KAILASA Library/ಜೀವನ್ಮುಕ್ತಿ/ಅನುಬಂಧSign in
ಜೀವನ್ಮುಕ್ತಿ

ಅನುಬಂಧ

This text was machine-transcribed from the printed book and may contain errors. Select the words and choose “Report a mistake”.

ಪರಮಹಂಸ ನಿತ್ಯಾನಂದರ ಮೇಲಿನ ಸಂಶೋಧನೆ, ಧ್ಯಾನ ಹಾಗೂ ಗುಣಪಡಿಸುವಿಕೆ

ಪರಮಹಂಸ ನಿತ್ಯಾನಂದರು ಧ್ಯಾನಸ್ಥರಾಗಿದ್ದಾಗ ಅವರ ಮೆದುಳಿನಲ್ಲಿ ಏನಾಗುತ್ತಿತ್ತು ಎಂಬುದನ್ನು ನೋಡಲು ಸೂಕ್ಷ್ಮ ಸಂಶೋಧನೆಗೆ ಒಳಪಡಿಸಲಾಯಿತು. ಇದರ ಉದ್ದೇಶವು, ಜ್ಞಾನಿಗಳು ಧ್ಯಾನಸ್ಥರಾದಾಗ ಅವರಲ್ಲಿ ಯೋಗದ ಪ್ರಕ್ರಿಯೆ ಹೇಗಾಗುತ್ತೆಂಬುದನ್ನು ತಿಳಿದುಕೊಳ್ಳುವುದು, ಅಳೆಯುವುದು ಹಾಗೂ ಆಳವಾಗಿ ಅರ್ಥಮಾಡಿಕೊಳ್ಳುವುದು ಆಗಿದ್ದಿತು. ಅಮೆರಿಕದ ಜಿಮ್ ಥೋರ್ಪೆ ರಿಹಾಬಿಲಿಟೇಷನ್ ಸೆಂಟರ್, ನ್ಯೂರೋ ಸೈಕಾಲಜಿ ವಿಭಾಗದ ಹಾಗೂ ಪಿ.ಇ.ಟಿ. ಸೆಂಟರ್ ಆಫ್ ಒಕ್ಲಹಾಮ, ಅಮೆರಿಕದ ನುರಿತ ವೈದ್ಯರು, ನರ ವಿಜ್ಞಾನ ತಜ್ಞರು ಹಾಗೂ ಸಂಶೋಧಕರು ಈ ಪ್ರಯೋಗವನ್ನು ನಡೆಸಿದರು.

ಪಿ.ಇ.ಟಿ. ಸ್ಕ್ಯಾನ್ ಅಧ್ಯಯನಗಳು

ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ
ಸ್ಕ್ಯಾನ್‌ಗಳು ಮೆದುಳಿನ ಜೈವಿಕ ಕ್ರಿಯೆಗಳನ್ನು
ಬಿಂಬಿಸುತ್ತವೆ. ಧ್ಯಾನದ ಆದಿಯಿಂದಲೇ
ನಿತ್ಯಾನಂದರ ಮೆದುಳಿನ ಮುಂದುಗಡೆಯ ಹಾಲೆಗಳ
ಕ್ರಿಯಾಶೀಲತೆಯು ಮಹತ್ತರವಾಗಿ ಹೆಚ್ಚಾದುದನ್ನು
ಪಿ.ಇ.ಟಿ. ಸ್ಕ್ಯಾನ್‌ಗಳು ತೋರಿದವು. ಅವು
ಯಾವುದೇ ಪರಿಸ್ಥಿತಿಯಲ್ಲಿಯೂ ಸಾಧಾರಣ
ಮನುಷ್ಯನ ಮೆದುಳಿನ ಕ್ರಿಯೆಯ ಮಟ್ಟಕ್ಕಿಂತಲೂ
ಬಹಳಪಟ್ಟು ಹೆಚ್ಚಾಗಿದ್ದವು. ಮೆದುಳಿನ
ಮುಂದುಗಡೆಯ ಹಾಲೆಗಳು ಬುದ್ಧಿಶಕ್ತಿ, ಗಮನ,
ಜ್ಞಾನ ಮತ್ತು ನಿರ್ಣಯಗಳಿಗೆ ಸಂಬಂಧಿಸಿದುದು.

ನಿತ್ಯಾನಂದರು ಅತ್ಯಂತ ಆಳವಾದ ಧ್ಯಾನದ ಸ್ಥಿತಿಯಲ್ಲಿದ್ದಾಗ ಅವರ ಮೆದುಳನ್ನು ಅಧ್ಯಯನ ಮಾಡಿದರು. ಇನ್ನೆರಡು ಗಮನಾರ್ಹ ಅಂಶಗಳು ಹೊರಬಿದ್ದವು. ಮೊದಲನೆಯದು, ಅವರ ಮೆದುಳಿನ ಪ್ರಮುಖಾರ್ಧ ಗೋಳವು ಶೇಕಡಾ ತೊಂಬತ್ತಕ್ಕಿಂತಲೂ ಹೆಚ್ಚು ಮುಚ್ಚಲ್ಪಟ್ಟಿತು. ಎರಡನೆಯದು, ಮುಂದಿರುವ ಮೀಸಿಯಲ್‌ನ ಕೆಳಭಾಗವು ಗಮನಾರ್ಹ ರೀತಿಯಲ್ಲಿ ಬೆಳಗುತ್ತಿತ್ತು. ಮೆದುಳಿನ ಈ ಕ್ಷೇತ್ರವು ಪ್ರಖ್ಯಾತವಾದ ಅತೀಂದ್ರಿಯ 'ಮೂರನೆ ಕಣ್ಣಿ'ರುವ ಕ್ಷೇತ್ರ.

ಕ್ಯು.ಇ.ಇ.ಜಿ. ಅಧ್ಯಯನ

ಕ್ವಾಂಟಿಟೇಟಿವ್ ಎಲೆಕ್ಟೋ ಎನ್ಸಿಫಾಲೋಗ್ರಫಿ
ಅಥವಾ ಕ್ಯು.ಇ.ಇ.ಜಿ. ಮೆದುಳಿನ ವಿದ್ಯುತ್
ವಿನ್ಯಾಸವನ್ನು ಅಳೆಯುತ್ತದೆ. ಇದನ್ನೇ 'ಮೆದುಳಿನ
ಅಲೆಗಳು' ಎಂದು ಕರೆಯುವುದು. ಮೆದುಳಿನ
ಅಲೆಗಳಲ್ಲಿ ಬೇರೆಬೇರೆ ತರಂಗಾಂತರಗಳ
ಶ್ರೇಣಿಗಳಿದ್ದು, ಪ್ರತಿಯೊಂದೂ ಬೇರೆ ಬೇರೆ
ಮನಃಸ್ಥಿತಿಗೆ ಸಂಬಂಧಿಸಿರುತ್ತದೆ. ಉದಾಹರಣೆಗೆ,
ಬೀಟಾ ಮೆದುಳಿನ ತರಂಗಗಳು ಚಿಕ್ಕದಾಗಿಯೂ,
ವೇಗವಾಗಿಯೂ ಇದ್ದು, ಎಚ್ಚರವಾಗಿರುವ ಹಾಗೂ
ಚುರುಕಾಗಿರುವ ಮಾನಸ್ಥಿತಿಗೆ
ಸಂಬಂಧಿತವಾಗಿರುವುವು. ಆಲ್ಫಾ ಮೆದುಳಿನ
ತರಂಗಗಳು ಅದಕ್ಕಿಂತಲೂ ನಿಧಾನವಾಗಿಯೂ,
ದೊಡ್ಡದಾಗಿಯೂ ಇದ್ದು, ಸ್ವಾಸ್ಥ್ಯದ ಭಾವನೆಗೆ
ಸಂಬಂಧಿತವಾಗಿರುವುವು. ಥೀಟಾ ಅಲೆಗಳು
ನಿದ್ರಾವಸ್ಥೆಗೆ ಹತ್ತಿರದಲ್ಲಿದ್ದು ಪ್ರಖರ
ಯೋಚನೆಗಳಿಲ್ಲದ ಪ್ರಶಾಂತತೆಯನ್ನೂ
ಸ್ವಾಸ್ಥ್ಯವನ್ನೂ ಸೂಚಿಸುತ್ತವೆ.

ನಿತ್ಯಾನಂದರ ಕ್ಯು.ಇ.ಇ.ಜಿ.ಯಲ್ಲಿ ಅವರಿಗೆ
ತಮ್ಮ ಮೆದುಳಿನ ತರಂಗಗಳ ಮೇಲೆ ಸಂಪೂರ್ಣ
ಹತೋಟಿ ಇರುವುದನ್ನು ನೋಡಬಹುದು. ಅವರು
ಆಳವಾದ ಧ್ಯಾನದಲ್ಲಿದ್ದಾಗ, ಅವರ ಮನಸ್ಸು ಒಂದು
ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ, ಪಿಯಾನೊ
ವಾದ್ಯಗಾರನು ಒಂದು ಸ್ವರಪಟ್ಟಿಯಿಂದ ಇನ್ನೊಂದು
ಸ್ವರಪಟ್ಟಿಗೆ ಜಾರುವ ಹಾಗೆ, ಬಹಳ ಸುಲಭವಾಗಿ
ಜಾರುತ್ತದೆ.

ಧ್ಯಾನಚಿಕಿತ್ಸೆ - ನಿತ್ಯ ಸ್ಪಿರಿಚುಯಲ್ ಹೀಲಿಂಗ್

ನಿತ್ಯಾನಂದರು ಗುಣಪಡಿಸುವ ಕಾರ್ಯದಲ್ಲಿ ತೊಡಗಿದ್ದಾಗ ಅವರ ಮೆದುಳಿನ ತರಂಗಗಳ ವಿನ್ಯಾಸಗಳನ್ನೂ, ಹೃದಯ ಬಡಿತದ ವ್ಯತ್ಯಾಸಗಳನ್ನೂ (ಹಾರ್ಟ್‌ರೇಟ್ ವೇರಿಯಬಿಲಿಟಿ - ಹೆಚ್.ಆರ್.ವಿ) ಮತ್ತು ಚರ್ಮದ ಸಂವಹನ ಮಟ್ಟ (ಸ್ಕಿನ್ ಕಂಡಕ್ಟೆನ್ಸ್ ಲೆವೆಲ್ - ಎಸ್.ಸಿ.ವಿ.) ವನ್ನು ಅಳೆಯಲಾಯಿತು. ಈ ಅಧ್ಯಯನವು ವಿದ್ಯುತ್ ಪ್ರಭಾವದ ವಿನ್ಯಾಸದಲ್ಲಿಯ ಬದಲಾವಣೆಗಳನ್ನು ತೋರಿಸಿತು. ಅದು ರೋಗಿಯ ಶಕ್ತಿಯು ನಿತ್ಯಾನಂದರ ಹೃದಯದ ಶಕ್ತಿಗೆ ಸರಿಹೊಂದುವ ಹಾಗೆ ಮೇಲೇರುತ್ತಿರುವುದನ್ನು ಸೂಚಿಸುತ್ತದೆ. ಇದು ಗುಣಪಡಿಸುವ ಕಾಲದಲ್ಲಿ ರೋಗಿಯ ಹೃದಯದ ಬಡಿತದ ಲಯವು ನಿತ್ಯಾನಂದರ ಹೃದಯದ ಬಡಿತದ ಲಯದೊಂದಿಗೆ ಸರಿಹೊಂದಿದ್ದದನ್ನು ತೋರಿಸಿತು.