ದುಡಿಯುವುದು, ಗಳಿಸುವುದು ಮತ್ತು ಇರುವುದು
This text was machine-transcribed from the printed book and may contain errors. Select the words and choose “Report a mistake”.
ನಾವೆಲ್ಲರೂ ದುಡಿಯುವುದು, ಗಳಿಸುವುದು ಮತ್ತು ಇರುವುದೆಂಬ ಈ ಮೂರು ಅಕ್ಷಗಳ ನಡುವೆಯೇ ಕಾರ್ಯನಿರ್ವಹಿಸುತ್ತೇವೆ. ಗಳಿಸಲೆಂದು ದುಡಿದು ಇರುವಿಕೆಯನ್ನು ಅನುಭವಿಸದೆ ಇರುವುದು, ನಮ್ಮೆಲ್ಲಾ ದುರವಸ್ಥೆಗಳಿಗೂ ಏಕೈಕ ಕಾರಣ. ದುಡಿಯುವುದು ಯಾವತ್ತೂ ಗಳಿಸುವುದನ್ನು ಹಿಂಬಾಲಿಸಿ ಬಂದು ಸೇರಲಾಗುವುದೇ ಇಲ್ಲ. ಚೆನ್ನಾಗಿ ದುಡಿದು ಒಂದು ಆಸೆಯನ್ನು ಪೂರೈಸಿಕೊಂಡಾಗಲೆಲ್ಲವೂ ಇದ್ದಕ್ಕಿದ್ದಂತೆ ಆ ಆಸೆಯು ನಿಮ್ಮ ಮೇಲಿನ ಸೆಳೆತವನ್ನು ಕಳೆದುಕೊಳ್ಳುತ್ತದೆ.
ಜ್ಞಾನ ಸದ್ಗುರುಗಳಾದ ರಮಣ
ಮಹರ್ಷಿಯವರು ಸುಂದರವಾಗಿ ಹೇಳುತ್ತಾರೆ,
'ಮನಸ್ಸು ಎಂಬುದು ಹೇಗಿರುತ್ತದೆ ಎಂದರೆ
ಪಡೆಯುವ ತನಕ ಒಂದು ಸಣ್ಣ ಸಾಸುವೆ ಕಾಳನ್ನು
ಒಂದು ದೊಡ್ಡ ಪರ್ವತದಷ್ಟು ಇರುವಂತೆ
ತೋರಿಸುತ್ತದೆ. ಅದನ್ನು ಪಡೆದ ತಕ್ಷಣವೇ ಒಂದು
ಪರ್ವತವೂ ಸಹ ಒಂದು ಸಣ್ಣ ಸಾಸುವೆ ಕಾಳಿನಷ್ಟು
ಕ್ಷುಲ್ಲಕವಾಗಿ ತೋರುವುದು'.
ಒಂದು ಆಸೆ ಈಡೇರಿದಾಗ ಇನ್ನೊಂದು ನಿಮ್ಮನ್ನು
ಸೆಳೆಯಲು ಪ್ರಾರಂಭಿಸುತ್ತದೆ. ನಿಮಗೆ ಅದನ್ನು
ಅನುಭವಿಸಿ ತೃಪ್ತಿಪಡೆಯಲೂ ಸಹ
ಸಮಯವಿರುವುದಿಲ್ಲ. ನೀವು ಯೋಚಿಸಬಹುದು,
'ನಾನು ಈ ಇನ್ನೊಂದು ವಸ್ತುವನ್ನು ಪಡೆಯುತ್ತೇನೆ.
ಆಮೇಲೆ ಎಂದೋ ಅದನ್ನು ವಿರಾಮವಾಗಿ
ಅನುಭವಿಸಿ ತೃಪ್ತಿಯಿಂದಿರುತ್ತೇನೆ' ಎಂದು.
ಸ್ಪಷ್ಟವಾಗಿರಿ, ನಿಮ್ಮ ಮನಸ್ಸು ಅದನ್ನು ಎಂದಿಗೂ
ಸಂಭವಿಸಲು ಬಿಡಲಾರದು.
ನಿಜವಾಗಿಯೂ ಜೀವನವನ್ನು ಜೀವಿಸಿ
ಆನಂದಿಸಬೇಕಾದರೆ ಇರುವ ಒಂದೇ ದಾರಿಯೆಂದರೆ
ದುಡಿತದಲ್ಲೇ ಆನಂದಪಡುವುದು. ಆಗ ದುಡಿತ,
ಗಳಿಕೆ ಮತ್ತು ಇರುವಿಕೆ ಎಲ್ಲವೂ ತಾನೇತಾನಾಗಿ
ಸಮಗ್ರಗೊಂಡು ನಡೆಯುತ್ತವೆ.
ನೀವು ಅನನ್ಯರು
ಪ್ರತಿಯೊಬ್ಬರಿಗೂ ಪ್ರಕೃತಿಯು ತನ್ನದೇ ಆದ ಬೆಳವಣಿಗೆಯ ಅನನ್ಯ ರೀತಿಯನ್ನು ಕೊಟ್ಟಿದೆ. ಉದಾಹರಣೆಗೆ, ಚೈನಾ ಬಿದಿರನ್ನು ತೆಗೆದುಕೊಳ್ಳಿರಿ. ಅದು ಮೊಳೆತಾಗ ಮೊದಲ ನಾಲ್ಕು ವರ್ಷಗಳಲ್ಲಿ
ಹೆಚ್ಚಿನ ಬೆಳವಣಿಗೆಯನ್ನು ತೋರುವುದಿಲ್ಲ. ನಂತರ
ಐದನೇ ವರ್ಷ, ಬರೀ ಆರು ವಾರಗಳಲ್ಲಿ ತೊಂಬತ್ತು
ಅಡಿ ಎತ್ತರವಾಗಿ ಬೆಳೆಯುತ್ತದೆ! ಮೊದಲ ನಾಲ್ಕು
ವರ್ಷಗಳಲ್ಲಿ ಬೆಳೆಯುತ್ತಿರಲೇ ಇಲ್ಲವೆಂದಲ್ಲ,
ಬೆಳವಣಿಗೆಯು ಕಾಣದೇ ಇದ್ದರೂ ಗಿಡವು
ಕ್ಷೇಮವಾಗಿ ಬೇಗ ದೊಡ್ಡಮರವಾಗಿ ಬೆಳೆಯಲು
ಅಗತ್ಯವಾದ ಬೇರುಗಳು ಬಲಿಷ್ಠಗೊಳ್ಳುತ್ತಿದ್ದವು
ಎಂದರ್ಥ.
ಬಿದಿರಿನ ಬೆಳವಣಿಗೆಯಂತೆ ನಿಮ್ಮನ್ನು ಅಳತೆ
ಮಾಡಿಕೊಳ್ಳಲು ನಿಮ್ಮನ್ನು ಹೊರತು ಬೇರೆ ಯಾವ
ಮಾಪನವೂ ಇಲ್ಲ. ನಿಮ್ಮ ಚೈತನ್ಯವೆಲ್ಲವನ್ನೂ
ಒಳಹೊಕ್ಕು ನೋಡಲು ಹಾಗೂ ನಿಮ್ಮೊಂದಿಗೆ
ತುಲನೆಮಾಡಿಕೊಳ್ಳಲು ಉಪಯೋಗಿಸಿದರೆ, ನಿಮ್ಮ
ಪ್ರಗತಿಯೂ ಅತ್ಯಂತ ವೇಗವಾಗಿ
ಮುಂದುವರೆಯುತ್ತದೆ.
ಮೊದಲನೆಯದಾಗಿ, ದೇವರು ಒಬ್ಬ ಕಲಾವಿದ, ತಂತ್ರಜ್ಞಾನಿಯಲ್ಲ ಎಂಬುದನ್ನು ತಿಳಿದುಕೊಳ್ಳಿ. ಆತನು ತಂತ್ರಜ್ಞಾನಿಯೇ ಆಗಿದ್ದಿದ್ದರೆ, ಒಬ್ಬ ಪರಿಪೂರ್ಣನಾದ ಪುರುಷನನ್ನೂ, ಒಬ್ಬ ಪರಿಪೂರ್ಣಳಾದ ಸ್ತ್ರೀಯನ್ನೂ ಮಾಡಿ, ನಂತರ ಅದೇ ಅಚ್ಚಿನಿಂದ ಕೋಟಿಗಟ್ಟಲೆ ಪ್ರತಿಗಳನ್ನು ಮಾಡುತ್ತಿದ್ದನು! ಇಲ್ಲ, ದೇವರು ಪ್ರತಿಯೊಬ್ಬರನ್ನೂ ಪ್ರತಿಯೊಂದು ರೀತಿಯಲ್ಲಿಯೂ ವಿಶಿಷ್ಟವಾಗಿ ನಿರ್ಮಿಸಿದ್ದಾನೆ.
ನೀವು ಒಂದು ಗುಲಾಬಿ ಹೂವೋ, ಕುಮುದ
ಹೂವೋ ಅಥವಾ ಒಂದು ಕಾಡುಹೂವೋ
ಏನಾಗಿದ್ದರೂ ಪರವಾಗಿಲ್ಲ. ಮುಖ್ಯವಾದ
ವಿಷಯವೇನೆಂದರೆ, ಕಾಡುಹೂವು ತನ್ನ ಪರಮೋನ್ನತ
ಸಾಮರ್ಥ್ಯವನ್ನು ಕಾಡು
ಹೂವಾಗಿ ವ್ಯಕ್ತಪಡಿಸ-
ಬೇಕು, ಅದೇ ರೀತಿ
ಗುಲಾಬಿ ಹೂವೂ
ತನ್ನಲ್ಲಿ ಅಡಗಿರುವ
ಸಾಮರ್ಥ್ಯವನ್ನು ವ್ಯಕ್ತಪಡಿಸಬೇಕು. ನೀವು ನಿಮ್ಮ
ಅನನ್ಯ ಸಾಮರ್ಥ್ಯವನ್ನು ಕಂಡುಕೊಂಡ ಸುಗಂಧವೇ
ಪಸರಿಸುವುದು ಮತ್ತು ಯಾವುದೇ ಶ್ರಮವಿಲ್ಲದೆ
ನಿಮ್ಮ ಸುತ್ತಲಿರುವ ಎಲ್ಲರನ್ನೂ ಮುಟ್ಟುವುದು.
ಸೌಂದರ್ಯದಲ್ಲಾಗಲೀ ಅಥವಾ
ಬುದ್ಧಿಶಕ್ತಿಯಲ್ಲಾಗಲೀ ನೀವಂತೂ ಅನನ್ಯರು. ನೀವು
ನಿಮ್ಮ ಅನನ್ಯತೆಯನ್ನು ಗೌರವಿಸದಿದ್ದಾಗ ಮಾತ್ರವೇ
ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಲು
ಪ್ರಾರಂಭಿಸುವುದು. ಸ್ಪಷ್ಟವಾಗಿ ತಿಳಿಯಿರಿ,
ಚಿತ್ರರಂಗದ ನಿಮ್ಮ ಅಚ್ಚುಮೆಚ್ಚಿನ ತಾರೆ ಅಥವಾ
ಮಾದರಿಯಾದ ವ್ಯಕ್ತಿಯು ಎಷ್ಟೇ
ಸುಂದರವಾಗಿದ್ದರೂ ನೀವು ಒಂದು ಲೋಟ
ನೀರನ್ನಾದರೂ ಆ ದೇಹದಿಂದ ಕುಡಿದು
ಆನಂದಿಸಲಾದೀತೆ? ಇಲ್ಲ! ನಿಮ್ಮ ದೇಹದ ಮೂಲಕ
ಮಾತ್ರವೇ ನಿಮಗೆ ಆನಂದಿಸಲಾಗುವುದು- ಅದೇ
ನಿಮ್ಮ ಅತ್ಯುತ್ತಮ ಮಿತ್ರ. ಅದನ್ನು ಸ್ವೀಕರಿಸಿ
ಆದರಿಸಿರಿ.
ಸಮಾನ ವರ್ಗದವರ ಒತ್ತಡ ಕೇವಲ ಒಂದು ದೊಡ್ಡ ಅಹಂಕಾರದ ಆಟ.
ಸಮಾನ ವರ್ಗದವರ ಒತ್ತಡ - ಅಸೂಯೆಯ ದಂಡ
ಪುರಾಣದಲ್ಲಿರುವ ಸುಂದರವಾದ ಶ್ಲೋಕವೊಂದು ಮಾಯೆಯ ಶಕ್ತಿಯನ್ನು ಕುರಿತು
ಈ ರೀತಿ ಹೇಳುತ್ತದೆ – ಅದು ಅಸೂಯೆಯೆಂಬ
ಸಾಧನವನ್ನು ಉಪಯೋಗಿಸಿಕೊಂಡು ತನ್ನಿಚ್ಛೆಯಂತೆ,
ಅದಕ್ಕೆ ನೀವು ಏನೆಲ್ಲಾ ಮಾಡಬೇಕೆಂದು ಇದೆಯೋ
ಅದನ್ನು ನಿಮ್ಮಿಂದ ಮಾಡಿಸುತ್ತದೆ ಎಂದು.
ನಮ್ಮ ದೇಶದಲ್ಲಿ ಮಂಗಗಳಿಂದ ಸರ್ಕಸ್ ಪ್ರದರ್ಶನಗಳನ್ನು ಬೀದಿಗಳಲ್ಲಿ ಮಾಡುವವರಿದ್ದಾರೆ. ಅವರ ಹತ್ತಿರ ಒಂದು ಸಣ್ಣ ಕೋಲಿರುತ್ತದೆ. ಅವರು ಆ ಕೋಲನ್ನೆತ್ತಿಕೊಂಡರೆ ಸಾಕು, ಮಂಗಗಳು ಅವರು ಹೇಳಿದ್ದನ್ನೆಲ್ಲಾ ಮಾಡುತ್ತವೆ. ಅವರು ಕೇವಲ ಸನ್ನೆ ಮಾಡಿದರೆ ಅವು ಕೇಳುವುದಿಲ್ಲ. ಅವರು ಯಾವಾಗಬೇಕಾದರೂ ಆಗ ಕೋಲನ್ನೆತ್ತಿಕೊಳ್ಳಬಹುದು ಎಂದು ಅವಕ್ಕೆ ತಿಳಿದಿದ್ದರೂ ಸಹ ಕೋಲನ್ನೆತ್ತಿಕೊಳ್ಳುವವರೆಗೂ ಅವು ಹೇಳಿದ ಮಾತನ್ನು ಕೇಳುವುದಿಲ್ಲ. ಕೋಲನ್ನು ಕೈಗೆತ್ತಿಕೊಂಡು, ಆ ಮಂಗಕ್ಕೆ ನೇರವಾಗಿ ನಡೆಯೆಂದರೆ, ಅದು ನೇರವಾಗಿ ನಡೆಯುತ್ತದೆ. ಮೂರು ಸಲ ಹಾರಲು ಹೇಳಿದರೆ, ಅದು ಹಾರುತ್ತದೆ.
ಸರ್ಕಸ್ಗಳಲ್ಲಿ ರಿಂಗ್ ಮಾಸ್ಟರ್ನಂತೆ
ಮನುಷ್ಯನು ಈ ಕೋಲನ್ನು ಉಪಯೋಗಿಸುತ್ತಾನೆ.
ಅದರಂತೆಯೇ ಮಾಯೆಯ ಶಕ್ತಿಯು
ಸಮಾನವರ್ಗದವರ ಒತ್ತಡ ಮತ್ತು ಅಸೂಯೆಯನ್ನು
ಉಪಯೋಗಿಸಿ ತನಗೇನುಬೇಕೋ ಅದನ್ನು ನಿಮ್ಮಿಂದ
ಮಾಡಿಸುತ್ತದೆ. ತಿಳಿಯಿರಿ, ಸಮಾನ ವರ್ಗದವರ
ಒತ್ತಡವು ಕೇವಲ ಒಂದು ದೊಡ್ಡ ಅಹಂಕಾರದ
ಆಟ. ವಾಸ್ತವವಾಗಿ ಅದು ನಿಮ್ಮ ಬೆಳವಣಿಗೆಗೆ
ಅವಶ್ಯಕವೇ ಅಲ್ಲ. ನಮ್ಮ ಮೂಲಭೂತವಾದ
ಅವಶ್ಯಕತೆಗಳನ್ನು ಪೂರೈಸುವಷ್ಟು ಆಹಾರ, ಆಶ್ರಯ,
ವೈದ್ಯಕೀಯ ನೆರವು ಹಾಗೂ ಉಡುಪುಗಳು
ಪ್ರಪಂಚದಲ್ಲಿ ಇವೆ. ಇಲ್ಲಿ ಪೈಪೋಟಿಯ
ಅವಶ್ಯಕತೆಯೇ ಇಲ್ಲ.
ಅಸೂಯೆಯನ್ನು ಜಯಿಸುವುದು ಹೇಗೆ?
ಅಸೂಯೆಯು ನಮ್ಮ ನಕಾರಾತ್ಮಕ
ಭಾವನೆಗಳಾದ ಕೋಪ, ದುರಾಸೆ, ಒಡೆತನ ಹಾಗೂ
ಖಿನ್ನತೆಗಳೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಈ
ಅಸೂಯೆಯ ಚಕ್ರವನ್ನು ಮುರಿದಾಗ, ಈ ಎಲ್ಲ
ಭಾವನೆಗಳೂ ಕರಗಿಹೋಗುತ್ತವೆ.
ಸಾಕ್ಷೀಭಾವದಲ್ಲಿರುವುದು
ಅಸೂಯೆಯಿಂದ ತಪ್ಪಿಸಿಕೊಳ್ಳು-
ವುದರಿಂದಾಗಲೀ, ಅಸೂಯೆಗೆ ಕಾರಣವಾದ
ವಸ್ತುವನ್ನು ದ್ವೇಷಿಸುವುದರಿಂದಾಗಲೀ
ಅಸೂಯೆಯನ್ನು ಜಯಿಸಲಾಗುವುದಿಲ್ಲ.
ಅಸೂಯೆಯು ತಲೆದೋರಿದಾಗ, ಕೇವಲ ಅದರ
ಸಂಪೂರ್ಣ ಅರಿವಿನಿಂದ ಇರಬೇಕಾದುದೇ ನೀವು
ಮಾಡಬೇಕಾದುದು. ಅದು ಸುಮ್ಮನೆ
ಅದೃಶ್ಯವಾಗುವುದನ್ನು ನೋಡಿ ನಿಮಗೆ
ಆಶ್ಚರ್ಯವಾಗಬಹುದು.
ಬುದ್ಧನು ಹೇಳುತ್ತಾನೆ, ‘ಆ ಅಸೂಯೆಯ ಬೇರುಗಳನ್ನು ಕಿತ್ತೆಸೆದು ಶಾಶ್ವತವಾದ ಶಾಂತಿಯನ್ನು ಅನುಭವಿಸಿರಿ' ಎಂದು.
ಕೇವಲ ಅರಿವಿನಿಂದಿದ್ದು, ನಿಮ್ಮ ಸ್ವಭಾವವೇ ಆದ ಆನಂದದಿಂದ ನಿಮ್ಮನ್ನು ವಂಚಿಸಿರುವ ಅಸೂಯೆ, ಪೈಪೋಟಿ, ದ್ವೇಷ ಮತ್ತು ಹೋಲಿಕೆಗಳನ್ನು ನಾಶಪಡಿಸಿರಿ. ಈ ನಕಾರಾತ್ಮಕ ಭಾವನೆಗಳ ನೆರಳಿನ ಸ್ವಭಾವವನ್ನು ಕಳಚಲು ಅರಿವಿನ ಬೆಳಕನ್ನು ಬಳಸಿರಿ. ಇಲ್ಲದೇ ಹೋದಲ್ಲಿ ನೀವು ಕೇವಲ ಇಲಿಗಳ ಓಟದ ಪಂದ್ಯದಲ್ಲಿ ಸಿಕ್ಕಿಬಿದ್ದಂತೆ. ನಾನು ಯಾವಾಗಲೂ ಜನರಿಗೆ ಹೇಳುವುದೇನೆಂದರೆ, ನೀವು ಆ ಓಟದ ಪಂದ್ಯದಲ್ಲಿ ಗೆದ್ದರೂ ಸಹ, ನೀವು ಕೇವಲ ಒಂದು ಇಲಿಯೇ!
ತಿಳಿಯಿರಿ, ಅಸೂಯೆಯಿಂದ ಪಾರಾಗಲು
ಅದನ್ನು ವಿರೋಧಿಸುವುದರಿಂದಾಗಲೀ, ಅದರ
ಅಸ್ತಿತ್ವವನ್ನು ನಿರಾಕರಿಸುವುದರಿಂದಾಗಲೀ
ಸಾಧ್ಯವಿಲ್ಲ. ಅದನ್ನು ವ್ಯಕ್ತಪಡಿಸುವುದು ಮತ್ತು
ಪ್ರೋತ್ಸಾಹಿಸುವುದೂ ಸಹ ಸರಿಯಲ್ಲ, ಏಕೆಂದರೆ
ಆಗ ನೀವು ಅಸೂಯೆಯನ್ನು ಅರಿವಿನೊಂದಿಗೆ
ಎದುರಿಸಲು ಸಿದ್ಧರಾಗಿಲ್ಲವೆಂದರ್ಥ.
ಅಸೂಯೆಯು ನಿಮ್ಮಲ್ಲಿ ಹೇಗೆ ಮೂಡುತ್ತದೆ
ಎಂದೂ, ಅಸೂಯೆಗೆ ಕಾರಣವಾದ ವಸ್ತುವಿನಲ್ಲಿ
ಯಾವ ರೀತಿ ಅದು ದ್ವೇಷವಾಗಿ ಬೆಳೆಯುತ್ತದೆ
ಎಂದೂ, ಹೇಗೆ ನಿಮ್ಮಲ್ಲಿ ಚಡಪಡಿಕೆ ಹಾಗೂ
ಅಸಮಾಧಾನವನ್ನು ಉಂಟುಮಾಡುತ್ತದೆಯೆಂದೂ,
ಕೊನೆಗೆ ನಿಮ್ಮ ಶಾಂತಿ ಸಮಾಧಾನಗಳೆಲ್ಲವನ್ನೂ
ಕಳೆದುಕೊಳ್ಳುವಂತೆ ಮಾಡುತ್ತದೆ ಎಂಬುದನ್ನೂ
ಗಮನಿಸಿರಿ.
ಅಸೂಯೆಯನ್ನು ಅಥವಾ ಅಸೂಯೆಗೆ
ಕಾರಣವಾದ ವಸ್ತುವನ್ನು ದ್ವೇಷಿಸುವ ಬದಲು
ಅಸೂಯೆಯ ವಿಷಯದಲ್ಲಿ ಅರಿವಿನಿಂದಿರಿ. ನಿಮಗೆ
ಅದರಿಂದ ಆಗಬೇಕಾದುದೇನೂ ಇಲ್ಲವೆಂಬಂತೆ
ಅದನ್ನು ಕೇವಲ ಗಮನಿಸಿರಿ. ಅದನ್ನು ಒಂದು
ವೈಜ್ಞಾನಿಕ ದೃಷ್ಟಿಯಲ್ಲಿ ನೋಡಿರಿ. ವೈಜ್ಞಾನಿಕ
ದೃಷ್ಟಿ ಎಂದು ನಾನು ಹೇಳುವುದರ ಅರ್ಥವೇನು?
ಪೂರ್ವನಿಯೋಜಿತ ಅಭಿಪ್ರಾಯವಿಲ್ಲದಿರುವುದು ವಿಜ್ಞಾನಿಯ ಮನೋಭಾವ
ಒಬ್ಬ ವಿಜ್ಞಾನಿಯು ಸಂಶೋಧನೆ ಮಾಡುತ್ತಿರುವಾಗ, ಆತನು ಯಾವ ನಿರ್ಣಯವೂ ಇಲ್ಲದೆ, ಯಾವ ಪೂರ್ವ ನಿಯೋಜಿತ ನಿರ್ಧಾರಗಳೂ ಇಲ್ಲದೆ, ಸುಮ್ಮನೆ ಸಂಶೋಧನೆ ಮಾಡುತ್ತಿರುತ್ತಾನೆ. ಆತನ ಮನಸ್ಸಿನಲ್ಲಿ ಆದಾಗಲೇ ಒಂದು ನಿರ್ಧಾರವಿದ್ದುಬಿಟ್ಟರೆ, ಆತನು ವಿಜ್ಞಾನಿಯೇ ಅಲ್ಲ; ಏಕೆಂದರೆ ಆ ನಿರ್ಧಾರವು ಸಂಶೋಧನೆಯ ಮೇಲೆ ಪ್ರಭಾವ ಬೀರಬಹುದು.
ಈಗ, ಒಳಪ್ರಪಂಚ ವಿಜ್ಞಾನದ
ಪ್ರಯೋಗಶಾಲೆಯಲ್ಲಿ ನೀವು ವಿಜ್ಞಾನಿಯಾಗಿದ್ದೀರಿ.
ನೀವು ನಿಮ್ಮ ಒಳ ಪ್ರಪಂಚದಲ್ಲಿ ವಿಜ್ಞಾನಿಯಾಗಿ
ಹಾಗೂ ನಿಮ್ಮ ಮನಸ್ಸು ನಿಮ್ಮ
ಪ್ರಯೋಗಶಾಲೆಯಾಗಲಿ. ಪೂರ್ವನಿಯೋಜಿತ
ಅಭಿಪ್ರಾಯವಿಲ್ಲದೆ ಕೇವಲ ಅರಿವಿನಿಂದಿದ್ದು
ಸಾಕ್ಷೀಭಾವದಲ್ಲಿರಿ.
ಆ ಭಾವನೆಯೂ ಕೆಟ್ಟದೆಂದು ನಿಮಗೆ
ಕಲಿಸಿರುವುದರಿಂದ ಅದನ್ನು ಹೀನಾಯಿಸಬೇಡಿ. ಅದು
ನಿಮ್ಮ ಅನುಭವವಾಗಿಲ್ಲ. ತಿಳಿಯಿರಿ, ಅಸೂಯೆಯು
ಒಂದು ನಕಾರಾತ್ಮಕ ಭಾವನೆ ಎಂಬುದು ನಿಮ್ಮ ಅನುಭವವಾಗಿದ್ದರೆ, ಅದನ್ನು ನೀವಾಗಿಯೇ ಬಿಟ್ಟುಬಿಡುವಿರಿ. ಅದು ನಿಮ್ಮ ಸ್ವಾನುಭವವಾಗಿಲ್ಲ! ಅದನ್ನು ಕೇವಲ ಬೇರೆಯವರಿಂದ ಕಲಿತದ್ದು. ಅಸೂಯೆ ಮತ್ತು ಹೋಲಿಕೆಗಳು ನಕಾರಾತ್ಮಕವೆಂಬ ಅನುಭವಾತ್ಮಕವಾಗಿ ಅರ್ಥವಾಗುವವರೆಗೂ ಆ ತಿಳಿವಳಿಕೆಯು ನಿಮ್ಮ ಒಂದು ಭಾಗವಾಗುವುದಿಲ್ಲ.
ಅಸೂಯೆಗೆ ಕಾರಣವಾದ ವಸ್ತುವನ್ನು
ಖಂಡಿಸಬೇಡಿ. ಆ ವಸ್ತುವು ಹೊರಗಿನಿಂದ
ಭಾವನೆಯನ್ನು ಉತ್ಪತ್ತಿ ಮಾಡುವುದಿಲ್ಲ.
ಅಸೂಯೆಯು ನಿಮ್ಮೊಳಗೇ ಉತ್ಪತ್ತಿಯಾಗುವುದು.
ಒಮ್ಮೆ ನಿಮ್ಮ ಅಸೂಯೆಯನ್ನು ಅರಿವಿನಿಂದ ನೋಡಿದರೆ, ಅದಕ್ಕೆ ಅಸ್ತಿತ್ವವೇ ಇಲ್ಲವೆಂಬುದನ್ನು ತಿಳಿಯುವಿರಿ. ಇದು ಸಂಭವಿಸಿದಾಗ, ಅಸೂಯೆಯು ತಾನಾಗಿಯೇ ಬಿಟ್ಟುಹೋಗುತ್ತದೆ. ನೀವು ಅದನ್ನು ಬಿಡಬೇಕಾಗಿಲ್ಲ.
ಒಂದು ಸಣ್ಣ ಕಥೆ:
ಒಮ್ಮೆ ಒಬ್ಬ ಮಹಿಳೆಯು ತನ್ನ ಭಾವಚಿತ್ರವನ್ನು ಚಿತ್ರಿಸಲು ಒಬ್ಬ ಔದ್ಯೋಗಿಕ ಕಲಾಕಾರನನ್ನು ನೇಮಿಸಿದಳು. ಆ ಚಿತ್ರಕಾರನು ಶ್ರದ್ಧೆಯಿಂದ ಒಂದು ದೊಡ್ಡ ವರ್ಣಚಿತ್ರವನ್ನು ಮಾಡಿ ಆಕೆಗೆ ನೀಡುತ್ತಾ, 'ನಿಮಗೆ ಇಷ್ಟವಾಯಿತೆ?' ಎಂದು ಕೇಳಿದನು.
ಆಕೆಯು ಅದನ್ನು ನೋಡಿ, 'ಹೌದು, ಬಹಳ
ಚೆನ್ನಾಗಿದೆ, ಆದರೆ ಇದಕ್ಕೆ ಇನ್ನೂ ಕೆಲವು
ವಿಷಯಗಳನ್ನು ಸೇರಿಸಲು ಸಾಧ್ಯವೇ? ನೀವು ಅದಕ್ಕೆ
ಹೊಳೆಯುವ ಒಂದು ವಜ್ರದ ಕಂಠಹಾರ, ಒಂದು
ಚಿನ್ನದ ಕೈಗಡಿಯಾರ ಹಾಗೂ ಕಡಗ, ಪಚ್ಚೆಯ
ಓಲೆಗಳು, ಬೆರಳುಗಳಿಗೆ ಸುಂದರವಾದ ಮುತ್ತಿನ
ಉಂಗುರಗಳು, ಇವನ್ನೆಲ್ಲಾ ಸೇರಿಸಬೇಕೆಂದು ನಾನು
ಇಚ್ಛಿಸುತ್ತೇನೆ' ಎಂದಳು. ಕಲಾಕಾರನಿಗೆ
ಆಶ್ಚರ್ಯವಾಗಿ, 'ಆದರೆ, ಈ ಭಾವಚಿತ್ರವು
ಇರುವಂತೆಯೇ ಸರಳವಾಗಿಯೂ,
ಸುಂದರವಾಗಿಯೂ ಕಾಣುತ್ತಿದೆ. ಒಡವೆಗಳನ್ನೆಲ್ಲಾ
ಸೇರಿಸಿಕೊಂಡು ಅದನ್ನೇಕೆ ಗಲಿಬಿಲಿ ಮಾಡುವಿರಿ?'
ಎಂದು ಕೇಳಿದನು.
ಆಕೆಯು, 'ನನ್ನ ನೆರೆಹೊರೆಯ ಶ್ರೀಮಂತರು ಈ
ಭಾವಚಿತ್ರವನ್ನು ನೋಡಿ, ಆ ಆಭರಣಗಳೆಲ್ಲವೂ
ನನ್ನ ಬಳಿ ಇವೆ ಎಂದುಕೊಂಡು, ಅವರಿಗೆ
ಚಿತ್ತಭ್ರಮೆಯುಂಟಾಗಬೇಕೆಂಬುದೇ ನನಗೆ
ಬೇಕಾದುದು'ಎಂದು ಹೇಳಿದಳು.
ಅಸೂಯೆ ಎಂಬ ಅಗ್ನಿಯನ್ನು ನಿಮ್ಮ ಅರಿವೆಂಬ ಅಗ್ನಿಶಾಮಕದಿಂದ ತಡೆಹಿಡಿಯದಿದ್ದರೆ, ಅದು ನಿಮ್ಮನ್ನು ಸಂಪೂರ್ಣವಾಗಿ ಆಹುತಿ ತೆಗೆದುಕೊಳ್ಳುವ ಸಾಧ್ಯತೆ ಇದೆ.