KAILASA Library/ಜೀವನ್ಮುಕ್ತಿ/ನಿಮ್ಮನ್ನು ಯಾರೆಂದುಕೊಂಡಿರುವಿರೋ, ಅವರು ನೀವಲ್ಲ!Sign in
ಜೀವನ್ಮುಕ್ತಿ

ನಿಮ್ಮನ್ನು ಯಾರೆಂದುಕೊಂಡಿರುವಿರೋ, ಅವರು ನೀವಲ್ಲ!

This text was machine-transcribed from the printed book and may contain errors. Select the words and choose “Report a mistake”.

ಗಾಂಭೀರ್ಯತೆ ಹಾಗೂ ಪ್ರಾಮಾಣಿಕತೆ

ನಮ್ಮನ್ನು ನಾವು ಏನೆಂದು ಭಾವಿಸಿದ್ದೇವೆ ಎಂಬುದರ ಮೇಲೆ ಇತರರೊಂದಿಗೆ ನಮ್ಮ ಹೋಲಿಕೆಯೆಲ್ಲವೂ ಆರಂಭವಾಗುವುದು. ನಮ್ಮ ಅನನ್ಯತೆಯನ್ನು ನಾವು ತಿಳಿದರೆ, ನಮ್ಮಲ್ಲಿರುವ ಅಸೂಯೆಯು ಮಾಯವಾಗುತ್ತದೆ. ಆದರೆ ಆಗ ನಾವು ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಬಹುದು. ನಮ್ಮನ್ನೇ ನಾವು ಅತಿ ವಿಶಿಷ್ಟವಾದ ವ್ಯಕ್ತಿಗಳೆಂದು ನಂಬಿ, ನಮ್ಮನ್ನು ನಾವೇ ಅತಿ ಗಂಭೀರವಾಗಿ ಭಾವಿಸಿಕೊಳ್ಳಲು ಪ್ರಾರಂಭಿಸಬಹುದು.

ಗಾಂಭೀರ್ಯತೆ ಎಂದರೇನು?

ಗಾಂಭೀರ್ಯತೆಯು ಮಿಕ್ಕೆಲ್ಲಾ
ವಿಷಯಗಳಿಗಿಂತಲೂ ಒಂದು ವಿಷಯಕ್ಕೆ
ಅನಾವಶ್ಯಕವಾದ ಪ್ರಾಮುಖ್ಯತೆಯನ್ನು
ಕೊಡುವುದಲ್ಲದೆ ಬೇರೇನೂ ಅಲ್ಲ. ಜೀವನವು
ಪ್ರತಿಯೊಂದು ನಿಮಿಷವೂ ಪ್ರಕಟಗೊಳ್ಳುತ್ತಿರುವ
ಬರಿಯ ಒಂದು ನಾಟಕವೆಂದು ತಿಳಿಯುವ
ಅಸಮರ್ಥತೆಯಿಂದ ಅದು ಹುಟ್ಟುತ್ತದೆ.
ಗಾಂಭೀರ್ಯತೆಯು ಜೀವನದಿಂದ ಅತಿಯಾದ
ನಿರೀಕ್ಷಣೆಯ ಫಲಿತಾಂಶವು.

ಒಂದು ಸಣ್ಣ ಕಥೆ:

ಇಬ್ಬರು ಹುಡುಗರು ಸಮುದ್ರ ತೀರದಲ್ಲಿ ಮರಳಿನ ಕೋಟೆಗಳನ್ನು ಕಟ್ಟುತ್ತಿದ್ದರು. ಇದ್ದಕ್ಕಿದ್ದಂತೆ ಅವರಿಬ್ಬರ ನಡುವೆ ಒಂದು ಜಗಳವುಂಟಾಗಲು, ಒಬ್ಬ ಹುಡುಗನು ಸಿಟ್ಟುಮಾಡಿಕೊಂಡು ಮರಳಿನ ಕೋಟೆಯನ್ನು ಒದ್ದುಬಿಟ್ಟನು.

ಇನ್ನೊಬ್ಬ ಹುಡುಗನು ಅವನ ಗಂಭೀರವಾದ
ಸಮಸ್ಯೆಯ ಬಗ್ಗೆ ರಾಜನಿಗೆ ದೂರು ನೀಡಿದನು.
ರಾಜನು ಕೇವಲ ಮರಳಿನ ಕೋಟೆಯ ಬಗ್ಗೆ
ಇಷ್ಟೊಂದು ಗೊಂದಲವೆಬ್ಬಿಸಿಕೊಂಡ ಕಾರಣ ಆ
ಹುಡುಗನನ್ನು ನೋಡಿ ನಗಲಾರಂಭಿಸಿದನು. ಆದರೆ,
ರಾಜನ ಸಲಹೆಗಾರನಾದ ಒಬ್ಬ ಜೈನ್ ಸನ್ಯಾಸಿಯು
ರಾಜನನ್ನು ನೋಡಿ ನಗಲಾರಂಭಿಸಿದನು.

ಆತನು, ‘ನೀನು ಯುದ್ಧಗಳಲ್ಲಿ ಹೋರಾಡಿ, ಕಲ್ಲಿನ ಕೋಟೆಗಳಿಗಾಗಿ ನಿದ್ದೆಗೆಡುವಾಗ, ಈ ಹುಡುಗರು

ಮರಳಿನ ಕೋಟೆಗಳಿಗಾಗಿ ಜಗಳ
ವಾಡುತ್ತಿರುವುದನ್ನು ನೋಡಿ ಏಕೆ
ನಗುತ್ತಿದ್ದೀಯೇ!’ ಎಂದು ಕೇಳಿದನು.

ನಮ್ಮೆಲ್ಲಾ ಗಾಂಭೀರ್ಯತೆಯೂ ಮರಳಿನ
ಕೋಟೆಗಳಿಗಷ್ಟೇ ಸಮ! ಆ ಹುಡುಗನ ವಯಸ್ಸಿಗೆ
ಮರಳಿನ ಕೋಟೆಗಳು ಅಮೂಲ್ಯವಾದುದು, ನಮ್ಮ
ವಯಸ್ಸಿಗೆ ಕಲ್ಲಿನ ಕೋಟೆಗಳು ಅಮೂಲ್ಯವಾದುದು,
ಅಷ್ಟೇ. ಅದು ಒಂದು ಮರಳಿನ ಕೋಟೆಯೇ ಆಗಲಿ,
ಅಥವಾ ಒಂದು ಕಲ್ಲಿನ ಕೋಟೆಯೇ ಆಗಲಿ, ಅದರ
ಹಿಂದಿರುವ ಗಾಂಭೀರ್ಯತೆಯು ಒಂದೇ. ವಸ್ತುವು
ಬೇರೆಯಾದರೂ, ಗಾಂಭೀರ್ಯತೆಯು ಒಂದೇ
ಆದ್ದರಿಂದ ಮಕ್ಕಳು ಮರಳು ಕೋಟೆಗಳ ಕುರಿತು
ಜಗಳವಾಡಿದರೆ, ನಗದಿರಿ.

ಗಾಂಭೀರ್ಯತೆಯು ಜೀವನದ ಮುಕ್ತತೆಗೆ ಹಾಗೂ ಸ್ವಾತಂತ್ರ್ಯಕ್ಕೆ ನಿಮ್ಮ ಮನಸ್ಸನ್ನು ಮುಚ್ಚುತ್ತದೆ. ಅದು ನಿಮ್ಮನ್ನು ಮೂಂಕಾಗಿ ಮತ್ತು ನಿರ್ಜೀವವಾಗಿಸುತ್ತದೆ ಹಾಗೂ ಎಲ್ಲಾ ಸಮಯದಲ್ಲೂ ನಿಮಗೆ ತಿಳಿದಿರುವ ಹಾಗೂ ಬಳಸುವ ಪರಿಚಿತ ಮಾದರಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ.

ಒಂದು ಸಣ್ಣ ಕಥೆ:

ಝೆನ್ ಮಠದಲ್ಲಿ, ಒಂದು ಉತ್ತಮವಾದ ತೋಟವನ್ನು ಯಾರು ಬೆಳೆಸುತ್ತಾರೆಂಬುದಕ್ಕಾಗಿ ಶಿಷ್ಯರ ನಡುವೆ ಒಂದು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಒಬ್ಬ ಶಿಷ್ಯನು ಬಹಳ ಗಂಭೀರ ಸ್ವಭಾವದವನಾಗಿದ್ದನು. ಆತನು ಸ್ಪರ್ಧೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡನು. ಆತನು ತನ್ನ ತೋಟವನ್ನು ಸದಾ ಅಂದವಾಗಿ, ಸ್ವಚ್ಛವಾಗಿಟ್ಟು, ಚೆನ್ನಾಗಿ ಗುಡಿಸುತ್ತಿದ್ದನು. ಎಲ್ಲಾ ಹುಲ್ಲಿನ ಎತ್ತರವೂ ಸಮವಾಗಿದ್ದಿತು. ಎಲ್ಲಾ ಪೊದೆಯೂ ಅಂದವಾಗಿ ಕತ್ತರಿಸಲ್ಪಟ್ಟಿದ್ದವು. ಆತನಿಗೆ ಮೊದಲನೆಯ ಬಹುಮಾನವು ತನಗೆ ಸಿಗುವುದೆಂದು ಖಚಿತವಾಗಿ ಇದ್ದನು.

ಸ್ಪರ್ಧೆಯ ದಿನ, ಗುರುಗಳು ಎಲ್ಲಾ ತೋಟಗಳನ್ನೂ
ನೋಡುತ್ತಾ ಬಂದರು. ನಂತರ ಹಿಂತಿರುಗಿ ಬಂದು,
ತೋಟಗಳಿಗೆ ಶ್ರೇಯಾಂಕಗಳನ್ನು ನೀಡಿದರು. ಈ
ಶಿಷ್ಯನ ತೋಟವು ಅತ್ಯಂತ ಕಡಿಮೆಯ
ಶ್ರೇಯಾಂಕವನ್ನು ಪಡೆಯಿತು. ಎಲ್ಲರಿಗೂ ಅತಿ
ಆಶ್ಚರ್ಯವಾಯಿತು. ಆ ಶಿಷ್ಯನಿಗೆ ಇದನ್ನು
ತಡೆಯಲಾಗದೆ, ‘ಗುರುಗಳೇ, ನನ್ನ ತೋಟದಲ್ಲಿ
ತಪ್ಪೇನಿದೆ? ನನ್ನ ತೋಟಕ್ಕೆ ಏಕೆ ಕಡಿಮೆಯ
ಶ್ರೇಯಾಂಕವನ್ನು ನೀಡಿದಿರಿ?’ ಎಂದು
ಕೇಳಿಯೇಬಿಟ್ಟನು.

ಗುರುಗಳು ಅವನನ್ನು ನೋಡಿ, ‘ನಿನ್ನ ತೋಟದಲ್ಲಿ
ತರಗೆಲೆಗಳೆಲ್ಲಿವೆ? ಈ ರೀತಿ ಪೋಷಿಸಿದ ತೋಟವು
ಜೀವಂತವಾಗಿರುವುದಿಲ್ಲ. ಅದು ನಿರ್ಜೀವವಾಗಿದೆ’
ಎಂದು ಹೇಳಿದರು.

ಗಾಂಭೀರ್ಯತೆಯು ಸಹಜತೆಯನ್ನು
ನಾಶಪಡಿಸುತ್ತದೆ. ಅದು ಸೃಜನಶೀಲತೆಯನ್ನು
ನಾಶಪಡಿಸುತ್ತದೆ.

ಒಂದು ಕೆಲಸವನ್ನು ನೆಮ್ಮದಿಯಿಂದ, ತಿಳಿಯಾದ ಮನೋಭಾವನೆಯಿಂದ ಮಾಡಿದಾಗ, ನಿಮ್ಮ ಚಿಂತನೆ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವು ಸ್ವಾಭಾವಿಕವಾಗಿ ಹೆಚ್ಚುತ್ತದೆ ಎಂದು ವಿಜ್ಞಾನವು ಸಾಬೀತು ಪಡಿಸಿದೆ. ಅದೇ ಕೆಲಸವನ್ನು ಒಂದು ಗಂಭೀರವಾದ ರೀತಿಯಲ್ಲಿ ಮಾಡಿದರೆ, ಅದು

ನಿಮ್ಮ ಮನಸ್ಸನ್ನು ಮಂಕಾಗಿಸುತ್ತದೆ. ನೀವು
ಯಾವುದೇ ಕೆಲಸವನ್ನು ಅತಿ ಗಂಭೀರವಾಗಿ
ಮಾಡಿದರೆ, ಫಲಿತಾಂಶದ ಬಗ್ಗೆ ನಿಮಗೆ ಅತಿಯಾದ
ಆಸಕ್ತಿ ಇದ್ದರೆ, ವಾಸ್ತವವಾಗಿ ನೀವು ನಿಮ್ಮ
ಅತ್ಯುತ್ತಮವಾದ ಮಟ್ಟದಲ್ಲಿ ಅದನ್ನು ಮಾಡಲು
ಆಸ್ಪದ ಕೊಡುತ್ತಿರುವುದಿಲ್ಲ.

ಸಹಜವಾಗಿ, ನೀವು ಯೋಜನೆಗಳನ್ನು
ಮಾಡಬೇಕಾಗುತ್ತದೆ ಮತ್ತು ಮುಂದಿನದನ್ನು
ಯೋಚಿಸಬೇಕಾಗುತ್ತದೆ. ಆದರೆ ಅದನ್ನು
ಪ್ರಾಮಾಣಿಕತೆಯಿಂದ ಮಾಡಿರಿ,
ಗಾಂಭೀರ್ಯತೆಯಿಂದಲ್ಲ. ಗಾಂಭೀರ್ಯತೆ ಹಾಗೂ
ಪ್ರಾಮಾಣಿಕತೆಯು ಒಂದೇ ಅಲ್ಲ. ಪ್ರಾಮಾಣಿಕತೆಯು
ಉತ್ಸಾಹದಿಂದ, ಲವಲವಿಕೆಯಿಂದ, ಕೆಲಸವನ್ನು
ಮಾಡುವುದರ ಮೇಲೆ ಕೇಂದ್ರೀಕರಿಸುವುದಾಗಿದೆ.
ಪ್ರಾಮಾಣಿಕತೆ ಎಂದರೆ ಫಲಿತಾಂಶದ ಬಗ್ಗೆ
ಅತಿಯಾಗಿ ಚಿಂತಿಸದೆ, ನಿಮ್ಮ ಉತ್ತಮವಾದ
ಪ್ರಯತ್ನವನ್ನು ಕೆಲಸಕ್ಕೆ ನೀಡುವುದು! ನೀವು
ಗಾಂಭೀರ್ಯತೆಯಿಂದ ಕೂಡಿದವರಾದರೆ, ನೀವು
ಸಂತೋಷಪಡುವುದಿಲ್ಲ, ನಗುವುದಿಲ್ಲ.
ಗಾಂಭೀರ್ಯತೆಯಿಂದಿದ್ದರೆ, ನಿಮ್ಮಿಂದ ಹೇಗೆ ತಾನೇ
ನಗಲು ಸಾಧ್ಯ?

ಅತಿ-ಸರಿತನದ ಆಕಾಂಕ್ಷೆ

ಅತಿ-ಸರಿತನದ ಆಕಾಂಕ್ಷೆಯು ಯಾವಾಗಲೂ ನಿಮ್ಮ ಮನಸ್ಸಿನಿಂದ ಬರುವಂತಹುದು. ಅದು ನಿಮಗೆ ಒಂದು ಗುರಿಯಾಗುತ್ತದೆ. ಅದನ್ನು ಗುರಿಯನ್ನಾಗಿಸಿ, ಅದರೆಡೆಗೆ ಕೆಲಸ ಮಾಡುತ್ತೀರಿ. ಅದನ್ನು ಗುರಿಯನ್ನಾಗಿಸಿ ಅದರೆಡೆಗೆ ಕೆಲಸ ಮಾಡಿದರೆ, ಅದು ಜಡವಾಗುತ್ತದೆ ಹಾಗೂ ಐಹಿಕವಾಗುತ್ತದೆ. ಆದರೆ ನೀವು ಪರಿಪೂರ್ಣರಾದಾಗ, ನೀವು ನಿಮ್ಮ ಹೃದಯದಲ್ಲಿ ನೆಲೆಸಿದಾಗ, ಅದೊಂದು ಆಳವಾದ ಅನುಭವವಾಗುತ್ತದೆ. ಅದರ ಫಲಿತಾಂಶವು ಸುಂದರವಾಗಿರುತ್ತದೆ ಹಾಗೂ ನಿಮಗೆ ಸಂತೋಷವನ್ನು ಕೊಡುತ್ತದೆ. ಆಗ, ನೀವು ಏನೇ ಮಾಡಿದರೂ, ವಿಶ್ವಶಕ್ತಿಯೊಂದಿಗೆ ಶೃತಿಗೂಡಿರುತ್ತೀರಿ. ನೀವು ಏನೇ ಮಾಡಿದರೂ, ಪೂರ್ತಿಯಾಗಿ, ಸಂಪೂರ್ಣವಾಗಿ ಮಾಡಿ. ಆಗ ಅದು ಸಂಪೂರ್ಣವಾಗಿರುತ್ತದೆ, ನೀವು ಅತಿ-ಸರಿತನದ ಆಕಾಂಕ್ಷೆಯ ಬಗ್ಗೆ ಚಿಂತಿಸಬೇಕಾಗಿಯೇ ಇರುವುದಿಲ್ಲ.

ಅತಿ-ಸರಿತನದ ಆಕಾಂಕ್ಷೆಯು ಸಂತೋಷವನ್ನು
ಕೊಡುವುದಿಲ್ಲ; ಅದು ಕೇವಲ ನಿಮ್ಮ ಅಹಂಕಾರಕ್ಕೆ
ಸಾರ್ಥಕತೆ ನೀಡುತ್ತದೆ. ಒಂದು ವೇಳೆ
ಸಾರ್ಥಕತೆಯನ್ನು ಕೊನೆಯಲ್ಲಿ
ಅನುಭವಿಸಿದಂತಾದರೂ, ಅದು ಬರಿಯ ನಿಮ್ಮ
ಅಹಂಕಾರದ ಸಾರ್ಥಕತೆಯಾಗಿರುತ್ತದೆ, ನಿಮ್ಮ
ಆಂತರಿಕ ಸಾರ್ಥಕತೆಯಾಗಿರುವುದಿಲ್ಲ. ಸ್ಪಷ್ಟವಾಗಿ
ತಿಳಿಯಿರಿ, ಅತಿ-ಸರಿತನದವಾದಿಗಳು ಅತ್ಯಂತ
ದೊಡ್ಡ ಅಹಂಕಾರಿಗಳಾಗಿರುತ್ತಾರೆ. ಅವರು
ಪರಿಪೂರ್ಣತೆಯ ಆಯಾಮವನ್ನೇ

ಪ್ರಾಮಾಣಿಕತೆ
ಎಂದರೆ
ಫಲಿತಾಂಶದ
ಬಗ್ಗೆ ಅತಿಯಾಗಿ
ಚಿಂತಿಸದೆ, ನಿಮ್ಮ
ಉತ್ತಮವಾದ
ಪ್ರಯತ್ನವನ್ನು
ಕೆಲಸಕ್ಕೆ
ನೀಡುವುದು!

ಕಳೆದುಕೊಂಡಿರುತ್ತಾರೆ. ನೀವು ಏನನ್ನಾದರೂ
ಆಳವಾಗಿ ಮಾಡಲಿಚ್ಛಿಸಿದಾಗ ಮಾತ್ರ
ಪರಿಪೂರ್ಣತೆಯು ಸಾಧ್ಯವಾಗುತ್ತದೆ. ಅತಿ-ಸರಿತನದ
ಆಕಾಂಕ್ಷೆಯೂ ಸಾಧ್ಯವಿಲ್ಲದ್ದು. ಏಕೆಂದರೆ, ಅದು
ಇರುವುದು ನಿಮ್ಮ ಮನಸ್ಸಿನಲ್ಲಿ ಮತ್ತು ನಿಮ್ಮ
ಮನಸ್ಸೇ ಅತಿ-ಸರಿತನವೆಂಬುದರ
ಅರ್ಥನಿರೂಪಣೆಯನ್ನು ಬದಲಾಯಿಸುತ್ತಿರುತ್ತದೆ!

ಜೀವನವು ನಿಮ್ಮ ತರ್ಕವನ್ನು ಮೀರಿದುದು

ನಮ್ಮಲ್ಲಿ ಅನೇಕರು ಜೀವನವು ನಮ್ಮ ತರ್ಕದ ಹತೋಟಿಯಲ್ಲಿರುವ ಘಟನೆಗಳಿಂದ ತುಂಬಿದೆ ಎಂದು ಪ್ರಜ್ಞಾಹೀನವಾಗಿ ನಂಬುತ್ತಾರೆ. ಆದರೆ ಜೀವನವು ನಿಮ್ಮ ತರ್ಕವನ್ನು ಮೀರಿದುದೆಂಬ ಸತ್ಯವನ್ನು ಜೀವನವು ಮತ್ತೆ ಮತ್ತೆ ನೆನಪಿಸುತ್ತದೆ. ನಿಮ್ಮ ಹತ್ತಿರದ ಸ್ನೇಹಿತರೋ ಅಥವಾ ಸಂಬಂಧಿಕರೋ ಮೃತಪಟ್ಟಾಗ ಅಥವಾ ಯಾವುದಾದರೂ ಅನಿರೀಕ್ಷಿತ ಘಟನೆ ಸಂಭವಿಸಿದಾಗ, ನಿಮಗೆ ಈ ವಾಸ್ತವಾಂಶವು ವಿಶೇಷವಾಗಿ ನೆನಪಿಗೆ ಬರುತ್ತದೆ. ನೀವು ನಿಮ್ಮ ಕೆಲಸವನ್ನು ಕಳೆದುಕೊಂಡಾಗ, ತಕ್ಷಣ ಜೀವನವು ನಿಮ್ಮ ಹತೋಟಿಯಲ್ಲಿಲ್ಲವೆಂದು ತಿಳಿಯುತ್ತೀರಿ. ಜೀವನವು ನಿಮ್ಮ ತರ್ಕವನ್ನು ಮೀರಿದುದೆಂಬ ಸತ್ಯಕ್ಕೆ ಇದ್ದಕ್ಕಿದ್ದಂತೆ ಎಚ್ಚೆತ್ತುಕೊಳ್ಳುತ್ತೀರಿ. ಆಗ ಸತ್ಯವನ್ನು ಹುಡುಕಲು ಪ್ರಾರಂಭಿಸುತ್ತೀರಿ.

ಮುಖ್ಯವಾಗಿ, ನೀವು ಒಂದು ನಗರದಲ್ಲಿ ವಾಸಿಸುತ್ತಿದ್ದರೆ, ನಿಮ್ಮ ದಿನಚರಿಯು ಬಹುಮಟ್ಟಿಗೆ ನಿರ್ಧಾರವಾಗಿರುತ್ತದೆ. ಬೆಳಗಿನಿಂದ ರಾತ್ರಿಯವರೆಗೆ ನಿಮ್ಮ ದಿನವು ಹೇಗೆ ಮುಂಬರುವುದೆಂದು ನಿಮಗೆ ನಿರ್ದಿಷ್ಟವಾಗಿ ತಿಳಿದಿರುತ್ತದೆ. ನೀವು ಎಲ್ಲಿಗೆ ಹೋಗುತ್ತೀರಿ, ಏನನ್ನು ಮಾಡುತ್ತೀರಿ ಅಥವಾ ಮಾಡುವುದಿಲ್ಲ ಮತ್ತು ಯಾವಾಗ, ಏನನ್ನು ತಿನ್ನುತ್ತೀರೆಂಬುದು ನಿಮಗೆ ತಿಳಿದಿರುತ್ತದೆ.

ನಿಜವಾಗಿಯೂ ನಿಮ್ಮ ಅಹಂಕಾರವು ಬಹುಮಟ್ಟಿಗೆ ನಿಮಗೆ ಒಂದು ಪರಿಕಲ್ಪನೆಯನ್ನು ನೀಡುತ್ತದೆ. ನಿಮ್ಮ ಜೀವನವು ನಿಮ್ಮ ತರ್ಕದ ಹತೋಟಿಯಲ್ಲಿದೆಯೆಂಬ ಭಾವನೆಯನ್ನು ನಿಮ್ಮ ತರ್ಕವು ನೀಡುತ್ತದೆ. ಆದ್ದರಿಂದಲೇ ನಿಮ್ಮ ತರ್ಕಕ್ಕೆ ಮೀರಿದ, ನಿಮ್ಮ ಹತೋಟಿಯಲ್ಲಿಲ್ಲದ ಯಾವುದಾದರೊಂದು ಘಟನೆ ಸಂಭವಿಸಿದಾಗ, ನೀವು ಸಂಪೂರ್ಣವಾಗಿ ವಿಚಲಿತರಾಗುತ್ತೀರಿ. ನಿಮ್ಮಿಂದ ಅದನ್ನು ನಿಭಾಯಿಸಲಾಗುವುದಿಲ್ಲ. ನಿಮಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ. ನೀವು ಖಿನ್ನತೆಯನ್ನು ಹೊಂದುತ್ತೀರಿ ಅಥವಾ ವೇದನೆಯನ್ನು ಅನುಭವಿಸುತ್ತೀರಿ.

ನೀವು ತಿಳಿಯಬೇಕಾದ ಒಂದು ಮುಖ್ಯವಾದ
ಸತ್ಯ, ಒಂದು ಪರಮೋನ್ನತವಾದ ರಹಸ್ಯವಿದೆ.
ನಿಮ್ಮಿಂದಲೇ ಕೆಲಸಕಾರ್ಯಗಳು ಸುಗಮವಾಗಿ
ನಡೆಯುತ್ತಿವೆಯೆಂದು ತಿಳಿಯಲೇಬೇಡಿ. ನಿಮ್ಮ
ಇರುವಿಕೆಯನ್ನು ಲೆಕ್ಕಿಸದೆಯೇ ಕೆಲಸ ಕಾರ್ಯಗಳು
ಸುಗಮವಾಗಿಯೇ ನಡೆಯುತ್ತವೆ! ಇದು ಮುಖ್ಯವಾದ
ರಹಸ್ಯಗಳಲ್ಲೊಂದು. ಎಲ್ಲಿಯವರೆಗೆ ನಿಮ್ಮಿಂದಲೇ
ಎಲ್ಲಾ ಆಗುಹೋಗುಗಳು ನಡೆಯುತ್ತಿವೆ ಎಂದು

ನೀವು ಭಾವಿಸುತ್ತೀರೋ, ಅಲ್ಲಿಯವರೆಗೂ ನೀವು
ಸತತವಾಗಿ ನಿಮ್ಮ ಅಹಂಕಾರದಿಂದ
ಕಷ್ಟಪಡುತ್ತಿರುತ್ತೀರಿ.