KAILASA Library/ಜೀವನ್ಮುಕ್ತಿ/ಆನಂದದ ಹಂಚಿಕೆSign in
ಜೀವನ್ಮುಕ್ತಿ

ಆನಂದದ ಹಂಚಿಕೆ

This text was machine-transcribed from the printed book and may contain errors. Select the words and choose “Report a mistake”.

ಗುಣಹೊಂದಿದವರ ಅನುಭವಗಳು

ಧ್ಯಾನಚಿಕಿತ್ಸೆ

1. ನಾನು ಹೆಪಟಿಟಿಸ್-ಬಿಯಿಂದ ಪೀಡಿತನಾಗಿ, ಸಾಮಾನ್ಯವಾಗಿ ವಾಸಿಯಾಗದು ಎಂದೇ ಭಾವಿಸಿರುವ ಸಿರೋಸಿಸ್ ಎಂಬ ದೀರ್ಘಕಾಲದ ಪಿತ್ತಜನಕಾಂಗದ ವ್ಯಾಧಿಯಿಂದ ನರಳುತ್ತಿದ್ದೆ. ಎಲ್ಲಾ ಆಸ್ಪತ್ರೆಗಳೂ ಭರವಸೆಯನ್ನು ಕಳೆದುಕೊಂಡಿದ್ದವು. ನಾನು ಆರು ವರ್ಷಗಳಿಂದಲೂ ದ್ರವ್ಯಾಹಾರದ ಪಥ್ಯದಲ್ಲಿದ್ದೆ ಹಾಗೂ ಸಾವು ಸನ್ನಿಹಿತವಾಗಿದೆಯೆಂದು ತಿಳಿದಿದ್ದೆ.

ನನ್ನ ಸ್ನೇಹಿತನ ಸಲಹೆಯ ಮೇರೆಗೆ ದಕ್ಷಿಣ ಭಾರತದ ತಮಿಳುನಾಡಿನ ಈರೋಡಿನಲ್ಲಿ ಅವರನ್ನು ಅರಸುತ್ತಾ ಬಂದ ಜನರಿಗೆ ಉಪಶಮನ ನೀಡುತ್ತಿದ್ದ ಪರಮಹಂಸ ನಿತ್ಯಾನಂದರ ಬಳಿಗೆ ಹೋದೆನು. ಅವರು ಸ್ವಲ್ಪ ವಿಭೂತಿಯನ್ನು ಕೊಟ್ಟು ಮುಂದಿನ ಮೂರು ದಿನಗಳ ಕಾಲ ನನ್ನ ಎಲ್ಲಾ ಆಹಾರ, ಪಾನೀಯಗಳಲ್ಲಿ ಅದನ್ನು ಬೆರೆಸಿ ಸೇವಿಸುವಂತೆ ಹೇಳಿದರು. ನಾನು ಅವರ ಆದೇಶವನ್ನು ಪರಿಪಾಲಿಸಿದೆ. ಮೂರನೆಯ ದಿನವೇ ಆರು ದೀರ್ಘ ವರ್ಷಗಳ ನಂತರ ಮೊದಲ ಬಾರಿಗೆ ನನ್ನ ಹೊಟ್ಟೆಯಲ್ಲಿ ನೆಮ್ಮದಿಯಾದಂತೆ ಭಾಸವಾಯಿತು. ಅವರ ಆದೇಶದ ಮೇರೆಗೆ ಆರು ವರ್ಷಗಳ ನಂತರ ಮೊದಲ ಬಾರಿಗೆ ಮಸಾಲೆ ಹಾಕಿದ ರುಚಿಕಟ್ಟಾದ ಊಟವನ್ನು ಹೊಟ್ಟೆತುಂಬ ಮಾಡಿದೆ. ಅಂದಿನಿಂದಲೂ ನಾನು ಆರೋಗ್ಯವೂ ಆನಂದಮಯವೂ ಆದ ಜೀವನವನ್ನು ನಡೆಸುತ್ತಾ ನನ್ನ ಪೂಜ್ಯ ಗುರುಗಳ ಸೇವೆಯನ್ನು ಮಾಡಲು ಸದಾ ಸಿದ್ಧನಾಗಿದ್ದೇನೆ.

  • ಶ್ರೀ ನಿತ್ಯ ಸದಾನಂದ ನಿತ್ಯಾನಂದ ಪರಂಪರೆಯ ಹಿರಿಯಸ್ವಾಮಿ. [email protected]

2. ನನಗೆ ಹಾರ್ಮೋನುಗಳ ತೊಂದರೆಯಾದ ಕಾರಣ ಪಿಸಿಓಎಸ್ ಎಂಬ ವ್ಯಾಧಿಯು ತೀವ್ರವಾಗಿದೆಯೆಂದು ರೋಗ ನಿರ್ಣಯ ಮಾಡಲಾಗಿತ್ತು. ನನ್ನ ಅಂಡಾಶಯವು ದೊಡ್ಡದಾದ ಸಿಸ್ಟ್‌ಗಳಿಂದ ಆವೃತವಾಗಿದೆ ಎಂದು ಅಲ್ಟ್ರಾಸೌಂಡಿನ

ಮೂಲಕ ಪತ್ತೆಹಚ್ಚಲಾಗಿತ್ತು. ನಾನು ಪರಮಹಂಸ
ನಿತ್ಯಾನಂದರ ಧ್ಯಾನ ಕಾರ್ಯಕ್ರಮದಲ್ಲಿ
ಭಾಗವಹಿಸಿದಾಗ, ನಾನು ನನ್ನ ಸಮಸ್ಯೆಯ ಬಗ್ಗೆ
ಅವರಿಗೆ ಹೇಳದೇ ಇದ್ದರೂ, ಅವರಾಗಿಯೇ ನನಗೆ
ಉಪಶಮನವಾಗುತ್ತದೆಂದು ಹೇಳಿದರು.

ಇನ್ನೂರು ಪೌಂಡಿನ ದೇಹದೊಂದಿಗೆ
ಸೆಣೆಸಾಡುತ್ತಿದ್ದ ನಾನು ಸುಮಾರು ಒಂದು ತಿಂಗಳ
ನಂತರ ಮೂವತ್ತು ಪೌಂಡುಗಳಷ್ಟು ತೂಕವನ್ನು
ಕಳೆದುಕೊಂಡಿದ್ದೆ. ಇದು ಪಥ್ಯ ಹಾಗೂ
ವ್ಯಾಯಾಮಗಳಿಂದ ಸಾಧ್ಯವಾಗಿರಲಿಲ್ಲ. ನನ್ನ ತೂಕವು
ಭಾವನೆಗಳಿಗೆ ಹೇಗೆ ಸಂಬಂಧಿಸಿತ್ತೆಂದು ನನಗೆ ಆಗ
ತಿಳಿಯಿತು. ಯಾವುದೇ ಚಟವಾದರೂ
ಪರಿಪೂರ್ಣತೆಗೆ ಒಂದು ಆಹ್ವಾನವಿದ್ದಂತೆ. ಇದನ್ನು
ಹೊರಗಿನಿಂದ ಪೂರೈಸಲು ಪ್ರಯತ್ನಪಟ್ಟರೂ
ಯಾವತ್ತಿಗೂ ಸಾಧ್ಯವಿಲ್ಲವೆಂದು ತಿಳಿದುಕೊಂಡೆ.

ಸುಮಾರು ಒಂದು ವರ್ಷದ ನಂತರ
ಅಲ್ಟ್ರಾಸೌಂಡಿನ ವೈದ್ಯಕೀಯ ಪರೀಕ್ಷೆಗೆ ನಾನು
ಒಳಪಟ್ಟಾಗ ನನ್ನ ಸಿಸ್ಟ್ ಗಳು ಸಂಪೂರ್ಣವಾಗಿ
ಇಲ್ಲದಿರುವುದನ್ನು ಕಂಡು ವೈದ್ಯರು
ಆಶ್ಚರ್ಯಚಕಿತರಾದರು.

– ರೋಹಿಣಿ ನಂಬಿಯಾರ್
ಧ್ಯಾನಾಚಾರ್ಯ
ಒಕ್ಲಾಹೋಮ, ಯು.ಎಸ್.ಎ.
[email protected]

3. ನನ್ನ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಸಿಂಗಪುರದಲ್ಲಿರುವ ನನ್ನನ್ನು ಭೇಟಿಮಾಡಲು ಬಂದಾಗ ವಿಹಾರಕ್ಕಾಗಿ ಮಲೇಶಿಯಾದ ಟಿಯೋಮಾನ್ ದ್ವೀಪಗಳಿಗೆ ಹೋಗಿದ್ದರು. ಅವರು ಹಿಂದಿರುಗಿದಾಗ, ಇಬ್ಬರೂ ಬಹಳ ದುಃಸ್ಥಿತಿಯಲ್ಲಿದ್ದರು. ಸಮುದ್ರದಡಿಯಲ್ಲಿ ಈಜುತ್ತಿದ್ದಾಗ ಅವರಿಗೆ ನೀರಿನಲ್ಲಿ ಮುಳುಗಿ ಸಾಯುವಂತಹ ಭಯಂಕರ ಅನುಭವವಾಗಿತ್ತು. ಅವರು ಸಮುದ್ರದ ನೀರನ್ನು ಸಹ ಬಹಳವಾಗಿ ಕುಡಿದುಬಿಟ್ಟಿದ್ದರು. ಹಿಂದಿರುಗಿದ ನಂತರವೂ ಅವರು ಸಂಪೂರ್ಣವಾಗಿ ಆಘಾತಗೊಂಡ ಸ್ಥಿತಿಯಲ್ಲಿದ್ದರು. ನನ್ನ ಚಿಕ್ಕಪ್ಪ ತೀವ್ರವಾದ ಜ್ವರದಿಂದ ಕಂಪಿಸುತ್ತಿದ್ದರು.

ನಾನು ಅವರಿಗೆ ಮಲಗಿಕೊಂಡು ವಿಶ್ರಮಿಸಲು
ಹೇಳಿದೆ. ನಿತ್ಯಾ ಸ್ಪಿರಿಚ್ಯುಯಲ್ ಉಪಶಮನವನ್ನು
ನೀಡಲು ಆರಂಭಿಸಿದೆ. ಸುಮಾರು ಹತ್ತು ನಿಮಿಷಗಳ
ನಂತರ ಅವರು ನಿದ್ರಾಪರವಶರಾದರು. ಮಾರನೆಯ
ಬೆಳಿಗ್ಗೆ ಎದ್ದಾಗ ಏನೇನೂ ಆಗಿರಲಿಲ್ಲವೆಂಬಂತೆ
ಅವರು ಸಂಪೂರ್ಣವಾಗಿ ಗುಣಹೊಂದಿದ್ದರು.

– ಮಾ. ನಿತ್ಯಾನಂದ ಅರ್ಪಣ
ನಿತ್ಯಾ ಆಧ್ಯಾತ್ಮಿಕ ಹೀಲರ್
ಸಿಂಗಪುರ
[email protected]

4. ನನ್ನ ಅಮೇರಿಕದ ಸ್ನೇಹಿತೆಯರಲ್ಲೊಬ್ಬಳಿಗೆ
ಬಹುಕಾಲದಿಂದಲೂ ವ್ಯಾಕುಲತೆ ಹಾಗೂ
ಬಾಧೆಗಳಿಂದ ಆಗಾಗ್ಗೆ ಅತಿಯಾದ ಆತಂಕಕ್ಕೆ
ಗುರಿಯಾಗುತ್ತಿರುವುದಾಗಿಯೂ ನರಳುತ್ತಿದ್ದೇನೆಂದೂ

ಹೇಳುತ್ತಿದ್ದಳು. ಹೀಲಿಂಗ್ (ಧ್ಯಾನಚಿಕಿತ್ಸೆ) ಮನಸ್ಸಿನ ಸಮಸ್ಯೆಗಳಿಗೂ ಪರಿಹಾರ ನೀಡುವುದೇ ಎಂದು ಅನುಮಾನಿಸಿದಳು. ಆಕೆಗೆ ಹೀಲಿಂಗ್ ಎನ್ನುವುದು ಶುದ್ಧ ಜ್ಞಾನವುಳ್ಳದೆಂದು, ಎಲ್ಲಾ ಸ್ತರಗಳಲ್ಲೂ ಪರಿಣಾಮಕಾರಿಯಾಗಿರುತ್ತದೆಂದು ವಿವರಿಸಿದೆ. ನಂತರ ಆಕೆಗೆ ಸುಮಾರು 15 ನಿಮಿಷಗಳ ಕಾಲ ಹೀಲಿಂಗ್ ನೀಡಿದೆ. ಮಾರನೆಯ ದಿನ ಆಕೆಯು ಹೀಲಿಂಗ್ ಸಮಯದಲ್ಲಿಯೂ, ನಂತರವೂ, ಆಳವಾದ ಶಾಂತಿ ಸಮಾಧಾನಗಳನ್ನು ಅನುಭವಿಸಿದಳೆಂದೂ, ನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ ಎಂದೂ ಇಲ್ಲದಂತೆ ಸುಖಕರವಾದ ನಿದ್ದೆ ಮಾಡಿದಳೆಂದೂ ಮತ್ತು ಜೀವನದಲ್ಲಿ ಒಂದು ದೊಡ್ಡ ಘಟನೆಯು ಆತಂಕಕ್ಕೆ ಮೂಲ ಕಾರಣವಾಗಿದ್ದಿತೆಂದೂ, ದೂರವಾಣಿಯ ಮೂಲಕ ನನಗೆ ತಿಳಿಸಿದಳು.

– ಪ್ರೇಮೇಶ್ವರಿ
ನಿತ್ಯ ಆಧ್ಯಾತ್ಮಿಕ ಹೀಲರ್
ಮಿಚಿಗನ್, ಯು.ಎಸ್.ಎ.
[email protected]

5. ನಾನು ಸ್ತ್ರೀರೋಗ ತಜ್ಞೆ. ನನ್ನ ಅನೇಕ ರೋಗಿಗಳು ಪರಮಹಂಸ ನಿತ್ಯಾನಂದರ ಸ್ಪರ್ಶ ಮಾತ್ರದಿಂದಲೇ ಪವಾಡ ಸದೃಶ ಅನುಭವಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಕ್ಷಯರೋಗಕ್ಕೆ ತುತ್ತಾದ ಒಬ್ಬ ಮಹಿಳೆಯು ಚಿಕಿತ್ಸೆಗಾಗಿ ಬಂದಳು. ಆಕೆಯ ಗರ್ಭಕೋಶದ ಒಳಪದರವು ಬಹಳ ಕೃಶವಾಗಿ ಆಕೆಯ ಎಂಡೋಮೆಟ್ರಿಯಂ ಬಹಳ ದುಃಸ್ಥಿತಿಯಲ್ಲಿತ್ತು. ನಾವು ವಿವಿಧ ರೀತಿಯ ಚಿಕಿತ್ಸೆಗಳನ್ನು ನೀಡಿದರೂ ಪರಿಣಾಮಕಾರಿಯಾಗಿರಲಿಲ್ಲ. ಬದಲಿ ತಾಯಿಯನ್ನು ಯೋಜಿಸುವ ಆಲೋಚನೆಯನ್ನು ಮಾಡುತ್ತಿದ್ದಾಗ ನಾನು ಪರಮಹಂಸರಿಂದ ಹೀಲಿಂಗ್ ಪಡೆಯಲು ಸೂಚಿಸಿದೆ. ಆಕೆಯು ಪರಮಹಂಸರಿಂದ ಹೀಲಿಂಗ್ ಪಡೆಯಲು ಹೋದಾಗ ಅವಳಿಗೆ ದಿವ್ಯ ಶಿಶುವಾಗಲೆಂದು ಹರಿಸಿದರು. ಮೊಟ್ಟಮೊದಲಾಗಿ ಆಕೆಯು ಗರ್ಭಿಣಿಯಾದಳು. ನಂತರ ಸಹಜವಾದ ಪ್ರಸವವಾದದ್ದು ನಿಜವಾದ ಒಂದು ವೈದ್ಯಕೀಯ ಪವಾಡವೆನ್ನಬಹುದು.

– ಡಾ॥ ನಿರ್ಮಲ
ಸ್ತ್ರೀರೋಗ ಶಾಸ್ತ್ರ ತಜ್ಞೆ
ಅಡ್ವಾನ್ಸ್‌ಡ್ ಫರ್ಟಿಲಿಟಿ ಸೆಂಟರ್
ಬೆಂಗಳೂರು
[email protected]

ಧ್ಯಾನ ಕಾರ್ಯಕ್ರಮಗಳು

1. ಎಂ.ಎನ್.ಸಿ. ಸಂಸ್ಥೆಯ ವೃತ್ತಿಯಲ್ಲಿ ನನ್ನನ್ನು ‘ಸ್ಟಾರ್’ ಎಂದು ಪರಿಗಣಿಸಲಾಗಿತ್ತು. ನಾನು ಕಂಪನಿಗಳನ್ನು, ಸಂಸ್ಥೆಗಳನ್ನು ನಡೆಸುತ್ತಿದ್ದೆ. ನೂರಾರು ಕೋಟಿ ಡಾಲರ್‌ಗಳ ಸಂಸ್ಥೆಗಳನ್ನು ನಿರ್ಮಿಸಿದೆ. ಅನೇಕ ಹೊಸ ಯೋಜನೆಗಳು ಕಾರ್ಯಗತವಾಗಲು ನೆರವಾಗಿದ್ದೆ. ಆದರೆ ನನಗೆ ಎಂದೂ ಸಾರ್ಥಕವೆನಿಸಲೇ ಇಲ್ಲ. ನನ್ನ ಜೀವನದಲ್ಲಿ ಪರಮಹಂಸ ನಿತ್ಯಾನಂದರ ಪ್ರವೇಶವಾದ ನಂತರ

ಒಳಪ್ರಪಂಚದಲ್ಲಿ ಯಶಸ್ವಿಯಾಗುತ್ತಾ,
ಹೊರಪ್ರಪಂಚದಲ್ಲಿಯೂ ಅಷ್ಟೇ
ಯಶಸ್ವಿಗಳಿಸುವುದನ್ನು ಕಲಿತೆನು.

– ರಾಮ್ ಎಸ್. ರಾಮ್
ಬಿಸಿನೆಸ್ ಮೆಂಟಾರ್
ಸಿಂಗಪುರ
[email protected]

2. ಐದು ವರ್ಷಗಳ ಹಿಂದೆ ಗ್ಲೋಬಲ್ ಸಪ್ಲೈ ಚೈನ್ ಎಂಬ ಒಂದು ಫಾರ್ಚೂನ್ 500 ಕಂಪನಿಯ ವೈಸ್ ಪ್ರೆಸಿಡೆಂಟ್ ಆಗಿದ್ದೆ. ಮೂವತ್ತೆರಡನೇ ವಯಸ್ಸಿನಲ್ಲಿಯೇ ನನಗೆ ಡಯಾಬಿಟಿಸ್ ಎಂದು ರೋಗ ನಿರ್ಣಯವಾಗಿತ್ತು. ನಮ್ಮ ಕುಟುಂಬದಲ್ಲಿ ತಾಯಿಯ ಹಾಗೂ ತಂದೆಯ ಎರಡೂ ಕಡೆಗಳಲ್ಲೂ ಈ ರೋಗದ ದೀರ್ಘಕಾಲದ ಹಿನ್ನೆಲೆಯಿದೆ. ನಾನು ಪರಮಹಂಸರನ್ನು ಸಂಧಿಸಿದಾಗ ಒಂದು ಸಂದರ್ಭದಲ್ಲಿ ನನ್ನ ಸಮಸ್ಯೆಯನ್ನು ಅವರಿಗೆ ಹೇಳಿದೆ. ನಾನಿದನ್ನು ಅವರಿಗೆ ಹೇಳಿ ಸುಮಾರು ನಾಲ್ಕೂವರೆ ವರ್ಷಗಳಾಗಿವೆ. ಆದರೂ ಇಂದಿನವರೆಗೂ ಯಾವ ಪಥ್ಯದ ನಿರ್ಬಂಧ ಅಥವಾ ರೋಗ ಲಕ್ಷಣಗಳೂ ಇಲ್ಲ ಹಾಗೂ ನನ್ನ ರಕ್ತದ ಸಕ್ಕರೆ ಅಂಶವು ಸರಿಯಾದ ಪ್ರಮಾಣದಲ್ಲಿಯೇ ಇದೆ.

ಪರಮಹಂಸರ ಒಂದು ಉನ್ನತವಾದ ಧ್ಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಅದರಲ್ಲಿದ್ದ ಒಂದು ತಂತ್ರವೇನೆಂದರೆ ಯಾವಾಗಲೂ ಆನಂದವಾಗಿರಲು ಬಿಡದ ತಡೆಯನ್ನು ಪದಗಳಲ್ಲಿ ವ್ಯಕ್ತಪಡಿಸುವುದು. ನಮ್ಮಲ್ಲಿ ಪ್ರತಿಯೊಬ್ಬರೂ ನಮಗೆ ತಡೆಯಾಗುತ್ತಿದೆ ಎಂದು ಭಾಸವಾಗುತ್ತಿದ್ದನ್ನು ಅದನ್ನು ಪದಗಳಲ್ಲಿ ವ್ಯಕ್ತಪಡಿಸಿದೆವು. ಅದನ್ನು ಪದಗಳಲ್ಲಿ ವ್ಯಕ್ತಪಡಿಸಿದ ಕ್ಷಣದಲ್ಲಿಯೇ ನಮ್ಮನ್ನು ಯಾವುದು ತಡೆಗಟ್ಟುತ್ತಿತ್ತೋ ಅದು ಮಾಯವಾಯಿತು. ನಾನು ಹೇಳುವುದಿಷ್ಟೇ, ಆಭಾತ ಸ್ತರದಲ್ಲಿ ತೀವ್ರವಾದ ಬದಲಾವಣೆ ನಡೆಯುತ್ತಿತ್ತು. ಅದು ಪರಮಹಂಸರು ಒಂದು ಜ್ವಾಲೆಯನ್ನು ನಿರ್ಮಿಸಿದಂತೆ. ನಾವು ಪದಗಳಲ್ಲಿ ವ್ಯಕ್ತಪಡಿಸಿದುದೆಲ್ಲವನ್ನೂ ನಮ್ಮ ಪ್ರಕೃತಿಯಿಂದ ಎಂದೆಂದಿಗೂ ದಹಿಸಿಬಿಟ್ಟಿಂತಿತ್ತು. ಈಗ ನನ್ನಲ್ಲಿ ಭಾವನೆಗಳ ಏರಿಳಿತಗಳಿಲ್ಲವೆಂದೆನಿಸುತ್ತದೆ. ನನಗೆ ಎಲ್ಲಾ ವಲಯಗಳಲ್ಲೂ ತೀವ್ರತೆಯಿಂದಲೂ, ಅತ್ಯುತ್ತಮ ಆನಂದದಿಂದಲೂ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ನಾನು ಇದನ್ನು ಮಾತ್ರ ಹೇಳಬಯಸುತ್ತೇನೆ. ಅವರು ತಮ್ಮ ಪ್ರೀತಿ ಅನುಕಂಪಗಳನ್ನು ನಮ್ಮ ಮೇಲೆ ಸುರಿಸಿದರು. ಆಗ ನಾವು ಹೊಸಬರಾದೆವು.

– ಶ್ರೀ ನಿತ್ಯ ಸಚ್ಚಿದಾನಂದ
ಅಂತರ ರಾಷ್ಟ್ರೀಯ ಕೋ ಆರ್ಡಿನೇಟರ್
ನಿತ್ಯಾನಂದ ಪರಂಪರೆಯ ಹಿರಿಯ ಸ್ವಾಮಿಗಳು
ಲಾಸ್ ಎಂಜಲೀಸ್, ಯು.ಎಸ್.ಎ.
[email protected]

3. ನಿರಾಯಾಸವಾದ ಕಾರ್ಯ ಎಂಬುದು
ಸಾಧ್ಯವೆಂದು ನನಗನಿಸಿರಲೇ ಇಲ್ಲ. ಮಹತ್ತರವಾದ
ರಚನಾತ್ಮಕತೆ ಮತ್ತು ಕಾರ್ಯ ಸಂತೃಪ್ತಿ ಹಾಗೂ

ಕಾಯಕದಲ್ಲೇ ಸಂತೋಷಪಡುವುದನ್ನು ಮತ್ತು
ತಾನಾಗಿಯೇ ಫಲಿತಾಂಶಗಳನ್ನು ನಿರಾಯಾಸವಾಗಿ
ನೀಡುವುದನ್ನು ಪರಮಹಂಸರ ಧ್ಯಾನ
ಕಾರ್ಯಕ್ರಮಗಳ ಮೂಲಕ ಕಲಿತೆ.

- ಅಪೂರ್ವ ಶೇತ್
ಮಾರ್ಕೆಟಿಂಗ್ ಡೈರೆಕ್ಟರ್
ಸಿಂಗಪುರ
[email protected]

4. ಪರಮಹಂಸ ನಿತ್ಯಾನಂದರು ನನ್ನನ್ನು ಪ್ರಥಮಬಾರಿಗೆ ಸ್ಪರ್ಶಿಸಿದಾಗಿನಿಂದಲೂ ನನ್ನ ಚೈತನ್ಯ ಮಟ್ಟದಲ್ಲಿ ಅದ್ಭುತವಾದ ಏರಿಕೆಯಾದುದಲ್ಲದೇ, ನನ್ನ ವ್ಯಾಪಾರದಲ್ಲೂ ಭಾರಿ ಬೆಳವಣಿಗೆಯಾಯಿತು. ವ್ಯಾಪಾರೋದ್ಯಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಬುದ್ಧಿವಂತಿಕೆಯಲ್ಲಿ ಒಂದು ಹೊಸದಾದ ಆಯಾಮರೂಪುಗೊಂಡಿತು. ಮನೆಯಲ್ಲಿಯೂ ಹಾಗೂ ಹೊರಗಡೆಯೂ ನನ್ನ ಸಂಬಂಧಗಳು ಮಹತ್ತರವಾಗಿ ಪಕ್ವಗೊಂಡಿವೆ. ನನ್ನ ಮಗಳು ಬೆಂಗಳೂರಿನ ಆಶ್ರಮದ ನಿತ್ಯಾನಂದ ಗುರುಕುಲದಲ್ಲಿ ಇದ್ದಾಳೆ ಮತ್ತು ಆಕೆ ಆತ್ಮವಿಶ್ವಾಸ, ಬುದ್ಧಿವಂತಿಕೆ ಹಾಗೂ ಪರಿಪೂರ್ಣ ವ್ಯಕ್ತಿಯಾಗಿ ಅರಳುವುದನ್ನು ನಾನು ಸಾಕ್ಷಾತ್ತಾಗಿ ನೋಡುತ್ತಿದ್ದೇನೆ.

- ಚರಣಪ್ರಿಯ
ವ್ಯಾಪಾರಸ್ಥ
ಪಾಂಡಿಚೇರಿ.
[email protected]