ಪುನರ್ಲಭಿಸಿದ ಮುಗ್ಧತೆಯು ಜೀವನದ ಅನೇಕ ದ್ವಾರಗಳನ್ನು ತೆರೆಯುತ್ತದೆ
This text was machine-transcribed from the printed book and may contain errors. Select the words and choose “Report a mistake”.
ತೀವ್ರತೆಯನ್ನು ಕುರಿತು ಮಾತನಾಡಿದಮೇಲೆ
ಮುಗ್ಧತೆಯನ್ನು ಕುರಿತು ಮಾತನಾಡುವುದು ನಿಮಗೆ
ವಿಚಿತ್ರವೆನಿಸಬಹುದು. ನಿಜವಾದ ಅರ್ಥದಲ್ಲಿ ನೀವು
ನಿಮ್ಮ ಬೇರೆ ಕಾರ್ಯಗಳ ಬಗ್ಗೆ ಮುಗ್ಧವಾಗದ
ಹೊರತು, ಮಾಡುವ ಯಾವುದರಲ್ಲಿಯೂ
ತೀವ್ರವಾಗಲಾರಿರಿ. ನಾನು ಹೇಳುವ ಮುಗ್ಧತೆಯು,
ನಿಮ್ಮದೇ ಶಬ್ದಕೋಶವು ಮುಗ್ಧತೆಯೆಂದು
ನಿರೂಪಿಸುವುದಕ್ಕಿಂತ ಬೇರೆ ಇರಬಹುದು. ನಾನು
ಹೇಳುವುದು ಮಗುವಿನ ಮುಗ್ಧತೆಯ ಬಗ್ಗೆ. ಮಗುವು
ಏನೇ ಮಾಡಿದರೂ ಅದರಲ್ಲಿ ತೀವ್ರವಾಗಿರುತ್ತದೆ.
ವಯಸ್ಕರು ಆ ಶಕ್ತಿಯನ್ನು ಕಳೆದುಕೊಂಡಿದ್ದಾರೆ;
ಆದರೆ ಅದನ್ನು ಪುನಃ ಪಡೆದುಕೊಳ್ಳಬಹುದು.
ಮುಗ್ಧತೆ ಎಂದರೇನು?
ಮುಗ್ಧತೆ ಎಂದರೆ ಯಾವುದೇ ಚಿಂತೆ ಅಥವಾ
ಸಂಸ್ಕಾರಗಳಿಂದ ಪ್ರಭಾವಿತವಾಗದ ಶುದ್ಧ ಅಂತಸ್ಥಳ.
ಸ್ಪಷ್ಟವಾಗಿ ತಿಳಿಸುವುದಾದರೆ, ಕೋಪ, ದುರಾಸೆ,
ಕಾಮ-ಇತ್ಯಾದಿ ಭಾವನೆಗಳು ನಿಮ್ಮ
ಅಂತರಂಗದಲ್ಲಿದ್ದು, ನೀವು ಅವನ್ನು
ವ್ಯಕ್ತಪಡಿಸದಿದ್ದರೂ, ಇನ್ನೂ ನೀವು ಒಬ್ಬ
ಪರಿಪೂರ್ಣ ಅಥವಾ ಮುಗ್ಧ ವ್ಯಕ್ತಿಯಲ್ಲ.
ಸಾಮಾಜಿಕವಾಗಿ ನೀವು ಶುದ್ಧರಾಗಿರಬಹುದು,
ಅಷ್ಟೇ. ಅದಕ್ಕೆ ಬದಲಾಗಿ, ನಿಮ್ಮ ಕೋಪ, ಕಾಮ
ದುರಾಸೆಗಳನ್ನು ನಿಮ್ಮ ಅಂತರಂಗಕ್ಕೆ ತಟ್ಟದಂತೆ
ವ್ಯಕ್ತಪಡಿಸಿ ಒಂದು ಮುಗ್ಧ ಮಗುವಿನಂತೆ
ಜೀವಿಸಿದ್ದರೆ, ನೀವು ಒಬ್ಬ ಶುದ್ಧ ಜೀವಿ ಎಂದು
ನಿಮಗೆ ಸ್ಪಷ್ಟವಾಗಲಿ.
ಮಕ್ಕಳು ಕೋಪಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಮಕ್ಕಳಿಗೆ ದುರಾಸೆಯೂ ಇರುತ್ತದೆ. ಅವರು ಬಹುಮಟ್ಟಿಗೆ ತಮ್ಮ ವ್ಯಕ್ತಿತ್ವವನ್ನು ದುರಾಸೆಯ ಮೇಲೆಯೇ ಕಟ್ಟಿಕೊಂಡಿರುತ್ತಾರೆ. ಆದ್ದರಿಂದಲೇ ಅವರು, 'ನನ್ನದು' ಎಂಬ ಧೋರಣೆಯ ಅರಿವನ್ನೂ, ಪ್ರಜ್ಞೆಯನ್ನೂ ಹೊಂದಿರುತ್ತಾರೆ. ಮಗುವಿನಿಂದ ಒಂದು ಬೊಂಬೆಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿರಿ; ಮಗುವು ತನ್ನ ಜೀವವನ್ನೇ ತನ್ನಿಂದ ಕಿತ್ತುಕೊಂಡಂತೆ ವರ್ತಿಸುತ್ತದೆ. ಅದು ಕಿರಿಚಾಡಿ, ಕೂಗಾಡುತ್ತದೆ. ಇಬೇಕೆಂದರೆ ಅದರ ಇಡೀ ವ್ಯಕ್ತಿತ್ವವು 'ನನ್ನದು' ಎಂಬ ಧೋರಣೆಯ ಮೇಲೆ ನಿರ್ಮಾಣವಾಗಿರುತ್ತದೆ.
ಶಿವ ಎಂದರೆ ಕಾರಣರಹಿತ ಮಂಗಳತ್ವ
ಮಕ್ಕಳಿಗೆ ದುರಾಸೆ ಹಾಗೂ ಕೋಪಗಳಿದ್ದರೂ ಅವನ್ನು ಅಶುದ್ಧ ಎಂದು ಕರೆಯಲಾಗದು. ಇದು ಏಕೆಂದರೆ ನೀವು ಯಾವುದನ್ನು ಅಶುದ್ಧ ಎಂದು ಭಾವಿಸುತ್ತಿರೋ, ಅದು ಅವರ ಅಂತರಂಗದಲ್ಲಿ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ. ಅವರು ಬೊಂಬೆಗಳೊಡನೆ ಕುಳಿತು ಆಟವಾಡಿ, ಕೆಲವು ಗಂಟೆಗಳ ನಂತರ ತಮ್ಮ ಬೊಂಬೆಗಳನ್ನು ಎಸೆದು ಹೋಗಿಬಿಡುತ್ತಾರೆ. ಅವರು ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ. ಅವರ ಅಂತರಂಗ ಬಹಳ ಸುಂದರ ಹಾಗೂ ಶುದ್ಧ.
ಸಂಸ್ಕೃತದಲ್ಲಿ ಶಿವ ಎಂಬ ಪದಕ್ಕೆ ಕಾರಣರಹಿತ ಮಂಗಳತ್ವ ಎಂದರ್ಥ. ಈ ಕಾರಣವಿಲ್ಲದ ಮಂಗಳತ್ವವು, ಆತನು ಎಲ್ಲಿಯೇ ಇದ್ದರೂ ಆನಂದವನ್ನು ಸೃಷ್ಟಿಸುವ ಚೈತನ್ಯವು; ಇದು ಆತನ ಮುಗ್ಧ ಅಂತರಂಗದೊಳಗಿನಿಂದ ಉದ್ಭವಿಸುತ್ತದೆ.
ವೈದಿಕ ಸಂಪ್ರದಾಯದಲ್ಲಿ ಉಪನಿಷತ್ತುಗಳೆಂಬ ಗ್ರಂಥಗಳಿವೆ. ಸಂಸ್ಕೃತದಲ್ಲಿ ಉಪನಿಷತ್ತು ಎಂಬ ಪದಕ್ಕೆ ಗುರುವಿನೊಂದಿಗೆ ಶಿಷ್ಯರು ಕುಳಿತಾಗ ನೀಡುವ ಬೋಧನೆಗಳು ಎಂದರ್ಥ. ಅಂತಹ 108 ಉಪನಿಷತ್ತುಗಳಿವೆ. ಅವು ವೈದಿಕ ಕಾಲದ ಪರಮ ಗುರುಗಳು ನೀಡಿರುವ ಆತ್ಮಜ್ಞಾನವೆಂಬ ವಿಜ್ಞಾನದ ಸಾರ. ಇವುಗಳಲ್ಲೊಂದಾದ ಛಾಂದೋಗ್ಯ ಉಪನಿಷತ್ತಿನಲ್ಲಿ ಒಂದು ಸುಂದರವಾದ ಕಥೆಯ ವಿವರಣೆ ಹೀಗಿದೆ;
ಮುಗ್ಧತೆಯು ಅಂತರಂಗಕ್ಕೆ ನೇರವಾಗಿ ಸಂಬಂಧಿಸಿದೆ. ಅದು ಹೊರ ಜಗತ್ತಿನೊಂದಿಗೆ ಯಾವ ರೀತಿಯಲ್ಲೂ ಸಂಬಂಧಿಸಿಲ್ಲ. ಈ ಮುಗ್ಧತೆಯನ್ನು ಪಡೆದುಕೊಳ್ಳಲು ಶಿವಸೂತ್ರದಲ್ಲಿ ಶಿವನು ತಂತ್ರಗಳನ್ನು ನಮಗೆ ಅನುಗ್ರಹಿಸುತ್ತಾನೆ. ಹಿಂದೂ ಪುರಾಣಗಳ ಕಥೆಗಳಲ್ಲಿ ವಿವರಿಸಿರುವಂತೆ ಶಿವನ ಜೀವನವನ್ನು ನೋಡಿದರೆ, ಆತನಲ್ಲಿ ಯಾವ ಸಾಮಾಜಿಕ ಅಥವಾ ಸಾಂಪ್ರದಾಯಿಕ ಮುಗ್ಧತೆಯನ್ನೂ ಕಾಣಲಾರಿರಿ. ಆದರೆ ಅಲ್ಲಿ ಶುದ್ಧವಾದ ಹಾಗೂ ಪರಮೋತ್ಕೃಷ್ಟವಾದ ಮುಗ್ಧತೆ ಇರುತ್ತದೆ. ಆತನಿರುವ ಸ್ಥಳವೂ ಹಾಗೂ ಆತನ ಜೀವನ ಶೈಲಿಯೂ, ಆತನ ಶುದ್ಧತೆಗಾಗಲೀ ಅಥವಾ ಮುಗ್ಧತೆಗಾಗಲೀ ಸಂಬಂಧಿಸಿಲ್ಲ. ದೇಹಗಳನ್ನು ದಹಿಸುವ ಹಾಗೂ ಭೂತಪ್ರೇತಗಳಿಂದಾವೃತವಾದ ಸ್ಮಶಾನವೇ ಶಿವನ ವಾಸಸ್ಥಾನ.
ಸತ್ಯಕಾಮನೆಂಬ ಬಾಲಕನೊಬ್ಬನು ಆತ್ಮಸಾಕ್ಷಾತ್ಕಾರಕ್ಕಾಗಿ ಒಬ್ಬ ಗುರುಗಳ ಬಳಿಗೆ ಹೋಗುತ್ತಾನೆ. ಗುರುಗಳು ಆತನಿಗೆ ನಾನೂರು ಹಸುಗಳನ್ನು ಕೊಟ್ಟು, ‘ಈ ಹಸುಗಳನ್ನು ಕರೆದುಕೊಂಡು ಕಾಡಿಗೆ ಹೋಗಿ, ಅಲ್ಲಿಯೇ ವಾಸಿಸುತ್ತಾ ಇವುಗಳನ್ನು ನೋಡಿಕೊ, ಇವುಗಳು ಸಂಖ್ಯೆಯಲ್ಲಿ ವೃದ್ಧಿಸಿ ಒಂದು ಸಾವಿರ ಹಸುಗಳಾದಾಗ ಅವುಗಳನ್ನು ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳುತ್ತಾರೆ.
ಸತ್ಯಕಾಮನು ಕಾಡಿಗೆ ಹೋಗಿ ಹಸುಗಳೊಂದಿಗೆ ಜೀವಿಸುತ್ತಾ ಅವುಗಳು ಸಂಖ್ಯೆಯಲ್ಲಿ ವೃದ್ಧಿಸುವುದನ್ನು ಕಾಯುತ್ತಿರುತ್ತಾನೆ. ಆ ಹಸುಗಳು ಸಾವಿರವಾಗಿ ವೃದ್ಧಿಸಲು ಅನೇಕ ವರ್ಷಗಳೇ ಹಿಡಿಯುತ್ತವೆ. ಆ ವರ್ಷಗಳಲ್ಲಿ ಆತನು
ಯಾರೊಂದಿಗೂ ಮಾತನಾಡದೆಯೇ, ಕೇವಲ
ಹಸುಗಳೊಂದಿಗೆ ಇದ್ದುಬಿಡುತ್ತಾನೆ. ಅನತಿ
ಕಾಲದಲ್ಲಿಯೇ ಆತನಿಗೆ ಮಾನವ ಭಾಷೆಯೇ
ಮರೆತುಹೋಗುತ್ತದೆ. ಆಳವಾದ ಮೌನದಲ್ಲಿ ಯಾವ
ಮನುಷ್ಯರೊಂದಿಗೂ ವ್ಯವಹರಿಸದೇ ನಿಧಾನವಾಗಿ
ಹೊರಜಗತ್ತಿನ ಗುರುತನ್ನೇ ಕಳೆದುಕೊಳ್ಳುತ್ತಾನೆ.
ಹಸುಗಳು ಸಾವಿರವಾಗುವ ಹೊತ್ತಿಗೆ ಆತನಿಗೆ ಹೇಗೆ
ಎಣಿಸಬೇಕೆಂಬುದೇ ಮರೆತುಹೋಗುತ್ತದೆ. ಆತನು
ಆತ್ಮಾನಂದದ ಸುಂದರ ಸ್ಥಿತಿಯಲ್ಲಿ ಸುಮ್ಮನೆ
ಕಾಯುತ್ತಾ ಕುಳಿತಿರುತ್ತಾನೆ.
ಕೊನೆಗೆ ಒಂದು ಹಸುವು ಅವನ ಬಳಿಗೆ ಬಂದು,
'ಸ್ವಾಮಿ, ನಾವು ಒಂದು ಸಾವಿರವಾಗಿದ್ದೇವೆ. ಈಗ
ನಾವು ಗುರುಗಳ ಬಳಿಗೆ
ಹಿಂತಿರುಗಬಹುದು' ಎನ್ನುತ್ತದೆ.
ಆತನು 'ಹಾಗೋ? ಸರಿ' ಎಂದು ಉತ್ತರಿಸುತ್ತಾನೆ.
ಸತ್ಯಕಾಮನು ಆಗ ಪರಮಾನಂದದಲ್ಲಿದ್ದನು.
ಆತನಿಗೆ ಹಿಂತಿರುಗುವ ದಾರಿಯೇ ಮರೆತು
ಹೋಗಿತ್ತು. ಹಸುಗಳೇ ದಾರಿ ತೋರಿದವು.
ಹಿಂತಿರುಗುವ ದಾರಿಯಲ್ಲಿ ಪ್ರಾಣಿಗಳು, ಪಕ್ಷಿಗಳು
ಹಾಗೂ ತನ್ನ ಆಹಾರವನ್ನು ಬೇಯಿಸಿಕೊಳ್ಳಲು
ಹಚ್ಚುತ್ತಿದ್ದ ಬೆಂಕಿಯೂ ಸಹ ಅಂತಿಮ ಸತ್ಯವಾದ
ಪರಬ್ರಹ್ಮನ ಸ್ವಭಾವವನ್ನು ಬೋಧಿಸಿದವು.
ಸತ್ಯಕಾಮನು ಗುರುಗಳ ಬಳಿಗೆ ಹಿಂತಿರುಗಿದಾಗ, ಗುರುಗಳು ಆತನತ್ತ ನೋಡಿ, ನಕ್ಕು, 'ಸತ್ಯಕಾಮ, ನೀನು ಸತ್ಯ ಸಾಕ್ಷಾತ್ಕಾರವಾದವನಂತೆ ಬೆಳಗುತ್ತಿದ್ದೀಯೆ, ನಿನಗೆ ಯಾರು ಹೇಳಿಕೊಟ್ಟರು?' ಎನ್ನುತ್ತಾರೆ.
ಸತ್ಯಕಾಮನು ತಾನು
ಯಾವ ರೀತಿಯಲ್ಲಿ
ಪಕ್ಷಿಗಳ ಹಾಗೂ
ಪ್ರಾಣಿಗಳ ಮೂಲಕ
ಸತ್ಯವನ್ನರಿತನೆಂದು
ಹೇಳಿ, ಗುರುಗಳನ್ನು
ತಮ್ಮ ಮಾತುಗಳಲ್ಲಿಯೇ ಸತ್ಯಬೋಧನೆ
ಮಾಡಬೇಕೆಂದು ಬೇಡಿಕೊಳ್ಳುತ್ತಾನೆ.
ಗುರುಗಳು, 'ನಿನಗೆ ಸತ್ಯವೇನೆಂಬುದು ಇದಾಗಲೇ
ತಿಳಿದಿದೆ' ಎಂದು ಹೇಳಿ ಅವನನ್ನು
ಆಶೀರ್ವದಿಸುತ್ತಾರೆ.
ಸತ್ಯಕಾಮನು ಕೇವಲ ಇದ್ದುದರಿಂದಲೇ, ಕೇವಲ
ಪ್ರಕೃತಿ ಹೇಳುವುದನ್ನು ಆಲಿಸುವುದರಿಂದಲೇ,
ಸತ್ಯದಲ್ಲಿ ತಾನಾಗಿಯೇ ಪ್ರತಿಷ್ಠಿತನಾದನು ಎಂದು
ಕಥೆಯು ಹೇಳುತ್ತದೆ. ಆತನು ಜೀವನ್ಮುಕ್ತಿಯನ್ನು
ಪಡೆದನು.
ಸಂಪೂರ್ಣ ಮುಗ್ಧತೆಯು ಜೀವನ್ಮುಕ್ತಿಗೆ ಮಾರ್ಗ.
ಸತ್ಯಕಾಮನು ಗುರುಗಳನ್ನು ಸಾಕ್ಷಾತ್ಕಾರಕ್ಕಾಗಿ ಬೇಡಿಕೊಂಡನು. ಆದರೆ ಗುರುಗಳು ಹಸುಗಳ ಸಂಖ್ಯೆಯನ್ನು ವೃದ್ಧಿಸೆಂದು ಹೇಳಿದರು! ನಿಮ್ಮಲ್ಲಿ ಅನೇಕರು ಸಾಕ್ಷಾತ್ಕಾರಕ್ಕೂ ಹಸುಗಳಿಗೂ ಯಾವ ಸಂಬಂಧ? ಎಂದು ಕೇಳಬಹುದು. ಅದೃಷ್ಟವಶಾತ್ ಸತ್ಯಕಾಮನು ಅಷ್ಟೊಂದು ಬುದ್ಧಿವಂತನಾಗಿರಲಿಲ್ಲ. ಆತನ ಅದೃಷ್ಟಕ್ಕೆ ಆತನು ಶಾಸ್ತ್ರೋಕ್ತ ಬೌದ್ಧಿಕ ಶಿಕ್ಷಣವನ್ನು ಪಡೆದಿರಲಿಲ್ಲ. ಆದುದರಿಂದಲೇ ಆತನು ಈ ಪ್ರಶ್ನೆಯನ್ನು ಕೇಳಲಿಲ್ಲ! ಆತನು ಸರಳ, ಮುಗ್ಧ ಹಾಗೂ ನಿರಹಂಕಾರಿಯಾಗಿದ್ದು,
ತರ್ಕದಿಂದ
ಬೇಸತ್ತವರಾಗದೆ
ಹೋದರೆ
ಪರಿವರ್ತನೆಗೆ
ಸಿದ್ಧರಾಗಲು
ಆಗುವುದಿಲ್ಲ.
ಪರಿವರ್ತನೆಗೊಳ್ಳಲು ಸಿದ್ಧನಾಗಿದ್ದನು. ಆತನಿಗೆ ಯಾವ ತರ್ಕವೂ ತಿಳಿದಿರಲಿಲ್ಲ.
ತಿಳಿಯಿರಿ, ತರ್ಕವಿಲ್ಲದವರಾಗದಿದ್ದರೆ ಅಥವಾ
ತರ್ಕದಿಂದ ಬೇಸತ್ತವರಾಗದೆ ಹೋದರೆ
ಪರಿವರ್ತನೆಗೆ ನೀವು ಸಿದ್ಧರಾಗಲು ಆಗುವುದಿಲ್ಲ.
ತರ್ಕವು ನಿಮ್ಮ ಜೀವನವನ್ನೇ ನೀವು
ಅರ್ಥಮಾಡಿಕೊಳ್ಳಲು ನೆರವಾಗುವುದಿಲ್ಲ. ನಿಮ್ಮ
ಮನಸ್ಸಿನೊಳಗೆ ಅವಲೋಕಿಸಿಕೊಳ್ಳಲೂ ತರ್ಕವು
ಸಹಾಯ ಮಾಡುವುದಿಲ್ಲ. ನೀವು ಬದಲಾಗಲು ಅದು
ಹೇಗೆ ಸಹಾಯಕವಾಗಬಲ್ಲದು?
'ಸ್ವಾಮೀಜೀ ನೀವು ತರ್ಕವನ್ನೇಕೆ ವಿರೋಧಿಸುತ್ತೀರಿ?' ಎಂದು ಜನರು ನನ್ನನ್ನು ಕೇಳುತ್ತಾರೆ. ನಾನು ತರ್ಕವನ್ನು ವಿರೋಧಿಸುತ್ತಿಲ್ಲ. ನಾನು ಹೇಳುವುದೇನೆಂದರೆ, ನಿಮ್ಮ ಎಲ್ಲಾ ಸಂಕಟಗಳಿಗೂ ಬುದ್ಧಿವಂತಿಕೆಯಿಲ್ಲದ ತರ್ಕವೇ ಕಾರಣ ಎಂದು. ಬೆಳಗಿನಿಂದ ಸಂಜೆಯವರೆಗೂ ನಿಮ್ಮ ತರ್ಕವು ಸಾಕಷ್ಟು ರಾಜಕೀಯವನ್ನು ನಿಮ್ಮೊಳಗೆ ಸೃಷ್ಟಿಸುತ್ತದೆ.
ರಾಜಕೀಯವೆಂದರೇನು? ರಾಜಕೀಯವೆಂದರೆ ಒಂದೇ ವಿಷಯದ ಬಗ್ಗೆ ಇರುವ ಬೇರೆಬೇರೆ ಅಭಿಪ್ರಾಯಗಳಲ್ಲದೆ ಮತ್ತೇನೂ ಅಲ್ಲ, ಅಲ್ಲವೇ? ಈಗ ನಿಮ್ಮ ಮನಸ್ಸನ್ನು ಗಮನಿಸಿರಿ. ಅದು ಒಂದೇ ವಿಷಯದ ಬಗ್ಗೆ ಬೆಳಿಗ್ಗೆ ಒಂದನ್ನು ಹೇಳಿದರೆ ಸಂಜೆ ಬೇರೇನೋ ಹೇಳುತ್ತದೆ. ಇದು ನಿಮ್ಮ ಮನಸ್ಸಿನಲ್ಲಿ ದ್ವಂದ್ವವನ್ನುಂಟುಮಾಡುತ್ತದೆ. ನಿಮ್ಮ ಮನಸ್ಸೇ ಅಂತಹ ಒಂದು ದ್ವಂದ್ವ.
ಎಲ್ಲಾ ಆಧ್ಯಾತ್ಮಿಕ ಸಂಸ್ಥೆಗಳಲ್ಲಿಯೂ ಬಹಳವಾದ ರಾಜಕೀಯವಿರುತ್ತದೆ, ಎಂದು ಜನರು ಹೇಳುತ್ತಾರೆ. ನಾನು ಅವರನ್ನು ಕೇಳುತ್ತೇನೆ, 'ಅದರ ಅರ್ಥವಾದರೂ ಏನು?' ಎಂದು. ಈ ಹೇಳಿಕೆಯನ್ನು ನೀಡುವ ವ್ಯಕ್ತಿಗಳೊಳಗೇ ರಾಜಕೀಯವಿದೆ! ರಾಜಕೀಯವನ್ನು ನಿರ್ಮಿಸಲು ಇಬ್ಬರ ಅವಶ್ಯಕತೆಯೂ ಇಲ್ಲ. ಒಬ್ಬರಿದ್ದರೆ ಸಾಕೇ ಸಾಕು. ತರ್ಕದಿಂದ ಕೂಡಿದ ಒಬ್ಬ ವ್ಯಕ್ತಿಯೇ ಸಾಕು, ಏಕೆಂದರೆ ಆತನ ತರ್ಕ ಬೆಳಿಗ್ಗೆ ಒಂದನ್ನು ಹೇಳಿದರೆ ಸಂಜೆ ಮತ್ತಿನ್ನೇನೋ ಹೇಳುತ್ತದೆ! ಸಹಜವಾಗಿಯೇ ನಿಮ್ಮ ವಿರುದ್ಧ ನೀವೇ ಮಾಡುವ ಹೋರಾಟವೇ ರಾಜಕೀಯ! ನಾನು ಹೇಳುವುದು ಸರಿ ತಾನೆ? ಹಾಗಿದ್ದಲ್ಲಿ ಆಧ್ಯಾತ್ಮಿಕ ಸಂಸ್ಥೆಗಳಲ್ಲಿಯೂ ರಾಜಕೀಯವಿರುತ್ತದೆಂಬ ಹೇಳಿಕೆಯನ್ನೇಕೆ ಮಾಡುತ್ತಿದ್ದೀರಿ?
ನೀವು ಬೆಳಿಗ್ಗೆ ಕೈಗೊಳ್ಳುವ ತೀರ್ಮಾನಗಳನ್ನು ಹಾಗೂ ಸಂಜೆಯಲ್ಲಿ ಕೈಗೊಳ್ಳುವ ತೀರ್ಮಾನಗಳನ್ನೂ ನಿಮ್ಮ ಮುಂದಿಟ್ಟರೆ, ನಿಮ್ಮೊಳಗೇ ಒಬ್ಬ ರಾಜಕಾರಣಿಯು ಕುಳಿತಿರುವುದನ್ನು ಕಾಣುವಿರಿ!
ತರ್ಕವು ನಿಮ್ಮನ್ನು ಸರಳವಾಗಿಯೂ
ಮುಗ್ಧವಾಗಿಯೂ ಇರಗೊಡುವುದಿಲ್ಲ. ಅದು
ಪರಿವರ್ತನೆಯನ್ನು ಸುಲಭವಾಗಿ ಆಗಗೊಡುವುದಿಲ್ಲ.
ಪರಿವರ್ತನೆಯುಂಟಾಗಲು ತರ್ಕವನ್ನು ಮೀರಿ
ಹೋಗಬೇಕು. ತರ್ಕವಿಲ್ಲದಿದ್ದಾಗ ಮಾತ್ರವೇ
ಮುಗ್ಧತೆ ಇರಲು ಸಾಧ್ಯ. ಪರಿವರ್ತನೆಯು
ಸಂಭವಿಸಲು ಮುಗ್ಧತೆಯೇ ಅವಶ್ಯಕ.
ಸತ್ಯಕಾಮನ ವಿಚಾರದಲ್ಲಿ, ಆತನನ್ನು ಅದೃಷ್ಟವಶಾತ್ ತರ್ಕವು ಹಿಡಿದಿರಲಿಲ್ಲ. ಶಿಷ್ಯನು
ಗುರುಗಳ ಬಳಿಗೆ ಸಾಕ್ಷಾತ್ಕಾರಕ್ಕಾಗಿ ಹೋಗುತ್ತಾನೆ. ಹಾಗೂ ಗುರುಗಳು, 'ಸರಿ, ಈ ಹಸುಗಳನ್ನು ತೆಗೆದುಕೊಂಡು ಕಾಡಿಗೆ ಹೋಗು ಹಾಗೂ ಅವುಗಳು ಒಂದು ಸಾವಿರ ಹಸುಗಳಾಗುವವರೆಗೂ ಅಲ್ಲಿಯೇ ಇರು. ನಂತರ ಹಿಂದಿರುಗು!' ಎಂದು ಅವನಿಗೆ ಹೇಳುತ್ತಾರೆ.
ಇಂದಿನ ಮುಮುಕ್ಷುವೇನಾದರೂ ಆ ಶಿಷ್ಯನ ಸ್ಥಾನದಲ್ಲಿದ್ದಿದ್ದರೆ, ಬಹುಶಃ ಅವನು, 'ಗುರುಗಳು ತನ್ನನ್ನು ಶೋಷಣೆ ಮಾಡಲು ಯತ್ನಿಸುತ್ತಿದ್ದಾರೆ, ಅವರಿಗೆ ಒಂದು ಸಾವಿರ ಹಸುಗಳು ಬೇಕು. ಅದಕ್ಕಾಗಿ ಈ ಕೆಲಸವನ್ನು ಮಾಡು ಎಂದು ಹೇಳುತ್ತಿದ್ದಾರೆ. ಅವರು ತಮ್ಮ ಕಾರ್ಯಸಾಧನೆಗಾಗಿ ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ' ಎನ್ನುತ್ತಿದ್ದನೇನೋ. ತರ್ಕಕ್ಕೆ ಮುಗ್ಧತೆಯು ಸೋತಿದೆ! ಅದಕ್ಕಾಗಿಯೇ ಯಾವ ಆಧುನಿಕ ಅನ್ವೇಷಕನೂ ಅಂತಹ ಅದ್ಭುತವಾದ ತಂತ್ರಗಳನ್ನು ಪಡೆಯುವುದಿಲ್ಲ.
ತಿಳಿಯಿರಿ: ಇದು ಕೇವಲ ಒಂದು ಕಥೆಯಲ್ಲ. ಅದರ ಹಿಂದೆ ಪರಮ ಸತ್ಯವಿದೆ. ಮುಗ್ಧತೆಯಿಂದ ಸತ್ಯಕಾಮನು ಗುರುಗಳು ಹೇಳಿದುದನ್ನು ಸುಮ್ಮನೆ ಅನುಸರಿಸಿದನು. ಮುಂದೆ ಆತನು ಎಣಿಕೆಯ ತರ್ಕವನ್ನೇ ಮರೆತನು. ಆತನು ಭಾವಪರವಶತೆಯಲ್ಲಿಯೂ ಸಂತೋಷದಲ್ಲಿಯೂ ಸಂಪೂರ್ಣವಾಗಿ ಮುಳುಗಿಹೋದನು. ಮನಸ್ಸು ಕೆಲಸ ಮಾಡುವುದನ್ನು ನಿಲ್ಲಿಸಿತು. ಆತನು ಒಂದು ಸಾವಿರಕ್ಕಾಗಲಿ, ಎರಡು ಸಾವಿರಕ್ಕಾಗಲಿ, ಲೆಕ್ಕಿಸಲಿಲ್ಲ. ಮುಗ್ಧತೆ ಮತ್ತು ಸ್ವೀಕಾರ ಮನೋಭಾವಗಳಷ್ಟೇ ಅವನಲ್ಲಿ ಆ ಮಹತ್ತರ ಅನುಭವವಾದ 'ಜ್ಞಾನೋದಯ'ವಾಗಲು ಕಾರಣವಾಯಿತು. ಸಂಪೂರ್ಣವಾಗಿ ಅಂಗೀಕರಿಸಿದಾಗ ಮನಸ್ಸು ಬೇಕಾಗುವುದಿಲ್ಲ. ನೀವು ಸಂಘರ್ಷದೊಂದಿಗೂ, ಹೋರಾಟದೊಂದಿಗೂ ಜೀವಿಸಿದಾಗ ಮಾತ್ರವೇ ಮನಸ್ಸು ಬೇಕಾಗುವುದು. ಕೇವಲ ಈ ಕ್ಷಣದಲ್ಲಿ ಹೊರಪ್ರಪಂಚದಲ್ಲಿಯೂ, ಒಳಪ್ರಪಂಚದಲ್ಲಿಯೂ, ನಿಮ್ಮನ್ನು ನೀವು ಒಪ್ಪಿಕೊಳ್ಳಿರಿ. ನೀವು ಜ್ಞಾನಿಗಳಾಗಿ ಹೊರನಡೆಯುತ್ತೀರಿ.
ಬಹಳಷ್ಟು ವರ್ಷಗಳ ಕಾಲ ಗುರುಗಳು ಸುಮ್ಮನೆ
ಹೇಳಿದುದನ್ನು ಸಂಪೂರ್ಣವಾಗಿ ಒಪ್ಪಿಕೊಂಡು,
ಅದರಂತೆಯೇ ಸತ್ಯಕಾಮನು ಇದ್ದುಬಿಟ್ಟಿದ್ದನು.
ಅವನಿಗೆ ಜ್ಞಾನೋದಯವಲ್ಲದೇ ಮತ್ತಿನ್ನೇನಾಗಲು
ಸಾಧ್ಯ!
'ಈ ಸರಳವಾದ ಸ್ವೀಕಾರ ಅಂತಹ ಬೃಹತ್ ಕೆಲಸವನ್ನು ಹೇಗೆ ಮಾಡಬಲ್ಲುದು?' ಎಂದೆನಿಸಬಹುದು. ಸಮಸ್ಯೆಯೇನೆಂದರೆ ಆಧ್ಯಾತ್ಮಿಕ ಜ್ಞಾನವನ್ನೂ ಸಹ ವಿಚಾರ ಮಾಡುವ ಮನಸ್ಸಿನಿಂದ ಪಡೆದುಕೊಳ್ಳಲು ಹೋಗುತ್ತೇವೆ. ನಾವು 'ಹೇಗೆ' ಎಂಬುದನ್ನು ಆ ವೈಚಾರಿಕ ಮನಸ್ಸಿನಿಂದ ಕೇಳುತ್ತೇವೆ. ವೈಚಾರಿಕತೆಯು ಯಾವಾಗಲೂ ಪ್ರಶ್ನಿಸುತ್ತಿರುತ್ತದೆ. ಆದರೆ ಮುಗ್ಧತೆಯು ಗುರುಗಳು ಹೇಳಿದುದನ್ನು ನೇರವಾಗಿ ಅಭ್ಯಾಸ ಮಾಡಲು ಪ್ರಾರಂಭಿಸುತ್ತದೆ. ಅದೇ ವ್ಯತ್ಯಾಸ.
ನೀವು ಸಂಪೂರ್ಣವಾಗಿ ಮುಗ್ಧರಾಗಿದ್ದು ತೆರೆದ
ಮನಸ್ಕರಾಗಿದ್ದರೆ ದೀಕ್ಷೆಯೇ ಜೀವನ್ಮುಕ್ತಿ. ಅದು
ಸಂಭವಿಸಲು ಕೇವಲ ಒಂದೇ ಒಂದು ಪದ ಸಾಕು.
ಶಿವ ಸೂತ್ರಗಳಲ್ಲಿ, 'ಗುರುಗಳು ಸತ್ಯವನ್ನು
ವ್ಯಕ್ತಪಡಿಸುತ್ತಿರುವಾಗ ಕೇವಲ ಆಲಿಸಿರಿ ಹಾಗೂ
ಜೀವನ್ಮುಕ್ತಿಯನ್ನು ಪಡೆಯಿರಿ!' ಎಂದು ಶಿವನು ಹೇಳುತ್ತಾನೆ.
ಕೇವಲ ಆಲಿಸುವುದು ಜೀವನ್ಮುಕ್ತಿಗೆ ಹೇಗೆ ದಾರಿಮಾಡಿಕೊಡುತ್ತದೆ? ನಮಗಾಗದಿರುವುದು ಸತ್ಯಕಾಮನಿಗೇಕಾಯಿತು? ಮೊದಲನೆಯದಾಗಿ, ಆತನು ಮುಗ್ಧನಾಗಿದ್ದನು. ಆದುದರಿಂದ ಗುರುಗಳ ಸೂಚನೆಗಳನ್ನು ಪಡೆಯುವಷ್ಟು ಬುದ್ಧಿಶಾಲಿಯಾಗಿದ್ದನು. ಎರಡನೆಯದಾಗಿ, ಅದರೊಂದಿಗೆ ಬಾಳುವಷ್ಟು ಧೈರ್ಯವಂತನಾಗಿದ್ದನು. ಆತನಿಗೆ ಗುರುಗಳ ಮೇಲೆ ಸಂಪೂರ್ಣ ವಿಶ್ವಾಸವಿತ್ತು. ವಿಶ್ವಾಸವಿದ್ದರೆ, ಮುಗ್ಧತೆಯು ಇರುತ್ತದೆ.
ಒಂದು ಸಾವಿರ ಹಸುಗಳನ್ನು ನನಗೆ ತಂದುಕೊಡಿರಿ ಎಂದು ನಾನು ನಿಮ್ಮನ್ನು ಕೇಳುತ್ತಿಲ್ಲ, ಇಲ್ಲ! ನೀವು ಸತ್ಯಕಾಮನಂತೆ, ಅದೇ ಭಾವದಲ್ಲಿ ಬನ್ನಿರೆಂದು ಕೇಳುತ್ತಿದ್ದೇನೆ. ಅದೇ ಮುಗ್ಧತೆಯೊಂದಿಗೆ ಬನ್ನಿರಿ. ಸತ್ಯಕಾಮ ಮಾಡಿದುದನ್ನೇ ನೀವು ಮಾಡಬೇಕಾಗಿಲ್ಲ, ಆದರೆ ನೀವು ಸತ್ಯಕಾಮನಂತಿರಬೇಕು. ನೀವು ಹಾಗಿದ್ದರೆ ಈ ಕ್ಷಣವೇ ಪರಿವರ್ತನೆಯಾಗಲು ಸಾಧ್ಯ. ಇದೇ ಕ್ಷಣದಲ್ಲಿಯೇ ಬೆಳಕಿನ ಸಂವಹನವು ಸಂಭವಿಸಬಲ್ಲದು.
ಬರಿದಾಗಿರಿ
ಉಪನಿಷತ್ತು ಎಂಬ ಪದದ ಅರ್ಥ ಗುರುಗಳ ಪದತಲದಲ್ಲಿ ಕುಳಿತುಕೊಳ್ಳುವುದು ಎಂದು. ಪ್ರಾಚೀನ ಭಾರತದಲ್ಲಿ ಗುರುಶಿಷ್ಯರ ಗುರುಕುಲ ಸಂಪ್ರದಾಯವಿತ್ತು. ಮಕ್ಕಳಿಗೆ ಏಳು ವರ್ಷಗಳಾದಾಗ ಅವರನ್ನು ಗುರುಗಳ ಬಳಿ ಬಿಡಲಾಗುತ್ತಿತ್ತು. ಅಲ್ಲಿ ಅವರು ತಮ್ಮ ಪ್ರಜ್ಞೆಯಲ್ಲಿ ಸುಂದರವಾಗಿ ಕೇಂದ್ರೀಕರಿಸಿಕೊಂಡು ಬೆಳೆಯುತ್ತಿದ್ದರು. ಗುರುಗಳು ಆಧ್ಯಾತ್ಮಿಕ ಸತ್ಯಗಳ ಜೀವಂತ ಸಾಕಾರ ಮೂರ್ತಿಗಳು. ಅವರ ಆಲೋಚನೆಗಳು, ನುಡಿಗಳು ಹಾಗೂ ಕ್ರಿಯೆಗಳು ಅಂತಿಮ ಸತ್ಯದಿಂದ ಉದ್ಭವಿಸುತ್ತವೆ. ಶಿಷ್ಯರು ಕೇವಲ ಅವರ ಸನ್ನಿಹದಲ್ಲಿ ಜೀವಿಸುವುದರಿಂದಲೇ ಸತ್ಯವನ್ನು ಗ್ರಹಿಸಿಕೊಳ್ಳುತ್ತಾರೆ.
ಭಾರತದ ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿಗಳೆಂಬ ಜ್ಞಾನಿಗಳು ಹೇಳುವುದೆೇನೆಂದರೆ, 'ಗುರುಗಳೊಂದಿಗೆ ಕುಳಿತುಕೊಳ್ಳುವುದು ಅವರ ಪ್ರಾಕೃತಿಕ ಸನ್ನಿಹದಲ್ಲಿ ಇರುವುದು ಮಾತ್ರವಲ್ಲ. ಆತನನ್ನು ನಿಮ್ಮ ಹೃದಯದಲ್ಲಿ ಇಟ್ಟುಕೊಳ್ಳುವುದು, ಅವರೊಡನೆ ತಾತ್ವಿಕವಾದ ಸಾಮರಸ್ಯ ಹೊಂದುವುದು ಮತ್ತು ನಿಮ್ಮನ್ನು ಅವರೊಂದಿಗೆ ಶ್ರುತಿಗೂಡಿಸುವುದೇ ಆಗಿರುವುದು. ಇದೇ ಉಪನಿಷತ್ತಿನ ತಂತ್ರವೆಲ್ಲವೂ' ಎಂದು. ಗುರುಗಳು ಪರಮೋನ್ನತ ಪ್ರಜ್ಞೆಯ ಚೈತನ್ಯ. ನೀವು ಅವರೊಂದಿಗೆ ಶ್ರುತಿಗೂಡಿಸಿಕೊಂಡಾಗ ಆ ಚೈತನ್ಯಕ್ಕೆ ಶ್ರುತಿಗೂಡಿಸಿಕೊಳ್ಳುವಿರಿ. ಮುಗ್ಧತೆ ಮತ್ತು ತೆರೆದ ಮನಸ್ಸಿನಿಂದ ಮಾತ್ರವೇ ಶ್ರುತಿಗೂಡಿಸಿಕೊಳ್ಳುವುದು ಸಾಧ್ಯ.
ತೆರೆದಿರುವಿಕೆ ಎಂಬುದು ಬರಿದಾಗಿರುವಿಕೆ. ಬರಿಯ ಪಾಂಡಿತ್ಯ ನಿಮ್ಮನ್ನು ತುಂಬದಿರಲಿ. ಪಾಂಡಿತ್ಯವು ಕೇವಲ ಉಪಕರಣವಾಗಿರುವುದಷ್ಟೆ. ಅದು ನಿಮ್ಮ ಸತ್ವವಲ್ಲ. 'ಇದಲ್ಲ, ಇದಲ್ಲ' ಎಂದು ಎಲ್ಲಾ ಪಾಂಡಿತ್ಯವನ್ನೂ ತಿರಸ್ಕರಿಸಿರಿ. ನಾನು
ತಿರಸ್ಕರಿಸಿರಿ ಎಂದಾಗ, ಅಂತಿಮ ಸತ್ಯವಲ್ಲದೆ ಮಧ್ಯದ ಹಂತದಲ್ಲಿರುವ ಯಾವ ತಿಳಿವಳಿಕೆಯಲ್ಲೂ ಕೊನೆಗೊಳ್ಳುವುದು ಬೇಡ ಎಂದರ್ಥ. ಏಕೆಂದರೆ ನಿಮ್ಮಲ್ಲಿ ಸತತವಾಗಿ ಉದ್ಭವಿಸುವ ಪ್ರತಿಯೊಂದನ್ನೂ ಕೈಬಿಟ್ಟಾಗ ನಿಮಗೆ ಬೇರೆ ಮಾರ್ಗವಿಲ್ಲ. ನೀವು ನಿಮ್ಮೊಳಗೇ ದೂಡಲ್ಪಡುವಿರಿ. ಅಲ್ಲೇ ನಿಮಗೆ ಅಂತಿಮ ಸತ್ಯವು ದೊರಕುವುದು. ಆಗಲೇ ನೀವು ಸತ್ಯದಿಂದ ತುಂಬಿಕೊಳ್ಳಲು ಸಿದ್ಧವಾಗುವುದು. ಅದು ಮಾತ್ರವೇ 'ಉಪನಿಷತ್ತ'ನ್ನು ಉಂಟುಮಾಡಲು ಸಾಧ್ಯ.
ನೀವು ಮಕ್ಕಳನ್ನು ಗಮನಿಸಿದರೆ, ಅವರ ಕಣ್ಣುಗಳು ಯಾವಾಗಲೂ ಆಶ್ಚರ್ಯ ಮತ್ತು ಹೊಸತನದಿಂದ ಕೂಡಿರುತ್ತವೆ. ಅವರು ಒಳಗೆ ಯಾವಾಗಲೂ ಬರಿದಾಗಿರುತ್ತಾರೆ. ಅವರು ಯಾವ ವಿಷಯದಲ್ಲಿಯೂ ಯಾವ ಅಭಿಪ್ರಾಯವನ್ನೂ ಹೊಂದಿರುವುದಿಲ್ಲ. ಅವರು ಸ್ವೀಕರಿಸಲು ಸಿದ್ಧರಾಗಿರುತ್ತಾರೆ. ಅವರ ಸಿದ್ಧತೆಯೂ ಅವರ ಕಣ್ಣುಗಳಲ್ಲಿ ವ್ಯಕ್ತವಾಗುತ್ತದೆ. ಅಂತಹ ಕಣ್ಣುಗಳಿರುವ ವಯಸ್ಕನನ್ನು ಎಂದಾದರೂ ನೋಡಿದ್ದೀರಾ? ನಮಗೆ ವಯಸ್ಸಾಗುತ್ತಿದ್ದಂತೆ ಕಣ್ಣುಗಳು ಹೊಳಪನ್ನು ಕಳೆದುಕೊಳ್ಳುತ್ತವೆ. ಏಕೆಂದರೆ ನಾವು ತಿಳಿದುಕೊಳ್ಳಲು ಆರಂಭಿಸುತ್ತಿದ್ದಂತೆ ನಿಸ್ತೇಜರಾಗುತ್ತೇವೆ. ಪಾಂಡಿತ್ಯವು ನಮ್ಮನ್ನು ಮಂದಗೊಳಿಸುತ್ತದೆ. ನಮಗೆ ಬಹಳ ವಿಷಯಗಳು ತಿಳಿದಿರಬಹುದು. ಆದರೆ ಆ ತಿಳಿವಳಿಕೆಯು ಯಾವ ರೀತಿಯಲ್ಲಿಯೂ ನಮ್ಮನ್ನು ಮಂದಗೊಳಿಸಬಾರದು. ನಾವು ಯಾವಾಗಲೂ ಮನಃಸ್ಥಿತಿಯಲ್ಲಿ ಬರಿದಾಗಿರಬೇಕು.
ಯಾವ
ಅಭಿಪ್ರಾಯಗಳೂ
ಇಲ್ಲದೆಯೋ, ವಿವರಣಾ
ಪದಗಳೂ ಇಲ್ಲದೆಯೋ, ನಿಗದಿತ
ಆಲೋಚನೆಗಳಿಲ್ಲದೆಯೋ, ಜೀವನವನ್ನು ಕೇವಲ
ವೀಕ್ಷಿಸಿದರೆ, ಆಗ ನೀವು ತಯಾರಿಸಿದ ಟೀಯನ್ನು
ತುಂಬುವ ಒಂದು ಖಾಲಿ ಬಟ್ಟಲಿನಂತಿರುತ್ತೀರಿ.
ಏನನ್ನೂ ಹಿಡಿದಿಟ್ಟುಕೊಳ್ಳದೇ ಇರುವುದರಿಂದ
ಹಾಗೂ ಬರಿದಾಗಿರುವುದರಿಂದ ಮಾತ್ರ
ಸ್ವೀಕರಿಸುತ್ತೀರಿ. ಆಗ ನೀವು ಉತ್ಸಾಹವನ್ನು
ಕಳೆದುಕೊಳ್ಳುವುದೇ ಇಲ್ಲ. ನಿಮಗೆ
ಬೇಸರವಾಗುವುದೇ ಇಲ್ಲ. ನೀವು ಒಂದು
ಮಗುವಿನಂತೆ ಮುಗ್ಧರಾಗಿ ಉಲ್ಲಾಸದಿಂದಿರುತ್ತೀರಿ.
ಚಿಕ್ಕ ಹುಡುಗಿಯೊಬ್ಬಳು ಒಂದು ಕಾಗದದ ಮೇಲೆ
ಏನನ್ನೋ ಬರೆಯುತ್ತಿದ್ದಳು. ಅವಳ ತಂದೆ
ಅದೇನೆಂದು ಅವಳನ್ನು ಕೇಳಿದನು.
‘ನಾನೊಂದು ಪತ್ರವನ್ನು ಬರೆಯುತ್ತಿದ್ದೇನೆ’ ಎಂದಳು.
‘ಯಾರಿಗೆ?’ ಎಂದು ತಂದೆಯು ಕೇಳಿದನು.
‘ನನಗೆ ’ಎಂದು ಉತ್ತರಿಸಿದಳು.
‘ಆ ಕಾಗದದ ವಿಷಯವೇನು?’ ಎಂದು ಆತನು ಕೇಳಿದನು.
ಅವಳು, ‘ನನಗೇನು ಗೊತ್ತು? ನಾನು ಅದನ್ನು
ಅಂಚೆಗೆ ಹಾಕಿಲ್ಲ ಹಾಗೂ ಅಲ್ಲಿಂದ ಅದು ನನಗಿನ್ನೂ
ಬಂದಿಲ್ಲ’ ಎಂದು ಉತ್ತರಿಸಿದಳು.
ಮುಗ್ಧತೆಯ ಹಿಂದೆ ಅಷ್ಟೊಂದು ತಾಜಾತನವಿದೆ!
ಜೀವನವು ಅದರೊಂದಿಗೆ ಪ್ರತಿ ನಿಮಿಷವೂ ತೆರೆದುಕೊಳ್ಳುತ್ತಿರುವ ರಹಸ್ಯ. ಅದೇ ಸತ್ಯ. ಜೀವನವು ಎಂದೆಂದಿಗೂ ತೆರೆದುಕೊಳ್ಳುತ್ತಿರುವ ರಹಸ್ಯ. ಮನಸ್ಸೇ ಅದನ್ನು ಅಚ್ಚುಹಾಕುತ್ತಿರುತ್ತದೆ. ಮನಸ್ಸು ಯಾವಾಗಲೂ ಜೀವನವನ್ನು ತನ್ನದೇ ಆದ ನಿರ್ದಿಷ್ಟ ಪ್ರಕಾರಕ್ಕೆ ಒಳಪಡಿಸುತ್ತದೆ. ಆದರೆ ಮುಗ್ಧತೆಯು ಜೀವನದ ಪ್ರಕಾರವೇ ಜೀವನವನ್ನು ಒಪ್ಪಿಕೊಳ್ಳುತ್ತದೆ.
ಮಕ್ಕಳೊಂದಿಗೆ ಕಣ್ಣುಮುಚ್ಚಾಲೆ ಆಟವನ್ನು ಆಡಿದರೆ, ಅವರು ನೀವು ಹಿಂದಿನ ಬಾರಿ ಎಲ್ಲಿ ಬಚ್ಚಿಟ್ಟುಕೊಂಡಿದ್ದಿರೋ ಅವರೂ ಸಹ ಅಲ್ಲಿಯೇ ಬಚ್ಚಿಟ್ಟುಕೊಳ್ಳುವುದನ್ನು ಕಾಣುವಿರಿ. ಏನೋ ಒಂದು ಸಲವಲ್ಲ. ಆದರೆ ಅನೇಕ ಬಾರಿ! ಇದು ಹೇಗೆ ಸಾಧ್ಯ? ಒಂದು ವಿಷಯದಿಂದಾಗಿ: ಅವರು ಮುಗ್ಧತೆಯಿಂದ ಸಾಗುತ್ತಾರೆ. ಅವರ ತಲೆಯಲ್ಲಿ ಯಾವ ಆಲೋಚನೆಯೂ ಇರುವುದಿಲ್ಲ. ಅವರು ಕೇವಲ ತಮ್ಮ ಹೃದಯವನ್ನೇ ಅನುಸರಿಸುತ್ತಾರೆ. ಅವರು ನಿಮ್ಮ ಮೇಲೆ ಅಪಾರವಾದ ವಿಶ್ವಾಸವಿಡುತ್ತಾರೆ. ಹಾಗಾಗಿ ನೀವು ಅಲ್ಲಿ ನೋಡುವಿರೆಂಬ ಸಂಶಯವೂ ಇಲ್ಲದೆ ಸುಮ್ಮನೆ ನೀವು ಎಲ್ಲಿ ಬಚ್ಚಿಟ್ಟುಕೊಂಡಿದ್ದಿರೋ ಅವರೂ ಅಲ್ಲಿಯೇ ಬಚ್ಚಿಟ್ಟುಕೊಳ್ಳುತ್ತಾರೆ! ಅದೇ ಅದರ ಸೊಗಸು.
ಮುಗ್ಧತೆಯು ನಂಬುತ್ತದೆ. ಮುಗ್ಧತೆಗೆ ಶೋಷಣೆಗೊಳಗಾಗುವ ಚಿಂತೆಯಿಲ್ಲ. ನರಶಾಸ್ತ್ರ ವಿಜ್ಞಾನಿಗಳು ಈಗ ಇದಕ್ಕೆ ವಿವರಗಳನ್ನು ನೀಡುತ್ತಾರೆ. ಐದು ಅಥವಾ ಆರು ವರ್ಷದವರೆಗೂ ಮಗುವಿನ ಮೆದುಳಿನ ಅಲೆಗಳ ಮಾದರಿಗಳು ಧೀಟಾ ಹಾಗೂ ಡೆಲ್ಟಾ ಸ್ಥಿತಿಯಲ್ಲಿರುತ್ತವೆ. ಇವುಗಳು ನಾವು ಕನಸು ಕಾಣುವ ಹಾಗೂ ನಿದ್ರಿಸುವ ಅತ್ಯಂತ ಪರಿಣಾಮಕ್ಕೊಳಗಾಗಬಹುದಾದ ಮನಃಸ್ಥಿತಿಗಳು. ಅವು ಗುರುತು ರಹಿತ ಸ್ಥಿತಿಗಳು. ಹನ್ನೆರಡು ವರ್ಷದವರೆಗೂ ಮೆದುಳಿನ ಅಲೆಗಳು ಆಲ್ಫಾ ಸ್ಥಿತಿಯಲ್ಲಿದ್ದು ಇನ್ನೂ ಕೂಡ ಸುಲಭವಾಗಿ ಪರಿಣಾಮಕ್ಕೊಳಗಾಗಬಹುದಾದ ಸ್ಥಿತಿಯಲ್ಲಿಯೇ ಇರುತ್ತವೆ ಎಂದು ಹೇಳುತ್ತಾರೆ. ಈ ಕಾರಣದಿಂದಲೇ ಮಕ್ಕಳು ಬಹುಪಾಲು ವಯಸ್ಕರು ಹೇಳುವುದನ್ನು ನಂಬುತ್ತಾರೆ. ಅವರು ಮುಗ್ಧತೆಯಿಂದ ನಂಬುತ್ತಾರೆ.
ಬರಿದಾದ ಕಣ್ಣುಗಳಿಂದ ನೋಡಿದಾಗ ನೀವು
ನೋಡಿದ್ದೆಲ್ಲವೂ ಗಾಢವಾಗುತ್ತದೆ. ಹಾಗೂ ನೂತನ
ಅಂತರ್ದೃಷ್ಟಿಗೂ ಕಾರಣವಾಗುತ್ತವೆ. ಜೀವನವು
ನಿರಂತರವಾಗಿ ತೆರೆದುಕೊಳ್ಳುತ್ತಿರುವ
ರಹಸ್ಯವಾಗುತ್ತದೆ. ನಿಮ್ಮ ಪ್ರಶ್ನಿಸುವ
ಮನೋಭಾವವೇ ಬದಲಾಗುತ್ತದೆ, ಪ್ರಶ್ನೆಯ
ಸ್ವಭಾವವು ಪ್ರಶ್ನಿಸುವವರ ಮುಗ್ಧತೆಯ ಆಳವನ್ನು
ವ್ಯಕ್ತಪಡಿಸುತ್ತದೆ.
ಒಂದು ಪ್ರಶ್ನೆಯನ್ನು ಕೇಳಲು ಮೂರು
ರೀತಿಗಳಿವೆ. ನೀವು ಮುಗ್ಧತೆಯಿಂದ ಕೇಳಬಹುದು,
ಅಥವಾ ನಿಮ್ಮ ಪಾಂಡಿತ್ಯವನ್ನು ಪ್ರದರ್ಶಿಸುವ
ಸಲುವಾಗಿ ಕೇಳಬಹುದು ಅಥವಾ ಮೂರನೆಯದಾಗಿ
ನಿಮಗೆ ತಿಳಿದಿರುವುದು ಸರಿಯೆಂಬುದನ್ನು
ಖಚಿತಪಡಿಸಿಕೊಳ್ಳಲು ಕೇಳಬಹುದು. ನೀವು
ಮುಗ್ಧತೆಯಿಂದ ಕೇಳಿದಾಗ ಉತ್ತರವನ್ನು ಪಡೆಯಲು
ಸಂಪೂರ್ಣವಾಗಿ ಸಿದ್ಧರಿರುತ್ತೀರಿ. ಪಾಂಡಿತ್ಯದ
ಪರಿಧಿಯಿಂದ ಪ್ರಶ್ನಿಸಿದರೆ ನೀವು ಸಂಪೂರ್ಣವಾಗಿ
ಉತ್ತರವನ್ನು ಕಳೆದುಕೊಳ್ಳುತ್ತೀರಿ. ನೀವು
ಖಚಿತಪಡಿಸಿಕೊಳ್ಳಲು ಕೇಳಿದಾಗ, ಉತ್ತರವನ್ನು
ಕೇವಲ ಪ್ರತಿರೋಧಿಸುತ್ತೀರಿ. ಸರಿಯಾದ ಕಲಿಕೆ
ಮತ್ತು ತಿಳಿವಳಿಕೆಯ ರಹಸ್ಯವು ಮುಗ್ಧತೆಯ ನೆಲೆಯಿಂದ ಕಾರ್ಯನಿರ್ವಹಿಸುವುದಾಗಿದೆ.
ಸಮಸ್ಯೆಯೆಂದರೆ, ಯಾರು ಬರಿದಾಗಿಲ್ಲವೋ
ಅವರಿಗೆ ತಾವು ಬರಿದಾಗಿಲ್ಲವೆಂದು ಎಂದಿಗೂ
ಗೊತ್ತಾಗುವುದಿಲ್ಲ. ಅವರು
ತುಂಬಿಹೋಗಿರುವರೆಂದು ಅವರಿಗೆ
ಹೇಳಲಾಗುವುದಿಲ್ಲ. ಅವರು ಅದನ್ನು
ಅರ್ಥಮಾಡಿಕೊಳ್ಳುವುದೂ ಇಲ್ಲ, ಒಪ್ಪಿಕೊಳ್ಳುವುದೂ
ಇಲ್ಲ. ಆದರೆ ಮುಗ್ಧನಾದ ಮನುಷ್ಯನು ಹೀಗೆ
ಹೇಳಬಹುದು, ‘ನನ್ನ ತಿಳಿವಳಿಕೆಯಿಂದ ನಾನು
ಅದನ್ನು ಕಳೆದುಕೊಂಡೆ. ವಾಸ್ತವವಾಗಿ ನನಗೆ
ತಿಳಿಯದು. ನಾನೀಗ ತಿಳಿಯಲು ಕಾತರನಾಗಿದ್ದೇನೆ’
ಎಂದು. ಈ ರೀತಿಯ ಅಂತಃಸ್ಥಳವು ಉಂಟಾದ
ಕ್ಷಣವೇ ಕಲಿಕೆಯು ಆಗುತ್ತಲಿರುವುದು. ಈ
ಅಂತಃಸ್ಥಳದಲ್ಲಿ ತಿಳಿವಳಿಕೆಯ ಅಹಂಕಾರ
ಇರುವುದಿಲ್ಲ. ಪ್ರತಿರೋಧವು ಬಿಟ್ಟು ಹೋಗಿ, ಕೇವಲ
ಶುದ್ಧ ಗ್ರಹಿಕೆ ಇರುತ್ತದೆ.
ತಿಳಿವಳಿಕೆಯ ಸಂಗ್ರಹಣೆಗೆ ಬೇಕಾಗುವ
ಪ್ರಚೋದನೆಯನ್ನು ಅರ್ಥಮಾಡಿಕೊಂಡಾಗ
ಮಾತ್ರವೇ ಪಾಂಡಿತ್ಯದಿಂದ ವಿಮೋಚನೆಯನ್ನು
ಪಡೆಯಲು ಸಾಧ್ಯ ಎಂದು ಮಹಾನ್ ತತ್ವಜ್ಞಾನಿ
ಜೆ. ಕೃಷ್ಣಮೂರ್ತಿಯವರು ಸುಂದರವಾಗಿ
ಹೇಳುತ್ತಾರೆ.
ಸಾಮಾನ್ಯವಾಗಿ ತಿಳಿವಳಿಕೆಗೆ ಪ್ರಚೋದನೆ ಯಾವುದು? ನೋಡಿ, ವರ್ತಮಾನವು ವಿಶ್ವಶಕ್ತಿಯ ತೆರೆದುಕೊಳ್ಳುತ್ತಿರುವ ಪವಾಡ ಮತ್ತು ರಹಸ್ಯ. ನಾವು ಅದನ್ನು ಪಾಂಡಿತ್ಯದ ಜಾಲದಿಂದ ಗ್ರಹಿಸಲು ಪ್ರಯತ್ನಿಸುತ್ತೇವೆ. ತಿಳಿವಳಿಕೆಯ ಸಂಗ್ರಹಣೆಗೆ ಅದೇ ಪ್ರಚೋದನೆ. ಆದರೆ ಅದು ಎಂದಿಗೂ ಆಗಲಾರದು!
> ತಿಳಿಯದಿರುವುದನ್ನು ತಿಳಿಯಲು ಅದಕ್ಕೆ ಶರಣಾಗುವ ಮೂಲಕವೇ ಸಾಧ್ಯ.
ತಿಳಿಯದಿರುವುದನ್ನು
ತಿಳಿದಿರುವುದರಿಂದ ಎಂದಿಗೂ ಕಟ್ಟಿಹಾಕ-
ಲಾಗುವುದಿಲ್ಲ. ತಿಳಿಯದಿದ್ದದನ್ನು ಅದಕ್ಕೆ
ಶರಣಾಗುವ ಮೂಲಕವೇ ತಿಳಿಯಲು ಸಾಧ್ಯ.ಆ
ಶರಣಾಗುವಿಕೆಯನ್ನೇ ಬುದ್ಧಿವಂತಿಕೆ ಎನ್ನುವುದು!
ಬುದ್ಧಿವಂತಿಕೆಯು ವರ್ತಮಾನದ ರಹಸ್ಯವನ್ನು
ಒಪ್ಪಿಕೊಳ್ಳುತ್ತದೆ ಮತ್ತು ಸಂತೋಷವಾಗಿ
ಶರಣಾಗುತ್ತದೆ. ಆ ಸಂತೋಷವೇ ಮುಗ್ಧತೆಯ
ಸಂತೋಷ.
ಪಾಂಡಿತ್ಯವು ಪ್ರಸಕ್ತ ಕ್ಷಣದ ರಹಸ್ಯವನ್ನು
ನಿರಾಕರಿಸುತ್ತದೆ. ಅದನ್ನು ಪ್ರತಿನಿಮಿಷವೂ
ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ, ಆದರೆ
ವರ್ತಮಾನವನ್ನು ಖಚಿತಪಡಿಸಿಕೊಳ್ಳಲು ಆಗುವುದೇ
ಇಲ್ಲ. ಹಾಗಾಗಿ ನೀವು ಸತತವಾಗಿ ಅಜ್ಞಾತದ
ಭಯದಲ್ಲೇ ಇರುತ್ತೀರಿ. ಪ್ರಸಕ್ತ ಕ್ಷಣವನ್ನು
ಖಚಿತಪಡಿಸಿಕೊಳ್ಳುವ ಪ್ರಯತ್ನದ ಮೂಲಕವಾಗಿ
ಅಜ್ಞಾತ ಭಯ ಹುಟ್ಟುತ್ತದೆ. ಇಲ್ಲದಿದ್ದರೆ ನಿಮಗೆ
ಭಯವಿರುವುದಿಲ್ಲ! ಪ್ರಸಕ್ತ ಕ್ಷಣವು ಒಂದು
ರಹಸ್ಯವೆಂಬುದು ನಿಮಗೆ ಬಹಳ ಸ್ಪಷ್ಟವಾಗಿ
ತಿಳಿದಿರುತ್ತದೆ!
ಪಾಂಡಿತ್ಯದ ಮೂಲಕ ಆ ಕ್ಷಣದ ಬಗ್ಗೆ ಇರುವ ‘ಅಜ್ಞಾನ’ದಿಂದ ಹೇಗಾದರೂ ತಪ್ಪಿಸಿಕೊಳ್ಳಲು ಯತ್ನಿಸುತ್ತೀರಿ. ಅಹಂಕಾರಕ್ಕೆ ಅಜ್ಞಾನವೆಂದರೆ ಏನೂ ಇಲ್ಲದಿರುವುದು ಎಂದರ್ಥ. ಅದಕ್ಕೆ ಏನೂ ಇಲ್ಲದ್ದನ್ನು ನಿಭಾಯಿಸಲಾಗುವುದಿಲ್ಲ. ಆದರೆ
| ಕ್ರಿಯಾ | ಮುಗ್ಧತೆಯು ಏನೂ | | ಶೀಲತೆಯು | ಇಲ್ಲದಿರುವುದು ಹಾಗೂ | | ಆಯಾಸ ಉಂಟು | ಪ್ರಸಕ್ತತೆಯನ್ನು | | ಮಾಡಿದರೆ, | ಸಂತೋಷದಿಂದ | | ಕ್ರಿಯೆಯು ಶಕ್ತಿ | ಅನುಭವಿಸುವಂತಹುದು! | | ಹಾಗೂ | ಪ್ರಸಕ್ತತೆ ಎಂಬುದು | | ಸ್ಫೂರ್ತಿಯನ್ನು | ಇನ್ನೂ ಬಿಚ್ಚಿ | | ಉಂಟುಮಾಡುತ್ತದೆ. | ನೋಡದಿರುವ ಕೊಡುಗೆ, | | ಆದರೆ ಪಾಂಡಿತ್ಯವು ಅದರ ರಹಸ್ಯವನ್ನು | | ಕಸಿದುಕೊಳ್ಳುತ್ತದೆ. ಪರಮಾತ್ಮನನ್ನು ಇನ್ನೂ | | ಕಂಡುಕೊಳ್ಳಬೇಕಾಗಿದೆ ಎಂದು ಪಾಂಡಿತ್ಯವು | | ಅರ್ಥಮಾಡಿಕೊಂಡಾಗ ಆ ಅಂತಿಮ ಜ್ಞಾನವನ್ನು | | ಪಡೆಯುವ ಕ್ರಿಯೆಗೆ ಅದು ಎಂದೂ | | ತೊಡಕಾಗುವುದಿಲ್ಲ. ಆಗ ಅದು ವಾಸ್ತವವಾಗಿ | | ಬೇಕಾದಾಗ ಒಂದು ಸಾಧನವಾಗಿ ವರ್ತಿಸುತ್ತಾ, | | ಬದುಕಿನ ನಿಗೂಢತೆಯನ್ನು ಅರ್ಥಮಾಡಿಕೊಳ್ಳುವ | | ಹಾದಿಗೆ ಅಡ್ಡಿಬರುವುದಿಲ್ಲ. |
ವಿಶ್ವಶಕ್ತಿಯು ಯಾವುದರ ಮುಂದುವರಿಕೆಯೂ
ಅಲ್ಲ. ಅದು ಪ್ರತಿಕ್ಷಣವೂ ನವೀನವಾಗಿರುವುದು.
ಆದುದರಿಂದ ಏನನ್ನೂ ತಿಳಿಯಲು
ಸಾಧ್ಯವಾಗುವುದಿಲ್ಲ. ಮರುಕ್ಷಣವೇ ಏನಾಗುತ್ತದೆ
ಎಂದು ನಿಮಗೇನು ಗೊತ್ತು? ಇದು ಅರ್ಥವಾದರೆ,
ಎಲ್ಲ ತಿಳಿವಳಿಕೆಯನ್ನೂ ಬಿಟ್ಟು ಬಿಡಬಹುದು. ಆಗ
ಕೇವಲ ವಿವೇಕವಿರುತ್ತದೆ ಮತ್ತು ವಿವೇಕವೇ ಮುಗ್ಧ
ತಿಳಿವಳಿಕೆ. ಪಾಂಡಿತ್ಯದ ತಡೆಗಳಿಲ್ಲದೆಯೇ ಅನುಭವ
ಉಂಟಾಗಲು ಅನುವು ಮಾಡಿಕೊಡುತ್ತದೆ. ಆಗ
ಆತ್ಮದ ಮತ್ತು ಆತ್ಮದ ಸುತ್ತಲೂ ಇರುವುದರ
ಹಾಗೂ ಇವೆರಡನ್ನು ಸೇರಿಸುವ ರಹಸ್ಯಗಳ
ಮಹತ್ವಪೂರ್ಣ ಕಂಡೂಹಿಡಿಯುವಿಕೆಗಳು
ಸಂಭವಿಸುವುವು.
ನಂಬಿಕೆಯು ಅನೇಕ ಸಾಧ್ಯತೆಗಳನ್ನು ತಳ್ಳಿಹಾಕಿ ಒಂದು ನಿರ್ದಿಷ್ಟವಾದ ಕ್ರಿಯೆಗೆ ನಿಮ್ಮನ್ನು ಪ್ರೇರಿಸುತ್ತದೆ ಎಂದು ಜೆ. ಕೃಷ್ಣಮೂರ್ತಿಯವರು ಸರಿಯಾಗಿ ಹೇಳುತ್ತಾರೆ. ಮನಸ್ಸು ಸತತವಾಗಿ ಕ್ರಿಯಾಶೀಲತೆಯ ಕಡೆಗೆ ನೋಡುತ್ತಿರುವುದರಿಂದ ನೀವು ನಂಬಿಕೆಯ ಹಿಂದೆ ಹೋಗುತ್ತೀರಿ. ನಿಮ್ಮ ಇಡೀ ಜೀವನವನ್ನೇ ನಂಬಿಕೆಗಳ ಆಧಾರವಾಗಿಟ್ಟುಕೊಳ್ಳುತ್ತೀರಿ. ಈ ಕಾರಣದಿಂದಲೇ ನೀವು ಕ್ರಿಯಾಶೀಲತೆಯಲ್ಲಿ ತಲ್ಲೀನರಾಗುತ್ತೀರಿ. ಆದರೆ ಕ್ರಿಯೆಯಲ್ಲಲ್ಲ! ಕ್ರಿಯಾಶೀಲತೆಗೆ ಸತತವಾಗಿ ನಂಬಿಕೆಗಳ ಇಂಧನ ಬೇಕಾಗುತ್ತದೆ. ಕ್ರಿಯಾಶೀಲತೆಯು ನಿಲ್ಲುವಂತಹದಲ್ಲ. ಅದು ನಿಂತಲ್ಲಿ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ. ಕ್ರಿಯೆಯು ಬೇಕಾದಾಗ ಮಾತ್ರ ಸಂಭವಿಸಿ, ನಂತರ ನಿಲ್ಲುತ್ತದೆ. ಕ್ರಿಯಾಶೀಲತೆಯು ನಂಬಿಕೆಯಿಂದ ಉಂಟಾಗುತ್ತದೆ. ಕ್ರಿಯೆಯು ತಿಳಿವಳಿಕೆಯಿಂದ
ಒಮ್ಮೆ ನಮ್ಮ ಅಸ್ತಿತ್ವದಲ್ಲಿ ಪಾಂಡಿತ್ಯವು
ಘನೀಭೂತವಾದಲ್ಲಿ ಏನನ್ನು ಅನುಭವಿಸಲೂ
ಅವಕಾಶವಿರುವುದಿಲ್ಲ. ಅಲ್ಲಿ ಕೇವಲ ಪಾಂಡಿತ್ಯದ
ಪುನರಾವರ್ತನೆಗೆ ಮಾತ್ರ ಅವಕಾಶವಿರುತ್ತದೆ.
ಎಲ್ಲವೂ ಯಾವುದೋ ಹಿಂದಿನ ತಿಳಿವಳಿಕೆಯ
ಪ್ರತಿಬಿಂಬವೋ ಅಥವಾ ಹಿಂದಿನ ಯಾವುದೋ
ತೀರ್ಮಾನವೋ ಆಗಿರುತ್ತದೆ. ಭವಿಷ್ಯವು ಗತಕಾಲದ
ಮಾದರಿಗಳ ಮತ್ತು ಅನುಭವಗಳ
ಮುಂದುವರಿಕೆಯಾಗುತ್ತದೆ. ನಿಮಗೀಗಾಗಲೇ
ಹೂವಿನ ಪರಿಮಳ ತಿಳಿದಿರುವುದು. ನಿಮಗೀಗಾಲೇ
ಅಲೆಗಳ ಶಬ್ದವು ತಿಳಿದಿರುವುದು.
ಉಂಟಾಗುತ್ತದೆ. ಕ್ರಿಯಾಶೀಲತೆಯು ಆಯಾಸವನ್ನು
ಉಂಟುಮಾಡಿದರೆ, ಕ್ರಿಯೆಯು ಶಕ್ತಿ ಹಾಗೂ
ಸ್ಪೂರ್ತಿಯನ್ನು ಉಂಟುಮಾಡುತ್ತದೆ. ನಿಮಗೆ
ಬೇಕಾಗಿರುವುದು ಕ್ರಿಯೆಯೇ ಹೊರತು
ಕ್ರಿಯಾಶೀಲತೆಯಲ್ಲ.
ನಂಬಿಕೆಯೆಂಬುದು ಯಾವ ವಿಷಯದಲ್ಲಾದರೂ ನಿಮಗಿರುವ ಸ್ವಂತ ತಿಳಿವಳಿಕೆಯೋ ಹೊರತು ಸತ್ಯವಲ್ಲ ಎನ್ನುವುದನ್ನು ತಿಳಿಯಿರಿ. ಯಾವುದೇ ಸನ್ನಿವೇಶದಲ್ಲಿ ನಾಲ್ಕು ಜನರು ನಾಲ್ಕು ಬೇರೆ ಬೇರೆ ನಂಬಿಕೆಗಳಿಂದ ಬೇರೆ ಬೇರೆಯುದಾಗಿ ತೀರ್ಮಾನಿಸಬಹುದು. ನಂಬಿಕೆಯಲ್ಲಿ ಖಚಿತವಾದ ನಿಜಾಂಶವಿರುವುದಿಲ್ಲ. ಅದು ಕೇವಲ ವೈಯಕ್ತಿಕ ಗ್ರಹಿಕೆ. ಆದರೆ ಮುಗ್ಧತೆಯು ಗ್ರಹಿಕೆಯನ್ನು ತೆರೆದಿರುತ್ತದೆ. ಇದೇ ಅದರ ಸೊಗಸು. ಅದು ಯಾವುದೇ ಅಂತಿಮ ತೀರ್ಮಾನಕ್ಕೆ ಬಂದು ಯಾವುದೇ ಸಾಧ್ಯತೆಯ ದ್ವಾರಗಳನ್ನು ಮುಚ್ಚುವುದಿಲ್ಲ.
ಯಾವುದೇ ವಿಚಾರಕ್ಕೂ ಅಸಂಖ್ಯಾತ
ವ್ಯಾಖ್ಯಾನಗಳಿರುತ್ತವೆ. ಯಾವುದೇ ಒಂದು
ವ್ಯಾಖ್ಯಾನಕ್ಕೂ ಬದ್ಧವಾಗಿರುವುದೇ ಮುಗ್ಧತೆಯ
ಸಾರ. ಆಗ ನಿಜವಾದ ಸತ್ಯವು
ಜೀವಂತವಾಗಿಡಲ್ಪಡುತ್ತದೆ.
ಮುಗ್ಧತೆಯೊಂದಿಗೆ ಗ್ರಹಿಸಿರಿ
ಮುಗ್ಧರಾಗಿದ್ದಾಗ ಆ ಕ್ಷಣವನ್ನು ಸುಮ್ಮನೆ ಆನಂದಿಸುತ್ತೀರಿ. ಮುಗ್ಧರನ್ನು ಗಮನಿಸಿದರೆ ಅವರು ಯಾವುದೋ ಬೃಹತ್ತೋದ್ದೇಶದಿಂದ ಇರುವಂತೆ ತೋರುವುದಿಲ್ಲ. ಸರಳತೆಯೊಂದಿಗೆ ಪರಿಪೂರ್ಣವಾಗಿ ಆ ಕ್ಷಣದಲ್ಲಿ ನೆಲೆಸಿರುತ್ತಾರೆ. ಮುಗ್ಧತೆಯು ಪ್ರಸಕ್ತ ಕ್ಷಣವನ್ನು ಗ್ರಹಿಸಿದರೆ ಪಾಂಡಿತ್ಯವು ಅದನ್ನು ಕಳೆದುಕೊಳ್ಳುತ್ತದೆ. ಪಾಂಡಿತ್ಯಕ್ಕೆ ಕೇವಲ ಉದ್ದೇಶವು ತಿಳಿದಿದ್ದರೆ, ಮುಗ್ಧತೆಗೆ ಉದ್ದೇಶರಹಿತತೆಯ ಸೊಗಸು ತಿಳಿದಿರುತ್ತದೆ.
ನೀವು ನಿಮ್ಮ ಪಾಂಡಿತ್ಯವನ್ನು ಬದಿಗೊತ್ತಿದರೆ ಪ್ರಸಕ್ತ ಕ್ಷಣವನ್ನೂ ಸತ್ಯವನ್ನೂ ಗ್ರಹಿಸಲು ಸಿದ್ಧರಾಗುವಿರಿ. ಪ್ರಸಕ್ತತೆಯು ತನ್ನಲ್ಲಿ ಸತ್ಯವನ್ನು ಹಿಡಿದಿಟ್ಟುಕೊಂಡಿರುತ್ತದೆ. ಸಮಸ್ಯೆಯೆಂದರೆ, ಇಂದಿನ ವಿದ್ಯಾಭ್ಯಾಸವು ಕೇವಲ ಪಂಡಿತರಾಗಿ ಮತ್ತು ಜಾಣರಾಗಿರುವುದು ಹೇಗೆ ಎಂಬುದನ್ನು ಬೋಧಿಸುತ್ತದೆ. ಅದು ಮುಗ್ಧತೆಯನ್ನು ಕುರಿತು ಶಿಕ್ಷಣವನ್ನು ಕೊಡುವುದಿಲ್ಲ. ಯಾವ ವಿಶ್ವವಿದ್ಯಾನಿಲಯವು ತಾನೆ ಮುಗ್ಧತೆಯನ್ನು ಬೋಧಿಸುತ್ತದೆ?
ಇಂದು ಜಾಣರಾಗಲು ಬಹಳಷ್ಟು ಒತ್ತಡವಿದೆ. 'ಜಾಣರಾಗಿರುವುದು ಹೇಗೆ' ಎಂಬ ಹೆಸರಿನಲ್ಲಿ ಮಕ್ಕಳು ತಮಗೆ ನೀಡುವ ತರಬೇತಿಯಲ್ಲಿ ತಮ್ಮ ಮುಗ್ಧತೆಯನ್ನು ಕಳೆದುಕೊಳ್ಳುತ್ತಾರೆ. ಕಾಲಕಳೆದಂತೆ, ಈ ಕೆಳಕಂಡ ಚಿಕ್ಕ ಹುಡುಗನಂತೆ, ಜಾಣತನವನ್ನು ತುಂಬಿಸಲು ಮಾತ್ರವೇ ಮುಗ್ಧತೆಯನ್ನು ಬಳಸಿಕೊಳ್ಳಲಾಗುತ್ತದೆ!
> ಮುಗ್ಧತೆಗೆ ಉದ್ದೇಶರಾಹಿತ್ಯದ ಸೊಗಸು ತಿಳಿದಿರುತ್ತದೆ.
ಒಬ್ಬ ತಂದೆಯು ತನ್ನ ಮಗನನ್ನು ಮೊದಲಬಾರಿಗೆ
ಕಛೇರಿಯಲ್ಲಿ ತಮ್ಮ ಸಹದ್ಯೋಗಿಗಳಿಗೆ
ಹೆಮ್ಮೆಯಿಂದ ಪರಿಚಯಿಸಿದನು.
ಸಹದ್ಯೋಗಿಗಳೆಲ್ಲರೂ ಹುಡುಗನ ಸುತ್ತಲೂ ನಿಂತಿದ್ದರು. ತಂದೆಯು, 'ನಿನಗೆ ಎಷ್ಟು ವಯಸ್ಸೆಂದು ಅವರಿಗೆಲ್ಲ ಹೇಳಬಾರದೇಕೆ?' ಎಂದು ಕೇಳಿದನು.
ಹುಡುಗನು ಥಟ್ಟನೆ, 'ಮನೆಯಲ್ಲಿದ್ದಾಗ ನನಗೆ ಏಳು
ವರ್ಷ, ಆದರೆ ಬಸ್ಸಿನಲ್ಲಿರುವಾಗ ನನಗೆ ಐದೇ
ವರ್ಷ' ಎಂದನು.
ಇದೇ ರೀತಿಯೇ ಮಕ್ಕಳಿಗೆ ಇಂದು ತರಬೇತಿ ನೀಡಲಾಗುತ್ತಿದೆ. ಪ್ರತಿಯೊಂದರಲ್ಲೂ ಪ್ರಯೋಜನವನ್ನು ನೋಡುವುದರಲ್ಲಿ ತರಬೇತಿ ಪಡೆದಿರುತ್ತಾರೆ. ಶಿಕ್ಷಣವು ನಿಮ್ಮ ಪ್ರಯೋಜನದ ದೃಷ್ಟಿಯಿಂದ ನಿಮ್ಮನ್ನು ಅಳೆಯುತ್ತದೆ. ಆದರೆ ನೀವು ಪ್ರಯೋಜನದ ವಸ್ತುವಲ್ಲ. ನೀವು ನಿಮ್ಮ ಅಸ್ತಿತ್ವ. ಅಸ್ತಿತ್ವವನ್ನು ಎಂದಿಗೂ ಅಳೆಯಲಾಗುವುದಿಲ್ಲ. ಮನಸ್ಸನ್ನು ಮಾತ್ರ ಅಳೆಯಬಹುದು. ಆದರೆ ಮನಸ್ಸೇ ಒಂದು ಮಿಥ್ಯ! ಸಮಾಜವು ಮನಸ್ಸೆಂಬ ಮಿಥ್ಯೆಯನ್ನು ಸೃಷ್ಟಿಸಿ ನಿಮ್ಮನ್ನು ಅಳೆಯಲು ಅಳತೆಗೋಲಿನಂತೆ ಅದನ್ನು ಉಪಯೋಗಿಸುತ್ತದೆ. ಈ ಕಾರಣದಿಂದಲೇ ಪಾಂಡಿತ್ಯವು ಇಂದೂ ಅಷ್ಟೊಂದು ಜನಪ್ರಿಯವಾಗಿರುವುದು.
ಒಂದು ಸಣ್ಣ ಕಥೆ:
ಒಂದು ಊರಿನಲ್ಲಿ ನಾಲ್ಕು ಜನ ಸ್ನೇಹಿತರಿದ್ದರು.
ಅವರು ಒಟ್ಟಿಗೇ ಬಹಳ ಕಾಲ ಕಳೆಯುತ್ತಿದ್ದರು.
ಅವರಲ್ಲಿ ಮೂವರು ಬಹಳ ವಿದ್ವಾಂಸರಾಗಿದ್ದರು.
ನಾಲ್ಕನೆಯವನು ಅಷ್ಟೊಂದು
ವಿದ್ವಾಂಸನಲ್ಲದಿದ್ದರೂ ವಿವೇಕಿಯಾಗಿದ್ದನು.
ಒಂದು ದಿನ ಅವರು ತಮ್ಮ ಪಾಂಡಿತ್ಯ ಪ್ರದರ್ಶನ
ಮಾಡಿ ಹಣ ಸಂಪಾದಿಸಲು ಬೇರೆ ದೇಶಗಳಿಗೆ
ಹೋಗಲು ನಿರ್ಧರಿಸಿದರು. ನಾಲ್ಕನೆಯವನಲ್ಲಿ
ತೋರಿಸಿಕೊಳ್ಳುವಂತಹದೇನೂ ಇರಲಿಲ್ಲವಾದರೂ
ಅವರೊಂದಿಗೆ ತಾನೂ ಹೋಗುವ ಅಭಿಲಾಷೆಯನ್ನು
ವ್ಯಕ್ತಪಡಿಸಿದನು.
ಮೊದಲನೇ ಸ್ನೇಹಿತನು, 'ನಿನಗೆ ಹೆಚ್ಚೇನೂ
ತಿಳಿಯದು, ನೀನು ನಮ್ಮೊಟ್ಟಿಗೆ ಬಂದರೆ ನಿನಗೂ
ಅನಾವಶ್ಯಕವಾಗಿ ಹಣವನ್ನು ಹಂಚಬೇಕಾಗುತ್ತದೆ'
ಎಂದನು.
ಎರಡನೇ ಸ್ನೇಹಿತನು, 'ಹೌದು, ಅದು ಸರಿ, ನೀನು ಇಲ್ಲೇ ಉಳಿಯುವುದು ಮೇಲು' ಎಂದನು.
ಮೂರನೇ ಸ್ನೇಹಿತನು ಹೆಚ್ಚು ದಯಾಪರ. ಆತನು,
'ಇಷ್ಟೂ ವರ್ಷಗಳೂ ನಾವು ಒಟ್ಟಿಗೆ
ಬೆಳೆದಿರುವವರು, ಆತನನ್ನು ಇಲ್ಲೇ ಇರು ಎಂದು
ಹೇಳುವುದು ಸರಿಯಲ್ಲ. ಆತನೂ ನಮ್ಮೊಂದಿಗೆ
ಬರಲಿ' ಎಂದನು.
ಅಂತೂ, ನಾಲ್ವರೂ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.
ಅವರು ಒಂದು ದಟ್ಟವಾದ ಕಾಡಿನ ಮೂಲಕ
ಹೋದರು. ಅನೇಕ ಕಾಡು ಮೃಗಗಳನ್ನು
ನೋಡಿದರು ಹಾಗೂ ಅನೇಕ ರೋಮಂಚಕಾರೀ
ಅನುಭವಗಳನ್ನು ಪಡೆದರು. ಒಂದು ದಿನ
ಇದ್ದಕ್ಕಿದ್ದಂತೆ ಯಾವುದೋ ಒಂದು ಪ್ರಾಣಿಯ
ಎಲುಬುಗಳ ದೊಡ್ಡರಾಶಿಯು ಕಂಡು ಬಂದಿತು.
ಅವರಲ್ಲೊಬ್ಬಾತನು, 'ಇದು ನಮ್ಮ ಪಾಂಡಿತ್ಯವನ್ನು
ಒರೆಹಚ್ಚಲು ಸುಸಂದರ್ಭ. ಈ ಪ್ರಾಣಿಯನ್ನು
ಬದುಕಿಸೋಣ' ಎಂದನು.
ಇನ್ನಿಬ್ಬರು ಸ್ನೇಹಿತರು ಒಪ್ಪಿದರು. ಆದರೆ
ನಾಲ್ಕನೆಯವನು, 'ಇದು ಯಾವುದೋ ಬಹಳ
ದೊಡ್ಡ ಪ್ರಾಣಿಯ ಮೂಳೆಗಳು ಎನಿಸುತ್ತದೆ.
ಆದುದರಿಂದ ಇಂತಹ ಕೆಲಸಕ್ಕಿಳಿಯಬಾರದು
ಎನಿಸುತ್ತದೆ' ಎಂದನು.
ಉಳಿದ ಮೂವರೂ ಆತನನ್ನು ನೋಡಿ ಗೇಲಿಮಾಡಿ ಅವನನ್ನು ಪುಕ್ಕಲ ಎಂದರು. ಅವರು, 'ನಮಗಿರುವಂತೆ ನಿನಗೆ ಜ್ಞಾನವಿದ್ದಿದ್ದರೆ ಇಂತಹ ಕೆಲಸಗಳಿಗೆ ಹೆದರುತ್ತಿರಲಿಲ್ಲ. ಸುಮ್ಮನೆ ತೆಪ್ಪಗಿದ್ದು ನಮ್ಮನ್ನು ಗಮನಿಸು' ಎಂದರು.
ಮೂವರೂ ಪ್ರಯೋಗವನ್ನು ಮಾಡಲಾರಂಭಿಸಿದರು.
ಅವರಲ್ಲೊಬ್ಬನು ಆ ಮೂಳೆಗಳನ್ನು ಒಂದು
ಪ್ರಾಣಿಯ ರೂಪದಲ್ಲಿ ಸರಿಯಾಗಿ ಜೋಡಿಸಿದನು.
ನಂತರ ಕೆಲವು ಮಂತ್ರಗಳನ್ನು ಜಪಿಸುತ್ತಾ ಅದರ
ಮೇಲೆ ಪವಿತ್ರ ಜಲವನ್ನು ಪ್ರೋಕ್ಷಿಸಿದನು. ಆಗ
ಮೂಳೆಗಳು ತಕ್ಷಣವೇ ಒಂದು
ಅಸ್ಥಿಪಂಜರವಾಯಿತು. ಅವರೆಲ್ಲರಿಗೂ ತಮ್ಮ
ಜ್ಞಾನದ ಬಗ್ಗೆ ಪರಮಾನಂದವಾಯಿತು.
ಎರಡನೆಯವನು ಮುಂದೆ ಬಂದು ಇನ್ನಷ್ಟು ಮಂತ್ರಗಳನ್ನು ಪಠಿಸಿ, ಇನ್ನಷ್ಟು ಜಲವನ್ನು ಪ್ರೋಕ್ಷಿಸಿದನು. ಆ ಕ್ಷಣವೇ ಅಸ್ಥಿಪಂಜರಕ್ಕೆ ಮಾಂಸ, ರಕ್ತ ಮತ್ತು ತುಪ್ಪಟಗಳು ಕಂಡುಬಂದವು. ಅದೊಂದು ಸಿಂಹವಾಗಿತ್ತು, ಜೀವ ಮಾತ್ರ ಇರಲಿಲ್ಲ.
ಸ್ನೇಹಿತರಿಗೆ ತಮ್ಮ ಬಗ್ಗೆಯೇ ವಿಸ್ಮಯ
ಉಂಟಾಯಿತು. ಮೂರನೆಯ ಸ್ನೇಹಿತನು ಮುಂದೆ
ಬಂದು, ಅದಕ್ಕೆ ಜೀವ ತುಂಬುವೆನು ಎಂದನು.
ನಾಲ್ಕನೆಯವನು ಮತ್ತೊಮ್ಮೆ ಎಚ್ಚರಿಕೆ ಕೊಟ್ಟನಾದರೂ, ಅವರು ಆತನನ್ನು ನೋಡಿ ನಕ್ಕುಬಿಟ್ಟರು. ಆತನು ಮೆಲ್ಲಗೆ ಒಂದು ಮರವನ್ನೇರಿ, ಮೇಲೆ ಕುಳಿತು, ಎಲ್ಲವನ್ನೂ ಗಮನಿಸುತ್ತಿದ್ದನು.
ಮೂರನೆಯ ಸ್ನೇಹಿತನು ಸಿಂಹದ ದೇಹಕ್ಕೆ
ಪ್ರಾಣಪ್ರದಾನ ಮಾಡಿದನು. ಆ ಕೂಡಲೇ ಸಿಂಹಕ್ಕೆ
ಜೀವ ಬಂದುಬಿಟ್ಟಿತು.
ಸಿಂಹವು ಒಂದು ಬಾರಿ ಗರ್ಜಿಸಿ ಈ ಮೂವರ
ಕಡೆಗೆ ಧಾವಿಸಿತು. ಅವರ ನಾಲ್ಕನೆಯ ಸ್ನೇಹಿತನು
ಮರವನ್ನು ಹತ್ತಿ, ಈ ದೃಶ್ಯವನ್ನು ನೋಡುತ್ತಾ
ಕುಳಿತಿದ್ದುದು ಅವರಿಗೆ ಕಾಣಿಸಿತು.
ಸಿಂಹವು ಅವರ ಕಥೆಯನ್ನು ಮುಗಿಸಿತು.
ಪಾಂಡಿತ್ಯವು ಒಂದು ಸಾಧನ. ಅದು ಬುದ್ಧಿವಂತಿಕೆಗೆ ನೇರವಾಗಿ ದಾರಿ ಮಾಡಿಕೊಡುವುದಿಲ್ಲ. ಅದು ಸಾಧನ ಮಾತ್ರ. ಅವಶ್ಯಕತೆ ಇರುವಲ್ಲಿ ಅದೊಂದು ಶಕ್ತಿಯುತವಾದ ಸಾಧನವಾಗಿ ಬಳಸುವವರೆಗೂ ಒಳ್ಳೆಯದು. ಅದು ಅದ್ಭುತವಾದ ಕೆಲಸಗಳನ್ನು ಮಾಡಬಲ್ಲದು. ಆದರೆ ನಾವು ಮಾಡುವ ತಪ್ಪೇನೆಂದರೆ, ನಮ್ಮ ಇಡೀ ಜೀವನವನ್ನೇ ಪಾಂಡಿತ್ಯದ ಕೈಗೆ ಒಪ್ಪಿಸುವುದು. ಅದೇ ಮುಗ್ಧತೆಯಾದರೋ ಶುದ್ಧ ಬುದ್ಧಿಯೆಡೆಗೆ ನೇರವಾಗಿ ಕರೆದೊಯ್ಯುತ್ತದೆ.
ಜಾಣತನವು ಗ್ರಹಿಸದ ಆಯಾಮಗಳನ್ನು ಮುಗ್ಧತೆ ಗ್ರಹಿಸುತ್ತದೆ. ಮುಗ್ಧತೆಯು ಮಾಹಿತಿಗಳನ್ನು ಕಳೆದುಕೊಳ್ಳಬಹುದು. ಆದರೆ ಅದು ಸತ್ಯಗಳನ್ನು ಗ್ರಹಿಸಿಕೊಳ್ಳುತ್ತದೆ. ಜಾಣತನವು ಮಾಹಿತಿಗಳೊಂದಿಗೆ ಅತಿಯಾಗಿ ಮಗ್ನವಾಗಿರುತ್ತದೆ. ಜಾಣತನವು ಮುಗ್ಧತೆಯೊಂದಿಗೆ ಸೇರಿದಾಗ, ಅದು ಬುದ್ಧಿವಂತಿಕೆ ಹಾಗೂ ಮುಗ್ಧತೆಯ ಅಪರೂಪದ ಸಂಯೋಜನೆ ಆಗುತ್ತದೆ. ಮುಗ್ಧತೆಗೋಸ್ಕರ ಪಾಂಡಿತ್ಯವನ್ನು ಬದಿಗೊತ್ತುವುದು ಬುದ್ಧಿವಂತಿಕೆಯಾಗುತ್ತದೆ. ನೀವು ಪಾಂಡಿತ್ಯ ಸಂಪಾದನೆಯನ್ನು ನಿಲ್ಲಿಸಿರಿ ಎಂದು ನಾನು ಅರ್ಥೈಸುತ್ತಿಲ್ಲ. ಆದರೆ ಮುಗ್ಧತೆಯ ಸ್ಥಾನವನ್ನು ಪಾಂಡಿತ್ಯವು ತುಂಬಲಾರದು ಎಂಬುದನ್ನು ಅರ್ಥಮಾಡಿಕೊಳ್ಳಿರಿ.
ಯಾವುದೇ ರೀತಿಯ ಶಿಕ್ಷಣವನ್ನೂ ಪಡೆಯದ ಹಳ್ಳಿಗರನ್ನು ನೋಡಿದರೆ, ಅವರು ಶುದ್ಧ ಬುದ್ಧಿವಂತಿಕೆಯನ್ನು ಪ್ರಕಟಿಸುವುದನ್ನು ಕಾಣುವಿರಿ! ಆ ಕಾರಣದಿಂದಲೇ ನೀವು ಕಷ್ಟದಲ್ಲಿ ಸಿಲುಕಿದಾಗ, ಒಬ್ಬ ಹಳ್ಳಿಯ ಮನುಷ್ಯನು ಬಂದು ಸುಲಭದಲ್ಲಿ ನಿಮ್ಮನ್ನು ಪಾರುಮಾಡುವನು. ಮುಗ್ಧ ಬುದ್ಧಿಗೆ ಆ ಸಾಮರ್ಥ್ಯವಿದೆ.
ಇಂದು ಎಲ್ಲ ವಿಶ್ವವಿದ್ಯಾನಿಲಯಗಳೂ ವ್ಯಕ್ತಿಯ ವಿಚಾರಮಾಡುವ ಶಕ್ತಿ ಅಥವಾ ಜಾಣತನಕ್ಕೆ ಸಾಣೆ ಹಿಡಿಯುವುದರಲ್ಲಿ ನಿರತವಾಗಿವೆ. ನಾವು ಸಮಾಜಕ್ಕೆ ಉಪಕಾರಕವಾಗಿಯೂ, ಉತ್ಪನ್ನಕಾರಕವಾಗಿಯೂ, ಪರಿಣಾಮಕಾರಿಯಾಗಿಯೂ ಇರುವುದು ಹೇಗೆಂಬುದನ್ನು ಅವು ಹೇಳಿಕೊಡುತ್ತವೆ. ಉತ್ಪನ್ನಕಾರಕವಾಗಿಯೂ, ಪರಿಣಾಮಕಾರಿಯಾಗಿಯೂ ಇರುವುದು ತಪ್ಪೇನಲ್ಲ. ಆದರೆ ಆ ಪ್ರಕ್ರಿಯೆಯಲ್ಲಿ ನಾವು ಮುಗ್ಧರಾಗಿರುವುದನ್ನು ಹಾಗೂ ಗ್ರಾಹ್ಯವಾಗಿರುವುದನ್ನು ಮರೆತುಬಿಡುತ್ತೇವೆ. ಬ್ರಹ್ಮಾಂಡಕ್ಕೂ ವಿಶ್ವಶಕ್ತಿಗೂ ತೆರೆದುಕೊಳ್ಳುವುದು ಹೇಗೆ ಎಂಬುದನ್ನು ಮರೆತು ಬಿಡುತ್ತೇವೆ. ವಿಶ್ವದೊಂದಿಗೆ ಸಮನ್ವಯವಾಗುವುದು ಹೇಗೆ ಎಂಬುದನ್ನೂ, ಎಲ್ಲಾ ಉತ್ಪಾದಕತೆಗಳಿಗೂ ಮೂಲವಾದ ವಿಶ್ವಯೋಜನೆಯೊಂದಿಗೆ ಶ್ರುತಿಗೂಡಿಸಿ ಉತ್ಪಾದಕತೆಯು ಉಂಟಾಗಿಸುವುದು ಹೇಗೆ ಎಂಬುದನ್ನೂ, ಮರೆಯುತ್ತೇವೆ. ಇದು ಹೀಗಾಗುವುದೇಕೆಂದರೆ ನಾವು ಮಾಡುವುದರಲ್ಲಿಯೂ, ಹೊಂದುವುದರಲ್ಲಿಯೂ ಸಿಲುಕಿಕೊಂಡು ಇರುವಿಕೆಯನ್ನೇ ಮರೆಯುವುದರಿಂದ.
ಮುಖ್ಯವಾಗಿ ಮೂರು ಸ್ಥಿತಿಗಳಿವೆ: ಇರುವಿಕೆ, ಮಾಡುವಿಕೆ ಮತ್ತು ಪಡೆಯುವಿಕೆ. ಈಗಂತೂ ಮಾಡುವುದರಿಂದ ಪಡೆಯುವುದಕ್ಕೆ ಹೋಗುತ್ತಿರುತ್ತೇವೆ. ಸತತವಾಗಿ ಕೆಲಸಗಳನ್ನು ‘ಮಾಡು’ತ್ತಿರುತ್ತೇವೆ. ನಾವು ಕಲಿತು, ಕಲಿಕೆಯನ್ನು ಪ್ರಯೋಜನಕಾರಿ ಕಾರ್ಯಗಳಿಗೆ ಬಳಸುತ್ತೇವೆ. ಆಗ ನಾವು ನಮಗೇನು ಬೇಕೋ ಅದನ್ನು ‘ಪಡೆ’ಯುತ್ತೇವೆ. ಹಣ, ಸಂಬಂಧಗಳು, ಸೌಖ್ಯ, ಇತ್ಯಾದಿ ಏನೇ ಇರಬಹುದು. ನಂತರ ಇದಕ್ಕಿಂತ ಉತ್ತಮವಾದ ವಸ್ತುಗಳನ್ನು ಅಥವಾ ಇನ್ನೂ ಹೆಚ್ಚು ವಸ್ತುಗಳನ್ನು ಪಡೆಯಲು ‘ಮಾಡು’ವುದನ್ನು ಮುಂದುವರೆಸುತ್ತೇವೆ. ನಾವು ಯಾವಾಗಲೂ ‘ಮಾಡು’ವುದು, ‘ಪಡೆ’ಯುವುದು ಇವುಗಳ ನಡುವೆಯೇ ಇರುತ್ತೇವೆ. ಹೀಗೆ ಇರುವುದರಿಂದ ನಮ್ಮ ಇರುವಿಕೆಯನ್ನು ಕಡೆಗಣಿಸಿರುತ್ತೇವೆ. ನಮ್ಮ ನಿಜವಾದ ವಿಶ್ರಾಂತಿಯಿರುವುದು ಇರುವಿಕೆಯ ಸ್ಥಿತಿಯಲ್ಲಿಯೇ. ಈ ಕಾರಣದಿಂದ ನಾವೆಷ್ಟೇ ಮಾಡಲಿ, ಪಡೆಯಲಿ, ವಿಶ್ರಾಂತಿಯನ್ನು ಅರಸುತ್ತಲೇ ಇರುತ್ತೇವೆ. ಈ ಭಾವನೆಯೇ ನಮ್ಮ ‘ಇರುವಿಕೆಯ ಕರೆ’ಯಾಗಿರುತ್ತದೆ.
ನಾವು ನಮ್ಮ ಅಸ್ತಿತ್ವವನ್ನು ಪೋಷಿಸಿದರೆ ಮತ್ತು
ನಮ್ಮ ಅಸ್ತಿತ್ವದ ಗುಣದಿಂದ ಮಾಡಿದರೆ, ಆಗ
ಪಡೆಯುವುದರ ಬಗ್ಗೆ ಅಷ್ಟಾಗಿ
ಶ್ರಮಿಸಬೇಕಾಗುವುದಿಲ್ಲ. ಅದೊಂದು ಉಪ ಉತ್ಪನ್ನವಾಗಿ ಸಂಭವಿಸುತ್ತದೆ. ಇದೇ ವಿಶ್ವಶಕ್ತಿಯ ರಹಸ್ಯ. ಆದರೆ ವಿಶ್ವವಿದ್ಯಾನಿಲಯಗಳು ಇದನ್ನು ಸಮಾಜಕ್ಕೆ ನೇರವಾಗಿ ಉಪಯುಕ್ತವಾದುವುಗಳೆಂದು ನೋಡುತ್ತಿಲ್ಲ, ಅದೇ ಸಮಸ್ಯೆ. ಆದರೆ, ಇದೇ ಪ್ರತಿಯೊಬ್ಬ ವ್ಯಕ್ತಿಯ ನಿಜವಾದ ಉಪಯುಕ್ತತೆಯನ್ನು ಕೇವಲ ಸಮಾಜಕ್ಕಾಗಿ ಮಾತ್ರವಲ್ಲದೇ, ಇಡೀ ವಿಶ್ವಕ್ಕೆ ನೀಡುವಂತಹದು. ನಾವು ಯಾವಾಗಲೂ ಪೂರ್ಣತ್ವದ ಕಡೆಗೆ ಗಮನವಿಡಬೇಕು.
ಪ್ರಾಚೀನ ಭಾರತೀಯ ವಿಶ್ವವಿದ್ಯಾನಿಲಯಗಳಾದ ನಳಂದ ಹಾಗೂ ತಕ್ಷಶಿಲೆಗಳಲ್ಲಿ ವಿದ್ಯಾರ್ಥಿಗಳ ತಯಾರಿಯು ಯಾವಾಗಲೂ ಅಸ್ತಿತ್ವದ ಹಂತದಲ್ಲಿ ಆಗುತ್ತಿತ್ತು. ಬಾಹ್ಯ ಜಗತ್ತಿನ ಕಲಿಕೆಯು ಅದರ ಸಹಜ ಫಲದಂತಾಗುತ್ತಿತ್ತು. ಭಾರತವು ಯಾವಾಗಲೂ ವ್ಯಕ್ತಿಯ ಮುಗ್ಧತೆಯನ್ನು ಪೋಷಿಸುವ ಕಡೆಗೆ ಕೇಂದ್ರೀಕರಿಸಿದೆ. ಏಕೆಂದರೆ ವ್ಯಕ್ತಿಯ ಮುಗ್ಧತೆಯೇ ಆತನ ಸಾಮರ್ಥ್ಯಕ್ಕೆ ಕೊಂಡೊಯ್ಯುವುದು. ವ್ಯಕ್ತಿಯಲ್ಲಿ ಸಾಮರ್ಥ್ಯವಿದ್ದಾಗ ಏನನ್ನಾದರೂ ಸಾಧಿಸಬಹುದು.
ಪರಮಹಂಸ ಯೋಗಾನಂದರು, ಆಧ್ಯಾತ್ಮಿಕ ಕಲಿಕೆಯ ಉದ್ದೇಶವನ್ನು ಸುಂದರವಾಗಿ ವರ್ಣಿಸುತ್ತಾರೆ. ದೇಹದಲ್ಲಿ ಕೋಟ್ಯಾನುಕೋಟಿ ಜೀವಕೋಶಗಳಿವೆ ಎನ್ನುತ್ತಾರೆ. ಪ್ರತಿಯೊಂದು ಜೀವಕೋಶವೂ ಒಬ್ಬ ಬುದ್ಧಿವಂತನಾದ ವ್ಯಕ್ತಿಯಂತಿರುತ್ತದೆ. ಪ್ರತಿಯೊಂದು ಕೋಶವೂ ಹೊಸ ದೇಹ ಮತ್ತು ಮೆದುಳುಗಳನ್ನು ಸಂಪೂರ್ಣವಾಗಿ ಬೆಳೆಸುವ ಮಾಹಿತಿ ಮತ್ತು ಬುದ್ಧಿಶಕ್ತಿ ಹೊಂದಿರುವ ಡಿ.ಎನ್.ಎ. ಎಂಬ ವಸ್ತುವನ್ನು ಹೊಂದಿರುತ್ತದೆ. ಮನಸ್ಸು ಯಾತನೆಗೀಡಾಗದೆ, ಆನಂದದಲ್ಲಿ ನೆಲೆಗೊಳ್ಳಲು ಈ ಸುಪ್ತ ಬುದ್ಧಿಶಕ್ತಿಯನ್ನು ಜಾಗೃತಗೊಳಿಸಬೇಕಾಗಿದೆ.
ಅವರು ಮುಂದುವರೆಸುತ್ತಾ, ಆಧ್ಯಾತ್ಮಿಕ
ಶಿಕ್ಷಣವು, ಮೆದುಳು ಹಾಗೂ ಬೆನ್ನುಹುರಿಯ
ಸುತ್ತಲೂ ಜೈವಿಕ ತರಂಗಗಳನ್ನು ಕಳಿಸುವ ಮೂಲಕ
ಜೀವಕೋಶಗಳನ್ನು ಆಯಸ್ಕಾಂತಗೊಳಿಸಿ ವ್ಯಕ್ತಿ
ವಿಕಾಸವನ್ನು ಅಭಿವೃದ್ಧಿಗೊಳಿಸುತ್ತದೆಂದು ಅವರು
ಹೇಳುತ್ತಾರೆ. ಈ ದೈವಿಕ ಅಯಸ್ಕಾಂತದ
ಕಾರಣದಿಂದ ಪ್ರತಿಯೊಂದು ಜೀವಕೋಶವೂ
ಮಾಹಿತಿಯ ಪ್ರತಿಯೊಂದು ತುಣುಕನ್ನೂ ಗ್ರಹಿಸುವ
ಸಜೀವವಾದ ಒಂದು ಮೆದುಳಾಗುತ್ತದೆ. ಈ
ಜಾಗೃತಗೊಂಡ ಮೆದುಳುಗಳಿಂದ, ವ್ಯಕ್ತಿಯ
ಮಾನಸಿಕ ಸಾಮರ್ಥ್ಯವು ಅನೇಕ ಪಟ್ಟು
ಹೆಚ್ಚಾಗುತ್ತದೆ ಮತ್ತು ಎಲ್ಲಾ ರೀತಿಯ ಜ್ಞಾನವೂ
ನಿರಾಯಾಸವಾಗಿ ಗ್ರಾಹ್ಯವಾಗುತ್ತದೆ. ಆಧ್ಯಾತ್ಮಿಕ
ಶಿಕ್ಷಣದ ಪರಿಣಾಮ ಇಂತಹದು.
ಗ್ರೀಸ್ನ ಸಾಮ್ರಾಟನಾದ ಅಲೆಗ್ಸಾಂಡರನು
ಪ್ರಪಂಚದ ಮುಕ್ಕಾಲು ಭಾಗವನ್ನು ಗೆದ್ದು, ಏಷ್ಯಾ
ಖಂಡವನ್ನು ಗೆಲ್ಲಲು ದಕ್ಷಿಣಾಭಿಮುಖವಾಗಿ
ಪಯಣಿಸಿದನು. ಆತನು ಭಾರತವನ್ನು ಗೆಲ್ಲಲು
ಸಿಂಧೂ ನದಿಯ ತೀರದಲ್ಲಿ ಬೀಡುಬಿಟ್ಟನು.
ಅದೇ ನದಿಯ ದಡದಲ್ಲಿ ಒಬ್ಬ ಸಾಧು ವಾಸವಾಗಿದ್ದನು.
ಅಲೆಗ್ಸಾಂಡರ್ ಹಾಗೂ ಆತನ ಸೈನ್ಯವು ಅದೇ
ಮಾರ್ಗವಾಗಿ ಹೋಗುತ್ತಿದ್ದಾಗ, ಸಾಧು ತಪಸ್ಸು
ಮಾಡುತ್ತಿದ್ದದ್ದರಿಂದ ಎದ್ದು ನಿಂತು ಗೌರವ
ತೋರಲಿಲ್ಲ.
ಅಲೆಕ್ಸಾಂಡರನಿಗೆ ಅವಮಾನವಾಗಿ, 'ನನಗೆ
ನಮಸ್ಕರಿಸದಿರಲು ನಿನಗೆಷ್ಟು ಧೈರ್ಯ!' ಎಂದು
ರೇಗಾಡಿ, ಆತನ ತಲೆಯನ್ನು ಕಡಿದುಹಾಕಲು
ಕತ್ತಿಯನ್ನು ಹಿಡಿದನು.
ಸಾಧುವು ಆತನನ್ನು ನೋಡಿ ನಕ್ಕನು.
ಅಲೆಕ್ಸಾಂಡರ್ಗೆ ದಿಗ್ಭ್ರಾಂತಿಯಾಯಿತು, 'ನಾನು ನಿನ್ನನ್ನು ಕೊಲ್ಲುವುದರಲ್ಲಿದ್ದೇನೆ. ನೀನು ನೋಡಿದರೆ ನಗುತ್ತಿರುವೆಯಲ್ಲಾ?' ಎಂದನು.
ಸಾಧುವು, 'ನೀನು ಏನನ್ನು ಕೊಲ್ಲಲು ಯತ್ನಿಸುತ್ತಿರುವೆಯೆಂದು ನನಗೆ ಆಶ್ಚರ್ಯವಾಗುತ್ತಿದೆ. 'ನನ್ನನ್ನು' ಎಂದಿಗೂ ಕೊಲ್ಲಲಾಗುವುದಿಲ್ಲ, 'ನಾನು' ಸಾವಿಲ್ಲದವನು, ಅನಂತನು ಮತ್ತು ಅವಿನಾಶಿ. ಈ ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು, ಬೆಂಕಿಯು ಸುಡಲಾರದು, ನೀರು ತೋಯಿಸಲಾರದು, ಗಾಳಿಯು ಒಣಗಿಸಲಾರದು' ಎಂಬ ಈ ಮಾತುಗಳನ್ನು ಭಗವದ್ಗೀತೆಯಿಂದ ಉಲ್ಲೇಖಿಸಿದನು.
ಅಲೆಕ್ಸಾಂಡರ್ನು ತನ್ನ ಖಡ್ಗವನ್ನು ಕೆಳಕ್ಕೆ ಹಾಕಿ ಸಾಧುವಿಗೆ ನಮಸ್ಕರಿಸಿ, 'ಭಾರತ ದೇಶವು ಸಾವಿಗೆ ಹೆದರದ ಇಂತಹ ಮಹಾತ್ಮರನ್ನೊಳಗೊಂಡಿದೆ. ಈ ಪವಿತ್ರ ದೇಶಕ್ಕೆ ನಮನಗಳನ್ನು ಸಲ್ಲಿಸುತ್ತೇನೆ' ಎನ್ನುತ್ತಾ ಆತನಿಗೆ ನಮಸ್ಕರಿಸಿ, ಒಬ್ಬ ವಿವೇಕಸ್ಥನಾಗಿ ಭಾರತವನ್ನು ಬಿಟ್ಟು ಹೋದನು.
ಪ್ರಾಚೀನ ವಿಶ್ವವಿದ್ಯಾನಿಲಯಗಳು ವ್ಯಕ್ತಿಗಳಲ್ಲಿ ಪರಮಜ್ಞಾನ ಹಾಗೂ ಆತ್ಮ ವಿಶ್ವಾಸಗಳನ್ನು ವಿಕಸಿಸಿ ಮತ್ತು ಅದೇ ಸಮಯ ಅವರಲ್ಲಿ ಮುಗ್ಧತೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯನ್ನುಂಟುಮಾಡುತ್ತಿದ್ದವು. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಬ್ಬ ಋಷಿಯ ಗುಣವನ್ನು ಪಡೆದಿರುತ್ತಿದ್ದನು. ಒಬ್ಬ ಋಷಿಯಾದರೋ ಬಾಹ್ಯ ಪ್ರಪಂಚದ ವಿಸ್ತಾರವಾದ ಜ್ಞಾನವನ್ನೂ, ಒಳ ಪ್ರಪಂಚದ ಅಪ್ಪಟ ಮುಗ್ಧತೆಯನ್ನೂ ಹೊಂದಿರುತ್ತಾನೆ.
ಒಬ್ಬ ವ್ಯಕ್ತಿಯು ಅಲ್ಲಲ್ಲಿ ಒಂದಿಷ್ಟನ್ನು ಓದಿಕೊಳ್ಳುತ್ತಾ ತನ್ನನ್ನೇ ವಿನೋದಗೊಳಿಸಿಕೊಳ್ಳಬಹುದು. ಆತನ ಉದ್ದೇಶವು ಕೇವಲ ಪುಸ್ತಕಗಳನ್ನು ಓದುವುದೇ ಆಗಿದ್ದಲ್ಲಿ ಅದು ಒಳ್ಳೆಯ ಮನರಂಜನೆಯಾಗಬಹುದು, ಆದರೆ ಜ್ಞಾನೋದಯವಲ್ಲ. ಮನರಂಜನೆಯೇ ಬೇರೆ, ಜ್ಞಾನೋದಯವೇ ಬೇರೆ. ಕೆಲವು ಒಳ್ಳೆಯ ಪುಸ್ತಕಗಳಿಂದ ಆತನಿಗೆ ಸಂತೋಷವಾಗಿದೆ ಎಂಬ ಕಾರಣಕ್ಕಾಗಿಯೇ ಆತನಿಗೆ ಜ್ಞಾನೋದಯವಾಗಿದೆ ಎನ್ನಲಾಗುವುದಿಲ್ಲ. ನಿಮ್ಮ ತರ್ಕವನ್ನು ಹರಿತಗೊಳಿಸುವ ಪುಸ್ತಕಗಳು ನಿಮಗೆ ಪಾಂಡಿತ್ಯವಿದೆ ಎಂಬ ಭಾವನೆಯುಂಟುಮಾಡುತ್ತವೆ. ಅಲ್ಲಿಂದಲೇ ಸಮಸ್ಯೆ ಉದ್ಭವವಾಗುವುದು.
ಮತ್ತೊಂದು ವಿಷಯ: ಮುಗ್ಧತೆಯನ್ನು
ಕಳೆದುಕೊಂಡದ್ದಕ್ಕೆ ಆಧುನಿಕತೆಯನ್ನು
ದೂಷಿಸಲಾಗುವುದಿಲ್ಲ ಶ್ರೀ ಕೃಷ್ಣನು, 'ನಾನು
ಕಾಲ'ವೆನ್ನುತ್ತಾನೆ. ಕೃಷ್ಣನೇ ಹಾಗೆಂದಾಗ,
ಆಧುನಿಕತೆಯೂ ವಿಶ್ವಶಕ್ತಿಯ
ದೈವಲೀಲೆಯೆಂಬುದನ್ನು ನೀವು ಅರಿತುಕೊಳ್ಳಬೇಕು.
ಆಧುನಿಕತೆಯನ್ನು ಸರಿಯಾದ ರೀತಿಯಲ್ಲಿ
ಅರಿತುಕೊಳ್ಳಬೇಕೇ ಹೊರತು, ವಿಕಸನದ ಪ್ರಾಚೀನ
ತಳಪಾಯಕ್ಕೆ ಪರ್ಯಾಯ ಎಂದು ಭಾವಿಸಬಾರದು.
ಭೇದ್ಯವಾಗಿರಿ
ನೀವು ಮುಗ್ಧರಾಗಿದ್ದಾಗ ವಿಶ್ವಶಕ್ತಿಯು ನಿಮಗೆ ಕಲಿಸಬೇಕೆಂದಿರುವ ಎಲ್ಲದಕ್ಕೂ ಭೇದ್ಯವಾಗಿರುತ್ತೀರಿ! ನಿಮ್ಮ ಮನಮುಚ್ಚಿಕೊಂಡಿದ್ದರೆ, ನಿಮ್ಮ ಸುತ್ತ ಒಂದು ಕೋಟೆಯನ್ನು ಕಟ್ಟಿಕೊಳ್ಳುತ್ತೀರಿ. ಕೋಟೆಯು, ಹೊಸ ತಂಗಾಳಿಯು ನಿಮ್ಮನ್ನು ಸೋಕಲೂ ಬಿಡುವುದಿಲ್ಲ, ನೀವು ಹೊರಬಂದು ತಂಗಾಳಿಯನ್ನು ಸ್ಪರ್ಶಿಸಲೂ ಬಿಡುವುದಿಲ್ಲ. ಭೇದ್ಯವಾಗಿರುವುದೆಂದರೆ ಆ ಕೋಟೆಯನ್ನು ಒಡೆದು ತಂಗಾಳಿಯು ಬೀಸಿದಾಗಲೆಲ್ಲಾ ನಿಮ್ಮ ಅಸ್ತಿತ್ವವನ್ನು ಸ್ಪರ್ಶಿಸುವಂತೆ ಆಹ್ವಾನಿಸುವುದು.
ನಿಮ್ಮ ಅಸ್ತಿತ್ವವನ್ನು ಸೋಕಲು ಪ್ರತಿಯೊಂದಕ್ಕೂ
ಅವಕಾಶ ಮಾಡಿಕೊಡುವುದೇ ಭೇದ್ಯ. ನೀವು
ಭೇದ್ಯರಾಗಿದ್ದಾಗ ಇಡೀ ವಿಶ್ವವೇ ನಿಮ್ಮಲ್ಲಿಗೆ
ಬರುವುದು.
ಭೇದ್ಯವಾಗಿರುವುದು ದೌರ್ಬಲ್ಯವಲ್ಲ. ಕೋಟೆಯನ್ನು ಒಡೆದಾಗ ಅದು ನಿಮಗೆ ಅಪಾಯವನ್ನುಂಟುಮಾಡುವುದಿಲ್ಲ. ಕೋಟೆ ಕಟ್ಟಿದ್ದೇ ನಿಮ್ಮ ವಾಸ್ತವಿಕತೆ ಬಹಿರಂಗವಾಗುತ್ತದೆಂಬ ಗಾಢವಾದ ಭಯದಿಂದ. ನಿಮ್ಮ ವಾಸ್ತವಿಕತೆಯೇ ನಿಮ್ಮ ಭೇದ್ಯತೆ. ಅದನ್ನು ವಿಶ್ವಕ್ಕೆ ತೆರೆಯಲು ಹೆದರಿಕೊಳ್ಳುತ್ತೀರಿ. ನಿಮ್ಮನ್ನೇ ನೀವು ಬಿಟ್ಟುಕೊಟ್ಟು ಭೇದ್ಯವಾದಾಗ, ಮುಗ್ಧತೆಯಲ್ಲಿ ಕೊಚ್ಚಿಹೋಗುವಿರಿ ಎಂದು ನಿಮಗೆ ಮನದಾಳದಲ್ಲಿ ಗೊತ್ತಿರುತ್ತದೆ. ಆದ್ದರಿಂದ ನಿಮ್ಮನ್ನು ನೀವು ಮುಚ್ಚಿಟ್ಟುಕೊಳ್ಳುವಿರಿ. ಆದರೆ, ನಿಮಗೆ ಅದರೊಳಗೇ ಇರುವುದು ಉಸಿರುಗಟ್ಟಿಸಿದಂತಾಗುತ್ತದೆ. ಏಕೆಂದರೆ ಅಲ್ಲಿ ಸುತ್ತಾಡುತ್ತಿರುವ ಅದೇ ಗಾಳಿ, ನಿಮ್ಮ ಮನಸ್ಸಿಗೆ ತಿಳಿದ ಅದೇ ಚಿತ್ತವೃತ್ತಿಗಳನ್ನೇ ಅನುಭವಿಸುತ್ತಿರುತ್ತೀರಿ. ಆಗ ಕೋಟೆಯ ಪ್ರಯೋಜನವಾದರೂ ಏನು? ಕೋಟೆಯನ್ನು ಒಡೆದಾಗ ನಿಮ್ಮನ್ನು ಯಾವುದೂ ಬಿಟ್ಟುಹೋಗುವುದಿಲ್ಲವೆಂಬುದನ್ನು ಅರಿಯುವಿರಿ. ಅದಕ್ಕೆ ಬದಲಾಗಿ, ಜೀವನದ ಹೊಸತನವನ್ನು ಮಾತ್ರ ಪಡೆಯುವಿರಿ.
ನೀವು ಅಸ್ತಿತ್ವಕ್ಕೆ
ಹೌದು ಎಂದಾಗ
ನಿಮ್ಮ ಚೈತನ್ಯವು
ಹೊಸ ದಿಕ್ಕಿನಲ್ಲಿ
ಹೋಗಲು
ಆರಂಭಿಸುತ್ತದೆ.
ಇಬ್ಬರು ಜ್ಯೋತಿಷಿಗಳು ಒಂದು ಸುಂದರವಾದ
ಶರತ್ಕಾಲದಲ್ಲಿ ಒಂದು ಬೀದಿಯಲ್ಲಿ
ಭೇಟಿಯಾದರು. ಅವರಲ್ಲೊಬ್ಬರು, ‘ಎಂತಹ
ಸುಂದರ ಶರತ್ಕಾಲ! ನಾವು ಹಿಂದೆಂದು
ಕಂಡಿರಲಿಲ್ಲ' ಎಂದು ಉದ್ಗರಿಸಿದರು.
ಮತ್ತೊಬ್ಬರು, ‘ನಿಜ, ನನಗೆ 1970ರ ಶರತ್ಕಾಲ
ನೆನಪಾಗುತ್ತದೆ' ಎಂದರು.
ನೀವು ಭೇದ್ಯರಾದಾಗ ಇರುವಿಕೆಯ ಸ್ವರದಲ್ಲಿ ಎಲ್ಲವನ್ನೂ ಅನುಭವಿಸುತ್ತೀರಿ; ಇಲ್ಲದಿದ್ದರೆ ಅದು ಮನಸ್ಸಿನಿಂದ ಬಂದ ಅನುಭವವಾಗುತ್ತದೆ. ಇರುವಿಕೆಯು ಕವನವಾದರೆ, ಮನಸ್ಸು ಗದ್ಯ. ಜೀವನವು ಒಂದು ಕವನ.
ಒಂದು ರಾತ್ರಿ ಹೆಂಡತಿಯೊಬ್ಬಳು ತನ್ನ ಗಂಡನು ತನ್ನ ಮಗುವಿನ ತೊಟ್ಟಿಲ ಹತ್ತಿರ ನಿಂತಿರುವುದನ್ನು ನೋಡಿದಳು.
ಆತನು ತೊಟ್ಟಿಲಲ್ಲಿದ್ದ ಮಗುವನ್ನು ನೋಡುತ್ತಾ ನಿಂತಿದ್ದಾಗ ಆತನ ಮುಖದಲ್ಲಿ ಬೆರೆತ ಭಾವನೆಗಳು ಏಳುತ್ತಿದ್ದದ್ದನ್ನು ಕಂಡಳು. ಅಪನಂಬಿಕೆ, ಆಶ್ಚರ್ಯ,
ಉದ್ವಿಗ್ನತೆ, ಅನುಮಾನ, ವಿಸ್ಮಯ, ಮುಂತಾದ
ಏನೆಲ್ಲಾ ಬೆರೆತ ಭಾವನೆಗಳನ್ನು ಕಂಡಳು. ಆಕೆಯು
ನಿಧಾನವಾಗಿ ಆತನ ಬಳಿ ಬಂದು, ಆತನನ್ನು
ಬಳಸುತ್ತಾ, 'ನಿನ್ನ ಅನಿಸಿಕೆಗಳಿಗೆ ಒಂದು ಕಾಸಿನ
ಬೆಲೆ' ಎಂದಳು.
ಗಂಡನು, 'ಏನಾಶ್ಚರ್ಯ! ಯಾವುದಾದರೂ ಇಂತಹ
ತೊಟ್ಟಿಲನ್ನು ಕೇವಲ 500 ರೂಪಾಯಿಗಳಲ್ಲಿ
ಮಾಡಬಹುದೆಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ!'
ಎಂದು ಉತ್ತರಿಸಿದನು.
ಬುದ್ಧಿಯನ್ನು ಉಪಯೋಗಿಸಿ ಭೇದ್ಯವಾಗಿರಲು ಸಾಧ್ಯವಿಲ್ಲ! ಹಾಗೆಯೇ ಭೇದ್ಯರಾಗಿಲ್ಲದಿದ್ದಾಗ ನೀವು ಮನೆಯ ದೊಡ್ಡ ಗೋಡೆಯ ಹಿಂದೆ ಕುಳಿತಿರುತ್ತೀರಿ. ಜೀವನವಿನ್ನೂ ಪ್ರಾರಂಭವಾಗಿಲ್ಲ ಎಂದರ್ಥ. ಜೀವನ ಪ್ರಾರಂಭವಾಗುವುದು ಭೇದ್ಯತೆಯಿಂದ.
ಭೇದ್ಯತೆಯೊಂದಿಗೆ ಸತ್ಯದೆಡೆಗೆ ಬೇರೆಯದೇ ಆದ, ಆನಂದಕರವಾದ ಪಥದಲ್ಲಿ ಹೆಜ್ಜೆ ಹಾಕುತ್ತೀರಿ. ಏಕೆಂದರೆ ಪ್ರ ತಿ ಕ್ಷ ಣ ವೂ ನೇ ರ ವಾ ಗಿ ವಿಶ್ವಶಕ್ತಿಯಿಂದಲೇ ಸತ್ಯವನ್ನು ಪಡೆಯುತ್ತಿರುತ್ತೀರಿ. ನೀವು ಭೇದ್ಯವಾಗಿರುವುದರಿಂದಲೂ, ಪಡೆಯಲು ಸಿದ್ಧವಾಗಿರುವುದರಿಂದಲೂ, ವಿಶ್ವಶಕ್ತಿಯು ನಿಮಗೆ ಸತ್ಯವನ್ನು ನೀಡಲು ಸಾಧ್ಯವಾಗುತ್ತದೆ! ವಿಶ್ವಶಕ್ತಿಗೆ ತನ್ನದೇ ಆದ ನೀತಿ ನಿಯಮಗಳಿರುವುದು. ಜ್ಞಾನಿಗಳಿಗೆ ತಮ್ಮದೇ ಆದ ನೀತಿ ನಿಯಮಗಳಿರುತ್ತವೆ. ಭೇದ್ಯತೆಯಿದ್ದಾಗ ಅವರು ನಿಮ್ಮ ಮೇಲೆ ಅನುಗ್ರಹದ ಸುರಿಮಳೆ ಸುರಿಸಬಲ್ಲರು. ಅಲ್ಲೊಂದು ಗೋಡೆಯಿದ್ದಾಗ ಅದು ಕಷ್ಟವಾಗುತ್ತದೆ. ಅವರ ನೀತಿ ನಿಯಮಗಳು ಅದನ್ನು ತೂರಿಬರಲು ಬಿಡುವುದಿಲ್ಲ. ಹೀಗಾಗಿ ಅವರು ಕೋಟೆಯು ಒಡೆಯುವುದನ್ನೇ ಕಾಯುತ್ತಿರುತ್ತಾರೆ.
ನೀವು ಭೇದ್ಯರಾದಾಗ ವಿಶ್ವಶಕ್ತಿಗೆ 'ಹೌದು' ಎನ್ನುತ್ತಿರುತ್ತೀರಿ. ವಿಶ್ವಶಕ್ತಿಯು ಅತಿ ದೊಡ್ಡ ರಹಸ್ಯಾತ್ಮಕವಾದ ಹಾಗೂ ನಿರಂತರವಾದ ಗುರು. ನೀವು ಅದಕ್ಕೆ ಹೌದು ಎಂದಾಗ ನಿಮ್ಮ ಚೈತನ್ಯವು ಹೊಸ ದಿಕ್ಕಿನಲ್ಲಿ ಹೋಗಲಾರಂಭಿಸುತ್ತದೆ. ಅದು ತಲೆಯಿಂದ ಹೃದಯದೆಡೆಗೆ ಹರಿಯುತ್ತದೆ ಹಾಗೂ ನಿಮ್ಮ ಇರುವಿಕೆಯಿಂದಲೇ ಉಪದೇಶಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ. ನೀವು ಹಿಂದೆ 'ಇಲ್ಲ' ಎಂದುದೆಲ್ಲವೂ ಈಗ 'ಹೌದು' ಎಂದಾಗಲು ಪ್ರಾ ರ ೦ ಭಿ ಸು ತ್ತ ವೆ. ಆ ಗ ಪ್ರ ಪ೦ ಚ ವು ನೀವೇನೆಂದುಕೊಂಡಿದ್ದಿರೋ ಅದಕ್ಕಿಂತಲೂ ಸಂಪೂರ್ಣವಾಗಿ ವಿಭಿನ್ನವೆಂದು ನೋಡುತ್ತೀರಿ.
ಜನರು ನನ್ನನ್ನು ನನ್ನ ಸಾನಿಧ್ಯದಲ್ಲಿ ಹೇಗೆ
'ಇರ'ಬೇಕೆಂದು ಕೇಳುತ್ತಾರೆ. ಕೇವಲ
ಸಂಪೂರ್ಣವಾಗಿ ಭೇದ್ಯರಾಗಿಯೂ, ಮುಗ್ಧರಾಗಿಯೂ
ಇರಿ. ತೆರೆದ ಮನಸ್ಸಿನಿಂದ ಸತ್ಯವನ್ನು ನೇರವಾಗಿ
ಇರುವಿಕೆಯಲ್ಲಿ ಪಡೆದುಕೊಳ್ಳಬಹುದು. ಗುರುಗಳು
ವಿಶ್ವಶಕ್ತಿಯ ಶುದ್ಧ ಸ್ವರೂಪ. ಅವರನ್ನು ನಿಮ್ಮ
ಅಂತರಂಗದೊಳಗೆ ಬಿಡುವುದರಿಂದ ವಿಶ್ವಶಕ್ತಿಯು
ನಿಮ್ಮೊಳಗೆ ಪ್ರವೇಶಿಸಲು ಅನುಮತಿ ಕೊಟ್ಟಂತೆ.
ವಿಶ್ವಶಕ್ತಿಯು ಒಳ ಬಂದಾಗ, ಸತ್ಯದ ಮುದ್ರೆಯನ್ನು
ನಿಮ್ಮಲ್ಲಿ ಮೂಡಿಸುತ್ತದೆ. ಗುರುಗಳ ಪ್ರತಿಯೊಂದು
ದರ್ಶನದೊಂದಿಗೂ ಗುರುಗಳ ಮುದ್ರೆಯು ಇನ್ನೂ
ಆಳವಾಗುತ್ತದೆ. ಈ ಮುದ್ರೆಯು ಅವರ ಯಾವುದೇ
ಉಪದೇಶಕ್ಕಿಂತಲೂ ಮಿಗಿಲಾದದ್ದು.
ಗುರುಗಳು ಆಧ್ಯಾತ್ಮಿಕತೆಯನ್ನು ಕಲಿಸಲು
ಸಾಧ್ಯವಿಲ್ಲ, ಆದರೆ ನೀವು ಮುಕ್ತರಾಗಿರುವುದರಿಂದ
ಹಾಗೂ ಅವರಲ್ಲಿ ವಿಶ್ವಾಸದಿಂದಿರುವ ಮೂಲಕ
ಕಲಿಯಬಹುದು. ಪದಗಳಿಗೂ ಆಧ್ಯಾತ್ಮಿಕತೆಗೂ
ಸಂಬಂಧವಿಲ್ಲ. ಅದೊಂದು ಅನುಭೂತಿ. ಗುರುಗಳ
ಹಾವಭಾವಗಳನ್ನು, ಅವರಿಂದ ಹೊರಹೊಮ್ಮುವ
ಜ್ಞಾನವನ್ನು ಆಘ್ರಾಣಿಸುವ ಮೂಲಕ ಅದನ್ನು
ಅಳವಡಿಸಿಕೊಳ್ಳಬೇಕು. ನೀವು ಎಚ್ಚರದಿಂದಿದ್ದರೆ
ಅದನ್ನು ಗ್ರಹಿಸಬಹುದು.
ನೀವು ಭೇದ್ಯರಾದಾಗ, ತೆರೆದ ಮನಸ್ಸಿನಿಂದ
ಸ್ಪಂದಿಸುತ್ತೀರ. ಪ್ರಶ್ನೆಗಳನ್ನು ಕೇಳುವ
ಆತುರದಲ್ಲಿರುವುದಿಲ್ಲ. ವಿಶ್ವಪ್ರಜ್ಞೆಯು ನಿಮ್ಮ
ಮೂಲಕ ಕ್ರಿಯಾತ್ಮಕವಾಗಲು ಅವಕಾಶ ಕೊಡುವಿರಿ.
ಕೇವಲ ಭೇದ್ಯದಿಂದ ವ್ಯಕ್ತಪಡಿಸುವುದೆಂದರೆ, ಭೂತ ಭವಿಷ್ಯತ್ಗಳ ಚಿಂತೆಯಿಲ್ಲದೇ ಹಕ್ಕಿಯಂತೆ ಸ್ವತಂತ್ರವಾಗಿ ಸುಮ್ಮನೆ ಇರುವುದು. ಇದನ್ನೇ ಝೆನ್ನ ಗುರುಗಳು ತಮ್ಮ ಶಿಷ್ಯರಿಗೆ ಬೋಧನೆ ಮಾಡಿದರು.
ವಿಶ್ವಾಸದಿಂದ ಶರಣಾಗಿರಿ
ಗಾಢವಾದ ವಿಶ್ವಾಸವು ಶರಣಾಗತಿಗೆ ಕೊಂಡೊಯ್ಯುತ್ತದೆ. ಶರಣಾಗತಿಯು ಹೃದಯದ ಸರಳತೆ. ಇದು ಸತ್ಯದ ಬಗ್ಗೆ ನಿರ್ಧರಿಸದೇ ಕೇವಲ ಅದನ್ನು ಅನುಸರಿಸುವುದು ಎಂಬ ತಿಳಿವಳಿಕೆ. ಸತ್ಯಕ್ಕೆ ಎಚ್ಚೆತ್ತುಕೊಂಡಾಗ ಶರಣಾಗತಿ ತನ್ನಷ್ಟಕ್ಕೆ ತಾನೇ ಸಂಭವಿಸುತ್ತದೆ.
ನಿಮ್ಮ ಮುದ್ದಿನ ನಾಯಿಯನ್ನು ಗಮನಿಸಿದರೆ,
ಅದಕ್ಕೆ ಯಾವಾಗಲಾದರೊಮ್ಮೆ ಮೋಸ ಮಾಡಿದರೂ
ಅದು ಅತೀವ ವಿಶ್ವಾಸದಿಂದ ನಿಮ್ಮ ಬಳಿಗೇ
ಬರುತ್ತದೆ. ಅದರ ವಿಶ್ವಾಸವು ನಿಜವಾದುದು ಮತ್ತು
ಮುಗ್ಧವಾದುದು. ಯಾವ
ಕಾರಣವೂ ಇಲ್ಲದೆಯೇ
ಬರುವ ವಿಶ್ವಾಸವು ಅದು.
ಅದಕ್ಕೆ ಪ್ರಶ್ನೆಗಳು ಇಲ್ಲ.
ಆದುದರಿಂದ ಉತ್ತರ-
ವನ್ನು ಕೊಡಬೇಕಾಗಿಯೂ
ಇಲ್ಲ. ಅದು ಯಾವುದರಲ್ಲಿಯೂ ಪ್ರಯೋಜನವನ್ನು
ಕಾಣುವುದಿಲ್ಲ. ಅದು ಕೇವಲ ಒಂದು ತೆರೆದ
ಪುಸ್ತಕದಂತೆ ಇರುತ್ತದೆ, ಅಷ್ಟೇ.
ಒಂದು ನೀರಿನ ತೊಟ್ಟಿಯಲ್ಲಿ ಚಿನ್ನದ ಬಣ್ಣದ
ಎರಡು ಮೀನುಗಳಿದ್ದವು. 'ನಿನಗೆ ದೇವರಲ್ಲಿ
ವಿಶ್ವಾಸವಿದೆಯೆ?' ಎಂದು ಒಂದು ಇನ್ನೊಂದನ್ನು
ಕೇಳಿತು.
'ಹೌದು, ನಮ್ಮ ತೊಟ್ಟಿಯ ನೀರನ್ನು ಪ್ರತಿದಿನವೂ
ಬದಲಾಯಿಸುವವರು ಯಾರೆಂದು-
ಕೊಂಡಿರುವೆ?' ಎಂದು ಇನ್ನೊಂದು ಮೀನು
ಉತ್ತರಿಸಿತು.
ಮುಗ್ಧತೆಗೆ ಮಾತ್ರವೇ ವಿಶ್ವಾಸ ಮತ್ತು ಶರಣಾಗತಿಗಳಿಗೆ ಜಿಗಿಯಲು ಸಾಧ್ಯವಾಗುವುದು. ಪಾಂಡಿತ್ಯವು ಹೇಗಾದರೂ ಪ್ರತಿಯೊಂದರಲ್ಲಿಯೂ ಉಪಯುಕ್ತತೆಯನ್ನು ಕಾಣುತ್ತದೆ. ಅದು ಪ್ರತಿಯೊಂದರಲ್ಲಿಯೂ ಕಾರಣವನ್ನು ಹುಡುಕುತ್ತದೆ. ಶರಣಾಗತಿ ಮತ್ತು ಕಾರಣಗಳು, ಒಂದಿದ್ದರೆ ಇನ್ನೊಂದು ಇರಲಾರದಂತಹವು. ಶರಣಾಗತಿಯು ಉಂಟಾಗುವುದು ವಿಶ್ವಾಸದಿಂದ. ಶರಣಾಗತಿಯು ಮುಗ್ಧತೆಯಿಂದ ಮಾತ್ರ ಸಾಧ್ಯವೇಕೆಂದರೆ, ವಿಶ್ವಾಸವು ಮುಗ್ಧತೆಯಿಂದ ಉಂಟಾಗುವುದರಿಂದ.
ಶ ರ ಣಾ ಗ ತಿ ಯಿ೦ ದ ಆ ಳ ವಾ ದ ವಿ ಶ್ರಾ೦ ತಿ ಉಂಟಾಗುತ್ತದೆ. ಸಮರ್ಪಣಾ ಭಾವದಿಂದ ಬೇರೆ ಸ್ತರದ ಒಂದು ಹೊಸ ಬುದ್ಧಿಶಕ್ತಿ ಹುಟ್ಟುತ್ತದೆ. ಈ ಸ್ತರದಲ್ಲಿ ಫಲಿತಾಂಶದ ಚಿಂತೆ ಇರುವುದಿಲ್ಲ. ಶುದ್ಧ ಚೈತನ್ಯದಿಂದ ನಡೆಸಲ್ಪಡುವ ಕ್ರಿಯೆ ಮಾತ್ರವೇ ಇರುವುದು. ಅಲ್ಲದೆ, ಚೈತನ್ಯವೇ ಬುದ್ಧಿಶಕ್ತಿ. ವಿಶ್ವಾಸವೆಂದರೆ ಕ್ರಿಯಾಹೀನತೆ ಎಂದರ್ಥವಲ್ಲ. ಅದರರ್ಥ ತಾರ್ಕಿಕ ಬುದ್ಧಿಶಕ್ತಿಯ ಬದಲಿಗೆ ಸೂಕ್ಷ್ಮ ಬುದ್ಧಿಯೊಂದಿಗೆ ಸತತವಾಗಿ ಕಾರ್ಯಮಗ್ನವಾಗಿರುವುದು. ಅದು ಚಿಂತನೆಯಲ್ಲಿ ವಿಶ್ವಾಸವನ್ನು ಇಡುವುದು ಮತ್ತು ಕ್ರಿಯೆಯಲ್ಲಿ ಬುದ್ಧಿವಂತಿಕೆಯಿಂದಿರುವುದೂ ಆಗಿದೆ.
ಒಬ್ಬ ಶಿಷ್ಯನು ತನ್ನ ಒಂಟೆಯ ಮೇಲೆ ಸವಾರಿಮಾಡಿಕೊಂಡು ಒಬ್ಬ ಸೂಫಿ ಗುರುಗಳ ಡೇರೆಗೆ ಬಂದನು. ಒಂಟೆಯ ಮೇಲಿಂದ ಇಳಿದು, ಗುರುಗಳ ಡೇರೆಗೆ ಹೋಗಿ ನಮ್ರವಾಗಿ ತಲೆಬಾಗಿ, 'ಗುರುಗಳೇ, ನನಗೆ ದೇವರಲ್ಲಿ ಎಷ್ಟು ವಿಶ್ವಾಸವಿದೆ ಎಂದರೆ, ಆತನನ್ನು ನಂಬಿದವರ ಬಾಧ್ಯತೆಯನ್ನು ದೇವರೇ ನೋಡಿಕೊಳ್ಳುತ್ತಾನೆಂಬ ವಿಶ್ವಾಸದಲ್ಲಿ ನನ್ನ ಒಂಟೆಯನ್ನು ಕಟ್ಟಿ ಹಾಕದೆಯೇ ಹೊರಗಡೆ ಹಾಗೆಯೇ ಬಿಟ್ಟು ಬಂದಿದ್ದೇನೆ!' ಎಂದನು.
ಗುರುಗಳು, 'ಎಲವೋ ಮೂರ್ಖ, ಮೊದಲು ಹೋಗಿ ನಿನ್ನ ಒಂಟೆಯನ್ನು ಕಟ್ಟಿಹಾಕು. ಖಂಡಿತವಾಗಿ ನೀನೇ ಮಾಡಬಹುದಾದ ಕೆಲಸಕ್ಕೆ ದೇವರನ್ನು ತೊಂದರೆಗೆ ಈಡು ಮಾಡಬಾರದು' ಎಂದು ಗದರಿಸಿದರು.
ವಿಶ್ವಾಸವು ಒಂದು ಮನೋವೃತ್ತಿ. ಇದು
ಯಥೋಚಿತ ಕ್ರಿಯೆಗೆ ಬದಲಿಯಲ್ಲ. ವಿಶ್ವಾಸದ
ಮನೋಭಾವವು ಜೀವನದ ಸಾರ. ಅದು ಮುಗ್ಧತೆ,
ಶರಣಾಗತಿ, ವಿಶ್ರಾಂತಿ ಮತ್ತು ಆನಂದಗಳಿಗೆ
ಕೊಂಡೊಯ್ಯುತ್ತದೆ. ಅದನ್ನು ಸಂಪೂರ್ಣವಾಗಿ
ಅರ್ಥಮಾಡಿಕೊಂಡು ಅನುಸರಿಸಿದರೆ, ಅದರ
ಹಾದಿಯಲ್ಲಿ ಕಳೆದುಕೊಳ್ಳುವಂತಹುದೇನೂ
ಇರುವುದಿಲ್ಲ. ಅದುವರೆವಿಗೂ ನೀವು ಇನ್ನು
ವಿಶ್ವಾಸದ ಹಾದಿಯಲ್ಲೇ ಇರುತ್ತೀರಿ.
ವಿಶ್ವಶಕ್ತಿಯ ಸ್ತರದಲ್ಲಿ ಅಸಾಧ್ಯವಾದುದೇನೂ ಇಲ್ಲ ಎಂಬ ಅರಿವಿನಲ್ಲಿ ಆತ್ಮಜ್ಞಾನಿಗಳು ನೆಲೆಸಿರುತ್ತಾರೆ. ಅವರು ವಿಶ್ವಾಸದ ಸಾಕಾರ ಮೂರ್ತಿಗಳು. ಅವರ ಆನಂದವೇ ಇದರ ಅಭಿವ್ಯಕ್ತಿ. ಪ್ರಪಂಚದ ಸಕಲ ಜ್ಞಾನವೂ ಅವರಿಗೆ ಲಭ್ಯವಿರುತ್ತದೆ. ಆದರೂ, ಅವರು ಅತ್ಯಂತ ಮುಗ್ಧರಾಗಿರುತ್ತಾರೆ. ಅವರಿಗೆ ತಮ್ಮ ಜ್ಞಾನವು ವಿಶ್ವಶಕ್ತಿಯ ಜ್ಞಾನವೆಂಬ ತಿಳಿವಳಿಕೆಯಿರುತ್ತದೆ. ಅವರ ಜ್ಞಾನವು, ಜ್ಞಾನ ಮಾತ್ರವೇ ಆಗಿಲ್ಲದೆ, ಅದು ಆ ಕ್ಷಣದ ಸತ್ಯಾನುಭವದ ಹರಿವು ಆಗಿರುವುದು.
ನಮಗೂ ಜ್ಞಾನವಿದೆ. ಆದರೆ ಸಮಸ್ಯೆಯೇನೆಂದರೆ ನಾವು ನಮ್ಮ ಜ್ಞಾನ ಮಾತ್ರವೇ ಸರಿಯಾದುದು, ಬೇರೆ ಎಲ್ಲಾ ಜ್ಞಾನವೂ ತಪ್ಪು ಎಂದುಕೊಳ್ಳುತ್ತೇವೆ. ಅರ್ಥಮಾಡಿಕೊಳ್ಳಿ: ಅಂತಿಮ ಪರಮ ಜ್ಞಾನವು ಪ್ರತಿಯೊಬ್ಬರಿಗೂ ಒಂದೇ ಎಂದು. ಅದನ್ನು ಬಿಟ್ಟು ಬೇರೆ ಏನೇ ನಡುವಿನಲ್ಲಿದ್ದರೂ ಅದು ಕೇವಲ ಎರವಲು ಪಡೆದ ಕಲ್ಪನೆಗಳ ಕಂತೆ. ಇದು ಸ್ಪಷ್ಟವಾದರೆ ಶರಣಾಗತಿಯು ಉಂಟಾಗುತ್ತದೆ ಹಾಗೂ ಪಾಂಡಿತ್ಯದ ಹೊರೆಯನ್ನು ಇಳಿಸಿಕೊಂಡು ಮುಗ್ಧರಾಗುತ್ತೇವೆ.
ನಮಗೆ ತಿಳಿದಿಲ್ಲವೆಂಬುದನ್ನು ತಿಳಿದುಕೊಳ್ಳಲು
ಹೇಗೆ ಪ್ರಾರಂಭಿಸುವುದು? ಕೇವಲ ನಮಗೆ
ತಿಳಿಯದೆಂಬ ಸ್ಪಷ್ಟತೆಯೇ ಸಾಕು. ಸಕಲ ಜ್ಞಾನಕ್ಕೂ
ಮೂಲವಾದ ವಿಶ್ವಶಕ್ತಿಯ ಮೇಲೆ ಸುಮ್ಮನೆ ಧ್ಯಾನ
ಮಾಡಿರಿ. ಯಾವಾಗಲೂ ಪ್ರಾರ್ಥನಾಭಾವ-
ದಲ್ಲಿಯೂ ಸಮರ್ಪಣಾಭಾವದಲ್ಲಿಯೂ ಇರಿ.
ವಿಶ್ವಶಕ್ತಿಯ ಜ್ಞಾನಕ್ಕೆ ಶರಣಾಗುವುದರಲ್ಲಿ
ದೃಢಮನಸ್ಕರಾಗಿರಿ. ನಿಮ್ಮ ಸುತ್ತ
ಪವಾಡಗಳಾಗುವುದನ್ನು ಕಾಣುವಿರಿ.
ಹಿಂದೂ ಪುರಾಣಗಳಲ್ಲಿ ರಾಮ ಭಕ್ತ ಹನುಮಂತನ ಬಗ್ಗೆ ಒಂದು ಕಥೆಯಿದೆ.
ಒಮ್ಮೆ ಹನುಮಂತನನ್ನು, ಅಂದು ಚಾಂದ್ರಮಾನ ಮಾಸದ ಯಾವ ದಿನ ಎಂದು ಕೇಳಲಾಯಿತು.
ಹನುಮಂತನು, 'ನನಗೆ ಯಾವ ತಿಂಗಳಿನ
ದಿವಸವಾಗಲೀ, ನಕ್ಷತ್ರಗಳ ಸ್ಥಾನಗಳಾಗಲೀ,
ಒಂದೂ ತಿಳಿಯದು, ನಾನು ಕೇವಲ
ರಾಮನೊಬ್ಬನನ್ನೇ ಧ್ಯಾನಿಸುವುದು' ಎಂದು
ಉತ್ತರಿಸಿದನು.
ಸತ್ಯದ ಸೋಜಿಗದಲ್ಲಿ ಸ್ಥಾಪಿತವಾದಾಗ ನೀವೆಷ್ಟು ಮುಗ್ಧರಾಗುತ್ತೀರೆಂದರೆ, ನಿಮ್ಮ ಜೀವನವೇ ಧ್ಯಾನಸ್ಥವಾಗಿ ಹಾಗೂ ಪವಾಡ ಸದೃಶ್ಯವಾಗುತ್ತದೆ. ರಾಮನಾಮ ಜಪವನ್ನು ಮಾಡುತ್ತಾ, ಕೇವಲ ಒಂದೇ ನೆಗೆತದಲ್ಲಿ ಹನುಮಂತನು ಭಾರತದಿಂದ ಶ್ರೀಲಂಕೆಗೆ ಸಾಗರವನ್ನೇ ದಾಟಿ ಹೋದನು. ಆದರೆ, ಸಾಗರವನ್ನು ತನ್ನ ಸೈನ್ಯದೊಂದಿಗೆ ದಾಟಲು, ರಾಮನೇ ಒಂದು ಸೇತುವೆಯನ್ನು ನಿರ್ಮಿಸಬೇಕಾಯಿತು. ವಿಶ್ವಶಕ್ತಿಗೆ ನಮ್ಮ ಮುಗ್ಧ ಶರಣಾಗತಿಯ ಪ್ರಭಾವವು ಅಂತಹುದು.
ಮತ್ತೊಂದು ವಿಷಯ: ನೀವು ವಿಶ್ವಾಸದಿಂದ
ಶರಣಾದಾಗ, ನಿಮ್ಮನ್ನು ಮೋಸ ಪಡಿಸುವುದು
ಕಷ್ಟವಾಗುತ್ತದೆ. ಮುಗ್ಧ ವಿಶ್ವಾಸವು ಮೋಸ
ಹೋಗುವುದರಿಂದ ನಿಮ್ಮನ್ನು ಸದಾ ಕಾಪಾಡುತ್ತದೆ.
ಅದು ಅಂತಹ ಚೈತನ್ಯವನ್ನು ಹೊರಹೊಮ್ಮಿಸುತ್ತದೆ.
ಹಬೀಬ್ ಅಜಾಮಿ ಎಂಬ ಸೂಫಿ ಸಂತನಿದ್ದನು.
ಒಂದು ದಿನ ಆತನು ನದಿಯ ದಡದಲ್ಲಿ ತನ್ನ
ನಿಲುವಂಗಿಯನ್ನು ಯಾರೂ
ನೋಡಿಕೊಳ್ಳುವವರಿಲ್ಲದಿದ್ದರೂ ಸಹ ಅದನ್ನು
ದಡದ ಮೇಲೆ ಇಟ್ಟು, ನದಿಯಲ್ಲಿ ಸ್ನಾನ ಮಾಡಲು
ಹೋದನು.
ಆ ಹೊತ್ತಿಗೆ ಸರಿಯಾಗಿ ಅಲ್ಲಿಯೇ ಹೋಗುತ್ತಿದ್ದ
ವ್ಯಕ್ತಿಯೊಬ್ಬನು ಆ ನಿಲುವಂಗಿಯನ್ನು ನೋಡಿದನು.
ಯಾರೋ ಬೇಜವಾಬ್ದಾರಿಯಿಂದ ಅದನ್ನು ಅಲ್ಲಿ
ಬಿಟ್ಟಿರುವರೆಂದು ಅದನ್ನು ಸುರಕ್ಷಿತವಾಗಿ
ಕಾಪಾಡಬೇಕೆಂದು ನಿರ್ಧರಿಸಿ, ನಿಲುವಂಗಿಯ
ಒಡೆಯನು ಬರುವವರೆಗೂ ಕಾವಲಾಗಿ ನಿಂತನು.
ಹಬೀಬರು ತಮ್ಮ ನಿಲುವಂಗಿಯನ್ನು ತೆಗೆದುಕೊಳ್ಳಲು
ಬಂದರು. 'ನೀವು ಸ್ನಾನ ಮಾಡಲು ಹೋದಾಗ
ಈ ನಿಲುವಂಗಿಯನ್ನು ಯಾರ ರಕ್ಷಣೆಯಲ್ಲಿ ಬಿಟ್ಟು
ಹೋದಿರಿ? ಅದನ್ನು ಯಾರಾದರೂ ಕದ್ದು ಬಿಡ
ಬಹುದಾಗಿತ್ತಲ್ಲಾ!' ಎಂದು ಆ ವ್ಯಕ್ತಿಯು
ಕೇಳಿದನು.
'ಇದನ್ನು ನೋಡಿಕೊಳ್ಳುವ ಕೆಲಸವನ್ನು ನಿನಗೆ
ಯಾರು ಕೊಟ್ಟರೋ, ಅವರಿಗೆ ಇದರ ರಕ್ಷಣೆಯನ್ನೂ
ಬಿಟ್ಟಿದ್ದೆ' ಎಂದು ಹಬೀಬರು ಉತ್ತರಿಸಿದರು!
ಉನ್ನತ ಮಟ್ಟದ ತಿಳಿವಳಿಯಿಂದ ವಿಶ್ವಾಸವು ಉಂಟಾದಾಗ ಯಾವುದೂ ಕಳೆದು ಹೋಗುವುದಿಲ್ಲ.
ವಿಶ್ವಾಸದ ಗುಣದಲ್ಲಿ ಅದರ ನಿಜವಾದ ಸಾರವು ಅಡಗಿದೆ. ನನ್ನ ಪಾರಿವ್ರಾಜಕ ದಿನಗಳಲ್ಲಿ ಹಿಮಾಲಯದಲ್ಲಿ ನೋಡಿದ ಸಾಧುಗಳ ಬಗ್ಗೆ ನನ್ನ ಶಿಷ್ಯರಿಗೆ ಹೇಳುತ್ತಿರುತ್ತೇನೆ. ಸಾಧುಗಳು ಸಕಲವನ್ನೂ ಪರಿತ್ಯಾಗ ಮಾಡಿ ತಪಸ್ಸಿಗಾಗಿ ಹಿಮಾಲಯಕ್ಕೆ ಬರುತ್ತಾರೆ. ಆದರೆ ಅಲ್ಲಿಗೆ ಬಂದು ತಮ್ಮ ಕಮಂಡಲುಗಳಿಗಾಗಿ ಕಾದಾಡುತ್ತಾರೆ! ಕೇವಲ ಸ್ವತ್ತಿನ ವಸ್ತು ಬದಲಾಯಿತು, ಅಷ್ಟೇ! ಇದನ್ನು ಅರ್ಥಮಾಡಿಕೊಳ್ಳಿರಿ, ನೀವು ವಿಶ್ವಾಸದಿಂದಿದ್ದರೆ ಎಲ್ಲಾ ಪ್ರಾಪಂಚಿಕ ವಸ್ತುಗಳೂ ವಿಶ್ವಶಕ್ತಿಗೆ ಸೇರಿದುವು, ಎಂಬಂತೆ ಭಾಸವಾಗುವುದು. ಸ್ವಾಧೀನತೆಯ ಪ್ರವೃತ್ತಿಯೇ ಬಿಟ್ಟುಹೋಗುತ್ತದೆ. ಅದು ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ. ಅದೇ ವಿಶ್ರಮಿಸಲು ಸ್ಥಳಾವಕಾಶವನ್ನು ಉಂಟುಮಾಡುತ್ತದೆ.
2004ನೇ ವರ್ಷದಲ್ಲಿ ನಾವು ಒಂದು ಚಿಕ್ಕ ಗುಂಪಾಗಿ ಹಿಮಾಲಯಕ್ಕೆ ಹೋದೆವು. ಜೀವನದಲ್ಲಿ ನೀವು ಒಮ್ಮೆಯಾದರೂ ಹಿಮಾಲಯವನ್ನು ಸಂದರ್ಶಿಸಲೇಬೇಕು. ಪವಿತ್ರ ಗಂಗಾನದಿಯ ಉಗಮ ಸ್ಥಳವಾದ ಗೋಮುಖಕ್ಕೆ ಹೋಗಿದ್ದೆವು. ಅಲ್ಲಿಗೆ ಹೇಸರಗತ್ತೆಯ ಮೇಲೆ ಹತ್ತಿ ಹೋಗಲು ಸುಮಾರು ಐದು ಗಂಟೆಗಳು ಮತ್ತು ಕೆಳಗಿಳಿಯಲು ಐದು ಗಂಟೆಗಳು ಬೇಕಾಗುತ್ತದೆ. ದಾರಿಯು ನಾಲ್ಕು ಅಡಿಗಳಷ್ಟು ಮಾತ್ರ ಅಗಲವಾಗಿರುತ್ತದೆ. ಹೆಜ್ಜೆ ತಪ್ಪಿದರೆ ಭೋರ್ಗರೆಯುವ ಆಳದ ಗಂಗೆಗೆ ಬೀಳಬೇಕಾಗುತ್ತದೆ! ನಾವು ಗೋಮುಖವನ್ನು ತಲುಪಿದ ಮೇಲೆ, ಸ್ವಲ್ಪಕಾಲ ಕಳೆದೆವು. ಬಂದವರೆಲ್ಲ ಹಿಂತಿರುಗಿದರು. ನಾನು ಮಾತ್ರ ಕೆಲವರು ಶಿಷ್ಯರೊಂದಿಗೆ ಅಲ್ಲೇ ಉಳಿದುಕೊಂಡೆ.
ಅಲ್ಲಿಂದ ಹಿಂತಿರುಗಿದ ಗುಂಪು ಹೊರಟಾಗ ಮುಸ್ಸಂಜೆಯಾಗಿತ್ತು. ನಾನು ಅದಕ್ಕಾಗಿ ಚಿಂತಿಸಬಾರದೆಂದೂ, ವಿಶ್ವಶಕ್ತಿಯು ಎಲ್ಲವನ್ನೂ ನೋಡಿಕೊಳ್ಳುತ್ತದೆಯೆಂದೂ ಹೇಳಿದೆ. ಕಗ್ಗತ್ತಲೆಯಲ್ಲಿ, ಹೇಸರಗತ್ತೆಯು ಬೆಟ್ಟದ ತಿರುವಿನಲ್ಲಿ ಹೋಗುತ್ತಿದೆಯೋ ಅಥವಾ ನೇರವಾಗಿ ಕತ್ತಲಿನೊಳಗಕ್ಕೇ ಹೋಗುತ್ತಿದೆಯೋ ಎಂಬುದೇ ತಿಳಿಯದೇಹೋದರೂ, ಗುಂಪಿನವರೆಲ್ಲರೂ ಅಂತೂ ಇಂತೂ ಹಿಂತಿರುಗಿದರು. ಮಾರನೇ ದಿನ ಅನುಭವ ಹೇಗಿತ್ತೆಂದು ನಾನು ಅವರನ್ನು ವಿಚಾರಿಸಿದೆ. ‘ಸ್ವಾಮೀಜಿ, ಅಂಧ ವಿಶ್ವಾಸ ಎಂದರೇನೆಂಬುದನ್ನು ಅನುಭವಿಸಿದೆವು!’ ಎಂದು ಅವರಲ್ಲೊಬ್ಬರು ಹೇಳಿದರು. ಅಂತಹ ವಿಶ್ವಾಸದ ಕ್ಷಣಗಳನ್ನು ವಿಸ್ತರಿಸುವುದಾದರೆ ಅದು ನಿಮ್ಮ ಜೀವನದ ಸಾರವೇ ಆಗಬಹುದು. ಆಗ ನೀವು ಫಲಿತಾಂಶವನ್ನು ವಿಶ್ವಶಕ್ತಿಗೇ ಬಿಟ್ಟು ಸುಮ್ಮನೆ ‘ಮಾಡು’ತ್ತಿರಬಹುದು.
ಮತ್ತೊಂದು ಮುಖ್ಯವಾದ ವಿಷಯವೆಂದರೆ, ಮುಗ್ಧತೆ ಉಂಟಾಗುವವರೆಗೂ ಆತ್ಮೀಯತೆ ಉಂಟಾಗುವುದಿಲ್ಲ. ಆತ್ಮೀಯತೆಯು ವಿಶ್ವಶಕ್ತಿಯ ಭಾಷೆ. ಮನಸ್ಸಿಗೆ ಆತ್ಮೀಯತೆ ತಿಳಿಯದು, ಇರುವಿಕೆಗೆ ಮಾತ್ರ ಅದು ಗೊತ್ತು. ಆತ್ಮೀಯತೆಯ ಮೂಲಕ ತೆರೆದುಕೊಳ್ಳುವಿಕೆ ಉಂಟಾಗುತ್ತದೆ ಹಾಗೂ ಯಾವುದರ ಬಗ್ಗೆಯಾದರೂ ಪ್ರಾಮಾಣಿಕವಾಗಿಯೂ, ಮನಃ ಪೂರ್ವಕವಾಗಿಯೂ ಹೇಳಬಹುದು ಹಾಗೂ ಮಾಡಬಹುದು. ನಿಮ್ಮ ಮಾತು ಮತ್ತು ಕಾರ್ಯಗಳಲ್ಲಿ ಖಚಿತತೆ ಇರುತ್ತದೆ. ನೀವು
ಪಸರಿಸುವ ಚೈತನ್ಯವು ನಿಮ್ಮ ಸುತ್ತಲಿರುವವರನ್ನು
ಮುಗ್ಧರನ್ನಾಗಿಯೂ, ತೆರೆದ ಮನಸ್ಕರನ್ನಾಗಿಯೂ
ಇರಲು ಉತ್ತೇಜಿಸುತ್ತದೆ. ಆಗ ವಿಶ್ವಶಕ್ತಿಯ
ನಿಜವಾದ ಸೌಂದರ್ಯವನ್ನು ಅನುಭವಿಸಲು ಸಾಧ್ಯ.
ಆಧ್ಯಾತ್ಮಿಕತೆ - ಮುಗ್ಧ ಭಕ್ತಿಗೆ ಮಾರ್ಗ
'ನೀವು ಚಿಂತಿಸಿದರೆ ಪ್ರಾರ್ಥಿಸಿಲ್ಲ, ಪ್ರಾರ್ಥಿಸಿದ್ದರೆ ಚಿಂತಿಸಬೇಕಾಗಿಲ್ಲ' ಎಂಬ ಒಂದು ಪ್ರಸಿದ್ಧ ನುಡಿ ಇದೆ.
ಚಿಂತೆಯನ್ನು ಒಪ್ಪಿಸಿಬಿಟ್ಟು ಮುಕ್ತರಾಗಿರಲು ನೇರವಾದ ಮಾರ್ಗವೆಂದರೆ ಆಧ್ಯಾತ್ಮಿಕತೆ. ಮಾನವನಿಗೆ ಅದೊಂದು ಅದ್ಭುತವಾದ ಪರಿಹಾರ. ಅದು ಒಂದು ನಿರೂಪಿಸಲ್ಪಟ್ಟ ವಿಜ್ಞಾನ. ಇಂದಿನ ಜ್ಞಾನ ಮತ್ತು ವಿಜ್ಞಾನಗಳ ಜಗತ್ತಿನಲ್ಲಿ ಅಸ್ತಿತ್ವದ ಕರೆಗೆ ಅನುಕಂಪದಿಂದ ತಕ್ಷಣ ಒಗೊಡಬೇಕಾಗಿದೆ. ಇದಕ್ಕೆ ಆಧ್ಯಾತ್ಮಿಕತೆಯೇ ಮಾರ್ಗ. ಆಧ್ಯಾತ್ಮಿಕತೆಯು ತನ್ನ ಪಾವಿತ್ರ್ಯತೆಯಿಂದಲೂ ನಿಗೂಢತೆಯಿಂದಲೂ ವಿಶ್ವವನ್ನು ಪೂರ್ವಸ್ಥಿತಿಗೆ ತರುತ್ತದೆ. ಈ ಭೂಗ್ರಹದಲ್ಲಿ ತಾನೇ ಎಲ್ಲಾ ಪ್ರಾಣಿಗಳಿಗಿಂತಲೂ ಉತ್ಕೃಷ್ಟನಲ್ಲವೆಂಬುದನ್ನು ಮಾನವನಿಗೆ ನೆನಪಿಸುತ್ತದೆ. ಶಕ್ತಿಶಾಲಿಯಾದ ವಿಶ್ವಶಕ್ತಿಯ ಚೈತನ್ಯವು ಬ್ರಹ್ಮಾಂಡವನ್ನೆಲ್ಲಾ ಆಕ್ರಮಿಸಿರುವುದನ್ನು ಆತನಿಗೆ ನೆನಪಿಸುತ್ತದೆ. ಅದು ಮನಸ್ಸಿನಲ್ಲಿ ಗೊತ್ತಿಲ್ಲದೆ ಇರುವ ಹಾಗೂ ಮುಗ್ಧವಾದ ಶರಣಾಗತಿಯನ್ನುಂಟುಮಾಡುತ್ತದೆ.
ಆಧ್ಯಾತ್ಮಿಕತೆಯು ಧರ್ಮಾಚರಣೆಯಲ್ಲ. ಅದು ವಿಶ್ವಶಕ್ತಿಯೊಂದಿಗೆ ಐಕ್ಯವಾಗುವ ವಿಜ್ಞಾನ. ಅನಾದಿ ಕಾಲದಿಂದಲೂ ಜಗತ್ತಿನ ಎಲ್ಲ ಮತಗಳೂ ಮಾಡಿದ ಮೊದಲ ಕೆಲಸವೆಂದರೆ, ದೇವರು ಜೀವನದ ಒಂದು ಭಾಗವಾಗಿರಲು ಅವಕಾಶ ಮಾಡಿಕೊಡುವುದು. ವಿಶ್ವ ಚೈತನ್ಯದೊಂದಿಗೆ ಮಧುರ ಸಂಬಂಧವನ್ನೇರ್ಪಡಿಸಿಕೊಳ್ಳಲು ಹಾಗೂ ಅದರಲ್ಲಿ ವಿಶ್ರಾಂತವಾಗಿರಲು ದೇವಸ್ಥಾನವು ಒಂದು ಸ್ಥಳ. ಪ್ರಪಂಚದ ಎಲ್ಲಾ ಧರ್ಮಗಳ ಮೂಲೋದ್ದೇಶವೂ ಅದೇ ಆಗಿತ್ತು. ನಂತರ ಈ ಸಂಬಂಧವು ಆಳವಾದಾಗ ಪ್ರತಿಯೊಬ್ಬನಲ್ಲಿಯೂ ಅದೊಂದು ಆನಂದಕರವಾದ ಸ್ಥಳಾವಕಾಶವಾಯಿತು. ಆಧ್ಯಾತ್ಮಿಕತೆಗೆ ಧರ್ಮವು ಒಂದು ಸ್ಪಷ್ಟವಾದ ಮೆಟ್ಟಲಿನಂತಾಯಿತು.
ಮಾನವನು ವಿಜ್ಞಾನವನ್ನು ಮಾತ್ರವೇ
ಅರಸಿಕೊಂಡು ಹೋಗುತ್ತಿದ್ದಾಗ, ಅತಿಯಾಗಿ
ತಿಳಿದವನಂತಾಗುತ್ತಾನೆ. ಏಕೆಂದರೆ ಆತನ
ಶೋಧನೆಗಳೂ, ಆವಿಷ್ಕಾರಗಳೂ, ತನ್ನ ಸ್ವಂತದ್ದೇ
ಎಂಬಂತೆ ತೋರುತ್ತವೆ. ಸಕಲವೂ ತನ್ನ
ವೈಚಾರಿಕತೆಯ ನೆಲೆಯಲ್ಲಿಯೇ ಇರುವಂತೆ
ತೋರುತ್ತದೆ. ಆದರೆ ಆಧ್ಯಾತ್ಮಿಕತೆಯು ವಿಶ್ವದ
ನಿಗೂಢತೆಯನ್ನು ಸಜೀವವಾಗಿರಿಸುತ್ತದೆ. ಅದು
ವೈಚಾರಿಕತೆಗಿಂತಲೂ ದೊಡ್ಡದಾದ ಜೈವಿಕಶಕ್ತಿಯ
ಕಡೆಗೆ ನಮ್ರತೆಯಿಂದ ಕೂಡಿದ ಭಕ್ತಿಯನ್ನು
ಹುಟ್ಟಿಸುತ್ತದೆ. ಆದುದರಿಂದಲೇ ಆಧ್ಯಾತ್ಮಿಕತೆಯು
ಮುಗ್ಧತೆಯನ್ನು ಮರಳಿಸಬಲ್ಲದು.
ವಿಶ್ವಶಕ್ತಿಗೆ ನಮನವನ್ನು ಸಲ್ಲಿಸಿ ನಮ್ಮ ತಾರ್ಕಿಕ ಬುದ್ಧಿಯನ್ನು ಶಾಂತಗೊಳಿಸಬೇಕಾದುದು ತಕ್ಷಣದ
ಅವಶ್ಯಕತೆಯಾಗಿದೆ. ಹಾಗೆ ನಮಿಸುವುದರಿಂದ ಒಂದು
ಹೊಸ ಬುದ್ಧಿಶಕ್ತಿಯು ಬರುತ್ತದೆ. ಅದು ವಿಶ್ವ
ಪ್ರಜ್ಞೆಯನ್ನು ಎಲ್ಲಾ ಚಟುವಟಿಕೆಗಳ ಕೇಂದ್ರವಾಗಿ
ಕಾಣುತ್ತದೆ. ಆಗ ಮಾನವನು ಆಳವನ್ನು
ಅಳೆಯಲಾಗದ ವಿಶ್ವಕ್ಕೆ ಹೆದರಬೇಕಾಗಿರುವುದಿಲ್ಲ.
ಆತನು ಸುಮ್ಮನೆ ಆಳವಾದ ಭಕ್ತಿ, ಪ್ರೀತಿ ಹಾಗೂ
ಭಾವೋನ್ಮಾದಗಳೊಡನೆ ಅದರೊಂದಿಗೆ
ಸಮ್ಮಿಳಿತಗೊಳ್ಳುತ್ತಾನೆ.
ವಿಶ್ವವು ಪ್ರೀತಿಯಿಂದ ಸ್ಪಂದಿಸುವಂತೆ ಮಾಡುವ
ಇಚ್ಛಾ ಶಕ್ತಿಯನ್ನು ಪಡೆದಿದ್ದ ಭಾರತದ ಮಹಾನ್
ಯೋಗಿಗಳು ಈ ಶಕ್ತಿಯನ್ನು ಆಧ್ಯಾತ್ಮಿಕತೆಯ
ಮೂಲಕ ಪಡೆದಿದ್ದರು.
ಮುರುಗನಾರ್ ಎಂಬ ಒಬ್ಬಾತನಿದ್ದನು. ಆತನು
ಶಿವನ ಪರಮ ಭಕ್ತನು. ಪ್ರತಿದಿನವೂ ಬೆಳಗಿನ
ಜಾವದಲ್ಲಿ ಎದ್ದು ತಂಪಾದ ನದಿಯ ನೀರಿನಲ್ಲಿ
ಮಿಂದು, ಗಿಡ-ಮರಗಳಲ್ಲಿಯೂ
ಹೊಲಗದ್ದೆಗಳಲ್ಲಿಯೂ ಬಿಟ್ಟಿದ್ದ ಹೂಗಳನ್ನು
ಬಿಡಿಸಿಕೊಂಡು ಬಂದು ದೇವಾಲಯದ ಶಿವನ
ಪ್ರತಿಮೆಗೆ ಹಾರಗಳನ್ನು ಕಟ್ಟುತ್ತಿದ್ದನು.
ಪ್ರತಿದಿನವೂ ದೇವಾಲಯಕ್ಕೆ ನಡೆದು ಬರುವಾಗ ಕಟ್ಟಿದ್ದ ಹಾರದಲ್ಲಿದ್ದ ಹೂಗಳಿಗೆ ತೊಂದರೆಯಾಗದಂತೆ ಜೋಪಾನವಾಗಿ ತರುತ್ತಿದ್ದನು! ಹಾರಗಳನ್ನು ದೇವರಿಗೆ ಅರ್ಪಿಸಿದ ನಂತರ ಶ್ಲೋಕಗಳನ್ನು ಗಂಟೆಗಟ್ಟಲೆ ಪಠಿಸುತ್ತಿದ್ದನು.
ಈ ಮುಗ್ಧ ಪೂಜಾವಿಧಿಯಿಂದಲೇ ಆತನು ಮೋಕ್ಷಪಡೆದನೆಂದು ಪ್ರತೀತಿ ಇದೆ.
ಮುಗ್ಧ ಭಕ್ತಿಯ ಮೂಲಕ ಆತ್ಮಸಾಕ್ಷಾತ್ಕಾರ
ಪಡೆದ ನಾಯನ್ಮಾರ್ಗಳೆಂಬ 63 ಸಂತರುಗಳಲ್ಲಿ
ಈತನೂ ಒಬ್ಬನೆಂದು ಇಂದು ಪೂಜಿಸಲಾಗುತ್ತಿದೆ.
ಆಧ್ಯಾತ್ಮಿಕತೆಯನ್ನು ದೂರ ಮಾಡುವರು ಅದರ
ಪರಿವರ್ತನಾ ಶಕ್ತಿಯ ಮಾಧುರ್ಯವನ್ನು
ಸವಿದಿಲ್ಲದವರು. ಅವರು ಆಧ್ಯಾತ್ಮಿಕತೆ ಎಂದರೆ
ಏನೋ ಗಾಂಭೀರ್ಯತೆ ಎಂದುಕೊಳ್ಳುವವರು. ಇಲ್ಲ!
ಭಗವಂತನು ಯಾವಾಗಲೂ ಆನಂದದ
ಪ್ರತಿರೂಪವಾಗಿರುವಾಗ, ಆಧ್ಯಾತ್ಮಿಕತೆಯು
ಗಂಭೀರತೆಯಾಗಲು ಹೇಗೆ ತಾನೇ ಸಾಧ್ಯ?
ಮಾನವನು ಅದನ್ನು ಧರ್ಮಾಚರಣೆಗಳಿಗಿಳಿಸಿ ಅದನ್ನು
ಗಂಭೀರವೆಂಬಂತೆ ಮಾಡಿದ್ದಾನೆ.
ನಮ್ಮ ಗುರುಗಳು ಪ್ರಾರ್ಥನೆಯ ಮೂಲಕ ನಮ್ಮ
ಅಸ್ತಿತ್ವವು ಇನ್ನೂ ಹೆಚ್ಚು ಆಳವಾದ ಸ್ತರಗಳಿಗೆ
ಸಂಪರ್ಕಿತ ಭಾವನೆ ಹೊಂದಲೆಂದು ನಿರ್ದಿಷ್ಟವಾದ
ಕಾಲವನ್ನು ಸಹ ನಿಗದಿಮಾಡಿದ್ದಾರೆ. ಬೆಳಗಿನ
ಜಾವದಲ್ಲಿ ಪ್ರಾರ್ಥಿಸುವುದು ಉತ್ತಮವೆಂದು
ಹೇಳಿದ್ದಾರೆ. ಇದಕ್ಕೆ ಕಾರಣವಾದರೂ ಏನು? ನಮ್ಮ
ವಿಚಾರ ಮಾಡುವ ತರ್ಕವು ರಾತ್ರಿಯಲ್ಲಿ ಚೆನ್ನಾಗಿ
ವಿರಮಿಸಿ ಬೆಳಗಿನ ಚಟುವಟಿಕೆಗಳಲ್ಲಿ ಇನ್ನೂ
ತೊಡಗಿಕೊಂಡಿರುವುದಿಲ್ಲ. ಆ ವೇಳೆಯಲ್ಲಿ
ಆಧ್ಯಾತ್ಮಿಕ ಸಾಧನೆ ಮಾಡಿದರೆ, ಮನಸ್ಸಿನ
ಮೇಲಾಗುವ ಪರಿಣಾಮ ಮಹತ್ತರವಾಗಿರುತ್ತದೆ.
ಮನಸ್ಸು ಇನ್ನೂ ನಿರ್ಮಲವಾಗಿಯೂ
ಮುಗ್ಧವಾಗಿಯೂ ಇರುವಾಗಲೇ, ಅದಿನ್ನೂ ನಮ್ಮ
ತರ್ಕವನ್ನು ಬೆಳೆಸಲು ಆರಂಭಿಸದಿರುವಾಗಲೇ,
ಪರಿಣಾಮಕಾರಿಯಾಗಿರುತ್ತದೆ. ಮಹಾನ್ ಗುರುಗಳು
ಆಧ್ಯಾತ್ಮಿಕತೆಯನ್ನು ಕಾರಣವಿಲ್ಲದೆ ಸುಮ್ಮನೆಯೇ
ನಮಗೆ ದಯಪಾಲಿಸಿಲ್ಲ. ಅದರ
ಧ್ಯೇಯವೇನೆಂಬುದನ್ನು ಅರ್ಥಮಾಡಿಕೊಂಡಾಗ,
ಮುಗ್ಧತೆ ಹಾಗೂ ನಂಬಿಕೆಗಳನ್ನು ಮರಳಿಸುವ ನೇರ
ಮಾರ್ಗವೇ ಆಧ್ಯಾತ್ಮಿಕತೆಯಾಗುತ್ತದೆ.
ಒಂದು ಸಣ್ಣ ಕಥೆ:
ಒಂದು ಸಂಜೆ ಒಬ್ಬ ರೈತನು ಮಾರುಕಟ್ಟೆಯಿಂದ ಹಿಂದಿರುಗುತ್ತಿದ್ದಾಗ, ತನ್ನ ಪ್ರಾರ್ಥನಾ ಪುಸ್ತಕವನ್ನು ಬಿಟ್ಟು ಬಂದುದನ್ನು ಗಮನಿಸಿದನು. ಕಾಡಿನ ಮಧ್ಯದಲ್ಲಿ ಆತನ ಗಾಡಿಯ ಚಕ್ರವು ಕಳಚಿಕೊಂಡ ಕಾರಣದಿಂದ ಅಂದು ಪ್ರಾರ್ಥನೆಯನ್ನು ಮಾಡದೇ ಇರಬೇಕಾದುದಕ್ಕೆ ದುಃಖವಾಯಿತು.
ಆದುದರಿಂದ ಆತನು ದೇವರಿಗೆ ತಾನೇ ಒಂದು ಪ್ರಾರ್ಥನೆಯನ್ನು ತಯಾರಿಸಿಕೊಂಡನು, 'ಓ ದೇವರೇ! ನಾನಿಂದು ಮೂರ್ಖನಾದೆ. ಇಂದು ನನ್ನ ಪ್ರಾರ್ಥನಾ ಪುಸ್ತಕವನ್ನು ಬಿಟ್ಟು ಬಂದಿದ್ದೇನೆ. ಪುಸ್ತಕವಿಲ್ಲದೆ ಪ್ರಾರ್ಥನೆಯ ಒಂದು ಸಾಲನ್ನು ಹೇಳುವಷ್ಟೂ ನೆನಪಿಲ್ಲ. ಆದುದರಿಂದ ಹೀಗೆ ಮಾಡುತ್ತೇನೆ. ಅಕ್ಷರಮಾಲೆಯನ್ನು ಬಹಳ ನಿಧಾನವಾಗಿ ಐದು ಬಾರಿ ಪಠಿಸುತ್ತೇನೆ. ಎಲ್ಲಾ ಪ್ರಾರ್ಥನೆಗಳನ್ನೂ ತಿಳಿದಿರುವ ನೀನು ಅಕ್ಷರಗಳನ್ನು ಜೋಡಿಸಿಕೊಂಡು ನನಗೆ ನೆನಪಿಗೆ ಬಾರದ ನನ್ನ ಪ್ರಾರ್ಥನೆಗಳನ್ನು ನೀನೇ ಮಾಡಿಕೋ' ಎಂದು ಪ್ರಾರ್ಥಿಸಿದನು.
ಭಗವಂತನು ಆ ದಿನ, 'ಇಂದು ಕೇಳಿದ ಎಲ್ಲಾ
ಪ್ರಾರ್ಥನೆಗಳಲ್ಲಿ ಈ ಸರಳವಾದ, ಪ್ರಾಮಾಣಿಕ
ಹೃದಯದಿಂದ ಮೂಡಿ ಬಂದ ಪ್ರಾರ್ಥನೆಯೇ
ಅತ್ಯುತ್ತಮವಾದುದು' ಎಂದು ತನ್ನ ದೇವದೂತರಿಗೆ
ಹೇಳಿದನು.
ಮುಗ್ಧತೆಯನ್ನು ಅದರ ಅತ್ಯಂತ ಶುದ್ಧ ರೂಪದಲ್ಲಿ ವ್ಯಕ್ತಪಡಿಸುವ ರೀತಿಯೇ ಆಧ್ಯಾತ್ಮಿಕತೆ. ಮುಗ್ಧತೆಯೇ ದೇವರಿಗೆ ಒಂದು ಸಮರ್ಪಣೆ. ಮುಗ್ಧತೆಯೇ ದೇವರಿಗೆ ಮಾಡುವ ಅತ್ಯಂತ ಮಹತ್ತರವಾದ ಪ್ರಾರ್ಥನೆ.
ಧರ್ಮವು ನಾವು ಅಂದುಕೊಂಡಿರುವಂತೆ ಯಾವ
ನಂಬಿಕೆಯೂ ಅಲ್ಲ. ಪ್ರತಿಯೊಂದು ಧರ್ಮವೂ ಅದರ
ಸ್ಥಾಪಕನಾದ ಮಹಾನ್ ಗುರುವಿನ ಆಳವಾದ
ಆಧ್ಯಾತ್ಮಿಕ ಅನುಭವದ ಫಲ. ಆ ಗುರುಗಳು ತಾವು
ಅನುಭವಿಸಿದುದನ್ನು ಮಾನವಕುಲವೂ
ಅನುಭವಿಸಲೆಂದು ಒಂದು ಧರ್ಮದ ರೂಪದಲ್ಲಿ
ಆ ಮನುಕುಲಕ್ಕೆ ನೀಡಿದ್ದಾರೆ. ಅವರಿಗೆ ಬೇರಾವ
ಉದ್ದೇಶವೂ ಇರಲಿಲ್ಲ. ಇದನ್ನು
ಅರ್ಥಮಾಡಿಕೊಂಡರೆ, ಯಾರು ಯಾವ ಧರ್ಮವನ್ನು
ಬೇಕಾದರೂ ಅನುಸರಿಸಬಹುದು. ಎಲ್ಲ ಮೂಲ
ಧರ್ಮಗಳ ಸೊಗಸೂ ಇದೇ.
ಒಬ್ಬ ಗುರುಗಳ ಸಾನಿಧ್ಯದಲ್ಲಿರುವುದೂ ಅಂತಹದೇ. ಮುಗ್ಧ ಶರಣಾಗತ ಭಾವದಲ್ಲಿರಿ. ನೀವು ಮುಗ್ಧರೂ, ಪ್ರಾರ್ಥನಾಮಯರೂ ಆಗಿದ್ದಾಗ ಗುರುಗಳ ಮೌನವು ನಿಮ್ಮ ಅಸ್ತಿತ್ವವನ್ನು ಹೊಕ್ಕುಬಿಡುತ್ತದೆ. ಮೌನದ ಧರ್ಮವೇ ಅತ್ಯುತ್ಕೃಷ್ಟ ಧರ್ಮ. ಅದು ಪರಮ ಗುರುಗಳ ಮತ್ತು ಶಿಷ್ಯರ ಧರ್ಮ. ಅದೇ ನಿಜವಾದ ಆಧ್ಯಾತ್ಮಿಕತೆಯೂ ಸಹ.
ಕಪಟತನವನ್ನು ಬಿಟ್ಟು ಸಮಯ ಸ್ಫೂರ್ತಿಯಿಂದಿರಿ
ನಾನು ಸತ್ಯಕಾಮನ ಕಥೆಯನ್ನು ಒಂದು ಜನರ
ಗುಂಪಿಗೆ ಹೇಳಿದಾಗ ಒಬ್ಬರು, 'ಸ್ವಾಮೀಜಿ, ಇಂತಹ
ತಂತ್ರಗಳು ಬಹಳವಾಗಿ ವಿಕಸನ ಹೊಂದಿದ
ಜೀವಿಗಳಾಗಿರಬಹುದು, ಆ ಕಥೆಯಲ್ಲಿ, ಗುರುಗಳು
ಕೇವಲ ಆಶೀರ್ವದಿಸಿದುದರಿಂದಲೇ ಶಿಷ್ಯನು
ಜ್ಞಾನೋದಯವನ್ನು ಹೊಂದುತ್ತಾನೆ. ಅದು
ಸಂಭವಿಸಲು ಆತನು ಬಹಳವಾಗಿ ವಿಕಸನ ಹೊಂದಿದ
ಜೀವಿಯಾಗಿರಲೇ ಬೇಕು, ಅಲ್ಲವೇ?' ಎಂದು.
ನಾನು ಆ ವ್ಯಕ್ತಿಗೆ ಹೇಳಿದೆ, 'ಇಲ್ಲ, ಅದು ಉನ್ನತಾತ್ಮರಿಗಲ್ಲ. ಅದು ಬಹಳ ಮುಗ್ಧಾತ್ಮರಿಗೆ!' ಎಂದು. ಉನ್ನತಾತ್ಮರಿಗೆ ತಂತ್ರಗಳು ಬೇಕಾಗುವುದಿಲ್ಲ. ಸತ್ಯಕಾಮನಿಗೆ ದಯಪಾಲಿಸಿದಂತಹ ತಂತ್ರಗಳನ್ನು ಯಾರು ಕಪಟ ತನದಿಂದ ವರ್ತಿಸಿ ದಣಿದಿರುತ್ತಾರೆಯೋ ಅಂತಹ ಮುಗ್ಧರಿಗೆ ಕೊಡುವಂತಹದು. ಈ ಪದಗಳನ್ನು ಅರ್ಥಮಾಡಿಕೊಳ್ಳಿರಿ: 'ಕಪಟತನದಿಂದ ದಣಿದಿರುವುದು'
ಕಪಟತನ ಎಂದರೇನು? ಅದು ಬುದ್ಧಿಶಕ್ತಿಗೆ ವಿರುದ್ಧ. ನೀವು ಕಪಟಿಗಳಾಗಿರಲು ಸಾಧ್ಯ ಅಥವಾ ಬುದ್ಧಿವಂತರಾಗಿರಲು ಸಾಧ್ಯ. ಒಂದೇ ಕಾಲದಲ್ಲಿ ಎರಡೂ ಆಗಿರಲು ಸಾಧ್ಯವಿಲ್ಲ. ಕಪಟತನವು ಭೇದ್ಯಕ್ಕೂ ವಿರುದ್ಧ. ಕಪಟಿಗಳಾಗಿದ್ದಾಗ ಭೇದ್ಯವಾಗಿರಲು ಸಾಧ್ಯವಿಲ್ಲ, ಭೇದ್ಯರಾಗಿರುವಾಗ ಮಗುವಿನಂತೆ ಪರಿಶುದ್ಧರಾಗಿರುವಿರಿ. ಮಗುವು ಒಂದೇ ಕಾಲದಲ್ಲಿ ಮುಗ್ಧವೂ, ಬುದ್ಧಿಯುಳ್ಳದ್ದೂ ಆಗಿರಬಹುದು. ಕಾಲಕ್ರಮೇಣ ಮಗುವಿನ ಬುದ್ಧಿವಂತಿಕೆಯು ಬೆಳೆಯುತ್ತದೆ. ಆದರೆ ಮುಗ್ಧತೆಯು ಸಹಜವಾಗಿಯೇ ಕಪಟತನದ ಕಡೆಗೆ ತಿರುಗುತ್ತದೆ. ಆಗ ಅವನು ಮಗುವಿನಂತೆ ಶುದ್ಧನಾಗಿರುವುದಿಲ್ಲ. ಸಾಮಾಜಿಕ ಕಟ್ಟುಪಾಡುಗಳು ಬುದ್ಧಿವಂತಿಕೆಯಲ್ಲಿರುವ ಮುಗ್ಧತೆಯನ್ನು ಕಪಟತನಕ್ಕೆ ತಿರುಗಿಸಲು ಕಾರಣವಾಗುತ್ತದೆ. ಮಕ್ಕಳನ್ನು ಅವರಷ್ಟಕ್ಕೇ ಬಿಟ್ಟರೆ ಮುಗ್ಧರಾಗಿಯೇ ಉಳಿಯುತ್ತಾರೆ. ಆದರೆ ನಾವು ಅವರಿಗೆ ಎಷ್ಟು ವಿಷಯಗಳನ್ನು ಹೇಳಿಕೊಡುತ್ತೇವೆ ಎಂದರೆ, ಅವರು ಸಾಮಾಜಿಕ ಪ್ರಾಣಿಗಳಾಗಿ ಬಿಡುತ್ತಾರೆ. ಇದನ್ನು ತಿಳಿದುಕೊಳ್ಳಿರಿ: ಮಕ್ಕಳನ್ನು ಕಪಟಿಗಳಾಗದೆ ಇರುವಂತೆ ಬೆಳೆಸುವಲ್ಲಿ ನಮ್ಮ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ.
ಕವಿ ಖಲೀಲ್ ಗಿಬ್ರಾನರು ಮಕ್ಕಳ ವಿಷಯದಲ್ಲಿ
ಸುಂದರವಾಗಿ ಹೇಳುತ್ತಾರೆ, 'ನೀವು ಮಕ್ಕಳಿಗೆ
ಪ್ರೀತಿಯನ್ನು ನೀಡಬಹುದೇ ಹೊರತು ನಿಮ್ಮ
ಚಿಂತನೆಗಳನ್ನಲ್ಲ, ಏಕೆಂದರೆ ಅವರಿಗೆ ಅವರದೇ ಆದ
ಚಿಂತನೆಗಳಿರುತ್ತವೆ' ಎಂದು.
ಕಪಟತನವು ವಿಭಜನೆ, ಅದೊಂದು ಸತತವಾದ ಲೆಕ್ಕಾಚಾರ. ಅದು ಮುಕ್ತ ಹಾಗೂ ಮುಗ್ಧ ವ್ಯಕ್ತಿತ್ವವನ್ನು ತಡೆಯುತ್ತದೆ. ಅದಕ್ಕೆ ಲೆಕ್ಕಾಚಾರದ ಮೂಲಕ ಮಾತ್ರವೇ ವ್ಯಕ್ತಪಡಿಸಲು ಗೊತ್ತಿರುವುದು. ಗಣಿತಕ್ಕೆ ಲೆಕ್ಕಾಚಾರ ಸರಿ, ಆದರೆ ನಿಮ್ಮ ಆತ್ಮಕ್ಕಲ್ಲ. ತಪ್ಪಾದ ಕಾರಣಗಳಿಗಾಗಿ ಲೆಕ್ಕಾಚಾರ ಮಾಡುತ್ತೇವೆ. ನಮಗಾಗಿರುವ ಅನುಗ್ರಹಗಳನ್ನು ಎಂದಾದರೂ ಲೆಕ್ಕ ಹಾಕುತ್ತೇವೆಯೇ? ಇಲ್ಲ! ಸುಮ್ಮನೆ ಅವುಗಳನ್ನು ನಿರ್ಲಕ್ಷಿಸಿಬಿಡುತ್ತೇವೆ.
ಕಪಟತನವು ಪೂರ್ಣವಾದುದನ್ನು
ವಿಭಜಿಸುವುದರಿಂದ ಆರಂಭವಾಗುತ್ತದೆ. ಮನಸ್ಸಿಗೆ
ವಿಭಜನೆಯನ್ನು ಹೇಳಿಕೊಟ್ಟಾಗ ಮುಗ್ಧತೆಯು
ನಾಶವಾಗುತ್ತದೆ. ಒಂದು ಬಾರಿ ಈ ಅಂಶವನ್ನು
ಗ್ರಹಿಸಿಬಿಟ್ಟರೆ, ಮನಸ್ಸು ಮುಂದುವರೆದು ಮೂಲ
ಮುಗ್ಧತೆಯಿಂದ ದೂರ ಸರಿಯುತ್ತದೆ.
ಎರಡು ಮಕ್ಕಳನ್ನು ಒಂದೇ ತಳ್ಳುಬಂಡಿಯಲ್ಲಿ ಪಕ್ಕಪಕ್ಕದಲ್ಲಿ ಕೂರಿಸಲಾಗಿತ್ತು.
ಒಂದು ಇನ್ನೊಂದರ ಕಡೆ ತಿರುಗಿ, 'ನೀನು
ಹುಡುಗಿಯೋ ಅಥವಾ ಹುಡುಗನೋ?' ಎಂದು
ಕೇಳಿತು.
ಅದು, 'ನನಗೆ ಗೊತ್ತಿಲ್ಲ' ಎಂದಿತು.
ಮೊದಲನೆಯದು, 'ನಾನು ಹೇಳುತ್ತೇನೆ' ಎಂದು
ಹೇಳಿ, ಕೆಳಗೆ ಬಗ್ಗಿ ನೋಡಿ ಮೇಲೆದ್ದು 'ನೀನೊಬ್ಬ
ಹುಡುಗಿ, ನಾನೊಬ್ಬ ಹುಡುಗ', ಎಂದಿತು.
ಹೆಣ್ಣು ಮಗುವಿಗೆ ಆಶ್ಚರ್ಯವಾಗಿ, 'ನಿನಗೆ ಹೇಗೆ
ಗೊತ್ತಾಯಿತು?' ಎಂದು ಕೇಳಿತು. ಥಟ್ಟನೆ ಉತ್ತರ
ಬಂದಿತು, 'ಅದು ಸುಲಭ. ನೀನು ಗುಲಾಬಿ ಬಣ್ಣದ
ಬೂಟುಗಳನ್ನು ಹಾಕಿಕೊಂಡಿರುವೆ, ನಾನು ನೀಲಿ
ಬೂಟುಗಳನ್ನು ಹಾಕಿಕೊಂಡಿದ್ದೇನೆ' ಎಂದು.
ಕಪಟತನದೊಂದಿಗೆ ಹೋರಾಡುತ್ತಿರುವವರೇ
ಬಹಳ ಚಿಕ್ಕ ವಯಸ್ಸಿನಿಂದಲೇ ಮಗುವಿಗೆ
ವಿಭಜನೆಯನ್ನು ಹೇಳಿಕೊಡುತ್ತಾರೆ. ಮಗುವು
ಅರಿವಿಲ್ಲದೆಯೇ ತನ್ನ ಮುಗ್ಧತೆಯನ್ನು ವಂಚನೆಗೆ
ಮಾರಿಕೊಳ್ಳುತ್ತದೆ.
ಕಪಟತನದ ಅಪಾಯವೆಂದರೆ ಅದು ಅನೇಕ ದಿಕ್ಕುಗಳಲ್ಲಿ ಬೇರುಬಿಟ್ಟು, ವ್ಯಕ್ತಿಯ ಸ್ವಭಾವವೇ
ಗಣಿತಕ್ಕೆ
ಲೆಕ್ಕಾಚಾರ ಸರಿ
ಆದರೆ ಆತ್ಮಕ್ಕಲ್ಲ.
ಆಗಿ ಗಟ್ಟಿಗೊಳ್ಳುತ್ತದೆ.
ವ್ಯಕ್ತಿಗೆ ತಾನು
ಕಪಟಿಯೆಂದು ಸಹ
ಗೊತ್ತಾಗುವುದಿಲ್ಲ. ತನ್ನೊಂದಿಗೆ ತಾನು
ಅನುಭವಿಸುವ ಸಂಘರ್ಷಣೆಯು ತನ್ನ
ಕಪಟತನದಿಂದಲೇ ಎಂಬುದನ್ನೂ ಆತನು
ತಿಳಿದಿರುವುದಿಲ್ಲ.
ಒಬ್ಬ ವ್ಯಕ್ತಿಯು ನನ್ನ ಬಳಿ ಬಂದು, 'ಸ್ವಾಮೀಜಿ, ನನಗೆ ವಿವಾಹೇತರ ಸಂಬಂಧಗಳಿವೆ' ಎಂದು ಹೇಳತೊಡಗಿದನು. ನಾನು, 'ಅದು ನಿನಗೆ ತಪ್ಪೆನಿಸುತ್ತಿಲ್ಲವೇ?' ಎಂದು ಕೇಳಿದೆ. ಆತನು, 'ಹೌದು, ಅದು ತಪ್ಪೆಂದು ನನಗೆ ಗೊತ್ತು ಹಾಗೂ ತಪ್ಪು ಮಾಡುತ್ತಿರುವೆನೆಂದು ಸ್ಪಷ್ಟವಾಗಿ ತಿಳಿದಿದೆ' ಎಂದನು. ನಾನು, 'ಹಾಗಾದರೆ ಅದನ್ನು ನಿಲ್ಲಿಸಿಬಿಡು' ಎಂದೆನು. ಆತನು, 'ಅದಾಗದು, ನೀವು ಮಾತ್ರವೇ ಅದನ್ನು ನಿಲ್ಲಿಸಬಲ್ಲಿರಿ' ಎಂದನು. ನಾನು, 'ಏನು? ಅದನ್ನು ನಿಲ್ಲಿಸಲು, ಸಂಬಂಧವಿಟ್ಟು ಕೊಂಡಿರುವವನು ನಾನಲ್ಲ! ಇಟ್ಟುಕೊಂಡಿರುವವನು ನೀನು, ಆದುದರಿಂದ ಅದನ್ನು ನಿಲ್ಲಿಸುವ ನಿರ್ಧಾರವನ್ನು ಮಾಡಿ ನಿಲ್ಲಿಸಬೇಕಾದವನು ನೀನು!' ಎಂದೆ. ಆತನು ಸುಮ್ಮನೆ ನಿಂತುಬಿಟ್ಟನು. ಆಗ ನಾನು, 'ನಾನು ನಿಲ್ಲಿಸಬೇಕು ಎಂದರೇನರ್ಥ? ನಾನು ನಿನ್ನ ಕಾರಿನ ಬೀಗದ ಕೈಯನ್ನು ತೆಗೆದುಕೊಂಡು ಅಲ್ಲಿಗೆ ನೀನು ಹೋಗದಂತೆ ತಡೆಯಬೇಕೇ? ನಾನು ನಿಲ್ಲಿಸಬೇಕು ಎಂದರೆ ನಿನ್ನ ಅರ್ಥವಾದರೂ ಏನು?' ಎಂದೆ.
ಇದೇ ಕಪಟತನ. ಆತನು, 'ಇಲ್ಲ, ನಾನು ನನ್ನದೆಲ್ಲವನ್ನೂ ನಿಮಗೆ ಸಮರ್ಪಿಸಿಕೊಂಡಿದ್ದೇನೆ.
ಆದುದರಿಂದ ನೀವು ಕಾಪಾಡಬೇಕು' ಎಂದನು.
ಇದೊಳ್ಳೆ ಕಥೆಯಾಯಿತೆಂದು ನಾನವನಿಗೆ ಹೇಳಿದೆ.
ಆಗ ನಾನು, 'ನೀನು ಈಗ ತಾನೇ ನಿನ್ನದೆಲ್ಲವನ್ನೂ
ನನಗೆ ಸಮರ್ಪಿಸಿಕೊಂಡಿರುವೆನೆಂದು ಹೇಳಿದೆ.
ಹಾಗಾದರೆ ಸರಿ, ಸುಮ್ಮನೆ ಇಲ್ಲಿ ಕುಳಿತು ಧ್ಯಾನ
ಮಾಡು' ಎಂದು ಹೇಳಿದೆ. ಆತನು, 'ಏನು
ಹೇಳುತ್ತಿರುವಿರಿ, ಸ್ವಾಮೀಜಿ!' ಎಂದನು. ನಾನು,
'ಈಗ ತಾನೇ ನನಗೆ ಎಲ್ಲವನ್ನೂ
ಸಮರ್ಪಿಸಿರುವೆನೆಂದು ಹೇಳಿದವನು ನೀನು!
ಆದುದರಿಂದ ಸುಮ್ಮನೆ ನಾನು ಹೇಳಿದುದನ್ನು
ಮಾಡು, ಇಲ್ಲಿಂದ ಕದಲಬೇಡ, ಸುಮ್ಮನೆ
ಕುಳಿತುಕೋ' ಎಂದೆ, ಆದರೆ ಅವನು ಅದಕ್ಕೆ
ಸಿದ್ಧನಿರಲಿಲ್ಲ!
ಒಂದು ಚಿಕ್ಕ ಕಥೆ:
ಒಂದು ದಿನ ನದಿಗಳೆಲ್ಲವೂ ಸೇರಿ, ಸಮುದ್ರಕ್ಕೆ,
'ನಾವು ನಿನ್ನನ್ನು ಸೇರುವಾಗ ಶುದ್ಧವಾಗಿಯೂ
ಕುಡಿಯಲು ಯೋಗ್ಯವಾಗಿಯೂ ಇರುತ್ತೇವೆ, ನೀನು
ನಮ್ಮನ್ನು ಉಪ್ಪಾಗಿಯೂ
ಕುಡಿಯಲಾಗದುದಾಗಿಯೂ ಮಾಡುತ್ತೀ' ಎಂದು
ಅದರ ವಿರುದ್ಧ ದೂರಿದವು.
ತನ್ನನ್ನು ದೂರುತ್ತಿರುವುದನ್ನು ಕೇಳಿಸಿಕೊಂಡ
ಸಮುದ್ರವು, 'ಹಾಗಾದರೆ ಬರಬೇಡಿ. ಆಗ ನೀವು
ಉಪ್ಪಾಗುವುದಿಲ್ಲ' ಎಂದು ಹೇಳಿತು.
ಒಂದು ಸರಳವಾದ ಪರಿಹಾರಕ್ಕೆ ನೀವು ತಯಾರಾಗಿಲ್ಲದಿದ್ದರೆ, ನೀವು ಕಪಟದಾಟವನ್ನು ಆಡುತ್ತಿದ್ದೀರೆಂಬುದು ಖಚಿತ! ನಿಮ್ಮ ಕಪಟತನಕ್ಕೆ ನೀವು ಬೇಸತ್ತುಕೊಳ್ಳುವವರೆಗೂ ನಿಮಗೆ ಏನೂ ಪ್ರಯೋಜನವಾಗುವುದಿಲ್ಲ. ಯಾವ ತಂತ್ರವೂ ಏನನ್ನೂ ಮಾಡುವುದಿಲ್ಲ. ಏಕೆಂದರೆ, ನಿಮ್ಮ ಕಪಟತನಕ್ಕೆ ಪ್ರತಿಯೊಂದು ತಂತ್ರದಿಂದಲೂ ಹೇಗೆ ತಪ್ಪಿಸಿಕೊಳ್ಳುವುದೆಂಬುದನ್ನು ತಿಳಿದಿರುತ್ತದೆ. ಜನರು ನನ್ನ ಬಳಿ ಬಂದು, 'ಸ್ವಾಮೀಜಿ, ನೀವು ಹೇಳುವುದೆಲ್ಲವೂ ಸರಿ, ಆದರೆ....' ಎಂದು ಹೇಳುತ್ತಾರೆ.
ಇದನ್ನು ತಿಳಿದುಕೊಳ್ಳಿರಿ, 'ಆದರೆ' ಎಂದು ನೀವು
ನನಗೆ ಹೇಳಿದ ಕ್ಷಣವೇ ನೀವು ತಪ್ಪಿಸಿಕೊಂಡಿರಿ.
'ಆದರೆ' ಎಂದು ಹೇಳಿದ ಕ್ಷಣವೇ ಅದು
ಮುಗಿದಂತೆಯೇ. ನಿಮ್ಮ ಕಪಟತನದಿಂದ
ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ.
ಕೆಲವರು ಹೀಗೂ ಹೇಳುತ್ತಾರೆ, 'ನೀವು ಹೇಳುವುದೆಲ್ಲವೂ ಸರಿ, ಆದರೆ ನೀವು ಹೇಳುವುದನ್ನು ನಾವು ಮಾಡುವಂತೆ ಮಾಡಿ' ಎಂದು. ಅದರ ಅರ್ಥವಾದರೂ ಏನು? ನಾನು ಯಾವಾಗಲೂ ನಿಮ್ಮನ್ನು ಗಮನಿಸಲು ಇಬ್ಬರು ಮೂವರನ್ನು ಇಟ್ಟುಕೊಂಡು ನಿಮ್ಮಿಂದ ಕೆಲಸ ಮಾಡಿಸಬೇಕೇನು? ನಿಮ್ಮ ಕಪಟತನವನ್ನು ಬಿಟ್ಟುಬಿಡಿ. ಆಗ ನೀವಾಗಿಯೇ ನಾನು ಹೇಳಿದುದನ್ನು ಮಾಡುವಿರಿ. ಕಪಟತನವು ನಿಮ್ಮೊಂದಿಗೆ ನೀವೇ ಆಡಿಕೊಳ್ಳುವ ಕಣ್ಣಾಮುಚ್ಚಾಲೆಯಾಟ, ನೀವು ಈ ಆಟವನ್ನು ನನ್ನೊಡನೆ ಆಡುವಂತಿಲ್ಲ. ನೀವೆಲ್ಲೆಲ್ಲಿ ಬಚ್ಚಿಟ್ಟು ಕೊಂಡಿರುವಿರಿ ಎಂಬುದು ನನಗೆ ಗೊತ್ತಾಗಿಬಿಡುತ್ತದೆ. ನಿಮ್ಮನ್ನು ಹುಡುಕಲು ನಾನು ಸ್ವತಃ ನಿಮ್ಮಲ್ಲಿಗೆ ಬರಬೇಕಾಗಿಲ್ಲ. ಆದುದರಿಂದ ನೀವು ಆಡುತ್ತಿರುವುದು ಕೇವಲ ನಿಮ್ಮೊಂದಿಗೇ, ಎಂಬುದನ್ನು ತಿಳಿದುಕೊಳ್ಳಿರಿ; ಸಂಪೂರ್ಣವಾಗಿ ಪ್ರಾಮಾಣಿಕವಾಗಿಯೂ, ನಂಬಲರ್ಹವಾಗಿಯೂ,
ಇರುತ್ತೇನೆಂದು ಸಂಕಲ್ಪಮಾಡಿಕೊಳ್ಳಿರಿ, ಆಗ
ಮಾತ್ರವೇ ನಿಮ್ಮ ಕಪಟತನವನ್ನು ಬಿಡಲು
ಸಾಧ್ಯವಾಗುವುದು.
ಕಪಟತನವು ಕರಗಿದಾಗ, ವಿಶ್ವಾಸಾರ್ಹತೆ
ಹಾಗೂ ಪ್ರಾಮಾಣಿಕತೆಯು ಉಂಟಾಗಿ,
ಜ್ಞಾನೋದಯವು ಶೀಘ್ರವಾಗಿ ಲಭಿಸುತ್ತದೆ. ನೀವು
ವಿಶ್ವಾಸಾರ್ಹತೆಯಿಂದಾಗಿ ಯಾವ ರೀತಿಯ ಗೊಡ್ಡು
ಹರಟೆಯಲ್ಲೂ ತೊಡಗುವುದಿಲ್ಲ. ಗೊಡ್ಡು ಹರಟೆ
ಎಂಬುದು ಕಪಟತನದ ಶುದ್ಧ ಅಭಿವ್ಯಕ್ತತೆ. ನೀವು
ಅಷ್ಟು ಕಪಟಿಗಳಾಗಿದ್ದಾಗ ಯಾವ ವ್ಯಕ್ತಿಗಾದರೂ
ಎದುರಿಗೇ ಏನೂ ಹೇಳಲಾರಿರಿ, ಆದರೆ ಆತನ ಹಿಂದೆ
ಆಡಿಕೊಳ್ಳುತ್ತೀರಿ.
ಕಪಟತನವನ್ನು ಬಿಟ್ಟಾಗ, ಸಮಯಸ್ಫೂರ್ತಿಯು ಅರಳುತ್ತದೆ. ಸಮಯಸ್ಫೂರ್ತಿಯು ಲೆಕ್ಕಾಚಾರಕ್ಕೆ ವಿರುದ್ಧವಾದುದು. ಬುದ್ಧಿವಂತಿಕೆಯೂ ಮುಗ್ಧತೆಯೂ ಸೇರಿದರೆ ಸಮಯಸ್ಫೂರ್ತಿಯಾಗುತ್ತದೆ. ಬುದ್ಧಿವಂತಿಕೆಯೂ ಕಪಟತನವು ಸೇರಿದರೆ ಲೆಕ್ಕಾಚಾರವಾಗುತ್ತದೆ. ಸಮಯಸ್ಫೂರ್ತಿಯು ನಿಮ್ಮ ಮುಗ್ಧತೆಯ ಪ್ರವಹಿಸುತ್ತಿರುವ ಅಭಿವ್ಯಕ್ತತೆಯಲ್ಲದೆ ಬೇರೇನಲ್ಲ. ಅದು ಲೆಕ್ಕಾಚಾರವಿಲ್ಲದ ಮನಃಸ್ಥಿತಿ. ಅದಕ್ಕೆ ಸಹಜ – ಎಂದರೆ ಯಾವ ಹೊರೆಯೂ ಇಲ್ಲದೆ ನೀವಾಗಿಯೇ ಇರುವುದು, ಎನ್ನುತ್ತಾರೆ. ಹೊರೆ ಎಂದರೆ ಒಂದೇ ಸಮನೆ ಲೆಕ್ಕ ಹಾಕುವ ಹೊರೆ.
ಇದನ್ನು ತಿಳಿಯಿರಿ: ಕಪಟತನದಿಂದ ನೀವು ಬಹಳಷ್ಟು ಪಡೆಯಬಹುದೆಂದು ತಿಳಿಯಬಹುದು, ಆದರೆ ನೀವು ನಿಮ್ಮ ಮುಗ್ಧತೆಯನ್ನು ಕಳೆದುಕೊಳ್ಳುತ್ತಿದ್ದೀರೆಂಬುದೇ ಸತ್ಯ. ಮುಗ್ಧತೆಯನ್ನು ಕಳೆದುಕೊಳ್ಳುವುದು ಇಡೀ ಜೀವನವನ್ನೇ ಕಳೆದುಕೊಂಡಂತೆ. ಏನನ್ನೇ ಕಳೆದುಕೊಂಡರೂ ಮುಗ್ಧತೆಯನ್ನು ಕಳೆದುಕೊಳ್ಳಬಾರದು.
ಸಮಾಜವು
ನೀವು
ವಿಶೇಷವಾಗಿರ-
ಬೇಕೆಂಬುದನ್ನು
ಕಲಿಸುವುದರಿಂದ
ಕೃತ್ರಿಮತೆಯ
ಸಮಸ್ಯೆಯು
ಬರುತ್ತದೆ.
ಮುಗ್ಧತೆ, ಪರಿಪೂರ್ಣತೆ, ಪರಿಪಕ್ವತೆ.
ನಿನ್ನೊಳಗಿನ ಜ್ಯೋತಿಯನ್ನು ಬೆಳಗಿಸು, ಜ್ಞಾನವನ್ನು ಹೊಂದಲು ಕಷ್ಟಪಟ್ಟು ದುಡಿ, ಶುದ್ಧನೂ, ಮುಗ್ಧನೂ ಆಗು, ತೇಜೋಮಯವಾದ ಲೋಕದಲ್ಲಿ ಬಾಳು, ಎಂದು ಧಮ್ಮಪಾದವು ಹೇಳುತ್ತದೆ.
ನೀವು ಜಗತ್ತಿಗೆ ಬಂದಾಗ, ಮುಗ್ಧ ಶಿಶುವಾಗಿ
ಬಂದಿರಿ. ಸಮಾಜವು ನಿಮಗೆ ಮನಸ್ಸನ್ನು
ಕೊಡುವವರೆಗೂ ನಿಮ್ಮ ಮುಗ್ಧತೆಯ ಸೊಬಗನ್ನು
ಹೊರಸೂಸುತ್ತಿದ್ದಿರಿ. ಈಗ ನಿಮ್ಮ ಮನಸ್ಸನ್ನು
ಕಳೆದುಕೊಂಡು, ಪುನಃ ಮುಗ್ಧವಾಗಲು
ಬಯಸುತ್ತಿದ್ದೀರಿ. ಪುನಃ ಪಡೆದ ಮುಗ್ಧತೆಯನ್ನೇ
ಪರಿಪಕ್ವತೆ ಎನ್ನುವುದು. ಅದನ್ನು ಮರಳಿ
ಪಡೆಯುವುದು ಸಾಧ್ಯ. ಒಂದಾನೊಂದು ಕಾಲದಲ್ಲಿ
ನೀವು ಮುಗ್ಧರಾಗಿದ್ದಿರೆಂಬುದನ್ನು ನಂಬಿರಿ. ಆ
ಮುಗ್ಧತೆಯು ಇನ್ನೂ ಇದೆ ಎಂಬ ವಿಶ್ವಾಸದಿಂದಿರಿ.
ಆಗ ಅದನ್ನು ಪುನಃ ಪಸರಿಸಲು ಸಾಧ್ಯ. ಈ
ತಿಳಿವಳಿಕೆಯೇ ಅದನ್ನು ಪುನಃ ಪಡೆದುಕೊಳ್ಳುವ
ಕಾರ್ಯಗತಿಯನ್ನು ಮತ್ತೊಮ್ಮೆ ಪ್ರಾರಂಭಿಸುತ್ತದೆ.
ಪರಿಪಕ್ವತೆಯು ನಾವು ಪೂರ್ಣತೆಯಲ್ಲಿ ಬದುಕಲು ಕಾರಣವಾಗುತ್ತದೆ. ಪೂರ್ಣತ್ವವೆಂದರೆ ತುಂಬು ಮುಗ್ಧತೆಯಿಂದ ಕಾರ್ಯನಿರ್ವಹಿಸುವುದು ಹಾಗೂ ಆ ಕ್ಷಣಕ್ಕೆ ಸಂಪೂರ್ಣವಾಗಿ ನಿಮ್ಮನ್ನೇ ಅರ್ಪಿಸಿಕೊಳ್ಳುವುದು. ನಿಮ್ಮಲ್ಲಿ ಅಭಿಪ್ರಾಯವಾಗಲೀ, ತೀರ್ಮಾನವಾಗಲೀ, ಒಡಕುಗಳಾಗಲೀ, ಅಲ್ಲಿ ಇರುವುದಿಲ್ಲ. ಆ ಕ್ಷಣಕ್ಕಾಗಿ ತೀವ್ರವಾದ ಉತ್ಸಾಹ ಮಾತ್ರವಿರುತ್ತದೆ. ಆ ಕ್ಷಣಕ್ಕಾಗಿ ತೆರೆದ ಮನಸ್ಕರಾಗಿರುವುದೇ ಮುಗ್ಧತೆ.
ಪರಿಪಕ್ವವಾಗಲು, ಮೊದಲು ನೀವು ಒಳ ಹೋಗಬೇಕು, ಏಕೆಂದರೆ ಪರಿಪಕ್ವತೆ ಎಂದರೆ ಯಾವ ತೋರ್ಪಡಿಕೆಯೂ ಇಲ್ಲದೆ ನಿಮ್ಮ ಸಹಜ ಸ್ವಭಾವದೊಂದಿಗೆ ಸರಾಗವಾಗಿರುವುದು. ನಿಮ್ಮ ಸಹಜತೆಯನ್ನು ನಿಮ್ಮ ಸ್ವಭಾವವನ್ನಾಗಿ ಮಾಡಿಕೊಳ್ಳುವುದೇ ಪರಿಪಕ್ವತೆ. ನಿಮ್ಮ ಸಹಜತೆಗೆ ಉತ್ತಮ ಮಾರ್ಗವೆಂದರೆ ನಿಮ್ಮ ಅಂತರಂಗವನ್ನು ಯಾವಾಗಲೂ ಹಾಯಾಗಿರುವಂತೆ ಇಡುವುದು. ನೀವೆಲ್ಲೇ ಇದ್ದರೂ ಏನೇ ಮಾಡುತ್ತಿದ್ದರೂ ನಿಮ್ಮ ಅಂತರಂಗವು ಹಾಯಾಗಿರಲಿ, ಆಗ ನಿಮ್ಮ ಶುದ್ಧತೆಯನ್ನು ಉಳಿಸಿಕೊಳ್ಳಬಹುದು. ನಿಮ್ಮ ಸಹಜತೆಯನ್ನು ಯಾವಾಗಲೂ ಒತ್ತಡವಿಲ್ಲದಂತೆಯೂ, ಪ್ರಯಾಸವಿಲ್ಲದಂತೆಯೂ ಹಾಗೂ ತೋರ್ಪಡಿಕೆ ಇಲ್ಲದಂತೆಯೂ ಅನುಭವಿಸಿರಿ.
ಸಮಾಜವು ಸದಾಕಾಲವೂ ನೀವು
ವಿಶೇಷವಾಗಿರಬೇಕೆಂಬುದನ್ನು ಕಲಿಸುವುದರಿಂದ
ಕೃತ್ರಿಮತೆಯ ಸಮಸ್ಯೆಯು ಬರುತ್ತದೆ. ಯಾವಾಗಲೂ
ವಿಶೇಷವಾಗಿಯೇ ಇರಬೇಕೆಂಬ ಅವಶ್ಯಕತೆಯೇ
ಇಲ್ಲ. ಅದೊಂದು ಅಪಕ್ವವಾದ ಕಲ್ಪನೆ. ಒಮ್ಮೆ ಈ
ಕಲ್ಪನೆಯನ್ನು ತ್ಯಜಿಸಿಬಿಟ್ಟರೆ ಮಾನಸ್ಸು
ವಿಶ್ರಾಂತವಾಗುತ್ತದೆ. ಚಾಣಾಕ್ಷತನದಿಂದಿರಬೇಕೆಂಬ
ಯಾವ ಒತ್ತಡವೂ ಇರುವುದಿಲ್ಲ. ಈ ವಿಶ್ರಾಂತತೆಯು
ಮುಗ್ಧತೆಯನ್ನು ಹುಟ್ಟು ಹಾಕುತ್ತದೆ.
ನಿಮ್ಮ ಮುಗ್ಧತೆಯನ್ನು ಪುನಃ ಪಡೆಯಬೇಕೆಂಬ ಹಂಬಲಕ್ಕಾಗಿ ದಾರಿಬಿಟ್ಟು ಹೋಗಬೇಕಾಗಬಹುದು. ಏಕೆಂದರೆ, ದಾರಿಬಿಟ್ಟು ಹೋಗಿ ಅದರ ಪರಿಣಾಮಗಳನ್ನು ಎದುರಿಸಿದಾಗ, ಆತ್ಮಪರೀಕ್ಷೆಯು ಆರಂಭವಾಗುತ್ತದೆ. ಆತ್ಮ ಪರೀಕ್ಷೆಯು ಮುಗ್ಧತೆಯನ್ನು ಪುನಃ ಪಡೆಯುವ ಅವಶ್ಯಕತೆಯನ್ನು ತ್ವರಿತಗೊಳಿಸುತ್ತದೆ. ದಾರಿ ಬಿಟ್ಟಿದ್ದಕ್ಕಾಗಿ ನಿಮ್ಮನ್ನೇ ದೂಷಿಸಿಕೊಳ್ಳಬೇಡಿರಿ. ಶಾಶ್ವತವಾಗಿ ನಿಮ್ಮನ್ನು ಸಮಗ್ರವಾಗಿಸಿಕೊಳ್ಳುವ ದಾರಿಗೆ ಬರುವ ಅರಿವನ್ನು ತಂದುಕೊಳ್ಳಿರಿ. ಈ ರೀತಿಯಲ್ಲಿ ಪರಿಪಕ್ವತೆ ಉಂಟಾಗುವುದು ಖಂಡಿತವಾಗಿಯೂ ಯೋಗ್ಯವೇ.
ಪರಿಪಕ್ವತೆ ಎಂದರೆ ಇನ್ನೆಂದಿಗೂ ನಿಮ್ಮನ್ನೇ
ನೀವು ಮರುಳುಗೊಳಿಸಿಕೊಳ್ಳುವುದಿಲ್ಲವೆಂಬ
ದೃಢವಾದ ತೀರ್ಮಾನಕ್ಕೆ ಬರುವುದು. ಅದು ಒಳಗಿನ
ಪ್ರಜ್ಞೆಗೆ ಎಚ್ಚರಗೊಳ್ಳುವುದಾಗಿದೆ. ಅದು
ಪ್ರಾಮಾಣಿಕತೆಯೊಂದಿಗೆ ನಿಮ್ಮನ್ನು
ಸಮಗ್ರಗೊಳಿಸುವುದಾಗಿದೆ. ಇದು ಸಂಭವಿಸಿದಾಗ,
ನೀವು ಪುನಃ ಮಗುವಾಗಲಾರಂಭಿಸುವಿರಿ.
ಮಗುವಾಗಿದ್ದಾಗ ಮುಗ್ಧರಾಗಿದ್ದಿರಿ, ಆದರೆ
ಅರಿವಿನಿಂದಲ್ಲ. ಬೆಳವಣಿಗೆಯ ಹಾದಿಯಲ್ಲೆಲ್ಲೋ
ಮುಗ್ಧತೆಯು ಕಳೆದುಹೋಗಿತ್ತು. ಈಗ ಅದನ್ನು ಪುನಃ
ಪಡೆಯುತ್ತಿದ್ದೀರಿ. ಹೊಸ ಮುಗ್ಧತೆಯು ಪೂರ್ಣ
ಅರಿವಿನಿಂದ ಕೂಡಿರುತ್ತದೆ ಹಾಗೂ ಅದೇ ನಿಜವಾದ ಮುಗ್ಧತೆ.
ಮುಗ್ಧತೆಯನ್ನು ಪುನಃ ಪಡೆದಾಗ,
ಮಗುವಿನಂತಾಗುವುದಕ್ಕಿಂತಲೂ ಬೇರಿನ್ನೇನೂ
ಅಮೂಲ್ಯವಾದುದು ಇರುವುದಿಲ್ಲವೆಂಬ ತಿಳಿವಳಿಕೆ
ಬರುತ್ತದೆ. ಅದೇ ಜೀವನ್ಮುಕ್ತಿಯ ಪ್ರಕ್ರಿಯೆ.
ಈ ಕಾರಣದಿಂದಲೇ ಮಗುವಿನ ಮುಗ್ಧತೆಯನ್ನು
ಅತ್ಯಂತ ಜಾಗರೂಕತೆಯಿಂದ ಕಾಪಾಡಬೇಕು.
ಮಗುವು ಮಾಡುವ ಪ್ರತಿಯೊಂದು ಅವಲೋಕನಕ್ಕೂ
ನಮ್ಮ ತಿಳಿವಳಿಕೆಯನ್ನು ಅದರ ಮೇಲೆ ಹೇರದಿದ್ದರೆ,
ಆ ಮಗುವು ತನ್ನ ಮುಗ್ಧತೆಯನ್ನು ಕಾಪಾಡಿಕೊಂಡು
ಬೆಳೆಯುತ್ತದೆ. ಉದಾಹರಣೆಗೆ, ಆಕಾಶವು ಕೆಲವು
ವೇಳೆ ನೀಲಿಯಾಗಿಯೂ, ಕೆಲವು ವೇಳೆ
ಬಿಳಿಯದಾಗಿಯೂ ಕಾಣುವುದೇಕೆ? ಎಂದು ಮಗುವು
ಕೇಳಿದರೆ, ಸುಮ್ಮನೆ ಅದು ಕೆಲವು ಸಲ
ನೀಲಿಯಾಗಿಯೂ, ಕೆಲವು ಸಲ ಬಿಳಿಯದಾಗಿಯೂ
ಕಾಣುತ್ತದೆ, ಎಂದು ಹೇಳಿರಿ. ಹೇಗೂ ಶಾಲೆಯಲ್ಲಿ
ಅದನ್ನು ಕಲಿಯುತ್ತಾನೆ. ಆದರೆ, ಅದು ಸಹಜವಾಗಿ
ಇರುವುದೇ ಹಾಗೆಂದು ನೀವು ಹೇಳಿದರೆ ಅವನು
ಪ್ರಕೃತಿಯ ಸಹಜತೆಯನ್ನು ನೇರವಾಗಿ
ತಿಳಿದುಕೊಂಡುಬಿಡುತ್ತಾನೆ. ಇನ್ನೂ ಹೆಚ್ಚಾದ
ವಿಷಯಗಳನ್ನು ತನ್ನಲ್ಲಿ ತುಂಬಿಸಿಕೊಳ್ಳಲು ಮುಂದೆ
ಬರುವುದಿಲ್ಲ. ಹೇಗೂ ವಿಶ್ವವಿದ್ಯಾಲಯಗಳು
ಅದನ್ನು ನೋಡಿಕೊಳ್ಳುತ್ತವೆ.
ಮನೆಯಲ್ಲಿ, ಅವನ ಜೀವನದಲ್ಲಿ ನೀವು ಇನ್ನೂ ಅತ್ಯಂತ ಪ್ರಭಾವಶಾಲಿಯಾದ ವ್ಯಕ್ತಿಯಾಗಿರುವಾಗ, ವಿಷಯಗಳು ಇರುವುದು ಹೀಗೆಯೇ ಎಂದು ನೀವು ಆತನಿಗೆ ತಿಳಿಸಿದರೆ, ಅವುಗಳನ್ನೆಲ್ಲಾ ಬುದ್ಧಿಯೊಂದಿಗೆ ತಿಳಿಯಬೇಕಾದ ಅವಶ್ಯಕತೆಯೇ ಇಲ್ಲವೆಂದು ತಿಳಿಸಿದರೆ ಅವನ ಮುಗ್ಧತೆಯು ಉಳಿದುಕೊಳ್ಳುತ್ತದೆ. ಅವನು ಪ್ರಕೃತಿಯ ಬಗ್ಗೆ ತೀರ್ಪು ಕೊಡುವ ಮನೋಭಾವವನ್ನು ಹಿಡಿಯುವುದಿಲ್ಲ. ಪದಗಳನ್ನು ಬಳಸದೆಯೇ, ನೋಡುವುದನ್ನು ಕಲಿಯುತ್ತಾನೆ. ಕೇವಲ ವೀಕ್ಷಿಸುವುದನ್ನೂ ಇರುವುದನ್ನೂ ಕಲಿಯುತ್ತಾನೆ. ಪದಗಳನ್ನು ತಂದುಕೊಂಡ ಕ್ಷಣವೇ ಮುಗ್ಧತೆಯು ಹೋಗಿಬಿಡುತ್ತದೆ. ಆಗ ಅದು ನೋಡುವುದು ಎಂದಾಗುವುದಿಲ್ಲ. ಅದು ಕೇವಲ ಅವಲೋಕಿಸುವುದಾಗುತ್ತದೆ. ಆಗ ಇಡೀ ಸೊಗಸೇ ನಾಶವಾಗುತ್ತದೆ.
ಬೆಳವಣಿಗೆಯು ಯಾವಾಗಲೂ ಗಂಭೀರವಾದ ವಿಷಯವೆಂದು ಪರಿಗಣಿಸಲಾಗಿದೆ. ಗಂಭೀರವಾಗಿ ಬೆಳೆದರೆ, ಕೇವಲ ಮುದುಕರಾಗುತ್ತೀರಿ. ವಿನೋದವಾಗಿ ಬೆಳೆದರೆ ಯುವಕರಾಗಿರುತ್ತೀರಿ! ಕೆಲವು ವೇಳೆ ಮಕ್ಕಳು, ಪ್ರಾಣಿಗಳು, ಇತರೆ ಕೀಟಗಳು ಮಾಡುತ್ತಿರುವುದನ್ನು ನೋಡಲು ಚೆನ್ನಾಗಿರುತ್ತದೆ. ಏಕೆಂದರೆ ಅವು ಮುಗ್ಧವಾಗಿಯೂ ವಿನೋದವಾಗಿಯೂ ಇರುತ್ತವೆ. ಅದು ಮುಗ್ಧತೆಯನ್ನು ಅರಿತುಕೊಂಡು ಅದರೊಂದಿಗೆ ಪುನಃ ಕೂಡಿಕೊಳ್ಳಲೂ ಸಹಾಯವಾಗುತ್ತದೆ.
ಮಗುವಿನಂತಹ ಮುಗ್ಧತೆಯು ಅನೇಕ ವಿಷಯಗಳನ್ನು ಕಂಡುಕೊಳ್ಳುತ್ತದೆ. ಆದರೆ ಅದರಲ್ಲಿ ಬಹಳಷ್ಟನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ. ಅದು ತನ್ನ ಮುಗ್ಧತೆಯ ಸ್ತರದಲ್ಲಿ ಆನಂದಿಸುತ್ತದೆ, ಅಷ್ಟೇ. ಆದರೆ, ಪುನಃ ಲಭಿಸಿದ ಮುಗ್ಧತೆಯು ಈ ಹೊಸ ವಿಷಯಗಳನ್ನು ಕಂಡುಕೊಳ್ಳುವುದು ಮಾತ್ರವಲ್ಲದೆ,
> ನಿಮ್ಮ
> ಮುಗ್ಧತೆಯನ್ನು
> ಮರಳಿ ಪಡೆದಾಗ,
> ನಿಮ್ಮನ್ನು 'ದ್ವಿಜ'
> ಎಂದರೆ
> ಪುನರ್ಜನಿಸಿದವ
> ಎಂದು
> ಕರೆಯುತ್ತಾರೆ.
ಅವೆಲ್ಲವನ್ನೂ
ಅರ್ಥಕೂಡ
ಮಾಡಿಕೊಳ್ಳುತ್ತದೆ. ಅದೇ
ವ್ಯತ್ಯಾಸ.
ಮಗುವಿನಂತಹ
ಮುಗ್ಧತೆ ಸೊಗಸಾ-
ಗಿರುತ್ತದೆ ಆದರೆ ಅಷ್ಟೇ
ಸಾಲದು. ಅದು
ಜೀವನದಲ್ಲಿ ಕಳೆದು-ಹೋಗಿ, ಸಂಪೂರ್ಣ
ಅರಿವಿನಿಂದಲೂ
ಪಕ್ವತೆಯಿಂದಲೂ ಪುನರ್ಲಭಿಸಬೇಕು.
ಒಬ್ಬ ಹುಚ್ಚನೂ, ಒಬ್ಬ ಯೋಗಿಯೂ ಒಂದೇ ವಿಧವಾಗಿ ಕಾಣುತ್ತಾರೆಂಬ ಪ್ರತೀತಿ ಇದೆ. ಇದ್ದಕ್ಕಿದ್ದಂತೆ ನಗುವುದು, ಅರ್ಥಮಾಡಿಕೊಳ್ಳಲಾಗದಂತದ್ದನ್ನು ಮಾಡುವ ರೀತಿಗಳಲ್ಲಿ ಅವರಿರ್ವರೂ ವಿಲಕ್ಷಣವಾಗಿರುತ್ತಾರೆ. ಆದರೆ ಅವರು ವಾಸ್ತವವಾಗಿ ಒಂದೇ ಪಂಕ್ತಿಯ ಎರಡು ತುದಿಗಳಲ್ಲಿರುತ್ತಾರೆ! ಪರಮಾವಾವಧಿಗಳು ಯಾವಾಗಲೂ ಒಂದೇ ರೀತಿ ಕಾಣುತ್ತವೆ. ಹೊರನೋಟಕ್ಕೆ ಅವು ಒಂದೇ ತರಹ ಕಾಣುತ್ತವೆ, ಅಷ್ಟೆ. ಅದೇ ರೀತಿ, ಒಂದು ಮಗುವೂ, ಒಬ್ಬ ಸಂತನೂ, ತಮ್ಮ ಮುಗ್ಧತೆಯಲ್ಲಿ ಒಂದೇ ರೀತಿ ಕಂಡರೂ ಅವರು ವಾಸ್ತವವಾಗಿ ಒಂದೇ ಪಂಕ್ತಿಯ ಎರಡು ತುದಿಗಳು. ಮಗುವು ಮುಗ್ಧತೆಯನ್ನು ಪುನರ್ಲಭಿಸುವ ಪ್ರಕ್ರಿಯೆಯನ್ನು ಇನ್ನೂ ಆರಂಭ ಮಾಡಿರುವುದಿಲ್ಲ; ಆದರೆ ಸಂತನು ಮುಗಿಸಿರುತ್ತಾನೆ.
ಮಗುವಿನ ಮುಗ್ಧತೆಯು ಅದು ಹುಟ್ಟಿ ಬಂದಾಗ ದೇವರು ಕೊಟ್ಟ ಮುಗ್ಧತೆಯೇ ಹೊರತು, ಜೀವನದ ಮೂಲಕ ಪುನಃ ಪಡೆದ ಮುಗ್ಧತೆಯಲ್ಲ. ಮಗುವಿನ ಮುಗ್ಧತೆಯನ್ನು ಸುಲಭವಾಗಿ ಕದಡಬಹುದು. ಆದರೆ ಸಂತನ ಮುಗ್ಧತೆಯನ್ನೊಂದಿಗೂ ಕದಡಲಾಗದು. ಮುಗ್ಧತೆಯನ್ನು ಕದಡುವಂತೆ ಮಾಡುವುದು ಹಾಗೂ ಅದನ್ನು ಶಾಶ್ವತವಾಗಿ ಪುನಃ ಪಡೆಯಲು ಶ್ರಮಿಸುವುದು, ಪಕ್ವತೆಯ ಪ್ರಕ್ರಿಯೆ. ಸಂತನಾಗಲು, ಪಂಕ್ತಿಯ ಮತ್ತೊಂದು ಕೊನೆಯನ್ನು ಸೇರಲು, ಮಾಡುವ ಪಯಣವೇ ಅದು.
ಪುನರ್ಲಭಿಸಿದ ಮುಗ್ಧತೆಯಿಂದ, ಮತ್ತೊಬ್ಬರ ಕಣ್ಣುಗಳಲ್ಲಿ ಪುನಃ ನೋಡಲು ಸಾಧ್ಯವಾಗುತ್ತದೆ. ಮುಗ್ಧತೆಯು ನಿಮ್ಮನ್ನು ಭೇದ್ಯರಾಗಿ ಮಾಡುವುದು ಮಾತ್ರವಲ್ಲ, ಅದು ನಿಮ್ಮನ್ನು ಸಮಗ್ರಗೊಳಿಸುತ್ತದೆ. ಪಾಂಡಿತ್ಯದಿಂದ ನೀವು ನಿಮ್ಮಲ್ಲೇ ಚೂರುಚೂರಾಗಿರುವಿರಿ. ಪುನಃ ದೊರೆತ ಮುಗ್ಧತೆಯಿಂದ ನೀವು ಸಮಗ್ರಗೊಂಡು ನಿಮಗೂ ಮತ್ತು ಇತರರಿಗೂ ಪ್ರಾಮಾಣಿಕವಾಗಿರುತ್ತೀರಿ. ಆ ಪ್ರಾಮಾಣಿಕತೆಯು ನಿಮ್ಮ ಕಣ್ಣುಗಳಲ್ಲಿ ಪ್ರಜ್ವಲಿಸುತ್ತದೆ ಹಾಗೂ ಬೇರೆಯವರನ್ನೂ ತಾಕುತ್ತದೆ. ಆ ಪ್ರಾಮಾಣಿಕತೆಯೇ ಪಕ್ವತೆ.
ಮತ್ತೆ ಮುಗ್ಧವಾಗೋಣವೆಂಬ ಕಾತುರತೆಯೇ
ಸಾಕು. ಅದು ನಿಮ್ಮೊಳಗಿರುವ ನೀವೇ ಅಲ್ಲದ
ಮತ್ತೆಲ್ಲವನ್ನೂ ನಾಶಪಡಿಸಲಾರಂಭಿಸುತ್ತದೆ.
ಎಷ್ಟಾದರೂ ಅದು ಕೇವಲ ಕಟ್ಟುಪಾಡುಗಳ
ಪದರಗಳು. ಆದರೆ ಪ್ರಕ್ರಿಯೆಯು
ಪೂರ್ಣವಾಗುವವರೆವಿಗೂ ನಿಮ್ಮ ಇಚ್ಛಾಶಕ್ತಿಯನ್ನು
ಬಲವಾಗಿಟ್ಟುಕೊಳ್ಳುವುದು ಮುಖ್ಯ. ಆ
ಇಚ್ಛಾಶಕ್ತಿಯೇ ನಿಮಗೆ ಪ್ರಾಮಾಣಿಕವಾಗಿ,
ಕಪಟತನವಿಲ್ಲದೆ ಇರುವಂತೆ ಸತತವಾಗಿ
ನೆನಪುಮಾಡಿಕೊಡುತ್ತದೆ. ಕಟ್ಟುಪಾಡುಗಳನ್ನು
ತೆಗೆದುಹಾಕುವುದರಲ್ಲಿ ಸಂಪೂರ್ಣವಾಗುವವರೆಗೂ
ವಿಶ್ರಮಿಸುವುದಿಲ್ಲವೆಂದು ನಿರ್ಧಾರ ಮಾಡಿರಿ.
ಪಕ್ವತೆಯ ಸೊಗಸೆಂದರೆ ಅದು ನಿಮ್ಮನ್ನು,
ಬೇಕೆಂದಾಗ ಪಕ್ವಗೊಂಡ ವ್ಯಕ್ತಿಯಂತೆಯೂ, ಬೇರೆ
ಸಮಯದಲ್ಲಿ ಮಗುವಿನಂತೆಯೂ ವರ್ತಿಸುವಂತೆ
ಮಾಡುತ್ತದೆ. ಒಂದರಿಂದ ಇನ್ನೊಂದು ಸ್ಥಿತಿಗೆ
ಸುಲಭವಾಗಿ ಹರಿಯಲು ಅನುವು ಮಾಡಿಕೊಡುತ್ತದೆ.
ಹಾಗಾಗಿ ಅದು ನಿಮ್ಮನ್ನು ಪೂರ್ಣತ್ವದೊಂದಿಗೆ
ಸಮಗ್ರವಾದ ಸಾಮರಸ್ಯದಿಂದಿರುವಂತೆ ಮಾಡುತ್ತದೆ.
ನಿಮ್ಮ ಮುಗ್ಧತೆಯನ್ನು ನೀವು ಮರಳಿ ಪಡೆದಾಗ, ನಿಮ್ಮನ್ನು 'ದ್ವಿಜ' ಎಂದರೆ ಪುನರ್ಜನಿಸಿದವ, ಎಂದು ಕರೆಯುತ್ತಾರೆ. ಮುಗ್ಧತೆಯನ್ನು ಪುನಃ ಪಡೆಯುವ ಹಾದಿಯಲ್ಲಿ ನಿಮ್ಮ ಪ್ರಯತ್ನವನ್ನು ಬಿಡದೇ ಇರುವುದು ಇದರ ಗುಟ್ಟು. ಪಯಣವು ಕೆಲವು ಬಾರಿ ಬೇಸರ ತರಬಹುದು, ಏಕೆಂದರೆ ಅದು ಸಮಯವನ್ನು ತೆಗೆದುಕೊಳ್ಳುತ್ತಿದ್ದರೂ, ಇನ್ನೂ ಸಂಭವಿಸದೇ ಇರದಿರಬಹುದು. ಅದು ಹಾಗೇಕೆಂದರೆ ಸಮಾಜವು ಅನೇಕ ಪದರಗಳಲ್ಲಿ ನಿಮ್ಮನ್ನು ಕಟ್ಟಿಹಾಕಿದೆ. ಈರುಳ್ಳಿಯ ಮಧ್ಯಭಾಗವನ್ನು ತಲುಪಲು ಪದರ ಪದರವಾಗಿ ಸಿಪ್ಪೆಸುಲಿಯಬೇಕು. ಪರಿವರ್ತನೆಯನ್ನು ಹೊಂದಿ ಸ್ಫೋಟವಾಗಿ ಬಿರಿಯುವುದರ ಪೂರ್ವ ಪರಿಸ್ಥಿತಿಯೇ ಬೇಸರ. ಆದುದರಿಂದ, ವಿಶ್ರಮಿಸಬೇಡಿರಿ, ಅಷ್ಟೇ ಸಾಕು. ಅದು ನಡೆಯುತ್ತದೆ. ನೆನಪಿಡಿ: ಮುಗ್ಧತೆ ನಿಮ್ಮಲ್ಲಿ ಈಗಾಗಲೇ ಇದೆ. ಅದು ಹೊರಗಿನ ಯಾವುದೇ ಅಂತಿಮ ಧೈಯವಲ್ಲ. ಕೇವಲ ಇದರ ನೆನಪೇ ಪ್ರತಿಬಾರಿ, ನಿಮಗೆ ಬೇಸರವಾದಾಗಲೂ ಅದರಿಂದ ವಿಶ್ರಾಂತಿ ನೀಡುತ್ತದೆ.
ಪ್ರತಿದಿನವೂ ಕೆಲವು ನಿಮಿಷಗಳು ನಿಮ್ಮೊಂದಿಗೆ ಸುಮ್ಮನೆ ಕುಳಿತುಕೊಳ್ಳಿರಿ ಹಾಗೂ ಶಾಂತವಾಗಿ, ನಿಮ್ಮ ಮುಗ್ಧತೆಗೆ ತೆರೆಳಿರಿ. ನಿಮ್ಮಲ್ಲಿರುವ ಮುಗ್ಧತೆಯನ್ನು ಅನುಭವಿಸಿರಿ. ನಿಮ್ಮಲ್ಲಿರುವ ಪರಿಶುದ್ಧತೆಯನ್ನು ಅನುಭವಿಸಿರಿ. ಅದು ನಿಮ್ಮೊಳಗಿನಿಂದ ಉಕ್ಕಿಹರಿಯುತ್ತಿರುವಂತೆ ಭಾವಿಸಿರಿ. ಅದು ನಿಮ್ಮ ದೇಹ ಮನಸ್ಸು ಹಾಗೂ ಅಸ್ತಿತ್ವವನ್ನು ಆವರಿಸಿಕೊಳ್ಳಲಿ. ನಿಮ್ಮ ಮುಗ್ಧತೆಯಲ್ಲಿ ನೀವೆಷ್ಟು ಸುಂದರವಾಗಿರುವಿರೆಂದು ಭಾವಿಸಿರಿ. ಇದನ್ನು ಪ್ರತಿದಿನವೂ ಮಾಡಿರಿ. ಕೆಲವೇ ದಿನಗಳಲ್ಲಿ ಅದು ನಿಮ್ಮ ಸ್ವಭಾವವೇ ಎನ್ನುವಂತೆ ಅದಕ್ಕೆ ಜಾಗೃತರಾಗುವುದನ್ನು ಕಾಣುವಿರಿ. ನೀವಲ್ಲದುದೆಲ್ಲವೂ ದಹಿಸಿ, ನಿಜವಾದ 'ನೀವು' ಎಂಬುದು ಹೊರಬರುತ್ತದೆ.
ಮುಗ್ಧತೆಯು ತನ್ನದೇ ಆದ ಒಂದು ಪರಿಪೂರ್ಣತೆಯನ್ನು ಹೊಂದಿದೆ. ಈ ಪರಿಪೂರ್ಣತೆಗೆ ಶೋಭೆ ಎನ್ನುತ್ತಾರೆ. ಅದರಿಂದಾಗಿಯೇ ಸಾಕ್ಷಾತ್ಕಾರ ಪಡೆದ ಗುರುಗಳು ಯಾವಾಗಲೂ ಶೋಭೆಯಿಂದಲೂ ಸುಂದರವಾಗಿಯೂ ಕಾಣಿಸುತ್ತಿರುತ್ತಾರೆ. ಮುಗ್ಧತೆಯು ನೋಡುವವರ ಕಣ್ಣುಗಳಿಗೆ ಅದ್ಭುತವಾದ ಸೌಂದರ್ಯವಾಗಿ ಕಾಣುತ್ತದೆ. ಅದು ಎಷ್ಟು ಪರಿಪೂರ್ಣವೆಂದರೆ ಎಂತಹ ಕಪಟ ಮನಸ್ಸಿಗೂ ಅದನ್ನು ಅಲ್ಲಗಳೆಯಲಾಗುವುದಿಲ್ಲ. ಅದು ಎಲ್ಲ ತರ್ಕವನ್ನೂ ಅಲ್ಲಗೆಳೆದು ನಿಮ್ಮನ್ನು ತಾಗುತ್ತದೆ.
ನಾವು ಯಾವಾಗಲೂ ಮಕ್ಕಳನ್ನು ಆಪತ್ಕರ
ಎಂದುಕೊಳ್ಳುತ್ತೇವೆ. ಅಳುವ ದೊಡ್ಡವರನ್ನು ಪಕ್ವತೆ ಇಲ್ಲದವರು ಎಂದು ಕೊಳ್ಳುತ್ತೇವೆ. ಯಾವ ಭಾವವನ್ನು ವ್ಯಕ್ತಪಡಿಸುವುದೂ ಅಪಕ್ವತೆ ಎಂದು ಭಾವಿಸುವಂತೆ ನಮ್ಮನ್ನು ನಿಬಂಧನೆಗೊಳಪಡಿಸಲಾಗಿದೆ. ಭಾವನೆಗಳನ್ನು ಶೋಧಿಸದೆಯೇ ವ್ಯಕ್ತಪಡಿಸುವುದು ಮುಗ್ಧತೆಯ ಲಕ್ಷಣ. ಕಪಟ ಬುದ್ಧಿಯುಳ್ಳವರು, ತಮ್ಮ ಭಾವನೆಗಳನ್ನು ಸಹ ಶೋಧಿಸುತ್ತಾರೆ. ಯಾವಾಗಲಾದರೊಮ್ಮೆ ಜನರ ಮುಂದೆ ಅತ್ತುಬಿಡುವುದು ಒಳ್ಳೆಯದು. ಅದರಲ್ಲಿಯೇನು ತಪ್ಪು? ಏನನ್ನು ಬಚ್ಚಿಡಲು ಪ್ರಯತ್ನಿಸುತ್ತಿರುವಿರಿ? ಅಳುವ ಮೂಲಕ ನಿಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಿರುವಿರಿ. ಅಲ್ಲಿ ಬಚ್ಚಿಡುವುದಕ್ಕೇನಿದೆ? ಸಮಸ್ಯೆಯು ಏನೆಂದರೆ ಸದಾಕಾಲವು ಸಮಾಜವು ನಮ್ಮ ಸಹಜ ಸ್ವಭಾವವನ್ನು ಮುಚ್ಚಿಟ್ಟುಕೊಳ್ಳುವುದನ್ನು ಹಾಗೂ ತೋರಿಕೆಯ ವ್ಯಕ್ತಿತ್ವವನ್ನು ಪ್ರದರ್ಶಿಸುವುದನ್ನು ಕಲಿಸಿದೆ. ಈ ಕಾರಣದಿಂದಲೇ ಕಾಲ ಸರಿದಂತೆ ನಮ್ಮ ಸ್ವಭಾವವೇನು ಎಂಬುದನ್ನು ಮರೆಯುತ್ತೇವೆ. ಮುಗ್ಧವಾಗಿರುವುದು ಹೇಗೆಂಬುದನ್ನೂ ಮರೆಯುತ್ತೇವೆ.
ತಂದೆ-ತಾಯಿ, ಉಪಾಧ್ಯಾಯರ ಸಭೆಯಲ್ಲಿ ಒಬ್ಬ ಉಪಾಧ್ಯಾಯರು, 'ನಿಮ್ಮ ಮಗಳು ಎಲ್ಲಾ ಚಟುವಟಿಕೆಗಳಲ್ಲಿಯೂ ಬಹಳ ಜಾಣೆ. ಅವಳು ಭಾವನಾತ್ಮಕವಾಗಿ ಮಾತ್ರ ಸ್ವಲ್ಪ ಅಪಕ್ವವಾಗಿದ್ದಾಳೆ, ಆದರೆ ಅವಳು ಸರಿಹೋಗುತ್ತಾಳೆ' ಎಂದರು. ತಂದೆ-ತಾಯಿಯರು ಗೊಂದಲದಿಂದ, ಆಕೆಯನ್ನು ನೋಡಿ, 'ಮೂರು ವರ್ಷದ ಅವಳನ್ನು ಇನ್ನು ಹೇಗಿರಬೇಕೆಂದು ಬಯಸುತ್ತೀರಿ?' ಎಂದು ಕೇಳಿದರು.
ನಾವು ಕೇವಲ ಮಕ್ಕಳೊಂದಿಗೆ ಸ್ನೇಹಿತರಂತೆ,
ಅವರ ಆಟದ ಸಂಗಾತಿಗಳಂತಿರುವುದರಿಂದ,
ಮುಗ್ಧತೆಯನ್ನು ಪುನಃ ಕಂಡುಕೊಳ್ಳಲು ಸಾಧ್ಯ.
ಅವರೊಂದಿಗಿದ್ದಾಗ ಮಗುವಿನಂತೆ ನಟಿಸಬೇಡಿರಿ,
ಅದನ್ನು ಪ್ರಾಮಾಣಿಕವಾಗಿ ಪರಿಗಣಿಸಿ, ಮಗುವೇ
ಆಗಿಬಿಡಿರಿ! ಅದು ನಿಮಗೆ ನೀವೇ ಮಾಡಿಕೊಳ್ಳುವ
ಬಹು ದೊಡ್ಡ ಉಪಕಾರ.
ನಿಮ್ಮಲ್ಲಡಗಿರುವ ಆ ಶಿಶುತ್ವವನ್ನು ಪುನಃ ಕಂಡುಕೊಳ್ಳಲು ಬೇಕಾದಷ್ಟು ಮಾರ್ಗಗಳಿವೆ. ಸುಮ್ಮನೆ ಮಕ್ಕಳೊಂದಿಗೆ ಕಣ್ಣು ಮುಚ್ಚಾಲೆ ಆಟ ಆಡಿರಿ, ಇಲ್ಲವೇ ತಿಂಡಿತಿನಿಸುಗಳನ್ನು ಮಾಡುವುದನ್ನು ಕಲಿಯಿರಿ. ಇಲ್ಲವೇ 'ಟಾಮ್ ಎಂಡ್ ಜೆರ್ರಿ ಕಾರ್ಟೂನ್'ಗಳನ್ನು ನೋಡಿರಿ, ಇಲ್ಲವೇ ಬಣ್ಣ ಬಣ್ಣದ 'ಕಾಟನ್ ಕ್ಯಾಂಡಿ'ಗಳನ್ನು ತಿನ್ನಿರಿ, ಇಲ್ಲವೇ ಮಣ್ಣಿನ ಬೊಂಬೆಗಳನ್ನು ಮಾಡಿರಿ! ಇವೆಲ್ಲವೂ ನಿಮ್ಮೊಳಗಿನ ಶಿಶುತ್ವವನ್ನು ಹೊರತರುತ್ತವೆ. ನಿಮ್ಮ ಘನವಾದ ಗುರುತು ಕರಗುತ್ತದೆ. ನೀವು ದ್ರವಿಸಿ ನದಿಯಂತೆ ಹರಿಯುವಿರಿ. ನಿಮ್ಮ ಗಂಭೀರತೆಯ ತೂಕವು ಕಳಚಿಹೋಗಿ, ಹಗುರವಾಗಿಯೂ ಆನಂದವಾಗಿಯೂ ಇರುತ್ತೀರಿ.
ಗಂಭೀರತೆಯೆಂದರೆ ಅಹಂಕಾರ.
ಗಾಯಗೊಳ್ಳಬಹುದೆಂಬ ಭಯವಾದಾಗ, ನಿಮ್ಮ
ಹತೋಟಿ ಅಥವಾ ಶಕ್ತಿಯನ್ನು ಕಳೆದುಕೊಳ್ಳುವ
ಭಯವಾದಾಗ, ನೀವು ಗಂಭೀರವಾಗುತ್ತೀರಿ. ನೀವು
ವಿಪರೀತವಾಗಿ ಸ್ವಯಂ
ಪ್ರಾಮುಖ್ಯತೆಕೊಟ್ಟುಕೊಂಡಾಗ, ಹೀಗಾಗುತ್ತದೆ.
ಎಲ್ಲವನ್ನೂ ಸಡಿಲ ಬಿಟ್ಟು, ವಿನೋದವಾಗಿ,
ಮುಗ್ಧತೆಯನ್ನು ಪುನಃ ಕಂಡುಕೊಂಡಾಗ,
ಇದ್ದಕ್ಕಿದ್ದಂತೆಯೇ ನಿಮ್ಮಿಂದಲೇ ನಿಮಗೆ ಒಂದು
ಬಿಡುವು ದೊರೆತು ಸಂತೋಷಪಡುವಿರಿ. ಆ ಬಿಡುವೇ
ನಿಮ್ಮ ಗಾಂಭೀರ್ಯದ ಪತನ. ಆ ಅಂತರದಲ್ಲಿ
ಹಿಡಿದುಕೊಳ್ಳಲು ಯಾವುದೂ ಇಲ್ಲವೆಂಬುದನ್ನು
ಮನಗಾಣುವಿರಿ. ಅಲ್ಲಿರುವುದು ಕೇವಲ ಮುಕ್ತವಾದ
ಉತ್ಸಾಹ. ಇದನ್ನು ಅರಿತಾಗ, ಅದರ ಮೇಲೆ
ಪ್ರಜ್ಞಾಪೂರಿತವಾಗಿ ಶ್ರಮಿಸಬಹುದು ಹಾಗೂ
ಸಂಪೂರ್ಣವಾಗಿ ಮುಗ್ಧರೂ, ಪ್ರಾಮಾಣಿಕರೂ
ಆಗುವೆಡೆಗೆ ಸಾಗಬಹುದು.
ಮುಗ್ಧತೆಯು ಪ್ರಜ್ಞೆಯನ್ನು ಹೃದಯದ
ಸ್ತರದಲ್ಲಿಟ್ಟುಕೊಳ್ಳುವಂತಹದು, ತಲೆಯಲ್ಲಿ
ನೆಲೆಸಲು ಅನುವು ಮಾಡಿಕೊಡುವುದಲ್ಲ.