ಅನುಬಂಧ
This text was machine-transcribed from the printed book and may contain errors. Select the words and choose “Report a mistake”.
ಪರಮಹಂಸ ನಿತ್ಯಾನಂದರ ವಿಷಯವಾಗಿ
ಪರಮಹಂಸ ನಿತ್ಯಾನಂದರು ಇಂದು ನಮ್ಮೊಂದಿಗಿರುವ ಒಬ್ಬ ಪರಮಜ್ಞಾನಿ. ದೈನಂದಿನ ಒತ್ತಡದಿಂದ ಜೀವನ್ಮುಕ್ತಿಯಷ್ಟು ಗಹನವಾದ ಅನ್ವೇಷಣೆಯವರೆಗೆ ಅವರು ಪರಿಹಾರಗಳನ್ನು ನೀಡುತ್ತಾರೆ. ಇದು ಜಗತ್ತಿನಾದ್ಯಂತ ಧ್ಯಾನ ಹಾಗೂ ಆಂತರಿಕ ಆನಂದಕ್ಕಾಗಿ ಇರುವ ಆಂದೋಲನ.
ನಿತ್ಯಾನಂದರು ಚಿಕ್ಕ ವಯಸ್ಸಿನಲ್ಲಿಯೇ ಗೃಹತ್ಯಾಗ ಮಾಡಿ, ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತ, ಅನೇಕ ಯೋಗಿವರ್ಯರು ಹಾಗೂ ಮುಮುಕ್ಷುಗಳೊಂದಿಗೆ ಇದ್ದು, ಅನೇಕ ವಿಷಯಗಳನ್ನು ಅಧ್ಯಯನ ಮಾಡಿ, ಭಾರತದಾದ್ಯಂತ ಸಂಚರಿಸಿದರು. ಅವರು ತಮ್ಮ ನೈಜ ಜ್ಞಾನವನ್ನು ಧ್ಯಾನ, ಯೋಗ, ಜ್ಞಾನ, ಭಕ್ತಿ, ತಂತ್ರ ಹಾಗೂ ಇತರ ಪೌರಾತ್ಯ ಅಲೌಕಿಕ ವಿಜ್ಞಾನಗಳ ಮೂಲಕ ಪಡೆದುಕೊಂಡರು. ನಿತ್ಯಾನಂದರು ತಮ್ಮ ಜ್ಞಾನಪೂರಿತ ಅಂತರ್ದೃಷ್ಟಿಯಿಂದ ಮಾನವನ ಸ್ವಭಾವದೊಳಹೊಕ್ಕು ಮನುಕುಲಕ್ಕೆ ತಮ್ಮ ಧೈಯವನ್ನು ನಿರೂಪಿಸಿದ್ದಾರೆ.
ಪ್ರಾಚೀನ ಪದ್ಧತಿಯ ಮುಕ್ತ ಜೀವನದಲ್ಲಿ ನೆಲೆಸಿ, ನಿತ್ಯಾನಂದರು ಜಗತ್ತಿನ ಎಲ್ಲಾ ಧರ್ಮಗಳನ್ನೂ ಅಂಗೀಕರಿಸಿದ್ದಾರೆ. ಅವರು ಎಲ್ಲಾ ಸಮಾಜ, ಸಂಸ್ಕೃತಿ, ಭಾಷೆ, ವಯಸ್ಸು, ಲಿಂಗ ಭೇದಗಳನ್ನು ದಾಟಿ ಜಗತ್ತಿನ ಎಲ್ಲೆಡೆಗಳಿಂದಲೂ ಜನರನ್ನು ಆಕರ್ಷಿಸುತ್ತಿದ್ದಾರೆ.
ಬೆಂಗಳೂರಿನಲ್ಲಿರುವ ಧ್ಯಾನಪೀಠವು ಪ್ರಾರಂಭದಿಂದಲೇ, ಜಗತ್ತಿನೆಲ್ಲೆಡೆಯ ಭಕ್ತರಿಗೂ ಆಧ್ಯಾತ್ಮಿಕ ಕೇಂದ್ರವಾಗಿದೆ. ಈ ಸಂಸ್ಥೆಯು ಅಸಂಖ್ಯಾತ ಸೇವೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ನೀಡುತ್ತಿದೆ. ಜಗತ್ತಿನಾದ್ಯಂತ ಇರುವ ಆಶ್ರಮಗಳು ಹಾಗೂ ಕೇಂದ್ರಗಳು ಒಂದು ಆನಂದಮಯ ಜೀವನದ ನಿರ್ಮಾಣಕ್ಕಾಗಿ ಲೌಕಿಕ ಹಾಗೂ ಪಾರಮಾರ್ಥಿಕ ಜಗತ್ತುಗಳು ಒಂದಾಗುವ ಪರಿಮಾಣ ಆಧ್ಯಾತ್ಮಿಕತೆಯನ್ನು ನೀಡುತ್ತವೆ.
ಈ ಸಂಸ್ಥೆಯ ಸೇವೆಗಳು ಯಾವುವೆಂದರೆ: ಧ್ಯಾನ, ಯೋಗ, ಸಂಘ-ಸಂಸ್ಥೆಗಳ ಮುಖಂಡತ್ವದ ಕಾರ್ಯಕ್ರಮಗಳು, ನಿತ್ಯಾ ಸ್ಪಿರಿಚುಯಲ್ ಹೀಲಿಂಗ್ ಪದ್ಧತಿಯ ಮೂಲಕ ಉಚಿತ ಚಿಕಿತ್ಸೆ, ಯುವಕರಿಗೆ ಉಚಿತ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಗಳಿಗೆ ಪ್ರೋತ್ಸಾಹ, ಸತ್ಸಂಗಗಳು, ಉಚಿತ ವೈದ್ಯಕೀಯ ಶಿಬಿರಗಳು ಹಾಗೂ ನೇತ್ರ ಶಸ್ತ್ರ ಚಿಕಿತ್ಸೆಗಳು, ಜಗತ್ತಿನಾದ್ಯಂತ ಎಲ್ಲಾ ಆಶ್ರಮಗಳಲ್ಲಿಯೂ ಉಚಿತ ಭೋಜನ, ಆಶ್ರಮದ ಗುರುಕುಲದಲ್ಲಿ ಮಕ್ಕಳಿಗೆ ಸಮಗ್ರ ಶಿಕ್ಷಣ, ಭಾರತದಲ್ಲಿ ಲೈಫ್ ಬ್ಲಿಸ್ ಟೆಕ್ನಾಲಜಿ ಎಂಬ ಎರಡು ವರ್ಷಗಳ ಉಚಿತ, ವಸತಿಯುತ, ಆಧ್ಯಾತ್ಮಿಕ ತರಬೇತಿ ಕಾರ್ಯಕ್ರಮ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಯುವಕರಿಗಾಗಿ ಲೈಫ್ ಬ್ಲಿಸ್ ಇಂಜಿನಿಯರಿಂಗ್ ಎಂಬ ಮೂರು ತಿಂಗಳ ವಸತಿಯುತ ಕಾರ್ಯಕ್ರಮಗಳು, ಇತ್ಯಾದಿ. ಅಮೆರಿಕಾದ ಲೈಫ್ ಬ್ಲಿಸ್ ಫೌಂಡೇಶನ್ ನಿತ್ಯಾನಂದರ ಪ್ರಭಾವಶಾಲಿ ಬೋಧನೆಗಳನ್ನೂ, ಧ್ಯಾನಗಳನ್ನೂ, ಉತ್ತರ ಅಮೆರಿಕ, ಯೂರೋಪ್ ಹಾಗೂ ಜಗತ್ತಿನ ಮತ್ತಿತರ ಭಾಗಗಳಿಗೆ ಹರಡುತ್ತದೆ.
ನಿತ್ಯಾನಂದರು ಹೇಳುತ್ತಾರೆ, 'ವೈಯಕ್ತಿಕ ಪ್ರಜ್ಞೆಯು ವಿಶ್ವಪ್ರಜ್ಞೆಯಲ್ಲಿ ಲೀನವಾದಾಗ, ಜೀವನ್ಮುಕ್ತಿಯು ವಿಕಸನಗೊಳ್ಳುತ್ತದೆ. ನೀವು ಜೀವನ್ಮುಕ್ತಿಯನ್ನು ಬಾಳಲು ಪ್ರಾರಂಭಿಸಿದಾಗ, ನಿಮ್ಮ ಸುತ್ತಲೂ ಮಾನವ ಪ್ರಜ್ಞೆಯನ್ನು ಸಹಜವಾಗಿ ಏರಿಸುತ್ತೀರಿ. ಜೀವನ್ಮುಕ್ತಿಯು ವಿಶ್ವಶಾಂತಿ ಹಾಗೂ ಆಂತರಿಕ ಆನಂದದ ಕೀಲಿಕೈಯನ್ನು ಹೊಂದಿದೆ. ಮಾನವಪ್ರಜ್ಞೆಯಿಂದ ದೈವೀಪ್ರಜ್ಞೆಯ ಪರಿವರ್ತನೆಯಲ್ಲಿ ಪ್ರತಿಯೊಬ್ಬರೂ ಮುನ್ನಡೆಯುವವರಾಗಬೇಕು' ಎಂದು.
ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳು
ನಿತ್ಯಾನಂದ ಸಂಸ್ಥೆಯು ದೇಹ, ಮನಸ್ಸು ಮತ್ತು ಆತ್ಮಗಳ ಮಟ್ಟಗಳಲ್ಲಿ ಲಕ್ಷಾಂತರ ಜನರಿಗೆ ಪ್ರಯೋಜನವಾಗುವಂತಹ ವಿಶಿಷ್ಟವಾದ ಧ್ಯಾನ ಕಾರ್ಯಕ್ರಮಗಳನ್ನು ಪ್ರಪಂಚದಾದ್ಯಂತ ನೀಡುತ್ತದೆ. ಅವುಗಳಲ್ಲಿ ಕೆಲವನ್ನು ಈ ಕೆಳಗೆ ನಮೂದಿಸಲಾಗಿದೆ.
ಇನ್ನರ್ ಅವೇಕನಿಂಗ್ - ಅಂತರ್ಜಾಗೃತಿ
ಆಂತರಿಕ ಜಾಗೃತಿ ಎಂಬ ಕಾರ್ಯಕ್ರಮವು ತೀವ್ರವಾಗಿ ಪರಿವರ್ತಿಸಬಲ್ಲ ಒಂದು ಬೃಹತ್ ಕಾರ್ಯಕ್ರಮ. ಇದು 21 ದಿನಗಳ ಚೈತನ್ಯದ ಆವರ್ತ. ಲೌಕಿಕದಿಂದ ದಿವ್ಯತೆಯೆಡೆಗೆ ಸಾಗುವ, ಹಿಂದಿನ ಸ್ಥಿತಿಗೆ ಬಾರದಂತಹ ರಸವಿದ್ಯೆಯನ್ನು ಇದು ಕಲಿಸುತ್ತದೆ. ನಿಜಸಾಧಕನಿಗೆ ಗುರುಗಳು ಸಂಪೂರ್ಣವಾಗಿ ಲಭ್ಯವಾಗಿದ್ದು, ಅಂತಿಮವಾದುದಕ್ಕೆ ಮಾರ್ಗದರ್ಶನ ನೀಡುವ ಕಾರ್ಯಕ್ರಮವಿದು. ಅಷ್ಟೇ ಅಲ್ಲದೆ, ಬೆಂಗಳೂರು ಆಶ್ರಮದ ಪ್ರಬಲವಾದ ಶಕ್ತಿ ಕ್ಷೇತ್ರದಲ್ಲಿ 21 ದಿನಗಳು ವಾಸಿಸುವ ಹಾಗೂ ಜೀವಮಾನದಲ್ಲಿ ಒಮ್ಮೆಯೋ ದೊರೆಯಬಹುದಾದ ಮಹದವಕಾಶವನ್ನು ಇದು ನೀಡುತ್ತದೆ.
ನಿತ್ಯಾನಂದರು ಹೇಳುತ್ತಾರೆ
'ಇನ್ನರ್ ಅವೇಕನಿಂಗ್ ಕಾರ್ಯಕ್ರಮವನ್ನು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಜೀವನ್ಮುಕ್ತಿಯ ಎಲ್ಲಾ ಅಂಶಗಳನ್ನೂ ಪುನರುತ್ಪಾದಿಸಲು ವಿನ್ಯಾಸಗೊಳಿಸಲಾಗಿದೆ.
ನನ್ನ ಪ್ರತಿಯೊಂದು ಕಾರ್ಯಕ್ರಮವೂ ನನ್ನ ಒಂದು ಅಂಶವನ್ನು, ಒಂದು ಆಯಾಮವನ್ನು, ನಿಮ್ಮಲ್ಲಿ ಪುನರುತ್ಪಾದಿಸಲು ನಿಯೋಜಿಸಲಾಗಿದೆ. ಉದಾಹರಣೆಗೆ ಲೈಫ್ ಬ್ಲಿಸ್ ಪ್ರೋಗ್ರಾಂ ಹಂತ 1 (LBP 1) ಎಂಬುದು 'ಸಂತೋಷವಾಗಿ ಬಾಳುವ' ಒಂದು ಅಂಶವನ್ನು ಪುನರುತ್ಪಾದಿಸಲು ಯೋಜಿಸಲಾಗಿದೆ. ಲೈಫ್ ಬ್ಲಿಸ್ ಪ್ರೋಗ್ರಾಂ ಹಂತ 2 (NSP) ಎಂಬುದು 'ಮರಣವನ್ನು ಸುಂದರವಾಗಿ ಬಾಳುವ' ಮತ್ತೊಂದು ಆಯಾಮವನ್ನು ಪುನರುತ್ಪಾದಿಸಲು ನಿಯೋಜಿಸಲಾಗಿದೆ. ನಿತ್ಯಯೋಗವು 'ಯೋಗಿಕ ದೇಹವನ್ನು ಹೊಂದುವ' ಇನ್ನೊಂದು ಆಯಾಮವನ್ನು ಪುನರುತ್ಪಾದಿಸಲು ನಿಯೋಜಿಸಲಾಗಿದೆ. ಪ್ರತಿಯೊಂದು ಕಾರ್ಯಕ್ರಮವನ್ನೂ, ಜೀವನ್ಮುಕ್ತಿಯ ಒಂದು ಅಂಶವನ್ನು ನಿಮ್ಮಲ್ಲಿ ಪುನರುತ್ಪಾದಿಸಲು ನಿಯೋಜಿಸಲಾಗಿದೆ.
ನೀವು ಒಂದು ಆಯಾಮವನ್ನು ಅನುಭವಿಸಿದಾಗಲೆಲ್ಲ ಆಳವಾಗಿ ಹೋಗಲು ಒಂದು ಸುಯೋಗವನ್ನು, ಒಂದು ಸ್ಪೂರ್ತಿಯನ್ನು ಅಥವಾ ಭಾವನೆಯನ್ನು ಅನುಭವಿಸುತ್ತೀರಿ. ದುರದೃಷ್ಟಕರವಾಗಿ, ಜೀವನ್ಮುಕ್ತಿಯನ್ನು ಪಡೆಯಲು ಹಾಗೂ ಜೀವನ್ಮುಕ್ತಿಯಲ್ಲಿಯೇ ನೆಲೆಸಲಾರಂಭಿಸಲು ಒಂದೇ ಸದವಕಾಶವು ಸಾಲದು. ಅದು ಬಹುಶಃ ಜೀವನ್ಮುಕ್ತಿಯ ಒಂದು ಇಣುಕು ನೋಟವನ್ನು ಕಂಡಂತೆ.
ಈ ಕಾರ್ಯಕ್ರಮವು ಸಂಪೂರ್ಣವಾದ ಸಮಗ್ರ ರೀತಿಯಲ್ಲಿ ರಚಿಸಲಾಗಿದೆ - ಅದು ನಿತ್ಯಾನಂದಂ, ನಿತ್ಯಯೋಗಗಳಂತಹ ಕಾರ್ಯಕ್ರಮಗಳೆಲ್ಲವನ್ನೂ ಒಟ್ಟಾಗಿಸಿ ಅದಕ್ಕೂ ಹೆಚ್ಚಿನದ್ದಾಗಿ . . . ನನ್ನಲ್ಲಿರುವ ಜೀವನ್ಮುಕ್ತಿಯ ಅಂಶಗಳೆಲ್ಲವನ್ನೂ ನಿಮ್ಮಲ್ಲಿ ಪುನರುತ್ಪಾದಿಸುವುದೇ ಆಗಿದೆ.
ಇದೀಗ, ಇವೆಲ್ಲವೂ ನಿಮಗೆ ಒಂದೇ ಕಡೆಯಲ್ಲಿ ದೊರಕುತ್ತದೆ.
ಜೀವನವು ವಿಶ್ವದ ಹೊಸ ಆಯಾಮಗಳನ್ನು ಪ್ರತಿಕ್ಷಣವೂ ನಿಮಗೆ ಪರಿಚಯಿಸುತ್ತಿದೆ ಎಂಬ ತಿಳಿವಳಿಕೆಯೊಂದಿಗೆ ಬಾಳುವುದೇ 'ಜೀವನ್ಮುಕ್ತಿ'.
ಲೈಫ್ ಬ್ಲಿಸ್ ಇಂಜಿನಿಯರಿಂಗ್
ಒಬ್ಬ ಜ್ಞಾನಿಯ ತೀವ್ರ ಹಾಗೂ ಪರಿವರ್ತನಾಶಕ್ತಿಯ ಸನ್ನಿಧಿಯಲ್ಲಿ ಇರುವ ಒಂದು ವಸತಿಯುತ ಕಾರ್ಯಕ್ರಮ. ಇದು ಬೆಂಗಳೂರಿನಲ್ಲಿ ನಡೆಯುವ 90 ದಿನಗಳ ಕಾರ್ಯಕ್ರಮ. ಇದು ಯೋಗ ಧ್ಯಾನಗಳ ಮೂಲಕ ನಿಮ್ಮನ್ನು ಅಸ್ತಿತ್ವದ ಅಂತರಾಳಕ್ಕೆ ಕೊಂಡೊಯ್ಯುತ್ತದೆ ಮತ್ತು ನಿಮ್ಮ ನೈಜ ಪರಾಕಾಷ್ಠೆಗೆ ಜಾಗೃತವಾಗಲು ಸಹಕರಿಸುತ್ತದೆ. ನಿಮ್ಮ ದೇಹ ಮನಸ್ಸುಗಳನ್ನು ಮುಕ್ತ ಜೀವನಕ್ಕೆ ನಿಯಂತ್ರಿಸಲು ಗುರುಗಳಾದ
ಪರಮಹಂಸ ನಿತ್ಯಾನಂದರಿಂದ ಇದನ್ನು ನೇರವಾಗಿ ಕಲಿಯಿರಿ.
LBE ಯಿಂದ ನೀವು ಇವುಗಳನ್ನು ಹೊಂದಿ
• ಜೀವನದ ಅತ್ಯಂತ ನೈಜರೂಪವಾದ ಜೀವನ್ಮುಕ್ತಿಯನ್ನು ಅನುಭವಿಸಿರಿ.
• ಜಾಗೃತ ಪ್ರಜ್ಞೆಯ ಪ್ರಾಚೀನ ಆಂತರಿಕ ಜಗತ್ತಿನ ವಿಜ್ಞಾನವನ್ನು ನಿತ್ಯಾನಂದರಿಂದಲೇ ನೇರವಾಗಿ ಹೇಳಲ್ಪಟ್ಟ ಬೋಧನೆ ಹಾಗೂ ಧ್ಯಾನಗಳ ಮೂಲಕ ಕಲಿತು, ಗ್ರಹಿಸಿರಿ.
• ಪತಂಜಲಿ ಮಹರ್ಷಿಗಳ ಪ್ರಾಚೀನ ಯೋಗ ಪದ್ಧತಿಯಿಂದ ನಿತ್ಯಾನಂದರು ಜೀವನ್ಮುಕ್ತಿಗಾಗಿ ವಿನ್ಯಾಸಗೊಳಿಸಿರುವ ನಿತ್ಯಯೋಗದ ಪ್ರತಿದಿನದ ಅಭ್ಯಾಸಗಳ ಮೂಲಕ ಒಂದು ಯೋಗಿಕ ದೇಹವನ್ನು ಸೃಷ್ಟಿಸಿಕೊಳ್ಳಿರಿ. ನಿತ್ಯಯೋಗವು ಹೆಚ್ಚಿನ ಚೈತನ್ಯ, ಮಾನಸಿಕ ಸ್ಪಷ್ಟತೆ, ದೈಹಿಕ ಹಾಗೂ ಭಾವನಾತ್ಮಕ ಸ್ವಾಸ್ಥ್ಯಕ್ಕಾಗಿ ದೇಹ, ಮನಸ್ಸು, ಆತ್ಮಗಳನ್ನು ಒಂದುಗೂಡಿಸುತ್ತದೆ.
• 21 ದಿನಗಳ ಎನ್ಲೈಟ್ನ್ಮೆಂಟ್ ಇನ್ಟೆನ್ಸಿವ್ ಎಂಬ ಇನ್ನರ್ ಅವೇಕನಿಂಗ್ ಅಧಿವೇಶನಗಳಲ್ಲಿ ಗುರುಗಳೊಂದಿಗೆ ಭಾಗವಹಿಸಿರಿ. ಅದು ನಿಮ್ಮ ಜೀವನೋದ್ದೇಶಗಳನ್ನು ಕಂಡುಹಿಡಿದು, ನಿಮ್ಮ ಮನಸ್ಸಿನ ಹಿಡಿತದಿಂದ ಮೇಲೇರುವಂತೆ ಮಾಡುತ್ತದೆ. ಈ ಕಾರ್ಯಕ್ರಮವು ಜೀವನ ಪರಿಹಾರಗಳನ್ನು ಮತ್ತು ಎಲ್ಲಾ ಮಟ್ಟದ ಅನ್ವೇಷಕರಿಗೂ ಧ್ಯಾನಗಳನ್ನು ಪ್ರತಿದಿನದ ನಿತ್ಯಯೋಗದ ಅಧಿವೇಶನಗಳನ್ನು ಹಾಗೂ ಚೈತನ್ಯಾಧಾರಿತ ಗುಣಪಡಿಸುವ ವಿಜ್ಞಾನವಾದ ನಿತ್ಯಾ ಸ್ಪಿರಿಚುಯಲ್ ಹೀಲಿಂಗಿನ ದೀಕ್ಷೆಯನ್ನೂ ಒಳಗೊಂಡಿದೆ.
• ಸಾಂಸ್ಕೃತಿಕ, ಜಾಗೃತಿಕ ಮತ್ತು ಆಧ್ಯಾತ್ಮಿಕವಾಗಿ ಮಹತ್ವಪೂರ್ಣವಾದ ನಿತ್ಯಾನಂದರ ಜನ್ಮಸ್ಥಳವಾದ ತಿರುವಣ್ಣಾಮಲೈ ಮತ್ತು ಪತಂಜಲಿಯವರ ಜನ್ಮಸ್ಥಳವಾದ ಚಿದಂಬರಂ ಎಂಬಂತಹ ಸ್ಥಳಗಳಿಗೆ ಯಾತ್ರಾಧ್ಯಯನಗಳಲ್ಲಿ ತೊಡಗಿರಿ.
• ಉದ್ಬೋಧಕ ಚರ್ಚೆಗಳು, ಸಂವಾದಗಳು ಹಾಗೂ ಅಧ್ಯಯನ ಶಿಬಿರಗಳಲ್ಲಿ ಇನ್ನೂ ಗಹನವಾದ ಒಳನೋಟ ಮತ್ತು ಮಾನವ ದೇಹ-ಮನಸ್ಸುಗಳ ಯಾಂತ್ರಿಕ ರಚನೆಯ ಬಗ್ಗೆ ತಿಳಿವಳಿಕೆ ಹೊಂದುವುದರಲ್ಲಿ ಹಾಗೂ ಜೀವನವನ್ನು ಸಂಭ್ರಮದಾಚರಣೆಯಂತೆ ಬಾಳುವುದರಲ್ಲಿ ತೊಡಗಿರಿ.
• ನಿಮ್ಮ ಸೃಜನಾತ್ಮಕತೆ ಮತ್ತು ಬುದ್ಧಿಯ ಸಾಮರ್ಥ್ಯವನ್ನು ವಿಸ್ತರಿಸಲು ಪರಿಕಲ್ಪಿಸಿರಿ, ನಿಯೋಜಿಸಿರಿ ಮತ್ತು ನಿಯೋಜಿತ ಕಾರ್ಯಗಳನ್ನು ನೆರವೇರಿಸಿ munkattu ಜವಾಬ್ದಾರಿಯಿಂದ ಸಮಾಜ ಸೇವೆ ಮಾಡಿರಿ.
- ಬೆಂಗಳೂರಿನ ಆಶ್ರಮದ ಯೋಗರಹಸ್ಯವುಳ್ಳ ಆಲದ ಮರದ ಶಕ್ತಿ ಕ್ಷೇತ್ರದಲ್ಲಿ ಸತತವಾದ ಆಂತರಿಕ ಉಪಶಮನವನ್ನು ಅನುಭವಿಸಿರಿ.
- ಆಯುರ್ವೇದ ಪದ್ಧತಿಯ ಸಾತ್ವಿಕ ಆಹಾರವನ್ನು ದಿನದ ಎಲ್ಲಾ ಭೋಜನಗಳಲ್ಲಿಯೂ ಸವಿಯಿರಿ.
- ಈ ವಿಶೇಷ ಕಾರ್ಯಕ್ರಮದಲ್ಲಿ ಜಗತ್ತಿನೆಲ್ಲೆಡೆಯಿಂದಲೂ ಜನರು ಬಂದು ಭಾಗವಹಿಸುತ್ತಾರೆ ಮತ್ತು ತಮ್ಮ ಅಂತರಂಗದಲ್ಲಿಯೂ, ಬಾಹ್ಯ ಜೀವನದಲ್ಲಿಯೂ ಪರಿಮಾಣಿತ ಜಿಗಿತವನ್ನು ಅನುಭವಿಸುತ್ತಾರೆ.
ಕಲ್ಪತರು
ಒಂದು ದಿನದ ಈ ಧ್ಯಾನ ಕಾರ್ಯಕ್ರಮವು ಜೀವನ್ಮುಕ್ತಿಯ ಬೀಜವನ್ನು ನಿಮ್ಮಲ್ಲಿ ಬಿತ್ತುತ್ತದೆ. ಕಲ್ಪತರುವಿನ ಮೂಲಕ ನಿಮಗೆ ಇವುಗಳ ಕೃಪೆಯಾಗುತ್ತದೆ:
ಜೀವನದಲ್ಲಿ ಏನನ್ನು ಬದಲಾಯಿಸುವ ಆವಶ್ಯಕತೆ ಇದೆಯೋ ಅದನ್ನು ಅರಿತು, ಬದಲಾಯಿಸುವ ಶಕ್ತಿ,
ಜೀವನದಲ್ಲಿ ಏನನ್ನು ಬದಲಾಯಿಸುವ ಆವಶ್ಯಕತೆ ಇಲ್ಲವೋ ಅದನ್ನು ಅರಿತುಕೊಳ್ಳುವ ಬುದ್ಧಿಶಕ್ತಿ ಮತ್ತು ಅಂಗೀಕರಿಸುವ ಬುದ್ಧಿ,
ಎಷ್ಟೇ ಬದಲಾಯಿಸಿದರೂ ಯಾವುದನ್ನು ನಿಜ ಎಂದುಕೊಳ್ಳಬಹುದೋ ಅದೇ ಒಂದು ನಿರಂತರವಾಗಿ ಬದಲಾಗುತ್ತಿರುವ ಕನಸೆಂದು ಅರಿತು, ತಿಳಿದುಕೊಳ್ಳುವ ಯುಕ್ತಿ,
ಬದಲಾಗದ ಶಾಶ್ವತವಾದ ಮತ್ತು ಅಂತಿಮವಾದುದರೊಡನೆ ಆಳವಾದ ಸಂಬಂಧವನ್ನು ಅನುಭವಿಸುವ ಭಕ್ತಿ ಹಾಗೂ
ಈ ನಾಲ್ಕೂ ನಿಮ್ಮಲ್ಲಿ ಸಮಗ್ರಗೊಂಡಾಗ ಪಡೆಯಬಹುದಾದ ಜೀವನ್ಮುಕ್ತಿಯೆಂಬ ಸರ್ವಶ್ರೇಷ್ಠವಾದ ಮುಕ್ತಿ.
ಈ ಕಾರ್ಯಕ್ರಮವು ನಿಮ್ಮ ಕಾರ್ಯಗಳನ್ನು ನಿಮ್ಮ ಉದ್ದೇಶಗಳೊಂದಿಗೆ ಗೆಲುವಿನಿಂದಲೂ ಆಂತರಿಕ ಆನಂದದಿಂದಲೂ ನಡೆಸುವ ಸಾಮರ್ಥ್ಯದೊಂದಿಗೆ ಸಾಮರಸ್ಯವನ್ನು ಹೊಂದುವ ಶಕ್ತಿಯನ್ನು ನಿಮಗೆ ನೀಡುತ್ತದೆ.
ಲೈಫ್ ಬ್ಲಿಸ್ ಪ್ರೋಗ್ರಾಂ ಹಂತ 1 - ಆನಂದ ಸ್ಫುರಣ ಪ್ರೋಗ್ರಾಂ
(LBP Level 1 - ASP)
- ಚೈತನ್ಯಪೂರಿತರಾಗಿ
ನಿಮ್ಮ ವ್ಯವಸ್ಥೆಯಲ್ಲಿರುವ ಏಳು ಪ್ರಧಾನ ಚಕ್ರಗಳು ಅಥವಾ ಸೂಕ್ಷ್ಮಶಕ್ತಿಕೇಂದ್ರಗಳನ್ನು ವಿರಮಿಸುವ ಹಾಗೂ ಚೈತನ್ಯಗೊಳಿಸುವ ಚಕ್ರಾಧಾರಿತ ಧ್ಯಾನ ಕಾರ್ಯಕ್ರಮ. ದುರಾಸೆ, ಚಿಂತೆ, ಗಮನದ ಅವಶ್ಯಕತೆ, ಒತ್ತಡ, ಅಸೂಯೆ, ಅಹಂಕಾರ ಹಾಗೂ ಅತೃಪ್ತಿಗಳಂತಹ ಭಾವನೆಗಳಿಗೆ ಸ್ಪಷ್ಟವಾದ ಬೌದ್ಧಿಕ ಹಾಗೂ ಆನುಭಾವಿಕ ತಿಳುವಳಿಕೆಯನ್ನು ಇದು ನೀಡುತ್ತದೆ. ಭೌತಿಕ ಮಟ್ಟದಲ್ಲಿ ಆಧ್ಯಾತ್ಮಿಕ ಪ್ರಭಾವವನ್ನುಂಟು ಮಾಡುವುದಕ್ಕಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ನಿಮ್ಮ ಸಹಜ ಆನಂದವನ್ನು ಅನುಭವಿಸಲು ಖಚಿತವಾದ ಜೀವನ-ಪರಿಹಾರ. ಯಾವುದೇ ಒಂದು ನಿರ್ದಿಷ್ಟವಾದ ಭಾವನೆಯಿಂದ ಮುಕ್ತರಾದಾಗ ಒಂದು ಹೊಸ ಪ್ರಪಂಚದ, ಒಂದು ಹೊಸ ಶಕ್ತಿಯ, ಅನುಭವವಾಗುತ್ತದೆ. ಇದು ಪ್ರಪಂಚದ ಎಲ್ಲೆಡೆಯಲ್ಲಿಯೂ ಲಕ್ಷಾಂತರ ಜನರಲ್ಲಿ ಅನುಭವವಾದ ಬಹಳ ಪರಿಣಾಮಕಾರಿಯಾದ ಕಾರ್ಯಾಗಾರ.
ಲೈಫ್ ಬ್ಲಿಸ್ ಪ್ರೋಗ್ರಾಂ ಹಂತ 2 - ನಿತ್ಯಾನಂದ ಸ್ಫುರಣ ಪ್ರೋಗ್ರಾಂ
(LBP Level 2 - NSP)
- ಮರಣದ ರಹಸ್ಯ ಬಯಲುಗೊಂಡಿದೆ!
ಮರಣದ ಕಾರ್ಯಗತಿಯನ್ನು ಬಯಲುಗೊಳಿಸುವ ಮೂಲಕ ಜೀವನ ಶೈಲಿಯನ್ನು ಸುಗಮವಾಗಿಸುವ ಒಂದು ಧ್ಯಾನ ಕಾರ್ಯಕ್ರಮ. ಕಟ್ಟಕಡೆಯ ಸಾವಿನ ಭಯದಿಂದ ಹುಟ್ಟುವ ಬೇರೂರಿದ ಹಾಗೂ ಸುಪ್ತ ಭಾವಗಳಾದ ಅಪರಾಧಮನೋಭಾವ, ಸುಖ-ದುಃಖಗಳು ಮುಂತಾದವುಗಳಿಂದ ಬಿಡುಗಡೆಹೊಂದುವ ಅವಕಾಶವನ್ನು ಈ ಕಾರ್ಯಕ್ರಮವು ಹೊರಗೆಡವುತ್ತದೆ. ಸ್ವಾಭಾವಿಕ ಬುದ್ಧಿಶಕ್ತಿ ಮತ್ತು ಸಹಜ ಪ್ರೇರಣೆಯ ಉತ್ಸಾಹದಿಂದ ಚಾಲಿತವಾಗುವ ನವಜೀವನಕ್ಕೆ ಇದು ಮಹಾದ್ವಾರ.
ಲೈಫ್ ಬ್ಲಿಸ್ ಪ್ರೋಗ್ರಾಂ ಹಂತ 3 (LBP Level3 - ATSP)
- ಆತ್ಮಸ್ಫುರಣ ಪ್ರೋಗ್ರಾಂ
ನಿಮ್ಮ ಆತ್ಮಸಂಪರ್ಕ ಮಾಡಿಕೊಳ್ಳಿರಿ ಮನದಾಟಗಳನ್ನು ಸ್ಪಷ್ಟವಾಗಿ ವಿಶ್ಲೇಷಿಸಿರಿ, ಮನಸ್ಸು ಹೇಳಿದಂತೆ ಕೇಳುವುದನ್ನು ಬಿಟ್ಟು ಮನಸ್ಸಿನ ಒಡೆಯರಾಗುವುದು ಹೇಗೆಂಬುದನ್ನು ಅನುಭಾವಿಕವಾಗಿ ತಿಳಿಸುವ ಒಂದು ಗಾಢವಾದ ಕಾರ್ಯಕ್ರಮ. ಇದರಲ್ಲಿ ಸ್ಪಷ್ಟತೆ ಹಾಗೂ ಸಮಗ್ರತೆಯನ್ನುಂಟುಮಾಡಲು ಅದ್ಭುತವಾದ ಬುದ್ಧಿಶಕ್ತಿಯೊಂದಿಗೆ ಮಿಳಿತವಾದ ಶಕ್ತಿಯುತ ಧ್ಯಾನಗಳನ್ನು ಹೇಳಿಕೊಡಲಾಗುವುದು.
ಲೈಫ್ ಬ್ಲಿಸ್ ಪ್ರೋಗ್ರಾಂ ಹಂತ 3 - ಭಕ್ತಿಸ್ಫುರಣ ಪ್ರೋಗ್ರಾಂ
(LBP Level 3 BSP)
– ನಿಮ್ಮ ಭಕ್ತಿಯನ್ನು ಒಂದುಗೂಡಿಸಿರಿ
ಇತರರೊಂದಿಗೂ, ನಿಮ್ಮ ಅಂತರಾತ್ಮದೊಂದಿಗೂ ನಿಮ್ಮನ್ನು ಸಂಬಂಧಿಸುವ ವೈವಿಧ್ಯಮಯ ಆಯಾಮಗಳನ್ನು ಹೊರಗೆಡಹುವ ಒಂದು ಕಾರ್ಯಕ್ರಮ. ನಿಮಗೇ ಅರಿಯದ ಆಯಾಮಗಳನ್ನು ನಿಮಗೆ ಬೆಳಗಿ ತೋರುವುದನ್ನೇ ಸಂಬಂಧವೆಂಬುದಾಗಿ ಅದು ಸ್ಪಷ್ಟವಾಗಿ ನಿರ್ಣಯಿಸುತ್ತದೆ. ನಿಮ್ಮ ಜೀವನದ ಯಾವುದೇ ಸಂಬಂಧದ ನಿಜವಾದ ಆಳ ಮತ್ತು ಸಂತೋಷವನ್ನು ಅನುಭವಿಸಲು ಅದು ಅವಕಾಶ ಮಾಡಿಕೊಡುತ್ತದೆ.
ಲೈಫ್ ಬ್ಲಿಸ್ ಟೆಕ್ನಾಲಜಿ (LBT)
– ಉಚಿತ, ವಸತಿಯುತ ಜೀವನ ವಿಜ್ಞಾನದ ಒಂದು ಕಾರ್ಯಕ್ರಮ
18 ರಿಂದ 39 ವರ್ಷದೊಳಗಿನ ಯುವ ಜನರಿಗಾಗಿ ವಿನ್ಯಾಸಗೊಳಿಸಲಾಗಿರುವ ಉಚಿತ, ವಸತಿಯುತ ಕಾರ್ಯಕ್ರಮ. ಪೌರ್ವಾತ್ಯ ವೈದಿಕ ಪದ್ಧತಿಯಲ್ಲಿ ನೆಲೆಗೊಂಡ ವಿದ್ಯಾಭ್ಯಾಸದ ಈ ಕಾರ್ಯಕ್ರಮವು ಆಧುನಿಕ ಯುವ ಜನರನ್ನು ಒಳ್ಳೆಯ ದೈಹಿಕ, ಮಾನಸಿಕ ಹಾಗೂ ಭಾವನಾಮಯ ಆರೋಗ್ಯ ಮತ್ತು ಪ್ರಾಯೋಗಿಕ ಜೀವನ ಚಾತುರ್ಯಗಳಿಂದ ಬಲಿಷ್ಠಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಸೃಜನಾತ್ಮಕ ಬುದ್ಧಿ ಮತ್ತು ಸ್ವಪ್ರೇರಣೆಗಳನ್ನು ಪೋಷಿಸುವ ಹಾಗೂ ಜೀವನ ಚಾತುರ್ಯಗಳನ್ನು ಕಲಿಸುವ ಮೂಲಕ, ಆರ್ಥಿಕವಾಗಿ ಸ್ವಾವಲಂಬಿಗಳಾಗಿಯೂ, ಆಧ್ಯಾತ್ಮಿಕವಾಗಿಯೂ, ಸಂತೃಪ್ತರಾಗಿ ಬಾಳುವ ಯುವಜನರನ್ನು ಸೃಜಿಸುತ್ತದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಒಬ್ಬ ಸಾಕ್ಷಾತ್ಕಾರ ಹೊಂದಿದ ಗುರುಗಳ ಮಾರ್ಗದರ್ಶನದಲ್ಲಿ ಕಲಿಯುವ, ಜೀವನದಲ್ಲೊಮ್ಮೆಯೇ ದೊರೆಯಬಹುದಾದ ಮಹಾಸೌಭಾಗ್ಯವನ್ನು ನೀಡುತ್ತದೆ.
ನಿತ್ಯಾನಂದಂ
ಗುರುಗಳ ಸಾನ್ನಿಧ್ಯ ಹಾಗೂ ಗಾಢವಾದ ಶಕ್ತಿ ವಲಯದಲ್ಲಿ ಅನ್ವೇಷಕರನ್ನು ನಿತ್ಯ ಆನಂದದ ನೆಲೆಗೆ ಕೊಂಡೊಯ್ಯುವ ಒಂದು ಉನ್ನತವಾದ ಕಾರ್ಯಕ್ರಮ. ಗುರುಗಳ ಪ್ರಭಾವಪೂರ್ಣ ಸನ್ನಿಧಿಯಲ್ಲಿ ಕುಳಿತು ಧ್ಯಾನದಿಂದ ಸೇವೆಯವರೆವಿಗೆ ತಂತ್ರಗಳ ಶ್ರೇಣಿಯನ್ನು ಕಲಿಸುವುದು.
ನಿತ್ಯಾನಂದ ಸಂಸ್ಥೆಯ ಸಂದೇಶದ ಪ್ರಮುಖಾಂಶಗಳು
ಪ್ರಪಂಚದಾದ್ಯಂತ ಧ್ಯಾನ ಮತ್ತು ದುರ್ವ್ಯಸನ ನಿವಾರಕ ಶಿಬಿರಗಳು
ಈವರೆವಿಗೆ 20 ಲಕ್ಷ ಜನರಿಗೆ ಪ್ರಭಾವವಾಗಿದೆ.
• ನಿತ್ಯಾ ಆಧ್ಯಾತ್ಮಿಕ ಉಪಶಮನ : ಪ್ರಪಂಚದಾದ್ಯಂತ ಇರುವ ನಮ್ಮ ಆಶ್ರಮಗಳಲ್ಲಿಯೂ ಕೇಂದ್ರಗಳಲ್ಲಿಯೂ 5000 ದೀಕ್ಷಾಬದ್ಧ ಉಪಶಮನಕಾರರಿಂದ ಪ್ರತಿದಿನವೂ ಜಾಗತಿಕವಾಗಿ 20,000 ಜನರಿಗೆ ದೈಹಿಕ ಹಾಗೂ ಮಾನಸಿಕವೆರಡರಲ್ಲಿಯೂ ವಿಶ್ವಶಕ್ತಿಯ ಪದ್ಧತಿಯ ಉಪಶಮನವನ್ನು ಉಚಿತವಾಗಿ ನೀಡಲಾಗುತ್ತಿದೆ.
• ಅನ್ನದಾನ : ಆರೋಗ್ಯೋಭಿವೃದ್ಧಿಗಾಗಿ ಎಲ್ಲ ಆಶ್ರಮಗಳ ಅನ್ನಮಂದಿರಗಳಲ್ಲಿಯೂ, ಅತಿಥಿಗಳಿಗೂ, ಭಕ್ತರಿಗೂ ಹಾಗೂ ಶಿಷ್ಯರಿಗೂ ಪ್ರತಿವಾರವೂ 10,000 ಪುಷ್ಟಿಕರ ಭೋಜನವನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
• ನಿತ್ಯಾನಂದ ಪಂಥ ಮತ್ತು ಅದರ ತರಬೇತಿ : ಯೋಗ, ಧ್ಯಾನ, ಗಾಢವಾದ ಆಧ್ಯಾತ್ಮಿಕ ಸಾಧನೆ, ಸಂಸ್ಕೃತ ಕಲಿಕೆ, ವೇದ ಪಠಣ, ಜೀವನ ಕುಶಲತೆ - ಇವುಗಳಲ್ಲಿ ವರ್ಷಾನುಗಟ್ಟಲೆ ಗಾಢ ತರಬೇತಿಯನ್ನು ಪಡೆದು, ಸನ್ಯಾಸಿಗಳು, ಬ್ರಹ್ಮಚಾರಿಗಳು ಮತ್ತು ಬ್ರಹ್ಮಚಾರಿಣಿಯರೆಂದು ದೀಕ್ಷಾಬದ್ಧರಾಗಿರುವ ಆಧ್ಯಾತ್ಮಿಕ ಮಹತ್ವಾಕಾಂಕ್ಷಿಗಳು 100ಕ್ಕೆ 100ರಷ್ಟು ಸ್ವಯಂಸೇವಾಧಾರಿತ ನಿತ್ಯಾನಂದ ಸಂಸ್ಥೆಗಳಲ್ಲಿ ಪ್ರಪಂಚದಾದ್ಯಂತವೂ ಆಶ್ರಮಗಳನ್ನು ನಡೆಸುತ್ತಿದ್ದಾರೆ.
• ನಿತ್ಯಯೋಗ : ಮಹಾಮುನಿಗಳಾದ ಪತಂಜಲಿಯವರ ಮೂಲಬೋಧನೆಗಳಿಗನುಸಾರವಾಗಿ ಪ್ರಪಂಚದಾದ್ಯಂತ ಕಲಿಸಲಾಗುತ್ತಿರುವ ಒಂದು ಕ್ರಾಂತಿಕಾರಿ ಯೋಗ ಪದ್ಧತಿ.
• ನಿತ್ಯಾನಂದ ದೇವಾಲಯಗಳು ಮತ್ತು ಆಶ್ರಮಗಳು : ಪ್ರಪಂಚದಾದ್ಯಂತ 30ಕ್ಕೂ ಮಿಗಿಲಾಗಿ ವೈದಿಕ ದೇವಾಲಯಗಳೂ ಆಶ್ರಮಗಳೂ ನಡೆಯುತ್ತಿವೆ.
• ಕಾರಾಗೃಹಗಳಲ್ಲಿ ಧ್ಯಾನ ಕಾರ್ಯಕ್ರಮಗಳು : ಅತಿರೇಕದ ಮನೋಭಾವಗಳನ್ನು ಪರಿವರ್ತಿಸಲು ಕಾರಾಗೃಹಗಳಲ್ಲಿಯೂ, ಬಾಲಿಶ ಶಿಬಿರಗಳಲ್ಲಿಯೂ ಧ್ಯಾನ ಕಾರ್ಯಕ್ರಮಗಳು ನಡೆದು ಕಾರಾಗೃಹ ನಿವಾಸಿಗಳಲ್ಲಿ ಅತ್ಯಾಶ್ಚರ್ಯಕರವಾದ ಪರಿವರ್ತನೆಯಾಗಿ ಪರಿಣಾಮಗೊಂಡಿವೆ.
• ವೈದ್ಯಕೀಯ ಶಿಬಿರಗಳು : ಅಲೋಪತಿ, ಹೋಮಿಯೋಪತಿ, ಆಯುರ್ವೇದ, ಅಕ್ಯುಪಂಕ್ಚರ್, ನೇತ್ರ ತಪಾಸಣೆಗಳು, ನೇತ್ರ ಶಸ್ತ್ರಚಿಕಿತ್ಸೆಗಳು, ಕೃತಕ ಅವಯವ ದಾನ ಶಿಬಿರಗಳು, ಸ್ತ್ರೀರೋಗ ಮುಂತಾದುವುಗಳಿಗೆ ಉಚಿತ ಚಿಕಿತ್ಸೆ ಹಾಗೂ ಔಷಧೋಪಚಾರಗಳನ್ನು ನೀಡಲಾಗುತ್ತಿದೆ.
• ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳಿಗೆ ಆಸರೆ : ಶಾಲಾಕಟ್ಟಡಗಳು, ಶಾಲೆಯ ಸಮವಸ್ತ್ರಗಳು ಮತ್ತು ವಿದ್ಯಾವಸ್ತುಗಳನ್ನು ಗ್ರಾಮೀಣ ಶಾಲೆಗಳಿಗೆ ಉಚಿತವಾಗಿ ಒದಗಿಸಲಾಗುತ್ತಿದೆ.
• ಲೈಫ್ ಬ್ಲಿಸ್ ಟೆಕ್ನಾಲಜಿ ಮತ್ತು ಲೈಫ್ ಬ್ಲಿಸ್ ಇಂಜಿನಿಯರಿಂಗ್ ಕೋರ್ಸುಗಳು : ಯುವಕರಿಗೆ ಜೀವನ ತಂತ್ರಗಳನ್ನೂ, ಆತ್ಮಜ್ಞಾನದ ವಿಜ್ಞಾನವನ್ನೂ ಉಚಿತವಾಗಿ ಬೋಧಿಸುವ ಎರಡು ವರ್ಷಗಳ ಕಾರ್ಯಕ್ರಮ ಮತ್ತು ಮೂರು ತಿಂಗಳುಗಳ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
• ನಿತ್ಯಾನಂದ ಗುರುಕುಲ : ಮಕ್ಕಳಿಗೆ ಹುಟ್ಟಿನಿಂದಲೇ ಬಂದಿರುವ ಬುದ್ಧಿಶಕ್ತಿಯನ್ನು ಯಾವ ನಿಬಂಧನೆ, ಭಯ ಅಥವಾ ಬಲಾತ್ಕಾರಗಳಿಲ್ಲದಂತೆ ಸಲಹಿ, ಬೆಳೆಸುವಂತಹ ವೈದಿಕ ಪದ್ಧತಿಯ ಆಧುನಿಕ ವಿದ್ಯಾಭ್ಯಾಸವನ್ನೊಳಗೊಂಡಿರುವ ಕಲಿಕೆಯ ಮೂಲಕ ಶಿಕ್ಷಣವನ್ನು ನೀಡಲಾಗುತ್ತಿದೆ.
• ಕಾರ್ಪೊರೇಟ್ ಮೆಡಿಟೇಷನ್ ಪ್ರೋಗ್ರಾಮ್ಸ್ : ಸಂಘ - ಸಂಸ್ಥೆಗಳ ಧ್ಯಾನ ಕಾರ್ಯಕ್ರಮಗಳು : ಅಂತರ್ಜಾಲನದ ನಿರ್ವಹಣೆ, ನೇತೃತ್ವದ ಚಾತುರ್ಯಗಳು ಮತ್ತು ಸಹಯೋಗ ಕ್ರಿಯಾಶೀಲತೆಗಳ ಮೇಲೆ ಕೇಂದ್ರೀಕೃತವಾಗಿ ಮೈಕ್ರೋಸಾಫ್ಟ್, ಎಟಿ ಅಂಡ್ ಟಿ, ಕಾಲ್ಕಾಮ್, ಜೆ.ಪಿ. ಮೋರ್ಗಾನ್, ಪೆಟ್ರೋಬ್ರಾಸ್, ಪೆಪ್ಸಿ, ಒರಾಕಲ್, ಅಮೇರಿಕನ್ ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಆರಿಜಿನ್ (ಎ ಎ ಪಿ ಐ)ಗಳೂ ಸೇರಿದಂತೆ ಪ್ರಪಂಚದಾದ್ಯಂತವಿರುವ ಸಂಘ ಸಂಸ್ಥೆಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಿ ನಡೆಸಲಾಗುತ್ತಿದೆ.
• ನಿತ್ಯಾನಂದ ಇನ್ಸಿಟ್ಯೂಟ್ ಆಫ್ ಟೀಚರ್ಸ್ ಟ್ರೈನಿಂಗ್ : ಪರಿವರ್ತನಾಕಾರೀ ಧ್ಯಾನ ಕಾರ್ಯಕ್ರಮಗಳು, ಪರಿಮಾಣಿತ ಸ್ಮರಣ ಕಾರ್ಯಕ್ರಮ, ನಿತ್ಯಯೋಗ, ಆರೋಗ್ಯ ಮತ್ತು ಗುಣಕಾರಕ ಕಾರ್ಯಕ್ರಮಗಳು, ಆಧ್ಯಾತ್ಮಿಕ ಸಾಧನಾ ಕಾರ್ಯಕ್ರಮಗಳು ಮುಂತಾದುವುಗಳನ್ನು ಬೋಧಿಸುವ 300ಕ್ಕೂ ಹೆಚ್ಚು ಆಚಾರ್ಯರುಗಳಿಗೆ ತರಬೇತಿಯನ್ನು ನೀಡಲಾಗಿದೆ.
• ಸಮೂಹ ಮಾಧ್ಯಮ : ನಿತ್ಯಾನಂದರ ಪರಿವರ್ತನಕಾರೀ ಸಂದೇಶಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವೃತ್ತಪರ್ತಿಕೆ ಮತ್ತು ಮ್ಯಾಗಜೈನ್ಗಳಲ್ಲಿ ಪ್ರಕಟವಾಗುತ್ತಿವೆ.
• ನಿತ್ಯಾನಂದ ಪ್ರಕಾಶನ : ಪರಮಹಂಸ ನಿತ್ಯಾನಂದರ 5000 ಗಂಟೆಗಳಿಗೂ ಮೀರಿದ ಪ್ರವಚನಗಳನ್ನು ಆಶ್ರಮದಲ್ಲಿಯೇ ಬರಹಕ್ಕೆ ತಂದು, ಮುದ್ರಣಕ್ಕೆ ಸಿದ್ಧಪಡಿಸಿ, ಪುಸ್ತಕ, ಡಿ.ವಿ.ಡಿ. ಹಾಗೂ ಸಿ.ಡಿ.ಗಳನ್ನಾಗಿ ತಯಾರಿಸಿ ಮಳಿಗೆಗಳಲ್ಲಿ ದೊರೆಯುವ ವ್ಯವಸ್ಥೆ ಮಾಡಲಾಗಿದೆ.
• ಲೈಫ್ ಬ್ಲಿಸ್ ಗೇಲೇರಿಯಾಗಳು : ಪರಮಹಂಸ ನಿತ್ಯಾನಂದರ ಪ್ರವಚನಗಳ ರೆಕಾರ್ಡಿಂಗ್ಗಳೂ, ಪುಸ್ತಕಗಳೂ ಹಾಗೂ ನಿತ್ಯಾಕೀರ್ತನೆಗಳ ರೆಕಾರ್ಡಿಂಗ್ಗಳೂ ಪ್ರಪಂಚದಾದ್ಯಂತ 23 ಭಾಷೆಗಳಲ್ಲಿ ಮಳಿಗೆಗಳಲ್ಲಿಯೂ, ಸಂಚಾರಿ ಅಂಗಡಿಗಳಲ್ಲಿಯೂ ದೊರೆಯುತ್ತವೆ.
• ನಿತ್ಯಾನಂದ ಮೆಡಿಟೇಶನ್ ಅಂಡ್ ಹೀಲಿಂಗ್ ಸೆಂಟರ್ಸ್ : ಪ್ರಪಂಚದಾದ್ಯಂತವೂ ಧ್ಯಾನ ಮತ್ತು ಉಪಶಮನವನ್ನು ನೀಡುವ ಕೇಂದ್ರಗಳು ಕಾರ್ಯನಿರತವಾಗಿವೆ.
• ನಿತ್ಯಾನಂದ ಸಂಗೀತ ಅಕಾಡೆಮಿ : ಸಂಗೀತ, ನೃತ್ಯ ಹಾಗೂ ಇತರ ವಿಧವಾದ ಕಲೆಗಳನ್ನು ಯುವಕರಿಗೂ ಹಿರಿಯರಿಗೂ ನೇರವಾಗಿಯೂ, ಇಂಟರ್ನೆಟ್ ಮೂಲಕವಾಗಿಯೂ, ಕಲಿಸುವುದನ್ನೂ ಪ್ರೋತ್ಸಾಹಿಸುವುದನ್ನೂ ಮಾಡಲಾಗುತ್ತಿದೆ.
• ಯು-ಟ್ಯೂಬ್ನಲ್ಲಿ ಉಚಿತ ಪ್ರವಚನಗಳು : ಯು-ಟ್ಯೂಬ್ನಲ್ಲಿ ಉಚಿತ ಪ್ರವಚನಗಳು www.youtube.com ಮೂಲಕ ಗುರುಗಳಿಂದ ಉಚಿತವಾಗಿ 500ಕ್ಕೂ ಮಿಗಿಲಾದ ಪ್ರವಚನಗಳು ನಿರಾಯಾಸವಾಗಿ ನಿಲುಕುತ್ತದೆ. ವೀಕ್ಷಣೆಯಲ್ಲಿ ಇದು ಅತ್ಯುಚ್ಛ ಸ್ಥಾನವನ್ನು ಪಡೆದಿದೆ.
• ವಿಜ್ಞಾನಿಗಳಿಗೂ ಸಂಶೋಧಕರಿಗೂ ನೆರವು : ಆಧ್ಯಾತ್ಮಿಕ ಶಕ್ತಿ ಮತ್ತು ಉಪಶಮನದ ಸಂಶೋಧನೆಗಳ ಮೂಲಕ ವಿಜ್ಞಾನಕ್ಕೂ ಆಧ್ಯಾತ್ಮಿಕತೆಗೂ ಇರುವ ಅಂತರವನ್ನು ಎಡೆಬಿಡದೆ ತಗ್ಗಿಸಲಾಗುತ್ತಿದೆ.
• ನಿತ್ಯಾನಂದ ಇಂಟರ್ನ್ಯಾಷನಲ್ ಯೂತ್ ಫೌಂಡೇಷನ್ (NIYF) : ಶಾಂತಿ ಮತ್ತು ಆತ್ಮಜ್ಞಾನದ ಸಾಮಾನ್ಯ ಚಿಂತನೆಗಳಿಂದ ಒಂದು ದಿವ್ಯವಾದ ಕ್ರಿಯಾತ್ಮಕ ಸಮಾಜವನ್ನು ಕಟ್ಟುವ ಸ್ಪೂರ್ತಿಯನ್ನು ಹೊಂದಿದ ಯುವಕರ ಸಂಘ.
• ನಿತ್ಯ ಧೀರ ಸೇವಾ ಸೇನೆ : ತಮ್ಮನ್ನೇ ಪರಿವರ್ತಿಸಿಕೊಳ್ಳುವ ಮೂಲಕ ಆನಂದ ಸೇವಕರೆಂಬ ಈ ಸ್ವಯಂಸೇವಕರು ಮನುಕುಲದ ಸೇವಾ ತರಬೇತಿಯನ್ನೂ ಕಾರ್ಯನಿರ್ವಹಣೆಯನ್ನೂ ಮಾಡುತ್ತ ಆಪತ್ತುಗಳು ಸಂಭವಿಸಿದಾಗ ಚೇತರಿಸಿಕೊಳ್ಳುವ ನಿರ್ವಹಣೆಗಾಗಿ ಪರಿಹಾರದ ಅಂಗವಾಗಿ ಸೇವಾನಿರತರಾಗಿರುತ್ತಾರೆ.
ನಮ್ಮನ್ನು ಸಂಪರ್ಕಿಸಲು...
ನಿತ್ಯಾನಂದ ಸಂಸ್ಥೆಯ ಕೆಲವು ಪ್ರಮುಖ ಕೇಂದ್ರಗಳು ಕೆಳಕಂಡಂತಿವೆ:
ಭಾರತ: ಬೆಂಗಳೂರು, ಕರ್ನಾಟಕ (ಆಧ್ಯಾತ್ಮಿಕ ಕೇಂದ್ರ ಮತ್ತು ವೈದಿಕ ದೇವಾಲಯ) ನಿತ್ಯಾನಂದ ಧ್ಯಾನಪೀಠ, ನಿತ್ಯಾನಂದಪುರಿ ಮೈಸೂರು ರಸ್ತೆಯ ಬಳಿ, ಬಿದದಿ, ಬೆಂಗಳೂರು – 562 109 ಕರ್ನಾಟಕ, ಇಂಡಿಯ Ph.: +91 98801 92492 / +91 94810 28155 / +91 92434 91815 Email: [email protected] URL:www.nithyananda.org
ಅಮೆರಿಕ:
ಲಾಸ್ ಏಂಜಲೀಸ್
ಲಾಸ್ ಏಂಜಲೀಸ್ ವೇದಿಕ್ ಟೆಂಪಲ್
9720, ಸೆಂಟ್ರಲ್ ಅವೆನ್ಯೂ, ಮಾಂಟ್ ಕ್ಲೇರ್.
CA 91763, USA
Ph.: +1 909 625 1400
Email: [email protected]
URL: www.lifebliss.org
ಮಲೇಶಿಯಾ: ಕ್ವಾಲಾಲಂಪೂರ್ 14, ಜಲಂದೇಸಾ, ಗೊಂಬಕ್ 5, ತಮನ್ ದೇಸಾ ಗೊಂಬಕ್ 53000 ಕೆ ಎಲ್, ಮಲೇಶಿಯಾ Ph.: +601 78861644 / +601 22350567 Email: [email protected], [email protected] URL: www.mynithyananda.com
ವಾರಣಾಸಿ, ಉತ್ತರ ಪ್ರದೇಶ
ನಿತ್ಯಾನಂದ ಧ್ಯಾನಪೀಠ,
ಲೀಲಾಫರ್ ಬಿಲ್ಡಿಂಗ್, ಮಣಿಕರ್ಣಿಕ ಘಾಟ್,
ವಾರಣಾಸಿ, ಇಂಡಿಯ.
Ph.: +91 +99184 01718
ಹೈದರಾಬಾದ್, ಆಂಧ್ರಪ್ರದೇಶ
ಶ್ರೀ ಆನಂದೇಶ್ವರಿ ಟೆಂಪಲ್, ನಿತ್ಯಾನಂದಗಿರಿ,
ಪಾಶಂಬಂದ ಸತಮ್ಮೈ ವಿಲೇಜ್, ಶಂಶಾಬಾದ್ ಮಂಡಲ್
ರಂಗಾರೆಡ್ಡಿ ಡಿಸ್ಟ್ರಿಕ್ಟ್ - 501 218
ಆಂಧ್ರಪ್ರದೇಶ, ಇಂಡಿಯ.
Ph.: +91 +84132 60044 / +91 +98665 00350
ತಿರುವಣ್ಣಾಮಲೈ, ತಮಿಳುನಾಡು ನಿತ್ಯಾನಂದಪುರಿ, ಗಿರಿವಳ ಪಾತ್, ತಿರುವಣ್ಣಾಮಲೈ - 606 604 ತಮಿಳುನಾಡು, ಇಂಡಿಯ. Ph.: +91 +4175 237666 / +91 94449 91089 / 94450 56262 / 94874 52555 E-mail: [email protected]
ಪಾಂಡಿಚೇರಿ, ತಮಿಳುನಾಡು
ನಿತ್ಯಾನಂದಪುರಿ
ಎಂಬಳಂ ಟು ವಿಲ್ಲಿಯನೂರ್ ಮೈನ್ ರೋಡ್
ಎಂಬಳಂ ಪೋಸ್ಟ್, ಪಾಂಡಿಚೇರಿ - 605 106
ತಮಿಳುನಾಡು, ಇಂಡಿಯ.
Ph.: +91 94420 36037 / +91 97876 67604
ಇನ್ನೂ ಹೆಚ್ಚಿನ ವಿಷಯಗಳಿಗಾಗಿ www.nithyananda.org ನ್ನು ಸಂಪರ್ಕಿಸಿರಿ.
ನಿತ್ಯಾನಂದ ಗೆಲೇರಿಯಾ
ಆನಂದಭರಿತ ಜೀವನಕ್ಕಾಗಿ ಅಧಿಕ ಶ್ರೇಣಿಯ ವಸ್ತುಗಳು:
- 26 ಭಾಷೆಗಳಲ್ಲಿ ವಿಡಿಯೋ, ಆಡಿಯೊ ಟೇಪ್ಗಳಲ್ಲಿಯೂ, ಸಿ.ಡಿ.ಗಳಲ್ಲಿಯೂ ಹಾಗೂ ಪುಸ್ತಕಗಳಲ್ಲಿಯೂ ನಿತ್ಯಾನಂದರ ಅಂತರ್ದೃಷ್ಟಿಯ ಪ್ರವಚನಗಳು,
- ಧ್ಯಾನ ಮತ್ತು ಆಳವಾದ ಆಂತರಿಕ ಉಪಶಮನಕ್ಕಾಗಿ ಚೈತನ್ಯದಾಯಕ ಸಂಗೀತ ಮತ್ತು ಶ್ಲೋಕಗಳ ಪಠಣ,
- ಶರೀರ, ಮನಸ್ಸು ಹಾಗೂ ಆತ್ಮಗಳನ್ನು ಪುನರುಜ್ಜೀವನಗೊಳಿಸುವ ಧ್ಯಾನ ಹಾಗೂ ಯೋಗದ ಪುಸ್ತಕಗಳು, ಉಪಕರಣ ಚೀಲಗಳು ಮತ್ತು ಸಿ.ಡಿ.ಗಳು,
- ಚೇತೋಹಾರಿ ಜೀವನ ಶೈಲಿಗಾಗಿ ಚೈತನ್ಯಪೂರ್ಣ ಜಪಮಾಲೆಗಳು, ಕಡಗಗಳು, ಚಿತ್ರಪಟಗಳು, ಉಡುಪುಗಳು ಮತ್ತು ಕೊಡುಗೆ ವಸ್ತುಗಳು,
- ಪ್ರಶಾಂತತೆ ಹಾಗೂ ಉನ್ನತವಾದ ಚೈತನ್ಯದ ಹರಿಯುವಿಕೆಗಾಗಿ ಸ್ತ್ರೀಯರಿಗೂ ಪುರುಷರಿಗೂ ಚೈತನ್ಯಪೂರ್ಣ ಮಣಿಗಳ ಆಭರಣಗಳು
- ಹೆಚ್ಚಿನ ವಿಷಯಗಳಿಗಾಗಿ www.lifeblissgalleria.com ನ್ನು ಸಂಪರ್ಕಿಸಿ.