KAILASA Library/ಜೀವನ್ಮುಕ್ತಿ/ಜೀವನ್ಮುಕ್ತಿಯ ಸ್ಪರ್ಶವನ್ನು ಅನುಭವಿಸಿರಿSign in
ಜೀವನ್ಮುಕ್ತಿ

ಜೀವನ್ಮುಕ್ತಿಯ ಸ್ಪರ್ಶವನ್ನು ಅನುಭವಿಸಿರಿ

This text was machine-transcribed from the printed book and may contain errors. Select the words and choose “Report a mistake”.

ಆನಂದ ದರ್ಶನ

(ಆನಂದ ದರ್ಶನವು ಗುರುಗಳ ಉಕ್ಕುತ್ತಿರುವ
ಚೈತನ್ಯದ ಸಾನ್ನಿಧ್ಯದಲ್ಲಿ ನೀವಿರುವ ಸಮಯ. ಅವರ
ಬಳಿಗೆ ನೀವು ಹೋದಾಗ, ಅವರು ನಿಮ್ಮ ಆಜ್ಞಾ
ಚಕ್ರವನ್ನು ಸ್ಪರ್ಶಿಸುವುದರ ಮೂಲಕ, ನಿಮಗೆ
ಚೈತನ್ಯವನ್ನೂ ಜೀವನ್ಮುಕ್ತಿಯ ಅನುಭವವನ್ನೂ
ಪ್ರಸರಣ ಮಾಡುತ್ತಾರೆ).

ದರ್ಶನವೆಂದರೆ 'ದಿವ್ಯವಾದುದನ್ನು
ನೋಡುವುದು' ಎಂದು. ಆನಂದ ದರ್ಶನವೆಂದರೆ
'ಆನಂದವಾಗಿ ನೋಡುವುದು' ಎಂದು. ವಿಶ್ವಶಕ್ತಿಯ
ಕಣ್ಣುಗಳು ನೋಡುವ ಒಂದು ರೂಪವಾಗಿ
ವಿಕಸಿಸಿಯೂ, ಪ್ರಜ್ಞೆಯು ಅರಿಯುವಂತೆಯೂ,
ಹಾಗೂ ನಿಮ್ಮೊಳಗೆ ಒಂದು ಪರಿವರ್ತನೆಯನ್ನು
ಉಂಟುಮಾಡುವ ದರ್ಶನವೇ ಆನಂದ ದರ್ಶನ!
ನೀವು ಕಾಣುವ ರೂಪವು ಭೂಮಿಯ ಮೇಲೆ ಆಗಾಗ
ಅವತರಿಸುವ ಒಬ್ಬ ಜ್ಞಾನಿಯ ರೂಪ.

'ವಿಶ್ವಶಕ್ತಿ ಎಂಬುದು ಇದೆಯೇ?' ಎಂದು
ಕೆಲವರು ಕೇಳುತ್ತಾರೆ. ಹೌದು, ಇದೆ, ಆದರೆ ಅದು
ನಮ್ಮ ವಿಚಾರಶಕ್ತಿಯನ್ನು ಮೀರಿದುದು. ನಾವು ನಮ್ಮ
ವಿಚಾರಶಕ್ತಿಯ ಪರಾಕಾಷ್ಠೆಯನ್ನು ತಲುಪಿದಾಗ,
ನಮ್ಮ ವಿಚಾರಶಕ್ತಿಗೆ ಮೀರಿದ ಯಾವುದೋ ಒಂದಿದೆ
ಎಂದು ತಿಳಿಯುತ್ತೇವೆ. ತಮ್ಮ ವಿಚಾರಶಕ್ತಿಯ
ಪರಾಕಾಷ್ಠೆಯನ್ನು ತಲುಪಿದ ಅನೇಕ ವಿಜ್ಞಾನಿಗಳು
ತಮ್ಮ ಮುಂದಿನ ಹೆಜ್ಜೆಯನ್ನು ತಮ್ಮನ್ನು ಮೀರಿದ
ಅನಂತ ವಿಶ್ವಶಕ್ತಿಯನ್ನಾಗಿ ಕಂಡಿದ್ದಾರೆ.
ಸೂಕ್ಷ್ಮತೆಯಿಂದ, ಈ ಚೈತನ್ಯದ ಇರುವಿಕೆಯನ್ನು
ಯಾರೊಬ್ಬರೂ ಅನುಭವಿಸಬಹುದು.

ಈ ಇಡೀ ಜಗತ್ತು ವಿಶ್ವಶಕ್ತಿಯ ದೈವಲೀಲೆಯಲ್ಲದೆ ಬೇರೇನೂ ಅಲ್ಲವೆಂದು ಹೇಳುವ ಜನರ ಗುಂಪೊಂದು ಯಾವಾಗಲೂ ಇದೆ. ಆದರೆ, ಈ ಇಡೀ ಜಗತ್ತು ಒಂದು ಆಕಸ್ಮಿಕ ಹಾಗೂ ಅದರ ಹಿಂದೆ ಯಾವ ಚೈತನ್ಯವೂ, ಬುದ್ಧಿಶಕ್ತಿಯೂ ಇಲ್ಲವೆಂದು ಹೇಳುವ ಮತ್ತೊಂದು ಗುಂಪಿದೆ. ಎರಡನೆಯ ಗುಂಪು ತಮ್ಮ ತತ್ತ್ವವನ್ನು ಬಹಳ ಅನುಕೂಲಕರವಾಗಿ ತಮ್ಮ ಸ್ವಂತಕ್ಕೆ ಬಳಸಿಕೊಂಡು ಜಗತ್ತನ್ನು ನಾಶಪಡಿಸಲು ಅನೇಕ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತದೆ. ಅವರು ಈ ಜಗತ್ತು ಹಾಗೂ ಇದರ ಆಗುಹೋಗುಗಳು ಆಕಸ್ಮಿಕವೆಂಬ ವಿಚಾರದಿಂದಲೇ ಜಗತ್ತಿನ ಯಾವುದರ ಬಗ್ಗೆಯೂ

ಸಂವೇದನೆಯನ್ನು ಬೆಳೆಸಿಕೊಳ್ಳುವುದೇ ಇಲ್ಲ. ಅವರು ಸ್ಥ candies ಮಟ್ಟದಲ್ಲಿಯೇ ಇರುವುದನ್ನೂ, ವಿಷಯಗಳನ್ನೂ ಗ್ರಹಿಸುವುದನ್ನೂ ಮುಂದುವರೆಸುತ್ತಾರೆ. ನೀವು ಮೊದಲ ಗುಂಪಿಗೆ ಸೇರಿದವರಾದರೆ, ಅಪ್ರಯತ್ನವಾಗಿಯೇ ನೀವು ಒಂದು ಸೂಕ್ಷ್ಮಮಟ್ಟದಲ್ಲಿದ್ದು, ಈ ವಿಶ್ವದ ಪ್ರತಿಯೊಂದು ಕಲ್ಲು, ಮರ, ಗಿಡ ಹಾಗೂ ಎಲ್ಲದರೊಂದಿಗೂ ಒಂದು ಆಳವಾದ ಗೌರವವನ್ನು ಬೆಳೆಸಿಕೊಳ್ಳುತ್ತೀರಿ. ನಿಮ್ಮೊಳಗೆ ಒಂದು ಆಳವಾದ ಭಕ್ತಿ ಉಕ್ಕುತ್ತದೆ. ನಿಮ್ಮ ಜೀವನವೇ ಒಬ್ಬ ಕಡಲ ಅಲೆಯ ಸವಾರನು ವಿಶ್ವಶಕ್ತಿಯ ಅಲೆಯ ಮೇಲೆ ಸವಾರಿ ಮಾಡುವಂತೆ ಸುಂದರವಾಗಿ ಹರಿಯುತ್ತದೆ.

ಈ ಇಡೀ ನಾಟಕವನ್ನು ಒಂದು ಅಗಾಧವಾದ ಹಾಗೂ ಆಳವಾದ ಬುದ್ಧಿಶಕ್ತಿಯು ನಡೆಸುತ್ತಿದೆ ಎಂಬ ಕಾರಣದಿಂದಲೇ ಮನುಷ್ಯನು ವಿಶ್ವಶಕ್ತಿಯ ನಾಟಕದೊಂದಿಗೆ ಸುಂದರವಾಗಿ, ಮಧುರವಾಗಿ, ಐಕ್ಯವಾಗಲು ಒಂದು ಜೀವನದ ರೀತಿಯನ್ನು ಸೃಷ್ಟಿಸಿಕೊಳ್ಳುವ ಸ್ಪಷ್ಟತೆಯನ್ನು ಪಡೆಯಲು ಸಾಧ್ಯವಾಗಿದೆ. ಇಡೀ ವಿಶ್ವಶಕ್ತಿಯು ನಿಮ್ಮ ಪ್ರತಿಯೊಂದು ಮಾತು, ಭಾವನೆ ಹಾಗೂ ಪ್ರಾರ್ಥನೆಗೆ ಸ್ಪಂದಿಸುವ ಒಂದು ಸಜೀವಿ. ಅದು ನಿಮ್ಮ ಪ್ರಜ್ಞೆಗೆ ಪ್ರತಿಕ್ಷಣವೂ ಜವಾಬ್ದಾರಿಯಿಂದ ಸ್ಪಂದಿಸುತ್ತದೆ. ನಿಮ್ಮೊಂದಿಗೆ ಸ್ಪಂದಿಸಲು ನೀವು ಕಾಣಬಹುದಾದ, ಕೇಳಬಹುದಾದ, ತಿಳಿಯಬಹುದಾದ ಜ್ಞಾನಿಗಳ ರೂಪವನ್ನು ಅದು ಆಗಾಗ್ಗೆ ಪಡೆದುಕೊಳ್ಳುತ್ತದೆ. ಒಂದು ಕಡಿಮೆ ವಾಯುಭಾರವಿರುವ ಪ್ರದೇಶದಲ್ಲಿ ಸಹಜವಾಗಿ ಒಂದು ಚಂಡಮಾರುತವು ಸೃಷ್ಟಿಯಾಗುವಂತೆ ಪ್ರಪಂಚದಾದ್ಯಂತದ ಕೋಟ್ಯಾಂತರ ಜನರ ಪ್ರಾರ್ಥನೆ ಹಾಗೂ ಅನ್ವೇಷಣೆಯು ಒಂದು ಅಸಾಧಾರಣ ಸೆಳೆತವನ್ನುಂಟುಮಾಡಿ, ಜ್ಞಾನಿಗಳು ಭೂಗ್ರಹದ ಮೇಲೆ ಅವತರಿಸುವುದಕ್ಕೆ ಕಾರಣವಾಗುತ್ತದೆ.

ಗುರುಗಳ ದರ್ಶನವು ವಿಶ್ವಶಕ್ತಿಯೆಂಬ ಸಾಗರದಲ್ಲಿ ಮೇಲೇಳುತ್ತಿರುವ ಒಂದು ದೊಡ್ಡ ಅಲೆಯಂತೆ. ಅಲೆಯು ಸಾಗರದಿಂದ ಬೇರ್ಪಡುವುದಿಲ್ಲ. ಆದರೆ ಅದೇ ಸಮಯದಲ್ಲಿ ಒಂದು ಅಸಾಧಾರಣ ಚಲನಾತ್ಮಕ ಶಕ್ತಿಯಾಗಿ ತನ್ನನ್ನೇ ವ್ಯಕ್ತಪಡಿಸಿಕೊಳ್ಳುತ್ತದೆ! ತಿಳಿಯಿರಿ: ಒಂದು ನದಿಯು ಸಾಗರಕ್ಕೆ ಸಂಬಂಧಿಸಿದೆಯಾದರೂ ಅದಕ್ಕೆ ಅಲೆಯ ಚಲನಾತ್ಮಕಶಕ್ತಿ ಇರುವುದಿಲ್ಲ. ಅದು ನಿಷ್ಕ್ರಿಯವಾಗಿ ಹರಿಯುತ್ತದೆ, ಅಷ್ಟೇ. ಆದರೆ ಆನಂದ ದರ್ಶನವು ವಿಶ್ವಶಕ್ತಿಯ ಆನಂದದ ಸಾಗರದಲ್ಲಿ ಮೇಲೇಳುವ ಸಕ್ರಿಯ ಅಲೆ. ಅದು ಒಂದು ಮಂಥನವನ್ನು ಸೃಷ್ಟಿಸಿ, ನಿಮ್ಮನ್ನು ಸಂಪೂರ್ಣವಾಗಿ ಬದಲಿಸಬಲ್ಲದು.

ಈಗ ಅಲೆಯಲ್ಲಿರುವ ಮರಳಿನ ಒಂದು ಕಣವನ್ನು ಊಹಿಸಿಕೊಳ್ಳಿರಿ. ಅದರಲ್ಲಿ ಅಶುದ್ಧತೆ ಏನಾದರೂ ಇರುತ್ತದೆಯೋ? ಇಲ್ಲ! ಅದು ಸಂಪೂರ್ಣವಾಗಿ ಶುದ್ಧವಾಗಿರುತ್ತದೆ. ಏಕೆಂದರೆ ಅದು ಚಲನಾತ್ಮಕ ಅಲೆಯೊಳಗಿರುತ್ತದೆ. ಅದೇ ರೀತಿ, ನೀವು ದರ್ಶನಕ್ಕೆ ಬಂದಾಗ ವ್ಯಕ್ತವಾಗುವ ಚಲನಾತ್ಮಕ ಶಕ್ತಿಯು ನಿಮ್ಮನ್ನು ಒಳಗೂ ಹೊರಗೂ ಸಂಪೂರ್ಣವಾಗಿ ಪಾವನಗೊಳಿಸುತ್ತದೆ. ದರ್ಶನದ ಸಮಯದಲ್ಲಿ ನೀವು ವಿಶ್ವಶಕ್ತಿಯ ಸೆಲೆಯೊಳಗೆ ಇರುತ್ತೀರಿ. ಸೂರ್ಯನ ಸಮಕ್ಷಮದಲ್ಲಿ ತಾವರೆಯು ಅರಳುತ್ತದೆ. ಅದೇ ರೀತಿ, ಗುರುಗಳ ಸನ್ನಿಧಿಯಲ್ಲಿ ನಿಮ್ಮ ಪ್ರಜ್ಞೆ ವಿಕಸಿಸುತ್ತದೆ.

ನೀವು ಮಾಡಬೇಕಾದುದೆಲ್ಲವೂ ಏನೆಂದರೆ, ಸಹಕರಿಸುವುದು. ವಾಸ್ತವವಾಗಿ ನೀವು ಸಹಕರಿಸದಿದ್ದರೂ, ಚೈತನ್ಯವು ಒಳನುಗ್ಗುತ್ತದೆ. ಅದು ಹೇಗೆ: ಅಲೆಯೊಳಗಿನ ಕಪ್ಪೆಚಿಪ್ಪು ಸಹಕರಿಸುತ್ತದೋ ಇಲ್ಲವೋ, ಅಲೆಯು ತನ್ನೊಂದಿಗೆ ಅದನ್ನು ಕೊಂಡೊಯ್ಯುತ್ತದೆ. ಅದೇ ರೀತಿ, ನೀವು ಸಹಕರಿಸಿದರೂ ಇಲ್ಲದಿದ್ದರೂ ಚೈತನ್ಯವು ನಿಮ್ಮನ್ನು ಆವರಿಸಿ, ಮಾಡಬೇಕಾದುದನ್ನು ಮಾಡುತ್ತದೆ. ಆದರೆ ಅಲೆಯೊಂದಿಗೆ ಸಹಕರಿಸುವ ಕಪ್ಪೆಚಿಪ್ಪು ಅಲೆಯ ಆನಂದದ ಚಲನೆಗಳೊಂದಿಗೆ ವಿನೋದವಾಗಿ ನರ್ತಿಸುತ್ತದೆ. ಅದು ಶುದ್ಧಗೊಂಡು ಕೊನೆಗೆ ಅಲೆಯಲ್ಲಿ ಲೀನವಾಗುತ್ತದೆ! ಆದರೆ ‘ನಿನ್ನನ್ನು ಅಷ್ಟು ಸುಲಭವಾಗಿ ನಂಬಲಾರೆ' ಎಂದು ಹೇಳಿ ಸುರಕ್ಷತೆಗಾಗಿ ತನ್ನ ಸುತ್ತಲೂ ಸಣ್ಣ ಕಲ್ಲುಗಳಿಂದ ಒಂದು ಗೋಡೆಯನ್ನು ನಿರ್ಮಿಸಿಕೊಳ್ಳುವ ಕಪ್ಪೆಚಿಪ್ಪು ಪ್ರತಿರೋಧವನ್ನು ಅನುಭವಿಸುತ್ತದೆ. ಆದರೆ ಕೇವಲ ಶಕ್ತಿಯಲೆಯ ಅನುಕಂಪವು ಅದನ್ನು ಕೊನೆಗೆ ಆನಂದದೊಳಗೆ ಸೆಳೆದುಕೊಳ್ಳುತ್ತದೆ.

ಸಂತೋಷವಾಗಿ ಅಲೆಗೆ ಶರಣಾದವನಿಗೆ ದರ್ಶನದ ಕ್ಷಣಮಾತ್ರವಲ್ಲದೆ, ಆತನ ಜೀವನವೇ ಆನಂದ ದರ್ಶನವಾಗುತ್ತದೆ. ತಿಳಿಯಿರಿ: ನಿಮ್ಮ ಪ್ರಜ್ಞೆಯು ವಿಶ್ವಶಕ್ತಿಯ ಆನಂದದ ಅಭಿವ್ಯಕ್ತತೆಯಾದ ಗುರುಗಳೆಡೆಗೆ ತಿರುಗಿದ ಯಾವುದೇ ಕ್ಷಣವಾದರೂ, ನಿಮಗೆ ಆನಂದ ದರ್ಶನವಾಗುತ್ತದೆ! ನೀವು ಗುರುಗಳ ಸನ್ನಿಧಿಯಲ್ಲಿ ಇರಬೇಕಾಗಿಯೂ ಇಲ್ಲ. ನಿಮ್ಮ ಪ್ರಜ್ಞೆಯನ್ನು ಆ ಚೈತನ್ಯದ ಅಭಿವ್ಯಕ್ತತೆಯ ಮೇಲೆ ಸತತವಾಗಿ ಇರಿಸಿದರೆ, ನಿಮ್ಮ ಜೀವನವೇ ಆನಂದ ದರ್ಶನವಾಗುತ್ತದೆ. ಬದಲಿಗೆ ಅದನ್ನು ವಿರೋಧಿಸುವವನು ಚೈತನ್ಯದೊಂದಿಗೆ ಐಕ್ಯವಾಗುವ ಸಂಭ್ರಮವನ್ನು ತಪ್ಪಿಸಿಕೊಳ್ಳುವವನಾದರೂ ಅಂತಿಮವಾಗಿ ಐಕ್ಯವಾಗುತ್ತಾನೆ.

ದರ್ಶನದ ಸಮಯದಲ್ಲಿ, ಗುರುಗಳಿಂದ ಅಪಾರ ಶಕ್ತಿಯು ಹೊರಸೂಸಲ್ಪಡುತ್ತದೆ. ಈ ಉಕ್ಕುತ್ತಿರುವ ಶಕ್ತಿಯನ್ನು ಸ್ವೀಕರಿಸುವುದು ಹೇಗೆ? ಮಗುವಿನಂತೆ, ತೀವ್ರವಾದ ಉತ್ಸಾಹದಿಂದ, ಒಂದು ಆಳವಾದ ಪ್ರಾರ್ಥನಾಭಾವದಿಂದ, ಒಂದು ಕರಗುವ ಹೃದಯದಿಂದ ಬನ್ನಿರಿ, ಅಷ್ಟು ಸಾಕು. ಸಮಾಜವು ಪ್ರಾರ್ಥನೆಯ ಶಕ್ತಿಯನ್ನು ನಾಶಪಡಿಸಿದೆ. ನೀವು ಬಯಸಿದಂತೆ ಆಗಲು ನಿಮ್ಮನ್ನು ಸಂಪೂರ್ಣವಾಗಿ ಪರಿವರ್ತಿಸುವ ಶಕ್ತಿ ಪ್ರಾರ್ಥನೆಗಿದೆ.

ಪ್ರಾರ್ಥನೆ ಎಂದರೇನು? ನೀವು ಏನನ್ನಾದರೂ
ಸಾಧಿಸಬೇಕೆಂದಾಗ, ನಿಮ್ಮ ಉದ್ದೇಶವನ್ನು ಹಾಗೂ
ತೀವ್ರತೆಯನ್ನು ನಿಮ್ಮ ಇಚ್ಛೆಯಿಂದ ಅದರ ಮೇಲೆ
ಕೇಂದ್ರೀಕರಿಸುತ್ತೀರಿ. ಇದನ್ನು ನಿಮ್ಮ
‘ಸಂಕಲ್ಪ'ವೆನ್ನುತ್ತಾರೆ. ಹೇಗಾದರೂ, ಅದನ್ನು
ಪೂರೈಸಲು ನಿಮಗೆ ಉನ್ನತ ಶಕ್ತಿಯ
ಅಗತ್ಯವಿದೆಯೆಂದು ಕೂಡ ಶೀಘ್ರವೇ ತಿಳಿಯುತ್ತೀರಿ.
ಈ ತಿಳಿವಳಿಕೆ ಉಂಟಾದಾಗ, ನಿಮ್ಮ ಸಂಕಲ್ಪವು
ಒಂದು ಪ್ರಾರ್ಥನೆಯಾಗುತ್ತದೆ! ನೀವು ಶಕ್ತಿಯನ್ನು
ಪ್ರಾರ್ಥಿಸಲಾರಂಭಿಸುತ್ತೀರಿ. ‘ನಾನು ಮಾಡಬಲ್ಲೆ'
ಎಂಬುದು ಸಂಕಲ್ಪ. ‘ನನ್ನನ್ನು ಮೀರಿದ ಶಕ್ತಿಯ
ಅನುಗ್ರಹವು ನನಗೆ ಬೇಕಾಗಿದೆ' ಎನ್ನುವುದು
ಪ್ರಾರ್ಥನೆ. ಆದ್ದರಿಂದ ಒಂದು ಆಳವಾದ
ಪ್ರಾರ್ಥನಾಭಾವದಿಂದ ಬನ್ನಿರಿ.

ನಿಮ್ಮ ಭಾವನೆಗಳನ್ನು ಒಬ್ಬ ಜ್ಞಾನಿಯ
ಸನ್ನಿಧಿಯಲ್ಲಿ ತೆರೆದುಕೊಂಡಾಗ ಅದು ಒಂದು
ಪ್ರಕ್ಷೇಪಕದ ಎದುರು ಒಂದು ಚಿತ್ರದ ಹಾಳೆಯನ್ನು
ಇಟ್ಟಂತೆ. ಚಿತ್ರದ ಹಾಳೆಯಲ್ಲಿರುವುದು ಪರದೆಯ
ಮೇಲೆ ವಾಸ್ತವವೆಂಬಂತೆ ಬಿಂಬಿಸಲ್ಪಡುತ್ತದೆ. ಅದೇ
ರೀತಿ, ನಿಮ್ಮ ಒಳಿತಿಗಾಗಿ ಅಥವಾ ಇತರರ
ಒಳಿತಿಗಾಗಿ ಪೂರೈಸಬೇಕಾದ ನಿಮ್ಮ ಆಸೆಗಳು
ಸಾಕಾರಗೊಳ್ಳುತ್ತವೆ. ಪೂರೈಸುವ ಅಗತ್ಯವಿಲ್ಲದ
ಆಸೆಗಳು ಅವನ್ನು ಸೃಷ್ಟಿಸಿದ ಅಪೂರ್ಣ
ಭಾವನೆಯೊಂದಿಗೆ ದಹಿಸಿಹೋಗುತ್ತವೆ. ನಿಮ್ಮ
ಆಸೆಯು ಪೂರೈಸುತ್ತದೆ, ಇಲ್ಲವೆ ನಿಮ್ಮ ಮನಸ್ಸು
ಆ ಆಸೆಯನ್ನು ಮರೆತುಬಿಡುತ್ತದೆ. ಆಸೆಯ ಬೀಜವು
ಚಿಗುರುತ್ತದೆ ಅಥವಾ ದಹಿಸಲ್ಪಡುತ್ತದೆ. ಎರಡು
ರೀತಿಯಲ್ಲೂ ನೀವು ಸಂತೃಪ್ತಿಯನ್ನು
ಹೊಂದುತ್ತೀರಿ.

ಪೂರೈಸುವ ಅಗತ್ಯವಿಲ್ಲದ ಅನೇಕ ಆಸೆಗಳನ್ನು
ನೀವು ಹೊತ್ತಿರಬಹುದು. ಇದನ್ನು ನಿಭಾಯಿಸಲು
ಗುರುಗಳ ಚೈತನ್ಯವು ಕೇವಲ ಬುದ್ಧಿಯಾಗಿ
ಕೆಲಸಮಾಡುತ್ತದೆ.

ಒಂದು ಸಣ್ಣ ಕಥೆ:

ಒಮ್ಮೆ ಒಬ್ಬ ಬಳಲಿದ ಯಾತ್ರಿಕನು ಒಂದು ಮರದಡಿಯಲ್ಲಿ ವಿಶ್ರಮಿಸಲು ನಿಶ್ಚಯಿಸಿದನು. ಅದು ಒಂದು ಕಲ್ಪತರು (ಬೇಡಿದ್ದನ್ನು ನೀಡುವ ಮರ) ವಾಗಿತ್ತು. ಅವನು ವಿಶ್ರಾಂತಿ ಪಡೆಯುತ್ತಿರುವಾಗಲೇ, ಅವನಿಗೆ ಒಂದು ಆಲೋಚನೆಯುಂಟಾಯಿತು, 'ನನಗೆ ಈಗ ಒಳ್ಳೆಯ ಆಹಾರ ದೊರೆತಿದ್ದರೆ, ಎಷ್ಟು ಚೆನ್ನಾಗಿರುತ್ತಿತ್ತು!' ಎಂದು. ಆ ಆಲೋಚನೆ ಬಂದೊಡನೆಯೇ, ಒಂದು ತಟ್ಟೆಯಲ್ಲಿ ರುಚಿಯಾದ ಆಹಾರವು ಆತನ ಮುಂದೆ ಬಂದಿತು. ಆತನಿಗೆ ಬಹಳ ಸಂತೋಷವಾಗಿ ತೃಪ್ತನಾಗಿ ಉಂಡನು.

ತೃಪ್ತಿಕರ ಊಟ ಮಾಡಿದ ಮೇಲೆ ಆತನು, 'ಮಲಗಲು ಒಂದು ಹಾಸಿಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು' ಎಂದು ಯೋಚಿಸಿದನು. ಆ ಕೂಡಲೆ ಒಂದು ದೊಡ್ಡ ಹಾಸಿಗೆ ಅವನೆದುರಿಗೆ ಪ್ರತ್ಯಕ್ಷವಾಯಿತು. ಅವನಿಗೆ ಅತ್ಯಾಶ್ಚರ್ಯವಾಯಿತು! ಅವನು ಹಾಸಿಗೆಯ ಮೇಲೆ ಮಲಗಿದನು.

ಆತನ ತಲೆಯು ದಿಂಬನ್ನು ತಾಕುತ್ತಿದ್ದಂತೆಯೇ ತಾನು
ಮಲಗಿದಾಗ, ಯಾರಾದರೂ ಗಾಳಿ ಬೀಸಿದರೆ ಎಷ್ಟು
ಚೆನ್ನಾಗಿರುತ್ತದೆ ಎಂದುಕೊಂಡನು. ತಕ್ಷಣವೇ ಒಬ್ಬ
ಯುವತಿಯು ಕೈಯಲ್ಲಿ ಬೀಸಣಿಗೆ ಹಿಡಿದು, ಅವನಿಗೆ
ಗಾಳಿ ಬೀಸಲಾರಂಭಿಸಿದಳು.

ಇದ್ದಕ್ಕಿದ್ದಂತೆ ಆತನಿಗೆ ಒಂದು ಆಲೋಚನೆ
ಉಂಟಾಯಿತು, 'ನಾನು ಕಾಡಿನ ಮಧ್ಯದಲ್ಲಿದ್ದೇನೆ!
ಹುಲಿ ಏನಾದರೂ ಇದ್ದಕ್ಕಿದ್ದಂತೆ ಇಲ್ಲಿಗೆ ಬಂದು
ಬಿಟ್ಟರೆ?' ಎಂದು. ಈ ಆಲೋಚನೆ
ಬಂದೊಡನೆಯೇ, ಒಂದು ಹುಲಿಯು ಆತನೆದುರಿಗೆ
ಪ್ರತ್ಯಕ್ಷವಾಗಿ, ಅವನ ಮೇಲೆರಗಿ ಆತನನ್ನು
ತಿಂದುಬಿಟ್ಟಿತು!

ನಿಮ್ಮ ಆಸೆಗಳನ್ನು ಪೂರೈಸುವ ಮೊದಲು, ಅವುಗಳಿಗೆ ಸ್ಪಷ್ಟತೆಯನ್ನು ತರುವ ಅಗತ್ಯವಿದೆ. ನಿಮ್ಮ ಆಸೆಗಳನ್ನು ಒಬ್ಬ ಜ್ಞಾನಿಯೆದುರು ಮಾತುಗಳಿಂದ ಹೇಳಿದಾಗ, ಅವು ಅಪ್ರಯತ್ನವಾಗಿಯೇ ಸ್ಪಷ್ಟತೆಯನ್ನು ಪಡೆಯುತ್ತವೆ. ಆದ್ದರಿಂದಲೇ 'ಕಲ್ಪತರು' ಕಾರ್ಯಕ್ರಮದಲ್ಲಿ ನಿಮ್ಮ ಆಸೆಗಳನ್ನು ಮಾತುಗಳ ರೂಪದಲ್ಲಿ ನನಗೆ ಹೇಳಲು ಹೇಳುತ್ತೇನೆ. ನೀವು

ಹೇಳುತ್ತಿರುವಂತೆಯೇ, ಯಾವ ಆಸೆಗಳು ನಿಜವಾಗಿ ಪೂರೈಸಲ್ಪಡಬೇಕು, ಯಾವ ಆಸೆಗಳು ಪೂರೈಸುವ ಅಗತ್ಯವಿಲ್ಲವೆಂಬುದು ನಿಮಗೇ ತಿಳಿಯುತ್ತದೆ. ಅಭಿವ್ಯಕ್ತವಾದ ಚೈತನ್ಯದ ಬುದ್ಧಿಯು ಅಷ್ಟಿರುತ್ತದೆ.

ಕಲ್ಪತರು ದರ್ಶನವು ನಿಮ್ಮಲ್ಲಿ ಈ ಕೆಳಗಿನ ಬೀಜಗಳನ್ನು ಬಿತ್ತುತ್ತದೆ:

ಶಕ್ತಿ : ಬದಲಾಗಿಸಬೇಕಾದುದನ್ನು ಬದಲಾಯಿಸುವ ಶಕ್ತಿ

ಬುದ್ಧಿ : ಬದಲಾಯಿಸಲಾಗದುದನ್ನು ಒಪ್ಪಿಕೊಳ್ಳುವ ಬುದ್ಧಿ

ಯುಕ್ತಿ : ಏನೇ ಬದಲಾದರೂ, ವಿಶ್ವವೇ ಒಂದು
ನಿರಂತರವಾಗಿ ಬದಲಾಗುತ್ತಿರುವ ಕನಸೆಂದು
ತಿಳಿದುಕೊಳ್ಳುವ ಯುಕ್ತಿ

ಭಕ್ತಿ : ಗುರುಗಳಲ್ಲಿ ನಿಶ್ಚಲ ಹಾಗೂ ಆಸರೆಯ ಶಕ್ತಿಗೆ ಉಕ್ಕುವ ಭಕ್ತಿ

ಮುಕ್ತಿ : ಈ ನಾಲ್ಕನ್ನೂ ನಿಮ್ಮ ಜೀವನದಲ್ಲಿ ಬದುಕುವುದೇ ಮುಕ್ತಿ!

ನಿಮ್ಮಿಂದ ಮಾಡಲಾಗುವ ಯಾವುದೇ ಕೆಲಸಗಳಿಗೆ ಶಕ್ತಿಯನ್ನು ಹರಿಸಿಲಿ. ನಿಮ್ಮಿಂದ ಬದಲಾಯಿಸಬಲ್ಲ ಸರಳವಾದುದನ್ನು ಮಾಡಲು ಯತ್ನಿಸಿರಿ. 'ನನ್ನಿಂದ ಎರಡು ಅಭ್ಯಾಸಗಳನ್ನು ಬದಲಾಯಿಸಲು ಸಾಧ್ಯ. ಮಿಕ್ಕ ಹತ್ತನ್ನು ಏನು ಮಾಡಲಿ?' ಎಂದು ಯೋಚಿಸದಿರಿ. ನಿಮ್ಮಿಂದ ಬದಲಾಯಿಸಲು ಸಾಧ್ಯವಾಗುವುದನ್ನು ಸುಮ್ಮನೆ ಬದಲಾಯಿಸಿ. ನಂತರ ಬದಲಾಗದುದನ್ನು ಒಪ್ಪಿಕೊಳ್ಳಿರಿ. ನಿಮ್ಮ ಚೈತನ್ಯವನ್ನು ವ್ಯಕ್ತಪಡಿಸಿದಾಗ, ನಿಮ್ಮ ಬುದ್ಧಿಯು ವಿಕಾಸವಾಗುತ್ತದೆ.

ನಿಮ್ಮಿಂದ ಬದಲಾಯಿಸಲು ಆಗದುದನ್ನು ಒಪ್ಪಿಕೊಳ್ಳುವುದೇ ಬುದ್ಧಿಶಕ್ತಿ. ಆದರೆ ನಿಮ್ಮಿಂದ ಬದಲಾಯಿಸಲು ಆಗುವುದನ್ನು ಬದಲಿಸುವ ಶಕ್ತಿಯನ್ನು ವ್ಯಕ್ತಪಡಿಸುವವರೆಗೂ, ನಿಮ್ಮಿಂದ ಬದಲಾಯಿಸಲಾಗದುದನ್ನು ಒಪ್ಪಿಕೊಳ್ಳುವ ಬುದ್ಧಿಯನ್ನು ಹೊಂದಲಾಗುವುದಿಲ್ಲ. ಮೊದಲು, ನಿಮ್ಮಿಂದ ಆಗುವುದನ್ನು ಬದಲಿಸಿರಿ. ನಂತರ ನಿಮ್ಮಿಂದಾಗದುದನ್ನು ಒಪ್ಪುವ ಒಂದು ಅಸಾಧಾರಣವಾದ ಸಾಮರ್ಥ್ಯವನ್ನು ನಿಮ್ಮಲ್ಲಿ ಕಾಣುತ್ತೀರಿ.

ಮೂರನೆಯ ಬೀಜವು ಸ್ಪಷ್ಟತೆ. ನೀವು ಹೇಗೇಯೇ
ಬದಲಾಯಿಸಿದರೂ, ಏನನ್ನೇ ಬದಲಾಯಿಸಿದರೂ,
ಈ ಇಡೀ ಪ್ರಪಂಚವೇ ಒಂದು ಬದಲಾಗುತ್ತಿರುವ
ವಾಸ್ತವತೆ. ಅದು ಕಾರಣವಿಲ್ಲದೆಯೇ ಸತತವಾಗಿ
ಬದಲಾಗುತ್ತಿರುವ ಒಂದು ಕನಸು. ಯಾವ
ಕಾರಣವೂ ಇಲ್ಲದ ಕಾರಣರಹಿತವಾದದ್ದು. ಅದು
ಕಾರಣ ರಹಿತವಾದದ್ದೆಂದು ಅರ್ಥಮಾಡಿಕೊಳ್ಳಿರಿ.
ಅದು ಕಾರಣರಹಿತವಾದುದರಿಂದ ನೀವು ಅದನ್ನು
ಒಂದು ಕಾರಣರಹಿತ ಮಂಗಳತ್ವವೆಂದೋ ಅಥವಾ
ಕಾರಣರಹಿತ ಅವ್ಯವಸ್ಥೆಯೆಂದೋ ಹೇಳಬಹುದು.
ಯಾರು ಇದನ್ನು ಮಂಗಳತ್ವವೆನ್ನುತ್ತಾನೋ ಅವನು
ಒಬ್ಬ ಆಸ್ತಿಕ, ಒಬ್ಬ ಅನ್ವೇಷಕ; ಯಾರು ಇದನ್ನು
ಕಾರಣರಹಿತ ಅವ್ಯವಸ್ಥೆ ಎನ್ನುವನೋ ಅವನು ಒಬ್ಬ
ನಾಸ್ತಿಕ.

ಈ ಇಡೀ ವಿಶ್ವವು ಒಂದು ಪವಾಡವಾಗಿಯೋ
ಅಥವಾ ಒಂದು ಶಾಪವಾಗಿಯೋ
ಕಂಡುಬರಬಹುದು. ನೀವದನ್ನು ಕಾರಣರಹಿತ
ಮಾಂಗಳ್ಯ ಎಂದಾಗ ಅದು ಒಂದು
ಪವಾಡವಾಗುತ್ತದೆ, ಒಂದು ಸತತವಾದ
ಪವಾಡವಾಗುತ್ತದೆ. ಇಲ್ಲದಿದ್ದರೆ ಅದೊಂದು
ಶಾಪವಾಗುತ್ತದೆ.

ದರ್ಶನದ ಸಮಯದಲ್ಲಿ ಅನೇಕರಿಗೆ ಅಲೌಕಿಕ
ದರ್ಶನಗಳು, ಉಪಶಮನದ ಅನುಭವಗಳು,
ತೀವ್ರವಾದ ಆಧ್ಯಾತ್ಮಿಕ ಅನುಭವಗಳು ಹಾಗೂ
ಕಾರಣರಹಿತ ಆನಂದದ ನೇರ ಅನುಭವಗಳಾಗಿವೆ.
ಅಷ್ಟೇ ಅಲ್ಲದೆ, ಮೇಲೇಳುವ ಶಕ್ತಿಯ ಅಲೆಯು
ಅನೇಕ ಪ್ರಜ್ಞಾರಹಿತ ಭಯಗಳು, ಅಪರಾಧಪ್ರಜ್ಞೆ
ಹಾಗೂ ಆಸೆಗಳು ಮೇಲೈಗೆ ಬರುವಂತೆ ಮಾಡುತ್ತದೆ.
ಕೆಲವರು ಗಾಢವಾದ ಮೌನಕ್ಕೆ ಹೋಗುತ್ತಾರೆ. ಮತ್ತೆ
ಕೆಲವರು ಕಣ್ಣೀರಿನಿಂದ ಭಾವಪರವಶರಾಗುತ್ತಾರೆ.
ಇವಕ್ಕೆಲ್ಲಾ ನಿಮಗೆ ಕಾರಣವೇ ತಿಳಿದಿರುವುದಿಲ್ಲ.
ಏಕೆಂದರೆ ಅವು ಬರುವುದು ಶಕ್ತಿಯ அலೆಯಿಂದ
ಹೊರಸೊಸುತ್ತಿರುವ ಆಳವಾದ ಪ್ರಜ್ಞಾರಹಿತ
ಪದರಗಳಿಂದ. ಈ ಆಳವಾದ ಕೊರೆಯಲ್ಪಟ್ಟ
ನೆನಪುಗಳಿಂದ ನಿಮ್ಮನ್ನು ಮುಕ್ತಗೊಳಿಸಲು ದರ್ಶನದ
ಸಮಯವು ಒಂದು ಅತಿ ವಿರಳವಾದ ಅವಕಾಶ.
ಉಕ್ಕುತ್ತಿರುವ ಶಕ್ತಿಯಿಂದ ಈ ಭಾವನೆಗಳನ್ನು
ಬೇರುಸಹಿತ ಸುಮ್ಮನೆ ತೆಗೆದುಹಾಕಿಬಿಡಬಹುದು.
ದರ್ಶನದ ಸಮಯದಲ್ಲಿ, ನಿಮ್ಮ ಅಂತರಂಗವು
ಸಜೀವವಾಗುತ್ತದೆ ಹಾಗೂ ವಿಶ್ವಶಕ್ತಿಯ
ಅಲೆಯೊಂದಿಗೆ ಸಂಭ್ರಮಿಸುತ್ತದೆ. ಮನಸ್ಸು ಕೆಲಕಾಲ
ಮಾಯವಾಗುತ್ತದೆ. ದರ್ಶನದ ಇಡೀ ದೃಶ್ಯವು ನಿಮ್ಮ
ಪ್ರಜ್ಞೆಯಲ್ಲಿ ಆಳವಾಗಿ ಮುದ್ರಿತವಾಗುತ್ತದೆ.

ನಾನು ಕೇವಲ ಒಂದು ಮಾತನ್ನು ಹೇಳಲು ಇಚ್ಛಿಸುತ್ತೇನೆ. ವಿಶ್ವಶಕ್ತಿಯು ನಿಮ್ಮ ತಂದೆಯ ಆಸ್ತಿಯಿದ್ದಂತೆ. ಅದನ್ನು ಆನಂದಿಸುವುದನ್ನು ಕಳೆದುಕೊಳ್ಳದಿರಿ! ವಿಶ್ವಶಕ್ತಿಗೆ ಸುಮ್ಮನೆ 'ಹೌದು' ಎನ್ನಿರಿ ಹಾಗೂ ಒಂದು ಮಗುವಿನಂತೆ ಅದರೊಳಗೆ ಪ್ರವೇಶಿಸಿರಿ.

ಬ್ಯಾಂಕಿನ ನಿಮ್ಮದೇ ಖಾತೆಯಿಂದ ಹಣವನ್ನು
ಪಡೆಯಲು, ನೀವು ಚೆಕ್‌ಗೆ ಹಸ್ತಾಕ್ಷರ ಹಾಕಬೇಕು.
ಅದೇ ರೀತಿ, ವಿಶ್ವದ ಶಕ್ತಿಯನ್ನು ಪಡೆಯಲು, ನೀವು
ತೆರೆದ ಮನಸ್ಕರಾಗಬೇಕು ಅಷ್ಟೇ.

ನೆನಪಿಟ್ಟುಕೊಳ್ಳಿರಿ, ಒಂದು ಮಳೆಯ ನೀರಿನ
ಹನಿಯು ಮುತ್ತಾಗಬೇಕಾದರೆ ಸಿಂಪಿಯು
ಬಾಯಿಯನ್ನು ತೆರೆದು ಅದನ್ನು ಹಿಡಿದಾಗಲೇ! ನೀವು
ಗುರುಗಳಿಗೆ ತೆರೆದ ಮನಸ್ಕರಾದಾಗ ಅವರಿಂದ
ಬರುವ ಒಂದು ಮಾತೇ ಸಾಕು. ಅದು ಸಿಂಪಿಯನ್ನು
ಪ್ರವೇಶಿಸಿದ ಮಳೆನೀರಿನ ಹನಿಯು ಮುತ್ತಾದಂತೆ.

ಗುರುಗಳ ಸಾನ್ನಿಧ್ಯವು ನಿಮ್ಮ ಮೇಲೆ
ಪರಿವರ್ತನೆಯ ಕೆಲಸ ಮಾಡಬೇಕಾದರೆ
ಆಗುವುದನ್ನೆಲ್ಲವನ್ನು ಆಗಲು ಬಿಡಿರಿ.
ಉದ್ವಿಗ್ನರಾಗಿಯೋ, ಕಿರಿಕಿರಿ ಹೊಂದಿದವರಾಗಿಯೊ,
ನಿರೋಧಿಸುತ್ತಲೋ ಇರಬೇಡಿ. ಏನನ್ನೂ
ಅಪೇಕ್ಷಿಸದಿರಿ. ಏನೇ ಆದರೂ ಅದು ಆಗಲು ಬಿಡಿರಿ.
ಒಬ್ಬ ಕಡಲ ಅಲೆಯ ಸವಾರನು ಶಕ್ತಿಯ ಅಲೆಯ
ಮೇಲೆ ನರ್ತಿಸಿ ಅದರ ಆನಂದವನ್ನು
ಅನುಭವಿಸುವವನಂತಿರಿ!