KAILASA Library/ಜೀವನ್ಮುಕ್ತಿ/ನೀತಿವಂತಿಕೆSign in
ಜೀವನ್ಮುಕ್ತಿ

ನೀತಿವಂತಿಕೆ

This text was machine-transcribed from the printed book and may contain errors. Select the words and choose “Report a mistake”.

ಸಮಗ್ರತೆ

ನೀತಿವಂತಿಕೆಯು ಸಮಗ್ರತೆಯಿಂದ ಆಗಬೇಕೇ
ಹೊರತು ತಪ್ಪಿತಸ್ಥ ಭಾವನೆಯಿಂದಲ್ಲವೆಂದು
ದಯವಿಟ್ಟು ತಿಳಿದುಕೊಳ್ಳಿರಿ.

ನಾನು ಸಮಗ್ರತೆ ಎಂದಾಗ ಅರ್ಥೈಸುವುದು ಏನನ್ನು? ಸಮಗ್ರತೆ ಎಂದರೆ ವರ್ತಮಾನ ಕ್ಷಣದಲ್ಲಿರುವುದು ಮತ್ತು ಅನೇಕ ದ್ವಂದ ವ್ಯಕ್ತಿತ್ವಗಳಲ್ಲದೆ, ಒಂದು ಘನವಾದ ವ್ಯಕ್ತಿತ್ವವನ್ನು ಹೊಂದುವುದು, ಎಂದು. ಅದು ಮನಸ್ಸಿನ ಆಟವಿಲ್ಲದೆ ನಿಜತ್ವವನ್ನು ನೋಡುವುದಾಗಿದೆ. ಒಮ್ಮೆ ಮನಸ್ಸು ಒಳ ಬಂದರೆ ದ್ವಂದ್ವವೂ ಒಳ ಬಂದಂತೆ. ವರ್ತಮಾನ ಕ್ಷಣದಲ್ಲಿ ತೀವ್ರವಾಗಿ ಅರಿವನ್ನು ಹೊಂದುವುದರಿಂದ ನಿಮ್ಮೊಳಗೆ ಹೋರಾಡುತ್ತಿರುವ ಎರಡೋ, ಮೂರೋ ಅಥವಾ ಅನೇಕ ವ್ಯಕ್ತಿತ್ವಗಳಿಲ್ಲದ, ಒಂದೇ ವ್ಯಕ್ತಿತ್ವದ ಸಮಗ್ರತೆಯನ್ನು ಸಾಧಿಸಲು ಸಾಧ್ಯ. ಮನಸ್ಸು ಭೂತಕಾಲ ಹಾಗೂ ಭವಿಷ್ಯತ್ ಕಾಲದ ನಡುವೆ ಚಲಿಸುತ್ತಿದ್ದಾಗ ಮಾತ್ರ ನಿಮ್ಮಲ್ಲಿ ಒಡಕು ವ್ಯಕ್ತಿತ್ವಗಳುಂಟಾಗಿ, ಸಮಗ್ರತೆಯು ನೆಲೆಸುವುದಿಲ್ಲ. ಮನಸ್ಸು ವರ್ತಮಾನದ ಮೇಲಿದ್ದಾಗ ತನ್ನಿಂದ ತಾನಾಗಿ ನೀವು ಒಂದಾಗುತ್ತೀರಿ ಹಾಗೂ ಸಮಗ್ರತೆಯು ನಿಮ್ಮಲ್ಲಿ ನೆಲೆಸುತ್ತದೆ.

ತಪ್ಪನ್ನು ಮಾಡುವಾಗ,
ಆಳವಾದ ಅರಿವಿನಿಂದ
ಕೂಡಿದ್ದರೆ, ನೀವು
ತಪ್ಪನ್ನು ಮಾಡುವುದೇ
ಇಲ್ಲ

ಒಂದು ಸಣ್ಣ ಕಥೆ:

ಒಂದು ದಿನ
ಒಬ್ಬ
ಪಾದ್ರಿಯು
ದೇವರ ಮುಂದೆ ಮಂಡಿಯೂರಿ, 'ನಾನೊಬ್ಬ ಪಾಪಿ.
ದಯವಿಟ್ಟು ನನ್ನ ಮೇಲೆ ದಯೆಯಿರಲಿ, ಓ ದೇವರೇ!
ಎಂದು ಗಟ್ಟಿಯಾಗಿ ಅಳತೊಡಗಿದನು. ಮೌನವಾಗಿ
ಪ್ರಾರ್ಥಿಸುತ್ತಿದ್ದ ಒಬ್ಬ ವ್ಯಕ್ತಿ ಇದರಿಂದ
ಪ್ರಚೋದನೆಗೊಂಡು ಆತನೂ, ಪಾದ್ರಿಯ ಪಕ್ಕದಲ್ಲಿ
ಮಂಡಿಯೂರಿ ಪ್ರಾರ್ಥಿಸಲಾರಂಭಿಸಿದನು. ಈಗ,
ಮತ್ತೊಬ್ಬನು ಮಂಡಿಯೂರಿ ಅಳಲು
ಮೊದಲಾದನು. ಇದನ್ನು ನೋಡಿ ಪಾದ್ರಿಯು
ಮೊದಲ ವ್ಯಕ್ತಿಯನ್ನು ತಟ್ಟಿ ಕೇಳಿದನು,
'ಪಾಪಿಯೆಂದು ಯೋಚಿಸುತ್ತಿರುವವರು ಯಾರೆಂದು
ನೋಡು!' ಎಂದು.

ನಮ್ಮೆಲ್ಲಾ ನಮ್ರತೆ, ನೀತಿವಂತಿಕೆಗಳು ಹೆಚ್ಚು
ಕಡಿಮೆ ಇತರರಿಗೂ ಹಾಗೂ ನಮಗೂ ಒಂದು
ತೋರಿಕೆಯಾಗಿರುತ್ತದೆ. ನಾವು ನಟಿಸುವುದೇಕೆಂದರೆ
ನಾವು ದೃಢವಾಗಿ ನಮ್ಮೊಳಗೇ
ಸಮಗ್ರರಾಗಿಲ್ಲದಿರುವುದರಿಂದ. ನಮ್ಮೊಳಗಿರುವ
ಯಾವ ವ್ಯಕ್ತಿತ್ವವು ನಂಬಲು ಅರ್ಹವೆಂದು ನಮಗೆ
ತಿಳಿದಿಲ್ಲ ಹಾಗೂ ಇಂತಹ ಆಟಗಳಲ್ಲಿ ನಾವು ಸಿಕ್ಕಿ
ಹಾಕಿಕೊಳ್ಳುತ್ತೇವೆ. ನಾವು ಸಮಗ್ರರಾಗಿದ್ದರೆ,
ನಮ್ಮೆಲ್ಲಾ ಕಾರ್ಯಗಳಲ್ಲೂ ದೃಢವಾಗಿರುತ್ತೇವೆ
ಹಾಗೂ ತನ್ನಿಂದ ತಾನಾಗಿ ನಾವು
ನೀತಿವಂತರಾಗಿರುತ್ತೇವೆ.

ಅರಿವಿನಿಂದ ಕೂಡಿದವರಾಗಿರಿ,
ಸಮಯ ಸ್ಫೂರ್ತಿಯಿಂದ
ಯುಕ್ತರಾಗಿರಿ

ದಯವಿಟ್ಟು ತಿಳಿಯಿರಿ, ತಪ್ಪನ್ನು ಮಾಡುವಾಗ, ಆಳವಾದ ಅರಿವಿನಿಂದ ಕೂಡಿದ್ದರೆ, ನೀವು ಆ ತಪ್ಪನ್ನು ಮಾಡುವುದೇ ಇಲ್ಲ. ಅರಿವಿನಿಂದ ಕೂಡಿದ್ದರೆ, ನೀವು ಘನವಾದ ಒಂದು ವ್ಯಕ್ತಿತ್ವವನ್ನು ಹೊಂದಿರುತ್ತೀರಿ ಹಾಗೂ ನೀತಿವಂತರೂ ಆಗಿರುತ್ತೀರಿ. ಅರಿವಿನಿಂದ ದೂರವಾದಾಗ, ಅನೇಕ ವ್ಯಕ್ತಿತ್ವಗಳನ್ನು ಹೊಂದಿ, ಅನೀತಿವಂತರೂ ಆಗುತ್ತೀರಿ. ನೀತಿವಂತಿಕೆಯು ಅರಿವಿಗೆ ಸಂಬಂಧಿಸಿದುದು. ಬೇರೆ ಯಾವುದೇ ಸಾಮಾಜಿಕ ನಿಯಮಗಳಿಗಲ್ಲ. ಸಹಜವಾಗಿ ನೀತಿವಂತರಾಗಿರಲು ಅರಿವು ಒಂದೇ ದಾರಿ.

ಅರಿವಿನಿಂದ ಮಾತ್ರ ಸರಿಯಾದ ಸಂದರ್ಭದಲ್ಲಿ ಸಮಯ ಸ್ಫೂರ್ತಿಯಿಂದ ಸರಿಯಾದ ಕೆಲಸ ಮಾಡಲು ಸಾಧ್ಯವಾಗುವುದು. ನೀತಿವಂತಿಕೆಗೆ ಸರಿಯಾದ ಆಧಾರವಿಲ್ಲದಿರುವ ಕಾರಣ, ನಿಮಗೆ ಸರಿಯಾದ ಸಂದರ್ಭದಲ್ಲಿ ಸರಿಯಲ್ಲದ ಕೆಲಸವನ್ನು ಅದು ಮಾಡಿಸಬಹುದು, ಏಕೆಂದರೆ ಅದಕ್ಕೆ ಸರಿಯಾದ ಆಧಾರವಿಲ್ಲ. ಅದಕ್ಕೆ ಅದರದೇ ಆದ ತಳಹದಿಯಿಲ್ಲ, ಅದರ ತಳಹದಿ ಸಮಾಜದಿಂದ ನಿರ್ಮಿಸಲ್ಪಟ್ಟಿದೆ. ಆದ್ದರಿಂದ ನೀವು ಅದಕ್ಕೆ ಸಂಬಂಧಿಸಿಲ್ಲವೆಂದು ಭಾವಿಸುತ್ತೀರಿ. ನಿಮಗದು ಸರಿಹೊಂದದಿದ್ದಾಗ, ದೃಢ ವಿಶ್ವಾಸದಿಂದ ಕಾರ್ಯ ನಿರ್ವಹಿಸಲಾಗುವುದಿಲ್ಲ. ಒಮ್ಮೆ ನಿಮ್ಮಲ್ಲೇ ನೀವು ಸಮಗ್ರಗೊಂಡರೆ ಅರಿವಿನಲ್ಲಿ ಕೇಂದ್ರೀಕೃತರಾಗುತ್ತೀರಿ. ನೀವು ಛಿದ್ರವಾಗಿದ್ದರೆ, ಅರಿವು ಇರುವುದಿಲ್ಲ ಹಾಗೂ ನಿಮ್ಮ ಮಾರ್ಗದರ್ಶನಕ್ಕೆ ನೀತಿವಂತಿಕೆಯನ್ನು ಅವಲಂಬಿಸುತ್ತೀರಿ.

ಮನಸ್ಸಾಕ್ಷಿಯ ಪ್ರತಿಯಾಗಿ ಪ್ರಜ್ಞೆ

ಸಮಾಜದ ಕಟ್ಟಳೆಗಳನ್ನು
ಆಂತರಿಕಗೊಳಿಸಲಾರಂಭಿಸಿದಾಗ, ನಿಮ್ಮ
ಅಸ್ತಿತ್ವದಲ್ಲಿ ಒಂದು ಆಳವಾದ ಗಾಯವನ್ನು
ಸೃಷ್ಟಿಸಿಕೊಳ್ಳುತ್ತೀರಿ. ನಿಮ್ಮ ಸಹಜವಾದ
ಬುದ್ಧಿಯನ್ನು ನಾಶಪಡಿಸುತ್ತೀರಿ. ನನ್ನ ಪ್ರಕಾರ,
ಮಕ್ಕಳಿಗೆ ಪ್ರಾರಂಭದಲ್ಲಿ ಪ್ರಜ್ಞೆಯ ಹಾದಿಯಿಂದ
ಹೊರಬರದಂತೆ ಕೆಲವು ನಿಯಮಗಳನ್ನು
ನೀಡಬಹುದು. ಆದರೆ ನಂತರ ಅವರಿಗೆ ಜೀವನದ
ಬಗ್ಗೆ ತಿಳಿವಳಿಕೆ ನೀಡಿ, ಮನಸ್ಸಾಕ್ಷಿಯ ಬದಲು
ಪ್ರಜ್ಞೆಯಿಂದ ಕೆಲಸ ಮಾಡುವ ಅಗತ್ಯವನ್ನು
ತಿಳಿಸಬೇಕು.

ಪ್ರಜ್ಞೆಯೊಂದಿಗೆ ಬಾಳಿದರೆ ನೀವು ನೀವಾಗಿಯೇ
ಒಂದು ನೀತಿವಂತಿಕೆಯ ಜೀವನವನ್ನು ನಡೆಸುತ್ತೀರಿ.
ಪ್ರಜ್ಞೆಯೊಂದಿಗೆ ಬಾಳುವ ಅಗತ್ಯವನ್ನು ತಿಳಿಯಲು
ನಿಮ್ಮ ನೀತಿವಂತಿಕೆಯನ್ನು ಅವಲೋಕಿಸಿರಿ.
ನೀತಿವಂತಿಕೆಯು ಕೇವಲ ತೋರಿಕೆಯದು. ಆದರೆ
ಪ್ರಜ್ಞೆಯು ನಿಮ್ಮ ಅಸ್ತಿತ್ವದಿಂದ ಬರುವಂತಹುದು.
ನಿಮ್ಮ ಪ್ರಜ್ಞೆಯು ನಿಮ್ಮ ಮನಸ್ಸಾಕ್ಷಿಯನ್ನು
ಮುರಿಯಲು ಪ್ರಯತ್ನಿಸುತ್ತದೆ. ನಿಮ್ಮ ಪ್ರಜ್ಞೆಯು
ಸತತವಾಗಿ ನಿಮ್ಮ ಮನಸ್ಸಾಕ್ಷಿಯೊಂದಿಗೆ
ಹೋರಾಡುತ್ತದೆ. ಮನಸ್ಸಾಕ್ಷಿಯು
ಸಾಮಾಜಿಕವಾದುದು. ಪ್ರಜ್ಞೆಯು ಸಹಜವಾದುದು.
ಮನಸ್ಸಾಕ್ಷಿಯು ಪ್ರಜ್ಞೆಗೆ ಒಂದು ಬಡಕಲಾದ ಬದಲಿ.

ಜನರು ನನ್ನನ್ನು ಕೇಳುತ್ತಾರೆ, 'ಗುರುಗಳೇ ಇದೇನು? ನೀವು ಇಡೀ ಸಮಾಜದ ವಿನ್ಯಾಸವನ್ನೇ ಕೆಳಗಿಳಿಯುತ್ತಿದ್ದೀರಿ. ಹಾಗಾದರೆ ನಾವೆಲ್ಲಾ ನೀತಿವಂತರಾಗಿ ಹೇಗೆ ಬದುಕುವುದು?' ಎಂದು. ನಾನು ಹೇಳುತ್ತೇನೆ, 'ಸ್ಪಷ್ಟವಾಗಿ ತಿಳಿಯಿರಿ, ಒಂದು ಬಲವಂತವಾದ ನೀತಿವಂತಿಕೆಯ ಅಗತ್ಯವಿರುವುದು ಮಕ್ಕಳಿಗೆ ಮಾತ್ರ' ಅವರಿಗೆ ನೀವು ಹೇಳಬೇಕಾಗುತ್ತದೆ, 'ಸುಮ್ಮನಿರು. ನಾನು ನಿನಗೆ ಮಿಠಾಯಿಕೊಡಿಸುತ್ತೇನೆ' ಎಂದು. ಆದರೆ ಈಗಿನ ಕಾಲದ ಮಕ್ಕಳು ಉತ್ತರಿಸುತ್ತಾರೆ, 'ನಾ ನು ಸಂತೋಷವಾಗಿದ್ದೇನೆ. ನನಗೆ ನಿನ್ನ ಮಿಠಾಯಿ ಬೇಕಾಗಿಲ್ಲ. ನಿನ್ನ ಮಿಠಾಯಿ ಯಾರಿಗೆ ಬೇಕಾಗಿದೆ?' ಎಂದು. ಒಂದು ಮಗುವಿಗೆ ಮಿಠಾಯಿ ಕೊಡುತ್ತೇನೆಂದು ಹೇಳಿ, ಅವನನ್ನು ನಿರ್ಬಂಧಿಸಬಹುದು. ದುರಾಸೆ ಹಾಗೂ ಭಯದ ಆಧಾರಿತವಾದ ನೀತಿವಂತಿಕೆಯನ್ನು ಅವನ ಮೇಲೆ ಹೇರಬಹುದು. ಆದರೆ ನಿಮಗೆ ಹೇಳುವುದಾದರೆ, ನೀವು ಬೆಳೆಯುವ ಕಾಲ ಬಂದಿದೆ. ನೀವೀಗ ಮಕ್ಕಳಲ್ಲ. ಪ್ರಜ್ಞೆಯಿಂದ ಸುಮ್ಮನೆ ಎದ್ದು ನಿಲ್ಲಿರಿ. ನಾನು ಪ್ರಜ್ಞೆ ಎಂದಾಗ ಅರ್ಥೈಸುವುದು ನಿಮ್ಮ ಆತ್ಮದ ಬುದ್ಧಿಶಕ್ತಿಯನ್ನು.

ನಿಯಮಗಳು

ನಿಯಮಗಳನ್ನು ಮುರಿಯುವ ಸಹಜ ಪ್ರವೃತ್ತಿ

ಯಾವುದಾದರೊಂದು ನಿಯಮವು ಬಲವಂತದ್ದಾದರೆ ನೀವು ಅದನ್ನು ಮುರಿಯಲು ಸದಾ ಯತ್ನಿಸುತ್ತೀರಿ. ಉದಾಹರಣೆಗೆ, ಪೊಲೀಸರು ಕಾಣದಿದ್ದಾಗ ವಾಹನವನ್ನು ಅತಿ ವೇಗವಾಗಿ ಚಾಲನೆ ಮಾಡುತ್ತೀರಿ.

ಒಮ್ಮೆ ನಿಮ್ಮಲ್ಲೇ ನೀವು
ಸಮಗ್ರಗೊಂಡರೆ
ಅರಿವಿನಲ್ಲಿ
ಕೇಂದ್ರೀಕೃತರಾಗುತ್ತೀರಿ.

ಒಂದು ಸಣ್ಣ ಕಥೆ:

ಒಬ್ಬ ಪೊಲೀಸನು, ಹೆದ್ದಾರಿಯಲ್ಲಿ ಒಂದು ಕಾರು
ಅತಿ ವೇಗದಿಂದ ಚಾಲನೆ ಮಾಡುತ್ತಿದ್ದ ಕಾರಣ,
ಅದನ್ನು ನಿಲ್ಲಿಸಿದನು. ಪೊಲೀಸನು ವಾಹನ
ಚಾಲಕನ ಲೈಸೆನ್ಸಿನ ಬಗ್ಗೆ ಕೇಳಲು, ಆ ಚಾಲಕನು,
'ಆದರೆ ಅಧಿಕಾರಿಗಳೇ, ನಾನು ನನ್ನ ಹಾಗೂ ನನ್ನ
ಹಿಂದಿದ್ದ ಕಾರಿನ ನಡುವೆ ಅಂತರವಿರಲೆಂದು
ವೇಗವಾಗಿ ಕಾರನ್ನು ಚಾಲನೆ ಮಾಡುತ್ತಿದ್ದೆ' ಎಂದು
ಉತ್ತರಿಸಿದನು.

ನಿಯಮಗಳ ಅಂತರಾರ್ಥವನ್ನು ತಿಳಿಯದೆ
ಅವುಗಳನ್ನು ಕುರುಡಾಗಿ ಪಾಲಿಸಿದರೆ, ಇದೇ
ಆಗುವುದು. ಅದನ್ನು ಮುರಿಯಲು ಬರಿಯ ಒಂದು
ನೆಪಕ್ಕಾಗಿ ಕಾಯುತ್ತಿರುತ್ತೀರಿ ಅಷ್ಟೆ.

ಪ್ರಾಮಾಣಿಕವಾಗಿ ನಿಮಗೆ ನೀವೇ ಉತ್ತರಿಸಿಕೊಳ್ಳಿರಿ: ಒಂದು ವೇಳೆ ನೀವು ಮಾಡುವುದನ್ನು ನಿಯಂತ್ರಿಸಲು ನಿಯಮಗಳಾಗಲಿ, ಅಧಿಕೃತ ಮಂಡಳಿಗಳಾಗಲೀ ಇರದಿದ್ದರೆ, ನೀವು ಈಗಿರುವ ಅದೇ ವ್ಯಕ್ತಿ ಆಗಿರುತ್ತಿದ್ದೀರಾ? ಈಗ ಮಾಡುತ್ತಿರುವ ರೀತಿಯಲ್ಲಿಯೇ ಕೆಲಸಗಳನ್ನು ಮಾಡುತ್ತಿದ್ದೀರಾ? ನಿಮ್ಮ ಉತ್ತರವು ಇಲ್ಲ ಎಂದಾದರೆ, ಆ ನಿಯಮವು ನಿಮ್ಮ ಮನಸ್ಸಾಕ್ಷಿಯಿಂದ ಬರುತ್ತಿದೆ, ಪ್ರಜ್ಞೆಯಿಂದಲ್ಲವೆಂದು ತಿಳಿಯಿರಿ. ನೀವು ನಿಯಮದ ಅಂತರಾರ್ಥವನ್ನು

ಮಾಡುವ ಕೆಲಸವನ್ನು ಅರ್ಥಮಾಡಿಕೊಂಡಿಲ್ಲ
ಮಾಡಬೇಕಾಗಿಲ್ಲದ
ಅಥವಾ ಆ
ಕೆಲಸವನ್ನು
ನಿಯಮವನ್ನು ನೀವು
ರೋಮಾಂಚಕರ-
ಒಪ್ಪುವುದಿಲ್ಲ. ಈ
ವಾಗಿರುತ್ತ ದೆ.
ಕಾರಣದಿಂದಲೇ
ನೀವು ಕೆಲಸಗಳನ್ನು ನಿಮಗೆ ಸಹಜವಾದ ರೀತಿಯಲ್ಲಿ
ಮಾಡುತ್ತಿಲ್ಲ.

‘ಇಲ್ಲ’ ಎನ್ನುವುದರ ಖುಷಿ

ಮಕ್ಕಳಿಗೆ ಏನನ್ನಾದರೂ ಮಾಡಬೇಡವೆಂದಾಗ,
ಅವರಿಗೆ ಅದನ್ನೇ ಮಾಡಲು ಅತಿಯಾದ ಪ್ರೇರಣೆ
ಹುಟ್ಟುತ್ತದೆ. ಆ ಕೆಲಸವನ್ನು ಮಾಡುವುದರ ಅಥವಾ
ಮಾಡದಿರುವ ಬಗ್ಗೆ ನೀವು ಹೇಳುವವರೆಗೂ ಅವರಿಗೆ
ಅದರ ಬಗ್ಗೆ ಲಕ್ಷ್ಯವೂ ಇಲ್ಲದೇ ಇರಬಹುದು.
ಆದರೆ ಅವರಿಗೆ ಯಾವುದನ್ನಾದರೂ
ಮಾಡಬೇಡವೆಂದು ಹೇಳಿದಾಕ್ಷಣವೇ ಅವರು
ಅದನ್ನು ಮಾಡಲು ಇಚ್ಛಿಸುತ್ತಾರೆ.

ಒಂದು ಸಣ್ಣ ಕಥೆ:

ಒಬ್ಬ ವ್ಯಕ್ತಿಯು ಹೇಳುತ್ತಾನೆ, 'ನಾನು ಕೆಲಸಗಳನ್ನು ಮಾಡಿಸಲು ಮೂರು ದಾರಿಗಳನ್ನು ಕಂಡುಕೊಂಡಿದ್ದೇನೆ' ಎಂದು. ಆತನ ಸ್ನೇಹಿತನು ಕೇಳುತ್ತಾನೆ, 'ಆ ಮೂರು ದಾರಿಗಳು ಯಾವುದು?' ಎಂದು.

ಆ ವ್ಯಕ್ತಿಯು ಹೇಳುತ್ತಾನೆ, 'ಮೊದಲನೆಯದು
ನೀವೇ ಸ್ವತಃ ಮಾಡುವುದು, ಎರಡನೆಯದು
ಕೆಲಸವನ್ನು ಮಾಡಲು ಯಾರನ್ನಾದರೂ
ನೇಮಿಸುವುದು, ಮೂರನೆಯದು, ನಿಮ್ಮ ಮಕ್ಕಳಿಗೆ
ಆ ಕೆಲಸವನ್ನು ಮಾಡಬೇಡಿರೆಂದು ಹೇಳುವುದು
ಅಷ್ಟೇ. ಆ ಕೆಲಸ ಆದಂತೆಯೇ!' ಎಂದು.

ವಾಸ್ತವವಾಗಿ, ಮಾಡಬಾರದ ಕೆಲಸವನ್ನು
ಮಾಡುವುದರಲ್ಲಿ ಸವಿಯೊ, ರೋಮಾಂಚನವೂ
ಇರುತ್ತದೆ. ಬಹಳಷ್ಟು ಸಮಯ, ಯಾವ
ಕೆಲಸವನ್ನಾದರೂ ಮಾಡಬಾರದೆಂದು ಹೇಳಿದಾಗ,
ಕೂಡಲೇ ಅದನ್ನು ಮಾಡಬೇಕೆಂಬ ಪ್ರಬಲವಾದ
ಆಸೆ ಉಂಟಾಗುತ್ತದೆ. ಅದನ್ನು ಮಾಡುವುದರಿಂದ
ಒಂದು ರೀತಿಯ ಸಂತೋಷ ಹಾಗೂ
ತೃಪ್ತಿಯುಂಟಾಗುತ್ತದೆ. ಇದು ಪ್ರತಿಯೊಬ್ಬ
ಮನುಷ್ಯನಲ್ಲಿಯೂ ಇರುವ ಮೂಲ ಪ್ರವೃತ್ತಿ.

ಒಂದು ಸಣ್ಣ ಕಥೆ:

ಒಮ್ಮೆ ಅಂಗಡಿಯವನೊಬ್ಬನು ತನ್ನ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಕಷ್ಟಪಟ್ಟು ಪ್ರಯತ್ನಿಸುತ್ತಿದ್ದನು. ಆತನು ಅನೇಕ ಬಗೆಯ ಪ್ರಯತ್ನಗಳನ್ನು ಮಾಡಿದನು

  • ರಿಯಾಯಿತಿಗಳು, ಆಕರ್ಷಣೀಯ ಜಾಹೀರಾತುಗಳು, ಉತ್ತಮವಾದ ಗಿರಾಕಿ ಸೇವೆ. ಆದರೆ, ಇವು ಯಾವುದೂ ಕೆಲಸಕ್ಕೆ ಬರಲಿಲ್ಲ! ನಂತರ ಒಂದು ದಿನ, ಆತನು ತನ್ನ ಅಂಗಡಿಯ ಕಿಟಕಿಗೆ ಒಂದು ಕಪ್ಪು ಬಣ್ಣದ ತೆರೆಯನ್ನು ತೂಗುಬಿಟ್ಟನು ಮತ್ತು ಅದರ ಮೇಲೆ ಒಂದು ಸಣ್ಣ ರಂಧ್ರವನ್ನು ಮಾಡಿಸಿದನು. ರಂಧ್ರದ ಕೆಳಗೆ ‘ಇಣುಕಿ ನೋಡುವುದನ್ನು ನಿಷೇಧಿಸಲಾಗಿದೆ’ ಎಂಬ ಒಂದು ಸೂಚನಾಫಲಕವನ್ನು ಹಾಕಿಸಿದನು.

ಅಂದಿನಿಂದ, ಆತನ ಅಂಗಡಿಯ ಬಳಿ ಅತಿಯಾದ
ಜನಸಂದಣಿ ಸೇರಿ, ಪ್ರತಿಯೊಬ್ಬರೂ ಆ ರಂಧ್ರದ
ಮೂಲಕ ಒಳಗೇನಿದೆಯೆಂದು ಇಣುಕಿ

ನೋಡತೊಡಗಿದರು! ಆತನ ಅಂಗಡಿಯ ವ್ಯಾಪಾರವು ತನ್ನಷ್ಟಕ್ಕೆ ತಾನೇ ವೃದ್ಧಿಸಿತು. ಏಕೆಂದರೆ ವಾಸ್ತವವಾಗಿ ಜನರು ಆತನ ಅಂಗಡಿಯಲ್ಲಿರುವ ಅನೇಕ ಬಗೆಯ ದಿನಸಿ ಸಾಮಾನುಗಳನ್ನು ನೋಡ ತೊಡಗಿದರು.

ನಿಮಗೆ ಏನನ್ನಾದರೂ ಮಾಡಬಾರದೆಂದು
ಹೇಳಿದಾಗ, ನಿರ್ದಿಷ್ಟವಾಗಿ ಅದನ್ನೇ ಮಾಡುವುದು
ಮನುಷ್ಯನ ಮೂಲ ಪ್ರವೃತ್ತಿ.

ಹದಿವಯಸ್ಸಿನ ಹುಡುಗನಾದ ನೀವು ನಿಮ್ಮ ತಂದೆತಾಯಿಯರಿಗೆ ‘ಇಲ್ಲ’ ಎಂದಾಗ, ನೀವು ಸ್ವತಂತ್ರರಾಗಿದ್ದೀರೆಂದು ಸಾಬೀತುಪಡಿಸಿರುವುದಾಗಿ ಭಾವಿಸುತ್ತೀರಿ. ನೀವು ‘ಇಲ್ಲ’ ಎಂದಾಗ, ನೀವು ಒಬ್ಬ ವಿಶೇಷವಾದ ವ್ಯಕ್ತಿ, ಒಬ್ಬ ವಿಭಿನ್ನವಾದ ವ್ಯಕ್ತಿಯೆಂದು ಭಾವಿಸುತ್ತೀರಿ. ನೀವು ‘ಹೌದು’ ಎನ್ನುವವರೆಗೂ, ನೀವಿನ್ನೂ ಒಬ್ಬ ಮಗುವೆಂದು ಭಾವಿಸುತ್ತೀರಿ. ನೀವು ‘ಇಲ್ಲ’ ಎನ್ನಲು ಆರಂಭಿಸಿದಾಗ, ನೀವು ಒಬ್ಬ ವಯಸ್ಕನಾಗಿದ್ದೀರೆಂದು ಭಾವಿಸುತ್ತೀರಿ.

ನೀವು ನಿಮ್ಮ ತಂದೆಗೆ ‘ಇಲ್ಲ’ ಎಂದಾಗ ಮಾತ್ರವೇ ನೀವು ವಯಸ್ಕರಾಗಿದ್ದೀರೆಂದು ಭಾವಿಸುತ್ತೀರಿ. ಅಲ್ಲಿಯವರೆಗೂ ನೀವು ಒಂದು ಮಗುವೆಂದು ಭಾವಿಸುತ್ತೀರಿ. ನೀವು ವಯಸ್ಕನಾಗಿರುವುದನ್ನು ಸಾಬೀತು ಪಡಿಸಲು ನಿಮ್ಮ ತಂದೆಗೆ ‘ಇಲ್ಲ’ ಎನ್ನಲಾರಂಭಿಸುತ್ತೀರಿ. ಇದು ಮೂಲ ಭೂತ ಮನಃಶಾಸ್ತ್ರ, ನೀವು ‘ಇಲ್ಲ’ ಎಂದಾಗ ನೀವೂ ಒಬ್ಬ ವ್ಯಕ್ತಿ ಎಂದು ಯೋಚಿಸುತ್ತೀರಿ. ಅಲ್ಲಿಯವರೆಗೂ ನೀವು ಯಾರೂ ಅಲ್ಲವೆಂದು ಯೋಚಿಸುತ್ತೀರಿ. ಆದ್ದರಿಂದ ಸ್ಪಷ್ಟವಾಗಿ ತಿಳಿಯಿರಿ, ನೀವೇನೇ ಹೇಳಿದರೂ, ನಿಮ್ಮ ವಯಸ್ಕನಾದ ಮಗನು ‘ಇಲ್ಲ’ ಎನ್ನುತ್ತಾನೆ. ಏಕೆಂದರೆ ಅವನು ಒಬ್ಬ ಸ್ವತಂತ್ರ ವ್ಯಕ್ತಿಯಾಗಲು ಬಯಸುತ್ತಾನೆ.

ನಿರ್ಜೀವ ನಿಯಮಗಳು ಹಾಗೂ ಸಜೀವ ಬುದ್ಧಿಶಕ್ತಿ

ಕಾಲ ಕಳೆದಂತೆ ಮೊದಲು ಅರ್ಥವಿದ್ದ
ನಿಬಂಧನೆಗಳು, ಯಾವುದೇ ಅರ್ಥವಿಲ್ಲದ ಕುರುಡು
ನಿಯಮಗಳಾಗುತ್ತವೆ.

ವಿದ್ಯುಚ್ಛಕ್ತಿಯನ್ನು ಕಂಡು ಹಿಡಿಯುವ ಮೊದಲು,
ಭಾರತದಲ್ಲಿ ದರ್ಜಿಗಳು ಬಟ್ಟೆಯನ್ನು ಮಬ್ಬಾದ
ದೀಪದ ಬೆಳಕಿನಲ್ಲಿ ಕೈಯಲ್ಲಿ ಹೊಲೆಯುತ್ತಿದ್ದರು.
ಸೂರ್ಯಸ್ತವಾದ ಮೇಲೆ ಮಬ್ಬಾದ ಬೆಳಕಿನಲ್ಲಿ ಬಟ್ಟೆ
ಹೊಲಿಯುವುದು ಅವರ ಕಣ್ಣಿಗೆ ಶ್ರಮವಾಗುತ್ತಿದ್ದ
ಕಾರಣದಿಂದ, ಬಟ್ಟೆಗಳನ್ನು ಸೂರ್ಯಸ್ತವಾದ ಮೇಲೆ
ಹೊಲೆಯುತ್ತಿರಲಿಲ್ಲ. ಆದ್ದರಿಂದ ಆ ಕೆಲಸವು
ಯಾವಾಗಲೂ ಹಗಲಲ್ಲಿ ಮಾಡಲು ಮೀಸಲಾಗಿತ್ತು.

ಆದರೆ ಭಾರತದಲ್ಲಿ ಈಗಲೂ ವಯಸ್ಸಾದವರು ಮನೆಗಳಲ್ಲಿ ‘ಸೂರ್ಯಸ್ತವಾದ ಮೇಲೆ ಬಟ್ಟೆ ಹೊಲಿಯುವುದು ಒಳ್ಳೆಯದಲ್ಲ’ ಎಂದು ಹೇಳುತ್ತಾರೆ. ರಾತ್ರಿ ಬಟ್ಟೆ ಹೊಲಿಯಬಾರದೆಂಬುದಕ್ಕೆ ಕಾರಣವೇ ಈಗಿಲ್ಲ! ಈಗ ವಿದ್ಯುತ್ ಶಕ್ತಿ ಹಾಗೂ ಪ್ರಕಾಶಮಾನವಾದ ದೀಪಗಳಿವೆ. ಆದರೆ ಅದರ ಮೂಲಕಾರಣಕ್ಕೆ ಸಂಬಂಧವಿಲ್ಲದೆ, ಇದೊಂದು ರೂಢಿಯಾಗಿದೆ.

ಒಂದು ಸಣ್ಣ ಕಥೆ:

ಒಮ್ಮೆ ವಿಮಾನದಿಂದ ಪ್ಯಾರಚೂಟ್‌ನಲ್ಲಿ ಇಳಿಯಲು
ತರಬೇತಿ ಪಡೆದ ಒಬ್ಬ ಸೈನಿಕನನ್ನು ಟಿ.ವಿ.ಗಾಗಿ
ಸಂದರ್ಶಿಸಲಾಯಿತು. ಸಂದರ್ಶಕರು, 'ನಿಮ್ಮ
ಜೀವನವು ಖಂಡಿತವಾಗಿಯೂ
ಸಾಹಸಮಯವಾಗಿರುತ್ತದಲ್ಲವೆ?' ಎಂದು
ಕೇಳಿದರು.

ಪ್ಯಾರಟ್ರೂಪರ್, 'ಹೌದು. ಕೆಲವೊಮ್ಮೆ ಅದರಲ್ಲಿ
ತಲ್ಲಣಗೊಳಿಸುವ ಕ್ಷಣಗಳೂ ಇರುತ್ತದೆ' ಎಂದು
ಉತ್ತರಿಸಿದನು.

ಸಂದರ್ಶಕರು, 'ನಿಮ್ಮ ಜೀವನದಲ್ಲಿ ಅತ್ಯಂತ
ತಳಮಳಗೊಳಿಸಿದ ಅನುಭವ ಯಾವುದು?' ಎಂದು
ಕೇಳಿದರು.

ಪ್ಯಾರಟ್ರೂಪರ್ ಉತ್ತರಿಸಿದನು, 'ನಾನು ಕೆಳಗಿಳಿದು ಒಬ್ಬರ ಮನೆಯ ಹುಲ್ಲುಗಾವಲಿನ ಮೇಲೆ ಬರುತ್ತಿದ್ದಾಗ ಈ ರೀತಿಯ ಸೂಚನಾಫಲಕವಿದ್ದಿತು. 'ಹುಲ್ಲನ್ನು ತುಳಿಯದಿರಿ!' ಎಂದು'.

ನಿಮ್ಮಲ್ಲಿ ಸರಿಯಾದ ಬುದ್ಧಿಶಕ್ತಿ ಅಥವಾ
ತಿಳಿವಳಿಕೆ ಇಲ್ಲದಾಗ, ನಿಮ್ಮ ಜೀವನದಲ್ಲಿ
ನಿಯಮಗಳು ನಿರ್ಜೀವ ನಿಯಮಗಳಾಗುತ್ತವೆ.

ನಿಮಗೆ ತಿಳಿವಳಿಕೆ ಇದ್ದಾಗ, ಯಾವುದೇ
ಸರಿಯಾದ ನಿಯಮವು ಜೀವನವನ್ನು
ಆನಂದವಾಗಿ ನಡೆಸಲು ಅದು ಒಂದು
ಸ್ನೇಹಪೂರ್ಣತಂತ್ರವಾಗುತ್ತದೆ. ನಿಯಮಗಳು
ಹಾಗೂ ಧರ್ಮಾಚರಣೆಗಳು ವಾಸ್ತವವಾಗಿ ನಿಮ್ಮ
ಜ್ಞಾನೋದಯಕ್ಕಾಗಿ ಇರುವ ತಂತ್ರಗಳಾಗಿವೆ. ನಾನು
ಜ್ಞಾನೋದಯವೆಂದಾಗ ಅರ್ಥೈಸುವುದು,
ಸಂಪೂರ್ಣವಾದ, ಸ್ಪಷ್ಟತೆಯುಳ್ಳ, ಒಂದು
ಆನಂದಮಯ ಜೀವನವನ್ನು, ಸಹಜವಾಗಿಯೇ
ಆಳವಾಗಿ ಅನುಸರಿಸಿದಾಗ ಅದು ನಿಮ್ಮನ್ನು
ಕಟ್ಟಕಡೆಯ ಸ್ಥಿತಿಯಾದ ಜ್ಞಾನೋದಯಕ್ಕೆ
ಕೊಂಡೊಯ್ಯುತ್ತದೆ.

ಒಂದು ಸಣ್ಣ ಕಥೆ:

ಒಬ್ಬ ರೈಲ್ವೆ ಅಧಿಕಾರಿಯು ರೈಲಿನಲ್ಲಿ ನಡೆದ ಒಂದು ಕೊಲೆ ಪ್ರಕರಣದ ಬಗ್ಗೆ ವರದಿಯನ್ನು ನೀಡುತ್ತಿದ್ದನು. 'ಕೊಲೆಗಾರನು ಕಂಪಾರ್ಟ್‌ಮೆಂಟನ್ನು ಪ್ರವೇಶಿಸಿ ಆ ವ್ಯಕ್ತಿಯನ್ನು ಅನೇಕ ಬಾರಿ ಇರಿದನು. ನಂತರ ಅವನು ರೈಲಿನ ಎದುರು ಬಾಗಿಲಿನಿಂದ ರೈಲ್ವೆ ಹಳಿಯ ಮೇಲೆ ಎಗರಿ ಹೊರಟು ಹೋದನು - ಹೀಗೆ ಅವನು ರೈಲ್ವೆ ನಿಬಂಧನೆಗಳನ್ನು ಉಲ್ಲಂಘಿಸಿದನು' ಎಂದು.

ನಿಮಗೆ ಸರಿಯಾದ ತಿಳಿವಳಿಕೆ ಇಲ್ಲದಾಗ ಇಡೀ
ವಿಷಯವನ್ನೇ ಕಳೆದುಕೊಳ್ಳುತ್ತೀರಿ ಹಾಗೂ
ಮೂರ್ಖತನದಿಂದ ವರ್ತಿಸುತ್ತೀರಿ. ನಿಮಗೆ
ಸರಿಯಾದ ತಿಳಿವಳಿಕೆ ನೀಡಲ್ಪಟ್ಟಾಗ, ಯಾವುದೇ
ನಿಯಮವು ನಿಮಗೂ ಹಾಗೂ ನಿಮ್ಮ
ಸುತ್ತಮುತ್ತಲಿನವರಿಗೂ ಒಂದು ಸಂತೋಷವಾದ
ಆನಂದಮಯವಾದ ಜೀವನವನ್ನು ನಡೆಸಲು
ಸೃಷ್ಟಿಸಲ್ಪಟ್ಟಿತೆಂದು ತಿಳಿಯುತ್ತೀರಿ.

ಒಂದು ನಿಯಮದ ಸತ್ವವನ್ನು ತಿಳಿದಾಗ, ಅದನ್ನು
ಪಾಲಿಸಲು ಯಾವ ಸಮಸ್ಯೆಯೂ ಇರುವುದಿಲ್ಲ.
ಅದನ್ನು ಅನುಸರಿಸಿದಾಗ, ನಿಮ್ಮ ಕ್ರಿಯೆಯು
ರಸವತ್ತಾಗಿರುತ್ತದೆ. ಅಲ್ಲಿ ಪಾಲಿಸುವ ಒಂದು
ಆನಂದಮಯವಾದ ಬದ್ಧತೆ ಮಾತ್ರ ಇರುತ್ತದೆ.

ಆದರೆ ಸತ್ವವು ತಪ್ಪಿದರೆ ಎಲ್ಲವೂ ತಪ್ಪಿಹೋದಂತೆ, ಜೀವನವು ನೀರಸವಾಗಿ ನಿರ್ಜೀವವಾದಂತಾಗುತ್ತದೆ.

ಉದಾಹರಣೆಗೆ, ಧ್ಯಾನವನ್ನು ತೆಗೆದುಕೊಳ್ಳಿರಿ.
ಧ್ಯಾನವನ್ನು ಮಾಡುವುದೇ ಬಾಹ್ಯ ಪ್ರಪಂಚದ
ಗಲಾಟೆ ಹಾಗೂ ಸನ್ನಿವೇಶಗಳನ್ನು ಲಕ್ಷಿಸದೆ
ಒಳಮುಖವಾಗಲು. ಧ್ಯಾನವಿಧಿಯನ್ನು ಆರಂಭಿಸುವ
ಮೊದಲು ನಿಶ್ಯಬ್ದವಾದ ವಾತಾವರಣವನ್ನು ಹೊರಗೆ
ನಿರ್ಮಿಸಲು ಪ್ರಯತ್ನ ಮಾಡುವವರನ್ನು ನಾನು
ನೋಡಿದ್ದೇನೆ. ಅವರು ಸುತ್ತಲಿರುವ ಎಲ್ಲರಿಗೂ
ಸುಮ್ಮನಿರಲು ಹೇಳುತ್ತಾರೆ. ಅವರು ಧ್ಯಾನವನ್ನು
ಮಾಡಬೇಕಾದ ಕಾರಣ ಇತರರನ್ನು ಅವರ
ದೈನಂದಿನ ರೂಢಿಯಿಂದ ನಿಷ್ಕ್ರಿಯರಾಗುವಂತೆ
ಮಾಡುತ್ತಾರೆ.

ಸ್ಫೂರ್ತಿ ತಪ್ಪಿದಾಗಲೇ, ಆಚರಣೆಗಳು
ನಿರ್ಜೀವವಾಗುವುದು. ಆಗ ನೀವು
ಕಳೆದುಕೊಳ್ಳುತ್ತೀರಿ ಮತ್ತು
ಗೊಂದಲಕ್ಕೊಳಗಾಗುತ್ತೀರಿ!

ಎಲ್ಲಾ ನಿಯಮ, ನಿಬಂಧನೆಗಳೂ ಸೃಷ್ಟಿಯಾದದ್ದು 'ನೀನು ನನ್ನನ್ನು ಕೊಲ್ಲದಿರು ಹಾಗೂ ನಾನು ನಿನ್ನನ್ನು ಕೊಲ್ಲುವುದಿಲ್ಲ, ನಾವಿಬ್ಬರೂ ಆನಂದವಾಗಿ ಜೀವಿಸೋಣ' ಎಂಬ ತಿಳಿವಳಿಕೆಯಿಂದ ಒಂದು ಸಮರಸವಾದ ಜೀವನವನ್ನು ಈ ತಿಳಿವಳಿಕೆಯಿಂದ ನಡೆಸಲು. ಅವುಗಳ ಹಿಂದಿರುವ ಮೂಲ ತಿಳಿವಳಿಕೆಯೇ ಇದು. ಆದರೆ ಕಾಲ ಕ್ರಮೇಣ ಅವು ಕಾನೂನುಗಳಾದುವು.

ಎಲ್ಲಾ ನಿಯಮ, ನಿಬಂಧನೆಗಳೂ ಒಂದು ಸಮರಸವಾದ, ಆನಂದಮಯವಾದ, ಜೀವನ ನಡೆಸಲು ಸೃಷ್ಟಿಸಲ್ಪಟ್ಟಿವೆ. ಆದರೆ ಅದರ ಸರಿಯಾದ ತಿಳಿವಳಿಕೆಯಿಲ್ಲದೆ ನಿಯಮವನ್ನು ಅಂತರ್ಗತ ಮಾಡಿಕೊಂಡ ಕ್ಷಣವೇ ನಿಮ್ಮಲ್ಲಿ ತಪ್ಪಿತಸ್ಥ ಭಾವನೆಯನ್ನು ಸೃಷ್ಟಿಸಿಕೊಳ್ಳುತ್ತೀರಿ. ನಿಯಮಗಳನ್ನು ತಿಳಿವಳಿಕೆಯಿಂದ ಪಾಲಿಸುತ್ತಿರುವವರೆಗೂ ನೀವು ಸಂತೋಷದಿಂದಿರುತ್ತೀರಿ. ಆದರೆ ಅಂತರಾರ್ಥದ ಬದಲು, ಪದಗಳನ್ನು ಪಾಲಿಸಲಾರಂಭಿಸಿದಾಗ, ನೀವು ತಪ್ಪಿತಸ್ಥತ ಭಾವನೆಯನ್ನು ಸೃಷ್ಟಿಸಲಾರಂಭಿಸುತ್ತೀರಿ.

ಕಾನೂನಿನಿಂದ ತಪ್ಪಿಸಿಕೊಳ್ಳಬೇಕಾದರೆ ಏನು ಮಾಡುತ್ತೀರಿ? ಕಾನೂನಿನ ಪದಗಳನ್ನೇ ಹಿಡಿದುಕೊಂಡು ಅದರ ಹಿಂದಿರುವ ಅರ್ಥವನ್ನು ಬಿಟ್ಟುಬಿಡುತ್ತೀರಿ. ಜಾಣತನದಿಂದ ಪದಗಳಲ್ಲಿ ಆಟವಾಡಿ, ಕಾನೂನಿನಿಂದ ತಪ್ಪಿಸಿಕೊಳ್ಳುತ್ತೀರಿ. ಪದಗಳನ್ನೇ ಹಿಡಿದಾಗ ನೀವು ಒಬ್ಬ ಗುಮಾಸ್ತರಾಗುತ್ತೀರಿ ಮತ್ತು ಸ್ಫೂರ್ತಿಯನ್ನೇ ಕಳೆದುಕೊಳ್ಳುತ್ತೀರಿ. ಅರ್ಥವನ್ನು ಹಿಡಿದಾಗ ತಪ್ಪಿತಸ್ಥ ಭಾವನೆಯನ್ನು ಬಿಟ್ಟು ಬುದ್ಧಿವಂತರಾಗಲು ಸಾಧ್ಯ.

ಉಪಯುಕ್ತವಾದ ತಪ್ಪಿತಸ್ಥ ಭಾವನೆ

ನಿಮಗೆ ಉಪಯುಕ್ತವಾದ ಒಂದು ರೀತಿಯ ತಪ್ಪಿತಸ್ಥ ಭಾವನೆ ಇದೆ. ನೀವು ಅದನ್ನು ಬುದ್ಧಿವಂತಿಕೆಯಿಂದ ಅನುಸರಿಸಿದಾಗ ಅದು ನಿಮ್ಮನ್ನು ಜೀವನದಲ್ಲಿ ಮುನ್ನಡೆಸುತ್ತದೆ. ಅದು ಹೀಗಿದೆ: ನಿಮಗೆ ಏನಾದರೊಂದನ್ನು ಮಾಡುವ ಸಾಮರ್ಥ್ಯವಿರುವುದನ್ನು ನೀವು ಗಮನಿಸಿದಾಗ, ನೀವು

ಉಪಯೋಗಿಸದಿರುವ ಇನ್ನೂ ಬಹಳಷ್ಟು ಸಾಮರ್ಥ್ಯವು ನಿಮ್ಮಲ್ಲಿದೆಯೆಂದು ತಿಳಿದುಕೊಂಡಾಗ, ನೀವು ಜಾಣರಾದರೆ, ನಿಮ್ಮಲ್ಲಿ ತಪ್ಪಿತಸ್ಥ ಭಾವನೆ ಉಂಟಾಗುತ್ತದೆ. ಈ ತಪ್ಪಿತಸ್ಥ ಭಾವನೆಯು ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಕಾರ್ಯತಃ ಸಾಧಿಸುವಂತೆ ಪ್ರಚೋದಿಸುತ್ತದೆ.

ಒಮ್ಮೊಮ್ಮೆ ನಮ್ಮ ಸುತ್ತಲಿರುವ ಪರಿಸ್ಥಿತಿಯನ್ನು
ನೋಡಿದಾಗ, ಆ ಪರಿಸ್ಥಿತಿಯನ್ನು ಸುಧಾರಿಸಲು
ಖಂಡಿತ ನಾವು ಸಹಾಯ ಮಾಡಬಹುದೆಂದು ನಮ್ಮ
ಮನಸ್ಸಿನ ಯಾವುದೋ ಮೂಲೆಯಲ್ಲಿ ತಿಳಿಯುತ್ತದೆ.
ಆದರೆ ಸೋಮಾರಿತನದಿಂದಲೋ ಅಥವಾ
ಎದುರಿಸುವ ಭಯದಿಂದಲೋ ಅಥವಾ
ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾದ
ಭಯದಿಂದಲೋ, ನಾವು ಸುಮ್ಮನಿದ್ದು ನೋಡುತ್ತೇವೆ.
ಇಂತಹ ಸಂದರ್ಭಗಳು ನಮ್ಮಲ್ಲಿ ಆಳವಾದ ತಪ್ಪಿತಸ್ಥ
ಭಾವನೆಗೆ ಕಾರಣವಾಗಬಹುದು. ಇಂತಹ ತಪ್ಪಿತಸ್ಥ
ಭಾವನೆಯು ಪರಿಣಾಮಕಾರಿಯಾದದು. ಆ
ಸಂದರ್ಭವನ್ನು ಸರಿಪಡಿಸಲು ನಾವು ಏನನ್ನು
ಮಾಡಬೇಕೆಂದು ನಿಜವಾಗಿ ಭಾವಿಸುವೆವೋ ಅದನ್ನು
ಮಾಡಿದಾಗ, ತಪ್ಪಿತಸ್ಥ ಭಾವನೆ ಮಾಯವಾಗಿ,
ನಾವೂ ಮುಂದುವರೆಯುತ್ತೇವೆ.

ಇಂತಹ ತಪ್ಪಿತಸ್ಥ ಭಾವನೆಗೆ ನಾವು ಅಗತ್ಯವಾಗಿ ಮಾಡಬೇಕಾದುದನ್ನು ಮಾಡುವಂತೆ ಪ್ರೇರೇಪಿಸುವ ಸಾಮರ್ಥ್ಯವಿದೆ. ಅದರ ಸ್ವಭಾವಕ್ಕನುಸಾರವಾಗಿಯೇ ಈ ತಪ್ಪಿತಸ್ಥ ಭಾವನೆಯನ್ನು ನಿಮ್ಮಲ್ಲಿ ಬಹಳ ಕಾಲ ತಪ್ಪಿತಸ್ಥ ಭಾವನೆಯನ್ನು ಬಚ್ಚಿಡಲಾಗುವುದಿಲ್ಲ. ನೀವು ಅದರಿಂದ ಹೊರಬರಲೇಬೇಕು ಹಾಗೂ ಮಾಡಬೇಕಾದುದನ್ನು ಮಾಡುವುದು ಇದರಿಂದ ಹೊರಬರುವ ದಾರಿ. ಅದನ್ನು ಮಾಡಿಯಾದ ಮೇಲೆ, ತಪ್ಪಿತಸ್ಥ ಭಾವನೆಯು ಮಾಯವಾಗುತ್ತದೆ. ಎಷ್ಟು ಕಾಲ ತಪ್ಪಿತಸ್ಥ ಭಾವನೆಯನ್ನು ಹೋಗಲಾಡಿಸುವ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲವೋ, ಅಷ್ಟು ಕಾಲ ನೀವು ಅದರಿಂದ ತೊಂದರೆ ಪಡುತ್ತಲೇ ಇರುತ್ತೀರಿ. ಇದೇ ಈ ತಪ್ಪಿತಸ್ಥ ಭಾವನೆಯ ಸರಳವಾದ ತರ್ಕ.

ಈ ತಪ್ಪಿತಸ್ಥ ಭಾವನೆಯ ಮತ್ತೊಂದು ಲಕ್ಷಣ
ಕಂಡುಬರುವುದು ನಿಮ್ಮ ಅಹಂಭಾವವು ಕೆಲವು
ಸಂದರ್ಭಗಳಲ್ಲಿ ಕಾಣಿಸಿಕೊಂಡಾಗ ಮತ್ತು ನೀವು
ಅದಕ್ಕೆ ಏನನ್ನೂ ಮಾಡಲು ಅಸಾಧ್ಯವಾದಾಗ. ನಿಮ್ಮ
ಅಹಂಭಾವವನ್ನು ತಿಳಿದರೂ ಅದನ್ನು ನಿಯಂತ್ರಿಸಲು
ಸಾಧ್ಯವಾಗದೆ ಇದ್ದಾಗ, ಈ ತಪ್ಪಿತಸ್ಥ ಭಾವನೆಯು
ನಿಮ್ಮಲ್ಲಿ ಮೇಲೇಳುತ್ತದೆ. ಈ ತಪ್ಪಿತಸ್ಥ
ಭಾವನೆಯೂ ಒಳ್ಳೆಯದೇ, ಏಕೆಂದರೆ ಅದು ನಿಮ್ಮ
ಅಹಂಭಾವದ ಆಳವಾದ ಅರಿವಿನ ಚಿಹ್ನೆ. ಆ
ಅಹಂಭಾವವನ್ನು ತೆಗೆದುಹಾಕಲು, ನೀವು
ಶ್ರದ್ಧೆಯಿಂದ ಶ್ರಮಿಸಲು ಆ ತಪ್ಪಿತಸ್ಥ ಭಾವನೆಯು
ಸಹಾಯ ಮಾಡುತ್ತದೆ.

ತಪ್ಪಿತಸ್ಥ ಭಾವನೆಯು ದೇಹದ ಅಸ್ವಸ್ಥತೆಯನ್ನು ಉಂಟುಮಾಡಬಲ್ಲದು

ತಪ್ಪಿತಸ್ಥ ಭಾವನೆಯು ಬುದ್ಧಿಶಕ್ತಿಯನ್ನು
ಖಂಡಿತವಾಗಿ ನಾಶಪಡಿಸುತ್ತದೆ. ನನ್ನ ಪ್ರಕಾರ,
ತಪ್ಪಿತಸ್ಥ ಭಾವನೆಯು ಬುದ್ಧಿಯ ಅತ್ಯಂತ ಕೆಟ್ಟ
ವಿನಾಶಕಾರಿ. ಅದು ಜೀವನದಲ್ಲಿ ನಿಮ್ಮನ್ನು
ಮುನ್ನಡೆಯಲು ಬಿಡುವುದಿಲ್ಲ.

ಒಮ್ಮೆ ನನ್ನ ಒಬ್ಬ ಭಕ್ತಳಿಗೆ ಬೆನ್ನುಹುರಿಯ ತಳಭಾಗದಲ್ಲಿ ಒಂದು ಗೆಡ್ಡೆಯಾಗಿದ್ದಿತು. ಇಪ್ಪತ್ತು ವರ್ಷಗಳ ಕಾಲ ಆಕೆಯು ಆ ಗೆಡ್ಡೆಯಿಂದ ನರಳುತ್ತಿದ್ದಳು. ಆಕೆಯು ನನ್ನ ಬಳಿ ಬಂದು, 'ದಯವಿಟ್ಟು ನನಗೆ ಸಹಾಯ ಮಾಡಿರಿ. ನನ್ನನ್ನು ಗುಣಪಡಿಸಿರಿ. ನಾನು ಅನೇಕ ವರ್ಷಗಳಿಂದ ಈ ಗೆಡ್ಡೆಯಿಂದ ನರಳುತ್ತಿದ್ದೇನೆ. ಶಸ್ತ್ರಚಿಕಿತ್ಸೆಯ ನಂತರವೂ, ಅದು ಮರುಕಳಿಸಿದೆ' ಎಂದು ತನ್ನ ಕಷ್ಟವನ್ನು ತೋಡಿಕೊಂಡಳು. ಆಕೆಯ ಸಮಸ್ಯೆಯ ಮೂಲವನ್ನು ತಿಳಿಯಲು ನಾನು ಆಕೆಯೊಡನೆ ಮಾತನಾಡತೊಡಗಿದೆ. ನಾನು ಆಕೆಯಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿಯಾದ ನಂತರ, ಆಕೆಯು ತನ್ನ ಮನಸ್ಸನ್ನು ತೆರೆದು ಅಳಲಾರಂಭಿಸಿದಳು. ನಾನು ಆಕೆಯನ್ನು ಕೇಳಿದೆ, 'ನಿನ್ನ ಲೈಂಗಿಕ ಶಕ್ತಿಯನ್ನು ಸಂಬಂಧಿಸಿದಂತೆ ನಿನಗೇನಾದರೂ ತಪ್ಪಿತಸ್ಥ ಭಾವನೆ ಇದೆಯೇ?' ಎಂದು. ಆಕೆಯು ನಿಧಾನವಾಗಿ ಮನಸ್ಸನ್ನು ತೆರೆದಳು.

ಆಕೆಯು ಬಹಳ ಚಿಕ್ಕವಳಾಗಿದ್ದಾಗಲೇ, ಆಕೆಯನ್ನು ದೈಹಿಕವಾಗಿ ದುರುಪಯೋಗಪಡಿಸಲಾಗಿತ್ತು. ಆಕೆಯ ಹತ್ತಿರದ ಸಂಬಂಧಿಯೊಬ್ಬನು ಬಹಳ ವರ್ಷಗಳ ಕಾಲ ದುರುಪಯೋಗಪಡಿಸಿದ್ದನು. ಆ ತಪ್ಪಿತಸ್ಥ ಭಾವನೆ ಆಕೆಯಲ್ಲಿ ಉಳಿದಿತ್ತು. ಆಕೆಯು ಹೇಳಿದಳು, 'ನಾನು ನನ್ನ ದೇಹದ ಆ ಭಾಗವನ್ನು ದ್ವೇಷಿಸಲಾರಂಭಿಸಿದೆ. ನನ್ನಲ್ಲಿ ಆ ದೇಹದ ಭಾಗವು ಇರಬಾರದೆಂದು ಭಾವಿಸಿದೆ. ದೇಹದ ಆ ಭಾಗವು ನನ್ನ ಅಸ್ತಿತ್ವವೇ ಅಲ್ಲ ಎಂದುಕೊಂಡೆ. ಆ ವ್ಯಕ್ತಿಯ ಮೇಲಿನ ದ್ವೇಷವನ್ನು ನನ್ನ ದೇಹದ ಭಾಗದ ಮೇಲೆ ತೋರಿಸಿದೆ' ಎಂದು.

ಆಕೆಯ ದ್ವೇಷವು ಆಳವಾಗಿದ್ದಿತು. ನಾನು ಆಕೆಯೊಡನೆ ಮಾತಾಡುವುದನ್ನು ಮುಂದುವರೆಸಿದೆ. ನಿಧಾನವಾಗಿ ಆಕೆಯೂ ಇನ್ನೂ ಹೆಚ್ಚಾಗಿ ತನ್ನ ಮನಸ್ಸನ್ನು ತೆರೆದುಕೊಂಡಳು. ಆಕೆಯಲ್ಲಿದ್ದ ತಪ್ಪಿತಸ್ಥ ಭಾವನೆಯನ್ನು ಹೊರತಂದಾಗ, ಆಕೆಯು ಅದರಿಂದ ಹೊರಬಂದಳು. ಆಕೆಯು ಮಾನಸಿಕವಾಗಿ ಗುಣಹೊಂದಿದಳು. ನಾನು ಆಕೆಗೆ ದೇಹದ ಆ ಭಾಗದಲ್ಲಿ ಧ್ಯಾನಿಸಲು ಒಂದು ಸಣ್ಣ ಧ್ಯಾನತಂತ್ರವನ್ನು ನೀಡಿದೆ. ಆಕೆಗೆ ಹೇಳಿದೆ, 'ನಿನ್ನ ದ್ವೇಷವನ್ನು ಆ ವ್ಯಕ್ತಿಯ ಮೇಲೆ ತೋರು, ಅಳು, ಕಿರುಚು, ರೋಧಿಸು, ಹೊಡೆ. ಬಾಗಿಲನ್ನು ಹಾಕಿಕೊಂಡು, ಒಂದು ದಿಂಬನ್ನು ತೆಗೆದುಕೊಂಡು ಆ ದಿಂಬೇ ಅವನೆಂದು ಭಾವಿಸಿ, ನಿನ್ನ ಸಿಟ್ಟನ್ನು ಅದರ ಮೇಲೆ ತೋರಿಸು. ಅದಾದ ನಂತರ ಮೌನವಾಗಿ ಕುಳಿತುಕೊಂಡು, ಆ ದೇಹದ ಭಾಗವೂ ನಿನ್ನದೇ ಎಂದು ಭಾವಿಸು. ನಿನ್ನ ಪ್ರೀತಿಯನ್ನು ಆ ದೇಹದ ಭಾಗಕ್ಕೆ ನೀಡು' ಎಂದು.

ನಿಮಗೆ ಆಶ್ಚರ್ಯವಾಗಬಹುದು, ಕೇವಲ ಹತ್ತು
ದಿನಗಳಲ್ಲಿ ಆಕೆಯ ಗೆಡ್ಡೆಯು ಮಾಯವಾಯಿತು
ಮತ್ತೆ ಮರುಕಳಿಸಲಿಲ್ಲ.

ನಮ್ಮ ಬಹಳಷ್ಟು ವ್ಯಾಧಿಗಳು, ತಪ್ಪಿತಸ್ಥ
ಭಾವನೆಯು ಮುಖ್ಯವಾದ ಪಾತ್ರವಹಿಸಿರುವ
ಮಾನಸಿಕ ತೊಂದರೆಗಳಿಂದಲೇ ಆಗಿರುತ್ತವೆ.

ಹೆಚ್ಚಿನ ಬಾರಿ ನಮ್ಮ ಶಕ್ತಿ ಸಂಚಾರವು ತಪ್ಪಿತಸ್ಥ ಭಾವನೆಯಿಂದ ತಡೆಯಲ್ಪಟ್ಟಿರುತ್ತದೆ. ಆಳವಾಗಿ ನೋಡಿದಲ್ಲಿ, ನಿಮ್ಮಿಂದ ಮುನ್ನಡೆಯಲು ಆಗದಿದ್ದಾಗ, ನಿರ್ಧಾರಗಳನ್ನು ತೆಗೆದುಕೊಳ್ಳಲಾಗದಿದ್ದಾಗ, ನಿಮ್ಮಲ್ಲಿ ಭಯವಿದ್ದಾಗ ಅಲ್ಲಿ ಸ್ವಲ್ಪವಾಗಿಯಾದರೂ ತಪ್ಪಿತಸ್ಥ ಭಾವನೆಯು ಅಡಗಿಕೊಂಡಿರುತ್ತದೆ.