KAILASA Library/ಜೀವನ್ಮುಕ್ತಿ/ನಿತ್ಯಧ್ಯಾನ – ಆನಂದಮಯ ಜೀವನಕ್ಕಾಗಿ ಧ್ಯಾನSign in
ಜೀವನ್ಮುಕ್ತಿ

ನಿತ್ಯಧ್ಯಾನ – ಆನಂದಮಯ ಜೀವನಕ್ಕಾಗಿ ಧ್ಯಾನ

This text was machine-transcribed from the printed book and may contain errors. Select the words and choose “Report a mistake”.

ಅತಿ ಶ್ರೇಷ್ಠವಾದ ಧ್ಯಾನ ತಂತ್ರ

ಕೆಲವು ಧ್ಯಾನ ತಂತ್ರಗಳು ನಿರ್ದಿಷ್ಟವಾದ ಸಮಯಕ್ಕೆ, ನಿರ್ದಿಷ್ಟವಾದ ಜನರಿಗೇಂದೇ ಇರುತ್ತವೆ, ಇನ್ನು ಕೆಲವು ಸಾರ್ವತ್ರಿಕವಾದವು. 'ನಿತ್ಯಧ್ಯಾನ' ಎಂಬ ಧ್ಯಾನವು ಇಂದಿನ ಅನ್ವೇಷಕರಿಗಾಗಿಯೇ ಇರುವಂತಹುದು. ಇದು ಇಂದಿನ ಸೈಬರ್ ಕಾಲಕ್ಕೆ ತಕ್ಕ ಧ್ಯಾನ ತಂತ್ರ.

ನಿತ್ಯಧ್ಯಾನದ ಉದಯ

ಮೊದಲಿಗೆ ನಿತ್ಯಧ್ಯಾನ ಎಂಬ ಧ್ಯಾನತಂತ್ರವು ಹೇಗೆ ಮೂಡಿತೆಂದು ಹೇಳಲು ಇಚ್ಛಿಸುತ್ತೇನೆ. ಹನ್ನೊಂದನೆಯ ವಯಸ್ಸಿನವರೆಗೆ ನಾನು ಅನೇಕ ಧ್ಯಾನತಂತ್ರಗಳೊಂದಿಗೆ ಪ್ರಯೋಗಮಾಡಿದೆ. 12ನೆಯ ವಯಸ್ಸಿನಲ್ಲಿ ನನಗೆ ಆಳವಾದ ಆಧ್ಯಾತ್ಮಿಕ ಅನುಭವವಾಯಿತು. 12ರಿಂದ 21ನೆಯ ವಯಸ್ಸಿನವರೆಗೆ ನಾನು ಪ್ರಜ್ಞಾಪೂರಿತವಾಗಿ ಅನೇಕ ಧ್ಯಾನತಂತ್ರಗಳ ಪ್ರಯೋಜನಗಳನ್ನು ಪರಿಶೀಲಿಸಿ, ವಿಶ್ಲೇಷಿಸಿದೆ. ನಾನು ಜೀವನ್ಮುಕ್ತಿಯನ್ನು ಪಡೆದ ಮೂರು ವರ್ಷಗಳ ನಂತರ ಅದೇ ಅನುಭವವನ್ನು ಇತರರಲ್ಲೂ ಪುನರುತ್ಪಾದಿಸಲು ಒಂದು ದೃಢವಾದ ತಾಂತ್ರಿಕ ಜ್ಞಾನವನ್ನು ಸೃಷ್ಟಿಸಲು ಪ್ರಯತ್ನಿಸಿದೆ. ನಾನು ಇಂದಿನವರೆಗೂ ಮಾಡಿರುವ ಇಡೀ ಒಳಜಗತ್ತಿನ ಸಂಶೋಧನೆಯ ಸಾರವೆಲ್ಲವನ್ನೂ ನಿತ್ಯಧ್ಯಾನ ತಂತ್ರದಲ್ಲಿ ಸೂತ್ರರೂಪವಾಗಿ ಅಳವಡಿಸಿದ್ದೇನೆ.

ನಿತ್ಯಧ್ಯಾನವು ಇಡೀ ಜೀವನವನ್ನು ಪರಿವರ್ತಿಸಿ,
ಅಂತಿಮವಾದ ಜೀವನ್ಮುಕ್ತಿಯ ಅನುಭವವನ್ನು
ಪಡೆಯಲು ನಿಮ್ಮನ್ನು ಸಿದ್ಧಗೊಳಿಸುವ ಒಂದು ಸೂತ್ರ
ಹಾಗೂ ತಂತ್ರ. ಈ ಅಸಾಧಾರಣವಾದ ತಂತ್ರದ
ಪ್ರತಿಯೊಂದು ಭಾಗವೂ ಇತರ ಹಂತಗಳಿಗೆ
ಪೂರಕವಾಗಿದ್ದು, ವೈಯಕ್ತಿಕ ಪ್ರಜ್ಞೆಯನ್ನು
ಮೇಲೇರಿಸಲು ಸಹಾಯಕಕಾರಿಯಾಗಿದೆ. ಇದು
ನಿರಂತರ ಆನಂದವಾದ ನಿತ್ಯ ಆನಂದವನ್ನು
ಪಡೆಯಲು ಒಂದು ಪ್ರತಿನಿತ್ಯದ ಧ್ಯಾನ.

ಚಕ್ರಗಳ ಅರಿವು

ಈ ತಂತ್ರವನ್ನು ತಿಳಿಯಲು ಸೂಕ್ಷ್ಮವಾದ ಶಕ್ತಿಕೇಂದ್ರಗಳಾದ ಚಕ್ರಗಳ ಬಗ್ಗೆ ತಿಳಿಯುವ

ಅಗತ್ಯವಿದೆ. ಏಳು ಚಕ್ರಗಳ ಮೇಲೆ ಧ್ಯಾನಿಸುವುದು
ನೂತನ ಶಕ್ತಿಪಥಗಳನ್ನು ಜಾಗೃತಗೊಳಿಸಿದಂತೆ.
ಅದು ಟಿ.ವಿ.ಯಲ್ಲಿ ಹೊಸ ಚಾನಲ್‌ಗೆ ಟ್ಯೂನ್
ಮಾಡಿದಂತೆ (ಟಿ.ವಿ.ಯಲ್ಲಿ ಹೊಸ ವಾಹಿನಿಯೊಂದಕ್ಕೆ
ಶ್ರುತಿಗೂಡಿಸಿದಂತೆ). ನಮ್ಮ ದೇಹದಲ್ಲಿ ಏಳು
ಪ್ರಮುಖ ಶಕ್ತಿ ಕೇಂದ್ರಗಳಿವೆ. ಪ್ರತಿಯೊಂದು
ಕೇಂದ್ರವೂ ಒಂದು ನಿರ್ದಿಷ್ಟವಾದ ಭಾವನೆಗೆ
ಸಂಬಂಧಿಸಿದೆ. ಏಳು ಭಾವನೆಗಳು ಯಾವುವೆಂದರೆ
ಕಾಮ, ಭಯ, ಚಿಂತೆ, ಗಮನದ ಅಪೇಕ್ಷೆ,
ಮಾತ್ಸರ್ಯ, ಅಹಂಕಾರ ಹಾಗೂ ಅತೃಪ್ತಿ. ಸದ್ಯದಲ್ಲಿ
ಮನುಷ್ಯನಿಗೆ ಈ ಏಳು ಭಾವನೆಗಳ
ಆಧಾರವಾಗಿಯೇ ಯೋಚಿಸಲು ಸಾಧ್ಯ. ಅವನ
ದೇಹವು ಸಾಗುವುದೇ ಈ ಯಾವುದಾದರೊಂದು
ಭಾವನೆಗಳ ಉಪಯುಕ್ತತೆಗಾಗಿ. ಕೆಲವರು
ನಡೆಯುವುದು ಆಸೆಯಿಂದ, ಕಾಮದಿಂದ ಅಥವಾ
ಸ್ಪರ್ಶದಿಂದ. ಕೆಲವರು ಭಯದಿಂದ ಮಾತ್ರವೇ
ಕಾರ್ಯಮಾಡುತ್ತಾರೆ. ಆಸೆಯಂತಹ ಭಾವನೆಗಳಿಂದ
ಪ್ರೇರಿತರಾದರೆ ಅದರಲ್ಲಿ ತಪ್ಪೇನೂ ಇಲ್ಲ. ಆದರೆ
ಪ್ರೀತಿಯಂತಹ ಇನ್ನೂ ಉತ್ತಮ ಆಯಾಮಗಳನ್ನು
ಸಹ ಅನುಭವಿಸಬೇಕು; ನಾವು ಕೇವಲ ಈ
ಭಾವನೆಗಳಿಂದಲ್ಲದೆ ಬರಿಯ ಚೈತನ್ಯದಿಂದಲೇ
ಕಾರ್ಯನಿರ್ವಹಿಸುವುದು ಸಾಧ್ಯವೆಂದು
ತಿಳಿಯಬೇಕು.

ಚಕ್ರಗಳನ್ನು ಜಾಗೃತಗೊಳಿಸುವುದರಿಂದ ಈ ಭಾವನೆಗಳ ಆಲೋಚನಾ ರೀತಿಯಿಂದ ಬಿಡುಗಡೆ ಹೊಂದುತ್ತೀರಿ. ನೀವು ಒಂದು ಸ್ವತಂತ್ರವಾದ ಜೀವಿಯಂತೆ ಬದುಕಲಾರಂಭಿಸುತ್ತೀರಿ. ಅಂತಹ ಮಾನಸಿಕ ಪ್ರವೃತ್ತಿಗಳಿಂದ ಬಿಡುಗಡೆ ಹೊಂದಿದಾಗ ಮಾತ್ರ ಆ ಸ್ವಾತಂತ್ರ್ಯದ ಬೆಲೆಯನ್ನು ತಿಳಿಯುತ್ತೀರಿ.

ನೀವು ಒಂದು ನಿರ್ದಿಷ್ಟವಾದ ಚಕ್ರದಿಂದ ಬಿಡುಗಡೆ ಹೊಂದಿದರೆ, ಉದಾಹರಣೆಗೆ, ಅಸೂಯೆಗೆ ಸಂಬಂಧಿಸಿದ ಚಕ್ರವೆಂದಿಟ್ಟುಕೊಂಡರೆ, ಆ ಆಯಾಮದಲ್ಲಿ ಅಸೂಯೆರಹಿತವಾದ ಪ್ರಪಂಚವೆಂಬ ಒಂದು ಹೊಸ ಪ್ರಪಂಚವನ್ನು ಅನುಭವಿಸುತ್ತೀರಿ! ನಿಮ್ಮ ವ್ಯಕ್ತಿತ್ವವು ಈಗ ಯಾವುದೇ ಗುರುತಿನ ಮೇಲೆ ಆಧಾರಿತವಾಗಿದ್ದರೂ, ಆ ಗುರುತು ಅಥವಾ ಪರಿಕಲ್ಪನೆಯು ಸುಮ್ಮನೆ ಕರಗಿಹೋಗುತ್ತದೆ. ನೀವು ಒಂದು ನವಚೈತನ್ಯವನ್ನೇ ಪಡೆಯುತ್ತೀರಿ.

ಅದು ಹೀಗಿದೆ: ನಿಮಗೆ ಇದ್ದಕ್ಕಿದ್ದಂತೆ ಷೇರು
ವ್ಯಾಪಾರದಲ್ಲಿ ಆಸಕ್ತಿ ಬಂದರೆ, ಷೇರು ಕಟ್ಟೆಯ
ಬಗ್ಗೆ ಟಿವಿ ಹಾಗೂ ಪತ್ರಿಕೆಗಳಿಂದ ಮಾಹಿತಿಯನ್ನು
ಪಡೆಯಲಾರಂಭಿಸುತ್ತೀರಿ. ಸುಮಾರು ಒಂದು ತಿಂಗಳ
ನಂತರ ಷೇರು ವ್ಯಾಪಾರದ ಬಗ್ಗೆ ಇಡೀ ಪ್ರಪಂಚಕ್ಕೆ
ಹೆಚ್ಚು ಅರಿವು ಉಂಟಾಗಿದೆಯೆಂದು
ತಿಳಿಯಲಾರಂಭಿಸುತ್ತೀರಿ. ಷೇರುಕಟ್ಟೆಗೆ
ಸಂಬಂಧಿಸಿದವರಿಂದ ನೀವು ಸುತ್ತುವರಿ-
ಯಲ್ಪಟ್ಟವರಂತೆ ಭಾವಿಸುತ್ತೀರಿ. ಆದರೆ ಪ್ರಪಂಚವು
ಬದಲೇನೂ ಆಗಿಲ್ಲ; ಬದಲಾಗಿರುವುದು ನಿಮ್ಮ
ದೃಷ್ಟಿಕೋನ. ನಿಮ್ಮ ಶಕ್ತಿ ಕೇಂದ್ರವನ್ನು
ಬದಲಾಯಿಸಿದರೆ ನಿಮ್ಮ ಸುತ್ತಮುತ್ತ ಅಂತಹ
ಜನರನ್ನು ಸೇರಿಸಿಕೊಳ್ಳಲಾರಂಭಿಸುತ್ತೀರಿ.

ನಿಮ್ಮ ಶಕ್ತಿಯ ಕೇಂದ್ರವನ್ನು ಬದಲಾಯಿಸಿದಾಗ, ನೀವು ಕಾಣುವ ಪ್ರಪಂಚವನ್ನು ಬದಲಾಯಿಸಬಹುದು. ಪುರಾಣಗಳಲ್ಲಿ ಏಳು ಪ್ರಪಂಚಗಳಿವೆ ಎಂದು ಹೇಳುತ್ತಾರೆ. ನೀವು ಪ್ರಪಂಚವನ್ನು ಹೇಗೆ ಕಾಣುತ್ತೀರೆಂದು ನಿರ್ಧರಿಸುವ ಏಳು ಭಾವನೆಗಳನ್ನೇ ಅವರು ವಾಸ್ತವವಾಗಿ ಇಲ್ಲಿ ಉಲ್ಲೇಖಿಸಿರುವುದು.

ನಿತ್ಯಧ್ಯಾನ ಧ್ಯಾನತಂತ್ರ

ಇದು ಪ್ರತಿ ಹಂತವೂ ಏಳು ನಿಮಿಷದ್ದಾಗಿರುವ ಐದು ಹಂತಗಳ ತಂತ್ರ.

1. ಅಸ್ತವ್ಯಸ್ತವಾದ ಉಸಿರಾಟ

ಕಾಲಾವಧಿ : ಏಳು ನಿಮಿಷಗಳು

ವಜ್ರಾಸನದಲ್ಲಿ ಕುಳಿತುಕೊಳ್ಳಿರಿ (ಮಂಡಿಗಳನ್ನು ಮಡಿಚಿ, ನಿಮ್ಮ ಪಾದಗಳು ಅದರ ಕೆಳಗೆ ಬರುವಂತೆ, ನಿಮ್ಮ ಪೃಷ್ಠವು ಹಿಮ್ಮಡಿಗಳ ಮೇಲೆ ವಿಶ್ರಮಿಸುವಂತೆ ಕುಳಿತುಕೊಳ್ಳುವುದು). ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಶಕ್ತಿಯು ಸಹಸ್ರಾರ ಚಕ್ರ (ನೆತ್ತಿಯ ಕೇಂದ್ರ)ದಿಂದ ಮೂಲಾಧಾರ ಚಕ್ರ (ಬೆನ್ನುಹುರಿಯ ತಳಹದಿಯಲ್ಲಿರುವ ಕೇಂದ್ರ)ಕ್ಕೆ ಹರಿಯುತ್ತದೆ. ವಜ್ರಾಸನದ ಭಂಗಿಯು ಈ ಹರಿವನ್ನು ತಿರುಗುಮುರುಗಾಗಿಸುತ್ತದೆ ಮತ್ತು ಮೇಲಕ್ಕೆ ಚಲಿಸುವ ಶಕ್ತಿಯನ್ನು ಬೆಂಬಲಿಸುತ್ತದೆ.

ವಜ್ರಾಸನದಲ್ಲಿ ಕುಳಿತಿರುವ ಭಂಗಿ

ಕಣ್ಣುಗಳನ್ನು
ಮುಚ್ಚಿ, ಕೈಗಳನ್ನು
ನಿಮ್ಮ ಸೊಂಟದ
ಮೇಲಿಟ್ಟು ಕುಳಿತು,
ಕ್ರಮಬದ್ಧವಲ್ಲದ
ಉಸಿರಾಟವನ್ನು
ನಡೆಸಿ. ಆಳವಾಗಿ
ಹಾಗೂ
ಅಸ್ತವ್ಯಸ್ತವಾಗಿ ಒಂದು ನಿರ್ದಿಷ್ಟವಾದ
ಲಯವಿಲ್ಲದಂತೆ ಉಸಿರನ್ನು ಒಳಕ್ಕೆಳೆದುಕೊಂಡು
ಬಿಡಿರಿ. ಉಸಿರಾಟದ ಮೇಲೆಯೇ ಕೇಂದ್ರೀಕರಿಸಿರಿ.
ನಿಮ್ಮ ಇಡೀ ಅಸ್ತಿತ್ವವು ಉಸಿರಾಟವಾಗಬೇಕು.

ಈ ಮೊದಲನೆಯ ಭಾಗವು ಕೇವಲ ದೈಹಿಕವಾದುದು; ವಜ್ರಾಸನದಲ್ಲಿ ಕುಳಿತು ಆಳವಾಗಿ, ಅಸ್ತವ್ಯಸ್ತವಾಗಿ ಉಸಿರನ್ನು ಒಳಕ್ಕೆಳೆದು, ಹೊರಕ್ಕೆ ಬಿಡುವುದು. ನಿಮಗೇನಾದರೂ ಜೀರ್ಣಕ್ಕೆ ಸಂಬಂಧಿಸಿದ ತೊಂದರೆ ಇದ್ದಲ್ಲಿ, ಅದು ಸಂಪೂರ್ಣವಾಗಿ ಇದರಿಂದ ಗುಣವಾಗಿ, ನಿಮ್ಮ ದೇಹವು ತಯಾರಾಗುತ್ತದೆ.

ದೇಹದ ತೀವ್ರತೆಯು ಹೆಚ್ಚಾದಾಗ ನಿಮ್ಮ ಜೀರ್ಣಶಕ್ತಿಯ ವ್ಯವಸ್ಥೆ ಚೆನ್ನಾಗಿರುತ್ತದೆ. ನಿತ್ಯಧ್ಯಾನದ ಈ ಮೊದಲನೆಯ ಭಾಗವು ಒಂದು ಆರೋಗ್ಯಕರವಾದ ದೇಹವನ್ನು ಹೊಂದಲೆಂದೇ ಸೃಷ್ಟಿಯಾಗಿದೆ. ನೀವು ತಿಳಿಯಬೇಕಾದ ಒಂದು ಮುಖ್ಯವಾದ ವಿಷಯವೆಂದರೆ, ನಿಮ್ಮ ಉಸಿರಾಟದ ಗುಣಮಟ್ಟವು ನಿಮ್ಮ ಮನಸ್ಸಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ. ನಿಮ್ಮ ಭಾವನೆಗಳು ನಿಮ್ಮ ಉಸಿರಾಟದ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತವೆ. ನೀವು ಆತಂಕಗೊಂಡಾಗ ನಿಮ್ಮ ಉಸಿರಾಟವು ಬದಲಾಗುತ್ತದೆ. ನೀವು ಕೋಪಗೊಂಡಾಗ ನಿಮ್ಮ ಉಸಿರಾಟವು ಬದಲಾಗುತ್ತದೆ. ನೀವು ಉದ್ವಿಗ್ನರಾದಾಗ ಆಳವಾಗಿ ಉಸಿರನ್ನು ತೆಗೆದುಕೊಂಡರೆ ಇದ್ದಕ್ಕಿದ್ದಂತೆ ನಿಮಗೆ ಹಗುರಾದಂತೆ ಭಾಸವಾಗುತ್ತದೆ, ಹೆಚ್ಚು ನೆಮ್ಮದಿಯಾಗುತ್ತದೆ ಹಾಗೂ ಉದ್ವೇಗವು ನಿವಾರಣೆಯಾಗುತ್ತದೆ.

> ನಿಮ್ಮ
> ಮನಃಸ್ಥಿತಿಯ
> ಆಧಾರದ ಮೇಲೆ
> ನಿಮ್ಮ
> ಉಸಿರಾಟದ
> ಗುಣಮಟ್ಟವು
> ಬದಲಾಗುತ್ತದೆ.

ಉಸಿರಾಟ ಹಾಗೂ ಮನಸ್ಸು ಪರಸ್ಪರ ಸಂಬಂಧಹೊಂದಿದ್ದು, ಒಂದನ್ನು ಬದಲಾಯಿಸಿದರೆ ಮತ್ತೊಂದು ತಾನಾಗಿಯೇ ಬದಲಾಗುತ್ತದೆ. ಭಾವನೆಗಳು ನಮ್ಮ ಹತೋಟಿಯಲ್ಲಿ ಇಲ್ಲದಿರಬಹುದು. ಆದರೆ ಉಸಿರಾಟವು ನಮ್ಮ ಹತೋಟಿಯಲ್ಲಿರುತ್ತದೆ. ಉಸಿರಾಟವನ್ನು ನಿಯಂತ್ರಿಸಿದರೆ ಅಥವಾ ಉಸಿರಾಟದ ರೀತಿಯಲ್ಲಿ ಯಾವುದಾದರೂ ಬದಲಾವಣೆಯನ್ನು ಮಾಡಿದರೆ, ನಾವು ನೇರವಾಗಿ ನಮ್ಮ ಭಾವನೆಗಳನ್ನು ಹಾಗೂ ಮನಸ್ಸಿನ ಸ್ಥಿತಿಯನ್ನು ಬದಲಾಯಿಸಬಹುದು.

ನಾವು ಒಂದು ನಿರ್ದಿಷ್ಟವಾದ ರೀತಿಯಲ್ಲಿ ಉಸಿರಾಡುತ್ತೇವೆ. ನಮ್ಮ ಹಿಂದಿನ ಸಂಸ್ಕಾರಗಳು, ನಮ್ಮ ಪ್ರಜ್ಞಾರಹಿತ ವಲಯದಲ್ಲಿ ಸಿಲುಕಿರುವ ನಮ್ಮ ಹಿಂದಿನ ನೆನಪುಗಳು ನಮ್ಮ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟವಾದ ಉಸಿರಾಟದ ರೀತಿಯನ್ನು ಸೃಷ್ಟಿಸುತ್ತದೆ. ಆ ಕಾರಣ, ನಾವು ಅದೇ ರೀತಿಯ ಭಾವನೆಗಳನ್ನು ಹಾಗೂ ಸಂಸ್ಕಾರಗಳನ್ನು ಆಕರ್ಷಿಸುತ್ತೇವೆ. ನಮ್ಮ ಹಿಂದಿನ ಸಂಸ್ಕಾರಗಳು ನಮ್ಮ ಉಸಿರಾಟದ ರೀತಿಯನ್ನು ರಚಿಸುತ್ತದೆ ಮತ್ತು ಉಸಿರಾಟದ ರೀತಿಯು, ಭವಿಷ್ಯತ್ತಿನಲ್ಲೂ ಮತ್ತೆ ಅದೇ ರೀತಿಯ ಸಂಸ್ಕಾರಗಳನ್ನು ಹಾಗೂ ಸಂದರ್ಭಗಳನ್ನು ಆಕರ್ಷಿಸುವುದರಿಂದ, ನಾವು ಒಂದು ವಿಷವರ್ತುಲಕ್ಕೆ ಸಿಕ್ಕಿಹಾಕಿಕೊಳ್ಳುತ್ತೇವೆ. ಈ ವಿಷವರ್ತುಲವನ್ನು ಮುರಿಯಬೇಕು.

ನಿತ್ಯಧ್ಯಾನವು ಅಸ್ತವ್ಯಸ್ತವಾದ ಉಸಿರಾಟದಿಂದ ಆರಂಭವಾಗುತ್ತದೆ. ಉಸಿರಾಟವು ಅಸ್ತವ್ಯಸ್ತವಾದುದರಿಂದ ಅದಕ್ಕೆ ಒಂದು ನಿರ್ದಿಷ್ಟವಾದ ರೀತಿ ಅಥವಾ ಲಯವಿರುವುದಿಲ್ಲ. ತನ್ನ ಇರುವಿಕೆ ಹಾಗೂ ಅಭಿವ್ಯಕ್ತತೆಯನ್ನು ನಿರ್ಮಿಸಿಕೊಂಡಿರುವ ಮನಸ್ಸಿನ ಮಾದರಿಯು ಮುರಿದುಹೋಗುತ್ತದೆ. ಅನೇಕ ವರ್ಷಗಳಿಂದ ಅಳವಡಿಸಿಕೊಂಡಿರುವ ಮಾದರಿಯನ್ನು ನಮ್ಮ ಆಲೋಚನೆಗಳಿಗೆ ಅನುಸರಿಸಲಾಗುವುದಿಲ್ಲ.

ನಮ್ಮ ಸ್ನಾಯುಗಳು ನಮ್ಮೆಲ್ಲಾ ಹಳೆಯ ನೆನಪುಗಳನ್ನು ಶಕ್ತಿಯು ಸ್ನಾಯುidenticalವಿನಲ್ಲಿ ಸಂಗ್ರಹಿಸಲ್ಪಟ್ಟ ನೆನಪಿನ(ಬಯೋಮೆಮೊರಿ)ಯ ರೂಪದಲ್ಲಿ ಸಂಗ್ರಹಿಸಿರುತ್ತದೆ. ಆಳವಾದ ಅಸ್ತವ್ಯಸ್ತ ಉಸಿರಾಟವು ಸ್ನಾಯುಗಳಲ್ಲಿರುವ ಉದ್ವೇಗವನ್ನು ಬಿಡುಗಡೆ ಮಾಡುತ್ತದೆ ಹಾಗೂ ಸ್ನಾಯುಗಳಲ್ಲಿ ಮತ್ತು ದೇಹದ ಭಾಗಗಳಲ್ಲಿ ಈ ಕೊರೆಯಲ್ಪಟ್ಟ ನೆನಪಿನ ರೀತಿಗಳನ್ನು ಹೊರಹಾಕುತ್ತದೆ. ಸಾಮಾನ್ಯವಾಗಿ ನಮ್ಮ ಸ್ನಾಯುಗಳು ಒತ್ತಡದಲ್ಲಿರುತ್ತವೆ. ಅಸ್ತವ್ಯಸ್ತವಾದ ಉಸಿರಾಟವು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಹಾಗೂ ಕೊರೆಯಲ್ಪಟ್ಟ ನೆನಪುಗಳನ್ನು (ಅಥವಾ ಸಂಸ್ಕಾರಗಳನ್ನು) ತೆಗೆದುಹಾಕಲಾರಂಭಿಸುತ್ತದೆ.

ನಮ್ಮೊಳಗಿನ ಪ್ರತಿಯೊಂದು ಭಾವನೆಯೂ
ಒಂದು ನಿರ್ದಿಷ್ಟವಾದ ಉಸಿರಾಟದ ರೀತಿಗೆ
ಕಾರಣವಾಗುತ್ತದೆ. ಮಕ್ಕಳು ಆಳವಾಗಿ, ಆನಂದವಾಗಿ
ಉಸಿರಾಡುವುದನ್ನು ನೀವು ನೋಡಿರಬಹುದು. ಆದರೆ
ಅವರು ಬೆಳೆದಂತೆಲ್ಲಾ ಸಮಾಜದ
ಕಟ್ಟುಪಾಡಿಗೊಳಪಟ್ಟು, ದುಃಖ, ಸುಖ, ತಪ್ಪಿತಸ್ಥ
ಭಾವನೆಯು, ನಂಬಿಕೆ, ಇತ್ಯಾದಿ ಕಲ್ಪನೆಗಳನ್ನು

ಸಮಾಜದಿಂದ ಪಡೆದುಕೊಳ್ಳುತ್ತಾರೆ. ಆಗ
ಉಸಿರಾಟದ ಗುಣಮಟ್ಟವು ಸಂಪೂರ್ಣವಾಗಿ
ಬದಲಾಗುತ್ತದೆ. ಇಂತಹ ರೂಢಿಯಾದ, ಸದಾ
ಅದುಮಿಟ್ಟ, ಭಾವನೆಗಳಿಂದ ಸೃಷ್ಟಿಸಲ್ಪಟ್ಟ
ಮಾದರಿಯನ್ನು ಅಲ್ಲಾಡಿಸಲು ಅಸ್ತವ್ಯಸ್ತತೆಯನ್ನು
ಒಳಸೇರಿಸಬೇಕು. ಮತ್ತೊಂದು ಕ್ರಮಬದ್ಧ
ಮಾದರಿಯನ್ನು ಅನುಸರಿಸುವುದು ಪರಿಹಾರವಲ್ಲ.

ನಿಮ್ಮ ವ್ಯವಸ್ಥೆಯಲ್ಲಿರುವ ಎಲ್ಲಾ ಹಳೆಯ ಅಚ್ಚೊತ್ತಿದ ಗುರುತುಗಳನ್ನು ಹೊರತೆಗೆಯಲು ಬಹಳವಾದ ಅಸ್ತವ್ಯಸ್ತತೆಯನ್ನು ಸೃಷ್ಟಿಸಬೇಕು. ಆದ್ದರಿಂದ ಈ ಧ್ಯಾನದಲ್ಲಿ ನಾನು ಪ್ರಾಣಾಯಾಮದಂತಹ ಲಯಬದ್ಧವಾದ ಉಸಿರಾಟವನ್ನು ಸಲಹೆ ಮಾಡುವುದಿಲ್ಲ. ಸುಮ್ಮನೆ ಅಸ್ತವ್ಯಸ್ತವಾದ ಉಸಿರಾಟವನ್ನು ನಡೆಸಿ. ಈ ಅಸ್ತವ್ಯಸ್ತವಾದ ಉಸಿರಾಟವು ನಿಮ್ಮೆಲ್ಲಾ ಹಳೆಯ ನೆನಪುಗಳನ್ನು, ನಿಮ್ಮ ಭಾವನಾತ್ಮಕ ಬಂಧನವನ್ನು ನಾಶಪಡಿಸುತ್ತದೆ. ಅದು ಒಣಗಿದ ಎಲೆಗಳಿಂದ ತುಂಬಿದ ಒಂದು ಮರವನ್ನು ಅಲುಗಾಡಿಸಿದಂತೆ. ಒಣಗಿದ ಎಲ್ಲಾ ಎಲೆಗಳೂ ಉದುರಿಬೀಳುತ್ತವೆ. ಅದೇ ರೀತಿ ಅಸ್ತವ್ಯಸ್ತ ಉಸಿರಾಟವು ನಿಮ್ಮ ನಿಗ್ರಹಿಸಲ್ಪಟ್ಟ ವ್ಯವಸ್ಥೆಯನ್ನು ಅಲುಗಾಡಿಸಿದಂತೆ. ಇದರಿಂದ ಎಲ್ಲಾ ಹಿಂದಿನ ಕೊರೆಯಲ್ಪಟ್ಟ ನೆನಪುಗಳೂ ಹೊರತೆಗೆಯಲ್ಪಡುತ್ತವೆ.

ಆಳವಾದ ಅಸ್ತವ್ಯಸ್ತವಾದ ಉಸಿರಾಟವು
ಅಸಾಧಾರಣವಾದ ಆಮ್ಲಜನಕವನ್ನು ತುಂಬಿ
ಇಂಗಾಲಾಮ್ಲವನ್ನು ದೇಹದಿಂದ ಹೊರಹಾಕುತ್ತದೆ.
ಅದು ಅತಿಯಾದ ಗಾಳಿಯ ಸಂಚಾರ-
ವನ್ನುಂಟುಮಾಡುವ ಕಾರಣದಿಂದಾಗಿ ನೀವು ಹೆಚ್ಚು
ಉತ್ಸಾಹ ಹಾಗೂ ಹುರುಪಿನಿಂದ
ಕೂಡಿದವರಾಗುತ್ತೀರಿ. ರಕ್ತದಲ್ಲಿ ಹೆಚ್ಚಾದ
ಆಮ್ಲಜನಕವನ್ನು ಒಳತೆಗೆದುಕೊಳ್ಳುವ ಕಾರಣ,
ತಾನಾಗಿಯೇ ಜೀವಕಣಗಳಲ್ಲಿ ಶಕ್ತಿಯು
ಉತ್ಪತ್ತಿಯಾಗುತ್ತದೆ ಹಾಗೂ ದೇಹದ ಎಲ್ಲಾ
ಕ್ರಿಯೆಗಳೂ ಉಲ್ಲಾಸಗೊಳ್ಳುತ್ತವೆ. ಉತ್ಪಾದಿಸಿದ
ಜೀವಶಕ್ತಿಯು ಸಂಸ್ಕಾರಗಳನ್ನು ನಿವಾರಿಸಲಾರಂಭಿಸಿ
ನಿಮ್ಮನ್ನು ಹಗುರವಾಗಿ, ಶಕ್ತಿಯುತವಾಗಿ,
ಆನಂದಮಯವಾಗಿರುವಂತೆ ಮಾಡುತ್ತದೆ.

2. ತೀವ್ರವಾದ ಝೇಂಕಾರ

ಕಾಲಾವಧಿ : 7 ನಿಮಿಷಗಳು

ವಜ್ರಾಸನದಲ್ಲಿ ಕುಳಿತುಕೊಳ್ಳುವುದನ್ನು
ಮುಂದುವರೆಸಿರಿ. ನಿಮ್ಮ ಬೆರಳುಗಳನ್ನು
ಚಿನ್ಮುದ್ರೆಯಿಟ್ಟುಕೊಂಡು ನಿಮ್ಮ ಕೈಗಳನ್ನು
ಮಂಡಿಗಳ ಮೇಲಿಟ್ಟು ಅಂಗೈಗಳನ್ನು
ಮೇಲ್ಮುಖವಾಗಿ
ಇಟ್ಟುಕೊಳ್ಳಿರಿ.

ವಜ್ರಾಸನದಲ್ಲಿ ಧ್ಯಾನಸ್ಥ ವ್ಯಕ್ತಿ

ಈ ಭಂಗಿಯಲ್ಲಿ
ಕುಳಿತು, ನಿಮ್ಮ
ಬಾಯಿಯನ್ನು ಮುಚ್ಚಿ,
ತುಟಿಗಳನ್ನು ಸೇರಿಸಿರಿ.
ಸಾಧ್ಯವಾದಷ್ಟು
ತೀವ್ರವಾಗಿ, ಸಾಧ್ಯ-
ವಾದಷ್ಟು ಗಟ್ಟಿಯಾಗಿ
ಹಾಗೂ ಸಾಧ್ಯ-
ವಾದಷ್ಟು

ದೀರ್ಘವಾಗಿ ಒಂದು ಝೇಂಕಾರದ ಶಬ್ದವನ್ನು ಮಾಡಿ.

ಉಸಿರನ್ನು ಸಾಮಾನ್ಯವಾಗಿ ಒಳತೆಗೆದುಕೊಂಡು, ಬಿಡುವಾಗ ಮ್ . . . ಎಂಬ ಶಬ್ದವನ್ನು ನಿಮ್ಮ ದೇಹದೊಳಗಿನಿಂದ ಉಂಟುಮಾಡಿರಿ. ಒಂದು ಖಾಲಿಯ ಅಲ್ಯುಮಿನಿಯಂ ಪಾತ್ರೆಯೊಳಗೆ ನಿಮ್ಮ ಮುಖವನ್ನಿಟ್ಟು ಝೇಂಕರಿಸಿದಾಗ ಬರುವ ಶಬ್ದಕ್ಕೆ ಈ ಶಬ್ದವು ಹೋಲುತ್ತದೆ. ಇದು ಹಂ . . . ಅಥವಾ ಓಂ . . . ಅಲ್ಲ. ನಿಮ್ಮ ತುಟಿಗಳನ್ನು ಸೇರಿಸಿ ಸುಮ್ಮನೆ ಮ್ . . . ಎಂಬ ಶಬ್ದವನ್ನು ಮಾಡುವುದು. ಈ ಝೇಂಕಾರವು ಎರಡು ಉಸಿರುಗಳ ನಡುವೆ ಸಾಧ್ಯವಾದಷ್ಟು ದೀರ್ಘವಾಗಿರಬೇಕು; ಸಾಧ್ಯವಾದಷ್ಟು ಆಳವಾಗಿರಬೇಕು (ಹೊಕ್ಕಳ ಕೇಂದ್ರದಿಂದ) ಹಾಗೂ ಸಾಧ್ಯವಾದಷ್ಟು ಜೋರಾಗಿರಬೇಕು. ಆಳವಾಗಿ ಉಸಿರು ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡುವ ಅಗತ್ಯವಿಲ್ಲ. ಅಗತ್ಯವಿದ್ದಾಗ ದೇಹವೇ ಸರಿಯಾದ ಪ್ರಮಾಣದ ಉಸಿರನ್ನು ತೆಗೆದುಕೊಳ್ಳುತ್ತದೆ.

ನಿಮ್ಮ ಅರಿವನ್ನು ಸಂಪೂರ್ಣವಾಗಿ ಝೇಂಕಾರದ ಮೇಲೆ ಇರಿಸಿರಿ. ನೀವೇ ಝೇಂಕಾರವಾಗಿಬಿಡಿರಿ. ಮನಸ್ಸಿನಲ್ಲಿ ಸತತವಾಗಿ ಮಾತನಾಡುವುದು ನಡೆಯುತ್ತಲೇ ಇರುತ್ತದೆ. ಈ ಒಳ ಹರಟೆಯನ್ನು ಕಡಿಮೆ ಮಾಡಲು ಝೇಂಕಾರವು ಒಂದು

ಅತ್ಯುತ್ತಮವಾದ ತಂತ್ರ. ಒಳ ಹರಟೆಯು ನಮ್ಮೊಳಗೆ ಸತತವಾಗಿ ಉಂಟಾಗುತ್ತಿರುವ ಸ್ವತಂತ್ರವಾದ ಆಲೋಚನೆಗಳ ಹರಿವಲ್ಲದೆ ಬೇರೇನೂ ಅಲ್ಲ. ನೀವು ನಿಮ್ಮ ದೇಹವನ್ನು ಶಕ್ತಿಮಯವಾದುದೆಂದು ಭಾವಿಸಲು ಝೇಂಕಾರವು ಆಸ್ಪದ ಕೊಡುತ್ತದೆ. ನೀವು ಝೇಂಕರಿಸಲು ಆರಂಭಿಸಿದ ಕೂಡಲೆ, ನೀವು ಹಗುರಾದಂತೆ, ತೇಲುತ್ತಿರುವಂತೆ ಭಾವಿಸಲಾರಂಭಿಸುತ್ತೀರಿ. ದೇಹದ ಭಾರವಿಲ್ಲದಂತೆ ಭಾವಿಸುತ್ತೀರಿ, ಏಕೆಂದರೆ ಝೇಂಕಾರವು ಮನಸ್ಸಿನ ಕಂಪನಗಳನ್ನು ದೇಹದ ಕಂಪನಗಳಿಗೆ ಹೊಂದಿಸುತ್ತದೆ. ನೀವೇ ಚೈತನ್ಯವೆಂಬಂತೆ ಅನುಭವಿಸಲಾರಂಭಿಸುತ್ತೀರಿ.

ಈ ತಂತ್ರವನ್ನು ಉದ್ವಿಗ್ನರಾಗದೆ, ಒಂದು ಹಾಯಾದ ರೀತಿಯಲ್ಲಿ ಮಾಡಿರಿ. ಈ ಕಂಪನವನ್ನು ಸೃಷ್ಟಿಸಲು ನಿಮ್ಮ ಇಡೀ ಅಸ್ತಿತ್ವವನ್ನು, ಚೈತನ್ಯವನ್ನು ಮಗ್ನಗೊಳಿಸಿರಿ. ಝೇಂಕಾರದ ಶಬ್ದಗಳ ನಡುವಿನ ಅಂತರಗಳನ್ನು ಅತ್ಯಂತ ಕನಿಷ್ಠಗೊಳಿಸಲು ಪ್ರಯತ್ನಿಸಿರಿ. ಸ್ವಲ್ಪ ಸಮಯದ ನಂತರ, ಝೇಂಕಾರವು ನಿಮ್ಮ ಪ್ರಯತ್ನವಿಲ್ಲದೆಯೇ ಮುಂದುವರೆಯುವುದನ್ನು ಕಾಣುತ್ತೀರಿ ಹಾಗೂ ನೀವು ಕೇವಲ ಒಬ್ಬ ಕೇಳುಗರಾಗುತ್ತೀರಿ. ದೇಹ ಮನಸ್ಸುಗಳು ಝೇಂಕಾರದ ಕಂಪನಗಳಿಗೆ ಅನುರಣಿಸಲಾರಂಭಿಸುತ್ತವೆ.

ಝೇಂಕಾರವು ಒಂದು ಆರೋಗ್ಯಕರವಾದ ಒಳಹರಟೆಯನ್ನು ಸೃಷ್ಟಿಸುತ್ತದೆ ಹಾಗೂ ಒಂದು ಆರೋಗ್ಯಕರವಾದ, ಉತ್ತಮವಾದ ಭಾವನಾತ್ಮಕ ಪ್ರಜ್ಞೆಯನ್ನು ಸೃಷ್ಟಿಸುತ್ತದೆ.

3. ಚಕ್ರಗಳ ಅರಿವು

ಕಾಲಾವಧಿ : 7 ನಿಮಿಷಗಳು

ವಜ್ರಾಸನದಲ್ಲಿ ಕುಳಿತುಕೊಳ್ಳುವುದನ್ನು ಮುಂದುವರೆಸಿರಿ ಅಥವಾ ಬೇಕೆಂದರೆ ಕಾಲುಗಳನ್ನು ಮಡಚಿ ಸುಖಾಸನದಲ್ಲಿ ಕುಳಿತುಕೊಳ್ಳಿರಿ. ಬೆರಳುಗಳನ್ನು ಚಿನ್ಮುದ್ರೆಯಲ್ಲಿ ಇಟ್ಟುಕೊಳ್ಳಿರಿ. ಈಗ ಮೂಲಾಧಾರ ಚಕ್ರ (ಬೆನ್ನುಹುರಿಯ ಕೆಳಭಾಗದ ಕೇಂದ್ರ)ದಿಂದ ಆರಂಭಿಸಿ, ಸಹಸ್ರಾರ ಚಕ್ರ (ನೆತ್ತಿಯ ಕೇಂದ್ರ)ದವರೆಗೆ ಪ್ರತಿಯೊಂದು ಚಕ್ರದ ಮೇಲೂ ನಿಮ್ಮ ಅರಿವನ್ನು ಹರಿಸಿರಿ. ನಿಮ್ಮ ಅರಿವನ್ನು ಒಂದು ಶಕ್ತಿಕೇಂದ್ರಕ್ಕೆ ಹರಿಸಿರೆಂದು ಹೇಳಿದಾಗ, ನೀವೇ ಆ ಶಕ್ತಿಕೇಂದ್ರವಾಗಬೇಕು. ನಿಮ್ಮ ಇಡೀ ಅಸ್ತಿತ್ವವೇ ಆ ಶಕ್ತಿಕೇಂದ್ರವಾಗಿರುವಂತೆ ಭಾವಿಸಿರಿ.

ಈ ಏಳು ಶಕ್ತಿ ಕೇಂದ್ರಗಳಲ್ಲಿ ಪ್ರತಿಯೊಂದು ಶಕ್ತಿಕೇಂದ್ರವೂ ಒಂದು ನಿರ್ದಿಷ್ಟವಾದ ಭಾವನೆಗೆ ಸಂಬಂಧಿಸಿದೆ. ಈ ಚಕ್ರಗಳನ್ನು ಕಿರ್ಲಿಯಾನ್ ಛಾಯಾಗ್ರಹಣವು ಸೆರೆಹಿಡಿದಿದೆ ಹಾಗೂ ಶಕ್ತಿಯಮಟ್ಟದಲ್ಲಿ ಅವುಗಳ ಇರುವಿಕೆಯನ್ನು ಸಾಬೀತುಪಡಿಸಿದೆ. ಈ ಭಾವನೆಗಳೇ ಹಿಂದಿನಿಂದ ಕೂಡಿಟ್ಟುಕೊಂಡ ಕೊರೆಯಲ್ಪಟ್ಟ ನೆನಪುಗಳ ಒಂದು ಫಲಿತಾಂಶ. ಈ ನೆನಪುಗಳು ನಮ್ಮನ್ನು ಸಂದರ್ಭಗಳಿಗೆ ಹಾಗೂ ಜನರೊಂದಿಗೆ ಅದೇ ಹಳೆಯ ರೀತಿಯಲ್ಲಿ ಪ್ರತಿಕ್ರಿಯಿಸುವಂತೆ ಮಾಡುತ್ತದೆ ಹಾಗೂ ಈ ಪ್ರತಿಕ್ರಿಯೆಯನ್ನೇ ಭಾವನೆ ಎನ್ನಲಾಗಿದೆ. ಮೇಲೇಳುವ ಭಾವನೆಗಳು ಒಂದು ನಿರ್ದಿಷ್ಟ ಶಕ್ತಿಕೇಂದ್ರವನ್ನು ತಡೆದು ದೈಹಿಕ ಹಾಗೂ ಮಾನಸಿಕ ತೊಂದರೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಈ ಹಂತದಲ್ಲಿ ನಮ್ಮ ಸಂಪೂರ್ಣ ಅರಿವನ್ನು ಬೆನ್ನುಹುರಿಯ ತಳಹದಿ-ಯಿಂದ ಹಿಡಿದು ನೆತ್ತಿ-ಯವರೆಗೂ ಪ್ರತಿಯೊಂದು ಶಕ್ತಿಕೇಂದ್ರದ ಮೇಲೆ ಕೇಂದ್ರೀಕರಿಸುತ್ತೇವೆ. ನಾವು ಯಾವುದನ್ನಾದರೂ ಅರಿವಿನಿಂದ ತುಂಬಿಸಿಬಿಟ್ಟಾಗ ಅದರಲ್ಲಿರುವ ನಕಾರಾತ್ಮತೆಯು ಕರಗಿಹೋಗುತ್ತದೆ. ಇದು ದೈಹಿಕ ನೋವಿಗೂ ಅನ್ವಯಿಸುತ್ತದೆ. ನಮ್ಮ ದೇಹದ ಒಂದು ಭಾಗದಲ್ಲಿ ನೋವು ಇದ್ದಲ್ಲಿ ಆ ಭಾಗವನ್ನು ಅರಿವಿನಿಂದ ತುಂಬಿಸಿದರೆ ಆ ನೋವು ಒಂದು ಸಣ್ಣ ಬಿಂದುವಿನಂತೆ ಕುಗ್ಗಿ ಮಾಯವಾಗುವುದನ್ನು ಕಾಣುತ್ತೇವೆ.

ಝೇಂಕಾರವು
ಒಂದು
ಆರೋಗ್ಯಕರವಾದ
ಒಳಹರಟೆಯನ್ನು
ಸೃಷ್ಟಿಸುತ್ತದೆ

ಏಳು ಶಕ್ತಿ-ಕೇಂದ್ರಗಳಲ್ಲಿ ಪ್ರತಿಯೊಂದು ಕೇಂದ್ರವನ್ನೂ ಒಂದು ನಿಮಿಷದ ಕಾಲ ಸಂಪೂರ್ಣ ಅರಿವಿನಿಂದ ತುಂಬಿರಿ. ಇಡೀ ಪ್ರಪಂಚದಲ್ಲಿ ಆ ಶಕ್ತಿ ಕೇಂದ್ರವೊಂದೇ ಇರುವುದೆಂದು ಭಾವಿಸಿರಿ. ಮತ್ತಿನ್ನೇನೂ ಇಲ್ಲವೆಂದು ಭಾವಿಸಿರಿ. ಆ ಶಕ್ತಿಕೇಂದ್ರವೇ ನೀವಾಗಿರಿ. ನಿಮ್ಮ ಇಡೀ ಅಸ್ತಿತ್ವವೇ ಆ ಶಕ್ತಿಕೇಂದ್ರವಾಗಿರುವಂತೆ ಭಾವಿಸಿರಿ. ನಂತರ, ಮುಂದಿನ ಶಕ್ತಿ ಕೇಂದ್ರಕ್ಕೆ ಮುನ್ನಡೆಯಿರಿ. ಈ ಹಂತದ

ಯೋಗಿ ಮತ್ತು ಚಕ್ರಗಳು

ಕೊನೆಯಲ್ಲಿ ನೀವು ಸಕಾರಾತ್ಮತೆ ಹಾಗೂ
ಹಗುರತೆಯಿಂದ ಸಂಪೂರ್ಣವಾಗಿ
ಶಕ್ತಿಯುತರಾಗುತ್ತೀರಿ.

ಮೇಲು ಮೇಲಿನ ಕೇಂದ್ರಗಳಿಗೆ ಬಂದಂತೆಲ್ಲಾ ನಿಮ್ಮ ಲವಲವಿಕೆ ಹಾಗೂ ತೀವ್ರತೆಯೂ ಹೆಚ್ಚಾಗುತ್ತದೆ. ನೀವು ಅತ್ಯಂತ ತೀವ್ರತೆಯಿಂದ ಕೂಡಿದವರಾಗುತ್ತೀರಿ. ಈ ವೀಕ್ಷಣೆಯು ಒಂದು ಆರೋಗ್ಯಕರವಾದ ಮನಸ್ಸು ಹಾಗೂ ಭಾವನೆಯನ್ನು, ಆರೋಗ್ಯಕರವಾದ ಒಳಹರಟೆ ಹಾಗೂ ಹೆಚ್ಚಿನ ಭಾವನಾತ್ಮಕ ಅರಿವನ್ನು ಸೃಷ್ಟಿಸುತ್ತದೆ. ಈ ಹಂತದ ಕೊನೆಯಲ್ಲಿ ನೀವು ಶಕ್ತಿಯುತವಾಗಿ ಹಗುರಾಗುತ್ತೀರಿ.

ಶಕ್ತಿಕೇಂದ್ರಗಳ ಮೇಲೆ ಏಕಾಗ್ರಗೊಳಿಸಿದರೆ, ಕೇಂದ್ರೀಕೃತರಾದರೆ, ನಿಮ್ಮ ಮನಸ್ಸು ಸುಲಭವಾಗಿ ಅಲೆಯುವುದಿಲ್ಲ. ಅದು ಒಂದೆಡೆ ನೆಲೆಗೊಳ್ಳುತ್ತದೆ. ಏಕೆಂದರೆ ಇವು ಸಜೀವ ಶಕ್ತಿಕೇಂದ್ರಗಳು. ನೀವು ಮತ್ತ್ಯಾವ ದೇಹದ ಭಾಗದ ಮೇಲೆ ಕೇಂದ್ರೀಕರಿಸಿದರೂ, ನಿಮ್ಮ ಮನಸ್ಸು ಸುಲಭವಾಗಿ ಅಲೆಯಬಹುದು.

4. ಅನ್‌ಕ್ಲಚ್ ಆಗಿರಿ

ಕಾಲಾವಧಿ : 7 ನಿಮಿಷಗಳು

ಈ ಹಂತದಲ್ಲಿ ನಿಮ್ಮ ಆಲೋಚನೆಗಳು ಅಸಂಬದ್ಧವಾದ, ಅಸಂಗತವಾದ ಹಾಗೂ ಅನ್‌ಕ್ಲಚ್ ಆಗಿರುವುವೆಂಬ ತಿಳಿವಳಿಕೆಯಿಂದ ಕೂಡಿ ಇರಿ. ಆಲೋಚನೆಗಳು ಉಂಟಾದರೂ, ಅವನ್ನು ನಿಗ್ರಹಿಸಬೇಡಿರಿ. ಅವುಗಳಿಗೆ ಪ್ರತಿಕ್ರಿಯಿಸಲೂಬೇಡಿರಿ. ಅವು ಅನ್‌ಕ್ಲಚ್ ಆಗಿರುವುವೆಂಬ ಭಾವನೆಯಿಂದ ಸುಮ್ಮನೆ ಅವನ್ನು ಗಮನಿಸಿರಿ. ಸಾಕ್ಷಿ ಪ್ರಜ್ಞೆಯು ನಿಮ್ಮಲ್ಲಿ ತಾನಾಗಿಯೇ ಉಂಟಾಗಲು ಆರಂಭಿಸುತ್ತದೆ. ನಿಮಗೆ ಇದು ತಿಳಿದರೂ ಬಿಟ್ಟರೂ, ನೀವು ಒಪ್ಪಿದರೂ, ಒಪ್ಪದಿದ್ದರೂ, ನೀವಾಗಲೇ ಜೀವನ್ಮುಕ್ತಿಯನ್ನು ಹೊಂದಿದವರೆಂದು ತಿಳಿಯಿರಿ. ನಿಮ್ಮ ಸ್ವಭಾವದಿಂದಲೇ ನೀವು ಅನ್‌ಕ್ಲಚ್ ಆಗಿರುವವರು. ಮೌನವಾಗಿ ಕುಳಿತು ಶುದ್ಧವಾದ ಅಂತರಂಗದ, ಆನಂದದ ಸ್ಥಿತಿಯಾದ ಅನ್‌ಕ್ಲಚ್‌ನ ಸ್ಥಿತಿಯನ್ನು ಆನಂದಿಸಿರಿ. ಜೀವನ್ಮುಕ್ತಿಯ ಸ್ಥಿತಿಯನ್ನು ಪಡೆಯಲು ಇದೇ ಸರ್ವಶ್ರೇಷ್ಠವಾದ ತಂತ್ರ.

ಹೆಚ್ಚು ವಿವರಗಳಿಗೆ ‘ಮನಸ್ಸಿನ ತೊಡಕುಗಳಿಂದ
ಅನ್‌ಕ್ಲಚ್ ಆಗಬಹುದು’ ಎಂಬ ಅಧ್ಯಾಯವನ್ನು
ಪರಾಮರ್ಶಿಸಿರಿ.

5. ಗುರುಪೂಜೆ

ಕಾಲಾವಧಿ : 7 ನಿಮಿಷಗಳು

ಇಡೀ ವಿಶ್ವಶಕ್ತಿಯೊಂದಿಗೆ ಸಂಪರ್ಕಿತ
ಭಾವನೆಯೊಂದಿಗೆ
ವಿರಮಿಸಿ, ವಿಶ್ರಾಂತಿ
ಹೊಂದುವುದರಿಂದ
ನಿತ್ಯಧ್ಯಾನವನ್ನು
ಮುಕ್ತಾಯಗೊಳಿಸುತ್ತೇವೆ.
ಇಡೀ ವಿಶ್ವದೊಡನೆ
ಸಂಬಂಧವನ್ನು
ಭಾವಿಸಿ ಆರಾಮವಾಗಿ

ಗುರುಪೂಜೆ ಭಂಗಿ

ಸುಮ್ಮನೆ ಕುಳಿತುಕೊಳ್ಳಿರಿ. ನಿಮಗೆ ಗುರುಗಳ ಮೇಲೆ ಪ್ರೀತಿಯಿದ್ದಲ್ಲಿ ಅಥವಾ ಯಾವುದೇ ದೇವರ ಬಗ್ಗೆ ಪ್ರೀತಿಯಿದ್ದಲ್ಲಿ ಒಂದು ಆಳವಾದ ಸಾತ್ವಿಕ ಮನೋಭಾವದಿಂದ, ವಿಶ್ವದ, ಗುರುಗಳ ಅಥವಾ ದೇವರ ಜೊತೆಗೆ ಸಂಪರ್ಕಿತ ಭಾವನೆ ಹೊಂದುತ್ತಾ ಸುಮ್ಮನೆ ಕುಳಿತುಕೊಳ್ಳಿರಿ, ಅಷ್ಟೇ. ಸುಮ್ಮನೆ ಹಾಯಾಗಿ ಶಾಂತ ಸ್ಥಿತಿಗೆ ಬನ್ನಿರಿ.

ಆನಂದವಾಗಿ ಗುರುಪೂಜೆ ಮಂತ್ರೋಚ್ಚಾರಣೆಯನ್ನು ಕೇಳುತ್ತಾ ಮೌನವಾಗಿ ಕುಳಿತುಕೊಳ್ಳಿರಿ. ವಿಶ್ವಶಕ್ತಿಯೊಂದಿಗೆ ಸಂಪರ್ಕಿತ ಭಾವನೆ ಹೊಂದುತ್ತಾ, ಪ್ರಬಲವಾದ ಮಂತ್ರಗಳ ತರಂಗಗಳನ್ನು ನಿಮ್ಮ ಅಂತರ್ಯದಲ್ಲಿ ಅನುಭವಿಸಿರಿ. ನಮ್ಮನ್ನು ಅಜ್ಞಾನದಿಂದ ಪಾರುಮಾಡಿ ನಿರಂತರವಾದ ಆನಂದವಾದ ನಿತ್ಯಾನಂದದ ಸ್ಥಿತಿಯನ್ನು ಪಡೆಯಲು ಸಹಾಯ ಮಾಡುವ ಈ ಮಹತ್ತರವಾದ ಜ್ಞಾನವನ್ನು ನಮಗೆ ನೀಡಿದುದಕ್ಕಾಗಿ, ವಿಶ್ವಶಕ್ತಿಗೆ ಹಾಗೂ ಗುರುಗಳಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮಂತ್ರಗಳು ಒಂದು ಮಾರ್ಗ.

ಮಂತ್ರೋಚ್ಚಾರಣೆಯು ಸಂಸ್ಕೃತದಲ್ಲಿದೆ. ಇದಕ್ಕೆ
ಭಾಷಾಧ್ಯಯನದ ಹಾಗೂ ಧ್ವನಿ ವಿಜ್ಞಾನದ
ಮಹತ್ವವಿದೆ. ಈ ಸಂಸ್ಕೃತ ಶಬ್ದಗಳನ್ನು
ಉಚ್ಚರಿಸಿದಾಗ ಉಂಟಾಗುವ ಕಂಪನಗಳ ಮೇಲೆ
ನಮ್ಮನ್ನು ಕೇಂದ್ರೀಕರಿಸಿಕೊಂಡಾಗ ಮನದ
ಮಾತುಗಳನ್ನು ಮೀರಿ ಆಂತರಿಕ ಶಾಂತಿಯನ್ನು
ಪಡೆಯಬಹುದು. ನಮಗೆ ಪದಗಳು
ಅರ್ಥವಾಗದಿದ್ದರೂ, ಸಂಸ್ಕೃತ ಪದಗಳ ಶಬ್ದದ
ವೈಶಿಷ್ಟ್ಯವು ನಮ್ಮ ಮನೋಭಾವವನ್ನು ಪರಿವರ್ತಿಸಿ,
ನಮ್ಮ ಇಡೀ ದೇಹ ಮನಸ್ಸುಗಳನ್ನು ಶುದ್ಧಗೊಳಿಸಿ
ನಮ್ಮ ಅಂತರಂಗದಲ್ಲಿ ಸಕಾರಾತ್ಮಕ ಕಂಪನಗಳನ್ನು
ಸೃಷ್ಟಿಸುತ್ತದೆ.

ಈ ಹಂತದಲ್ಲಿ ಮಂತ್ರಗಳನ್ನು ಉಚ್ಚರಿಸಿ ಗುರುಪೂಜೆಯ ಆಚರಣೆಯನ್ನು ಮಾಡಬಹುದು. (ವಿವರಗಳಿಗೆ 'ಗುರುಪೂಜೆಯನ್ನು ನೀವೇ ಮಾಡಿರಿ’ ಎಂಬ ಪುಸ್ತಕವನ್ನು ಓದಿರಿ). ಈ ಧ್ಯಾನತಂತ್ರವನ್ನು ಪ್ರತಿದಿನವೂ ಒಂದು ಬಾರಿ ಅಭ್ಯಾಸಮಾಡಿರಿ. ಆಗ ನಿಮ್ಮ ಅಸ್ತಿತ್ವದಲ್ಲಿ ಒಂದು ಹೊಸ ಆಯಾಮವನ್ನು ಅನುಭವಿಸಲಾರಂಭಿಸುತ್ತೀರಿ. ನಿತ್ಯಧ್ಯಾನ ತಂತ್ರವು ಶುದ್ಧವಾದ ಪ್ರಜ್ಞೆ ಹಾಗೂ ಆನಂದವನ್ನು ಅನುಭವಿಸಲು ನಿಮ್ಮ ದೇಹ, ಮನಸ್ಸುಗಳನ್ನು ಸಿದ್ಧಗೊಳಿಸುತ್ತದೆ.

ನಿತ್ಯಧ್ಯಾನದ ಪ್ರಯೋಜನಗಳು

ಅರ್ಧ ಘಂಟೆಯ ನಿತ್ಯಧ್ಯಾನವು ನಿಮಗೆ ಇವುಗಳನ್ನು ನೀಡಬಲ್ಲುದು:

ಒತ್ತಡದಿಂದ ಬಿಡುಗಡೆ

ಉತ್ತಮಗೊಂಡ ಸಂಬಂಧಗಳು

ಅಂತರಂಗದ ಶಾಂತಿ ಹಾಗೂ ಸಂತೃಪ್ತಿ

ಜಾಗೃತವಾದ ಅಂತರ್ದೃಷ್ಟಿ

ನಿಯಂತ್ರಿತ ರಕ್ತದ ಒತ್ತಡ

ನಿದ್ರೆಯ ಗುಣಮಟ್ಟದ ವೃದ್ಧಿ

ಹೆಚ್ಚಿನ ಸ್ಪಷ್ಟತೆ

ಇಡೀ ದಿನಕ್ಕೆ ಬೇಕಾದ ಹೆಚ್ಚಿನ ಚೈತನ್ಯ ಹಾಗೂ ದಿವ್ಯಶಕ್ತಿಯೊಂದಿಗೆ ಸಂಪರ್ಕ

ನಿಮ್ಮ ಕುಟುಂಬ ವರ್ಗದವರಿಗೂ, ಸ್ನೇಹಿತರಿಗೂ ನಿತ್ಯಧ್ಯಾನ ದೀಕ್ಷೆಯನ್ನು ಪಡೆಯುವಂತೆ ಉತ್ತೇಜಿಸಿರಿ.

ಇದರಿಂದಾಗಿ ಹೆಚ್ಚು ಹೆಚ್ಚು ಜನರು ಅನ್‌ಕ್ಲಚ್ ಆಗಿ, ಜೀವನ್ಮುಕ್ತರಾಗಿ ಬಾಳಲಾರಂಭಿಸುತ್ತಾರೆ. ಪ್ರತಿಯೊಬ್ಬರ ವೈಯಕ್ತಿಕ ಅರಿವಿನ ಈ ಪರಿವರ್ತನೆಯು ಸಮಗ್ರ ಪ್ರಜ್ಞೆಯಲ್ಲಿ ಒಂದು ಸಕಾರಾತ್ಮಕ ಸ್ಥಿತ್ಯಂತರವನ್ನು ಉಂಟುಮಾಡಿ ಜಗತ್ತಿನ ಸಮಗ್ರ ಜೀವರಾಶಿಯ ಮೇಲೆ ಪರಿಣಾಮ ಬೀರುತ್ತದೆ.