KAILASA Library/ಜೀವನ್ಮುಕ್ತಿ/ಕರ್ಮ ಹಾಗೂ ಮುಂದಿನ ಜನ್ಮSign in
ಜೀವನ್ಮುಕ್ತಿ

ಕರ್ಮ ಹಾಗೂ ಮುಂದಿನ ಜನ್ಮ

This text was machine-transcribed from the printed book and may contain errors. Select the words and choose “Report a mistake”.

ಮೂರೂ ಬಗೆಯ ಕರ್ಮಗಳಿದ್ದಾಗ ನಿಮ್ಮ ಮುಂದಿನ ಜನ್ಮಕ್ಕೆ ಹೆಚ್ಚು ಕಟ್ಟುಪಾಡುಗಳು ಇರುತ್ತವೆ.

ಮುಂದಿನ ಜನ್ಮವನ್ನು ಹೇಗೆ ಆಯ್ದುಕೊಳ್ಳುತ್ತೇವೆ?

ಆತ್ಮವು ದೇಹವನ್ನು ಬಿಟ್ಟು ಹೋದಾಗ, ಕೇವಲ
ಮೂರು ಕ್ಷಣಗಳೊಳಗೆ ಮುಂದಿನ ದೇಹವನ್ನು
ಆಯ್ದುಕೊಳ್ಳುತ್ತದೆ.

ಮರಣದ ಸಮಯದಲ್ಲಿ ಆ ಜನ್ಮದಲ್ಲಿ
ಅನುಭವಿಸಿದ ಮೂರು ಅತಿಸವಿಯಾದ ಅನುಭ-
ವಗಳು ವ್ಯಕ್ತಿಯ ಕೊನೆಯ ಆಲೋ-ಚನೆಗಳಾಗಿ
ಎದ್ದು ನಿಲ್ಲುತ್ತವೆ. ಈ ಮೂರು ಅನುಭವಗಳ
ಮನೋವ್ಯವಸ್ಥೆಯ ಆಧಾರದ ಮೇಲೆ ಮುಂದಿನ
ದೇಹವು ಆಯ್ಕೆಯಾಗುತ್ತದೆ.

ಈ ಮೂರು ಆಲೋಚನೆಗಳು ಮೂರು ಬಗೆಯ

ಕರ್ಮ ಹಾಗೂ ಮುಂದಿನ ಜನ್ಮದ ಚಿತ್ರಣ

ಕರ್ಮಗಳಾದ ಸಂಚಿತ
ಕರ್ಮ, ಪ್ರಾರಬ್ಧ ಕರ್ಮ
ಮತ್ತು ಆಗಾಮ್ಯ
ಕರ್ಮಗಳ ಮೇಲೆ ಆಧಾರಿತವಾಗಿರುತ್ತದೆ. ಇದರ
ಆಧಾರಿತವಾಗಿ ಈ ಜನ್ಮದ ಪ್ರಾರಬ್ಧವು
ರೂಪುಗೊಳ್ಳುತ್ತದೆ.

ಈ ಜೀವಮಾನದಲ್ಲಿ, ಆಧ್ಯಾತ್ಮಿಕ
ಅಭ್ಯಾಸಗಳನ್ನು ಮಾಡುವುದರಿಂದಾಗಿ ನೀವು
ಅರಿವಿನಿಂದ ಜೀವನ ನಡೆಸಬಹುದು. ಆಗ ಶೇಖರಿಸಿದ
ಸಂಚಿತ ಕರ್ಮವು ಕಡಿಮೆಯಾಗುತ್ತದೆ.

ಧ್ಯಾನದಿಂದ ಪ್ರಾರಬ್ಧ ಕರ್ಮವು
ಕಡಿಮೆಯಾಗುತ್ತದೆ. ಅದು ಶಾರೀರಿಕ ಅಥವಾ
ಪ್ರಜ್ಞೆಯ ಮಟ್ಟದಲ್ಲಿ ಪರಿಣಾಮ ಬೀರು-ವುದಲ್ಲದೆ,
ಪ್ರಜ್ಞಾರಹಿತ ವಲಯದೊಳಗೂ ಆಳವಾಗಿಳಿದು
ದೈಹಿಕ, ಮಾನಸಿಕ ಮತ್ತು ಅಸ್ತಿತ್ವದ ಮಟ್ಟಗಳಲ್ಲಿ
ಶುದ್ಧಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಏನೇ ಆದರೂ, ಕರ್ಮದ ಬ್ಯಾಂಕಿನ ಅತಿ
ದೊಡ್ಡ ಉಳಿಕೆಯಾದ ಸಂಚಿತ ಕರ್ಮವು
ಗುರುಕೃಪೆಯಿಂದ ಮಾತ್ರ ತೀರಬಲ್ಲುದು.

ಈ ಮೂರು ಕರ್ಮಗಳು ಕಡಿಮೆಯಾದಷ್ಟೂ
ಮುಂದಿನ ದೇಹದ ಆಯ್ಕೆಯ ಮೇಲಿನ
ನಿರ್ಬಂಧಗಳು ಕಡಿಮೆಯಾಗುತ್ತವೆ. ಈ ಮೂರು
ಕರ್ಮಗಳೂ, ಅನುಗುಣವಾದ ಒಂದೊಂದು
ಗಾಢವಾದ ಅನುಭವವನ್ನು ಬಾಳಲು
ಆದೇಶಿಸುವುದರಿಂದ, ಮುಂದಿನ ದೇಹವು ಆ
ಅನುಭವಗಳನ್ನು ಬಾಳಲು ಎಡೆ
ಮಾಡಿಕೊಡಬೇಕಾಗುತ್ತದೆ.

ಅದು ಹೀಗೆ, 'ಕನ್ನಡ, ಹಿಂದಿ ಹಾಗೂ ಸಂಸ್ಕೃತ ಭಾಷೆಗಳನ್ನು ಮಾತನಾಡುವ ವ್ಯಕ್ತಿ ಸಿಗಲಿ' ಎನ್ನುವುದಕ್ಕಿಂತಲೂ, 'ಕನ್ನಡ ಮಾತನಾಡುವ ವ್ಯಕ್ತಿ ಸಿಗಲಿ' ಎಂದಾಗ ಆಯ್ಕೆಯು ಹೆಚ್ಚಾಗುತ್ತದೆ.

ಹಾಗೆಯೇ, ಮೂರೂ ಬಗೆಯ ಕರ್ಮಗಳಿದ್ದಾಗ
ನಿಮ್ಮ ಮುಂದಿನ ಜನ್ಮಕ್ಕೆ ಹೆಚ್ಚು
ನಿರ್ಬಂಧಗಳಿರುತ್ತವೆ.

ಉದಾಹರಣೆಗೆ, ಸಂಚಿತ ಕರ್ಮದಿಂದ ಪ್ರಭಾವಿತವಾದ ಆಸೆಯೊಂದು, 'ನಾನು ಸುಂದರವಾಗಿರಬೇಕು' ಎಂದಿರಬಹುದು. ಈ ಜನ್ಮದ ಪ್ರಾರಬ್ಧದಿಂದ ಉಂಟಾದ ಆಸೆಯು, 'ನಾನು ಧನಿಕನಾಗಿರಬೇಕು' ಎಂದಾದರೆ, ಸಂಗ್ರಹಿಸಲ್ಪಟ್ಟ ಆಗಾಮ್ಯ ಕರ್ಮದಿಂದ ಬಂದ ಆಸೆಯು, 'ನಾನು ಅಮೆರಿಕಾದಲ್ಲಿ ನೆಲೆಸಬೇಕು' ಎಂದಿರಬಹುದು. ಮೂರು ಕ್ಷಣಗಳ ಸಣ್ಣ ಅವಧಿಯಲ್ಲಿ ಈ ಮೂರು ಆಸೆಗಳನ್ನೂ ಪೂರೈಸಬಲ್ಲ ಶರೀರವನ್ನು ಪಡೆಯುವುದು ಜೀವಶಕ್ತಿಗೆ ಹೆಚ್ಚು ಕಷ್ಟವಾಗುತ್ತದೆ. ಆದುದರಿಂದ ಅದು ಈ ಮೂರರಲ್ಲಿ ಯಾವುದು ಅತಿ ತೀವ್ರವಾದ ಆಸೆಯೋ ಅದನ್ನು ಪೂರೈಸಬಲ್ಲ ಶರೀರವನ್ನು ಆಯ್ದುಕೊಳ್ಳುತ್ತದೆ. ಜೀವಶಕ್ತಿಯು ದೇಹವನ್ನು ಬಿಡುವಾಗ ಇರುವ ಎಲ್ಲಾ ಆಸೆಗಳು, ಮತ್ತು ಮನಃಸ್ಥಿತಿಯನ್ನೇ, ಹಿಂದೆ ಹೇಳಿದ ವಾಸನ ಅಥವಾ ಆಸೆಗಳ ಬೀಜ ಎನ್ನುವುದು.

ಈ ಮೂರೂ ಆಸೆಗಳು, ಈ ಮೂರೂ
ಆಲೋಚನೆಗಳು, ಮೂರು ಕ್ಷಣಗಳಲ್ಲಿ ಒಂದು
ಮಿಂಚುನೋಟವಾಗಿ, ಒಂದು ವಾಸನೆಯಾಗಿ
ಕಂಡುಬರುತ್ತದೆ. ವಾಸನೆ ಎಂಬುದು ಟಿ.ವಿ

ಚ್ಯಾನಲ್‌ನಂತಿದ್ದರೆ ದೇಹವು ಆ ಚ್ಯಾನಲ್‌ಗೆ ಹೊಂದಿದ ಟಿ.ವಿ ಇದ್ದಂತೆ. ವಾಸನದ ಆಳ ಮತ್ತು ಅದಕ್ಕೆ ಸರಿಹೊಂದುವ ದೇಹವು ಜೀವಶಕ್ತಿಯನ್ನು ಆಕರ್ಷಿಸುತ್ತದೆ. ಸ್ಯಾಟಲೈಟ್ ಚ್ಯಾನಲ್‌ಗೆ ಟ್ಯೂನ್ ಆದ ಟೆಲಿವಿಷನ್ ಸೆಟ್ಟು ಅದಕ್ಕೆ ತಕ್ಕ ಎಲೆಕ್ಟ್ರಾಮ್ಯಾಗ್ನೆಟಿಕ್ ತರಂಗಗಳನ್ನು ಸ್ವೀಕರಿಸುವಂತೆ ದೇಹವು ವಾಸನೆಯನ್ನು ಆಕರ್ಷಿಸುತ್ತದೆ.

ಹಿಂದಿನ ಶರೀರದಿಂದ ಮುಕ್ತವಾದ
ಜೀವಶಕ್ತಿಯು, ತಾನು ಆಯ್ದುಕೊಂಡ ಹೊಸ
ಶರೀರವನ್ನು ತಾಯಿಯು ಪ್ರಸವಿಸುವಾಗ ಅದು
ಬಂದು ಸೇರುತ್ತದೆ. ಅದು ಜನನನಾಳದಲ್ಲಿ ಆ
ಶರೀರವನ್ನು ಪ್ರವೇಶಿಸುತ್ತದೆ.

ತಾನು ತ್ಯಜಿಸಿದ ದೇಹದ ಕಾರಣಶರೀರದ ಇರುಳು ತಾಯಿಯ ಜನನನಾಳದ ಇರುಳಿಗೆ ಅನ್ವಯಿಸುತ್ತದೆ. ದೇಹವು ತಾಯಿ-ತಂದೆಯರ ಶಕ್ತಿಗಳ ಸಮ್ಮಿಲನದಿಂದ ಉಂಟಾಗುವುದರಿಂದ ಜೀವಶಕ್ತಿಯು ತಾನು ಹಿಂದಿನ ದೇಹವನ್ನು ಬಿಡುವಾಗ ಹೊಂದಿದ ಆಸೆಗಳು, ವಾಸನೆಗಳು ಮತ್ತು ಮನಃಸ್ಥಿತಿಯ ಆಧಾರದ ಮೇಲೆ ತಾಯಿತಂದೆಯರ ಮಿಳಿತ ಶಕ್ತಿಯನ್ನು ಆಯ್ದುಕೊಳ್ಳುತ್ತದೆ. ಆದ್ದರಿಂದ, ತಾಯಿ-ತಂದೆಯರು ಮಗುವನ್ನು ಆಯ್ತುಕೊಳ್ಳುವುದಿಲ್ಲ. ಮಗುವು ತಾಯಿತಂದೆಯರನ್ನು ಆಯ್ದುಕೊಳ್ಳುತ್ತದೆ.

ಒಂದು ದೇಹವನ್ನು ಆಯ್ದುಕೊಂಡ ನಂತರ, ಆತ್ಮ ಅಥವಾ ಜೀವಶಕ್ತಿಯು ತನಗಿದ್ದ ಉಳಿದೆರಡು ಆಸೆಗಳನ್ನೂ ಈಡೇರಿಸಿಕೊಳ್ಳಲು ತಕ್ಕ ದೇಹವನ್ನು ಆಯ್ಕೆಮಾಡಿಕೊಳ್ಳಲಾಗಲಿಲ್ಲ. ಹೇಗಾದರೂ, ಕತ್ತಲಿನಲ್ಲಿ ಅದು ಪಯಣಿಸುವಾಗ ಆತ್ಮಕ್ಕಾಗುವ ಅಗಾಧ ನೋವು, ಹೊಸ ದೇಹವನ್ನು ಸೇರುವ ಮೊದಲು ಅದು ತಳೆದಿರುವ ಎಲ್ಲಾ ವಾಸನೆಗಳ ನೆನಪನ್ನೂ ಅಳಿಸಿಬಿಡುತ್ತದೆ. ಈ ಹೊಸ ಅಸ್ತಿತ್ವಕ್ಕೆ ಹಿಂದಿನ ದೇಹವನ್ನು ಬಿಟ್ಟಾಗ ಇದ್ದ ಆಸೆಗಳು ನೆನೆಪಿನಲ್ಲಿರುವುದಿಲ್ಲ. ಈ ಮರೆವಿನಿಂದಾಗಿ, ತಾನು ಹಿಂದಿನ ದೇಹವನ್ನು ಬಿಟ್ಟಾಗ ಹೊಂದಿದ ಆಸೆಗಳನ್ನು ಪೂರೈಸುವ ಬದಲು ಹೊಸ ದೇಹವನ್ನು ಹೊಂದಿದ ಜೀವಿಯು ಹೊಸ ಆಸೆಗಳನ್ನು ಹುಡುಕುತ್ತಾ ಕರ್ಮಗಳನ್ನು ಸೇರಿಸಿಕೊಳ್ಳುತ್ತದೆ.

ಈಗ ಮೂರು ಕರ್ಮಗಳಲ್ಲಿ ಒಂದು
ಇಲ್ಲವಾದರೆ, ಆಯ್ಕೆಯ ನಿರ್ಬಂಧನೆಗಳು
ಕಡಿಮೆಯಾಗಿ ಜೀವಶಕ್ತಿಯು ತನ್ನ ಆಯ್ಕೆಗಳ ಬಗ್ಗೆ
ಹೆಚ್ಚು ಗಮನ ಹರಿಸಬಹುದು. ಆಗಾಮ್ಯ ಕರ್ಮ
ಹಾಗೂ ಈ ಜನ್ಮದ ಪ್ರಾರಬ್ಧಕರ್ಮಗಳನ್ನು,
ಜೀವನದ ಅರ್ಥವನ್ನು ಗ್ರಹಿಸಿ, ಧ್ಯಾನ ಮಾಡುವುದರ
ಮೂಲಕ ಯಾವುದೇ ವ್ಯಕ್ತಿಯು ಶುದ್ಧವಾಗಿಸಬಹುದು.
ಗುರುವಿನ ಅನುಗ್ರಹವು ಸಂಪೂರ್ಣ ಸಂಚಿತ
ಕರ್ಮವನ್ನು ತಗ್ಗಿಸಬಲ್ಲುದು.

ಒಮ್ಮೆ ಸಂಚಿತ ಕರ್ಮವು ಸಂಪೂರ್ಣವಾಗಿ
ಪರಿಶುದ್ಧವಾಗಿ ಬಿಟ್ಟರೆ, ಇನ್ನೊಂದು ದೇಹವನ್ನು
ಪಡೆಯುವ ಅವಶ್ಯಕತೆಯೇ ಇರುವುದಿಲ್ಲ. ಆಗ,
ಒಂದು ವೇಳೆ ಇನ್ನೊಂದು ಜನ್ಮ ತಾಳಬೇಕಾಗಿ
ಬಂದರೂ, ಅದು ಕೇವಲ ಉಕ್ಕಿಹರಿಯುವ ಹರ್ಷ
ಮತ್ತು ಆನಂದದಿಂದ ಇರಲೆಂದೇ ಆಗಿರುತ್ತದೆ. ಆ
ಜನ್ಮವು ಪ್ರಜ್ಞಾಪೂರಿತವಾಗಿ ಆಯ್ದುಕೊಂಡದ್ದು.

ಏಕೆಂದರೆ ಅಲ್ಲಿ ಕರ್ಮದ ಸೆಳೆತವಿಲ್ಲ. ಆ ಜೀವನವು
ಒಬ್ಬ ಅವತಾರಪುರುಷನ ಲೀಲೆಯಲ್ಲದೆ
ಬೇರೆಯಲ್ಲ.

ಜನನ-ಮರಣಗಳ ಚಕ್ರವು ಶುರುವಾದದು ಹೇಗೆ?

ನಮ್ಮೆಲ್ಲರ ಸಂಪೂರ್ಣ ಸಂಚಿತ ಕರ್ಮವು
ಮೊದಲಿಗೆ ದೈವಲೀಲೆಯೇ ಆಗಿತ್ತು. ಒಬ್ಬ
ಜೀವನ್ಮುಕ್ತನಾದ ಗುರುವಿಗೆ ಈಗಲೂ ಅದು
ದೈವಲೀಲೆಯೇ, ಏಕೆಂದರೆ ಆತನಿಗೆ ಕರ್ಮಗಳಿಲ್ಲ.
ಕೇವಲ ಆಟಕ್ಕಾಗಿ ಆಡುವ ಆಟವೇ ದೈವಲೀಲೆ.

ನಾವು ನಮ್ಮದೇ ಆಯ್ಕೆಯಿಂದ ಜನ್ಮ ತಾಳಿದ್ದೇವೆ. ನಮ್ಮ ಪ್ರಾರಬ್ಧಕರ್ಮವನ್ನು ಮರೆತು ಆಗಾಮ್ಯಕರ್ಮವನ್ನು ಸಂಗ್ರಹಿಸಿ, ಸಂಪೂರ್ಣ ಸಂಚಿತವನ್ನು ಬೆಳೆಸಿಕೊಂಡಿದ್ದೇವೆ. ಇದರ ಭಾರವನ್ನು ತೀರಿಸಲು ಇನ್ನೊಂದು ಜನ್ಮವೆತ್ತಿ, ಅಲ್ಲಿ ಮತ್ತೆ ಇನ್ನೂ ಹೆಚ್ಚು ಆಸೆ, ಕರ್ಮಗಳನ್ನು ಸಂಗ್ರಹಿಸಿಕೊಳ್ಳುತ್ತೇವೆ. ಜನನ-ಮರಣಗಳ ಚಕ್ರವು ಮುಂದುವರೆಯುವುದು ಹೀಗೆಯೇ.

ಸಂಗ್ರಹಿಸಲ್ಪಟ್ಟ ನಿಮ್ಮ ಆಗಾಮ್ಯ ಕರ್ಮವೇ
ನಿಮ್ಮ ಬಂಧನ ಎಂಬುದನ್ನು ದಯವಿಟ್ಟು
ಅರ್ಥಮಾಡಿಕೊಳ್ಳಿರಿ. ಒಟ್ಟಾರೆ ಕರ್ಮವೂ, ಈ
ಜನ್ಮದ ಕರ್ಮವೂ ದೈವಲೀಲೆಯಾಗಬಹುದು. ಈ
ಆಟದ ಫಲವೇ ಆ ಜನ್ಮದ ಕರ್ಮ. ಹುಟ್ಟಿದ ಮೇಲೆ
ಕರ್ಮವನ್ನು ಸಂಗ್ರಹಿಸದೇಹೋದರೆ, ಅದು
ದೈವಲೀಲೆಯಾಗಿ ಮುಂದುವರೆಯುತ್ತದೆ.
ಸಂಗ್ರಹಿಸಿದ ಕರ್ಮದಿಂದಾಗಿಯೋ
ಬಂಧನವುಂಟಾಗುವುದು.

ಮಾನವನು ಮುಂದಿನ ಜನ್ಮದಲ್ಲಿ ಮೃಗವೋ, ಪಕ್ಷಿಯೋ, ಕೀಟವೋ ಆಗಿ ಹುಟ್ಟಬಹುದೇ ಅಥವಾ ಮುಂದಿನ ಜನ್ಮದಲ್ಲೂ ಮನುಷ್ಯನಾಗಿರಬಹುದೇ?

ಇದು ಬಹಳ ಒಳ್ಳೆಯ ಪ್ರಶ್ನೆ. ನೇರವಾಗಿ
ಸತ್ಯವನ್ನು ಹೇಳಿ ಕರ್ಮಚಕ್ರದ ಬಗ್ಗೆ ಇರುವ, ಈ
ಪ್ರಶ್ನೆಯ ಸುತ್ತಲಿರುವ ಭ್ರಮೆಯನ್ನು ಒಮ್ಮೆಗೇ
ಅಳಿಸಿಬಿಡುತ್ತೇನೆ!

ಒಂದು ಸಲ ಮಾನವನಾಗಿ ಹುಟ್ಟಿದವನು
ಸೃಷ್ಟಿಗೆ ವಿರುದ್ಧವಾಗಿ ನಡೆಯುವವರೆಗೂ, ಅಂದರೆ
ಗುರುಗಳ ರೂಪದಲ್ಲಿರುವ ವಿಶ್ವಶಕ್ತಿಗೂ, ಪ್ರಕೃತಿ
ಅಥವಾ ಇತರರೊಂದಿಗೆ ಕಾಯ, ವಾಚಾ, ಮನಸಾ
ಹಿಂಸಾತ್ಮಕವಾಗಿ ಪ್ರವರ್ತಿಸುವವರೆಗೂ
ಮಾನವಜನ್ಮವನ್ನೇ ತಳೆಯುತ್ತಾನೆ. ಈ
ದುರ್ವರ್ತನೆಗಳ ತೀವ್ರತೆಯು ವಿಶ್ವದ
ಕರ್ಮದಾಖಲೆಯಲ್ಲಿ ಸೇರುತ್ತದೆ.
ಅರ್ಥಮಾಡಿಕೊಳ್ಳಿರಿ, ಕಾರ್ಯವೇ ಮುಖ್ಯವಲ್ಲ. ಆ
ಕಾರ್ಯದ ತೀವ್ರತೆಗೇ ಪ್ರಾಮುಖ್ಯತೆಯಿರುವುದು.

ಒಬ್ಬ ವ್ಯಕ್ತಿಯು ತನ್ನ ಜೀವಿತವನ್ನೆಲ್ಲಾ ಕೆಳಮಟ್ಟದ ಪ್ರಜ್ಞೆಯಲ್ಲಿ ಕಳೆದರೆ, ಅವನು

ಪ್ರಾಣಿಯಾಗಿ ಜನ್ಮತಾಳಬಹುದು. ಉದಾಹರಣೆಗೆ,
ಅವನು ತನ್ನ ಇಡೀ ಜೀವನವನ್ನು ಊಟ-ನಿದ್ರೆಗಳಲ್ಲಿ
ಕಳೆದರೆ ಅವನು ಪ್ರಾಣಿಯಾಗಿ ಜನಿಸಬಹುದು.

ಅದು ಹೀಗೆ: ಕೇವಲ ಮಾನವರಿಗೆ ಮಾತ್ರ
ಮೀಸಲಾಗಿರುವ ಪ್ರೇಮ, ಆತ್ಮಸಾಕ್ಷಾತ್ಕಾರದ
ಪ್ರಯತ್ನ, ಇಂತಹ ಗುಣಗಳನ್ನು ಒಮ್ಮೆಯಾದರೂ
ಅನುಭವಿಸದಿದ್ದರೆ, ಅಂತಹವನು ಪ್ರಾಣಿಯಾಗಿ
ಜನಿಸುವನು. ಏಕೆಂದರೆ ಮಾನವ ಶರೀರವಿದ್ದರೂ
ಮಾನವತೆಯ ಅನುಭವದ ಚ್ಯಾನೆಲ್‌ಗಳನ್ನು
ಬೆಳೆಸಿಕೊಳ್ಳಲಿಲ್ಲವಾದ್ದರಿಂದ.

ಪ್ರಾರಬ್ಧವಲ್ಲದ ಬೇರೆ ಯಾವುದೇ ವಿಷಯದ ಬಗ್ಗೆ ಗಾಢ ಭಾವನೆಯಿದ್ದರೆ ಮುಂದಿನ ಜನ್ಮಕ್ಕಾಗಿ ಕಾಯಬೇಕೇ?

ಇಲ್ಲ. ಸರಳ ಹಾಗು ದೃಢ ಸಂಕಲ್ಪದಿಂದ
ಪ್ರಾರಬ್ಧವನ್ನು ಬದಲಾಯಿಸಿಕೊಳ್ಳಬಹುದು.
ಸಂಕಲ್ಪದ ಶಕ್ತಿಯು ಈ ಜನ್ಮದಲ್ಲೇ ನಿಮಗೆ
ಪುನರ್ಜನ್ಮವನ್ನು ನೀಡಬಲ್ಲದು. ಪುನರ್ಜನ್ಮವು
ಈಗಲೇ ಆಗಬಹುದು. ಉದಾಹರಣೆಗೆ, ಸಂಸಾರದ
ಜವಾಬ್ದಾರಿಗಳಲ್ಲಿ ಸಿಲುಕಿಕೊಂಡಂತೆ ಭಾವಿಸುವ
ಅನೇಕ ಶಿಷ್ಯರು, 'ಸ್ವಾಮೀಜಿ, ಮುಂದಿನ
ಜನ್ಮದಲ್ಲಾದರೂ ನಿಮ್ಮ ಬಳಿ ಇರುವಂತೆ
ಆಶೀರ್ವದಿಸಿ' ಎಂದು ಬೇಡುತ್ತಾರೆ. ಕೆಲವೇ
ತಿಂಗಳುಗಳಲ್ಲಿಯೇ ಅವರು ಆಶ್ರಮಕ್ಕೆ ಸೇರಿರುವ
ಅನೇಕ ಸಂಗತಿಗಳಿವೆ. ಅದು ಕೇವಲ ದೃಢ ನಿಶ್ಚಯದ
ಬಲ.

ಆತ್ಮ ಸಾಕ್ಷಾತ್ಕಾರ - ಮರಳಿ ಗೂಡಿಗೆ

ಸೃಷ್ಟಿಯೆಂಬ ಸಾಗರದಲ್ಲಿ ನೀವೊಂದು
ಅಲೆಯಂತೆ. ಅಲೆಯು ಸಾಗರದಿಂದ ಮೇಲಕ್ಕೆದ್ದರೂ
ಅದು ಸಾಗರದ ಅಂಶವೇ. ಅದು ತನ್ನದೇ ಆದ
ಅಸ್ತಿತ್ವವಿದೆಯೆಂದು ಭಾವಿಸಿದರೆ ಅದು ಕೇವಲ
ಭ್ರಮೆಯೇ. ಅಲೆಯು ಮೇಲೆಳುತ್ತಿದ್ದರೂ, ಕೆಳಗೆ
ಬೀಳುತ್ತಿದ್ದರೂ ಅದು ಸಮುದ್ರದ ಅಂಶವೇ.

ತಾನೇ ತಾನಾಗಿ ಆನಂದದಿಂದ ಅಲೆಯು
ಮೇಲೆದ್ದು, ದೇಹವನ್ನು ಧರಿಸಿದಾಗ, ಆಗಾಮ್ಯ
ಕರ್ಮವಿರುವುದಿಲ್ಲ. ಆಗಾಮ್ಯ ಕರ್ಮವನ್ನು
ಸಂಗ್ರಹಿಸಿದಾಗ ಅದು ನಿರ್ಮಲವಾಗಿದ್ದ ಒಟ್ಟಾರೆ
ಸಂಚಿತಕರ್ಮವನ್ನು ಅಶುದ್ಧಿಗೊಳಿಸುತ್ತದೆ. ಈ
ಸಂಚಿತಕರ್ಮವನ್ನು ಮುಂದಿನ ಜನ್ಮದಲ್ಲಿ
ತೀರಿಸಬೇಕಾಗುತ್ತದೆ. ಅಶುದ್ಧಿಯಾದ ಒಟ್ಟಾರೆ
ಸಂಚಿತಕರ್ಮದಿಂದಲೇ ಜನನ-ಮರಣಗಳ ಚಕ್ರವು
ರಚಿತಗೊಳ್ಳುವುದು, ಹೀಗೆಯೇ ಕರ್ಮಚಕ್ರವೂ
ಆರಂಭವಾಗುವುದು.

ಹೊಸ ದೇಹವನ್ನು ಧರಿಸಿದ ಜೀವಶಕ್ತಿಯು ತಾನು
ಈ ದೇಹವನ್ನು ಧರಿಸಲು ಕಾರಣವಾದ
ಪ್ರಾರಬ್ಧಕರ್ಮವನ್ನು ಮರೆಯುತ್ತದೆ. ಹಾಗಾಗಿ,
ಹಿಂದಿನ ದೇಹವನ್ನು ಬಿಡುವಾಗ ಹೊಂದಿದ
ಆಸೆಗಳನ್ನು ಮರೆಯುತ್ತೀರಿ.

ತಪಸ್ಸು ಹಾಗೂ ಜ್ಞಾನೋದಯವನ್ನು
ಪಡೆಯುವುದೆಲ್ಲವೂ ಆ ಆಸೆಗಳನ್ನು ಪುನಃ
ನೆನಪುಮಾಡಿಕೊಂಡು ಈ ಜನ್ಮದಲ್ಲಿ

ಈಡೇರಿಸಿಕೊಳ್ಳುವುದೇ ಆಗಿದೆ.

ನೀವು ಜನಿಸಿದಾಗ ನಿಮ್ಮ ಜನ್ಮವು ದೈವಲೀಲೆ
ಎಂಬುದನ್ನು ಮರೆತರೆ ಏನಾಗುತ್ತದೆ?
ಕರ್ಮಭಾರವು ಅತಿಯಾದಾಗ, ನಿಮಗೆ
ಅರಿವಾಗುತ್ತದೆ, 'ಎಲ್ಲೋ ಏನೋ
ತೊಂದರೆಯಿದೆ' ಎಂದು. ಆಕ್ಷಣವೇ ಎಚ್ಚೆತ್ತು
ಜ್ಞಾನವನ್ನು ಹೊಂದುತ್ತೀರಿ. ಈ ರೀತಿ
ಹಿಂದಿರುಗುವುದನ್ನೇ ಜ್ಞಾನೋದಯ ಎನ್ನುವುದು.

ಕೆಲವೊಮ್ಮೆ ನಿಜವಾಗಿಯೂ ಒಂದು ದುಃಸ್ವಪ್ನ
ಬಂದಾಗ, 'ನಾನು ಕನಸು ಕಾಣುತ್ತಿದ್ದೇನೆ'
ಎಂಬಂತಹ ಆಲೋಚನೆಯು ಮೊದಲು ಬರುತ್ತದೆ.
ನಂತರ ಎಚ್ಚರವಾಗುತ್ತದೆ. 'ನಾನು ಕನಸು
ಕಾಣುತ್ತಿದ್ದೇನೆ' ಎಂಬ ಆಲೋಚನೆಯು ಬರುವುದು
ಆತ್ಮಜ್ಞಾನದ ಕಡೆಗೆ ತಿರುಗಿದ ಹಾಗೆ;
ಎಚ್ಚರವಾಗುವುದು ಜ್ಞಾನೋದಯ ಹೊಂದುವ
ಹಾಗೆ.

'ನಾನು ಕನಸು ಕಾಣುತ್ತಿದ್ದೇನೆ, ಈ
ಪ್ರಪಂಚವೇ ಒಂದು ಸ್ವಪ್ನ' ಎಂದು ಯೋಚಿಸಿ
ಮಿಥ್ಯವಾದ ಪ್ರಪಂಚವನ್ನು ಪರಿತ್ಯಾಗ ಮಾಡಿ
ಸತ್ಯವನ್ನು ಕಂಡುಕೊಳ್ಳುವುದೇ ಜ್ಞಾನೋದಯ. ಈ
ಪ್ರಪಂಚದಲ್ಲಿ ಅದೇ ಅನುಭವಗಳು ಪುನರಾವರ್ತಿಸಿ,
ಸಾಕಾಗಿ, ಬೇಸರ ತರುವುವು. ಅದು 'ನಾನು ಕನಸು
ಕಾಣುತ್ತಿದ್ದೇನೆ' ಎನ್ನುವುದರ ಅನುಮಾನವನ್ನು
ತರುತ್ತದೆ. ಆಗ ಪ್ರಪಂಚವನ್ನು, ಪ್ರಪಂಚದ
ಭರವಸೆಯನ್ನು ಅನುಮಾನಿಸಲು ಆರಂಭಿಸುತ್ತೀರಿ.

ಅದು, ವಾರ್ತಾಪತ್ರಿಕೆಯಲ್ಲಿ ಬರುವ ಸಮುದ್ರ ತೀರದ ಪ್ರವಾಸಿ ಸ್ಥಳದ ಜಾಹೀರಾತಿನಂತೆ ಇರುತ್ತದೆ. ಅದರಲ್ಲಿ, ಆ ಪ್ರವಾಸಿಸ್ಥಳದ ಸೌಂದರ್ಯ, ಅಲ್ಲಿ ದೊರಕುವ ಆಹಾರ, ಅಲ್ಲಿಯ ಕುರ್ಚಿಮೇಜುಗಳು, ಎಲ್ಲವೂ ಅದು ಸ್ವರ್ಗವೇ ಎಂಬಂತೆ ಭಾವನೆಯನ್ನು ಕೊಡುತ್ತದೆ. ಆದರೆ, ಆ ಜಾಹೀರಾತನ್ನು ನಂಬಲಾಗುವುದಿಲ್ಲ. ಏಕೆಂದರೆ, ನೂರಾರು ಜನ ಇದನ್ನು ನೋಡಿ ಅಲ್ಲಿಗೆ ಹೋಗಿದ್ದಾರೆ, ಎಲ್ಲರೂ ಆ ಸ್ವರ್ಗಸುಖವನ್ನು ನಿಜವಾಗಿಯೂ ಅನುಭವಿಸಿರುವುದಿಲ್ಲ. ಹಾಗೆಯೇ ನಿಜ ಜೀವನದಲ್ಲೂ ಸಹ ನಿಮ್ಮ ಮನವು ಆಗಿಂದಾಗ ಮಾಡುತ್ತಿರುವ ವಾಗ್ದಾನಗಳು ಪೂರೈಸದಿದ್ದಾಗ, ಅದರ ಬಗ್ಗೆ ಅನುಮಾನವುಂಟಾಗುತ್ತದೆ.