KAILASA Library/ಜೀವನ್ಮುಕ್ತಿ/ಕರ್ಮ ಚಕ್ರವನ್ನು ಭೇದಿಸಲು ಸಾಧ್ಯSign in
ಜೀವನ್ಮುಕ್ತಿ

ಕರ್ಮ ಚಕ್ರವನ್ನು ಭೇದಿಸಲು ಸಾಧ್ಯ

This text was machine-transcribed from the printed book and may contain errors. Select the words and choose “Report a mistake”.

ನಮ್ಮ ಆಲೋಚನೆಗಳು ಸುಖ ದುಃಖವೆಂಬ
ಎರಡು ಕಾಲ್ಪನಿಕ ದಂಡಗಳನ್ನು ಸೃಷ್ಟಿಮಾಡುತ್ತವೆ.
ಈ ಸತ್ಯವನ್ನು ಅರಿತುಕೊಂಡು 'ಅನಾಕ್ಷಚ್' ಎಂದರೆ,
ಆಲೋಚನೆಗಳ ಹಿಡಿತದಿಂದ ಬಿಡುಗಡೆಹೊಂದಿದರೆ,
ನಾವು ಬುದ್ಧನು ಹೇಳುವ ಲಕ್ಷ್ಯ ಸ್ಥಿತಿಯನ್ನು
ಹೊಂದಬಹುದು. ವರ್ತಮಾನದಲ್ಲಿ ಇರಬಹುದು
ಹಾಗೂ ಅರಿವಿನಿಂದ ಇರಬಹುದು. ನಮ್ಮ
ಆಲೋಚನೆಗಳ ಪ್ರಕ್ರಿಯೆಯೇ ನಮ್ಮನ್ನು ಸತತವಾಗಿ
ಭೂತ-ಭವಿಷ್ಯತ್ಕಾಲಗಳ ನಡುವೆ ಡೋಲಾಯಿಸಿ
ವರ್ತಮಾನದಲ್ಲಿ ವಿರಮಿಸಲು ಸಾಧ್ಯವಾಗದಂತೆ
ಮಾಡುವುದು.

ಇದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಿರಿ,
ನಾವು ವರ್ತಮಾನದಲ್ಲಿದ್ದಾಗ ಆಸೆ, ಭಯಗಳ
ತೊಂದರೆಯಿಂದ ಮುಕ್ತರಾಗಿರಬಹುದು. ಭಯ
ಹಾಗೂ ಆಸೆಗಳಾವುದೂ ಇಲ್ಲದೆ ಕಾರ್ಯ
ನಿರ್ವಹಿಸಬಹುದು. ಅದು ಹೇಗೆಂದು ನೀವು
ಕೇಳಬಹುದು. ನನ್ನಲ್ಲಿ ಯಾವುದಾದರೂ ಕೆಲಸವನ್ನು
ಮಾಡಲು ಯಾವ ಆಸೆಯೂ ಇಲ್ಲದಿದ್ದರೆ, ನಾನು
ಹೇಗೆ ಪ್ರೇರೇಪಿಸಲ್ಪಡಬಹುದು? ಅದಕ್ಕೆ ಪ್ರೇರಣೆಯ
ಅವಶ್ಯಕತೆ ಇಲ್ಲ. ನೀವು ಉಸಿರಾಡುವುದು, ನಿಮ್ಮ
ಆಹಾರವನ್ನು ಜೀರ್ಣಿಸಿಕೊಳ್ಳುವುದು ಎಲ್ಲವನ್ನೂ
ಪ್ರೇರಣೆಯಿಂದಲೇ ಮಾಡುತ್ತಿದ್ದೀರೇನು?
ನಮ್ಮೊಳಗೂ ಹೊರಗೂ ಇರುವ ಚೈತನ್ಯದ
ಬುದ್ಧಿಶಕ್ತಿಯಿಂದಲೇ ನಾವು ಜೀವಿಸಲೂ ಹಾಗೂ
ಬೆಳೆಯಲೂ ಸಾಧ್ಯವಾಗುವುದು. ಜೀವನವು ನಮ್ಮಿಂದ
ಸಾಗುತ್ತಿಲ್ಲ, ನಮ್ಮ ಹೊರತೂ ಸಾಗುತ್ತದೆ.

ಮೋಹವಿಲ್ಲದೆ ನಾವು ಕಾರ್ಯ ನಿರ್ವಹಿಸಿದಾಗ
ಆ ಕಾರ್ಯಗಳಿಂದಾಗಿ
ಕರ್ಮಬಂಧನವುಂಟಾಗುವುದಿಲ್ಲ.

ಕರ್ಮ ಎಂದರೇನು?

ಈಶಾವಾಸ್ಯ ಉಪನಿಷತ್ತಿನಲ್ಲಿ ಬಹಳ ಸುಂದರವಾದ ಒಂದು ಶ್ಲೋಕವಿದೆ:

ಪೂರ್ಣಮದಃ ಪೂರ್ಣಮಿದಂ

ಪೂರ್ಣಾತ್ ಪೂರ್ಣಮುದಚ್ಯತೇ

ಪೂರ್ಣಸ್ಯ ಪೂರ್ಣಮಾದಾಯ

ಪೂರ್ಣಮೇವಾವಶಿಷ್ಯತೇ

ಅದು ಪೂರ್ಣ, ಇದು
ಪೂರ್ಣ, ಪೂರ್ಣದಿಂದ
ಪೂರ್ಣವು ಉದಿಸುತ್ತದೆ. ಪೂರ್ಣದಿಂದ
ಪೂರ್ಣವನ್ನು ಕಳೆದರೂ ಪೂರ್ಣವೇ ಉಳಿಯು-
ತ್ತದೆ.

ನಮ್ಮ ಸ್ವಭಾವದಿಂದಲೇ ಪೂರ್ಣತ್ವವನ್ನು
ಅರಸುತ್ತೇವೆ. ನಮ್ಮ ಸಹಜ ಸ್ವಭಾವದ ಅನುಸಾರ
ನಾವು ಪೂರ್ಣತೆಯನ್ನು ಅರಸುತ್ತೇವೆ. ನಾವು
ಮಾಡುವ ಕಾರ್ಯಗಳಲ್ಲಿ ಸಂತೃಪ್ತಿಯನ್ನು
ಸಹಜವಾಗಿಯೇ ಅರಸುತ್ತೇವೆ.

ತಿನ್ನುವುದೋ, ಕುಡಿಯುವುದೋ,
ಕುಣಿದಾಡುವುದೋ, ಓಡುವುದೋ,
ಮಾತನಾಡುವುದೋ, ನಿದ್ರಿಸುವುದೋ ಅಥವಾ
ಧ್ಯಾನ ಮಾಡುವುದೋ ಅಥವಾ ಇನ್ನಾವುದೇ
ಕಾರ್ಯದಲ್ಲಿ ತೊಡಗಿದರೂ, ನಮ್ಮ ಅಸ್ತಿತ್ವವು
ಅದನ್ನು ಸಂಪೂರ್ಣವಾಗಿ ಅನುಭವಿಸಿ ಅದರಲ್ಲಿ
ತಲ್ಲೀನರಾಗಲು ತವಕಿಸುತ್ತದೆ. ನಾವು ಮಾಡುವ
ಪ್ರತಿ ಕಾರ್ಯದ ಬಗ್ಗೆಯೂ ಪೂರ್ಣವಾಗಿ
ಎಚ್ಚರದಿಂದ ಇದ್ದೇವೇಯೇ? ನಮ್ಮ ಜೀವನದ ಪ್ರತಿ
ಕ್ಷಣವೂ ಜಾಗೃತರಾಗಿದ್ದೇವೇಯೇ?

ಒಂದು ಸಣ್ಣ ಕಥೆ :

ಒಬ್ಬ ವ್ಯಕ್ತಿಯು ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದನು. ಗಾಡಿಯ ಚಾಲಕನು ರಸ್ತೆಯ ತಿರುವುಗಳಲ್ಲೂ ಅತಿವೇಗವಾಗಿ ಕಾರನ್ನು ಓಡಿಸುತ್ತಿದ್ದನು. ಇದರಿಂದ ಪ್ರಯಾಣಿಕನು ಭಯಗೊಂಡನು.

ಭಯಗೊಂಡ ಪ್ರಯಾಣಿಕನನ್ನು ಕಂಡು ಚಾಲಕನು,
'ರಸ್ತೆಯಲ್ಲಿ ತಿರುವುಗಳು ಬಂದಾಗ ನೀನೂ ಸಹ
ನಾನು ಮಾಡಿದಂತೆಯೇ ಏಕೆ ಮಾಡಬಾರದು?
ಸುಮ್ಮನೆ ಕಣ್ಣು ಮುಚ್ಚಿಕೋ ಅಷ್ಟೇ!' ಎಂದು
ಹೇಳಿದನು.

ನೀವು ಮಾಡುವ ಕಾರ್ಯದಲ್ಲಿ ನೀವು ಸಂಪೂರ್ಣ ಎಚ್ಚರದಿಂದಿಲ್ಲದಿದ್ದರೆ, ನಿಮ್ಮ ಅಸ್ತಿತ್ವವು ಅದರ ಅನುಭವದಲ್ಲಿ ಅಸಂತೃಪ್ತವಾಗಿಯೇ ಉಳಿದುಬಿಡುತ್ತದೆ. ಈ ಅಸಂತೃಪ್ತ ಅನುಭವವು ನಿಮ್ಮೊಳಗೆ ಉಳಿದು ಅದರ ಆತೃಪ್ತಿಗಾಗಿ ನಿಮ್ಮನ್ನು ಪದೇ ಪದೇ ಅದೇ ಕಾರ್ಯವನ್ನು ತೀವ್ರತೆಯಿಂದ ಮಾಡಲು ಪ್ರೇರೇಪಿಸುತ್ತಿರುತ್ತದೆ. ಅದನ್ನೇ ಕರ್ಮ ಎನ್ನುವುದು.

ಕರ್ಮ ಎಂದರೆ ನಮ್ಮೊಳಗೆ ಉಳಿದು ತನ್ನ
ಪೂರೈಕೆಗಾಗಿ ನಮ್ಮನ್ನು ನಿರಂತರವಾಗಿ
ಕೆಳಗೆಳೆಯುತ್ತಿರುವ ಪೂರೈಸದ ಅನುಭವಗಳ
ಸಂಕಲನ.

ನಾವು ಯಾವುದನ್ನು ತೀಕ್ಷ್ಣವಾಗಿಯೂ,
ಗಾಢವಾಗಿಯೂ ಮಾಡಿ ಅನುಭವಿಸುತ್ತೇವೆಯೋ,
ಅದು ಯಾವಾಗಲೂ ನಮ್ಮ ವ್ಯವಸ್ಥೆಯನ್ನು
ಬಿಟ್ಟುಹೋಗುತ್ತದೆ. ಅದು ನಮ್ಮನ್ನು
ಮುಕ್ತಗೊಳಿಸುತ್ತದೆ. ನಮ್ಮ ಸಂಪೂರ್ಣ ಗಮನ,
ಚೈತನ್ಯ ಮತ್ತು ಅರಿವುಗಳನ್ನು ಪಡೆಯದಿದ್ದ, ನಾವು
ಸಂಪೂರ್ಣವಾಗಿ ಅನುಭವಿಸದೇ ಇದ್ದ, ಹಾಗೂ
ನಮಗೆ ಸಂತೃಪ್ತಿಯನ್ನೂ ಕೊಡದೆ ಇದ್ದ
ಅನುಭವಗಳು ನಮ್ಮೊಳಗೆ ಉಳಿದು
ಕರ್ಮಗಳಾಗುತ್ತವೆ.

ಕೆಲವು ಕರ್ಮಗಳ ಹೊರೆಗಳನ್ನು ಹೊತ್ತಿದ್ದರೂ
ಸಹ ಮೂಲತಃ ನಾವು ಪರಿಪೂರ್ಣರೇ. ಹಾಗಾಗಿ
ಪೂರೈಸದ ಕರ್ಮಗಳು ಬಹುಕಾಲ ನಮ್ಮೊಳಗೇ
ಅಡಗಿರಲಾರವು. ತಮ್ಮ ಪೂರೈಕೆಗಾಗಿ ಅವು
ಪ್ರಯತ್ನಿಸುತ್ತವೆ. ನಮ್ಮ ವ್ಯವಸ್ಥೆಯ
ಅಪರಿಪೂರ್ಣವಾದ ಯಾವುದೇ ಆಸೆ, ಅನುಭವಗಳು
ಪೂರೈಸುವವರೆಗೂ ಕರ್ಮವಾಗಿ ಉಳಿದು ನಮ್ಮನ್ನು
ಪುನಃ ಪುನಃ ಅದೇ ಅನುಭವವನ್ನು ಪಡೆಯುವಂತೆ
ಪ್ರೇರೇಪಿಸುತ್ತವೆ.

ನಾವು ಯೋಚಿಸುವುದು, ಮಾತನಾಡುವುದು ಮತ್ತು ಕೆಲಸಗಳನ್ನು ಮಾಡುವುದು ಎಲ್ಲವೂ ಅಸ್ಪಷ್ಟತೆ, ಅತೃಪ್ತಿ ಮತ್ತು ಗಾಢವಾದ ಅಜ್ಞಾನದಿಂದ ಕೂಡಿದೆ. ಈ ಎಲ್ಲಾ ಯೋಚನೆಗಳು, ನಡೆ, ನುಡಿಗಳು ಒಟ್ಟಾಗಿ ನಮ್ಮ ಕರ್ಮಬಂಧಕ್ಕೆ ಸೇರುತ್ತವೆ. ಏಕೆಂದರೆ ಇವು ಯಾವುದೂ ನಮ್ಮಲ್ಲಿ ಪೂರೈಕೆಯನ್ನು ಉಂಟುಮಾಡುವುದಿಲ್ಲ. ಅವು ಪೂರೈಸದಿದ್ದಾಗ ನಮ್ಮ ಕರ್ಮವು ಹೇಗಾದರೂ ಅದನ್ನು ಪೂರೈಸಿಕೊಳ್ಳಲು ಯತ್ನಿಸುತ್ತದೆ.

ನಮ್ಮ ಸ್ವಂತ ಆಲೋಚನೆ, ನಡೆ ನುಡಿಗಳೇ
ನಮ್ಮ ಕರ್ಮವಾಗಿ ಯಾವ ರೀತಿಯಲ್ಲಾದರೂ
ಪೂರೈಕೆಯನ್ನು ಹೊಂದಲು ಪ್ರೇರೇಪಿಸುತ್ತವೆ.

ವರ್ತಮಾನವು ಹಿಂದಿನ ಎಲ್ಲ ನಿರ್ಧಾರಗಳ ಮೊತ್ತ

ನೀವು ಈಗ ಈ ಪುಸ್ತಕವನ್ನು ಓದುತ್ತಿರುವುದು ನಿಮ್ಮ ಹಿಂದಿನ ಎಲ್ಲ ನಿರ್ಧಾರಗಳಿಂದಾಗಿಯೇ ಎಂಬುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಿರಿ. ಮೊದಲು ನೀವು ಪ್ರದರ್ಶನದಲ್ಲಿದ್ದ ಪುಸ್ತಕಗಳ ಬಗ್ಗೆ ಗಮನಿಸಲು ನಿರ್ಧರಿಸಿದಿರಿ. ನಂತರ ಅದನ್ನು ಕೊಂಡುಕೊಳ್ಳುವ ನಿರ್ಧಾರ ಮಾಡಿದಿರಿ. ಈಗ ಅದನ್ನು ಓದುವ ನಿರ್ಧಾರ ಮಾಡಿದ್ದೀರಿ. ಈ ಎಲ್ಲ ನಿರ್ಧಾರಗಳ ಮೊತ್ತದಿಂದಲೇ ನೀವೀಗ ಇಲ್ಲಿ ಕುಳಿತಿರುವುದು.

ಹಿಂದಿನ ಈ ಎಲ್ಲ ನಿರ್ಧಾರಗಳ ಮೊತ್ತವೇ
ವರ್ತಮಾನ. ಇದೇ ತರ್ಕವನ್ನು ಅನ್ವಯಿಸಿದರೆ,
ವರ್ತಮಾನದಲ್ಲಿ ನೀವು ತೆಗೆದುಕೊಳ್ಳುವ
ನಿರ್ಧಾರಗಳೇ ನಿಮ್ಮ ಭವಿಷ್ಯತ್ತಾಗುತ್ತದೆ.

ಕರ್ಮ ಸಿದ್ಧಾಂತದ ಸಾರವೇ ಇದು:
ಭೂತಕಾಲದ ಮೊತ್ತವೇ ವರ್ತಮಾನ.
ವರ್ತಮಾನದ ಮೊತ್ತವೇ ಭವಿಷ್ಯತ್ತು.

ನಿಮ್ಮೆಲ್ಲಾ ಭೂತಕಾಲದ ಮೊತ್ತವು ವರ್ತಮಾನವಾಗಿದೆ. ವರ್ತಮಾನದ ಮೊತ್ತವೇ ಭವಿಷ್ಯತ್ತಾಗುತ್ತದೆ. ಸಮಸ್ಯೆಯೇನೆಂದರೆ, ನಾವು ಅನೇಕ ನಿರ್ಧಾರಗಳನ್ನು ಪ್ರಜ್ಞಾರಹಿತವಾಗಿ ತೆಗೆದುಕೊಳ್ಳುತ್ತೇವೆ. ಸಾವಿರಾರು ನಿರ್ಧಾರಗಳನ್ನು ಪ್ರಜ್ಞಾರಹಿತವಾಗಿಯೇ ತೆಗೆದುಕೊಳ್ಳುತ್ತೇವೆ. ಹಾಗಾಗಿಯೇ ನಾವು ಕಾರ್ಯ-ಕಾರಣಗಳ ಸಂಬಂಧವನ್ನು ಅರಿಯಲು ಸಾಧ್ಯವಿಲ್ಲದಾಗಿದೆ.

ನಿಮ್ಮ ಆಲೋಚನಾಪದ್ಧತಿಗೆ ಹೆಚ್ಚು ಅರಿವನ್ನೂ ಬುದ್ಧಿಶಕ್ತಿಯನ್ನೂ ಹರಿಸಿರಿ. ನಿಮ್ಮ ನಿರ್ಧಾರ ಕ್ರಮಕ್ಕೆ ಹೆಚ್ಚು ಅರಿವನ್ನೂ ಪ್ರಜ್ಞೆಯನ್ನೂ ಹರಿಸಿರಿ.

ಯಾವುದೇ ಕ್ಷಣದಲ್ಲಿಯೂ ಭವಿಷ್ಯತ್ತು ಪೂರ್ವನಿಯಮಿತವೆಂಬುದು ನಿಜವೇ, ಆದರೆ ಅದು ನಿರ್ಬಂಧಕ್ಕೆ ಒಳಪಟ್ಟಿರುತ್ತದೆ. ಅಲ್ಲಿಯವರೆವಿಗೂ ನಡೆದಿರುವ ಎಲ್ಲ ಘಟನೆಗಳ ಮೊತ್ತವು ಭವಿಷ್ಯತ್ತನ್ನು ರೂಪಿಸುವುದು ಪೂರ್ವನಿಯಾಮಕ. ಆದರೆ ಅದು ನಿರ್ಬಂಧಿತ. ಅದನ್ನು ಬದಲಾಯಿಸಬಲ್ಲ, ಬದಲಾಯಿಸುವ ಮುಖ್ಯವಾದ ಅಂಶವೊಂದಿದೆಅದು ನಿಮ್ಮ ಪ್ರಜ್ಞೆ, ನಿಮ್ಮ ಸಂಕಲ್ಪ.

ಒಂದು ಸಣ್ಣ ಕಥೆ:

ಒಮ್ಮೆ ಇಬ್ಬರು ಸಹೋದರರು ಭವಿಷ್ಯತ್ತನ್ನು ಬಲ್ಲ
ಮುನಿಯೊಬ್ಬನನ್ನು ಭೇಟಿ ಮಾಡಿದರು. ಆ
ಸಹೋದರರು ಆತನಿಗೆ ವಂದಿಸಿ, ತಮ್ಮ
ಭವಿಷ್ಯವನ್ನು ಹೇಳುವಂತೆ ಕೋರಿದರು. ಮುನಿಯು
ಅವರಿಗೆ ಹಿತವಚನ ಹೇಳಿದನು, ‘ಮುಂದಿನದನ್ನು
ಮೊದಲೇ ತಿಳಿಯುವುದು ಒಳ್ಳೆಯದಲ್ಲ. ಅಲ್ಲದೆ
ನಾನೀಗ ಏನು ಹೇಳಿದರೂ ಮುಂದೆ ಅದು
ಬದಲಾಗಬಹುದು’ ಎಂದು.

ಆದರೂ ಸಹೋದರರು ತಮ್ಮ ಭವಿಷ್ಯವನ್ನು
ನುಡಿಯುವಂತೆ ಒತ್ತಾಯ ಪಡಿಸಿದರು. ಮುನಿಯು
ಹಿರಿಯವನನ್ನು ನೋಡಿ, ‘ಒಂದು ವರ್ಷದೊಳಗೆ
ನೀನು ರಾಜನಾಗಲಿದ್ದೀಯೆ’ ಎಂದೂ, ಕಿರಿಯವನನ್ನು
ಕುರಿತು, ‘ಒಂದು ವರ್ಷದೊಳಗೆ ನೀನು
ಕೊಲೆಯಾಗಲಿದ್ದೀಯೆ’ ಎಂದೂ ಹೇಳಿದನು. ಅಣ್ಣ

  • ತಮ್ಮಂದಿರು ಮನೆಯ ಕಡೆಗೆ ಹೊರಟರು. ಅಣ್ಣನು ಸಂತಸದಲ್ಲಿದ್ದರೆ, ತಮ್ಮನು ಖಿನ್ನನಾಗಿದ್ದನು.

ಈಗ ಅಣ್ಣನು ತಾನು ರಾಜನಾಗಲಿರುವ ಸವಿಗನಸನ್ನು
ಕಾಣಲಾರಂಭಿಸಿದನು. ಒಂದು ವರ್ಷಕ್ಕಿಂತಲೂ
ಕಡಿಮೆ ಆಯುಷ್ಯವಿರುವ ತಮ್ಮನು ಆಧ್ಯಾತ್ಮಿಕ
ಚಟುವಟಿಕೆಗಳಲ್ಲಿ ತೊಡಗಿದನು. ಇತರರ
ಸೇವೆಯಲ್ಲಿ ನಿರತನಾಗಿ ತನ್ನ ನಿರುತ್ಸಾಹದಿಂದ
ಹೊರಬಂದನು.

ಹನ್ನೊಂದು ತಿಂಗಳುಗಳು ಕಳೆದವು. ಒಂದು ದಿನ ಅಣ್ಣನು ತಮ್ಮನನ್ನು ತನ್ನ ಮನೆಗೆ ಆಹ್ವಾನಿಸಿದನು. ತಾನು ಶೀಘ್ರದಲ್ಲೇ ರಾಜನಾಗಲಿರುವುದರಿಂದ ಅರಮನೆಗಾಗಿ ಭೂಮಿಯನ್ನು ಹುಡುಕುತ್ತಿದ್ದನು. ಅವರು ವಿಶಾಲವಾದ ಒಂದು ಪ್ರದೇಶದಲ್ಲಿ ಓಡಾಡುತ್ತಿದ್ದಾಗ, ತಮ್ಮನು ಅರ್ಧ ಹೂತುಕೊಂಡಿದ್ದ ಬಿಂದಿಗೆಯೊಂದನ್ನು ಎಡವಿದನು. ಸಹೋದರರಿಬ್ಬರೂ ಸೇರಿ ನೆಲವನ್ನು ಅಗೆದು ಅದನ್ನು ಹೊರತೆಗೆದನು. ಅದೊಂದು ದೊಡ್ಡ ಚಿನ್ನದ ನಾಣ್ಯಗಳಿಂದ ತುಂಬಿದ ಬಿಂದಿಗೆಯಾಗಿತ್ತು.

ಅಣ್ಣನು ಅತ್ಯಾನಂದದಿಂದ ಹಿಗ್ಗಿ, ‘ಇದು ನನಗೆ
ಸೇರಬೇಕು! ನನ್ನ ಅರಮನೆ ಹಾಗೂ ರಾಜ್ಯಕ್ಕೆ
ಸೇರಬೇಕು!’ ಎಂದು ಕೂಗಲಾರಂಭಿಸಿದನು. ಅದೇ
ವೇಳೆಗೆ ಅಲ್ಲಿದ್ದ ಪೊದೆಯಿಂದ ಡಕಾಯಿತನೊಬ್ಬನು
ಅಣ್ಣನ ಮೇಲೇರಿ ಆ ಬಿಂದಿಗೆಯನ್ನು ಕಸಿದುಕೊಳ್ಳಲು
ಅವನ ತಲೆಯ ಮೇಲೆ ಹೊಡೆದನು. ಅಣ್ಣನನ್ನು
ಕಾಪಾಡಲು ತಮ್ಮನು ಡಕಾಯಿತನ ಮೇಲೆ ಬಿದ್ದನು.
ಆದರೆ ಡಕಾಯಿತನು ತನ್ನ ಕೈಯಲ್ಲಿದ್ದ ಚಾಕುವಿನಿಂದ
ಅವನ ಮೇಲೆ ಧಾಳಿ ಮಾಡಿದನು. ಈ
ಹೊಡೆದಾಟದಲ್ಲಿ ಡಕಾಯಿತನು ಬಿಂದಿಗೆಯನ್ನು
ಬಿಟ್ಟು ಓಡಿಹೋದನು.

ಅಣ್ಣನು ತನ್ನ ಜೀವವನ್ನು ಕಾಪಾಡಿದುದಕ್ಕಾಗಿ
ತಮ್ಮನಿಗೆ ಬಹುವಾಗಿ ಧನ್ಯವಾದಗಳನ್ನು ಹೇಳಿ
ನಿಧಿಯಲ್ಲಿ ಅರ್ಧವನ್ನು ಕೊಡುವುದಾಗಿ ಹೇಳಿದನು.
ತಮ್ಮನು ತಾನು ಹೇಗಿದ್ದರೂ ಹೆಚ್ಚು ಕಾಲ
ಜೀವಿಸುವುದಿಲ್ಲವೆಂದು ಅದನ್ನು ನಿರಾಕರಿಸಿದನು.

ಅಣ್ಣನು ದೊರೆತ ಹೊಸ ನಿಧಿಯಿಂದ ತಿಂದು,
ಕುಡಿದು, ವಿಲಾಸದಿಂದಿದ್ದು, ಭೋಗದ ಜೀವನವನ್ನು
ಆರಂಭಿಸಿದನು.

ಒಂದು ವರ್ಷ ಕಳೆಯಿತು. ಅಣ್ಣನಿಗೆ ಯಾವ ಕಿರೀಟವೂ ಕಾಣಿಸಲಿಲ್ಲ. ತಮ್ಮನೂ ಒಳ್ಳೆಯ ಆರೋಗ್ಯದಿಂದಿದ್ದನು. ಅವರಿಬ್ಬರೂ ಮತ್ತೆ ಆ ಮುನಿಯ ದರ್ಶನಕ್ಕಾಗಿ ಬಂದರು. ಆತನನ್ನು ಭೇಟಿ ಮಾಡಿ, 'ನಿಮ್ಮ ಭವಿಷ್ಯವು ಸುಳ್ಳಾದುದು ಹೇಗೆ?' ಎಂದು ಕೇಳಿದರು. ಮುನಿಗೂ ಆಶ್ಚರ್ಯವಾಗಿ, ಸ್ವಲ್ಪ ಕಾಲ ಧ್ಯಾನಮಗ್ನನಾಗಿದ್ದನು. ನಂತರ ಮುನಿಯು, 'ನಿಮ್ಮ ಭವಿಷ್ಯವು ಬದಲಾಗಬಹುದು. ಎಂದು ಹೇಳಿದ್ದೆನಲ್ಲ' ಎಂದನು. ಹಿರಿಯವನ ಕಡೆಗೆ ತಿರುಗಿ, 'ಕಳೆದ ತಿಂಗಳುಗಳ ನಿನ್ನ ಬೇಜವಾಬ್ದಾರಿಯ ವರ್ತನೆಯಿಂದ ನಿನ್ನ ಭವಿಷ್ಯವು ಬದಲಾಗಿ, ದೊರಕಬೇಕಾದ ಕಿರೀಟವು ಕೇವಲ ಕೆಲವು ಚಿನ್ನದ ನಾಣ್ಯಗಳಿಗೆ ಇಳಿಯಿತು' ಎಂದನು.

ಮತ್ತೆ ಕಿರಿಯವನ ಕಡೆ ನೋಡಿ, 'ನಿನ್ನ ಆಧ್ಯಾತ್ಮಿಕತೆ, ವಿಶ್ವಾಸ ಹಾಗೂ ದೈವ ಶರಣಾಗತಿಯು ನಿನ್ನ ಭವಿಷ್ಯವನ್ನು ಬದಲಾಯಿಸಿತು. ಆ ಡಕಾಯಿತನ ಕೈಯಿಂದ ಮರಣಹೊಂದುವ ಬದಲು ಕೇವಲ ಗಾಯಗೊಂಡು ಪಾರಾದೆ' ಎಂದು ಹೇಳಿದನು.

ಅರ್ಥಮಾಡಿಕೊಳ್ಳಿರಿ, ವಿಧಿ ಎಂಬುದು ಕಲ್ಲಿನಲ್ಲಿ
ಕೆತ್ತಿಟ್ಟಿದ್ದಲ್ಲ. ವಿಧಿಯು ಜೀವನವು ನೀಡುವ
ಪ್ರತಿಯೊಂದು ಸನ್ನಿವೇಶದಲ್ಲಿಯೂ ನೀವು ಹೇಗೆ
ನಡೆದುಕೊಳ್ಳುತ್ತೀರಿ ಎಂಬುದರ ಮೇಲೆ
ಆಧಾರವಾಗುತ್ತದೆ. ನಿಮ್ಮ ಜೀವನದ ಸನ್ನಿವೇಶಗಳ
ಹರಿವನ್ನು ಬದಲಾಯಿಸುವ ಶಕ್ತಿ ಸಾಮರ್ಥ್ಯಗಳನ್ನು
ನಿಮ್ಮ ಅರಿವು ನೀಡುತ್ತದೆ.

ಕರ್ಮ ಹಾಗೂ ಟಿ.ಪಿ.ಎಸ್.

ವಿಧಿಯು
ಜೀವನವು
ನೀಡುವ
ಪ್ರತಿಯೊಂದು
ಸನ್ನಿವೇಶದಲ್ಲಿಯೂ
ನೀವು ಹೇಗೆ
ಪ್ರತಿಕ್ರಿಯಿಸಲು
ಆಯ್ದುಕೊಳ್ಳುತ್ತೀರಿ
ಎಂಬುದರ
ಮೇಲೆ
ಆಧಾರವಾಗುತ್ತದೆ.

ಭೂತಕಾಲದ
ಸಂಪೂರ್ಣ ಅರಿವಿಲ್ಲದಿ-
ದ್ದರೆ ಭವಿಷ್ಯದಲ್ಲೂ
ಮತ್ತೆ ಮತ್ತೆ ಅದನ್ನೇ
ಮಾಡುತ್ತೀರಿ. ನಿಮ್ಮ
ಆಲೋಚನೆಗಳ ವೇಗವು
(ಥಾಟ್ ಪರ್ ಸೆಕಂಡ್

  • ಟಿ.ಪಿ.ಎಸ್, ಒಂದು ಸೆಕೆಂಡಿಗೆ ನಿಮ್ಮಲ್ಲೇಳುವ ಆಲೋಚನೆಗಳ ಸಂಖ್ಯೆ) ತಗ್ಗಿ, ಭೂತಕಾಲವನ್ನು ಅದು ನಡೆದಂತೆಯೇ ತಿಳಿದಾಗ, ಹಿಂದಿನದನ್ನೇ ಮತ್ತೆ ಭವಿಷ್ಯದಲ್ಲೂ ಪುನರಾವರ್ತಿಸುವುದಿಲ್ಲ. ನೀವು ಆಗ ಕರ್ಮಮುಕ್ತರಾಗುತ್ತೀರಿ. ಈಗಲಾದರೋ ಭೂತಕಾಲವನ್ನು ಸಂಪೂರ್ಣವಾಗಿ ಬಾಳದೇ ಇದ್ದಿರುವುದರಿಂದ ಕರ್ಮಕ್ಕೆ ಬದ್ಧರಾಗಿ 'ಕರ್ಮಬಂಧ'ರಾಗಿರುತ್ತೀರಿ.

ಉದಾಹರಣೆಗೆ, ನಿಮ್ಮ ಬಾಲ್ಯವು ಯಾವಾಗಲೂ ಸುವರ್ಣಮಯವಾಗಿ ಕಾಣುತ್ತದೆ. ನೀವು ಕಾಲೇಜಿಗೆ ಹೋಗುತ್ತಿದ್ದ ದಿನಗಳು ಎಷ್ಟು ಮಧುರವಾಗಿತ್ತು ಎನಿಸುತ್ತದೆ. ಆದರೆ ನೀವು ಕಾಲೇಜಿಗೆ ಹೋಗುತ್ತಿದ್ದಾಗ ಹಾಗೆನಿಸುತ್ತಿರಲಿಲ್ಲ. ಅಲ್ಲವೇ? ಅದೇಕೆ? ಏಕೆಂದರೆ ಈಗ ನಿಮ್ಮ ಜೀವನದಲ್ಲಿ ನೋವುಗಳು ಹೆಚ್ಚಾಗಿರುವುದರಿಂದ, ಕಳೆದ ದಿನಗಳನ್ನು ಇದಕ್ಕೆ ಹೋಲಿಸಿದಾಗ ಅವು ಮಧುರವಾಗಿದ್ದೆಂದು ತೋರುತ್ತವೆ. ಈಗ ನೀವು

ಹಿಂದಿನ ದಿನಗಳೊಂದಿಗೆ ಸಂತೋಷವನ್ನು ಜೋಡಿಸಿ,
ಅವಕಾಶ ಸಿಕ್ಕಿದರೆ ಅದನ್ನು ಮತ್ತೆ
ಅನುಭವಿಸಬೇಕೆಂದು ಬಯಸುತ್ತೀರಿ. ಆದರೆ ಆ
ದಿನಗಳಲ್ಲಿ ಅದನ್ನು ಅನುಭವಿಸಿದಿರೆ? ಇಲ್ಲ!

ವರ್ತಮಾನದಲ್ಲಿ ನಿಮ್ಮ ಟಿ.ಪಿ.ಎಸ್
ಸೊನ್ನೆಯಾಗಿದ್ದು, ನೀವು ಹನ್ನೊಂದು ಕ್ಷಣ (ಎರಡು
ಆಲೋಚನೆಗಳ ನಡುವಿನ ಅಂತರ)ಗಳ ಕಾಲ
ವಿಶ್ರಮಿಸಿದರೆ ಕಾಲದಂಡವನ್ನು ಭೇದಿಸಬಲ್ಲಿರಿ.

ಶೂನ್ಯ ಟಿ.ಪಿ.ಎಸ್.ನಲ್ಲಿ 21ಕ್ಷಣ ನಿಲ್ಲಲಾದರೆ ಕಾಲದಂಡವನ್ನು ಭೇದಿಸಿ ಭವಿಷ್ಯವನ್ನು ಬದಲಾಯಿಸಬಹುದು. ಇದು ನಿಮ್ಮ ಕೈಯಲ್ಲಿದೆ. ಎಲ್ಲ ಧ್ಯಾನ ಸೂತ್ರಗಳೂ, ಟಿ.ಪಿ.ಎಸ್-ಅನ್ನು ತಗ್ಗಿಸಿ, ಕಾಲದಂಡವನ್ನು ಭೇದಿಸುವ ಸಲುವಾಗಿಯೇ ಇರುವ ವಿವಿಧ ಮಾರ್ಗಗಳು.

ಕ್ಷಣ

ಕ್ಷಣ ಎಂಬುದನ್ನು ಅರ್ಥಮಾಡಿಕೊಳ್ಳುವುದು
ಮುಖ್ಯ. ಆಂಗ್ಲ ಭಾಷೆಯಲ್ಲಿ ಇದಕ್ಕೆ ಸರಿಸಮನಾದ
ಪದವಿಲ್ಲ. ಆದುದರಿಂದ ಕ್ಷಣ ಎಂದರೇನೆಂದು
ವಿವರಿಸುತ್ತೇನೆ. ಕ್ಷಣ ಎಂಬುದು ಕಾಲದ ಅಳತೆ.
ಅನೇಕರು ನಂಬಿರುವಂತೆ ಅದು ನಿಮಿಷ ಅಥವಾ
ಸೆಕೆಂಡ್ ಅಲ್ಲ.

ಎರಡು ಆಲೋಚನೆಗಳ ನಡುವಿನ ಅಂತರವು
ಒಂದು ಕ್ಷಣ. ನಮಗೆ ಕಾಲವನ್ನು ಒಂದು
ನಿರ್ದಿಷ್ಟವಾದ ಅರ್ಥದಲ್ಲಿ ತಿಳಿಯುವುದು
ರೂಢಿಯಾಗಿದೆ. ಆದರೆ 'ಕ್ಷಣ'ವು ಸಂಪೂರ್ಣವಾಗಿ
ಅವಲಂಬಿತವಾದುದು! ಪ್ರತಿಯೊಬ್ಬ ವ್ಯಕ್ತಿಯ
ಆಲೋಚನೆಗಳೂ ಹಾಗೂ ಆತನಲ್ಲಿ ಉಂಟಾಗುವ
ಅವುಗಳ ವೇಗವು ಆತನನ್ನು ಅವಲಂಬಿಸಿರುತ್ತವೆ.
ಕ್ಷಣ ಎಂಬುದು ಪ್ರತಿ ವ್ಯಕ್ತಿಗೂ ಬೇರೆಯೇ
ಆಗಿರುತ್ತದೆ.

ಒಬ್ಬ ವ್ಯಕ್ತಿಯು ಚಂಚಲಚಿತ್ತನಾಗಿದ್ದು ಒಂದು
ಸೆಕೆಂಡಿನ ಅವಧಿಯಲ್ಲಿ ಅನೇಕ ಆಲೋಚನೆಗಳು
ಬರುತ್ತಿದ್ದರೆ, ಆತನ ಕ್ಷಣವು ಸಣ್ಣದು, ಏಕೆಂದರೆ
ಆತನ ಎರಡು ಆಲೋಚನೆಗಳ ನಡುವಿನ ಅಂತರವು
ಕಡಿಮೆ.

ಧ್ಯಾನಾಸಕ್ತನಂತೆ ಶಾಂತಚಿತ್ತನಾಗಿರುವವನಿಗೆ
ಒಂದು ನಿಗದಿತ ವೇಳೆಯಲ್ಲಿ ಕಡಿಮೆ
ಆಲೋಚನೆಗಳಿರುತ್ತವೆ. ಎರಡು ಆಲೋಚನೆಗಳ
ನಡುವಿನ ಅಂತರವು ಹೆಚ್ಚಾದುದರಿಂದ ಆತನ
ಕ್ಷಣವು ದೀರ್ಘವಾಗಿರುತ್ತದೆ.

ಕರ್ಮ - ಪ್ರಜ್ಞಾಪೂರ್ಣ ಆಯ್ಕೆಗಳ ಮೊತ್ತ

ಜೀವನವೆಂದರೆ ಪ್ರಜ್ಞಾಪೂರ್ಣವಾಗಿ ಸತತವಾಗಿ
ಮಾಡುವ ಆಯ್ಕೆಗಳ ಮೊತ್ತವಲ್ಲದೆ ಬೇರೆಯಲ್ಲ.
ನಿಮಗೆ ಬೇಕಾಗಿಯೋ ಬೇಡವಾಗಿಯೋ,
ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ, ನೀವು
ಎಲ್ಲವನ್ನೂ ಆಯ್ಕೆಮಾಡುತ್ತಲೇ ಇರುತ್ತೀರಿ. ಬೇರೆ
ಯಾರೋ ಆಯ್ಕೆ ಮಾಡುವುದಿಲ್ಲ. ಆಯ್ಕೆಯನ್ನು
ಮಾಡುವುದು ನೀವೇ.

ಒಂದು ಸಣ್ಣ ಕಥೆ:

ಒಬ್ಬ ನೌಕರನು ತನ್ನ ಮೇಲಧಿಕಾರಿಯನ್ನು, 'ನನ್ನ ಸಂಬಳವನ್ನು ಹೆಚ್ಚಿಸುವಂತೆ ಕೇಳಲು ನನ್ನ ಹೆಂಡತಿಯು ಹೇಳಿದಳು' ಎಂದು ಕೇಳಿದನು.

ಅಧಿಕಾರಿಯು, 'ಓ! ನಿನಗೆ ಸಂಬಳ ಹೆಚ್ಚಿಸಬೇಕೋ
ಇಲ್ಲವೋ ಎಂದು ನನ್ನ ಮಡದಿಯನ್ನು ಇಂದು
ರಾತ್ರಿಯೇ ಕೇಳುತ್ತೇನೆ!' ಎಂದು ಉತ್ತರಿಸಿದನು.

ಅರ್ಥ ಮಾಡಿಕೊಳ್ಳಿರಿ, ಸದಾಕಾಲವೂ
ಆಯ್ಕೆಯೂ, ನಿರ್ಧಾರವೂ ನಿಮ್ಮದೇ. ಅನ್ಯರಾರೋ
ನಿರ್ಧಾರಮಾಡುತ್ತಿದ್ದಾರೆಂದು ನೀವು
ಯೋಚಿಸಬಹುದು. ಆದರೆ ನಿರ್ಧರಿಸುತ್ತಿರುವುದು
ನೀವು ಮಾತ್ರವೇ.

ಒಂದು ಸಣ್ಣ ಉದಾಹರಣೆಯಿಂದ ಈ ಮೂಲ
ಸತ್ಯವನ್ನು ಅರ್ಥ ಮಾಡಿಕೊಳ್ಳಬಹುದು.
ಯಾರಾದರೂ ನಿಮ್ಮನ್ನು ನಿಂದಿಸಿದಾಗ ನೀವು
ನೊಂದುಕೊಳ್ಳುವ ಆಯ್ಕೆ ಮಾಡುತ್ತೀರಿ.
ಯಾರಾದರೂ ಹೊಗಳಿದಾಗ ಉಬ್ಬಿ ಬಿಡುವ
ಆಯ್ಕೆಯನ್ನು ಮಾಡುತ್ತೀರಿ. ಅಭ್ಯಾಸಬಲದಿಂದ ಈ
ಆಯ್ಕೆಗಳನ್ನು ಅರಿವಿಲ್ಲದೆಯೇ ಮಾಡಬಲ್ಲಿರಿ. ಈ
ಆಯ್ಕೆಯನ್ನು ನೀವಲ್ಲದೆ ಬೇರೆ ಯಾರೂ
ಮಾಡಿದುದಲ್ಲ. ಇನ್ನೊಬ್ಬರಿಂದಾಗಿ ನಿಮ್ಮ
ನಿರ್ಧಾರಗಳು ಬದಲಾಗುತ್ತವೆಯೆಂದು ಭಾವಿಸುವ
ಅಭ್ಯಾಸದಿಂದ, ನೀವೇ ಆಯ್ಕೆ ಮಾಡುವುದೆಂಬ
ಸತ್ಯವನ್ನು ಮರೆತಿದ್ದೀರಿ.

ಯಾರಾದರೂ ನಿಂದಿಸಿದಾಗಲೆಲ್ಲಾ ನೀವು
ವಿಚಲಿತರಾಗುವ ಆಯ್ಕೆ ಮಾಡುವಿರಿ. ಯಾರಾದರೂ
ಹೊಗಳಿದಾಗಲೆಲ್ಲ ಉಬ್ಬಿಹೋಗುವ ಆಯ್ಕೆಯನ್ನೂ
ಮಾಡುವಿರಿ. ಇದು ಅನ್ಯರಾರ ಆಯ್ಕೆಯೂ ಅಲ್ಲ,
ನಿಮ್ಮದೇ. ನೀವು ಹೇಗೆ ಬೇಕಾದರೂ ಆಯ್ಕೆ
ಮಾಡಬಹುದು. ಯಾರಾದರೂ ನಿಂದಿಸಿದಾಗ
ಅವಮಾನಿತರಾಗದೆ ಶಾಂತವಾಗಿರಲು
ನಿರ್ಧರಿಸಬಹುದು. ಅವಮಾನಿತರಾಗುವುದೋ
ಬೇಡವೋ ಎಂಬುದು ನಿಮ್ಮ ಆಯ್ಕೆಯೇ.

ಪ್ರತಿ ನಿಮಿಷವೂ ತೆಗೆದುಕೊಳ್ಳುವ ನಿರ್ಧಾರಗಳ
ಸಂಕಲನವೇ ಜೀವನ. ನೀವು ನಿರ್ಧರಿಸದೆ,
ಸನ್ನಿವೇಶಗಳೇ ಮೇಲುಗೈಯಾಗುವುದು ಒಂದು
ರೀತಿಯ 'ಪಾರ್ಶ್ವವಾಯು' ಇದ್ದಂತೆ. ಪ್ರಸ್ತುತ
ನಮ್ಮ ಜೀವನಗಳು ಪಾರ್ಶ್ವವಾಯು ಅಲ್ಲದೆ
ಬೇರೆಯಲ್ಲ. ಹೊರಗಿನ ಯಾವುದೇ ಘಟನೆಗಳು,
ಸನ್ನಿವೇಶಗಳು ಅಥವಾ ನಿರ್ಧಾರಗಳು ನಿಮ್ಮ ಮೇಲೆ
ಒತ್ತಡವನ್ನು ತರಲಾರದೆಂಬ ನಿಶ್ಚಯವನ್ನು ನೀವು
ಕೈಗೊಂಡಾಗ ಮಾತ್ರ ವಾಸ್ತವವಾಗಿ ಬಾಳಲು
ನಿರ್ಧರಿಸುತ್ತೀರಿ.

ಜೀವನವು ನಿಮ್ಮ ಆಯ್ಕೆ ಎಂಬುದನ್ನು ಅರ್ಥ
ಮಾಡಿಕೊಳ್ಳುವವರೆಗೂ ನಿಮ್ಮ ಜೀವನವು ಕೇವಲ
ಪಾರ್ಶ್ವವಾಯು ಆಗಿರುತ್ತದೆ.

ವಾಸನ, ಸಂಸ್ಕಾರ ಮತ್ತು ಕರ್ಮ

ಸಂಸ್ಕೃತದಲ್ಲಿ ವಾಸನ, ಸಂಸ್ಕಾರ ಮತ್ತು ಕರ್ಮ ಎಂಬ ಮೂರಕ್ಕೂ ಪರಸ್ಪರ ಸಂಬಂಧವಿದೆ.

ವಾಸನ

ವಾಸನ ಎಂಬುದು ಆಸೆಯ ಬೀಜ.
ಉದಾಹರಣೆಗೆ, ನೀವು ಬೀದಿಯಲ್ಲಿ ನಡೆಯುತ್ತಾ
ಇದ್ದಾಗ, ಅಂಗಡಿಯಲ್ಲಿ ಝಳಝಳನೆ
ಹೊಳೆಯುತ್ತಿರುವ ಒಂದು ಕಂಠಹಾರವನ್ನು
ನೋಡುತ್ತೀರಿ, ಆಗ ಅದನ್ನು ಕೊಳ್ಳಬೇಕೆಂಬ ಆಸೆ
ನಿಮ್ಮೊಳಗೆ ಹುಟ್ಟುತ್ತದೆ. ಇದೇ ವಾಸನ.

ಸಂಸ್ಕಾರ

ವಾಸನದ ಬೀಜವು ಮೊಳೆದಾಗ ಬೆಳೆಯುವ
ಗಿಡವೇ ಸಂಸ್ಕಾರ. ಆ ಕಂಠಹಾರವನ್ನು ಮತ್ತೆ ಮತ್ತೆ
ನೋಡಿದಾಗಲೆಲ್ಲಾ ಅದನ್ನು ಪಡೆಯುವ ಆಸೆಯೂ
ಪ್ರಬಲವಾಗುತ್ತದೆ. ಸರವನ್ನು ಪಡೆಯುವ ಆಸೆಯನ್ನು
ಪೋಷಿಸುವುದು ವಾಸನದ ಬೀಜಕ್ಕೆ ನೀರೆರೆದಂತೆ.

ನಿಮ್ಮ ಅಂತರಾಳದಲ್ಲಾಗುವ ಕಲ್ಮಷವನ್ನೇ ನಾನು ಸಂಸ್ಕಾರ ಅಥವಾ ಮನಸ್ಸಿನಲ್ಲಿ ಕೋರೆಯಲ್ಪಟ್ಟ ನೆನಪುಗಳು ಎಂದು ಕರೆಯುವುದು. ಈ ನೆನಪುಗಳೇ ನಿಮ್ಮೊಳಗೆ ಆಳವಾಗಿ ಬೇರೂರಿ ನಿಮ್ಮನ್ನು ಮತ್ತೆ ಮತ್ತೆ ಅದೇ ಅನುಭವಗಳೆಡೆಗೆ ಕೆಳಗೆಳೆಯುತ್ತವೆ. ನಿಮಗೇ ಬೇಕಿಲ್ಲದಿದ್ದರೂ ಅದೇ ರೀತಿಯ ಕಾರ್ಯಗಳು, ಅದೇ ರೀತಿಯ ಆಲೋಚನೆಗಳನ್ನು ಪುನರಾವರ್ತಿಸುವಂತೆ ಎಳೆಯುವುವು. ಇಂತಹ ನೆನಪುಗಳನ್ನೇ ನಾನು ಸಂಸ್ಕಾರ ಎನ್ನುವುದು.

ನಿಮ್ಮ ಪ್ರಜ್ಞಾಪೂರ್ವಕ ಅಥವಾ ಪ್ರಜ್ಞಾಹೀನ
ಪದರದಲ್ಲಿ ಅಡಗಿರುವ ಯಾವುದೇ ಸಂಸ್ಕಾರವು
ನಿಮ್ಮ ಜೀವನದ ಸಂಪೂರ್ಣತೆಗೆ ಅಡ್ಡಿಯಲ್ಲದೆ
ಬೇರಲ್ಲ. ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರ ಎಂಬುದೇ
ಇಲ್ಲ. ಯಾವ ಸಂಸ್ಕಾರವೂ ಒಳಿತಲ್ಲ.
ಸಂಸ್ಕಾರಗಳಿಂದ ತುಂಬಿದ ಅಂತರಂಗವೇ ನರಕ;
ಸಂಸ್ಕಾರಗಳಿಲ್ಲದ ಅಂತರಂಗವೇ ಸ್ವರ್ಗ.
ಸಂಸ್ಕಾರಗಳನ್ನು ಒಳ್ಳೆಯದು, ಕೆಟ್ಟದ್ದು ಎಂದು
ವಿಂಗಡಿಸುವ ಪ್ರಯತ್ನವೇ ಸಲ್ಲದು.

ಸಂಸ್ಕಾರವೆಂಬುದು ಸಹಜವಾಗಿಯೇ
ನಕಾರಾತ್ಮಕವಾದುದು. ಸ್ವಭಾವತಃ ಸಂಸ್ಕಾರವು
ಖಿನ್ನತೆಗೇ ಮಾಡುತ್ತದೆ. ಸಂಸ್ಕಾರದ ಬಲದಿಂದ
ಮಾಡಿದುದೆಲ್ಲವೂ ಬೇಸರ ತರಿಸುವ
ಶೂನ್ಯದಂತಾಗುತ್ತದೆ. ಆಳವಾದ ತಿಳಿವಳಿಕೆಯಿಂದ,
ಶುದ್ಧ ಅಂತರಂಗದಿಂದ ಆಗುವುದೆಲ್ಲವೂ ನಿಮ್ಮ
ಮೌಲ್ಯವನ್ನು ಏರಿಸುತ್ತದೆ. ಸಂಸ್ಕಾರಗಳಿಂದ
ಮಾಡುವುದೆಲ್ಲವೂ ಹೆಚ್ಚಿನ ಬಂಧನಗಳನ್ನು ಉಂಟು
ಮಾಡುತ್ತದೆ.

ಬಾಲ್ಯದಿಂದಲೇ ನಾವು ಅನೇಕ ರೀತಿಯಲ್ಲಿ
ಅನೇಕ ಸಂಸ್ಕಾರಗಳನ್ನು ಸಂಗ್ರಹಿಸುತ್ತೇವೆ.
ಸಂಗ್ರಹಿಸುವುದು ಮಾತ್ರವಲ್ಲ, ಅವನ್ನು
ಪುನರುತ್ಪಾದಿಸುತ್ತೇವೆ. ನಮ್ಮ ಸಹಕಾರವಿಲ್ಲದೆಯೂ
ಸಂಸ್ಕಾರಗಳು ತಾವಾಗಿಯೇ
ಪುನರುತ್ಪತ್ತಿಗೊಳ್ಳುತ್ತವೆ.

ಸಂಸ್ಕಾರಗಳು ಅನೇಕ ವಿಧಗಳಲ್ಲಿ
ಬಲಗೊಳ್ಳುತ್ತವೆ. ಕೆಲವು ಸಂಸ್ಕಾರಗಳು
ಪುನರಾವರ್ತನೆಯಿಂದ ಬಲಗೊಳ್ಳುತ್ತವೆ. ಕೆಲವು
ಸಂಸ್ಕಾರಗಳು ವಿಚಾರಗ್ರಹಣೆಯಿಂದ, ಅಂದರೆ ಈ
ಪ್ರಪಂಚದಿಂದ ಅವುಗಳ ಬಗ್ಗೆ ಮಾಹಿತಿಯನ್ನು

ಪಡೆದಾಗ ಬಲವಾಗುತ್ತವೆ. ಇನ್ನೂ ಕೆಲವು
ಸಂಸ್ಕಾರಗಳು ಕಾರ್ಯ, ವಿಚಾರಗಳ ಅಗತ್ಯವೂ
ಇಲ್ಲದೆ, ಕೇವಲ ನೆನೆಪಿಸಿಕೊಳ್ಳುವುದರಿಂದಲೇ
ಬಲಗೊಳ್ಳುತ್ತವೆ!

ಇಂತಹ ವಿವಿಧ ಸ್ತರಗಳ ಸಂಸ್ಕಾರಗಳನ್ನು,
ಎಂದರೆ ಆಳವಾದ ನೆನಪುಗಳನ್ನು ನಮ್ಮೊಳಗೇ
ಶೇಖರಿಸಿಕೊಂಡು ಅವನ್ನು ಬೆಳೆಸುತ್ತಿರುತ್ತೇವೆ.

ಕರ್ಮ

ಆಸೆಯ ಪ್ರೇರಣೆಯಿಂದ ಮಾಡಿದ ಕಾರ್ಯವು ಕಡೆಗೆ ಕರ್ಮವಾಗಿ ಉಳಿಯುತ್ತದೆ. ಆಸೆಯ ಬಲವು ಕೊನೆಗೆ ನಿಮ್ಮನ್ನು ಆ ಕಂಠಹಾರವನ್ನು ಕೊಳ್ಳುವಂತೆ ಮಾಡುತ್ತದೆ. ಈ ಕಾರ್ಯವೇ ಕರ್ಮವಾಗುತ್ತದೆ.

ಅರ್ಧ ಮಾಡಿದ ಯಾವ ಕೆಲಸವಾದರೂ ನಿಮ್ಮ
ಅಸ್ತಿತ್ವದಲ್ಲಿ ಸಂಸ್ಕಾರವನ್ನುಂಟು ಮಾಡುತ್ತದೆ.
ಸಂಪೂರ್ಣವಾಗಿ ಆಸ್ವಾದಿಸದ ಅನುಭವಗಳು ನಿಮ್ಮ
ಅಸ್ತಿತ್ವದಲ್ಲಿ ಆಳವಾದ ಗುರುತನ್ನು ಅಥವಾ
ಸಂಸ್ಕಾರವನ್ನು ಉಳಿಸುತ್ತದೆ. ಅದರ
ಪೂರೈಕೆಯಾಗುವವರೆಗೂ ಪುನಃ ಪುನಃ ನಿಮ್ಮನ್ನು
ಅದೇ ದಾರಿಯಲ್ಲಿ ಸಾಗುವಂತೆ ಎಳೆಯುತ್ತದೆ ಹಾಗೂ
ಆಕರ್ಷಿಸುತ್ತದೆ.

ದುಶ್ಚಟಗಳಿಗೂ ಸಂಸ್ಕಾರಗಳೇ ಕಾರಣ.
ಲಕ್ಷಾಂತರ ಜನರನ್ನು ವೈಯಕ್ತಿಕವಾಗಿ ಕಂಡಿರುವ
ನನ್ನ ಸ್ವಂತ ಅನುಭವದಿಂದ ಹೇಳುತ್ತೇನೆ,
ಸಾವಿರಾರು ಜನರ ದುಶ್ಚಟಗಳು ಧ್ಯಾನದಿಂದ
ಗುಣವಾಗಿದೆ. ಜೀವನವನ್ನು ಪೂರ್ಣ

ಇರುವಿಕೆಯಿಂದ ಗುರಿ-
ಯೂ, ಅರಿವೂ ಇಲ್ಲದೆ
ಕಳೆದಿರುವುದೇ ಈ
ಹವ್ಯಾಸಗಳ ಮೂಲ
ಕಾರಣ. ಪೂರೈಸದ
ಆಸೆಗಳು ಸಂಸ್ಕಾರಗಳಾಗಿ
ಉಳಿದು, ತಮ್ಮ ಪೂರೈಕೆಯಾಗುವವರೆಗೂ
ಪುನರಾವರ್ತಿಸುವಂತೆ ಮತ್ತೆ ಮತ್ತೆ ನಿಮ್ಮನ್ನು
ಹಿಂದಕ್ಕೆಳೆಯುತ್ತವೆ.

> ಯಾವ
> ಭಾವನೆಗಳನ್ನು
> ಗಾಢವಾಗಿ
> ಅನುಭವಿಸುವಿರೋ
> ಅದು ನಿಮ್ಮನ್ನು
> ಮುಕ್ತರನ್ನಾಗಿಸುತ್ತದೆ.

ಯಾವ ಭಾವನೆಗಳನ್ನು ಗಾಢವಾಗಿ
ಅನುಭವಿಸುವಿರೋ, ಅದು ನಿಮ್ಮನ್ನು
ಮುಕ್ತರನ್ನಾಗಿಸುತ್ತದೆ. ಅದು ಕೋಪವೋ,
ಭಯವೋ, ತಿನ್ನುವ ಆಸೆಯೋ, ವ್ಯಕ್ತಿ ಅಥವಾ
ವಸ್ತುವಿನ ಮೋಹವೋ ಆಗಿರಬಹುದು.
ಯಾವುದನ್ನೇ ಆಗಲಿ, ನೀವು ಸಂಪೂರ್ಣವಾಗಿ
ಅನುಭವಿಸಿದಾಗ ಅದರಿಂದ ಮುಕ್ತರಾಗುತ್ತೀರಿ.
ಯಾರಾದರೂ ಪುನಃಪುನಃ ಒಂದೇ ವಿಧವಾದ
ತೊಂದರೆಯನ್ನು ಅನುಭವಿಸುತ್ತಿದ್ದಾರೆಂದರೆ, ಅವರು
ಆ ತೊಂದರೆಯನ್ನು ಪೂರ್ಣವಾಗಿ
ಅನುಭವಿಸಿಲ್ಲವೆಂದೇ ಅರ್ಥ.

ನಾವು ಜೀವಿಸುತ್ತಿರುವಾಗ ನಮ್ಮ ಅರ್ಧ ಮನಸ್ಸು
ಬೇರೆಲ್ಲೋ ಇರುತ್ತದೆ. ಪತಂಜಲಿಯವರು
ಸುಂದರವಾಗಿ ಹೇಳಿದ್ದಾರೆ, ‘ಪ್ರಮಾಣವು
ಹೆಚ್ಚಾದಂತೆ ಗುಣಮಟ್ಟ ಕಡಿಮೆಯಾಗುತ್ತದೆ’
ಎಂದು. ಯಾವುದೇ ವಸ್ತುವಿನ ಅನುಭವದ
ಗುಣಮಟ್ಟವು ಉತ್ತಮವಾದಂತೆಲ್ಲ ಅದರ
ಪರಿಮಾಣವು
ತಾನಾಗಿಯೇ ಕಡಿಮೆಯಾಗುತ್ತದೆ. ಆದ್ದರಿಂದ

> ಪ್ರಾರಬ್ಧವು
> ಸಂಚಿತದ
> ರಾಶಿಯಿಂದ ಈ
> ಜನ್ಮದಲ್ಲಿ ಆಯ್ದು
> ತಂದ ಒಂದು ಸಣ್ಣ
> ಭಾಗ ಮಾತ್ರ.

ಗುಣವನ್ನು ಹೆಚ್ಚಿಸಬೇಕಷ್ಟೆ.

ಜೀವನವೆಂ-
ಬುದು ಸಣ್ಣ
ಮೇಣದಬತ್ತಿಯಲ್ಲ.
ಅದು ಉಜ್ವಲವಾದ
ಜ್ಯೋತಿ. ಅದನ್ನು ಸಾಧ್ಯವಾದಷ್ಟು
ಪ್ರಕಾಶಮಾನವಾಗಿ ಬೆಳಗಿಸಿರಿ.

ಮೂರು ಬಗೆಯ ಕರ್ಮಗಳು

ಕರ್ಮಗಳು ಮೂರು ವಿಧವಾಗಿದೆ. ಸಂಚಿತ, ಪ್ರಾರಬ್ಧ ಮತ್ತು ಆಗಾಮ್ಯ.

ಸಂಚಿತ ಕರ್ಮವು ರಿಸರ್ವ ಬ್ಯಾಂಕಿನಂತೆ. ಅರ್ಥ ಮಾಡಿಕೊಳ್ಳಿರಿ: ನೀವು ಜನ್ಮ ತಾಳಿ ಭೂಮಿಗೆ ಬಂದಿರುವುದು ಇದೇ ಮೊದಲಬಾರಿಯಲ್ಲ. ಇಲ್ಲಿಯವರೆಗೂ ನೀವು ಕೋಟ್ಯಾಂತರ ದೇಹಗಳನ್ನು ಧರಿಸಿದ್ದಿರಬಹುದು! ಆ ಕೋಟ್ಯಾಂತರ ದೇಹಗಳಲ್ಲಿ ಯಾವ ಯಾವ ಆಲೋಚನೆಗಳನ್ನು ಮಾಡಿದ್ದಿರೋ, ಯಾವ ನುಡಿಗಳನ್ನು ಆಡಿದ್ದಿರೋ, ಏನೇನು ಕಾರ್ಯಗಳನ್ನು ಮಾಡಿದ್ದಿರೋ, ಅವುಗಳ ಎಲ್ಲಾ ಅಪರಿಪೂರ್ಣ ಅನುಭವಗಳೂ ನಿಮ್ಮ ಅಂತರಾಳದಲ್ಲಿ ಕೊರೆಯಲ್ಪಟ್ಟ ನೆನಪುಗಳು ಅಥವಾ ಸಂಸ್ಕಾರಗಳಾಗಿವೆ. ಅವೆಲ್ಲವೂ ಒಟ್ಟಾಗಿ ಸೇರಿ ಸಂಚಿತ ಕರ್ಮ ಎಂಬ ಬ್ಯಾಂಕ್‌ನಂತಾಗಿದೆ. ನಾನು ಬ್ಯಾಂಕ್ ಎಂದೊಡನೆಯೋ ಅದು ನಿಮ್ಮ ಉಳಿತಾಯವೆಂದುಕೊಳ್ಳಬೇಡಿರಿ. ಅದು ಸಾಲ! ಎಲ್ಲಾ ಸಾಲಗಳನ್ನೂ ನೀವು ತೀರಿಸಲೇಬೇಕು!

ಮುಂದಿನದು ಪ್ರಾರಬ್ಧ ಕರ್ಮ.
ಪ್ರಾರಬ್ಧವೆಂದರೆ- ಸಂಚಿತ ಕರ್ಮದ ಬ್ಯಾಂಕಿನಿಂದ
ಸ್ವಲ್ಪ ಕರ್ಮವನ್ನು ತೆಗೆದುಕೊಂಡು ಈ ಶರೀರವನ್ನು
ಪಡೆಯುತ್ತೀರಿ. ನೀವು ತಂದ ಎಲ್ಲ ಕರ್ಮಗಳನ್ನೂ
ಈ ದೇಹದ ಮೂಲಕ ಪೂರೈಸುವ ನಿರ್ಧಾರವನ್ನು
ಮಾಡುತ್ತೀರಿ. ಹೀಗೆ ಪ್ರಾರಬ್ಧವು ಸಂಚಿತದ
ರಾಶಿಯಿಂದ ಈ ಜನ್ಮದಲ್ಲಿ ಆಯ್ದು ತಂದ ಒಂದು
ಸಣ್ಣ ಭಾಗ ಮಾತ್ರ. ಇಷ್ಟನ್ನು ಈ ದೇಹದ ಮೂಲಕ
ಅನುಭವಿಸಿ ತೀರಿಸಲು ಯೋಜಿಸಿರುವಿರಿ.

ಮೂರನೆಯ ರೀತಿಯ ಕರ್ಮವೇ ಅತಿ
ಹೀನವಾದದ್ದು. ಅದೇ ಆಗಾಮ್ಯ ಕರ್ಮ-ಈ
ಜನ್ಮವನ್ನು ತಳೆದ ಮೇಲೆ ನಿಮ್ಮ ನಡೆ-ನುಡಿ ಮತ್ತು
ಹೊಸ ಆಲೋಚನೆಗಳ ಮೂಲಕ ಹೊಸದಾಗಿ
ಸಂಗ್ರಹಿಸುವ ಕರ್ಮ.

ಭೂಮಿಯ ಮೇಲೆ ಜನ್ಮ ತಾಳಿ ಬಂದವರೆಲ್ಲ ತಾವು ಹೊತ್ತು ತಂದ ಪ್ರಾರಬ್ಧ ಕರ್ಮವನ್ನು ತೀರಿಸಲೇಬೇಕು. ಉದಾಹರಣೆಗೆ, ಸಂಚಿತದ ಬ್ಯಾಂಕಿನಲ್ಲಿ 1000 ಕರ್ಮವಿದೆಯೆನ್ನೋಣ. ಈ 1000 ಕರ್ಮಗಳಲ್ಲಿ 10ನ್ನು ಈ ಜನ್ಮದಲ್ಲಿ ಇಷ್ಟನ್ನು ತೀರಿಸೋಣ, ಎಂದುಕೊಂಡು ಪ್ರಾರಬ್ಧವಾಗಿ ತರುತ್ತೀರಿ. ಆದರೆ ಭೂಮಿಗೆ ಬಂದ ಮೇಲೆ ಹಳೆಯದನ್ನು ತೀರಿಸುವ ಬದಲು, ಇತರರ ಆಸೆಗಳ ಆಧಾರದ ಮೇಲೆ ಇನ್ನಷ್ಟು ಕರ್ಮಗಳನ್ನು ಶೇಖರಿಸುತ್ತೀರಿ. ಈ ಆಸೆಗಳು ನಿಮ್ಮ ಸುತ್ತಮುತ್ತಲಿನವರಿಂದ ಪಡೆದುಕೊಂಡದ್ದು. ಹೀಗೆ ಪಡೆದುಕೊಂಡ ಆಸೆಗಳಿಂದಾಗಿ ಕೆಲವು ಆಲೋಚನೆ, ನಡೆ ನುಡಿಗಳನ್ನು ಸೃಷ್ಟಿಸಿಕೊಳ್ಳುತ್ತೀರಿ.

ಉದಾಹರಣೆಗೆ, ನಿಮಗಿಂತ
ಸುಂದರವಾಗಿರುವವರನ್ನು ಕಂಡಾಗ, ಹೋಲಿಕೆ
ಹಾಗೂ ಮಾತ್ಸರ್ಯದಿಂದ ನಿಮ್ಮ ಆಲೋಚನೆಗಳು
ದ್ವಿಗುಣವಾಗುತ್ತವೆ. ಆಲೋಚನೆಗಳಿಗೆ
ಅನುಸಾರವಾಗಿ ಕರ್ಮಗಳನ್ನು ಸೃಷ್ಟಿಸುತ್ತೀರಿ.
ಕೆಲವೊಮ್ಮೆ ವಿಷಯವನ್ನು ಪೂರ್ತಿಯಾಗಿ ತಿಳಿಯದೆ
ಇತರರನ್ನು ನಿಂದಿಸುವಿರಿ. ಹಾಗೆ ಮಾಡಿದಾಗ ಆ
ನುಡಿಗಳಿಗನುಸಾರವಾಗಿ ಕರ್ಮವನ್ನು ಗಳಿಸುತ್ತೀರಿ.

ದಿನನಿತ್ಯದ ಕಿರಿಕಿರಿಯಿಂದ ವಿಮೋಚನೆ - ಪ್ರಾರಬ್ಧ ಕರ್ಮವನ್ನು ಅನುಭವಿಸುವುದು

ಈ ಮೂರು ಕರ್ಮಗಳ ಬಗ್ಗೆ ಇನ್ನೊಂದು ದೃಷ್ಟಿಕೋನದಿಂದ ವಿವರಿಸುತ್ತೇನೆ.

ನೋಡಿರಿ, ಇಡೀ ಜಗತ್ತಿನಲ್ಲಿ ನಿಮಗೆ
ತಿಳಿದಿರುವ, ದೊರೆಯುವಂತಹ, ಎಲ್ಲ
ಸಾಧ್ಯತೆಗಳನ್ನೂ ಒಟ್ಟಾಗಿಸಿ ಆಗಾಮ್ಯ ಎಂದು
ಕರೆಯಬಹುದು. ಇದರಲ್ಲಿ ಎಲ್ಲ ರೀತಿಯ
ಸಾಧ್ಯತೆಗಳೂ ಇವೆ. ನೀವು ಮೀನಾಗಬಹುದು,
ಹಾವಾಗಬಹುದು, ಮನುಷ್ಯ ಅಥವಾ
ದೇವರಾಗಬಹುದು. ಇವೆಲ್ಲವೂ ಸಾಧ್ಯತೆಗಳು.
ಇದನ್ನು ಆಗಾಮ್ಯ ಎಂದು ಕರೆಯುತ್ತೇವೆ.

ಇವಲ್ಲದೆ ನಿಮಗೆ ದೊರೆಯಬಹುದಾದ ಬೇರೆ ಸಾಧ್ಯತೆಗಳೂ ಇವೆ. ನಿಮಗೆ ಪರಿಚಯವಿರುವ, ನಿಮ್ಮ ಅರಿವಿನ ವ್ಯಾಪ್ತಿಯಲ್ಲಿರುವ ಮೀನು, ಕಪಿ, ನಾಯಿ, ಕತ್ತೆ, ಮನುಷ್ಯ ಎಂಬುವುವು ಮಾತ್ರವಲ್ಲದೆ, ನಿಮಗೆ ತಿಳಿಯದಿರುವ ಇನ್ನೂ ಅನೇಕ ಸಾಧ್ಯತೆಗಳಿವೆ. ನಿಮಗೆ ತಿಳಿದಿರುವ, ತಿಳಿಯದಿರುವ ಎಲ್ಲಾ ಸಾಧ್ಯತೆಗಳನ್ನೂ ಒಟ್ಟಾಗಿಸಿ ಸಂಚಿತ ಎಂದು ಕರೆಯಬಹುದು.

ಸಮಗ್ರವಾದದ್ದು ಸಂಚಿತ ಹಾಗೂ ನಿಮ್ಮ ಮುಂದಿರುವ ಸಾಧ್ಯತೆಗಳು ಆಗಾಮ್ಯ. ಈ ಶರೀರವನ್ನು ಪಡೆದು ಬಂದಾಗ ಈ ಸಾಧ್ಯತೆಗಳಲ್ಲಿ ಕೆಲವನ್ನು ಮಾತ್ರ ಸೀಮಿತಗೊಳಿಸಿ, ಅವುಗಳನ್ನು ಅನುಭವಿಸಲೆಂದು ನಿರ್ಧರಿಸುವಿರಿ. ಅದನ್ನೇ ಪ್ರಾರಬ್ಧ ಎನ್ನುವುದು. ನೋಡಿ, ನೀವು ಧರೆಗಿಳಿದು ಬಂದಾಗ ಒಂದು ಸೀಮಾರೇಖೆಯೊಳಗೆ ಮಾತ್ರ ಇರುವುದಾಗಿ ನಿರ್ಧರಿಸಿದಿರಿ. ಆ ಪರಿಧಿಯನ್ನೇ ಪ್ರಾರಬ್ಧ ಎಂದು ಕರೆಯುತ್ತೇವೆ. ನೀವು ಬಂದಾಗ ನಿರ್ದಿಷ್ಟವಾದ ಸೀಮೆಯೊಳಗೆ ಮಾತ್ರ ಆಟವಾಡಲು ಬಂದಿರಿ. ಈ ಸೀಮೆಯನ್ನು ಪ್ರಾರಬ್ಧವೆಂದು ಕರೆಯುತ್ತೇವೆ.

ಈ ಲೋಕಕ್ಕೆ ಬಂದ ಮೇಲೆ ನಿಮ್ಮ ಮುಂದೆ
ಇನ್ನೂ ಅನೇಕ ಸಾಧ್ಯತೆಗಳು ಕಂಡುಬರುತ್ತವೆ.
ಅವನ್ನು ಸಂಗ್ರಹಿಸಲು ಪ್ರಯತ್ನಿಸುತ್ತೀರಿ, ನಂತರ
ಅವುಗಳನ್ನು ಪಡೆಯಲು ಪ್ರಯತ್ನಿಸುತ್ತೀರಿ. ಅಂತಹ
ಸಾಧ್ಯತೆಗಳನ್ನು ಆಗಾಮ್ಯ ಎನ್ನಬಹುದು.

ನಿಮ್ಮ ಜೊತೆಯಲ್ಲಿ ತಂದ ಈ ಪ್ರಾರಬ್ಧವು ನಿಮ್ಮ ಜೀವನವನ್ನು ನಡೆಸಬಲ್ಲ ಬುದ್ಧಿವಂತಿಕೆಯನ್ನು ಹೊಂದಿರುತ್ತದೆ.

ಒಂದು ದೊಡ್ಡ ಸಮಸ್ಯೆಯೆಂದರೆ, ನಿಮ್ಮ ಮುಂದೆ ಅತಿಯಾದ ಸಂಖ್ಯೆಯಲ್ಲಿ ಆಗಾಮ್ಯವನ್ನು ಎಂದರೆ,

> ಆಸೆ ಅಥವಾ
> ಭಯದಿಂದ
> ಪ್ರೇರಿತರಾಗಿ
> ಕಾರ್ಯ
> ಮಾಡುವುದನ್ನೇ
> ನಾನು
> ಆಗಾಮ್ಯದಲ್ಲಿ
> ಜೀವಿಸುವುದು

ಅತಿಯಾದ ಸಾಧ್ಯತೆಗಳನ್ನು ಕಾಣುವಿರಿ. ಅವುಗಳಿಂದಾಗಿ ಪ್ರಾರಬ್ಧದ ಮೇಲೆ ಅಂದರೆ, ನೀವೇ ಹಿಂದೆ ಆಯ್ದುಕೊಂಡ ಸಾಧ್ಯತೆಗಳ ಮೇಲೆ ನಿಮ್ಮ ಭರವಸೆ ಕಡಿಮೆಯಾಗುತ್ತದೆ. ನಿಮ್ಮ ಕಣ್ಣ ಮುಂದಿರುವ ಆಗಾಮ್ಯದಿಂದಾಗಿ, ಪ್ರಾರಬ್ಧವು ನಿಮ್ಮ ಜೀವನವನ್ನು ನಡೆಸುವಷ್ಟು ಬಲಶಾಲಿಯಲ್ಲ ಎನಿಸುತ್ತದೆ.

ಇಷ್ಟನ್ನು ಮಾತ್ರ ಹೇಳಬಲ್ಲೆ, ಪ್ರಾರಬ್ಧದಲ್ಲಿ
ನಂಬಿಕೆಯಿಡುವುದು ಪ್ರಬಲವಾದುದು.
ಪ್ರಾರಬ್ಧವನ್ನು ಪೂರೈಸುವುದರ ಮೂಲಕ ನಿಮ್ಮ
ಜೀವನದ ಒಂದು ದೊಡ್ಡ ನಕಾರಾತ್ಮಕ ಭಾಗ -
ಅಂದರೆ, ಸತತವಾಗಿ ಅಶಾಂತಿಯಿಂದಿರುವುದನ್ನು
ಅಳಿಸಬಹುದು. ಬೆಳಗಿನಿಂದ ಸಂಜೆಯವರೆಗೆ
ನಿಮ್ಮೊಡನೆ ಹೊರುವ ಸತತವಾದ ಅಸಂತುಷ್ಟತೆಯು
ಆಗಾಮ್ಯದ ಕೊಡುಗೆಯೇ.

ಬೆಳಗಿನಿಂದ ಸಂಜೆಯವರೆಗೆ, ಹಾಸಿಗೆಯಿಂದೆದ್ದ
ಕ್ಷಣದಿಂದ ಮಲಗುವವರೆಗೆ, ಸತತವಾದ
ಕಿರಿಕಿರಿಯಿರುತ್ತದೆ. ಯಾರಾದರೂ ಏನಾದರೂ
ತಪ್ಪು ಮಾಡಿದ ತಕ್ಷಣವೇ ಅವರ ಮೇಲೆರಗುತ್ತೇವೆ!
ಅಂತಹ ಅವಕಾಶಕ್ಕಾಗಿ ಕಾಯುತ್ತಿರುತ್ತೇವೆ. ನಮ್ಮ
ಎದುರಿಗೆ ಬಂದವರಿಗೆ ನಮ್ಮ 'ಆಶೀರ್ವಾದ'
ಕಾದಿರುತ್ತದೆ! ಈ ಸತತ ಕಿರಿಕಿರಿ ಅಥವಾ
ಅಶಾಂತಿಯು ಆಗಾಮ್ಯದ ಮೇಲೆ
ಕೇಂದ್ರೀಕರಿಸಿರುತ್ತದೆ.

ನಮ್ಮ ಚೈತನ್ಯ ಅಥವಾ ಅಂತಃಸ್ಥಳವು ಪ್ರಾರಬ್ಧದಲ್ಲಿ ಕೇಂದ್ರೀಕೃತವಾಗಿದ್ದರೆ, ನಾವೀಗ ಅನುಭವಿಸುತ್ತಿರುವ ನಿರಂತರ ಕಿರಿಕಿರಿ ಇರುವುದಿಲ್ಲ. ಸಾಧ್ಯತೆಗಳನ್ನು ಅಲ್ಲಗಳೆಯ ಬೇಕಾಗಿಲ್ಲ. ನಾವು ಮಾಡುತ್ತಿರುವುದನ್ನೆಲ್ಲ ನಿಲ್ಲಿಸಬೇಕು ಎಂದು ಅಲ್ಲವೇ ಅಲ್ಲ! ಎಲ್ಲವನ್ನೂ ಮಾಡುತ್ತಲೇ ಇರುತ್ತೇವೆ. ಆದರೆ ತಳಪಾಯವು ನಮ್ಮ ಪ್ರಾರಬ್ಧವಾಗಿರುತ್ತದೆ.

ನೋಡಿರಿ, ಸತತವಾಗಿ ಎಲ್ಲವನ್ನೂ ತಿರಸ್ಕರಿಸುವುದು, ಸತತವಾಗಿ ಸಿಡಿಮಿಡಿಗೊಳ್ಳುವುದು, ಇವೆಲ್ಲವೂ ನಮ್ಮ ಸುತ್ತಲೂ ಕಾಣುವ ಸಾಧ್ಯತೆಗಳಿಂದ, ಆಗಾಮ್ಯದಿಂದ. ಆಯ್ಕೆಗಳ, ಸಾಧ್ಯತೆಗಳ, ಆಗಾಮ್ಯಗಳ, ಹಿಂದೆ ಓಡುತ್ತಿದ್ದೇವೆ. ಆದರೆ ಪ್ರಾರಬ್ಧವು ಅತಿ ಬುದ್ಧಿಶಾಲಿಯಾದುದು ಹಾಗೂ ಪ್ರಬಲವಾದುದು ಎಂಬುದನ್ನು ಮರೆಯುತ್ತೇವೆ.

ಇಡೀ ಪ್ರಪಂಚದಲ್ಲಿ ಎರಡೇ ಬಗೆಯ ಜನರಿರುವುದು-ಆಗಾಮ್ಯದಲ್ಲಿ ಕೇಂದ್ರಿತರಾದವರು ಮತ್ತು ಪ್ರಾರಬ್ಧದಲ್ಲಿ ಕೇಂದ್ರಿತರಾದವರು, ಅಷ್ಟೇ. ಯಾರ ಅಂತಃಸ್ಥಳವು ಪ್ರಾರಬ್ಧದಲ್ಲಿ ನೆಲೆಸಿರುತ್ತದೆಯೋ ಅಂತಹವರು ಪ್ರಶಾಂತರಾಗಿರುತ್ತಾರೆ.

ಆಗಾಮ್ಯದಲ್ಲಿ ನೆಲೆಸಿರುವ ಮನವು ಭಯ
ಅಥವಾ ಲೋಭದಿಂದ ಪ್ರಭಾವಿತಗೊಂಡಿರುತ್ತದೆ.
ನೀವು ನಿದ್ರೆಯಿಂದ ಎಚ್ಚರಗೊಂಡಾಗ ಇದನ್ನು
ಗಮನಿಸಬಹುದು. ನೀವು ಕನಸಿನಿಂದ
ಹೊರಬರುವುದು, ನಿಮಗೆ ಪ್ರಬಲವಾದ ಆಸೆಯಿದ್ದರೆ
ಅಥವಾ ಭಯಗ್ರಸ್ತರಾಗಿದ್ದರೆ ಮಾತ್ರ.

ಉದಾಹರಣೆಗೆ, ನೀವು ಮಕ್ಕಳಿಗೆ ಒಳ್ಳೆಯ ಶಿಕ್ಷಣ
ನೀಡಿ ಅವರ ಭವಿಷ್ಯವನ್ನು ಉಜ್ವಲವಾಗಿಸುವ
ಆಸೆಯ ಪ್ರೇರೇಪಣೆಯಿಂದ ಎಳಬಹುದು, ಅಥವಾ
ಆಫೀಸಿಗೆ ತಡವಾಗಿ, ಕೆಲಸ
ಕಳೆದುಕೊಳ್ಳಬೇಕಾಗಬಹುದೆಂಬ ಭಯದಿಂದ
ಎಚ್ಚರಗೊಳ್ಳಬಹುದು.

ಆಸೆ ಅಥವಾ ಭಯದಿಂದ ಪ್ರೇರಿತರಾಗಿ
ಕಾರ್ಯ ಮಾಡುವುದನ್ನೇ ನಾನು ಆಗಾಮ್ಯದ
ಆಧಾರಿತವಾಗಿ ಜೀವಿಸುವುದು ಎನ್ನುವುದು.

ಕರ್ಮಚಕ್ರದಿಂದ ಬಿಡುಗಡೆ

ನಿಮ್ಮ ಎಲ್ಲಾ ಕಾರ್ಯಗಳಿಗೂ ಆಸೆ ಅಥವಾ
ಭಯದ ಪ್ರೇರೇಪಣೆ ಇರುವುದರಿಂದ ಅವು
ತೋರಿಕೆಗಾಗಿ ಮಾಡಿದ ಕಾರ್ಯಗಳಾಗಿ, ಕರ್ಮಕ್ಕೆ
ಸೇರಿಕೊಳ್ಳುತ್ತವೆ.

ಈ ರೀತಿ, ನೀವು ಹೆಚ್ಚುಹೆಚ್ಚು ಕರ್ಮವನ್ನು
ಸಂಗ್ರಹಿಸುತ್ತೀರಿ. ನೀವು ಹಿಂದಿರುಗಬೇಕಾದಾಗ
ಏನಾಗುತ್ತದೆ? ನಿಮ್ಮ ಕರ್ಮದ ಬ್ಯಾಂಕಿನ
ಪಾವತಿಯು ಆಗಾಮ್ಯ ಕರ್ಮಗಳ ಸಂಖ್ಯೆಯಷ್ಟು
ಬೆಳೆದಿರುತ್ತದೆ!

ನೀವು ಹತ್ತು ಕರ್ಮಗಳನ್ನು ತೀರಿಸಲು
ಬಂದಿದ್ದೀರೇನ್ನೋಣ. ಆ ಹತ್ತನ್ನು ತೀರಿಸದೆಯೇ
ಇನ್ನೂ 200 ಕರ್ಮಗಳನ್ನು ಸಂಗ್ರಹಿಸುತ್ತೀರಿ!

ಮುಂದಿನ ಜನ್ಮದಲ್ಲೇನಾಗುತ್ತದೆ? ಹಿಂದಿನ 1000ವೇ ಅಲ್ಲದೆ ಇನ್ನೂ 200 ಹೊಸ ಆಗಾಮ್ಯ ಕರ್ಮಗಳು ನಿಮ್ಮ ಸಂಚಿತಕ್ಕೆ ಸೇರಿರುತ್ತದೆ. ಕಳೆದ ಜನ್ಮಕ್ಕಿಂತ 200 ಕರ್ಮಗಳು ಹೆಚ್ಚಾಗಿರುತ್ತದೆ. ಈ ಸಂಗ್ರಹದಿಂದ ಹತ್ತನ್ನು ಮತ್ತೆ ಆರಿಸಿಕೊಂಡು ಜನ್ಮ ತಾಳುವಿರಿ. ಆದರೆ ಮತ್ತೆ ಇನ್ನೂ ಹೆಚ್ಚು ಕರ್ಮಗಳನ್ನು ಗಳಿಸಿ ಹಿಂದಿರುಗುವಿರಿ. ಹೀಗೆ ಇದೊಂದು ವಿಷವರ್ತುಲವಾಗುತ್ತದೆ. ಇದನ್ನೇ ಜನನ-ಮರಣ ಚಕ್ರವೆಂದು ಕರೆಯುವುದು – ಸತತವಾಗಿ ಒಂದು ಶರೀರವನ್ನು ಧರಿಸಿ ಹುಟ್ಟುವುದು, ಸಾಯುವುದು.

ಹೀಗಾಗದೆ, ಒಂದು ಪಕ್ಷ ನೀವು
ಜೀವಿಸಿರುವಾಗಲೇ, ನೀವು ಕೇವಲ ದೇಹವೋ
ಅಥವಾ ಮನಸ್ಸೋ ಅಲ್ಲದೇ, ಎಲ್ಲವೂ ಕರ್ಮದ
ಪ್ರಭಾವವೇ ಎಂಬ ಜ್ಞಾನವನ್ನು ಯಾರಾದರೂ
ನೀಡಿದರೆ, ನಿಮ್ಮ ಮೇಲಿರುವ ಕರ್ಮದ ಪ್ರಭಾವವು
ಕಡಿಮೆಯಾಗಲಾರಂಭಿಸುತ್ತದೆ. ಆಗ ನೀವು ಹೊತ್ತು
ತಂದ ಪ್ರಾರಬ್ಧವನ್ನು ಕರಗಿಸತೊಡಗುತ್ತೀರಿ.

ನೀವು ಈ ದೇಹವನ್ನು ಪಡೆದಾಗ ಹತ್ತು ಪ್ರಾರಬ್ಧ ಕರ್ಮಗಳನ್ನು ತಂದಿರೇನ್ನೋಣ. ಈ ಹತ್ತು ಪ್ರಾರಬ್ಧ ಕರ್ಮಗಳಲ್ಲಿ ಮೂರು ಸಂಸ್ಕಾರಗಳಿಗೆ ನಿಮ್ಮನ್ನು ನಿರುತ್ಸಾಹಗೊಳಿಸುವ ಬಲವಿದೆಯೆನ್ನೋಣ. ಈ ಸಂಸ್ಕಾರ (ಕೊರೆಯಲ್ಪಟ್ಟ ನೆನಪು)ಗಳ ಆಜ್ಞೆಯನ್ನು ನೆರವೇರಿಸಿ ಖಿನ್ನತೆಗೆ ಗುರಿಯಾಗುತ್ತಲೇ ಇದ್ದರೆ, ಅವು ಮೂರಾಗಿ ಉಳಿಯದೇ ಹತ್ತಾಗಬಹುದು. ಅಧಿಕವಾದ ಏಳು ಕರ್ಮಗಳು ಆಗಾಮ್ಯ ಕರ್ಮಗಳು. ಪ್ರಾರಬ್ಧವನ್ನು ಕರಗಿಸದೆ ಅದರೊಂದಿಗಿರಲು ನಿರ್ಧರಿಸಿದರೆ ಆಗಾಮ್ಯವನ್ನು ಸಂಗ್ರಹಿಸುತ್ತೇವೆ.

ಹೀಗಾಗದೆ ಒಂದು ಪಕ್ಷ, ಆ ಮೂರು

Diagram showing karma cycle

ನಿಮ್ಮ ಮೇಲೆ ಪ್ರಾರಬ್ಧದ ಪ್ರಭಾವವು
ಇಲ್ಲವಾದಾಗ, ನೀವು ಆಗಾಮ್ಯವನ್ನು
ಸಂಗ್ರಹಿಸುವುದನ್ನೂ ನಿಲ್ಲಿಸುತ್ತೀರ. ಈ ಹತ್ತು
ಪ್ರಾರಬ್ಧಗಳ ಪ್ರಭಾವವು ಅಂತ್ಯಗೊಂಡಾಗ,
ಆಗಾಮ್ಯಗಳ ಸಂಗ್ರಹಣೆಯೂ ನಿಲ್ಲುತ್ತದೆ. ಏಕೆಂದರೆ
ಈ ಹತ್ತು ಸಂಸ್ಕಾರಗಳೇ ಮುಂದಿನ ಕರ್ಮಗಳ
ಸಂಗ್ರಹಣೆಗೆ ಕಾರಣವಾಗಿರುವುದು.

ಈಗ ಸಂಚಿತ ಕರ್ಮದ ಬಗ್ಗೆ ಯೋಚಿಸೋಣ. ತಿಳಿದುಕೊಳ್ಳಿರಿ, ಸಂಚಿತ ಕರ್ಮದ ಬ್ಯಾಂಕಿನ ಬಗ್ಗೆ ನೇರವಾಗಿ ನೀವು ಏನನ್ನೂ ಮಾಡಲಾಗುವುದಿಲ್ಲ.

ಸಂಸ್ಕಾರಗಳು ನಿಮ್ಮನ್ನು ಖಿನ್ನತೆಗೊಳಪಡಿಸಿದಾಗಲೆಲ್ಲಾ, ಆ ಖಿನ್ನತೆಯಿಂದ ಹೊರಬರಲು ಯಾವುದಾದರೂ ತಂತ್ರವನ್ನು ಕಲಿತಿದ್ದರೆ, ಆ ಮೂರೂ ನಿಮ್ಮ ಮೇಲಿನ ಹಿಡಿತವನ್ನು ಕಳೆದುಕೊಳ್ಳಲಾರಂಭಿಸುತ್ತವೆ. ಹೀಗಾಗಿ ಕಾಲ ಕಳೆದಂತೆ, ಹತ್ತರಲ್ಲಿ ಮೂರು ಕರ್ಮಗಳು

Diagram showing meditation breaking the karma cycle
Diagram showing karma reduction

ಸಂಚಿತವನ್ನು ದಹಿಸಲು ಕೇವಲ ಗುರು ಕೃಪೆಯಿಂದ
ಮಾತ್ರ ಸಾಧ್ಯ. ಗುರುವಿನ ಅನುಗ್ರಹವು ಮಾತ್ರ
ನಿಮ್ಮ ಸಂಚಿತವನ್ನು ದಹಿಸಬಲ್ಲುದು.

ನಿಮ್ಮನ್ನು ಬಿಟ್ಟುಹೋಗುತ್ತವೆ. ಪ್ರಾರಬ್ಧದ
ಪ್ರಭಾವವನ್ನು ತಡೆಗಟ್ಟಿದಾಗ ಪ್ರಾರಬ್ಧವು
ನಶಿಸುವುದು ಮಾತ್ರವಲ್ಲದೆ, ಆಗಾಮ್ಯಗಳನ್ನು
ಗಳಿಸುವ ಸಾಧ್ಯತೆಯೂ ಕಡಿಮೆಯಾಗುತ್ತದೆ.