ವಿಶ್ವಶಾಂತಿಯು ನಿಮ್ಮಿಂದಲೇ ಪ್ರಾರಂಭವಾಗುತ್ತದೆ
This text was machine-transcribed from the printed book and may contain errors. Select the words and choose “Report a mistake”.
ಬ್ರಹ್ಮಾಂಡದ ಯೋಜನೆಯಲ್ಲಿ ನಮ್ಮ ಪಾತ್ರವನ್ನು ಅರಿತಾಗ, ನಮ್ಮ ಸುತ್ತಮುತ್ತಲಿರುವ ಎಲ್ಲದರಿಂದ ನಾವು ಬೇರೆ ಎನ್ನುವ ಭಾವನೆ ಇರುವುದೇ ಇಲ್ಲ. ನಾವು ಬೇರೆ ಎನಿಸುವುದು ನಮ್ಮ ಪಾತ್ರದ ಬಗ್ಗೆ ಪ್ರಜ್ಞಾಪೂರ್ವಕವಾಗಿ ಇಲ್ಲದಿದ್ದಾಗ ಹಾಗೂ ನಮಗೆ ಅರಿವಿಲ್ಲದಿದ್ದಾಗ ಮಾತ್ರ.
ಭೂಗ್ರಹದ ಮೇಲೆ ಜ್ಞಾನಿಗಳ ಅಥವಾ
ಜೀವನ್ಮುಕ್ತರ ಸಮೂಹವನ್ನು ರಚಿಸಬೇಕಾದ ಕಾಲ
ಕೂಡಿಬಂದಿದೆ. ಹೆಚ್ಚು ಹೆಚ್ಚು ಜ್ಞಾನಿಗಳನ್ನೂ,
ಜಾಗೃತಗೊಂಡವರನ್ನೂ ಸೃಷ್ಟಿಸುವುದರಿಂದ ಮಾತ್ರ
ವೈಯಕ್ತಿಕ ನಕಾರಾತ್ಮಕತೆಯು ಸಾಮೂಹಿಕ
ಪರಿಣಾಮವನ್ನು ನಾಶಪಡಿಸಲು ಸಾಧ್ಯ. ಪ್ರಪಂಚದ
ಎಲ್ಲೆಡೆಯ ಕೇಡುಗಳೂ ಅರಿವಿಲ್ಲದವರಿಂದಲೇ
ಹುಟ್ಟಿಕೊಂಡಿರುವುದು. ಭೂಮಂಡಲ ಶಾಖದ
ಏರಿಕೆ, ಹೆಚ್.ಐ.ವಿ., ಧಾರ್ಮಿಕ ಭಯೋತ್ಪಾದನೆ,
ಮತಾಂಧತೆ, ಅಣ್ವಸ್ತ್ರಗಳ ನಿರ್ಮಾಣಗಳೆಲ್ಲವೂ ಈ
ನಕಾರಾತ್ಮಕತೆಯಿಂದಲೇ ನಡೆಯುತ್ತಿರುವುದು.
ಇಂದು ಅದೆಷ್ಟು ಅಪಾಯಗಳನ್ನೆದುರಿಸುತ್ತಿದ್ದೇವೆ
ಎಂದರೆ, ಶಾಂತಿಯುತವಾದ, ಆನಂದವಾದ,
ಸಂತೋಷವಾದ ಮತ್ತು ಜ್ಞಾನಭರಿತವಾದ
ಜೀವನ್ಮುಕ್ತ ಸಮಾಜವನ್ನು ನಿರ್ಮಿಸದೇ ಹೋದರೆ,
ಈ ಸುಂದರವಾದ ಭೂಗ್ರಹವನ್ನುಳಿಸಿಕೊಳ್ಳುವುದು
ನಮಗೆ ಸಾಧ್ಯವಾಗುವುದಿಲ್ಲ.
ಶಾಂತವಾದ, ಸಂತೋಷವಾದ,
ಆನಂದಮಯವಾದ, ಜ್ಞಾನಭರಿತವಾದ ಜೀವನ್ಮುಕ್ತ
ಸಮಾಜವೊಂದನ್ನು ನಿರ್ಮಿಸುವುದೇ ನನ್ನ
ಜೀವಿತೋದ್ದೇಶ.
ವಿಶ್ವಶಾಂತಿ - ವೈಯಕ್ತಿಕ ಆನಂದದ ಉಪಫಲ
ಸ್ವಯಂ ವಿರೋಧಾತ್ಮಕ ಆಲೋಚನೆಗಳು
ವಾಸ್ತವವಾಗಿ, ನಮ್ಮಲ್ಲಿ ಬಹಳಷ್ಟು ಜನರು
ನಮ್ಮ ನಮ್ಮಲ್ಲಿಯೇ ಹೊಡೆದಾಡಿಕೊಳ್ಳುವುದರಲ್ಲಿ
ಸಿಕ್ಕಿಹೋಗಿದ್ದೇವೆ. ಸ್ವಯಂ ವಿರೋಧಾತ್ಮಕವಾದ
ಆಲೋಚನೆಗಳ ಹಾಗೂ ಆಸೆಗಳ ಜಾಲದಲ್ಲಿ
ಸಿಕ್ಕಿಬಿದ್ದಿದ್ದೇವೆ. ನಮ್ಮ ಆಲೋಚನೆಗಳೂ,
ಶಾಂತವಾದ,
ಸಂತೋಷವಾದ,
ಆನಂದಮಯವಾದ,
ಜ್ಞಾನಭರಿತವಾದ
ಜೀವನ್ಮುಕ್ತ
ಸಮಾಜವೊಂದನ್ನು
ನಿರ್ಮಿಸುವುದೇ
ನನ್ನ ಧ್ವೇಯ.
ನುಡಿಗಳೂ ಎಷ್ಟೇ
ಪ್ರಬಲವಾಗಿದ್ದರೂ
ನಾವದನ್ನು ಅಷ್ಟೇ
ಕೇವಲವಾಗಿ
ಉಪಯೋಗಿಸಿಬಿಡುತ್ತೇವೆ.
ಉದಾಹರಣೆಗೆ,
ನಿಮಗೆ ತಲೆನೋವು
ಬಂದಿದೆ ಎಂದಿಟ್ಟು-
ಕೊಳ್ಳಿರಿ. ಏನು ಮಾಡುತ್ತೀರಿ? ‘ಈ ತಲೆನೋವು
ಹೊರಟುಹೋದರೆ ಎಷ್ಟು ಚೆನ್ನ!’
ಎಂದುಕೊಳ್ಳುತ್ತೀರಿ. ಈ ಪದಗಳನ್ನು
ಉಚ್ಚರಿಸುವಾಗ, ‘ಹೊರಟುಹೋದರೆ’ ಎಂಬುದಕ್ಕೆ
ಎಷ್ಟು ಪ್ರಾಮುಖ್ಯತೆ ಕೊಡುತ್ತೀರೋ, ‘ತಲೆನೋವು’
ಎಂಬುದಕ್ಕೂ ಅಷ್ಟೇ ಪ್ರಾಮುಖ್ಯತೆ ಕೊಡುತ್ತೀರಿ.
ಇದನ್ನೇ ನಾನು ಸ್ವಯಂವಿರೋಧಾತ್ಮಕ ಎನ್ನುವುದು.
ನಿಮ್ಮ ಆಲೋಚನೆಯಿಂದಲೇ ನಿಮ್ಮ
ಮೂಲಭೂತವಾದ ಆಸೆಯನ್ನು ವಿರೋಧಿಸುತ್ತೀರಿ.
ನಿಮ್ಮ ಸಕಾರಾತ್ಮಕ ಉದ್ದೇಶವೂ ಸಹ ನಿಮ್ಮ
ಆಲೋಚನೆಗಳ ಮತ್ತು ನುಡಿಗಳ ಘರ್ಷಣೆಯಲ್ಲಿ
ಸಿಲುಕಿದೆ. ನಂತರ ನೀವು ಕೇಳುತ್ತೀರಿ, ‘ತಲೆನೋವು
ಹೋಗಿಸಿಕೊಳ್ಳುವುದು ಹೇಗೆ?’ ಎಂದು. ಕೇವಲ
‘ನನಗೆ ಗುಣವಾಗಲಿ’ ಎಂದುಕೊಳ್ಳಿರಿ, ಅಷ್ಟೇ.
ನಾವು ಮತ್ತೆಮತ್ತೆ ಗುಣಕಾರಕ ಚಿಂತನೆಗಳನ್ನು ನಮ್ಮ ವ್ಯವಸ್ಥೆಗೆ ಅಳವಡಿಸಿಕೊಂಡಾಗ, ಸಕಾರಾತ್ಮಕ ನುಡಿಗಳಿಗೂ, ಆಲೋಚನೆಗಳಿಗೂ, ಚೈತನ್ಯವನ್ನು ನೀಡುತ್ತೇವೆ. ಅವು ನಮ್ಮ ಸ್ನಾಯುಗಳಲ್ಲಿ ನೆನಪಾಗಿ ಉಳಿಯುತ್ತವೆ. ಖಿನ್ನತೆ ಮತ್ತು ನಿರುತ್ಸಾಹಗೊಂಡಾಗ, ಅಂತರಾಳದಲ್ಲಿ ಈ ಗುಣಕಾರಕ ಆಲೋಚನೆಗಳು ತಾವಾಗಿಯೇ ಉದ್ಭವಿಸಿ ಖಿನ್ನತೆಯಿಂದ ನಮ್ಮನ್ನು ಹೊರತೆಗೆಯುತ್ತವೆ.
ವೈಯಕ್ತಿಕ ಶಾಂತಿಯು ತನ್ನ ಸ್ವಭಾವದಿಂದಲೇ ಪ್ರಪಂಚವನ್ನು ತಲುಪುತ್ತದೆ
ಭಗವಾನ್ ಬುದ್ಧನ ಜೀವನದಿಂದ ಆಯ್ದ ಒಂದು ಸುಂದರವಾದ ಕಥೆ:
ಬುದ್ಧನ ಸೋದರ ಸಂಬಂಧಿಯಾದ
ದೇವದತ್ತನೆಂಬುವನು ಬುದ್ಧನ ಭಿಕ್ಷುಗಳ
ಸಂಘವನ್ನು ಸೇರಿದನು. ಆತನು ಸ್ಥಾನಮಾನಗಳಿಗಾಗಿ
ಹಾತೊರೆಯುತ್ತಿದ್ದನು. ಆತನು ಭಿಕ್ಷುಗಳ ಸಂಘಕ್ಕೆ
ಒಡೆಯನಾಗಬೇಕೆಂದು ಬಯಸಿದ್ದನು. ಆದರೆ,
ಬುದ್ಧನು ತನ್ನ ಸಂಸ್ಥೆಗೆ ಅಂತಹ ಅಪಕ್ವನಾದ,
ಜ್ಞಾನೋದಯಕ್ಕಾಗಲ್ಲದೇ ಪದವಿಗಾಗಿ
ಹಂಬಲಿಸುವವನನ್ನು ಒಡೆಯನನ್ನಾಗಿ ಮಾಡಲು
ಒಪ್ಪುತ್ತಿರಲಿಲ್ಲ. ಅದರಿಂದಾಗಿ ದೇವದತ್ತನಿಗೆ
ಬುದ್ಧನ ಮೇಲೆ ಅಸೂಯೆಯೂ, ದ್ವೇಷವೂ ಹುಟ್ಟಿ,
ಬುದ್ಧನನ್ನೇ ಕೊಂದುಬಿಡುವ ಅನೇಕ ಪ್ರಯತ್ನಗಳನ್ನು
ಮಾಡಿದನು.
ಒಮ್ಮೆ ದೇವದತ್ತನು ಬುದ್ಧನು ಹೋಗುವ
ದಾರಿಯಲ್ಲಿ ಒಂದು ಕ್ರೂರವಾದ ಆನೆಯನ್ನು
ಬಿಡುವಂತೆ ಅರಮನೆಯ ಮಾವುಟಿಗರನ್ನು
ಪ್ರೇರೇಪಿಸಿದನು.
ಬುದ್ಧನು ಸಾಮಾನ್ಯವಾಗಿ ಹೋಗಿಬರುತ್ತಿದ್ದ
ಬೀದಿಗಳಲ್ಲಿ ಮದಿಸಿದ ಆನೆಯೊಂದನ್ನು
ಬಿಡಲಾಯಿತು. ಆ ಮತಿಗೆಟ್ಟ ಆನೆಯು
ರೋಷದಿಂದ ಓಡತೊಡಗಿತು. ಜನರು ಭೀತಿಯಿಂದ ದಿಕ್ಪಾಲಾಗಿ ಓಡಿಹೋಗತೊಡಗಿದರು.
ಆನೆಯು ಬುದ್ಧನೆಡೆಗೆ ಬಂದಿತು. ಇಂತಹ ವಿಪತ್ತಿನ
ಎದುರಿನಲ್ಲಿಯೂ ಬುದ್ಧನು ಅದೇ ಶಾಂತತೆ,
ಸಮಾಧಾನಗಳನ್ನು ಹೊರಸೂಸುತ್ತಾ ನಡೆಯುತ್ತಲೇ
ಇದ್ದನು. ಈ ಭಯಂಕರ ಆನೆಯ ಬೆದರಿಕೆಯಿಂದ
ಆತನ ಆನಂದ ಹಾಗೂ ಪ್ರಶಾಂತತೆಯು ಕಿಂಚಿತ್ತೂ
ವಿಚಲಿತವಾಗಲಿಲ್ಲ. ಆನೆಯು ಉನ್ಮತ್ತರೋಷದಿಂದ
ಬುದ್ಧನೆಡೆಗೆ ಧಾವಿಸಿತು. ಬುದ್ಧನ ಬಳಿ ಬಂದ
ಕೂಡಲೇ ಅದು ಸಂಪೂರ್ಣವಾಗಿ
ಸಮಾಧಾನಗೊಂಡಿತು. ಅದರ ರೋಷವು ಬುದ್ಧನ
ಜ್ಞಾನ ಸನ್ನಿಧಿಯಲ್ಲಿ ಸುಮ್ಮನೆ ಕರಗಿಹೋಯಿತು.
ಬುದ್ಧನು ಆನೆಯ ಹಣೆಯನ್ನು ನೇವರಿಸಿ,
ಮೃதுவாகಿ ತಟ್ಟಿದನು. ಆ ತಟ್ಟುವಿಕೆಯಿಂದ
ಶಾಂತವಾದ ಆನೆಯು ಮೊಣಕಾಲೂರಿ ಬುದ್ಧನಿಗೆ
ತಲೆಬಾಗಿತು.
ಇದೆಲ್ಲವನ್ನೂ ನೋಡುತ್ತಿದ್ದ ಜನರು ಬೆರಗಾದರು.
ಶಾಂತಿಯಿಂದೊಡಗೂಡಿದ ವ್ಯಕ್ತಿಯೊಬ್ಬನಿಂದ
ಪಸರಿಸುವ ಆನಂದದ ತರಂಗಗಳು ಜನರನ್ನು,
ಪ್ರಾಣಿಗಳನ್ನು, ಮರಗಳನ್ನು ಹಾಗೂ ಬಂಡೆಗಳನ್ನು,
ಸುತ್ತಮುತ್ತಲಿರುವ ಎಲ್ಲವನ್ನೂ ಸಹಜವಾಗಿ
ತಾನಾಗೀತಾನೇ ಪ್ರಭಾವಗೊಳಿಸುತ್ತದೆ.
ಇಡೀ ಪ್ರಪಂಚವನ್ನು ಆನಂದಮಯವಾಗಿಯೂ, ಸಂತೋಷಕರವಾಗಿಯೂ ಮಾಡಲು, ನೀವು ಮಾಡಬೇಕಾದುದೇನೂ ಇಲ್ಲ. ಕೇವಲ ನಿಮ್ಮ ಗಮನದ ಕೇಂದ್ರವನ್ನು ಬದಲಾಯಿಸಿಕೊಳ್ಳಿರಿ. ಒಂದು ಭಯಾನಕವಾದ ಚಲನಚಿತ್ರವನ್ನು ನೋಡುತ್ತಿರುವಾಗ, ನಿಮ್ಮ ಜಗತ್ತು ಭಯದಿಂದ ತುಂಬಿರುತ್ತದೆ. ಆದರೆ, ಕೇವಲ ಚಾನೆಲ್ನ್ನು ಒಂದು ಹಾಸ್ಯದ ಚಲನಚಿತ್ರಕ್ಕೆ ಬದಲಾಯಿಸಿದರೆ, ನಿಮ್ಮ ಜಗತ್ತೆಲ್ಲವೂ ಹೇಗೆ ಬದಲಾವಣೆಯಾಗುತ್ತದೆ ಎಂಬುದನ್ನು ನೋಡಬಹುದು!
ಅಂತರಂಗದ ಜಾಗೃತಿಯುಂಟಾದಾಗ, ಉನ್ನತವಾದ ಭಾವನೆಗಳು ಉದಯಿಸುತ್ತವೆ. ಕೊನೆಗೆ ನಡೆಯುತ್ತಿರುವುದೆಲ್ಲವೂ ನಿಮ್ಮ ಸ್ವಂತ ಅನುಭವಕ್ಕೆ ಇಂಗಿಹೋಗುತ್ತವೆ. ನಿಮಗೆ ಈ ಪ್ರಪಂಚವನ್ನು ಕಾಪಾಡಬೇಕೆಂಬ ಅಪೇಕ್ಷೆ ಇದ್ದರೆ, ನೀವು ಮಾಡಬೇಕಾದುದೆಲ್ಲವೂ ಏನೆಂದರೆ, ನಿಮ್ಮನ್ನು ನೀವು ಕಾಪಾಡಿಕೊಳ್ಳುವುದು!
ಈ ಪ್ರಪಂಚದಲ್ಲಿ ಎಲ್ಲವೂ ವಾಸ್ತವವಾಗಿ
ನಡೆಯುತ್ತಲೇ ಇವೆ - ಜ್ಞಾನವನ್ನು ಹಂಚಿಕೊಳ್ಳುವ
ಪವಿತ್ರವಾದ ಆಧ್ಯಾತ್ಮಿಕ ಅಧಿವೇಶನಗಳು ಹಾಗೂ
ಅದೇ ಸಮಯದಲ್ಲಿ, ಹಿಂಸೆಯನ್ನು ಹಂಚಿಕೊಳ್ಳುವ
ಭಯೋತ್ಪಾದಕರ ತರಬೇತಿ ಶಿಬಿರಗಳು. ನೀವು
ಯಾವುದಕ್ಕೆ ಶ್ರುತಿಗೂಡಿಸಿಕೊಳ್ಳುತ್ತೀರೋ,
ಅದರಂತೆಯೇ ನೀವು ನಿಮ್ಮ ಪ್ರಪಂಚವನ್ನು
ಆಕರ್ಷಿಸಲು ನೋಡುವಿರಿ. ಅದೇ ರೀತಿಯ
ಜನಗಳನ್ನೂ ಸನ್ನಿವೇಶಗಳನ್ನೂ ಆಕರ್ಷಿಸುತ್ತೀರಿ.
ಜ್ಞಾನೋದಯಕ್ಕಾಗಿ ಪರಿತಪಿಸುತ್ತಿರುವ, ಅನ್ವೇಷಿಸುತ್ತಿರುವ, ಒಬ್ಬನೇ ಒಬ್ಬ ಮನುಷ್ಯನು ಸಹ ಕನಿಷ್ಠ ಪಕ್ಷ ದಶಲಕ್ಷ ಜನರ ಪ್ರಜ್ಞೆಯನ್ನು ಏರಿಸುತ್ತಾನೆ.
ಪ್ರಪಂಚದ ಕಷ್ಟಗಳನ್ನು ನಿಭಾಯಿಸುವುದು ಹೇಗೆ?
ಮೊದಲನೆಯದಾಗಿ, ಉನ್ನತಮಟ್ಟದ ಅಧಿಕಾರ ಹಾಗೂ ಆಡಳಿತವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಸಾಮೂಹಿಕ ಸಕಾರಾತ್ಮಕ ಅಥವಾ ಸಾಮೂಹಿಕ ನಕಾರಾತ್ಮಕತೆಯ ವ್ಯಕ್ತರೂಪವೇ ಆಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಏಕೆಂದರೆ ನೇತಾರರನ್ನು ಸೃಷ್ಟಿಸುವುದು ಸಾಮೂಹಿಕ ಪ್ರಜ್ಞೆ ಅಥವಾ ಸಮಗ್ರ ಪ್ರಜ್ಞೆ. ಆದುದರಿಂದ ಇತರರನ್ನು - ನೇತಾರರನ್ನು, ರಾಜಕಾರಣಿಗಳನ್ನು ಅಥವಾ ಅಧಿಕಾರಿಗಳನ್ನು - ದೂಷಿಸುವ ಮೊದಲು ಸ್ವಲ್ಪ ಗಮನವನ್ನು ನಿಮ್ಮೆಡೆಗೆ ತಿರುಗಿಸಿ, ನಮ್ಮ ಅಂತರಂಗದಲ್ಲಿ ಹೆಚ್ಚು ಸಕಾರಾತ್ಮಕ ಪ್ರಜ್ಞೆಯನ್ನು ಸೃಷ್ಟಿಸಿಕೊಳ್ಳುವ ಕಾರ್ಯವನ್ನು ಪ್ರಾರಂಭಿಸಿದರೆ, ನಿಜವಾಗಿಯೂ ಸ್ವಲ್ಪ ಪ್ರಯೋಜನಕರವಾದ ಕೆಲಸವನ್ನು ಮಾಡಿದಂತಾಗುತ್ತದೆ.
ಈಗ ಕಾಲ ಕೂಡಿಬಂದಿದೆ . . .
ನಮ್ಮ ಕಡೆಯಿಂದ ನಾವು ಇನ್ನಷ್ಟು ಸಕಾರಾತ್ಮಕತೆಯನ್ನು ಸೃಜಿಸೋಣ.
ನಮ್ಮ ಕೆಲಸಕಾರ್ಯಗಳಲ್ಲಿ ಇನ್ನಷ್ಟು ಪ್ರೀತಿಯನ್ನು ತರೋಣ.
ನಮ್ಮ ವೈಯಕ್ತಿಕ ಪ್ರಜ್ಞೆಯ ತರಂಗವನ್ನು ವೃದ್ಧಿಸೋಣ.
ನಕಾರಾತ್ಮಕ ನಿರ್ಧಾರಗಳಿಂದ ಆತಂಕ ಅಥವಾ ಕ್ಷೋಭೆಗೊಳ್ಳುವುದಕ್ಕಿಂತಲೂ ನೀವು ಕೇವಲ ಸಕಾರಾತ್ಮಕ ಚೈತನ್ಯವನ್ನು ಸೃಜಿಸಿರಿ, ಆಗ ನಿಮ್ಮ ಸುತ್ತಮುತ್ತ ಇರುವವರೂ, ಪ್ರಪಂಚದಾದ್ಯಂತ ಇರುವವರೂ ಈ ಸಕಾರಾತ್ಮಕ ಚೈತನ್ಯದಿಂದ ಉತ್ತೇಜಿತರಾಗುತ್ತಾರೆ. ಆಗ ಅದು ನೇತಾರರ ಮೂಲಕವೂ ಹೊರಹೊಮ್ಮುವುದನ್ನು ಕಾಣುತ್ತೀರಿ. ಹೆಚ್ಚು ಹೆಚ್ಚು ಜನರು ತಮ್ಮಲ್ಲಿ ಪರಿವರ್ತನೆಯನ್ನು ಹೊಂದಿದಾಗ, ಸಮಗ್ರ ಸಕಾರಾತ್ಮಕತೆಯು ಸರಿಯಾದ ರಾಜಕಾರಣಿಗಳ, ಸರಿಯಾದ ನೇತಾರರ ಮೂಲಕ ತನ್ನನ್ನು ತಾನೇ ವ್ಯಕ್ತಪಡಿಸಿಕೊಳ್ಳಲೇಬೇಕು.
ನೀವು ಆತಂಕಗೊಂಡು ಕ್ಷೋಭೆಗೊಳಗಾದರೆ ಏನಾಗುತ್ತದೆ? ಇನ್ನಷ್ಟು ನಿರುತ್ಸಾಹ, ಇನ್ನಷ್ಟು ನಕಾರಾತ್ಮಕತೆಯನ್ನು ನೀವು ಹೊಂದುತ್ತೀರಷ್ಟೆ, ಇನ್ನೇನೂ ಇಲ್ಲ. ಅಲ್ಲದೆ, ಆ ಕಾರಣದಿಂದ ನೀವೇ ಜಗತ್ತಿಗೆ ಇನ್ನಷ್ಟು ನಕಾರಾತ್ಮಕತೆಯನ್ನು ಸೇರಿಸುತ್ತೀರಿ, ನಕಾರಾತ್ಮಕ ಪ್ರಜ್ಞೆಗೆ ಇನ್ನಷ್ಟು ಭಾರವನ್ನು ಹೇರುತ್ತೀರಿ.
ಆದುದರಿಂದ ಇದಕ್ಕೆ ಕ್ರಾಂತಿಯು ಸರಿಯಾದ ಮಾರ್ಗವಲ್ಲ, ವಿಕಸನಗೊಳ್ಳುವುದು ಒಂದೇ ಮಾರ್ಗ.
ಪ್ರತಿಯೊಂದು ಕ್ರಾಂತಿಯೂ ಸತ್ಯ ಅಥವಾ
ಅಂತಿಮ ಪರಿಹಾರದ ಆಶ್ವಾಸನೆ ಮಾಡಿತ್ತು. ಆದರೆ
ಹಿಂದಿರುಗಿ ನೋಡಿದಾಗ ಏನನ್ನು ಕಾಣುತ್ತೇವೆ?
ಹಿಂದಿನ 3000 ವರ್ಷಗಳ ಭೂಗ್ರಹದ
ಇತಿಹಾಸದಲ್ಲಿ, ದಾಖಲೆಯಾಗಿರುವ 5000
ಯುದ್ಧಗಳಾಗಿವೆ! ಸಂಶೋಧಕರ ಅಂದಾಜಿನಲ್ಲಿ
ಕಳೆದ 3000 ವರ್ಷಗಳ ಇತಿಹಾಸದಲ್ಲಿ
ಏನಿಲ್ಲವೆಂದರೂ 9000 ಶಾಂತಿ ಸಂಧಾನಗಳಾಗಿವೆ
ಮತ್ತು ಅವುಗಳು ಜಾರಿಯಲ್ಲಿದ್ದ ಅವಧಿಯು ಕೇವಲ
ಎಂಟು ವರ್ಷಗಳು!
ನಿಮ್ಮ ಸುತ್ತಲಿನವರೂ,
ಪ್ರಪಂಚದಲ್ಲಿರುವವರೆಲ್ಲರೂ ಸಕಾರಾತ್ಮಕ
ಪ್ರಜ್ಞೆಯಿಂದ ಪ್ರಭಾವಿತರಾಗಲು ಕೇವಲ ಸಕಾರಾತ್ಮಕ
ಚೈತನ್ಯವನ್ನು ಸೃಜಿಸಿರಿ. ಆಗ, ಅದು ನೇತರರ
ಮೂಲಕವೂ ಕೂಡ ಪಸರಿಸುವುದನ್ನು ಕಾಣುತ್ತೀರಿ.
ಶಾಂತಿಯ ಮೇಲೆ ಧ್ಯಾನದ ಪರಿಣಾಮಗಳ ಅಧ್ಯಯನಗಳು
ಸಮುದಾಯಗಳ ಮೇಲೆ ಸಾಮೂಹಿಕ ಧ್ಯಾನದ ಪರಿಣಾಮಗಳನ್ನು ಕಂಡುಹಿಡಿಯಲು ಬಗೆಬಗೆಯ ಅಧ್ಯಯನಗಳನ್ನು ಮಾಡಲಾಗಿದೆ. ಟ್ರಾನ್ಸೆಂಡೆಂಟಲ್ ಮೆಡಿಟೇಶನ್ ತಂತ್ರವನ್ನಳವಡಿಸಿಕೊಂಡು ಧ್ಯಾನವನ್ನು ಮಾಡಿದ ಒಂದು ಗುಂಪಿನ ಪರಿಣಾಮವನ್ನು ಕೆಲವು ಅಧ್ಯಯನಗಳು ಗಮನಿಸಿದವು. ಸಾಮೂಹಿಕ ಧ್ಯಾನವು ನಡೆದ ನಗರಗಳಲ್ಲಿ ಅಪರಾಧದ ಪ್ರಮಾಣವು ಪ್ರತಿಶತ ಎಂಟರಷ್ಟು ಇಳಿತವನ್ನು ತೋರಿದವು. ಬೇರೆ ವರದಿಗಳು ಹಿಂಸಾಚಾರದ ಕಾರ್ಯಗಳಲ್ಲಿ ಪ್ರತಿಶತ ಹದಿನೇಳರಷ್ಟು ಇಳಿತವನ್ನೂ, ಸಹಾನುಭೂತಿ ಮತ್ತು ಸಹಾಯಕ ಕಾರ್ಯಗಳಲ್ಲಿ ಪ್ರತಿಶತ ಹದಿಮೂರರಷ್ಟು ಏರಿಕೆಯನ್ನೂ ಮಹತ್ವಪೂರ್ಣವಾಗಿ ತೋರಿದವು. ಯುದ್ಧಪೀಡಿತ ಪ್ರದೇಶಗಳಲ್ಲಿ ಪ್ರತಿದಿನದ ಯುದ್ಧದ ಸಾವಿನ ಸಂಖ್ಯೆಯಲ್ಲಿ ಪ್ರತಿಶತ 50ರಷ್ಟು ಇಳಿತವೂ, ಯುದ್ಧದ ಗಾಯಾಳುಗಳ ಸಂಖ್ಯೆಯಲ್ಲಿ ಪ್ರತಿಶತ 25ರಷ್ಟು ಇಳಿತವೂ ಇತ್ತು. ಅಪರಾಧದ ಪ್ರಮಾಣಗಳು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹಾಗೂ ಹಿಂಸಾಚಾರಗಳು ಕಡಿಮೆಯಾದ್ದರಿಂದ, ಜನ-ಜೀವನದ ಗುಣಮಟ್ಟವು ಉತ್ತಮಗೊಂಡುದುದನ್ನು ಒಟ್ಟಿನ ಅಂಕಿಅಂಶಗಳು ತೋರಿದವು.
ವಿಶ್ವಶಾಂತಿ ಧ್ಯಾನ
ಸೆಪ್ಟೆಂಬರ್ 21ರ ದಿನವನ್ನು ಅಂತರ ರಾಷ್ಟ್ರೀಯ ಶಾಂತಿಯ ದಿನವೆಂದು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತವೂ ಲಕ್ಷಾಂತರ ಜನರು ಪ್ರಾರ್ಥನೆ, ಧ್ಯಾನ, ಆಚರಣೆ ಮತ್ತು ವಿಶ್ವಶಾಂತಿ ಮತ್ತು ಜಾಗತಿಕ ಸಾಮರಸ್ಯದ ಸಹಕಾರಕ್ಕಾಗಿ ಒಟ್ಟುಗೂಡುತ್ತಾರೆ.
ಈ ಸಂದರ್ಭದಲ್ಲಿ ಪ್ರತಿವರ್ಷವೂ ನಿತ್ಯಾನಂದ ಸಂಸ್ಥೆಯ ಕೇಂದ್ರಗಳು ಜಗತ್ತಿನಾದ್ಯಂತ ಸಾಮೂಹಿಕ ಧ್ಯಾನಗಳನ್ನು ನಡೆಸುತ್ತವೆ. ಜನರು ಒಂದು ಗುಂಪಾಗಿ ಧ್ಯಾನವನ್ನು ಮಾಡಿದಾಗ ಸಾಮೂಹಿಕ ಪ್ರಜ್ಞೆಯು ಇನ್ನೂ ಹೆಚ್ಚು ಶಕ್ತಿಯುತವಾಗಿ ಉದ್ದರಿಸುತ್ತದೆ.
ಯಾವುದೇ ವಸ್ತುವನ್ನು ಹಂಚಿಕೊಂಡಾಗ, ಅದು ಗಾತ್ರದಲ್ಲಿ ಚಿಕ್ಕದಾಗುತ್ತದೆ. ಉದಾಹರಣೆಗೆ, ಒಂದು ಸೇಬನ್ನು ನಾಲ್ವರು ಹಂಚಿಕೊಳ್ಳಬೇಕಾದರೆ ಅದನ್ನು ನಾಲ್ಕು ಭಾಗಗಳಾಗಿ ತುಂಡುಮಾಡಬೇಕು. ಅದು ಗಾತ್ರದಲ್ಲಿ ಚಿಕ್ಕದಾಗುತ್ತದೆ. ವಿದ್ಯುಚ್ಛಕ್ತಿಯ ವಿಷಯಕ್ಕೆ ಬಂದಾಗ ಅದರ ವೋಲ್ವೇಜನ್ನು ಹಂಚಿಕೊಂಡರೆ, ಅದು ಕಡಿಮೆಯಾಗುವುದಿಲ್ಲ. ಅದು ಅಷ್ಟೇ ಇರುತ್ತದೆ. ಉದಾಹರಣೆಗೆ, ಒಂದು ವಿದ್ಯುತ್ ತಂತಿಯಲ್ಲಿ 10 ವೋಲ್ಟಿನ ವಿದ್ಯುತ್ತು ಇದ್ದರೆ, ಒಬ್ಬನೇ ಆ ತಂತಿಯನ್ನು ಮುಟ್ಟಿದರೂ 10 ವೋಲ್ಟನ್ನೇ ಅನುಭವಿಸುತ್ತಾನೆ. ಹಾಗಲ್ಲದೆ ನಾಲ್ಕು ಜನ ಅದೇ ತಂತಿಯನ್ನು ಮುಟ್ಟಿದರೂ ಪ್ರತಿಯೊಬ್ಬರೂ 10 ವೋಲ್ಟನ್ನೇ ಅನುಭವಿಸುತ್ತಾರೆ.
ಆದರೆ ಧ್ಯಾನದಿಂದುಂಟಾಗುವ, ಸೂಕ್ಷ್ಮಶಕ್ತಿಯ ವಿಷಯಕ್ಕೆ ಬಂದಾಗ, ಅದೇ ಬೇರೆಯಾಗುತ್ತದೆ. ಜನಗಳ ಒಂದು ಗುಂಪು ಧ್ಯಾನವನ್ನು ಮಾಡಿದಾಗ, ಅದು ವೃದ್ಧಿಸುತ್ತದೆ! ಪರಿಣಾಮವು ಕಡಿಮೆಯಾಗದೆ ಅಥವಾ ಇದ್ದಷ್ಟೇ ಇರದೆ, ಇಡೀ ಗುಂಪಿಗೂ, ಇನ್ನೂ ಅವರಿಂದಾಚೆ ಇರುವ ಎಲ್ಲರಿಗೂ ಹಂಚಿಹೋಗಿ ವಿಸ್ತಾರಗೊಳ್ಳುತ್ತದೆ. ಧ್ಯಾನ ಮಾಡುವ ಒಬ್ಬಾತನು 10 ವೋಲ್ಟುಗಳ ಚೈತನ್ಯವನ್ನುಂಟುಮಾಡಿದರೆ, ಆಗ 100 ಜನರು ಒಟ್ಟಾಗಿ ಕುಳಿತು ಮಾಡುವ ಸಾಮೂಹಿಕ ಧ್ಯಾನವು 10 x 100 ಎಂದರೆ 1000 ವೋಲ್ಟುಗಳಷ್ಟು ಚೈತನ್ಯವನ್ನುಂಟುಮಾಡುತ್ತದೆ. ಸುಮ್ಮನೆ ಕಲ್ಪಿಸಿಕೊಳ್ಳಿರಿ! ಅಲ್ಲಿ ಉತ್ಪನ್ನವಾದ ಚೈತನ್ಯದ ಬಲವು ಧ್ಯಾನವನ್ನು ಮಾಡಿದ ಜಾಗವನ್ನೆಲ್ಲಾ ಶುದ್ಧೀಕರಿಸಿಬಿಡುತ್ತದೆ. ಆದುದರಿಂದಲೇ ಸಮಗ್ರ, ಸಾಮೂಹಿಕ ಧ್ಯಾನವನ್ನು ಪ್ರೋತ್ಸಾಹಿಸುವುದು.
ಜ್ಞಾನಿಗಳ ತಪ್ಪಿಸಿಕೊಳ್ಳಲಾಗದ ಪ್ರೀತಿಯ ಸ್ಪರ್ಶ
ಭಗವಾನ್ ಬುದ್ಧನ ಜೀವನದ ಒಂದು ಕಥೆ:
ಅಂಗುಲಿಮಾಲನೆಂಬ ಒಬ್ಬ
ದರೋಡೆಕೋರನಿದ್ದನು. ಬಹಳ ಜನರು
ದಾಟಿಹೋಗಬೇಕಾಗಿದ್ದ ಒಂದು ಕಾಡಿನಲ್ಲಿ ಅವನು
ವಾಸಿಸುತ್ತಿದ್ದನು. ಕಾಡಿನ ಮೂಲಕ
ಹೋಗುವವರನ್ನು ಅಡ್ಡಗಟ್ಟಿ ಅವರ ಸ್ವತ್ತನ್ನು
ಅಪಹರಿಸುತ್ತಿದ್ದನು. ನಂತರ ಅವರ ಒಂದು
ಕಿರುಬೆರಳನ್ನು ಕೊಯ್ದುಹಾಕಿ ಅಂತಹ ಬೆರಳುಗಳಿಂದ
ಒಂದು ಹಾರವನ್ನು ಮಾಡಿಕೊಳ್ಳುತ್ತಿದ್ದನು.
ಆದುದರಿಂದಲೇ ಅವನನ್ನು ‘ಅಂಗುಲಿಮಾಲಾ’
ಎಂದರೆ ಬೆರಳುಗಳ ಹಾರ ಎಂದು ಕರೆಯುತ್ತಿದ್ದರು.
ಬುದ್ಧನು ಒಮ್ಮೆ ಪರ್ಯಟನೆಯಲ್ಲಿದ್ದಾಗ ಆ
ಕಾಡನ್ನು ದಾಟಬೇಕಾಗಿತ್ತು. ಜನರು ಭಯಂಕರನಾದ
ಅಂಗುಲಿಮಾಲನ ಬಗ್ಗೆ ಆತನನ್ನು ಎಚ್ಚರಿಸಿದರು.
ಆದರೆ ಬುದ್ಧನು ವಿಚಲಿತನಾಗದೆ ನಡಿಗೆಯನ್ನು
ಮುಂದುವರೆಸಿದನು. ಕಾಡಿನಲ್ಲಿ ಬಹಳ ಒಳಕ್ಕೆ
ಬಂದಾಗ ಅಂಗುಲಿಮಾಲನು ಪೊದೆಯಿಂದ ಹೊರಕ್ಕೆ
ದುಮುಕಿ, ಬೆದರಿಸುವಂತೆ, ‘ತಟಸ್ಥನಾಗಿ ನಿಲ್ಲು!’
ಎಂದು ಆರ್ಭಟಿಸಿದನು.
ಬುದ್ಧನು ನಿಂತು, ‘ನಾನು ತಟಸ್ಥನಾಗಿದ್ದೇನೆ. ನೀನು ತಟಸ್ಥನಾಗುವಂತಾಗಲಿ’, ಎಂದನು.
ಅಂಗುಲಿಮಾಲನಿಗೆ ತನ್ನ ಜೀವನದಲ್ಲಿ
ಮೊಟ್ಟಮೊದಲನೆಯ ಸಲ ಜಂಘಾಬಲವೇ
ಅಡಗಿದಂತಾಯಿತು. ಬುದ್ಧನ ಬಗ್ಗೆ ಅದೇನೋ
ಆಳವಾಗಿ ಮಿಡಿದಂತಾಯಿತು. ಬುದ್ಧನ ಮೇಲೆ
ಆಕ್ರಮಣಮಾಡಲು ಮುಂದಾಗಲು ಸಾಧ್ಯವಾಗಲಿಲ್ಲ.
ಕೈಗಳು ಮರಗಟ್ಟಿಹೋದವು. ಆತನು
ರೋಧಿಸುತ್ತಲೂ, ಕ್ಷಮೆಯಾಚಿಸುತ್ತಲೂ ಬುದ್ಧನ
ಪಾದಗಳಿಗಿರೆಗಿದನು.
ಈ ಕಥೆಯು ಜ್ಞಾನಿಗಳ ಪ್ರಭಾವದ
ಸತ್ಯಗಳಲ್ಲೊಂದನ್ನು ನಿರೂಪಿಸುತ್ತದೆ.
ಜ್ಞಾನಿಯಾದವನು ಯಾವ ಪ್ರಯತ್ನವಾಗಲೀ,
ಉದ್ದೇಶವಾಗಲೀ ಇಲ್ಲದೆಯೇ ಎಂತಹವರನ್ನಾದರೂ
ಪರಿವರ್ತಿಸುವ ಶಕ್ತಿಯುಳ್ಳ ವಿಪರೀತವಾದ ಶಾಂತತೆ
ಹಾಗೂ ಅನುಕಂಪಗಳನ್ನು ಹೊರಸೂಸುತ್ತಾನೆ.
ಈ ಪ್ರಭಾವವು ಕೇವಲ ಮನುಷ್ಯನಿಗೆ ಮಾತ್ರ
ಸೀಮಿತವಾದುದಲ್ಲ. ಒಬ್ಬ ಜ್ಞಾನಿಯಿಂದ
ಹೊರಸೂಸುವ ಶುದ್ಧ ಪ್ರೀತಿಯ ಅನುಕಂಪಗಳಿಂದ
ಪ್ರಾಣಿಗಳೂ ಸಹ ಪ್ರಭಾವಗೊಳ್ಳುತ್ತವೆ. ಆ
ಶಕ್ತಿಕ್ಷೇತ್ರದ ಉನ್ನತವಾದ ಕಂಪನಕ್ಕೆ
ತೆರೆದುಕೊಂಡಾಗ ಎಲ್ಲವೂ ಬದಲಾಗಿಬಿಡುತ್ತದೆ.
ಆದಿಶಂಕರರ ಜೀವನದಿಂದಾರಿಸಿದ ಒಂದು ಸುಂದರವಾದ ಕಥೆ ಇದು:
ಶಂಕರರು ಶೃಂಗೇರಿಯಲ್ಲಿ ಪರ್ಯಟನೆ ಮಾಡುತ್ತಿದ್ದರು. ಒಂದು ದಿನ ಅವರ ಮುಂದೆ ಒಂದು ವಿಚಿತ್ರವಾದ ಹಾಗೂ ಸುಂದರವಾದ ದೃಶ್ಯ ಗೋಚರಿಸಿತು. ಒಂದು ಬಂಡೆಯ ಮೇಲೆ ಎರಡು ಕಪ್ಪೆಗಳು ಕುಳಿತಿದ್ದವು. ಬಹಳ ಕಾವೇರಿದುದರಿಂದ ಕಪ್ಪೆಗಳು ನೀರಿಗೆ ಜಿಗಿಯುವುದರಲ್ಲಿದ್ದವು. ಅಷ್ಟುಹೊತ್ತಿಗೆ ಸರಿಯಾಗಿ ಒಂದು ನಾಗರಹಾವು ತನ್ನ ಹೆಡೆಯೆತ್ತಿ ಆ ಎರಡು ಕಪ್ಪೆಗಳ ಮೇಲೂ ಹೆಡೆ ಬಿಚ್ಚಿಕೊಂಡು ನೆರಳನ್ನು ನೀಡಿತು. ತಂಪಾದ ನೆರಳನ್ನು ಆಹ್ಲಾದಿಸುತ್ತಾ ಅವುಗಳು ಸ್ವಲ್ಪಹೊತ್ತು ಹಾಗೆಯೇ ಕುಳಿತಿದ್ದು ನಂತರ ನೀರಿಗೆ ಜಿಗಿದವು. ನಾಗರಹಾವೂ ತನ್ನ ಹೆಡೆಯನ್ನು ಮುದುರಿಕೊಂಡು ಹೊರಟುಹೋಯಿತು.
ಇದನ್ನು ಗಮನಿಸುತ್ತಿದ್ದ ಶಂಕರರಿಗೆ ಆಶ್ಚರ್ಯವಾಯಿತು. ಅವರು ಬಹಳ ತೀಕ್ಷ್ಣವಾದ ಬುದ್ಧಿಶಕ್ತಿಯುಳ್ಳವರು. ಆ ಘಟನೆಯನ್ನು ಅಷ್ಟಕ್ಕೇ ಬಿಡಲಿಲ್ಲ. ಯಾವುದೋ ಅನರ್ಘ್ಯವಾದ ಶಕ್ತಿಯಿಂದ ಆ ಸ್ಥಳವು ಪಾವನಗೊಳ್ಳದೆ ಇದ್ದರೆ ಪ್ರಾಣಿಗಳು ಈ ರೀತಿ ತಮ್ಮ ಆಜನ್ಮವೈರತ್ವವನ್ನು ಮರೆತು ಇಷ್ಟು ಸೌಜನ್ಯದಿಂದ ಸಹಬಾಳ್ವೆ ನಡೆಸುವುದು ಸಾಧ್ಯವಿಲ್ಲವೆಂಬುದನ್ನು ಮನಗಂಡರು. ಅವರು ಸುತ್ತಮುತ್ತಲೂ ಹೋಗಿ ಆ ಸ್ಥಳದ ಬಗ್ಗೆ ವಿಚಾರಿಸಿದರು. ಹಿಂದೆಂದೋ ಆ ಸ್ಥಳದಲ್ಲಿ ಜ್ಞಾನಿಗಳಾದ ಒಬ್ಬ ಮಹಾತ್ಮರು ಒಂದು ಆಶ್ರಮವನ್ನು ಸ್ಥಾಪಿಸಿ, ಬಹಳ ವರ್ಷಗಳ ಕಾಲ ಅದನ್ನು ನಡೆಸುತ್ತಿದ್ದರೆಂದು ತಿಳಿದುಬಂತು!
ಶಂಕರರು ಈ ಇಡೀ ಘಟನೆಯಿಂದ ಎಷ್ಟು ಪ್ರಭಾವಿತರಾದರೆಂದರೆ ಒಂದಲ್ಲಾ ಒಂದು ದಿನ ತಾವು ಅದೇ ಸ್ಥಳದಲ್ಲಿ ತಮ್ಮ ಮಠವನ್ನು ಸ್ಥಾಪಿಸಬೇಕೆಂದು ನಿಶ್ಚಯಿಸಿದರು. ಕೆಲವು ವರ್ಷಗಳ ನಂತರ ಮತ್ತೆ ಅದೇ ಪ್ರದೇಶವನ್ನು ಹಾದು ಹೋಗುತ್ತಿದ್ದಾಗ ಅಲ್ಲಿಯೇ ನಿಂತು ಶೃಂಗೇರಿ ಮಠವೆಂಬ ತಮ್ಮ ಪ್ರಥಮ ಆಶ್ರಮವನ್ನು ಸ್ಥಾಪಿಸಿದರು. ಇಂದಿಗೂ ಅದು ಪ್ರಪಂಚದ ಪ್ರಮುಖ ಆಧ್ಯಾತ್ಮಿಕ ಜ್ಞಾನಪೀಠಗಳಲ್ಲೊಂದಾಗಿ ನಿಂತಿದೆ!
ಜ್ಞಾನಿಗಳಾದವರು ತಮ್ಮ ಸಾರ್ವತ್ರಿಕ
ಅಂತರಂಗವನ್ನು ಸಲೀಸಾಗಿ ಪಸರಿಸುವ ಮೂಲಕ
ಸಮಗ್ರ ಸಕಾರಾತ್ಮಕತೆಯನ್ನು ನಿರ್ಮಿಸುತ್ತಾರೆ.
ಪತಂಜಲಿಯವರು ಯೋಗ ಸೂತ್ರಗಳಲ್ಲಿ
ಹೇಳುವಂತೆ, 'ಒಬ್ಬ ಜ್ಞಾನಿಯ ಸಮಕ್ಷಮದಲ್ಲಿ
ಆಜನ್ಮ ವೈರಿಗಳೂ ತಮ್ಮ ವೈರತ್ವವನ್ನು
ಕಳೆದುಕೊಳ್ಳುತ್ತವೆ'.
ನಿತ್ಯಾನಂದ ಸಂಸ್ಥೆ
ನಾನು ಭೂಲೋಕಕ್ಕೆ ಆಗಮಿಸಿರುವ ಉದ್ದೇಶವೇ
ಸಾಮೂಹಿಕ ಪ್ರಜ್ಞೆಯು ಉನ್ನತ ಪ್ರಜ್ಞೆಯ
ವಲಯವನ್ನು ಪ್ರವೇಶಿಸಲು ಕಾರಣವಾಗುವ ವ್ಯಕ್ತಿ
ಪ್ರಜ್ಞೆಯ ಒಂದು ನವೀನ ವರ್ತುಲವನ್ನು
ಸೃಷ್ಟಿಸುವುದು.
ಇದನ್ನು ಸಾಧಿಸಲು ಒಂದು ಲಕ್ಷ ಜನರಿಗೆ
ಜೀವನ್ಮುಕ್ತರಾಗಿ ಜೀವಿಸುವ ದೀಕ್ಷೆಯನ್ನು
ನೀಡಲಾಗುವುದು.
ಮತ್ತು
ಭೂಲೋಕದಲ್ಲಿ ವ್ಯಕ್ತಿಗತ ಪ್ರಜ್ಞೆಯ ಸಕಾರಾತ್ಮಕ ಸ್ಥಿತ್ಯಂತರಕ್ಕೆ ಕಾರಣವಾಗುವ ನಿತ್ಯ ಧ್ಯಾನ ಲೈಫ್ ಬ್ಲಿಸ್ ಮೆಡಿಟೇಶನ್ ಎಂದು ವಿನ್ಯಾಸಗೊಂಡ ಧ್ಯಾನಕ್ಕೆ ದೀಕ್ಷೆಯನ್ನು ಒಂದು ದಶಕೋಟಿ ಜನರಿಗೆ ನೀಡಲಾಗುವುದು.
ವಿಶ್ವಶಾಂತಿಗಾಗಿ ಧ್ಯಾನೋಪಾಯ
ವಿಶ್ವಶಾಂತಿಯನ್ನು ಗಳಿಸುವ ಮಾರ್ಗವೆಂದರೆ
ವೈಯಕ್ತಿಕ ಶಾಂತಿಯನ್ನು ಸೃಜಿಸುವುದು.
ವಿಶ್ವಶಾಂತಿಗಾಗಿ ಮಾಡುವ ಧ್ಯಾನವು ಒಂದು
ಸಾಮೂಹಿಕ ಧ್ಯಾನ. ಇದು ಬಹಳ ಸುಲಭವಾದ
ಹಾಗೂ ಬಹಳ ಪ್ರಭಾವಪೂರ್ಣ ಧ್ಯಾನ.
ಒಂದು ವೃತ್ತಾಕಾರವಾಗಿ ಅಥವಾ ಒಂದು ವೃತ್ತದ ಸುತ್ತ ಮತ್ತೊಂದು ವೃತ್ತದಂತೆ ಕುಳಿತು ಬಲಗೈಯಿಂದ ಬಲಗಡೆಯವರ ಎಡಗೈಯಂತೆ ಒಬ್ಬರ ಕೈಯನ್ನೊಬ್ಬರು ಹಿಡಿದುಕೊಳ್ಳುವುದು – ಬಲಅಂಗೈ ಕೆಳಮುಖವಾಗಿರುವಂತೆ – ಶಾಂತಿಯನ್ನೂ ಆನಂದವನ್ನೂ ಧಾರೆಎರೆಯುವ ಸಂಕೇತದಂತೆ – ಅಂತೆಯೇ ನಿಮ್ಮ ಎಡಗೈ ಅಂಗೈ ಮೇಲ್ಮುಖವಾಗಿರುವಂತೆ – ಶಾಂತಿಯನ್ನೂ ಆನಂದವನ್ನೂ ಪಕ್ಕದವರಿಂದ ಸ್ವೀಕರಿಸುವ ಸಂಕೇತದಂತೆ. ಈ ರೀತಿ ಸೇರಿದ ಜನರ ವರ್ತುಲವು ಒಂದು ಪ್ರಭಾವಶಾಲೀ ಚಕ್ರವನ್ನು ಸೃಜಿಸುತ್ತದೆ. ಒಬ್ಬರ ಧ್ಯಾನಶಕ್ತಿಯು ಬೇರೆಲ್ಲರಿಗೂ ಹಂಚಿಕೊಳ್ಳುತ್ತದೆ. ಈ ಧ್ಯಾನವನ್ನು ಕನಿಷ್ಠ ಪಕ್ಷ 21 ನಿಮಿಷಗಳಾದರೂ ಮಾಡಬೇಕು.