ಉದ್ದೇಶವೇ ಮುಖ್ಯ
This text was machine-transcribed from the printed book and may contain errors. Select the words and choose “Report a mistake”.
ಭಾಗವತದಲ್ಲಿನ ಒಂದು ಸುಂದರವಾದ ಕಥೆ:
ಕೃಷ್ಣನು ಗೋಪಿಯರೊಡನೆ ಯಮುನಾತೀರಕ್ಕೆ
ಬಂದನು. ಅವರು ನದಿಯನ್ನು ದಾಟಲು ಯಾವ
ದಾರಿಯೂ ಇರಲಿಲ್ಲ.
ಕೃಷ್ಣನು, ‘ನಾನು ನಿಜವಾದ ಬ್ರಹ್ಮಚಾರಿಯಾಗಿದ್ದರೆ, ಯಮುನೆಯು ಇಬ್ಬಾಗವಾಗಿ ದಾರಿ ಕೊಡಲಿ’ ಎಂದು ಘೋಷಿಸಿದನು.
ಯಮುನೆಯು ಇಬ್ಬಾಗವಾಯಿತು.
ಹೊರನೋಟಕ್ಕೆ ಕೃಷ್ಣನು ಸಾಮಾನ್ಯರಂತೆ
ಗೋಪಿಕೆಯರೊಡನೆ ವಿಹರಿಸುತ್ತಿದ್ದಂತೆ
ತೋರಿದರೂ, ಆತನು ದೇಹ-ಮನಸ್ಸುಗಳನ್ನು
ಮೀರಿದ್ದನು. ಆತನ ಕಾರ್ಯಗಳಲ್ಲಿ
ಸಾಮಾನ್ಯರಿಗಿರುವಂತಹ ಉದ್ದೇಶವಿರಲಿಲ್ಲ.
ಯಾವುದೇ ಕಾರ್ಯದ ಹಿಂದಿರುವ ಉದ್ದೇಶವು
ಮುಖ್ಯವೇ ಹೊರತು, ಕಾರ್ಯವಲ್ಲ.
ಉದ್ದೇಶವೆಂಬುದೇ ಹೊರೆ ಅಥವಾ ಕರ್ಮ;
ಕೇವಲ ಕ್ರಿಯೆ ಮಾತ್ರವೇ ಕರ್ಮವಲ್ಲ. ಕ್ರಿಯೆಯು
ಉದ್ದೇಶವನ್ನು ಸೃಷ್ಟಿಸಿದರೆ ಅದು
ಹೊರೆಯಾಗುತ್ತದೆ. ಯಾವುದೇ ನಿರ್ದಿಷ್ಟ
ಉದ್ದೇಶವಿಲ್ಲದೆ ಮಾಡುವ ಶುದ್ಧ ಕಾರ್ಯವು
ಕರ್ಮವಲ್ಲ.
ಗುರುಗಳ ಸಾನ್ನಿಧ್ಯವು ಉದ್ದೇಶದ ಮೇಲೆ ಪರಿಣಾಮ ಬೀರುತ್ತದೆ
ನೋಡಿರಿ, ಗುರುಗಳ ಸನ್ನಿಧಾನದಲ್ಲಿ ಯಾವ ಕಾರ್ಯಗಳನ್ನು ಮಾಡಿದರೂ ಅದನ್ನು ಗುರುವಿನ ಸಲುವಾಗಿಯೇ ಮಾಡುವಿರಿ. ಅದು ಯಾವ ರೀತಿಯಲ್ಲೂ ನಿಮ್ಮ ಸ್ವಂತ ಕೀರ್ತಿ ಗಳಿಸುವುದಕ್ಕಾಗಿ ಅಲ್ಲವೆಂದು ಬಲ್ಲಿರಿ. ಹಾಗಾಗಿ, ಉದ್ದೇಶವಿಲ್ಲದೆ ಕಾರ್ಯ ಸಾಗುತ್ತದೆ. ಅದರಲ್ಲಿ ಯಾವ ಉದ್ದೇಶವೂ ಇರುವುದಿಲ್ಲ. ಉದ್ದಿಶ್ಯವು ಗುರುಗಳದ್ದು, ಕಾರ್ಯ ನಿಮ್ಮದು. ಯಾವ ಉದ್ದೇಶವೂ ಇಲ್ಲದ ವ್ಯಕ್ತಿಯ ಅಂತರಂಗದಲ್ಲಿ ಉದ್ದೇಶವಿರುತ್ತದೆ!
ನೋಡಿ, ಒಟ್ಟಾರೆ ಸಂಚಿತ ಕರ್ಮವು
ಸಂಪೂರ್ಣವಾಗಿ ನಿಮ್ಮದು ಅಥವಾ
ನನ್ನದಾಗಿರಬಹುದು. ನನ್ನದು ದೈವಲೀಲೆ, ನಿಮ್ಮದು
ವೇದನೆ. ಪ್ರಾರಂಭದಲ್ಲಿ ನಿಮ್ಮ ಒಟ್ಟಾರೆ ಸಂಚಿತ
ಕರ್ಮವೂ ದೈವಲೀಲೆಯಂತೆಯೇ ಆರಂಭವಾಗಿತ್ತು.
ಆದರೆ ನಂತರ ಆಗಾಮ್ಯಗಳ ಸಂಗ್ರಹಣೆಯಿಂದ
ಕಲ್ಮಶಗೊಂಡಿತು.
ನನಗೆ ಕರ್ಮಗಳಿಲ್ಲವಾದ್ದರಿಂದ ನನ್ನೊಡನೆ
ಪ್ರವಹಿಸಿದಾಗ ನೀವೂ ಉದ್ದೇಶವಿಲ್ಲದೆ
ಕಾರ್ಯಮಾಡಬಲ್ಲಿರಿ. ಉದ್ದೇಶವಿಲ್ಲದ ಕಾರ್ಯವೇ
ಜೀವನ್ಮುಕ್ತಿ.
> ಜೀವನ್ಮುಕ್ತರಿಗೆ
> ಯಾವುದೇ
> ವೈಯಕ್ತಿಕ
> ಆಸಕ್ತಿಗಳಿರುವುದಿಲ್ಲ.
ಉದ್ದೇಶವಿಲ್ಲದ ಕ್ರಿಯೆಯು ಕರ್ಮ-ಮುಕ್ತವಾದುದು
ಒಬ್ಬ ವ್ಯಕ್ತಿಯು ಹತ್ತು ಕೊಲೆಗಳನ್ನು
ಮಾಡಿದ್ದರೆ, ಆ ಕೊಲೆಗಳ ಸಂಖ್ಯೆಯು
ದಾಖಲಾಗುವುದಿಲ್ಲ. ಆದರೆ ಕೊಲೆಗಾರನ
ತೀವ್ರತೆಯು ದಾಖಲಾಗುತ್ತದೆ. ಗುಣ,
ಮನೋಭಾವನೆ ಹಾಗೂ ಮನೋವ್ಯವಸ್ಥೆಗಳು
ಕರ್ಮದ ಹೊರೆಯನ್ನು ಹೊರುತ್ತವೆ.
ಅಂತೆಯೇ ಕೃಷ್ಣನು ಭಗವದ್ಗೀತೆಯಲ್ಲಿ
ಕಾರ್ಯಕ್ಕಿಂತಲೂ ಉದ್ದೇಶವೇ ಮುಖ್ಯವೆಂದು
ಪುನಃಪುನಃ ಹೇಳುತ್ತಾನೆ. ಇಡೀ ಗೀತೆಯ
ಸಂದೇಶವೇ ಅದು. ಕೃಷ್ಣನು ಹೇಳುತ್ತಾನೆ, 'ನೀನು
ಉದ್ದೇಶರಹಿತನಾಗಿ ಇದ್ದಾಗ ನಾನು
ನೋಡಿಕೊಳ್ಳುತ್ತೇನೆ' ಎಂದು.
ಕಾರ್ಯವು ದಾಖಲೆಯಾಗುವುದಿಲ್ಲ. ಉದ್ದೇಶವು ಮಾತ್ರ ದಾಖಲೆಯಾಗುತ್ತದೆ.
ಮಹಾಭಾರತದಲ್ಲಿ ಒಬ್ಬ ವೇಶ್ಯ ಹಾಗೂ ಸನ್ಯಾಸಿಯ ಸುಂದರ ಕಥೆಯೊಂದಿದೆ.
ವೇಶ್ಯಯೊಬ್ಬಳ ಮನೆಯೆದುರಿನಲ್ಲಿ ಸನ್ಯಾಸಿಯೊಬ್ಬನು ವಾಸವಾಗಿದ್ದನು. ಆತನು ಆಕೆಯ ಮನೆಗೆ ಬರುವ ಗಂಡಸರ ಲೆಕ್ಕವಿಟ್ಟುಕೊಂಡು ಆಕೆಯ ಜೀವನಶೈಲಿಯ ಬಗ್ಗೆ ಎಲ್ಲಾ ಬಗೆಯ ಕಲ್ಪನೆಗಳನ್ನೂ ಮಾಡಿಕೊಳ್ಳುತ್ತಿದ್ದನು. ಆ ಸ್ತ್ರೀಯು ತನ್ನ ಬಿಡುವಿನ ವೇಳೆಯಲ್ಲೆಲ್ಲಾ ಕೃಷ್ಣನನ್ನು ಧ್ಯಾನಿಸುತ್ತಾ ತನ್ನ ಪಾಪಗಳಿಂದ ಮುಕ್ತಿಯನ್ನು ಬೇಡುತ್ತಿದ್ದಳು.
ಒಂದು ದಿನ, ಅವರಿಬ್ಬರೂ ಒಂದೇ ವೇಳೆಯಲ್ಲಿ ಮರಣಹೊಂದಿದರು. ಇಬ್ಬರೂ ಮೃತ್ಯುದೇವತೆಯಾದ ಯಮನ ಸನ್ನಿಧಿಗೆ ಬಂದರು. ಯಮನು ಅವರ ಜೀವನದ ದಾಖಲೆಗಳನ್ನು ನೋಡಿ ಸನ್ಯಾಸಿಗೆ ನರಕ ಹಾಗೂ ವೇಶ್ಯೆಗೆ ಸ್ವರ್ಗ ಎಂದು ತೀರ್ಮಾನಿಸಿದನು. ಸನ್ಯಾಸಿಗೆ ದಿಗ್ಧಮೆಯಾಗಿ, 'ನಾನೆಂತಹ ಧಾರ್ಮಿಕ ಜೀವನವನ್ನು ನಡೆಸಿದ್ದೇನೆ, ಈಕೆಯು ಅನಾಚಾರದ ಜೀವನ ನಡೆಸಿದ್ದಾಳೆ. ಈಕೆಗೆ ಸ್ವರ್ಗ ಮತ್ತು ನನಗೆ ನರಕವೆಂಬುದು ಹೇಗೆ ಸಾಧ್ಯ!' ಎಂದು ಪ್ರತಿಭಟಿಸಿದನು. ಯಮನು, 'ನನ್ನ ನ್ಯಾಯಾಲಯದಲ್ಲಿ ನಿನ್ನ ಕಾರ್ಯಗಳಿಗೆ ಬೆಲೆಯಿಲ್ಲ. ಕೇವಲ ನಿನ್ನ ಉದ್ದೇಶಕ್ಕೆ ಮಾತ್ರವೇ ಬೆಲೆಯಿರುವುದು. ಕಾವಿಯನ್ನುಟ್ಟು ಹೊರ ನೋಟಕ್ಕೆ ಧಾರ್ಮಿಕ ಜೀವನವನ್ನು ನಡೆಸಿದರೂ ನಿನ್ನೊಳಗೆ ಕಾಮವೇ ತುಂಬಿತ್ತು. ಅಂತೆಯೇ ಹೊರ ಪ್ರಪಂಚದಲ್ಲಿ ನಿನ್ನ ದೇಹಕ್ಕೆ ಸಲ್ಲಬೇಕಾದ ಎಲ್ಲಾ ಗೌರವದೊಂದಿಗೆ ಅಂತಿಮ ಕ್ರಿಯೆ ನಡೆಯುತ್ತಿದೆ. ಆದರೂ ನೀನು ನರಕವನ್ನನುಭವಿಸಬೇಕು. ಈಕೆಯ ದೇಹವು ಪರಪುರುಷರಿಗೆ ವಿಕ್ರಯಿಸಲ್ಪಟ್ಟಾಗಲೂ ಈಕೆಯ ಹೃದಯದಲ್ಲಿ ಕೃಷ್ಣನೇ ತುಂಬಿದ್ದನು. ಹಾಗಾಗಿ ಈಕೆಯ ದೇಹದ ಅಂತ್ಯಕ್ರಿಯೆಯನ್ನು ಮಾಡಲು ಯಾರೂ ಮುಂದೆಬರದಿದ್ದರೂ ಈಕೆಯು ಸ್ವರ್ಗಕ್ಕೆ ಹೋಗುತ್ತಿದ್ದಾಳೆ' ಎಂದು ಉತ್ತರಿಸಿದನು. ಉದ್ದೇಶ ಮತ್ತು ಮನೋಭಾವಗಳೇ ಮುಖ್ಯ.
ಒಬ್ಬ ಜ್ಞಾನಿಯು, ಒಬ್ಬ ಅವತಾರಿಯು, ವಿಶ್ವಶಕ್ತಿಯೊಡನೆ ಒಂದಾಗಿರುತ್ತಾನೆ. ಜೀವನ್ಮುಕ್ತನು ವಿಶ್ವಶಕ್ತಿಗೆ ಅನುಗುಣವಾಗಿಯೇ ನಡೆಯಲು ಸಾಧ್ಯ. ಆತನೆಂದೂ ಬೇರೆ ರೀತಿಯಲ್ಲಿರಲಾರನು.
ಜ್ಞಾನಿಯಾದವನ ಕಾರ್ಯಗಳೆಂದೂ
ಅರಿವಿನಿಂದಲೂ, ಹಾಗೂ ಅಪಾರ ಕರುಣೆಗಳಿಂದಲೂ
ಕೂಡಿರುತ್ತವೆ.
ನಮಗೆ ಪೂರ್ಣ ಪ್ರಜ್ಞೆಯಾಗಲಿ, ಅರಿವಾಗಲೀ ಇಲ್ಲದುದರಿಂದ, ನಮ್ಮ ಕಾರ್ಯಗಳನ್ನು ಜೀವನ್ಮುಕ್ತನ ಕಾರ್ಯಗಳಂತೆಯೇ ಎಂದು ಸಮರ್ಥಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸ್ಪಷ್ಟವಾಗಿ ತಿಳಿಯಿರಿ, ಕಾರ್ಯವು ಹೊರಗಿನಿಂದ ಒಂದೇ ರೀತಿಯಾಗಿ ಕಂಡುಬಂದರೂ, ಆಂತರಿಕ ಉದ್ದೇಶ ಹಾಗೂ ಮನೋಭಾವಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತವೆ.
ಆದಿ ಶಂಕರರ ಜೀವನದ ಒಂದು ಸುಂದರ ಪ್ರಸಂಗ:
ಒಮ್ಮೆ ಶಂಕರರು ತಮ್ಮ ಶಿಷ್ಯರೊಂದಿಗೆ ಸಂಚಾರ
ಮಾಡುತ್ತಿದ್ದಾಗ ಅವರಿಗೆ ಇದ್ದಕ್ಕಿದ್ದಂತೆ
ಬಾಯಾರಿಕೆಯಾಯಿತು. ಅವರ ಸುತ್ತಮುತ್ತಲಿನಲ್ಲಿ
ನೀರು ಸಿಗುವಂತಿರಲಿಲ್ಲ. ಅವರು ಮುಂದೆ ಸಾಗಿ
ಕಡೆಗೆ ಒಂದು ಅಂಗಡಿಯ ಬಳಿಗೆ ಬಂದರು. ಶಂಕರರು
ಅಂಗಡಿಯವನ ಬಳಿ ಬಂದು ನೀರನ್ನು ಕೇಳಿದರು.
ಆತನು 'ನನ್ನ ಬಳಿ ಸಾರಾಯಿಯನ್ನು ಬಿಟ್ಟರೆ
ಕುಡಿಯುವುದಕ್ಕಾಗಿ ನಿಮಗೆ ನೀಡಲು ಬೇರೇನೂ
ಇಲ್ಲ' ಎಂದನು.
ಶಂಕರರು, 'ಆಗಲಿ, ದಯವಿಟ್ಟು ಅದನ್ನೇ ಸ್ವಲ್ಪ
ಕೊಡು' ಎಂದರು. ಒಂದು ಲೋಟ
ಸಾರಾಯಿಯನ್ನು ಕುಡಿದು ಆತನಿಗೆ ಧನ್ಯವಾದ
ಹೇಳಿದರು. ಶಿಷ್ಯರು ತಮ್ಮ ಗುರುವು ಸಾರಾಯಿ
ಕುಡಿದದ್ದನ್ನು ಕಂಡು ಚಕಿತರಾದರು! ಶಿಷ್ಯರೂ
ಬಾಯಾರಿದ್ದರಿಂದ ತಮ್ಮ ಗುರುವನ್ನು ಅನುಕರಿಸಿ
ತಾವೂ ಮನಃಪೂರ್ವಕವಾಗಿ ಸಾರಾಯಿಯನ್ನು
ಕುಡಿದರು.
ಅವರು ಸಂಚಾರವನ್ನು ಮುಂದುವರೆಸಿದಾಗ,
ಶಂಕರರು ಏನೂ ತೊಂದರೆಯಿಲ್ಲದೆ ನಡೆದರು.
ಆದರೆ ಸಾರಾಯಿಯ ಪರಿಣಾಮವಾಗಿ ಅವರ ಶಿಷ್ಯರು
ಒಂದು ಹೆಜ್ಜೆಯನ್ನೂ ಸರಿಯಾಗಿ ಇಡಲಾರದಾದರು.
ಅವರು ಹಾಗೆಯೇ ಮುಂದೆ ಸಾಗಿ ಒಂದು ಕಬ್ಬಿಣದ
ಕುಲುಮೆಯ ಬಳಿ ಬಂದರು.
ಕಾದು ಕರಗಿದ ಕಬ್ಬಿಣವನ್ನು ಅಚ್ಚಿಗೆ ಸುರಿಯುತ್ತಿದ್ದ ಕಮ್ಮಾರನ ಬಳಿಗೆ ಶಂಕರರು ಹೋದರು. ಆತನನ್ನು 'ಒಂದು ಲೋಟ ನೀರನ್ನು ಕೊಡು' ಎಂದು ಕೇಳಿದರು. ಕಮ್ಮಾರನು ತನ್ನ ಬಳಿ ನೀರಿಲ್ಲವೆಂದು ಹೇಳುತ್ತಾ ಕ್ಷಮೆ ಯಾಚಿಸಿದನು. ಶಂಕರರು, 'ತೊಂದರೆಯಿಲ್ಲ. ಆ ಕರಗಿದ ಕಬ್ಬಿಣವನ್ನೇ ಕೊಡು' ಎಂದರು.
ಕಮ್ಮಾರನೂ, ಶಂಕರರ ಶಿಷ್ಯರೂ ಚಕಿತರಾದರು.
ಆತನು ಕರಗಿದ ಕಬ್ಬಿಣವನ್ನು ಕೊಟ್ಟನು. ಶಂಕರರು
ಅದನ್ನು ನೀರಿನಂತೆ ಕುಡಿದರು!
ಅವರು ತಮ್ಮ ಶಿಷ್ಯರ ಕಡೆಗೆ ತಿರುಗಿ, 'ಈಗ ನೀವೂ
ಕುಡಿಯಬಹುದು' ಎಂದರು. ಶಿಷ್ಯರು ತಲೆತಗ್ಗಿಸಿ
ನಿಂತರು. ಶಂಕರರು, 'ನನ್ನ ಕಾರ್ಯಗಳನ್ನು
ಅನುಕರಿಸಬೇಡಿರಿ, ನಾನು ಹೇಳುವ ಮಾತುಗಳನ್ನು
ಅನುಕರಿಸಿರಿ, ಇಲ್ಲದಿದ್ದರೆ ನಿಮ್ಮ ಮನಬಂದಂತೆ
ಮಾಡುತ್ತೀರಿ' ಎಂದು ವಿವರಿಸಿದರು.
ಜೀವನ್ಮುಕ್ತರು ಇರುವ ಸ್ತರವೇ ಬೇರೆ,
ಸಾಮಾನ್ಯ ಜನರು ಇರುವ ಸ್ತರವೇ ಬೇರೆ. ಸಾಮಾನ್ಯ
ತರ್ಕಕ್ಕೆ ಸಿಗುವಂತಹ ಕಾರ್ಯಗಳನ್ನು ಅವರು
ಮಾಡಲಾರರು ಮತ್ತು ಮಾಡುವುದಿಲ್ಲ. ತರ್ಕಕ್ಕೆ
ಮೀರಿದ ಅವರ ಉದ್ದೇಶವೇ ಮುಖ್ಯ. ಅದನ್ನು ಸಾಮಾನ್ಯ ತರ್ಕದಂತೆ ವಿವರಿಸಲಾಗುವುದಿಲ್ಲ.
ಜೀವನ್ಮುಕ್ತರಿಗೆ ಯಾವುದೇ ವೈಯಕ್ತಿಕ ಆಸಕ್ತಿಗಳಿರುವುದಿಲ್ಲ. ಏಕೆಂದರೆ ಅವರಿಗೆ ವೈಯಕ್ತಿಕ ಅಸ್ತಿತ್ವ ಇರುವುದಿಲ್ಲ. ಅವರ ವ್ಯಕ್ತಿತ್ವವು ಇಡೀ ವಿಶ್ವ ಶಕ್ತಿಯ ಅಸ್ತಿತ್ವದಲ್ಲಿ ಒಂದಾಗಿರುತ್ತದೆ.
ಉದ್ದೇಶ ಹಾಗೂ ಕ್ರಿಯೆ
ಉದ್ದೇಶದ ಅಳವು ಹೆಚ್ಚಾಗಿದ್ದು, ಕ್ರಿಯೆಯ
ಅಳವು ಕಡಿಮೆಯಾದಾಗ, ಆತನು ಸೋಮಾರಿಯಾಗಿ
ತಮಸ್ಸಿನಲ್ಲಿರುತ್ತಾನೆ.
ಉದ್ದೇಶಗಳ ಹಾಗೂ ಕ್ರಿಯೆಗಳ ಅಳವು
ಸಮಾನಾಗಿದ್ದಾಗ ವ್ಯಕ್ತಿಯು ಚಂಚಲವಾದ
ಕ್ರಿಯೆಯಲ್ಲಿ ತೊಡಗಿರುತ್ತಾನೆ ಅಥವಾ
ರಜಸ್ಸಿನಲ್ಲಿರುತ್ತಾನೆ.
ಉದ್ದೇಶವೇ ಇಲ್ಲದೆ ಕ್ರಿಯೆಯು ಮಾತ್ರವಿದ್ದಾಗ
ಉದ್ದೇಶರಹಿತವಾದ ಕಾರ್ಯದಲ್ಲಿ ತೊಡಗುತ್ತಾನೆ
ಅಥವಾ ಸತ್ವದಲ್ಲಿರುತ್ತಾನೆ.
ಆದುದರಿಂದಲೇ, ಭಗವದ್ಗೀತೆಯಲ್ಲಿ ಕೃಷ್ಣನು
ಅರ್ಜುನನಿಗೆ ಹೇಳುತ್ತಾನೆ. 'ಓ ಅರ್ಜುನ! ಯುದ್ಧ
ಮಾಡು' ಎಂದು. ಏಕೆಂದರೆ ಕೊಲ್ಲುವ ಕ್ರಿಯೆಯು
ದಾಖಲೆಯಾಗುವುದಿಲ್ಲ. ಅದರ ಹಿಂದಿನ ಉದ್ದೇಶವು
ದಾಖಲೆಯಾಗುತ್ತದೆ. ಅರ್ಜುನನ ಉದ್ದೇಶವು,
ಉದ್ದೇಶವೇ ಇಲ್ಲದ ಕೃಷ್ಣನ ಉದ್ದೇಶವೇ ಆಗಿತ್ತು
ಮತ್ತು ಉದ್ದೇಶರಹಿತನಾದ ಕೃಷ್ಣನು
ವಿಶ್ವಶಕ್ತಿಯಲ್ಲಿ ಒಂದಾಗಿದ್ದನು!
ವಿಶ್ವಶಕ್ತಿಗನುಸಾರವಾಗಿ ಕಾರ್ಯಮಾಡಿದಾಗ ಇಡೀ ವಿಶ್ವವೇ ನಿಮ್ಮನ್ನು ಆಶೀರ್ವದಿಸುತ್ತದೆ. ನಿಮ್ಮ ಸುತ್ತಲೂ ಎಲ್ಲಾ ರೀತಿಯ ಸಕಾರಾತ್ಮಕವಾದ ಕಾಕತಾಳೀಯವಾದ ಘಟನೆಗಳನ್ನು ಆಕರ್ಷಿಸುತ್ತೀರಿ. ಅಂತೆಯೇ ಅಂತಹ ವ್ಯಕ್ತಿಯ ಕಾರ್ಯಗಳಿಗೆ ಅಲ್ಪಕಾಣಿಕೆಯನ್ನು ನೀಡಿದರೂ ಅವರಿಗೆ ಎಲ್ಲೆಡೆಯಿಂದಲೂ ಸಮೃದ್ಧಿಯ ಸುರಿಮಳೆಯಾಗುತ್ತದೆ.
ನಿತ್ಯ ಸಂಕಲ್ಪದ ಪ್ರಭಾವ
ನಮಗೆ ಏಳು ಚೈತನ್ಯ ಶರೀರಗಳು ಅಥವಾ ಏಳು ಚೈತನ್ಯದ ಪದರಗಳಿವೆ. ಅವು ಯಾವುವೆಂದರೆ ಭೌತಿಕ, ಪ್ರಾಣ, ಮಾನಸಿಕ, ಸೂಕ್ಷ್ಮ, ಕಾರಣ, ಸುಖ ಮತ್ತು ನಿರ್ವಾಣ. ಅರ್ಥಮಾಡಿಕೊಳ್ಳಿರಿ, ಕಾರಣ ಶರೀರದಲ್ಲಿ ನಾವು ಕೂಡಿಹಾಕಿಕೊಂಡಿರುವ ನಮ್ಮ ಆಗಾಮ್ಯ ಕರ್ಮವು ಸಂಪೂರ್ಣವಾಗಿ ನಮಗೆ ಲಭ್ಯವಾಗಿದೆ. ಕಾರಣ ಶರೀರದಲ್ಲಿ ನಿಮಗೆ ಕ್ರಿಕೆಟ್, ಟೆನ್ನಿಸ್ ಅಥವಾ ಗಾಲ್ಫ್ ಕ್ರೀಡೆಗಳನ್ನಾಡುವ ಚಾತುರ್ಯವಿರಬಹುದು. ಆದರೆ ನೀವು ಗಾಢವಾದ ನಿದ್ರೆಯಿಂದ ಎಚ್ಚರಗೊಳ್ಳುವಾಗ ಕ್ರಿಕೆಟ್ ಆಡಬೇಕೆಂಬ ದೃಢಸಂಕಲ್ಪವನ್ನು ಹೊಂದಿದ್ದರೆ ಕಾರಣ ಶರೀರದಿಂದ ಕ್ರಿಕೆಟ್ಗೆ ಬೇಕಾಗುವ ಬುದ್ಧಿಶಕ್ತಿಯನ್ನೂ ತರುತ್ತೀರಿ. ಅದಕ್ಕೆ ಬೇಕಾಗುವ ಸಮಯ, ಸಂದರ್ಭಗಳು ತಾವಾಗಿಯೇ ಮೂಡಿಬರುತ್ತವೆ. ರಾತ್ರಿ ಮಲಗುವಾಗ ಗಾಲ್ಫ್
ಆಡಬೇಕೆಂಬ ದೃಢನಿಶ್ಚಯ ಮಾಡಿಕೊಂಡು ಮಲಗಿ,
ಏಳುವಾಗಲೂ ಗಾಲ್ಫ್ ಆಡುವ ದೃಢನಿಶ್ಚಯವಿದ್ದರೆ
ಗಾಲ್ಫ್ ಆಟವಾಡಲು ಬೇಕಾಗುವ ಬುದ್ಧಿಶಕ್ತಿಯನ್ನೂ
ತಂದುಕೊಳ್ಳುತ್ತೀರಿ.
ಕಾರಣ ಶರೀರವು ವಿನಿಮಯ ಕೇಂದ್ರವಿದ್ದಂತೆ.
ಅದು ಹಣಕಾಸಿನ ವಿನಿಮಯವಿದ್ದಂತೆ. ಅಲ್ಲಿ
ಏನನ್ನಾದರೂ ವಿನಿಮಯ ಮಾಡಬಹುದು.
ಪ್ರತಿನಿತ್ಯವೂ ಅಂತಹ ದೃಢಸಂಕಲ್ಪವಿದ್ದರೆ, ಕಾರಣ
ಶರೀರದಲ್ಲಿ ಈ ಜನ್ಮದ ಕರ್ಮಗಳನ್ನೂ
ಬದಲಾಯಿಸಬಹುದು. ಇದು ನಿಜವಾದ ಸ್ವಾತಂತ್ರ್ಯ.
ದೃಢಸಂಕಲ್ಪವು ಈ ಜನ್ಮದಲ್ಲಿ ಸಂಗ್ರಹಿಸಿದ
ಆಗಾಮ್ಯವನ್ನೂ, ಪ್ರಾರಬ್ಧವನ್ನೂ
ಬದಲಾಯಿಸಬಲ್ಲದು. ಇಡೀ ಸಂಚಿತ ಕರ್ಮವನ್ನು
ಅದು ಬದಲಾಯಿಸಲಾಗುವುದಿಲ್ಲ. ಸಂಚಿತ
ಕರ್ಮಗಳನ್ನು ಕೇವಲ ಕರ್ಮರಹಿತನಾದ ಗುರುವಿನ
ಕೃಪೆಯಿಂದ ಮಾತ್ರ ಬದಲಾಯಿಸಲು ಸಾಧ್ಯ.
ಸಂಸ್ಥೆಯೋ, ಯಂತ್ರವೋ?
ಗುರುವನ್ನರಸುವುದು, ಗುರುವಿನ ಉಪದೇಶವನ್ನು
ಪಾಲಿಸುವುದು, ಫಲಾಪೇಕ್ಷೆಯಿಲ್ಲದೆ ಕಾರ್ಯಗಳನ್ನು
ಮಾಡುವುದೇ ಇಡೀ ಜೀವನದ ಆಟವಾಗಿದೆ.
ಉದ್ದೇಶರಹಿತವಾದ ಕಾರ್ಯವೇ
ಸಂಸ್ಥೆಯಾಗುತ್ತದೆ. ಉದ್ದೇಶದಿಂದ
ಕಾರ್ಯನಿರ್ವಹಿಸಿದರೆ ನೀವು ಕೇವಲ ಒಂದು
ಯಂತ್ರದಂತೆ.
ಉದ್ದೇಶವಿಲ್ಲದೆ ಕಾರ್ಯಮಾಡಿದಾಗ ನೀವೇ ಸಂಸ್ಥೆಯಾಗುತ್ತೀರಿ. ಯಂತ್ರವಾಗಬೇಕೋ ಸಂಸ್ಥೆಯಾಗಬೇಕೋ ಎಂಬುದು ನಿಮ್ಮ ಆಯ್ಕೆ. ನಿಮ್ಮ ಉದ್ದೇಶವನ್ನು ಸೇರಿಸದೆ, ಕೇವಲ ನನ್ನ ಉದ್ದೇಶವನ್ನು ಪಾಲಿಸುವವರೆಗೂ ನಾನು ನಿಮಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತೇನೆ. ನಾನು ಹೇಳಿದುದನ್ನು ನಿಮ್ಮ ಸ್ವಂತ ಉದ್ದೇಶದ, ನಿಮ್ಮ ಭಯ ಹಾಗೂ ಆಸೆಗಳ ಪ್ರೇರಣೆಯಿಲ್ಲದೆ ಪಾಲಿಸಿರಿ. ಉದ್ದೇಶವಿಲ್ಲದ ಶುದ್ಧಕಾರ್ಯದಿಂದ ಸಂತೃಪ್ತಿಯುಂಟಾಗುತ್ತದೆ.
ಅದೇ ಶಕ್ತಿಯನ್ನು
ಒಳಮುಖವಾಗಿಸುವುದು
ಕರ್ಮ ಎಂಬುದು ಪುರಸ್ಕಾರ ಮತ್ತು ದಂಡನೆಗಳ
ನಿಯಮವಲ್ಲ. ಅದು ಪಾಪ ಮಾಡಿದವರನ್ನು ದೇವರು
ಶಿಕ್ಷಿಸುವ ವಿಧಾನವೇನೂ ಅಲ್ಲ. ಅದು ‘ಸ್ವರ್ಗ’,
‘ನರಕ’ಗಳ ಅನುಭವವನ್ನು ಇಲ್ಲಿಯೇ ನೀಡುವ
ನಿಮ್ಮ ಮನಃಸ್ಥಿತಿಯ ಪ್ರತಿಬಿಂಬ.
ಒಂದು ಸಣ್ಣ ಕಥೆ:
ಒಬ್ಬ ವ್ಯಕ್ತಿಯು ರಸ್ತೆಯಲ್ಲಿ ವೇಗವಾಗಿ ಗಾಡಿ
ಚಲಾಯಿಸುತ್ತಿದ್ದಾಗ ಪೋಲೀಸನು ಆತನನ್ನು
ಹಿಡಿದನು. ಪೋಲೀಸನು ವೇಗವಾಗಿ ಚಾಲನೆ
ಮಾಡಿದುದಕ್ಕಾಗಿ ದಂಡನೆಯ ಟಿಕೆಟ್ ಕೊಡಲು
ಅನುವಾದನು.
ಇದ್ದಕ್ಕಿದ್ದಂತೆ ಹಿಂದಿನ ಸೀಟಿನಿಂದ ಹೆಣ್ಣೊಬ್ಬಳ ರೇಗಾಟ ಕೇಳಿಸಿತು, ‘ನೋಡು, ನೀನು ಸಿಕ್ಕಿ
| ಧ್ಯಾನದಿಂದ ಪ್ರಾರಬ್ಧ ಕರ್ಮವು ಕಡಿಮೆಯಾಗುತ್ತದೆ. | ಹಾಕಿಕೊಳ್ಳುವೆಯೆಂದು ನಾನು ಹೇಳಿರಲಿಲ್ಲವೆ! ಅಷ್ಟು ವೇಗವಾಗಿ ಚಾಲನೆ |
|---|
ಮಾಡಲು ನಿನಗೆ ಯಾರು ಹೇಳಿದರು? ಹುಷಾರಾಗಿ, ನಿಧಾನವಾಗಿ ನೋಡಿಕೊಂಡು ಚಾಲನೆ ಮಾಡೆಂದು ನಾನು ಹೇಳಿದರೆ ನನ್ನ ಬಾಯಿ ಮುಚ್ಚಿಸುತ್ತೀಯೇ, ಈಗ ಸಿಕ್ಕಿ ಹಾಕಿಕೊಂಡೆಯಲ್ಲ!' ಎಂದು. ಪೋಲೀಸನು ಆಕೆ ಯಾರೆಂದು ಕೇಳಿದನು. ವ್ಯಕ್ತಿಯು ನಿಟ್ಟುಸಿರು ಬಿಡುತ್ತಾ, ‘ನನ್ನ ಹೆಂಡತಿ' ಎಂದನು.
ಪೋಲೀಸನು, 'ಸರಿ, ಹೋಗು. ನಿನಗೀಗಾಗಲೇ ಸಾಕಷ್ಟು ದಂಡನೆ-ಯಾಗಿದೆ' ಎಂದು ಹೇಳಿ ಟಿಕೆಟನ್ನು ಹರಿದು ಹಾಕಿದನು.
ನಿಮಗೆ ಕೋಪ ಬಂದರೆ, ಅದರ ಪಾಪದ
ಫಲವನ್ನು ಮುಂದಿನ ಜನ್ಮದಲ್ಲಿ ಅನುಭವಿಸುವಿರಿ
ಎಂದಲ್ಲ. ನಿಮ್ಮ ಕೋಪದಿಂದಾಗಿ ನೀವೀಗಲೇ
ಕಷ್ಟವನ್ನು ಅನುಭವಿಸುತ್ತೀರಿ. ಅದೇ ನೀವು
ಅನುಭವಿಸುವ ನರಕ! ನೀವು ಯಾರ ಮೇಲೆ
ಕೋಪಗೊಂಡಿರುವಿರೋ ಆ ವ್ಯಕ್ತಿಯಷ್ಟೇ ಕಷ್ಟವನ್ನು
ನೀವೂ ಒಳಗೆ ಅನುಭವಿಸುತ್ತೀರಿ.
ನೀವು ಹೊರಗೆ ಉಗುಳುವ ಜ್ವಾಲೆಯು ನಿಮ್ಮ
ಒಳಗೂ ಅಷ್ಟೇ ತೀವ್ರತೆಯಿಂದ ಉರಿಯುತ್ತದೆ.
ಇನ್ನೊಬ್ಬನನ್ನು ಆ ಜ್ವಾಲೆಯು ದಹಿಸುವುದೋ
ಇಲ್ಲವೋ, ನಿಮ್ಮನ್ನಂತೂ ದಹಿಸುವುದು ಖಂಡಿತ.
ಇನ್ನೊಬ್ಬರನ್ನು ಇರಿಯಲು ಹೊರತೆಗೆದ ಕತ್ತಿಯು
ನಿಮ್ಮೊಳಗೂ ಅಷ್ಟೇ ತೀವ್ರವಾದ ಗಾಯವನ್ನು
ಮಾಡುತ್ತದೆ. ಅದು ಎರಡು ಅಲಗಿನ ಕತ್ತಿ
ಎಂಬುದನ್ನು ನೆನೆಪಿಡಿ.
ಬುದ್ಧನ ಜೀವನದಲ್ಲಿ ಕಂಡು ಬರುವ ಒಂದು ಸುಂದರವಾದ ಕಥೆ:
ಒಮ್ಮೆ ಒಬ್ಬ ವ್ಯಕ್ತಿಯು ಬುದ್ಧನ ಮುಖದ ಮೇಲೆ
ಉಗಿದನು. ಬುದ್ಧನು ಮುಖವನ್ನು ಒರೆಸಿಕೊಂಡು,
‘ನೀನು ಇನ್ನೇನಾದರೂ ಹೇಳುವುದಿದೆಯೇ ಅಥವಾ
ಇಷ್ಟೇಯೋ?' ಎಂದು ಕೇಳಿದನು.
ಬುದ್ಧನ ಶಿಷ್ಯನಾದ ಆನಂದನಿಗೆ ಕೋಪವೇರಿತು.
ಯಾವನೋ ಒಬ್ಬನು, ವಿನಾಕಾರಣ ತನ್ನ ಗುರುವಿನ
ಮುಖದ ಮೇಲೆ ಉಗಿಯುವುದೆಂದರೇನು? ಆತನು
ಬುದ್ಧನನ್ನು ಕುರಿತು, 'ನೀವು ಅನುಮತಿ ಕೊಟ್ಟರೆ,
ಅವನಿಗೆ ಸರಿಯಾಗಿ ಬುದ್ಧಿಕಲಿಸುತ್ತೇನೆ' ಎಂದನು.
ಬುದ್ಧನು, 'ನೀನೊಬ್ಬ ಸನ್ಯಾಸಿ ಎಂಬುದನ್ನು ಮರೆತೆಯಾ? ಈ ಬಡಪಾಯಿಯು ಈಗಾಗಲೇ ತನ್ನ ಕೋಪದಿಂದ ಕುದಿಯುತ್ತಿದ್ದಾನೆ. ಆತನೇನು ಸಂತೋಷದಿಂದ ನರ್ತಿಸುತ್ತಿದ್ದಾನೇನು? ಆತನು ತನ್ನ ಕೋಪದಿಂದಲೇ ಹುಚ್ಚನಾಗಿದ್ದಾನೆ. ಅಂತಹ ಮನಃಸ್ಥಿತಿಯಲ್ಲಿ ಬಂದು ನನ್ನ ಮೇಲೆ ಉಗಿದಿದ್ದಾನೆ. ಅಂತಹ ಸ್ಥಿತಿಯಲ್ಲಿರುವುದಕ್ಕಿಂತಲೂ ದೊಡ್ಡ ಶಿಕ್ಷೆ ಆತನಿಗೆ ಇನ್ನೇನಿದೆ? ಅದೂ ಅಲ್ಲದೆ, ಆತನು ನನಗೇನು ಹಾನಿಯನ್ನು ತಾನೇ ಮಾಡಿದ? ನಾನು ಕೇವಲ ಆ ಉಗುಳನ್ನು ಮುಖದಿಂದ ಒರೆಸಿಕೊಳ್ಳಬೇಕಾಯಿತು, ಅಷ್ಟೇ. ಈಗ ನೀನು ಸಿಡಿಮಿಡಿಗೊಳ್ಳಬೇಡ. ಕೋಪವು ನಿನ್ನೊಳಗೆ ಬೆಳೆಯುತ್ತದೆ. ನಿನ್ನನ್ನು ನೀನೇ ಶಿಕ್ಷಿಸಿಕೊಳ್ಳುವೆಯೇಕೆ? ಅದು ಮೂರ್ಖತನ, ಆ ಬಡಪಾಯಿಯ ಮೇಲೆ ಅನುಕಂಪವನ್ನು ತೋರು' ಎಂದು ಹೇಳಿದನು.
ಇದನ್ನೆಲ್ಲಾ ಕೇಳುತ್ತಿದ್ದ ಆ ವ್ಯಕ್ತಿಯು ಆಶ್ಚರ್ಯದಿಂದ ತಬ್ಬಿಬ್ಬಾದನು. ಬುದ್ಧನು ಕೋಪಗೊಳ್ಳುವನೆಂದು ಆತನು ಭಾವಿಸಿದ್ದನು. ಆತನಿಗೆ ಅದೇ ಬೇಕಾಗಿತ್ತು. ಹಾಗಲ್ಲದೆ, ಬುದ್ಧನು ತೋರಿದ ದಯೆ, ಅನುಕಂಪಗಳಿಂದ ಆತನಿಗೆ ದಿಗ್ಧಮೆಯಾಯಿತು!
ಬುದ್ಧನು ಅವನನ್ನು ಕುರಿತು, 'ಈಗ ಮನೆಗೆ ಹೋಗು, ನಿನ್ನನ್ನು ನೀನೇ ಸಾಕಷ್ಟು ಶಿಕ್ಷೆ ಮಾಡಿ ಕೊಂಡಿರುವೆ. ನೀನು ನನಗೆ ಮಾಡಿದುದನ್ನೆಲ್ಲಾ ಮರೆತುಬಿಡು, ನೀನು ನನ್ನನ್ನು ಬಾಧಿಸಲಿಲ್ಲ. ಈ ದೇಹವು ಎಂದಿದ್ದರೂ ಭೂಮಿಯನ್ನು ಸೇರುವುದೇ. ಅದಕ್ಕೆ ಬಹಳ ಜನರು ಉಗಿಯುವುದೇ ಮುಂತಾದುವನ್ನು ಹೇಗಿದ್ದರೂ ಮಾಡುತ್ತಾರೆ. ಮನೆಗೆ ಹೋಗಿ ವಿಶ್ರಾಂತಿಯನ್ನು ಪಡೆ' ಎಂದನು.
ಬುದ್ಧನ ಪ್ರತಿಕ್ರಿಯೆಯಿಂದ ಆ ವ್ಯಕ್ತಿಯು ಪೂರ್ಣವಾಗಿ ತಲ್ಲಣಿಸಿಹೋದನು. ಆತನು ಮನೆಗೆ ಹೋದನು. ಆ ಸಂಜೆಯೇ ಆತನು ಹಿಂದಿರುಗಿ ಬಂದು, ಬುದ್ಧನ ಪಾದಗಳ ಮೇಲೆರಗಿ, 'ನನ್ನನ್ನು ಕ್ಷಮಿಸಿರಿ' ಎಂದು ಅತ್ತನು.
ಬುದ್ಧನು, 'ನಾನು ನಿನ್ನ ಮೇಲೆ ಕೋಪಗೊಳ್ಳಲೇ
ಇಲ್ಲ, ಹಾಗೆಂದ ಮೇಲೆ
ಕ್ಷಮಿಸುವುದಕ್ಕೇನಿದೆ? ನೀನು ಕೋಪವಿಲ್ಲದೆ
ಸಮಾಧಾನವಾಗಿರುವುದನ್ನು ಕಂಡು ನನಗೆ
ಸಂತೋಷವಾಯಿತು. ಇದನ್ನು ನೆನಪಿಟ್ಟುಕೊ,
ಇಂತಹ ಕಾರ್ಯಗಳನ್ನು ಮತ್ತೆ ಮಾಡಬೇಡ.
ಇದರಿಂದ ನಿನಗೆ ನೀನೇ ನರಕವನ್ನು
ಸೃಷ್ಟಿಸಿಕೊಳ್ಳುವೆ' ಎಂದು ಶಾಂತವಾಗಿ ನುಡಿದನು.