KAILASA Library/ಜೀವನ್ಮುಕ್ತಿ/ಅಹಂಕಾರ ಎಂದರೇನು?Sign in
ಜೀವನ್ಮುಕ್ತಿ

ಅಹಂಕಾರ ಎಂದರೇನು?

This text was machine-transcribed from the printed book and may contain errors. Select the words and choose “Report a mistake”.

ಉಪನಿಷತ್ತಿನ ಪ್ರಕಾರ, ಎಲ್ಲಿಯವರೆಗೆ ನೀವು
ಜೀವನಕ್ಕೆ ಒಂದು ಉದ್ದೇಶವಿದೆ ಎಂದು ಆಲೋಚಿಸಿ,
ನೀವು, ಆ ಉದ್ದೇಶದ ಹಿಂದೆ ಓಡುತ್ತಿರುತ್ತೀರೋ,
ಅಲ್ಲಿಯವರೆಗೆ ನೀವು ಒಬ್ಬ ಅಹಂಕಾರಿಯಾದ
ವ್ಯಕ್ತಿಯೇ. ಜೀವನದ ಉದ್ದೇಶ ರಹಿತತೆಯ
ಸೌಂದರ್ಯವನ್ನು ತಿಳಿದಾಗ, ನೀವು ನಿಮ್ಮ
ಅಹಂಕಾರವನ್ನು ಬಿಡುತ್ತೀರಿ. ಜೀವನದ ಉದ್ದೇಶ
ರಹಿತತೆಯನ್ನು ನಿಮಗೆ ತಿಳಿಯುವಂತೆ ಮಾಡುವವರೇ
ಗುರುಗಳು. ಈಗ ನೀವು ಯಾವುದನ್ನು ಯೋಗ್ಯವೆಂದು
ತಿಳಿದಿದ್ದೀರೋ, ಅದು ವಾಸ್ತವವಾಗಿ ಸತ್ಯವೂ
ಆದದ್ದಲ್ಲ, ಯೋಗ್ಯವೂ ಆದದ್ದಲ್ಲ.
ಅಹಂಕಾರಿಯಾದ ವ್ಯಕ್ತಿಯು ಉದ್ದೇಶದೊಂದಿಗೆ
ಅರಸಿ, ನಿಜತ್ವವನ್ನು ಕಳೆದುಕೊಳ್ಳುತ್ತಾನೆ.

ನೀವು ಯಾವ ಮನಸ್ಸಿನಿಂದ ಬಾಳಿದಿರೋ, ಆ ಮನಸ್ಸಿಗೆ ನಿಜವಾದ ಅಸ್ತಿತ್ವವಿಲ್ಲವೆಂದು ಮರಣವು ಸ್ಪಷ್ಟವಾಗಿ ತಿಳಿಸುತ್ತದೆ. ನೀವು ಜೀವನದ ಉದ್ದೇಶ ರಹಿತತೆಯನ್ನು ತಿಳಿದಾಗ, ನಿಮ್ಮಲ್ಲಿ ಒಂದು ಹೊಸದಾದ ಪ್ರಜ್ಞೆಯು ವಿಕಸಿಸಲಾರಂಭಿಸುತ್ತದೆ. ನೀವು ಸಾಧಿಸಬೇಕಾದುದೇನೂ ಇಲ್ಲವೆಂದೂ, ನೀವು ಕಾಪಾಡುತ್ತಿರುವ ವಜ್ರಗಳು, ಬರಿಯ ಕಲ್ಲುಗಳೆಂದೂ ಹಾಗೂ ಜೀವನದಲ್ಲಿ ಮಹತ್ತರವಾದುದೆಲ್ಲವೂ ಬರಿಯ ಆಟದ ಸಾಮಾನುಗಳೆಂದೂ ಅನುಭವಕ್ಕೆ ಬಂದ ಕ್ಷಣವೇ, ನಿಮಗೆ ಜೀವನದ ಉದ್ದೇಶ ರಹಿತತೆಯು ತಿಳಿಯುತ್ತದೆ.

ಜೀವನದ
ನಿಜವಾದ
ಉದ್ದೇಶವನ್ನು
ತಿಳಿಯಲು
ಅಹಂಕಾರಕ್ಕೆ
ಸಾಧ್ಯವಿಲ್ಲ.

ಜೀವನದ ನಿಜವಾದ
ಉದ್ದೇಶವನ್ನು
ಅಹಂಕಾರದಿಂದ ತಿಳಿಯಲು ಸಾಧ್ಯವಿಲ್ಲ.
ಅಹಂಕಾರವನ್ನು ಬಿಟ್ಟಾಗ, ನಿಮಗೆ ಜೀವನದ ದೈವಿಕ
ಉದ್ದೇಶ, ದೈವಲೀಲೆಗಳನ್ನು ತಿಳಿಯಲು
ಸಾಧ್ಯವಾಗುತ್ತದೆ. ನೀವು ನಾಟಕವನ್ನು ನೋಡಿ
ಆನಂದಿಸುತ್ತೀರಿ. ಜೀವನಕ್ಕೆ ಒಂದೂ
ಉದ್ದೇಶವಿದೆಯೆಂದು ಯೋಚಿಸುತ್ತಾ ಏನನ್ನಾದರೂ
ಸಾಧಿಸಬೇಕೆಂದು ಕಾಯುತ್ತಿದ್ದದ್ದರೆ, ನೀವು
ಜೀವನವನ್ನೇ ಕಳೆದುಕೊಂಡುಬಿಡುತ್ತೀರಿ.

ಜೀವನವೇ ದಾರಿ ಹಾಗೂ ಗುರಿ. ನಿಮಗೊಂದು ಗುರಿ ಇದ್ದಾಗ, ನೀವು ಓಡುತ್ತೀರಿ; ನಿಮ್ಮ ಪಾದಗಳು ಭೂಸ್ಪರ್ಶಮಾಡುವುದಿಲ್ಲ ಮತ್ತು ನೀವು ವಿಶ್ವಶಕ್ತಿಯ ಅಥವಾ ಪ್ರಕೃತಿಯ ಸೌಂದರ್ಯವನ್ನು ಕಳೆದುಕೊಳ್ಳುತ್ತೀರಿ. ನೀವು ಗುರಿಯನ್ನು ಬಿಟ್ಟಾಗ, ಪ್ರಾಧಾನ್ಯತೆಯು ಮಾರ್ಗದ ಮೇಲಿರುತ್ತದೆ.

ಜೀವನದ ಉದ್ದೇಶ ರಹಿತತೆಯನ್ನು ತಿಳಿದರೆ, ಬಾಳಿನ ಅರ್ಥವು ತಿಳಿಯುತ್ತದೆ. ಅಲ್ಲಿಯವರೆಗೂ, ನೀವು ಒಬ್ಬ 'ಬದುಕಿಯೂ ಸತ್ತಂತಿರುವ' ವ್ಯಕ್ತಿ. ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿರುವ ಒಬ್ಬ ವ್ಯಕ್ತಿ ಹಾಗೂ ಸತ್ಯವನ್ನು ತಿಳಿದಿಲ್ಲದ ಒಬ್ಬ ವ್ಯಕ್ತಿ-ಇಬ್ಬರೂ ಸರಿಯಾದ ಪ್ರಜ್ಞೆ ಇಲ್ಲದೆ ಬಾಳುತ್ತಾರೆ. ಈ ಸತ್ಯವನ್ನು ನಿಮಗೆ ತಿಳಿಸುವವರು ಗುರುಗಳು ಮಾತ್ರ. ಜೀವನದ

ಅಥವಾ ವಿಶ್ವಶಕ್ತಿಯ
ಅರ್ಥವೇ, ಬಾಳುವುದರ
ಅರ್ಥ ಎಂದು ತಿಳಿಯಿರಿ.

ಗುರಿಯನ್ನು ಬಿಟ್ಟು
ಜೀವನವನ್ನು ಆನಂದಿಸಿರಿ.
ಈ ಬೋಧನೆಯ ಮೇಲೆ
ಮತ್ತೆ ಮತ್ತೆ ಧ್ಯಾನಿಸಿರಿ. ಸತ್ಯವು ನಿಮ್ಮೊಳಗೆ
ಉದಯಿಸುತ್ತದೆ ಹಾಗೂ ಜೀವನದ ಅರ್ಥವೇ
ಆಗಿರುವ ನಿತ್ಯಾನಂದ ಸ್ಥಿತಿಯು ನಿಮ್ಮಲ್ಲಿ
ವಿಕಾಸವಾಗುತ್ತದೆ.

‘ಇಲ್ಲ’ ಎಂಬ ಘನವಾದ ಭಾವನೆ

ಅನೇಕ ಬಾರಿ, ನೀವು ನೋಡಿರಬಹುದು,
ಯಾರಾದರೂ ನಿಮಗೆ ಏನನ್ನಾದರೂ ಹೇಳಿದರೆ,
ನಿಮ್ಮಲ್ಲಾಗುವ ಮೊದಲ ಪ್ರತಿಕ್ರಿಯೆಯು ‘ಇಲ್ಲ’
ಎನ್ನುವ ಒಂದು ನಿರ್ದಿಷ್ಟವಾದ ಪ್ರತಿರೋಧ. ನೀವು
‘ಇಲ್ಲ’ ಎಂದಾಗ, ಅದು ಅಹಂಕಾರವನ್ನು
ಪೋಷಿಸುತ್ತದೆ. ನೀವು ನಿಮ್ಮೊಳಗೆ ಘನವಾಗಿ ಹಾಗೂ
ದೃಢವಾಗುತ್ತೀರಿ. ನೀವು ‘ಹೌದು’ ಎಂದಾಗ
ದ್ರಾವಕವೂ, ಭೇದ್ಯವೂ ಆಗುತ್ತೀರಿ; ನಿಮ್ಮ
ಅಹಂಕಾರವು ಮಣಿಯುವಂತೆ ಭಾಸವಾಗಿ, ನಿಮಗೆ
ಮುಜುಗುರವಾಗುತ್ತದೆ. ಆದ್ದರಿಂದಲೇ ನೀವು ‘ಇಲ್ಲ’
ಎನ್ನುವುದು.

ಈ ಕಾರಣದಿಂದಲೂ ನಿಮಗೆ ಮನೆಯಲ್ಲಿ,
ಶಾಲೆಯಲ್ಲಿ, ಕಾರ್ಯಾಲಯದಲ್ಲಿ ಅಥವಾ ವಾಹನ
ಚಾಲನೆ ಮಾಡುವಾಗ, ನಿಯಮಗಳನ್ನು ಮುರಿದರೆ
ಸಂತೋಷವಾಗುತ್ತದೆ. ನಿಯಮಗಳಿಗೆ ‘ಇಲ್ಲ’
ಎಂದಾಗ ನಿಮ್ಮ ಅಹಂಕಾರವು ಹೆಚ್ಚಿದಂತಾಗುತ್ತದೆ.
ನೀವಿದನ್ನು ಚಿಕ್ಕ ಮಕ್ಕಳಲ್ಲಿ ಕಾಣಬಹುದು. ಯಾವ
ವಸ್ತುಗಳನ್ನು ಅವರು ಕೇಳಬಾರದೆಂದು
ಹೇಳುವಿರೋ, ತಕ್ಷಣವೇ ಅವರು ಅದನ್ನೇ
ಕೇಳುತ್ತಾರೆ.

ಸಾಮಾನ್ಯ ಹಾಗೂ ಅಸಾಮಾನ್ಯ

ನಿಮ್ಮ ಅಹಂಕಾರಕ್ಕಾಗಿಗೇ ಬದುಕಲು ಯತ್ನಿಸಿದಾಗಲೆಲ್ಲಾ, ನೀವು ನಿಮ್ಮ ಹಾಗೂ ಇತರರ ಜೀವನವನ್ನು ಸಂಕಟಗೊಳಿಸುತ್ತೀರಿ. ಹೆಚ್ಚಾಗಿ ನಿಮ್ಮ ಜೀವನದಲ್ಲಿ ನೀವು ಎದುರಿಸುವ ಸಂಕಟಗಳು ಇತರರಿಂದ ಸೃಷ್ಟಿಸಲ್ಪಟ್ಟಿರುವುದಲ್ಲ. ಅವು ನಿಮ್ಮ ಅರಿವಿಲ್ಲದೇ ನಿಮ್ಮಿಂದಲೇ ಸೃಷ್ಟಿಸಲ್ಪಟ್ಟಿರುವುವು. ನಿಮಗೆ ಅದರಿಂದ ಯಾವ ಪ್ರಯೋಜನವೂ ಆಗದಿರಬಹುದು. ಆದರೆ ನಿಮ್ಮ ಅಹಂಕಾರವೇ ಹೆಚ್ಚೆಂದು ನಿರೂಪಿಸಲು, ನೀವು ಅದನ್ನು ಸೃಷ್ಟಿಸುತ್ತೀರಿ.

ಒಂದು ಸಣ್ಣ ಕಥೆ:

ಜಪಾನ್ ದೇಶದಲ್ಲಿ ಸುಝುಕಿ ಎಂಬ ಒಬ್ಬ ಜ್ಞಾನಿಯಿದ್ದನು. ಆತನ ಗುರುವು ಗತಿಸಿದ ನಂತರ, ಆತನು ಗಟ್ಟಿಯಾಗಿ ಅಳಲಾರಂಭಿಸಿದನು. ಒಬ್ಬ ವ್ಯಕ್ತಿಯು, ‘ನೀವು ಒಬ್ಬ ಜ್ಞಾನಿಗಳು. ಒಬ್ಬ ವ್ಯಕ್ತಿಯು ಮರಣ ಹೊಂದಿದ ಕಾರಣ, ನೀವೇಕೆ ಅಳುತ್ತಿರುವಿರಿ?’ ಎಂದು ಕೇಳಿದನು. ‘ನನ್ನ ಗುರುಗಳು ಈ ಭೂಗ್ರಹದ ಮೇಲೆ ಒಬ್ಬ ಅಸಾಧಾರಣ ವ್ಯಕ್ತಿಯಾಗಿದ್ದರು’ ಎಂದು ಸುಝುಕಿ

ಉತ್ತರಿಸಿದರು. ಆ ವ್ಯಕ್ತಿಗೆ
ಆಶ್ಚರ್ಯವಾಗಿ, ‘ಅವರಲ್ಲಿ ಅಂತಹ
ಅಸಾಮಾನ್ಯತೆಯು ಏನಿತ್ತು?’ ಎಂದು ಕೇಳಿದನು.

ಸುಝು ಕಿಯು, ‘ತಮ್ಮನ್ನು ಒಬ್ಬ ಅತ್ಯಂತ
ಸಾಮಾನ್ಯನೆಂದು ಭಾವಿಸಿದ ಅಂತಹ
ಅಸಾಮಾನ್ಯರನ್ನು ನಾನೆಂದೂ ನೋಡಿಯೇ ಇಲ್ಲ’
ಎಂದು ಹೇಳಿದರು.

ಸಾಧಾರಣವಾಗಿ ಜೀವನದಲ್ಲಿ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನೂ ತಾನು ಅಸಾಮಾನ್ಯ ವ್ಯಕ್ತಿಯೆಂದೇ ತಿಳಿದಿರುತ್ತಾನೆ. ನೀವು ಅತ್ಯಂತ ಹೆಚ್ಚಿನ ಕಷ್ಟವನ್ನು ಎದುರಿಸಿದ್ದೀರೆಂದು ಭಾವಿಸಿದಾಗ, ಒಂದು ಕಠಿಣವಾದ ಜೀವನವನ್ನು ನಿಭಾಯಿಸಲು ಸಮರ್ಥರಾಗಿದುದಕ್ಕಾಗಿ ನಿಮ್ಮ ಅಹಂಕಾರಕ್ಕೆ ಸಂತೋಷವಾಗುತ್ತದೆ. ನಿಮ್ಮ ಶತ್ರುವು ದೊಡ್ಡವನಾಗಿದ್ದರೆ, ನೀವು ದೊಡ್ಡವರೆಂಬಂತೆ ಭಾವಿಸುತ್ತೀರಿ, ನಿಮ್ಮ ಶತ್ರುವು ಚಿಕ್ಕವರಾಗಿದ್ದರೆ, ನೀವು ಚಿಕ್ಕವರೆಂದು ಭಾವಿಸುತ್ತೀರಿ.

ಇದೇ ಕಾರಣಕ್ಕೆ, ನಿಮ್ಮ ಕಷ್ಟವು ದೊಡ್ಡದಾಗಿದ್ದರೆ, ನಿಮಗೆ ಒಳ್ಳೆಯ ಭಾವನೆ ಉಂಟಾಗುತ್ತದೆ. ನಿಮ್ಮ ಅಹಂಕಾರವು ತೃಪ್ತಿಪಡುತ್ತದೆ. ನಿಮ್ಮ ಜೀವನವನ್ನು ನೀವು ಪಡುವ ಕಷ್ಟಗಳಿಂದ ಅಳೆಯುತ್ತೀರಿ. ತಿಳಿಯದೆಯೇ, ನೀವು ಇತರರನ್ನೂ ಹಾಗೂ ನಿಮ್ಮನ್ನೂ ಸಂಕಟಕ್ಕೆ ಈಡುಮಾಡುತ್ತೀರಿ. ಸುಝುಕಿಯವರ ಗುರುಗಳು, ಅಸಾಮಾನ್ಯರು ಏಕೆಂದರೆ ಅವರು ತಮ್ಮನ್ನು ಅತ್ಯಂತ ಸಾಮಾನ್ಯರೆಂದು ತಿಳಿದಿದ್ದರು. ಆದರೆ ಈ ಪ್ರಪಂಚದಲ್ಲಿ ಪ್ರತಿಯೊಬ್ಬನೂ ತನ್ನನ್ನು ಅಸಾಮಾನ್ಯನೆಂದು ತಿಳಿಯುತ್ತಾನೆ.

ನೀವು ಸಾಮಾನ್ಯ ಮಟ್ಟದವರೋ ಅಲ್ಲವೋ ಎಂದು ತಿಳಿಯಲು, ಈ ಪ್ರಯೋಗವನ್ನು ಮಾಡಿರಿ. ನಿಮ್ಮನ್ನು ನೀವು ಅಸಾಮಾನ್ಯರೆಂದು ಭಾವಿಸಿದರೆ, ಸ್ಪಷ್ಟವಾಗಿ ತಿಳಿಯಿರಿ, ನೀವು ಸಾಮಾನ್ಯರು. ನಿಮ್ಮನ್ನು ನೀವು ಸಾಮಾನ್ಯರೆಂದು ತಿಳಿದರೆ, ನೀವು ಅಸಾಮಾನ್ಯರು!

ಸರಿಯಾದ ಮುಖವಾಡವನ್ನು ಬಳಸುವುದು

ನಿಮ್ಮ ದೈನಂದಿನ ಜೀವನದಲ್ಲಿ, ನೀವೆಲ್ಲರೂ
ಬೇರೆ ಬೇರೆಯ ಪಾತ್ರಗಳನ್ನು ನಟಿಸುತ್ತೀರಿ,
ಮುಖವಾಡಗಳನ್ನು ಬಳಸುತ್ತೀರಿ. ನಿಮ್ಮ ತಾಯಿಯ
ಜೊತೆ ಒಂದು ಮುಖವಾಡ, ನಿಮ್ಮ ತಂದೆಯ ಜೊತೆ
ಬೇರೆಯ ಮುಖವಾಡ, ನಿಮ್ಮ ಮೇಲಧಿಕಾರಿಯ
ಜೊತೆ ಇನ್ನೊಂದು ಮುಖವಾಡ, ಇತ್ಯಾದಿ.
ಸರಿಯಾದ ಜನರೊಂದಿಗೆ ಸರಿಯಾದ
ಮುಖವಾಡವನ್ನು ಬಳಸುತ್ತಿದ್ದರೆ, ಅದು ಸರಿ. ಒಬ್ಬ
ವ್ಯಕ್ತಿಯೊಂದಿಗೆ ಸರಿಯಲ್ಲದ ಮುಖವಾಡವನ್ನು
ಬಳಸಿದರೆ, ನಿಮ್ಮ ಅಹಂಕಾರವು ಪ್ರವೇಶಿಸಿರುವುದರ
ಬಗ್ಗೆ ಹುಷಾರಾಗಿರಿ.

ನೀವು ಮಾಡಬೇಕಾದುದೇನೆಂದರೆ,
ಮುಖವಾಡಗಳನ್ನು ಸಮರ್ಥವಾಗಿ ಥಟ್ಟನೆ
ಬದಲಾಯಿಸಿ ನಾಟಕವನ್ನು ನೋಡಿ ಆನಂದಿಸುವುದು.
ಆಗ ನೀವು ಒಬ್ಬ ಪ್ರೇಕ್ಷಕರಾಗುತ್ತೀರಿ - ನೀವು
ಮುಖವಾಡವನ್ನು ಮೀರಿದವರೆಂದು ತಿಳಿದಾಗ ಮಾತ್ರ
ಇದನ್ನು ನಿಮ್ಮಿಂದ ಮಾಡಲು ಸಾಧ್ಯವಾಗುವುದು,

ದುಃಖದ
ಮೂಲೆಗಳನ್ನೂ
ತಾಕಿದಾಗ, ಅದು
ಅಸ್ತಿತ್ವದಲ್ಲಿರುವುದು.

ಇಲ್ಲದಿದ್ದರೆ, ನೀವು
ಮುಖವಾಡದಿಂದ
ಪರವಶರಾಗಿ, ಜೀವನದ
ಇಡೀ ಸೊಬಗನ್ನು
ಕಳೆದುಕೊಳ್ಳುತ್ತೀರಿ. ನೀವು
ಮುಖವಾಡಗಳನ್ನು ಮಾತ್ರ ಬಳಸುತ್ತಿದ್ದೀರೆಂದು
ತಿಳಿದಾಗ, ನಿಮ್ಮ ಆಸೆಗಳು ಉದುರಿ ಹೋಗುತ್ತವೆ.

ನೀವು ದೊಡ್ಡವರಾಗಿ ಬೆಳೆದಾಗ,
ಸಹಜವಾಗಿಯೇ ಆಟಿಕೆಗಳನ್ನು ತ್ಯಜಿಸುತ್ತೀರಿ. ಅದೇ
ರೀತಿ, ಈ ಮುಖವಾಡಗಳನ್ನು ಬುದ್ಧಿವಂತಿಕೆಯಿಂದ
ನೋಡಿದಾಗ ನಿಮಗೆ ಅದರ ಬಗ್ಗೆ ಯಾವ ಆಸೆಯೂ
ಇರುವುದಿಲ್ಲ ಹಾಗೂ ಅವುಗಳನ್ನು ಬರಿಯ ಅಗತ್ಯಕ್ಕೆ
ಅನುಗುಣವಾಗಿ ಬಳಸುತ್ತೀರಿ.

ಅಹಂಕಾರವು ಅತೃಪ್ತಿಯಿಂದ ಹುಟ್ಟುತ್ತದೆ

ನೀವು ಒಬ್ಬ ಘನವಾದ ಅಹಂಕಾರಿಯಾಗಿದ್ದರೆ, ನಿಮಗೆ ಒಂದು ಬೇರೆಯದಾದ ನರಕವು ಬೇಕಾಗಿಲ್ಲ, ಏಕೆಂದರೆ ಕದನದಲ್ಲಿ ಹಾಗೂ ಅತೃಪ್ತಿಯಲ್ಲಿ ಮಾತ್ರ ಮಾನಸ್ಸು ಇರಲು ಸಾಧ್ಯವಾಗುವುದು. ತೃಪ್ತಿ, ಸಮಾಧಾನಗಳಿದ್ದರೆ, ನೀವು ನಿಮ್ಮ ಸೀಮೆಯನ್ನು ಕಳೆದುಕೊಳ್ಳುತ್ತೀರಿ. ಆದ್ದರಿಂದಲೇ ನಿಮಗೆ ಸಂತೋಷ ಅಥವಾ ಆನಂದ ಬೇಡವಾಗುತ್ತದೆ. ದಯವಿಟ್ಟು ನಿಮಗೆ ಆನಂದ ಬೇಕೆಂದು ನೀವೆಂದೂ ತಿಳಿಯದಿರಿ. ಇಲ್ಲ! ವಾಸ್ತವವಾಗಿ ನಿಮಗೆ ಸಂತೋಷ ಅಥವಾ ಆನಂದದ ಬಗ್ಗೆ ಭಯವಿದೆ. ನಿಮ್ಮಲ್ಲಿ ಒಂದು ಶಾಂತವಾದ, ನಿಶ್ಚಿಂತವಾದ ಭಾವನೆ ಇದ್ದಾಗ ನಿಮ್ಮನ್ನು ಗಮನಿಸಿರಿ. ಚಿಂತಿಸಲು ಏನೂ ಇಲ್ಲದಿದ್ದಾಗ, ಏನೋ ಕಳೆದುಕೊಂಡಂತೆ ಭಾವಿಸುತ್ತೀರಿ! ನಿಮಗೆ ಏನಾದರೊಂದು ಬಲವಾದ ಚಿಂತೆ ಇಲ್ಲದಿದ್ದರೆ, ನಿಮ್ಮ ಅಂತರಂಗದಲ್ಲಿ ಒಂದು ಸ್ಪಷ್ಟವಾದ ಸೀಮೆ ಇರುವುದಿಲ್ಲ.

ನಿಮ್ಮ ಮಾನಸ್ಸು ದುಃಖದ ಮೂಲೆ ಮೂಲೆಗಳನ್ನೂ ತಾಗಿದಾಗ, ನಿಮಗೆ ಮನಸ್ಸು ಇದೆ ಎಂದರ್ಥ. ನಿಮ್ಮ ಕಷ್ಟವು ಬಹಳವಾಗಿಲ್ಲದಿದ್ದರೆ, ನಿಮಗೆ ನಿಮ್ಮ ಸೀಮೆ ಅಥವಾ ನಿಮ್ಮ ಗುರುತು ತಿಳಿಯಲಾಗುವುದಿಲ್ಲ. ಸ್ವಲ್ಪ ಆಳವಾಗಿ ನೋಡಿದರೆ, ನಿಮಗೆ ಯಾವ ಚಿಂತೆಯೂ ಇಲ್ಲದಿದ್ದಾಗ ಅಥವಾ ಕಷ್ಟವೂ ಇಲ್ಲದಿದ್ದಾಗ ಬಹಳಷ್ಟು ಸಲ ನೀವು ಒಬ್ಬಂಟಿಗರೆಂದೆನಿಸುತ್ತದೆ. ನಿಮ್ಮನ್ನು ನೀವು ಅಂತೆಯೇ ನಂಬುತ್ತೀರಿ. ಏಕೆಂದರೆ ಸ್ವಾಭಾವಿಕವಾಗಿ, ಮಾನಸ್ಸು ಬರಿಯ ನಕಾರಾತ್ಮಕವಾದದ್ದನ್ನೇ ದಾಖಲಿಸುತ್ತದೆ. ವೇದನೆ, ಅಸಮಾಧಾನ ಹಾಗೂ ಅತೃಪ್ತಿಗಳಿಂದಾಗಿ, ಮನಸ್ಸು ಹೆಚ್ಚು ಯಾತನೆಗಳನ್ನು ಸೃಷ್ಟಿಸುತ್ತದೆ. ಅದರೊಂದಿಗೆ ಸ್ಪಷ್ಟವಾಗಿ ಗುರುತಿಸಿಕೊಳ್ಳುತ್ತದೆ ಮತ್ತು ಬೆಳೆಯುತ್ತದೆ. ಸೀಮೆ ಇಲ್ಲದಿರುವುದೇ ಆನಂದದ ಸ್ವಭಾವ. ನೀವು ಆನಂದವಾಗಿರುವಾಗ ನಿಮ್ಮ ಸೀಮೆಯು ತಿಳಿಯುವುದೇ ಇಲ್ಲ. ನಿಮಗೆ ನಿಮ್ಮ ಸೀಮೆಯು ತಿಳಿಯದೆ ಇದ್ದಾಗ, ನೀವು ಒಂದು ಆನಂದದ ಸ್ಥಿತಿಯಲ್ಲಿರುತ್ತೀರಿ, ಒಂದು ತೃಪ್ತಿಯಾದ ಸಮಾಧಾನದ ಭಾವನೆಯಲ್ಲಿರುತ್ತೀರಿ.

ವೇದನೆಯು ಅಹಂಕಾರಕ್ಕೆ ಕೊಂಡೊಯ್ಯುತ್ತದೆ

ನಿಮ್ಮ ವೇದನೆಯಿಲ್ಲದೆ ನಿಮ್ಮ ಅಹಂಕಾರವು
ಇರಲು ಸಾಧ್ಯವಿಲ್ಲ. ವೇದನೆಯು ನಿಮ್ಮ ಅಹಂಕಾರದ
ಮೂಲ. ಇದು ನೀವು ತಿಳಿಯಬೇಕಾದ ಮುಖ್ಯವಾದ
ಅಂಶ. ಅಹಂಕಾರವು ವೇದನೆಯಿಂದ
ತೊಂದರೆಗೀಡಾಗುತ್ತದೆಂದು ನಾವು ಯಾವಾಗಲೂ
ಆಲೋಚಿಸುತ್ತೇವೆ. ಇಲ್ಲ! ಅಹಂಕಾರವು
ವೇದನೆಯಿಂದ ಪುಷ್ಟಿಗೊಳ್ಳುತ್ತದೆ. ಮತ್ತೊಂದು
ಮುಖ್ಯವಾದ ವಿಷಯವೆಂದರೆ, ನಿಮ್ಮ ವೇದನೆಯು
ಕಡಿಮೆ ಇದ್ದರೆ, ನಿಮ್ಮ ಅಹಂಕಾರವೂ ಕಡಿಮೆ
ಇರುತ್ತದೆ. ನಿಮಗೆ ನೀವು ಬಹಳ ಅಲ್ಪರು
ಎಂದೆನಿಸುತ್ತದೆ. ಹಾಗಾಗಿ ನಿಮ್ಮ ವೇದನೆಯನ್ನು
ಹೆಚ್ಚಿಸಿಕೊಳ್ಳುವುದರ ಮೂಲಕ ನಿಮ್ಮನ್ನು ಒಬ್ಬ
ವ್ಯಕ್ತಿಯೆಂದು ಗುರುತಿಸಿಕೊಳ್ಳುತ್ತೀರಿ.

ನಿಮ್ಮ ವೇದನೆ ಕಡಿಮೆ ಇದ್ದಷ್ಟೂ ಅಹಂಕಾರವು ನಿರ್ಬಲವಾಗಿರುತ್ತದೆ. ಹೆಚ್ಚು ಕಷ್ಟವನ್ನನುಭವಿಸಿದಾಗ ನಿಮ್ಮ ಅಹಂಕಾರವು ಬಲಿಷ್ಠವಾಗುತ್ತದೆ. ಆದ್ದರಿಂದಲೇ ನಿಮ್ಮ ವೇದನೆಯನ್ನು ಸದಾ ಉತ್ಪ್ರೇಕ್ಷಿಸುತ್ತೀರಿ. ಸಮಸ್ಯೆ ಏನೆಂದರೆ, ಸ್ವಲ್ಪ ಸಮಯದ ನಂತರ ನೀವೇ ಉತ್ಪ್ರೇಕ್ಷಿಸಿದ್ದಿರೆಂದು ಮರೆತೇ ಬಿಡುತ್ತೀರಿ. ಆಗ ನೀವೂ ಸಹ ಅದೇ ಬಲೆಯೊಳಗೆ ಬೀಳುತ್ತೀರಿ. ನೀವು ಅದನ್ನೊಪ್ಪದೇ, 'ಇಲ್ಲ, ನಿಮಗೆ ನನ್ನ ಜೀವನದ ಬಗ್ಗೆ ತಿಳಿದಿಲ್ಲ. ನಿಮಗೆ ನನ್ನ ವೇದನೆಯ ಬಗ್ಗೆ ತಿಳಿದಿಲ್ಲ' ಎಂದು ಹೇಳಬಹುದು. ಆದರೆ ಸ್ಪಷ್ಟವಾಗಿ ತಿಳಿಯಿರಿ, ಸ್ವಲ್ಪ ಸಮಯದ ನಂತರ ನೀವೇ ಸೃಷ್ಟಿಸಿದ ಬಲೆಯಲ್ಲಿ ನೀವೇ ಸಿಕ್ಕಿಹಾಕಿಕೊಂಡಿರುತ್ತೀರಿ!

ದ್ವಂದ್ವ ವ್ಯಕ್ತಿತ್ವಗಳು

ನಮಗೆಲ್ಲರಿಗೂ ಎರಡು ವ್ಯಕ್ತಿತ್ವಗಳಿವೆ, ಹೊರ ಪ್ರಪಂಚಕ್ಕೆ ಪ್ರದರ್ಶಿಸುವ ವ್ಯಕ್ತಿತ್ವ ಮತ್ತು ಅಂತರಂಗ ಪ್ರಪಂಚದಲ್ಲಿ ನಮ್ಮನ್ನೇ ನಾವೆಂದು ನಂಬುವ ವ್ಯಕ್ತಿತ್ವ.

ನಿಮ್ಮ ಮನಸ್ಸಿನೊಳಗೆ ನಿಮ್ಮನ್ನು ನೀವೆಂದು ನಂಬಿರುವ ವ್ಯಕ್ತಿತ್ವವನ್ನು ಸಂಸ್ಕೃತ ಭಾಷೆಯಲ್ಲಿ ಮಮಕಾರ ಎನ್ನುತ್ತಾರೆ. ಅದು ಯಾವಾಗಲೂ ನೀವು ನಿಜವಾಗಿ ಇರುವುದಕ್ಕಿಂತಲೂ ಚಿಕ್ಕದಾಗಿರುತ್ತದೆ. ನೀವು ನಿಮ್ಮೆಲ್ಲಾ ಸೋಲುಗಳನ್ನೂ, ಹಿಂದಿನ ತಪ್ಪುಗಳನ್ನೂ ಹಾಗೂ ತಪ್ಪಿತಸ್ಥತೆಯನ್ನು ಹೊತ್ತಿರುತ್ತೀರಿ ಅಥವಾ ನೆನಪು ಮಾಡಿಕೊಂಡು ಸತತವಾಗಿ ಅವುಗಳೊಂದಿಗೆ ಒದ್ದಾಡುತ್ತಿರುತ್ತೀರಿ.

ಬಾಹ್ಯಪ್ರಪಂಚಕ್ಕೆ ನೀವು ತೋರುವ ನಿಮ್ಮ ವ್ಯಕ್ತಿತ್ವವನ್ನು ಅಹಂಕಾರವೆನ್ನುತ್ತಾರೆ. ಅಹಂಕಾರವು ನಿಮ್ಮ ವಿಸಿಟಿಂಗ್ ಕಾರ್ಡು. ಬೇರೆಯವರು ನಿಮ್ಮ ಬಗ್ಗೆ ಏನೇನು ತಿಳಿಯಬೇಕೆಂದು ಇಚ್ಛಿಸುತ್ತೀರೋ, ಅದೆಲ್ಲವನ್ನೂ ಅದರ ಮೇಲೆ ಮುದ್ರಿಸಿರುತ್ತೀರಿ. ಬಾಹ್ಯ ಪ್ರಪಂಚಕ್ಕೆ ನೀವು ತೋರ ಬಯಸುವ ಗುರುತಿನ ಮೇಲೆ ಇದು ಆಧಾರಿತವಾಗಿರುತ್ತದೆ. ಅದು ಯಾವಾಗಲೂ ನಿಮ್ಮಲ್ಲಿರುವುದಕ್ಕಿಂತ ಹೆಚ್ಚಿನದ್ದಾಗಿರುತ್ತದೆ ಹಾಗೂ ನೀವಿರುವುದಕ್ಕಿಂತ ಹೆಚ್ಚಿನದ್ದಾಗಿರುತ್ತದೆ. ಅದು ಯಾವಾಗಲೂ ನೀವಿರುವುದಕ್ಕಿಂತ ಹೆಚ್ಚಿನದ್ದೇ ಆಗಿರುವುದು ಏಕೆಂದರೆ, ನಿಮ್ಮನ್ನು ನೀವು ಘನವಾದ ವ್ಯಕ್ತಿಯೆಂದು ಪ್ರದರ್ಶಿಸಿಕೊಳ್ಳಲು ಯೋಚಿಸುತ್ತೀರಿ. ವಿಶೇಷವಾಗಿ ನಿಮ್ಮನ್ನೇ ನೀವು ಪ್ರದರ್ಶಿಸಿಕೊಳ್ಳುವ ಸಮಾಜಗಳಲ್ಲಿ ಇದೊಂದು ಮೂಲಭೂತ ಅವಶ್ಯಕತೆಯಾಗುತ್ತದೆ.

ಅಹಂಕಾರವು ಮೇಲರಿಮೆಯ ಮೇಲೆ
ಆಧಾರಿತವಾಗಿರುತ್ತದೆ. ಮಮಕಾರವು ಕೀಳರಿಮೆಯ
ಮೇಲೆ ಆಧಾರಿತವಾಗಿರುತ್ತದೆ. ಅಹಂಕಾರವು
ಭಯದ ಮೇಲೆ ಆಧಾರಿತವಾಗಿರುತ್ತದೆ.
ಮಮಕಾರವು ದುರಾಸೆಯ ಮೇಲೆ
ಆಧಾರಿತವಾಗಿರುತ್ತದೆ.

ಮೂಲಭೂತ ಸತ್ಯವೇನೆಂದರೆ, ನೀವು ಈ ಎರಡೂ ವ್ಯಕ್ತಿತ್ವಗಳಿಗಿಂತಲೂ ಹೆಚ್ಚಿನವರು. ನೀವು ಈ ಎರಡೂ ವ್ಯಕ್ತಿತ್ವಗಳಿಂದ ‘ಅನ್‌ಕ್ಲಚ್’ ಆಗಲು ಸಾಧ್ಯವಾದರೆ, ಇದ್ದಕ್ಕಿದ್ದಂತೆ ನೀವು ಈ ಎರಡು ವ್ಯಕ್ತಿತ್ವಗಳನ್ನೂ ಮೀರಿದವರೆಂದು ತಿಳಿಯುತ್ತೀರಿ. ಹಾಗಾದಾಗ, ಈ ಎರಡು ವ್ಯಕ್ತಿತ್ವಗಳು ನಿಮ್ಮನ್ನು ಮತ್ತೆ ಬಂಧಿಸುವುದಿಲ್ಲ.

ಕೀಳರಿಮೆಯ ಅಹಂಕಾರ

ರಮಣ ಮಹರ್ಷಿಗಳ ಜೀವನದ ಒಂದು ಘಟನೆ:

ರಮಣ ಮಹರ್ಷಿಗಳ ಶಿಷ್ಯರಲ್ಲೊಬ್ಬರು, ಅವರ
ಪುಸ್ತಕಗಳನ್ನು ಬೇರೊಂದು ಭಾಷೆಗೆ ಅನುವಾದ
ಮಾಡುತ್ತಿದ್ದರು. ಅನುವಾದ ಮಾಡಿದ ಪುಸ್ತಕದ
ಒಳಗೆ ಆ ಅನುವಾದಕರು ಎಂದು ಅವರ ಹೆಸರೂ
ಸಹ ಪ್ರಕಟಿಸಲಾಗಿತ್ತು.

ಆ ಶಿಷ್ಯರು ಪುಸ್ತಕವನ್ನು ನೋಡಿದಾಗ, ಇದನ್ನು
ನೋಡಿ ಆಘಾತವಾಯಿತು. ಅವರು ಇದಕ್ಕೆ
ಸಂಬಂಧಪಟ್ಟ ಅಧಿಕೃತ ವರ್ಗದವರನ್ನು ಕಂಡು
ಈ ತಪ್ಪಿಗಾಗಿ ಬೈದರು. ನಂತರ, ಅವರು ರಮಣ
ಮಹರ್ಷಿಗಳ ಬಳಿ ಹೋಗಿ, ‘ಭಗವಾನ್, ಇವರು
ನನ್ನ ಹೆಸರನ್ನು ಹಾಕಬಾರದಾಗಿತ್ತು, ನನ್ನ ಹೆಸರು
ಪ್ರಕಟವಾಗಬೇಕಾಗಿರಲಿಲ್ಲ, ನಾನು ಅಂತಹ ದೊಡ್ಡ
ವ್ಯಕ್ತಿಯಲ್ಲ’ ಎಂದು ಹೇಳಿದರು. ಭಗವಾನರು,
‘ಹೆಸರು ಇರಬೇಕೆಂದು ಹೇಳುವ ಅಹಂಕಾರ ಹಾಗೂ
ಹೆಸರು ಇರಬಾರದೆಂದು ಹೇಳುವ
ಅಹಂಕಾರವೆರಡೂ ಒಂದೇ. ವಿರಮಿಸು’ ಎಂದು
ಹೇಳಿದರು.

ಸರಿಯಾಗಿ ತಿಳಿಯಿರಿ, ನಮ್ರತೆಯನ್ನು
ತೋರಲೆತ್ನಿಸುತ್ತಿರುವ ಕೀಳರಿಮೆ ಅಹಂಕಾರವೂ
ಅಹಂಕಾರವೇ ಆಗಿರುತ್ತದೆ.

ಮೇಲರಿಮೆ ಇದ್ದರೆ, ಒಂದು ತೀವ್ರವಾದ ಮೇಲೆರಗುವಂತಹ ಅಹಂಕಾರವನ್ನು ಹೊಂದಿದ್ದರೆ, ಬಹುಶಃ ಸಮಾಜವಾದರೂ ನಿಮಗೆ ಕಲಿಸುತ್ತದೆ. ಈ ಅಹಂಕಾರವು ಸ್ಪಷ್ಟವಾಗಿ ಕಾಣುವಂತಹದು. ಆದರೆ ವಿನೀತವಾದ ಅಹಂಕಾರವಿದ್ದರೆ ನೀವು ಸಮಾಜದಿಂದ ತಪ್ಪಿಸಿಕೊಳ್ಳುತ್ತೀರಿ. ಅದು ಇನ್ನೂ ಹೆಚ್ಚು ಅಪಾಯಕಾರಿ. ಕೃತ್ರಿಮವಾದ ಅಹಂಕಾರವು ತನ್ನನ್ನು ತಾನು ಚೆನ್ನಾಗಿ ಕಾಪಾಡಿಕೊಳ್ಳಬಲ್ಲುದು. ನಿಮ್ಮ ಬಗ್ಗೆ ನೀವು ಹೊತ್ತಿರುವ ಗುರುತೇ ಅಹಂಕಾರ.

ಅಹಂಕಾರದ ಬಗೆಗಳು

ಕ್ರಿಯಾಶೀಲ ಹಾಗೂ ನಿಷ್ಕ್ರಿಯ ಅಹಂಕಾರ

ಕ್ರಿಯಾಶೀಲವಾದ ಅಹಂಕಾರವನ್ನು
ಗುರುತಿಸುವುದು ಸುಲಭ. ಕ್ರಿಯಾಶೀಲವಾದ
ಅಹಂಕಾರವನ್ನು ಹೊತ್ತ ಜನರು ಗರ್ವದಿಂದ

ವರ್ತಿಸುತ್ತಾರೆ. ಅವರು ಸ್ವಯಂ ಪ್ರತಿಷ್ಠೆಯನ್ನು
ಮುಚ್ಚುಮರೆಯಿಲ್ಲದೆ ತೋರುತ್ತಾರೆ, ಅವರು
ದುರಹಂಕಾರಿಗಳಾಗಿರುತ್ತಾರೆ. ವಾಸ್ತವವಾಗಿ
ಗುರುಗಳಿಗೆ ಈ ಅಹಂಕಾರದೊಂದಿಗೆ
ವ್ಯವಹರಿಸುವುದು ಸುಲಭ. ಅವರು ಅದನ್ನು ಕೆಲವು
ಬಾರಿ ಬಡಿದರೆ ಅದು ಮುರಿಯುತ್ತದೆ!

ಒಂದು ಸಣ್ಣ ಕಥೆ:

ಒಬ್ಬ ಮನೋವೈದ್ಯರು ತಮ್ಮ ರೋಗಿಯನ್ನು ಸ್ವಯಂ ಪ್ರತಿಷ್ಠೆಯ ಕಲ್ಪನೆಗಳಿಂದ ನರಳುತ್ತಿರುವರೇ ಎಂದು ಕೇಳಿದರು. ಅದಕ್ಕೆ ರೋಗಿಯು, ‘ಖಂಡಿತವಾಗಿಯೂ ಇಲ್ಲ. ವಾಸ್ತವವಾಗಿ ನನ್ನನ್ನು ನಾನು ಇರುವುದಕ್ಕಿಂತಲೂ ಕಡಿಮೆಯಂತೆಯೇ ಭಾವಿಸುತ್ತೇನೆ’ ಎಂದು ಹೇಳಿದನು.

ಕ್ರಿಯಾಶೀಲವಾದ ಅಹಂಕಾರವುಳ್ಳ ಒಬ್ಬ ವ್ಯಕ್ತಿಯು ಯಾವುದೇ ಕಾರಣಕ್ಕೂ ತನ್ನ ಅಹಂಕಾರವನ್ನು ಬಿಟ್ಟುಬಿಡಲು ಸಿದ್ಧವಿರುವುದಿಲ್ಲ.

ನಿಷ್ಕ್ರಿಯವಾದ ಅಹಂಕಾರವು ಬಹಳ ಸೂಕ್ಷ್ಮವಾದುದು ಹಾಗೂ ಕಪಟವಾದುದು. ನಿಷ್ಕ್ರಿಯವಾದ ಅಹಂಕಾರವುಳ್ಳ ಜನರು ಅತ್ಯಂತ ವಿನಯವಾಗಿ ನಟಿಸುತ್ತಾರೆ. ಅವರು ಜನರನ್ನು ಎದುರಿಸುವ ಧೈರ್ಯವಿಲ್ಲದವರಾಗಿ ಪ್ರಶಂಸೆಯನ್ನು ಸ್ವೀಕರಿಸಲು ನಾಚುತ್ತಾರೆ. ಇದರ ಅತ್ಯಂತ ಕೆಟ್ಟ ಅಂಶವೆಂದರೆ ಅವರು ಹೀಗಿರುವುದು ಅವರು ಅಹಂಕಾರಿಗಳಲ್ಲದಿರುವುದರಿಂದ ಎಂದು ಭಾವಿಸುತ್ತಾರೆ. ವಾಸ್ತವವಾಗಿ ಅರಿವಿಲ್ಲದೆಯೇ ತಾವು ವಿನೀತರೆಂದು ಯೋಚಿಸಿ, ತಮ್ಮ ಅಹಂಕಾರಕ್ಕೆ ಪೆಟ್ಟು ಬೀಳದಂತೆ ಜೋಪಾನವಾಗಿ ಕಾಯುತ್ತಾರೆ.

ಕ್ರಿಯಾಶೀಲವಾದ ಅಹಂಕಾರವುಳ್ಳ ಜನರು ಒಣಗಿದ ಕಡ್ಡಿಯಂತೆ ಇರುತ್ತಾರೆ. ಅವನ್ನು ಸುಲಭವಾಗಿ ಮುರಿಯಬಹುದು. ನಿಷ್ಕ್ರಿಯವಾದ ಅಹಂಕಾರವುಳ್ಳ ಜನರು ಹೊಸದಾದ ಹಸಿರು ಕಡ್ಡಿಗಳಂತೆ ಇರುತ್ತಾರೆ. ಅವರ ಅಹಂಕಾರಕ್ಕೆ ಪೆಟ್ಟು ಬಿದ್ದ ಪ್ರತಿ ಬಾರಿಯೂ ಅವು ಬಾಗುತ್ತವೆ. ಆದರೆ ಮುರಿಯುವುದಿಲ್ಲ! ಅವರ ಅಹಂಕಾರವು ಅದೆಷ್ಟು ಸುರಕ್ಷಿತವಾಗಿ ಕಾಪಾಡಲ್ಪಟ್ಟಿರುತ್ತದೆಂದರೆ. ಅದರೊಡನೆ ವ್ಯವಹರಿಸುವುದು ಕಷ್ಟವಾಗುತ್ತದೆ. ವಾಸ್ತವವಾಗಿ ಅವರು ಒಂದು ಮಧುರವಾದ ಹಾಗೂ ನಿಷ್ಕ್ರಿಯವಾದ ರೀತಿಯಲ್ಲಿ ಅದನ್ನು ಕಾಪಾಡಿಕೊಳ್ಳಲು ಬಹಳ ಕಷ್ಟಪಡುತ್ತಾರೆ.

‘ನಾನು’ ಹಾಗೂ ‘ನನ್ನದು’

‘ನಾನು’ ಎಂಬುದು ಅಹಂಕಾರ - ಭಯದ ಮೂಲ. ‘ನನ್ನದು’, ‘ಇದು ನನ್ನ ಮನೆ’, ‘ಅದು ನನ್ನ ಕಾರು’, ‘ಇವರು ನನ್ನ ಸ್ನೇಹಿತರು’ - ಎಂಬುದು ದುರಾಸೆಯ ಮೂಲ.

‘ನಾನು’ ಎಂದರೆ ಸತತವಾಗಿ ಮಾಡುವುದು ಎಂದರ್ಥ. ‘ನನ್ನದು’ ಎಂದರೆ ಸತತವಾಗಿ ಹೊಂದುವುದು ಎಂದರ್ಥ. ನಿಮ್ಮ ಸೀಮೆಯನ್ನು ಸತತವಾಗಿ ವಿಸ್ತರಿಸಲು ಯತ್ನಿಸುತ್ತೀರಿ. ಹೊರಗಿನ ಆಗುಹೋಗುಗಳನ್ನು ಸತತವಾಗಿ ಬದಲಾಯಿಸಲು ಯತ್ನಿಸುತ್ತೀರಿ. ನನ್ನದು ಎಂಬ ಸೀಮೆಯನ್ನು ವಿಸ್ತಾರ ಮಾಡಬಯಸುತ್ತೀರಿ. ಉದಾಹರಣೆಗೆ, ನಿಮ್ಮ ಬಳಿ ಒಂದು ಕಾರಿದೆ ಎಂದಿಟ್ಟುಕೊಳ್ಳಿರಿ. ಆದರೆ, ನಿಮಗೆ ದುಬಾರಿ ಬೆಲೆಯ ಕಾರು ಬೇಕೆನಿಸಬಹುದು. ನಿಮಗೆ

ಅಹಂಕಾರ ಹಾಗೂ ಗುರು

'ನಾವೇಕೆ ಗುರುಗಳನ್ನು ಅನುಸರಿಸಬೇಕು?'
ಎಂದು ಜನರು ನನ್ನನ್ನು ಕೇಳುತ್ತಾರೆ. 'ನೀವು
ಗುರುಗಳನ್ನು ಅನುಸರಿಸಬೇಕಾಗಿಲ್ಲ. ಆದರೆ, ನೀವು
ಗುರುಗಳನ್ನು ಅನುಸರಿಸದಿದ್ದರೆ, ನಿಮ್ಮ
ಅಹಂಕಾರವನ್ನು ಅನುಸರಿಸುತ್ತಿರುತ್ತೀರಿ ಅಷ್ಟೇ'
ಎಂದು ನಾನವರಿಗೆ ಹೇಳುತ್ತೇನೆ. ಇರುವುದು ಎರಡೇ
ಆಯ್ಕೆಗಳು; ಗುರುಗಳು ಹೇಳಿದ್ದನ್ನು ಕೇಳುವುದು
ಇಲ್ಲವೇ ಅಹಂಕಾರವು ಹೇಳಿದ್ದನ್ನು ಕೇಳುವುದು.

ಗುರುಗಳು ನಿರಂತರವಾದ ಆನಂದವನ್ನು, ನಿತ್ಯಾನಂದವನ್ನು ಸಾಧಿಸಿ ಆಗಿದೆ. ಅವರನ್ನು ಅನುಸರಿಸಿದರೆ, ನೀವೂ ಆ ಸ್ಥಿತಿಯನ್ನು ತಲುಪುವಿರಿ. ನಿಮ್ಮ ಅಹಂಕಾರದ ಬಗ್ಗೆ ಹೇಳುವುದಾದರೆ ಇಲ್ಲಿಯವರೆಗೂ ಅದು ಏನನ್ನು ಸಾಧಿಸಿದೆಯೆಂದು ನಿಮಗೇ ತಿಳಿದಿದೆ, ಹಾಗೂ ಯಾವ ಕಡೆಗೆ ಸಾಗುತ್ತಿದೆಯೆಂದೂ ನಿಮಗೆ ತಿಳಿದಿದೆ! ಅಹಂಕಾರವು ಈಗಾಗಲೇ ನಿಮ್ಮನ್ನು ಕರೆದುಕೊಂಡು ಹೋಗುತ್ತಿರುವ ದಾರಿಯಲ್ಲಿ ಸಂತೋಷವಾಗಿ, ಹಾಯಾಗಿ, ತೃಪ್ತಿ ಸಿಕ್ಕರೆ, ಆನಂದವಾಗಿದ್ದರೆ, ನಿಮ್ಮ ಅಹಂಕಾರವು ತೋರುವ ಈ ಹಾದಿಯನ್ನೇ ಅನುಸರಿಸಿ. ಅದರಲ್ಲಿ ತಪ್ಪೇನೂ ಇಲ್ಲ. ನಿಮಗೆ ಸ್ವಲ್ಪ ಮುಜುಗರವಾಗುತ್ತಿದ್ದರೆ, ನೀವು ಬದಲಾವಣೆಯನ್ನು ಬಯಸಿದರೆ, ಆಗ ಗುರುಗಳ ಹಾದಿಯನ್ನು ಅನುಸರಿಸಿ.

ಅನುಸರಿಸಲು ಇರುವುದು ಎರಡೇ: ಗುರುಗಳು ಮತ್ತು ಮನಸ್ಸು. ಗುರುಗಳನ್ನು ಅನುಸರಿಸಿದರೆ, ಮನಸ್ಸನ್ನು ಅನುಸರಿಸಲಾಗುವುದಿಲ್ಲ; ಮನಸ್ಸನ್ನು ಮನಸ್ಸನ್ನು ಅನುಸರಿಸಿದರೆ, ಗುರುಗಳನ್ನು ಅನುಸರಿಸಲಾಗುವುದಿಲ್ಲ. ಮತ್ತೊಂದು ಕಾರು ಬೇಕೆನಿಸುತ್ತದೆ. ವಾಸವಾಗಿ ಇರಲು ಒಂದು ಮನೆ ಇದ್ದರೂ, ನಿಮಗೆ ಇನ್ನೂ ದೊಡ್ಡದಾದ ಮನೆಯು ಬೇಕೆನಿಸುತ್ತದೆ. ಈ ರೀತಿಯ ವ್ಯಕ್ತಿತ್ವವು, ಹೊಂದುವುದರ ಮೇಲೆ ಆಧಾರಿತವಾಗಿದೆ. ಅಂತಹ ಜನರು ಸತತವಾಗಿ ಹೆಚ್ಚು ಹೆಚ್ಚು ವಸ್ತುಗಳನ್ನು ಪಡೆಯುತ್ತಲಿರುವವರೆಗೆ ಮಾತ್ರ ಸಂತೋಷವಾಗಿ, ನಿರಾತಂಕವಾಗಿ, ನೆಮ್ಮದಿಯಾಗಿರುತ್ತಾರೆ.

ಆಳವಾದ ಅಭದ್ರತೆಯ ಭಾವನೆ ಹಾಗೂ
ಭಯವು ನಮ್ಮನ್ನು ಹೆಚ್ಚು ವಸ್ತುಗಳನ್ನು ಸತತವಾಗಿ
ಪಡೆಯಲೆತ್ನಿಸುವುದಕ್ಕೆ ನೂಕುತ್ತದೆ. ಸತತವಾಗಿ
ವಸ್ತುಗಳನ್ನು ಪಡೆಯಲೆತ್ನಿಸುವುದು ಒಂದು ಆಳವಾದ
ಅಭದ್ರತೆಯ ಭಾವನೆಯಲ್ಲದೆ ಮತ್ತೇನೂ ಅಲ್ಲ.
ಸತತವಾಗಿ ಹೆಚ್ಚು ಹೆಚ್ಚು ವಸ್ತುಗಳನ್ನು ಪಡೆಯಲು
ಯತ್ನಿಸುವ ಕಲ್ಪನೆಯು ಕೇವಲ ಭಯ ಹಾಗೂ
ಅಭದ್ರತೆಯ ಆತಂಕದಿಂದ ಉಂಟಾಗುತ್ತದೆ.

ನಮ್ಮ ಸುತ್ತ ಮುತ್ತ ಹೆಚ್ಚು ಸ್ನೇಹಿತರು, ಹೆಚ್ಚು ವಸ್ತುಗಳಿದ್ದಾಗ ನಮ್ಮಲ್ಲಿ ಹೆಚ್ಚು ಸುರಕ್ಷಿತವಾದ ಭಾವನೆ ಇರುತ್ತದೆ. ಹೆಚ್ಚು ಸುರಕ್ಷತೆಯನ್ನು ಪಡೆದಾಗ, ನಾವು ಈ ಪ್ರಪಂಚದಿಂದ ಹೊರಗೆಲ್ಲಿಗೂ ಕೊಂಡೊಯ್ಯಲ್ಪಡುವುದಿಲ್ಲವೆಂದು ಭಾವಿಸುತ್ತೇವೆ.

ನಿಮ್ಮನ್ನು ಯಾರೆಂದುಕೊಂಡಿರುವಿರೋ, ಅವರು ನೀವಲ್ಲ!

ಅನುಸರಿಸಿದರೆ, ಗುರುಗಳನ್ನು ಅನುಸರಿಸಲಾಗುವುದಿಲ್ಲ.

'ನಮಃ' ಎಂಬ ಸುಂದರವಾದ ಒಂದು ಪದವಿದೆ.
ಅದರರ್ಥವೇನೆಂದರೆ ‘ನನ್ನದಲ್ಲ', 'ನಾನಲ್ಲ’-
'ನಾನು', 'ನನ್ನದು' ಎಂಬುದನ್ನು ಗುರುಗಳ ಅಥವಾ
ದೇವರ ಪಾದಗಳಲ್ಲಿ ಅರ್ಪಿಸಿ ಶರಣಾಗುತ್ತೇನೆ
ಎಂದು.

woman looking at picture of eyes

ಧ್ಯಾನತಂತ್ರ

ಮೂರನೆಯ ಕಣ್ಣಿನ ಧ್ಯಾನತಂತ್ರ

ಪೂರ್ಣ ಸಮಯಾವಧಿ : 25 ನಿಮಿಷ

ಇದು ಒಂದು ಅತ್ಯಂತ ಪ್ರಬಲವಾದ
ಧ್ಯಾನತಂತ್ರ. ಇದನ್ನು ಗುರುವಿನ ಸಾನಿಧ್ಯದಲ್ಲಿ
ಅಥವಾ ಗುರುವಿನ ಕಣ್ಣಿನ ಚಿತ್ರದ ಮುಂದೆ
ಮಾಡಿದಾಗ, ಅತ್ಯಂತ ಪರಿಣಾಮಕಾರಿಯಾಗಿರುತ್ತದೆ.

ಹಂತ 1: ಕಾಲಾವಧಿ : 5 ನಿಮಿಷ

ನಿಮ್ಮ ಕಣ್ಣುಗಳನ್ನು ಮುಚ್ಚಿ, ಮುಚ್ಚಿದ ಕಣ್ಣಿನ
ಹಿಂದೆ ಬರುವ ಚಿತ್ರಗಳನ್ನು ನಿಮ್ಮ ಕಣ್ಣಿನ ಮೂಲಕ
ನೋಡಿರಿ.

ಹಂತ 2: ಕಾಲಾವಧಿ : 5 ನಿಮಿಷ

ಈಗ ಕಣ್ಣುಗಳನ್ನು ತೆರೆದು, ನಿಮ್ಮ ಮೂರನೆಯ
ಕಣ್ಣಿನಿಂದ (ಹುಬ್ಬುಗಳ ನಡುವಿನ ಪ್ರದೇಶ)
ಚಿತ್ರದಲ್ಲಿರುವ ಗುರುಗಳ ಮೂರನೆಯ ಕಣ್ಣನ್ನು
ತೀವ್ರವಾಗಿ ನೋಡಿರಿ. ನಿಮ್ಮ ಕಣ್ಣುಗಳ ಮೂಲಕ
ನೋಡಿರಿ.

ಹಂತ 3: ಕಾಲಾವಧಿ : 5 ನಿಮಿಷ

ನಿಮ್ಮ ಮುಚ್ಚಿದ ಕಣ್ಣುಗಳಿಂದ, ನಿಮ್ಮ ಕಣ್ಣುಗಳ
ಮೂಲಕ, ಮುಚ್ಚಿದ ಕಣ್ಣುಗಳ ಹಿಂದಿರುವ
ಚಿತ್ರಗಳನ್ನು ತೀವ್ರವಾಗಿ ನೋಡಿರಿ.

ಹಂತ 4: ಕಾಲಾವಧಿ : 5 ನಿಮಿಷ

ಈಗ ಕಣ್ಣುಗಳನ್ನು ತೆರೆದು, ನಿಮ್ಮ ಮೂರನೆಯ
ಕಣ್ಣಿನ ಮೂಲಕ ಚಿತ್ರದಲ್ಲಿರುವ ಗುರುಗಳ
ಮೂರನೆಯ ಕಣ್ಣನ್ನು ತೀವ್ರವಾಗಿ ನೋಡಿರಿ. ನಿಮ್ಮ
ಕಣ್ಣುಗಳ ಮೂಲಕ ನೋಡಿರಿ.

ಹಂತ 5: ಕಾಲಾವಧಿ : 5 ನಿಮಿಷ

ನಿಮ್ಮ ಮುಚ್ಚಿದ ಕಣ್ಣುಗಳಿಂದ ನಿಮ್ಮ ಕಣ್ಣುಗಳ
ಮೂಲಕ, ಮುಚ್ಚಿದ ಕಣ್ಣುಗಳ ಹಿಂದಿರುವ
ಚಿತ್ರಗಳನ್ನು ನೋಡಿರಿ.

ಈ ಧ್ಯಾನವನ್ನು ಮಾಡುವ ಸಮಯದಲ್ಲಿ,
ಬಹುಶಃ ನಿಮ್ಮ ಇಷ್ಟ ದೇವತೆಗಳ ದರ್ಶನವನ್ನು
ಪಡೆಯಬಹುದು ಅಥವಾ ಗುರುಗಳ ಆಕೃತಿಯು
ಬದಲಾಗಿ, ಒಂದು ಬೆಳಕಿನ ಕಾಂತಿಯಾಗಿರುವುದನ್ನು
ನೋಡಲೂಬಹುದು. ಒಮ್ಮೊಮ್ಮೆ ಅವರ ಚಿತ್ರವಿದ್ದ
ಜಾಗದಲ್ಲಿ ಬರಿಯ ಬೆಳಕು ಅಥವಾ ಖಾಲಿ
ಜಾಗವನ್ನು ನೀವು ನೋಡಬಹುದು. ಅಂತಹ
ಕ್ಷಣಗಳಲ್ಲಿ ಗಾಬರಿಯಾಗಬೇಡಿರಿ ಅಥವಾ ನಿಮ್ಮ
ಅರಿವನ್ನು ಕಳೆದುಕೊಳ್ಳದಿರಿ. ಅದು ಹಿಪ್ನೋಸಿಸ್
ಅಲ್ಲ! ವಾಸ್ತವವಾಗಿ ಅದೊಂದು ಹಿಪ್ನೋಸಿಸ್‌ನ
ವಿರುದ್ಧವಾದ ಪ್ರಕ್ರಿಯೆ. ನಿಮ್ಮ ಮಾನವಾತೀತ
ಪರಮೋನ್ನತ ಪ್ರಜ್ಞೆಯು ಜಾಗೃತವಾಗುತ್ತದೆ.
ಬರಿಯ ಬೆಳಕು ಅಥವಾ ಖಾಲಿ ಜಾಗವನ್ನು
ನೋಡಿದರೆ, ನೀವು ಧ್ಯಾನವನ್ನು ಆಳವಾದ
ಶ್ರದ್ಧೆಯಿಂದ ಮಾಡಿದ್ದೀರೆಂದು ಹೇಳಬಹುದು. ಅದೇ
ನಮ್ಮ ನಿಜಸ್ವಭಾವದ ಸತ್ಯ. ನಾವೆಲ್ಲರೂ
ಶಕ್ತಿಯಲ್ಲದೇ ಮತ್ತೇನೂ ಅಲ್ಲ.

ಕಣ್ಣಿನ ಮೂಲಕ ನೋಡುವುದರಿಂದ ‘ನಾನು’ ಎನ್ನುವುದನ್ನು ಸಾಧಿಸಬಹುದು. ಸದ್ಯದಲ್ಲಿ ನೀವು ನಿಮ್ಮದೇ ಆದ ನಿಜತ್ವವನ್ನು ಸೃಷ್ಟಿಮಾಡಿಕೊಳ್ಳುತ್ತಿದ್ದೀರಿ. ನಿಮ್ಮ ಕಣ್ಣುಗಳ ಮೂಲಕ ನೋಡಿದರೆ, ಅದರಿಂದ ಎಚ್ಚರಗೊಂಡು ಸತ್ಯವನ್ನು ಅದು ಇರುವಂತೆಯೇ ನೋಡುವಿರಿ!