ನಿರಂತರವಾದ ಸಂಬಂಧ
This text was machine-transcribed from the printed book and may contain errors. Select the words and choose “Report a mistake”.
ಸಂಬಂಧವೆಂದರೇನು?
ಸಂಬಂಧವೆಂದರೆ, ನಿಮ್ಮೊಳಗೆ ಅಜ್ಞಾತವಾಗಿ
ಅಡಗಿರುವ ಹೊಸ ಆಯಾಮಗಳನ್ನು
ತೋರಿಸುವಂಥಹುದು. ಅದು ನೀವೂ ಸಹ
ಯಾರನ್ನಾದರೂ ಅಥವಾ ಯಾವುದನ್ನಾದರೂ
ಪ್ರೀತಿಸಬಲ್ಲಿರೆಂದು ಅನುಭವ ಸಹಿತವಾಗಿ
ರುಜುವಾತು ಪಡಿಸುವುದು. ನೀವು ಇನ್ನೊಬ್ಬರಿಗಾಗಿ
ಪ್ರೇಮ, ತ್ಯಾಗಗಳನ್ನು ಚಮತ್ಕಾರವೆಂಬಂತೆ
ಮಾಡಬಲ್ಲಿರೆಂಬುದನ್ನು ತೋರಿಸುತ್ತದೆ.
ನಾವು ಹುಟ್ಟಿದಾಗ ಪರಿಪೂರ್ಣರಾಗಿ ಹುಟ್ಟಿರುತ್ತೇವೆ. ಆದರೆ ನಮ್ಮ ಅನೇಕ ಆಯಾಮಗಳ
ಅರಿವು ನಮಗೇ
ಇರುವುದಿಲ್ಲ. ಅರಿವು
ನಮಗೇ ಇಲ್ಲದಾದಾಗ,
ಹೊರ ಪ್ರಪಂಚಕ್ಕೂ
ಅದರ ಅರಿವಿರುವುದಿಲ್ಲ.
ಸಂಬಂಧಗಳಿಗೆ ನಮ್ಮಲ್ಲಿ ಅಡಗಿರುವ ಹೊಸ
ಆಯಾಮಗಳನ್ನು ಅನುಭವಸಹಿತವಾಗಿ ಹೊರತರುವ
ಶಕ್ತಿಯಿದೆ.
ಸಂಬಂಧವು ನಿಮ್ಮೊಳಗಿನ ನಿಮಗೇ ತಿಳಿಯದ ಆಯಾಮಗಳನ್ನು ಜಾಗೃತಗೊಳಿಸುತ್ತದೆ.
ಯಾವುದೇ ವಸ್ತುವಿನ ಅಥವಾ ವ್ಯಕ್ತಿಯ
ಜೊತೆಗಿನ ಸಂಬಂಧವೂ, ಅವರು ಯಾರೇ ಆಗಿರಲಿ,
ಏನೇ ಆಗಿರಲಿ, ಅದು ಗುರುವಿನೊಂದಿಗಿನ ಪರಮ
ಬಾಂಧವ್ಯಕ್ಕೆ ಕೊಂಡೊಯ್ಯುತ್ತದೆ.
ನೀವು ಯಾರನ್ನಾದರೂ ಪ್ರೀತಿಸಿದಾಗ, ಪುರುಷ,
ಸ್ತ್ರೀ, ಮಗು, ದೇವರು ಅಥವಾ ಗುರುವನ್ನೇ ಆಗಲಿ,
ನಿಮ್ಮೊಳಗೆ ಅಡಗಿರುವ ನಿಮಗೇ ತಿಳಿದಿರದ
ಆಯಾಮಗಳು ಕಾಣತೊಡಗುತ್ತವೆ. ಇಂತಹ
ಪ್ರೀತಿಯು ಅರಳಿದಾಗ ನೀವು ಹೆಚ್ಚು
ಜವಾಬ್ದಾರರಾಗುತ್ತೀರಿ. ಜೀವನದ ಸ್ವಾರಸ್ಯವನ್ನೇ
ಆಸ್ವಾದಿಸುತ್ತೀರಿ.
ಸೃಷ್ಟಿಯೇ ತಾನಾಗಿರುವ ಗುರುವಿನೊಂದಿಗಿನ
ಸಂಬಂಧವು ಬೇರೆ ಯಾವುದೇ ಸಂಬಂಧಕ್ಕಿಂತಲೂ
ಹೆಚ್ಚು ಆಳವಾದುದು. ಅದು ಆತ್ಮಾನುಬಂಧ.
ಸಾಮಾನ್ಯವಾಗಿ ಬೇರೆಲ್ಲ ಸಂಬಂಧಗಳೂ ಬಂಧನವನ್ನುಂಟುಮಾಡುವಂತಹವು. ಆದರೆ ಗುರುವಿನ ಸಂಬಂಧವು ನಿಮ್ಮನ್ನು ಬಂಧಮುಕ್ತಗೊಳಿಸಿ, ನಿತ್ಯ ಆನಂದಕ್ಕಿಡೆಮಾಡುವುದು. ಈ ಸಂಬಂಧದಲ್ಲಿ ನೀವಾಗಿಯೇ ಬಂಧನವನ್ನು ಏರ್ಪಡಿಸಿಕೊಂಡರೂ ಸಹ ಕಡೆಗೆ ನಿರಂತರ ಆನಂದವನ್ನೇ ಹೊಂದುತ್ತೀರಿ! ಈ ಸಂಬಂಧದಲ್ಲಿ ಬಂಧನವೆಂಬುದೇ ಇರುವುದಿಲ್ಲ.
ಗುರುವಿನ ರೂಪವು ಪರಮಾತ್ಮನಿಗೂ ನಿಮಗೂ
ನಡುವಿನ ಸೇತುವೆ. ಗುರುವು ಪರಮಾತ್ಮನ
ಸ್ವರೂಪವೇ ರೂಪವೇ ಆಗಿರುವುದರಿಂದ ಮಾನವ
ಹಾಗೂ ದೈವವೆರಡರ ಆಯಾಮವೂ ಆ
ಮೂರ್ತಿಯಲ್ಲಿ ಇರುತ್ತದೆ. ನೀವು ಕೇವಲ ಗುರುವಿನ
ರೂಪಕ್ಕೆ ಮಾತ್ರವಲ್ಲದೆ ಅದರ ಹಿಂದಿನ
ಸತ್ಯದೊಡನೆಯೂ ಸಂಬಂಧ ಬೆಳೆಸಿಕೊಂಡಾಗ
ಪರತತ್ವದ ಜ್ಞಾನವನ್ನು ಹೊಂದುತ್ತೀರಿ.
ಗುರುವು ಸರ್ವರೂಪಿಯೂ ಹೌದು.
ರೂಪರಹಿತನೂ ಹೌದು. ಯಾವ ಚೌಕಟ್ಟಿನಲ್ಲಾಗಲೀ,
ಕಲ್ಲು, ವಿಗ್ರಹಗಳಲ್ಲಾಗಲೀ ಆತನನ್ನು
ಸೆರೆಹಿಡಿಯಲಾಗದು. ಆತನು ರೂಪಾತೀತನು,
ನಿರಾಕಾರನು, ಆಯಾಮಗಳಿಗೆ ಮೀರಿದವನು.
ಅನಂತರೋಪನು!
ಮಾತೃಭಾವ ಅಥವಾ ಪ್ರೀತಿಯ ಭಾವವೆಂಬ
ಒಂದು ಚೌಕಟ್ಟಿನಲ್ಲಿ ಆತನನ್ನು ಸೆರೆಹಿಡಿಯುವುದು
ಹಾಗೂ ಉಳಿಸಿಕೊಳ್ಳುವುದು ನಿಮಗೆ ಸುಲಭ.
ಇತರರಿಗೆ ಹೇಳಲೂ ಸುಲಭ. ಆದರೆ ಗುರುವಿಗೆ
ಇಂತಹ ವ್ಯವಹಾರ ಬೇಕಿಲ್ಲ. ನಿಮಗೆ
ಗೊಂದಲವಾಗಿ, ಒಳಹೊಕ್ಕು ನೋಡಿ, ಜ್ಞಾನವನ್ನು
ಪಡೆಯಬೇಕೆಂಬುದೇ ಆತನ ಇಚ್ಛೆ. ನೀವು
ಎಚ್ಚರಗೊಳ್ಳುವುದಕ್ಕಾಗಿ ಸಾಯಬೇಕೆಂಬುದೇ ಅವನ
ಆಸೆ.
ನಿಮ್ಮ ಅಜ್ಞಾನದೊಂದಿಗೆ ಗುರುವಿನ ಬಳಿ
ಬನ್ನಿರಿ. ಆತನು ದಾರಿತೋರುವನು. ಆತನ ಪ್ರೀತಿಯ
ತೋಳುಗಳಲ್ಲಿ ಬೀಳಲು ಹಿಂಜರಿಯಬೇಡಿ.
ಆತನೊಂದಿಗೆ ಆನಂದಕ್ಕೇರುವಿರಿ.
ಗುರುವು ನಮಗೆ ಅನೇಕ ಚೌಕಟ್ಟುಗಳಲ್ಲಿ ಅಥವಾ
ಸ್ತರಗಳಲ್ಲಿ ಕಂಡುಬರುತ್ತಾನೆ. ಆ ಪ್ರತಿಯೊಂದು
ರೂಪದಲ್ಲೂ, ತನ್ನೆಡೆಗೆ ಬರುವ ಅದೃಷ್ಟವಿರುವ
ಪ್ರತಿಯೊಬ್ಬರೆಡೆಗೂ, ತನ್ನ ಅಪೂರ್ವ ಸಂಬಂಧದ
ಸೊಗಸನ್ನೂ, ತೀವ್ರತೆಯನ್ನೂ, ತನ್ನದೇ ಆದ
ಸುಂದರ, ಅಗಾಧವಾದ ರೀತಿಯಲ್ಲಿ
ಹೊರಗೆಡಹುತ್ತಾನೆ.
ಸತ್ಯಾನ್ವೇಷಣೆಯಲ್ಲಿ ತೊಡಗಿದ ಪ್ರತಿಯೊಬ್ಬರಿಗೂ ಅಜ್ಞಾನದ ಅಂಧಕಾರದಿಂದ ಜ್ಞಾನಜ್ಯೋತಿಯ ಕಡೆಗೆ ಕೊಂಡೊಯ್ಯುವ ಗುರುವಿನೊಂದಿಗೆ ಒಬ್ಬೊಬ್ಬರಿಗೂ ವಿಶಿಷ್ಟ ಮಾರ್ಗವಾಗಿರುತ್ತದೆ. ಅದು ನವಿರಾದ ಮಧುರ ಸಂಬಂಧ. ಎರಡು ಆತ್ಮಗಳ ಅತಿನಿಕಟ ವಿಶ್ವಾಸದಿಂದಾಗಿ ಗುರುವಿನ ಆತ್ಮಜ್ಯೋತಿಯು ಶಿಷ್ಯನಲ್ಲಿ ಬೆಳಗುವುದು. ಜ್ಞಾನಜ್ಯೋತಿಯು ಈ ರೀತಿ ಬೆಳಗಲಾರಂಭಿಸುವುದು.
ವಿವಿಧ ಸಂಬಂಧಗಳು ನಿಮ್ಮಲ್ಲಿ ವಿವಿಧ
ಆಯಾಮಗಳನ್ನು ಹೊರತರುತ್ತವೆ. ಪ್ರೇಮಿಯು
ಪ್ರೇಮಭಾವವನ್ನೂ, ಮಿತ್ರರು ಮೈತ್ರಿಯನ್ನೂ,
ಮಕ್ಕಳು, ಮಾತೃಭಾವವನ್ನೂ, ತಂದೆ-ತಾಯಿ,
ಅಜ್ಜಿ-ತಾತಂದಿರು ಬಾಲ್ಯಭಾವವನ್ನೂ ನಿಮ್ಮಲ್ಲಿ
ಹೊರತರಬಲ್ಲರು. ಆದರೆ ಕೇವಲ ಗುರುವು ಮಾತ್ರ
ಈ ಎಲ್ಲ ಭಾವಗಳನ್ನೂ ಮೂಡಿಸಬಲ್ಲನು.
ನಿಮ್ಮಲ್ಲಿದೆಯೆಂದು ನಿಮಗೇ ತಿಳಿಯದ
ಜ್ಞಾನೋದಯದ
ಆಯಾಮವನ್ನು
ಜಾಗೃತಗೊಳಿಸುವವನೇ
ಗುರು. ಗುರು ಶಿಷ್ಯ
ಸಂಬಂಧದಲ್ಲಾಗುವ
ಪರಿವರ್ತನೆಯನ್ನು
ನೀವು ಅಂದಾಜು ಮಾಡಲು ಆಗುವುದಿಲ್ಲ. ಗುರುವು
ಅನೇಕ ಆಯಾಮಗಳಲ್ಲಿ ಪ್ರಕಟಗೊಂಡು, ನೀವು
ಅವೆಲ್ಲವನ್ನೂ ಮೀರಿ ಪರಮಾತ್ಮನಲ್ಲಿ ಒಂದಾಗುವ
ಅನುಭವವನ್ನು ನೀಡುತ್ತಾನೆ.
ದೇವರು ಮತ್ತು ಗುರು
ಸಂತ ಕಬೀರರು ಹೀಗೆ ಸುಂದರವಾಗಿ ಹಾಡಿದ್ದಾರೆ:
'ಗುರುವೂ ದೇವರೂ ಇಬ್ಬರೂ ಕಾಣಿಸಿಕೊಂಡಾಗ ನಾನು ಯಾರಿಗೆ ನಮಸ್ಕರಿಸಲಿ?
ಗುರುವಿಗೇ
ವಂದಿಸುತ್ತೇನೆ. ಆತನೇ ದೇವರನ್ನು ನನಗೆ
ತೋರಿದವನು'.
ಸ್ವಾಮಿ ವಿವೇಕಾನಂದರು, ರಾಮಕೃಷ್ಣ
ಪರಮಹಂಸರ ಇನ್ನಿತರ ಶಿಷ್ಯರೊಂದಿಗೆ
ಮಾತನಾಡುತ್ತಿದ್ದಾಗ ಶ್ರೀ
ರಾಮಕೃಷ್ಣರನ್ನು ದೇವರೆಂದು ಕರೆದರು. ಇದಕ್ಕೆ
ಇನ್ನೊಬ್ಬ ಶಿಷ್ಯರು ಪ್ರತಿಭಟಿಸಿ, 'ಇದು ಬಹಳ
ಅತಿರೇಕವಾಯಿತು. ಗುರುಗಳು ಆತ್ಮಸಾಕ್ಷಾತ್ಕಾರ
ಹೊಂದಿರುವರೆಂದು ಅಂಗೀಕರಿಸುತ್ತೇನೆ. ಆದರೆ
> ನಾನು
> ದೇವರೆಂದು
> ನಿರೂಪಿಸಲು
> ನಾನು ಬಂದಿಲ್ಲ.
> ನೀವು
> ದೇವರೆಂದು
> ಸಾಬೀತುಪಡಿಸಲು
> ಬಂದಿದ್ದೇನೆ.
ಅವರೇ ದೇವರು
ಹೇಗಾಗಲು ಸಾಧ್ಯ?'
ಎಂದರು.
ವಿವೇಕಾನಂದರು ಕೇಳಿದರು,
'ದೇವರ ಬಗ್ಗೆ ನಿನಗೇನು
ತಿಳಿದಿದೆ?' ಎಂದು.
ಶಿಷ್ಯನು, 'ಓ, ದೇವರು
ಸರ್ವಾಂತರ್ಯಾಮಿಯೂ,
ಸರ್ವವ್ಯಾಪಿಯೂ ಸರ್ವಶಕ್ತನೂ ಆಗಿರುವನು'
ಎಂದನು.
ವಿವೇಕಾನಂದರು, 'ದೇವರು ಸರ್ವವ್ಯಾಪಿ
ಎಂದರೇನು?' ಎಂದು ಕೇಳಿದರು. ಶಿಷ್ಯನು,
'ದೇವರು ಎಲ್ಲೆಡೆಯಲ್ಲೂ ಇದ್ದಾನೆ ಎಂದು
ಅರ್ಥ' ಎಂದನು. ವಿವೇಕಾನಂದರು, 'ಸರಿಯೇ,
ಹಾಗಾದರೆ ನೀನೀಗ ದೇವರನ್ನು ಕಾಣುತ್ತಿರಬೇಕು'
ಎಂದರು. ಶಿಷ್ಯನು, ತಬ್ಬಿಬ್ಬಾಗಿ ಏನೂ
ಹೇಳಲಾದನು. ವಿವೇಕಾನಂದರು, 'ನಿನಗೆ ದೇವರು
ಎಂಬುವನು ಕಣ್ಣಿಗೆ ಕಾಣದ ಕಲ್ಪನೆ ಮಾತ್ರವೇ,
ನಿನಗೆ ಅರ್ಥವೂ ಆಗದ ಊಹೆ. ಆದರೆ ನಿನ್ನೆದುರಿಗೆ
ನಿಜವಾದ ದೇವರಾದ ಗುರುವು ಇಲ್ಲೇ ಇದ್ದಾರೆ'
ಎಂದು ಹೇಳಿದರು.
'ದೇವರಿಗೂ ಗುರುವಿಗೂ ವ್ಯತ್ಯಾಸವೇನು?' ಎಂದು ನನ್ನನ್ನು ಯಾರೋ ಕೇಳಿದರು.
ಅದಕ್ಕೆ ನಾನು ಹೇಳಿದೆ, 'ನಿಮಗೆ ದೇವರ ಬಗ್ಗೆ ಏನು ತಿಳಿದಿದೆ? ನಿಮಗೆ ತಿಳಿದಿರುವುದೆಲ್ಲವೂ ಕೇವಲ ಒಂದಷ್ಟು ಪದಗಳು ಹಾಗೂ ಕಲ್ಪನೆಗಳು. ದೇವರೆಂದು ಹೇಳುವಾಗ ಏನನ್ನು ಕುರಿತು ಹೇಳುತ್ತಿರುವಿರಿ ಎಂಬ ಊಹೆಯೂ ನಿಮಗಿಲ್ಲ. ನಿಮಗೆ ದೇವರು ಕೇವಲ ಕಾಲ್ಪನಿಕ. ಪರಾಶಕ್ತಿಯೆಂದೋ, ವಿಶ್ವ ಚೈತನ್ಯವೆಂದೋ ಅಥವಾ ನಿಮಗೇನೂ ತಿಳಿಯದಿರದ ವಿಷಯಕ್ಕೆ ಒಂದು ಹೆಸರು ಕೊಡುತ್ತೀರ ಅಷ್ಟೇ.
ಬ್ರಹ್ಮಾಂಡ ಪುರಾಣದಲ್ಲಿ,
ಗುರುವು ಶಿವ-ಅವನ ಮೂರು ಕಣ್ಣುಗಳನ್ನು ಹೊರತುಪಡಿಸಿ
ವಿಷ್ಣು-ಅವನ ಚತುರ್ಭುಜಗಳನ್ನು ಹೊರತುಪಡಿಸಿ
ಬ್ರಹ್ಮ- ಅವನ ಚತುರ್ಮುಖಗಳನ್ನು ಹೊರತುಪಡಿಸಿ ಎಂದು ಹೇಳಲಾಗಿದೆ.
ಆತನು ಮಾನವ ರೂಪದಲ್ಲಿರುವ ಪರಮ ಶಿವನೇ.
ಗುರುವೇ ಸತ್ಯ. ಗುರುವೇ ಪರಾಶಕ್ತಿಯ
ನಿಜಸ್ವರೂಪ. ಆತನು ಈಗ, ಇಲ್ಲಿ ಇರುವವನು.
ಆತನು ವರ್ತಮಾನದಲ್ಲಿರುವವನು. ಆತನೇ
ವರ್ತಮಾನವು. ನಿಮಗೂ, ದೇವರೆಂಬ ಕಲ್ಪನೆಗೂ
ನಡುವಿನ ಸೇತುವೆಯವನು. ಈ ಅರ್ಥದಲ್ಲಿ ಆತನು
ದೇವರಿಗಿಂತಲೂ ಮಿಗಿಲಾದವನೇ.
ಜನರು ನನ್ನನ್ನು ಕೇಳುತ್ತಾರೆ, 'ನೀವು ದೇವರೇ?'
ಎಂದು. 'ನಿಮಗೆ ದೇವರೆಂದರೇನೆಂಬುದು ತಿಳಿದಿಲ್ಲದ
ಮೇಲೆ, ನಾನು ದೇವರೇ ಎಂದು ಹೇಗೆ ಕೇಳುವಿರಿ?
ದೇವರು ವರ್ಣನೆಗೆ ನಿಲುಕದವನು. ಆತನನ್ನು
ಅನುಭವಿಸಲು ಮಾತ್ರ ಸಾಧ್ಯ' ಎಂದು ನಾನು
ಹೇಳುತ್ತೇನೆ.
ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಿಬಿಡುತ್ತೇನೆ. ನಾನು ದೇವರೆಂದು ನಿರೂಪಿಸಲು ನಾನು ಬಂದಿಲ್ಲ. ನೀವು ದೇವರೆಂದು ಸಾಬೀತುಪಡಿಸಲು ಬಂದಿದ್ದೇನೆ. ನನ್ನ ದೈವತ್ವವನ್ನು ನಿರೂಪಿಸಲು ನಾನಿಲ್ಲಿ ಬಂದಿಲ್ಲ. ನಿಮ್ಮ ದೈವತ್ವವನ್ನು ನಿರೂಪಿಸಲು ಬಂದಿದ್ದೇನೆ.
ಗುರುವು ನದಿಯ ಒಂದು ದಡದಲ್ಲಿ ಉರಿಯುತ್ತಿರುವ ಕಾಳ್ಗಿಚ್ಚಿನಂತೆ. ಶಿಷ್ಯನು ನದಿಯ ಇನ್ನೊಂದು ತೀರದಲ್ಲಿರುವವನು. ಆ ನದಿಯೇ ಜನ್ಮ ಜನ್ಮಾಂತರಗಳನ್ನೊಳಗೊಂಡ ಸಂಸಾರ. ಗುರುವಿಗೂ ಶಿಷ್ಯನಿಗೂ ನಡುವೆ ಯಾವುದೇ ಪದಾರ್ಥದಿಂದ ಮಾಡಲ್ಪಟ್ಟ ಒಂದು ಸೇತುವೆಯು ಏರ್ಪಟ್ಟರೆ, ಆ ಅಗ್ನಿಯು ಹೋಗಿ, ಸೇತುವೆಯನ್ನು ದಾಟಿ, ಶಿಷ್ಯನನ್ನು ತಲುಪಬಹುದು. ಸೇತುವೆಯು ಯಾವ ಪದಾರ್ಥದಿಂದ ಮಾಡಿದುದೆಂಬುದು ಲೆಕ್ಕಕ್ಕೆ ಬರುವುದಿಲ್ಲ. ಅದು ಮರದಿಂದ ಅಥವಾ ಸಿಮೆಂಟಿನಿಂದ ಮಾಡಿದ್ದಿರಬಹುದು, ಆದರೂ ಸಹ, ಕಾಳ್ಗಿಚ್ಚು ಶಿಷ್ಯನನ್ನು ಸೇತುವೆಯಮೇಲೆ ಹೋಗಿ ತಲುಪಬಲ್ಲದು. ಅದೇ ರೀತಿ, ಗುರುವಿನೊಂದಿಗೆ ಯಾವುದೇ ರೀತಿಯ ಸಂಬಂಧವಿಟ್ಟುಕೊಂಡರೂ, ಅದರಲ್ಲಿ ಸಂಪೂರ್ಣವಾಗಿ ಕರಗಿಹೋಗಿರಿ.
ನೀವು ಅದರಲ್ಲಿ ಕರಗಿಹೋದರೆ, ಅದು ನಿಮ್ಮ ಭಾವನೆಗಳನ್ನು ಸಂತೃಪ್ತಿಗೊಳಿಸಿ, ನಿಮ್ಮನ್ನು ಪರಮ ಸ್ಥಿತಿಯಾದ ನಿತ್ಯ ಆನಂದಕ್ಕೆ ಕೊಂಡೊಯ್ಯುತ್ತದೆ. ಈ ಸತ್ಯವನ್ನು ಆಳವಾಗಿ ಅರಿತುಕೊಂಡು 'ನನ್ನ ಭಾವನೆಯ ಮೇಲೆ ಕೇಂದ್ರೀಕರಿಸಿ, ಗುರು-ಶಿಷ್ಯ ಸಂಬಂಧದಲ್ಲಿ ಕರಗಿಹೋಗುತ್ತೇನೆ' ಎಂಬ ಸಾಧನೆಮಾಡಲು ದೃಢ ಸಂಕಲ್ಪದಿಂದ ಪ್ರಯತ್ನಿಸಿದಲ್ಲಿ, ಅದು ಆ ಸ್ಥಿತಿಗೆ ಒಯ್ಯುತ್ತದೆ. ಅದರಲ್ಲಿ ಕರಗಿಹೋಗುವುದು ಹೇಗೆಂದು ನಿಮಗೆ ತಿಳಿದಿಲ್ಲವೆಂದು ಕೊಳ್ಳಬೇಡಿರಿ. ಕೇವಲ ತೀರ್ಮಾನ ಒಂದೇ ಸಾಕು, ಅದು ತಾನಾಗಿಯೇ ನಿಮ್ಮಲ್ಲಾಗುತ್ತದೆ. ಗುರು-ಶಿಷ್ಯರ ನಡುವಿನ ಯಾವುದೇ ಅಡಚಣೆಯು ಕೇವಲ ಗುರುಶಿಷ್ಯರ ನಡುವೆ ಆಗುವ ಲೀನತೆಯ ಮೇಲೆ ಕೇಂದ್ರೀಕರಿಸುವುದರಿಂದಲೇ ಮಾಯವಾಗುತ್ತದೆ.
ಗುರುವಿನೊಡನೆ ಸಂಬಂಧವೇರ್ಪಡಲು ಐದು ಮಾರ್ಗಗಳು
ಗುರುವಿನೊಡನೆ ಅನುಬಂಧವು ಐದು
ಮನೋಭಾವಗಳಲ್ಲಿರಬಹುದು. ಪ್ರತಿಯೊಂದು
ಭಾವದ ಮೂಲಕವೂ ನಿಮ್ಮನ್ನು ಮತ್ತಷ್ಟು ನಿಮ್ಮ
ಅಸ್ತಿತ್ವದ ಬಳಿಗೆ ಕೊಂಡೊಯ್ಯುವ ಒಂದು
ಪ್ರತ್ಯೇಕವಾದ ಮಾರ್ಗವು ತಲೆದೋರುತ್ತದೆ.
ಒಂದು ಮಾರ್ಗವು ತಾಯಿ ತನ್ನ ಮಗುವಿನ
ಬಗ್ಗೆ ತೋರುವ ಭಾವ; ಗುರುವನ್ನು ಸಂತಾನದಂತೆ
ಕಾಣುವ ಭಾವ, ಇದನ್ನು
'ವಾತ್ಸಲ್ಯಭಾವ'ವೆನ್ನುತ್ತಾರೆ. ಸಾಕು ತಾಯಿಯಾದ
ಯಶೋಧೆಯು ಶ್ರೀ ಕೃಷ್ಣನೆಡೆಗೆ ಹೊಂದಿದ
ಭಾವವಿದು.
ಇನ್ನೊಂದು ಮಾರ್ಗವು ಮಗು ತನ್ನ ತಾಯಿಯೆಡೆಗೆ ತೋರುವ ಭಾವ. ಇದನ್ನು 'ಮಾತೃ ಭಾವ'ವೆನ್ನುತ್ತಾರೆ. ರಾಮಕೃಷ್ಣರು ಕಾಳಿಮಾತೆಯನ್ನು ಕಂಡಂತೆ ಗುರುವನ್ನು ತಾಯಿಯ ರೂಪದಲ್ಲಿ ಕಾಣುವುದು.
ಮೂರನೆಯದು ಸ್ನೇಹಿತನ ಭಾವ. ಗುರುವನ್ನು
ಮಿತ್ರನಂತೆ ಕಾಣುವುದು. ಇದನ್ನು
'ಸಖಿಭಾವ'ವೆನ್ನುತ್ತಾರೆ. ಕುಚೇಲನೂ, ಅರ್ಜುನನೂ
ಶ್ರೀ ಕೃಷ್ಣನೆಡೆಗೆ ತೋರಿದ ಭಾವವಿದು.
ಮುಂದಿನದು ಸೇವಕನ ಭಾವ. ಇದನ್ನು 'ದಾಸಭಾವ'ವೆನ್ನುತ್ತಾರೆ. ಇದರಲ್ಲಿ ಶಿಷ್ಯನು ತಾನು ಗುರುವಿನ ದಾಸನೆಂದು ಭಾವಿಸುತ್ತಾನೆ. ರಾಮಾಯಣದಲ್ಲಿ ಹನುಮಂತನು ರಾಮನೆಡೆಗೆ ಇದೇ ಭಾವವನ್ನು ಹೊಂದಿದ್ದನು.
ಅತ್ಯುನ್ನತವಾದುದು ಪ್ರೇಮಿಯ ಭಾವ. ಇದನ್ನು
'ಮಧುರಭಾವ'ವೆನ್ನುತ್ತಾರೆ. ಗೊಲ್ಲ ಪ್ರೇಮಿ,
ರಾಧೆಯು ಶ್ರೀ ಕೃಷ್ಣನನ್ನು ಕಂಡ ರೀತಿ. ರಾಧೆಯು
ಶ್ರೀ ಕೃಷ್ಣನನ್ನು ತನ್ನ ಪ್ರೇಮಿಯಂತೆ ಕಂಡಳು.
ಪ್ರೇಮಿಯ ಭಾವವು ನೀವು ಸ್ತ್ರೀ ಅಥವಾ
ಪುರುಷರೆಂಬುದಕ್ಕೆ ಸಂಬಂಧಿಸಿಲ್ಲ. ಅದು ದೇಹಕ್ಕೆ
ಸಂಬಂಧಿಸಿದುದೇ ಅಲ್ಲ. ಅದು ಸಂಪೂರ್ಣವಾಗಿ
ದೇಹಕ್ಕೆ ಮೀರಿದ್ದು. ಅದು ಆತ್ಮಾನುಬಂಧ.
ಗುರುವು ಪುರುಷನಾಗಿದ್ದು, ನೀವು
ಪುರುಷನಾಗಿದ್ದರೂ ಮಧುರಭಾವ
ಉಂಟಾಗಬಹುದು ಅಥವಾ ಗುರುವು ಸ್ತ್ರೀಯಾಗಿದ್ದು,
ನೀವು ಸ್ತ್ರೀಯಾಗಿದ್ದರೂ ಮಧುರಭಾವ ಉಂಟಾಗಲು
ಸಾಧ್ಯ. ಮಧುರಭಾವವು ಲಿಂಗಕ್ಕೆ
ಸಂಬಂಧಪಟ್ಟಿದ್ದಲ್ಲ. ಅದು ಸ್ತ್ರೀ ಪುರುಷರೆಂಬ
ಭಾವನೆಗೆ ಮೀರಿದ್ದು. ಅತಿ ಗಾಢವಾದ
ಅನುಬಂಧವದು.
ಕಡೆಯದು 'ಮಹಾಭಾವ'. ಮೇಲಿನ ಐದು
ಭಾವಗಳೂ ಸೇರಿದುದಲ್ಲದೆ ಅವನ್ನು ಮೀರಿದುದು!
ಅದೇ ಗುರು-ಶಿಷ್ಯರ ಸಂಬಂಧ. ಕೆಲವೊಮ್ಮೆ ಗುರುವು
ನಿಮ್ಮ ಮಗನೆಂದೆನಿಸುತ್ತದೆ. ಇನ್ನೊಮ್ಮೆ ಆತನು
ತಾಯಿಯಂತೆ ಕಂಡುಬಂದರೆ, ಮತ್ತೊಮ್ಮೆ ಆತನು
ನಿಮ್ಮ ಸ್ವಾಮಿಯಂತೆ ಕಾಣುವನು. ಕೆಲವೊಮ್ಮೆ
ಆತನು ಮಿತ್ರನಂತೆ ಕಂಡರೆ, ಇನ್ನೊಮ್ಮೆ ನಲ್ಲೆಯ
ಇನಿಯನಂತೆ ಕಾಣಬಹುದು. ಗುರುವಿನೊಂದಿಗಿನ
ಸಂಬಂಧವು ಈ ಐದೂ ಸೇರಿದುದು ಮಾತ್ರವಲ್ಲದೆ
ಇನ್ನೂ ಹೆಚ್ಚಿನದು.
ಗುರುವಿನೊಡನೆ ಈ ಐದರಲ್ಲಿ ಯಾವುದೇ
ಭಾವದಲ್ಲಾಗಲೀ, ಐದೂ ಭಾವಗಳಲ್ಲಾಗಲೀ
ಅನುಬಂಧವಿರಬಹುದು.
ಗುರು-ಶಿಷ್ಯ ಸಂಬಂಧದ ಹಂತಗಳು
ಗುರು-ಶಿಷ್ಯ ಸಂಬಂಧದಲ್ಲಿ ಅನೇಕ ಹಂತಗಳಿವೆ.
ಮೊದಲನೆಯದು, ಬೇರೆಲ್ಲದಕ್ಕಿಂತಲೂ
ಅನುಮಾನದಲ್ಲಿಯೇ ಆಧಾರಿತವಾದ
ವೈಚಾರಿಕತೆಯ ಸ್ತರ. ಇದರಲ್ಲಿ ಯಾವಾಗಲೂ
ಅನೇಕ ತರಹದ ಸಂಶಯಗಳು ಏಳುತ್ತಿರುತ್ತವೆ. 'ಹೇ!
ಈತನು ಕೇವಲ ಮೂವತ್ತು ವರ್ಷ ವಯಸ್ಸಿನವಂತೆ
ಕಾಣುತ್ತಾನೆ. ಈತನು ಗುರು ಹೇಗಾಗುತ್ತಾನೆ?
ಅತಿಯಾದ ವಿದ್ವಾವಂತನೂ ಅರ್ಹತೆಯುಳ್ಳವನೂ
ಅಲ್ಲವೆನಿಸುತ್ತದೆ. ಸಾವಿರಾರು ಜನರು ಈತನ
ಮಾತೇಕೆ ಕೇಳುತ್ತಾರೆ?' ಎಂದು ಯೋಚಿಸುವಿರಿ.
ನಿಮಗೆ ಸಾಕಷ್ಟು ಸಂಶಯಗಳು ಬರುತ್ತವೆ. ನೀವು
ಎಲ್ಲದರಲ್ಲೂ ತಪ್ಪು ಕಂಡುಹಿಡಿಯುವಂತಹವರು.
ಶುದ್ಧ ವೈಚಾರಿಕ ವಲಯದಲ್ಲಿ
ಸಂಬಂಧವೇರ್ಪಡಲು ಸಾಧ್ಯವೇ ಇಲ್ಲ.
ಮುಂದಿನ ಹಂತವು ವೈಚಾರಿಕತೆಯಿಂದ
ಬುದ್ಧಿವಂತಿಕೆಯ ಕಡೆಗೆ. ಸಂದೇಹವೆಂಬ
ನಕಾರಾತ್ಮಕತೆಯಿಂದ ಸ್ವಲ್ಪ ಹೊರಬಂದು, 'ಈ
ಕಾರ್ಯಕ್ರಮಕ್ಕೆ ಹೋಗಿ ಈತನೇನು
ಮಾಡುತ್ತಿರುವನೆಂದು ಖುದ್ದಾಗಿ ನೋಡಬಾರದೇಕೆ?'
ಎಂದು ಯೋಚಿಸುವುದು. 'ಈತನೇನು
ಮಾಡಬಲ್ಲ?' ಎಂಬ ಯೋಚನೆಯೊಂದಿಗೆ
ಉಳಿಯುವ ಬದಲು, 'ಈತನೇನೋ
ಹೇಳುತ್ತಿರಬಹುದು, ನನಗೆ ನಂಬಿಕೆ ಅಪನಂಬಿಕೆ
ಎರಡೂ ಇಲ್ಲ, ಹೋಗಿ ನೋಡಿಯೇ ಬಿಡೋಣ'
ಎಂದು ವಿಚಾರವಂತಿಕೆಯು
ಬುದ್ಧಿವಂತಿಕೆಯಾಗಲಾರಂಭಿಸುತ್ತದೆ.
ಮುಂದೆ, ಆಂತರಿಕ ಅವಲೋಕನವನ್ನು ಮುಂದುವರೆಸಿದಂತೆ, ಬುದ್ಧಿವಂತಿಕೆಯಿಂದ, ಭಾವದಿಂದೊಡಗೂಡಿದ ಬುದ್ಧಿವಂತಿಕೆಯೆಡೆಗೆ ಸಾಗುವಿರಿ. ಅಂದರೆ ಶೇಕಡಾ 60ರಷ್ಟು ಬುದ್ಧಿ, ಶೇಕಡಾ 40ರಷ್ಟು ಭಾವ. ಗುರುವು ಆಪ್ತಮಿತ್ರನೆನಿಸುತ್ತಾನೆ. ನೀವು ಹೀಗೆ ಯೋಚಿಸುವಿರಿ, 'ಆಗಾಗ, ನನಗೆ ಅವಶ್ಯಕತೆ ಉಂಟಾದಾಗಲೆಲ್ಲಾ ಅವನು ಮಾರ್ಗದರ್ಶನ ನೀಡಬಹುದು. ನನ್ನ ಜೀವನ ಹೇಗಿರಬೇಕೆಂಬ ಅಭಿಪ್ರಾಯ ನನಗಿದೆ. ಹಾಗಾಗಿ, ಎಲ್ಲವನ್ನೂ ಈತನು ಕಲಿಸಬೇಕಾದುದಿಲ್ಲ. ಆದರೆ, ಕೆಲವೊಮ್ಮೆ ನಿರ್ಧಾರಗಳನ್ನು ಮಾಡಬೇಕಾದಾಗ ಈತನ ಸಹಾಯ ಕೋರಬಹುದು'. ಇದು ಗುರುವನ್ನು ಮಿತ್ರನಂತೆ ಕಾಣುವ 'ಸಖಿ-ಭಾವ', ಸ್ನೇಹದ ಮನೋಭಾವ.
ಇದು ಹೇಗೆಂದರೆ, ನಡೆಯುವಾಗ
ಊರುಗೋಲು ಉಪಯೋಗಿಸಿದಂತೆ. ಏರಿಳಿತಗಳು
ಬಂದಾಗ ಊರುಗೋಲನ್ನು ಬಳಸುತ್ತೀರಿ. ನಂತರ,
ನಿಧಾನವಾಗಿ ನಿರುತ್ಸಾಹ, ಇಲ್ಲವೆ ಮನಸ್ಸು
ಕುಗ್ಗಿಸುವಂತಹ ತೀವ್ರವಾದ ಸಮಸ್ಯೆಗಳು
ಎದುರಾದಾಗ, ಆತನ ಮಾತುಗಳಿಂದ ನಿಮಗೆ ನೀವೇ
ಸಹಾಯ ಮಾಡಿಕೊಳ್ಳಲಾಗದಿದ್ದಾಗ, ಆತನನ್ನೇ
ಹೋಗಿ ಕೇಳುತ್ತೀರಿ!, 'ನಿಮ್ಮ ಉಪದೇಶಗಳೇನೋ
ಬಹಳ ಮಹತ್ತರವಾದುವೇ, ಆದರೆ ಈ ಕ್ಷಣ
ನನಗದನ್ನು ಅನುಸರಿಸಲಾಗುತ್ತಿಲ್ಲ. ಏನು ಮಾಡಲಿ?'
ಎಂದು. ಆಗ ಆತನು ಮಾನಸಿಕವಾಗಿಯೂ,
ಭಾವನಾತ್ಮಕವಾಗಿಯೂ, ಸಹಕಾರ ನೀಡುತ್ತಾನೆ. ಆಗ
ನಿಮಗೆ ಕೇವಲ ಊರುಗೋಲು ಸಾಲದು, ಇನ್ನೂ
ಹೆಚ್ಚಿನ ಆಧಾರ ಬೇಕು ಎಂದು ತೋರುವುದು. ಆಗ,
ಆತನ ಆಸರೆಯನ್ನು ಕೋರಿ, ಆತನ ಸಹಾಯದಿಂದ
ಮತ್ತೆ ನಡೆಯುತ್ತೀರಿ. ಆತನ ಕೈ ಹಿಡಿದಾಗ
ಕೃತಜ್ಞತೆಯೂ ಹೆಚ್ಚುತ್ತದೆ.
ನಿಮ್ಮಲ್ಲಿ ಕೇವಲ ಊರುಗೋಲು ಮಾತ್ರ
ಇದ್ದಲ್ಲಿ, ಅದು ಸಖಿಭಾವ, ಬುದ್ಧಿವಂತಿಕೆಯಿಂದ
ಕೂಡಿದ ಭಾವ. ನೀವು ಆತನ ಕೈ
ಹಿಡಿಯಲಾರಂಭಿಸಿದರೆ, ಆತನು ನಿಮ್ಮನ್ನು
ಮೇಲೆತ್ತಿದಾಗ, ಕ್ರಮೇಣ ಅದು ಭಾವಾತ್ಮಕ
ಬುದ್ಧಿವಂತಿಕೆಯಾಗುತ್ತದೆ. ಈ ಹಂತದಲ್ಲಿ ನೀವು
ಬುದ್ಧಿಯಿಂದ ಭಾವದಿಂದೊಡಗೂಡಿದ ಬುದ್ಧಿಯ ಸ್ಥಿತಿಗೆ ಎಂದರೆ, 60% ಬುದ್ಧಿ ಮತ್ತು 40% ಭಾವದ ಸ್ಥಿತಿಗೆ ಸಾಗುವಿರಿ. ಈ ಮನೋಭಾವವನ್ನೇ ನಾನು ಗುರುವನ್ನು ಮಾತೃ ಅಥವಾ ಪಿತೃರೂಪದಲ್ಲಿ ಕಾಣುವ ಭಾವವೆನ್ನುವುದು.
ಮಿತ್ರನಾಗಿ ಇರುವುದರಿಂದ ಆತನು ತಂದೆ
ಅಥವಾ ತಾಯಿಯಾಗುತ್ತಾನೆ. ಕ್ರಮೇಣ ಬಹಳ
ನಿಧಾನವಾಗಿ ಸಂಬಂಧವು ಗಾಢವಾಗುತ್ತದೆ. ನೀವು
ನೆಲೆಗೊಂಡು ಯೋಚಿಸುತ್ತೀರಿ, ‘ಈತನು ಕೇವಲ
ಮಿತ್ರನಲ್ಲ, ಕೇವಲ ಸಲಹೆಗಳನ್ನೂ,
ಅಭಿಪ್ರಾಯಗಳನ್ನೂ ಕೊಡುವವನಲ್ಲ. ನನ್ನನ್ನು ನನ್ನ
ತೊಂದರೆಗಳಿಂದಲೂ ಪಾರುಮಾಡುವವನು’ ಎಂದು.
ಹೀಗೆ, ನಿಧಾನವಾಗಿ, ಬಾರಿಬಾರಿಗೂ ನಿಮ್ಮ
ಅಪೇಕ್ಷೆಗೆ ಮೀರಿದ ಸಹಾಯಗಳು ದೊರೆತಾಗ,
ಆತನಡೆಗೆ ನಿಮ್ಮ ಮನದಲ್ಲಿ ಶುದ್ಧ ಭಾವವೇ
ಉಳಿಯುತ್ತದೆ. ಆತನು ನಿಮ್ಮನ್ನೂ ನಿಮ್ಮ
ಹೃದಯವನ್ನೂ ತುಂಬಿಕೊಳ್ಳುತ್ತಾನೆ. ಆತನನ್ನು
ಮರೆಯುವುದೇ ಸಮಸ್ಯೆಯಾಗುತ್ತದೆ. ಆ
ಕ್ಷಣದಲ್ಲಿಯೇ ಸೇವಕನಂತೆ ಆತನಿಗೆ ವಂದಿಸುವ
ಭಾವನೆ ಮೂಡುತ್ತದೆ. ಲಜ್ಜೆಯಿಂದಲ್ಲದೆ,
ನಮ್ರತೆಯಿಂದ ನಿಮ್ಮ ತೊಂದರೆಗಳೆಲ್ಲವನ್ನೂ
ಅರ್ಪಿಸಬಹುದಾದ ವ್ಯಕ್ತಿ ದೊರಕಿರುವನೆಂಬ
ಭಾವನೆಯಿಂದ, ತಲೆಬಾಗುವಂತಾಗುತ್ತದೆ.
ರಾಮಾಯಣದಲ್ಲಿ ಹನುಮಂತನು ರಾಮನಡೆಗೆ
ಹೊಂದಿದ್ದ ಭಾವವಿದು. ಆತನು ರಾಮನಲ್ಲಿ
ಸಂಪೂರ್ಣ ಭಕ್ತಿ ಹೊಂದಿದ್ದನು. ಇಂತಹ
ಸಂಬಂಧದಲ್ಲಿ ಉತ್ತಮವಾದ
ಭಾವದಿಂದೊಡಗೂಡಿದ ಸಂಬಂಧವೇರ್ಪಡುತ್ತದೆ.
ಈ ಮನೋಭಾವವು ಹಿಂದಿನ ಸಂಬಂಧಕ್ಕಿಂತಲೂ
ಹೆಚ್ಚು ಭಾವಾತ್ಮಕವಾದದ್ದು. ಇದು ಶೇಕಡ 60 ಭಾವ
ಮತ್ತು ಶೇಕಡ 40 ಬುದ್ಧಿಯ ಬೆರೆಕೆಯಾಗಿರುತ್ತದೆ.
ಹಾಗೆಯೇ ಬರುಬರುತ್ತಾ, ಭಾವನಾತ್ಮಕವಾಗಿ
ಆಳಕ್ಕೆ ಹೋದಂತೆ ಗುರುಗಳ ರಕ್ಷಕರಾಗುತ್ತೀರಿ.
ಆತನ ಸಹಾಯವನ್ನು ಕೋರುವ ಬದಲಿಗೆ ನೀವೇ
ಆತನಿಗೆ ಬೆಂಬಲವನ್ನು ಕೊಡಲಿಚ್ಛಿಸಿ ಪ್ರೀತಿಯಿಂದ
ಸೇವೆ ಮಾಡುತ್ತೀರಿ. ನಿಮ್ಮ ಭಾವನೆಯು ಲಾಲನೆ
ಮಾಡುವ ತಾಯಿಯಂತಾಗುತ್ತದೆ. ಇದು ಶುದ್ಧವಾದ
ಭಾವನೆಯ ಸ್ಥಿತಿ. ತಾಯಿಯು ತನ್ನ ಕಂದನ
ಸೌಖ್ಯವನ್ನು ಕಾಪಾಡುವುದೇ ಅವಶ್ಯಕತೆ.
ಬುದ್ಧಿವಂತಿಕೆ, ಬುದ್ಧಿವಂತಿಕೆಯಿಂದ ಕೂಡಿದ
ಭಾವನೆ, ಭಾವನೆಯಿಂದ ಕೂಡಿದ ಬುದ್ಧಿವಂತಿಕೆ
ಹಾಗೂ ಶುದ್ಧವಾದ ಭಾವನೆ - ಎಂಬ ಈ ನಾಲ್ಕು
ಹಂತಗಳಲ್ಲೂ ನಿಮ್ಮ ಜೀವನವು ಗುರುಗಳ
ಜೀವನದಿಂದ ಭಿನ್ನವಾಗಿಯೂ, ಬೇರೆಯದ್ದಾಗಿಯೂ
ಇರುತ್ತದೆ. ನೀವು ನಿಮ್ಮ ಜೀವನೋದ್ಧಾರಕ್ಕಾಗಿ,
ನಿಮ್ಮ ಶ್ರೇಯೋಭಿವೃದ್ಧಿಗಾಗಿ ಆತನ ಸಹಾಯವನ್ನು
ಪಡೆಯುತ್ತೀರಿ, ಅಷ್ಟೆ.
ನಿಮ್ಮ ಭಾವುಕತೆಯು ಪಕ್ವವಾದಂತೆ, ನಿಮ್ಮ ಜೀವನವು ಆತನ ಜೀವನದಿಂದ ಬೇರೆ ಅಲ್ಲ ಎಂದೆನಿಸುತ್ತದೆ. ಆಗ, ಭಾವುಕತೆಯಿಂದ ಆತ್ಮದ ಹಂತಕ್ಕೆ ಸಾಗುವಿರಿ. ಆತನಿಗಾಗಿ ನಿಮ್ಮನ್ನು ನೀವೇ ತ್ಯಾಗಮಾಡಲು ಸಿದ್ಧವಾಗಿ ನಿಮ್ಮ ಜೀವನವನ್ನೇ ಆತನಿಗೆ ಅರ್ಪಿಸುವಂತಾಗುವಿರಿ. ತಾಯಿ-ಮಗುವಿನ ಬಾಂಧವ್ಯಕ್ಕಿಂತಲೂ ಮಿಗಿಲಾಗಿ ಆತ್ಮದ ಸ್ತರದಲ್ಲಿ ಒಂದಾಗುತ್ತೀರಿ. ಲಿಂಗಭೇದವಿಲ್ಲದ, ಗಾಢವಾದ ಪ್ರೀತಿಯ ಸಂಬಂಧವದು. ಭಾವುಕತೆ ಹಾಗೂ ಆತ್ಮಮಟ್ಟದ ಭಾವಗಳೆರಡೂ ಗಾಢವಾಗಿ ಸೇರಿರುವ ಮಧುರ ಭಾವವಿದು.
'ಮಾಧುರ ಭಾವ'ವು ಗಾಢವಾದಂತೆ
ಇದ್ದಕ್ಕಿದ್ದಂತೆಯೇ 'ಆತ', 'ನೀವು' ಎಂಬ
ಭೇದವೇ ಇಲ್ಲ ಎಂಬ ಅನುಭವವಾಗುತ್ತದೆ.
ಎರಡೂ ಬೇರೆ ಬೇರೆ ಆತ್ಮಗಳಾಗಿರುವುದಿಲ್ಲ. ನೀವೂ
ಆತನೂ ಒಂದೇ ಆಗಿಬಿಡುತ್ತೀರಿ. ನೀವೇ
ಗುರುವಾಗಿರುವ 'ಮಹಾಭಾವ'ವನ್ನು
ಅನುಭವಿಸಲಾರಂಭಿಸುತ್ತೀರಿ. ಆ ಉತ್ತುಂಗವನ್ನು
'ತತ್ ತ್ವಂ ಅಸಿ', 'ಅದು ನೀನೇ ಆಗಿರುವೆ'
ಎಂಬುದನ್ನು ಅನುಭವಿಸುತ್ತೀರಿ.
ಮೊದಲಿಗೆ ವೈಚಾರಿಕತೆ (ಬುದ್ಧಿಮತ್ತತೆ),
ನಂತರ ಬುದ್ಧಿವಂತಿಕೆ, ನಂತರ ಶೇಕಡ 60 ಬುದ್ಧಿ
ಮತ್ತು ಶೇಕಡ 40 ಭಾವ, ನಂತರ ಶೇಕಡ 60
ಭಾವ ಮತ್ತು ಶೇಕಡ 40 ಬುದ್ಧಿ, ನಂತರ ಶೇಕಡ
100 ಭಾವ, ನಂತರ ಶೇಕಡ 60 ಭಾವ ಮತ್ತು
ಶೇಕಡ 40 ಅಸ್ತಿತ್ವ, ನಂತರ ಶೇಕಡ 100ರಷ್ಟು
ಶುದ್ಧ ಅಸ್ತಿತ್ವ.
ಈ ರೀತಿ ಗುರು-ಶಿಷ್ಯ ಸಂಬಂಧದಲ್ಲಿ ಹಂತ
ಹಂತವಾಗಿ ಅನುಭವಗಳಿಸುತ್ತಾ
ಬೆಳೆಯಲಾರಂಭಿಸುತ್ತೀರಿ. ಯಾವುದೇ ಸಮಯದಲ್ಲಿ
ಯಾವುದಾದರೂ ಒಂದು ಮನೋಭಾವವು
ಉಳಿದೆಲ್ಲಾ ಭಾವಗಳಿಗಿಂತಲೂ
ಪ್ರಮುಖವಾಗಿರಬಹುದು.
ಪ್ರತಿಯೊಬ್ಬರೂ ಚೈತನ್ಯದಲ್ಲಿ ಸಮಗ್ರವಾಗಿ
ಬೆಳೆಯುತ್ತಾರೆ. ಆದಾಗ್ಯೂ ಗುರುಗಳೊಂದಿಗಿನ
ಸಂಬಂಧವು ಪ್ರತಿಯೊಬ್ಬರದೂ ಅನನ್ಯವಾದುದು.
ಇದೇ ಅದರ ಸೊಗಸು.
ರಾಮಹನುಮರ ದಾಸ-
ಭಾವ, ಯಶೋಧೆ-
ಕೃಷ್ಣರ ವಾತ್ಸಲ್ಯ ಭಾವ,
ಕೃಷ್ಣ - ಅರ್ಜುನರ
ಸಖಿಭಾವ, ರಾಮಕೃಷ್ಣ-
ಕಾಳಿಯೊಂದಿಗಿನ ಮಾತೃಭಾವ, ರಾಧಾ ಕೃಷ್ಣರ
ಮಧುರಭಾವ - ಈ ಯಾವುದೇ ಭಾವವೇ ಆಗಲಿ
ಗುರು-ಶಿಷ್ಯರ ನಡುವಿನ ಅನನ್ಯವಾದ ಸಂಬಂಧವೇ.
ಪ್ರತಿಯೊಬ್ಬ ಶಿಷ್ಯನೂ ಸತ್ಯಾನ್ವೇಷಣೆಯ ಪಥವನ್ನು
ತನ್ನ ಇಷ್ಟಾನುಸುರ ಆಯ್ಕೆ ಮಾಡಿಕೊಂಡು, ಗುರುವಿನ
ದಯದಿಂದ ಪ್ರಗತಿ ಹೊಂದುತ್ತಾನೆ.
ಗುರುವು ಎಂತಹ
ಸಜೀವ
ಚೈತನ್ಯವೆಂದರೆ
ನೀವು ಪರಿವರ್ತನೆ
ಹೊಂದಿ ಹೊಸ
ಪ್ರಜ್ಞೆಯಾಗುತ್ತೀರಿ.
ಗುರುವಿನೊಂದಿಗೆ ಹೇಗೆ ವರ್ತಿಸಬೇಕು - ತೆರೆದ ಮನಸ್ಕರಾಗಿ
ಗುರುವಿನೊಂದಿಗಿರುವಾಗ ಸಂಪೂರ್ಣವಾಗಿ ತೆರೆದ ಮನಸ್ಕರಾಗಿ. ನಿಶ್ಚಷ್ಟಿತರಾಗಿ ಇರಬೇಡಿರಿ. ಜೀವನವೆಂಬುದು ತರ್ಕಕ್ಕೆ ಮೀರಿದುದು ಎಂದು ಅರ್ಥ ಮಾಡಿಕೊಳ್ಳಿರಿ. ತರ್ಕವನ್ನು ಕೈ ಬಿಟ್ಟು ಸಂಪೂರ್ಣವಾಗಿ ತೆರೆದ ಮನಸ್ಸಿನಿಂದ ಹಾಗೂ ಅರಿವಿನಿಂದಿರಿ.
ಗುರುವು ಎಂತಹ ಸಜೀವ ಚೈತನ್ಯವೆಂದರೆ ನೀವು ತರ್ಕವನ್ನು ಕೈಬಿಟ್ಟು ತೆರೆದ ಮನಸ್ಸಿನಿಂದಿದ್ದ ಪಕ್ಷದಲ್ಲಿ, ನೀವು ಖಂಡಿತವಾಗಿಯೂ ಪರಿವರ್ತನೆ ಹೊಂದುತ್ತೀರಿ; ನೀವು ಹೊಸ ವ್ಯಕ್ತಿಯಾಗುತ್ತೀರಿ,
> ### ಶಿಷ್ಯನಾಗುವುದೆಂದರೆ ಗುರುವಿನೊಂದಿಗೆ ತೆರೆದ ಮನಸ್ಸಿನಿಂದಿದ್ದು, ಸಂಪೂರ್ಣವಾಗಿ ಪ್ರಾಮಾಣಿಕವಾಗಿರುವುದು.
ಹೊಸ ಚೈತನ್ಯ-
ವಾಗುತ್ತೀರಿ, ಹೊಸ
ಪ್ರಜ್ಞೆಯಾಗುತ್ತೀರಿ.
ಒಂದೇ ಮಾತಿನಲ್ಲಿ
ಹೇಳಬೇಕೆಂದರೆ, ನೀವೇ
ಹೊಸದಾಗುತ್ತೀರಿ!
ನಿಮ್ಮಲ್ಲಿ 'ಹೊಸತನ' ಹಾಗೂ 'ಸ್ಪಷ್ಟತೆ' ಎರಡೂ
ಸೇರುತ್ತವೆ.
ನಿಮಗೆ ಹಗುರವಾದ ಅನುಭವವಾಗುತ್ತದೆ. ನಿಮ್ಮನ್ನು ತಳಮಳಗೊಳಿಸುತ್ತಿದ್ದ ವಿಕಾರ ಗಡ್ಡೆಗಳ ಭಾರವು ಇಳಿದುಹೋಗುತ್ತದೆ. ನಿಮ್ಮಲ್ಲಿ ಸಹಜವಾಗಿಯೇ ಇರಬೇಕಾದ ಭಾಗವು ಎಂದೂ ತೊಂದರೆ ಮಾಡುವುದಿಲ್ಲ. ಅದಾ ತೊಂದರೆಯಾಗಿದೆಯೆಂದರೆ, ಅದು ನಿಮ್ಮ ಭಾಗವೇ ಅಲ್ಲ ಎಂದರ್ಥ. ಆದ್ದರಿಂದ ತೆರೆದ ಮನಸ್ಸಿನಿಂದ ಜನ್ಮ ಜನ್ಮಕ್ಕೂ ಅಂಟಿಕೊಂಡು ಬಂದ ಟ್ಯೂಮರ್ಗಳನ್ನು ನಿರ್ಮೂಲಗೊಳಿಸಲು 'ಶಸ್ತ್ರಚಿಕಿತ್ಸಕ'ನಿಗೆ ಅಣಿ-ಮಾಡಿಕೊಡಿರಿ.
ಗುರುವಿನ ಸಾನ್ನಿಧ್ಯದಲ್ಲಿ ಸಂಪೂರ್ಣವಾಗಿರಿ.
ಗುರುವು ನಿಮಗೆ ಹೇಳಿದುದರ ಬಗ್ಗೆ ನೀವು
ಸಮ್ಮತಿಸುವಿರೋ ಇಲ್ಲವೋ, ಎಂಬುದು ಪ್ರಶ್ನೆಯಲ್ಲ.
ಸಮ್ಮತಿ-ಅಸಮ್ಮತಿಗಳನ್ನು ಮೀರಿ ಹೋಗಬೇಕು.
ಸೂರ್ಯನು ಉದಯಿಸುವುದನ್ನು ನೋಡಿದಾಗ ನೀವು
ಅದರೊಂದಿಗೆ ಸಮ್ಮತಿಸುವಿರೋ ಇಲ್ಲವೋ, ಎಂದು
ಹೇಳಲಾಗುವುದೇ? ಇಲ್ಲ! ಅದು ಹಾಗೆಯೇ, ಅಷ್ಟೇ.
ಇದೇ ರೀತಿ, ಗುರುವೂ ಇರುವನು, ಅಷ್ಟೇ. ಈ
ಭಾವನೆಯು ನಿಮ್ಮಲ್ಲಿ ಸ್ಪಷ್ಟವಾದಾಗ, ನಿಮ್ಮ
ಕಡೆಯಿಂದ ಬೇರಾವ ಪ್ರಯತ್ನವೂ ಬೇಕಿಲ್ಲ – ನಿಮ್ಮ
ನಿಜ ಅಸ್ತಿತ್ವವನ್ನು ನಿಮಗೇ ತೋರಿಸಲು ನೀವು
ಗುರುವಿಗೆ ಅನುಮತಿ ಕೊಟ್ಟಂತೆ.
ಶಿಷ್ಯನಾಗುವುದೆಂದರೆ, ಗುರುವಿನೊಂದಿಗೆ ತೆರೆದ
ಮನಸ್ಸಿನಿಂದಿರುವುದು. ಯಾವ ರೀತಿಯ ಭಯವೂ
ಇಲ್ಲದೆ, ಏನನ್ನೂ ಮುಚ್ಚಿಡದೆ, ಸಂಪೂರ್ಣವಾಗಿ
ಪ್ರಾಮಾಣಿಕವಾಗಿರುವುದು.
ಆಗ ಗುರುವು ತನ್ನ ಕಾರ್ಯವನ್ನು ಮಾಡಬಲ್ಲನು. ನಿಮ್ಮಿಂದ ನಿರ್ವಹಿಸಲು ಸಾಧ್ಯ ಎಂದು ಊಹಿಸಿರದ ದಿಕ್ಕುಗಳಲ್ಲಿ ನಿಮ್ಮನ್ನು ತಳ್ಳುತ್ತಾನೆ. ಭಯವನ್ನು ತರುವಂತಹ ಕ್ಷಣಗಳನ್ನೂ, ಸನ್ನಿವೇಶಗಳನ್ನೂ ಎದುರಿಸುವ ಸ್ಪೂರ್ತಿ ನೀಡುತ್ತಾನೆ. ನಿಮ್ಮ ಪರಿಮಿತಿಯನ್ನು ಸತತವಾಗಿ ಬೆಳೆಸುತ್ತಾ, ಮೇರೆಯೂ, ಮಿತಿಯೂ ಇಲ್ಲವೆಂಬ ಸತ್ಯವನ್ನು ತಿಳಿಯಪಡಿಸುತ್ತಾನೆ. ಆಗ ನೀವೂ ಆತನಂತೆಯೇ ಆಗುವಿರಿ. ನೀವೂ ಒಬ್ಬ ಸಂಪೂರ್ಣ ಮುಕ್ತ ಪರಮಹಂಸರಾಗುವಿರಿ.
ನೀವು ಮಾಡಬೇಕಾದುದೇನೆಂದರೆ, ಗುರುವಿಗೆ, ವಿಶ್ವಶಕ್ತಿಗೆ ತೆರೆದ ಮನಸ್ಸಿನಿಂದಿರುವುದೊಂದೇ. ನೀವು ತೆರೆದ ಮನಸ್ಸಿನಿಂದಿರುವುದು ಗುರುವಿನ ಮೇಲೆ ನಿಮಗಿರುವ ಭರವಸೆಯನ್ನು ಸೂಚಿಸುತ್ತದೆ. ನಿಮಗೂ ವಿಶ್ವಶಕ್ತಿಗೂ ನಡುವೆ ಸುಂದರ ಸೇತುವೆಯಾಗಲು ಬೇಕಾದುದು ಈ ಭರವಸೆಯೇ.
ಒಂದು ಸಣ್ಣ ಕಥೆ:
ಶಿಷ್ಯನೊಬ್ಬನು ಗಂಗಾ ನದಿಯೊಳಗೆ ಬಿದ್ದು ಬಿಟ್ಟನು. ಗುರುವು ಗಂಗಾನದಿಯ ತೀರದಲ್ಲಿ ಕುಳಿತಿದ್ದನು. ಆತನನ್ನು ನೋಡಿ ಶಿಷ್ಯನು, 'ಕಾಪಾಡಿ! ಕಾಪಾಡಿ! ದೇವರೇ ಕಾಪಾಡು! ಗುರುವೇ ಕಾಪಾಡಿರಿ!' ಎಂದು ಕೂಗಿಕೊಂಡನು. ಗುರುವು, ‘ಮೂರ್ಖ! ಎದ್ದು ನಿಲ್ಲು, ನಿನ್ನನ್ನು ನೀನೇ ಕಾಪಾಡಿಕೊ’ ಎಂದರು. ಶಿಷ್ಯನು, ‘ನಿಮ್ಮ ವೇದಾಂತವನ್ನೆಲ್ಲ ಆಮೇಲೆ ಕಲಿಸಿ. ಈಗ ಮೊದಲು ನನ್ನನ್ನು ಕಾಪಾಡಿರಿ, ನನ್ನ ಪ್ರಾಣವು ಅಪಾಯದಲ್ಲಿದೆ!’ ಎಂದು ಕೂಗಿಕೊಂಡನು.
ಗುರುವು ಅಲುಗಾಡಲೂ ಇಲ್ಲ, ‘ಮೂರ್ಖ! ಎದ್ದು ನಿಲ್ಲು, ನಿನ್ನನ್ನು ನೀನೇ ಕಾಪಾಡಿಕೊ’ ಎಂದು ಮತ್ತೆ ಹೇಳಿದರು. ಶಿಷ್ಯನು, ‘ನೀವು ನನ್ನ ಗುರುವೆಂದು ಭಾವಿಸಿದ್ದೆ, ನನ್ನನ್ನು ಕಾಪಾಡಿ! ಕಾಪಾಡಿ!’ ಎಂದು ಕಿರಿಚಿಕೊಂಡನು. ಈಗ ಗುರುವು ಇನ್ನೂ ಗಟ್ಟಿಯಾಗಿ, ‘ಮೂರ್ಖ! ಎದ್ದು ನಿಲ್ಲು!’ ಎಂದು ಕೂಗಿದರು. ಶಿಷ್ಯನು ಹೆದರಿ ಎದ್ದು ನಿಂತನು. ನೀರು ಕೇವಲ ತನ್ನ ಸೊಂಟದವರೆಗೆ ಮಾತ್ರವೇ ಇದೆಯೆಂಬುದನ್ನು ಆಗ ತಿಳಿದನು!
ನೀವು ಒದ್ದಾಡುವುದೇಕೆಂದರೆ, ನೀರಿನೊಳಗೆ ಬಿದ್ದಿದ್ದೇನೆಂದುಕೊಳ್ಳುತ್ತೀರ. ಆದರೆ ನೀರು ನಿಮ್ಮ ಸೊಂಟದ ಮಟ್ಟಕ್ಕೆ ಮಾತ್ರ ಇರುತ್ತದೆ ಎಂದು ತಿಳಿದಿರುವುದಿಲ್ಲ! ಗುರುವಿನ ಮಾತನ್ನು ಕೇಳಿ ಎದ್ದು ನಿಂತಾಗ ಮಾತ್ರ ನೀರು ಅಷ್ಟೇ ಇದೆಯೆಂದು ಅರಿವಾಗಿ ನಿರಾಳವಾಗುತ್ತದೆ. ನಿಮ್ಮ ಜೀವನವನ್ನು ಧ್ವಂಸ ಮಾಡುತ್ತವೆ ಎಂದು ನೀವು ಭಾವಿಸಿರುವ ನಿಮ್ಮ ಚಿಂತೆಗಳು ವಾಸ್ತವವಾಗಿ ಇರುವುದೇ ಇಲ್ಲ. ಅವು ಕೇವಲ ನಿಮ್ಮ ಕಲ್ಪನೆ ಮಾತ್ರ. ಅವು ನಿಜವಾಗುವುದೇ ಇಲ್ಲ.
ಆದ್ದರಿಂದ ಅರ್ಥಮಾಡಿಕೊಳ್ಳಿರಿ, ‘ನಾನು
ನೋಡಿಕೊಳ್ಳುತ್ತೇನೆ’ ಎಂದು ನಾನು ಹೇಳಿದಾಗ
ನೀವು ಎದ್ದು ನಿಲ್ಲಲು ಊರುಗೋಲನ್ನು
ಕೊಡುತ್ತಿದ್ದೇನೆ. ಗುರುವು ‘ನಾನು
ನೋಡಿಕೊಳ್ಳುತ್ತೇನೆ’,
ಎಂದು ಹೇಳಿದಾಗ, ಆ
ಮಾತನ್ನು ನಂಬದೆ
ಹೋದರೆ, ಎದ್ದು
ನಿಲ್ಲುವ ಅವಕಾಶವನ್ನೇ
ಕಳೆದುಕೊಳ್ಳುತ್ತೀರಿ.
ಯಾವುದೇ
ಸಂಸ್ಕಾರದಲ್ಲಿ
ಸಿಕ್ಕಿಹಾಕಿಕೊಂಡಾಗ,
ಗುರುವಿನ
ಸಾನಿಧ್ಯದಲ್ಲಿರಿ.
ಅದು ನಿಮ್ಮನ್ನು
ಸಂಪೂರ್ಣವಾಗಿ
ಗುಣಪಡಿಸುತ್ತದೆ.
ಗುರುವಿನ ಸಾನಿಧ್ಯದಲ್ಲಿ ಸಂಸ್ಕಾರಗಳನ್ನು ದಹಿಸಿಬಿಡಿ
ಭಗವಾನ್ ರಮಣ ಮಹರ್ಷಿಗಳ ಜೀವನದ ಒಂದು ಸುಂದರ ಘಟನೆ:
ಶಿಷ್ಯನೊಬ್ಬನು ರಮಣರನ್ನು ಕೊಂಡಾಡುವ ‘ರಮಣ ಪುರಾಣ’ವೆಂಬ ಶ್ಲೋಕಗಳನ್ನು ಬರೆಯುತ್ತಿದ್ದನು. ಆದರೆ ಆತನು ಒಂದು ಹಂತದಲ್ಲಿ ಸಿಲುಕಿ ಮುಂದುವರೆಸಲಾರದಾದನು. ಹೇಗೋ, ನಿಮ್ಮ ಅಹಂಕಾರದೊಂದಿಗೆ ಬರೆಯುವಾಗ ಇಂತಹ ತಡೆ ಬಂದು ಬಿಡುತ್ತದೆ. ಏನೇ ಆಗಲಿ, ಆ ಶಿಷ್ಯನು ರಮಣರ ಬಳಿ ಬಂದು, ‘ಭಗವಾನ್, ನನಗೆ ಮುಂದೆ ಬರೆಯಲಾಗುತ್ತಿಲ್ಲ. ದಯವಿಟ್ಟು ಸಹಾಯ ಮಾಡಿರಿ’ ಎಂದು ಕೇಳಿಕೊಂಡನು. ಭಗವಾನರು, ‘ಕಾಗದವನ್ನು ಇಲ್ಲಿಟ್ಟು ಹೋಗು, ನಿನ್ನೊಡನೆ ನಂತರ ಮಾತನಾಡುತ್ತೇನೆ’ ಎಂದರು.
ಶಿಷ್ಯನು ಕಾಗದವನ್ನಿಟ್ಟು ಹೊರಟು ಹೋದನು.
ಮಾರನೆಯ ದಿನ ಅವನು ಬಂದು ನೋಡಿದಾಗ ಇಡೀ
ಕಾವ್ಯವು ಪೂರ್ತಿಯಾಗಿತ್ತು! ರಮಣ
| ಮನಸ್ಸಿನ ಸಹಜ | ಮಹರ್ಷಿಯವರು 300 |
|---|---|
| ಸ್ವಭಾವವೇ | ಸಾಲುಗಳನ್ನು ತಾವೇ |
| ಚಕ್ರದಂತೆ. | ಬರೆದಿದ್ದರು! ಆ ಪುಸ್ತಕವು |
| ಕೆಳಗಿದ್ದುದು | ಮುದ್ರಿತವಾದಾಗ ಆ 300 |
| ಮೇಲೆ ಬರಲೇ | ಸಾಲುಗಳನ್ನು ವಿಶೇಷ- |
| ಬೇಕು. | ವಾಗಿ ಮುದ್ರಿಸಿ ಈ 300 |
ಸಾಲುಗಳನ್ನು 'ಭಗವಾನರು ತಾವೇ ರಚಿಸಿದರು' ಎಂಬ ಅಡಿ ಟಿಪ್ಪಣಿಯನ್ನು ಆ ಶಿಷ್ಯನು ಬರೆದನು.
ಭಗವಾನರು ಆ ಪುಸ್ತಕವನ್ನು ನೋಡಿ, 'ಓ!
ಹಾಗಾದರೆ ಉಳಿದ ಸಾಲುಗಳನ್ನು ನೀನು
ಬರೆದೆಯೆಂದಾಯಿತು? ಸರಿ!' ಎಂದರು.
'ಅವರು ಹಾಗೆಂದ ಕೂಡಲೇ ನನ್ನಲ್ಲೇನೋ ಒಡೆದುಹೋದಂತಾಯಿತು. ಕಣ್ಣೀರು ಸುರಿಸುತ್ತಾ ಅವರ ಪಾದಗಳಲ್ಲಿ ಬಿದ್ದು ನಾನು ಮೇಲೇಳಲೇ ಇಲ್ಲ' ಎಂದು ಶಿಷ್ಯರು ನಂತರ ಹೇಳಿಕೊಳ್ಳುತ್ತಾರೆ.
ಭಗವಾನರ ಶಿಷ್ಯರಾದ ಮುರುಗನಾರ್ರವರಿಗೆ
ಜ್ಞಾನೋದಯವಾಗಲು ಅವರ ಆ ಒಂದು ಟೀಕೆಯೇ
ಸಾಕಾಯಿತು!
ಅರ್ಥಮಾಡಿಕೊಳ್ಳಿರಿ, ಮುರುಗನಾರ್ರವರಲ್ಲಿ ಬರಹಗಾರ ಎಂಬ ಅಹಂಕಾರದ ಒಂದು ಸಂಸ್ಕಾರವು ಹೇಗೆ ಉಳಿದಿತ್ತೋ, ಹಾಗೆಯೇ ನಿಮ್ಮಲ್ಲೂ ಅನೇಕ ಸಂಸ್ಕಾರಗಳಿವೆ. ಯಾವುದೇ ಸಂಸ್ಕಾರದಲ್ಲಿ ಸಿಕ್ಕಿಹಾಕಿಕೊಂಡಾಗ ಗುರುವಿನ ಸಾನಿಧ್ಯದಲ್ಲಿರಿ. ಅದು ನಿಮ್ಮನ್ನು ಸಂಪೂರ್ಣವಾಗಿ ಗುಣಪಡಿಸುತ್ತದೆ.
ದೊಡ್ಡ ಸಮಸ್ಯೆಯೇನೆಂದರೆ, ಸಂಸ್ಕಾರವು ನಿಮ್ಮಲ್ಲಿ ತನ್ನ ಇರುವಿಕೆಯನ್ನು ಒಪ್ಪಿಕೊಳ್ಳಲು ಬಿಡುವುದಿಲ್ಲ. ಅದು ತನ್ನ ಅಸ್ತಿತ್ವಕ್ಕಾಗಿ ತನ್ನನ್ನು ತಾನೇ ಸಮರ್ಥಿಸಿಕೊಳ್ಳುತ್ತದೆ.
ಹಾಗಾಗಿಯೇ ನಾನು ಜನರಿಗೆ ಯಾವಾಗಲೂ
ಹೇಳುವುದು, ಸಂಸ್ಕಾರಗಳಲ್ಲಿ ಸಿಲುಕಿದಾಗ, ಎಂದರೆ
ಕೋಪ, ಕಾಮ, ಲೋಭ, ಭಯ, ನಿರುತ್ಸಾಹ,
ಮಾತ್ಸರ್ಯಗಳ ಬಲವಾದ ಹಿಡಿತದಲ್ಲಿ
ಸಿಕ್ಕಿಕೊಂಡಿದ್ದಾಗ, ಯಾವುದೇ ಪ್ರಮುಖ
ನಿರ್ಧಾರಗಳನ್ನೂ ಮಾಡಬೇಡಿರಿ, ಎಂದು. ಕೇವಲ
ಗುರುವಿನ ಸಾನಿಧ್ಯದಲ್ಲಿರಿ. ಆ ಹಿತಕರವಾದ
ಅವಕಾಶವನ್ನೆಂದೂ ಕಳೆದುಕೊಳ್ಳಬೇಡಿರಿ. ನೀವು
ಸಂಪೂರ್ಣ ಗುಣಹೊಂದಿ ಅದರಿಂದ
ಹೊರಬರಲಾಗುತ್ತದೆ. ಸಂಸ್ಕಾರಗಳಲ್ಲಿ ಸಿಲುಕಿದಾಗ
ಗುರುವಿನಿಂದ ತಪ್ಪಿಸಿಕೊಳ್ಳಬೇಡಿರಿ.
ಯಾರಾದರೂ ಖಿನ್ನತೆಯಲ್ಲಿರುವಾಗ ನನ್ನನ್ನು ಬಿಟ್ಟು ಹೋದರೆ, ನನಗೆ ಬಹಳ ಕನಿಕರವಾಗುತ್ತದೆ. ನನ್ನ ಆಶ್ರಮದಲ್ಲಿ ಒಟ್ಟಾರೆ ಎಣಿಕೆ ಕಡಿಮೆಯಾಯಿತೆಂದಲ್ಲ. ಅಲ್ಲವೇ ಅಲ್ಲ! ಖಿನ್ನತೆಯ ಮನಃಸ್ಥಿತಿಯಲ್ಲಿ ಹೊರಟುಹೋದರಲ್ಲ, ಎಂದು. ಅದೇ ವ್ಯಕ್ತಿಯೇ ಸಂತೋಷದ ಸ್ಥಿತಿಯಲ್ಲಿ ಬಿಟ್ಟು ಹೋದರೆ ಏನೂ ತೊಂದರೆಯಿಲ್ಲ. ಅದು ಸಾಧಾರಣ ಸಂಬಂಧವೇ. ಅಂತಹ ವ್ಯಕ್ತಿಯು ಎಲ್ಲೇ ಹೋದರೂ ನನ್ನನ್ನು ತನ್ನೊಳಗೆ ತುಂಬಿಕೊಂಡಿರುತ್ತಾನೆ. ಅದೇ ವ್ಯಕ್ತಿಯು ನಿರುತ್ಸಾಹದ ಸ್ಥಿತಿಯಲ್ಲಿದ್ದರೆ, ಆತನು ಬೆಳೆಯುವುದಿರಲಿ, ಆ ಸಂಸ್ಕಾರದಿಂದ ಎಂದೂ ಹೊರಗೆ ಬರುವುದಿಲ್ಲ. ಅದು ತೀವ್ರ ಘಾಯವಾಗಿ ಉಳಿಯುತ್ತದೆ. ಬೆಕ್ಕು ಬಿಸಿ ಹಾಲಿನಿಂದ ಬಾಯಿ ಸುಟ್ಟುಕೊಂಡಂತೆ. ಅದು ಮುಂದেন্দೂ ಹಾಲಿನ ಬಳಿগে ಹೋಗುವುದಿಲ್ಲ.
ಗುರುಗಳಿಗೆ
ಎಚ್ಚೆತ್ತುಕೊಳ್ಳುವುದು
ಗಹನವಾದ
ಹಂಬಲಕ್ಕೂ,
ನಿಮ್ಮ
ಜೀವಿತೋದ್ದೇಶಕ್ಕೂ
ಎಚ್ಚೆತ್ತುಕೊಳ್ಳು-
ವುದಲ್ಲದೆ
ಬೇರೆಯಲ್ಲ.
ಬೇಸರವಾದ ಖಿನ್ನತೆಯ ಮನಃಸ್ಥಿತಿಯಲ್ಲಿ ಯಾವ ನಿರ್ಣಯವನ್ನೂ ತೆಗೆದುಕೊಳ್ಳಬೇಡಿರಿ. ಆ ಮನಃಸ್ಥಿತಿಯು ವಾಸ್ತವಾಂಶವನ್ನು ವಿಕೃತಗೊಳಿಸುತ್ತದೆ. ಯಾವುದೇ ದೊಡ್ಡ ನಿರ್ಣಯವನ್ನು ಕೈಗೊಳ್ಳಲು ಅದು ಸರಿಯಾದ ಪರಿಸ್ಥಿತಿಯಲ್ಲ. ನಿಮ್ಮ ಮನಸ್ಸು ಉತ್ತಮ ಸ್ಥಿತಿಗೆ ತೆರಳುವವರೆಗೂ ಕಾಯಬೇಕು. ಆಗ ಎಲ್ಲವೂ ಹೆಚ್ಚು ಸ್ಪಷ್ಟವಾಗಿರುತ್ತದೆ. ಸಕಾರಾತ್ಮಕ ಮನೋಭಾವದಲ್ಲಿ, ಉಲ್ಲಾಸದ ಮನಃಸ್ಥಿತಿಯಲ್ಲಿ ಇದ್ದಾಗ ದೊಡ್ಡ ನಿರ್ಣಯಗಳನ್ನು ತೆಗೆದುಕೊಳ್ಳಿರಿ. ಹೇಗೆ ರಾತ್ರಿಯಲ್ಲಿ ನಿದ್ರಿಸುವಾಗಲ್ಲದೆ ಹಗಲಿನಲ್ಲಿ ಎಚ್ಚರವಾಗಿದ್ದಾಗ ನಿರ್ಧಾರಗಳನ್ನು ತೆಗೆದುಕೊಳ್ಳುವಿರೋ, ಹಾಗೆಯೇ ಇದನ್ನೂ ತುಮುಲದಲ್ಲಿರುವಾಗಲ್ಲದೆ, ಅರಿವಿನಿಂದಿರುವಾಗ ನಿರ್ಧರಿಸಿರಿ.
ತಪ್ಪಿತಸ್ಥ ಮನೋ-
ಭಾವವು ಅಡ್ಡಬಂದು,
ಹಿಂದಿರುಗಲು
ಯೋಗ್ಯತೆಯಿಲ್ಲವೇನೋ
ಎನಿಸುತ್ತದೆ.
ನಿರುತ್ಸಾಹದಿಂದ
ಹೋಗಬೇಡಿರಿ ಎಂದು
ನಾನು ಯಾವಾಗಲೂ
ಹೇಳುತ್ತೇನೆ.
ನಿರುತ್ಸಾಹದಿಂದಿರುವಾಗಲೇ ನನ್ನ ಬಳಿಯಿರಲು
ಸರಿಯಾದ ಸಮಯ. ಸಂಸ್ಕಾರಗಳಲ್ಲಿ ಸಿಲುಕಿದಾಗ
ನನ್ನನ್ನು ಬಿಟ್ಟು ಹೋಗುವುದು, ರೋಗಿಯು
ವೈದ್ಯನಿಂದ ತಪ್ಪಿಸಿಕೊಂಡಂತೆ! ವೈದ್ಯನ ಬಳಿ
ಬರಬೇಕಾದ ಸಮಯವೇ ಅದು!
ಸ್ಪಷ್ಟವಾಗಿ ತಿಳಿಯಿರಿ. ಕುಗ್ಗಿದ ಮನಃಸ್ಥಿತಿಯೂ ಉತ್ಸಾಹದ ಮನಃಸ್ಥಿತಿಯಂತೆಯೇ ಕಳೆದುಹೋಗುತ್ತದೆ. ಅದೇ ಮನಸ್ಸಿನ ಸಹಜ ಸ್ವಭಾವ. ಚಕ್ರದಂತೆ-ಕೆಳಗಿದ್ದುದು ಮೇಲೆ ಬರಲೇ ಬೇಕು. 'ಮೇಲೆ' ಇರುವುದೇ ಆಗಲಿ, 'ಕೆಳಗೆ' ಇರುವುದೇ ಆಗಲಿ ಒಂದಕ್ಕಿಂತಲೂ ಮತ್ತೊಂದು ವಾಸ್ತವವಲ್ಲ. ಎರಡೂ ಇರುತ್ತವೆ, ಅಷ್ಟೇ. ಸಕಾರಾತ್ಮಕತೆಯನ್ನು ಹೆಚ್ಚಾಗಿ ನಂಬುವುದು ನಿಮಗಿರುವ ಆಯ್ಕೆಯಷ್ಟೆ.
ನಿಮ್ಮ ಜೀವನದ ಉದ್ದೇಶಕ್ಕೂ,
ಮತ್ತು ಗುರುವಿಗೂ ಎಚ್ಚೆತ್ತುಕೊಳ್ಳುವುದು
ಶಿಷ್ಯನಾದವನಿಗೆ ತಾನೇ
ಅಂಧಕಾರದಲ್ಲಿರುವುದರಿಂದ, ತನ್ನ ಅಜ್ಞಾನದ
ಅರಿವಿರುವುದಿಲ್ಲ. ಜಾಗೃತಗೊಳಿಸುವ ಜವಾಬ್ದಾರಿ,
ಯಾರು ಬೆಳಕಿನಲ್ಲಿರುವರೋ ಅವರದ್ದು.
ಅಂಧಕಾರದಲ್ಲಿರುವವರದ್ದಲ್ಲ.
ಖಿನ್ನತೆಯಲ್ಲಿದ್ದಾಗ ಯಾರಾದರೂ ನನ್ನಿಂದ
ಹೊರಟು ಹೋಗಲು ನಿರ್ಧರಿಸಿದರೆ, ಮನಸ್ಸು
ಸರಿಯಾದಾಗ ಆತನು ತನ್ನ ನಿರ್ಣಯಕ್ಕಾಗಿ
ಪಶ್ಚಾತ್ತಾಪ ಪಡುತ್ತಾನೆ. ಆಗ ಹಿಂದಿರುಗಲು
ಒಂದು ಚಿಕ್ಕ ಕಥೆ:
ಹಿಮಾಲಯದಲ್ಲಿ ಒಬ್ಬ ಕುರುಡನು ಅಲೆದಾಡುತ್ತಿದ್ದನು. ಆತನು ತನಗೆ ಆಸರೆಗೆಂದು
ಒಂದು ಊರುಗೋಲನ್ನು ಹುಡುಕುತ್ತಿದ್ದನು.
ಹಾಗೆಯೇ ಒಂದು ಮಂಜಿನ ಚಳಿಯಿಂದ
ಮರಗಟ್ಟಿಹೋದ ಹಾವನ್ನು ಎಡವಿದನು. ಅದನ್ನು
ಕೋಲೆಂದುಕೊಂಡು ಉಪಯೋಗಿಸ-
ಲಾರಂಭಿಸಿದನು.
ಒಬ್ಬ ಜ್ಞಾನಿಗಳು ಇದನ್ನು ಕಂಡು, 'ಮೂರ್ಖ! ಅದೊಂದು ಹಾವು, ಅದನ್ನು ಬಿಸಾಡು' ಎಂದು ಕೂಗಿಕೊಂಡರು. ಕುರುಡನು, 'ಇಲ್ಲ! ಬಹುಶಃ ನಿನ್ನ ಬಳಿ ಕೋಲಿಲ್ಲವೇನೋ, ಅದಕ್ಕಾಗಿ ಇದನ್ನು ನೀನು ತೆಗೆದುಕೊಳ್ಳೋಣವೆಂದು ನನ್ನನ್ನು ಬಿಸಾಡೆಂದು ಹೇಳುತ್ತಿರುವೆ!' ಎಂದು ರೇಗಿದನು. ಗುರುಗಳು, 'ಮೂರ್ಖ, ನನಗ his ಅವಶ್ಯಕತೆ ಇಲ್ಲ. ನೀನು ಹಿಡಿದುಕೊಂಡಿರುವುದು ಕೋಲಲ್ಲ, ಅದೊಂದು ಹಾವು. ಇನ್ನೇನು ಸೂರ್ಯೋದಯವಾಗುತ್ತದೆ. ಹಾವಿಗೆ ಜೀವ ಬಂದುಬಿಡುತ್ತದೆ. ನಿನ್ನನ್ನು ಕೊಂದುಬಿಡುತ್ತದೆ' ಎಂದರು. ಏನೇ ಆದರೂ ಕುರುಡನು ಅದನ್ನು ಕೈಬಿಡಲು ತಯಾರಾಗಿರಲಿಲ್ಲ. ಆಗ ಗುರುಗಳು, 'ನೀನು ನನ್ನನ್ನು ನಂಬದಿದ್ದರೂ ಪರವಾಗಿಲ್ಲ. ನಿನ್ನನ್ನು ಕಾಪಾಡುವುದು ನನ್ನ ಜವಾಬ್ದಾರಿ' ಎನ್ನುತ್ತಲೇ ಆ ಹಾವನ್ನು ಅವನಿಂದ ಕಿತ್ತುಕೊಂಡು, ಬಿಸಾಡುವುದರಲ್ಲಿದ್ದರು. ಕುರುಡನು ಅದೇ ಕೋಲಿನಿಂದ ಗುರುಗಳನ್ನು ಹೊಡೆಯಲು ಹೋದನು. ಆದರೂ ಗುರುಗಳು, 'ನೀನು ನನ್ನನ್ನು ಹೊಡೆದರೂ ಚಿಂತೆಯಿಲ್ಲ. ನಿನಗೆ ಅರಿವಿಲ್ಲದಿದ್ದರೂ ಅದು ನನ್ನ ಜವಾಬ್ದಾರಿಯೇ' ಎನ್ನುತ್ತಾ ಆ ಹಾವನ್ನೆತ್ತಿ ಬಿಸಾಡಿಯೇ ಬಿಟ್ಟರು.
ಒಬ್ಬ ಸದ್ಗುರುಗಳು ದೊರಕಬೇಕಾದರೆ ಎಷ್ಟು ಜನ್ಮಗಳು ಹಾತೊರೆದು ಬೇಡಿಕೊಂಡಿರುವಿರೋ ಏನೋ ನಿಮಗೇ ತಿಳಿಯದು. ನಿಮ್ಮ ಹಂಬಲವೇನೆಂಬುದೇ ನಿಮಗೆ ಗೊತ್ತಿಲ್ಲ. ನಿಮ್ಮ ಜೀವನದಲ್ಲಿ ಒಬ್ಬ ಗುರುಗಳನ್ನು ಪಡೆಯುವುದೆಂದರೆ ತಮಾಷೆಯಲ್ಲ. ಒಬ್ಬ ಜೀವಂತ ಗುರುಗಳ ಒಂದು ಕ್ಷಣಿಕ ದರ್ಶನಕ್ಕಾಗಿ ನೀವು ಅದೆಷ್ಟು ಜನ್ಮಗಳಲ್ಲಿ ಕಾದಾಡಿ, ಕೋರಿಕೊಂಡಿದ್ದೀರೆಂಬುದು ನಿಮಗೇ ತಿಳಿಯದು. ನಿಮ್ಮ ಜೀವನದಲ್ಲಿ ಗುರುಗಳಿಗೆ ಎಚ್ಚೆತ್ತುಕೊಳ್ಳುವುದು ಎಂದರೆ ಈ ಗಹನವಾದ ಹಂಬಲಕ್ಕೂ, ನಿಮ್ಮ ಜೀವಿತೋದ್ದೇಶಕ್ಕೂ ಎಚ್ಚೆತ್ತುಕೊಳ್ಳುವುದಲ್ಲದೆ ಬೇರೆಯಲ್ಲ.