ಸನ್ಯಾಸವು ಅಂತಿಮದ್ಯೂತ
This text was machine-transcribed from the printed book and may contain errors. Select the words and choose “Report a mistake”.
ಅನ್ಯರೊಂದಿಗೂ, ವಿಶ್ವಶಕ್ತಿಯೊಂದಿಗೂ
ಶೃತಿಗೂಡಿಸಿಕೊಳ್ಳುವ ನಮ್ಮ ಸಾಮರ್ಥ್ಯವು ನಾವು
ಯಾವ ರೀತಿ ವರ್ತಿಸುವೆವೆಂಬುದರ ಮೇಲೆ
ಸಂಪೂರ್ಣವಾಗಿ ಆಧಾರಿತವಾಗಿರುತ್ತದೆ. ನಾವು
ಜೀವನದಲ್ಲಿ ಆಯ್ಕೆ ಮಾಡುವ ಆದ್ಯತೆಗಳ ಮೇಲೆ
ಅದು ಆಧಾರಿತವಾಗಿರುತ್ತದೆ. ನಾವು ಆಯ್ಕೆ
ಮಾಡದಿದ್ದಲ್ಲಿ ಏನಂತೆ? ವಿಷಯಗಳು ಅವು ನಮ್ಮ
ಜೀವನದಲ್ಲಿ ನಡೆಯುವಂತೆಯೇ ಒಪ್ಪಿಕೊಂಡರೆ
ಏನಂತೆ?
ಈಗ, ವೈರಾಗ್ಯದ ಬಗ್ಗೆ ಮಾತನಾಡುವ ಸಮಯ ಬಂದಿದೆ. ವೈರಾಗ್ಯವೆಂದರೆ ಜೀವನದಿಂದ ಪಲಾಯನ ಮಾಡುವುದೇಂದಲ್ಲ. ವೈರಾಗ್ಯವೆಂದರೆ ಜೀವನದೊಂದಿಗೆ ತಡೆಯಿಲ್ಲದೆ ಹರಿಯುವುದು. ಸಂಸ್ಕೃತದ ಪದ ಸನ್ಯಾಸವೆಂಬುದು ಜೀವನದ ಉಳಿದೆಲ್ಲವನ್ನೂ ಬಿಟ್ಟುಬಿಡುವುದಕ್ಕೆ ಆಗುವ ಹಾಗೆ ಪ್ರಪಂಚ ಶಕ್ತಿಯೊಂದಿಗೆ ಇರುವ ನಂಬಿಕೆಯ ಸ್ಥಿತಿಗೆ ಅನ್ವಯಿಸುತ್ತದೆ.
ಸನ್ಯಾಸ . . .
ಭಗವಾನ್ ಬುದ್ಧನ ಜೀವನದಲ್ಲಿ ನಡೆದ ಒಂದು ಸುಂದರವಾದ ಕಥೆ ಇದೆ:
ಜ್ಞಾನೋದಯ ಹೊಂದಿದ ನಂತರ ಬುದ್ಧನು ತನ್ನ
ಧರ್ಮದ ಉಪದೇಶ ಮಾಡುತ್ತಲೂ, ಜನರಿಗೆ
ಆಧ್ಯಾತ್ಮ ಜೀವನದ ದೀಕ್ಷೆ ನೀಡುತ್ತಲೂ, ಅನೇಕ
ಸ್ಥಳಗಳನ್ನು ಸಂದರ್ಶಿಸಿದನು.
ಮಾರ್ಗದಲ್ಲಿ ತನ್ನ ಜನ್ಮಸ್ಥಳವಾದ ಕಪಿಲವಸ್ತುವಿಗೆ ಬಂದನು. ಕಾವೀವಸ್ತ್ರಧಾರಿಗಳಾದ ತನ್ನ ಶಿಷ್ಯರೊಂದಿಗೆ ಬೀದಿಗಳಲ್ಲಿ ಹೋಗುತ್ತಿದ್ದನು. ಪ್ರತಿಯೊಬ್ಬರೂ ಅತ್ಯಾಶ್ಚರ್ಯದಿಂದ ಅವನನ್ನು ನೋಡುತ್ತಿದ್ದರು. ಬುದ್ಧನ ಪತ್ನಿಯಾದ ಯಶೋಧರೆಯು ಬೀದಿಯಲ್ಲಾಗುತ್ತಿರುವ ಗದ್ದಲವನ್ನು ಆಲಿಸಿ, ಅದೇನೆಂದು ಕೇಳಿದಳು. ಅದು ಬೇರಾರೂ ಅಲ್ಲದೆ, ಆಕೆಯ ಪತಿಯೇ ಜ್ಞಾನೋದಯ ಹೊಂದಿದ ಬುದ್ಧನಾಗಿ ಹಿಂದಿರುಗಿದ್ದಾನೆಂದು ಆಕೆಯ ಸೇವಕಿಯರು ಹೇಳಿದರು. ಆಕೆಯು ಆತನನ್ನು ಸಂಧಿಸಲು ಹೋಗಲಿಲ್ಲ. ಬದಲಾಗಿ, ತನ್ನ ಮಗ ರಾಹುಲನನ್ನು ಕರೆಸಿದಳು. ಜ್ಞಾನಾರ್ಜನೆಗಾಗಿ ಬುದ್ಧನು ಗೃಹತ್ಯಾಗ
ಕ್ರಾಂತಿಯು
ಜ್ಞಾನೋದಯಕ್ಕೆ
ಒಯ್ಯುತ್ತದೆ.
ಅದೇ ಸನ್ಯಾಸ.
ಒಬ್ಬ ವ್ಯಕ್ತಿಯ
ಪರಮೋತ್ಕೃಷ್ಟ
ಕ್ರಾಂತಿ.
ಮಾಡಿದ ರಾತ್ರಿ ರಾಹುಲನು ಜನಿಸಿದ್ದನು.
ಆಕೆಯು ರಾಹುಲನನ್ನು
ಕೇಳಿದಳು, 'ಅಲ್ಲಿ
ಭಿಕ್ಷಾಪಾತ್ರೆಯನ್ನು ಹಿಡಿದು-
ಕೊಂಡಿದ್ದರೂ ರಾಜನಂತೆ
ಶೋಭಿಸುತ್ತಿರುವ ಆ
ತೇಜಸ್ವಿಯನ್ನು
ನೋಡಿದೆಯಾ? ಆತನೇ ನಿನ್ನ ತಂದೆ. ಹೋಗು,
ಆತನಿಂದ ನಿನ್ನ ಪಿತ್ರಾರ್ಜಿತವನ್ನು ಕೇಳು'.
ಬಾಲಕನು ಓಡೋಡುತ್ತಾ ಮೆಟ್ಟಿಲುಗಳನ್ನಿಳಿದು,
ದಾರಿಬಿಡಿಸಿಕೊಂಡು ಬುದ್ಧನು ನಿಂತಿದ್ದಲ್ಲಿಗೆ
ಬಂದನು. ಬುದ್ಧನ ಪಾದಗಳಿಗಿರೆಗಿ, ತನ್ನ ತಾಯಿಯು
ತನಗೆ ಹೇಳಿದುದನ್ನು ದಿಟ್ಟವಾಗಿ ಹೇಳಿದನು.
ಬುದ್ಧನು ನಸುನಗುತ್ತಾ ಅವನನ್ನು ನಯವಾಗಿ ಎತ್ತಿಕೊಂಡು ಅವನತ್ತ ನೋಡಿದನು. ಬಾಲಕನು ತೊಟ್ಟುಕೊಂಡಿದ್ದ ಜರತಾರಿ ಕಸೂತಿಯ ಉಡುಪನ್ನು ನಾಜೂಕಾಗಿ ಬಿಚ್ಚಿ, ಕಾವಿಬಟ್ಟೆಯನ್ನು ಉಡಿಸಿದನು.
ಏಳು ವರ್ಷದ ಬಾಲಕನಿಗೆ ಪಿತ್ರಾರ್ಜಿತವನ್ನು
ನೀಡಲಾಯಿತು. ಅವನು ಬುದ್ಧನ ಭಿಕ್ಷುಗಳ ಸಂಘಕ್ಕೆ
ಸೇರಿಸಲ್ಪಟ್ಟ ಪ್ರಥಮ ಹಾಗೂ ಏಕೈಕ ಪುಟ್ಟ
ಬಾಲಕನು.
ಒಬ್ಬರು ನನ್ನನ್ನು ಕೇಳಿದರು, 'ಸೃಷ್ಟಿಯಲ್ಲಿ
ಎಲ್ಲವೂ ಮಂಗನಿಂದ ಮಾನವ, ಹಾಗೂ
ಕೆಟ್ಟದ್ದರಿಂದ ಒಳ್ಳೆಯದು ಎಂಬ ವಿಕಸನ
ಕಾರ್ಯಗತಿಯಲ್ಲಿ ಸಹಜವಾಗಿ
ವಿಕಸನಗೊಳ್ಳುತ್ತಿರುವಾಗ, ಕಟ್ಟಕಡೆಗೆ ಮಾನವನು
ದೇವರಾಗಿ ವಿಕಸಿಸುವುದಿಲ್ಲವೆ? ಹಾಗಾಗುವುದಾದರೆ,
ಧ್ಯಾನ, ಸನ್ಯಾಸಗಳ ಅವಶ್ಯಕತೆಯಾಗಲೀ . . .
ಸ್ಪೂರ್ತಿಯ ಅವಶ್ಯಕತೆಯಾಗಲೀ ಎಲ್ಲಿದೆ?'
ಎಂದು.
ನಾನು ಹೇಳಿದೆ, 'ಮಂಗವು ಮಾನವನಾಗಲು
ಐದು ಸಾವಿರ ವರ್ಷಗಳು ಹಿಡಿಯಿತು. ಅಂತೆಯೇ
ಮಾನವನು ದೇವರಾಗಲು ಸಹ ಅಷ್ಟೇ ಸಮಯ
ಹಿಡಿಯುತ್ತದೆ. ನಿಮಗೆ ಅಷ್ಟು ಕಾಲ ಕಾದಿರಲು
ಇಷ್ಟವಿದ್ದರೆ ನನ್ನ ಅಭ್ಯಂತರವೇನಿಲ್ಲ!' ಎಂದು.
ಹಾಗಲ್ಲದೆ, ವಿಶ್ವಸೃಷ್ಟಿಯ ನಿಯಮಗಳ ಹಾಗೂ
ರಚನೆಗಳ ಮತ್ತು ಧ್ಯಾನದ ಬಗ್ಗೆ ಸ್ಪಷ್ಟವಾದ
ತಿಳಿವಳಿಕೆಯನ್ನು ಹೊಂದಿ, ಪ್ರಜ್ಞಾವಂತರಾಗಿ
ಬಾಳುವ ನಿರ್ಧಾರ ಮಾಡಬಹುದು. ನಿಮ್ಮ ವಿಕಸನದ
ಕಾರ್ಯಗತಿಯನ್ನು ಕ್ರಾಂತಿಕಾರಕವಾಗಿ
ಪರಿವರ್ತಿಸಬಹುದು. ಸರಿಯಾದ ಕ್ರಾಂತಿಯು
ವಿಕಸನಕ್ಕೆ ಅಥವಾ ಜ್ಞಾನೋದಯಕ್ಕೆ ಒಯ್ಯುತ್ತದೆ.
ಅದೇ ಸನ್ಯಾಸ - ಒಬ್ಬ ವ್ಯಕ್ತಿಯ ಪರಮೋತ್ಕೃಷ್ಟ
ಕ್ರಾಂತಿ - ಒಬ್ಬ ಪರಮಹಂಸರಂತೆ - ಒಬ್ಬ
ಜ್ಞಾನಿಯಂತೆ ಜೀವಿಸುವುದು.
ಜ್ಞಾನಿಗಳಾದ ಆದಿಶಂಕರರು ವಿವೇಕ
ಚೂಡಾಮಣಿ ಎಂಬ ತಮ್ಮ ಕೃತಿಯಲ್ಲಿ ಸುಂದರವಾಗಿ
ಹೀಗೆ ಹೇಳಿದ್ದಾರೆ
ಪ್ರಾಣಿಗಳೆಲ್ಲದರಲ್ಲಿಯೂ ಮಾನವ
ಜನ್ಮವ ಪಡೆವುದು ದುರ್ಲಭವು,
ಮನೋಧರ್ಮದಲ್ಲಿ ಸಾತ್ವಿಕ ಭಾವವ
ಪಡೆವುದು ಇನ್ನೂ ದುರ್ಲಭವು,
ಆಧ್ಯಾತ್ಮಿಕ ಹಾದಿಯಲ್ಲಿ ದೃಢ ನಿಶ್ಚತೆಯ
ಪಡೆವುದು ಮತ್ತೂ ದುರ್ಲಭವು
ಎಂದು ವೇದಗಳಲ್ಲಿ ವಿವರಿಸಿರುವಂತೆ.
ಈ ಮಾತುಗಳು ಶಂಕರರು ಅವತರಿಸಿದ ಸಾವಿರಾರು ವರ್ಷಗಳ ನಂತರ ಜನಿಸಿದ ಭಾರತದ ಜ್ಞಾನಿಗಳಾದ ಸ್ವಾಮಿ ವಿವೇಕಾನಂದರ ಜೀವನದ ಮೇಲೆ ಬಹಳ ಪ್ರಭಾವಬೀರಿತು. ಸ್ವಾಮಿ ವಿವೇಕಾನಂದರು ತಮ್ಮ ಕಾನೂನು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ, ಅವರು ಓದುತ್ತಿದ್ದ ಸಮಯ, ಇದೇ ಮಾತುಗಳು ಅವರ ಮೇಲೆ ಸಿಡಿಲಿನಂತೆರಗಿತು. ಅವರಿಗೆ ಮುಂದೆ ಓದಲು ಅಸಾಧ್ಯವಾಯಿತು. ಅವರು ತಮ್ಮ ಪುಸ್ತಕಗಳನ್ನು ಬಿಟ್ಟು, ಬೀದಿಯಲ್ಲಿ ಓಡತೊಡಗಿದರು. ಅವರು ತಮ್ಮ ಗುರುಗಳಾದ ರಾಮಕೃಷ್ಣ ಪರಮಹಂಸರೆಡೆಗೆ ಓಡುತ್ತಿದ್ದರು. ಅವರು ಓಡುತ್ತಿದ್ದಾಗ, ಶಂಕರರ ಮಾತುಗಳ ಸತ್ಯಾಂಶವು ಅವರ ಅಸ್ತಿತ್ವದಲ್ಲಿ ಮೊಳಗುತ್ತಿತ್ತು. ಅವರು ತಮ್ಮಲ್ಲೇ ಅಂದುಕೊಂಡರು, ‘ನಾನು ಈ ಮೂರನ್ನೂ ಪಡೆದುಕೊಂಡಿದ್ದೇನೆ: ಮನುಷ್ಯನಾಗಿ ಜನಿಸಿದ್ದೇನೆ. ಮುಕ್ತಿಯ ಬಯಕೆಯನ್ನು ಹೊಂದಿದ್ದೇನೆ. ನನಗೆ ಪರಮಗುರುಗಳು ದೊರಕಿದ್ದಾರೆ . . . ಹಾಗಿದ್ದೂ ನಾನು ಜೀವನವನ್ನು ಇನ್ನೂ ಏಕೆ ವ್ಯರ್ಥಮಾಡಿಕೊಳ್ಳುತ್ತಿದ್ದೇನೆ? ಏಕಾದರೂ ನನ್ನ ಜೀವನವನ್ನು ವ್ಯರ್ಥಮಾಡಿಕೊಳ್ಳುತ್ತಿದ್ದೇನೆ?’ ಎಂದು. ಪುನಃ ಪುನಃ ಈ ಮಾತುಗಳು ಅವರನ್ನು ಕಾಡುತ್ತಿದ್ದವು. ಹೀಗೆಯೇ ಮುಂದುವರೆದ ಸ್ವಾಮಿ ವಿವೇಕಾನಂದರು ಸಾಕ್ಷಾತ್ಕಾರ ಪಡೆದರು ಹಾಗೂ ಜಗತ್ತಿನಲ್ಲೆಲ್ಲಾ ರಾಮಕೃಷ್ಣ ಪರಮಹಂಸರ ಧರ್ಮಪ್ರಚಾರ ಮಾಡಿದರು.
ಸನ್ಯಾಸವು - ತಮ್ಮನ್ನೇ ತಾವು ಜಯಿಸ
ಬೇಕೆಂದಿರುವವರಿಗೂ, ಅಸೂಯೆ, ಕೋಪ ಹಾಗೂ
ಖಿನ್ನತೆಗಳ ಹಿಡಿತದಿಂದ ಶಾಶ್ವತವಾಗಿ ಬಿಡುಗಡೆ
ಹೊಂದಬೇಕೆಂದಿರುವವರಿಗೂ, ಸನ್ಯಾಸವು ಇರುವ
ಮಾರ್ಗ. ಬದುಕಿನಲ್ಲಿ ಸೋತವರು ಸನ್ಯಾಸವನ್ನು
ಆಯ್ದುಕೊಳ್ಳುವರೆಂದು ಜನರು ಆಡಿಕೊಳ್ಳುತ್ತಾರೆ.
ಇಲ್ಲ, ಅಂದಹಾಗೆ, ಕೆಲವು ಸಲ ತಮ್ಮ ಜೀವನವನ್ನು
ಏನು ಮಾಡಬೇಕೆಂಬುದನ್ನು ಅರಿಯದವರೂ
ಸನ್ಯಾಸವನ್ನು ಸ್ವೀಕರಿಸುತ್ತಾರೆ. ಆದರೆ ಅದು
ಸನ್ಯಾಸದ ನಿಜವಾದ ಅರ್ಥವಲ್ಲ.
ಮಾನವ ಜೀವಿ ಎಂದು ನಿಮ್ಮನ್ನು ಆವರಿಸಿರುವ ಪ್ರಕ್ರಿಯೆಯು ನಿಮಗೆ ಮೊದಲ ಸಲ ಅರಿವಾಗುವ ಪ್ರಯತ್ನವೇ ಸನ್ಯಾಸ. ನೀವು ವಿಶ್ವಶಕ್ತಿಯ ಒಂದು ಭಾಗವಷ್ಟೆ. ಬ್ರಹ್ಮಾಂಡವು ತನ್ನದೇ ಆದ ಯಾಂತ್ರಿಕತೆಯಲ್ಲಿ ತನ್ನದೇ ಆದ ಗಾನದಲ್ಲಿಯೂ ಚಲಿಸುತ್ತಿರುತ್ತದೆ. ಅದರೊಂದಿಗೆ ಶ್ರುತಿಗೂಡಿಸುವ ವಿಜ್ಞಾನಕ್ಕೆ ಸನ್ಯಾಸ ಎನ್ನುತ್ತೇವೆ. ಸನ್ಯಾಸವು ಅಸ್ತಿತ್ವ ಮಟ್ಟದ ಒಂದು ಸಂಬಂಧ - ಇಡೀ ಬ್ರಹ್ಮಾಂಡದೊಂದಿಗೆ ಶ್ರುತಿಗೊಳಿಸಿಕೊಳ್ಳುವ ಸಂಬಂಧ, ಅದು ಜೀವನದ ಯಶಸ್ಸಿಗೆ ಅತ್ಯಂತ ಹತ್ತಿರದ ಮಾರ್ಗವೂ ಸಹ.
ವಿಶ್ವಶಕ್ತಿಯ ಗಾನವನ್ನಾಲಿಸಲು ಸರಿಯಾದ
ಅಂತಃಸ್ಥಳದಲ್ಲಿ ಚಲಿಸಲು ಪ್ರಾರಂಭಿಸಬೇಕು. ಅದು
ಯಾವುದೆಂದು ತಿಳಿಯಲು ನೀವು ನಿಮಗೆ ತಿಳಿದಿರುವ
ಬೇರೆಲ್ಲವನ್ನೂ ಬಿಟ್ಟು, ಆಳವಾದ ಅರಿವಿನಿಂದ ಆ
ಗಾನವನ್ನು ಆಲಿಸಬೇಕು. ಆಗ ನೀವು
ಕಂಡುಕೊಳ್ಳುವಿರಿ. ಆ ಅಂತಃಸ್ಥಳದಲ್ಲಿ ನದಿಯು
ಸಾಗರದೆಡೆಗೆ ಧಾವಿಸುವಂತೆ ಜೀವನವು
ಹರಿಯುತ್ತದೆ. ಇನ್ನಾವ ಮಾರ್ಗವೇ ಆದರೂ ಹೆಚ್ಚು
ಕಾಲ ತೆಗೆದುಕೊಳ್ಳುತ್ತದೆ.
> ಸನ್ಯಾಸವು
> ಸತ್ಯವನ್ನು
> ತಕ್ಷಣವೇ ನಿಮ್ಮ
> ಜೀವನದಲ್ಲಿ
> ಜೀವಿಸುವ
> ಪ್ರಜ್ಞಾಪೂರಿತ
> ನಿರ್ಧಾರ.
ಜೀವನವು ಒಂದು
ಹರಿಯುವ ನದಿಯಾದಾಗ,
ಅದು ಸಾಗರವನ್ನು
ಸೇರಲೇಬೇಕು, ಬೇರೆ
ದಾರಿಯಿಲ್ಲ. ಸನ್ಯಾಸವು
ವಿಶ್ವಶಕ್ತಿಯ ಸಹಜ-
ಗತಿಯೊಡನೆ ಹರಿಯುವ
ಹಾಗೂ ಕೊನೆಗೆ ಅದರೊಡನೆ ಐಕ್ಯವಾಗುವ
ವಿಜ್ಞಾನವಾಗಿದೆ.
ನದಿಯಂತೆ ಪ್ರವಹಿಸಿರಿ
ನದಿಯು ಸಾಗರದೆಡೆಗೆ ಮಾತ್ರ ಪ್ರವಹಿಸುತ್ತದೆ.
ಅದು ಎಲ್ಲಿಯೂ ನಿಂತುಬಿಡುವುದಿಲ್ಲ. ಸನ್ಯಾಸಿಯು
ತನ್ನ ಗುರಿಯಾದ ಜ್ಞಾನೋದಯದ ಕಡೆಗೆ ಮಾತ್ರ
ನಡೆಯುತ್ತಾನೆ. ಆತನು ಬೇರಾವ ಸೆಳೆತಗಳಿಂದ
ವಿಚಲಿತನಾಗುವುದಿಲ್ಲ. ನದಿಯ ಮಾರ್ಗದಲ್ಲಿ
ಅದರೊಳಕ್ಕೆ ಏನೇ ವಸ್ತುಗಳನ್ನು ಎಸೆದರೂ ಸಹ
ಆನಂದವಾಗಿ ಹರಿಯುತ್ತದೆ. ಹೂಗಳು, ಕಡ್ಡಿಗಳು,
ಆಹಾರ ಪದಾರ್ಥಗಳು, ಪ್ರಾಣಿಗಳು, ಪಕ್ಷಿಗಳು,
ಮೃತದೇಹಗಳು ಹೀಗೆ ಮುಂತಾದ ಎಷ್ಟೋ
ವಸ್ತುಗಳನ್ನು ಅದರೊಳಕ್ಕೆ ಎಸೆಯಲಾಗುತ್ತದೆ.
ಆದರೆ, ಯಾವುದಕ್ಕೂ ಆತಂಕಪಡದೆಯೇ ನದಿ
ಹರಿಯುತ್ತಿರುತ್ತದೆ.
ಅಂತೆಯೇ ಒಬ್ಬ ಸನ್ಯಾಸಿಯು ತನ್ನ ಹಾದಿಯಲ್ಲಿ ಏನೇ ಬಂದರೂ ಅದರಿಂದ ಸ್ಪರ್ಶಿತನಾಗದೆ ಆನಂದವಾಗಿ ಸಾಗುತ್ತಾನೆ. ಸೆಳೆತವು ನದಿಯನ್ನು ಅದರ ಅಡಚಣೆಗಳ ಮೇಲೆ ಎಳೆದುಕೊಂಡು ಹೋಗುತ್ತದೆ ಹಾಗೂ ಸತತ ಗಾನವಾದ ಜುಳುಜುಳು ಶಬ್ದ ಮಾಡುತ್ತಾ ಸಾಗರದೆಡೆಗೆ ಸಾಗುತ್ತದೆ. ವಿಶ್ವಶಕ್ತಿಯು ಸನ್ಯಾಸಿಯನ್ನು, ಆತನು ಅಂತಿಮ ಗುರಿಯೆಡೆಗೆ ಸಾಗುತ್ತಿದ್ದಂತೆ ಅವನು ಅಡೆತಡೆಗಳನ್ನು ದಾಟುವಂತೆ ಮಾಡಿ ಅವನನ್ನು ಕೊಂಡೊಯ್ಯುತ್ತದೆ. ಆತನಿಗೆ ಅಡೆತಡೆಗಳೆಂಬುದೇ ತಿಳಿಯದು. ಆನಂದದ ಹಾದಿಯಲ್ಲಿ ಆತನಿಗೆ ಅವೆಲ್ಲವೂ ಮೆಟ್ಟುಗಲ್ಲುಗಳು.
'ಝೆನ್ ಎಂದರೇನು?' ಎಂದು ಒಬ್ಬ ಝೆನ್ ಗುರುಗಳನ್ನು ಕೇಳಲಾಯಿತು.
ಅವರು 'ಮುಂದುವರಿ' ಎಂದು ಹೇಳಿದರು.
ಝೆನ್ ಬೌದ್ಧಮತವು ಸುಂದರವಾಗಿ ಹೇಳುವುದೇನೆಂದರೆ, ಜೀವನವು ಹರಿಯುವ ನದಿಯಂತೆ, ಅದು ಪ್ರತಿಯೊಂದು ರೂಪವನ್ನೂ ತುಂಬುತ್ತದೆ ಮತ್ತು ತನ್ನ ಸಾಮರ್ಥ್ಯವನ್ನು ಹಿಗ್ಗಿಸಿಕೊಳ್ಳಲು ತನ್ನ ಪರಿಮಿತಿಗಳನ್ನು ಖಿರಿದುಕೊಳ್ಳುತ್ತದೆ. ಇದು ಜೀವನದ ಹಾಗೂ ಸನ್ಯಾಸದ ಸಾರ. ಸನ್ಯಾಸವೆಂದರೆ ಜೀವನ ಸಾಗುತ್ತಿದ್ದಂತೆ ಕ್ರಿಯಾಶೀಲತೆಯಲ್ಲಿ ಕಲಿಯುವಿಕೆ, ತತ್ವಜಿಜ್ಞಾಸೆ ಮಾಡುವುದಲ್ಲ. ಅದೊಂದು ಬಲ, ಸಿದ್ಧಾಂತವಲ್ಲ. ನಿಜವಾದ ಸನ್ಯಾಸಿಗೆ ಜೀವನವು ಸರಿಯಾದ ದಿಕ್ಕಿನಲ್ಲಿ ಸುಗಮವಾಗಿ ಸಾಗುತ್ತದೆ. ಅಲ್ಲದೆ, ಸಾಗುತ್ತಲೇ ಕಲಿಕೆಯಾಗುತ್ತದೆ, ಬೇರೆಯಾಗಿ ಅಲ್ಲ.
ಸನ್ಯಾಸವೆಂಬುದು ಕಳೆಯುತ್ತಿರುವ ಪ್ರತಿ ಕ್ಷಣವು
ಸತ್ಯವನ್ನು ನೇರವಾಗಿ ಅಭ್ಯಾಸ ಮಾಡುವುದೇ
ಹೊರತು ಬೇರೆಯಲ್ಲ. ಜಗತ್ತಿನಲ್ಲಿ ಸಾಕಷ್ಟು
ತತ್ವಜಿಜ್ಞಾಸೆಗಳೂ ಇವೆ, ಆದರೆ ಅದನ್ನು
ಅನುಸರಿಸುವವರು ಯಾರೂ ಇಲ್ಲ. ಸನ್ಯಾಸವು ಸತ್ಯವನ್ನು ತಕ್ಷಣವೇ ನಿಮ್ಮ ಜೀವನದಲ್ಲಿ ಜೀವಿಸುವ ಪ್ರಜ್ಞಾಪೂರಿತ ನಿರ್ಧಾರ.
ಒಬ್ಬ ಝೆನ್ ಗುರುವು ತನ್ನ ಶಿಷ್ಯನಿಗೆ ಬಹಳ
ಸುಂದರವಾಗಿ ಹೇಳುತ್ತಾರೆ, 'ಸತ್ಯವನ್ನು
ತತ್ವಶಾಸ್ತ್ರವೆಂದು ಅಧ್ಯಯನ ಮಾಡುವುದು ಕೇವಲ
ಬೋಧನಾ ಪುಸ್ತಕ ಇತ್ಯಾದಿಗಳನ್ನು
ಕಳೆಹಾಕಿಕೊಂಡಂತೆ. ಎಡಬಿಡದೇ ಅಭ್ಯಾಸ
ಮಾಡದೇ ಹೋದರೆ, ನಿನ್ನ ಸತ್ಯದ ದೀವಿಗೆಯು
ನಂದಿಹೋಗಬಹುದೆಂಬುದನ್ನು ನೆನಪಿಡು' ಎಂದು.
ಅಭ್ಯಾಸವೆಂದರೆ ಎಲ್ಲಿಯೂ ಮಡುವುಗಟ್ಟದೆ, ಸರಿಯಾದ ದಿಕ್ಕಿನಲ್ಲಿ ಒಂದೇ ಸಮನೆ ಸಾಗುವುದಲ್ಲದೆ ಬೇರೆಯಲ್ಲ. ಮಡುವುಗಟ್ಟಿದ್ದಲ್ಲಿಯು ಸಹ ಯಾವುದರಿಂದ ತಡೆಯಾಗುತ್ತದೆಯೋ ಆ ವಸ್ತುವಿನ ಸುತ್ತಲೂ ಚಲನೆ ಇರುತ್ತದೆ - ಹರಿಯುವಿಕೆಯನ್ನು ಪುನಃ ಪಡೆಯುವ ಪ್ರಯತ್ನದಲ್ಲಿ ಚಲನೆಯು ಇರುವುದು; ನಿಲುಗಡೆ ಇರುವುದಿಲ್ಲ.
ಸನ್ಯಾಸಿಯಾದವನು ಸತತವಾಗಿ ವಿಶ್ವಶಕ್ತಿಯೊಂದಿಗೆ ಶರಣಾಗತ ಭಾವದಿಂದ ಸಾಗುತ್ತಿರುತ್ತಾನೆ. ಶರಣಾಗತಿ ಎಂದರೆ ನಿಷ್ಕ್ರಿಯತೆ ಎಂದು ನಾನು ಹೇಳುವುದಿಲ್ಲ. ಶರಣಾಗತ ಭಾವದಿಂದ ಕ್ರಿಯಾಶೀಲವಾಗಿರುವುದು ಎಂದು ಅರ್ಥೈಸುತ್ತೇನೆ. ಅಲ್ಲಿ ನಿಲುಗಡೆ ಇರುವುದಿಲ್ಲ. ಸಮಯಸ್ಫೂರ್ತಿಯಿಂದ ಆ ಕ್ಷಣದ ಅವಶ್ಯಕತೆಗೆ ತಕ್ಕಂತೆ ಬದುಕುತ್ತಾನೆ, ಇದನ್ನೇ ನಾವು ದ್ರವತ್ವ (fluidity) ಎನ್ನುವುದು.
ಸನ್ಯಾಸವೆಂದರೆ ಪರಿತ್ಯಜಿಸುವುದಲ್ಲ
ಸನ್ಯಾಸವನ್ನು ಯಾವಾಗಲೂ ಪರಿತ್ಯಜಿಸುವುದರ ಜೊತೆಗೆ ತಪ್ಪಾಗಿ ಸೇರಿಸಲಾಗಿದೆ. ನೀವು ಏನನ್ನೂ ಪರಿತ್ಯಜಿಸಿ ಹೋಗಬೇಕಾಗಿಲ್ಲ. ನೀವು ಹೇಗೆ ವಿಶ್ವಶಕ್ತಿಯ ಒಂದು ಭಾಗವಾಗಿರುವಿರೋ ಹಾಗೆಯೇ ವಿಶ್ವಶಕ್ತಿಯ ಒಂದು ಭಾಗವಾಗಿರುವ ಸ್ವಲ್ಪ ಸಂಪತ್ತಿಗೆ ತಾತ್ಕಾಲಿಕ ಪಾರುಪತ್ಯಗಾರನಂತೆ ಎಂದು ಕೇವಲ ಅರ್ಥಮಾಡಿಕೊಳ್ಳಬೇಕು. ಆಗ ನೀವು ಏನನ್ನೂ ಪರಿತ್ಯಜಿಸಬೇಕಾಗುವುದಿಲ್ಲ. ಏಕೆಂದರೆ, ಮೊದಲಿಗೆ ನೀವು ಏನನ್ನೂ ಹೊಂದಿರಲೇ ಇಲ್ಲ! ನಿಮ್ಮ ಸಂಪತ್ತನ್ನು ಬಿಡಬೇಕಾಗಿ ಬಂದರೂ, ಕೊಟ್ಟುಬಿಡುತ್ತಿದ್ದೇನೆಂಬುದಾಗಿಯೋ, ಅಥವಾ ಹೊಂದಿರುವುದನ್ನು ಕಳೆದುಕೊಳ್ಳುತ್ತಿದ್ದೇನೆಂದೋ ಭಾವಿಸುವುದಿಲ್ಲ. ಇದು 'ನನ್ನದು' ಎಂಬ ಭಾವನೆಯಿಂದಲೂ, ಸ್ವಾಧೀನತೆಯ ದೃಷ್ಟಿಯಿಂದಲೂ ಸಮಸ್ಯೆಯು ಆರಂಭವಾಗುತ್ತದೆ.
ಸನ್ಯಾಸಿಯು ಜಗತ್ತನ್ನು ಪರಿತ್ಯಜಿಸಬೇಕಾಗಿಯೂ
ಇಲ್ಲ; ಸಂಸಾರಿಯು ಪರಿತ್ಯಜಿಸಮಾಡಬೇಕೆಂದು
ಹೆದರಬೇಕಾಗಿಯೂ ಇಲ್ಲ. ವಿಶ್ವಶಕ್ತಿಯು ಸಮಯಕ್ಕೆ
ಸರಿಯಾಗಿ ಕೊಡುವುದನ್ನೂ ತೆಗೆದುಕೊಳ್ಳುವುದನ್ನೂ
ಮಾಡುತ್ತಲೇ ಇರುತ್ತದೆ ಎಂಬ ಸಾಮಾನ್ಯ
ತಿಳಿವಳಿಕೆಯಷ್ಟೆ ಸಾಕು. ಆಗ ನಿಮಗೆ ಈಗ ಏನು
ನಡೆಯುತ್ತಿದೆಯೋ ಅದೇ ಸರಿಯಾದುದೆಂದೂ,
ಜೀವನವು ಹೇಗೆ ಸಾಗಬೇಕೋ ಹಾಗೆಯೇ
ಸಾಗುತ್ತಿದೆಯೆಂದೂ ತಿಳಿಯುತ್ತದೆ. ಆಗ, ನಿಮಗೂ
ನಿಮ್ಮ ಸಂಪತ್ತಿಗೂ ನಡುವೆ ಒಂದು ಮಾನಸಿಕ
| ಸನ್ಯಾಸಿಯಾದವನು | ಅಂತರ ಉಂಟಾಗುತ್ತದೆ. |
| ಸತತವಾಗಿ | ಆ ಅಂತರವನ್ನೇ ಪರಿ- |
| ಬ್ರಹ್ಮಾಂಡದ | ತ್ಯಜಿಸುವುದು ಎನ್ನುತ್ತೇವೆ. |
| ಅರಿವಿನೊಂದಿಗೆ | ಅದು ಕೇವಲ ಒಂದು |
| ಶರಣಾಗತ | ಅಂತರ, ಹೊಂದ- |
| ಭಾವದಿಂದ | ಬೇಕೆಂಬ ಭಾವನೆಯಲ್ಲಿ |
| ಸಾಗುತ್ತಿರುತ್ತಾನೆ. | ಒಂದು ಬಿರುಕು, |
ಬೇರೇನಲ್ಲ. ಆದರೆ, ಅದನ್ನು ‘ಸನ್ಯಾಸ’ವೆಂಬ ವಿಷಯದಲ್ಲಿ ತಪ್ಪಾಗಿ ಬಳಸಲಾಗಿದೆ.
ಒಂದು ಪುಟ್ಟ ಕಥೆ :
ಇಬ್ಬರು ಸಾಧುಗಳು ಒಟ್ಟಿಗೆ ಪ್ರಯಾಣ ಮಾಡುತ್ತಿದ್ದರು. ಅವರ ಪೈಕಿ ಒಬ್ಬನು ಸಂಪತ್ತನ್ನು ಗಳಿಸುವುದರಲ್ಲಿ ಅತೀವ ವಿಶ್ವಾಸವಿಟ್ಟಿದ್ದನು. ಅವನು ಆ ಮೂಲಕ ಆಧ್ಯಾತ್ಮಿಕತೆಯನ್ನು ಸಾಧಿಸುತ್ತಿದ್ದನು. ಇನ್ನೊಬ್ಬನು ಪರಿತ್ಯಜಿಸುವುದನ್ನು ಬಲವಾಗಿ ಅನುಸರಿಸುತ್ತಿದ್ದನು. ಅವರಿಬ್ಬರೂ ಆ ಎರಡು ಜೀವನ ವಿಧಾನಗಳ ಬಗ್ಗೆ ಪರಸ್ಪರ ಚರ್ಚಿಸುತ್ತಿದ್ದರು. ಹೀಗೆ ಚರ್ಚಿಸುತ್ತಿದ್ದಾಗ ರಾತ್ರಿಯಾಯಿತು. ಅದೇ ಸಮಯಕ್ಕೆ ಒಂದು ನದಿಯ ಬಳಿ ಬಂದರು. ಅದನ್ನವರು ದಾಟಬೇಕಾಗಿಬಂದಿತು.
ಪರಿತ್ಯಜಿಸುವುದರಲ್ಲಿ ವಿಶ್ವಾಸವಿಟ್ಟವನ ಬಳಿ
ಹಣವಿರಲಿಲ್ಲ. ಅವನೆಂದನು: ‘ನದಿಯನ್ನು ದಾಟಲು
ನನ್ನಲ್ಲಿ ಹಣವಿಲ್ಲ. ರಾತ್ರಿಯನ್ನು ಇಲ್ಲಿಯೇ
ಕಳೆಯೋಣ, ನಂತರ ನಾಳೆ ಬೆಳಗ್ಗೆ ಯಾರಾದರೂ
ನಮ್ಮನ್ನು ದಾಟಿಸುತ್ತಾರೆ’ ಎಂದು.
ಇನ್ನೊಬ್ಬನು ಹೇಳಿದನು, ‘ಅದು ಸಾಧ್ಯವಿಲ್ಲ.
ರಾತ್ರಿಯನ್ನು ಇಲ್ಲಿಯೇ ಕಳೆಯೋಣವೆಂದರೆ,
ಕಾಡುಪ್ರಾಣಿಗಳು ನಮ್ಮನ್ನು ತಿಂದು ಹಾಕುತ್ತವೆ.
ನನ್ನಲ್ಲಿ ಹಣವಿದೆ. ಅಂಬಿಗನಿಗೆ ಹಣ ಕೊಟ್ಟು
ನದಿಯನ್ನು ದಾಟೋಣ’.
ನದಿಯನ್ನು ಕ್ಷೇಮವಾಗಿ ದಾಟಿದ ಮೇಲೆ, ಅವನು
ತನ್ನ ಜೊತೆಗಾರರನ್ನು ಕೇಳಿದನು, ‘ಈಗ ನಿನಗೆ
ಹಣದ ಬೆಲೆ ತಿಳಿಯಿತೆ? ನಾನೂ ಒಬ್ಬ
ವಿರಾಗಿಯಾಗಿದ್ದರೆ ನಮ್ಮ ಗತಿ
ಏನಾಗುತ್ತಿತ್ತು?’
ಮೊದಲನೆಯವನು, ‘ನಿನ್ನ ಪರಿತ್ಯಕ್ತತೆಯೇ ನಮ್ಮನ್ನು ಕ್ಷೇಮವಾಗಿ ನದಿಯನ್ನು ದಾಟಿಸಿತು. ನದಿಯನ್ನು ದಾಟಲು ನೀನು ನಿನ್ನ ಹಣವನ್ನು ಪರಿತ್ಯಾಗಮಾಡಿದೆ’ಎಂದು ಉತ್ತರಿಸಿದನು.
ಹೊಂದಬೇಕೆಂಬ ಭಾವನೆ ಇಲ್ಲದೆ
ಹೊಂದುವುದೂ, ತ್ಯಜಿಸುವ ಭಾವನೆಯಿಲ್ಲದೆ
ತ್ಯಜಿಸುವುದೂ, ಇವೆರಡೂ ಪರಿತ್ಯಾಗವೇ.
ಹಾಗಲ್ಲದೆ, ಬರೀ ಬಾಹ್ಯ
ಸಂಪತ್ತನ್ನು ತ್ಯಜಿಸುವುದರಿಂದ ನೀವೇನನ್ನೂ
ಗಳಿಸಲಾರಿರಿ. ಕೇವಲ ‘ನನ್ನದು’ ಎಂಬುದನ್ನು
ತೊರೆದ ಸಂಕಟವನ್ನು ಮಾತ್ರ ಪಡುವಿರಿ. ‘ನನ್ನದು’
ಎಂಬುದರಿಂದ ತಪ್ಪಿಸಿಕೊಳ್ಳುವುದು ಸನ್ಯಾಸವಲ್ಲ.
ಅದು ನನ್ನದೆಂಬುದನ್ನು ಮೀರಿಹೋಗುವುದು. ಅದು
ಸಾಧ್ಯವಾಗುವುದು ತಿಳಿವಳಿಕೆಯಿಂದ ಮಾತ್ರ.
ಅರಿವಿನಿಂದ ತ್ಯಜಿಸಿದರೆ ಅದು ಸರಿ. ಹಾಗಿಲ್ಲದೆ
ಹೋದರೆ, ‘ನನ್ನದು’ ಎಂಬುದು ನೀವೆಲ್ಲೇ
ಹೋದರೂ ಇದ್ದೇ ಇರುತ್ತದೆ. ಅಷ್ಟೇ ಅಲ್ಲ,
ನನ್ನದೆಂಬುದನ್ನು ತ್ಯಜಿಸುತ್ತಿದ್ದೇನೆ ಎಂಬ
ಭಾವದಿಂದ, ಅದು ಸರಿಯಾದ ಕ್ರಿಯೆಯಾಗಿದ್ದರೂ,
ತಪ್ಪಾದ ಕಾರಣಕ್ಕಾಗಿ ಆಗಿರುತ್ತದೆ! ಕೇವಲ ಬಾಹ್ಯ
ಸಂಪತ್ತನ್ನು ತ್ಯಜಿಸುವುದರಿಂದ ಸನ್ಯಾಸಿಯಾಗಲು
ಸಾಧ್ಯವೇ ಇಲ್ಲ. ಸನ್ಯಾಸವೆಂಬುದು ಅಂತರಂಗದ
ಮನೋವ್ಯವಸ್ಥೆಯ ಬದಲಾವಣೆಯಷ್ಟೆ ಹೊರತು
ಲೌಕಿಕವಾದ ಹೊರ ವ್ಯವಸ್ಥೆಯದಲ್ಲ.
ಸನ್ಯಾಸಿಯಾಗಲು ಬಾಹ್ಯಸಂಪತ್ತನ್ನು ತೊರೆಯುವುದು,
ತಪ್ಪು ಕಾರಣಕ್ಕಾಗಿ ಸರಿಯಾದ ಕ್ರಿಯೆಯನ್ನು
ಮಾಡಿದಂತಷ್ಟೇ!
ಸಂಪತ್ತು ಮತ್ತು ಸನ್ಯಾಸ ಪರಸ್ಪರ
ನಿಷೇಧಕವಲ್ಲ. ನಿಜಕ್ಕೂ, ಸನ್ಯಾಸವೆಂಬುದು
ಸಂಪತ್ತನ್ನು ಲೋಪವಿಲ್ಲದೆ ಗಳಿಸುವ ಕಲೆ ಮತ್ತು
ವಿಜ್ಞಾನ.
ವೈದಿಕ ಗ್ರಂಥಗಳನ್ನು ಅಧ್ಯಯನ ಮಾಡಿದರೆ
ನೋಡಬಹುದು: ಅವು ಯಾವಾಗಲೂ ಜೀವನದ
ಶ್ರೀಮಂತಿಕೆಯನ್ನು ಕುರಿತು ನುಡಿಯುತ್ತವೆ. ಅವು
ಅದರಿಂದ ತಪ್ಪಿಸಿಕೊಳ್ಳುವುದನ್ನು ಬೋಧಿಸುವುದೇ
ಇಲ್ಲ. ಅವು ಐಶ್ವರ್ಯದ ಮೇಲಿನ ಮೋಹವನ್ನು
ಸಡಿಲಗೊಳಿಸುವುದನ್ನು ಬೋಧಿಸುವುವೇ ಹೊರತು
ಅದನ್ನು ಪರಿತ್ಯಜಿಸುವುದನ್ನಾಗಲೀ,
ದ್ವೇಷಿಸುವುದನ್ನಾಗಲೀ ಅಲ್ಲ. ಸನ್ಯಾಸವೆಂದರೆ
ಜೀವನವು ಸಮೃದ್ಧವೂ, ಸಂಪೂರ್ಣವೂ
ಆಗಿರುವುದನ್ನೂ ನೋಡುವುದಾಗಿದೆ;
ಆದುದರಿಂದಲೇ ನಿಮ್ಮದೇ ಚಿಕ್ಕ ಆಸ್ತಿಗೆ
ಅಂಟಿಕೊಳ್ಳದಿರುವುದನ್ನೂ ಗಮನಿಸುವುದಾಗಿದೆ.
ಅದು ಐಶ್ವರ್ಯವೂ ಸಹ ವಿಶ್ವಶಕ್ತಿಯ ಒಂದು ವ್ಯಕ್ತ
ಸ್ವರೂಪವೆ ಹೊರತು, ಜೀವನದ ಸಾರಾಂಶವೇ
ಅದಲ್ಲವೆಂದೂ, ತಿಳಿಯುವುದಾಗಿದೆ.
ಸನ್ಯಾಸವೆಂದರೆ ಆತ್ಮಹತ್ಯೆಯಲ್ಲ. ಅದು ಜೀವನ.
ಸನ್ಯಾಸವೆಂದರೆ ನಿಮ್ಮ ಒಳಗೂ ಹೊರಗೂ ಸಮೃದ್ಧ
ಸೊಬಗಿನಲ್ಲಿ ಜೀವಿಸುವುದು.
ತಿಳಿಯಿರಿ: ಸನ್ಯಾಸದ ಹಾದಿಯಲ್ಲಿ
ಬಾಹ್ಯಸೌಂದರ್ಯ ಹಾಗೂ ಸಿರಿ-ಸಂಪತ್ತುಗಳು
ವೈರಿಗಳಲ್ಲ. ಅವು ಒಂದಕ್ಕೊಂದು
ಪೂರಕವಾದವುಗಳು. ಸನ್ಯಾಸವು ನಿಮ್ಮ ಬಾಹ್ಯ
ಸೌಂದರ್ಯ ಮತ್ತು ಸಿರಿ-ಸಂಪತ್ತುಗಳಿಗೆ, ಒಳ
ಸೌಂದರ್ಯ ಮತ್ತು ಸಿರಿಸಂಪತ್ತುಗಳನ್ನು
ಸೇರಿಸುತ್ತದೆ. ಬಾಹ್ಯಸೌಂದರ್ಯ ಮತ್ತು ಸಿರಿ-
ಸಂಪತ್ತುಗಳನ್ನು ಅವಕ್ಕೆ ಸಂಬಂಧಿಸಿದ ಯಾವ
ತೊಂದರೆಯೂ ಇಲ್ಲದಂತೆ ನಿಭಾಯಿಸುವ
ಬುದ್ಧಿಶಕ್ತಿಯನ್ನು ಅದು ನಮಗೆ ನೀಡುತ್ತದೆ.
ಸಂಸಾರ ಮತ್ತು ಸನ್ಯಾಸ
ಸಂಸಾರವೆಂದರೆ ಅಕ್ಷರಶಃ ‘ಪ್ರಪಂಚ’ ಅಥವಾ
‘ಮಾರ್ಗ’ ಎಂದರ್ಥ. ಅದು ನಿರಂತರವಾದ
ಜನನ-ಮರಣ ಚಕ್ರಗಳಿಗೆ ಕಾರಣವಾದ ಪ್ರಾಪಂಚಿಕ
ಜೀವನಕ್ಕೆ ಅನ್ವಯಿಸುತ್ತದೆ.
ಯಾವುದೇ ಪಥದಲ್ಲಿ
ಮುಂದುವರೆಯಬೇಕೆಂದರೂ ಎರಡು ಮಾರ್ಗಗಳಿವೆ:
ಹೊರೆ ಮತ್ತು ಜನಗಳೊಂದಿಗೆ ಅಥವಾ ನೀವೊಬ್ಬರೇ
ಮುಂದುವರೆಯುವುದು. ಮೊದಲನೆಯ
ಪರಿಸ್ಥಿತಿಯಲ್ಲಿ ನೀವು ಬಹಳ ಕಾಲ
ಕಾಯಬೇಕಾಗುತ್ತದೆ. ಎರಡನೆಯ ಪರಿಸ್ಥಿತಿಯಲ್ಲಿ
ಈ ನಿಮಿಷದಲ್ಲಿಯೇ ಬೇಕಾದರೂ ತಲುಪಬಲ್ಲಿರಿ.
ಸನ್ಯಾಸವೆಂಬುದು ಮುಂದೆ ಸಾಗುತ್ತಿರುವಾಗ
ಏನನ್ನೂ ಹೊರದೇ ಇರುವ ನಿರ್ಧಾರ. ನೀವು
ಎಲ್ಲವನ್ನೂ ಹೊಂದಿರಬಹುದು, ಆದರೆ, ನೀವು
ಸನ್ಯಾಸಿಯು
ಭವಸಾಗರವನ್ನು ಅದನ್ನು ಹೊರ-
ದಾಟಲು ಬೇಕಾಗಿಲ್ಲ. ಯಾವಾಗ
ದೋಣಿಯನ್ನು ಏನನ್ನೂ ಹೊರ-
ಬಳಸುತ್ತಾನೆ. ವುದಿಲ್ಲವೋ ಆಗ, ಆ
ಸಂಸಾರಿಯು ಕ್ಷಣಕ್ಕೆ ಬೇಕಾದುದನ್ನು
ಅದನ್ನು ವಿಶ್ವಶಕ್ತಿಯು ಒದ-
ಇಟ್ಟುಕೊಂಡಿರುತ್ತಾನೆ. ಗಿಸುತ್ತದೆ. ಅದೇ
ಸನ್ಯಾಸ.
ಬುದ್ಧನ ಜೀವನದಲ್ಲಿ ಒಂದು ಸುಂದರವಾದ ಕಥೆ ಇದೆ :
ಒಂದು ದಿನ ಬುದ್ಧನ ಶಿಷ್ಯರು ಆತನನ್ನು
ಸುತ್ತುವರೆದು ಸನ್ಯಾಸದ ಸಾರವನ್ನು
ಬೋಧಿಸಬೇಕೆಂದು ಕೇಳಿಕೊಂಡರು. ಆತನು
ಅವರಿಗೆ ಒಂದು ಚಿಕ್ಕ ಕಥೆಯನ್ನು ಹೇಳಿದನು :
ಒಂದು ದ್ವೀಪದಲ್ಲಿ ಮನುಷ್ಯನೊಬ್ಬನು ಏಕಾಂಗಿಯಾಗಿ ಜೀವಿಸುತ್ತಿದ್ದನು. ಇದ್ದಕ್ಕಿದ್ದಂತೆ ಆತನಿಗೆ ಆ ದ್ವೀಪದಿಂದ ಹೊರಗೆ ಹೋಗಬೇಕೆಂಬ ಬಯಕೆಯಾಯಿತು. ಆತನ ಬಳಿ ದೋಣಿ ಇರಲಿಲ್ಲ. ಆದುದರಿಂದ ಆತನು ಕೈಗೆ ಸಿಕ್ಕ ಕಡ್ಡಿಗಳು, ಕೊಂಬೆಗಳು, ಎಲೆಗಳನ್ನು ಮತ್ತು ಕೈಗೆ ಸಿಕ್ಕ ಎಲ್ಲವನ್ನೂ ಸೇರಿಸಿಕೊಂಡು, ಒಂದು ದೋಣಿಯನ್ನು ಮಾಡಿದನು. ಪ್ರಯಾಣವು ಕಷ್ಟಕರವಾಗಿತ್ತು. ಆದರೂ ಆತನೂ ಹೇಗೋ ಮಾಡಿಕೊಂಡು ದಾಟಿ, ಆಚೆಯ ದಡವನ್ನು ಸೇರಿದನು.
ಬುದ್ಧನು ಶಿಷ್ಯರನ್ನು ಕೇಳಿದನು, 'ಆಚೆಯ ದಡವನ್ನು ಸೇರಿದ ನಂತರ ಆತನು ದೋಣಿಯನ್ನು ಇಟ್ಟುಕೊಂಡಿರಬೇಕೇ ಅಥವಾ ಬಿಟ್ಟುಬಿಡಬೇಕೇ?'
ಶಿಷ್ಯರು ಬೇರೆ ಬೇರೆ ಉತ್ತರಗಳನ್ನು ಕೊಟ್ಟರು.
ಬುದ್ಧನು ಮುಂದುವರೆ-
ಸಿದನು, 'ಸನ್ಯಾಸಿಯಾದವನು ಮುಂದೆ ತನಗೆ ಏನು
ಆವಶ್ಯಕವಾಗುವುದೋ ಅದು ಕೊಡಲ್ಪಡುವುದು
ಎಂಬುದನ್ನರಿತು ದೋಣಿಯನ್ನು ಬಿಟ್ಟುಬಿಡುತ್ತಾನೆ.
ಸಂಸಾರಿಯಾದವನು ಒಂದು ವೇಳೆ
ಹಿಂದಿರುಗಬೇಕಾಗಿ ಬಂದರೆ ತನ್ನ ಶ್ರಮ
ವ್ಯರ್ಥವಾಗಬಾರದೆಂದು ಅದನ್ನು
ಇಟ್ಟುಕೊಂಡಿರುತ್ತಾನೆ!'
ಸನ್ಯಾಸಿಯು ವಿಶ್ವಶಕ್ತಿಯಲ್ಲಿ ತನ್ನ ಗಮನವಿಟ್ಟು ನಡೆಯುತ್ತಾನೆ. ಸಂಸಾರಿಯು ಜೀವಿಸಿರುವುದು ಹೇಗೆಂಬುದರಲ್ಲಿ ಗಮನವಿಟ್ಟು ನಡೆಯುತ್ತಾನೆ. ಸನ್ಯಾಸಿಯು ಭವಸಾಗರವನ್ನು ದಾಟಲು ದೋಣಿಯನ್ನು ಬಳಸುತ್ತಾನೆ. ಸಂಸಾರಿಯು ಆವಶ್ಯಕವಾದ ಸಮಯದ ನಂತರವೂ ಅದನ್ನು ಬಿಟ್ಟು ಬಿಡಬಹುದೆಂದು ತಿಳಿಯದೇ ಇಟ್ಟುಕೊಂಡಿರುತ್ತಾನೆ. ಅದೇ ವ್ಯತ್ಯಾಸ. ಇದರಲ್ಲಿ ಸರಿ ಅಥವಾ ತಪ್ಪು ಎಂಬುದಿಲ್ಲ. ಅವು ಕೇವಲ ವಿಭಿನ್ನವಾದ ಜೀವನ ಶೈಲಿಗಳು.
ನಾನೀಗ ಕರ್ಮದ ಹಿನ್ನೆಲೆಯಲ್ಲಿ ಸನ್ಯಾಸವನ್ನು ವಿವರಿಸುತ್ತೇನೆ, ಏಕೆಂದರೆ ಕರ್ಮವನ್ನು ಬರಿದುಮಾಡಿಕೊಳ್ಳಲು ಸನ್ಯಾಸವು ಹತ್ತಿರದ ಮಾರ್ಗ, ಕರ್ಮವೆಂದರೆ, ಪೂರೈಸದ ನಿಮ್ಮ ಹಿಂದಿನ ಕ್ರಿಯೆಗಳು ಪೂರೈಕೆಗೊಳ್ಳಲೆಂದೇ ನಿಮ್ಮನ್ನು ಪುನಃ ಪುನಃ ಜನಿಸಲು ಸೆಳೆಯುವಂತಹದಲ್ಲದೆ ಬೇರೇನಲ್ಲ. ಜನನ-ಮರಣ ಚಕ್ರದ ಕಾರಣವೇ ಅದು. ಕರ್ಮಗಳನ್ನು ಸಂಪೂರ್ಣವಾಗಿ ಬರಿದು ಮಾಡಿಕೊಳ್ಳುವವರೆಗೂ ಈ ಜಗತ್ತಿನಲ್ಲಿ ಪುನಃ ಪುನಃ ಜನ್ಮವೆತ್ತುವಂತೆ ಮಾಡುತ್ತದೆ.
ಮೂರು ರೀತಿಯ ಕರ್ಮಗಳಿವೆ, ಅವು ಸಂಚಿತ, ಪ್ರಾರಬ್ಧ ಮತ್ತು ಆಗಾಮ್ಯ ಎಂಬುವು. ಸಂಚಿತ ಕರ್ಮವೆಂದರೆ, ಅನೇಕ ಜನ್ಮಗಳಿಂದಲೂ ಕೂಡಿಟ್ಟುಕೊಂಡಿರುವ ಪೂರೈಸದ ಕಾಮನೆಗಳ ಬ್ಯಾಂಕಿನ ಮೊತ್ತದ ಉಳಿಕೆಯಂತೆ. ಪ್ರಾರಬ್ಧ ಕರ್ಮವೆಂದರೆ, ಆ ಸಂಚಿತದಿಂದ ಒಂದು ಭಾಗವನ್ನು ತಂದು, ಈ ಒಂದು ಜನ್ಮದಲ್ಲಿ ತೀರಿಸಬೇಕಾಗಿರುವ ಕರ್ಮ. ಪ್ರತಿಸಲ ಜನ್ಮ ಪಡೆದಾಗಲೂ ಸಂಚಿತದಿಂದ ಒಂದು ಸಣ್ಣ ಭಾಗದಷ್ಟನ್ನು ತೀರಿಸಲು ಪ್ರಾರಬ್ಧ ರೂಪದಲ್ಲಿ ನಿಮ್ಮೊಡನೆ ಅದನ್ನು ತರುವಿರಿ. ಅದರಲ್ಲಿ ನಿಮ್ಮ ಎಲ್ಲಾ ತೀರದ ಬಯಕೆಗಳೂ, ಕಾಮ, ಕ್ರೋಧ, ಭಯ ಮುಂತಾದ ಎಲ್ಲವೂ ಸೇರಿರುತ್ತವೆ. ಮೂರನೆಯದಾದ ಆಗಾಮ್ಯ ಕರ್ಮವು ಈ ಜನ್ಮದಲ್ಲಿ ಹೊಸದಾಗಿ ಸೃಷ್ಟಿಸಿಕೊಂಡ ಪೂರೈಸದ ಬಯಕೆಗಳ ಹೊಸ ಕರ್ಮ.
ಅಂತಿಮವಾಗಿ, ಕರ್ಮವನ್ನು ಪೂರ್ಣವಾಗಿ ಬರಿದುಮಾಡಿಕೊಳ್ಳಲು ಈ ಮೂರನ್ನೂ ಮಾಡಿ ಮುಗಿಸಲೇ ಬೇಕು. ಮೊದಲನೆಯದು : ಹೊಸ ಆಗಮ್ಯ ಕರ್ಮವು ಸೃಷ್ಟಿಯಾಗಕೂಡದು. ಏಕೆಂದರೆ ಅದು ಜೀವನದ ಕೊನೆಯಲ್ಲಿ ಸಂಚಿತ ಬ್ಯಾಂಕಿನ ಉಳಿಕೆಗೆ ಕೂಡಿಕೆಯಾಗುತ್ತದೆ.
ಎರಡನೆಯದು : ನೀವು ಹೊತ್ತು ತಂದ ಪ್ರಾರಬ್ಧವನ್ನು ಈ ಜನ್ಮದಲ್ಲಿ ಸಂಪೂರ್ಣವಾಗಿ ಅದರ ಗುರುತನ್ನು ಸ್ವಲ್ಪವೂ ಬಿಡದಂತೆ ಕಳೆದುಕೊಳ್ಳುವುದು ಅಥವಾ ಪೂರೈಸಿಕೊಳ್ಳುವುದು.
ಮೂರನೆಯದು : ಇನ್ನೂ ಹುಟ್ಟಿ ಬರಬೇಕಾದ ಜನ್ಮಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಹೇಗಾದರೂ ಮಾಡಿ ಸಂಚಿತದ ಪ್ರಮಾಣವನ್ನೇ ಭಸ್ಮ ಮಾಡುವುದು. ಆಗಾಮ್ಯವನ್ನು ಸೇರಿಸಿಕೊಳ್ಳದೆ, ಪ್ರಾರಬ್ಧವನ್ನು ಪೂರೈಸಿಕೊಳ್ಳುವ ಮೂಲಕ ಒಂದು ಜನ್ಮದಲ್ಲಿ ಇದು ನಡೆಯುತ್ತದೆ.
ಸರಿಯಾದ ರೀತಿಯಲ್ಲಿ ಪ್ರಾರಬ್ಧವನ್ನು ಬರಿದುಮಾಡಿಕೊಂಡರೆ, ಆಗಾಮ್ಯ ಕರ್ಮವು ಸೃಷ್ಟಿಯಾಗುವುದಿಲ್ಲ. ಪ್ರಾರಬ್ಧವನ್ನು ಸರಿಯಾದ ರೀತಿಯಲ್ಲಿ ಬರಿದಾಗಿಸುವ ಬುದ್ಧಿಶಕ್ತಿಯೇ ಆಗಾಮ್ಯದ ಹೊಸ ಸೃಷ್ಟಿಯನ್ನು ಆಗಗೊಡುವುದಿಲ್ಲ. ಸಂಚಿತವನ್ನೇ ಬರಿದುಮಾಡುವುದು ಜ್ಞಾನಿಯಾದ ಗುರುಗಳ ಕೃಪೆಯಿಂದ ಮಾತ್ರ ಸಾಧ್ಯ.
ಈಗ ಸ್ಪಷ್ಟವಾಗಿ ತಿಳಿಯಿರಿ : ನಿಮ್ಮ ಪ್ರಾರಬ್ಧದ ಕಲ್ಪನಾಶಕ್ತಿಯು ನಿಮ್ಮ ಬುದ್ಧಿಶಕ್ತಿಗಿಂತಲೂ ಮಿಗಿಲಾಗಿದ್ದರೆ, ಸಂಸಾರ (ಮದುವೆ)ವೇ ನಿಮ್ಮ ಪಥ. ನಿಮ್ಮ ಪ್ರಾರಬ್ಧದ ಕಲ್ಪನಾಶಕ್ತಿಯು ನಿಮ್ಮ ಬುದ್ಧಿಶಕ್ತಿಗಿಂತಲೂ ಕಡಿಮೆಯಾಗಿದ್ದರೆ, ಸನ್ಯಾಸವೇ ನಿಮ್ಮ ಪಥ! ಸನ್ಯಾಸದ ಪಥದಲ್ಲಿ ನಿಮ್ಮ ಬುದ್ಧಿಶಕ್ತಿಯು ಪ್ರಾರಬ್ಧವನ್ನು ಗೆಲ್ಲುತ್ತದೆ ಮತ್ತು ಅದನ್ನು ಬರಿದಾಗಿಸಲು ಆತನ ಹಿಡಿತಕ್ಕೆ ತರುತ್ತದೆ. ಸಂಸಾರದ ಪಥದಲ್ಲಿ, ಜೀವನವು ಅನೇಕ ರೀತಿಯಲ್ಲಿ ಪಾಠ ಕಲಿಸುತ್ತದೆ ಮತ್ತು ಲಕ್ಷಾಂತರ ಜನ್ಮಗಳ ಮೂಲಕ ಪ್ರಾರಬ್ಧವನ್ನು ಕಳೆದುಕೊಳ್ಳುತ್ತೀರಿ!
ಪತಂಜಲಿ ಯೋಗ ಸೂತ್ರದಲ್ಲಿ, ಸಾಕ್ಷಾತ್ಕಾರಕ್ಕೆ ಅಷ್ಟಾಂಗ ಮಾರ್ಗವುಂಟೆಂದು ಹೇಳಲಾಗಿದೆ. ಎಲ್ಲ ಎಂಟು ಅಂಗಗಳನ್ನೂ ಒಟ್ಟಿಗೆಯೇ ಆಚರಿಸಬೇಕು. ಅದರ ಮೂರು ಭಾಗಗಳು ಪ್ರತ್ಯಾಹಾರ, ಧಾರಣ ಮತ್ತು ಧ್ಯಾನ. ಪ್ರತ್ಯಾಹಾರವೆಂದರೆ, ಮನಸ್ಸನ್ನು ಪಂಚೇಂದ್ರಿಯಗಳಿಂದಾಚೆಗೆ ಒಳಮುಖ-ವಾಗಿಸುವುದು. ಮುಂದಿನದು ಧಾರಣ - ಎಂದರೆ
ಸನ್ಯಾಸಿಯು
ಯಾವಾಗಲೂ
ಹರ್ಷಚಿತ್ತನಾಗಿರುತ್ತಾನೆ.
ಆತನಿಗೇನು
ದೊರೆಯುತ್ತದೆಯೋ
ಅದೇ ಆತನಿಗೆ
ಬೇಕಾದುದು.
ಮನಸ್ಸನ್ನು ಅಂತರಾತ್ಮ-
ದೊಡನೆ ಐಕ್ಯವಾಗಿ-
ಸುವುದು. ಮೂರನೆ-
ಯದು ಧ್ಯಾನ.
ಮನಸ್ಸನ್ನು
ಪಂಚೇಂದ್ರಿಯಗಳಿಂದ
ಹಿಂತೆಗೆದುಕೊಳ್ಳುವುದು,
ಮನಸ್ಸು ಅಂತರಾತ್ಮದಲ್ಲಿ ಒಂದಾದಾಗ ಮಾತ್ರ
ಸಾಧ್ಯವಾಗುವುದು! ಉದಾಹರಣೆಗೆ, ಏಣಿಯ
ಮೇಲಿನ ಮೆಟ್ಟಲಿನ ಮೇಲೆ ಪಾದವನ್ನು ಸರಿಯಾಗಿ
ಊರಿದ ನಂತರವಷ್ಟೇ ಕೆಳಗಿನ ಮೆಟ್ಟಲಿನ ಮೇಲಿನ
ಕಾಲನ್ನು ತೆಗೆಯಬಹುದು - ಅಲ್ಲವೆ? ನೀವು
ಮೇಲಿನ ಕೊಂಬೆಯನ್ನು ಭದ್ರವಾಗಿ ಹಿಡಿದುಕೊಂಡ
ನಂತರವಷ್ಟೆ ಕೆಳಗಿನ ಕೊಂಬೆಯನ್ನು ಬಿಡಬಲ್ಲಿರಿ.
ಪ್ರಾಪಂಚಿಕ ವ್ಯಾಮೋಹವನ್ನು ತೊರೆದ ನಂತರವೇ
ದೈವಪ್ರಾಪ್ತಿಯಾಗುತ್ತದೆ ಎಂದು ನಾವೆಲ್ಲರೂ
ಅಂದುಕೊಳ್ಳುತ್ತೇವೆ. ಇಲ್ಲ! ಸತ್ಯವೆಂದರೆ,
ದೈವಪ್ರಾಪ್ತಿಯಾದ ನಂತರವೇ ನೀವು ನಿಜವಾಗಿಯೂ
ಪ್ರಾಪಂಚಿಕ ವಿಷಯಗಳನ್ನು ತಳ್ಳಿ
ದೂರಮಾಡಿಬಿಡಬಹುದು. ‘ನಿತ್ಯಾನಂದ’ವನ್ನು
ಅನುಭವಿಸಿದ ನಂತರವೇ ನೀವು ಪ್ರಾಪಂಚಿಕ
ಭ್ರಮೆಗಳ ‘ಮಿಥ್ಯಾನಂದ’ವನ್ನು ತಳ್ಳಿಬಿಡಲು
ಸಾಧ್ಯವಾಗುವುದು.
ಅರಿವಿನಿಂದ ಕೂಡಿ ಮೇಲಿನ ಮೆಟ್ಟಲನ್ನು ಭದ್ರವಾಗಿ ಹಿಡಿದುಕೊಂಡರೆ ಕೆಳಗಿನ ಮೆಟ್ಟಲನ್ನು ಇನ್ನೂ ಸುಲಭವಾಗಿ ಬಿಡಬಹುದು. ಆ ಅರಿವನ್ನೇ ಸನ್ಯಾಸ ಎನ್ನುವುದು. ಅದು ಅರಿತುಕೊಳ್ಳುವ, ಹಾಗೂ ಮೇಲಿನ ಮೆಟ್ಟಲನ್ನು ತಲುಪುವ ಮತ್ತು ಕೆಳಗಿನ ಮೆಟ್ಟಲನ್ನು ಬಿಡುವ ಪ್ರಕ್ರಿಯೆ. ಮುಂದುವರೆದಂತೆಲ್ಲಾ ಪರಿತ್ಯಾಗವು ಉಪಪದಾರ್ಥದಂತೆ ಸಂಭವಿಸುತ್ತದೆ. ಅದೇಕೆಂದರೆ, ಮೇಲೇರಲು, ನಿಮ್ಮನ್ನೇ ಬಿಟ್ಟು ಇನ್ನೇನೂ ಬೇಕಾಗಿಲ್ಲವೆಂಬುದನ್ನು ಅರಿತುಕೊಳ್ಳುವಿರಿ! ನಿಮ್ಮೊಡನೆ ಏನನ್ನೇ ತೆಗೆದುಕೊಂಡು ಹೋದರೂ ಅದು ಮೇಲೇರಲು ಇನ್ನೂ ಹೆಚ್ಚು ಕಷ್ಟವಾಗಿಸುತ್ತದೆ!
ಸಂಸಾರಿಯು ತನ್ನ ಕಲ್ಪನೆಗಳ ಬೆನ್ನಟ್ಟಿ
ಹೋಗುತ್ತಾನೆ. ವಿಶ್ವಶಕ್ತಿಯ ಸೌಂದರ್ಯವನ್ನು
ಸವಿಯಲು ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತಾನೆ.
ಸನ್ಯಾಸಿಯಾದರೋ ತನ್ನ ಸುತ್ತಲಿನ ಎಲ್ಲವನ್ನೂ
ಈಗಾಗಲೇ ದಿವ್ಯವಾಗಿದೆ ಎಂದೂ,
ಸುಂದರವಾಗಿದೆಯೆಂದೂ ಕಾಣುತ್ತಾನೆ! ತಾನು
ಕಂಡದ್ದರಲ್ಲೇ ಆತನು ಕಲ್ಪನಾಪೂರಿತನಾಗುತ್ತಾನೆ!
ಸಂಸಾರಿಯು ಅಂತರ್ಮುಖಿಯಾದಾಗ
ಸನ್ಯಾಸಿಯಾಗುತ್ತಾನೆ. ಅದರ ಉತ್ಕಟ ಇಚ್ಛೆಯನ್ನು
ಕಂಡುಕೊಳ್ಳುವವರೆಗೂ ಅವನು ಮಾಡುತ್ತಿರುವುದನ್ನು
ಮುಂದುವರೆಸುವುದೇ ಮೇಲು. ಸನ್ಯಾಸಿಯು
ಯಾವಾಗಲೂ ಹರ್ಷಚಿತ್ತನಾಗಿರುತ್ತಾನೆ. ಆತನಿಗೇನು
ದೊರೆಯುತ್ತದೆಯೋ ಅದೇ ಆತನಿಗೆ ಬೇಕಾದುದು.
ಆತನು ಯಾವಾಗಲೂ ಕೃತಜ್ಞತೆಯ ಮತ್ತು ಸ್ವೀಕೃತ
ಭಾವದಲ್ಲಿರುತ್ತಾನೆ. ಸಂಸಾರಿಯ ಮನಸ್ಸು
ತುಮುಲಗಳಿಂದ ತುಂಬಿಹೋಗಿರುತ್ತದೆ. ತನಗೇನು
ಬೇಕೋ ಅದನ್ನು ಪಡೆಯಲು ಪ್ರಯತ್ನಿಸುತ್ತಲೇ
ಇರುತ್ತಾನೆ. ಸಂಸಾರಿಯು, ಆತನಿಗೆ ಏನು
ದೊರೆಯುತ್ತಿದೆಯೋ ಅದೇ ಆತನಿಗೆ ಆ ಕ್ಷಣಕ್ಕೂ
ಹಾಗೂ ತನ್ನ ಅಂತಿಮ ಸಂತೃಪ್ತಿಗೂ
ಅವಶ್ಯಕವಾದುದು ಎಂದು ತನ್ನ ಬುದ್ಧಿವಂತಿಕೆಯಿಂದ
ಎಚ್ಚೆತ್ತುಕೊಳ್ಳಲು ಸಾಧ್ಯ.
ಸಂಸಾರಿಯು ಪ್ರಾಪಂಚಿಕ ವಸ್ತುಗಳ ಹಾಗೂ ಒಂದು ಸೀಮಿತವಾದ ಜೀವನದ ಬಗ್ಗೆ ಚಿಂತಿಸುತಿರುವವನು. ಸನ್ಯಾಸಿಯು ಸಾವು - ಅಂದರೆ ಅಹಂಕಾರ, ದುರಾಸೆ, ಕಾಮ, ಕ್ರೋಧ, ಭಯ, ಅಸೂಯೆ, ಅತೃಪ್ತಿ . . . ಹೀಗೆ ಮುಂತಾದ ತಾನಲ್ಲದ ಎಲ್ಲದರ ಸಾವಿನ ಬಗ್ಗೆ ಚಿಂತಿಸುತ್ತಿರುವವನು. ತಾನು ಇವೆಲ್ಲವುಗಳನ್ನೂ ಮೀರಿದವನು ಎಂದು ತಿಳಿದಿರುತ್ತಾನೆ. ಆತನ ಅನ್ವೇಷಣೆ ಎಲ್ಲವೂ ಇದನ್ನು ಕಂಡುಕೊಳ್ಳುವುದಕ್ಕಾಗಿಯೇ ಇರುತ್ತದೆ. ಏಕೆಂದರೆ, ಒಂದು ಸಲ ಇದನ್ನು ಕಂಡುಕೊಂಡರೆ, ಏಣಿಯ ಮೇಲಿನ ಮೆಟ್ಟಿಲನ್ನು ತಲುಪಿದಂತೆಯೇ ಮತ್ತು ರಾಗ, ಪ್ರಾಪಂಚಿಕ ವಿಷಯಾದಿಗಳು ಮನೆ ಮಾಡಿ, ಸತತವಾಗಿ ಎಳೆದಾಡುತ್ತಿರುವ ಕೆಳಗಿನ ಮೆಟ್ಟಿಲನ್ನು ಬಿಡಬಲ್ಲನು.
ಸನ್ಯಾಸವೆಂದರೆ ‘ನಾನು ಯಾರು?’ ಎಂಬ ಪ್ರಶ್ನೆಯನ್ನು ಉತ್ತರಿಸಲು ಮಾಡುವ ಅನ್ವೇಷಣೆಯೇ ಆಗಿದೆ. ಸನ್ಯಾಸಿಯಾದವನು ಇದನ್ನು ಕಂಡುಕೊಳ್ಳಲು ತನ್ನ ಸಾಮರ್ಥ್ಯವೆಲ್ಲವನ್ನು ವ್ಯಯಿಸುತ್ತಾನೆ. ಜನಗಳು ನಿಮ್ಮನ್ನು ‘ನೀವು ಯಾರು?’ ಎಂದು ಕೇಳಿದರೆ, ಸಾಮಾನ್ಯವಾಗಿ, ‘ನಾನು ಇಂತಹವರ ಮಗ, ನಾನೊಬ್ಬ ಇಂಜಿನಿಯರು, ನಾನೊಬ್ಬ ಪ್ರೊಫೆಸರು’ ಎಂದೆಲ್ಲಾ ಹೇಳುತ್ತೀರ. ಆದರೆ, ಆ ಪದಗಳು ಈ ಜಗತ್ತಿನೊಂದಿಗಿರುವ ನಿಮ್ಮ ಸಂಬಂಧಗಳಲ್ಲಿ ನೀವು ಯಾರೆಂಬುದನ್ನು ವಿವರಿಸುತ್ತವೆ, ಅಷ್ಟೆ. ಒಂದು ವೇಳೆ ಜಗತ್ತೇ ಇಲ್ಲದಿದ್ದರೆ, ಆಗ ನೀವು ಯಾರು?
ಜಗತ್ತಿನ ಮತಸ್ಥಾಪಕರುಗಳಾದ ಮಹಾಜ್ಞಾನಿಗಳು ಒಂದು ವಿಷಯವನ್ನು ಮತ್ತೆ ಮತ್ತೆ ಹೇಳಿದ್ದಾರೆ - ಹಿಂದೂ ಸಂಪ್ರದಾಯದಲ್ಲಿ ‘ಅಹಂ ಬ್ರಹ್ಮಾಸ್ಮಿ’ ಎಂದರೆ ‘ನಾನು ಅದು ಆಗಿದ್ದೇನೆ’ ಎಂದೂ, ಕ್ರೈಸ್ತ ಸಂಪ್ರದಾಯದಲ್ಲಿ, ‘ನಿಶ್ಚಲರಾಗಿರಿ, ನಂತರ ನಾನೇ ದೇವರೆಂದು ತಿಳಿಯಿರಿ’ ಎಂದೂ, ಇಸ್ಲಾಂ ಮತದಲ್ಲಿ ‘ಅನಲ್-ಹಕ್’ ಎಂದರೆ ‘ನಾನು ಸತ್ಯ’ ಎಂದು. ಮಾನವ ಜೀವನದ ಉದ್ದೇಶವೇ ನೀವೇ ದೇವರೆಂಬುದನ್ನು ಅನುಭವ ಮಾಡಿಕೊಳ್ಳುವುದೇ ಆಗಿದೆ.
ಒಮ್ಮೆ ಈ ಉದ್ದೇಶದ ಅನುಭವವಾಯಿತೆಂದರೆ, ಈ ಎಲ್ಲಾ ಮಹಾನುಭಾವರೂ ಹೇಳುವ ಒಳಗಿನ ಮಹದಾನಂದವು ಉಂಟಾಗಲು ಆರಂಭವಾಗುತ್ತದೆ. ಆಗ ನೀವು ಈ ಬಾಹ್ಯಪ್ರಪಂಚವು ದೈವ ಲೀಲೆ ನಡೆಯುತ್ತಿರುವ ಸುಂದರವಾದ ನಾಟಕರಂಗವೆಂದು ಅರ್ಥಮಾಡಿಕೊಳ್ಳುವಿರಿ. ಆಗ ಪ್ರಾಪಂಚಿಕ ದುರಿತಗಳೆಲ್ಲಾದುದರಿಂದಲೂ ಅಂತಿಮ ಸ್ವಾತಂತ್ರ್ಯವು ಲಭಿಸುತ್ತದೆ. ಆಗ ನೀವು ಮಾಡಿದರೂ ಮಾಡುವುದಿಲ್ಲ, ನುಡಿದರೂ ನುಡಿಯುವುದಿಲ್ಲ, ಅತ್ತರೂ ಅಳುವುದಿಲ್ಲ. ನಿಮ್ಮ ಅಂತರಾತ್ಮ ನಿರ್ಲಿಪ್ತವಾಗುತ್ತದೆ. ನೀವು ಎಂದೆಂದಿಗೂ ಶಾಶ್ವತಾನಂದ - ಎಂದರೆ ನಿತ್ಯ ಆನಂದದಲ್ಲಿರುತ್ತೀರಿ.
ಸಮಸ್ಯೆಯೇನೆಂದರೆ, ಜನರು ಸಾಮಾನ್ಯವಾಗಿ
ಸನ್ಯಾಸವೆಂದರೆ ಲೌಕಿಕ ಜೀವನಕ್ಕೆ ಅಡಚಣೆ
ಎಂದುಕೊಳ್ಳುತ್ತಾರೆ. ಅವರು ಸನ್ಯಾಸವೆಂದರೆ ಏನೋ
ಗಂಭೀರವಾದುದು ಎಂದುಕೊಳ್ಳುತ್ತಾರೆ. ಅಲ್ಲ!
ಸನ್ಯಾಸವೆಂದರೆ ಜೀವನವನ್ನು ಅದರ
ಪರಾಕಾಷ್ಠೆಯಲ್ಲಿ ಜೀವಿಸುವ ಒಂದು ನಿರ್ದಿಷ್ಟವಾದ
ಗುಣ. ಜೀವನವನ್ನು ಸಂಪೂರ್ಣವಾಗಿ ಅನುಭವಿಸಲು
ಗಂಭೀರತೆಯು ಸಹಾಯ ಮಾಡುವುದಿಲ್ಲ, ಕೇವಲ
ಪ್ರಾಮಾಣಿಕತೆ ಹಾಗೂ ನಗೆಯೇ ಸಹಾಯ
ಮಾಡಬಲ್ಲವು. ನಗೆಯು ಅತ್ಯಂತ ದೊಡ್ಡ ಆಧ್ಯಾತ್ಮಿಕ
ಗುಣ.
ಒಬ್ಬ ಗುರುಗಳು ತಮ್ಮ ಶಿಷ್ಯಂದಿರೊಂದಿಗೆ
ಕುಳಿತಿದ್ದರು. ಅವರು ಪ್ರಸನ್ನರಾಗಿದ್ದರು. ಅದೇ
ಸಮಯಕ್ಕೆ ಅವರ ಶಿಷ್ಯರು ಗುರುಗಳು ದೈವವನ್ನು
ತಲುಪಲು ದಾಟಿದ ವಿವಿಧ ಹಂತಗಳ ಬಗ್ಗೆ ಕೇಳುವ
ನಿರ್ಧಾರ ಮಾಡಿದರು.
ಗುರುಗಳು ಸುಂದರವಾಗಿ ಹೀಗೆ ಹೇಳಲಾರಂಭಿಸಿದರು...
'ದೇವರು ನನ್ನ ಕೈಹಿಡಿದು ಮೊದಲು ನನ್ನನ್ನು ಕರ್ಮಕ್ಷೇತ್ರಕ್ಕೆ ಕರೆದುಕೊಂಡು ಹೋದನು. ಅಲ್ಲಿ ನಾನು ಅನೇಕ ವರ್ಷಗಳು ಇದ್ದೆ. ನಂತರ ದೇವರು ಹಿಂದಿರುಗಿ ಬಂದು, ನನ್ನನ್ನು ದುಃಖ ಸಾಮ್ರಾಜ್ಯಕ್ಕೆ ಕರೆದೊಯ್ದನು. ನಾನು ಆಳವಾದ ದುಃಖಗಳಲ್ಲಿ ಮುಳುಗಿದರೂ, ಕಡೆಗೆ ಅದನ್ನು ಮೀರಿಹೋದೆ. ನನಗೆ ಸಂತೋಷವಾಯಿತು. ಆಗ, ಇದ್ದಕ್ಕಿದ್ದಂತೆಯೇ ದೇವರು ನನ್ನನ್ನು ಪ್ರೇಮಲೋಕದಲ್ಲಿರಿಸಿದನು. ಅಲ್ಲಿ ನಾನು ಸುಡುವ ಭಾವಗಳಲ್ಲಿ ಬೆಂದು, ಪೂರ್ಣವಾಗಿ ಶುದ್ಧನಾದೆನು. ನಂತರ ದೇವರು ನನ್ನನ್ನು ಮೌನ ಲೋಕಕ್ಕೆ ಕರೆದುಕೊಂಡು ಹೋದನು. ಅಲ್ಲಿ ನಾನು ಜನನ-ಮರಣಗಳ ರಹಸ್ಯವನ್ನು ಕಲಿತುಕೊಂಡೆನು'.
ಆಗ ಶಿಷ್ಯರು, 'ಅದು ನಿಮ್ಮ ಅನ್ವೇಷಣೆಯ ಕೊನೆಯ ಹಂತವಾಗಿತ್ತೆ?' ಎಂದು ಕೇಳಿದರು.
ಗುರುಗಳು ಹೇಳಿದರು, 'ಇಲ್ಲ. ಒಂದು ದಿನ ದೇವರು, ಈ ದಿನ ನಾನು ನಿನ್ನನ್ನು ನನ್ನ ಹೃದಯಕ್ಕೇ ಕರೆದುಕೊಳ್ಳುತ್ತೇನೆ... ಎಂದು ಹೇಳಿ, ನಗೆಯ ಲೋಕಕ್ಕೆ ಕರೆದುಕೊಂಡು ಹೋದನು'.
ಸನ್ಯಾಸವೆಂಬುದು ನಿಮ್ಮ ಮೂಲಭೂತ ಚೈತನ್ಯ. ಅದು ಯಾವುದಕ್ಕಾದರೂ ತಡೆಯಾಗಲು ಹೇಗೆ ಸಾಧ್ಯ? ಅಷ್ಟೇ ಅಲ್ಲ, ಸನ್ಯಾಸದ ಚೈತನ್ಯದಿಂದ ನೀವು ಯಾವಾಗಲೂ ತಾರುಣ್ಯದಲ್ಲಿರುತ್ತೀರಿ. ಸನ್ಯಾಸದ ಚೈತನ್ಯದಿಂದ ಜೀವನದ ಸವಾಲುಗಳನ್ನೆದುರಿಸಲು ಸಿದ್ಧರಾಗಿರುತ್ತೀರಿ.
ಜನರು ನನ್ನನ್ನು ಕೇಳುತ್ತಾರೆ, 'ನಾವು ಸಂಸಾರದಲ್ಲಿಯೇ ಇದ್ದುಕೊಂಡು ಸನ್ಯಾಸಿಯ ಪ್ರಜ್ಞೆಯಲ್ಲೇಕಿರಬಾರದು?' ಎಂದು. ನೋಡಿರಿ ಮನುಷ್ಯನ ಸ್ವಭಾವ ಎಂತಹುದೆಂದರೆ, ಒಂದು ಪ್ರಜ್ಞಾಪೂರಿತ ತೀರ್ಮಾನವನ್ನು ತೆಗೆದುಕೊಳ್ಳದೆಯೇ, ಆತನ ಪ್ರಜ್ಞೆಯಲ್ಲಿ ಶಾಶ್ವತವಾದ ಪರಿವರ್ತನೆಯನ್ನು ತರವುದು ಕಷ್ಟ. ಸನ್ಯಾಸವೆಂಬುದು ಪ್ರಜ್ಞೆಯನ್ನು ಪರಿವರ್ತಿಸಲು ಪ್ರಜ್ಞಾಪೂರ್ವಕವಾಗಿ ತೆಗೆದುಕೊಳ್ಳುವ ನಿರ್ಧಾರ, ಬೇರೇನಲ್ಲ. ಸನ್ಯಾಸವು ಒಂದು ಪ್ರಜ್ಞಾಪೂರಿತ ನಿರ್ಧಾರ. ಆದುದರಿಂದಲೇ ಸನ್ಯಾಸವನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರಜ್ಞಾಪೂರಿತ ತೀರ್ಮಾನದಿಂದ ಎಡೆಬಿಡದ ಅರಿವಿರುತ್ತದೆ. ಎಡೆಬಿಡದ ಅರಿವು, ಹಿಂದಕ್ಕೆ ಜಾರಿಬೀಡುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅದಿಲ್ಲದೆ ಆ ಮಾರ್ಗದಲ್ಲಿಯೇ ಇರಲು ನಿರ್ಬಂಧವೇನೂ ಇರುವುದಿಲ್ಲ. ಸುಲಭವಾಗಿ ಜಾರಿಬಿಡುತ್ತೇವೆ.
ಸನ್ಯಾಸದೊಂದಿಗೆ ನೀವು ಮಾಡುತ್ತಿರುವುದನ್ನೇ ಮಾಡುವುದನ್ನು ಮುಂದುವರೆಸುವಿರಿ, ಆದರೆ ಅದನ್ನು
ಇನ್ನೂ ಚೆನ್ನಾಗಿ ಮಾಡುತ್ತೀರಿ. ಸನ್ಯಾಸದೊಂದಿಗೆ
ಪ್ರತಿಯೊಂದನ್ನೂ ಗಮನಿಸಲಾರಂಭಿಸುತ್ತೀರಿ. ನೀವು
ಸಾಕ್ಷಿಯಾಗುತ್ತೀರಿ. ಸಾಕ್ಷಿಯಾಗುವುದರಿಂದ,
ನಿಮಗೂ ಮತ್ತೊಬ್ಬರಿಗೂ ನಡುವೆ ಒಂದು ಅಂತರ
ಉಂಟಾಗುತ್ತದೆ. ಆ ಅಂತರವನ್ನು ತ್ಯಾಗವೆಂದು
ತಪ್ಪಾಗಿ ತಿಳಿಯಲಾಗಿದೆ. ನೀವು ಚೆನ್ನಾಗಿ
ಗಮನಿಸಿದಲ್ಲಿ, ಹಿಂದೆ ಆ ಅಂತರ ಇರಲಿಲ್ಲ,
ಪ್ರತಿಯೊಬ್ಬರೂ ಇನ್ನೊಬ್ಬರನ್ನು
ಉಸಿರುಗಟ್ಟಿಸುತ್ತಿದ್ದರು. ಈಗ ಅಂತರವಿದೆ. ಆ
ಅಂತರವು ದೂರವನ್ನು ಸೃಷ್ಟಿಸುವಂತದ್ದಲ್ಲ, ಅದು
ಅರಿವಿನ ಅಂತರ.
ಸನ್ಯಾಸವೆಂದರೆ, ಆಂತರಿಕ ಹೆಣ್ಣು ಅಥವಾ ಗಂಡು ಎಂಬುದರ ಹೊರೆಯಿಲ್ಲದೆ ಜೀವಿಸುವುದೆಂದೂ ಆಗುತ್ತದೆ. ಆಂತರಿಕ ಹೆಣ್ಣು ಅಥವಾ ಗಂಡು ಎಂದರೇನು? ಅದು ನಿಮ್ಮ ಮನಸ್ಸಿನಲ್ಲಿಡಗಿರುವ ಕಾಮ ಹಾಗೂ ನಿಮ್ಮ ಮನಸ್ಸಿನಲ್ಲಿ ನೀವು ಮಾಡಿಕೊಂಡಿರುವ ಕಲ್ಪನೆಗಳಲ್ಲದೆ ಬೇರೇನಲ್ಲ. ತಂತ್ರದಲ್ಲಿ ಶಿವನು ಸುಂದರವಾಗಿ ಹೇಳುತ್ತಾನೆ: ಸಂಸಾರದಲ್ಲಿದ್ದರೂ ಸಹ ತನ್ನ ಮನದಾಳದಲ್ಲಿ ತನ್ನಲ್ಲಿರುವ ಹೆಣ್ಣನ್ನು ಬಿಟ್ಟಿರುವ ಗಂಡೇ ಸನ್ಯಾಸಿ. ಇದಕ್ಕೆ ವಿರುದ್ಧವಾಗಿ, ಸನ್ಯಾಸಿಯ ಮನಸ್ಸಿನಲ್ಲಿ ಒಬ್ಬ ಹೆಣ್ಣಿನ ಯೋಚನೆಗಳೇ ಬರುತ್ತಿದ್ದರೆ, ಆತನನ್ನು ಸನ್ಯಾಸಿ ಎನ್ನಲಾಗದು. ಒಬ್ಬನನ್ನು ಸನ್ಯಾಸಿಯೇ ಎಂದು ಅಳತೆ ಮಾಡಲು ಇದೇ ಮಾಪನ.
ಬುದ್ಧನು ಬೋಧಿಸಿದ ಚತುರಾರ್ಯ ಸತ್ಯಗಳಲ್ಲಿ,
ಎರಡನೆಯ ಸತ್ಯವು ದುಃಖದ ಕಾರಣವನ್ನು
ವಿಶ್ಲೇಷಿಸುತ್ತದೆ. ಆತನು ಸುಂದರವಾಗಿ
ಹೇಳುವುದೇನೆಂದರೆ, ಸನ್ಯಾಸಿಯು ಇಡೀ
ವಿಶ್ವದ
ಪ್ರತಿ ನಿಮಿಷವೂ
ಜವಾಬ್ದಾರಿಯನ್ನು
ಬಾಳಿನ ಮೇಲೆ ನಮ್ಮ
ತೆಗೆದುಕೊಳ್ಳುತ್ತಾನೆ.
ಬೇಡಿಕೆಗಳನ್ನು ಹೇರು-
ಆತನಿಗೆ ತನ್ನ
ತ್ತಿರುವುದೇ ನಮ್ಮ
ಕುಟುಂಬಕ್ಕೂ
ದುಃಖಕ್ಕೆ ಕಾರಣವೆಂದು. ಉಳಿದ ಪ್ರಪಂಚಕ್ಕೂ
ಅದು ಬಾಳೇಗಿಡದಲ್ಲಿ ವ್ಯತ್ಯಾಸವಿರುವುದಿಲ್ಲ.
ಮಾವು ಬಿಡಲಿ ಎಂದು
ಅಪೇಕ್ಷಿಸಿದಂತೆ! ಆದರೆ ನಾವು ಅರಿವನ್ನು
ಮೂಡಿಸಿಕೊಂಡರೆ ಮಾತ್ರವೇ ಈ ಅಭ್ಯಾಸವನ್ನು
ತಿಳಿಯಲು ಸಾಧ್ಯ.
ಅಷ್ಟೇ ಅಲ್ಲ, ನೀವು ಗಮನಿಸಿದರೆ
ಸಂಬಂಧಗಳಲ್ಲಿ ಯಾವ ರೀತಿ ವ್ಯವಹಾರಗಳು
ನಡೆಯುತ್ತಿರುತ್ತವೆ ಎಂಬುದನ್ನು ಸ್ಪಷ್ಟವಾಗಿ
ನೋಡಲಾರಂಭಿಸುತ್ತೀರಿ. ಯಾವ ರೀತಿ ಎಲ್ಲವೂ
ನಿರೀಕ್ಷೆಗಳಿಂದ ನಡೆಯುತ್ತಿವೆ ಎಂಬುದನ್ನು ಆಗ
ತಿಳಿಯುವಿರಿ. ಪ್ರತಿಯೊಂದರಲ್ಲಿಯೂ
ಅಗೋಚರವಾದ ಅಪೇಕ್ಷೆಗಳಿರುವುದನ್ನು ಕಾಣುವಿರಿ.
ಸನ್ಯಾಸಿಯ ಜವಾಬ್ದಾರಿ
ಸನ್ಯಾಸಿಯ ಬಗ್ಗೆ ತಿಳಿಯದಿರುವ ಕೆಲವು ಸತ್ಯಾಂಶಗಳಿವೆ. ಅವೇನೆಂದರೆ, ಸನ್ಯಾಸಿಯು ಇಡೀ ವಿಶ್ವದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ. ಆತನಿಗೆ ತನ್ನ ಕುಟುಂಬಕ್ಕೂ ಉಳಿದ ಪ್ರಪಂಚಕ್ಕೂ ವ್ಯತ್ಯಾಸವಿರುವುದಿಲ್ಲ. ಆತನಿಗೆ ಎಲ್ಲವೂ ಒಂದೇ. ಆತನ ಹಾದಿಯಲ್ಲಿ ಬಂದ ಯಾರಿಗೇ ಆದರೂ ಮುಕ್ತಿ ದೊರೆಯಲೆಂದು ಹಾರೈಸುತ್ತಾನೆ. ಅದೇ ಒಬ್ಬ
ಸಂಸಾರಿಯು, ಒಂದು ಕುಟುಂಬದ ಹೊಣೆಯನ್ನೋ
ಅಥವಾ ಕೆಲವು ಸಂಸ್ಥೆಗಳ ಹೊಣೆಯನ್ನೋ
ಹೊರಬಹುದು. ಅದು ಯಾವಾಗಲೂ ಒಂದು
ನಿಖರವಾದ ಕಾರಣಕ್ಕಾಗಿರುತ್ತದೆ. ಅದು ಸೇವೆಯನ್ನು
ಮಾಡಿದ ಪ್ರತಿಷ್ಠೆಗಳಿಸಲಾಗಲೀ, ನಿರ್ಬಂಧಕ್ಕೆ
ಕಟ್ಟುಬಿದ್ದಾಗಲೀ ಅಥವಾ ಸುತ್ತಮುತ್ತಲಿನವರ
ಜೊತೆಯಲ್ಲಿ ಸಹಬಾಳ್ವೆಯನ್ನು ಸುಗಮವಾಗಿ
ಸಾಗಿಸಲಾಗಲೀ ಇರುತ್ತದೆ.
ಒಬ್ಬ ಸನ್ಯಾಸಿಯ ಜವಾಬ್ದಾರಿಯ ರೀತಿ ಹಾಗೂ ಗುಣವೇ ಪೂರ್ತಿಯಾಗಿ ಬೇರೆಯೇ ಆಗಿರುತ್ತದೆ. ಆತನಿಗೆ ಇಡೀ ಜಗತ್ತು ತನ್ನ ಕುಟುಂಬವಾಗಿರುತ್ತದೆ. ಆತನಿಗೆ ಮಾಡಲೇಬೇಕೆಂಬ ಯಾವ ನಿರ್ಬಂಧವೂ ಪ್ರೇರಕವಾಗಿರುವುದಿಲ್ಲ. ಆ ಜವಾಬ್ದಾರಿಯು ಆತನ ಆಂತರಿಕ ಸ್ವಭಾವದ ಗುಣಮಟ್ಟದ ಮೇಲೆ ಸಂಪೂರ್ಣವಾಗಿ ಆಧಾರಿತವಾಗಿರುತ್ತದೆ ಹಾಗೂ ಒಬ್ಬ ಸಂಸಾರಿಯು ಜೀವನದ ಆ ಮಟ್ಟದಲ್ಲಿ ತನ್ನೆಲ್ಲಾ ಕರ್ತವ್ಯಗಳನ್ನೂ ನಿಭಾಯಿಸಿ, ವಿಶ್ರಮಿಸಬಹುದು. ಸನ್ಯಾಸಿಯಾದರೋ ಸತತವಾಗಿ ದುಡಿಯುತ್ತಾನೆ. ಏಕೆಂದರೆ, ಜನರಿಗೆ ಸತತವಾಗಿ ತಮ್ಮ ಜೀವನದಲ್ಲಿ ಸತ್ಯಗಳ ಅವಶ್ಯಕತೆ ಇರುತ್ತದೆ.
ಸನ್ಯಾಸಿಯಾದವನು ಸಂಪೂರ್ಣ ಸಂಬಂಧಗಳಲ್ಲಿ ನೆಲೆ ಹೊಂದಿರುತ್ತಾನೆ. ಸನ್ಯಾಸಿಗಳು ಸಂಬಂಧಗಳನ್ನು ತೊರೆದು ಓಡಿ ಹೋಗುವವರೆಂದು ಜನರು ಭಾವಿಸುತ್ತಾರೆ. ನಾನೊಮ್ಮೆ ಒಂದು ಕಾಲೇಜಿನಲ್ಲಿ ಒಂದು ಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ಒಬ್ಬ ಹುಡುಗಿ ಕೇಳಿದಳು, 'ಸ್ವಾಮಿ, ನಿಮಗೆ ಪ್ರೇಮಭಂಗವಾದ ಕಾರಣ ನೀವು ಸನ್ಯಾಸಿಯಾದಿರಾ?' ಎಂದು.
'ನಾನು ಸನ್ಯಾಸಿಯಾಗಲು ಕಾರಣ ಪ್ರೇಮದಲ್ಲಿ ಜಯ' ಎಂದು ನಾನು ಹೇಳಿದೆ. ನಿಜವಾಗಿಯೂ ನೋಡಿದರೆ, ಸನ್ಯಾಸವೇ ನಿಜವಾದ ಪ್ರೀತಿಯಲ್ಲಿ ನಿಮ್ಮನ್ನು ಮೃದುಗೊಳಿಸುವುದು – ಪ್ರೀತಿಯು ಒಬ್ಬ ವ್ಯಕ್ತಿಯ ಕಡೆಗಲ್ಲ, ಆದರೆ ಇಡೀ ವಿಶ್ವಶಕ್ತಿಯ ಕಡೆಗೆ ನಿರ್ದೇಶಿತವಾಗಿರುವುದು.
ಸಾಮಾನ್ಯವಾದ ಪ್ರೀತಿಯು ಒಂದು ಕಾರಣದೊಡನೆ ಅಥವಾ ಕಾಮದಿಂದ ಏರ್ಪಡುತ್ತದೆ. ನಿಜವಾದ ಪ್ರೀತಿಗೆ ಕಾರಣ ತಿಳಿದಿರುವುದಿಲ್ಲ. ಅದು ವಿಶ್ವದಲ್ಲಿರುವ ಎಲ್ಲದರ ಮೇಲೂ ಉಕ್ಕಿ ಹರಿಯುವ ಕಾರಣ ರಹಿತ ಚೈತನ್ಯ.
ವಾಸ್ತವದಲ್ಲಿ ಸನ್ಯಾಸವು ರಾಜನಂತೆ
ಜೀವಿಸುವುದು. ಸನ್ಯಾಸವು ರಾಜನಂತಹ ಜೀವನದ
ಪ್ರಾರಂಭ; ಏಕೆಂದರೆ ನಿಮ್ಮ ಕಷ್ಟಗಳೆಲ್ಲವನ್ನೂ
ನೀವಾಗಿಯೇ ನಿವಾರಿಸಿಕೊಂಡಾಗ, ನೀವು
ಸಂಪಾದಿಸಬಹುದಾಗಿದ್ದದ್ದೆಲ್ಲವನ್ನೂ
ಹೊಂದಿದಂತೆಯೇ! ಐಶ್ವರ್ಯವು ಏನನ್ನು
ಕೊಡಬಹುದೋ ಅದಕ್ಕಿಂತಲೂ ಮಿಗಿಲಾದುದನ್ನು
ಪಡೆಯುವಿರಿ.
ಸನ್ಯಾಸಿಯು ವಿಶ್ವಶಕ್ತಿಯ ಕೊನೆಯಿಲ್ಲದ ಶ್ರೀಮಂತಿಕೆಯನ್ನು ಕಾಣುತ್ತಾನೆ. ಆತನ ದೃಷ್ಟಿಯು ಸಾಗರದಷ್ಟು ವಿಶಾಲ. ಆತನು ಕಿರಿದಾದ ದೃಷ್ಟಿಕೋನಗಳಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಇಡೀ ವಿಶ್ವಶಕ್ತಿಯೇ ಒಂದೆಂದು ಗ್ರಹಿಸುತ್ತಾನೆ. ತಾನು ಪೂರ್ಣತ್ವದಲ್ಲಿ ಒಂದು ಭಾಗವೆಂದುಕೊಳ್ಳುತ್ತಾನೆ. ಆದುದರಿಂದಲೇ ಆತನು ಶ್ರೀಮಂತ. ಕೆಲವು ಎಕರೆಗಳನ್ನು ಹೊಂದಿದ ಶ್ರೀಮಂತನು ನಿಜವಾದ ಶ್ರೀಮಂತನಲ್ಲ. ಯಾರು ಇಡೀ ವಿಶ್ವಶಕ್ತಿಯ ಸಮೃದ್ಧಿಯನ್ನು ಅನುಭವಿಸುತ್ತಾನೋ ಅವನೇ ನಿಜವಾದ ಶ್ರೀಮಂತ.
'ಶ್ರೀಮಂತ' ಎಂಬ ಪದವನ್ನೇ ತಪ್ಪಾಗಿ
ಅರ್ಥೈಸಲಾಗಿದೆ ಎಂದು ಅರ್ಥಮಾಡಿಕೊಳ್ಳಿ. ಕೇವಲ
ಕೆಲವು ಬಂಗಲೆಗಳನ್ನು ಅನುಭವಿಸುತ್ತಿರುವವನು
ಶ್ರೀಮಂತನು ಹೇಗಾಗುತ್ತಾನೆ? ಅದು ಸಾಧ್ಯವಿಲ್ಲ!
ತನ್ನ ಸುತ್ತಲಿರುವ ಎಲ್ಲವನ್ನೂ ಸತತವಾಗಿ
ಆನಂದಿಸುವವನೇ ನಿಜವಾದ ಶ್ರೀಮಂತ. ಆತನ
ಶ್ರೀಮಂತಿಕೆಯು ಇಡೀ ವಿಶ್ವಶಕ್ತಿಯ ಶ್ರೀಮಂತಿಕೆ.
ಆತನು ಯಾವುದಕ್ಕೂ ಅಂಟಿಕೊಳ್ಳದೆಯೇ ಸಂತೋಷ
ಪಡುತ್ತಿರುತ್ತಾನೆ.
ಸಮಗ್ರತೆ - ಸನ್ಯಾಸಿಯ ವಿಶೇಷ ಗುಣ!
'ತಪಸ್ಸು' ಎಂಬ ಪದದ ಅರ್ಥ ನಿಮ್ಮನ್ನು ನೀವೇ ಒಂದು ಏಕ ಅಸ್ತಿತ್ವವನ್ನಾಗಿ ಮಾಡಿಕೊಳ್ಳುತ್ತಾ ನಿಮ್ಮನ್ನೇ ಸಮಗ್ರವಾಗಿಸಿಕೊಳ್ಳುವುದು ಎಂದೇ ಹೊರತು ಬೇರೆಯಲ್ಲ. 'ನಾವು ಈಗ ಹಾಗಿಲ್ಲವೆ?' ಎಂದು ನೀವು ಕೇಳಬಹುದು. ನೀವು ಕೂಲಂಕುಶವಾಗಿ ಪರಿಶೀಲಿಸಿದರೆ, ನಾವು ಬೇರೆಬೇರೆ ಅಸ್ತಿತ್ವಗಳಾಗಿರುತ್ತೇವೆ, ಒಂದಾಗಿರುವುದೇ ಇಲ್ಲ ಎಂಬುದನ್ನು ಕಾಣುವಿರಿ. ಸಮಗ್ರತೆಯನ್ನು ಹೊರತುಪಡಿಸಿ ನಮ್ಮ ಜೀವನದಲ್ಲಿ ಇನ್ನೆಲ್ಲವೂ ಇವೆ.
ನೀವು ಆಳವಾಗಿ ಅವಲೋಕಿಸಿದಲ್ಲಿ, ನಿಮ್ಮೊಳಗೆ ನೂರಾರು ಧ್ವನಿಗಳು ಸತತವಾಗಿ ಮಾತನಾಡುತ್ತಲೇ ಇರುವುದು ನಿಮಗೆ ಸಮಗ್ರತೆಯಿಂದ ಬದುಕಲು ಏನನ್ನೇ ಆದರೂ ತ್ಯಜಿಸಲು ಧೈರ್ಯ ಬೇಕಾಗುತ್ತದೆ. ತಿಳಿಯುತ್ತದೆ. ನಿಮ್ಮ ಮನಸ್ಸು 'ಇದನ್ನು ಮಾಡೋಣ' ಎಂದುಕೊಳ್ಳುತ್ತಿದ್ದಂತೆಯೇ, ಮರುಕ್ಷಣವೇ, 'ಅದನ್ನು ಮಾಡುವುದು ಬೇಡ!' ಎಂಬ ಆಲೋಚನೆಯು ಮೇಲೇಳುವುದು. ಅದರ ಪಾರ್ಶ್ವ ಪರಿಣಾಮಗಳು ಮತ್ತು ನಂತರದ ಪರಿಣಾಮಗಳನ್ನು ಆಲೋಚಿಸಿದ ನಂತರ ಮನಸ್ಸು ಡೋಲಾಯಮಾನವಾಗಲು ಆರಂಭಿಸುತ್ತದೆ.
ಛಿದ್ರಛಿದ್ರವಾದ ಮನಸ್ಸಿನ ಭಾಗಗಳನ್ನು
ಸಮಗ್ರಗೊಳಿಸುವುದೇ ಜೀವನದ ಸಾರಾಂಶ.
ಭಾವನೆಗಳನ್ನೂ, ಮನಸ್ಸನ್ನೂ ಸಮಗ್ರಗೊಳಿಸುವುದು,
ಮುಖಚರ್ಯೆಯನ್ನೂ, ಮನಸ್ಸನ್ನೂ
ಸಮಗ್ರಗೊಳಿಸುವುದು, ಮನಸ್ಸು ಏನನ್ನು
ಆಲೋಚಿಸುತ್ತದೆಯೋ ಮುಖಚರ್ಯೆಯೂ ಅದನ್ನೇ
ತೋರಿಸುತ್ತದೆ ಎಂಬುದನ್ನು
ಖಾತರಿಪಡಿಸಿಕೊಳ್ಳುವುದೇ ಜೀವನದ ಸಾರಾಂಶ.
ಮಹಾನ್ ಗುರುಗಳ ಜೀವನಗಳನ್ನು ಅಧ್ಯಯನ
ಮಾಡಿದರೆ ಹಾಗೂ ಅವರೆಲ್ಲರ ಜೀವನದ ಒಂದು
ಮೂಲಭೂತವಾದ ಸಾರವನ್ನು ಹುಡುಕಲು
ಪ್ರಯತ್ನಿಸಿದರೆ, ಅದು ಜ್ಞಾನ ಅಥವಾ
ಭಕ್ತಿಯಾಗಿರುವುದಿಲ್ಲ. ಅದು ಸಮಗ್ರತೆ! ಅವರು
ಯಾವುದನ್ನು ನಂಬಿದರೋ ಅದರಂತೆ ಬದುಕಿದರು,
ಅಷ್ಟೇ! ಅವರ ಸಮಗ್ರತೆಯೂ ಘನವಾಗಿತ್ತು. ಅವರು
ಜೀವವನ್ನಾದರೂ ತೊರೆಯಲು ಸಿದ್ಧರಾಗಿದ್ದರೇ ವಿನಃ
ತಮ್ಮ ಸಮಗ್ರತೆಯನ್ನಲ್ಲ.
ಭಾರತದ ಮಹಾಜ್ಞಾನಿಗಳಾದ ಚೈತನ್ಯ ಮಹಾಪ್ರಭುಗಳು ಭಕ್ತಿಗೀತೆಗಳನ್ನು ಹಾಡುತ್ತಾ ಬೀದಿಗಳಲ್ಲಿ ನಡೆದಾಡುತ್ತಿದ್ದರು. ಬೇರೆಯವರು ಏನೆಂದುಕೊಳ್ಳುತ್ತಾರೆಯೋ ಎಂಬುದಕ್ಕೆ ಅವರು ಗಮನಕೊಡುತ್ತಲೇ ಇರುತ್ತಿರಲಿಲ್ಲ. ಅವರಿಗೇನನ್ನಿಸುತ್ತಿತ್ತೋ ಅದನ್ನು ಪ್ರಕಟಪಡಿಸುತ್ತಿದ್ದರು. ಹೀಗಿರುವುದಕ್ಕೆ ತ್ಯಾಗದ ಪರಾಕಾಷ್ಠತೆ ಇರಬೇಕಾಗುತ್ತದೆ. ಸಮಗ್ರತೆಯಿಂದ ಬದುಕಲು ಏನನ್ನೇ ಆದರೂ ತ್ಯಜಿಸಲು ಧೈರ್ಯ ಬೇಕಾಗುತ್ತದೆ!
ಆದುದರಿಂದಲೇ, ಈ ಮಹಾನ್ ಗುರುಗಳು ತಮ್ಮ ಜೀವನದಲ್ಲಿ ಮಾಡಿದ್ದಾದೆಲ್ಲವೂ, ಯಾವಾಗಲೂ ಶಾಶ್ವತವಾದ ಮಂಗಳತ್ವದಲ್ಲಿ ಪರ್ಯವಸಾನಗೊಳ್ಳುತ್ತಿದ್ದವು! ಅವರು ಮಾಡಿದುದೆಲ್ಲವೂ ಆಳವಾದ ಪ್ರಾಮಾಣಿಕತೆ ಮತ್ತು ಭಕ್ತಿಗಳೊಂದಿಗೆ ತಮ್ಮನ್ನು ಲೀನವಾಗಿಸಿಕೊಳ್ಳುವುದೇ ಆಗಿತ್ತು. ತಮ್ಮನ್ನೇ ಪೂರ್ಣವಾಗಿ ಸಮಗ್ರವಾಗಿಸಿಕೊಳ್ಳುವ ತೀವ್ರತಮ ಪ್ರಯತ್ನವನ್ನೇ ತಪಸ್ಸು ಎಂದು ಕರೆಯುವುದು. ತಪಸ್ಸು ಯಾವಾಗಲೂ ಮಾಂಗಳ್ಯತ್ವದಲ್ಲಿ ಪರ್ಯವಸಾನಗೊಳ್ಳುತ್ತದೆ. ನಿಮ್ಮ ಜೀವನದಲ್ಲಿ ಅಸಂಖ್ಯಾತ ವಿಷಯಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಇವುಗಳೆಲ್ಲವನ್ನೂ ಸಹಿಸಿಕೊಂಡು ಅವುಗಳೊಂದಿಗೆ ತಾದಾತ್ಮ್ಯವನ್ನು ಹೊಂದುವುದಕ್ಕೆ ತಪಸ್ಸೆಂದು ಕರೆಯುತ್ತಾರೆ. ಹಾಗಲ್ಲದೆ ಇದ್ದರೆ, ಅವುಗಳು ನಿಮ್ಮನ್ನು ಕಲಕಿಬಿಟ್ಟರೆ ಅವಮಾನಕ್ಕೀಡಾಗುವಿರಿ. ಯಾವ ಮಾರ್ಗವನ್ನು ಹಿಡಿಯಬೇಕೆಂಬುದು ನಿಮಗೇ ಬಿಟ್ಟದ್ದು.
ಆದಿ ಶಂಕರರು ಬಾಲಕರಾಗಿದ್ದಾಗ ಸನ್ಯಾಸದ
ಮಾರ್ಗವನ್ನುನುಸರಿಸಬೇಕೆಂಬ ಅಭಿಲಾಷೆ ಅವರಿಗೆ
ಬಂದಾಗ ಒಂದು ಉಭಯಸಂಕಟಕ್ಕೆ ಸಿಲುಕಿದರು.
ಅವರು ತಮ್ಮ ತಾಯಿಯ ಅನುಮತಿಯನ್ನು ಪಡೆದು
ಹೋಗಬೇಕೆಂದಿದ್ದರು, ಆದರೆ ಆಕೆಗೆ ಅವರನ್ನು
ಕಳುಹಿಸಲು ಇಷ್ಟವಿರಲಿಲ್ಲ.
ಒಂದು ದಿನ ಸ್ನಾನ ಮಾಡಲು ನದಿಗೆ ಹೋದರು. ಇದ್ದಕ್ಕಿದ್ದಂತೆ ಅವರ ತಾಯಿಗೆ ಇವರು ನೆರವಿಗಾಗಿ ಜೋರಾಗಿ ಕೂಗಿಕೊಂಡದ್ದು ಕೇಳಿಸಿತು. ಆಕೆಯು ಓಡಿಬಂದು ನೋಡಿದಾಗ ಒಂದು ಮೊಸಳೆಯು ಅವರ ಕಾಲನ್ನು ಹಿಡಿದಿತ್ತು. ಬಿಡಿಸಿಕೊಳ್ಳಲು ಅವರು ಹೆಣಗಾಡುತ್ತಿದ್ದರು.
ತಕ್ಷಣವೇ ಒಂದು ಉಪಾಯಹೊಳಿದು, ಅವರು,
'ಅಮ್ಮಾ, ನಾನು ಸನ್ಯಾಸಿಯಾಗಲು ನೀನು ಅನುಮತಿ
ನೀಡಿದರೆ, ಈ ಮೊಸಳೆಯಿಂದ ಪಾರಾಗಿ ನಾನು
ಜೀವನವನ್ನು ಮುಂದುವರೆಸಬಹುದು' ಎಂದು
ಕೂಗಿಕೊಂಡರು.
ತಾಯಿಯು ಆಶ್ಚರ್ಯದಿಂದ, ಅದು ಹೇಗೆಂದು
ಕೇಳಿದಳು. ಅವರು ವಿವರಿಸಿದರು, 'ವೇದಗಳ
ಪ್ರಕಾರ ನಾನೊಂದು ಹೊಸ ಆಶ್ರಮ ಅಥವಾ
ಜೀವನದ ಹಂತಕ್ಕೆ ಕಾಲಿಟ್ಟರೆ ಅದು ಪುನರ್ಜನ್ಮ
ಪಡೆದಂತೆ. ಆದುದರಿಂದ ನಾನು ಸನ್ಯಾಸಾಶ್ರಮಕ್ಕೆ
ಕಾಲಿಡಲು ನೀನು ಅನುಮತಿ ನೀಡಿದರೆ, ಪ್ರಾಯಶಃ
ಭಗವಂತನು ನನಗೆ ಹೊಸದೊಂದು ಜೀವನವನ್ನು
ನೀಡಬಹುದೇನೋ!' ಎಂದು.
ತಾಯಿಯು ಸಂಪೂರ್ಣ ನಿಸ್ಸಹಾಯಕಳಾದಳು.
ಆಕೆಯು ತ್ವರೆಯಿಂದ ತೀರ್ಮಾನಿಸಿದಳು. ಬಾಲಕನ
ಮರಣವನ್ನು ನೋಡುವುದಕ್ಕಿಂತಲೂ ಅವನು
ಸನ್ಯಾಸಿಯಾಗುವುದು ಮೇಲೆಂದುಕೊಂಡಳು, ಒಪ್ಪಿಗೆಯಿತ್ತಳು.
ತಕ್ಷಣವೇ ಮೊಸಳೆಯು ತನ್ನ ಹಿಡಿತವನ್ನು ಬಿಟ್ಟಿತು!
ಶಂಕರರು ಅತ್ಯಂತ ಸಂತೋಷದಿಂದ ತಾಯಿಯ
ಬಳಿಗೋದಿದರು. ತಾವು ಅರಸುತ್ತಿದ್ದ ಸತ್ಯವನ್ನು
ಅವರು ಆ ಘಳಿಗೆಯಲ್ಲಿ ಜೀವಿಸಿದರು . . . ಮತ್ತು
ಅದು ಕೆಲಸ ಮಾಡಿತು.
ನೋಡಿರಿ: ಮೂರು ವಿಷಯಗಳಿವೆ.
ಸತ್ಯವನ್ನು ಚಿಂತನೆ ಮಾಡುವುದು.
ಸತ್ಯವನ್ನು ನುಡಿಯುವುದು.
ಸತ್ಯವನ್ನು ಜೀವಿಸುವುದು.
ಮೊದಲ ಎರಡೂ ಅನುಸರಿಸಲು ಸುಲಭ. ಆದರೆ, ಮೂರನೆಯದಾದ ಯಾವಾಗಲೂ ಸತ್ಯದಲ್ಲೇ ಬದುಕುವುದು ಕಷ್ಟ. ಅದು ಬಹಳ ಅಪರೂಪ. ಸನ್ಯಾಸವೆಂದರೆ ನಾವು ಏನನ್ನು ಸತ್ಯವೆಂದುಕೊಳ್ಳುತ್ತೇವೆಯೋ ಅದನ್ನೇ ಜೀವಿಸುವ ಧೈರ್ಯ. ನಾವು ಸತ್ಯವನ್ನು ಹೇಳುವುದಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತೇವೆ. ಆದರೆ ಸತ್ಯದಲ್ಲೇ ಜೀವಿಸುವುದು ಅತ್ಯಂತ ಮುಖ್ಯ. ನಿಮ್ಮ ಸತ್ಯವನ್ನು ನೀವು ಜೀವಿಸಲಾರಂಭಿಸಿದರೆ, ನಿಮ್ಮ ಮೇಲಿನ ನಿಮ್ಮ ಗೌರವ ಹೆಚ್ಚಾಗುತ್ತದೆ. ಅದೇ ಅದರ ಸೊಬಗು!
ನೀವು ಋಜುತ್ವದಿಂದಿದ್ದು ಸತ್ಯವನ್ನು ಬಾಳಿದರೆ
ಕಪಟತನವನ್ನು ಕೈಬಿಡುತ್ತೀರಿ. ಕಪಟತನವೆಂದರೆ
ನೀವು ಏನಲ್ಲವೋ ಅದು ಎಂದು
ಸೋಗುಹಾಕುವುದು. ಕಪಟತನವೆಂಬುದು ನೀವು
ಹಲವು ಕಡೆಗಳಲ್ಲಿ ಅಡಗಿಕೊಂಡಿದ್ದು ನಿಜವಾಗಿಯೂ
ನೀವು ಯಾರೆಂದು ಜನರಿಗೆ ಕಾಣಿಸದೇ ಇರುವುದು.
ನಿಮ್ಮ ವ್ಯಕ್ತಿತ್ವದ ತುಂಡಾದ ಭಾಗಗಳು, ಒಂದರ
ಮೇಲೊಂದು ಮೇಲ್ಗೈ ಸಾಧಿಸುತ್ತಾ ನಿಮ್ಮನ್ನು
ಕಪಟಿಯನ್ನಾಗಿ ಮಾಡುತ್ತವೆ. ನಿಮ್ಮ ಆ
ತುಣುಕುಗಳೊಂದಿಗೆ ಕಾದಾಡಿ ಗೆದ್ದರೆ ನೀವು 'ಧೀರ'
ರಾಗುವಿರಿ. ಬೇರೆಯವರೊಂದಿಗೆ ಕಾದಾಡಿ
ಗೆಲ್ಲುವುದು ಸುಲಭ. ಬೇರೆಯವರೊಂದಿಗೆ ಕಾದಾಡಿ
ಜಯಿಸಿದರೆ, ನೀವೊಬ್ಬ 'ವೀರ'ರಾಗುವಿರಿ - ಒಬ್ಬ
ಯೋಧನಂತೆ. ಆದರೆ, ನಿಮ್ಮೊಡನೆಯೇ
ಕಾದಾಡುವುದಕ್ಕೆ ಹೆಚ್ಚಿನ ಧೈರ್ಯ ಬೇಕಾಗುತ್ತದೆ.
ನಿಮ್ಮ ಮೇಲೆಯೇ ನಿಮಗೆ ಬೇಸರ ಬರುವವರೆಗೂ
ನೀವು ಕಾದಾಡುವುದಿಲ್ಲ. ನಿಮಗೆ ಬೇಸರ ಬಂದಾಗ
ಮಾತ್ರವೇ ಕಾದಾಡಲು ಆವಶ್ಯಕವೆಂದು
ಒಪ್ಪಿಕೊಳ್ಳುವಿರಿ.
ಒಮ್ಮೆ ಸಮಗ್ರತೆಯನ್ನು ಹೊಂದಿದರೆ, ನೀವು ನಿಜವಾಗಿಯೂ ಯಾರೆಂಬುದನ್ನು ಮೊಟ್ಟ ಮೊದಲ ಬಾರಿಗೆ ತಿಳಿದುಕೊಳ್ಳುವಿರಿ. ಆಗ ಮುಖವಾಡಗಳೆಲ್ಲವೂ ಕಳಚಿಹೋಗುತ್ತವೆ. ಸಂಬಂಧಗಳಲ್ಲಿ ನಿಮ್ಮನ್ನು ನೀವು ಬಹಿರಂಗಪಡಿಸಿಕೊಳ್ಳಲು ಸಿದ್ಧವಾಗುವಿರಿ; ಹೆಚ್ಚು ಅಧಿಕೃತರಾಗುವಿರಿ. ನೀವು ಏನೆಲ್ಲವನ್ನೂ ಕಳೆದುಕೊಳ್ಳುತ್ತಿದ್ದಿರೋ, ಅದು ನಿಮ್ಮಿಂದಲೇ ಎಂದು ಆ ಕೂಡಲೇ ಅರಿಯುವಿರಿ. ಹೆಚ್ಚು ಅಧಿಕೃತರಾಗಿರುವುದೇ ಸನ್ಯಾಸ. ನಾನು ಅಧಿಕೃತ ಎಂದಾಗ, ಅದರರ್ಥ, ನಿಮ್ಮ ವ್ಯಕ್ತಿತ್ವಕ್ಕಿಂತಲೂ ನಿಮ್ಮ ವೈಯಕ್ತಿಕತೆಯನ್ನು ಪಸರಿಸಲಾರಂಭಿಸುವಿರಿ ಎಂದು. ತುಣುಕುಗಳಿಂದ ಕೂಡಿ ನೀವು ಒಬ್ಬ ವ್ಯಕ್ತಿ ಎನಿಸಿಕೊಳ್ಳುವಿರಿ. ಸಮಗ್ರತೆಯಿಂದ ನೀವು ಅನನ್ಯ ಜೀವಿಯಾಗಿ ವ್ಯಕ್ತಗೊಳ್ಳುವಿರಿ. ಅನನ್ಯ
ಜೀವಿಯಾಗಿರುವುದೆಂದರೆ ನಿಮ್ಮನ್ನು ನೀವು ನಿಮ್ಮ ಅಧಿಕೃತ ದೃಷ್ಟಿಯಲ್ಲಿಯೇ ನೋಡುವುದು. ವ್ಯಕ್ತಿತ್ವವು ಸಮಾಜದ ದೃಷ್ಟಿಯಲ್ಲಿ ನಿರ್ಮಿಸಿಕೊಂಡ ಒಂದು ಆಕಾರವಷ್ಟೆ. ನಿಮ್ಮ ವ್ಯಕ್ತಿತ್ವವನ್ನು ನೀವು ಕಾಪಾಡಿಕೊಳ್ಳಬೇಕಾಗಿಲ್ಲದೆ, ನೀವು ಸ್ವತಂತ್ರವಾಗಿರಬಹುದಾದ, ಕೇವಲ ತಿಳಿವಳಿಕೆಯೇ ಪರಿವರ್ತನೆಗೆ ಕಾರಣವಾಗುವ ಅವಕಾಶವನ್ನು ನಿಮ್ಮಲ್ಲಿ ಸೃಜಿಸುವುದೇ ಗುರುವಿನ ಕೆಲಸ.
ಬುದ್ಧನು, 'ಸನ್ಯಾಸವನ್ನು ಸ್ವೀಕರಿಸಿದ ನಂತರವೇ ನಿಮ್ಮ ಜೀವನವನ್ನು ಗಣನೆಗೆ ತೆಗೆದುಕೊಳ್ಳಿರಿ' ಎಂದು ತನ್ನ ಅನುಯಾಯಿಗಳಿಗೆ ಹೇಳುತ್ತಿದ್ದನು.
ಯಾರೋ ಒಬ್ಬರು ನನ್ನನ್ನು ಕೇಳಿದರು, 'ಬ್ರಹ್ಮಚರ್ಯ ಅಥವಾ ಸನ್ಯಾಸದ ಪ್ರತಿಜ್ಞೆಯನ್ನು ತೆಗೆದುಕೊಂಡರೆ, ಅದು ಜ್ಞಾನೋದಯಕ್ಕೆ ಕೊಂಡೊಯ್ಯುವುದೇ?' ಎಂದು. ಪ್ರತಿಜ್ಞೆಯನ್ನು ತೆಗೆದುಕೊಳ್ಳುವುದು ಜ್ಞಾನೋದಯಕ್ಕೆ ಒಯ್ಯುವುದೋ ಇಲ್ಲವೋ ಎಂಬುದು ಪ್ರಮುಖವಲ್ಲ. ಆದರೆ, ಒಂದು ತಿಂಗಳ ಕಾಲ ಪ್ರತಿಜ್ಞೆಯನ್ನು ಕಟ್ಟುನಿಟ್ಟಾಗಿ ಹಾಗೂ ಯಶಸ್ವಿಯಾಗಿ ಅನುಸರಿಸಿದಲ್ಲಿ ನಿಮ್ಮ ಮೇಲೆ ನೀವಿಟ್ಟಿರುವ ಗೌರವವು ಅಗಾಧವಾಗಿ ವೃದ್ಧಿಸುತ್ತದೆ. ಅಷ್ಟು ಸಾಕು! ಅದನ್ನು 'ಅಸಾಧ್ಯ ಸಾಧನೆ' ಎನ್ನುತ್ತಾರೆ. ಎಂದರೆ, ಅಸಾಧ್ಯವೆಂದು ತೋರುವ ಕಾರ್ಯವನ್ನು ಯಶಸ್ವಿಯಾಗಿ ಸಾಧಿಸುವುದು. ನಿಮ್ಮ ಮನಸ್ಸು ಏನನ್ನು ಮಾಡಲಾಗುವುದಿಲ್ಲ ಎನ್ನುತ್ತದೆಯೋ ಅದನ್ನು ನೀವು ಮಾಡುವಂತೆ ಮಾಡುವುದು. ಬೆಂಕಿಯ ಮೇಲೆ ನಡೆಯುವಂತಹ ತಂತ್ರಗಳು ಈ ವರ್ಗಕ್ಕೆ ಸೇರಿದುವು. ಬೆಂಕಿಯ ಹಾಸಿನ ಮೇಲೆ ನಡೆಯಲಾಗುವುದಿಲ್ಲವೆಂದು ಸಾಮಾನ್ಯವಾಗಿ ಮನಸ್ಸು ಹೇಳುತ್ತದೆ. ಒಂದು ಸಲ ನಡೆದರೆ, ನಿಮಗೆ ನಿಮ್ಮ ಮೇಲಿನ ಗೌರವ ಹೆಚ್ಚಾಗುತ್ತದೆ! ಆಗ ನೀವು ಸಮಗ್ರತೆಯತ್ತ ಸಾಗುವಿರಿ.
ಸಮಗ್ರತೆಯನ್ನು ಎರಡು ರೀತಿಯಲ್ಲಿ
ಅರ್ಥಮಾಡಿಕೊಳ್ಳಬೇಕು. ಮೊದಲನೆಯದು,
ಮನಸ್ಸಿನ ಕಾದಾಡುತ್ತಿರುವ ಭಾಗಗಳನ್ನು
ಸಮಗ್ರಗೊಳಿಸುವುದು. ನೋಡಿರಿ, ಮನಸ್ಸಿನ
ಹೋಯ್ದಾಟದಲ್ಲಿ ಜೀವನವೇ ವ್ಯರ್ಥವಾಗುತ್ತದೆ.
ಯಾವುದಾದರೂ ಒಂದು ಮಾರ್ಗವನ್ನನುಸರಿಸಿದರೆ,
ಅದನ್ನು ಸಾಧಿಸುತ್ತೀರಿ. ಉದಾಹರಣೆಗೆ,
ಬೆಂಗಳೂರನ್ನು ತಲುಪಲು ಎರಡು ಮಾರ್ಗಗಳಿವೆ
ಎಂದುಕೊಳ್ಳೋಣ. ಒಂದು ಮಾರ್ಗವು 30
ಕಿಲೋಮೀಟರ್ ಆದರೆ, ಮತ್ತೊಂದು ಮಾರ್ಗ
30,000 ಕಿಲೋಮೀಟರ್. ಇವೆರಡರಲ್ಲಿ
ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ತಿಳಿಯದೆ
ಹೋಯ್ದಾಡುತ್ತಿರುವಿರಿ. ತಿಳಿಯಿರಿ: ಯಾವುದಾದರೂ
ಒಂದು ಮಾರ್ಗವನ್ನು ಆಯ್ದು ಮುಂದುವರೆದರೆ
ಬೆಂಗಳೂರನ್ನು ತಲುಪುತ್ತೀರಿ.
ಆದರೆ, ನೀವು ಹೋಯ್ದಾಡುತ್ತಲೇ ಇದ್ದರೆ,
ಎಂದರೆ ಒಂದರ್ಧಗಂಟೆ ಒಂದು ಮಾರ್ಗದಲ್ಲಿ
ಹೋಗಿ, ನಂತರ ಮನಸ್ಸನ್ನು ಬದಲಾಯಿಸಿಕೊಂಡು
ಮುಂದಿನ ಅರ್ಧಗಂಟೆ ಕಾಲ ಇನ್ನೊಂದು
ಮಾರ್ಗವಾಗಿ ಹೋದರೆ, ಏನಾಗುತ್ತದೆ? ನೀವು
ಬೆಂಗಳೂರನ್ನು ತಲುಪುವುದೇ ಇಲ್ಲ! ಕನಿಷ್ಠ ಪಕ್ಷ
ನೀವು ನಿರ್ಧರಿಸಿಕೊಂಡು 30,000 ಕಿಲೋಮೀಟರ್
ದಾರಿಯನ್ನೇ ತೆಗೆದುಕೊಂಡರೂ, ಒಂದು
ವರ್ಷಕ್ಕಾದರೂ ಬೆಂಗಳೂರನ್ನು ತಲುಪುವಿರಿ! ಆದರೆ
ನೀವು ಈ ಎರಡರ ನಡುವೆ ಹೊಯ್ದಾಡುತ್ತಲೇ
ಇದ್ದರೆ, 30 ವರ್ಷಗಳಾದರೂ ಬೆಂಗಳೂರನ್ನು
ತಲುಪುವುದೇ ಇಲ್ಲ.
ಆಯ್ಕೆ ಮಾಡಿದ ಮಾರ್ಗವು ತಪ್ಪೇ ಆಗಿದ್ದರೂ, ಸಮಗ್ರತೆಯಿಂದ ಹೊರಟವನು ಸರಿಯಾದ ಮಾರ್ಗಕ್ಕೆ ತಾನಾಗಿಯೇ ಬರುತ್ತಾನೆ. ಆತನು ಏನನ್ನು ಸಾಧಿಸಬೇಕೋ ಅದನ್ನು ಸಾಧಿಸುತ್ತಾನೆ. ಸ್ಪಷ್ಟವಾಗಿ ತಿಳಿಯಿರಿ: ಭೂಗ್ರಹದ ಮೇಲೆ ಎರಡೇ ವಿಧವಾದ ಜನರಿರುವುದು – ಸಮಗ್ರತೆಯಿಂದ ಜೀವಿಸುವವರು ಮತ್ತು ಸಮಗ್ರತೆ ಇಲ್ಲದೆ ಜೀವಿಸುವವರು, ಅಷ್ಟೇ! ಒಬ್ಬ ವ್ಯಕ್ತಿಯನ್ನು ಅಳೆಯುವ ಮಾಪನವು ಆತನು ಯಾವ ಮಾರ್ಗದಲ್ಲಿ ಹೋದನು ಎಂಬುದಲ್ಲ, ಆದರೆ ಆತನು ಪ್ರಾಮಾಣಿಕವಾಗಿ ಜೀವಿಸಿದನೋ ಇಲ್ಲವೋ ಎಂಬುದು.
ಏನೇ ಬಂದರೂ, ನಿಮ್ಮ ನಂಬಿಕೆಯಂತೆಯೇ ಜೀವಿಸುವ ಶಕ್ತಿಯೇ ಸಮಗ್ರತೆ.
ಎರಡನೆಯದು, ಯಾವ ಹೊರಗಿನ ಪ್ರಭಾವದಿಂದಲೂ ಸಾರಗುಂದಿತರಾಗದೇ ಇರುವುದೂ ಸಮಗ್ರತೆಯೇ ಎಂಬುದು. ಅದು ಒಳಗಿನ ಗೊಂದಲಗಳಿಂದಾಗಲೀ, ಬಾಹ್ಯಪ್ರಭಾವದಿಂದಾಗಲೀ ನಮ್ಮ ಸಮಗ್ರತೆಯನ್ನು ಬದಲಾಯಿಸದೇ ಇರುವ ಅಥವಾ ಸಾರಗುಂತಿತರಾಗದೇ ಇರುವ ಸಾಮರ್ಥ್ಯ. ಸಮಗ್ರತೆಯಿಂದ ಬಾಳಿದವನು ರೈಲು ನಿಲ್ದಾಣದ ಪ್ಲಾಟ್ಫಾರಂ ಮೇಲೆ ಪ್ರಾಣಬಿಟ್ಟರೂ ತಾನು ಪೂರ್ಣವಾಗಿ ಬಾಳಿದೆನೆಂಬ ನೆಮ್ಮದಿಯಿಂದ ಸಾಯುತ್ತಾನೆ. ಸಮಗ್ರತೆ ಇಲ್ಲದೆ ಜೀವಿಸುವ ವ್ಯಕ್ತಿಯು ಅತ್ಯುತ್ತಮವಾದ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟರೂ ಅತೃಪ್ತಿಯಿಂದಲೇ ಸಾಯುತ್ತಾನೆ. ಒಬ್ಬ ವ್ಯಕ್ತಿಯ ಜೀವನಮಟ್ಟವನ್ನು ಅಳೆಯುವ ಅಳತೆಗೋಲೆಂದರೆ, ಆತನ ಕಲ್ಪನೆಯಲ್ಲಿ ಜೀವನವೆಂದರೆ ಏನೆಂದಿತ್ತೋ ಅದರಂತೆ ಎಷ್ಟರಮಟ್ಟಿಗೆ ಜೀವಿಸಿದನೆಂಬುದು. ಉದಾಹರಣೆಗೆ, ಆತನು ನಾಸ್ತಿಕನಾಗಿದ್ದರೆ, ಆತನು ಉತ್ಕಟವಾದ ನಾಸ್ತಿಕನಾಗಿ ಬಾಳಿ, ಉತ್ಕಟವಾದ ನಾಸ್ತಿಕನಾಗಿ ಸತ್ತರೆ ಏನೂ ತಪ್ಪಿಲ್ಲ. ಆತನಿಗೆ ಸತ್ಯ ಲಭಿಸುತ್ತದೆ! ಆಳವಾಗಿ ಹೋಗಿ ಅನ್ವೇಷಿಸಿದಾಗ, ಆತನಲ್ಲಿ ಆ ಉತ್ಕಟತೆಯೇ ಸತ್ಯವನ್ನು ಆತನಿಗೆ ತೋರಿಸುತ್ತದೆ!
ಮನಸ್ಸನ್ನು ಸಮಗ್ರಗೊಳಿಸಿಕೊಳ್ಳುವುದೇ
ಜೀವನದ ಸಾರ. ನಿಮಗೆ ಸರಿ ಎನಿಸಿದುದನ್ನೇ
ಯಾವಾಗಲೂ ಮಾತನಾಡುತ್ತೇನೆಂದೂ,
ಮಾಡುತ್ತೇನೆಂದೂ ನಿರ್ಧರಿಸಿರಿ. ಆಗ ಆಂತರಿಕ
ಹಾಗೂ ಬಾಹ್ಯ ಪ್ರಪಂಚದಲ್ಲಿ ಅಗಾಧವಾದ ಸ್ಪಷ್ಟತೆ
ಮತ್ತು ನಿಶ್ಚಿತಾಭಿಪ್ರಾಯವನ್ನು ಹೊಂದುವಿರಿ.
ಸ್ವಾಮಿ ವಿವೇಕಾನಂದರು, ತಮ್ಮ ಗುರುಗಳಾದ ರಾಮಕೃಷ್ಣ ಪರಮಹಂಸರು ಸಂಸ್ಥೆಯ ಜವಾಬ್ದಾರಿಯನ್ನೆಲ್ಲವನ್ನೂ ತಮಗೆ ಕೊಟ್ಟು, ದೇಹಬಿಟ್ಟದ್ದನ್ನು ತಮ್ಮ ಜೀವನದಲ್ಲಿ ಸ್ಮರಿಸಿಕೊಳ್ಳುತ್ತಾರೆ. ಅದೇ ವೇಳೆಗೆ ಸ್ವಾಮಿ ವಿವೇಕಾನಂದರ ತಂದೆಯವರು ತಮ್ಮ ಕುಟುಂಬವನ್ನು ದಟ್ಟ ದಾರಿದ್ರ್ಯದಲ್ಲಿ ಬಿಟ್ಟು ಮರಣ ಹೊಂದಿದ್ದರು. ಆ ಕುಟುಂಬಕ್ಕೆ ಸ್ವಾಮಿ ವಿವೇಕಾನಂದರೊಬ್ಬರೇ ದಿಕ್ಕಾಗಿದ್ದರು. ಕುಟುಂಬವನ್ನು ಸಲಹಬೇಕೋ, ಪ್ರಪಂಚವನ್ನು ಸಲಹಬೇಕೋ ಎಂಬ ಇಕ್ಕಟ್ಟಿಗೆ ಅವರು ಸಿಲುಕಿದರು. ಅವರು ಹೇಳುತ್ತಿದ್ದ ಉದಾತ್ತ ಧ್ಯೇಯವೇ ಯಾರಿಗೂ ತಿಳಿಯಲಿಲ್ಲ. 'ಒಬ್ಬ ಹುಡುಗನ ಕಲ್ಪನೆಗಳಿಗೆ ಯಾರು ತಾನೇ ಅನುಕಂಪ
> ಸಮಗ್ರತೆಯ
> ಶಕ್ತಿಯಿಂದ
> ಸಂಪೂರ್ಣ
> ಸ್ವಾತಂತ್ರ್ಯ ಹಾಗೂ
> ಆನಂದ
> ಉಂಟಾಗುತ್ತದೆ.
ತೋರಿಸುತ್ತಾರೆ?'
ಎಂದು ಅವರು
ಸೊಗಸಾಗಿ ಹೇಳು-
ತ್ತಾರೆ. ಎಷ್ಟೇ ಆದರೂ
ಆಗ ಅವರು ಒಬ್ಬ ಚಿಕ್ಕ
ಹುಡುಗರಾಗಿದ್ದರಷ್ಟೇ!
ಆ ಕೆಲವು ದಿನಗಳನ್ನು, 'ಕಲ್ಪಿಸಿಕೊಳ್ಳಲಾರದಂತಹ
ನರಕ' ಎಂದು ವಿವೇಕಾನಂದರು ವಿವರಿಸುತ್ತಾರೆ.
ಅವರ ಗುರುಗಳು ಕಲಿಸಿದಂತೆ, ತಾವು ನಂಬಿದ್ದ
ಜೀವನವನ್ನು ಬಾಳುವ ಸಮಗ್ರತೆಯನ್ನು ಮಾತ್ರ
ಹೊಂದಿದ್ದ, ಹಣವಿಲ್ಲದ ಒಂದು ಸಣ್ಣ ಹುಡುಗರ
ಗುಂಪಿನೊಂದಿಗೆ ಅವರಿದ್ದರು. ಹತ್ತು ವರ್ಷಗಳ
ನಂತರ ಅವರು ಹೇಳುತ್ತಾರೆ, 'ಹತ್ತು ವರ್ಷಗಳ
ಹಿಂದೆ, ಗುರುಗಳ ಜಯಂತಿಯನ್ನಾಚರಿಸಲು ಒಂದು
ನೂರು ಜನರನ್ನು ಕಲೆಹಾಕಲು ಆಗುತ್ತಿರಲಿಲ್ಲ.
ಇಂದು ಐವತ್ತು ಸಾವಿರ ಜನರಿದ್ದಾರೆ!' ಎಂದು.
ಸನ್ಯಾಸವೆಂದರೆ ಪ್ರಜ್ಞಾಹೀನತೆಯು ಪ್ರಜ್ಞೆಗೆ
ಅಡ್ಡಿಬರದಂತೆ ನೋಡಿಕೊಳ್ಳುವ ದೃಢನಿರ್ಧಾರವನ್ನು
ಮಾಡಿಕೊಳ್ಳುವುದು ಮತ್ತು ಗುರುಗಳ ಮೇಲೆಯೂ
ಅವರ ನುಡಿಗಳ ಮೇಲೆಯೂ ಪ್ರಜ್ಞೆಯನ್ನು
ಸ್ಥಿರಗೊಳಿಸುವುದು.
ಆ ಪರಿಸ್ಥಿತಿಯಲ್ಲಿ ತಮ್ಮ ಕುಟುಂಬವನ್ನು
ತೊರೆಯಲು ಹೇಗೆ ಸಾಧ್ಯವಾಯಿತೆಂದು ಸ್ವಾಮಿ
ವಿವೇಕಾನಂದರನ್ನು ಪ್ರಶ್ನಿಸಲಾಯಿತು. ಅವರು
ಸುಂದರವಾಗಿ ಹೀಗೆ ಉತ್ತರಿಸಿದರು. 'ರಾಮಕೃಷ್ಣ
ಪರಮಹಂಸರ ಬೋಧನೆಗಳು ಭಾರತಕ್ಕೂ ಅನೇಕ
ವಿದೇಶೀ ಜನಾಂಗಗಳಿಗೂ, ಸುಧಾರಣೆಯನ್ನು
ತರಬಲ್ಲವು ಎಂಬುದರಲ್ಲಿ ನನಗೆ ನಂಬಿಕೆ ಇತ್ತು.
ಆ ನಂಬಿಕೆಯಿಂದ ಒಂದು ತಿಳಿವಳಿಕೆ ಮೂಡಿತು:
ಅಂತಹ ಮಹದಾಲೋಚನೆಗಳು ಜಗತ್ತಿನಿಂದ
ಅಸ್ತಂಗತವಾಗುವ ಬದಲು, ಕೆಲವರು
ಕಷ್ಟಪಡುವುದೇ ಮೇಲು ಎಂದು. ಇಷ್ಟರ ಮೇಲೆ
ಒಬ್ಬ ತಾಯಿಯೂ ಇಬ್ಬರು ಸೋದರರೂ
ಪ್ರಾಣನೀಗಿದರೂ ಏನಂತೆ? ಅದೊಂದು ತ್ಯಾಗ. ಅದು
ನಡೆಯಲಿ. ತ್ಯಾಗ ಮಾಡದೆಯೇ ಯಾವ
ಮಹತ್ಕಾರ್ಯವನ್ನೂ ಮಾಡಲಾಗುವುದಿಲ್ಲ.
ಹೃದಯವನ್ನು ಕಿತ್ತು ರಕ್ತತೊಟ್ಟಿಕ್ಕುತ್ತಿರುವ
ಹೃದಯವನ್ನು ಪೂಜಾಪೀಠದ ಮೇಲಿಡಬೇಕು. ಆಗ,
ಮಹತ್ಕಾರ್ಯಗಳು ನಡೆಯುತ್ತವೆ!'
ಅವರ ಸಮಗ್ರತೆ ಇಂತಹುದಾಗಿತ್ತು.
ಅಷ್ಟೇ ಅಲ್ಲ, ಸ್ವಾಮಿ ವಿವೇಕಾನಂದರು
ಕುಟುಂಬವನ್ನು ತೊರೆದರು ಎಂದು ಹೇಳುವವರಿಗೆ
ನಿಜಾಂಶ ತಿಳಿಯದು. ವಾಸ್ತವದಲ್ಲಿ ಅವರು ಅತ್ಯಂತ
ಅವಶ್ಯಕವಾದುವುಗಳನ್ನು ಮಾತ್ರ ಅವರಿಗೆ
ಒದಗಿಸುತ್ತಾ, ತಮ್ಮ ಕರ್ತವ್ಯವನ್ನು
ನೆರವೇರಿಸುತ್ತಿದ್ದರು. ಅವರ ಕುಟುಂಬವು
ಎದುರಿಸುತ್ತಿದ್ದ ಕಾನೂನಿನ ವಿವಾದಾಂಶಗಳಿಗಾಗಿ
ಕೋರ್ಟಿಗೆ ಸಹ ಹೋಗುತ್ತಿದ್ದರು.
ಒಂದು ಸಣ್ಣ ಕಥೆ:
ಜಪಾನಿನಲ್ಲಿ ಅಂತರ್ಯುದ್ಧ ನಡೆಯುತ್ತಿದ್ದಾಗ,
ಆಕ್ರಮಣಕ್ಕೆ ಬಂದಿದ್ದ ಸೈನ್ಯವು ಒಂದು ಊರನ್ನು
ಪ್ರವೇಶಿಸಿ, ಊರನ್ನೆಲ್ಲಾ ತನ್ನ ಅಧೀನಕ್ಕೆ
ತೆಗೆದುಕೊಂಡಿತು. ಒಂದು ನಿರ್ದಿಷ್ಟವಾದ
ಹಳ್ಳಿಯಲ್ಲಿ ಒಬ್ಬ ಝೆನ್ ಗುರುವಿನ ಹೊರತಾಗಿ
ಉಳಿದೆಲ್ಲರೂ ಸೈನ್ಯ ಬರುವ ಮೊದಲೇ
ಓಡಿಹೋಗಿದ್ದರು.
ಈ ಗುರುಗಳ ಬಗ್ಗೆ ಕುತೂಹಲಗೊಂಡ
ಸೇನಾಧಿಪತಿಯು, ಈತನು ಎಂತಹ
ಮನುಷ್ಯನೆಂಬುದನ್ನು ನೋಡೋಣವೆಂದು ಆತನಿದ್ದ
ದೇವಾಲಯಕ್ಕೆ ಹೋದನು. ಗುರುವು
ಸೇನಾಧಿಪತಿಯನ್ನು ಲೆಕ್ಕಿಸಲಿಲ್ಲ. ಸೇನಾಧಿಪತಿಗೆ
ತನಗೆ ಅಭ್ಯಾಸವಾಗಿದ್ದ ರೀತಿಯಲ್ಲಿ ಆತನಿಗೆ
ಮರ್ಯಾದೆ ಮಾಡದೇ ಇದ್ದುದಕ್ಕಾಗಿ ಬಹಳ ಕೋಪ
ಬಂದಿತು.
ಕತ್ತಿಯನ್ನು ಝಳಪಿಸುತ್ತಾ 'ಎಲವೋ ಮೂರ್ಖ,
ಕಣ್ಣು ಮಿಟುಕಿಸದೆ ನಿನ್ನನ್ನು ಕೊಲ್ಲಬಲ್ಲವವನು
ಎದುರಲ್ಲಿ ನಿಂತಿರುವೆನೆಂಬ ಪರಿಜ್ಞಾನವಿಲ್ಲವೇ
ನಿನಗೆ?' ಎಂದು ಅಬ್ಬರಿಸಿದನು.
ಗುರುವು, 'ಕಣ್ಣು ಮಿಟುಕಿಸದೆಯೇ ಕೊಲ್ಲಿಸಿಕೊಳ್ಳಬಲ್ಲವನ ಎದುರಿಗೆ ನೀನು ನಿಂತಿರುವೆ ಎಂಬುದನ್ನು ಅರಿಯೆಯಾ?' ಎಂದು ಶಾಂತವಾಗಿ ಕೇಳಿದನು.
ಸಮಗ್ರತೆಯ ಶಕ್ತಿಯಿಂದ ಸಂಪೂರ್ಣ
ಸ್ವಾತಂತ್ರ್ಯ ಹಾಗೂ ಆನಂದ ಉಂಟಾಗುತ್ತದೆ. ಆಗ
ಆಂತರಿಕ ಹಾಗೂ ಬಾಹ್ಯಪ್ರಪಂಚಗಳಲ್ಲಿ
ಭಯವೆಂಬುದೇ ಇರುವುದಿಲ್ಲ.