KAILASA Library/ಜೀವನ್ಮುಕ್ತಿ/ಪ್ರಬಲವಾದ ತತ್ಕ್ಷಣದ ಧ್ಯಾನಗಳುSign in
ಜೀವನ್ಮುಕ್ತಿ

ಪ್ರಬಲವಾದ ತತ್ಕ್ಷಣದ ಧ್ಯಾನಗಳು

This text was machine-transcribed from the printed book and may contain errors. Select the words and choose “Report a mistake”.

1. ಸುಮ್ಮನೆ ನಿಲ್ಲಿಸಿ!

ನಿಮ್ಮ ಅರಿವನ್ನು ವರ್ತಮಾನ ಕ್ಷಣಕ್ಕೆ ತರಲು ಇದೊಂದು ಬಹಳ ಪ್ರಬಲವಾದ ಧ್ಯಾನತಂತ್ರ.

ಕಾಲಾವಧಿ : ಯಾವಾಗಲಾದರೂ ಸರಿ, ಎಲ್ಲಾದರೂ ಸರಿ.

ಸುಮ್ಮನೆ ನಿಲ್ಲಿಸಿ! ಎಂಬುದು ಜ್ಞಾನಿಗಳಾದ ಜಾರ್ಜ್ ಗುರ್ಡಿಫ್‌ರವರು ಬಹಳವಾಗಿ ಬಳಸುತ್ತಿದ್ದ ತಂತ್ರ.

Stop meditation

ನಿಮಗೆ ಏನನ್ನಾದರೂ ಮಾಡುವ ಪ್ರಚೋದನೆಯು ಉಂಟಾಗುತ್ತಿರುವಂತೆಯೇ ಅದನ್ನು ನಿಲ್ಲಿಸಿ. ನಿಮ್ಮ ಕಪಟತನವೂ ಒಂದು ಪ್ರಚೋದನೆ. ಅದು ನಿಮ್ಮ ಉಳಿವಿಗಾಗಿ ಮತ್ತೊಂದು ಪ್ರಚೋದನೆ. ನೀವು ಕಪಟಿಗಳಾಗಿದ್ದರೆ ಹಾಗೂ ಸದಾ ಎಚ್ಚರದಿಂದಿದ್ದರೆ ಮಾತ್ರ ಉಳಿಯಲು ಸಾಧ್ಯವೆಂದು ಯಾವಾಗಲೂ ಆಲೋಚಿಸುತ್ತೀರಿ. ಈಗ ಆ ಕಪಟತನವನ್ನು ನಿಲ್ಲಿಸಿ, ಮುಗ್ಧತೆಯಿಂದಲೂ, ವಿಶ್ವಾಸದಿಂದಲೂ ಇರಿ. ಎರಡನೆಯ ಹಂತ: ನಿಮಗೆ ಯಾವಾಗಲಾದರೂ ಹಸಿವು, ಕೋಪ, ಬಾಯಾರಿಕೆ ಅಥವಾ ಸೀನುವುದು ಅಥವಾ ಮತ್ತಾವುದೇ ಕ್ರಿಯೆಯ ಪ್ರಚೋದನೆ ಉಂಟಾಗುವ ಸಂದರ್ಭದಲ್ಲಿ ಅಥವಾ ನೀವು ಆ ಕ್ರಿಯೆಯಲ್ಲಿ ತೊಡಗುವ ಸಮಯದಲ್ಲಿ ಸುಮ್ಮನೆ ತಡೆಯಿರಿ. 'ಮಾಡುವ' ಮನಸ್ಥಿತಿಯಿಂದ 'ಇರುವ' ಮನಸ್ಥಿತಿಗೆ ಬನ್ನಿ.

2. ಕನ್ನಡಿಯ ಮೂಲಕ ನಿಮ್ಮನ್ನೇ ನೋಡಿಕೊಳ್ಳುವುದು

ಸತತವಾಗಿ ಸಚೇತನಗೊಂಡು ನಿಮ್ಮನ್ನೇ ಪುನರುಜ್ಜೀವನಗೊಳಿಸಿಕೊಳ್ಳಿರಿ.

ಕಾಲಾವಧಿ : 10 ನಿಮಿಷಗಳು

ಒಂದು ಪೂರ್ಣಪ್ರಮಾಣದ ಕನ್ನಡಿಯ ಮುಂದೆ ನಿಂತು, ನಿಮ್ಮನ್ನೇ ನೋಡಿಕೊಳ್ಳಿರಿ. ಹೊರಗಿನಿಂದ ನಿಮ್ಮ ಸ್ವರೂಪವನ್ನು ನೋಡಿಕೊಳ್ಳಿರಿ. ನೀವೇ ಕರ್ತೃ ಹಾಗೂ ಕನ್ನಡಿಯಲ್ಲಿನ ನಿಮ್ಮ ಪ್ರತಿಬಿಂಬವು ನಿಮ್ಮ ಗಮನದ ವಸ್ತು. ನಿಮ್ಮ ಚೈತನ್ಯವು ವಸ್ತುವಿನೆಡೆಗೆ ಹರಿಯುತ್ತಿರುವುದನ್ನು ತಿಳಿಯುತ್ತೀರಿ. ನೀವು ನೋಡುತ್ತಿದ್ದೀರಿ ಹಾಗೂ ನಿಮ್ಮ ಪ್ರತಿಬಿಂಬವು ನೋಡಲ್ಪಡುತ್ತಿದೆ.

ಈಗ ಪಾತ್ರಗಳು ತಿರುಗು ಮುರುಗಾದಂತೆ ಭಾವಿಸಿರಿ. ನಿಮ್ಮ ಪ್ರತಿಬಿಂಬವು ನಿಮ್ಮನ್ನು ನೋಡುತ್ತಿರುವಂತೆ ಭಾವಿಸಿರಿ. ಮೊದಲಿಗೆ ಇದು ಭಯವನ್ನುಂಟುಮಾಡಬಹುದು. ನಿಮ್ಮ ಪ್ರತಿಬಿಂಬವು ನಿಮ್ಮನ್ನು ಗಮನಿಸುವಂತೆ ಯೋಚಿಸುವುದು ನಿಮಗೆ ಅಭ್ಯಾಸವಾಗಿರುವುದಿಲ್ಲ.

ಆ ಭಾವನೆಯು ವಿಚಿತ್ರವಾಗಿ ಹೆದರಿಸುವಂಥದ್ದಾಗಿದ್ದರೂ, ಮುಂದುವರೆಸಿ. ಕೆಲವೇ ಕ್ಷಣಗಳಲ್ಲಿ ಒಂದು ಮಹತ್ತರವಾದ ಬದಲಾವಣೆಯನ್ನು ಕಾಣುತ್ತೀರಿ. ನಿಮ್ಮ ಪ್ರತಿಬಿಂಬದಿಂದ ಚೈತನ್ಯವು ನಿಮ್ಮೆಡೆಗೆ ಪ್ರವಹಿಸುತ್ತಿರುವುದನ್ನು ಕಾಣುತ್ತೀರಿ. ಈಗ ಚೈತನ್ಯದ ಆವರ್ತವನ್ನು ಪೂರ್ಣಗೊಳಿಸಿದ್ದೀರಿ. ಶಕ್ತಿಯ ಆವರ್ತವನ್ನು ಪೂರ್ಣಗೊಳಿಸುವುದರಿಂದ ಶಕ್ತಿಯು ವ್ಯಯವಾಗಿಲ್ಲವೆಂದು ದೃಢೀಕರಿಸಿದ್ದೀರಿ. ಶಕ್ತಿಯು ಈಗ ನಿಮ್ಮೆಡೆಗೆ ಹರಿಯುತ್ತಿದೆ. ನಿಮ್ಮ ಶಕ್ತಿಯನ್ನು ನಿಮಗಾಗಿಯೇ ಸಂರಕ್ಷಿಸಿಕೊಂಡಿದ್ದೀರಿ.

ಈ ತಂತ್ರವನ್ನು ಕೆಲವು ದಿನಗಳವರೆಗೆ ಅಭ್ಯಾಸಿಸಿದಲ್ಲಿ ನಿಮ್ಮಲ್ಲಿ ಒಂದು ನಿರ್ದಿಷ್ಟವಾದ ಬದಲಾವಣೆ ಕಾಣುತ್ತದೆ. ನೀವು ಹೆಚ್ಚು ಶಕ್ತಿಶಾಲಿಯಾಗಿ ಹೆಚ್ಚು ಕೇಂದ್ರೀಕೃತರಾಗಿ ನಿಮ್ಮೊಂದಿಗೆ ಹಾಗೂ ಇತರರೊಂದಿಗೆ ಶಾಂತಿಯಿಂದ ಇರುತ್ತೀರಿ.

ಇದನ್ನು ಕನ್ನಡಿ ಹಾಗೂ ನಿಮ್ಮ ಬಿಂಬವಿಲ್ಲದೆಯೇ ಇಡೀ ದಿನ ಅಭ್ಯಾಸಿಸಬಹುದು. ನೀವು ನಿಮ್ಮ ಗಮನವನ್ನು ಕೇಂದ್ರೀಕರಿಸುವ ಯಾವುದೇ ವಸ್ತು ಹಾಗೂ ವ್ಯಕ್ತಿಯ ಮೇಲೂ ಇದನ್ನು ಪ್ರಯತ್ನಿಸಿ. ನಿಮ್ಮ ಚೈತನ್ಯವನ್ನು ಯಾವುದರ ಮೇಲಾದರೂ ಅಥವಾ ಯಾರ ಮೇಲೆಯಾದರೂ ಹರಿಸಿದಾಗ ಅದು ಅಥವಾ ಅವರು ಅದನ್ನು ನಿಮಗೆ ಹಿಂದಿರುಗಿಸುತ್ತಿರುವುದಾಗಿ ಭಾವಿಸಿ. ಚೈತನ್ಯವು ನಿಮ್ಮೆಡೆಗೆ ಹಿಂದಿರುಗಿ ಹರಿದು ನಿಮಗೆ ನವಚೈತನ್ಯ ನೀಡಿ ಪುನರುಜ್ಜಿವನಗೊಳಿಸುವುದನ್ನು ಭಾವಿಸುತ್ತೀರಿ. ಇದನ್ನು ದಿನವಿಡೀ ನೀವು ಕೆಲಸ ಮಾಡುವ ಕಂಪ್ಯೂಟರ್‌ನೊಂದಿಗೂ ಪ್ರಯತ್ನಿಸಬಹುದು!

3. ಅಂಗಾಂಗಗಳ ವಿಶ್ರಾಂತಿ

ತಕ್ಷಣದ ವಿಶ್ರಾಂತಿ ಪಡೆಯಲು ಇದು ಅತ್ಯಂತ ಶೀಘ್ರವಾದ ಧ್ಯಾನತಂತ್ರಗಳಲ್ಲೊಂದು.

ಕಾಲಾವಧಿ : ಕನಿಷ್ಠ 2 ನಿಮಿಷಗಳು - ಸಮಯವಿದ್ದಲ್ಲಿ ಮತ್ತಷ್ಟು ಹೊತ್ತು ಮಾಡಬಹುದು

A young man sitting cross-legged on rocks with hands raised

ಏಕಾಂತವಾದ ಸ್ಥಳವಿದ್ದಲ್ಲಿ ಈ ತಂತ್ರವನ್ನು ಮಲಗಿ ಮಾಡಿರಿ. ಇಲ್ಲದಿದ್ದಲ್ಲಿ ನಿಮ್ಮನ್ನೇ ನೀವು ಸಾಧ್ಯವಾದಷ್ಟು ಆರಾಮವಾಗಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ. ಒಂದು ದೊಡ್ಡ, ಆಳವಾದ ಉಸಿರನ್ನು ತೆಗೆದುಕೊಳ್ಳಿ. ಉಸಿರನ್ನು ಹಿಡಿದಿಡಬೇಕಾಗಿರುವುದರಿಂದ, ಸಾಧ್ಯವಾದಷ್ಟು ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿರಿ. ಉಸಿರನ್ನು ಒಳಗೇ ಹಿಡಿಯುತ್ತಾ ಅಂಗಾಂಗಗಳನ್ನು ಒಂದಾದ ಮೇಲೆ ಒಂದರಂತೆ ಬಿಗಿಹಿಡಿಯಿರಿ. ನಿಮ್ಮ ಪಾದಗಳು ಹಾಗೂ ಕಣಕಾಲುಗಳಿಂದ ಆರಂಭಿಸಿ, ಮೊಣಕಾಲು, ಮಂಡಿಗಳು ಸೇರಿದಂತೆ ಮೇಲಕ್ಕೆ ಚಲಿಸಿ ನಿಮ್ಮ ತೊಡೆಗಳನ್ನೂ, ಪೃಷ್ಠವನ್ನೂ ಬಿಗಿಹಿಡಿಯಿರಿ. ಮೇಲಕ್ಕೆ ಹೋದಂತೆ, ಮುಂಚೆ ಬಿಗಿಹಿಡಿದಿದ್ದ ಅಂಗಗಳನ್ನು ಸಡಿಲಿಸಬೇಡಿ.

ಈಗ ನಿಮ್ಮ ಸೊಂಟದವರೆಗೂ ಸಾಗಿ, ನಂತರ ಹೊಟ್ಟೆಯನ್ನೂ ಬಿಗಿಹಿಡಿಯಿರಿ. ನಿಮ್ಮ ಹೊಟ್ಟೆಯ ಸ್ನಾಯುಗಳನ್ನು ಸಾಧ್ಯವಾದಷ್ಟು ಗಟ್ಟಿಯಾಗಿ ಬಿಗಿಹಿಡಿಯಿರಿ. ನಿಮ್ಮ ತೊಡೆ ಸಂದಿರುವ ಸ್ನಾಯುಗಳೂ ತಾವಾಗಿಯೇ ಬಿಗಿದುಕೊಳ್ಳುತ್ತವೆ.

ನಂತರ, ನಿಮ್ಮ ಎದೆ ಹಾಗೂ ಬೆನ್ನನ್ನು ಬಿಗಿಹಿಡಿಯಿರಿ. ನಿಮ್ಮ ಬೆನ್ನಿನ ಜೊತೆಗೆ ಬೆನ್ನು ಮೂಳೆಗಳನ್ನೂ ಬಿಗಿದುಕೊಳ್ಳಿ. ನಿಮ್ಮ ಕೈ ಬೆರಳುಗಳಿಂದ ಹಿಡಿದು, ಕೈಗಳು, ತೋಳುಗಳು ಹಾಗೂ ರೆಟ್ಟೆ ಸ್ನಾಯುಗಳವರೆಗೂ ಬಿಗಿದುಕೊಳ್ಳಿ. ನಿಮ್ಮ ಭುಜಗಳು, ಕತ್ತು ಹಾಗೂ ಗಂಟಲ ಸ್ನಾಯುಗಳನ್ನು ಬಿಗಿದುಕೊಳ್ಳಿ. ಮುಖ್ಯವಾಗಿ ನಿಮ್ಮ ಕತ್ತಿನ ಸ್ನಾಯುಗಳಲ್ಲಿ ಬಿಗಿತವನ್ನು ಹಿಡಿಯಿರಿ.

ಒಬ್ಬ ವ್ಯಕ್ತಿ ನೆಲದ ಮೇಲೆ ಮಲಗಿರುವ ಭಂಗಿ

ನಿಮ್ಮ ಮುಖಕ್ಕೆ ಸಾಗಿರಿ. ನಿಮ್ಮ ಮುಖದಲ್ಲಿ ನೀವು ತಿಳಿದಿರುವುದಕ್ಕಿಂತಲೂ ಹೆಚ್ಚು ಸ್ನಾಯುಗಳಿವೆ. ನಿಮ್ಮ ಬಾಯಿ, ಮೂಗಿನ ಹೊಳ್ಳೆ, ಕಣ್ಣುಗಳು, ಹುಬ್ಬುಗಳು, ಹಣೆ ಹಾಗೂ ಕೆನ್ನೆಗಳನ್ನು ಬಿಗಿಹಿಡಿಯಿರಿ. ರೆಪ್ಪೆಗಳನ್ನು ಗಟ್ಟಿಯಾಗಿ ಮುಚ್ಚಿ. ಹಲ್ಲುಗಳನ್ನು ಬಿಗಿಯಿರಿ. ನಿಮ್ಮ ಇಡೀ ಮುಖವನ್ನು ಒಂದು ಚೆಂಡಿನಂತೆ ಬಿಗಿಯಿರಿ. ಈ ಸಮಯದಲ್ಲಿ ಇತರ ಅಂಗಾಂಗಗಳ ಬಿಗಿತವನ್ನು ಸಡಿಲಿಸದಿರಿ.

ಈ ಬಿಗಿತದ ಸ್ಥಿತಿಯಲ್ಲಿ ಸಾಧ್ಯವಾದಷ್ಟು ಸಮಯ ಇರಿ. ಉಸಿರನ್ನು ಇನ್ನೂ ಹಿಡಿದಿಟ್ಟುಕೊಳ್ಳಲಾಗದಿದ್ದಾಗ, ಏಕಕಾಲದಲ್ಲಿಯೇ ನಿಮ್ಮ ದೇಹವನ್ನು ಪೂರ್ತಿಯಾಗಿ ವಿಶ್ರಮಿಸುತ್ತಾ, ಉಸಿರನ್ನು ಒಮ್ಮೆಗೇ ಥಟ್ಟನೆ ಹೊರಹಾಕಿರಿ. ಈ ದೈಹಿಕ ಹಾಗೂ ಮಾನಸಿಕ ವಿಶ್ರಾಂತಿಯ ಸ್ಥಿತಿಯಲ್ಲಿ ಒಂದು ನಿಮಿಷ ಕಾಲ ಇರಿ. ಈ ತಂತ್ರವು ದೇಹ ಮನಸ್ಸುಗಳಿಗೆ ವಿಶ್ರಾಂತಿ ನೀಡಿ, ಕೇವಲ ಎರಡೇ ನಿಮಿಷಗಳಲ್ಲಿ ಪುನಶ್ಚೇತನಗೊಳಿಸುತ್ತದೆ. ಸಮಯವಿದ್ದಲ್ಲಿ ಈ ಪ್ರಕ್ರಿಯೆಯನ್ನು ಮೂರು ಬಾರಿ ಪುನರಾವರ್ತಿಸಿರಿ.

4. ಗ್ರಹಿಕೆಯನ್ನು ಮೀರಿ ಚಿಂತನೆಮಾಡಿ

ಮನಸ್ಸೇ ಇಲ್ಲದ ಆನಂದವನ್ನು ಅನುಭವಿಸಿರಿ

ಕಾಲಾವಧಿ : 10 ನಿಮಿಷಗಳು

ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿರುವ ವ್ಯಕ್ತಿಯ ಪಾರ್ಶ್ವ ಚಿತ್ರ

ನೀವು ಏನನ್ನಾದರೂ ಗ್ರಹಿಸಿದ ಕ್ಷಣವೇ, ಅದರ ಬಗ್ಗೆ ಆಲೋಚಿಸಲು ಸಾಧ್ಯವಾದ ಕ್ಷಣವೇ, ಅದು ನಿಮ್ಮ ಭೂತಕಾಲಕ್ಕೆ ಸೇರುತ್ತದೆ. ಉದಾಹರಣೆಗೆ, ಆರಂಭದಲ್ಲಿ ನಿಮ್ಮ ಆಲೋಚನೆಗಳಿಗೆ ಮೀರಿದ ಯಾವುದರ ಬಗ್ಗೆಯಾದರೂ ಯೋಚಿಸಲು ಹೇಳಿದರೆ, ನೀವು ಇಡೀ ಸೌರವ್ಯೂಹವನ್ನು ಯೋಚಿಸಬಹುದು. ಆದರೆ ಇಡೀ ಸೌರವ್ಯೂಹದ ಬಗ್ಗೆ ನೀವು ಯೋಚಿಸಿದ ಕ್ಷಣವೇ ನೀವು ಅದನ್ನಾಗಲೇ ಮತ್ತೊಂದು ಆಲೋಚನೆಯನ್ನಾಗಿ ಮಾಡಿರುತ್ತೀರಿ! ಆದ್ದರಿಂದ ಈಗ ಅದನ್ನು ಬಿಡಿ. ನಂತರ ಅದರಿಂದಾಚೆಗೆ ಯೋಚಿಸಲು ಯತ್ನಿಸಿರಿ. ಸೌರವ್ಯೂಹವನ್ನು ಮೀರಿದ ತಾರಾ ಸಮೂಹವನ್ನು ಯೋಚಿಸಬಹುದು. ತಾರಾ ಸಮೂಹವನ್ನು ಯೋಚಿಸಲು ಸಾಧ್ಯವಾದಾಗ ಆ ಆಲೋಚನೆಯನ್ನೂ ಬಿಟ್ಟುಬಿಡಿ. ತಾರಾಸಮೂಹವನ್ನೂ ಮೀರಿ

ಹೋಗಿ. ಸತತವಾಗಿ ನಿಮ್ಮ ಮನಸ್ಸನ್ನು ದಾಟಿಹೋಗಲು ಅದನ್ನು ವಿಸ್ತರಿಸಿದಾಗ ನೀವು ವರ್ತಮಾನ ಕ್ಷಣದಲ್ಲಿರುತ್ತೀರಿ.

ತಿಳಿಯಿರಿ, ಏನನ್ನಾದರೂ ಮನಸ್ಸಿನಿಂದ ಗ್ರಹಿಸಿ, ಅದರ ಬಗ್ಗೆ ಯೋಚಿಸಿದ ಕ್ಷಣ ನೀವಾಗಲೇ ಅದನ್ನು ನಿಮ್ಮ ಗತಕಾಲಕ್ಕೆ ನಿಮ್ಮ ಆಸ್ತಿಗೆ ಸೇರಿಸಿದ್ದೀರಿ. ನಿಮ್ಮ ಮನಸ್ಸು ಅಲ್ಲಿ ಚೆನ್ನಾಗಿ ಬೆಳೆಯಲು ಸಾಧ್ಯ. ಆದ್ದರಿಂದ ನೀವು ಯೋಚಿಸಲು ಸಾಧ್ಯವಾಗುವುದನ್ನು ಮೀರಿ ಮುಂದೆ ಸಾಗಲು ಪ್ರಯತ್ನಿಸಿರಿ. ಯೋಚಿಸಲು ಸಾಧ್ಯವಾಗುವುದಿಲ್ಲವಾದುದು ಯಾವುದೆಂದು ಯೋಚಿಸಿದರೂ ಆ ಆಲೋಚನೆಯನ್ನೂ ಬಿಟ್ಟುಬಿಡಿರಿ. ಮನಸ್ಸು ಯಾವಾಗಲೂ ಎಲ್ಲವನ್ನೂ ಗ್ರಹಿಸಲು ಪ್ರಯತ್ನಿಸುತ್ತದೆ. ಅದನ್ನು ನಂತರ ನಿಧಾನವಾಗಿ ತಿಂದು ಮೆಲುಕುಹಾಕುವ ಗೋವಿನಂತೆ ಅದನ್ನು ಸಂಗ್ರಹಣ ಕೇಂದ್ರದಲ್ಲಿಡುತ್ತದೆ. ಆದ್ದರಿಂದ ನೀವು ಈಗಾಗಲೇ ಗ್ರಹಿಸಿದ ವಿಷಯಗಳನ್ನು ಮತ್ತೆ ಮನಸ್ಸಿಗೆ ತಂದುಕೊಳ್ಳಬೇಡಿರಿ. ಸತತವಾಗಿ ಅವುಗಳನ್ನು ಬಿಡುತ್ತಲೇ ಇರಿ.

ನಿಮ್ಮ ಜೀವನದಲ್ಲಿ ಏನನ್ನು ಅಂತಿಮವಾದದ್ದೆಂದು ತಿಳಿಯುವಿರೋ ಅದನ್ನು ಬಿಟ್ಟುಬಿಡಿರಿ ಹಾಗೂ ನಿಮ್ಮ ಚಿಂತನೆಯನ್ನು ಇನ್ನೂ ದೊಡ್ಡ ವಿಚಾರಕ್ಕೆ ವಿಸ್ತರಿಸಿರಿ. ಪುನಃ ನಿಮ್ಮ ಮನಸ್ಸು ಮತ್ತೇನನ್ನೋ ತಾನಾಗಿಯೇ ಹಿಡಿಯುತ್ತದೆ. ಆದರೆ ಆ ವಿಚಾರವನ್ನು ನಿಮ್ಮ ಮನಸ್ಸು ತಾನಾಗಿಯೇ ಹಿಡಿಯಲು ಬಿಡಬೇಡಿ, ಅದನ್ನೂ ಬಿಟ್ಟುಬಿಡಿ. ನಿಮ್ಮ ಮನಸ್ಸು ಸತತವಾಗಿ ಹೇಳುತ್ತದೆ, ‘ನಾನು ಪ್ರತಿಕ್ಷಣವೂ ಎಲ್ಲವನ್ನೂ ಬಿಡುತ್ತಿದ್ದರೆ, ಆಗ ನನಗೇನಾಗುತ್ತದೆ? ಇದು ಎಲ್ಲಿಗೆ ಮುಕ್ತಾಯ?’ ಎಂದು.

ಈ ಮುಕ್ತಾಯದ ಬಗ್ಗೆ ಯೋಚಿಸದಿರಿ, ಈ ಪ್ರಶ್ನೆಯನ್ನು ಕೇಳುವುದರ ಮೂಲಕ ನಿಮ್ಮ ಮನಸ್ಸು ಏನನ್ನಾದರೂ ಹಿಡಿಯಲು ಪ್ರಯತ್ನಿಸುತ್ತಿರುತ್ತದೆ. ಅಭ್ಯಾಸವನ್ನು ಆರಂಭಿಸುವುದಕ್ಕೆ ಮುಂಚೆಯೇ ನಿಮ್ಮ ಮನಸ್ಸು ಫಲಿತಾಂಶವನ್ನು ರುಜುವಾತುಪಡಿಸಲು ಹೇಳುತ್ತದೆ. ಅದಕ್ಕೆ ಆಸ್ಪದ ಕೊಡಬೇಡಿ. ಅಲ್ಲಿಯೇ ನೀವು ಮೋಸಹೋಗುವುದು. ತಿಳಿಯಿರಿ, ವಿಕಸನಗೊಳ್ಳುತ್ತಾ ಎಲ್ಲವನ್ನೂ ಮೀರುತ್ತಾ ಪ್ರತಿಯೊಂದು ಸೀಮೆಯನ್ನೂ ಪ್ರತಿಯೊಂದು ಆಲೋಚನೆಯನ್ನೂ ಸತತವಾಗಿ ಬಿಡುತ್ತಾ ಇರಿ.

ನಿಜವಾದ ಗುರುಗಳ ಮೇಲೆ ಅಥವಾ ನಿಜವಾದ ವಿಶ್ವಶಕ್ತಿಯ ಮೇಲೆ ಅಥವಾ ನಿಜವಾದ ದೇವರ ಮೇಲೆ ಧ್ಯಾನಿಸಿರಿ. ನೀವು ದೈವಸಾರಾಂಶವನ್ನು ಕಂಡುಕೊಂಡಿದ್ದೀರೆಂದು ಭಾವಿಸಬಹುದು ಆದರೆ ಅದು ಸಾಧ್ಯವಿಲ್ಲ. ಏಕೆಂದರೆ ನಿಮ್ಮ ಮನಸ್ಸಿಗೆ ನಿಜವಾದ ದೇವರನ್ನು ಕಂಡುಕೊಳ್ಳಲು ಸಾಧ್ಯವಿಲ್ಲ! ನಿಮ್ಮ ಮನಸ್ಸಿಗೆ ದೇವರನ್ನು ಅರಿಯಲು ಸಾಧ್ಯವಾಯಿತೆಂದರೆ ನಿಮ್ಮ ಮನಸ್ಸು ದೇವರಿಗಿಂತ ಶ್ರೇಷ್ಠವಾದದ್ದೆಂದರ್ಥ. ಆದ್ದರಿಂದ ನೀವು ಅರಿತಿರುವುದು ದೇವರನ್ನಲ್ಲ, ಅದು ಕೇವಲ ದೇವರ ಒಂದು ಕಲ್ಪನೆಯನ್ನು. ಆ ಕಲ್ಪನೆಯನ್ನು ಬಿಟ್ಟು ಮತ್ತೆ ಪ್ರಯತ್ನಿಸಿರಿ. ಅದಕ್ಕಿಂತ ದೊಡ್ಡದ್ದನ್ನು ಗ್ರಹಿಸಿರಿ.

ಪರಮ ಸತ್ಯವನ್ನು ಸದಾ ಗ್ರಹಿಸಲು ಯತ್ನಿಸಿರಿ. ತಿಳಿಯಿರಿ, ನಿಮ್ಮ ಮನಸ್ಸಿನಿಂದ ಒಂದು ನಿರ್ದಿಷ್ಟವಾದ ಕಲ್ಪನೆಯನ್ನು ತೆಗೆದುಹಾಕಿದರೆ, ಆ ಕಲ್ಪನೆಯನ್ನು ತೆಗೆಯುವುದಷ್ಟೇ ಅಲ್ಲದೆ, ನಿಮ್ಮ ಮನಸ್ಸಿನಿಂದ ಮೂಲೆಯ ರಚನೆಯ ಒಂದು ಭಾಗವನ್ನು ಕಿತ್ತೆಸೆಯುತ್ತೀರಿ. ಪ್ರತಿ ಸಲವೂ ನಿಮ್ಮ ಮನಸ್ಸಿನಿಂದ ಕೆಲವು ಆಲೋಚನೆಗಳನ್ನು ತೆಗೆದುಹಾಕುತ್ತಿದ್ದರೆ, ಆಲೋಚನೆಗಳು ತ್ಯಜಿಸಲ್ಪಡುವುದಲ್ಲದೆ, ನಿಮ್ಮ ಮನಸ್ಸಿನ ಮೂಲೆಯ ರಚನೆಯ ಒಂದು ಭಾಗವೂ ಎಸೆಯಲ್ಪಡುತ್ತದೆ. ತ್ಯಜಿಸುತ್ತಾ, ತ್ಯಜಿಸುತ್ತಾ, ಕೊನೆಗೆ ಯಾವ ಮೂಲೆಯ ರಚನೆಯೂ ಇರುವುದಿಲ್ಲ! ಇದ್ದಕ್ಕಿದ್ದಂತೆ ಇಡೀ ಮನಸ್ಸೇ ಎಸೆಯಲ್ಪಟ್ಟಿರುತ್ತದೆ! ಹಾಗೂ ಮನಸ್ಸು ಎಂಬುದು ಇಲ್ಲದ ಸ್ಥಿತಿ ಅಂದರೆ ಮನೋರಹಿತ ಸ್ಥಿತಿಯ ಆನಂದವನ್ನು ಅನುಭವಿಸುತ್ತೀರಿ.

ಶಬ್ದ

1. ಶಬ್ದಮಾರುತದ ಕೇಂದ್ರ

ನಿಮ್ಮೊಳಗಿನ ಎಲ್ಲಾ ಶಬ್ದಗಳ ಕೇಂದ್ರವನ್ನು ಕಂಡುಕೊಳ್ಳಿರಿ ಹಾಗೂ ಎಲ್ಲಾ ಶಬ್ದಗಳನ್ನೂ ಮೀರಿ ಹೋಗಿರಿ.

ಕಾಲಾವಧಿ : 21 ನಿಮಿಷಗಳು

ನಾವು ಯಾವಾಗಲೂ ಒಂದು ಶಬ್ದದ ಚಂಡಮಾರುತದಲ್ಲಿರುತ್ತೇವೆ. ಶಬ್ದಗಳು ಸತತವಾಗಿ ನಮ್ಮತ್ತ ಚಲಿಸುತ್ತಾ ನಮ್ಮ ಮೇಲೆ ಅಪ್ಪಳಿಸುತ್ತಾ ನಮ್ಮನ್ನು ಆವರಿಸುತ್ತಿರುತ್ತದೆ. ಆದರೆ ಈ ಶಬ್ದಮಾರುತದ ಮಧ್ಯದಲ್ಲಿ ನಾವು ಕೇಳದಿರುವ ಒಂದು ನಿಶ್ಯಬ್ದತೆಯಿದೆ. ಈ ಧ್ಯಾನವು ಶಬ್ದಮಾರುತದ ಮಧ್ಯದಲ್ಲಿರುವ ಆ ನಿಶ್ಯಬ್ದತೆಯನ್ನು ಅರಿಯುವಂತೆ ಮಾಡುತ್ತದೆ.

ಎಲ್ಲಾದರೂ ಒಂದೆಡೆ ಕುಳಿತುಕೊಳ್ಳಿರಿ. ಶಬ್ದವು ಬಹಳವಿದ್ದಷ್ಟೂ ಒಳ್ಳೆಯದು! ಸತತವಾಗಿ ಗಲಾಟೆಯಿರುವ ಒಂದು ಸ್ಥಳವನ್ನು ನೋಡಿಕೊಳ್ಳಿರಿ. ಅಂದರೆ, ಹರಿಯುತ್ತಿರುವ ನದಿ, ಜಲಪಾತ ಅಥವಾ ಸಮುದ್ರ ತೀರದ ಅಲೆಗಳ ರಭಸದ ಧ್ವನಿ ಅಥವಾ ರೈಲು ನಿಲ್ದಾಣ ಅಥವಾ ಮಾರುಕಟ್ಟೆಯಾಗಿರಬಹುದು.

ನಿಶ್ಯಬ್ದವಾಗಿ ಕುಳಿತುಕೊಳ್ಳಿರಿ. ಶಬ್ದಗಳು ಎಲ್ಲಾ ದಿಕ್ಕುಗಳಿಂದ ಶಬ್ದ ತರಂಗಗಳಾಗಿ ನಿಮ್ಮೆಡೆಗೆ ಬರುತ್ತಿರುವಂತೆ ಭಾವಿಸಿರಿ. ಎಲ್ಲಾ ದಿಕ್ಕುಗಳಿಂದಲೂ ಬರುವ ಶಬ್ದಗಳಿಂದ ನೀವೇ ಈ ಶಬ್ದ ಮಾರುತದ ಕೇಂದ್ರಬಿಂದುವಾದಂತೆ ಭಾವಿಸಿರಿ. ಈಗ ನೀವು ಕೇಂದ್ರ ಮಧ್ಯದಲ್ಲಿದ್ದೀರಿ. ಶಬ್ದಗಳು ನಿಮ್ಮೆಡೆಗೆ ಹರಿಯುತ್ತಿವೆ.

ಸ್ಪಷ್ಟವಾಗಿ ಭಾವಿಸಿರಿ, ನೀವಿರುವ ಕೇಂದ್ರ ಮಧ್ಯದಲ್ಲಿ ಯಾವ ಶಬ್ದವೂ ಇಲ್ಲ! ಕೇಂದ್ರಮಧ್ಯದಲ್ಲಿ ಸಂಪೂರ್ಣ ನಿಶ್ಯಬ್ದತೆಯಿದೆ. ಮಧ್ಯದಲ್ಲಿ ಶಬ್ದವಿದ್ದಿದ್ದರೆ ಹೊರಗಿನ ಶಬ್ದಗಳು ನಿಮಗೆ ಕೇಳಿಸುತ್ತಲೇ ಇರಲಿಲ್ಲ. ಶಬ್ದಗಳು ನಿಮ್ಮನ್ನು ಪ್ರವೇಶಿಸುತ್ತಿವೆ, ಭೇದಿಸುತ್ತಿವೆ ಆದರೆ ಅವು ಕೇಂದ್ರಮಧ್ಯದಲ್ಲಿ ನಿಂತುಹೋಗುತ್ತವೆ.

ನಿಮ್ಮೊಳಗೆ ಎಲ್ಲಾ ಶಬ್ದಗಳೂ ನಿಂತುಹೋಗುವ ಒಂದು ಸ್ಥಳವಿದೆ. ಆ ಸ್ಥಳದಿಂದಲೇ ಪ್ರತಿಯೊಂದು ಶಬ್ದವೂ ಕೇಳಿಸುವುದು. ಆ ಸ್ಥಳವನ್ನು ಕಂಡುಹಿಡಿಯಿರಿ.

ಅದನ್ನು ಕಂಡುಹಿಡಿದ ಕೂಡಲೇ ಇದ್ದಕ್ಕಿದ್ದಂತೆ ನಿಮ್ಮ ಅರಿವು ಶಬ್ದದಿಂದ ಕೂಡಿರುವ ಹೊರಪ್ರಪಂಚದಿಂದ ಒಳಮುಖವಾಗುತ್ತದೆ, ನೀವು ನಿಶ್ಯಬ್ದದ ಕೇಂದ್ರಮಧ್ಯದಲ್ಲಿ ಇರುತ್ತೀರಿ. ಅಲ್ಲಿ ಯಾವ ಶಬ್ದವೂ ಪ್ರವೇಶಿಸಲಾಗುವುದಿಲ್ಲ. ಆ ಸ್ಥಳವೇ ನಿಮ್ಮ ಕೇಂದ್ರಬಿಂದು.

ಆ ನಿಶ್ಯಬ್ದತೆಯನ್ನು ಒಮ್ಮೆ ಅನುಭವಿಸಿದರೆ ನಿಮಗೆ ಎಂದಿಗೂ ಮತ್ತಾವ ಶಬ್ದದಿಂದಲೂ ತೊಂದರೆಯಾಗುವುದಿಲ್ಲ. ಶಬ್ದದಿಂದ ನೀವು ವಿಚಲಿತರಾಗುವುದಿಲ್ಲ.

ನಾವು ಯಾವಾಗಲೂ ಶಬ್ದಗಳನ್ನು ನಮ್ಮ ಕಿವಿಗಳಿಂದ ಕೇಳುತ್ತಿದ್ದೇವೆಂದು ತಿಳಿದಿದ್ದೇವೆ. ಈ ತಂತ್ರದಿಂದ ಶಬ್ದಗಳು ಕಿವಿಯಿಂದ ಅಥವಾ ತಲೆಯಿಂದ ಕೇಳಲ್ಪಡುವುದಿಲ್ಲವೆಂದು ಕಂಡುಕೊಳ್ಳುತ್ತೀರಿ. ಶಬ್ದವು ಯಾವಾಗಲೂ ನಾಭಿ ಪ್ರದೇಶದಲ್ಲಿ ಕೇಳಿಸುತ್ತದೆ; ಅದೇ ಶಬ್ದದ ಮಧ್ಯಕೇಂದ್ರ.

ಈ ತಂತ್ರವನ್ನು ಹಾಡುಗಳೊಂದಿಗೆ ಯತ್ನಿಸಲಾಗುವುದಿಲ್ಲ ಏಕೆಂದರೆ ಹಾಡಿನ ಸಾಹಿತ್ಯವು ನಿಮಗೆ ಅರ್ಥವಾಗುತ್ತದೆ. ಆಗ ನೀವು ಅರ್ಥದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತೀರಿ. ಆದ್ದರಿಂದ ಅದು ಬರೀ ಒಂದು ರೀತಿಯ ಗಲಾಟೆಯೇ ಆಗಿರಬೇಕು.

ದೃಶ್ಯೀಕರಣ

1. ಕಮಲದ ದಾರದ ಬೆಳಕು

ಬುದ್ಧಿವಂತಿಕೆ, ಚೈತನ್ಯ ಹಾಗೂ ಜ್ಞಾನೋದಯವು ನಿಮ್ಮಲ್ಲಿ ಜಾಗೃತವಾಗಲು ಬಿಡಿ.

ಕಾಲಾವಧಿ : 21 ನಿಮಿಷಗಳು

ಮಾನಸಿಕವಾಗಿ ನಿಮ್ಮ ಬೆನ್ನು ಹುರಿಯನ್ನು ಒಂದು ಸಾರಿ ಸೂಕ್ಷ್ಮವಾಗಿ ಗಮನಿಸಿ. ಆಗ ಈ ಧ್ಯಾನದಲ್ಲಿ ಸುಲಭವಾಗಿ ಅದನ್ನು ದೃಶ್ಯೀಕರಿಸಿಕೊಳ್ಳಲು ಸಹಾಯವಾಗುತ್ತದೆ.

ಮಧ್ಯೆ ಬೆನ್ನು ಹುರಿಯ ಉದ್ದಕ್ಕೂ ಅದರ ಪಕ್ಕದಲ್ಲಿ ಒಂದು ತೆಳ್ಳನೆಯ ದಾರದಂತೆ ಒಂದು ಶಕ್ತಿಯ ಹರಿವು ಇದೆ. ಅದನ್ನೇ ನಾವು ‘ಸುಶುಮ್ನ ನಾಡಿ’ ಎಂದು ಕರೆಯುವುದು. ಅದನ್ನು ಗಮನಿಸಿರಿ. ಆಗ ಸುಶುಮ್ನ ನಾಡಿಯನ್ನು ದೃಶ್ಯಿಕರಿಸಿಕೊಳ್ಳಲು ಸುಲಭವಾಗುತ್ತದೆ. ಅದು ಬೆನ್ನುಹುರಿಯ ಕೆಳಭಾಗದಿಂದ ಆರಂಭಗೊಂಡು ನಮ್ಮ ದೇಹದ ಎಲ್ಲಾ ಏಳು ಮುಖ್ಯಶಕ್ತಿಕೇಂದ್ರಗಳಾದ ಚಕ್ರಗಳ ಮೂಲಕ ನೆತ್ತಿಯವರೆಗೂ ಸಾಗುತ್ತದೆ. ಇಡಾ ನಾಡಿ ಎಂಬ ಮತ್ತೊಂದು ತೆಳ್ಳನೆಯ ದಾರವು ಸುಶುಮ್ನ ನಾಡಿಯ ಎಡಭಾಗದಲ್ಲಿ ಆರಂಭವಾಗಿ ಕೊನೆಗೊಳ್ಳುತ್ತದೆ ಹಾಗೂ ಪಿಂಗಳನಾಡಿ ಎಂಬ ಮೂರನೆಯ ತೆಳ್ಳನೆಯ ದಾರವು ಸುಶುಮ್ನ ನಾಡಿಯ ಬಲಭಾಗದಲ್ಲಿ ಆರಂಭಗೊಂಡು ಕೊನೆಗೊಳ್ಳುತ್ತದೆ. ಇಡಾ ಹಾಗೂ ಪಿಂಗಳ ನಾಡಿಗಳು ಸುಶುಮ್ನದ ಸುತ್ತಲೂ ಸುತ್ತಿಕೊಂಡು ಪ್ರತಿಯೊಂದು ಶಕ್ತಿಕೇಂದ್ರದಲ್ಲೂ ಸಂಧಿಸುತ್ತವೆ ಮತ್ತು ಮೂರೂ ನಾಡಿಗಳು ಹುಬ್ಬುಗಳ ನಡುವೆ ಮಧ್ಯಮಾರ್ಗದಲ್ಲಿ ಸಂಧಿಸುತ್ತವೆ.

ನಿಮ್ಮ ಚೈತನ್ಯವು ವೈಚಾರಿಕತೆಯಿಂದ ಅಂದರೆ ನಿಮ್ಮ ತಾರ್ಕಿಕ ಬುದ್ಧಿಯಿಂದ ಹೀರಲ್ಪಟ್ಟಾಗ ಇಡಾ ನಾಡಿಯು ಕ್ರಿಯಾಶೀಲವಾಗಿರುತ್ತದೆ ಹಾಗೂ ನಿಮ್ಮ ವ್ಯವಸ್ಥೆಯ ಸೂಕ್ಷ್ಮ ಚೈತನ್ಯವು ಮೇಲ್ಮುಖವಾಗಿ ಹರಿಯುತ್ತಿರುತ್ತದೆ. ನಿಮ್ಮ ಶಕ್ತಿಯು ಲೈಂಗಿಕ ಕೇಂದ್ರದಿಂದ ಹೀರಲ್ಪಟ್ಟಾಗ ಪಿಂಗಳ ನಾಡಿಯು ಕ್ರಿಯಾತ್ಮಕವಾಗಿರುತ್ತದೆ ಹಾಗೂ ಚೈತನ್ಯವು ಕೆಳಮುಖವಾಗಿ ಹರಿಯುತ್ತಿರುತ್ತದೆ. ಯಾವಾಗ ನಿಮ್ಮಲ್ಲಿ ಜ್ಞಾನೋದಯವು ಕ್ರಿಯಾತ್ಮಕಗೊಳ್ಳುತ್ತದೋ ಆಗ ಮಧ್ಯದ ಸುಶುಮ್ನ ನಾಡಿಯು ಸಕ್ರಿಯವಾಗುತ್ತದೆ ಮತ್ತು ನಿಮ್ಮ ಬುದ್ಧಿಶಕ್ತಿಯು ಜಾಗೃತವಾಗುತ್ತದೆ!

ನಿಮ್ಮೆಲ್ಲಾ ತಾರ್ಕಿಕ ಬುದ್ಧಿಯ ಆಲೋಚನೆಗಳೂ ಚೈತನ್ಯವನ್ನು ಮೇಲಕ್ಕೆ ಎಳೆಯುತ್ತವೆ. ನಿಮ್ಮ ಸುಖ ಹಾಗೂ ಸಂತೋಷಗಳ ಎಲ್ಲಾ ಆಲೋಚನೆಗಳೂ ನಿಮ್ಮ ಶಕ್ತಿಯನ್ನು ಕೆಳಕ್ಕೆ ಎಳೆಯುತ್ತವೆ. ಈಗ ನೀವು ನಿಮ್ಮ ಜ್ಞಾನೋದಯ ಅಥವಾ ಬುದ್ಧಿವಂತಿಕೆ ಜಾಗೃತವಾಗಲು ನಿಮ್ಮ ಚೈತನ್ಯವನ್ನು ಮಧ್ಯದಲ್ಲಿರುವ ಸುಶುಮ್ನ ನಾಡಿಯತ್ತ ಹರಿಸಲಿದ್ದೀರಿ.

ಕಣ್ಣುಗಳನ್ನು ಮುಚ್ಚಿಕೊಂಡು ನೆಟ್ಟಗೆ ಕುಳಿತುಕೊಳ್ಳಿರಿ. ನಿಮ್ಮ ಬೆನ್ನುಹುರಿ ನೆಟ್ಟಗಿರಲಿ. ನಿಮ್ಮ ಬೆನ್ನು ಹುರಿಯು ನಿಮ್ಮ ಬೆನ್ನು ಹುರಿಯ ಮೂಲದಿಂದ ನೆತ್ತಿಯ ಭಾಗದವರೆಗೂ ಒಂದು ಸಣ್ಣ ತಾವರೆಯ ದಾರದಂತೆ ಇರುವುದಾಗಿ ಭಾವಿಸಿರಿ. ಒಂದು ಸಣ್ಣ ಬೆಳಕಿನ ದಾರವು ಬೆನ್ನುಹುರಿಯ ಕೆಳಭಾಗದಿಂದ ಆರಂಭವಾಗಿ ನಿಮ್ಮ ತಲೆಯ ನೆತ್ತಿಯ ಭಾಗದವರೆಗೂ ಬೆನ್ನುಹುರಿಯ ಮಧ್ಯದಲ್ಲಿ ಇರುವುದಾಗಿ ಚಿತ್ರಿಸಿಕೊಳ್ಳಿರಿ.

ನಿಮ್ಮ ಗಮನವನ್ನು ಈ ಬೆಳಕಿನ ದಾರದ ಮೇಲಿಡಿರಿ. ಈ ಸುಶುಮ್ನ ನಾಡಿಯ ಮೂಲಕ ನಿಮ್ಮ ಬೆನ್ನು ಹುರಿಯ ಮೂಲದಿಂದ ನೆತ್ತಿಯವರೆಗೂ ಶಕ್ತಿ ಹರಿಯುತ್ತಿರುವುದನ್ನು ವೀಕ್ಷಿಸಿರಿ. ನಿಮ್ಮ ಅರಿವೆಲ್ಲವೂ ನಿಮ್ಮ ಸುಶುಮ್ನ ನಾಡಿಯ ಮೇಲಿರಲಿ.

ಈ ತಂತ್ರವನ್ನು ಕಡೇ ಪಕ್ಷ 21 ನಿಮಿಷಗಳ ಕಾಲ 10 ದಿನಗಳು ಮಾಡಿ ನೋಡಿರಿ. 10 ಅಥವಾ 11 ದಿನಗಳಲ್ಲಿ ನಿಮ್ಮಲ್ಲಿ ಬುದ್ಧಿವಂತಿಕೆ, ಶಕ್ತಿ, ಜ್ಞಾನೋದಯವು ಜಾಗೃತವಾಗುವುದನ್ನು ಕಾಣುವಿರಿ.

2. ಆಕಾಶದೊಡನೆ ಸಂಬಂಧ

ನಿಮ್ಮ ಪ್ರಜ್ಞೆಯನ್ನು ವಿಸ್ತರಿಸಿರಿ ಹಾಗೂ ನಿಮ್ಮ ಭಾವನೆಗಳನ್ನು ಜಯಿಸಿರಿ.

ಕಾಲಾವಧಿ : 21 ನಿಮಿಷಗಳು

ನಿಮ್ಮನ್ನು ಒಂದು ದೊಡ್ಡ ಬೆಳಕಿನ ಶರೀರವೆಂಬಂತೆ ಚಿತ್ರೀಕರಿಸಿಕೊಳ್ಳಿರಿ. ನೀವು ಪ್ರೀತಿಸುವ ಹಾಗೂ ಅಷ್ಟೇನೂ ಪ್ರೀತಿಸದ ನಿಮ್ಮೆಲ್ಲಾ ಭಾವನಾತ್ಮಕ ಸಂಬಂಧಗಳನ್ನೂ ನಿಮ್ಮ ಬೆಳಕಿನ ಶರೀರ (ಆಕಾಶ ಶರೀರ ಅಥವಾ ಸೂಕ್ಷ್ಮ ಶರೀರ)ದ ಒಂದು ಭಾಗದಂತೆ ವೀಕ್ಷಿಸಿರಿ. ನಿಮಗೆ ಭಾವನಾತ್ಮಕವಾಗಿ ಸಂಬಂಧಪಟ್ಟ ಯಾರಾದರೂ ಬೇರೆಯ ದೇಶದಲ್ಲಿದ್ದರೆ, ನಿಮಗೆ ಒಂದು ಅಗಾಧವಾದ ಶರೀರವಿದ್ದು, ಅದು ಆ ದೇಶದವರೆಗೂ ವ್ಯಾಪಿಸಿ ಆ ವ್ಯಕ್ತಿಯೂ (ಅಥವಾ ವ್ಯಕ್ತಿಗಳೂ) ಆ ದೇಹದೊಳಗಿರುವಂತೆ ಚಿತ್ರಿಸಿಕೊಳ್ಳಿರಿ!

ನಿಮ್ಮೆಲ್ಲಾ ಭಾವನಾತ್ಮಕ ಸಂಬಂಧಗಳೂ ದ್ವೇಷದ್ದೇ ಆದರೂ ಪ್ರೀತಿಯದ್ದೇ ಆದರೂ ಅವು ನಿಮ್ಮ ಸೂಕ್ಷ್ಮ ಶರೀರದೊಳಗಿರಲಿ. ಎರಡನೆಯದಾಗಿ ನಿಮ್ಮ ಸೂಕ್ಷ್ಮ ಶರೀರದ ದೃಶ್ಯೀಕರಣದ ಜೊತೆಗೆ, ನಿಮ್ಮ ಅಂತರಂಗದ ಕೇಂದ್ರಮಧ್ಯದ ಅರಿವೂ ಇರಲಿ.

ಈ ವೀಕ್ಷಣೆಯನ್ನು 10 ದಿನಗಳ ಕಾಲ ಮಾಡಿರಿ.