KAILASA Library/ಜೀವನ್ಮುಕ್ತಿ/ಜೀವನವಿರುವುದು ಜೀವನ್ಮುಕ್ತಿಗಾಗಿSign in
ಜೀವನ್ಮುಕ್ತಿ

ಜೀವನವಿರುವುದು ಜೀವನ್ಮುಕ್ತಿಗಾಗಿ

This text was machine-transcribed from the printed book and may contain errors. Select the words and choose “Report a mistake”.

ಜೀವನದ ಗುರಿಯೇ ಜೀವನ್ಮುಕ್ತಿ. ನಿಮಗೆ ಬೇರೆ
ಗುರಿಗಳೂ ಇರಬಹುದು. ಆದರೆ, ಅವೆಲ್ಲವೂ
ತಿಳಿದೋ ತಿಳಿಯದೆಯೋ ಜೀವನ್ಮುಕ್ತಿಯ ಗುರಿಗೆ
ನಾವು ಕೊಡುವ ಬೇರೆ ಬೇರೆ ಹೆಸರುಗಳಷ್ಟೆ. ಅದೇ
ರೀತಿಯಲ್ಲಿ, ನೀವೇನೇ ಹುಡುಕಿದರೂ ನೀವು
ಹುಡುಕುವುದು ಸನ್ಯಾಸವನ್ನೇ. ಆದರೆ ನಿಮಗದು
ಗೊತ್ತಿಲ್ಲ, ಅದೇ ಸಮಸ್ಯೆ!

ಇನ್ನೂ ಹೆಚ್ಚು ಹಣಗಳಿಸುವುದು, ಹೆಚ್ಚು
ಸಂಬಂಧಗಳನ್ನು ಕೂಡಿಸಿಕೊಳ್ಳುವುದು ನಿಮ್ಮ
ಗುರಿಗಳೆಂದು ನಿಮಗನ್ನಿಸಬಹುದು. ಸತ್ಯವೇನೆಂದರೆ,
ಹಣವನ್ನು ಅರಸುತ್ತಿರುವವನೂ ಸಹ ನಿಜವಾಗಿಯೂ
ಜೀವನ್ಮುಕ್ತಿಯನ್ನೇ ಅರಸುತ್ತಿರುವುದು! ನೋಡಿರಿ;
ಇರುವುದು ಎರಡೇ ವಿಷಯಗಳು : ಒಂದು ಹಣ,
ಮತ್ತೊಂದು ಹೆಸರು ಮತ್ತು ಕೀರ್ತಿ. ಹೆಸರು ಮತ್ತು
ಕೀರ್ತಿ ಎಂಬುದು ಹೆಚ್ಚು ಸಂಬಂಧಗಳನ್ನು
ಬಯಸುವುದಲ್ಲದೆ ಬೇರೇನೂ ಅಲ್ಲ. ಹಣ ಅಥವಾ
ಸಂಬಂಧಗಳ ಮೂಲಕ ಯಾವ ಅನುಭವವನ್ನು
ಪಡೆಯುವಿರೆಂದು ತಿಳಿದಿದ್ದೀರೋ ಆ ಅನುಭವವು
ಜೀವನ್ಮುಕ್ತಿಯ ಮೂಲಕ ಮಾತ್ರವೇ
ಪಡೆಯುವಂತಹದು!

ಆ ಕಾರಣದಿಂದಲೇ ಜೀವನ್ಮುಕ್ತಿಯಾಗುವರೆಗೂ ಆತ್ಮವು ಮಿರಿಮಿಸುವುದಿಲ್ಲ. ಆತ್ಮವನ್ನು ಎಷ್ಟೇ ಹಣದಿಂದಲಾಗಲೀ ತಣಿಸಲಾಗುವುದಿಲ್ಲ. ಯಾವ ಸಂಬಂಧಗಳಿಂದಲೂ ಅದನ್ನು ತಣಿಸಲಾಗುವುದಿಲ್ಲ. ಹಣವೂ, ಸಂಬಂಧಗಳೂ ತೃಪ್ತಿಯನ್ನು ನೀಡದಿದ್ದಾಗ, ಅದನ್ನು 'ಯಶಸ್ಸಿನಿಂದಾದ ಖಿನ್ನತೆ' ಎನ್ನುತ್ತೇವೆ. ನಮ್ಮ ವೃತ್ತಿಯ ಶೃಂಗವನ್ನು ತಲುಪಿದ ನಂತರ ಇದೇ ಆಗುವುದು. ಜನರು ನನ್ನ ಬಳಿ ಬಂದು ಹೇಳುತ್ತಾರೆ, 'ನಾನು ಸಾಧಿಸಬೇಕೆಂದಿದ್ದುದ್ದನ್ನೆಲ್ಲಾ ಸಾಧಿಸಿದೆ, ಆದರೆ ಯಾವುದಕ್ಕಾಗಿ ಸಾಧಿಸಬೇಕೆಂದಿದ್ದೆನೋ ಅದನ್ನು ಸಾಧಿಸಿಲ್ಲ. ನನಗೆ

> ವಿಶ್ವಪ್ರಜ್ಞೆಯಲ್ಲಿ
> ಮುಳುಗಬಹುದಾದ
> ಅತಿ ಹೆಚ್ಚಾದ
> ಸಾಧ್ಯತೆಯನ್ನು
> ನೀಡುವ ಮಾನವ
> ದೇಹವನ್ನು
> ಪಡೆದಿರುವಿರಿ.

ಅಪರಿಪೂರ್ಣತೆಯ
ಭಾವನೆ ಬರುತ್ತಿದೆ'
ಎಂದು. ಆತ್ಮ-
ಸಾಕ್ಷಾತ್ಕಾರವನ್ನಲ್ಲದೆ
ಬೇರೆ ಯಾವ
ಗುರಿಯನ್ನೂ
ಅಪೇಕ್ಷಿಸದ ನಿಮ್ಮ
ಆತ್ಮದ ಕೂಗು ಇದೇ ಎಂಬುದನ್ನು ತಿಳಿಯಿರಿ. ಆ
ಕೂಗಿಗೆ ಸ್ಪಂದನವೇ ಸಂನ್ಯಾಸ.

ಎಲ್ಲ ಸಮಸ್ಯೆಗಳಿಗೂ ಇರುವ ಮೂಲಭೂತ
ಕಾರಣ, ಜೀವನದ ಗುರಿಯನ್ನು ಸರಿಯಾಗಿ
ತಿಳಿಯದಿರುವುದು. ಸಂನ್ಯಾಸವೆಂದರೆ ಆ ಗುರಿಯನ್ನು
ಸರಿಯಾಗಿ ಗುರುತಿಸುವುದು ಮತ್ತು ಅದನ್ನು ಗಳಿಸಲು
ಸಮಗ್ರತೆಯನ್ನು ಹೊಂದುವುದು. ನಿಮ್ಮ ಜೀವನದಲ್ಲಿ
ಹಣ, ಸಂಬಂಧಗಳು ಅಥವಾ ಬೇರೇನೇ ಗುರಿಯನ್ನು
ಬೆನ್ನು ಹತ್ತಿದರೂ ನಿಮ್ಮ ಅಂತಿಮ ಗುರಿಯು
ಆನಂದವೇ. ನಿಮ್ಮ ಜೀವನದಲ್ಲಿ ಅದನ್ನು ಹೊರತು
ಬೇರೆ ಯಾವ ಗುರಿಯೂ ಇಲ್ಲ!

ಜನರಲ್ಲಿ ಎರಡೇ ಬಗೆ: ಒಂದು ಗುಂಪಿಗೆ 'ಆನಂದ' ಅಥವಾ 'ಜೀವನ್ಮುಕ್ತಿ'ಯೆಂಬ ಪದ ಮತ್ತು ಅದರ ಹಾದಿ ಗೊತ್ತಿರುತ್ತದೆ. ಆ ಗುಂಪಿನವರು ಅದಕ್ಕನುಗುಣವಾಗಿ ಜೀವಿಸುತ್ತಿರುತ್ತಾರೆ. ಇನ್ನೊಂದು ಗುಂಪಿನವರಿಗೆ ಆ ಪದವಾಗಲೀ ಹಾದಿಯಾಗಲೀ ತಿಳಿದಿರುವುದಿಲ್ಲ. ಆದುದರಿಂದ ಅದು ಸುತ್ತಿ ಬಳಸಿ ಬರುತ್ತದೆ, ಅಷ್ಟೇ. ಮೊದಲನೆಯವನು ಸಂನ್ಯಾಸಿ, ಎರಡನೆಯವನು ಸಂಸಾರಿ.

ವಿಶ್ವಪ್ರಜ್ಞೆಯಲ್ಲಿ ಮುಳುಗಬಹುದಾದ ಅತಿ
ಹೆಚ್ಚಾದ ಸಾಧ್ಯತೆಯನ್ನು ನೀಡುವ ಮಾನವ
ದೇಹವನ್ನು ಪಡೆದಿರುವಿರಿ. ಗಾಜು,
ಸೂರ್ಯಕಿರಣಗಳನ್ನು ಈಗಾಗಲೇ
ಪ್ರತಿಬಿಂಬಿಸುತ್ತಿದೆ. ಈಗ, ಗಾಜು
ಮಾಡಬೇಕಾದುದೆಲ್ಲವೂ ಏನೆಂದರೆ, ಪ್ರತಿಬಿಂಬದ
ಮೂಲವನ್ನು ಕಾಣುವುದು, ಅಷ್ಟೇ! ಮೂಲದಲ್ಲಿ
ಐಕ್ಯವಾಗುವುದು, ಅದನ್ನೇ ನಾನು
ಜ್ಞಾನೋದಯವೆನ್ನುವುದು - ವ್ಯಕ್ತಿಗತ ಪ್ರಜ್ಞೆಯು
ವಿಶ್ವ ಪ್ರಜ್ಞೆಯೊಂದಿಗೆ ಒಂದಾಗುವುದು.

ಇದಾಗಿಬಿಟ್ಟರೆ, ಯಾವ ಉದ್ದೇಶಕ್ಕಾಗಿ ಗಾಜು ಸೃಷ್ಟಿಸಲ್ಪಟ್ಟಿತ್ತೋ, ಆ ಜೀವಿತೋದ್ದೇಶವು ಪೂರ್ಣವಾದಂತೆಯೇ. ಆನಂತರ ಗಾಜು ಒಡೆದುಹೋದರೂ ಪರವಾಗಿಲ್ಲ. ಆದರೆ ಅದನ್ನು ಸಾಧಿಸುವಷ್ಟರಲ್ಲಿಯೇ ಗಾಜು ಒಡೆದುಹೋದರೆ, ಅದರಂತಹ ನಷ್ಟ ಮತ್ತೊಂದಿಲ್ಲ. ಜೀವನ್ಮುಕ್ತಿಯನ್ನು ಹೊಂದುವ ಮೊದಲೇ, ಮಾನವನು ಸಾವನ್ನಪ್ಪಿದರೆ ಇದಕ್ಕಿಂತ ದೊಡ್ಡ ನಷ್ಟ ಬೇರಾವುದೂ ಇಲ್ಲ.

ಈ ಗಳಿಗೆಗೆ ಸಂನ್ಯಾಸವು ಸಾಧನ. ಸಂನ್ಯಾಸವು
ಜೀವನದ ಅಂತ್ಯವಲ್ಲ. ಅದು ಜೀವನದ ಪ್ರಾರಂಭ.
ಏಕೈಕ ಶಾಶ್ವತವಾದ ಜೀವನ ಧ್ವೇಯದತ್ತ
ಸಾಗುತ್ತಿರುವುದೇ ಸಂನ್ಯಾಸ.

ನಿಯಮಾಧೀನತೆಯೇ ತಪ್ಪಿತಸ್ಥ

ಜೀವನದ ಧ್ವೇಯವೇ ಜೀವನ್ಮುಕ್ತಿಯಾಗಿರುವಾಗ
ನಾವೀಗ ಎಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ? ನಮ್ಮ
ಜೀವನದ ಯಾವ ವಿಷಯಗಳಲ್ಲಿ ತಪ್ಪು ದಿಕ್ಕಿನಲ್ಲಿ
ನಡೆಯುತ್ತಿದ್ದೇವೆ? ಸರಿಯಾದ ಗುರಿಯನ್ನು

ಗುರುತಿಸುವುದರಲ್ಲಿಯೇ ಸಮಸ್ಯೆ ಹೇಳಿಕೊಡುತ್ತಾರೆ, ಸ್ವೀಕಾರದಿಂದ, ಇರುವುದೆಂಬುದನ್ನು ತಿಳಿಯಿರಿ. ಗುರಿಯು ಅಷ್ಟೇ. ಅವರ ಹಿಂದಿನದನ್ನು ಸರಿಯಾಗಿದ್ದರೆ ಧೈಯವನ್ನು ಸಾಧಿಸಿದಂತೆಯೇ. ನಿಯಮಾಧೀನತೆಯು ಬಿಟ್ಟು ಹೊಸ ನಿಮ್ಮ ಗುರಿಯು ಸರಿಯಾಗಿದ್ದರೆ ನೀವು ಅದನ್ನು ನಿಮ್ಮನ್ನು ಬೇಕೆಂದೇ ಜಗತ್ತಿಗೆ ಈಗಾಗಲೇ ಜೀವಿಸುತ್ತಿದ್ದೀರೆಂದೇ ಅರ್ಥ. ನಿರ್ಬಂಧಿಸುವ ಅಥವಾ ಕಾಲಿಡಲು ನಿಬಂಧನೆಗೊಳಪಡಿಸುವ, ಪ್ರಜ್ಞಾಪೂರ್ವಕವಾದ ಪ್ರಯತ್ನವಾಗಲೀ ಅಲ್ಲ. ಮೊದಲ

ಗುರಿಯು ತಪ್ಪಿಹೋಗಲು 'ನಿಯಮಾಧೀನತೆ' ಹೆಜ್ಜೆಯನ್ನು (conditioning) ಯೇ ಕಾರಣ. ನೀವು ಹುಟ್ಟಿದಾಗ, ನಿಯಾಮಾಧೀನತೆಯು ನೀವು ಒಬ್ಬ ಸ್ವತಂತ್ರ ಪಕ್ಷಿಯಂತೆ, ಉತ್ಕೃಷ್ಟವಾದ ವಂಶಪಾರಂಪರ್ಯವಾಗಿ ಇಡುತ್ತೀರಿ. ಪರಮಹಂಸದಂತೆ - ಆನಂದವಾಗಿ ತೇಲುತ್ತಾ, ಒಬ್ಬರಿಂದೊಬ್ಬರಿಗೆ ಹಾರಾಡುತ್ತಾ ಇಡೀ ವಿಶ್ವಶಕ್ತಿಯನ್ನು ಆನಂದಿಸಲು ಹರಿದು ಬಂದಿರುವ ಅನಗತ್ಯವಾಗಿ ಬಂದ ಬಂದಿರಿ. ಆದರೆ, ಬಂದ ನಂತರ ವರದಕ್ಷಿಣೆಯಂತೆ. ಮೊದಲಿಗೆ ತಂದೆ-ತಾಯಿಯರ ನಿಮಗರಿವಿಲ್ಲದೆಯೇ, ಸುತ್ತಮುತ್ತ ನಿಬಂಧನೆಗಳು, ಆನಂತರ ಸಮಾಜದ ಹಾರಾಡಿದುದಲ್ಲದೆ, ಭೂಸ್ಪರ್ಶವನ್ನೂ ಮಾಡಿದಿರಿ. ನಿಬಂಧನೆಗಳು, ಇವೆರಡರ ಆಧಾರಿತವಾಗಿ ಕೆಲವು ಅದೇ ಸಮಸ್ಯೆ. ನೆಲಕ್ಕೆ ಬರುವ ಅಂತಹ ಪಕ್ಷಿಗಳನ್ನು ನೀತಿ, ನಿಯಮಗಳನ್ನು ನೀವೇ ಹಾಕಿಕೊಳ್ಳುತ್ತೀರಿ. ಹಿಡಿಯಲು ಹೊಂಚುಹಾಕುವ ಅನೇಕರು ಇರುತ್ತಾರೆ! ಇವು ನಿಮಗೆ ನೀವೇ ಮಾಡಿಕೊಂಡ ದೇಶದ, ಮತದ, ಜಾತಿಯ, ಪಂಗಡದ ಮತ್ತು ನಿಯಮಾಧೀನತೆಗಳು, ನಿಮ್ಮದೇ ಆದ ಧರ್ಮ. ಸಿದ್ಧಾಂತಗಳ ಚೌಕಟ್ಟಿಗೆ ನಿಮ್ಮನ್ನು ಸಿಕ್ಕಿಸಿಹಾಕಲು ಸಮಾಜವು ಸದಾ ಕಾದಿರುತ್ತದೆ.

ನಾವು ನಿಯಮಾಧೀನತೆಯ ಅನೇಕ ನೀವು ಪುಣ್ಯಾತ್ಮರಾಗಿ ಧರೆಗಿಳಿದಿರಿ. ನೀವು ಪದರಗಳನ್ನು ಸೃಷ್ಟಿಸಿಕೊಳ್ಳುವುದರಿಂದ ಸತ್ಯವನ್ನು ಹಿಂದೂವೋ, ಇಂಜಿನಿಯರೋ ಅಥವಾ ನೇರವಾಗಿ ನೋಡಲಾರೆವು. ನಾವು ಗುರಿಯನ್ನು ಕೂಲಿಯಾಳೋ ಆಗಿರಲಿಲ್ಲ. ಆದರೆ, ಸಮಾಜಕ್ಕೆ ನೇರವಾಗಿ ಗ್ರಹಿಸಲಾರೆವು. ನಾವು ಗುರಿಯನ್ನು ಇಂಜಿನಿಯರುಗಳೂ ಕೂಲಿಯಾಳುಗಳೂ ನೇರವಾಗಿ ಜೀವಿಸಲಾರೆವು. ನಿಯಮಾಧೀನತೆಯಲ್ಲಿ ಬೇಕೆಂಬುದನ್ನು ತಿಳಿಯಿರಿ. ಅದಕ್ಕೆ ನಿಮ್ಮ ಪ್ರಜ್ಞೆಯ ಸಿಕ್ಕಿಹಾಕಿಕೊಂಡು, ನಾವು ನಿಜವಾಗಿಯೂ ಬಗ್ಗೆ ಗಮನವೇ ಇರುವುದಿಲ್ಲ. ನಿಜವಾಗಿಯೂ ನಿಮ್ಮ ಯಾರೆಂಬುದನ್ನು ಮರೆತಿದ್ದೇವೆ. ತಂದೆ-ತಾಯಿಯರಿಗಾಗಲೀ, ಸಮಾಜಕ್ಕಾಗಲೀ, ನಿಯಾಮಾಧೀನತೆಯು ನಮ್ಮಲ್ಲಿ ಕೆಲವು ಪ್ರಜ್ಞೆಯೆಂಬುದೊಂದಿದೆ ಎಂದೇ ತಿಳಿದಿರುವುದಿಲ್ಲ. ಸೀಮಿತಗೊಳಿಸುವ ತಡೆಗಳನ್ನು ನಿರ್ಮಿಸುತ್ತದೆ ಅವರಿಗೇ ಆ ಬುದ್ಧಿಶಕ್ತಿ ಇರುವುದಿಲ್ಲ. ಅವರು ಹಾಗೂ ಆ ಸೀಮಿತಗೊಳಿಸುವ ತಡೆಗಳೇ ನಿಜವಾದ ತಮಗೇನು ಹೇಳಿಕೊಡಲಾಗಿತ್ತೋ ಅದನ್ನೇ ನಿಮಗೂ ನಾವು ಎಂದುಕೊಳ್ಳುತ್ತೇವೆ. ನಾವು ತೊಡುವ ಬಟ್ಟೆಗಳೂ ಸಹ ನಾವೇ ಬಟ್ಟೆಗಳೆಂದು ನಂಬುವಂತೆ ನಮ್ಮನ್ನು ನಿಯಮಾಧೀನ ಪಡಿಸುತ್ತವೆ!

ಸಮಾಜದಲ್ಲಿ ಅನೇಕ ನಿಯಮಾಧೀನತೆಗಳನ್ನು ನಿರ್ಮಿಸಿರುವುದು ಶಾಂತಿಯಿಂದ ಸಹಬಾಳ್ವೆ ಮಾಡುವ ಕಾರಣಕ್ಕಾಗಿಯೇ. ಉದಾಹರಣೆಗೆ, ಸುಲಭವಾಗಿ ಸಂಪರ್ಕಕ್ಕಾಗಿ ಅನೇಕ ಭಾಷೆಗಳನ್ನು ಕಲಿಸಲಾಗುತ್ತದೆ. ಭಾಷೆಯನ್ನು ಕಲಿಯುವುದು ತಪ್ಪೇನಲ್ಲ. ಆದರೆ ಅದನ್ನೇ ನಿಯಮಾಧೀನತೆಯನ್ನಾಗಿಸಿ, ಭಾಷೆಯೇ ನಿಮ್ಮ ಜೀವವೆಂಬಂತೆ ಮಾಡಿಕೊಂಡು ನಿಮಗೂ ಇತರರಿಗೂ ಹಿಂಸೆಯುಂಟುಮಾಡುವುದು ತಪ್ಪು. ಆ ಮನೋಭಾವನೆಯೇ ತಪ್ಪು. ಭಾಷೆಗಾಗಿ ಎಷ್ಟೋ ಜನರು ಪ್ರಾಣವನ್ನೇ ತೆತ್ತಿದ್ದಾರೆ. ನಿಯಮಾಧೀನತೆಯೆಂಬುದಿಲ್ಲದೇ ಹೋಗಿದ್ದರೆ, ಅಷ್ಟೊಂದು ಸಾವುಗಳು ಸಂಭವಿಸುತ್ತಿರಲಿಲ್ಲ! ಮನುಕುಲದ ಇತಿಹಾಸವೇ ಬೇರೆ ರೀತಿಯಲ್ಲಿ ಬರೆಯಲ್ಪಡುತ್ತಿತ್ತು. ಮನುಷ್ಯರಲ್ಲಿ ಭಯೋತ್ಪಾದನೆಗೆ ನಿಯಮಾಧೀನತೆಯೇ ಕಾರಣ. ಇಂದು ನಿಯಮಾಧೀನತೆಯಿಂದಾದ ವಿಭಜನೆಯು ನಿರ್ದಿಷ್ಟವಾದ ರಾಜಕೀಯ ಪಕ್ಷಗಳ ಮಟ್ಟಕ್ಕಿಳಿದುಬಿಟ್ಟಿದೆ!

ಸನ್ಯಾಸ ಸ್ವೀಕಾರದಿಂದ ಹಿಂದಿನದನ್ನು ಬಿಟ್ಟು ಹೊಸ ಜಗತ್ತಿಗೆ ಕಾಲಿಡಲು ಪ್ರಜ್ಞಾಪೂರ್ವಕವಾದ ಮೊದಲ ಹೆಜ್ಜೆಯನ್ನಿಡುತ್ತೀರಿ. ಹಿಂದಿನದು ಪರಿಚಿತವಾದುದು, ಆದುದರಿಂದ ಅದನ್ನು ಹೊತ್ತುಕೊಂಡು ಹೋಗಲು ಇಷ್ಟಪಡುತ್ತೀರಿ. ಮನಸ್ಸು ಯಾವಾಗಲೂ ಪರಿಚಿತವಾದುದನ್ನೇ ಬಯಸುತ್ತದೆ ಹಾಗೂ ಸಮಾಜವು ನಿಮ್ಮಲ್ಲಿ ತಪ್ಪಿತಸ್ಥ ಭಾವನೆ ಮತ್ತು ಭಯವನ್ನು ಹುಟ್ಟಿಸುವ ಸಲುವಾಗಿ ಹಳೆಯ ಘಟನೆಗಳ ಆಧಾರದ ಮೇಲೆ ಹಿಂದಿನದನ್ನು ಜೊತೆಗೊಯ್ಯುವಂತೆ ಬೋಧಿಸುತ್ತದೆ. ಹಿಂದಿನದು ಬೇಡವಾದ ಹೊರೆ. ಸನ್ಯಾಸವು ಹಿಂದಿನದರಿಂದ ಕಳಚಿಕೊಳ್ಳುವುದು. ಹಿಂದಿನದನ್ನು ಕಳಚಿಕೊಂಡು ಹೊಸ ಭವಿಷ್ಯದತ್ತ ಸಾಗಿದರೆ ಮೊದಮೊದಲು ವಿಪರೀತ ಅಭದ್ರತೆ ಇರುತ್ತದೆ. ಸನ್ಯಾಸವು ಸಂಪೂರ್ಣವಾಗಿ ಅಭದ್ರತೆಯಿಂದ ಕೂಡಿದ್ದು. ಅಂತಹ ಅಭದ್ರತಾ ಸ್ಥಿತಿಯಲ್ಲಿ ಯಾವ ಆಲಂಬನೆಯೂ ಇರುವುದಿಲ್ಲ. ಹಾಗಾಗಿ ದೇವರನ್ನು ಪಡೆಯುತ್ತೀರಿ!

ನಿಮಗೆ ಆಧ್ಯಾತ್ಮಿಕ ಹೆಸರನ್ನು ನಾನೇಕೆ ಕೊಡುತ್ತೇನೆಂದುಕೊಂಡಿರುವಿರಿ? ನಾನು ನಿಮಗೊಂದು ಆಧ್ಯಾತ್ಮಿಕ ಹೆಸರನ್ನು ಕೊಡುವುದು ನಿಮಗೆ ಗತಕಾಲದಿಂದ ಅತಿ ಸುಲಭವಾಗಿ ಕಳಚಿಕೊಳ್ಳಲು ಸಾಧ್ಯವಾಗಲೆಂದು. ನಿಮಗೆ ನಾನು ಕೊಡುವ ಹೊಸ ಹೆಸರು ನಿಮಗಾದ ಮಾನಸಿಕ ಕ್ರಾಂತಿಯನ್ನೂ, ನಿಮ್ಮಲ್ಲುಂಟಾಗಿರುವ ಹೊಸ ತಿಳಿವಳಿಕೆಯನ್ನೂ ಸತತವಾಗಿ ನೆನಪಿಸುತ್ತದೆ. ನಿಮ್ಮ ಅಂತಃಸ್ವಭಾವಕ್ಕೆ ಅನುಗುಣವಾಗಿ ಆ ಹೆಸರು ನಿಮ್ಮ ಪ್ರತ್ಯೇಕವಾದ ಆಧ್ಯಾತ್ಮಿಕ ಹಾದಿಯನ್ನು ಸಹ ಸೂಚಿಸುತ್ತದೆ ಅದು ಅಂತಿಮವಾಗಿ ನಿಮ್ಮ ಅರಳುವ ಪ್ರಜ್ಞೆಗೆ ನಿಮ್ಮನ್ನು ಕೊಂಡೊಯ್ಯುತ್ತದೆ.

ಸನ್ಯಾಸಿಯಾದವನು ಪ್ರಸಕ್ತ ಕ್ಷಣಕ್ಕಾಗಿ ದುಡಿಯುತ್ತಾನೆ. ಆತನು ತನ್ನ ಇಡೀ ಜೀವನವನ್ನು ವಿಶ್ವಕ್ಕಾಗಿ ನೀಡಿ ಫಲದ ಬಗ್ಗೆ ಚಿಂತಿಸದೇ ಇರುತ್ತಾನೆ. ಫಲಗಳು ತಾವಾಗಿಯೇ ಸಂಭವಿಸುತ್ತವೆ. ಅದೇ ಆತನ ಕೆಲಸ ಮಾಡುವ ರೀತಿ. ಆತನಿಗೆ ಆ ಕ್ಷಣವು ಮಾತ್ರವೇ ಗೊತ್ತಿರುವುದು, ಬೇರೇನೂ ಅಲ್ಲ. ಅದರಿಂದಾಗಿ ಆತನು ನೇರವಾಗಿ ವಿಶ್ವದಿಂದ ಪ್ರತಿ ಕ್ಷಣವೂ ಕಲಿಯುತ್ತಿರುತ್ತಾನೆ. ಆ ಕಾರಣದಿಂದಲೇ ಆತನಿಗೆ ಯಾವ ಸಿದ್ಧಾಂತಗಳಾಗಲೀ ಮತವಾಗಲೀ ಇರುವುದಿಲ್ಲ. ಆತನು ಇಡೀ ವಿಶ್ವಶಕ್ತಿಯೊಂದಿಗೆ ಸಾಮರಸ್ಯದಿಂದಿದ್ದು ಅದರಿಂದ ಕಲಿಯುತ್ತಿರುತ್ತಾನೆ.

ಸೂಫೀ ಗಾದೆಯೊಂದಿದೆ, 'ಸೂಫಿಯು ಆ ಕ್ಷಣದ ಶಿಶು' ಎಂದು. ಸೂಫೀ ಗ್ರಂಥಗಳಲ್ಲಿ ಪ್ರತಿಯೊಂದು ಕ್ಷಣವನ್ನೂ ಒಂದು ಉಸಿರು ಎನ್ನುತ್ತಾರೆ ಹಾಗೂ ಸೂಫಿಗಳನ್ನು 'ಉಸಿರುಗಳ ಜನ ಸಮೂಹ' ಎನ್ನುತ್ತಾರೆ. ಏಕೆಂದರೆ ಅವರು ಪ್ರತಿಯೊಂದು ಕ್ಷಣದಲ್ಲೂ, ಪ್ರತಿಯೊಂದು ಉಸಿರಿನಲ್ಲೂ, ಪೂರ್ಣ ಅರಿವಿನೊಂದಿಗೆ ಜೀವಿಸುತ್ತಾರೆ. ಅವರ ಪ್ರಕಾರ, ಪ್ರತಿಯೊಂದು ಕ್ಷಣದಲ್ಲಿಯೂ ಹೊಸ ಪ್ರಜ್ಞೆಯೊಂದು ಆಗಮಿಸುತ್ತದೆ. ಅದೇ ಸನ್ಯಾಸದ ಭಾವ. ಅಂದರೆ ಪ್ರತಿ ಕ್ಷಣವೂ ನವ್ಯತೆಯಿಂದಿರುವುದು. ಅಂತಹವರು ಕ್ಷಣ ಕ್ಷಣವೂ ಕಲಿಯುತ್ತಾರೆ. ಅವರಿಗೆ ವಿಶ್ವಶಕ್ತಿಯೇ ಗುರು!

ಸೂಫಿಗಳ ಮಹಾನ್ ಗುರುವಾದ ಹಸನ್‌ರವರು
ಮರಣಶಯ್ಯೆಯಲ್ಲಿದ್ದಾಗ ಯಾರೋ ಒಬ್ಬರು
ಕೇಳಿದರು, 'ಹಸನ್‌ರವರೆ, ತಮ್ಮ ಗುರುಗಳು
ಯಾರಾಗಿದ್ದರು?' ಎಂದು.

ಅವರು ಹೇಳಿದರು, 'ನನಗೆ ಅನೇಕ ಗುರುಗಳಿದ್ದರು.
ಅವರುಗಳ ಹೆಸರುಗಳನ್ನು ಹೇಳುತ್ತಾ ಹೋದರೆ
ತಿಂಗಳುಗಳೋ, ವರ್ಷಗಳೋ ಬೇಕಾಗುತ್ತವೆ
ಹಾಗೂ ಈಗ ಅದಕ್ಕೆ ಕಾಲಾವಕಾಶವಿಲ್ಲ. ನಾನು
ಯಾವ ನಿಮಿಷದಲ್ಲಿಯಾದರೂ ಪ್ರಾಣ
ಬಿಡಬಹುದು. ನಾನು ನಿಮಗೆ ಮೂವರು ಗುರುಗಳ
ಬಗ್ಗೆ ಹೇಳುತ್ತೇನೆ.

ಮೊದಲನೆಯ ಗುರು ಒಬ್ಬ ಕಳ್ಳ. ಒಮ್ಮೆ ನಾನು ಒಂದು ಮರುಭೂಮಿಯಲ್ಲಿ ದಾರಿತಪ್ಪಿ ಹತ್ತಿರವೇ ಇದ್ದ ಒಂದು ಹಳ್ಳಿಯನ್ನು ಸೇರಿದಾಗ ಹೊತ್ತಾಗಿತ್ತು. ಎಲ್ಲವೂ ಮುಚ್ಚಿತ್ತು. ಕೊನೆಗೆ, ಒಂದು ಮನೆಯ ಗೋಡೆಗೆ ಕನ್ನಹಾಕಲು ಹವಣಿಸುತ್ತಿದ್ದ ಒಬ್ಬನು ಸಿಕ್ಕಿದನು. ರಾತ್ರಿಯನ್ನು ನಾನೆಲ್ಲಿ ಕಳೆಯಬಹುದೆಂದು ನಾನವನನ್ನು ಕೇಳಿದೆ. ಆತನು, 'ಈ ಸರಿಹೊತ್ತಿನಲ್ಲಿ ಅದು ಕಷ್ಟ. ಒಬ್ಬ ಕಳ್ಳನ ಜೊತೆಯಲ್ಲಿರಲು ಅಭ್ಯಂತರವಿಲ್ಲದಿದ್ದರೆ, ನೀನು ನನ್ನ ಜೊತೆಯಲ್ಲಿರಬಹುದು' ಎಂದನು.

ಆ ಮನುಷ್ಯನ ಜೊತೆಯಲ್ಲಿ ನಾನು ಒಂದು ತಿಂಗಳಿದ್ದೆ. ಪ್ರತಿರಾತ್ರಿಯೂ ಆತನು, 'ಈಗ ನಾನು ನನ್ನ ಕೆಲಸಕ್ಕೆ ಹೋಗುತ್ತಿದ್ದೇನೆ. ನೀನು ವಿಶ್ರಾಂತಿ ತೆಗೆದುಕೊ ಮತ್ತು ನನಗಾಗಿ ಪ್ರಾರ್ಥಿಸು' ಎಂದು ಹೇಳುತ್ತಿದ್ದನು. ಆತನು ಹಿಂದಿರುಗಿದಾಗ, 'ನಿನಗೇನಾದರೂ ದೊರೆಯಿತೆ?' ಎಂದು ನಾನು ಕೇಳುತ್ತಿದ್ದೆ. ಆತನು, 'ಇಂದು ರಾತ್ರಿ ಸಿಗಲಿಲ್ಲ. ದೈವೇಚ್ಛೆಯಿದ್ದರೆ, ನಾಳೆ ಪುನಃ ಪ್ರಯತ್ನಿಸುತ್ತೇನೆ' ಎನ್ನುತ್ತಿದ್ದನು. ಆತನು ಯಾವಾಗಲೂ ಸಂತೋಷವಾಗಿಯೂ, ಭರವಸೆಯಿಂದಲೂ ಇರುತ್ತಿದ್ದನೇ ಹೊರತು ಹತಾಶನಾಗಿರುತ್ತಲೇ ಇರಲಿಲ್ಲ.

ನಾನು ಬಹಳ ವರ್ಷಗಳ ಕಾಲ ಧ್ಯಾನಮಾಡುತ್ತಿದ್ದು,
ಏನೂ ನಡೆಯದೇ ಇದ್ದಾಗ, ಎಷ್ಟೋ ಹತಾಶನಾಗಿ,
ಎಷ್ಟೋ ನಿರಾಸೆಗೊಂಡಾಗಲೆಲ್ಲಾ, 'ಈ
ಅರ್ಥಹೀನವಾದದ್ದನ್ನೆಲ್ಲಾ ಬಿಟ್ಟುಬಿಡಬೇಕು'
ಎಂದು ಕೊಳ್ಳುತ್ತಿದ್ದೆ. ಆ ಕ್ಷಣವೇ,

ಪ್ರಪಂಚದಲ್ಲಿಯೇ ಇದ್ದರೂ, ಪ್ರಾಪಂಚಿಕವಾದ ಯಾವುದೂ ನಿಜವಾಗಿಯೂ ನಿಮ್ಮನ್ನು ಸೆಳೆಯುವುದಿಲ್ಲ.

‘ದೈವೇಚ್ಛೆಯಿದ್ದರೆ, ನಾಳೆ ಪುನಃ ಪ್ರಯತ್ನಿಸುತ್ತೇನೆ’ ಎನ್ನುತ್ತಿದ್ದ ಆ ಕಳ್ಳನ ನೆನಪಾಗುತ್ತಿತ್ತು.

ನನ್ನ ಎರಡನೆಯ ಗುರು ಎಂದರೆ, ಒಂದು ನಾಯಿ. ಒಂದು ದಿನ ಬಾಯಾರಿಕೆಯನ್ನು ಇಂಗಿಸಿಕೊಳ್ಳಲು ನದಿಗೆ ಹೋದೆ. ಆಗ ಒಂದು ನಾಯಿ ಬಂದಿತು. ಅದಕ್ಕೂ ಬಾಯಾರಿಕೆಯಾಗಿತ್ತು. ಅದು ನದಿಯೊಳಗೆ ನೋಡಿ, ಅಲ್ಲಿ ತನ್ನದೇ ಪ್ರತಿಬಿಂಬವಾಗಿದ್ದ ಇನ್ನೊಂದು ನಾಯಿಯನ್ನು ಕಂಡಿತು. ಅದಕ್ಕೆ ಭಯವಾಯಿತು. ಅದು ಬೊಗಳಿ ಓಡಿಹೋಗುತ್ತಿತ್ತು. ಆದರೆ ಅದಕ್ಕೆ ಅದೆಷ್ಟು ಬಾಯಾರಿಕೆಯಾಗಿತ್ತೆಂದರೆ, ಅದು ಹಿಂದಿರುಗಿ ಬರುತ್ತಿತ್ತು. ಕೊನೆಗೆ, ಎಷ್ಟೇ ಭಯವಾಗುತ್ತಿದ್ದರೂ, ನೀರಿಗೆ ಜಿಗಿಯಿತು ಹಾಗೂ ಆದರದೇ ಪ್ರತಿಬಿಂಬವು ಇಲ್ಲವಾಯಿತು. ಆಗ ನಾನು ಈ ಆದೇಶ - ಭಯವಾದರೂ ಸಹ ಅದನ್ನು ಎದುರಿಸಿ ಜಿಗಿದುಬಿಡಬೇಕು ಎಂಬುದು ಭಗವಂತನಿಂದ ಬಂದಿದೆ ಎಂದು ಅರಿತುಕೊಂಡೆನು.

ಮೂರನೆಯ ಗುರುವು ಒಬ್ಬ ಪುಟ್ಟ ಹುಡುಗ. ನಾನು ಹೋಗಿದ್ದ ಒಂದು ಊರಿನಲ್ಲಿ ಒಬ್ಬ ಪುಟ್ಟ ಹುಡುಗನು ಒಂದು ಹಚ್ಚಿಸಿದ ಮೇಣಬತ್ತಿಯನ್ನು ತೆಗೆದುಕೊಂಡು ಅದನ್ನು ಒಂದು ಮಸೀದಿಯಲ್ಲಿಟ್ಟು ಬರಲು ಹೋಗುತ್ತಿದ್ದನು.

ನಾನು ಆ ಹುಡುಗನನ್ನು ಕೇಳಿದೆ, ‘ದೀಪವನ್ನು ನೀನೇ ಹಚ್ಚಿದೆಯಾ?’ ಎಂದು. ಅವನು ಹೌದೆಂದನು. ನಂತರ ನಾನು ಕೇಳಿದೆ, ‘ದೀಪವು ಇನ್ನೂ ಹತ್ತಿಕೊಂಡಿರದೆ ಇದ್ದ ಕ್ಷಣವೊಂದಿತ್ತು. ನಂತರ, ಅದು ಹತ್ತಿಕೊಂಡ ಕ್ಷಣ ಒಂದಿತ್ತು. ಬೆಳಕು ಹುಟ್ಟಿದ ಮೂಲವನ್ನು ನನಗೆ ತೋರಿಸಬಲ್ಲೆಯಾ?’ ಎಂದು.

ಹುಡುಗನು ನಕ್ಕು, ದೀಪವನ್ನು ಗಾಳಿಯಿಂದ ಊದಿ ಆರಿಸಿ, ‘ಈಗ ದೀಪವು ಆರಿಹೋದುದನ್ನು ನೀವು ನೋಡಿದಿರಿ, ಅದು ಎಲ್ಲಿಗೆ ಹೋಯಿತು? ನೀವೇ ಹೇಳಿರಿ!’ ಎಂದನು.

ನನ್ನ ಅಹಂಕಾರವು ಪುಡಿಪುಡಿಯಾಯಿತು, ಅಲ್ಲದೆ, ನನ್ನ ಪಾಂಡಿತ್ಯವೂ ಅಂದೇ ನಾಶವಾಗಿ ಹೋಯಿತು.

ನನಗೆ ಗುರು ಎಂಬುವರು ಇರಲಿಲ್ಲವೆಂಬುದೇನೋ ನಿಜವೇ. ಹಾಗೆಂದ ಮಾತ್ರಕ್ಕೆ ನಾನು ಶಿಷ್ಯನಾಗಿರಲಿಲ್ಲವೆಂದಲ್ಲ. ನಾನು ಇಡೀ ಬ್ರಹ್ಮಾಂಡವನ್ನೇ ನನ್ನ ಗುರುವೆಂದು ಪರಿಗಣಿಸಿದ್ದೆ. ಆಗಸದ ಮೋಡಗಳನ್ನು, ಮರಗಳನ್ನು ನಂಬಿದ್ದೆ. ಸಾಧ್ಯವಿದ್ದ ಪ್ರತಿ ಮೂಲಗಳಿಂದಲೂ ಕಲಿಯುತ್ತಿದ್ದೆ.

ಸನ್ಯಾಸವೆಂದರೆ ಈ ‘ಕ್ಷಣ’ವು ನಿಮ್ಮನ್ನು ಜೀವನ್ಮುಕ್ತಿಗೆ ಹತ್ತಿರವಾಗಿ ನಡೆಸುತ್ತಿದೆ ಎಂಬ ಆನಂದದ ಅರಿವು. ನೀವು ಮಾಡಬೇಕಾದುದೆಲ್ಲವೂ ಏನೆಂದರೆ, ಸುಲಭ ಭೇದ್ಯವಾಗಿರುವುದು, ಅಷ್ಟೇ.

ನಾಳೆಯೂ ಇಂದಿನ ರೂಪದಲ್ಲಿಯೇ ಬರುತ್ತದೆ. ಆದುದರಿಂದ ಈ ದಿನದ ಮೇಲೆ ಮಾತ್ರವೇ ಕೇಂದ್ರೀಕರಿಸಬಾರದೇಕೆ? ನೀವು ಈ ಕ್ಷಣದಲ್ಲಿದ್ದಾಗ ನೋವಿಗಾಗಲೀ, ಸಂಕಟಕ್ಕಾಗಲೀ ಆಸ್ಪದವೇ ಇರುವುದಿಲ್ಲ. ಗತಕಾಲ ಅಥವಾ ಭವಿಷ್ಯತ್ಕಾಲದಲ್ಲಿದ್ದಾಗ ಮಾತ್ರವೇ ಸಂಕಟಕ್ಕೆ ಎಡೆಮಾಡುವಿರಿ. ಈ ಕ್ಷಣದಲ್ಲಿರುವಾಗ ಎಲ್ಲವೂ ಸುಂದರವಾಗಿರುವಂತಹ ಅಂತಃಸ್ಥಳವನ್ನು ಸೃಜಿಸಿಕೊಳ್ಳುತ್ತೀರಿ. ಜೀವನವೇ

ವಿಶ್ವಶಕ್ತಿಯೊಂದಿಗಿನ ಶುದ್ಧವಾದ ಸರಸ
ಸಲ್ಲಾಪದಂತಾಗುತ್ತದೆ. ನೀವು ಎಲ್ಲದರೊಂದಿಗೂ
ಅನುರಣಿಸುತ್ತೀರಿ. ಕಾರಣವೇ ಇಲ್ಲದೆ
ಎಲ್ಲರೊಂದಿಗೂ, ಎಲ್ಲದರೊಂದಿಗೂ
ಪ್ರೇಮದಿಂದಿರುವಿರಿ. ಅದೇ ಸನ್ಯಾಸ. ಆಗ ನೀವು
ಏನನ್ನೂ ಕೂಡಿಟ್ಟುಕೊಳ್ಳುವುದಿಲ್ಲ. ಯಾವುದಕ್ಕೂ
ಹೆದರುವುದಿಲ್ಲ, ಯಾವುದಕ್ಕೂ ಚಿಂತಿಸುವುದೂ
ಇಲ್ಲ. ನಿಮ್ಮ ಸುತ್ತಮುತ್ತಲಿನ ಎಲ್ಲವೂ ಒಂದು
ಸುಂದರವಾದ ಕನಸಿನಂತೆ ನಡೆದುಬಿಡುತ್ತದೆ.

ಸನ್ಯಾಸಿಯು ಆತ್ಮದಲ್ಲಿ ನಿರಂತರ ಪರಿವ್ರಾಜಕ. ಆತನು ಒಂದು ಜಾಗದಲ್ಲಿದ್ದರೂ ಆತನ ಆತ್ಮವು ದೂರದಲ್ಲಿರುವ ಅನೇಕ ವಿಷಯಗಳನ್ನು ಸೋಕುತ್ತಾ, ಯಾವ ಒಂದು ನಮೂನೆಯಾಗಿಯೂ ಇಲ್ಲದೆ, ಅಲೆದಾಡುತ್ತಿರುತ್ತದೆ. ಆತನು ಯಾವುದನ್ನೇ ಕೂಡಿಡುವುದರಲ್ಲಿ ಆಸಕ್ತನಾಗಿರುವುದಿಲ್ಲ. ತನ್ನ ಹಾದಿಯಲ್ಲಿ ಬರುವ ಯಾವುದನ್ನೇ ಆದರೂ ದಾನ ಮಾಡಿಬಿಡುತ್ತಾನೆ. ಆತನು ಅಗತ್ಯಕ್ಕಿಂತಲೂ ಹೆಚ್ಚಾಗಿ ಪಡೆಯುತ್ತಾನೆ. ಆತನು ರಾಜನಂತೆ ಬಾಳುತ್ತಾನೆ.

ನಶ್ವರತೆಯನ್ನು ಆಸ್ವಾದಿಸಿರಿ!

ಸನ್ಯಾಸವೆಂದರೆ ಎಲ್ಲದಾದರೂ ನಶ್ವರತೆಯ ಸ್ವಭಾವವನ್ನು ಅರ್ಥಮಾಡಿಕೊಳ್ಳುವುದು. ಆಸೆಗಳು, ಸ್ವತ್ತುಗಳು ಮತ್ತು ಮನೋಭಾವನೆಗಳೆಲ್ಲವೂ ಬದಲಾಗುತ್ತಿರುವಂತಹವುಗಳು ಅಥವಾ ಚಲಿಸುತ್ತಿರುವಂತಹವುಗಳು. ಪ್ರತಿಯೊಂದು ಬದಲಾವಣೆಯಾಗುತ್ತಲೂ, ಚಲಿಸುತ್ತಲೂ ಇರುವಂತಹವು. ಯಾವುದೂ ಶಾಶ್ವತವಲ್ಲ. ನೀವು ನಿಮ್ಮದೇ ಆಸೆಗಳನ್ನು ಪರಿಶೀಲಿಸಿದರೆ, ಅವು ಈಡೇರುವುದಕ್ಕೆ ಮೊದಲು ಒಂದು ಬೆಟ್ಟದಂತೆ, ದೊಡ್ಡ ಧೈಯದಂತೆ ಕಾಣುತ್ತವೆ. ಈಡೇರಿದ ನಂತರ ಅದೇ ಆಸೆಯು ಚಿಕ್ಕ ಮಣ್ಣುದಿಬ್ಬದಂತೆ ತೋರುತ್ತದೆ. ಈಡೇರುವ ಮೊದಲು ಅದು ನಿಮ್ಮ ಪ್ರಾಣವೇ ಎಂಬಂತೆ ತೋರುತ್ತದೆ. ಒಂದು ಆಸೆಯು ಈಡೇರಿಬಿಟ್ಟರೆ, ನೀವು ಸುಮ್ಮನೆ ಮುಂದಿನ ಆಸೆಯತ್ತ ನಡೆಯುವಿರಿ! ಆಸೆಗಳು ಘನವಾದವುಗಳಾಗಲೀ ಶಾಶ್ವತವಾದವುಗಳಾಗಲೀ ಅಲ್ಲವೆಂದು ಈ ಕಾರ್ಯಗತಿಯೇ ತೋರಿಸುತ್ತದೆ. ಅವು ಕೇವಲ ಬದಲಾಗುತ್ತಿರುವ ಮನಸ್ಸಿನ ಭ್ರಮೆಗಳು.

ಸನ್ಯಾಸವು ಆಸೆಗಳ ಕ್ಷಣಿಕತೆಯನ್ನು ಅರಿಯಲು ಸಹಾಯ ಮಾಡುತ್ತದೆ. ನಿಧಾನವಾಗಿ ಆಸೆಗಳ ನಿರ್ವಾಣ ನಿಲ್ಲುತ್ತದೆ. ಆಗ, ಆಸೆಗಳಲ್ಲಿ ಶೇಖರವಾಗಿದ್ದ ಶಕ್ತಿ ಎಲ್ಲವೂ ನಿಮಗೆ ಸಂಪೂರ್ಣವಾಗಿ ದೊರೆಯುತ್ತದೆ. ನಿಮ್ಮ ಸಾಮರ್ಥ್ಯವು ತನ್ನಷ್ಟಕ್ಕೆ ತಾನೇ ಚಿಮ್ಮುತ್ತದೆ. ನೀವು ಏನನ್ನು ಮಾಡಲು ಸಿದ್ಧರಾಗಿರುತ್ತೀರಿ. ಪ್ರಪಂಚದಲ್ಲಿಯೇ ಇದ್ದರೂ, ಪ್ರಾಪಂಚಿಕವಾದ ಯಾವುದೂ ನಿಜವಾಗಿಯೂ ನಿಮ್ಮನ್ನು ಸೆಳೆಯುವುದಿಲ್ಲ. ನೀವು ಏನನ್ನೋ ಸುಂದರವಾದದ್ದನ್ನು ಕಂಡರೂ, ಅದನ್ನು ಹೊಂದಲು ಅಪೇಕ್ಷಿಸುವುದಿಲ್ಲ. ಕೇವಲ ಆನಂದಿಸಿ, ಮುಂದುವರೆಯುವಿರಿ ಅಷ್ಟೇ, ಅದೇ ಸನ್ಯಾಸ.

ಸನ್ಯಾಸವು ಮೃತದೇಹವನ್ನು ದಹಿಸಲು
ಉಪಯೋಗಿಸುವ ಸೌದೆಯಂತೆ ಇದ್ದು ಕೊನೆಯಲ್ಲಿ
ಅದನ್ನು ಅದೇ ಚಿತೆಗೆ ಎಸೆಯಲ್ಪಡುವಂತೆ

ಕಾರ್ಯನಿರ್ವಹಣೆ ಮಾಡುತ್ತದೆ. ಅದು ನಿಮ್ಮ ಎಲ್ಲ ಭ್ರಮೆಗಳನ್ನೂ ದಹಿಸಿ, ಕೊನೆಗೆ ತನ್ನನ್ನೇ ಅದೇ ಅಗ್ನಿಗೆ ಸಮರ್ಪಿಸಿಕೊಳ್ಳುತ್ತದೆ. ಅದು ಒಂದು ಸಲಕರಣೆ.

ಆದಿಶಂಕರರು ‘ಭಜಗೋವಿಂದಂ’ ಎಂಬ ತಮ್ಮ
ಸುವಿಖ್ಯಾತವಾದ ಗೀತೆಯಲ್ಲಿ ಸುಂದರವಾಗಿ
ಹೇಳುತ್ತಾರೆ:

ಹಗಲು ರಾತ್ರಿಗಳು ಶಿಶಿರ ವಸಂತಗಳು
ಕಳೆದು ಹೋಗುತ್ತಲೇ ಇರಲು,
ಜೀವನವೇ ಕೊನೆ ಮುಟ್ಟುತ್ತಲಿರಲು
ಇದ್ದೇ ಇಹುದು ಆಸೆಯ ಸಂಕೋಲೆಯು.

ಪ್ರಜ್ಞಾಹೀನ ಅವಸ್ಥೆಯಲ್ಲಿ ಆಸೆಗೆ
ಸೆಳೆತವೆಷ್ಟಿರುತ್ತದೆ ಎಂದರೆ ಅದರಿಂದ
ಬಿಡಿಸಿಕೊಳ್ಳುವುದೇ ಅತಿ ದೊಡ್ಡ ಬಿಡುಗಡೆ.

ಒಂದು ಸಣ್ಣ ಕಥೆ:

ಹಿಂದೊಮ್ಮೆ ಒಬ್ಬ ಶಿಲ್ಪಿ ಇದ್ದನು. ಆತನಿಗೆ ತಾನಿದ್ದ ಸ್ಥಿತಿ ತೃಪ್ತಿಕರವಾಗಿರಲಿಲ್ಲ. ಒಂದು ದಿನ ಆತನು ಒಬ್ಬ ಶ್ರೀಮಂತ ವರ್ತಕನ ಮನೆಯ ಮುಂದೆ ಹೋಗುತ್ತಿದ್ದನು. ಆ ಧನಿಕನ ಮನೆಯಲ್ಲಿ ತೆರೆದ ಬಾಗಿಲಿನ ಮೂಲಕ ಅನೇಕ ಭೋಗ ವಸ್ತುಗಳನ್ನೂ, ಗಣ್ಯವ್ಯಕ್ತಿಗಳನ್ನೂ ನೋಡಿದನು. ಆತನಿಗೆ ಆ ವರ್ತಕನು ಬಹಳ ಪ್ರಬಲನೆನಿಸಿತು. ಆತನಿಗೆ ಅಸೂಯೆಯುಂಟಾಗಿ, ತಾನೂ ವರ್ತಕನಂತಿರಬೇಕು ಎಂದು ಬಯಸಿದನು.

ಆತನ ಪರಮಾಶ್ಚರ್ಯಕ್ಕೆ ಆ ಶಿಲ್ಪಿಯು
ಇದ್ದಕ್ಕಿದ್ದಂತೆಯೇ ತಾನೆಂದುಕೊಂಡುದ್ದಕ್ಕಿಂತಲೂ
ಹೆಚ್ಚು ವೈಭವಪೂರ್ಣನೂ ಪ್ರಭಾವಶಾಲಿಯೂ ಆದ
ವರ್ತಕನಾದನು.

ಆತನು ಒಂದು ದಿನ ಬೀದಿಯಲ್ಲಿ ನಿಂತಿದ್ದಾಗ,
ದೊಡ್ಡ ಅಧಿಕಾರಿಯೊಬ್ಬರು ಹಾದು
ಹೋಗುತ್ತಿದ್ದದ್ದನ್ನು ಕಂಡನು. ಆತನನ್ನು
ಪರಿಚಾರಕರೂ, ಸೈನಿಕರೂ, ಜಾಗಟೆ ಬಾರಿಸುತ್ತಾ
ಸುಂದರವಾದ ಮೇನೆಯಲ್ಲಿ ಒಯ್ಯುತ್ತಿದ್ದರು.
ಪ್ರತಿಯೊಬ್ಬರೂ, ಎಷ್ಟೇ ಶ್ರೀಮಂತರಾದವರೂ ಸಹ,
ಆ ಮೆರವಣಿಗೆಗೆ ಶಿರಬಾಗಬೇಕಾಗಿತ್ತು.

ಆತನು, 'ಆ ಅಧಿಕಾರಿಯು ಎಷ್ಟು ಪ್ರಭಾವಶಾಲಿ!, ನಾನೂ ಹಾಗಾದರೆ!' ಎಂದುಕೊಂಡನು.

ತಕ್ಷಣವೇ ಆತನೊಬ್ಬ ದೊಡ್ಡ ಅಧಿಕಾರಿಯಾದನು
ಹಾಗೂ ಆತನನ್ನು ಮೇನೆಯಲ್ಲಿ ಎಲ್ಲೆಡೆಯೂ
ಹೊತ್ತೊಯ್ಯಲಾಗುತ್ತಿತ್ತು.

ಒಂದು ದಿನ ವಿಪರೀತ ಸೆಖೆಯಾಗಿ, ಅಂಟಿಕೊಳ್ಳುತ್ತಿದ್ದ ಆ ಆಸನದಲ್ಲಿ ಕುಳಿತುಕೊಳ್ಳಲು ಬಹಳ ಕಷ್ಟವಾಯಿತು. ತಲೆ ಎತ್ತಿ ಸೂರ್ಯನನ್ನು ನೋಡಿದನು. ಆಕಾಶದಲ್ಲಿ ಸೂರ್ಯನು ಬಹಳ ರಮ್ಯವಾಗಿ ಪ್ರಜ್ವಲಿಸುತ್ತಿದ್ದನು. ಆತನು, 'ಸೂರ್ಯನೆಷ್ಟೊಂದು ಪ್ರಭಾವಶಾಲಿ! ನಾನು ಸೂರ್ಯನಾದರೆ ಎಷ್ಟು ಚೆನ್ನ!' ಎಂದುಕೊಂಡನು.

ಆತನು ಸೂರ್ಯನೇ ಆಗಿಬಿಟ್ಟನು! ನಂತರ ಎಲ್ಲದರ
ಮೇಲೂ ತನ್ನ ಪ್ರಭಾವವನ್ನು ಬೀರುತ್ತಾ
ಸಂತೋಷಗೊಂಡನು.

ಒಂದು ದಿನ ಒಂದು ದೊಡ್ಡ ಕಾರ್ಮೋಡವು
ಆತನಿಗೂ ಭೂಮಿಗೂ ನಡುವೆ ಬಂದು, ಆತನ
ಬೆಳಕು ಕೆಳಗಿನ ಯಾವುದರ ಮೇಲೂ
ಬೀಳದಂತಾಯಿತು. ಆತನಿಗೆ ಆಶ್ಚರ್ಯವಾಯಿತು.

ಆತನು, ‘ಆ ದೊಡ್ಡ ಕಾರ್ಮೋಡವೆಷ್ಟು ಬಲಶಾಲಿ!
ನಾನೂ ಒಂದು ಕಾರ್ಮೋಡವಾದರೆ ಎಷ್ಟು
ಚೆನ್ನಾಗಿದ್ದೀತು!’ ಎಂದುಕೊಂಡನು.

ಆತನು ಮೋಡವಾಗಿ ಹೊಲ-ಗದ್ದೆಗಳನ್ನೂ, ಹಳ್ಳಿಗಳನ್ನೂ ಮಳೆಯಿಂದ ತೋಯಿಸಿದನು.

ಆ ಕೂಡಲೇ ತನ್ನನ್ನು ಯಾವುದೋ ದೊಡ್ಡ ಶಕ್ತಿಯು ತಳ್ಳಿಹಾಕುತ್ತಿರುವಂತಾಯಿತು. ನೋಡಿದರೆ, ಅದು ಮಾರುತವಾಗಿದ್ದಿತು. ಆತನು, ‘ಗಾಳಿಗಿಷ್ಟು ಶಕ್ತಿ! ನಾನೇ ಗಾಳಿಯಾಗಿದ್ದಿದ್ದರೆಷ್ಟು ಚೆನ್ನಾಗಿತ್ತು!’ ಎಂದುಕೊಂಡನು.

ಆತನು ಗಾಳಿಯಾಗಿ ಮನೆಗಳ ಮಾಳಿಗೆಗಳ ಮೇಲೂ, ಕಾಡುಗಳ ಮೇಲೂ ಬಲವಾಗಿ ಬೀಸಿದನು.

ಒಂದು ದಿನ, ತಾನೆಷ್ಟು ಜೋರಾಗಿ ಬೀಸಿದರೂ
ಅಲ್ಲಾಡದೇ ಇದ್ದ ಒಂದು ವಸ್ತುವು ಎದುರಾಯಿತು.
ಅದು ದೊಡ್ಡ, ಎತ್ತರವಾದ ಬಂಡೆ. ಆತನು ‘ಈ
ಬಂಡೆಗಿಷ್ಟು ಶಕ್ತಿ! ನಾನೇ ಆ ಬಂಡೆಯಾದರೆ!’
ಎಂದುಕೊಂಡನು.

ಆತನು ಪ್ರಪಂಚದಲ್ಲೇ ಎಲ್ಲಕ್ಕಿಂತಲೂ ಗಟ್ಟಿಯಾದ ಬಂಡೆಯಾದನು. ಆದರೆ ಆತನು ಅಲ್ಲಿ ನಿಂತಿದ್ದಾಗ, ಒಂದು ಸುತ್ತಿಗೆಯ ಉಳಿಯನ್ನು ತನ್ನ ಗಟ್ಟಿಯಾದ ಭಾಗಕ್ಕೆ ಹೊಡೆಯುತ್ತಿರುವ ಶಬ್ದ ಕೇಳಿಸಿತು. ಹಾಗೂ ತಾನೇ ಬದಲಾಗುತ್ತಿರುವುದನ್ನು ಕಂಡನು. ಆತನು, ‘ಬಂಡೆಗಿಂತಲೂ ಬಲಶಾಲಿ- ಯಾವುದೇನಿರಬಹುದು?’ ಎಂದುಕೊಂಡು ಕೆಳಗೆ ನೋಡಿದನು.

ಅಲ್ಲಿ, ಬಂಡೆಯ ಕೆಳಭಾಗದಲ್ಲಿ ಒಬ್ಬ ಶಿಲ್ಪಿಯನ್ನು ಕಂಡನು!

ನಮ್ಮ ಮನಸ್ಸು, ಯಾವಾಗಲೂ ನಾವು ಸಾಧಿಸಿರುವುದಕ್ಕಿಂತಲೂ, ಇನ್ನೂ ನಾವು ಸಾಧಿಸದೇ ಇರುವಂತಹದು ಶ್ರೇಷ್ಠವೆಂದುಕೊಳ್ಳುತ್ತದೆ ಎಂಬುದನ್ನು ಈ ಕಥೆಯು ಸ್ಪಷ್ಟವಾಗಿ ತೋರಿಸುತ್ತದೆ. ಆಚೆಯ ದಡದ ಹುಲ್ಲು ಯಾವಾಗಲೂ ಹೆಚ್ಚು ಹಸಿರೆನಿಸುತ್ತದೆ! ಆದರೆ, ಆಚೆಯ ದಡಕ್ಕೆ ಹೋದಾಗ ಏನಾಗುತ್ತದೆ? ಅಲ್ಲಿಂದ ಕಾಣುವ ಈಚೆಯ ದಡದ ಹುಲ್ಲೇ ಹೆಚ್ಚು ಹಸಿರೆನಿಸುತ್ತದೆ. ನಾವು ಒಂದರಿಂದ ಒಂದಕ್ಕೆ, ಒಂದು ಆಸೆಯಿಂದ ಮತ್ತೊಂದಕ್ಕೆ, ಒಂದು ದೃಷ್ಟಿ ಕೋನದಿಂದ ಮತ್ತೊಂದಕ್ಕೆ ಜಿಗಿಯುತ್ತೇವೆ. ಆದರೆ, ನಾವು ಸಂತೋಷವಾಗಿರುವುದೇ ಇಲ್ಲ.

ಅತ್ಯಂತ ಕಷ್ಟ
ಕಾಲದಲ್ಲಿಯೂ
ಸಹ, ಜೀವನವು
ಒಂದು
ಅದೃಶ್ಯವಾಗುವ
ಕನಸೆಂದು
ಸನ್ಯಾಸಿಯು
ಅರಿತಿರುತ್ತಾನೆ.

ಪ್ರತಿಯೊಂದೂ ಸದಾ ಬದಲಾಗುತ್ತಿದೆಯೆಂದೂ, ಪ್ರತಿಯೊಂದೂ ಅದು ಇರುವಂತೆಯೇ ಚೆನ್ನಾಗಿದೆ ಎಂದೂ ಸ್ಪಷ್ಟವಾಗಿ ನೋಡುವವನೇ ಸನ್ಯಾಸಿ. ಸೌಂದರ್ಯವು ನೋಡುವವನ ದೃಷ್ಟಿಯಲ್ಲಿ ಅಡಗಿದೆಯೆಂದೂ ಆತನಿಗೆ ಗೊತ್ತು. ಆದುದರಿಂದಲೇ ಆತನು ಮೊದಲು ತನ್ನ ಕಣ್ಣುಗಳನ್ನು ಸ್ವಚ್ಛಗೊಳಿಸಿಕೊಳ್ಳಲು ತೊಡಗುತ್ತಾನೆ. ಕಣ್ಣುಗಳು ಆತ್ಮದ ಕಿಟಕಿಗಳು, ಆದುದರಿಂದ ಆತನ ಕೆಲಸವು ಅಂತಃಸತ್ವದ ಮಟ್ಟದಲ್ಲಿರುತ್ತದೆ. ಪ್ರಪಂಚವನ್ನು ಕೆಂಪು ಬಣ್ಣದ ಗಾಜಿನ ಮೂಲಕ ನೋಡಿದರೆ ಎಲ್ಲವೂ ಕೆಂಪಾಗಿಯೇ ಕಾಣುತ್ತದೆ. ಹಸಿರು ಬಣ್ಣದ

ಗಾಜಿನ ಮೂಲಕ ನೋಡಿದರೆ ಎಲ್ಲವೂ
ಹಸಿರಾಗಿಯೇ ಕಾಣುತ್ತದೆ. ಸ್ವಚ್ಛವಾದ ಕಣ್ಣಿನಿಂದ
ನೋಡಿದರೆ ಎಲ್ಲವೂ ಸ್ವಚ್ಛವಾಗಿಯೂ,
ಸುಂದರವಾಗಿಯೂ ಕಾಣುತ್ತದೆ. ವಿಶ್ವಶಕ್ತಿಯು
ಯಾವಾಗಲೂ ಸುಂದರವಾಗಿಯೇ ಇದೆ. ಆದರೆ,
ಅದನ್ನು ನೋಡುವುದನ್ನು ನಾವೇ
ತಪ್ಪಿಸಿಕೊಂಡಿದ್ದೇವೆ. ಸ್ವಚ್ಛವಾದ ಕಣ್ಣುಗಳಿಂದ
ನೋಡಬೇಕೆಂಬ ತೀರ್ಮಾನವೇ ಸನ್ಯಾಸ.

ಜೀವನವೇ ಸದಾ ಬದಲಾಗುತ್ತಿದ್ದರೆ, ನಾವೇಕೆ ಅದನ್ನು ಕಟ್ಟಿಹಾಕಬೇಕು? ಬುದ್ಧನು ಧಮ್ಮಪದದಲ್ಲಿ 'ಜೀವನವು ಆಕಾಶದ ಮಿಂಚಿನಂತೆ' ಎಂದು ಹೇಳುತ್ತಾನೆ. ಜೀವನವು ನಶ್ವರ. ಹಾಗಾದರೆ, ನಾವೇನು ಮಾಡಲು ಪ್ರಯತ್ನಿಸುತ್ತಿದ್ದೇವೆ? ನಾವು ಅಸಾಧ್ಯವಾದದ್ದೊಂದನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಕೆಲಸವೇನಿದ್ದರೂ, ನೋಡುವುದು, ಸಂತೋಷಪಡುವುದು ಮತ್ತು ಮುಂದೆ ಸಾಗುವುದು. ಎಲ್ಲವೂ ಸರಿದುಹೋಗುತ್ತಿರುವ ಬ್ರಹ್ಮಾಂಡದ ವ್ಯಕ್ತರೂಪವೆಂದ ಮೇಲೆ ಅಹಂಕಾರಕ್ಕಾಗಲೀ, ಭಯಕ್ಕಾಗಲೀ, ದುರಾಸೆಗಾಗಲೀ ಎಡೆ ಎಲ್ಲಿ? ಸನ್ಯಾಸವು ತಾನಾಗಿಯೇ ಏನನ್ನೂ ಬದಲಾಯಿಸಿಬಿಡುವುದಿಲ್ಲ. ಎಲ್ಲವೂ ಇದ್ದಂತೆಯೇ ಇರುತ್ತವೆ. ಆದರೆ ಅದು ನೀವು ವಿಷಯಗಳನ್ನು ನೋಡುವ ರೀತಿಯನ್ನು ಬದಲಾಯಿಸುತ್ತದೆ. ಸನ್ಯಾಸ ಆಗುವುದು ನಿಮ್ಮ ಅಂತರಂಗದಲ್ಲಿ. ಸನ್ಯಾಸವು ಬಾಹ್ಯಪ್ರಪಂಚಕ್ಕೆ ಸಂಬಂಧಿಸಿದುದಲ್ಲ.

ಸನ್ಯಾಸವು ಸಾರಥಿಯನ್ನು ಎಚ್ಚರಿಸಿದಂತೆ.
ಮಾನವನ ದೇಹವು ಒಂದು ರಥದಂತೆ ಹಾಗೂ
ಆತನ ಪ್ರಜ್ಞೆಯು ಸಾರಥಿಯಂತೆ, ಆದರೆ ಆ
ಸಾರಥಿಯು ಗಾಢವಾದ ನಿದ್ರೆಯಲ್ಲಿದ್ದಾನೆ ಮತ್ತು
ರಥವು ಕುದುರೆಗಳ ಇಷ್ಟಬಂದಂತೆ ಸಾಗುತ್ತಿದೆ. ಐದು
ಕುದುರೆಗಳೆಂದರೆ, ಪ್ರತಿಯೊಂದೂ ಬೇರೆ ಬೇರೆ
ಭಾವನೆಗಳನ್ನು ಹೊಂದಿರುವ ಪಂಚೇಂದ್ರಿಯಗಳು.
ಅವುಗಳ ಪೈಕಿ ಯಾವುದೂ ಸತ್ಯವಲ್ಲ. ಅವು ಕೇವಲ
ಕ್ಷಣಿಕ ಭಾವನೆಗಳು!

ಅತ್ಯಂತ ಕಷ್ಟ ಕಾಲದಲ್ಲಿಯೂ ಸಹ, ಜೀವನವು
ಒಂದು ಅದೃಶ್ಯವಾಗುವ ಕನಸೆಂದು ಸನ್ಯಾಸಿಯು
ಅರಿತಿರುತ್ತಾನೆ. ಗೆಲುವು ಹಾಗೂ ಸೋಲುಗಳಿಗೆ
ಆತನು ಪೂರ್ತಿಯೋ ಬೇರೆಯಾದ ಸ್ಪಷ್ಟ
ನಿರೂಪಣೆಗಳನ್ನಿಟ್ಟುಕೊಂಡಿರುತ್ತಾನೆ. ಆತನು
ಗೆಲುವನ್ನೇ ಆಗಲೀ ಸೋಲನ್ನೇ ಆಗಲೀ
ಹೊರುವುದಿಲ್ಲ. ಅದೇ ಒಬ್ಬ ಸಂಸಾರಿಯು ಎಲ್ಲಿಗೇ
ಹೋದರೂ ಸೋಲು-ಗೆಲುವುಗಳನ್ನು ತನ್ನೊಂದಿಗೆ
ಹೊತ್ತು ಹೋಗುತ್ತಾನೆ. ಸಮಸ್ಯೆಯು
ಪ್ರಾರಂಭವಾಗುವುದು ಅಲ್ಲಿಯೇ.

ಶರಣಾಗತಿ, ಪ್ರೀತಿ, ಅನುಕಂಪ, ಸನ್ಯಾಸ

ಸನ್ಯಾಸವೆಂದರೆ ವಿಶ್ವಶಕ್ತಿಗೆ 'ಹೌದು'
ಎನ್ನುವುದು. 'ಹೌದು' ಎನ್ನುವುದೇ ಶರಣಾಗತಿ.
'ಹೌದು' ಎನ್ನುವುದೇ ಪ್ರೀತಿ ಹಾಗೂ ಅನುಕಂಪ.

ಮಾನವನ ಮನಸ್ಸಿಗೆ ಯಾವಾಗಲೂ 'ಇಲ್ಲ' ಎನ್ನುವುದನ್ನು ಕಲಿಸಲಾಗಿದೆ. 'ಇಲ್ಲ' ಎನ್ನುವುದು ಅಹಂಕಾರವನ್ನು ಹೆಚ್ಚಿಸುತ್ತದೆ. 'ಹೌದು' ಎನ್ನುವುದು ಅಹಂಕಾರವನ್ನು ಕುಗ್ಗಿಸುತ್ತದೆ. ಆದುದರಿಂದ ಮನಸ್ಸು 'ಇಲ್ಲ' ಎನ್ನುತ್ತಲೇ ಇರುತ್ತದೆ. ಸನ್ಯಾಸವೆಂದರೆ ವಿಶ್ವಶಕ್ತಿಗೆ 'ಹೌದು' ಎನ್ನುವುದು. ವಿಶ್ವಶಕ್ತಿಯು ನಿಮ್ಮನ್ನು ಸೃಷ್ಟಿಸಿದೆ. ಅದು ತನ್ನ ದೈವಲೀಲೆಯನ್ನು ನಿಮ್ಮ ಮೂಲಕ ವ್ಯಕ್ತಪಡಿಸಲು ಕಾದಿದೆ. 'ಹೌದು' ಎಂದೆನ್ನುವ ಮೂಲಕ ದೈವಲೀಲೆಯು ಸಂಭವಿಸಲು ಅವಕಾಶ ಮಾಡಿಕೊಡುತ್ತಿದ್ದೀರ. ದೈವಲೀಲೆಯು ನಡೆದಾಗ ವಿಶ್ವಶಕ್ತಿಯ ಹರಿವಿನ ಪ್ರಕಾರ ವಿಷಯಗಳು ನಿರ್ದಿಷ್ಟವಾಗಿ ನಡೆಯುತ್ತವೆ. ಆಗ ಎಲ್ಲವೂ ಮಂಗಳಕರವಾಗಿರುವುದು.

'ಹೌದು' ಎಂದು ಹೇಳುವ ಪ್ರಯತ್ನದಲ್ಲಿ ನೀವು ಮೃದುವಾಗುತ್ತಾ ಬರುವಿರಿ. ಸನ್ಯಾಸವು ಮೃದುವಾಗುವುದನ್ನು ಕುರಿತದ್ದು. 'ಇಲ್ಲ' ಎನ್ನುತ್ತಿರುವವರೆಗೂ ಗಡುಸಾಗಿರುವಿರಿ. 'ಹೌದು' ಎನ್ನುವ ಪ್ರಯತ್ನ ಮಾಡಿದಾಗ ಮೃದುವಾಗತೊಡಗುವಿರಿ. 'ಹೌದು' ಎನ್ನುವ ಪ್ರಜ್ಞಾಪೂರ್ವಕ ನಿರ್ಧಾರ ಮಾಡಿದಾಗ ಅದು ಪ್ರಾರಂಭವಾಗುತ್ತದೆ. ಅಲ್ಲಿಯೇ ಗುರುವು ಪಾತ್ರವಹಿಸುವುದು. ಗುರುಗಳು ಏನು ಹೇಳುತ್ತಾರೋ ಅದಕ್ಕೆ ವಿವರಣೆಯನ್ನು ಕೇಳದೆಯೇ 'ಹೌದು' ಎನ್ನುವುದೇ ಸನ್ಯಾಸ. ನೀವು ಗುರುಗಳಲ್ಲಿ ಸಂಪೂರ್ಣವಾಗಿ ವಿಶ್ವಾಸವಿಡಲು ಪ್ರಾರಂಭಿಸಿದಾಗ ನಿಮ್ಮಲ್ಲಿ ಸನ್ಯಾಸವು ಸಂಭವಿಸಲಾರಂಭಿಸುತ್ತದೆ. ಗುರುಗಳಿಗೆ ನನಗಿಂತಲೂ ಚೆನ್ನಾಗಿ ಗೊತ್ತು ಎಂಬ ಒಂದು ತಿಳಿವಳಿಕೆ ಥಟ್ಟನೆ ನಿಮಗೆ ಹೊಳೆಯುತ್ತದೆ. ಎಲ್ಲಿಯೋ ನಿಮಗೆ ಸಿಗುತ್ತದೆ. ಆಗ ನಿಮ್ಮ ಮನಸ್ಸಿನ ಮೇಲಿನ ಹತೋಟಿಯನ್ನು ಬಿಡಲು ಆರಂಭಿಸಿ, ಗುರುಗಳ ಕರಗಳನ್ನು ಹಿಡಿಯಲಾರಂಭಿಸುವಿರಿ. ಗುರುಗಳ ಕರಗಳು ಯಾವಾಗಲೂ ಚಾಚಿಕೊಂಡಿರುತ್ತವೆ. ಆದರೆ ನೀವು ಅವುಗಳನ್ನು ಹಿಡಿಯಲು ತಯಾರಿರಲಿಲ್ಲ. ಒಮ್ಮೆ 'ಹೌದು' ಎಂಬುದು ಪ್ರಾರಂಭವಾದಾಗ ನೀವು ಅವರ ಕೈಗಳನ್ನು ಹಿಡಿಯುವಿರಿ.

ಆಗ ಒಂದು ಅಂತಃಸ್ಥಳವು ನಿರ್ಮಾಣವಾಗಿ, ಅಲ್ಲಿ ಪ್ರೀತಿ ಉಂಟಾಗುತ್ತದೆ. ಪ್ರೀತಿಯು ಉಂಟಾಗುವುದು ನೀವು 'ಹೌದು' ಎನ್ನಲು ಪ್ರಾರಂಭಿಸಿದಾಗಲೇ. 'ಹೌದು' ಎನ್ನುವುದರಿಂದ ಪ್ರೀತಿಸುವುದನ್ನು ಪ್ರಾರಂಭಿಸುವುದು ಮಾತ್ರವಲ್ಲ, ಬೇರೆಯವರು ನಿಮ್ಮನ್ನು ಪ್ರೀತಿಸಲೂ ಅವಕಾಶ ಮಾಡಿಕೊಡುವಿರಿ. ಆಗ ಮೊದಲಿಗೆ ಬಂಡೆಯಂತಿದ್ದ ನಿಮ್ಮ ಅಂತರಂಗವು ಹತ್ತಿಯಂತಾಗಲಾರಂಭಿಸುತ್ತದೆ! ಅದು ಪ್ರೀತಿಯಲ್ಲಿ ತೋಯ್ದು ಹೋಗುತ್ತದೆ. ಆ ಪ್ರೀತಿಯು ಕೇವಲ ಒಬ್ಬ ವ್ಯಕ್ತಿಯ ಕಡೆಗಾಗಲೀ, ಯಾವುದೋ ಒಂದು ಕಾರಣಕ್ಕಾಗಿಯಾಗಲೀ ಅಲ್ಲ. ಅದೊಂದು ಉಕ್ಕಿ ಹರಿಯುತ್ತಿರುವ ಶಕ್ತಿ. ಅದು ಕಾರಣರಹಿತವಾಗಿದ್ದು ಪೂರ್ಣವಾಗಿ ವಿಶ್ವಶಕ್ತಿಯೆಡೆಗೆ ಇರುತ್ತದೆ. ನೀವು ಗಿಡ-ಮರಗಳೊಡನೆಯೂ ಸುತ್ತಮುತ್ತಲಿನ ಎಲ್ಲದರೊಡನೆಯೂ ಸಂಯೋಗದಿಂದಿರಲು ಆರಂಭಿಸುವಿರಿ. ನಿಮಗೆ ಜೀವನವು ಒಂದು ಹಾಡು ಎಂದೆನಿಸುತ್ತದೆ. ಆ ಹಾಡು ನೀವು ಒಂದು ಭಾಗವಾಗಿರುವ ವಿಶ್ವಶಕ್ತಿಯ ಹಾಡಾಗಿರುತ್ತದೆ. ನೀವು ನಿಮ್ಮನ್ನೂ ಸೇರಿದಂತೆ ಎಲ್ಲದರ ಮತ್ತು ಸುತ್ತಮುತ್ತಲಿರುವ ಪ್ರತಿಯೊಬ್ಬರೊಂದಿಗೆ ಅನುರಣನಾ ಭಾವದಿಂದಿರುತ್ತೀರ. ನಿಮ್ಮ ಕೆಲಸಗಳೆಲ್ಲವೂ ನಿಮ್ಮನ್ನು ಸದಾಕಾಲವೂ ಆವರಿಸಿರುವ ಸಂತೋಷ ಮತ್ತು ಹರ್ಷೋನ್ಮಾದಗಳ ಸುರಿಮಳೆಯಾಗಿರುತ್ತವೆ.

ಒಂದು ಚಿಕ್ಕ ಕಥೆ:
ಕೇಂಬ್ರಿಡ್ಜ್ ಬೌದ್ಧ
ಸಂಘಕ್ಕೆ ಒಬ್ಬ ಝೆನ್
ಗುರುಗಳು ಆಗಮಿಸಿದರು.
ಅವರ ಆಗಮನಕ್ಕಾಗಿ
ಪ್ರತಿಯೊಬ್ಬರೂ ಆ
ಸ್ಥಳವನ್ನೆಲ್ಲಾ ಧೂಳು
ಕೆಡವುತ್ತಾ ಶುಚಿಗೊಳಿಸುತ್ತಿದ್ದುದನ್ನು ಅವರು
ಕಂಡರು.

ಅಲ್ಲಿದ್ದವರಿಗೆಲ್ಲಾ ಅವರನ್ನು ಕಂಡು
ಆಶ್ಚರ್ಯವಾಯಿತು. ಏಕೆಂದರೆ ಅವರು ಮಾರನೆಯ
ದಿನ ಬರಬೇಕಾಗಿತ್ತು.

ಗುರುಗಳು ಬಂದವರೇ ತಮ್ಮ ಉಡುಪಿನ
ತೋಳುಗಳನ್ನು ಹಿಂದಕ್ಕೆ ಮಡಚಿಕೊಂಡು
ತಯಾರಿಯಲ್ಲಿ ತಾವೂ ಸೇರಿಕೊಂಡರು. ಅವರಿಗೆ
ಸಹಾಯಮಾಡಬೇಕೆನ್ನುವುದನ್ನು ಇತರರಿಗೆ
ನಂಬಲಾಗಲಿಲ್ಲ. ಆಗ ಅವರು ಕೇಳಿದರು, 'ನನ್ನ
ಅದ್ದೂರಿಯ ಆಗಮನಕ್ಕಾಗಿ ನಾನೂ ಸಹ
ತಯಾರಿನಡೆಸಬಾರದೇನು?' ಎಂದು.

ವಿಶ್ವಶಕ್ತಿಯೊಂದಿಗೆ ಅನುರಣಿಸುತ್ತಿರುವಾಗ ನಿಮ್ಮನ್ನೊಳಗೊಂಡಂತೆ ಎಲ್ಲವನ್ನೂ ಆಸ್ವಾದಿಸುತ್ತೀರಿ. ನೀವು ಯಾವುದರಿಂದಲೂ ಬೇರೆ ಎಂದು ನೀವು ನೋಡುವುದಿಲ್ಲ. ಯಾವುದಕ್ಕೂ ಪ್ರತ್ಯೇಕವಾದ ಕಾರಣವನ್ನು ಕಾಣುವುದಿಲ್ಲ. ಪ್ರಕೃತಿಯೊಂದಿಗೆ ಸಂಯೋಗದಿಂದಿರುವ ಕೆಲವರಿದ್ದಾರೆ. ಆದರೆ ಜನಗಳ ವಿಷಯಕ್ಕೆ ಬಂದಾಗ ಅವರು ಬಹಳವಾಗಿ ಸೋತು ಹೋಗುತ್ತಾರೆ. ಅಂದರೆ, ಅವರ ಪ್ರಕೃತಿಯೊಂದಿಗಿನ ಸಂಯೋಗವೂ ಸಹ ನಿಜವಾದ ಸಂಯೋಗವಲ್ಲ. ಪ್ರಕೃತಿಯ ಮೇಲಿನ ಸಂವೇದನೆಯೊಂದೇ ಪ್ರೀತಿಯನ್ನಳೆಯುವ ಅಳತೆಗೋಲಲ್ಲ. ಕೆಲವರು ತಾವು ಈಗಾಗಲೇ ವಿಶ್ವಶಕ್ತಿಯೊಂದಿಗೆ ಸಂಯೋಗದಿಂದಿರುವುದಾಗಿ ನನಗೆ ಹೇಳುತ್ತಾರೆ. ಮರಗಳೂ ಪ್ರಾಣಿಗಳೂ ನಿಮಗೆ ತೊಂದರೆ ಉಂಟುಮಾಡುವುದಿಲ್ಲ. ಆದುದರಿಂದಲೇ ನೀವು ಅವುಗಳೊಂದಿಗೆ ಸಂಯೋಗದಿಂದಿರುವುದಾಗಿ ಹೇಳುತ್ತೀರಿ! ಅವು ಸುಮ್ಮನಿರುತ್ತವೆ. ನೀವು ಏನನ್ನು ಬೇಕಾದರೂ ಅವುಗಳಿಗೆ ಹೇಳಬಹುದು. ನಿಮ್ಮ ಭಾವನೆಗಳನ್ನು ಅವುಗಳ ಮೇಲೆ ಹೇರಬಹುದು, ಹಿಂತೆಗೆದುಕೊಳ್ಳಬಹುದು ಹಾಗೂ ಸಂತೋಷಪಡಬಹುದು, ಅಷ್ಟೇ. ಅದೊಂದು ಅಹಂಕಾರದ ವಿಹಾರ. ಕಷ್ಟವನ್ನು ಎದುರಿಸಿದಾಗಲೂ ಇಡೀ ವಿಶ್ವಶಕ್ತಿಯೊಂದಿಗೆ ಸಂಯೋಗದಿಂದಿರುವ ಸಾಮರ್ಥ್ಯ ಹೊಂದುವುದೇ ಸಾರ – ಅಂತಹ ಸಂದರ್ಭಗಳಲ್ಲಿಯೂ ಆ ಪ್ರೀತಿಯ ಅಂತಃಸ್ಥಳವನ್ನು ನಿರ್ಮಿಸಿಕೊಳ್ಳುವುದು ಸಾಧ್ಯವಾದರೆ, ಆಗ ನೀವು ಸಂಯೋಗದಿಂದಿರುವಿರೆಂದು ಅರ್ಥ!

ಒಮ್ಮೆ ಒಬ್ಬ ಕವಿಯು ಒಂದು ಪ್ರೇಮಗೀತೆಯನ್ನು ಬರೆದು ತನ್ನ ಸ್ನೇಹಿತರಿಗೆ ಕಳುಹಿಸಿದನು.

ಕೆಲವು ದಿನಗಳ ನಂತರ ಆತನಿಗೊಂದು ಪತ್ರ
ಬಂದಿತು. ಅದು ಆತನು ಪ್ರೇಮಗೀತೆಯನ್ನು
ಕಳಿಸಿದ್ದವರ ಪೈಕಿ ಒಬ್ಬಳದು. ಆಕೆಯು, 'ನಿಮ್ಮ
ಪ್ರೇಮಗೀತೆಯಿಂದ ಪರವಶಳಾದೆನು. ದಯವಿಟ್ಟು
ಮನೆಗೆ ಬನ್ನಿ, ನಮ್ಮ ತಾಯಿತಂದೆಯರನ್ನು ಕಂಡು
ನಮ್ಮ ಮದುವೆಯ ಪ್ರಸ್ತಾಪ ಮಾಡಿ', ಎಂದು
ಬರೆದಿದ್ದಳು.

ಕವಿಗೆ ಆಶ್ಚರ್ಯವಾಯಿತು. ಅವನು ಪ್ರತಿಯಾಗಿ ಬರೆದನು, 'ನನ್ನ ಕೆಲವು ಆತ್ಮೀಯರಿಗೆ ಹಾಡೋಣವೆಂದು ನನ್ನ ಹೃದಯದಿಂದ ಬಂದ ಪ್ರೇಮಗೀತೆಯದು, ಅಷ್ಟಲ್ಲದೆ ಇನ್ನೇನಿಲ್ಲ!' ಎಂದು.

ಆಕೆಯು 'ನೀನೊಬ್ಬ ಕಪಟಿ. ನಿನ್ನಿಂದಾಗಿ ನಾನು
ನನ್ನ ಜೀವನದಲ್ಲಿ ಇನ್ನು ಯಾವ ಕವಿಗೂ
ಎಡೆಕೊಡುವುದಿಲ್ಲ' ಎಂದು ಉತ್ತರ ಬರೆದಳು.

ಸಮಸ್ಯೆ ಏನೆಂದರೆ ಎಲ್ಲವೂ ವೈಚಾರಿಕತೆಯ ಕಾರಣದಿಂದ ನಡೆಯುತ್ತದೆ. ಪ್ರೀತಿಯೆಂಬುದು ಕೇವಲ ಕಾಮದ ಮಟ್ಟಕ್ಕೆ ಇಳಿದಿದೆ. ಅದುವೇ ಸಮಸ್ಯೆ. ನಿಜವಾದ ಪ್ರೀತಿಯು, ವಿಶ್ವಶಕ್ತಿಗೆ ನೀವು 'ಹೌದು' ಎಂದು ಹೇಳಲು ಆರಂಭಿಸಿದಾಗ, ಪ್ರಾರಂಭವಾಗುವ ಉಕ್ಕಿ ಹರಿಯುವ ಶಕ್ತಿಯ ಅಭಿವ್ಯಕ್ತತೆ.

ಸುಪ್ರಸಿದ್ಧ ಕವಿ ಕಬೀರರು ಹೇಳುತ್ತಾರೆ, 'ನಿಮ್ಮನ್ನು ಪ್ರೀತಿಯು ಆವರಿಸಿದಾಗ ಎರಡನೇ ಆಲೋಚನೆಯನ್ನೇ ಮಾಡಬೇಡಿರಿ. ಸುಮ್ಮನೆ ಅದರೊಳಗೆ ಧುಮುಕಿಬಿಡಿರಿ. ಯೋಚನೆಮಾಡುತ್ತಾ ಹೋದರೆ, ಅದು ವಿಶ್ರಾಂತಿ ಬೇಕೇ ಬೇಕೆಂದು ಕಣ್ಣಿಗೆ ಗಾಢ ನಿದ್ರೆ ಹತ್ತಿರುವಾಗ ತಲೆದಿಂಬನ್ನು ಸರಿಯಾಗಿಟ್ಟುಕೊಳ್ಳಲು ತೊಡಗಿದಂತಾಗುತ್ತದೆ' ಎಂದು. ಅವರು ಹೇಳುವುದು, 'ಒಂದು ವೇಳೆ ತಲೆಯನ್ನೇ ಕೊಡಬೇಕಾಗಿ ಬಂದರೂ ಏನಂತೆ? ಅದಕ್ಕೇಕೆ ಅಳಬೇಕು!' ಎಂದು.

ಗುರುಗಳು ಅನೇಕ ಜನ್ಮಗಳು ನಿಮಗಾಗಿ
ಕಾಯುತ್ತಾರೆ, ಆದರೆ ನೀವು 'ಹೌದು' ಎನ್ನಬೇಕು.
ನೆನಪಿಡಿ: ಗುರುಗಳು ಸಂಭಾವಿತರು. ಅವರು ನೀವು
ಬಂಧನದಲ್ಲಿಯೇ ಇರಲು ಸ್ವಾತಂತ್ರ್ಯವನ್ನು
ಕೊಡುತ್ತಾರೆ. ಅವರು
ಕಾಯುತ್ತಾರೆ. ಒಮ್ಮೆ
ನೀವು 'ಹೌದು'
ಎಂದರೆ, ನಿಮ್ಮನ್ನು
ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಪ್ರೇಮದ
ಬಲವನ್ನು ನಿಮಗೆ ತೋರಿಸಬಲ್ಲವರು
ಗುರುಗಳೊಬ್ಬರೇ.

ನಿಜವಾದ ಪ್ರೀತಿಯ
ಅನುಕಂಪಗಳು ಆ
ಕ್ಷಣಕ್ಕೆ ಸ್ವಾಭಾವಿಕ
ಪ್ರತಿಸ್ಪಂದನೆಗಳು.

ಒಬ್ಬ ಜ್ಞಾನಿಯ ಪ್ರೀತಿಯ ಅನುಕಂಪಗಳು
ಸೀಮಾತೀತವಾದುವು. ಸನ್ಯಾಸವು ಜ್ಞಾನಿಯಂತೆ
ಜೀವಿಸುವುದು. ಅದೇ ಜೀವನ್ಮುಕ್ತಿ.

ಅಂತರಂಗದಲ್ಲಿ ಪ್ರೀತಿ ಹಾಗೂ
ಅನುಕಂಪಗಳಲ್ಲಿಯೂ, ಬಾಹ್ಯ ಪ್ರಪಂಚದಲ್ಲಿ
ಏಕಾಗ್ರತೆ ಹಾಗೂ ನಿಖರತೆಯಲ್ಲಿಯೂ,
ನೆಲೆಯಾಗಿರುವವನು ಸನ್ಯಾಸಿ. ನಿಜ ಸನ್ಯಾಸಿಯಲ್ಲಿ
ಖಡ್ಗದ ನಿಖರತೆ ಇರುತ್ತದೆ. ಅವನು ಕಣ್ಣುಗಳನ್ನು
ಮುಚ್ಚಿಕೊಂಡಾಗ ಬಾಹ್ಯಪ್ರಪಂಚವಿರುವುದಿಲ್ಲ.
ಅವನು ಕಣ್ಣೆರೆದಾಗ ಕೆಲಸದಲ್ಲಿ ಮಾತ್ರವಲ್ಲದೆ
ಸಂಬಂಧಗಳಲ್ಲಿಯೂ ಪರಿಪೂರ್ಣನಾಗಿರುತ್ತಾನೆ!
ಅವನು ಒಬ್ಬ ತಂದೆ, ತಾಯಿ, ಸಹೋದರ ಹಾಗೂ
ಸ್ನೇಹಿತ - ಎಲ್ಲವೂ ಆಗಿರುತ್ತಾನೆ.

ಅವನು ಅಂತರ್ಜ್ಞಾನವು ನಡೆಸಿದಂತೆ ನಡೆಯುತ್ತಾನೆ. ಆದ್ದರಿಂದಲೇ ಅವನು ಯಾವಾಗಲೂ ಪ್ರಸಕ್ತ ಕ್ಷಣದಲ್ಲಿರುತ್ತಾನೆ. ಆ ಕ್ಷಣಕ್ಕೆ ಸ್ಪಂದಿಸುತ್ತಾನೆ. ಅದೇ ಜವಾಬ್ದಾರಿಯ ಭಾವನೆಯ ಅಂತಿಮ ಸ್ಥಿತಿ

  • ಆ ಕ್ಷಣಕ್ಕೆ ಸಮಯ ಸ್ಫೂರ್ತಿಯಿಂದ ಪ್ರತಿಸ್ಪಂದಿಸುವುದು. ನಿಜವಾದ ಪ್ರೀತಿಯ ಅನುಕಂಪಗಳು ಆ ಕ್ಷಣಕ್ಕೆ ಆಗುವ ಸಮಯ ಸ್ಫೂರ್ತಿಯುತ ಪ್ರತಿಸ್ಪಂದನೆಗಳು. ಆದುದರಿಂದಲೇ ಜನರ ಅಥವಾ ಸನ್ನಿವೇಶಗಳ ಪರಿವೆಯಿಲ್ಲದೆ ಅವು ಮೇಲೆ ಕಾಣಿಸಿಕೊಳ್ಳುತ್ತವೆ.

ಒಂದು ಚಿಕ್ಕ ಕಥೆ:

ಒಬ್ಬನು ಒಂದು ಝೆನ್ ವಿಹಾರಕ್ಕೆ ಹೋಗಿ, 'ಗುರುಗಳೇ, ನಾನು ನನ್ನ ಜೀವನ ಪರ್ಯಂತವೂ ಝೆನ್ ಸಾಧನೆ ಮಾಡಲಿಚ್ಛಿಸುತ್ತೇನೆ. ಆದರೆ ನನ್ನ ಜೀವನದಲ್ಲಿ ಯಾವುದಕ್ಕೂ ಹೆಚ್ಚು ಕಾಲ ತೊಡಗಿಕೊಂಡಿಲ್ಲ. ನಾನು ಯಾವಾಗಲೂ ಪ್ರತಿಯೊಂದಕ್ಕೂ ಹತ್ತಿರದ ದಾರಿಯನ್ನು ಹುಡುಕುತ್ತಿರುತ್ತೇನೆ. ಆತ್ಮಸಾಕ್ಷಾತ್ಕಾರಕ್ಕೂ ಹತ್ತಿರದ ದಾರಿ ಇದೆಯೇ?' ಎಂದು ಕೇಳಿದನು.

ಗುರುಗಳು, 'ನಿನ್ನನ್ನು ಎರಡು ದಿನಗಳಿಗೆ ಈ
ವಿಹಾರಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಎರಡು
ದಿನಗಳಲ್ಲಿ ಆತ್ಮಸಾಕ್ಷಾತ್ಕಾರಕ್ಕೆ ಹತ್ತಿರದ
ದಾರಿಯನ್ನು ಕಲಿಸಲಾಗುವುದು. ನಿನಗೆ ಮಾಡಲು
ಇಷ್ಟವಿರುವಂತಹದು ಯಾವುದಾದರೂ
ಇದೆಯೇ?' ಎಂದು ಕೇಳಿದರು.

ಆತನು, 'ನಾನು ಯಾವುದಕ್ಕೂ ಹೆಚ್ಚು ಕಾಲ
ತೊಡಗಿಕೊಳ್ಳದಿರುವುದರಿಂದ ನನಗೇನು
ಮಾಡುವುದು ಇಷ್ಟವೆಂದು ಹೇಳಲಾಗುವುದಿಲ್ಲ.
ಆದರೂ ನನಗೆ ಚದುರಂಗ ಆಡುವುದು ಇಷ್ಟ'
ಎಂದನು.

ಗುರುಗಳು ಚೆನ್ನಾಗಿ ಚದುರಂಗವನ್ನಾಡುವ ಒಬ್ಬ
ಯುವ ಶಿಷ್ಯನನ್ನು ಕರೆದರು. ಇಬ್ಬರನ್ನೂ
ಕುಳಿತುಕೊಳ್ಳಲು ಹೇಳಿ, ಅವರಿಬ್ಬರ ಮಧ್ಯೆ ಒಂದು
ಚೆಸ್ ಬೋರ್ಡನ್ನು ಇಟ್ಟರು. ನಂತರ ತಮ್ಮ
ಖಡ್ಗವನ್ನು ತೆಗೆದು ಅವರಿಬ್ಬರ ಎದುರಿಗೆ ಇಟ್ಟು,
'ನೀವಿಬ್ಬರೂ ಆಡಬೇಕು. ಇಬ್ಬರಲ್ಲೊಬ್ಬರು ಸೋತ
ಕ್ಷಣವೇ ಸೋತವನ ಶಿರಚ್ಛೇಧವಾಗುತ್ತದೆ'
ಎಂದು ಹೇಳಿದರು.

ಗುರುಗಳ ಮಾತು ಕೇಳಿ ಇಬ್ಬರಿಗೂ ದಿಗ್ಭ್ರಮೆಯಾಯಿತು.

ಆಟವನ್ನಾಡಲಾರಂಭಿಸಿದರು. ಹಿಂದೊಂದೂ ಇಲ್ಲದಷ್ಟು ಮನಸ್ಸಿಟ್ಟು ಆಡತೊಡಗಿದರು.

ಮೊದಮೊದಲು ಯುವ ಸನ್ಯಾಸಿಯು ಒಳ್ಳೆಯ ನಡೆಗಳನ್ನು ನಡೆಸಿದನು ಹಾಗೂ ಆತನೇ ಗೆಲ್ಲುವಂತೆ ತೋರಿತು. ನಂತರ ಇದ್ದಕ್ಕಿದ್ದಂತೆ ಒಂದು ತಪ್ಪು ಮಾಡಿಬಿಟ್ಟನು. ಈ ಮನುಷ್ಯನು ಅದರ ಲಾಭ ಪಡೆದು ಆಟವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡನು. ಸ್ವಲ್ಪ ಹೊತ್ತಿಗೆ ಈತನು ಗೆಲ್ಲುವುದು ಸ್ಪಷ್ಟವಾಯಿತು.

ಆ ಕೂಡಲೇ ಈತನು ಯುವ ಸನ್ಯಾಸಿಯನ್ನು
ನೋಡಿ, ಇಷ್ಟು ವಯಸ್ಸಿಗಾಗಲೇ ಎಂತಹ
ಸಮರ್ಪಣಾಭಾವ ಮತ್ತು ಭಕ್ತಿಗಳಿಂದ
ಗುರುಗಳೊಡನೆ ಜೀವಿಸುತ್ತಿರುವನೆಂಬುದನ್ನು
ಯೋಚಿಸಿದನು. ನಂತರ ತನ್ನ ಜೀವನವನ್ನು ನೆನೆದು,
ಅದನ್ನು ಹೇಗೆ ಹಾಳುಮಾಡಿಕೊಂಡೆನೆಂದು
ಯೋಚಿಸಿದನು. ತಕ್ಷಣವೇ ಇಬ್ಬರಲ್ಲೊಬ್ಬರು
ಸಾಯಲೇಬೇಕೆಂದರೆ, ಅದು ತಾನೇ ಆಗಬೇಕೆಂದು
ನಿರ್ಧರಿಸಿದನು. ಬೇಕೆಂದೇ ತಪ್ಪು ನಡಿಗೆ
ನಡೆಸಿದನು. ಯುವ ಸನ್ಯಾಸಿಯು ಅದನ್ನು ಕಂಡು
ಆಟದಲ್ಲಿ ಮತ್ತೊಮ್ಮೆ ಮೇಲುಗೈ ಪಡೆದನು.

ಗುರುಗಳು ಎಲ್ಲವನ್ನೂ ಗಮನಿಸುತ್ತಾ ಇದ್ದರು. ಆ
ಹಂತದಲ್ಲಿ ಬೋರ್ಡನ್ನು ತೆಗೆದುಬಿಟ್ಟರು, ಆಟದ
ಕಾಯಿಗಳು ಗಾಳಿಗೆ ತೂರಿದವು. ಅವರು ಹೇಳಿದರು,
'ಯಾರೂ ಗೆಲ್ಲುವುದಿಲ್ಲ, ಯಾರೂ ಸೋಲುವುದಿಲ್ಲ.
ಆಟ ಮುಗಿಯಿತು. ಆತ್ಮಸಾಕ್ಷಾತ್ಕಾರಕ್ಕೆ

ಬೇಕಾಗಿರುವುದು ಎರಡೇ ವಿಷಯಗಳು : ಏಕಾಗ್ರತೆ ಮತ್ತು ಅನುಕಂಪ. ಈ ದಿನ ಇವೆರಡನ್ನೂ ಕಲಿತಿರುವೆ. ನನ್ನೊಂದಿಗಿರು ಹಾಗೂ ಇಂದು ಚದುರಂಗವಾಡಿದ ರೀತಿಯಲ್ಲಿಯೇ ಅಧ್ಯಯನ ಮಾಡು, ನಿನಗೆ ಆತ್ಮಸಾಕ್ಷಾತ್ಕಾರವಾಗುತ್ತದೆ' ಎಂದು ಹೇಳಿದರು.

ಸನ್ಯಾಸವೆಂದರೆ ಏಕಾಗ್ರತೆ ಮತ್ತು ಅನುಕಂಪಗಳು

  • ಇವೆರಡನ್ನೂ ಒಮ್ಮೆಲೇ ಹೊಂದುವುದು. ಏಕಾಗ್ರತೆಯಿಂದ ಜೀವನದ ಗುರಿಯಾದ ಜೀವನ್ಮುಕ್ತಿಯನ್ನು ನೀವು ಮರೆಯುವುದೇ ಇಲ್ಲ. ಅನುಕಂಪದಿಂದ ಬೇರೆಯವರು ಆ ಗುರಿಯನ್ನು ಮುಟ್ಟುವ ಸಲುವಾಗಿ ನಿಮ್ಮ ಜೀವನವನ್ನೇ ತ್ಯಾಗಮಾಡಲು ಸಿದ್ಧರಾಗುವಿರಿ! ಎರಡೂ ಇದ್ದಲ್ಲಿ ನೀವೂ ಹಾಗೂ ಬೇರೆಯವರೂ ಗುರಿಮುಟ್ಟುವಿರಿ! ಅದು ಸನ್ಯಾಸದ ಹಿರಿಮೆ.

ಸನ್ಯಾಸಿಯ ಅತ್ಯಂತ ದೊಡ್ಡ ಗುಣವೆಂದರೆ, ವಿಶ್ವಶಕ್ತಿಯ ಮೇಲಿನ ಆತನ ಅಗಾಧವಾದ ವಿಶ್ವಾಸ. ಸಮಾಜವು ನಿಮ್ಮನ್ನು ಎಲ್ಲದರಿಂದಲೂ ಯಾವಾಗಲೂ ರಕ್ಷಿಸಿಕೊಳ್ಳುವ ಶಿಕ್ಷಣ ನೀಡುತ್ತದೆ. ಅದೇ ಸಮಸ್ಯೆ. ಅದು ವಿಶ್ವಶಕ್ತಿಯು ನಿಮ್ಮ ಶತ್ರುವೆಂದೂ ಅದರಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕೆಂದೂ ನಿಮ್ಮನ್ನು ನಂಬಿಸುತ್ತದೆ. ನೀವು ಅದೇ ನಿಯಮವನ್ನು ಹಾಕಿಕೊಂಡು, ಗುರುಗಳಿಂದಲೂ ರಕ್ಷಿಸಿಕೊಳ್ಳಲು ಪ್ರಯತ್ನಿಸುವಿರಿ. ಗುರುವು ನಿಮ್ಮ ಜೀವನದಲ್ಲಿ ಸಂಭವಿಸುವುದು ಕೇವಲ ಒಂದೇ ಉದ್ದೇಶದಿಂದ. ನಿಮ್ಮ ಅಹಂಕಾರವನ್ನು ನಾಶಮಾಡಲು ಮತ್ತು ಸನ್ಯಾಸದ ಮನೋಭಾವವನ್ನು ನಿಮ್ಮಲ್ಲಿ ವಿಕಸಿಸಲು.

ನೀವು ತಪ್ಪನ್ನೆಲ್ಲಿ ಮಾಡುತ್ತಿರುವಿರಿ ಎಂಬುದನ್ನು ಸ್ಪಷ್ಟವಾಗಿ ಕಂಡುಕೊಳ್ಳುವುದೇ ಸನ್ಯಾಸ. ಅದರ ನಿಖರ ಸ್ಥಾನವು ಅಹಂಕಾರದಲ್ಲಿ ಇಲ್ಲದೆ ಇನ್ನೆಲ್ಲೂ ಇಲ್ಲ ಎಂಬುದು ತಿಳಿದಿದೆ. ನೀವು ಇದನ್ನು ಅರಿತರೆ, ಗುರುಗಳಿಗೆ ಸುಮ್ಮನೆ ತೆರೆದುಕೊಳ್ಳುವಿರಿ ಹಾಗೂ ಅವರು ನಿಮ್ಮ ಅಹಂಕಾರಕ್ಕೆ ಪೆಟ್ಟು ಕೊಡಲು ಅನುವುಮಾಡಿಕೊಡುವಿರಿ. ನಿಮ್ಮ ರಕ್ಷಣೆಗಳನ್ನು ಕಳಚಿ ಹಾಕಿ ಸುಮ್ಮನೆ ತೆರೆದುಕೊಳ್ಳುವಿರಿ. ಗುರುಗಳ ಸಾನ್ನಿಧ್ಯಕ್ಕೆ ನೀವು ತೆರೆದುಕೊಳ್ಳದಿದ್ದರೆ, ಸುವಾಸನೆಯುಳ್ಳ ಗಾಳಿ ಬೀಸುತ್ತಿರುವಾಗ ನಿಮ್ಮ ಬೆರಳುಗಳಿಂದ ಮೂಗನ್ನು ಮುಚ್ಚಿಕೊಂಡಂತೆ. ಅವರ ಮೇಲಿನ ವಿಶ್ವಾಸದಿಂದ ಅವರಿಗೆ ತೆರೆದುಕೊಂಡರೆ, ನಿಮ್ಮ ಸುತ್ತಲೂ ಪವಾಡಗಳು ನಡೆಯುವುದನ್ನು ನೀವೇ ನೋಡುವಿರಿ.

ದೃಢ ವಿಶ್ವಾಸಕ್ಕೆ ಅಗಾಧವಾದ ಶಕ್ತಿ ಇದೆ. ಅದು
ತರ್ಕಕ್ಕೂ ಮಾರಿದುದು. ತರ್ಕಕ್ಕೂ ಮಾರಿದ
ಯಾವುದೇ ಆದರೂ ಅದು ನೇರವಾದ ಸತ್ಯವೇ.
ಅದು ಸೋಲುವುದೇ ಇಲ್ಲ. ಏಕೆಂದರೆ ಗುರುಗಳ
ಮೇಲೆ ವಿಶ್ವಾಸವಿಟ್ಟು, ಅವರಿಗೆ ಶರಣಾದಾಗ,
ಅವರಿಗೆ ನಿಮ್ಮ ಮೇಲಿನ ಜವಾಬ್ದಾರಿಯನ್ನು
ಕೊಟ್ಟುಬಿಡುತ್ತೀರಿ. ಅವರು ಎಂದಿಗೂ
ಸೋಲುವುದಿಲ್ಲ! ನೀವು ಶರಣಾಗಿ ಆನಂತರ
ಅವಿವೇಕದ ಕೆಲಸಗಳನ್ನು ಮಾಡಬಹುದು
ಎಂದರ್ಥವಲ್ಲ. ಅಲ್ಲ! ಮೊದಲನೆಯದಾಗಿ
ತಿಳಿದುಕೊಳ್ಳಬೇಕಾದುದೇನೆಂದರೆ, ನಿಜವಾದ
ಶರಣಾಗತಿಯಾದಾಗ ಅದು ನಿಮ್ಮನ್ನು ಅವಿವೇಕದ
ಕೆಲಸಗಳನ್ನು ಮಾಡಲು ಪ್ರಚೋದಿಸುವುದಿಲ್ಲ.
ಹೆಸರಿಗೆ ಶರಣಾಗತರಾದರೆ ಅದು ನಿಮ್ಮನ್ನು
ಅವಿವೇಕದ ಕೆಲಸಗಳನ್ನು ಮಾಡಲು

ಪ್ರಚೋದಿಸುತ್ತದೆ. ನಿಜವಾದ ಶರಣಾಗತಿಯು
ಒಂದು ಪ್ರಜ್ಞೆ, ಅದೇನೂ ಪ್ರಯೋಗಕ್ಕಾಗಿ
ಇರುವಂತಹ ಒಂದು ಕಲ್ಪನೆಯಲ್ಲ.

ಗುರುಗಳ ಸಾನ್ನಿಧ್ಯದಲ್ಲಿದ್ದಾಗ, ಜನಗಳ
ಸಮೂಹಗಳಲ್ಲಿ ಅರಳುವ ಪ್ರಜ್ಞೆಯೇ ಸನ್ಯಾಸ.
ಅನೇಕ ವರ್ಷಗಳಿಂದಲೂ ಸನ್ಯಾಸವು
ಸಮೂಹಗಳಲ್ಲಿಯೇ ಯಾವಾಗಲೂ ಸಂಭವಿಸಿದೆ.
ಎಲ್ಲ ಮಹಾನ್ ಗುರುಗಳೂ ಸನ್ಯಾಸಿಗಳ ಗುಂಪುಗಳಿಗೆ
ದೀಕ್ಷೆ ನೀಡಿದ್ದಾರೆ. ಜನರ ಒಂದು ಗುಂಪು
ಪ್ರೀತಿಯಲ್ಲಿ ವಿಲೀನವಾಗಲಾರಂಭಿಸಿದಾಗ, ಆ
ಗುಂಪು ಕರಗಿಹೋಗಲಾರಂಭಿಸಿದಾಗ ಸನ್ಯಾಸ
ಸಂಭವಿಸಲಾರಂಭವಾಗುತ್ತದೆ. ಫಕ್ಕನೇ ಅಗಾಧವಾದ
ಸೌಂದರ್ಯವು ಪ್ರಸರಿಸುತ್ತದೆ. ಆ ಕೂಡಲೇ
ವಿಶ್ವಶಕ್ತಿಯು ಅತಿಶಯವಾಗಿ ರಹಸ್ಯಾತ್ಮಕವಾಗಿಯೂ
ಸುಂದರವಾದದ್ದಾಗಿಯೂ ಕಾಣುತ್ತದೆ. ಕಾಕತಾಲೀಯ
ಪ್ರಭಾವವು ಜೀವನಕ್ರಮವೇ ಆಗಿಬಿಡುತ್ತದೆ. ಪ್ರಚಂಡ
ಶಕ್ತಿಯು ಹರಿಯಲಾರಂಭಿಸುತ್ತದೆ ಹಾಗೂ
ಕಾರಣವಿಲ್ಲದೆಯೇ ಜೀವನವು ಅತ್ಯಂತ
ಸುಂದರವಾಗಿ ಕಾಣುತ್ತದೆ. ಸಕಲವೂ
ಸಮಗ್ರವೆನಿಸುತ್ತದೆ. ಎಲ್ಲೆಡೆಯೂ ಹೇಳಲಾಗದಂತಹ
ವಿಕಸನದ ಅನುಭವವಾಗುತ್ತದೆ.

ವಿಶ್ವಶಕ್ತಿಯು ಇನ್ನೂ ಸುಂದರವಾಯಿತೆಂದಲ್ಲ. ವಿಶ್ವಶಕ್ತಿಯು ಯಾವಾಗಲೂ ಒಂದೇ ಆಗಿರುತ್ತದೆ. ನೀವು ಅದಕ್ಕೆ ಸ್ಪಂದಿಸಲಾರಂಭಿಸಿದಿರಿ, ಅಷ್ಟೆ. ನಿಮ್ಮವೇ ಆದ ಮಾನವ ಗುಣಗಳು ಬಹಳವಾಗಿ ಶ್ರೀಮಂತಗೊಂಡಿವೆ. ಅದೇ ಸನ್ಯಾಸ! ಸಮೃದ್ಧ ಗುಣಗಳಿಂದ ವಿಶ್ವಶಕ್ತಿಗೆ ಸ್ಪಂದಿಸಲಾರಂಭಿಸಿದಾಗ, ವಿಶ್ವಶಕ್ತಿಯೊಳಗೆ ಕರಗಿಹೋಗಲು ಪ್ರಾರಂಭಿಸಿದಾಗ, ಅದಕ್ಕಾಗಿ ಹಂಬಲಿಸಿದಾಗ, ನಿಮ್ಮಲ್ಲಿ ಸನ್ಯಾಸವು ಉಂಟಾಗಲಾರಂಭಿಸುತ್ತದೆ.

ಸನ್ಯಾಸವು ಸಂಭವಿಸಿದಾಗ ನೀವು
ಸಹಜವಾಗಿಯೇ ವಿಶ್ವಶಕ್ತಿಗೆ ಇನ್ನೂ ಹೆಚ್ಚಿನ
ಸೌಂದರ್ಯವನ್ನು ಸೇರಿಸುತ್ತೀರಿ. ನೀವು
ಸೃಷ್ಟಿಕರ್ತರಾಗುತ್ತೀರಿ. ಸೃಜನಾತ್ಮಕತೆಯನ್ನು
ತ್ಯಜಿಸುವುದು ಸನ್ಯಾಸ ಎಂದು ಜನರು
ಅಂದುಕೊಳ್ಳುತ್ತಾರೆ. ಅಲ್ಲ! ಸನ್ಯಾಸವೆಂದರೆ
ದೇವರೆಡೆಗೆ ಒಂದು ಹೆಜ್ಜೆ ಸಮೀಪಿಸುವುದು. ಹಾಗೆ
ನೋಡಿದರೆ ದೇವರೇ ಪರಮ ಸೃಷ್ಟಿಕರ್ತನು.
ಸನ್ಯಾಸದ ಮೂಲ ಚೈತನ್ಯವೇ ಸೃಷ್ಟಿ. ಇದು ಜನರಿಗೆ
ಸನ್ಯಾಸದ ಬಗ್ಗೆ ಅಷ್ಟಾಗಿ ತಿಳಿಯದಿರುವ ಅಂಶ.

ಸನ್ಯಾಸವು ಸಂಭವಿಸಿದಾಗಲೇ ಸರಿಯಾದ ಸಮಯ

ಒಂದು ಪುಟ್ಟ ಕಥೆ:

ಒಂದು ದಿನ ಒಬ್ಬ ಯುವಕನು ಗ್ರೀಕ್ ತತ್ವಜ್ಞಾನಿ ಸಾಕ್ರಟೀಸನನ್ನು ಸಂಧಿಸಿ, ‘ಓ ಮಹಾತ್ಮನೇ, ನಾನು ಜ್ಞಾನಾರ್ಜನೆಗಾಗಿ ಬಂದಿದ್ದೇನೆ' ಎಂದು ಹೇಳಿದನು. ಸಾಕ್ರಟೀಸನು ಆತನನ್ನು ಸಮುದ್ರಕ್ಕೆ ಕರೆದುಕೊಂಡು ಹೋಗಿ, ಕೆಲವು ಕ್ಷಣಗಳ ಕಾಲ ಅವನ ತಲೆಯನ್ನು ನೀರಿನಲ್ಲಿ ಅದುಮಿ ಹಿಡಿದನು.

ಆತನನ್ನು ಬಿಟ್ಟಾಗ, ಆತನು ಏದುಸಿರು
ಬಿಡುತ್ತಿದ್ದನು. ಸಾಕ್ರಟೀಸ್ ಆತನನ್ನು ತನಗೇನು
ಬೇಕೆಂಬುದನ್ನು ಪುನಃ ಹೇಳೆಂದು ಕೇಳಿದನು. ಆತನು
'ನನಗೆ ಜ್ಞಾನಬೇಕು' ಎಂದನು.

ಸಾಕ್ರಟೀಸ್ ಆತನನ್ನು ಇನ್ನೂ ಹೆಚ್ಚು ಕಾಲ ನೀರಿನಲ್ಲಿ ಮುಳುಗಿಸಿದನು. ನಂತರ ಬಿಟ್ಟು, 'ನಿನಗೇನು ಬೇಕು?' ಎಂದು ಕೇಳಿದನು. ಆ ಮನುಷ್ಯನು ಪುನಃ 'ಜ್ಞಾನ' ಎಂದನು.

ಸಾಕ್ರಟೀಸನು ಇದನ್ನು ಇನ್ನೂ ಕೆಲವು ಬಾರಿ ಮಾಡಿದನು.

ನಂತರ ಪುನಃ 'ನಿನಗೇನು ಬೇಕು?' ಎಂದು
ಕೇಳಿದನು. ಯುವಕನು 'ಗಾಳಿ, ನನಗೆ ಗಾಳಿ ಬೇಕು'
ಎಂದು ಎದುಸಿರುಬಿಡುತ್ತಾ ಹೇಳಿದನು.

ಸಾಕ್ರಟೀಸನು, 'ನಿನಗೆ ಗಾಳಿಯಷ್ಟೇ ಜ್ಞಾನವೂ ಬೇಕಾಗಿದ್ದರೆ ನಿನಗದು ದೊರೆಯುತ್ತದೆ' ಎಂದನು.

ಸನ್ಯಾಸವು ನಿಮ್ಮೊಳಗಿನಿಂದ ಉದಯಿಸುವ
ಆಳವಾದ ಉತ್ಕಟ ಇಚ್ಛೆ. ಅದು ಒಂದು ಆಳವಾದ
ಹಂಬಲಿಕೆ. ಆ ಹಂಬಲಿಕೆಯು ಯಾವಾಗಲೂ
ಎಲ್ಲಾದರೂ ಪೂರ್ಣವಾಗಿ
ಸಮಂಜಸವಾಗಿರದಿದ್ದರೂ ಪರವಾಗಿಲ್ಲ. ನೀವು
ಜಿಗಿದುಬಿಡಬಹುದು. ಅದು ಸಮಂಜಸವಾಗದೇ
ಹೋಗಬಹುದು. ಆದರೆ ಅದು
ಸಮಂಜಸವಾಗಿರುವುದೇ ಅಳತೆಗೋಲಲ್ಲ. ಅದು
ಬೇರು ಬಿಟ್ಟರೆ, ಅಷ್ಟೇ ಸಾಕು. ನೀವದಕ್ಕೆ
ತಯಾರೆಂದರ್ಥ. ಒಂದು ಸಲ ನೀವು ಜಿಗಿದಿರೆಂದರೆ
ಉಳಿದದ್ದು ತಾನಾಗಿಯೇ ಆಗುತ್ತದೆ.

ಒಬ್ಬಾತನು ಚಳಿಗಾಲದಲ್ಲಿ ಹಿಮಾಲಯದ ಕಡೆಗೆ ನಡೆದು ಹೋಗುತ್ತಿದ್ದನು. ಒಬ್ಬ ವೃದ್ಧರು ಆತನನ್ನು ನೋಡಿ, 'ಪರ್ವತಗಳಲ್ಲಿ ವಿಪರೀತ ಚಳಿಯಾಗುತ್ತದೆ. ನಿಮಗದನ್ನು ಭರಿಸಲು ಸಾಧ್ಯವಾಗುವುದೇ?' ಎಂದು ಕೇಳಿದರು. ಆತನು, 'ನನ್ನ ಹೃದಯವು ಈಗಾಗಲೇ ಅಲ್ಲಿದೆ. ಹಾಗಾಗಿ ನನ್ನ ಉಳಿದ ಭಾಗ ಅಲ್ಲಿಗೆ ಸೇರುವುದು ಸುಲಭ' ಎಂದನು.

ದೀಕ್ಷೆಯೋ ಕಾರ್ಯದ ಮುಂದುವರಿಕೆಯನ್ನು ಪ್ರಚೋದಿಸುತ್ತದೆ. ಸನ್ಯಾಸದ ಬಾಹ್ಯಾಲಂಕಾರಗಳು ಆಂತರಿಕ ಭೂಷಣವನ್ನು ನೋಡಿಕೊಳ್ಳುತ್ತವೆ. ಆದುದರಿಂದಲೇ ದೀಕ್ಷೆಯ ಜೊತೆ ಜೊತೆಗೆ ಹೊಸ ಹೆಸರು, ಕಾವಿಬಟ್ಟೆ, ಮುಂತಾದುವನ್ನೆಲ್ಲಾ ಕೊಡುವುದು. ಅವು ನಿಮ್ಮ ಎಷ್ಟೋ ಕೆಲಸಗಳನ್ನು ಮಾಡಿಬಿಡುತ್ತವೆ. ಅವು ಆ ಅರಿವನ್ನು ಪ್ರತಿಕ್ಷಣವೂ ಜೀವಂತವಾಗಿಡುತ್ತವೆ.

ಆದರೆ, ನೀವೇನಾದರೂ ಜಿಗಿಯುವ ನಿರ್ಧಾರವನ್ನು ವಿಶ್ಲೇಷಣೆ ಮಾಡತೊಡಗಿದರೆ, ನಿಮಗದು ತಪ್ಪಿಹೋಗುತ್ತದೆ. ಸನ್ಯಾಸವು ನಿಮ್ಮ ಚೈತನ್ಯಕ್ಕೆ ಸಂಬಂಧಿಸಿದುದು. ಕೇವಲ ನಿಮ್ಮ ಚೈತನ್ಯವನ್ನು ನೋಡಿಯೇ, ನೀವು ಸನ್ಯಾಸಕ್ಕೆ ಸಿದ್ಧವೆಂದು ಹೇಳಿಬಿಡಬಲ್ಲೆ! ಚೈತನ್ಯವನ್ನು ತರ್ಕದಿಂದ ವಿಮರ್ಶಿಸಲಾಗುವುದಿಲ್ಲ. ಚೈತನ್ಯವು ತರ್ಕವನ್ನು ಮಾರಿದುದು. ನೀವು ಸನ್ಯಾಸವನ್ನು ತೆಗೆದುಕೊಳ್ಳುವ ಸಮಯವೇ ಸರಿಯಾದ ಸಮಯ, ಅಷ್ಟೆ. ನಂತರದಲ್ಲಿ ಅದನ್ನು ಬಿಟ್ಟುಬಿಟ್ಟರೂ, ಪಶ್ಚಾತ್ತಾಪ ಪಡಬೇಡಿರಿ. ಬೀಜವನ್ನಂತೂ ಬಿತ್ತಿದ್ದಾಯಿತು. ಒಮ್ಮೆ ಸನ್ಯಾಸಿ ಎಂದರೆ ಎಂದಿಗೂ ಸನ್ಯಾಸಿಯೇ. ಸರಿಯಾದ ಕಾಲದಲ್ಲಿ ಅದು ಪುನಃ ಆಗುತ್ತದೆ. ಹಾಗೂ ಅದೇ ಅಂತಿಮ ಬಾರಿಯಾಗಬಹುದು.

ಸನ್ಯಾಸವು ಬುದ್ಧಿವಂತರು ತೆಗೆದುಕೊಳ್ಳುವ
ನಿರ್ಧಾರ. ಜೀವನವು ಖಿನ್ನತೆ, ನಿರುತ್ಸಾಹಗಳ
ಪರಾಕಾಷ್ಠೆಯನ್ನು ತಲುಪಿದಾಗ, ಬಾಹ್ಯಪ್ರಪಂಚವು

ನಿಷ್ಪ್ರಯೋಜಕವೆಂದು ಭಾವಿಸುವ ಸ್ಥಿತಿಗೆ ಬಂದಾಗ,
ಪರಿಸ್ಥಿತಿಯನ್ನು ಸುಧಾರಿಸಲು ಇನ್ನೇನನ್ನೂ
ಮಾಡಲಾಗುವುದಿಲ್ಲವೆಂದಾದಾಗ, ಆರಿಸಿಕೊಳ್ಳಲು
ನಿಮಗೆ ಮೂರು ಮಾರ್ಗಗಳಿವೆ.

ಮೊದಲನೆಯ ಮಾರ್ಗವೆಂದರೆ, ಆತ್ಮಹತ್ಯೆ. ಆತ್ಮಹತ್ಯೆಯು ತಕ್ಷಣದ ಪರಿಹಾರವೆಂಬಂತೆ ಕಂಡರೂ ವಾಸ್ತವವಾಗಿ ಅದು ಭಯಂಕರ ಸಂಕಟವನ್ನುಂಟುಮಾಡುತ್ತದೆ. ಜನರು ಆತ್ಮಹತ್ಯೆಗೆ ಧೈರ್ಯಬೇಕಾಗುತ್ತದೆ ಎಂದುಕೊಳ್ಳುತ್ತಾರೆ. ಧೈರ್ಯವೆಂಬುದು ಸುಂದರವಾದ ಪದವಾದರೂ, ಇಲ್ಲಿ ತಪ್ಪಾಗಿ ಉಪಯೋಗಿಸಿದ ಪದ. ನಿಮ್ಮ ಕಣ್ಣಿಗೆ ನೀವು ಮೆಣಸಿನ ಪುಡಿಯನ್ನು ಹಾಕಿಕೊಂಡು ಉಜ್ಜಿಕೊಳ್ಳಲು ಧೈರ್ಯಬೇಕೆ? ಇಲ್ಲ! ಅದು ಕೇವಲ ಮೂರ್ಖತನ. ಹಾಗೇಯೇ, ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಬೇಕಾಗಿಲ್ಲ, ಅದು ಮೂರ್ಖತನವೇ ಸರಿ. ಅದರಲ್ಲಿ ಧೈರ್ಯವೆಂಬುದೇನೂ ಇಲ್ಲ.

ಆತ್ಮಹತ್ಯೆಯ ಹಿಂದಿರುವ ವಿಜ್ಞಾನವನ್ನು
ತಿಳಿದುಕೊಳ್ಳಿರಿ. ನಿಮ್ಮ ಈ ಜನ್ಮದ ಆಯಸ್ಸು
ತೊಂಬತ್ತು ವರ್ಷಗಳು ಎಂದಿಟ್ಟುಕೊಂಡು, ನಿಮಗೆ
ನಲವತ್ತೈದು ವರ್ಷಗಳಾದಾಗ ಆತ್ಮಹತ್ಯೆ
ಮಾಡಿಕೊಳ್ಳುವಿರೆಂದುಕೊಳ್ಳೋಣ. ಉಳಿದ
ನಲವತ್ತೈದು ವರ್ಷಗಳು ನೀವು ಒಂದು ಪ್ರೇತವಾಗಿ
ಕಾದಿರಬೇಕಾಗುತ್ತದೆ. ತೊಂಬತ್ತು ವರ್ಷಗಳು ಕಳೆದ
ನಂತರವೇ ನೀವು ಮುಂದಿನ ದೇಹವನ್ನು
ಆರಿಸಿಕೊಂಡು ಹುಟ್ಟಲು ಸಾಧ್ಯವಾಗುವುದು. ಈ
ನಲವತ್ತೈದು ವರ್ಷಗಳು ನೀವು
ಅನುಭವಿಸಬಹುದಾದ ಅತಿ ದಾರುಣವಾದ ನರಕ

  • ಅದು ನೀವು ದೇಹದಲ್ಲಿದ್ದಾಗ ಅನುಭವಿಸಿರಬಹುದಾದ ಕಷ್ಟಗಳಿಗಿಂತಲೂ ಹೆಚ್ಚು ದಾರುಣವಾಗಿರುತ್ತದೆ. ಆತ್ಮಹತ್ಯೆಯು ನೀವೆಂದುಕೊಳ್ಳುವಂತೆ ಪರಿಹಾರವಲ್ಲ.

ಎರಡನೆಯ ಮಾರ್ಗವೆಂದರೆ, ಮಾದಕ
ಪದಾರ್ಥ ಹಾಗೂ ಕುಡಿತಗಳ ದುರ್ವ್ಯಸನಕ್ಕೆ
ವಶವಾಗುವುದು ಹಾಗೂ ದೇಹವು ಸಾಯುವ ತನಕ
ನಿಧಾನವಾಗಿ ವಿಷವನ್ನಿಕ್ಕುವುದು. ಇದೂ ಸಹ ಅಷ್ಟೇ
ಮೂರ್ಖತನವಾದದ್ದೇ, ಏಕೆಂದರೆ ತಿಳಿದೂ ತಿಳಿದೂ
ದೇಹವನ್ನು ದುರುಪಯೋಗಪಡಿಸುತ್ತಿರುವಿರಿ.

ಮೂರನೆಯ ಮತ್ತು ಅತ್ಯಂತ ಬುದ್ಧಿವಂತಿಕೆಯ ಮಾರ್ಗವೆಂದರೆ ಅಂತರ್ಮುಖಿಯಾಗುವುದು. ನಿಮ್ಮ ಮನಸ್ಸಿನಲ್ಲಿ ಬಾಹ್ಯ ಪ್ರಪಂಚವು ಮುಗಿದುಹೋದಂತೆನಿಸಿದಾಗ, ಅಂತರ್ಮುಖಿಯಾಗುವ ಕಾಲ ಬಂದಿದೆ ಎಂದರ್ಥ. ಅಂತರ್ಮುಖಿಯಾಗಿ ಒಳಹೊಕ್ಕು ಅವಲೋಕಿಸಿದಾಗ ಸನ್ಯಾಸವು ಸಂಭವಿಸುತ್ತದೆ. ಸನ್ಯಾಸವು ನಿಮ್ಮ ಇಡೀ ಜೀವನಶೈಲಿಯನ್ನು ಪರಿವರ್ತಿಸಿ, ನಿಮ್ಮ ಚೈತನ್ಯವನ್ನೆಲ್ಲವನ್ನೂ ಜೀವನ್ಮುಕ್ತಿಯೆಡೆಗೆ ನಿರ್ದೇಶಿಸುವಂತಹ ರಸವಾದ. ಒಳಹೊಕ್ಕು ನೋಡುವ ಮೊದಲ ಯೋಚನೆ ಬಂದಾಗ, ಅಧ್ಯಾತ್ಮವನ್ನು ಅನುಸರಿಸುವ ಮೊದಲ ಯೋಚನೆ ಬಂದಾಗ, ಬುದ್ಧಿವಂತರು ಸನ್ಯಾಸಕ್ಕೆ ಜಿಗಿದುಬಿಡುತ್ತಾರೆ. ಸನ್ಯಾಸವು ಹತ್ತಿರದ ದಾರಿ.

ಒಂದು ಪುಟ್ಟ ಕಥೆ:

ಐವತ್ತು ವರ್ಷ ವಯಸ್ಸಿನ ಆತ್ಮಸಾಕ್ಷಾತ್ಕಾರಕ್ಕಾಗಿ ಬಂದ ವಿದ್ಯಾರ್ಥಿಯೊಬ್ಬನು ಒಬ್ಬ ಝೆನ್ ಗುರುಗಳ

ಬಳಿ ಹೋಗಿ, ‘ನಾನು ಚಿಕ್ಕ
ಹುಡುಗನಾಗಿದ್ದಾಗಿನಿಂದಲೂ ಆಧ್ಯಾತ್ಮಿಕ
ಅಧ್ಯಯನಗಳನ್ನು ಮಾಡುತ್ತಿದ್ದೇನೆ. ನಾನು
ಕಲಿತಿರುವಂತೆ ಹುಲ್ಲೂ, ಮರಗಳೂ
ಆತ್ಮಸಾಕ್ಷಾತ್ಕಾರ ಪಡೆಯುತ್ತವೆ ಎನ್ನುತ್ತಾರೆ,
ನನಗಿದು ಬಹಳ ವಿಚಿತ್ರವೆನಿಸುತ್ತದೆ’ ಎಂದನು.

ಗುರುಗಳು, ‘ಹುಲ್ಲೂ, ಮರಗಳೂ ಸಾಕ್ಷಾತ್ಕಾರ ಪಡೆಯುವ ಬಗ್ಗೆ ಚರ್ಚಿಸಿದರೇನು ಪ್ರಯೋಜನ? ನೀನು ಸಾಕ್ಷಾತ್ಕಾರ ಪಡೆಯುವುದು ಹೇಗೆ ಎಂಬುದೇ ಪ್ರಶ್ನೆ, ಅದನ್ನೇನಾದರೂ ಚಿಂತಿಸಿರುವೆಯಾ?’ ಎಂದು ಕೇಳಿದರು.

ಆತನು, ‘ನಾನು ಅದನ್ನು ಆ ರೀತಿ ಯೋಚಿಸಿಯೇ ಇರಲಿಲ್ಲ’ ಎಂದನು.

ಗುರುಗಳು, ‘ಹಾಗಾದರೆ ಮನೆಗೆ ಹೋಗಿ ಅದನ್ನು ಯೋಚಿಸು’ ಎಂದರು.

ಸನ್ಯಾಸವು ನಿಮ್ಮೊಡನೆ ನೀವೇ ಮಾಡಿಕೊಂಡ ಕಾರ್ಯನಿಶ್ಚಯ. ಅದು ‘ನೀವು ಯಾವುದು ಅಲ್ಲವೋ ಅದೆಲ್ಲವನ್ನೂ ನಾಶಮಾಡಲು ಬದ್ಧನಾಗಿರುತ್ತೇನೆಂದು ಮತ್ತು ಸಂಪೂರ್ಣವಾಗಿ ಶುದ್ಧೀಕರಿಸಿಕೊಳ್ಳುತ್ತೇನೆಂದು ನಿಮ್ಮನ್ನೇ ಪ್ರಜ್ಞಾಪೂರ್ವಕವಾಗಿ ಬದ್ಧತೆಗೊಳಪಡಿಸಿಕೊಳ್ಳುವುದು’.

ಒಂದು ಸಲ ಬದ್ಧತೆಯನ್ನು ಕೈಗೊಂಡಾಗ,
ನಿಮ್ಮಗೆ ನೋಟ, ಶ್ರವಣ, ನುಡಿ ಹಾಗೂ ಭಾವನೆಗಳು
ಬೇರೆ ರೀತಿಯಾಗಿರಲು ಪ್ರಾರಂಭವಾಗುತ್ತದೆ. ಅದೇ
ವಿಷಯಗಳು ನಿಮ್ಮಲ್ಲಿ ಹೊಸ ತಿಳಿವಳಿಕೆಯನ್ನು
ಉಂಟುಮಾಡುತ್ತವೆ. ಸನ್ಯಾಸಕ್ಕೆ ಬದ್ಧರಾದಾಗ ಅದು
ನಿಮಗೆ ಮಾಡುವುದೇ ಅದನ್ನ. ಭವಿಷ್ಯಕ್ಕೆ

ಭೌತಿಕ ಬೇರ್ಪಡಿಕೆಯೋ ಸನ್ಯಾಸವೊಂದೇ ಪರಿಹಾರವಾಗಿದೆ. ಜನನ, ಮಾನಸಿಕ ಏಕೆಂದರೆ ಅದು ಮಾತ್ರವೇ ಬೇರ್ಪಡಿಕೆಯೋ ನಿಮ್ಮಲ್ಲಿಯೇ ನೀವು ಸನ್ಯಾಸ. ನೆಲೆಗೊಂಡಿದ್ದು, ವಿನೋದವಾಗಿ, ಸಂತೋಷವಾಗಿ, ಆನಂದಪರವಶರಾಗಿ ಹೊರ ಪ್ರಪಂಚದಲ್ಲಿ ವ್ಯವಹರಿಸುವುದನ್ನು ನಿಮಗೆ ಕಲಿಸುತ್ತದೆ. ಸನ್ಯಾಸವು, ನೀವು ಎಷ್ಟು ಪಾತ್ರಗಳನ್ನು ವಹಿಸಿದರೂ ಯಾವುದರೊಂದಿಗೂ ತಾದಾತ್ಮ್ಯವನ್ನು ಹೊಂದದಂತೆ ಇರಗೊಡುತ್ತದೆ. ಅದು ನಿಮ್ಮನ್ನು ಸದಾ ಪರವಶವಾಗಿಯೂ ಆನಂದೋದ್ರೇಕದಲ್ಲಿಯೂ ಇಡುತ್ತದೆ. ಅದು ನಿಮ್ಮನ್ನು ಭೂಲೋಕದಲ್ಲಿ ಹುಟ್ಟುವುದರ ಸಾರವನ್ನೇ ಅನುಭವಿಸುವಂತೆ ಮಾಡುತ್ತದೆ.

ನಿಜವಾದ ಪ್ರೀತಿಯು ದಾರಿಗೆ ಅಡ್ಡವಾಗುವುದಿಲ್ಲ

ಸರಿಯಾದ ಕಾಲ ಬಂದಾಗ, ತನ್ನ ಮಗುವನ್ನು
ಯಾರು ಬಿಟ್ಟುಕೊಡುತ್ತಾರೆಯೋ ಆಕೆಯೇ ನಿಜವಾದ
ತಾಯಿ. ಮೊದಲನೆಯದಾಗಿ ಯಾವ ತಾಯಿಗೆ ತನ್ನ
ಮಗುವಿನ ಮೇಲೆ ವಿಪರೀತವಾದ ಸ್ವಾಮ್ಯತೆ
ಇರುತ್ತದೆಯೋ ಅಂತಹವರು ಜನ್ಮಕೊಡಲೂ
ಹಿಂತೆಗೆಯಬೇಕು! ಜನ್ಮ ಕೊಡುವುದೂ ಸಹ
ಬಿಟ್ಟುಕೊಟ್ಟಂತೆಯೇ; ಮಗುವು ಆಕೆಯ ದೇಹವನ್ನು
ಬಿಡಲು ಅವಳು ಅನುಮತಿಕೊಟ್ಟಂತೆಯೇ! ಯಾವ
ತಾಯಿಯೂ ಮುಂದಿನ ವಿಸ್ಫೋಟನೆಯನ್ನು

ಅನುಮತಿಸಲು ಸಿದ್ಧಳೋ, ಬಿಟ್ಟುಕೊಡಲು
ಸಿದ್ಧಳೋ, ಸ್ಫೂರ್ತಿನೀಡಲು ಸಿದ್ಧಳೋ, ಆಕೆಯು
ಮಾತ್ರ ನಿಜವಾದ ತಾಯಿಯಾಗಬಲ್ಲಳು.

ನೀವು ಸ್ವಾಮ್ಯತೆಯಿಂದಿದ್ದಲ್ಲಿ, ಮಗುವಿನಿಂದ
ಬೇರ್ಪಡುವ ಆಲೋಚನೆಯಿಂದಲೇ
ದುಃಖವಾಗುತ್ತಿದ್ದ ಮಗುವಿಗೆ ಜನ್ಮವನ್ನೂ
ಕೊಡಲೇಬಾರದು! ಹೊಕ್ಕಳ ಬಳ್ಳಿಯ ಮೂಲಕ
ನಿರಂತರವಾಗಿ ಆಹಾರ ಕೊಡುತ್ತಲೇ ಇರಬೇಕು.
ಹೊಕ್ಕಳ ಬಳ್ಳಿಯನ್ನು ನಿರಂತರವಾಗಿ
ಸಜೀವವಾಗಿಟ್ಟುಕೊಳ್ಳಬೇಕು! ಯಾವ ರೀತಿ ಒಂಬತ್ತು
ತಿಂಗಳಾದ ಮೇಲೆ ಹುಟ್ಟಿದ ಮಗುವು ದೈಹಿಕವಾಗಿ
ಬೆಳೆಯುತ್ತದೆಯೋ, ಹಾಗೆಯೇ ಅದನ್ನು ನಿಮ್ಮಿಂದ
ಬೇರ್ಪಡಲು ಅನುಮತಿಸಿದರೆ, ಮಗುವು
ಮಾನಸಿಕವಾಗಿಯೂ ಬೆಳೆಯಲು ಸಾಧ್ಯವಾಗುವುದು.

ದೈಹಿಕ ಬೇರ್ಪಡೆಯೇ ಜನನ, ಮಾನಸಿಕ ಬೇರ್ಪಡೆಯೇ ಸನ್ಯಾಸ.

ಆ ರೀತಿ ನೋಡಿದರೆ, ನಾನು ಬಹಳ ಅದೃಷ್ಟವಂತ. ನಾನು ಸನ್ಯಾಸಿಯಾಗಿಹೋಗಲು ಗೃಹತ್ಯಾಗ ಮಾಡುವುದಾಗಿ ಅಂದು ನಮ್ಮ ತಾಯಿಗೆ ಹೇಳಿದಾಗ, ರಾತ್ರಿ ಬಹಳ ಹೊತ್ತಾಗಿತ್ತು. ಸುಮಾರು ಹನ್ನೊಂದು ಗಂಟೆ. ದೇವಸ್ಥಾನಕ್ಕೆ ಹೋಗಿ, ಎಂದಿನಂತೆ ಸ್ವಲ್ಪ ಕಾಲ ಕಳೆದು, ನಂತರ ಸಾಮಾನ್ಯವಾಗಿ ಮನೆಗೆ ಬರುತ್ತಿದ್ದ ಕಾಲಕ್ಕೇ ಬಂದೆ. ನನ್ನ ಬೀಗದ ಕೈಯಿಂದ ಮನೆಯಬಾಗಿಲನ್ನು ತೆಗೆದು ಒಳಗೇಹೋದೆ. ಪರ್ಯಟನಾ ಸಾಧುಗಳು ಬಳಸುವಂತಹ ಮರದ ಪಾದುಕೆಗಳನ್ನು ಹಾಕಿಕೊಳ್ಳುತ್ತಿದ್ದೆ. ಕಲ್ಲಿನ ನೆಲದ ಮೇಲೆ ಅವು ಜೋರಾಗಿ ಶಬ್ದ ಮಾಡುತ್ತಿದ್ದುವು! ನಾನು ಒಳಗೆ ಹೋದ ತಕ್ಷಣವೇ ನನ್ನ ತಾಯಿ ಏಳುತ್ತಿದ್ದಳು. ನನಗೆ ಇಷ್ಟವಾದ ಅಡಿಗೆ ಮಾಡಿ ಬಡಿಸುತ್ತಿದ್ದಳು. ನಾನು ದೇವಸ್ಥಾನದಲ್ಲಿ ಊಟಮಾಡಿ ಬಂದಿದ್ದರೆ ಅವಳಿಗೆ ಹಾಗೆಂದು ಹೇಳುತ್ತಿದ್ದೆ, ನಂತರ ಇಬ್ಬರೂ ಮಲಗುತ್ತಿದ್ದೆವು.

ಆ ರಾತ್ರಿ ಅವಳು ಎದ್ದು ಅಡಿಗೆ ಮಾಡಲು
ಹೊರಟಳು. ನಾನವಳನ್ನು ಕರೆದು, 'ನಾನು
ಸನ್ಯಾಸಕ್ಕಾಗಿ ಮನೆ ಬಿಟ್ಟುಹೋಗುವುದಾಗಿ
ತೀರ್ಮಾನಿಸಿದ್ದೇನೆ. ನಾನೀಗಾಗಲೇ ಊಟ
ಮಾಡಾಗಿದೆ, ಆದರೂ ಸಹ ಈ ರಾತ್ರಿ ನೀನು ನನಗೆ
ಊಟ ಕೊಡಬಹುದು. ಈಗ ಊಟ ಮಾಡುತ್ತೇನೆ
ಏಕೆಂದರೆ ನಾಳೆ ನಾನು ಹೊರಟುಹೋಗುತ್ತಿದ್ದೇನೆ'
ಎಂದು ಹೇಳಿದೆ.

ನನ್ನ ಕಡೆಯಿಂದಲೇನೋ ಅದು ಸಾಮಾನ್ಯವಾದ ಮಾತೇ ಆಗಿದ್ದಿತು. ಆದರೆ, ನಿಜಕ್ಕೂ ಅವಳಿಗೆ ದಿಗ್ಭ್ರಮೆಯಾಯಿತು, ಆದರೆ ಅವಳೇನೂ ಹೇಳಲಿಲ್ಲ. ಒಂದು ವಿಷಯವೆಂದರೆ, ಮಾತನಾಡಿ ನನ್ನನ್ನು ಒಪ್ಪಿಸುವುದು ಆಗದ ಕೆಲಸವೆಂದು ನನ್ನ ಮನೆಯವರೆಲ್ಲರಿಗೂ ಮೊದಲಿನಿಂದಲೂ ಗೊತ್ತಿತ್ತು. ಏನಾದರೂ ಹೇಳುವ ಮೊದಲು ನಾನು ನನ್ನಲ್ಲಿ ಬಹಳ ಸ್ಪಷ್ಟವಾಗಿರುತ್ತೇನೆಂದು ಅವರಿಗೆ ತಿಳಿದಿತ್ತು. ನಾನು ಏನು ಮಾಡುತ್ತೇನೆಂಬುದನ್ನು ಖಚಿತಪಡಿಸಿಕೊಂಡ ನಂತರವೇ ಮಾತುಗಳನ್ನಾಡುತ್ತಿದ್ದುದು. ನಾನೇನನ್ನಾದರೂ ಹೇಳಿದಾಗ, ಅದನ್ನು ಮಾಡಿಯೇ ಮಾಡುತ್ತೇನೆಂದು ಅರ್ಥ, ಅಷ್ಟೇ!

ನನ್ನ ತಾಯಿಯು ಕಣ್ಣುಗಳಿಂದ ಕಣ್ಣೀರು
ಸುರಿಸಲಾರಂಭಿಸಿತು. ನಾನು ಅವಳನ್ನು ನೋಡಿ,
‘ಅಳುವುದು ಎಂದರೇನರ್ಥ? ನಾನು
ಹೋಗಕೂಡದೆಂದು ನಿನ್ನ ಅರ್ಥವೇ?’ ಎಂದು
ಕೇಳಿದೆ. ಅವಳು ತಲೆ ಆಡಿಸುತ್ತಾ, ‘ನೀನು
ಹೋಗಕೂಡದೆಂದು ನಾನು ಹೇಳುತ್ತಿಲ್ಲ. ನನಗೆ
ತಡೆದುಕೊಳ್ಳಲಾಗುತ್ತಿಲ್ಲವಾದ ಕಾರಣ ನಾನು
ಅಳುತ್ತಿದ್ದೇನೆ. ನನಗೆ ಅದನ್ನು ಒಪ್ಪಿಕೊಳ್ಳಲು
ಸಾಧ್ಯವಾಗುತ್ತಿಲ್ಲ. ನೀನು ಹೋಗಕೂಡದೆಂದು ನಾನು
ಹೇಳಲಾರೆ’ ಎಂದಳು.

ಇದುವರೆವಿಗೂ, ಇದು ಯಾವತ್ತಿದ್ದರೂ ಒಂದು ದಿನ ನಡೆಯುತ್ತದೆ ಎಂದು ಅವಳಿಗೆ ಗೊತ್ತಿತ್ತು. ಒಂದಲ್ಲ ಒಂದು ದಿನ ನಾನು ಹೋಗುತ್ತಿದ್ದೆ. ಅದು ನನ್ನ ಜಾತಕದಲ್ಲಿಯೇ ಬರೆದಿತ್ತು. ಸ್ವಾರಸ್ಯವೆಂದರೆ, ಅವಳು ‘ಬೇಡ’ ಎನ್ನಲೇ ಇಲ್ಲ! ನಾನು ಹೋಗಬಾರದೆಂದು ಹೇಳದೆಯೇ ಇದ್ದುದಲ್ಲದೆ, ನಮ್ಮ ತಂದೆಯವರಿಗೂ ಈ ಸಮಾಚಾರ ಹೇಳಿಬಿಟ್ಟಳು. ಆಕೆಯು ನನ್ನ ಮೇಲೆ ಕೂಗಾಡಿರಬಹುದು ಹಾಗೂ ಏನೋ ಸಮಸ್ಯೆ ತಂದಿಟ್ಟಿರಬಹುದು, ಅದಕ್ಕೇ ನಾನು ಮನೆ ಬಿಟ್ಟುಹೋಗುವ ಆ ತೀರ್ಮಾನ ತೆಗೆದುಕೊಂಡಿರಬೇಕು ಎಂದು ನನ್ನ ತಂದೆಯವರು ಭಾವಿಸಿದರು. ಅವರು ‘ನೀನು ಅವನ ಮೇಲೆ ಕೂಗಾಡಿದೆಯಾ? ಏನಾದರೂ ಸಮಸ್ಯೆ ತಂದಿಟ್ಟೆಯಾ?’ ಎಂದು ಆಕೆಯನ್ನು ಕೇಳಿದರು.

ನನ್ನ ತಾಯಿಯು, ‘ನಾನು ಕೂಗಾಡಲೂ ಇಲ್ಲ,
ಏನೂ ಅನ್ನಲೂ ಇಲ್ಲ. ಅವನೇ ಬಂದು ಇದನ್ನು
ಹೇಳಿದ’ ಎಂದರು. ಆಗ ನನ್ನ ತಂದೆ ಶಾಂತವಾದರು.

ಅದೊಂದು ನೇರವಾದ, ಸರಳವಾದ ಹೇಳಿಕೆಯಾಗಿತ್ತು. ನಮ್ಮ ತಂದೆ ನನ್ನ ಬಳಿ ಬಂದು, ಕುಳಿತುಕೊಂಡು, ‘ಸ್ವಾಮಿ, ನಿನ್ನ ತಾಯಿ ಕೆಲವು ಮಾತುಗಳನ್ನು ನೀನು ಹೇಳಿದೆಂದು ಹೇಳುತ್ತಿದ್ದಾಳೆ. ಅವು ನಿಜವೆ?’ ಎಂದು ಕೇಳಿದರು.

ತಮಾಷೆ ಎಂದರೆ, ಆ ದಿನಗಳಲ್ಲಿಯೂ ನನ್ನನ್ನು ‘ಸ್ವಾಮಿ’ ಎಂದು ಕರೆಯುತ್ತಿದ್ದರು!

ನಾನವರಿಗೆ ಹೇಳಿದೆ, ‘ಹೌದು, ನಾನು
ಸನ್ಯಾಸವನ್ನು ಅನುಸರಿಸಿ, ಜೀವನ್ಮುಕ್ತಿಯನ್ನು
ಪಡೆಯಲು ಮನೆಬಿಟ್ಟುಹೋಗುವ ತೀರ್ಮಾನ
ಮಾಡಿದ್ದೇನೆ’ ಎಂದು.

ಅವರಿಗೆ ದಿಗ್ಭ್ರಮೆಯಾಯಿತು. ಆದರೆ ನಾನು
ಬಹಳ ಸ್ಪಷ್ಟವಾಗಿಯೂ, ಸಮಚಿತ್ತನಾಗಿಯೂ,
ಶಾಂತವಾಗಿಯೂ ಹಾಗೂ ಹಾಯಾಗಿರುವುದನ್ನು
ಅವರು ಗಮನಿಸಿದರು. ಅವರು ಒಂದೇ ಒಂದು
ಮಾತನ್ನು ಹೇಳಿದರು, ‘ನೀನು ಖಾಯಿಲೆ ಬಿದ್ದರೆ
ದಯವಿಟ್ಟು ನಮಗೆ ತಿಳಿಸು. ನಾವು ನಿನ್ನನ್ನು
ನೋಡಿಕೊಳ್ಳಬೇಕು’ ಎಂದು, ಅಷ್ಟೇ. ಅವರು
ಸರಳವಾಗಿ, ‘ನಿನ್ನ ಪ್ರಯಾಣ ಕಾಲದಲ್ಲಿ
ಎಲ್ಲಿಯಾದರೂ ಖಾಯಿಲೆಬಿದ್ದರೆ, ದಯವಿಟ್ಟು
ನಮಗೆ ತಿಳಿಸು. ನಾವು ನಿನ್ನನ್ನು ನೋಡಿಕೊಳ್ಳಲು
ಬಯಸುತ್ತೇವೆ. ನಮಗೆ ಬೇಕಾಗಿರುವುದು
ಅದೊಂದೇ, ಇನ್ನೇನಿಲ್ಲ. ಅದು ಬಿಟ್ಟರೆ, ನಿನಗೆ
ಬೇಕಾದುದನ್ನೇ ಮಾಡು’ ಎಂದರು.

ನನ್ನ ತಾಯಿ-ತಂದೆಯರು ನನ್ನ ಹಾದಿಗೆ ಅಡ್ಡ
ಬರಲೇ ಇಲ್ಲ. ತಿಳಿಯಿರಿ, ತಾಯಿ-ತಂದೆಯರೂ
ಸೇರಿದಂತೆ ಯಾವುದೇ ಸಂಬಂಧವಾಗಲೀ, ಯಾರೇ

ಆಗಲಿ, ಮುಂದಿನ ಹಂತವು ಘಟಿಸಲು ಸಮ್ಮತಿಸಲು
ಸಿದ್ಧರಾಗಿದ್ದರೆ ಮಾತ್ರವೇ ಅದು ಒಳ್ಳೆಯ ಸಂಬಂಧ.
ಅನ್ವೇಷಣೆಯ ಈ ಮಾರ್ಗವನ್ನು ಹಿಡಿಯಲು
ಸಾಕಷ್ಟು ಸ್ಫೂರ್ತಿಯುತರಾದ, ಧೈರ್ಯವಂತರಾದ,
ಸಾಹಸಿಗಳಾದ, ಸಾವಿರಗಟ್ಟಲೆ ಯುವಕರನ್ನು
ನೋಡಿದ್ದೇನೆ. ಆದರೆ ಅವರ ತಾಯಿ-
ತಂದೆಯರಿಂದಾಗಿ ಅನ್ವೇಷಣೆಗಾಗಿ ತಮಗೇ ಒಂದು
ಅವಕಾಶವನ್ನೂ ನೀಡುವುದಿಲ್ಲ!

ತಾಯಿ-ತಂದೆಯರು ಕೇವಲ ಪೂರ್ವ ವ್ಯವಸ್ಥಿತ ಜೀವನ ಕ್ರಮಕ್ಕೆ ಕಟ್ಟುಬಿದ್ದು, ಬೇರೆಯವರ ಅಹಂಭಾವಗಳನ್ನು ತೃಪ್ತಿಪಡಿಸಲೆಂದೇ ಜೀವಿಸುತ್ತಾ ಮಕ್ಕಳನ್ನು ಸಾಕುತ್ತಾರೆ. ಬಹಳ ಅಪರೂಪಕ್ಕೆ, ಕೆಲವರು ಮಾತ್ರ ಪರಿಶೋಧಿಸುವ ಸ್ಫೂರ್ತಿಯನ್ನೂ ಧೈರ್ಯವನ್ನೂ ಪಡೆಯುತ್ತಾರೆ. ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ: ನಿಮ್ಮ ಮಕ್ಕಳಿಗೆ ಸ್ವಾಮಿಗಳಾಗುವ ತರಬೇತಿಕೊಡಿರೆಂದೋ, ಅವರನ್ನು ಅದಕ್ಕೆ ಬಲಾತ್ಕರಿಸಿರಿಂದೋ ನಾನು ಹೇಳುತ್ತಿಲ್ಲ. ಇಲ್ಲ! ನಾನು ಹೇಳುತ್ತಿರುವುದೇನೆಂದರೆ, ಅವರೇನಾದರೂ ಸನ್ಯಾಸದ ಕಡೆಗೆ ಒಲವನ್ನು ತೋರಿಸಿದ್ದೇ ಆದರೆ, ಅವರ ದಾರಿಗೆ ಅಡ್ಡಬರಬೇಡಿರಿ. ಅವರ ದಾರಿಗೆ ಅಡ್ಡವಾಗದಿದ್ದರೆ ನೀವು ಅನುಗ್ರಹಿತರಾಗುವಿರಿ.

ಮಗುವು ಆರಿಸಿಕೊಂಡಿರುವ ಪಥವನ್ನು ನೋಡುವ ಜಾಣ್ಮೆ ಇರಲಿ. ಅವನು ಪರಮಶ್ರೇಷ್ಠವಾದ ಪಥವನ್ನು ಆಯ್ಕೆಮಾಡಿಕೊಂಡಿರುತ್ತಾನೆ. ಅವನು ಆತ್ಮ ಕರೆದ ಕಡೆಗೆ ಸೋತು ಬಿಟ್ಟರೆ ಏನೂ ತಪ್ಪಿಲ್ಲ - ಒಂದು ವೇಳೆ ಇದೇ ನಿಮ್ಮ ಭಯವಾಗಿದ್ದರೆ ನನ್ನ ಹಿಂದಿನ ಹತ್ತು ಜನ್ಮಗಳಲ್ಲಿ ನಾನು ಯಶಸ್ವಿಯಾಗದೇ ಹೋಗಿದ್ದಿರಬಹುದು. ಆ ಕಾರಣದಿಂದಲೇ ಈ ಜನ್ಮದಲ್ಲಿ ಯಶಸ್ವಿಯಾಗಿರುವುದು! ಮತ್ತೊಂದು ವಿಷಯ: ಜೀವನ್ಮುಕ್ತಿಗಾಗಿ ಕಷ್ಟಪಡುತ್ತಿದ್ದಾಗ, ಜೀವನ್ಮುಕ್ತಿ ದೊರಕದಿದ್ದರೂ ಅದು ಸೋಲಲ್ಲ. ಅದು ದೊಡ್ಡ ಗೆಲುವು, ಏಕೆಂದರೆ ನೀವು ಸಮಗ್ರತೆಯೊಂದಿಗೆ, ಅದರಲ್ಲೂ ಪ್ರಜ್ಞಾಕ್ಷೇತ್ರದಲ್ಲಿ ಜೀವಿಸಿದಂತಾಯಿತು. ಪ್ರಜ್ಞಾಕ್ಷೇತ್ರದಲ್ಲಿ ವಿಶ್ವಶಕ್ತಿಯು ನಿಮ್ಮನ್ನು ಪರಿಪೂರ್ಣವಾಗಿ ಗಮನಿಸುತ್ತಿರುತ್ತದೆ. ಪ್ರತಿಯೊಂದು ಹೆಜ್ಜೆಯಲ್ಲಿಯೂ ನಿಮ್ಮನ್ನು ನೋಡಿಕೊಳ್ಳುತ್ತದೆ. ಆದುದರಿಂದ ಅರ್ಥಮಾಡಿಕೊಳ್ಳಿರಿ, ಪ್ರಜ್ಞಾಕ್ಷೇತ್ರದಲ್ಲಿ ಮಾಡುವ ಯಾವುದೇ ಅನ್ವೇಷಣೆ, ಯಾವುದೇ ಸಂಶೋಧನೆ ಅಥವಾ ಯಾವುದೇ ಸಾಹಸವನ್ನೇ ಆಗಲಿ ಪ್ರೋತ್ಸಾಹಿಸಬೇಕು, ಮಾಡಗೊಡಬೇಕು ಮತ್ತು ಬೆಂಬಲಿಸಬೇಕು!

ನನ್ನ ದಾರಿಗೆ ಅಡ್ಡಬಾರದ್ದಿದ್ದ ನನ್ನ ತಾಯಿತಂದೆಯವರಿಗೆ ನಾನು ಎಂದೆಂದಿಗೂ ಚಿರಋಣಿ.