ಆನಂದ ಮಂತ್ರೋಚ್ಛಾರಣೆ
This text was machine-transcribed from the printed book and may contain errors. Select the words and choose “Report a mistake”.
ಆನಂದ ಮಂತ್ರವನ್ನು ಪಠಿಸುವುದು ಅಥವಾ ಪುರಶ್ಚರಣ.
ಮಂತ್ರಗಳನ್ನು ವೈದಿಕ ಭಾಷೆಯಾದ
ಸಂಸ್ಕೃತದಲ್ಲಿ ಪಠಿಸಲಾಗುತ್ತದೆ. ಅದರಲ್ಲಿರುವ
ಐವತ್ತೊಂದು ಅಕ್ಷರಗಳಿಂದ ಸಾಧ್ಯವಾದ ಎಲ್ಲಾ
ರೀತಿಯ ಶಬ್ದಗಳನ್ನೂ ವಿವರಿಸಿರುವುದು ಸಂಸ್ಕೃತ
ಭಾಷೆಯ ಸೊಗಸು. ಸಂಸ್ಕೃತಭಾಷೆಯು ಅರ್ಥವನ್ನು
ಕೊಡುವುದರ ಜೊತೆಗೆ, ಅದರ ಉಚ್ಚಾರಣೆಯ
ರೂಪವು ವಿಶಿಷ್ಟವಾದ ಕಂಪನಗಳನ್ನು ಪಸರಿಸುತ್ತದೆ.
ನಿಮಗೆ ಮಂತ್ರಗಳ ಅರ್ಥ, ತಿಳಿಯದಿದ್ದರೂ ಸಹ,
ಅದರ ಕಂಪನಗಳು ನಿಮ್ಮಮೇಲೆ ಪರಿಣಾಮ
ಬೀರುತ್ತವೆ.
ಪ್ರಾಚ್ಯದೇಶಗಳಲ್ಲಿ ಸಂಸ್ಕೃತ ಮಂತ್ರಗಳನ್ನು
ದೀಕ್ಷೆಗಾಗಿ ಉಪಯೋಗಿಸುತ್ತಾರೆ. ಒಂದು
ಮಂತ್ರವನ್ನು ಗುರುಗಳು ಉಚ್ಚರಿಸುತ್ತಾರೆ, ಆ
ಮಂತ್ರವೇ ಶಿಷ್ಯನಿಗೆ ಜಾಗೃತಗೊಳಿಸುವ
ದೀಕ್ಷೆಯಾಗುತ್ತದೆ. ಆ ಕಂಪನಗಳು ನೇರವಾಗಿ ಆ
ವ್ಯಕ್ತಿಯಲ್ಲಿ ಸೇರಿ ಕಾರ್ಯೋನ್ಮುಖವಾಗುತ್ತದೆ.
ಗುರು ಮಂತ್ರವು ಈ ರೀತಿ ಇದೆ:
ಓಂ ಹ್ರೀಂ ನಿತ್ಯಾನಂದಾಯ ನಮಃ
ಹಿಂದುಗಳ ಭಾವನೆಯಲ್ಲಿ ಪ್ರತಿಯೊಂದು
ಸರಳವಾದ ಕ್ರಿಯೆಯೂ ಅನೇಕ ಸ್ತರಗಳಲ್ಲಿ
ಅರ್ಥಗರ್ಭಿತವಾಗಿರುತ್ತದೆ. ಇದನ್ನು
ತಿಳಿದುಕೊಳ್ಳುವುದು ಅವರವರ ಅರಿವಿನ ಮಟ್ಟವನ್ನು
ಅವಲಂಬಿಸಿರುತ್ತದೆ. ಓಂ ಎಂಬ ಪದ ಅಥವಾ
ಶಬ್ದವು ಹಲವು ಸ್ತರಗಳಲ್ಲಿ ಹಲವಾರು ಅರ್ಥಗಳನ್ನು
ಕೊಡುತ್ತದೆ.
ಓಂ ಎಂಬುದು ಮೂಲ ಶಬ್ದ. ಈ ಸಮಗ್ರ
ಸೃಷ್ಟಿಯು ಅದರಿಂದಲೇ ಉದ್ಭವವಾಯಿತು ಎಂದು
ನಂಬಲಾಗಿದೆ. ಅದು ಅ, ಉ ಮತ್ತು ಮ ಎಂಬ
ಮೂರು ಉಚ್ಚಾರಗಳನ್ನೊಳಗೊಂಡಿದೆ. ಅ ಎಂಬ ಅಕ್ಷರವು ಈ ಪ್ರಪಂಚದ ಸೃಷ್ಟಿಕರ್ತನಾದ ಬ್ರಹ್ಮನನ್ನು ಪ್ರತಿನಿಧಿಸುತ್ತದೆ; ಉ ಎಂಬ ಅಕ್ಷರವು ಈ ಪ್ರಪಂಚವನ್ನು ರಕ್ಷಣೆಮಾಡುವ ವಿಷ್ಣುವನ್ನು ಪ್ರತಿನಿಧಿಸುತ್ತದೆ ಮತ್ತು ಮ ಎಂಬ ಅಕ್ಷರವು ಈ ಪ್ರಪಂಚದಲ್ಲಿ ಲಯವನ್ನು ಮಾಡಿ ಹೊಸ ಸೃಷ್ಟಿಗೆ ಅವಕಾಶ ಮಾಡುವ ಶಿವನನ್ನು ಪ್ರತಿನಿಧಿಸುತ್ತದೆ. ಇದರಿಂದಾಗಿ ಈ ಮೂರನ್ನೂ ಸೇರಿದ ಓಂ ಎಂಬ ಅಕ್ಷರವು ಈ ಸಮಗ್ರ ವಿಶ್ವದ ಅಭಿವ್ಯಕ್ತಿಯಾಗಿದೆ.
ಇನ್ನೂ ಆಳವಾದ ಸ್ತರದಲ್ಲಿ, ನಿಮ್ಮ ವೈಯಕ್ತಿಕ
ವಿಶ್ವವಾದ ದೇಹ - ಮನಸ್ಸಿನ ವ್ಯವಸ್ಥೆಯಲ್ಲಿ
ಜೀವಕೋಶದ ಮಟ್ಟದಲ್ಲಿ ಸಂಭವಿಸುವ ಸೃಷ್ಟಿ,
ಸ್ಥಿತಿ ಮತ್ತು ಲಯಗಳ ಚೈತನ್ಯವನ್ನೇ ದೇವರುಗಳು
ಪ್ರತಿನಿಧಿಸುತ್ತಾರೆ.
ಓಂ ಎಂಬುದನ್ನು ಪಠಿಸಿದಾಗ, ಅದು
ಭೂಮಾತೆಯ ದೃಢತೆಯ ಸಂಕಲ್ಪವನ್ನು ನೀಡುತ್ತದೆ.
ನಮ್ಮ ಕೋಪ, ಆಸೆ ಹಾಗೂ ಮನೋದೈಹಿಕ,
ವ್ಯಾಧಿಗಳನ್ನು ಅದು ಕರಗಿಸುತ್ತದೆ. ಅದು
ಭೂಮಾತೆಯಂತಹ ವೈಶಾಲ್ಯತೆಯನ್ನು ಹಾಗೂ
ಅಮಿತತೆಯನ್ನು ನಮ್ಮಲ್ಲಿ ತುಂಬುತ್ತದೆ. ಅದು
ಮನಸ್ಸನ್ನು ನಕಾರಾತ್ಮಕತೆಯಿಂದ ಬಿಡುಗಡೆ
ಮಾಡಿಸುತ್ತದೆ. ಅದು ಅಪಾರವಾದ ಚೈತನ್ಯವನ್ನು
ಬಿಡುಗಡೆಮಾಡುವುದಲ್ಲದೆ, ಮೆದುಳಿಗೆ ನವ
ತಾರುಣ್ಯವನ್ನು ನೀಡುತ್ತದೆ. ಅದು
ಮನಃಶಾಂತಿಯನ್ನೂ, ಏಕಾಗ್ರತೆಯ ಪರಮ
ಚೈತನ್ಯವನ್ನೂ ನೀಡುತ್ತದೆ. ಮನಸ್ಸನ್ನು
ಪ್ರಶಾಂತವಾಗಿಸಲು ಹಾಗೂ ಆತ್ಮದೊಳಗೆ
ಐಕ್ಯವಾಗಲು ಇದೊಂದು ಹಾರುವ ಫಲಕದಂತೆ.
ಹ್ರೀಂ ಎಂಬುದು ಪವಿತ್ರವಾದ ಸ್ತ್ರೀತತ್ವವಾದ ದೇವಿಯ ಬೀಜಮಂತ್ರ.
ಪ್ರಾಚೀನ ಭಾರತದ ಋಷಿಗಳು ಆದ್ಯ ಶಬ್ದಗಳನ್ನು ಪಠಿಸುತ್ತಿದ್ದರು ಹಾಗೂ ದೇಹ ಮನಸ್ಸು ಮತ್ತು ಆತ್ಮಗಳ ಸ್ತರಗಳಲ್ಲೂ ಆಳವಾದ ಅನುಭವವನ್ನು ಪಡೆಯುತ್ತಿದ್ದರು. ಮಹಾಋಷಿಗಳು ತಾವು ಅನುಭವಿಸಿದುದನ್ನು ಸರ್ವರೂ ಅನುಭವಿಸಲೆಂದು ಅದರ ವಿಜ್ಞಾನ ಮತ್ತು ಸಾಧನಾ ಮಾರ್ಗಗಳನ್ನು ಮಾನವ ಕುಲಕ್ಕೆ ಅರ್ಪಣೆ ಮಾಡಿದರು. ಋಷಿಗಳು ತಮ್ಮಲ್ಲುಂಟಾದ ಪರಮಾನುಭವವನ್ನು ಮಾನವರೊಂದಿಗೆ ಹಂಚಿಕೊಳ್ಳಬೇಕೆಂಬ ಅಭಿಲಾಷೆಯನ್ನು ಹೊಂದಿದ್ದು, ಅವರು ನಡೆಸಿದ ಸಂಶೋಧನಾ ವರದಿಗಳೇ ವೈದಿಕ ಕಾಲದ ಮಂತ್ರಗಳೆಲ್ಲವೂ.
ಓಂ ಮತ್ತು ಹ್ರೀಂ ಮಂತ್ರಗಳನ್ನು ಜೊತೆಯಲ್ಲಿ
ಪಠಿಸಿದರೆ, ಅದು ನಮ್ಮಲ್ಲಡಗಿರುವ ಸ್ತ್ರೀ ಮತ್ತು
ಪುರುಷ ಶಕ್ತಿಗಳನ್ನು ಜಾಗೃತಗೊಳಿಸುತ್ತದೆ.
ಪರಮ ಸತ್ಯದ ವ್ಯಕ್ತರೂಪವಾದ ಗುರುಗಳ
ಹೆಸರನ್ನು ಪ್ರಚೋದಿಸಲು ನಿತ್ಯಾನಂದ ಎಂಬುದಾಗಿ
ಪಠಿಸಲಾಗುತ್ತದೆ. ಇದು ಪೂರ್ಣಮೂಲಮಂತ್ರ.
ಏಕೆಂದರೆ, ಇದು ಇಹಲೋಕದ ಯಶಸ್ಸಿಗಾಗಿ,
ಶಕ್ತಿಯನ್ನು, ಪರಲೋಕದ ಯಶಸ್ಸಿಗಾಗಿ ಶಿವನನ್ನು
ಈ ಎರಡನ್ನೂ, ಎಂದರೆ ಜೀವನ್ಮುಕ್ತಿಯನ್ನು
ಹೊಂದುವ ನೇರವಾದ ಮಾರ್ಗ.
ನಿತ್ಯಾನಂದ ಪದದ ಅರ್ಥವು ನಿರಂತರ
ಆನಂದ ಎಂದೂ ಹೌದು. ಇದನ್ನು ಪಠಿಸುವುದರಿಂದ
ನಮ್ಮ ಆತ್ಮಕ್ಕೂ ಹಾಗೂ ವಿಶ್ವಕ್ಕೂ ನಮ್ಮ ಅಂತಿಮ
ಆಕಾಂಕ್ಷೆಯೇ ಶಾಶ್ವತಾನಂದ ಅಥವಾ ಜೀವನ್ಮುಕ್ತಿ ಎಂಬ ಸ್ಪಷ್ಟವಾದ ಅಭಿಪ್ರಾಯವನ್ನು ಕೊಡುತ್ತದೆ.
ನಮಃ ಎಂದರೆ ನಾನಲ್ಲ ಎಂದು ಅರ್ಥ.
ನಾನಲ್ಲ ಎಂದು ಹೇಳಿದಾಗ ಅಹಂಕಾರವನ್ನು
ಬ್ರಹ್ಮಾಂಡಕ್ಕೆ ಅಥವಾ ಬ್ರಹ್ಮಾಂಡದ
ಶುದ್ಧರೂಪವಾದ ಗುರುಗಳಿಗೆ ಸಮರ್ಪಣೆ
ಮಾಡುತ್ತೇವೆ, ನಮಃ ಎಂಬುದನ್ನು
ಪುನರುಚ್ಚಾರಣೆ ಮಾಡುವುದರಿಂದ ನಮ್ಮ
ಶರಣಾಗತಿಯ ಭಾವನೆ ಬಲವಾಗುತ್ತದೆ. ಅದು
ನಮ್ಮಲ್ಲಿ ವಿಧೇಯತೆ ಮತ್ತು ನಮ್ರತೆಯನ್ನು
ಮೂಡಿಸುತ್ತದೆ.
ಧ್ಯಾನ
ಗುರುಮಂತ್ರವನ್ನು ನಿತ್ಯವೂ ಐವತ್ತನಾಲ್ಕು ಸಲ ಹನ್ನೊಂದು ದಿನಗಳು ಅಥವಾ ನೆನಪಾದಾಗಲೆಲ್ಲಾ ಸತತವಾಗಿ ಉಚ್ಚರಿಸುತ್ತಿರಿ. ಉಚ್ಚಾರಣೆಯನ್ನು ಗಟ್ಟಿಯಾಗಿ ಇಲ್ಲವೇ ಮನಸ್ಸಿನಲ್ಲೇ ನಿಶ್ಯಬ್ದವಾಗಿ ಮಾಡಬಹುದು. ಜಪಿಸುವ ಗತಿಯಲ್ಲಿ ಒಬ್ಬರಿಂದೊಬ್ಬರಿಗೆ ವ್ಯತ್ಯಾಸವಿರುತ್ತದೆ.
ಈ ಮಂತ್ರಕ್ಕೆ ಅಂತರಂಗದಲ್ಲಿ ಶಕ್ತಿಯನ್ನು
ನೀಡುವ ಮತ್ತು ಅನಾವಶ್ಯಕವಾದ ಯೋಚನೆಗಳು
ಮೇಲೆದ್ದು ಬರದಂತೆ ಮಾಡುವ ಗುಣವಿದೆ. ನಾಭಿ
ಪ್ರದೇಶದಲ್ಲಿ ಇರುವ ಮಣಿಪೂರಕ ಚಕ್ರವೆಂಬ
ಚೈತನ್ಯ ಕೇಂದ್ರದಿಂದ ಯೋಚನೆಗಳು ಶಬ್ದವಿಲ್ಲದ
ಪದಗಳಾಗಿ ಮೇಲೇಳುತ್ತವೆ. ಗುರುಮಂತ್ರವನ್ನು
ಉಚ್ಚರಿಸುವುದರಿಂದ ಮಣಿಪೂರಕ ಚಕ್ರವು

ಸಂಪೂರ್ಣವಾಗಿ
ಸ್ವಚ್ಛವಾಗುತ್ತದೆ.
ಇದು ತಾನಾಗಿಯೇ
ಎಲ್ಲಾ ಚಿಂತೆಗಳನ್ನು,
ನಕಾರಾತ್ಮಕ
ಯೋಚನೆಗಳನ್ನು
ಮತ್ತು ಆವೇಶ-
ಗಳನ್ನೂ ತೆಗೆದು-
ಹಾಕಲು ಕಾರಣ-
ವಾಗುತ್ತದೆ.
ಗುರುಮಂತ್ರವು ವಾಕ್ಶಕ್ತಿ ಎಂದು ಕರೆಯಲ್ಪಡುವ ಮಾತಿನ ಹಿಂದಿರುವ ಶಕ್ತಿಯನ್ನು ಶುದ್ಧಿ-ಮಾಡುತ್ತದೆ. ಅದು ಬಾಳಿಗೆ ಸಂಭ್ರಮ, ತೀವ್ರ ಉತ್ಸಾಹ ಹಾಗೂ ಉಕ್ಕಿ ಬರುವ ಚೈತನ್ಯವನ್ನು ನಿರಂ-ತರವಾಗಿ ನೀಡುತ್ತದೆ.
ಈ ಮಂತ್ರದ ಕಂಪನಕ್ಕೆ ಆತ್ಮದ ಕಂಪನ ಮತ್ತು
ಆವರ್ತವನ್ನು ಬದಲಾಯಿಸುವ ಸಾಧ್ಯತೆ ಇದೆ.
ಮಂತ್ರಮಗ್ನರಾಗಿದ್ದು ಸತತವಾಗಿ ಅರಿವನ್ನು ಮರಳಿ
ಮರಳಿ ಮಂತ್ರಕ್ಕೆ ತಂದುಕೊಂಡರೆ, ಅಂತರಂಗದ
ಅರಿವಿನ ಸಮೀಪಕ್ಕೆ ಬರುತ್ತೀರಿ.
ನೀರಿನ ತೊಟ್ಟಿಯೊಂದರ ಅಡಿಯಲ್ಲಿ ನೀಲಿ ಬಣ್ಣದ ಪುಡಿಯನ್ನು ಇಟ್ಟರೆ ಮೇಲೆದ್ದು ಬರುವ ನೀರಿನ ಗುಳ್ಳೆಗಳೂ ಹೇಗೆ ನೀಲಿಬಣ್ಣದ್ದಾಗಿರುತ್ತವೆಯೋ, ಹಾಗೆಯೇ ಮಂತ್ರವನ್ನು ನಿಮ್ಮ ಅರಿವಿನ ಕೇಂದ್ರದಲ್ಲಿಟ್ಟುಕೊಂಡರೆ, ನಿಮ್ಮ ಆಲೋಚನಾ ವ್ಯವಸ್ಥೆಯೂ ಪರಿ-ಶುದ್ಧವಾಗಿಬಿಡುತ್ತದೆ. ಮಂತ್ರವು
ಶ್ರಮವಿಲ್ಲದೆಯೇ ಸಂಭವಿಸಲು
ಆರಂಭವಾಗುವುದನ್ನು ನೀವು ಕ್ರಮೇಣ ನೋಡುವಿರಿ
ಮತ್ತು ಸ್ವಾಭಾವಿಕವಾಗಿ ಧ್ಯಾನ ಸ್ಥಿತಿಗೆ
ಹೋಗಿಬಿಡುವಿರಿ.
ಮಂತ್ರವನ್ನು ಒಂದು ನಿರ್ದಿಷ್ಟ ಸಂಕಲ್ಪದಿಂದ
ಮಾಡಿದಾಗ, ಅದೊಂದು ತೀವ್ರವಾದ
ಪ್ರಾರ್ಥನೆಯಾಗುತ್ತದೆ. ಪ್ರಾರ್ಥನೆಯು ದೇಹ
ಮನಸ್ಸು ಮತ್ತು ಆತ್ಮಗಳ ಮೇಲೆ ಗಮನಾರ್ಹವಾದ
ಪರಿಣಾಮ ಬೀರುತ್ತದೆ ಎಂದು ವೈದ್ಯಕೀಯ
ಸಂಶೋಧನೆಗಳು ಸಮರ್ಥಿಸಿವೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಪ್ರಧಾನ ವಿಶ್ವವಿದ್ಯಾನಿಲಯಗಳಲ್ಲಿ ಕ್ಯಾನ್ಸರ್ ಮತ್ತು ಹೃದ್ರೋಗಗಳಿಂದ ಆಗುವ ಸಾವಿನ ಪ್ರಮಾಣದಲ್ಲಿ ಶೇಕಡ ನಲವತ್ತು ಭಾಗ ಪ್ರಾರ್ಥನೆಯಿಂದ ಕಡಿಮೆಯಾಗುತ್ತದೆಯೆಂದೂ, ಹೃದಯ ಚಿಕಿತ್ಸೆಯಿಂದ ಬದುಕಿ ಉಳಿಯುವವರ ಪ್ರಮಾಣ ಹದಿನಾಲ್ಕು ಪಟ್ಟು ಹೆಚ್ಚಾಗುತ್ತದೆಯೆಂದೂ, ಹಿರಿಯ ನಾಗರೀಕರಲ್ಲಿ ಆಘಾತಗಳ ಪ್ರಮಾಣ ಅರ್ಧಕ್ಕೆ ಇಳಿಯುತ್ತದೆಯೆಂದೂ ಮತ್ತು ಆಸ್ಪತ್ರೆ ದಾಖಲಾತಿಯ ಸಮಯ ಪ್ರಮಾಣದಲ್ಲಿ ಮೂರುವಾರಗಳಷ್ಟು ಕಡಿಮೆಯಾಗುತ್ತದೆಯೆಂದೂ ಕಂಡುಹಿಡಿದಿದ್ದಾರೆ. ಪ್ರಾರ್ಥನೆಯ ಸಕಾರಾತ್ಮಕ ಪರಿಣಾಮಗಳನ್ನು ಸಮರ್ಥಿಸುವ ದೊಡ್ಡದೊಂದು ದತ್ತಾಂಶಗಳ ಸಂಗ್ರಹ 'ಇಂಟರ್ನೆಟ್'ನಲ್ಲಿದೆ.