ಅರಿವು
This text was machine-transcribed from the printed book and may contain errors. Select the words and choose “Report a mistake”.
ಅಂತಿಮವಾದ ಕೀಲಿಕೈ
ನೀವು ಇದ್ದಕ್ಕಿದ್ದಂತೆ ಅರಿವನ್ನು ಹೊಂದಿದರೆ, ಯಾವುದೇ ಆಲೋಚನೆಯು ನಿಮ್ಮ ಮುಂದೆ ಹಾದುಹೋದರೂ ಆ ಕ್ಷಣವೇ ಅದೇ ನಿಮ್ಮ ಜೀವನವಾಗುತ್ತದೆ. ಅದನ್ನು ಪೂರೈಸಲು ಅಥವಾ ಅದರಿಂದ ತಪ್ಪಿಸಿಕೊಳ್ಳಲು ಆ ಆಲೋಚನೆಗೆ ಗಮನ ಕೊಡಲಾರಂಭಿಸುತ್ತೀರಿ. ಅದು ಒಂದು ಪ್ರೊಜೆಕ್ಟರ್ (ಪ್ರಕ್ಷೇಪಕ – ಬೆಳಕಿನ ಕಿರಣಗಳಿಂದ ಚಿತ್ರಗಳನ್ನು ಪರದೆಯ ಮೇಲೆ ಮೂಡಿಸುವ ಸಾಧನ) ಮೇಲಿನ ಸ್ಲೈಡ್(ಚಿತ್ರದ ಹಾಳೆ)ಗಳಂತೆ. ಪ್ರೊಜೆಕ್ಟರ್ ಬೆಳಕಿನ ಮುಂದೆ ಯಾವುದೇ ಸ್ಲೈಡನ್ನು ಇಟ್ಟರೂ ಅದು ಪರದೆಯ ಮೇಲೆ ನಿಜವೆಂಬಂತೆ ತೋರುತ್ತದೆ. ಸಮಸ್ಯೆ ಏನೆಂದರೆ, ನಿಮ್ಮ ಅಂತರಂಗದಲ್ಲಿ ಪ್ರೊಜೆಕ್ಟರ್ನ ಬೆಳಕು ಸತತವಾಗಿ ಇರುವುದಿಲ್ಲ. ಪ್ರೊಜೆಕ್ಟರ್ನ ಬೆಳಕು ಎಂದಾಗ ನಾನು ಅರ್ಥೈಸುವುದು ನಿಮ್ಮ ಅರಿವನ್ನು. ಅದು ಕೇವಲ ಬಂದು ಹೋಗಿ, ಬಂದು ಹೋಗಿ, ಮಾಡುತ್ತಿರುತ್ತದೆ. ನೀವು ಸದಾಕಾಲ ಸಂಪೂರ್ಣವಾಗಿ ಅರಿವನ್ನು ಹೊಂದಿರುವುದಿಲ್ಲ.
ಅನೇಕ ಸಲ ನಿಮ್ಮ ಕಣ್ಣುಗಳು ತೆರೆದಿದ್ದು, ದೇಹವು ಚಲಿಸುತ್ತಿದ್ದರೂ ನಿಮಗೆ ನಿಮ್ಮ ಅಸ್ತಿತ್ವದ ಬಗ್ಗೆ ಅರಿವು ಇರುವುದಿಲ್ಲ. ಇದಕ್ಕೆ ನಿತ್ಯ ಜೀವನದ ಒಂದು ಉದಾಹರಣೆ ಎಂದರೆ, ನೀವು ಅರ್ಧಗಂಟೆ ವಾಹನ ಚಾಲನೆ ಮಾಡಿ ನಿಮ್ಮ ಕಾರ್ಯಾಲಯವನ್ನು
ತಲುಪುವುದು. ನೀವು ಕಾರ್ಯಾಲಯವನ್ನು ತಲುಪಿ
ಕಾರನ್ನು ನಿಲುಗಡೆ ಧಾಮದಲ್ಲಿ ನಿಲ್ಲಿಸಿ, ಬೀಗದ
ಕೈಯನ್ನು ಹೊರತೆಗೆದಾಗ, ಇದ್ದಕ್ಕಿದ್ದಂತೆ ನಿಮಗೆ
ತಿಳಿಯುತ್ತದೆ, 'ಓ ನಾನು ಕಾರ್ಯಾಲಯವನ್ನು
ತಲುಪಿದ್ದೇನೆ!' ಎಂದು. ಇದು
ಅರ್ಥೈಸುವುದೆನೆಂದರೆ, ವಾಹನ ಚಾಲನೆ ಮಾಡುವ
ಆ ಕ್ಷಣಗಳಲ್ಲಿ ಪ್ರೊಜೆಕ್ಟರ್ನ ಬೆಳಕು ಬಹಳಷ್ಟು
ಕಾಲ ಪ್ರಜ್ವಲಿಸುತ್ತಿರಲೇ ಇಲ್ಲ, ಆಫ್ ಆಗಿತ್ತು,
ಎಂದು.
ಪ್ರೊಜೆಕ್ಟರ್ನ ಮುಂದೆ ಸ್ಲೈಡನ್ನು ಇಟ್ಟಾಗ,
ಪ್ರೊಜೆಕ್ಟರ್ನ ಬೆಳಕು ಎಂದರೆ ನಿಮ್ಮ ಅರಿವು
ಇಲ್ಲದಿದ್ದ ಕ್ಷಣಗಳು ನಿಮ್ಮ ಜೀವನದ
ಭಾಗವಾಗುವುದಿಲ್ಲ. ನೀವು ಅದನ್ನು
ನೆನಪಿಟ್ಟುಕೊಳ್ಳುವುದೇ ಇಲ್ಲ. ಬೆಳಕು ಮತ್ತೆ
ಬಂದಾಗ, ಅಂದರೆ ನಿಮ್ಮ ಅರಿವು ಮತ್ತೆ ಬಂದಾಗ,
ಆ ಕಾಲದಲ್ಲಿ ಯಾವುದೇ ಆಲೋಚನೆಯಾಗಿದ್ದರೂ,
ಅದು ನಿಮ್ಮ ಭಾಗವಾಗುತ್ತದೆ. ತಿಳಿಯಿರಿ, ಇದು
ಒಂದು ಅತಿ ಸೂಕ್ಷ್ಮವಾದ ಸತ್ಯ. ಅರಿವಿನಿಂದ
ಇದ್ದಾಗ ಹಾಗೂ ಅರಿವಿನಿಂದ ಇಲ್ಲದಿದ್ದಾಗ,
ನಿಮ್ಮಲ್ಲುಂಟಾದ ಎಲ್ಲಾ ಆಲೋಚನೆಗಳ ಮೊತ್ತವೇ
ನಿಮ್ಮ ಜೀವನ.
ದುರದೃಷ್ಟಕರವಾಗಿ, ಅನೇಕ ಬಾರಿ ನೀವು
ಅರಿವನ್ನು ಹೊಂದಿಲ್ಲದ ಸಮಯದಲ್ಲಿ ಅನೇಕ
ದೊಡ್ಡ ನಿರ್ಧಾರಗಳು, ಜೀವನವನ್ನು
ಬದಲಾಯಿಸುವಂತಹ ಸಂದರ್ಭಗಳು
ಸಂಭವಿಸುತ್ತವೆ. ಇವೂ ಸಹ ನಿಮ್ಮ ಜೀವನದ, ನಿಮ್ಮ
ಆತ್ಮಚರಿತ್ರೆಯ ಒಂದು ಭಾಗವಾಗಿರುತ್ತವೆ.
ದುರದೃಷ್ಟಕರವಾಗಿ ನಿರ್ಧಾರಗಳ ಬಗ್ಗೆ,
ಆಲೋಚನೆಗಳ ಬಗ್ಗೆ ಅಥವಾ ದೃಶ್ಯಗಳ ಬಗ್ಗೆ
ಅವುಗಳು ಬರುವಾಗ ನಿಮಗೆ ಅರಿವು ಇರುವುದಿಲ್ಲ.
ನಿಮಗೆ ತಿಳಿಯದೆಯೇ ಅವು ನಿಮ್ಮ ಜೀವನದಲ್ಲಿ
ಪ್ರಭಾವ ಬೀರಿರುತ್ತವೆ.
ಸ್ಪಷ್ಟವಾಗಿ ತಿಳಿಯಿರಿ, ನಿಮ್ಮ ಜೀವನದಲ್ಲಿ ನಿಮ್ಮ ಅರಿವಿಲ್ಲದೆ, ನಿಮ್ಮ ಸಮಕ್ಷಮವಿಲ್ಲದೆ ಕಳೆದಂತಹ ಪ್ರತಿಯೊಂದು ಕ್ಷಣವೂ ಯಾತನೆಯಾಗಿರುತ್ತದೆ. ನೀವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾತನೆಯ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳುತ್ತೀರಿ. ಕಾರಿನಲ್ಲಿ ತಿರುವನ್ನು ಸೂಚಿಸುವ ದೀಪವು (ಇಂಡಿಕೇಟರ್) ಮಿಣುಗುಟ್ಟುವಂತೆ ನಿಮ್ಮ ಪ್ರಜ್ಞೆಯೂ ಮಿಣುಗುಟ್ಟುತ್ತಿರುತ್ತದೆ. ಆದರೆ, ನಿಮಗೆ ಅರಿವಿಲ್ಲದ ಕಾರಣ, ಅದು ಯಾವಾಗ ಇರುತ್ತದೆ ಯಾವಾಗ ಇರುವುದಿಲ್ಲವೆಂದು ನಿಮಗೆ ಗೊತ್ತಿರುವುದಿಲ್ಲ.
ಇತ್ತೀಚೆಗೆ, ಒಂದು ದಿನ ನಾನು ಒಂದು ಹಾಸ್ಯಕ್ತಿಯನ್ನು ಓದಿದೆ:
ಒಬ್ಬ ವ್ಯಕ್ತಿ ತನ್ನ ಕಾರಿನೊಳಗೆ ಕುಳಿತು ಚಾಲನೆ
ಮಾಡಲು ಆರಂಭಿಸಿದನು. ಆತನು ತಿರುವನ್ನು
ಸೂಚಿಸುವ ದೀಪವನ್ನು ಹಾಕಿ, ದೀಪವು ಕಾರಿನ
ಹಿಂಭಾಗದಲ್ಲಿ ಮಿನುಗುತ್ತಿದೆಯೋ ನೋಡೆಂದು ತನ್ನ
ಮಗನಿಗೆ ಹೇಳಿದನು.
ಆತನ ಮಗನು, 'ಹೌದು, ಮಿನುಗುತ್ತಿದೆ. . . ಇಲ್ಲ, ಮಿನುಗುತ್ತಿಲ್ಲ . . . ಈಗ ಮಿನುಗುತ್ತಿದೆ!' ಎಂದು ಗಟ್ಟಿಯಾಗಿ ಕಿರಿಚಿದನು.
ನಿಮ್ಮ ಮುಂದೆ ಆಗುವ ಆಲೋಚನಾ ಪ್ರವಾಹವನ್ನು ನೋಡಿದಾಗ ನೀವು ಇದ್ದಕ್ಕಿದ್ದಂತೆ
ನಿಮ್ಮ ಜೀವನ
ಚರಿತ್ರೆಯನ್ನು
ನಿಮಗೆ ಬೇಕಾದ
ರೀತಿಯಲ್ಲಿ ಮಾತ್ರ
ನೆನಪುಮಾಡಿ-
ಕೊಳ್ಳುತ್ತೀರಿ.
ತಿಳಿಯುತ್ತೀರಿ, 'ಓ
ದೇವರೇ, ಇವೆಲ್ಲವೂ
ವಾಸ್ತವವಾಗಿ ನನ್ನೊಳಗೇ
ಆಗುತ್ತಿದೆ! ನಾನು ಎಲ್ಲಿಗೆ
ಸಾಗುತ್ತಿದ್ದೇನೋ
ತಿಳಿಯುತ್ತಿಲ್ಲ. ನನ್ನೊಳಗೆ
ಏನಾಗುತ್ತಿದೆಯೋ ನನಗೇ ತಿಳಿಯುತ್ತಿಲ್ಲ!' ಎಂದು.
ನೀವು ಅರಿವನ್ನು ಹೊಂದಿರುವುದಿಲ್ಲ. ಆದರೆ
ಸತತವಾಗಿ ಅರಿವನ್ನು ಹೊಂದಿರುವುದಾಗಿ
ನಂಬಿರುತ್ತೀರಿ. ಅದು ಮೊದಲನೆಯ ಭ್ರಮೆ.
ನೀವು ಸತತವಾಗಿ ಅರಿವಿನಿಂದಿದ್ದರೆ, ಮೊದಲ ಬಾರಿಗೆ ಸತ್ಯದೆಡೆಗೆ ತೆರೆದುಕೊಳ್ಳುತ್ತೀರಿ. ಪ್ರಾರಂಭದಲ್ಲಿ ಅದು ಸ್ವಲ್ಪ ತೀವ್ರವಾದದ್ದೆನಿಸಬಹುದು. ಏಕೆಂದರೆ ಈವರೆಗೂ ನೀವು ಬಹಳಷ್ಟು ಸಮಯವನ್ನು ಅರಿವಿಲ್ಲದೆಯೇ ಕಳೆದಿದ್ದೀರಿ. ಆದರೆ ಅಂತಿಮವಾಗಿ ಅದು ನಿಮ್ಮನ್ನು ಸಂತೋಷ ಹಾಗೂ ಆನಂದದ ಅನುಭವದೆಡೆಗೆ ಕೊಂಡೊಯ್ಯುವುದು.
ನೀವು ನಿಮ್ಮ ನಿಜವಾದ ಗತಕಾಲವನ್ನು ತಿಳಿದಿಲ್ಲ
ಮೊದಲ ಸತ್ಯ - ನಿಮ್ಮೆದುರಿಗೆ ಆಗುವ ಎಲ್ಲಾ
ಆಗುಹೋಗುಗಳ ಅರಿವು ನಿಮಗೆ ಇರುವುದಿಲ್ಲ
ಎಂಬುದು. ನಿಮ್ಮ ಜೀವನ ಚರಿತ್ರೆಯು ಅದು
ನಡೆದಿರುವಂತೆ ನಿಮ್ಮ ನೆನಪಿನಲ್ಲಿಲ್ಲ. ನಿಮಗೆ
ಬೇಕಾದ ರೀತಿಯಲ್ಲಿ ಮಾತ್ರ ಅದನ್ನು
ನೆನಪುಮಾಡಿಕೊಳ್ಳುತ್ತೀರಿ.
ಒಂದು ಸರಳವಾದ ಉದಾಹರಣೆಯನ್ನೇ ತೆಗೆದುಕೊಳ್ಳಿರಿ. ನಿಮ್ಮ ಜೀವನವು ಸಂತೋಷ, ದುಃಖ, ತಪ್ಪಿತಸ್ಥತೆ, ವೇದನೆ, ಖಿನ್ನತೆಗಳಿಗೆ ಸಂಬಂಧಪಟ್ಟ ಅನೇಕ ಘಟನೆಗಳಿಂದ ಕೂಡಿದೆ. ನೀವು ಜೀವನವನ್ನು ಅದು ಇರುವಂತೆಯೇ ನೋಡುವುದಿಲ್ಲ. ಸಾಮಾನ್ಯವಾಗಿ ನೀವೇನು ಮಾಡುವಿರಿ? ದುಃಖಕ್ಕೆ ಸಂಬಂಧಿಸಿದ ಘಟನೆಗಳನ್ನು ಒಟ್ಟುಗೂಡಿಸಿ ಒಂದು ದಂಡವನ್ನು ಸೃಷ್ಟಿಸಿ, ಈ ಎಲ್ಲಾ ಕಲ್ಪನೆಗಳನ್ನು ಸಂಬಂಧಿಸಿ, ನಿಮ್ಮ ಜೀವನವು ದುಃಖಮಯವಲ್ಲದೆ ಬೇರೇನಿಲ್ಲವೆಂದು ಆಲೋಚಿಸುತ್ತೀರಿ. ನಿಮ್ಮ ಜೀವನವು ಒಂದು ಉದ್ದವಾದ ನೋವಿನ ಸರಪಣಿ, ಒಂದು ನೋವಿನ ದಂಡವೆಂದು ಆಲೋಚಿಸುತ್ತೀರಿ.
ಬಹಳ ಅಪರೂಪವಾಗಿ, ಸಂತೋಷದ ಒಂದು
ದಂಡವನ್ನು ಸೃಷ್ಟಿಸುತ್ತೀರಿ. ಸಂತೋಷದ
ಸಂದರ್ಭಗಳನ್ನು ಒಟ್ಟುಗೂಡಿಸಿ, ಒಂದು
ಸಂತೋಷದ ದಂಡವನ್ನು ಸೃಷ್ಟಿಸಿ, ಜೀವನವೇ
ಸಂತೋಷವೆಂದು ಬಹಳ ಅಪರೂಪವಾಗಿ
ತಿಳಿಯುತ್ತೀರಿ. ಆ ಸಂತೋಷದ ಸಂದರ್ಭಗಳು
ಸಂಖ್ಯೆಯಲ್ಲಿ ಮಾತ್ರವಲ್ಲದೆ ಅವುಗಳ
ಗುಣಮಟ್ಟದಲ್ಲಿಯೂ ಕೂಡ
ಅಪರೂಪವಾಗಿರುತ್ತದೆ. ಬಹಳಷ್ಟು ಸಮಯ ಎಲ್ಲಾ
ನೋವಿನ ನೆನಪುಗಳನ್ನು ಹಾಗೂ ಸಂದರ್ಭಗಳನ್ನು
ಒಟ್ಟುಗೂಡಿಸಿ, ಜೀವನವು ಬರಿಯ ನೋವೆಂಬ
ಕಲ್ಪನೆಯನ್ನು ಮಾಡಿಕೊಳ್ಳುತ್ತೀರಿ. ಜೀವನವು
ಸತತವಾಗಿ ನೋವಿನ ಘಟನೆಗಳಿಂದ ತುಂಬಿದೆ
ಎಂದು ನಂಬಿದ ಕ್ಷಣವೇ ನೋವಿನ ದಂಡವನ್ನು
ಪ್ರಜ್ಞಾಪೂರ್ವಕವಾಗಿ ಮುರಿಯಲು ಪ್ರಯತ್ನಿಸಿದರೂ,
ನಿಮ್ಮ ಅರಿವಿಲ್ಲದಂತೆಯೇ ಆ ನಂಬಿಕೆಯನ್ನು
ದೃಢಪಡಿಸಲು ಪ್ರಯತ್ನಿಸುತ್ತೀರಿ. ದಯವಿಟ್ಟು
ತಿಳಿಯಿರಿ, ಜೀವನವು ಒಂದು ನೋವಿನ ದಂಡ
ಅಥವಾ ಸಂತೋಷದ ದಂಡ ಎಂಬ ನಿಮ್ಮ ನಂಬಿಕೆ
ಉಳಿಯುವುದು ನೀವು ಪ್ರಜ್ಞಾರಹಿತವಾಗಿ
ಇರುವವರೆಗೆ ಮಾತ್ರ. ಅರಿವಿನಿಂದ ಇದ್ದಾಗ ಅಲ್ಲ.
ಅರಿವು ಹಾಗೂ ನಿಮ್ಮ ಅಂತರಂಗದ ಆಲೋಚನೆಗಳಿಗೆ ಇರುವ ಸಂಬಂಧ
ಸಾಮಾನ್ಯವಾಗಿ ನೀವು ಕಾಮಾಸಕ್ತಿಯ ಆಲೋಚನೆಗಳನ್ನು ಸವಿಯುತ್ತಿದ್ದರೆ ನಿಮ್ಮ ಅಂತರಂಗದಲ್ಲಿ ಕಾಮಾಸಕ್ತಿಯ ಆಲೋಚನೆಗಳು ಹಾದು ಬಂದಾಗಲೆಲ್ಲಾ 'ನಾನು ಇದ್ದೇನೆ' ಎಂಬ ಅರಿವನ್ನು ಹೊಂದುತ್ತೀರಿ. ಸಾಮಾನ್ಯವಾಗಿ ನೀವು ಹಿಂಸಾತ್ಮಕ ಆಲೋಚನೆಗಳನ್ನು ಸವಿಯುತ್ತಿದ್ದರೆ, ಹಿಂಸಾತ್ಮಕ ಆಲೋಚನೆಗಳು ನಿಮ್ಮ ಅಂತರಂಗದಲ್ಲಿ ಹಾದು ಬಂದಾಗಲೆಲ್ಲಾ ನೀವು ಜೀವನದ ವಾಸ್ತವಕ್ಕೆ ಬಂದು ನೀವು ಇದ್ದೀರೆಂಬ ಅರಿವನ್ನು ಹೊಂದುತ್ತೀರಿ. ನೀವು ನಕಾರಾತ್ಮಕತೆಗೆ ಅಧಿಕಾರ ಕೊಟ್ಟು, ನಕಾರಾತ್ಮಕತೆಯು ನಿಮ್ಮನ್ನು ಪುನಃಶ್ಚೇತನಗೊಳಿಸುವುದು ಹಾಗೂ ನೀವು ನಕಾರಾತ್ಮಕತೆಗೆ ಹೆಚ್ಚಿನ ಅಧಿಕಾರ ಕೊಟ್ಟು, ಹೆಚ್ಚಿನ ನಕಾರಾತ್ಮಕತೆಯು ಉದ್ರೇಕದ ಭಾವನೆಯನ್ನು ಪುನಃಶ್ಚೇತನಗೊಳಿಸುವುದನ್ನೇ ನಾನು 'ವಿಷವರ್ತುಲ' ಎನ್ನುವುದು.
ಅಸ್ತಿತ್ವದಲ್ಲಿಯೇ ಇಲ್ಲದ ದಂಡ
ನೋವಿನ ದಂಡ ನಿಮ್ಮ ಜೀವನಕ್ಕೆ ನೋವಿನ ಘಟನೆಗಳನ್ನು ಆಹ್ವಾನಿಸುತ್ತದೆ
ಜ್ಞಾನಿಗಳಾದ ರಮಣಮಹರ್ಷಿಗಳಿಂದ
ತಿಳಿಸಲ್ಪಟ್ಟ ಒಂದು ಸುಂದರವಾದ ದೃಷ್ಟಾಂತವಿದೆ.
ಒಂದು ನಾಯಿಯು ಒಂದು ಒಣಗಿದ ಮೂಳೆಯನ್ನು
ಕಡಿಯುತ್ತದೆ. ಕಡಿಯುತ್ತಿದ್ದಂತೆ ಆ ಮೂಳೆಯ
ತುಂಡುಗಳು ಅದರ ಬಾಯನ್ನು ಚುಚ್ಚಿ ರಕ್ತ
ಬರಿಸುತ್ತದೆ. ರಕ್ತ ಬರುತ್ತಿರುವುದು ಮೂಳೆಯಿಂದ
ಎಂದು ನಾಯಿಯು ತಿಳಿಯುತ್ತದೆ ಹಾಗೂ ರಕ್ತವನ್ನು
ಸವಿಯುತ್ತದೆ. ಆ ರಕ್ತದ ರುಚಿಯನ್ನು ಸವಿಯಲು
ಮೂಳೆ ಕಡಿಯುವುದನ್ನು ಮುಂದುವರೆಸುತ್ತದೆ!
ರಕ್ತವು ತನ್ನ ಬಾಯಿಯಿಂದ ಬರುತ್ತಿದೆ,
ಮೂಳೆಯಿಂದಲ್ಲವೆಂದು ನಾಯಿಯು ತಿಳಿಯುವುದೇ
ಇಲ್ಲ.
ಹಿಂಸೆಯು ನಿಮ್ಮನ್ನು ಪ್ರಚೋದಿಸಿದರೆ, ನಿಮ್ಮ
ಜೀವನದಲ್ಲಿ ಅಂತಹ ಘಟನೆಗಾಗಿ ನೀವು
ಕಾಯುತ್ತಿರುತ್ತೀರಿ. ನೋವು ನಿಮ್ಮನ್ನು
ಪ್ರಚೋದಿಸಿದರೆ, ಜೀವನವು ಒಂದು ನೋವಿನ
ದಂಡವೆಂದು ನೀವು ನಂಬಿದರೆ ನಿಮ್ಮ ನಂಬಿಕೆಯನ್ನು
ಶಕ್ತಿಯುತಗೊಳಿಸಿ, ಬಲಪಡಿಸಲು ನಿಮ್ಮ
ಜೀವನದಲ್ಲಿ ಅಂತಹ ಘಟನೆಗಾಗಿ
ಕಾಯುತ್ತಿರುತ್ತೀರಿ. ಇದು ಮನುಷ್ಯರ
ಸಾಧಾರಣವಾದ ಮನಸ್ಸಿನ ಗುಣ. ಜನರು ಹಿಂಸೆಯ
ದಂಡವನ್ನೋ ನೋವಿನ ದಂಡವನ್ನೋ ಮುರಿಯಲು
ಇಚ್ಛಿಸುವುದಾಗಿ ತೋರಿದರೂ ಅವರು ರಹಸ್ಯವಾಗಿ
ಅದನ್ನು ಪೋಷಿಸುತ್ತಿರುತ್ತಾರೆ.
ನೋವಿನ ದಂಡ
ಒಂದು ಹೆಚ್ಚು ಗಾಢವಾದ ತಿಳಿವಳಿಕೆಯನ್ನು ನೀಡುತ್ತೇನೆ. ಹತ್ತು ವರ್ಷಗಳ ಹಿಂದಿದ್ದ ನಿಮ್ಮ ನೋವು, ಒಂಭತ್ತು ವರ್ಷಗಳ ಹಿಂದೆ ನೀವು ಅನುಭವಿಸಿದ ನೋವು, ಏಳು ವರ್ಷಗಳ ಹಿಂದೆ ನೀವು ಅನುಭವಿಸಿದ ನೋವು, ಮೂರು ವರ್ಷಗಳ ಹಿಂದೆ ನೀವು ಅನುಭವಿಸಿದ ನೋವು, ನಿನ್ನೆಯ ದಿನ ನೀವು ಅನುಭವಿಸಿದ ನೋವುಗಳೆಲ್ಲವೂ ಸಂಬಂಧವಿಲ್ಲದ, ಸ್ವತಂತ್ರವಾದ, ಪ್ರತ್ಯೇಕವಾದ ಸಂದರ್ಭಗಳು. ಆದರೆ ನೀವು ಅವನ್ನೆಲ್ಲಾ ಪರಸ್ಪರ ಸಂಬಂಧ ಕಲ್ಪಿಸಿ ಒಂದು ನೋವಿನ ದಂಡವನ್ನು ಸೃಷ್ಟಿಸಲು ಪ್ರಾರಂಭಿಸುತ್ತೀರಿ. ಈ ಎಲ್ಲಾ ಆಲೋಚನಾ ದಂಡಗಳನ್ನು ಪರಸ್ಪರ ಸಂಬಂಧ ಕಲ್ಪಿಸಿ ಒಂದು ದೊಡ್ಡ ನೋವಿನ ದಂಡವನ್ನು ಸೃಷ್ಟಿಸುತ್ತೀರಿ. ‘ನನ್ನ ಜೀವನವು ನೋವಿನಿಂದ ಕೂಡಿದ್ದು’ ಎಂದು ಆಲೋಚಿಸಿ ಅದನ್ನು ನಂಬಲು ಆರಂಭಿಸುತ್ತೀರಿ. ಆದರೆ ಅದು ನಿಜವೇ? ಇಲ್ಲ! ಆ ನೋವಿನ ಸಂಗತಿಗಳ ನಡುವೆ ಉಂಟಾಗಿದ್ದ ಸಂತೋಷದ ಘಟನೆಗಳೆಲ್ಲಾ ಏನಾದವು? ಖಂಡಿತವಾಗಿ, ಅವುಗಳ ನಡುವೆ ಕೆಲವು ಕ್ಷಣಗಳಾದರೂ ಸಂತೋಷವಿದ್ದಿರಬೇಕಲ್ಲವೆ? ಆದರೆ ನಿಮಗೆ ಅವು ಸುಮ್ಮನೆ ಮರೆತು ಹೋಗಿವೆ. ಒಂದು ದಂಡವನ್ನು ಸೃಷ್ಟಿಸುವಾಗ ಸಂತೋಷದ ಸಂದರ್ಭಗಳನ್ನು ನೀವು ತೆಗೆದುಕೊಂಡಿಲ್ಲ. ಆದ್ದರಿಂದ ದಂಡವು, ಯಾವುದೇ ದಂಡವಾದರೂ ಅದು ನಿಜವಲ್ಲ. ಏಕೆಂದರೆ ಅದು ನಿಮ್ಮ ಸಂಪೂರ್ಣ ಜೀವನಚರಿತ್ರೆಯ ಕೇವಲ ಒಂದು ಸಣ್ಣ ಭಾಗದ ಮೇಲೆ ಮಾತ್ರ ಕೇಂದ್ರೀಕೃತವಾಗಿರುತ್ತದೆ.
ಮೊದಲು ನೋವಿನ ನೆನಪುಗಳನ್ನು ಉಪಯುಕ್ತತೆಯ ದೃಷ್ಟಿಯಿಂದ ದಾಖಲಿಸುತ್ತೀರಿ. ಬಹುಶಃ ವೈದ್ಯಕೀಯ ಹಿನ್ನೆಲೆಗಾಗಿಯೋ ಅಥವಾ ನಿಮ್ಮ ವೈದ್ಯರಿಗೆ ಹೇಳಬೇಕೆಂದೋ ನಿಮ್ಮ ಎಲ್ಲಾ ನೋವುಗಳನ್ನು ದಾಖಲಿಸುತ್ತೀರಿ. ಹೀಗೆಯೇ ಆಗುತ್ತಾ, ನಿಮ್ಮ ಜೀವನದಲ್ಲಿ ನೀವನುಭವಿಸಿದ ನೋವುಗಳೆಲ್ಲವೂ ಒಂದಕ್ಕೊಂದು ಸಂಬಂಧಿಸಿವೆಯೆಂದು ನಂಬಲಾರಂಭಿಸುತ್ತೀರಿ. ನಿಮ್ಮ ಜೀವನವೇ ನೋವೆಂದೂ, ನಿಮ್ಮ ಜೀವನವೇ ಯಾತನೆಯೆಂದೂ ನಿರ್ಧರಿಸುತ್ತೀರಿ. ನಿಮ್ಮ ಜೀವನವೇ ನೋವೆಂದೋ ಅಥವಾ ನಿಮ್ಮ ಜೀವನವೇ ಯಾತನೆಯೆಂದೋ ನಿರ್ಧರಿಸಿದ ಕ್ಷಣವೇ ನಿಮಗೆ ನೀವೇ ನರಕವನ್ನು ಸೃಷ್ಟಿಸಿಕೊಳ್ಳುತ್ತೀರಿ.
ಉದಾಹರಣೆಗೆ, ನಿನ್ನೆಯವರೆಗೂ ನೀವು ಕೇವಲ ನಡೆಯುತ್ತಿದ್ದಿರಿ, ನಿಮ್ಮಿಂದ ಹಾರಲಾಗುತ್ತಿರಲಿಲ್ಲ. ಈ ಹಿಂದೆ ನೀವು ಹಾರಿಲ್ಲ. ಕೇವಲ ನಡೆದಿದ್ದೀರಿ ಎಂಬುದು ನಿಮಗೆ ತಿಳಿದಿದೆ. ನಾಳೆಯಿಂದ ನೀವು ಹಾರಬಹುದೆಂದರೆ, ಅದನ್ನು ನಿಮ್ಮಿಂದ ನಂಬಲಾಗುವುದೇ? ಆಗದು! ನಾಳೆಯೂ ನೀವು ಕೇವಲ ನಡೆಯುತ್ತಿರುತ್ತೀರೆಂದು ನಿಮಗೆ ತಿಳಿದಿದೆ. ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಅನೇಕ ಹೊಸ ಸಾಧ್ಯತೆಗಳನ್ನು ತೆಗೆದು ಹಾಕಿ ನಿಮ್ಮ ನೆನಪಿನಲ್ಲಿರುವ ಹಿಂದೆ ನಡೆದ ಅನುಭವಗಳನ್ನೇ ನೆಚ್ಚಿಕೊಳ್ಳುತ್ತೀರಿ.
ಸಂತೋಷದ ದಂಡ
ಹತ್ತು ವರ್ಷಗಳ ಹಿಂದೆ ಪಟ್ಟ ಸಂತೋಷ,
ಒಂಭತ್ತು ವರ್ಷಗಳ ಹಿಂದೆ ಪಟ್ಟ ಸಂತೋಷ,
ಮೂರು ವರ್ಷಗಳ ಹಿಂದೆ ಪಟ್ಟ ಸಂತೋಷ ಹಾಗೂ
ಒಂದು ವರ್ಷದ ಹಿಂದೆ ಪಟ್ಟ ಸಂತೋಷವೆಲ್ಲವೂ
ಸ್ವತಂತ್ರವಾದ, ಪ್ರತ್ಯೇಕವಾದ ಒಂದಕ್ಕೊಂದು
ಸಂಬಂಧವಿಲ್ಲದ ಆಲೋಚನಾ ದಂಡಗಳು.
ವರ್ತಮಾನದಲ್ಲಿ ಆ ಎಲ್ಲಾ ಆಲೋಚನೆಗಳನ್ನೂ
ಪರಸ್ಪರ ಸಂಬಂಧ ಕಲ್ಪಿಸಿ ಒಂದು ದೊಡ್ಡ
ಸಂತೋಷದ ದಂಡವನ್ನು ಸೃಷ್ಟಿಸುತ್ತೀರಿ.
ನಿಮ್ಮ ಸಂತೋಷವನ್ನು ಒಂದು ವಸ್ತು, ವ್ಯಕ್ತಿ ಅಥವಾ ಒಂದು ವಿಹಾರ ಧಾಮದ ಜೊತೆಗೆ ನೀವು ಗುರುತಿಸಿಕೊಳ್ಳಬಹುದು. ಈಗ ನೀವು ಮತ್ತೆಮತ್ತೆ ಆ ವ್ಯಕ್ತಿಯನ್ನು, ಆ ವಸ್ತುವನ್ನು, ಆ ಸ್ಥಳವನ್ನು ಅಥವಾ ಒಂದು ಘಟನೆಯನ್ನು ನಿಮ್ಮ ಜೀವನದಲ್ಲಿ ಮತ್ತೆ ಅನುಭವಿಸಲು ಪ್ರಯತ್ನಿಸುತ್ತೀರಿ. ನೀವು ಎಷ್ಟೇ ಪ್ರಯತ್ನಿಸಿದರೂ ನಿಮಗಾಗಿದ್ದ ಅದೇ ಸಂತೋಷವನ್ನು ಮತ್ತೆ ಅನುಭವಿಸಲಾಗುವುದಿಲ್ಲ. ಅದು ನಿಮ್ಮನ್ನು ಮತ್ತಷ್ಟು ದುಃಖಕ್ಕೊಳಗಾಗಿಸುತ್ತದೆ!
ನೋವಿನ ದಂಡ ಅಥವಾ ಸಂತೋಷದ ದಂಡ ಎರಡೂ ವೇದನೆಯೆಡೆಗೆ ಕೊಂಡೊಯ್ಯುತ್ತವೆ
ಜೀವನದಲ್ಲಿ ನೀವು ಸತತವಾಗಿ ನೋವಿನ ಅಥವಾ ಸಂತೋಷದ ದಂಡಗಳನ್ನು ಸೃಷ್ಟಿಸುತ್ತಿರುತ್ತೀರಿ. ಒಮ್ಮೆ ನೋವಿನ ದಂಡವನ್ನು ಸೃಷ್ಟಿಸಿದರೆ ಅದನ್ನು ಮುರಿಯಲು ಪ್ರಯತ್ನಿಸುತ್ತೀರಿ. ಸಂತೋಷದ ದಂಡವನ್ನು ಸೃಷ್ಟಿಸಿದರೆ ಅದನ್ನು ದೊಡ್ಡದಾಗಿಸಲು ಪ್ರಯತ್ನಿಸುತ್ತೀರಿ! ಆದರೆ ಸಂತೋಷದ ದಂಡವನ್ನು ದೊಡ್ಡದಾಗಿಸಲಾಗಲೀ ದುಃಖದ ದಂಡವನ್ನು ಮುರಿಯಲಾಗಲೀ ಸಾಧ್ಯವಿಲ್ಲ. ಏಕೆಂದರೆ, ನಿಜವಾಗಿಯೂ ದಂಡವೆಂಬುದೇ ಇರುವುದಿಲ್ಲ. ಅದು ಕೇವಲ ಆಯ್ದುಕೊಂಡ ನೆನಪುಗಳಷ್ಟೆ. ದಂಡವೇ ನಿಮ್ಮ ಕಲ್ಪನೆ.
ಆಲೋಚನೆಗಳು – ಮೀನು ಕೊಳದಲ್ಲಿರುವ ನೀರಿನ ಗುಳ್ಳೆಗಳಂತೆ
ನಮಗುಂಟಾಗುವ ಒಂದು ಆಲೋಚನೆಗೂ
ಮತ್ತೊಂದು ಆಲೋಚನೆಗೂ ಯಾವ ನೇರವಾದ
ಸಂಬಂಧವೂ ಇಲ್ಲ. ಆಲೋಚನೆಗಳ ನಡುವಿನ
ಒಂದೇ ಸಂಬಂಧವೆಂದರೆ, ಅವು ಒಂದೇ
ಮೂಲದಿಂದ ಬರುತ್ತವೆ ಎಂಬುದು. ಆದರೆ ನಾವು
ಆಲೋಚನೆಗಳ
ನಡುವಿನ ಒಂದೇ
ಸಂಬಂಧವೆಂದರೆ
ಅವು ಒಂದೇ
ಮೂಲದಿಂದ
ಬರುತ್ತವೆ
ಎಂಬುದು.
ಒಂದು ಆಲೋಚನೆ-
ಯನ್ನು ಮತ್ತೊಂದಕ್ಕೆ
ನೇರವಾಗಿ ಸಂಬಂಧ
ಕಲ್ಪಿಸುತ್ತೇವೆ.
ಒಂದು ಮೀನು-
ಗೋಳದಲ್ಲಿ ಗುಳ್ಳೆಗಳು
ಕೆಳಗಿನಿಂದ ಮೇಲೇಳು-
ವಂತೆ, ನಮ್ಮ ಆಲೋಚನೆಗಳೂ ಸಹ
ಮೇಲೇಳುತ್ತವೆ. ಒಂದು ಗುಳ್ಳೆಯು ನೀರಿನಿಂದ
ಬಂದು ಮೇಲೆ ತಲುಪುವಷ್ಟರಲ್ಲಿ ಮತ್ತೊಂದು
ಗುಳ್ಳೆಯು ಬರುತ್ತದೆ. ನಂತರ ಮೂರನೆಯದು.
ಗುಳ್ಳೆಗಳು ಅತ್ಯಂತ ವೇಗವಾಗಿ ಮೇಲೇಳುತ್ತಿರುವ
ಕಾರಣ, ಅದು ಒಂದು ಸತತವಾದ ಪ್ರವಾಹ
ಎಂಬಂತೆ ತೋರುತ್ತದೆ! ವಾಸ್ತವವಾಗಿ ಎರಡು
ಗುಳ್ಳೆಗಳ ನಡುವೆ ಯಾವಾಗಲೂ ಒಂದು
ಅಂತರವಿದ್ದೇ ಇರುತ್ತದೆ.

ಗುಳ್ಳೆಗಳಂತೆಯೇ ಎರಡು ಆಲೋಚನೆಗಳ
ನಡುವೆ ಒಂದು ತಟಸ್ಥ ಸ್ಥಿತಿಯನ್ನು ನಾವು
ಅನುಭವಿಸುತ್ತೇವೆ. ಎರಡು ಆಲೋಚನೆಗಳ
ನಡುವಿನ ಅಂತರ ಅಥವಾ ತಟಸ್ಥ ಸ್ಥಳವು ಬಹಳ
ಕಡಿಮೆಯಾಗಿರುವುದರಿಂದ, ಎಲ್ಲಾ
ಆಲೋಚನೆಗಳೂ ಪರಸ್ಪರ ಸಂಬಂಧಿಸಿವೆ
ಎಂದುಕೊಂಡು ಒಂದು ದಂಡವನ್ನು
ಸೃಷ್ಟಿಸಿಕೊಳ್ಳುತ್ತೇವೆ. ಆದರೆ ಎರಡು ಆಲೋಚನೆಗಳ
ನಡುವೆ ಒಂದು ಅಂತರವಿದ್ದೇ ಇರುತ್ತದೆ.
ನಡೆದ ಒಂದು ಘಟನೆಯ ಬಗ್ಗೆ ನಿಮಗೆ ಹೇಳುತ್ತೇನೆ:
ಮಧ್ಯವಯಸ್ಕನಾದ ಒಬ್ಬ ವ್ಯಕ್ತಿಯು ಬಂದು, 'ಸ್ವಾಮೀಜೀ, ನಾನು ನನ್ನ ವಿವಾಹವನ್ನು ವಿಚ್ಛೇದನೆ ಮಾಡಲು ಇಚ್ಚಿಸುತ್ತೇನೆ. ನನ್ನನ್ನು ಹರಸಿರಿ!' ಎಂದು ಕೇಳಿದನು. 'ನಾನು ಮದುವೆಯಾಗಲು ಮಾತ್ರ ಹರಸುತ್ತೇನೆ. ವಿಚ್ಛೇದನೆಗೆ ನಾನೇಕೆ ಹರಸಬೇಕು?' ಎಂದು ನಾನು ಆತನಿಗೆ ಹೇಳಿದೆ. ಆತನು, 'ಇಲ್ಲ, ನೀವು ನನ್ನನ್ನು ಹರಸಲೇಬೇಕು, ಏಕೆಂದರೆ ನಾನು ಬಹಳ ವೇದನೆಯನ್ನು ಅನುಭವಿಸಿದ್ದೇನೆ' ಎಂದು ಹೇಳಿದನು. 'ನಾನು ವಿವಾಹಗಳಿಗೆ ಅನುಗ್ರಹಿಸುತ್ತೇನೆ. ಆದರೆ ನೀನು ವಿಚ್ಛೇದನೆಗೆ ನನ್ನ ಅನುಗ್ರಹಕ್ಕಾಗಿ ಏಕೆ ಬಂದೆ?' ಎಂದು ಕೇಳಿದೆನು. ಆತನು, 'ಇಲ್ಲ ಇಲ್ಲ ಸ್ವಾಮೀಜಿ, ನೀವು ನನ್ನನ್ನು ಅನುಗ್ರಹಿಸಲೇಬೇಕು. ಏಕೆಂದರೆ ನಾನು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದೇನೆ' ಎಂದು ಉತ್ತರಿಸಿದನು.
'ಕಷ್ಟವು ಯಾವಾಗಲೂ ಕೊಟ್ಟು
ಪಡೆಯುವಂತಹದು. ಅದು ಬರೀ ಪಡೆಯುವುದಲ್ಲ.
ನೀನೂ ಸಹ ನಿನ್ನ ಹೆಂಡತಿಗೆ ಸಾಕಷ್ಟು
ಸಂಕಟಪಡಿಸಿರಬೇಕು. ಹಾಗಾಗಿ, ಸತ್ಯವೇನೆಂದು
ಹೇಳು, ನಂತರ ಸಂದರ್ಭವನ್ನು ವಿಶ್ಲೇಷಿಸೋಣ'
ಎಂದು ನಾನು ಹೇಳಿದೆ.
ಆತನು, 'ನಾನು ಯಾವ ಘಟನೆಗಳನ್ನು ಹೇಳಲಿ,
ಯಾವುದನ್ನು ಬಿಡಲಿ? ಅವು ಸಾಕಷ್ಟಿವೆ. ಅವಳು
ನನ್ನನ್ನು ಮೊದಲನೆಯ ದಿನದಿಂದಲೇ
ಹಿಂಸಿಸುತ್ತಿದ್ದಾಳೆ. ನಾನೆಷ್ಟು
ಹಿಂಸೆಗೊಳಗಾಗಿದ್ದೇನೆಂಬುದು ನಿಮಗೆ ತಿಳಿಯದು'
ಎಂದು ಉತ್ತರಿಸಿದನು. ನಂತರ ಆತನು ತನ್ನ
ಮದುವೆಯ ದಿನದಂದು ನಡೆದ ಘಟನೆಯೊಂದನ್ನು
ಹೇಳತೊಡಗಿದನು!
ನಮ್ಮ ಹಳ್ಳಿಗಳಲ್ಲಿ ಒಂದು ವಿವಾಹವು ಜರುಗಿದರೆ
ಮದುವೆಯ ಶಾಸ್ತ್ರಗಳ ನಂತರ ವಧು-ವರರಿಗೆ
ಕೆಲವು ಆಟಗಳನ್ನು ಆಡಿಸುತ್ತಾರೆ. ಅಂತಹ
ಆಟಗಳಲ್ಲಿ, ಒಂದು ಕೊಡದಲ್ಲಿ ನೀರು ತುಂಬಿಸಿ
ಒಂದು ಉಂಗುರವನ್ನು ಅದರೊಳಗೆ ಹಾಕಿ, ಗಂಡ
ಹೆಂಡಿರನ್ನು ಅದರೊಳಗೆ ಕೈಹಾಕಿ ಉಂಗುರವನ್ನು
ಹುಡುಕುವಂತೆ ಮಾಡುವುದು ಒಂದು ಬಗೆಯ ಆಟ.
ಯಾರಿಗೆ ಮೊದಲು ಉಂಗುರ ಸಿಗುತ್ತದೊ ಅವರು
ಗೆದ್ದಂತೆ. ಮದುವೆಯ ಸಮಯದಲ್ಲಿಯೇ ವಧು-
ವರರು ಮೊದಲಬಾರಿಗೆ ಒಬ್ಬರನ್ನೊಬ್ಬರು
ಸಂಧಿಸುವ ಕಾರಣ ಅವರಿಬ್ಬರ ನಡುವೆ ಅನ್ನೋನ್ಯತೆ
ಉಂಟಾಗಲೆಂದು ಆಡಿಸುವ ಚಿಕ್ಕ ಆಟಗಳಿವು.
ಒಬ್ಬರಿಗೊಬ್ಬರು ಹೊಸಬರಾಗಿರುವುದರಿಂದ
ಅವರಿಬ್ಬರ ನಡುವಿನ ಸಂಬಂಧವನ್ನು ಹತ್ತಿರ ತರಲು
ಇಂತಹ ಪುಟ್ಟ ಆಟಗಳನ್ನು ಆಡಿಸುತ್ತಾರೆ.
'ಆ ಆಟದ ಸಮಯದಲ್ಲಿಯೂ ಅವಳು ನನ್ನ
ಕೈಯನ್ನು ಪರಚಿದಳು. ಅವಳ ಉಗುರಿನಿಂದ ನನ್ನ
ಕೈಯನ್ನು ಪರಚಿಬಿಟ್ಟಳು' ಎಂದು ಆ ವ್ಯಕ್ತಿ
ಹೇಳಿದನು. ಹಾಗೂ ಅಂದಿನಿಂದ ಆಕೆಯು ಆತನಿಗೆ
ಮಾಡಿದ ಎಲ್ಲವನ್ನೂ ಒಂದು ದೊಡ್ಡ ಕಥೆಯಾಗಿ
ಹೇಳತೊಡಗಿದನು! ವ್ಯಾವಹಾರಿಕವಾಗಿ ನೋಡಿದರೆ
ಆತನ ಮದುವೆಯ ಮೊದಲ ದಿನದಿಂದ
ಬಹುಮಟ್ಟಿಗೆ ಒಂದು ಪೊಲೀಸ್ ವರದಿಯಂತೆ
ಎಲ್ಲವನ್ನೂ ಆತನು ಒಂದು ಫೈಲಿನಲ್ಲಿ
ದಾಖಲಿಸಿದ್ದನು.
ಒಂದೆರಡು ಮೂರು ಘಟನೆಗಳ ವಿವರಣೆಯ ನಂತರ ನಾನು, 'ದಯವಿಟ್ಟು ನಿಲ್ಲಿಸು! ವಿಷಯವು ಹೀಗಿದ್ದರೆ ನಿನ್ನನ್ನು ಅಗಲಲು ಅವಳಿಗೆ ಸಂತೋಷವಾಗಬೇಕು. ಇಷ್ಟು ದೊಡ್ಡ ವಿವರವಾದ ಕಂತೆಗಳನ್ನು ತಲೆಯಲ್ಲಿ ಹೊತ್ತಿರುವವನ ಜೊತೆ ಬಾಳುವುದು ಬಹಳ ಕಷ್ಟ!' ಎಂದು ಹೇಳಿದೆ. ಆಕೆಯು ಏನೇ ಮಾಡಿದರೂ ಈ ವ್ಯಕ್ತಿಯು ಆಕೆಯನ್ನು ತನ್ನ ನೆನಪಿನ ಕಡತಗಳ ಮೂಲಕವೇ ನೋಡುತ್ತಿರುತ್ತಾನೆ.
ನಂತರ ಆತನು ತನ್ನ ವಿವಾಹ ವಿಚ್ಛೇದನಕ್ಕೆ ಇದ್ದ ಸದ್ಯದ ಕಾರಣವನ್ನು ಹೇಳಿದನು, 'ಆಕೆಯು ಸ್ವಲ್ಪ ಕಾಫಿಯನ್ನು ನನ್ನ ಬಟ್ಟೆಯ ಮೇಲೆ ಚೆಲ್ಲಿಬಿಟ್ಟಳು!' ಎಂದು. 'ಬಟ್ಟೆಯ ಮೇಲೆ ಕಾಫಿ ಚೆಲ್ಲುವುದು ವಿಚ್ಛೇದನಕ್ಕೆ ಕಾರಣವಾಗುವುದಿಲ್ಲ!' ಎಂದು ನಾನು ಹೇಳಿದೆ.
ಆತನು, 'ಇಲ್ಲ, ನಿಮಗೆ ಗೊತ್ತಿಲ್ಲ. ಇಂದು ಆಕೆಯು ಕಾಫಿ ಚೆಲ್ಲಿದಳು; ನಾಳೆ ಆಸಿಡ್ನನ್ನೇ ಚೆಲ್ಲುತ್ತಾಳೆ!' ಎಂದು ಹೇಳಿದನು. ಆತನು ಈ ಮಾತನ್ನು ನಿಜವಾಗಿಯೂ ಹೇಳಿದನು. ನನಗೆ ಅದರ ಸಂಬಂಧವು ಅರ್ಥವೇ ಆಗಲಿಲ್ಲ. ನಾನು ಆತನನ್ನು ಕಾಫಿಗೂ ಆಸಿಡ್ಗೂ ಹೇಗೆ ಸಂಬಂಧ ಕಲ್ಪಿಸಿದೆಯೆಂದು ಕೇಳಿದೆ. ಆತನು 'ಇಲ್ಲ, ಇಲ್ಲ, ಸ್ವಾಮೀಜಿ, ನಿಮಗೆ ಗೊತ್ತಿಲ್ಲ' ಎಂದು ಪುನಃ ಹೇಳಿದನು.
ಆತನು ಹೇಳುತ್ತಿರುವುದು ಅತಿಯಾದಂತೆ ನಿಮಗೆ
ತೋರಬಹುದು ಹಾಗೂ ಇದನ್ನು ಕೇಳಿದಾಗ ನೀವು
ನಗಬಹುದು. ಆದರೆ ನಿಮ್ಮ ಜೀವನವನ್ನೇ
ತೀಕ್ಷ್ಣವಾಗಿ ಅವಲೋಕಿಸಿರಿ. ನೀವೂ ಇದನ್ನೇ
ಮಾಡುತ್ತಿರುವುದು - ಸತತವಾಗಿ ತರ್ಕವಿಲ್ಲದ
ಸಂಬಂಧಗಳನ್ನು ಸೃಷ್ಟಿಸುವುದು. ಸಂದರ್ಭಗಳು
ಪರಸ್ಪರ ಪ್ರತ್ಯೇಕವಾಗಿರುವುದನ್ನು ನೋಡಲು
ಮರೆಯುತ್ತೀರಿ, ಆಲೋಚನೆಗಳು
ಪ್ರತ್ಯೇಕವೆಂಬುದನ್ನು ಮರೆಯುತ್ತೀರಿ.
ಈ ಒಂದು ಸರಳತಂತ್ರವಾದ 'ಅನ್ಕ್ಲಚ್' ಮಾಡಲು ಕಲಿತರೆ ಸಾಕಷ್ಟು ಶಕ್ತಿಯನ್ನು ನಿಮ್ಮ ಮನೋಶರೀರ ವ್ಯವಸ್ಥೆಯಲ್ಲಿ, ನಿಮ್ಮ ಅಸ್ತಿತ್ವದಲ್ಲಿ ಉಳಿಸಿಕೊಳ್ಳಬಹುದು. ಅದರಿಂದ ನೀವು ಬಹಳಷ್ಟು ಸಮರ್ಥರೂ, ಸೃಜನಶೀಲರೂ ಆಗುತ್ತೀರಿ. ನಿಮ್ಮ ಸಂಬಂಧಗಳು ಹೆಚ್ಚು ಸ್ನೇಹಮಯವಾಗುತ್ತವೆ. ಏಕೆಂದರೆ, ಸಂಬಂಧವಿಲ್ಲದ ಸಂದರ್ಭಗಳಿಗೆ ನೀವು ಕೊಕ್ಕೆಹಾಕಿಕೊಂಡಿರುವುದಿಲ್ಲ. ಜನರಿಂದ ಅಥವಾ ಅವರ ನಿರೀಕ್ಷಣೆಗಳಿಂದ ನಿಮಗೆ ಉಸಿರುಗಟ್ಟಿದಂತಾಗುವುದಿಲ್ಲ. ನಿಮಗೆ ನಿಮ್ಮ ಹಾಗೂ ಇತರರ ಅಗತ್ಯಗಳನ್ನು ಪೂರೈಸಲು ಅಗಾಧವಾದ ಒಳಪ್ರಪಂಚದ ಅವಕಾಶ ದೊರಕುತ್ತದೆ. ಬೇರೆಯವರು ಕಷ್ಟವನ್ನೇಕೆ ಅನುಭವಿಸುತ್ತಿದ್ದಾರೆಂದು ತಿಳಿಯಲು ನಿಮ್ಮಲ್ಲಿ ಮಹತ್ತರವಾದ ಅನುಕಂಪವಿರುತ್ತದೆ. ಬೇರೆಯವರು ಕಷ್ಟವನ್ನೇಕೆ ಅನುಭವಿಸುತ್ತಿದ್ದಾರೆಂಬುದು ತಿಳಿಯದಿದ್ದಾಗ ಮಾತ್ರ ನೀವು ಅವರೊಡನೆ ಒರಟಾಗಿರುತ್ತೀರಿ. ನೀವು 'ಅನ್ಕ್ಲಚ್' ಆದರೆ ನಿಮ್ಮ ಅಂತರಂಗದಲ್ಲಿ ಆ ವ್ಯಕ್ತಿಗೆ ಅವಕಾಶ ಕೊಡುತ್ತೀರಿ. ನೀವು ಅಪ್ರಯತ್ನವಾಗಿಯೇ ಸಹಾನುಭೂತಿಯುಳ್ಳವರಾಗುತ್ತೀರಿ. ನಿಮ್ಮ ಜೀವನವೇ ಒಂದು ಬೇರೆಯ ಗುಣಮಟ್ಟದ್ದಾಗುತ್ತದೆ ಹಾಗೂ ನೀವು ಪ್ರಪಂಚದಲ್ಲಿ ಒಬ್ಬ ಬೇರೆಯ ವ್ಯಕ್ತಿಯೇ ಆಗುತ್ತೀರಿ.
ಅದು ಎಂದಿಗೂ 'ಅದೇ' ಅಲ್ಲ
ನಮ್ಮ ಜೀವನದ ಪ್ರತಿಯೊಂದು ಆಗುಹೋಗುಗಳು - ತಿನ್ನುವಂತಹ, ಕುಡಿಯುವಂತಹ ದಿನನಿತ್ಯದ ಕ್ರಿಯೆಗಳೂ ಸಹ - ಒಂದಕ್ಕೊಂದು ಸಂಬಂಧವಿಲ್ಲದ್ದು. ಪ್ರತಿಯೊಂದು ಅನುಭವವೂ ಅದರದೇ ರೀತಿಯಲ್ಲಿ ಸ್ವತಂತ್ರವಾದದ್ದು. ನೆನ್ನೆಯ ದಿನ ನೀರು ಕುಡಿದದ್ದು ಹಾಗೂ ಇಂದು ನೀರು ಕುಡಿದದ್ದೆರಡೂ ಸಂಪೂರ್ಣವಾಗಿ ಬೇರೆಯ ಘಟನೆಗಳು. ನೆನ್ನೆಯ ದಿನ ಸೇವಿಸಿದ ಆಹಾರ ಹಾಗೂ ಇಂದು ಸೇವಿಸಿದ ಆಹಾರವೆರಡೂ ಒಂದೇ ಎನಿಸಿದರೂ, ಅವು ಬೇರೆ! ಆದರೆ ನಿಮ್ಮ ಮನಸ್ಸು ಈ ಎರಡು ಸಂದರ್ಭಗಳ ನಡುವೆ ಒಂದು ದಂಡವನ್ನು ಸೃಷ್ಟಿಸಿ ಹೇಳುತ್ತದೆ, 'ನಾನು ದಿನವೂ ಒಂದೇ ಆಹಾರವನ್ನು ಸೇವಿಸುತ್ತೇನೆ' ಎಂದು.
ದಯವಿಟ್ಟು ಸ್ಪಷ್ಟವಾಗಿ ತಿಳಿಯಿರಿ, ನೀವು
ದಿನವೂ ಒಂದೇ ಆಹಾರವನ್ನು ತಿನ್ನುವುದಿಲ್ಲ. ನೀವು
ಆ ಎರಡು ಅನುಭವಗಳಿಗೆ 'ತಿನ್ನುವುದು' ಎಂಬ
ಒಂದೇ ಪದವನ್ನು ಬಳಸಿದರೂ, ಅವು ಒಂದೇ
ಅನುಭವವಲ್ಲ. ನೀವು ಬಳಸುವ ಪದಗಳಿಂದ ನೀವೇ
ಮೋಸಹೋಗದಿರಿ. ನೆನ್ನೆಯ ಆಹಾರ ಸೇವನೆ,
ಇಂದಿನ ಆಹಾರ ಸೇವನೆ ಹಾಗೂ ನಾಳೆಯ ಆಹಾರ
ಸೇವನೆಯು ಬೇರೆ ಬೇರೆಯ ಸಂದರ್ಭಗಳು, ಬೇರೆ
ಬೇರೆಯ ಅನುಭವಗಳು. ಅವು ಸಂಪೂರ್ಣವಾಗಿ
ಸ್ವತಂತ್ರವಾದುವು ಹಾಗೂ ಸಂಬಂಧವಿಲ್ಲದುವು.
ಮಧ್ಯಭಾರತದ ಒಬ್ಬ ಜ್ಞಾನಿಯ ಜೀವನದ ಒಂದು ಸುಂದರವಾದ ಘಟನೆ ಹೀಗಿದೆ:
ಅವರ ಜೀವನದ ಕೊನೆಯ ಹತ್ತು ವರ್ಷಗಳಲ್ಲಿ
ವೈದ್ಯರು ಆ ಜ್ಞಾನಿಗೆ ಒಂದು ನಿರ್ದಿಷ್ಟವಾದ
ಆಹಾರವನ್ನು ಸೇವಿಸುವಂತೆ ಹೇಳಿದ್ದರು. ಅವರು
ಮತ್ತೇನನ್ನೂ ತಿನ್ನುವಹಾಗಿರಲಿಲ್ಲ. ಅವರು
ಪ್ರತಿದಿನವೂ ಒಂದೇ ರೀತಿಯ ಆಹಾರವನ್ನು ದಿನದ
ಮೂರು ಬಾರಿಯೂ ತಿನ್ನಬೇಕಾಗಿದ್ದಿತು.
ಎರಡು ವರ್ಷಗಳ ನಂತರ ಅವರಿಗೆ ಆಹಾರವನ್ನು
ತಯಾರಿಸುತ್ತಿದ್ದ ವ್ಯಕ್ತಿ ಅವರ ಬಳಿ ಬಂದು
'ಗುರುಗಳೇ, ನನಗೆ ಒಂದೇ ರೀತಿಯ ಆಹಾರವನ್ನು
ಸಿದ್ಧಪಡಿಸಿ ಸಾಕಾಗಿಹೋಗಿದೆ. ದಿನವೂ ಒಂದೇ
ಬಗೆಯ ಆಹಾರವನ್ನು ತಿನ್ನಲು ನಿಮ್ಮಿಂದ ಹೇಗೆ
ಸಾಧ್ಯ?' ಎಂದು ಗೊಣಗಿದನು.
ಗುರುಗಳು ಸುಮ್ಮನೆ ನಕ್ಕು, 'ನಾನು ಪ್ರತಿದಿನವೂ ಅದೇ ಆಹಾರವನ್ನು ತಿನ್ನುತ್ತಿಲ್ಲ. ಅದೇ ಆಹಾರವನ್ನು ಪ್ರತಿದಿನವೂ ಹೇಗೆ ತಿನ್ನಲು ಸಾಧ್ಯ? ನಾನು ಇಂದು ಮಾತ್ರ ಈ ಆಹಾರವನ್ನು ತಿನ್ನಲು ಸಾಧ್ಯ. ನಾಳೆಯ ಆಹಾರವು ಸಂಪೂರ್ಣವಾಗಿ ಬೇರೆಯದೇ ಆಗಿರುತ್ತದೆ!' ಎಂದು ಹೇಳಿದರು.
ಜೀವನವು ಪ್ರತೀಕ್ಷಣವೂ ಹೊಸದು. ಅದು
ಪುನರಾವರ್ತಿಸುವ ಹಾಗೆ, ಜಡ ಮತ್ತು ಮಂದವಾಗಿ,
ನೀರಸವಾಗಿ ಕಾಣುವಂತೆ ಮಾಡುವುದೇ ಮನಸ್ಸು.
ಸುಮ್ಮನೆ
ಬಿಟ್ಟುಬಿಡಿ . . .
ಆಗ ನೀವು
ಹಾರಾಡಬಹುದು.
ಜೀವನವು
ಪ್ರತಿಕ್ಷಣವೂ
ಹೊಸದು. ಅದು
ಪುನರಾವರ್ತಿಸುವ
ಹಾಗೆ, ಮಂದವಾಗಿ
ಹಾಗೂ ನೀರಸವಾಗಿ
ಕಾಣುವಂತೆ
ಮಾಡುವುದೇ
ಮನಸ್ಸು.
ನಾನು ಇದನ್ನು ನನ್ನ ಪಾರಿವ್ರಾಜಕದ ದಿನಗಳಲ್ಲಿ ನೋಡಿದ್ದೇನೆ. ಉತ್ತರ ಭಾರತದ ಕಾಡುಗಳಲ್ಲಿ ಹಕ್ಕಿಗಳನ್ನು ಹಿಡಿಯಲು ಬೇಟೆಗಾರರು ಒಂದು ಕುಣಿಕೆಯನ್ನು ಬಳಸುತ್ತಾರೆ. ಎರಡು ಮರಗಳ ನಡುವೆ ಎತ್ತರದಲ್ಲಿ ಹಗ್ಗವನ್ನು ಕಟ್ಟುತ್ತಾರೆ. ಹಗ್ಗದ ಮಧ್ಯಭಾಗದಲ್ಲಿ ಒಂದು ಕೋಲನ್ನು ಸಿಕ್ಕಿಸುತ್ತಾರೆ. ಹಗ್ಗವನ್ನು ಕೋಲಿನ ಮಧ್ಯಕ್ಕೆ ಕಟ್ಟುತ್ತಾರೆ. ಇದು ವಾಸ್ತವವಾಗಿ ಹಕ್ಕಿಗಳನ್ನು ಹಿಡಿಯುವ ಬೇಟೆಗಾರರ ಒಂದು ಪಾಶ.
ಒಂದು ಸಣ್ಣ ಕೋಲಿನಿಂದ ಒಂದು ಪಕ್ಷಿಯನ್ನು
ಹಿಡಿಯುವುದು ಹೇಗೆ? ಅದು ಹೇಗೆ ಸಾಧ್ಯ? ಎಂದು
ನಿಮಗನ್ನಿಸಬಹುದು. ಅವರು ಮಾಡುವುದೆಲ್ಲವೂ

ಏನೆಂದರೆ, ಎರಡು ಮರಗಳ ನಡುವೆ ಒಂದು
ಹಗ್ಗದಿಂದ ಒಂದು ಸಣ್ಣ ಕೋಲನ್ನು ಸಿಕ್ಕಿಸುವುದು,
ಅಷ್ಟೇ. ಹಕ್ಕಿಯು ಬಂದು ಕೋಲಿನ ಮೇಲೆ ಕುಳಿತಾಗ
ಅದರ ಭಾರದಿಂದಲೇ ಇಡೀ ಕೋಲು
ತಲೆಕೆಳಗಾಗುತ್ತದೆ; ಹಕ್ಕಿಯೂ ಕೂಡ ಈಗ
ಕೋಲನ್ನು ಹಿಡಿದುಕೊಂಡು ತಲೆಕೆಳಗಾಗಿರುತ್ತದೆ.
ಅದು ತಲೆಕೆಳಗಾದ ಕ್ಷಣವೇ, ತನ್ನ
ತೋಲನವನ್ನು ಕಳೆದುಕೊಂಡು ಸಂಪೂರ್ಣವಾಗಿ
ಆಘಾತವನ್ನು ಅನುಭವಿಸುತ್ತದೆ ಹಾಗೂ ಕೋಲಿಗೆ

ತನ್ನ ಹಿಡಿತವನ್ನು ಬಿಗಿಯಾಗಿಸುತ್ತದೆ. ತನ್ನ ಜೀವವೇ ಅದರ ಮೇಲೆ ಆಧಾರವಾಗಿರುವಂತೆ ಅದನ್ನು ಭದ್ರವಾಗಿ ಹಿಡಿದಿರುತ್ತದೆ. ಅದು ತಲೆಕೆಳಗಾಗಿ ಜೋತಾಡುತ್ತಿರುವುದರಿಂದ ‘ನಾನು ಈ ಕೋಲಿನಿಂದ ಅನ್ಕ್ಲಚ್ ಆದರೆ ಏನು ಗತಿ? ನಾನು ಕೆಳಕ್ಕೆ ಬಿದ್ದು ಸಾಯುತ್ತೇನೆ' ಎಂದು ಯೋಚಿಸುತ್ತದೆ.
ಒಂದು ಹಕ್ಕಿಯು ಕೆಳಗೆ ಬಿದ್ದು ತಲೆಯನ್ನು ಒಡೆದುಕೊಂಡ ದಾಖಲೆಯು ಎಲ್ಲೂ ಇಲ್ಲ! ಆದರೆ ಹಕ್ಕಿಗೆ ಇದನ್ನು ತಿಳಿಯುವಷ್ಟು ಬುದ್ಧಿ ಇಲ್ಲ. ಅದು
ಹಾಗೆಯೇ ಜೋತಾಡುತ್ತಿರುತ್ತದೆ. ತಾನು ಕೈಬಿಡದೇ ಇರುವುದರಿಂದ ಅದು ತನ್ನ ಸ್ವತಂತ್ರವನ್ನಷ್ಟೇ ಅಲ್ಲದೆ ತನ್ನ ಜೀವವನ್ನೂ ಕಳೆದುಕೊಳ್ಳುತ್ತದೆ. ಏಕೆಂದರೆ ಕಡೆಗೆ ಬೇಟೆಗಾರನು ಬಂದು ಅದನ್ನು ಹಿಡಿಯುತ್ತಾನೆ.
ಪಕ್ಷಿಯಂತೆಯೇ ನೀವೂ ಸಹ ನಿಮ್ಮ ಮನಸ್ಸನ್ನು
ಬಿಟ್ಟುಬಿಟ್ಟರೆ, ಅದರಿಂದ ಅನ್ಕ್ಲಚ್ ಆದರೆ, ಆ
ಕ್ಷಣದಲ್ಲಿ ನೀವು ‘ಪರಮಹಂಸ’ರಾಗಬಹುದು
ಎಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಆ
ಕ್ಷಣವೇ ಬಿಡುಗಡೆ ಹೊಂದಬಹುದು. ನೀವು
ನಿಜವಾಗಿಯೂ ಹಾರಲಾರಂಭಿಸಬಹುದು.
ಕೋಲಿಗೆ ಜೋತಾಡುತ್ತಿದ್ದ ಪಕ್ಷಿಗಿದ್ದ ಭಯವೇ ನಿಮಗೂ ಈಗ ಇರುವುದು. ನಿಮ್ಮ ಭಯ ಹಾಗೂ ಪಕ್ಷಿಯ ಭಯಗಳೆರಡೂ ಒಂದೇ. ಪಕ್ಷಿಯು ತನ್ನ ಕೈಯನ್ನು ಬಿಡಲಾಗುವುದಿಲ್ಲವೆಂದೂ, ಬಿಟ್ಟರೆ ಅದು ಸಾಯುತ್ತದೆಂದೂ ನಂಬುತ್ತದೆ. ಅದೇ ರೀತಿ, ನೀವು ನಿಮ್ಮ ಮನಸ್ಸಿಗೆ ಕಟ್ಟುಬಿದ್ದು, ‘ನನ್ನಿಂದ ಎಲ್ಲವನ್ನೂ ಬಿಟ್ಟುಬಿಡಲಾಗುವುದಿಲ್ಲ. ನಾನು ಎಂಬುದು ಸಂಬಂಧವಿಲ್ಲದ, ಪ್ರತ್ಯೇಕವಾದ, ಸ್ವತಂತ್ರವಾದ, ತರ್ಕವಲ್ಲದ, ಆಲೋಚನೆಗಳಿಂದಾ

ನಂಬಲಾರಂಭಿಸಿದರೆ, ನಾನು ಕಳೆದುಹೋಗಬಹುದು' ಎಂದು ಭಾವಿಸುತ್ತೀರಿ.
ಬೇಟೆಗಾರನು ನಾಲ್ಕೈದು ಘಂಟೆಗಳ ನಂತರ
ಸಾವಕಾಶದಿಂದ ಬಂದು ಹಕ್ಕಿಯನ್ನು
ಪಂಜರದಲ್ಲಿಟ್ಟುಕೊಂಡು ಹೋಗುತ್ತಾನೆ. ಈಗ
ಪಕ್ಷಿಗೆ ಹಾರುವ ಸ್ವತಂತ್ರವೂ ಇಲ್ಲ, ಜೋತಾಡಲು
ಕೋಲೂ ಇಲ್ಲ. ಅದು ಹಿಡಿದಿದ್ದ ಕೋಲನ್ನು
ಬಿಟ್ಟಿದ್ದರೆ ಸುಮ್ಮನೆ ಹಾರಿ ಹೋಗಬಹುದಿತ್ತೆಂದು
ಆ ಮೂರ್ಖಪಕ್ಷಿಗೆ ತಿಳಿದಿಲ್ಲ!
ಅದೇ ರೀತಿ, ನೀವೂ ಸಹ ನಿಮ್ಮ ಗುರುತು ಹಾಗೂ ಭದ್ರತೆ ಎಂದುಕೊಂಡಿರುವ ವಿದ್ಯಾಭ್ಯಾಸವನ್ನು, ನಿಮ್ಮ ಮನಸ್ಸನ್ನು, ನಿಮ್ಮ ಜೀವನವನ್ನು, ನಿಮ್ಮ ಸಂಬಂಧಗಳನ್ನು ಅಥವಾ ನಿಮ್ಮ ಬ್ಯಾಂಕ್ನಲ್ಲಿರುವ ಹಣವನ್ನು ಹಿಡಿದುಕೊಂಡಿದ್ದೀರಿ. ಕಡೆಗೆ ನಿಮ್ಮ ಗುರುತೆಂದು ತಿಳಿದಿರುವ ಕೋಲನ್ನು ತೆಗೆಯಲು ಸಾವಿನ ದೇವನಾದ ಯಮನು ಬರುತ್ತಾನೆ. ಆಗ ನೀವು ಒಬ್ಬ ಬಿಡುಗಡೆ ಹೊಂದಿದ ಪರಮಹಂಸನೂ ಆಗಿರುವುದಿಲ್ಲ ಅಥವಾ ನಿಮ್ಮ ಗುರುತಿಗೆ ಅಂಟಿಕೊಳ್ಳಲೂ ಆಗುವುದಿಲ್ಲ. ನಿಮಗೆ ಸ್ವತಂತ್ರವೂ ಇರುವುದಿಲ್ಲ, ನಿಮಗೆ ನೀವು ಹಿಡಿದುಕೊಂಡಿರುವ ಅಥವಾ ನಿಮ್ಮ ಗುರುತಾದ ಕೋಲೂ ಇರುವುದಿಲ್ಲ. ಏಕೆಂದರೆ ಕೋಲೇ ಒಂದು ಭ್ರಮೆ.
ಪಕ್ಷಿಯು ಕೈಬಿಟ್ಟು ವಿರಮಿಸಿದರೆ ಒಂದೆರಡು ಕ್ಷಣಗಳು ಸಮತೋಲನೆಗಾಗಿ ಪಟಪಟನೆ ರೆಕ್ಕೆ ಬಡಿಯಬಹುದು. ತನ್ನನ್ನೇ ಸಮತೋಲನ ಗೊಳಿಸಿಕೊಳ್ಳಲು ಒಂದೆರಡು ನಿಮಿಷಗಳನ್ನು ತೆಗೆದುಕೊಳ್ಳಬಹುದು. ಆದರೆ ಅದು ಎಂದಿಗೂ ಬಿದ್ದು ಸಾಯುವುದಿಲ್ಲ. ಕೋಲನ್ನು ಬಿಟ್ಟಾಗ, ಒಂದೆರಡು ಕ್ಷಣಗಳು ಕೆಳಗೆ ಬರಬಹುದು. ಆದರೆ ಕೂಡಲೇ ತನ್ನನ್ನೇ ಒಗ್ಗಿಸಿಕೊಂಡು ಹಾರಲಾರಂಭಿಸುತ್ತದೆ.
ನೀವು
ಮಾಡಬೇಕಾದು-
ದೆಲ್ಲವೂ
ಏನೆಂದರೆ ನೀವು
ಅನಾಕ್ಲಚ್
ಆಗಿದ್ದೀರೆಂದು
ನಂಬುವುದು -
ನೀವು
ನಂಬದಿದ್ದರೂ
ಅದೇ ಸತ್ಯ!
ಸ್ಪಷ್ಟವಾಗಿ ತಿಳಿಯಿರಿ,
ನಿಮ್ಮ ವ್ಯಕ್ತಿತ್ವವನ್ನು
ಬಿಟ್ಟು ಬಿಡಿರಿ, ಆಗ ನೀವು ಎಂದಿಗೂ ಬಿದ್ದು
ಸಾಯುವುದಿಲ್ಲ. ನೀವು ಒಬ್ಬ
ಪರಮಹಂಸರಾಗುತ್ತೀರಿ.
ಈ ಕ್ಷಣವೇ ನಿಮ್ಮನ್ನೇ ನೀವು ನಂಬಿರಿ. ನಿಮ್ಮ ಗುರುತನ್ನು ಕಳೆದುಕೊಳ್ಳುವುದರ ಬಗ್ಗೆ ಚಿಂತಿಸದಿರಿ. ಸುಮ್ಮನೆ ನಿಮ್ಮಲ್ಲೇ ನೀವು ವಿಶ್ವಾಸವಿಟ್ಟು, ನಿಮ್ಮ ಗುರುತನ್ನು ಬಿಟ್ಟುಬಿಡಿರಿ. ಕೂಡಲೇ ಒಬ್ಬ ಪರಮಹಂಸರಾಗಿ ಬಿಡುಗಡೆಯನ್ನು ಪಡೆಯುತ್ತೀರಿ. ನೀವು ಮಾಡಬೇಕಾದುದೆಲ್ಲವೂ ಏನೆಂದರೆ ನೀವು ‘ಅನಾಕ್ಲಚ್’ ಆಗಿದ್ದೀರೆಂದು ನಂಬುವುದು – ನೀವು ನಂಬದಿದ್ದರೂ ಅದೇ ಸತ್ಯ!
ಸಂಘದ ಸುರಕ್ಷಿತ ಬಲೆ
ನೀವು ‘ಅನಾಕ್ಲಚ್’ ಆದಾಗ, ನಿಮ್ಮ ಜೀವನದಲ್ಲಿ, ನಿಮ್ಮ ದೈನಂದಿನ ಚಿಂತನೆಯಲ್ಲಿ,
ನಿಮ್ಮ ನಿರ್ಧಾರಗಳಲ್ಲಿ ಹಾಗೂ ದಿನಚರಿಯಲ್ಲಿ – ಜೀವನಶೈಲಿಯಲ್ಲಿಯೇ ಕ್ರಾಂತಿಕಾರಿ ಬದಲಾವಣೆಗಳಾಗುತ್ತವೆ. ಧೈರ್ಯವಾಗಿ ಆ ಕ್ರಾಂತಿಯನ್ನು ಅನುಭವಿಸುವುದನ್ನು ಮತ್ತು ನಿಮ್ಮಲ್ಲಿ ಉಂಟಾಗುವ ಪರಿವರ್ತನೆಗೊಳಗಾಗುವುದನ್ನೇ, ನಾನು ತಪಸ್ಸು ಎಂದು ಕರೆಯುತ್ತೇನೆ.
ನನ್ನ ಪರ್ಯಟನೆಯ ಕೆಲವು ಅಪರೂಪದ ಸಂದರ್ಭಗಳಲ್ಲಿ ಒಂದು ಪಕ್ಷಿಯು ಕೋಲಿಗೆ ಜೋತಾಡುವುದನ್ನು ನಾನು ನೋಡಿದ್ದೇನೆ. ಆ ಪಕ್ಷಿಯಂತೆಯೇ ಬಲೆಗೆ ಸಿಕ್ಕಿಹಾಕಿಕೊಂಡಿದ್ದ, ಆದರೆ ಕೈಬಿಟ್ಟು ಹಾರುವ ಧೈರ್ಯವಿದ್ದ, ಮತ್ತೊಂದು ಪಕ್ಷಿ ಬರುತ್ತದೆ. ಅದು, ಜೋತಾಡುತ್ತಿರುವ ಪಕ್ಷಿಯನ್ನು ಕುಕ್ಕಿ ಹೇಳುತ್ತದೆ, 'ಏಯ್, ಕೈಯನ್ನು ಬಿಟ್ಟುಬಿಡು, ನಿಶ್ಚಿಂತನಾಗು. ನಾನೂ ನಿನ್ನಂತೆಯೇ ಇದ್ದೆ. ನನಗೂ ಇದೇ ಸಮಸ್ಯೆ ಇತ್ತು. ನಾನು ನಿಶ್ಚಿಂತನಾದಾಗ ಹಾರಲಾರಂಭಿಸಿದೆ. ಸಮತೋಲನಗೊಳ್ಳಲು ಕೇವಲ ಒಂದೆರಡು ಕ್ಷಣಗಳೇ ಸಾಕು. ನಾನು ಕೈಯನ್ನು ಬಿಟ್ಟಾಗ, ಬಿದ್ದು ತಲೆಯೊಡೆದುಕೊಂಡು ಸಾಯಲಿಲ್ಲ. ನಾನು ಬಿಡುಗಡೆಯನ್ನು ಮಾತ್ರ ಹೊಂದಿದೆ. ನಾನೊಂದು ಸ್ವಚ್ಛಂದ ಹಕ್ಕಿಯಾದೆ. ನೀನೂ ಹಾಗೇಯೇ ಮಾಡು' ಎಂದು. ಆದರೆ ಜೋತಾಡುತ್ತಿರುವ ಹಕ್ಕಿಯು ಇದನ್ನು ನಂಬುವುದಿಲ್ಲ.
ತಿಳಿಯಿರಿ, ಇತರ ಹಕ್ಕಿಗಳನ್ನು ಬಿಡಿಸುವುದು ಸ್ವತಂತ್ರವಾದ ಹಕ್ಕಿಯ ಹೊಣೆ. ಕೋಲಿಗೆ ಸಿಕ್ಕಿಹಾಕಿಕೊಂಡು ಜೋತಾಡುತ್ತಿರುವ ಹಕ್ಕಿಗಳಿಗೆ 'ಬಿಡುಗಡೆ ಹೊಂದು' ಎಂದು ಹೇಳುವುದು ಸ್ವತಂತ್ರವಾದ ಹಕ್ಕಿಯ ಜವಾಬ್ದಾರಿ. ಆ ಸ್ವತಂತ್ರವಾದ ಹಕ್ಕಿಯೇ ನಾನು ಹಾಗೂ ನಾನು ಒಂದು ಸುರಕ್ಷಿತವಾದ ಬಲೆಯನ್ನು ಸೃಷ್ಟಿಸಿದ್ದೇನೆ. ಒಂದು ವೇಳೆ ನೀವು ಬಿದ್ದರೂ, ನಿಮಗೆ ಪೆಟ್ಟಾಗುವುದಿಲ್ಲ. ನಿಶ್ಚಿಂತರಾಗಿರಿ! ನಿಮ್ಮ ಗುರುತನ್ನು ಕೈಬಿಡಿರಿ. ಆಗ ನೀವಾಗಿಯೇ ಹಾರುತ್ತೀರಿ! ತಿಳಿಯಿರಿ, ಗುರುಗಳ ಸಮುದಾಯದ ಸಂಘವೇ ಬಲೆ. ನೀವು ಬಿದ್ದರೂ, ನೀವು ಪೆಟ್ಟು ಮಾಡಿಕೊಳ್ಳುವುದಿಲ್ಲ.
ಮೊದಲನೆಯದಾಗಿ, ನೀವು ಬೀಳುವುದೇ ಇಲ್ಲ.
ಆದರೆ, ನಿಮಗೆ ಹೆಚ್ಚು ಭದ್ರವಾದ ಆಶ್ವಾಸನೆಯನ್ನು
ಕೊಡಲು ಸಂಘವೆಂಬ ಆಧ್ಯಾತ್ಮಿಕ ಸಮುದಾಯವನ್ನು
ಸೃಷ್ಟಿಸಲಾಗಿದೆ. ಆದ್ದರಿಂದ ನೀವೆಲ್ಲರೂ ಬಂದು
ಸಂಘದ ಅನುಭವವನ್ನು ಪಡೆಯಲು ನಿಮ್ಮೆಲ್ಲರನ್ನೂ
ನಾನು ಆಹ್ವಾನಿಸುತ್ತೇನೆ.
ತಿಳಿಯಿರಿ, ಬಲೆಗೆ ಸಿಕ್ಕಿಹಾಕಿಕೊಂಡಿರುವ
ಪಕ್ಷಿಗಳನ್ನು ಬಿಡುಗಡೆ ಹೊಂದಲು ಸಹಾಯ ಮಾಡಿ,
ಅವು ಬಿಡಿಸಿಕೊಳ್ಳಲು ಪ್ರಚೋದಿಸುವುದು ಒಂದು
ಸ್ವತಂತ್ರವಾದ ಪಕ್ಷಿಯ ಜವಾಬ್ದಾರಿ.
ಮಂಗನ ಕಥೆ
ಹಕ್ಕಿಯನ್ನು ಹಿಡಿಯುವಂತೆಯೇ ಬೇಟೆಗಾರರಿಗೆ ಮಂಗಗಳನ್ನು ಹಿಡಿಯಲು ಒಂದು ಬೋನು ಇದೆ. ಮಂಗಗಳನ್ನು ಹಿಡಿಯಲು ಒಂದು ಸಣ್ಣ ಪೆಟ್ಟಿಗೆಯನ್ನು ಬೋನಿನಂತೆ ಬಳಸುತ್ತಾರೆ. ಒಂದು ಸಣ್ಣ ಬಾಯಿರುವ ಈ ಪೆಟ್ಟಿಗೆಯೊಳಗೆ ಸ್ವಲ್ಪ ಸಿಹಿತಿನಿಸುಗಳನ್ನು ಇಡುತ್ತಾರೆ. ಸಿಹಿತಿನಿಸನ್ನು ತೆಗೆದುಕೊಳ್ಳಲು ಮಂಗನು ತನ್ನ ಕೈಯನ್ನು ಪೆಟ್ಟಿಗೆಯೊಳಗೆ ಹಾಕುತ್ತದೆ. ಮಂಗವು ತಿನಿಸನ್ನು
ಹಿಡಿದಿರುವವರೆಗೂ ಅದರ ಕೈಯನ್ನು ಡಬ್ಬಿಯಿಂದ
ಹೊರತೆಗೆಯಲಾಗುವುದಿಲ್ಲ. ಏಕೆಂದರೆ ಅದರ
ಮುಷ್ಠಿಯು ಡಬ್ಬಿಯ ತೂತಿಗಿಂತ
ದೊಡ್ಡದಾಗಿರುತ್ತದೆ!
ಮಂಗವು ಸಿಹಿತಿನಿಸನ್ನು ಬಿಟ್ಟುಬಿಟ್ಟರೆ ತನ್ನ ಕೈಯನ್ನು ಕೂಡಲೇ ಹೊರತೆಗೆದುಕೊಳ್ಳಬಹುದು. ಆದರೆ ಮಂಗಕ್ಕೆ ಇದನ್ನು ತಿಳಿಯುವಷ್ಟು ಬುದ್ಧಿ ಇರುವುದಿಲ್ಲ. ಅದು ಸಿಹಿತಿನಿಸನ್ನು ಹಿಡಿದೇ ಇರುತ್ತದೆ. ಇದರಿಂದ ತನ್ನ ಕೈಯನ್ನು ಹೊರತೆಗೆದುಕೊಳ್ಳಲಾಗುವುದಿಲ್ಲ. ಅದು ಸಿಹಿತಿನಿಸನ್ನು ಬಿಟ್ಟುಬಿಟ್ಟರೆ, ತನ್ನ ಕೈಯನ್ನು ಹೊರತೆಗೆದು ಸ್ವತಂತ್ರವಾಗುತ್ತದೆ. ಈ ಕಥೆಯ ತಿಳಿವಳಿಕೆಯು ನಿಮ್ಮಲ್ಲಿ ಉಂಟಾಗಲು ನೀವು ಆಸ್ಪದಕೊಟ್ಟರೆ, ಆ ಕೂಡಲೇ ನಿಮ್ಮ ದಂಡಗಳಿಂದ ‘ಅನ್ಕ್ಲಚ್’ ಆಗಿ ಆ ಕ್ಷಣದಿಂದಲೇ ಬಿಡುಗಡೆ ಹೊಂದುತ್ತೀರಿ.
ವರ್ತಮಾನದಲ್ಲಿ ತೀವ್ರವಾಗಿ ಬಾಳುವುದು
ನೀವು ಸ್ವಾಭಾವಿಕವಾಗಿಯೇ ಪ್ರತಿಕ್ಷಣವೂ ತ್ಯಜಿಸುತ್ತಿರುತ್ತೀರಿ
ಅದೃಷ್ಟವಶಾತ್, ನೀವು ಸ್ವಾಭಾವಿಕವಾಗಿಯೇ,
ಒಂದು ಸಮಯದಲ್ಲಿ ಒಂದು ಆಲೋಚನೆಯನ್ನು
ಮಾತ್ರ ಹೊಂದಲು ಸಾಧ್ಯ. ನಿಮ್ಮಲ್ಲಿ ಮತ್ತೊಂದು
ಆಲೋಚನೆಯು ಬಂದಾಗ, ಹಿಂದಿನ
ಆಲೋಚನೆಯು ನಿಮ್ಮ ಮೇಲಿನ ತನ್ನ ಶಕ್ತಿಯನ್ನು
ಅಥವಾ ಪ್ರಭಾವವನ್ನು ಕಳೆದುಕೊಂಡಿದೆ ಎಂದರ್ಥ.
ಹೊಸ ಆಲೋಚನೆಯು ಪ್ರವೇಶಿಸಿದರೆ ಹಳೆಯ
ಆಲೋಚನೆಯು ತ್ಯಜಿಸಲ್ಪಟ್ಟಿದೆ ಎಂದರ್ಥ.
ಏಕೆಂದರೆ ಒಂದು ಸಮಯದಲ್ಲಿ ಎರಡು
ಆಲೋಚನೆಗಳು ಉಂಟಾಗಲು ಸಾಧ್ಯವಿಲ್ಲ. ಒಂದು
ಆಲೋಚನೆ ಮಾತ್ರ ಇರಲು ಸಾಧ್ಯ. ಒಂದು ವೇಳೆ
ಹಳೆಯ ಆಲೋಚನೆಯೂ ಇದೆಯೆಂದು ನೀವು
ಹೇಳುವುದಾದರೆ, ಆ ಕ್ಷಣದಲ್ಲಿ ಹೊಸ
ಆಲೋಚನೆಯು ತ್ಯಜಿಸಲ್ಪಟ್ಟಿದೆ ಎಂದರ್ಥ!
ರಾಮಕೃಷ್ಣ ಪರಮಹಂಸರಿಂದ ಒಂದು ಸುಂದರವಾದ ಕಥೆ ಹೇಳಲ್ಪಟ್ಟಿದೆ:
ಒಮ್ಮೆ ಒಂದು ಕೋಟೆಯಲ್ಲಿ ವಾಸಿಸುತ್ತಿದ್ದ
ರಾಜನನ್ನು ಇಪ್ಪತ್ತು ಲಕ್ಷ ಪಡೆಯುಳ್ಳ ಶತ್ರುಗಳು
ಧಾಳಿ ಮಾಡಲು ಬಂದರು. ರಾಜನ ಬಳಿ ಇಬ್ಬರೋ
ಮೂವರೋ ಇದ್ದುದರಿಂದ ಆತನಿಗೆ ಬಹಳ
ಭಯವಾಯಿತು. ರಾಜನು, ‘ಇಪ್ಪತ್ತು ಲಕ್ಷ
ಜನರೆದುರು ನಾನು ಇರುವುದು ಒಬ್ಬನೇ; ಅವರು
ನನ್ನನ್ನು ಕೊಂದುಬಿಡುತ್ತಾರೆ’ ಎಂದು ತನ್ನ
ಸಲಹೆಗಾರನಿಗೆ ಹೇಳಿದನು.
ರಾಜನ ಸಲಹೆಗಾರನು, ‘ಚಿಂತಿಸಬೇಡ ರಾಜ,
ಕೋಟೆಯ ಒಂದು ದ್ವಾರವನ್ನು ಮಾತ್ರ ತೆರೆ.
ಖಂಡಿತವಾಗಿ ಒಂದು ದ್ವಾರದಿಂದ ಒಮ್ಮೆ ಗೆ ಒಬ್ಬನು
ಮಾತ್ರ ಒಳಬರಲು ಸಾಧ್ಯ. ಅವರು ಬಂದಂತೆಲ್ಲಾ
ನೀನು ದ್ವಾರದ ಬಳಿ ನಿಂತು ಒಬ್ಬೊಬ್ಬರನ್ನೇ
ಕೊಲ್ಲು, ಅಷ್ಟೇ! ಇಡೀ ಸೇನೆಯೊಂದಿಗೆ ಕದನ
ಮಾಡಲು ಪ್ರಯತ್ನಿಸಬೇಡ’ ಎಂದು ಹೇಳಿದನು.
> ಪ್ರತಿಯೊಂದು
> ನಿಮ್ಮ
> ಅಂತರಂಗದಲ್ಲಿ
> ಹಳೆಯ
> ಆಲೋಚನೆಗಳು
> ನಿವಾರಣೆ-
> ಯಾಗುತ್ತಿರುತ್ತವೆ.
ನಿಮ್ಮ ಶತ್ರು-
ಗಳೆಲ್ಲರೂ ಒಟ್ಟಿಗೆ
ನೆರೆದಿದ್ದಾರೆಂದುಕೊಂಡರೆ
ನಿಮಗೆ ಸಲ್ಲದ
ಭಯಗಳುಂಟಾಗುತ್ತವೆ.
ಒಂದು ಸಮಯಕ್ಕೆ ಎರಡು
ಆಲೋಚನೆಗಳು
ಉಂಟಾಗಲು ಸಾಧ್ಯವಿಲ್ಲ.
ಅಂದರೆ ಪ್ರತಿಯೊಂದು ಆಲೋಚನೆಯ ಸ್ಥಾನವನ್ನು
ಮುಂದಿನ ಆಲೋಚನೆಯು ತೆಗೆದುಕೊಳ್ಳುತ್ತದೆ.
ನಾನು ಮತ್ತೆ ಹೇಳುತ್ತೇನೆ:
ಮೊದಲನೆಯದೆಂದರೆ, ನಿಮಗೆ ಒಂದು ಬಾರಿಗೆ
ಒಂದು ಆಲೋಚನೆ ಮಾತ್ರವೇ ಉಂಟಾಗಲು ಸಾಧ್ಯ.
ಎರಡನೆಯದೆಂದರೆ, ಹಳೆಯ ಆಲೋಚನೆಯು
ಹೊರಹಾಕಲ್ಪಡದೆ ಇರುವವರೆಗೂ ಎರಡನೆಯ
ಆಲೋಚನೆಯು ಬರಲಾಗುವುದಿಲ್ಲ.
ಮೂರನೆಯದೆಂದರೆ, ಯಾರಾದರೂ ನನ್ನನ್ನು ನೂಕಿ ಇಲ್ಲಿ ಕುಳಿತರೆ, ಅವರು ಖಂಡಿತವಾಗಿಯೂ ನನಗಿಂತಲೂ ಬಲಶಾಲಿಯೇ ಆಗಿರುತ್ತಾರೆ! ಒಳಬರುವ ಆಲೋಚನೆಯು ಹಳೆಯ ಆಲೋಚನೆಯನ್ನು ಹೊರನೂಕಿದರೆ ಆ ಆಲೋಚನೆಯು ಹೆಚ್ಚು ಶಕ್ತಿಯುತವಾಗಿರುತ್ತದೆ. ಎಂದರೆ, ಈಗ ಬರುತ್ತಿರುವ ಯಾವುದೇ ಆಲೋಚನೆಯ ಮೂಲವು ವರ್ತಮಾನ ಕ್ಷಣದಲ್ಲಿರುತ್ತದೆ. ಆಲೋಚನೆಯು ಯಾವುದರ ಬಗ್ಗೆಯೇ ಆಗಿದ್ದರೂ, ತ್ಯಜಿಸಲ್ಪಟ್ಟ ಆಲೋಚನೆಗಿಂತ ನಂತರದ ಆಲೋಚನೆಯು ಹೆಚ್ಚು ಶಕ್ತಿಯುತವಾಗಿರುತ್ತದೆ.
ತ್ಯಜಿಸುವುದೇ ನಿಮ್ಮ ಸ್ವಭಾವ. ನೀವು
ತ್ಯಜಿಸುವುದನ್ನು ಕಲಿಯಬೇಕಾಗಿಲ್ಲ. ಪ್ರತಿಯೊಂದು
ತ್ಯಜಿಸುತ್ತಲೇ ಇದ್ದೀರಿ. ನಾನು ತ್ಯಜಿಸುವುದು
ಎಂದಾಗ ಇಲ್ಲಿ ಅರ್ಥೈಸಿಕೊಳ್ಳುವುದು ಏನನ್ನು?
ಪ್ರತಿಯೊಂದು ಕ್ಷಣದಲ್ಲಿಯೂ ಒಂದು
ಆಲೋಚನೆಯ ನಂತರ ಮತ್ತೊಂದು
ಆಲೋಚನೆಯನ್ನು ತ್ಯಜಿಸುತ್ತಿರುತ್ತೀರಿ. ಹೊಸ
ಆಲೋಚನೆಗಳನ್ನು ನಿಮ್ಮೊಳಗೆ ತಂದುಕೊಳ್ಳಲು
ಆಗಲೇ ಸಾಧ್ಯವಾಗುವುದು. ಪ್ರತಿಯೊಂದು ನಿಮ್ಮ
ಅಂತರಂಗದಲ್ಲಿ ಹಳೆಯ ಆಲೋಚನೆಗಳು
ನಿವಾರಣೆಯಾಗುತ್ತಿರುತ್ತವೆ.
ಆಲೋಚನೆಗಳು ಸತತವಾಗಿ ತಮ್ಮಿಂದ ತಾವೇ
ತ್ಯಜಿಸಲ್ಪಡುತ್ತಿರುತ್ತವೆ. ನಿಮ್ಮ ಆಲೋಚನೆಗಳು
ಒಂದಕ್ಕೊಂದು ಸಂಬಂಧಿಸಿವೆ ಎಂಬ ನಂಬಿಕೆಯನ್ನು
ಮೂಡಿಸಿಕೊಂಡಾಗ, ಒಂದಕ್ಕೊಂದು
ಸೇರಿಕೊಂಡಿರುವ ದಂಡದಂತಹ ವೇದನೆಯು
ಉಂಟಾಗುವುದೇ, ಇರುವ ಸಮಸ್ಯೆ. ನಿಮಗೆ
ಸಮಸ್ಯೆಯಿದೆ ಎಂಬ ನಿಮ್ಮ ನಂಬಿಕೆಯೇ ನಿಮಗಿರುವ
ಏಕೈಕ ಸಮಸ್ಯೆ.
ಪ್ರತಿಯೊಂದು ನಿಮ್ಮ ಅಂತರಂಗವು ಹೊಸದಾಗಿ ಒಳಬರುವ ಆಲೋಚನೆಗಳಿಂದ ಪರಿಶುದ್ಧವಾಗುತ್ತದೆ. ಈ ಪ್ರಕ್ರಿಯೆಯನ್ನು ಮುಂದುವರೆಯಲು ಬಿಟ್ಟರೆ, ಅದು ತನ್ನಷ್ಟಕ್ಕೆ ತಾನೇ ಆಗುತ್ತದೆ ಹಾಗೂ ಪರಿಶುದ್ಧವೂ ಆಗುತ್ತದೆ. ನಿಮ್ಮ ಮನಸ್ಸನ್ನು ಪರಿಶುದ್ಧಗೊಳಿಸುವ ಅಗತ್ಯವೇ ನಿಮಗಿರುವುದಿಲ್ಲ. ನೀವು ಮಾಡಬೇಕಾದುದೆಲ್ಲವೂ ಏನೆಂದರೆ, ಸುಮ್ಮನೆ ಆಚೆಗೆ ಬರುವುದು - ನಿಮ್ಮ ವ್ಯವಸ್ಥೆಯಿಂದ ಆಚೆಗೆ ಬಂದರೆ ವ್ಯವಸ್ಥೆಯು ತನ್ನಷ್ಟಕ್ಕೆ ತಾನೇ ಮುಂದೆ ಸಾಗುತ್ತದೆ.
ನೀವು ತಿಳಿಯಬೇಕಾದ ಒಂದು ಮುಖ್ಯವಾದ
ಸತ್ಯವೆಂದರೆ, ನಿಮಗೆ ಬೇಕಿದ್ದರೂ,
ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿದರೂ, ನಿಮ್ಮ
ವೇದನೆಯನ್ನು ಬಹಳ ಕಾಲ ಅಧೀನಪಡಿಸಿಕೊಳ್ಳಲು
ಅಥವಾ ಹಿಡಿದಿಟ್ಟುಕೊಳ್ಳಲು ನಿಮಗಾಗುವುದಿಲ್ಲ.
ವೇದನೆಯನ್ನು ಹಿಡಿದಿಡಲು ಪ್ರಯತ್ನಿಸಿದರೂ ಅದನ್ನು ಹಿಡಿದಿಡಲಾಗುವುದಿಲ್ಲ. ಏಕೆಂದರೆ ಸತತವಾಗಿ ವೇದನೆಯನ್ನು ಸೃಷ್ಟಿಸುವ ನಿಮ್ಮ ಆಲೋಚನೆಗಳೂ ಕೂಡ ಇನ್ನೂ ಹೊಸ ಆಲೋಚನೆಗಳಿಂದ ಬದಲೀಕರಿಸಲ್ಪಡುತ್ತವೆ. ವಾಸ್ತವವಾಗಿ ನಿಮ್ಮ ವೇದನೆಗೆ ಅಂಟಿಕೊಳ್ಳಲು ನಿಮ್ಮ ಕಡೆಯಿಂದ ಬಹಳಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಏಕೆಂದರೆ ಆಲೋಚನೆಗಳು ಸದಾ ಹರಿಯುತ್ತಿರುತ್ತವೆ.