ಪ್ರತಿದಿನದ ಆನಂದಮಯ ಜೀವನಕ್ಕಾಗಿ ಎಂಟು ಹೆಜ್ಜೆಗಳು
This text was machine-transcribed from the printed book and may contain errors. Select the words and choose “Report a mistake”.
ಆನಂದ ಜೀವನ
ಇದು ಆನಂದ ಜೀವನಕ್ಕೆ ಎಂಟು ಅಂಗಗಳಿರುವ ಮಾರ್ಗ ಅಥವಾ ಆನಂದ ಅಷ್ಟಾಂಗ.
ಜೀವನ್ಮುಕ್ತಿಯನ್ನು ಹೊಂದಲು ಆನಂದ
ಅಷ್ಟಾಂಗ ಅಥವಾ ಆನಂದಮಯ ಜೀವನ
ಎಂಬುವುದು ಸರಳವಾದ ಎಂಟು ಅಂಗಗಳ ಮಾರ್ಗ.
ಇವುಗಳನ್ನು ಅರ್ಥಮಾಡಿಕೊಳ್ಳುವ ಮತ್ತು
ಗ್ರಹಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಇವು
ನೇರವಾಗಿ ಅನುಭವಕ್ಕೆ ಕೊಂಡೊಯ್ಯುವ ಸರಳವಾದ
ತಂತ್ರಗಳು.
ಇವು ಯಾವುವೆಂದರೆ:
ಆನಂದ ನಗೆ
ಆನಂದ ಸಂಕಲ್ಪ
ಆನಂದ ಶುದ್ಧೀಕರಣ
ಆನಂದ ಯೋಗ
ಆನಂದ ಧ್ಯಾನ
ಆನಂದ ಸಾಧನ
ಆನಂದ ಶಕ್ತಿ
ಆನಂದ ಮಂತ್ರೋಚ್ಚಾರಣೆ
ಆನಂದ ನಗೆ
ನಗೆವಿನ ಧ್ಯಾನ ಅಥವಾ ಹಾಸ್ಯಧ್ಯಾನ
ಧ್ಯಾನ
ಪ್ರಾತಃಕಾಲ ನಿಮಗೆ ನಿದ್ದೆಯಿಂದ ಎದ್ದ ತಕ್ಷಣ ಹಾಸಿಗೆಯಿಂದ ಏಳುವ ಮೊದಲೇ, ಐದು ನಿಮಿಷಗಳ ಕಾಲ ನಗುತ್ತಾ ಇದ್ದುಬಿಡಿ! ನಿಮ್ಮಿಷ್ಟಕ್ಕೆ ನೀವೇ ನಗುತ್ತಾ ಇರಿ. ಕಾರಣವಿಲ್ಲದೆಯೇ ನಗುತ್ತಾ ಇರಿ. ನಗೆಯು ಒಂದು ವಿಶೇಷವಾದ ಧ್ಯಾನೋಪಾಯ. ನಗೆಯು ‘ಮನೋರಹಿತ’ಸ್ಥಿತಿಯನ್ನು ಮುಟ್ಟಲು ಪುರಾತನವಾದ ಝೆನ್ ಗುರುಶಿಷ್ಯ ಪರಂಪರೆಯ ಒಂದು ಉಪಾಯ. ನಾವು ನಂಬುತ್ತೇವೆಯೋ
ಇಲ್ಲವೋ, ನಗೆಯು ಪರಿಣಾಮಕಾರಿಯಾದದ್ದು.
ಅದು ಕೂಡಲೇ ಪರಿಣಾಮ ಉಂಟುಮಾಡುತ್ತದೆ.
ಬೇರೆ ತಂತ್ರಗಳಾದರೆ, ಅವುಗಳನ್ನು ಅಭ್ಯಾಸ
ಮಾಡಿದ ನಂತರವೇ ಫಲವನ್ನು ಕಾಣಲಾಗುವುದು.
ಆದರೆ ನಗುವನ್ನು ಅಭ್ಯಾಸ ಮಾಡಬೇಕಾಗಿಲ್ಲ. ಅದು
ಮೊದಲನೇ ಬಾರಿ ಮತ್ತು ಪ್ರತಿಯೊಂದು ಬಾರಿಯೂ
ಆಗುತ್ತದೆ. ಅದು ಆಳಕ್ಕೆ ಹೋಗಿ ದೈಹಿಕವಾಗಿ
ಹಾಗೂ ಮಾನಸಿಕವಾಗಿ ಗುಣಪಡಿಸುತ್ತದೆ.
ನಗುವು ಆರೋಗ್ಯದಿಂದ ಹುಟ್ಟಿ, ಆರೋಗ್ಯವನ್ನು ಹುಟ್ಟಿಸುತ್ತದೆ. ಅದೊಂದು ಉಕ್ಕಿಹರಿಯುವ ಚೈತನ್ಯ. ತಡೆದುಹಿಡಿದಿರುವ ಭಾವಾವೇಶಗಳನ್ನು ಅದು ಬಿಡುಗಡೆ ಮಾಡುತ್ತದೆ.
ನಗು ಎಂಬುದು ಒಂದು ಅತಿ ದೊಡ್ಡ ಆಧ್ಯಾತ್ಮಿಕ ಗುಣ. ನಗುವಿನಲ್ಲಿ ನಾವು ಜ್ಞಾನೋದಯ ಹೊಂದಿದ ಬುದ್ಧನಂತಾಗಿಬಿಡುತ್ತೇವೆ. ಬುದ್ಧ ಎಂದರೆ 'ಮನೋರಹಿತ', ಎಂದು. ನಾವು ನಗುತ್ತಿರುವಾಗ ಆ ಕೆಲವು ಘಳಿಗೆಗಳಲ್ಲಿ 'ಮನೋರಹಿತ' ಸ್ಥಿತಿಯಲ್ಲಿ ಇರುತ್ತೇವೆ. ನಗು ಇಲ್ಲವೇ ಮನಸ್ಸು ಇವೆರಡರಲ್ಲೊಂದು ಇರಲು ಸಾಧ್ಯ. ಎರಡೂ ಏಕಕಾಲದಲ್ಲಿರಲು ಎಂದಿಗೂ ಸಾಧ್ಯವಿಲ್ಲ. ನಾವು ನಗುವಾಗ, ಆ ಕ್ಷಣದಲ್ಲಿ ನಮ್ಮ ಮನಸ್ಸು ಅದೃಶ್ಯವಾಗುತ್ತದೆ ಮತ್ತು ವಿಶ್ವಶಕ್ತಿಯೊಂದಿಗೆ ನಾವು ಒಂದಾಗಿಬಿಡುತ್ತೇವೆ. ನಮ್ಮ ವ್ಯಕ್ತಿತ್ವದ ಅರಿವು ನಮಗಿರುವುದಿಲ್ಲ. ನಾವು ನಗುವಿನ ಉತ್ತುಂಗ ಸ್ಥಿತಿಯಲ್ಲಿದ್ದಾಗ ನಮ್ಮನ್ನು ನಾವು ಬೇರೆ ಎಂಬಂತೆ ಕಾಣಬಲ್ಲೆವೆ? ಇಲ್ಲ! ಆ ಇಲ್ಲದಿರುವಿಕೆಯೇ ಕ್ಷಣಿಕವಾದ ಮನೋರಹಿತ ಸ್ಥಿತಿ ಹಾಗೂ ವಿಶ್ವಶಕ್ತಿಯಲ್ಲಿ ತಲ್ಲೀನವಾಗುವುದು. ಆದುದರಿಂದಲೇ ನಾವು ಹೆಚ್ಚು ಹೆಚ್ಚು ನಗುತ್ತಿರಬೇಕು. ಕೊನೆಗೆ ನಮ್ಮ ಗುರುತವನ್ನು ಕಳೆದುಕೊಂಡು ಚೈತನ್ಯದೊಂದಿಗೆ ಒಂದಾಗಿ ಬಾಳನ್ನು ಸಾಗಿಸಲು ಆ ನಮ್ಮ ಗುರುತು ಅಥವಾ ವ್ಯಕ್ತಿತ್ವ ಇಲ್ಲದಂತಾಗುವ ಕ್ಷಣಗಳನ್ನು ಹೆಚ್ಚಿಸಿಕೊಳ್ಳಬೇಕು.
ಹಲವಾರು ರೋಗಗಳನ್ನು, ಅದರಲ್ಲೂ,
ವಿಶೇಷವಾಗಿ ನರವ್ಯೂಹ ಮತ್ತು ಗಂಟಲಿನ
ರೋಗಗಳನ್ನು ನಗುವು ನಿವಾರಿಸಬಲ್ಲದು.
ಜೀವಕೋಶದ ಕ್ರಿಯೆಯಿಂದಾಗಿ ಆಗುವ ಹಾನಿಕರ
ಉಪ ಉತ್ಪತ್ತಿಗಳನ್ನು ಒಂದು ಹೃತ್ಪೂರ್ವಕವಾದ
ನಗೆಯು ಹಿಂಡಿ ಹೊರಹಾಕುತ್ತದೆ ಎನ್ನಲಾಗಿದೆ.
ಆನಂದ ಸಂಕಲ್ಪ
ಆನಂದದ ಒಂದು ಪ್ರತಿಜ್ಞೆ ಅಥವಾ ಆನಂದ ಸಂಕಲ್ಪ.
ಸಂಕಲ್ಪವೆಂದರೆ ಪ್ರತಿಜ್ಞೆ, ಆನಂದ
ಸಂಕಲ್ಪವೆಂದರೆ ಆನಂದದಲ್ಲೇ ಇದ್ದು ಬಿಡುವ
ಪ್ರತಿಜ್ಞೆ.
ನೀವು ಆನಂದದಲ್ಲೇ ಇದ್ದುಬಿಡುವ
ತೀರ್ಮಾನವನ್ನು ತೆಗೆದುಕೊಳ್ಳಬಹುದು. ಅದು
ನೀವೇ ಮಾಡಿಕೊಳ್ಳುವ ಆಯ್ಕೆ. ನಿಜವೆಂದರೆ, ಅದು
ನೀವು ಮಾಡಿಕೊಳ್ಳುವ ಆಯ್ಕೆಯೂ ಅಲ್ಲ.
ವಿಶ್ವಶಕ್ತಿಯು ನಿಮಗೆ ಉದ್ದೇಶಿಸುವ ಇಚ್ಛೆಗೆ
ಅನುಸಾರವಾಗಿ ಆಯ್ಕೆಗಳೇ ಇಲ್ಲದಂತಹ ರೀತಿಯಲ್ಲಿ
ಹಾಯಾಗಿ ಸಾಗಲು ನೀವು ಸಮ್ಮತಿಸಿದರೆ, ನೀವು
ಚಿರಕಾಲ ಆನಂದದಲ್ಲೇ ಇರುತ್ತೀರಿ. ಆಯ್ಕೆಗಳೇ
ಇಲ್ಲದ ಈ ಮನೋಭಾವನೆಯನ್ನು ನಾವು ಬೆಳೆಸಿಕೊಳ್ಳಲು ಸಾಧ್ಯ.
ಈ ಧ್ಯಾನದ ಒಂದು ಭಾಗದ ಮೂಲವು ಸೂಫಿ
ಅನುಭಾವಿಗಳಾದ ಅಬ್ದುಲ್ಲಾರವರದು. ಸೂಫಿಗಳು
ಅತ್ಯಂತ ಆನಂದದ ಪಂಥದವರು, ಕೃತಜ್ಞತೆಯೇ
ಇವರ ಪ್ರಾರ್ಥನೆ, ಬೇರೇನೂ ಇಲ್ಲ. ಸದಾ
ಹಸನ್ಮುಖಿ ಎಂದು ಅಬ್ದುಲ್ಲಾರವರು ಖ್ಯಾತಿ
ಪಡೆದಿದ್ದರು. ಅವರ ಮರಣ ಶಯ್ಯೆಯಲ್ಲಿದ್ದಾಗಲೂ
ನಗುತ್ತಾ ಇದ್ದರು ಎನ್ನುತ್ತಾರೆ. ಕೊನೆಗೂ ಅವರ
ಕೆಲವು ಶಿಷ್ಯರು ಅಬ್ದುಲ್ಲಾರವರನ್ನು, ಈ ರೀತಿ
ಯಾವಾಗಲೂ ಆನಂದದಲ್ಲೇ ಹೇಗೆ ಇರುತ್ತೀರಿ,
ಎಂದು ಕೇಳದೆಯೇ ಇರಲಾಗಲಿಲ್ಲ.
ಅವರು, 'ಗುರುಗಳೇ, ಸಾವಿನಲ್ಲಿ ಅದೇನು
ಮೋಜಿದೆ?' ಎಂದು ಆತನನ್ನು ಕೇಳಿದರು.
ತಮ್ಮ ಗುರುಗಳು ಕಲಿಸಿದ ರಹಸ್ಯವನ್ನು ಆಗ ಅವರಿಗೆ ನೀಡುತ್ತಾ ಹೀಗೆಂದರು, 'ನಿಮ್ಮ ಸಂತೋಷ ನಿಮ್ಮ ಕೈಯಲ್ಲಿದೆ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಸಂತೋಷ ಪ್ರತಿಶತ ನೂರೊ ನಿಮ್ಮದೇ ಆದ ಆಯ್ಕೆ. ಪ್ರತಿನಿತ್ಯವೂ ಬಾಳಿನಲ್ಲಿ ಸಂತೋಷವಾಗಿರುವ ಅಥವಾ ದುಃಖದಿಂದಿರುವ ಆಯ್ಕೆಯನ್ನು ಜೀವನವು ನೀಡುತ್ತದೆ. ನೀವೇನು ಆಯ್ದುಕೊಳ್ಳುವಿರೋ ಅದು ನಿಮಗೆ ಬಿಟ್ಟದ್ದು!'.
ಧ್ಯಾನ
ಇದಕ್ಕಿಂತಲೂ ಸುಲಭವಾದ ಧ್ಯಾನದ ವಿಧಾನ
ಇರಲು ಸಾಧ್ಯವಿಲ್ಲ. ಆದರೂ ಸಹ ಇದು ಅತ್ಯಂತ
ಪರಿಣಾಮಕಾರಿಯಾದದ್ದು.
ಪ್ರಾತಃಕಾಲ ಪ್ರತಿದಿನ ನೀವು ಎಚ್ಚರಗೊಳ್ಳುತ್ತಿರುವಂತೆಯೇ, ಕಣ್ಣು ಬಿಡುವುದಕ್ಕೂ ಮುಂಚೆ, ಹಾಸಿಗೆಯ ಮೇಲೆ ಕುಳಿತುಕೊಳ್ಳಿರಿ. ನಿಮ್ಮ ಹೆಸರನ್ನು ಗಟ್ಟಿಯಾಗಿ ಹೇಳಿರಿ. ಗಟ್ಟಿಯಾಗಿ ಹೇಳುವುದರಿಂದ ನಿಮ್ಮ ಸುತ್ತಮುತ್ತಲಿರುವವರಿಗೆ ಗಲಾಟೆಯಾಗುತ್ತದೆ ಎನಿಸಿದರೆ ನಿಶ್ಯಬ್ದವಾಗಿ ಕೇವಲ ನಿಮ್ಮೊಳಗೇ ಹೇಳಿಕೊಳ್ಳಿ.
(ಏಕವಚನದಲ್ಲಿ ನಿಮ್ಮನ್ನು ಹೆಸರಿನಿಂದ
ಸಂಭೋಧಿಸುತ್ತಾ) 'ಇಂದು ಅನುಭವಿಸಲು ನಾನು
ಏನನ್ನು ಆಯ್ಕೆ ಮಾಡಿಕೊಳ್ಳಲಿ? ಸುಖವನ್ನೇ ಅಥವಾ
ದುಃಖವನ್ನೇ?' ಎಂದು ವಿಚಾರಿಸಿಕೊಳ್ಳಿರಿ.
ಮೊದಲನೆಯದಾಗಿ ಸಹಜವಾಗಿ ಬೆಳಗ್ಗೆ ಎದ್ದು
ನೀವು ದುಃಖವನ್ನೇನೂ ಆಯ್ದುಕೊಳ್ಳುವುದಿಲ್ಲವಲ್ಲ!
ಆದುದರಿಂದ ನಿಮ್ಮ ಮನಸ್ಸು 'ನಾನು ಸಂತೋಷವನ್ನು
ಆಯ್ದುಕೊಳ್ಳುತ್ತೇನೆ' ಎನ್ನುತ್ತದೆ.
ಆಗ, 'ಸರಿ' ಎಂದು (ನಿಮ್ಮ ಹೆಸರು ಹೇಳಿ) ಸಂತೋಷವಾಗಿದ್ದುಬಿಡಿ. ಅಲ್ಲಿಗೆ ಮುಗಿಯಿತಷ್ಟೆ!
ಆನಂತರ ಸ್ವಲ್ಪ ಸಮಯ ಕಣ್ಣುಗಳನ್ನು
ಮುಚ್ಚಿಕೊಂಡು, ಏನೇ ಆದರೂ ಸರಿ, ನೀವೇ
ಅನುಮತಿ ನೀಡದೆ ದುಃಖ ಪಡುವುದಿಲ್ಲ, ಎಂಬ
ತೀರ್ಮಾನಕ್ಕೆ ಬನ್ನಿರಿ. ಹೊರಗಿನ ಪರಿಸ್ಥಿತಿಗಳ
ಕಾರಣದಿಂದಾಗಿ ದುಃಖಿಪಡಲು ನೀವು
ಸಮ್ಮತಿಸುವುದರಿಂದಲೇ ನೀವು ದುಃಖಿ ಪಡುವುದು.
ಯಾವಾಗಲೂ ಸಂತೋಷವಾಗಿರಬಲ್ಲ ಶಕ್ತಿ ನಿಮ್ಮಲ್ಲಿ
ಅಡಕವಾಗಿದೆ. ಈಗ ನೀವು ಕಣ್ಣೆರೆದುಕೊಂಡು ನಿಮ್ಮ
ಸಂಕಲ್ಪವನ್ನು ನೆರವೇರಿಸಿಕೊಂಡು ಬಾಳಿರಿ!
ಕೇವಲ ಈ ಸಂಕಲ್ಪದಿಂದಾಗಿ ನಿಮ್ಮ ಮನೋಧಾಟಿಯೇ ಬದಲಾಯಿಸಿ ಹೋಗಿರುವುದನ್ನು ನೀವು ದಿನವೆಲ್ಲಾ ಕಾಣುತ್ತೀರಿ. ನೀವೆಂದುಕೊಂಡಂತೆ ಏನಾದರೂ ಆಗದಿದ್ದರೆ ಪ್ರತಿಯೊಂದು ಬಾರಿಯೂ ತೊಂದರೆಗೊಳಗಾಗುವುದನ್ನು ನೀವೇ ಆಯ್ಕೆಮಾಡಿಕೊಂಡಿದ್ದರೂ ಸಹ, ಇದುವರೆಗೂ ಬೇರೆಯವರನ್ನು ನಿಮ್ಮ ಕ್ಲೇಶಕ್ಕಾಗಿ ದೂಷಿಸುತ್ತಿದ್ದಿರಿ ಎಂಬುದನ್ನು ಕಾಣುವಿರಿ. ಹೊರಗಿನ ಪರಿಸ್ಥಿತಿಗಳಿಂದ ಅಲ್ಲ, ಅವು ಇದ್ದೂ ಅವನ್ನು ಲಕ್ಷಿಸದೆ ಸಂತೋಷವಾಗಿರುವ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತೀರಿ. ನೀವು ಸಂತೋಷದಿಂದಿದ್ದೀರಿ, ಏಕೆಂದರೆ ನೀವು ಸಂತೋಷದಿಂದಿದ್ದೀರಿ, ಅಷ್ಟೆ.
ಆನಂದ ಶುದ್ಧೀಕರಣ
- ಎಣ್ಣೆಯನ್ನು ಮುಕ್ಕಳಿಸುವುದು.
ದೇಹದಲ್ಲಿ ಏನಾಗುತ್ತಿದೆ ಎಂಬುದನ್ನು
ತಿಳಿಯಲು ನಾಲಿಗೆ ಒಂದು ಸೂಚಿ ಎನ್ನಲಾಗಿದೆ.
ನಾಲಿಗೆಯನ್ನೂ, ಅದರ ಬಣ್ಣವನ್ನೂ
ಪರೀಕ್ಷಿಸುವುದರಿಂದ, ಒಬ್ಬ ವ್ಯಕ್ತಿಯ ವೈದ್ಯಕೀಯ
ಪರಿಸ್ಥಿತಿಯನ್ನು ಊಹಿಸಬಹುದು. ಆಯುರ್ವೇದದ
ಪ್ರಕಾರ ನಾಲಿಗೆಯ ನಿರ್ದಿಷ್ಟವಾದ ಸ್ಥಾನಗಳು
ಮೂತ್ರಪಿಂಡ, ಶ್ವಾಸಕೋಶ ಹಾಗೂ ಇತರ
ನಿರ್ದಿಷ್ಟವಾದ ಅಂಗಾಂಗಗಳಿಗೆ ಸೇರಿಸಲ್ಪಟ್ಟಿವೆ.
ನಾವು ಎಣ್ಣೆಯನ್ನು ಮುಕ್ಕಳಿಸಿದಾಗ, ಎಣ್ಣೆಯು
ಶ್ಲೇಷ್ಮ, ಕಫ, ಏಕಾಣುಜೀವಿ ಮತ್ತು
ವಿಷನಂಜುಗಳನ್ನು ನಾಲಿಗೆ ಮತ್ತು ಎಂಜಲಿನ
ಮೂಲಕ ಎಳೆದುಬಿಡುತ್ತದೆ. ಆಯುರ್ವೇದದ
ಪ್ರಕಾರ ಕಫ ವಿಷಮಯವಾದದ್ದರಿಂದ ಅದನ್ನು
ತೆಗೆದು ಹಾಕಲೇ ಬೇಕು.
ಧ್ಯಾನ
ಪ್ರಾತಃಕಾಲ, ಹಲ್ಲುಜ್ಜುವ ಮೊದಲೇ, ಏನನ್ನಾದರೂ ಸೇವಿಸುವ ಮೊದಲು, ಒಂದು ಟೇಬಲ್ಸ್ಪೂನ್ನಷ್ಟು ಎಳ್ಳೆಣ್ಣೆ ಅಥವಾ ಸೂರ್ಯಕಾಂತಿ ಎಣ್ಣೆಯನ್ನು ಬಾಯಲ್ಲಿ ಹಾಕಿಕೊಂಡು ಒಂದುಕಡೆ ಕುಳಿತುಕೊಳ್ಳಿರಿ. ಹಿಂದಿನ ದವಡೆ ಹಲ್ಲಿನಕಡೆಗೆ ಎಣ್ಣೆ ಸರಿಯುವಂತೆ ಗಲ್ಲವನ್ನು ಸ್ವಲ್ಪ ಮೇಲಕ್ಕೆ ಎತ್ತಿ, ನಂತರ ಹಲ್ಲುಗಳನ್ನು ಕಚ್ಚಿಕೊಂಡು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಎಣ್ಣೆಯನ್ನು ಹಲ್ಲಿನ ಮೂಲಕ ಮೃದುವಾಗಿ ಮುಕ್ಕಳಿಸುತ್ತಾ ಇರಿ.
ಈ ಕ್ರಿಯೆ ಮಾಡುತ್ತಿರುವಾಗ ಇತರೆ ಯಾವ ಕೆಲಸಗಳನ್ನೂ ಮಾಡಬೇಡಿರಿ. ಸಮಯವಾದ ನಂತರ ಎಣ್ಣೆಯನ್ನು ಉಗಿದುಬಿಡಿರಿ. ಎಣ್ಣೆ ಮುಕ್ಕಳಿಸುವುದನ್ನು ಸರಿಯಾದ ರೀತಿಯಲ್ಲಿ ಮಾಡಿದ್ದರೆ, ನೀವು ಉಗಿಯುವ ಎಣ್ಣೆಯು ತೆಳುವಾಗಿಯೂ, ಬಿಳಿಯ ಬಣ್ಣದ್ದಾಗಿಯೂ ಆಗಿರುತ್ತದೆ. ಬಾಯನ್ನು ತೊಳೆದು ಕೊಂಡು, ನೀರನ್ನು

ಮುಕ್ಕಳಿಸಿದ ನಂತರ ಎರಡು ಲೋಟ ನೀರನ್ನು ಕುಡಿಯಿರಿ.
ಗಮನಿಸಿ:
ಎಣ್ಣೆಯನ್ನು
ಮುಕ್ಕಳಿಸುವಾಗ ಅದನ್ನು
ಕುಡಿಯಬೇಡಿರಿ.
ಅದರಲ್ಲಿ ಏಕಾಣುಜೀವಿಗಳು ಮತ್ತು
ಪರೋಪಜೀವಿಗಳಿರುತ್ತವೆ. ಊಟವಾದ ನಂತರ
ಎಣ್ಣೆಯನ್ನು ಮುಕ್ಕಳಿಸುವುದಾದರೆ, ಕನಿಷ್ಠ ಪಕ್ಷ
ನಾಲ್ಕು ಗಂಟೆಗಳ ನಂತರ ಮಾಡಬಹುದು.
ಹಿಮ್ಮಡಿ ಒಡೆಯುವುದರಿಂದ ಕ್ಯಾನ್ಸರ್ವರೆಗೂ
ಅನೇಕ ದೈಹಿಕ ದುರವಸ್ಥೆಗಳು ಎಣ್ಣೆಯನ್ನು
ಮುಕ್ಕಳಿಸುವುದರಿಂದ ನಿವಾರಣೆಯಾಗುತ್ತವೆ
ಎನ್ನಲಾಗಿದೆ. ಎಣ್ಣೆಯನ್ನು ಮುಕ್ಕಳಿಸುವುದರಿಂದ
ಆಗುವ ಲಾಭಗಳನ್ನು ಕುರಿತು ನಡೆಸಿರುವ
ಸಂಶೋಧನೆಗಳ ವ್ಯಾಪಕ ವರದಿಗಳು
ಇಂಟರ್ನೆಟ್ನಲ್ಲಿ ದೊರಕುತ್ತವೆ.
ಆನಂದ ಯೋಗ
– ಸೂರ್ಯ ನಮಸ್ಕಾರ
ಸೂರ್ಯ ನಮಸ್ಕಾರವು ನಿತ್ಯಯೋಗದ ಒಂದು
ಭಾಗ. ನಿತ್ಯಯೋಗದ ವೈಶಿಷ್ಟ್ಯವೆಂದರೆ
ಪತಂಜಲಿಯವರ ಆದ್ಯ ಬೋಧನೆಗಳನ್ನು ಆಧುನಿಕ
ಮನಸ್ಸಿಗೆ ಒಪ್ಪಿಗೆಯಾಗುವಂತೆ ಸಜೀವವಾಗಿಸುವುದು.
ಪತಂಜಲಿಯವರನ್ನು ಯೋಗದ ಪಿತಾಮಹ ಎಂದು
ಪರಿಗಣಿಸಲಾಗಿದೆ.
ಸೂರ್ಯ ನಮಸ್ಕಾರವು ಸೂರ್ಯನಿಗೆ ಪ್ರತಿನಿತ್ಯ
ಮಾಡುವ ವಂದನೆ. ಅದು ದೇಹದ
ಚಟುವಟಿಕೆಗಳನ್ನು ಉತ್ತಮ ಸ್ಥಿತಿಯಲ್ಲಿ
ಇಡುವುದಲ್ಲದೇ, ದೇಹ-ಮನಸ್ಸಿನ ಸಂಬಂಧದ
ಪೂರ್ಣ ಅರಿವನ್ನು ಸಹ ಅದು ಮೂಡಿಸುತ್ತದೆ.
ಸೂರ್ಯ ನಮಸ್ಕಾರದ ಪ್ರಯೋಜನಗಳು
ಸೂರ್ಯ ನಮಸ್ಕಾರವನ್ನು ಅಭ್ಯಾಸಮಾಡುವುದರಿಂದ, ಸೂರ್ಯನಿಂದ ನೇರವಾಗಿ ಚೈತನ್ಯವನ್ನು ಆಕರ್ಷಿಸಿಕೊಳ್ಳುವ ದೇಹ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ನಮ್ಮನ್ನು ಆವರಿಸಿರುವ ಸೂಕ್ಷ್ಮ ಚೈತನ್ಯವನ್ನು ಪಡೆದುಕೊಳ್ಳಲು ಸೂರ್ಯ ನಮಸ್ಕಾರವನ್ನು ರೂಪಿಸಲಾಗಿದೆ. ಅದನ್ನು ಪ್ರಾತಃಕಾಲ, ಪೂರ್ವಾಭಿಮುಖವಾಗಿ ಬೆಳಗಿನ ಸೂರ್ಯನ ಪ್ರಥಮ ಕಿರಣಗಳಲ್ಲಿ ಸರಿಯಾದ ಉಸಿರಾಟ ತಂತ್ರದಿಂದ ಹಾಗೂ ಮಂತ್ರಪೂರ್ವಕವಾಗಿ ಮಾಡಿದರೆ, ದೇಹ, ಮನಸ್ಸು ಮತ್ತು ಜೀವಗಳ ಮೇಲೆ ಅದ್ಭುತವಾದ ಪರಿಣಾಮವನ್ನು ಬೀರುತ್ತದೆ. ಇನ್ನೇನನ್ನೂ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.
ಇದು ದೇಹದ ಎಲ್ಲಾ ಭಾಗ, ಎಲ್ಲಾ ಅಂಗಾಂಗ ವ್ಯವಸ್ಥೆ ಮತ್ತು ಚಕ್ರಗಳ ಮೇಲೆ ಕೆಲಸ ಮಾಡುತ್ತದೆ. ಅದು ಲವಲವಿಕೆಯಿಂದ ಕ್ರಿಯಾತ್ಮಕವಾಗಿ, ಸುಲಭವಾಗಿ, ಕ್ರಮವಾದ ಉಸಿರಾಟದೊಂದಿಗೆ ಮಾಡಬೇಕಾದ ಅನುಕ್ರಮವಾದ ಆಸನಗಳ ಸರಣಿ. ಸೂರ್ಯನಮಸ್ಕಾರವನ್ನು ಪ್ರತಿನಿತ್ಯ ಪ್ರಾತಃಕಾಲದಲ್ಲಿ ಆರರಿಂದ ಹನ್ನೆರಡುಬಾರಿ ಮಾಡಬಹುದು. ಕೈ ಕಾಲುಗಳನ್ನು ಶಕ್ತಿಯುತವಾಗಿಸಲು, ದೇಹದ ಎಲ್ಲಾ ಭಾಗಗಳನ್ನೂ ಹಾಗೂ ಬೆನ್ನೆಲುಬನ್ನು ಚಾಚಿ ಬಲಪಡಿಸಲು ಸೂರ್ಯ ನಮಸ್ಕಾರವು ಬೇರೆಲ್ಲಾ ಯೋಗಾಸನಗಳಿಗಿಂತಲೂ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಸೂರ್ಯ ನಮಸ್ಕಾರವು ಎಲ್ಲ ಆಸನಗಳ ರಾಜ ಎಂದು ಗೌರವಿಸಲಾಗಿದೆ.
ಸೂರ್ಯ ನಮಸ್ಕಾರ ಮಂತ್ರಗಳ ಮಹತ್ವ
ಮಂತ್ರವು ಅಕ್ಷರ, ಪದ, ಪದಗುಚ್ಛ ಹಾಗೂ
ವಾಕ್ಯಗಳಿಂದ ಸಂಯೋಜಿತವಾದುದು. ಮಂತ್ರಗಳನ್ನು
ಅರಿವಿನಿಂದ ಪಠನ ಮಾಡಿದರೆ, ದೇಹ ಮತ್ತು
ಮಾನಸ್ಸಿನ ಮೇಲೆ ಅತ್ಯಂತ ಶಕ್ತಿಯುತವಾದ,
ಪ್ರಬಲವಾದ ಪರಿಣಾಮ ಉಂಟಾಗುತ್ತದೆ. ಸೂರ್ಯ
ನಮಸ್ಕಾರ ಮಂತ್ರವು ಒಂದು ಬೀಜಮಂತ್ರ ಹಾಗೂ
ಒಂದು ಸ್ತೋತ್ರದಿಂದ ಆದ ಸಂಯೋಜನೆ. ಸ್ತೋತ್ರ
ಮಾಡುವುದು ಸೂರ್ಯದೇವನನ್ನು. ಬೀಜಮಂತ್ರಕ್ಕೆ
ತನ್ನದೇ ಆದ ಅರ್ಥವಿಲ್ಲದಿದ್ದರೂ ಅದರ
ಪಠಣದಿಂದ ಉಂಟಾಗುವ ಕಂಪನವು ಮನುಷ್ಯನ
ವ್ಯವಸ್ಥೆಮೇಲೆ ಬಹಳ ಪ್ರಭಾವಕಾರಿಯಾದದ್ದು.
ಆಧುನಿಕ ವಿಜ್ಞಾನಿಗಳು ಪ್ರತಿಪಾದಿಸಿರುವ ಕಂಪನಗಳ
ಸಿದ್ಧಾಂತವನ್ನು ಸಾವಿರಾರು ವರ್ಷಗಳ ಹಿಂದೆಯೇ
ನಮ್ಮ ಪ್ರಾಚೀನ ವಿಜ್ಞಾನಿಗಳಾದ ಋಷಿಗಳು
ನೇರವಾಗಿ ಪ್ರಯೋಗ ಮಾಡಿದ್ದರು!
ಜಪಾನಿನ ಡಾ|| ಮಸಾರೋ ಎಮೋಟೊ
ಎಂಬುವರು ನಡೆಸಿದ ಅಧ್ಯಯನಗಳು ಧ್ವನಿಯ
ಕಂಪನದಿಂದ ನೀರಿನ ಮೇಲೆ ಗಹನವಾದ
ಪರಿಣಾಮವಿದೆಯೆಂದು ಸ್ಪಷ್ಟವಾಗಿ ಸಮರ್ಥಿಸಿವೆ.
ಮಾನವ ಶರೀರವು ಶೇಕಡಾ ಅರವತ್ತು ಭಾಗ
ನೀರಿನಿಂದ ತುಂಬಿದೆ, ಆದುದರಿಂದ ಧ್ವನಿಯ
ಕಂಪನಗಳು ನಮ್ಮ ದೇಹ-ಮನಸ್ಸುಗಳ ವ್ಯವಸ್ಥೆಯ
ಮೇಲೆಯೂ ಪ್ರಭಾವ ಬೀರಬಲ್ಲವು ಮತ್ತು
ಬೀರುತ್ತವೆ ಎಂಬುದು ಪ್ರಮಾಣಪೂರ್ವಕವಾದುದು.
ಪ್ರಜ್ಞಾಹೀನ ಆಲೋಚನೆಗಳು ಹಾಗೂ
ಭಾವನೆಗಳು ಶಕ್ತಿಯುತವಾದ ಕಂಪನಗಳನ್ನು
ನಮ್ಮಲ್ಲಿ ಸಂಗ್ರಹಿಸಲ್ಪಟ್ಟ ನೆನಪುಗಳು ಅಥವಾ
ಸಂಸ್ಕಾರಗಳ ರೂಪದಲ್ಲಿ ಸೃಷ್ಟಿಮಾಡುತ್ತವೆ.
ಅರಿವಿನಿಂದ ಅವುಗಳನ್ನು ನಾವು ಕರಗಿಸಬೇಕು. ಆಗ
ನಮ್ಮೊಳಗೇ ಇರುವ ಸಂಪೂರ್ಣವಾದ,
ಸಕಾರಾತ್ಮಕವಾದ ಪ್ರಜ್ಞೆಯ ಅನುಭವವಾಗುತ್ತದೆ.
ಆರು ಬೀಜ ಮಂತ್ರಗಳಿವೆ. ಅವು ಯಾವುವೆಂದರೆ:
ಓಂ ಹ್ರಾಂ
ಓಂ ಹ್ರೀಂ
ಓಂ ಹ್ರೂಂ
ಓಂ ಹೈಂ
ಓಂ ಹ್ರೌಂ
ಓ ಹ್ರಃ
ಈ ಮಂತ್ರಗಳು ಸೂರ್ಯನ ಶ್ರೇಷ್ಠ ಗುಣಗಳನ್ನು
ಸ್ತುತಿಸುತ್ತವೆ. ಮೊದಲನೆಯ ಸೂತ್ರದಿಂದ
ಪ್ರಾರಂಭಿಸಿ ಪ್ರತಿ ಮಂತ್ರವನ್ನೂ ಸೂರ್ಯ
ನಮಸ್ಕಾರದ ಪ್ರತಿ ಆವರ್ತದ ಮೊದಲು
ಪೂರ್ಣವಾದ ಅರಿವನ್ನಿಟ್ಟುಕೊಂಡು ಪಠಿಸಬೇಕು.
ಪ್ರಾಮಾಣಿಕ ಸಾಧಕರಿಗೆ ಸ್ತೋತ್ರದಲ್ಲಿರುವ
ಗುಣಗಳನ್ನು ಆಳವಾಗಿ ಗ್ರಹಿಸುವಂತೆ ಮಾಡುವ
ಶಕ್ತಿಯು ಮಂತ್ರಗಳಿಗಿವೆ.
ಈ ಸರಳವಾದ ಕ್ರಮಗಳಿಂದ, ನಮ್ಮೊಳಗೇ
ಇರುವ ಅಂತರಾತ್ಮದ ಪ್ರಜ್ವಲವಾದ ಜ್ಞಾನವನ್ನು
ಹೊರಗಿರುವ ಸೂರ್ಯನು ಸೂಚಿಸುತ್ತಾನೆ
ಎಂಬುದನ್ನು ತಿಳಿಯಬಹುದು. ಸರ್ವವ್ಯಾಪಿಯಾದ
ವಿಶ್ವ ಚೈತನ್ಯಕ್ಕೂ ನಮಗೂ ಇರುವ ಸಂಪರ್ಕವನ್ನು
ನಾವು ಮನಗಾಣುತ್ತೇವೆ.
ಸೂರ್ಯ ನಮಸ್ಕಾರದ ಮಂತ್ರಗಳು (ಬೀಜ ಮಂತ್ರ ಹಾಗೂ ಸ್ತುತಿಗಳಿಂದ ವಿರಚಿತ)
1. ಓಂ ಹ್ರಾಂ ಮಿತ್ರಾಯ ನಮಃ
ನಿತ್ಯ ಮಿತ್ರನಿಗೆ ವಂದನೆಗಳು.
2. ಓಂ ಹ್ರೀಂ ರವಯೇ ನಮಃ
ನಿತ್ಯ ಬೆಳಗುವವನಿಗೆ ವಂದನೆಗಳು.
3. ಓಂ ಹ್ರೂಂ ಸೂರ್ಯಾಯ ನಮಃ
ಚಟುವಟಿಕೆಯನ್ನು ಮೂಡಿಸುವವನಿಗೆ ವಂದನೆಗಳು.
4. ಓಂ ಹೈಂ ಭಾನವೇ ನಮಃ
ನಿತ್ಯ ಕಾಂತಿಯನ್ನು ನೀಡುವವನಿಗೆ ವಂದನೆಗಳು.
5. ಓಂ ಹ್ರೌಂ ಖಗಾಯ ನಮಃ
ನಿತ್ಯ ವೇಗವಾಗಿ ಚಲಿಸುವವನಿಗೆ ವಂದನೆಗಳು.
6. ಓಂ ಹೃಃ ಪೂಷ್ಟೇ ನಮಃ
ನಿತ್ಯ ಶಕ್ತಿಯನ್ನು ಕೊಡುವವನಿಗೆ ವಂದನೆಗಳು.
7. ಓಂ ಹ್ರಾಂ ಹಿರಣ್ಯಗರ್ಭಾಯ ನಮಃ
ಸುವರ್ಣ ವಿಶ್ವ ಗರ್ಭಕ್ಕೆ ವಂದನೆಗಳು.
8. ಓಂ ಹ್ರೀಂ ಮರೀಚಯೇ ನಮಃ
ಪ್ರಾತಃಕಾಲದ ಅಧಿಪತಿಗೆ ವಂದನೆಗಳು.
9. ಓಂ ಹ್ರೂಂ ಆದಿತ್ಯಾಯ ನಮಃ
ಅನಂತ ವಿಶ್ವಮಾತೆ ಅದಿತಿಯ ಪುತ್ರನಿಗೆ ವಂದನೆಗಳು.
10. ಓಂ ಹೈಂ ಸಾವಿತ್ರೇ ನಮಃ
ನಿತ್ಯ ದಯಾಮಯಿಗೆ ವಂದನೆಗಳು.
11. ಓಂ ಹ್ರೌಂ ಅರ್ಕಾಯ ನಮಃ
ನಿತ್ಯ ಕೀರ್ತಿವಂತನಿಗೆ ವಂದನೆಗಳು.
12. ಓಂ ಹೃಃ ಭಾಸ್ಕರಾಯ ನಮಃ
ಜೀವನ್ಮುಕ್ತಿಗೊಯ್ಯುವ ಅನಂತನಿಗೆ ವಂದನೆಗಳು.
ಪ್ರಾಣಾಯಾಮ
ಸೂರ್ಯ ನಮಸ್ಕಾರದಲ್ಲಿ ದೇಹದ
ಪ್ರತಿಯೊಂದು ಚಲನೆಯೂ, ಉಸಿರಾಟವೂ, ಒಟ್ಟಿಗೆ
ನಡೆಯುತ್ತದೆ. ಪ್ರತಿಯೊಂದು ಪೂರಕ (ಉಚ್ಛ್ವಾಸ)
ಮತ್ತು ರೇಚಕ(ನಿಶ್ವಾಸ)ವನ್ನು ಮಾಡುವಾಗಲೂ ಆನಂದ ಚೈತನ್ಯವನ್ನು ಒಳಕ್ಕೆ ತೆಗೆದುಕೊಳ್ಳುತ್ತಿರುವುದನ್ನೂ, ಹೊರಕ್ಕೆ ಬಿಡುತ್ತಿರುವುದನ್ನೂ ಸ್ಪಷ್ಟವಾಗಿ ದೃಶ್ಯಿಕರಿಸಿಕೊಳ್ಳಿರಿ. ನಿಮ್ಮ ಪ್ರತಿಯೊಂದು ಜೀವಕಣದಲ್ಲೂ ಆನಂದ ಶಕ್ತಿಯು ಹರಿದು ನಮ್ಮ ದೇಹ-ಮಾನಸ್ಸು ಪುನರುಜ್ಜಿವನಗೊಳ್ಳುತ್ತಿದೆ ಎಂದು ಭಾವಿಸಿರಿ.
ಧ್ಯಾನ
ಇದನ್ನು ಪ್ರಾತಃಕಾಲ ಬರೀ ಹೊಟ್ಟೆಯಲ್ಲಿ ಮಾಡುವುದು ಉಚಿತ.
ಆಸನ. ಸೂರ್ಯ ನಮಸ್ಕಾರದ ಆಸನ ಅನುಕ್ರಮ:
1. ಸಮಸ್ಥಿತಿಗಾಗಿ ಪಾದಗಳ ಮಧ್ಯೆ ಸ್ವಲ್ಪ
ಅಂತರವಿಟ್ಟು, ನಿಂತುಕೊಳ್ಳಿರಿ. ಎರಡೂ ಕೈಗಳನ್ನು
ಎದೆಯ ಮುಂದೆ ನಮಸ್ಕಾರ ಮುದ್ರೆಯಲ್ಲಿ
ಇಟ್ಟುಕೊಳ್ಳಿರಿ. ಸೂರ್ಯ ನಮಸ್ಕಾರ ಮಾಡಿ
ಮುಗಿಸುವವರೆಗೂ ಕಣ್ಣುಗಳನ್ನು ತೆರೆದಿರಿ.
ಅನುಕ್ರಮವಾದ ಮಂತ್ರೋಚ್ಚಾರಣೆಯನ್ನು ಮಾಡಿರಿ.
2. ಪೂರಕ ಮಾಡುತ್ತಾ, ಸುಲಲಿತವಾಗಿ
ಕೈಗಳನ್ನು ಬೀಸಿಕೊಂಡು ತಲೆಯ ಮೇಲಕ್ಕೆತ್ತಿರಿ,
ಹಾಗೂ ಬೆನ್ನುಹುರಿಯನ್ನೂ ಹಿಂದಕ್ಕೆ ಸ್ವಲ್ಪ
ನಯವಾಗಿ ಬಾಗಿಸಿರಿ.
3. ರೇಚಕ ಮಾಡುತ್ತಾ, ಕೈಗಳನ್ನು
ಬೀಸಿಕೊಂಡು ಮುಂದಕ್ಕೆ ಬಗ್ಗಿ ಎರಡೂ ಕೈಗಳಿಂದ
ಪಾದಗಳ ಪಕ್ಕದ ನೆಲವನ್ನು ಮುಟ್ಟಿರಿ ಹಾಗೂ
ಹಣೆಯನ್ನು ಮಂಡಿಗಳ ಹತ್ತಿರದಲ್ಲಿರಿಸಿಂ. ಇದು
ಸುಲಭವಾಗಲು ನಿಮ್ಮ ಮಂಡಿಗಳನ್ನು ಸ್ವಲ್ಪ
ಬಗ್ಗಿಸಬಹುದು.
4. ಪೂರಕ ಮಾಡುತ್ತಾ, ಬಲ ಪಾದವನ್ನು ಆದಷ್ಟೂ ಹಿಂದಕ್ಕೆ ಇಟ್ಟು ಮತ್ತು ಎದೆಯ ಭಾಗವನ್ನು ಎತ್ತರಿಸುತ್ತಾ ಹಾಗೆಯೇ ಮೇಲಕ್ಕೆ ನೋಡಿರಿ.
5. ಕುಂಭಕ (ಉಸಿರನ್ನು
ಹಿಡಿದಿಟ್ಟುಕೊಳ್ಳುವುದು) ಮಾಡಿಕೊಂಡು, ಎಡ
ಪಾದವನ್ನು ಹಿಂದಕ್ಕೆ ಇಟ್ಟು ನಿಮ್ಮ ಕೈಗಳನ್ನು
ಭುಜದ ಕೆಳಗೆ ಇಟ್ಟುಕೊಳ್ಳಿರಿ. ನಂತರ ಕತ್ತು,
ಬೆನ್ನೆಲುಬು ಹಾಗೂ ತಲೆಯನ್ನೂ ಒಂದಾ
ಸಮರೇಖೆಯಲ್ಲಿ ಹಲಗೆಯ ರೀತಿಗೆ ತಂದು ಕೊಳ್ಳಿರಿ,
ನಿಮ್ಮ ನೋಟವು ನೆಲದಕಡೆಗೆ ಇರಲಿ.
6. ರೇಚಕ ಮಾಡುತ್ತಾ ಮಂಡಿ, ಎದೆ, ಹಾಗೂ ಗಲ್ಲವನ್ನು ಕೆಳಗಿಳಿಸಿ ನೆಲಕ್ಕೆ ತಾಗಿಸಿರಿ ಮತ್ತು ಎಂಟು ಅಂಗಗಳು ನೆಲಕ್ಕೆ ತಾಗಿಕೊಳ್ಳುವ ಸಾಷ್ಟಾಂಗ ನಮಸ್ಕಾರ ಸ್ಥಿತಿಗೆ ಬನ್ನಿರಿ. ನಿಮ್ಮ ಮೊಣಕೈಗಳು ಮಡಚಿಕೊಂಡಿದ್ದು, ನಿಮ್ಮ ಹೊಟ್ಟೆ ಹಾಗೂ ಸೊಂಟವು ನೆಲ ಮುಟ್ಟದ ಹಾಗೆ ಸ್ವಲ್ಪ ಮೇಲಕ್ಕೆ ಎತ್ತಿಕೊಂಡಿರಲಿ.
7. ಪೂರಕ ಮಾಡುತ್ತಾ, ಕಾಲಿನ ಹೆಬ್ಬೆರಳನ್ನು
ಹಿಂದಕ್ಕೆ ಮೊನೆಮಾಡಿಕೊಂಡು, ನಿಮ್ಮ
ಮೊಣಕೈಯನ್ನು ತೊಂಬತ್ತು ಡಿಗ್ರಿ ಕೋನವಾಗಿ
ಬಾಗಿಸಿಕೊಂಡು, ಉದರವನ್ನು ಸಡಿಲಬಿಟ್ಟು ನೆಲಕ್ಕೆ
ತಾಗಿಸಿರಿ. ನಂತರ ಮೃದುವಾಗಿ ಕೈಗಳನ್ನು ಒತ್ತಿ
ಎದೆಯನ್ನು ಮೇಲಕ್ಕೆ ಎತ್ತಿ, ಭುಜಾಂಗಾಸನದ
ಭಂಗಿಗೆ ಬನ್ನಿ.

8. ರೇಚಕ ಮಾಡುತ್ತಾ, ಕೈಗಳನ್ನು
ಒತ್ತಿಕೊಂಡು ಸೊಂಟವನ್ನು ಮೇಲಕ್ಕೂ ಹಾಗೂ
ಹಿಂದಕ್ಕೂ ಎತ್ತಿ ಅಧೋಮುಖ ಶ್ವಾನಾಸನದ
ಭಂಗಿಗೆ ಬಂದು ಕೈ ಬೆರಳುಗಳನ್ನು
ಅಗಲವಾಗಿಟ್ಟುಕೊಂಡು ಹಿಮ್ಮಡಿಯಿಂದ ನೆಲವನ್ನು
ಮೃದುವಾಗಿ ಒತ್ತಿರಿ. ಹಿಮ್ಮಡಿಗಳನ್ನು ನೆಲಕ್ಕೆ
ತಾಗಿಸಲಾಗದಿದ್ದರೆ ಚಿಂತೆ ಇಲ್ಲ. ಆದರೆ ಅವನ್ನು
ನೆಲಮುಟ್ಟಿಸುವ ಸಲುವಾಗಿ ಭಂಗಿಯನ್ನು
ಅಲುಗಿಸಬೇಡಿರಿ.
9. ನಿಮ್ಮ ಬಲಪಾದವನ್ನು ಮುಂದೆ ತಂದು
ಎರಡು ಹಸ್ತಗಳ ಮಧ್ಯೆ ಎಷ್ಟು ದೂರ ಸಾಧ್ಯವೋ
ಅಷ್ಟು ದೂರ ಇಡಿರಿ. ಮೃದುವಾಗಿ ಮುಂದೆ
ನೋಡುತ್ತಿರಿ. ಗಲ್ಲ ಮತ್ತು ಎದೆಯನ್ನು ಮೇಲಕ್ಕೆ
ಎತ್ತುತ್ತಾ ಪೂರಕ ಮಾಡಿಕೊಳ್ಳಿರಿ.
10. ಎಡಪಾದವನ್ನು ಮುಂದೆತಂದು ಬಲಪಾದದ
ಜೊತೆಗೆ ಇಟ್ಟು, ಮಂಡಿಯನ್ನೂ ಸ್ವಲ್ಪ
ಬಗ್ಗಿಸಬೇಕೆನಿಸಿದರೆ ಬಾಗಿಸಿ, ರೇಚಕ ಮಾಡುತ್ತಾ
தலೆಯನ್ನು ಮಂಡಿಗಳ ಹತ್ತಿರವಿಡಿರಿ.
11. ಪೂರಕ ಮಾಡುತ್ತಾ, ಕೈಗಳನ್ನು ಬೀಸಿ தலೆಯ ಮೇಲಕ್ಕೆ ಎತ್ತಿಕೊಂಡು ಸೂರ್ಯನನ್ನು ವಂದಿಸುತ್ತಾ ಬೆನ್ನು ಹುರಿಯನ್ನು ಹಿಂದಕ್ಕೆ ಕಮಾನಿನ ಹಾಗೆ ಬಾಗಿಸಿರಿ.
12. ರೇಚಕ ಮಾಡುತ್ತಾ, ಕೈಗಳನ್ನು ಕೆಳಕ್ಕೆ
ತಂದು ನಿಮ್ಮ ಎದೆಯ ಮುಂಭಾಗದಲ್ಲಿ ನಮಸ್ಕಾರ
ಮುದ್ರೆ ಮಾಡಿಕೊಳ್ಳಿರಿ.
ಪ್ರತಿ ಆವರ್ತನದಲ್ಲೂ ಈ ರೀತಿಯಾದ
ಹನ್ನೆರಡು ಆಸನಗಳ ಇಂತಹ ಎರಡು
ಚಲನೆಗಳಿರುತ್ತವೆ. ಆವರ್ತದ ಮೊದಲ
ಅರ್ಧಭಾಗದಲ್ಲಿ ಹಂತ 4 ಮತ್ತು 9 ರಲ್ಲಿ
ಬಲಪಾದವನ್ನು ಮುಂದುಮಾಡಿರಿ, ನಂತರದ ಅರ್ಧ
ಭಾಗದಲ್ಲಿ ನಿಮ್ಮ ಎಡಪಾದವನ್ನು ಮುಂದಿಡಿರಿ.
ಕನಿಷ್ಠ ಪಕ್ಷ ಈ ರೀತಿಯ ಆರು
ಆವರ್ತನಗಳನ್ನು, ಸಾಧ್ಯವಾದರೆ ಹನ್ನೆರಡು
ಆವರ್ತನಗಳನ್ನು ಮಾಡಿರಿ. ಪ್ರತಿ ಆವರ್ತನದ
ಮೊದಲು ಮಂತ್ರವನ್ನು ಅನುಕ್ರಮವಾಗಿ ಪಠಿಸಿರಿ.
ಆನಂದ ಧ್ಯಾನ
- ನಿತ್ಯ ಧ್ಯಾನ ಆನಂದ ಜೀವನಕ್ಕಾಗಿ ಧ್ಯಾನ
ನನ್ನ ಹನ್ನೊಂದನೇ ವಯಸ್ಸಿನವರೆಗೂ ಅನೇಕ
ಸಾಂಪ್ರದಾಯಿಕ ಧ್ಯಾನ ತಂತ್ರಗಳನ್ನು ಪರಿಶೋಧಿಸಿ,
ಪ್ರಯೋಗಿಸಿ ನೋಡಿದೆನು. ಹನ್ನೆರಡನೆಯ
ವಯಸ್ಸಿನಲ್ಲಿ ಒಂದು ಗಹನವಾದ ಆಧ್ಯಾತ್ಮಿಕ
ಅನುಭವ ನನಗಾಯಿತು. ಹನ್ನೆರಡರಿಂದ
ಇಪ್ಪತ್ತೊಂದನೇ ವಯಸ್ಸಿನವರೆಗೂ, ವಿವಿಧ ಧ್ಯಾನ
ತಂತ್ರಗಳನ್ನು ಪ್ರಜ್ಞಾಪೂರ್ವಕವಾಗಿ ಪರಿಶೀಲಿಸಿ,
ವಿಶ್ಲೇಷಿಸಿದೆ. ನನಗೆ ಜ್ಞಾನೋದಯವಾದ ನಂತರ
ಮೂರು ವರ್ಷಗಳ ಕಾಲ, ಜ್ಞಾನೋದಯದ ನನ್ನ
ಅನುಭವವನ್ನು ಇತರರಲ್ಲಿ ಪುನರುತ್ಪಾದಿಸುವಂತೆ
ಮಾಡುವ ಸಲುವಾಗಿ, ಒಂದು ತಂತ್ರವನ್ನು ರೂಪಿಸಿ,
ಸೂಕ್ತವಾಗುವಂತೆ ಮಾಡಿದೆನು. ನಿತ್ಯಧ್ಯಾನ ಧ್ಯಾನ
ತಂತ್ರದಲ್ಲಿ ಸೂತ್ರಿಸಿರುವುದು ಈ ಸಮಗ್ರ ಒಳ
ಪ್ರಪಂಚದಲ್ಲಿ ಇದುವರೆಗೂ ನಡೆಸಿರುವ
ಸಂಶೋಧನೆಯ ಸಾರಾಂಶ.
ಜೀವನ್ಮುಕ್ತಿಯ ಅಂತಿಮ ಅನುಭವವನ್ನು ಪಡೆಯಲು ಅಸ್ತಿತ್ವವನ್ನು ಪೂರ್ಣವಾಗಿ ಬದಲಾಯಿಸಿ, ಸಿದ್ಧವಾಗಿಸುವಂತಹ ಒಂದು ಸೂತ್ರ ಹಾಗೂ ತಂತ್ರವೇ ನಿತ್ಯಧ್ಯಾನ. ಈ ವಿಶೇಷವಾದ ತಂತ್ರದ ಪ್ರತಿ ವಿಭಾಗವೂ ವೈಯಕ್ತಿಕ ಪ್ರಜ್ಞೆಯನ್ನು ಮೇಲೇರಿಸಲು ಇತರ ಹಂತಗಳಿಗೆ ಪೂರಕವಾಗಿರುತ್ತದೆ.
ಇದು ನಿತ್ಯಆನಂದ ಎಂದರೆ ನಿತ್ಯಾನಂದಕ್ಕಾಗಿ ಪ್ರತಿದಿನವೂ ಮಾಡಬೇಕಾದ ಧ್ಯಾನ.
ಧ್ಯಾನ
ಇದು ಐದು ಹಂತಗಳ ತಂತ್ರ, ಪ್ರತಿ ಹಂತದ
ಕಾಲಾವಧಿ ಏಳು ನಿಮಿಷ. ಧ್ಯಾನದ ಸೂಚನೆಗಳಿಗಾಗಿ
ನಿತ್ಯಧ್ಯಾನದ ಅಧ್ಯಾಯವನ್ನು ಅವಲೋಕಿಸಿರಿ.
ಆನಂದ ಸಾಧನಗಳು
ಜ್ಞಾನ-ಶಸ್ತ್ರಗಳು ಅಥವಾ ಶಾಸ್ತ್ರ-ಶಸ್ತ್ರಗಳು
ಧ್ಯಾನ
ಪ್ರತಿದಿನ ಅರ್ಧ ಗಂಟೆ ಕಾಲ ಜ್ಞಾನೋದಯ
ಹೊಂದಿದ ಗುರುಗಳ ಯಾವುದೇ ಗ್ರಂಥಗಳನ್ನು
ಓದಿರಿ, ಇಲ್ಲವೇ ಅವರ ಪ್ರವಚನಗಳನ್ನು ಕೇಳಿರಿ.
ಗುರು ವಚನಗಳು ನೇರವಾದ ಶಾಸ್ತ್ರಗಳು - ಪರಮ ಜ್ಞಾನ, ಪರಮ ಸತ್ಯ.
ಅಜ್ಞಾನದ ವಧೆಗಾಗಿ ಪ್ರಯೋಗಿಸುವ ಆಯುಧಗಳನ್ನು ಶಸ್ತ್ರವೆನ್ನುತ್ತಾರೆ.
ವಚನಗಳು ಅಜ್ಞಾನದ ವಧೆಗಾಗಿ
ಆಯುಧಗಳಾದರೆ, ಅವನ್ನು ಶಾಸ್ತ್ರ-ಶಸ್ತ್ರ ಅಥವಾ
ಜ್ಞಾನ-ಆಯುಧಗಳು ಎನ್ನುತ್ತಾರೆ!
ಗುರುಗಳ ವಚನಗಳು ನೇರವಾಗಿ ಅಜ್ಞಾನವನ್ನು ವಧೆಮಾಡಬಲ್ಲ ಜ್ಞಾನಾಯುಧಗಳು. ಗುರುಗಳಾದವರು ಸತತವಾಗಿ ಅನೇಕ ವಿಚಾರಧಾರೆಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಇದ್ದಕ್ಕಿದ್ದ ಹಾಗೆ ಯಾವುದೋ ಒಂದು ವಿಚಾರ ನಿಮಗೆ 'ಕ್ಲಿಕ್' ಆಗುವುದು. ಅದು ನಿಮ್ಮನ್ನು ಖಿನ್ನತೆಯಿಂದ ಪಾರುಮಾಡುತ್ತದೆ. ಅದಾ ಯಾವುದೋ ಒಂದು ಸಮಸ್ಯೆಯನ್ನು ಬಗೆಹರಿಸಿಬಿಡುತ್ತದೆ. ಅದನ್ನೇ 'ಕ್ಲಿಕ್' ಎನ್ನುವುದು. ಆ 'ಕ್ಲಿಕ್' ಎಂಬುದನ್ನೇ ದೀಕ್ಷೆ ಎನ್ನುವುದು.
ತಮ್ಮ ವಚನಗಳಿಂದ, ತಂತ್ರಗಳಿಂದ ಹಾಗೂ
ಭಾವ ಭಾವಗಳಿಂದ ಯಾರು ಈ ಜ್ಞಾನಶಸ್ತ್ರಗಳನ್ನು
ನೀಡುವರೋ ಅವರೇ ಗುರುಗಳು.
ಈ ಜ್ಞಾನಶಸ್ತ್ರಗಳನ್ನು ಗುರುಗಳಿಂದ ಪಡೆಯುವವರೇ ದೀಕ್ಷಿತರು.
ತಮ್ಮಲ್ಲಿ ಉಂಟಾದ ಪರಮಾನುಭವವನ್ನು ಇತರರಲ್ಲಿಯೂ ನಿರೂಪಿಸುವ ತಂತ್ರವನ್ನು ನಿರ್ಮಿಸುವವರೇ ಗುರುಗಳು ಹಾಗೂ ದೀಕ್ಷೆಯೇ ತಂತ್ರ. ನಮ್ಮನ್ನು ನಾವೇ ಪುನಃಪುನಃ ಉನ್ನತ ಅರಿವಿಗೆ ಏರಿಸಿಕೊಳ್ಳಲು ಬೇಕಾಗುವ ತಂತ್ರಗಳೇ ಜ್ಞಾನಶಸ್ತ್ರಗಳು. ನಮ್ಮಲ್ಲಿರುವ ಈ ಜ್ಞಾನಶಸ್ತ್ರಗಳ ಸಮಷ್ಟಿಯೇ ಒಳಗಿನ ಗುರು. ನಮ್ಮಲ್ಲಿ ಒಳಗಿನ ಗುರು ಜಾಗೃತವಾಗುವವರೆಗೆ ಬಾಹ್ಯ ಗುರುಗಳು ನಮ್ಮನ್ನು ಕೈ ಹಿಡಿದು ನಡೆಸುತ್ತಾರೆ. ಅವರು ಈ ಕೆಲಸವನ್ನು ಪದಗಳು, ತಂತ್ರಗಳು ಭಾವ ಭಾವಗಳಿಂದ ಮಾಡಿ ಜ್ಞಾನವನ್ನು ಬಳಸಲು ಧೈರ್ಯವನ್ನು ನೀಡುತ್ತಾರೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಜೀವನ್ಮುಕ್ತ ಬಾಳನ್ನು ಬಾಳುವ ಧೈರ್ಯವನ್ನು ನೀಡುತ್ತಾರೆ.
ಜ್ಞಾನಿಗಳೊಂದಿಗೆ 'ಕ್ಲಿಕ್' ಅನುಭವಿಸಿದವರೇ ಧನ್ಯರು. ಈ ಕ್ಲಿಕ್ ಆಗುವುದು ತರ್ಕದ ಮೂಲಕವಾಗಿ ಅಲ್ಲ. ಗುರುಗಳಾಡಿದ ಕೆಲವು ಮಾತುಗಳು ಇದ್ದಕ್ಕಿದ್ದಂತೆ ನಮ್ಮ ಹೃದಯವನ್ನು ಮುಟ್ಟುತ್ತವೆ.
ಮೊದಲನೇ ಬಾರಿ ಅದು ಸಂಭವಿಸಿದಾಗಲೇ,
ಇವರೇ ನಮ್ಮ ಗುರುಗಳೆಂದೂ, ಇದೇ ನಮ್ಮ
ಮಾರ್ಗವೆಂದೂ ತಿಳಿದುಹೋಗುತ್ತದೆ. ಈ ಕ್ಲಿಕ್
ಆಗುವುದೇ ಮೊದಲನೆಯ ದೀಕ್ಷೆ. ಗುರುಗಳ
ವಚನಗಳು, ಉಪದೇಶಗಳು, ಗ್ರಂಥಗಳು, ಕೃಪೆಗಳು,
ತಂತ್ರಗಳು, ಚೈತನ್ಯ ಹಾಗೂ ಹಾವ ಭಾವಗಳು
ಕೊಡುವ ಕ್ಲಿಕ್ ಅನ್ನು ಅನುಭವಿಸಿದವರೇ ಧನ್ಯರು.
ತಿಳಿಯಿರಿ: ಒಡೆದು ಬಿರಿಯುವುದು ಬೀಜಕ್ಕೆ
ಯಾವಾಗಲೂ ಭಯ, ಆದರೆ ಒಡೆದು
ತೆರೆದುಕೊಂಡರೆ ಮಾತ್ರವೇ ಬೀಜವು
ಮರವಾಗುವುದು. ಆಗ ಆ ಮರವು ಇತರೆ
ಬೀಜಗಳಿಗೆ, 'ಹೆದರಬೇಡಿರಿ, ಒಡೆದು
ಬಿರಿಯುವುದರಿಂದ ನೀವು ಎಂದಿಗೂ ಸಾಯುವುದಿಲ್ಲ.
ಇದರಿಂದ ನೀವು ಬಾಳುವಿರಿ ಅಷ್ಟೆ. ನನ್ನಂತೆ ನೀವೂ
ಸಹ ವಿಕಾಸಗೊಳ್ಳುವಿರಿ' ಎಂದು ಧೈರ್ಯವನ್ನು
ನೀಡಬೇಕು. ಆದರೆ ಬೀಜವು ಮರವಾಗಬೇಕೆಂದು
ಕಾಯುತ್ತದೆ ಮತ್ತು ಮರವು ಬೀಜ ಬಿರಿಯಲೆಂದು
ಕಾಯುತ್ತದೆ! ಅದೇ ಸಮಸ್ಯೆ.
ನಾನು ಹೇಳುತ್ತಿರುವ ಸತ್ಯವು ನನಗೆ ತಿಳಿದಿದೆ.
'ಓ! ಅಮೃತಪುತ್ರರೇ ಚಿಗುರೊಡೆದು
ಮರವಾಗಿಬಿಡಲು ಧೈರ್ಯ ತಂದುಕೊಳ್ಳಿರಿ!’
ಈ ಸ್ಪೂರ್ತಿ ಹಾಗೂ ಈ ಚೈತನ್ಯವೇ ಗುರು. ಗುರುವಿನ ಆಗಮನವೇ ಜೀವನದಲ್ಲಿ ನಡೆಯುವ ಅತ್ಯಂತ ಮಹತ್ತರವಾದ ಸಾಹಸಕಾರ್ಯ. ಒಮ್ಮೆ ಗುರುವು ನಮ್ಮ ಅಂತರಂಗದಲ್ಲಿ ಪ್ರವೇಶಿಸಿದ ಮೇಲೆ, ನಂಬಿಕೆ, ಧೈರ್ಯ ಮತ್ತು ಆತ್ಮ ವಿಶ್ವಾಸಗಳನ್ನು ಹೊಂದಿ ನಿಲ್ಲಬೇಕಾದುದೇ ನಾವು ಮಾಡಬೇಕಾದುದೆಲ್ಲವೂ. ನಿಮ್ಮ ಜೀವನದಲ್ಲಿ ಆಗಿರುವ 'ಕ್ಲಿಕ್'ಗಳನ್ನು ಮತ್ತೆ ಮತ್ತೆ ಅನುಷ್ಠಾನಕ್ಕೆ ತಂದುಕೊಳ್ಳಿರಿ. ಉಪಯೋಗಿಸದ ಆಯುಧವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಅಲ್ಲದೆ, ಅದನ್ನು ಉಪಯೋಗಿಸುವ ವಿಧಾನವನ್ನೂ ಮರೆಯುತ್ತೇವೆ. ಮತ್ತೆ ಮತ್ತೆ ಉಪಯೋಗಿಸುವ ಆಯುಧಗಳು ನಿಜವಾಗಿಯೂ ಧೈರ್ಯ ಹಾಗೂ ಸ್ಪಷ್ಟತೆಯನ್ನು ಕೊಡುತ್ತವೆ ಅಲ್ಲದೆ ನಾವೂ ಸಹ ಅವುಗಳನ್ನು ಉಪಯೋಗಿಸಲು ಬೇಕಾಗುವ ಬುದ್ಧಿ ಶಕ್ತಿಯನ್ನೂ ಪಡೆಯುತ್ತೇವೆ.
ಗುರುವಿನ ವಚನಗಳನ್ನು ಆಲಿಸಿ ಇನ್ನೂ ಹೆಚ್ಚು ಹೆಚ್ಚು ಕ್ಲಿಕ್ಗಳನ್ನು ನಿಮ್ಮ ಬಾಳಿಗೆ ಸೇರಿಸಿಕೊಳ್ಳಿರಿ. ಅವನ್ನು ನಿಮ್ಮ ಅಂತರಂಗಕ್ಕೆ ಸೇರಿಸಿಕೊಳ್ಳಿರಿ. ಆಧ್ಯಾತ್ಮ ಕುಟುಂಬ ಮತ್ತು ಸತ್ಸಂಗದ ನಿರ್ಮಾಣವು ಜ್ಞಾನ ಶಸ್ತ್ರಗಳನ್ನು ಬಳಸುವ ಧೈರ್ಯ ಮತ್ತು ಸ್ಫೂರ್ತಿಗಳನ್ನು ಸತತವಾಗಿ ಕೊಡುತ್ತದೆ.
ಇನ್ನೊಂದು ವಿಷಯ, ಗುರುಗಳು
ಮಾತನಾಡುವುದನ್ನು ಗಮನಿಸಿದಾಗ, ಒಬ್ಬ ಜ್ಞಾನಿಯ
ಹಾವಭಾವವನ್ನು ನೋಡುತ್ತಿರುತ್ತೇವೆ. ಒಬ್ಬ
ವ್ಯಕ್ತಿಯ ಹಾವಭಾವಗಳು ಅವನದೇ ಆದ ಸತ್ಯ
ಹಾಗೂ ಅನುಭವವನ್ನು ಹೊರಸೂಸುತ್ತವೆ.
ಬ್ರಹ್ಮಾಂಡದ ಪರಮಸತ್ಯದ ಮೂರ್ತರೂಪವೇ
ಗುರು. ಆದುದರಿಂದ ಅವರ ಹಾವಭಾವವು
ಬ್ರಹ್ಮಾಂಡದ ಹಾವಭಾವವೇ ಆಗಿರುತ್ತದೆ. ಅವರನ್ನು
ಗಮನಿಸುವುದರಿಂದ ತರ್ಕವನ್ನೂ ಮೀರಿ ಸತ್ಯವು ನಮ್ಮ ಮೇಲೆ ಪರಿಣಾಮಕಾರಿಯಾಗುತ್ತದೆ.
ಆನಂದ ಶಕ್ತಿ
- ಅಸ್ತಿತ್ವದ ಶಕ್ತಿ ಗ್ರಹಣೆ - ಅಥವಾ ಶಕ್ತಿಧಾರಣೆ
ಈ ತಂತ್ರವನ್ನು ತಂತ್ರಶಾಸ್ತ್ರದಿಂದ (ಕುಲಾರ್ಣವ
ತಂತ್ರದಿಂದ) ಆಯ್ದುಕೊಳ್ಳಲಾಗಿದೆ. ಬ್ರಹ್ಮಾಂಡದ
ಶಕ್ತಿಯೊಂದಿಗೆ ಸಂಪರ್ಕಿಸಲು ಇದು ಒಂದು
ಸುಂದರವಾದ ತಂತ್ರ.
ರಾತ್ರಿ ನಿದ್ರೆಮಾಡುವ ಮೊದಲು ಈ ಧ್ಯಾನವನ್ನು ಆಚರಿಸುವುದು ಅತ್ಯುತ್ತಮ. ಇದನ್ನು ಹಗಲಿನಲ್ಲೂ ಮಾಡಬಹುದು, ಆದರೂ, ಇದನ್ನು ಮಾಡಿದ ಮೇಲೆ ಕನಿಷ್ಠ ಪಕ್ಷ ಹದಿನೈದು ನಿಮಿಷಗಳಾದರೂ ವಿರಮಿಸಬೇಕು. ಇಲ್ಲವಾದರೆ ಧ್ಯಾನದ ಪರಿಣಾಮದಿಂದ ಆನಂದದ ಅಮಲಿನಲ್ಲಿರುತ್ತೀರಿ. ಈ ಧ್ಯಾನವು ನಿಮ್ಮನ್ನು ಬ್ರಹ್ಮಾಂಡದ ಚೈತನ್ಯದಲ್ಲಿ ಒಂದಾಗಲು ದಾರಿತೋರುತ್ತದೆ. ಶಕ್ತಿಧಾರಣ ಧ್ಯಾನದ ಮಹತ್ವವೆಂದರೆ, ಅದು ನಿಮ್ಮನ್ನು ಯೋಚನೆಗಳಿಲ್ಲದ ಆದರೂ ಸಂಪೂರ್ಣವಾದ ಅರಿವು ಇರುವಂತಹ ತುರೀಯಾ ಸ್ಥಿತಿಯ ಹೊಸ್ತಿಲಿಗೆ ಕೈ ಹಿಡಿದು ನಡೆಸಿಕೊಂಡು ಹೋಗುತ್ತದೆ.
ಧ್ಯಾನ
ಮಂಡಿಗಳ ಮೇಲೆ ನಿಂತುಕೊಂಡು ಸ್ಥಿರವಾದ ಸಮಸ್ಥಿತಿಗೆ ಬನ್ನಿರಿ. ನಿಮ್ಮ ಸೊಂಟದ ಮೇಲೆ ಕುಳಿತುಕೊಳ್ಳಬೇಡಿರಿ. ಕಣ್ಣುಗಳನ್ನು ಮುಚ್ಚಿಕೊಂಡು ನಿಮ್ಮ ಕೈಗಳನ್ನು ಮೇಲಕ್ಕೆ ಎತ್ತಿ ಹಸ್ತವನ್ನು ಆಕಾಶದೆಡೆಗೆ ಮಾಡಿರಿ. ತಲೆಯನ್ನು ಸ್ವಲ್ಪ ಮೇಲಕ್ಕೆ ಎತ್ತಿಕೊಳ್ಳಿರಿ.
ಈ ಭಂಗಿಯಲ್ಲಿ ಬ್ರಹ್ಮಾಂಡದ ಒಂದು ಬೆಳಕಿನ ಕಿರಣವು ನಿಮ್ಮಲ್ಲಿ ಹರಿಯುವುದನ್ನು ಭಾವಿಸಿರಿ. ಪ್ರಾರಂಭದಲ್ಲಿ ಒಂದು ಬೆಳಕಿನ ಕಿರಣವು ನಿಮ್ಮ ಮೂಲಕ ಹರಿಯುತ್ತಿದೆ ಎಂಬುದಾಗಿ ದೃಶ್ಯೀಕರಿಸಿಕೊಳ್ಳಿರಿ. ಪ್ರಾರಂಭದಲ್ಲಿ ಯಾರಾದರೂ ಒಬ್ಬ ಜ್ಞಾನಿಯಾದ ಗುರುವಿನ ಮುಖವನ್ನು ನೆನೆಪುಮಾಡಿಕೊಳ್ಳಿರಿ. ಒಬ್ಬ ಕೃಪಣನು ಹಣವನ್ನು ಎಣಿಸುತ್ತಿರುವಾಗ ಚೈತನ್ಯದ ಶಿಖರವನ್ನೇರುವಂತೆ ಅಥವಾ ಪ್ರೇಮಿಯು ತನ್ನ ಸಂಗಾತಿಯೊಂದಿಗಿರುವಾಗ ಚೈತನ್ಯದ ಶಿಖರವನ್ನೇರುವಂತೆ ಒಬ್ಬ ಗುರುವೂ ಸಹ ನಗುತ್ತಿರುವಾಗಲೂ,

ಮುಗುಳ್ನಗುತ್ತಿರುವಾಗಲೂ, ಚೈತನ್ಯದ
ಶಿಬಿರದಲ್ಲಿರುತ್ತಾರೆ. ಆ ಕಾರಣದಿಂದಾಗಿಯೇ
ಗುರುಗಳ ಹಸನ್ಮುಖವನ್ನು ನೆನಪುಮಾಡಿಕೊಂಡು,
ಚೈತನ್ಯವನ್ನು ನಿಮ್ಮ ಮೂಲಕ ಹರಿಯಲು ಅವಕಾಶ
ಮಾಡಿಕೊಡಿ ಎಂದು ಹೇಳುವುದು. ಅಲ್ಲದೆ, ನಿಮ್ಮ
ಮಾನಸ್ಸು ಅಲೆಯುತ್ತಾ ಬೇರೇನನ್ನೋ
ಯೋಚಿಸುವುದಕ್ಕಿಂತಲೂ ಗುರುಗಳನ್ನು
ನೆನೆಯುವುದು ಉತ್ತಮ!
ಬ್ರಹ್ಮಾಂಡದ ಚೈತನ್ಯವು ನಿಮ್ಮ ತೋಳುಗಳ ಮೂಲಕ ಹರಿದಾಗ ನಿಮಗೆ ಜುಮ್ಮೆನಿಸುತ್ತದೆ, ಒಂದು ಹಗುರವಾದ ಕಂಪನ ಅಥವಾ ಒಂದು ಕೋಮಲವಾದ ಸ್ಪಂದನದ ಭಾಸವಾಗುತ್ತದೆ. ಅದು ಒಂದು ಮೃದುವಾದ ಲತೆಯು ಮಂದ ಮಾರುತದಲ್ಲಿ ನೃತ್ಯವಾಡಿದಂತಿರುತ್ತದೆ. ಆ ಕಂಪನವನ್ನು ಕಂಪಿಸಲು ಬಿಡಿರಿ. ಕಂಪನಕ್ಕೆ ಸಹಕರಿಸಿರಿ. ನಿಮ್ಮ ಇಡೀ ದೇಹವು ಆ ಕಂಪನದೊಂದಿಗೆ ಸ್ಪಂದಿಸಿಕೊಂಡು ಆ ಚೈತನ್ಯಕ್ಕೆ ನೆರವಾಗಲಿ. ಏನೇ ಆಗುತ್ತಿದ್ದರೂ ಅವನ್ನು ಆಗಲು ನೆರವಾಗಿರಿ ಮತ್ತು ಅವಕಾಶ ಮಾಡಿಕೊಡಿರಿ. ಸ್ವರ್ಗ
- ಪಾತಾಳಗಳು ಒಂದಾಗುತ್ತಿರುವಂತೆಯೂ, ಸ್ತ್ರೀ ಪುರುಷ ಚೈತನ್ಯಗಳು ಒಂದಾದಂತೆಯೂ ಎನಿಸಬಹುದು. ನೀವು ತೇಲಾಡುತ್ತಿರುವಂತೆಯೋ ಅಥವಾ ವಿಲೀನವಾಗುತ್ತಿರುವಂತೆಯೋ ಭಾಸವಾಗಬಹುದು. ನಿಮ್ಮನ್ನು ನೀವು ಕೈಬಿಟ್ಟು, ಯಾವುದೇ ಭಾವವನ್ನು ಆಗಲು ಬಿಡಿರಿ. 'ನೀವು' ಎನ್ನುವುದೇ ಇಲ್ಲ. ನೀವು ವಿಶ್ವಶಕ್ತಿಯಲ್ಲಿ ಸುಮ್ಮನೆ ಕರಗಿ ಹೋಗಿದ್ದೀರಿ.
ಎರಡು ಅಥವಾ ಮೂರು ನಿಮಿಷಗಳಾದ ನಂತರ ಅಸ್ತಿತ್ವದ ಚೈತನ್ಯವು ನಿಮ್ಮನ್ನು ತುಂಬಿದಂತೆನಿಸಿದಾಗ ನಿಮ್ಮ ಮೋಣಕ್ಕೆ ಹಾಗೂ ಮುಂಗೈ ಯ ನ್ನು ಊರಿಕೊಂಡು, ಕೆಳಕ್ಕೆ ಬಾಗಿ ನೆಲಕ್ಕೆ ಮುತ್ತು ಕೊಡಿರಿ ಅಥವಾ ಹಣೆಯನ್ನಾದರೂ ನೆಲಕ್ಕೆ ತಗುಲಿಸಿ, ನೀವು ಆಕರ್ಷಿಸಿ ತುಂಬಿಕೊಂಡ

ದಿವ್ಯಶಕ್ತಿಯನ್ನು ಭೂ ಚೈತನ್ಯಕ್ಕೆ ಸೇರಿಸಲು ನೀವು ಒಂದು ಮಾಧ್ಯಮ ಅಥವಾ ವಾಹಕ-ವಾಗಿರಿ. ನಿಮ್ಮೆಲ್ಲ ಚೈತನ್ಯವನ್ನೂ ಭೂ ತಾಯಿಗೆ ಹರಿಯಲು ಬಿಡಿರಿ. ಈ ಭಂಗಿಯಲ್ಲಿರು-ವಾಗ ಗುರುಗಳ ಪಾದಗಳನ್ನು ಮನದಲ್ಲಿ ದೃಶ್ಯಕರಿಸಿಕೊಳ್ಳಬಹುದು. ಇದು ಚೈತನ್ಯವನ್ನು ಸಮರ್ಪಿಸುವಾಗ ಭೂ ತಾಯಿಗೆ ಶರಣಾಗತ ಭಾವನೆಯಲ್ಲಿರಲು ಅನುಕೂಲವಾಗುತ್ತದೆ.
ಈಗ ಮತ್ತೆ ಮೊದಲಿನ ಸ್ಥಿತಿಗೆ ಬನ್ನಿರಿ. ಈ ಆವರ್ತಗಳನ್ನು ಆರುಸಲವಾದರೂ ಪುನರಾವರ್ತಿಸಿರಿ. ಈ ರೀತಿಯಾಗಿ ಒಟ್ಟಿನಲ್ಲಿ ಏಳು ಆವರ್ತಗಳನ್ನು ಮಾಡಿರಿ.
ಈ ಧ್ಯಾನದ ಪರಿಣಾಮವಾಗಿ ನಿಮ್ಮ ದೇಹದಲ್ಲಿ
ಚೈತನ್ಯದ ಪರಿಚಲನೆಯು ಮಹತ್ತರವಾಗಿ
ಉತ್ತಮಗೊಳ್ಳುತ್ತದೆ. ಬೆನ್ನೆಲುಬಿನ
ತಳಹದಿಯಲ್ಲಿರುವ ಮೂಲಾಧಾರ ಚಕ್ರಕ್ಕೆ
ಚೈತನ್ಯವು ನೇರವಾಗಿ
ಸೇರುವುದರಿಂದ ಬೆನ್ನೆಲುಬಿಗೆ ಸಂಬಂಧಿಸಿದ
ವ್ಯಾಧಿಗಳೆಲ್ಲವೂ ಈ ಧ್ಯಾನ ಮಾಡುವುದರಿಂದ
ಮಾಯವಾಗಿ ಹೋಗುತ್ತವೆ.
ಈ ಧ್ಯಾನವನ್ನು ಮಾಡಿದ ಮೇಲೆ, ಅದೇ
ಧ್ಯಾನದ ಗುಂಗಿನಲ್ಲಿ ನೀವು ನಿದ್ರಿಸಬಹುದು. ಈ
ಧ್ಯಾನವನ್ನು ಅನುಸರಿಸಿ ಮಾಡಿದ ನಿದ್ರೆಯು
ಗಾಢವಾಗಿಯೂ ಹಾಗೂ ಸ್ವಪ್ನರಹಿತವಾಗಿಯೂ
ಇರುತ್ತದೆ. ಮಾರನೇ ಬೆಳಿಗ್ಗೆ ಎದ್ದಾಗ ಒಳ್ಳೆಯ
ಲವಲವಿಕೆ ಹಾಗೂ ಸಾಮರ್ಥ್ಯಗಳನ್ನು
ಹೊಂದಿರುತ್ತೀರಿ.
ಇದೊಂದು ಬಹಳ ಪ್ರಭಾವಶಾಲಿಯಾದ ತಂತ್ರ. ಇದನ್ನು ನಿಷ್ಠೆಯಿಂದ ಮಾಡಿದಾಗ, ಒಂದು ಹೊಸ ಜೀವನ, ಒಂದು ಹೊಸ ಸತ್ಯವು ನಿಮ್ಮಲ್ಲಿ ಹರಿಯಲು ಪ್ರಾರಂಭವಾಗುತ್ತದೆ. ನಿಮಗೂ ವಿಶ್ವಶಕ್ತಿಗೂ ಒಂದು ಸುಂದರವಾದ ಮತ್ತು ಸಜೀವವಾದ ನಂಟು ಸೃಷ್ಟಿಸಲ್ಪಡುತ್ತದೆ. ನೀವು ಬಹಳ ಸಂತೋಷದಿಂದಿರುತ್ತೀರಿ ಮತ್ತು ಪ್ರತಿ ದಿನವೂ ಒಂದು ಹಬ್ಬವಾಗುತ್ತದೆ.