KAILASA Library/ಜೀವನ್ಮುಕ್ತಿ/ಕೃತಜ್ಞತೆಯೇ ಸಾಕು!Sign in
ಜೀವನ್ಮುಕ್ತಿ

ಕೃತಜ್ಞತೆಯೇ ಸಾಕು!

This text was machine-transcribed from the printed book and may contain errors. Select the words and choose “Report a mistake”.

ಕೃತಜ್ಞತೆ ಎಂದರೇನು?

ಸೃಷ್ಟಿಯ ಅಗಾಧತೆಯಲ್ಲಿ ನಾವು ಒಂದು ಭಾಗವೆಂದೂ, ಪ್ರತিক্ষಣವೂ ವಿಶ್ವಶಕ್ತಿಯು ನಮ್ಮನ್ನು ಪ್ರೇಮದಿಂದ ಕಾಪಾಡುತ್ತಿದೆಯೆಂದೂ ಮನಗಂಡಾಗ ನಾವು ಕೃತಜ್ಞತೆಯಿಂದ ತುಂಬಿಹೋಗುತ್ತೇವೆ. ಕ್ಷಣ ಕ್ಷಣವೂ ನಾವು ಏನನ್ನು ಪಡೆಯುತ್ತಿದ್ದೇವೆಯೋ, ಅದು ಕೈ ಕಾಲುಗಳನ್ನಾಡಿಸುವಷ್ಟೋ ಅಥವಾ ಇಂದ್ರಿಯಗಳನ್ನು ಬಳಸುವಷ್ಟೋ ಕನಿಷ್ಠವಾದರೂ ಸರಿ ಅದಕ್ಕಾಗಿ ನಿಜವಾಗಿಯೂ ಧನ್ಯರಾಗುತ್ತೇವೆ.

ಕೃತಜ್ಞತೆ ಎನ್ನುವುದು ಸೃಷ್ಟಿಯ ಅಗಾಧತೆಯನ್ನು
ನೀವು ಅರಿತಾಗ ನಿಮ್ಮಿಂದ ತೋರಲ್ಪಡುವ
ಪ್ರತಿಕ್ರಿಯೆ. ನಿಮ್ಮೊಳಗೆ ಅರಳಬಲ್ಲ ಅದ್ಭುತ
ಶಕ್ತಿಯಿದು.

ನಿಮ್ಮ ಜೀವನದಲ್ಲಿ ಎಲ್ಲ ವಿಷಯಗಳನ್ನೂ
ಸಂಭಾಳಿಸಬಲ್ಲ ಒಂದೇ ಶಕ್ತಿಯೆಂದರೆ, ಅದು
ಕೃತಜ್ಞತೆ! ನಿಮಗೆ ಯಾವಾಗಲಾದರೂ
ಜೀವನದಲ್ಲೇನೋ ಲೋಪವಿದೆಯೆನಿಸಿದರೆ ಅದು
ಕೃತಜ್ಞತೆಯ ಅಭಾವದಿಂದಲೇ.

ಕೃತಜ್ಞತೆಯೆಂಬುದು ನಿಮ್ಮ ಉಸಿರೇ ಆಗಿಬಿಡಬೇಕು. ಕೃತಜ್ಞತೆಯೆಂಬುದು ನಿಮ್ಮನ್ನು ಪರಿವರ್ತಿಸಬಲ್ಲ ಶಕ್ತಿ. ನಿಮ್ಮನ್ನು ಹಾಗೂ ನಿಮ್ಮ ಪರಿಸರವನ್ನು ಅದು ಪರಿವರ್ತಿಸುತ್ತದೆ. ಅದು ವಿಶ್ವಶಕ್ತಿಯೊಡನೆ ನಿಮ್ಮನ್ನು ಮೇಲೈಸಿ ನಿಮ್ಮೆಡೆಗೆ ಅತ್ಯಂತ ಸಮೃದ್ಧಿಯನ್ನು ಸೆಳೆಯಬಲ್ಲ ಶಕ್ತಿ. ಕೃತಜ್ಞತೆಯೊಂದಿದ್ದರೆ ವಿಶ್ವಶಕ್ತಿಯೂ ಜೀವಂತ ವ್ಯಕ್ತಿಯಂತೆ ಮಿಡಿಯುವುದನ್ನು ಕಾಣುವಿರಿ. ವಿಶ್ವಶಕ್ತಿಯೊಡನೆ ಒಂದಾಗಲು ಇದೇ ಸೇತುವೆ!

ಕೃತಜ್ಞತೆಯುಂಟಾದಾಗ, ಆಕರ್ಷಣಾನಿಯಮದ
ಪ್ರಕಾರ ಅದು ನಿಮ್ಮೆಡೆಗೆ ಅಗಾಧ ಸಮೃದ್ಧಿಯನ್ನು
ಸುಂದರವಾಗಿ ಆಕರ್ಷಿಸುತ್ತದೆ. ಅದು ಹೇಗೆ ಸಾಧ್ಯ?

ಒಂದು ಸಣ್ಣ ಕಥೆ:

ಒಮ್ಮೆ ಅಕ್ಬರ್ ಚಕ್ರವರ್ತಿಯು ತನ್ನ ಸಲಹೆಗಾರನಾದ
ಬೀರಬಲ್ಲನ ಜೊತೆ ರಸ್ತೆಯಲ್ಲಿ ನಡೆದು
ಹೋಗುತ್ತಿದ್ದನು.

ಒಬ್ಬ ಚಂದನದ ವ್ಯಾಪಾರಿಯ ಸನಿಹಕ್ಕೆ ಬಂದಾಗ
ಅಕ್ಬರನು ಬೀರಬಲ್ಲನಿಗೆ, 'ಏಕೋ ತಿಳಿಯದು,
ಆದರೆ ಈ ವ್ಯಕ್ತಿಯನ್ನು ಗಲ್ಲಿಗೇರಿಸುವ
ಮನಸ್ಸಾಗುತ್ತಿದೆ' ಎಂದು ಹೇಳಿದನು.

ಒಂದು ತಿಂಗಳ ನಂತರ ಅವರಿಬ್ಬರೂ ಅದೇ ಚಂದನದ ವ್ಯಾಪಾರಿಯ ಮುಂದೆ ಹಾದುಹೋದರು.

ಈ ಬಾರಿ ಅಕ್ಬರನು, 'ಇದು ವಿಚಿತ್ರವೇ, ಆದರೆ ಇಂದು ಈ ವ್ಯಕ್ತಿಯನ್ನು ಬಹುಮಾನಿಸಬೇಕೆಂಬ ಮನಸ್ಸಾಗುತ್ತಿದೆ! ಇದು ಹೇಗೆ ಸಾಧ್ಯ?' ಎಂದನು.

ಬೀರಬಲ್ಲನು, 'ಓ ರಾಜ! ಒಂದು ತಿಂಗಳ ಹಿಂದೆ ಈ ಚಂದನದ ವ್ಯಾಪಾರಿಯ ವ್ಯಾಪಾರವು ನಷ್ಟದಲ್ಲಿದ್ದು, ಈತನು ನಿಮ್ಮನ್ನು ಕಂಡಾಗ ಹೀಗೆ ಯೋಚಿಸಿದನು, 'ರಾಜನು ಮರಣ ಹೊಂದಿದರೆ ಅವನ ಚಿತೆಗಾಗಿ ರಾಜಭಟರು ನನ್ನಿಂದ ಯಥೇಚ್ಛವಾಗಿ ಚಂದನವನ್ನು ಕೊಳ್ಳುತ್ತಾರಲ್ಲವೆ?' ಎಂದು.

ಆತನ ಈ ಬಗೆಯ ನಕಾರಾತ್ಮಕ ತರಂಗಗಳಿಂದಾಗಿ ನಿಮಗೂ ಆತನಲ್ಲಿ ದ್ವೇಷ ಭಾವನೆಯುಂಟಾಯಿತು. ಆದ್ದರಿಂದಲೇ ನೀವು ಆ ದಿನ ವಿನಾಕಾರಣ ಆತನನ್ನು 'ಗಲ್ಲಿಗೇರಿಸುವ ಮನಸ್ಸಾಗುತ್ತಿದೆ' ಎಂದಿರಿ. ಆ ಕೂಡಲೇ ನಾನು ಆತನಿಂದ ಅರಮನೆಯ ಮೇಜು-ಕುರ್ಚಿಗಳಿಗಾಗಿ ಬಹಳ ಚಂದನವನ್ನು ಖರೀದಿಸಿದೆನು. ಅದರಿಂದ ಆತನು ಬಹಳವಾಗಿ ಸಂತಸಗೊಂಡನು. ಇಂದು ಅದಕ್ಕಾಗಿಯೇ ನಿಮಗೆ ಕೃತಜ್ಞನಾಗಿದ್ದಾನೆ. ಈಗ ಆತನ ಯೋಚನೆಯ ಸಕಾರಾತ್ಮಕ ತರಂಗಗಳಿಂದಾಗಿ ಆತನನ್ನು ಬಹುಮಾನಿಸಬೇಕೆಂಬ ಮನಸ್ಸು ನಿಮಗಾಗಿದೆ!' ಎಂದು ಹೇಳಿದನು.

ಆಕರ್ಷಣಾ ನಿಯಮದ ಪ್ರಕಾರ, ಯಾವುದೇ ಶಕ್ತಿಯು ತನಗೆ ಸಮನಾದ ಶಕ್ತಿಯನ್ನೇ ಆಕರ್ಷಿಸುತ್ತದೆ. ಇದು ಕೃತಜ್ಞತೆಗೆ ಹೇಗೆ ಅಳವಡಿಸುತ್ತದೆ? ಇದನ್ನು ಅರ್ಥಮಾಡಿಕೊಳ್ಳಿರಿ: ನೀವು ಎಲ್ಲದರ ಬಗ್ಗೆಯೂ ಕೃತಜ್ಞತಾಭಾವವನ್ನು ಹೊಂದಿರುವಿರೆಂದರೆ, ನೀವು ಸಂತೃಪ್ತರಾಗಿ ಆನಂದವಾಗಿದ್ದೀರಿ. ಹಾಗಾಗಿ ನೀವು ಕೃತಜ್ಞತೆಯನ್ನು ಹೊರಸೂಸಿದರೆ, ಆ ಸಂತೃಪ್ತಿಯ ದೆಸೆಯಿಂದ ಪ್ರಾಪಂಚಿಕ ಏಳಿಗೆ, ಒಳ್ಳೆಯ ಸಂಬಂಧ, ಒಳ್ಳೆಯ ಆರೋಗ್ಯ ಮುಂತಾದ ರೂಪಗಳಲ್ಲಿ ಸಂತೃಪ್ತಿಯು ಆಕರ್ಷಿತವಾಗಿ ನಿಮಗೆ ಹಿಂದಿರುಗುತ್ತದೆ. ಅದು ಹೀಗೆಯೇ ನಡೆಯುವುದು.

ಮುಖ್ಯವಾದ ವಿಷಯವೇನೆಂದರೆ ಕೃತಜ್ಞತೆಯೆಂಬುದು ನೀವು ವಿಶ್ವಶಕ್ತಿಯೊಡನೆ ಪ್ರತಿಸ್ಪಂದಿಸುವಂತೆ ಮಾಡಿ, ನಿಮ್ಮ ವ್ಯಕ್ತಿತ್ವವನ್ನು ಸುಂದರವಾಗಿಸುತ್ತದೆ.

ಮಾನಸಿಕ ತಜ್ಞರು ಜನರಲ್ಲಿ ಕೃತಜ್ಞತಾ ಭಾವನೆಯ ಪರಿಣಾಮಗಳನ್ನು ಅಧ್ಯಯನ ಮಾಡಿದ್ದಾರೆ. ಟೆಕ್ಸಾಸ್‌ನ ಡಲಾಸ್ ಮೆಥಾಡಿಕ್ ವಿಶ್ವವಿದ್ಯಾಲಯದ ಡಾ. ಮೈಕೆಲ್ ಮೆಕೊಲೊ ಹಾಗೂ ಡೇವಿಸ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಡಾ.ರಾಬರ್ಟ್ ಎಮ್ಮನ್ಸ್ ಎಂಬ ಇಬ್ಬರು ಸಂಶೋಧಕರು ತಮ್ಮ ಪ್ರಥಮ ಅಧ್ಯಯನದಲ್ಲಿ ಕೃತಜ್ಞತೆಯೆಂಬುದು ವ್ಯಕ್ತಿಯ ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರವಹಿಸುತ್ತದೆಯೆಂದು ನಿರ್ಧರಿಸಿದ್ದಾರೆ.

ಈ ಅಧ್ಯಯನದ ಫಲಿತಾಂಶಗಳು ಕೃತಜ್ಞತೆಯ ನಿತ್ಯ ಅಭ್ಯಾಸದಿಂದ, ಹೆಚ್ಚಾದ ಚುರುಕುತನ,

ಉತ್ಸಾಹ, ದೃಢತೆ, ಆಶಾವಾದ, ಶಕ್ತಿ ಹಾಗೂ
ನಿರುತ್ಸಾಹ ಮತ್ತು ಒತ್ತಡಗಳು ಕಡಿಮೆಯಾದದ್ದನ್ನು
ಸೂಚಿಸಿದವು. ಅಷ್ಟೇ ಅಲ್ಲದೆ, ಯಾರು ಬೇಕಾದರೂ
ಕೇವಲ ತಮಗೆ ದೊರೆತಿರುವ ಅನುಗ್ರಹಗಳನ್ನು
ಎಣಿಸುವ ಮೂಲಕ ತಮ್ಮ ಯೋಗಕ್ಷೇಮವನ್ನು
ಹೆಚ್ಚಿಸಿಕೊಂಡು ಸಕಾರಾತ್ಮಕ ಸಾಮಾಜಿಕ
ಪರಿಣಾಮಗಳನ್ನು ಉಂಟಾಗಿಸಬಹುದೆಂದು
ಸೂಚಿಸಿದವು.

ಕೇವಲ ಇರುವುದಕ್ಕೇ ಧನ್ಯರಾಗಿರಿ

ನಾನು ಜನರಿಗೆ ಕೃತಜ್ಞರಾಗಿ ಇರಿ ಎಂದು
ಹೇಳಿದಾಗ ಅವರು ಕಾರಣಗಳಿಗಾಗಿ ತಡಕಾಡುತ್ತಾರೆ.
ನಿಜವಾದ ಕೃತಜ್ಞತೆಗಿಂದೂ ಕಾರಣ
ಬೇಕಾಗುವುದಿಲ್ಲ. ಅದು ನಿಷ್ಕಾರಣವಾಗಿಯೇ
ನಿಮ್ಮೊಳಗೆ ಅರಳುತ್ತದೆ. ಹೂವು, ಯಾವುದಾದರೂ
ಕಾರಣದಿಂದಾಗಿ ಅರಳುತ್ತದೆಯೇ? ಇಲ್ಲ! ಅದು ತನ್ನ
ಸಹಜ ಸ್ವಭಾವದಂತೆ ಅರಳುತ್ತದೆ, ಅಷ್ಟೆ.
ಕೃತಜ್ಞತೆಯೂ ಸಹ ನಿಮ್ಮ ಸಹಜ ಸ್ವಭಾವವೇ.
ಸಮಾಜದ ಅನೇಕ ಕಟ್ಟುಪಾಡುಗಳ ಅಡಿಯಲ್ಲಿ ಅದು
ಮುಚ್ಚಿಹೋಗಿದೆ.

ಸಮಸ್ಯೆಯೆಂದರೆ, ಸಮಾಜಕ್ಕೆ ಕೃತಜ್ಞತೆಯ
ಪರಿಭಾಷೆಯೇ ತಿಳಿದಿಲ್ಲ. ಅದಕ್ಕೆ ಕೇವಲ
ಉಪಯುಕ್ತತೆಯ ಭಾಷೆ ಮಾತ್ರ ತಿಳಿದಿದೆ.
ಸಮಾಜವು ತನ್ನ ಕಾರ್ಯಸಾಧನೆಗಾಗಿ ಲೋಭ
ಭೀತಿಗಳನ್ನು ನೇರವಾಗಿ ನಿಮ್ಮೊಳಗೆ ನೆಟ್ಟು
ಬಿಡುತ್ತದೆ. ಭೀತಿ, ಲೋಭಗಳ ದಾರಿಯಲ್ಲದೆ
ಕೃತಜ್ಞತೆಯ ದಾರಿಯೊಂದಿದೆ. ಅದು ಇನ್ನೂ ಹೆಚ್ಚು
ಪರಿಣಾಮಕಾರಿಯೆಂಬುದನ್ನು ಸಮಾಜವು ಅರಿತಿಲ್ಲ.

ನಾವು ಕೃತಜ್ಞರಾಗಿರಲು ಕೊನೆಯಿಲ್ಲದಷ್ಟು
ಕಾರಣಗಳಿವೆ. ಈ ಜೀವನವೆಂಬುದೇ ನಮಗೆ
ದೊರೆತಿರುವ ಕೊಡುಗೆ. ನಾವು ಯಾರಾದರೂ
ಅದಕ್ಕಾಗಿ ಕಷ್ಟಪಟ್ಟು ಪಡೆದುಕೊಂಡೆವೆ? ಇಲ್ಲ.
ಮಾನವ ಪ್ರಜ್ಞೆಯೊಂದಿಗೆ ಜನಿಸಿರುವುದೇ ನಮಗೆ
ದೊರೆತಿರುವ ಮೊದಲ ಅನುಗ್ರಹ. ನಮ್ಮ
ಕೃತಜ್ಞತೆಯು ಅಲ್ಲಿಂದಲೇ ಮೊದಲಾಗಬೇಕು. ನಮ್ಮ
ಇರುವಿಕೆಗಾಗಿಯೇ ಕೃತಜ್ಞರಾಗಿರಬೇಕು.

ಒಬ್ಬ ಹುಡುಗಿಯು ಊಟ ಮಾಡಲು ಕುಳಿತಳು.
ಅವಳು ತಿನ್ನಲು ಶುರುಮಾಡಿದಾಗ, ಅವಳ
ತಾಯಿಯು ಒಮ್ಮೆಲೇ ಅವಳನ್ನು ತಡೆದು, ‘ನೀನು
ತಿನ್ನುವ ಮೊದಲು ದೇವರಿಗೆ ಧನ್ಯತೆಗಳನ್ನು
ಅರ್ಪಿಸಿದೆಯಾ?’ ಎಂದು ಕೇಳಿದಳು.

ಹುಡುಗಿಯು, ‘ಆದರೆ ನಾನು ಈಗಾಗಲೇ ದೇವರಿಗೆ
ಒಂದು ಬಾರಿಯಾದರೂ ಧನ್ಯತೆ ಹೇಳದಿರುವ
ತಿಂಡಿಯೇ ಈ ತಟ್ಟೆಯಲ್ಲಿ ಇಲ್ಲವಲ್ಲ’ ಎಂದಳು.

ಅರ್ಥಮಾಡಿಕೊಳ್ಳಿರಿ, ಜೀವನವು ನಿಸ್ಸಾರವಾಗಿ,
ನಿರುತ್ಸಾಹವಾಗಿ, ಕಂಡುಬರುವುದು ಕೃತಜ್ಞತೆಯ
ಅಭಾವದಿಂದಲೇ. ಜೀವನವನ್ನು ಉತ್ಸಾಹ,
ಉಲ್ಲಾಸಮಯಗೊಳಿಸಬಲ್ಲ ಶಕ್ತಿಯೆಂದರೆ
ಕೃತಜ್ಞತೆಯೇ. ಇದು ಜೀವನದ ಒಂದು ಮೂಲ
ರಹಸ್ಯ.

ಎಲ್ಲವೂ ಕೊಡುಗೆಯೇ

ನೀವು ಕೃತಜ್ಞತೆಯನ್ನು ಕಳೆದುಕೊಳ್ಳುವುದರ ಮೂಲ ಕಾರಣವೆಂದರೆ, ಎಲ್ಲವನ್ನೂ, ಹೇಗಿದ್ದರೂ ಇದೆಯೆಲ್ಲಾ ಎಂದು ಕಾಣುವುದೇ ಆಗಿದೆ. ಯಾರು ನಿಮಗಾಗಿ ಏನನ್ನು ಮಾಡಿದರೂ, ಅದು ನಿಮ್ಮ ಆಜನ್ಮಸಿದ್ಧ ಹಕ್ಕೆಂದು ಭಾವಿಸುವಿರಿ. ಅರಿತುಕೊಳ್ಳಿರಿ, ಜನರು ನಿಮಗಾಗಿ ಶ್ರಮಿಸುವ ಬದಲಿಗೆ ಬೇರೆ ಏನನ್ನಾದರೂ ಮಾಡುತ್ತಿರಬಹುದಾಗಿತ್ತು. ಆದ್ದರಿಂದ ಅದು ಅವರು ನಿಮಗೆ ಕೊಡುವ ಉಡುಗೊರೆಯಂತೆಯೇ. ಅದಕ್ಕಾಗಿ ಅವರಿಗೆ ಧನ್ಯರಾಗಿರಬೇಕು.

ಜೀವನದಲ್ಲಿ ಪ್ರತಿಯೊಂದು ಸಣ್ಣಪುಟ್ಟದ್ದನ್ನೂ
ಕೊಡುಗೆಯಂತೆ ಸ್ವೀಕರಿಸಿರಿ. ನೀವು ಊಟ
ಮಾಡಲು ಕುಳಿತಾಗ, ನಿಮ್ಮ ಬೆರಳುಗಳಿಗೆ
ಎಂದಾದರೂ ಕೃತಜ್ಞತೆ ಹೇಳಿದ್ದೀರಾ? ಕೆಲವರಿಗೆ
ತಿನ್ನಲು ಬೆರಳುಗಳೇ ಇರುವುದಿಲ್ಲ! ಹೀಗೆ
ಎಂದಾದರೂ ಯೋಚಿಸಿದ್ದೀರಾ? ಇಲ್ಲವೇ ಇಲ್ಲ!
ನಾವು ಕೇವಲ ಬೆರಳಿನಲ್ಲಿ ವಜ್ರದುಂಗುರ
ಇರುವವರನ್ನು ಮಾತ್ರ ನೋಡುತ್ತೇವೆ. ಬೆರಳೇ
ಇಲ್ಲದವರ ಬಗ್ಗೆ ಗಮನ ಹರಿಸುವುದೇ ಇಲ್ಲ.

ಸಣ್ಣ ವಿಷಯಗಳಿಗೆ ಕೃತಜ್ಞರಾಗಲು
ಪ್ರಾರಂಭಿಸಿದಾಗ ನಾವು ಹೆಚ್ಚು
ಸೂಕ್ಷ್ಮಗ್ರಾಹಿಗಳಾಗುತ್ತೇವೆ. ನಾವು ಹೆಚ್ಚು
ಸುಸಂಸ್ಕೃತರಾಗುತ್ತೇವೆ.

ಒಂದು ಸಣ್ಣ ಕಥೆ:

ಒಬ್ಬ ವ್ಯಕ್ತಿಯು ತಾನು ಮರುಳುಗಾಡಿನಲ್ಲಿ ಹೇಗೆ ದಾರಿಕಳೆದುಕೊಂಡನೆಂದು ಮಿತ್ರನಿಗೆ ಹೇಳುತ್ತಿದ್ದನು. ಆತನು, 'ನಾನು ಹತಾಶನಾಗಿ, ಬಾಗಿ ನಮಸ್ಕರಿಸುತ್ತಾ, ನನಗೆ ಮರುಭೂಮಿಯಿಂದ ಹೊರಗೆ ಹೋಗುವ ದಾರಿಯನ್ನು ತೋರುವಂತೆ ಪ್ರಾರ್ಥಿಸಿದೆ' ಎಂದನು.

ಮಿತ್ರನು ಇದನ್ನು ಕೇಳಿ ವಿಸ್ಮಯದಿಂದ, 'ಹಾಗಾದರೆ
ದೇವರು ನಿನ್ನ ಪ್ರಾರ್ಥನೆಯನ್ನು ಮನ್ನಿಸಿದನೆ?'
ಎಂದು ಕೇಳಿದನು.

ಆ ವ್ಯಕ್ತಿಯು, 'ಇಲ್ಲ ಇಲ್ಲ! ಅಷ್ಟರಲ್ಲಿ ಒಬ್ಬ
ಅನ್ವೇಷಕನು ಎಲ್ಲಿಂದಲೋ ಬಂದು ದಾರಿ
ತೋರಿದನು' ಎಂದು ಉತ್ತರಿಸಿದನು.

ನಾವು ಜೀವನದಲ್ಲಿ ಇಷ್ಟು ಒರಟಾಗಿ ಬಿಟ್ಟಿದ್ದೇವೆ! ಎಲ್ಲವನ್ನೂ ಹೇಗಿದ್ದರೂ ಇದೆಯೆಲ್ಲಾ ಎಂಬ ಭಾವನೆಯಿಂದ ಕಾಣುತ್ತೇವೆ. ನಾವು ಕೃತಜ್ಞತೆಯಿಂದ ನಮ್ಮನ್ನು ನಾವೇ ಸೂಕ್ಷ್ಮವಾಗಿಸಿಕೊಂಡರೆ, ಯಾವುದನ್ನೂ ಅಸಡ್ಡೆಯಿಂದ ನೋಡುತ್ತಿರಲಿಲ್ಲ - ಬೆರಳುಗಳನ್ನಾಗಲಿ, ಐಶ್ವರ್ಯವನ್ನಾಗಲಿ, ಕಾಲಕ್ಕೆ ಸರಿಯಾದ ಅಸ್ತಿತ್ವದ ಔದಾರ್ಯವನ್ನಾಗಲಿ, ಯಾವುದನ್ನೂ ಅಲ್ಲ. ಸೂಕ್ಷ್ಮತೆಯುಂಟಾದಾಗ, ಪ್ರತಿಕ್ಷಣವನ್ನೂ ಸೃಷ್ಟಿಯ ಆಗುಹೋಗುಗಳ ಬಗ್ಗೆ ಗಾಢವಾದ ವಿಸ್ಮಯದೊಂದಿಗೆ ಕಳೆಯುತ್ತೇವೆ.

ಕೃತಜ್ಞತೆಯಿಂದ ಇತರರನ್ನು

ಆದರಿಸಿರಿ

ಮೊಟ್ಟಮೊದಲಾಗಿ ನಾವು ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ,

ಯಾರೂ ನಮ್ಮ ಸೇವೆ ಮಾಡಲೆಂದೇ ಜನ್ಮ
ತಾಳಲಿಲ್ಲವೆಂಬುದು. ಇತರರೂ ನಮ್ಮಂತೆಯೇ
ಜೀವನದ ಪಥಿಕರು. ಒಳ್ಳೆಯತನ, ಪ್ರೇಮಗಳಿಂದಾಗಿ
ಅವರು ನಮಗಾಗಿ ಶ್ರಮಪಡುತ್ತಾರೆ.

ಪತಿ ಪತ್ನಿಯರ ನಡುವೆಯಂತೂ ಅನೇಕ
ವಿಷಯಗಳ ಬಗ್ಗೆ ಅನಾದರವಿರುತ್ತದೆ. ಹೇಗೋ,
ಈ ಅಭಿಪ್ರಾಯವು ನಮ್ಮ ಸಮಾಜದಲ್ಲಿ ಆಳವಾಗಿ
ಬೇರೂರಿಬಿಟ್ಟಿದೆ. ಇದರಿಂದಾಗಿ, ಇಂದು ಅನೇಕ
ವಿವಾಹಗಳು ವಿಚ್ಛೇದಕ್ಕೊಳಗಾಗುತ್ತಿವೆ. ನಾನು
ಹೇಳುವೆ, ದೈಹಿಕ ಸಂಬಂಧದಲ್ಲೂ ಸಹ ಇನ್ನೊಬ್ಬರ
ದೇಹದ ಬಗ್ಗೆ ಗಾಢವಾದ ಕೃತಜ್ಞತೆ ಇರಬಹುದು.
ಆಗ ಅದೆಲ್ಲವೂ ಕೇವಲ ದೈಹಿಕ ಸಂಬಂಧವಾಗಿರದೆ
ದೈವಿಕ ಅನುಭವವಾಗುತ್ತದೆ. ಇನ್ನೊಬ್ಬರಿಂದ
ಇಷ್ಟೊಂದು ಸುಖ ಸಿಗುತ್ತಿರುವಾಗ, ಅವರ ಬಗ್ಗೆ
ಕೃತಜ್ಞತೆ ಏಕಿರಬಾರದು? ಇನ್ನೊಬ್ಬರನ್ನು
ಮೊದಲಿನಿಂದಲೇ ಆಳವಾಗಿ ಆದರಿಸಿದರೆ, ಅನೇಕ
ವಿವಾಹಗಳನ್ನು ಉಳಿಸಬಹುದು.

ಒಂದು ಸಣ್ಣ ಕಥೆ:

ಒಬ್ಬ ವ್ಯಕ್ತಿಯು, 'ಓ ದೇವರೇ, ನನ್ನ ಮೇಲೆ
ದಯೆತೋರು. ನಾನು ಇಷ್ಟು ಕಷ್ಟಪಟ್ಟು
ದುಡಿಯುತ್ತಿರುವಾಗ ನನ್ನ ಹೆಂಡತಿಯು
ಮನೆಯಲ್ಲಿರುವಳು. ನಾನು ದಿನವಿಡೀ
ದುಡಿಯುತ್ತಿದ್ದರೆ, ಆಕೆ ಮನೆಯಲ್ಲಿ
ಆರಾಮವಾಗಿರುವಳು. ನನಗೊಂದು ವರ ನೀಡು.
ನಾನು ಹೆಂಡತಿಯಾಗಿ, ಆಕೆಯು ಗಂಡನಾಗಲಿ.
ನಾನವಳಿಗೆ ಗಂಡನ ಜೀವನ ಎಷ್ಟು ಕಷ್ಟವೆಂದು
ಪಾಠ ಕಲಿಸಬೇಕು' ಎಂದು ದೇವರನ್ನು
ಪ್ರಾರ್ಥಿಸಿದನು.

ದೇವರು ಆತನ
ಪ್ರಾರ್ಥನೆಯನ್ನು
ಮನ್ನಿಸಿದನು.

ಮರುದಿನ ಬೆಳಗ್ಗೆ ಈಗ ಹೆಣ್ಣಾಗಿರುವ ಪತಿಯು, ಬೇಗನೆ ಎದ್ದು ಮಕ್ಕಳಿಗೆ ಅಡಿಗೆ, ತಿಂಡಿ ಮಾಡಿಟ್ಟು, ಅವರನ್ನು ಶಾಲೆಗೆ ತಯಾರಿ ಮಾಡಿ, ಶಾಲೆಗೆ ಕರೆದೊಯ್ದಳು. ಹಿಂದಿರುಗಿದ ಬಳಿಕ, ಬಟ್ಟೆಗಳನ್ನು ಒಗೆದು, ಬ್ಯಾಂಕಿಗೆ ಹೋಗಿ ಹಣ ತಂದು, ವಿದ್ಯುತ್ ಹಾಗೂ ಫೋನಿನ ಬಿಲ್ಲನ್ನು ಕಟ್ಟಿದಳು. ನಂತರ ಅಂಗಡಿಗೆ ಹೋಗಿ, ಮನೆಗೆ ಬೇಕಾದ ವಸ್ತುಗಳನ್ನು ಕೊಂಡು, ಬಟ್ಟೆಗಳನ್ನು ಒಣಗಿಸಿ, ಮಕ್ಕಳನ್ನು ಶಾಲೆಯಿಂದ ಕರೆತಂದು, ಅವರ ಜಗಳಗಳನ್ನು ಬಗೆಹರಿಸಿ, ಹೋಂವರ್ಕ್ ಮಾಡಿಸಿ, ಟಿ.ವಿ. ನೋಡುತ್ತಾ ಬಟ್ಟೆಗಳನ್ನು ಇಸ್ತ್ರಿ ಮಾಡಿದಳು. ನಂತರ ರಾತ್ರಿಯ ಅಡಿಗೆ ಮಾಡಿ, ಮಕ್ಕಳಿಗೆ ತಿನ್ನಿಸಿ, ಮಲಗಿಸಿ ತಾನೂ ಉಂಡು ಮಲಗಿದಳು.

ನೀವು
ಕೃತಜ್ಞತೆಯನ್ನು
ಕಳೆದುಕೊಳ್ಳುವುದರ
ಮೂಲ
ಕಾರಣವೆಂದರೆ,
ಎಲ್ಲವನ್ನೂ
ಹೇಗಿದ್ದರೂ
ಇದೆಯಲ್ಲಾ
ಎಂದು
ಕಾಣುವುದೇ.

ಮರುದಿನ ಬೆಳಗ್ಗೆ ಗಂಡನು ದೇವರನ್ನು ಮತ್ತೆ ಪ್ರಾರ್ಥಿಸಿ, 'ಓ ದೇವರೇ, ನಾನು ಇನ್ನೊಂದು ದಿನವೂ ಇದನ್ನು ಭರಿಸಲಾರೆ. ನಿನ್ನನ್ನು ಬೇಡುತ್ತೇನೆ, ದಯವಿಟ್ಟು ನನ್ನನ್ನು ಮತ್ತೆ ಗಂಡಾಗಿಸು' ಎಂದನು.

ದೇವರು, 'ನಿನ್ನನ್ನು ಮತ್ತೆ ಗಂಡಾಗಿಸುತ್ತೇನೆ, ಆದರೆ ನೀನು ಒಂಬತ್ತು ತಿಂಗಳು ಕಾಯಬೇಕು. ಏಕೆಂದರೆ ನೀನೀಗ ಬಸಿರಾಗಿದ್ದೀಯೆ!' ಎಂದು ಉತ್ತರಿಸಿದನು.

ನಿಮಗೆ ಸಂಬಂಧಿಸಿದವರ ಬಗ್ಗೆ ಪೂರ್ಣ ಕೃತಜ್ಞತೆಯಿದ್ದಾಗ ಅವರನ್ನು ಸ್ವಾಧೀನ- ಪಡಿಸಿಕೊಳ್ಳುವ ಮನಸ್ಸಾಗುವುದಿಲ್ಲ.ಜೀವನದಲ್ಲಿ ಪ್ರತಿ- ಯೊಬ್ಬರೂ ಸಮಾನ ಪಾತ್ರವಹಿಸುತ್ತಾರೆ. ಯಾರೂ ಅನಾದ- ರಣೀಯರಲ್ಲ. ಭೂಮಿಯ ಮೇಲಿರುವ ಪ್ರತಿ ವ್ಯಕ್ತಿಯ ಬಗ್ಗೆಯೂ ಸ್ವಲ್ಪವಾದರೂ ಕೃತಜ್ಞತೆ ಇರಬೇಕು.

ನಿಮಗೆ ನಿಮ್ಮ ಪತ್ನಿಯೊಂದಿಗೆ ಸರಿಹೊಂದದೆ, ನೀವು
ವಿಚ್ಛೇದನ ಮಾಡಿಕೊಂಡರೂ, ಕೃತಜ್ಞತೆಯಿಂದ
ಆಗಲಿರಿ ಎಂದು ನಾನು ಯಾವಾಗಲೂ ಹೇಳುತ್ತೇನೆ.

ಸಮಸ್ಯೆಯೆಂದರೆ, ಯಾವಾಗಲೂ ಇನ್ನೊಬ್ಬರು
ನಮ್ಮನ್ನು ಬಾಧಿಸಲು ಹವಣಿಸುತ್ತಿದ್ದಾರೆಂದು
ನಮಗನಿಸುತ್ತದೆ. ಆದರೆ ಹಾಗಲ್ಲ. ಅದು
ಮತ್ತೊಬ್ಬರಲ್ಲಿ ತೋರುವ ನಮ್ಮ ಅಭದ್ರತಾ
ಭಾವನೆಯ ಪ್ರತಿಬಿಂಬವೇ.

ಅನೇಕ ಮಂದಿ ತಮ್ಮ ತಾಯಿ-ತಂದೆ ಅಥವಾ ಸಮಾಜವು ತಮ್ಮನ್ನು ಬೆಳೆಸಿರುವ ರೀತಿಯನ್ನು ದೂಷಿಸುತ್ತಾರೆ. ಅರಿತುಕೊಳ್ಳಿರಿ, ನಿಮಗೆ ಈಗಿರುವ ತಿಳಿವಳಿಕೆಯಿಂದಾಗಿ ನಿಮಗೆ ಹಿಂದೆ ಸರಿಯಾದ ಮಾನಸಿಕ ನಿಲುವು ದೊರಕಲಿಲ್ಲವೆಂದು ಅನಿಸುತ್ತದೆ. ಆದರೆ ನಮಗೆ ಈ ದೇಹ, ಮನಸ್ಸುಗಳನ್ನು ಕೊಟ್ಟವರು ಉದ್ದೇಶಪೂರ್ವಕವಾಗಿ ನಮಗೆ ತೊಂದರೆಕೊಡಬೇಕೆಂದಿರಲಿಲ್ಲ. ಅವರಿಗೆ ಉತ್ತಮವೆಂದು ತೋರಿದುದನ್ನು ನಮಗಾಗಿ ಮಾಡಿದರು, ಅಷ್ಟೆ. ಈಗ ನಾವು ಬುದ್ಧಿಶಾಲಿಗಳಾದುದರಿಂದ ಹಿಂದಕ್ಕೆ ಅದರಾಚೆ ಯೋಚಿಸುತ್ತಿದ್ದೇವೆ. ಸುಮ್ಮನೆ ಅವರಿಗೆ ಕೃತಜ್ಞರಾಗಿರಿ, ಅಷ್ಟೇ ಸಾಕು.

ಇನ್ನೊಂದು ವಿಷಯ: ನಿಮಗೆ ಸಂಬಂಧಿಸಿದವರ
ಬಗ್ಗೆ ಪೂರ್ಣ ಕೃತಜ್ಞತೆಯಿದ್ದಾಗ ಅವರನ್ನು
ಸ್ವಾಧೀನಪಡಿಸಿಕೊಳ್ಳುವ ಮನಸ್ಸಾಗುವುದಿಲ್ಲ.
ಅವರನ್ನು ಸುಂದರ ವ್ಯಕ್ತಿಗಳನ್ನಾಗಿ ಮಾತ್ರ
ಕಾಣುತ್ತೀರಿ, ಅಷ್ಟೆ. ಇನ್ನೊಬ್ಬರನ್ನು
ವ್ಯಕ್ತಿಯೆಂದಲ್ಲದೆ, ವಸ್ತುವೆಂದು ಭಾವಿಸಿದಾಗಲೇ
ಅವರನ್ನು ಸ್ವಾಧೀನಪಡಿಸಿಕೊಳ್ಳುವ ಮನೋಭಾವವು
ಉಂಟಾಗುವುದು. ಕೃತಜ್ಞತೆಯಿದ್ದಾಗ ಆ ವ್ಯಕ್ತಿಯ
ಸ್ವಾತಂತ್ರ್ಯಕ್ಕೂ ಗೌರವ ಕೊಡುತ್ತೀರಿ.

ಮುಂದಿನ ಎರಡು ದಿನಗಳು ಯಾವುದೇ ಸನ್ನಿವೇಶದಲ್ಲಾದರೂ ಸರಿ, ಪರಿಶುದ್ಧ ಪ್ರೇಮ, ಕೃತಜ್ಞತೆಗಳಿಂದ ಪ್ರತಿಕ್ರಿಯೆ ತೋರಿಸುತ್ತೀರೆಂದು ಪ್ರಜ್ಞಾಪೂರ್ವಕದಿಂದ ಸಂಕಲ್ಪ ಮಾಡಿಕೊಳ್ಳಿರಿ. ಆಗ ತಾನಾಗಿಯೇ ಪ್ರತಿಯೊಬ್ಬರೂ ವಿಶ್ವಶಕ್ತಿಯ ಅನುಪಮ ಸೃಷ್ಟಿಯಂತೆ, ದೈವತ್ವದ ಪ್ರತಿರೂಪದಂತೆ ಕಂಡುಬರುತ್ತಾರೆ.

ಅಷ್ಟೇ ಅಲ್ಲ. ನಿಮ್ಮ ಪರಿಸರದಲ್ಲಿರುವ ಎಲ್ಲದರ
ಬಗ್ಗೆಯೂ ಗಾಢವಾದ ಅನುಕಂಪವುಂಟಾಗುತ್ತದೆ.
ನೀವು ಕೋಪಿಷ್ಟರಾದರೆ, ನಿಮ್ಮ ಕೋಪವು ನಶಿಸಿ
ಹೋದಂತಾಗುತ್ತದೆ. ಬೇರೆ ನಕಾರಾತ್ಮಕ
ಭಾವನೆಗಳಲ್ಲಿ ಹರಿಯುತ್ತಿದ್ದ ಶಕ್ತಿಯು,
ಬೆಳೆಯುತ್ತಿರುವ ಕೃತಜ್ಞತೆಯಿಂದಾಗಿ
ಮುಕ್ತಗೊಳ್ಳುತ್ತದೆ. ನೀವು ಪ್ರೇಮಾನುಕಂಪ
ಭರಿತರಾಗುತ್ತೀರಿ.

ಶರೀರಕ್ಕೆ ಕೃತಜ್ಞತೆಯನ್ನು ಅರ್ಪಿಸಿರಿ

ಒಂದು ಸಣ್ಣ ಕಥೆ:

ಒಬ್ಬ ಮಧ್ಯವಯಸ್ಕಳಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ಒಯ್ದರು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಆಕೆಗೆ ಸಾವಿನ ನಿಕಟಾನುಭವವಾಯಿತು. ಈ ಅನುಭವದಲ್ಲಿ ಆಕೆಯು ದೇವರನ್ನು ಕಂಡು, ಇದು ತನ್ನ ಜೀವನದ ಅಂತ್ಯವೇ ಎಂದು ಕೇಳಿದಳು.

ದೇವರು ಆಕೆಗಿನ್ನೂ ಮೂವತ್ತು ಅಥವಾ ನಲವತ್ತು ವರ್ಷಗಳ ಆಯುಷ್ಯವಿದೆಯೆಂದನು.

ಆಕೆಗೆ ಗುಣವಾದ ಕೂಡಲೇ ಆಕೆಯು, ತಾನು
ಆಸ್ಪತ್ರೆಯಲ್ಲೇ ಉಳಿಯಲು ನಿರ್ಧರಿಸಿ, ಸೌಂದರ್ಯ
ವರ್ಧನೆಗಾಗಿ ಮುಖ, ಮೂಗು ಹಾಗೂ ತೂಕ
ಕಡಿಮೆ ಮಾಡುವ ಶಸ್ತ್ರಚಿಕಿತ್ಸೆಗಳನ್ನೂ
ಮಾಡಿಸಿಕೊಂಡಳು. ಕೂದಲಿಗೆ ಬಣ್ಣ ಹಾಕಿದಳು,
ಇನ್ನೂ ಮೂವತ್ತು ವರ್ಷ ಬದುಕಿರಬೇಕೆಂದ ಮೇಲೆ
ಹೊಸದಾಗಿ ಜೀವನ ಪ್ರಾರಂಭಿಸೋಣ
ಎಂದುಕೊಂಡಳು. ಅವೆಲ್ಲ ಶಸ್ತ್ರಚಿಕಿತ್ಸೆಗಳನ್ನೂ
ಮುಗಿಸಿಕೊಂಡು ಆಸ್ಪತ್ರೆಯಿಂದ ಹೊರಕ್ಕೆ
ಬರುತ್ತಿರುವಾಗ ಆಂಬುಲೆನ್ಸ್‌ನೊಂದಿಗೆ
ಅಪಘಾತವಾಗಿ ಮರಣ ಹೊಂದಿದಳು. ಆಕೆಯು
ದೇವರ ಬಳಿ ಬಂದಾಗ, ‘ನನಗಿನ್ನೂ ಮೂವತ್ತು
ವರ್ಷಗಳಿವೆಯೆಂದು ಹೇಳಿದ್ದೆಯಲ್ಲವೆ?’ ಎಂದು
ಕೇಳಿದಳು.

ದೇವರು, ‘ಕ್ಷಮಿಸು, ನಿನ್ನನ್ನು ಗುರುತಿಸಲಾಗಲಿಲ್ಲ!’ ಎಂದು ಉತ್ತರಿಸಿದನು.

ಪ್ರತಿಯೊಬ್ಬ ವ್ಯಕ್ತಿಯೂ ದೇವರ ಅನುಪಮ
ಸೃಷ್ಟಿ. ಹಾಗಾಗಿಯೇ ಯಾವ ಎರಡು ದೇಹಗಳೂ
ಒಂದೇ ರೀತಿ ಕಾಣುವುದಿಲ್ಲ. ದೇವರು
ಯಂತ್ರಕಾರನಲ್ಲ. ಆತನು ಕಲಾಕಾರನು. ಹಾಗಾಗಿಯೇ
ನಾವೆಲ್ಲರೂ ವಿಧವಿಧವಾಗಿ ಕಾಣುವುದು.
ಆತನೇನಾದರೂ ಯಂತ್ರಕಾರನಾಗಿದ್ದರೆ,
ನಮ್ಮೆಲ್ಲರನ್ನೂ ಒಂದೇ ಅಚ್ಚಿನಿಂದ
ಮಾಡಿಬಿಡುತ್ತಿದ್ದ! ಆತನು ಪ್ರತಿಯೊಬ್ಬರನ್ನೂ
ಅದ್ವಿತೀಯವಾಗಿ ಸೃಷ್ಟಿಸಿದ್ದಾನೆ. ಆದರೆ ನಮಗೆ
ನಮ್ಮ ಸೌಂದರ್ಯವು ಸಾಲದೆನಿಸುತ್ತದೆ.
ಸದಾಕಾಲವೂ ಇನ್ನೊಬ್ಬರನ್ನು ನೋಡಿ ಅವರ
ಹಾಗಿರಬೇಕೆಂದು ಆಶಿಸುತ್ತೇವೆ. ನಮ್ಮ ಶರೀರವೇ
ಸುಂದರವಾಗಿದೆಯೆಂದು ನಾವು ಅದಕ್ಕೆ ತಿಳಿಸುವುದೇ
ಇಲ್ಲ.

ನಮ್ಮ ಶರೀರವು, ಅದರ ಬಗ್ಗೆ ನಮಗಿರುವ ಭಾವನೆಗೆ ಪ್ರತಿಸ್ಪಂದಿಸುತ್ತದೆ. ಕ್ಷಣಕ್ಷಣವೂ ಅದರ ಬಗ್ಗೆ ನಮಗಿರುವ ಆಲೋಚನೆಗೂ, ಭಾವನೆಗೂ ಅದು ಪ್ರತಿಸ್ಪಂದಿಸುತ್ತದೆ. ನಮ್ಮ ದೇಹದ ಬಗ್ಗೆ ಕೃತಜ್ಞತೆಯಿದ್ದರೆ, ಅದೂ ನಮ್ಮ ಆರೋಗ್ಯವನ್ನು ವರ್ಧಿಸುವುದರ ಮೂಲಕ ಪ್ರತಿಸ್ಪಂದಿಸುತ್ತದೆ. ನಮ್ಮ ದೇಹವನ್ನು ದ್ವೇಷಿಸಿದರೆ, ಅದೂ ಖಾಯಿಲೆಯಿಂದ ಕುಗ್ಗುತ್ತದೆ. ಸೂಫೀ ಸಂಪ್ರದಾಯದಲ್ಲಿ ದೇಹಕೃತಜ್ಞತೆಯನ್ನು ನಿತ್ಯಧ್ಯಾನವಾಗಿಯೇ ಅಭ್ಯಾಸ ಮಾಡುತ್ತಾರೆ. ಇದರಲ್ಲಿ ದೇಹದ ಪ್ರತಿ ಅಂಗವನ್ನೂ ಪ್ರೇಮದಿಂದ ಸ್ಪರ್ಶಿಸಿ, ಕೃತಜ್ಞತೆಯನ್ನು ಅರ್ಪಿಸುತ್ತಾರೆ.

ಪ್ರತಿಯೊಂದೂ ಮಂಗಳಕರ, ಕೇವಲ ಅದನ್ನು ಸಂಭ್ರಮಿಸಿರಿ.

ಒಂದು ವಿಷಯವನ್ನು ಬಹಳ ಸ್ಪಷ್ಟವಾಗಿ
ಅರ್ಥಮಾಡಿಕೊಳ್ಳಬೇಕು: ಇಡೀ ವಿಶ್ವವೇ
ಮಂಗಳಕರವಾದ ಸೃಷ್ಟಿ. ನೀವು ವಿಶ್ವಶಕ್ತಿಯ ಒಂದು
ಭಾಗವಾದ್ದರಿಂದ ನಿಮ್ಮ ಪರಿಸರದಲ್ಲಿರುವುದೆಲ್ಲವೂ
ಮಂಗಳಕರವಾದುದೇ. ಇದು ವಿಶ್ವದ ಸತ್ಯ. ಈ
ವಿಶ್ವದಲ್ಲಿ ನಡೆಯುವುದಾವುದೂ ಅಮಂಗಳವಲ್ಲ.
ಪ್ರತಿಯೊಂದು ಸಂಗತಿಯೂ ನಾವು
ಧನ್ಯರಾಗಿರಬೇಕಾದಂತಹ ಆಶೀರ್ವಾದವೇ.

ಇದು ಸ್ಪಷ್ಟವಾಗಿ ಅರ್ಥವಾದಪಕ್ಷದಲ್ಲಿ
ಜೀವನದಲ್ಲಿ ಆಕ್ಷೇಪಣೀಯವಾದುದು ಏನೂ
ಇರುವುದಿಲ್ಲ. ಇದು ಸ್ಪಷ್ಟವಾಗಿ ಅರ್ಥವಾದಾಗ,
ನಿಮ್ಮ ನೋಟವೇ ಕೃತಜ್ಞತಾಭರಿತವಾಗಿಬಿಡುತ್ತದೆ.
ಅದು ಪ್ರತಿಯೊಂದನ್ನೂ ಅಸಾಧಾರಣವಾಗಿ
ಕಾಣುತ್ತದೆ. ಯಾವುದೂ ಸಾಧಾರಣವಾಗಿ
ಕಾಣುವುದೇ ಇಲ್ಲ. ಎಲ್ಲವೂ ಪವಾಡದಂತೆ
ಕಂಡುಬರುತ್ತದೆ.

ಒಂದು ಸಣ್ಣ ಕಥೆ:

ಒಮ್ಮೆ ಬಾತುಕೋಳಿಗಳನ್ನು ಹಿಡಿಯುವವನೊಬ್ಬನು
ಪಕ್ಷಿಯನ್ನು ಹಿಡಿದು ತರಬಲ್ಲ ನಾಯಿಯನ್ನು
ಹುಡುಕುತ್ತಿದ್ದನು. ಆತನ ಆಶ್ಚರ್ಯಕ್ಕೆ, ಆತನಿಗೆ
ನೀರಿನ ಮೇಲೆ ನಡೆಯಬಲ್ಲ ನಾಯಿ ಸಿಕ್ಕಿತು! ಆತನು
ತಕ್ಷಣವೇ ಅದನ್ನು ಮನೆಗೆ ತಂದನು.

ಮರುದಿನ ಆತನು ತನ್ನ ಮಿತ್ರನೊಬ್ಬನನ್ನು ಬೇಟೆಗಾಗಿ ಕರೆದು, ತನ್ನ ನಾಯಿಯನ್ನು ಕರೆದುಕೊಂಡು ಹೊರಟನು. ಬಾತುಕೋಳಿಗಳ ಹಿಂಡೊಂದು ಕಂಡುಬಂದಾಗ ಆತನು ಗುರಿಯಿಟ್ಟು ಹೊಡೆದು ನೋಡಿದನು. ನಾಯಿಯು ನೀರಿನ ಮೇಲೆ ನಡೆದು ಹೋಗಿ ಪಕ್ಷಿಯನ್ನು ಹಿಡಿದುತಂದಿತು. ಆತನು ತನ್ನ ಮಿತ್ರನ ಪ್ರತಿಕ್ರಿಯೆಗಾಗಿ ಅವನನ್ನು ನೋಡಿದನು, ಆದರೆ ಮಿತ್ರನು ಸುಮ್ಮನಿದ್ದನು.

ಆತನು ಕೇಳಿದನು, ‘ನನ್ನ ನಾಯಿಯಲ್ಲಿ ಏನಾದರೂ ವಿಶೇಷವನ್ನು ಕಂಡೆಯಾ?’

ಮಿತ್ರನೂ, ‘ಹೌದು, ನಿನ್ನ ನಾಯಿಗೆ ಈಜಲೂ ಬಾರದು!’ ಎಂದು ಉತ್ತರಿಸಿದನು.

ಪವಾಡಗಳು ನಮ್ಮ ಕಣ್ಣ ಮುಂದೆಯೇ
ಯಾವಾಗಲೂ ನಡೆಯುತ್ತಿವೆ. ಆದರೆ ನಾವು
ಸತತವಾಗಿ ಅವುಗಳನ್ನು ಕಳೆದುಕೊಳ್ಳುತ್ತಿದ್ದೇವೆ!
ನಾವು ಅರ್ಥ ಮಾಡಿಕೊಳ್ಳದೆ ಇರುವುದರಿಂದಾಗಿ,
ಜೀವನವೇ ಕೆಲವೊಮ್ಮೆ ನಿಸ್ಸಾರವೆನಿಸಿಬಿಡುತ್ತದೆ.
ನಾವದನ್ನು ಕಾಣಲು ಪ್ರಾರಂಭಿಸಿದಾಗ, ಇಡೀ
ಜೀವನವೇ ಒಂದು ಪವಾಡವಾಗುತ್ತದೆ. ನಿಜ
ಹೇಳಬೇಕೆಂದರೆ, ನಮ್ಮ ಜೀವನದಲ್ಲಿ ಅನೇಕ
ಪವಾಡಗಳು ಯಾವಾಗಲೂ ನಡೆಯುತ್ತಲೇ ಇವೆ.

ವಿಶ್ವಶಕ್ತಿಯನ್ನು ಅದರ ವಿವಿಧವಿಧವಾದ ಎಲ್ಲಾ ಆಯಾಮಗಳೊಡನೆಯೂ ವಿರೋಧಾಭಾಸಗಳೊಡನೆಯೂ ಅಂಗೀಕರಿಸಿ, ಸಂಭ್ರಮಿಸಿರಿ, ಯಾವುದರ ಬಗ್ಗೆಯೂ ತೀರ್ಮಾನ ನೀಡಬೇಡಿರಿ. ನೀವು ಸದಾಕಾಲವೂ ಖಂಡಿಸುತ್ತಲೇ ಇರುತ್ತೀರಿ: ಯಾವುದು ಸರಿ, ಯಾವುದು ತಪ್ಪು, ಇದು ಹಾಗಿರಬೇಕಿತ್ತು, ಅದು ಹೀಗಿರಬೇಕಾಗಿತ್ತು, ಎಂದು.

ವಿಶ್ವದಲ್ಲಿ ಏನೇ ಸಂಭವಿಸಿದರೂ ಅದು ಮಂಗಳಕರ ಮಾತ್ರವೇ ಎಂದು ಜಾಗರೂಕವಾಗಿ ಅರಿತುಕೊಳ್ಳಿ. ಈ ಜಗತ್ತಿನಲ್ಲಿ ಎರಡೇ ಬಗೆಯ ವ್ಯಕ್ತಿಗಳಿರುವುದು. ಮೊದಲನೆಯವರು, ಏನು ನಡೆದರೂ ಅದು ಶುಭವೆಂದು ಭಾವಿಸುತ್ತಾರೆ. ಎರಡನೆಯವರು, ಏನೇ ನಡೆದರೂ ಅದು ತಮ್ಮ ಇಚ್ಛೆಗೆ ವಿರುದ್ಧವಾಗಿ ನಡೆಯುತ್ತಿದೆ ಹಾಗೂ ಅದು ಸ್ವಲ್ಪ ಬದಲಾಗಬೇಕು ಎಂದು ಭಾವಿಸುತ್ತಾರೆ. ಇಂತಹವರು ತಮ್ಮ ಅನಿಸಿಕೆಯ ಪ್ರಕಾರ ಜಗತ್ತಿನಲ್ಲಿ ನಡೆಯುತ್ತಿರುವುದನ್ನು ಬದಲಾಯಿಸಿ, ಖಂಡಿಸಿ, ಟೀಕಿಸಿ, ಆಕ್ಷೇಪಿಸುತ್ತಿರುತ್ತಾರೆ. ಇವರು ಯಾವಾಗಲೂ ಏನನ್ನಾದರೂ ಬದಲಾಯಿಸಲು ಪ್ರಯತ್ನಿಸುತ್ತಿರುವುದರಿಂದ ನೋವನ್ನನುಭವಿಸುತ್ತಲೇ ಇರುತ್ತಾರೆ.

ತಿಳಿಯಿರಿ: ಸಾವು, ಅನಾರೋಗ್ಯಗಳನ್ನೂ ಸೇರಿದಂತೆ ಪ್ರತಿ ಘಟನೆಯಲ್ಲೂ ನಮಗೊಂದು ಸಂದೇಶವಿದೆ. ಪ್ರತಿಯೊಂದರಲ್ಲೂ ನಾವು ಕಲಿಯಬೇಕಾದ ಪಾಠವೊಂದಿದೆ. ಪ್ರತಿಯೊಂದು ಸಂಗತಿಯೂ ನಮ್ಮ ಬುದ್ಧಿಮಟ್ಟವನ್ನು, ಚೈತನ್ಯವನ್ನು ಉತ್ಕೃಷ್ಟಗೊಳಿಸುತ್ತದೆ.

ಒಂದು ಮುಖ್ಯವಾದ ವಿಷಯವನ್ನು ತಿಳಿದುಕೊಳ್ಳಬೇಕು. ನಿಮಗೂ ಹಾಗೂ ಆತ್ಮಜ್ಞಾನಿಯಾದ ಗುರುವಿಗೂ ಗುಣದಲ್ಲಾಗಲೀ ಗಣನೆಯಲ್ಲಾಗಲೀ ಯಾವ ವ್ಯತ್ಯಾಸವೂ ಇಲ್ಲ. ಆದರೆ, ಆತನು ಅಂತರಂಗದಲ್ಲಿಯೂ, ಬಹಿರಂಗದಲ್ಲಿಯೂ ಸಂತೃಪ್ತನಾಗಿದ್ದಾನೆ. ನಿಮಗೆ ಆ ಸಂತೃಪ್ತಿಯಿಲ್ಲ. ಇಷ್ಟೇ ವ್ಯತ್ಯಾಸ. ನಿಮಗೆ ಯಾವಾಗಲೂ ಏನೋ ಕೊರತೆಯಿದ್ದಂತೆ ಭಾಸವಾಗುತ್ತಿರುತ್ತದೆ. ವಿಶ್ವಶಕ್ತಿಯು ಯಾವ ರೀತಿ ಆತನ ಇರುವಿಕೆಯನ್ನು ಈ ಪ್ರಪಂಚದಲ್ಲಿ ಇರಬಯಸುತ್ತದೆಯೋ ಅದೇ ರೀತಿ ನಿಮ್ಮ ಇರುವಿಕೆಯನ್ನೂ ಬಯಸುತ್ತದೆ. ನಿಮ್ಮ ಇರುವಿಕೆಯು ಆಕಸ್ಮಿಕವಲ್ಲ. ನಿರೀಕ್ಷಿತ ಘಟನೆ. ನೀವು ವಿಶ್ವಶಕ್ತಿಯ ಪವಾಡ. ಇದು ನೇರ ಹಾಗೂ ನಿಚ್ಚಳವಾದ ಸತ್ಯ. ಇದು ಆಶಾವಾದವೆಂದು ಭಾವಿಸಬೇಡಿರಿ. ಇಲ್ಲ, ಇದು ಕೇವಲ ಸತ್ಯ. ಈ ಸತ್ಯವನ್ನು ನಂಬಿದರೆ ನೀವಾಗಿಯೇ ಆಶಾವಾದಿಯಾಗುತ್ತೀರಿ, ಅಷ್ಟೆ.

ಸೃಷ್ಟಿಯು ನಿಮ್ಮ ಮೂಲಕ ತನ್ನನ್ನು ತಾನೇ ಪೂರ್ಣಗೊಳಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿರಿ. ನೀವಿಲ್ಲದಿದ್ದರೆ ವಿಶ್ವಶಕ್ತಿಯು ನಿಮ್ಮನ್ನು ಕಳೆದುಕೊಂಡಂತೆ. ನಿಮ್ಮ ಸಂಪತ್ತು, ಸಂಬಂಧಗಳಾವುದೂ ಆಕಸ್ಮಿಕವಲ್ಲ. ವಿಶ್ವಶಕ್ತಿಯು ಅದನ್ನು ನಿಮಗಾಗಿ ಕಾದಿರಿಸಿದೆ. ಅದು ನಿಮ್ಮ ಮೂಲಕ ಪೂರ್ಣಗೊಳ್ಳುತ್ತದೆ. ನಿಮ್ಮ ಮೂಲಕ ಘಟಿಸುತ್ತದೆ! ಇದನ್ನು ಅರ್ಥಮಾಡಿಕೊಳ್ಳಿರಿ.

ಒಂದು ಸಣ್ಣ ಕಥೆ:

ಒಂದಾನೊಂದು ಗ್ರಾಮವು ಸುತ್ತಲೂ ಜೋಳದ
ಹೊಲಗಳ ಮಧ್ಯೆ ಪ್ರತ್ಯೇಕವಾಗಿತ್ತು. ಊರು
ಅಲ್ಲಿಂದ ದೂರವಾಗಿದ್ದರಿಂದ ಅದು
ಪ್ರಶಾಂತವಾಗಿತ್ತು.

ಒಂದು ದಿನ ಬೆಳಗ್ಗೆ ಹಳ್ಳಿಯವರು ಹಿಂದেন্দೂ
ಕಂಡಿರದ ಒಬ್ಬ ಸಾಧುವನ್ನು ಕಂಡರು. ಆತನು
ಒಂದು ಆಲದ ಮರದಡಿಯಲ್ಲಿ ಕುಳಿತಿದ್ದನು.
ಅವರು ಆತನು ಎಲ್ಲಿಂದ ಬಂದನೆಂದು ಕೇಳಿದರು.
ಆತನು, 'ನಾನು ನನ್ನ ಸೋದರರಂತಹ ನಿಮ್ಮೊಡನೆ

ಕೆಲವು ದಿನಗಳನ್ನು
ಕಳೆಯಲು ಬಂದಿರುವೆ'
ಎಂದು ಹೇಳಿದನು.

ಗ್ರಾಮಸ್ಥರು ಬಹಳ ಸಂತಸಗೊಂಡು ಆತನಿಗಾಗಿ
ಕುಟೀರವನ್ನು ನಿರ್ಮಿಸಿದರು. ಶೀಘ್ರದಲ್ಲೇ ಆ
ಸಾಧುವು ಅವರ ರೋಗಗಳನ್ನು ಗುಣಪಡಿಸಿ ಅವರ
ಅನೇಕ ಸಮಸ್ಯೆಗಳನ್ನು ಬಗೆಹರಿಸತೊಡಗಿದನು.

ಒಮ್ಮೆ ಯಾವುದೋ ಖಾಯಿಲೆಯಿಂದಾಗಿ ಆ
ಗ್ರಾಮದ ಅನೇಕ ಪಕ್ಷಿಗಳು ಮರಣಹೊಂದಿದವು,
ಗ್ರಾಮಸ್ಥರು ಇದನ್ನು ಸಾಧುವಿಗೆ ತಿಳಿಸಿದರು,
ಸಾಧುವು, 'ನೀವಿಷ್ಟೊಂದು ಪಕ್ಷಿಗಳನ್ನು
ಕಳೆದುಕೊಂಡುದು ದುಃಖಕರ ಸಂಗತಿಯೇ, ಆದರೆ
ನೀವು ವಿಶ್ವಶಕ್ತಿಯಲ್ಲಿ ಭರವಸೆಯಿಟ್ಟು
ಪ್ರಾರ್ಥಿಸಿದರೆ, ಈ ನಷ್ಟದಲ್ಲೂ ಲಾಭವೇ
ಇರಬಹುದು' ಎಂದನು.

ಗ್ರಾಮಸ್ಥರಿಗೆ ಇದನ್ನು ಪೂರ್ಣವಾಗಿ
ಸಮ್ಮತಿಸಲಾಗದಿದ್ದರೂ, ಆತನ ಮೇಲಿನ
ಗೌರವದಿಂದಾಗಿ ಸುಮ್ಮನೆ ಹಿಂದಿರುಗಿದರು.

ಮುಂದಿನ ವಾರದಲ್ಲಿ ಇದ್ದಕ್ಕಿದ್ದಂತೆ, ಆ ಗ್ರಾಮದ ನಾಯಿಗಳೆಲ್ಲವೂ ಓಡಿಹೋದವು. ಗ್ರಾಮಸ್ಥರಿಗೆ ಮತ್ತೆ ಕಳವಳವಾಯಿತು. ಏಕೆಂದರೆ, ನಾಯಿಗಳು ಗ್ರಾಮವನ್ನು ಕಳ್ಳರಿಂದ ಕಾಪಾಡುತ್ತಿದ್ದವು, ಅವರು ಸಾಧುವಿನ ಬಳಿ ಹೋಗಿ ಈ ವಿಷಯವನ್ನು ಹೇಳಿದರು. 'ನೀವು ವಿಶ್ವಶಕ್ತಿಯಲ್ಲಿ ಭರವಸೆಯಿಟ್ಟು ಪ್ರಾರ್ಥಿಸಿದರೆ ಈ ನಷ್ಟವೇ ಲಾಭವಾಗಬಲ್ಲುದು' ಎಂದು ಆತನು ತನ್ನ ಸಂದೇಶವನ್ನೇ ಪುನಃ ಹೇಳಿದನು.

ಇನ್ನೂ ಕೆಲವು ದಿನಗಳು ಕಳೆದಂತೆ ಮತ್ತೊಂದು ವಿಚಿತ್ರ ಘಟನೆ ಸಂಭವಿಸಿತು. ಆ ದಿನಗಳಲ್ಲಿ ಜನರ ಹತ್ತಿರ ಬೆಂಕಿಪೊಟ್ಟಣಗಳಿರಲಿಲ್ಲ. ಜನರು ಎರಡು ಕಲ್ಲುಗಳನ್ನುಜ್ಜಿ ಬೆಂಕಿ ಮಾಡುತ್ತಿದ್ದರು, ಇಲ್ಲವೆ ಒಲೆಯಲ್ಲಿ ಯಾವಾಗಲೂ ಬೆಂಕಿಯನ್ನು ಕಾಪಾಡುತ್ತಿದ್ದರು. ಒಂದು ದಿನ ಎಲ್ಲ ಮನೆಗಳಲ್ಲೂ ಬೆಂಕಿಯು ಆರಿಹೋಯಿತು. ಅವರು ಕಲ್ಲುಗಳನ್ನುಜ್ಜಿ ಬೆಂಕಿ ಮಾಡಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಎಲ್ಲರೂ ಬಹಳವಾಗಿ ಕಳವಳಗೊಂಡರು.

ಅವರು ಮತ್ತೆ ಸಾಧುವಿನ ಬಳಿ ಹೋಗಿ
ನಡೆಯುತ್ತಿದ್ದದ್ದನ್ನು ಹೇಳಿದರು. ಸಾಧುವು 'ಏನೋ
ಬಹಳ ವಿಶೇಷವಾದ ಸಂಗತಿ ನಡೆಯಲಿದೆಯೆಂದು
ಕಾಣುತ್ತದೆ' ಎಂದನು.

ಗ್ರಾಮಸ್ಥರು ಸಾಧುವನ್ನು ಅನುಮಾನಿಸ
ತೊಡಗಿದರು. ಅವರು, ಆತನು ತಮಗಿಂತ ಯಾವ
ರೀತಿಯಲ್ಲಿ ಉತ್ತಮನು ಹಾಗೂ ತಮಗೆ ಈ
ಮಾತುಗಳನ್ನು ಹೇಳಲು ಆತನಿಗೆ ಯಾವ
ಅರ್ಹತೆಯಿದೆ, ಎಂದು ಯೋಚಿಸತೊಡಗಿದರು.
ಕೆಲವು ಗ್ರಾಮಸ್ಥರು ಪಕ್ಕದ ಗ್ರಾಮಕ್ಕೆ ಹೋಗಿ
ಬೆಂಕಿಯನ್ನು ತರಬೇಕೆಂದು ಹೊರಟರು. ಆದರೆ
ಸಾಧುವು ಅದು ಕೂಡದೆಂದು ಬಲವಾಗಿ ತಡೆದನು.

ಮರುದಿನ ಮುಂಜಾನೆಯೇ ಕೆಲವು ಗ್ರಾಮಸ್ಥರು ಪಕ್ಕದ ಗ್ರಾಮಕ್ಕೆ ಹೊರಟರು. ಇದ್ದಕ್ಕಿದ್ದಂತೆ ಅವರು ಸುಂಟರಗಾಳಿಯಂತಹ ಸಂಭವವನ್ನು ದೂರದಲ್ಲಿ ಕಂಡರು. ಸ್ವಲ್ಪ ಸಮಯದ ನಂತರ, ಅದು ಇತ್ತ ಕಡೆ ಬರುತ್ತಿದ್ದ ಸೈನ್ಯವೆಬ್ಬಿಸಿದ ಧೂಳು ಎಂದು ತಿಳಿಯಿತು. ಆ ಸೈನ್ಯವು ಊರು ಹಾಗೂ ಹತ್ತಿರದ ಗ್ರಾಮಗಳನ್ನು ಲೂಟಿ ಮಾಡಲು ಹೊರಟಿತ್ತು. ಗ್ರಾಮಸ್ಥರು ಮರಗಳ ಹಿಂದೆ ಅಡಗಿ ಆ ಸೈನ್ಯವನ್ನು ನೋಡಿದರು. ಸೈನ್ಯವು ಗ್ರಾಮದ ಬಳಿ ಬಂದಾಗ,

'ಈ ಗ್ರಾಮವನ್ನೂ ಲೂಟಿ ಮಾಡೋಣ!' ಎಂದು ಒಬ್ಬನು ಕೂಗಿದನು.

ಇನ್ನೊಬ್ಬನು, 'ಅದರಿಂದ ಏನೂ ಪ್ರಯೋಜನವಿಲ್ಲ,
ಇಲ್ಲಿ ಬೆಳಗಿನ ಜಾವದಲ್ಲಿಯೂ ಒಂದು ಪಕ್ಷಿಯ
ಕಲರವವೂ ಇಲ್ಲ, ಯಾವ ನಾಯಿಯೂ
ಬೊಗಳುತ್ತಿಲ್ಲ, ಒಂದು ಮನೆಯಿಂದಾದರೂ
ಬೆಂಕಿಯ ಹೊಗೆಯಿಲ್ಲ, ಇಲ್ಲಿ ಯಾರೂ
ನೆಲೆಸಿಲ್ಲವೆಂದೇ ತೋರುತ್ತದೆ' ಎಂದನು.

ಸೈನ್ಯವು ಹಿಂದಿರುಗಿ ಹೊರಟುಹೋಯಿತು.

ಅಡಗಿದ್ದ ಗ್ರಾಮಸ್ಥರು ಹಿಂದಿರುಗಿ ಉಳಿದವರಿಗೆ
ವಿಷಯವನ್ನು ತಿಳಿಸಿದರು. ಹಠಾತ್ತನೆ ಅವರಿಗೆ
ಸಾಧುವು ಯಾವಾಗಲೂ ಸತ್ಯವನ್ನೇ
ಹೇಳುತ್ತಿದ್ದನೆಂದು ಅರಿವಾಯಿತು! ಅವರು
ಸಾಧುವಿಗೆ ಎಲ್ಲವನ್ನೂ ಹೇಳಬೇಕೆಂದು ಆತನ
ಕುಟೀರಕ್ಕೆ ಹೋದರು. ಆದರೆ, ಕುಟೀರವು
ಖಾಲಿಯಾಗಿತ್ತು, ಸಾಧುವು ಹೊರಟುಹೋಗಿದ್ದನು.

ಆತನೆಲ್ಲಿಗೆ ಹೋದನೆಂದು ಯಾರಿಗೂ ತಿಳಿಯಲಿಲ್ಲ.

ವಿಶ್ವಶಕ್ತಿಯು ಆಕಸ್ಮಿಕವಲ್ಲ, ಅದು ಸ್ವತಂತ್ರ
ಚೈತನ್ಯ. ಅದು ಸ್ವತಂತ್ರ ಚೈತನ್ಯವೆಂದೂ,
ಅನುಭವಿಸಬೇಕಾದ ಭೇದಿಸಲಾಗದ ನಿಗೂಢ
ರಹಸ್ಯವೆಂದೂ ಅರಿತುಕೊಂಡಾಗ, ಜೀವನದಲ್ಲಿ
ಕಂಡುಬರುವುದೆಲ್ಲವೂ ತಾನಾಗಿ ಅರಳಿ, ತನ್ನೊಂದಿಗೆ
ತಂದಿರುವ ಪಾಠವನ್ನು ಹೊರತೋರುತ್ತದೆ.

ಕೆಲವರು ನನ್ನನ್ನು ಕೇಳುತ್ತಾರೆ, 'ಸ್ವಾಮೀಜಿ,
ನಮ್ಮ ಆಳವಾದ ಕೃತಜ್ಞತೆಯನ್ನು ನಿಮಗೆ ಹೇಗೆ
ಅರ್ಪಿಸುವುದು?' ಎಂದು. 'ನನಗೆ ಕೃತಜ್ಞತೆ
ತೋರಿಸುವ ಒಂದೇ ಬಗೆಯೆಂದರೆ, ನಾನು ಇದೀಗ
ವಿವರಿಸಿರುವ ರೀತಿಯಲ್ಲಿ ಜೀವನ್ಮುಕ್ತರಾಗಿ
ಬಾಳುವುದು. ಅದೇ ನನಗೆ ನೀವೂ, ನಿಮಗೆ ನಾನೂ
ನೀಡಬಲ್ಲ, ಅತ್ಯುತ್ತಮ ಕೊಡುಗೆ' ಎಂದು
ಹೇಳುತ್ತೇನೆ.

'ನಾವು ಈ ಸಂಸ್ಥೆಗೆ ಏನು ಸೇವೆ
ಮಾಡಬಹುದು?' ಎಂದು ಜನರು ಕೇಳುತ್ತಾರೆ.
'ಪ್ರಪಂಚಕ್ಕೆ ನೀವು ಮಾಡಬಹುದಾದ ಮಹತ್ತರವಾದ
ಸೇವೆಯೆಂದರೆ, ನಿಮ್ಮ ಸ್ವಂತ ಚೈತನ್ಯದ
ಸ್ಫುರಣದೆಡೆಗೆ ಶ್ರಮಿಸುವುದು. ಒಮ್ಮೆ ಇದು
ಸಂಭವವಾದರೆ, ನೀವಾಗಿಯೇ ಎಲ್ಲಿ ಅವಶ್ಯಕವೋ
ಅಲ್ಲಿ ಸೇವೆ ಮಾಡುತ್ತೀರಿ - ಅಹಂಕಾರದಿಂದ
ಅಥವಾ ಹೆಸರುಗಳಿಸಲು ಅಲ್ಲದೆ, ಕೇವಲ ಉಕ್ಕಿ
ಹರಿಯುತ್ತಿರುವ ಸಂತಸದಿಂದ. ಆಗ ಅದೂ
ಸೇವೆಯೆಂದು ಕರೆಯಲಾಗುವುದಿಲ್ಲ. ಅದು ಕೇವಲ
ಉಕ್ಕಿ ಹರಿಯುವಿಕೆ, ಅಷ್ಟೆ. ಸೇವೆಯೆಂಬುದು ಈ
ರೀತಿ ನಡೆಯಬೇಕು. ನೀಡಿಕೆಯಂತೆ ಅಲ್ಲ, ಸ್ವಯಂ
ಪ್ರೇರಿತ ಹಂಚುವಿಕೆಯಂತೆ' ಎಂದು ನಾನು
ಹೇಳುವುದು.

ಕೃತಜ್ಞತೆಯು ನಿಮ್ಮ ಕರ್ಮಗಳನ್ನು ದಹಿಸಬಲ್ಲದು

ಸೂಫೀ ಧರ್ಮವು ಸಂಪೂರ್ಣವಾಗಿ
ಕೃತಜ್ಞತೆಯನ್ನು ಆಧಾರವಾಗಿಟ್ಟುಕೊಂಡ ಮತ.
ಸೂಫೀ ಸೂತ್ರಗಳನ್ನೆಲ್ಲ ಒಂದೇ ಶಬ್ದದಲ್ಲಿ
ಹೇಳಬೇಕೆಂದರೆ, ಅದು ಕೃತಜ್ಞತೆ. ಮಹಾನ್ ಸೂಫೀ
ಸಂತರಾದ ಜಲಾಲುದ್ದೀನ್ ರೂಮೀ ಹಾಗೂ ಇತರ

ಸೂಫೀ ಸಂತರ ಕವಿತೆಗಳಲ್ಲೆಲ್ಲಾ ಇದನ್ನು
ಕಾಣಬಹುದು. ಅವರ ಮಾತುಗಳಲ್ಲಿ,
ಹರಿಯುತ್ತಿರುವ ಕೃತಜ್ಞತೆಯ ಶಕ್ತಿಯನ್ನು
ಕಾಣಬಹುದು. ಕೃತಜ್ಞತೆಯು ನಿಮ್ಮನ್ನು ಯಾರೂ
ಅಲ್ಲದಂತೆ ಕೇವಲ ಹರಿಯುವ
ಚೈತನ್ಯವನ್ನಾಗಿಸುತ್ತದೆ.

ಕೃತಜ್ಞತೆಯು ನಿಮ್ಮ ಕರ್ಮಗಳನ್ನೆಲ್ಲ ಸುಡಬಲ್ಲ ಅಗ್ನಿಯಂತೆ. ಕರ್ಮ ಎಂದರೇನು? ಅದು ನಿಮ್ಮಲ್ಲಿರುವ ಯಾವುದೋ ಅಸಂತೃಪ್ತಿಯು, ತನ್ನನ್ನು ಪೂರೈಸುವಂತೆ ಮತ್ತೆ ಮತ್ತೆ ನಿಮ್ಮನ್ನು ಎಳೆಯುವಂತಹ ಕ್ರಿಯೆ. ಇಂತಹ ಕೂಡಿಟ್ಟು ಕೊಂಡಿರುವ ಕರ್ಮಗಳನ್ನು ಪೂರೈಸಲು ಅಥವಾ ತೀರಿಸಲೆಂದೇ ಈ ಪ್ರಪಂಚದಲ್ಲಿ ಪುನಃ ಪುನಃ ಜನ್ಮ ತಾಳಿದುಬರುತ್ತೇವೆ. ಕೇವಲ ಕೃತಜ್ಞತೆಯ ಶಕ್ತಿಯೊಂದಿಗೆ ಈ ಕರ್ಮಗಳು ದಹಿಸಿಹೋಗುತ್ತವೆ! ಕೃತಜ್ಞತೆಯು ಅದೆಷ್ಟು ಬಲವಾದುದು!

ಕೃತಜ್ಞತೆ - ಸರ್ವೋತ್ತಮ ಪ್ರಾರ್ಥನೆ ಹಾಗೂ ಧರ್ಮ

ಕೃತಜ್ಞತೆಯೇ ನಿಮ್ಮ ಪ್ರಾರ್ಥನೆಯಾದಾಗ, ನಿಮ್ಮೊಡೆಗೆ ಶುಭವನ್ನು ಆಕರ್ಷಿಸುತ್ತೀರಿ. ಕೃತಜ್ಞತೆಯು ನಮ್ಮ ಊಹೆಗೆ ಮೀರಿದ ಫಲವನ್ನು ನೀಡಬಲ್ಲ ಸರ್ವೋತ್ತಮ ಪ್ರಾರ್ಥನೆ. ನಿಜವಾದ ಪ್ರಾರ್ಥನೆಯೆಂದರೆ, ಪ್ರಾರ್ಥನಾ ಪುಸ್ತಕಗಳ ಪಠನೆಯಲ್ಲ. ದೇವರಿಗೆ ಸಲ್ಲಿಸುವ ನೈವೇದ್ಯವಲ್ಲ. ದೇವಾಲಯಕ್ಕೆ ಮಾಡುವ ದಾನವೂ ಅಲ್ಲ. ಅದು ವಿಶ್ವಶಕ್ತಿಗೆ ನಾವು ಸಲ್ಲಿಸುವ ಗಾಢವಾದ, ಮೌನಧನ್ಯತೆ. ಸೃಷ್ಟಿಯು ರಕ್ಷಿಸುತ್ತಿದೆ ಎಂಬುದರಲ್ಲಿ ಅಚಲ ವಿಶ್ವಾಸವದು.

ಅನೇಕರು ಪ್ರಾರ್ಥನೆ, ಕೃತಜ್ಞತೆಗಳು ಬಂಧನವೆಂದು ತಿಳಿದಿದ್ದಾರೆ, ಅಲ್ಲ. ಅವೇ ಎಲ್ಲ ಬಂಧನಗಳಿಂದಲೂ ಮುಕ್ತಗೊಳಿಸುವುವು. ಅವು ನಿಮ್ಮನ್ನು ಅಸಂತೃಪ್ತಿಯ ಬಂಧನದಿಂದ ಮುಕ್ತಿಗೊಳಿಸುವುವು. ಪ್ರಾರ್ಥನೆಯೆಂಬುದು ನಿಮ್ಮಲ್ಲಿ ಉಕ್ಕಿ ಬರುವ ತೃಪ್ತಿ ಹಾಗೂ ಧನ್ಯತೆಯಾಗಿರಬೇಕು. 'ದೇವಾಲಯಕ್ಕೆ ಹೋಗಿ ಏಕೆ ಪ್ರಾರ್ಥಿಸಬೇಕು?' ಎಂದು ಕೆಲವರು ಕೇಳುತ್ತಾರೆ. ಅರ್ಥಮಾಡಿಕೊಳ್ಳಿರಿ, ಪ್ರಾರ್ಥನೆಯು ವಿಶ್ವಶಕ್ತಿಯ ಅಪಾರ ಕೃಪೆಯ ಒಂದು ಕೊಂಡಾಟ. ನಮ್ಮ ಪ್ರಾರ್ಥನೆಯು ಈ ರೀತಿಯಾಗಿದ್ದರೆ, ವಿಶ್ವಶಕ್ತಿಯೂ ಸ್ಪಂದಿಸುತ್ತದೆ. ಅದು ಸ್ಪಂದಿಸಿದಾಗ, ನಿಮ್ಮ ಜೀವನದಲ್ಲಿನ್ನೂ ಹೆಚ್ಚು ಅನುಗ್ರಹವಾಗಿ ಅದು ನಿಮಗೆ ಹಿಂದಿರುಗಿ ಬರುತ್ತದೆ. ಇದೇ ಪ್ರಾರ್ಥನೆ, ಆಶೀರ್ವಾದಗಳ ಶುಭ ವರ್ತುಲ!

ನಾನು ಜನರಿಗೆ ಯಾವಾಗಲೂ ಸೂಫೀ ಸಂತರೊಬ್ಬರ ಬೆರಗಾಗಿಸುವ ಕಥೆಯನ್ನು ಹೇಳುತ್ತೇನೆ. ಸೂಫೀ ಧರ್ಮವು ಕೃತಜ್ಞತೆಯಲ್ಲಿ ಆಧಾರಿತವಾಗಿದೆ. ಅದು ಇಡೀ ವಿಶ್ವಶಕ್ತಿಯಲ್ಲಿ ಕೃತಜ್ಞತೆಯಲ್ಲದೆ ಬೇರೇನಿಲ್ಲ.

ಒಬ್ಬ ಸೂಫೀ ಸಂತನೂ ಆತನ ಶಿಷ್ಯರೂ ಸಂಚಾರದಲ್ಲಿದ್ದರು. ಮೂರು ದಿನಗಳಾದರೂ ಆಹಾರ ದೊರಕಲಿಲ್ಲ. ನಾಲ್ಕನೆಯದಿನವಂತೂ ಗ್ರಾಮಸ್ಥರು ಅವರನ್ನು ಅಟ್ಟಿಸಿಕೊಂಡು ಓಡಿಸಿದುದರಿಂದ ಒಂದು ಸ್ಮಶಾನದಲ್ಲಿ ರಾತ್ರಿಯನ್ನು ಕಳೆಯಬೇಕಾಯಿತು. ಮಾರನೆಯ ದಿನ ಮುಂಜಾನೆ

ಸಂತನು ನಿತ್ಯದಂತೆಯೇ ಭಗವಂತನಿಗೆ ಧನ್ಯವಾದಗಳನ್ನು ಹೇಳುತ್ತಾ ಪ್ರಾರ್ಥಿಸುತ್ತಿದ್ದನು. ಆತನ ಶಿಷ್ಯರು ತಮ್ಮ ಕಣ್ಣುಗಳನ್ನೇ ನಂಬಲಾರದಾದರು. ಅವರು ಆಹಾರ ವಸತಿಗಳಿಲ್ಲದೆ ದಿನಗಟ್ಟಲೆ ಅಲೆಯುತ್ತಿದ್ದರೂ ಗುರುವು ಭಗವಂತನಿಗೆ ಧನ್ಯವಾದ ಹೇಳುತ್ತಿದ್ದಾನೆ! ಅವರು ಅನುಕರಿಸಲು ಒಪ್ಪಲಿಲ್ಲ.

ಶಿಷ್ಯರು ಸಂತನನ್ನು ಕೇಳಿದರು, 'ಮೂರು
ದಿನಗಳಾದರೂ ಆಹಾರ, ಆಶ್ರಯಗಳು
ದೊರಕದಿದ್ದಾಗ ದೇವರಿಗೆ ನಾವೇಕೆ ಧನ್ಯವಾದ
ಹೇಳಬೇಕು?' ಎಂದು.

ಸಂತನು, 'ಕಳೆದ ಮೂವತ್ತು ವರ್ಷ ನಿಮ್ಮ ಆಹಾರ,
ವಸತಿಗಳೆಲ್ಲವನ್ನೂ ನೋಡಿಕೊಂಡಿರುವನಲ್ಲಾ,
ಅದಕ್ಕಾಗಿ ಧನ್ಯವಾದ ಹೇಳಬೇಡವೇ?' ಎಂದು
ಉತ್ತರಿಸಿದನು.

ಪ್ರಾರ್ಥನೆ ಎಂಬುದು ವಿಶ್ವಶಕ್ತಿಯು ನಮ್ಮ
ಮೇಲೆ ನಿರಂತರವಾಗಿ ಸುರಿಸುತ್ತಿರುವ ಕೃಪೆಗಾಗಿ
ಸಲ್ಲಿಸುವ ಕೃತಜ್ಞತೆಯೇ.

ಫಲಾಕಾಂಕ್ಷೆಯೇ ತಪ್ಪಿತಸ್ಥತೆ - ಅದನ್ನು ತೊರೆಯಿರಿ!

ಒಂದೆಡೆ ಕುಳಿತುಕೊಂಡು ಎರಡು ಪಟ್ಟಿಗಳನ್ನು
ಮಾಡಿರಿ. ಒಂದು, ನಿಮ್ಮ ಬಳಿ ಇರುವುದರದ್ದು,
ಮತ್ತೊಂದು ನಿಮ್ಮ ಬಳಿ ಇಲ್ಲದ್ದು. ಮೊದಲನೆಯ
ಪಟ್ಟಿಯಲ್ಲಿ ನಿಮ್ಮ ಬಳಿ ಇರುವ ಸಕಲವೂ
ಸೇರಿರಬೇಕು. ಕೈ, ಕಾಲು, ಕಣ್ಣು, ಮೂಗು ಎಲ್ಲವೂ.
ಏಕೆಂದರೆ, ಅವಿಲ್ಲದೆ
ಇರುವ ವಿಕಲಾಂಗರೂ
ಇದ್ದಾರೆ. ಮೊದಲು
ನಿಮ್ಮ ಎಲ್ಲ ದೈಹಿಕ,
ಮಾನಸಿಕವಾದ ಸಹಜ ಶಕ್ತಿಗಳನ್ನೂ ಪಟ್ಟಿಮಾಡಿ,
ನಂತರ ಪ್ರಾಪಂಚಿಕ ದ್ರವ್ಯಗಳ ಬಗ್ಗೆಯೂ ಬರೆಯಿರಿ.
ನೀವು ಪ್ರಾಮಾಣಿಕವಾಗಿ ಬರೆದುದೇ ಆದರೆ,
ಮೊದಲನೆಯ ಪಟ್ಟಿಯನ್ನು ಮುಗಿಸಲಾರಿರಿ! ಇದೇ
ಸತ್ಯ. ಮೊದಲನೆಯ ಪಟ್ಟಿಯು ಅಂತ್ಯವಿಲ್ಲದಷ್ಟಿದೆ
ಎನಿಸಿದರೆ, ಕೃತಜ್ಞತೆಯು ನಿಮ್ಮಲ್ಲಿ
ಅರಳಲಾರಂಭಿಸಿದೆ ಎಂದರ್ಥ.

ಸಮಸ್ಯೆಯೆಂದರೆ, ನಮ್ಮಲ್ಲಿ ಸತತವಾಗಿ ಫಲಾಕಾಂಕ್ಷೆಯು ಬೇರೂರಿಕೊಂಡಿದೆ. ಹಾಗಾಗಿಯೇ ಕೃತಜ್ಞತೆಯು ಸುಲಭವಲ್ಲ. ಫಲಾಕಾಂಕ್ಷೆಯೊಂದಿಗೆ ಕಾರ್ಯಗಳನ್ನು ಮಾಡುವುದು ಬೆಂಕಿಯನ್ನು ಆರಿಸಲು ತುಪ್ಪ ಸುರಿದಂತೆ! ತುಪ್ಪವನ್ನು ಸುರಿದು ಬೆಂಕಿಯನ್ನು ಆರಿಸಲು ಸಾಧ್ಯವೆ? ಅಸಾಧ್ಯ! ಹಾಗೆಯೇ, ನಿಮ್ಮ ಕಾರ್ಯಗಳು ಫಲಾಕಾಂಕ್ಷೆಯಲ್ಲಿ ಬೇರೂರಿದಾಗ, ಸಂತೃಪ್ತಿ ಸಾಧ್ಯವಾಗದು. ನಿಮ್ಮ ಇಂದ್ರಿಯಗಳು ಶ್ರಮಿಸುತ್ತವೆ, ಅಷ್ಟೆ.

ನೀವು ಕೃತಜ್ಞತೆ ಅಥವಾ ಫಲಾಕಾಂಕ್ಷೆ
ಯಾವುದಾದರೂ ಒಂದರಲ್ಲಿ ನೆಲೆಯಾಗಿರಬಹುದು.
ಎರಡರಲ್ಲೂ ಒಂದೇ ಸಮಯದಲ್ಲಿ ನೆಲೆಸಲಾಗದು.
ಫಲಾಕಾಂಕ್ಷೆಯಿದ್ದಾಗ ವಸ್ತುಗಳನ್ನು
ವಶಪಡಿಸಿಕೊಳ್ಳುವ ಆಸೆಯಿರುತ್ತದೆ. ನೀವು
ಮಾಲೀಕರಾಗುತ್ತೀರಿ. ಕೃತಜ್ಞತೆಯಿದ್ದಾಗ ನೀವು
ಆಸ್ವಾದಿಸುವವರಾಗುತ್ತೀರಿ. ನೀವು ಮಾಲೀಕರಾದಾಗ
ನಿಮ್ಮ ಸ್ವಂತವಾದ ಕೆಲವು ವಸ್ತುಗಳನ್ನು ಮಾತ್ರ

ಪ್ರಾರ್ಥನೆಯು
ಅಸ್ತಿತ್ವದ
ಕೃಪೆಯ ಒಂದು
ಕೊಂಡಾಟ.

ಆಸ್ವಾದಿಸುತ್ತೀರಿ. ನೀವು ಕೇವಲ
ಆಸ್ವಾದಿಸುವವರಾದರೆ ಇಡೀ ಜಗತ್ತಿನಲ್ಲಿರುವ
ಪ್ರತಿಯೊಂದನ್ನೂ ಆಸ್ವಾದಿಸಬಲ್ಲಿರಿ.
ಸ್ವಂತವಾಗಿಸಿಕೊಳ್ಳಲು ಹೊರಟರೆ, ಅದಕ್ಕೆ ಕೊನೆಯೇ
ಇರದು. ಆಸ್ವಾದಿಸುತ್ತಿದ್ದರೆ, ಎಲ್ಲವೂ ತುಂಬಿ
ತುಳುಕುವಂತೆ! ಅದೇ ವ್ಯತ್ಯಾಸ.

ಒಂದು ಸಣ್ಣ ಕಥೆ:

ಒಂದು ಗ್ರಾಮದಲ್ಲಿ ಕಾವಲಿನವನು ಆಗಿಂದಾಗ್ಗೆ
ತನ್ನ ಸೀಟಿ ಊದುತ್ತಾ ರಾತ್ರಿ ಕಾವಲು
ಕಾಯುತ್ತಿದ್ದನು.

ಅವನು ಮಣ್ಣಿನ ಹುಕ್ಕಾ ಸೇದುತ್ತಿದ್ದನು. ಅದರಲ್ಲಿ ತಂಬಾಕು ತುಂಬಿಸಿ ಬೆಂಕಿಪೊಟ್ಟಣಕ್ಕಾಗಿ ಹುಡುಕಿದನು. ಅವನ ಬಳಿ ಇರಲಿಲ್ಲ.

ಅವನು ಹತ್ತಿರದಲ್ಲಿದ್ದ ಮುದುಕಿಯ ಗುಡಿಸಲಿಗೆ
ಹೋಗಿ, ಆಕೆಯ ಒಲೆಯಿಂದ ಕೆಂಡ ಕೊಡಲು
ಕೇಳಿದನು. ಮುದುಕಿಯು ಮೂರು ದಿನಗಳಿಂದಲೂ
ತಾನು ಒಲೆ ಹಚ್ಚಲೇ ಇಲ್ಲವೆಂದೂ, ದೇವಸ್ಥಾನದ
ಪ್ರಸಾದದಿಂದ ಜೀವಿಸುತ್ತಿದ್ದಾಳೆಂದೂ ಹೇಳಿದಳು.

ಆತನು ಅನೇಕ ಸ್ಥಳಗಳಲ್ಲಿ ಕೇಳಿದರೂ
ಪ್ರಯೋಜನವಾಗಲಿಲ್ಲ. ಕಡೆಗೆ ಗ್ರಾಮದ ಮುಖ್ಯಸ್ಥನ
ಮನೆಗೆ ಹೋಗಿ ಆತನ ಸೇವಕಿಯರನ್ನು ಹುಕ್ಕಾ
ಹತ್ತಿಸಿಕೊಡುವಂತೆ ಕೇಳಿದನು.

ಅಲ್ಲಿದ್ದ ಹುಡುಗಿಯೊಬ್ಬಳು, 'ಹುಕ್ಕಾ ಹತ್ತಿಸಲು
ಬೆಂಕಿ ಬೇಕೇ? ನಿನ್ನ ಕೈಯಲ್ಲಿರುವ ಲಾಟೀನಿನಿಂದ
ಹತ್ತಿಸಬಹುದಲ್ಲ!' ಎಂದಳು.

ಕಾವಲಿನವನು ತನ್ನ ಕಣ್ಣನ್ನೇ ನಂಬಲಾರದಾದನು.
ಆತನು ತನ್ನ ಕೈಯಲ್ಲೇ ಲಾಟೀನು ಹಿಡಿದುಕೊಂಡು
ಬೆಂಕಿ ಪೊಟ್ಟಣವನ್ನು ಹುಡುಕುತ್ತಿದ್ದನು!

ನಮಗೆ ಬೇಕಾದುದು ಯಾವಾಗಲೂ ನಮ್ಮಿಂದ
ಹೊರಗೆ ಸಿಗುವುದಾಗಿ ನಂಬಿದಾಗ ಆ
ಕಾವಲುಗಾರನಂತೆಯೇ ನಾವೂ ನಿರಂತರ
ಹುಡುಕಾಟದಲ್ಲಿರುತ್ತೇವೆ ಹಾಗೂ ಹುಡುಕಾಟವನ್ನು
ಮುಂದುವರೆಸುತ್ತೇವೆ. ವಿಶ್ವಶಕ್ತಿಯು ನಮ್ಮ
ಅಗತ್ಯಗಳೆಲ್ಲವನ್ನೂ ನಿರಂತರವಾಗಿ ಪೂರೈಸುತ್ತಿದೆ
ಎಂದು ನಂಬಿದಾಗ, ಎಲ್ಲವೂ ಯಾವಾಗಲೂ
ನಮ್ಮೊಳಗೇ ಸಿಗುತ್ತದೆ.

ಕೃತಜ್ಞತೆಯಿಂದ ನಿಮ್ಮ ಹಾವ -

ಭಾವಗಳೇ ಬದಲಾಗಬಲ್ಲದು.

ನಾವು ಒಂದೇ ಸಮನೆ ಫಲಾಕಾಂಕ್ಷೆಯಿಂದ
ಕೆಲಸ ಮಾಡುವಾಗ, ನಮ್ಮ ಹಾವ-ಭಾವಗಳಲ್ಲಿ
ಸೂಕ್ಷ್ಮವಾದ ಹಿಂಸಾಪ್ರವೃತ್ತಿ ಹೊಂದಿರುತ್ತೇವೆ;
ಬೇಕೆಂದು ಮಾಡುವ ಹಿಂಸೆಯಲ್ಲ, ಅಂತರ್ಗತವಾದ
ಹಿಂಸೆ. ನಮ್ಮ ಹಾವ-ಭಾವಗಳ ಬಗ್ಗೆ ಸ್ವಲ್ಪ
ಜಾಗರೂಕರಾದರೆ, ಇದನ್ನು ಗುರುತಿಸಬಹುದು.

ನೀವು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ,
ಫೋನನ್ನು ಬಳಸುವಾಗ, ಅದನ್ನು ಕೆಳಗಿಡುವಾಗ,
ನಡೆದಾಡುವಾಗ . . . ಎಲ್ಲ ಸಮಯದಲ್ಲೂ ನಿಮ್ಮನ್ನು
ನೀವೇ ಗುರುತಿಸಿಕೊಳ್ಳಿರಿ. ಎಲ್ಲದರಲ್ಲೂ ಒಂದು
ಸೂಕ್ಷ್ಮ ಒರಟುತನ ಸೇರಿರುವುದನ್ನು ಕಾಣುವಿರಿ.

ಕೃತಜ್ಞತೆಯಿಂದ ನಿಮ್ಮ ಇಡೀ ಹಾವಭಾವಗಳೇ ಬದಲಾಯಿಸುತ್ತವೆ. ನೀವು ಗಾಢವಾದ

ಕೃತಜ್ಞತೆಯನ್ನು ಅನುಭವಿಸಿದಂತೆಲ್ಲ, ಪರಿಸ್ಥಿತಿಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆಗಳು ಬದಲಾಗುತ್ತವೆ. ವಿಶ್ವಶಕ್ತಿಯೊಂದಿಗೆ ಸ್ಪಂದಿಸತೊಡಗುತ್ತೀರಿ. ಆ ಸ್ಪಂದನದ ಹೊಳೆಯೊಂದಿಗೆ ನಿಮ್ಮ ಶರೀರವೂ ಒನಪು ವಯ್ಯಾರಗಳಿಂದ ತೇಲಿ ಸಾಗುತ್ತದೆ. ಈ ಒನಪಿನಿಂದ ನಿಮ್ಮೆಲ್ಲಾ ಕಾರ್ಯಗಳೂ ಹುಟ್ಟಿಕೊಳ್ಳುತ್ತವೆ. ಹಿಂಸೆಯಿರುವುದಿಲ್ಲ, ಕೇವಲ ಸಂತಸವು ಉಕ್ಕುತ್ತಿರುತ್ತದೆ. ಆಗ ನೀವೇನು ಮಾಡಿದರೂ, ಅದು ಜೀವನವನ್ನು ಹೆಚ್ಚು ಮಧುರವಾಗಿಸುತ್ತದೆ.

ಮನಸ್ಸಿನ ತೊಡಕುಗಳಿಂದ ಅನ್‌ಕ್ಲಚ್ ಆಗಬಹುದು

ನಮ್ಮನ್ನು ಪ್ರೇರಿಸುವ ಮೂಲಭೂತ ಭಾವನೆಗಳ ಬಗ್ಗೆ ಈವರೆಗೂ ನೋಡಿದ್ದೇವೆ. ಈ ಭಾವನೆಗಳನ್ನು ನಕಾರಾತ್ಮಕವಾಗಿ ವ್ಯಕ್ತಪಡಿಸಿದಾಗ, ನಮ್ಮ ಅಂತಃಶಕ್ತಿಯನ್ನು ನಾಶಪಡಿಸಿಕೊಳ್ಳುತ್ತೇವೆ ಹಾಗೂ ಬಾಹ್ಯದಿಂದ ಬರುವ ಶಕ್ತಿಯನ್ನು ತಡೆಯುತ್ತೇವೆ. ಹಿಂದಿನ ಪ್ರತಿಯೊಂದು ಅಧ್ಯಾಯದಲ್ಲಿಯೂ ನೀಡಿರುವ ಧ್ಯಾನತಂತ್ರಗಳನ್ನು ನೀವು ಅಭ್ಯಾಸ ಮಾಡಿದ್ದಲ್ಲಿ, ಈ ನಕಾರಾತ್ಮಕ ಶಕ್ತಿಗಳನ್ನು ಹೇಗೆ ಜಯಿಸಬೇಕೆಂದು ಹಾಗೂ ಅಡೆತಡೆಗಳನ್ನು ಹೇಗೆ ನಿವಾರಿಸಬೇಕೆಂದು ತಿಳಿದಿರುತ್ತೀರಿ.

ಈಗ, ಇತರ ಕೆಲವು ವಿಷಯಗಳನ್ನು ಪರಿಶೀಲಿಸಿ, ಅವನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ, ನಮ್ಮ ಬದುಕಿನ ರೀತಿಯನ್ನೇ ಬದಲಾಯಿಸಿಕೊಳ್ಳಬಹುದು. ಈ ತಿಳಿವಳಿಕೆಗಳು ನಮ್ಮನ್ನು ಪರಿವರ್ತಿಸಲು ಸಾಧ್ಯ.

ಬಹಳ ಸರಳವಾದ ವಿಷಯದಿಂದ
ಆರಂಭಿಸೋಣ. ನಾವೆಲ್ಲರೂ ಬಹಳ
ಸಾಧಾರಣವಾಗಿ ತೆಗೆದುಕೊಂಡ ವಿಷಯವಾದ ನಮ್ಮ
ಮನಸ್ಸು ನಿಜವಾಗಿ ಹೇಗೆ ಕೆಲಸಮಾಡುತ್ತದೆಯೆಂದು
ನೋಡೋಣ.

ಹತ್ತು ನಿಮಿಷಗಳ ಪ್ರಯೋಗ

ಈ ಒಂದು ಸರಳವಾದ ಪ್ರಯೋಗವನ್ನು ಕೇವಲ ಹತ್ತು ನಿಮಿಷಗಳ ಕಾಲ ಮಾಡಲು ಪ್ರಯತ್ನಿಸಿರಿ.

ಒಂದು ಕಾಗದ ಹಾಗೂ ಲೇಖನಿಯನ್ನು
ತೆಗೆದುಕೊಳ್ಳಿರಿ. ಒಬ್ಬರೇ ಕುಳಿತುಕೊಂಡು ನಿಮ್ಮ
ಮನಸ್ಸಿನಲ್ಲಿ ಏನೇ ಆಲೋಚನೆ ಬಂದರೂ ಅದನ್ನು
ಬರೆಯಿರಿ - ನಿಮ್ಮ ಮನಸ್ಸಿಗೆ ಒಂದು ಲಿಪ್ಯಂತರ
ತಂತ್ರಾಂಶ (ಟ್ರಾನ್ಸ್‌ಕ್ರೈಬ್ ಮಾಡುವ
ಸಾಫ್ಟ್‌ವೇರ್)ವನ್ನು ಅಳವಡಿಸಿದಂತೆ; ನೀವು
ಯೋಚಿಸುವುದನ್ನು ನಿಖರವಾಗಿ ಬರೆಯಿರಿ. ಯಾವ
ಆಲೋಚನೆಯನ್ನೂ ವಿಶ್ಲೇಷಿಸಬೇಡಿ ಅಥವಾ
ತಡೆಗಟ್ಟಬೇಡಿ. ಈ ಪ್ರಯೋಗವು ನಿಮಗಾಗಿ ಮಾತ್ರ.
ನೀವು ಬರೆದಿರುವುದನ್ನು ಬೇರೆ ಯಾರೂ
ನೋಡುವುದಿಲ್ಲ. ಒಂದು ಧ್ವನಿಮುದ್ರಿತವಾದ
ಭಾಷಣಕ್ಕೆ ಒಂದು ಟ್ರಾನ್ಸ್‌ಕ್ರೈಬಿಂಗ್
ಸಾಫ್ಟ್‌ವೇರ್‌ನ್ನು ಅಳವಡಿಸಿದಾಗ ಅದು ಹೇಗೆ
ಎಲ್ಲವನ್ನೂ ಲಿಪ್ಯಂತರ ಮಾಡುತ್ತದೆಯೋ
ಹಾಗೆಯೇ, ನಿಮ್ಮ ಮನಸ್ಸಿನಲ್ಲಿ ಬರುವಂತೆಯೇ
ಎಲ್ಲವನ್ನೂ ಅಕ್ಷರಶಃ ಲಿಪ್ಯಂತರ ಮಾಡಿರಿ. ಹತ್ತು

ನಿಮಿಷಗಳ ನಂತರ ನೀವು ಬರೆದಿರುವುದನ್ನು ಕೇವಲ ಒಮ್ಮೆ ಓದಿರಿ. ಆಗ ನೀವೇ ಬೆರಗಾಗುತ್ತೀರಿ! ನಿಮ್ಮ ಮಾನಸ್ಸಿನಲ್ಲಿ ಆಲೋಚನೆಗಳು ಉಂಟಾಗುವ ರೀತಿಯನ್ನು ನೋಡಿದರೆ ಅದರಲ್ಲಿ ಯಾವ ತರ್ಕವೂ ಇಲ್ಲದಿರುವುದನ್ನು ಸ್ಪಷ್ಟವಾಗಿ ಕಾಣುತ್ತೀರಿ!

ಉದಾಹರಣೆಗೆ, ಬೀದಿಯಲ್ಲಿ ಒಂದು ನಾಯಿಯನ್ನು ನೋಡುತ್ತೀರಿ. ಕೂಡಲೆ ನೀವು ಚಿಕ್ಕವರಾಗಿದ್ದಾಗ ನೀವು ನೋಡಿ ಹೆದರಿದ್ದ ನಾಯಿಯ ನೆನಪಾಗುತ್ತದೆ ಅಥವಾ ನೀವು ಚಿಕ್ಕವರಾಗಿದ್ದಾಗ ಆಟವಾಡಿದ್ದ ನಾಯಿಯ ನೆನಪಾಗುತ್ತದೆ. ಮತ್ತೊಂದು ಆಲೋಚನೆಯು ನಿಮ್ಮ ಬಾಲ್ಯವನ್ನು ಕುರಿತದ್ದಾಗಿರಬಹುದು. ಮೂರನೆಯದು, ನಿಮ್ಮ ಶಾಲೆಯ ಶಿಕ್ಷಕರ ಬಗ್ಗೆ ಅಥವಾ ಕುಳಿತಿದ್ದ ಕೊಠಡಿಯ ಬಗ್ಗೆ ಆಗಿರಬಹುದು. ನಾಲ್ಕನೆಯದು ನಿಮ್ಮ ಶಿಕ್ಷಕರು ವಾಸವಾಗಿದ್ದ ಮನೆಯನ್ನು ಕುರಿತದ್ದಾಗಿರಬಹುದು.

ನೀವು ಇತ್ತೀಚೆಗೆ ರಸ್ತೆಯಲ್ಲಿ ನೋಡಿದ
ನಾಯಿಗೂ, ನಿಮ್ಮ ಶಾಲೆಯ ಶಿಕ್ಷಕರಿಗೂ, ಯಾವ
ತರ್ಕಬದ್ಧವಾದ ಸಂಬಂಧವೂ ಇಲ್ಲ. ಆದರೂ,
ಕೆಲವೇ ಕ್ಷಣಗಳಲ್ಲಿ, ಬೀದಿಯಲ್ಲಿ ನೋಡಿದ
ನಾಯಿಯಿಂದ, ನಿಮ್ಮ ಶಾಲೆಯ ಶಿಕ್ಷಕರಿಗೆ, ನಿಮ್ಮ
ಆಲೋಚನೆಗಳು ಸುಮ್ಮನೆ ಜಿಗಿದು ಹೋದುವು.
ನಿಮ್ಮ ಆಲೋಚನೆಗಳು ಸುಮ್ಮನೆ ಒಂದರಿಂದ
ಮತ್ತೊಂದಕ್ಕೆ ಸಾಗುತ್ತಿರುವುದನ್ನು ನೋಡಬಹುದು.
ಇದನ್ನು 'ಆಲೋಚಿಸುವುದು' ಎಂದೂ
ಹೇಳಲಾಗುವುದಿಲ್ಲ. ಅದು ಬರಿಯ 'ಸಂಬಂಧ
ಕಲ್ಪಿಸುವಿಕೆ' ಅಷ್ಟೇ. ನಾಯಿಯನ್ನು ನಿಮ್ಮ
ಬಾಲ್ಯದೊಂದಿಗೆ ಜೊತೆಗೂಡಿಸಿದಿರಿ, ನಿಮ್ಮ
ಬಾಲ್ಯವನ್ನು ಶಾಲೆಯ ಶಿಕ್ಷಕರೊಂದಿಗೆ, ಇತ್ಯಾದಿ.

ವಾಸ್ತವವಾಗಿ, ಈ ಪ್ರಯೋಗವನ್ನು ಒಮ್ಮೆ ಮಾಡಿದರೆ, ಅದರಿಂದ ದೊರೆಯುವ ತಿಳಿವಳಿಕೆಯೇ, ನೀವು ನಿಮ್ಮ ಬಗ್ಗೆ ಆಲೋಚಿಸುವ ರೀತಿಯನ್ನು ಹಾಗೂ ನಿಮ್ಮೊಂದಿಗೆ ಮತ್ತು ಇತರರೊಂದಿಗೆ ವರ್ತಿಸುವ ರೀತಿಯನ್ನು ಪರಿವರ್ತಿಸುತ್ತದೆ. ನಿಮ್ಮ ಇಡೀ ಜೀವನವೇ ಪರಿವರ್ತಿಸಲ್ಪಡುತ್ತದೆ.

ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ?

ನಾವು ಹೇಗೆ ಆಲೋಚನೆಗಳನ್ನು ಸೃಷ್ಟಿಸುತ್ತೇವೆ ಮತ್ತು ಅವಕ್ಕೆ ಅರ್ಥವನ್ನು ಹೇಗೆ ಕೊಡುತ್ತೇವೆ?

ಜೀವನವನ್ನು ಹೇಗೆ ಅನುಭವಿಸುತ್ತೇವೆ?

ಮನಸ್ಸಿನ ಸ್ವಭಾವ

ಮಾನಸ್ಸಿನಲ್ಲಿ ಆಲೋಚನೆಗಳು ಹೇಗೆ
ಹಾದುಹೋಗುತ್ತವೆ ಮತ್ತು ನೀವು ಹೇಗೆ
ಒಂದಕ್ಕೊಂದು ಪರಸ್ಪರ ಸಂಬಂಧ ಕಲ್ಪಿಸುತ್ತೀರ
ಎಂಬುದನ್ನು ತಿಳಿಸಲು ಒಂದು ಸರಳವಾದ
ರೇಖಾಚಿತ್ರವನ್ನು ನೀಡುತ್ತೇನೆ.

ನಿಮ್ಮ ಮಾನಸ್ಸಿನ ಪ್ರತಿಯೊಂದು
ಆಲೋಚನೆಯನ್ನೂ ಒಂದು ಚೌಕ ಅಥವಾ
ಆಯಾಕಾರದಂತೆ ಇಲ್ಲಿ ತೋರಿಸಲಾಗಿದೆ.
ಪ್ರತಿಯೊಂದೂ ಬೇರೆ ಬೇರೆಯ ಆಕಾರ, ಗಾತ್ರ
ಹಾಗೂ ಬಣ್ಣದ್ದಾಗಿದೆ. ಬೇರೆ ಬೇರೆಯ
ಆಲೋಚನೆಗಳು ನಿಮ್ಮಲ್ಲಿ ಸತತವಾಗಿ
ಹರಿಯುತ್ತಿರುತ್ತದೆ. ಒಂದು ಆಲೋಚನೆಯು
ನೋವಿಗೆ ಅಥವಾ ನೋವಿನ ಅನುಭವಕ್ಕೆ

ಸಂಬಂಧಿಸಿರಬಹುದು. ಇನ್ನೊಂದು ಆಲೋಚನೆಯು
ಸಂತೋಷಕ್ಕೆ ಅಥವಾ ಸಂತೋಷದ ಅನುಭವಕ್ಕೆ
ಸಂಬಂಧಿಸಿರಬಹುದು. ಮತ್ತೊಂದು ಆಲೋಚನೆಯು
ಸಂತೋಷಕ್ಕೆ ಸಂಬಂಧಿಸಿರಬಹುದು ಆದರೆ ನೀವು
ಅದನ್ನು ನೋವೆಂದುಕೊಳ್ಳಬಹುದು. ಇದನ್ನು
ರೇಖಾಚಿತ್ರದಲ್ಲಿ 'ಸಂ.ನೊ' ಎಂದು
ತೋರಿಸಲಾಗಿದೆ, ಎಂದರೆ ಸಂತೋಷದ ಅನುಭವ,
ನೋವಿನ ಅನಿಸಿಕೆ. ಅದೇ ರೀತಿ ನಿಮಗೆ ನೋವಿಗೆ
ಸಂಬಂಧಪಟ್ಟ ಅನುಭವದ ಆಲೋಚನೆ
ಉಂಟಾಗಿರಬಹುದು. ಆದರೆ ನೀವು ಅದನ್ನು
ಸಂತೋಷವೆಂದುಕೊಳ್ಳುತ್ತೀರಿ. ಇದನ್ನು 'ನೊ.ಸಂ'
ಎಂದು ತೋರಿಸಲಾಗಿದೆ - ನೋವಿನ ಅನುಭವ,
ಸಂತೋಷದ ಅನಿಸಿಕೆ.

ಸಾಮಾನ್ಯವಾಗಿ ನಿಮ್ಮ ಎಲ್ಲಾ ಆಲೋಚನೆಗಳೂ
ಭೂತಕಾಲ ಅಥವಾ ಭವಿಷ್ಯತ್ ಕಾಲಕ್ಕೆ
ಸಂಬಂಧಿಸಿರುತ್ತವೆ. ವರ್ತಮಾನ ಕಾಲದ
ಆಲೋಚನೆಗಳು ಇರುವುದಿಲ್ಲ. ವರ್ತಮಾನದಲ್ಲಿ
ಪ್ರಜ್ಞೆ ಮಾತ್ರ ಇರಲು ಸಾಧ್ಯ, ಆಲೋಚನೆಗಳಲ್ಲ.
ನಿಮಗೆ ಹಿಂದೆ ಆದ ಸಂತೋಷದ ಅನುಭವಗಳು
ಮತ್ತು ಮುಂದೆಯೂ ಅವುಗಳು ಬೇಕೆಂಬ
ಬಯಕೆಗೋ ಅಥವಾ ಹಿಂದೆ ಆದ ನೋವಿನ
ಅನುಭವಗಳು ಮತ್ತು
ಅವು ಮರುಕಳಿಸ-
ಬಾರದೆಂಬ ಇಚ್ಛೆಗೋ,
ಆಲೋಚನೆಗಳು
ಸಂಬಂಧಿಸಿರುತ್ತವೆ.

ಒಂದು
ಗಂಭೀರವಾದ
ಸಮಸ್ಯೆಯನ್ನು ಎದುರಿಸುವ ಸಮಯದಲ್ಲೂ ಸಹ
ಇದ್ದಕ್ಕಿದ್ದಂತೆ ನಿಮ್ಮಲ್ಲಿ ಒಂದು ಸಕಾರಾತ್ಮಕ
ಆಲೋಚನೆ ಉಂಟಾಗಬಹುದು. ಸಂತೋಷದ
ಉತ್ತುಂಗದಲ್ಲಿದ್ದಾಗಲೂ ಯಾವುದೋ
ಅಸಂಬದ್ಧವಾದ ನಕಾರಾತ್ಮಕ ಆಲೋಚನೆ
ಉಂಟಾಗಬಹುದು. ಪ್ರತಿಯೊಂದು ಆಲೋಚನೆಯೂ
ಸಂಪೂರ್ಣವಾಗಿ ಸ್ವತಂತ್ರವಾಗಿದ್ದು, ಹಿಂದಿನ
ಆಲೋಚನೆಗೆ ಸಂಬಂಧಿಸಿರುವುದೇ ಇಲ್ಲ.
ಆದ್ದರಿಂದಲೇ ನಿಮಗೆ ದುಃಖದ ಆಲೋಚನೆಗಳ
ಮಧ್ಯದಲ್ಲೂ ಒಂದು ಸಂತೋಷದ ಆಲೋಚನೆ
ಉಂಟಾಗಲು ಸಾಧ್ಯ ಹಾಗೂ ಸಂತೋಷದ
ಆಲೋಚನೆಗಳ ಮಧ್ಯೆ ಒಂದು ನೋವಿನ
ಆಲೋಚನೆ ಉಂಟಾಗಲೂ ಸಾಧ್ಯ.

ಯಾವ ಎರಡೂ ಆಲೋಚನೆಗಳೂ
ತರ್ಕಬದ್ಧವಾಗಿ ಸಂಬಂಧಿಸಿಲ್ಲವೆಂದು ತಿಳಿಯಿರಿ.
ಯಾವ ಒಂದು ಆಲೋಚನೆಯೂ ಮತ್ತೊಂದು
ಆಲೋಚನೆಯ ಸೃಷ್ಟಿಗೆ ಕಾರಣವಲ್ಲ. ಅವೆಲ್ಲಾ
ಗೊತ್ತುಗುರಿಯಿಲ್ಲದೆ ಸ್ವತಂತ್ರವಾಗಿ ಹಾಗೂ
ತರ್ಕವಿಲ್ಲದೆಯೇ ಉಂಟಾಗುತ್ತವೆ.

ಈ ಗೊತ್ತುಗುರಿಯಿಲ್ಲದ ಆಲೋಚನಾಪ್ರವಾಹದಿಂದ 'ಅನಾಕ್ಲಚ್' ಎಂದರೆ

diagram showing thought patterns connected to joy and pain

ಪ್ರತಿಯೊಂದು
ಆಲೋಚನೆಯೂ
ಸಂಪೂರ್ಣವಾಗಿ
ಸ್ವತಂತ್ರವಾಗಿದ್ದು,
ಹಿಂದಿನ
ಆಲೋಚನೆಗೆ
ಸಂಬಂಧಿಸಿರುವುದೇ
ಇಲ್ಲ.

ಬಿಡುಗಡೆ ಆಗುವುದು ಹೇಗೆ? 'ಅನ್‌ಕ್ಲಚ್' ಎಂಬ ಪದವನ್ನು ನಾವು ಪದೇ ಪದೇ ಬಳಸುತ್ತಿರುತ್ತೇವೆ. 'ಅನ್‌ಕ್ಲಚ್' ಎಂಬ ಪದದ ಅರ್ಥವಿವರಣೆಯನ್ನು ಸ್ಪಷ್ಟವಾಗಿ ತಿಳಿಯೋಣ. ಒಂದು ಕಾರನ್ನು ಚಾಲನೆ ಮಾಡುವಾಗ ಗೇರುಗಳನ್ನು ಬದಲಾಯಿಸುತ್ತಿರುತ್ತೇವೆ. ಮೊದಲನೆಯ ಗೇರಿನಿಂದ ಎರಡನೆಯದಕ್ಕೆ, ಎರಡನೆಯ ಗೇರಿನಿಂದ ಮೂರನೆಯದಕ್ಕೆ ಅಥವಾ ಯಾವುದೇ ಗೇರನ್ನು ಬದಲಾಯಿಸುವಾಗಲೂ ಪ್ರತಿಬಾರಿಯೂ ನ್ಯೂಟ್ರಲ್‌ಗೆ ಬರಬೇಕಾಗುತ್ತದೆ. ಕ್ಲಚ್ಚನ್ನು ಸಂಪೂರ್ಣವಾಗಿ ಅದುಮಿ ಅಥವಾ ಅನ್‌ಕ್ಲಚ್ ಮಾಡಿ ನ್ಯೂಟ್ರಲ್‌ಗೆ ಬಂದ ನಂತರವೇ ಮುಂದಿನ ಗೇರನ್ನು ಹಾಕಬಹುದು. ಅಲ್ಲವೆ? ಅದೇ ರೀತಿ ನಮ್ಮ ಮನಸ್ಸಿನಲ್ಲಿ ಎರಡು ಆಲೋಚನೆಗಳ ನಡುವೆ ಒಂದು ತಟಸ್ಥವಾದ ವಲಯವಿರುತ್ತದೆ. ಎರಡು ಆಲೋಚನೆಗಳ ನಡುವಿನ ಅಂತರದ ತಟಸ್ಥವಾದ ವಲಯವೇ ಶಾಂತಿ ಹಾಗೂ ಪರಮಾನಂದ. ಆಲೋಚನೆಗಳನ್ನು ಹಿಡಿಯದೆ ಇದ್ದಾಗ, ಭೂತಕಾಲ ಹಾಗೂ ಭವಿಷ್ಯತ್ ಕಾಲಗಳಿಗೆ ಅವನ್ನು ಸಂಬಂಧಿಸದೇ ಇದ್ದಾಗ, ನಾವು 'ಅನ್‌ಕ್ಲಚ್' ಆಗುತ್ತೇವೆ. ನಮ್ಮ ಆಲೋಚನೆಗಳಿಂದ 'ಅನ್‌ಕ್ಲಚ್' ಆದಾಗ, ಆಲೋಚನೆಗಳ ನಡುವಿನ ತಟಸ್ಥ ವಲಯದ ಅರಿವನ್ನು ಹೆಚ್ಚಾಗಿ ಹೊಂದುತ್ತೇವೆ. ನಾವು ಆಲೋಚನೆಗಳ ಪ್ರವಾಹದಿಂದ 'ಅನ್‌ಕ್ಲಚ್' ಆದಾಗ, ಆಲೋಚನೆಗಳ ನಡುವಿನ ಅಂತರವು ತಾನಾಗಿಯೇ ವಿಸ್ತರಿಸುತ್ತದೆ. ನಾವು ತಟಸ್ಥ ವಲಯದಲ್ಲಿ ಹೆಚ್ಚುಕಾಲ ನೆಲೆಸಿರುತ್ತೇವೆ ಹಾಗೂ ಹೆಚ್ಚುಹೆಚ್ಚು ಶಾಂತಿ ಹಾಗೂ ಆನಂದವನ್ನು ಅನುಭವಿಸುತ್ತೇವೆ.