KAILASA Library/ಜೀವನ್ಮುಕ್ತಿ/ಸ್ವೀಕಾರ - ಹೊರ ಬರಲು ಸುಂದರವಾದ ದಾರಿSign in
ಜೀವನ್ಮುಕ್ತಿ

ಸ್ವೀಕಾರ - ಹೊರ ಬರಲು ಸುಂದರವಾದ ದಾರಿ

This text was machine-transcribed from the printed book and may contain errors. Select the words and choose “Report a mistake”.

ನಿಮ್ಮ ಭೂತ ಹಾಗೂ ಭವಿಷ್ಯತ್ ಕಾಲಗಳ
ನೂಕಾಟಗಳಿಂದ ಬಿಡಿಸಿಕೊಳ್ಳಲು ಸ್ವೀಕಾರವು ಒಂದು
ಅದ್ಭುತವಾದ ಸಾಧನ. ಸ್ವೀಕಾರದಿಂದ ನೀವು
ನೇರವಾಗಿ ವರ್ತಮಾನದಲ್ಲಿರುತ್ತೀರಿ.
ಮೊದಲನೆಯದಾಗಿ ಬಾಹ್ಯ ಪ್ರಪಂಚದ ಹಾಗೂ
ಅಂತರಂಗ ಪ್ರಪಂಚದ ಆಗುಹೋಗುಗಳೆಲ್ಲವನ್ನು
ಸ್ವೀಕರಿಸಿರಿ. ಬಾಹ್ಯ ಪ್ರಪಂಚದಲ್ಲಿ ಏನೇ
ಸಮಸ್ಯೆಯಿದ್ದರೂ ಹಾಗೂ ಅಂತರಂಗ ಪ್ರಪಂಚದಲ್ಲಿ
ಏನೇ ಸಮಸ್ಯೆಗಳಿದ್ದರೂ ಅವನ್ನು ಸಂಪೂರ್ಣವಾಗಿ
ಹಾಗೆಯೇ ಸ್ವೀಕರಿಸಿರಿ. ನೀವು ಸಮಸ್ಯೆಗಳೆಂದು
ತಿಳಿದಿರುವ ಎಲ್ಲವನ್ನೂ ಸಂಕ್ಷೇಪಿಸಿ, ಅವನ್ನು
ಸಂಪೂರ್ಣವಾಗಿ ಸ್ವೀಕರಿಸಿರಿ.

ಎಲ್ಲಾ ತಪ್ಪಿತಸ್ಥ ಭಾವನೆಯನ್ನೂ, ಎಲ್ಲಾ ತಪ್ಪುಗಳನ್ನೂ, ಎಲ್ಲಾ ಸೋಲುಗಳನ್ನೂ ಸ್ವೀಕರಿಸಿರಿ. ನಿಮ್ಮಿಂದ ಸಮ್ಮತಿಸಲಾಗದಿದ್ದರೆ, ನಿಮ್ಮಿಂದ ಸ್ವೀಕರಿಸಲಾಗುತ್ತಿಲ್ಲವೆಂಬುದನ್ನು ಸ್ವೀಕರಿಸಿರಿ. ಆಗ ನೀವು ಆರಾಮವಾಗುವಿರಿ. ತಪ್ಪಿತಸ್ಥ ಭಾವನೆಯು ನಿಮ್ಮ ಮನಸ್ಸಿನಿಂದ ಬಿದ್ದು ಹೋಗುತ್ತದೆ.

ಈ ಸಣ್ಣ ಪ್ರಯೋಗವನ್ನು ಮಾಡಲು ಯತ್ನಿಸಿರಿ. ಕೇವಲ ಮೂರು ದಿನಗಳ ಕಾಲ ಸಂಪೂರ್ಣವಾದ ಸ್ವೀಕಾರದೊಂದಿಗೆ ವಿರಮಿಸಿರಿ. ಬರಿಯ ಮೂರು ದಿನಗಳ ಕಾಲ ಬಾಹ್ಯ ಹಾಗೂ ಅಂತರಂಗ ಪ್ರಪಂಚಗಳ ನೂಕಾಟಗಳಿಂದ ತಪ್ಪಿಸಿಕೊಂಡರೆ, ನಿಮ್ಮ ಸಂಪತ್ತನ್ನೆಲ್ಲಾ ಕಳೆದುಕೊಳ್ಳುವಿರೇನು? ಖಂಡಿತ ಇಲ್ಲ! ಅದರಿಂದ ಯಾವ ಸಮಸ್ಯೆಯೂ ಆಗುವುದಿಲ್ಲ. ಮೂರು ದಿನಗಳಲ್ಲಿ ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ. ಹಾಗಿದ್ದಲ್ಲಿ ನೀವೇಕೆ ಅದನ್ನು ಪ್ರಯತ್ನಿಸಬಾರದು? ಕೇವಲ ಮೂರು ದಿನಗಳ ಕಾಲ, ಶ್ರದ್ಧೆಯಿಂದ ಸಂಪೂರ್ಣವಾಗಿ ಶೇಕಡಾ100ರಷ್ಟು ನಿಮ್ಮ ಜೀವನದಲ್ಲಿರುವ ಎಲ್ಲವನ್ನೂ ಸ್ವೀಕರಿಸಿರಿ.

ಒಂದು ವೇಳೆ ನಿಮ್ಮಿಂದ ಶೇಕಡಾ100ರಷ್ಟನ್ನು ಸ್ವೀಕರಿಸಲಾಗದಿದ್ದರೆ, ನಿಮ್ಮಿಂದ ಅದನ್ನು 100ರಷ್ಟು ಸ್ವೀಕರಿಸಲಾಗುತ್ತಿಲ್ಲವೆಂದುದನ್ನು ಸ್ವೀಕರಿಸಿರಿ. 'ಬಾಹ್ಯ ಹಾಗೂ ಅಂತರಂಗ ಪ್ರಪಂಚಗಳಲ್ಲಿ ನನ್ನನ್ನು ನಾನು ಸ್ವೀಕರಿಸಲಾಗುತ್ತಿಲ್ಲ'ವೆಂಬ ಸ್ವೀಕಾರವೇ ನಿಮ್ಮನ್ನು ಭೂತ ಹಾಗೂ ಭವಿಷ್ಯತ್ ಕಾಲಗಳ ನೂಕಾಟದಿಂದ ಪಾರು ಮಾಡಲು ಸಾಧ್ಯವಾಗುತ್ತದೆ. 'ನನ್ನಿಂದ ಆಸೆ ಹಾಗೂ ಭಯಗಳ ನೂಕಲಾಟದಿಂದ ತಪ್ಪಿಸಿಕೊಳ್ಳಲಾಗುತ್ತಿಲ್ಲ, ನನ್ನಿಂದ ನಿಜತ್ವವನ್ನು ಸ್ವೀಕರಿಸಲಾಗುತ್ತಿಲ್ಲ' ಎಂದು ತಿಳಿದ ಕ್ಷಣವೇ, ಆ ತಿಳಿವಳಿಕೆಯೇ ಅದರ ಕೆಲಸವನ್ನು ಮಾಡಲಾರಂಭಿಸುತ್ತದೆ.

ಬಾಹ್ಯ ಹಾಗೂ ಅಂತರಂಗ ಪ್ರಪಂಚದಿಂದ
ವಿರಮಿಸಿ, ವರ್ತಮಾನ ಕ್ಷಣಕ್ಕೆ ಜಾರಲು ನಿಮ್ಮಿಂದ
ಸಾಧ್ಯವಾದರೆ, ಮೂರು ದಿನಗಳಲ್ಲಿ ನಿಮಗೆ ಒಂದು
ಮಿಂಚುನೋಟವು ಉಂಟಾಗುತ್ತದೆ:
ಜೀವನವೆಂದರೇನು, ವರ್ತಮಾನ
ಕ್ಷಣದಲ್ಲಿರುವುದೆಂದರೇನು, ಎಂಬುದರ ಬಗ್ಗೆ.
ನಿಮ್ಮಲ್ಲಿ ಅದು ಉಂಟಾದರೆ ನೀವು ಅನಂತ
ಆನಂದವನ್ನು, ಈ ಹಿಂದೆ ಅನುಭವಿಸದ
ನವಜೀವನವನ್ನು ಅನುಭವಿಸುತ್ತೀರಿ.

ನೀವು ಸುಮಾರು 30 ವರ್ಷಗಳ ಕಾಲ ನಿಮ್ಮ ಸಿದ್ಧಾಂತದ ಪ್ರಕಾರ ಬದುಕಿದ್ದೀರೆಂದು ತಿಳಿಯೋಣ. ಬರಿಯ ಮೂರು ದಿನಗಳ ಕಾಲ ಮಾತ್ರ ಹೊರಗಿನ ಪ್ರಪಂಚದಲ್ಲಿ ಬೇರೆಯವರನ್ನು ಬದಲಾಯಿಸಲು ಪ್ರಯತ್ನಿಸದಿರಿ. ಇಂತಹ ಮಹಾತಂತ್ರಗಳೊಂದಿಗೆ ಪ್ರಯೋಗಿಸಿದಾಗ, ಅವು ನಿಮ್ಮ ಅಂತರಂಗದಲ್ಲಿ ಅದ್ಭುತವಾದ ಕೆಲಸ ಮಾಡುತ್ತವೆ ಎಂದು ತಿಳಿಯಿರಿ. ಅವು ನಿಮ್ಮ ಅಂತರಂಗದಲ್ಲಿ ಪರಿವರ್ತನೆಯ ಸಂಸ್ಕರಣೆಯನ್ನು ಆರಂಭಿಸುತ್ತವೆ. ನಿಮ್ಮಿಂದ ಶ್ರದ್ಧಾವಂತರಾಗಿರಲು ಸಾಧ್ಯವಾಗದಿದ್ದರೆ ನಿಮ್ಮಿಂದ ಶ್ರದ್ಧಾವಂತರಾಗಿರಲು ಆಗುತ್ತಿಲ್ಲವೆಂಬುದನ್ನು ಅಂಗೀಕರಿಸಿರಿ. ಅಷ್ಟು ಶ್ರದ್ಧೆಯೇ ಸಾಕು. ನಿಮ್ಮಲ್ಲಿ ಬೇರೆಯೇದಾದ ಒಂದು ಅಂತರಂಗವನ್ನು ಕಾಣಲಾರಂಭಿಸುತ್ತೀರಿ.

ಧ್ಯಾನ ತಂತ್ರ

ತಲೆಯಿಂದ ಹೃದಯಕ್ಕೆ

ಒಂದು ಕಡೆ ಕುಳಿತುಕೊಂಡು ಕಣ್ಣುಗಳನ್ನು
ಮುಚ್ಚಿಕೊಳ್ಳಿರಿ. ಕೆಲವು ನಿಮಿಷಗಳ ಕಾಲ
ನಿಧಾನವಾದ, ಆಳವಾದ ಉಸಿರನ್ನು ತೆಗೆದುಕೊಳ್ಳಿರಿ.
ಅದರ ಜೊತೆಗೆ, ನಿಮ್ಮ ತಲೆಯು ನಿಮ್ಮ ಹೃದಯಕ್ಕೆ,
ಎದೆಯ ಭಾಗಕ್ಕೆ, ಒತ್ತಲ್ಪಡುತ್ತಿರುವುದನ್ನು
ಅನುಭವಿಸಿರಿ. ಸಂಪೂರ್ಣವಾಗಿ ತಲೆ
ಇಲ್ಲದವರಾಗಿರಿ. ನಿಮಗೀಗ ತಲೆ ಇಲ್ಲ, ನೀವು ತಲೆ
ಇಲ್ಲದವರು.

ನಿಮ್ಮ ಹೃದಯದಿಂದ ಉಸಿರಾಡುತ್ತಿರುವುದನ್ನು
ಅನುಭವಿಸಿರಿ. ನಿಮ್ಮ ಹೃದಯದ ಮೂಲಕ
ನೋಡುತ್ತಿರುವುದನ್ನು ಅನುಭವಿಸಿರಿ. ನಿಮ್ಮ
ಹೃದಯದಿಂದ ಮೂಸುತ್ತಿರುವುದನ್ನು ಅನುಭವಿಸಿರಿ.
ನಿಮ್ಮ ಹೃದಯದಿಂದ ಉಸಿರಾಡುತ್ತಿರುವುದನ್ನು
ಸ್ಪಷ್ಟವಾಗಿ ಅನುಭವಿಸಿರಿ. ಹೃದಯದಿಂದ ಆಲಿಸಿರಿ,
ಹೃದಯದಿಂದ ನೋಡಿರಿ, ಹೃದಯದಿಂದ
ಅನುಭವಿಸಿರಿ.

ಎದ್ದು ನಿಲ್ಲಿರಿ. ಹೃದಯದಿಂದ ಪ್ರಜ್ಞೆಯಿದಿರಿ
ಹಾಗೂ ನಿಮ್ಮ ಚಲನೆಗಳು ಸಾಧ್ಯವಾದಷ್ಟೂ
ನಿಧಾನವಾಗಿರಲಿ. ನಡೆಯಬೇಡಿರಿ. ಕೇವಲ ನಿಮ್ಮ
ದೇಹವನ್ನು ನಿಧಾನವಾಗಿ ಸುತ್ತಮುತ್ತ ಚಲಿಸಿರಿ.
ನಿಮ್ಮ ಹೃದಯದಿಂದ ಚಲಿಸುತ್ತಿದ್ದೀರಿ ಎಂಬುದನ್ನು
ನೆನಪಿನಲ್ಲಿಡಿ. ನಿಮ್ಮ ಕೇಂದ್ರ ಬಿಂದುವು ಹೃದಯ,
ತಲೆಯಲ್ಲ. ಪುನಃ ಪುನಃ ತಲೆಯನ್ನು ಮರೆತುಬಿಡಿ,
ಹೃದಯದಿಂದ ಚಲಿಸಿರಿ. ನೀವು ತಲೆ ಇಲ್ಲದ
ವ್ಯಕ್ತಿಯೆಂದು ನೆನಪಿಡಿ.

ಒಂದು ಸ್ಥಳದಲ್ಲಿ ನಿಲ್ಲಿರಿ. ಈಗ, ವೇಗವನ್ನು
ನಿಧಾನವಾಗಿ, ಬಲು ನಿಧಾನವಾಗಿ ಹೆಚ್ಚಿಸಿರಿ.
ಹೃದಯದಿಂದ ಚಲಿಸುವುದನ್ನು ನೆನಪಿಡಿರಿ,
ತಲೆಯಿಂದಲ್ಲ. ನಿಮ್ಮ ತಲೆಯನ್ನು ಮರೆತುಬಿಡಿ.
ನೀವು ತಲೆ ಇಲ್ಲದ, ಚಲಿಸುತ್ತಿರುವ ಒಂದು ಜೀವಿ.

{ಕೆಲವು ನಿಮಿಷಗಳ ನಂತರ}

ನೀವು ಎಲ್ಲಿರುವಿರೋ ಅಲ್ಲೇಂಯೇ ಕುಳಿತುಕೊಳ್ಳಿರಿ. ಸಂಪೂರ್ಣವಾಗಿ ತಲೆಯಿಲ್ಲದೆ ಇರಿ. ನಿಮ್ಮ ಹೃದಯದೊಂದಿಗೆ ಮಾತ್ರ ಕುಳಿತುಕೊಳ್ಳಿರಿ. ವಿರಮಿಸಿರಿ.

{ಕೆಲವು ನಿಮಿಷಗಳ ನಂತರ}

ನಿಧಾನವಾಗಿ, ಬಲು ನಿಧಾನವಾಗಿ, ಕಣ್ಣುಗಳನ್ನು ತೆರೆಯಿರಿ.