ನಿಮ್ಮ ಸಾಮ್ರಾಜ್ಯಕ್ಕೆ ಜೀವನ್ಮುಕ್ತಿಯೇ ಕೀಲಿಕೈ
This text was machine-transcribed from the printed book and may contain errors. Select the words and choose “Report a mistake”.
ಈಗ ನಾವು ಪರಮೋನ್ನತವಾದ ಅಥವಾ ನಾನು
ಕರೆಯುವ ತಾತ್ತ್ವಿಕತೆಯ ಅನುಭವವನ್ನು
ತಲುಪುತ್ತೇವೆ. ನಾವು ಯಾರು ಹಾಗೂ ಈ ವಿಶ್ವದಲ್ಲಿ
ನಮ್ಮ ಪಾತ್ರವೇನು, ಎಂಬ ಅರಿವೇ ನಾವು
ಪಡೆಯಬಹುದಾದ ಪರಮೋನ್ನತವಾದ ಜ್ಞಾನ
ಹಾಗೂ ಅನುಭವ. ಅಜ್ಞಾನದ ಕತ್ತಲಿನಿಂದ ಸತ್ಯದ
ಬೆಳಕಿನೆಡೆಗೆ ನಾವು ಸಾಗುತ್ತೇವೆ.
ಜ್ಞಾನೋದಯವನ್ನು ಪಡೆಯುತ್ತೇವೆ.
ಜ್ಞಾನಿಗಳು ಈ ಭೂಗ್ರಹದ ಮೇಲೆ ಏಕೆ ಅವತರಿಸುತ್ತಾರೆ?
ಯಾರಾದರೂ ಈಜುತ್ತಲಿರುವುದನ್ನು ನೀವು
ನೋಡಿದಾಗ, ಮೂರು ವಿಷಯಗಳನ್ನು ತಿಳಿಯುತ್ತೀರಿ.
ಮೊದಲನೆಯದು, ಈಜುವುದು ಸಾಧ್ಯ; ಮನುಷ್ಯನು
ನೀರಿನ ಮೇಲೆ ತೇಲಬಹುದು ಎಂದು.
ಎರಡನೆಯದು, ನಿಮಗೆ ಅದರಿಂದ ಒಂದು
ಅಗಾಧವಾದ ಪ್ರಚೋದನೆ ಉಂಟಾಗುತ್ತದೆ:
‘ಆತನಿಗೆ ಅದನ್ನು ಮಾಡಲು ಸಾಧ್ಯವಾದರೆ, ನನಗೇಕೆ
ಆಗುವುದಿಲ್ಲ? ನಾನೇಕೆ ಪ್ರಯತ್ನಿಸಬಾರದು? ನನಗೂ
ಈಜಲು ಸಾಧ್ಯವಾಗುತ್ತದೆ’ ಎಂದು. ಮೂರನೆಯದು,
‘ನಾನೂ ನೆಗೆಯೋಣ!’ ಎಂಬ ಸ್ಫೂರ್ತಿ ಹಾಗೂ
ಧೈರ್ಯವು ನಿಮಗೆ ಬರುತ್ತದೆ.
ಅದೇ ರೀತಿ, ಒಬ್ಬ ಜ್ಞಾನಿಯು ಭೂಗ್ರಹದ ಮೇಲೆ ನಡೆಯುತ್ತಿರುವುದನ್ನು ನೋಡಿದಾಗ, ಅವರೊಂದಿಗೆ ಜೀವಿಸಿದಾಗ, ನಿಮಗೂ ಮೂರು ವಿಷಯಗಳು ತಿಳಿಯುತ್ತದೆ. ಮೊದಲನೆಯದೆಂದರೆ, ಜೀವನ್ಮುಕ್ತಿಯನ್ನು ಪಡೆಯುವುದು ಸಾಧ್ಯ. ಭೂಗ್ರಹದ ಮೇಲೆ ನೀವು ಒಬ್ಬ ದೇವರಂತೆ ಬಾಳಬಹುದು ಎಂಬುದು. ಎರಡನೆಯದು, ‘ಅವರಿಗೆ ಜೀವನ್ಮುಕ್ತಿಯನ್ನು ಪಡೆಯಲು ಸಾಧ್ಯವಾದರೆ, ನನಗೇಕೆ ಆಗಬಾರದು?’ ಎಂಬುದು. ಏಕೆಂದರೆ, ಅವರು ಮನುಷ್ಯ ಸ್ವಭಾವಕ್ಕೆ ಸನ್ನಿಹಿತವಾದ ಸರಳತೆ ಹಾಗೂ ಸಾಮಾನ್ಯತೆಯನ್ನು ಹೊರಸೂಸುತ್ತಾರೆ. ಅದು ಸಾಧ್ಯವೆಂಬ ವಿಶ್ವಾಸವು ನಿಮ್ಮಲ್ಲೂ ಸಹಜವಾಗಿಯೇ ಮೂಡುತ್ತದೆ. ಮೂರನೆಯದು, ‘ನಾನೂ ನೆಗೆಯೋಣ’ ಎಂಬ ಧೈರ್ಯ. ಈ ಮೂರೊ ಉಂಟಾಗುವುದು ನೀವು ಒಬ್ಬ ಜ್ಞಾನಿಯ ಸುತ್ತಮುತ್ತ ಇದ್ದು ಜೀವಿಸಿದಾಗ ಹಾಗೂ ಅವರ ಹಾವಭಾವಗಳನ್ನು ಸತತವಾಗಿ ಗಮನಿಸಿದಾಗ ಮಾತ್ರ. ಮಾತ್ರ್ಯಾವುದರಿಂದಲೂ ಇದನ್ನು ನಿಮ್ಮಲ್ಲಿ ಪ್ರಚೋದಿಸಲಾಗುವುದಿಲ್ಲ.
ಜೀವನ್ಮುಕ್ತಿಯು . . .
1. ಮಿತಿಯಿಲ್ಲದ ಅಖಂಡ ಧಾರೆಯನ್ನು ಅನುಭವಿಸುವುದು
ಮಿತಿಯಿಲ್ಲದ ಅಖಂಡ ಧರೆಯೊಂದಿಗೆ
ಬದುಕುವುದೇ ಜೀವನ್ಮುಕ್ತ ಬಾಳು. ಈ ಅಖಂಡ
ಧಾರೆಯು ಉಂಟಾಗುವುದು ಬಾಹ್ಯ ಹಾಗೂ
ಆಂತರಿಕ ಪ್ರಪಂಚದಲ್ಲಿ ನೀವು ನಿಮ್ಮ ಗುರುತುಗಳ
ಹಿಡಿತದಿಂದ ಹೊರಬಂದಾಗಲೇ.
ಆ ಅಂತಿಮವಾದ ಅಖಂಡಧಾರೆಯಲ್ಲಿ
ನೆಲೆಗೊಂಡು ಕ್ರಿಯಾಶೀಲರಾಗಲು ನಿಮ್ಮಿಂದ
ಸಾಧ್ಯವಾದಾಗ, ನೀವು ಜೀವನ್ಮುಕ್ತರಾಗುತ್ತೀರಿ.
ನಿಮಗೆ ಅದರಲ್ಲಿ ನೆಲೆಗೊಳ್ಳಲಾಗದೆ ಇದ್ದರೂ
ಅದರ ಒಂದು ಸಣ್ಣ ಅನುಭವ ಉಂಟಾದಾಗ ನೀವು
‘ಸತೋರಿ’ಯನ್ನು ಅನುಭವಿಸುತ್ತೀರಿ.
2. ಆತ್ಮ, ಪ್ರಪಂಚ ಹಾಗೂ ದೇವರನ್ನು ತಿಳಿಯುವುದು
ಜೀವನ್ಮುಕ್ತಿಯನ್ನು ಪಡೆಯಲು ಬೇಕಾದ
ಮೂಲವಸ್ತುವೆಂದರೆ 'ಮಾನಸಿಕ ಕ್ರಾಂತಿ'. ಆತ್ಮ
(ಜೀವ)ದ, ಪ್ರಪಂಚ (ಜಗತ್)ದ ಹಾಗೂ ದೇವರ
(ಈಶ್ವರ) ಬಗ್ಗೆ ಒಂದು ಹೊಸದಾದ ಸ್ಪಷ್ಟತೆ.
ನೀವು ಹೇಗೆ ಆಲೋಚಿಸುತ್ತೀರಿ, ಹೇಗೆ ಪ್ರೇರಿತರಾಗಿದ್ದೀರಿ, ನಿಮ್ಮ ಸ್ಪೂರ್ತಿ ಯಾವುದು, ಜೀವನದಲ್ಲಿ ನಿಮಗೆ ಯಾವುದು ಪ್ರಚೋದನೆ ನೀಡುತ್ತದೆ ಎಂಬ ತಿಳಿವಳಿಕೆಯೇ ಆತ್ಮ – ‘ಜೀವ’ದ ಬಗ್ಗೆ ಸ್ಪಷ್ಟತೆ.
ಈ ಪ್ರಪಂಚದಲ್ಲಿ ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳುವುದು ಹೇಗೆ, ಪ್ರಪಂಚವು ನಿಮ್ಮ ಮೇಲೆ ಹೇರಿರುವ ಭಯ ಹಾಗೂ ಇತರ ವಿಷಯಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ತಿಳಿವಳಿಕೆಯೇ ಪ್ರಪಂಚ ಅಥವಾ ‘ಜಗತ್ತಿನ’ ಸ್ಪಷ್ಟತೆ.
ಈಶ್ವರ ಅಥವಾ ದೇವರ ಬಗ್ಗೆ ಸ್ಪಷ್ಟತೆ ಎಂದರೆ
ಆತ್ಮ ಹಾಗೂ ಪ್ರಪಂಚವೆರಡರ ಮೂಲವನ್ನು
ತಿಳಿಯುವುದು. ಮೂಲವಸ್ತುವನ್ನು ಪಡೆದು ಈ
ಮೂರನ್ನೂ ತಿಳಿಯುವುದೇ ಜೀವನ್ಮುಕ್ತಿ.
ನೀವು ಏಕೆ ಆಲೋಚಿಸುತ್ತೀರಿ ಹಾಗೂ ಹೇಗೆ
ಆಲೋಚಿಸುತ್ತೀರೆಂಬುದರ ಸ್ಪಷ್ಟವಾದ ತಿಳಿವಳಿಕೆ
ಇದ್ದಾಗ ಆ ತಿಳಿವಳಿಕೆಯೇ ನಿಮಗೆ ಸ್ಪಷ್ಟವಾದ
ಆತ್ಮಾನುಭವವನ್ನು ನೀಡುತ್ತದೆ. ಭಯ ಹಾಗೂ
ದುರಾಸೆಯ ಮೂಲಕ ಈ ಪ್ರಪಂಚದೊಂದಿಗೆ ಹೇಗೆ
ಸಂಪರ್ಕಿಸಬೇಕೆಂದು, ನಿಮಗೆ ಬೇಕಾದುದನ್ನು ಹೇಗೆ
ಪಡೆಯಬೇಕೆಂದು ಹಾಗೂ ಬೇಡದ್ದನ್ನು ಹೇಗೆ
ಬಿಡಬೇಕೆಂದು ತಿಳಿದಾಗ ಪ್ರಪಂಚದ ಒಂದು
ಸ್ಪಷ್ಟವಾದ ಅನುಭವವನ್ನು ಪಡೆಯುತ್ತೀರಿ.
ಮೂರನೆಯದು, ಆತ್ಮ ಹಾಗೂ ಪ್ರಪಂಚದ
ಮೂಲವಾದ ದೇವರು – ‘ಈಶ್ವರ’ನ ಅನುಭವವನ್ನು
ಪಡೆಯುತ್ತೀರಿ.
ಆತ್ಮ, ಪ್ರಪಂಚ ಹಾಗೂ ದೇವರ ಬಗ್ಗೆ ಒಂದು
ನಿಜವಾದ ತಿಳಿವಳಿಕೆಯನ್ನು ಪಡೆಯುವುದೇ
ಜೀವನ್ಮುಕ್ತಿ.
ಎಲ್ಲಿಗೊ ತಪ್ಪಿಸಿಕೊಂಡು ಹೋಗುವುದೆಂದಲ್ಲ.
ಜೀವನವನ್ನು ಇಲ್ಲಿ ಹಾಗೂ ಈಗ ಸವಿಯುವುದನ್ನೇ
ನಾನು ಜೀವನ್ಮುಕ್ತಿ ಎನ್ನುವುದು.
3. ಕಾರಣವಿಲ್ಲದೆಯೇ ಉಂಟಾಗುವ ತೀವ್ರವಾದ ಉತ್ಸಾಹ
ಜನರು, ‘ಜೀವನ್ಮುಕ್ತಿಯನ್ನು ಪಡೆದ ಮೇಲೆ ಜ್ಞಾನಿಗಳು ಸಂತೋಷ ಪಡಲಾಗುವುದೇ?’ ಎಂದು ನನ್ನನ್ನು ಕೇಳುತ್ತಾರೆ. ಜೀವನ್ಮುಕ್ತಿಯನ್ನು ಪಡೆದ ನಂತರವೇ ಸಂತೋಷಪಡಲು ಸಾಧ್ಯ! ಎಂದು ನಾನು ಹೇಳುತ್ತೇನೆ. ಅದಕ್ಕೆ ಮೊದಲು ಕೇವಲ ಸಂತೋಷಪಡುತ್ತಿರುವಂತೆ ಭಾವಿಸುತ್ತೀರಿ ಅಥವಾ ಕಲ್ಪಿಸಿಕೊಳ್ಳುತ್ತೀರಿ.
ಜೀವನ್ಮುಕ್ತಿಯನ್ನು ಪಡೆದ ಮೇಲೆ,
ಸಂತೋಷಿಸಲು ನಿಮಗೆ ವಿಷಯ ವಸ್ತುಗಳ ಅಗತ್ಯವೇ
ಇರುವುದಿಲ್ಲ. ನೀವು ಸದಾ ಸಂತೋಷವಾಗಿರುತ್ತೀರಿ.
ಕಾರಣವಿಲ್ಲದೆಯೇ ಒಂದು ತೀವ್ರವಾದ ಉತ್ಸಾಹವು
ನಿಮ್ಮಲ್ಲಿ ಇರುತ್ತದೆ.
ಜೀವನ್ಮುಕ್ತಿಯನ್ನು ಎರಡು ಮಾತುಗಳಲ್ಲಿ
ನಿರೂಪಿಸಬೇಕೆಂದರೆ, ಅದು ಕಾರಣವಿಲ್ಲದ
ತೀವ್ರವಾದ ಉತ್ಸಾಹ; ಯಾವ ವಸ್ತುವಿನೆಡೆಗೂ
ನಿರ್ದೇಶಿಸದ ತೀವ್ರವಾದ ಭಾವಾವೇಶ ಎಂದು ನಾನು
ಹೇಳುತ್ತೇನೆ. ಯಾವ ವಸ್ತುವೂ ಇಲ್ಲದಿದ್ದರೂ
ತೀವ್ರವಾದ ಆವೇಶವಿರುತ್ತದೆ. ಕಾರಣವಿಲ್ಲದಿದ್ದರೂ
ತೀವ್ರವಾದ ಉತ್ಸಾಹವಿರುತ್ತದೆ. ಅದನ್ನೇ ನಾನು
ಜೀವನ್ಮುಕ್ತಿ ಎನ್ನುವುದು. ಜೀವನ್ಮುಕ್ತಿಯೆಂದರೆ
4. ಇತರರನ್ನೂ ನಿಮ್ಮಂತೆಯೇ ಕಾಣುವುದು
ನಿಮ್ಮೊಳಗೆ ಅನುಭವಿಸುವ ಜೀವನದ ತೀವ್ರತೆಯನ್ನೇ ನಿಮ್ಮ ಚರ್ಮದ ಹೊರಗೂ ಅನುಭವಿಸುವುದನ್ನು ನಾನು ಜೀವನ್ಮುಕ್ತಿ ಎನ್ನುತ್ತೇನೆ. ನೀವು ಬರಿಯ ನಿಮ್ಮ ದೇಹದೊಳಗೆ ಮಾತ್ರ ಜೀವಂತವಾಗಿಲ್ಲ: ಪ್ರತಿಯೊಂದು ಜೀವಿಯಲ್ಲೂ, ಮರದಲ್ಲೂ ಹಾಗೂ ಬಂಡೆಯಲ್ಲೂ ಜೀವಂತವಾಗಿದ್ದೀರಿ. ನಿಮ್ಮ ದೈಹಿಕ ಶರೀರದ ಮೇಲಿರುವ ನಿಮ್ಮ ಹಿಡಿತವು ವಿಶ್ವಾತ್ಮಕ ಶರೀರದ ಮೇಲಿನ ಹಿಡಿತವಾಗಿ ಪರಿವರ್ತಿಸುತ್ತದೆ! ಈ ವಿಶ್ವದ ಪ್ರತಿಯೊಂದು ಕಣದಲ್ಲಿಯೂ ನೀವು ಸಜೀವವಾಗಿದ್ದೀರಿ, ಪ್ರತಿಯೊಂದು ಕಣವೂ ವಿಶ್ವದ ಸಂಪೂರ್ಣವಾದ, ಸಫಲತೆಯ ಭಾಗ.
ತಿಳಿಯಿರಿ, ನಾನು ನನ್ನ ಚರ್ಮದೊಳಗೆ ಎಷ್ಟು
ಜೀವಂತವಾಗಿದ್ದೇನೆಯೋ, ಹೊರಗೂ ಅಷ್ಟೇ
ಜೀವಂತವಾಗಿದ್ದೇನೆ. ನಾನು ಎಲ್ಲಾ ಕೋಟ್ಯಾಂತರ
ತಲೆಗಳಲ್ಲಿ, ಕಣ್ಣುಗಳಲ್ಲಿ ಹಾಗೂ ಪಾದಗಳಲ್ಲಿಯೂ
ಈ ವಿಶ್ವದ ಕೋಟ್ಯಾಂತರ ಜೀವಿಗಳಲ್ಲಿಯೂ
ಜೀವಂತವಾಗಿದ್ದೇನೆ.
ಇದನ್ನು ಸಾಧಿಸಲು, ನಿಮ್ಮ ಸಂಸ್ಕಾರಗಳನ್ನು, ನಿಮ್ಮ ಹಿಂದಿನ ಕೊರೆಯಲ್ಪಟ್ಟ ನೆನಪುಗಳನ್ನು ತಂದುಕೊಳ್ಳದೆ ಎಲ್ಲವನ್ನೂ ಮೊದಲ ಬಾರಿಗೊಂಬಂತೆ ನೋಡಲಾರಂಭಿಸಿರಿ. ಆಗ, ನಿಮ್ಮ ಚರ್ಮದೊಳಗಿನ ಜೀವ ಹಾಗೂ ತೀವ್ರತೆಯನ್ನೇ ಹೊರಗೂ ಅನುಭವಿಸಲಾರಂಭಿಸುತ್ತೀರಿ. ಇದನ್ನು ಹತ್ತು ದಿನಗಳ ಕಾಲ ಮಾಡಲು ಪ್ರಯತ್ನಿಸಿರಿ. ಒಮ್ಮೆ ನಿಮಗೆ ಇದರ ಒಂದು ಮಿಂಚುನೋಟವು ಉಂಟಾದರೆ, ನೀವು ಎಂದಿಗೂ ಅದನ್ನು ಕಳೆದುಕೊಳ್ಳುವುದಿಲ್ಲ. ಕಾರಣವಿಲ್ಲದೆಯೇ ಉತ್ಸಾಹದಿಂದಿರುತ್ತೀರಿ. ಪುನಃ ಎಂದಿಗೂ ಯಾವುದನ್ನು ಹೇಗಿದ್ದರೂ ಇದ್ದೇ ಇದೆಯಲ್ಲ ಎಂದು ತಾತ್ಸಾರ ಮಾಡುವುದಿಲ್ಲ, ಸದಾ ಆನಂದದಲ್ಲಿರುತ್ತೀರಿ.
5. ಅನ್ಕ್ಲಚ್ ಆಗಿರುವುದು
ಈಗಲಾದರೂ ನೀವು ನಿಮ್ಮ ಜೀವನದ ಅನುಭವಗಳನ್ನೆಲ್ಲಾ ಪರಸ್ಪರ ಸಂಬಂಧ ಕಲ್ಪಿಸಿ ಒಂದು ದಂಡವನ್ನು ಸೃಷ್ಟಿಸಿದ್ದೀರಿ. ನಿಮ್ಮ ಭವಿಷ್ಯತ್ತಿನ ಅನುಭವಗಳು ಈ ದಂಡವನ್ನು ನೀವು ಹೇಗೆ ಸೃಷ್ಟಿಸಿದ್ದೀರೆಂಬುದರ ಮೇಲೆ ಆಧಾರಿತವಾಗಿರುತ್ತದೆ. ಅದು ಹಿಂದಿನ ಯಾವ ಮಾತುಗಳನ್ನು ಆಯ್ದಿದ್ದೀರಿ, ದಂಡವನ್ನು ಹೇಗೆ ರಚಿಸಿದ್ದೀರಿ ಎಂಬುದರ ಮೇಲೆ ಆಧಾರಿತವಾಗಿರುತ್ತದೆ. ನಿಮ್ಮ ಭವಿಷ್ಯತ್ತಿನ ಭಾವನೆಗಳು, ಪ್ರತಿಕ್ರಿಯೆಗಳು, ಆಲೋಚನೆಗಳು ಹಾಗೂ ನುಡಿಗಳು ಸಂಪೂರ್ಣವಾಗಿ ಈ ದಂಡವನ್ನು ಆಧರಿಸಿರುತ್ತದೆ. ಆದರೆ ಜೀವನ್ಮುಕ್ತಿಯಾದ ಮೇಲೆ ಜೀವನವು ಇದಕ್ಕೆ ಬಹಳ ವಿಭಿನ್ನವಾಗಿರುತ್ತದೆ. ಆಲೋಚನೆಗಳು ಮೇಲೆಳುತ್ತವೆ, ಹಾಗೂ ಅವು ಕ್ರಿಯಾತ್ಮಕವಾಗಬೇಕೆಂದಿದ್ದರೆ ದೇಹವು ಆ ಆಲೋಚನೆಗಳನ್ನು ಅನುಸರಿಸುತ್ತದೆ. ಕೆಲಸವು ಮುಗಿದ ನಂತರ ಆಲೋಚನೆಗಳು ಮಾಯವಾಗುತ್ತವೆ. ನಂತರ, ಮುಂದೆ ಯಾವ ಕೆಲಸವನ್ನಾದರೂ ಮಾಡಬೇಕಾಗಿ ಬಂದಾಗ ಆಲೋಚನೆಗಳು ಮತ್ತೆ ಮೇಲೆಳುತ್ತವೆ ಹಾಗೂ ಪ್ರಕ್ರಿಯೆಯು ಮುಂದುವರೆಯುತ್ತದೆ. ಈ ಎಲ್ಲವೂ ತಾನಾಗಿಯೇ ಸುಂದರವಾಗಿ ಆಗುತ್ತದೆ. ಅಲ್ಲಿ ಯಾವ ದಂಡವೂ ಇರುವುದಿಲ್ಲ.
ಈ ಸಧ್ಯದಲ್ಲಿ ನಾವೆಲ್ಲರೂ ಹಾಸಿಗೆಯಿಂದ ಎದ್ದಾಗಿನಿಂದ ಮಲಗುವವರೆಗೂ ಸತತವಾಗಿ ಅಶಾಂತಿಯಿಂದಿರುತ್ತೇವೆ. ನಾವು ಸತತವಾಗಿ ಒಂದಲ್ಲ ಒಂದು ಕ್ಷೋಭೆಯನ್ನು ಹೊತ್ತಿರುತ್ತೇವೆ. ಮತ್ತೊಬ್ಬರ ಮೇಲೆ ಎರಗಲು ಹವಣಿಸುತ್ತಿರುತ್ತೇವೆ. ಎರಗಲು ಏನಾದರೊಂದು ನೆಪ ಮಾತ್ರ ಬೇಕಾಗಿರುತ್ತದೆ. ಜೀವನ್ಮುಕ್ತರಾದ ನಂತರ, ನಮ್ಮನ್ನು ಸತತವಾಗಿ ಕ್ಷೋಭೆಗೊಳಿಸುವ ಅಪರಾಧಪ್ರಜ್ಞೆ ಅಥವಾ ಆಸೆಯೂ ಇರುವುದಿಲ್ಲ. ಒಂದಾ ಕ್ಷಣವಾದರೂ ದಂಡದಿಂದ ಅನ್ಕ್ಲಚ್ ಆದರೆ, ಜೀವನ್ಮುಕ್ತಿಯ ಒಂದು ಕುಡಿನೋಟವನ್ನು ಪಡೆಯುತ್ತೇವೆ.
ದಂಡದಿಂದ ಸ್ಥಿತ್ಯಂತರವು ಒಂದಾ ಕ್ಷಣಾರ್ಧದಲ್ಲಿ ಉಂಟಾಗುತ್ತದೆ. ನೀವು ಆಳವಾದ ಅರಿವಿನಿಂದ ಕೂಡಿದರೆ ಅನ್ಕ್ಲಚ್ ಉಂಟಾದಾಗ ಆ ಅಮೂಲ್ಯ ಕ್ಷಣವನ್ನು ಆಹ್ಲಾದಿಸಬಹುದು. ನಮ್ಮೆಲ್ಲಾ ತಪಸ್ಸು, ಆಧ್ಯಾತ್ಮಿಕ ಶಿಕ್ಷಣವು ಆ ಸ್ಥಿತ್ಯಂತರದ ಕ್ಷಣವನ್ನು ಆನಂದಿಸಲು ನಮ್ಮನ್ನು ಸಿದ್ಧಗೊಳಿಸಲು ಮಾತ್ರವಾಗಿದೆ. ಸ್ಥಿತ್ಯಂತರವು ಅನೇಕ ಬಾರಿ ಆಗುತ್ತದೆ. ನೀವು ಕೇವಲ ನಿಜವಾದ ಅರಿವಿನಿಂದಿದ್ದರೆ ಆಗ ನಿಮ್ಮಿಂದ ಅದನ್ನು ಹಿಡಿಯಲು ಸಾಧ್ಯ. ದಂಡದಿಂದ ನೀವು ಶಾಶ್ವತವಾಗಿ ಅನ್ಕ್ಲಚ್ ಆದರೆ, ಜೀವನ್ಮುಕ್ತಿಯಾದಂತೆ.
6. ನಾಲ್ಕು ಶಾಶ್ವತ ಬದಲಾವಣೆಗಳು
ನಾನು ಜೀವನ್ಮುಕ್ತಿಯನ್ನು ಪಡೆದ ನಂತರ,
ನನ್ನಲ್ಲಿ ಕೆಲವು ಬದಲಾವಣೆಗಳು ಶಾಶ್ವತವಾಗಿ
ಉಂಟಾದವೆಂದು ಹೇಳಬಲ್ಲೆ.
ಮೊದಲನೆದಾಗಿ, ಎಲ್ಲಾ ಒಳಹರಟೆಯೂ
ಮಾಯವಾಯಿತು. ಒಳಹರಟೆ ಎಂದರೆ,
ಸಾಮಾನ್ಯವಾಗಿ ನಮ್ಮೊಳಗೆ ಉಂಟಾಗುತ್ತಿರುವ
ಸತತವಾದ ಮಾತುಗಳ ಗಲಾಟೆ. ಈಗ
ಮಾತನಾಡುತ್ತಿರುವಾಗ ನನ್ನ ಮಾತುಗಳ ನಡುವಿನ
ಅಂತರದ ಕೆಲವು ಕ್ಷಣಗಳಲ್ಲಿ ಒಳಗೆ ಯಾವ
ಗಲಾಟೆಯೂ ಇಲ್ಲ. ಅದು ಸುಮ್ಮನೆ ಶುದ್ಧವಾದ
ಅಂತರಂಗ, ಮೌನ.
ಎರಡನೆಯದಾಗಿ, ಈ ದೇಹದ ಸೀಮೆಯು ನನ್ನಿಂದ ಕೊನೆಗೊಂಡು, ಅಲ್ಲಿಂದ ಉಳಿದ ಪ್ರಪಂಚವು ಪ್ರಾರಂಭವಾಗುತ್ತಿದೆಯೆಂಬ ಕಲ್ಪನೆಯು ಮಾಯವಾಯಿತು. ಸೀಮೆಯು ಪ್ರಜ್ಞೆಯು ಕರಗಿಹೋಯಿತು. ನಾನು ಬರೀ ಈ ಆರು ಅಡಿಯ ರೂಪವೆಂದು ಭಾವಿಸುವುದಿಲ್ಲ. ಎಲ್ಲದರಲ್ಲೂ ನನ್ನನ್ನೇ ಕಂಡಂತೆ ಭಾವಿಸುತ್ತೇನೆ. ನನ್ನನ್ನು ನೀವು ಗಮನಿಸಿದರೆ, ನನ್ನ ಛಾಯಾಚಿತ್ರವನ್ನು ಅಥವಾ ಪುಸ್ತಕದ ಕವಚದ ಮೇಲಿನ ನನ್ನ ಛಾಯಾಚಿತ್ರವನ್ನು ಕಂಡು ಆನಂದಿಸಲು ನಾನೇ ಮೊದಲಿಗನಾಗುತ್ತೇನೆ! ಅವುಗಳೊಂದಿಗೆ ಸುಮ್ಮನೆ ನಾಲ್ಕೈದು ದಿನಗಳು ಆಟವಾಡುತ್ತೇನೆ.
ಒಂದು
ಸರಳವಾದ
ವಿಷಯವೂ
ಗಾಢವಾದ
ಉತ್ಸಾಹವನ್ನುಂಟು
ಮಾಡುತ್ತದೆ.
ಮೂರನೆಯದಾಗಿ,
ಈ ದೇಹವು ಒಂದು
ಗಂಡು ದೇಹವಾದರೂ ನಾನು ಗಂಡು ಅಥವಾ
ಹೆಣ್ಣೆಂಬ ಒಳಗುರುತೇ ಮಾಯವಾಯಿತು. ನಾನು
ಗಂಡು ಅಥವಾ ಹೆಣ್ಣು ಎಂಬ ಮಾನಸಿಕ ಕಲ್ಪನೆಯೇ
ನನ್ನಲ್ಲಿ ಇನ್ನಿಲ್ಲವಾಯಿತು.
ನಾಲ್ಕನೆಯದಾಗಿ, ಅಂತರಂಗದಲ್ಲಿ ಒಂದು
ಸತತವಾದ ಉತ್ಸಾಹವಿದೆ. ಸರ್ವವೂ
ಸಂಭ್ರಮಿಸುತ್ತದೆ. ಸಣ್ಣ ಪುಟ್ಟ ವಿಷಯಗಳು ದೊಡ್ಡ
ಸಂಭ್ರಮವನ್ನುಂಟುಮಾಡುತ್ತದೆ. ಒಂದು ಸರಳವಾದ
ವಿಷಯವೂ ಗಾಢವಾದ ಸಂಭ್ರಮ ಹಾಗೂ
ಸಂತೋಷವನ್ನುಂಟುಮಾಡುತ್ತದೆ.
ಈ ನಾಲ್ಕು ಬದಲಾವಣೆಗಳೂ ಜೀವನ್ಮುಕ್ತಿಯನ್ನು ಪಡೆದ ಮೇಲೆ ನನ್ನಲ್ಲಿ ಉಂಟಾದ ಶಾಶ್ವತ ಬದಲಾವಣೆಗಳೆಂದು ಹೇಳಬಲ್ಲೆ.
7. ಅಂತಿಮ ಆದರೆ ಕೊನೆಯದಲ್ಲ
ಸ್ಪಷ್ಟವಾಗಿ ತಿಳಿಯಿರಿ. ಜೀವನ್ಮುಕ್ತಿಯು
ಅಂತ್ಯವಾದುದಲ್ಲ. ಅದು ಅಂತಿಮ ಅಥವಾ
ಪರಮೋನ್ನತ ಅನುಭವ ಆದರೆ ಕೊನೆಯ
ಅನುಭವವಲ್ಲ.
ಆಂತರಿಕ ಹರಟೆ
ಇಲ್ಲದಿದ್ದಾಗ,
ಇಡೀ
ದೃಶ್ಯೀಕರಣವು
ಒಂದು
ಪೊಟ್ಟಣದಂತೆ
ಹೊರಬರುತ್ತದೆ.
'ಅಂತಿಮ' ಹಾಗೂ
'ಕೊನೆ' ಎಂಬ ಈ
ಎರಡು ಪದಗಳನ್ನು ನೀವು
ತಿಳಿಯಬೇಕು. ಅವು
ಬಹಳ ವಿಭಿನ್ನವಾದವು.
ಉದಾಹರಣೆಗೆ, ಈ
ಸರಣಿಯ ಮೊದಲ
ದಿನದ ಪ್ರವಚನದ ನಂತರ, ಒಬ್ಬ ವ್ಯಕ್ತಿ ನನ್ನ ಬಳಿ
ಬಂದು, 'ನೀವು ಎಲ್ಲವನ್ನೂ ಹೇಳಿದ್ದೀರಿ,
ಮತ್ತೊಂದು ಪ್ರವಚನದ ಅಗತ್ಯವೇನಿದೆ?' ಎಂದು
ಕೇಳಿದನು. ನೆನ್ನೆಯ ದಿನ ಮತ್ತೊಬ್ಬ ವ್ಯಕ್ತಿಯು,
'ಸ್ವಾಮೀಜಿ, ಮೊದಲ ದಿನ ನೀವು ನಮ್ಮನ್ನು ಬಹಳ
ಆಳಕ್ಕೆ ಕರೆದೊಯ್ಯಲಾಗಲಿಲ್ಲ ಎನಿಸಿತು. ಅದೇನೋ
ಮುಗಿಯಿತು. ಇಂದು ನೆನ್ನೆಗಿಂತಲೂ ಆಳವಾಗಿ
ಕರೆದೊಯ್ದಿದ್ದೀರಿ, ಇದಕ್ಕಿಂತಲೂ ಇನ್ನೂ ಆಳಕ್ಕೆ
ಕರೆದೊಯ್ಯುವುದು ಸಾಧ್ಯವಿಲ್ಲ ಎಂದುಕೊಂಡೆ.
ಪ್ರತಿದಿನವೂ ಇದಕ್ಕಿಂತಲೂ ಆಳವಾಗಿ ಹೋಗಲು
ಸಾಧ್ಯವಿಲ್ಲವೆಂದುಕೊಂಡಾಗಲೂ ನಾವು ಹೆಚ್ಚು
ಹೆಚ್ಚು ಆಳವಾಗಿಯೇ ಹೋಗುತ್ತಿದ್ದೇವೆ' ಎಂದನು.
ಪ್ರತಿದಿನದ ಅನುಭವವೂ ಅಂತಿಮವಾದದ್ದೆಂದು ಆ
ವ್ಯಕ್ತಿಯು ಭಾವಿಸಿದ್ದನು.
ಅಂತಿಮವೆಂದರೆ, ಪ್ರತಿಕ್ಷಣದಲ್ಲೂ
ಸಂಪೂರ್ಣವಾಗಿ ಪೂರ್ತಿಯಾಗಿ ಬದುಕುವುದು
ಎಂದು. ಅಂತಿಮವು ಕಡೆಯದಲ್ಲ. ಅದನ್ನು
ನವೀಕರಿಸಬಹುದು.
ಅಂತಿಮ ಹಾಗೂ ಕೊನೆ ಎಂಬ ಎರಡು
ಪದಗಳಿಗೆ ಒಂದು ದೊಡ್ಡ ವ್ಯತ್ಯಾಸವಿದೆ. ಅದು
ಅಂತಿಮವಾಗಿದ್ದರೆ ಪ್ರತಿಕ್ಷಣದಲ್ಲಿಯೂ
ಆಗುತ್ತಿರುತ್ತದೆ; ಅದು ಕೊನೆಯಲ್ಲ.
ಒಬ್ಬ ವ್ಯಕ್ತಿಯು ಜೀವನ್ಮುಕ್ತಿಯನ್ನು ಪಡೆದಾಗ,
ಆತನು ತನ್ನ ಸಾಮರ್ಥ್ಯವನ್ನು ಅನುಭವಿಸುವುದಲ್ಲದೇ
ಇನ್ನಷ್ಟು ಹೆಚ್ಚು ಹೆಚ್ಚು ಜ್ಞಾನಿಗಳನ್ನು ಹಾಗೂ
ಜ್ಞಾನಿಗಳನ್ನು ಸೃಷ್ಟಿಸುವ ಸಾಧ್ಯತೆಯನ್ನು
ಸೃಷ್ಟಿಸಲಾರಂಭಿಸುತ್ತಾನೆ.
8. ಮಾತು ಇಲ್ಲ, ದೃಶ್ಯೀಕರಣ
ಜೀವನ್ಮುಕ್ತಿಯನ್ನು ಹೊಂದಿದಾಗ, ನಿಮ್ಮ ನಾಭಿ
ಹಾಗೂ ಗಂಟಲ ನಡುವೆ ಯಾವ ಅಕ್ಷರ ಅಥವಾ
ಪದ ಅಥವಾ ಆಲೋಚನೆಯ ಚಲನೆಯೂ
ಇರುವುದಿಲ್ಲ. ಮಾತುಗಳು ಗಂಟಲಿನಿಂದ ಮಾತ್ರ
ಬರುತ್ತದೆ. ಇದು ಜೀವನ್ಮುಕ್ತಿಯ ನಿಖರವಾದ
ವಿವರಗಳಲ್ಲೊಂದು ಎಂದು ನಾನು ಹೇಳಬಲ್ಲೆ. ನಾಭಿ
ಹಾಗೂ ಗಂಟಲ ನಡುವೆ ಯಾವ ಪದ, ಆಲೋಚನೆ,
ಅಕ್ಷರ ಅಥವಾ ಶಬ್ದದ ಚಲನೆಯೂ ಇರುವುದಿಲ್ಲ.
ನೀವು ಮಾತನಾಡುತ್ತಿರುವಾಗ ಮಾತ್ರ
ಪದಗಳಿರುತ್ತದೆ. ಮಾತನಾಡದಿರುವಾಗ
ಆಂತರಿಕವಾಗಿ ಯಾವ ಪದಗಳೂ ಇರುವುದಿಲ್ಲ.
ಬರಿಯ ಶಕ್ತಿಯ ಚಲನೆ ಇರುತ್ತದೆ. ಯಾವ
ಆಲೋಚನೆ, ಮಾತಿನ ರೂಪ ಹಾಗೂ ಆಂತರಿಕ
ಸತತ ಒಳಹರಟೆಗಳೂ ಇರುವುದಿಲ್ಲ.
ತಿಳಿಯಿರಿ, ಆಂತರಿಕ ಹರಟೆಯು ಇಲ್ಲದಿದ್ದಾಗ ಅದು ಜಡ ಮೌನವಲ್ಲ. ಅದು ಗಾಢವಾದ ಚೈತನ್ಯ!
ಆ ಚೈತನ್ಯದಿಂದ ಮಾಡಬೇಕಾದುದು ಒಂದು
ಸಂಪೂರ್ಣ ದೃಶ್ಯೀಕರಣವಾಗಿ ಕಂಡುಬರುತ್ತದೆ.
ಆಂತರಿಕ ಹರಟೆಯಿದ್ದರೆ ಅದು ಸಾಲುಸಾಲಾಗಿ
ಬರುತ್ತದೆ. 'ಬೆಳಿಗ್ಗೆ ನಾನು ಏಳಬೇಕು. ನಂತರ
ಕಾರ್ಯಾಲಯಕ್ಕೆ ಹೋಗಬೇಕು. ಅಲ್ಲಿ ಒಂದು
ಹೊಸ ಯೋಜನೆಯಲ್ಲಿ ಕೆಲಸ ಮಾಡಬೇಕು. ಸಂಜೆ
ಹಿಂತಿರುಗುತ್ತೇನೆ. ರಾತ್ರಿಯ ಊಟಕ್ಕೆ ಹೊರಗೆ
ಹೋಗಬಹುದು' ಎಂದು ಸಾಲಾಗಿ ಒಂದಾದ ಮೇಲೆ
ಒಂದರಂತೆ ಆಲೋಚನೆಗಳು ಹಾಗೂ ಪದಗಳು
ಹೊರಬರುತ್ತವೆ.
ಒಳಹರಟೆ ಇಲ್ಲದಿದ್ದಾಗ, ನೀವು ನಿಮ್ಮೊಂದಿಗೆ ಇದ್ದಾಗ, ಇಡೀ ದೃಶ್ಯೀಕರಣವು ಒಂದು ಕಂತೆಯಂತೆ, ಒಂದು ಮಾಹಿತಿಯಂತೆ ಹೊರಬರುತ್ತದೆ. ಅದನ್ನೇ ಅಂತರ್ದೃಷ್ಟಿ ಎಂದು ಕರೆಯುವುದು. ತರ್ಕಬದ್ಧವಾದ ಪ್ರಕ್ರಿಯೆಯನ್ನೊಳಗೊಂಡಾಗ ಅದನ್ನು ಆಂತರಿಕ ಹರಟೆ ಎನ್ನುತ್ತಾರೆ. ಆದರೆ ಆಂತರಿಕ ಹರಟೆ ಇಲ್ಲದಿದ್ದಾಗ ವಿಷಯಗಳು ನಿಮ್ಮಲ್ಲಿ ಅಂತರ್ದೃಷ್ಟಿಯಿಂದ ನೇರವಾಗಿ ವ್ಯಕ್ತವಾಗಲಾರಂಭಿಸುತ್ತವೆ.
9. ಸಮಗ್ರ ಒಳಹರಟೆ ಹಾಗೂ ಬಾಹ್ಯದ ಮಾತುಗಳು
ಕಪಟಾಚಾರವನ್ನು ತನ್ನ ಅಂತರಂಗದಿಂದ
ತೆಗೆದುಹಾಕಿದವನು ಜೀವನ್ಮುಕ್ತಿಯನ್ನು
ಹೊಂದುತ್ತಾನೆ. ಜ್ಞಾನಿಗಳಾದ ರಾಮಕೃಷ್ಣ ಪರಮ
ಹಂಸರು, 'ನಿಮ್ಮ ಒಳಹರಟೆ ಹಾಗೂ ನೀವು
ಬಾಹ್ಯದಲ್ಲಿ ಆಡುವ ಮಾತುಗಳನ್ನು ಏಕೀಕರಿಸುವುದೇ
ಜೀವನ್ಮುಕ್ತಿ' ಎಂದು ಹೇಳುತ್ತಾರೆ. ನಿಮ್ಮ ಒಳ
ಹರಟೆಯನ್ನು ಹಾಗೂ ಬಾಹ್ಯದಲ್ಲಿ ನೀವಾಡುವ
ಮಾತುಗಳನ್ನು ಒಂದಾಗಿಸಿರಿ. ಅವೆರಡೂ ಒಂದಾಗಲಿ.
ಆಗ ನೀವು ಜೀವನ್ಮುಕ್ತಿಯನ್ನು ಪಡೆಯುತ್ತೀರಿ.
10. ಮಾನವಾತೀತ ಪ್ರಜ್ಞೆಯ ಅರಿವಿನಿಂದ ಸಂಶೋಧನೆ ಹಾಗೂ ಅಭಿವೃದ್ಧಿ
ಜೀವನ್ಮುಕ್ತಿಯನ್ನು ಪಡೆದ ನಂತರ
ಯಾರಿಗಾದರೂ ಬಹಳ ಚುರುಕಾದ
ಮಾನವಾತೀತಪ್ರಜ್ಞೆಯ ಅರಿವಿರುತ್ತದೆ. ಆ
ಮಾನವಾತೀತ ಪ್ರಜ್ಞೆಯ ಅರಿವಿನಿಂದ ಸಂಶೋಧನೆ,
ಪ್ರಯೋಗ ಹಾಗೂ ವಿಶ್ಲೇಷಣೆಗಳನ್ನು ಮಾಡಲು
ಸುಲಭವಾಗುತ್ತದೆ. ಜೀವನ್ಮುಕ್ತಿಯನ್ನು ಪಡೆದ
ನಂತರವೂ ನಾನು ಬಾಹ್ಯ ಹಾಗೂ ಆಂತರಿಕ
ಪ್ರಪಂಚದ ವಿಜ್ಞಾನಿಗಳು ಮತ್ತು
ಸಂಶೋಧಕರೊಂದಿಗೆ ಹಾಗೂ ನಾನಾಗಿಯೇ ಅನೇಕ
ಪ್ರಯೋಗಗಳಲ್ಲಿ, ಅನೇಕ ಅಭ್ಯಾಸಗಳಲ್ಲಿ,
ನಿರತನಾಗಿದ್ದೇನೆ.
ತಿಳಿಯಿರಿ, ಒಬ್ಬ ಜ್ಞಾನಿಯು ಆಧ್ಯಾತ್ಮಿಕ
ಅಭ್ಯಾಸಗಳನ್ನು ಮಾಡಿದರೆ, ಅದು ಕೇವಲ
ಆತನಿಗಾಗಿ ಆಗಿರುವುದಿಲ್ಲ. ಅವರಲ್ಲುಂಟಾದ ಅದೇ
ಅನುಭವವನ್ನು ಶಿಷ್ಯರಲ್ಲೂ ಪುನರುತ್ಪಾದಿಸಲು
ಸರಿಯಾದ ಸೂತ್ರಗಳನ್ನು ಅವರು ಸೃಷ್ಟಿಸುತ್ತಾರೆ.
11. ಮಾನವ ಸ್ಥಿತಿಯನ್ನು ಮೀರಿಹೋಗುವುದು
ಒಬ್ಬರು ನನ್ನನ್ನು ಕೇಳಿದರು, 'ಜೀವನ್ಮುಕ್ತಿಯು
ಸಹಜವಾದ ಮಾನವ ಸ್ಥಿತಿಯೋ ಅಥವಾ ಮಾನವ
ಸ್ಥಿತಿಯನ್ನು ಮೀರಿರುವಂತಹದೋ?' ಎಂದು.
ಖಂಡಿತವಾಗಿಯೂ ಜೀವನ್ಮುಕ್ತಿಯು ಮಾನವ
ಪ್ರಜ್ಞೆಯನ್ನು ಮೀರಿಹೋಗುವುದಾಗಿದೆ. ಮಾನವ
ಪ್ರಜ್ಞೆಯೆಂದು ಏನನ್ನು ತಿಳಿದಿರುವಿರೋ, ಅದು
ಸಂಪೂರ್ಣವಾದುದಲ್ಲ. ನೀವು ಕೇವಲ ಒಂದು
ಬೀಜ, ಒಂದು ಸಾಮರ್ಥ್ಯ, ಒಂದು ಸಾಧ್ಯತೆ. ನೀವು
ಒಂದು ಮರವಲ್ಲ. ನೀವು ವಾಸ್ತವತೆಯಲ್ಲ. ನಿಮ್ಮ
ವಾಸ್ತವತೆಯು ಜೀವನ್ಮುಕ್ತಿ.
ನಿಮ್ಮಲ್ಲಿ ಅಡಗಿರುವ ಸಾಮರ್ಥ್ಯದ ಸ್ಥಿತಿಯಲ್ಲಿ ನಿಮ್ಮನ್ನು ಒಬ್ಬ ಮನುಷ್ಯನೆಂದು ಕರೆಯುತ್ತಾರೆ. ನಿಮ್ಮ ನಿಜಸ್ಥಿತಿಯಲ್ಲಿ, ಜೀವನ್ಮುಕ್ತ ಸ್ಥಿತಿಯಲ್ಲಿ, ನಿಮ್ಮನ್ನು ಒಬ್ಬ ಜ್ಞಾನಿಯೆಂದು ಕರೆಯುತ್ತಾರೆ. ಸ್ಪಷ್ಟವಾಗಿ ತಿಳಿಯಿರಿ, ನೀವು ಆಧ್ಯಾತ್ಮಿಕ ಅನುಭವವಿರುವ ಒಬ್ಬ ಮನುಷ್ಯರಲ್ಲ, ನೀವು ಮನುಷ್ಯನ ಅನುಭವದಲ್ಲಿರುವ ಒಬ್ಬ ಆಧ್ಯಾತ್ಮಿಕ ಜೀವಿ!
12. ಯೌಗಿಕ ಶಕ್ತಿಗಳಾಚೆ
ನೀವು ಧ್ಯಾನ ಮಾಡಿದಾಗ ನಿಮಗೆ ವಿವಿಧ
ಯೋಗ ಶಕ್ತಿಗಳು ಅಥವಾ ಸಿದ್ಧಿಗಳು ಲಭಿಸಬಲ್ಲವು.
ಆದರೆ ಜೀವನ್ಮುಕ್ತಿಯು ಉಂಟಾಗುವುದು ಆ
ಶಕ್ತಿಗಳನ್ನೂ ಮೀರಿ ಹೋದಾಗ. ಶಕ್ತಿಗಳನ್ನು
ನಿಭಾಯಿಸುವ ಸಾಮರ್ಥ್ಯ ಹಾಗೂ ಅಗತ್ಯವಾದಾಗ
ಅವುಗಳನ್ನು ಬಿಟ್ಟುಬಿಡುವ ಬುದ್ಧಿವಂತಿಕೆಯೇ
ಜೀವನ್ಮುಕ್ತಿ.
ಇತ್ತೀಚೆಗೆ ಒಂದು ದಿನ 'ಆಕಲ್ಟ್ ಕೆಮಿಸ್ಟ್ರಿ' ಎಂಬ ಪುಸ್ತಕದ ಬಗ್ಗೆ ಬ್ರಹ್ಮವಿದ್ಯಾವಾದಿಗಳಾದ ಆನಿಬೆಸೆಂಟ್ ಮತ್ತು ಚಾರ್ಲ್ಸ್ ಲೆಡ್ಬೀಟರ್ ಎಂಬುವರು ಅನೇಕ ಪದಾರ್ಥಗಳ ಅಣುಗಳ ರಚನೆಯ ಬಗ್ಗೆ ಮಾಡಿರುವ ಸಂಶೋಧನೆಯ ಆಧಾರಿತವಾದ ಸ್ವಾರಸ್ಯಕರ ಲೇಖನವನ್ನು ಓದುತ್ತಿದ್ದೆ. ಅದರಲ್ಲಿ ಹೇಳಿರುವುದೇನೆಂದರೆ, ಒಂದು ಪರಮಾಣುವಿನಲ್ಲಿ ಬೀಜಕಣವಿರುವುದನ್ನು ಭೌತಶಾಸ್ತ್ರವು ಕಂಡುಹಿಡಿಯುವ ಮೊದಲೇ ಬ್ರಹ್ಮವಿದ್ಯಾವಾದಿಗಳು ಅನೇಕ ಪದಾರ್ಥಗಳ, ಅದರಲ್ಲೂ ಪರಿಮಾಣ ಭೌತಶಾಸ್ತ್ರದಲ್ಲಿ ಇಂದು ಅತ್ಯಂತ ಮೂಲರೂಪದ ಕಣವೆಂದೆನಿಸಿದ 'ಕ್ವಾರ್ಕ್' ಎಂಬ ಕಣದ, ಪರಮಾಣು ರಚನೆಯನ್ನು ನಿರ್ಣಯಿಸಿದ್ದಾರೆ ಎಂದು.
ಅವರು ಇತ್ತೀಚಿನ ಯಾವ ವೈಜ್ಞಾನಿಕ
ಸಲಕರಣೆಗಳೂ ಇಲ್ಲದೆ, ಪರಿಮಾಣ ಭೌತಶಾಸ್ತ್ರವು
ಹುಟ್ಟುವ ಮೊದಲೇ ಇದನ್ನು ಹೇಗೆ
ಕಂಡುಹಿಡಿದಿದ್ದರು? ಯೋಗ ವಿಜ್ಞಾನದ
ಪಿತಾಮಹರೆನಿಸಿಕೊಂಡಿರುವ ಜ್ಞಾನಿಗಳಾದ
ಪತಂಜಲಿಯವರು, ತಮ್ಮ ಯೋಗಸೂತ್ರಗಳಲ್ಲಿ
ವಿವರಿಸಿರುವ 'ಅಣಿಮ' ಎಂಬ ಸಿದ್ಧಿ ಅಥವಾ
ಅತೀಂದ್ರಿಯ ಶಕ್ತಿಯ ಮೂಲಕ ಇದನ್ನು
ಕಂಡುಹಿಡಿಯಲಾಯಿತೆಂದು ವರದಿಯು ತಿಳಿಸುತ್ತದೆ.
ಪತಂಜಲಿಯವರು ಅಣಿಮ ಭೌತಾತೀತ ಶಕ್ತಿಯನ್ನು
ಸಣ್ಣ, ಗುಪ್ತ ಅಥವಾ ದೂರದಲ್ಲಿರುವ ವಸ್ತುವಿನ
ಜ್ಞಾನವನ್ನು ಪಡೆಯುವ ಸಾಮರ್ಥ್ಯವೆಂದು ವಿವರಿಸಿದ್ದಾರೆ.
ಯೋಗಿಕ ತರಬೇತಿಯಿಂದ, ಅವರು ಸಾಧಾರಣ ಕಣ್ಣಿಗೆ ಕಾಣಲಾಗದ ಅತಿಸೂಕ್ಷ್ಮ ವಸ್ತುಗಳ ವೀಕ್ಷಣಾ ರೂಪಗಳನ್ನು ತಿಳಿಯುತ್ತಿದ್ದರು. ಈ ಯೋಗಶಕ್ತಿಗಳಿಂದ ಅವರು ಐದು ಹೊಸ ಮೂಲಧಾತುಗಳನ್ನು ಕಂಡುಹಿಡಿದರು. ಕ್ವಾರ್ಕ್ನ ಆಮೂಲಾಗ್ರವಾದ ರಚನೆಯನ್ನು ಮಾತ್ರವಲ್ಲದೆ ಅದನ್ನೂ ಮೀರಿ ವಿಜ್ಞಾನವು ಇನ್ನೂ ಕಂಡುಹಿಡಿಯಬೇಕಾಗಿರುವ ಸಬ್ಕ್ವಾರ್ಕ್ನ ಬಗ್ಗೆಯೂ ಕಂಡುಹಿಡಿದಿದ್ದಾರೆ. ಇಂತಹ ಅತೀಂದ್ರಿಯ ಸಾಮರ್ಥ್ಯಗಳ ಮೂಲಕ ಪ್ರಪಂಚದ ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ಸಮಯದಲ್ಲಿ, ಕಡೆಯ ಪಕ್ಷ ಮೂರು ಜನರು ಇವುಗಳನ್ನೇ ಪತ್ತೆಹಚ್ಚಿರುತ್ತಾರೆ.
ಎಲ್ಲಾ ವಸ್ತುಗಳೂ ಒಂದು ಅಗೋಚರ ತಂತಿಯ
ಮೇಲೆ ಮುತ್ತುಗಳಂತೆ, ಖಾಲಿ ಪ್ರದೇಶದಲ್ಲಿ
ಗುಳ್ಳೆಗಳಂತೆ, ಇರುತ್ತವೆಯೆಂದು ಅವರು
ನಿರ್ಣಯಿಸಿದರು. ಸಂಶೋಧಕರು
ಉಪಪರಮಾಣುವಿನ ಕಣಗಳನ್ನು ನೋಡಿದರಲ್ಲದೆ
ಸಬ್ಕ್ವಾರ್ಕ್ನವರೆಗೂ ಹೋಗಿ ಪರಮಾಣುವಿನ
ಒಳಗೆ ನೋಡಲು ಸಾಧ್ಯವಾಯಿತು.
ಇದನ್ನು ಮಾಡಲು ವಿಜ್ಞಾನಕ್ಕೆ ಕೋಟ್ಯಾಂತರ
ಡಾಲರುಗಳ ವೆಚ್ಚದ ಒಂದು ಅತಿ ಪ್ರಬಲವಾದ
ಕಣಗಳ ವೇಗವರ್ಧಕ ಬೇಕಾಗುತ್ತದೆ!
ಇಂತಹ ಸಿದ್ಧಿ ಅಥವಾ ಶಕ್ತಿಗಳನ್ನು ಧ್ಯಾನದ
ಪರಿಣಾಮವಾಗಿ ಪಡೆದ ಅನೇಕ ಯೋಗಿಗಳಿದ್ದಾರೆ.
ಈ ಸಿದ್ಧಿಗಳ
ಬಲೆಯೊಳಗೆ ಸಿಕ್ಕಿ
ಬೀಳದಿರುವವರೆಗೂ
ಅವು ಒಳ್ಳೆಯದೇ.
ಇಲ್ಲದಿದ್ದರೆ ನೀವು ಜೀವನ್ಮುಕ್ತಿಯ ಅಂತಿಮ
ಗುರಿಯನ್ನೇ ಕಾಣಲಾರಿರಿ.
ನೀವು ಮನುಷ್ಯನ
ಅನುಭವದಲ್ಲಿರುವ
ಒಬ್ಬ ಆಧ್ಯಾತ್ಮಿಕ
ಜೀವಿ!
13. ಸ್ಪಷ್ಟವಾದ, ನಿರಾತಂಕವಾದ ಶಾಂತಿ
ಜೀವನ್ಮುಕ್ತಿಗೆ ಎಂತಹ ಒಂದು ಪ್ರಬಲವಾದ
ಹಾಗೂ ಸ್ಪಷ್ಟವಾದ ಶಾಂತಿಯ ಗುಣವಿದೆ ಎಂದರೆ
ನಿಮ್ಮೊಳಗಿನ, ನಿಮ್ಮ ಆಲೋಚನೆಗಳೂ ಸಹ
ನಿಮ್ಮನ್ನು ವಿಚಲಿತಗೊಳಿಸಲಾರವು.
ಜ್ಞಾನಿಗಳಿಗೆ ಆಲೋಚನೆಗಳು
ಇರುವುದಿಲ್ಲವೆಂದು ತಿಳಿಯಬೇಡಿ. ಅವರ
ಅಂತರಂಗವು ಎಷ್ಟು ದೊಡ್ಡದಾಗಿರುತ್ತದೆಂದರೆ,
ಮನಸ್ಸು ಕೇವಲ ಅದರ ಗಣನೆಗೆ ಬಾರದ ಒಂದು
ಭಾಗವಾಗಿರುತ್ತದೆ. ನಿಮಗೆ ಹತ್ತು ಎಕರೆಯಷ್ಟು
ದೊಡ್ಡ ಮನಸ್ಸಿದ್ದರೆ ಆ ಹತ್ತು ಎಕರೆಗಳೂ ಒಂದು
ಮೃಗಾಲಯದಂತಿರುತ್ತದೆ. ಜ್ಞಾನಿಗಾದರೋ ಅದು
ಒಂದು ದಶಲಕ್ಷ ಎಕರೆಯಷ್ಟಿದ್ದು, ಹತ್ತು
ಎಕರೆಯಷ್ಟರ ಒಂದು ಮೃಗಾಲಯವಿದ್ದಂತೆ.
ದಶಲಕ್ಷ ಎಕರೆಗಳಲ್ಲಿ ಹತ್ತು ಎಕರೆಯಷ್ಟರ ಒಂದು
ಮೃಗಾಲಯವಿದ್ದರೆ ಅದು ಕ್ಷೋಭೆಗೊಳಿಸುವ
ವಿಷಯವೇ? ಅಲ್ಲ! ಅದು ಲಕ್ಷ್ಯಕ್ಕೆ ಬಾರದ್ದು.
ವಾಸ್ತವವಾಗಿ ಅದು ಇಲ್ಲದಂತೆಯೇ. ಆದ್ದರಿಂದಲೇ
ಒಬ್ಬ ಸಾಮಾನ್ಯ ಮನುಷ್ಯನು ‘ನಾನು
ದೇಹ' ಎಂದು ಭಾವಿಸಿದರೆ, ಒಬ್ಬ ಜ್ಞಾನಿಯು ‘ನಾನು ದೇಹವೂ ಸಹ’ ಎಂದು ಭಾವಿಸುತ್ತಾನೆ.
ಆತನಿಗೆ ‘ನಾನು ದೇಹ’ವೆಂಬ ಕಲ್ಪನೆ ಮಾಯವಾಗುತ್ತದೆ ಎಂದಲ್ಲ. ಅದು ಕೇವಲ ವಿಸ್ತಾರವಾಗುತ್ತದೆ – ‘ನಾನು ದೇಹವೂ ಆಗಿದ್ದೇನೆ’ ಎಂದು.
14. ಆನಂದದಿಂದಾಚೆಗೆ
‘ಯಾವಾಗಲೂ ತೀವ್ರತೆಯಲ್ಲಿರುವುದು’ ಒಬ್ಬ
ಜ್ಞಾನಿಯ ಮುಖ್ಯವಾದ ಗುರುತು. ಅದನ್ನು
ನೋಡಿದಾಗ ಅದನ್ನು ‘ಆನಂದ’ ಅಥವಾ
‘ಸಂತೋಷ’ವೆಂದು ನೀವು ತಿಳಿಯುತ್ತೀರಿ. ನಿಮಗೆ
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನೊಂದು
ಪ್ರತ್ಯೇಕ ಆನಂದ ಜೀವಿ ಎಂದು ನನಗನಿಸುವುದಿಲ್ಲ.
ನನಗೆ ತಿಳಿದಿರುವುದೆಲ್ಲವೂ ಏನೆಂದರೆ, ಯಾವುದೋ
ಅಸಾಧಾರಣವಾದುದು ನನ್ನಲ್ಲಿ ಸದಾ ಅತಿ ತೀವ್ರವಾಗಿ
ಉಂಟಾಗುತ್ತಿದೆ ಎಂದು. ಹೊರಗಿನವರು ಅದನ್ನು
‘ಆನಂದ’ವೆಂದು ಭಾವಿಸುತ್ತಾರೆ. ವಾಸ್ತವವಾಗಿ,
ಅದು ಆನಂದವೂ ಅಲ್ಲ. ಅದು ವಿವರಿಸಲಾಗದಂತಹ
ಗುಣ. ಅದು ಮನಸ್ಸಿಗೆ ಗ್ರಾಹ್ಯವಲ್ಲದುದು.
15. ಅನುಭವ, ಅನುಭಾವಿ ಹಾಗೂ ಅನುಭಾವ್ಯಗಳ ಏಕೀಭಾವ
ಈಗಲಾದರೂ ನೀವು ಮೂರು ಪ್ರತ್ಯೇಕ
ವಸ್ತುಗಳನ್ನು ಕಾಣುತ್ತೀರಿ: ಅನುಭವ, ಅನುಭಾವಿ
ಎಂದರೆ ಅನುಭವಿಸುವವನು ಹಾಗೂ ಅನುಭಾವ್ಯ
ಎಂದರೆ ಅನುಭವಿಸಿದುದು. ಉದಾಹರಣೆಗೆ, ನೀವು
ಈಗ ಈ ಪುಸ್ತಕವನ್ನು ಓದುತ್ತಿದ್ದೀರಿ. ಅನುಭಾವಿ
ಎಂದರೆ ಓದುತ್ತಿರುವವರು. ನೀವು ಓದುತ್ತಿರುವುದು
ಅನುಭವ ಹಾಗೂ ಅನುಭಾವ್ಯವಾದುದ್ದು ಈ ಪುಸ್ತಕ.
ಜೀವನ್ಮುಕ್ತಿಯನ್ನು ಪಡೆದಾಗ ಅನುಭವ, ಅನುಭಾವಿ,
ಅನುಭಾವ್ಯ ಮೂರೂ ಒಂದಾಗುತ್ತದೆ. ನಿಮ್ಮ
ಅನುಭವವೂ, ಅನುಭಾವಿಯೂ, ಅನುಭಾವ್ಯವೂ
ಮೂರೂ ನೀವೇ ಆಗುತ್ತೀರಿ.
ಜೀವನ್ಮುಕ್ತಿ
1. ದೇಹದ ಚೌಕಟ್ಟಿನೊಳಗೆ ವಿಶ್ವದ ಅವ್ಯವಸ್ಥೆಯನ್ನು ಆನಂದಿಸುವುದು
ಈಗ ನೀವು ವಿಶ್ವದ ಅವ್ಯವಸ್ಥೆಯನ್ನು ನಿಮ್ಮ ದೇಹದ ಚೌಕಟ್ಟಿನೊಳಗೆ ಹಿಡಿದುಕೊಳ್ಳುವಷ್ಟು ಪಕ್ವರಾಗಿಲ್ಲ. ವಿಶ್ವದ ಅವ್ಯವಸ್ಥೆಯನ್ನು ಅದಿರುವಂತೆಯೇ ನಿಮ್ಮಿಂದ ನಿಭಾಯಿಸಲಾಗುವುದಿಲ್ಲವಾದ್ದರಿಂದ ಅವ್ಯವಸ್ಥೆಯನ್ನು ಸರಿಪಡಿಸಬೇಕಾಗುತ್ತದೆ. ವಿಶ್ವವು ಇರುವಂತೆಯೇ ಅದನ್ನು ಗ್ರಹಿಸಿಕೊಳ್ಳಲು, ಆನಂದದಿಂದ ಅನುಭವಿಸಲು, ನಿಮ್ಮ ಆರು ಅಡಿ ದೇಹವು ಪಕ್ವವಾಗಿಲ್ಲ.
ದೇಹ, ಮನಸ್ಸು ಹಾಗೂ ಮೆದುಳು
ಜಾಗೃತಗೊಂಡು, ವಿಶ್ವವನ್ನು ಅದು ಇರುವಂತೆಯೇ
ಅನುಭವಿಸಲು ಶ್ರುತಿಗೂಡಿಸುವುದೇ ಜೀವನ್ಮುಕ್ತಿ.
ಇದಾಗಲು, ದೇಹ, ಮನಸ್ಸು ಹಾಗೂ ಮೆದುಳು
ತಯಾರಾಗಬೇಕು. ದೇಹವನ್ನು ನಿತ್ಯಯೋಗದಂತಹ
ತಂತ್ರಗಳಿಂದ ತಯಾರು ಮಾಡಬಹುದು.
ಮನಸ್ಸು ಸಾಫ್ಟ್ವೇರ್ನಂತೆ. ಅದು ಪ್ರಜ್ಞಾಪೂರಿತ ಮನಸ್ಸು ಹಾಗೂ ಪ್ರಜ್ಞಾರಹಿತ ಮನಸ್ಸನ್ನು ಒಳಗೊಂಡಿದೆ. ಪ್ರಜ್ಞಾ ಪೂರ್ವಕವಾದ ಮನಸ್ಸನ್ನು ಬೋಧನೆಗಳಿಂದ, ತಪ್ಪು ಕಲ್ಪನೆಗಳನ್ನು ನಿವಾರಿಸುವುದರಿಂದ, ಸ್ಪಷ್ಟವಾದ, ಸರಿಯಾದ ಅಭಿಪ್ರಾಯಗಳನ್ನು ಮಾಡಿಕೊಳ್ಳುವುದರಿಂದ ಸ್ವಚ್ಛಗೊಳಿಸಬಹುದು. ಪ್ರಜ್ಞಾರಹಿತವಾದ ಮನಸ್ಸನ್ನು ಧ್ಯಾನತಂತ್ರಗಳಿಂದ ಶುದ್ಧಗೊಳಿಸಬಹುದು.
ಆದರೆ ಅಂತಿಮವಾಗಿ ಸಾಫ್ಟ್ವೇರ್ ಶಾಶ್ವತವಾಗಿರಲು, ಹಾರ್ಡ್ವೇರ್ ಸಹ ಬದಲಾಗಬೇಕು. ಜೀವನ್ಮುಕ್ತಿಯನ್ನು ಪ್ರಸರಿಸಿ, ಜ್ಞಾನೋದಯದ ಅನುಭವವನ್ನು ಹಿಡಿದಿಟ್ಟುಕೊಳ್ಳಲು ನಿಮ್ಮ ಮೆದುಳಿನ ಕೊರೆತೆಗಳನ್ನೇ ಬದಲಾಯಿಸಬೇಕು. ಇದು ಸಾಧ್ಯವಾಗುವುದು ಗುರುಗಳ ಸ್ಪರ್ಶದೀಕ್ಷೆಯಿಂದ. ದೀಕ್ಷೆಯೆಂದರೆ ಚೈತನ್ಯದ ನೇರಪ್ರಸಾರ. ನಂತರ ನಿಮ್ಮಲ್ಲಿನ ಬೇರೆ ಬೇರೆಯ ಆಯಾಮಗಳು ಜಾಗೃತವಾಗಲಾರಂಭಿಸುತ್ತವೆ.
2. ಘರ್ಷಣಾರಹಿತ ಜೀವನವನ್ನು ಬಾಳುವುದು
ಜೀವನ್ಮುಕ್ತಿಯು ವಿವಾಹಿತ ಜೀವನಕ್ಕಾಗಲೀ,
ಬ್ರಹ್ಮಚರ್ಯ ಜೀವನಕ್ಕಾಗಲೀ ಸಂಬಂಧಿಸಿದ್ದಲ್ಲ.
ಅದು ನಿಮ್ಮ ಕ್ರಿಯೆಗಳು ಹಾಗೂ ತಿಳಿವಳಿಕೆಗಳನ್ನು
ಆಸೆಯೊಂದಿಗೆ ಶ್ರುತಿಗೂಡಿಸಿ ಒಂದು ಘರ್ಷಣಾರಹಿತ
ಜೀವನವನ್ನು ನಡೆಸುವುದೇ ಆಗಿದೆ.
3. ಕಡಿಮೆಯಾದ ಆಲೋಚನೆಗಳು
ಯಾವುದರ ಅತಿರೇಕಗಳೂ ಇಲ್ಲದಂತೆ,
ಭಾವನೆಗಳ ಅತಿರೇಕಗಳಲ್ಲಿ ಹಿಡಿಯಲ್ಪಡದೆ
ಇರುವುದನ್ನೇ ಮಧ್ಯ ಪಥವೆಂದು ಕರೆಯುತ್ತಾರೆ.
ಮಧ್ಯ ಪಂಥ ಅಥವಾ ಮಧ್ಯಪಥದಲ್ಲಿದ್ದಾಗ
ಯಾವುದೇ ಕ್ರಿಯೆಯು ಪ್ರಾರಂಭವಾಗುವ ಮೊದಲು
ನಿಮ್ಮ ಆಲೋಚನೆಗಳ ಸಂಖ್ಯೆಯು ಇದ್ದಕ್ಕಿದಂತೆ
ಕಡಿಮೆಯಾಗುವುದನ್ನು ಕಾಣುತ್ತೀರಿ. ಈ ಕಾಲವನ್ನೇ
'ಜೀವನ್ಮುಕ್ತಿ' ಎನ್ನುವುದು. ಆಲೋಚನೆಗಳು
ಸಂಪೂರ್ಣವಾಗಿ ಬಿಟ್ಟುಹೋದಾಗ ಮತ್ತು ನಿಮ್ಮೆಲ್ಲಾ
ಕ್ರಿಯೆಗಳನ್ನೂ ಆಲೋಚನೆಗಳಿಲ್ಲದೆ ಮಾಡಲು
ಸಾಧ್ಯವಾದಾಗ, ಜೀವನ್ಮುಕ್ತಿಯು ಲಭಿಸುತ್ತದೆ.
4. ಯಾಂತ್ರಿಕವಲ್ಲದ ಮೆದುಳಿನ ಭಾಗಗಳ ಜಾಗೃತಿ
ನೀವು ಸಕಾರಾತ್ಮಕ ಶಕ್ತಿಯಾದ ಸತ್ತ್ವದಲ್ಲಿ
ಕೇಂದ್ರೀಕೃತರಾದಾಗ, ನಿಮಗೆ ಜೀವದ ಬಗ್ಗೆ ಒಂದು
ಸ್ಪಷ್ಟವಾದ ತಿಳಿವಳಿಕೆ ಉಂಟಾಗುತ್ತದೆ. ನಿಮಗೆ
ಜಗತ್ ಅಥವಾ ಪ್ರಪಂಚದೊಂದಿಗೆ ಸಂಬಂಧಿಸಲು
ಸ್ಪಷ್ಟವಾದ ತಿಳಿವಳಿಕೆ ಇರುತ್ತದೆ. ಜೀವ ಹಾಗೂ
ಜಗತ್ತಿನ ಬಗ್ಗೆ ಸ್ಪಷ್ಟತೆ ಇರುವ ಕಾರಣ,
ಸಹಜವಾಗಿಯೇ ನೀವು ಅವುಗಳ ಮೂಲವಾದ
ಈಶ್ವರ ಅಥವಾ ದೈವದೊಂದಿಗೆ ಸಂಪರ್ಕವನ್ನು
ಹೊಂದುತ್ತೀರಿ.
ಈ ತಿಳಿವಳಿಕೆಯೇ ನಿಮಗೆ ಸ್ಪಷ್ಟತೆಯನ್ನು ನೀಡುತ್ತದೆ. ಆಸ್ಪಷ್ಟತೆಯು ಸಹಜವಾಗಿಯೇ ನಿಮ್ಮ ಮೆದುಳಿನ ಯಾಂತ್ರಿಕವಲ್ಲದ ಭಾಗಗಳನ್ನು ಜಾಗೃತಗೊಳಿಸುತ್ತದೆ. ಆ ಜಾಗೃತಿ ಉಂಟಾದಾಗ, ನಿಮ್ಮ ನಿಯತಕ್ರಮದಲ್ಲಿ ಒಂದು ಅವ್ಯವಸ್ಥೆ ಉಂಟಾಗುತ್ತದೆ. ನಿಮ್ಮ ನಿಯತಕ್ರಮವು ತಾನಾಗಿಯೇ ಪುನರ್ವ್ಯವಸ್ಥೆಗೊಳ್ಳುತ್ತದೆ. ಅದರೊಂದಿಗೆ ಸುಮ್ಮನೆ ಸಹಕರಿಸಿ. ಇದನ್ನೇ ನಾನು ಜೀವನ್ಮುಕ್ತಿ ಎನ್ನುವುದು. ನಿಮ್ಮಲ್ಲಿ ಉಂಟಾಗುವ ಜಾಗೃತಿಯೊಂದಿಗೆ ಸಹಕರಿಸುವುದನ್ನೇ ನಾನು ಶಿಷ್ಯತ್ವ ಅಥವಾ ಜೀವನ್ಮುಕ್ತಿ ಎನ್ನುತ್ತೇನೆ.
5. ಪರಮ ಸತ್ಯಗಳನ್ನು ಬಾಳುವುದು
'ಜೀವನ್ಮುಕ್ತಿ' ಎಂಬುದು ಸರಿಯಾದ ಪದ.
ಪರಮ ಸತ್ಯಗಳನ್ನು ಬಾಳಿದಾಗ
ಜೀವನ್ಮುಕ್ತಿಯಾದಂತೆ, ಅಷ್ಟೇ.
ನೀವು ಸತ್ಯಗಳನ್ನು ಬಾಳಬೇಕು. ನಿಮ್ಮ ಜೀವನದಲ್ಲಿ ಪರಮ ಸತ್ಯಗಳನ್ನು ಬಾಳುವುದೇ 'ಜೀವನ್ಮುಕ್ತಿ'. ಜೀವನ್ಮುಕ್ತಿ ಎಂದರೆ ನೀವು ನಿಮ್ಮ ದೇಹವನ್ನು ಬಿಟ್ಟು ಸಾಯುತ್ತೀರೆಂದು ಅರ್ಥವಲ್ಲ. ಇಲ್ಲ! ನೀವು ಪಂಚೇಂದ್ರಿಯದೊಂದಿಗೆ ಇದ್ದರೂ, ಅವುಗಳನ್ನು ಮೀರಿದ ಒಂದು ಕೇಂದ್ರದಲ್ಲಿರುತ್ತೀರಿ. ನಿಮ್ಮ ಕೇಂದ್ರವು ಮಾತ್ರ ಬದಲಾಗುತ್ತದೆ. ನಿಮ್ಮೊಳಗೆ ಅರಿವಿನ ಸ್ಥಿತ್ಯಂತರವಾಗುತ್ತದೆ. ಇದನ್ನೇ ನಾನು ಜೀವನ್ಮುಕ್ತಿ ಎನ್ನುವುದು.
ಅಹಂಕಾರ ಹಾಗೂ ಜೀವನ್ಮುಕ್ತಿ
ನಿಮ್ಮ ಅಹಂಕಾರವು ನಿಮ್ಮ ಜೀವನ್ಮುಕ್ತಿಯನ್ನು ಕಿತ್ತುಕೊಳ್ಳುವಷ್ಟು ಪ್ರಬಲವಾದದ್ದಲ್ಲ!
ನಿಮಗೆ ಒಂದು ಅಹಂಕಾರವಿದೆಯೆಂದು
ಆಲೋಚಿಸುವುದನ್ನು ಬಿಡಬೇಕು. ನಿಮ್ಮ
ಅಹಂಕಾರವೂ ಸಹ ನೀವು ತಿಳಿದಷ್ಟು ದೊಡ್ಡದೇನೂ
ಅಲ್ಲ! ಆದ್ದರಿಂದ ನಿಮ್ಮ ಅಹಂಕಾರಕ್ಕೆ ನಿಮ್ಮ
ಜೀವನ್ಮುಕ್ತಿಯನ್ನು ಕಿತ್ತುಕೊಳ್ಳಲಾಗುವುದಿಲ್ಲ.
ನೀವು ನಂಬಿದರೂ ನಂಬದಿದ್ದರೂ,
ಅನುಭವಿಸಿದರೂ ಅನುಭವಿಸದಿದ್ದರೂ, ನೀವು
ಶಾಶ್ವತ ಪ್ರಜ್ಞೆಯೇ.
ನಿಮ್ಮ ತರ್ಕವು ನೀವು ತಿಳಿದಷ್ಟು
ಬಲವಾದದ್ದಲ್ಲ. ನಿಮ್ಮ ಅಜ್ಞಾನವು ನಿಮ್ಮಿಂದ
ಜೀವನ್ಮುಕ್ತಿಯನ್ನು ಕಿತ್ತುಕೊಳ್ಳುವಷ್ಟು
ಪ್ರಬಲವಾದದ್ದಲ್ಲವೆಂದು ನಾನು ಯಾವಾಗಲೂ
ಜನರಿಗೆ ಹೇಳುತ್ತೇನೆ. ನಿಮ್ಮ ಅಜ್ಞಾನ ಅಥವಾ
ಅಹಂಕಾರದಲ್ಲಿಯೂ, ನೀವು ಅಷ್ಟು ದೊಡ್ಡ
ವ್ಯಕ್ತಿಯಲ್ಲ, ಅದೇ ಸತ್ಯ!
ಕೃಪೆ ಹಾಗೂ ಅನುಗ್ರಹಕ್ಕಾಗಿ ಬೇಕಾದುದು - ಆಳವಾದ ಬಯಕೆ, ಅರ್ಹತೆಗಳಲ್ಲ.
‘ಗುರುಗಳು ಬಯಸಿದರೆ, ಶಿಷ್ಯನು
ಅರ್ಹನಾಗಿದ್ದರೂ, ಆಗದಿದ್ದರೂ, ಅವರು ಆತನಿಗೆ
ಜೀವನ್ಮುಕ್ತಿಯನ್ನು ನೀಡಬಲ್ಲರೆ?’ ಎಂದು ಜನರು
ನನ್ನನ್ನು ಕೇಳುತ್ತಾರೆ.
ಯಾರಿಗಾದರೂ ಜೀವನ್ಮುಕ್ತಿಯನ್ನು ನೀಡಲು
ಒಬ್ಬ ಜ್ಞಾನಿಗೆ ಬರಿಯ ಒಂದು ಸ್ಪರ್ಶವೇ ಸಾಕು -
ಸ್ಪರ್ಶವೂ ಅಲ್ಲ, ಬರಿಯ ಒಂದು ಆಲೋಚನೆಯೇ
ಸಾಕು, ಬೇರೇನೂ ಬೇಕಿಲ್ಲ. ಅವರು ಯಾರನ್ನು
ಬೇಕಾದರೂ ಬಿಡುಗಡೆ ಮಾಡಬಲ್ಲರು.
ಭೂಗ್ರಹದ ಮೇಲಿನ ಅತಿ ಮಹತ್ತರವಾದ
ವಿಷಯವೆಂದರೆ ಒಬ್ಬ ಅಜ್ಞಾನಿಯು ಜ್ಞಾನಿಯೊಡನೆ
ಕುಳಿತು ಜೀವನ್ಮುಕ್ತಿಯನ್ನು ಪಡೆಯುವುದು.
ಗುರುಗಳು ಜೀವನ್ಮುಕ್ತಿಯ ಶರೀರವಿಜ್ಞಾನದ
ಸಾಫ್ಟ್ವೇರನ್ನು (ತಂತ್ರಾಂಶವನ್ನು) ಯಾರಿಗೆ
ಬೇಕಾದರೂ ಸುಮ್ಮನೆ ಡೌನ್ಲೋಡ್
ಮಾಡಬಹುದು (ಒಮ್ಮೆಲೆ ಒಳಹಾಕಬಹುದು).
ನೀವು ಸಂಪೂರ್ಣವಾಗಿ ತೆರೆದ ಮನಸ್ಕರಾದಾಗ,
ನಿಮ್ಮ ವ್ಯವಸ್ಥೆಯೊಳಗೆ ಜೀವನ್ಮುಕ್ತಿಯ ಶರೀರ
ವಿಜ್ಞಾನವನ್ನು ಡೌನ್-ಲೋಡ್ ಮಾಡಬಹುದು.
ಈಗಿರುವುದಕ್ಕಿಂತಲೂ
ಉತ್ತಮಗೊಳ್ಳಬಹುದೆಂದು
ನಿಮ್ಮ ದೇಹವು
ತಿಳಿಯುತ್ತದೆ. ನಿಮ್ಮ
ಸ್ನಾಯುಗಳಲ್ಲಿರುವ
ನೆನಪು(ಬಯೊಮೆಮೊರಿ)
ಉತ್ತಮವಾಗಿ ಜೀವಿಸುವ
ಸಾಧ್ಯತೆಯ ಪಾಠವನ್ನು
ಕಲಿಯುತ್ತದೆ.
ನಿಮ್ಮಲ್ಲಿ
ಉಂಟಾಗುವ
ಜಾಗೃತಿಯೊಂದಿಗೆ
ಸಹಕರಿಸುವುದನ್ನು
ನಾನು ಶಿಷ್ಯತ್ವ
ಅಥವಾ
ಜೀವನ್ಮುಕ್ತಿ
ಎನ್ನುತ್ತೇನೆ.
ಜ್ಞಾನಿಯಾದ ಬುದ್ಧನ ಜೀವನದಿಂದ ಆಯ್ದ ಒಂದು ಸಣ್ಣ ಕಥೆ:
ಒಮ್ಮೆ ಬುದ್ಧನನ್ನು, ‘ನೀವೇಕೆ ಎಲ್ಲರಿಗೂ ಜೀವನ್ಮುಕ್ತಿಯನ್ನು ನೀಡಬಾರದು?’ ಎಂದು ಕೇಳಲಾಯಿತು. ಆತನು, ‘ಈ ಹಳ್ಳಿಯಲ್ಲಿ ಜೀವನ್ಮುಕ್ತಿಯು ಯಾರಿಗೆ ಬೇಕಾಗಿದೆ ಎಂದು ದಯವಿಟ್ಟು ಕೇಳಿರಿ, ಅವರನ್ನು ನನ್ನ ಬಳಿ ಕರೆತನ್ನಿರಿ. ನಾನು ಅವರಿಗೆ ಜೀವನ್ಮುಕ್ತಿಯನ್ನು ನೀಡುತ್ತೇನೆ’ ಎಂದು ಹೇಳಿದನು.
ಆ ವ್ಯಕ್ತಿಯು, ಆ ಹಳ್ಳಿಯಲ್ಲೆಲ್ಲಾ ತಿರುಗಿ,
ಜೀವನ್ಮುಕ್ತಿಯು ಯಾರಿಗೆ ಬೇಕೆಂದು
ಕೇಳತೊಡಗಿದನು. ಆತನು ಸಂಜೆಯ ವೇಳೆಗೆ
ಬುದ್ಧನ ಬಳಿಗೆ ಸೋಲು ಮೊಗದಿಂದ ಹಿಂದಿರುಗಿ
ಬಂದನು. ಬುದ್ಧನು, ‘ಏನಾಯಿತು? ಜೀವನ್ಮುಕ್ತಿಯು
ಯಾರಿಗೂ ಬೇಡವಾಗಿದೆಯೇ?’ ಎಂದು ಕೇಳಿದನು.
ಆ ವ್ಯಕ್ತಿಯು ಸ್ವಲ್ಪ ಹುಮ್ಮಸ್ಸಿನಿಂದ, ‘ಇಲ್ಲ, ಇಲ್ಲ ಜೀವನ್ಮುಕ್ತಿಯು ಇಬ್ಬರಿಗೆ ಬೇಕಾಗಿದೆ’ ಎಂದು ಹೇಳಿದನು. ಬುದ್ಧನು, ‘ಸರಿ ಅವರನ್ನು ಇದೀಗಲೇ ನನ್ನ ಬಳಿ ಕರೆತನ್ನಿರಿ, ನಾನು ಅವರಿಗೆ
> ನಿಮ್ಮನ್ನೇ
> ವಿಶ್ವಶಕ್ತಿಗೆ
> ಅರ್ಪಿಸಿ-
> ಕೊಳ್ಳುವುದರಿಂದ
> ಜೀವನ್ಮುಕ್ತಿ
> ಪ್ರಾಪ್ತವಾಗುತ್ತದೆ.
ಜೀವನ್ಮುಕ್ತಿಯನ್ನು
ನೀಡುತ್ತೇನೆ' ಎಂದು
ಹೇಳಿದನು.
ಆ ವ್ಯಕ್ತಿಯು, 'ಇಲ್ಲ,
ಇಲ್ಲಿಗೆ ಬರಲು ಅವರಿಗೆ
ಇಷ್ಟವಿಲ್ಲ. ಅವರಿರು-
ವಲ್ಲಿಗೇ ಅದನ್ನು ಕಳುಹಿಸಿದರೆ, ಅವರು ಅದನ್ನು
ತೆಗೆದುಕೊಳ್ಳುತ್ತಾರೆ' ಎಂದು ಮೇಲುದನಿಯಲ್ಲಿ
ಹೇಳಿದನು!
ನಿಜವಾದ ಅರ್ಥದಲ್ಲಿ ಜೀವನ್ಮುಕ್ತಿಯು ಯಾರಿಗೂ ಬೇಕಾಗಿರುವುದಿಲ್ಲ! ಅದು ಕೇವಲ ಬಳಕೆಗೇಂದೋ ಅಥವಾ ಅವರ ಪ್ರದರ್ಶನದ ಕಪಾಟಿನಲ್ಲಿಡಲೆಂದೋ ಬೇಕಾಗಿರುತ್ತದೆ! ತಿಳಿಯಿರಿ, ಭಗವಂತನು ನಿಮಗೆ ಬಂಧನದಲ್ಲಿರುವ ಸ್ವಾತಂತ್ರ್ಯವನ್ನೂ ಕೊಡುತ್ತಾನೆ. ಜೀವನ್ಮುಕ್ತಿಯನ್ನು ನಿಮ್ಮ ಮೇಲೆ ಬಲಾತ್ಕರಿಸಲಾಗುವುದಿಲ್ಲ. ಬಲಾತ್ಕರಿಸಿದರೆ ಸ್ವತಂತ್ರವೂ ಬಂಧನವಾಗುತ್ತದೆ.
ಇಲ್ಲಿ ಎರಡು ವಿಷಯಗಳಿವೆ: ಅರ್ಹತೆ ಹಾಗೂ ಅಪೇಕ್ಷೆ.
ಜೀವನ್ಮುಕ್ತಿಗೆ ಯಾವ ಅರ್ಹತೆಯೂ ಬೇಕಾಗಿಲ್ಲ.
ಆದರೆ 'ನನಗೆ ಬೇಕು' ಎಂಬ ಆಳವಾದ ಅಪೇಕ್ಷೆ
ಇರಬೇಕು.
ದಯವಿಟ್ಟು ಸ್ಪಷ್ಟವಾಗಿ ತಿಳಿಯಿರಿ, ನಿಮಗಿರುವ ಎಲ್ಲಾ ಸಮಸ್ಯೆಗಳೂ ನನಗೂ ಇದ್ದವು - ವಿಶ್ವಶಕ್ತಿಯನ್ನು ನಂಬಲಾಗಾದಿರುವಿಕೆ ಅಥವಾ ನನ್ನನ್ನೇ ನಂಬಲಾಗಾದಿರುವಿಕೆ ಇವೆಲ್ಲವೂ ನನಗೂ ಇದ್ದವು. ನಾನು ಹೇಳುವುದೆಲ್ಲವೂ ಏನೆಂದರೆ ಜೀವನ್ಮುಕ್ತಿಗೆ ಯಾವ ಅರ್ಹತೆಯೂ ಬೇಕಾಗಿಲ್ಲ ಎಂದು. ಜೀವನ್ಮುಕ್ತಿಯನ್ನು ಹೊಂದಲು ಬಯಸುವವರು ಯಾವ ಅರ್ಹತೆಯನ್ನೂ ಪಡೆದಿರುವ ಅಗತ್ಯವಿಲ್ಲ.
ನಿಮ್ಮನ್ನೇ ವಿಶ್ವಶಕ್ತಿಗೆ ಅರ್ಪಿಸಿಕೊಳ್ಳುವುದರಿಂದ ಜೀವನ್ಮುಕ್ತಿಯು ದೊರಕುತ್ತದೆ. ನೀವು ಪಡೆಯುವುದಕ್ಕೆ ಹೋಲಿಸಿದರೆ, ನೀವು ಅರ್ಪಿಸುವುದು ಯಾವ ರೀತಿಯಲ್ಲಿಯೂ ಸರಿಸಮವಲ್ಲ. ನಿಮ್ಮ ಜೀವವನ್ನೇ ತೆತ್ತರೂ ಅದರ ಒಂದು ಪ್ರಯತ್ನವಾಗಲೀ, ಬೆಲೆಯಾಗಲೀ ಒಂದು ಲಾಟರಿ ಟಿಕೆಟನ್ನು ಕೊಳ್ಳುವಷ್ಟೂ ಇಲ್ಲ.
ಜೀವನ್ಮುಕ್ತಿಯಾದ ನಂತರ, ಇದೆಲ್ಲವೂ ವಿಶ್ವಶಕ್ತಿಯ ಶುದ್ಧವಾದ ಕೃಪೆ ಹಾಗೂ ಅನುಗ್ರಹವಲ್ಲದೆ ಬೇರೇನಲ್ಲವೆಂದು ತಿಳಿಯುತ್ತೀರಿ. ಪರಿಣಾಮ ಅಥವಾ ಪರಿವರ್ತನೆಯು ಎಷ್ಟು ದೊಡ್ಡದು ಹಾಗೂ ಮಹತ್ತರವಾದುದೆಂದರೆ, ನೀವೇಕೆ ಆಯ್ಕೆಯಾದಿರಿ, ನಿಮ್ಮ ಮೇಲೇಕೆ ಅದು ವೃಷ್ಟಿಯಾಯಿತೆಂಬ ಕಾರಣವನ್ನು ತಿಳಿಯದವರಾಗುತ್ತೀರಿ. ಯಾವ ಅರ್ಹತೆಯ ಅಗತ್ಯವೂ ಇಲ್ಲ, ಆದರೆ ಆಳವಾದ ಅಪೇಕ್ಷೆ, ಅನ್ವೇಷಣೆಯು ಅಗತ್ಯ. ನೆರವೇರಿಕೆಯು ಯಾವಾಗಲೂ ಒಂದು ಕೊಡುಗೆ. ಕೊಡುಗೆಯನ್ನು ಪಡೆಯಲು ಅರ್ಹರಾಗಿರಬೇಕೆಂಬುದೇನಿಲ್ಲ.
ರಾಮಕೃಷ್ಣರು ಹೇಳುತ್ತಿದ್ದರು, 'ನೀವು
ದಾರಿದ್ರ್ಯದಿಂದ ಊಟವಿಲ್ಲದೆ, ಬಟ್ಟೆಯಿಲ್ಲದೆ,
ಸಾಯುತ್ತಿದ್ದೀರೆಂದು ಇಟ್ಟುಕೊಳ್ಳೋಣ. ಹೇಗೋ
ಏನೋ, ಪಕ್ಕದ ಕೋಣೆಯಲ್ಲಿ ಬಹಳ ಸಂಪತ್ತು
ಇದೆಯೆಂದೂ, ನೀವು ಅದನ್ನು ತೆಗೆದುಕೊಂಡರೂ
ಯಾರಿಗೂ ತಿಳಿಯುವುದಿಲ್ಲವೆಂದೂ ನಿಮಗೆ
ತಿಳಿದುಬರುತ್ತದೆ. ಈಗ ನೀವು ಹಾಯಾಗಿ ನಿದ್ರಿಸಲು ಸಾಧ್ಯವೆ? ಬಾಗಿಲನ್ನು ತೆರೆಯಲು ಪ್ರಯತ್ನಿಸುತ್ತೀರಿ. ಇಲ್ಲವೇ ಬಾಗಿಲನ್ನು ಒಡೆಯುತ್ತೀರಿ. ಆ ಸಂಪತ್ತು ನಿಮ್ಮ ಕೈಗೆ ಬರುವವರೆಗೂ ನಿಮಗೆ ನಿದ್ದೆ ಬರುವುದಿಲ್ಲ' ಎಂದು.
ಅದೇ ರೀತಿ, ನೀವು ಆಧ್ಯಾತ್ಮಿಕ
ಬಡತನದಲ್ಲಿದ್ದೀರೆಂದು ಈ ಕೂಡಲೇ ತಿಳಿಯಬೇಕು.
ನಿಮ್ಮೊಳಗೆ ಒಂದು ಕೋಣೆಯಿದೆ ಎಂದೂ ಅದರಲ್ಲಿ
ಅಗಾಧವಾದ ಸಂಪತ್ತಿಗೆ ಬೀಗ ಮುದ್ರೆಗಳಾಗಿವೆ
ಎಂದೂ ತಿಳಿಯಬೇಕು. ಆ ಜ್ಞಾನ, ಆ ಮನೋಭಾವ,
ಆ ತೀವ್ರತೆ, ಆ ಮಾನಃಸ್ಥಿತಿಯು ಒಂದು
ಮೂಲಭೂತವಾದ ಅಗತ್ಯ. ಅದರೊಡನೆ
ಅನ್ವೇಷಣೆಯು ನಿಮ್ಮ ಇಡೀ ಜೀವನವನ್ನು
ಸುಲಭವಾಗಿ ಪರಿವರ್ತಿಸಬಹುದು.
ನಿಮ್ಮ ಅರ್ಪಣಾಭಾವವು ನಿಮ್ಮನ್ನು
ಜೀವನ್ಮುಕ್ತಿಯತ್ತ ಕೊಂಡೊಯ್ಯಲು ಸಾಕಷ್ಟು
ಪ್ರಬಲವಾದುದು.
ವಾಸ್ತವವಾಗಿ, ಜೀವನ್ಮುಕ್ತಿಯು
ಪ್ರಾಯೋಗಿಕವಾಗಿ ಅಡಿಗೆ ಮಾಡಿದಂತೆ. ಕೆಲವನ್ನು
ಸೇರಿಸಬೇಕು, ಕೆಲವನ್ನು ತೆಗೆಯಬೇಕು. ತೀವ್ರವಾದ
ಅನ್ವೇಷಣೆಯನ್ನು ಸೇರಿಸಬೇಕು. ಆಗ ಅಗತ್ಯವಿಲ್ಲದ
ಚಂಚಲತೆ ಇತ್ಯಾದಿಗಳು ತಾವಾಗಿಯೇ ಹೊರಬಂದು,
ಜೀವನ್ಮುಕ್ತಿಯು ಉಂಟಾಗುತ್ತದೆ!
ಪ್ರಜ್ಞಾವಂತ ಸಮಾಜ
ವೇದಗಳ ಕಾಲದಲ್ಲಿ ಇಡೀ ಜೀವನ, ಇಡೀ
ಸಮಾಜವು ಜೀವನ್ಮುಕ್ತಿಯನ್ನು ಅವಲಂಬಿಸಿತ್ತು.
ಶೇಕಡಾ 70ರಷ್ಟು ಜನರು
ಜೀವನ್ಮುಕ್ತಿಯನ್ನು
ಪಡೆದಿದ್ದರು ಹಾಗೂ
ಉಳಿದ ಶೇಕಡಾ 30ರಷ್ಟು
ಜನರು ಜೀವನ್ಮುಕ್ತಿ-
ಯೆಡೆಗೆ ಶ್ರಮಿಸುತ್ತಾ
ಅನ್ವೇಷಿಸುತ್ತಿದ್ದರು.
ನಿಮ್ಮ ಶ್ರದ್ಧೆಯು
ನಿಮ್ಮನ್ನು
ಜೀವನ್ಮುಕ್ತಿಯತ್ತ
ಕೊಂಡೊಯ್ಯಲು
ಸಾಕಷ್ಟು
ಪ್ರಬಲವಾದುದು.
ಕಲೆ, ವಿಜ್ಞಾನ, ಶಿಕ್ಷಣ, ಜೀವನ ಶೈಲಿ, ಜೀವನದ ಪ್ರತಿಯೊಂದು ಕ್ಷೇತ್ರವೂ ಪ್ರತಿಯೊಂದು ಕ್ರಿಯೆಯೂ, ಜೀವನ್ಮುಕ್ತಿಯ ಅಂತಿಮ ಅನುಭವದೆಡೆಗೆ ನಿರ್ದೇಶಿಸಲ್ಪಟ್ಟಿದ್ದವು. ಭರತನಾಟ್ಯದಂತಹ ಶಾಸ್ತ್ರೀಯ ನೃತ್ಯ, ಸಾಂಪ್ರದಾಯಿಕ ಗಾಯನ ಹಾಗೂ ವಾದ್ಯ ಸಂಗೀತ, ಸಾಂಪ್ರದಾಯಿಕ ದೇವಸ್ಥಾನ ಹಾಗೂ ಶಿಲ್ಪಕಲೆಯಂತಹ ವಾಸ್ತುಶಿಲ್ಪ, ಶಾಸ್ತ್ರೀಯ ಚಿತ್ರ ಹಾಗೂ ವರ್ಣಕಲೆಗಳು, ಸಂಸ್ಕೃತದಂತಹ ಭಾಷಾವಿಜ್ಞಾನ, ಜ್ಯೋತಿಶ್ಯ್ಯಾಸ್ತ್ರ ಹಾಗೂ ವಾಸ್ತುಶಾಸ್ತ್ರ, ಅಪೂರ್ವವಾದ ಗುರುಕುಲ ಶಿಕ್ಷಣ ಪದ್ಧತಿ, ಹುಟ್ಟಿನಿಂದ ಆರಂಭಗೊಂಡು ಮದುವೆಯ ಮೂಲಕ ಸಾವಿನವರೆಗಿನ ಸಾಂಪ್ರದಾಯಿಕ ಧರ್ಮಾಚರಣೆಗಳು - ಜೀವನದ ಪ್ರತಿಯೊಂದು ಆಯಾಮವೂ, ಪ್ರತಿಯೊಂದು ಚಟುವಟಿಕೆಯೂ, ಮಹಾ ಜ್ಞಾನಿಗಳ ಒಂದು ಅಭಿವ್ಯಕ್ತತೆಯಾಗಿದ್ದಿತು ಹಾಗೂ ಜೀವನ್ಮುಕ್ತಿಯನ್ನು ಹೊಂದಲು ಒಂದು ಸಾಧನವಾಗಿದ್ದಿತು.
| ಭೂಗ್ರಹದ ಮೇಲೆ ಜ್ಞಾನಿಗಳು ಇರುವವರೆಗೂ ಭೂಗ್ರಹವನ್ನು ನಾಶಪಡಿಸಲಾಗುವುದಿಲ್ಲ! | ಕಾಲದ ಪರೀಕ್ಷೆಯನ್ನು ಮೀರಿದ ಅಂತಿಮವಾದ ಚೈತನ್ಯ |
|---|
ಭೂಗ್ರಹದ ಮೇಲೆ ಜೀವನ್ಮುಕ್ತಿಯ
ಅನುಭವಕ್ಕಿಂತಲೂ ಮಿಗಿಲಾದುದು ಮತ್ತೇನೂ
ಇರಲು ಸಾಧ್ಯವಿಲ್ಲ. ಒಬ್ಬ ಜ್ಞಾನಿಯ ತಳಹದಿ
ಅಥವಾ ಪ್ರೇರಣೆ ಇಲ್ಲದೆ, ಯಾವುದೇ
ಜೀವನ್ಮುಕ್ತಿಯ ಆಧಾರವಿಲ್ಲದೆಯೇ, ಯಾವ
ವೇದಾಂತವೂ, ಯಾವ ಪದ್ಧತಿಯೂ, ಯಾವ
ಸಿದ್ಧಾಂತವೂ, ಯಾವ ಭಾವನಾಶಾಸ್ತ್ರವೂ ಒಂದು
ತಲೆಮಾರಿಗೂ ಮೀರಿ ನಿಲ್ಲಲು, ಉಳಿಯಲು ಅಥವಾ
ಬೆಳೆಯಲು ಆಗುವುದಿಲ್ಲ.
ಪ್ರಾಚೀನ ಭಾರತದಲ್ಲಿ ಕನಿಷ್ಠ ಪಕ್ಷ 3000
ರಾಜರು ಬೇರೆ ಬೇರೆಯ ಕಾಲಗಳಲ್ಲಿ ಆಳುತ್ತಿದ್ದರು.
ಒಬ್ಬ ಜ್ಞಾನಿಯ ಮಾರ್ಗದರ್ಶನವಿಲ್ಲದ ಯಾವ
ರಾಜ ಅಥವಾ ರಾಜ್ಯವೂ ಏಳಿಗೆಯಾಗಲು
ಸಾಧ್ಯವಾಗಿರಲಿಲ್ಲ. ಇಂದಿಗೂ ದಕ್ಷಿಣ ಭಾರತದ
ಹಳ್ಳಿಗಳಿಗೆ ಹೋದರೆ, ಜ್ಞಾನಿಗಳಿಂದ
ಪ್ರತಿಷ್ಠಾಪಿತವಾದ ಬೃಹತ್ತಾದ ಕಲ್ಲಿನ
ದೇವಾಲಯಗಳನ್ನು ಕಾಣುತ್ತೀರಿ. ಆದರೆ ರಾಜರಿಂದ
ತಮಗಾಗಿಯೇ ನಿರ್ಮಿಸಿಕೊಂಡಿದ್ದ ಅರಮನೆಗಳು
ಇಲ್ಲವಾಗಿವೆ.
ತಿಳಿಯಿರಿ, ಜೀವನ್ಮುಕ್ತಿಯ ಚೈತನ್ಯವನ್ನು
ಹಿಡಿದಿಡಲು ದೇವಾಲಯಗಳನ್ನು ನಿರ್ಮಿಸಿದ ಅದೇ
ರಾಜ ಅಥವಾ ಶಿಲ್ಪಿಯೂ, ರಾಜನು ವಾಸಿಸುವ
ಅರಮನೆಗಳನ್ನು ನಿರ್ಮಿಸಿದರು. ರಾಜನು ತನ್ನ
ಅರಮನೆಯನ್ನು ಕಟ್ಟಿಕೊಳ್ಳಲು ಇನ್ನೂ
ಉತ್ಕೃಷ್ಟವಾದ ವಸ್ತುಗಳನ್ನೇ ಬಳಸಿದ್ದನೆಂದೂ
ಊಹಿಸಬಹುದು! ಆದರೆ ಇಂದು ದೇವಾಲಯಗಳು
ಇನ್ನೂ ಉಳಿದಿವೆ. ಆದರೆ ಅರಮನೆಗಳು
ಕಾಲಕ್ರಮೇಣ ಮಾಯವಾಗಿವೆ.
ದಕ್ಷಿಣ ಭಾರತದಲ್ಲಿ, ನಾನು ಹುಟ್ಟಿ ಬೆಳೆದ,
ನನ್ನದೇ ಊರಾದ ತಿರುವಣ್ಣಾಮಲೈಯಲ್ಲಿ
ಸುಮಾರು 25 ಎಕರೆಗಳಷ್ಟು ಕಟ್ಟಡವಿರುವ
ದೇವಾಲಯವೊಂದಿದೆ. ಅದೇ ರಾಜನು ಕಟ್ಟಿದ
ಅರಮನೆಯು ಇಲ್ಲವಾಗಿದೆ. ಅದು ಕೇವಲ ಪಾಳು
ಬಿದ್ದಿದೆ. ಆದರೆ ಆತನು ಕಟ್ಟಿರುವ ದೇವಾಲಯವು
ಇಂದಿಗೂ ಜೀವಂತವಾಗಿರುವುದೇಕೆಂದರೆ, ಅಲ್ಲಿ
ಒಬ್ಬ ಜ್ಞಾನಿಯ ಶಕ್ತಿಯಿದೆ.
ಮಾನವ ಕುಲಕ್ಕೆ ಮಾಡುವ ಅತಿ ದೊಡ್ಡ ಸೇವೆಯೆಂದರೆ ಜೀವನ್ಮುಕ್ತಿಯ ವಿಜ್ಞಾನವನ್ನು ಸಜೀವವಾಗಿಡುವುದು
ನಿಮ್ಮ ಜೀವನದಲ್ಲಿ ನೀವು ಮಾಡಬಹುದಾದ
ಅತಿ ದೊಡ್ಡ ಸೇವೆ ಹಾಗೂ ನಿಮ್ಮ ಜೀವನವನ್ನು
ಉತ್ತಮವಾಗಿ ಉಪಯೋಗಿಸಿಕೊಳ್ಳುವುದೆಂದರೆ
ಭೂಗ್ರಹದ ಮೇಲೆ ಜೀವನ್ಮುಕ್ತಿಯ ವಿಜ್ಞಾನವನ್ನು ಸಜೀವವಾಗಿಡುವುದು. ಇಂದು ನಾವು ಎಷ್ಟೇ ಅಣು ಶಸ್ತ್ರಗಳನ್ನು ಕೂಡಿಹಾಕಿದ್ದರೂ, ಕಾಡು, ಖನಿಜಗಳು ಹಾಗೂ ನೈಸರ್ಗಿಕ ಸಂಪನ್ಮೂಲಗಳು ಕುಗ್ಗಿದರೂ
ಭೂಗ್ರಹವು ಇಂದಿಗೂ ಸಜೀವವಾಗಿದೆ. ಅದು
ಹಾಗಿರುವುದು ಜ್ಞಾನಿಗಳ ಇರುವಿಕೆಯಿಂದ.
ಭೂಗ್ರಹದ ಮೇಲೆ ಜ್ಞಾನಿಗಳು ಇರುವವರೆಗೂ
ಅದನ್ನು ನಾಶಪಡಿಸಲಾಗುವುದೇ ಇಲ್ಲ!
ಜೀವನ್ಮುಕ್ತಿಯನ್ನು ಪಡೆಯಲು ಹತ್ತು ಪ್ರಮುಖ ಕಾರಣಗಳು:
1. ಚಿಂತೆಗಳಿಲ್ಲದೆ ಆನಂದವಾಗಿರಿ! ಖಚಿತವಾದ ಯಶಸ್ಸಿಗೆ ಸಮಯಸ್ಫೂರ್ತಿಯುತ ಸೃಜನಶೀಲತೆಯನ್ನು ವ್ಯಕ್ತಪಡಿಸಿ!
2. ತೀವ್ರವಾಗಿ ಜೀವನವನ್ನು ಸವಿಯಿರಿ! ಜೀವನದ ಪ್ರತಿಕ್ಷಣವನ್ನು ಶುದ್ಧವಾದ ಉತ್ಸಾಹದೊಂದಿಗೆ ಆನಂದಿಸಿರಿ!
3. ಯಾವಾಗಲೂ ಮಂಗಳತ್ವ! ಜೀವನದಲ್ಲಿ ಆಗುವುದೆಲ್ಲಾ ಮಂಗಳತ್ವವೇ ಆಗಿರುತ್ತದೆ!
4. 'ಯಾವಾಗಲೂ-ಸರಿ' ಎಂಬ ಬದ್ಧಾತ್ಮಕ ಯೋಜನೆ! ಸಂಬಂಧಗಳು, ವ್ಯಾಪಾರ ಅಥವಾ ಜೀವನ - ಯಾವಾಗಲೂ ಸರಿಯಾದ ನಿರ್ಧಾರ!
5. ಪ್ರತಿಕ್ಷಣವೂ ಪರಮಾನುಭವ! ಜೀವನದ ಎಲ್ಲಾ ಆಯಾಮಗಳಲ್ಲಿಯೂ ವಿಸ್ತರಿಸಿ, ವಿಸ್ಫೋಟಿಸಿ!
6. ಅಧ್ಯಯನ ಬೇಕಿಲ್ಲ, ಒಮ್ಮೆಲೆ ಗ್ರಹಿಕೆ ಅಷ್ಟೇ! ವಿಜ್ಞಾನ, ಕಲೆ, ಧರ್ಮ, ವ್ಯಾಪಾರ, ಅಡಿಗೆ . . . ಎಲ್ಲವನ್ನೂ ವಿಶ್ವದ ಜ್ಞಾನ ಭಂಡಾರದಿಂದ ಸುಮ್ಮನೆ ಒಮ್ಮೆಲೆ ಗ್ರಹಿಸಿರಿ!
7. ದುರಾಸೆಯಿಲ್ಲ, ಭಯವಿಲ್ಲ! ಕಳೆದುಕೊಳ್ಳುವುದು, ಪಡೆಯುವುದು ಏನೂ ಇಲ್ಲ - ಬೇಕಾದ್ದೆಲ್ಲಾ ಇಲ್ಲೇ, ಈಗಲೇ ಪಡೆಯಿರಿ!
8. ಅನ್ಕ್ಲಚ್ - ಅತಿ ವೇಗವಾದದ್ದು! ಮನಸ್ಸಿನ ಹಿಡಿತದಿಂದ ಎಂದೆಂದಿಗೂ ಬಿಡುಗಡೆ ಹೊಂದಿಂರಿ!
9. ದೇವರೇ ಆಗಿರುವುದು! ನಿಮ್ಮ ವಿಧಿಯ ಒಡೆಯ ನೀವೇ - ನಿಮ್ಮ ನೈಜತೆಯನ್ನು ಸೃಷ್ಟಿಸಿರಿ!
10. ಆಕಾಶ, ಕಾಲ ಮತ್ತು ಮನವನ್ನು ಮೀರಿರುವುದು! ನಿತ್ಯ ಆನಂದದ ಮಡಿಲಿನಲ್ಲಿ ಇರುವುದನ್ನು ಸವಿಯಿರಿ! ನೀವೇ ನಿತ್ಯ ಆನಂದ - ನಿತ್ಯಾನಂದ ಆಗಿರುವಿರಿ!