ಹೊಸ ಆಲೋಚನೆಗಳಿಗೆ ಆಸ್ಪದ ಕೊಡಿ
This text was machine-transcribed from the printed book and may contain errors. Select the words and choose “Report a mistake”.
ಸ್ಪಷ್ಟವಾಗಿ ತಿಳಿಯಿರಿ, ಒಂದು ಹೊಸ ಆಲೋಚನೆಯನ್ನು ತರುವ ನಿಮ್ಮ ಶಕ್ತಿಯೇ ನಿಮಗೆ ಹಳೆಯ ಆಲೋಚನೆಯನ್ನು ಬಿಟ್ಟುಬಿಡುವ ಶಕ್ತಿಯಿದೆ ಎಂದು ಸಾಬೀತುಪಡಿಸುತ್ತದೆ. ಸಮಸ್ಯೆ ಏನೆಂದರೆ ನಿಮ್ಮ ಮೂಲಕ ಹೊಸ ಆಲೋಚನೆಗಳ ಹರಿಯುವಿಕೆಗೆ ಸಾಕ್ಷಿಯಾಗದೆ, ಹಳೆಯ ಆಲೋಚನೆಗಳನ್ನು ನಿಮ್ಮ ವ್ಯವಸ್ಥೆಯೊಳಗೆ ತರಲು ಯತ್ನಿಸುತ್ತೀರಿ. ಅದು ಹೇಗೆಂದರೆ, ಕಸದ ಬುಟ್ಟಿಗೆ ಹಾಕಿದ ಪತ್ರಗಳನ್ನು ಪುನಃ ಪತ್ರದ ಪೆಟ್ಟಿಗೆಗೆ ತಂದಂತೆ. ಕಸದ ಬುಟ್ಟಿಗೆ ಹಾಕಿದ ಪತ್ರಗಳನ್ನು ವಾಪಸ್ಸು ತರುವ ಅಗತ್ಯವೇನಾದರೂ ಇದೆಯೇ? ಇಲ್ಲ! ಸತತವಾಗಿ ಹಳೆಯ ಆಲೋಚನೆಗಳನ್ನು ತರಲು ಇಚ್ಛಿಸುತ್ತಿದ್ದರೆ ನೀವು ಬರಿಯ ವೇದನೆಯನ್ನೇ ಸೃಷ್ಟಿಸಿಕೊಳ್ಳುತ್ತೀರಿ.
ತಿಳಿಯಿರಿ, ಯಾವುದೇ ವೇದನೆಯನ್ನು ಒಂದು
ಹೊಸ ಆಲೋಚನಾ ಪ್ರವಾಹದಿಂದ ಬದಲಿಸಲು
ಸಾಧ್ಯವೆಂಬ ವಾಸ್ತವಾಂಶವನ್ನು ಬೆಂಬಲಿಸಿದರೆ ಅದು
ನೈಜವಾಗುತ್ತದೆ ಹಾಗೂ ವೇದನೆ ಇರುವುದಿಲ್ಲ.
'ಇಲ್ಲ, ನಾನು ಆಲೋಚನೆಗಳನ್ನು ಬದಲಿಸಲು ಎಷ್ಟೇ
ಪ್ರಯತ್ನಿಸಿದರೂ, ವೇದನೆಯು ಮತ್ತೆ ಬರುತ್ತದೆ'
ಎಂಬ ಆಲೋಚನೆಯನ್ನು ಬೆಂಬಲಿಸಿದರೆ ನೀವು
ಅದನ್ನೇ ನಿಜವಾಗಿಸುತ್ತೀರಿ. ವೇದನೆಯು ಮರಳಿ
ಬರುತ್ತದೆಂಬ ಆಲೋಚನೆಗೆ ಮನ್ನಣೆಕೊಟ್ಟರೆ ಅದು
ಮರಳಿ ಬರುತ್ತದೆ. ಅದು ಹೊರಟು ಹೋಗುತ್ತದೆಂಬ
ಆಲೋಚನೆಗೆ ಮನ್ನಣೆಕೊಟ್ಟರೆ ಅದು
ಹೊರಟೇಹೋಗುತ್ತದೆ.
ನೀವು ತಿಳಿಯಲು ಅಗತ್ಯವಿರುವುದೇನೆಂದರೆ
ನಿಮ್ಮ ಅಂತರಂಗದಲ್ಲಿ ಒಮ್ಮೆಯಾದರೂ ಒಂದು
ಆಲೋಚನೆಯನ್ನು ಬದಲಿಸಿದ್ದು, ಹಿಂದಿನ
ಆಲೋಚನೆಗೆ ಹೋಗದೆ ಇರಲು ಸಾಧ್ಯವಾದರೆ,
'ನಾನು ಒಮ್ಮೆ ಬದಲಿಸಿದ್ದೇನೆ, ನನ್ನಿಂದ ಅದನ್ನು
ಮತ್ತೆ ಬದಲಿಸಲು ಸಾಧ್ಯ' ಎಂಬ ದೃಢವಿಶ್ವಾಸ
ಉಂಟಾಗುತ್ತದೆ. ಆಗ ನೀವು ನಿಮಗೇ ಹೀಗೆ
ಹೇಳಿಕೊಳ್ಳಬಹುದು, 'ಹಳೆಯ ಆಲೋಚನೆಯು
ಹತ್ತು ಬಾರಿ ಬಂದರೆ, ಹತ್ತು ಬಾರಿಯೂ ಅದನ್ನು
ಬದಲಿಸುತ್ತೇನೆ!' ಎಂದು, ಅಷ್ಟೇ. ಆಗ ಹಳೆಯ
ಆಲೋಚನೆಗಳ ಹಿಂದಿರುವ ಪ್ರಸಂಗವೇ ಇಲ್ಲದಿರುವುದನ್ನು ಕಾಣುವಿರಿ.
ಬುದ್ಧನ ಜೀವನದಲ್ಲಿ ಒಂದು ಬಹಳ ಸುಂದರವಾದ
ಸನ್ನಿವೇಶವಿದೆ: ಬುದ್ಧನು ಹೇಳುತ್ತಾನೆ,
'ಧ್ಯಾನದಲ್ಲಿದ್ದಾಗ, ಕೆಲವು ಘಂಟೆಗಳ ನಂತರ ನಾನು
ಧ್ಯಾನದಿಂದ ಏಳುತ್ತೇನೆ ಎಂದುಕೊಂಡಾಗಲೆಲ್ಲಾ
ನನಗೆ ಜ್ಞಾನೋದಯವಾಗುತ್ತಿರಲಿಲ್ಲ. ಒಮ್ಮೆ ನಾನು
ನನಗೆ ಜ್ಞಾನೋದಯವಾಗದೆ ಈ ಸ್ಥಳದಿಂದ
ಮೇಲೇಳುವುದಿಲ್ಲ; ಈ ದೇಹವು ಇಲ್ಲಿಯೇ
ಒಣಗಿಹೋಗಲಿ; ಜ್ಞಾನೋದಯವಾಗುವವರೆಗೂ
ನಾನು ಇಲ್ಲಿಂದ ಅಲ್ಲಾಡುವುದಿಲ್ಲ ಎಂದು
ನಿರ್ಧರಿಸಿದೆ' ಎಂದು. ಬುದ್ಧನು, 'ಆ ದೃಢ
ಸಂಕಲ್ಪವನ್ನು, ಅಂತಹ ಸ್ಪಷ್ಟತೆಯನ್ನು
ಮಾಡಿಸಿಕೊಂಡ ಮರುಕ್ಷಣವೇ
ಜ್ಞಾನೋದಯವನ್ನು ಪಡೆದೆನು!' ಎಂದು
ನುಡಿಯುತ್ತಾನೆ.
ನಿಮ್ಮ ವೇದನೆಯನ್ನು ಬದಲಿಸಲು ನೀವು
ಒಂದೆಡೆ ಕುಳಿತುಕೊಂಡು, 'ಇಂದು ನಾನು ಹತ್ತು
ಬಾರಿ ಆಲೋಚನೆಯನ್ನು ಬದಲಿಸಲು ಯತ್ನಿಸುತ್ತೇನೆ.
ಹನ್ನೊಂದನೇ ಬಾರಿ ಆ ಆಲೋಚನೆಯು ಹಿಂದಿರುಗಿ
ಬಂದರೆ ನಾಳೆ ಮತ್ತೆ ಪ್ರಯತ್ನಿಸುತ್ತೇನೆ' ಎಂದು
ಯೋಚಿಸಿದರೆ, ಏನೂ ಆಗುವುದಿಲ್ಲ. ನಿಮ್ಮಲ್ಲಿ
ಯಾವ ಪರಿವರ್ತನೆಯೂ ಆಗುವುದಿಲ್ಲ! ಬಹಳ
ಸ್ಪಷ್ಟವಾಗಿ ನಿರ್ಧರಿಸಿರಿ, 'ನನಗೆ ಬರುತ್ತಿರುವ
ನಕಾರಾತ್ಮಕವಾದ ಆಲೋಚನೆಗಳು ನಿಲ್ಲುವವರೆಗೂ
ನಾನು ಅವನ್ನು ಬದಲಿಸುತ್ತಿರುತ್ತೇನೆ' ಎಂದು.
ಇದನ್ನೇ ನಾನು ಧೈರ್ಯ ಎಂದು ಕರೆಯುವುದು.
ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸಮಸ್ಯೆಗಳಿಗೆ ಪರಿಹಾರ
ನಾವು ಅನ್ಕ್ಲಚ್ ಆದಾಗ ಮೊದಲನೆಯದಾಗಿ
ನಮಗಾಗುವುದೇನೆಂದರೆ, ಒಂದು ಆಂತರಿಕ
ಉಪಶಮನದ ಪರಿಣಾಮ. ನಮ್ಮೊಳಗೆ ಒಂದು
ಆಳವಾದ ಮೌನ ಹಾಗೂ ಶಾಂತಿಯನ್ನು
ಹೊಂದುತ್ತೇವೆ.
ಎರಡನೆಯದಾಗಿ, ಆ ಆಂತರಿಕ ಉಪಶಮನವು
ದೈಹಿಕ ಸ್ವಾಸ್ಥ್ಯವನ್ನು ಹೊರಸೂಸುತ್ತದೆ. ಅದೇ
ನಮ್ಮ ಆರೋಗ್ಯ.
ಮೂರನೆಯದಾಗಿ, ಸ್ವಾಭಾವಿಕವಾಗಿ ಅದು ನಮ್ಮ ಸಂಬಂಧಗಳಿಗೂ ಹರಡುತ್ತದೆ.
ನಾಲ್ಕನೆಯದಾಗಿ, ಈ ಮೂರೂ ಸುಂದರವಾಗಿ
ನಡೆಯುತ್ತಿರುವುದರಿಂದ ನಾವು ಸೃಜನಾತ್ಮಕವಾಗಿ
ಉತ್ಪನ್ನಕಾರಕರಾಗುತ್ತೇವೆ!
ದೀರ್ಘಕಾಲದ ರೋಗಗಳಿಗೆ ಪರಿಹಾರ
ಜನರು ನನ್ನ ಬಳಿ ಬಂದು ಕೇಳುತ್ತಾರೆ,
'ಸ್ವಾಮೀಜಿ, ಕಳೆದ ಇಪ್ಪತ್ತು ವರ್ಷಗಳಿಂದ ನನಗೆ
ಮಂಡಿ ನೋವಿದೆ' ಎಂದು. ಇಲ್ಲ, ಹಾಗಿರಲು
ಸಾಧ್ಯವಿಲ್ಲ! ದಯವಿಟ್ಟು ತಿಳಿಯಿರಿ, ನಿಜವಾಗಿ
ಹಾಗಿರಲು ಸಾಧ್ಯವೇ ಇಲ್ಲ. ನಾನು ನಿಮ್ಮನ್ನು
ಅಗೌರವಿಸುತ್ತಿಲ್ಲ ಅಥವಾ ಎಲ್ಲಾ ಸಮಸ್ಯೆಗಳೂ ನಿಮ್ಮ ತಲೆಯಲ್ಲಿಯೇ ಇರುವುದೆಂದು ಹೇಳಿ ನಿಮಗೆ ಸಂಕಟವನ್ನು ಹೆಚ್ಚು ಮಾಡುತ್ತಿಲ್ಲ. ನಾನು ಸತ್ಯವನ್ನು ಮಾತ್ರ ಹೇಳುತ್ತಿದ್ದೇನೆ. ನಿಮ್ಮೆಲ್ಲಾ ಸಮಸ್ಯೆಗಳು ಇರುವುದು ನಿಮ್ಮ ತಲೆಯಲ್ಲಿಯೇ! ನಾನು ಕೇವಲ ಸತ್ಯವನ್ನು ನುಡಿಯುತ್ತಿದ್ದೇನೆ.
ಎರಡು ವರ್ಷದ ಹಿಂದೆ ನೀವು ಅನುಭವಿಸಿದ ಮಂಡಿ ನೋವು, ಒಂದು ವರ್ಷದ ಹಿಂದೆ ಅನುಭವಿಸಿದ ಮಂಡಿ ನೋವು, ಎರಡು ತಿಂಗಳ ಹಿಂದೆ ನೀವು ಅನುಭವಿಸಿದ ಮಂಡಿ ನೋವು, ಎರಡು ಘಂಟೆಗಳ ಹಿಂದೆ ನೀವು ಅನುಭವಿಸಿದ ಮಂಡಿ ನೋವು ಎಲ್ಲವೂ ಸ್ವತಂತ್ರವಾದ ಅನುಭವಗಳು. ಅವೆಲ್ಲವನ್ನೂ ಒಂದಕ್ಕೊಂದು ಸೇರಿಸುವುದರಿಂದ ಇಪ್ಪತ್ತು ವರ್ಷಗಳಿಂದ ನಿಮಗೆ ಮಂಡಿ ನೋವಿರುವುದೆಂಬ ತೀರ್ಮಾನಕ್ಕೆ ಬರುತ್ತೀರಿ. ನಿಮಗೆ ಇಪ್ಪತ್ತು ವರ್ಷಗಳಿಂದ ಸತತವಾಗಿ ಮಂಡಿ ನೋವಿರುವುದು ಸತ್ಯವೇ? ಮಂಡಿ ನೋವಿಲ್ಲದ ನಡುವಿನ ಕ್ಷಣಗಳನ್ನು ಏನೆನ್ನಬೇಕು? ನೀವು ತಿಳಿಯಬೇಕಾದ ಒಂದು ಮುಖ್ಯವಾದ ವಿಷಯವೆಂದರೆ, ಈ ಎಲ್ಲವನ್ನೂ ಪರಸ್ಪರ ಸೇರಿಸಿ ಸಂಬಂಧಿಸಿ ಅದು ಸತತವಾದ ಒಂದು ಸನ್ನಿವೇಶವೆಂದು ನೋಡುವುದರಿಂದ ಸ್ವಯಂ ಉಪಶಮನದ ಸಾಧ್ಯತೆಯನ್ನು ತಡೆಯುತ್ತೀರಿ.
ಖಿನ್ನತೆಗೆ ಪರಿಹಾರ
ಒಂದು ತಿಂಗಳ ಹಿಂದೆ ಉಂಟಾಗಿದ್ದ ಖಿನ್ನತೆ
(depression), ಒಂದು ವರ್ಷದ ಹಿಂದೆ
ಉಂಟಾಗಿದ್ದ ಖಿನ್ನತೆ, ಮೂರು ವರ್ಷಗಳ ಹಿಂದೆ
ಉಂಟಾಗಿದ್ದ ಖಿನ್ನತೆಗಳು ಸ್ವತಂತ್ರವಾದ,
ವೈಯುಕ್ತಿಕವಾದ, ಸಂಬಂಧವಿಲ್ಲದ ಹಾಗೂ
ಅನ್ಕ್ಲಚ್ ಆದವು. ಇದೂ ಸಹ ದೈಹಿಕ
ನೋವಿನಂತಹ ಸಮಸ್ಯೆ. ಎಲ್ಲಾ ಖಿನ್ನತೆಗಳನ್ನೂ
ಪರಸ್ಪರ ಸೇರಿಸಲು ಪ್ರಾರಂಭಿಸಿ, ಅದೇ ಖಿನ್ನತೆಯು
ಸತತವಾಗಿ ನಿಮಗೆ ಇರುವುದಾಗಿ ನಿರ್ಣಯಿಸುತ್ತೀರಿ.
ನಿಮ್ಮ ಜೀವನವೇ ಖಿನ್ನತೆಯಿಂದ ಕೂಡಿದೆ ಎಂಬ
ಭಾವನೆಯನ್ನು ಹೊಂದುತ್ತೀರಿ. ನಂತರ
ಅದರೊಂದಿಗೆ ಹೋರಾಡಲಾರಂಭಿಸುತ್ತೀರಿ.
ಖಿನ್ನತೆಯ ಆಲೋಚನೆಗಳಿಗೆ ಅದು ಹೆಚ್ಚು
ಜೀವವನ್ನು ಕೊಡುತ್ತದೆ.
ಕಳೆದ ಹತ್ತು ವರ್ಷಗಳು ಸಂಕಟ ಹಾಗೂ
ಖಿನ್ನತೆಗಳಿಂದ ತುಂಬಿತ್ತೆಂದು ನೀವು ದೃಢವಾಗಿ
ನಂಬಿದಾಗ, ಅದರ ಸುತ್ತಲೂ ಒಂದು ದೃಢವಾದ
ಮನೋಭಾವವನ್ನು ಸೃಷ್ಟಿಸುತ್ತೀರಿ. ಸಹಜವಾಗಿಯೇ
ನಿಮ್ಮ ಭವಿಷ್ಯತ್ಕಾಲವೂ ನೋವಿನಿಂದಿದ್ದು,
ಖಿನ್ನತೆಯಿಂದ ಕೂಡಿರುತ್ತದೆಂದು
ಯೋಚಿಸಲಾರಂಭಿಸುವಿರಿ.
ಒಂದು ವೇಳೆ ನಿಮ್ಮೆದುರು ನಿಮ್ಮ ಶತ್ರುವೆಂದು ನೀವು ತಿಳಿದ ಒಬ್ಬ ವ್ಯಕ್ತಿ ಕುಳಿತಿರುವನೆಂದು ಭಾವಿಸಿಕೊಳ್ಳಿ. ಇದ್ದಕ್ಕಿದ್ದಂತೆ ಆತನ ತಲೆಯು ಬೇರೆಯಾಗಿ, ಕಾಲುಗಳು ಬೇರೆಯಾಗಿ, ಕೈಗಳು ಬೇರೆಯಾಗಿವೆ ಎಂದು ಕಂಡುಬಂದರೆ, ಆಗಲೂ ಆತನೊಂದಿಗೆ ಹೋರಾಡೋಣವೆನಿಸುತ್ತದೆಯೇ? ಇಲ್ಲ! ಆತನು ಹೋರಾಟಕ್ಕೂ ಅರ್ಹನಲ್ಲ! ನೀವು ತಿಳಿದಂತೆ ಆತನಿಗೆ ಒಂದು ಭದ್ರವಾದ ಅಸ್ತಿತ್ವವಿಲ್ಲ. ಹಾಗಿದ್ದರೆ ಹೋರಾಡಲು ಏನಿದೆ?
‘ನಿರುತ್ಸಾಹದಲ್ಲಿ ಬದುಕು’ವುದನ್ನು ಅದೇ ರೀತಿ, ನಿಮ್ಮೆದುರು ಬಿಟ್ಟು ‘ಅನ್ಕ್ಲಚ್ ಒಂದು ದೊಡ್ಡ ಸಮಸ್ಯೆ ಆಗಿ ಬದುಕಿರಿ’ ಇದೆಯೆಂದು ಎಂದು ನಾನು ಭಾವಿಸಿದಾಗ, ಒಬ್ಬ ಹೇಳುತ್ತಿದ್ದೇನೆ. ದೊಡ್ಡ ವ್ಯಕ್ತಿಯು ನಿಮ್ಮೆದುರು ಇರುವಂತೆ ಕಂಡಾಗ, ನೀವು ಹೋರಾಡಲು ಆರಂಭಿಸಿ, ಹೆಚ್ಚು ತೊಂದರೆಗೆ ಸಿಕ್ಕಿಕೊಳ್ಳುತ್ತೀರಿ. ನಿಮ್ಮ ಖಿನ್ನತೆಯು ನೀವು ಭಾವಿಸಿರುವಷ್ಟು ದೊಡ್ಡ ಶತ್രുവಲ್ಲ. ಅದು ಛಿದ್ರವಾದ ದೇಹದ ಭಾಗಗಳುಳ್ಳ ವ್ಯಕ್ತಿಯಂತೆ. ಅವನ್ನು ಜೋಡಿಸಿ, ಅದಕ್ಕೆ ಜೀವ ಕೊಟ್ಟದ್ದು ನೀವು. ಖಿನ್ನತೆಯ ಜೊತೆಯ ನಿಮ್ಮ ಹೋರಾಟವೇ ನಿಮ್ಮ ಖಿನ್ನತೆಗೆ ಮೂಲಕಾರಣ.
ರಾಮಾಯಣದಲ್ಲಿ ಒಂದು ಸುಂದರವಾದ ಕಥೆಯಿದೆ. ವಾನರ ರಾಜನಾದ ವಾಲಿಯ ಎದುರು ನಿಂತು ಯಾರು ಕದನ ಮಾಡುವರೋ ಅವರು ತಮ್ಮ ಅರ್ಧ ಶಕ್ತಿಯನ್ನು ಆತನಿಗೆ ಕಳೆದುಕೊಳ್ಳುತ್ತಿದ್ದರು. ಅದೇ ರೀತಿ ಯಾರು ಆಲೋಚನಾ ದಂಡದೆದುರು ನಿಲ್ಲುವರೋ ಮತ್ತು ಆ ದಂಡದೊಂದಿಗೆ ಕದನ ಮಾಡುವರೋ ಅವರು ಆ ದಂಡಕ್ಕೆ ತಮ್ಮ ಅರ್ಧ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ.
ದಂಡದಿಂದ ಅನ್ಕ್ಲಚ್ ಆದ ಕ್ಷಣವೇ ನೀವು
ಒಂದು ತಟಸ್ಥವಾದ ಸ್ಥಳದಲ್ಲಿರುವ ಅನುಭವ
ಪಡೆಯುತ್ತೀರಿ ಹಾಗೂ ಆಗ ಅಂತರಂಗದ
ಉಪಶಮನವು ಪ್ರಾರಂಭವಾಗುತ್ತದೆ. ಅಂತರಂಗದ
ಉಪಶಮನವು ಆರಂಭವಾದ ಕ್ಷಣವೇ
ದೈಹಿಕವಾಗಿಯೂ ಗುಣ ಹೊಂದುತ್ತೀರಿ.
ನಿಮ್ಮ ಖಿನ್ನತೆಯನ್ನು ತ್ಯಜಿಸಲು ಯತ್ನಿಸದಿರಿ,
ಏಕೆಂದರೆ ಸಹಜವಾಗಿಯೇ ಅದು ನಿಮ್ಮಿಂದ ದೂರ
ಹರಿದು ತ್ಯಜಿಸಲ್ಪಡುತ್ತದೆ. ಸಹಜವಾಗಿ ನಿಮ್ಮ
ಮನಸ್ಸಿನಿಂದ ಸಂತೋಷವು ಮಾಯವಾಗುವಂತೆ
ನಿರುತ್ಸಾಹವೂ ಮಾಯವಾಗುತ್ತದೆ. ನಿರುತ್ಸಾಹವನ್ನು
ನಿವಾರಿಸಲು ಪ್ರಯತ್ನಿಸಿದರೆ, ನೀವು ಅದನ್ನು
ಮುಂದುವರೆಸುತ್ತೀರಿ ಮತ್ತು ಅದಕ್ಕೆ ಹೆಚ್ಚಿನ
ಚೈತನ್ಯವನ್ನು ಕೊಡುತ್ತೀರಿ.
ನೋಡಿ, ನಿಮಗೆ ಒಂದು ಆಳವಾದ ನಿರುತ್ಸಾಹ ಇದ್ದರೆ ಕಛೇರಿಗೆ ಹೋಗುವುದನ್ನು ನಿಲ್ಲಿಸುತ್ತೀರೇನು? ಇಲ್ಲ! ನೀವು ನಿಮ್ಮ ನಿರುತ್ಸಾಹವನ್ನು ನಿಮ್ಮ ಮನಸ್ಸಿನಲ್ಲಿ ಹೊತ್ತಿರಬಹುದು. ಆದರೆ ನಿಮ್ಮ ದೇಹವು ಕಾರ್ಯನಿರ್ವಹಣೆ ಮಾಡುತ್ತದೆ. ನೀವು ಕೆಲಸ ಮಾಡುತ್ತೀರಿ. ನೀವು ಅಷ್ಟೇನೂ ಸಮರ್ಥರಾಗಿಯೋ, ದಕ್ಷರಾಗಿಯೋ ಇರಲು ಸಾಧ್ಯವಾಗದಿರಬಹುದು. ಆದರೂ ನಿಮ್ಮ ದೇಹವು ಕಾರ್ಯನಿರತವಾಗುತ್ತದೆ.
‘ನಿರುತ್ಸಾಹದಲ್ಲಿ ಬದುಕು’ವುದನ್ನು ಬಿಟ್ಟು
‘ಅನ್ಕ್ಲಚ್ ಆಗಿ ಬದುಕಿರಿ’ ಎಂದು ನಾನು
ಹೇಳುತ್ತಿದ್ದೇನೆ.
ನಾವು ನಿರುತ್ಸಾಹದಲ್ಲಿರುವಾಗ, ‘ನನಗೆ ನಿರುತ್ಸಾಹ ಉಂಟಾದರೆ ನನ್ನ ದೇಹವು ಹೇಗೆ ಕಾರ್ಯನಿರ್ವಹಿಸುತ್ತದೆ?’ ಎಂಬಂತಹ ಪ್ರಶ್ನೆಗಳಿರುವುದಿಲ್ಲ. ನಿರುತ್ಸಾಹವು ನಮ್ಮ ಜೀವನದ ಭಾಗವಾಗುತ್ತದೆ. ಆರಂಭದಲ್ಲಿ ನಿಮಗೆ ಪ್ರಶ್ನೆಗಳು ಮೇಲೇಳಬಹುದು. ‘ನಾನು ಅನ್ಕ್ಲಚ್ ಆಗಿ ಹೇಗೆ ಬದುಕಲಿ? ನಾನು ನನ್ನ ದೇಹವನ್ನು ಹೇಗೆ ತಾನೇ
ಕಾರ್ಯನಿರತವಾಗಿಸಲಿ' ಎಂದು. ಆನಾಕ್ಲಚ್ನ
ಸತತವಾದ ನೆನಪು ನಿಮ್ಮ ದೇಹ, ಮನಸ್ಸುಗಳ
ಕಾರ್ಯಗತಿಯ ಮಧ್ಯೆ ತಡೆಯಾಗಿ ಬರುವುದಿಲ್ಲ.
ಅದು ನಿರುತ್ಸಾಹವನ್ನಂತೂ ನಿವಾರಿಸುತ್ತದೆ,
ಏಕೆಂದರೆ ಅದು ನಿರುತ್ಸಾಹದ ಆಲೋಚನೆಗಳಿಗೆ
ಅಂಟಿಕೊಳ್ಳದೆ, ಅವು ಮೇಲೇಳಲು ಹಾಗು
ಅಂತ್ಯಗೊಳ್ಳಲು ಆಸ್ಪದ ನೀಡುತ್ತದೆ.
ದುಶ್ಚಟಕ್ಕೆ ಪರಿಹಾರ
ದುಶ್ಚಟ ಎಂದರೇನು? ಯಾವುದನ್ನಾದರೂ
ಮಾಡದಿದ್ದಾಗ ಏನನ್ನೋ ಕಳೆದುಕೊಂಡಂತೆ
ಭಾಸವಾಗುವ ಒಂದು ವರ್ತನೆ ಅಥವಾ ಕ್ರಿಯೆಯೇ
ದುಶ್ಚಟ. ಆದರೆ, ಅದನ್ನು ಮಾಡಿದಾಗ ಅದರಿಂದ
ನಿಮಗೆ ಸಂತೋಷವೇನೂ ಆಗುವುದಿಲ್ಲ. ಅದು
ಕೇವಲ ಯಾಂತ್ರಿಕವಾಗಿರುತ್ತದೆ. ದುಶ್ಚಟ ಎಂದರೆ
ಯಾವುದೇ ವಸ್ತುವಿನಿಂದ, ವ್ಯಕ್ತಿಯಿಂದ ಅಥವಾ
ಸಂದರ್ಭದಿಂದ ಸಂತೋಷ ಉಂಟಾಗುತ್ತದೆ ಎಂಬ
ನಂಬಿಕೆ.
ದುಶ್ಚಟದ ಅರ್ಥವಿವರಣೆಯನ್ನು ಹೀಗೆ
ತಿಳಿಯಬಹುದು: ಸಂತೋಷದ ದಂಡವನ್ನು ಪುನಃ
ಸೃಷ್ಟಿಸುವ ಮೂಲಕ ಅದನ್ನು ದೊಡ್ಡದಾಗಿಸಲು
ಪ್ರಯತ್ನಿಸುವುದು. ನಿಮ್ಮ ಜೀವನದೊಳಗೆ ಅದೇ
ಜನರನ್ನು, ಸಂದರ್ಭಗಳನ್ನು, ಘಟನೆಗಳನ್ನು
ತಂದುಕೊಂಡರೆ, ಅದೇ ಸಂತೋಷವು
ಸಿಗುವುದಿಲ್ಲವೆಂದು ತಿಳಿದಿದ್ದರೂ ಅವುಗಳನ್ನು
ತಂದುಕೊಳ್ಳುತ್ತೀರಿ. ಕೆಲವರು ಸಂತೋಷಕೂಟಗಳಿಗೆ,
ಕೆಲವರು ಧೂಮಪಾನ ಸೇವನೆಗೆ, ಕೆಲವರು ಕುಡಿತಕ್ಕೆ
ಹಾಗೂ ಇನ್ನೂ ಅನೇಕ ದುಶ್ಚಟಗಳಿಗೆ
ವಶವಾಗಿರುತ್ತಾರೆ.
ಮೊದಲ ಬಾರಿಗೆ ಯಾವುದರಿಂದ ನಿಮಗೆ ಉತ್ಸಾಹವುಂಟಾಯಿತೋ ಅದನ್ನು ಮತ್ತೆ ಮತ್ತೆ ನಿಮ್ಮ ಜೀವನಕ್ಕೆ ತಂದುಕೊಂಡರೆ, ಅದು ಅಷ್ಟೇ ಉತ್ಸಾಹವನ್ನು ನೀಡುವುದಿಲ್ಲ. ಅದು ದುಶ್ಚಟಕ್ಕೆ ಕೊಂಡೊಯ್ಯಬಹುದು, ಸಂತೋಷಕ್ಕಲ್ಲ. ಮೊದಲ ಬಾರಿಗೆ ಒಂದು ಸಿಹಿ ತಿಂಡಿಯನ್ನು ತಿಂದಾಗ ಅದೊಂದು ಉಲ್ಲಾಸಕರ ಅನುಭವವಾಗುತ್ತದೆ. ಅದರ ಉತ್ಸಾಹವೇ ಸಂಪೂರ್ಣವಾಗಿ ಬೇರೆಯದಾಗಿರುತ್ತದೆ. ಆದರೆ ಅದೇ ಸಿಹಿತಿನಿಸನ್ನು ತಿನ್ನುತ್ತಲೇ ಇದ್ದರೆ, ಅದೇ ಸಂತಸದ ಅನುಭವವು ಇರುವುದಿಲ್ಲ. ಅಂತಿಮವಾಗಿ ನೀವು ಸಾಕಷ್ಟು ಸಿಹಿತಿನಿಸನ್ನು ತಿಂದರೆ, ಅದರ ನೋಟವೂ ನಿಮಗೆ ಇಷ್ಟವಾಗುವುದಿಲ್ಲ. ಅದನ್ನು ನೋಡಿ 'ಓ, ಇಲ್ಲ, ಸಿಹಿತಿನಿಸುಗಳು ಇನ್ನು ಬೇಡ. ಅವನ್ನು ತಿನ್ನಲು ನನ್ನಿಂದ ಸಾಧ್ಯವಿಲ್ಲ' ಎನ್ನುತ್ತೀರಿ. ಅದೇ ರೀತಿಯಲ್ಲಿ ಒಬ್ಬ ವ್ಯಕ್ತಿಯನ್ನು ಮೊದಲ ಬಾರಿಗೆ ಭೇಟಿಯಾದಾಗ ಆಗುವ ಉತ್ಸಾಹವೇ ಸಂಪೂರ್ಣವಾಗಿ ಬೇರೆ, ಆನಂತರ ಆ ಉತ್ಸಾಹವು ಕ್ರಮೇಣ ಕಡಿಮೆಯಾಗುತ್ತದೆ.
ಜನರು ಬಂದು ನನ್ನನ್ನು ಕೇಳುತ್ತಾರೆ, 'ನಾನು ನನ್ನ ಚಟಗಳಿಂದ ಹೊರಬರುವುದು ಹೇಗೆ?' ಎಂದು. ನೋಡಿ, ಹ್ಯಾಬಿಟ್ (HABIT) ಅಭ್ಯಾಸವೆಂಬುದು ಸುಂದರವಾದ ಒಂದು ಪದ. ಅದರಲ್ಲಿ 'H' ನ್ನು ತೆಗೆದರೆ, 'A' BIT ಉಳಿಯುತ್ತದೆ. 'B' ಯನ್ನು ತೆಗೆದರೆ, 'IT' - ಅದು ಉಳಿಯುತ್ತದೆ. 'I' ಯನ್ನು, ಎಂದರೆ 'ನಾನು' ಎಂಬುದನ್ನು ತೆಗೆದಾಗ ಮಾತ್ರ
'IT' ಎಂಬ ದ್ವಂದ ನಶಿಸಿಹೋಗುತ್ತದೆ. 'I' ನಾನು ಎಂಬುದನ್ನು ತೆಗೆದಾಗ ಮಾತ್ರ, ಕಿತ್ತೆಸೆದಾಗ ಮಾತ್ರ, ಅದು ಸಂಪೂರ್ಣವಾಗಿ ನಶಿಸುವುದು.
ಸ್ಪಷ್ಟವಾಗಿ ತಿಳಿಯಿರಿ, ಎರಡು ದಿನದ ಹಿಂದೆ ಸೇವಿಸಿದ ಧೂಮಪಾನ, ಹತ್ತು ವರ್ಷಗಳ ಹಿಂದೆ ಸೇವಿಸಿದ ಧೂಮಪಾನ, ಇಪ್ಪತ್ತು ವರ್ಷಗಳ ಹಿಂದೆ ಸೇವಿಸಿದ ಧೂಮಪಾನ, ಈ ಮೂರು ಸಂದರ್ಭಗಳೂ ಸಂಪೂರ್ಣವಾಗಿ ಸ್ವತಂತ್ರವಾದುವು. ಅವು ಒಂದಕ್ಕೊಂದು ಸಂಬಂಧಿಸಿಲ್ಲ. ಮಾನಸಿಕವಾಗಿ ಅವುಗಳ ನಡುವೆ ಪರಸ್ಪರ ಸಂಬಂಧ ಕಲ್ಪಿಸಲಾರಂಭಿಸಿದಾಗ, ನಿಮಗೆ ಧೂಮಪಾನ ಸೇವನೆಯ ದುಶ್ಚಟವಿದೆ ಎಂದೂ, ನೀವು ಆ ದುಶ್ಚಟಕ್ಕೆ ವಶವಾಗಿದ್ದೀರೆಂದೂ ನಂಬಲಾರಂಭಿಸಿದಾಗ, ಆ ನಂಬಿಕೆಯು ಒಂದು ದ್ವಂದವನ್ನು ಸೃಷ್ಟಿಸುತ್ತದೆ. ಆಗ ಅದರೊಂದಿಗೆ ಹೋರಾಡಲಾರಂಭಿಸುತ್ತೀರಿ. 'ನಾನು' ಎಂಬುದನ್ನು ಬಿಡಬೇಕು ಎಂದಾಗ ನಾನು ಇದನ್ನೇ ಅರ್ಥೈಸುವುದು. ಯಾವುದೇ ವಿಷಯವೂ ಚಟವಾಗುವುದು ನಿಮ್ಮ ನಂಬಿಕೆಯಿಂದ. ನಂಬಿಕೆಯನ್ನು ಬಿಟ್ಟಾಗ ಚಟವೂ ಬಿಟ್ಟುಹೋಗುತ್ತದೆ.
ಅದೊಂದು ಸಂತೋಷಕರವಾದ ಅನುಭವವೆಂದು ನೀವು ನಂಬಿದ್ದರೆ, ಧೂಮಪಾನ ಸೇವನೆಯನ್ನು ಹೆಚ್ಚು ಹೆಚ್ಚಾಗಿ ಮುಂದುವರೆಸುತ್ತೀರಿ. ಅದೊಂದು ನೋವಿನ ಅನುಭವವೆಂದು ನೀವು ನಂಬಿದರೆ ದ್ವಂದದೊಡನೆ ಹೋರಾಡಲಾರಂಭಿಸುತ್ತೀರಿ. ಹೇಗೇಯೇ ಆದರೂ ನೀವು ಗೆಲ್ಲುವುದಿಲ್ಲ. ಧೂಮಪಾನ ಸೇವನೆಯು ಸಂತೋಷಕರವಾದುದೆಂದು ನಂಬಿದರೂ ಯಾವ ತಡೆಯಿಲ್ಲದೆ ನಿರಾತಂಕವಾಗಿ ಧೂಮಪಾನ ಸೇವಿಸಲು ಪ್ರಯತ್ನಿಸಿ, ನಿಮಗೇ ಹೇಗನ್ನಿಸುತ್ತದೆಂದು ನೋಡಿರಿ. ನೀವು ಅದನ್ನು ಸೇದಿ, ಹೊಗೆಯನ್ನು ಒಳಗೆ ತೆಗೆದುಕೊಂಡಾಗ, ಅದೊಂದು ಸಂತೋಷದ ಅನುಭವವಾಗುವುದೇ ಇಲ್ಲ. ಅದು ಎಂದಿಗೂ ಸಂತೋಷ ನೀಡುವುದಿಲ್ಲ.
ಧೂಮಪಾನ ಸೇವಿಸಿದಾಗ, ಆ ಕ್ಷಣದಲ್ಲಿ ನಿಮ್ಮ
ಅಂತರಂಗದಲ್ಲಿ ಏನಾಗುತ್ತಿದೆಯೆಂದು ನೋಡಿರಿ.
ನೀವು ಏನನ್ನೂ ಆನಂದಿಸುತ್ತಿರುವುದಿಲ್ಲ. ನೀವು
ಯಾವುದರಿಂದಲೋ ತಪ್ಪಿಸಿಕೊಳ್ಳುತ್ತಿರುತ್ತೀರಿ.
ಧೂಮಪಾನವು ಸಂತೋಷಕರವಾದುದೆಂದು
ಸುಮ್ಮನೆಯೋ ನಂಬುತ್ತೀರಿ. ಧೂಮಪಾನ
ಸೇವನೆಯಿಂದ ಸಂತೋಷ ದೊರಕದಿದ್ದಾಗಲೂ
ಅದರಿಂದ ನೀವು ಸಂತೋಷವನ್ನು ಹಿಂಡಿ ತೆಗೆಯುವ
ಪ್ರಯತ್ನ ಮಾಡುತ್ತೀರಿ.
ನಿಮ್ಮ ಜೀವನವನ್ನು ಆಳವಾಗಿ ಪರಿಶೀಲಿಸಿ ನೋಡಿದಾಗ, ಧೂಮಪಾನ ಸೇವನೆಯೋ, ಲೈಂಗಿಕತೆಯೋ, ಹಣವೋ ಅಥವಾ ಮತ್ತಾವುದೇ ಸುಖವಾದರೂ, ಅದು ಮೊದಲ ಬಾರಿಗೆ ಉಂಟಾಗಿದ್ದ ಸುಖವನ್ನು ಅನುಭವಿಸದಿದ್ದರೂ, ಅದರಿಂದ ಸುಖವನ್ನು ಹಿಂಡಿ ಹೊರತೆಗೆಯಲು ಯತ್ನಿಸುತ್ತೀರಿ. 'ಇಲ್ಲ, ಇದೇ ಸುಖ. ಸುಖವೆಂದರೆ ಮತ್ತೇನು?' ಎಂದು ನಿಮ್ಮನ್ನು ನೀವೇ ಸಂತೈಸಿಕೊಳ್ಳುತ್ತೀರಿ. ನಿರಾಸೆಯನ್ನು ಸುಖವೆಂದು ನಂಬಿ, ಮುಚ್ಚಿಡಲು ಪ್ರಯತ್ನಿಸುತ್ತೀರಿ. ಅದೇ ಸುಖವೆಂದು ನಂಬಲು ಇಚ್ಛಿಸುತ್ತೀರಿ.
ದುಶ್ಚಟವನ್ನು ಬಿಡಲು ಸಾಧ್ಯವಾದ ಮಟ್ಟಿಗೆ ಪ್ರಯತ್ನಿಸಿ ನೋಡಿ. ನೀವು ಎಂದಿಗೂ
ಯಶಸ್ವಿಯಾಗುವುದಿಲ್ಲ. ಒಂದು ವೇಳೆ ಬಿಟ್ಟರೂ ಇನ್ನೂ ಹೆಚ್ಚಿನ ಚಟವಾದ ಯಾವುದೋ ಭಯ ಅಥವಾ ದುರಾಸೆಯಿಂದ ಅದನ್ನು ಬಿಟ್ಟಿರುತ್ತೀರಿ. ಹಾಗೆ ನೋಡಿದರೆ, ಭಯ ಅಥವಾ ದುರಾಸೆಗಳೇ ಇನ್ನೂ ದೊಡ್ಡ ಚಟಗಳು. ಧೂಮಪಾನ ಸೇವನೆಯನ್ನು ಯಾವುದೋ ಭಯ ಅಥವಾ ದುರಾಸೆಯಿಂದ ಬಿಟ್ಟಾಗ ನಿಮ್ಮ ಪ್ರಜ್ಞೆಗೆ, ನಿಮ್ಮ ಅಂತರಂಗಕ್ಕೆ, ಯಾವ ಒಳ್ಳೆಯದನ್ನೂ ನೀವು ಮಾಡುವುದಿಲ್ಲ. ನಿಮ್ಮನ್ನು ನೀವೇ ಹೆಚ್ಚು ನಾಶಪಡಿಸಿಕೊಳ್ಳುತ್ತಿರುತ್ತೀರಿ.
ಧೂಮಪಾನವನ್ನು ನೀವು ಬಿಟ್ಟುಬಿಟ್ಟಿರಬಹುದು. ಆದರೆ ಅದನ್ನು ಬಿಡಲು ಕಾರಣವಾದ ಭಯ ಅಥವಾ ದುರಾಸೆಯು ನಿಮ್ಮ ಅಂತರಂಗಕ್ಕೆ ಸೇರಿಕೊಂಡಿರುತ್ತದೆ. ಧೂಮಪಾನದಿಂದಲಾದರೋ, ನೀವು ಈ ದೇಹವನ್ನು ಮಾತ್ರ ನಾಶಪಡಿಸಿಕೊಳ್ಳುತ್ತೀರಿ. ಭಯ ಅಥವಾ ದುರಾಸೆಯಿಂದಾದರೆ, ನೀವು ನಿಮ್ಮ ಇಡೀ ಅಸ್ತಿತ್ವವನ್ನು, ಜನ್ಮ ಜನ್ಮಗಳಲ್ಲೂ ನಾಶಪಡಿಸಿಕೊಳ್ಳುತ್ತೀರಿ! ಭಯ ಹಾಗೂ ದುರಾಸೆಯನ್ನು ಮುಂದಿನ ಜನ್ಮಕ್ಕೂ ಮುಂದುವರೆಸುತ್ತೀರಿ. ಧೂಮಪಾನದ ದುಶ್ಚಟವು ಮುಂದಿನ ಜನ್ಮಕ್ಕೆ ಮುಂದುವರೆಯದಿರಬಹುದು. ಆದರೆ ಭಯ ಹಾಗೂ ದುರಾಸೆಯ ಭಾವನೆಗಳು ನಿಮ್ಮೊಡನೆ ಮುಂದಿನ ಜನ್ಮಕ್ಕೂ ಮುಂದುವರೆಯುತ್ತವೆ. ಆದ್ದರಿಂದ ನಿಮಗೆ ದುಶ್ಚಟವಿದೆಯೆಂಬ ಕಲ್ಪನೆಯನ್ನು ಬಿಟ್ಟುಬಿಡುವುದೇ ಉತ್ತಮವಾದ ಮಾರ್ಗ ಮತ್ತು ಹಾಗೆ ನೋಡಿದಾಗ ಅದೇ ನಿಮ್ಮನ್ನು ಬಿಟ್ಟುಹೋಗುತ್ತದೆ.
ಅನ್ಕ್ಲಚ್
ಆಗಿರಿ -
ಕಷ್ಟದಿಂದಲ್ಲ,
ಜಾಣತನದಿಂದ
ಕೆಲಸ ಮಾಡಿರಿ
ದುಶ್ಚಟವಿದೆಯೆಂಬ
ಕಲ್ಪನೆಯನ್ನು
ಬಿಟ್ಟುಬಿಡಿರಿ,
ಅದು
ಬಿಟ್ಟುಹೋಗುತ್ತದೆ.
ನೀವು 'ಅನ್ಕ್ಲಚ್' ಆಗಿದ್ದೀರೆಂದು ಹೇಳಿದ ಕ್ಷಣವೇ ನಿಮ್ಮಲ್ಲುಂಟಾಗುವ ಮೊದಲ ಭಯವೆಂದರೆ 'ನನ್ನ ಆಲೋಚನೆಗಳನ್ನು ಒಂದಕ್ಕೊಂದು ಸಂಬಂಧಿಸದೆ ಬದುಕಲು ಆರಂಭಿಸಿದರೆ, ನನ್ನ ವೆಚ್ಚಗಳನ್ನು ಯಾರು ಭರಿಸುತ್ತಾರೆ? ನಾನು ನನ್ನ ಸಂಪತ್ತನ್ನೆಲ್ಲಾ ಕಳೆದುಕೊಳ್ಳಬಹುದು. ನನ್ನ ಹಣವನ್ನು ಎಲ್ಲಿ ಇಟ್ಟಿದ್ದೇನೆಂದು ಮರೆಯಬಹುದು. ನನ್ನಿಂದ ಸಮಾಜದಲ್ಲಿ ತಲೆ ಎತ್ತಿಕೊಂಡು ಬದುಕಲಾಗದಿರಬಹುದು. ನನ್ನ ಕೆಲಸವನ್ನು ಹೇಗೆ ಮಾಡುವುದು? ನನ್ನ ವಸ್ತುಗಳನ್ನು ಹೇಗೆ ಕಾಪಾಡುವುದು? ನಾನು ಸುಮ್ಮನೆ ಏನನ್ನೂ ಮಾಡದೆ ಹಾಸಿಗೆಯ ಮೇಲೆ ಮಲಗಿಬಿಡುವುದಿಲ್ಲವೆ? ಆಫೀಸಿಗೆ ಹೋಗಬೇಕೆಂದು ನನಗೆ ಹೇಗೆ ತಾನೇ ಅನಿಸುತ್ತದೆ?' ಎಂಬುದಾಗಿರುತ್ತದೆ.
ನಾನು ಕೇಳುತ್ತೇನೆ, 'ನೀವು ಆಫೀಸಿಗೆ ಏಕೆ ಹೋಗುವುದಿಲ್ಲ?', ನೀವು ಹೀಗೆ ಕೇಳಿದಾಕ್ಷಣವೇ ನಿಮಗೆ ನಿಮ್ಮ ಆಫೀಸಿನ ಕೆಲಸದ ಬಗ್ಗೆ ಸ್ವಲ್ಪ ದ್ವೇಷವೋ, ಹಿಂಸೆಯೋ, ಇದೆಯೆಂದು ಇದರಿಂದ ತಿಳಿಯುತ್ತದೆ! ಆದ್ದರಿಂದಲೇ ಒಂದು ನೆಪ ಹೇಳಿ ನಿಮ್ಮ ಕೆಲಸದಿಂದ ತಪ್ಪಿಸಿಕೊಳ್ಳಲು ಬಯಸುತ್ತೀರಿ.
ಈ ಪ್ರಶ್ನೆಯನ್ನು ಕೇಳುವುದರಿಂದ ನೀವು ನಿಮ್ಮ ದಿನಚರಿಯ ಮೇಲಿರುವ ನಿಮ್ಮ ಕೋಪ, ನಿಮ್ಮ ಹಿಂಸೆಯನ್ನು ವ್ಯಕ್ತಪಡಿಸುತ್ತಿದ್ದೀರಿ, ಮತ್ತೇನೂ ಅಲ್ಲ! ಈ ಪ್ರಶ್ನೆಗೂ ಅನ್ಕ್ಲಚ್ ಆಗುವುದಕ್ಕೂ ಸಂಬಂಧವೇ ಇಲ್ಲ.
ನಿಮ್ಮಲ್ಲಿ ಅಂತಹ ಪ್ರಶ್ನೆಗಳಿದ್ದರೆ ಸುಮ್ಮನೆ ಅನ್ಕ್ಲಚ್ ಆಗಿ, ಹತ್ತು ದಿನಗಳು ಮಲಗಿರಿ. ಅದರಲ್ಲಿ ಯಾವ ತಪ್ಪ ಇಲ್ಲ. ಹತ್ತು ದಿನಗಳ ಕಾಲ ವಿರಾಮ ಪಡೆಯಿರಿ. 'ನಾನು ಎರಡೂ ಗುರುತುಗಳಿಂದಲೂ ಅನ್ಕ್ಲಚ್ ಆಗುತ್ತೇನೆ' ಎಂದು ನಿರ್ಧರಿಸಿರಿ. ಎಷ್ಟು ದಿನಗಳು ಮಲಗಲಾಗುತ್ತದೆಂದು ತಿಳಿದಿದ್ದೀರಿ? ಕಾರ್ಯಕಲಾಪಗಳ ಪೂರ್ಣ ನಿಲುಗಡೆ ನಿಮ್ಮಲ್ಲಿ ಎಷ್ಟು ದಿನಗಳು ಮುಂದುವರೆಯಲು ಸಾಧ್ಯವೆಂದು ಭಾವಿಸಿದ್ದೀರಿ? ನಿಮ್ಮಲ್ಲಿರುವ ತಮಸ್ಸು ಮುಗಿಯುವವರೆಗೆ ಮಾತ್ರ. ನಂತರ ನೀವು ನೀವಾಗಿಯೇ ಏನನ್ನಾದರೂ ಮಾಡಲಾರಂಭಿಸುತ್ತೀರಿ.
ಆದ್ದರಿಂದ ನೀವು ಅದನ್ನು ಬೇಜವಾಬ್ದಾರಿಯೆಂದೋ ಅಥವಾ ಪರಾಜಿತ ಭಾವನೆಯೆಂದೋ ತಿಳಿದಿದ್ದರೆ, ಕೆಲವು ದಿನಗಳ ಕಾಲ ಅನ್ಕ್ಲಚ್ ಆಗಿರಿ. ಆಗ, ಅನ್ಕ್ಲಚ್ ಆದಾಗ ನಿಮಗೆ ಸೋಮಾರಿತನದ ಅಥವಾ ಜಡತ್ವದ ಭಾವನೆ ಉಂಟಾಗುವುದಿಲ್ಲವೆಂದು ತಿಳಿಯುವಿರಿ ಹಾಗೂ ಅದನ್ನು ಅನುಭವಿಸುವಿರಿ. ಮಾನಸಿಕವಾಗಿ ನೀವು ಮೌನವಾಗಿರುತ್ತೀರಿ. ಆದರೆ ದೈಹಿಕವಾಗಿ ನೀವು ಕ್ರಿಯಾಶೀಲರಾಗಿ ಚೈತನ್ಯದಿಂದಿರುತ್ತೀರಿ.
ಬೇಜವಾಬ್ದಾರಿ ಅಥವಾ ಜಡತ್ವದ ಭಾವನೆಯು
ನಿಮ್ಮ ಅಂತರಂಗದಲ್ಲಿದ್ದಾಗ, ಮಾನಸಿಕವಾಗಿ ಬಹಳ
ಕ್ರಿಯಾಶೀಲರಾಗಿರುತ್ತೀರಿ. ಆದರೆ ದೈಹಿಕವಾಗಿ
ದಣಿದಿರುತ್ತೀರಿ. ನೀವು ಅನ್ಕ್ಲಚ್ ಆದಾಗ
ದೈಹಿಕವಾಗಿ ಕ್ರಿಯಾಶೀಲರಾಗಿ
ಚೈತನ್ಯಪೂರಿತರಾಗಿರುತ್ತೀರಿ, ಆದರೆ ಮಾನಸಿಕವಾಗಿ
ಮೌನವಾಗಿರುತ್ತೀರಿ.
ನೋಡಿ, ದೇಹದಲ್ಲಿ ಶೇಕಡಾ 33ರಷ್ಟು ಭಾಗ
ಸತ್ತ್ವ ಗುಣ ಎಂದರೆ ಶುದ್ಧವಾದ ಮೌನ, ಶೇಕಡಾ
33ರಷ್ಟು ರಜೋಗುಣ ಎಂದರೆ ಚಂಚಲತೆ ಹಾಗೂ
ಶೇಕಡಾ 33ರಷ್ಟು ತಮೋಗುಣ ಎಂದರೆ ಆಳವಾದ
ನಿದ್ದೆ ಅಥವಾ ಸೋಮಾರಿತನವಿರುತ್ತದೆ.
ಈಗಲಾದರೋ, ನೀವು ಅನ್ಕ್ಲಚ್ ಆದರೆ
ನಿಮಗಾಗುವ ಮೊದಲ ಭಯವೆಂದರೆ, ನೀವು
ತಮಸ್ಸನ್ನು ಹೊಂದಬಹುದು, ಒಬ್ಬ
ಸೋಮಾರಿಯಾಗಬಹುದು ಎಂದು.
ಅನ್ಕ್ಲಚ್ ಆಗಿರಿ. ಆಗ ಶೇಕಡಾ 33ರಷ್ಟಿನ
ಸೋಮಾರಿತನವು ಕೂಡಲೇ ಹೊರಗೆ ಹೋಗುತ್ತದೆ.
ಕೆಲವು ದಿನಗಳಲ್ಲಿ ಅದು ನಿಮ್ಮ ವ್ಯವಸ್ಥೆಯಿಂದ
ಮಾಯವಾಗುತ್ತದೆ. ಆಗ ನೀವು ನೀವಾಗಿಯೇ
ನಿಮ್ಮಲ್ಲಿ ಅಡಗಿರುವ ಬುದ್ಧಿಶಕ್ತಿಯಿಂದ ಕೆಲಸ
ಮಾಡಲಾರಂಭಿಸುತ್ತೀರಿ. ನಿಮ್ಮ ದಿನನಿತ್ಯದ ಜೀವನ
ನಡೆಸಲು ಭಯ ಹಾಗೂ ದುರಾಸೆಯಿಂದ
ಪ್ರಚೋದಿಸಲ್ಪಡಬೇಕಾಗುವುದಿಲ್ಲ.
ನೀವು ಯೋಚಿಸುವುದನ್ನು ಸಂಪೂರ್ಣವಾಗಿ
ನಿಲ್ಲಿಸಬೇಕೆಂದು ನಾನು ಹೇಳುತ್ತಿಲ್ಲ. ನಾನು
ಹೇಳುತ್ತಿರುವುದೆನೆಂದರೆ, ನೀವು ಅನ್ಕ್ಲಚ್
ಆದಾಗ, ಯಾವ ಆಲೋಚನೆಗಳು ಉಂಟಾಗಬೇಕೋ
ಅವು ತಾನಾಗಿಯೇ ಉಂಟಾಗುತ್ತವೆ ಎಂದು. ನೀವು
ಅನ್ಕ್ಲಚ್ ಆದಾಗ, ಆರಂಭದಲ್ಲಿ ನಿಮ್ಮಲ್ಲಿ ಯಾವ
ಆಲೋಚನೆಗಳೂ ಉಂಟಾಗುತ್ತಿಲ್ಲವೆಂದು ಭಾಸವಾಗಬಹುದು. ನಂತರ ನಿಮಗೆ ತಿಳಿಯುತ್ತದೆ ಅನ್ಕ್ಲಚ್ ಆದ ನಂತರವೂ ಯೋಚಿಸುವ ಅಗತ್ಯವಿದ್ದಾಗಲೆಲ್ಲಾ ಮನಸ್ಸು ಕ್ಲಚ್ ಆಗುತ್ತದೆ. ಯೋಚಿಸುವ ಅಗತ್ಯವಿಲ್ಲದಿದ್ದಾಗ ಮನಸ್ಸು ಅನ್ಕ್ಲಚ್ ಆಗುತ್ತದೆ ಎಂದು. ನಿಮ್ಮ ಮನಸ್ಸು ಒಡೆಯನಂತಲ್ಲದೆ ಒಂದು ಸಾಧನದಂತೆ ಬಳಸಲ್ಪಡುವುದು.
ನಾವು ಶುದ್ಧವಾದ ಸ್ಪೂರ್ತಿಯಿಂದ ಬಾಳಬಹುದು, ಆದರೆ ಸಮಸ್ಯೆ ಏನೆಂದರೆ, ನಮಗೆ ಆ ಭರವಸೆ ಎಂದೂ ದೊರೆತಿಲ್ಲ. ನಮಗೆ ಸ್ಪೂರ್ತಿಯಿಂದಲೇ ಬಾಳಬಹುದೆಂಬ ಧೈರ್ಯ ಎಂದೂ ದೊರೆತಿಲ್ಲ. ಒಮ್ಮೊಮ್ಮೆ ಕಾರಣವಿಲ್ಲದೆಯೇ ಉತ್ಸಾಹವು ಹೊರಸೂಸುವುದನ್ನು, ಕಾರಣವಿಲ್ಲದೆಯೇ ಬುದ್ಧಿವಂತಿಕೆಯು ಹೊರಸೂಸುವುದನ್ನು ಕಾಣಬಹುದು. ಇದನ್ನೇ ನಾನು ಸ್ಪೂರ್ತಿ ಎನ್ನುವುದು. ಇದು ಕೆಲವು ಕ್ಷಣಗಳ ಕಾಲ ಮಾತ್ರ ಇರಬಹುದು. ಆದರೆ ಆ ಕೆಲವು ಕ್ಷಣಗಳೇ ನಿಮಗೆ ಒಂದು ಬದುಕಿನ ರೀತಿಯಾಗಬಹುದೆಂದು ತಿಳಿಯಬೇಕು. ನಾವು ಅನ್ಕ್ಲಚ್ ಆದಾಗ ಸತತವಾದ ಪ್ರೇರಣೆಯು ನಮ್ಮ ಜೀವನದಲ್ಲಿ ಉಂಟಾಗುತ್ತದೆ. ಅನ್ಕ್ಲಚ್ ಆಗುವುದು ನೇರವಾಗಿ ನಮ್ಮ ಆತ್ಮದ ಶಕ್ತಿಯನ್ನು ಪ್ರಚೋದಿಸುತ್ತದೆ. ಈ ಶಕ್ತಿಯೇ ಪ್ರೇರಕ ಶಕ್ತಿ, ಅನ್ಕ್ಲಚ್ನ ಶಕ್ತಿ.
ನಿಮ್ಮ ಜೀವನವನ್ನು ನಡೆಸಲು ‘ನಿಮ್ಮ’ ಅಗತ್ಯವಿದೆಯೇ?
ಒಂದು ಮುಖ್ಯವಾದ ವಿಷಯವನ್ನು ತಿಳಿಯಿರಿ.
ನಮ್ಮ ದೈನಂದಿನ ಜವಾಬ್ದಾರಿಗಳನ್ನು ನಿರ್ವಹಿಸಲು,
ನಮ್ಮ ಜೀವನವನ್ನು ನಡೆಸಲು, ಒಂದು
ಸ್ವಯಂಚಾಲಿತ ಬುದ್ಧಿಶಕ್ತಿಯಿದೆ. ಅದು ನಮ್ಮ
ಜೀವನವನ್ನು ನಡೆಸುವುದಲ್ಲದೆ, ನಮ್ಮ ಜೀವನವನ್ನು
ಪೋಷಿಸಿ, ಬೆಳೆಸಿ, ವಿಕಸಿಸುತ್ತದೆ.
ಆದರೆ ಸಮಾಜವು ನಮ್ಮನ್ನು ಚಿಕ್ಕವಯಸ್ಸಿನಿಂದಲೇ ನಿಯಮಾಧೀನರನ್ನಾಗಿಸುತ್ತದೆ. ಯೋಜನೆಯಿಲ್ಲದೆ, ಭಯ ಹಾಗೂ ದುರಾಸೆಗಳಿಲ್ಲದೆ ಬದುಕಲಾಗುವುದಿಲ್ಲವೆಂದು ನಮಗೆ ಕಲಿಸಲಾಗಿದೆ. ನಿಮ್ಮ ಆತ್ಮಗೌರವವು ನಿಮ್ಮಿಂದ ಕಿತ್ತುಕೊಳ್ಳಲ್ಪಟ್ಟಿದೆ. ಭಯ ಹಾಗೂ ದುರಾಸೆಗಳಿಲ್ಲದೆ ನಿಮ್ಮ ಜೀವನವನ್ನು ಸಹಜವಾಗಿ ನಡೆಸಬಹುದೆಂಬ ನಂಬಿಕೆಯನ್ನು ಕಳೆದುಕೊಳ್ಳುವಂತಾಗಿಸಿದೆ. ಆದ್ದರಿಂದಲೇ ನೀವು ಭಯ ಹಾಗೂ ದುರಾಸೆಗಳನ್ನು ನಿಮ್ಮೊಳಗೆ ತುಂಬುತ್ತೀರಿ. ನಿಮ್ಮ ಜೀವನ ನಡೆಸಲು, ನಿಮ್ಮ ಜೀವನವನ್ನು ಸಚೇತನಗೊಳಿಸಲು, ಭಯ ಹಾಗೂ ದುರಾಸೆಯನ್ನು ಇಂಧನವನ್ನಾಗಿ ಬಳಸಲು ಪ್ರಯತ್ನಿಸುತ್ತೀರಿ.
ಸ್ಪಷ್ಟವಾಗಿ ತಿಳಿಯಿರಿ, ನಿಮ್ಮ ಜೀವನವನ್ನು ಭಯ
ಹಾಗೂ ದುರಾಸೆಯ ಆಧಾರದ ಮೇಲೆ
ನಡೆಸಲಾಗುವುದಿಲ್ಲ. ಭಯ ಹಾಗೂ ದುರಾಸೆಯಿಂದ
ನೀವು ದೂಡಲ್ಪಟ್ಟರೆ, ಒಂದು ಸತತವಾದ
ಕಿರಿಕಿರಿಯನ್ನು ಹೊತ್ತಿರುತ್ತೀರಿ. ಬೆಳಗಿನಿಂದ
ರಾತ್ರಿಯವರೆಗೂ, ಎದ್ದಾಗಿನಿಂದ ಮಲಗುವವರೆಗೂ
| ಭಯ ಹಾಗೂ ದುರಾಸೆಯಿಂದ ನೀವು ದೂಡಲ್ಪಟ್ಟರೆ, ಒಂದು ಸತತವಾದ ಕಿರಿಕಿರಿಯನ್ನು ಹೊತ್ತಿರುತ್ತೀರಿ. | ಒಂದು ಸತತವಾದ ಕಿರಿಕಿರಿ ಇರುತ್ತದೆ. ಸಿಡಿದು ಬೀಳಲು ಒಂದು ಕಾರಣಕ್ಕಾಗಿ ಕಾಯುತ್ತಿರುತ್ತೀರಿ. ಒಂದು ಸಣ್ಣ ಸ್ಪರ್ಶಮಾತ್ರದಿಂದ ಇನ್ನೊಬ್ಬರ ಮೇಲೆ ಎರಗಲು ಸಿದ್ಧರಿರುತ್ತೀರಿ. ಅವರು ಯಾವ ತಪ್ಪನ್ನೂ |
|---|
ಮಾಡುವ ಅಗತ್ಯವಿರುವುದಿಲ್ಲ; ಸುಮ್ಮನೆ ನಿಮ್ಮೆದುರು ಬರುವುದೇ ನಿಮ್ಮನ್ನು ಪ್ರಚೋದಿಸುತ್ತದೆ! ಹೀಗಾಗುವುದು ಏಕೆಂದರೆ, ನಿಮ್ಮ ಜೀವನವನ್ನು ಭಯ ಹಾಗೂ ದುರಾಸೆಯಿಂದ ನಡೆಸುತ್ತಿರುವ ಶ್ರಮದಿಂದಾಗಿ.
ನೀವು ಸುಮ್ಮನೆ ವಿರಮಿಸಿದರೆ ವಿಶ್ವಶಕ್ತಿಯ ಸ್ವಾಭಾವಿಕವಾದ ಬುದ್ಧಿಶಕ್ತಿಯು ನಿಮ್ಮ ಜೀವನವನ್ನು ಸುಂದರವಾಗಿ ನಡೆಸುತ್ತದೆ. ನಿಮ್ಮ ಕ್ರಿಯೆಗಳು ಅನಾಯಾಸವಾಗಿ ವಿಶ್ವಶಕ್ತಿಯ ಚೈತನ್ಯದಿಂದಲೇ ಮುಂದುವರೆಯುತ್ತವೆ.
ತಂತ್ರ - 'ಕರ್ತನು ನಾನಲ್ಲ'
ಜ್ಞಾನಿಯಾದ ಅಷ್ಟಾವಕ್ರನು ಹೇಳುತ್ತಾನೆ,
'ನಾನು ಕರ್ತನು' ಎಂಬ ಅಹಂಕಾರದ
ಮಹಾಕಾಲಸರ್ಪದಿಂದ ಕಡಿಯಲ್ಪಟ್ಟಿರುವ ನೀವು,
'ನಾನು ಕರ್ತನಲ್ಲ' ಎಂಬ ನಂಬಿಕೆಯ ಅಮೃತವನ್ನು
ಕುಡಿದು ಸಂತೋಷವಾಗಿರಿ, ಎಂದು.
ಅಷ್ಟಾವಕ್ರನು ಈ ತಂತ್ರವನ್ನು ಜನಕ ಮಹಾರಾಜನಿಗೆ ನೀಡುತ್ತಾನೆ. 'ನಾನು ಕರ್ತನಲ್ಲ' ವೆಂದು ಕೇವಲ ಯೋಚಿಸುವುದು ಅಥವಾ 'ನಾನು ಕರ್ತನಲ್ಲ' ಎಂದು ನಂಬುವುದು ನಿಮ್ಮನ್ನು ನೇರವಾಗಿ ಮುಕ್ತವಾಗಿಸುವುದಿಲ್ಲ. ಈ ತಂತ್ರಮಾತ್ರದಿಂದಲೇ ನಿಮಗೆ ಬಿಡುಗಡೆ ಸಿಗುವುದಿಲ್ಲ. ಅದು ನಿಮಗೆ ಆಯಾಸವಾಗುವಂತೆ ಮಾಡುತ್ತದೆ ಅಷ್ಟೆ! ನೀವು ಸತತವಾಗಿ ನಾನು ಕರ್ತನಲ್ಲವೆಂಬುದನ್ನು ಒಂದು ವಿರಾಮವಿಲ್ಲದೆ ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ. 'ನಾನು ಕರ್ತನಲ್ಲ'ವೆಂಬುದನ್ನು ನಿರಂತರವಾಗಿ ನೆನಪಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ ಎಂದು ಅರಿತ ಕ್ಷಣವೇ, ನೀವು ಸಂಪೂರ್ಣವಾಗಿ ಹತಾಶರಾಗಿ ನಿಮ್ಮ ಮನಸ್ಸನ್ನು ಕೈಬಿಡುತ್ತೀರಿ. ಹೀಗೆ ಮನಸ್ಸನ್ನು ಕೈಬಿಟ್ಟಾಗ ನಾನು ಕರ್ತನಲ್ಲವೆಂಬುದು ಸುಮ್ಮನೆ ನಿಜವಾಗಿಬಿಡುತ್ತದೆ! ಆ ತಂತ್ರವನ್ನೇ ಇಲ್ಲಿ ಸೂಚಿಸಿರುವುದು.
ಅನ್ಕ್ಲಚ್ ಆಗುವುದು ಒಂದು ಆತ್ಮಶುದ್ಧೀಕರಣದ ಹಾಗೂ ವಿಕಸನೀಯವಾದ ತಂತ್ರ
ಅನ್ಕ್ಲಚ್ ಆಗುವುದರ ಬಗ್ಗೆ ಇದೊಂದು
ಸರಳವಾದ ತಿಳಿವಳಿಕೆ. ನೀವು
ಮಾಡಬೇಕಾದುದೇನೆಂದರೆ, ಹಳೆಯ
ಆಲೋಚನೆಗಳಿಗೆ ಅರ್ಥ ಕೊಡಲಾರಂಭಿಸಿದಾಗ
ಅಥವಾ ಹಳೆಯ ಆಲೋಚನೆಗಳೊಂದಿಗೆ ಸಂಬಂಧ
ಕಲ್ಪಿಸಿ ಅವು ನಿಮಗೆ ತೊಂದರೆ ಕೊಡಲು ಆಸ್ಪದ
ನೀಡಿದಾಕ್ಷಣವೇ ಅನ್ಕ್ಲಚ್ ಆಗಲು ನೆನಪು ಮಾಡಿಕೊಳ್ಳುವುದು.
ಯಾವ ಆಲೋಚನೆಯನ್ನೂ ಸೃಷ್ಟಿಸಿ, ಪೋಷಿಸಿ,
ನಾಶ ಮಾಡದಿರಿ. ಈ ಮೂರನ್ನೂ ಮಾಡದಿದ್ದರೆ,
ನೀವೇ ಪರಮಾತ್ಮ, ಪರಬ್ರಹ್ಮರಾಗುತ್ತೀರಿ.
ಅನ್ಕ್ಲಚ್ ಮಾಡುವುದು ಒಂದು ಆತ್ಮಶುದ್ಧೀಕರಣದ
ವಿಧಾನ. ಯಾವುದೇ ತಂತ್ರವು ಆತ್ಮಶುದ್ಧೀಕರಿಸಿ,
ಬಿಡುಗಡೆಗೊಳಿಸಬೇಕಾದರೆ, ನೀವು
ಸೂಕ್ಷ್ಮರಾಗುತ್ತಾ ಹೋದಂತೆಲ್ಲಾ ಅದೂ
ಸೂಕ್ಷ್ಮವಾಗಬೇಕು. ಅನ್ಕ್ಲಚ್ ಮಾಡುವುದು
ಅಂತಹ ಒಂದು ತಂತ್ರ.
ಯಾವ ತಂತ್ರವು ತಾನಾಗಿಯೇ ಸೂಕ್ಷ್ಮವಾಗುವುದಿಲ್ಲವೋ, ಅದು ಸ್ಕೂಲ ಸ್ತರದಲ್ಲಿಯೇ ಇದ್ದುಬಿಡುತ್ತದೆ. ಅದು ತನ್ನನ್ನೇ ಕೊಂದುಕೊಳ್ಳಲಾಗದಿದ್ದರೆ, ತನ್ನನ್ನು ಆತ್ಮಹತ್ಯೆಗೊಳಿಸಿಕೊಳ್ಳಲಾಗದಿದ್ದರೆ, ಅದು ನಿಮ್ಮನ್ನು ಕೊಲ್ಲುತ್ತದೆ! ಅನ್ಕ್ಲಚ್ನ ಸೊಗಸೆಂದರೆ ನೀವು ಸೂಕ್ಷ್ಮರಾಗುತ್ತಾ ಬಂದಂತೆಲ್ಲಾ ಅದೂ ಹೆಚ್ಚುಹೆಚ್ಚು ಸೂಕ್ಷ್ಮವಾಗುತ್ತಾ ಹೋಗುತ್ತದೆ. ಕೊನೆಗೆ ಅದು ಕರಗಿ ಹೋಗುತ್ತದೆ.
ಧ್ಯಾನ ತಂತ್ರಗಳು
ಅನ್ಕ್ಲಚ್ ಆಗುವುದು -
ಯಾವಾಗಲಾದರೂ ಸರಿ, ಎಲ್ಲಿಯಾದರೂ ಸರಿ.
ನೀವು ಕುಳಿತಾಗ, ಸಹಜವಾಗಿ ಕೆಲವು ಆಲೋಚನೆಗಳು ಬರುತ್ತವೆ. ಒಂದು ಆಲೋಚನೆಯು ಬರುವುದನ್ನು ನೋಡಿದಾಗ, ಅದಕ್ಕೆ ಅರ್ಥವನ್ನು ಕೊಡಬೇಡಿರಿ. ನೀವು ನಿಮ್ಮ ಭೂತಕಾಲದ ಜೊತೆ ಅದನ್ನು ಸಂಬಂಧ ಕಲ್ಪಿಸಿದಾಗ ಮಾತ್ರ ಅದಕ್ಕೆ ಅರ್ಥವನ್ನು ಕೊಡುತ್ತೀರಿ. ಅದಕ್ಕೆ ಅರ್ಥವನ್ನು ಕೊಡದೆ, ಸುಮ್ಮನೆ ಅನ್ಕ್ಲಚ್ ಆಗುವುದನ್ನು ನೆನಪು ಮಾಡಿಕೊಂಡು ಏನಾಗುತ್ತದೆಂದು ನೋಡಿರಿ. 'ಈ ಆಲೋಚನೆಯಿಂದ ಅನ್ಕ್ಲಚ್ ಆಗುತ್ತೇನೆ; ಇದಕ್ಕೆ ಅರ್ಥವನ್ನು ಕೊಡುವುದು ಬೇಡ' ಎಂದು ನೆನಪು ಮಾಡಿಕೊಂಡ ಕ್ಷಣ, ಕೆಲವು ಸೆಕೆಂಡುಗಳು ಒಂದು ಸಣ್ಣ ಮೌನವಾದ ಅಂತರವಿರುತ್ತದೆ. ಮೌನವಿದೆಯೆಂಬ ಅರಿವು ಉಂಟಾದ ಕ್ಷಣವೇ ಮತ್ತೊಂದು ಆಲೋಚನೆ ಉಂಟಾಗುತ್ತದೆ. ಆಗ ಆ ಆಲೋಚನೆಯಿಂದ ಅನ್ಕ್ಲಚ್ ಆಗಿರಿ. ನಂತರ ಕೆಲವು ಸಮಯ ಅಂತರವಿರುತ್ತದೆ. ಮತ್ತೆ 'ನಾನು ಮೌನದಲ್ಲಿದ್ದೇನೆ' ಎಂದೋ ಅಥವಾ ನಾನು 'ಅನ್ಕ್ಲಚ್ ಮಾಡುತ್ತಿದ್ದೇನೆ' ಎಂದೋ ಇನ್ನೊಂದು ಆಲೋಚನೆ ಬರುತ್ತದೆ. ಆ ಆಲೋಚನೆಯಿಂದಲೂ ಅನ್ಕ್ಲಚ್ ಆಗಿರಿ. ಎರಡು ಆಲೋಚನೆಗಳ ನಡುವಿನ ಅಂತರ ಅಥವಾ ಮೌನವು ಹೆಚ್ಚು ಹೆಚ್ಚು ದೀರ್ಘವಾಗುತ್ತಾ ಬರುತ್ತದೆ. ಅದೇ ಇದರ ಇಡೀ ಉದ್ದೇಶ.
ಸಹಜವಾಗಿ ಕೆಲವು ನಿಮಿಷಗಳಾದ ಮೇಲೆ ಎಲ್ಲೋ ಅಲೆದಾಡುವುದು ಮನಸ್ಸಿನ ಸ್ವಭಾವ. ಮನಸ್ಸು ಎಲ್ಲೋ ಅಲೆದಿದೆಯೆಂದು ನೆನಪಾದ ಕ್ಷಣ ಅಥವಾ ಅರಿವನ್ನು ಹೊಂದಿದ ಕ್ಷಣವೇ ಅನ್ಕ್ಲಚ್ ಮಾಡಿಕೊಳ್ಳಿರಿ. ಮನಸ್ಸು ಎಲ್ಲೋ ಅಲೆದಿದೆಯೆಂಬುದರ ಬಗ್ಗೆ ತಪ್ಪಿತಸ್ಥ ಭಾವನೆಯನ್ನು ಹೊಂದಲಾಗಲೀ ಅಥವಾ ಕ್ಷೋಭೆಗೊಳಗಾಗುವ ಅಗತ್ಯವಿಲ್ಲ. ನೆನಪಾದ ಕ್ಷಣವೇ ಅನ್ಕ್ಲಚ್ ಆಗಿರಿ, ಅಷ್ಟೇ.
ಪ್ರಾರಂಭದಲ್ಲಿ ಅದೊಂದು ಘನವಾದ
ಹೋರಾಟದಂತೆ, ಬಹಳ ಸ್ಕೂಲವಾಗಿರಬಹುದು.
ಅನ್ಕ್ಲಚ್ ಎಂಬುದನ್ನು ಮಂತ್ರದಂತೆ
ಉಚ್ಚರಿಸಬೇಕಾಗುತ್ತದೆ. ಆದರೆ ಕೆಲವು
ಕ್ಷಣಗಳಲ್ಲಿಯೇ ಅದೊಂದು ಸೂಕ್ಷ್ಮವಾದ
ಪ್ರಕ್ರಿಯೆಯಾಗುತ್ತದೆ.
ಅನ್ಕ್ಲಚ್ ಮಾಡಿದಾಗ ...
ಪ್ರತಿಕ್ಷಣವೂ ಹೊಸದಾಗಿರುತ್ತದೆ.
ಪ್ರತಿಕ್ಷಣವೂ ಆನಂದದಾಯಕವಾಗಿರುತ್ತದೆ.
ಪ್ರತಿಕ್ಷಣವೂ ಸಂತೋಷವಾಗಿರುತ್ತದೆ.
ಪ್ರತಿಕ್ಷಣವೂ ಉತ್ಸಾಹಭರಿತವಾಗಿರುತ್ತದೆ.
ಅನ್ಕ್ಲಚ್ ಮಾಡುವುದು ನಿರಂತರ ಉತ್ಸಾಹ
- ನಿತ್ಯಾನಂದ ಸ್ಪುರಣದ ಮೂಲ.