KAILASA Library/ಜೀವನ್ಮುಕ್ತಿ/ಅನಂತ ಪ್ರೀತಿSign in
ಜೀವನ್ಮುಕ್ತಿ

ಅನಂತ ಪ್ರೀತಿ

This text was machine-transcribed from the printed book and may contain errors. Select the words and choose “Report a mistake”.

ನಿಮ್ಮ ಸಹಜ ಸ್ವಭಾವಗಳಾದ ಪ್ರೇಮ ಮತ್ತು
ಆನಂದಗಳನ್ನು ಅನುಭವಿಸಲು ಅಸೂಯೆಯು ಆಸ್ಪದ
ಕೊಡುವುದಿಲ್ಲ. ಜೀವನವನ್ನೂ ಹಾಗೂ ನಿಮ್ಮನ್ನು
ನೀವು ಸರಿಯಾಗಿ ಅರ್ಥಮಾಡಿಕೊಳ್ಳದೇ
ಇರುವುದರಿಂದ ಇದು ಹುಟ್ಟುತ್ತದೆ. ಪ್ರೇಮವನ್ನು
ನಿಮ್ಮ ಹೊರಗಿನದೆಂದೂ, ಅದನ್ನು
ಹೊಂದಬೇಕೆಂದೂ ತಪ್ಪಾಗಿ ತಿಳಿದುಕೊಳ್ಳುವಿರಿ.
ಅಷ್ಟೇ ಅಲ್ಲದೆ ಪ್ರೇಮವು ಒಂದು ಪರಿಮಾಣವೆಂದೂ

ಅದನ್ನು ಹಂಚಿಕೊಳ್ಳಬೇಕೆಂದೂ ತಿಳಿಯುವಿರಿ.
ಆದುದರಿಂದಲೇ ನಿಮ್ಮ ಪ್ರೇಮವನ್ನು ಹಂಚಿಕೊಂಡರೆ
ನಿಮ್ಮ ಪಾಲು ಕಡಿಮೆಯಾಗಿಬಿಡಬಹುದೆಂದು
ಹೆದರುವಿರಿ.

ಪ್ರೇಮವು ನಿಮ್ಮೊಳಗೇ ಇರುವ ಒಂದು ಗುಣ.
ಅದು ಸೀಮಿತವಾದ ಪರಿಮಾಣವಲ್ಲ. ಅದು
ನಿಮ್ಮೊಳಗಿನಿಂದಲೇ ಕೊನೆಯೇ ಇಲ್ಲದೆ
ಉಕ್ಕಿಹರಿಯುವಂತಹದು. ಅದು ನಿಮ್ಮ ಸಹಜ
ಸ್ವಭಾವವಾದ ಕಾರಣ ನಿಮ್ಮನ್ನು ಬಿಟ್ಟು ಬೇರೆ
ಯಾವುದರಿಂದಾಗಲೀ, ಯಾರಿಂದಾಗಲೀ ಅದನ್ನು
ತಡೆಯಲು ಸಾಧ್ಯವಿಲ್ಲ.

ಒಮ್ಮೆ ಪ್ರೀತಿಯಲ್ಲಿ ಪ್ರವಹಿಸಲಾರಂಭಿಸಿದರೆ,
ಅಸೂಯೆ, ಸ್ವಾಧೀನದ ಹಂಬಲ
ಮೊದಲಾದುವುಗಳೆಲ್ಲವೂ ಇಲ್ಲವಾಗುತ್ತವೆ. ನೀವು
ಹೇಗಿರುವಿರೋ ಹಾಗೆಯೇ ನಿಮ್ಮನ್ನು ನೀವು
ಒಪ್ಪಿಕೊಂಡು, ಬೇರೆಯವರನ್ನೂ ಅವರು
ಹೇಗಿರುವರೋ ಹಾಗೆಯೇ ಒಪ್ಪಿಕೊಳ್ಳಬಹುದು.