KAILASA Library/ಜೀವನ್ಮುಕ್ತಿ/ನಿತ್ಯಯೋಗ - ತನುಮನಗಳಿಗಾಗಿ ಮತ್ತು ಅದರಿಂದಾಚೆಗೂSign in
ಜೀವನ್ಮುಕ್ತಿ

ನಿತ್ಯಯೋಗ - ತನುಮನಗಳಿಗಾಗಿ ಮತ್ತು ಅದರಿಂದಾಚೆಗೂ

This text was machine-transcribed from the printed book and may contain errors. Select the words and choose “Report a mistake”.

ಯೋಗವು ಕೇವಲ ದೈಹಿಕ ಸ್ವಾಸ್ಥ್ಯಕ್ಕಾಗಿ ಮಾತ್ರವಲ್ಲ. ಅದು ದೇಹ, ಮನಸ್ಸು ಹಾಗೂ ಆತ್ಮದ ಸಂಯೋಗಕ್ಕೆ ನಮ್ಮನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ. ಈ ಸಂಯೋಗಕ್ಕಾಗಿಯೇ ನಿತ್ಯಧ್ಯಾನ ವಿಧಾನವನ್ನು ಪತಂಜಲಿಯವರ ಸೂತ್ರದ ಭಾವಾನುಗುಣವಾಗಿ ವಿನ್ಯಾಸ ಮಾಡಲಾಗಿದೆ. ಧ್ಯಾನಗಳಲ್ಲಿ ನಿತ್ಯಧ್ಯಾನವನ್ನು ಕುರಿತು ನಾವು ಮಾತನಾಡಿದ ರೀತಿಯಲ್ಲಿಯೇ ನಿತ್ಯಯೋಗವು ಇಂದಿನ ಜೆಟ್‌ ಯುಗಕ್ಕೆ ಸೂಕ್ತವಾದ ಯೋಗ.

ಯೋಗ ಎಂದರೇನು?

ಯೋಗದ ಮೂಲ ಗ್ರಂಥವಾದ ಪತಂಜಲಿ ಯೋಗ ಸೂತ್ರದ ಪ್ರಾರಂಭದಲ್ಲಿ ಯೋಗ ಪಿತಾಮಹ ಪತಂಜಲಿಯವರು,

ಯೋಗಃ ಚಿತ್ತವೃತ್ತಿ ನಿರೋಧಃ

ಎಂದರೆ, 'ಯೋಗವು ಮನಸ್ಸನ್ನು ನಿಲ್ಲಿಸುವುದು' ಎಂದು ಹೇಳುತ್ತಾರೆ. ಅರ್ಥಮಾಡಿಕೊಳ್ಳಿರಿ, ಮನಸ್ಸು ನಿಲ್ಲಿಸುವುದರೊಂದಿಗೆ ಯೋಗವು ಕೊನೆಯಾಗುವುದೆಂದು ಇದರರ್ಥವಲ್ಲ. ಸರಿಯಾಗಿ ಹೇಳಬೇಕೆಂದರೆ, ಮನಸ್ಸು ಕೊನೆಗೊಂಡಲ್ಲಿ ಯೋಗವು ಪ್ರಾರಂಭವಾಗುತ್ತದೆ. ವಾಸ್ತವವಾಗಿ ಯೋಗವು ಎಂದೂ ಕೊನೆಗೊಳ್ಳುವುದೇ ಇಲ್ಲ; ಅದು ಪ್ರಾರಂಭ ಮಾತ್ರ ಆಗಬಲ್ಲುದಷ್ಟೆ. ಅದು ಒಂದು ನಿರಂತರವಾದ ಸಂಘಟನೆ.

ಯೋಗವು ನಿರಂತರ ಸಂಘಟನೆಯೆಂದು ತಿಳಿಯಲು, ಏನು ನಡೆಯುತ್ತಿದೆಯೋ ಅದೆಲ್ಲವೂ ಮಂಗಳಕರವಾದುದು ಎಂಬ ಮುಖ್ಯವಾದ ಸತ್ಯವನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ. ಸ್ಪಷ್ಟವಾಗಿ ತಿಳಿಯಿರಿ, ಪ್ರತಿಯೊಂದು ಅನುಭವವೂ ನಿಮ್ಮ ಪ್ರಜ್ಞೆಯನ್ನು ಉನ್ನತಿಗೊಯ್ದು ನಿಮ್ಮನ್ನು ಹೆಚ್ಚು ಪ್ರಬುದ್ಧರನ್ನಾಗಿಸುತ್ತದೆ. ಐಶ್ವರ್ಯವನ್ನು ಕಳೆದುಕೊಳ್ಳುವುದೂ ಸಹ ನಿಮಗೆ ಪ್ರಬುದ್ಧತೆಯನ್ನು ನೀಡುತ್ತದೆ. ಆರೋಗ್ಯವನ್ನು ಕಳೆದುಕೊಳ್ಳುವುದು, ನಿಮಗೆ ಜೀವನದಲ್ಲಿ ಒಂದು ತಿಳಿವಳಿಕೆಯನ್ನು ನೀಡುತ್ತದೆ. ಈ ಸತ್ಯವು ನಿಮ್ಮ ಅಂತರಂಗದಲ್ಲಿ ಮನವರಿಕೆಯಾದಾಗ, ಇದ್ದಕ್ಕಿದ್ದಹಾಗೆ ಜೀವನದ ಪ್ರತಿಕ್ಷಣವೂ ಒಂದು ಸುಂದರ ಸಂಘಟನೆ ಎಂಬುದನ್ನು ಕಾಣುವಿರಿ.

ಮನಸ್ಸು ನಿಂತಲ್ಲಿ
ಯೋಗವು
ಪ್ರಾರಂಭವಾಗುವುದು.

ಒಂದು ಸಣ್ಣ ಕಥೆ:

ಒಂದು ಬಾರಿ ಮಹಾಸಾಗರದಲ್ಲಿ ಹಾಯಿಹಡಗೊಂದು ಪ್ರಯಾಣಮಾಡುತ್ತಿತ್ತು. ಇದ್ದಕ್ಕಿದ್ದ ಹಾಗೆ ಹಡಗಿನ ಮುಖಂಡರು ಹಡಗಿನ ಮುಂದೆ ಪ್ರಜ್ವಲವಾದ ದೀಪಗಳನ್ನು ಕಂಡು, ಆ ಮುಂದಿರುವ ಹಡಗನ್ನು ದಾರಿಬಿಟ್ಟು ಸರಿಯಲು ಮುನ್ನೆಚ್ಚರಿಕೆ ನೀಡಲು ಒಳಕ್ಕೆ ಓಡಿಬಂದರು. ಅವರು ಆತುರದಿಂದ, 'ಡಿಕ್ಕಿಹೊಡೆಯುವುದನ್ನು ತಪ್ಪಿಸಲು ದಯವಿಟ್ಟು ನಿಮ್ಮ ದಿಸೆಯನ್ನು 15 ಡಿಗ್ರಿ ಉತ್ತರಾಭಿಮುಖವಾಗಿಸಿರಿ' ಎಂದು ಸಾರಿ ಹೇಳಿದರು. ಒಂದು ವಾಣಿಯು, 'ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ನೀವು 15 ಡಿಗ್ರಿ ದಕ್ಷಿಣಾಭಿಮುಖವಾಗಿ ತಿರುಗಿಸಿರಿ' ಎಂದು ಉತ್ತರಿಸಿತು.

ಇದು ಹಡಗಿನ ಮುಖಂಡರಿಗೆ ಕೋಪ ತಂದಿತು ಮತ್ತು ಆತನು ಗರ್ವದಿಂದ ಮತ್ತು ಬೆದರಿಕೆ ಹಾಕುವ ಧ್ವನಿಯಲ್ಲಿ, 'ದೇಶದಲ್ಲೇ ಈ ಹಡಗು ಅತಿದೊಡ್ಡದು. ನಮ್ಮ ಜೊತೆ ಮೂರು 'ಡೆಸ್ಟ್ರಾಯರ್'ಗಳು, ರಕ್ಷಣಾ ಉಪಕರಣಗಳು ಹಾಗೂ ಅನೇಕ ಸಹಾಯಕ ಹಡಗುಗಳಿವೆ. ನೀವು ನಿಮ್ಮ ದಿಸೆಯನ್ನು 15 ಡಿಗ್ರಿ ಉತ್ತರಾಭಿಮುಖವಾಗಿ ಬದಲಾಯಿಸಿರೆಂದು ಆಗ್ರಹಿಸುತ್ತಿದ್ದೇನೆ. ಇಲ್ಲವಾದರೆ ಈ ಹಡಗಿನ ರಕ್ಷಣೆಗಾಗಿ ಪ್ರತಿರೋಧಕ ಕ್ರಿಯೆಗಳನ್ನು ಕೈಗೊಳ್ಳಲಾಗುವುದು' ಎಂದು ಉತ್ತರಿಸಿದರು.

ಆ ವಾಣಿಯು ಗಂಭೀರವಾದ ಧ್ವನಿಯಲ್ಲಿ 'ನಾವು ಸಮುದ್ರ ದೀಪಗೃಹದವರು!' ಎಂದಿತು.

ವಿಶ್ವಶಕ್ತಿಯು ನಿರಂತರವಾಗಿ ಸಂಘಟಿಸುತ್ತಿರುವಂತಹುದು ಹಾಗೂ ಏನೇ ಸಂಭವಿಸಿದರೂ ಅದು ನಿಮಗೆ ಅತ್ಯಂತ ಅನುಕೂಲ ಆಗುವಂತೆ ನಿಮಗೆ ಮಾರ್ಗದರ್ಶನವನ್ನು ನೀಡುವಂತಹುದು. ಸುಮ್ಮನೆ ಅದರೊಂದಿಗೆ ಶ್ರುತಿಗೂಡಿಸಿಕೊಳ್ಳಿರಿ. ಅದೇ ಅತ್ಯುತ್ತಮ ಮಾರ್ಗ! ವಿಶ್ವಶಕ್ತಿಯೊಂದಿಗೆ ಶ್ರುತಿಗೂಡಿಸಿಕೊಳ್ಳಲು ಯೋಗವು ಒಂದು ಮಾರ್ಗ. ರೇಡಿಯೋವನ್ನು ಉನ್ನತ ಆವರ್ತನಕ್ಕೆ ಶ್ರುತಿಗೂಡಿಸುವ ಹಾಗೆ! ಯೋಗ ಎಂಬ ಪದಕ್ಕೆ ಅಕ್ಷರಶಃ 'ಒಂದುಗೂಡಿಸುವುದು' ಎಂದರ್ಥ.

ಯೋಗಪಿತಾಮಹ ಪತಂಜಲಿ

ಪತಂಜಲಿ ಮಹರ್ಷಿಯು ಯೋಗ ಪದ್ಧತಿಯ ಸ್ಥಾಪಕರು. ಜ್ಞಾನೋದಯದ ಅನುಭವವನ್ನು ಪಡೆಯಲು ಒಂದು ಸ್ಪಷ್ಟ, ವೈಜ್ಞಾನಿಕ, ತರ್ಕಬದ್ಧ ಪದ್ಧತಿಯನ್ನು ರೂಪಿಸಿದ ಪ್ರಥಮ ಗುರುವೇ ಪತಂಜಲಿ.

ಜ್ಞಾನೋದಯವನ್ನು ಪಡೆಯುವುದಕ್ಕಾಗಿ ನಕ್ಷೆಯನ್ನು ರಚಿಸಿ, ಸಮಗ್ರ ಮಾರ್ಗದರ್ಶನವನ್ನು ನೀಡಿದ ಪ್ರಥಮ ಗುರುವೇ ಪತಂಜಲಿ. ನಾನು ಅವರನ್ನು 'ಅಧ್ಯಾತ್ಮದ ನಾವಿಗ' ಎಂದು ಕರೆಯುತ್ತೇನೆ. ಅವರು ಜ್ಞಾನೋದಯದ ಅನುಭವವನ್ನು ಪಡೆಯುವುದಕ್ಕಾಗಿ ಸೂತ್ರಗಳನ್ನು ನೀಡಿದರು ಹಾಗೂ ಆ ದಿಕ್ಕಿನಲ್ಲಿ ಹಂತ ಹಂತವಾಗಿ ಮೇಲೇರಲು ಸ್ಪಷ್ಟ ನಿರ್ದೇಶನವನ್ನು ನೀಡಿದರು. ವಿಜ್ಞಾನಿಗಳು ಪ್ರಕೃತಿಯ ಹೊರ ಪ್ರಪಂಚದ ವಿಷಯಗಳ ಹಿಂದಿರುವ ತಿಳಿವಳಿಕೆಯನ್ನು ಜನರಲ್ಲಿ

ಪುನರುತ್ಪಾದಿಸಲು ಸೂತ್ರಗಳನ್ನು ರಚಿಸಿದಂತೆ,
ಪತಂಜಲಿಯವರು ಅಂತರಂಗದ
ಜ್ಞಾನೋದಯವನ್ನು ಜನರಲ್ಲಿ ಪುನರುತ್ಪಾದಿಸಲು
ಸುಂದರವಾದ ತಂತ್ರಜ್ಞಾನ ಅಥವಾ ಸೂತ್ರಗಳನ್ನು
ರಚಿಸಿದರು.

ರಘುಪತಿಯೋಗಿ - ಯೋಗದ ಗುರು

ಯೋಗಿರಾಜ ಯೋಗಾನಂದಪುರಿ ಅಥವಾ
ರಘುಪತಿಯೋಗಿ ಎಂದು ಕರೆಯಲ್ಪಡುತ್ತಿದ್ದ
ಯೋಗದ ಮಹಾನ್ ಗುರುಗಳೊಂದಿಗೆ ಜೀವಿಸುವ
ಅದೃಷ್ಟ ನನ್ನದಾಗಿತ್ತು. ಪತಂಜಲಿಯವರು
ಕಂಡುಹಿಡಿದ ಇಡೀ ಯೋಗದ ವಿಜ್ಞಾನದಲ್ಲಿ ಅವರು
ಪರಿಣತರಾಗಿದ್ದರು.

ದೇಹವನ್ನು ವಿವಿಧ ಭಂಗಿಗಳಲ್ಲಿ ಬಗ್ಗಿಸಬೇಕಾದ
ಆಸನ, ಹಠಯೋಗ, ನೇತಿ ಮುಂತಾದುವು ದೈಹಿಕ
ದೃಷ್ಟಿಯಿಂದಾದರೆ, ಜೀವ ಚೈತನ್ಯ ಅಥವಾ ಪ್ರಾಣದ
ಮೇಲೆ ಕೆಲಸ ಮಾಡುವುದು, ಮಾನಸಿಕ ಕಲ್ಪನೆಯ
ಮೇಲೆ ಕೆಲಸ ಮಾಡುವುದು, ಭಾವಗಳ ಮೇಲೆ ಕೆಲಸ
ಮಾಡುವುದು ಮುಂತಾದ ಯೋಗದ ಎಲ್ಲಾ
ಆಯಾಮಗಳಲ್ಲಿಯೂ ಅವರು ಪರಿಣಿತಿ
ಹೊಂದಿದ್ದರು. ಅವರಿಗೆ ಯೋಗದ ಮೂಲ ಸತ್ಯದ
ಬಗ್ಗೆ ಆಳವಾದ ಒಳದೃಷ್ಟಿಯಿತ್ತು.

ಪತಂಜಲಿಯವರ ಪ್ರಜ್ಞೆಯನ್ನು
ಅನುಭವಿಸಿದವರು ಮಾತ್ರವೇ ಪತಂಜಲಿಯವರನ್ನು
ಪುನರುಜ್ಜಿವಗೊಳಿಸಬಲ್ಲರು. ಪತಂಜಲಿಯವರ
ಆತ್ಮಪ್ರಜ್ಞೆ
ಅಥವಾ ಅವರ
ಅಂತರಂಗವನ್ನೇ
ಉಸಿರಾಗಿಸಿಕೊಂಡಿದ್ದ
ಓರ್ವ ಮಹಾನ್
ಗುರುವಿನೊಂದಿಗೆ
ಇರುವ ಅದೃಷ್ಟ
ನನ್ನದಾಗಿತ್ತು.

ನೀವು ಯಾವ
ಉದ್ದೇಶಕ್ಕಾಗಿ ನಿಮ್ಮ
ದೇಹವನ್ನು
ಚಲಿಸುವಿರೋ, ಅದರ
ನೆನಪು ನಿಮ್ಮ ದೇಹ
ಮತ್ತು ಮನಸ್ಸಿನಲ್ಲಿ
ಸಂಪೂರ್ಣವಾಗಿ
ದಾಖಲಾಗಿಬಿಡುತ್ತದೆ.

ಅವರಿಗಿದ್ದ ಅದ್ಭುತವಾದ ಸಾಮರ್ಥ್ಯವನ್ನು,
ಊಹಿಸಲು ಅಸಾಧ್ಯವಾದ ದೈಹಿಕ ಶಕ್ತಿಯನ್ನು
ಯಾವ ಶ್ರಮವೂ ಇಲ್ಲದೆ ಸುಲಭವಾಗಿ ಅವರು
ತೋರಿಸುತ್ತಿದ್ದರು. ಕಬ್ಬಿಣದ ಪಟ್ಟಿಯನ್ನು ಎದೆಯ
ಸುತ್ತಲೂ ಬಿಗಿದುಕೊಂಡು, ಪೂರ್ಣವಾಗಿ
ನಿಶ್ವಾಸಮಾಡಿ ನಂತರ ಉಸಿರನ್ನು ಒಳಕ್ಕೆ
ಎಳೆದುಕೊಳ್ಳುತ್ತಿದ್ದ ವೈಖರಿಯಲ್ಲಿ ಕಬ್ಬಿಣದ
ಪಟ್ಟಿಯು ತುಂಡುತುಂಡಾಗಿ ಮುರಿದುಬೀಳುತ್ತಿತ್ತು!

ಇವೆಲ್ಲವೂ ಸಾಧ್ಯವಾಗುತ್ತದೆ ಎಂದು ಒಪ್ಪಿಕೊಳ್ಳಲು ಅಥವಾ ಅರ್ಥಮಾಡಿಕೊಳ್ಳಲು ಸಾಮಾನ್ಯವಾದ ತರ್ಕಬದ್ಧ ಮನಸ್ಸಿಗೆ ಅಸಾಧ್ಯ. ಆದರೆ ಈ ಮಹಾಯೋಗಿಗಳು ಎಲ್ಲವನ್ನೂ ಸಾಧ್ಯವಾಗಿಸುತ್ತಿದ್ದರು. ಇವರ ಸಂಗಡ ಇರುವ ಅದೃಷ್ಟ ನನಗಿತ್ತು. ಅವರು ಗಾಳಿಯಲ್ಲಿ ತೇಲಾಡುತ್ತಿದ್ದದ್ದನ್ನು ನಾನು ಒಂದು ಬಾರಿಯಲ್ಲ, ಕನಿಷ್ಟ ಪಕ್ಷ ಇಪ್ಪತ್ತು ಬಾರಿಯಾದರೂ ನೋಡಿದ್ದೇನೆ. ಅವರು ಒಂದು ರೀತಿಯಲ್ಲಿ ಉಸಿರನ್ನು ಆಳವಾಗಿ ಒಳಗೆ ಎಳೆದುಕೊಂಡು, ಉಸಿರನ್ನು ಬಿಗಿಹಿಡಿದುಕೊಳ್ಳುತ್ತಿದ್ದರು. ಹಾಗೆ ಮಾಡಿದಾಕ್ಷಣ ಗಾಳಿ ತುಂಬಿದ ಬಲೂನಿನ ಹಾಗೆ ಅವರ ದೇಹವು ನೆಲದಿಂದ ಮೇಲಕ್ಕೇರುತ್ತಿತ್ತು!

ನಾನು ಮೂರರಿಂದ ಹದಿಮೂರನೆಯ
ವಯಸ್ಸಿನವರೆಗೆ ಅವರ ಮಾರ್ಗದರ್ಶನ,
ಪೋಷಣೆಯಲ್ಲಿದ್ದು, ಅವರ ಚರಣಕಮಲಗಳ ಸೇವೆ
ಮಾಡುವ ಅದೃಷ್ಟವಿತ್ತು. ಪ್ರತಿದಿನ ಬೆಳಗಿನಿಂದ
ಮಧ್ಯಾಹ್ನದವರೆಗೆ ಕನಿಷ್ಟ ಪಕ್ಷ ನಾಲ್ಕು ಅಥವಾ
ಐದು ಗಂಟೆಗಳ ಕಾಲ ಸಾಂಪ್ರದಾಯಕವಾದ ಅನೇಕ
ಯೋಗಾಭ್ಯಾಸಗಳನ್ನು ನನ್ನಿಂದ ಮಾಡಿಸುತ್ತಿದ್ದರು:
ಆಸನಗಳು, ಹಾಗೂ ಕರುಳು ಮತ್ತು ಇತರ ಆಂತರಿಕ
ಅಂಗಗಳನ್ನು ಶುಚಿಮಾಡಲು ನೇತಿ ಮತ್ತು
ದೌತಿಗಳಂತಹ ಯೋಗಿಕ ತಂತ್ರಗಳನ್ನು ಮಾಡಲು
ನಾನು ಉದ್ದವಾದ ಬಟ್ಟೆಯನ್ನು ನುಂಗಬೇಕಾಗಿತ್ತು!

ಉದ್ದೇಶಪೂರ್ವಕವಾಗಿ ಶರೀರವನ್ನು ಚಲಿಸಿರಿ ಮತ್ತು ಫಲಿತಾಂಶವನ್ನು ಪಡೆಯಿರಿ

ಕೆಲವು ದಿನಗಳಲ್ಲಿ, ರಘುಪತಿಯೋಗಿಗಳು ನನ್ನನ್ನು ನಿಶ್ಚಲವಾಗಿ ಕುಳಿತು, ಶಾಂತಿ ಹಾಗೂ ನೆಮ್ಮದಿಯ ಮೇಲೆ ಧ್ಯಾನಮಾಡು ಎನ್ನುತ್ತಿದ್ದರು. ಹತ್ತು ನಿಮಿಷಗಳಾದ ಮೇಲೆ ಒಮ್ಮೆಗೇ ಎದ್ದು ನಿಲ್ಲು ಎನ್ನುತ್ತಿದ್ದರು. ನಂತರ, ನಿನಗೆ ಸಾಧ್ಯವಾದಷ್ಟು ವೇಗವಾಗಿ ದೇವಸ್ಥಾನದ ಸುತ್ತಲೂ ಓಡು ಎನ್ನುತ್ತಿದ್ದರು.

ಅವರು ನನ್ನನ್ನು ಹೇಗೆ ಹೇಗೋ ಬಗ್ಗಿಸುತ್ತಿದ್ದರು. ಅವರು ಯೋಗ ಶಿಕ್ಷಣ ನೀಡುತ್ತಿದ್ದ ದೇವಸ್ಥಾನದಲ್ಲಿ ಇಪ್ಪತ್ತರಿಂದ ಮೂವತ್ತು ಕಂಬಗಳಿದ್ದವು. ನನ್ನನ್ನು ಆ ಪ್ರತಿಯೊಂದು ಕಂಬವನ್ನೂ ಹತ್ತಿಳಿಯುವಂತೆ ಮಾಡುತ್ತಿದ್ದರು! ಅಲ್ಲದೆ ಕಂಬವನ್ನು ಹತ್ತಿಳಿಯುವಾಗ ನಾನು ಒಂದೇ ಕೈಯನ್ನು ಮಾತ್ರ ಉಪಯೋಗಿಸಬೇಕಾಗಿತ್ತು!

ಯಾವ ಗ್ರಂಥಗಳಲ್ಲಾಗಲೀ ಅಥವಾ ಸೂತ್ರಗಳಲ್ಲಾಗಲೀ, ಕಂಬಗಳನ್ನು ಹತ್ತಿಳಿಯುವುದನ್ನು ಯೋಗಾಭ್ಯಾಸದ ಅಂಶವೆಂದು ಕಾಣದಿದ್ದ ನಾನು, ಅವರೇಕೆ ನನ್ನನ್ನು ಕಂಬಗಳನ್ನು ಹತ್ತಿಳಿಯುವಂತೆ ಮಾಡುತ್ತಾರೆಂದು ಅವರನ್ನು ಕೇಳುತ್ತಿದ್ದೆ.

ಇದಕ್ಕೆ ಅವರು ಬಹುಸುಂದರವಾದ ವಿವರಣೆ ನೀಡುತ್ತಿದ್ದರು. ‘ಯಾವ ಉದ್ದೇಶಕ್ಕಾಗಿ ದೇಹವನ್ನು ಅಲುಗಾಡಿಸುವಿರೋ ಅಥವಾ ಬಗ್ಗಿಸುವಿರೋ ಆ ಉದ್ದೇಶದ ನೆನಪು ಮತ್ತು ಕಲ್ಪನೆಯು ದೇಹ ಮತ್ತು ಮನಸ್ಸಿನಲ್ಲಿ ಸಂಪೂರ್ಣವಾಗಿ ಒಳಹೊಕ್ಕು ದಾಖಲಾಗಿಬಿಡುವುದು’ ಎಂದು.

ಅದೊಂದು ತಲ್ಲಣಗೊಳಿಸುವ ಮಹತ್ತರವಾದ
ಸತ್ಯ! ನೀವು ಯಾವುದೇ ಉದ್ದೇಶದಿಂದ ನಿಮ್ಮ
ದೇಹವನ್ನು ಅಲುಗಿಸಿದರೂ, ಬಗ್ಗಿಸಿದರೂ ಅಥವಾ
ಯಾವುದೇ ಚಟುವಟಿಕೆಯಲ್ಲಿ ನಿಮ್ಮ ದೇಹವನ್ನು
ತೊಡಗಿಸಿದರೂ, ಆ ಉದ್ದೇಶವು ನಿಮ್ಮ ದೇಹದಲ್ಲಿ
ದಾಖಲಾಗಿ, ಅದರ ಸಂಸ್ಕಾರವು ನಿಮ್ಮ ದೇಹದಲ್ಲಿ
ವ್ಯಕ್ತವಾಗಲಾರಂಭಿಸುತ್ತದೆ.

ಇಂದು ಹೆಚ್ಚಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ
ರೋಗಕ್ಕೂ ಆಸನಗಳಿಗೂ ಅತಿಯಾದ ಸಂಬಂಧವನ್ನು
ಕಲ್ಪಿಸಿದ್ದಾರೆ. ಈ ಖಾಯಿಲೆಗೆ ಆ ಆಸನವನ್ನು
ಮಾಡಿರಿ, ಈ ತೊಂದರೆಗೆ ಆ ತಂತ್ರ ವಿಧಾನವನ್ನು
ಅಭ್ಯಾಸಮಾಡಿರಿ ಎನ್ನುತ್ತಾರೆ. ಖಾಯಿಲೆಗಳನ್ನು
ನಿವಾರಿಸುವುದೇ ಯೋಗದ ಉದ್ದೇಶವಲ್ಲ!

ತಿಳಿಯಿರಿ, ನೀವು ಒಂದು ಖಾಯಿಲೆಯ ಬಗ್ಗೆ
ಪರ್ಯಾಲೋಚಿಸಿ, ಆ ಆಲೋಚನೆಯನ್ನೇ
ಮಾನಸ್ಸಿನಲ್ಲಿಟ್ಟುಕೊಂಡು ಯೋಗವನ್ನು
ಮಾಡಿದ್ದಾದರೆ, ಆ ಖಾಯಿಲೆಯ ಆಲೋಚನೆಯನ್ನು
ನಿಮ್ಮ ವ್ಯವಸ್ಥೆಯೊಳಕ್ಕೆ ಇನ್ನೂ ದೃಢವಾಗಿ
ಒತ್ತಿಬಿಡುತ್ತೀರಿ!

ರಘುಪತಿಯೋಗಿಗಳು ಯಾವುದಾದರೂ
ಉದ್ದೇಶ ಅಥವಾ ಗುರಿಸಾಧನೆಗಾಗಿ,
ಆಸನಾಭ್ಯಾಸವನ್ನಾಗಲೀ ಅಥವಾ ಯಾವುದಾದರೂ
ದೈಹಿಕ ಚಲನೆಯನ್ನಾಗಲೀ ಮಾಡಿದರೆ, ದೇಹದಲ್ಲಿ
ಅದರ ಪರಿಣಾಮ ಉಂಟಾಗುತ್ತದೆ ಎನ್ನುತ್ತಾರೆ.
ಕೇವಲ ಸಾಮಾನ್ಯವಾಗಿ ಕುಳಿತುಕೊಳ್ಳುವುದರಿಂದಲೂ
ಇದು ಸಾಧ್ಯ ಎನ್ನುತ್ತಾರವರು. ನೀವು ಉತ್ತಮ
ಆರೋಗ್ಯವನ್ನು ಪಡೆಯುತ್ತೇನೆಂಬ ಬಲವಾದ
ನಂಬಿಕೆ ಇಟ್ಟುಕೊಂಡು ಆರೋಗ್ಯ ಸಾಧನೆಗಾಗಿ
ಕೇವಲ ಕುಳಿತುಕೊಂಡರೂ ಸಾಕು, ಆರೋಗ್ಯವು
ತಾನಾಗಿಯೇ ಸರಿಹೋಗುವುದನ್ನು ಕಾಣುವಿರಿ.

ನಿಮ್ಮ ಶರೀರವು ನಿಮ್ಮ ನೆನಪುಗಳಿಂದ
ನಿರ್ಮಿತವಾಗಿದೆ. ನೀವೇ ಅದು ಎಂದು ಭಾವಿಸುವ
ನಿಮ್ಮ ಮನಸ್ಸಿನ ಆಲೋಚನೆಗಳು ನಿಮ್ಮ ದೇಹದ
ನಿರ್ಮಾಣದ ಇಟ್ಟಿಗೆಗಳಂತೆ.

ಪ್ರತಿಯೊಂದು ನೆನಪೂ ಸಹ ನಿಮ್ಮ ಸ್ನಾಯುಗಳಲ್ಲಿ ದಾಖಲಾಗುತ್ತದೆ. ಹಾಗಾಗಿ, ನೀವು ನೆನಪುಗಳನ್ನು ಬದಲಾಯಿಸುವ ಮೂಲಕ ನಿಮ್ಮ ದೇಹ-ಮನಸ್ಸುಗಳ ವ್ಯವಸ್ಥೆಯನ್ನೂ ಬದಲಾಯಿಸಿ ಬಿಡಬಹುದು. ನಿಮ್ಮ ವ್ಯವಸ್ಥೆಯು ನೀವು ಸೃಷ್ಟಿಸುವ ನೆನಪುಗಳಿಗೆ ಸ್ಪಂದಿಸಬಲ್ಲದು ಮತ್ತು ಸ್ಪಂದಿಸುತ್ತದೆ.

ನಿತ್ಯಯೋಗದ
ಮೂಲಕ ದೇಹ-
ಮನಸ್ಸಿನ
ನಿಮ್ಮ ಶರೀರವು ನಿಮ್ಮ
ನೆನಪುಗಳಿಂದ
ನಿರ್ಮಿತವಾಗಿದೆ.
ಪರಿವರ್ತನೆ ಆಗುವುದು ಈ ರೀತಿಯಾಗಿಯೇ.
ನಿತ್ಯಯೋಗದಲ್ಲಿ ಮನಸ್ಸು ಒಂದೇ ತಾನಕ್ಕೆ ಬರಲು
ಮೊದಲು ಅಂತರಂಗವನ್ನು ಶುದ್ಧೀಕರಿಸಲಾಗುವುದು.
ನಂತರ ಉದ್ದೇಶಪೂರ್ವಕವಾಗಿ ಮಾಡುವ ದೈಹಿಕ
ಚಲನೆ ಅಥವಾ ಆಸನ ಮಾಡುವುದರಲ್ಲಿ ದೇಹವನ್ನು
ತೊಡಗಿಸಲಾಗುವುದು. ಈ ಉದ್ದೇಶವು
ಸ್ನಾಯುಗಳಲ್ಲಿ ನೆನಪಾಗಿಯೂ ಹಾಗೂ
ಜೀವಕೋಶಗಳಲ್ಲಿ ಬುದ್ಧಿಶಕ್ತಿಯಾಗಿಯೂ
ಸೇರಿಕೊಳ್ಳುತ್ತದೆ.

ವೈಜ್ಞಾನಿಕ ಪ್ರಮಾಣ

'ನಮ್ಮ ಗ್ರಹಿಕೆಗಳೇನೋ ಅದರಂತೆಯೇ ನಾವು.
ನಮ್ಮ ಗ್ರಹಿಕೆಗಳಂತೆಯೇ ನಮ್ಮ ಕಾರ್ಯಗಳೂ
ಆಗುತ್ತವೆ. ನಮ್ಮ ಕಾರ್ಯಗಳಂತೆಯೇ ನಮ್ಮ
ವಿಧಿಯೂ ಆಗುತ್ತದೆ' ಎಂಬುದು ಉಪನಿಷತ್ತಿನ
ಹೇಳಿಕೆಯಲ್ಲ. ಡಾ|| ಬ್ರೂಸ್ ಲಿಪ್ಟನ್ ಎಂಬ
ಜೀವಕೋಶದ ಜೀವವಿಜ್ಞಾನಿ ಬರೆದಿರುವ 'ದಿ
ಬಯಾಲಜಿ ಆಫ್ ಬಿಲೀಫ್' ಎಂಬ ಪುಸ್ತಕದಲ್ಲಿ
ಕಂಡುಬಂದದ್ದು; ಜೀವಕೋಶಗಳು ಯಾವ
ರೀತಿಯಲ್ಲಿ ನಡೆದುಕೊಳ್ಳುತ್ತವೆ ಎಂಬುದರ ಕುರಿತು
ಅವರು ಇತ್ತೀಚೆಗೆ ಪ್ರತಿಪಾದಿಸಿರುವ ಹೊಸ
ತತ್ವದಲ್ಲಿ ಕಂಡುಬಂದದ್ದು. ನಮ್ಮ 'ಜೀನ್ಸ್'
(ವಂಶವಾಹಿ)ಗಳು ರಚನೆ ಆಗಿರುವಂತೆ ನಮ್ಮ
ನಡವಳಿಕೆ ಇರುತ್ತದೆ ಎಂದು ತಿಳಿದಿದ್ದೆವು.

ಸಂಶೋಧನೆಯನ್ನು ಮಾಡಿದ ನಂತರ ಡಾ|| ಲಿಪ್ಟನ್‌ರವರು ಇದಕ್ಕೆ ತದ್ವಿರುದ್ಧವಾಗಿ, ‘ನಮ್ಮ ನಡವಳಿಕೆಗೆ ಅನುಗುಣವಾಗಿ ನಮ್ಮ ಜೀನ್ಸ್ ರೂಪುಗೊಳ್ಳುತ್ತವೆ!’ ಎನ್ನುತ್ತಾರೆ. ಉದ್ದೇಶ ಮತ್ತು ಮನೋಕಲ್ಪನೆಗಳು ದೈಹಿಕವಾಗಿಂಗೋ ಕಾಣಿಸಿಕೊಳ್ಳುವ ಸಾಮರ್ಥ್ಯದ ಬಗ್ಗೆ ದಾಖಲಾಗಿರುವ ಅನೇಕ ದೃಷ್ಟಾಂತಗಳಿವೆ! ಉದಾಹರಣೆಗೆ, ಜನರು ತಮ್ಮ ಶಕ್ತಿಯನ್ನು ಮೀರಿ ಪರಿಮಿತಿಗಳನ್ನೆಲ್ಲವನ್ನೂ ದಾಟಿ, ಮಾರಕವಾದ ಕ್ಯಾನ್ಸರ್‌ನಂತಹ ಅಥವಾ ಭಯಂಕರವಾದ ಖಾಯಿಲೆಗಳನ್ನು ಗುಣಪಡಿಸಿದ್ದಾರೆ, ಅಥವಾ ದೈಹಿಕ ಅಂಗವಿಕಲತೆಯನ್ನು ನಿವಾರಿಸಿಕೊಂಡಿದ್ದಾರೆ. ಮುಖ್ಯವಾಗಿ ಜೀವಕೋಶದ ನೆನಪನ್ನು ಮಾರ್ಪಾಡಾಗಿಸಬಲ್ಲ ಉದ್ದೇಶಗಳ ಸಾಮರ್ಥ್ಯದಿಂದಾಗಿ ಇವುಗಳು ಘಟಿಸಿವೆ.

ಈ ಪುರಾತನ ಸತ್ಯವು ಆಧುನಿಕ ವೈಜ್ಞಾನಿಕ
ಸಂಶೋಧನೆಗಳಿಂದ ಈಗ ಸಾಬೀತಾಗುತ್ತಿದೆ. ನಾವು
ಯಾವುದನ್ನಾದರೂ ಕುರಿತು ಆಳವಾಗಿ ಮತ್ತು
ಸತತವಾಗಿ ಯೋಚನೆ ಮಾಡಿದರೆ, ಅದು ನಮ್ಮ
ಮೇಲೆ ತೀವ್ರವಾಗಿ ದೈಹಿಕ, ಮಾನಸಿಕ ಹಾಗೂ
ಆಧ್ಯಾತ್ಮಿಕ ಪ್ರಭಾವ ಬೀರುತ್ತದೆ.

ನಿತ್ಯಯೋಗದ ಉದ್ದೇಶ

ನಿತ್ಯಯೋಗವು ಜಗತ್ತಿಗೆ ನನ್ನ ಕಾಣಿಕೆ. ಅದು
ನನಗೆ ದೊರೆತಂತಹ ಜ್ಞಾನೋದಯದ
ಅನುಭವವನ್ನು ಎಲ್ಲರಿಗೂ ದೊರೆಯುವಂತೆ
ಮಾಡುವ ಒಂದು ವಿಜ್ಞಾನ, ಒಂದು ಸೂತ್ರ.

ನಿತ್ಯಯೋಗದ ಉದ್ದೇಶವು ಬಹಳ
ಸರಳವಾದದ್ದು – ಆನಂದವನ್ನು ಅನುಭವಿಸುವುದು
ಹಾಗೂ ಅಭಿವ್ಯಕ್ತಪಡಿಸುವುದು. ನಿತ್ಯಯೋಗದಿಂದ
ಆನಂದವನ್ನು ಅನುಭವಿಸುವ ಸಾಮರ್ಥ್ಯ ನಿಮ್ಮ
ಅಂತರಾಳದಲ್ಲಿ ಸ್ಫೋಟಗೊಳ್ಳುತ್ತದೆ. ಆನಂದವನ್ನು
ಹೊರಸೂಸುವ ಸಾಮರ್ಥ್ಯ ನಿಮ್ಮ ಶರೀರದಲ್ಲಿ
ಉಂಟಾಗಲು ಪ್ರಾರಂಭವಾಗುತ್ತದೆ.

ಈಗ ನಿಮ್ಮ ದೇಹ-ಮನಸ್ಸುಗಳ ವ್ಯವಸ್ಥೆಯು ಜ್ಞಾನೋದಯದ ವಲಯದಲ್ಲೇ ಸ್ಥಿರವಾಗಿ ನಿಲ್ಲಲು ಹಾಗೂ ಆ ಅನುಭವವನ್ನು ನಿರಂತರವಾಗಿ ಹೊರಸೂಸಲು ಸಿದ್ಧವಾಗಿರದೇ ಇರಬಹುದು. ನಿತ್ಯಯೋಗವು ಆಂತರಿಕ ಆನಂದವನ್ನು – ಶಾಶ್ವತಾನಂದವನ್ನು ಅನುಭವಿಸಿ, ಅದರಲ್ಲಿ ನೆಲೆಸಿ, ಅದನ್ನು ಹೊರಸೂಸಲು ನಿಮ್ಮ ದೇಹವನ್ನು ಸಿದ್ಧಪಡಿಸುತ್ತದೆ.

ನಿತ್ಯಯೋಗದ ಮೂಲಕ ಸಾಧಕರಿಗೆ ಆನಂದವನ್ನು ಅನುಭವಿಸಲು ಮಾತ್ರವಲ್ಲದೆ, ಆ ಅನುಭವದಲ್ಲಿ ಸ್ಥಿರವಾಗಿ ನಿಂತು ಆ ಅನುಭವವನ್ನು ನಿರಂತರವಾಗಿ ಬದುಕಿನಲ್ಲಿ ಪಸರಿಸಲು ತರಬೇತಿ ನೀಡುತ್ತಿದ್ದೇನೆ. ನಿತ್ಯಯೋಗದ ಉದ್ದೇಶವು ಜನರು ನಿತ್ಯಾನಂದವನ್ನು ಅನುಭವಿಸಲು ಸಹಾಯ ಮಾಡುವುದೇ ಆಗಿದೆ. ಇದರ ಉಪಪರಿಣಾಮವಾಗಿ ಅಥವಾ ಉಪಫಲವಾಗಿ ದೈಹಿಕ ಆರೋಗ್ಯದ ಉಪಶಮನವಾಗುತ್ತದೆ. ಆದರೆ ಸ್ಪಷ್ಟವಾಗಿ ತಿಳಿಯಿರಿ, ಯೋಗವನ್ನು ದೈಹಿಕ ಆರೋಗ್ಯಕ್ಕಿಂತಲೂ ಹೆಚ್ಚಿನದನ್ನು ನೀಡುವುದಕ್ಕಾಗಿ ಉದ್ದೇಶಿಸಿದ್ದೇನೆ. ದೈಹಿಕವಾಗಿ ಪಡೆಯುವ ಆರೋಗ್ಯವು ಯೋಗದಿಂದಾಗುವ ಲಾಭಗಳಲ್ಲಿ ಒಂದಷ್ಟೆ. ಭಾವನಾತ್ಮಕವಾಗಿ ಲಾಭವsecretಂಟಾದರೂ ಅವೆಲ್ಲ ಉಪಉತ್ಪನ್ನಗಳಷ್ಟೆ!

ಇದೇ ರೀತಿ, ಧ್ಯಾನವು ಕೇವಲ ಮಾನಸಿಕ
ಯೋಗಕ್ಷೇಮಕ್ಕೆ ಮಾತ್ರವಲ್ಲ; ಮಾನಸಿಕ
ಯೋಗಕ್ಷೇಮವೂ ಧ್ಯಾನದ ಒಂದು
ಉಪಉತ್ಪನ್ನವಷ್ಟೆ. ನಿತ್ಯಯೋಗದ ಧೈಯವು ನಿಮ್ಮ
ಇಡೀ ಬದುಕನ್ನು, ಪ್ರತಿಯೊಂದು ಚಟುವಟಿಕೆ ಹಾಗೂ
ಪ್ರತಿಚಲನೆಯನ್ನು ಆನಂದವನ್ನಾಗಿ ಅಥವಾ
ಯೋಗವನ್ನಾಗಿ ಪರಿವರ್ತನೆಗೊಳಿಸುವುದೇ ಆಗಿದೆ.

ಇಂದು ನಿತ್ಯಯೋಗವನ್ನು ಪ್ರಪಂಚದಾದ್ಯಂತ
ಹೇಳಿಕೊಡಲಾಗುತ್ತಿದೆ. ಪತಂಜಲಿಯವರ ಅಷ್ಟಾಂಗ
ಯೋಗ ಸೂತ್ರಗಳನ್ನೆಲ್ಲಾ ಒಂದುಗೂಡಿಸಿ, ಆಸನ
ಪ್ರಾಣಾಯಾಮ ಮತ್ತು ಮುದ್ರೆಗಳ ಮೂಲಕ ದೇಹ-
ಮನಸ್ಸು-ಆತ್ಮವು ಸಂಯೋಗವಾಗುವುದನ್ನು
ನಿತ್ಯಯೋಗದ ಕಲಿಕೆಯ ಒಂದೊಂದು ಅವಧಿಯೂ
ಮತ್ತಷ್ಟೂ ಆಳವಾಗಿಸುತ್ತದೆ.

ನಿತ್ಯಯೋಗವು
ನಿಮ್ಮ ಬದುಕಿಗೆ
ಹೆಚ್ಚು ಚಲನ-
ವಲನಗಳನ್ನು
ಸೇರಿಸುವುದನ್ನು
ಕುರಿತಾಗಿಲ್ಲ.
ಅದು ನಿಮ್ಮ
ಚಲನವಲನಗಳಿಗೆ
ಜೀವಂತಿಕೆ
ನೀಡುವುದನ್ನು
ಕುರಿತದ್ದಾಗಿದೆ.

ನಿತ್ಯಯೋಗವು ನಿಮ್ಮ
ಬದುಕಿಗೆ ಹೆಚ್ಚು
ಚಲನವಲನಗಳನ್ನು
ಸೇರಿಸುವುದನ್ನು
ಕುರಿತಾಗಿಲ್ಲ. ಅದು
ನಿಮ್ಮ
ಚಲನವಲನಗಳಿಗೆ
ಜೀವಂತಿಕೆ
ನೀಡುವುದನ್ನು
ಕುರಿತದ್ದಾಗಿದೆ.

ನೀವು ಏನೇ ಮಾಡುವಾಗಲೂ ಎಚ್ಚರಿಕೆಯಿಂದ
ಪೂರ್ಣವಾಗಿ ನಿಮ್ಮನ್ನು ನೀವು ತೊಡಗಿಸಿಕೊಂಡರೆ,
ಅದೇ ಯೋಗ – ನಿತ್ಯಯೋಗ.