KAILASA Library/ಜೀವನ್ಮುಕ್ತಿ/ಉಪನಿಷತ್ತುSign in
ಜೀವನ್ಮುಕ್ತಿ

ಉಪನಿಷತ್ತು

This text was machine-transcribed from the printed book and may contain errors. Select the words and choose “Report a mistake”.

ಉಪನಿಷತ್ತು ಎಂದರೆ ಕುಳಿತುಕೊಳ್ಳುವುದು.
ಗುರುಗಳ ಸನ್ನಿಧಿಯಲ್ಲಿ ಶಿಷ್ಯನು ಕುಳಿತಾಗ
ಗುರುಗಳಿಗಾದ ಅನುಭವವೇ ಶಿಷ್ಯನಲ್ಲೂ
ಪುನರುತ್ಪಾದಿಸುತ್ತದೆ.

ಗುರುಗಳನ್ನು ತನ್ನಲ್ಲಿಯೇ ಕಂಡು, ಅವರ
ಅನುಭವ ಪುನರುತ್ಪಾದನೆಯಾಗಿರುವ ಶಿಷ್ಯನು, ಈ
ರಸವಾದವು ಸಂಭವಿಸಿದಂತಹ ತನ್ನ ಸ್ಮರಣೆಗಳನ್ನು
ಬರೆದಿಡುತ್ತಾನೆ. ಶಿಷ್ಯನೋ, ಗುರುಗಳೋ ಅಥವಾ
ಯಾರಾದರೊಬ್ಬರು, ಶಿಷ್ಯನಲ್ಲಿ ಯಾವ ರೀತಿ
ಅನುಭವವು ಪುನರುತ್ಪಾದಿಸಿತು - ಅಂದರೆ
ಪ್ರಕ್ರಿಯೆಯು ಆರಂಭವಾದಾಗ ಏನಾಯಿತು, ಅದು
ಹೇಗೆ ಮುಕ್ತಾಯವಾಯಿತು ಹಾಗೂ
ಮುಕ್ತಾಯವಾದಾಗ ಏನಾಯಿತು ಎಂಬುದರ
ವಿವರಣೆಯನ್ನು ಬರೆಯುತ್ತಾರೆ. ಇಂತಹ
ವರದಿಯನ್ನೇ ಉಪನಿಷತ್ತು ಎನ್ನಲಾಗಿದೆ.

ಕಾರ್ಯ-ಕಾರಣ ಸಿದ್ಧಾಂತವನ್ನು ಮೀರಿ-ಉಪನಿಷತ್ತು ಸಂಭವಿಸುವುದು ಹೇಗೆ

ಕಾರ್ಯ-ಕಾರಣ ಸಿದ್ಧಾಂತವೆಂಬ ಮಾತನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ. ಒಂದು ಚೆಂಡನ್ನು ಕೈಬಿಟ್ಟರೆ ಅದು ಕೆಳಗೆ ಬೀಳುತ್ತದೆ. ನೀರನ್ನು 100° ಡಿಗ್ರಿ ಸೆಂಟ್‌ಗ್ರೇಡ್‌ನಲ್ಲಿ ಕುದಿಸಿದರೆ ಅದು ಆವಿಯಾಗುತ್ತದೆ. ನೀರಿಗೆ ಉಪ್ಪನ್ನು ಹಾಕಿದರೆ ಅದು ಕರಗಿಹೋಗುತ್ತದೆ. ಇದು ಕಾರಣ ಸಿದ್ಧಾಂತ. ಯಾವುದೇ ಕ್ರಿಯೆಯು ಒಂದು ನಿರ್ದಿಷ್ಟವಾದ ಪರಿಣಾಮವನ್ನು ಉಂಟುಮಾಡುತ್ತದೆ. ವಿಜ್ಞಾನದ ತಳಹದಿಯು ಈ ಕಾರಣ ಸಿದ್ಧಾಂತವನ್ನವಲಂಬಿಸಿದೆ.

ಆದರೆ ಬ್ರಹ್ಮಾಂಡದಲ್ಲಿ ಇರುವುದು ಇದೊಂದೇ
ನಿಯಮವಲ್ಲ. ಪ್ರತಿನಿಮಿಷವೂ ನಡೆಯುತ್ತಿರುವ
ಅಂತರ್ಜ್ಞಾನದ ನಿಯಮ ಅಥವಾ ಖ್ಯಾತ ತತ್ವಜ್ಞಾನಿ
ಕಾರ್ಲ್ ಜುಂಗ್‌ರವರು ಹೇಳುವಂತೆ ಏಕಕಾಲಿಕತೆಯ
ನಿಯಮವು ಮುಖ್ಯವಾದ ಒಂದು ನಿಯಮ.

ಇಲ್ಲಿ, ಏನಾದರೂ ಸಂಭವಿಸಿ, ಅದರ
ಪರಿಣಾಮವಾಗಿ ಮತ್ತೊಂದು ಸಂಭವಿಸುತ್ತದೆ
ಎಂದಲ್ಲ. ಏನೋ ಒಂದು ಸಂಭವಿಸುತ್ತದೆ, ಅದಕ್ಕೆ
'ಅನುಗುಣ'ವಾಗಿ ಮತ್ತೇನೋ ಸಂಭವಿಸುತ್ತದೆ,
ಎಂದರ್ಥ.

ನಮಗೆ ಕಾರ್ಯ-ಕಾರಣ ಸಿದ್ಧಾಂತದಂತೆಯೇ
ವಿಷಯಗಳನ್ನು ನೋಡುವುದು ಬಹಳಮಟ್ಟಿಗೆ
ಅಭ್ಯಾಸವಾಗಿಬಿಟ್ಟಿದೆ. ಕಾರಣಕ್ಕೂ ಮತ್ತು
ಅದನ್ನನುಸರಿಸಿ ತಕ್ಷಣವೇ ಉಂಟಾಗುವ

ಪರಿಣಾಮಕ್ಕೂ ಇರುವ ಸಂಬಂಧವನ್ನು ನೋಡುತ್ತೇವೆ. ಆದರೆ ಜೀವನದಲ್ಲಿ ಮೂಲ ಕಾರಣಕ್ಕೂ ಮತ್ತು ಅದರ ಪರಿಣಾಮವಾಗಿ ಸಂಭವಿಸುವ ಘಟನೆಗಳಿಗೂ ಸಮಯದ ಅಂತರ ಬಹಳ ಇರುವುದರಿಂದ ಅವುಗಳನ್ನು ಸಂಬಂಧಿಸಲಾಗುವುದಿಲ್ಲ. ಒಂದು ಕಲ್ಲನ್ನು ನೀರಿಗೆಸೆದಾಗ, ಆ ಕಲ್ಲಿನಿಂದಾಗಿ ತಕ್ಷಣದ ತರಂಗಗಳೇಳುವುದನ್ನು ನೋಡಬಹುದು. ಆದರೆ ಕೆಲವು ನಿಮಿಷಗಳ ನಂತರ ನೋಡಿದರೆ, ಎರಡನೇ ಹಂತದ ತರಂಗಗಳನ್ನು ನೋಡುತ್ತೀರಿ, ಆದರೆ ಅವು ಏತಕ್ಕಾಗಿ ಆದುವೆಂದು ಖಚಿತವಾಗಿ ತಿಳಿಯುವುದಿಲ್ಲ.

ನಿಮ್ಮ ಜೀವನದಲ್ಲಿ ಇಂತಹ ಸನ್ನಿವೇಶಗಳು ಎದುರಾಗಿರಬಹುದು. ನಿಮ್ಮ ಗೆಳತಿಗೆ ನಿಮಗಿಷ್ಟವಾದ ತಿಂಡಿಯನ್ನು ಮಾಡೆಂದು ಹೇಳೋಣವೆಂದುಕೊಂಡು, ಆಕೆಯ ಮನೆಗೆ ಹೋದರೆ, ಆಕೆಯು ಅದೇ ತಿಂಡಿಯನ್ನೇ ಮಾಡಿರುತ್ತಾಳೆ! ಆಕೆಗೆ ಅಂದು ಅದನ್ನೇ ಮಾಡಬೇಕೆಂದು ತೋಚಿರುತ್ತದೆ, ಇದು ಏಕಕಾಲಿಕತೆಯ ಪ್ರಭಾವ.

ಇದು ಹತ್ತಿರದ ಸಂಬಂಧವಾದ ಗೆಳೆಯರು,
ಪ್ರೇಮಿಗಳು ಅಥವಾ ಗಂಡ-ಹೆಂಡಿರುಗಳಲ್ಲಿ
ಆಗುವುದಕ್ಕಿಂತಲೂ ಗುರು-ಶಿಷ್ಯರಲ್ಲಿ ನಡೆಯುವ
ಸಂಭವ ಹೆಚ್ಚು. ಏಕೆಂದರೆ, ಗುರು-ಶಿಷ್ಯ ಸಂಬಂಧವು
ವಿಶ್ವದಲ್ಲಿ ಸಾಧ್ಯವಿರುವ ಎಲ್ಲಾ
ಸಂಬಂಧಗಳಿಗಿಂತಲೂ ಆಳವಾದದ್ದು, ಅದು
ಸರ್ವಶ್ರೇಷ್ಠ ಪ್ರೀತಿಪ್ರಕರಣೆ.

ಅದು ವಿಸ್ಮಯಕಾರಿ. ಏಕೆಂದರೆ ಅದು ತರ್ಕದ
ಸಂಕುಚಿತ ವ್ಯಾಪ್ತಿಯನ್ನು ಮೀರಿದೆ. ನಿಜಕ್ಕೂ,
ಮನಸ್ಸಿನಿಂದ ಹಿಡಿದಿಡಲಾಗದ, ಆದರೆ ಹೃದಯದ
ಎಳೆಗಳನ್ನು ಹಿಡಿದೆಳೆಯುವಂತಹ ತರ್ಕವನ್ನು
ಮೀರಿದನ್ನು ಏನನ್ನೋ ಮೀಟಿದಾಗ ಮಾತ್ರವೇ ನಮ್ಮ
ನಿಜವಾದ ಜೀವನ ಪ್ರಾರಂಭವಾಗುವುದು. ಅದು
ಯಾವಾಗಲೂ ಟೀಕಿಸುವ ಮನಸ್ಸಿನ ವಾದ
ವಿವಾದಗಳನ್ನು ಬದಿಗೊತ್ತುತ್ತದೆ.

ಗುರುಗಳು ಹೇಳಿದ ಯಾವುದೋ
ಮಾತಿನಿಂದಲ್ಲದೆ, ಅವರ ಸಾನಿಧ್ಯದಿಂದ ಮಾತ್ರವೇ
ಶಿಷ್ಯನು ಅವರಿಗೆ ನಿಜವಾದ ಶಿಷ್ಯನಾಗುತ್ತಾನೆ. ಆ
ಕಾರಣದಿಂದಲೇ, ಕೇವಲ ಗುರುಗಳೊಂದಿಗೆ
ಕುಳಿತುಕೊಳ್ಳುವುದರಿಂದ, ಶಿಷ್ಯನು ಗುರುಗಳ
ಸೊಬಗಿನಿಂದ ಕೂಡಿದ ಲಯಕ್ಕೆ
ಶೃತಿಗೂಡಿಸಲಾರಂಭಿಸುತ್ತಾನೆ. ಇದೇ ಉಪನಿಷತ್ತು.
ಇದೇ ನಿಜವಾದ ಶಿಷ್ಯತ್ವ - ಗುರುಗಳಿಗೆ ಮನತೆರೆದು
ಆತನು ತನ್ನ ಪ್ರೀತಿಯನ್ನು ನಿಮ್ಮ ಮೇಲೆ
ಸುರಿಸುವಂತಾಗಿ, ನೀವು ಅದರ ಸಂಪೂರ್ಣ ವೈಭವ
ಮತ್ತು ದೈವತ್ವವನ್ನು ಪಡೆದು ಬೆಳೆಯುವುದು.

ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಪರಿವರ್ತನೆ

ಮನದ ಪ್ರಜ್ಞಾರಹಿತ ವಲಯವು ಧ್ಯಾನದಿಂದ ಶುದ್ಧೀಕರಿಸಬಹುದಾದ ಸಾಫ್ಟ್‌ವೇರ್‌ನಂತೆ. 'ಗುರುಗಳ ದರ್ಶನ' ಅಥವಾ ಕೃಪೆಯಿಂದ ಈ ಹೊಸ ಸಾಫ್ಟ್‌ವೇರ್‌ನ್ನು ಇಟ್ಟುಕೊಳ್ಳಲು ಹಾರ್ಡ್‌ವೇರ್ ಆದ ಮೆದುಳನ್ನೇ ಅನುಗೊಳಿಸಲಾಗುವುದು.

ಪ್ರಜ್ಞಾಸಹಿತತೆ ಮತ್ತು ಪ್ರಜ್ಞಾರಹಿತತೆಯನ್ನು ಧ್ಯಾನದಿಂದ ಶುದ್ಧೀಕರಿಸಿ, ನಿಮ್ಮಲ್ಲೇ ಒಂದು

ಪರಿವರ್ತನೆ ಉಂಟಾದಾಗ, ಮೊದಲನೇ ದಿನದಿಂದಲೇ ಆ ಪರಿಣಾಮವನ್ನು ಹಿಡಿದಿಟ್ಟುಕೊಂಡು ಅದನ್ನು ಪೋಷಿಸಲು ಹಾರ್ಡ್‌ವೇರ್‌ಗೆ ಸಾಧ್ಯವಾಗದೇ ಹೋಗಬಹುದು. ಗುರುಗಳ ದರ್ಶನ ಅಥವಾ ಕೃಪೆಯಾದರೆ, ಹಾರ್ಡ್‌ವೇರ್ ಸಹ ಆ ಪರಿಣಾಮವನ್ನು ಹಿಡಿದಿಟ್ಟುಕೊಳ್ಳುವಂತೆ ಪರಿವರ್ತನೆ ಹೊಂದುತ್ತದೆ. ಆ ಕೃಪೆಯು ದೊರಕದಿದ್ದರೆ, ನಿಷ್ಠೆಯಿಂದ ಮಾಡಿದ ಧ್ಯಾನ ಮತ್ತು ಕಲಿತ ಉಪದೇಶಗಳು ಹೇಗೋ ಹಾರ್ಡ್‌ವೇರ್‌ನ್ನು ಪರಿವರ್ತಿಸಲು ಸಹಾಯಕವಾಗುತ್ತವೆ.

ಒಂದು ವೇಳೆ ಹಾರ್ಡ್‌ವೇರ್ ಹಳೆಯದಾಗಿದ್ದರೆ,
ಹೊಸ ಸಾಫ್ಟ್‌ವೇರ್‌ನ್ನು ಒಮ್ಮೆ ಅಳವಡಿಸಿದಲ್ಲಿ,
ಹಾರ್ಡ್‌ವೇರ್ ಕೂಡ ಕ್ರಮೇಣವಾಗಿ
ನವೀಕರಿಸಲ್ಪಡುತ್ತದೆ. ಹೇಗಾದರೂ,
ಹಾರ್ಡ್‌ವೇರ್‌ನಲ್ಲಿ ತಕ್ಷಣವೇ
ಪರಿವರ್ತನೆಯಾಗಬೇಕೆಂದರೆ, ದರ್ಶನವೇ
ಸರಿಯಾದುದು. ಅದು ಹಾರ್ಡ್‌ವೇರ್‌ನ್ನು ನೇರವಾಗಿ
ಪರಿವರ್ತಿಸುತ್ತದೆ.

ಕೆಲವುಬಾರಿ ಹೊಸ ಸಾಫ್ಟ್‌ವೇರ್‌ನ್ನು ಅಳವಡಿಸದೇ ಇದ್ದರೂ ಹಾರ್ಡ್‌ವೇರ್‌ನ್ನು ಪರಿವರ್ತಿಸಬಹುದು ಹಾಗೂ ಹೊಸ ಸಾಫ್ಟ್‌ವೇರ್‌ನ ಗುಣವನ್ನು ನೇರವಾಗಿ ಹೊರಹೊಮ್ಮಿಸಲಾರಂಭಿಸಬಹುದು. ಅದು ಶಿಷ್ಯನು ಗುರುವಿಗೆ ಸಂಪೂರ್ಣವಾಗಿ ತೆರೆದುಕೊಂಡಾಗ ಮಾತ್ರ ಆಗಲು ಸಾಧ್ಯ. ಕೆಲವು ವೇಳೆ ಶಿಷ್ಯನು ಯಾವ ಕಾರಣವೂ ಇಲ್ಲದೆಯೋ ಗುರುವನ್ನು ಪ್ರೀತಿಸಲಾರಂಭಿಸುತ್ತಾನೆ. ಆತನು ಬೋಧನೆಗಳಿಂದ ಆಕರ್ಷಿತವಾಗದೇ ಇರಬಹುದು ಅಥವಾ ಅವುಗಳನ್ನು ತಿಳಿದುಕೊಂಡಿಲ್ಲದಿರಬಹುದು. ಧ್ಯಾನತಂತ್ರಗಳಿಗೆ ಆಕರ್ಷಿತವಾಗದಿರಬಹುದು ಅಥವಾ ಅವುಗಳನ್ನು ಅರಿಯದೇ ಹೋಗಿರಬಹುದು. ಆದರೆ, ಕೇವಲ ಪ್ರೀತಿಸುತ್ತಾನೆ. ಕಾರಣವೇ ಇಲ್ಲದೆ ಗುರುಗಳನ್ನು ಪ್ರೀತಿಸಿದರೆ, ಗುರುಗಳು ಸಾಫ್ಟ್‌ವೇರ್‌ನೊಡನೆ ಹಾರ್ಡ್‌ವೇರ್‌ನ್ನೂ ನೇರವಾಗಿ ಪರಿವರ್ತಿಸಲು ಸಾಧ್ಯ. ಇಂತಹ ಶಿಷ್ಯರು ಬೋಧನೆಗಳ ಮತ್ತು ಧ್ಯಾನದ ಸಾರವನ್ನು, ಅವುಗಳನ್ನು ಕಲಿಯದೆಯೇ ನಿಸ್ಸಂಶಯವಾಗಿ ಪ್ರಸರಿಸುತ್ತಿರುತ್ತಾರೆ.

ಸದ್ಯದಲ್ಲಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳೆರಡೂ ಹೊರಪ್ರಪಂಚಕ್ಕೆ, ಭೌತಿಕ ಜಗತ್ತಿಗೆ ತೆರೆದುಕೊಂಡಿವೆ. ಬೋಧನೆಗಳನ್ನು ಆಲಿಸುವ ಮೂಲಕ ಸಾಫ್ಟ್‌ವೇರಿನ ಪ್ರಜ್ಞಾಸಹಿತಭಾಗವು ಒಳಪ್ರಪಂಚಕ್ಕೆ ತಿರುಗಿಕೊಳ್ಳಲಾರಂಭಿಸುತ್ತದೆ ಹಾಗೂ ಸಾಫ್ಟ್‌ವೇರಿನ ಪ್ರಜ್ಞಾರಹಿತ ಭಾಗವು ಧ್ಯಾನದ ಮೂಲಕ ಅಂತರ್ಮುಖಿಯಾಗಲು ಆರಂಭಿಸುತ್ತದೆ. ಆದರೆ ಸಾಫ್ಟ್‌ವೇರ್ ಅಂತರ್ಮುಖಿಯಾದರೂ ಹಾರ್ಡ್‌ವೇರಿಗೆ ಅದನ್ನು ನಿಭಾಯಿಸಲಾಗುವುದಿಲ್ಲ. ಆಗ, ಸಹಜವಾಗಿಯೇ ಹಾರ್ಡ್‌ವೇರ್ ತನ್ನ ಮೂಲ ಸ್ವಭಾವವನ್ನು ಉಳಿಸಿಕೊಂಡಿರಲು ಶಕ್ತಿಮೀರಿ ಪ್ರಯತ್ನಿಸುತ್ತದೆ. ಒಂದು ವೇಳೆ ಸಾಫ್ಟ್‌ವೇರ್ ವಿಪರೀತ ಶಕ್ತಿಯುತವಾಗಿದ್ದು, ಶೃತಿಗೂಡಿಕೊಂಡಿದ್ದರೆ, ಆಗ ಹಾರ್ಡ್‌ವೇರ್ ಪರಿವರ್ತಿಸುತ್ತದೆ. ಆದರೆ, ಬೋಧನೆಯನ್ನೂ ಧ್ಯಾನವನ್ನೂ ಅನುಗ್ರಹಿಸಿ, ಜೊತೆಗೆ ದರ್ಶನವನ್ನೂ ಕೃಪೆಯನ್ನೂ ದಯಪಾಲಿಸಿದರೆ, ಹಾರ್ಡ್‌ವೇರ್‌ಅನ್ನು ಸಹ ಪರಿವರ್ತಿಸಿ, ಪರಿವರ್ತನೆಯನ್ನು ನಿಗ್ರಹಿಸಿಕೊಳ್ಳಲಾರಂಭಿಸುತ್ತದೆ. ಅದೇ ಅನುಭವಕ್ಕೆ ಹೊಂದಿಕೊಂಡಿರಲು ಅದು ತಯಾರಾಗಿರುತ್ತದೆ.

ಡಿ.ಎನ್‌.ಎ. ಭ್ರಮಾ ಪರಿಣಾಮ

ಅಮೆರಿಕಾದ ಹಾರ್ಟ್‌ಮಾತ್‌ ಸಂಸ್ಥೆಯಲ್ಲಿ ಒಂದು ರೋಮಾಂಚಕಾರಿ ಸಂಶೋಧನೆ ನಡೆಯಿತು:

ಈ ಪ್ರಯೋಗದಲ್ಲಿ, ‘ಲೈಟ್‌ ಫೋಟಾನ್’ಗಳ
ಲಕ್ಷಣಗಳನ್ನು ಒಂದು ‘ಲೈಟ್‌ ಸ್ಕ್ಯಾಟರಿಂಗ್‌
ಛೇಂಬರ್’ನಲ್ಲಿ ಅಧ್ಯಯನ ಮಾಡಲಾಯಿತು. ಆ
ನಕ್ಷೆಯು ಫೋಟಾನ್‌ಗಳ ಸ್ವೇಚ್ಛೆಯಾದ
ಚಲನೆಯನ್ನೂ ಒಂದು ಮಾದರಿಯ ರೇಖಾಚಿತ್ರದಂತೆ
ಮೂಡಿಸಿತು.

ನಂತರ, ಆ ಸ್ಕ್ಯಾಟರಿಂಗ್ ಛೇಂಬರ್‌ನಲ್ಲಿ ಒಂದು ಡಿ.ಎನ್‌.ಎ. ನಮೂನೆಯನ್ನು ಇಡಲಾಯಿತು. ಈಗ ನಕ್ಷೆಯು ಪರಿವರ್ತಿಸಿ ಡಿ.ಎನ್‌.ಎ. ಮತ್ತು ಬೆಳಕಿನ ಫೋಟಾನ್‌ಗಳ ಮಧ್ಯೆ ಒಂದು ಪರಸ್ಪರ ಕ್ರಿಯೆಯನ್ನು ತೋರಿತು.

ನಂತರ ಡಿ.ಎನ್‌.ಎ. ನಮೂನೆಯನ್ನು ಛೇಂಬರ್‌ನಿಂದ ತೆಗೆಯಲಾಯಿತು. ಡಿ.ಎನ್‌.ಎ. ಯನ್ನು ತೆಗೆದಾಗ, ನಕ್ಷೆಯು ಡಿ.ಎನ್‌.ಎ.ಯನ್ನು ಛೇಂಬರಿನಲ್ಲಿ ಇರಿಸುವುದಕ್ಕೂ ಮೊದಲು ಹೇಗಿತ್ತೋ ಹಾಗೆಯೇ ಇರುತ್ತದೆಂದು ನಿರೀಕ್ಷಿಸುವಿರಿ. ಆಶ್ಚರ್ಯಕರವಾಗಿ, ಡಿ.ಎನ್‌.ಎ.ಯನ್ನು ತೆಗೆದ ನಂತರ ನಕ್ಷೆಯು ಸ್ಪಷ್ಟವಾಗಿ ಡಿ.ಎನ್‌.ಎ.ಯನ್ನಿಡುವ ಮೊದಲು ಹೇಗಿತ್ತೋ ಅದಕ್ಕಿಂತಲೂ ಬಹಳ ಬೇರೆ ರೀತಿಯದಾಗಿತ್ತು.

ಡಿ.ಎನ್‌.ಎ.ಯನ್ನು ತೆಗೆದ ಮೇಲೂ ಬೆಳಕಿನ
ಫೋಟಾನ್‌ಗಳ ಮೇಲೆ ಅದರ ಪರಿಣಾಮವಿತ್ತು.
ತೆಗೆದ ತಕ್ಷಣ ಮಾತ್ರವಲ್ಲ, ಆದರೆ ನಂತರ ಅನೇಕ
ದಿನಗಳವರೆಗೆ ಡಿ.ಎನ್‌.ಎ.ಯ ಪ್ರಭಾವವು
ಉಳಿದಿತ್ತು.

ಒಂದು ವಿಸ್ಮಯಕಾರಕ ಪರಿಶೀಲನೆಯೆಂದರೆ, ಕೆಳಮಟ್ಟದ ಜೀವಿಗಳ ಪ್ರಜ್ಞೆಯ ಡಿ.ಎನ್‌.ಎ.ಗಳಲ್ಲಿ ಈ ಪರಿಣಾಮವು ಕಂಡುಬರುವುದಿಲ್ಲ. ಇದರಿಂದ ಒಂದು ನಿರ್ದಿಷ್ಟವಾದ ವಸ್ತುವಿನ ಅಥವಾ ವ್ಯಕ್ತಿಯ ಪ್ರಜ್ಞೆಯು ಸದಾಕಾಲವೂ ಹೊರಸೂಸುತ್ತಿರುತ್ತದೆಯೆಂದೂ, ಅದು ತನ್ನ ಪ್ರಭಾವವನ್ನು ಬೀರುತ್ತಲೇ ಇರುತ್ತದೆಂದೂ ತೀರ್ಮಾನಿಸಬಹುದು. ಅಲ್ಲದೆ, ಪ್ರಕೃತಿಯಲ್ಲಿ ಉನ್ನತಸ್ತರದ ಪ್ರಜ್ಞಾರೂಪಗಳು, ಕೇವಲ ಅವುಗಳ ಇರುವಿಕೆಯಿಂದಲೇ ಕಡಿಮೆ ಸ್ತರದ ಪ್ರಜ್ಞೆಯ ಬೇರೆ ಬೇರೆ ರೂಪಗಳ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಗಮನಿಸಬಹುದು. (ಇದರ ಸಂಪೂರ್ಣ ಮಾಹಿತಿಗಾಗಿ http://twm.co.nz/ DNAPhantom.htm ಗೆ ಭೇಟಿ ನೀಡಿರಿ)

ಒಬ್ಬ ಆತ್ಮಜ್ಞಾನಿಯ ಪರಮೋನ್ನತ ಪ್ರಜ್ಞೆಯು
ಆತನ ಸುತ್ತಲಿರುವ ಎಲ್ಲದರಮೇಲೂ ಮತ್ತು ಎಲ್ಲರ
ಮೇಲೂ ಯಾವ ರೀತಿಯ ಪ್ರಭಾವ ಬೀರಬಲ್ಲದು
ಎಂಬುದನ್ನು ನೀವೇ ಊಹಿಸಿಕೊಳ್ಳಬಹುದು.

ಪರಿವರ್ತನೆಯನ್ನು ಭರಿಸಲು ಬೇಕಾದ ಶಕ್ತಿ

ಒಬ್ಬ ಆತ್ಮಜ್ಞಾನಿಯ ಸಾನಿಧ್ಯದಲ್ಲಿದ್ದರೆ
ಪರಿವರ್ತನೆಯನ್ನು ಭರಿಸುವ ಹಾರ್ಡ್‌ವೇರ್,
ಸಾಫ್ಟ್‌ವೇರ್ ಹಾಗೂ ಸಂಪೂರ್ಣ ಪ್ರಕ್ರಿಯೆಯನ್ನೇ
ನೇರವಾಗಿ ಬದಲಾಯಿಸುತ್ತದೆ.

ತಿಳಿಯಿರಿ, ಜ್ಞಾನೋದಯದೊಂದಿಗೆ ನಿಮ್ಮ
ದೈಹಿಕ ಕ್ರಿಯೆ ಸಹ ಬದಲಾಗುತ್ತದೆ. ಗುರುಗಳು
ಸ್ಪರ್ಶಿಸಿದಾಗ, ಆ ಜ್ಞಾನೋದಯ ಹೊಂದಿದ
ಸಾಫ್ಟ್‌ವೇರ್ ಸಹ ಡೌನ್‌ಲೋಡ್ ಆಗಿ, ನಿಮ್ಮ
ದೈಹಿಕ ಕ್ರಿಯೆಯನ್ನು ಬದಲಾಯಿಸುತ್ತದೆ.

ಸ್ಪರ್ಶದ ಸಮಯದಲ್ಲಿ ನೀವು ಸಂಪೂರ್ಣವಾಗಿ ತೆರೆದ ಮನಸ್ಕರಾಗಿದ್ದರೆ, ಜ್ಞಾನೋದಯದ ದೈಹಿಕ ಜ್ಞಾನವು ನಿಮ್ಮಲ್ಲಿ ಡೌನ್‌ಲೋಡ್ ಆಗುತ್ತದೆ. ನಿಮ್ಮ ಶರೀರವು ಈಗಿರುವುದಕ್ಕಿಂತಲೂ ಉತ್ತಮವಾಗಿರಬಹುದೆಂಬುದೂ ತಿಳಿಯುತ್ತದೆ! ನಿಮ್ಮ ಸ್ನಾಯುನೆನಪು (Biomemory) ಇನ್ನೂ ಉತ್ತಮವಾದ ಜೀವನದ ಸಾಧ್ಯತೆಯಿದೆ ಎಂಬುದನ್ನು ತಿಳಿಯುತ್ತದೆ.

ವಸುಧೈವ ಕುಟುಂಬಕಂ

ಗುರುಗಳ ಪ್ರೀತಿಯೊಂದಿಗೆ ಸಹಶಿಷ್ಯರ ಮೇಲಿನ
ಪ್ರೀತಿಯು ಉಂಟಾಗುತ್ತದೆ. ಇನ್ನು ಅದು ‘ನಾನು’
ಅಲ್ಲ, ಬರೀ ‘ನಾವು’. ಕುಟುಂಬದ ಪಾಶಕ್ಕಿಂತಲೂ
ಗಾಢವಾದ ಬಾಂಧವ್ಯವು ಸಹ ಶಿಷ್ಯರ
ಮೇಲುಂಟಾಗುತ್ತದೆ. ಗುರುಗಳ ಮೇಲಿನ ಪ್ರೀತಿಯನ್ನು
ಬಿಟ್ಟರೆ ಇಲ್ಲಿ ಇನ್ನಾವ
ನಿಯಮಗಳೂ ಇರು-
ವುದಿಲ್ಲ. ಬಾಹ್ಯಪ್ರೀತಿಯು
ತಾನಾಗಿಯೇ ಮೊರೆ-
ಯುತ್ತದೆ. ಜಗತ್ತೆಲ್ಲವೂ
ನಮ್ಮ ಕುಟುಂಬವೇ -
ವಸುಧೈವ ಕುಟುಂಬಕಂ
ಎಂಬ ಕೃಷ್ಣನ ದೂರದೃಷ್ಟಿಯು ಸತ್ಯವಾಗುತ್ತದೆ.

ಬ್ರಹ್ಮಾಂಡದ
ಜವಾಬ್ದಾರಿಯಾದ
ನನ್ನ
ಜವಾಬ್ದಾರಿಯನ್ನು
ಅರಿತುಕೊಳ್ಳಿರಿ,
ಆಗ ನೀವು ನನ್ನ
ಶಿಷ್ಯರಾಗುತ್ತೀರಿ.

ಸಮಗ್ರವಾದ ಚೈತನ್ಯದೊಂದಿಗೆ ಬೆಳೆಯುತ್ತೀರಿ, ಆದರೂ ಗುರುವಿನೊಂದಿಗಿನ ಬಾಂಧವ್ಯವು ಪ್ರತಿಯೊಬ್ಬರಿಗೂ ವಿಶೇಷವಾಗಿರುತ್ತದೆ. ಈ ಕ್ರಿಯೆಯು ವಿಚಾರ ಮಾಡುವ ಶಕ್ತಿಯಿಂದಲೋ ಇಲ್ಲವೆ ಹೃದಯದಿಂದಲೋ ಪ್ರಾರಂಭವಾಗುವುದು. ಸ್ವಲ್ಪ ಸಮಯದಲ್ಲೇ ಆ ಕ್ರಿಯೆಯು ಅಸ್ತಿತ್ವದೊಂದಿಗೆ ವೃದ್ಧಿಸುತ್ತದೆ. ಒಂದು ಜೀವವು ಮತ್ತೊಂದರಲ್ಲಿ ಲೀನವಾಗುವ ಹಾಗೆ, ಶಿಷ್ಯನು ಗುರುವಿನಲ್ಲಿ ಲೀನವಾದಾಗ ಅದೇ ಮುಕ್ತಿ, ಅದೇ ನಿರಂತರ ಆನಂದವಾಗುತ್ತದೆ. ಜೀವನ್ಮುಕ್ತಿ ಎಂದರೆ ಗುರುಗಳೊಂದಿಗೆ ಜೀವಿಸುವುದು....ಅದು ಅಷ್ಟೊಂದು ಸುಲಭ!

ಪ್ರಶೋತ್ತರ

ಗುರುಗಳು ಶಿಷ್ಯನನ್ನು ಆರಿಸಿಕೊಳ್ಳುವರೋ ಅಥವಾ ಶಿಷ್ಯನು ಗುರುಗಳನ್ನು ಆರಿಸಿಕೊಳ್ಳುವನೆ?

ಮೊದಲನೆಯದಾಗಿ, ವಾಸ್ತವವಾಗಿಯೂ, ಶಿಷ್ಯನೇ ಗುರುವನ್ನು ಆಯ್ಕೆಮಾಡಿಕೊಳ್ಳುವುದು.

ನಾನು ನಿಮ್ಮ ಶಿಷ್ಯನಾಗುವುದು ಹೇಗೆ?

ನಿಮಗೆ ನನ್ನನ್ನು
ಮರೆಯಲಾಗದಿದ್ದರೆ,
ಆಗ ಮಾತ್ರವೇ
ನಾನು ನಿಮ್ಮ
ಗುರು.

ಏಕೆಂದರೆ ಗುರುವು
ಆಯ್ಕೆ ಮಾಡುವುದೇ
ಇಲ್ಲ, ತಮ್ಮ
ಕೃಪೆಯನ್ನು ವರ್ಷಿಸು-
ತ್ತಾರೆ. ಆತನು ಪವಿತ್ರ
ಗಂಗಾನದಿಯಂತೆ ಕೇವಲ ಹರಿಯುತ್ತಾನೆ. ನಿಮಗೆ
ಬೇಕಾಗಿದ್ದರೆ, ನೀವು ನದಿಯೊಳಗಿಳಿಯುವಿರಿ,
ಮುಳುಗುವಿರಿ, ಕುಡಿಯುವಿರಿ ಅಥವಾ ಆಟ
ಆಡುವಿರಿ. ನಿಮಗೇನು ಬೇಕೋ ಅದೆಲ್ಲವನ್ನೂ
ಮಾಡುವಿರಿ. ಗಂಗೆಯು ಕೇವಲ ತಾನಾಗಿಯೇ
ಹರಿಯುವಳು. ಆಯ್ಕೆ ಮಾಡುವುದಿಲ್ಲ. ಗುರುವಿನ
ವಿಷಯದಲ್ಲಿಯೂ ಹಾಗೆಯೇ. ಗುರುವೆಂದರೆ ಆಯ್ಕೆ
ಇಲ್ಲದ ಚೈತನ್ಯ, ಆಯ್ಕೆ ಇಲ್ಲದ ಆನಂದ.

ಆದುದರಿಂದ ಈ ಸಂಬಂಧವು ಶಿಷ್ಯನಿಂದಲೇ ಉಂಟಾಗುವುದು ಎನ್ನುತ್ತೇನೆ. ಶಿಷ್ಯನಿಗೆ ಕಟ್ಟಕಡೆಯ ಸ್ವಾತಂತ್ರ್ಯವಿದೆ, ಗುರು-ಶಿಷ್ಯರ ಬಾಂಧವ್ಯವನ್ನೇರ್ಪಡಿಸಿಕೊಳ್ಳುವ ಸ್ವಾತಂತ್ರ್ಯ ಅವನದು. ಏರ್ಪಡಿಸಿಕೊಂಡ ನಂತರ, ಆತನ ಸ್ವಾತಂತ್ರ್ಯವೆಲ್ಲವೂ ನಶಿಸಿಬಿಡುತ್ತದೆ. ಏಕೆಂದರೆ ಆತನಿಗೆ ಸಾಕ್ಷಾತ್ಕಾರವಾಗುತ್ತದೆ! ನಿಮ್ಮ ಜೀವನದಲ್ಲಿ ನೀವು ಮಾಡಬಹುದಾದ ಕಟ್ಟಕಡೆಯ ಆಯ್ಕೆ ಎಂದರೆ ನಿಮ್ಮ ಗುರುಗಳನ್ನು ಕಂಡುಕೊಳ್ಳುವುದು, ಅಷ್ಟೇ. ಗುರುಗಳನ್ನು ಆಯ್ಕೆ ಮಾಡಿಕೊಂಡ ಕ್ಷಣವೇ ನಿಮ್ಮತನ ಹೋಗಿಬಿಡುತ್ತದೆ. ಆಗ, ನೀವು ಒಬ್ಬ ಬೇರೆಯಾದ ವ್ಯಕ್ತಿಯೇ ಅಲ್ಲ; ನೀವೇ ಗುರುವಾಗುತ್ತೀರಿ.

ನೀವೇನಾದರೂ ‘ಅನ್‌ಕ್ಲಚ್’ ಆಗಿದ್ದರೆ, ನನ್ನ ವಲಯಕ್ಕೆ ಸೇರಬಹುದು. ‘ಅನ್‌ಕ್ಲಚ್’ ಆಗಿರುವುದೇ ನಿಮ್ಮನ್ನು ನೇರವಾಗಿ ನನ್ನೊಂದಿಗೆ ಸೇರಿಸುತ್ತದೆ. ನಿಮ್ಮಿಂದ ಒಂದು ಪ್ರಚಂಡ ಚೈತನ್ಯವು ಉಕ್ಕಿ ಹರಿಯಲಾರಂಭಿಸುತ್ತದೆ. ‘ಅನ್‌ಕ್ಲಚ್’ ಎನ್ನುವುದರ ನನ್ನ ಅರ್ಥವೇನು? ಯಾವ ವ್ಯಕ್ತಿಗೂ, ಆಲೋಚನೆಗೂ ಅಥವಾ ವಸ್ತುವಿಗೂ ಜೋತುಬೀಳದೆ, ಆರಾಮವಾಗಿರುವುದು.

ನಾನು ಯಾವಾಗಲೂ ಎಲ್ಲರಿಗೂ ಹೇಳುವುದೇನೆಂದರೆ, ಯಾರು ತನ್ನ ನೋವನ್ನು ಭಾವಿಸುತ್ತಿದ್ದು, ಉಪಶಮನಕ್ಕಾಗಿ ನನ್ನ ಬಳಿ ಬರುತ್ತಾನೆಯೋ ಆತನು ಒಬ್ಬ ಭಕ್ತನೆಂದು. ತನ್ನ ಸಮಸ್ಯೆಗಳ ಬಗ್ಗೆ ಮಾತ್ರ ಹೇಳಿಕೊಳ್ಳುವವನು ಭಕ್ತ.

ಯಾರು ನನ್ನ ಶ್ರಮವನ್ನು ಗುರುತಿಸುತ್ತಾನೆಯೋ,
ನಾನು ಹೊತ್ತಿರುವ ಈ ಇಡೀ ಸಂಸ್ಥೆಯ
ಜವಾಬ್ದಾರಿಯನ್ನು ಹೊರುತ್ತಾನೆಯೋ ಆತನು ಒಬ್ಬ
ಶಿಷ್ಯ!

ಯಾರು ನನ್ನ ಜವಾಬ್ದಾರಿಯನ್ನು ತೆಗೆದುಕೊಂಡ
ನಂತರ, ‘ಜ್ಞಾನೋದಯಗೊಂಡವರಿಗೆ ನೋವಿರಲು
ಹೇಗೆ ಸಾಧ್ಯ?’ ಎಂದರಿತು ಈ ಜವಾಬ್ದಾರಿಯನ್ನು
ತೆಗೆದುಕೊಳ್ಳುವ ಮೊದಲು ನಾನು ಯಾವುದನ್ನು
ಶ್ರಮವೆಂದುಕೊಂಡಿದ್ದೆನೋ ಅದು ಶ್ರಮವಲ್ಲ, ಅದು
ನಿತ್ಯಾನಂದ, ಶಾಶ್ವತಾನಂದ ಎಂದರಿತುಕೊಂಡಾಗ
ಅವರು ಒಳಗಿನವರಾಗುತ್ತಾರೆ.

ಹಾಗಾದರೆ, ಈಗ ನಿಮಗೆ ಶಿಷ್ಯನಾಗುವುದು ಹೀಗೆಂದು ತಿಳಿದಿರಬೇಕು. ಬ್ರಹ್ಮಾಂಡದ ಜವಾಬ್ದಾರಿಯಾದ ನನ್ನ ಜವಾಬ್ದಾರಿಯನ್ನು ಅರಿತುಕೊಳ್ಳಿರಿ, ಆಗ ನೀವು ನನ್ನ ಶಿಷ್ಯರಾಗುತ್ತೀರಿ.

ಅನ್ವೇಷಕನಿಗೆ ತನ್ನ ಗುರುವನ್ನು ಪಡೆದೆನೆಂದು ಹೇಗೆ ತಿಳಿಯುತ್ತದೆ? ಅಥವಾ ಆತನಿಗೆ ಅನೇಕ ಗುರುಗಳಿರಬಹುದೇ?

ಗುರುಗಳನ್ನು ತಲುಪಿದಾಗ, 'ಇವರು ನನ್ನ ಗುರುಗಳೋ ಅಲ್ಲವೋ?' ಎಂಬ ಪ್ರಶ್ನೆಯು ಅದೃಶ್ಯವಾಗುತ್ತದೆ. ಸ್ಪಷ್ಟವಾಗಿ ತಿಳಿದುಕೊಳ್ಳಿರಿ, ಜನರು ನನ್ನನ್ನು ಕೇಳುತ್ತಾರೆ, 'ನಿಮ್ಮನ್ನು ನಮ್ಮ ಗುರುಗಳೆಂದು ಭಾವಿಸೋಣವೆ?' ಎಂದು. 'ಆ ತಪ್ಪನ್ನೆಂದಿಗೂ ಮಾಡಬೇಡಿರಿ. ಇಲ್ಲ, ನಾನೆಂದಿಗೂ ನನ್ನನ್ನೇ ಉಚ್ಛಸ್ಥಾನಕ್ಕೇರಿಸಿ ಕೊಳ್ಳುವುದಿಲ್ಲ. ನಾನೆಂದಿಗೂ ನನ್ನನ್ನೇ ನಿಮ್ಮ ಗುರುವೆಂದು ಒಪ್ಪಿಕೊಳ್ಳಿರೆಂದು ಹೇಳುವುದಿಲ್ಲ'.

ನಾನು ನಿಮ್ಮ ಗುರುವಾಗಿದ್ದರೆ, ನಿಮ್ಮ
ತರ್ಕಬುದ್ಧಿಗೂ ಮೀರಿದ ಏನಾದರೂಒಂದು ಇರುತ್ತದೆ.
ನಿಮಗೆ ನನ್ನನ್ನು ಮರೆಯಲಾಗುವುದಿಲ್ಲ. ಈಗ ನಾನು
ಸವಾಲು ಹಾಕುತ್ತೇನೆ, ನನ್ನನ್ನು ಮರೆಯಲು
ಸಾಧ್ಯವಾದರೆ, ಮರೆತುಬಿಡಿರಿ, ಆಗ ನಾನು ನಿಮ್ಮ
ಗುರುವಲ್ಲ. ಆರಾಮವಾಗಿ ನಿಮ್ಮ ಅನ್ವೇಷಣೆಯನ್ನು
ಮುಂದುವರೆಸಿರಿ. ನಿಮಗೆ ಸರಿಯಾದ ಗುರು
ದೊರಕುತ್ತಾರೆ, ಚಿಂತಿಸಬೇಡಿರಿ.

ನಿಮಗೆ ನನ್ನನ್ನು ಮರೆಯಲಾಗದಿದ್ದರೆ, ಆಗ
ಮಾತ್ರವೇ ನಾನು ನಿಮ್ಮ ಗುರು. ನಾನು ನಿಮ್ಮ
ಗುರುವಾಗಿದ್ದರೆ, ಹಗಲಿರುಳೂ ನಿಮ್ಮ
ಮನಸ್ಸಿನಲ್ಲಿರುತ್ತೇನೆ. ನಿಮ್ಮ ಕನಸಿನಲ್ಲಿಯೂ
ಇರುತ್ತೇನೆ. ನನ್ನ ಆಲೋಚನೆಗಳು ಹಗಲಿರುಳೂ
ನಿಮ್ಮನ್ನಾವರಿಸಿದರೆ ಆಗ ನಾನು ನಿಮ್ಮ ಗುರು.

ಜನರು ಕೇಳುತ್ತಾರೆ, 'ಸ್ವಾಮೀಜೀ, ನಾನು ನಿಮ್ಮನ್ನು ನೆನಪಿಸಿಕೊಳ್ಳಬೇಕೇ? ನಿಮ್ಮನ್ನು ಕುರಿತು ಧ್ಯಾನ ಮಾಡಬೇಕೇ?' ಎಂದು. 'ಬೇಡ, ನನ್ನನ್ನು ಮರೆಯುವುದೇ ಸಮಸ್ಯೆಯಾಗಿ, ನನ್ನನ್ನು ನೆನಪಿಸಿಕೊಳ್ಳುವುದು ಸಮಸ್ಯೆಯಲ್ಲದಾದಾಗ ಮಾತ್ರ ನಾನು ನಿಮ್ಮ ಗುರು. ನಿಮಗೆ ನನ್ನನ್ನು ಮರೆಯಲು ಸಾಧ್ಯವಾದರೆ ಮರೆತು, ಮುಂದುವರೆಯಿರಿ. ಅದು ನಿಮಗೆ ಒಳ್ಳೆಯದು' ಎನ್ನುತ್ತೇನೆ.

ನಿಮಗೆ ನನ್ನನ್ನು ಮರೆಯಲಾಗದಿದ್ದರೆ ನಾನು ನಿಮ್ಮ ಗುರು. ಯಾವುದೋ ಒಂದು ಮೂಲೆಯಲ್ಲಾದರೂ ಒಂದು ಅನುಮಾನವಿದ್ದಲ್ಲಿ, ನಾನು ನಿಮ್ಮ ಗುರುವಲ್ಲವೆನ್ನುವುದಕ್ಕೆ ಅದೇ ಭದ್ರವಾದ ಸಾಕ್ಷಿ. ವಿರಮಿಸಿ, ಪರದಾಡಬೇಡಿ, ವ್ಯಥೆಪಡಬೇಡಿ, ಹಿಂಸೆ ಪಡಬೇಡಿ, ಸೊಗಸಾಗಿ ವಿದಾಯಹೇಳಿ, ಮುಂದುವರೆಯಿರಿ. ನಿಮ್ಮ ಸರಿಯಾದ ಗುರು ದೊರಕಲು, ನಿಮಗಾಗಿರುವ ಗುರುವನ್ನು ಸಂಧಿಸಲು ನಿಮಗೆ ನನ್ನ ಪ್ರೀತಿ, ಗೌರವ ಹಾಗೂ ಹಾರೈಕೆಗಳಿವೆ. ಅನ್ವೇಷಣೆ ಪ್ರಾರಂಭವಾಗಲಿ, ಸರಿಯಾದ ಗುರುವನ್ನು ಕಾಣುವಿರಿ. ನಾನೇ ಅನೇಕ ಶಿಷ್ಯರನ್ನು ಅನೇಕ ಗುರುಗಳ ಬಳಿ ಕಳುಹಿಸಿದ್ದೇನೆ. ಬಹಳ ಜನರಿಗೆ ಅದೇ ರೀತಿ ನಿರ್ದೇಶಿಸಿದ್ದೇನೆ. ಇದು ಒಂದು ಅಂಗಡಿಯಂತಲ್ಲ.

ನನ್ನ ಅಂಗಡಿಗೆ ಬಂದವರು ಮತ್ತೊಂದಕ್ಕೆ ಹೋಗಬಾರದೆಂದೇನಿಲ್ಲ. ಇದು ವ್ಯವಹಾರವಲ್ಲ.

ನೀವು ನನ್ನ ಶಿಷ್ಯರಾದರೆ, ಬೇರೆ ಎಲ್ಲಾ
ಗುರುಗಳಿಂದ ಕಲಿಯುವುದನ್ನು ಬಿಡಬೇಡಿರೆಂದೇ
ನಾನು ಎಲ್ಲರಿಗೂ ಹೇಳುವುದು. ಎಲ್ಲಾ
ಹೂದೋಟಗಳಿಂದಲೂ ಹೂಗಳನ್ನು ಬಿಡಿಸಿಕೊಂಡು,
ಒಂದು ಸುಂದರವಾದ ಗುಚ್ಛವನ್ನು ನಿಮಗಾಗಿ
ಮಾಡಿಕೊಳ್ಳಿರಿ. ಏನೇ ಆದರೂ ಜೀವನವನ್ನು
ಶ್ರೀಮಂತಗೊಳಿಸಿಕೊಳ್ಳಬೇಕು.

ಮೊದಲನೆಯದಾಗಿ : ನಾನು ನಿಮ್ಮ ಗುರುವಾಗಿದ್ದಲ್ಲಿ, ನೀವು ನನ್ನ ಶಿಷ್ಯರೋ ಅಲ್ಲವೋ ಎಂಬ ಪ್ರಶ್ನೆಯೇ ನಿಮ್ಮಲ್ಲಿ ಏಳುವುದಿಲ್ಲ. ನಿಮಗೆ ಈ ಅನುಮಾನವಿದ್ದರೆ, ನಾನು ನಿಮ್ಮ ಗುರುವಲ್ಲವೆಂದು ಸ್ಪಷ್ಟಮಾಡಿಕೊಳ್ಳಿರಿ, ನಿಮ್ಮ ಅನ್ವೇಷಣೆಯನ್ನು ಮುಂದುವರೆಸಿರಿ.

ಎರಡನೆಯದಾಗಿ, ನಿಮ್ಮ ಅನುಮಾನಗಳೆಲ್ಲವೂ
ಪರಿಹಾರವಾಗಿದ್ದರೂ, ನಿಮಗೆ ನಾನೇ ಗುರು
ಎನಿಸಿದ್ದರೂ, ಸಂಪೂರ್ಣವಾಗಿ
ಒಂದಾದಂತೆನಿಸಿದರೂ, ಆಗಲೂ ಸಹ, ಬೇರೆ ಎಲ್ಲಾ
ಮೂಲಗಳಿಂದಲೂ ಕಲಿಯುವುದನ್ನು ಬಿಡಬೇಡಿರಿ.
ಸಾಧ್ಯವಾದ ಎಲ್ಲಾ ಮೂಲಗಳಿಂದಲೂ ಕಲಿಯಿರಿ.