KAILASA Library/ಜೀವನ್ಮುಕ್ತಿ/ಧ್ಯಾನಚಿಕಿತ್ಸೆ - ನಿತ್ಯ ಸ್ಪಿರಿಚುಯಲ್ ಹೀಲಿಂಗ್Sign in
ಜೀವನ್ಮುಕ್ತಿ

ಧ್ಯಾನಚಿಕಿತ್ಸೆ - ನಿತ್ಯ ಸ್ಪಿರಿಚುಯಲ್ ಹೀಲಿಂಗ್

This text was machine-transcribed from the printed book and may contain errors. Select the words and choose “Report a mistake”.

ನೀವೂ ಗುಣಪಡಿಸಬಹುದು

ಧ್ಯಾನ ಚಿಕಿತ್ಸೆ - ನಿತ್ಯ ಸ್ಪಿರಿಚುಯಲ್ ಹೀಲಿಂಗ್

ನಿತ್ಯ ಸ್ಪಿರಿಚುಯಲ್ ಹೀಲಿಂಗ್ ನನ್ನ ಸಾಕ್ಷಾತ್ಕಾರದೊಂದಿಗೆ ನಾನು ಪಡೆದ ಒಂದು ಕೊಡುಗೆ. ಇದನ್ನು ನಾನು ನಿಮಗೆ ಹಸ್ತಾಂತರಿಸುತ್ತಿದ್ದೇನೆ. ಅದು ಯಾವ ಧ್ಯಾನ ಕಾರ್ಯಕ್ರಮವೂ ಅಲ್ಲ. ಅದು ಗುರುಗಳು ಕೊಡುವ ದೀಕ್ಷೆ. ದೀಕ್ಷೆಯು ನಿಮ್ಮನ್ನು ವಿಶ್ವಶಕ್ತಿಯೊಂದಿಗೆ ಶ್ರುತಿಗೊಳಿಸುತ್ತದೆ ಹಾಗೂ ಗುಣಪಡಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ.

ಹೀಲಿಂಗ್ - ಗುಣಪಡಿಸುವುದು ಎಂದರೇನು?

'ಗುಣಪಡಿಸುವಿಕೆ' ಎಂಬ ಪದಕ್ಕೆ ಬುದ್ಧನು
ಸುಂದರವಾದ ವಿವರಣೆ ಅಥವಾ ನಿರೂಪಣೆ
ಕೊಡುತ್ತಾನೆ. ಗುಣಪಡಿಸುವಿಕೆ ಎಂದರೆ ತೊಂದರೆ
ಪಡುತ್ತಿರುವವರು ತಮ್ಮ ಆರೋಗ್ಯವನ್ನು ಮರಳಿ
ಪಡೆಯುವ ಸಲುವಾಗಿ ನಮ್ಮ ಅನುಕಂಪವನ್ನು, ನಮ್ಮ
ಗಮನವನ್ನು ವ್ಯಕ್ತಪಡಿಸುವ ಒಂದು ವಿಧಾನ.

ಗುಣಪಡಿಸುವಿಕೆಯು ಒಬ್ಬಾತನು ದೈಹಿಕ,
ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು
ಮರಳಿ ಪಡೆಯಲು ಸಹಾಯ ಮಾಡುವುದು.

ಆರೋಗ್ಯ

ಒಳ್ಳೆಯ ಆರೋಗ್ಯವೆಂದರೆ ರೋಗವಿಲ್ಲ-
ದಿರುವಿಕೆಯಲ್ಲ. ಅದು ಹಾಯಾಗಿರುವುದರ ಸಂಕೇತ,
ಚೆನ್ನಾಗಿರುವ ಭಾವನೆ. ನಾವು ಖಾಯಿಲೆಬಿದ್ದು
ವಾಸಿಮಾಡಿಕೊಳ್ಳುವುದಕ್ಕೆ ಮಾತ್ರ ಇರುವ ಹುಲು
ಮಾನವರಲ್ಲ. ನಾವು ಆನಂದದ ವ್ಯಕ್ತರೂಪಗಳು.
ಸರ್ವದಾ ನಮ್ಮ ಅಸ್ತಿತ್ವದ ಮಟ್ಟದಲ್ಲಿ ಆನಂದದಿಂದ
ಜೀವಿಸಲು ಸೃಷ್ಟಿಸಲ್ಪಟ್ಟವರು. ಒಳ್ಳೆಯ
ಆರೋಗ್ಯವೆಂದರೆ ಇದು.

ಚಕ್ರಗಳು ಮತ್ತು ಗುಣಪಡಿಸುವ ವಿಜ್ಞಾನ

ಯೋಗದ ಪಿತಾಮಹರೆನಿಸಿದ ಸಾಕ್ಷಾತ್ಕಾರವನ್ನು ಪಡೆದ ಪತಂಜಲಿ ಮಹರ್ಷಿಗಳ ಪ್ರಕಾರ, ನಮ್ಮ ದೇಹದಲ್ಲಿ ಏಳು ಪ್ರಮುಖ ಚಕ್ರಗಳು ಅಥವಾ ಸೂಕ್ಷ್ಮ ಶಕ್ತಿಕೇಂದ್ರಗಳಿವೆ. ಈ ಏಳು ಶಕ್ತಿಕೇಂದ್ರಗಳು ನಮ್ಮ ದೈಹಿಕ, ಮಾನಸಿಕ ಹಾಗೂ ಅಸ್ತಿತ್ವದ ಕಾರ್ಯ ಚಟುವಟಿಕೆಗಳ ಮೇಲೆ ಪರಿಣಾಮವನ್ನು ಬೀರುತ್ತವೆ. ಅವು ನಮ್ಮೊಳಗೆ ಆದಿಭೌತಿಕ ಸ್ತರದಲ್ಲಿದ್ದು ನಮ್ಮ ಭೌತಿಕ ದೇಹದ ಏಳು ಪ್ರಮುಖ ಗ್ರಂಥಿಗಳೊಂದಿಗೆ ಸಂಬಂಧಪಟ್ಟಿವೆ. ಅವು ಭೌತಿಕ ಗ್ರಂಥಿಗಳ ಕಾರ್ಯಗಳ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತವೆ.

ಚಕ್ರಗಳು ಪೀಡಿತವಾದಾಗಲೇ ನಮಗೆ
ರೋಗಗಳುಂಟಾಗುವುದು. ನಮ್ಮ ದೇಹ ಮತ್ತು
ಮಾನಸ್ಸುಗಳು ಪರಸ್ಪರ ಹಿತವಾಗಿದ್ದರೆ,
ಕ್ಷೇಮವಾಗಿರುವ ಭಾವನೆ ಬರುತ್ತದೆ. ನಮ್ಮ ದೇಹ
ಮತ್ತು ಮನಸ್ಸುಗಳು ಪರಸ್ಪರ ಹಿತವಾಗಿಲ್ಲದಿದ್ದರೆ
'ಕ್ಷೇಮವಿಲ್ಲದ' ಭಾವನೆ ಅಥವಾ ರೋಗದ ಭಾವನೆ
ಬರುತ್ತದೆ ಮತ್ತು ಚಕ್ರಗಳ ಸ್ಥಿತಿಯು, ಕ್ಷೇಮದ
ಅಥವಾ ಕ್ಷೇಮವಿಲ್ಲದ ಮಟ್ಟವನ್ನು ತೋರುತ್ತದೆ.

ದೇಹದ ಮೇಲೆ ಮನಸ್ಸಿನ ಪ್ರಭಾವ

ದೇಹವು ಯಂತ್ರಾಂಶ (ಹಾರ್ಡ್‌ವೇರ್) ದಂತೆಯೂ ಮಾನಸ್ಸು ತಂತ್ರಾಂಶ (ಸಾಫ್ಟ್‌ವೇರ್)ದಂತೆಯೂ ಇವೆ. ತಂತ್ರಾಂಶವು ಸಮಸ್ಯೆಗೆ ಕಾರಣವಾಗಿದ್ದಾಗ, ಯಂತ್ರಾಂಶವನ್ನು ಸರಿಪಡಿಸಲು ಹೋಗುತ್ತೇವೆ. ತಂತ್ರಾಂಶವು ದೂಷಿತವಾಗಿದ್ದು, ಯಂತ್ರಾಂಶಕ್ಕೆ ಎಂದರೆ ದೇಹಕ್ಕೆ ಸತತವಾಗಿ ತಪ್ಪು ಸೂಚನೆಗಳನ್ನು ಕಳುಹಿಸುತ್ತಲೇ ಇರುತ್ತದೆ. ನಮ್ಮ ದೇಹದ ಅನಾರೋಗ್ಯಕ್ಕೆ ಮತ್ತು ಮನೋದೇಹದ ಅಸಮತೋಲನಕ್ಕೆ ಮೂಲಕಾರಣ ಮನಸ್ಥಿತಿ ಎಂಬುದನ್ನು ತಿಳಿಯಿರಿ.

ಧ್ಯಾನಚಿಕಿತ್ಸೆ - ನಿತ್ಯ ಸ್ಪಿರಿಚುಯಲ್ ಹೀಲಿಂಗ್ ಎಂದರೇನು?

ಧ್ಯಾನಚಿಕಿತ್ಸೆ ಅಥವಾ ನಿತ್ಯ ಸ್ಪಿರಿಚುಯಲ್ ಹೀಲಿಂಗ್ ಎಂಬುದು ವಿಶ್ವಶಕ್ತಿಯ ಮೂಲಕ ಗುಣಪಡಿಸುವುದು. ವಿಶ್ವಶಕ್ತಿಯು ನಮಗೆ ಗೊತ್ತಿರುವ ವಿದ್ಯುಚ್ಛಕ್ತಿಯಂತಹ ವಿವಿಧ ರೂಪಗಳ ಶಕ್ತಿಗಿಂತಲೂ ಭಿನ್ನವಾದುದು. ವಿದ್ಯುಚ್ಛಕ್ತಿಗೆ ತನ್ನದೇ ಆದ ಬುದ್ಧಿಶಕ್ತಿಯಿಲ್ಲ. ಒಂದು ಬಲ್ಬನ್ನು ಸಾಕೆಟ್(ಬಲ್ಬಿನ ಆಧಾರ)ನೊಳಕ್ಕೆ ಹಾಕಿದರೆ, ವಿದ್ಯುತ್ ಹರಿದು ದೀಪವು ಬೆಳಗುತ್ತದೆ. ಸಾಕೆಟ್‌ನೊಳಕ್ಕೆ ನಿಮ್ಮ ಬೆರಳನ್ನಿಟ್ಟರೆ, ನಿಮ್ಮಲ್ಲೂ ಅದೇ ವಿದ್ಯುತ್ ಹರಿಯುತ್ತದೆ, ಆದರೆ ನಿಮಗೆ ವಿದ್ಯುದಾಘಾತವಾಗುತ್ತದೆ. ಹರಿಯುತ್ತಿರುವಾಗ ಏನು ಮಾಡಬೇಕೆಂಬುದು ವಿದ್ಯುಚ್ಛಕ್ತಿಗೆ ಗೊತ್ತಾಗುವುದಿಲ್ಲ. ಆದರೆ ವಿಶ್ವಶಕ್ತಿಯು ಶುದ್ಧ ಬುದ್ಧಿಶಕ್ತಿ. ವಿಶ್ವಶಕ್ತಿಯನ್ನು ಒಮ್ಮೊಮ್ಮೆ ವಿದ್ಯುತ್‌ಛಕ್ತಿಗೆ ಹೋಲಿಸಲಾಗುತ್ತದೆ, ಆದರೂ ಅದು ಬಹಳ ಭಿನ್ನವಾದುದು. ಅದು ತಪ್ಪುಮಾಡುವುದೇ ಇಲ್ಲ, ಏಕೆಂದರೆ ಅದಕ್ಕೆ ತನ್ನದೇ ಆದ ಬುದ್ಧಿಶಕ್ತಿ ಇದೆ.

ವಿಶ್ವಶಕ್ತಿಯನ್ನು ಯಾರು ಪಡೆಯಬಲ್ಲರು? ತೆರೆದ ಹೃದಯ ಮತ್ತು ಮನಸ್ಸುಗಳುಳ್ಳವರು

ವಿಶ್ವಶಕ್ತಿಯನ್ನು ಯಾರು ಪಡೆಯಬಲ್ಲರು?
ಅವಶ್ಯಕತೆ ಇರುವ ಯಾರಾದರೂ ಪಡೆಯಬಹುದು.
ಅದಕ್ಕೆ ಯಾವ ನಿರ್ಬಂಧಗಳು ಇಲ್ಲ. ಆ ಶಕ್ತಿಯನ್ನು
ಸುಂದರವಾಗಿ ಪಡೆಯಲು ಕೆಲವು ಸೂಚನೆಗಳು ಇವೆ.
ತೆರೆದ ಹೃದಯಿಗಳು ಹಾಗೂ ತೆರೆದ ಮನಸ್ಕರೂ,
ತಮ್ಮ ತರ್ಕದಿಂದ ಶಕ್ತಿಯನ್ನು
ಪ್ರಶ್ನಿಸುತ್ತಿರುವವರಿಗಿಂತಲೂ ಸುಲಭವಾಗಿ ಹಾಗೂ
ಶೀಘ್ರವಾಗಿ ಪಡೆಯಬಲ್ಲರು.

ಈ ತತ್ತ್ವವನ್ನು ಅರ್ಥಮಾಡಿಕೊಂಡು ಪ್ರಾಮಾಣಿಕವಾಗಿ ಅದರೊಳಗೆ ಸಂಪೂರ್ಣವಾಗಿ ತೊಡಗಿಕೊಳ್ಳಿರಿ, ಅಷ್ಟೇ ಸಾಕು. ಪ್ರಯೋಗ ಮಾಡಿನೋಡುವುದಕ್ಕೆ ಮುಂಚೆಯೇ ಪ್ರಯೋಗದ ಲಾಭವನ್ನು ಅಪೇಕ್ಷಿಸದೆ ಪ್ರಯೋಗ ಮಾಡಲು ಧೈರ್ಯವನ್ನೂ ತೆರೆದ ಮನಸ್ಸನ್ನೂ ಹೊಂದಿರಿ. ನಿಮ್ಮ ಆಲೋಚನೆಗಳನ್ನೂ, ಬುದ್ಧಿಶಕ್ತಿಯನ್ನೂ, ಭಾವನೆಗಳನ್ನೂ ಮತ್ತು ಉತ್ಸಾಹವನ್ನೂ ಒಟ್ಟುಗೂಡಿಸಿ ತತ್ತ್ವದೊಂದಿಗೆ ಸಮನ್ವಯಗೊಳಿಸಿರಿ.

ನಿತ್ಯ ಸ್ಪಿರಿಚುಯಲ್ ಹೀಲರುಗಳ ದೀಕ್ಷೆ

ನಿತ್ಯ ಸ್ಪಿರಿಚುಯಲ್ ಹೀಲರುಗಳ ದೀಕ್ಷೆಯು
ಸಾಕ್ಷಾತ್ಕಾರದೊಂದಿಗೆ ನೇರವಾಗಿ
ಸಂಬಂಧಿತವಾಗಿದೆ. ಬೇರೆಯವರನ್ನು
ಗುಣಪಡಿಸುವುದು, ನಡೆಯುವ ಪ್ರಕ್ರಿಯೆಯ ಪಾರ್ಶ್ವ
ಪರಿಣಾಮ ಅಥವಾ ಒಂದು ಉಪಉತ್ಪನ್ನ ಮಾತ್ರ.
ಮುಖ್ಯವಾದ ಪರಿಣಾಮ ಎಂದರೆ ನೀವು
ಹೀಲರುಗಳಾಗಿ ಸೇವೆ ಮಾಡುವಾಗ ವಾಸ್ತವವಾಗಿ
ನಿಮ್ಮ ಅಸ್ತಿತ್ವದ ಅತ್ಯಂತ ಆಳವಾದ ಸ್ತರದೊಂದಿಗೆ
ಸಂಪರ್ಕವನ್ನು ಹೊಂದುವಿರಿ.

ನಿತ್ಯ ಸ್ಪಿರಿಚುಯಲ್ ಹೀಲರುಗಳ
ದೀಕ್ಷೆಕೊಡುವಾಗ, ಗುರುಗಳು ಆನಂದ ಗಂಧ ಚಕ್ರದ
ಚೈತನ್ಯದ ಬಾಗಿಲನ್ನು ತೆರೆಯುವರು.

ಆನಂದಗಂಧ ಚಕ್ರ

ಆನಂದಗಂಧ ಚಕ್ರವು ನಮ್ಮ ಏಳು ಚಕ್ರಗಳೂ, ಏಳು ಚೈತನ್ಯ ಶರೀರಗಳೂ, ಪಂಚಕೋಶಗಳೂ ಎಲ್ಲವೂ ಲೀನವಾಗುವ ಶಕ್ತಿಕೇಂದ್ರ. ಅದು ನಮ್ಮ ಎಲ್ಲಾ ಚೈತನ್ಯಕ್ಕೂ ಮೂಲ ಹಾಗೂ ಬ್ರಹ್ಮಾಂಡದ ವಿಶ್ವಶಕ್ತಿಗೆ ನೇರವಾಗಿ ಸಂಪರ್ಕವನ್ನು ಹೊಂದಿದೆ. ಆನಂದಗಂಧವು ಭೌತಿಕ ದೇಹದಲ್ಲಿಲ್ಲ; ಅದಕ್ಕೆ ಆಧಿಭೌತಿಕ ಮಹತ್ವವಿದೆ.

ಜ್ಞಾನಿಯೂ ಒಬ್ಬ ವ್ಯಕ್ತಿಯನ್ನು ಗುಣಪಡಿಸುವವನಾಗಲು (ಹೀಲರ್ ಆಗಲು) ದೀಕ್ಷೆ

ಕೊಟ್ಟಾಗ ಆನಂದಗಂಧದ ಕದ ತೆರೆಯುತ್ತಾನೆ.
ಹೀಗಾಗಿ, ಪ್ರತಿಯೊಂದು ನಿಮಿಷವೂ ದೈವಿಕ
ಚೈತನ್ಯದೊಡನೆ ಸಂಪರ್ಕವಿರುತ್ತದೆ. ನೀವು ಆನಂದ
ಗಂಧದಲ್ಲಿದ್ದಾಗ, ನೀವು ಜ್ಞಾನೋದಯ
ಹೊಂದಿರುತ್ತೀರಿ. ಏಕೆಂದರೆ ನೀವು
ವಿಶ್ವಚೈತನ್ಯದೊಂದಿಗೆ ಒಂದಾಗಿರುತ್ತೀರಿ.

ಗುರುಗಳು ಆನಂದ ಗಂಧದಲ್ಲಿರುತ್ತಾರೆ. ನಾವು
ಆನಂದ ಗಂಧದಲ್ಲಿದ್ದಾಗ ಅದೇ ಶಕ್ತಿ
ಮೂಲದೊಂದಿಗೆ ಸಂಪರ್ಕವನ್ನಿಟ್ಟುಕೊಂಡಿರುತ್ತೇವೆ.
ಆದುದರಿಂದಲೇ ಗುಣಪಡಿಸುವ ಶಕ್ತಿಯು ಹೊಸ
ಜೀವನವನ್ನು, ಹೊಸಚೈತನ್ಯವನ್ನು ಕೊಡಬಲ್ಲುದು
ಮತ್ತು ರೋಗಗಳನ್ನು ಗುಣಪಡಿಸಬಲ್ಲುದು.

ಆನಂದಗಂಧ ಧ್ಯಾನದ ಕೆಲವು ಪ್ರಯೋಜನಗಳು

ಆನಂದಗಂಧ ಧ್ಯಾನವನ್ನು ಪ್ರತಿದಿನವೂ
ಮಾಡಿದಾಗ, ಹೊರಪ್ರಪಂಚದ ಯಾವುದೂ ನಿಮ್ಮ
ಆಂತರ್ಯವನ್ನು ಅಲುಗಾಡಿಸಲಾಗುವುದಿಲ್ಲ. ನಿಮ್ಮ
ಸುತ್ತಲಿನ ಸಕಲವೂ ಅಸಫಲವಾಗುತ್ತಿದ್ದರೂ ನೀವು
ದೃಢವಾಗಿಯೂ ಬಲವಾಗಿಯೂ ಇರುತ್ತೀರಿ.
ಕಾಲಕ್ರಮೇಣ, ಈ ಧ್ಯಾನವು ನಿಮ್ಮ ಸಹಜ ಅಸ್ತಿತ್ವದ
ಸ್ಥಿತಿಯಾಗುವ ಹಂತವನ್ನು ತಲುಪುವಿರಿ. ನೀವು
ನಿರಂತರವಾಗಿ ಆನಂದಗಂಧದಲ್ಲಿರುತ್ತೀರಿ!

ಈ ಧ್ಯಾನವು ನಿಮಗೆ ಇವುಗಳನ್ನು ನೀಡುತ್ತದೆ.

ಸತ್: ಎಲ್ಲದರಲ್ಲಿಯೂ ಸ್ಪಷ್ಟತೆ.

ನಿಮಗೆ ಸ್ಪಷ್ಟತೆ ಇರುತ್ತದೆ ಏಕೆಂದರೆ ನೀವು
ಆಸೆ ಮತ್ತು ಭಯಗಳಿಂದ ಪ್ರೇರಿತರಾಗದೆ,
ವಿಷಯಗಳನ್ನು ವಸ್ತುನಿಷ್ಠವಾಗಿ
ನೋಡಬಲ್ಲವರಾಗುತ್ತೀರಿ.

ಚಿತ್: ಪ್ರಜ್ಞೆ

ನೀವು ಮಾಡುವ ಪ್ರತಿಯೊಂದರಲ್ಲಿಯೂ
ಉತ್ಸಾಹವಿರುತ್ತದೆ. ನಿಮ್ಮ ಶರೀರದ ಪ್ರತಿಯೊಂದು
ರಂಧ್ರ, ಪ್ರತಿಯೊಂದು ಕಣವೂ ಚೈತನ್ಯವನ್ನೂ
ಉತ್ಸಾಹವನ್ನೂ ಹೊರಸೂಸುತ್ತದೆ.

ಪ್ರಯಾಸವಿಲ್ಲದೆಯೇ ಒಂದರ ಮೇಲೊಂದು
ತೀರ್ಮಾನಗಳನ್ನು, ಮುಖ್ಯವಾಗಿ ಹೇಳಬೇಕೆಂದರೆ,
ಅದೇ ಉತ್ಸಾಹದಿಂದ ಮತ್ತು ಬುದ್ಧಿಶಕ್ತಿಯಿಂದಲೂ
ನಿರ್ವಹಿಸುತ್ತೀರಿ.

ಆನಂದ: ಕಾರಣರಹಿತ ಆನಂದ

ಬಾಹ್ಯ ಪ್ರಪಂಚದಲ್ಲಿ ಏನೇ ನಡೆಯುತ್ತಿದ್ದರೂ ಅದರ ಪರಿವೆಯೇ ಇಲ್ಲದೆ ಸಂತೋಷವಾಗಿರುತ್ತೀರಿ.

ಆನಂದ ಗಂಧದಲ್ಲೇ ಸತತವಾಗಿ
ಇರುವುದರಿಂದಾಗಿ ದೈಹಿಕ ಹಾಗೂ ಮಾನಸಿಕ
ಸ್ವಾಸ್ಥ್ಯ ಪಡೆಯುವುದಲ್ಲದೆ, ಹೊರ ಪ್ರಪಂಚದಲ್ಲಿ
ನಡೆಯುವ ಯಾವುದೇ ವಿಷಯವನ್ನು ನಿಭಾಯಿಸುವ
ಸ್ಪಷ್ಟತೆಯನ್ನು ಹೊಂದುತ್ತೀರಿ.

ನಿತ್ಯ ಸ್ಪಿರಿಚುಯಲ್ ಹೀಲಿಂಗ್ 'ಒಂದರಲ್ಲೇ
ಎರಡು' ಇರುವ ತಂತ್ರ. ಹೀಲರ್ ಆಗಿ, ಆನಂದವನ್ನು
ಅನುಭವಿಸುವಿರಿ ಮತ್ತು ಹೀಲಿಂಗ್ ಪಡೆಯುವವನು
ಗುಣಹೊಂದುತ್ತಾನೆ. ಆದುದರಿಂದಲೇ ಇದನ್ನು
ಅಂತಿಮ ತಂತ್ರವೆನ್ನಬಹುದು.

ನಿತ್ಯ ಸ್ಪಿರಿಚುಯಲ್ ಹೀಲಿಂಗ್‌ನ ಆರೋಗ್ಯ ಲಾಭಗಳು

1. ಕ್ಯಾನ್ಸರ್, ಆಸ್ತಮಾ, ಸೈನಸೈಟಿಸ್, ಹರ್ನಿಯಾ, ಮೂತ್ರ ಜನಕಾಂಗದ ವೈಫಲ್ಯ, ಮಧುಮೇಹ, ತೀವ್ರ ರಕ್ತದೊತ್ತಡ, ಬೆನ್ನಿನ ತೊಂದರೆಗಳು, ಅಲರ್ಜಿಗಳು, ಮೂರ್ಛೆ ರೋಗ, ಅರೆ ತಲೆನೋವು, ಧಮ್ಮು, ಚರ್ಮರೋಗಗಳು, ನಿದ್ರಾಹೀನತೆ ಮುಂತಾದ ಅನೇಕ ರೋಗಗಳು ಗುಣವಾಗುತ್ತವೆ.

2. ಉದ್ವಿಗ್ನತೆ, ಖಿನ್ನತೆ, ಅಕಾರಣ ಭಯ ಮುಂತಾದ ಮಾನಸಿಕ ಖಾಯಿಲೆಗಳು ಗುಣವಾಗುತ್ತವೆ.

3. ಸುಟ್ಟಗಾಯ, ನೋವುಗಳು, ಶೂಲೆಗಳು, ಮುಂತಾದ ದೈಹಿಕ ತೊಂದರೆಗಳ ಶೀಘ್ರ ಗುಣವಾಗುತ್ತದೆ.

4. ಸ್ತ್ರೀರೋಗ ಸಂಬಂಧವಾದ ಖಾಯಿಲೆಗಳು, ಬಂಜೆತನ ಮುಂತಾದುವುಗಳಿಗೆ ಪರಿಹಾರ ದೊರಕುತ್ತದೆ.

ಸೇವೆಗಳು

ನಿತ್ಯ ಸ್ಪಿರಿಚುಯಲ್ ಹೀಲಿಂಗ್ ಎಂಬುದು ಜಗತ್ತಿನಾದ್ಯಂತ ಸಾವಿರಾರು ಹೀಲಿಂಗ್ ಕೇಂದ್ರಗಳಲ್ಲಿಯೂ, ಕಾಲಕಾಲಕ್ಕೆ ನಡೆಸುವ ಚಿಕಿತ್ಸಾ ಶಿಬಿರಗಳಲ್ಲಿಯೂ ಉಚಿತವಾಗಿ ನೀಡಲಾಗುತ್ತಿರುವ

ಸೇವೆ. ಈ ವಿಶಿಷ್ಟ ಚಿಕಿತ್ಸಾ ಪದ್ಧತಿಯು ಹೀಲಿಂಗ್ ನೀಡುವವನಿಗೆ ಧ್ಯಾನವಾಗಿಯೂ, ಮಾಡಿಸಿಕೊಳ್ಳುವವನಿಗೆ ಚಿಕಿತ್ಸೆಯಾಗಿಯೂ ಇರುತ್ತದೆ. ಇದರಲ್ಲಿ ಯಾವ ಅನಿಷ್ಟ ಉಪಪರಿಣಾಮಗಳೂ ಇಲ್ಲದೆ ಸುರಕ್ಷಿತವಾಗಿರುವುದು.