ನೀವೇ ಅತ್ಯುತ್ತಮರು, ಹೋಲಿಕೆ ಏಕೆ?
This text was machine-transcribed from the printed book and may contain errors. Select the words and choose “Report a mistake”.
ಹೋಲಿಕೆ ಮತ್ತು ಅಸೂಯೆ
ಭಯ, ಆಸೆ ಮತ್ತು ತಪ್ಪಿತಸ್ಥ ಭಾವನೆಗಳು ವ್ಯಕ್ತಿನಿಷ್ಠ ಭಾವನೆಗಳು. ನಾನು ಹೇಳುವುದೇನೆಂದರೆ, ಈ ಭಾವನೆಗಳುಂಟಾಗಲು ನಿಮಗೆ ಬೇರೊಬ್ಬರದಾಗಲೀ, ಬೇರೆ ವಸ್ತುವಿನದಾಗಲೀ ಅವಶ್ಯಕತೆ ಇಲ್ಲ. ಸ್ಪರ್ಶಿಸಲಾಗಲೀ, ಆಸ್ವಾದಿಸಲಾಗಲೀ ಅಥವಾ ಆಘ್ರಾಣಿಸಲಾಗಲೀ ಏನೂ ಇಲ್ಲದ ಒಂದು ಶಬ್ದರಹಿತ ಕೋಣೆಯಲ್ಲಿ ನೀವು ಕಣ್ಣುಮುಚ್ಚಿಕೊಂಡು ಇದ್ದೀರೆಂದು ಕಲ್ಪಿಸಿಕೊಳ್ಳಿರಿ. ಆಗಲೂ ಸಹ ಭಯ ಅಥವಾ ಆಸೆಯ ಭಾವನೆಗಳಿರಲು ಸಾಧ್ಯ. ಆದರೆ, ನಿಮ್ಮನ್ನು ಬೇರೊಬ್ಬರೊಂದಿಗೆ ಹೋಲಿಸಿಕೊಳ್ಳಲು ಮತ್ತು ಅವರ ಮೇಲೆ ಅಸೂಯೆಪಡಲು ಬೇರೊಬ್ಬರ ಇರುವಿಕೆ ಅಗತ್ಯ. ಆದುದರಿಂದ ಅಸೂಯೆಯು ಬಾಹ್ಯವಸ್ತುವಿಗೆ ಸಂಬಂಧಿಸಿದ ಒಂದು ಭಾವನೆ. ಅದು ಚುರುಕುಗೊಳ್ಳಲು ಒಂದು ವಸ್ತುವಿನ ಅಗತ್ಯವಿರುತ್ತದೆ.
ಒಂದು ಸಣ್ಣ ಕಥೆ :
ಒಂದು ಸಂಜೆ ಒಬ್ಬಾತನು ತನ್ನ ಮಡದಿಯ
ಜೊತೆಯಲ್ಲಿ ಒಂದು ಉದ್ಯಾನದ ಬೆಂಚಿನ ಮೇಲೆ
ಕುಳಿತಿದ್ದನು. ಒಬ್ಬ ಯುವಕನೂ ಆತನ ಸ್ನೇಹಿತೆಯೂ
ಅವರನ್ನು ಗಮನಿಸದೆಯೇ ಅವರ ಪಕ್ಕದಲ್ಲಿಯೇ
ಕುಳಿತರು. ಯುವಕನು ತನ್ನ ಸ್ನೇಹಿತೆಯೊಂದಿಗೆ
ಬಹಳ ಪ್ರೇಮದಿಂದ ಮಾತನಾಡಲಾರಂಭಿಸಿದನು.
ಇದನ್ನು ಕೇಳಿಸಿಕೊಳ್ಳುತ್ತಿದ್ದ ಮಡದಿಯು ತನ್ನ ಗಂಡನ ಕಿವಿಯಲ್ಲಿ ಪಿಸುಗುಟ್ಟಿದಳು, 'ಅವನು ಅವಳನ್ನು ಮದುವೆಯಾಗೋಣವೆಂದು ಕೇಳುತ್ತಿರಬಹುದೆಂದು ನನಗನ್ನಿಸುತ್ತಿದೆ. ಅವನನ್ನು ಎಚ್ಚರಿಸಲು ನೀವು ಕೆಮ್ಮುವುದೋ ಅಥವಾ ಇನ್ನೇನಾದರೂ ಮಾಡಬೇಕು!'
ಗಂಡನು ಹೇಳಿದನು, 'ಅವನನ್ನು ನಾನೇಕೆ
ಎಚ್ಚರಿಸಬೇಕು? ನನ್ನನ್ನು ಯಾರೂ ಎಚ್ಚರಿಸಲೇ
ಇಲ್ಲ!'
ಹೋಲಿಕೆಯಿಂದ ಅಸೂಯೆಯು ಹುಟ್ಟುತ್ತದೆ. ನಾವು ಯಾವಾಗಲೂ ಬೇರೆಯವರೊಂದಿಗೆ ವಿವಿಧ ವಿಷಯಗಳಲ್ಲಿ ಹೋಲಿಸಿಕೊಳ್ಳುತ್ತೇವೆ; ಚೆಲುವು, ಐಶ್ವರ್ಯ, ತಿಳವಳಿಕೆ, ಖ್ಯಾತಿ ಹಾಗೂ ಸ್ನೇಹಗಳೆಂಬ ಹಲವಾರು ವಿಚಾರಗಳಲ್ಲಿ ನಾವು ಬೇರೆಯವರೊಂದಿಗೆ ಹೋಲಿಸಿಕೊಂಡಾಗ, ಆ
ಬೇರೆಯವರು ನಮಗಿರುವುದಕ್ಕಿಂತಲೂ ಇನ್ನೂ
ಹೆಚ್ಚಿನದೇನನ್ನೋ ಹೊಂದಿದ್ದಾರೆಂದುಕೊಂಡು
ಅಸೂಯೆಯಲ್ಲಿ ಸಿಕ್ಕಿಬೀಳುತ್ತೇವೆ.
ಹೋಲಿಕೆಯು ಬೀಜವಾದರೆ ಅಸೂಯೆಯೇ ಫಲ!
ಹೋಲಿಕೆ ಏಕೆ?
ನಾವು ನಿಜವಾಗಿಯೂ ಏಕೆ ನಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದು?
ಮೊದಲನೆಯದಾಗಿ ನಾವು
ಹೋಲಿಸಿಕೊಳ್ಳುವುದೇಕೆಂದರೆ, ನಾವು ನಮ್ಮನ್ನೇ
ಅರ್ಥಮಾಡಿಕೊಂಡಿಲ್ಲದೆ ಇರುವುದರಿಂದ. ನಾವು
ಯಾರೆಂದೂ, ನಮಗೇನಿದೆ ಎಂದೂ ನಮಗೆ
ಅರಿವಿಲ್ಲ.
ಎರಡನೆಯದಾಗಿ, ನಾವು ಹುಟ್ಟಿದಾಗಿನಿಂದಲೂ
ಬೇರೆಯವರ ಮೇಲೆ ಆಧಾರಿತವಾಗಿ ನಮ್ಮನ್ನು
ಮಾಪನ ಮಾಡಿಕೊಳ್ಳುವುದನ್ನೇ ಸಮಾಜವು
ರೂಢೀಕರಿಸಿದೆ. ಈ ಹೋಲಿಕೆಯು ಬಾಲ್ಯದಿಂದಲೂ
ಪ್ರಾರಂಭವಾಗುತ್ತದೆ. ಶಾಲೆಯಲ್ಲಿ ವಿವಿಧ
ದರ್ಜೀಕರಣ ವ್ಯವಸ್ಥೆಯಿಂದ ಮಗುವಿಗೆ
ಬೇರೆಯವರೊಂದಿಗೆ ಪೈಪೋಟಿ ಹಾಗೂ
ಹೋಲಿಕೆಗಳು ಪ್ರಾರಂಭವಾಗುತ್ತವೆ.
ಒಂದು ಮಗುವಿನ ಗಣಿತಶಾಸ್ತ್ರದ ಸಾಮರ್ಥ್ಯ, ವೈಜ್ಞಾನಿಕ ಪ್ರವೃತ್ತಿ, ಕಲಾ ಚಾತುರ್ಯ, ಆಟೋಟ ಸಾಮರ್ಥ್ಯ, ಸಂಗೀತದ ಅಭಿರುಚಿ, ಮುಂತಾದ ಅನೇಕ ಅರ್ಹತೆಯನ್ನುಳಿಯಲು ನಿಗದಿಯಾದ ಅಳತೆಯ ಮಟ್ಟಗಳಿವೆ. ಆದರೆ, ಒಂದು ನಿಗದಿಯಾದ ಅಳತೆಗೋಲನ್ನು ಉಪಯೋಗಿಸಿಕೊಂಡು ಒಂದು ಮಗುವಿನ ಯೋಗ್ಯತೆಯನ್ನುಳಿಯಲು ಪ್ರಯತ್ನಿಸಿದಾಗ, ಹೋಲಿಕೆಯನ್ನು ಅಳತೆಗೋಲನ್ನಾಗಿ ಮಾಡಿಕೊಳ್ಳುತ್ತಿದ್ದೇವಲ್ಲದೆ ಬೇರೇನಲ್ಲ ಎಂದು ನಾವು ಅರಿತುಕೊಳ್ಳುವುದಿಲ್ಲ. ಶಾಲೆಗಳಲ್ಲಿರುವ ಪುರಸ್ಕಾರ ಪದ್ಧತಿಯಿಂದ ಎಲ್ಲ ಮಕ್ಕಳನ್ನೂ ಅಕ್ಷರಶಃ ದಂಡಿಸುತ್ತಿದ್ದೇವೆ.
ಮಗುವಿಗೆ ಬೇರೆಯವರನ್ನು ನೋಡಿ, ಅವರೊಂದಿಗೆ ಹೋಲಿಸಿಕೊಂಡೇ ತನ್ನ ಯೋಗ್ಯತೆಯನ್ನೂ, ತನ್ನನ್ನೂ ಅರಿತುಕೊಳ್ಳುವುದು ಅಭ್ಯಾಸವಾಗಿಬಿಡುತ್ತದೆ. ತಾನೇನು ಎನ್ನುವುದನ್ನು ಆಧರಿಸಿ ಮಗುವಿಗೆ ತನ್ನ ಮೇಲಿನ ತಿಳಿವಳಿಕೆ ಇರುವುದಿಲ್ಲ. ಬೇರೆಯವರ ಮೇಲೆ ಆಧರಿಸಿ ಮಾತ್ರವೇ ತನ್ನನ್ನು ತಾನು ತಿಳಿದುಕೊಂಡಿರುತ್ತದೆ.
ಒಂದು ಸಣ್ಣ ಕಥೆ:
ಒಮ್ಮೆ ಒಬ್ಬಾತನು ಒಂದು ರಸ್ತೆ ಅಪಘಾತದ
ವಿಷಯವಾಗಿ ನ್ಯಾಯಾಲಯದಲ್ಲಿ ಸಾಕ್ಷಿ
ಹೇಳುತ್ತಿದ್ದನು. ಇದ್ದಕ್ಕಿದ್ದಂತೆಯೇ, ತಾನು
ಮಾತನಾಡುತ್ತಿದ್ದಾಗ, ನ್ಯಾಯಾಲಯದ
ವರದಿಗಾರನು ಬರೆದುಕೊಳ್ಳುತ್ತಿದ್ದದ್ದನ್ನು
ಗಮನಿಸಿದನು. ಅಲ್ಲದೆ ತಾನು ಬೇಗ ಬೇಗ
ಮಾತನಾಡುತ್ತಿದ್ದಾಗ ವರದಿಗಾರನೂ ಬೇಗ ಬೇಗನೆ
ಬರೆಯುತ್ತಿದ್ದನು.
ತಕ್ಷಣವೇ ಆತನು ವರದಿಗಾರನಿಗೆ ಹೇಳಿದನು,
'ದಯವಿಟ್ಟು ಅಷ್ಟು ಬೇಗ ಬರೆಯಬೇಡಿರಿ. ನನಗೆ
ನಿಮ್ಮಷ್ಟು ವೇಗವಾಗಿ ಮುಂದೆ ಸಾಗಲು
ಸಾಧ್ಯವಾಗುತ್ತಿಲ್ಲ' ಎಂದು.
ನಿಮ್ಮ ಮೇಲೆ ನೀವು ತೆಗೆದುಕೊಳ್ಳುವ
ಪ್ರತಿಯೊಂದು ತೀರ್ಮಾನವೂ ಇನ್ನೊಬ್ಬರೊಂದಿಗೆ
ಯಾವುದಾದರೊಂದು ಹೋಲಿಕೆಯ
ಆಧಾರದಿಂದಿರುತ್ತದೆ. ಆದರೆ ಆ ‘ಇನ್ನೊಬ್ಬರು’
ಎಂಬ ವಿಚಾರ ನಿಮ್ಮ ಮನಸ್ಸಿಗೇಕೆ ಬರುತ್ತದೆ?
ಅದೇಕೆಂದರೆ, ನೀವು ಅಂತರಾವಲೋಕನ
ಮಾಡಿಕೊಂಡು ನೀವು ಯಾರೆಂದು ತಿಳಿದುಕೊಂಡಿಲ್ಲ.
ಆನಂದವನ್ನು ಹಾಗೂ ನಿಮ್ಮೊಳಗಿರುವ ಪ್ರಚಂಡ
ನಿಗೂಢ ಶಕ್ತಿಯನ್ನು ನೀವು ಅನುಭವಿಸಿಲ್ಲ.
ನೀವಿರುವಂತೆಯೇ ನಿಮ್ಮನ್ನು ನೀವು
ವ್ಯಕ್ತಪಡಿಸಲಾಗದೇ ಇರುವುದರಿಂದ ನೀವು
ಪರಿಪೂರ್ಣರಲ್ಲ ಎಂದು ಭಾವಿಸುತ್ತೀರಿ.
ಆದುದರಿಂದ ಒಳಗಿನ ಬರಿದುತನ ಮತ್ತು
ಅಪರಿಪೂರ್ಣತೆಯು, ಬೇರೆಯವರಿಗಿಂತಲೂ ನೀವು
ಕೀಳೆಂಬ ಭಾವನೆಯನ್ನುಂಟುಮಾಡುತ್ತದೆ.
ಹೋಲಿಕೆಯ ನಿಷ್ಪ್ರಯೋಜಕತೆ
ಬುದ್ಧನು ಹೇಳುತ್ತಾನೆ, ‘ಸಂಬಂಧ ಎಂಬುದು
ಇಲ್ಲದೆಯೇ ಏನೂ ಇರುವುದಿಲ್ಲ' ಎಂದು. ಒಂದು
ವೇಳೆ, ಒಂದು ಹೊಸ ಗ್ರಹದಲ್ಲಿ ನೀವೊಬ್ಬರೇ
ಇದ್ದಿದ್ದರೆ, ನೀವು ಯಾರೊಡನೆಯಾದರೂ ಹೇಗೆ
ಹೋಲಿಸಿಕೊಳ್ಳುತ್ತಿದ್ದಿರಿ? ನೀವು ನಿಮ್ಮನ್ನು
ಎತ್ತರವಾಗಿರುವವರೆಂದೋ ಅಥವಾ
ಕುಳ್ಳಾಗಿರುವವರೆಂದೋ, ಕುರೂಪಿಯಾಗಿರು-
ವವರೆಂದೋ ಅಥವಾ ಸುಂದರವಾಗಿರು-
ವವರೆಂದೋ, ಶ್ರೀಮಂತರೆಂದೋ ಅಥವಾ
ಬಡವರೆಂದೋ,
ಜಾಣರೆಂದೋ ಅಥವಾ
ದಡ್ಡರೆಂದೋ ಹೇಳಿಕೊಳ್ಳ-
ಲಾಗುತ್ತಿತ್ತೆ? ಇಲ್ಲ!
ಹೋಲಿಸಿಕೊಳ್ಳಲು ಯಾರೂ ಇಲ್ಲದಿದ್ದಾಗ, ನಾವು
ಕೇವಲ ಇರುತ್ತೇವೆ, ಅಷ್ಟೇ!
ತಿಳಿಯಿರಿ, ಈಗಲೂ ನಿಮ್ಮನ್ನು ಯಾರೊಂದಿಗೂ
ಹೋಲಿಸಿಕೊಳ್ಳಲು ಯಾವ ಅಳತೆಗೋಲೂ ಇಲ್ಲ.
ಪ್ರತಿಯೊಬ್ಬ ವ್ಯಕ್ತಿಯೂ ಅನನ್ಯವೇ.
ಒಂದು ಸಿಂಹವನ್ನೂ ಒಂದು ಕುದುರೆಯನ್ನೂ
ಹೋಲಿಸಬಲ್ಲಿರಾ? ಹೂವುಗಳೊಂದಿಗಾಗಲೀ,
ಪಕ್ಷಿಗಳೊಂದಿಗಾಗಲೀ, ಬೆಟ್ಟಗಳೊಂದಿಗಾಗಲೀ
ಎಂದಿಗಾದರೂ ನಮ್ಮನ್ನು
ಹೋಲಿಸಿಕೊಳ್ಳುತ್ತೇವೆಯೇ? ಹಾಗಾದರೆ ನಮ್ಮನ್ನು
ಇತರ ಮನುಷ್ಯರೊಂದಿಗೇಕೆ ಹೋಲಿಸಿಕೊಳ್ಳಬೇಕು?
ಒಂದು ಸುಂದರವಾದ ಜೈನ ಕಥೆ :
ಒಮ್ಮೆ ಒಬ್ಬ ರಾಜನು ತನ್ನ ಪಕ್ಕದ
ರಾಜರುಗಳಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಲು
ಒಂದು ತಂತ್ರವನ್ನು ಕೇಳಬೇಕೆಂದು ಒಬ್ಬ ಗುರುಗಳ
ಬಳಿಗೆ ಹೋದನು. ಆತನು ಗುರುಗಳ ಮುಂದೆ
ಕುಳಿತು ತನ್ನ ಆಗಮನದ ಉದ್ದೇಶವನ್ನು
ಹೇಳಲಾರಂಭಿಸಿದನು. ಗುರುಗಳು ರಾಜನು
ಹೇಳುತ್ತಿದ್ದುದನ್ನು ಸಹನೆಯಿಂದ ಆಲಿಸಿದರು.
ನಂತರ ಅವರು ಆತನನ್ನು ಅರಮನೆಯ ತೋಟದ ಒಂದು ಗುಲಾಬಿ ಹೂವಿನ ಗಿಡವೂ, ಒಂದು ಸೈಪ್ರಸ್ ಗಿಡವೂ ಪಕ್ಕಪಕ್ಕದಲ್ಲಿ ಬೆಳೆಯುತ್ತಿದ್ದಲ್ಲಿಗೆ ಹೋಗಿ ಎಂದು ಹೇಳಿ, 'ಅವೇ ನಿನ್ನ ಗುರುಗಳು. ನೀನು
| ನಿಮಗೆ ನೋವಾದಾಗ ನಿಮಗೊಂದು ಗಾಯವಿದೆ ಎಂದರಿತುಕೊಳ್ಳಿರಿ | ಕಲಿಯಬೇಕಾದುದನ್ನು ಅವು ಕಲಿಸಬಲ್ಲವು' ಎಂದು ಹೇಳಿದರು. ರಾಜನು ತೋಟಕ್ಕೆ ಹೋಗಿ, ಆ ಎರಡು ಗಿಡಗಳನ್ನು ನೋಡಿದನು. ಆದರೆ ತಾನು ಅವುಗಳಿಂದ ಕಲಿಯಬೇಕಾಗಿದ್ದುದೇನು ಎಂಬುದನ್ನು ತಿಳಿಯದಾದನು. ಆತನು ಗುರುಗಳ ಬಳಿಗೆ ಹಿಂತಿರುಗಿ ಹೋಗಿ, 'ಗುರುಗಳೇ, ನೀವು ಹೇಳಿದುದರ ಅರ್ಥವೇನು? ಈ ಗಿಡಗಳು ಏನನ್ನು ಮತ್ತು ಹೇಗೆ ನನಗೆ ಬೋಧಿಸಬಲ್ಲವು ಎಂಬುದು ನನಗೆ ಅರ್ಥವಾಗುತ್ತಿಲ್ಲ' ಎಂದು ಹೇಳಿದನು. |
ಗುರುಗಳು ರಾಜನನ್ನು ಆ ಗಿಡಗಳ ಬಳಿಗೆ ಕರೆದುಕೊಂಡು ಹೋಗಿ, ‘ಈ ಸೈಪ್ರಸ್ ಗಿಡವು ಎಷ್ಟೋ ವರ್ಷಗಳಿಂದಲೂ ಗುಲಾಬಿ ಗಿಡದ ಪಕ್ಕದಲ್ಲಿಯೇ ಇದೆ. ಅದು ಒಂದು ಸಲವಾದರೂ ತಾನು ಗುಲಾಬಿಗಿಡವಾಗಬೇಕೆಂದುಕೊಳ್ಳಲಿಲ್ಲ. ಅಂತೆಯೇ ಗುಲಾಬಿಗಿಡವೂ ಸಹ ಎಂದಿಗೂ ಸೈಪ್ರಸ್ ಗಿಡವಾಗಬೇಕೆಂದು ಹಂಬಲಿಸಲಿಲ್ಲ. ಒಂದು ವೇಳೆ ಮನುಷ್ಯನೇನಾದರೂ ಸೈಪ್ರಸ್ ಗಿಡವಾಗಿದ್ದಿದ್ದರೆ, ಗುಲಾಬಿ ಗಿಡಕ್ಕೆ ತನ್ನನ್ನು ಹೋಲಿಸಿಕೊಂಡು, ಗುಲಾಬಿ ಗಿಡವು ಜನರಿಂದ ಪಡೆಯುತ್ತಿದ್ದ ಮನ್ನಣೆಯನ್ನು ಕಂಡು ಅಸೂಯೆಪಡುತ್ತಿದ್ದನು. ಅಥವಾ ಅವನೇನಾದರೂ ಗುಲಾಬಿಗಿಡವೇ ಆಗಿದ್ದಿದ್ದರೆ ದಿನವೆಲ್ಲಾ ಜನರು ತನ್ನನ್ನು ಕಿತ್ತುಬಿಡುವ ಚಿತ್ರಹಿಂಸೆಯಿಲ್ಲದೆ ಸೈಪ್ರಸ್ ಗಿಡವು ಎಷ್ಟು ನೆಮ್ಮದಿಯಾಗಿದೆ ಎಂದು ಆ ಗಿಡವನ್ನು ಅಸೂಯೆಯಿಂದ ನೋಡುತ್ತಿದ್ದನು!’ ಎಂದರು.
ಈ ಎರಡು ಗಿಡಗಳೂ ಏಳಿಗೆ
ಹೊಂದಿದುವೇಕೆಂದರೆ, ಅವು ತಮ್ಮ ಚೈತನ್ಯವನ್ನು
ಬೇರೆಯವರ ಜೊತೆ ಹೋಲಿಕೆಗೆ ಉಪಯೋಗಿಸದೇ
ತಮ್ಮ ಎಲ್ಲಾ ಚೈತನ್ಯವನ್ನು ತಮ್ಮದೇ
ಬೆಳವಣಿಗೆಗಾಗಿ ಉಪಯೋಗಿಸಿಕೊಂಡಿವೆ.
ನೀವು ಹೋಲಿಸಿಕೊಳ್ಳುವುದನ್ನು ನಿಲ್ಲಿಸಿದ ಕ್ಷಣವೇ ಅಸೂಯೆಯು ಅದೃಶ್ಯವಾಗಿಬಿಡುತ್ತದೆ. ಅದರ ಬದಲಾಗಿ, ನಿಮ್ಮಲ್ಲೇ ನೀವು ಸಮಾಧಾನ ಹೊಂದಿ, ಇಷ್ಟೆಲ್ಲವನ್ನೂ ಕೊಟ್ಟು ನಿಮ್ಮನ್ನು ಒಬ್ಬ ಅಪೂರ್ವವ್ಯಕ್ತಿಯನ್ನಾಗಿ ಮಾಡಿದುದಕ್ಕಾಗಿ ವಿಶ್ವಶಕ್ತಿಗೆ ಕೃತಜ್ಞರಾಗಿರಲು ಆರಂಭಿಸುತ್ತೀರಿ.
ಅದನ್ನು ಬಿಟ್ಟು ಬೇರೆಯವರ ಮೇಲೆ ಅಸೂಯೆಪಟ್ಟರೆ ಕಷ್ಟಕ್ಕೀಡಾಗುತ್ತೀರಿ. ಒಂದೇ ಸಮನೆ ಬೇರೆಯವರೊಂದಿಗೆ ಬಹಿರಂಗವಾಗಿ ಅಥವಾ ನಿಮ್ಮೊಳಗೆ ಅಂತರ್ಗತವಾಗಿ ಹೋರಾಡುತ್ತಿರುತ್ತೀರಿ. ಯಾರಾದರೂ ನಕ್ಕರೆ, ಅವರು ನಿಮ್ಮನ್ನು ನೋಡಿಯೇ ನಗುತ್ತಿದ್ದಾರೆಂದುಕೊಳ್ಳುತ್ತೀರಿ. ಯಾರಾದರೂ ಮತ್ತೊಬ್ಬರೊಡನೆ ಸ್ನೇಹದಿಂದಿದ್ದರೆ, ನೀವು ಒಂಟಿತನದಿಂದ ಇದ್ದು, ಅವರ ಮೇಲೆ ಅಸೂಯೆಪಡುತ್ತೀರಿ. ವಾಸ್ತವವಾಗಿ ಯಾರಾದರೂ ನಿಮ್ಮನ್ನು ನೋಯಿಸಲೆಂದೇ ಕಾಯುತ್ತಿರುವಿರಿ. ನಿಮ್ಮೊಳಗೆ ಉಂಟಾಗಲು ಆಸ್ಪದ ಕೊಡುವ ಅಸೂಯೆಯು ಒಂದು ಹಸೀ ಗಾಯದಂತೆ – ನಿಮ್ಮನ್ನು ನೋಯಿಸುವ ಉದ್ದೇಶವಿಲ್ಲದೆ ಮಾಡಿದ ಕಾರ್ಯವೂ ಸಹ ಗಾಯಕ್ಕೇ ತಗುಲಿ ನೋಯಿಸುತ್ತದೆ.
ಆದುದರಿಂದ, ನಿಮಗೆ ನೋವಾದಾಗ ನಿಮಗೊಂದು ಗಾಯವಿದೆ ಎಂದರಿತುಕೊಳ್ಳಿರಿ.
ನೋವಿನ ಬಾಧ್ಯತೆಯನ್ನು ಬೇರೊಬ್ಬರ ಮೇಲೆ
ಹಾಕಬೇಡಿರಿ. ಗಾಯವು ವಾಸಿಯಾಗಬೇಕು;
ಅಸೂಯೆಯು ಕರಗಿಹೋಗಬೇಕು. ಆಗ ಯಾರೂ
ನಿಮ್ಮನ್ನು ನೋಯಿಸಲು ಸಾಧ್ಯವಿಲ್ಲ. ಸ್ಪಷ್ಟವಾಗಿ
ತಿಳಿಯಿರಿ, ನಿಮ್ಮ ಮೌನ ಸಮ್ಮತಿಯಿಲ್ಲದೆ ಯಾರೂ
ನಿಮ್ಮನ್ನು ನೋಯಿಸಲಾಗುವುದಿಲ್ಲ.
ನೀವು ಒಬ್ಬರಿಗೊಬ್ಬರು ಹೋಲಿಸಿಕೊಳ್ಳುವುದೇಕೆಂದರೆ ನಿಮ್ಮಲ್ಲೇನೋ ಕೊರತೆ ಇದೆ ಎಂದು ನಿಮಗನಿಸುವುದರಿಂದ. ಖಂಡಿತವಾಗಿಯೂ, ನಿಮ್ಮ ನಿಜವಾದ ಅಸಾಧಾರಣ ಸಾಮರ್ಥ್ಯದ ಬಗ್ಗೆ ನಿಮಗರಿವಿಲ್ಲ! ಅದು ಇದ್ದಿದ್ದರೆ ಒಂದು ಸೃಜನಾತ್ಮಕವಾದ, ಪೂರ್ಣವಾದ ಜೀವನವನ್ನು ನಡೆಸುವುದು ಹೇಗೆ ಎಂಬುದರ ಉತ್ತರವನ್ನು ಹುಡುಕುವುದರಲ್ಲಿ ಒಂದು ಕ್ಷಣವನ್ನೂ ಹೊರಪ್ರಪಂಚದಲ್ಲಿ ಕಳೆಯುತ್ತಿರಲಿಲ್ಲ. ನಿಮಗೆ ಬೇಕಾದಷ್ಟು ಆತ್ಮವಿಶ್ವಾಸ, ಬುದ್ಧಿಶಕ್ತಿ ಮತ್ತು ಕಂಪಿಸುತ್ತಿರುವ ಚೈತನ್ಯಗಳು ಎಲ್ಲವೂ ಈಗಾಗಲೇ ನಿಮ್ಮಲ್ಲಿವೆ. ಭೂಲೋಕದಲ್ಲಿ ದೇವರಂತೆ ಜೀವಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ನಿಮ್ಮ ಬಗ್ಗೆ, ನೀವು ಸೀಮಿತವಾಗಿದ್ದೀರಿ ಎಂಬ ನಂಬಿಕೆಯನ್ನು ಉಂಟುಮಾಡುವ ವಿಷಯಗಳನ್ನು ನಂಬಬೇಡಿರಿ. ಕೇವಲ ಒಳಹೊಕ್ಕು ನೋಡಿರಿ! ಪ್ರಯೋಗಮಾಡಿ, ನೀವಾಗಿಯೇ ಒಳಹೊಕ್ಕು ನೋಡಿ ಸತ್ಯವನ್ನು ಕಂಡುಕೊಳ್ಳಿರಿ. ಆಗ ನೀವು ಈ ಎಲ್ಲ ಗುಣಗಳನ್ನೂ ಪ್ರಯಾಸವಿಲ್ಲದೆಯೇ ಪ್ರಸರಿಸುತ್ತೀರಿ.
ಏಣಿಯ ಮೇಲೆ ಮತ್ತು ಕೆಳಗೆ
ಒಂದು ಬೃಹತ್ತಾದ ಏಣಿ ಇತ್ತೆಂದುಕೊಳ್ಳಿರಿ
ಹಾಗೂ ಸೌಂದರ್ಯ ಅಥವಾ ಬುದ್ಧಿವಂತಿಕೆಯಂತಹ
ಯಾವುದೇ ವಿಷಯದಲ್ಲಿ ಎಲ್ಲರನ್ನೂ ಅವರವರ
ಯೋಗ್ಯತಾನುಸಾರವಾಗಿ ಅದರ ಮೇಲೆ
ನಿಂತುಕೊಳ್ಳುವಂತೆ ಹೇಳಲಾಗಿದೆ ಎಂದುಕೊಳ್ಳಿರಿ.
ನೀವು ಬಹುಶಃ ಆ ಏಣಿಯ ಮಧ್ಯದಲ್ಲಿ ಎಲ್ಲಿಯೋ
ಇರುತ್ತಿದ್ದಿರಿ. ನಿಮಗಿಂತಲೂ ಮೇಲೆ ಬಹಳ
ಜನರಿರುತ್ತಾರೆ, ಹಾಗೆಯೇ ನಿಮಗಿಂತಲೂ ಕೆಳಗೂ
ಬಹಳ ಜನರಿರುತ್ತಾರೆ. ಮೇಲಿರುವವರನ್ನು ನೋಡಿ
ನಿಮಗೆ ಅಸೂಯೆಯಾಗುತ್ತದೆ. ಆದುದರಿಂದ
ಏಣಿಯಲ್ಲಿ ಇನ್ನೂ ಮೇಲೆ ಏರುವ
ಅಭಿಲಾಷೆಯಿಂದ, ಅವರಿಗಿಂತಲೂ ಉತ್ತಮರಾಗಲು
ಸತತವಾಗಿ ಪ್ರಯತ್ನ ಮಾಡುತ್ತೀರಿ.
ಈಗ, ನಿಮ್ಮ ಜೀವನದ ಯಾವುದೋ ಒಂದು ಹಂತದಲ್ಲಿ ಈ ಕೊನೆಯಿಲ್ಲದ ಆಟದ ನಿಷ್ಪ್ರಯೋಜಕತೆಯನ್ನು ಬಹುಶಃ ಅರಿತುಕೊಳ್ಳುವಿರಿ. ಆಗ ನಿಮಗೆ ಏಣಿಯನ್ನು ಬಿಟ್ಟು ಜಿಗಿಯಬೇಕೆನಿಸುತ್ತದೆ; ನೀವು ಕೆಳಗೆ ನೋಡುವಿರಿ. ಈಗೇನು ಕಾಣುತ್ತದೆ? ನಿಮಗಿಂತಲೂ ಕೆಳಗೆ ಅನೇಕರಿರುತ್ತಾರೆ. ಇದ್ದಕ್ಕಿದ್ದಂತೆ ಅಷ್ಟೊಂದು ಜನರು ನಿಮಗಿಂತಲೂ ಕೆಳಗಿದ್ದಾರಲ್ಲಾ ಎಂದುಕೊಂಡು ನಿಮಗಿಂತಲೂ ಮೇಲಿದ್ದವರನ್ನು ನೋಡಿದಾಗ ನೀವೆಷ್ಟು ಕೀಳೆನಿಸಿತ್ತೋ ಅಷ್ಟು ಕೀಳಲ್ಲವೆಂದು ಸಂತೋಷಪಡಲಾರಂಭಿಸುತ್ತೀರಿ.
ಇಲ್ಲಿಯೇ ಹೋರಾಟ ಆರಂಭವಾಗುವುದು. ಮೇಲೆ ನೋಡಿದಾಗ ಸಂಕಟವಾಗುತ್ತದೆ, ಆದರೆ > ನಾವೆಲ್ಲರೂ ದುಡಿಯುವುದು, ಗಳಿಸುವುದು ಮತ್ತು ಇರುವುದರ ನಡುವೆಯೇ ವರ್ತಿಸುತ್ತೇವೆ.
ಕೆಳಗೆ ನೋಡಿದಾಗ ಸಂತೋಷವಾಗುತ್ತದೆ. ಈಗ ಜೀವನವೆಲ್ಲಾ ಈ ಏಣಿಯನ್ನು ಹತ್ತುವುದರಲ್ಲಿಯೇ ಕಳೆಯುವುದರ ನಿಷ್ಪ್ರಯೋಜಕತೆಯನ್ನು ತಿಳಿಯಲಾರಂಭಿಸಿದರೂ, ಏಣಿಯಿಂದ ಜಿಗಿದುಬಿಡಲಾಗುವುದಿಲ್ಲ, ಏಕೆಂದರೆ ಜಿಗಿದುಬಿಟ್ಟರೆ, ನೀವು ಒಬ್ಬೊಂಟಿಯಾಗಿಬಿಡುತ್ತೀರಿ – ನಿಮಗಿಂತಲೂ ಮೇಲೆಯಾಗಲೀ ಕೆಳಗಾಗಲೀ ಯಾರೂ ಇರುವುದಿಲ್ಲ.