ಧ್ಯಾನದ ಮೇಲಿನ ವೈಜ್ಞಾನಿಕ ಸಂಶೋಧನೆಯ ಇಣುಕು ನೋಟ
This text was machine-transcribed from the printed book and may contain errors. Select the words and choose “Report a mistake”.
ಇಡೀ ಮನೋ ಶರೀರದ ರಚನೆಯನ್ನೇ
ಸಂಪೂರ್ಣವಾಗಿ ಬದಲಾಯಿಸುವಂತಹ ಧ್ಯಾನದ
ಅಗಾಧ ಶಕ್ತಿಯ ಇಣುಕುನೋಟವನ್ನು ವಿಜ್ಞಾನವು
ಇತ್ತೀಚೆಗೆ ಕಾಣಲಾರಂಭಿಸಿದೆ. ಧ್ಯಾನದ
ಪ್ರಯೋಜನಗಳು ಅಸಂಖ್ಯಾತ ಹಾಗೂ ಎಲ್ಲ
ಸ್ತರಗಳಲ್ಲಿಯೂ - ದೈಹಿಕ, ಮಾನಸಿಕ,
ಭಾವನಾತ್ಮಕ ಹಾಗೂ ಆಧ್ಯಾತ್ಮಿಕತೆಗಳಲ್ಲಿಯೂ
ಇವೆ. ಧ್ಯಾನವು ಜೀವನದ ಗುಣವನ್ನೇ
ಬದಲಾಯಿಸಬಲ್ಲುದು.
ವರ್ಧಿಸುವ ಮೆದುಳಿನ ಶಕ್ತಿ
ಇತ್ತೀಚಿನವರೆಗೂ, ಮೆದುಳಿನಲ್ಲಿ, ಮೆದುಳಿನ
ನರ-ಕಣಗಳ ಸಂಪರ್ಕವು ಬಾಲ್ಯಾವಸ್ಥೆಯಲ್ಲಿಯೇ
ನಿಗದಿಯಾಗಿರುತ್ತದೆಯೆಂದೂ, ಅದೂ
ಬದಲಾಗುವುದಿಲ್ಲವೆಂದೂ, ಆದುದರಿಂದ ಮೆದುಳಿನ
ಬೆಳವಣಿಗೆಯು ಚಿಕ್ಕಂದಿನಲ್ಲಿಯೇ ನಿಂತು
ಹೋಗಿರುತ್ತದೆಯೆಂದೂ, ನಂಬಲಾಗಿತ್ತು. ಇತ್ತೀಚೆಗೆ
ವಿಜ್ಞಾನಿಗಳು ಮೆದುಳು ನಿಜವಾಗಿ ಬೆಳೆದು, ಜೀವನ
ಪರ್ಯಂತವೂ ಹೊಸ ಸಂಪರ್ಕಗಳನ್ನು
ಮಾಡುತ್ತಲೇ ಇರುತ್ತದೆ ಎಂದು
ಕಂಡುಹಿಡಿಯುತ್ತಿದ್ದಾರೆ. ಇದನ್ನು ನ್ಯೂರೋ
ಪ್ಲಾಸ್ಟಿಸಿಟಿ (Neuro Plasticity) ಎಂದು
ಕರೆಯುತ್ತಾರೆ.
ಇತ್ತೀಚೆಗೆ ಒಂದು ದಿನ, ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಮೆದುಳಿನ ಮೇಲಾಗುವ ಧ್ಯಾನದ ಪ್ರಭಾವದ ಕುರಿತಾಗಿ ನಡೆದ ಸಂಶೋಧನೆಯ ಬಗ್ಗೆ ಪತ್ರಿಕೆಯೊಂದರಲ್ಲಿ (ವಾಷಿಂಗ್ಟನ್ ಪೋಸ್ಟ್, ಜನವರಿ 3, 2005) ಓದುತ್ತಿದ್ದೆ. ವರ್ಷಾನುಗಟ್ಟಲೆ ಧ್ಯಾನಮಾಡುತ್ತಿದ್ದ ಟಿಬೆಟ್ಟಿನ ಸಾಧುಗಳ ಒಂದು ಗುಂಪಿನ ಮೇಲೂ, ಧ್ಯಾನಕ್ಕೆ ಹೊಸಬರಾದ, ಆದರೆ ಧ್ಯಾನವನ್ನು ಹೇಗೆ ಮಾಡಬೇಕೆಂದು ಹೊಸದಾಗಿ ಕಲಿತಿದ್ದ ವಿದ್ಯಾರ್ಥಿಗಳ ಒಂದು ಗುಂಪಿನ ಮೇಲೂ ಅಧ್ಯಯನವನ್ನು ಮಾಡಲಾಗಿತ್ತು.
ಧ್ಯಾನಕ್ಕೆ ಹೊಸಬರಾಗಿದ್ದ ವಿದ್ಯಾರ್ಥಿಗಳಿಗಿಂತಲೂ, ಧ್ಯಾನವನ್ನು ಮಾಡುತ್ತಿದ್ದ ಸಾಧುಗಳ ಅರಿವು ಹೆಚ್ಚಾಗಿದ್ದು, ಮೆದುಳಿನ ಚಟುವಟಿಕೆ ಶೀಘ್ರವಾಗಿಯೂ ಒಳ್ಳೆಯ ಕ್ರಮಬದ್ಧವಾಗಿಯೂ, ಸಹಯೋಜಕವಾಗಿಯೂ ಇದ್ದಿತೆಂದೂ, ಅವರು ಕಂಡುಹಿಡಿದರು. ಅಷ್ಟೇ ಅಲ್ಲದೆ, ಸಂತೋಷ, ಸಕಾರಾತ್ಮಕ ಆಲೋಚನೆಗಳು ಹಾಗೂ ಭಾವನೆಗಳಿಗೆ ಸೇರಿದ ಮೆದುಳಿನ ಭಾಗವು ಸಹ, ವಿದ್ಯಾರ್ಥಿಗಳಿಗಿಂತಲೂ ಸಾಧುಗಳಲ್ಲಿ ಹೆಚ್ಚು ಕ್ರಿಯಾತ್ಮಕವಾಗಿತ್ತು.
ಮತ್ತೊಂದು ಬಹು ಮುಖ್ಯವಾದ
ವಿಷಯವೆಂದರೆ, ಸಾಧುಗಳು ಧ್ಯಾನ ಮಾಡುವುದಕ್ಕೆ
ಮೊದಲೂ ಸಹ, ಅವರ ಮೆದುಳಿನ ಚಟುವಟಿಕೆಗಳು,
ವಿದ್ಯಾರ್ಥಿಗಳಿಗೆ ಇದ್ದುದಕ್ಕಿಂತಲೂ ಹೆಚ್ಚು
ತೀವ್ರವಾದುದಾಗಿಯೂ, ಕ್ರಮಬದ್ಧವಾದುದಾಗಿಯೂ
ಇತ್ತು. ಆದುದರಿಂದ ನಿಜಕ್ಕೂ, ಧ್ಯಾನದ
ಪ್ರಯೋಜನಗಳು ಶಾಶ್ವತವಾದುವು. ಧ್ಯಾನವು
ಮೆದುಳಿನ ಪರಿಭ್ರಮಾಣ ಮತ್ತು ಆಂತರಿಕ
ಕಾರ್ಯವಿಧಾನಗಳನ್ನು ಸುಲಭವಾಗಿ
ಬದಲಾಯಿಸಿಬಿಡಬಲ್ಲುದು.
ಅಮೆರಿಕಾದ ಯೆಲ್, ಹಾರ್ವರ್ಡ್ ಮತ್ತು ಎಮ್.ಐ.ಟಿ (ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಯಂತಹ ಅನೇಕ ಉನ್ನತ ವಿಶ್ವವಿದ್ಯಾಲಯಗಳೂ ಧ್ಯಾನದ ಪರಿಣಾಮಗಳನ್ನು ಅಧ್ಯಯನ ಮಾಡಿವೆ.
ಎಮ್.ಆರ್.ಐ (ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್)ನ್ನು ಉಪಯೋಗಿಸಿಕೊಂಡು ಮಾಡಿದ ಅಧ್ಯಯನಗಳಲ್ಲಿ ಅರಿವು ಮತ್ತು ಗಮನಕ್ಕೆ ಸಂಬಂಧಿಸಿದ ಮೆದುಳಿನ ದಪ್ಪವನ್ನು ಧ್ಯಾನವು ಹೆಚ್ಚಿಸಿದುದೇ ಅಲ್ಲದೆ, ಅರಿವಿನ ಕಾರ್ಯಗತಿಯನ್ನೂ ಭಾವನಾತ್ಮಕ ಒಳಿತನ್ನೂ ಹೆಚ್ಚಿಸಿತು ಎಂದು ಕಂಡುಬಂದಿತು.
ರಕ್ತನಾಳಗಳೂ ಇನ್ನೂ ಹಿರಿದಾದುದನ್ನೂ, ಆಧಾರವಾಗಿರುವ ರಚನೆಗಳು ಸಂಖ್ಯೆಯಲ್ಲಿ ಹೆಚ್ಚಾದುದನ್ನೂ ಮತ್ತು ಅವು ಹೆಚ್ಚು ಶಾಖೆಗಳನ್ನೂ, ಕೂಡಿಕೆಗಳನ್ನೂ, ಹೊಂದಿದುದನ್ನೂ ಸಂಶೋಧಕರು ಕಂಡುಹಿಡಿದರು.
ಧ್ಯಾನ ಹಾಗೂ ನಿದ್ರೆ
ಒಬ್ಬರ ಅರಿವಿನ ಮೇಲೆ ನಿದ್ರೆಯ
ಪರಿಣಾಮವೇನೆಂಬುದನ್ನು ಕೆಂಟಕಿ
ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಸಂಶೋಧನೆಯ
ಮೂಲಕ ಅಧ್ಯಯನ ಮಾಡಲಾಯಿತು. ಒಂದು
ಗುಂಪು ಜನರಿಗೆ ಒಂದು ಪರದೆಯನ್ನು ನೋಡುತ್ತಿರಬೇಕೆಂದು ಹೇಳಲಾಯಿತು ಹಾಗೂ ಆ ಪರದೆಯ ಮೇಲೆ ಒಂದು ಚಿತ್ರವನ್ನು ಕಂಡಕೂಡಲೇ ಒಂದು ಗುಂಡಿಯನ್ನು ಒತ್ತಬೇಕೆಂದು ನಿರ್ದೇಶಿಸಲಾಗಿತ್ತು. ಚಿತ್ರಕ್ಕೆ ಪ್ರತಿಕ್ರಿಯೆ ನೀಡಲು, ಕಡಿಮೆ ನಿದ್ರೆಮಾಡಿದವರು ಸಾಧಾರಣವಾಗಿ ನಿದ್ರೆ ಮಾಡಿದವರಿಗಿಂತಲೂ ಹೆಚ್ಚು ಕಾಲ ತೆಗೆದು ಕೊಳ್ಳುತ್ತಾರೆ; ಕೆಲವು ವೇಳೆ ಅವರು ಚಿತ್ರ ಬಂದಾಗ ನೋಡುವುದನ್ನೇ ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ.
ಭಾಗವಹಿಸಿದವರನ್ನು ನಿದ್ರೆ, ಧ್ಯಾನ, ಓದುವುದು
ಅಥವಾ ಯಾವುದಾದರೂ ಸರಳವಾದ
ಕ್ರಿಯೆಯಲ್ಲಿ ತೊಡಗಿಕೊಳ್ಳುವುದಕ್ಕೆ ನಲವತ್ತು
ನಿಮಿಷಗಳು ಮೊದಲು ಮತ್ತು ಕ್ರಿಯೆಯನ್ನು
ಮುಗಿಸಿದ ನಲವತ್ತು ನಿಮಿಷಗಳ ನಂತರ
ಪರೀಕ್ಷಿಸಲಾಯಿತು.
ಅಭ್ಯರ್ಥಿಗಳಿಗೆ ಧ್ಯಾನ ಮಾಡಿ ಅಭ್ಯಾಸ ವಿಲ್ಲದಿದ್ದರೂ ಸಹ, ಧ್ಯಾನದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರ ಪ್ರತಿಕ್ರಿಯೆಯೂ ಅತ್ಯಂತ ವೇಗವಾಗಿತ್ತೆಂಬುದನ್ನು ಕಂಡುಹಿಡಿದರು. ಇಡೀ ರಾತ್ರಿ ಎಚ್ಚರವಾಗಿದ್ದರೂ ಅವರ ಪ್ರತಿಕ್ರಿಯೆ ಇನ್ನೂ ಉತ್ತಮವಾಗಿತ್ತು.
ಇನ್ನೂ ಉತ್ತಮವಾದ ಏಕಾಗ್ರತೆ ಮತ್ತು ಪ್ರತಿಕ್ರಿಯೆಯ ವೇಗ
ಗ್ರಹಿಕೆ ಮತ್ತು ಪ್ರತಿಸ್ಪಂದನದ ವೇಗ ಹಾಗೂ
ಯಥಾರ್ಥತೆಯ ಮೇಲೆ ಧ್ಯಾನದ ಪ್ರಭಾವವನ್ನು
ಕುರಿತ ಹಲವು ಅಧ್ಯಯನಗಳನ್ನು ಮಾಡಲಾಗಿದೆ.
ಇಂಗ್ಲೆಂಡಿನ ಲಿವರ್ ಪೂಲ್ ಜಾನ್ ಮೂರ್ಸ್ ವಿಶ್ವವಿದ್ಯಾಲಯದಲ್ಲಿ ಕೆಲವು ಅಧ್ಯಯನಗಳು ನಡೆದುವು. ಒಂದು ಅಧ್ಯಯನದಲ್ಲಿ ಭಾಗವಹಿಸಿದವರಿಗೆ ಅಕ್ಷರಗಳ ಮೇಲೆ ಬೇರೆ ಬೇರೆ ಸಂಖ್ಯೆಗಳಷ್ಟು ಗೆರೆಗಳುಳ್ಳ ಅಕ್ಷರಗಳ ಸಾಲುಗಳನ್ನು ಕೊಡಲಾಗಿತ್ತು. ಅವರು ಅನೇಕ ಗೆರೆಗಳುಳ್ಳ ಅಕ್ಷರಗಳನ್ನು ಸಾಧ್ಯವಾದಷ್ಟು ಬೇಗ ಹೊಡೆದುಹಾಕಬೇಕಾಗಿತ್ತು.
ಮತ್ತೊಂದು ಅಧ್ಯಯನದಲ್ಲಿ ಭಾಗವಹಿಸಿದವರಿಗೆ 'ಕೆಂಪು', 'ನೀಲಿ' ಅಥವಾ 'ಹಸಿರು' ಎಂಬ ಪದಗಳನ್ನು ಬೇರೆ ಬಣ್ಣದ ಶಾಯಿಯಿಂದ ಮುದ್ರಿಸಿದ್ದನ್ನು ತೋರಿಸಿದರು. ಪದವನ್ನು ಬರೆದ ಶಾಯಿಯ ಬಣ್ಣವನ್ನು ಅವರು ತ್ವರಿತವಾಗಿ ಹೇಳಬೇಕಾಗಿತ್ತು. ಸಾಮಾನ್ಯವಾಗಿ ಇದು ಕಷ್ಟ. ಏಕೆಂದರೆ ಪದವು ಯಾವ ಬಣ್ಣದಲ್ಲಿ ಬರೆದಿದೆ ಎಂಬುದಕ್ಕಿಂತಲೂ ಪದವನ್ನು ಓದುವುದರ ಕಡೆಗೆ ಮೆದುಳು ವಾಲುತ್ತದೆ!
ಧ್ಯಾನ ಮಾಡದವರಿಗಿಂತಲೂ ಧ್ಯಾನ
ಮಾಡುವವರು ಇನ್ನೂ ಬೇಗಲೂ, ಧ್ಯಾನ
ಮಾಡದವರ ಸುಮಾರು ಅರ್ಧದಷ್ಟು ತಪ್ಪುಗಳನ್ನು
ಮಾಡಿದ್ದರೆಂದೂ ಕಂಡುಹಿಡಿದರು.
ಅರಿವು, ಗಮನ, ನೆನಪು, ಏಕಾಗ್ರತೆ,
ಪ್ರತಿಸ್ಪಂದನೆಯ ಕಾಲ, ದೃಶ್ಯೀಕರಣ ಭಾವನಾತ್ಮಕ
ಸೌಖ್ಯ ಮತ್ತು ಆರೋಗ್ಯವನ್ನು ಧ್ಯಾನವು
ನೇರವಾಗಿಯೂ ಮತ್ತು ಮಹತ್ವಪೂರ್ಣವಾಗಿಯೂ
ಉತ್ತಮಗೊಳಿಸುತ್ತದೆ.
ಧ್ಯಾನದ ಪರಿಣಾಮಗಳು ಹಾಗೂ
ಪ್ರಯೋಜನಗಳ ಅಗಾಧವಾದ ಆಯಾಮಗಳನ್ನು
ವಿಜ್ಞಾನವು ಇದೀಗ ಪರೀಕ್ಷಿಸಿ ನೋಡಲಾರಂಭಿಸಿದೆ.
ಆದರೆ, ಸಾವಿರಾರು ವರ್ಷಗಳಿಂದಲೂ, ವೈದಿಕ
ಕಾಲದಿಂದಲೂ ಮಾನವನು ಧ್ಯಾನದ
ಪ್ರಯೋಜನಗಳನ್ನು ಪಡೆಯುತ್ತಲೇ ಇದ್ದಾನೆ.
ಧ್ಯಾನವು ಪರಮಾತ್ಮನನ್ನು ಸೇರಲು ಅಂತಿಮ
ಮಾರ್ಗ! ಇದು ತಪ್ಪಲು ಸಾಧ್ಯವಿಲ್ಲದ, ಕಾಲ
ಪರೀಕ್ಷೆಗೊಳಗಾದ, ಆತ್ಮಜ್ಞಾನವನ್ನು
ಪಡೆಯುವುದಕ್ಕಿರುವ ತಂತ್ರ.