KAILASA Library/ಜೀವನ್ಮುಕ್ತಿ/ಗುರು - ಜೀವನ್ಮುಕ್ತಿSign in
ಜೀವನ್ಮುಕ್ತಿ

ಗುರು - ಜೀವನ್ಮುಕ್ತಿ

This text was machine-transcribed from the printed book and may contain errors. Select the words and choose “Report a mistake”.

ಚಿತ್ರಂ ವಟತರೋರ್ ಮೂಲೇ ವೃದ್ಧಾಃ ಶಿಷ್ಯಾಃ
ಗುರುರ್ ಯುವಃ

ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು
ಛಿನ್ನಃ ಸಂಶಯಾಃ

ವಟವೃಕ್ಷದಡಿಯಲ್ಲಿ ಕುಳಿತಿರುವ ವೃದ್ಧ ಶಿಷ್ಯರಿಗೆ ಗುರುವು ಒಬ್ಬ ಯುವಕನು! ಆ ಗುರುವು ಮೌನವಾಗಿಯೇ ಇದ್ದರೂ ಶಿಷ್ಯರ ಸಂಶಯಗಳು ತಾವಾಗಿಯೇ ಬಗೆ ಹರಿಯುತ್ತಿವೆ!

ಗುರುಸಾನ್ನಿಧ್ಯವೆಂಬ ಕ್ರಿಯಾ ವರ್ಧಕಶಕ್ತಿಯು
ಇಲ್ಲದಿದ್ದರೆ, ವಿಷಯಗಳು ಕೇವಲ
ಪಾಂಡಿತ್ಯವಾಗಿಯೂ, ತಂತ್ರಗಳು ಶಕ್ತಿರಹಿತ
ಪರಿವರ್ತನಾ ಯಂತ್ರಗಳಾಗಿಯೂ ಉಳಿಯುತ್ತವೆ.
ದೈವಸಾಕ್ಷಾತ್ಕಾರಕ್ಕೆ ಗುರುವು ಅತ್ಯಾವಶ್ಯಕ.

ವೈದಿಕ ಸಂಪ್ರದಾಯದಲ್ಲಿ ಗುರುವು
ದೇವರಿಗಿಂತಲೂ ಶ್ರೇಷ್ಠನಾದವನು.
ಶಾಸ್ತ್ರಗಳಲ್ಲಿ ಗುರುವು ಮಾತಾ, ಪಿತ, ದೈವವೆಂದು
ಮಾತ್ರವಲ್ಲದೆ, ಅವೆಲ್ಲಕ್ಕೂ ಮಿಗಿಲಾದವನೆಂದು
ಹೇಳಲಾಗಿದೆ.

ನಮ್ಮಲ್ಲಿ ಅನೇಕರಿಗೆ ದೇವರೆಂಬುದು ಕೇವಲ
ಒಂದು ಕಲ್ಪನೆ. ಸ್ವಂತ ಅನುಭವದ ಆಧಾರದ ಮೇಲೆ
ದೈವತ್ವದ ಬಗ್ಗೆ ಹೇಳಬಲ್ಲವರು ಅತಿ ವಿರಳ.
ಅನುಭವವಾದವರು ಹೇಳಿಕೊಳ್ಳುವುದಿಲ್ಲ ಹಾಗೂ
ಹೇಳಿಕೊಳ್ಳುವವರಿಗೆ ಅನುಭವವಾಗಿಲ್ಲವೆಂದು
ಹೇಳಬಹುದು. ಗುರುವಾದವನು ಇಂತಹ
ಅನುಭವವನ್ನು ಹೊಂದಿದ್ದು, ಅದನ್ನು ತನ್ನ
ಭಾವಭಾವ ಹಾಗೂ ಜೀವನಶೈಲಿಯ ಮೂಲಕವೇ
ಇತರರಿಗೂ ಹಂಚಬಲ್ಲನು.

ಒಬ್ಬರ ದೈವತ್ವದ ಸ್ವಂತ ಅನುಭವಕ್ಕೆ ಗುರುವು ಹೆಬ್ಬಾಗಿಲಿನಂತೆ. ಅದರ ಮೂಲಕ ಗುರುವು ಶಿಷ್ಯನ ಕೈ ಹಿಡಿದು ಮೂಲಭೂತ ಆಂತರಿಕ ಸತ್ಯಾನುಭವಕ್ಕೆ ಒಯ್ಯುವನು. ಈ ಪ್ರಕ್ರಿಯೆಯಲ್ಲಿ ಶಿಷ್ಯನೇ ಗುರುವಾಗಿ, ಧರ್ಮಚಕ್ರವು ಮುಂದುವರೆಯುತ್ತದೆ.

ಸತ್ಯಾನುಭವವಾಗಿ ಪರಿಣಮಿಸುವ
ಜೀವನ್ಮುಕ್ತಿಯ ಈ ಧರ್ಮಚಕ್ರವು ನಾವೆಲ್ಲರು
ಸಿಲುಕಿರುವ ಆಸೆ ಹಾಗೂ ವೇದನೆಗಳ ವಿಷಚಕ್ರವನ್ನು
ಮುರಿಯುತ್ತದೆ. ಬುದ್ಧನು ಆಳವಾದ
ಚಿಂತನೆಯಿಂದಲೇ, ಆಸೆಗಳೆಲ್ಲವೂ ವೇದನೆಯಲ್ಲದೆ
ಬೇರಲ್ಲವೆಂದನು. ಹೀಗೆ ಹೇಳುವಾಗ ಬುದ್ಧನು

ಬಾಹ್ಯವಸ್ತುಗಳಿಂದ ತೃಪ್ತಿಯನ್ನು ಹೊಂದಲು
ತವಕಿಸುವ ಮಾನವ ಸ್ವಭಾವವನ್ನು ಕುರಿತು
ಪ್ರಸ್ತಾಪಿಸುತ್ತಿದ್ದನು. ಅದು ಎಂದಿಗೂ ಅಸಾಧ್ಯ.
ಆಸೆಗಳು ಮತ್ತೆ ಮತ್ತೆ ತಲೆದೋರುತ್ತವೆ. ಮಾನವರ
ಸಹಜವಾದ ಈ ವೇದನೆಯನ್ನು ಅಳಿಸುವ
ಮಾರ್ಗವೆಂದರೆ ತಮ್ಮೊಳಗಿರುವ ಅಗಾಧ
ಸಾಮರ್ಥ್ಯದ ಅರಿವಿನಿಂದ ಹೊರಹೊಮ್ಮುವ
ಆನಂದಾನುಭವವೊಂದೇ.

ಗುರುವು ಕನ್ನಡಿಯಂತೆ. ನಾವು ಯಾರೆಂದು
ಕಂಡುಕೊಳ್ಳಲು ಬಳಸಬಹುದಾದ ವಿವೇಕಯುತ
ಚೈತನ್ಯದ ಕನ್ನಡಿ. ಈ ಪ್ರಯಾಣವನ್ನೀಗ
ಕೈಗೊಳ್ಳೋಣ.

ಸಿಂಹ ಮತ್ತು ಮರಿಯ ಕಥೆ

ಒಂದು ಸಣ್ಣ ಕಥೆ.

ಒಂದಾನೊಂದು ಕಾಲದಲ್ಲಿ ಗರ್ಭಿಣಿ
ಸಿಂಹಿಣಿಯೊಂದು ಆಹಾರಕ್ಕಾಗಿ ಅಲೆಯುತ್ತಿದ್ದಾಗ
ಕುರಿಗಳ ಮಂದೆಯೊಂದನ್ನು ಆಕ್ರಮಣಮಾಡಿತು.
ಅದು ಕುರಿಯ ಮೇಲೆಗರಲು ಹೋದಾಗ, ಆಯಾಸ
ಹೆಚ್ಚಾಗಿ ಅದಕ್ಕೆ ಪ್ರಸವವಾಗಿ ಒಂದು ಮರಿಗೆ
ಜನ್ಮಕೊಟ್ಟು ಸಾವನ್ನಪ್ಪಿತು.

ಆಗ ತಾನೇ ಹುಟ್ಟಿದ ಸಿಂಹದ ಮರಿಯು ಇನ್ನೂ ಕಣ್ಣು ತೆರೆದಿರಲಿಲ್ಲ. ಅದು ಕುಂಯ್ಗುಡುತ್ತಾ ನೆಲದ ಮೇಲೆ ಒದ್ದಾಡುತ್ತಿತ್ತು. ಅಲ್ಲಿದ್ದ ಕುರಿಗಳು ಈ ಮರಿಯ ಮೇಲೆ ಅನುಕಂಪ ತಾಳಿದವು.

ಕುರಿಗಳಿಗೆ ಸಿಂಹದ ಮರಿಯ ಮೇಲೆ ಹೇಗೆ ಅನುಕಂಪವುಂಟಾಯಿತೆಂದು ನೀವು ಆಶ್ಚರ್ಯಪಡಬಹುದು. ಯೋಚಿಸಿ ನೋಡಿ, ಒಬ್ಬ ಶತ್ರುವು ನಿಮ್ಮನ್ನು ಬಾಧಿಸದೆ, ಹಿಂಸಿಸದಿದ್ದರೆ, ನಿಮಗೆ ಅದರಿಂದ ಯಾವ ಭಯವೂ ಇಲ್ಲವೆಂಬ ಭರವಸೆಯಿದ್ದರೆ, ಸಹಜವಾಗಿ ಅದು ನಿಮ್ಮ ಶತ್ರುವೇ ಆದರೂ ಅದರ ಬಗ್ಗೆ ಅನುಕಂಪ ಮೂಡುತ್ತದೆ. ಇದೇ ರೀತಿ, ಸಿಂಹದ ಮರಿಯಿಂದ ಕುರಿಗಳಿಗೆ ಯಾವ ಭಯವೂ ಇಲ್ಲದುದರಿಂದ ಅವು ಅದಕ್ಕೆ ಪ್ರೀತಿ ತುಂಬಿದವು.

ಸಿಂಹದ ಮರಿಯು ತಮಗೇನೂ
ಮಾಡುವುದಿಲ್ಲವೆಂದು ಅರಿತ ಕುರಿಗಳು ಅದಕ್ಕೆ
ಅನುಕಂಪ ತೋರಿದವು. ತಮಗೆ ತಿಳಿದ ರೀತಿಯಲ್ಲಿ
ಅದನ್ನು ಕಾಪಾಡಿ ಬೆಳೆಸಿದವು. ತಮ್ಮಂತೆಯೇ
ಹುಲ್ಲು ತಿಂದು, ಹಾಲು ಕುಡಿದು, ಕುರಿಗಳಂತೆಯೇ
ಕೂಗುವುದನ್ನು ಸಹ ಕಲಿಸಿದವು!

ಸಿಂಹದ ಮರಿಯೂ ಸಹ ಕುರಿಗಳ ಹಾವ-
ಭಾವಗಳನ್ನೇ ತನ್ನದಾಗಿಸಿ ಕೊಂಡಿತು.
ಹುಟ್ಟಿದಾಗಿನಿಂದಲೂ ತಾನು ಸಿಂಹದ ಮರಿಯೆಂದು
ಅದಕ್ಕೆ ಯಾರೂ ಹೇಳಿರಲಿಲ್ಲ. ಹಾಗಾಗಿ,
ಸಿಂಹವೆಂದರೆ ಹೇಗಿರಬೇಕೆಂಬುದು ಅದಕ್ಕೆ ತಿಳಿದೇ
ಇರಲಿಲ್ಲ. ಹೀಗೆ ಸಿಂಹದ ಮರಿಯು
ಕುರಿಗಳೊಂದಿಗೆ ಬೆಳೆಯಿತು. ತಮ್ಮ ಮಂದೆಯಲ್ಲಿ
ಈ ಸಿಂಹದ ಮರಿಯೂ ಒಂದೆಂದು ಕುರಿಗಳೂ
ಆರಾಮವಾಗಿದ್ದವು.

ಸಿಂಹದ ಮರಿಯು ಬೆಳೆದಂತೆ ಅದಕ್ಕೆ ಸಹಜವಾದ
ದೇಹಶಕ್ತಿಯು ತೋರ ತೊಡಗಿತು. ಕುರಿಮರಿಗಳು
ಅದರೊಂದಿಗೆ ಹೋರಾಡಿದಾಗ ಅದು ಜೋರಾಗಿ
ಹೊಡೆಯುತ್ತಿತ್ತು. ಕುರಿಮರಿಗಳು ತಾಯಿ ಕುರಿಗೆ

ಅವನು ನಮ್ಮನ್ನು ಹೊಡೆಯುತ್ತಿದ್ದಾನೆ! ಎಂದು
ಚಾಡಿ ಹೇಳುತ್ತಿದ್ದವು. ತಾಯಿ ಕುರಿಯು ಸಿಂಹ
ಹಾಗೂ ಕುರಿಗಳನ್ನು ಸಮಾಜಾಯಿಸುವ ಪ್ರಯತ್ನದಿಂದ
ಕುರಿಮರಿಗಳಿಗೆ ಜಗಳವನ್ನು ಮರೆಯುವಂತೆ
ಮಾಡುತ್ತಿತ್ತು.

ಒಂದು ದಿನ ಒಂದು ಸಿಂಹವು ಕುರಿಮಂದೆಯನ್ನು
ದಾಳಿಮಾಡಿತು. ಬೆದರಿದ ಕುರಿಗಳು ದಿಕ್ಕುಪಾಲಾಗಿ
ಓಡಿದವು. ಸಿಂಹವು ಆ ಮಂದೆಯಲ್ಲಿ
ಕುರಿಯಂತೆಯೇ ಕಿರಿಚಿ ಓಡುತ್ತಿರುವ ಸಿಂಹದ
ಮರಿಯನ್ನು ಕಂಡಿತು. ಅದು ತನ್ನ ಕಣ್ಣನ್ನು ತಾನೇ
ನಂಬಲಾರದಾಯಿತು! ಅದಕ್ಕೆ ತನ್ನನ್ನು ಕಂಡು
ಸಿಂಹದ ಮರಿಯೇಕೆ ಭಯದಿಂದ ಓಡಿತು, ಅದು
ಕುರಿಗಳಂತೆ ಏಕೆ ಕಿರಿಚುತ್ತಿತ್ತು ಎಂದು
ಅರ್ಥವಾಗಲಿಲ್ಲ.

ಮಾರನೇ ದಿನ ಸಿಂಹವು ಬೇಟೆಗಾಗಿಯಲ್ಲದೆ ಈ ಮರಿಯನ್ನು ಹುಡುಕಿಕೊಂಡೇ ಬಂದಿತು. ಅದು ಸಿಂಹದ ಮರಿಯನ್ನು ಕಂಡಾಗ, ಮೆಲ್ಲಗೆ ಹೋಗಿ ಹಿಂದಿನಿಂದ ಅದನ್ನು ಹಿಡಿಯಿತು. ಸಿಂಹವು ಹಿಡಿದ ಕೂಡಲೇ ಮರಿಯು, ‘ನನ್ನನ್ನು ಬಿಡು! ನನ್ನನ್ನು ಬಿಡು! ಬ್ಯಾ..ಬ್ಯಾ..’ ಎಂದು ಕಿರಿಚಿತು.

ಸಿಂಹವು, ‘ಮೂರ್ಖ! ಹೆದರಬೇಡ ನಾನು ನಿನ್ನನ್ನು ಕೊಲ್ಲುವುದಿಲ್ಲ. ನೀನಾರೆಂದು ನಿನಗೆ ತಿಳಿದಿಲ್ಲವೆ?’ ಎಂದಿತು. ಮರಿಯು, ‘ನಾನು ಕುರಿ, ನನ್ನನ್ನು ಬಿಡು, ನನ್ನನ್ನು ಬಿಡು’ ಎಂದಿತು.

ಸಿಂಹವು, ‘ಮೂರ್ಖ! ನೀನು ಕುರಿಯಲ್ಲ ನನ್ನನ್ನು
ಕಂಡು ಹೆದರಬೇಡ’ ಎಂದಿತು. ಆದರೆ ಆ ಮರಿಯು
ತುಂಬಾ ಬೆದರಿ ಏನೂ ಕೇಳಿಸಿಕೊಳ್ಳದಾಯಿತು.
ಹೇಗೋ ಸಿಂಹದಿಂದ ಬಿಡಿಸಿಕೊಂಡು ಓಡಿ
ಹೋಯಿತು.

ಮಾರನೆಯ ದಿನ ಸಿಂಹವು ಮತ್ತೆ ಕುರಿಗಳಿದ್ದೆಡೆಗೆ
ಬಂದಿತು. ಮತ್ತೆ ಸಿಂಹದ ಮರಿಯನ್ನು ಹಿಡಿಯಲು
ಈ ಬಾರಿ ಗಟ್ಟಿಯಾಗಿಯೇ ಹಿಡಿಯಿತು.

ಮರಿಯು ಸಿಂಹದ ಹಿಡಿತದಲ್ಲಿ ಒದ್ದಾಡಿತು. ಒಂದೆಡೆ ತಪ್ಪಿಸಿಕೊಂಡು ಓಡಬೇಕೆಂಬ ಮನಸ್ಸಾದರೆ, ಮತ್ತೊಂದೆಡೆ ಸಿಂಹದ ಸ್ಪರ್ಶವು ಹಿತವೆನಿಸಿತು. ಸಿಂಹದ ಹಾಯಾದ ಸುರಕ್ಷಿತವಾದ ಸ್ಪರ್ಶದಿಂದ ಮರಿಗೆ ಏನೋ ಗಾಢವಾದ ಅನುಭವವಾಯಿತು. ಮರಿಯ ಒದ್ದಾಟವನ್ನು ನೋಡಿ ಸಿಂಹವು, ‘ನಾಳೆ ಮತ್ತೆ ಬರುತ್ತೇನೆ. ಆದರೆ ಆಗ ನಿನ್ನನ್ನು ಅಟ್ಟಿಸಿಕೊಂಡು ಬರುವುದಿಲ್ಲ’ ಎಂದು ಹೇಳಿ ಬಿಟ್ಟುಬಿಟ್ಟಿತು. ಸಿಂಹವು ಕಾಡಿಗೆ ಹಿಂದಿರುಗಿತು.

ಸಿಂಹದ ಮರಿಯು ರಾತ್ರಿಯೆಲ್ಲ ನಿದ್ರಿಸಲಾಗದೆ ಎಚ್ಚರವಾಗಿಯೇ ಇತ್ತು. ಅದರ ಮನಸ್ಸಿನಲ್ಲಿ ಅನೇಕ ಯೋಚನೆಗಳು, ‘ಸಿಂಹವು ಹೇಳಿದ್ದನ್ನು ನಾನು ನಂಬಲಾರೆ, ಆದರೆ ಅದು ಹೇಳಿದುದರಲ್ಲಿ ಒಂದಂಶ ನಿಜವಿರಲೂಬಹುದು. ಇಲ್ಲ! ಇಲ್ಲ! ಇಲ್ಲ! ಅದು ಹೇಳಿದುದಾವುದೂ ಸರಿಯಲ್ಲ. ನಾನು ಕುರಿಯೆಂದು ನನಗೆ ತಿಳಿದಿದೆ. ಹುಟ್ಟಿದಾಗಿನಿಂದಲೂ ನನಗದು ತಿಳಿದಿದೆ. ಅದು ಹೇಳಿದ್ದು ನನಗೇನೂ ಅರ್ಥವಾಗುತ್ತಿಲ್ಲ. ನನ್ನಿಂದೇನೋ ಪಡೆದುಕೊಳ್ಳಲು ಅದು ಸುಳ್ಳು ಹೇಳುತ್ತದೆ’.

ಅರ್ಥಮಾಡಿಕೊಳ್ಳಿರಿ, ಮರಿಯ ತರ್ಕಕ್ಕೆ ಮೀರಿದ ರೀತಿಯಲ್ಲಿ ಸಿಂಹವು ಅದನ್ನು ಆವರಿಸಿದೆ. ನಾನು ಸ್ಪಷ್ಟವಾಗಿ ಹೇಳಬೇಕೆಂದರೆ ಗುರುವಿನ ಸಾನ್ನಿಧ್ಯವು ನಿಮ್ಮ ತರ್ಕಕ್ಕೆ ಮೀರಿದ ಪ್ರಭಾವ ಬೀರಿದೆಯೆಂದರೆ, ನಿಮ್ಮೊಳಗಿನ ಗುರುವು ಆಗಲೇ ಎಚ್ಚೆತ್ತುಕೊಂಡಿದೆ! ನಿಮ್ಮೊಳಗಿನ ಸಿಂಹವು ಜಾಗೃತವಾಗದಿದ್ದರೆ ನೀವು ಸಿಂಹದೊಂದಿಗೆ ಸಂಬಂಧ ಕಂಡುಕೊಳ್ಳಲಾರಿರಿ. ಗುರುವಿನ ಸಿಂಹಸ್ಪರ್ಶದಿಂದ ಏನೋ ಒಂದು ರೀತಿಯ ಹರ್ಷೋನ್ಮಾದ ಹಾಗೂ ಹಿತಕರ ಅನುಭವವಾಗಿ, ಸಿಂಹದೊಂದಿಗೆ ನೀವಿದ್ದಾಗ ನಿಮ್ಮಲ್ಲುಂಟಾದ ಅದೇ ಭಾವನೆಯನ್ನು ಮತ್ತೆ ಮತ್ತೆ ನೆನಪಿಗೆ ತಂದುಕೊಳ್ಳುವಂತೆ ಮನಸ್ಸಾಗುತ್ತಿದ್ದರೆ, ಸ್ಪಷ್ಟವಾಗಿ ತಿಳಿಯಿರಿ, ಸಿಂಹವು ನಿಮ್ಮ ಮನದಾಳವನ್ನು ಮುಟ್ಟಿದೆ! ನಿಮ್ಮ ಒಂದು ಭಾಗವು, ಆಗಲೇ ಸಾಂತ್ವನಗೊಂಡಿದೆ. ಒಂದು ಭಾಗವು ಆಗಲೇ ಗುರುವು ಹೇಳುವುದರಲ್ಲಿ ಏನೋ ಇದೆಯೆಂದು ತಿಳಿಯಲಾರಂಭಿಸಿದೆ.

ಮಾರನೆಯ ದಿನ ಸಿಂಹವು ಬಂದಾಗ, ಮರಿಯು
ಕಾಯುತ್ತಾ ಎದುರಿಗೆ ನಿಂತಿತ್ತು. ಮರಿಯು
ಕಾಡಿನಂಚಿನಲ್ಲಿ ನಿಂತು, ಸಿಂಹಕ್ಕಾಗಿ ಎದುರು
ನೋಡುತ್ತಿತ್ತು. ಆದರೆ ಸಿಂಹವು ಬಂದಾಗ ಮಾತ್ರ
ಹಿಂದೆ ಸರಿದು ಕುರಿಗಳತ್ತ ಹೋಗಲಾರಂಭಿಸಿತು.
ಆದರೆ ಮರಿಯು ತನ್ನ ದೃಷ್ಟಿಯನ್ನು ಸಿಂಹದ
ಮೇಲಿಂದ ತೆಗೆಯದೇ ಸಿಂಹವನ್ನು ನೋಡುತ್ತಲೇ
ಹಿಂದಕ್ಕೆ ಸರಿಯಿತು!

ಕೆಲವು ಹೆಜ್ಜೆ ಹಿಂದಕ್ಕೆ ಜಾಗರೂಕತೆಯಿಂದ ಸರಿದು, 'ನೀನು ಅಲ್ಲೇ ಇರು, ನಾನಿಲ್ಲೇ ದೂರದಲ್ಲೇ ಇರುತ್ತೇನೆ. ಆದರೂ ಮಾತನಾಡಬಹುದು. ನನಗೆ ನಿನ್ನನ್ನು ಮರೆಯಲಾಗುತ್ತಿಲ್ಲವೆಂಬುದೇನೋ ನಿಜವೇ ಆದರೂ ಈ ದೂರವನ್ನು ಉಳಿಸಿಕೊಳ್ಳೋಣ' ಎಂದು ಸಿಂಹಕ್ಕೆ ಕೂಗಿ ಹೇಳಿತು. ಸಿಂಹವು, 'ಹಾಗೆಯೇ ಆಗಲಿ, ನೀನಿರುವಲ್ಲಿಯೇ ಇರು. ಈಗ ಮಾತನಾಡೋಣ' ಎಂದಿತು.

ಸಿಂಹವು ಮುಂದುವರೆಸಿ, 'ತಿಳಿದುಕೋ, ನೀನೊಂದು ಸಿಂಹ! ಬೇರೇನೋ ಆಗಲು ಹೋಗಿ ನಿನ್ನ ನಿಜ ಸ್ವಭಾವವನ್ನು ಅಲಕ್ಷಿಸುತ್ತಿದ್ದೀಯೆ! ಗಮನವಿಟ್ಟು ನೋಡು, ನಿನಗೂ ಆ ಕುರಿಗಳಿಗೂ ಇರುವ ವ್ಯತ್ಯಾಸವು ಕಂಡುಬರುತ್ತದೆ' ಎಂದಿತು. ಮರಿಯು 'ಇಲ್ಲ! ಇಲ್ಲ! ಇದು ಹೇಗೆ ಸಾಧ್ಯ? ನಾನು ಅದೇ ಹುಲ್ಲನ್ನು ತಿನ್ನುತ್ತೇನೆ. ಆ ಕುರಿಗಳಂತೆಯೇ ಬದುಕಿದ್ದೇನೆ' ಎಂದಿತು.

ಸಿಂಹವು, 'ಮೂರ್ಖ! ಈ ಮುಖ್ಯವಾದ ವಿಷಯವನ್ನು ತಿಳಿ. ನೀನಾಗಿಯೇ ನೋಡು, ಬೇರಾವ ಕುರಿಗೂ ನನ್ನಲ್ಲಿ ಒಲವಿಲ್ಲ. ಬೇರಾವ ಕುರಿಯೂ ನನಗಾಗಿ ನಿರೀಕ್ಷಿಸುತ್ತಿಲ್ಲ. ಅವೆಲ್ಲಕ್ಕೂ ನನ್ನನ್ನು ಕಂಡರೆ ಭಯ. ನೀನು ಮಾತ್ರ ನನಗಾಗಿ ಕಾದಿದ್ದೀಯೆ. ಕೇವಲ ಇಷ್ಟರಿಂದಲೇ ನಿನ್ನೊಳಗೇನೋ ನಡೆಯುತ್ತಿದೆಯೆಂದು ಅರಿತುಕೊಳ್ಳಬಹುದು. ನೀನು ನನಗಾಗಿ ಇಲ್ಲಿ ಕಾಯುವ ಅವಶ್ಯಕತೆಯೇನಿದೆ? ನನ್ನೊಡನೆ ಹತ್ತಿರದ ನದಿಗೆ ಬಂದು ನಿನ್ನ ಪ್ರತಿಬಿಂಬವನ್ನು ನೋಡು. ಅಲ್ಲಿ ನಿನ್ನ ಹಾಗೂ ನನ್ನ ಮುಖವನ್ನು ನೋಡಬಹುದು' ಎಂದು ಹೇಳಿತು.

ಮರಿಗೆ ಸಿಂಹದೊಡನೆ ಹೋಗಲು ಭಯವಾಗಿ, 'ಇಲ್ಲ, ಇಲ್ಲೇ ನಿಂತು ಮಾತನಾಡೋಣ, ನೀನಿರುವಲ್ಲೇ ನಿಲ್ಲು, ನಾನಿಲ್ಲೇ ನಿಲ್ಲುತ್ತೇನೆ. ನಿನಗೇನು ಹೇಳಬೇಕೆಂದಿದೆಯೋ ಅಲ್ಲಿಂದಲೇ ಹೇಳು, ನಾನಿಲ್ಲಿಂದಲೇ ಕೇಳುತ್ತೇನೆ' ಎಂದು ಹೇಳಿತು.

ಸಿಂಹವು, 'ಸರಿ, ಇಷ್ಟು ಮಾತ್ರ ಹೇಳಬಲ್ಲೆ, ನನಗೆ ಅನುಮತಿ ಕೊಟ್ಟರೆ ನಿನ್ನನ್ನು ನದಿಗೆ ಕರೆದುಕೊಂಡು ಹೋಗಿ ನಿನ್ನ ನಿಜರೂಪವನ್ನು ತೋರಿಸಿ ನೀನೂ ನನ್ನಂತೆಯೇ ಎಂದು ತೋರಿಸಬಲ್ಲೆ. ಆದರೆ ನಿನ್ನನ್ನು

ಒತ್ತಾಯ ಪಡಿಸುವುದಿಲ್ಲ. ಒಂದು ವಾರದ ನಂತರ ಹಿಂತಿರುಗುತ್ತೇನೆ. ನೀನು ತಯಾರಾಗಿದ್ದರೆ, ಇದೇ ಜಾಗಕ್ಕೆ ಬಂದು ನನಗಾಗಿ ಕಾದಿರು. ಆಗ ನಿನ್ನನ್ನು ನದಿಗೆ ಕರೆದೊಯ್ಯುತ್ತೇನೆ. ಇಲ್ಲವಾದರೆ, ನನ್ನನ್ನು ಮರೆತುಬಿಡು. ನನ್ನನ್ನು ನೆನೆಯುವ ಪ್ರಯತ್ನವನ್ನೇ ಮಾಡದೆ ಹೋಗಿಬಿಡು!' ಎಂದು ಸಿಂಹವು ಹೊರಟುಹೋಯಿತು.

ಒಂದು ವಾರದ ನಂತರ, ಮಾತುಕೊಟ್ಟಂತೆ ಸಿಂಹವು
ಅಲ್ಲಿಗೆ ಬಂದಿತು. ಮರಿಗೆ ಇನ್ನೂ ಸಂದೇಹ;
‘ಸಿಂಹವನ್ನು ಭೇಟಿ ಮಾಡಲು ಹೋಗಲೋ
ಬೇಡವೋ?' ಎಂದು. ಮನದಾಳದಲ್ಲಿ ಮರಿಗೆ
ನಿಜವಾಗಿಯೂ ಸಿಂಹವನ್ನು
ಭೇಟಿಮಾಡಬೇಕೆಂದಿತ್ತು. ಆದರೆ ಅದನ್ನು ಕಂಡರೆ
ಬಹಳ ಭಯವೂ ಇತ್ತು.

ಕಡೆಗೆ ಮರಿಯು ಹಿಂದೆ ಸಿಂಹವನ್ನು ಸಂಧಿಸಿದ ಸ್ಥಳಕ್ಕೆ ಹೋಗಿ, ಅಲ್ಲಿ ಸಿಂಹವನ್ನು ಕಂಡಿತು. ಸಿಂಹವು ಅದನ್ನು ನೋಡಿ ಎದ್ದು ನಿಂತಿತು. ಸಿಂಹವು ಮುಂದಾಗಿ ದಾರಿ ತೋರುತ್ತಾ ಅವೆರಡೂ ನದಿಯ ಕಡೆಗೆ ನಡೆದುವು. ಅವು ನಡೆಯುತ್ತಿರುವಾಗ ಸಿಂಹವು ಸ್ವಲ್ಪ ಹತ್ತಿರ ಬಂದಿತು. ಮರಿಯು ಹೆದರಿ, ‘ಇಲ್ಲ! ಇಲ್ಲ! ನೀನು ಎಲ್ಲಿರುವೆಯೋ ಅಲ್ಲೇ ಇರು. ನನಗೆ ನದಿಯ ದಾರಿ ತೋರಿಸು, ಸಾಕು. ದಯವಿಟ್ಟು ನನಗೆ ಹತ್ತಿರವಾಗಿ ನಡೆಯಬೇಡ. ನಾನಾಗಿಯೇ ನದಿಯೆಡೆಗೆ ನಡೆದು ಬರುತ್ತೇನೆ!' ಎಂದು ಕೂಗಿತು.

ಸಿಂಹವು ಸ್ವಲ್ಪ ದೂರ ಸರಿದು, ಮರಿಗೆ ತಾನೂ
ಚಿಕ್ಕ ಮರಿಯಾಗಿದ್ದಾಗ ಹೇಗೆ ಬೆಳೆದೆನೆಂಬ
ಕಥೆಗಳನ್ನು ಹೇಳಲಾರಂಭಿಸಿತು. ಆ ಕಥೆಗಳನ್ನು
ಕೇಳುತ್ತಾ ತಲ್ಲೀನವಾಗಿ, ಮರಿಯು ಅವರಿಬ್ಬರ
ನಡುವೆ ಅಂತರವಿರಬೇಕೆಂಬುದನ್ನು ಮರೆತುಬಿಟ್ಟಿತು.

ಅವು ನಡೆಯುತ್ತಾ ಇದ್ದಂತೆ ಸಿಂಹವು ಮರಿಯ
ಹತ್ತಿರ ಸರಿಯಿತು. ಮರಿಯು ಕಥೆಗಳಲ್ಲಿ ಸಂಪೂರ್ಣ
ಲೀನವಾಗಿ, ‘ಹೌದೇ? ಹಾಗಾಯಿತೆ? ನಿನಗೂ
ಇಂತಹ ಸಮಸ್ಯೆಗಳಿದ್ದವೆ?' ಎಂದು ಕೇಳುತ್ತಿತ್ತು.

ಮರಿಗೆ ತಿಳಿಯದಂತೆಯೇ ಈಗ ಸಿಂಹವು ಅದನ್ನು
ಮುಟ್ಟುವಷ್ಟು ಸಮೀಪದಲ್ಲಿ ನಡೆಯುತ್ತಿತ್ತು!
ಒಮ್ಮೆಲೇ ಇದನ್ನು ಗಮನಿಸಿದರೂ ಮರಿಗೆ
ಇದರಿಂದ ಏನೂ ಭಯವಾಗಲಿಲ್ಲ. ಸಿಂಹದ ಮೃದು
ಸ್ಪರ್ಶವು ಎಷ್ಟು ಹಿತವಾಗಿದೆ, ಎನಿಸಿತು! ಅದು
ಪ್ರತಿಭಟಿಸಲಿಲ್ಲ.

ಸಿಂಹವು ಕಥೆಗಳನ್ನು ಹೇಳುತ್ತಿತ್ತು, ಮರಿಯು, ‘ಓ! ಚೆನ್ನಾಗಿದೆ ಎಷ್ಟು ಸ್ವಾರಸ್ಯಕರವಾಗಿದೆ!' ಎಂದು ಹೇಳುತ್ತಾ ಕೇಳುತ್ತಿತ್ತು. ಸಿಂಹವು ಮರಿಯನ್ನು ಹಿಡಿಯುವಷ್ಟು ಹತ್ತಿರವಿದ್ದರೂ, ಸಿಂಹದ ಬಾಲ್ಯಕ್ಕೆ ಸಂಬಂಧಿಸಿದ ಸಣ್ಣ ಕಥೆಗಳಲ್ಲಿ ಮರಿಯು ಮಗ್ನವಾಗಿತ್ತು.

ಅವು ನದಿಯನ್ನು ಸಮೀಪಿಸಿದೊಡನೆಯೇ ಸಿಂಹವು
ಮರಿಯನ್ನು ಹಿಡಿದು ನೀರಿನ ಬಳಿ ತಂದಿತು. ಮರಿಗೆ
ಈಗ ಬಿಡುಗಡೆಯಿಲ್ಲ ಎಂದೆನಿಸಿತು.
ಆಶ್ಚರ್ಯವೆಂದರೆ, ಈಗ ಅದಕ್ಕೆ ಬಿಡಿಸಿಕೊಳ್ಳುವ
ಆಸೆಯೂ ಇರಲಿಲ್ಲ!

ಅರ್ಥಮಾಡಿಕೊಳ್ಳಿರಿ. ಮರಿಯು ಬಿಡಿಸಿಕೊಳ್ಳಲಾಗದೆಂದು ಮಾತ್ರವಲ್ಲದೆ, ಬಿಡಿಸಿಕೊಳ್ಳುವುದು ಬೇಕಿಲ್ಲವೆಂದೂ ತಿಳಿಯಿತು! ಆದರೆ ಅದರ ಮನದ ಮೂಲೆಯಲ್ಲಿದ್ದ ಸ್ವಲ್ಪ ಅಹಂಕಾರವು ಬಾಧಿಸಿ, ಅದು ಹೇಳಿತು, ‘ಇಲ್ಲ! ಇಲ್ಲ! ನನ್ನನ್ನು ಬಿಡು. ನನಗೇನು ಮಾಡುತ್ತಿದ್ದೀ? ನನ್ನನ್ನೇಕೆ ಹಿಡಿದಿದ್ದೀ?' ಎಂದು. ಮರಿಗೆ ಇನ್ನೂ

ಅದರೆ, ಮನಸ್ಸು
ಮತ್ತೆ ಅಡ್ಡಿ
ಬಂದು, ಅದಕ್ಕೆ
ಮಂಕು ಕವಿದು,
ಮನಸ್ಸಿನಲ್ಲೇ
ಅನುಮಾನ
ಪಡತೊಡಗಿತು.

ಸ್ವಲ್ಪ ಭಯವಿತ್ತು. ಹಾಗಾಗಿ,
'ನನಗೇನು ಮಾಡು-
ತ್ತಿದ್ದೀಯೆ? ದಯವಿಟ್ಟು
ಹೇಳು, ನನ್ನನ್ನೇನು
ಮಾಡುತ್ತೀಯೆ?' ಎಂದು
ಕೇಳಿತು.

ಸಿಂಹವು, 'ನಾನೇನೂ ಮಾಡುತ್ತಿಲ್ಲ. ಸುಮ್ಮನೆ ನೀರಿನಲ್ಲಿ ನೋಡು' ಎಂದು ಉತ್ತರಿಸಿತು. ಮರಿಯು ನೀರಿನಲ್ಲಿ ಇಣುಕಿ, 'ಸರಿ, ನೀರಿನಲ್ಲಿ ನೋಡುತ್ತಿದ್ದೇನೆ' ಎಂದಿತು. ಆಗ ಸಿಂಹವು, 'ನೀರಿನಲ್ಲಿ ಏನು ಕಾಣಿಸಿತು? ಎರಡು ಬಿಂಬಗಳು ಕಂಡವೆ?' ಎಂದು ಕೇಳಿತು. ಮರಿಯು, 'ಹೌದು' ಎಂದಿತು.

ಸಿಂಹವು, 'ಸರಿ, ಒಂದು ಸಿಂಹವು ನಾನು, ಇನ್ನೊಂದು ನೀನು' ಎಂದಿತು.

ಮರಿಯೂ, 'ಎರಡು ಪ್ರತಿಬಿಂಬಗಳು: ಒಂದು ನನ್ನದು, ಒಂದು ನಿನ್ನದು' ಎಂದು ಪುನರುಚ್ಚರಿಸಿತು. ಹಠಾತ್ತನೆ ತಾನು ಹೇಳುತ್ತಿರುವುದನ್ನು ನಂಬಲಾರದೆ, 'ಇಲ್ಲದಿರಬಹುದು! ಇಲ್ಲ! ಇಲ್ಲ! ಇಲ್ಲ! ನೀರಿನಲ್ಲಿರುವ ಎರಡು ಪ್ರತಿಬಿಂಬಗಳೂ ನಿನ್ನದೇ ಆಗಿರಬೇಕು!' ಎಂದಿತು.

ಸಿಂಹವು, 'ಮೂರ್ಖ! ನೋಡು! ನಾನು ಕೈ
ಎತ್ತುತ್ತೇನೆ. ಈಗ ಹೇಳು ಯಾವ ಪ್ರತಿಬಿಂಬವು
ಕೈಎತ್ತಿದೆ?' ಎಂದು ಅಬ್ಬರಿಸಿತು. ಮರಿಯು
ಸಿಂಹದ ಪ್ರತಿಬಿಂಬವನ್ನು ತೋರಿಸಿ, 'ಅದು ಮಾತ್ರ
ಕೈಎತ್ತಿದೆ' ಎಂದಿತು. ಆಗ ಸಿಂಹವು, 'ಸರಿ, ಈಗ
ನೀನು ಕೈ ಎತ್ತು' ಎಂದಿತು.

ಮರಿಯು ತನ್ನ ಕೈ ಎತ್ತಿ, ಪ್ರತಿಬಿಂಬಗಳನ್ನು ನೋಡುತ್ತಾ, 'ಹೌದು! ಹೌದು! ನಾನು ನೋಡುತ್ತಿದ್ದೇನೆ! ನಾನು ನೋಡುತ್ತಿದ್ದೇನೆ' ಎಂದು ಕೂಗಿಕೊಂಡಿತು. ಮತ್ತೆ ಸಣ್ಣ ಅನುಮಾನದ ದನಿಯಲ್ಲಿ, 'ಆದರೆ, ನಾನು ಸಿಂಹ ಹೇಗಾದೆ? ನಾನು ಕುರಿಯಲ್ಲವೆ?' ಮತ್ತೆ ಕೇಳಿತು.

ಸಿಂಹವು ಅದನ್ನು ಸುಮ್ಮನೆ ನೋಡಿ, 'ನಾನು
ನಿನ್ನೊಡನೆ ಆಟವಾಡಲು ಬಂದಿಲ್ಲ' ಎಂದಿತು. ಆ
ಕ್ಷಣ ಮರಿಯಲ್ಲಿ ಏನೋ ಉಲ್ಲಾಸದ
ಭಾವವೇರಿತು. 'ವಿಚಿತ್ರವಾದುದೇನೋ ನಡೆಯಲಿದೆ'
ಎಂದು ಅದಕ್ಕನಿಸಿತು.

ಆದರೆ ಮತ್ತೆ ಅದರ ಮನಸ್ಸು ಅಡ್ಡಿ ಬಂದು, ಅದಕ್ಕೆ
ಮಂಕು ಕವಿದು, ಮನಸ್ಸಿನಲ್ಲೇ
ಅನುಮಾನಿಸತೊಡಗಿತು, 'ನನಗೇನೋ ಮೋಡಿ
ಹಾಕಿದಂತಿದೆ. ಇದು ನನ್ನ ನಿಜರೂಪವಲ್ಲ!
ನನಗೇನೋ ಆಗಿದೆ, ಇದು ನಾನಲ್ಲ, ಇಷ್ಟು ಆನಂದ,
ಇಷ್ಟು ಆಹ್ಲಾದವು ನನಗೆಂದೂ ಆಗಿರಲಿಲ್ಲ! ಇದು
ನಾನಲ್ಲ. ಅವನು ನನಗೇನೋ ಮಾಡುತ್ತಿದ್ದಾನೆ.
ನನಗೇನೋ ಆಗಲೇ ಮಾಡಿಬಿಟ್ಟಿದ್ದಾನೆ!' ಎಂದು
ಯೋಚಿಸಿತು.

ಮರಿಯು ಮತ್ತೆ ಹಿಂದೇಟು ಹಾಕಿತು, ತಪ್ಪಿಸಿಕೊಳ್ಳಲು ಯತ್ನಿಸಿತು. ಆದರೆ ತಪ್ಪಿಸಿಕೊಳ್ಳುವ ಯತ್ನವು ಕೇವಲ ನಾಟಕೀಯವಾಗಿತ್ತು. ಏಕೆಂದರೆ ಅದಕ್ಕೆ ವಾಸ್ತವವಾಗಿ ತಪ್ಪಿಸಿಕೊಳ್ಳುವ ಮನಸ್ಸೇ ಇರಲಿಲ್ಲ.

ಮರಿಯು, 'ಇಲ್ಲ! ಇಲ್ಲ! ಇಲ್ಲ! ನನ್ನನ್ನು ಬಿಡು! ನನ್ನನ್ನು ಬಿಟ್ಟುಬಿಡು! ನೀನೊಂದು ಸಿಂಹವೆಂದು ನನಗೆ ತಿಳಿದಿದೆ. ನಿನಗೆ ನೈವೇದ್ಯವಾಗಿ ನಾನು ದಿನವೂ ತಿನ್ನುವ ಹುಲ್ಲನ್ನು ನಿನಗೆ ಅರ್ಪಿಸುತ್ತೇನೆ.

ನಾನು ಕುಡಿಯುವ ಹಾಲನ್ನೂ ಕೊಡುತ್ತೇನೆ. ನಿನ್ನ
ಸೇವೆಯಲ್ಲಿ ನಿರತನಾಗುತ್ತೇನೆ' ಎಂದು
ಪ್ರತಿಭಟಿಸಿತು.

ಕಡೆಗೆ ಸಿಂಹವು, 'ನಾನೀಗ ಇದನ್ನು ಕೈ ಬಿಡಬೇಕು. ಈಗ ಸದ್ಯಕ್ಕೆ ಇದಕ್ಕೆ ಇಷ್ಟೇ ಅರ್ಥವಾಗುವುದು' ಎಂದು ಯೋಚಿಸಿ, 'ಹಾಗಾದರೆ ಸರಿ, ಸ್ಪಷ್ಟವಾಗಿ ತಿಳಿ. ನಾಳೆ ಮತ್ತೆ ಭೇಟಿಯಾಗೋಣ. ನಾನು ನಿನ್ನನ್ನು ಕರೆತರಲು ಕಾಡಿನಂಚಿಗೆ ಬರುವುದಿಲ್ಲ. ನನ್ನ ಮನೆಯಲ್ಲೇ ಇರುತ್ತೇನೆ. ನನ್ನನ್ನು ಕಾಣಬೇಕಾದರೆ ನೀನಾಗಿಯೇ ಕಂಡುಹಿಡಿದು ಬರಬೇಕು. ಇಷ್ಟು ದೂರ ನಿನಗಾಗಿ ಬಂದು ನಿನ್ನನ್ನು ಕರೆತರುವಷ್ಟು ನಾನು ಕಾಲಹರಣ ಮಾಡುವುದಿಲ್ಲ! ನಿನ್ನ ಸ್ವಂತ ಪ್ರಯತ್ನದಿಂದ ನಿನಗೆ ಬರಬೇಕೆಂದಿಲ್ಲದಿದ್ದರೆ ಹಾಗೆಯೇ ಆಗಲಿ!' ಎಂದು ಸಿಂಹವು ಹೇಳಿ ಹೊರಟು ಹೋಯಿತು.

ಈ ಬಾರಿ ಮರಿಯು ಪ್ರತಿಸಲದಂತೆ ಓಡಿ
ಹೋಗಲಿಲ್ಲ. ಬಹಳ ನಿಧಾನವಾಗಿ
ನಡೆದುಹೋಯಿತು. ಹೋಗಲು ಇಚ್ಛೆ
ಇಲ್ಲದಿದ್ದರೂ, ಒಂದೆಡೆ ಮನಸ್ಸು ಕುರಿಗಳ ಬಳಿಗೆ
ಹಿಂದಿರುಗಬೇಕೆಂದು ಹೇಳುತ್ತಿತ್ತು. ಮರಿಯ
ಮೂರು ಕಾಲುಗಳೂ ಚಲಿಸಲೇ ಇಲ್ಲ. ಒಂದೇ
ಕಾಲು ಮಾತ್ರ ಚಲಿಸುತ್ತಿತ್ತು. ಈ ಅಗಲಿಕೆಯನ್ನು
ನೆನೆದು ಅದರ ಪುಟ್ಟ ಕಣ್ಣುಗಳಿಂದ ಅಶ್ರುಧಾರೆಯೇ
ಹರಿಯಿತು.

ಮರುದಿನ ಸಿಂಹವು ತನ್ನ ನಿವಾಸದಲ್ಲಿ ಭವ್ಯವಾಗಿ ಆಸೀನವಾಗಿತ್ತು. ಮರಿಯು ಮೆಲ್ಲಗೆ, ಅತಿ ಮೆಲ್ಲಗೆ, ಅದರ ಬಳಿ ಹೊಸದಾಗಿ ಕತ್ತರಿಸಿದ ಹುಲ್ಲನ್ನು ತಂದು, 'ಎಲ್ಲೆಡೆಗಿಂತಲೂ ಇದೇ ಹೊಚ್ಚ ಹಸಿರು ಹುಲ್ಲು' ಎಂದುಕೊಂಡು ಸಿಂಹದ ಮುಂದಿರಿಸಿ, 'ನಾನು ತಂದಿರುವ ಈ ನೈವೇದ್ಯವನ್ನು ದಯವಿಟ್ಟು ಸ್ವೀಕರಿಸು' ಎಂದಿತು.

ಸಿಂಹವು ತನ್ನೊಳಗೆ ತಾನೇ, 'ಆಗಲಿ. ಈ ಹುಲ್ಲನ್ನು
ಸ್ವೀಕರಿಸಿದರೆ ಅವನು ನನ್ನೊಡನೆ
ಸಂಬಂಧಕಲ್ಪಿಸಬಹುದು. ಆಮೇಲೆ ಅದನ್ನು ಇನ್ನೂ
ಸ್ಥಿರಗೊಳಿಸಲು ಅವನು ಬಿಡಬಹುದು. ಇದರ
ಮೂಲಕ ನನ್ನೊಡನೆ ಬಾಂಧವ್ಯ ಬೆಳೆಯಬಹುದು'
ಎಂದುಕೊಂಡು, ಎಂದೂ ಹುಲ್ಲನ್ನು ತಿನ್ನದಿದ್ದರೂ,
ಅದು ಹುಲ್ಲನ್ನು ಬಾಯಿಗೆ ಹಾಕಿಕೊಂಡು
ತಿನ್ನಲಾರಂಭಿಸಿತು! ಮರಿಗೆ ಇದರಿಂದ ಬಹಳ
ಸಂತೋಷವಾಯಿತು. ಸಿಂಹವೂ ಹುಲ್ಲು
ತಿನ್ನಲಾರಂಭಿಸಿದಾಗ ಅವರಿಬ್ಬರ ಬಾಂಧವ್ಯ
ಗಾಢವಾಯಿತು.

ಅರಿತುಕೊಳ್ಳಿರಿ, ಸಿಂಹವು ತನಗೂ ಮರಿಗೂ ಇರುವ
ಅಂತರವನ್ನು ಕಡಿಮೆ ಮಾಡಲೆಂದು ಹುಲ್ಲು
ತಿನ್ನುತ್ತದೆ. ತಾನೆಂದೂ ಹುಲ್ಲು ತಿನ್ನದಿದ್ದರೂ
ಹುಲ್ಲುತಿನ್ನುವಂತೆಯೂ ಅದನ್ನು ಸವಿಯುವಂತೆಯೂ
ನಟಿಸುತ್ತದೆ.

ಹೀಗೆಯೇ ನಿಧಾನವಾಗಿ ಸಿಂಹಕ್ಕೂ ಮರಿಗೂ ಬಾಂಧವ್ಯ ಹೆಚ್ಚಿತು. ಕೆಲವೊಮ್ಮೆ ಹುಲ್ಲನ್ನು ತಿಂದ ಸಿಂಹವು, 'ಮೂರ್ಖ! ನನಗೆಂತಹ ಹುಲ್ಲನ್ನು ತರಬೇಕೆಂಬುದೂ ತಿಳಿದಿಲ್ಲವೇ? ಇದು ಎಂತಹ ಹುಲ್ಲು? ಇಷ್ಟು ಹೊತ್ತಿಗೆ ನಾನೆಂಥ ಹುಲ್ಲನ್ನು ತಿನ್ನುತ್ತೇನೆಂಬುದು ನಿನಗೆ ತಿಳಿದಿರಬೇಕು. ಮುಂದಿನ ಬಾರಿ ಸರಿಯಾದ ಹುಲ್ಲನ್ನು ತೆಗೆದುಕೊಂಡು ಬಾ!' ಎಂದು ರೇಗಾಡಿತು.

ಸಿಂಹದ ಮರಿಯು, 'ಸಿಂಹವು ಕೋಪಗೊಳ್ಳುತ್ತಿದೆ. ನನಗೂ ಕೆಲವೊಮ್ಮೆ ಕೋಪ ಬರುತ್ತದೆ. ನಮ್ಮಿಬ್ಬರ

ಸಿಂಹ ಮತ್ತು ಸಿಂಹದ ಮರಿ ಆಡುತ್ತಿರುವ ಚಿತ್ರ

ಭಾಷೆಯೂ ಒಂದೇ. ಇವನೂ ಸಹ ನನ್ನಂತೆಯೇ!’ ಎಂದು ಯೋಚಿಸಿತು.

ಸಿಂಹವು ಹುಲ್ಲು ತಿಂದಾಗ, ಅದು ತನ್ನ ಉಚ್ಚ
ಸ್ವರದಿಂದ, ತನ್ನ ಮಟ್ಟದಿಂದ, ಅರಿವಿನಿಂದ, ಈ
ಮರಿಗಾಗಿ ಕೆಳಗಿಳಿದು ಬರುತ್ತದೆ.

ಮರಿಗೆ ಆ ಕೂಡಲೇ ಸಮಾಧಾನವಾಯಿತು. ಈಗ
ಅದಕ್ಕೆ ಸಿಂಹದೊಡನೆ ಅನುಬಂಧ ಬೆಳೆಯಿತು. ಈಗ
ಮರಿಯು, ‘ಮುಂದಿನ ಬಾರಿ ನಾನು ಸರಿಯಾದ

ಸಿಂಹ ಮತ್ತು ಅದರ ಬಳಿ ಕುಳಿತಿರುವ ಮರಿ

ಹುಲ್ಲನ್ನೂ ಶುದ್ಧವಾದ ಹಾಲನ್ನೂ ತರಬೇಕು. ನಾನು ಕೆಲಸಗಳನ್ನು ಸರಿಯಾದ ರೀತಿಯಲ್ಲಿ ಮಾಡಬೇಕು. ಹುಲ್ಲನ್ನು ಸರಿಯಾಗಿ ಕಟ್ಟು ಕಟ್ಟಬೇಕು’ ಎಂದು ತೀರ್ಮಾನಿಸಿತು. ತಾನು ಕೆಲಸವನ್ನು ಸರಿಯಾಗಿ ಮಾಡದುದಕ್ಕಾಗಿ ಸಿಂಹವು ರೇಗಿತೆಂದು ಭಾವಿಸಿ ಮರಿಯು ಅನೇಕ ಯೋಜನೆಗಳನ್ನು ಹೂಡಿತು! ಸಿಂಹಕ್ಕೂ ಮರಿಗೂ ಈ ರೀತಿಯಾಗಿ ಸಂಬಂಧ ಬೆಳೆಯಿತು. ಈಗ ಮರಿಗೆ ನಿರಾಳವಾಗಿ, ತನಗಿಷ್ಟ ಬಂದಾಗಲೆಲ್ಲ ಕಾಡಿಗೆ ಬಂದು ಸಿಂಹವನ್ನು ಕಾಣುತ್ತಿತ್ತು. ಮರಿಗೆ ಸಿಂಹದ ಸನ್ನಿಧಾನವು ಅತ್ಯಂತ ಸುಖಕರವಾಗಿ, ಆರಾಮವೆನಿಸಿತು. ಅದಕ್ಕೆ, ಆ ರಾಜ ಸಿಂಹದ ರಾಜ ಯೋಜನೆ ತಿಳಿದಿರಲಿಲ್ಲ.

ಒಂದು ದಿನ ಮರಿಯು ಹುಲ್ಲು ಮತ್ತು ಹಾಲನ್ನು
ತಂದಾಗ, ಸಿಂಹವು ದೊಡ್ಡ ತಟ್ಟೆಯಲ್ಲಿ ಮಾಂಸದ
ತುಂಡನ್ನು ಮುಂದಿಟ್ಟುಕೊಂಡು ಕುಳಿತಿತ್ತು.
ಮಾಂಸವನ್ನು ಕಂಡೊಡನೆ ಮರಿಗೆ ಭಯವಾಗಿ, ‘ನಿನ್ನ
ತಟ್ಟೆಯಲ್ಲಿ ಮಾಂಸವೇಕಿದೆ? ಇದೇನಿದು? ನೀನು
ಮಾಂಸಾಹಾರಿಯೇ? ನೀನು ಮಾಂಸಾಹಾರಿಯೆಂದು
ನನಗೆ ತಿಳಿದಿರಲಿಲ್ಲ! ನೀನೆಂತಹ ಪ್ರೀತಿಯ,
ಮನಸ್ಸುಳ್ಳವನು, ನೀನು
ಮಾಂಸಾಹಾರಿಯಾಗಿರುವುದು ಅಸಾಧ್ಯ! ಇಂತಹ
ಘೋರವಾದುದನ್ನು ಏಕೆ ತಿನ್ನುತ್ತೀಯೇ! ನಾನು
ಶಾಖಾಹಾರಿ! ನನಗಿದು ಸರಿಬೀರದು!’ ಎಂದು
ಕೂಗಿತು.

ಈ ಬಾರಿ ಸಿಂಹವು ಏನು ಹೇಳಲೂ ಸಮಯ ವ್ಯರ್ಥಮಾಡಲಿಲ್ಲ. ಮರಿಯ ಕತ್ತನ್ನು ಹಿಡಿದು ಸ್ವಲ್ಪ ಮಾಂಸವನ್ನು ಅದರ ಬಾಯೊಳಗೆ ತುರುಕಿತು. ಆ ಮಾಂಸವು ಬಾಯೊಳಗೆ ಹೋಗಿ, ಮಾಂಸದಲ್ಲಿದ್ದ ನೆತ್ತರು ಸವಿದಾಗ ಆ ಮರಿಗೆ ಏನೋ ಆದಂತಾಯಿತು.

ಏನಾಗುತ್ತಿದೆಯೆಂದು ಮರಿಗೆ ತಿಳಿಯಲಿಲ್ಲ. ಮೊದಲ
ಬಾರಿಗೆ ಅದು ಮಾಂಸದ ರುಚಿ ನೋಡಿತ್ತು!
ತನ್ನೊಳಗೆ ತಲೆದೋರಿದ ಭಾವನೆಗಳಿಂದ ಅದು
ದಿಗ್ಧ್ರಾಂತವಾಯಿತು. ನಿಮ್ಮ ಮೊದಲ ‘ಸತೋರಿ’
ಅಥವಾ ಆನಂದಾನುಭವದಂತೆ! ಅದನ್ನು
ಅನುಭವಿಸಿದಾಗಲೇ ಅರ್ಥವಾಗುವುದು!

ಮಾಂಸದ ರುಚಿನೋಡಿದ ಮರಿಯು ಸಿಂಹದಂತೆ ಗರ್ಜಿಸಿತು! ತನ್ನ ನಿಜರೂಪವನ್ನು ಬಹಿರಂಗಪಡಿಸುತ್ತಾ ಅದು ಗರ್ಜಿಸಿತು. ತನ್ನ ನಿಜ ಅಸ್ತಿತ್ವವನ್ನು ಅರಿಯಿತು. ಈಗ ಸಿಂಹವು ಮರಿಯ ಕಣ್ಣಲ್ಲಿ ಕಣ್ಣಿಟ್ಟು ‘ತತ್ ತ್ವಂ ಅಸಿ’ ಎಂದಿತು. ‘ನೀನು ಅದೇ ಆಗಿರುವೆ’ ಎಂಬ ದೀಕ್ಷೆಯಾಯಿತು. ಸಿಂಹವು ಸಿಂಹವಾಯಿತು. ಅಷ್ಟೇ. ತಾನು ಕುರಿಯೆಂದು ಭಾವಿಸಿದ್ದ ಸಿಂಹವು ಪುನಃ ಸಿಂಹವಾಯಿತು.

ನೀವು ಸಿಂಹವೇ, ಕುರಿಯಲ್ಲ!

ಅರಿತುಕೊಳ್ಳಿರಿ, ನೀವು ಮನುಷ್ಯರೂ ಅಲ್ಲ, ನೀವಂದುಕೊಂಡಿರುವ ವ್ಯಕ್ತಿತ್ವವೂ ನೀವಲ್ಲ.

ನೀವು ಆ ಕುರಿಯಂತೆಯೇ. ನಿಜ ಹೇಳಬೇಕೆಂದರೆ ನೀವು ಕುರಿಯೇ. ನನ್ನನ್ನು ನೋಡಿ ಅರಿತುಕೊಳ್ಳಿರಿ. ನಾನೂ ಸಹ, ‘ನಾನು ಕುರಿ’ಯೆಂದು ಭಾವಿಸಿದ್ದೆ. ಆದರೆ ನಾನು ಸಿಂಹವಾದ ರೀತಿಯನ್ನು ನೋಡಿರಿ. ನನ್ನ ಸ್ವಂತ ಜೀವನದತ್ತ ಗಮನವಿಟ್ಟು ನೋಡಿರಿ. ಆಗ ನಿಮಗೇ ನೀವು ಎಂತಹ ಮೂರ್ಖತನದಿಂದ ನೀವು ಕುರಿಯೆಂದು ತಿಳಿದಿದ್ದೀರಿ ಎಂದು ಅರ್ಥವಾಗಿ ನೀವಾಗಿಯೇ ಸಿಂಹವಾಗುತ್ತೀರಿ.

ಇದನ್ನೇ ಶ್ರೀ
ಕೃಷ್ಣನೂ ಹೇಳುವುದು,
‘ನನ್ನ ಜೀವನವನ್ನು
ಅರ್ಥಮಾಡಿಕೊಂಡಾಗ,
ನೀವು ಮುಕ್ತ-
ರಾಗುತ್ತೀರಿ’ ಎಂದು.

ನೀವು
ಮನುಷ್ಯರೂ
ಅಲ್ಲ,
ನೀವಂದು-
ಕೊಂಡಿರುವ
ವ್ಯಕ್ತಿತ್ವವೂ ಅಲ್ಲ.

ಜೀವನ್ಮುಕ್ತನ ಜೀವನವು ನಿಮ್ಮನ್ನೂ
ಮುಕ್ತಗೊಳಿಸುತ್ತದೆ. ಹೇಗೆಂದರೆ, ನೀವಿರುವ ಈಗಿನ
ಸ್ಥಿತಿಯನ್ನು ಅದು ಸ್ಪಷ್ಟವಾಗಿ ತೋರಿಸುತ್ತದೆ.
ಜೀವನ್ಮುಕ್ತನಾದ ವ್ಯಕ್ತಿಯೂ ಕೂಡ ಒಂದು
ಕಾಲದಲ್ಲಿ ಅಜ್ಞಾನದಿಂದ ನೀವು ಈಗಿರುವಲ್ಲಿಯೇ
ಇದ್ದನು. ಇದರಿಂದ ಕುರಿಯಂತೆ ಕೂಗುವ ಬದಲು
ನಿಮಗೆ ಹಸಿಮಾಂಸವನ್ನು ಸವಿದು ನಿಮ್ಮ
ನಿಜಸ್ವರೂಪದ ಆನಂದವನ್ನು ಹೊಂದಿ ಸಿಂಹದಂತೆ
ಗರ್ಜಿಸಲು ನಿಮಗೆ ಬೇಕಾಗುವ ಸ್ಥೆರ್ಯವು
ದೊರಕುತ್ತದೆ.

ಸಿಂಹದ ಮರಿಗೆ ತಾನು ಸಿಂಹವೆಂದು ತಿಳಿಯಲು
ಎಷ್ಟು ಸಮಯ ಬೇಕಾಯಿತು? ಕ್ಷಣಮಾತ್ರವೇ! ಆ
ರಕ್ತ ಮಾಂಸಗಳು ಗಂಟಲಿಗೆ ಇಳಿಸಲು ಗರ್ಜಿಸಿತು.
ಆದರೆ ಆ ಮಾಂಸವನ್ನು ಅದರ ಗಂಟಲಿಗೆ
ಇಳಿಸುವುದರಲ್ಲಿ ಎಷ್ಟು ಕಾಲ ಹಿಡಿಯಿತೆಂದು
ಯೋಚಿಸಿ!

ಗುರುವಿನ ಗುಹೆಯನ್ನು ಪ್ರವೇಶಿಸಲು ಸಮಯ
ಬೇಕಾಗುತ್ತದೆ. ಅದಕ್ಕೆ ಮುನ್ನ ನಿಮ್ಮ ಸಂಬಂಧದ
ಸೇತುವೆಯ ನಿರ್ಮಾಣವಾಗಬೇಕು. ಅದಕ್ಕಾಗಿಯೇ
ಸ್ವಲ್ಪ ಕಾಲ ಬೇಕಾಗುವುದು.

ಆತ್ಮಜ್ಞಾನಕ್ಕೆ ಸಮಯ ಹಿಡಿಯುವುದಿಲ್ಲ. ಆ ಅನುಭವವನ್ನು ಪ್ರಸರಿಸಲು ಆ ಸೇತುವೆ, ಆ ವಿಶ್ವಾಸ ಸಜೀವವಾಗಿರುವ ಒಂದೇ ಪವಿತ್ರ ಗ್ರಂಥವೆಂದರೆ ಗುರು.

ಉಂಟಾಗಲು ಸಮಯ ಹಿಡಿಯುತ್ತದೆ.

ಗುರುವಿನ ಮಹತ್ವ

ಆಧುನಿಕ ಮನಸ್ಸಿಗೆ ಗುರುವಿನ ಅವಶ್ಯಕತೆಯನ್ನು ಅರ್ಥಮಾಡಿಕೊಳ್ಳಲು ಬಹಳ ಪ್ರಯಾಸವಾಗುತ್ತದೆ.

ಗುರುವು ನೀವು ಯಾರೆಂಬ ನಿಜ ಸತ್ಯದ ಒಂದು
ಕಿರುನೋಟವನ್ನು ಕೊಡುತ್ತಾನೆ. ಆತನು ಕೇವಲ
ಬೋಧಿಸಲು ಬಂದಿಲ್ಲ, ಎಚ್ಚರಿಸಲು ಬಂದಿರುವನು.

ಸಜೀವವಾಗಿರುವ ಒಂದೇ ಪವಿತ್ರ ಗ್ರಂಥವೆಂದರೆ ಗುರು.

ದೇವರಿಗೆ ಶರಣಾಗುವುದು ಕಠಿಣವೇಕೆಂದರೆ ದೇವರಾರೋ, ಎಲ್ಲಿರುವನೋ, ತಿಳಿದಿಲ್ಲ. ದೇವರೆಂಬುದು ಕೇವಲ ಕಲ್ಪನೆಯೇ. ಆದರೆ ಗುರುವು ಬ್ರಹ್ಮಾಂಡದೊಂದಿಗೆ ಲಯವಾಗಿರುವವನು. ಆತನು ಪರಿಪೂರ್ಣತೆಯನ್ನು ಹೊಂದಿರುವವನು. ಆತನಿಗೆ ದೇವರು ನಿಜವಾಗಿ ತಿಳಿದಿದೆ. ಏನನ್ನು ನೀವು 'ದೇವರು' ಅಥವಾ 'ವಿಶ್ವಶಕ್ತಿ' ಎಂದು ಕರೆಯುವಿರೋ ಅದರೊಂದಿಗೆ ಇರುವವನು ಗುರುವು. ಆತನು ಸ್ಪರ್ಶಗ್ರಾಹ್ಯ, ಮುಟ್ಟಿ ತಿಳಿಯಬಹುದಾದವನು. ಆದ್ದರಿಂದ ಆತನು ದೇವರನ್ನು ತಲುಪುವ ಮಾರ್ಗವಾಗಬಲ್ಲನು.

ಗುರುವಿನ ಮೂಲಕ ದೇವರ ತೋಳುಗಳೆಡೆಗೆ ನೇರವಾಗಿ ಜಿಗಿದುಬಿಡಬಹುದು.

ನಿಮ್ಮ ಹಾಗೂ ನಿಮ್ಮ ಸಹಜ ಸ್ವಭಾವವಾದ
ಆನಂದದ ನಡುವೆ ಅಡ್ಡವಾಗಿ ನಿಂತಿರುವುದು ನಿಮ್ಮ
ಅಹಂಕಾರವೊಂದೇ. ಶಿಷ್ಯನಾಗುವುದೆಂದರೆ
ಅಹಂಕಾರವನ್ನು ತ್ಯಜಿಸುವ ಪ್ರಕ್ರಿಯೆಯೇ.
ಅಹಂಕಾರವನ್ನು ತ್ಯಜಿಸುವುದು ಅತಿ ಕಠಿಣ.
ಅಹಂಕಾರವನ್ನು ತ್ಯಜಿಸುವುದೆಂದರೆ ನೀವಿಷ್ಟು
ಕಾಲವೂ ಸ್ಥಿರವಾಗಿ ಹಿಡಿದಿಟ್ಟುಕೊಂಡಿರುವ ನಿಮ್ಮ
ಘನವಾದ ವ್ಯಕ್ತಿತ್ವವನ್ನೇ ಕಳೆದುಕೊಂಡಂತೆ.
ಅಹಂಕಾರವನ್ನು ತ್ಯಜಿಸುವುದು ಸಾವಿನಂತೆ ಕಂಡರೂ,
ವಾಸ್ತವವಾಗಿ ನಿಮಗೂ ಜೀವನಕ್ಕೂ ನಡುವೆ
ನಿಂತಿರುವುದೇ ಅಹಂಕಾರ!

ಗುರುವಿನೊಂದಿಗೆ ಆಳವಾದ ಭರವಸೆಯಿಂದಲೂ, ಪ್ರೀತಿಯಿಂದಲೂ ಮತ್ತು ಗೌರವಾದರಗಳಿಂದಲೂ ಕೂಡಿದ ಸಂಬಂಧದಿಂದ ಮಾತ್ರ ಅಹಂಕಾರವನ್ನು ತ್ಯಜಿಸಲು ಸಾಧ್ಯ. ನೀವು ಇಡೀ ಜೀವನವೆಲ್ಲಾ ಭದ್ರವಾಗಿ ಹಿಡಿದಿರುವ ಅಹಂಕಾರವನ್ನು ತ್ಯಜಿಸುವ ಧೈರ್ಯ ಸಾವಕಾಶವಾಗಿ ಮೂಡಿಬರುತ್ತದೆ. ನೀವು ಕೆಳಗೆ ಬಿದ್ದರೂ, ಸೃಷ್ಟಿಯ ಅಗಾಧ ಪ್ರೇಮಾನುಕಂಪಗಳ ಪ್ರತಿಮೂರ್ತಿಯಾದ ಗುರುವಿನ ಅಭಯದ ಕವಚದಲ್ಲಿಯೇ ಬೀಳುವಿರೆಂಬ ಪೂರ್ಣ ಭರವಸೆಯುಂಟಾದಾಗ ಮಾತ್ರ ಅಹಂಕಾರವನ್ನು ತ್ಯಜಿಸಲು ಸಾಧ್ಯವಾಗುತ್ತದೆ.

ಈಗಿನ ಪರಿಸ್ಥಿತಿಯಲ್ಲಿ, ನಿಮಗಾಗುವ
ಅನುಭವಗಳು ನಿಮ್ಮೊಳಗೆ ಆಸೆ - ಭಯಗಳನ್ನು
ಹೆಚ್ಚಿಸುವಂತಹವು. ಹಾಗಲ್ಲದೆ ಯಾವುದೇ
ಅನುಭವವು ಹೆಚ್ಚು ಅರಿವು, ಶಕ್ತಿಗಳನ್ನು
ನೀಡಬಹುದು. ಈ ಸ್ಥಿತ್ಯಂತರವನ್ನೇ, ಮಾನಸಿಕ

ಕ್ರಾಂತಿಯನ್ನೇ ಗುರುವು ಮಾಡುವುದು. ಇದರಿಂದ ನಿಮ್ಮ ಸಂಪೂರ್ಣ ಪರಿವರ್ತನೆಯಾಗುತ್ತದೆ.

ಗುರುವಿನಿಂದ ಕಲಿಯುವುದು

'ಗುರುವಿನಿಂದೇಕೆ ಕಲಿಯಬೇಕು?
ಜೀವನದಿಂದಲೇ ಕಲಿಯಬಹುದಲ್ಲ' ಎಂದು ನೀವು
ಕೇಳಬಹುದು.

ಗುರುವಿನಿಂದ ಕಲಿಯುವುದು ಒಂದು ಸುಂದರ,
ಆಹ್ಲಾದಕರ ಅನುಭವ. ಗುರುವು ಮೊದಲು ನಿಮ್ಮನ್ನು
ತೊಡೆಯಮೇಲಿರಿಸಿಕೊಂಡು ತನ್ನ ಪ್ರೀತಿಯೆಂಬ
ನೋವುನಿವಾರಕ ಮದ್ದನ್ನು ಕೊಟ್ಟು, ನಂತರ
ಅಹಂಕಾರವೆಂಬ ಗಡ್ಡೆಯ ಶಸ್ತ್ರಚಿಕಿತ್ಸೆ
ಮಾಡಲಾರಂಭಿಸುತ್ತಾರೆ. ಅವರು ಪ್ರೀತಿ
ಸುರಿಸುವುದರಿಂದ, ನೀವು ಪರಿವರ್ತನೆಗೊಳ್ಳುವಾಗ
ನಿಮಗೆ ಆಗುವ ನೋವು ಭಾಸವಾಗುವುದೇ ಇಲ್ಲ.
ಸ್ವಲ್ಪ ಕಷ್ಟವೆನಿಸಿದರೂ ಗುರುವಿನೊಂದಿಗಿದ್ದೇನೆ
ಎಂಬ ಆನಂದ ಮತ್ತು ಅರಿವು ಅದನ್ನು
ಸಹಿಸಿಕೊಳ್ಳಲು ಸಹಾಯ ಮಾಡುತ್ತದೆ.

ಗುರುವು ತೀವ್ರವಾದ ಜೀವನದ ಅನುಭವವನ್ನು
ನೀಡುತ್ತಾನೆ. ಆತನು ಕಲಿಸುವುದು ಮಾತ್ರವಲ್ಲ,
ನಿಮ್ಮ ಇಡೀ ಪರಿವರ್ತನೆಯೇ
ಆನಂದದಿಂದಾಗುವಂತೆ ನೋಡಿಕೊಳ್ಳುತ್ತಾನೆ.

ಒಂದು ಸಣ್ಣ ಕಥೆ:

ಒಬ್ಬ ಬಾಲಕನ ತಂದೆಯು, ಅವನಿಗೆ ದೊಡ್ಡ
ಬಂಡೆಯನ್ನು ಸ್ವಲ್ಪ ಸರಿಸಲು ಹೇಳಿದನು. ಬಾಲಕನು
ಎಷ್ಟು ಶ್ರಮ ಪಟ್ಟರೂ ಅದನ್ನು

ಅಲುಗಾಡಿಸಲಾಗಲಿಲ್ಲ.
ಬಹಳ ಬಳಲಿ
ನಿಂತುಬಿಟ್ಟನು.
ತಂದೆಯು, 'ನಿನ್ನ ಎಲ್ಲ
ಸಾಮರ್ಥ್ಯವನ್ನು
ನೀನು ಉಪ-
ಯೋಗಿಸಿಲ್ಲ, ನಿನ್ನ
ಶಕ್ತಿ ಸಾಮರ್ಥ್ಯವನ್ನು
ಬಳಸು' ಎಂದು
ಹೇಳಿದನು.

ಗುರುವು
ಕಲಿಸುವುದು
ಮಾತ್ರವಲ್ಲ,
ನಿಮ್ಮ ಇಡೀ
ಪರಿವರ್ತನೆಯೇ
ಆನಂದದಿಂದ
ಆಗುವಂತೆ
ನೋಡಿಕೊಳ್ಳುತ್ತಾನೆ.

ಮಗನು ಅತಿಯಾದ ಬಳಲಿಕೆಯಿಂದ, 'ಏನು ಹೇಳುತ್ತಿರುವಿ? ನನ್ನ ಎಲ್ಲ ಸಾಮರ್ಥ್ಯವನ್ನೂ ಉಪಯೋಗಿಸಿಲ್ಲವೆಂದೇ?, ನಾನೆಷ್ಟು ಬಳಲಿದ್ದೇನೆಂದು ಕಾಣುತ್ತಿಲ್ಲವೆ?' ಎಂದು ತಂದೆಗೆ ಕೂಗಿ ಹೇಳಿದನು.

ತಂದೆಯು, 'ನೀನು ನನ್ನ ಸಹಾಯ
ಕೇಳಬಹುದಾಗಿತ್ತು. ನಾನೂ ನಿನ್ನ ಬಲವಲ್ಲವೇ?'
ಎಂದು ಕೇಳಿದನು.

ಇದೇ ರೀತಿ ನೀವೂ ಗುರು ಸಾನಿಧ್ಯವನ್ನು ಬಳಸಿಕೊಳ್ಳಬಹುದು. ದಯವಿಟ್ಟು ಅರ್ಥ ಮಾಡಿಕೊಳ್ಳಿರಿ. ನೀವೂ ನನ್ನನ್ನು ಕೇಳಬಹುದು. ಗುರುವಿನ ಸಹಾಯ ಪಡೆಯಬಹುದು. ನೀವದನ್ನು ಮಾಡಿಯೇ ಇಲ್ಲ. ಗುರುವನ್ನು ನಿಮ್ಮ ಬಲವೆಂದು ತಿಳಿದಿಲ್ಲ. ಎಷ್ಟೊಂದು ಸಹಾಯ ಸಿಗುವಂತಿದೆ, ಆದರೆ ನೀವು ಕೇಳುವುದೂ ಇಲ್ಲ, ತೆಗೆದುಕೊಳ್ಳುವುದೂ ಇಲ್ಲ!

ಜೀವನವೇ ಗುರುವಾಗಿರಬಹುದು. ಆದರೆ ಎಲ್ಲಿ,
ಯಾವುದರಿಂದ, ಏನು ಕಲಿಯಬೇಕೆಂಬುದನ್ನು
ತಿಳಿಯುವುದು ಕಷ್ಟವಾಗುತ್ತದೆ. ಮಹಾತ್ಮರಾದ

ದತ್ತಾತ್ರೇಯರು ಹೇಳುವಂತೆ, ‘ನನಗೆ ಗುರುವೇ ಇಲ್ಲ, ಏಕೆಂದರೆ ಜೀವನವೇ ನನ್ನ ಗುರು. ಪಕ್ಷಿಯನ್ನು ಗುರಿಯಿಡುವ ಬೇಡನಿಂದ ನಾನು ಏಕಾಗ್ರತೆಯನ್ನು ಕಲಿತೆ. ಇರುವೆಗಳಿಂದ ಹಣ ಕೂಡಿಡುವುದನ್ನು ಕಲಿತೆ!’ ಎಂಬಂತಹ ಸರಿಯಾದ ತತ್ತ್ವಗಳನ್ನು ಕಲಿಯುವ ಜಾಣ್ಮೆಯಿದ್ದರೆ, ಜೀವನವೇ ಗುರುವಾಗುತ್ತದೆ. ಆದರೆ ಅನೇಕ ಬಾರಿ ನಾವು ತಪ್ಪು ವಿಷಯಗಳನ್ನೇ ಕಲಿಯುತ್ತೇವೆ.

ಒಂದು ಸಣ್ಣ ಕಥೆ:

ರಾಜ ಹರಿಶ್ಚಂದ್ರನು ತನ್ನ ಜೀವನವನ್ನೆಲ್ಲಾ ಸತ್ಯಪಾಲನೆಯಲ್ಲೇ ಕಳೆದನು. ಹರಿಶ್ಚಂದ್ರನ ಕಥೆಯಲ್ಲಿ, ಆತನು ಸತ್ಯಕ್ಕಾಗಿ ಜೀವಿಸಿದನು ಮತ್ತು ಒಂದು ಸಮಯದಲ್ಲಿ ಸತ್ಯಪಾಲನೆಗಾಗಿ ತನ್ನ ಮಡದಿ, ಮಗನನ್ನು ಸಹ ಮಾರಿಕೊಂಡನು ಎಂದು ಕೇಳಿದ್ದೇವೆ.

ಒಮ್ಮೆ ಒಂದು ಹಳ್ಳಿಯಲ್ಲಿ ಪಂಡಿತರೊಬ್ಬರು ಹರಿಶ್ಚಂದ್ರನ ಕಥೆಯನ್ನು ಹೇಳುತ್ತಿದ್ದರು. ಕಥೆ ಹೇಳಿದ ನಂತರ ಒಬ್ಬನನ್ನು, ‘ಈ ಕಥೆಯಿಂದ ಏನು ಕಲಿತೆ?’ ಎಂದು ಕೇಳಿದರು. ಆ ವ್ಯಕ್ತಿಯು, ‘ನಾನು ಜೀವನದಲ್ಲೇನೇ ಬಂದರೂ ಸತ್ಯವನ್ನೇ ಹೇಳಬೇಕೆಂಬುದನ್ನು ಕಲಿತೆ ಎಂದನು. ಪಂಡಿತನಿಗೆ ಸಂತೋಷವಾಯಿತು. ಆತನು ಮತ್ತೊಬ್ಬನನ್ನು, ‘ನೀನೇನು ಕಲಿತೆ?’ ಎಂದು ಕೇಳಿದನು. ಎರಡನೆಯವನು, ‘ಬಹು ಮುಖ್ಯವಾದ ಮತ್ತೊಂದು ವಿಷಯವನ್ನು ಕಲಿತೆ. ಅವಶ್ಯಕತೆ ಬಿದ್ದಾಗ ಹೆಂಡತಿಯನ್ನು ಮಾರಿದರೂ ತಪ್ಪೇನಲ್ಲ!’ ಎಂದು ಹೇಳಿದನು.

ತಿಳಿಯಿತೆ? ಒಂದೇ ಕಥೆಯಿಂದ ಎರಡು ವಿಷಯಗಳನ್ನು ಕಲಿಯಬಹುದು!

ಜೀವನದ ಪಾಠಗಳನ್ನು ಯಾವಾಗಲೂ
ಸರಿಯಾಗಿ ಕಲಿಯುವ ವಿವೇಕವು ನಿಮಗೆ
ಇಲ್ಲದಿರಬಹುದು. ಅದಕ್ಕೇ ನಿಮ್ಮ ಜೀವನದಲ್ಲಿ
ಗುರುವಿರುವುದು. ಆತನು ದಾರಿತೋರುವನು,
ಏಕೆಂದರೆ ಆತನು ಆ ದಾರಿಯಲ್ಲಿ ಆಗಲೇ ನಡೆದು
ಜಯಶಾಲಿಯಾಗಿರುವನು.

ಕೆಲವು ಔಷಧಗಳನ್ನು ಕೊಟ್ಟೂ ಗಡ್ಡೆಯನ್ನು ಗುಣಪಡಿಸಬಹುದು. ಆದರೆ ಅದಕ್ಕೆ ಅನೇಕ ವರ್ಷಗಳೇ ಬೇಕಾಗಬಹುದು. ಗುರುವು ಗಡ್ಡೆಯನ್ನು ಕ್ಷಣಮಾತ್ರದಲ್ಲೇ ತೆಗೆದುಹಾಕುವನು. ಇನ್ನೊಂದು ವಿಷಯ, ಜೀವನದಲ್ಲಿ ಗಡ್ಡೆಗಳಿಂದ ಆಗುವ ನೋವು ಗುರುಗಳು ಗಡ್ಡೆಗಳನ್ನು ತೆಗೆದಾಗ ಆಗುವ ನೋವಿಗಿಂತಲೂ ಬಹಳಷ್ಟು ಪಟ್ಟು ಹೆಚ್ಚಿನದು. ಗುರುವಿನೊಡನೆ ಇದ್ದು ಅವರು ಅದನ್ನು ತೆಗೆದುಹಾಕಿದಾಗ ಆಗುವ ನೋವು ಯಾವ ಲೆಕ್ಕಕ್ಕೂ ಇಲ್ಲ, ಆದರೆ ಗಡ್ಡೆಗಳೊಂದಿಗೆ ಇದ್ದು ಜೀವಿಸುವುದು ಅಪಾಯ ಹಾಗೂ ಕಷ್ಟ. ಆದುದರಿಂದಲೇ ಗುರುವಿನ ಬಳಿ ಹೋಗುವುದು ಉತ್ತಮ.

ಜೀವನವೆಂಬುದು ನಮ್ಮ ಆಸೆಗಳಿಂದ
ಅಳೆಯಲಾಗದ ಗಾಢವಾದ ರಹಸ್ಯ. ನಮ್ಮ ಆಸೆಗಳು
ಬಹಳ ದೊಡ್ಡದಾಗಿ, ಅವುಗಳನ್ನು
ಅನುಭವಿಸುವುದರಿಂದ ಜೀವನವೇ ಸಾರ್ಥಕವೆಂದೂ
ನಮಗೆ ತೋರುತ್ತವೆ. ಜೀವನವನ್ನು ನಾವು
ನೋಡುವ ಪರಿಮಿತ ದೃಷ್ಟಿಯಿಂದಾಗಿ, ಅತ್ಯಲ್ಪ
ವಿಷಯಗಳಿಗೆ ಪ್ರಾಮುಖ್ಯತೆ ನೀಡಿ, ಎದುರಿಗೇ
ಕಾದಿರುವ ಮಹತ್ತರವಾದ ವಿಷಯಗಳನ್ನು

ಅಲಕ್ಷಿಸುತ್ತೇವೆ. ತೊಂದರೆಯೇನೆಂದರೆ, ನಾವು ಆ
ಮಹತ್ತರವಾದ ವಿಷಯಗಳನ್ನು ಕಲ್ಪಿಸಿಕೊಳ್ಳಲೂ
ಸಾಧ್ಯವಿಲ್ಲ. ಏಕೆಂದರೆ ನಾವು ಅಂತಹವುಗಳನ್ನು
ಕಂಡೇ ಇರುವುದಿಲ್ಲ.

ಇಲ್ಲಿಯೇ ಗುರುವಿನ ಪಾತ್ರವಿರುವುದು. ಅವರು
ಜೀವನದ ಪರಿಪೂರ್ಣತೆಯನ್ನು ಕಂಡಿರುವವರು.
ನೀವು ಆಶಿಸುವುದನ್ನು ಮಾತ್ರವಲ್ಲದೆ, ನಿಮ್ಮ
ಊಹೆಗೂ ಮೀರಿದ ವಿಷಯಗಳನ್ನು ಅವರು
ಕಾಣಬಲ್ಲರು. ನಿಮ್ಮ ಜೀವನದಲ್ಲೂ ಆ
ಪರಿಪೂರ್ಣತೆಯುಂಟಾಗಲು ಸಹಾಯಮಾಡಲೆಂದೇ
ಅವರಿರುವುದು.

ನಿಮಗೆ ಬೇಕಾದುದೆಲ್ಲವೂ ಏನೆಂದರೆ, ಅವರೊಂದಿಗೆ ನಡೆಯುವಷ್ಟು ನಂಬಿಕೆ ಅಷ್ಟೇ. ಮುಂದಾಗುವ ಅನುಭವಗಳಿಂದ ನಿಮಗೆ ಈ ಸತ್ಯದ ಮೇಲೆ ಹೆಚ್ಚು ಭರವಸೆ ಮೂಡುತ್ತದೆ. ಆಗ ಒಂದು ಶ್ರೇಷ್ಠವಾದ ವರ್ತುಲವನ್ನು ಪ್ರವೇಶಿಸುತ್ತೀರಿ. ನಿಮ್ಮ ಭರವಸೆಯು ಗಾಢವಾದಂತೆಲ್ಲ ಹೆಚ್ಚು ಅನುಭವಗಳಾಗಿ, ಅದು ಇನ್ನೂ ಹೆಚ್ಚಿನ ಭರವಸೆ ಮೂಡಿಸುತ್ತದೆ.

ಗುರುವು ನಿಮ್ಮ ಮೇಲೆ ಏನನ್ನೂ ಹೊರಿಸುವುದಿಲ್ಲ. ಬದಲಿಗೆ ನಿಮ್ಮ ಮೇಲೆ ಹೊರಿಸಿರುವುದನ್ನೂ, ಬೇಕಿಲ್ಲದುದನ್ನೆಲ್ಲವನ್ನೂ ಕಿತ್ತೆಸೆದು ನಿಮ್ಮನ್ನು ಹೊಚ್ಚ ಹೊಸದಾಗಿಸುತ್ತಾನೆ. ನಿಮ್ಮದೇ ಆದ ಸುಂದರ ಚಿತ್ರವನ್ನು ರಚಿಸಲು ನೀವು ಹೊಸ ಬಿಳಿ ಕಾಗದದಂತಾಗುತ್ತೀರಿ. ನಿಮ್ಮ ಗಾನವನ್ನು ನೀವೇ ರಚಿಸಿ, ನಿಮ್ಮದೇ ನಾಟ್ಯವನ್ನು ಮಾಡಬಹುದು. ಗುರುವು ನಿಮ್ಮ ಜೀವನದ ಅತ್ಯಂತ ಮಧುರವಾದ ಅನುಭವಕ್ಕೆ ಬಾಗಿಲನ್ನು ತೆರೆಯುತ್ತಾನೆ.

ಗುರುವು ನಿಮ್ಮ
ಜೀವನದ ಅತ್ಯಂತ
ಮಧುರವಾದ
ಅನುಭವಕ್ಕೆ
ಬಾಗಿಲು
ತೆರೆಯುತ್ತಾನೆ.

ತಂತ್ರಕ್ಕೂ, ರಸ-
ವಾದಕ್ಕೂ ಇರುವ
ವ್ಯತ್ಯಾಸವನ್ನು ಅರಿತು-
ಕೊಳ್ಳಿರಿ. ತಂತ್ರವನ್ನು
ಪುನರಾವರ್ತಿಸಿದರೂ
ಪರಿಣಾಮವು ಒಂದೇ
ರೀತಿ ಇರುತ್ತದೆ. ರಸವಾದದಲ್ಲಿ ಒಂದೇ ಬಗೆಯ
ಪರಿಣಾಮವು ಪ್ರತಿಸಲವೂ ಇರುವುದೆಂದು
ಹೇಳಲಾಗದು. ಅಲ್ಲದೆ, ಸ್ವಂತವಾಗಿ ಮಾಡಲೂ
ಆಗದು.

ಗರುವಿನೊಂದಿಗೆ ಮಾಡುವ ತಂತ್ರವೇ
ರಸವಾದ. ಗುರುವಿಲ್ಲದೆ ಮಾಡುವ ರಸವಾದವು
ಕೇವಲ ತಂತ್ರ.