮಚಂದ್ರನು ಸ್ವರ್ಗದಲ್ಲಿ ಇದ್ದಾನೆ!'
ಎಂದು. ಇದನ್ನು ಹೇಳಿದ ನಂತರ, ಗುರುಗಳು ಕಣ್ಣು ಮುಚ್ಚಿಕೊಂಡು ಧ್ಯಾನಮಗ್ನರಾದರು.
ಮತ್ತೆ ಗುರುಗಳು ಕಣ್ಣು ತೆರೆಯುವುದು ಬಹಳ ಸಮಯದ ನಂತರವೇ ಎಂದು ಶಿಷ್ಯನಿಗೆ ತಿಳಿದಿತ್ತು. ಆದುದರಿಂದ, ಆತನು ಇತರ ಶಿಷ್ಯರ ಬಳಿ ಹೋಗಿ, 'ಹೇಮಚಂದ್ರನು ಎಲ್ಲಿ ವಾಸಿಸುತ್ತಿದ್ದಾನೆ, ನಿಮಗೆ ತಿಳಿದಿದೆಯೆ?' ಎಂದು ವಿಚಾರಿಸಿದನು. ಯಾರಿಗೂ ತಿಳಿದಂತೆ ಕಾಣಲಿಲ್ಲ.
ಕೊನೆಗೆ ಒಬ್ಬ ಶಿಷ್ಯನು, 'ನೀನು ಅಲ್ಲಿಗೆ ಹೋಗಲು
ಮಾರ್ಗದರ್ಶನ ನೀಡಬಲ್ಲೆ, ಆದರೆ ನಾನೇ ಸ್ವತಃ
ಅಲ್ಲಿಗೆ ಎಂದೂ ಹೋಗಿಲ್ಲ, ಅದು ಹಿಮದಿಂದ
ಆವರಿಸಿದ ಪರ್ವತ ಶ್ರೇಣಿಗಳಾಂಡಾಚೆ ಇರುವ
ಒಂದು ಆಳವಾದ ಕಣಿವೆಯಲ್ಲಿದೆ' ಎಂದನು.
ಶಿಷ್ಯನು ಜಾಗರೂಕತೆಯಿಂದ ಮಾರ್ಗವನ್ನು
ಬರೆದುಕೊಂಡು ಗುರುಗಳ ಬಳಿಗೆ ಹಿಂತಿರುಗಿದನು.
ಆತನು, 'ಗುರುಗಳೇ ನಾನು ಹೇಮಚಂದ್ರನನ್ನು
ನೋಡಿಕೊಂಡು ಬರಲು ಇಚ್ಛಿಸುತ್ತೇನೆ' ಎಂದನು.
ಗುರುಗಳು ಯಾವುದೋ ಕಾರ್ಯದಲ್ಲಿ
ಮಗ್ನರಾಗಿದ್ದರು, ಅವರು ಆತನತ್ತ ನೋಡದೆಯೇ
'ಮುಂದುವರಿ' ಎಂದರು.
ಶಿಷ್ಯನು ತನ್ನ ಪ್ರಯಾಣವನ್ನು ಪ್ರಾರಂಭಿಸಿದನು.
ಬಿಸಿಲು, ಮಳೆ, ಹಿಮ ಮತ್ತು ಇಂತಹವೆಲ್ಲವನ್ನೂ
ದಾಟಿಕೊಂಡು ಅನೇಕ ದಿನಗಳವರೆಗೆ ನಡೆದನು.
ಆತನಿಗೆ ಆಯಾಸವಾಗಿ, ಸಾಯುವುದರಲ್ಲಿದ್ದನು.
ಆ ಕಣಿವೆಗೆ ತಲುಪಲು ನೂರು ದಿನಗಳು ಹಿಡಿದು
ಕೊನೆಗೂ ಆತನು ಅಲ್ಲಿಗೆ ತಲುಪಿ, ಆ ಕಣಿವೆಯನ್ನು
ನೋಡಿ, 'ಈ ಕಣಿವೆಯು ಅಷ್ಟೇನೂ
ಮಹತ್ತರವಾದುದಾಗಿ ಕಾಣುತ್ತಿಲ್ಲ. ನಾನು ಇನ್ನೂ
ಸುಂದರವಾದ ಅನೇಕ ಕಣಿವೆಗಳನ್ನು ಕಂಡಿದ್ದೇನೆ,
ಗುರುಗಳು ಇದನ್ನೇಕೆ ಸ್ವರ್ಗವೆಂದರು?' ಎಂದು
ಆಲೋಚಿಸಿದನು.
ಆತನು ಸುತ್ತಮುತ್ತ ನೋಡಿ, ಇನ್ನೂ ಮುಂದೆ ನಡೆದು, ಕೊನೆಗೂ ಹೇಮಚಂದ್ರನ ಗುಡಿಸಿಲನ್ನು ಕಂಡನು. ಈತನನ್ನು ಕಂಡು ಹೇಮಚಂದ್ರನಿಗೆ ಬಹಳ ಸಂತೋಷವಾಯಿತು. ಆತನು ಸ್ನೇಹಿತನಿಗೆ ಆಹಾರವನ್ನು ನೀಡಿ, ಗುರುಗಳು ಮತ್ತಿತ್ತರ ಶಿಷ್ಯರು ಹೇಗಿರುವರೆಂದು ವಿಚಾರಿಸಿದನು.
ಇಷ್ಟು ಹೊತ್ತೂ, ಶಿಷ್ಯನು ತನ್ನಲ್ಲೇ ತಾನು ಚಿಂತಿಸುತ್ತಿದ್ದನು, 'ಗುರುಗಳು ಇದನ್ನೇಕೆ ಸ್ವರ್ಗ ಎಂದರು? ಇದನ್ನು ನಾನು ನಂಬಲಾರೆ' ಎಂದು.
ಒಂದು ವಾರದಾದ್ಯಂತ ಅಲ್ಲಿ ಇದ್ದನಂತರ, ಮತ್ತೆ
ಗುರುಗಳ ಬಳಿಗೆ ಮರಳಿದನು. ಹಿಂತಿರುಗಿ ಬರಲು
ಆತನಿಗೆ ಮತ್ತೆ ನೂರು ದಿನಗಳು ಹಿಡಿದುವು.
ಆತನು ನೇರವಾಗಿ ಗುರುಗಳ ಬಳಿ ಹೋಗಿ, 'ನೀವು
ಆ ಸ್ಥಳವನ್ನು ಸ್ವರ್ಗವೆಂದಿರಿ, ಆದರೆ ಅದು ನಾನು
ಅಲ್ಲಿ ಕಂಡದ್ದರಲ್ಲೆಲ್ಲಾ ಅತಿ ಸಾಧಾರಣವಾದ ಸ್ಥಳ
ಮಾತ್ರ' ಎಂದನು.
ಗುರುಗಳು, 'ಅಯ್ಯೋ ದೇವರೇ! ನೀನು ವಿಚಾರಿಸಿದಾಗ, ನಿನ್ನ ಉದ್ದೇಶವೇನೆಂದು ವಿಷಧವಾಗಿ ತಿಳಿಸಿದ್ದಿದ್ದರೆ, ನಿನಗೆ ಸತ್ಯವನ್ನು ಹೇಳುತ್ತಿದ್ದೆ' ಎಂದರು.
ಶಿಷ್ಯನು, 'ಹಾಗಾದರೆ ಸತ್ಯವೇನು?' ಎಂದನು.
ಗುರುಗಳು, 'ಹೇಮಚಂದ್ರ ಸ್ವರ್ಗದಲ್ಲಿಲ್ಲ. ಸ್ವರ್ಗ ಅವನಲ್ಲಿದೆ!' ಎಂದು ಉತ್ತರಿಸಿದರು.
ಅಸ್ತಿತ್ವದ ಸನಿಹದಲ್ಲೇ ಜೀವಿಸುತ್ತಾ, ಯಾವುದೇ
ಅಪೇಕ್ಷೆಯಿಲ್ಲದೆ ಇರುವುದನ್ನು ಇರುವಂತೆಯೇ
ನೋಡುತ್ತಾ, ಸ್ವರ್ಗವನ್ನು ನಿಮ್ಮಲ್ಲೇ
ಇಟ್ಟುಕೊಂಡಿರುತ್ತೀರಿ. ಸ್ವರ್ಗವೆಂಬುದು
ಭೂಗೋಳದಲ್ಲಿ ಇರುವಂತಹದಲ್ಲ. ಅದು
ಮನಸ್ಸಿಗೆ ಸಂಬಂಧಪಟ್ಟದ್ದು. ಅದು ಭೌತಿಕವಲ್ಲ,
ಅದು ಮಾನಸಿಕವಾದುದು. ನೀವು ನಿಶ್ಚಯಿಸಿದರೆ,
ಈಗಲೇ ಸ್ವರ್ಗದಲ್ಲಿರಬಹುದು.
ಚಿಂತೆ-ಒಂದು ಪೂರ್ವಾರ್ಜಿತ ಬಳುವಳಿ
ಚಿಂತೆ ಎಂಬುದು ಒಂದು ಬೇಕಿಲ್ಲದ
ಪೂರ್ವಾರ್ಜಿತ ಬಳುವಳಿ-ತಾತ-ಅಜ್ಜಿಯರಿಂದ
ತಂದೆ-ತಾಯಿಯರಿಗೆ ಮತ್ತು ಅವರಿಂದ ಮಕ್ಕಳಿಗೆ
ಬಂದದ್ದು. ಮಕ್ಕಳು ಸ್ಪಂಜಿನಂತೆ, ತಂದೆ-ತಾಯಿಯರ
ಹಾವಭಾವ ಹಾಗೂ ಮನೋಭಾವನೆಗಳನ್ನು
ಸುಮ್ಮನೆ ಹೀರಿಕೊಂಡುಬಿಡುತ್ತಾರೆ. ತಂದೆ-
ತಾಯಿಯರಿಗೆ ಇದು ಸಂಭವವಾಗುತ್ತಿರುವ ಬಗ್ಗೆ
ಅರಿವು ಸಹ ಇರುವುದಿಲ್ಲ. ಉದಾಹರಣೆಗೆ,
ಯಾವುದಾದರೊಂದು ಚಿಂತೆಯನ್ನು ಮೂರು-ನಾಲ್ಕು
ಬಾರಿ ಒಬ್ಬ ತಾಯಿಯು ಪುನರುಚ್ಛರಿಸುವುದನ್ನು
ಕೇಳಿಸಿಕೊಂಡರೆ, ಮಗುವು ಆ ಸ್ವಭಾವವನ್ನು
ಅಳವಡಿಸಿಕೊಂಡುಬಿಡುತ್ತದೆ. ಅದು ಅನಗತ್ಯವಾಗಿ
ಅದನ್ನು ಪುನರುಚ್ಛರಿಸುತ್ತಾ ಬೆಳೆಯುತ್ತದೆ, ಇದು
ಚಿಂತೆಯ ಒಂದು ಲಕ್ಷಣ.
ಮೂಲತಃ ಅದು ತಾಯಿಗೆ ಸಂಬಂಧಪಟ್ಟ ವಿಷಯವಾದರೂ, ಮಗುವು ಬೆಳೆದು ಕೊನೆಗೆ ದಾಂಪತ್ಯ ಜೀವನಕ್ಕೂ ಆ ಚಿಂತೆಯನ್ನು ತಂದುಕೊಳ್ಳುತ್ತಾನೆ. ಅನಂತರ ಆತನೂ ಆತನ ಹೆಂಡತಿಯೂ ಸಹ ಅದರೊಂದಿಗೆ ಹೆಣಗಾಡಬೇಕು. ವಾಸ್ತವದೊಂದಿಗೆ ಬಾಳುವುದನ್ನು ಕಲಿಯದಿದ್ದರೆ ಹಾಗೂ ಅದಕ್ಕೆ ಹೆಸರಿಡುವುದನ್ನು ನಿಲ್ಲಿಸದಿದ್ದರೆ, ಅದನ್ನು ತಮ್ಮ ನಂತರ ಮಕ್ಕಳಿಗೂ ಬಿಟ್ಟು ಕೊಡುತ್ತಾರೆ.
ಒಬ್ಬ ವ್ಯಕ್ತಿಯು ಒಂದು ಮಗುವನ್ನು ಪ್ರಾಂ ನಲ್ಲಿ ತಳ್ಳಿಕೊಂಡು ಹೋಗುತ್ತಿದ್ದನು. ಆ ಮಗುವು ಅತಿ ಜೋರಾಗಿ ಅರಚಿಕೊಳ್ಳುತ್ತಿತ್ತು. ಆತನು, 'ಜಾರ್ಜ್, ಶಾಂತಿಯಿಂದಿರು. ಅರಚಬೇಡ. ಎಲ್ಲಾ ಸರಿಹೋಗುತ್ತದೆ' ಎಂದು ತನ್ನೊಳಗೇ ದಾರಿಯುದ್ದಕ್ಕೂ ಮೆಲುದನಿಯಲ್ಲಿ ಪುನರುಚ್ಛರಿಸುತ್ತಿದ್ದನು.
ಆತನ ಹೆಂಡತಿಯು ಆತನನ್ನು ಸುಮ್ಮನಿರಿ ಎಂದಳು.
ಇದನ್ನು ನೋಡುತ್ತಿದ್ದ ಇನ್ನೊಬ್ಬಾಕೆಯು, ಆತನ
ಹೆಂಡತಿಗೆ ಹೇಳಿದಳು, 'ನೀನೇಕೆ ಆತನ ಮೇಲೆ
ಅಷ್ಟು ಬರಟಾಗಿ ವರ್ತಿಸುತ್ತೀಯೆ? ಆತನು ನಿನ್ನ
ಮಗನನ್ನು ಸಂತೈಸಲು ತನಗೆ ಸಾಧ್ಯವಾದುದನ್ನೆಲ್ಲಾ
ಮಾಡುತ್ತಿದ್ದಾನೆ!' ಎಂದು.
ಹೆಂಡತಿಯು ಅಸಮಾಧಾನದಿಂದ ಆಕೆಯನ್ನು
ನೋಡಿ, ಗಂಡನ ಕಡೆಗೆ ಬೆರಳುಮಾಡಿ, 'ಆತನೇ
ಜಾರ್ಜ್' ಎಂದು ಆಕೆಗೆ ಹೇಳಿದಳು.
ತಂದೆ ತಾಯಿಯರು ಯಾವಾಗಲೂ ಚಿಂತೆಯನ್ನು ವ್ಯಕ್ತಪಡಿಸುತ್ತಲೇ ಇದ್ದರೆ, ಮಕ್ಕಳು ಚಿಂತೆಯಿಂದಲೇ ಜೀವನ ಸಾಗುತ್ತದೆ ಎಂಬ ಭಾವನೆಯೊಂದಿಗೆ ಬೆಳೆಯುತ್ತಾರೆ! ತಿಳಿಯಿರಿ, ಜೀವನವು ನಮ್ಮಿಂದ ಸಾಗುತ್ತಿಲ್ಲ. ಆದರೆ ಅದು ನಾವು ಇದ್ದಾಗ್ಯೂ ಸಾಗುತ್ತಿದೆ!
ಮಕ್ಕಳೂ ಚಿಂತೆ ಮಾಡಬೇಕು ಎಂದು ತಂದೆತಾಯಿಗಳೇ ನಿರೀಕ್ಷಿಸುವುದು ಒಂದು ಸಮಸ್ಯೆ! ಮಕ್ಕಳು ಚಿಂತಿಸದಿದ್ದರೆ, ಶ್ರದ್ಧೆ ಇಲ್ಲದವರು ಎಂದು ಅವರು ಮುದ್ರೆ ಹಾಕಿಬಿಡುತ್ತಾರೆ. ಚಿಂತಿತರಾಗದೆಯೇ ಕಾಳಜಿಯಿಂದಿರಲು ಸಾಧ್ಯ. ಕಾಳಜಿ ವಹಿಸುವುದು ಎಂದರೆ ಮಾಡಬೇಕಾದ ಕೆಲಸಮಾಡುವುದು, ಚಿಂತೆ ಎಂದರೆ ವಟಗುಟ್ಟುವುದು. ವಟಗುಟ್ಟುವುದರಿಂದ ಏನೂ ಪ್ರಯೋಜನವಿಲ್ಲ. ವಟಗುಟ್ಟುವುದು ಸೇತುವೆ ಬರುವ ಮುನ್ನವೇ ಅದನ್ನು ದಾಟಲು ಪ್ರಯತ್ನಿಸಿದಂತೆ.
ಒಬ್ಬ ಚಿಕ್ಕ ಹುಡುಗನು ತನ್ನ ತಾಯಿಯನ್ನು ಪಕ್ಕದ ಹಳ್ಳಿಗೆ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದನು. ಅವರು ಹಳ್ಳಿಯನ್ನು ಸಮೀಪಿಸುತ್ತಿದ್ದಂತೆ, ಅಲ್ಲಿ ಇರುತ್ತಿದ್ದ ಒಂದು ಹಳೆಯದಾದ ಮತ್ತು ಉಪಯೋಗಿಸಲಾಗದ ಸೇತುವೆಯೊಂದನ್ನು ನೆನಪು ಮಾಡಿಕೊಂಡರು.
ತಾಯಿಯು ತೀವ್ರವಾಗಿ ಕಾತರಗೊಂಡಳು ಮತ್ತು
ಆಕೆಯು 'ಆ ಸೇತುವೆಯನ್ನು ಕಾರಿನಲ್ಲಿ ನಾನು
ಎಂದೂ ದಾಟುವುದಿಲ್ಲ' ಎಂದಳು.
ಮಗನು, 'ಅದು ಹತ್ತಿರ ಬಂದಾಗ ಅದು ಹೇಗೆ ಇದೆಯೆಂದು ನೋಡೋಣ' ಎಂದನು.
ತಾಯಿಯು, 'ನಾವು ಅದನ್ನು ದಾಟಲು
ಪ್ರಯತ್ನಿಸಿದರೆ ಆ ಸೇತುವೆ ಮುರಿದು ಹೋಗುತ್ತದೆ
ಎಂಬುದು ನನಗೆ ಖಚಿತ' ಎಂದಳು.
ಮಗನು, 'ಅದು ಎಷ್ಟು ಬಲಿಷ್ಠವಾಗಿದೆಯೋ
ನೋಡೋಣ. ಅದು ಸರಿಯಾಗಿದೆಯೇ ಎಂಬುದನ್ನು
ಗಮನಕೊಟ್ಟು ನೋಡದೆಯೇ ದಾಟುವುದು ಬೇಡ'
ಎಂದು ಉತ್ತರಿಸಿದನು.
ತಾಯಿಯು, 'ನನಗಾಗಲೀ ಅಥವಾ ನಿನಗಾಗಲೀ
ಏನಾದರೂ ಆದರೆ ನಿನ್ನ ತಂದೆ ನನ್ನನ್ನು ಮಾತ್ರ
ಎಂದೆಂದಿಗೂ ಕ್ಷಮಿಸುವುದಿಲ್ಲ' ಎಂದಳು. ಆಕೆಯು
ಇದೇ ರೀತಿಯಲ್ಲಿ ಮುಂದುವರೆಯುತ್ತಾ, ಹೆಚ್ಚು
ಹೆಚ್ಚಾಗಿ ಕ್ಷೋಭೆಗೊಂಡಳು.
ಇಷ್ಟರಲ್ಲೇ ಆ ಸೇತುವೆ ಇದ್ದ ಜಾಗಕ್ಕೆ ಅವರು
ತಲುಪಿದರು. ಆ ಸೇತುವೆಯ ಬದಲು ಹೊಸ
ಸೇತುವೆಯೊಂದಿತ್ತು!
ಇಲ್ಲಿ ತಿಳಿದುಕೊಳ್ಳಬೇಕಾದ ಎರಡು ವಿಷಯಗಳಿವೆ: ಕಾಲಾನುಕ್ರಮವಾಗಿ ಯೋಜನೆ ಮಾಡುವುದು ಮತ್ತು ಮಾನಸಿಕ ಚಿಂತನೆ. ಒಂದು ಕಾರ್ಯ ಅಥವಾ ಯೋಜನೆಯನ್ನು ಮಾಡಿ ಮುಗಿಸಲು ಕಾಲಾನುಕ್ರಮವಾಗಿ ವೇಳಾಪಟ್ಟಿಯನ್ನು ಹಾಕುವುದು ಅಗತ್ಯ. ಉದಾಹರಣೆಗೆ, 'ನಾನು ಬೆಳಗ್ಗೆ ಆರು ಗಂಟೆಗೆ ಏಳುತ್ತೇನೆ. ಧ್ಯಾನವನ್ನು ಮಾಡುತ್ತೇನೆ, ಆನಂತರ, ಏಳು ಗಂಟೆಗೆ ಸ್ನಾನ ಮಾಡುತ್ತೇನೆ ಮತ್ತು ಎಂಟು ಗಂಟೆಗೆ ಕಛೇರಿಗೆ ತೆರಳುತ್ತೇನೆ, ಸಂಜೆ ಐದರ ಹೊತ್ತಿಗೆ ನಾನು ಕೆಲಸವನ್ನು ಮುಗಿಸುತ್ತೇನೆ ಮತ್ತು ಸಂಜೆ ಆರರ ವೇಳೆಗೆ ಮನೆಗೆ ಹಿಂದಿರುಗುತ್ತೇನೆ' ಎಂದು ನಿರ್ಣಯಿಸುತ್ತೀರಿ.
ಈ ರೀತಿ ಯೋಚಿಸುವುದು ಸಂಪೂರ್ಣವಾಗಿ
ಸರಿಯಾದುದು. ಆದರೆ, ಪ್ರತಿಯೊಂದು ಕಾರ್ಯದ
ಮುನ್ನವೇ ಅದನ್ನು ಕುರಿತು ಆತಂಕಪಡಲು
ಆರಂಭಿಸಿಬಿಡುತ್ತೀರಿ. ಪ್ರತಿಯೊಂದಕ್ಕೂ
ಏನಾಗುತ್ತದೆಯೋ ಏನೋ ಎಂದು ಯೋಚಿಸುತ್ತೀರಿ.
ಇದನ್ನೇ ಮಾನಸಿಕ ಚಿಂತೆ ಎನ್ನುವುದು. ಇದು
ಅನಾವಶ್ಯಕ. ಕಾಲಾನುಕ್ರಮವಾಗಿ ಯೋಚಿಸುವುದು
ಸರಿಯಾದುದು ಆದರೆ ಮಾನಸಿಕವಾಗಿ ಚಿಂತಿಸುವುದು
ಅನಾವಶ್ಯಕ, ಅದು ಸೇತುವೆ ಬರುವ ಮುನ್ನವೇ
ಅದನ್ನು ದಾಟಲು ಪ್ರಯತ್ನಿಸಿದಂತೆ.
ಚಿಂತಿಸುವಾಗ ಹೆಚ್ಚು ಶಕ್ತಿ ವ್ಯಯವಾಗುತ್ತದೆ. ಅದು ಯಾವ ಉಪಯೋಗಕ್ಕೂ ಬಾರದ್ದು. ಈಗ ತಾನೇ ನಾನು ಹೇಳಿದ ಕಥೆಯಲ್ಲಿ, ಮಗನಿಗೆ ಕಾಳಜಿ ಇಲ್ಲವೆಂದು ಅರ್ಥವೇನಲ್ಲ. ಆತನು ಚಿಂತೆ ಮಾಡದೆಯೇ ಕಾಳಜಿ ವಹಿಸುತ್ತಾನೆ, ಅಷ್ಟೆ. ಸೇತುವೆ ಬರುವ ಮುನ್ನವೇ ಅದನ್ನು ಕುರಿತು ಚಿಂತಿಸುವುದೇಕೆ?
ಮನೆಯ ಭೌತಿಕ ಭಾಗಗಳಾದ ಜಮಖಾನ
ಹಾಗೂ ನೆಲವನ್ನು ನೀವು ತೊಳಿದುಬಿಡಬಹುದು.
ಆದರೆ ಮನೆಯೊಳಗೆ ಆವರಿಸಿರುವ ಆಕಾಶವನ್ನು
ಏನು ಮಾಡಬಲ್ಲಿರಿ? ಈ ಆಕಾಶವೇ ನಿಮ್ಮ
ಮನೆಯಲ್ಲೆಲ್ಲಾ ಹರಿದಾಡುತ್ತಿರುವ ಚೈತನ್ಯ. ನೀವು
ಹೊರಹೊಮ್ಮುವ ಆಲೋಚನೆಗಳನ್ನೆಲ್ಲಾ ಅದು
ಸೆರೆಹಿಡಿಯುತ್ತದೆ. ನಿಮ್ಮ ಮನೆಯ ಭಾವನೆಯನ್ನೇ
ಅದು ನಿರ್ಣಯಿಸುತ್ತದೆ. ನಿಮ್ಮ ಮನೆಯ ಆಕಾಶದಲ್ಲಿ
ನಿಮ್ಮ ಚಿಂತೆಗಳು ಜೇಡರ ಬಲೆಯಂತೆ
ನೆಲೆಸಿಬಿಡುತ್ತದೆ. ಆದುದರಿಂದಲೇ ನೀವು
ಮನೆಯನ್ನು ಪ್ರವೇಶಿಸಿದ ಕೂಡಲೆ, ನಿಮಗೆ
ರೂಢಿಯಾಗಿರುವ ಚಿಂತೆಗಳ ನಮೂನೆಯು
ಅನುಭವವಾಗುತ್ತದೆ. ನೀವು ಮನೆಗೆ ಮರಳಿ
ಬಂದಾಗ ಮನೆಯ ಆಕಾಶದಲ್ಲಿ ಉಳಿದುಕೊಂಡಿರುವ
ಈ ನಮೂನೆಗಳು ನಿಮ್ಮನ್ನು ಆವರಿಸುತ್ತವೆ. ನಿಮ್ಮ
ಮನೆಯ ಆಕಾಶದಲ್ಲಿ ನಿಮ್ಮ ಮನೋಭಾವನೆ
ನೆಲೆಸಿಬಿಡುತ್ತದೆ ಎಂಬುದನ್ನು ತಿಳಿಯಿರಿ.
ಯಾವುದನ್ನಾದರೂ
ಅರಿವಿನಿಂದ
ನೋಡಿದರೆ ಅದು
ಕರಗಿ
ಹೋಗುವುದು.
ಒಂದು ದೊಡ್ಡ
ಸಮಸ್ಯೆ ಏನೆಂದರೆ, ನೀವು
ನಿಮ್ಮ ಚಿಂತೆಯ
ನಮೂನೆಗಳಿಗೆ ಎಷ್ಟು
ಒಗ್ಗಿಹೋಗಿಬಿಟ್ಟಿರುವಿ-
ರೆಂದರೆ, ಒಂದು
ತಾಯ್ನಾಡಿನ ಕಂಪಿನಿಂದ ಬೇರ್ಪಟ್ಟ ದ್ವೀಪದಂತೆ
ಆಗಿಬಿಡುವಿರಿ. ನೀವು ವಿಶ್ವಶಕ್ತಿಯ
ಮಾಧುರ್ಯದಿಂದ ಬೇರ್ಪಟ್ಟಿರುವುದು ನಿಮ್ಮ
ಚಿಂತೆಗಳಿಂದ. ನಿಮ್ಮ ಸುತ್ತಮುತ್ತ ಎಡೆಬಿಡದೆ
ನಡೆಯುತ್ತಿರುವ ವಿಶ್ವಶಕ್ತಿಯ ಪವಾಡಗಳನ್ನು
ಗಮನಿಸುವುದೇ ಇಲ್ಲ. ನೀವು ಮೆಚ್ಚುವುದನ್ನು
ಮರೆಯುವಿರಿ ಮತ್ತು ಗೊಣಗುವುದನ್ನು ಮಾತ್ರ
ಮರೆಯುವುದಿಲ್ಲ. ನೀವು ನಗುವುದನ್ನು ಮರೆಯುವಿರಿ
ಮತ್ತು ಆತಂಕವನ್ನು ಮಾತ್ರ ಪಡುವಿರಿ. ಆನಂದವನ್ನು
ಮರೆತು ಒತ್ತಡವನ್ನು ಅನುಭವಿಸುವಿರಿ.
ನಕಾರಾತ್ಮಕವಾದವುಗಳನ್ನು ನೆನೆಯುವುದು ಕೇವಲ
ಒಂದು ಚಟವಾಗಿಬಿಡುತ್ತದೆ.
ಅರಿವು - ಹಿತಕರವಾದ ವೈರಾಣು!
ಮನಸ್ಸಿನ ಸಾಫ್ಟ್ ವೇರ್ನ ವಿರೂಪಕ್ಕೆ ಪರಿಹಾರವೇನು?
ಆಳವಾದ ಅರಿವೇ ಪರಿಹಾರ. ಆಳವಾದ ಅರಿವೇ
ಒಂದು ಹಿತಕರವಾದ ವೈರಾಣುವಿನಂತೆ,
ಅಂತಹದೊಂದು ಇದ್ದದ್ದೇ ಆದರೆ! ಒಮ್ಮೆ ಅರಿವು
ನಿಮ್ಮಲ್ಲಿ ಮೂಡಿದರೆ ಸಾಕು, ನೀವು ಎಷ್ಟೆಷ್ಟು ಹೆಚ್ಚು ನಿಮ್ಮ ಮನಸ್ಸಿನ ಮೇಲೆ ಕೆಲಸಮಾಡುವಿರೋ, ಅಷ್ಟಷ್ಟು ಅರಿವು ನಿಮ್ಮ ಚಿಂತೆಯ ಸಾಫ್ಟ್ವೇರ್ನಲ್ಲಿ ಹೊಕ್ಕು ಅದನ್ನು ಧ್ವಂಸ ಮಾಡಿಬಿಡುತ್ತದೆ.
ನಮ್ಮ ಒಳಗೆ ಹಾಗೂ ನಮ್ಮ ಸುತ್ತಮುತ್ತಲೂ
ನಡೆಯುತ್ತಿರುವ ಘಟನೆಗಳ ಬಗ್ಗೆ ಸರಿಯಾಗಿ
ಗಮನವಿಡುವುದೇ ಅರಿವು. ಇದೇ ಪ್ರತ್ಯಕ್ಷವಾಗಿ
ಕಾಣುವುದು. ಯಾವುದನ್ನೇ ಆದರೂ ಅರಿವಿನಿಂದ
ನೋಡಿದರೆ ಅದು ಕರಗಿ ಹೋಗುವುದು. ಅದೇ
ಅರಿವಿನ ಶಕ್ತಿ; ದೈಹಿಕ ನೋವಾಗಲೀ ಅಥವಾ
ಮಾನಸಿಕ ನೋವಾಗಲೀ ಅಥವಾ ಚಿಂತೆಯಾಗಲೀ
ಅಥವಾ ಇನ್ನೇನೇ ಆಗಲಿ ನಾವು ಅರಿವಿನಿಂದ
ನೋಡಿದಾಗ, ನಮ್ಮೊಳಗೇ ಇರುವ ಘರ್ಷಣೆಯನ್ನು
ನಿಲ್ಲಿಸುತ್ತೇವೆ. ಸ್ವಾಭಾವಿಕವಾದ, ಸರಾಗವಾಗಿ
ಹರಿಯುವ ಜೀವನವನ್ನು ಪ್ರಾರಂಭಿಸುತ್ತೇವೆ.
ಚಿಂತೆಯನ್ನು ಅರಿವಿಟ್ಟು ನೋಡಿದಾಗ, ಚಿಂತೆ ಹೇಗೆ ಸೃಷ್ಟಿಯಾಯಿತು, ಅದು ಯಾವ ರೀತಿ ಇರುತ್ತದೆ, ಎಂಬುದರ ಮೇಲೆ ಬೆಳಕನ್ನು ಬೀರಿ ಸರಿಯಾಗಿ ಕೇಂದ್ರೀಕರಿಸುತ್ತೇವೆ. ಒಂದು ಬಾರಿ ಇದು ಸಂಭವಿಸಿದರೆ, ಚಿಂತೆ ಕರಗಲು ಪ್ರಾರಂಭವಾಗುತ್ತದೆ ಮತ್ತು ಸ್ಪಷ್ಟತೆ ಸಂಭವಿಸಲು ಪ್ರಾರಂಭವಾಗುತ್ತದೆ.
ಬುದ್ಧ ಮತ್ತು ಆತನ ಶಿಷ್ಯರನ್ನು ಕುರಿತಾದ ಒಂದು ಸಣ್ಣ ಕಥೆ ಈ ರೀತಿ ಇದೆ:
ಒಂದು ದಿನ ಬುದ್ಧನು ಎಂದಿನಂತೆ ಪ್ರಾತಃಕಾಲದಲ್ಲಿ
ಶಿಷ್ಯರಿಗೆ ಪ್ರವಚನ ನೀಡಲು ಬಂದನು. ಗಂಟು
ಹಾಕಿದ ಕರವಸ್ತ್ರವೊಂದು ಆತನ ಕೈಯಲ್ಲಿ ಇತ್ತು.
ಆತನು ಆ ಕರವಸ್ತ್ರವನ್ನು ಶಿಷ್ಯರಿಗೆ ತೋರಿಸಿ,
ಯಾರಾದರೂ ಮುಂದೆ ಬಂದು ಇದನ್ನು
ಬಿಡಿಸಬಲ್ಲಿರಾ ಎಂದು ಕೇಳಿದನು.
ಒಬ್ಬ ಶಿಷ್ಯನು ಹೋಗಿ ಅದನ್ನು ಬಿಡಿಸಲು ಪ್ರಯತ್ನಿಸಿದನು. ಅದನ್ನು ಆತನು ಎಳೆಯುತ್ತಿದ್ದಂತೆ ಗಂಟು ಇನ್ನೂ ಬಿಗಿಯಾಯಿತು. ಮತ್ತೊಬ್ಬ ಶಿಷ್ಯನು ಹೋಗಿ ಕೆಲವು ಕ್ಷಣಕಾಲ ಆ ಗಂಟನ್ನು ನೋಡಿ, ಸುಲಭವಾಗಿ ಅದನ್ನು ಬಿಡಿಸಿದನು.
ಆತನು ಮಾಡಿದುದು ಗಂಟನ್ನು ನೋಡುವುದಷ್ಟೇ.
ಮೊದಲಿಗೆ ಆ ಗಂಟನ್ನು ಹೇಗೆ ಹಾಕಲಾಯಿತು
ಎಂಬುದು ನೋಡಿದಾಕ್ಷಣವೇ ತಿಳಿದುಹೋಯಿತು.
ಆದುದರಿಂದ, ಗಂಟು ಹಾಕಿದ ವಿರುದ್ಧ ರೀತಿಯಲ್ಲಿ
ಅದನ್ನು ಬಿಡಿಸಿದನು. ಅದನ್ನು ಹೇಗೆ
ಬಿಡಿಸಬೇಕೆಂಬುದನ್ನು ಗಂಟು ತಾನೇ ಆತನಿಗೆ
ತಿಳಿಯಪಡಿಸಿತು.
ಕರವಸ್ತ್ರದ ಗಂಟುಗಳು ಜೀವನದಲ್ಲಿನ
ಚಿಂತೆಗಳು. ಅವನ್ನು ಅರಿವಿನಿಂದ ನೋಡಿದರೆ,
ಅವನ್ನು ಹೇಗೆ ಕರಗಿಸಬಹುದು ಎಂಬುದು
ತಿಳಿದುಬಿಡುತ್ತದೆ. ಚಿಂತೆ ಹೇಗೆ ಸೃಷ್ಟಿಯಾಯಿತು
ಎಂಬುದನ್ನು ಸರಿಯಾಗಿ ನೋಡುತ್ತೇವೆ ಮತ್ತು
ಆನಂತರ ಅದನ್ನು ಹೇಗೆ ಬಿಡಿಸಬಹುದೆಂದು
ನೋಡುತ್ತೇವೆ. ಚಿಂತೆಯೇ ತನ್ನನ್ನು ಬಿಡಿಸುವ
ಬಗೆಯನ್ನು ತಿಳಿಸಿಕೊಡುತ್ತದೆ.
ಸ್ಫೂರ್ತಿಯಿಂದ ಕಾರ್ಯ ನಿರ್ವಹಿಸಿ - ಚಿಂತೆಯಿಂದಲ್ಲ
ಗಮನವಿಟ್ಟು ನೋಡಿದರೆ, ಗುರಿಗಳು ನಮ್ಮಲ್ಲಿ ಯಾವಾಗಲೂ ಚಿಂತೆ ಉಂಟುಮಾಡುವುದನ್ನು
ಕಾಣಬಹುದು. ನಾವು ಗುರಿಯ ಕಡೆಗೆ ನಡೆದಾಗ,
ಅದರ ಫಲಿತಾಂಶವನ್ನು ಕುರಿತ ಚಿಂತೆಯಿಂದಲೇ
ಮುಂದುವರೆಯುತ್ತಿರುತ್ತೇವೆ.
ಪರಮ ಜ್ಞಾನಿಯಾದ ಶ್ರೀ ಕೃಷ್ಣನು,
ಭಗವದ್ಗೀತೆಯಲ್ಲಿ ಸುಂದರವಾಗಿ ಹೇಳುವುದು,
‘ಯಾವುದರಿಂದಲೂ ಲಾಭ ಅಥವಾ ನಷ್ಟವನ್ನು
ಅಪೇಕ್ಷಿಸದ ವ್ಯಕ್ತಿಯು ಯಾವ ಪ್ರೋತ್ಸಾಹವೂ
ಬೇಕಿಲ್ಲದೆ, ಸಂತೋಷವಾಗಿ ಕೆಲಸ
ಮಾಡುತ್ತಿರುತ್ತಾನೆ’ ಎಂದು.
ನಿಮಗೆ ಫಲಿತಾಂಶದ ಬಗ್ಗೆ ಚಿಂತೆಯಾದಾಗ, ಆ ಚಿಂತೆಯೇ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ, ನೀವು ಚಿಂತಿತರಾದಾಗ, ನಿಮ್ಮ ಕೆಲಸ ಕೆಡುತ್ತದೆ. ಕೆಲಸವನ್ನು ಯಾವಾಗಲೂ ಸ್ಪೂರ್ತಿಯಿಂದ ಮಾಡಬೇಕು, ಚಿಂತೆಯಿಂದ ಅಲ್ಲ. ಕೆಲಸಗಳನ್ನು ಮಾಡುವ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಉಕ್ಕಿಹರಿಯುವ ಚೈತನ್ಯವೇ ಸ್ಪೂರ್ತಿ. ಅದು ಪೂರ್ಣವಾಗಿ ಶಕ್ತಿನೀಡುವಂತಹುದು. ನಿಮ್ಮ ಸಾಮರ್ಥ್ಯವನ್ನು ಕುಗ್ಗಿಸುವಂತಹುದು ಚಿಂತೆ. ಅದು ನಿಮ್ಮ ಚೈತನ್ಯವನ್ನು ತೆಗೆದುಕೊಂಡುಬಿಡುತ್ತದೆ. ಆದುದರಿಂದ ನಿಮ್ಮ ನಿಜವಾದ ಸಾಮರ್ಥ್ಯವನ್ನೂ ಮಿತಗೊಳಿಸುತ್ತದೆ.
ನೀವು ಚಿಂತಿತರಾಗಿ ಕೆಲಸಮಾಡಿದಾಗ, ಯಾವಾಗಲೂ ಫಲಿತಾಂಶಗಳ ಬಗ್ಗೆಯೇ ಪೇಚಾಡುತ್ತಿರುತ್ತೀರಿ. ಸ್ಪೂರ್ತಿಯಿಂದ ಕೆಲಸಮಾಡಿದಾಗ ನಿಮಗೆ ಫಲಿತಾಂಶದ ಬಗ್ಗೆ ಪೇಚಾಟವಿರುವುದಿಲ್ಲ. ಕೆಲಸವನ್ನು ಆದಷ್ಟೂ ಸಂಪೂರ್ಣವಾಗಿ ಮಾಡುವ ಬಗ್ಗೆಯೇ ಗಮನವಿರುತ್ತದೆ. ಪ್ರೇರಣೆಕೊಟ್ಟ ಚೈತನ್ಯದಿಂದ ನಡೆಸಿದ ಯಾವುದೇ ಕಾರ್ಯವಾಗಲೀ ಉತ್ತಮ ಫಲಿತಾಂಶವಾಗಿ ಪರಿಣಮಿಸುತ್ತದೆ. ಅದು ನಿರೀಕ್ಷಿಸಿದಷ್ಟು ಫಲ ನೀಡದಿದ್ದರೂ, ನಿಮಗೆ ಅದನ್ನು ಕುರಿತು ವಿಷಾದವಾಗುವುದಿಲ್ಲ. ಏಕೆಂದರೆ ಅದನ್ನು ಮಾಡಿದುದರಿಂದಲೇ ನಿಮಗೆ ಪರಿಪೂರ್ಣತೆ ಸಿಕ್ಕಿಬಿಟ್ಟಿರುತ್ತದೆ. ಕೆಲಸ ಮಾಡುವುದೇ ನಿಮಗೆ ಸಂತೃಪ್ತಿಯನ್ನು ನೀಡುತ್ತದೆ.
ಚಿಂತೆ ತುಂಬಿಕೊಳ್ಳಲು ಅವಕಾಶ ಮಾಡಿಕೊಡಬೇಡಿ
ನಿರೀಕ್ಷೆಗಳಿಲ್ಲದೆ ಜೀವಿಸಿದಾಗಲೇ ನೀವು ಪರಿಪೂರ್ಣರು. ಅಲ್ಲಿ ಚಿಂತೆಗೆ ಆಸ್ಪದವೇ ಇಲ್ಲ. ನಿಮಗೆ ಚಿಂತೆ ಇಲ್ಲದಿದ್ದಾಗ, ಎಲ್ಲವನ್ನೂ ಅವು ಇರುವ ಹಾಗೆಯೇ ನೋಡುತ್ತೀರಿ. ಏನಾಗುತ್ತದೆಯೋ ಅಥವಾ ಏನಾಗುವುದಿಲ್ಲವೋ ಎಂಬುದರ ಚಿಂತೆ ನಿಮಗಿರುವುದಿಲ್ಲ. ನೀವು ಅವಕಾಶ ಮಾಡಿಕೊಟ್ಟರೆ ಮಾತ್ರ ಚಿಂತೆ ಇರಬಲ್ಲುದು. ಭೂತಕಾಲ ಇಲ್ಲವೇ ಭವಿಷ್ಯತ್ ಕಾಲದಲ್ಲಿ ಮಾತ್ರ ಚಿಂತೆಗೆ ಸ್ಥಳ ಇರುವುದು. ವರ್ತಮಾನಕಾಲದಲ್ಲಿ ಅದಕ್ಕೆ ಸ್ಥಳವೇ ಇಲ್ಲ.
ಒಂದು ಸಣ್ಣ ಕಥೆ:
ತನ್ನ ಎಳೆಯ ಮಗನಿಗೆ ತಾಯಿಯೊಬ್ಬಳು ಊಟವನ್ನು ತಯಾರಿಸುತ್ತಿದ್ದಳು. ಕಡಾಯಿಯಲ್ಲಿ ಒಂದು ಡಬ್ಬ ಹುರುಳಿಯನ್ನು ಬೇಯಿಸಲು ಹಾಕಿದಳು. ಆಗ ಫೋನ್ ಸದ್ದಾಯಿತು. ಆ ಕರೆಯನ್ನು ಆಕೆ ನಿರೀಕ್ಷಿಸಿದ್ದಳು ಹಾಗೂ ಅದನ್ನು ತೆಗೆದುಕೊಳ್ಳಲು ಇಷ್ಟವಿತ್ತು. ಆದರೆ ಆಕೆಗೆ ಕೋಣೆಯ ಹೊರಗೆ ಹೋದರೆ, ಕೆಲವು ನಿಮಿಷಗಳಾದರೂ ತನ್ನ ಮಗನನ್ನು ಒಂಟಿಯಾಗಿ ಬಿಟ್ಟು ಹೋಗಬೇಕಲ್ಲಾ ಎಂಬ ಚಿಂತೆಯಾಯಿತು.
ಮಗನಿಗೆ, ‘ನಾನು ಫೋನ್ನಲ್ಲಿ
ಮಾತನಾಡುತ್ತಿರುವಾಗ ಇಲ್ಲೇ ಇರು. ಬೇಗನೆ
ಬಂದು ಬಿಡುತ್ತೇನೆ. ಚೇಷ್ಟೆ ಮಾಡಬೇಡ, ನೀನು
ಏನೇ ಮಾಡಿದರೂ, ಆ ಹುರುಳಿಯನ್ನು
ಮೂಗಿನೊಳಕ್ಕೆ ಏರಿಸಿಕೊಳ್ಳಬೇಡ' ಎಂದು
ದೃಢವಾಗಿ ಹೇಳಿದಳು.
ನಾವು ಯಾವಾಗಲೂ ಏನು ಆಗುತ್ತಿದೆಯೋ
ಮತ್ತು ಏನು ಆಗಬಹುದೋ ಎಂಬುದರ ಬಗ್ಗೆ
ಚಿಂತಿಸುತ್ತೇವೆ. ಆ ಹುಡುಗ ಹುರುಳಿಯನ್ನು
ಮೂಗಿಗೇರಿಸುವ ವಿಷಯವನ್ನು ಯೋಚಿಸಿಯೇ
ಇಲ್ಲದಿರಬಹುದು. ಈಗ ಅವನ ತಾಯಿ ಆ
ವಿಚಾರವನ್ನು ಅವನಲ್ಲಿ ಬಿತ್ತಿದಳು. ಚಿಂತೆಯು, ಈ
ಮೊದಲು ಇಲ್ಲದ ವಿಷಯಗಳಿಗೂ ಜೀವ
ತುಂಬುತ್ತದೆ. ಈಗ ಆ ಹುಡುಗ ಹುರುಳಿಯನ್ನು
ಮೂಗಿನಲ್ಲಿ ಹಾಕಿಕೊಂಡರೆ, ಅವಳ ಚಿಂತೆ ನಿಜವಾಗಿ
ಬಿಡುತ್ತದೆ! ತನ್ನ ಚಿಂತೆಗಳು ಯಾವಾಗಲೂ
ಸರಿಯಾಗಿ ಇರುತ್ತವೆ ಎಂದು
ನಿರ್ಧಾರಮಾಡಿಬಿಡುತ್ತಾಳೆ.
ಚಿಂತೆ ಒಂದು ಭ್ರಮೆಯಷ್ಟೆ
ಚಿಂತೆಗಳನ್ನು ಪರಿಶೀಲಿಸಿದರೆ, ಅವು, ಎಲ್ಲವೂ ಆ ವಿಶ್ವಶಕ್ತಿಯ ಲೀಲೆ ಎಂಬ ಸತ್ಯವನ್ನು ತಿಳಿಯದೇ ಇದ್ದ ಅಜ್ಞಾನದಿಂದ ಉಂಟಾಗುತ್ತಿವೆ ಎಂದು ತಿಳಿಯುತ್ತೀರ. ಒಳಹೊಕ್ಕು ನೋಡಿದರೆ, ಎಲ್ಲಾ ಚಿಂತೆಗಳೂ ಭ್ರಮೆಗಳಷ್ಟೇ ಎಂಬುದನ್ನು ಕಾಣುವಿರಿ. ಸಾವು ಬಂದಾಗ ಏನು ಘಟಿಸುತ್ತದೆ ಎಂಬುದನ್ನು ಗಮನಿಸಿ ನೋಡಿದಾಗ, ನಿಮಗೆ ಇದು ಅರ್ಥವಾಗುತ್ತದೆ. ನೀವು ಬದುಕಿರುವಾಗ, ನಿಮಗೆ ಒಂದು ನೂರು ಚಿಂತೆಗಳಿರುತ್ತವೆ. ಆದರೆ ನೀವು ಸಾಯುತ್ತಿದ್ದೀರಿ ಎಂದುಕೊಂಡಾಗ, ಆ ಗಳಿಗೆಯಲ್ಲಿ, ಈ ಮುಂಚೆ ನಿಮ್ಮ ಮೇಲೆ ಪ್ರಭಾವ ಬೀರುತ್ತಿದ್ದ ಚಿಂತೆಗಳಲ್ಲಿ ಎಷ್ಟು ಚಿಂತೆಗಳು ಇರುತ್ತವೆ ಎಂದುಕೊಂಡಿದ್ದೀರಿ? ಖಂಡಿತವಾಗಿಯೂ ಒಂದೇ ಒಂದು ಚಿಂತೆ ಮಾತ್ರ. ಅದೇ ನೀವು ಸಾಯುತ್ತಿದ್ದೀರಿ ಎಂಬುದು. ಮುಂಚೆ ಇದ್ದ ಬೇರಾವ ಚಿಂತೆಗಳೂ ಅಷ್ಟು ಬಲವಾದ ಪ್ರಭಾವ ಬೀರುವುದಿಲ್ಲ. ಹೊರ ಪ್ರಪಂಚದ ಪರಿಸ್ಥಿತಿಗಳೆಲ್ಲವೂ ಹಾಗೆಯೇ ಇದ್ದರೂ, ಚಿಂತೆಗಳು ಕಾಣದಾಗುತ್ತವೆ! ನಿಮ್ಮ ಸುತ್ತಲಿರುವ ಪ್ರೀತಿಪಾತ್ರರ ಮೇಲಿನ ಪ್ರೀತಿಯ ಆಲೋಚನೆಗಳು ಮಾತ್ರ ಇರುತ್ತವೆ.
ಇದು ಹೇಗೆ ಸಾಧ್ಯ? ನಿಮ್ಮ ಚಿಂತೆಗಳು ಎಂದೂ
ನಿಮ್ಮದೇ ಒಂದು ಅಂಶವಾಗಿರಲಿಲ್ಲ.
ಆದುದರಿಂದಲೇ ಇದು ಸಾಧ್ಯವಾಗುವುದು.
ಚಿಂತೆಗಳು ನಿಮ್ಮ ಮನಸ್ಸಿನ ಒಂದು ಅಂಶಮಾತ್ರ
ಆಗಿದ್ದವು. ಅವೇನೂ ಘನವಾದುದಲ್ಲ. ಅವು
ಘನವಾದುದ್ದಾದರೆ, ನೀವು ಸಾಯುತ್ತಿರುವಾಗಲೂ
ನಿಮ್ಮ ಮೇಲೆ ಅವು ಖಂಡಿತವಾಗಿ ಪ್ರಭಾವ ಬೀರಬೇಕಾಗಿತ್ತು.
ಚಿಂತೆಯ ಸ್ವಭಾವವೇನೆಂದರೆ, ಅದು ಯಾವಾಗಲೂ ಯಾವುದು ಇಲ್ಲವೋ ಅದನ್ನೇ ಹಿಂಬಾಲಿಸುವುದು. ನಿಮಗೆ ಆಸ್ತಿ ಇದ್ದರೆ, ಅದು ಸಂಬಂಧಗಳನ್ನು ಹಿಂಬಾಲಿಸುತ್ತದೆ. ನಿಮಗೆ ಸಂಬಂಧಗಳಿದ್ದರೆ, ಅದು ವಿದ್ಯೆಯನ್ನು ಹಿಂಬಾಲಿಸುತ್ತದೆ. ನಿಮಗೆ ವಿದ್ಯೆ ಇದ್ದರೆ, ಅದು ಸೌಂದರ್ಯವನ್ನು ಹಿಂಬಾಲಿಸುತ್ತದೆ. ಎಲ್ಲವೂ ಇದ್ದು ಬಿಟ್ಟರೆ, ಅದಕ್ಕೆ ಇದ್ದದ್ದರ ಮೇಲೆ ಅನುಮಾನ ಬರುತ್ತದೆ.
ಶರಣಾಗಿರಿ ಮತ್ತು ವಿಶ್ರಮಿಸಿರಿ
ವಿಶ್ವಶಕ್ತಿಯ ಮಹಾಯೋಜನೆಯಲ್ಲಿ ನೀವೂ ಒಂದು ಭಾಗವೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಂಡಾಗ ಯಾವ ಚಿಂತೆಯೂ ನಿಮ್ಮಲ್ಲಿ ಬೇರು ಬಿಡಲಾಗುವುದಿಲ್ಲ. ವಿಶ್ವಶಕ್ತಿಯು ಒಂದು ಚೈತನ್ಯವುಳ್ಳ ಜೀವಂತ ಸ್ವರೂಪ. ಅದಕ್ಕಿರುವ ಅಪಾರವಾದ ಬುದ್ಧಿಶಕ್ತಿಯಿಂದ ಇಡೀ ಲೀಲೆಯು ನಡೆಯುತ್ತಿದೆ. ನಾವೆಲ್ಲರೂ ಅದರ ಅಂಗಗಳು. ಯಾವ ಶಕ್ತಿಯು ಈ ವಿಶ್ವವನ್ನು ನಿರ್ವಹಿಸುತ್ತಿದೆಯೋ ಅದು ನಮಗೂ ಲಭ್ಯ. ನಾವು ಅದರೊಂದಿಗೆ ಶ್ರುತಿಗೂಡಿಸಿದರೆ, ವಿಶ್ವಶಕ್ತಿಯ ಆಗುಹೋಗುಗಳಂತೆ ನಮ್ಮ ಕ್ರಿಯೆಗಳು ಅನಿಶ್ಚಿತವಾದುವುಗಳೂ, ಸ್ವಯಂಪ್ರೇರಿತವಾದುವೂ ಆಗಿರುತ್ತವೆ. ಅದಕ್ಕೆ ಶ್ರುತಿಗೂಡಿಸಿಕೊಳ್ಳದಿದ್ದರೆ ಚಿಂತೆ ಮತ್ತು ಭಯಗಳಿಗೀಡಾಗಿ ಮುಚ್ಚಲ್ಪಡುತ್ತೇವೆ.
ವಿಶ್ವಶಕ್ತಿಯಿಂದ ಕಲಿಯ ಬೇಕಾದದ್ದು ಎಷ್ಟೊಂದಿದೆ! ಉದಾಹರಣೆಗೆ, ಪ್ರಾಣಿಗಳನ್ನು ತೆಗೆದುಕೊಳ್ಳಿರಿ. ನೀವು ಎಂದಾದರೂ ಚಿಂತಾಕ್ರಾಂತವಾದ ಕುರಿಗಳ ಬಗ್ಗೆಯಾಗಲೀ, ಹಸುಗಳ ಬಗ್ಗೆಯಾಗಲೀ ಕೇಳಿರುವಿರಾ? ಇಲ್ಲ! ನಿಮ್ಮ ಹಾಗೆಯೇ ಅವೂ ಜೀವನವನ್ನು ನಿರ್ವಹಿಸುತ್ತವೆ; ಅವು ಹುಟ್ಟುತ್ತವೆ; ಹುಟ್ಟಿಸುತ್ತವೆ; ಆಹಾರವನ್ನು ಹುಡುಕಿಕೊಳ್ಳುತ್ತವೆ ಮತ್ತು ಸಾವಿಗೆ ಈಡಾಗುತ್ತವೆ
- ಮನುಷ್ಯರ ಹಾಗೆಯೇ. 'ನಾವು ಎದುರಿಸಬೇಕಾದ ಸಮಸ್ಯೆಗಳನ್ನು ಅವುಗಳೇನೂ ಎದುರಿಸಬೇಕಾಗಿಲ್ಲವಲ್ಲ' ಎಂದು ನೀವೆನ್ನಬಹುದು. ಹಾಗಾದರೆ ಅವುಗಳ ಸಂತತಿ, ಸಾವು ಮತ್ತಿತರ ಚಟುವಟಿಕೆಗಳನ್ನು ಕುರಿತು ಏನನ್ನುತ್ತೀರಿ? ಅವೆಲ್ಲವನ್ನೂ ಕುರಿತು ಅವು ಚಿಂತಿಸುತ್ತವೆಯೆ? ಇಲ್ಲ! ಆದರೆ ಇವೆಲ್ಲವೂ ಅವುಗಳಿಗೂ ಘಟಿಸುತ್ತವೆ. ಆದುದರಿಂದ ತಿಳಿಯಿರಿ, ವಿಶ್ವಶಕ್ತಿಯು ಈ ಇಡೀ ಬ್ರಹ್ಮಾಂಡವನ್ನು ನಿರ್ವಹಿಸುತ್ತಿದೆ. ನಿಮ್ಮನ್ನೂ ಸಹ ಖಂಡಿತವಾಗಿಯೂ ಪೋಷಿಸಬಲ್ಲುದು!
ವಿಶ್ವಶಕ್ತಿಯ ನಿಯಮಗಳಿಗೆ ಶರಣಾಗುವುದು ಚಿಂತೆಗಳಿಂದ ವಿಶ್ರಮಿಸುವ ಪರಮಾವಧಿ.
ಮರೆಮಾಚಿಕೊಂಡಿರುವ ಅಹಂಕಾರ
ನಿಮ್ಮಲ್ಲಿ ಮೇಲೇಳುವ ಪ್ರತಿಯೊಂದು
ಚಿಂತೆಯನ್ನೂ ಗಂಭೀರವಾಗಿ ವಿಶ್ಲೇಷಣೆ ಮಾಡಿದರೆ,
ಶೇಕಡ ತೊಂಬತ್ತೊಂಬತ್ತು ಚಿಂತೆಗಳಿಗೆ ಆಧಾರವಿಲ್ಲ
ಎಂಬುದನ್ನು ಕಾಣುವಿರಿ. ಆದರೆ, ಸಮಸ್ಯೆ ಏನೆಂದರೆ ನಮ್ಮ ಅಹಂಕಾರ ಅದನ್ನು ಒಪ್ಪಿಕೊಳ್ಳಲು ಇಷ್ಟಪಡುವುದಿಲ್ಲ. ಅಹಂಕಾರವು ಚಿಂತೆಯಲ್ಲಿ ಅತಿ ಹೆಚ್ಚಾದ ಬಂಡವಾಳವನ್ನು ಹಾಕಿದೆ. ಚಿಂತೆಯನ್ನು ಸುಮ್ಮನೆ ಹಾಗೇಯೇ ಬಿಟ್ಟುಬಿಡಲಾಗುವುದಿಲ್ಲ! ಯಾರೊಂದಿಗಾದರೂ ಅವರ ಚಿಂತೆಗಳು ಏನೂ ಬೆಲೆ ಇಲ್ಲದವು ಎಂದು ಹೇಳಲು ಪ್ರಯತ್ನಿಸಿ ನೋಡಿರಿ. ಅವರಿಗೆ ತುಂಬಾ ಅವಮಾನ ಮಾಡಿದಂತೆನಿಸುತ್ತದೆ. ಅವರ ಚಿಂತೆಗಳೆಲ್ಲವೂ ನಿಜವಾದುವಲ್ಲ ಎಂದು ಯಾರಿಗಾದರೂ ಹೇಳಿದರೆ ಅವರು ಸಂತೋಷಿಸಬಹುದು ಎಂದು ನಿರೀಕ್ಷಿಸುತ್ತೀರಿ. ಆದರೆ ಅದು ಹಾಗಲ್ಲ! ಅವರಿಗೆ ಕೋಪವೇ ಬಂದುಬಿಡುತ್ತದೆ. ತಮ್ಮ ಚಿಂತೆಗಳನ್ನು ಗೌರವಾನ್ವಿತವಾಗಿ ಒಪ್ಪಿಕೊಳ್ಳದಿದ್ದರೆ ಅವರ ಅಹಂಕಾರಕ್ಕೆ ಅವಮಾನವಾದಂತಾಗುತ್ತದೆ.
ಚಿಂತೆಗೆ ಅಹಂಕಾರವೇ ಆಧಾರ ನೀಡುವುದು. ಅಜ್ಞಾನದಿಂದ ಚಿಂತೆ ಸೃಷ್ಟಿಯಾಗುತ್ತದೆಯಾದರೂ, ಅಹಂಕಾರವು ಚಿಂತೆಯನ್ನು ಪೋಷಿಸುತ್ತದೆ. ಚಿಂತೆಯು ಒಂದು ಅಕ್ಷರೇಖೆಯಾಗಿ, ಅಹಂಕಾರವು ಅದರ ಸುತ್ತಲೂ ತಿರುಗುತ್ತಿರುತ್ತದೆ. ಚಿಂತೆಯನ್ನು ದೂರಮಾಡಿದರೆ, ಅಹಂಕಾರವು ತಳಮಳಗೊಳ್ಳುತ್ತದೆ. ಕೆಲಸದ ಚಿಂತೆ ಮತ್ತು ಜವಾಬ್ದಾರಿಯ ಚಿಂತೆ ಇದಕ್ಕೆ ಉತ್ತಮವಾದ ನಿದರ್ಶನಗಳು.
ಕೆಲವರನ್ನು ಗಮನವಿಟ್ಟು ನೋಡಿದರೆ, ಅವರು ತಮ್ಮ ಪರಿಸ್ಥಿತಿಯನ್ನು ಸುಮ್ಮನೆ ಹಿರಿದಾಗಿಸಿ, ಈ ಭೂಮಿಯ ಮೇಲೆ ಇರುವ ಅತಿ ದೊಡ್ಡ ಚಿಂತೆಯೇ ಅವರದೆಂದು ಸ್ಥಿರಪಡಿಸುತ್ತಾರೆ! ಅವರ ವಿರುದ್ಧ ಹೇಳಲು ಪ್ರಯತ್ನಿಸಿದರೆ, ಅವರು ಖಿನ್ನರಾಗುತ್ತಾರೆ.
ಅನ್ಯರು ನಮ್ಮ ಬಗ್ಗೆ ಏನನ್ನುತ್ತಾರೋ ಎಂದು ಚಿಂತಿಸುವುದೂ ಅಹಂಕಾರದ ಒಂದು ಸಮಸ್ಯೆ. ತನ್ನ ಆತ್ಮಚಿತ್ರಣಕ್ಕೆ ಯಾರಾದರೂ ಹಾನಿಮಾಡಬಹುದು ಎಂದು ಅಹಂಕಾರಕ್ಕೆ ಯಾವಾಗಲೂ ಚಿಂತೆ. ಸದಾಕಾಲ ನಾವು ಗಣ್ಯವ್ಯಕ್ತಿ ಆಗಿರಬೇಕೆಂಬ ನಮ್ಮ ಅನಿಸಿಕೆಗೆ ನಮ್ಮ ಅಹಂಕಾರವೇ ಕಾರಣ. ನಮ್ಮ ಆತ್ಮ ಚಿತ್ರಣದ ಬಗ್ಗೆ ನಾವು ಹೆಚ್ಚು ಸಮಯವನ್ನು ವ್ಯಯ ಮಾಡುತ್ತೇವೆ. ‘ಯಾರೂ ಅಲ್ಲ’ವಾಗಿದ್ದು ಆನಂದದಿಂದಿರುವುದೇ ಅತ್ಯಂತ ದೊಡ್ಡ ಅನುಗ್ರಹ ಎಂಬುದನ್ನು ತಿಳಿಯಿರಿ. ಅದೇ ಅತಿ ದೊಡ್ಡ ವೈಶಿಷ್ಟ್ಯ. ತಾನು ಸಾಮಾನ್ಯ ಎಂದು ಭಾವಿಸುವುದೇ ಒಬ್ಬ ಜ್ಞಾನೋದಯ ಹೊಂದಿದ ವ್ಯಕ್ತಿಯ ಅಸಾಮಾನ್ಯವಾದ ಗುಣ ಎಂದು ಹೇಳಲಾಗಿದೆ! ಆದುದರಿಂದ ನಿಮ್ಮಲ್ಲೇ ನೀವು ವಿಶ್ರಮಿಸಲು ಮಾಡುವ ಯಾತ್ರೆಯೇ ಜ್ಞಾನೋದಯವೆಂದು ತಿಳಿಯಿರಿ. ನಿಮ್ಮ ಚಿಂತೆ ಮತ್ತು ಅಹಂಕಾರವನ್ನು ಬಿಟ್ಟಾಗ ಮಾತ್ರವೇ ನೀವು ಸದಾಕಾಲಕ್ಕೂ ಒಬ್ಬ ಗಣ್ಯವ್ಯಕ್ತಿಯಾಗುವುದು.
ನೆಮ್ಮದಿಯ ನೆಲೆಯನ್ನು ಬಿಟ್ಟು ಬನ್ನಿರಿ
ನಿಮಗೆ ನಿಮ್ಮ ಚಿಂತೆಗಳಿಂದ ಹೊರಬರಬೇಕು
ಎಂದು ನಿಜವಾಗಿಯೂ ಅನಿಸಿದರೆ, ನಿಮ್ಮ
ಚಿಂತೆಗಳಿಗೆ ಯಾವ ಸಮರ್ಥನೆಯನ್ನೂ ಕೊಡಲು
ಪ್ರಯತ್ನಿಸದೆ ಈಗಲೇ ಹೊರಬರುವುದಕ್ಕೆ ಸಾಧ್ಯ.
ಒಂದು ವಿಷಯ, ನಮ್ಮ ಚಿಂತೆಗಳೇ ನಮಗೆ
ನೆಮ್ಮದಿಯ ವಾತಾವರಣವಾಗುತ್ತವೆ. ಅದರಲ್ಲೇ
ಅಡಗಿಕೊಳ್ಳುತ್ತೇವೆ. ಅದರಲ್ಲೇ ಅಡಗಿಕೊಂಡು
ಅದರ ಬಗ್ಗೆ ಸುಮ್ಮನೆ ಮಾತನಾಡುತ್ತಿರುವುದು
ಸೋಮಾರಿಗಳಾಗಿ ಉಳಿದುಬಿಡುವುದಕ್ಕೆ
ಸಹಾಯವಾಗುತ್ತದೆ.
ಜೈನಗುರುಗಳಾದ ಮಹಾವೀರರನ್ನು ಒಬ್ಬರು, 'ಚಿಂತೆಗಳಿರುವುದು ಯಾರಿಗೆ?' ಎಂದು ಕೇಳಿದರು.
'ಚಿಂತೆ ಮಾಡುವ ವ್ಯಕ್ತಿಗೆ' ಎಂದು ಅವರು ಸುಂದರವಾಗಿ ಉತ್ತರ ನೀಡಿದರು.
'ಚಿಂತೆಗೆ ಕಾರಣವೇನು?' ಎಂದು ಅವರು
ಕೇಳಿದಾಗ, 'ಸೋಮಾರಿತನ' ಎಂದು ಉತ್ತರ
ನೀಡಿದರು.
'ಚಿಂತೆಯನ್ನು ಯಾರು ಪರಿಹರಿಸುತ್ತಾರೆ?'
ಎಂದು ಕೇಳಿದರು. 'ಮನುಷ್ಯನೇ' ಎಂದು ಅವರು
ಉತ್ತರಿಸಿದರು.
'ಚಿಂತೆಯನ್ನು ಕೊನೆಗಾಣಿಸುವುದು ಹೇಗೆ?' ಎಂದು ಕೇಳಿದರು.
'ಸೋಮಾರಿತನವನ್ನು ಬಿಟ್ಟು ಬಿಡುವುದರಿಂದ' ಎಂದು ಉತ್ತರ ನೀಡಿದರು.
ಸೋಮಾರಿತನವನ್ನು ಬಿಟ್ಟು ಬಿಟ್ಟರೆ, ಯೋಗ್ಯವಾದ ಕಾರ್ಯದಲ್ಲಿ ತೊಡಗುತ್ತೀರಿ. ಯೋಗ್ಯವಾದ ಕಾರ್ಯದಲ್ಲಿದ್ದಾಗ ಚಿಂತೆಯನ್ನು ಬಿಡುವಿರಿ. ಅನ್ಯರ ಚಿಂತೆಗಳಿಗೆ ನೀವು ಕೊಡುವ ಪ್ರತಿಕ್ರಿಯೆಯಿಂದಲೇ ನೀವು ನಿಮ್ಮ ಚಿಂತೆಗಳೊಂದಿಗೆ ಎಷ್ಟು ನೆಮ್ಮದಿಯಾಗಿದ್ದೀರಿ ಎಂಬುದು ತಿಳಿಯುತ್ತದೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ನಿಮಗೇ ತಿಳಿಯುತ್ತದೆ, ಎಂದಾದರೂ ಒಬ್ಬ ವ್ಯಕ್ತಿಯು ತನ್ನ ಚಿಂತೆಗಳನ್ನು ನಿಮ್ಮಲ್ಲಿ ಹೇಳಿಕೊಂಡರೆ, ನೀವು ಅವರಿಗೆ ಮೊದಲ ಹೇಳುವುದೇನೆಂದರೆ. 'ನೀವುತಾನೆ ಏನುಮಾಡುವುದಕ್ಕಾಗುತ್ತದೆ.... ಅದು ಆಗುವುದೇ ಹಾಗೆ....' ಎಂದು ಹೇಳುತ್ತೀರಿ. ನೀವು ಅವರಿಗೆ ನೇರವಾಗಿ ಯಾವ ಪರಿಹಾರವನ್ನೂ ಎಂದಿಗೂ ನೀಡುವುದಿಲ್ಲ. ನೀವು ಈ ರೀತಿಯಾಗಿ ಮಾಡುವಾಗ, ಸ್ಪಷ್ಟವಾಗಿರಿ, ನೀವು ಅವರಿಗೆ ಉತ್ತೇಜನ ಕೊಡುವುದಲ್ಲದೆ, ನೀವೂ ಸಹ ಚಿಂತೆಯ ವಲಯದಲ್ಲಿ ನೆಮ್ಮದಿಯಾಗಿರಲು ನಿಮಗೇ ಉತ್ತೇಜನ ಕೊಟ್ಟುಕೊಳ್ಳುತ್ತೀರಿ.
ವಾಸ್ತವವಾಗಿ ನೋಡಿದರೆ, ಚಿಂತೆಯಿಂದಿರಲು
ಮತ್ತು ಅದನ್ನು ಕುರಿತು ಮಾತನಾಡಲು ನಮಗೆ
ಇಷ್ಟ. ಅನೇಕ ಸಮಸ್ಯೆಗಳಿಗೆ ನಾವು
ಹೆಗಲುಕೊಟ್ಟಿದ್ದೇವೆ ಎಂಬ ಭಾವನೆಯನ್ನು ಅದು
ನೀಡುತ್ತದೆ. ನಾವು ಸಲಹದಿದ್ದರೆ ಈ ಪ್ರಪಂಚವು
ನಮ್ಮ ವಿನಃ ನಿರ್ವಹಿಸಲಾಗದು ಎಂಬಂತೆ, ನಮಗೆ
ಪ್ರಾಧಾನ್ಯತೆಯ ಭಾವನೆಯನ್ನು ನೀಡುತ್ತದೆ.
ನೀವು ಒಂದು ಸಮಸ್ಯೆಯನ್ನು ಕಂಡಾಗ, ಪರಿಹಾರ ಬೇಕಿದ್ದರೆ, ಸಮಸ್ಯೆಯನ್ನು ಕುರಿತು ಒಂದು ಕ್ಷಣವೂ ಯೋಚಿಸುವುದಿಲ್ಲ. ಪರಿಹಾರದ ಕಡೆಗೆ ತಿರುಗುವಿರಿ, ಅಷ್ಟೆ! ಅದೇ ರೀತಿಯಾಗಿ ಪ್ರತಿಯೊಂದು ಚಿಂತೆಗೂ ತತ್ಕ್ಷಣದ ಪರಿಹಾರವಿದೆ. ನಿಮಗೆ ಬೇಕಾಗಿರಬೇಕು; ಅದೇ ಮುಖ್ಯ.
ಬಹುಪಾಲು ನೀವು ನಿಮ್ಮ ಚಿಂತೆಯ ನೆಮ್ಮದಿಯಾದ ವಲಯದಲ್ಲೇ ಇರಲು ಬಯಸುತ್ತೀರಿ. ಅದು ನಿಮ್ಮನ್ನು ಹಾಯಾಗಿರಿಸುತ್ತದೆ. ಉದಾಹರಣೆಗೆ, ನಿಮ್ಮ ಮಗುವನ್ನು ಭೇಟಿ ಮಾಡಲು ಕಾಲೇಜಿಗೆ ಹೋಗುವಿರಿ ಎಂದುಕೊಳ್ಳೋಣ. ಅಲ್ಲಿಯ ವಿದ್ಯಾರ್ಥಿ ನಿಲಯದಲ್ಲಿ ಕೆಲವು ವಿದ್ಯಾರ್ಥಿಗಳು ತಮ್ಮ ಕೋಣೆಗಳನ್ನು ಅಸ್ತವ್ಯಸ್ತವಾಗಿ ಇಟ್ಟುಕೊಂಡಿರುವುದನ್ನು ಅಥವಾ ಉಡುಪುಗಳನ್ನು ಅದಲು ಬದಲು ಮಾಡಿಕೊಂಡು ಹಾಕಿಕೊಳ್ಳುತ್ತಿರುವುದನ್ನು ನೋಡುತ್ತೀರಿ. ಇವೆಲ್ಲವನ್ನೂ ನಿಮ್ಮ ಮನಸ್ಸಿನಲ್ಲಿ ದಾಖಲು ಮಾಡಿಕೊಳ್ಳುವಿರಿ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿನ ಜೀವನ ಶೈಲಿಯೇ ಈ ರೀತಿ ಎಂದುಕೊಳ್ಳುವಿರಿ. ನಿಮ್ಮ ಮಗುವಿಗೆ ವಸ್ತುಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕೆಂದು ಹಾಗೂ ಬೇರೆಯವರ ಉಡುಪುಗಳನ್ನು ಧರಿಸಬಾರದೆಂದು ಬುದ್ಧಿವಾದ ಹೇಳುತ್ತೀರಿ. ಅವಳು ತನ್ನ ವಸ್ತುಗಳನ್ನು ವ್ಯವಸ್ಥಿತವಾಗಿ ಇಟ್ಟಿರುವೆನು ಮತ್ತು ಅನ್ಯರ ಉಡುಪನ್ನು ತಾನು ಧರಿಸುವುದಿಲ್ಲವೆಂದು ಹೇಳಿದರೂ, ಕೂಡಲೇ ನೀವು ದಾಖಲು ಮಾಡಿಕೊಂಡಿರುವುದನ್ನು ಅಳಿಸುವುದಿಲ್ಲ ಅಥವಾ ಬದಲಾಯಿಸಿಕೊಳ್ಳುವುದಿಲ್ಲ. ನೀವು ಈ ಮೊದಲು ನೋಡಿ ದಾಖಲು ಮಾಡಿಕೊಂಡಿದುದಕ್ಕೇ ಅಂಟಿಕೊಂಡಿರುತ್ತೀರಿ.
ಪ್ರಾಯಶಃ ವಿದ್ಯಾರ್ಥಿನಿಲಯದಲ್ಲಿ ದಾಖಲು ಮಾಡಿಕೊಳ್ಳಲು ವಿದ್ಯಾರ್ಥಿ ನಿಲಯದ ಆವರಣ, ವಿದ್ಯಾರ್ಥಿಗಳ ಹರ್ಷ, ಇಂತಹ ಅನೇಕ ಸುಂದರವಾದ ವಿಷಯಗಳು ಇದ್ದವೇನೋ. ಆದರೆ ಪ್ರತಿ ಬಾರಿ ನಿಮ್ಮ ಮಗಳನ್ನು ಕುರಿತು ಯೋಚಿಸಿದಾಗಲೂ ನೀವು ದಾಖಲುಮಾಡಿಕೊಂಡಿರುವುದು ಮಾತ್ರ ನೆನಪಾಗಿ ನಿಮ್ಮ ಮಗಳ ಬಗ್ಗೆ ಚಿಂತಿಸುತ್ತೀರಿ. ಅಷ್ಟೇ ಅಲ್ಲ, ಯಾರಾದರೂ ಭೇಟಿಯಾದರೆ ಅವಳ ವಿದ್ಯಾರ್ಥಿನಿಲಯದಲ್ಲಿ ಯಾವ ರೀತಿ ವಸ್ತುಗಳು ಅಸ್ತವ್ಯಸ್ತವಾಗಿದ್ದವು ಮತ್ತು ಅಲ್ಲಿ ಉಡುಪುಗಳನ್ನು ಹೇಗೆ ಪ್ರತಿಯೊಬ್ಬರೂ ಅದಲು ಬದಲು ಮಾಡಿ ಕೊಳ್ಳುತ್ತಿದ್ದರು ಎಂಬುದನ್ನೇ ಹೇಳುವಿರಿ! ದಾಖಲು ಮಾಡಿಕೊಂಡಿದ್ದೇ ಅಸಲು ನಿಜವಲ್ಲ; ಅದನ್ನು ನಿಮ್ಮ ನೆಮ್ಮದಿಯ ವಲಯವಾಗಿ ಆಯ್ಕೆ ಮಾಡಿಕೊಂಡು ಅದಕ್ಕೆ ಪುಷ್ಟಿನೀಡುವಿರಿ.
ನಿಮ್ಮ ಆಸ್ತಿಗೆ ಸಂಬಂಧಪಟ್ಟ ಚಿಂತೆಗಳೂ ಇದೇ
ರೀತಿಯಾಗಿರುತ್ತವೆ. ಹಣಗಳಿಸುವುದು
ಚಿಂತೆಯಾದರೆ, ಎಲ್ಲೋ ನಿಮ್ಮ ಸೋಮಾರಿತನ
ನಿಮ್ಮನ್ನು ನಿಮ್ಮ ಚಿಂತೆಯ ಸುಖವಾದ ವಲಯಕ್ಕೆ
ಎಳೆಯುತ್ತದೆ ಎಂಬುದು ಸ್ಪಷ್ಟವಾದ ಅರ್ಥ. ನಿಮ್ಮ
ಆಲಸ್ಯವನ್ನು ಬಿಟ್ಟು ಮುಂದುವರೆದರೆ ಹಣವನ್ನು
ಗಳಿಸುತ್ತೀರಿ. ಇಂದಿನ ಪ್ರಪಂಚದಲ್ಲಿ ಹಣಗಳಿಸಲು
ಲಕ್ಷ ಅವಕಾಶಗಳಿವೆ.
ಚಿಂತೆಯನ್ನು ಬಿಡಿರಿ ಆರೋಗ್ಯವನ್ನು ಪಡೆಯಿರಿ
ಚಿಂತೆಯಿಂದ ನೀವು ಹೆಚ್ಚಾಗಿ ಆಲೋಚನೆಗಳನ್ನು ಸೃಷ್ಟಿ ಮಾಡಿದಾಗ, ನಿಮ್ಮ ನಾಭಿಪ್ರದೇಶದಲ್ಲಿ ಭಾರವು ಅಧಿಕವಾಗುತ್ತದೆ. ನಾಭಿ ಪ್ರದೇಶದಿಂದಲೇ ಆಲೋಚನೆಗಳು ಹಾಗೂ ಚಿಂತೆಗಳು ಮೇಲೇಳುವುದು. ನೀವು ಹೆಚ್ಚು ಹೆಚ್ಚಾಗಿ ಆಲೋಚನೆಗಳನ್ನು ಸೃಷ್ಟಿಸಿದಾಗ, ಹೊಟ್ಟೆ ಭಾರವಾದಂತೆ ಭಾಸವಾಗುತ್ತದೆ. ನಾಭಿ ಪ್ರದೇಶದಲ್ಲಿ ಮಣಿಪೂರಕ ಚಕ್ರವೆಂಬ ಚೈತನ್ಯ ಕೇಂದ್ರವಿದೆ. ಚಿಂತೆಯ ಹೊರೆಯಿಂದಾಗಿ ಈ ಚೈತನ್ಯ ಕೇಂದ್ರವು ಮುದುರಿಕೊಳ್ಳಲು ಪ್ರಾರಂಭವಾಗುತ್ತದೆ. ಈ ಚೈತನ್ಯ ಕೇಂದ್ರವು ಚಿಂತೆಗೆ ನೇರವಾಗಿ ಪ್ರತಿಕ್ರಿಯೆ ನೀಡಿ, ಹೊಟ್ಟೆಯ ಮೇಲೆ ಪ್ರಭಾವವನ್ನುಂಟುಮಾಡುತ್ತದೆ. ಆದುದರಿಂದಲೇ ನೀವು ಯಾವುದೇ ಒಂದು ವಿಷಯವನ್ನು ಕುರಿತು ಚಿಂತಿಸಿದಾಗಲೂ, ನಿಮ್ಮ ಹೊಟ್ಟೆಯಲ್ಲಿ ಅಸ್ವಸ್ಥತೆ ಉಂಟಾಗಲು ಪ್ರಾರಂಭವಾಗುತ್ತದೆ ಅಥವಾ ಆಘಾತದ ವಾರ್ತೆಯನ್ನು ಕೇಳಿದಾಗ, 'ನಾನು ಇದನ್ನು ಅರಗಿಸಿಕೊಳ್ಳಲಾರೆ..!' ಎನ್ನುತ್ತೀರಿ. ಯಾವುದೇ ಶಾಂತಿಭಂಗ ಮಾಡುವ ವಾರ್ತೆಯು ಹೊಟ್ಟೆಯನ್ನು ಕಲಕುತ್ತದೆ. ಹೊಟ್ಟೆಯು ನಿಮ್ಮ ಆಲೋಚನೆಗಳಿಗೆ ಬಹಳ ಸೂಕ್ಷ್ಮಗ್ರಾಹಿಯಾಗಿರುವುದು.
ಒರ್ವ ವೈದ್ಯರು ಸಂಧಿವಾತರೋಗಕ್ಕೆ
ಅಸಾಮಾನ್ಯವಾದ ಹಾಗೂ ಪರಿಣಾಮಕಾರಿಯಾದ
ಚಿಕಿತ್ಸೆಗೆ ಹೆಸರುವಾಸಿಯಾಗಿದ್ದರು. ಯಾವಾಗಲೂ
ಅವರ ಪ್ರತೀಕ್ಷಾ ಕೊಠಡಿಯಲ್ಲಿ ತುಂಬಾ ಜನರು
ಇದ್ದೇ ಇರುತ್ತಿದ್ದರು.
ಒಂದು ದಿನ, ಬೆನ್ನು
ತೀವ್ರವಾಗಿ ಬಾಗಿದ,
ಗೂನುಳ್ಳ
ಮುದುಕಿಯೊಬ್ಬಳು
ಕೋಲೂರಿಕೊಂಡು
ಒಳಕ್ಕೆ ಬಂದಳು.
ಆಕೆಯ ಸರದಿ
ಚಿಂತೆ ಎಂಬ ಆ
ಚಟವು,
ನಮಗಿರುವ
ಪೂರ್ಣ
ಸಾಮರ್ಥ್ಯದೊಂದಿಗೆ
ಜೀವಿಸಲು
ಬಿಡುವುದಿಲ್ಲ
ಬಂದಾಗ, ವೈದ್ಯರ ಕೋಣೆಯೊಳಗೆ ಹೋಗಿ, ಮತ್ತೆ
ಆಶ್ಚರ್ಯವಾಗುವಂತೆ ಐದೇ ನಿಮಿಷದಲ್ಲಿ ತಲೆ
ಎತ್ತಿಕೊಂಡು ಪೂರಾ ನೆಟ್ಟಗೆ ಹೊರಬಂದಳು.
ಪ್ರತೀಕ್ಷಾ ಕೋಣೆಯಲ್ಲಿ ಕುಳಿತಿದ್ದ ಇನ್ನೊಬ್ಬ ಆಕೆ ಓಡಿ ಬಂದು, 'ಇದು ಒಂದು ಚಮತ್ಕಾರ! ನೀವು ಅರ್ಧಬಾಗಿಕೊಂಡು ಒಳಗೆ ಹೋದಿರಿ ಮತ್ತು ಈಗ ನೆಟ್ಟಗೆ ಓಡಾಡುತ್ತಿದ್ದೀರಿ! ವೈದ್ಯರು ಮಾಡಿದ್ದಾದರೂ ಏನು?' ಎಂದು ಕೇಳಿದಳು.
ಆ ಮುದುಕಿಯು, 'ಅವರು ನನಗೆ ಇನ್ನೂ
ಉದ್ದವಾದ ಊರುಗೋಲನ್ನು ನೀಡಿದರು' ಎಂದು
ಉತ್ತರಿಸಿದಳು.
ಒಮ್ಮೊಮ್ಮೆ ನಮಗೆ ಒಂದೇ ರೀತಿಯಲ್ಲಿ ಜೀವಿಸುವುದು ಎಷ್ಟು ಅಭ್ಯಾಸವಾಗಿ ಬಿಟ್ಟಿರುತ್ತದೆ ಎಂದರೆ, ಜೀವಿಸಲು ಇನ್ನೂ ಉತ್ತಮವಾದ ಮಾರ್ಗಗಳು ಕಾಣುವುದೇ ಇಲ್ಲ. ಚಿಂತೆ ಎಂಬ ಆ ಚಟವು, ನಮಗಿರುವ ಪೂರ್ಣ ಸಾಮರ್ಥ್ಯದೊಂದಿಗೆ ಜೀವಿಸಲು ಬಿಡುವುದಿಲ್ಲ ಮತ್ತು ದೇಹದೊಳಕ್ಕೆ ರೋಗವನ್ನು ಆಹ್ವಾನಿಸುತ್ತದೆ. ರೋಗವು ಪ್ರಾರಂಭವಾಗುವುದು ಮನಸ್ಸಿನಲ್ಲಿ.
ಚಿಂತೆಯ ಕೆಲವು ಅತಿರೇಕದ ರೂಪಗಳು ರೂಢಿಯಾಗಿ ವ್ಯಕ್ತಿಯ ಜೀವನವನ್ನೇ
ಮಂದವಾಗಿಸಿಬಿಡುತ್ತವೆ. ಇಂತಹ ರೂಪದ
ಚಿಂತನೆಗಳನ್ನು 'ಜೆನೆರಲೈಸ್ಡ್ ಆಂಕ್ಸೈಟಿ
ಡಿಸಾರ್ಡರ್' (Generalised Anxiety Disor-
der) GAD ಎಂದು ಕರೆಯುತ್ತಾರೆ. ದಿನೇದಿನೇ
ಜನರು ಅನುಭವಿಸುವ ಸಾಮಾನ್ಯವಾದ
ಆತಂಕಕ್ಕಿಂತಲೂ ಅದು ಅತಿ ಹೆಚ್ಚಿನದಾಗಿರುತ್ತದೆ.
ಅಮೆರಿಕದಲ್ಲಿರುವ ‘ನ್ಯಾಷನಲ್ ಇನ್ಸ್ಟಿಟ್ಯೂಟ್
ಆಫ್ ಮೆಂಟಲ್ ಹೆಲ್ತ್’ನವರು ಮಾಡಿರುವ
ಸಂಶೋಧನೆಯ ಪ್ರಕಾರ, ಸುಮಾರು 68 ಲಕ್ಷ
ವಯಸ್ಕ ಅಮೆರಿಕ ರನ್ನು GAD ಪೀಡಿಸುತ್ತದೆ ಮತ್ತು
ಗಂಡಸರಿಗಿಂತ ಸುಮಾರು ಎರಡು ಪಟ್ಟು
ಹೆಂಗಸರನ್ನು ಪೀಡಿಸುತ್ತದೆ.
ಧ್ಯಾನವು ಯಾವ ರೀತಿ ಸಹಾಯ ಮಾಡಬಲ್ಲದು
ಚಿಂತೆ ಒಂದು ಬಾರಿ ಉಂಟಾದರೆ, ನಾವು
ಮನೋವೈದ್ಯರ ಬಳಿ ಹೋಗುತ್ತೇವೆ. ಚಿಂತೆಗೆ
ಕಾರಣ ನಮ್ಮ ಮನಸ್ಸಿನಲ್ಲೇ ಇದೆ, ಹೊರಗಲ್ಲ.
ಹಾಗಾದರೆ ಔಷಧಿಗಳಿಂದ ಮಾತ್ರವೇ ಹೇಗೆ ತಾನೆ
ಸಹಾಯ ಆಗಲು ಸಾಧ್ಯ?
ಪ್ರಪಂಚದಲ್ಲಿ ಬಹಳ ಜನರು ಚಿಂತೆಯ
ಚಿಕಿತ್ಸೆಗಾಗಿ ಮನೋವೈದ್ಯರ ಬಳಿ ಹೋಗುತ್ತಾರೆ.
ಔಷಧಿಯೇನೋ ಸರಿ, ಆದರೆ ಚಿಂತೆಯಂತಹ
ಮನೋವ್ಯಾಧಿಗಳಿಗೆ ಧ್ಯಾನವು ಅವಶ್ಯಕ.
ಧ್ಯಾನವು ನಿಮ್ಮನ್ನು ಮೃದುವಾಗಿಸುತ್ತದೆ. ನೀವು
ಮೃದುವಾದಾಗ ಪ್ರೇಮ ಮತ್ತು ಕೃತಜ್ಞತಾಭಾವಗಳು
ನಿಮ್ಮಲ್ಲಿ ಮೂಡಲಾರಂಭಿಸುತ್ತವೆ. ನಂತರ
ನಿಧಾನವಾಗಿ ಚಿಂತೆಗೆ ಎಡೆಯೇ ಇಲ್ಲದಂತೆ
ಆಗಿಬಿಡುತ್ತದೆ. ಚಿಂತೆಯೂ ಹಿಂಸೆಯ ಒಂದು ರೂಪ.
ಅದು ಹಿಂಸೆಯ ಸೂಕ್ಷ್ಮಸ್ವರೂಪ. ಅದು ನಮ್ಮಲ್ಲಿ
ಮರೆಮಾಚಿಕೊಂಡಿರುವ ಘರ್ಷಣೆ.
ಧ್ಯಾನವು ಅರಿವನ್ನು ಮಹತ್ತರವಾಗಿ ಹೆಚ್ಚಿಸುತ್ತದೆ. ಅರಿವು ಹೆಚ್ಚಾದಾಗ ಹೊರಮುಖವಾಗಿ ನೀವು ಬಾಹ್ಯ ಪ್ರಪಂಚದಲ್ಲಿ ಸಂಪೂರ್ಣವಾಗಿ ತೊಡಗಿದ್ದರೂ, ಒಳಮುಖವಾಗಿ ಏನೇ ಆದರೂ ಅವುಗಳಿಂದ ಲೇಪಗೊಳ್ಳುವುದಿಲ್ಲ. ಅದೇ ನಿಜವಾದ ಚಿಂತೆಯಿಂದ ಮುಕ್ತವಾದ ಜೀವನ.