KAILASA Library/ಜೀವನ್ಮುಕ್ತಿ/ಜೀವನದ ಮನೋನಾಟಕದ ಅಂತ್ಯSign in
ಜೀವನ್ಮುಕ್ತಿ

ಜೀವನದ ಮನೋನಾಟಕದ ಅಂತ್ಯ

This text was machine-transcribed from the printed book and may contain errors. Select the words and choose “Report a mistake”.

ನಿಮ್ಮ ಸಂಬಂಧಗಳೆಲ್ಲವೂ ಕೇವಲ ಪಾತ್ರಗಳು,
ಹಾಗೂ ಜೀವನವೇ ಒಂದು ನಾಟಕ. ದಯವಿಟ್ಟು
ಸ್ಪಷ್ಟವಾಗಿ ತಿಳಿಯಿರಿ. ಸಂಬಂಧ'ವೆಂದು
ಏರ್ಪಡುವುದெல்லವೂ ಕೇವಲ ಒಂದು
ಮನೋನಾಟಕವೇ.

ನೀವು ಸತ್ಯವನ್ನರಿಯಬೇಕು. ಒಂದು ಕುಟುಂಬದಲ್ಲಿ ಜನ್ಮವೆತ್ತಿ, ಒಬ್ಬರನ್ನು ತಾಯಿ, ತಂದೆ, ಸೋದರ ಹಾಗೂ ಸೋದರಿಗಳಾಗಿ ಪಡೆದು ಅವರನ್ನು ಕುಟುಂಬದ ಸದಸ್ಯರೆನ್ನುತ್ತಾ, ಅವರೊಡನೆ ಆಟವಾಡುತ್ತೀರಿ. ಮಕ್ಕಳು ಗೊಂಬೆಗಳನ್ನಿಟ್ಟುಕೊಂಡು ಆಡುವುದನ್ನು ನೀವು ನೋಡಿರಬಹುದು. ಮಗು ಕೆಲವು ಗೊಂಬೆಗಳನ್ನಿಟ್ಟುಕೊಂಡಿರುತ್ತದೆ; ಅದು ಒಂದನ್ನು ತಂದೆಯಂತೆ ಮತ್ತೊಂದನ್ನು ತಾಯಿಯಂತೆ, ಹಾಗೆಯೇ ಇನ್ನೆರಡು ಗೊಂಬೆಗಳನ್ನು ಸೋದರ, ಸೋದರಿಯರಂತೆ ಅಲಂಕಾರ ಮಾಡುತ್ತದೆ. ಅವರ ಒಂದು ದಿನದ ಜೀವನದ ನಾಟಕವನ್ನಾಡಲು ಪ್ರಾರಂಭಿಸುತ್ತದೆ. ತಂದೆಯು ಕೆಲಸಕ್ಕೆ ಹೊರಡುತ್ತಿರುವಂತೆ, ತಾಯಿಯು ಅಡಿಗೆ ಮನೆಯಲ್ಲಿ ಏನೋ ಅಡಿಗೆ ಮಾಡುತ್ತಿರುವಂತೆ, ಸೋದರನು ಶಾಲೆಗೆ ಹೋಗುತ್ತಿರುವಂತೆ, ಹಾಗೂ ಸೋದರಿಯು ಶಾಲೆಗೆ ಹೋಗಲು ಹಠಮಾಡುತ್ತಾ ಅಳುತ್ತಿರುವಂತೆ ಶಬ್ದಗಳನ್ನು ಮಾಡುತ್ತದೆ. ಇವೆಲ್ಲಾ ಪಾತ್ರಗಳನ್ನೂ ಮಗುವೇ ವಹಿಸಿ, ಇದಿಷ್ಟೂ ಆಟದಿಂದ ಸಂತೋಷಪಡುತ್ತದೆ.

ಈಗ, ನಿಮ್ಮ ಜೀವನವನ್ನೇ ನೋಡಿರಿ. ನೀವೂ ಸಹ ಸಂಬಂಧಗಳ ರೀತಿಯಲ್ಲೋ, ಭೌತಿಕ ವಸ್ತುಗಳ ರೀತಿಯಲ್ಲೋ, ಇನ್ನೂ ಹೆಚ್ಚು ಹೆಚ್ಚಾಗಿ ಕೂಡಿಹಾಕಲು ಮತ್ತು ನಿಮ್ಮದಾಗಿಸಿಕೊಳ್ಳಲು ಪ್ರಯತ್ನಪಡುತ್ತಿರುವಿರಿ. ಸ್ಥಿರಾಸ್ಥಿರವಸ್ತುಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ. ಅಷ್ಟು ಹೊತ್ತಿಗೆ ಇದ್ದಕ್ಕಿದ್ದಂತೆ ಈ ನಾಟಕವು ನಿಮ್ಮ ಸಾವಿನೊಂದಿಗೆ ಮುಕ್ತಾಯವಾಗುತ್ತದೆ.

ಪುನಃ ಬೇರೊಂದು ಕುಟುಂಬದಲ್ಲಿ ಯಾರನ್ನೋ ತಾಯಿ, ತಂದೆ, ಸೋದರ, ಸೋದರಿಗಳಾಗಿ ಪಡೆದು ಜನ್ಮವೆತ್ತಿ ಇದೇ ಆಟವನ್ನೇ ಮತ್ತೊಮ್ಮೆ ಆಡುತ್ತೀರಿ. ನಮ್ಮ ಜೀವನವೆಲ್ಲವೂ ಮಕ್ಕಳು ಬೊಂಬೆಗಳನ್ನಿಟ್ಟುಕೊಂಡು ಆಡುವಂತಲ್ಲದೆ ಬೇರೆಯಲ್ಲ. ಇದು ಜೀವನದ ಮನೋನಾಟಕ. ಯಾರೊಬ್ಬರಿಗೆ ಗುರು ಶಿಷ್ಯ ಸಂಬಂಧದ ಸಂಪೂರ್ಣ ಅನುಭವವಾಗಿರುತ್ತದೆಯೋ ಅವರಿಗೆ ತಮ್ಮ ಜೀವನದಲ್ಲಿ ಪುನಃ ಈ ಮನೋನಾಟಕ ನಡೆಯುವುದಿಲ್ಲ.

ಶರಣಾಗತಿ – ಅಂತಿಮೋಪಾಯ

ಪರಮಾತ್ಮನನ್ನು
ಅರಿತುಕೊಳ್ಳಲು
ಅತ್ಯುತ್ತಮ
ತಂತ್ರವೇ
ಶರಣಾಗತಿ.

ಭಗವದ್ಗೀತೆಯಲ್ಲಿ ಅರ್ಜುನನು ತಾನು ಯಾವ ಮಾರ್ಗವನ್ನು ಅನುಸರಿಸಬೇಕು ಎಂಬುದರಲ್ಲಿ ಸಂಪೂರ್ಣವಾಗಿ ಗೊಂದಲದಲ್ಲಿರುತ್ತಾನೆ. ಜಿಜ್ಞಾಸೆ ಮೂಡುತ್ತದೆ. ಕೊನೆಯ ಅಧ್ಯಾಯದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶವೇ ಪರಮಾತ್ಮನನ್ನು ಅರಿತುಕೊಳ್ಳುವ ಉತ್ತಮೋಪಾಯ. ಧ್ಯಾನ, ಭಕ್ತಿ ಮತ್ತು ಜ್ಞಾನಗಳಂತಹ ವಿವಿಧೋಪಾಯಗಳನ್ನು ಬೋಧಿಸಿದ ನಂತರ, ಕೊನೆಗೆ ಕೃಷ್ಣನು ನೇರವಾದ, ಖಂಡಿತವಾದ ಸರ್ವಶ್ರೇಷ್ಠವಾದ ಶರಣಾಗತಿಯನ್ನು ಬಹಿರಂಗಪಡಿಸುತ್ತಾನೆ.

ಸ್ಪಷ್ಟವಾಗಿಸಿಕೊಳ್ಳಿ, ಪರಮಜ್ಞಾನಿಗಳಿಗೆ
ಶರಣಾದಾಗ, ವಾಸ್ತವವಾಗಿ ಅಹಂಕಾರವಿಲ್ಲದ,
ತನ್ನತನವಿಲ್ಲದವರೊಬ್ಬರಿಗೆ ಶರಣಾಗುತ್ತಿರುವಿರಿ.
ಆದಕಾರಣ ಆತನಿಗೆ ಆತನದೇ ಆದ ಯಾವ
ವೈಯಕ್ತಿಕ ಆಸಕ್ತಿಯೂ ಇರುವುದಿಲ್ಲ. ಆತನು
ವಿಶ್ವಶಕ್ತಿಯೊಂದಿಗೆ ಒಂದಾಗಿ,
ಉಕ್ಕಿಹರಿಯುತ್ತಿರುವವನು. ಆತನ ಕೈ ಹಿಡಿದು,
ಆತನಿರುವ ಆನಂದ ಸಾಗರಕ್ಕೆ ನಿಮ್ಮನ್ನೂ
ಕರೆದುಕೊಂಡು ಹೋಗೆಂದು ಆತನನ್ನು ಬೇಡಿಕೊಳ್ಳಿರಿ.

ನೀವು ಕರ್ತೃವೆಂದುಕೊಂಡಾಗ ಚಿಂತೆ ಹಾಗೂ
ಒತ್ತಡಗಳು ಉಂಟಾಗುತ್ತವೆ. ಅಲ್ಲದೆ, ಬೇಗನೇ
ದಣಿಯುತ್ತೀರಿ. ಆದರೆ, ಅದೇ ಒಂದು ಉನ್ನತವಾದ
ಚೈತನ್ಯಕ್ಕೆ ನಿಮ್ಮ ಯಜಮಾನಿಕೆಯನ್ನು ವರ್ಗಾಯಿಸಿ

ಕೆಲಸವನ್ನು ಆನಂದವಾಗಿ ಮಾಡುತ್ತಿದ್ದರೆ, ಬಹಳ ಆರಾಮವಾಗಿರುತ್ತೀರಿ!

ಪರಮಾತ್ಮನನ್ನು ಅರಿತುಕೊಳ್ಳಲು ಅತ್ಯುತ್ತಮ ತಂತ್ರವೇ ಶರಣಾಗತಿ.

ಒಂದು ಪುಟ್ಟ ಕಥೆ:

ಒಮ್ಮೆ ಒಬ್ಬ ಬ್ಯಾಂಕ್ ಮ್ಯಾನೇಜರ್ ಪ್ರತಿದಿನವೂ ಹಣವನ್ನೆಲ್ಲವನ್ನೂ ಮನೆಗೆ ತೆಗೆದುಕೊಂಡುಹೋಗಿ, ಮಾರನೆಯ ದಿನ ಬೆಳಗ್ಗೆ ತನ್ನೊಂದಿಗೆ ತರುತ್ತಿದ್ದನು. ಈ ರೀತಿ ಒಂದು ತಿಂಗಳು ಮಾಡಿದ ಮೇಲೆ ಅದನ್ನು ಇನ್ನು ಮುಂದುವರೆಸಲಾಗಲಿಲ್ಲ.

ತನ್ನ ಉಸ್ತುವಾರಿಯಲ್ಲಿದ್ದ ಹಣದೊಂದಿಗೆ ಮನೆಗೆ
ಹೋಗುವಾಗ ದಾರಿಯುದ್ದಕ್ಕೂ ಹೆದರಿ
ನಡುಗುತ್ತಿದ್ದನು ಹಾಗೂ ಮನೆಯಲ್ಲಿ ನಿದ್ರೆಯೂ
ಮಾಡಲಾಗುತ್ತಿರಲಿಲ್ಲ. ಕೊನೆಗೆ, ಆತನು ಅದರ
ಒತ್ತಡವನ್ನು ಇನ್ನು ಸಹಿಸಲು ಸಾಧ್ಯವಿಲ್ಲದಾಗಿ ಆ
ಕೆಲಸದಿಂದ ಬಿಡುಗಡೆ ಮಾಡಿರೆಂದು ತನ್ನ
ಮೇಲಧಿಕಾರಿಯನ್ನು ಕೇಳಿಕೊಂಡನು.

ಮೇಲಧಿಕಾರಿಗಳು, ಹಣವು ಕಳೆದೇ ಹೋದರೂ, ಆತನನ್ನು ಆಕ್ಷೇಪಿಸುವುದಿಲ್ಲವೆಂದೂ ಆತನು ತನ್ನ ಕೆಲಸವನ್ನು ಮುಂದುವರೆಸಬಹುದೆಂದೂ ಹೇಳಿದರು. ಅಂದಿನಿಂದ ಮ್ಯಾನೇಜರ್ ನಿಶ್ಚಿಂತನಾಗಿ ನಿದ್ರಿಸಿದನು. ಆತನಿಗಾದ ವ್ಯತ್ಯಾಸವಾದರೂ ಏನು? ಆತನು ಅದೇ ಕೆಲಸವನ್ನೇ ಮಾಡುತ್ತಿದ್ದನು; ಆದರೂ ಭಯವೂ ಒತ್ತಡವೂ, ಇನ್ನಿಲ್ಲವಾಗಿದ್ದುದೇಕೆ? ಏಕೆಂದರೆ, ಜವಾಬ್ದಾರಿಯನ್ನು ಉನ್ನತ ಅಧಿಕಾರಕ್ಕೆ ವರ್ಗಾಯಿಸಿದುದರಿಂದ, ಅಷ್ಟೇ. ಆತನು ತಾನು ಮಾಡುತ್ತಿದ್ದ ಕೆಲಸವನ್ನೇ ಮುಂದುವರೆಸಿದನು.

ಉನ್ನತವಾದ ಚೈತನ್ಯಕ್ಕೆ ಶರಣಾದಾಗ
ನೀವೊಂದಿಗೂ ಬರಿದಾಗುವುದಿಲ್ಲ ಅಥವಾ
ಬಳಲುವುದಿಲ್ಲ. ಏಕೆಂದರೆ, ನೀವು ಅಪಾರವಾದ
ಚೈತನ್ಯದ ಸಾಕಾರಮೂರ್ತಿಗೆ ನೇರವಾಗಿ
ಸೇರಿರುವಿರಿ. ಇದೇ ಶರಣಾಗತಿಯ ಕೊಡುಗೆ.

ಶರಣಾಗತಿಯ ಮೂರು ಹಂತಗಳು

ನಾನೀಗ ಶರಣಾಗತಿಯ ಮೂರು ವಿಧಗಳನ್ನು
ನಿಮಗೆ ವಿವರಿಸುತ್ತೇನೆ. ಬುದ್ಧಿಮತ್ತತೆಯ
ಶರಣಾಗತಿ, ಭಾವನೆಗಳ ಶರಣಾಗತಿ ಮತ್ತು
ಇಂದ್ರಿಯಗಳ ಶರಣಾಗತಿ.

ಮೊದಲನೆಯದು: ಬುದ್ಧಿಮತ್ತತೆಯ ಶರಣಾಗತಿ
ಎಂದರೆ, ನಿಮ್ಮ ವಿಚಾರ ಮಾಡುವ ಶಕ್ತಿಗಿಂತಲೂ
ಗುರುಗಳ ವಿಚಾರ ಮಾಡುವ ಶಕ್ತಿಯು
ಉತ್ತಮವಾದುದೆಂದು ವಿಶ್ವಾಸದಿಂದಿರುವುದು. ಇದೇ
ವೈಚಾರಿಕ ಶರಣಾಗತಿ ಎನ್ನುವುದು. ಈ ಹಂತದಲ್ಲಿ
ಗುರುಗಳು ತೋರುವ ಜೀವನಶೈಲಿಯನ್ನು
ಅನುಸರಿಸುವಿರಿ.

ಎರಡನೆಯದು: ನಿಮ್ಮೆಲ್ಲಾ ಭಾವನೆಗಳಿಗಿಂತಲೂ ಗುರುಗಳ ಭಾವನೆಗಳು ಉತ್ತಮವಾದುವೆಂದು ವಿಶ್ವಾಸದಿಂದಿರುವುದು. ಎಂದರೆ ಗುರುಗಳ ಸಂಬಂಧವು ಬೇರೆಲ್ಲಾದುದಕ್ಕಿಂತಲೂ ಮಿಗಿಲಾದ ಶ್ರೇಷ್ಠವಾದ ಸಂಬಂಧವೆಂದು ವಿಶ್ವಾಸದಿಂದಿರುವುದು. ನಿಮ್ಮ ಮುಂದೆ ದೇವರು ಪ್ರತ್ಯಕ್ಷವಾಗಿ ಈ ಲೋಕದಲ್ಲಿ ನಿಮ್ಮನ್ನು ಹೊರತು ಇನ್ನೊಬ್ಬರು

ಮಾತ್ರವೇ ಜೀವಿಸಬಹುದು ಎಂದು ಒಬ್ಬರನ್ನು
ಆಯ್ಕೆಮಾಡಿಕೊಳ್ಳಲು ಹೇಳಿದರೆ, ಯಾರನ್ನು ಆಯ್ಕೆ
ಮಾಡಿಕೊಳ್ಳುತ್ತೀರಿ? ನೀವು ಗುರುಗಳನ್ನು
ಆಯ್ಕೆಮಾಡಿಕೊಂಡಲ್ಲಿ, ನಿಮಗೆ ಭಾವನಾತ್ಮಕ
ಶರಣಾಗತಿಯಾದಂತೆಯೇ.

ಅಂದಹಾಗೆ, ಗುರುಗಳನ್ನು
ವಿನಾಶಗೊಳಿಸಲಾಗುವುದಿಲ್ಲ. ಆದರೆ ಆ ವಿಷಯವೇ
ಬೇರೆ! ನೀವು ಆರಿಸಿಕೊಂಡ ಮಾತ್ರದಿಂದಲೇ ಅವರು
ಜೀವಂತವಾಗಿರುತ್ತಾರೆ ಎಂದುಕೊಳ್ಳಲೇ ಬೇಡಿರಿ!
ನೀವು ಆಯ್ಕೆ ಮಾಡಿಕೊಂಡರೂ ಬಿಟ್ಟರೂ,
ಅವರಂತೂ ಜೀವಂತವಾಗಿಯೇ ಇರುತ್ತಾರೆ.

ನಿಮ್ಮೆಲ್ಲಾ ಭಾವನೆಗಳಿಗಿಂತಲೂ ಗುರುವಿನ
ಮೇಲಿನ ಭಾವನೆಯೇ ಹೆಚ್ಚು ಬಲವಾದದ್ದೆಂದು
ನಿಮಗನಿಸಿದರೆ, ಆಗ ನಿಮಗೆ ಭಾವನಾತ್ಮಕ
ಶರಣಾಗತಿ ಆಗಿದೆ ಎಂದರ್ಥ. ಚೆನ್ನಾಗಿ
ತಿಳಿದುಕೊಳ್ಳಿರಿ, ಶೇಕಡಾ 99ರಷ್ಟು ಜನರು
ಮೊದಲನೆಯ ಹಂತದಲ್ಲಿರುತ್ತಾರೆ. ಇವರಲ್ಲಿ ಕೇವಲ
ಶೇಕಡಾ 20 ರಿಂದ 40ರಷ್ಟು ಜನರು ಎರಡನೇ
ಹಂತಕ್ಕೆ ಹೋಗುತ್ತಾರೆ. ಉಳಿದವರು
ಅವರಿರುವಲ್ಲಿಯೇ ಉಳಿಯುತ್ತಾರೆ.

ಮೂರನೆಯ ಬಗೆಯ ಶರಣಾಗತಿ ಎಂಬುದೊಂದಿದೆ, ಅದೇ ಇಂದ್ರಿಯಗಳ ಶರಣಾಗತಿ.

ಶ್ರೀ ಕೃಷ್ಣನ ಜೀವನದಲ್ಲಿ ಒಂದು ಸುಂದರವಾದ ಕಥೆ ಇದೆ:

ಮಹಾಭಾರತದ ಯುದ್ಧವಾದ ಮೇಲೆ, ಕೃಷ್ಣಾರ್ಜುನರು ವಿರಮಿಸುತ್ತಿದ್ದಾಗ, ಕೃಷ್ಣನು, 'ಹೇ, ಅರ್ಜುನ, ನೋಡಲ್ಲಿ, ಅಲ್ಲೊಂದು ಹಸಿರು ಕಾಗೆ ಇದೆ!' ಎನ್ನುತ್ತಾನೆ.

ಅರ್ಜುನನು, 'ಹೌದು ಚೆನ್ನಾಗಿದೆ! ಹಸಿರು ಕಾಗೆ!' ಎನ್ನುತ್ತಾನೆ.

ಕೃಷ್ಣನು, 'ಮೂರ್ಖ! ಅದು ಕಪ್ಪು, ಹಸಿರಲ್ಲ' ಎನ್ನುತ್ತಾನೆ.

ಅರ್ಜುನನು, 'ಹೌದು ಕೃಷ್ಣ, ಅದು ಕಪ್ಪಾಗಿದೆ. ಹಸಿರಾಗಿಲ್ಲ' ಎನ್ನುತ್ತಾನೆ.

ಕೃಷ್ಣನು, 'ನಿನಗೇನಾಗಿದೆ? ನಾನು ಹಸಿರೆಂದಾಗ
ನೀನೂ ಹಸಿರೆನ್ನುವೆ, ನಾನು ಕಪ್ಪೆಂದಾಗ ನೀನೂ
ಕಪ್ಪು ಎನ್ನುವೆ, ನಿನಗೇನಾಗುತ್ತಿದೆ?' ಎಂದು
ಕೇಳುತ್ತಾನೆ.

ಅರ್ಜುನನು, 'ಕೃಷ್ಣ, ನಿಜ ಹೇಳುತ್ತೇನೆ. ಆ
ಕಾಗೆಯು ಯಾವ ಬಣ್ಣದ್ದೆಂದು ನನಗೆ ತಿಳಿಯದು,
ಆದರೆ ನೀನು ಅದನ್ನು ಹಸಿರು ಎಂದಾಗ ನನಗೆ
ಹಸಿರಾಗಿಯೇ ಕಾಣಿಸಿತು. ನೀನು ಕಪ್ಪು ಎಂದಾಗ
ನನಗೆ ಕಪ್ಪಾಗಿಯೇ ಕಾಣಿಸಿತು, ನನಗಿನ್ನೇನೂ
ತಿಳಿಯದು!' ಎನ್ನುತ್ತಾನೆ.

ಅರ್ಜುನನ ಇಂದ್ರಿಯಗಳೇ ಕೃಷ್ಣನನ್ನು
ನಂಬಿದ್ದವು, ಆತನು ತನ್ನ ಇಂದ್ರಿಯಗಳಿಗಿಂತಲೂ
ಕೃಷ್ಣನ ಇಂದ್ರಿಯಗಳನ್ನೇ ನಂಬಿದ್ದನು!

ಮಾಡಲಾಯಿತು. ಹಸಿರು ಬೆಳಕು ಕಾಣಿಸಿತೆಂದರೆ
ಆಘಾತವು ಮೃದುವಾಗಿರುತ್ತದೆ ಎಂದೂ, ಕೆಂಪು
ಬೆಳಕು ಕಾಣಿಸಿದರೆ ಆಘಾತವು ತೀವ್ರವಾಗಿರುತ್ತದೆ
ಎಂದೂ ಅರ್ಥ. ಆಘಾತವನ್ನು ಒಂದರಿಂದ
ಹತ್ತರವರೆಗಿನ ಮಾಪಕದಲ್ಲಿ, ಮೃದುವಿನಿಂದ
ತೀವ್ರದವರೆಗೆ ನಿಗದಿ ಮಾಡಬೇಕಾಗಿತ್ತು.

ಆತನು ಇದನ್ನು ಹದಿನೈದು ನಿಮಿಷಗಳ ಕಾಲ
ಮಾಡಿದನು. ಕೊನೆಯಲ್ಲಿ ಆತನಿಗೆ ಅನಿಸಿದುದು
ಏನೆಂದರೆ ಪ್ರಾರಂಭದ ಆಘಾತಗಳು ತೀಕ್ಷ್ಣ-
ವಾಗಿದ್ದು ಕೊನೆಯಲ್ಲಿ ಅವು ಮೃದುವಾಗಿದ್ದವು
ಎಂದು.

ಆದರೆ ದಿಗ್ಭ್ರಮೆಯಾದ ವಿಷಯವೇನೆಂದರೆ, ವಾಸ್ತವವಾಗಿ ಅದು ತದ್ವಿರುದ್ಧವಾಗಿತ್ತು. ಕೊನೆಯಲ್ಲಿ ಕೊಟ್ಟಿದ್ದ ಆಘಾತಗಳೆಲ್ಲವೂ ತೀವ್ರವಾಗಿದ್ದವು. ಹಾಗಾದರೆ, ಆಘಾತಗಳನ್ನು ಮೃದುವೆಂದುಕೊಳ್ಳಲು ಹೇಗೆ ಸಾಧ್ಯವಾಗಿತ್ತು? ಮೃದು ಆಘಾತಗಳನ್ನು ಕೊಡುವ ಮೊದಲು ಬರಲಿರುವ ಆಘಾತವು ಮೃದುವಾಗಿರುತ್ತದೆಂದು ಸೂಚಿಸಲು ಆತನಿಗೆ ತೋರಿಸಿದ ಬೆಳಕಿನ ಬಣ್ಣವು ಹಸಿರು ಬಣ್ಣದ್ದಾಗಿತ್ತು.

ಹೀಗಾಗಿ, ಬರಲಿರುವ ಆಘಾತವು ಮೃದುವಾಗಿರುತ್ತದೆಯೆಂಬ ನಿರೀಕ್ಷೆಯಲ್ಲಿ ಮನಸ್ಸು ಅದಕ್ಕೆ ತಯಾರಾಗಿತ್ತು. ಆಘಾತವು ವಾಸ್ತವವಾಗಿ ಉಂಟಾದಾಗ, ದೈಹಿಕವಾಗಿ ನಿಜವಾಗಿಯೂ ಅದು ತೀವ್ರವಾದುದೇ ಆಗಿದ್ದರೂ, ಆತನ ಮನಸ್ಸು ಮೃದುವಾಗಿದ್ದುದನ್ನು ನಿರೀಕ್ಷಿಸಿದ್ದುದರಿಂದ, ದೇಹವು ಮೃದು ಆಘಾತವೆಂದೇ ಪರಿಗಣಿಸಿತು!

ವೈದ್ಯಕೀಯ ಕ್ಷೇತ್ರದಲ್ಲಿ 'ಪ್ಲೇಸಿಬೊ ಎಫೆಕ್ಟ್' ಎಂಬ ಪದವಿದೆ. ರೋಗಿಯೊಬ್ಬನು, ತೋರಿಕೆಗೆ ಔಷಧಿಯಂತೆ ಕಾಣುವ ಒಂದು ಔಷಧಿಯನ್ನು ತೆಗೆದುಕೊಳ್ಳುತ್ತಾನೆ. ಆದರೆ ಆತನಿಗೆ ಅದು ವಾಸ್ತವವಾಗಿಯೂ ನಿಜವಾದ ಔಷಧವೆಂದು ಹೇಳಲಾಗಿರುತ್ತದೆ. ನಂತರ ಆತನ ವ್ಯಾಧಿಯು ಗುಣವಾಗುತ್ತದೆ! ಇತ್ತೀಚಿನ ಸಂಶೋಧನೆಯ ಪ್ರಕಾರ ಪ್ಲೇಸಿಬೊ ಪರಿಣಾಮವು ವಾಸ್ತವವಾಗಿ ಹೆಚ್ಚು ಗುಣಕಾರಿ ಎನ್ನಲಾಗಿದೆ.

ಇಟಲಿಯ ಟ್ಯೂರಿನ್ ವಿಶ್ವವಿದ್ಯಾಲಯದಲ್ಲಿ ನಡೆದ ಒಂದು ರೋಮಾಂಚಕಾರಿಯಾದ ಸಂಶೋಧನೆಯ ಬಗ್ಗೆ ಓದಿದೆ. ಒಬ್ಬಾತನಿಗೆ ಎಲೆಕ್ಟೋಡುಗಳನ್ನು ದೇಹಕ್ಕೆ ಅಳವಡಿಸಿ, ವಿದ್ಯುತ್ ಆಘಾತವನ್ನು ನಿಯಂತ್ರಿಸಿ ಕೊಡುವ ಒಂದು ಪ್ರಯೋಗವನ್ನು ಮಾಡಿದರು. ಮೊದಲನೆಯದಾಗಿ, ಆತನ ಅರಿವಿಗೆ ಬರುವ ಕನಿಷ್ಠ ವಿದ್ಯುತ್ ಹರಿವು ಹಾಗೂ ಆತನು ತಡೆದುಕೊಳ್ಳಲಾಗುವ ಗರಿಷ್ಠ ವಿದ್ಯುತ್ ಹರಿವನ್ನು ಅಳತೆಮಾಡುವ ನೋವಿನ ಮಾಪನವನ್ನು ಸಿದ್ಧಗೊಳಿಸಿದರು.

ಈಗ, ವಿದ್ಯುತ್ ಆಘಾತವನ್ನುಂಟುಮಾಡುವ
ಮೊದಲು, ತೆರೆಯ ಮೇಲೆ ಒಂದು ಕೆಂಪು ಅಥವಾ
ಹಸಿರು ಬೆಳಕು ಆತನ ಮುಂದೆ ಕಾಣಿಸುವಂತೆ

ಈ ಕಾರಣದಿಂದ ಸಂಶೋಧಕರು ಪ್ಲೇಸಿಬೊ
ಪರಿಣಾಮವು ಬಹಳ ಗಾಢವಾದುದೆಂದೂ,
ಮೊದಲು ತಿಳಿದುಕೊಂಡುದುದಕ್ಕಿಂತಲೂ ಬಹಳ
ಹೆಚ್ಚು ಪ್ರಭಾವಪೂರ್ಣವಾದುದೆಂದೂ,
ಹೇಳುತ್ತಿದ್ದಾರೆ.

ಔಷಧಗಳು ಯಾವಾಗಲೂ ನೇರವಾದ
ಪರಿಣಾಮಗಳನ್ನು ಕೊಡುವುದಿಲ್ಲವೆಂದು ಅವರು
ಈಗ ಕಂಡುಹಿಡಿದಿದ್ದಾರೆ. ಅವುಗಳ ಫಲಿತಾಂಶಗಳು
ನಿರೀಕ್ಷೆಗಳಿಂದ ಪ್ರಭಾವಗೊಳ್ಳಬಹುದಾಗಿದೆ. ನೋವು
ನಿವಾರಕ ಪರಿಣಾಮವನ್ನು ಹೊಂದಲು ಒಬ್ಬರಿಗೆ
ಒಂದು ಇಂಜೆಕ್ಷನ್ ಅಥವಾ ನೋವುನಿವಾರಕವನ್ನು
ಕೊಡುವುದಾಗಿ ಹೇಳದೆಯೇ ಇದ್ದರೆ ಆ ಪರಿಣಾಮ
ಉಂಟಾಗಲು ಇನ್ನೂ ಹೆಚ್ಚಿನ ಪ್ರಮಾಣದ
ಔಷಧವನ್ನು ಕೊಡಬೇಕಾಗುತ್ತದೆ ಎಂಬುದನ್ನು
ವೈದ್ಯರು ಕಂಡುಹಿಡಿದಿದ್ದಾರೆ. ಅದಲ್ಲದೇ,
ಯಾರಿಗಾದರೂ, ನೋವು ನಿವಾರಕ ಔಷಧವನ್ನು
ಕೊಡಲಾಗುತ್ತದೆಯೆಂದು ತಿಳಿದಿದ್ದರೆ, ಕಡಿಮೆ
ಪ್ರಮಾಣದ ಔಷಧವೂ ಅದೇ
ಪರಿಣಾಮವನ್ನುಂಟುಮಾಡಬಲ್ಲದು!

ಮನಸ್ಸೆಂಬುದು ಎಷ್ಟು ಪ್ರಭಾವವುಳ್ಳದ್ದೆಂದರೆ,
ಅದು ನೇರವಾಗಿ ನಿಮ್ಮಲ್ಲಿ ಒಂದು ಭೌತಿಕ
ಪರಿವರ್ತನೆಯನ್ನು ಮಾಡಬಲ್ಲದು. ಯಾವ ರೀತಿ
ಇಂದ್ರಿಯಗಳು ಮನಸ್ಸಿಗೆ ಶರಣಾಗಬಲ್ಲವೋ, ಅದೇ
ರೀತಿ ಇಂದ್ರಿಯಗಳು ದೈವಿಕ ಪ್ರಜ್ಞೆಗೂ
ಶರಣಾಗಬಲ್ಲವು. ಕೃಷ್ಣನು ಅರ್ಜುನನಿಗೆ, ‘ಹಸಿರು’
ಕಾಗೆಯನ್ನು ನೋಡೆಂದು ಹೇಳಿದಾಗ, ಅರ್ಜುನನು
ಹಸಿರು ಕಾಗೆಯನ್ನು ಕಂಡದ್ದೂ ಹೀಗೆಯೇ.

ನೀವು ಮನುಷ್ಯನೆಂದು ನಿಮ್ಮ ಇಂದ್ರಿಯಗಳು ಹೇಳುತ್ತವೆ. ಆದರೆ ನೀವು ಆಧ್ಯಾತ್ಮಿಕ ವ್ಯಕ್ತಿಯೆಂದು ನಾನು ಹೇಳುತ್ತೇನೆ. ನೀವು ಇಂದ್ರಿಯಗಳನ್ನು ನಂಬುವವರೆಗೂ ನೀವು ಮನುಷ್ಯರೇ ಆಗಿರುತ್ತೀರಿ. ನೀವು ಗುರುಗಳನ್ನು ನಂಬಿದಾಗ, ನೀವು ಆಧ್ಯಾತ್ಮಿಕ ವ್ಯಕ್ತಿ ಎಂಬುದನ್ನು ಮನಗಾಣುತ್ತೀರಿ. ಈ ಸ್ಥಿತಿಯ ಬದಲಾವಣೆಯನ್ನೇ ನಾನು ‘ಒಂದು ಮಹತ್ತರ ಬದಲಾವಣೆ’ ಎನ್ನುವುದು.

ಗುರು - ಪರಮ ಸುಖ

ನಿಮ್ಮ ಜೀವನದಲ್ಲಿ ಗುರುಗಳೇ ಪರಮ ಸುಖ.
ನಮ್ಮ ಜೀವನದಲ್ಲಿ ಗುರುಗಳು ದೊರೆತಾಗ
ಬೇರೇನೂ ಬೇಕಾಗುವುದಿಲ್ಲ. ಅವರು
ದೊರೆಯದಿದ್ದರೆ ಇನ್ನೆಲ್ಲವೂ ನಿಷ್ಪಯೋಜಕ. ನಮ್ಮ
ಅವಶ್ಯಕತೆಗಳಿಗನುಸಾರವಾಗಿ ನಮ್ಮ ಜೀವನಕ್ಕೆ
ವಿವೇಕವನ್ನು ತಂದುಕೊಟ್ಟು, ಅದನ್ನು ನವೀಕರಿಸಲು
ಅವರು ಒಂದು ಸೇತುವೆಯಾಗುವರು.

ಜೀವ ಶಕ್ತಿ ಮತ್ತು ಗುರುಗಳು - ಎರಡೂ
ಬೇರೆ ಬೇರೆ ವಿಷಯಗಳಲ್ಲ. ಗುರುಗಳನ್ನು ಒಳಗೇ
ಅನುಭವಿಸುವುದೆಂಬ ಸುಂದರ ಕಲ್ಪನೆಯನ್ನು
ಗುರುವರ್ಯರು ಮತ್ತೆ ಮತ್ತೆ ಒತ್ತಿ ಹೇಳುತ್ತಾರೆ.
ಗುರುಗಳನ್ನು ನಿಮ್ಮಲ್ಲಿಯೇ ಅನುಭವಿಸುವವರೆಗೆ
ಮಾತ್ರವೇ ನಿಮಗೆ ಬಾಹ್ಯ ಪ್ರಪಂಚದಿಂದ ಗುರು
ಬೇಕು ಎನಿಸುವುದು. ಗುರುಗಳನ್ನು ಒಮ್ಮೆ
ಅಂತರಂಗದಲ್ಲಿ ಅನುಭವಿಸಿದ ನಂತರ, ಹೊರ
ಜಗತ್ತಿನಿಂದ ಗುರುಗಳ ಅವಶ್ಯಕತೆ ಇರುವುದಿಲ್ಲ.

ಗುರುಗಳ ಸಾನ್ನಿಧ್ಯ

ನೋಡಿ, ಗುರುಗಳೊಂದಿಗೆ ಒಂದು ಧ್ಯಾನತಂತ್ರವನ್ನು ಮಾಡಿದಾಗ, ಅದೊಂದು ರಸವಾದವಾಗುತ್ತದೆ. ನಿಮ್ಮ ಮನೆಯಲ್ಲಿ ನೀವೊಬ್ಬರೇ ಮಾಡಿದರೆ ಧ್ಯಾನವಾಗುತ್ತದೆ. ಅದನ್ನು ಗುರುಗಳೊಡನೆ, ಗುರುಗಳ ಸನ್ನಿಧಿಯಲ್ಲಿ, ಮಾಡಿದಾಗ, ಹಾಗೂ ಗುರುಗಳಿಂದ ನಿರ್ದೇಶನ ಪಡೆದಾಗ, ಅದು ರಸವಾದ ಎನಿಸಿಕೊಳ್ಳುತ್ತದೆ. ಅದು ನಿಮ್ಮನ್ನು ಕುದಿಸಿದಂತೆ. ಪರಿವರ್ತನಾ ಪ್ರಕ್ರಿಯೆಯು ಚುರುಕಾಗಿಯೂ ತೀವ್ರವಾಗಿಯೂ ಆಗುತ್ತದೆ.

ಒಂದು ಸಣ್ಣ ಕಥೆ:

ಒಬ್ಬ ಯುವತಿಗೆ ಅಡಿಗೆ ಮಾಡಲು ಬರುತ್ತಿರಲಿಲ್ಲ.
ಆದರೆ ಆಕೆಯು ಅಂದು ರಾತ್ರಿ ತಾನು ಹೋಗಬೇಕಿದ್ದ
ಭೋಜನಕೂಟಕ್ಕೆ ತಾನೇನಾದರೂ ಅಡಿಗೆ ಮಾಡಿ
ತೆಗೆದುಕೊಂಡು ಹೋಗಬೇಕೆಂದುಕೊಂಡಳು.
ಆಕೆಯು ಅಡಿಗೆ ಪುಸ್ತಕವನ್ನು ತೆಗೆದುಕೊಂಡು
ಯಾವುದೋ ಒಂದು ಅಡಿಗೆ ಮಾಡಲು
ತೊಡಗಿದಳು.

ಒಂದು ಕೈಯಲ್ಲಿ ಪುಸ್ತಕವನ್ನು ಹಿಡಿದಿದ್ದಳು. ಪುಸ್ತಕದ ಸೂಚನೆಯು, 'ಪಾತ್ರೆಯನ್ನು ಒಲೆಯ ಮೇಲಿಡಿ ಎಂದಿತ್ತು', ಇಟ್ಟಳು. ನಂತರ, 'ಅರ್ಧ ಬಟ್ಟಲು ಹಿಟ್ಟನ್ನು ಹಾಕಿರಿ' ಎಂದಿತ್ತು. ಹಾಗೆಯೇ ಮಾಡಿದಳು ನಂತರ 'ಅರ್ಧ ಲೀಟರ್ ನೀರು ಹಾಕಿರಿ. ಸ್ವಲ್ಪ ಸಕ್ಕರೆಯನ್ನು ಸೇರಿಸಿ, ಮತ್ತು ಇಪ್ಪತ್ತು ನಿಮಿಷಗಳು ಗೊಟಾಯಿಸಿ' ಎಂದಿತ್ತು. ಆಕೆಯು ಸೂಚನೆಗಳೆಲ್ಲವನ್ನೂ ಚಾಚೂತಪ್ಪದೆ ಮಾಡಿದಳು. ಆದರೆ ಇಪ್ಪತ್ತು ನಿಮಿಷಗಳಾದರೂ ಏನೂ ಆಗಲೇ ಇಲ್ಲ.

ಏಕೆ? ಏಕೆಂದರೆ ಪುಸ್ತಕದಲ್ಲಿ 'ಒಲೆಯನ್ನು ಹಚ್ಚಬೇಕೆಂದು ಹೇಳಿರಲಿಲ್ಲ!'

ಅದೇ ರೀತಿ, ನಿಮ್ಮ ಪಾಡಿಗೆ ನೀವು ಧ್ಯಾನವನ್ನು
ಮಾಡುವಾಗ, ಕೆಲವು ಸಲ 'ಬೆಂಕಿ ಹಚ್ಚು'ವುದನ್ನು
ಮರೆಯಬಹುದು. ಗುರುಗಳ ಸನ್ನಿಧಿಯೇ ಬೆಂಕಿ, ಅದು
ಆಗಬೇಕಾದ್ದನ್ನು ಆಗಿಸುತ್ತದೆ. ರಸವಾದ ಕ್ರಿಯೆ
ನಡೆಯುತ್ತದೆ.

ಜನರು, 'ಸ್ವಾಮೀಜಿ, ಗುರುಗಳ ಸಾನ್ನಿಧ್ಯವನ್ನೇಕೆ ಒತ್ತಿಹೇಳುವಿರಿ?' ಎಂದು ನನ್ನನ್ನು ಕೇಳುತ್ತಾರೆ. ಅಂದಹಾಗೆ ನೀವು ನನ್ನ ಮಾತುಗಳನ್ನು ಸಿ.ಡಿ. ಅಥವಾ ಡಿ.ವಿ.ಡಿ.ಯಿಂದ ಕೇಳಬಹುದು. ಆದರೆ, ನೀವು ಇಲ್ಲಿ ಕುಳಿತಾಗ ನನ್ನ ಕಣ್ಣುಗಳಿಂದ ಪಸರಿಸುವ ಪ್ರಾಮಾಣಿಕತೆ, ನನ್ನ ಹಾವಭಾವಗಳಲ್ಲಿ ಹೊರಹೊಮ್ಮುವ ಸತ್ಯವು ನಿಮ್ಮನ್ನು ಸೆರೆಹಿಡಿಯುತ್ತದೆ. ನೀವು ಅದನ್ನು ಗ್ರಹಿಸುತ್ತೀರಿ. ನಿಮಗೆ, 'ಹೌದು. ಈತನು ಸತ್ಯವನ್ನು ಹೇಳುತ್ತಿದ್ದಾನೆ' ಎಂಬ 'ಕ್ಲಿಕ್' - ಎಂಬ ಸಂಪರ್ಕ ದೊರೆತು ಅದನ್ನು ಹಿಡಿದುಕೊಳ್ಳುತ್ತೀರಿ.

ಅನುಮಾನಿಸೋಣವೆಂದರೂ, ಇದ್ದಕ್ಕಿದ್ದಂತೆ ನಿಮ್ಮ ತರ್ಕಕ್ಕೆ ನಿಮ್ಮ ಮೇಲೆ ಯಾವ ಶಕ್ತಿಯೂ, ಇಲ್ಲವೆಂಬುದನ್ನು ತಿಳಿಯುವಿರಿ. ಈ ಮಾತುಗಳು ನಿಮ್ಮ ತರ್ಕವನ್ನೂ ಮೀರಿ ಸುಮ್ಮನೆ ನಿಮ್ಮನ್ನು ಒಳ ಹೊಕ್ಕುತ್ತವೆ. ಇದು, ನೀವು ಗುರುಗಳ ಸಾನಿಧ್ಯದಲ್ಲಿ ಕುಳಿತಾಗ ಮಾತ್ರವೇ ಆಗುವುದು. ಅದನ್ನು ನಾವು 'ಉಪನಿಷತ್' ಎಂದು ಕರೆಯುತ್ತೇವೆ - ಕೇವಲ ಗುರುಗಳ ಸಾನಿಧ್ಯದಲ್ಲಿ ಇರುವುದು, ಕುಳಿತಿರುವುದು, ಅವರಿಗೆ ತೆರೆದುಕೊಳ್ಳುವುದು.

ಭರವಸೆಯಿಂದ ನಿಮ್ಮನ್ನು ತೆರೆದುಕೊಳ್ಳಿರಿ. ನಿಮ್ಮನ್ನೇ ಭರವಸೆಯಲ್ಲಿ ಸುಮ್ಮನೆ ಮುಳುಗಿಸಿ ಬಿಡಿ. ನಿಮ್ಮನ್ನು ಹಿಡಿದುಕೊಳ್ಳಲು ಗುರುಗಳು ಅಲ್ಲಿಯೇ ನಿಂತಿರುತ್ತಾರೆಂಬುದನ್ನು ಕಾಣುವಿರಿ. ತಲೆಯಿಂದ ಹೃದಯದೊಳಕ್ಕೆ ಧುಮುಕಿಬಿಡಿ. ಗುರುಗಳು ಹಿಡಿಯಲು ಅಲ್ಲಿದ್ದು, ನಿಮಗೆ ಜೀವನ್ಮುಕ್ತಿ ನೀಡುತ್ತಾರೆ, ಅಷ್ಟೇ.